Sat. May 9th, 2026

Kannada

ಪ್ರಚಲಿತ ವಿದ್ಯಮಾನಗಳು: 22ನೇ ಸೆಪ್ಟೆಂಬರ್ 2025

  • ಪರಿಷ್ಕೃತ ಜಿಎಸ್ಟಿ ಇಂದಿನಿಂದ

ಸಂದರ್ಭ: ನಿತ್ಯ ಬಳಕೆಯ ಉತ್ಪನ್ನಗಳು, ಆಹಾರ ಉತ್ಪನ್ನಗಳು, ವಾಹನಗಳು ಸೇರಿದಂತೆ ಸರಿಸುಮಾರು 375 ಉತ್ಪನ್ನಗಳ ಬೆಲೆಯು ಕಡಿಮೆ ಆಗಲಿವೆ.

  • ವಿವಿಧ ಉತ್ಪನ್ನಗಳು ಹಾಗೂ ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಜಿಎಸ್‌ಟಿ ಮಂಡಳಿ ಪರಿಷ್ಕರಿಸಿದ್ದು, ಪರಿಷ್ಕೃತ ದರಗಳು ಜಾರಿಗೆ ಬರುತ್ತಿವೆ. ಇದರ ಪ್ರಯೋಜನ ವನ್ನು ಬಹುತೇಕ ಕಂಪನಿಗಳು ಗ್ರಾಹಕರಿಗೆ ವರ್ಗಾವಣೆ ಮಾಡಿವೆ.
  • ಇಷ್ಟು ವರ್ಷ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ನಾಲ್ಕು ತೆರಿಗೆ ಹಂತಗಳು (ಶೇ 5, 12, 18 ಮತ್ತು 28) ಇದ್ದವು. ಆದರೆ ಇನ್ನು ಮುಂದೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಎರಡು ತೆರಿಗೆ ಹಂತಗಳು (ಶೇ 5 ಮತ್ತು 18) ಇರಲಿವೆ. ಐಷಾರಾಮಿ ಉತ್ಪನ್ನಗಳು ಹಾಗೂ ತಂಬಾಕಿನ ಉತ್ಪನ್ನಗಳಿಗೆ ಶೇ 40ರಷ್ಟು ತೆರಿಗೆ ಇರಲಿದೆ. ಈ ಬದಲಾವಣೆಗಳ ಪರಿಣಾಮವಾಗಿ ದೇಶದ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.
  • ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳನ್ನು (ಎಫ್‌ಎಂಸಿಜಿ) ತಯಾರಿಸುವ ಕಂಪನಿಗಳು ಪರಿಷ್ಕೃತ ದರವನ್ನು ಪ್ರಕಟಿಸಿವೆ. ಸೋಪು, ಶಾಂಪೂ, ಟೂತ್‌ಪೇಸ್ಟ್‌ ಸೇರಿದಂತೆ ತಮ್ಮ ಹತ್ತು ಹಲವು ಉತ್ಪನ್ನಗಳ ಮೇಲೆ ಹೊಸ ಎಂಆರ್‌ಪಿ ನಮೂದಿಸಿವೆ.
  • ಕುರುಕಲು, ಕಾಫಿ ಮತ್ತು ಚಹಾ ಪುಡಿ, ಐಸ್‌ಕ್ರೀಂ, ಚಾಕೊಲೇಟ್‌ ಹಾಗೂ ಇತರ ಆಹಾರ ವಸ್ತುಗಳ ತಯಾರಿಕಾ ಕಂಪನಿಗಳು ಕೂಡ ತೆರಿಗೆ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಸಜ್ಜಾಗಿವೆ.
  • ಈ ಕಂಪನಿಗಳು ಪರಿಷ್ಕೃತ ಎಂಆರ್‌ಪಿ ಇರುವ ಉತ್ಪನ್ನಗಳನ್ನು ವಿತರಕರಿಗೆ, ಇ–ವಾಣಿಜ್ಯ ಕಂಪನಿಗಳ ಗೋದಾಮುಗಳಿಗೆ, ಸಾಂಪ್ರದಾಯಿಕ ಕಿರಾಣಿ ಅಂಗಡಿಗಳಿಗೆ ರವಾನಿಸಿರುವುದಾಗಿ ಹೇಳಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಉತ್ಪನ್ನಗಳ ಬೆಲೆಯನ್ನು ವಿಶೇಷವಾದ ರಿಯಾಯಿತಿಗಳ ಮೂಲಕ ಸರಿಹೊಂದಿಸಲಾಗಿದೆ ಎಂದು ಹೇಳಿವೆ.
  • ಡಾಬರ್, ಐಟಿಸಿ, ಪ್ರಾಕ್ಟರ್‌ ಆ್ಯಂಡ್‌ ಗ್ಯಾಂಬಲ್, ಇಮಾಮಿ, ನೆಸ್ಲೆ, ಆರ್‌ಸಿಪಿಎಲ್‌, ಅಮೂಲ್, ಎಚ್‌ಯುಎಲ್‌ನಂತಹ ಪ್ರಮುಖ ಕಂಪನಿಗಳು ಪರಿಷ್ಕೃತ ದರದ ‍ಪಟ್ಟಿಯನ್ನು ತಮ್ಮ ವಿತರಕರಿಗೆ ರವಾನಿಸಿವೆ. ಅಲ್ಲದೆ, ತಮ್ಮ ವೆಬ್‌ಸೈಟ್‌ಗಳ ಮೂಲಕ ಹೊಸ ದರವನ್ನು ಗ್ರಾಹಕರಿಗೂ ತಿಳಿಸಿವೆ.
  • ಕೆಐಒಸಿಎಲ್ವಿರುದ್ಧ ಗ್ರಾಮಸಭೆ ನಿರ್ಣಯ

ಸಂದರ್ಭ: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿಎಲ್‌) ಉದ್ದೇಶಿತ ದೇವದಾರಿ ಗಣಿಗೆ ಮತ್ತೊಂದು ಅಡ್ಡಿ ಎದುರಾಗಿದೆ. ಗಣಿಯ ವಿರುದ್ಧ ಸ್ಥಳೀಯ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

  • ದೇವದಾರಿ ಗಣಿಗೆ ಸಂಬಂಧಿಸಿ ಕೆಐಒಸಿಎಲ್‌ ಮತ್ತು ಅರಣ್ಯ ಇಲಾಖೆ ನಡುವಿನ ನ್ಯಾಯಾಂಗ ಹೋರಾಟದಲ್ಲಿ ಕೋರ್ಟ್‌ ಕೆಐಒಸಿಎಲ್‌ ಪರ ಇತ್ತೀಚೆಗೆ ಆದೇಶ ನೀಡಿದೆ. ಈ ಮಧ್ಯೆ ಸಂಡೂರು ತಾಲ್ಲೂಕಿನ ನರಸಿಂಗಪುರ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆ ಜರುಗಿತು.
  • ಸಭೆಯಲ್ಲಿ ಕೆಐಒಸಿಎಲ್‌ಗೆ ವಿರೋಧ ವ್ಯಕ್ತವಾಗಿದೆ. ‘ಅರಣ್ಯ ಪ್ರದೇಶ, ಮಳೆ, ಪರಿಸರ ಹಿತದೃಷ್ಟಿಯಿಂದ ಕುದುರೆಮುಖ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಗ್ರಾಮಸ್ಥರು ತೀರ್ಮಾನಿಸಿದರು. ಕಂಪನಿಯು ಕೆಲ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಇದಕ್ಕೆ ಅನುಮತಿ ನೀಡಬೇಕು ಎಂದು ಗ್ರಾಮಸ್ಥರೊಬ್ಬರು ಸಭೆಯಲ್ಲಿ ತಿಳಿಸಿದರು. ಮುಂದಿನ ಕ್ರಮಕ್ಕಾಗಿ ಸಂಡೂರು ತಹಶೀಲ್ದಾರರಿಗೆ ಪತ್ರ ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ಗ್ರಾಮ ಪಂಚಾಯಿತಿ ನಿರ್ಣಯ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
  • ನಿರ್ಣಯಕ್ಕೆ ಮಾನ್ಯತೆಯುಂಟೇ?: ಗ್ರಾಮ ಸಭೆಯ ನಿರ್ಣಯಗಳಿಗೆ ಮಾನ್ಯತೆ ಇರುತ್ತದೆ. ಆದರೆ, ಇದು ಮುಖ್ಯ ಖನಿಜಕ್ಕೆ (ಮೇಜರ್‌ ಮಿನರಲ್‌) ಸಂಬಂಧಿಸಿದ ವಿಷಯ. ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಮುಖ್ಯ ಖನಿಜಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆದ್ದರಿಂದ ಈ ವಿಷಯದಲ್ಲಿ ಗ್ರಾಮಸಭೆ ನಿರ್ಣಯಕ್ಕೆ ಮಾನ್ಯತೆ ಇಲ್ಲ ಎಂಬ ಅಭಿಪ್ರಾಯ ಅಧಿಕಾರಿಗಳಿಂದ ವ್ಯಕ್ತವಾಗಿದೆ.
  • ‘ಗ್ರಾಮ ಪಂಚಾಯಿತಿ ಎಂಬುದು ಸ್ಥಳೀಯ ಸರ್ಕಾರ. ನಮ್ಮ ನಿರ್ಧಾರಕ್ಕೆ ಮಾನ್ಯತೆ ಇದೆ. ಗಣಿ ಲಾರಿಗಳ ಓಡಾಟದಿಂದ ನಮ್ಮ ಗ್ರಾಮಗಳು ದೂಳಿನಲ್ಲಿ ಮುಳುಗಿವೆ. ನಾವೆಲ್ಲರೂ ಶಾಪಗ್ರಸ್ತರಾಗಿದ್ದೇವೆ. ಹೊಸ ಗಣಿ ಬರುವುದಕ್ಕೆ ನಮ್ಮ ವಿರೋಧವಿದೆ’ ಎಂದು ಗ್ರಾಮಸ್ಥರು ಹೇಳಿದ್ದಾರೆ.
  • ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಅರಣ್ಯದ 401.57 ಹೆಕ್ಟೇರ್ ಪ್ರದೇಶದಲ್ಲಿ ಕೆಐಒಸಿಎಲ್‌ ‘ದೇವದಾರಿಗಣಿಗಾರಿಕೆ ನಡೆಸಲು ಯೋಜನೆ ರೂಪಿಸಿದೆ. ಆದರೆ, ಅರಣ್ಯ ತೀರುವಳಿ ಪತ್ರ ಇನ್ನೂ ಸಿಕ್ಕಿಲ್ಲ. ಗಣಿಗೆ ಒಂದು ಲಕ್ಷ ಮರಗಳನ್ನು ಕಡಿಯುವ ಅಗತ್ಯವಿದೆ ಎಂದು ಈಗಾಗಲೇ ಅರಣ್ಯ ಇಲಾಖೆ ಹೇಳಿದ್ದು, ಜತೆಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದೆ.
  • ಭಾರತ್ಜೆನ್. ಮಾದರಿಗೆ ಹಣಕಾಸಿನ ನೆರವು: ವೈಷ್ಣವ್

ಸಂದರ್ಭ: ಕೇಂದ್ರ ಸರ್ಕಾರದ ಬೆಂಬಲವಿರುವ ಕೃತಕ ಬುದ್ಧಿಮತ್ತೆಯ (ಎ.ಐ) ಪ್ರಮುಖ ಯೋಜನೆ ‘ಭಾರತ್‌ಜೆನ್‌’ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ₹988.6 ಕೋಟಿ ಧನಸಹಾಯವನ್ನು ನೀಡಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.

  • ₹1,500 ಕೋಟಿ ಮೊತ್ತದ ‘ಇಂಡಿಯಾ ಎ.ಐ ಮಿಷನ್ 2025’ ಅಡಿಯಲ್ಲಿ ಭಾರತದ ಸರ್ಕಾರಿ ಎ.ಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಭಾರತ್‌ಜೆನ್‌ನ ವಹಿಸಬಹುದಾದ ಪಾತ್ರವನ್ನು ಈ ಧನಸಹಾಯವು ತೋರಿಸುತ್ತದೆ.
  • ಶಕ್ತಿಯುತ ಎ.ಐ ಮಾದರಿಗಳನ್ನು ರಚಿಸಲು ಭಾರತ್‌ಜೆನ್‌ಗೆ ಈ ಧನಸಹಾಯವು ನೆರವು ನೀಡುತ್ತದೆ. ಇದು ಧ್ವನಿಯನ್ನು ಅಕ್ಷರಗಳಿಗೆ ಪರಿವರ್ತಿಸುವ, ಅಕ್ಷರಗಳನ್ನು ಓದಿಹೇಳುವ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
  • ಆನಂದ ಸಂಕೇಶ್ವರಗೆಸೌತ್ಇಂಡಿಯಾ ಬ್ಯುಸಿನೆಸ್’​ ಪ್ರಶಸ್ತಿ

ಸಂದರ್ಭ: ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಗೆ ‘ಸೌತ್​ ಇಂಡಿಯಾ ಬ್ಯುಸಿನೆಸ್​ ಪ್ರಶಸ್ತಿ’ (ಎಸ್​ಐಬಿಎ)​ ಸಂದಿದೆ.

  • ದುಬೈನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಭಾರತದಲ್ಲಿ ಯುಎಇ ರಾಯಭಾರಿ ಆಗಿದ್ದ ಅಹ್ಮದ್​ ಅಬ್ದುಲ್​ ರೆಹಮಾನ್​ ಅಲ್ಬನ್ನಾ ಅವರು ಆನಂದ ಸಂಕೇಶ್ವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಉದ್ಯಮ, ಸಂಸ್ಕೃತಿ ಮತ್ತು ವಾಣಿಜ್ಯ ವಲಯದಲ್ಲಿ ಜಾಗತಿಕವಾಗಿ ಪ್ರಭಾವ ಬೀರಿರುವವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
  • ವಿಆರ್​ಎಲ್​ ಸಂಸ್ಥೆಯನ್ನು ದೇಶದ ದೊಡ್ಡ ಸಾರಿಗೆ ಕಂಪನಿಯಾಗಿ, ಕಾರ್ಯಾ ಚರಣೆ ದಕ್ಷತೆಯಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬೆಳೆಸುವಲ್ಲಿ ಆನಂದ ಸಂಕೇಶ್ವರ ಕೊಡುಗೆ ನೀಡಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರು ಹೇಳಿರು ವುದಾಗಿ ಪ್ರಕಟಣೆ ತಿಳಿಸಿದೆ.
  • ಎಚ್‌–1ಬಿ ವೀಸಾ: ಕ್ರಮಕ್ಕೆ ಒತ್ತಾಯ

ಸಂದರ್ಭ: ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಎಚ್‌–1ಬಿ ವೀಸಾ ಅರ್ಜಿಯ ವಾರ್ಷಿಕ ಶುಲ್ಕವನ್ನು ಹೆಚ್ಚಿಸಿರುವುದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಯುದ್ಧೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು‘ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ಆಗ್ರಹಿಸಿದ್ದಾರೆ.

  • ‘ಎಚ್‌–1ಬಿ ವೀಸಾ ಅರ್ಜಿಯ ವಾರ್ಷಿಕ ಶುಲ್ಕ ಹೆಚ್ಚಳದಿಂದ ತೆಲುಗು ಐಟಿ ವೃತ್ತಿಪರರಿಗೆ ಆಗಿರುವ ನೋವನ್ನು ಊಹಿಸಲೂ ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಸೌಹಾರ್ದದಿಂದ ಪರಿಹರಿಸಬೇಕು’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.
  • ‘ಶುಲ್ಕ ಹೆಚ್ಚಿಸುವ ಟ್ರಂಪ್ ಅವರ ಆದೇಶವು ಆಘಾತಕಾರಿಯಾಗಿದೆ. ಭಾರತ–ಅಮೆರಿಕ ನಡುವಿನ ಐತಿಹಾಸಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕ್ರಮವು ಸ್ವೀಕಾರಾರ್ಹವಲ್ಲ’ ಎಂದೂ ಅವರು ಹೇಳಿದ್ದಾರೆ.
  • ‘ಅಮೆರಿಕಕ್ಕಾಗಿ ವರ್ಷಗಳಿಂದ ಕೆಲಸ ಮಾಡುತ್ತಿರುವ ನಮ್ಮ ದೇಶದ ಅಪಾರ ಸಂಖ್ಯೆಯ ಐಟಿ ವೃತ್ತಿಪರರು, ಕೌಶಲ ಆಧಾರಿತ ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
  • ಎಚ್‌–1ಬಿ ವೀಸಾದ ದುರ್ಬಳಕೆಯು ರಾಷ್ಟ್ರೀಯ ಭದ್ರತೆಗೆ ಆತಂಕಕಾರಿ ಎಂದಿರುವ ಟ್ರಂಪ್‌, ಅರ್ಜಿಗೆ ಸಂಬಂಧಿಸಿದ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಅಂದಾಜು ₹88 ಲಕ್ಷ) ಹೆಚ್ಚಿಸುವ ಆದೇಶಕ್ಕೆ ಶುಕ್ರವಾರ ಸಹಿ ಹಾಕಿದ್ದರು. ಅಮೆರಿಕಕ್ಕೆ ವಲಸೆಯೇತರ ಕಾರ್ಮಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ಶುಲ್ಕ ಹೆಚ್ಚಳ ಮಾಡುತ್ತಿರುವುದಾಗಿ ಹೇಳಿದ್ದರು.

‘ಅಮೆರಿಕದಿಂದ ಬಲವಂತದ ತಂತ್ರ’

  • ‘ಅಮೆರಿಕವು ತನ್ನ ವ್ಯಾಪಾರ ಹಿತಾಸಕ್ತಿ ರಕ್ಷಿಸಿಕೊಳ್ಳಲು ಭಾರತದ ಮೇಲೆ ಬಲವಂತದ ತಂತ್ರಗಳನ್ನು ಅನುಸರಿಸುತ್ತಿದೆ. ಕೇಂದ್ರ ಸರ್ಕಾರವು ಈ ಅನ್ಯಾಯದ ವಿರುದ್ಧ ದೃಢ ನಿಲುವು ತೆಗೆದುಕೊಳ್ಳಬೇಕು’ ಎಂದು  ಸಿಪಿಎಂ ಪಾಲಿಟ್‌ಬ್ಯೂರೊ ಆಗ್ರಹಿಸಿದೆ.
  • ಅಮೆರಿಕದ ಶೇ 50 ಸುಂಕ ನೀತಿಗೆ ಭಾರತ ಮಣಿಯುವಂತೆ ಮಾಡಲು ಎಚ್‌–1ಬಿ ವೀಸಾ ಅರ್ಜಿಯ ಶುಲ್ಕ ಹೆಚ್ಚಳದಂತಹ ಬಲವಂತದ ಕ್ರಮಗಳನ್ನು ಕೈ ಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆನ್ನು ಎಡಪಕ್ಷಗಳು ಬಯಸುತ್ತವೆ ಎಂದಿದೆ.
  • ಪವನ್ಕುಮಾರ್ಭಜಂತ್ರಿ ಪಟ್ನಾ ಹೈಕೋರ್ಟ್ಸಿಜೆ

ಸಂದರ್ಭ: ಕರ್ನಾಟಕದ ಪವನ್‌ಕುಮಾರ್‌ ಭೀಮಪ್ಪ ಭಜಂತ್ರಿ ಅವರು ಬಿಹಾರದ ಪಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

  • ಬಿಹಾರ ರಾಜ್ಯಪಾಲರಾದ ಆರೀಫ್‌ ಮೊಹಮ್ಮದ್‌ ಖಾನ್‌ ಅವರು ರಾಜಭವನದಲ್ಲಿ ಪವನ್‌ಕುಮಾರ್‌ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ನಿತೀಶ್‌ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ಕಾರ್ಯಕ್ರಮದಲ್ಲಿ ಹಾಜರಿದ್ದರು. 
  • 1990ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಪವನ್‌ಕುಮಾರ್‌ ಅವರು, 2015ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ನಂತರ ಪಂಜಾಬ್‌, ಹರಿಯಾಣ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, 2018ರಲ್ಲಿ ಮತ್ತೆ ಕರ್ನಾಟಕ ಹೈ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2021ರಿಂದ ಪಟ್ನಾ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ.
  • ಸಾತ್ವಿಕ್‌–ಚಿರಾಗ್ಮತ್ತೆ ರನ್ನರ್ಸ್ಅಪ್

ಸಂದರ್ಭ: ಭಾರತದ ಅಗ್ರಮಾನ್ಯ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಚೀನಾ ಮಾಸ್ಟರ್ಸ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ನೊಂದಿಗೆ ಅಭಿಯಾನ ಮುಗಿಸಿದರು.

  • ಎಂಟನೇ ಕ್ರಮಾಂಕದ ಭಾರತದ ಆಟಗಾರರು ಪುರುಷರ ಡಬಲ್ಸ್‌ ಫೈನಲ್‌ನಲ್ಲಿ 19-21, 15-21ರಿಂದ ವಿಶ್ವದ ಅಗ್ರಮಾನ್ಯ ಜೋಡಿ ಕಿಮ್ ವಾನ್ ಹೋ ಮತ್ತು ಸಿಯೋ ಸೆಯುಂಗ್ ಜೇ ಅವರಿಗೆ ಮಣಿದರು. ದಕ್ಷಿಣ ಕೊರಿಯಾದ ಈ ಆಟಗಾರರು 45 ನಿಮಿಷದಲ್ಲಿ ನೇರ ಗೇಮ್‌ಗಳಿಂದ ಮೇಲುಗೈ ಸಾಧಿಸಿದರು.
  • ಏಷ್ಯನ್ ಗೇಮ್ಸ್ ಚಾಂಪಿಯನ್‌ ಜೋಡಿ ಈ ಟೂರ್ನಿಯ ಮೂಲಕ ತಮ್ಮ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳುವ ಛಲದಲ್ಲಿದ್ದರು. ಹೋದ ತಿಂಗಳು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಕಂಚಿನ ಪದಕ ಮತ್ತು ಹೋದ ವಾರ ಹಾಂಗ್‌ಕಾಂಗ್‌ ಓಪನ್‌ನಲ್ಲಿ ರನ್ನರ್ಸ್‌ ಅಪ್‌ ಆಗಿದ್ದ ಸಾತ್ವಿಕ್‌–ಚಿರಾಗ್‌ ಇಲ್ಲಿ ಒಂದೂ ಗೇಮ್‌ ಬಿಟ್ಟುಕೊಡದೆ ಪ್ರಶಸ್ತಿ ಸುತ್ತು ತಲುಪಿ, ಭರವಸೆ ಮೂಡಿಸಿದ್ದರು.
  • ಇತರ ಜೊತೆಗಾರರೊಂದಿಗೆ ಪ್ರಯೋಗ ಮಾಡಿ ಮತ್ತೆ ಈ ಋತುವಿನಲ್ಲಿ ಒಂದಾದ  ಕಿಮ್‌ ಮತ್ತು ಸಿಯೋ ಅವರು 2025ರಲ್ಲಿ ಒಂಬತ್ತನೇ ಟೂರ್ನಿಯಲ್ಲಿ ಫೈನಲ್‌ ಸ್ಪರ್ಧಿಸಿದ್ದಾರೆ. ಆ ಪೈಕಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, ಆಲ್ ಇಂಗ್ಲೆಂಡ್ ಮತ್ತು ಇಂಡೋನೇಷ್ಯಾ ಓಪನ್‌ ಸೇರಿದಂತೆ ಆರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
  • ಪ್ಯಾರಾ ಬ್ಯಾಡ್ಮಿಂಟನ್: ಪ್ರಮೋದ್ಗೆ ಚಿನ್ನ, ಕೃಷ್ಣ, ಸುಕಾಂತ್ಗೆ ಬೆಳ್ಳಿ

ಸಂದರ್ಭ: ಭಾರತದ ಪ್ರಮೋದ್ ಭಗತ್ ಅವರು ಬೀಜಿಂಗ್‌ನಲ್ಲಿ ಭಾನುವಾರ ನಡೆದ ಚೀನಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಚಿನ್ನ ಗೆದರೆ, ಸುಕಾಂತ ಕದಂ ಮತ್ತು ಕೃಷ್ಣ ನಗರ್ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

  • ಅನುಭವಿ ಪ್ರಮೋದ್ ಭಾಗವತ್‌ ಅವರು 18 ತಿಂಗಳ ಅಮಾನತಿನ ನಂತರ ಆಟಕ್ಕೆ ಸ್ಮರಣೀಯ  ಪುನರಾಗಮನ ಮಾಡಿದ್ದು, ಪುರುಷರ ಎಸ್‌ಎಲ್‌3 ವಿಭಾಗದ ಸಿಂಗಲ್ಸ್‌ನಲ್ಲಿ ಚಿನ್ನದ ಗೆದ್ದುಕೊಂಡರು. ಪ್ರಮೋದ್, ಉತ್ತಮ ಹೋರಾಟ ಕಂಡ ಫೈನಲ್‌ನಲ್ಲಿ ಇಂಡೊನೇಷ್ಯಾದ ಮುಹ ಅಲ್ ಇಮ್ರಾನ್ ಎದುರು ಮೊದಲ ಸೆಟ್‌ ಸೋತರೂ ನಂತರ 21–19, 21–16 ರಲ್ಲಿ ಜಯಗಳಿಸಿದರು.
  • ಪುರುಷರ ರಿಲೆ: ಚಿನ್ನ ಕಸಿದ ಬೋಟ್ಸ್ವಾನಾ

ಸಂದರ್ಭ: ರೋಮಾಂಚಕ ಹಣಾಹಣಿಯಲ್ಲಿ ಅಮೆರಿಕ ತಂಡವನ್ನು ಕೊನೆಯ ಲೆಗ್‌ನಲ್ಲಿ ಹಿಂದೆಹಾಕಿದ ಬೋಟ್ಸ್‌ವಾನಾ ತಂಡವು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 4×400 ಮೀಟರ್ಸ್ ರಿಲೆ ಚಿನ್ನವನ್ನು ಬಾಚಿಕೊಂಡಿತು. ಈ ಓಟದಲ್ಲಿ ಚಿನ್ನ ಗೆದ್ದ ಆಫ್ರಿಕಾದ ಮೊದಲ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಯಿತು.

  • ಭಾನುವಾರ ಮಳೆ ಜೋರಾಗಿದ್ದು ಸ್ಪರ್ಧೆಗಳ ವೇಳಾಪಟ್ಟಿ ಏರುಪೇರಾಯಿತು. ಬೆಳಿಗ್ಗೆ ರನ್‌ಆಫ್‌ನಲ್ಲಿ ಕೆನ್ಯಾ ತಂಡವನ್ನು ಹಿಂದೆಹಾಕಿ ಫೈನಲ್ ತಲುಪಿದ್ದ ಪ್ರಬಲ ಅಮೆರಿಕವು ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಅಂತಿಮ ಲೆಗ್ ಇರುವಾಗ ಅಮೆರಿಕ ಮುಂದಿತ್ತು. ಆದರೆ 400 ಮೀ. ಓಟದಲ್ಲಿ ವೈಯಕ್ತಿಕ ಚಿನ್ನ ಗೆದ್ದಿದ್ದ, ಕಾಲಿನ್ ಕೆಬಿನಾಟ್ಶಿಪಿ  ಅವರು ಮಳೆಯ ನಡುವೆ ಅತ್ಯಮೋಘವಾಗಿ ಅಂತಿಮ ಲೆಗ್‌ ಓಡಿ ಬೋಟ್ಸ್‌ವಾನಾಕ್ಕೆ ಐತಿಹಾಸಿಕ ಚಿನ್ನ ತಂದುಕೊಟ್ಟರು. ಈ ತಂಡ 2ನಿಮಿಷ 57.56 ಸೆಕೆಂಡುಗಳಲ್ಲಿ ಗುರಿತಲುಪಿತು.
  • ನಿಕೋಲಾಗೆ ಚಿನ್ನ: ಆಸ್ಟ್ರೇಲಿಯಾದ ನಿಕೋಲಾ ಒಲಿಸ್ಲೇಗರ್ಸ್ ಅವರು ಮಹಿಳೆಯರ ಹೈಜಂಪ್‌ ಚಿನ್ನ ಗೆದ್ದರು. ಮಳೆಯಿಂದ ಈ ಸ್ಪರ್ಧೆಯ ಕೊನೆಯ ಸುತ್ತಿನ ಯತ್ನಕ್ಕೆ ಸ್ಪರ್ಧಿಗಳು ಸಾಕಷ್ಟು ಕಾಯಬೇಕಾಯಿತು.
  • ಎರಡು ಬಾರಿಯ ಒಲಿಂಪಿಕ್ ಬೆಳ್ಳಿ ವಿಜೇತೆ ನಿಕೋಲಾ 2.00 ಮೀ. ಜಿಗಿದು ಮೊದಲಿಗರಾದರು. ವಿಶ್ವದಾಖಲೆ ಹೊಂದಿರುವ ಉಕ್ರೇನ್‌ನ ಯರೊಸ್ಲಾವಾ ಮಹುಚಿಕಿ 2.02 ಮೀ. ಎತ್ತರಕ್ಕೆ ಜಿಗಿಯಲು ಉದ್ದೇಶಿಸಿದರೂ ವಿಫಲರಾದರು. ಪೋಲೆಂಡ್‌ನ ಮರಿಯಾ ಜೋಡ್ಜಿಕ್ (2.00) ಬೆಳ್ಳಿ ಗೆದ್ದರು. ಮಹುಚಿಕಿ ಅಂತಿಮವಾಗಿ ಸರ್ಬಿಯಾದ ಆ್ಯಂಜೆಲಿನಾ ಟೋಪಿಕ್ ಅವರೊಂದಿಗೆ  1.97 ಮೀ. ಜಿಗಿದು ಕಂಚಿನ ಪದಕ ಹಂಚಿಕೊಂಡರು.
  • ನಾಡಹಬ್ಬಕ್ಕೆ ಬಾನು ಚಾಲನೆ ಇಂದು

ಸಂದರ್ಭ: ರಾಜ್ಯದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆ ಸಾರುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಅರಂಭವಾಗಿದೆ.

  • ಅಂತರರಾಷ್ಟ್ರೀಯ ‘ಬುಕರ್‌’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್‌ ( ಸೆ.22 to ಅ.2 ರವರೆಗೆ ನಡೆಯುವ ಉತ್ಸವಕ್ಕೆ ಚಾಲನೆ ನೀಡ ಲಿದ್ದಾರೆ
  • ಇದೇ ಮೊದಲು: ಮೈಸೂರು ದಸರಾ ಉದ್ಘಾಟನೆಗೆ ಮುಸ್ಲಿಂ ಮಹಿಳೆಯನ್ನು ಆಯ್ಕೆ ಮಾಡಿರುವುದು ಇದೇ ಮೊದಲು.

ರಾಜವಂಶಸ್ಥರಿಂದ ‘ಖಾಸಗಿ ದರ್ಬಾರ್‌’

  • ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರತ್ನಖಚಿತ ಸಿಂಹಾಸನದಲ್ಲಿ ಕುಳಿತು 11ನೇ ವರ್ಷದಖಾಸಗಿ ದರ್ಬಾರ್‌’ ನಡೆಸಲಿದ್ದಾರೆ.
  • ಗಜಪಡೆಯ ನಾಯಕಅಭಿಮನ್ಯುಆನೆ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಅಲಂಕೃತ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಲಿದ್ದಾರೆ.
  • ಯುವ ಕನಸು ನುಚ್ಚು ನೂರು?: ಎಚ್‌––1ಬಿ ವೀಸಾ ಶುಲ್ಕ ಹೆಚ್ಚಳ: ಸ್ಪಷ್ಟನೆಯಿಂದ ಭಾರತೀಯರು ಕೊಂಚ ನಿರಾಳ

ಸಂದರ್ಭ: ಅಮೆರಿಕದ ಐಟಿ ಉದ್ಯೋಗಿಗಳಾಗಿರುವ ಕೆಲವು ಭಾರತೀಯರು ತವರಿಗೆ ಬರುವುದಕ್ಕಾಗಿ ಸ್ಯಾನ್‌ ಫ್ರಾನ್ಸಿಸ್ಕೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಏರಿದ್ದರು. ಸ್ವಲ್ಪ ಹೊತ್ತಿನಲ್ಲಿ ವಿಮಾನ ಹೊರಡುವುದಿತ್ತು. ಅಷ್ಟು ಹೊತ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಎಚ್‌–1ಬಿ ವೀಸಾದ ಅರ್ಜಿ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಸುಮಾರು ₹88 ಲಕ್ಷ) ಏರಿಸುವ ಕಾರ್ಯಾದೇಶಕ್ಕೆ ಸಹಿ ಹಾಕಿದರು.

  • ವಿಮಾನದಲ್ಲಿದ್ದ ಭಾರತೀಯರಿಗೆ ಈ ಸುದ್ದಿ ಸಿಕ್ಕಿದ್ದೇ ತಡ, ಆತಂಕಗೊಂಡರು. ತಮ್ಮನ್ನು ವಿಮಾನದಿಂದ ಕೆಳಗಿಳಿಸುವಂತೆ ವಿಮಾನದ ಸಿಬ್ಬಂದಿಗೆ ಕೇಳಿಕೊಂಡರು. ಟೆಕಿಗಳಿಗೆ ಮಾತ್ರವಲ್ಲ, ಅವರನ್ನು ನೇಮಿಸಿಕೊಂಡಿರುವ ಮೆಟಾ, ಮೈಕ್ರೊಸಾಫ್ಟ್‌, ಗೂಗಲ್ನಂತಹ ತಂತ್ರಜ್ಞಾನ ಕ್ಷೇತ್ರದ ಬೃಹತ್ಕಂಪನಿಗಳೂ ಆದೇಶದಿಂದ ಗಾಬರಿಗೊಂಡು ವೀಸಾದ ಅಡಿಯಲ್ಲಿ ಕೆಲಸ ಮಾಡುತ್ತಿರುವ ತಮ್ಮೆಲ್ಲಾ ಸಿಬ್ಬಂದಿಗೆ ದೇಶ ತೊರೆಯದಂತೆ ಸೂಚಿಸಿದವು‌.
  • ಅಮೆರಿಕವೇ ಮೊದಲು ಎಂದು ಹೇಳುತ್ತಿರುವ ಟ್ರಂಪ್‌ ಆಡಳಿತದ ನಿರ್ಧಾರ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
  • ಅಮೆರಿಕದ ನಿರ್ಧಾರವು ಭಾರತೀಯರ ‘ಕುಟುಂಬಗಳನ್ನು ಗಲಿಬಿಲಿಗೊಳಿಸಲಿದೆ’ ಎಂಬ ಭಾರತದ ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ ಕೂಡ ಟ್ರಂಪ್‌ ಆದೇಶದಿಂದ ಭಾರತೀಯರ ಮೇಲಾಗಲಿರುವ ಪರಿಣಾಮವನ್ನು ಒತ್ತಿ ಹೇಳುತ್ತದೆ. ಅದಕ್ಕೆ ಕಾರಣವೂ ಇದೆ.
  • ಈ ವೀಸಾ ಯೋಜನೆಯ ಅತಿ ಹೆಚ್ಚು ಫಲಾನುಭವಿಗಳು ಭಾರತೀಯ ಯುವ ಜನರು. ಅಮೆರಿಕದಲ್ಲಿ ದುಡಿದು ಹಣ ಸಂಪಾದಿಸಬೇಕು ಎಂಬ ಅವರ ಕನಸನ್ನು ನನಸು ಮಾಡಿದ್ದು ಇದೇ ಎಚ್‌–1ಬಿ ವೀಸಾ. ಈ ವೀಸಾದ ಮೂಲಕ ಅಲ್ಲಿಗೆ ತೆರಳಿ ಒಂದಷ್ಟು ವರ್ಷ ಕೆಲಸ ಮಾಡಿ, ನಂತರ ಪೌರತ್ವ ಪಡೆದು ಅಲ್ಲಿಯೇ ನೆಲಸಿದ ಭಾರತೀಯರ ಸಂಖ್ಯೆ ದೊಡ್ಡದಿದೆ.
  • ಹೀಗಿರುವಾಗ 2,000 ಡಾಲರ್‌ನಿಂದ 5,000 ಡಾಲರ್‌ವರೆಗೆ ಇದ್ದ ವೀಸಾ ಶುಲ್ಕವನ್ನು ದಿಢೀರ್ ಒಂದು ಲಕ್ಷ ಡಾಲರ್‌ಗೆ ಏರಿಸಿರುವುದು ಅಮೆರಿಕದಲ್ಲಿ ಕೆಲಸ ಮಾಡಬೇಕು, ನಂತರ ಅಲ್ಲಿಯೇ ನೆಲಸಬೇಕು ಎನ್ನುವ ದೇಶದ ಲಕ್ಷಾಂತರ ಯುವಕ–ಯುವತಿಯರ ಕನಸಿಗೆ ತಣ್ಣೀರು ಎರಚಿದೆ. 
  • ಈ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿ ಈಗ ಕೆಲಸ ಮಾಡುತ್ತಿರುವವರೂ ಶನಿವಾರ ಆದೇಶ ಹೊರಬಿದ್ದ ತಕ್ಷಣ ಆತಂಕಗೊಂಡಿದ್ದರು.‌ ತಮ್ಮನ್ನು ನೇಮಕ ಮಾಡಿಕೊಂಡ ಕಂಪನಿಗಳು ಲಕ್ಷ ಡಾಲರ್‌ ಶುಲ್ಕ ಭರಿಸದೇ ಇದ್ದರೆ, ಕೆಲಸ ಕಳೆದುಕೊಂಡು ಭಾರತಕ್ಕೆ ಮರಳಬೇಕಾದೀತು ಎಂಬ ಕಳವಳ ಅವರನ್ನು ಕಾಡಿತ್ತು. ಆದರೆ, ಶ್ವೇತಭವನದಿಂದ ಸ್ಪಷ್ಟನೆ ಹೊರಬಿದ್ದ ಬಳಿಕ ಅವರು ಕೊಂಚ ನಿರಾಳರಾಗಿದ್ದಾರೆ.
  • ಶ್ವೇತ ಭವನದ ಆಡಳಿತ ನೀಡಿರುವ ಸ್ಪಷ್ಟನೆಯ ಪ್ರಕಾರ, ಹೊಸ ಶುಲ್ಕ ಹೊಸ ಅರ್ಜಿಗಳಿಗಷ್ಟೇ ಅನ್ವಯವಾಗುತ್ತದೆ (ಮುಂದಿನ ಲಾಟರಿ ಸೈಕಲ್‌ಗೆ). ಈ ವೀಸಾದಡಿ ಈಗ ಕೆಲಸ ಮಾಡುತ್ತಿರುವವರು ಹೊಸ ಶುಲ್ಕ ಪಾವತಿಸಬೇಕಾಗಿಲ್ಲ. ಅಲ್ಲದೇ ವೀಸಾ ಅವಧಿ ಮುಕ್ತಾಯಗೊಂಡ ನಂತರ ಸಲ್ಲಿಸಲಾಗುವ ನವೀಕರಣ ಅರ್ಜಿಗೂ ಇದು ಅನ್ವಯವಾಗುವುದಿಲ್ಲ. ಹಾಲಿ ವೀಸಾ ಹೊಂದಿರುವವರು ಈಗಿನಂತೆ ಹೊರ ದೇಶಗಳಿಗೆ ಹೋಗಬಹುದು, ಅಮೆರಿಕಕ್ಕೆ ಬರಬಹುದು. ಅದೇ ರೀತಿ, ಎಚ್‌–1ಬಿ ವೀಸಾಕ್ಕಾಗಿ ಪ್ರತಿ ವರ್ಷ ಲಕ್ಷ ಡಾಲರ್‌ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ, ಇದಕ್ಕೂ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ಈ ಶುಲ್ಕವು ವೀಸಾದ ಪೂರ್ಣ ಅವಧಿಗೆ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ. 
  • ಕಡಿಮೆಯಾಗಲಿದೆ ಅವಕಾಶ: ಹೊರದೇಶಗಳ ಕೌಶಲಯುಕ್ತ ವೃತ್ತಿಪರರನ್ನು ನೇಮಿಸಿಕೊಳ್ಳುವ ಕಂಪನಿಗಳು ಈ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತವೆ. ಶುಲ್ಕವನ್ನು ಭರಿಸುವುದೂ ಅವುಗಳೇ. ಶುಲ್ಕ ಹೆಚ್ಚಾಗಿರುವುದು ಕಂಪನಿಗಳಿಗೆ ಹೊರೆಯಾಗುವುದು ಖಂಡಿತ. ಹಾಗಾಗಿ, ವಿದೇಶ ವೃತ್ತಿಪರರನ್ನು ನೇಮಿಸುವುದಕ್ಕಾಗಿ ಅಷ್ಟು ಮೊತ್ತದ ಶುಲ್ಕ ನೀಡಲು ಅವುಗಳು ಹಿಂದೇಟು ಹಾಕಬಹುದು. ಇಲ್ಲವೇ ಹೆಚ್ಚು ಪರಿಣತಿ ಇರುವ ನಿರ್ದಿಷ್ಟ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಲೇ ಬೇಕು ಎಂಬಂತಹ ಅನಿವಾರ್ಯ ಸನ್ನಿವೇಶದಲ್ಲಿ ಮಾತ್ರ ಈ ವೀಸಾದಡಿ ಕಂಪನಿಗಳು ನೇಮಕಾತಿಗೆ ಮುಂದಾಗಬಹುದು. ನೇಮಕ ಮಾಡಿದರೂ, ಉದ್ಯೋಗಿಗಳ ಸಂಖ್ಯೆ ತುಂಬಾ ಕಡಿಮೆ ಇರಬಹುದು. ವೀಸಾ ನವೀಕರಣಕ್ಕೆ ಹೊಸ ಶುಲ್ಕ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿರುವುದು ಸಮಾಧಾನಕರ ಸಂಗತಿ. ನವೀಕರಣಕ್ಕೆ ಈ ಶುಲ್ಕ ಅನ್ವಯವಾಗಿದ್ದರೆ ಸಾವಿರಾರು ಭಾರತೀಯರು ಕೆಲಸ ಕಳೆದುಕೊಳ್ಳುತ್ತಿದ್ದರು ಎಂಬುದು ತಜ್ಞರ ಅಭಿಪ್ರಾಯ.

