Wed. Mar 25th, 2026

Kannada

ಜಿಡಿಪಿ: ಈ ವರ್ಷದಲ್ಲಿ 87.4 3 7.4ರಷ್ಟು ಬೆಳವಣಿಗೆ

ಸಂದರ್ಭ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಅರ್ಥಿಕತೆಯ ಬೆಳವಣಿಗೆ ಅಂದಾಜನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ವರ್ಷದಲ್ಲಿ ಅರ್ಥ ವ್ಯವಸ್ಥೆಯು ಶೇ 7.4ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂದಾಜಿನಲ್ಲಿ ಹೇಳಲಾಗಿದೆ.
•ಈ ಪ್ರಮಾಣದ ಸಾಧ್ಯವಾದಲ್ಲಿ, ಬೆಳವಣಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ಭಾರತ ಸಾಧಿಸಿದಂತಾಗುತ್ತದೆ. ಆದರೆ ದ್ರೋಕರೇಜ್ ಕಂಪನಿ ಗೋಲ್ಡ್ಮನ್ ಸಾಕ್ಸ್ ಸಿದ್ಧಪಡಿಸಿರುವ ವರದಿಯೊಂದರ ಪ್ರಕಾರ ಈ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ 7.3ರಷ್ಟು ಆಗಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಂದಾಜಿನ ಪ್ರಕಾರ ಕೂಡ ಭಾರತದ ಜಿಡಿಪಿ 2025-26ರಲ್ಲಿ ಶೇ 7.3ರಷ್ಟು ಬೆಳೆಯಲಿದೆ. ಜಿಎಸ್ಟಿ ದರ ಇಳಿಕೆ, ಆದಾಯ ತೆರಿಗೆ ಮಿತಿ ಹೆಚ್ಚಳದಂತಹ ಕ್ರಮಗಳು ಆರ್ಥಿಕ ಚಟುವಟಿಕೆ ಚೆನ್ನಾಗಿ ಇರುವುದಕ್ಕೆ ಕಾರಣವಾಗಿವೆ.
ಚೀನಾದ ಬೆಳವಣಿಗೆ ದರವು 2025ರಲ್ಲಿ ಶೇ 4.9ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜು ಮಾಡಿದೆ.
• ಮೊದಲ ಮುಂಗಡ ಅಂದಾಜನ್ನು ಪ್ರಕಟಿಸಿದ ಕೇಂದ್ರ ಸರ್ಕಾರ: ದೇಶದ ಅರ್ಥ ವ್ಯವಸ್ಥೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಶೇಕಡ 7.4ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ ಬೆಳವಣಿಗೆ ಪ್ರಮಾಣವು ಶೇ 6.5ರಷ್ಟು ಇತ್ತು.
ಸೇವಾ ವಲಯ ಹಾಗೂ ತಯಾರಿಕಾ ವಲಯಗಳಲ್ಲಿ ಚಟುವಟಿಕೆ ಚೆನ್ನಾಗಿ ಇರುವುದು ಈ ಬಾರಿ ಬೆಳವಣಿಗೆಯು ಕಳೆದ ವರ್ಷಕ್ಕಿಂತ ಹೆಚ್ಚಿರುವಂತೆ ಮಾಡಲಿದೆ. ಈ ಮೂಲಕ ಭಾರತವು ಪ್ರಮುಖ ಅರ್ಥವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆ ಕಾಣುವ ದೇಶವಾಗಿ ಮುಂದುವರಿಯಲಿದೆ.
2023-24ರಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣವು ಶೇ 9.2ರಷ್ಟು ಇತ್ತು.
• ಪ್ರಸಕ್ತ ಹಣಕಾಸು ವರ್ಷದಲ್ಲಿ ತಯಾರಿಕಾ ವಲಯದಲ್ಲಿನ ಒಟ್ಟು ಮೌಲ್ಯ ಸೇರ್ಪಡೆಯು (ಜಿವಿಎ) ಶೇ 7ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ.
• ಇದು ಹಿಂದಿನ ವರ್ಷದ ಶೇ 4.5ರಷ್ಟು ಜಿವಿಎಗಿಂತ ಹೆಚ್ಚಿನದ್ದಾಗಲಿದೆ.
• ಸೇವಾ ವಲಯದಲ್ಲಿನ ಬೆಳವಣಿಗೆಯು ಶೇ 9.1ರಷ್ಟು ಇರಲಿದೆ (ಹಿಂದಿನ ವರ್ಷದಲ್ಲಿ ಇದು ಶೇ 7.2ರಷ್ಟು ಇತ್ತು) ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಬಿಡುಗಡೆ ಮಾಡಿರುವ ಅಂದಾಜಿನಲ್ಲಿ ಹೇಳಲಾಗಿದೆ.
• ಕೃಷಿ ಮತ್ತು ಸಂಬಂಧಿತ ವಲಯ-ಗಳಲ್ಲಿನ ಬೆಳವಣಿಗೆಯು ಈ ವರ್ಷದಲ್ಲಿ ಶೇ 3.1ಕ್ಕೆ ಇಳಿಕೆ ಆಗುವ ಸಾಧ್ಯತೆ ಇದೆ. ಹಿಂದಿನ ವರ್ಷದಲ್ಲಿ ಇದು ಶೇ 4.6ರ ಮಟ್ಟದಲ್ಲಿತ್ತು. ಈ ವರ್ಷದಲ್ಲಿ ನೈಜ ಜಿಡಿಪಿ ಗಾತ್ರವು ₹201.90 ಲಕ್ಷ ಕೋಟಿಯಷ್ಟಾಗುವ ಅಂದಾಜು ಮಾಡಲಾಗಿದೆ. ಅಮೆರಿಕದ ಡಾಲರ್ ಲೆಕ್ಕದಲ್ಲಿ ಜಿಡಿಪಿ ಗಾತ್ರವು 3.97 ಟ್ರಿಲಿಯನ್ ಆಗಲಿದೆ (1 ಡಾಲರ್ 90 ರೂಪಾಯಿಗೆ ಸಮ ಎಂಬ ಅಂದಾಜಿನೊಂದಿಗೆ).
• ಕೇಂದ್ರ ಸರ್ಕಾರವು ಮುಂದಿನ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರುವರಿ 1ರಂದು ಮಂಡಿಸುವ ನಿರೀಕ್ಷೆ ಇದ್ದು, ಬಜೆಟ್ ಸಿದ್ಧಪಡಿಸುವ ಸಂದರ್ಭದಲ್ಲಿ ಮುಂಗಡ ಅಂದಾಜನ್ನು ಆಶ್ರಯಿಸುತ್ತದೆ.
• “ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಗಳು ಹೆಚ್ಚಿದ್ದರೂ, ದೇಶದ ಬೆಳವಣಿಗೆ ದರವು ಕಡಿಮೆ ಆಗಿಲ್ಲ. ಹಣಕಾಸು ಮತ್ತು ವಿತ್ತೀಯ ನೀತಿಗಳು ಹೊಂದಾಣಿಕೆಯ ಗುಣ ಹೊಂದಿದ್ದುದು, ಕಾರ್ಪೊರೇಟ್ ಕಂಪನಿಗಳ ಹಣಕಾಸಿನ ಚೆನ್ನಾಗಿರುವುದು, ಮುಂಗಾರು ಮಳೆ ಚೆನ್ನಾಗಿ ಆಗಿರುವುದು ಹಾಗೂ ಕಚ್ಚಾ ತೈಲದ ಬೆಲೆಯು ಕಡಿಮೆ ಇರುವುದು ಇದಕ್ಕೆ ಕಾರಣ’ ಎಂದು ಕ್ರಿಸಿಲ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಹೇಳಿದ್ದಾರೆ.
• ಹಬ್ಬಗಳ ಹೊತ್ತಿನಲ್ಲಿ ನಡೆಯುವ ಉತ್ತಮ ಮಾರಾಟ, ಜಿಎಸ್ಟಿ ದರ ಪರಿಷ್ಕರಣೆ ಹಾಗೂ ಆದಾಯ ತೆರಿಗೆ ಮಿತಿಯಲ್ಲಿನ ವಿನಾಯಿತಿಗಳು ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಹಬ್ಬಗಳ ನಂತರದಲ್ಲಿಯೂ ಬೇಡಿಕೆ ಉತ್ತಮ ಮಟ್ಟದಲ್ಲಿ ಎಂದು ಮುಂದುವರಿದಿದೆ ಬ್ಯಾಂಕ್ ಆಫ್ ಬರೋಡದ ಮುಖ್ಯ ಅರ್ಥಶಾಸ್ತ್ರಜ್ಞೆ ಹೇಳಿದ್ದಾರೆ.

Source: Prajavani

ರಷ್ಯಾದಿಂದ ₹15 ಲಕ್ಷ ಕೋಟಿ ಮೌಲ್ಯದ ಕಚ್ಚಾ ತೈಲ ಖರೀದಿ

ಸಂದರ್ಭ: ಉಕ್ರೇನ್ ಮತ್ತು ರಷ್ಯಾ ನಡುವೆ ಸಮರ ಆರಂಭವಾದ ನಂತರದಲ್ಲಿ ಭಾರತವು ರಷ್ಯಾದಿಂದ ಅಂದಾಜು 144 ಬಿಲಿಯನ್ ಯೂರೊ (ಸರಿಸುಮಾರು ₹15.19 ಲಕ್ಷ ಕೋಟಿ) ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ಯುರೋಪಿನ ‘ಇಂಧನ ಮತ್ತು ಶುದ್ಧ ಗಾಳಿ ಕುರಿತ ಸಂಶೋಧನಾ ಕೇಂದ್ರ’ (ಸಿಆರ್ಇಎ) ಅಂದಾಜು ಮಾಡಿದೆ.
ಇದೇ ಅವಧಿಯಲ್ಲಿ ಚೀನಾ ದೇಶವು ರಷ್ಯಾದಿಂದ ಅಂದಾಜು 210 ಬಿಲಿಯನ್ ಯೂರೊ ಮೌಲ್ಯದ (ಸರಿಸುಮಾರು ₹22.16 ಲಕ್ಷ ಕೋಟಿ) ಕಚ್ಚಾ ತೈಲವನ್ನು ಖರೀದಿಸಿದೆ.
ಭಾರತವು ರಷ್ಯಾದಿಂದ ಕಚ್ಚಾ ತೈಲ ಮಾತ್ರವೇ ಅಲ್ಲದೆ 18.18 ಬಿಲಿಯನ್ ಯೂರೊ (ಸರಿಸುಮಾರು ₹1.91 ಲಕ್ಷ ಕೋಟಿ) ಮೌಲ್ಯದ ಕಲ್ಲಿದ್ದಲನ್ನು ಕೂಡ ಖರೀದಿಸಿದೆ.
ಚೀನಾ ಕೂಡ ರಷ್ಯಾದಿಂದ ಹಾಗೂ ಅನಿಲವನ್ನು ಕಲ್ಲಿದ್ದಲು ಖರೀದಿಸಿದೆ.
ಇದೇ ಅವಧಿಯಲ್ಲಿ ಐರೋಪ್ಯ ಒಕ್ಕೂಟವು ರಷ್ಯಾದಿಂದ ಒಟ್ಟು 218.1 ಬಿಲಿಯನ್ ಯೂರೊ (ಸರಿಸುಮಾರು ₹23.02 ಲಕ್ಷ ಕೋಟಿ) ಮೌಲ್ಯದ ಪಳೆಯುಳಿಕೆ ಇಂಧನವನ್ನು (ಕಲ್ಲಿದ್ದಲು. ತೈಲ ಮತ್ತು ಅನಿಲ) ಖರೀದಿಸಿದೆ.

