Sat. May 9th, 2026

Kannada

‘ಜಿಡಿಪಿ ಶೇ 7.2ರಷ್ಟು ನಿರೀಕ್ಷೆ’

ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 7.2ರಷ್ಟಾಗುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ತನ್ನ ಆಂದಾಜನ್ನು ಪರಿಷ್ಕರಿಸಿದೆ.
• ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದು, ತೆರಿಗೆ ಸುಧಾರಣೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳ ಗಳಿಕೆಯಲ್ಲಿ ಹೆಚ್ಚಳವಾಗಿರುವುದು ಜಿಡಿಪಿ ಹೆಚ್ಚಳಕ್ಕೆ ನೆರವಾಗಲಿದೆ ಎಂದು ಹೇಳಿದೆ. ಭಾರತವು ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಲಿದೆ ಎಂದು ಹೇಳಿದೆ.
• ಜೂನ್ನಲ್ಲಿ ವಿಶ್ವಬ್ಯಾಂಕ್ ಭಾರತದ ಜಿಡಿಪಿ ಬೆಳವಣಿಗೆ ಶೇ 6.3ರಷ್ಟಾಗಲಿದೆ ಎಂದು ಹೇಳಿತ್ತು.
• 2026-27ರಲ್ಲಿ ದೇಶದ ಜಿಡಿಪಿ ಶೇ 6.5 ಮತ್ತು 2027-28ರಲ್ಲಿ ಶೇ 6.6ರಷ್ಟಾಗಬಹುದು ಎಂದು ಹೇಳಿದೆ.
• ಅಮೆರಿಕದ ಸುಂಕ ಹೆಚ್ಚಳ ಮತ್ತು ವ್ಯಾಪಾರ ಸಂಬಂಧಿತ ಅನಿಶ್ಚಿತತೆ ಯಿಂದಾಗಿ ಬಂಡವಾಳದ ಹೊರಹರಿವು ಹೆಚ್ಚಾಗಿದೆ. ಇದರಿಂದ ಮೇ ತಿಂಗಳಿನಿಂದ ಭಾರತದ ರೂಪಾಯಿ ಮೌಲ್ಯ ಕುಸಿದಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
• ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮೊದಲ ಅಂದಾಜಿನ ಪ್ರಕಾರ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ 7.4ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿತ್ತು.

ರಷ್ಯಾದಿಂದ ತೈಲ ಆಮದು ಇಳಿಕೆ

ಸಂದರ್ಭ: ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವ ದೇಶಗಳ ಸಾಲಿನಲ್ಲಿ ಭಾರತವು ಡಿಸೆಂಬರ್ನಲ್ಲಿ ಮೂರನೆಯ ಸ್ಥಾನಕ್ಕೆ ಇಳಿದಿದೆ ಎಂದು ಯುರೋಪಿನ ‘ಇಂಧನ ಮತ್ತು ಶುದ್ಧಗಾಳಿ ಕುರಿತ ಸಂಶೋಧನಾ ಕೇಂದ್ರ’ (ಸಿಆರ್ಇಎ) ಹೇಳಿದೆ.
• ಸಿಆರ್ಇಎ ಅಂದಾಜಿನ ಪ್ರಕಾರ ಡಿಸೆಂಬರ್ನಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಂಡ ಕಚ್ಚಾ ತೈಲ, ಕಲ್ಲಿದ್ದಲಿನ ಮೊತ್ತವು 2.3 ಬಿಲಿಯನ್ ಯೂರೊ (ಸರಿಸುಮಾರು ₹24 ಸಾವಿರ ಕೋಟಿ) ಆಗಿದೆ. ನವೆಂಬರ್ ತಿಂಗಳಲ್ಲಿ ಇದು 3.3 ಬಿಲಿಯನ್ ಯೂರೊ (ಸರಿಸುಮಾರು ₹34 ಸಾವಿರ ಕೋಟಿ) ಆಗಿತ್ತು.
• ಎರಡನೆಯ ಸ್ಥಾನಕ್ಕೆ ಟರ್ಕಿ ದೇಶ ಬಂದಿದೆ ಎಂದು ಅದು ಹೇಳಿದೆ. ಮೊದಲ ಸ್ಥಾನದಲ್ಲಿ ಚೀನಾ ಮುಂದುವರಿದಿದೆ.
• ಅಮೆರಿಕವು ರಷ್ಯಾದ ರೊಸ್ಸೆಫ್ಟ್ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ. ಇವೆರಡು ರಷ್ಯಾದ ಅತಿದೊಡ್ಡ ತೈಲ ಉತ್ಪಾದನಾ ಕಂಪನಿಗಳಾಗಿವೆ. ಈ ನಿರ್ಬಂಧದ ಕಾರಣದಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಎಚ್ಪಿಸಿಎಲ್-ಮಿತ್ತಲ್ ಎನರ್ಜಿ ಲಿ. ಮತ್ತು ಎಂಆರ್ಪಿಎಲ್ ಲಿಮಿಟೆಡ್ ರಷ್ಯಾದಿಂದ ಕಚ್ಚಾ ತೈಲ ಅಮದುಮಾಡಿಕೊಳ್ಳುವುದನ್ನು ಒಂದೋ ನಿಲ್ಲಿಸಿವೆ ಅಥವಾ ಆಮದು ಪ್ರಮಾಣವನ್ನು ತಗ್ಗಿಸಿವೆ.

