ಸಂದರ್ಭ: ವಿಶ್ವದ ಆಗ್ರ ಶ್ರೇಯಾಂಕದ ಟೆನಿಸ್ ಆಟಗಾರ್ತಿ ಆರಿನಾ ಸಬಲೆಂಕಾ ಅವರು ನೇರ ಸೆಟ್ಗಳಲ್ಲಿ ಉಕ್ರೇನ್ನ ಮಾರ್ತಾ ಕೊಪ್ಪಿಯುಕ್ ಅವರನ್ನು ಮಣಿಸಿ ಸತತ ಎರಡನೇ ಬಾರಿಗೆ ಬ್ರಿಸ್ಟೇನ್ ಇಂಟರ್ನ್ಯಾಷನಲ್ ಪ್ರಶಸ್ತಿ ಗೆದ್ದುಕೊಂಡರು. • ಕ್ಲೀನ್ಸ್ಲ್ಯಾಂಡ್ ಟೆನಿಸ್ ಸೆಂಟರ್ ಹಂಪಾನುವಾರ ನಡೆದ ಫೈನಲ್ನಲ್ಲಿ аая 6-4, 6-3 ರಿಂದ ಗೆದ್ದರು. ಅದರೊಂದಿಗೆ, ಇದೇ 18ರಂದು ಆರಂಭವಾಗಲಿರುವ ವರ್ಷದ ಮೊದಲ ಗ್ರಾನ್ಸ್ಲಾಮ್ ಟೂರ್ನಿ ‘ಆಸ್ಟ್ರೇಲಿಯಾ ಓಪನ್’ಗೆ ಭರ್ಜರಿ ಯಾಗಿಯೇ ಸಿದ್ಧತೆ ಆರಂಭಿಸಿದರು. • ವಿಶ್ವ ಕ್ರಮಾಂಕದಲ್ಲಿ 13ನೇ ಸ್ಥಾನದ ಲ್ಲಿರುವ ರಷ್ಯಾದ ಆಟಗಾರ ಡೇನಿಯಲ್ ಮೆಡ್ಡೆಡೇವ್ ಅವರು ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. 96 ನಿಮಿಷ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 6-2, 7-6 (7-1) 505 ಅಮೆರಿಕದ ಬ್ರಾಂಡನ್ ನಕಾಶಿಮಾ ಅವರನ್ನು ಮಣಿಸಿದರು. • ಅಗ್ರ 10ರಲ್ಲಿ ಬುಬ್ಲಿಕ್: ಕಜಕಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಅವರು ಭಾನುವಾರ ನಡೆದ ಹಾಂಗ್ಕಾಂಗ್ ಓಪನ್ ಟೆನಿಸ್ ಟೂರ್ನಿಯ ಫೈನಲ್ನಲ್ಲಿ 7-6 (7-2),6-3505 ಸೆಟ್ಗಳಲ್ಲಿ ಇಟಲಿಯ ಲೊರೆಂಜೊ ಮುಸೆಟ್ಟಿ ವಿರುದ್ಧ ಗೆದ್ದರು. ಈ ಟ್ರೋಫಿಯೊಂದಿಗೆ ಅವರು ಮೊದಲ ಬಾರಿಗೆ ವಿಶ್ವ ಯಾಂಕಿಂಗ್ನ ಆಗ್ರ 10ರಲ್ಲಿ ಸ್ಥಾನ ಪಡೆದರು.
ಸಂದರ್ಭ: ಡಿಜಿಟಲ್ ಆಸ್ತಿಗಳ ಮಾರುಕಟ್ಟೆಯಲ್ಲಿ ಅಕ್ರಮ ಚಟುವಟಿಕೆ ಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರದ ವಿತ್ತೀಯ ಗುಪ್ತದಳವು (ಎಫ್ಐಯು) ಕಠಿಣ ನಿಯಮಗಳನ್ನು ಅನಾವರಣ ಮಾಡಿದೆ. • ಹಣದ ಅಕ್ರಮ ವರ್ಗಾವಣೆ ತಡೆಯುವ ಉದ್ದೇಶದ ಹಾಗೂ ಕೆವೈಸಿ (ಗ್ರಾಹಕರಿಗೆ ಸಂಬಂಧಿಸಿದ ಆಗತ್ಯ ಮಾಹಿತಿ ಕಲೆಹಾಕುವುದು) ಪ್ರಕ್ರಿಯೆಗಳ ಕುರಿತಾದ ನಿಯಮಗಳು ಇವು. ಕ್ರಿಪ್ರೊಕರೆನ್ಸಿ ವಿನಿಮಯ ಸೇವೆಗಳನ್ನು ಒದಗಿಸುವವರು ಪಾಲಿಸಬೇಕಿದೆ. ಇವುಗಳನ್ನು ಪರಿಷ್ಕೃತ ನಿಯಮಗಳನ್ನು ಜನವರಿ 8ರಂದು ಹೊರಡಿಸಲಾಗಿದೆ. ಇವು ಕ್ರಿಪ್ರೊ ವಿನಿಮಯ ಕೇಂದ್ರಗಳನ್ನು ‘ವಾಸ್ತವೋಪಮ ಡಿಜಿಟಲ್ ಅಸ್ತಿ (ಪಿಡಿಎ) ಸೇವಾದಾತರು’ ಎಂದು ಗುರುತಿಸಿದೆ. ನಿಯಮಗಳ ಪ್ರಕಾರ ಇವರು ಸರಳವಾದ ಕೆಲವು ದಾಖಲೆಪತ್ರಗಳನ್ನು ಗ್ರಾಹಕರಿಂದ ಪಡೆಯುವುದಷ್ಟೇ ಅಲ್ಲದೆ, ಇನ್ನೂ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. • ವಿನಿಮಯ ಕೇಂದ್ರಗಳ ಸೇವೆಯನ್ನು ಪಡೆಯಲು ಮುಂದಾಗುವ ಗ್ರಾಹಕರು ತಮ್ಮ ಸೆಲ್ಲಿಯನ್ನು ಕ್ಲಿಕ್ಕಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ. ಕ್ಯಾಮೆರಾ ಕಣ್ಣಿನ ಅಚೆಯಲ್ಲಿ ಗ್ರಾಹಕ ನಿಜಕ್ಕೂ ನಿಂತಿದ್ದಾನೆ ಎಂಬುದನ್ನು ತಂತ್ರಾಂಶವು ಆತನ ಕಣ್ಣುರೆಪ್ಪೆಗಳ ಚಲನೆ ಅಥವಾ ತಲೆಯ ಚಲನೆಯ ಮೂಲಕ ಗುರುತಿಸುತ್ತದೆ. ಈ ಪ್ರಕ್ರಿಯೆಯನ್ನು ಅನುಸರಿಸುವುದರಿಂದಾಗಿ ಭಾವಚಿತ್ರ ಅಥವಾ ಡೀಪ್ಫೇಕ್ ಚಿತ್ರ ಬಳಸಿ ವಂಚನೆ ಎಸಗುವುದನ್ನು ತಡೆಯಲು ಸಾಧ್ಯವಾಗುತ್ತದೆ. • ಬಿಗಿ ನಿಲುವು: ಕೇಂದ್ರ ಹಣಕಾಸು ಸಚಿವಾಲಯದ ಕೆಲಸ ಅಧೀನದಲ್ಲಿ ಮಾಡುವ ಎಫ್ಐಯು, ಕ್ರಿಪ್ರೊ ಆಸ್ತಿಗಳನ್ನು ಬಳಸಿ ನಡೆಯುವ ವಹಿವಾಟುಗಳು ಇನ್ನೊಬ್ಬರಿಗೆ ಗೊತ್ತಾಗದಂತೆ ಮಾಡುವುದರ ವಿರುದ್ಧ ಕಠಿಣ ನಿಲುವು ತಾಳಿದೆ. ಕೆಲವು ಕಂಪನಿಗಳು ಷೇರುಗಳ ಮಾದರಿಯಲ್ಲಿ ಡಿಜಿಟಲ್ ಟೋಕನ್ಗಳನ್ನು ನೀಡು ವುದನ್ನು ನಿರುತ್ತೇಜಿಸುವ ಉದ್ದೇಶವನ್ನು ನಿಯಮಗಳು ಹೊಂದಿವೆ. • ಭಾರತದಲ್ಲಿ ಕೆಲಸ ನಿರ್ವಹಿಸುತ್ತಿ-ರುವ ಕ್ರಿಪ್ರೊ ವಿನಿಮಯ ಕೇಂದ್ರಗಳಿಗೆ ಎಫ್ಐಯು ಏಕಗವಾಕ್ಷಿ ನಿಯಂತ್ರಣ ನಿಯಂತ್ರಣ ವ್ಯವಸ್ಥೆಯಂತಿದೆ. ಎಲ್ಲ ಕ್ರಿಪ್ರೊ ವಿನಿಮಯ ಕೇಂದ್ರಗಳು ಎಫ್ಐಯು කව ನೋಂದಣಿ ಮಾಡಿಕೊಳ್ಳಬೇಕು, ಅನುಮಾನಕ್ಕೆ ಆಸ್ಪದ ನೀಡುವಂತಹ ವಹಿವಾಟುಗಳ ಬಗ್ಗೆ ಕಾಲಕಾಲಕ್ಕೆ ವರದಿ ಮಾಡಬೇಕು, ಹಣದ ಅಕ್ರಮ ವರ್ಗಾವಣೆ ತಡೆಯಲು, ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುವುದನ್ನು ತಡೆಯಲು ತಮ್ಮ ಗ್ರಾಹಕರ ದಾಖಲೆ ನಿರ್ವಹಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ. • ‘ಹೆಚ್ಚಿನ ರಿಸ್ಕ್’ ಇರುವ ವ್ಯಕ್ತಿಗಳ ಕೆವೈಸಿ ಪರಿಷ್ಕರಣೆ ಪ್ರಕ್ರಿಯೆಯನ್ನು ಆರು ತಿಂಗಳಿಗೆ ಒಮ್ಮೆ ನಡೆಸಬೇಕು. ಇತರ ಎಲ್ಲರ ಕೆವೈಸಿ ಪರಿಷ್ಕರಣೆ-ಯನ್ನು ವರ್ಷಕ್ಕೊಮ್ಮೆ ನಡೆಸಬೇಕು ಎಂದು ವಿನಿಮಯ ಕೇಂದ್ರಗಳಿಗೆ ಹೇಳಲಾಗಿದೆ. • ತೆರಿಗೆಗಳ್ಳರ ಸ್ವರ್ಗ ಎಂದು ಹೆಸರಾಗಿರುವ ದೇಶಗಳ ಜೊತೆ ನಂಟು ಕಲೆಹಾಕಬೇಕು. ಹೊಂದಿರುವವರ, ಹೆಚ್ಚಿನ ರಿಸ್ಕ್ ಇರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿಚಾರವಾಗಿ ಮುಕ್ತ ಮೂಲಗಳಿಂದ ಮಾಹಿತಿ ಎಫ್ಎಟಿಎಫ್ನ (ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್) ಬೂದು ಅಥವಾ ಕಪ್ಪುಪಟ್ಟಿ ಯಲ್ಲಿ ಇರುವ ಪ್ರದೇಶಗಳಿಗೆ ಸೇರಿದವರ, ಲಾಭದ ಉದ್ದೇಶವಿಲ್ಲದ ಸಂಘಟನೆಗಳ (ಎನ್ಪಿಒ), ಸರ್ಕಾರಗಳಲ್ಲಿ ಮಹತ್ವದ ಹುದ್ದೆ ಹೊಂದಿರುವ ವ್ಯಕ್ತಿಗಳ ಬಗ್ಗೆಯೂ ಹೆಚ್ಚಿನ ಮಾಹಿತಿಯನ್ನು ಒಗ್ಗೂಡಿಸಬೇಕು ಎಂದು ನಿಯಮಗಳು ಹೇಳಿವೆ. • ಷೇರುಗಳ ಬದಲು ಡಿಜಿಟಲ್ ಟೋಕನ್ಗಳನ್ನು ನೀಡುವ ಪ್ರಕ್ರಿಯೆ-ಯಲ್ಲಿ ಹೆಚ್ಚಿನ ಮಟ್ಟದ ಹಣದ ಅಕ್ರಮ ವರ್ಗಾವಣೆ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಹಣದ ನೆರವು ಒದಗಿಸುವ ಅಯಾಮಗಳೂ ಇರುತ್ತವೆ. ಹೀಗೆ ಡಿಜಿಟಲ್ ಟೋಕನ್ ನೀಡುವುದನ್ನು ಸಮರ್ಥಿಸಿಕೊಳ್ಳಲು ಆರ್ಥಿಕ ತರ್ಕ ಇರುವುದಿಲ್ಲ ಎಂದು ನಿಯಮಗಳಲ್ಲಿ ಹೇಳಲಾಗಿದೆ. • ವಿನಿಮಯ ಕೇಂದ್ರಗಳು ಗ್ರಾಹಕರ ಗುರುತು. ವಿಳಾಸ ಮತ್ತು ವಹಿವಾಟಿನ ವಿವರವನ್ನು ಕನಿಷ್ಠ ಐದು ವರ್ಷಗಳವರೆಗೆ ಹಾಗೇ ಇರಿಸಬೇಕು, ತನಿಖೆ ನಡೆಯುತ್ತಿದ್ದರೆ ಅದು ಪೂರ್ಣ-ಗೊಳ್ಳುವವರೆಗೆ ಉಳಿಸಿಕೊಳ್ಳಬೇಕು ಎಂದು ನಿಯಮಗಳಲ್ಲಿ ತಾಕೀತು ಮಾಡಲಾಗಿದೆ.
ಸಂದರ್ಭ: ‘ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ನಲ್ಲಿ ಅಂದಾಜು ಮಾಡಲಾಗಿರುವ ವಿತ್ತೀಯ ಕೊರತೆಯ ಮಿತಿಯನ್ನು ಕೇಂದ್ರ ಸರ್ಕಾರವು ಮೀರುವುದಿಲ್ಲ ಎಂಬ ನಿರೀಕ್ಷೆ ಇದೆ’ ಎಂದು ಪಿಡಬ್ಲ್ಯುಸಿ ಪಾಲುದಾರ ರಾನೆನ್ ಬ್ಯಾನರ್ಜಿ ಹೇಳಿದ್ದಾರೆ. ಜಿಡಿಪಿಯ ಶೇ 4.4ರಷ್ಟಕ್ಕೆ ವಿತ್ತೀಯ ಕೊರತೆಯನ್ನು ಮಿತಿಗೊಳಿಸುವ ಉದ್ದೇಶವನ್ನು ಕೇಂದ್ರವು ಬಜೆಟ್ನಲ್ಲಿ ಹೇಳಿದೆ. • ಇದು ಹಣಕಾಸು ನಿರ್ವಹಣೆಯ ವಿಚಾರವಾಗಿ ದೇಶವು ಹೊಂದಿರುವ ಬದ್ಧತೆಯ ಬಗ್ಗೆ ಜಾಗತಿಕ ಮಟ್ಟದ ಹೂಡಿಕೆದಾರರಿಗೆ ನೀಡಿರುವ ಸಕಾರಾತ್ಮಕ ಸಂದೇಶ ಎಂದು ಅವರು ಹೇಳಿದ್ದಾರೆ. • ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್ಎಸ್ಒ) ಜಿಡಿಪಿ ಬೆಳವಣಿಗೆಯ ಗುರಿಯನ್ನು (ಹಣದುಬ್ಬರದ ಪರಿಣಾಮವನ್ನು ಪರಿಗಣನೆಗೆ ತೆಗೆದುಕೊಳ್ಳದೆ) ಶೇ 10.1ರಿಂದ ಶೇ 8ಕ್ಕೆ ಪರಿಷ್ಕರಿಸಿತ್ತು. ಇದು ವಿತ್ತೀಯ ಕೊರತೆಯ ಗುರಿಯನ್ನು ಸಾಧಿಸುವ ಸರ್ಕಾರದ ಸಾಮರ್ಥ್ಯದ ಬಗ್ಗೆ ಕಳವಳ ಹುಟ್ಟುಹಾಕಿತ್ತು. • 2024-25ರ ಆರ್ಥಿಕ ವರ್ಷದಲ್ಲಿ ಕೇಂದ್ರವು ಶೇ 4.8ರಷ್ಟು ವಿತ್ತೀಯ ಕೊರತೆಯ ಗುರಿಯನ್ನು ಸಾಧಿಸಿತ್ತು. • ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು బజీటో ಮಂಡನೆ ವೇಳೆ, 2025-26ರ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.4ಕ್ಕೆ (ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ₹15.69 ಲಕ್ಷ ಕೋಟಿ) ತಗ್ಗಿಸಲು ಸರ್ಕಾರ ಬಜೆಟ್ನಲ್ಲಿ ಗುರಿನಿಗದಿಮಾಡಲಾಗಿದೆ ಎಂದಿದ್ದರು.