ಭಾರತೀಯರೇ ಫಲಾನುಭವಿಗಳು

  • ‘ಎಚ್‌1–ಬಿ’ ಯು ವಲಸೆಯೇತರ ವೀಸಾ. ಹೊರದೇಶಗಳ ಪರಿಣತ ವೃತ್ತಿಪರರಿಗೆ ಅಮೆರಿಕದಲ್ಲಿ ಕೆಲಸ ನೀಡಲು ಅಲ್ಲಿನ ಕಂಪನಿಗಳಿಗೆ ಇದು ಅವಕಾಶ ನೀಡುತ್ತದೆ. ಇದು ತಾತ್ಕಾಲಿಕ ವೀಸಾ ಆಗಿದ್ದು, ಇದಕ್ಕೆ ಮೂರರಿಂದ ಆರು ವರ್ಷಗಳ ಅವಧಿ ಇರುತ್ತದೆ.
  • ಈ ವೀಸಾದ ಅಡಿಯಲ್ಲಿ ಅಮೆರಿಕಕ್ಕೆ ತೆರಳುವವರಲ್ಲಿ ಭಾರತೀಯರೇ ಮುಂದೆ ಇದ್ದಾರೆ. ಭಾರತದ ಎಂಜಿನಿಯರ್‌ಗಳು ಹಾಗೂ ಇತರ ಕ್ಷೇತ್ರಗಳ ತಜ್ಞರನ್ನು ತಂತ್ರಜ್ಞಾನ ಹಾಗೂ ಇತರ ಕಂಪನಿಗಳು ಕರೆಸಿಕೊಳ್ಳುತ್ತವೆ. ಅಮೆರಿಕ ಸರ್ಕಾರ ವಿತರಿಸುವ ಬಹುಪಾಲು ವೀಸಾಗಳ ಫಲಾನುಭವಿಗಳು ತಂತ್ರಜ್ಞಾನ ಕಂಪನಿಗಳು. ಕಂಪ್ಯೂಟರ್‌ಗೆ ಸಂಬಂಧಿಸಿದ ಉದ್ಯೋಗದಲ್ಲಿರುವ ಶೇ 65ರಷ್ಟು ಮಂದಿ ಈ ವೀಸಾದ ಫಲಾನುಭವಿಗಳು.
  • ಪ್ಯೂ ರಿಸರ್ಚ್ವರದಿ ಪ್ರಕಾರ 2023ರಲ್ಲಿ ಎಚ್‌1– ಬಿ ವೀಸಾಗಳಲ್ಲಿ ಶೇ 73ರಷ್ಟು ಭಾರತೀಯರು ಪಡೆದಿದ್ದರುಚೀನಾದ ನಾಗರಿಕರ ಪಾಲು ಶೇ 12. ಉಳಿದ ಎಲ್ಲ ದೇಶಗಳ ನಾಗರಿಕರಿಗೆ ಸಿಕ್ಕಿದ್ದು ಶೇ 15ರಷ್ಟು ವೀಸಾಗಳು.

ಶುಲ್ಕ ಹೆಚ್ಚಳ: ಟ್ರಂಪ್ವಾದವೇನು?

  • ಟ್ರಂಪ್‌ ಅವರು ತಮ್ಮ ಕಾರ್ಯಾದೇಶದಲ್ಲಿ, ಎಚ್‌–1ಬಿ ವೀಸಾ ಅರ್ಜಿ ಶುಲ್ಕ ಹೆಚ್ಚಿಸುವುದಕ್ಕೆ ಏನು ಕಾರಣ ಎಂಬುದನ್ನೂ ವಿವರಿಸಿದ್ದಾರೆ. ಕಂಪನಿಗಳು ಈ ವೀಸಾ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಸ್ಥಳೀಯರಿಗೆ ಹೆಚ್ಚು ಸಂಬಳ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡದೆ, ಹೊರದೇಶಗಳಿಂದ ಕಡಿಮೆ ಸಂಬಳಕ್ಕೆ ವೃತ್ತಿಪರರನ್ನು ಕರೆಸಿಕೊಂಡು ಉದ್ಯೋಗ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
  • ವಿಜ್ಞಾನ, ತಂತ್ರಜ್ಞಾನ ಎಂಜಿನಿಯರಿಂಗ್ಮತ್ತು ಗಣಿತ ಕ್ಷೇತ್ರದಲ್ಲಿ (ಸ್ಟೆಮ್‌) ದುಡಿಯುತ್ತಿರುವ ವಿದೇಶಿ ಉದ್ಯೋಗಿಗಳ ಸಂಖ್ಯೆ 2000 ಮತ್ತು 2019 ನಡುವೆ ದುಪ್ಪಟ್ಟಾಗಿದೆ. ಐಟಿ ಕಂಪನಿಗಳು ವೀಸಾ ಯೋಜನೆಯನ್ನು ಅತಿ ಹೆಚ್ಚು ದುರ್ಬಳಕೆ ಮಾಡಿಕೊಂಡಿವೆ. ಕಳೆದ ಐದು ವರ್ಷಗಳಲ್ಲಿ ಕಂಪನಿಗಳು ಎಚ್‌–1ಬಿ ವೀಸಾ ಪಡೆಯುವ ಪ್ರಮಾಣ ಶೇ 65ರಷ್ಟು ಹೆಚ್ಚಾಗಿದೆ ಎಂದು ಟ್ರಂಪ್ಅವರು ಆದೇಶದಲ್ಲಿ ವಿವರಿಸಿದ್ದಾರೆ
  • ಕಂಪನಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಎಚ್‌–1ಬಿ ವೀಸಾಕ್ಕೆ ಅರ್ಜಿ ಸಲ್ಲಿಸಿ ವಿದೇಶದವರಿಗೆ ಉದ್ಯೋಗ ನೀಡುತ್ತಿವೆ. ಅದೇ ಸಮಯದಲ್ಲಿ ಹೆಚ್ಚು ಸಂಬಳದ ಕಾರಣಕ್ಕೆ ಅಮೆರಿಕದವರನ್ನು ಕೆಲಸದಿಂದ ತೆಗೆಯುತ್ತಿವೆ. ಎಂದು ಆರೋಪಿಸಿರುವ ಅವರು, ಇದಕ್ಕೆ ಹಲವು ಉದಾಹರಣೆಗಳನ್ನೂ ನೀಡಿದ್ದಾರೆ. ವೀಸಾ ಯೋಜನೆಯ ದುರ್ಬಳಕೆ ತಡೆಯಲು ಮತ್ತು ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಲು ವೀಸಾ ಅರ್ಜಿ ಶುಲ್ಕ ಹೆಚ್ಚಿಸುವುದು ಅನಿವಾರ್ಯ ಎಂದು ಟ್ರಂಪ್‌ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
  • ಈ ಆದೇಶ ಒಂದು ವರ್ಷ (ಸೆ.21 2026) ಜಾರಿಯಲ್ಲಿರಲಿದೆ ಎಂದು ಕಾರ್ಯಾದೇಶದಲ್ಲಿ ಹೇಳಲಾಗಿದೆ.  ಒಂದು ವೇಳೆ, ಅದರ ಒಳಗಾಗಿ ಅವಧಿಯನ್ನು ವಿಸ್ತರಿಸದೇ ಇದ್ದರೆ ಆದೇಶ ಅನೂರ್ಜಿತ ಗೊಳ್ಳಲಿದೆ. 

ಸದ್ಬಳಕೆಗೆ ಅವಕಾಶ

  • ಟ್ರಂಪ್‌ ಅವರ ಈ ಕ್ರಮವನ್ನು ಸದ್ಬಳಕೆ ಮಾಡುವುದಕ್ಕೆ ಭಾರತಕ್ಕೆ ಅವಕಾಶ ಇದೆ. ಅಮೆರಿಕದಲ್ಲಿನ ಕಂಪನಿಗಳು ಪರಿಣತ ವೃತ್ತಿಪರರನ್ನು ನೇಮಕ ಮಾಡಿಕೊಳ್ಳದೇ ಇದ್ದರೆ, ಅವರು ಭಾರತದಲ್ಲೇ ಉಳಿಯಲಿದ್ದಾರೆ. ಅವರಿಗೆ ಇಲ್ಲೇ ಉತ್ತಮ ಅವಕಾಶ ಸಿಕ್ಕಿದರೆ ದೇಶದಲ್ಲಿ ಉದ್ಯಮಗಳು ಬೆಳೆಯುತ್ತವೆ. ಇದು ದೇಶದ ಅಭಿವೃದ್ಧಿಗೂ ಅನುಕೂಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
  • ‘ಅಮೆರಿಕದಿಂದ ವಾಪಸ್‌ ಆಗುವ ಮತ್ತು ದೇಶದಲ್ಲಿರುವ ತಜ್ಞ ಪ್ರತಿಭೆಗಳನ್ನು ದೇಶದ ಸಾಫ್ಟ್‌ವೇರ್‌, ಕ್ಲೌಡ್‌ ಮತ್ತು ಸೈಬರ್‌ಭದ್ರತೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಬಳಸಿಕೊಂಡು ಲಾಭ ಪಡೆಯುವ ಯೋಜನೆಯನ್ನು ಭಾರತ ರೂಪಿಸಬೇಕು. ಆ ಮೂಲಕ ‘ಡಿಜಿಟಲ್‌ ಸ್ವರಾಜ್‌ ಮಿಷನ್‌’ಗೆ ಉತ್ತೇಜನ ನೀಡಬೇಕು’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್‌ ಶ್ರೀವಾಸ್ತವ ಹೇಳಿದ್ದಾರೆ.  ‌

ಅಮೆರಿಕಕ್ಕೇ ನಷ್ಟ

  • ಟ್ರಂಪ್‌ ಅವರ ಈ ನಿರ್ಧಾರದಿಂದ ಭಾರತಕ್ಕಿಂತಲೂ ಅಮೆರಿಕಕ್ಕೆ ಹೆಚ್ಚು ನಷ್ಟ ಆಗಬಹುದು ಎಂದು ಚಿಂತಕರ ಚಾವಡಿ ಜಿಟಿಆರ್‌ಐ ಹೇಳಿದೆ.
  • ‘ಅಮೆರಿಕದಲ್ಲಿ ಭಾರತದ ಐಟಿ ಕಂಪನಿಗಳು ಈಗಾಗಲೇ ಶೇ 50ರಿಂದ ಶೇ 80ರಷ್ಟು ಸ್ಥಳೀಯರನ್ನೇ ನೇಮಕ ಮಾಡಿಕೊಂಡಿವೆ. ಟ್ರಂಪ್‌ ಕ್ರಮವು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸದು. ಭಾರತೀಯರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಕಂಪನಿಗಳು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ಕಂಪನಿಗಳು, ಹೊರದೇಶಗಳಿಂದಲೇ ತಮ್ಮ ಕಂಪನಿಗಳ ಕಾರ್ಯಾಚರಣೆಯನ್ನು ತೀವ್ರಗೊಳಿಸಬಹುದು. ಉದಾಹರಣೆಗೆ, ತಮ್ಮ ಉದ್ಯೋಗಿಗಳ ಮೂಲಕ ಭಾರತದಿಂದಲೇ ಕಾರ್ಯಾಚರಣೆಯನ್ನು ಹೆಚ್ಚಿಸಬಹುದು’ ಎಂದು ಅದು ಅಭಿಪ್ರಾಯಪಟ್ಟಿದೆ.
  • ಟ್ರಂಪ್‌ ನೀತಿಯಿಂದಾಗಿ ಭಾರತದ ಐಟಿ ವಲಯವು ಅಮೆರಿಕದ ಪ್ರಾಜೆಕ್ಟ್‌ಗಳಿಗಾಗಿ ತನ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
  • ಭಾರತದ ಐಟಿ ವಲಯವು ತನ್ನ ಒಟ್ಟಾರೆ ಆದಾಯದಲ್ಲಿ ಅಮೆರಿಕದಿಂದಲೇ ಶೇ 57ರಷ್ಟು ಆದಾಯ ಪಡೆಯುತ್ತದೆ.
  • ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ನಿವೃತ್ತಿ

ಸಂದರ್ಭ: ಇದು ಮಹಿಳೆಯರ ಕೈಲಾಗುವಂಥ ಕೆಲಸವಲ್ಲ ಎನ್ನುತ್ತಿದ್ದ ಕಾಲದಲ್ಲಿಯೇ ರೈಲು ಎಂಜಿನಿಯರ್‌ ಆಗಿ ಉದ್ಯೋಗ ಪಡೆದವರು ಸುರೇಖಾ ಯಾದವ್‌. ಮಹಿಳೆಯೊಬ್ಬರು ರೈಲು ಚಲಾಯಿಸಿದ ಏಷ್ಯಾದ ಮೊದಲಿಗರಿವರು. 36 ವರ್ಷದ ವೃತ್ತಿ ಜೀವನ ಮುಗಿಸಿದ ಸುರೇಖಾ ಅವರು ಇದೇ 30ರಂದು ನಿವೃತ್ತಿಯಾಗಲಿದ್ದಾರೆ.

  • 1988ರಲ್ಲಿ ಇವರು ರೈಲು ಎಂಜಿನಿಯರ್ಆಗಿ ತಮ್ಮ ವೃತ್ತಿ ಆರಂಭಿಸಿ ದರು. ಗುರಿ ಸಾಧನೆ, ಹಿಡಿದ ಛಲ ಬಿಡದಿರುವುದು ಮತ್ತು ಅತ್ಯಂತ ಸವಾಲಿನ ವೃತ್ತಿರಂಗದಲ್ಲಿನ ಲಿಂಗ ತಾರ ತಮ್ಯದ ಅಡೆತಡೆಗಳನ್ನು ಮೀರಿದ ಇವರ ಜೀವನಗಾಥೆಯೇ ಅಸಾಧಾರಣ ವಾದುದು. ಅವರಿಗೀಗ 60 ವರ್ಷ.
  • ಗೂಡ್ಸ್‌ ರೈಲಿನ ಚಾಲಕಿಯಾಗಿ ಅವರು ತಮ್ಮ ವೃತ್ತಿ ಆರಂಭಿಸಿದರು. ಬಳಿಕ, ಮುಂಬೈನ ಲೋಕಲ್‌ ರೈಲುಗಳಲ್ಲಿ ಕಾರ್ಯನಿರ್ವಹಿಸಿದರು. ಪ್ರತಿಷ್ಠಿತ ‘ಡೆಕ್ಕನ್‌ ಕ್ವೀನ್‌’ನನ್ನೂ ಇವರು ಚಲಾಯಿಸಿದ್ದಾರೆ. ಆಧುನಿಕ ಕಾಲದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅನ್ನು ಚಲಾಯಿಸಿದ್ದಾರೆ. ವಿಶೇಷವೆಂದರೆ, ಇಷ್ಟೊಂದು ವೈವಿಧ್ಯಮಯ ರೈಲುಗಳನ್ನು ಚಲಾಯಿಸಿದ ಮೊದಲ ಮಹಿಳೆಯೂ ಇವರೇ ಆಗಿದ್ದಾರೆ.
  • ‘ಈ ವೃತ್ತಿ ಆಯ್ಕೆ ಮಾಡಿಕೊಳ್ಳಲು ಪೋಷಕರು ನನಗೆ ಬೇಡ ಎನ್ನಲೇ ಇಲ್ಲ’ ಎನ್ನುವ ಸುರೇಖಾ ಅವರು ಹುಟ್ಟಿದ್ದು ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ. ಹೈಸ್ಕೂಲ್‌ ಮುಗಿಸಿದ ಬಳಿಕ ಇವರು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮುಗಿಸಿದರು. ಸುರೇಖಾ ಅವರ ಪತಿ ಪೊಲೀಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಇಬ್ಬರು ಮಕ್ಕಳು ಎಂಜಿನಿಯರ್‌ಗಳು.
  • ಸುರೇಖಾ ಹಲವು ಮೊದಲುಗಳಿಗೆ ಹೆಸರಾದವರು. 1989ರಲ್ಲಿ ಇವರ ಸಹಾಯಕ ಲೋಕೋ ಚಾಲಕಿಯಾದರು. 1996ರಲ್ಲಿ ಗೂಡ್ಸ್ರೈಲು ಚಾಲಕಿಯಾದರು. 2000ರಲ್ಲಿ ರೈಲು ಚಾಲಕಿಯಾದರು. 2010ರಲ್ಲಿ ಘಾಟ್ಡ್ರೈವರ್ ಆದರು. 2023ರಲ್ಲಿ ವಂದೇ ಭಾರತ್ಎಕ್ಸ್‌‍ಪ್ರೆಸ್ಚಲಾಯಿಸಿದರು.
  • ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಸುರೇಖಾ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು.

ಸೇವೆ ಅಜರಾಮರ

  • ತಮಗೆ ಎದುರಾದ ಎಲ್ಲ ಅಡೆತಡೆಗಳನ್ನು ದಾಟಿದವರು. ಅಸಂಖ್ಯ ಮಹಿಳೆಯರಿಗೆ ಸ್ಫೂರ್ತಿದಾಯಕರು. ಯಾವುದೇ ಕನಸನ್ನೂ ನನಸು ಮಾಡಿಕೊಳ್ಳುವುದು ಸಾಧ್ಯ ಎಂದು ತೋರಿಸಿಕೊಟ್ಟವರು. ಭಾರತೀಯ ರೈಲ್ವೆಯಲ್ಲಿ ಮಹಿಳಾ ಸಬಲೀಕರಣದ ರೂಪಕವಾಗಿ ಸುರೇಖಾ ಅವರ ವೃತ್ತಿ ಜೀವನವು ಅಜರಾಮರ

ಒಮ್ಮೆಲೆ ಹೆಚ್ಚಿಸಿದರೆ ಹೊರೆ

  • ಐದು–ಹತ್ತು ವರ್ಷಗಳಿಗೊಮ್ಮೆ ಟಿಕೆಟ್‌ ದರ ಒಮ್ಮೆಲೇ ಹೆಚ್ಚಿಸಿದರೆ ಪ್ರಯಾಣಿಕರಿಗೂ ಹೊರೆಯಾಗುತ್ತದೆ. ಕಾಲಕಾಲಕ್ಕೆ ಅಲ್ಪ ಪ್ರಮಾಣದಲ್ಲಿ ವೈಜ್ಞಾನಿಕವಾಗಿ ದರ ಏರಿಕೆ ಮಾಡಿದಾಗ ಹೊರೆಯಾಗುವುದು ತಪ್ಪಲಿದೆ. ಅಲ್ಲದೇ ರಾಜಕೀಯ ಹಿತಾಸಕ್ತಿಗಳಿಂದ ದೂರ ಇದ್ದು, ಸ್ವತಂತ್ರವಾಗಿ ಸಮಿತಿಯು ಕಾರ್ಯನಿರ್ವಹಿಸುವುದರಿಂದ ಸಂಸ್ಥೆಗಳಿಗೂ ಒಳಿತಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಚಲಿತ ವಿದ್ಯಮಾನಗಳು: 21ನೇ ಸೆಪ್ಟೆಂಬರ್ 2025

ವೆಂಕಟೇಶ್ ಕುಮಾರ್‌ಗೆ ‘ಸಂಗೀತ ವಿದ್ವಾನ್’ ಗರಿ
ಸಂದರ್ಭ: ಮೈಸೂರು ದಸರಾ ಸಂದರ್ಭದಲ್ಲಿ ನೀಡುವ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಹಿಂದೂಸ್ತಾನಿ ಗಾಯಕ ಎಂ. ವೆಂಕಟೇಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
  • ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಸಂಗೀತ ಸಾಧಕರಿಗೆ ರಾಜ್ಯ ಸರ್ಕಾರ ನೀಡುವ 2025ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಹಿಂದೂಸ್ತಾನಿ ಗಾಯಕ ಎಂ. ವೆಂಕಟೇಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
  • ಪ್ರಶಸ್ತಿಯು ₹ 5 ಲಕ್ಷ ನಗದು, ಸರಸ್ವತಿ ವಿಗ್ರಹ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
  • ವೈ.ಕೆ. ಮುದ್ದುಕೃಷ್ಣ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ. ಮೈಸೂರು ಅರಮನೆಯ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
  • ‘ಅದ್ಭುತ ಗಾಯನದ ಮೂಲಕ ವೆಂಕಟೇಶ್‌ ಕುಮಾರ್ ಅವರು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ಸಾಧನೆ ಪರಿಗಣಿಸಿ ಈ ಆಯ್ಕೆ ಮಾಡಲಾಗಿದ’.

ಎಚ್‌–1ಬಿ ವೀಸಾ ಶುಲ್ಕ 1 ಲಕ್ಷ ಡಾಲರ್‌ಗೆ ಹೆಚ್ಚಳ
ಸಂದರ್ಭ: ವಿವಿಧ ದೇಶಗಳ ಜನರನ್ನು ನೇಮಕ ಮಾಡಿಕೊಳ್ಳುವ ಅಮೆರಿಕದ ಕಂಪನಿ ಗಳು ತಮ್ಮ ಉದ್ಯೋಗಿಗಳಿಗಾಗಿ ಪಡೆಯುವ ಎಚ್‌–1ಬಿ ವೀಸಾ ಅರ್ಜಿಗೆ ಸಂಬಂಧಿಸಿದ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಅಂದಾಜು ₹88 ಲಕ್ಷ) ಹೆಚ್ಚಿಸುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸಹಿ ಹಾಕಿದ್ದಾರೆ.
  • ಚಾಲ್ತಿಯಲ್ಲಿ ಇರುವವರಿಗೆ ಅನ್ವಯಿಸದು: ‘ಪರಿಷ್ಕೃತ ನಿಯಮವು ಮಾನ್ಯತೆ ಹೊಂದಿದ ಎಚ್‌–1ಬಿ ವೀಸಾ ಹೊಂದಿರುವವರಿಗೆ ಅನ್ವಯ ಆಗುವುದಿಲ್ಲ. ಹೊಸ ಶುಲ್ಕವು ಈಗಾಗಲೇ ಎಚ್‌–1ಬಿ ವೀಸಾ ಹೊಂದಿರುವವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ‘ಅಮೆರಿಕಕ್ಕೆ ಮರಳಲು ಯಾವುದೇ ಸಮಸ್ಯೆಯಿಲ್ಲ. ವೀಸಾ ನವೀಕರಿಸುವವರಿಗೂ ಯಾವುದೇ ತೊಂದರೆಯಿಲ್ಲ’ ಎಂದು ವರದಿಯಲ್ಲಿ ತಿಳಿಸಲಾಗಿದೆ.
  • ‘ಮುಂದಿನ ದಿನಗಳಲ್ಲಿ ಲಾಟರಿ ಮೂಲಕ ಆಯ್ಕೆಯಾಗುವ ಎಚ್‌–1ಬಿ ವೀಸಾ ಅರ್ಜಿದಾರರಿಗೆ ಮಾತ್ರ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ’ ಎಂದು ಸ್ಪಷ್ಟಪಡಿಸಿದೆ.
  • ‘ಇತರ ದೇಶಗಳಿಂದ ಅಮೆರಿಕಕ್ಕೆ ಬರುವ ಜನರು ಅಧಿಕ ಕೌಶಲ ಉಳ್ಳವರಾಗಿರಬೇಕು ಹಾಗೂ ಈ ವೀಸಾ ಪಡೆದು ಬರುವವರಿಂದಾಗಿ ಸ್ಥಳೀಯರು ತಮ್ಮ ಉದ್ಯೋಗ ಕಳೆದುಕೊಳ್ಳುವುದಿಲ್ಲ ಎಂಬುದನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಟ್ರಂಪ್ ಆಡಳಿತ ಹೇಳಿದೆ.
  • ಟ್ರಂಪ್‌ ಅವರ ಈ ನಡೆಯು, ಉದ್ಯೋಗ ವೀಸಾ ಪಡೆದು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯರು, ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಮೇಲೆ ಭಾರಿ ಪರಿಣಾಮ ಬೀರಲಿದೆ.
  • ‘ಎಚ್‌–1ಬಿ ವೀಸಾ ಸೌಲಭ್ಯದ ಪ್ರಯೋಜನ ಪಡೆಯಲು ಬಯಸುವ ಕಂಪನಿಗಳ ಮೇಲೆ ಅಧಿಕ ವೆಚ್ಚ ಹೇರು ವುದು ಅಗತ್ಯವಾಗಿದೆ. ಈ ಮೂಲಕ, ಅವುಗಳು ಈ ವೀಸಾ ಸೌಲಭ್ಯ ದುರ್ಬಳಕೆ ಮಾಡದಂತೆ ತಡಯಬಹುದಾಗಿದೆ’ ಎಂದು ಟ್ರಂಪ್‌ ಹೇಳಿದ್ದಾರೆ.

‘ಭಾರತದ ಕಂಪನಿಗಳ ಮೇಲೆ ಪರಿಣಾಮ’

  • ಅಮೆರಿಕದ ಎಚ್‌–1ಬಿ ವೀಸಾ ಅರ್ಜಿ ಶುಲ್ಕ ₹88.09 ಲಕ್ಷ ತಂತ್ರಜ್ಞಾನ ಸೇವಾ ಕಂಪನಿಗಳಿಗೆ ತೊಂದರೆ: ನಾಸ್ಕಾಂ
  • ಎಚ್‌–1ಬಿ ವೀಸಾ ಅರ್ಜಿಗಳಿಗೆ ವಿಧಿಸುವ ಶುಲ್ಕವನ್ನು 1 ಲಕ್ಷ ಅಮೆರಿಕನ್ ಡಾಲರ್‌ಗೆ (ಅಂದಾಜು ₹88.09 ಲಕ್ಷ) ನಿಗದಿಪಡಿಸುವ ಅಮೆರಿಕ ಸರ್ಕಾರದ ತೀರ್ಮಾನವು ಭಾರತದ ತಂತ್ರಜ್ಞಾನ ಸೇವಾ ಕಂಪನಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನಾಸ್ಕಾಂ ಅಂದಾಜು ಮಾಡಿದೆ.
  • ಅಮೆರಿಕದಲ್ಲಿಯೇ ಉಳಿದು ಮಾಡಬೇಕಾದ ಕೆಲಸಗಳ ಮೇಲೆ ಈ ತೀರ್ಮಾನದಿಂದಾಗಿ ಪರಿಣಾಮ ಉಂಟಾಗಲಿದೆ ಎಂದು ಐ.ಟಿ. ಸೇವಾ ಕಂಪನಿಗಳ ಸಂಘಟನೆಯಾದ ನಾಸ್ಕಾಂ ಹೇಳಿದೆ.
  • ಅಮೆರಿಕದ ಎಚ್‌–1ಬಿ ವೀಸಾಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವುದು ಭಾರತದ ಟೆಕಿಗಳು. ಅಮೆರಿಕವು ಪ್ರತಿ ವರ್ಷ 6,50,000 ಎಚ್‌–1ಬಿ ವೀಸಾ ನೀಡುತ್ತದೆ. ಈ ಬಗೆಯ ವೀಸಾಗಳನ್ನು 2024–25ರಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡ ಕಂಪನಿಗಳ ಪಟ್ಟಿಯಲ್ಲಿ ಅಮೆಜಾನ್ ಮೊದಲ ಸ್ಥಾನದಲ್ಲಿದೆ (10,044).

ಅಮೆರಿಕಕ್ಕೆ ನಷ್ಟ, ಭಾರತಕ್ಕೆ ಲಾಭ: ಅಮಿತಾಭ್ ಕಾಂತ್

  • ‘ಎಚ್‌–1ಬಿ ವೀಸಾ ಶುಲ್ಕ ಹೆಚ್ಚಳದ ನಿರ್ಧಾರವು ಅಮೆರಿಕದಲ್ಲಿ ಅನ್ವೇಷಣೆಗಳು ಉಸಿರುಗಟ್ಟುವಂತೆ ಮಾಡಲಿದೆ. ಆದರೆ, ಈ ನಿರ್ಧಾರವು ಭಾರತದ ಅಭಿವೃದ್ಧಿಗೆ ವೇಗ ನೀಡಲಿದೆ’ ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.
  • ವೀಸಾ ಶುಲ್ಕ ಹೆಚ್ಚಳವು, ಜಾಗತಿಕ ಪ್ರತಿಭೆಗಳಿಗೆ ಬಾಗಿಲು ಹಾಕುವ ಕೆಲಸ ಮಾಡಲಿದೆ. ಇದರಿಂದ ಅಮೆರಿಕದಲ್ಲಿ ಸ್ಥಾಪನೆಯಾಗಬೇಕಾದ ಪ್ರಯೋಗಾಲಯಗಳು, ಅಲ್ಲಿಗೆ ಸಿಗಬೇಕಾದ ಹಕ್ಕುಸ್ವಾಮ್ಯ, ಅಲ್ಲಿ ಆಗಬೇಕಾದ ಸಂಶೋಧನೆ ಮತ್ತು ಅಲ್ಲಿ ಸ್ಥಾಪನೆ ಆಗಬಹುದಾಗ ನವೋದ್ಯಮಗಳು ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಗುರುಗ್ರಾಮದಂತಹ ನಗರಗಳಿಗೆ ಹೋಗುವಂತೆ ಮಾಡಲಿದೆ ಎಂದು ಹೇಳಿದ್ದಾರೆ.
  • ಇದರಿಂದಾಗಿ ಭಾರತದ ಅತ್ಯುತ್ತಮ ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು, ನಾವೀನ್ಯಕಾರರು ವಿಕಸಿತ ಭಾರತದ ಗುರಿ ಮತ್ತು ಪ್ರಗತಿಗೆ ಕೊಡುಗೆ ನೀಡಲು ಅವಕಾಶ ಹೊಂದಲಿದ್ದಾರೆ. ಅಮೆರಿಕದ ಈ ನಿರ್ಧಾರವು ಭಾರತಕ್ಕೆ ಲಾಭ ಉಂಟುಮಾಡುತ್ತದೆ ಎಂದು ಅಮಿತಾಭ್ ಕಾಂತ್ ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ಎಂಎಸ್‌ಪಿ ಅಡಿ ಐದು ಧಾನ್ಯಗಳ ಖರೀದಿ
ಸಂದರ್ಭ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಐದು ಧಾನ್ಯಗಳ ಖರೀದಿಗೆ ಕೇಂದ್ರ ಕೃಷಿ ಸಚಿವಾಲಯ ಅನುಮತಿ ನೀಡಿದೆ.
  • 2025-26ನೇ ಸಾಲಿನ ಮುಂಗಾರಿನಲ್ಲಿ ಬೆಳೆದ ಹೆಸರು ಕಾಳು, ಉದ್ದಿನ ಕಾಳು, ನೆಲಗಡಲೆ(ಶೇಂಗಾ), ಸೋಯಾಬಿನ್‌ ಮತ್ತು ಸೂರ್ಯಕಾಂತಿ ಧಾನ್ಯಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
  • 38,000 ಟನ್‌ ಹೆಸರು ಕಾಳು, 60,810 ಟನ್‌ ಉದ್ದು, 15,650 ಟನ್‌ ಸೂರ್ಯಕಾಂತಿ, 61,148 ಟನ್‌ ಕಡಲೆಬೀಜ ಮತ್ತು 1,15,000 ಟನ್‌ ಸೋಯಾಬೀನ್ ಖರೀದಿಗೆ ಅನುಮತಿ ಸಿಕ್ಕಿದೆ.
  • ಪ್ರಸಕ್ತ ಮುಂಗಾರಿನಲ್ಲಿ ರಾಜ್ಯದ ಕೃಷಿಕರು ಅತಿವೃಷ್ಟಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾನ್ಯಗಳನ್ನು ಖರೀದಿಸುವಂತೆ ಒತ್ತಾಯಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದರು.
  • ಕರ್ನಾಟಕದ ರೈತರಿಗೆ ಕಲ್ಪಿಸಿರುವ ಈ ಬೆಂಬಲ ಬೆಲೆ ಯೋಜನೆಯ ನೆರವನ್ನು ರಾಜ್ಯ ಸರ್ಕಾರ ತ್ವರಿತವಾಗಿ ಒದಗಿಸಬೇಕು ಎಂದು ಜೋಶಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನ
ಸಂದರ್ಭ: ಬೆಳಗಾವಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಯ ಸದಸ್ಯ.
  • ‘ಬೆಳಗಾವಿ ಬಾಲಾಜಿ ಟ್ರಸ್ಟ್‌ ಎಂಬ ಸಂಸ್ಥೆಯು ಸುವರ್ಣ ಸೌಧದ ಎದುರು ಏಳು ಎಕರೆ ಜಾಗವನ್ನು ಖರೀದಿಸಿದೆ. ಅಲ್ಲಿ ಅಂದಾಜು ₹100 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಿಸಲು ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದೆ’.

ಮೋಹನ್‌ಲಾಲ್‌ಗೆ ಫಾಲ್ಕೆ ಗರಿ
ಸಂದರ್ಭ: ಮಲಯಾಳ ಚಿತ್ರರಂಗದ ಹಿರಿಯ ನಟ ಮೋಹನ್‌ಲಾಲ್‌ ಅವರನ್ನು ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿರುವ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
  • ಸಿನಿಮಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಭಾರತೀಯ ಸಿನಿಮಾದ ಪಿತಾಮಹ ದಾದಾಸಾಹೇಬ್‌ ಫಾಲ್ಕೆ ಹೆಸರಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.
  • 2023ನೇ ಸಾಲಿನ ಪ್ರಶಸ್ತಿಗೆ 65 ವರ್ಷದ ಮೋಹನ್‌ಲಾಲ್‌ ಅವರನ್ನು ಆಯ್ಕೆ ಮಾಡಿರುವ ವಿಷಯವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ‘ಎಕ್ಸ್‌’ನಲ್ಲಿ ಪ್ರಕಟಿಸಿದ್ದಾರೆ. ಸೆಪ್ಟೆಂಬರ್‌ 23ರಂದು ನಡೆಯಲಿರುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
  • ಮೋಹನ್‌ಲಾಲ್‌ ಅವರಿಗೆ 2001ರಲ್ಲಿ ಪದ್ಮಶ್ರೀ ಮತ್ತು 2019ರಲ್ಲಿ ಪದ್ಮಭೂಷಣ ಪುರಸ್ಕಾರ ಲಭಿಸಿದ್ದವು.
  • 350ಕ್ಕೂ ಹೆಚ್ಚು ಸಿನಿಮಾದಲ್ಲಿ ನಟನೆ ನಾಲ್ಕು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ಮೋಹನ್‌ಲಾಲ್‌ ಅವರು ಮಲಯಾ‌ಳ, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಗಳ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತನ್ಮಾತ್ರ, ಇರುವರ್, ದೃಶ್ಯಂ, ವಾನಪ್ರಸ್ಥಂ, ಕಂಪನಿ, ಮುಂದಿರಿವಳ್ಳಿಗಳ್ ತಳಿರ್ಕುಂಬೋಳ್ ಮತ್ತು ಪುಲಿಮುರುಗನ್ ಅವರಿಗೆ ಹೆಸರು ತಂದುಕೊಟ್ಟ ಪ್ರಮುಖ ಚಿತ್ರಗಳಾಗಿವೆ.

ಬಹುಪತ್ನಿತ್ವ ಒಪ್ಪಲಾಗದು: ಹೈಕೋರ್ಟ್‌
ಸಂದರ್ಭ: ‘ಪತ್ನಿಯರನ್ನು ಸಲಹುವ ಸಾಮರ್ಥ್ಯ ಇಲ್ಲದಿದ್ದರೆ ಮುಸ್ಲಿಂ ಪುರುಷನೊಬ್ಬ ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
  • ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂದಲ್‌ಮಣ್ಣ ನಿವಾಸಿ 39 ವರ್ಷದ ಮಹಿಳೆಯೊಬ್ಬರು, ಭಿಕ್ಷಾಟನೆಯಿಂದ ಜೀವನ ನಿರ್ವಹಣೆ ಮಾಡುತ್ತಿರುವ ತನ್ನ ಪತಿಯಿಂದ ಪ್ರತಿ ತಿಂಗಳು ₹10 ಸಾವಿರ ಜೀವನಾಂಶ ಕೋರಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
  • ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್‌, ‘ಮುಸ್ಲಿಂ ಪುರುಷನೊಬ್ಬನಿಗೆ ತನ್ನ ಪತ್ನಿಯರನ್ನು ನೋಡಿಕೊಳ್ಳುವ ಆರ್ಥಿಕ ಸಾಮರ್ಥ್ಯ ಇಲ್ಲದಿದ್ದರೆ ಮತ್ತು ಆತನ ಪತ್ನಿಯರಲ್ಲಿ ಒಬ್ಬರು ಜೀವನಾಂಶಕ್ಕಾಗಿ ಕೋರ್ಟ್‌ ಮೊರೆ ಹೋಗುತ್ತಾರೆ ಎನ್ನುವುದಾದರೆ ಆತನ ಬಹುಪತ್ನಿತ್ವ ವನ್ನು ಒಪ್ಪಲು ಸಾಧ್ಯವಿಲ್ಲ’ ಎಂದಿದ್ದಾರೆ.
  • ದೂರುದಾರ ಮಹಿಳೆ ಮೊದಲು ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಅಲ್ಲಿ ಆಕೆಯ ಮನವಿಯನ್ನು ತಳ್ಳಿಹಾಕಿದಾಗ, ಹೈಕೋರ್ಟ್ ಮೆಟ್ಟಿಲೇರಿದ್ದರು. ‘ಪಾಲಕ್ಕಾಡ್‌ನ ಕುಂಬಡಿ ಗ್ರಾಮದ 44 ವರ್ಷದ ನನ್ನ ಪತಿಯು ಭಿಕ್ಷಾಟನೆಯಿಂದ ಜೀವಿಸುತ್ತಿದ್ದು, ತಿಂಗಳಿಗೆ ₹25 ಸಾವಿರ ಆದಾಯವಿದೆ. ಆದರೆ, ನನಗೆ ಜೀವನಾಂಶ ನೀಡುತ್ತಿಲ್ಲ’ ಎಂದು ದೂರಿದ್ದರು.
  • ದೂರುದಾರ ಮಹಿಳೆಯ ವಾದ ಆಲಿಸಿದ ನ್ಯಾಯಮೂರ್ತಿ, ‘ಭಿಕ್ಷಾಪಾತ್ರೆಗೆ ಕೈ ಹಾಕಲು ಹೋಗಬೇಡಿ’ ಎನ್ನುವ ಮಲಯಾಳಂ ನುಡಿಗಟ್ಟು ಬಳಸಿದರು. ಈ ಪ್ರಕರಣದಲ್ಲಿ ‘ಪತ್ನಿಗೆ ಜೀವನಾಂಶ ನೀಡುವಂತೆ ಭಿಕ್ಷುಕನಿಗೆ ಕೋರ್ಟ್‌ ನಿರ್ದೇಶಿಸುವಂತಿಲ್ಲ. ಆದರೆ, ದೂರುದಾರ ಮಹಿಳೆಗೆ ಆಹಾರ, ಬಟ್ಟೆಗಳನ್ನು ಒದಗಿಸಲಾಗಿದೆಯೇ ಎನ್ನುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು’ ಎಂದರು.
  • ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಆದೇಶದ ಪ್ರತಿಯನ್ನು ನೀಡುವಂತೆ ಸೂಚಿಸಿದ ಕೋರ್ಟ್‌, ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿತು.

‘ಏಕಪತ್ನಿತ್ವ: ಜಾಗೃತಿ ಮೂಡಿಸಬೇಕು’

  • ಬಹುತೇಕ ಮುಸ್ಲಿಮರು ಏಕಪತ್ನಿತ್ವವನ್ನೇ ಅನುಸರಿ ಸುತ್ತಾರೆ. ಇದು ಕುರಾನ್‌ನ ನಿಜವಾದ ಆಶಯವನ್ನು ಪ್ರತಿಬಿಂಬಿ ಸುತ್ತದೆ. ಕೆಲವರಷ್ಟೇ ಬಹುಪತ್ನಿತ್ವ ಹೊಂದಿದ್ದಾರೆ. ಸಮುದಾಯ ಮತ್ತು ಧಾರ್ಮಿಕ ಮುಖಂಡರು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

ಪ್ರಚಲಿತ ವಿದ್ಯಮಾನಗಳು: 20ನೇ ಸೆಪ್ಟೆಂಬರ್ 2025

  • ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೆಳಕಾಗುವದೀಪಿಕಾ

ಸಂದರ್ಭ: ಪ್ರತಿಯೊಂದು ಮಗುವೂ ಉತ್ತಮ ಶಿಕ್ಷಣ ಪಡೆಯಬೇಕು. ಉನ್ನತ ಶಿಕ್ಷಣ ಪಡೆಯುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಅದಕ್ಕಾಗಿ ನಮ್ಮ ಫೌಂಡೇಷನ್‌ ಶ್ರಮಿಸುತ್ತಿದೆಅಜೀಂ ಪ್ರೇಮ್‌ಜಿ, ಉದ್ಯಮಿ.

  • ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ರಾಜ್ಯದ ಹೆಣ್ಣು ಮಕ್ಕಳಿಗೆ ಇನ್ನು ಮುಂದೆ ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಆರ್ಥಿಕ ನೆರವು ನೀಡಲಿದ್ದು, ಅದಕ್ಕಾಗಿ ₹2,000 ಕೋಟಿ ಹಾಗೂ ರಾಜ್ಯ ಸರ್ಕಾರ ₹200 ಕೋಟಿ ಒದಗಿಸಿವೆ.
  • ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ವಿದ್ಯಾರ್ಥಿ ವೇತನ ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಹಾಗೂ ಉನ್ನತ ಶಿಕ್ಷಣ ಇಲಾಖೆ ದೀಪಿಕಾ ವಿದ್ಯಾರ್ಥಿ ವೇತನ ಕಾರ್ಯಕ್ರಮ ರೂಪಿಸಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
  • ಯೋಜನೆಯಲ್ಲಿ ಪ್ರತಿ ವಿದ್ಯಾರ್ಥಿನಿಗೆ ಪದವಿ ಶಿಕ್ಷಣ ಮುಗಿಯುವವರೆಗೆ ವಾರ್ಷಿಕ ₹30,000 ಸಿಗಲಿದ್ದು,ಶೈಕ್ಷಣಿಕ ಉದ್ದೇಶ ಹಾಗೂ ಪೂರಕ ಕಾರಣಗಳಿಗೆ ಬಳಸಿಕೊಳ್ಳಬಹುದು.
  • ಸರ್ಕಾರಿ ಶಾಲೆಗಳಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿಯು ಉತ್ತೀರ್ಣರಾಗಿ 2025–26ನೇ ಸಾಲಿನಲ್ಲಿ ಸಾಮಾನ್ಯ ಪದವಿ ಅಥವಾ ವೃತ್ತಿ ಶಿಕ್ಷಣ ಪದವಿಗೆ ಸೇರುವ 37,000 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನದ ನೆರವು ಸಿಗಲಿದೆ. ಅರ್ಹ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾದರೆ ಆ ಮೊತ್ತವನ್ನು ರಾಜ್ಯ ಭರಿಸಲಿದೆ.
  • ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ‘ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಅವರು ಸುಶಿಕ್ಷಿತರಾದರೆ ಅವರ ಕುಟುಂಬ, ಸಮಾಜ, ರಾಜ್ಯವೇ ಸುಶಿಕ್ಷಿತವಾಗುತ್ತದೆ.
  • ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯ ರಿಗೆ ಬೋಧನೆ ಹಾಗೂ ಪ್ರಯೋಗಾಲಯ ಶುಲ್ಕಗಳನ್ನು ಮರುಪಾವತಿ ಮಾಡಲಾಗುತ್ತಿದೆ. ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಸಮಸ್ಯೆ ನಿರ್ಮೂಲನೆಯ ಹೋರಾಟಕ್ಕೆ ಶಕ್ತಿ ತುಂಬಲಿದೆ’ ಎಂದರು.
  • ಸಾಮಾಜಿಕಶೈಕ್ಷಣಿಕ ಸಮೀಕ್ಷೆ ಆಧಾರ್ ಆಧಾರ
  • ಜಿಎಸ್ಟಿ ಪರಿಷ್ಕರಣೆ: ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳಲ್ಲಕ್ರಿಸಿಲ್

ಸಂದರ್ಭ: ಜಿಎಸ್‌ಟಿ ಪರಿಷ್ಕರಣೆಯಿಂದಾಗಿ ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳುವ ಸಾಧ್ಯತೆಯಿಲ್ಲ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್‌ ತಿಳಿಸಿದೆ.

  • ಜಿಎಸ್‌ಟಿ ಪರಿಷ್ಕರಣೆಯಿಂದ ಅಲ್ಪಾವಧಿವರೆಗೆ ವಾರ್ಷಿಕ ₹48 ಸಾವಿರ ಕೋಟಿ ನಷ್ಟ ಉಂಟಾಗಲಿದೆ ಎಂದು ಸರ್ಕಾರ ಅಂದಾಜಿಸಿತ್ತು ಎಂದು ಕ್ರಿಸಿಲ್‌ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ. ಕಳೆದ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹವು ₹10.6 ಲಕ್ಷ ಕೋಟಿಯಾಗಿತ್ತು. ಆದ್ದರಿಂದ, ನಷ್ಟದ ಪ್ರಮಾಣ ಗಮನಾರ್ಹವಾಗಿ ಇಲ್ಲ ಎಂದು ಹೇಳಿದೆ.
  • ಜಿಎಸ್‌ಟಿ ಮಂಡಳಿಯು ದರ ಪರಿಷ್ಕರಣೆ ಮಾಡಿರುವುದರಿಂದ ನಾಲ್ಕು ಹಂತದ ತೆರಿಗೆ, ಎರಡು ಹಂತಕ್ಕೆ ಇಳಿಯಲಿದೆ. ಇದರಿಂದ ಸರಕು ಮತ್ತು ಸೇವೆಗಳ ದರ ಕಡಿಮೆಯಾಗಲಿದೆ ಎಂದು ಹೇಳಿದೆ.  
  • ಜಿಎಸ್‌ಟಿ ಪರಿಷ್ಕರಣೆ ಮೊದಲು ಶೇ 18ರ ಹಂತದ ತೆರಿಗೆಯಿಂದ  ಶೇ 75ರಷ್ಟು ವರಮಾನ ಬರುತ್ತಿತ್ತು. ಶೇ 6ರಷ್ಟು ವರಮಾನ ಶೇ 12ರ ಹಂತದ ತೆರಿಗೆಯಿಂದ ಮತ್ತು ಶೇ 15ರಷ್ಟು ವರಮಾನ ಶೇ 28 ಹಂತದಿಂದ ಬರುತ್ತಿತ್ತು.

ನೇರ ತೆರಿಗೆ ಸಂಗ್ರಹ ಹೆಚ್ಚಳ

  • ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ 1ರಿಂದ ಸೆಪ್ಟೆಂಬರ್ 17ರ ವರೆಗೆ ದೇಶದ ನಿವ್ವಳ ನೇರ ತೆರಿಗೆ ಸಂಗ್ರಹವು ₹10.82 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
  • 2024–25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹9.91 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ಸಂಗ್ರಹವು ಶೇ 9ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ. ಹೆಚ್ಚಿದ ಮುಂಗಡ ತೆರಿಗೆ ಮತ್ತು ಮರುಪಾವತಿ ಯಲ್ಲಿನ  (ರೀಫಂಡ್‌) ಇಳಿಕೆಯು ಸಂಗ್ರಹ ಹೆಚ್ಚಲು ಕಾರಣವಾಗಿದೆ ಎಂದು ತಿಳಿಸಿದೆ.
  • ಏಪ್ರಿಲ್‌ 1ರಿಂದ ಸೆಪ್ಟೆಂಬರ್‌ 17ರ ವರೆಗೆ ಮರುಪಾವತಿ ಪ್ರಮಾಣ ಶೇ 24ರಷ್ಟು ಇಳಿಕೆಯಾಗಿದ್ದು, ₹1.61 ಲಕ್ಷ ಕೋಟಿಯಾಗಿದೆ. ಈ ಅವಧಿಯಲ್ಲಿ ಮುಂಗಡ ತೆರಿಗೆ ಸಂಗ್ರಹವು ಶೇ 6ರಷ್ಟು ಹೆಚ್ಚಳವಾಗಿದ್ದು, ₹3.52 ಲಕ್ಷ ಕೋಟಿ ದಾಟಿದೆ. ಆದರೆ, ಕಾರ್ಪೊರೇಟ್‌ಯೇತರ ತೆರಿಗೆ ಸಂಗ್ರಹವು ಶೇ 7ರಷ್ಟು ಇಳಿಕೆಯಾಗಿದ್ದು, ₹96,784 ಕೋಟಿಯಾಗಿದೆ.
  • ನಿವ್ವಳ ಕಾರ್ಪೊರೇಟ್ ತೆರಿಗೆ ಸಂಗ್ರಹವು ₹4.72 ಲಕ್ಷ ಕೋಟಿ ಮತ್ತು ವೈಯಕ್ತಿಕ ಆದಾಯ ತೆರಿಗೆಯನ್ನು ಒಳಗೊಂಡಿರುವ ಕಾರ್ಪೊರೇಟ್‌ಯೇತರ ತೆರಿಗೆ, ₹5.84 ಲಕ್ಷ ಕೋಟಿಯಷ್ಟಾಗಿದೆ.
  • ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಸಂಗ್ರಹವು ₹26,306 ಕೋಟಿಗೆ ಹೆಚ್ಚಳವಾಗಿದೆ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ನೇರ ತೆರಿಗೆ ಮೂಲಕ ₹25.20 ಲಕ್ಷ ಕೋಟಿ ಸಂಗ್ರಹದ ಗುರಿ ಹೊಂದಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 12ರಷ್ಟು ಹೆಚ್ಚಳವಿದು. ಎಸ್‌ಟಿಟಿ ಮೂಲಕ ₹78 ಸಾವಿರ ಕೋಟಿ ಸಂಗ್ರಹಿಸಲು ಯೋಜಿಸಿದೆ.
  • ಗಾಜಾದಲ್ಲಿ ಕದನವಿರಾಮ: ನಿರ್ಣಯದ ವಿರುದ್ಧ ಅಮೆರಿಕ ಮತ

ಸಂದರ್ಭ: ಭಯೋತ್ಪಾದನೆಯ ಕುರಿತು ಭದ್ರತಾ ಮಂಡಳಿಯು ಕಣ್ಣುಮುಚ್ಚಿ ಕುಳಿತರೂ ಇಸ್ರೇಲ್‌ ಮಾತ್ರ ಹಮಾಸ್‌ ವಿರುದ್ಧದ ತನ್ನ ಯುದ್ಧವನ್ನು ಮುಂದುವರಿಸುತ್ತದೆ ಡ್ಯಾನಿ ಡ್ಯಾನನ್‌, ವಿಶ್ವ ಸಂಸ್ಥೆಗೆ ಇಸ್ರೇಲ್‌ ರಾಯಭಾರಿ.

  • ‘ಗಾಜಾದಲ್ಲಿ ತಕ್ಷಣದಲ್ಲಿ ಕದನವಿರಾಮ ಘೋಷಿಸ ಬೇಕು ಮತ್ತು ಈ ಕದನವಿರಾಮವು ಶಾಶ್ವತವಾಗಿ ಇರಬೇಕು’ ಎಂಬ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ವಿರುದ್ಧವಾಗಿ ಅಮೆರಿಕವು ಮತ್ತೊಮ್ಮೆ ತನ್ನ ಪರಮಾಧಿಕಾರವನ್ನು ಚಲಾಯಿಸಿತು.
  • ನಿರ್ಣಯದಲ್ಲಿ ಹಮಾಸ್‌ ಬಂಡುಕೋರರನ್ನು ಸೂಕ್ತ ರೀತಿಯಲ್ಲಿ ಖಂಡಿಸಲಾಗಿಲ್ಲ ಎಂಬುದು ಅಮೆರಿಕದ ಆಕ್ಷೇಪ. ಆದರೆ, ಮಂಡಳಿಯ ಉಳಿದೆಲ್ಲ ಪ್ರಮುಖ 14 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿವೆ. ‘ಗಾಜಾದಲ್ಲಿ ಮಾನವೀಯ ಪರಿಸ್ಥಿತಿಯು ದುರಂತಮಯವಾಗಿದೆ. ಮೂಲಭೂತ ಅಗತ್ಯಗಳನ್ನು ಪೂರೈಸಲು ವಿಧಿಸಿರುವ ಎಲ್ಲ ನಿರ್ಬಂಧವನ್ನು ಇಸ್ರೇಲ್‌ ತೆಗೆದು ಹಾಕಬೇಕು’ ಎಂದು ಇವುಗಳು ಹೇಳಿವೆ.
  • ‘ಹಮಾಸ್‌ನ ಕ್ರಿಯೆಗಳನ್ನು ಖಂಡಿಸಲಾಗಿಲ್ಲ ಅಥವಾ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇಸ್ರೇಲ್‌ಗೆ ಹಕ್ಕಿದೆ ಎಂಬುದನ್ನೂ ಉಲ್ಲೇಖಿಸಲಾಗಿಲ್ಲ. ಹಮಾಸ್‌ಗೆ ಅನುಕೂಲವಾಗುವ ತಪ್ಪು ಸಂಕಥನಕ್ಕೆ ಈ ನಿರ್ಣಯವು ಅಂಕಿತ ಹಾಕಿದೆ. ಇದಕ್ಕೆ ಈ ಮಂಡಳಿಯ ಇತರ ಸದಸ್ಯರು ದನಿಗೂಡಿಸಿದ್ದಾರೆ’ ಎಂದು ಮತಚಲಾಯಿಸುವುದಕ್ಕೂ ಮುನ್ನ ಅಮೆರಿಕದ ನೀತಿ ಸಲಹೆಗಾರ ಮಾರ್ಗನ್‌ ಒರ್ಟಗಸ್‌ ಹೇಳಿದರು.
  • 474 ಪಕ್ಷಗಳನ್ನು ಪಟ್ಟಿಯಿಂದ ಕೈಬಿಟ್ಟ ಆಯೋಗ

ಸಂದರ್ಭ: ನೋಂದಾಯಿತ ಮತ್ತು ಮಾನ್ಯತೆ ಪಡೆಯದ 474 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

  • ಈ ಪಕ್ಷಗಳು ಕಳೆದ ಆರು ವರ್ಷಗಳಲ್ಲಿ ಯಾವುದೇ ಚುನಾವಣೆ ಯಲ್ಲಿ ಭಾಗವಹಿಸಿಲ್ಲ ಹಾಗೂ ಮಾನದಂಡಗಳನ್ನು ಪಾಲಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ. ಇದರೊಂದಿಗೆ ಕಳೆದ 2 ತಿಂಗಳಲ್ಲಿ ಒಟ್ಟು 808 ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಆ.9 ರಂದು ಮೊದಲ ಹಂತದಲ್ಲಿ 334 ಪಕ್ಷಗಳನ್ನು ಕೈಬಿಡಲಾಯಿತು.
  • ಲೈಲ್ಸ್ಮಿಂಚು: ಅಮೆರಿಕದ ನೋವಾ ಲೈಲ್ಸ್ಸತತ ನಾಲ್ಕನೇ ಬಾರಿ ವಿಶ್ವ ಅಥ್ಲೆಟಿಕ್ಸ್ಚಾಂಪಿಯನ್ಷಿಪ್ 200 ಮೀ. ಓಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದಿಗ್ಗಜ ಅಥ್ಲೀಟ್ಉಸೇನ್ ಬೋಲ್ಟ್ದಾಖಲೆ ಸರಿಗಟ್ಟಿದರು.
  • ಅಮೆರಿಕದ ಓಟಗಾರ ನೋವಾ ಲೈಲ್ಸ್‌ ಅವರು ಸತತ ನಾಲ್ಕನೇ ಬಾರಿ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 200 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ದಿಗ್ಗಜ ಅಥ್ಲೀಟ್‌ ಉಸೇನ್ ಬೋಲ್ಟ್‌ ಅವರ ದಾಖಲೆಯನ್ನು ಸರಿಗಟ್ಟಿದರು. ನ್ಯಾಷನಲ್ ಸ್ಟೇಡಿಯಮ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಲೈಲ್ಸ್‌ 19.52 ಸೆ.ಗಳಲ್ಲಿ ಗುರಿಮುಟ್ಟಿದರು.
  • ಜಮೈಕದ ದಂತಕಥೆ ಉಸೇನ್ ಬೋಲ್ಟ್‌ 200 ಮೀ. ಓಟದಲ್ಲಿ ಸತತ ನಾಲ್ಕು ಬಾರಿ ಚಿನ್ನ ಗೆದ್ದಿದ್ದರು. 2009 ರಿಂದ 2015 ಅವಧಿಯಲ್ಲಿ ಅವರು ವಿಶ್ವ ಕೂಟದಲ್ಲಿ 100 ಮೀ ಮತ್ತು 200 ಮೀ. ಓಟದಲ್ಲಿ ಪಾರಮ್ಯ ಮೆರೆದಿದ್ದರು. ವಿಶ್ವ ಕೂಟದಲ್ಲಿ 11 ಚಿನ್ನ ಮತ್ತು ಒಲಿಂಪಿಕ್ಸ್ನಲ್ಲಿ ಎಂಟು ಚಿನ್ನ ಬಾಚಿದ್ದರು.
  • ಈ ಕೂಟದ 100 ಮೀ. ಓಟದಲ್ಲಿ ಲೈಲ್ಸ್‌ ಕಂಚಿನ ಪದಕ ಗೆದ್ದುಕೊಂಡಿದ್ದು, 200 ಮೀ. ಓಟವನ್ನು ನಿರೀಕ್ಷೆಯಂತೆ ಗೆದ್ದರು. ಸ್ವದೇಶದ ಕೆನ್ನಿ ಬೆಡ್ನಾರೆಕ್‌ 19.58 ಸೆ.ಗಳಲ್ಲಿ ಗುರಿತಲುಪಿ ಬೆಳ್ಳಿ ಗೆದ್ದರೆ, ಜಮೈಕಾದ ಬ್ರಯಾನ್ ಲೆವೆಲ್‌ (19.64 ಸೆ.) ಕಂಚಿನ ಪದಕ ಗೆದ್ದುಕೊಂಡರು.
  • ಒಲಿಂಪಿಕ್ ಚಾಂಪಿಯನ್, ಬೋಟ್ಸ್‌ವಾನಾದ ಲೆಟ್ಸಿಲಿ ಟೆಬಾಗೊ ಸೆಕೆಂಡಿನ ನೂರನೇ ಒಂದು ಭಾಗದಿಂದ ಪದಕ ಕಳೆದುಕೊಂಡರು. ಕಣದಲ್ಲಿದ್ದ 20 ವರ್ಷದೊಳಗಿನ ಏಕೈಕ ಅಥ್ಲೀಟ್‌ ಅಂಗಿಲ್ಲಾ (ಪೂರ್ವ ಕೆರಿಬಿಯನ್‌ ಭಾಗ) ಸಂಜಾತ ಬ್ರಿಟನ್‌ನ ಝರ್ನೆಲ್‌ ಹ್ಯೂಸ್‌ (19.78 ಸೆ.) ಐದನೇ ಸ್ಥಾನ ಪಡೆದರು.
  • 28 ವರ್ಷ ವಯಸ್ಸಿನ ‘ಷೋ ಮ್ಯಾನ್‌’ ಲೈಲ್ಸ್‌, ಸೆಮಿಫೈನಲ್‌ನಲ್ಲಿ ದಾಖಲೆಯ 19.51 ಸೆ.ಗಳಲ್ಲಿ ಓಡಿದ್ದರು. ಫೈನಲ್‌ನಲ್ಲಿ ಆರನೇ ಲೇನ್‌ನಲ್ಲಿ ಓಡಿ, ಗುರಿಮುಟ್ಟಿದ ತಕ್ಷಣ, ಕೈಗಳನ್ನು ಮೇಲೆತ್ತಿ ಅರೆಕ್ಷಣ ಮುಗಿಲಿನತ್ತ ದಿಟ್ಟಿಸಿದರು.
  • ಮೆಲಿಸಾಗೆ ಸ್ಪ್ರಿಂಟ್‌ ಡಬಲ್‌: ಅಮೆರಿಕದ ಮೆಲಿಸ್ಸಾ ಜೆಫರ್ಸನ್‌–ವೂಡೆನ್‌ ಅವರು ಮಹಿಳೆಯರ 200 ಮೀ. ಓಟವನ್ನು 21.68 ಸೆ.ಗಳಲ್ಲಿ ಪೂರೈಸಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪ್ರಿಂಟ್‌ ಡಬಲ್‌ (100 ಮತ್ತು 200 ಮೀ. ಓಟ) ಸಾಧಿಸಿದರು. ಅವರು ಕೂಟದ ಮೂರನೇ ದಿನ 100 ಮೀ. ಓಟದಲ್ಲಿ ವಿಜೇತರಾಗಿದ್ದರು.
  • ಶೆಲ್ಲಿ–ಆ್ಯನ್ ಫ್ರೇಸರ್‌–ಪ್ರೈಸ್‌ 2013ರಲ್ಲಿ ಸ್ಪ್ರಿಂಟ್‌ ಡಬಲ್‌ ಸಾಧಿಸಿದ್ದರು. ನಂತರ ಮೆಲಿಸ್ಸಾ ಈ ಸಾಧನೆಗೆ ಪಾತ್ರರಾಗಿದ್ದಾರೆ.
  • ಬೋಲ್‌ಗೆ ಚಿನ್ನ: ಡಚ್‌ ಓಟಗಾರ್ತಿ ಫೆಮ್ಕೆ ಬೋಲ್ ಅವರು ಮಹಿಳೆಯರ 400 ಮೀ. ಹರ್ಡಲ್ಸ್‌ ಓಟದ ಸ್ಪರ್ಧೆಯನ್ನು 51.54 ಸೆ.ಗಳಲ್ಲಿ ಓಡಿ ಗೆಲ್ಲುವ ಮೂಲಕ ಚಿನ್ನದ ಪದಕವನ್ನು ತಮ್ಮಲ್ಲೇ ಉಳಿಸಿಕೊಂಡರು.
  • ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದಾಖಲೆ ಹೊಂದಿರುವ ಸಿಡ್ನಿ ಮೆಕ್‌ಲಾಫ್ಲಿನ್ ಲೆವ್ರೊನ್ ಸ್ಪರ್ಧೆಯಿಂದ ಹಿಂದೆಸರಿದರು. ಅವರು 400 ಮೀ.ಫೈನಲ್ ಓಟದ ಕಡೆ ಗಮನ ಕೇಂದ್ರೀಕರಿಸುವ ಸಲುವಾಗಿ ಹರ್ಡಲ್ಸ್‌ನಿಂದ ಹಿಂದೆಸರಿದಿದ್ದರು.
  • ಬೋಲ್‌ಗೆ ತೀವ್ರ ಪೈಪೋಟಿ ನೀಡಿದ ಅಮೆರಿಕದ ಜಾಸ್ಮಿನ್ ಜೋನ್ಸ್ (52.03 ಸೆ.) ಬೆಳ್ಳಿ ಪದಕ ಗೆದ್ದರು. ಸ್ಲೊವಾಕಿಯಾದ ಎಮ್ಮಾ ಝಪ್ಲೆಟಲೊವಾ (53.00 ಸೆ.) ಮೂರನೇ ಸ್ಥಾನ ಗಳಿಸಿದರು.
  • ಪುರುಷರ ವಿಭಾಗದಲ್ಲಿ ಒಲಿಂಪಿಕ್ ಚಾಂಪಿಯನ್ ರಾಯ್‌ ಬೆಂಜಮಿನ್ 46.52 ಸೆ.ಗಳಲ್ಲಿ ಗುರಿತಲುಪಿ ಚಿನ್ನ ಗೆದ್ದುಕೊಂಡರು. ಜೊತೆಗೆ ಅನರ್ಹತೆ ಆತಂಕದಿಂದ ಬಚಾವಾದರು.
  • ಅಮೆರಿಕದ 28 ವರ್ಷ ವಯಸ್ಸಿನ ಓಟಗಾರ, ಅಂತಿಮ ತಡೆ ದಾಟುವಾಗ ಹರ್ಡಲ್ಸ್‌ ಬಿದ್ದು, ಇತರ ಅಥ್ಲೀಟುಗಳ ಓಟದ ಮೇಲೆ ಪರಿಣಾಮವಾಯಿತು. ಆದರೆ ಅಂತಿಮವಾಗಿ ಫಲಿತಾಂಶ ಪ್ರಕಟವಾದಾಗ ಅವರು ಹೆಸರು ಅಗ್ರಸ್ಥಾನದಲ್ಲೇ ಉಳಿಯಿತು.
  • ಬ್ರೆಜಿಲ್‌ನ ಅಲಿಸನ್ ಡಾಸ್‌ ಸಂಟೋಸ್ (46.84 ಸೆ.) ಎರಡನೇ ಸ್ಥಾನ ಪಡೆದರೆ, ಕತಾರಿನ ಅಬ್ದರೆಹಮಾನ್ ಸಂಬಾ (47.06 ಸೆ.) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಪ್ರಚಲಿತ ವಿದ್ಯಮಾನಗಳು: 19ನೇ ಸೆಪ್ಟೆಂಬರ್ 2025

ಎಐ ಆಧಾರಿತ ‘ವ್ಯೋಮಮಿತ್ರ’ ಅಭಿವೃದ್ಧಿ: ಇಸ್ರೊ

ಸಂದರ್ಭ: ಮಾನವಸಹಿತ ಗಗನಯಾನಕ್ಕೆ ಪೂರ್ವಬಾವಿಯಾಗಿ ಕೈಗೊಳ್ಳಲಾಗುವ ಮಾನವರಹಿತ ಕಾರ್ಯಾಚರಣೆಗೆ ವಿನ್ಯಾಸಗೊಳಿಸಲಾಗಿರುವ ‘ವ್ಯೋಮಮಿತ್ರ’ವು, ಮನುಷ್ಯನ ಪ್ರತಿಕೃತಿ ಯಂತಿರುವ ರೊಬೊಟ್‌ ಆಗಿದ್ದು, ಇದು ಕೃತಕ ಬುದ್ಧಿಮತ್ತೆ (ಎಐ) ಆಧರಿಸಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಗುರುವಾರ ಇಲ್ಲಿ ಹೇಳಿದ್ದಾರೆ.
  • ‘ವ್ಯೋಮಮಿತ್ರ’ ಹೊತ್ತ ಬಾಹ್ಯಾಕಾಶ ಕೋಶವನ್ನು ಡಿಸೆಂಬರ್‌ ಅಂತ್ಯಕ್ಕೆ ಉಡ್ಡಯನ ಮಾಡಲಾಗುವುದು.
  • ‘ಮಾನವಸಹಿತ ಗಗನಯಾನ ಕಾರ್ಯಕ್ರಮದ ಭಾಗವಾಗಿ ಗಗನಯಾನಿಗಳನ್ನು ಹೊತ್ತ ಕೋಶವನ್ನು ಭೂಮಿಯಿಂದ 400 ಕಿ.ಮೀ ದೂರದ ಕಕ್ಷೆಗೆ ಕಳುಹಿಸಲಾಗುವುದು. ಈ ವೇಳೆ, ತಾಪಮಾನ, ವಾಯುಭಾರ, ತೇವಾಂಶ ಹಾಗೂ ಇಂಗಾಲದ ಡೈಆಕ್ಸೈಡ್‌ ಪ್ರಮಾಣದಂತಹ ಅಂಶಗಳ ಕುರಿತು ಅಧ್ಯಯನ ನಡೆಸಲಾಗುವುದು’.
  • ‘ಈ ಮಹತ್ವಾಕಾಂಕ್ಷೆ ಯೋಜನೆಗೆ ಭಾರತೀಯ ವಾಯುಪಡೆ, ನೌಕಾಪಡೆ, ಡಿಆರ್‌ಡಿಒ ಹಾಗೂ ಇತರ ಹಲವು ಸಂಸ್ಥೆಗಳು ಇಸ್ರೊ ಜೊತೆ ಕೈಜೋಡಿಸಿವೆ’.

ಕೆಲ ಭಾರತೀಯರ ವೀಸಾ ರದ್ದು

ಸಂದರ್ಭ: ‘ಫೆಂಟಾನಿಲ್‌’ ಮಾದಕದ್ರವ್ಯ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪದ ಮೇರೆಗೆ ಭಾರತದ ಕೆಲ ಉದ್ಯಮ ಕಾರ್ಯನಿರ್ವಾಹಕರು ಮತ್ತು ಕಾರ್ಪೊರೇಟ್‌ ಸಂಸ್ಥೆಗಳ ಪ್ರಮುಖರ ವೀಸಾಗಳನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವರಿಗೆ ವೀಸಾ ನಿರಾಕರಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ.
  • ಮಾದಕದ್ರವ್ಯ ಕಳ್ಳಸಾಗಣೆ ಆರೋಪದ ಮೇರೆಗೆ ವೀಸಾ ರದ್ದು ಮಾಡಿರುವ ಮತ್ತು ವೀಸಾ ನಿರಾಕರಿಸಿರುವ ವ್ಯಕ್ತಿಗಳ ಗುರತನ್ನು ಅಮೆರಿಕದ ರಾಯಭಾರ ಕಚೇರಿ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಅಮೆರಿಕದ ಈ ಕ್ರಮದ ಬಗ್ಗೆ ಕೇಂದ್ರ ಸರ್ಕಾರದಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  ಅಮೆರಿಕ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.  ಇದರ ಪರಿಣಾಮ, ವೀಸಾ ರದ್ದುಗೊಳಿಸಿರುವ ಅಥವಾ ನಿರಾಕರಿಸಿರುವ ವ್ಯಕ್ತಿಗಳು ಮತ್ತು ಅವರ ಕುಟುಂಬದ ಸದಸ್ಯರು ಅಮೆರಿಕಕ್ಕೆ ಪ್ರಯಾಣಿಸಲು ಅನರ್ಹರು ಎಂದು ಪ್ರಕಟಣೆ ವಿವರಿಸಿದೆ.

ವಿಶ್ವ ಕುಸ್ತಿ: ಅಂತಿಮ್‌ಗೆ ಕಂಚು

ಸಂದರ್ಭ: ಯುವ ಕುಸ್ತಿಪಟು ಅಂತಿಮ್‌ ಪಂಘಲ್‌ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಪದಕ ತಮ್ಮದಾಗಿಸಿಕೊಂಡರು. ಈ ಚಾಂಪಿಯನ್‌ ಷಿಪ್‌ನಲ್ಲಿ ಭಾರತಕ್ಕೆ ದೊರೆತ ಮೊದಲ ಪದಕ ಇದಾಗಿದೆ.
  • 2023ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ 21 ವರ್ಷದ ಅಂತಿಮ್, ಮಹಿಳೆಯರ 53 ಕೆ.ಜಿ. ವಿಭಾಗದ ಕಂಚಿನ ಪದಕದ ಸ್ಪರ್ಧೆಯಲ್ಲಿ 9–1 ಅಂತರದಿಂದ  ಸ್ವೀಡನ್‌ನ ಎಮ್ಮಾ ಜೊನ್ನಾ ಡೆನಿಸ್ ಮಾಲ್ಮ್‌ಗ್ರೆನ್ ಅವರನ್ನು ಸುಲಭವಾಗಿ ಮಣಿಸಿದರು. ಎಮ್ಮಾ ಅವರು 23 ವರ್ಷದೊಳಗಿನ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದಾರೆ. 
  • ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಎರಡನೇ ಮಹಿಳಾ ಕುಸ್ತಿಪಟು ಎಂಬ ಹಿರಿಮೆಗೆ ಅಂತಿಮ್ ಪಾತ್ರವಾದರು. ವಿನೇಶ್‌ ಪೋಗಟ್‌ ಎರಡು ಪದಕ ಗೆದ್ದ ಮೊದಲ ಕುಸ್ತಿಪಟುವಾಗಿದ್ದಾರೆ. 

ಪ್ರಚಲಿತ ವಿದ್ಯಮಾನಗಳು: 18ನೇ ಸೆಪ್ಟೆಂಬರ್ 2025

ಕರ್ನಾಟಕ: ಎಸ್‌ಐಆರ್‌ಗೆ ಮುನ್ನುಡಿ

ಸಂದರ್ಭ: ಬಿಹಾರದ ಮಾದರಿಯ ಲ್ಲಿಯೇ ರಾಜ್ಯದಲ್ಲಿಯೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಯಲಿದೆ. ರಾಜ್ಯದ ಎಲ್ಲ ಮತದಾರರು ಎಸ್‌ಐಆರ್‌ಗೆ ಒಳಪಡಲಿದ್ದು, ಮತದಾರರ ಗುರುತಿನ ಚೀಟಿ, ಮತದಾರರ ಪಟ್ಟಿ ಮತ್ತು ಮತಗಟ್ಟೆಗಳು ಬದಲಾಗಲಿವೆ.
  • ರಾಜ್ಯದಲ್ಲಿ ನಡೆಯಲಿರುವ ಎಸ್‌ಐಆರ್‌ ಕುರಿತಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಪತ್ರಕರ್ತರಿಗೆ ಕಾರ್ಯಾಗಾರ ನಡೆಸಿತು. ಅಲ್ಲಿ, ಎಸ್ಐಆರ್‌ ಪ್ರಕ್ರಿಯೆಯ ವಿವರಗಳನ್ನು ಒದಗಿಸಿದೆ.
  • ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿ ಎಸ್‌ಐಆರ್‌ಗೆ ಸಿದ್ಧತೆ ಮಾಡಿಕೊಳ್ಳಲಾ ಗಿದೆ. ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿ ಗಳಿಗೆ ತರಬೇತಿ ಪೂರ್ಣಗೊಂಡಿದೆ. ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನಡೆಯುತ್ತಿದ್ದು, ಸೆಪ್ಟೆಂಬರ್ 25ರೊಳಗೆ ಪೂರ್ಣಗೊಳ್ಳಲಿದೆ.

ಗರಿಷ್ಠ 90 ದಿನಗಳಲ್ಲಿ ಎಸ್ಐಆರ್ ಪ್ರಕ್ರಿಯೆ: ಅನ್ಬುಕುಮಾರ್

l ಪ್ರತಿ ಮತಗಟ್ಟೆಗೆ ಏಜೆಂಟರನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳಿಗೆ ಸೂಚಿಸಲಾಗಿದೆ

l ಗ್ರಾಮ ಪಂಚಾಯಿತಿ, ನಗರ ಪ್ರದೇಶದ ವಾರ್ಡ್‌ಗಳಲ್ಲಿ ವೈಫೈ ಸವಲತ್ತು ಇರುವ ಶಿಬಿರ ಆರಂಭಿಸಿ ಎಸ್‌ಐಆರ್‌ ನಡೆಸಲಾಗುತ್ತದೆ. ಚುನಾವಣಾ ಆಯೋಗದ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ

l ಅಂದಾಜು ಐದು ಕೋಟಿ ಮತದಾರರಿಗಾಗಿ 10 ಕೋಟಿಯಷ್ಟು ಎನ್ಯುಮರೇಷನ್‌ ಫಾರ್ಮ್‌ಗಳನ್ನು ಸಿದ್ಧಪಡಿಸಲಾಗಿದೆ

l ಒಬ್ಬ ಮತದಾರರಿಗೆ ಸೇರಿದ ಹಲವು ಚೀಟಿಗಳು ಇದ್ದರೆ, ಅವುಗಳ ವಿವರ ಶೇ 60ರಷ್ಟು ಹೊಂದಾಣಿಕೆಯಾದರೆ ಅದನ್ನು ತಂತ್ರಾಂಶದ ಮೂಲಕ ಪತ್ತೆ ಮಾಡಲಾಗುತ್ತದೆ

l ಬಿಎಲ್‌ಒಗಳಿಗೆ ಗೌರವಧನವನ್ನು ₹6,000ದಿಂದ ₹12,000ಕ್ಕೆ ಹೆಚ್ಚಿಸಲಾಗಿದೆ. ಎಸ್‌ಐಆರ್‌ನಲ್ಲಿ ಭಾಗಿಯಾಗುವವರಿಗೆ ಹೆಚ್ಚುವರಿಯಾಗಿ ₹6,000 ನೀಡಲಾಗುತ್ತದೆ

l ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಭಾಗಿಯಾಗಿರುವ ಸುಮಾರು 10,000 ನಮೂನೆ 6, ನಮೂನೆ 7 ಮತ್ತು ನಮೂನೆ 8 ಅನ್ನು ಶೀಘ್ರವೇ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಅವು ವಿಲೇವಾರಿ ಆಗದಿದ್ದರೆ, ಸಂಬಂಧಿತ ಮತದಾರರಿಗೆ ಎನ್ಯುಮರೇಷನ್‌ ಫಾರ್ಮ್‌ ಸೃಜಿಸಲಾಗುವುದಿಲ್ಲ

  • ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುಂದಾಗಿರುವ ಚುನಾವಣಾ ಆಯೋಗವು, ಪರಿಷ್ಕರಣೆ ವೇಳೆ ರಾಜ್ಯಗಳಲ್ಲಿನ ಅರ್ಧಕ್ಕಿಂತ ಹೆಚ್ಚು ಮತದಾರರು ಯಾವುದೇ ದಾಖಲೆಯನ್ನು ನೀಡಬೇಕಾಗಿಲ್ಲ.
  • ‘ಕೇಂದ್ರ ಚುನಾವಣೆ ಆಯೋಗ ಈ ಬಗ್ಗೆ ಅಧಿಸೂಚನೆ ಹೊರಡಿಸಿದ ತಕ್ಷಣವೇ ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಪ್ರಾರಂಭವಾಗಲಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್‌ ತಿಳಿಸಿದರು.
  • ‘2002ರಲ್ಲಿ ರಾಜ್ಯದಲ್ಲಿ ಎಸ್ಐಆರ್ ನಡೆದಿತ್ತು. 23 ವರ್ಷಗಳ ನಂತರ ಮತ್ತೆ ಎಸ್ಐಆರ್ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ 2002 ಮತದಾರರ ಪಟ್ಟಿಯನ್ನು ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಇರುವ ಮತದಾರರು ಪ್ರಸ್ತುತ ಮತದಾರರ ಪಟ್ಟಿಯಲ್ಲಿದ್ದಾರೊ ಇಲ್ಲವೋ ಎಂಬು ದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ’ ಎಂದು ಅವರು ವಿವರಿಸಿದರು.
  • ಜಿಲ್ಲಾಧಿಕಾರಿಗಳಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್) 2002 ಮತದಾರರ ಪಟ್ಟಿ ನೀಡಲಾಗಿದೆ. ಬಿಎಲ್ಒಗಳು ಮನೆಮನೆಗೆ ಭೇಟಿ ಪರಿಶೀಲಿಸುತ್ತಾರೆ. ಎರಡೂ ಪಟ್ಟಿಯಲ್ಲಿ ಹೆಸರು ಇರುವವರಿಗೆ ಕ್ಯೂಆರ್‌ ಕೋಡ್‌ ಆಧಾರಿತ ಗಣತಿ ನಮೂನೆ (ಎನ್ಯುಮರೇಷನ್‌ ಫಾರ್ಮ್‌) ನೀಡಲಾಗುತ್ತದೆ. ಇದರಿಂದ ಅನರ್ಹ ಹಾಗೂ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಸಹಾಯವಾಗಲಿದೆ’ ಎಂದು ಮಾಹಿತಿ ನೀಡಿದರು.
  • ‘ಪ್ರತಿ ಮತದಾರನಿಗೆ ಸಂಬಂಧಿಸಿದ ಗಣತಿ ನಮೂನೆಯ ಎರಡು ಪ್ರತಿಗಳು ಬಿಎಲ್‌ಒಗಳು ಬಳಿ ಇರುತ್ತವೆ. 2 ಪ್ರತಿಗಳನ್ನು ಭರ್ತಿ ಮಾಡಿದ ನಂತರ ಒಂದಕ್ಕೆ ಬಿಎಲ್‌ಒ ಸಹಿ ಮಾಡಿ ಮತದಾರನಿಗೆ ನೀಡುತ್ತಾರೆ. ಮತ್ತೊಂದು ಆಯೋಗಕ್ಕೆ ಸಲ್ಲಿಸುತ್ತಾರೆ. ಮನೆಯಲ್ಲಿ ಯಾರು ಇಲ್ಲದಿದ್ದರೆ, ಮೂರು ಬಾರಿ ಮನೆಗೆ ಭೇಟಿ ನೀಡಬೇಕು. ಜೊತೆಗೆ ಸ್ನೇಹಿತರ ಮೂಲಕ ಅವರನ್ನು ಸಂಪರ್ಕಿಸಿ, ಎಸ್‌ಐಆರ್‌ ಪ್ರಕ್ರಿಯೆ ನಡೆಸಬೇಕು. ಪತ್ರಿಕೆಗಳ ಮೂಲಕ ಸಹ ಈ ಬಗ್ಗೆ ಪ್ರಚಾರ ಮಾಡಲಿದೆ’ ಎಂದರು.
  • ‘ಎನ್ಯುಮರೇಷನ್‌ ಫಾರ್ಮ್‌ನಲ್ಲಿ ಮತದಾರರ ಗುರುತಿನ ಚೀಟಿಯ ಸಂಖ್ಯೆ, ವಿಳಾಸ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಆಧಾರ್ ಸಂಖ್ಯೆ ಸೇರಿಸಲು ಅವಕಾಶವಿದೆ. ಆಯೋಗ ಸೂಚಿಸಿದ ಯಾವುದಾದರೂ ಒಂದು ದಾಖಲೆ ಸಲ್ಲಿಕೆ ಕಡ್ಡಾಯ ’ ಎಂದರು
  • ಬಹುತೇಕ ರಾಜ್ಯಗಳಲ್ಲಿ 2002 ಮತ್ತು 2004 ನಡುವೆ ಎಸ್ಐಆರ್ನಡೆಸಲಾಗಿದೆ. ಮುಂದಿನ ಎಸ್ಐಆರ್ವೇಳೆ, 2002 ಹಾಗೂ 2004 ನಡುವಿನ ಸಂಬಂಧಿಸಿದ ವರ್ಷವನ್ನೇ ಆಧಾರವನ್ನಾಗಿ ಪರಿಗಣಿಸಲಾಗುವುದು ಎಂದೂ ಆಯೋಗ ಸ್ಪಷ್ಟಪಡಿಸಿದೆ.
  • ಈ ಹಿಂದಿನ ಎಸ್‌ಐಆರ್‌ ಬಳಿಕ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಎಲ್ಲ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (ಸಿಇಒ) ಈಗಾಗಲೇ ಸೂಚನೆ ನೀಡಲಾಗಿದೆ. ಕೆಲ ರಾಜ್ಯಗಳ ಸಿಇಒಗಳು ಇಂತಹ ಮತದಾರರ ಪಟ್ಟಿಯನ್ನು ಈಗಾಗಲೇ ಕಚೇರಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ.

ಬದಲಾಗಲಿದೆ ಮತಗಟ್ಟೆ, ವಿಭಾಗ

  • ಎಸ್‌ಐಆರ್‌ ಪ್ರಕ್ರಿಯೆಯ ಭಾಗವಾಗಿ ಮತಗಟ್ಟೆ, ವಿಭಾಗಗಳು ಬದಲಾಗಲಿವೆ. ಒಂದು ಕಟ್ಟಡ, ಒಂದು ಬೀದಿ, ಒಂದು ಮತಗಟ್ಟೆ ವಿಭಾಗದಲ್ಲಿ ವಾಸಿಸುತ್ತಿರುವ ಎಲ್ಲ ಮತದಾರರು ಒಂದೇ ಮತಗಟ್ಟೆ ಮತ್ತು ವಿಭಾಗಕ್ಕೆ ಒಳಪಡುವಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ.
  • ಒಂದು ಮತಗಟ್ಟೆಯಲ್ಲಿ 1,200ಕ್ಕಿಂತಲೂ ಹೆಚ್ಚು ಮತದಾರರು ಇರಬಾರದು. ಪ್ರತಿ ಮತಗಟ್ಟೆಗೆ 1,200 ಮತದಾರರನ್ನು ಮಿತಿಗೊಳಿಸಿ, ಹೊಸಮತಗಟ್ಟೆಗಳನ್ನು ರಚಿಸಲಾಗುತ್ತದೆ.