ಸೆಕ್ಷನ್ 17ಎ: ಭಿನ್ನಮತದ ತೀರ್ಪು ಪ್ರಕಟಿಸಿದ ‘ಸುಪ್ರೀಂ’

ಸಂದರ್ಭ: ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆ-2018ರ ಸಾಂವಿಧಾನಿಕ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟ್ ಭಿನ್ನಮತದ ತೀರ್ಪು ಪ್ರಕಟಿಸಿದೆ.
• ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ‘ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಸಾಂವಿಧಾನಿಕ. ಅದನ್ನು ತೆಗೆದುಹಾಕಬೇಕಿದೆ’ ಎಂದರು.
• ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರು, ‘ಆ ಸೆಕ್ಷನ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದು, ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸಬೇಕಿದೆ’ ಎಂದು ಒತ್ತಿ ಹೇಳಿದರು.
• ಸಕ್ಷಮ ಪ್ರಾಧಿಕಾರದ ಅನುಮತಿಯ ಅಗತ್ಯವು ಭ್ರಷ್ಟಾಚಾರ ತಡೆ ಕಾಯ್ದೆಗೆ ವಿರುದ್ಧವಾಗಿದೆ. ಇದು ಭ್ರಷ್ಟರನ್ನು ರಕ್ಷಿಸುತ್ತದೆ ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟರು.
• ನ್ಯಾಯಮೂರ್ತಿ ವಿಶ್ವನಾಥನ್ ಅವರು, ‘ಸೆಕ್ಷನ್ 17ಎ ಕೈಬಿಡುವುದು, ಸ್ನಾನದ ನೀರಿನ ಜೊತೆಗೆ ಮಗುವನ್ನೂ ಎಸೆದಂತೆ. ಚಿಕಿತ್ಸೆಯೇ ಕಾಯಿಲೆಗಿಂತಲೂ ಭಯಾನಕ ಎಂದು ಹೇಳಿದ ಹಾಗಾಗುತ್ತದೆ’ ಎಂದರು.
• ಪ್ರಕರಣದ ಕುರಿತ ಅಂತಿಮ ನಿರ್ಣಯಕ್ಕಾಗಿ ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ಅವರು ವಿಸ್ತ್ರತ ನ್ಯಾಯಪೀಠ ರಚಿಸಲಿದ್ದಾರೆ.
• ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಪ್ರಕಾರ, ಈ ಕಾಯ್ದೆಯಡಿ ಜನಪ್ರತಿನಿಧಿಗಳು ಸಾರ್ವಜನಿಕ ಸೇವೆ/ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮಾಡಿರುವ ಯಾವುದೇ ಶಿಫಾರಸುಗಳು ಮತ್ತು ನಿರ್ಧಾರಗಳ ಕುರಿತ ಆರೋಪಗಳ ಮೇಲೆ ತನಿಖೆ ಅಥವಾ ವಿಚಾರಣೆ ಮಾಡುವ ಮೊದಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.

ರಸ್ತೆಯಲ್ಲಿ 200 ಅಡಿಗೆ ಎರಡು ಜಾಹೀರಾತು

ಬೆಂಗಳೂರು ರಸ್ತೆಗಳಲ್ಲಿ ಪ್ರತಿ 200 ಅಡಿಗೆ ಎರಡು ಜಾಹೀರಾತಿಗೆ ಅವಕಾಶ ನೀಡುವ ‘ಗ್ರೇಟರ್ ಬೆಂಗಳೂರು ಪ್ರದೇಶ ಜಾಹೀರಾತು ನಿಯಮಗಳು-2025’ ಅನ್ನು ಅಂತಿಮಗೊಳಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಒಲಿ೦ಪಿಕ್ ಅಕಾಡೆಮಿಗೆ ಮರುಜೀವ: ಅಹಮದಾಬಾದಿನಲ್ಲಿರುವ ರಾಷ್ಟ್ರೀಯ ಒಲಿಂಪಿಕ್ ಅಕಾಡೆಮಿ

