ಲಕ್ಕುಂಡಿ ವೈಭವದ ಮರು ಅನ್ವೇಷಣೆ





ಅಮೃತರಾಜ್‌ಗೆ ಪದ್ಮಭೂಷಣ, ರೋಹಿತ್‌ಗೆ ಪದ್ಮಶ್ರೀ
ಸಂದರ್ಭ: ಟೆನಿಸ್ ಕ್ರೀಡೆಯ ದಿಗ್ಗಜ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಸಂದರ್ಭ: ತೈಲದ ಮೇಲೆ ರಾಷ್ಟ್ರೀಯ ಹಿಡಿತ ಸಡಿಲಿಸುವ ಮಸೂದೆಯ ಕುರಿತ ಚರ್ಚೆಯನ್ನು ವೆನೆಜುವೆಲಾ ಆರಂಭಿಸಿತು.
• ಸಮಾಜವಾದಿ ನಾಯಕ ಹೂಗೋ ಚಾವೆಜ್ ಅವರು 2007ರಲ್ಲಿ ತೈಲೋದ್ಯಮವನ್ನು ರಾಷ್ಟ್ರೀಕರಣಗೊಳಿ-ಸಿದ ನಂತರ ಮೊದಲ ಬಾರಿಗೆ ಈ ಕುರಿತ ಚರ್ಚೆನಡೆದಿದೆ.
• ಈ ಮಸೂದೆಯು ತೈಲ ಉದ್ಯಮದಲ್ಲಿ ಖಾಸಗಿ ಕಂಪನಿಗಳಿಗೆ ಹೂಡಿಕೆ ಮಾಡಲು ಮತ್ತು ಹೂಡಿಕೆ ವಿವಾದಗಳಿಗೆ ಅಂತರರಾಷ್ಟ್ರೀಯ ಮಧ್ಯಸ್ಥಿಕೆಯನ್ನು ಸ್ಥಾಪಿಸಲು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ.
• ವೆನೆಜುವೆಲಾದ ಅಧ್ಯಕ್ಷರಾಗಿದ್ದ ನಿಕೋಲಸ್ ಮಡೂರೊ ಅವರನ್ನು ಈ ತಿಂಗಳ ಆರಂಭದಲ್ಲಿ ಟ್ರಂಪ್ ಆಡಳಿತವು ಸೆರೆ ಹಿಡಿದಿತ್ತು.
ಸಂದರ್ಭ: ವಿಶ್ವ ಆರೋಗ್ಯ ಸಂಸ್ಥೆಯಿಂದ(ಡಬ್ಲ್ಯುಎಚ್ಒ) ಹೊರಬರುವ ಪ್ರಕ್ರಿಯೆಯನ್ನು ಅಮೆರಿಕ ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರ.
ಸಂದರ್ಭ: ‘ಪ್ರಶ್ನೆಗಾಗಿ ಲಂಚ’ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾಮೊಯಿತ್ರಾ ವಿರುದ್ಧಆರೋಪ ಪಟ್ಟಿಸಲ್ಲಿಸಲು ಸಿಬಿಐಗೆ ಅನುಮತಿ ನೀಡುವ ವಿಚಾರವನ್ನು ಕಾನೂನಿನ ಪ್ರಕಾರ ಪರಿಗಣಿಸಲು ಲೋಕಪಾಲಕ್ಕೆ ನೀಡಿದ್ದ ಕಾಲಾವಕಾಶವನ್ನು ದೆಹಲಿ ಹೈಕೋರ್ಟ್ ಎರಡು ತಿಂಗಳು ವಿಸ್ತರಿಸಿದೆ.
ಲೋಕಪಾಲ್ (Lokalpal) ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವ ಅತ್ಯುನ್ನತ ಸಂಸ್ಥೆಯಾಗಿದೆ. ಲೋಕಪಾಲ್ ಕಾಯ್ದೆ 2013 ರಲ್ಲಿ ಅಂಗೀಕಾರವಾಯಿತು. 1 ಜನವರಿ 2014 ರಿಂದ ಜಾರಿಗೆ ಬಂದಿತು. ಮೊದಲ ಅಧ್ಯಕ್ಷರು: ಪಿನಾಕಿ ಚಂದ್ರ ಘೋಷ್ (P.C. Ghosh).