📊 ವಿತ್ತೀಯ ಕೊರತೆ ಮಿತಿ (Fiscal Deficit Limit) 🏛️ ಅರ್ಥ ವಿತ್ತೀಯ ಕೊರತೆ (Fiscal Deficit): ಸರ್ಕಾರದ ಒಟ್ಟು ವೆಚ್ಚವು (Revenue + Capital Expenditure) ಅದರ ಒಟ್ಟು ಆದಾಯವನ್ನು (Revenue Receipts + Non‑Debt Capital Receipts) ಮೀರಿದಾಗ ಉಂಟಾಗುವ ಕೊರತೆ.
ಸರಳವಾಗಿ ಹೇಳುವುದಾದರೆ, ಸರ್ಕಾರದ ಖರ್ಚು – ಸರ್ಕಾರದ ಆದಾಯ (ಕಡೇ ಹೊರತುಪಡಿಸಿ) = ವಿತ್ತೀಯ ಕೊರತೆ.
ಈ ಕೊರತೆಯನ್ನು ಸರ್ಕಾರ ಸಾಲ ತೆಗೆದುಕೊಳ್ಳುವ ಮೂಲಕ ಪೂರೈಸುತ್ತದೆ.
📜 ಭಾರತದಲ್ಲಿ ಮಿತಿ FRBM Act (Fiscal Responsibility and Budget Management Act, 2003):
ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯನ್ನು GDPಯ 3% ಮಿತಿಯೊಳಗೆ ಇಡಬೇಕು ಎಂದು ನಿಗದಿಪಡಿಸಿದೆ.
ಆದರೆ ಆರ್ಥಿಕ ಸಂಕಷ್ಟ, COVID‑19, ಜಾಗತಿಕ ಅಸ್ಥಿರತೆ ಮುಂತಾದ ಸಂದರ್ಭಗಳಲ್ಲಿ ಈ ಮಿತಿಯನ್ನು ಮೀರಿ ಹೋಗಲು ಅವಕಾಶ ನೀಡಲಾಗಿದೆ.
ರಾಜ್ಯ ಸರ್ಕಾರಗಳು:
ಸಾಮಾನ್ಯವಾಗಿ 3% GDP ವರೆಗೆ ವಿತ್ತೀಯ ಕೊರತೆ ಅನುಮತಿಸಲಾಗಿದೆ.
ವಿಶೇಷ ಸಂದರ್ಭಗಳಲ್ಲಿ (ಉದಾ: ಸುಧಾರಣೆಗಳನ್ನು ಜಾರಿಗೊಳಿಸಿದರೆ) 3.5%–4% GDP ವರೆಗೆ ಅನುಮತಿ ನೀಡಲಾಗುತ್ತದೆ.
🎯 ಮಹತ್ವ ಆರ್ಥಿಕ ಶಿಸ್ತಿನ ಸೂಚಕ: ಸರ್ಕಾರದ ಹಣಕಾಸು ನಿರ್ವಹಣೆಯ ಸ್ಥಿರತೆ.
ಹಣದುಬ್ಬರ ನಿಯಂತ್ರಣ: ಹೆಚ್ಚು ಸಾಲ ತೆಗೆದುಕೊಂಡರೆ ಹಣದುಬ್ಬರ ಹೆಚ್ಚಾಗಬಹುದು.
ಹೂಡಿಕೆದಾರರ ವಿಶ್ವಾಸ: ವಿತ್ತೀಯ ಕೊರತೆ ನಿಯಂತ್ರಣದಲ್ಲಿದ್ದರೆ ಹೂಡಿಕೆದಾರರಿಗೆ ವಿಶ್ವಾಸ.
ಅಂತರರಾಷ್ಟ್ರೀಯ ಕ್ರೆಡಿಟ್ ರೇಟಿಂಗ್: ಕಡಿಮೆ ಕೊರತೆ = ಉತ್ತಮ ರೇಟಿಂಗ್ = ಹೆಚ್ಚು ವಿದೇಶಿ ಹೂಡಿಕೆ.
⚖️ ಪ್ರಸ್ತುತ ಸ್ಥಿತಿ (2025–26) ಕೇಂದ್ರ ಸರ್ಕಾರದ ವಿತ್ತೀಯ ಕೊರತೆ GDPಯ 5.9% (2023–24) ಆಗಿತ್ತು.
2025–26ರಲ್ಲಿ ಇದನ್ನು 4.5% GDP ಒಳಗೆ ತರುವ ಗುರಿ ಇಡಲಾಗಿದೆ.
ರಾಜ್ಯಗಳಿಗೂ 3%–3.5% GDP ಮಿತಿಯನ್ನು ಪಾಲಿಸಲು ಸೂಚನೆ.
✨ ಸಾರಾಂಶ ವಿತ್ತೀಯ ಕೊರತೆ ಮಿತಿ ಎಂದರೆ ಸರ್ಕಾರದ ಸಾಲದ ಅವಲಂಬನೆಯನ್ನು ನಿಯಂತ್ರಿಸಲು ನಿಗದಿಪಡಿಸಿದ GDP ಶೇಕಡಾವಾರು ಮಿತಿ. ಭಾರತದಲ್ಲಿ FRBM ಕಾಯ್ದೆಯ ಪ್ರಕಾರ 3% GDP ಮಿತಿಯಿದೆ. ಆದರೆ ಆರ್ಥಿಕ ಪರಿಸ್ಥಿತಿಗಳ ಪ್ರಕಾರ ಈ ಮಿತಿಯನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗುತ್ತದೆ.
ಗೋದ್ನಾ ಯೋಜನೆ ಜಿಂದಾಲ್ ತೆಕ್ಕೆಗೆ: 1,600 ಮೆ.ವಾ ಉತ್ಪಾದನೆ: ಪಿಪಿಪಿ ಮಾದರಿಯಲ್ಲಿ ಮೊದಲ ಪ್ರಯೋಗ ಸಂದರ್ಭ: ಸುಮಾರು 18 ವರ್ಷಗಳಿಂದ ನನೆಗುದಿಯಲ್ಲಿದ್ದ 1,600 ಮೆಗಾವಾಟ್ ಸಾಮರ್ಥ್ಯದ ಗೋದ್ನಾಶಾಖೋತ್ಪನ್ನ ವಿದ್ಯುತ್ ಯೋಜನೆಯನ್ನು ಜಿಂದಾಲ್ South ವೆಸ್ಟ್ (ಜೆಎಸ್ಡಬ್ಲ್ಯು) ಎನರ್ಜಿ ಕಂಪನಿ ಕೈಗೆತ್ತಿಕೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಸದ್ಯದಲ್ಲೇ ಒಪ್ಪಂದ ಮಾಡಿಕೊಳ್ಳಲಿದೆ. • ಸಾರ್ವಜನಿಕ ಖಾಸಗಿ ಸಹ ಭಾಗಿತ್ವದ(ಪಿಪಿಪಿ) ಈ ಯೋಜನೆಯನ್ನು ಛತ್ತೀಸಗಢದ ಗೋದ್ಘಾದಲ್ಲಿ ಕರ್ನಾಟಕ ಸರ್ಕಾರ ಆರಂಭಿಸುತ್ತಿದೆ. ಇದರ ಅನುಷ್ಠಾನದ ಹೊಣೆಯನ್ನು ಜೆಎಸ್ಡಬ್ಬುಗೆ ನೀಡುವುದಕ್ಕೆ ಈ ತಿಂಗಳ 8ರಂದು ನಡೆದ ಕೆಪಿಸಿಎಲ್ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. • ಈ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ಕೆಪಿಸಿಎಲ್ ಟೆಂಡರ್ ಕರೆದಿತ್ತು. ಇದರಲ್ಲಿ ಎರಡು ಕಂಪನಿಗಳು ಭಾಗವಹಿಸಿದ್ದವು. ಜೆಎಸ್ಡಬ್ಲ್ಯು, ಕಡಿಮೆ ಬಿಡ್ ಮಾಡಿದ್ದ ಕಾರಣ, ಆ ಕಂಪನಿಗೆ ನೀಡಲು ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದರು ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. • ಜೆಎಸ್ಡಬ್ಲ್ಯು ಎನರ್ಜಿ ಕಂಪನಿಯು 1 ಯೂನಿಟ್ಗೆ ₹4.05 ಹಾಗೂ ಡಿಬಿ ಪವರ್ ಲಿಮಿಟೆಡ್ ₹4.20 ದರ ನಿಗದಿ ಮಾಡುವಂತೆ ಕೋರಿದ್ದವು. ಕಡಿಮೆ ದರ, ತಾಂತ್ರಿಕ ಸಾಮರ್ಥ್ಯ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಜೆಎಸ್ಡಬ್ಲ್ಯು, ಅಯ್ಕೆ ಮಾಡಲಾಗಿದೆ. • ‘ಯೋಜನೆ ಪೂರ್ಣಗೊಂಡ ಬಳಿಕ ಅದಕ್ಕೆ ಎಷ್ಟು ಹಣ ವೆಚ್ಚವಾಗಿದೆ. ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ಎಷ್ಟಿದೆ ಎಂಬುದನ್ನು ಆಧರಿಸಿ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್ಸಿ) ಯೂನಿಟ್ಗೆ ಎಷ್ಟು ದರ ಎಂಬುದನ್ನು ನಿಗದಿ ಮಾಡಲಿದೆ. ಟೆಂಡರ್ನಲ್ಲಿ ಈಗ ನಿಗದಿ ಮಾಡಿರುವ ದರದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸ ಆದರೂ ಆಗಬಹುದು’ ಎಂದು ಅಧಿಕಾರಿಯೊಬ್ಬರು ವಿವರಿಸಿದರು. • ಈ ಯೋಜನೆಗೆ ಸುಮಾರು ₹18 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಜೆಎಸ್ಡಬ್ಲ್ಯು ಶೇ 74ರಷ್ಟು ಹಾಗೂ ಕೆಪಿಸಿಎಲ್ ಶೇ 26ರಷ್ಟು ಮೊತ್ತವನ್ನು ಭರಿಸಲಿದೆ. ಯೋಜನೆ 45 ತಿಂಗಳಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 2008ರಲ್ಲಿ ಸರ್ಕಾರದೊಂದಿಗೆ ಯೋಜನೆ’ ಒಪ್ಪಂದ ಈ ಛತ್ತೀಸಗಢ ‘ಗೋದ್ನಾ ಮಾಡಿಕೊಳ್ಳಲಾಗಿತ್ತು.