ಸಂದರ್ಭ: ಅಕಾಡೆಮಿಯನ್ನು (ಎನ್ಒಎ) ‘ವಿಧ್ಯುಕ್ತವಾಗಿ ಕ್ರಿಯಾಶೀಲಗೊಳಿಸಲಾಗಿದೆ ಎಂದು ಭಾರತ ಒಲಿಂಪಿಕ್ ಸಮಿತಿ (ಐಒಎ) ಘೋಷಿಸಿದೆ. ಭಾರತದಲ್ಲಿ ಒಲಿಂಪಿಕ್ ಅಂದೋಲನವನ್ನು ಬಲಪಡಿಸುವ ನಿಟ್ಟಿನಲ್ಲಿ ಇದನ್ನು ದೊಡ್ಡಹೆಜ್ಜೆ.
ಈ ಅಕಾಡೆಮಿಗೆ ದಿಗ್ಗಜ ಅಸ್ಟ್ರೀಟ್ ಹಾಗೂ ಐಓಎ ಹಾಲಿ ಅಧ್ಯಕ್ಷೆ ಪಿ.ಟಿ.ಉಷಾ ಅವರೇ ಮುಖ್ಯಸ್ಥರಾಗಿರುತ್ತಾರೆ.

• ರಾಷ್ಟ್ರೀಯ ಒಲಿಂಪಿಕ್ ಶಿಕ್ಷಣ ಮತ್ತು ಅಭಿವೃದ್ಧಿ ಕಾರ್ಯಕ್ರಮವನ್ನೂ (ಎನ್ಒಇಡಿಪಿ) ಆರಂಭಿಸಲಾಗುತ್ತಿದೆ ಎಂದೂ ಐಒಎ ತಿಳಿಸಿದೆ.
• ‘ರಾಷ್ಟ್ರೀಯ ಒಲಿಂಪಿಕ್ ಅಕಾಡೆಮಿಗೆ ಪಿ.ಟಿ.ಉಷಾ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಐಒಎ ಉಪಾಧ್ಯಕ್ಷ ಹಾಗೂ ಒಲಿಂಪಿಕ್ ಪದಕ ವಿಜೇತ ಗಗನ್ ನಾರಂಗ್ ಅವರನ್ನು ನಿರ್ದೇಶಕನ್ನರಾಗಿ ಮಾಡಲು ಐಒಎ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು’.
• ಅಹಮದಾಬಾದಿನಲ್ಲಿ ಜನವರಿ 8ರಂದು ನಡೆದ ಐಒಎ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜನವರಿ 9ರಂದು ಐಒಎ ವಾರ್ಷಿಕ ಮಹಾಸಭೆಯಲ್ಲಿ ಇದನ್ನು ಅನುಮೋದಿಸಲಾಯಿತು.

ಹಿನ್ನೆಲೆ
NOA 2018ರಿಂದ ಅಸ್ತಿತ್ವದಲ್ಲಿದ್ದರೂ, COVID-19 ಸೇರಿದಂತೆ ಹಲವು ಕಾರಣಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.

ಈಗ IOA ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಅಹಮದಾಬಾದ್‌ನಲ್ಲಿ ಅಧಿಕೃತವಾಗಿ ಪುನರ್‌ಸಕ್ರಿಯಗೊಳಿಸಲಾಗಿದೆ.

ಇದು Bharat Centre of Olympic Research and Education (BCROE), ಗಾಂಧಿನಗರದ Rashtriya Raksha Universityಯಲ್ಲಿ ನಡೆದ ಸಂಶೋಧನಾ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದೆ.

ಗುಜರಾತ್ನಲ್ಲಿ ಭೇಟಿಯಾದ ಮೋದಿ-ಫ್ರೆಡರಿಕ್ ಮೆರ್ಜ್ : 19 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ: ‘ಭಾರತ-ಜರ್ಮನಿ ನಡುವಿನ ಸಂಬಂಧಕ್ಕೆ ನವ ಶಕ್ತಿ’