ಲೋಕಪಾಲ್: ತನಿಖೆ ಮತ್ತು ವಿಚಾರಣೆಯ ಕಾಲಮಿತಿ
ಲೋಕಪಾಲ್ ಸಂಸ್ಥೆಯ ಇತರ ಪ್ರಮುಖ ಅಂಶಗಳು:
| ಹಂತ | ಕಾಲಾವಕಾಶ (Time Limit) | ವಿಸ್ತರಣೆ (Extension) |
| ಪ್ರಾಥಮಿಕ ವಿಚಾರಣೆ (Preliminary Inquiry) | 30 ದಿನಗಳು | ಅಗತ್ಯವಿದ್ದರೆ ಲಿಖಿತ ಕಾರಣಗಳೊಂದಿಗೆ 3 ತಿಂಗಳವರೆಗೆ ವಿಸ್ತರಿಸಬಹುದು. |
| ತನಿಖಾ ವರದಿ ಸಲ್ಲಿಕೆ (Inquiry Report) | ಪ್ರಾಥಮಿಕ ವಿಚಾರಣೆ ಮುಗಿದ ನಂತರ 60 ದಿನಗಳೊಳಗೆ ಲೋಕಪಾಲ್‌ಗೆ ಸಲ್ಲಿಸಬೇಕು. | – |
| ಪೂರ್ಣ ಪ್ರಮಾಣದ ತನಿಖೆ (Investigation) | 6 ತಿಂಗಳು | ವಿಶೇಷ ಸಂದರ್ಭಗಳಲ್ಲಿ ಏಕಕಾಲಕ್ಕೆ 6 ತಿಂಗಳವರೆಗೆ ವಿಸ್ತರಿಸಬಹುದು. |
| ವಿಚಾರಣೆ ಪೂರ್ಣಗೊಳಿಸುವುದು (Trial) | 1 ವರ್ಷ | ವಿಶೇಷ ಕಾರಣಗಳಿದ್ದರೆ ಗರಿಷ್ಠ 2 ವರ್ಷಗಳವರೆಗೆ ವಿಸ್ತರಿಸಬಹುದು. |
ರಚನೆ: ಒಬ್ಬರು ಅಧ್ಯಕ್ಷರು ಮತ್ತು ಗರಿಷ್ಠ 8 ಜನ ಸದಸ್ಯರಿರುತ್ತಾರೆ (ಇದರಲ್ಲಿ 50% ನ್ಯಾಯಾಂಗ ಸದಸ್ಯರು ಮತ್ತು 50% SC/ST/OBC/ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿರಬೇಕು).
ವ್ಯಾಪ್ತಿ (Jurisdiction): ಪ್ರಧಾನ ಮಂತ್ರಿ (ಕೆಲವು ವಿನಾಯಿತಿಗಳೊಂದಿಗೆ), ಕೇಂದ್ರ ಸಚಿವರು, ಸಂಸತ್ ಸದಸ್ಯರು ಮತ್ತು ಗ್ರೂಪ್ A, B, C, D ಅಧಿಕಾರಿಗಳು ಲೋಕಪಾಲ್ ವ್ಯಾಪ್ತಿಗೆ ಬರುತ್ತಾರೆ.
ಆಯ್ಕೆ ಸಮಿತಿ: ಪ್ರಧಾನ ಮಂತ್ರಿ (ಅಧ್ಯಕ್ಷರು), ಲೋಕಸಭೆಯ ಸ್ಪೀಕರ್, ಲೋಕಸಭೆಯ ವಿರೋಧ ಪಕ್ಷದ ನಾಯಕರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು (CJI) ಅಥವಾ ಅವರು ಸೂಚಿಸಿದ ನ್ಯಾಯಾಧೀಶರು ಮತ್ತು ಒಬ್ಬ ಖ್ಯಾತ ನ್ಯಾಯಶಾಸ್ತ್ರಜ್ಞರು ಈ ಸಮಿತಿಯಲ್ಲಿರುತ್ತಾರೆ.
ಸಂದರ್ಭ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್ ಪಿಂಚಣಿ ಯೋಜನೆಯನ್ನು 2030-31ನೇ ಹಣಕಾಸು ವರ್ಷದ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
• ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು, ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕೆ ರೂಪಿಸಿರುವ ಯೋಜನೆಗಳಿಗೆ ಆರ್ಥಿಕ ನೆರವು ಮುಂದುವರಿಸುವುದಕ್ಕೂ ಅನುಮೋದನೆ ನೀಡಿದೆ ಎಂದು `ಪ್ರಕಟಣೆ ತಿಳಿಸಿದೆ.
• ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯ ದಲ್ಲಿ ಆದಾಯ ಭದ್ರತೆ ಒದಗಿಸುವ ದೃಷ್ಟಿಯಿಂದ ಅಟಲ್ ಪಿಂಚಣಿ ಯೋಜನೆಯನ್ನು 2015ರ ಮೇ 9ರಂದು ಆರಂಭಿಸಲಾಯಿತು. ಪ್ರಸ್ತುತ, 8.66 ಕೋಟಿ ಜನರು ಈ ಯೋಜನೆಯಡಿ ನೋಂದಾಯಿಸಿ ಕೊಂಡಿದ್ದಾರೆ.