ತಿರಸ್ಕಾರಕ್ಕೂ ಅವಕಾಶ

  • ಆಯೋಗವು ಸೂಚಿಸಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರೂ ಅವರ ಗಣತಿ ನಮೂನೆ (ಎನ್ಯುಮರೇಷನ್‌ ಫಾರ್ಮ್‌) ತಿರಸ್ಕರಿಸಿ ಶಿಫಾರಸು ಮಾಡಲು ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್‌ಒ) ಅವಕಾಶವಿದೆ. ಗಣತಿ ನಮೂನೆ, ಘೋಷಣಾ ಪತ್ರದಲ್ಲಿ ಅವುಗಳನ್ನು ಶಿಫಾರಸು ಮಾಡಲಾಗಿದೆ ಅಥವಾ ಶಿಫಾರಸು ಮಾಡಲಾಗಿಲ್ಲ ಎಂದು ಬಿಎಲ್‌ಒ ಆಯ್ಕೆ ಮಾಡಬಹುದಾಗಿದೆ.
  • ಆದರೆ ಬಿಎಲ್‌ಒಗಳು ಶಿಫಾರಸಿಗೆ ಅಗತ್ಯ ಕಾರಣಗಳನ್ನು ಒದಗಿಸಬೇಕು ಮತ್ತು ಇತರ ಕೆಲ ಮತದಾರರ ಸಹಿ ಪಡೆದು ಮಹಜರು ನಡೆಸಿರಬೇಕು. ಬಿಎಲ್‌ಒಯಿಂದ ಶಿಫಾರಸು ಆಗಿ ಬಂದ ಗಣತಿ ನಮೂನೆ ಮತ್ತು ಘೋಷಣಾ ಪತ್ರವನ್ನು ಅಂಗೀಕರಿಸಲಾಗಿದೆ ಅಥವಾ ತಿರಸ್ಕರಿಸಲಾಗಿದೆ ಎಂದು ಆಯ್ಕೆ ಮಾಡುವ ಅಧಿಕಾರ ಮತದಾರರ ನೋಂದಣಾಧಿಕಾರಿಗೆ ನೀಡಲಾಗಿದೆ.

‘ಬಿಪಿಎಲ್‌ ಅನರ್ಹಗೊಂಡರೆ ಎಪಿಎಲ್’

ಸಂದರ್ಭ: ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ ಬದಲಿಸಲಾಗುವುದು. ಹೊಸ ಬಿಪಿಎಲ್‌ ಕಾರ್ಡ್‌ಗಳಿಗೆ  ಮುಂದಿನ ತಿಂಗಳು ಅರ್ಜಿ ಆಹ್ವಾನಿಸಲು ಆಹಾರ ಇಲಾಖೆ ನಿರ್ಧರಿಸಿದೆ. ಈಗ ರದ್ದುಪಡಿಸಿದಷ್ಟು ಕಾರ್ಡ್‌ಗಳನ್ನು ವಿತರಿಸಲು ಮಾತ್ರ ಹೊಸದಾಗಿ ಅವಕಾಶ ಇದೆ.

  • ‘ಸರ್ಕಾರದ ಮಾನದಂಡಗಳ ಅನ್ವಯ ಬಿಪಿಎಲ್‌ ಕಾರ್ಡ್‌ಗಳನ್ನು ಪರಿಷ್ಕರಿಸಲಾಗುವುದು. ಅನರ್ಹವೆಂದು ಕಂಡುಬಂದರೆ ಎಪಿಎಲ್‌ಗೆ ವರ್ಗಾವಣೆ ಮಾಡುತ್ತೇವೆ. ಯಾವ ಪಡಿತರ ಚೀಟಿಯನ್ನೂ ರದ್ದು ಮಾಡುವುದಿಲ್ಲ.
  • ‘ಎಲ್ಲ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುತ್ತೇವೆ. ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಯಾದರೆ 24 ಗಂಟೆಯ ಒಳಗೆ ಸರಿಪಡಿಸಿ ಆಹಾರಧಾನ್ಯ ಹಂಚಿಕೆ ಮಾಡಲಾಗುವುದು’.
  • ‘ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕ ದಲ್ಲಿ ಬಿಪಿಎಲ್ ಕಾರ್ಡ್‌ಗಳು ಅತಿ ಹೆಚ್ಚು ಇವೆ. ಶೇಕಡ 75ರಷ್ಟು ಬಿಪಿಎಲ್‌ ಕಾರ್ಡ್‌ಗಳು ಕರ್ನಾಟಕ ದಲ್ಲಿವೆ. ಹೀಗಾಗಿ, ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆ ಅನಿವಾರ್ಯವಾಗಿದೆ.
  • ನಂದಗುಡಿರಾಗಿಗುಡ್ಡ’: ಲಕ್ಷ ವರ್ಷಗಳ ನಂಟು

ಸಂದರ್ಭ: ಇಂದು ಬಿರು ಬಿಸಿಲು, ಒಣ ಭೂಮಿ, ನೀರಿನ ಕೊರತೆಯಿಂದ ಬೆಂಡಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಪ್ರದೇಶ ಮತ್ತು ಕೋಲಾರ ಜಿಲ್ಲೆಯ ಭೂಭಾಗ ಒಂದಾನೊಂದು ಕಾಲದಲ್ಲಿ ಈಗಿನ ಮಲೆನಾಡಿನಂತೆ ಹೆಚ್ಚು ಮಳೆ ಬೀಳುವ ತೇವದಿಂದ ಕೂಡಿದ ಹಸಿರಿನಿಂದ ನಳನಳಿಸುವ ಪ್ರದೇಶವಾಗಿತ್ತು ಎಂದರೆ ನಂಬುತ್ತೀರಾ?

  • ಅದರಲ್ಲೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ನಂದಗುಡಿಯ ‘ರಾಗಿಗುಡ್ಡ’ ಪ್ರದೇಶ ಕರ್ನಾಟಕ ಮಾತ್ರವಲ್ಲ, ಭಾರತದಲ್ಲೇ ಭೂವಿಸ್ಮಯದ ತಾಣವಾಗಿದೆ. ಭೂಮೇಲ್ಮೈನಿಂದ ಸುಮಾರು 150 ಅಡಿ ಎತ್ತರ ಮತ್ತು ಸಾವಿರಕ್ಕೂ ಹೆಚ್ಚು ಅಡಿ ಸುತ್ತಳತೆಯ ಈ ಗುಡ್ಡ ಸುತ್ತಲಿನ ಸಮತಟ್ಟಾದ ಮೇಲ್ಮೈನಿಂದ ಎದ್ದು ಕಾಣುತ್ತದೆ.
  • ಈ ಗುಡ್ಡದ ಮಹತ್ವ ಏನೆಂದರೆ ಲಕ್ಷಾಂತರ ವರ್ಷಗಳ ಹಿಂದೆ ಸಂಭವಿಸಿದ ವಿಶಿಷ್ಟ ಶೀತಲೀಕರಣ ಪ್ರಕ್ರಿಯೆ ಕುರುಹಾಗಿ ಇದು ಮೈದಳೆದಿದೆ. ಗುಡ್ಡದ ಒಡಲಿನಲ್ಲಿ ಜಂಬಿಟ್ಟಿಗೆ ಇದೆ. ಜಂಬಿಟ್ಟಿಗೆ (ಲ್ಯಾಟರೈಟ್‌) ಎಂಬ ನೈಸರ್ಗಿಕ ಶಿಲೆಯ ನಿರ್ಮಾಣದ ಸುದೀರ್ಘ ಪ್ರಕ್ರಿಯೆಯೇ ಒಂದು ಕುತೂಹಲಕರ ಕಥನ.
  • ಲಕ್ಷಾಂತರ ವರ್ಷಗಳ ಹಿಂದೆ ಈ ಪ್ರದೇಶದಲ್ಲಿದ್ದ ವಿಶಿಷ್ಟ ಹವಾಮಾನ, ಭೂಪ್ರಕ್ರಿಯೆ ಮತ್ತು ಶೀತಲೀಕರಣದ ಪರಿಣಾಮ, ಭೂಮಿಯ ವಿವಿಧ ಸ್ತರಗಳಲ್ಲಿ ಕುತೂಹಲಕರ ಖನಿಜಗಳು ಸೃಷ್ಟಿಯಾಗಿವೆ. ಕೋಲಾರ ಜಿಲ್ಲೆಯ ಬಹುಪಾಲು ಪ್ರದೇಶವು ಲ್ಯಾಟರೈಟ್ ಮತ್ತು ಲ್ಯಾಟರೈಟ್‌ನಿಂದಾದ ಮಣ್ಣಿನಿಂದ ಆವೃತವಾಗಿದೆ. ನಂದಗುಡಿಯ ರಾಗಿಗುಡ್ಡ ಲ್ಯಾಟರೈಟ್‌ ಪ್ರಕ್ರಿಯೆಯ ಪ್ರತಿನಿಧಿಯಂತೆ ಗಮನ ಸೆಳೆಯುತ್ತಿದೆ. ಹೀಗಾಗಿ, ಭೂವಿಜ್ಞಾನಿ ಗಳಿಗೆ ಹೆಚ್ಚಿನ ಸಂಶೋಧನೆಯ ಆಯಸ್ಕಾಂತ ಬಿಂದುವಾಗಿ ಸೆಳೆಯುತ್ತಿದೆ ಎನ್ನುತ್ತಾರೆ ಭೂ ವಿಜ್ಞಾನಿಗಳು.
  • ಈ ಸಂಶೋಧನೆಗೆ ವೆಸ್ಕೋ ಕಂಪನಿಯ ಮುಖ್ಯಸ್ಥ ಕೆ.ಎಸ್‌.ಶಿವಕುಮಾರ್‌ ಅವರು ಕರ್ನಾಟಕ ಅಸೋಸಿಯೇಷನ್‌ ಫಾರ್ ಅಡ್ವಾನ್ಸ್‌ಮೆಂಟ್ ಆಫ್‌ ಸೈನ್ಸ್‌ ಸಂಸ್ಥೆಗೆ ಯೋಜನಾ ರೂಪದಲ್ಲಿ ಧನ ಸಹಾಯ ಮಾಡಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಲ್ಯಾಟರಟೈಸೇಶನ್ಪ್ರಕ್ರಿಯೆ ಏನು?

  • ಲಾಟರಟೈಸೇಶನ್ಎಂದರೆ ಮೂಲ ಗಡಸು ಕಲ್ಲನ್ನು ಭೌತಿಕವಾಗಿ ಹಾಗೂ ರಾಸಾಯನಿಕವಾಗಿ ಪರಿವರ್ತಿಸಿ ಮೆದು ಕಲ್ಲಿನ ರೂಪವನ್ನು ಕೊಡುವ ಕ್ರಿಯೆ ಆಗಿದೆ.
  • ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದ ಸುತ್ತಮುತ್ತ ಗೀರುಶಿಲೆ ಮತ್ತು ಗ್ರಾನೈಟ್‌ ಕಲ್ಲುಗಳು ಸರ್ವೇ ಸಾಮಾನ್ಯ. ಈ ಕಲ್ಲುಗಳು ವಿಶಿಷ್ಟ ಹವಾಗುಣ ಪರಿಸ್ಥಿತಿಯಲ್ಲಿ ಲ್ಯಾಟರೈಟ್‌ ಆಗಿ ಮಾರ್ಪಾಡಾಗುತ್ತವೆ.
  • ನಂದಗುಡಿಯ ಸುತ್ತಮುತ್ತ ನೈಸ್‌ ಎಂಬ ಬೂದಿ ಬಣ್ಣದ ಗಡಸು ಶಿಲೆ ಇದ್ದು, ಇದು ಲಕ್ಷಾಂತರ ವರ್ಷಗಳ ಸವಕಳಿ ಮತ್ತು ರಾಸಾಯನಿಕ ಶೀತಲೀಕರಣಕ್ಕೆ ಒಳಪಟ್ಟು ಕಂದು ಬಣ್ಣದ ಮೆದುವಾದ ಶಿಲೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಉಷ್ಣವಲಯದ (ಟ್ರಾಫಿಕಲ್) ಹವಾಗುಣವಿರಬೇಕು.

70 ದಾಟಿದವರಿಗೂ ‘ಆಯುಷ್ಮಾನ್ ಭಾರತ್‌’

ಸಂದರ್ಭ: 70 ವರ್ಷ ದಾಟಿದ ಹಿರಿಯರಿಗೆ ಕೇಂದ್ರ ಸರ್ಕಾರದ ವಯೋ ವಂದನಾ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆ ಪ್ರಯೋಜನಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಸ್ತರಿಸಿ ಆದೇಶ ಹೊರಡಿಸಿದೆ.
  • ಎಪ್ಪತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚಿನವರಿಗೆ ಚಿಕಿತ್ಸೆಗಾಗಿ ₹5 ಲಕ್ಷ ಟಾಪ್‌ ಅಪ್‌ ಒದಗಿಸಲಾಗುವುದು. ಅರ್ಜಿ ಸಲ್ಲಿಸಲು ಬಯಸುವವರಿಗೆ ನೋಂದಣಿಗಾಗಿ ಆಯುಷ್ಮಾನ್ ಅಪ್ಲಿಕೇಶನ್‌ನಲ್ಲಿ ಮತ್ತು ವೆಬ್‌ ಪೋರ್ಟಲ್‌ನಲ್ಲಿ (beneficiary.nha.in) ಪ್ರತ್ಯೇಕ ಮಾಡ್ಯೂಲ್‌ ರಚಿಸಲಾಗಿದೆ. ನೋಂದಣಿ ಮಾಡಿಕೊಂಡವರಿಗೆ ವಿಶಿಷ್ಟವಾದ ಆಯುಷ್ಮಾನ್ ಕಾರ್ಡ್ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

‘ಬಿ. ಸರೋಜಾದೇವಿ ಹೆಸರಿನಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ’

ಸಂದರ್ಭ: ಪಂಚ ಭಾಷಾ ನಟಿ ದಿವಂಗತ ಬಿ. ಸರೋಜಾದೇವಿ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಅವರ ಹೆಸರಿನಲ್ಲಿ ರಾಜ್ಯ ಸರ್ಕಾರವು ಈ ಸಾಲಿನಿಂದ ಜಾರಿಗೆ ಬರುವಂತೆ ‘ಅಭಿನಯ ಸರಸ್ವತಿ ಬಿ. ಸರೋಜಾ ದೇವಿ’ ಪ್ರಶಸ್ತಿ ಸ್ಥಾಪಿಸಿದೆ.
  • ಈ ಪ್ರಶಸ್ತಿಯು ₹1 ಲಕ್ಷ ಮತ್ತು 100 ಗ್ರಾಂ ಬೆಳ್ಳಿ ಪದಕ ಒಳಗೊಂಡಿರುತ್ತದೆ. ಪ್ರಸ್ತುತ ಜಾರಿಯಲ್ಲಿರುವ ಕನ್ನಡ ಚಲನಚಿತ್ರ ನೀತಿ- 2011ರಲ್ಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯ ನಿಯಮದಂತೆ ಈ ಪ್ರಶಸ್ತಿ ಯನ್ನು ಸ್ಥಾಪಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆದೇಶದಲ್ಲಿ ತಿಳಿಸಿದೆ.
  • ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಮಹಿಳಾ ಸಾಧಕಿಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುವುದು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.
  • ಬಿ. ಸರೋಜಾದೇವಿ ಅವರ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರವು ಇತ್ತೀಚೆಗೆ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದೆ.
  • ಹೇಗೆ ನಡೆಯಲಿದೆ ಸಮಗ್ರ ಪರಿಷ್ಕರಣೆ?

ರಾಜ್ಯದ 12 ನದಿಗಳು ಮಲಿನ

ಸಂದರ್ಭ: ಕರ್ನಾಟಕದ ನಗರ ಮತ್ತು ಪಟ್ಟಣ ಪ್ರದೇಶಗಳ ಕೊಳಚೆ ನೀರು ಹಾಗೂ ಆಯಾ ಜಲಾನಯನ ಪ್ರದೇಶಗಳಲ್ಲಿನ ಕೈಗಾರಿಕೆಗಳ ತ್ಯಾಜ್ಯ ಸೇರುತ್ತಿರುವುದರಿಂದ 12 ನದಿಗಳು ಕಲುಷಿತಗೊಂಡಿವೆ.
  • ರಾಜ್ಯದ 17 ನದಿಗಳು ಕಲುಷಿತಗೊಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) 2022ರಲ್ಲಿ ಜಲಶಕ್ತಿ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು.
  • ರಾಜ್ಯದ ನದಿಗಳು ಮಲಿನಗೊಂಡಿರುವ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಎನ್‌ಜಿಟಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಿತವಾಗಿ ಪ್ರಗತಿ ವರದಿ ಸಲ್ಲಿಸುತ್ತಿದೆ.
  • ಗಂಗಾ ಮಾಲಿನ್ಯದ ರಾಷ್ಟ್ರೀಯ ಮಿಷನ್‌ನ ಕೇಂದ್ರ ಮೇಲ್ವಿಚಾರಣಾ ಸಮಿತಿಗೆ ಪತ್ರ ಬರೆದಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ, ‘ಮಲಿನ ನದಿಗಳ ಪಟ್ಟಿಯಲ್ಲಿದ್ದ ಅಘನಾಶಿನಿ, ದಕ್ಷಿಣ ಪಿನಾಕಿನಿ, ಶರಾವತಿ ಹಾಗೂ ಗಂಗಾವಳಿ ನದಿಗಳಲ್ಲಿ ಕರಗಿದ ಆಮ್ಲಜನಕದ (ಬಿಒಡಿ) ಪ್ರಮಾಣ 3 ಮಿಲಿಗ್ರಾಂ/ಲೀಟರ್‌ ದಾಟಿಲ್ಲ. ಹೀಗಾಗಿ, ಈ ನದಿಗಳನ್ನು ಮಲಿನ ನದಿಗಳ ಪಟ್ಟಿಯಿಂದ ಕೈಬಿಡಬೇಕು’ ಎಂದು ಕೋರಿದ್ದಾರೆ. ಜತೆಗೆ, ಎನ್‌ಜಿಟಿಗೂ ವರದಿ ಸಲ್ಲಿಸಿದ್ದಾರೆ.
  • ನದಿಗಳ ಮಾಲಿನ್ಯ ಕಡಿಮೆ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಪ್ರಾದೇಶಿಕ ಕಚೇರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಈ ಕೆಲಸ ಪ್ರಗತಿಯಲ್ಲಿದೆ. ಕ್ರಿಯಾಯೋಜನೆ ಸಿದ್ಧಗೊಂಡ ಬಳಿಕ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
  • ಮುಕ್ಕಾಲು ಪಾಲು ಗಾಜಾ ನಗರ ಸುತ್ತುವರಿದ ಇಸ್ರೇಲ್

ಸಂದರ್ಭ: ಗಾಜಾ ನಗರದ ಕರಾವಳಿ ಭಾಗದ ದೊಡ್ಡ ಪ್ರದೇಶವೊಂದನ್ನು ಹೊರತುಪಡಿಸಿ ಉಳಿದ ಬಹುಭಾಗವನ್ನು ಇಸ್ರೇಲ್‌ ಸೇನೆಯು ಸುತ್ತುವರಿದಿದೆ. ಒಂದೆಡೆ, ಸಾವಿರಾರು ಪ್ಯಾಲೆಸ್ಟೇನಿಯನ್ನರು ನಗರವನ್ನು ತೊರೆಯುತ್ತಿದ್ದರೆ ಇನ್ನೊಂದೆಡೆ, ಇಸ್ರೇಲ್‌ ಭೂಸೇನೆಯು ಎರಡನೇ ದಿನವೂ ತನ್ನ ದಾಳಿಯನ್ನು ಮುಂದುವರಿಸಿದೆ.

  • ಇಸ್ರೇಲ್‌ನ ಭೂಸೇನೆಯು ಗಾಜಾ ನಗರದ ಮೇಲೆ ನಡೆಸುತ್ತಿರುವ ತೀವ್ರ ದಾಳಿಗೆ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಅರ್ಧದಷ್ಟು ಜನರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಗಾಜಾದ ಆಸ್ಪತ್ರೆ ಯಲ್ಲಿದ್ದ 80 ರೋಗಿಗಳಿಗೆ ಈ ದಾಳಿಯ ಕಾರಣದಿಂದ ಹೊರಹೋಗುವಂತೆ ಹೇಳಲಾಗಿದೆ.
  • ಆಹಾರ, ನೀರು, ಔಷಧ ಸೇರಿದಂತೆ ಗಾಜಾ ಜನರಿಗೆ ಮೂಲಸೌಲಭ್ಯ, ನೆರವು ಒದಗಿ ಸುತ್ತಿರುವ ಅಂತರರಾಷ್ಟ್ರೀಯ ಮಟ್ಟದ ಸುಮಾರು 20 ಸಂಸ್ಥೆಗಳು ದಾಳಿಯನ್ನು ಕಟು ಮಾತುಗಳಲ್ಲಿ ಖಂಡಿಸಿವೆ. ‘ಭೂಸೇನೆಯ ಕಾರ್ಯಾಚರಣೆಯು ನರಮೇಧದ ಯುದ್ಧವನ್ನು ವಿಸ್ತರಿಸಿದಂತೆ’ ಎಂದಿರುವ ಕತಾರ್‌, ಇಸ್ರೇಲ್‌ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.
  • ‘ಕಳೆದ ಕೆಲವು ದಿನಗಳಲ್ಲಿ ಗಾಜಾ ನಗರದ ಎತ್ತರದ ಕಟ್ಟಡಗಳನ್ನು ಗುರಿಯಾಗಿಸಿ ಸುಮಾರು 150ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದೇವೆ’ ಎಂದು ಇಸ್ರೇಲ್‌ ಹೇಳಿಕೊಂಡಿದೆ. ಈ ಕಟ್ಟಡಗಳಲ್ಲಿ ಸಾವಿರಾರು ಪ್ಯಾಲೆಸ್ಟೇನಿಯನ್ನರು ಆಶ್ರಯ‍ ಪಡೆದುಕೊಂಡಿದ್ದರು. ‘ಕಣ್ಗಾವಲು ನಡೆಸಲು ಹಮಾಸ್‌ ಬಂಡುಕೋರರು ಇಂಥ ಕಟ್ಟಡಗಳನ್ನು ಬಳಸಿಕೊಳ್ಳುತ್ತಾರೆ’ ಎಂದು ಇಸ್ರೇಲ್‌ ದೂರಿದೆ.
  • ದಕ್ಷಿಣಕ್ಕೆ ತೆರಳಲು ಎಚ್ಚರಿಕೆ: ಉತ್ತರ ಗಾಜಾದಿಂದ ದಕ್ಷಿಣ ಗಾಜಾಗೆ ತೆರಳುವಂತೆ ಇಸ್ರೇಲ್‌ ಸೇನೆ ಈಗಾಗಲೇ ಎಚ್ಚರಿಕೆ ನೀಡಿದೆ. ಇದಕ್ಕಾಗಿ ಇನ್ನೊಂದು ಹೊಸ ಮಾರ್ಗವನ್ನು ತೆರೆದಿದೆ. ‘ಈ ಮಾರ್ಗವು ಬುಧವಾರ ಸಂಜೆಯಿಂದ ಆರಂಭಗೊಂಡು ಎರಡು ದಿನ ತೆರೆದಿರಲಿದೆ’ ಎಂದು ಇಸ್ರೇಲ್‌ ತಿಳಿಸಿದೆ.
  • ದೂರಸಂಪರ್ಕ ಸಂಪೂರ್ಣ ಕಡಿತ: ‘ಉತ್ತರ ಗಾಜಾದ ಮುಖ್ಯ ದೂರಸಂಪರ್ಕ ಮೂಲಸೌರ್ಕಯದ ಮೇಲೆ ಇಸ್ರೇಲ್‌ ಸೇನೆಯು ನಿರಂತರವಾಗಿ ದಾಳಿ ನಡೆಸುತ್ತಿದೆ. ಇದರಿಂದಾಗಿ ಬುಧವಾರ ಬೆಳಿಗ್ಗೆಯಿಂದ ಇಲ್ಲಿನ ದೂರವಾಣಿ ಸಂಪರ್ಕ ಮತ್ತು ಅಂತರ್ಜಾಲ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ’ ಎಂದು ಪ್ಯಾಲೆಸ್ಟೇನ್‌ ದೂರಸಂಪರ್ಕ ಪ್ರಾಧಿಕಾರ ಹೇಳಿದೆ.

ಹುಥಿ ವಾಯು ಪ್ರದೇಶ ಸನ್ನದ್ದ

  • ಇರಾನ್‌ ಬೆಂಬಲಿತ ಹುಥಿ ಬಂಡುಕೋರರು ಸಕ್ರಿಯವಾಗಿರುವ ಬಂದರಿನ ಮೇಲೆ ಇಸ್ರೇಲ್‌ ದಾಳಿ ನಡೆಸಿತ್ತು. ಬಳಿಕ ಬಂಡುಕೋರರು ತಮ್ಮ ವಾಯು ರಕ್ಷಣಾ ವ್ಯವಸ್ಥೆಯನ್ನು ಸನ್ನದ್ದ ಸ್ಥಿತಿಯಲ್ಲಿ ಇರಿಸಿದ್ದಾರೆ.
  • ‘ಹೊಡೇಡ ಬಂದರಿನ ಮೂಲಕ ಇರಾನ್‌ನಿಂದ ಶಸ್ತ್ರಾಸ್ತ್ರಗಳು ಬಂಡುಕೋರರನ್ನು ತಲುಪುತ್ತಿವೆ. ಈ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ ಮತ್ತು ಅದರ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಬಳಸಿಕೊಳ್ಳಲಾಗುತ್ತದೆ’ ಎಂದು ಇಸ್ರೇಲ್‌ ಹೇಳಿದೆ. ‘ಇಸ್ರೇಲ್‌ನವರಿಗೆ ನಾವು ಚಳ್ಳೆಹಣ್ಣು ತಿನ್ನಿಸುತ್ತಿದ್ದೇವೆ. ನಾವು ಅವರಲ್ಲಿ ಗೊಂದಲ ಮೂಡುವಂತೆ ಮಾಡಿ, ದಾಳಿ ಮಾಡುವ ಮುನ್ನವೇ ನಮ್ಮ ವಾಯುಪ್ರದೇಶ ಬಿಟ್ಟು ಹೋಗುವಂತೆ ಮಾಡುತ್ತಿದ್ದೇವೆ’ ಎಂದು ಹುಥಿ ಬಂಡುಕೋರ ಸಂಘಟನೆ ತಿಳಿಸಿದೆ.

ಪ್ರಚಲಿತ ವಿದ್ಯಮಾನಗಳು: 17ನೇ ಸೆಪ್ಟೆಂಬರ್ 2025

ಪರಿಹಾರ ದರ ನಿಗದಿ

ಸಂದರ್ಭ: ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸುವ ‘ಕೃಷ್ಣಾ ಮೇಲ್ದಂಡೆ ಯೋಜನೆ–3’ನೇ ಹಂತದ ಯೋಜನೆಗಾಗಿ ಮುಳುಗಡೆ ಆಗುವ ಮತ್ತು ನಾಲೆಗಾಗಿ ಸ್ವಾಧೀನಪಡಿ ಸಿಕೊಳ್ಳುವ ಜಮೀನಿಗೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಹಾರದ ದರ ನಿಗದಿ ಮಾಡಲಾಗಿದೆ.

  • ನೀರಾವರಿ ಜಮೀನಿಗೆ ಎಕರೆಗೆ ₹40 ಲಕ್ಷ ಮತ್ತು ಒಣ ಭೂಮಿಗೆ ಎಕರೆಗೆ ₹30 ಲಕ್ಷ ಪರಿಹಾರ ನೀಡಲು ಒಪ್ಪಿಗೆ ನೀಡಲಾಗಿದೆ. ಒಣ ಭೂಮಿಗೆ ಎಕರೆಗೆ ₹25 ಲಕ್ಷ ದರ ನಿಗದಿ ಮಾಡಲು ತೀರ್ಮಾನಿಸಲಾಗಿದೆ. ಕಾಲುವೆ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡವರು ಯೋಜನೆಯ ಫಲಾನುಭವಿಗಳಾಗುತ್ತಾರೆ. ಆದ್ದರಿಂದ ಕಡಿಮೆ ದರ ನಿಗದಿ ಮಾಡಲಾಗಿದೆ.
  • ಅಣೆಕಟ್ಟಿನ ಎತ್ತರ ಹೆಚ್ಚಿಸು ವುದರಿಂದ ಹಿನ್ನೀರಿನಿಂದ ಸುಮಾರು 75 ಸಾವಿರ ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುತ್ತದೆ. 5.94 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಒದಗಿಸಬಹುದು. ಇದರಿಂದ ಈ ಭಾಗದ ಜನರ ಜೀವನಮಟ್ಟವೂ ಸುಧಾರಣೆ ಆಗಲಿದೆ.
  • ‘ಭೂಸ್ವಾಧೀನದ ವಿಚಾರವಾಗಿ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳ ವಿಚಾರಣೆ ನಡೆಯುತ್ತಿವೆ. ಸುಮಾರು 20 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿವೆ.  2013ರ ಭೂಸ್ವಾಧೀನ ಕಾಯ್ದೆ ಅನ್ವಯ ಈ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣವಿಲ್ಲದ ಜಮೀನುಗಳನ್ನು ರೈತರಿಂದ ನೇರವಾಗಿ ಖರೀದಿ.
  • ‘2013ರ ಭೂ ಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯ ಸೆಕ್ಷನ್ 51ರ ಅಡಿ ಭೂಸ್ವಾಧೀನ, ಪುನರ್‌ವಸತಿ ಪ್ರಾಧಿಕಾರವನ್ನು ರಚಿಸಲು ಅವಕಾಶವಿದೆ. ಹೀಗಾಗಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಪ್ರಾಧಿಕಾರವನ್ನು ರಚಿಸಲಿದೆ. ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರಾಧಿಕಾರ ರಚನೆ ಆಗಲಿದೆ.

ಏನಿದು ಕೃಷ್ಣಾ ಮೇಲ್ಡಂಡೆ ಯೋಜನೆ ?

  • ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಮುಖ ನೀರಾವರಿ ಯೋಜನೆಯಾಗಿದೆ.
  • ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಕೃಷಿ ಭೂಮಿಗೆ ನೀರು ಒದಗಿಸುವ ಯೋಜನೆ ಇದಾಗಿದೆ.
  • ಕೃಷ್ಣಾ ನದಿ ಮತ್ತು ಅದರ ಉಪನದಿಗಳಾದ ಭೀಮಾ ಹಾಗೂ ಇತರ ನದಿಗಳ ನೀರನ್ನು ಬಳಸಿಕೊಂಡು ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
  • ಯೋಜನೆಯಿಂದ 6.5 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಗುರಿ ಇದೆ.
  • ಯುಕೆಪಿ-ಹಂತ III: ಕರ್ನಾಟಕ ಸರ್ಕಾರವು ಡಿಸೆಂಬರ್ 3, 2011 ರಂದು ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಐದು ವರ್ಷಗಳ ಕ್ರಿಯಾ ಯೋಜನೆಯನ್ನು ಅನಾವರಣಗೊಳಿಸಿತು. ಯುಕೆಪಿಯ ಹಂತ III 130 ಟಿಎಂಸಿಎಫ್‌ಟಿ ನೀರನ್ನು ಬಳಸುತ್ತದೆ. ಯೋಜನೆಯ ಮೂರನೇ ಹಂತವನ್ನು ಪೂರ್ಣಗೊಳಿಸಲು ಕರ್ನಾಟಕ ಸರ್ಕಾರ ₹17,000 ಕೋಟಿ (US$2.0 ಬಿಲಿಯನ್) ಖರ್ಚು ಮಾಡಲಿದೆ.
  • ಹಂತ III ಆಲಮಟ್ಟಿ ಅಣೆಕಟ್ಟಿನ ಪೂರ್ಣ ಜಲಾಶಯದ ನೀರಿನ ಮಟ್ಟವನ್ನು 524 ಮೀಟರ್ (1,719 ಅಡಿ) ಗೆ ಹೆಚ್ಚಿಸುವುದನ್ನು ಒಳಗೊಂಡಿದೆ ಮತ್ತು ಇದಕ್ಕೆ 30 ಹಳ್ಳಿಗಳ ಸ್ಥಳಾಂತರದ ಅಗತ್ಯವಿರುತ್ತದೆ. ಒಂದು ಲಕ್ಷ ಎಕರೆ (405 ಕಿಮೀ2) ಭೂಮಿ ಮುಳುಗುತ್ತದೆ.
  • ಯುಕೆಪಿ ಹಂತ III ಮುಲ್ವಾಡ್, ಚಿಮ್ಮಲಗಿ ಮತ್ತು ಇಂಡಿಯಲ್ಲಿ ಲಿಫ್ಟ್ ನೀರಾವರಿ ಯೋಜನೆಗಳು ಮತ್ತು ನಾರಾಯಣಪುರ ಬಲದಂಡೆ ಕಾಲುವೆಯ ವಿಸ್ತರಣೆ ಮತ್ತು ಭೀಮಾ ತಿರುವು ಯೋಜನೆಯನ್ನು ಒಳಗೊಂಡಿರುತ್ತದೆ. ಹಂತ III ರಾಂಪುರ, ಮಲ್ಲಾಬಾದ್, ಕೊಪ್ಪಳ ಮತ್ತು ಹೆರಕಲ್‌ನಲ್ಲಿ ಲಿಫ್ಟ್ ನೀರಾವರಿ ಯೋಜನೆಗಳ ವಿಸ್ತರಣೆಯನ್ನು ಸಹ ಒಳಗೊಂಡಿರುತ್ತದೆ.
ಯೋಜನೆಯ ಹೈಲೈಟ್ಸ್
  • ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2 ರ ತೀರ್ಪಿನ ಅನ್ವಯ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನುಷ್ಠಾನಕ್ಕಾಗಿ 130 ಟಿಎಂಸಿ ನೀರಿನ ಹಂಚಿಕೆ ಮಾಡಿದ್ದು, ಇದರಿಂದ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಾಧ್ಯವಾಗಲಿದೆ.
  • ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3ರಲ್ಲಿ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟ 519 ಮೀಟರ್ ನಿಂದ 524 ಮೀಟರ್ ಗೆ ಎತ್ತರಿಸುವುದರಿಂದ ಹೆಚ್ಚುವರಿಯಾಗಿ 100 ಟಿ ಎಂ ಸಿ. ನೀರಿನ ಪ್ರಮಾಣ ಸಂಗ್ರಹ ಅಂದಾಜಿಸಲಾಗಿದೆ.
  • ಯೋಜನೆ ಅನುಷ್ಠಾನಕ್ಕೆ ಒಟ್ಟು 1,33,867 ಎಕ್ರೆ ಜಮೀನು ಭೂಸ್ವಾಧೀನ ಅಗತ್ಯವಿದ್ದು, ಇದರಲ್ಲಿ 75,563 ಎಕ್ರೆ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನು ಸೇರಿದೆ. ಇದುವರೆಗೆ 29,566ಎಕ್ರೆ ಭೂಸ್ವಾಧೀನ ಐತೀರ್ಪು ಹೊರಡಿಸಲಾಗಿದೆ. 59,354 ಎಕ್ರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕಿದೆ.
  • ಮುಳುಗಡೆ ಹೊಂದಲಿರುವ ಜಮೀನನ್ನು 2ಹಂತದಲ್ಲಿ ಭೂಸ್ವಾಧೀನಕ್ಕೆ ಒಳಪಡಿಸುವ ಬದಲು ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಲು ಈಗಾಗಲೇ ತೀರ್ಮಾನಿಸಲಾಗಿದೆ.
  • ಯೋಜನೆ ಅನುಷ್ಠಾನಕ್ಕೆ ಆರಂಭದಲ್ಲಿ ರೂ. 51,148 ಕೋಟಿ ಯೋಜನಾ ಮೊತ್ತ ಅಂದಾಜಿಸಲಾಗಿತ್ತು. ಈಗ ಪರಿಷ್ಕೃತ ರೂ. 87,818ಕೋಟಿ ಅಂದಾಜಿಸಲಾಗಿದೆ. ಇದರಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ರೂ. 17,627 ಕೋಟಿ ಆರಂಭದಲ್ಲಿ ಅಂದಾಜಿಸಲಾಗಿತ್ತು. ಪ್ರಸ್ತುತ ಪರಿಷ್ಕೃತ ಮೊತ್ತ ರೂ. 40,557.09 ಕೋಟಿ ರೂಪಾಯಿ ಅಂದಾಜಿಸಲಾಗಿದೆ.
  • ಯೋಜನೆಗೆ ಸಂಬಂಧಿಸಿದಂತೆ 9 ಉಪ ಯೋಜನಾ ಸಿವಿಲ್ ಕಾಮಗಾರಿಗಳಿಗೆ ಪರಿಷ್ಕೃತ ಅಂದಾಜು ಮೊತ್ತ 25,122.53 ಕೋಟಿ ರೂಪಾಯಿ ಅಂದಾಜಿಸಲಾಗಿದೆ.

ಕರಡಿ ‘ವಸಿಕರನ್’ಗೆ ಕೃತಕ ಕಾಲು

ಸಂದರ್ಭ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕರಡಿ ರಕ್ಷಣಾ ಕೇಂದ್ರದಲ್ಲಿ ‘ವಸಿಕರನ್’ ಹೆಸರಿನ ಕರಡಿಗೆ ಮೂರು ದಿನಗಳಿಂದ ಕೈಗೊಳ್ಳಲಾಗಿದ್ದ ಕೃತಕ ಕಾಲು ಜೋಡಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

  • ಇದರಿಂದಾಗಿ ಕರಡಿಯು ಮತ್ತೆ ಮೊದಲಿನಂತೆ ಮರ ಏರುವುದು, ನೆಲ ಕೆರೆಯುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ.
  • ವಿಶ್ವದಲ್ಲೇ ಕರಡಿಗೆ ಕೃತಕ ಕಾಲು ಜೋಡಣೆ ಮಾಡಲಾದ ಮೊಟ್ಟಮೊದಲ ಪ್ರಕರಣ ಇದಾಗಿದೆ.
  • ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ.
  • ಬಳ್ಳಾರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 2019ರಲ್ಲಿ ಬೇಟೆಗಾರರ ಬಲೆಗೆ ಸಿಲುಕಿ ಜೀವನ್ಮರಣ ಹೋರಾಟದಲ್ಲಿದ್ದ ‘ವಸಿಕರನ್’ನನ್ನು ಇಲ್ಲಿಗೆ ತರಲಾಗಿತ್ತು.

ಬಫರ್‌ ಝೋನ್‌ ಕಡಿತ ಮರುಪರಿಶೀಲನೆಗೆ ಸಲಹೆ

ಸಂದರ್ಭ: ‘ಕೆರೆಗಳ ಬಫರ್‌ ಝೋನ್‌ ಕಡಿತಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಾಗುತ್ತದೆ’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಿ.ಕೆ. ಚಂದ್ರಶೇಖರ್‌.

  • ‘ಎಲ್ಲ ಕೆರೆಗಳಿಗೆ 30 ಮೀಟರ್‌ ಬಫರ್ ಝೋನ್‌ ಅನ್ನು ನಿಗದಿಪಡಿಸಲಾಗಿದೆ. ಅದನ್ನು ಕಡಿತಗೊಳಿಸಿ ಒಂದೊಂದು ಕೆರೆಗೆ ಒಂದೊಂದು ರೀತಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ನಿಗದಿಪಡಿಸಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.

ಹುಲಿಗಳ ಸಂಖ್ಯೆ ಮತ್ತು ಸಂಘರ್ಷ

ಸಂದರ್ಭ: ಬಂಡೀಪುರದ ಸಫಾರಿ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ನೈಸರ್ಗಿಕ ಕಾರಣಗಳಿಂದ ಗಾಯಗೊಂಡು ಕುಂಟುತ್ತಿರುವ ದೃಶ್ಯ. ಇದು, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿ ಕೆಲವು ವನ್ಯಜೀವಿ ಆಸಕ್ತರು ಆ ಹುಲಿಗೆ ಚಿಕಿತ್ಸೆ ನೀಡಲು ಮತ್ತು ಅದರ ಮರಿಗಳಿಗೆ ಕೃತಕವಾಗಿ ಆಹಾರವನ್ನೊದಗಿಸಲು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ ಪರಿಣಾಮ, ಇಲಾಖೆ ಏನೇನೊ ಕಸರತ್ತು ಮಾಡಿತು.