• ಗುಜರಾತ್ನ ಗಾಂಧಿನಗರದಲ್ಲಿರುವ ಮಹಾತ್ಮ ಮಂದಿರದಲ್ಲಿ ಭಾರತ ಮತ್ತು ಜರ್ಮನಿ ನಡುವೆ ಮಹತ್ವದ ದ್ವಿಪಕ್ಷೀಯ ಮಾತುಕತೆಗಳು ನಡೆದವು.
• ‘ಎರಡೂ ರಾಷ್ಟ್ರಗಳು ಇತ್ತೀಚೆಗಷ್ಟೇ ಪಾಲುದಾರಿಕೆಯ 25ನೇ ವರ್ಷ ಹಾಗೂ 75 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಪೂರೈಸಿವೆ. ಇಂತಹ ಮಹತ್ವದ ಘಟ್ಟದಲ್ಲಿ ಜರ್ಮನಿಯ ಚಾನ್ಸಲರ್ ಫ್ರೆಡರಿಕ್ ಮೆರ್ಜ್ ಅವರು ಭೇಟಿ ನೀಡಿದ್ದಾರೆ’.
• ‘ನಮ್ಮ ದ್ವಿಪಕ್ಷೀಯ ವ್ಯಾಪಾರ 50 ಶತಕೋಟಿ ಜರ್ಮನಿಯ ಡಾಲರ್ಗಳನ್ನು ದಾಟಿ ಸಾರ್ವಕಾಲಿಕ ಎತ್ತರಕ್ಕೇರಿದೆ. 2,000 ಅಧಿಕ ಕಂಪನಿಗಳು ಭಾರತದಲ್ಲಿ ಕಾರ್ಯಾಚರಿಸುತ್ತಿವೆ.
• ಆರ್ಥಿಕತೆ, ರಕ್ಷಣಾ ಕ್ಷೇತ್ರ. ಔಷಧ ವಲಯ, ಕಾರ್ಯತಂತ್ರಗಳ ಪಾಲುದಾರಿಕೆ, ಶಿಕ್ಷಣ, ಕಾನೂನುಬದ್ದ ವಲಸೆ ಸೇರಿದಂತೆ 19 ಒಪ್ಪಂದಗಳಿಗೆ ಭಾರತ ಮತ್ತು ಜರ್ಮನಿ ಸಹಿ ಹಾಕಿವೆ.
• ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ಮುಕ್ತ ಸಾರಿಗೆ, ಇಂಡೊ-ಪೆಸಿಫಿಕ್ ಕುರಿತ ಮಾತುಕತೆಗೆ ವೇದಿಕೆ ರೂಪಿಸುವುದು, ನವೀಕರಿಸಬಹುದಾದ ಇಂಧನ ಕ್ಷೇತ್ರದ ಹೂಡಿಕೆ (1.24 ಶತಕೋಟಿ ಯುರೊ ಮೊತ್ತದ ಪಾಲುದಾರಿಕೆಯ ಕಾರ್ಯಕ್ರಮ), ಗ್ರೀನ್ ಹೈಡೋಜನ್ ಪಾಲುದಾರಿಕೆ, ಪಿಎಂ ಇ ಬಸ್ ಸೇವೆ. ಅಹಮದಾಬಾದ್ನಲ್ಲಿ ಜರ್ಮನಿಯ ಕಾನ್ಸುಲ್ ಸ್ಥಾಪನೆ ವಿಚಾರಗಳನ್ನೂ ಘೋಷಿಸಲಾಯಿತು.

ಶಕ್ಸ್ಗಾಮ್ ಕಣಿವೆ

ಸಂದರ್ಭ: ಶಕ್ಗಾಮ್ ಕಣಿವೆಯು ತನ್ನ ಭೂಭಾಗವಾಗಿದೆ ಎಂದು ಚೀನಾ ಪುನರುಚ್ಚರಿಸಿದ್ದು, ಅಲ್ಲಿ ಕೈಗೊಂಡಿರುವ ಮೂಲಸೌಕರ್ಯ ಯೋಜನೆಗಳು ಆಕ್ಷೇಪಕ್ಕೆ ಹೊರತಾಗಿವೆ ಎಂದು ಪ್ರತಿಪಾದಿಸಿದೆ
• ಶಕ್ಸ್ಗಾಮ್ ಕಣಿವೆಯಲ್ಲಿ ಚೀನಾ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು.
• ಇದು ಭಾರತದ ಪ್ರದೇಶವಾಗಿರುವುದರಿಂದ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವ ಹಕ್ಕುಗಳನ್ನು ಕಾಯ್ದಿರಿಸಿಕೊಂಡಿದೆ ಎಂದು ಹೇಳಿತ್ತು, ‘ಶಕ್ಸ್ ಗಾಮ್ ಕಣಿವೆ ಭಾರತದ ಭೂಪ್ರದೇಶ, 1963ರಲ್ಲಿ ಸಹಿ ಹಾಕಿದ ಚೀನಾ-ಪಾಕಿಸ್ತಾನ ಗಡಿ ಒಪ್ಪಂದವೆಂದು ಕರೆಯಲಾಗುವ ಒಪ್ಪಂದವನ್ನು ನಾವು ಎಂದಿಗೂ ಒಪ್ಪಿಲ್ಲ ಮತ್ತು ಮಾನ್ಯತೆ ನೀಡಿಲ್ಲ. ಈ ಒಪ್ಪಂದವು ಕಾನೂನುಬಾಹಿರ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದರು.
• ಹೇಳಿಕೆಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್, ‘ನೀವು ಹೇಳಿದ ಪ್ರದೇಶವು ಚೀನಾದ ಪ್ರದೇಶದ ಭಾಗವಾಗಿದೆ. ನಮ್ಮ ಭೂಪ್ರದೇಶದಲ್ಲಿ ಮೂಲಸೌಕರ್ಯ ಚಟುವಟಿಕೆಗಳನ್ನು ಕೈಗೊಂಡಿದೆ.ಚೀನಾ ಮತ್ತು ಪಾಕಿಸ್ತಾನ ಗಡಿ ಒಪ್ಪಂದಕ್ಕೆ ಸಹಿ ಹಾಕಿವೆ’ ಎಂದಿದ್ದಾರೆ.