• ನೋಂದಾಯಿತ ಸದಸ್ಯರು ಪಾವತಿಸಿದ ವಂತಿಗೆ ಆಧಾರದಲ್ಲಿ, ಫಲಾನುಭವಿಗೆ 60 ವರ್ಷ ತುಂಬಿದ ನಂತರ ಮಾಸಿಕ ಕನಿಷ್ಠ ಒಂದು ಸಾವಿರ ರೂಪಾಯಿಯಿಂದ ₹5 ಸಾವಿರ ವರೆಗೆ ಪಿಂಚಣಿ ನೀಡಲಾಗುತ್ತದೆ.
| ಅಂಶ | ವಿವರಗಳು |
| ಯೋಜನೆಯ ಹೆಸರು | ಅಟಲ್ ಪಿಂಚಣಿ ಯೋಜನೆ (Atal Pension Yojana) |
| ಪ್ರಾರಂಭ | 9 ಮೇ 2015 (ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿಯವರಿಂದ ಚಾಲನೆ) |
| ಉಸ್ತುವಾರಿ ಸಂಸ್ಥೆ | PFRDA (Pension Fund Regulatory and Development Authority) |
| ಅರ್ಹತೆ | ಭಾರತೀಯ ನಾಗರಿಕನಾಗಿರಬೇಕು. |
| ವಯೋಮಿತಿ | 18 ರಿಂದ 40 ವರ್ಷಗಳು. |
| ಪಿಂಚಣಿ ಲಭ್ಯತೆ | 60 ವರ್ಷ ತುಂಬಿದ ನಂತರ. |
| ಪಿಂಚಣಿ ಸ್ಲ್ಯಾಬ್‌ಗಳು | ₹1,000, ₹2,000, ₹3,000, ₹4,000 ಮತ್ತು ₹5,000 (ತಿಂಗಳಿಗೆ). |
| ವಂತಿಗೆ ಅವಧಿ | ಕನಿಷ್ಠ 20 ವರ್ಷಗಳ ಕಾಲ ವಂತಿಗೆ (Contribution) ಪಾವತಿಸಬೇಕು. |
| ತೆರಿಗೆದಾರರಿಗೆ ನಿಯಮ | 1 ಅಕ್ಟೋಬರ್ 2022 ರಿಂದ, ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಸೇರಲು ಅರ್ಹರಲ್ಲ. |
| ನಾಮಿನಿ ಸೌಲಭ್ಯ | ಚಂದಾದಾರರ ಮರಣದ ನಂತರ ಸಂಗಾತಿಗೆ (Spouse) ಪಿಂಚಣಿ ಸಿಗುತ್ತದೆ. ಇಬ್ಬರ ಮರಣದ ನಂತರ ಕಾರ್ಪಸ್ ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ. |
| ಹೂಡಿಕೆ ವಿಧಾನ | ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕವಾಗಿ ಬ್ಯಾಂಕ್ ಖಾತೆಯಿಂದ ‘ಆಟೋ ಡೆಬಿಟ್’ ಮೂಲಕ ಹಣ ಕಡಿತವಾಗುತ್ತದೆ. |
ಸಂದರ್ಭ: 2025ನೇ ಸಾಲಿನ ‘ಇಂದಿರಾ ಗಾಂಧಿ ಶಾಂತಿ’ ಪ್ರಶಸ್ತಿಯು ಮೊಜಾಂಬಿಕದ ಹೋರಾಟಗಾರ್ತಿ ಗ್ರಾಸಾಮಾ ಶೆಲ್ಅವರಿಗೆ ಸಂದಿದೆ.

Source: Prajavani
ಸಂದರ್ಭ: ಭಾರತದ ತಲಾವಾರು ಒಟ್ಟು ರಾಷ್ಟ್ರೀಯ ಆದಾಯದ ಬಗ್ಗೆ ಎಸ್‌ಬಿಐ ಅಂದಾಜು ಇನ್ನು ನಾಲ್ಕು ವರ್ಷಗಳಲ್ಲಿ ಭಾರತವು ಮೇಲ್ಮಧ್ಯಮ ವರ್ಗದ ಆದಾಯ ಹೊಂದಿರುವ ದೇಶವಾಗಿ ಪರಿವರ್ತನೆ ಕಾಣಲಿದೆ, ಆ ಮೂಲಕ ಚೀನಾ ಮತ್ತು ಇಂಡೊನೇಷ್ಯಾ ದೇಶಗಳ ಸಾಲಿಗೆ ಸೇರಲಿದೆ ಎಂದು ಎಸ್‌ಬಿಐ ರಿಸರ್ಚ್‌ನ ವರದಿಯು ಅಂದಾಜು ಮಾಡಿದೆ.