ಯೋಜನೆಗಾಗಿ 1,016 ಎಕರೆ ಖಾಸಗಿ ಜಮೀನು ಹಾಗೂ 160 ಎಕರೆ ಸರ್ಕಾಲ ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿ ಕೊಳ್ಳಲಾಗಿದೆ. ಇದಕ್ಕಾಗಿ ಸುಮಾರು ₹220 ಕೋಟಿ ವೆಚ್ಚವಾಗಿದೆ. • ಕಲ್ಲಿದ್ದಲು ಹಂಚಿಕೆ: ಗೋದ್ನಾದ ಸಮೀಪದಲ್ಲೇ ಎರಡು ಕಲ್ಲಿದ್ದಲು ಗಣಿಗಳನ್ನು ಕೇಂದ್ರ ಸರ್ಕಾರವು 2019ರಲ್ಲಿ ಕೆಪಿಸಿಎಲ್ಗೆ ಹಂಚಿಕೆ ಮಾಡಿದೆ. 1,600 ಮೆಗಾವಾಟ್ ವಿದ್ಯುತ್ ಉತ್ಪಾದನೆಗಾಗಿ ವರ್ಷಕ್ಕೆ 70 ಲಕ್ಷ ಟನ್ ಕಲ್ಲಿದ್ದಲು ಬೇಕಾಗುತ್ತದೆ. 21 ಕೋಟಿ ಟನ್ ಕಲ್ಲಿದ್ದಲು ಅಲ್ಲಿ ಲಭ್ಯವಿದ್ದು, 30 ವರ್ಷಗಳವರೆಗೆ ಬಳಸಬಹುದು ಎಂದು ಅಂದಾಜಿಸಲಾಗಿದೆ. • ಈ ಯೋಜನೆಗೆ ಆಗತ್ಯವಿರುವ ನೀರನ್ನು ಬಳಸಿಕೊಳ್ಳಲಾಗುತ್ತದೆ. ನದಿಯಿಂದ ಮಹಾನದಿಯಿಂದ ಗೋಡಾಗೆ ನೀರು ತರಲು ಬ್ಯಾರೇಜ್ ನಿರ್ಮಾಣಕ್ಕಾಗಿ 264 ಕೋಟಿ ವೆಚ್ಚ ಮಾಡಲಾಗಿದೆ.
ವಿಭಾಗ
ವಿವರಗಳು
ಯೋಜನೆಯ ಹೆಸರು
ಗೋದ್ನಾ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಯೋಜನೆ (Godna Thermal Power Project)
ಸ್ಥಳ
ಗೋದ್ಘಾ ಗ್ರಾಮ, ಜಾಂಜ್‌ಗೀರ್-ಚಂಪಾ ಜಿಲ್ಲೆ, ಛತ್ತೀಸಗಢ
ಒಟ್ಟು ಸಾಮರ್ಥ್ಯ
1,600 ಮೆಗಾವಾಟ್ (800 MW ನ 2 ಘಟಕಗಳು)
ತಂತ್ರಜ್ಞಾನ
ಸೂಪರ್ ಕ್ರಿಟಿಕಲ್ ತಂತ್ರಜ್ಞಾನ (ಇದು ಕಡಿಮೆ ಕಲ್ಲಿದ್ದಲು ಬಳಸಿ ಹೆಚ್ಚು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಪರಿಸರ ಮಾಲಿನ್ಯ ಕಡಿಮೆ ಮಾಡುತ್ತದೆ)
ಸಂದರ್ಭ: ಭೂಸರ್ವೇಕ್ಷಣಾ ಉಪಗ್ರಹ ಮತ್ತು ಇತರ 14 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ-ಸಿ62 ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. • ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಬೆಳಿಗ್ಗೆ 10.18ಕ್ಕೆ 250 ಟನ್ ತೂಕದ ಸಾಧನಗಳನ್ನು ಹೊತ್ತು ಎಲ್ಎಸ್ಎಲ್ವಿ-ಸಿ62 ರಾಕೆಟ್ ನಭಕ್ಕೆ ಚಿಮ್ಮಲಿದೆ ಎಂದು ಇಸ್ರೋ ಭಾನುವಾರ ತಿಳಿಸಿದೆ. ಇಸ್ರೋ ಅಂಗಸಂಸ್ಥೆಯಾದನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ನೇತೃತ್ವದಲ್ಲಿ ದೇಶೀಯ ಹಾಗೂ ವಿದೇಶದ 14 ಉಪಗ್ರಹ ಗಳನ್ನು ಕಕ್ಷೆಗೆ ಕಳುಹಿಸಲು ಸಿದ್ಧತೆ ನಡೆದಿದೆ. ಥಾಯ್ಲೆಂಡ್ ಮತ್ತು ಬ್ರಿಟನ್ ಅಭಿವೃದ್ಧಿಪಡಿಸಿದ ಭೂ ಸರ್ವೇಕ್ಷಣಾ ಉಪಗ್ರಹವನ್ನು ಪಿಎಸ್ಎಲ್ವಿ ರಾಕೆಟ್ ಮೊದಲಿಗೆ ಕಕ್ಷೆಗೆ ತಲುಪಿಸಲಿದೆ.ನಂತರ ನಭಕ್ಕೆ ಹಾರಿದ 17 ನಿಮಿಷಗಳ ಒಳಗಾಗಿ ಉಳಿದ 13 ಉಪಗ್ರಹಗಳನ್ನು ಸೂರ್ಯಸಮನ್ವಯ ಕಕ್ಷೆಗೆ ಸೇರಿಸಲಿದೆ.