ಶಕ್ಗಾಮ್ ಕಣಿವೆ (Shaksgam Valley) ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದ್ದು, ಭಾರತವು ತನ್ನ ಭೂಭಾಗವೆಂದು ಹೇಳುತ್ತದೆ. ಆದರೆ 1963ರಲ್ಲಿ ಪಾಕಿಸ್ತಾನವು ಈ ಪ್ರದೇಶವನ್ನು ಅಕ್ರಮವಾಗಿ ಚೀನಾಗೆ ಒಪ್ಪಿಸಿದ ಕಾರಣದಿಂದ, ಇದು ಭಾರತ–ಚೀನಾ–ಪಾಕಿಸ್ತಾನ ನಡುವಿನ ಗಡಿಚರ್ಚೆಯ ಪ್ರಮುಖ ಕೇಂದ್ರವಾಗಿದೆ.

ಅಂಶ (Aspect)ವಿವರ (Details)
ಸ್ಥಳ (Location)ಕರಾಕೋರಂ ಪರ್ವತಶ್ರೇಣಿಯಲ್ಲಿ, ಸಿಯಾಚಿನ್ ಹಿಮನದಿಯ ಉತ್ತರ ಭಾಗದಲ್ಲಿದೆ. ಇದು ಲಡಾಖ್‌ನ ಗಡಿಯ ಸಮೀಪದಲ್ಲಿದೆ.
ವಿಸ್ತೀರ್ಣ (Area)ಸುಮಾರು 5,180 ಚದರ ಕಿ.ಮೀ. (ಸುಮಾರು 2,000 ಚದರ ಮೈಲಿ).
ಇತರ ಹೆಸರುಗಳುಟ್ರಾನ್ಸ್-ಕರಾಕೋರಂ ಟ್ರಾಕ್ಟ್ (Trans-Karakoram Tract).
ರಾಜಕೀಯ ಸ್ಥಿತಿಇದು ಮೂಲತಃ ಜಮ್ಮು ಮತ್ತು ಕಾಶ್ಮೀರದ (ಈಗ ಲಡಾಖ್ ಕೇಂದ್ರಾಡಳಿತ ಪ್ರದೇಶ) ಭಾಗ. ಪ್ರಸ್ತುತ ಚೀನಾದ ಆಡಳಿತದಲ್ಲಿದೆ.
1963ರ ಒಪ್ಪಂದಪಾಕಿಸ್ತಾನವು ಭಾರತದ ಭೂಭಾಗವನ್ನು ಚೀನಾದೊಂದಿಗೆ ಗಡಿ ವಿವಾದ ಬಗೆಹರಿಸಿಕೊಳ್ಳಲು ಅಕ್ರಮವಾಗಿ “Sino-Pakistan Boundary Agreement” ಮೂಲಕ ಹಸ್ತಾಂತರಿಸಿತು.
ಭಾರತದ ನಿಲುವುಈ ಪ್ರದೇಶವು ಭಾರತದ ಅವಿಭಾಜ್ಯ ಅಂಗ. 1963ರ ಒಪ್ಪಂದವು ಅಕ್ರಮ ಮತ್ತು ಅಮಾನ್ಯ ಎಂದು ಭಾರತ ನಿರಂತರವಾಗಿ ಪ್ರತಿಭಟಿಸುತ್ತಿದೆ.
ಚೀನಾದ ನಿಲುವುಇದು ತನ್ನ ಸಾರ್ವಭೌಮ ಭೂಭಾಗವೆಂದು ಪ್ರತಿಪಾದಿಸುತ್ತದೆ. ಇತ್ತೀಚೆಗೆ (ಜೂನ್ 2025/ಜನವರಿ 2026) ಚೀನಾ ತನ್ನ ನಿರ್ಮಾಣ ಕಾರ್ಯಗಳು “ಕ್ಷೇಪಕ್ಕೆ ಹೊರತಾಗಿವೆ” ಎಂದು ಹೇಳಿದೆ.
ಸೇನಾ ಕಾರ್ಯತಂತ್ರದ ಮಹತ್ವ– ಸಿಯಾಚಿನ್ ಹಿಮನದಿಯ ಮೇಲೆ ಕಣ್ಗಾವಲು ಇಡಲು ಚೀನಾಗೆ ಸಹಕಾರಿ.
– ಕಾರಾಕೋರಂ ಪಾಸ್‌ಗೆ ಹತ್ತಿರದಲ್ಲಿದೆ.
– ಪಾಕಿಸ್ತಾನ ಮತ್ತು ಚೀನಾ ನಡುವಿನ ಭೂ-ಸಂಪರ್ಕಕ್ಕೆ (CPEC) ದಾರಿ ಮಾಡಿಕೊಡುತ್ತದೆ.
ಇತ್ತೀಚಿನ ಬೆಳವಣಿಗೆಗಳು (2025-26)ಚೀನಾ ಇಲ್ಲಿ ಸುಮಾರು 75 ಕಿ.ಮೀ ಉದ್ದದ ಸರ್ವಋತು ರಸ್ತೆಯನ್ನು ನಿರ್ಮಿಸುತ್ತಿದೆ. ಇದನ್ನು ಭಾರತವು ತೀವ್ರವಾಗಿ ವಿರೋಧಿಸಿದೆ ಮತ್ತು ಭಾರತೀಯ ಸೇನಾ ಮುಖ್ಯಸ್ಥರು (Gen Upendra Dwivedi) ಇದನ್ನು ಕಾನೂನುಬಾಹಿರ ಎಂದು ಖಂಡಿಸಿದ್ದಾರೆ.