ಸಂದರ್ಭ: ಭಾರತ ಮತ್ತು ಯುಎಇ 2032ರವರೆಗೆ ಪ್ರತಿ ವರ್ಷವೂ ಸುಮಾರು ₹18.17 ಲಕ್ಷ ಕೋಟಿ (200 ಬಿಲಿಯನ್ ಡಾಲರ್) ವ್ಯಾಪಾರ ನಡೆಸುವ ಗುರಿ ನಿಗದಿಪಡಿಸಿವೆ.
ಭಾರತ – ಯುಎಇ ಸಂಬಂಧಗಳ ಮುಖ್ಯಾಂಶಗಳು (2026)
| ವಲಯ | ಪ್ರಮುಖ ಅಂಶಗಳು |
| ವ್ಯಾಪಾರ ಮತ್ತು ಆರ್ಥಿಕತೆ | 2022ರಲ್ಲಿ CEPA ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಪ್ರಸ್ತುತ ದ್ವಿಪಕ್ಷೀಯ ವ್ಯಾಪಾರವು $100 ಬಿಲಿಯನ್ ದಾಟಿದ್ದು, 2032ರ ವೇಳೆಗೆ ಇದನ್ನು $200 ಬಿಲಿಯನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. |
| ಇಂಧನ ಭದ್ರತೆ | ಯುಎಇ ಭಾರತದ ಪ್ರಮುಖ ತೈಲ ಮತ್ತು ಅನಿಲ ಪೂರೈಕೆದಾರ. ಇತ್ತೀಚೆಗೆ 2028ರಿಂದ ಜಾರಿಗೆ ಬರುವಂತೆ 10 ವರ್ಷಗಳ ಕಾಲ ವಾರ್ಷಿಕ 5 ಲಕ್ಷ ಟನ್ LNG ಪೂರೈಕೆಯ ಒಪ್ಪಂದ ಮಾಡಿಕೊಳ್ಳಲಾಗಿದೆ. |
| ರಕ್ಷಣಾ ಸಹಕಾರ | ಜನವರಿ 2026ರಲ್ಲಿ ‘ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆ’ (Strategic Defence Partnership) ಗೆ ಸಹಿ ಹಾಕಲಾಗಿದೆ. ಇದು ಜಂಟಿ ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಸೈಬರ್ ಭದ್ರತೆಗೆ ಒತ್ತು ನೀಡುತ್ತದೆ. |
| ತಂತ್ರಜ್ಞಾನ ಮತ್ತು ಬಾಹ್ಯಾಕಾಶ | ಭಾರತದ IN-SPACe ಮತ್ತು ಯುಎಇ ಬಾಹ್ಯಾಕಾಶ ಸಂಸ್ಥೆ ನಡುವೆ ಒಪ್ಪಂದ ನಡೆದಿದೆ. ಭಾರತದಲ್ಲಿ ಸೂಪರ್ ಕಂಪ್ಯೂಟಿಂಗ್ ಕ್ಲಸ್ಟರ್ ಮತ್ತು ಡಿಜಿಟಲ್ ಡೇಟಾ ಎಂಬಸ್ಸಿ ಸ್ಥಾಪಿಸಲು ನಿರ್ಧರಿಸಲಾಗಿದೆ. |
| ಹಣಕಾಸು ಮತ್ತು ಡಿಜಿಟಲ್ | ಭಾರತದ UPI ಮತ್ತು ಯುಎಇಯ AANI ಪಾವತಿ ವ್ಯವಸ್ಥೆಗಳನ್ನು ಲಿಂಕ್ ಮಾಡಲಾಗುತ್ತಿದೆ. ಗುಜರಾತ್‌ನ GIFT City ಯಲ್ಲಿ ಯುಎಇ ಕಂಪನಿಗಳು (FAB, DP World) ಕಾರ್ಯಾಚರಣೆ ಆರಂಭಿಸಿವೆ. |
| ಸಾಂಸ್ಕೃತಿಕ ಮತ್ತು ಶಿಕ್ಷಣ | ಅಬುಧಾಬಿಯಲ್ಲಿ ‘ಹೌಸ್ ಆಫ್ ಇಂಡಿಯಾ’ (ಮ್ಯೂಸಿಯಂ) ಸ್ಥಾಪನೆ. ಅಬುಧಾಬಿಯಲ್ಲಿ ಈಗಾಗಲೇ IIT Delhi ತನ್ನ ಕ್ಯಾಂಪಸ್ ಆರಂಭಿಸಿದೆ. |