ನಾಡಗೀತೆ: ಅನಂತಸ್ವಾಮಿ ಧಾಟಿಯೇ ಸಿಂಧು

ಸಂದರ್ಭ: ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ’ಜಯ ಭಾರತ ಜನನಿಯ ತನುಜಾತೆ…’ ನಾಡಗೀತೆ ಹಾಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿಕೃಷ್ಣಮೂರ್ತಿಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

  • ‘ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನು ಅಳವಡಿಸಿಕೊಂಡು ಅದರ ಪೂರ್ಣಪಾಠ ಬಳಸಬೇಕು ಹಾಗೂ ಅಲಾಪವಿಲ್ಲದೇ, ಪುನರಾವರ್ತನೆ ಇಲ್ಲದೆ 2 ನಿಮಿಷ 30 ಸೆಕೆಂಡುಗಳಲ್ಲಿ ಹಾಡಬೇಕು’ ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರಸು ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ: ಅರಸು ನಂತರ ಮುಖ್ಯಮಂತ್ರಿಯಾಗಿ 7 ವರ್ಷ 239 ದಿನ ಆಡಳಿತ: 17ನೇ ಬಾರಿ ಬಜೆಟ್ ಮಂಡನೆ ಸಿದ್ಧತೆಯಲ್ಲಿ ಮುಖ್ಯಮಂತ್ರಿ

ಸಂದರ್ಭ: ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅರಸು ಹೊಂದಿದ್ದ ದೇವರಾಜ ಅವರ ದಾಖಲೆಯನ್ನು ಸಿದ್ದರಾಮಯ್ಯ (ಜ. 6) ಸರಿಗಟ್ಟಲಿದ್ದಾರೆ. ಆ ಮೂಲಕ, ಅತಿ ಹೆಚ್ಚು ಅವಧಿ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಎಂಬ ಗರಿಮೆಗೆ ಅವರು ಪಾತ್ರರಾಗಲಿದ್ದಾರೆ.

  • ಈ ಹಿರಿಮೆಯ ಹೊರತಾಗಿ, ಅತಿ ಹೆಚ್ಚು 16 ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನೂ ಸಿದ್ದರಾಮಯ್ಯ ಹೊಂದಿದ್ದಾರೆ. ಅಲ್ಲದೆ, 2026-27ನೇ ಸಾಲಿನಲ್ಲಿ ತಮ್ಮ 17ನೇ ಬಜೆಟ್ ಮಂಡಿಸುವ ಉತ್ಸಾಹದಲ್ಲಿದ್ದಾರೆ.
  • ‘ಸಾಮಾಜಿಕ ನಾಯಕರಾಗಿ ನ್ಯಾಯ’ದ ಗುರುತಿಸಿಕೊಂಡಿದ್ದ ದೇವರಾಜ ಅರಸು 2,789 ದಿನಗಳು, ಅಂದರೆ 7 ವರ್ಷ 239 ದಿನ (ಎರಡು ಅವಧಿಗೆ) ಮುಖ್ಯಮಂತ್ರಿ ಆಗಿದ್ದರು. ಈ ದಾಖಲೆಯನ್ನು ಸಿದ್ದರಾಮಯ್ಯ ಮುರಿಯಲಿದ್ದಾರೆ.
  • ಅರಸು ಅವರು 1972ರ ಮಾರ್ಚ್ 20ರಿಂದ 1980 ಜನವರಿ 7ರವರೆಗೆ ಸತತ ಏಳೂವರೆ ವರ್ಷ ಮುಖ್ಯಮಂತ್ರಿಯಾಗಿ ನಿರ್ವಹಿಸಿದ್ದರು. 2013 ಅವಧಿಯಲ್ಲಿ ಸಿದ್ದರಾಮಯ್ಯ 2018ರ ಮೊದಲ ಬಾರಿ 1,829 ದಿನ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು. 2023ರ ಮೇ 20ರಿಂದ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಮುಖ್ಯಮಂತ್ರಿಯ ಅಧಿಕಾರಾವಧಿ ಲೆಕ್ಕ ಮಾಡುವಾಗ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಪರಿಗಣಿಸಲಾಗುತ್ತದೆ ಎಂದು ವಿಧಾನಸಭೆ ಮೂಲಗಳು ತಿಳಿಸಿವೆ. ಸಚಿವಾಲಯದ ಅರಸು ಮತ್ತು ಸಿದ್ದರಾಮಯ್ಯ ಇಬ್ಬರೂ ತಮ್ಮ ವರ್ಚಸ್ಸು, ಸಂಘಟನಾ ಚಾತುರ್ಯದಿಂದ ರಾಜ್ಯ ರಾಜಕೀಯದಲ್ಲಿ ಬೆಳೆದವರು. ಅಲ್ಪಸಂಖ್ಯಾತ, ಹಿಂದುಳಿದ, ದಲಿತ (ಅಹಿಂದ) ಸಂಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡವರು. ಒಕ್ಕಲಿಗರು ಮತ್ತು ಲಿಂಗಾಯತರ ಪ್ರಾಬಲ್ಯದ ನಡುವೆ, ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿ ಪಟ್ಟದಲ್ಲಿ ಉಳಿಯಲು ಕೂಡ ಈ ಸಂಯೋಜನೆ ಇಬ್ಬರಿಗೂ ಸಹಾಯ ಮಾಡಿದೆ. ಸಿದ್ದರಾಮಯ್ಯ ಅವರು ಅಹಿಂದ ನಾಯಕರೆಂದೇ ಹೆಸರು ಗಳಿಸಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳ ಬಲ ಕುಗ್ಗಿಸಲು ಅವರು ಈ ‘ಅಸ್ತ್ರ’ವನ್ನು ಸಮರ್ಥ ವಾಗಿ ಬಳಸಿಕೊಂಡಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿದೆ.
  • ಸಾಮಾಜಿಕ ನ್ಯಾಯ, ಜಾತ್ಯತೀತತೆ ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ಕೋಮುವಾದ ವಿರೋಧಿ ನಿಲುವುಗಳನ್ನು ಬಲವಾಗಿ ಪ್ರತಿಪಾದಿಸುತ್ತಲೇ ಬಂದಿರುವ ಸಿದ್ದರಾಮಯ್ಯ, ಅಹಿಂದ ಗುಂಪುಗಳ ಕಡೆಗೆ ವಿಶೇಷ ಪ್ರೀತಿ ತೋರಿದರು. ತಮ್ಮ ಅಧಿಕಾರಾವಧಿಯಲ್ಲಿ ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹಲವು ‘ಭಾಗ್ಯ’ಗಳ ಜೊತೆಗೆ, ಹಲವು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಈ ಅವಧಿಯಲ್ಲಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಪಂಚ ಗ್ಯಾರಂಟಿ’ಗಳನ್ನು ಅನುಷ್ಠಾನ ಮಾಡಿದೆ. ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಜನತಾಪಕ್ಷ, ಜನತಾದಳ ಮತ್ತು 2006ರಿಂದ ಕಾಂಗ್ರೆಸ್‌ನಲ್ಲಿ ಮುಂದುವರಿದಿದೆ. ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾದವರಲ್ಲಿ ದೇವರಾಜ ಅರಸು ಅವರ ನಂತರ ಎಸ್. ನಿಜಲಿಂಗಪ್ಪ(7 ವರ್ಷ 175 ದಿನ), ರಾಮಕೃಷ್ಣ ಹೆಗಡೆ (5 ವರ್ಷ 216 ದಿನ), ಬಿ.ಎಸ್.ಯಡಿಯೂರಪ್ಪ (5 ವರ್ಷ 82 ದಿನ) ಇದ್ದಾರೆ.

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಜನವರಿ 7, 2026 ರಂದು ಸಿದ್ದರಾಮಯ್ಯನವರು ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೊದಲು ಡಿ. ದೇವರಾಜ್ ಅರಸು ಅವರು ಹೊಂದಿದ್ದ 7 ವರ್ಷ 239 ದಿನಗಳ ಸುದೀರ್ಘ ಆಡಳಿತದ ದಾಖಲೆಯನ್ನು ಇವರು ಮುರಿದಿದ್ದಾರೆ.

ಕರ್ನಾಟಕದ ಇತರ ಪ್ರಮುಖ ಮುಖ್ಯಮಂತ್ರಿಗಳು ಮತ್ತು ಭಾರತದ ದೀರ್ಘಕಾಲದ ಮುಖ್ಯಮಂತ್ರಿಗಳ ನಡುವಿನ ತುಲನಾತ್ಮಕ ಮಾಹಿತಿ ಇಲ್ಲಿದೆ:

ಕರ್ನಾಟಕದ ದೀರ್ಘಕಾಲದ ಮುಖ್ಯಮಂತ್ರಿಗಳ ಪಟ್ಟಿ
ಕರ್ನಾಟಕದಲ್ಲಿ ರಾಜಕೀಯ ಏರಿಳಿತಗಳು ಹೆಚ್ಚಿರುವುದರಿಂದ, ಪೂರ್ಣ 5 ವರ್ಷಗಳ ಅವಧಿಯನ್ನು ಪೂರೈಸಿದ ಮುಖ್ಯಮಂತ್ರಿಗಳು ಬಹಳ ಕಡಿಮೆ.

ಮುಖ್ಯಮಂತ್ರಿಒಟ್ಟು ಅಧಿಕಾರಾವಧಿ (ದಿನಗಳು/ವರ್ಷ)ವಿಶೇಷತೆ
ಸಿದ್ದರಾಮಯ್ಯ2,793+ ದಿನಗಳು (7 ವರ್ಷ, 240 ದಿನ ದಾಟಿದೆ)ಅರಸು ಅವರ ದಾಖಲೆ ಮುರಿದವರು; ಎರಡು ಪೂರ್ಣ ಅವಧಿಗಳತ್ತ ಸಾಗುತ್ತಿದ್ದಾರೆ.
ಡಿ. ದೇವರಾಜ್ ಅರಸು2,790 ದಿನಗಳು (7 ವರ್ಷ, 239 ದಿನ)ಸಾಮಾಜಿಕ ನ್ಯಾಯದ ಹರಿಕಾರ; 1970ರ ದಶಕದಲ್ಲಿ ಸುಧಾರಣೆ ತಂದವರು.
ಎಸ್. ನಿಜಲಿಂಗಪ್ಪ2,729 ದಿನಗಳು (7 ವರ್ಷ, 175 ದಿನ)ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ.
ರಾಮಕೃಷ್ಣ ಹೆಗ್ಡೆ~1,967 ದಿನಗಳು (5 ವರ್ಷ, 214 ದಿನ)ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ.
ಬಿ. ಎಸ್. ಯಡಿಯೂರಪ್ಪ~1,900+ ದಿನಗಳು (5 ವರ್ಷ+)4 ಬಾರಿ ಮುಖ್ಯಮಂತ್ರಿಯಾದರೂ ಒಮ್ಮೆಯೂ ಪೂರ್ಣಾವಧಿ ಪೂರೈಸಲಿಲ್ಲ.