ಶಕ್ಗಾಮ್ ಕಣಿವೆಯ ಪ್ರಮುಖ ಮುಖ್ಯಾಂಶಗಳು

Shaksham Valley


ಭೌಗೋಳಿಕ ಮಹತ್ವ: ಇದು ವಿಶ್ವದ ಎರಡನೇ ಅತಿ ಎತ್ತರದ ಶಿಖರವಾದ K2 ನ ಉತ್ತರಕ್ಕೆ ನೆಲೆಸಿದೆ. ಇದು ಅತ್ಯಂತ ದುರ್ಗಮವಾದ ಪರ್ವತ ಪ್ರದೇಶವಾಗಿದ್ದರೂ, ಯುದ್ಧತಂತ್ರದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.

ಐತಿಹಾಸಿಕ ಹಿನ್ನೆಲೆ: 1963 ಕ್ಕಿಂತ ಮೊದಲು ಈ ಪ್ರದೇಶವು ಪಾಕಿಸ್ತಾನದ ಆಕ್ರಮಿತ ಕಾಶ್ಮೀರದ (PoK) ಭಾಗವಾಗಿತ್ತು. ಆದರೆ ಚೀನಾದೊಂದಿಗೆ ಗಡಿ ವಿವಾದ ಬಗೆಹರಿಸಿಕೊಳ್ಳಲು ಪಾಕಿಸ್ತಾನವು ಇದನ್ನು ಚೀನಾಗೆ ಬಿಟ್ಟುಕೊಟ್ಟಿತು. ಇದನ್ನು ಭಾರತವು “ಸಿನೋ-ಪಾಕ್ ಗಡಿ ಒಪ್ಪಂದ, 1963” ಎಂದು ಕರೆಯುತ್ತದೆ ಮತ್ತು ಇದನ್ನು ಕಾನೂನುಬಾಹಿರವೆಂದು ಪರಿಗಣಿಸುತ್ತದೆ.

ಭಾರತಕ್ಕೆ ಇದು ಏಕೆ ಮುಖ್ಯ?
ಶಕ್ಗಾಮ್ ಕಣಿವೆಯಲ್ಲಿ ಚೀನಾ ರಸ್ತೆಗಳನ್ನು ನಿರ್ಮಿಸುವುದರಿಂದ, ಯುದ್ಧದ ಸಮಯದಲ್ಲಿ ಪಾಕಿಸ್ತಾನ ಮತ್ತು ಚೀನಾ ಸೇನೆಗಳು ಒಂದಾಗಿ ಭಾರತದ ಮೇಲೆ “ಎರಡು ಮುಖಗಳ ಯುದ್ಧ” (Two-front war) ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ. ಇದು ಸಿಯಾಚಿನ್‌ನಲ್ಲಿರುವ ಭಾರತೀಯ ಸೈನಿಕರ ಭದ್ರತೆಗೆ ನೇರ ಸಂಚಕಾರ ತರಬಹುದು.