  • ಎರಡನೆಯದು: ಮೈಸೂರಿನ ಇಲವಾಲದ ಹತ್ತಿರ ಹುಲಿಗಳು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿದೆ ಎಂಬ ಸುದ್ದಿ.
  • ಮೂರನೆಯದು: ಬಂಡೀಪುರ ಹುಲಿ ಯೋಜನೆಯ ಹತ್ತಿರವಿರುವ ಕುಂದುಕೆರೆ ಗ್ರಾಮದ ಬಳಿಯಿರುವ ಪುಟ್ಟ ಗುಡ್ಡದಲ್ಲಿ ಇತ್ತೀಚೆಗೆ ಎರಡು ಹುಲಿಗಳು ಕಾಣಿಸಿಕೊಂಡು, ಅವುಗಳಲ್ಲಿ ಒಂದು ಹುಲಿ ಇನ್ನೊಂದು ಹುಲಿಯಿಂದ ಗಾಯಗೊಂಡು ನಿತ್ರಾಣಗೊಂಡಿರುವ ಸುದ್ದಿ.
  • ನಾಲ್ಕನೆಯದು: ಬಂಡೀಪುರದ ಬಳಿಯಿರುವ ಬೊಮ್ಮಲಾಪುರ ಎಂಬ ಹಳ್ಳಿಯಲ್ಲಿ ಗ್ರಾಮಸ್ಥರು ಹುಲಿ ಸಂಘರ್ಷದಿಂದ ಬೇಸತ್ತು, ಹುಲಿಯನ್ನು ಹಿಡಿಯಲು ಇಟ್ಟಿದ್ದ ಬೋನಿನಲ್ಲಿ ಅರಣ್ಯ ಇಲಾಖೆಯ ನೌಕರರನ್ನೇ ಕೂಡಿ ಹಾಕಿದ ಘಟನೆ.
  • ಈ ನಾಲ್ಕೂ ಘಟನೆಗಳು ಸ್ವತಂತ್ರವೆನಿಸಿದರೂ, ಅವುಗಳಿಗೆ ಮತ್ತು ವನ್ಯಜೀವಿ ಸಂರಕ್ಷಣೆಯ ವಿಧಾನಗಳಿಗೆ ಕೊಂಡಿಗಳಿವೆ. ನಿಸರ್ಗದಲ್ಲಿ ಹುಲಿಯನ್ನು ಭಕ್ಷಿಸುವ ಇತರ ಪ್ರಾಣಿಗಳು ಇಲ್ಲವಾದುದರಿಂದ ಅದು ಪಾರಿಸರಿಕ ಗೋಪುರದ ತುದಿಯಲ್ಲಿರುವ ವನ್ಯಜೀವಿ. ಹಾಗಾಗಿ, ಹುಲಿಗಳಿಗೆ ಉತ್ತಮ ರಕ್ಷಣೆ ಸಿಕ್ಕರೆ ಅವುಗಳ ಸಂಖ್ಯೆ ಹೆಚ್ಚುತ್ತದೆ. ಆವಾಸಸ್ಥಾನದ ವ್ಯಾಪ್ತಿ, ಆ ಪ್ರದೇಶದಲ್ಲಿರುವ ಬಲಿಪ್ರಾಣಿಗಳ ಸಾಂದ್ರತೆಗೆ ಅನುಗುಣವಾಗಿ ಅವುಗಳ ಸಂಖ್ಯೆಯನ್ನು ನೈಸರ್ಗಿಕ ಕಾರಣಗಳು ನಿಯಂತ್ರಿಸುತ್ತವೆ. ಹುಲಿಗಳ ನೈಸರ್ಗಿಕ ಮರಣ ಪ್ರಮಾಣಕ್ಕೆ ಮುಖ್ಯ ಕಾರಣಗಳು: ನೆಲಹರವಿಗಾಗಿ ಹುಲಿಗಳ ಕಾದಾಟ, ನೈಸರ್ಗಿಕ ಕಾರಣಗಳಿಂದ ಆಗುವ ಗಾಯಗಳು, ರೋಗ, ಆಹಾರ ಅಥವಾ ನೀರಿನ ಕೊರತೆ. ಇವುಗಳಲ್ಲಿ ಕೊನೆಯದು ಅಪರೂಪ.
  • ಏಕೆಂದರೆ, ಆಹಾರ ಮತ್ತು ನೀರಿನ ಕೊರತೆಯಿದ್ದರೆ ಹುಲಿಗಳ ಸಂಖ್ಯೆ ನೈಸರ್ಗಿಕವಾಗಿ ಕಡಿಮೆಯಿದ್ದು, ಅವುಗಳ ಸಂಖ್ಯೆ ಹೆಚ್ಚುವುದಿಲ್ಲ. ಇದನ್ನು ಮಲೆಮಹದೇಶ್ವರಬೆಟ್ಟ, ಕಾವೇರಿ ವನ್ಯಜೀವಿಧಾಮ ಮತ್ತಿತರ ಪ್ರದೇಶಗಳಲ್ಲಿ ನಿರ್ದಿಷ್ಟವಾಗಿ ಕಾಣಬಹುದು. ಮಹದೇಶ್ವರಬೆಟ್ಟ, ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆಸಿರುವ ಅಧ್ಯಯನಗಳ ಪ್ರಕಾರ, ಈ ಎರಡು ವನ್ಯಜೀವಿಧಾಮಗಳಲ್ಲಿ 12–15 ಹುಲಿಗಳಿವೆ. ಒಂದಕ್ಕೊಂದು ಹೊಂದಿಕೊಂಡಿರುವ ಈ ವನ್ಯಜೀವಿಧಾಮಗಳ ಒಟ್ಟು ಭೂ ವಿಸ್ತೀರ್ಣ 1,991 ಚ.ಕಿ.ಮೀ. (ಸುಮಾರು 4,91,987 ಎಕರೆ).
  • ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳಂತೆಯೇ ಭೌಗೋಳಿಕವಾಗಿ ಕೂಡಿಕೊಂಡಿರುವ ಬಂಡೀಪುರ ಮತ್ತು ನಾಗರಹೊಳೆ ಹುಲಿ ಯೋಜನಾ ಪ್ರದೇಶಗಳ ಒಟ್ಟು ವಿಸ್ತೀರ್ಣ 1,771 ಚ.ಕಿ.ಮೀ. (ಸುಮಾರು 4,37,624 ಎಕರೆ). ಇತ್ತೀಚಿನ ವರದಿಗಳ ಪ್ರಕಾರ, ಇಲ್ಲಿರುವ ಹುಲಿಗಳ ಸಂಖ್ಯೆ 288. ಅಂದರೆ, ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳಿಗಿಂತ 200 ಚ.ಕಿ.ಮೀ. ಕಡಿಮೆ ಇರುವ ಪ್ರದೇಶಕ್ಕಿಂತ ಸುಮಾರು 20 ಪಟ್ಟು ಹೆಚ್ಚು ಹುಲಿಗಳು ಬಂಡೀಪುರ–ನಾಗರಹೊಳೆಯಲ್ಲಿವೆ. ಇಲ್ಲಿ ಹಲವು ದಶಕಗಳಿಂದ ಆಗಿರುವ ರಕ್ಷಣಾ ಕಾರ್ಯಗಳು ಮತ್ತು ಹುಲಿಗಳ ಆವಾಸಸ್ಥಾನಗಳ ನಿರ್ವಹಣೆಯಿಂದ ಈ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಪಾರಿಸರಿಕ ಸಮತೋಲನದ ಮಟ್ಟ ತಲುಪಿವೆ ಅಥವಾ ಅದಕ್ಕಿಂತ ಹೆಚ್ಚಾಗಿವೆ. ಇದರ ಪರಿಣಾಮವಾಗಿ ಪ್ರಾಯದ ಹುಲಿಗಳು ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಯ ಸಣ್ಣಪುಟ್ಟ ಕಾಡುಗಳು ಅಥವಾ ಕೃಷಿ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ. ಈ ಸಣ್ಣಪುಟ್ಟ ಕಾಡುಗಳು ಅಥವಾ ಕೃಷಿ ಪ್ರದೇಶ ಹುಲಿಗಳಿಗೆ ಪಾರಿಸರಿಕ ಮತ್ತು ಸಾಮಾಜಿಕವಾಗಿ ಸೂಕ್ತ ಪ್ರದೇಶಗಳಲ್ಲ. ಅಲ್ಲಿ ಅವುಗಳಿಗೆ ಬೇಕಿರುವಷ್ಟು ನೈಸರ್ಗಿಕ ಆಹಾರ ಸಿಗದಿರುವುದರಿಂದ, ಅವು ಹೆಚ್ಚಾಗಿ ಜಾನುವಾರುಗಳ ಮೇಲೆ ಅವಲಂಬಿತ ವಾಗಿವೆ. ಇದು ಸ್ಥಳೀಯರನ್ನು ತೊಂದರೆಗೆ ಸಿಲುಕಿಸಿದೆ ಮತ್ತು ಕೃಷಿ ಪ್ರದೇಶಗಳಲ್ಲಿ ಹುಲಿಗಳಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.
  • ನಾವು ಪಾರಿಸರಿಕ ಮತ್ತು ಸಾಮಾಜಿಕ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಬಂಡೀಪುರ–ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆಯನ್ನು ಕೃತಕವಾಗಿ ಹೆಚ್ಚಿಸುವ ಕಾರ್ಯ ವಿಧಾನ ಗಳನ್ನು ಅಳವಡಿಸಿಕೊಂಡಿದ್ದೇವೆ. ಸಾಮಾಜಿಕ ಮಾಧ್ಯಮಗಳ ಒತ್ತಡಕ್ಕೆ ಮಣಿದು ಅವುಗಳಿಗೆ ಚಿಕಿತ್ಸೆ ನೀಡಿ, ಅವುಗಳ ನೈಸರ್ಗಿಕ ಮರಣ ಪ್ರಮಾಣಕ್ಕೆ ಅವಕಾಶ ಕೊಡದೆ ಸಂಖ್ಯೆಯನ್ನು ಅನೈಸರ್ಗಿಕವಾಗಿ ಹೆಚ್ಚಿಸುತ್ತಿದ್ದೇವೆ. ಸಾಕುಪ್ರಾಣಿಗಳು ಮತ್ತು ವನ್ಯಜೀವಿಗಳ ಬಗ್ಗೆ ಇರುವ ವ್ಯತ್ಯಾಸಗಳನ್ನು ಅರಿತುಕೊಳ್ಳದೆ, ಹುಲಿಗಳನ್ನು ಸಾಕುಪ್ರಾಣಿಗಳ ದೃಷ್ಟಿಕೋನದಿಂದ ನೋಡಲು ಪ್ರಾರಂಭಿಸಿದ್ದೇವೆ.
  • ಬಂಡೀಪುರದಲ್ಲಿ ಗಾಯಗೊಂಡು ಪತ್ತೆಯಾದ ಹೆಣ್ಣು ಹುಲಿಗೆ ನಾಲ್ಕು ಮರಿಗಳಿವೆ. ಈ ತಾಯಿ ಮತ್ತು ಮರಿಗಳು ಉಳಿಯುವುದು ಬಹು ಮುಖ್ಯವಾದರೂ, ಅವುಗಳು ನೈಸರ್ಗಿಕವಾಗಿ ಉಳಿಯಬೇಕೇ ಹೊರತು ಅವುಗಳನ್ನು ಕೃತಕವಾಗಿ ಬದುಕಿಸಿಕೊಳ್ಳುವ ಪ್ರಯತ್ನ ಮಾಡಿದರೆ, ಹುಲಿಗಳ ಸಂಖ್ಯೆಯನ್ನು ಅಸಹಜವಾಗಿ ಹೆಚ್ಚಿಸಿದಂತಾಗುತ್ತದೆ. ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಹುಲಿಗಳು ಅಧಿಕವಾಗಿರುವ ಬಂಡೀಪುರ–ನಾಗರಹೊಳೆಯಂತಹ ಪ್ರದೇಶಗಳಲ್ಲಿ ವಾರ್ಷಿಕವಾಗಿ ಹುಲಿಗಳಲ್ಲಿ ಶೇ 25ರಷ್ಟು ನೈಸರ್ಗಿಕ ಮರಣ ಪ್ರಮಾಣವಿರುತ್ತದೆ. ಇದನ್ನು ತಡೆದರೆ, ಹುಲಿಗಳ ಸಂಖ್ಯೆ ಅವುಗಳಿಗಿರುವ ಆವಾಸಸ್ಥಾನಕ್ಕಿಂತ ಹೆಚ್ಚಾಗಿ ಜನವಸತಿ ಪ್ರದೇಶಗಳಿಗೆ ವಲಸೆ ಹೋಗಿ ತಮ್ಮ ವಸಾಹತು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಇದು ಮಾನವ–ಹುಲಿ ಸಂಘರ್ಷದಂತಹ ಗಂಭೀರ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ.
  • ಇನ್ನೊಂದು ಗಂಭೀರ ಸಮಸ್ಯೆ, ಹುಲಿಗಳ ಆವಾಸ ಸ್ಥಾನಗಳ ಅವೈಜ್ಞಾನಿಕ ನಿರ್ವಹಣೆ. ವರ್ಷಪೂರ್ತಿ ವನ್ಯಜೀವಿಗಳಿಗೆ ನೀರು ಸಿಗುವ ಹಾಗೆ ಮಾಡಲು ಹೊಸ ಕೆರೆಗಳ ನಿರ್ಮಾಣ, ಕೊಳವೆಬಾವಿಗಳನ್ನು ತೋಡುವುದು ಮಾಡುತ್ತಿದ್ದೇವೆ. ವರ್ಷಪೂರ್ತಿ ನೀರು ಸಿಗುವು ದರಿಂದ ಹುಲಿಗಳಿಗೆ ಅವಶ್ಯಕವಾದ ಸಾರಂಗ ಗಳಂತಹ ಪ್ರಾಣಿಗಳು ಅಸ್ವಾಭಾವಿಕವಾಗಿ ವೃದ್ಧಿಸುತ್ತದೆ. ಋತುಮಾನಕ್ಕೆ ಅನುಗುಣವಾಗಿ ನೀರಿದ್ದರೆ, ದೈಹಿಕವಾಗಿ ಸಮರ್ಥ ಪ್ರಾಣಿಗಳು ಮಾತ್ರ ಬದುಕಿ, ಇನ್ನುಳಿದವು ಅಸುನೀಗಿ ಅವುಗಳ ಸಂಖ್ಯೆಯನ್ನು ನಿಸರ್ಗ ಪಾರಿಸರಿಕ ಮಟ್ಟದಲ್ಲಿ ಕಾಯ್ದುಕೊಳ್ಳುತ್ತದೆ.
  • ಸಾರಂಗಗಳ ಸಂಖ್ಯೆ ಹೆಚ್ಚಾದಾಗ ಹುಲಿಗಳ ಸಂಖ್ಯೆಯೂ ಹೆಚ್ಚುತ್ತದೆ. ಆದರೆ, ಅವುಗಳ ಆವಾಸಸ್ಥಾನದ ವ್ಯಾಪ್ತಿ ಹೆಚ್ಚಾಗುವುದಿಲ್ಲ. 5 ಜನರಿಗೆ ಸರಿಹೊಂದುವಂತೆ ಕಟ್ಟಿದ ಮನೆಯಲ್ಲಿ 15–20 ಜನರನ್ನು ತುರುಕಿದ ಹಾಗೆ ಆಗುತ್ತದೆ. ಇದರ ಪರಿಣಾಮವಾಗಿ ಹುಲಿಗಳು ಹೊಸ ವ್ಯಾಪ್ತಿಯನ್ನು ಹುಡುಕಿಕೊಂಡು, ತಾವು ಹುಟ್ಟಿರುವ ಪ್ರದೇಶವನ್ನು ಬಿಟ್ಟು ಕೃಷಿ ಪ್ರದೇಶಗಳಿಗೆ ಮತ್ತು ಚಿಕ್ಕಪುಟ್ಟ ಕಾಡುಗಳತ್ತ ವಲಸೆ ಹೋಗುವುದು ಪ್ರಾರಂಭವಾಗಿದೆ. ಹೀಗೆಯೇ ಮುಂದುವರಿದರೆ, ಈಗ ಮೈಸೂರು, ಮಡಿಕೇರಿ ತಲುಪಿರುವ ಹುಲಿಗಳು ಬೇರೆ ಬೇರೆ ಪ್ರದೇಶಗಳಿಗೆ ಹಬ್ಬುವ ಸಾಧ್ಯತೆಯಿದೆ. ವನ್ಯಜೀವಿ ಸಂರಕ್ಷಣಾ ದೃಷ್ಟಿಕೋನದಿಂದಷ್ಟೇ ನೋಡಿದರೆ ಇದು ಸಂಭ್ರಮಿಸುವ ವಿಚಾರವಾದರೂ, ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ, ಮತ್ತು ಅದನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಅಧಿಕವಾಗುತ್ತಿರುವ ಹುಲಿಗಳನ್ನು ಸೂಕ್ತವಲ್ಲದ ಪ್ರದೇಶಗಳಲ್ಲಿ ತುರುಕಲು ಪ್ರಯತ್ನಿಸುವುದು ಪಾರಿಸರಿಕ ದೃಷ್ಟಿಕೋನದಿಂದಾಗಲೀ ಅಥವಾ ಸಾಮಾಜಿಕ ದೃಷ್ಟಿಕೋನದಿಂದಾಗಲೀ ಸರಿಯಲ್ಲ. ಈ ತರಹದ ಪ್ರದೇಶಗಳಲ್ಲಿ ಹುಲಿಗಳ ಇರುವಿಕೆಯಿಂದ ಹುಲಿಗಳಿಗೆ ಕೂಡ ತೊಂದರೆಯೇ. ಸಂಘರ್ಷ ಹೆಚ್ಚಾದಂತೆ ಹುಲಿಗಳ ಬಗ್ಗೆ ಸಮಾಜಕ್ಕಿದ್ದ ತಾಳಿಕೆಯ ಸೌಹಾರ್ದ ಕಡಿಮೆಯಾಗಿ, ಅದರ ವಿರುದ್ದದ ಮನಃಸ್ಥಿತಿ ಮತ್ತು ನಡವಳಿಕೆ ಹೆಚ್ಚುತ್ತದೆ.
  • ಬೊಮ್ಮಲಾಪುರದ ಗ್ರಾಮಸ್ಥರು ತೆಗೆದುಕೊಂಡ ನಿಲುವು ಬಹುಶಃ ಹಲವು ವರ್ಷಗಳಿಂದ ಮಾನವ–ವನ್ಯಜೀವಿ ಸಂಘರ್ಷದ ಬಗ್ಗೆ ಅಂತರಂಗದೊಳಗೆ ಹುದುಗಿದ್ದ ಅಸಹಾಯಕ ಮನೋವೃತ್ತಿಯನ್ನು ತೋರಿಸುತ್ತಿರಬಹುದು. ಈಗಲಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ತರುವ ಒತ್ತಡಕ್ಕೆ ಮಣಿಯದೆ, ವನ್ಯಜೀವಿಯ ಆವಾಸಸ್ಥಾನಗಳ ಅವೈಜ್ಞಾನಿಕ ನಿರ್ವಹಣೆಯನ್ನು ತಪ್ಪಿಸಬೇಕಾಗಿದೆ. ಬಹು ಮುಖ್ಯವಾಗಿ, ಆರ್ಥಿಕ ಕಾರಣಗಳಿಗೆ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನಿಲ್ಲಿಸದಿದ್ದರೆ ಹುಲಿಗಳಿಗಾಗಲೀ ಸಮಾಜಕ್ಕಾಗಲೀ ಒಳಿತಾಗದು.
  • ಈಗಿನ ಸಂಘರ್ಷದ ಪರಿಸ್ಥಿತಿಗೆ ವನ್ಯಜೀವಿ ಆವಾಸ ಗಳ ಅವೈಜ್ಞಾನಿಕ ನಿರ್ವಹಣೆಯೂ ಕಾರಣ. ಈ ಧೋರಣೆ ಬದಲಾಯಿಸಿಕೊಂಡರೆ, ಮುಂಬರುವ ದಿನಗಳಲ್ಲಿ ಸಂಘರ್ಷಕ್ಕೊಳಗಾಗುವ ವನ್ಯಜೀವಿಗಳ ಸಂಖ್ಯೆಯಲ್ಲಿ ಸಮತೋಲನ ಕಾಣಬಹುದು. ಇದರಿಂದ ಇಲವಾಲ, ಬೊಮ್ಮಲಾಪುರ, ಇನ್ನಿತರ ಪ್ರದೇಶಗಳಿಗೆ ಹುಲಿಗಳು ಹೋಗುವುದು ಕಡಿಮೆಯಾಗಿ ಸಂಘರ್ಷ ತಗ್ಗುವ ದಿನಗಳನ್ನು ಕಾಣಬಹುದು. ಇಲ್ಲವಾದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುವುದು, ಅದರ, ಮತ್ತು ಅರಣ್ಯ ಇಲಾಖೆಯ ವಿರುದ್ಧ ಸ್ಥಳೀಯ ಜನರ ಆಕ್ರೋಶ ಇನ್ನೂ ಹೆಚ್ಚಲಿದೆ.

ಪಟ್ಟಿಯಲ್ಲಿಲ್ಲ ಹಲವು ಪ್ರಸಿದ್ಧ ತಾಣಗಳು: 1,275 ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಸಂಖ್ಯೆ

ಟೈಫನ್‌ ಕ್ಷಿಪಣಿ ಹಿಂತೆಗೆದುಕೊಳ್ಳಲು ಚೀನಾ ಆಗ್ರಹ

ಸಂದರ್ಭ: ಜಪಾನ್‌ನಲ್ಲಿ ನಿಯೋಜಿಸಿರುವ ಮಧ್ಯಮ ಶ್ರೇಣಿಯ ಟೈಫನ್‌ ಕ್ಷಿಪಣಿಯನ್ನು ಹಿಂತೆಗೆದುಕೊಳ್ಳುವಂತೆ ಅಮೆರಿಕವನ್ನು ಚೀನಾ ಒತ್ತಾಯಿಸಿದೆ.

  • ‘ಟೈಫನ್‌ ಕ್ಷಿಪಣಿಯು ಪ್ರಾದೇಶಿಕ ಕಾರ್ಯತಂತ್ರದ ಭದ್ರತೆಗೆ ಕಾಯಂ ಬೆದರಿಕೆಯಾಗಿದೆ. ಜಂಟಿ ಸಮರಾ ಭ್ಯಾಸದ ನೆಪದಲ್ಲಿ ಅಮೆರಿಕವು ಜಪಾನ್‌ನಲ್ಲಿ ಈ ಕ್ಷಿಪಣಿಯನ್ನು ನಿಯೋಜಿಸಿದೆ. ಇದನ್ನು ಹಿಂತೆಗೆದು ಕೊಳ್ಳಬೇಕು’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರ ಲಿನ್‌ ಜಿಯಾನ್‌ ಒತ್ತಾಯಿಸಿದ್ದಾರೆ.  
  • ಈ ಮೊದಲು ಫಿಲಿಪ್ಪೀನ್ಸ್‌ನಲ್ಲಿ  ‘ಟೈಫನ್‌’ ಕ್ಷಿಪಣಿ ನಿಯೋಜನೆಗೆ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ, ಫಿಲಿಪ್ಪೀನ್ಸ್‌ ಭಾರತದಿಂದ ಬ್ರಹ್ಮೋಸ್‌ ಕ್ಷಿಪಣಿ ಖರೀದಿಸಿತ್ತು.

ಮಾತುಕತೆ ಸಕಾರಾತ್ಮಕ’:ಹೆಚ್ಚುವರಿ ತೆರಿಗೆ ರದ್ದುಪಡಿಸಲು ಅಮೆರಿಕಕ್ಕೆ ಭಾರತ ಒತ್ತಾಯ

ಸಂದರ್ಭ: ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ವಿಚಾರವಾಗಿ ಅಮೆರಿಕದ ನಿಯೋಗದ ಜೊತೆಗಿನ ಮಾತುಕತೆಯು ಸಕಾರಾತ್ಮಕವಾಗಿ ಇತ್ತು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.

  • ಇಬ್ಬರಿಗೂ ಅನುಕೂಲ ಆಗುವ ಒಪ್ಪಂದವೊಂದಕ್ಕೆ ಆದಷ್ಟು ಬೇಗ ಅಂತಿಮ ರೂಪ ನೀಡಲು ಎರಡೂ ದೇಶಗಳು ಒಪ್ಪಿವೆ ಎಂದು ಕೂಡ ಸಚಿವಾಲಯವು ಹೇಳಿದೆ.
  • ‘ಎರಡೂ ಕಡೆಯವರಿಗೆ ಪ್ರಯೋಜನಕಾರಿ ಆಗುವಂತಹ ವ್ಯಾಪಾರ ಒಪ್ಪಂದವನ್ನು ಬೇಗನೆ ಸಾಧ್ಯವಾಗಿಸುವ ಪ್ರಯತ್ನಕ್ಕೆ ಇನ್ನಷ್ಟು ಚುರುಕು ನೀಡಲು ತೀರ್ಮಾನಿಸಲಾಗಿದೆ’ ಎಂದು ಸಚಿವಾಲಯವು ಹೇಳಿದೆ. ಎರಡೂ ದೇಶಗಳ ಪ್ರತಿನಿಧಿಗಳ ನಡುವೆ ಮಂಗಳವಾರ ಇಡೀ ದಿನ ಮಾತುಕತೆ ನಡೆದಿದೆ.
  • ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ಮುಖ್ಯ ಸಂಧಾನಕಾರ ಬ್ರೆಂಡನ್ ಲಿಂಚ್ ಅವರ ಜೊತೆ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತಾದ ಮಾತುಕತೆಗಳು ಸಕಾರಾತ್ಮಕವಾಗಿದ್ದವು ಎಂದು ಸಚಿವಾಲಯವು ಹೇಳಿದೆ.
  • ಲಿಂಚ್ ಅವರು ನವದೆಹಲಿಗೆ ಬಂದಿದ್ದಾರೆ. ಮಾತುಕತೆ ವೇಳೆ ಭಾರತದ ಪ್ರತಿನಿಧಿಗಳ ನೇತೃತ್ವವನ್ನು ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ವಹಿಸಿದ್ದರು.
  • ಎರಡೂ ದೇಶಗಳು ವರ್ಚುವಲ್ ವೇದಿಕೆಯ ಮೂಲಕ ಮಾತುಕತೆ ಮುಂದುವರಿಸಲಿವೆ. ಅಲ್ಲದೆ, ಮುಂದಿನ ಭೌತಿಕ ಸಭೆಗೆ ಸೂಕ್ತ ದಿನಾಂಕ ಯಾವುದು ಎಂಬುದನ್ನು ಕೂಡ ನಿರ್ಧರಿಸಲಿವೆ ಎಂದು ಮೂಲವೊಂದು ತಿಳಿಸಿದೆ.
  • ಅಮೆರಿಕವು ಭಾರತದ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸಿದೆ. ಪ್ರತಿಸುಂಕದ ರೂಪದಲ್ಲಿ ಶೇ 25ರಷ್ಟು ತೆರಿಗೆ ಹಾಗೂ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಶೇ 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ. ಈ ತೆರಿಗೆ ಕ್ರಮಗಳು ಜಾರಿಗೆ ಬಂದ ನಂತರದಲ್ಲಿ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ವ್ಯಾಪಾರ ಒಪ್ಪಂದದ ಮಾತುಕತೆಗೆ ಭಾರತಕ್ಕೆ ಭೇಟಿ ನೀಡಿರುವುದು ಇದೇ ಮೊದಲು. ಶೇ 50ರಷ್ಟು ತೆರಿಗೆ ವಿಧಿಸುವ ಕ್ರಮವನ್ನು ಭಾರತವು ‘ಅನ್ಯಾಯ’ ಎಂದು ಹೇಳಿದೆ.
  • ಮಾತುಕತೆ ಮುಂದುವರಿಯಬೇಕು ಎಂದಾದರೆ ಭಾರತದ ಮೇಲೆ ಹೇರಿರುವ ಹೆಚ್ಚುವರಿ ಶೇ 25ರಷ್ಟು ಸುಂಕವನ್ನು ರದ್ದುಪಡಿಸಬೇಕು ಎಂದು ಭಾರತದ ಅಧಿಕಾರಿಗಳು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.
  • ‘ಮಾತುಕತೆಯಲ್ಲಿ ಪ್ರಗತಿಯು, ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದ ಶೇ 25ರಷ್ಟು ತೆರಿಗೆಯನ್ನು ಅಮೆರಿಕವು ಹಿಂಪಡೆಯುವುದನ್ನು ಅವಲಂಬಿಸಿದೆ. ಅದು ಸಾಧ್ಯವಾಗದೆ ಇದ್ದರೆ ರಾಜಕೀಯವಾಗಿ ಅಥವಾ ಆರ್ಥಿಕ ದೃಷ್ಟಿಯಿಂದ ಯಾವುದೇ ಮಹತ್ವದ ತಿರುವು ಲಭಿಸುವುದಿಲ್ಲ’ ಎಂದು ಗ್ಲೋಬಲ್‌ ಟ್ರೇಡ್ ರಿಸರ್ಚ್‌ ಇನಿಷಿಯೇಟಿವ್‌ನ (ಜಿಟಿಆರ್‌ಐ) ಅಜಯ್ ಶ್ರೀವಾಸ್ತವ ಹೇಳಿದ್ದಾರೆ.

ಜಿಎಸ್‌ಟಿ ಇಳಿಕೆ ಕುರಿತು ಮಾಹಿತಿ ನೀಡಲು ಸೂಚನೆ

ಸಂದರ್ಭ: ಭೌತಿಕ ಮಳಿಗೆಗಳ ಮೂಲಕ ರಿಟೇಲ್‌ ಮಾರಾಟದಲ್ಲಿ ತೊಡಗಿರುವವರು ಜಿಎಸ್‌ಟಿ ದರ ಇಳಿಕೆಯಿಂದಾಗಿ ಉತ್ಪನ್ನಗಳ ಬೆಲೆಯಲ್ಲಿ ಆಗುವ ಇಳಿಕೆಯನ್ನು ಗ್ರಾಹಕರಿಗೆ ಗೊತ್ತಾಗುವ ರೀತಿಯಲ್ಲಿ ಪ್ರದರ್ಶಿಸಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಸೂಚಿಸಿದೆ.

  • ರಿಟೇಲ್‌ ವಹಿವಾಟಿನಲ್ಲಿ ತೊಡಗಿರುವವರ ಸಂಘಕ್ಕೆ ಸೂಚನೆಯೊಂದನ್ನು ರವಾನಿಸಿರುವ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯು (ಡಿಪಿಐಐಟಿ), ರಿಟೇಲ್ ವಹಿವಾಟಿನಲ್ಲಿ ತೊಡಗಿರುವವರು ಜಿಎಸ್‌ಟಿಯಲ್ಲಿ ಆಗಿರುವ ಇಳಿಕೆಯನ್ನು ರಸೀದಿಯಲ್ಲಿ ‘ಜಿಎಸ್‌ಟಿ ರಿಯಾಯಿತಿ’ ಎಂಬುದಾಗಿ ನಮೂದಿಸಬೇಕು ಎಂದು ಹೇಳಿದೆ.
  • ‘ಜಿಎಸ್‌ಟಿಯಿಂದಾಗಿನ ರಿಯಾಯಿತಿಯನ್ನು ಪ್ರಮುಖವಾಗಿ ತೋರಿಸಬೇಕು. ಉದಾಹರಣೆಗೆ, ಪೋಸ್ಟರ್‌ಗಳು, ಫ್ಲೈಯರ್‌ಗಳು ಹಾಗೂ ಜಾಹೀರಾತುಗಳ ಮೂಲಕ (ಟಿ.ವಿ., ಮುದ್ರಣ ಮತ್ತು ಆನ್‌ಲೈನ್‌ ಮಾಧ್ಯಮ) ತಿಳಿಸಬೇಕು’ ಎಂದು ಅದು ಸೂಚಿಸಿದೆ.

ಜಿಎಸ್ಟಿ ಇಳಿಕೆ ಲಾಭ ಗ್ರಾಹಕರಿಗೆ

  • ಜಿಎಸ್‌ಟಿ ದರದಲ್ಲಿನ ಪರಿಷ್ಕರಣೆಯ ಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಮದರ್ ಡೈರಿ ಮಂಗಳವಾರ ಹೇಳಿದೆ. ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳು, ಸಂಸ್ಕರಿತ ಆಹಾರ ಸೇರಿದಂತೆ ತನ್ನ ಬಹುತೇಕ ಉತ್ಪನ್ನಗಳ ಬೆಲೆಯು ಸೆಪ್ಟೆಂಬರ್‌ 22ರಿಂದ ಕಡಿಮೆ ಆಗಲಿದೆ ಎಂದು ಅದು ಹೇಳಿದೆ.
  • ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಅಂಗಸಂಸ್ಥೆ ಮದರ್ ಡೈರಿ. 200 ಗ್ರಾಂ ಪನೀರ್‌ ಬೆಲೆಯು ₹95 ಇರುವುದು ₹92ಕ್ಕೆ, 1 ಲೀಟರ್ ತುಪ್ಪದ ಬೆಲೆಯು ₹675 ಇರುವುದು ₹645ಕ್ಕೆ 100 ಗ್ರಾಂ ಬೆಣ್ಣೆಯ ಬೆಲೆಯು ₹62 ಇರುವುದು ₹58ಕ್ಕೆ ಇಳಿಕೆ ಕಾಣಲಿದೆ ಎಂದು ಹೇಳಿದೆ.

ಸತತ ನಾಲ್ಕನೇ ಸಲ ಚಿನ್ನ ಗೆದ್ದ ಕಿಪ್ಯೆಗಾನ್

ಸಂದರ್ಭ: ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: 1500 ಮೀ. ಓಟದಲ್ಲಿ ಕೆನ್ಯಾ ಅಥ್ಲೀಟ್‌ ದಾಖಲೆ

  • ಫೇತ್‌ ಕಿಪ್ಯೆಗಾನ್‌ ಎಂದಿನಂತೆ ಕೊನೆಯ ಲ್ಯಾಪ್‌ನಲ್ಲಿ ಅತ್ಯಮೋಘ ವೇಗ ಸಾಧಿಸಿ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 1500 ಮೀ. ಓಟದಲ್ಲಿ ಅಭೂತಪೂರ್ವ ನಾಲ್ಕನೇ ಸಲ ಚಿನ್ನ ಗೆದ್ದುಕೊಂಡರು.
  • ಮೂರು ಬಾರಿ ಒಲಿಂಪಿಕ್ ಚಾಂಪಿಯನ್ ಸಹ ಆಗಿರುವ ಕಿಪ್ಯೆಗಾನ್ ಮಂಗಳವಾರ 3ನಿ.52.15 ಸೆ.ಗಳಲ್ಲಿ ಓಟವನ್ನು ಪೂರೈಸಿ ಸಂಭ್ರಮಿಸಿದರು. ಆ ಹಾದಿಯಲ್ಲಿ ವಿಶ್ವದ ಅತಿ ಶ್ರೇಷ್ಠ ಮಧ್ಯಮ ದೂರದ ಓಟಗಾರ್ತಿ ಎಂಬ ಹಿರಿಮೆಗೂ ಪಾತ್ರರಾದರು.
  • ಇದೇ ದೇಶದ ದೋರ್ಕಸ್‌ ಇವೊಯಿ 3ನಿ.54.02 ಸೆ.ಗಳಲ್ಲಿ ಗುರಿತಲುಪಿ ಬೆಳ್ಳಿ ಗೆದ್ದರೆ, ಆಸ್ಟ್ರೇಲಿಯಾದ ಜೆಸಿಕಾ ಹಲ್ (3:55.16) ಕಂಚಿನ ಪದಕ ತಮ್ಮದಾಗಿಸಿಕೊಂಡರು.
  • 31 ವರ್ಷ ವಯಸ್ಸಿನ ಕಿಪ್ಯೆಗಾನ್‌ ನಾಲ್ಕು ಪದಕಗಳನ್ನು ಪಡೆಯುವ ಮೂಲಕ, ಪುರುಷರ ವಿಭಾಗದಲ್ಲಿ ಮೊರಾಕೊದ ಹಿಶಮ್ ಎಲ್‌ ಗೆರೂಝ್‌ ಅವರು 1997–2003ರ ಅವಧಿಯಲ್ಲಿ ಗೆದ್ದ ಪದಕಗಳ ಸಾಧನೆ ಸರಿಗಟ್ಟಿದರು.
  • ಕಾರ್ಡೆಲ್‌ಗೆ ಚಿನ್ನ: ಈ ಋತುವಿನಲ್ಲಿ ಉತ್ತಮ ಲಯದಲ್ಲಿರುವ ಅಮೆರಿಕದ ಕಾರ್ಡೆಲ್‌ ಟಿಂಚ್‌ ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದರು. ಜಮೈಕಾದ ಇಬ್ಬರು ಓಟಗಾರರ ಪೈಪೋಟಿ ಎದುರಿಸಿದ ಅವರು 12.99 ಸೆ.ಗಳಲ್ಲಿ ದೂರ ಕ್ರಮಿಸಿ ಮೊದಲಿಗರಾದರು.
  • ಒರ್ಲಾಂಡೊ ಬೆನೆಟ್‌ (13.08 ಸೆ) ಮತ್ತು ಟೈಲರ್ ಮ್ಯಾಸನ್ (13.12 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
  • ನಾಲ್ಕನೇ ಬಾರಿ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದ ಅಮೆರಿಕದ ಗ್ರಾಂಟ್‌ ಹೊಲೊವೆ ವರ ಕನಸು ನುಚ್ಚುನೂರಾಯಿತು.
  • ಒಲಿಂಪಿಕ್ ಚಾಂಪಿಯನ್ ಸಹ ಆಗಿರುವ 27 ವರ್ಷ ವಯಸ್ಸಿನ ಗ್ರಾಂಟ್‌ ಸೆಮಿಫೈನಲ್‌ನಲ್ಲಿ ಆರನೇ ಸ್ಥಾನಕ್ಕೆ ಸರಿದು ನಿರಾಶರಾದರು.

ಮಹಿಳೆಯರ 400 ಮೀ. ಓಟ: ಮೆಕ್‌ಲಾಗ್ಲಿನ್‌ ವಿಶ್ವದಾಖಲೆ

ಸಂದರ್ಭ: ಅಮೆರಿಕದ ಮೆಕ್‌ಲಾಗ್ಲಿನ್–ಲೆವ್ರೋನ್‌ ಅವರು ಮಂಗಳವಾರ ನಡೆದ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀ. ಓಟದಲ್ಲಿ ನೂತನ ವಿಶ್ವದಾಖಲೆ ಬರೆದರು.

  • 400 ಮೀ. ಹರ್ಡಲ್ಸ್‌ನಲ್ಲಿ ವಿಶ್ವದಾಖಲೆ ಹೊಂದಿರುವ 26 ವರ್ಷ ವಯಸ್ಸಿನ  ಮೆಕ್‌ಲಾಗ್ಲಿನ್ ಟೋಕಿಯೊದಲ್ಲಿ ಹರ್ಡಲ್ಸ್‌ ಬದಲು ಬರೇ 400 ಮೀ. ಓಟದಲ್ಲಿ ಭಾಗವಹಿಸಲು ನಿರ್ಧರಿಸಿದ್ದರು. ಅವರು 48.29 ಸೆ.ಗಳಲ್ಲಿ ಗುರಿತಲುಪಿದರು. ಇದರಿಂದಾಗಿ 2006ರಷ್ಟು ಹಿಂದೆ ಸಾನ್ಯಾ ರಿಚರ್ಡ್ಸ್‌–ರಾಸ್ ಹೆಸರಿನಲ್ಲಿದ್ದ ಹಳೆಯ ದಾಖಲೆ (48.70 ಸೆ.) ಭಗ್ನಗೊಂಡಿತು.
  • ಮೆಕ್‌ಲಾಗ್ಲಿನ್ ಅವರು ಫೈನಲ್‌ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಅಥ್ಲೀಟ್‌ ಆಗಿದ್ದಾರೆ.

ಅಗ್ರಸ್ಥಾನಕ್ಕೆ ಮರಳಿದ ಮಂದಾನ

ಸಂದರ್ಭ: ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ ಸ್ಮೃತಿ ಮಂದಾನ ಅವರು ಪ್ರಕಟವಾದ ಮಹಿಳಾ ಐಸಿಸಿ ಏಕದಿನ ರ‍್ಯಾಂಕಿಂಗ್‌ನ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ.

  • ಸೆ. 30ರಂದು ಆರಂಭವಾಗುವ ಮಹಿಳಾ ಏಕದಿನ ವಿಶ್ವಕಪ್‌ಗೆ ಮೊದಲು ಅಗ್ರಸ್ಥಾನ ಪಡೆದಿರುವುದು ಮಂದಾನ ಅವರ ವಿಶ್ವಾಸ ಹೆಚ್ಚಿಸಲಿದೆ. 2019ರಲ್ಲಿ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದ ಅವರು, ಈ ವರ್ಷ ಎರಡು ಸಲ ಅಲ್ಪಾ ವಧಿಗೆ ಈ ಸ್ಥಾನ ಉಳಿಸಿಕೊಂಡಿದ್ದರು.
  • ಮಂದಾನ 735 ರೇಟಿಂಗ್ ಪಾಯಿಂಟ್ಪಡೆದಿದ್ದರೆ, ಇಂಗ್ಲೆಂಡ್ ನಾಟ್ಶಿವರ್‌–ಬ್ರಂಟ್‌ 731 ಪಾಯಿಂಟ್ಸ್ಹೊಂದಿದ್ದಾರೆ.
  • ಭಾರತ ತಂಡದ ಆರಂಭ ಆಟಗಾರ್ತಿ ಪ್ರತಿಕಾ ರಾವಲ್‌ ನಾಲ್ಕು ಸ್ಥಾನ ಬಡ್ತಿ ಪಡೆದು 42ನೇ ಸ್ಥಾನದಲ್ಲಿದ್ದಾರೆ.
  • ಮುಲ್ಲನಪುರ ಪಂದ್ಯದಲ್ಲಿ ಅಜೇಯ 77 ರನ್ ಹೊಡೆದಿದ್ದ ಆಸ್ಟ್ರೇಲಿಯಾದ ಎಡಗೈ ಆಟಗಾರ್ತಿ ಬೆತ್ ಮೂನಿ ಮೂರು ಸ್ಥಾನ ಬಡ್ತಿ ಪಡೆದು ಐದನೇ ಸ್ಥಾನಕ್ಕೇರಿದ್ದಾರೆ.
  • ಭಾರತದ ಸ್ಪಿನ್ನರ್ ಸ್ನೇಹ ರಾಣಾ ಐದು ಸ್ಥಾನ ಬಡ್ತಿ ಪಡೆದು 13ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್‌ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ಪ್ರಚಲಿತ ವಿದ್ಯಮಾನಗಳು: 16ನೇ ಸೆಪ್ಟೆಂಬರ್ 2025

ವಕ್ಫ್‌ (ತಿದ್ದುಪಡಿ) ಕಾಯ್ದೆ–2025: ಪ್ರಮುಖ ಅಂಶಗಳಿಗೆ ತಡೆ

ಸಂದರ್ಭ: ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷ ಅನುಸರಿಸಿದ ವ್ಯಕ್ತಿ ಮಾತ್ರ ಆಸ್ತಿಯನ್ನು ವಕ್ಫ್‌ಗೆ ದಾನ ನೀಡಬಹುದು ಎಂಬ ಷರತ್ತು ಸೇರಿದಂತೆ ವಕ್ಫ್‌ (ತಿದ್ದುಪಡಿ) ಕಾಯ್ದೆ–2025ರ ಕೆಲವು ಪ್ರಮುಖ ಅಂಶಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಆದರೆ, ಇಡೀ ಕಾಯ್ದೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ಯಾವ ಕಾನೂನಿಗೆ ತಡೆ?