ಬೆಂಗಳೂರು ಓಪನ್ ಟೆನಿಸ್ ಟೂರ್ನಿ: ಸ್ಕೆಟೊವ್ ರನ್ನರ್ಸ್ ಅಪ್ ಅಗ್ರ ಶ್ರೇಯಾಂಕದ ಆಟಗಾರ ಪೆಟ್ರೊ ಮಾರ್ಟನೆಝ್ ಅವರು ಫೈನಲ್‌ನಲ್ಲಿ ನೇರ ಸೆಟ್‌ಗಳಿಂದ ಆರನೇ ಶ್ರೇಯಾಂಕದ ಆಟಗಾರ ಟಿಮೋಫಿ ಸೈಟೋವ್ ಅವರನ್ನು ಪ್ರಶಸ್ತಿ ಗೆದ್ದುಕೊಂಡರು.
28 ವರ್ಷ ವಯಸ್ತಿನ, ಆರು ಅಡಿ ಎತ್ತರದ ಪೆಡೋ ಎಂದಿನಂತೆಯೇ ಎದುರಾಳಿಯ ಆಟದ ತಂತ್ರ ಗ್ರಹಿಸಿ ನಂತರ ತಮ್ಮ ಆಟಕ್ಕೆ ಕುದುರಿಕೊಂಡು ಮೇಲುಗೈ ಸಾಧಿಸಿದರು. ಇದು ಅವರಿಗೆ ಎಂಟನೇ ಎಟಿಪಿ ಚಾಲೆಂಜರ್ ಪ್ರಶಸ್ತಿ,
ನಿಕೋಲಸ್ ಕಿಟ್ಟಿಗೆ ಪ್ರಶಸ್ತಿ: ಕೊಲಂಬಿಯಾ ನಿಕೋಲಸ್ ಬೆರಿಂಟೋಸ್ ಅಮೆರಿಕದ ಬೆಂಜಮಿನ್ ಕಿಟ್ಟೆ ಜೋಡಿ 76 (11-9), 75 ರಿಂದ ಫ್ರಾನ್ಸ್‌ನ ಲುಕಾ ಸ್ಕಾಂಚೆಝ್ ಅರ್ಥರ್ ರೇಮಂಡ್ ಜೋಡಿಯನ್ನು ಸೋಲಿಸಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತು.
ಸಹ ಪ್ರಯಾಣಿಕ ಉಪಗ್ರಹಗಳು: 15–18 ಅಂತರರಾಷ್ಟ್ರೀಯ ಮತ್ತು ದೇಶೀಯ ಉಪಗ್ರಹಗಳು (ಸ್ಪೇನ್‌ನ Kestrel Initial Demonstrator ಸೇರಿ)
📌 ವಿಶೇಷ ಅಂಶಗಳು NSIL (NewSpace India Limited): ಇದು NSILನ 9ನೇ ವಾಣಿಜ್ಯ ಉಡಾವಣೆ
ಉಡಾವಣೆಯ ನಂತರ: 17 ನಿಮಿಷಗಳಲ್ಲಿ EOS‑N1 ತನ್ನ ಪೇಲೋಡ್ ಅನ್ನು ಗುರಿ ಕಕ್ಷೆಗೆ ನಿಯೋಜಿಸುತ್ತದೆ
ಅಂತರರಾಷ್ಟ್ರೀಯ ಸಹಭಾಗಿತ್ವ: ಈ ಉಡಾವಣೆಯೊಂದಿಗೆ ಭಾರತೀಯ ನೆಲದಿಂದ ಉಡಾವಣೆಗೊಂಡ ವಿದೇಶಿ ಉಪಗ್ರಹಗಳ ಸಂಖ್ಯೆ 442ಕ್ಕೆ ಏರಿಕೆ
🌱 ಮಹತ್ವ ಭಾರತದ ಮೊದಲ ಉಡಾವಣೆ 2026ರಲ್ಲಿ: EOS‑N1 ಮೂಲಕ ISRO ತನ್ನ ವರ್ಷದ ಕಾರ್ಯಚಟುವಟಿಕೆಗಳನ್ನು ಆರಂಭಿಸುತ್ತಿದೆ.
ಅಂತರರಾಷ್ಟ್ರೀಯ ವಿಶ್ವಾಸ: NSIL ಮೂಲಕ ವಾಣಿಜ್ಯ ಉಡಾವಣೆಗಳು ಭಾರತವನ್ನು ವಿಶ್ವದ ವಿಶ್ವಾಸಾರ್ಹ ಉಡಾವಣಾ ಪಾಲುದಾರರಾಗಿ ಸ್ಥಾಪಿಸುತ್ತಿವೆ.
ತಂತ್ರಜ್ಞಾನ ಪ್ರಗತಿ: ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ಉಪಗ್ರಹವು ಪರಿಸರ, ಕೃಷಿ, ನಗರ ಯೋಜನೆಗಳಲ್ಲಿ ನಿಖರ ಮಾಹಿತಿಯನ್ನು ಒದಗಿಸುತ್ತದೆ.
ಸಾರಾಂಶ: ಜನವರಿ 12, 2026ರಂದು ನಡೆಯಲಿರುವ PSLV‑C62/EOS‑N1 ಉಡಾವಣೆ ISROಗೆ ತಂತ್ರಜ್ಞಾನ, ವಾಣಿಜ್ಯ ಹಾಗೂ ಅಂತರರಾಷ್ಟ್ರೀಯ ಸಹಭಾಗಿತ್ವದ ದೃಷ್ಟಿಯಿಂದ ಮಹತ್ವದ ಹೆಜ್ಜೆ. ಇದು ಭೂ ವೀಕ್ಷಣಾ ಸಾಮರ್ಥ್ಯಗಳನ್ನು ವಿಸ್ತರಿಸುವುದರ ಜೊತೆಗೆ ಭಾರತವನ್ನು ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಮತ್ತಷ್ಟು ಬಲಪಡಿಸುತ್ತದೆ.
ಪಶ್ಚಿಮ ಘಟ್ಟಗಳು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾಗಿದ್ದು, ಇಲ್ಲಿನ ಪ್ರತಿಯೊಂದು ಯೋಜನೆಯೂ ಪರಿಸರವಾದಿಗಳ ತೀವ್ರ ವಿರೋಧ ಅಥವಾ ಚರ್ಚೆಗೆ ಕಾರಣವಾಗಿದೆ.
🌲 ಪಶ್ಚಿಮ ಘಟ್ಟಗಳಲ್ಲಿನ ಪ್ರಮುಖ ಉದ್ದೇಶಿತ ಯೋಜನೆಗಳು
ವಲಯ
ಯೋಜನೆಯ ಹೆಸರು
ಅತಿ ಹೆಚ್ಚು ಪರಿಣಾಮ ಬೀರುವ ಪ್ರದೇಶ
ನೀರು ಮತ್ತು ಇಂಧನ
ಕಳಸಾ ಬಂಡೂರಿ ನದಿ ತಿರುವು ಯೋಜನೆ
ಭೀಮಘಡ ವನ್ಯಜೀವಿ ಅಭಯಾರಣ್ಯ
ಕೈಗಾ ಪರಮಾಣು ಸ್ಥಾವರ (5 ಮತ್ತು 6ನೇ ಹಂತ)
ಉತ್ತರ ಕನ್ನಡದ ಅರಣ್ಯ ಪ್ರದೇಶ
ರೈಲ್ವೆ ಯೋಜನೆಗಳು
ಕ್ಯಾಸೆಲ್ ರಾಕ್-ಕುಲೆಮ್ ಡಬಲ್ ಟ್ರ್ಯಾಕಿಂಗ್
ಕಾಳಿ ಹುಲಿ ಸಂರಕ್ಷಿತ ಪ್ರದೇಶ (KTR)
ತಾಳಗುಪ್ಪ – ಹೊನ್ನಾವರ ರೈಲು ಮಾರ್ಗ
ಶರಾವತಿ ವನ್ಯಜೀವಿ ಅಭಯಾರಣ್ಯ
ಮೈಸೂರು – ಕುಶಾಲನಗರ – ಮಡಿಕೇರಿ
ಕೊಡಗು ಜಿಲ್ಲೆಯ ಪರಿಸರ
ಕಾಣಿಯೂರು – ಕಾಂಞಂಗಾಡ್ ಮಾರ್ಗ
ದಕ್ಷಿಣ ಕನ್ನಡ ಮತ್ತು ಕೇರಳದ ಗಡಿ
ರಸ್ತೆ ಮತ್ತು ಸುರಂಗ
ಆಗುಂಬೆ ಸುರಂಗ ರಸ್ತೆ
ಆಗುಂಬೆ ಘಾಟ್ (ಅತಿ ಹೆಚ್ಚು ಮಳೆ ಬೀಳುವ ಪ್ರದೇಶ)
ಮಡಿಕೇರಿ-ಮಕುಟ್ಟ-ಕಣ್ಣೂರು ರಸ್ತೆ ವಿಸ್ತರಣೆ
ಕೊಡಗಿನ ಕಾಫಿ ತೋಟಗಳು ಮತ್ತು ಅರಣ್ಯ
ಪ್ರವಾಸೋದ್ಯಮ
ಕೊಡಚಾದ್ರಿ ಬೆಟ್ಟಗಳಿಗೆ ರೋಪ್ವೇ
ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ
⚠️ ಈ ಯೋಜನೆಗಳ ಪರಿಸರ ಮೇಲಿನ ಪರಿಣಾಮಗಳು ಅರಣ್ಯ ನಾಶ (Deforestation): ಈ ಎಲ್ಲಾ ಯೋಜನೆಗಳಿಗಾಗಿ ಲಕ್ಷಾಂತರ ಮರಗಳನ್ನು ಕಡಿಯಬೇಕಾಗುತ್ತದೆ. ವಿಶೇಷವಾಗಿ ಕೈಗಾ ಮತ್ತು ರೈಲ್ವೆ ಯೋಜನೆಗಳು ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳ ಮೇಲೆ ಪ್ರಭಾವ ಬೀರುತ್ತವೆ.