ಚಿಲ್ಲರೆ ಹಣದುಬ್ಬರ

ಸಂದರ್ಭ: ಆಹಾರ ಪದಾರ್ಥಗಳ ಬೆಲೆಯಲ್ಲಿನ ಹೆಚ್ಚಳದಿಂದ ಚಿಲ್ಲರೆ ಹಣದುಬ್ಬರವು ಡಿಸೆಂಬರ್ ತಿಂಗಳಿನಲ್ಲಿ ಶೇ 1.33ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ತಿಳಿಸಿದೆ. ಇದು ಮೂರು ತಿಂಗಳ ಗರಿಷ್ಠ ಮಟ್ಟದ ಏರಿಕೆ ಆಗಿದೆ.
• ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಅಧಾರಿತ ಚಿಲ್ಲರೆ ಹಣದುಬ್ಬರವು ನವೆಂಬರ್ನಲ್ಲಿ ಶೇ 0.71ರಷ್ಟಿತ್ತು. 2024ರ ಡಿಸೆಂಬರ್ನಲ್ಲಿ ಶೇ 5.22ರಷ್ಟು ದಾಖಲಾಗಿತ್ತು.
• ತರಕಾರಿಗಳು, ಮೊಟ್ಟೆ, ಮಾಂಸ ಮತ್ತು ಮೀನು, ಮಸಾಲೆ ಪದಾರ್ಥಗಳು, ಧಾನ್ಯಗಳ ಬೆಲೆಯಲ್ಲಿನ ಹೆಚ್ಚಳವೇ ಹಣದುಬ್ಬರ ಏರಿಕೆಗೆ ಕಾರಣ ಎಂದು ತಿಳಿಸಿದೆ. ನಗರ ಪ್ರದೇಶದಲ್ಲಿ ಹಣದುಬ್ಬರ ಪ್ರಮಾಣ ಶೇ 2.03ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.0.76ರಷ್ಟಿದೆ.
ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 4ರ ಹಂತದಲ್ಲಿ ಇರಬೇಕು. ಅದು ಶೇ 2ಕ್ಕಿಂತ ಕಡಿಮೆ ಆಗಬಾರದು ಎಂಬುದು ಆರ್ಬಿಐಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಗುರಿ. ಡಿಸೆಂಬರ್ ತಿಂಗಳಿನಲ್ಲೂ ಇದೇ ಮಟ್ಟದಲ್ಲಿ ಚಿಲ್ಲರೆ ಹಣದುಬ್ಬರ ಇದೆ.
ಕೇರಳದಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಿನ ಪ್ರಮಾಣದಲ್ಲಿದ್ದು, ಶೇ9.19ರಷ್ಟಿದೆ. ಕರ್ನಾಟಕದಲ್ಲಿ ಶೇ 2.99, ಅಂಧ್ರಪ್ರದೇಶ ಶೇ 2.71, ತಮಿಳುನಾಡು ಶೇ 2.67 ಮತ್ತು ಜಮ್ಮು ಕಾಶ್ಮೀರದಲ್ಲಿ ಶೇ 2.26ರಷ್ಟು ದಾಖಲಾಗಿದೆ ಎಂದು ತಿಳಿಸಿದೆ.

ಅಂಶ (Aspect)ವಿವರ (Details)
ಮಾಪನ ವಿಧಾನಗ್ರಾಹಕ ಬೆಲೆ ಸೂಚ್ಯಂಕ (CPI – Consumer Price Index)
ಡಿಸೆಂಬರ್ 2025 ದರ1.3% (ನವೆಂಬರ್‌ನ 0.7% ಕ್ಕಿಂತ ಸ್ವಲ್ಪ ಏರಿಕೆ).
ಹಿಂದಿನ ವರ್ಷ (2024)5.2% (ಗಣನೀಯ ಇಳಿಕೆ ಕಂಡುಬಂದಿದೆ).
ಆಹಾರ ಹಣದುಬ್ಬರ-2.7% (ಆಹಾರ ಪದಾರ್ಥಗಳ ಬೆಲೆಯಲ್ಲಿ ಕುಸಿತ/Deflation).
ಗ್ರಾಮೀಣ vs ನಗರಗ್ರಾಮೀಣ: 0.8%, ನಗರ: 2.0%.
ಕೋರ್ ಇನ್ಫ್ಲೇಶನ್4.8% (28 ತಿಂಗಳ ಗರಿಷ್ಠ ಮಟ್ಟ – ಆಹಾರ ಮತ್ತು ಇಂಧನ ಹೊರತುಪಡಿಸಿ).
RBI FY26 ಅಂದಾಜು3.1% (ಹಿಂದಿನ 3.7% ಅಂದಾಜಿನಿಂದ ಕಡಿತಗೊಳಿಸಲಾಗಿದೆ).
ಆರ್ಥಿಕ ಪರಿಣಾಮಕಡಿಮೆ ಹಣದುಬ್ಬರದಿಂದ RBIಗೆ ಬಡ್ಡಿದರ ಕಡಿತಗೊಳಿಸಲು ಮುಕ್ತ ಅವಕಾಶ.
ಸಾಮಾನ್ಯ ಪ್ರವೃತ್ತಿ2025ರಲ್ಲಿ ನಿರಂತರ ಕುಸಿತ; ಜೂನ್ 2025ರಲ್ಲಿ 77 ತಿಂಗಳ ಕನಿಷ್ಠ (2.1%) ದಾಖಲಾಗಿತ್ತು.