  • 2025ರ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ, ಯಾವ ವ್ಯಕ್ತಿಯು ಕನಿಷ್ಟ ಐದು ವರ್ಷಗಳಿಂದ ಇಸ್ಲಾಂ ಧರ್ಮವನ್ನು ಪಾಲಿಸುತ್ತಿದ್ದಾನೋ ಆ ವ್ಯಕ್ತಿಯು ಮಾತ್ರ ವಕ್ಫ್ ಮಂಡಳಿಗಳಿಗೆ ಭೂಮಿಯನ್ನು ದಾನ ಕೊಡಲು ಅರ್ಹ ಎಂಬ ಅಂಶಕ್ಕೆ ಸದ್ಯಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಒಪ್ಪಿದೆ. ಈ ಅಂಶದ ಬಗ್ಗೆ ರಾಜ್ಯ ಸರ್ಕಾರಗಳು ಹೊಸ ನಿಯಮಗಳನ್ನು ರೂಪಿಸುವವರೆಗೂ ಈ ಅಂಶಕ್ಕೆ (ಕಾಯ್ದೆಯಲ್ಲಿರುವ ಸೆಕ್ಷನ್ 3 (1), (r) ತಡೆ ನೀಡಬೇಕು ಎಂದು ಸುಪ್ರೀಂಕೋರ್ಟ್ ನ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
  • ಇನ್ನು, ಎರಡನೆಯದಾಗಿ, ವಕ್ಫ್ ಆಸ್ತಿಯನ್ನು ಗುರುತಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಸರ್ಕಾರದಿಂದ ನಿಯೋಜಿಸಲಾಗಿರುವ ಅಧಿಕಾರಿಗೆ ನೀಡಿರುವ ಅಂಶಕ್ಕೂ ತಡೆಯನ್ನು ನೀಡಲಾಗಿದೆ. ಇದು ಅಧಿಕಾರ ಪ್ರತ್ಯೇಕತೆಯ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಇನ್ನಿತರ ತಡೆಗಳು:

  • ಆಸ್ತಿ ಅತಿಕ್ರಮಣದ ಬಗ್ಗೆ ಸಂಬಂಧಿಸಿದ ಅಧಿಕಾರಿಯು ವರದಿ ಸಲ್ಲಿಸುವವರೆಗೆ ವಕ್ಫ್ ಆಸ್ತಿ ಎಂದು ಪರಿಗಣಿಸಬಾರದು ಎಂಬ ಅಂಶ (ಕಾಯ್ದೆಯಲ್ಲಿರುವ ಸೆಕ್ಷನ್ 3C (2).
  • ಒಂದು ವೇಳೆ ಆಸ್ತಿಯು ಸರ್ಕಾರಿ ಜಮೀನು ಎನ್ನುವುದನ್ನು ನಿಯೋಜಿತ ಅಧಿಕಾರಿಯು (ಅಥವಾ ಜಿಲ್ಲಾಧಿಕಾರಿ) ವಕ್ಫ್ ಭೂಮಿಯನ್ನು ಸರ್ಕಾರಿ ಭೂಮಿ ಎಂದು ಗುರುತಿಸಿದರೆ, ಕಂದಾಯ ದಾಖಲೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂಬ ಅಂಶಕ್ಕೂ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
  • ನಿಯೋಜಿತ ಅಧಿಕಾರಿ ಸಲ್ಲಿಸಿರುವ ವರದಿ ಆಧರಿಸಿ, ದಾಖಲೆಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ಮಾಡಬೇಕು. ಎಂದು ವಕ್ಫ್ ಬೋರ್ಡ್ ಗೆ ರಾಜ್ಯ ಸರ್ಕಾರ ಸೂಚಿಸಬೇಕು ಎಂಬ ಅಂಶ. (ಸೆಕ್ಷನ್ 3ಸಿ (4)).

ಆದೇಶದ ಪ್ರಮುಖಾಂಶಗಳು

l ಕನಿಷ್ಠ ಐದು ವರ್ಷ ಇಸ್ಲಾಂ ಧರ್ಮವನ್ನು ಅನುಸರಿಸಿದ ವ್ಯಕ್ತಿ ಮಾತ್ರ ಆಸ್ತಿಯನ್ನು ವಕ್ಫ್‌ಗೆ ದಾನ ನೀಡಬಹುದು ಎಂಬ ಅಂಶ ಹೊಂದಿರುವ ಸೆಕ್ಷನ್ 3(1)(ಆರ್‌)ಗೆ ಪೀಠ ತಡೆ ನೀಡಿದೆ

lಒಬ್ಬ ವ್ಯಕ್ತಿಯು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿ ದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸುವವರೆಗೂ ತಡೆಯಾಜ್ಞೆ ಜಾರಿಯಲ್ಲಿರಲಿದೆ ಎಂದು ಹೇಳಿದೆ

l‘ವಿವಾದದಲ್ಲಿರುವ ಆಸ್ತಿಗೆ ಸಂಬಂಧಿಸಿದಂತೆ ನಿಯೋಜಿತ ಅಧಿಕಾರಿ ತನ್ನ ವರದಿ ಸಲ್ಲಿಸುವವರೆಗೂ ಆಸ್ತಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿಗಣಿಸಬಾರದು’ ಎಂದು ಹೇಳುವ ಅಂಶಕ್ಕೂ ತಡೆ ನೀಡಿದೆ

l ನಿಯೋಜಿತ ಅಧಿಕಾರಿಯು ಆಸ್ತಿಯನ್ನು ಸರ್ಕಾರಿ ಆಸ್ತಿ ಎಂದು ನಿರ್ಧರಿಸಿದರೆ, ಅವರು ಕಂದಾಯ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು ಮತ್ತು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂಬ ಅಂಶಕ್ಕೆ ತಡೆ ನೀಡಲಾಗಿದೆ

l ವಿವಾದಿತ ಆಸ್ತಿಯ ಮಾಲೀಕತ್ವದ ಬಗ್ಗೆ ನ್ಯಾಯಮಂಡಳಿಯು ಅಂತಿಮ ನಿರ್ಣಯ ತೆಗೆದುಕೊಳ್ಳುವವರೆಗೆ ಮತ್ತು ಮೇಲ್ಮನವಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮುಂದಿನ ಆದೇಶದವರೆಗೆ ಆ ಆಸ್ತಿಯ ಹಕ್ಕನ್ನು ಯಾವುದೇ ಮೂರನೇ ವ್ಯಕ್ತಿಗೆ ನೀಡುವಂತಿಲ್ಲ ಎಂದು ಹೇಳಿದೆ

l ರಾಜ್ಯ ವಕ್ಫ್ ಮಂಡಳಿಗಳು ಮತ್ತು ಕೇಂದ್ರ ವಕ್ಫ್‌ ಪರಿಷತ್ತಿನಲ್ಲಿ ಮುಸ್ಲಿಮೇತರರ ಪ್ರಾತಿನಿಧ್ಯಕ್ಕೆ ಮಿತಿ ಹೇರಿದೆ

l ಕೇಂದ್ರ ವಕ್ಫ್‌ ಪರಿಷತ್ತಿನ 22 ಸದಸ್ಯರಲ್ಲಿ ಗರಿಷ್ಠ ನಾಲ್ವರು ಮುಸ್ಲಿಮೇತರರು ಇರಬಹುದು

l ರಾಜ್ಯ ವಕ್ಫ್‌ ಮಂಡಳಿಯ 11 ಸದಸ್ಯರಲ್ಲಿ ಗರಿಷ್ಠ ಮೂವರು ಮುಸ್ಲಿಮೇತರರಿಗಷ್ಟೇ ಅವಕಾಶ

ಪೀಠ ಹೇಳಿದ್ದು…

lಕಾಯ್ದೆಯು ಅಸಾಂವಿಧಾನಿಕವಾಗಿದೆ ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದೆನಿಸಿದಾಗ ಮಾತ್ರ ಅದನ್ನು ತಡೆಹಿಡಿಯಬೇಕು

lಪೀಠವು ಒಂದು ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಗಣಿಸುವಾಗ ಅದರ ನೈಜ ಸ್ವರೂಪ, ಕಾರ್ಯವ್ಯಾಪ್ತಿ ಮತ್ತು ಉದ್ದೇಶವನ್ನು ಪರಿಗಣಿಸುವುದು ಅಗತ್ಯ

lಸಂವಿಧಾನದಲ್ಲಿರುವ ಅಂಶಗಳ ಸ್ಪಷ್ಟ ಉಲ್ಲಂಘನೆಯ ಹೊರತು, ಸಂಸತ್ತು ಅಥವಾ ರಾಜ್ಯ ಶಾಸಕಾಂಗ ರೂಪಿಸಿದ ಕಾಯ್ದೆಯನ್ನು ಅಮಾನ್ಯವೆಂದು ಘೋಷಿಸಲು ಸಾಧ್ಯವಿಲ್ಲ

ವಕ್ಫ್ ತಿದ್ದುಪಡಿ ಮಸೂದೆ, 2025: ಭಾರತದಲ್ಲಿ ವಕ್ಫ್ ಇತಿಹಾಸ
ಪರಿಚಯ

ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಮಹತ್ವವನ್ನು ಹೊಂದಿರುವ ವಕ್ಫ್ ಆಸ್ತಿಗಳನ್ನು ನಿಯಂತ್ರಿಸಲು ಮತ್ತು ರಕ್ಷಿಸಲು ಭಾರತ ಕೆಲಸ ಮಾಡುತ್ತಿದೆ. ಮೊದಲ ಪ್ರಮುಖ ಕಾನೂನು, 1954 ರ ವಕ್ಫ್ ಕಾಯ್ದೆ, ಈ ಆಸ್ತಿಗಳ ನಿರ್ವಹಣೆಗೆ ಅಡಿಪಾಯ ಹಾಕಿತು. ಕಾಲಾನಂತರದಲ್ಲಿ, ಆಡಳಿತವನ್ನು ಸುಧಾರಿಸಲು ಮತ್ತು ದುರುಪಯೋಗವನ್ನು ತಡೆಗಟ್ಟಲು ಕಾನೂನುಗಳನ್ನು ನವೀಕರಿಸಲಾಗಿದೆ. ವಕ್ಫ್ ತಿದ್ದುಪಡಿ ಮಸೂದೆ 2025 ಪಾರದರ್ಶಕತೆಯನ್ನು ಹೆಚ್ಚಿಸುವುದು, ನಿರ್ವಹಣೆಯನ್ನು ಬಲಪಡಿಸುವುದು ಮತ್ತು ವಕ್ಫ್ ಸ್ವತ್ತುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಈ ಸುಧಾರಣೆಗಳು ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಅನುಸರಿಸುತ್ತವೆ.

ಕೇಂದ್ರ ಸರ್ಕಾರ ಜಾರಿಗೆ ತಂದ 1995ರ ವಕ್ಫ್ ಕಾಯ್ದೆಯು ಪ್ರಸ್ತುತ ವಕ್ಫ್ ಆಸ್ತಿಗಳನ್ನು ನಿಯಂತ್ರಿಸುತ್ತದೆ. ಪ್ರಮುಖ ಆಡಳಿತ ಮಂಡಳಿಗಳೆಂದರೆ:

ಕೇಂದ್ರ ವಕ್ಫ್ ಕೌನ್ಸಿಲ್ (ಸಿಡಬ್ಲ್ಯೂಸಿ) – ನೀತಿಯ ಬಗ್ಗೆ ಸರ್ಕಾರ ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಸಲಹೆ ನೀಡುತ್ತದೆ ಆದರೆ ವಕ್ಫ್ ಆಸ್ತಿಗಳನ್ನು ನೇರವಾಗಿ ನಿಯಂತ್ರಿಸುವುದಿಲ್ಲ.
ರಾಜ್ಯ ವಕ್ಫ್ ಮಂಡಳಿಗಳು (ಎಸ್ ಡಬ್ಲ್ಯೂಬಿಗಳು) – ಪ್ರತಿ ರಾಜ್ಯದಲ್ಲಿ ವಕ್ಫ್ ಆಸ್ತಿಗಳನ್ನು ನಿರ್ವಹಿಸುವುದು ಮತ್ತು ರಕ್ಷಿಸುವುದು.
ವಕ್ಫ್ ನ್ಯಾಯಮಂಡಳಿಗಳು – ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ನಿರ್ವಹಿಸುವ ವಿಶೇಷ ನ್ಯಾಯಾಂಗ ಸಂಸ್ಥೆಗಳು.
ಈ ವ್ಯವಸ್ಥೆಯು ಉತ್ತಮ ನಿರ್ವಹಣೆ ಮತ್ತು ಸಮಸ್ಯೆಗಳ ತ್ವರಿತ ಪರಿಹಾರವನ್ನು ಖಚಿತಪಡಿಸುತ್ತದೆ. ವರ್ಷಗಳಲ್ಲಿ, ಕಾನೂನು ಬದಲಾವಣೆಗಳು ವಕ್ಫ್ ಆಡಳಿತವನ್ನು ಹೆಚ್ಚು ಪಾರದರ್ಶಕ, ದಕ್ಷ ಮತ್ತು ಉತ್ತರದಾಯಿಯನ್ನಾಗಿ ಮಾಡಿವೆ.

ಭಾರತದಲ್ಲಿ ವಕ್ಫ್ ಇತಿಹಾಸದ ಅವಲೋಕನ

ಭಾರತದಲ್ಲಿ ವಕ್ಫ್ ಆಸ್ತಿಗಳನ್ನು ಆಡಳಿತವನ್ನು ಸುಧಾರಿಸಲು ಮತ್ತು ದುರಾಡಳಿತವನ್ನು ತಡೆಗಟ್ಟಲು ಹಲವಾರು ಕಾನೂನುಗಳಿಂದ ನಿಯಂತ್ರಿಸಲಾಗಿದೆ:

ಮುಸಲ್ಮಾನ ವಕ್ಫ್ ಮಾನ್ಯತೆ ಕಾಯ್ದೆ, 1913:
ಕುಟುಂಬದ ಲಾಭಕ್ಕಾಗಿ ವಕ್ಫ್ ಗಳನ್ನು ರಚಿಸಲು ಮುಸ್ಲಿಮರಿಗೆ ಅವಕಾಶ ಮಾಡಿಕೊಟ್ಟಿತು, ಅಂತಿಮವಾಗಿ ದತ್ತಿ ಉದ್ದೇಶಗಳಿಗೆ ಕಾರಣವಾಯಿತು.
ವಕ್ಫ್ ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿತ್ತು ಆದರೆ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ.

  1. ಮುಸಲ್ಮಾನ್ ವಕ್ಫ್ ಕಾಯ್ದೆ, 1923: ವಕ್ಫ್ ನಿರ್ವಹಣೆಯಲ್ಲಿ ಸರಿಯಾದ ಲೆಕ್ಕಪತ್ರ ಮತ್ತು ಪಾರದರ್ಶಕತೆಗಾಗಿ ನಿಯಮಗಳನ್ನು ಪರಿಚಯಿಸಿತು.
  2. ಮುಸಲ್ಮಾನ ವಕ್ಫ್ ಮಾನ್ಯತಾ ಕಾಯ್ದೆ, 1930: ಕುಟುಂಬ ವಕ್ಫ್ ಗಳ ಕಾನೂನು ಸಿಂಧುತ್ವವನ್ನು ಬಲಪಡಿಸಿತು, 1913 ರ ಕಾಯ್ದೆಗೆ ಕಾನೂನು ಬೆಂಬಲವನ್ನು ನೀಡಿತು.
  3. ವಕ್ಫ್ ಕಾಯ್ದೆ, 1954:

ವಕ್ಫ್ ಆಸ್ತಿಗಳ ಮೇಲ್ವಿಚಾರಣೆಗಾಗಿ ಮೊದಲ ಬಾರಿಗೆ ರಾಜ್ಯ ವಕ್ಫ್ ಮಂಡಳಿಗಳನ್ನು (ಎಸ್ ಡಬ್ಲ್ಯೂಬಿ) ರಚಿಸಲಾಯಿತು.
ಭಾರತದ ಸ್ವಾತಂತ್ರ್ಯದ ನಂತರ ವಕ್ಫ್ ನಿರ್ವಹಣೆಯನ್ನು ಬಲಪಡಿಸಲಾಯಿತು.
ರಾಜ್ಯ ವಕ್ಫ್ ಮಂಡಳಿಗಳ ಮೇಲ್ವಿಚಾರಣೆಗಾಗಿ 1964 ರಲ್ಲಿ ಸೆಂಟ್ರಲ್ ವಕ್ಫ್ ಕೌನ್ಸಿಲ್ ಆಫ್ ಇಂಡಿಯಾವನ್ನು ಸ್ಥಾಪಿಸಿದರು ಮತ್ತು ವಕ್ಫ್ ಗಳ ಕೇಂದ್ರೀಕರಣಕ್ಕೆ ಮಾರ್ಗವನ್ನು ಒದಗಿಸಿದರು.
ಈ ಕೇಂದ್ರೀಯ ಸಂಸ್ಥೆಯು ವಕ್ಫ್ ಕಾಯ್ದೆ, 1954 ರ ಸೆಕ್ಷನ್ 9 (1) ರ ನಿಬಂಧನೆಗಳ ಅಡಿಯಲ್ಲಿ ಸ್ಥಾಪಿಸಲಾದ ವಿವಿಧ ರಾಜ್ಯ ವಕ್ಫ್ ಮಂಡಳಿಗಳ ಅಡಿಯಲ್ಲಿ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತದೆ.

  1. ವಕ್ಫ್ ಕಾಯ್ದೆ, 1954 (1959, 1964, 1969, ಮತ್ತು 1984) ಗೆ ತಿದ್ದುಪಡಿಗಳು: ಈ ತಿದ್ದುಪಡಿಗಳು ವಕ್ಫ್ ಆಸ್ತಿಗಳ ಆಡಳಿತವನ್ನು ಮತ್ತಷ್ಟು ಸುಧಾರಿಸುವ ಗುರಿಯನ್ನು ಹೊಂದಿದ್ದವು.
  2. ವಕ್ಫ್ ಕಾಯ್ದೆ, 1995: ಈ ಸಮಗ್ರ ಕಾಯ್ದೆಯು 1954 ರ ಕಾಯ್ದೆ ಮತ್ತು ಅದರ ತಿದ್ದುಪಡಿಗಳನ್ನು ರದ್ದುಗೊಳಿಸಿತು:

ಭಾರತದಲ್ಲಿ ವಕ್ಫ್ ಆಸ್ತಿಗಳ ಆಡಳಿತವನ್ನು ನಿಯಂತ್ರಿಸಲು ಇದನ್ನು ಜಾರಿಗೆ ತರಲಾಯಿತು.
ಇದು ವಕ್ಫ್ ಕೌನ್ಸಿಲ್, ರಾಜ್ಯ ವಕ್ಫ್ ಮಂಡಳಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅಧಿಕಾರ ಮತ್ತು ಕಾರ್ಯಗಳನ್ನು ಮತ್ತು ಮುತವಳ್ಳಿಯ ಕರ್ತವ್ಯಗಳನ್ನು ಸಹ ಒದಗಿಸುತ್ತದೆ.
ವಕ್ಫ್ ನ್ಯಾಯಮಂಡಳಿಗಳು, ಸಿವಿಲ್ ನ್ಯಾಯಾಲಯಗಳಿಗೆ ಹೋಲುವ ಅಧಿಕಾರಗಳನ್ನು ಹೊಂದಿರುವ ವಿಶೇಷ ನ್ಯಾಯಾಲಯಗಳನ್ನು ರಚಿಸಿದರು.
ನ್ಯಾಯಾಧಿಕರಣದ ತೀರ್ಪುಗಳು ಅಂತಿಮ ಮತ್ತು ಸಿವಿಲ್ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗುವುದಿಲ್ಲ.

  1. ವಕ್ಫ್ (ತಿದ್ದುಪಡಿ) ಕಾಯ್ದೆ, 2013 ಈ ಕೆಳಗಿನವುಗಳನ್ನು ಒಳಗೊಂಡಂತೆ ಗಮನಾರ್ಹ ಬದಲಾವಣೆಗಳನ್ನು ಪರಿಚಯಿಸಿತು:

ಮುಸ್ಲಿಂ ಕಾನೂನು ತಜ್ಞರು ಸೇರಿದಂತೆ ಮೂವರು ಸದಸ್ಯರ ವಕ್ಫ್ ನ್ಯಾಯಮಂಡಳಿಗಳನ್ನು ರಚಿಸಿದರು.
ಪ್ರತಿ ರಾಜ್ಯ ವಕ್ಫ್ ಮಂಡಳಿಯಲ್ಲಿ ಇಬ್ಬರು ಮಹಿಳಾ ಸದಸ್ಯರ ಅಗತ್ಯವಿತ್ತು.
ವಕ್ಫ್ ಆಸ್ತಿಗಳ ಮಾರಾಟ ಅಥವಾ ಉಡುಗೊರೆಯನ್ನು ನಿಷೇಧಿಸಲಾಯಿತು.
ಉತ್ತಮ ಬಳಕೆಗಾಗಿ ವಕ್ಫ್ ಆಸ್ತಿಗಳ ಗುತ್ತಿಗೆ ಅವಧಿಯನ್ನು 3 ವರ್ಷದಿಂದ 30 ವರ್ಷಗಳಿಗೆ ಹೆಚ್ಚಿಸಲಾಗಿದೆ.

  1. ವಕ್ಫ್ (ತಿದ್ದುಪಡಿ) ಮಸೂದೆ, 2025, ಮತ್ತು ಮುಸಲ್ಮಾನ ವಕ್ಫ್ (ರದ್ದತಿ) ಮಸೂದೆ, 2024

ವಕ್ಫ್ ಆಡಳಿತವನ್ನು ಆಧುನೀಕರಿಸುವುದು, ಕಾನೂನು ವಿವಾದಗಳನ್ನು ಕಡಿಮೆ ಮಾಡುವುದು ಮತ್ತು ದಕ್ಷತೆಯನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ.
1995ರ ಕಾಯ್ದೆ ಮತ್ತು 2013ರ ತಿದ್ದುಪಡಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಯೋಜನೆಗಳು

ಕ್ವಾಮಿ ವಕ್ಫ್ ಬೋರ್ಡ್ ತರಾಕಿಯಾತಿ ಯೋಜನೆ (ಕ್ಯೂಡಬ್ಲ್ಯೂಬಿಟಿಎಸ್) ಮತ್ತು ಶಹರಿ ವಕ್ಫ್ ಸಂಪತ್ತಿ ವಿಕಾಸ್ ಯೋಜನೆ (ಎಸ್ ಡಬ್ಲ್ಯೂಎಸ್ ವಿವೈ) ಅನ್ನು ಭಾರತ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ (ಎಂಒಎಂಎ) ಮೂಲಕ ಜಾರಿಗೆ ತರಲಾಗುತ್ತಿದೆ. ಈ ಎರಡು ಯೋಜನೆಗಳು ರಾಜ್ಯ ವಕ್ಫ್ ಮಂಡಳಿಗಳ ಯಾಂತ್ರೀಕರಣ ಮತ್ತು ಆಧುನೀಕರಣಕ್ಕಾಗಿವೆ.

ಕ್ಯೂಡಬ್ಲ್ಯೂಬಿಟಿಎಸ್ ಅಡಿಯಲ್ಲಿ, ವಕ್ಫ್ ಆಸ್ತಿಗಳ ದಾಖಲೆಗಳನ್ನು ಗಣಕೀಕರಣಗೊಳಿಸಲು ಮತ್ತು ಡಿಜಿಟಲೀಕರಣಗೊಳಿಸಲು ಮತ್ತು ವಕ್ಫ್ ಮಂಡಳಿಗಳ ಆಡಳಿತವನ್ನು ಹೆಚ್ಚಿಸಲು ಮಾನವಶಕ್ತಿಯನ್ನು ನಿಯೋಜಿಸಲು ಸಿಡಬ್ಲ್ಯೂಸಿ ಮೂಲಕ ರಾಜ್ಯ ವಕ್ಫ್ ಮಂಡಳಿಗಳಿಗೆ ಸರ್ಕಾರಿ ಅನುದಾನ (ಜಿಐಎ) ಒದಗಿಸಲಾಗುತ್ತದೆ.
ವಕ್ಫ್ ಆಸ್ತಿಗಳಲ್ಲಿ ವಾಣಿಜ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಎಸ್ ಡಬ್ಲ್ಯೂಎಸ್ ವಿವೈ ವಕ್ಫ್ ಮಂಡಳಿಗಳು ಮತ್ತು ಸಂಸ್ಥೆಗಳಿಗೆ ಬಡ್ಡಿರಹಿತ ಸಾಲವನ್ನು ನೀಡುತ್ತದೆ.
2019-20 ರಿಂದ 2023-24 ರವರೆಗೆ ಕ್ಯೂಡಬ್ಲ್ಯೂಬಿಟಿಎಸ್ ಮತ್ತು ಎಸ್ ಡಬ್ಲ್ಯೂಎಸ್ ವಿವೈ ಅಡಿಯಲ್ಲಿ ಕ್ರಮವಾಗಿ 23.87 ಕೋಟಿ ಮತ್ತು 7.16 ಕೋಟಿ ರೂ.

ತೀರ್ಮಾನ:

1913 ರಿಂದ 2024 ರವರೆಗೆ ಭಾರತದಲ್ಲಿ ವಕ್ಫ್ ಕಾನೂನುಗಳಲ್ಲಿನ ಬದಲಾವಣೆಗಳು ಸರಿಯಾದ ಆಡಳಿತ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವಾಗ ಸಮಾಜದ ಪ್ರಯೋಜನಕ್ಕಾಗಿ ವಕ್ಫ್ ಆಸ್ತಿಗಳನ್ನು ರಕ್ಷಿಸಲು ಮತ್ತು ನಿರ್ವಹಿಸಲು ಬಲವಾದ ಪ್ರಯತ್ನವನ್ನು ತೋರಿಸುತ್ತವೆ. ಪ್ರತಿಯೊಂದು ಕಾನೂನು ವಕ್ಫ್ ದತ್ತಿಗಳ ಮುಖ್ಯ ಉದ್ದೇಶವನ್ನು ಉಳಿಸಿಕೊಂಡು ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ವಕ್ಫ್ ತಿದ್ದುಪಡಿ ಮಸೂದೆ 2025 ವಕ್ಫ್ ನಿರ್ವಹಣೆಯನ್ನು ಹೆಚ್ಚು ಪಾರದರ್ಶಕ, ಜವಾಬ್ದಾರಿಯುತ ಮತ್ತು ಅಂತರ್ಗತಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

‘ಅಕ್ರಮವಿದ್ದರೆ ಎಸ್‌ಐಆರ್‌ ರದ್ದು’

ಸಂದರ್ಭ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಸಮಯದಲ್ಲಿ ಕೇಂದ್ರ ಚುನಾವಣಾ ಆಯೋಗ ಅಳವಡಿಸಿ ಕೊಂಡ ವಿಧಾನದಲ್ಲಿ ಯಾವುದೇ ಅಕ್ರಮ ಕಂಡುಬಂದರೆ, ಸಂಪೂರ್ಣ ಪ್ರಕ್ರಿಯೆ ಯನ್ನೇ ರದ್ದುಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

  • ಬಿಹಾರದ ಎಸ್‌ಐಆರ್‌ನ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಅಕ್ಟೋಬರ್‌ 7ರಂದು ನಡೆಸುವುದಾಗಿ ನ್ಯಾಯಮೂರ್ತಿ ಗಳಾದ ಸೂರ್ಯಕಾಂತ್‌ ಹಾಗೂ ಜಾಯ್‌ಮಲ್ಯ ಬಾಗ್ಚಿ ಅವರ ಪೀಠ ತಿಳಿಸಿತು. ಈ ಪ್ರಕ್ರಿಯೆಯ ಕುರಿತು ಅರೆಬರೆ ಅಭಿಪ್ರಾಯಗಳನ್ನು ನೀಡುವುದಿಲ್ಲ ಎಂದೂ ಪೀಠ ಹೇಳಿತು. 

ವಕೀಲರ ವಾದವೇನು?

  • ಎಸ್‌ಐಆರ್‌ ನ ಸಂಪೂರ್ಣ ‍ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗಕ್ಕೆ ಅವಕಾಶ ನೀಡಬೇಕು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನ್ಯಾಯಾಲಯವು ಅದನ್ನು ಉತ್ತಮವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ
  • ಬಫರ್ಝೋನ್ಕಡಿತ ಮಸೂದೆ ವಾಪಸ್

ಸಂದರ್ಭ:  ಕೆರೆಗಳ ಸಂರಕ್ಷಿತ ಪ್ರದೇಶವನ್ನು (ಬಫರ್‌ ಝೋನ್‌) ಕಡಿಮೆ ಮಾಡಲು ಅವಕಾಶ ಕಲ್ಪಿಸುವ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ’ಯನ್ನು ಸ್ಪಷ್ಟೀಕರಣ ಕೇಳಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ರಾಜ್ಯ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದಾರೆ.

  • ಕೆರೆಗಳು ಮತ್ತು ರಾಜಕಾಲುವೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ‘ಸಂರಕ್ಷಿತ ಪ್ರದೇಶ’ ವನ್ನು ನಿಗದಿಪಡಿಸಲು ಹಾಗೂ ಬಫರ್‌ಝೋನ್‌ನಲ್ಲಿ ಸಾರ್ವಜನಿಕ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಗಳನ್ನು ಕೈಗೊಳ್ಳಲು ಮಸೂದೆ ತಿದ್ದುಪಡಿಗೆ ಸರ್ಕಾರ ಮುಂದಾಗಿತ್ತು.
  • ಆದರೆ, ಸರ್ಕಾರದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ನಾಗರಿಕರ ಸಂಘವಾದ ‘ಬೆಂಗಳೂರು ಟೌನ್ ಹಾಲ್‌’, ರಾಜ್ಯಪಾಲರಿಗೆ ಪತ್ರ ಬರೆದು ಮಸೂದೆಗೆ ಅಂಕಿತ ಹಾಕದಂತೆ ಮನವಿ ಮಾಡಿತ್ತು.
  • ‘ಕೆರೆಗಳ ಬಫರ್ ಝೋನ್‌ ಅನ್ನು 30 ಮೀಟರ್‌ಗೆ ಇಳಿಸುವುದರಿಂದ ಬೆಂಗಳೂರಿನ ನೀರಿನ ಭದ್ರತೆ ಮತ್ತು ಪರಿಸರ ವ್ಯವಸ್ಥೆಯ ಸಮಗ್ರತೆಗೆ ಅಪಾಯ ಉಂಟಾಗಲಿದೆ. ಪರಿಸರ ಸಮತೋಲನ ಕಾಪಾಡಲು 30 ಮೀಟರ್‌ ಬದಲು 300 ಮೀಟರ್‌ಗೆ ಬಫರ್ ಝೋನ್‌ ಹೆಚ್ಚಿಸುವ ಅಗತ್ಯವಿದೆ’ ಎಂದು ಸಂಘವು ಪತ್ರದಲ್ಲಿ ಪ್ರತಿಪಾದಿಸಿತ್ತು.
  • ‘ಬೆಂಗಳೂರು ಟೌನ್ ಹಾಲ್‌’ ಸಂಘದ ಪತ್ರದಲ್ಲಿದ್ದ ಅಂಶಗಳನ್ನು ಉಲ್ಲೇಖಿಸಿ ಸ್ಪಷ್ಟೀಕರಣ ಕೇಳಿರುವ ರಾಜ್ಯಪಾಲರು, ಆ ಅಂಶಗಳಿಗೆ ವಿವರವಾದ ಸ್ಪಷ್ಟನೆಗಳ ಸಹಿತ ಕಡತ ಮತ್ತೊಮ್ಮೆ ಕಳುಹಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
  • ಮತಾಂತರಗೊಂಡವರ ಜಾತಿ ಯಾವುದು?

ಸಂದರ್ಭ: ಜಾತಿ ತಾರತಮ್ಯ, ಶೋಷಣೆಗೆ ಗುರಿಯಾಗಿದ್ದ ದಲಿತರು ಸೇರಿದಂತೆ ದುರ್ಬಲ ಜಾತಿಗಳ ಲಕ್ಷಾಂತರ ಮಂದಿ ಕ್ರೈಸ್ತ, ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ದಲಿತರು ಮತಾಂತರವಾದ ನಂತರವೂ ತಾರತಮ್ಯ, ಸಾಮಾಜಿಕ–ಆರ್ಥಿಕ ಅಸಮಾನತೆ ಎದುರಿಸುತ್ತಿದ್ದಾರೆ. ಹೀಗಾಗಿ ತಮ್ಮನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಎಂದೇ ಪರಿಗಣಿಸಿ, ಸೌಲಭ್ಯಗಳನ್ನು ನೀಡಬೇಕು ಎಂದು ಹಲವು ದಶಕಗಳಿಂದ ದಲಿತ ಕ್ರೈಸ್ತರು ಮತ್ತು ದಲಿತ ಮುಸ್ಲಿಮರು ಹೋರಾಟ ಮಾಡುತ್ತಿದ್ದಾರೆ.

  • ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಎಸ್ಸಿ ಸಮು ದಾಯಗಳನ್ನು, 342ನೇ ವಿಧಿ ಅಡಿಯಲ್ಲಿ ಪರಿಶಿಷ್ಟ ಪಂಗಡಗಳನ್ನು ಮತ್ತು 340ನೇ ವಿಧಿಯಲ್ಲಿ ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸಲಾಗುತ್ತಿದೆ.
  • ಎಸ್ಸಿ ಪಟ್ಟಿಗೆ ಹೊಸ ಜಾತಿಯನ್ನು ಸೇರಿಸುವ ಇಲ್ಲವೇ ತೆಗೆಯುವ ಅಧಿಕಾರ ಸಂಸತ್ಗೆ ಮಾತ್ರ ಇದೆ. ಸಂಸತ್ತಿನ ನಿರ್ಧಾರದ ಬಳಿಕ ರಾಷ್ಟ್ರಪತಿಯವರು ಸಹಿ ಹಾಕಿ ಅದನ್ನು ಅಧಿಕೃತಗೊಳಿಸುತ್ತಾರೆ.
  • ಒಬ್ಬ ಎಸ್‌ಸಿ ವ್ಯಕ್ತಿಯು ಹಿಂದೂ ಧರ್ಮದಿಂದ ಬೇರೊಂದು ಧರ್ಮಕ್ಕೆ ಮತಾಂತರಗೊಂಡರೆ, ಅವರನ್ನು ಎಸ್‌ಸಿ ಎಂದು ಪರಿಗಣಿಸಲಾಗದು ಎಂದು 341ನೇ ವಿಧಿಯು ಹೇಳುತ್ತದೆ.
  • 1950ರಲ್ಲಿ ಹಿಂದೂಗಳನ್ನು ಮಾತ್ರ ಎಸ್‌ಸಿ ಎಂದು ಸಾಂವಿಧಾನಿಕ ಆದೇಶದ ಮೂಲಕ ಪರಿಗಣಿಸಲಾಗಿತ್ತು. ನಂತರ 1956ರ ತಿದ್ದುಪಡಿ ಮೂಲಕ ದಲಿತ ಸಿಖ್ಖರನ್ನು, 1990ರ ತಿದ್ದುಪಡಿಯ ಮೂಲಕ ದಲಿತ ಬೌದ್ಧರನ್ನು ಎಸ್‌ಸಿಗಳೆಂದು ಪರಿಗಣಿಸಬಹುದು ಎಂದು ಬದಲಿಸಲಾಯಿತು. ಆದರೆ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರನ್ನು ಎಸ್‌ಸಿ ಎಂದು ಪರಿಗಣಿಸುವ ಬಗ್ಗೆ ಯಾವುದೇ ತಿದ್ದುಪಡಿ ಆಗಿಲ್ಲ.
  • ಒಬಿಸಿ ಮೀಸಲಾತಿ: ಕ್ರೈಸ್ತ ಮತ್ತು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಎಸ್‌ಸಿಗಳನ್ನು ಕೆಲವು ರಾಜ್ಯಗಳಲ್ಲಿ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂದರೆ, ರಾಜ್ಯ ಸರ್ಕಾರಗಳು ಬಯಸಿದರೆ, ದಲಿತ ಕ್ರೈಸ್ತರನ್ನು ಮತ್ತು ದಲಿತ ಮುಸ್ಲಿಮರನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಬಹುದು. ಆದರೆ, ಈ ಎರಡೂ ಧರ್ಮಗಳಿಗೆ ಮತಾಂತರಗೊಂಡ ದಲಿತರನ್ನು ಎಸ್‌ಸಿ ಎಂದು ಪರಿಗಣಿಸಬಹುದೇ ಎನ್ನುವ ವಿಚಾರ ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿದೆ.
  • ಧರ್ಮದ ಆಧಾರದಲ್ಲಿ ಎಸ್‌ಸಿಗಳನ್ನು ಗುರುತಿಸುವ 1950ರ ಸಾಂವಿಧಾನಿಕ ಆದೇಶವೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎನ್ನುವುದು ದಲಿತ ಕ್ರೈಸ್ತ ಸಂಘಟನೆಗಳ ಆರೋಪವಾಗಿದೆ. 15(1) ವಿಧಿಗೆ (ಧರ್ಮದ ಹೆಸರಿನಲ್ಲಿ ತಾರತಮ್ಯ ಸಲ್ಲದು) ಆದೇಶವು ವಿರುದ್ಧವಾಗಿದೆ ಎನ್ನುವುದು ಅವರ ವಾದ. ಹೀಗಾಗಿ ದಲಿತರು ಮತಾಂತರಗೊಂಡರೂ ಅವರ‌‌ನ್ನು ಎಸ್‌ಸಿ ಎಂದೇ ಗುರುತಿಸಬೇಕು ಎನ್ನುವುದು ಅವರ ಆಗ್ರಹ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದು ಎಂದು ಸಂವಿಧಾನ ಹೇಳುತ್ತಿದ್ದು, ಮೀಸಲಾತಿ ನಿರಾಕರಿಸಲೂ ಧರ್ಮ ಆಧಾರವಾಗಬಾರದು ಎನ್ನುವುದು ಅವರ ಪ್ರತಿಪಾದನೆ.
  • 1983ರ ಸೂಸೈ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣ ದಲ್ಲಿ 1950ರ ಸಾಂವಿಧಾನಿಕ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಮತಾಂತರದ ನಂತರವೂ ಜಾತಿ ಮುಂದುವರಿ ಯುತ್ತದೆ ಎನ್ನುವುದನ್ನು ಆ ಪ್ರಕರಣದ ತೀರ್ಪಿನಲ್ಲಿ ಸು‍ಪ್ರೀಂ ಕೋರ್ಟ್ ಒಪ್ಪಿಕೊಂಡಿತು. ಆದರೆ, ಮತಾಂತರಗೊಂಡ ದಲಿತರು ಹಿಂದೂ ದಲಿತರಷ್ಟೇ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ಎಂಬುದಕ್ಕೆ ಸೂಕ್ತ ಆಧಾರ ಇಲ್ಲ ಎಂದಿತು. ಮತಾಂತರಗೊಂಡವರ ಶೋಷಣೆಯ ಸ್ವರೂಪ ಏನು ಅನ್ನುವುದರ ಬಗ್ಗೆ ಸಾಮಾಜಿಕ–ಆರ್ಥಿಕ ದತ್ತಾಂಶ ಒದಗಿಸುವಂತೆ ಸುಪ್ರೀಂ ಕೋರ್ಟ್ ತಾಕೀತು ಮಾಡಿತು.
  • ಅದರ ನಂತರ ಈ ವಿಚಾರದಲ್ಲಿ ಸಾಕಷ್ಟು ಕಾನೂನು ಹೋರಾಟ, ಶಾಸಕಾಂಗದ ಪ್ರಯತ್ನಗಳು ನಡೆದಿವೆ. ಆದರೆ, ಇದುವರೆಗೂ ಯಾವುದೇ ಫಲಶ್ರುತಿ ಸಿಕ್ಕಿಲ್ಲ. ಸಮಾನತೆ, ಘನತೆಯನ್ನು ಅರಸಿ ಮತಾಂತರಗೊಂಡ ದಲಿತರು ಮತ್ತು ಇತರ ದುರ್ಬಲ ಜಾತಿಗಳ ಜನರು, ಆ ಕಾರಣಕ್ಕಾಗಿ ಮೀಸಲಾತಿ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಒಂದು ಮಾನವೀಯ ವಿಚಾರವನ್ನಾಗಿ ಪರಿಗಣಿಸಿ, ಸಮಸ್ಯೆಗೆ ಪರಿಹಾರ ನೀಡಬೇಕು ಎನ್ನುವ ಒತ್ತಾಯವೂ ಇದೆ.