ಭಾರತ vs ಕರ್ನಾಟಕ: ಸುದೀರ್ಘಾವಧಿಯ ಸಿಎಂಗಳ ತುಲನೆ
ಕರ್ನಾಟಕದ ಅತ್ಯಂತ ದೀರ್ಘಾವಧಿಯ ದಾಖಲೆ (7-8 ವರ್ಷ) ಭಾರತದ ಇತರ ರಾಜ್ಯಗಳ ದಾಖಲೆಗೆ ಹೋಲಿಸಿದರೆ ಕಡಿಮೆಯೆಂದೇ ಹೇಳಬಹುದು. ಭಾರತದಲ್ಲಿ 20 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ನಾಯಕರಿದ್ದಾರೆ.

ನಾಯಕರಾಜ್ಯಅಧಿಕಾರಾವಧಿಹೋಲಿಕೆ
ಪವನ್ ಕುಮಾರ್ ಚಾಮ್ಲಿಂಗ್ಸಿಕ್ಕಿಂ24 ವರ್ಷ, 165 ದಿನಭಾರತದ ಅತಿ ದೀರ್ಘಕಾಲದ ಸಿಎಂ (ಸತತ ಆಡಳಿತ).
ನವೀನ್ ಪಟ್ನಾಯಕ್ಒಡಿಶಾ24 ವರ್ಷ, 96 ದಿನಪ್ರಾದೇಶಿಕ ಪಕ್ಷದ ಬಲವಾದ ಹಿಡಿತಕ್ಕೆ ಸಾಕ್ಷಿ.
ಜ್ಯೋತಿ ಬಸುಪಶ್ಚಿಮ ಬಂಗಾಳ23 ವರ್ಷ, 137 ದಿನಕಮ್ಯುನಿಸ್ಟ್ ಪಕ್ಷದ ಸುದೀರ್ಘ ಆಡಳಿತ.
ಸಿದ್ದರಾಮಯ್ಯಕರ್ನಾಟಕ~7 ವರ್ಷ+ಕರ್ನಾಟಕದ ಸ್ಥಿರತೆಗೆ ಹೋಲಿಸಿದರೆ ದೊಡ್ಡ ಮೈಲಿಗಲ್ಲು.

Sources: Prajavani

ರಾಜ್ಯದಲ್ಲಿ ಹುಲಿ ಗಣತಿ ಆರಂಭ: 38 ಅರಣ್ಯ ವಿಭಾಗಗಳಲ್ಲಿ ಗಣತಿಗಾಗಿ ಅಗತ್ಯ ತರಬೇತಿ

ಸಂದರ್ಭ:  ‘ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಲ್ಲಿ (ಜ.5) ಹುಲಿ ಹಾಗೂ ಮಾಂಸಾಹಾರಿ ಪ್ರಾಣಿಗಳ ಗಣತಿ ಆರಂಭಗೊಂಡಿದೆ’.

  • ‘ಕಾಳಿ, ಭದ್ರಾ, ನಾಗರ ಹೊಳೆ, ಬಂಡೀಪುರ, ಬಿ.ಆ‌ರ್.ಟಿ ಹುಲಿ ಸಂರಕ್ಷಿತ ಧಾಮ ಸೇರಿದಂತೆ ರಾಜ್ಯದ ಎಲ್ಲ ಅರಣ್ಯ ಪ್ರದೇಶದಲ್ಲಿ ಗಣತಿ ಆರಂಭವಾಗಿದೆ. ನಾಲ್ಕು ವರ್ಷಗಳಿಗೊಮ್ಮೆ ದೇಶದಾದ್ಯಂತ ಹುಲಿ ಅಂದಾಜು ಗಣತಿ ನಡೆಯುತ್ತಿದೆ’.
  • ‘ಈಗ ನಡೆಯುವುದು ‘ಆರನೇ ಗಣತಿ. ಹಿಂದೆ 2006, 2010, 2014, 2018. 2022 ನಡೆದಿತ್ತು. ರಾಜ್ಯದಲ್ಲಿ ಸುಮಾರು 563 ಹುಲಿಗಳಿವೆ ಎಂಬ ಅಂದಾಜಿದೆ. ದೇಶದಲ್ಲೇ ರಾಜ್ಯ ಎರಡನೇ ಸ್ಥಾನದಲ್ಲಿತ್ತು’.
  • ಅರಣ್ಯ ಪ್ರದೇಶಗಳ ಪ್ರತಿ ವಲಯದಲ್ಲಿರುವ ಎಲ್ಲ 38 ಅರಣ್ಯ ವಿಭಾಗದ ಗಸ್ತುಗಳಲ್ಲಿ ಈ ಕಾರ್ಯ ನಡೆಯಲಿದೆ. ಇದಕ್ಕಾಗಿ ಕಳೆದ ಅಕ್ಟೋಬ‌ರ್-ಡಿಸೆಂಬರ್‌ನಲ್ಲಿ 5 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಪ್ರತ್ಯೇಕವಾಗಿ ಮತ್ತು  ರಾಜ್ಯದ ಎಲ್ಲಾ 13 ಅರಣ್ಯ ವೃತ್ತಗಳ ಮುಂಚೂಣಿ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ.
  • ಮೂರು ದಿನ ಎಲ್ಲ ವಿಭಾಗಗಳಲ್ಲಿ ಮೂವರ ತಂಡ ನಿತ್ಯ 5 ಕಿ.ಮೀ. ಕಾಡಿನಲ್ಲಿ ಸಂಚರಿಸಿ ಹುಲಿ, ಚಿರತೆ ಸೇರಿ ಎಲ್ಲ ಮಾಂಸಾಹಾರಿ ಪ್ರಾಣಿಗಳ ಮತ್ತು ಆನೆಯ ಕಾಲು ಗುರುತು, ಲದ್ದಿ, ಪ್ರತ್ಯಕ್ಷ ದರ್ಶನ ಇತ್ಯಾದಿ ವಿವರ ಕಲೆ ಹಾಕಲಿದೆ. ಜ. 15ರಿಂದ 17ರವರೆಗೆ 14 ಅರಣ್ಯ ವಿಭಾಗಗಳಲ್ಲಿ 2ನೇ ಹಂತದ ಗಣತಿ ನಡೆಯಲಿದೆ. ಪ್ರತಿ ತಂಡ ಕಾಡಿನಲ್ಲಿ ಸಂಚರಿಸಿ ಜಿಂಕೆ, ಕಡವೆ, ಕಾಡೆಮ್ಮೆ, ಕಾಡುಕೋಣ ಸೇರಿ ಸಸ್ಯಾಹಾರಿ ಪ್ರಾಣಿಗಳ ದರ್ಶನದ ಮಾಹಿತಿ ಕಲೆ ಹಾಕಲಿದೆ. ಎಲ್ಲ ಇದರಿಂದ ಎಲ್ಲಿ ಕ್ಯಾಮೆರಾ ಟ್ರಾಪ್ ಅಳವಡಿಸಬೇಕು ಎಂಬುದನ್ನು ನಿರ್ಧರಿ ಸಲು ಅನುಕೂಲವಾಗುತ್ತದೆ.
  • ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಅವರನ್ನು ಎನ್.ಟಿ.ಸಿ.ಎ.ಗೆ ನೋಡಲ್ ಅಧಿಕಾರಿ ಯಾಗಿ ನಾಮನಿರ್ದೇಶನ ಮಾಡಲಾಗಿದೆ. ಇವರು ಈ ಅಂದಾಜಿನ ಉಸ್ತುವಾರಿ ವಹಿಸಲಿದ್ದಾರೆ. ಯಾವ ಪ್ರದೇಶದಲ್ಲಿ ಎಷ್ಟು ಹುಲಿ, ಇತರೆ ಮಾಂಸಾಹಾರಿ ಪ್ರಾಣಿಗಳಿವೆ. ಎಷ್ಟು ಸಸ್ಯಾಹಾರಿ ಪ್ರಾಣಿಗಳಿವೆ ಎಂದು ಪಟ್ಟಿಮಾಡಿ, ಅರಣ್ಯವಾರು ಎಷ್ಟು ಹುಲಿಗಳಿವೆ. ಅವುಗಳಿಗೆ ಆಹಾರವಾದ ಸಸ್ಯಾಹಾರಿ ಪ್ರಾಣಿಗಳು ಎಷ್ಟಿವೆ ಎಂದು ಗ್ರಹಿಸಿ ಕಾನನದ ಧಾರಣಾ ಸಾಮರ್ಥ್ಯ ಗುರುತಿಸಲು ಸೂಚಿಸಲಾಗಿದೆ.
  • ‘ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದನ್ನು ನೋಡಿದರೆ ಈ ಬಾರಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಗೋಚರಿಸುತ್ತಿದೆ. ಇದು ಗಣತಿಯಿಂದ ನಿಖರವಾಗಿ ತಿಳಿಯಲಿದೆ’.
  • ಹಿಂದಿನ ಸಮೀಕ್ಷೆಯಂತೆ ರಾಜ್ಯದಲ್ಲಿ 563 ಹುಲಿಗಳಿರುವ ಅಂದಾಜು: ಪ್ರತಿ ನಾಲ್ಕು ವರ್ಷಗಳಿ-ಗೊಮ್ಮೆ ಗಣತಿ ಪ್ರಕ್ರಿಯೆ: ಹುಲಿಗಳ ಸಂಖ್ಯೆ ವೃದ್ಧಿಸಿರುವ ಸಾಧ್ಯತೆ.

1.ರಾಷ್ಟ್ರೀಯ ಹುಲಿ ಗಣತಿಯ ಇತಿಹಾಸ (2006–2026)

ಭಾರತದಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿ ನಡೆಯುತ್ತದೆ. ಇದುವರೆಗೆ ನಡೆದಿರುವ ಗಣತಿಗಳ ವಿವರ ಇಲ್ಲಿದೆ:

ಗಣತಿಯ ಆವೃತ್ತಿವರ್ಷಸ್ಥಿತಿ
1ನೇ ಗಣತಿ2006ಯಶಸ್ವಿಯಾಗಿ ಪೂರ್ಣಗೊಂಡಿದೆ
2ನೇ ಗಣತಿ2010ಯಶಸ್ವಿಯಾಗಿ ಪೂರ್ಣಗೊಂಡಿದೆ
3ನೇ ಗಣತಿ2014ಯಶಸ್ವಿಯಾಗಿ ಪೂರ್ಣಗೊಂಡಿದೆ
4ನೇ ಗಣತಿ2018ಯಶಸ್ವಿಯಾಗಿ ಪೂರ್ಣಗೊಂಡಿದೆ
5ನೇ ಗಣತಿ2022ಕೊನೆಯದಾಗಿ ಪೂರ್ಣಗೊಂಡ ಗಣತಿ
6ನೇ ಗಣತಿ2026ಪ್ರಸ್ತುತ (ಜ. 2026 ರಿಂದ)

2.ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳು (Tiger Reserves)
ಕರ್ನಾಟಕದಲ್ಲಿ ಒಟ್ಟು 5 ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಿವೆ. ಗಣತಿಯು ಮುಖ್ಯವಾಗಿ ಈ ಭಾಗಗಳಲ್ಲಿ ಕೇಂದ್ರೀಕೃತವಾಗಿರುತ್ತದೆ:

ಹುಲಿ ಸಂರಕ್ಷಿತ ಪ್ರದೇಶಜಿಲ್ಲೆವಿಶೇಷತೆ
ಬಂಡೀಪುರಚಾಮರಾಜನಗರದೇಶದ ಹಳೆಯ ಹುಲಿ ಯೋಜನೆಗಳಲ್ಲಿ ಒಂದು.
ನಾಗರಹೊಳೆಮೈಸೂರು/ಕೊಡಗುಅತಿ ಹೆಚ್ಚು ಹುಲಿ ಸಾಂದ್ರತೆ ಹೊಂದಿರುವ ಕಾಡುಗಳಲ್ಲಿ ಒಂದು.
ಬಿ.ಆರ್.ಟಿ (BRT)ಚಾಮರಾಜನಗರಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸೇತುವೆ.
ಭದ್ರಾಚಿಕ್ಕಮಗಳೂರುಕಾಫಿ ನಾಡಿನ ಪ್ರಮುಖ ಸಂರಕ್ಷಿತ ಪ್ರದೇಶ.
ಕಾಳಿ (ಅಂಶಿ-ದಾಂಡೇಲಿ)ಉತ್ತರ ಕನ್ನಡಉತ್ತರ ಕರ್ನಾಟಕದ ಪ್ರಮುಖ ಹುಲಿ ಧಾಮ.