ಖಗೋಳ ವಿಜ್ಞಾನಿ ಶ್ರೀನಿವಾಸ ಕುಲಕರ್ಣಿಗೆ ರಾಯಲ್ ಸೊಸೈಟಿಯ ಚಿನ್ನದ ಪದಕ

ಸಂದರ್ಭ: ಅಮೆರಿಕದಲ್ಲಿ ನೆಲಸಿರುವ ಭಾರತ ಮೂಲದ ಖಗೋಳ ವಿಜ್ಞಾನಿ ಪ್ರೊಫೆಸರ್ ಶ್ರೀನಿವಾಸ ಕುಲಕರ್ಣಿ ಅವರಿಗೆ ಇಂಗ್ಲೆಂಡ್ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯ ಶ್ರೀನಿವಾಸ (ಆರ್ಎಎಸ್) ಚಿನ್ನದ ಪದಕ ಕುಲಕರ್ಣಿ ಲಭಿಸಿದೆ.
• ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸಂಶೋಧನೆಗಳನ್ನು ಕೈಗೊಂಡಿರುವ ಶ್ರೀನಿವಾಸ್ ಕುಲಕರ್ಣಿ ಅವರು, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಸಹೋದರ.
• ಮಹಾರಾಷ್ಟ್ರದಲ್ಲಿ ಜನಿಸಿರುವ ಕುಲಕರ್ಣಿ ಅವರು, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಖಗೋಳ ವಸ್ತುಗಳು ಮತ್ತು ಗಾಮಾ ಕಿರಣಗಳ ಸ್ವಯಂಸ್ಫೋಸೇರಿದಂತೆ ಖಗೋಳ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಸಂಶೋಧನೆ ಕೈಗೊಂಡು ಯಶಸ್ವಿಯಾಗಿದ್ದಾರೆ.
ಬಹುತರಂಗಾಂತರದ ‘ಖಗೋಳ ಭೌತಶಾಸ್ತ್ರದಲ್ಲಿ ಕ್ಷಣಿಕ ಕುರಿತಾದ ಸುಸ್ಥಿರ, ನವೀನ ಮತ್ತು ಅಭೂತಪೂರ್ವ ಅನ್ನೇಷಣೆ’ಯ ಕೊಡುಗೆಯನ್ನು ಚಿನ್ನದ ಪದಕ ಆಯ್ಕೆಗೆ ಪರಿಗಣಿಸಲಾಗಿದೆ.
1984ರಿಂದಲೂ ರಾಯಲ್ ಸಂಸ್ಥೆಯು ಚಿನ್ನದ ಪದಕವನ್ನು ನೀಡುತ್ತಿದೆ. ಖ್ಯಾತ ವಿಜ್ಞಾನಿಗಳಾದ ಸ್ಟೀಪನ್ ಹಾಕಿಂಗ್, ಜಾನ್ ಬೆಲ್ ಬರ್ನೆಲ್, ಅಲ್ಬರ್ಟ್ ಐನ್ಸ್ಟೀನ್ ಮತ್ತು ಎಡ್ರಿನ್ ಹಬಲ್ ಅವರು ಈ ಪದಕ ಪಡೆದಿದ್ದಾರೆ. ಇವರ ಸಾಲಿಗೆ ಕುಲಕರ್ಣಿ ಸೇರಿದ್ದಾರೆ.
• 2024ರಲ್ಲಿ ಖಗೋಳ ಕ್ಷೇತ್ರದ ಪ್ರಶಸ್ತಿ) ಅನ್ವೇಷಣೆಗಾಗಿ ‘ಶಾ’ ಪುರಸ್ಕಾರವನ್ನೂ (ಹಾಂಕಾಂಗ್ ನೀಡುವ ಕುಲಕರ್ಣಿ ಪಡೆದಿದ್ದಾರೆ. ಖಗೋಳ ವಿಜ್ಞಾನದ ಸಾಧನಗಳ ಅನ್ವೇಷಕರಾಗಿ ರುವ ಕುಲಕರ್ಣಿ ಅವರು, ಈವರೆಗೆ 10 ಸಾಧನಗಳನ್ನು ರೂಪಿಸಿದ್ದಾರೆ.
• ಕುಲಕರ್ಣಿ ಅವರು ನಾಸಾದ ನೇರಳಾತೀತ ಕಿರಣಗಳ ಅನ್ವೇಷಣೆಗೆ ಸಂಬಂಧಿಸಿದ (ಯುವಿಎಕ್ಸ್) ಸಂಶೋಧನೆಯ ಕಾರ್ಯಯೋಜನೆಯ ಭಾಗವಾಗಿದ್ದಾರೆ.ನೇರಳಾತೀತ ಕಿರಣಗಳ ಕುರಿತಾದ ಅತ್ಯಂತ ಸೂಕ್ಷ್ಮ ಸಂಶೋಧನೆ ಇದಾಗಿದೆ.

•ಕುಲಕರ್ಣಿ ಅವರು 1978ರಲ್ಲಿ ದೆಹಲಿಯ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ (ಐಐಟಿ) ಸ್ನಾತಕೋತ್ತರ ಪದವಿ, 1983ರಲ್ಲಿ ಬಾರ್ಕ್ಲೆಯಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.