ವನ್ಯಜೀವಿ ಕಾರಿಡಾರ್‌ಗೆ ಧಕ್ಕೆ: ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಶರಾವತಿ ಅಭಯಾರಣ್ಯಗಳಲ್ಲಿ ರೈಲು ಹಳಿಗಳು ಪ್ರಾಣಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗುತ್ತವೆ (Fragmentation).
ಭೂಕುಸಿತದ ಭೀತಿ (Landslides): ಕೊಡಗು ಮತ್ತು ಆಗುಂಬೆ ಭಾಗದಲ್ಲಿ ರಸ್ತೆ ವಿಸ್ತರಣೆ ಮತ್ತು ಸುರಂಗ ಮಾರ್ಗಗಳು ಮಣ್ಣಿನ ಸ್ಥಿರತೆಯನ್ನು ಕುಗ್ಗಿಸಿ, ಮಳೆಗಾಲದಲ್ಲಿ ಭೀಕರ ಭೂಕುಸಿತಕ್ಕೆ ಕಾರಣವಾಗಬಹುದು.
ನೀರಿನ ಮೂಲಗಳ ನಾಶ: ಕಳಸಾ ಬಂಡೂರಿ ಮತ್ತು ಕೊಡಗಿನ ರಸ್ತೆ ವಿಸ್ತರಣೆಗಳು ನದಿಗಳ ಉಗಮ ಸ್ಥಾನ ಮತ್ತು ಜಲಾನಯನ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತವೆ.
⚖️ ಅಭಿವೃದ್ಧಿ vs ಸಂರಕ್ಷಣೆ ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದಂತೆ ಮಾಧವ ಗಾಡ್ಗೀಳ್ ವರದಿ ಮತ್ತು ಕಸ್ತೂರಿ ರಂಗನ್ ವರದಿಗಳು ಈ ಪ್ರದೇಶಗಳನ್ನು ‘ಪರಿಸರ ಸೂಕ್ಷ್ಮ ವಲಯ’ (ESA) ಎಂದು ಘೋಷಿಸಲು ಶಿಫಾರಸು ಮಾಡಿವೆ.
🌲 ಪಶ್ಚಿಮ ಘಟ್ಟಗಳ ಸಂರಕ್ಷಣೆ: ಗಾಡ್ಗೀಳ್ vs ಕಸ್ತೂರಿ ರಂಗನ್ ವರದಿ
ಹೋಲಿಕೆಯ ಅಂಶಗಳು
ಮಾಧವ ಗಾಡ್ಗೀಳ್ ವರದಿ (2011)
ಕಸ್ತೂರಿ ರಂಗನ್ ವರದಿ (2013)
ಸಮಿತಿಯ ಹೆಸರು
ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ (WGEEP)
ಉನ್ನತ ಮಟ್ಟದ ಕಾರ್ಯನಿರತ ಗುಂಪು (HLWG)
ದೃಷ್ಟಿಕೋನ
ಪರಿಸರ ಕೇಂದ್ರಿತ: ಪರಿಸರ ಸಂರಕ್ಷಣೆಗೆ ಅತಿ ಹೆಚ್ಚು ಒತ್ತು ನೀಡಿತು.
ಅಭಿವೃದ್ಧಿ ಪೂರಕ: ಪರಿಸರ ಮತ್ತು ಅಭಿವೃದ್ಧಿಯ ನಡುವೆ ಸಮತೋಲನಕ್ಕೆ ಪ್ರಯತ್ನಿಸಿತು.
ಸಂರಕ್ಷಿತ ಪ್ರದೇಶ
ಇಡೀ ಪಶ್ಚಿಮ ಘಟ್ಟಗಳನ್ನು (100%) ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಿತು.
ಪಶ್ಚಿಮ ಘಟ್ಟಗಳ ಕೇವಲ 37% (ಸುಮಾರು 60,000 ಚ.ಕಿ.ಮೀ) ಪ್ರದೇಶವನ್ನು ಮಾತ್ರ ESA ಎಂದು ಗುರುತಿಸಿತು.
ವಲಯಗಳ ವಿಂಗಡಣೆ
ಸೂಕ್ಷ್ಮತೆಯನ್ನು ಆಧರಿಸಿ 3 ವಲಯಗಳಾಗಿ (ESZ 1, 2, 3) ವಿಂಗಡಿಸಿತು.
ಇಡೀ ಪ್ರದೇಶವನ್ನು ‘ಸಾಂಸ್ಕೃತಿಕ ಭೂದೃಶ್ಯ’ ಮತ್ತು ‘ನೈಸರ್ಗಿಕ ಭೂದೃಶ್ಯ’ ಎಂದು ಎರಡೇ ಭಾಗ ಮಾಡಿತು.
ನಿರ್ಬಂಧಗಳು
ಗಣಿಗಾರಿಕೆ, ಅಣೆಕಟ್ಟು ನಿರ್ಮಾಣ ಮತ್ತು ಕೀಟನಾಶಕಗಳ ಬಳಕೆಗೆ ಸಂಪೂರ್ಣ ನಿಷೇಧ ಹೇರಲು ಶಿಫಾರಸು ಮಾಡಿತು.
ಕೇವಲ ಅತಿ ಹೆಚ್ಚು ಹಾನಿಕಾರಕ ಕೈಗಾರಿಕೆಗಳು ಮತ್ತು ಗಣಿಗಾರಿಕೆಯನ್ನು ಮಾತ್ರ ನಿಷೇಧಿಸಲು ಸೂಚಿಸಿತು.
ಸ್ಥಳೀಯರ ಪಾಲುದಾರಿಕೆ
ಗ್ರಾಮ ಸಭೆಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಪ್ರತಿಪಾದಿಸಿತು (Bottom-to-top approach).
ಆಡಳಿತಾತ್ಮಕ ಮತ್ತು ತಾಂತ್ರಿಕ ನಿರ್ಧಾರಗಳಿಗೆ ಹೆಚ್ಚಿನ ಒತ್ತು ನೀಡಿತು.
🔍 ಮುಖ್ಯಾಂಶಗಳು ಮತ್ತು ವಿವಾದಗಳು ಮಾಧವ ಗಾಡ್ಗೀಳ್ ವರದಿ: ಅನುಕೂಲ: ಅತ್ಯಂತ ಕಟ್ಟುನಿಟ್ಟಾದ ಪರಿಸರ ರಕ್ಷಣೆ.
ವಿರೋಧ: ಈ ವರದಿಯು ತುಂಬಾ ಕಠಿಣವಾಗಿದೆ ಮತ್ತು ಇದು ಜಾರಿಯಾದರೆ ಗುಡ್ಡಗಾಡು ಪ್ರದೇಶದ ಜನರ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ರಾಜ್ಯ ಸರ್ಕಾರಗಳು (ವಿಶೇಷವಾಗಿ ಕೇರಳ ಮತ್ತು ಕರ್ನಾಟಕ) ವಿರೋಧಿಸಿದವು.