3.ಕರ್ನಾಟಕ vs ಭಾರತ: ಹುಲಿಗಳ ಸಂಖ್ಯೆ ಹೋಲಿಕೆ (2014–2022)
ಕಳೆದ ಮೂರು ಗಣತಿಗಳಲ್ಲಿ ಕರ್ನಾಟಕ ಮತ್ತು ಭಾರತದ ಒಟ್ಟು ಹುಲಿಗಳ ಸಂಖ್ಯೆಯಲ್ಲಿನ ಏರಿಕೆಯನ್ನು ಇಲ್ಲಿ ಗಮನಿಸಬಹುದು:

ವರ್ಷಕರ್ನಾಟಕದಲ್ಲಿ ಹುಲಿಗಳುಭಾರತದಲ್ಲಿ ಒಟ್ಟು ಹುಲಿಗಳುಕರ್ನಾಟಕದ ಸ್ಥಾನ
20144062,2261ನೇ ಸ್ಥಾನ
20185242,9672ನೇ ಸ್ಥಾನ (ಮಧ್ಯಪ್ರದೇಶದ ನಂತರ)
20225633,167 (ಕನಿಷ್ಠ) / 3,682 (ಅಂದಾಜು)2ನೇ ಸ್ಥಾನ

4.ಪ್ರಮುಖ ಅಂಕಿ-ಅಂಶಗಳು ಮತ್ತು ಹೋಲಿಕೆ
ರಾಜ್ಯಗಳ ಪೈಪೋಟಿ: 2022ರ ಅಂಕಿ-ಅಂಶದಂತೆ ಮಧ್ಯಪ್ರದೇಶ (785 ಹುಲಿಗಳು) ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (563 ಹುಲಿಗಳು) ಎರಡನೇ ಸ್ಥಾನದಲ್ಲಿದೆ. ಉತ್ತರಾಖಂಡ (560) ಮೂರನೇ ಸ್ಥಾನದಲ್ಲಿದೆ.

ಗಣತಿ ವಿಧಾನ: ಈ ಬಾರಿ ‘M-STrIPES’ ಮೊಬೈಲ್ ಅಪ್ಲಿಕೇಶನ್ ಮತ್ತು ಸುಧಾರಿತ ಕ್ಯಾಮೆರಾ ಟ್ರಾಪ್ (Camera Trap) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ಹೆಚ್ಚಳದ ನಿರೀಕ್ಷೆ: ಕರ್ನಾಟಕದ ಕಾಡುಗಳಲ್ಲಿ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಸಮೃದ್ಧವಾಗಿರುವುದರಿಂದ, 2026ರ ಗಣತಿಯಲ್ಲಿ ಹುಲಿಗಳ ಸಂಖ್ಯೆ 600 ದಾಟುವ ನಿರೀಕ್ಷೆಯಿದೆ.

Source: Prajavani

‘ಸ್ವಾದಭರಿತ ಹಾಲಿಗೆ ಶೇ 5ರಷ್ಟು ಜಿಎಸ್‌ಟಿ’

ಸಂದರ್ಭ: ಸ್ವಾದಭರಿತ ಹಾಲನ್ನು ಡೇರಿ ಉತ್ಪನ್ನವೆಂದು ಪರಿಗಣಿಸಬೇಕೇ ಹೊರತು ಪಾನೀಯ ಎಂದು ವರ್ಗೀಕರಿ ಸುವಂತಿಲ್ಲ. ಹಾಗಾಗಿ, ಅದಕ್ಕೆ ಶೇ12ರಷ್ಟು ಜಿಎಸ್‌ಟಿ ವಿಧಿಸುವ ಬದಲು ಶೇ 5ರಷ್ಟು ಮಾತ್ರ ವಿಧಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.

  • ಈ ಸಂಬಂಧ ‘ದೊಡ್ಡ’ ಡೇರಿ ಲಿಮಿಟೆಡ್ ಕಂಪನಿ ಸಲ್ಲಿಸಿದ್ದರಿಟ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರ ದೊಡ್ಡ ಕಂಪನಿ ಪಾವತಿ ಮಾಡಿರುವ ತೆರಿಗೆ ಹಣವನ್ನು ಮರು ಪಾವತಿಸುವಂತೆ ನಿರ್ದೇಶಿಸಿದೆ.
  • ‘ಸುವಾಸನೆಭರಿತ ಹಾಲನ್ನು ಹೊಂದಿ ರುವ ಪಾನೀಯಗಳು ಉದ್ದೇಶಿತ ಜಿಎಸ್‌ಟಿ ಸುಂಕದ ಶೀರ್ಷಿಕೆಯ ಅಡಿಯಲ್ಲಿ ಬರುತ್ತವೆಯೇ ಅಥವಾ ಹಾಲು ಮತ್ತು ಕೆನೆ ಬೆರೆಸಿದ ಸಕ್ಕರೆ ಅಥವಾ ಸಿಹಿಕಾರಕಗಳನ್ನು ಒಳಗೊಂಡ ವರ್ಗದಡಿಯಲ್ಲಿ ಬರುತ್ತವೆಯೇ’ ಎಂಬುದರ ಪರಾಮರ್ಶೆಯನ್ನು ನ್ಯಾಯಪೀಠ ನಡೆಸಿತು.
  • ಸುವಾಸನೆಭರಿತ ಹಾಲು ಮೂಲ ಹಾಲಾಗಿಯೇ ಸ್ವರೂಪದಲ್ಲಿಯೂ ಉಳಿದುಕೊಳ್ಳುತ್ತದೆ ಮತ್ತು ಸುಂಕ ಶೀರ್ಷಿಕೆ ವ್ಯಾಪ್ತಿಗೆ ಒಳಪಡುತ್ತದೆ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ನ್ಯಾಯಪೀಠ, ‘ತೆರಿಗೆದಾರರು ಠೇವಣಿ ಮಾಡಿದ ಮೊತ್ತವನ್ನು ಅನ್ವಯವಾಗುವ ಬಡ್ಡಿಯೊಂದಿಗೆ ಮರು ಪಾವತಿಸಬೇಕು’ ಎಂದು ತೆರಿಗೆ ಇಲಾಖೆಗೆ ನಿರ್ದೇಶಿಸಿದೆ.
  • ಪ್ರಕರಣವೇನು?: ಹಾಲು ಹಾಲಿನ ಉತ್ಪನ್ನಗಳ ತಯಾರಕರ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಧಿಕಾರಿಗಳು ಡೇರಿ ಉತ್ಪನ್ನಗಳಿಗೆ ಅನ್ವಯವಾಗುವ ಶೇ 5ರ ಜಿಎಸ್‌ಟಿಯನ್ನು ಶೇ 12ರಿಂದ ಶೇ18ಕ್ಕೆ ಹೆಚ್ಚಿಸಿದ್ದರು. ಈ ಸಂಬಂಧ ಸಿಜಿಎಸ್‌ಟಿ ಕಾಯ್ದೆಯ ಕಲಂ 74ರ ತೆರಿಗೆ ಅಡಿಯಲ್ಲಿ ತಯಾರಕರಿಗೆ ಷೋಕಾಸ್ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು 2021ರ ಡಿಸೆಂಬರ್‌ನಲ್ಲಿ ಜಿಎಸ್‌ಟಿಗೆ ₹72.95 ಲಕ್ಷ ಠೇವಣಿ ಮಾಡಿತ್ತು. ನಂತರ ಜಿಎಸ್‌ಟಿ ಆದೇಶವನ್ನು ಪ್ರಶ್ನಿಸಿ ಸಕ್ಷಮ ಪ್ರಾಧಿಕಾರದ ಮೆಟ್ಟಿಲೇರಿತ್ತು. ಇದರ ವಿಚಾರಣೆ ನಡೆಸಿದ ಮೊದಲ ಮೇಲ್ಮನವಿ ಪ್ರಾಧಿಕಾರ ಕಂಪನಿಯ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.

🥛 ಹಾಲು ಮತ್ತು ಹಾಲಿನ ಉತ್ಪನ್ನಗಳ ಜಿಎಸ್ಟಿ ಹಿನ್ನಲೆ
🔹 2017ರ ಜಿಎಸ್ಟಿ ಜಾರಿಗೆ ಮೊದಲು
ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ವಿವಿಧ ರಾಜ್ಯಗಳಲ್ಲಿ ವಿಭಿನ್ನ ತೆರಿಗೆ ದರಗಳು ಇದ್ದವು.

ಕೆಲ ರಾಜ್ಯಗಳಲ್ಲಿ ಹಾಲಿಗೆ ತೆರಿಗೆ ಇರಲಿಲ್ಲ, ಆದರೆ ಬೆಣ್ಣೆ, ಗೀ, ಚೀಸ್ ಮುಂತಾದ ಉತ್ಪನ್ನಗಳಿಗೆ VAT/Excise ವಿಧಿಸಲಾಗುತ್ತಿತ್ತು.

🔹 2017ರ ಜಿಎಸ್ಟಿ ಜಾರಿಗೆ ನಂತರ

ಉತ್ಪನ್ನಹಳೆಯ ಜಿಎಸ್‌ಟಿ ದರ (2017–2024)ಹೊಸ ಜಿಎಸ್‌ಟಿ ದರ (2025 ರ ನಿರ್ಧಾರ)ಪ್ರಮುಖ ಟಿಪ್ಪಣಿ
ಸಾಮಾನ್ಯ ಹಾಲುNil (ವಿನಾಯಿತಿ)Nilಮೂಲ ಹಾಲಿಗೆ ಯಾವುದೇ ತೆರಿಗೆ ಇಲ್ಲ.
UHT ಹಾಲು (Ultra High Temperature)5%Nilಪ್ಯಾಕೇಜ್ಡ್ ಹಾಲಿನ ಮೇಲಿನ ತೆರಿಗೆ ತೆಗೆದುಹಾಕಲಾಗಿದೆ.
ಪ್ಯಾಕೇಜ್ ಮಾಡಿದ ಪನೀರ್/ಚೆನ್ನಾ5%Nilಸಾಮಾನ್ಯ ಜನರ ಬಳಕೆಯ ವಸ್ತುವೆಂದು ತೆರಿಗೆ ವಿನಾಯಿತಿ.
ಬೆಣ್ಣೆ, ತುಪ್ಪ (Ghee)12%5%ದರ ಕಡಿತದಿಂದ ಗ್ರಾಹಕರಿಗೆ ದೊಡ್ಡ ಲಾಭ.
ಚೀಸ್ (Cheese)12%5%ಹಾಲಿನ ಉಪ ಉತ್ಪನ್ನವಾಗಿ ಪರಿಗಣಿಸಿ ದರ ಇಳಿಕೆ.
ಕಾಂಡೆನ್ಸ್‌ಡ್ ಮಿಲ್ಕ್12%5%ಸಿಹಿ ಹಾಲಿನ ಉತ್ಪನ್ನಗಳ ಮೇಲಿನ ಹೊರೆ ಕಡಿಮೆ.
ಸ್ವಾದಭರಿತ ಹಾಲು (Flavoured Milk)12%5%ಹೈಕೋರ್ಟ್ ತೀರ್ಪಿನ ಅನ್ವಯ ಡೈರಿ ಉತ್ಪನ್ನವಾಗಿ ಸೇರ್ಪಡೆ.