ಹೋರಾಟಕ್ಕೆ ದಶಕಗಳ ಇತಿಹಾಸ

  • ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಗೆ ಮತಾಂತರಗೊಂಡ ದಲಿತರನ್ನು ಕೂಡ ಪರಿಶಿಷ್ಟ ಜಾತಿಯವರು ಎಂದು ಪರಿಗಣಿಸಬೇಕು ಎಂಬ ಕೂಗಿಗೆ ದಶಕಗಳ ಇತಿಹಾಸವಿದೆ. ಈಗಲೂ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಮತಾಂತರಗೊಂಡವರಿಗೂ ಎಸ್‌ಸಿ ಸ್ಥಾನಮಾನ ನೀಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ವಿರೋಧಿಸುತ್ತಲೇ ಬಂದಿದೆ. ದಲಿತ ಕ್ರೈಸ್ತರು, ದಲಿತ ಮುಸ್ಲಿಮರನ್ನು ಪರಿಶಿಷ್ಟ ಜಾತಿಯವರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳು ಅಭಿಪ್ರಾಯಪಟ್ಟ ಉದಾಹರಣೆಗಳೂ ಇವೆ. ‌
  • lಭಾರತೀಯ ರಿಜಿಸ್ಟ್ರಾರ್‌ ಜನರಲ್‌ (ಆರ್‌ಜಿಐ) ಕಚೇರಿಯು ಆರಂಭದಿಂದಲೂ ಹಿಂದೂ ಅಥವಾ ಸಿಖ್‌ ಧರ್ಮದವರನ್ನು ಬಿಟ್ಟು ಉಳಿದವರನ್ನು ಎಸ್‌ಸಿ ವ್ಯಾಪ್ತಿಗೆ ತರುವುದನ್ನು ಆಕ್ಷೇಪಿಸುತ್ತಲೇ ಇದೆ. ಅಸ್ಪೃಶ್ಯತೆ ಆಚರಣೆಯಿಂದ ಸಾಮಾಜಿಕವಾಗಿ ತಾರತಮ್ಯ ಅನುಭವಿಸುತ್ತಿರುವ ಸಮುದಾಯಗಳಿಗೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಲಾಗುತ್ತದೆ ಎಂದು 1978ರಲ್ಲಿ ಅದು ಅಭಿಪ್ರಾಯ ಪಟ್ಟಿತ್ತು
  • l2001ರಲ್ಲಿ ಈ ವಿಚಾರ ಮತ್ತೆ ಪ್ರಸ್ತಾಪವಾದಾಗಲೂ ಆರ್‌ಜಿಐ ತನ್ನ ಹಿಂದಿನ ಅಭಿಪ್ರಾಯವನ್ನೇ ವ್ಯಕ್ತಪಡಿಸಿತ್ತು. ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರು ಭಿನ್ನವಾದ ಜಾತಿಯ ಗುಂಪುಗಳಿಗೆ ಸೇರಿದವರು. ಈ ಕಾರಣದಿಂದ ‘ಒಂದು ಜನಾಂಗೀಯ ಗುಂಪಿ’ಗೆ ಸೇರಿದವರು ಎಂದು ವರ್ಗೀಕರಿಸಲು ಸಾಧ್ಯವಿಲ್ಲ ಎಂದು ಆರ್‌ಜಿಐ ಪ್ರತಿಪಾದಿಸಿತ್ತು. ಅಸ್ಪೃಶ್ಯತೆ ಆಚರಣೆ ಹಿಂದೂ ಧರ್ಮ ಮತ್ತು ಅದರ ಕವಲುಗಳಲ್ಲಿ ಮಾತ್ರ ಇದೆ. ಕ್ರೈಸ್ತ ಮತ್ತು ಇಸ್ಲಾಂನಲ್ಲಿ ಅಂತಹ ಆಚರಣೆ ಇಲ್ಲದಿರುವುದರಿಂದ, ಪರಿಶಿಷ್ಟ ಜಾತಿಯವರು ಈ ಧರ್ಮಗಳಿಗೆ ಮತಾಂತರಗೊಂಡಾಗ ಅವರ ಎಸ್‌ಸಿ ಮಾನ್ಯತೆ ಹೋಗುತ್ತದೆ ಎಂಬುದು ಅದರ ಮತ್ತೊಂದು ವಾದ. ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಕೂಡ ಇದೇ ವಾದವನ್ನು ಮಂಡಿಸಿದೆ
  • lದಲಿತ ಕ್ರೈಸ್ತರನ್ನು ಎಸ್‌ಸಿಗೆ ಸೇರಿದವರು ಎಂದು ಪರಿಗಣಿಸುವ ಪ್ರಸ್ತಾವವನ್ನು 2019ರಲ್ಲಿ ತಿರಸ್ಕರಿಸಿದ್ದ ಕೇಂದ್ರ ಸರ್ಕಾರ, ಅವರನ್ನು ಎಸ್‌ಸಿ ವರ್ಗದಿಂದ ಹೊರಗಿಡುವುದಕ್ಕೆ 1936ರ ಬ್ರಿಟಿಷ್‌ ಆಡಳಿತದ ಆದೇಶವನ್ನು ಉಲ್ಲೇಖಿಸಿತ್ತು. ಬ್ರಿಟಿಷ್‌ ಸರ್ಕಾರವು ಜಾತಿಗಳನ್ನು ಪಟ್ಟಿ ಮಾಡುವಾಗ ‘ಶೋಷಿತ ವರ್ಗಗಳು’ ಎಂಬ ವರ್ಗೀಕರಣ ಮಾಡಿತ್ತು. ಆದರೆ, ಈ ವರ್ಗಗಳಲ್ಲಿರುವ ಜಾತಿಯಿಂದ ಭಾರತೀಯ ಕ್ರೈಸ್ತರನ್ನು ಹೊರಗಿಟ್ಟಿತ್ತು
  • lದಲಿತ ಕ್ರೈಸ್ತರು ಮತ್ತು ದಲಿತ ಮುಸ್ಲಿಮರಿಗೆ ಎಸ್‌ಸಿ ಮಾನ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿರುವವರು, 2007ರಲ್ಲಿ ಯುಪಿಎ ಸರ್ಕಾರ ರಚಿಸಿದ್ದ ರಂಗನಾಥ್‌ ಮಿಶ್ರಾ ನೇತೃತ್ವದ ಸಮಿತಿ ಮಾಡಿದ ಶಿಫಾರಸುಗಳನ್ನು ಉಲ್ಲೇಖಿಸುತ್ತಿದ್ದಾರೆ. ‘ಜನರು ಸ್ವಯಂಪ್ರೇರಿತರಾಗಿ ಮತಾಂತರಗೊಂಡಿರುವುದು ಅವರು ಹೊಂದಿರುವ ಎಸ್‌ಸಿ ಮಾನ್ಯತೆ ಮೇಲೆ ಪರಿಣಾಮ ಬೀರಬಾರದು’ ಎಂದು ಸಮಿತಿ ಹೇಳಿತ್ತು. ಆದರೆ, ಈ ವರದಿಯನ್ನು ಸರ್ಕಾರ ಒಪ್ಪಿಕೊಂಡಿಲ್ಲ ಎಂದು ಎನ್‌ಡಿಎ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು
  • lಕಳೆದ ವರ್ಷ ಪ್ರಕರಣವೊಂದರಲ್ಲಿ ತಮಿಳುನಾಡಿನ ಮಹಿಳೆಯೊಬ್ಬರಿಗೆ ಪರಿಶಿಷ್ಟ ಜಾತಿಯ ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ಆ ಮಹಿಳೆಯ ಕುಟುಂಬವು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವುದು ವಿಚಾರಣೆ ವೇಳೆ ದೃಢಪಟ್ಟಿತ್ತು
  • lಕ್ರೈಸ್ತ ಧರ್ಮಕ್ಕೆ ಮತಾಂತರ ಆದ ತಕ್ಷಣ ಜನರು ಪರಿಶಿಷ್ಟ ಜಾತಿಯ ಮಾನ್ಯತೆ ಕಳೆದುಕೊಳ್ಳುತ್ತಾರೆ. ಆ ಬಳಿಕ ಅವರಿಗೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ರಕ್ಷಣೆ ಸಿಗುವುದಿಲ್ಲ ಎಂದು ಆಂಧ್ರ ಪ್ರದೇಶದ ಹೈಕೋರ್ಟ್‌ ಈ ವರ್ಷದ ಏಪ್ರಿಲ್‌ನಲ್ಲಿ ಪ್ರಕರಣವೊಂದರಲ್ಲಿ ತೀರ್ಪು ನೀಡಿತ್ತು
  • ಸಗಟು ಹಣದುಬ್ಬರ ಏರಿಕೆ: ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದ ಹಣದುಬ್ಬರ ಏರಿಕೆ: ಕೇಂದ್ರ

ಸಂದರ್ಭ: ದೇಶದ ಸಗಟು  ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಆಗಸ್ಟ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಶೇ 0.52ರಷ್ಟು ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

  • ಆಹಾರ ಪದಾರ್ಥಗಳು ಮತ್ತು ತಯಾರಿಕಾ ವಸ್ತುಗಳ ಬೆಲೆ ಹೆಚ್ಚಳದಿಂದ ಸಗಟು ಹಣದುಬ್ಬರವು ಏರಿಕೆಯಾಗಿದೆ ಎಂದು ಅದು ತಿಳಿಸಿದೆ.
  • ಸಗಟು ಹಣದುಬ್ಬರ ಪ್ರಮಾಣವು ಜುಲೈ ಮತ್ತು ಜೂನ್ನಲ್ಲಿ ಕ್ರಮವಾಗಿ ಶೇ (–)0.58 ಮತ್ತು ಶೇ (–) 0.19ರಷ್ಟಿತ್ತು. ಏಪ್ರಿಲ್ನಲ್ಲಿ ಇದು ಶೇ 0.85ರಷ್ಟಿತ್ತು. ಕಳೆದ ಆಗಸ್ಟ್ನಲ್ಲಿ ಶೇ 1.25ರಷ್ಟು ಇತ್ತು ಎಂದು ತಿಳಿಸಿದೆ.
  • ಆಹಾರ ಪದಾರ್ಥಗಳು, ತಯಾರಿಕಾ ವಲಯದ ವಸ್ತುಗಳು, ಆಹಾರೇತರ ಉತ್ಪನ್ನಗಳು, ಸಾರಿಗೆ ಉಪಕರಣಗಳ ಬೆಲೆ ಹೆಚ್ಚಳವಾಗಿದೆ. ಇದು ಸಗಟು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣ ಎಂದು ಕೇಂದ್ರ ತಿಳಿಸಿದೆ.
  • ಜುಲೈನಲ್ಲಿ ಆಹಾರ ಪದಾರ್ಥಗಳ ಬೆಲೆ ಇಳಿಕೆ ಪ್ರಮಾಣ ಶೇ 6.29ರಷ್ಟಿತ್ತು. ಇದು ಆಗಸ್ಟ್‌ನಲ್ಲಿ ಶೇ 3.06ಕ್ಕೆ ತಗ್ಗಿದೆ. ತರಕಾರಿಗಳು ಮತ್ತು ಧಾನ್ಯಗಳ ಬೆಲೆ ಇಳಿಕೆ ಪ್ರಮಾಣ ಕ್ರಮವಾಗಿ ಶೇ 14.18 ಮತ್ತು ಶೇ 14.85ರಷ್ಟು ಆಗಿದೆ. ಜುಲೈನಲ್ಲಿ ಇದು ಕ್ರಮವಾಗಿ ಶೇ 28.96 ಮತ್ತು ಶೇ 15.12ರಷ್ಟು ಇತ್ತು.
  • ಜಿಎಸ್‌ಟಿ ಪರಿಷ್ಕರಣೆಯಿಂದ ಹಣದುಬ್ಬರವು ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಪಿಎಚ್‌ಡಿಸಿಸಿಐ ಅಧ್ಯಕ್ಷ ಹೇಮಂತ್ ಜೈನ್ ಹೇಳಿದ್ದಾರೆ.
  • ಕಚ್ಚಾ ತೈಲ, ಸರಕುಗಳ ಬೆಲೆ ಏರಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವು ಇಳಿಕೆಯಿಂದಾಗಿ ಸೆಪ್ಟೆಂಬರ್‌ ನಲ್ಲಿ ಸಗಟು ಹಣದುಬ್ಬರವು ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ಐಸಿಆರ್‌ಎ ಅಂದಾಜಿಸಿದೆ.
  • ಆಹಾರ ಪದಾರ್ಥಗಳ ಬೆಲೆ ಏರಿಕೆ ಯಿಂದ ಚಿಲ್ಲರೆ ಹಣದುಬ್ಬರವು ಆಗಸ್ಟ್ನಲ್ಲಿ ಶೇ 2.07ರಷ್ಟು ದಾಖಲಾಗಿತ್ತು.
  • ಅಮೆರಿಕಕ್ಕೆ ರಫ್ತು ಆಗಸ್ಟ್ನಲ್ಲಿ ಇಳಿಕೆ

ಸಂದರ್ಭ: ಭಾರತದಿಂದ ಅಮೆರಿಕಕ್ಕೆ ಆಗುವ ರಫ್ತುಗಳ ಪ್ರಮಾಣವು ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಶೇಕಡ 14ರಷ್ಟು ಕಡಿಮೆ ಆಗಿದೆ.

  • ಭಾರತದ ಸರಕುಗಳ ಮೇಲೆ ಅಮೆರಿಕವು ಆಗಸ್ಟ್‌ನಿಂದ ಶೇ 50ರಷ್ಟು ತೆರಿಗೆ ವಿಧಿಸುತ್ತಿದೆ. ಆಗಸ್ಟ್‌ನಲ್ಲಿ ಭಾರತದಿಂದ ಅಮೆರಿಕಕ್ಕೆ ₹60,464 ಕೋಟಿ ಮೌಲ್ಯದ ಸರಕುಗಳು, ಸೇವೆಗಳು ರಫ್ತಾಗಿವೆ. ಜುಲೈನಲ್ಲಿ ರಫ್ತು ಮೊತ್ತವು ₹70,512 ಕೋಟಿ ಆಗಿತ್ತು.
  • ಅಮೆರಿಕಕ್ಕೆ ಆಗುವ ರಫ್ತಿನ ಮೊತ್ತ ಕಡಿಮೆ ಆಗಿದ್ದರೂ, ಭಾರತದ ರಫ್ತು ಪಟ್ಟಿಯಲ್ಲಿ ಅಮೆರಿಕವು ಆಗಸ್ಟ್‌ನಲ್ಲಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
  • ಹಿಂದಿನ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಅಮೆರಿಕಕ್ಕೆ ರಫ್ತು ಪ್ರಮಾಣವು ಶೇ 7.15ರಷ್ಟು ಹೆಚ್ಚಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ–ಅಂಶಗಳು ಹೇಳಿವೆ.
  • ಅಮೆರಿಕದ ನಂತರದ ಸ್ಥಾನದಲ್ಲಿ ಯುಎಇ, ನೆದರ್ಲೆಂಡ್ಸ್‌, ಚೀನಾ, ಬ್ರಿಟನ್ ಇವೆ.
  • ಆಗಸ್ಟ್‌ 7ರಿಂದ ಅನ್ವಯ ಆಗುವಂತೆ ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 25ರಷ್ಟು ತೆರಿಗೆ ವಿಧಿಸಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಅಮೆರಿಕವು ಆಗಸ್ಟ್‌ 27ರಿಂದ ಅನ್ವಯ ಆಗುವಂತೆ ಭಾರತದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ತೆರಿಗೆ ವಿಧಿಸುತ್ತಿದೆ.
  • ಆರ್ಇಐಟಿಈಕ್ವಿಟಿಎಂದು ಪರಿಗಣನೆ

ಸಂದರ್ಭ: ಮ್ಯೂಚುವಲ್‌ ಫಂಡ್‌ಗಳ ಪಾಲಿಗೆ ರಿಯಲ್ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳನ್ನು (ಆರ್‌ಇಐಟಿ) ‘ಈಕ್ವಿಟಿ’ ಎಂದು ವರ್ಗೀಕರಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತೀರ್ಮಾನಿಸಿರುವುದು ಪ್ರಗತಿಪರ ನಡೆ ಎಂದು ಉದ್ಯಮ ವಲಯ ಹೇಳಿದೆ.

  • ಸೆಬಿ ನಡೆಯು ಆರ್‌ಇಐಟಿಗಳಲ್ಲಿ ಹೂಡಿಕೆದಾರರ ಭಾಗವಹಿಸುವಿಕೆಯನ್ನು ಬಲಪಡಿಸುತ್ತದೆ ಎಂದು ಉದ್ಯಮದ ಪ್ರತಿನಿಧಿಗಳು ಹೇಳಿದ್ದಾರೆ.
  • ಆರ್‌ಇಐಟಿಗಳಲ್ಲಿ ಮ್ಯೂಚುವಲ್‌ ಫಂಡ್‌ಗಳ ಹೂಡಿಕೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಸೆಬಿ ಕಳೆದ ವಾರ, ಸೆಬಿ (ಮ್ಯೂಚುವಲ್ಫಂಡ್ಸ್‌) ನಿಯಮ – 1996’ಕ್ಕೆ ತಿದ್ದುಪಡಿ ತರಲು ಒಪ್ಪಿಗೆ ನೀಡಿದೆ. ತಿದ್ದುಪಡಿ ತಂದು ಆರ್‌ಇಐಟಿಗಳನ್ನು ‘ಈಕ್ವಿಟಿ’ ಎಂದು ವರ್ಗೀಕರಿಸಲಾಗುತ್ತದೆ. ಆದರೆ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳ ವರ್ಗೀಕರಣವನ್ನು ‘ಹೈಬ್ರಿಡ್’ ಎಂದೇ ಉಳಿಸಿಕೊಳ್ಳಲಾಗುತ್ತದೆ.
  • ಸೆಬಿ ಕೈಗೊಂಡಿರುವ ತೀರ್ಮಾನದ ಪರಿಣಾಮವಾಗಿ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಹೂಡಿಕೆ ಇನ್ನಷ್ಟು ಹೆಚ್ಚಾಗುತ್ತದೆ, ಇನ್ನಷ್ಟು ಹೆಚ್ಚು ಆರ್‌ಇಐಟಿಗಳು ಭಾರತದ ಷೇರುಪೇಟೆ ಗಳಲ್ಲಿ ನೋಂದಾಯಿತವಾಗಲು ಇದು ಉತ್ತೇಜನ ನೀಡುತ್ತದೆ ಎಂದು ಭಾರತೀಯ ಆರ್‌ಇಐಟಿಗಳ ಸಂಘಟನೆಯು (ಐಆರ್‌ಎ) ಹೇಳಿದೆ. ಷೇರುಪೇಟೆ ನೋಂದಾಯಿತ ಆರ್‌ಇಐಟಿಗಳ ಪ್ರತಿನಿಧಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  • ಆರ್‌ಇಐಟಿಗಳು ಆದಾಯ ತಂದುಕೊಡುವ ರಿಯಲ್‌ ಎಸ್ಟೇಟ್‌ ಆಸ್ತಿಗಳ ಮಾಲೀಕತ್ವ ಹೊಂದಿರುತ್ತವೆ ಅಥವಾ ಅಂತಹ ಆಸ್ತಿಗಳನ್ನು ನಿರ್ವ ಹಿಸುತ್ತಿರುತ್ತವೆ. ಅವು ಹೂಡಿಕೆದಾರರಿಗೆ ಆಸ್ತಿಯನ್ನು ನೇರವಾಗಿ ಖರೀದಿಸದೆಯೇ ಅವುಗಳ ಆದಾಯದಲ್ಲಿ ಒಂದು ಪಾಲನ್ನು ಪಡೆದುಕೊಳ್ಳಲು ನೆರವಾಗುತ್ತವೆ.
  • ಜಾಗತಿಕ ಮಟ್ಟದಲ್ಲಿ ಕೂಡ ಆರ್‌ಇಐಟಿಗಳು ಈಕ್ವಿಟಿ ಸೂಚ್ಯಂಕಗಳ ಭಾಗವಾಗಿವೆ, ಸೆಬಿ ಈಗ ತೆಗೆದು ಕೊಂಡಿ ರುವ ತೀರ್ಮಾನವು ಪ್ರಗತಿಪರವಾದುದು ಎಂದು ಐಆರ್‌ಎ ಹೇಳಿದೆ. ದೇಶದಲ್ಲಿ ಈಗ ಐದು ಆರ್‌ಇಐಟಿಗಳು ಷೇರುಪೇಟೆಯಲ್ಲಿ ನೋಂದಾಯಿತ ಆಗಿವೆ.
  • ವಂತಾರಕ್ಕೆ ಎಸ್ಐಟಿ ಕ್ಲೀನ್ಚಿಟ್

ಸಂದರ್ಭ: ವನ್ಯಜೀವಿ ರಕ್ಷ‌ಣಾ ಮತ್ತು ಪುನರ್ವಸತಿ ಕೇಂದ್ರ ‘ವಂತಾರ’ದ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿರುವ ಸುಪ್ರೀಂ ಕೋರ್ಟ್‌ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್ ಚಿಟ್‌ ನೀಡಿದೆ.

  • ‘ಅನಂತ್‌ ಅಂಬಾನಿ ಅವರು ಜಾಮ್‌ನಗರದಲ್ಲಿ ನಡೆಸುತ್ತಿರುವ ‘ವಂತಾರ’ದಲ್ಲಿ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಎಸ್‌ಐಟಿ ವರದಿ ನೀಡಿದ್ದು, ಅದನ್ನು ಸ್ವೀಕರಿಸಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
  • ‘ವಂತಾರದ ಕಾರ್ಯಚಟುವಟಿಕೆ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರ ನೇತೃತ್ವದ ಎಸ್‌ಐಟಿ ನೀಡಿರು‌ವ ವರದಿ ತೃಪ್ತಿ ನೀಡಿದೆ. ಈ ಪ್ರಕರಣವನ್ನು ಮುಕ್ತಾಯಗೊಳಿಸುತ್ತಿ ದ್ದೇವೆ’ ಎಂದು ‌ನ್ಯಾಯಮೂರ್ತಿಗಳಾದ ಪಂಕಜ್‌ ಮಿತ್ತಲ್, ಪಿ.ಬಿ.ವರಾಳೆ ಅವರ ಪೀಠ ತಿಳಿಸಿದೆ.
  • ‘ಇಂತಹ ಆರೋಪಗಳನ್ನು ಇನ್ನೂ ಮುಂದೆ ಪರಿಗಣಿಸಲಾಗುವುದಿಲ್ಲ. ತಜ್ಞರ ಸಹಕಾರದೊಂದಿಗೆ ತನಿಖಾ ತಂಡವು ಎಲ್ಲ ವಿಧದಲ್ಲಿ ಪರಿಶೀಲನೆ ನಡೆಸಿದೆ. ತನಿಖಾ ತಂಡ ನೀಡಿರುವ ವರದಿಯ ಆಧಾರದಲ್ಲಿಯೇ ನಾವು ಮುಂದಿನ ಕ್ರಮಕೈಗೊಳ್ಳುತ್ತೇವೆ. ಈ ವರದಿಯ ಶಿಫಾರಸು ಮತ್ತು ಸಲಹೆಗಳ ಆಧಾರದಲ್ಲಿ ಕ್ರಮಕೈಗೊಳ್ಳಲು ಎಲ್ಲ ಅಧಿಕಾರಿಗಳು ಸ್ವತಂತ್ರರಾಗಿರುತ್ತಾರೆ’ ಎಂದು ಹೇಳಿದೆ.
  • ಭಾರತ ಮತ್ತು ವಿದೇಶಗಳಿಂದ ಕಾನೂನುಬಾಹಿರವಾಗಿ ‘ವಂತಾರ’ವು ವನ್ಯಪ್ರಾಣಿಗಳನ್ನು ಪಡೆದುಕೊಳ್ಳುತ್ತಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗಿರುವ ಆರೋಪಗಳು ಮತ್ತು ಈ ಬಗ್ಗೆ ಎನ್‌ಜಿಒ ಮತ್ತು ವನ್ಯಜೀವಿ ಸಂಘಟನೆಗಳು ನೀಡಿದ್ದ ದೂರುಗಳ ಆಧಾರದಲ್ಲಿ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ಈ ಕುರಿತ ತನಿಖೆಗಾಗಿ ಆಗಸ್ಟ್‌ 25ರಂದು ಎಸ್‌ಐಟಿ ರಚಿಸಿತ್ತು.
  • ನ್ಯಾ. ಚಲಮೇಶ್ವರ್‌ ಅವರ ನೇತೃತ್ವದ ಎಸ್‌ಐಟಿಗೆ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್‌, ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಹೇಮಂತ್‌ ನಗ್ರಾಲೆ ಮತ್ತು ಕಂದಾಯ ಸೇವೆಗಳ ಹಿರಿಯ ಅಧಿಕಾರಿ ಅನಿಷ್‌ ಗುಪ್ತಾ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು.
  • ವಂತಾರದಲ್ಲಿನ ಬಂಧಿತ ಆನೆಗಳನ್ನು ಅವುಗಳ ಮಾಲೀಕ‌ರಿಗೆ ಹಿಂದಿರುಗಿಸಲು ಮೇಲ್ವಿಚಾರಣಾ ಸಮಿತಿ ರಚಿಸಬೇಕು ಎಂದು ಕೋರಿ ಸಿ.ಆರ್‌. ಜಯ ಸುಕಿನ್‌ ಸಲ್ಲಿಸಿರುವ ಅರ್ಜಿ ಅಸ್ಪಷ್ಟವಾಗಿದೆ ಎಂದು ಸುಪ್ರೀಂಕೋರ್ಟ್‌ ಆ.14ರಂದು ಹೇಳಿತ್ತು.
  • ವೈಶಾಲಿಗೆ ಗ್ರ್ಯಾಂಡ್ಸ್ವಿಸ್ಚೆಸ್ ಕಿರೀಟ: ಮುಂದಿನ ವರ್ಷದ ಕ್ಯಾಂಡಿಡೇಟ್ಸ್ಗೂ ಅರ್ಹತೆ

ಸಂದರ್ಭ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಆರ್‌.ವೈಶಾಲಿ ಸತತ ಎರಡನೇ ಬಾರಿ ಫಿಡೆ ಮಹಿಳಾ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟ ಧರಿಸಿದರು. ಆ ಮೂಲಕ ಮುಂದಿನ ವರ್ಷದ ಮಹಿಳಾ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನೂ ಸಂಪಾದಿಸಿದರು.

  • ಮಾಜಿ ವಿಶ್ವ ಮಹಿಳಾ ಚಾಂಪಿಯನ್‌ ಝೊಂಗ್‌ಯಿ ತಾನ್ ಜೊತೆ ಹೋರಾಡಿ ಡ್ರಾ ಸಾಧಿಸಿದ ಅವರು ಅಂತಿಮವಾಗಿ 11 ಸುತ್ತುಗಳಿಂದ 8 ಅಂಕ ಕಲೆಹಾಕಿದರು.
  • ಅಜರ್‌ಬೈಜಾನ್‌ನ ಉಲ್ವಿಯಾ ಫತಾಲಿಯೇವಾ ಜೊತೆ ಡ್ರಾ ಮಾಡಿಕೊಂಡ ರಷ್ಯಾದ ಕ್ಯಾತರಿನಾ ಲಾಗ್ನೊ ಸಹ ಎಂಟು ಅಂಕ ಪಡೆದರೂ ಟೈಬ್ರೇಕರ್‌ನಲ್ಲಿ ಎರಡನೇ ಸ್ಥಾನಕ್ಕೆ ಸರಿದರು. ಈ ಟೂರ್ನಿಯಿಂದ ಇಬ್ಬರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯುವ ಕಾರಣ ಲಾಗ್ನೊ ಸಹ ಅವಕಾಶ ಪಡೆದರು.
  • ಈ ಟೂರ್ನಿಯಲ್ಲಿ ವೈಶಾಲಿ ಆರು ಪಂದ್ಯ ಗೆದ್ದು, ಒಂದು ಸೋತು, ನಾಲ್ಕು ಡ್ರಾ ಮಾಡಿಕೊಂಡರು.
  • ವೈಶಾಲಿ ಅವರು ಕ್ಯಾಂಡಿಡೇಟ್ಸ್ಗೆ ಅರ್ಹತೆ ಪಡೆದ ಭಾರತದ ಮೂರನೇ ಆಟಗಾರ್ತಿ. ಜಾರ್ಜಿಯಾದ ಬಟುಮಿಯಲ್ಲಿ ವಿಶ್ವಕಪ್‌ ಗೆದ್ದುಕೊಂಡಿದ್ದ ದಿವ್ಯಾ ದೇಶಮುಖ್ ಮತ್ತು ರನ್ನರ್ ಅಪ್‌ ಆಗಿದ್ದ ಕೋನೇರು ಹಂಪಿ ಅವರು ಈ ಮೊದಲೇ ಅರ್ಹತೆ ಪಡೆದಿದ್ದರು.
  • ಕಜಾಕಸ್ತಾನದ ಬಿಬಿಸಾರ ಅಸೌನ್ಬಯೇವಾ, ಚೀನಾದ ತಾನ್ಝೊಂಗ್ಯಿ ಮತ್ತು  ಯಕ್ಸಿನ್ ಸಾಂಗ್ (ತಲಾ 7.5) ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.
  • ಓಪನ್ ವಿಭಾಗದಲ್ಲಿ ಡಚ್‌ ಗ್ರ್ಯಾಂಡ್‌ಮಾಸ್ಟರ್‌ ಅನಿಶ್‌ ಗಿರಿ ಎಂಟು ಅಂಕ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು. ಗಿರಿ ಜೊತೆಗೆ ಈ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದ ಮಥಾಯಸ್‌ ಬ್ಲೂಬಾಮ್, ಹಿಕಾರು ನಕಾಮುರಾ (ರೇಟಿಂಗ್ ಆಧಾರ), ಆರ್‌.ಪ್ರಜ್ಞಾನಂದ ಮತ್ತು ಫ್ಯಾಬಿಯಾನ ಕರುವಾನ ಅವರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯುವುದು ಖಚಿತವಾಗಿದೆ.‌
  • ಕೊನೆಯ ಮೂರು ಸ್ಥಾನಗಳು, ಗೋವಾದಲ್ಲಿ ಮುಂದಿನ ತಿಂಗಳು ನಡೆಯುವ ವಿಶ್ವಕಪ್‌ನಲ್ಲಿ ತೀರ್ಮಾನವಾಗಲಿವೆ. ಕ್ಯಾಂಡಿಡೇಟ್ಸ್ ವಿಜೇತರು ಹಾಲಿ ವಿಶ್ವ ಚಾಂಪಿಯನ್‌ ಗುಕೇಶ್ ಅವರಿಗೆ ಸವಾಲು ಹಾಕುವ ಅರ್ಹತೆ ಪಡೆಯುತ್ತಾರೆ.
  • ಭಾರತದ ಅರ್ಜುನ್ ಇರಿಗೇಶಿ, ನಿಹಾಲ್ ಸರಿನ್, ವಿದಿತ್ ಗುಜರಾತಿ ತಲಾ 7 ಅಂಕ, ಪ್ರಣವ್‌ ವಿ. 6.5 ಅಂಕ ಪಡೆದರು.
  • ವಿಶ್ವದಾಖಲೆಯೊಂದಿಗೆ ಡುಪ್ಲಾಂಟಿಸ್ಗೆ ಚಿನ್ನ
  • ಸ್ವೀಡನ್‌ನ ದಿಗ್ಗಜ ಅಥ್ಲೀಟ್ ಮೊಂಡೊ ಡುಪ್ಲಾಂಟಿಸ್ ಅವರು ಪೋಲ್‌ವಾಲ್ಟ್‌ ನಲ್ಲಿ ವಿಶ್ವದಾಖಲೆಯೊಂದಿಗೆ ಮೂರನೇ ಬಾರಿ ವಿಶ್ವ ಚಾಂಪಿಯನ್‌ ಷಿಪ್‌ ನಲ್ಲಿ ಚಿನ್ನದ ಪದಕ ಗೆದ್ದರು.
  • 25 ವರ್ಷ ವಯಸ್ಸಿನ ಈ ತಾರೆ, ಟೋಕಿಯೋದ ನ್ಯಾಷನಲ್ ಸ್ಟೇಡಿಯಂ ನಲ್ಲಿ 6.30 ಮೀ ಜಿಗಿದು 14ನೇ ಬಾರಿ ವಿಶ್ವ ದಾಖಲೆ ಸ್ಥಾಪಿಸಿದರು.

ಪ್ರಚಲಿತ ವಿದ್ಯಮಾನಗಳು: 15ನೇ ಸೆಪ್ಟೆಂಬರ್ 2025

ಪ್ರೌಢಶಾಲೆಯಿಂದಲೇ ಕೌಶಲ ತರಬೇತಿ

ಸಂದರ್ಭ: ಪ್ರೌಢಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ‘ಶಾಲೆಯಲ್ಲೇ ಕೌಶಲ’ ಎಂಬ ಕಾರ್ಯಕ್ರಮ ರೂಪಿಸಿದೆ.
  • ಮೊದಲ ಹಂತದಲ್ಲಿ 200 ಸರ್ಕಾರಿ ಪ್ರೌಢಶಾಲೆಗಳು ಹಾಗೂ 50 ಪದವಿ ಪೂರ್ವ ಕಾಲೇಜುಗಳನ್ನು ಗುರುತಿಸಿದ್ದು, ಒಟ್ಟು 7,500 ವಿದ್ಯಾರ್ಥಿಗಳಿಗೆ ಉನ್ನತೀಕರಿಸಿದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ಮೂಲಕ ತರಬೇತಿ ನೀಡಲಾಗುತ್ತದೆ. ಮುಂದಿನ ವರ್ಷ ಇನ್ನಷ್ಟು ಶಾಲಾ–ಕಾಲೇಜುಗಳಿಗೆ ಈ ಕಾರ್ಯಕ್ರಮ ವಿಸ್ತರಿಸಲಾಗುತ್ತದೆ.
  • ಈಗಾಗಲೇ ಶಾಲಾ–ಕಾಲೇಜುಗಳನ್ನು ಗುರುತಿಸಿ, ಅಲ್ಲಿನ ವಿದ್ಯಾರ್ಥಿಗಳಿಗೆ ಯಾವ ಐಟಿಐನಲ್ಲಿ ತರಬೇತಿ ನೀಡಬೇಕು ಎಂಬುದನ್ನು ಅಂತಿಮಗೊಳಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಶಿಕ್ಷಣ ಇಲಾಖೆ ಭರಿಸಲಿದ್ದು, ತರಬೇತಿ ನೀಡುವ ಕೆಲಸವನ್ನು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮಾಡಲಿದೆ.
  • ವಾರದಲ್ಲಿ ಮೂರು ದಿನ, ನಿತ್ಯ ಎರಡು ಗಂಟೆ ಕಾಲ ಆಯಾ ಶಾಲೆ ಗಳೊಂದಿಗೆ ಮ್ಯಾಪಿಂಗ್‌ ಮಾಡಲಾದ ಐಟಿಐಗಳ ತರಬೇತುದಾರರು ಶಾಲೆಗಳಿಗೆ ತೆರಳಿ ತಾಂತ್ರಿಕ ತರಬೇತಿ ನೀಡುತ್ತಾರೆ. ಇದಕ್ಕಾಗಿ 30 ವಿದ್ಯಾರ್ಥಿಗಳಿಗೆ ಒಬ್ಬರಂತೆ 250 ತರಬೇತುದಾರರನ್ನು ಗುರುತಿಸ ಲಾಗಿದೆ. ಪ್ರಾಯೋಗಿಕ ತರಬೇತಿಯನ್ನು ಶಾಲೆಗಳಿಗೆ 10 ಕಿ.ಮೀ. ಅಂತರದಲ್ಲಿರುವ ಐಟಿಐಗಳಲ್ಲೇ ಶನಿವಾರ ನಾಲ್ಕು ಗಂಟೆ ನೀಡಲಾಗುತ್ತದೆ. 
  • ಈ ಕಾರ್ಯಕ್ರಮದಡಿ ವಿದ್ಯಾರ್ಥಿ ಗಳಿಗೆ ಇಂಟರ್ನ್‌ಶಿಪ್‌ ಕಡ್ಡಾಯ ವಾಗಲಿದೆ. ಪ್ರೌಢಶಾಲಾ ಹಂತದಲ್ಲಿ 8, 9ನೇ ತರಗತಿ ಹಾಗೂ ಕಾಲೇಜು ಹಂತದಲ್ಲಿ ಮೊದಲ ಪಿಯುಸಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಹೆಚ್ಚು ಮಕ್ಕಳು ದಾಖಲಾತಿ ಇರುವ ಶಾಲಾ–ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ.
  • ತರಬೇತಿಗಾಗಿ ಈ ವರ್ಷ ₹5.25 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಿದ್ದು, ಇದನ್ನು ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಅಡಿ ಭರಿಸಲಾಗುತ್ತದೆ.

ಜೂನಿಯರ್‌ ಟೆಕ್ನಿಷಿಯನ್‌ ಕೋರ್ಸ್‌

  • ವಿದ್ಯಾರ್ಥಿಗಳಿಗೆ ವಿವಿಧ ಕೌಶಲಗಳ ಬಗ್ಗೆ ತಿಳಿಸಿಕೊಡುವ ಇದಕ್ಕೆ ಜೂನಿಯರ್‌ ಟೆಕ್ನಿಷಿಯನ್‌ ಕೋರ್ಸ್‌ ಎಂದು ಹೆಸರಿಡಲಾಗಿದೆ. ಆಟೊಮೊಬೈಲ್‌, ಆಟೊ ಮಿಷನ್‌, ಪ್ಲಂಬಿಂಗ್‌, ಎಲೆಕ್ಟ್ರಿಕ್‌ ವಾಹನಗಳ ನಿರ್ವಹಣೆ–ರಿಪೇರಿ, ಇಂಟರ್‌ನೆಟ್‌, ಬೇಸಿಕ್‌ ಕಂಪ್ಯೂಟರ್‌ ಇತ್ಯಾದಿಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.

‘ಸಹಜೀವನ ಬಳಿಕ ಮದುವೆಗೆ ನಿರಾಕರಿಸಿದರೆ ಅಪರಾಧವಲ್ಲ’

ಸಂದರ್ಭ: ಸಹಜೀವನದಲ್ಲಿದ್ದು ನಾಲ್ಕು ವರ್ಷ ಒಪ್ಪಿತ ದೈಹಿಕ ಸಂಬಂಧ ಹೊಂದಿದ ಬಳಿಕ ಮದುವೆಯಾಗುವು ದಕ್ಕೆ ಪುರುಷನೊಬ್ಬ ನಿರಾಕರಿಸಿದಲ್ಲಿ ಅದು ಗಂಭೀರ ಅಪರಾಧವಾಗು ವುದಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.
  • ‘ಸರಿ– ತಪ್ಪುಗಳನ್ನು ನಿರ್ಧರಿಸಬಲ್ಲ ಸಾಮರ್ಥ್ಯ ವಿರುವ ವಯಸ್ಕರಿಬ್ಬರು ಹಲವು ವರ್ಷ ಸಹಜೀವನ ನಡೆಸುತ್ತಿದ್ದರೆ, ಅವರು ಅಂತಹ ಸಂಬಂಧವನ್ನು ಸ್ವ ಇಚ್ಛೆಯಿಂದ ಆಯ್ಕೆ ಮಾಡಿಕೊಂಡಿರುತ್ತಾರೆ ಹಾಗೂ ಅದರಿಂದಾಗುವ ಪರಿಣಾಮಗಳ ಕುರಿತು ಅವರಿಗೆ ಅರಿವು ಇರುತ್ತದೆ ಎಂದೇ ಊಹಿಸಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ ಅರುಣಕುಮಾರ್‌ ಸಿಂಗ್‌ ದೇಶವಾಲ್ ಅವರು ಇದ್ದ ಪೀಠ ಹೇಳಿದೆ.
  • ಸಹಜೀವನ ಸಂಗಾತಿ ಯಾಗಿದ್ದ ಪುರುಷನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ಮಹಿಳೆ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ವೇಳೆ, ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
  • ‘ಮದುವೆ ಮಾಡಿಕೊಳ್ಳುವ ಭರವಸೆ ಇದ್ದ ಕಾರಣವೇ ಒಪ್ಪಿತ ಸಂಬಂಧಕ್ಕೆ ಸಮ್ಮತಿಸಿದ್ದೆ ಎಂಬ ವಾದವನ್ನು ಒಪ್ಪಿಕೊಳ್ಳಲು ಸಾಧ್ಯ ಇಲ್ಲ’ ಎಂದು ಸೆಪ್ಟೆಂಬರ್‌ 8ರಂದು ಹೊರಡಿಸಿರುವ ಆದೇಶದಲ್ಲಿ ಪೀಠ ಹೇಳಿದೆ.
  • ಒಪ್ಪಿತ ಸಂಬಂಧದಲ್ಲಿದ್ದ ಪುರುಷನ ವಿರುದ್ಧ ತಾನು ನೀಡಿದ್ದ ದೂರನ್ನು ಮಹೋಬಾ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತಿರಸ್ಕರಿಸಿ ಕಳೆದ ವರ್ಷ ಆಗಸ್ಟ್‌ 17ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಮೇಲ್ಮನವಿ ಸಲ್ಲಿಸಿದ್ದರು.

ಜೈವಿಕ ತಂತ್ರಜ್ಞಾನ ಸಂಶೋಧನೆಗೆ ವರದಾನ

ಸಂದರ್ಭ: ಇಪ್ಪತ್ತೊಂದನೇ ಶತಮಾನವನ್ನು ಜ್ಞಾನ ಮತ್ತು ವಿಜ್ಞಾನದ ಶತಮಾನ ಎಂದು ಕರೆಯಲಾಗುತ್ತಿದೆ. ಇದಕ್ಕೆ ಪೂರಕವಾಗಿ, ಬಯೊಟೆಕ್ನಾಲಜಿ ಅಥವಾ ಜೈವಿಕ ತಂತ್ರಜ್ಞಾನ ಕ್ಷೇತ್ರವು ಬೆಳೆಯುತ್ತಿದೆ.
  • ಮಾನವ ಜೀವನದ ಗುಣಮಟ್ಟ ಸುಧಾರಣೆ, ಆಹಾರ ಭದ್ರತೆ, ಆರೋಗ್ಯ ಸಂರಕ್ಷಣೆ, ಪರಿಸರ ಸಂರಕ್ಷಣೆ‌, ಕೈಗಾರಿಕಾ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನವು ಕ್ರಾಂತಿಯನ್ನು ಉಂಟುಮಾಡುತ್ತಿದೆ.
  • ಈ ತಂತ್ರಜ್ಞಾನದಲ್ಲಿನ ಸಂಶೋಧನೆ ವಿವಿಧ ದಿಕ್ಕುಗಳಲ್ಲಿ ಸಾಗುತ್ತಿದೆ.‌   ಜೆನೆಟಿಕ್‌ ಎಂಜಿನಿಯರಿಂಗ್‌, ಮಾಲಿಕ್ಯುಲಾರ್‌ ಬಯಾಲಜಿ , ಅಗ್ರಿಕಲ್ಚರಲ್‌ ಬಯೊಟೆಕ್ನಾಲಜಿ, ಫಾರ್ಮಸ್ಯೂಟಿಕಲ್‌ ಬಯೊಟೆಕ್ನಾಲಜಿ, ಇಂಡಸ್ಟ್ರಿಯಲ್‌ ಬಯೊಪ್ರೋಸೆಸಸ್‌ ಹಾಗೂ ಎನ್‌ವಿರಾನ್‌ಮೆಂಟಲ್‌ ಬಯೊಟೆಕ್ನಾಲಜಿ ಪ್ರಮುಖವಾಗಿವೆ. ಉದಾಹರಣೆಗೆ, ಜೆನೆಟಿಕ್‌ ಎಂಜಿನಿಯರಿಂಗ್‌ ಮೂಲಕ ತಳಿ ಪರಿವರ್ತಿತ ಬೆಳೆಗಳು (ಜೆನೆಟಿಕಲಿ ಮಾಡಿಫೈಡ್‌ ಕ್ರಾಪ್ಸ್‌) ಅಭಿವೃದ್ಧಿಯಾಗಿದ್ದು, ಅವು ಹೆಚ್ಚಿನ ಉತ್ಪಾದನೆ, ಕೀಟ ನಿರೋಧಕತೆಗೆ ಕಾರಣವಾಗಿವೆ. ಆರೋಗ್ಯ ಕ್ಷೇತ್ರದಲ್ಲಿ, ಕೃತಕ ಇನ್ಸುಲಿನ್ ಉತ್ಪಾದನೆ, ಲಸಿಕೆಗಳ ತಯಾರಿಕೆಯು ಜೈವಿಕ ತಂತ್ರಜ್ಞಾನ ಸಂಶೋಧನೆಯ ಫಲ. ಜೆನೋಮ್ ತಿದ್ದುಪಡಿ ತಂತ್ರಜ್ಞಾನವು ವೈದ್ಯಕೀಯ ರಂಗದಲ್ಲಿ ನವೀನ ಸಂಶೋಧನೆಯ ದಿಕ್ಕನ್ನು ತೋರಿಸುತ್ತಿದೆ.