ಕಸ್ತೂರಿ ರಂಗನ್ ವರದಿ: ಅನುಕೂಲ: ಅಭಿವೃದ್ಧಿ ಚಟುವಟಿಕೆಗಳಿಗೆ ಸ್ವಲ್ಪ ಅವಕಾಶ ನೀಡಲಾಗಿದೆ.
ವಿರೋಧ: ಪರಿಸರವಾದಿಗಳು ಈ ವರದಿಯನ್ನು ವಿರೋಧಿಸಿದರು, ಏಕೆಂದರೆ ಇದು ಕೇವಲ 37% ಪ್ರದೇಶವನ್ನು ಮಾತ್ರ ರಕ್ಷಿಸುತ್ತದೆ, ಉಳಿದ 63% ಪ್ರದೇಶವನ್ನು ವಿನಾಶಕ್ಕೆ ಮುಕ್ತಗೊಳಿಸುತ್ತದೆ ಎಂಬುದು ಅವರ ವಾದ.
📍 ಕರ್ನಾಟಕದ ಪ್ರಸ್ತುತ ಸ್ಥಿತಿ ಕರ್ನಾಟಕ ಸರ್ಕಾರವು ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ವರದಿಯಲ್ಲಿ ಗುರುತಿಸಲಾದ ಗ್ರಾಮಗಳ ಜನರು ತಮ್ಮ ಭೂಮಿಯ ಹಕ್ಕು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚುತ್ತಿರುವ ಭೂಕುಸಿತ ಮತ್ತು ಪ್ರವಾಹಗಳು ಈ ವರದಿಗಳ ಅಗತ್ಯತೆಯನ್ನು ಮತ್ತೆ ನೆನಪಿಸುತ್ತಿವೆ.
🌾 ಬೆಲೆ ಕೊರತೆ ಪಾವತಿ ಯೋಜನೆ (PDPS) ಬೆಲೆ ಕೊರತೆ ಪಾವತಿ ಯೋಜನೆ (Price Deficiency Payment Scheme – PDPS) ಅನ್ನು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಅನ್ನದಾತ ಆಯ್ ಸಂರಕ್ಷಣ ಅಭಿಯಾನ (PM-AASHA) ಅಡಿಯಲ್ಲಿ 2018ರಲ್ಲಿ ಆರಂಭಿಸಿತು. ಈ ಯೋಜನೆಯ ಉದ್ದೇಶ ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP) ಗಿಂತ ಕಡಿಮೆ ಮಾರುಕಟ್ಟೆ ಬೆಲೆ ದೊರೆತರೆ, ಆ ಕೊರತೆಯನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಸುವುದು.
🏛️ ಯೋಜನೆಯ ಕಾರ್ಯವಿಧಾನ ರೈತರು ತಮ್ಮ ಉತ್ಪನ್ನವನ್ನು ಅಧಿಸೂಚಿತ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ.
ಮಾರಾಟ ಬೆಲೆ MSP ಗಿಂತ ಕಡಿಮೆ ಇದ್ದರೆ, MSP ಮತ್ತು ಮಾರಾಟ ಬೆಲೆಯ ನಡುವಿನ ಅಂತರವನ್ನು ಸರ್ಕಾರ ಪಾವತಿಸುತ್ತದೆ.
ಪಾವತಿ RTGS/NEFT ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ರೈತರು ಆನ್‌ಲೈನ್ ನೋಂದಣಿ ಮಾಡಬೇಕು ಮತ್ತು FAQ (Fair Average Quality) ಮಾನದಂಡಗಳನ್ನು ಪೂರೈಸಬೇಕು.
📊 ಪ್ರಮುಖ ಅಂಶಗಳು ಈ ಯೋಜನೆಯಲ್ಲಿ ಸರ್ಕಾರವು ರೈತರಿಂದ ನೇರವಾಗಿ ಬೆಳೆಯನ್ನು ಖರೀದಿಸುವುದಿಲ್ಲ; ಬದಲಾಗಿ, ಮಾರುಕಟ್ಟೆ ಬೆಲೆ ಕುಸಿದಾಗ ಉಂಟಾಗುವ ನಷ್ಟವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡುತ್ತದೆ.
ಅಂಶ
ವಿವರಣೆ
ಪ್ರಾರಂಭ
2018 (PM-AASHA ಯೋಜನೆಯ ಭಾಗವಾಗಿ).
ಮುಖ್ಯ ಉದ್ದೇಶ
ಕನಿಷ್ಠ ಬೆಂಬಲ ಬೆಲೆ (MSP) ಗಿಂತ ಮಾರುಕಟ್ಟೆ ಬೆಲೆ ಕಡಿಮೆಯಾದಾಗ ಆ ವ್ಯತ್ಯಾಸದ ಹಣವನ್ನು ರೈತರಿಗೆ ನೀಡಿ ಆರ್ಥಿಕ ರಕ್ಷಣೆ ಒದಗಿಸುವುದು.
ಕಾರ್ಯವಿಧಾನ
ಇಲ್ಲಿ ಭೌತಿಕ ಖರೀದಿ ಇರುವುದಿಲ್ಲ. ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಪಾವತಿಸಲಾಗುತ್ತದೆ.
ಕರ್ನಾಟಕದಲ್ಲಿ ಅನ್ವಯ (2025)
ಮಾವು ಬೆಳೆಗಾರರಿಗೆ (ವಿಶೇಷವಾಗಿ ತೋತಾಪುರಿ ತಳಿ) ಈ ಯೋಜನೆ ಜಾರಿಗೊಳಿಸಲಾಗಿದೆ.
ಕೇಂದ್ರದ ನೆರವು
MSP ಮೌಲ್ಯದ 15% ವರೆಗಿನ ವ್ಯತ್ಯಾಸವನ್ನು ಕೇಂದ್ರ ಸರ್ಕಾರ ಭರಿಸುತ್ತದೆ.
ಪ್ರಥಮ ಅನುಷ್ಠಾನ
ಮಧ್ಯಪ್ರದೇಶದ ‘ಭಾವಾಂತರ ಭುಕ್ತಾನ್ ಯೋಜನೆ’ಯ ಮಾದರಿಯಲ್ಲಿ 2018ರಲ್ಲಿ ಸೋಯಾಬೀನ್ ಬೆಳೆಗೆ ಮೊದಲು ಜಾರಿಯಾಯಿತು.
💡 ಯೋಜನೆಯ ವಿಶೇಷತೆಗಳು: ದಾಸ್ತಾನು ಸಮಸ್ಯೆ ಇಲ್ಲ: ಸರ್ಕಾರವು ಬೆಳೆಗಳನ್ನು ಸಂಗ್ರಹಿಸಿಡುವ (Procurement & Storage) ಅವಶ್ಯಕತೆ ಇರುವುದಿಲ್ಲ, ಇದರಿಂದ ನಿರ್ವಹಣಾ ವೆಚ್ಚ ಉಳಿಯುತ್ತದೆ.
ರೈತರಿಗೆ ಅನುಕೂಲ: ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ (APMC) ಮಾರುಕಟ್ಟೆಯಲ್ಲಿ ಮುಕ್ತವಾಗಿ ಮಾರಾಟ ಮಾಡಬಹುದು ಮತ್ತು ಬೆಲೆ ವ್ಯತ್ಯಾಸದ ಹಣವನ್ನು ಸರ್ಕಾರದ ಕಡೆಯಿಂದ ಪಡೆಯಬಹುದು.
ಮಿತಿಗಳು: ರಾಜ್ಯದ ಒಟ್ಟು ಉತ್ಪಾದನೆಯ ಗರಿಷ್ಠ 40% ವರೆಗೆ ಮಾತ್ರ ಈ ಯೋಜನೆಯಡಿ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ.
🎯 PM-AASHA ಉದ್ದೇಶಗಳು MSP ಭರವಸೆ: ಅಧಿಸೂಚಿತ ಪಲ್ಸ್, ಎಣ್ಣೆ ಬೀಜಗಳು ಮತ್ತು ಕೊಪ್ರಾ ಬೆಳೆಗಳಿಗೆ.
ಅಪಾಯ ತಡೆ: ಮಾರುಕಟ್ಟೆ ಬೆಲೆ MSP ಗಿಂತ ಕಡಿಮೆ ಇದ್ದಾಗ ರೈತರು ಸಂಕಷ್ಟ ಮಾರಾಟ ಮಾಡದಂತೆ ತಡೆ.