ಈ ಬದಲಾವಣೆಯ ಮುಖ್ಯ ಉದ್ದೇಶಗಳು:
ಹೈನುಗಾರಿಕೆಗೆ ಉತ್ತೇಜನ: ಹಾಲಿನ ಉತ್ಪನ್ನಗಳ ಬಳಕೆ ಹೆಚ್ಚಿಸಲು ಮತ್ತು ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಬೆಲೆ ಇಳಿಕೆ: ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗುವುದರಿಂದ ಸಾರ್ವಜನಿಕರ ಮಾಸಿಕ ಖರ್ಚು ಉಳಿತಾಯವಾಗಲಿದೆ.

ಮುಖ್ಯವಾಗಿ ಸ್ವಾದಭರಿತ ಹಾಲು (Flavoured Milk) ಅನ್ನು ‘ಪಾನೀಯ’ ಎಂದು ಪರಿಗಣಿಸಬೇಕೆ ಅಥವಾ ‘ಹಾಲಿನ ಉತ್ಪನ್ನ’ ಎಂದು ಪರಿಗಣಿಸಬೇಕೆ ಎಂಬ ಬಗ್ಗೆ ಇದ್ದ ಗೊಂದಲಕ್ಕೆ 2026ರ ಹೈಕೋರ್ಟ್ ತೀರ್ಪು ಪೂರ್ಣವಿರಾಮ ಹಾಕಿದೆ.
ಹಾಲಿನ ಉತ್ಪನ್ನಗಳ ಜಿಎಸ್‌ಟಿ ವಿವಾದದ ಕಾಲಾನುಕ್ರಮ (Timeline)

ವರ್ಷಘಟನೆವಿವರ
2017ಜಿಎಸ್‌ಟಿ ಜಾರಿಹೊಸ ತೆರಿಗೆ ವ್ಯವಸ್ಥೆಯಲ್ಲಿ ಹಾಲಿನ ಉತ್ಪನ್ನಗಳಿಗೆ ಬೇರೆ ಬೇರೆ ದರಗಳನ್ನು ನಿಗದಿಪಡಿಸಲಾಯಿತು.
2019–21ತೆರಿಗೆ ವಿವಾದಸ್ವಾದಭರಿತ ಹಾಲನ್ನು ಪಾನೀಯ ಎಂದು ಪರಿಗಣಿಸಿ ಅಧಿಕಾರಿಗಳು ದರವನ್ನು 5% ರಿಂದ 12–18% ಕ್ಕೆ ಹೆಚ್ಚಿಸಿದರು.
2021ಕಾನೂನು ಹೋರಾಟದೊಡ್ಡ ಡೈರಿ ಕಂಪನಿಯೊಂದು ₹72.95 ಲಕ್ಷ ತೆರಿಗೆ ಪಾವತಿಸಿ, ನ್ಯಾಯಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿತು.
2025ಕೌನ್ಸಿಲ್ ನಿರ್ಧಾರಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಡೈರಿ ಉದ್ಯಮವನ್ನು ಉತ್ತೇಜಿಸಲು ದರ ಕಡಿತದ ನಿರ್ಧಾರ ಕೈಗೊಳ್ಳಲಾಯಿತು.
2026ಹೈಕೋರ್ಟ್ ತೀರ್ಪುಸ್ವಾದಭರಿತ ಹಾಲಿಗೆ 5% ಜಿಎಸ್‌ಟಿ ಮಾತ್ರ ಅನ್ವಯ ಎಂದು ಐತಿಹಾಸಿಕ ತೀರ್ಪು ನೀಡಲಾಯಿತು.

ಈ ತೀರ್ಪಿನ ಪ್ರಮುಖ ಪರಿಣಾಮಗಳು:
ಕಡಿಮೆ ಬೆಲೆ: 12% ಅಥವಾ 18% ತೆರಿಗೆಯ ಬದಲಾಗಿ ಕೇವಲ 5% ತೆರಿಗೆ ವಿಧಿಸುವುದರಿಂದ ಮಾರುಕಟ್ಟೆಯಲ್ಲಿ ಸ್ವಾದಭರಿತ ಹಾಲಿನ ಬೆಲೆ ಇಳಿಕೆಯಾಗಲಿದೆ.

ಉದ್ಯಮಕ್ಕೆ ನೆರವು: ಡೈರಿ ಕಂಪನಿಗಳಿಗೆ ಇದ್ದ ತೆರಿಗೆ ಹೊರೆ ಕಡಿಮೆಯಾಗಿ, ಈ ವಲಯದಲ್ಲಿ ಹೆಚ್ಚಿನ ಹೂಡಿಕೆಗೆ ದಾರಿಯಾಗುತ್ತದೆ.

ಸ್ಪಷ್ಟತೆ: ಹಾಲಿನಿಂದ ತಯಾರಿಸಿದ ಯಾವುದೇ ಪಾನೀಯವು ‘ಡೈರಿ ಉತ್ಪನ್ನ’ವೇ ಹೊರತು ಅದು ಸಾಫ್ಟ್ ಡ್ರಿಂಕ್ ಅಲ್ಲ ಎಂಬ ಕಾನೂನು ಸ್ಪಷ್ಟತೆ ಸಿಕ್ಕಂತಾಗಿದೆ.

Source: Prajavani

ಕರಾವಳಿ ಪಡೆಗೆ ‘ಸಮುದ್ರ ಪ್ರತಾಪ್‌’

ಸಂದರ್ಭ: ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಿರುವ ಮಾಲಿನ್ಯ ನಿಯಂತ್ರಣ ಹಡಗು (Pollution Control Vessel) ‘ಸಮುದ್ರ ಪ್ರತಾಪ್’ ಅನ್ನು ಭಾರತೀಯ ಕರಾವಳಿ ಪಡೆಗೆ 2026ರ ಜನವರಿಯಲ್ಲಿ ಅಧಿಕೃತವಾಗಿ ಸೇವೆಗೆ ಸೇರಿತು.

  • 4,200 ಟನ್ ತೂಕದ ಈ ಹಡಗು ಗಂಟೆಗೆ 22 ನಾಟಿಕಲ್ ಮೈಲು ವೇಗದಲ್ಲಿ ಚಲಿಸಲಿದ್ದು, 6 ಸಾವಿರ ನಾಟಿಕಲ್ ಮೈಲು ದೂರ ಚಲಿಸುವ ಸಾಮರ್ಥ್ಯ ಹೊಂದಿದೆ. 114.5 ಮೀಟರ್ ಉದ್ದವಿದ್ದು, ಶೇ 60ರಷ್ಟು ದೇಶೀಯ ವಸ್ತುಗಳಿಂದಲೇ ನಿರ್ಮಾಣಗೊಂಡಿದೆ.
  • ಕಡಲ ಮಾಲಿನ್ಯ ನಿಯಂತ್ರಣ ನಿಯಮಗಳು, ಕಡಲ ಕಾನೂನು ಜಾರಿ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಗಳು ಸೇರಿದಂತೆ ವಿಶೇಷ ಆರ್ಥಿಕ ವಲಯವನ್ನು (ಇಇಝಡ್) (Exclusive Economic Zone) ರಕ್ಷಿಸುವಲ್ಲಿ ಈ ಹಡಗು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ.

⚓ ಸಮುದ್ರ ಪ್ರತಾಪ್‌: ಪ್ರಮುಖ ಮಾಹಿತಿ

ಅಂಶವಿವರ
ಹಡಗಿನ ಹೆಸರುಐಸಿಜಿಎಸ್ ಸಮುದ್ರ ಪ್ರತಾಪ್ (ICGS Samudra Pratap)
ಉದ್ದ ಮತ್ತು ತೂಕ114.5 ಮೀಟರ್ ಉದ್ದ, 4,200 ಟನ್ ತೂಕ
ವೇಗಗಂಟೆಗೆ 22 ನಾಟಿಕಲ್ ಮೈಲು
ಕಾರ್ಯಾಚರಣಾ ವ್ಯಾಪ್ತಿ6,000 ನಾಟಿಕಲ್ ಮೈಲು ದೂರ ಸಂಚರಿಸಬಲ್ಲದು
ನಿರ್ಮಾಣ ಸ್ಥಳಗೋವಾ ಶಿಪ್‌ಯಾರ್ಡ್ ಲಿಮಿಟೆಡ್ (Goa Shipyard Ltd)
ದೇಶೀಯ ಪಾಲುಶೇ. 60ಕ್ಕಿಂತ ಹೆಚ್ಚು ಭಾಗ ದೇಶೀಯವಾಗಿ ನಿರ್ಮಿತವಾಗಿದೆ
ಸೇರ್ಪಡೆ ದಿನಾಂಕ5 ಜನವರಿ 2026

🌊 ಕಾರ್ಯಕ್ಷಮತೆ ಮತ್ತು ಉದ್ದೇಶ
ಮಾಲಿನ್ಯ ನಿಯಂತ್ರಣ: ಸಮುದ್ರದ ಮೇಲ್ಮೈಯಲ್ಲಿ ತೈಲ ಅಥವಾ ರಾಸಾಯನಿಕ ಸೋರಿಕೆ ಸಂಭವಿಸಿದರೆ ಶುದ್ಧೀಕರಣ ಕಾರ್ಯಾಚರಣೆ ನಡೆಸಲು.

ಕಡಲ ಕಾನೂನು ಜಾರಿ: ಸಮುದ್ರದ ಕಾನೂನು ಉಲ್ಲಂಘನೆಗಳನ್ನು ತಡೆಹಿಡಿಯಲು.

ಭಾರತಕ್ಕೆ ಮಹತ್ವ
ಆತ್ಮನಿರ್ಭರ ಭಾರತ: ಈ ಹಡಗು ಸಂಪೂರ್ಣವಾಗಿ ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ.

ಪರಿಸರ ಸಂರಕ್ಷಣೆಗೆ ಬಲ: ಕಡಲ ಮಾಲಿನ್ಯ ತಡೆಗೆ ತಂತ್ರಜ್ಞಾನ ಬಳಕೆ.

ರಕ್ಷಣಾ ಸಾಮರ್ಥ್ಯ: ಕರಾವಳಿ ಭದ್ರತೆಗೆ ಹೊಸ ಆಯಾಮ.

ಸಮುದ್ರ ಪ್ರತಾಪ್‌ ಭಾರತದ ಸಾಗರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಇದು ತಂತ್ರಜ್ಞಾನ, ಆತ್ಮನಿರ್ಭರತೆ ಮತ್ತು ಪರಿಸರ ಜವಾಬ್ದಾರಿಯ ಸಂಕೇತವಾಗಿದೆ.

Source: Prajavani

ಅಕ್ಕಿ ಉತ್ಪಾದನೆ: ಭಾರತ ಅಗ್ರ

ಸಂದರ್ಭ: ‘ಭಾರತವು, ಜಗತ್ತಿನಲ್ಲಿಅತಿಹೆಚ್ಚುಅಕ್ಕಿ ಉತ್ಪಾದನೆ ಮಾಡುವ ರಾಷ್ಟ್ರವಾಗಿದೆ. ಈ ಮೂಲಕ ಅಕ್ಕಿ ಉತ್ಪಾದನೆ-ಯಲ್ಲಿ ಚೀನಾವನ್ನುಭಾರತ ಮೀರಿಸಿದೆ’ ಎಂದು ಕೇಂದ್ರ ಕೃಷಿ ಸಚಿವ.

  • 2024-25ರ ಬೆಳೆ ವರ್ಷದಲ್ಲಿ ಭಾರತವು 15.01 ಕೋಟಿ ಟನ್ ಅಕ್ಕಿ ಉತ್ಪಾದನೆ ಮಾಡಿದೆ, ಚೀನಾ ದೇಶವು 14.52 ಕೋಟಿ ಟನ್ ಉತ್ಪಾದನೆ ಮಾಡಿದೆ. ಈ ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ಅಕ್ಕಿ ಉತ್ಪಾದನೆ ಮಾಡಿದ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.
  • 25 ಬೆಳೆಗಳ 184 ಹೊಸ ಸುಧಾರಿತ ತಳಿಗಳನ್ನು ಬಿಡುಗಡೆ ಮಾಡಿದರು.ಈ ತಳಿಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್), ಕೇಂದ್ರ ಹಾಗೂ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಖಾಸಗಿ ಬಿತ್ತನೆ ಬೀಜ ಕಂಪನಿಗಳು ಅಭಿವೃದ್ಧಿಪಡಿಸಿವೆ.
  • ಈ ಹೊಸ ತಳಿಗಳು ಹೆಚ್ಚು ಇಳುವರಿ ನೀಡಲಿದ್ದು, ರೈತರ ಆದಾಯವನ್ನು ಹೆಚ್ಚಿಸಲಿವೆ. ಹೆಚ್ಚಿನ ಮಟದ ರೋಗ ನಿರೋದಕ ಶಕ್ತಿ ಹೊಂದಿವೆ.
  • 1969 to 2014ರ ನಡುವೆ ಅಧಿಕ ಇಳುವರಿ ನೀಡುವ 3,969 ತಳಿಗಳಿಗೆ ಅನುಮೋದನೆ ನೀಡಲಾಗಿತ್ತು. ಆದರೆ, ಪ್ರಧಾನಿ ನೇತೃತ್ವದ ಸರ್ಕಾರವು ಅಧಿಕ ಇಳುವರಿ ನೀಡುವ 3,236 ತಳಿಗಳಿಗೆ ಅನುಮೋದನೆ ನೀಡಿದೆ.

✅ ಪ್ರಮುಖ ಅಂಶಗಳು:
ಭಾರತ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿದೆ (2025–26ರ ಅಂಕಿಅಂಶಗಳ ಪ್ರಕಾರ).

ಉತ್ಪಾದನೆಯ ಪ್ರಮಾಣ: ಸುಮಾರು 120–125 ಮಿಲಿಯನ್ ಟನ್ ಅಕ್ಕಿ ವರ್ಷಕ್ಕೆ.

ಮುಖ್ಯ ರಾಜ್ಯಗಳು: ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪಂಜಾಬ್, ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ.

ರಾಜ್ಯಉತ್ಪಾದನೆ (ಲಕ್ಷ ಟನ್‌ಗಳಲ್ಲಿ)ಉತ್ಪಾದನೆ (ಮಿಲಿಯನ್ ಟನ್‌ಗಳಲ್ಲಿ)ಪ್ರಮುಖ ಲಕ್ಷಣ
ಉತ್ತರ ಪ್ರದೇಶ~209.3~20.93ಭಾರತದ ಒಟ್ಟು ಉತ್ಪಾದನೆಯಲ್ಲಿ 14.04% ಪಾಲು.
ಪಶ್ಚಿಮ ಬಂಗಾಳ~164.9~16.49ಫಲವತ್ತಾದ ಮಣ್ಣಿನಿಂದಾಗಿ ಸ್ಥಿರ ಉತ್ಪಾದನೆ.
ಪಂಜಾಬ್~143.6~14.36ಅತ್ಯುತ್ತಮ ನೀರಾವರಿ ಮತ್ತು ಯಾಂತ್ರೀಕೃತ ಕೃಷಿ.
ಆಂಧ್ರ ಪ್ರದೇಶ~78.0~7.80ಕೃಷ್ಣಾ-ಗೋದಾವರಿ ನದಿ ಮುಖಜ ಭೂಮಿಯಲ್ಲಿ ಹೆಚ್ಚಿನ ಬೆಳೆ.
ತಮಿಳುನಾಡು~79.8~7.98ಸುಧಾರಿತ ಕೃಷಿ ಪದ್ಧತಿಗಳಿಂದ ಉತ್ಪಾದನೆ ಹೆಚ್ಚಳ.
ಕರ್ನಾಟಕ~41.8~4.18ಸೋನಾ ಮಸೂರಿ ಮತ್ತು ಬಿಪಿಟಿ ತಳಿಗಳ ಹೆಚ್ಚಿನ ಉತ್ಪಾದನೆ.

ಈ ಅಂಕಿಅಂಶಗಳ ಮಹತ್ವ:
ಉತ್ತರ ಪ್ರದೇಶ: ಇದು ಪ್ರಸ್ತುತ ಭಾರತದ ಅತಿ ದೊಡ್ಡ ಅಕ್ಕಿ ಉತ್ಪಾದಕ ರಾಜ್ಯವಾಗಿ ಹೊರಹೊಮ್ಮಿದೆ (ಸುಮಾರು 30.9% ರಷ್ಟು ಬೆಳವಣಿಗೆ ಕಂಡಿದೆ).

ಪಶ್ಚಿಮ ಬಂಗಾಳ: ಎರಡನೇ ಸ್ಥಾನದಲ್ಲಿದ್ದು, ದೇಶದ ಅಕ್ಕಿ ಉತ್ಪಾದನೆಯಲ್ಲಿ ಸುಮಾರು 11.06% ಪಾಲು ಹೊಂದಿದೆ.

ಕರ್ನಾಟಕ: ದಕ್ಷಿಣ ಭಾರತದ ಪ್ರಮುಖ ಅಕ್ಕಿ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿದ್ದು, ಗುಣಮಟ್ಟದ ಅಕ್ಕಿ ತಳಿಗಳಿಗೆ ಹೆಸರುವಾಸಿಯಾಗಿದೆ.

ಪ್ರಮುಖ ಬೆಳೆ ಕಾಲಗಳು: ಖರೀಫ್ (ಜೂನ್–ಅಕ್ಟೋಬರ್), ರಬಿ (ನವೆಂಬರ್–ಮಾರ್ಚ್).

ಭಾರತವು ಈಗ ಅಕ್ಕಿ ಉತ್ಪಾದನೆಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದ ಮೊದಲ ಸ್ಥಾನಕ್ಕೇರಿದೆ.


🌍 ಜಾಗತಿಕ ಅಕ್ಕಿ ಉತ್ಪಾದನೆ: ನವೀಕರಿಸಿದ ಅಂಕಿಅಂಶಗಳು (2025-26)

ಸ್ಥಾನದೇಶಅಕ್ಕಿ ಉತ್ಪಾದನೆ (ಮಿಲಿಯನ್ ಟನ್‌ಗಳಲ್ಲಿ)ಜಾಗತಿಕ ಪಾಲು (%)
1ಭಾರತ~150.1828%
2ಚೀನಾ~145.2827%
3ಬಾಂಗ್ಲಾದೇಶ~36.67%
4ಇಂಡೋನೇಶಿಯಾ~34.16%
5ವಿಯೆಟ್ನಾಂ~26.755%

ಭಾರತದ ಸಾಧನೆ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ದೇಶವಾಗಿ ಹೊರಹೊಮ್ಮಿದೆ.

ಹೊಸ ತಳಿಗಳ ಪಾತ್ರ: ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಅಭಿವೃದ್ಧಿಪಡಿಸಿದ 184ಕ್ಕೂ ಹೆಚ್ಚು ಹೊಸ ಮತ್ತು ಹವಾಮಾನ-ನಿರೋಧಕ ಬಿತ್ತನೆ ಬೀಜದ ತಳಿಗಳು ಈ ದಾಖಲೆಯ ಉತ್ಪಾದನೆಗೆ ಮುಖ್ಯ ಕಾರಣವಾಗಿವೆ.

ರಫ್ತು: ಭಾರತವು ಕೇವಲ ಉತ್ಪಾದನೆಯಲ್ಲಿ ಮಾತ್ರವಲ್ಲದೆ, ಜಾಗತಿಕ ಅಕ್ಕಿ ರಫ್ತಿನಲ್ಲೂ ಶೇ. 40 ಕ್ಕಿಂತ ಹೆಚ್ಚು ಪಾಲನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ.

📦 ರಫ್ತು ಮತ್ತು ಆರ್ಥಿಕತೆ
ಭಾರತ ಅಕ್ಕಿ ರಫ್ತಿನಲ್ಲಿ ಕೂಡ ಅಗ್ರಸ್ಥಾನದಲ್ಲಿದೆ.

ಪ್ರಮುಖ ರಫ್ತು ಗುರಿಗಳು: ನೇಪಾಳ, ಬಾಂಗ್ಲಾದೇಶ, UAE, ಸೌದಿ ಅರೇಬಿಯಾ, ಆಫ್ರಿಕಾದ ರಾಷ್ಟ್ರಗಳು.

ಬಾಸ್ಮತಿ ಅಕ್ಕಿ: ಅತ್ಯಧಿಕ ಮೌಲ್ಯದ ರಫ್ತು ಉತ್ಪನ್ನ.

🌱 ಸವಾಲುಗಳು
ನೀರಿನ ಅವಲಂಬನೆ: ಅಕ್ಕಿ ಬೆಳೆಗೆ ಹೆಚ್ಚಿನ ನೀರಿನ ಅಗತ್ಯವಿದೆ.

ಹವಾಮಾನ ಬದಲಾವಣೆ: ಮಳೆಯ ಅವಿಶ್ವಾಸಾರ್ಹತೆ ಉತ್ಪಾದನೆಗೆ ಧಕ್ಕೆ.

ಮಣ್ಣಿನ ಗುಣಮಟ್ಟ ಮತ್ತು ರಾಸಾಯನಿಕ ಬಳಕೆ.

ಭಾರತ ಅಕ್ಕಿ ಉತ್ಪಾದನೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿದ್ದು, ಆಹಾರ ಭದ್ರತೆ ಮತ್ತು ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಮುಂದಿನ ವರ್ಷಗಳಲ್ಲಿ ಸ್ಥಿರ ನೀತಿ, ತಂತ್ರಜ್ಞಾನ, ಮತ್ತು ಪರಿಸರ ಸ್ನೇಹಿ ಕೃಷಿ ವಿಧಾನಗಳು ಈ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಬಹುದು.