ರಾಜ್ಯಗಳ ಆಯ್ಕೆ: ಪ್ರತಿ ವರ್ಷ/ಮಾರುಕಟ್ಟೆ ಹಂಗಾಮಿನಲ್ಲಿ PSS ಅಥವಾ PDPS ಆಯ್ಕೆ.
🛠️ ಸರ್ಕಾರದ ಕ್ರಮಗಳು ಖರೀದಿ ಕೇಂದ್ರಗಳು: NAFED, NCCF ಮತ್ತು ರಾಜ್ಯ ಸಂಸ್ಥೆಗಳ ಮೂಲಕ ಹೆಚ್ಚುವರಿ ಕೇಂದ್ರಗಳು.
ಹಣಕಾಸು ಭರವಸೆ: ₹45,000 ಕೋಟಿ ವರೆಗೆ ಕೇಂದ್ರ ಭರವಸೆ.
ನೋಂದಣಿ: eSamriddhi (NAFED), eSanyukti (NCCF) ಪೋರ್ಟಲ್‌ಗಳಲ್ಲಿ ಆಧಾರ್ ಆಧಾರಿತ ನೋಂದಣಿ.
ಜಾಗೃತಿ: SMS/WhatsApp ಮೂಲಕ ರೈತರಿಗೆ ಮಾಹಿತಿ.
Agmarknet ಪೋರ್ಟಲ್: ದೈನಂದಿನ ಮಾರುಕಟ್ಟೆ ಬೆಲೆ ಮಾಹಿತಿ.
ಭೂ ದಾಖಲೆ: ರಾಜ್ಯ ಭೂ ದಾಖಲೆಗಳಿಂದ ನೇರವಾಗಿ ಪಡೆಯುವುದು.
ಖರೀದಿ ಮಿತಿ: ರೈತರಿಂದ ದಿನಕ್ಕೆ 40 ಕ್ವಿಂಟಲ್ ವರೆಗೆ (ಹಿಂದಿನ 25 ಕ್ವಿಂಟಲ್‌ನಿಂದ ಹೆಚ್ಚಳ).
ಅನುಷ್ಠಾನ ಅವಧಿ: 90 ದಿನಗಳಿಂದ 120 ದಿನಗಳಿಗೆ ವಿಸ್ತರಣೆ.
MSP ಪಾವತಿ: ನೇರವಾಗಿ ರೈತರ ಬ್ಯಾಂಕ್ ಖಾತೆಗೆ.
🌱 ಕರ್ನಾಟಕದ ದೃಷ್ಟಿಕೋನ
🥭 ಕರ್ನಾಟಕದಲ್ಲಿ ಮಾವು ಬೆಳೆಗಾರರಿಗೆ ಲಾಭ (2025-26): ಕರ್ನಾಟಕವು ಮಾವಿನ PDPS ಅನ್ನು 2025ರಲ್ಲಿ ಪ್ರಾರಂಭಿಸಿತು. ಇತ್ತೀಚಿನ ವರದಿಗಳಂತೆ, ಕರ್ನಾಟಕದ ಸುಮಾರು 14,500 ಕ್ಕೂ ಹೆಚ್ಚು ರೈತರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಪ್ರತಿ ಎಕರೆಗೆ 20 ಕ್ವಿಂಟಲ್‌ನಂತೆ ಗರಿಷ್ಠ 5 ಎಕರೆಗೆ ಮಿತಿ ನಿಗದಿಪಡಿಸಲಾಗಿದೆ.
2026–27ರಲ್ಲಿ ₹796 ಕೋಟಿ ಹೆಚ್ಚುವರಿ ಹಂಚಿಕೆಗಾಗಿ ಪ್ರಸ್ತಾಪಿಸಲಾಗಿದೆ. ಜೋಳ, ಸೋಯಾಬೀನ್, ಮಾವು, ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ಅರಿಶಿನ, ಶುಂಠಿ ಬೆಳೆಗಳನ್ನು PDPS ಅಡಿಯಲ್ಲಿ ತರಲು ಯೋಜನೆ.
ಇದು ಪರಿಶಿಷ್ಟ ಬೆಳೆಗಳು ಮತ್ತು ಶೀಘ್ರ ಹಾಳಾಗುವ ಬೆಳೆಗಳಿಗೆ ಭರವಸೆ ನೀಡುತ್ತದೆ.
✨ ಸಾರಾಂಶ ಬೆಲೆ ಕೊರತೆ ಪಾವತಿ ಯೋಜನೆ (PDPS) ರೈತರಿಗೆ MSP ಭರವಸೆ ನೀಡುವ ನವೀನ ಕ್ರಮ. ಭೌತಿಕ ಖರೀದಿ ಇಲ್ಲದೆ, ನೇರ ಪಾವತಿ ಮೂಲಕ ರೈತರ ಆದಾಯವನ್ನು ರಕ್ಷಿಸುತ್ತದೆ. ಮಧ್ಯಪ್ರದೇಶದಲ್ಲಿ ಯಶಸ್ವಿ ಅನುಷ್ಠಾನಗೊಂಡ ಈ ಯೋಜನೆ, ಈಗ ಕರ್ನಾಟಕದಲ್ಲಿ ವಿಸ್ತೃತ ಬೆಳೆಗಳಿಗೆ ಜಾರಿಯಾಗುತ್ತಿದೆ. ₹796 ಕೋಟಿ ಹಂಚಿಕೆ ಮೂಲಕ, ರೈತರ ಆರ್ಥಿಕ ಭದ್ರತೆ ಮತ್ತು ಕೃಷಿ ಸ್ಥಿರತೆ ಸಾಧಿಸಲು ಇದು ಮಹತ್ವದ ಹೆಜ್ಜೆ.
ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ನವೆಂಬರ್ವರೆಗೆ ಚೀನಾಕ್ಕೆ, ದೇಶದಿಂದ ₹1.10 ಲಕ್ಷ ಕೋಟಿ ಮೌಲ್ಯದಷ್ಟು ಸರಕುಗಳು ರಫ್ತಾಗಿವೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ • 2024-25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ದೇಶದಿಂದ ಚೀನಾಕ್ಕೆ ₹82,965 ಕೋಟಿ ಮೌಲ್ಯದ ಸರಕುಗಳು ರಫ್ತಾಗಿದ್ದವು. ಇದಕ್ಕೆ ಹೋಲಿಸಿದರೆ ಈ ಬಾರಿ ರಫ್ತು ಪ್ರಮಾಣವು ಶೇ 33ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ. • ಚೀನಾವು ಕ್ರಮೇಣವಾಗಿ, ಭಾರತದ ಪ್ರಮುಖ ರಫ್ತು ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಅಲ್ಲದೆ, ಈ ದತ್ತಾಂಶವು ದ್ವಿಪಕ್ಷೀಯ ವ್ಯಾಪಾರ ಸಂಬಂಧದಲ್ಲಿ ರಚನಾತ್ಮಕ ಬದಲಾವಣೆಯನ್ನು ಸೂಚಿಸುತ್ತಿದೆ ಎಂದು ತಿಳಿಸಿದೆ. • ಎಲೆಕ್ಟ್ರಾನಿಕ್ಸ್ ವಸ್ತುಗಳು, ಕೃಷಿ ಮತ್ತು ಸಾಗರೋತ್ಪನ್ನಗಳು, ದೂರಸಂಪರ್ಕ ಉಪಕರಣಗಳು ಹಾಗೂ ಮಸಾಲೆಗಳಂತಹ ಉತ್ಪನ್ನಗಳು ರಫ್ತು ಹೆಚ್ಚಳಕ್ಕೆ ಕಾರಣವಾಗಿವೆ ಎಂದು ತಿಳಿಸಿದೆ. • ಅಮೆರಿಕದಲ್ಲಿ ಭಾರತದ ಸರಕುಗಳಿಗೆ ಹೆಚ್ಚಿನ ಸುಂಕ ಹೇರಲಾಗುತ್ತಿದೆ. • ಇದರಿಂದ ಅಲ್ಲಿಗೆ ರಫ್ತು ಮಾಡಲು ಕಷ್ಟಕರವಾಗುತ್ತಿದೆ. ಈ ವೇಳೆ ಭಾರತವು ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರದ ಅವಕಾಶಕ್ಕಾಗಿ ಅನ್ವೇಷಣೆ ಮಾಡುತ್ತಿದೆ ಎಂದು ರಫ್ತುದಾರರೊಬ್ಬರು ಹೇಳಿದ್ದಾರೆ.