Source: Prajavani

ವೆನೆಜುವೆಲಾ

ಜಗತ್ತಿನಲ್ಲೇ ಅತಿ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರವಾಗಿರುವ ವೆನೆಜುವೆಲಾ, ಸುಮಾರು ಮೂರು ಶತಮಾನ ಸ್ಪೇನ್‌ನ ವಸಾಹತುವಾಗಿತ್ತು.ಸ್ಪೇನ್‌ನಿಂದ ಸ್ವಾತಂತ್ರ್ಯ ಪಡೆದನಂತರನೆರೆಯ ರಾಷ್ಟ್ರಗಳೊಂದಿಗೆ ಗಡಿ ವಿವಾದ, ಸರ್ವಾಧಿಕಾರ, ಸೇನಾ ದಂಗೆಯಿಂದ ತೆವಳುತ್ತಾ ಸಾಗುತ್ತಿದ್ದವೆನೆಜುವೆಲಾಗೆ ಸ್ಥಿರತೆ ತಂದುಕೊಟ್ಟು, ಅದನ್ನು ಅಭಿವೃದ್ಧಿಯ ಪಥದಲ್ಲಿ ನಡೆಯುವಂತೆ ಮಾಡಿದ್ದು ಹೂಗೊ ಚಾವೇಸ್.ಎಡಪಂಥೀಯರಾಗಿದ್ದಚಾವೇಸ್, ಉದ್ದಿಮೆಗಳ ರಾಷ್ಟ್ರೀಕರಣ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡು ಆರ್ಥಿಕ ಬೆಳವಣಿಗೆ ಸಾಧಿಸಿದರು. ಆದರೆ, ಸರ್ವಾಧಿಕಾರಿ ಎನ್ನುವ ನೆಪದಲ್ಲಿ ದೇಶದ ಒಳಗೆ ಮತ್ತು ಹೊರಗೆ ಅವರ ವಿರೋಧಿಗಳು ಹೆಚ್ಚಾದರು. ದೇಶದ ಹೊರಗಿನ ವಿರೋಧಿಗಳಲ್ಲಿ ಅಮೆರಿಕ ಪ್ರಮುಖವಾದರೆ, ಒಳಗಿನ ವಿರೋಧಿಗಳಲ್ಲಿ ಮಾರಿಯಾ ಕೊರಿನಾ ಮಚಾದೊ ಪ್ರಮುಖರಾಗಿದ್ದರು. ಅಮೆರಿಕದ ವಿರೋಧಕ್ಕೆ ಕಾರಣವಾಗಿದ್ದು ಇಂಧನ ವ್ಯಾಪಾರ.

ಅಮೆರಿಕ ಕಣ್ಣು ತೈಲದ ಮೇಲೆ: ವೆನೆಜುವೆಲಾದ ಅನಿಲ ಸಂಪನ್ಮೂಲಗಳ ಮೇಲೆ ಅಮೆರಿಕ ದೀರ್ಘಕಾಲದಿಂದಲೂ ಕಣ್ಣಿಟ್ಟಿದೆ. 1920ರಿಂದಲೂ ಅಮೆರಿಕದ ಕಂಪನಿಗಳು ವೆನೆಜುವೆಲಾದಲ್ಲಿ ತೈಲವ್ಯಾಪಾರ ಮಾಡುತ್ತಿದ್ದವು. 1976ರಲ್ಲಿ ವೆನೆಜುವೆಲಾದಲ್ಲಿ ಸರ್ಕಾರಿ ಸ್ವಾಮ್ಯದ ಇಂಧನ ಮತ್ತು ನೈಸರ್ಗಿಕ ಅನಿಲ ಕಂಪನಿಯನ್ನು ಸ್ಥಾಪಿಸಿದರೂ ಅಮೆರಿಕವು ಪಾಲುದಾರಿಕ ಮತ್ತು ಇತರ ಪರೋಕ್ಷ ವಿಧಾನಗಳಲ್ಲಿ ತೈಲ ವ್ಯಾಪಾರ ಮುಂದುವರಿಸಿತ್ತು.ಆದರೆ, ಚಾವೇಸ್ ಅಧ್ಯಕ್ಷರಾದ (1998) ನಂತರ ರಾಷ್ಟ್ರೀಕರಣದಿಂದ ನಿಯಮಗಳು ಬಿಗಿಯಾಗಿ, ಅಮೆರಿಕ ವೆನೆಜುವೆಲಾದ ತೈಲ ಮಾರುಕಟ್ಟೆಯಿಂದ ಹೊರಬರಲೇಬೇಕಾಯಿತು. ಕಮ್ಯುನಿಸ್ಟ್ ವೆನೆಜುವೆಲಾ ಕಮ್ಯುನಿಸ್ಟ್‌ ಚೀನಾದತ್ತ ವಾಲಿತು. ಚೀನಾಕ್ಕೆ ತೈಲರಫ್ತು ಮಾಡತೊಡಗಿತು.ಅಮೆರಿಕವು ವೆನೆಜುವೆಲಾ ಮೇಲೆ ಹಲವು ರೀತಿಯ ನಿರ್ಬಂಧ ಹೇರಿದ್ದಲ್ಲದೇ ಆಗಿನಿಂದಲೂ ವೆನೆಜುವೆಲಾ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಲೇ ಇತ್ತು.

ಚಾವೇಸ್ ನಂತರ ಅವರ ಉತ್ತರಾಧಿಕಾರಿಯಾಗಿ ಬಂದ ನಿಕೊಲಸ್ ಮಡೂರೊ ಕೂಡ ಚಾವೇಸ್ ಅವರ ಅಮೆರಿಕ ವಿರೋಧಿ ನಿಲುವನ್ನು ಮುಂದುವರಿಸಿದರು. ಆದರೆ, ತೈಲದ ಬೆಲೆ ಏರಿಳಿತ, ವಿರೋಧಿಗಳ ಪಿತೂರಿ ಮುಂತಾದ ಕಾರಣಗಳಿಂದ ವೆನೆಜುವೆಲಾದ ಆರ್ಥಿಕ ಸ್ಥಿತಿ ಹದಗೆಡುತ್ತಾ ಬಂದಿತು. ಆಹಾರ ಧಾನ್ಯಗಳ ಬೆಲೆ ಏರಿಕೆ. ಬಡತನ ಹೆಚ್ಚಾಯಿತು. ಲಕ್ಷಾಂತರ ಮಂದಿ ದೇಶ ತೊರೆದರು. ಇಪ್ಪಾದರೂ ಸತತ ಮೂರು ಚುನಾವಣೆಗಳಲ್ಲಿ (2013, 2018. 2024) ಜಯಗಳಿಸಿ ಅಧ್ಯಕ್ಷರಾಗಿ ಮುಂದುವರಿದರು.ಅವರು ಚುನಾವಣೆಗಳನ್ನು ಆಕ್ರಮವಾಗಿ ಗೆಲ್ಲುತ್ತಿದ್ದಾರೆ ಎನ್ನುವುದು ವಿರೋಧಿಗಳವಾದವಾಗಿತ್ತು.

ಚೀನಾ ಪ್ರಭಾವ ತಗ್ಗಿಸುವ ಉದ್ದೇಶ
ಭೌಗೋಳಿಕವಾಗಿ ಪಶ್ಚಿಮದ ರಾಷ್ಟ್ರಗಳಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸುವುದು ಅಮೆರಿಕದ ಈಕ್ರಮದ ಹಿಂದಿನ ಮತ್ತೊಂದು ಕಾರಣವಾದರೆ, ದಕ್ಷಿಣ ಅಮೆರಿಕದ ವ್ಯಾಪ್ತಿಯಲ್ಲಿ ಚೀನಾ ಮತ್ತು ರಷ್ಯಾ ಪ್ರಭಾವವನ್ನು ತಗ್ಗಿಸುವುದು ಮಗದೊಂದು ಕಾರಣ.

ವೆನೆಜುವೆಲಾ ಸೇರಿದಂತೆ ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳಲ್ಲಿ ಚೀನಾವು ಬೆಲ್ಸ್ ಆ್ಯಂಡ್ ರೋಡ್ ಇನಿಷಿಯೇಟಿವ್ ಮೂಲಕ ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡಿದೆ. ತನ್ನ ಮಹತ್ವಾಕಾಂಕ್ಷೆ ಯೋಜನೆಗೆ ಈ ಭಾಗದ 24 ರಾಷ್ಟ್ರಗಳು ಸಹಿ ಹಾಕಿವೆ ಎಂದು ಚೀನಾ ಈ ಹಿಂದೆ ಹೇಳಿಕೊಂಡಿತ್ತು. ಇಲ್ಲಿನ ಹಲವು ದೇಶಗಳಿಗೆ ಚೀನಾ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲೊಂದು. ಚೀನಾದೊಂದಿಗೆ ಪಾಲುದಾರಿಕೆ ಇದ್ದಹೊರತಾಗಿಯೂ ಈ ವಲಯದ ಹಲವು ರಾಷ್ಟ್ರಗಳು ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ. ಆದರೆ, ವೆನೆಜುವೆಲಾ ಮತ್ತು ಕ್ಯೂಬಾ ಅಮೆರಿಕದ ವಿರುದ್ಧ ತೊಡೆ ತಟ್ಟಿದ್ದವು.

ಇತ್ತೀಚಿನ ವರ್ಷಗಳಲ್ಲಿ ಅಮೆರಿಕವು ಕ್ಯೂಬಾಕ್ಕಿಂತಲೂ ವೆನೆಜುವೆಲಾವನ್ನೇ ಹೆಚ್ಚು ಗುರಿಯಾಗಿಸಿಕೊಂಡಿತ್ತು.

ಅಮೆರಿಕದಿಂದ ದೂರವಾದ ಬಳಿಕ ಚೀನಾವು ವೆನೆಜುವೆಲಾಕ್ಕೆ ಹತ್ತಿರವಾಗಿತ್ತು.

ಚೀನಾವು ಅಲ್ಲಿನ ಇಂಧನ ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ವೆನೆಜುವೆಲಾವು ತಾನು ಉತ್ಪಾದಿಸುವ ಒಟ್ಟು ತೈಲದಲ್ಲಿ ಶೇ 80ರಷ್ಟನ್ನು ಚೀನಾಕ್ಕೆ ಮಾರುತ್ತಿದೆ. 2024ರಲ್ಲಿ ಅಮೆರಿಕವು ವೆನೆಜುವೆಲಾದ ಮೇಲೆ ನಿರ್ಬಂಧಗಳನ್ನು ಹೇರಿದ ನಂತರ ಚೀನಾವು ಹೂಡಿಕೆಯನ್ನು ಸ್ವಲ್ಪ ಕಡಿಮೆ ಮಾಡಿದ್ದರೂ ಇಂಧನ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಮುಂದುವರಿದಿತ್ತು.

ಚೀನಾ ಕಾನ್‌ಕೋರ್ಡ್‌ ರಿಸೋರ್ಸಸ್ ಕಾರ್ಪೊರೇಷನ್ ಎಂಬ ಖಾಸಗಿ ಕಂಪೆನಿಯುವೆನೆಜುವೆಲಾದ ಸರ್ಕಾರಿ ಸ್ವಾಮ್ಯದತೈಲ ಕಂಪನಿಯೊಂದಿಗೆ ಮ್ಯಾರಕ್ಕೆಬೊ ಸರೋವರದಲ್ಲಿ ಎರಡು ತೈಲ ಉತ್ಪಾದನಾ ಘಟಕ ಅಭಿವೃದ್ಧಿಪಡಿಸಲು 100 ಕೋಟಿ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು.

ವೆನೆಜುವೆಲಾ ಸಂಕಷ್ಟ: ಭಾರತದ ಇಂಧನ ಭದ್ರತೆಗೆ ಪರಿಣಾಮವಿಲ್ಲ
2025ರ ನವೆಂಬರ್‌ವರೆಗೆ ನಡೆದ ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ತೈಲ ಆಮದುಗಳಲ್ಲಿ ವೆನೆಜುವೆಲಾ ಕ್ರೂಡ್ ಕೇವಲ 0.3% ಮಾತ್ರ. 2019ರಿಂದಲೇ ಅಮೆರಿಕದ ನಿರ್ಬಂಧಗಳ ಹಿನ್ನೆಲೆಯಲ್ಲಿ ಭಾರತವು ವೆನೆಜುವೆಲಾದಿಂದ ತೈಲ ಆಮದು ಕಡಿಮೆ ಮಾಡುತ್ತಿದೆ.

ಅಮೆರಿಕದ ದಾಳಿ ಮತ್ತು ಭಾರತದ ಸ್ಥಿತಿ
ಅಮೆರಿಕವು ವೆನೆಜುವೆಲಾದ ಮೇಲೆ ನಡೆಸಿದ ದಾಳಿ ಭಾರತದ ಇಂಧನ ಭದ್ರತೆಗೆ ನೇರ ಪರಿಣಾಮ ಬೀರುವ ಸಾಧ್ಯತೆ ಇಲ್ಲವೆಂದು ಇತ್ತೀಚಿನ ಅಂಕಿಅಂಶಗಳು ತೋರಿಸುತ್ತವೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮಾಹಿತಿ: 2025ರ ನವೆಂಬರ್‌ವರೆಗೆ ಭಾರತವು ವೆನೆಜುವೆಲಾದಿಂದ 255.3 ಮಿಲಿಯನ್ ಡಾಲರ್ ಮೌಲ್ಯದ ತೈಲವನ್ನು ಆಮದು ಮಾಡಿದೆ. ಇದು ಒಟ್ಟು ಆಮದುಗಳಲ್ಲಿ ಕೇವಲ 0.3%.

2013ರ ಸ್ಥಿತಿ: ಆ ಸಮಯದಲ್ಲಿ ಭಾರತವು ವೆನೆಜುವೆಲಾದಿಂದ 13 ಬಿಲಿಯನ್ ಡಾಲರ್ ಮೌಲ್ಯದ ತೈಲವನ್ನು ಆಮದು ಮಾಡಿತ್ತು.

2019ರಿಂದ: ಅಮೆರಿಕದ ನಿರ್ಬಂಧಗಳು ಮತ್ತು ದ್ವಿತೀಯ ನಿರ್ಬಂಧಗಳ ಭೀತಿಯಿಂದ ಭಾರತವು ವೆನೆಜುವೆಲಾದೊಂದಿಗೆ ವ್ಯಾಪಾರವನ್ನು ಕಡಿಮೆ ಮಾಡಿತು.

“ಕಡಿಮೆ ವ್ಯಾಪಾರ ಪ್ರಮಾಣ, ಈಗಾಗಲೇ ಜಾರಿಯಲ್ಲಿರುವ ನಿರ್ಬಂಧಗಳು ಮತ್ತು ಭೌಗೋಳಿಕ ಅಂತರ—ಒಟ್ಟಾಗಿ ದೃಢಪಡಿಸುತ್ತದೆ ವೆನೆಜುವೆಲಾದ ಇತ್ತೀಚಿನ ಬೆಳವಣಿಗೆಗಳು ಭಾರತದ ಆರ್ಥಿಕತೆ ಅಥವಾ ಇಂಧನ ಭದ್ರತೆಗೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ,” ಎಂದು ವಿಶ್ಲೇಷಕರು ಹೇಳಿದ್ದಾರೆ.

OPEC ಸದಸ್ಯತ್ವ
ವೆನೆಜುವೆಲಾ OPEC (Organization of the Petroleum Exporting Countries) ಸದಸ್ಯ ರಾಷ್ಟ್ರ. ಈ ಗುಂಪು ಜಾಗತಿಕ ತೈಲ ಮಾರುಕಟ್ಟೆಯನ್ನು ಬಹುಮಟ್ಟಿಗೆ ನಿಯಂತ್ರಿಸುತ್ತದೆ.

ವೆನೆಜುವೆಲಾ ಪ್ರಸ್ತುತ ಇತರ ರಾಷ್ಟ್ರಗಳಿಗಿಂತ ಕಡಿಮೆ ಪ್ರಮಾಣದ ಕ್ರೂಡ್ ತೈಲವನ್ನು ಉತ್ಪಾದಿಸುತ್ತದೆ.

OPEC ಅಂಕಿಅಂಶಗಳ ಪ್ರಕಾರ, ವೆನೆಜುವೆಲಾ OPEC ಒಟ್ಟು ತೈಲ ರಫ್ತುಗಳಲ್ಲಿ 3.5% ಮತ್ತು ಜಾಗತಿಕ ತೈಲ ಸರಬರಾಜಿನಲ್ಲಿ 1% ಮಾತ್ರ.

ಭಾರವಾದ ತೈಲ (Heavy Oil)
ವೆನೆಜುವೆಲಾದ ತೈಲವು ಭಾರವಾದ ಸ್ವರೂಪ ಹೊಂದಿರುವುದರಿಂದ ಅದನ್ನು ಸಂಸ್ಕರಿಸಲು ವಿಶೇಷ ಶುದ್ಧೀಕರಣಾಲಯಗಳು ಅಗತ್ಯ. ಆದರೆ ಇಂತಹ ಶುದ್ಧೀಕರಣಾಲಯಗಳು ಬಹುತೇಕ ರಾಷ್ಟ್ರಗಳಲ್ಲಿ ಲಭ್ಯವಿಲ್ಲ.

ಅಮೆರಿಕದ ನಿರ್ಬಂಧಗಳ ಪರಿಣಾಮವಾಗಿ ವೆನೆಜುವೆಲಾದ ತೈಲದ ಜಾಗತಿಕ ಸರಬರಾಜು ಕುಸಿದಿದೆ.

ಪ್ರಸ್ತುತ ಉತ್ಪಾದನೆಯ ಹೆಚ್ಚಿನ ಭಾಗವನ್ನು ಚೀನಾಕ್ಕೆ ರಫ್ತು ಮಾಡಲಾಗುತ್ತಿದೆ.

ವನ್ಯಜೀವಿ ಸಂಘರ್ಷ ತಡೆಗೆ ತಂತ್ರಜ್ಞಾನ

ಮಾನವ-ವನ್ಯಜೀವಿ ಸಂಘರ್ಷ ತಡೆಗಾಗಿ ಅರಣ್ಯ ಇಲಾಖೆಯು ಅತ್ಯಾಧುನಿಕ ಸವಲತ್ತುಗಳಿಂದ ಕೂಡಿರುವ ರಾಜ್ಯ ಮಟ್ಟದ ನೂತನ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ ಹಾಗೂ ಏಳು ವಿಭಾಗೀಯ ಕೇಂದ್ರಗಳನ್ನು ಆರಂಭಿಸಿದೆ.

ಅರಣ್ಯ ಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಈ ಕೇಂದ್ರಗಳಿಗೆ ಚಾಲನೆ ನೀಡಿದರು.

‘ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕಿಂತ, ಅಂತಹ ಸ್ಥಿತಿ ತಲೆದೋರುವುದನ್ನು ತಡೆಯುವುದೇ ಹೆಚ್ಚು ಪರಿಣಾಮಕಾರಿ. ತಡೆ ಮತ್ತು ನಿಯಂತ್ರಣ ಕ್ರಮಗಳನ್ನು ಗಮನದಲ್ಲಿ ಇರಿಸಿಕೊಂಡೇ ಈ ಕೇಂದ್ರಗಳನ್ನು ರೂಪಿಸಲಾಗಿದೆ. ಇದಕ್ಕಾಗಿ ಕೃತಕ ಬುದ್ಧಿಮತ್ತೆ, ಅತ್ಯಾಧುನಿಕ ಕ್ಯಾಮೆರಾ, ಜಿಪಿಎಸ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದರು.

‘ಅರಣ್ಯ ಪ್ರದೇಶದ ಹೊರಗೆ ಕಾಡುಪ್ರಾಣಿಗಳು ಓಡಾಡುತ್ತಿರುವುದುಸಾರ್ವಜನಿಕರ ಗಮನಕ್ಕೆ ಬಂದರೆ, ಅರಣ್ಯ ಇಲಾಖೆ ಸಹಾಯವಾಣಿ 1926ಕ್ಷೆಕರೆ ಮಾಡಿ ಮಾಹಿತಿ ನೀಡಬೇಕು. ಆ ಕರೆಯ ಮಾಹಿತಿಯು ರಾಜ್ಯಮಟ್ಟದ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರಕ್ಕೆ ಹೋಗಲಿದೆ. ಅಲ್ಲಿಂದ ಸಂಬಂಧಿತ ವಿಭಾಗೀಯ ಅಥವಾ ವಲಯ ಮಟ್ಟದ ನಿಯಂತ್ರಣ ಕೊಠಡಿಗೆ ನಿರ್ದೇಶನ ರವಾನೆಯಾಗಲಿದೆ’ ಎಂದು ವಿವರಿಸಿದರು.

‘ಆನಂತರ, ವನ್ಯಜೀವಿಗಳನ್ನು ಅರಣ್ಯ ಪ್ರದೇಶಕ್ಕೆ ಮರಳಿ ಕಳುಹಿಸುವ, ಮಾನವ ವನ್ಯಜೀವಿ ಸಂಘರ್ಷ ಉಂಟಾಗುವುದನ್ನು ತಡೆಯುವಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.ಸಮಸ್ಯೆ ಬಗೆಹರಿಯುವವರೆಗೂ ರಾಜ್ಯಮಟ್ಟದ ಕೇಂದ್ರದ ಅಧಿಕಾರಿಗಳು, ನಿಗಾ ಇರಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

11 ವಿಭಾಗೀಯ ಕೇಂದ್ರಗಳು: ರಾಜ್ಯದಲ್ಲಿ ಈಚೆಗಷ್ಟೇ ವಿಭಾಗೀಯ ಮಟ್ಟದ ನಾಲ್ಕು ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಈಗ ಇನ್ನೂ ಏಳು ವಿಭಾಗೀಯ ಮಟ್ಟದ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಅವುಗಳ ಸಂಖ್ಯೆ 11ರಷ್ಟಾಗಿದೆ. ಈ ಹನ್ನೊಂದೂ ಕೇಂದ್ರಗಳು ಬೆಂಗಳೂರಿನ ಅರಣ್ಯ ಭವನದಲ್ಲಿರುವ ರಾಜ್ಯಮಟ್ಟದ ಕೇಂದ್ರದ ನಿರ್ದೇಶನದೊಂದಿಗೆ ಕಾರ್ಯನಿರ್ವಹಿಸಲಿವೆ. 1926 ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಿದರೆ, ಸಂಬಂಧಪಟ್ಟ ಕೇಂದ್ರಕ್ಕೆ ಮಾಹಿತಿ ರವಾನೆಯಾಗಲಿದೆ.