ಉದ್ಯೋಗಾವಕಾಶ: ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಅವಕಾಶಗಳು ತೆರೆದಿವೆ.

1.ಆರೋಗ್ಯ ಕ್ಷೇತ್ರ– ಔಷಧ ಕಂಪನಿಗಳು, ಲಸಿಕೆ ತಯಾರಿಕಾ ಘಟಕಗಳು, ಕ್ಲಿನಿಕಲ್ ಸಂಶೋಧನಾ ಸಂಸ್ಥೆಗಳು.

2.ಕೃಷಿ ಕ್ಷೇತ್ರ– ಬೀಜ ಉತ್ಪಾದನಾ ಕಂಪನಿಗಳು, ಸಸ್ಯ ಸಂಶೋಧನಾ ಕೇಂದ್ರಗಳು, ಆಹಾರ ಸಂಸ್ಕರಣಾ ಕೈಗಾರಿಕೆಗಳು.

3.ಪರಿಸರ ನಿರ್ವಹಣೆ– ಜಲಶುದ್ಧೀಕರಣ ಘಟಕಗಳು, ತ್ಯಾಜ್ಯ ನಿರ್ವಹಣಾ ಕೈಗಾರಿಕೆಗಳು, ನವೀನ ಶಕ್ತಿಯ ತಂತ್ರಜ್ಞಾನ.

4.ಕೈಗಾರಿಕಾ ಕ್ಷೇತ್ರ– ಎನ್‌ಜೈಮ್ ತಯಾರಿಕೆ, ಜೈವಿಕ ಇಂಧನ, ಬಯೊಫಾರ್ಮಸ್ಯೂಟಿಕಲ್ಸ್.

5.ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು– ಸಂಶೋಧನಾ ಸಹಾಯಕ, ಉಪನ್ಯಾಸಕ, ವಿಜ್ಞಾನಿ ಹುದ್ದೆಗಳು.

6.ವಿದೇಶದಲ್ಲಿ ಅವಕಾಶ– ಅಮೆರಿಕ, ಯುರೋಪ್, ಜಪಾನ್, ಸಿಂಗಪುರದಂತಹ ದೇಶಗಳಲ್ಲಿ ಸಂಶೋಧನೆ ಹಾಗೂ ಕೈಗಾರಿಕಾ ಕೆಲಸಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಬೇಡಿಕೆ ಹೊಂದಿದ್ದಾರೆ. ಇದೇ ರೀತಿ, ಬಯೊಟೆಕ್ನಾಲಜಿಯಲ್ಲಿ ಸ್ಟಾರ್ಟ್‌–ಅಪ್ ಉದ್ದಿಮೆಗಳು ಕೂಡ ವೇಗವಾಗಿ ಬೆಳೆಯುತ್ತಿವೆ. ಆರೋಗ್ಯ ನಿರ್ಣಾಯಕ ಕಿಟ್‌ಗಳು, ಸಸ್ಯ ಆಧಾರಿತ ಉತ್ಪನ್ನಗಳು, ಜೈವಿಕ ಇಂಧನ, ಆಹಾರ ತಂತ್ರಜ್ಞಾನದಲ್ಲಿ ಯುವ ಉದ್ಯಮಿಗಳು ಹೊಸ ಹಾದಿ ತೆರೆಯುತ್ತಿದ್ದಾರೆ.

ಅಸ್ಸಾಂ: ಒಂದೂವರೆ ತಾಸಿನಲ್ಲಿ ನಾಲ್ಕು ಬಾರಿ ಭೂಕಂಪ

ಸಂದರ್ಭ: ಗುವಾಹಟಿ/ ಕೋಲ್ಕತ್ತ/ ಇಂಫಾಲ್‌/ ಇಟಾನಗರ (ಪಿಟಿಐ): ಅಸ್ಸಾಂನಲ್ಲಿ ಒಂದೂವರೆ ತಾಸಿನಲ್ಲಿ ನಾಲ್ಕು ಬಾರಿ ಭೂಮಿಯು ಕಂಪನ.
  • ರಾಜ್ಯದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯು ರಿಕ್ಟರ್‌ ಮಾಪಕದಲ್ಲಿ 5.8ರಷ್ಟು ದಾಖಲಾಗಿತ್ತು. 4.58ಕ್ಕೆ ಎರಡನೇ ಬಾರಿ ಸಂಭವಿಸಿದ ಭೂಕಂಪನದ ತೀವ್ರತೆಯು 3.1ರಷ್ಟು ಮತ್ತು 5.21ಕ್ಕೆ ಮೂರನೇ ಬಾರಿಗೆ ಸಂಭವಿಸಿದ ಭೂಕಂಪದ ತೀವ್ರತೆಯು 2.9ರಷ್ಟಿತ್ತು. 6.11ಕ್ಕೆ ನಾಲ್ಕನೇ ಬಾರಿ ಸಂಭವಿಸಿದ ಭೂಕಂಪದ ತೀವ್ರತೆಯು 2.7ರಷ್ಟು ದಾಖಲಾಗಿದೆ.
  • ಅಸ್ಸಾಂನ ಉದಲಗುರಿ ಮತ್ತು ಸೋನಿತ್‌ಪುರದಲ್ಲಿ ಭೂಕಂಪನದ ಕೇಂದ್ರ ಬಿಂದುಗಳು ಪತ್ತೆಯಾಗಿವೆ.
  • ಮಣಿಪುರ ಮತ್ತು ಅರುಣಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕೆಲವೆಡೆಯೂ ಭೂಮಿ ಕಂಪಿಸಿದ ಅನುಭವವಾಗಿತ್ತು.

ವಿಶ್ವ ಬಾಕ್ಸಿಂಗ್: ಭಾರತಕ್ಕೆ ‘ಚಿನ್ನ ಡಬಲ್’

ಸಂದರ್ಭ: ಜೈಸ್ಮಿನ್ ಲಾಂಬೊರಿಯಾ (57ಕೆ.ಜಿ) ಮತ್ತು ಮೀನಾಕ್ಷಿ ಹೂಡಾ (48ಕೆ.ಜಿ) ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದರು.

  • ಪ್ಯಾರಿಸ್‌ ಒಲಿಂಪಿಕ್ ಕೂಟದ ಮಹಿಳೆಯರ 57 ಕೆ.ಜಿ. ವಿಭಾಗದ ಬೆಳ್ಳಿ ಪದಕ ವಿಜೇತ ಬಾಕ್ಸರ್‌ ಪೋಲೆಂಡ್‌ನ ಜೂಲಿಯಾ ಎಸ್‌ಝೆರೆಮೆತಾ ಅವರನ್ನು ಜೈಸ್ಮಿನ್ ಸೋಲಿಸಿದರು. ಭಾರತದ ಬಾಕ್ಸರ್ 4–1 (30-27 29-28 30-27 28-29 29-28) ರಿಂದ ಕಠಿಣ ಪೈಪೋಟಿ ಯೊಡ್ಡಿದ ತಮ್ಮ ಎದುರಾಳಿಯನ್ನು ಸೋಲಿಸಿದರು. ಇದರೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
  • ಮಧ್ಯಾಹ್ನದ ನಂತರ ನಡೆದ 48 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಮೀನಾಕ್ಷಿ ಅವರು ಕಜಾಕಸ್ತಾನದ ನಾಝೀಂ ಕೈಝೈಬೆ ವಿರುದ್ಧ ಜಯಭೇರಿ ಬಾರಿಸಿದರು. ನಾಝೀಂ ಅವರು ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕ ಪಡೆದಿದ್ದರು.
  • ಇದರೊಂದಿಗೆ ಜೈಸ್ಮಿನ್ ಮತ್ತು ಮೀನಾಕ್ಷಿ ಅವರು ವಿಶ್ವ ಚಾಂಪಿಯನ್‌ಷಿಪ್‌ ನಲ್ಲಿ ಚಿನ್ನ ಗೆದ್ದ ಭಾರತೀಯ ಬಾಕ್ಸರ್‌ಗಳ  ಯಾದಿಯಲ್ಲಿ ಸ್ಥಾನ ಪಡೆದರು. ಆರು ಸಲ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್  (2002, 2005, 2006, 2008, 2010 ಮತ್ತು 2018), ಎರಡು ಬಾರಿ ಚಾಂಪಿಯನ್ ನಿಖತ್ ಜರೀನ್ (2022 ಮತ್ತು 2023), ಸರಿತಾ ದೇವಿ (2006), ಜೆನ್ನಿ ಆರ್‌.ಎಲ್ (2006), ಕೆ.ಸಿ. ಲೇಖಾ (2006), ನೀತು ಗಂಗಾಸ್ (2023), ಲವ್ಲಿನಾ ಬೊರ್ಗೊಹೈನ್ (2023) ಮತ್ತು ಸವಿತಿ ಬೂರಾ (2023) ಅವರ ನಂತರ ಜೈಸ್ಮಿನ್ ಮತ್ತು ಮೀನಾಕ್ಷಿ ಅವರೂ ಈ ಪಟ್ಟಿಗೆ ಸೇರ್ಪಡೆಯಾದರು. 24 ವರ್ಷದ ಜೈಸ್ಮಿನ್ ಅವರಿಗೆ ಇದು ಮೂರನೇ ವಿಶ್ವ ಚಾಂಪಿಯನ್‌ಷಿಪ್.
  • ಮಹಿಳೆಯರ ವಿಭಾಗದಲ್ಲಿ ಮತ್ತೆರಡು ಪದಕಗಳೂ ಭಾರತಕ್ಕೆ ಒಲಿದವು. ನೂಪುರ್ ಶೆರಾನ್ (80 ಕೆ.ಜಿ ಮೇಲ್ಪಟ್ಟು) ಮತ್ತು ಪೂಜಾರಾಣಿ (80 ಕೆ.ಜಿ) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.
  • 80 ಕೆ.ಜಿ ಮೇಲ್ಪಟ್ಟವರ ವಿಭಾಗದ ಫೈನಲ್‌ನಲ್ಲಿ ನೂಪುರ್ ಅವರು 2–3ರ ಅಲ್ಪ ಅಂತರದ ಸೋಲನ್ನು ಪೋಲೆಂಡ್‌ನ ಅಗಾತಾ ಕಾಜಾಮರಸ್ಕಾ ವಿರುದ್ಧ ಅನುಭವಿಸಿದರು. ತಾಂತ್ರಿಕ ಅಂಕಗಳೊಂದಿಗೆ ಪೋಲೆಂಡ್ ಬಾಕ್ಸರ್ ಮೇಲುಗೈ ಸಾಧಿಸಿದರು.
  • ಪೂಜಾ ಅವರು ಸೆಮಿಫೈನಲ್‌ನಲ್ಲಿ 1–4ರಿಂದ ಸ್ಥಳೀಯ ಫೆವರಿಟ್ ಎಮಿಲಿ ಅಷ್ಕಿತ್ ವಿರುದ್ಧ ಸೋತು ಕಂಚಿನ ಪದಕ ಪಡೆದರು.

ಏಷ್ಯಾ ಕಪ್: ಭಾರತ ರನ್ನರ್ಸ್‌ ಅಪ್‌

ಸಂದರ್ಭ: ಭಾರತ ಮಹಿಳಾ ತಂಡವು ಭಾನುವಾರ ಇಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಚೀನಾ ವಿರುದ್ಧ 1–4 ಗೋಲುಗಳಿಂದ ಪರಾಭವಗೊಂಡು, ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆಯಿತು.
  • ಈ ಸೋಲಿನೊಂದಿಗೆ ಸಲೀಮಾ ಟೆಟೆ ಬಳಗವು ಮುಂದಿನ ವರ್ಷ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವ ಸುವರ್ಣಾವಕಾಶವನ್ನು ಕಳೆದುಕೊಂಡಿತು. ಚಾಂಪಿಯನ್‌ ಚೀನಾ ತಂಡವು ವಿಶ್ವಕಪ್‌ಗೆ ಟಿಕೆಟ್‌ ‍ಪಡೆದುಕೊಂಡಿತು.
  • ಗೊಂಗ್ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅನುಭವಿ ಫಾರ್ವರ್ಡ್‌ ಆಟಗಾರ್ತಿ ನವನೀತ್‌ ಅವರು ಮೊದಲ ನಿಮಿಷದಲ್ಲೇ ಭಾರತಕ್ಕೆ ಮುನ್ನಡೆ ಒದಗಿಸಿದ್ದರು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು  ಗಳಿಸಿ, ಆತಿಥೇಯರನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸುವ ಪ್ರಯತ್ನ ಮಾಡಿದ್ದರು.
  • ನಂತರದಲ್ಲಿ ಚೀನಾ ತಂಡವು ಸತತ ಮೂರು ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲು ಹೊಡೆಯುವುದಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾದ ಭಾರತದ ಆಟಗಾರ್ತಿಯರು 21ನೇ ನಿಮಿಷದವರೆಗೆ ಮುನ್ನಡೆ ಕಾಯ್ದುಕೊಂಡರು. ಆದರೆ, ನಾಲ್ಕನೇ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಜಿಕ್ಸಿಯಾ ಔ ಅವರು ಚೆಂಡನ್ನು ಗುರಿ ಸೇರಿಸಿದ್ದರಿಂದ ಉಭಯ ತಂಡಗಳ ಸ್ಕೋರ್‌ ಸಮಬಲಗೊಂಡಿತು.
  • 41ನೇ ನಿಮಿಷದಲ್ಲಿ ಹಾಂಗ್ ಲಿ ಅವರು ಫೀಲ್ಡ್‌ ಗೋಲು ಬಾರಿಸಿ ಆತಿಥೇಯ ತಂಡಕ್ಕೆ 2–1 ಮುನ್ನಡೆ ಒದಗಿಸಿದರು. ನಂತರದಲ್ಲಿ ಮೀರಾಂಗ್ ಝೌ (51ನೇ ನಿಮಿಷ) ಮತ್ತು ಜಿಯಾಕಿ ಜಾಂಗ್ (53ನೇ ನಿ) ಗೋಲು ತಂದಿತ್ತು. ಚೀನಾ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದರು.
  • ಟೂರ್ನಿಯಲ್ಲಿ ಚೀನಾ ವಿರುದ್ಧ ಭಾರತಕ್ಕೆ ಇದು ಎರಡನೇ ಸೋಲಾಗಿದೆ. ಇದಕ್ಕೂ ಮುನ್ನ ಸೂಪರ್‌ ಫೋರ್‌ ಹಂತದಲ್ಲೂ 1–4 ಗೋಲುಗಳಿಂದ ಭಾರತ ಪರಾಭವಗೊಂಡಿತ್ತು.
  • ಜಪಾನ್‌ಗೆ ಗೆಲುವು: ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್‌ ಜಪಾನ್‌ ತಂಡವು 2–1 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತು. ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಸ್ಪರ್ಧಿಸಿದ್ದವು.

ಶೂಟಿಂಗ್‌ ವಿಶ್ವಕಪ್‌: ಮೇಘನಾಗೆ ಕಂಚು

ಸಂದರ್ಭ: ಅನುಭವಿ ಶೂಟರ್‌ ಮೇಘನಾ ಸಜ್ಜನರ್ ಅವರು ಐಎಸ್‌ಎಸ್‌ಎಫ್‌ ವಿಶ್ವಕಪ್‌ ರೈಫಲ್‌/ ಪಿಸ್ತೂಲ್ ವಿಶ್ವಕಪ್‌ ನಲ್ಲಿ ಕಂಚಿನ ಪದಕ ಗೆದ್ದರು. ಋತುವಿನ ಕೊನೆಯ ವಿಶ್ವಕಪ್‌ ಟೂರ್ನಿಯಲ್ಲಿ ಭಾರತವು ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು.
  • ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಕರ್ನಾಟಕದ ಮೇಘನಾ 230.0 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ವಿಶ್ವಕಪ್‌ನಲ್ಲಿ ಅವರಿಗೆ ದೊರೆತ ಚೊಚ್ಚಲ ಪದಕ ಇದಾಗಿದೆ.
  • ಚೀನಾದ ಉದಯೋನ್ಮುಖ ತಾರೆ ಪೆಂಗ್ ಕ್ಸಿನ್ಲು 255.3 ಅಂಕ ಸಂಪಾದಿಸಿ, ವಿಶ್ವದಾಖಲೆ ಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿ ದರು. ಅವರು ಸ್ವದೇಶದ ವಾಂಗ್ ಜಿಫೀ (254.8) ಅವರ ದಾಖಲೆಯನ್ನು ಮುರಿದರು. ನಾರ್ವೆಯ ಜೀನೆಟ್ ಹೆಗ್ ಡ್ಯುಸ್ಟಾಡ್ ಬೆಳ್ಳಿ ಪದಕ ಗೆದ್ದರು.
  • 31 ವರ್ಷದ ಮೇಘನಾ (632.7) ಅವರು ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ದೊಂದಿಗೆ ಫೈನಲ್‌ ಪ್ರವೇಶಿಸಿದ್ದರು. ಪೆಂಗ್ (637.4) ಅಗ್ರಸ್ಥಾನ ಪಡೆದಿದ್ದರು.

ಪ್ರಚಲಿತ ವಿದ್ಯಮಾನಗಳು: 13ನೇ ಸೆಪ್ಟೆಂಬರ್ 2025

  • ಮತಾಂತರಗೊಂಡವರು ಕ್ರೈಸ್ತರೇ

ಸಂದರ್ಭ: ಕುರುಬ, ಬ್ರಾಹ್ಮಣ, ಲಿಂಗಾಯತ, ದಲಿತ, ವೈಶ್ಯ ಮತ್ತು ಒಕ್ಕಲಿಗರಲ್ಲಿ ಯಾರೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೂ ಅವರೆ ಲ್ಲರೂ ಕ್ರೈಸ್ತರೇ ಆಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮೀಕ್ಷಾ ಕೈಪಿಡಿ ಬಿಡುಗಡೆ ಮಾಡಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.
  • ‘ಮತಾಂತರಗೊಂಡವ‌ರ ಧರ್ಮ ವನ್ನು ಉಲ್ಲೇಖಿಸುವಾಗ ಅವರ ಮೂಲ ಜಾತಿಯ ಹೆಸರು ಸೇರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆಯಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಮತಾಂತರ ಗೊಂಡವರು ಕ್ರೈಸ್ತರೇ ಆಗುತ್ತಾರೆ’ ಎಂದರು.
  • ‘ಸಮೀಕ್ಷೆಗೆ ಬಂದಾಗ ಏನು ಬರೆಯುತ್ತಾರೋ ಬರೆಯಲಿ. ಮತಾಂತರ ಗೊಂಡವರು ಅಥವಾ ಜಾತಿಧರ್ಮದ ಹೆಸರಿನ ಗೊಂದಲ ಇದ್ದರೆ ಅದನ್ನು ಹಿಂದುಳಿದ ವರ್ಗಗಳ ಆಯೋಗ ವಿಶ್ಲೇಷಣೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ. ನಾವು ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿ ಮಾತ್ರ ಸಂಗ್ರಹಿಸುತ್ತಿದ್ದೇವೆ’ ಎಂದು ಹೇಳಿದರು.
  • ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ್ದ ಜಾತಿ ಪಟ್ಟಿಯಲ್ಲಿ ಕುರುಬ ಕ್ರಿಶ್ಚಿಯನ್‌. ಕುಂಬಾರ ಕ್ರಿಶ್ಚಿಯನ್‌, ಮಡಿವಾಳ ಕ್ರಿಶ್ಚಿಯನ್‌, ನೇಕಾರ ಕ್ರಿಶ್ಚಿಯನ್ಸೇರಿ 100ಕ್ಕೂ ಹೆಚ್ಚು ಜಾತಿಗಳನ್ನು ಕ್ರಿಶ್ಚಿಯನ್ಧರ್ಮದ ಹೆಸರಿನಲ್ಲಿ ಸೇರಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
  • ಸರ್ಕಾರ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಕ್ಯಾಥೋಲಿಕ್‌, ಪ್ರೊಟೆಸ್ಟಂಟ್‌, ಪೆಂಟಕೋಸ್ಟ್‌ ಇತ್ಯಾದಿ ಮೂಲ ಕ್ರೈಸ್ತ ಪಂಗಡಗಳ ಹೆಸರೇ ಇಲ್ಲ. ಅವರಿಗೆ ಕೇವಲ ಕ್ರೈಸ್ತರೆಂದು ಗುರುತಿಸಿ ಕೊಳ್ಳಲು ಅವಕಾಶ ನೀಡಿದೆ’ ಎಂದು ಬಿಜೆಪಿ ನಾಯಕರು ದೂರಿದ್ದರು.

ವೀರಶೈವ– ಲಿಂಗಾಯತ.. ಏನಾದರೂ ಬರೆಯಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

  • ‘ವೀರಶೈವ– ಲಿಂಗಾಯತರು ಧರ್ಮ ಮತ್ತು ಜಾತಿಯನ್ನು ತಮಗೆ ಹೇಗೆ ಬೇಕೋ ಹಾಗೆ ಬರೆಸಿಕೊಳ್ಳಲಿ’ ಎಂದು ಸಿದ್ದರಾಮಯ್ಯ ಹೇಳಿದರು.
  • ‘ವೀರಶೈವ ಲಿಂಗಾಯತರು ಹಿಂದೂ ಧರ್ಮ ಎಂಬುದನ್ನು ಬಳಸದೇ ಲಿಂಗಾಯತ ಧರ್ಮ ಎಂದೇ ನಮೂದಿಸಬೇಕು ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಧರ್ಮದ ಪಟ್ಟಿಯಲ್ಲಿ ಲಿಂಗಾಯತ ಧರ್ಮದ ಉಲ್ಲೇಖ ಇಲ್ಲ. ಹೀಗಾಗಿ ಏನೆಂದು ಬರೆಸಬೇಕೆಂಬ ಗೊಂದಲಕ್ಕೆ ಆ ಸಮುದಾಯದ ಜನ ಸಿಲುಕಿದ್ದಾರೆ’ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.
  • ‘ಅವರು ‘ವೀರಶೈವ–ಲಿಂಗಾಯತ’ ಧರ್ಮ ಅಂತ ಬರೆಯಿಸಲಿ, ‘ವೀರಶೈವ’ ಧರ್ಮ ಅಂತಾನೆ ಬರೆಯಿಸಲಿ, ಕೇವಲ ವೀರಶೈವ ಅಥವಾ ಲಿಂಗಾಯತ ಅಂತ ಬೇಕಾದರೂ ಬರೆಯಿಸಿಕೊಳ್ಳಲಿ. ನಮಗೆ ಬೇಕಾಗಿರುವುದು ಅವರ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಮಾತ್ರ. ಏನು ಬೇಕಾದರೂ ಬರೆಯಿಸಿಕೊಳ್ಳಲಿ’ ಎಂದು ಹೇಳಿದರು.
  • ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತ ಧರ್ಮ ಎಂದೇ ಬರೆಯಿಸಬೇಕು ಎಂದು ಆ ಸಮುದಾಯದ ಕೆಲವು ಮಠಾಧೀಶರು ಮತ್ತು ಪ್ರಮುಖರು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಸಮೀಕ್ಷೆಯ ಕೈಪಿಡಿಯಲ್ಲಿ ಹಿಂದೂ, ಇಸ್ಲಾಂ, ಕ್ರೈಸ್ತ, ಜೈನ, ಸಿಖ್, ಬೌದ್ಧ, ಪಾರ್ಸಿ, ನಾಸ್ತಿಕ, ಗೊತ್ತಿಲ್ಲ, ತಿಳಿಸಲು ನಿರಾಕರಿಸುತ್ತಾರೆ ಮತ್ತು ಇತರೆ ಎಂದು ಇದೆ. ‘ಪ್ರಮುಖ 7 ಧರ್ಮಗಳ ಹೊರತಾಗಿ ಇತರೆ ಧರ್ಮಗಳಿದ್ದಲ್ಲಿ, ಅವುಗಳನ್ನು ಇತರೆ ವಿಭಾಗದಲ್ಲಿ ಕೋಡ್ಸಂಖ್ಯೆ 11ರಲ್ಲಿ ನಮೂದಿಸಬಹುದುಎಂದು ಸೂಚಿಸಲಾಗಿದೆ.
  • ಡಿಸೆಂಬರ್ನಲ್ಲಿ ಜಾತಿವಾರು ಸಮೀಕ್ಷೆ ವರದಿ ಸಲ್ಲಿಕೆ: ಸಿ.ಎಂ

ಸಂದರ್ಭ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇದೇ 22ರಂದು ಆರಂಭಗೊಂಡು ಅ.7ರವರೆಗೆ ನಡೆಯಲಿದ್ದು, ಡಿಸೆಂಬರ್‌ನಲ್ಲಿ ವರದಿ ಸಲ್ಲಿಕೆಯಾಗಲಿದೆ.

  • ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾವಳಿ ಇರುತ್ತದೆ. ಅದರಲ್ಲಿ ಪ್ರತಿ ಸದಸ್ಯರ ಧರ್ಮ, ಜಾತಿ, ಉಪಜಾತಿ, ವಿದ್ಯಾರ್ಹತೆ, ಕುಲಕಸುಬು ಕೌಶಲ್ಯ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳನ್ನು ಸಂಗ್ರಹಿಸ ಲಾಗುವುದು. ಈಗಾಗಲೇ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸುವ ಕೆಲಸ ನಡೆದಿದೆ. ರಾಜ್ಯದ 2 ಕೋಟಿ ಮನೆಗಳ ಪೈಕಿ ಈವರೆಗೆ 1.55 ಕೋಟಿ ಮನೆಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ.
  • ಶಿಕ್ಷಕರು ಮನೆಗೆ ಸಮೀಕ್ಷೆ ಬರುವುದಕ್ಕೆ 3 ದಿನಗಳ ಮೊದಲೇ ಆಶಾ ಕಾರ್ಯಕರ್ತೆಯರು ಪ್ರಶ್ನಾವಳಿಗಳನ್ನು ವಿತರಿಸುತ್ತಾರೆ. ಇದರಿಂದ ಮನೆಯ ಸದಸ್ಯರು ಎಲ್ಲ ಪ್ರಶ್ನೆಗಳನ್ನು ಓದಿಕೊಂಡು ಉತ್ತರಿಸಲು ಸಹಾಯಕವಾಗುತ್ತದೆ. ಪ್ರಶ್ನೆಗಳನ್ನು ಓದಲು ಬಾರದಿದ್ದವರು ಬೇರೆಯವರ ಸಹಾಯ ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕು. ಅದಕ್ಕಾಗಿ ಪ್ರತಿಯೊಂದು ಕುಟುಂಬಗಳೂ ತಯಾರಿರಬೇಕು. ಆಶಾ ಕಾರ್ಯಕರ್ತೆಯರು ಪ್ರಶ್ನಾವಳಿ ವಿತರಿಸುತ್ತಾರೆ.
  • ಒಂದು ವೇಳೆ ಯಾರಿಗಾದರೂ ಸಮೀಕ್ಷೆಯಲ್ಲಿ ಭಾಗವಹಿಸಲು ಆಗದಿದ್ದರೆ ಅಥವಾ ಮನೆಯಲ್ಲಿ ಇಲ್ಲದೇ ಇದ್ದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಮತ್ತು ವೈಬ್‌ಸೈಟ್‌ನಲ್ಲಿ ಸಮೀಕ್ಷೆಯ ಮೂಲಕ ಪ್ರಶ್ನೆಗಳಿಗೆ ಉತ್ತರ ನೀಡಿ ಸಮೀಕ್ಷೆಯಲ್ಲಿ ಭಾಗವಹಿಸಬಹುದು.

ಸಮೀಕ್ಷೆಗೆ ವಿನೂತನ ವಿಧಾನ

ಈ ಸಮೀಕ್ಷೆಯಲ್ಲಿ ಎಲ್ಲಾ ಕುಟುಂಬಗಳು ಪೂರ್ಣವಾಗಿ ಒಳ್ಳಗೊಳ್ಳಬೇಕು ಎಂಬ ಕಾರಣಕ್ಕಾಗಿ ವಿನೂತನ ಸಮೀಕ್ಷಾ ವಿಧಾನ ಅನುಸರಿಸಲಾಗುತ್ತಿದೆ.

  • ರಾಜ್ಯದ ಬಹುಪಾಲು ಮನೆಗಳು ವಸತಿ ಉದ್ದೇಶದ ವಿದ್ಯುತ್ ಸಂಪರ್ಕ ಹೊಂದಿದ್ದು, ಅವುಗಳಿಗೆ  ಆರ್‌.ಆರ್‌ ಸಂಖ್ಯೆ ಹೊಂದಿರುವ ಎಲೆಕ್ಟ್ರಿಕ್‌ ಮೀಟರ್‌ಗಳು ಇರುತ್ತವೆ. ಈ ಮಾಹಿತಿ ಆಧರಿಸಿ ಮನೆಗಳ ಪಟ್ಟಿಯನ್ನು ತಯಾರಿಸಲಾಗಿದೆ. ಹೀಗಾಗಿ ಎಲ್ಲ ಮನೆಗಳು ಮತ್ತು ಕುಟುಂಬಗಳು ಈ ಜಾಲದಲ್ಲಿ ಬಂದಿವೆ.
  •  ವಿದ್ಯುತ್ ಸಂಪರ್ಕ ಹೊಂದಿರದ ಮನೆಗಳನ್ನೂ ಪ್ರತ್ಯೇಕ ವಿಧಾನದಿಂದ ಸಮೀಕ್ಷೆಗೆ ಒಳಪಡಿಸಲಾಗುವುದು. ವಿದ್ಯುತ್‌ ಸಂಪರ್ಕವಿಲ್ಲದ ಮನೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿಗಳನ್ನು ಬಳಸಿ ಅಂತಹ ಮನೆಗಳನ್ನು ಜಿಯೋಟ್ಯಾಗ್‌ ಮಾಡಿ, ಸಮೀಕ್ಷಾ ಬ್ಲಾಕ್‌ಗಳನ್ನು ರಚಿಸಲಾಗಿದೆ. ಈ ಮೂಲಕ 2 ಕೋಟಿ ಕುಟುಂಬಗಳ 7 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳ‍ಪಡಿಸಲಾಗುವುದು.

‘ಗ್ಯಾರಂಟಿ’ ಮಾಹಿತಿಯೂ ಸಂಗ್ರಹ

  • ಯಾವುದೇ ಕುಟುಂಬ ಸರ್ಕಾರದಿಂದ ಪಡೆದ ಸವಲತ್ತು, ಎಂದರೆ ಗಂಗಾ ಕಲ್ಯಾಣ, ಭೂಒಡೆತನ, ಸ್ವಾವಲಂಬಿ ಸಾರಥಿ, ಪ್ರೇರಣಾ ಯೋಜನೆ(ಕಿರುಸಾಲ), ಸ್ವಯಂ ಉದ್ಯೋಗ(ನೇರ ಸಾಲ), ಕೈಗಾರಿಕಾ ನಿವೇಶನ, ಕೈಗಾರಿಕೆ ಸ್ಥಾಪಿಸಲು ನೆರವು. ಕೃಷಿ ಸಂಬಂಧಿತ ನೆರವು, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗಲ ವಿಕಲ ವೇತನದ ಜತೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಮಾಹಿತಿ ನೀಡಬೇಕು. ಇದರಿಂದ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುತ್ತಿದೆಯೆ ಎಂಬ ಮಾಹಿತಿ ಸಿಗುತ್ತದೆ.
  • ಚಲನಚಿತ್ರಗಳ ಟಿಕೆಟ್ ಗರಿಷ್ಠ ದರ ₹200

ಸಂದರ್ಭ: ರಾಜ್ಯದಲ್ಲಿ ಮಲ್ಟಿ ಪ್ಲೆಕ್ಸ್‌ಗಳೂ ಸೇರಿ ಎಲ್ಲ ಚಿತ್ರ ಮಂದಿರಗಳಲ್ಲಿ ಚಲನಚಿತ್ರಗಳ ಟಿಕೆಟ್‌ ದರವನ್ನು (ತೆರಿಗೆ ಬಿಟ್ಟು) ಗರಿಷ್ಠ ₹200ಕ್ಕೆ ನಿಗದಿಪಡಿಸಿ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ.

  • ಈ ನಿಯಮ ಜಾರಿಗೆ ಬಂದಿದ್ದು, ಕನ್ನಡ ಸೇರಿ ಎಲ್ಲ ಭಾಷೆಗಳ ಚಲನಚಿತ್ರಗಳಿಗೂ ಈ ಆದೇಶ ಅನ್ವಯವಾಗಲಿದೆ. ಆದರೆ, 75 ಅಥವಾ ಅದಕ್ಕಿಂತ ಕಡಿಮೆ ಆಸನ ಹೊಂದಿರುವ ಪ್ರೀಮಿಯಂ ಸೌಲಭ್ಯ ಗಳನ್ನು ಒಳಗೊಂಡ ಮಲ್ಟಿಪ್ಲೆಕ್ಸ್‌ಗಳಿಗೆ ಈ ನಿಯಮದಿಂದ ವಿನಾಯ್ತಿ ನೀಡಲಾಗಿದೆ.
  • ಯಾವುದೇ ಭಾಷೆಯ ಚಿತ್ರವಾದರೂ ಸರಿ ಗರಿಷ್ಠ ದರ ₹200 ದಾಟುವಂತಿಲ್ಲ. ಟಿಕೆಟ್ಮೇಲೆ ಶೇ 18ರಷ್ಟು ತೆರಿಗೆ ಇರುತ್ತದೆ.
  • ಚಿತ್ರ ಮಂದಿರದಲ್ಲಿ ಎರಡು ಅಥವಾ ಮೂರು ಕ್ಲಾಸ್‌ಗಳ ಆಸನ ವ್ಯವಸ್ಥೆ ಇದ್ದರೆ ಅವುಗಳ ಬೆಲೆಯೂ ₹150ಕ್ಕಿಂತ ಕಡಿಮೆ ಆಗಲಿದೆ.
  • ಮಲ್ಟಿಪ್ಲೆಕ್ಸ್‌ಗಳಲ್ಲಿ ಪರಭಾಷಾ ಚಿತ್ರಗಳ ಟಿಕೆಟ್‌ ದರದ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ. ಕೆಲವು ಚಿತ್ರಗಳ ಟಿಕೆಟ್‌ ದರ ₹2,000–₹3000 ದಾಟುತ್ತಿತ್ತು.
  • ತಮಿಳುನಾಡು ಮಾದರಿಯಲ್ಲೇ ಕರ್ನಾಟಕದಲ್ಲೂ ಟಿಕೆಟ್ದರವನ್ನು ನಿಗದಿ ಮಾಡಬೇಕು ಎಂಬುದು ಕನ್ನಡ ಚಲನಚಿತ್ರ ರಂಗದ ಬೇಡಿಕೆಯಾಗಿತ್ತು.
  • ರಾಜೇಂದ್ರ ಸಿಂಗ್ ಬಾಬು ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ, ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂದಿನ ಅಧ್ಯಕ್ಷ ಸಾ.ರಾ.ಗೋವಿಂದು ಕೈಜೋಡಿಸಿದ್ದರು.
  • ‘ತಮಿಳುನಾಡು, ಆಂಧ್ರದಲ್ಲೂ ಟಿಕೆಟ್‌ ದರ ಕಡಿಮೆ ಇದೆ. ಅಲ್ಲಿ ತೆರಿಗೆಯೂ ಸೇರಿ ಟಿಕೆಟ್‌ ದರ ₹150ರಿಂದ ₹200ರ ಒಳಗೆ ಇದೆ. ಕರ್ನಾಟಕದಲ್ಲಿ ಮಾತ್ರ ಅತ್ಯಂತ ದುಬಾರಿ ಆಗಿತ್ತು. ಇದರಿಂದ ಕನ್ನಡ ಚಿತ್ರಗಳ ಮೇಲೂ ಪರಿಣಾಮ ಬೀರಿತ್ತು. ಹೊಸ ಅಧಿಸೂಚನೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದರು.
  • ಶರಾವತಿ ಪಂಪ್ಡ್ ಸ್ಟೋರೇಜ್: 120 ಎಕರೆಯಷ್ಟೇ ಬಳಕೆ

ಸಂದರ್ಭ: ‘ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಪಂಪ್ಡ್‌ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ 120 ಎಕರೆಯಷ್ಟೇ ಬಳಕೆಯಾಗಲಿದ್ದು, ಹೆಚ್ಚುವರಿ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.

  • ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಯೋಜನೆಗೆ ಗುರುತಿಸಿರುವ ಪ್ರದೇಶದಲ್ಲಿ ಸರ್ಕಾರದ ಜಾಗವೇ ಇದೆ. 40 ಎಕರೆಯಷ್ಟು ಖಾಸಗಿ ಜಮೀನು ಸ್ವಾಧೀನ ಮಾಡಿಕೊಳ್ಳಬೇಕು.
  • ಶಿವನಸಮುದ್ರ ಯೋಜನೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅನುಷ್ಠಾನಗೊಂಡಿತ್ತು. ‘ವಿದ್ಯುತ್ ಉತ್ಪಾದನೆ ಮಾಡಿದರೆ ನೀರಿನ ಸತ್ವ ಹೋಗುತ್ತದೆ, ಆ ನೀರನ್ನು ಕೃಷಿಗೆ ಬಳಸಲು ಆಗುವು ದಿಲ್ಲ’ ಎಂದು ಸ್ವಹಿತಾಸಕ್ತಿಯ ಕೆಲವರು ಸುಳ್ಳು ಹಬ್ಬಿಸಿದ್ದರು. ಅಂಥ ಜನ ಎಲ್ಲಾ ಕಾಲದಲ್ಲೂ ಇರುತ್ತಾರೆ’ ಎಂದರು.
  • ಚಿಲ್ಲರೆ ಹಣದುಬ್ಬರ ಅಲ್ಪ ಏರಿಕೆ

ಸಂದರ್ಭ: ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ದೇಶದ ಚಿಲ್ಲರೆ ಹಣದುಬ್ಬರವು ಆಗಸ್ಟ್‌ ತಿಂಗಳಿನಲ್ಲಿ ಶೇ 2.07ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.

  • ಚಿಲ್ಲರೆ  ಹಣದುಬ್ಬರ  ಪ್ರಮಾಣವು  ಜುಲೈನಲ್ಲಿ ಶೇ 1.61ರಷ್ಟಿತ್ತು.  2024ರ ಆಗಸ್ಟ್‌ನಲ್ಲಿ ಶೇ 3.65ರಷ್ಟಿತ್ತು. 9 ತಿಂಗಳಿನಿಂದ ಇಳಿಕೆ ಕಂಡಿದ್ದ ಹಣ ದುಬ್ಬರವು ಈಗ ಸ್ವಲ್ಪ ಏರಿಕೆಯಾಗಿದೆ. ನವೆಂಬರ್‌ನಲ್ಲಿ ಶೇ 5.48 ದಾಖಲಾಗಿತ್ತು. 
  • ತರಕಾರಿಗಳು, ಮಾಂಸ, ಮೀನು, ಮೊಟ್ಟೆ, ಎಣ್ಣೆ ಮತ್ತು ವೈಯಕ್ತಿಕ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಹಣ ದುಬ್ಬರ ಏರಿಕೆಯಾಗಿದೆ ಎಂದು ತಿಳಿಸಿದೆ.
  • ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ  ಪ್ರಮಾಣವು ಶೇ 4 ಹಂತದಲ್ಲಿ ಇರಬೇಕು, ಅದು ಶೇ 2ಕ್ಕಿಂತ ಕಡಿಮೆ ಆಗಬಾರದು ಎಂಬುದು ಆರ್ಬಿಐಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಗುರಿ.
  • ದೇಶದ ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರವು ಜುಲೈನಲ್ಲಿ ಶೇ 1.18ರಷ್ಟಿತ್ತು. ಆಗಸ್ಟ್‌ನಲ್ಲಿ ಶೇ 1.69ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ನಗರ ಪ್ರದೇಶದಲ್ಲಿ ಶೇ 2.1ರಿಂದ ಶೇ 2.47ಕ್ಕೆ ಹೆಚ್ಚಳವಾಗಿದೆ.
  • ‘ಆಹಾರ ಮತ್ತು ಪಾನೀಯ ವಿಭಾಗದ ವಸ್ತುಗಳ ದರದಲ್ಲಿನ ಹೆಚ್ಚಳದಿಂದ ಹಣದುಬ್ಬರವು ಆಗಸ್ಟ್‌ನಲ್ಲಿ ಹೆಚ್ಚಾಗಿದೆ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ. ಇತ್ತೀಚೆಗೆ ಸುರಿದ ಹೆಚ್ಚಿನ ಮಳೆ ಮತ್ತು ದೇಶದ ಕೆಲವು ಭಾಗದಲ್ಲಿ ಉಂಟಾದ ಪ್ರವಾಹವು ಬೆಳೆಯ ಇಳುವರಿ ಮೇಲೆ ಪರಿಣಾಮ ಬೀರಬಹುದು. ಇದರಿಂದ ದರವು ಹೆಚ್ಚಳವಾಗಬಹುದು ಎಂದು ತಿಳಿಸಿದ್ದಾರೆ.

ಕರ್ನಾಟಕಕ್ಕೆ ಎರಡನೇ ಸ್ಥಾನ

  • ಅತಿ ಹೆಚ್ಚು ಹಣದುಬ್ಬರ ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದ ಲ್ಲಿದ್ದು, ಶೇ 3.81ರಷ್ಟಿದೆ.
  • ಮೊದಲ ಸ್ಥಾನದಲ್ಲಿ ಕೇರಳ ಶೇ 9.04 ಹೊಂದಿದ್ದರೆ, ಅಸ್ಸಾಂನಲ್ಲಿ ಅತಿ ಕಡಿಮೆ ಹಣದುಬ್ಬರ (–) ಶೇ 0.66 ಇದೆ.
  • .ಐನಿಂದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ: ಸಚಿವ ನಿತಿನ್ಗಡ್ಕರಿ

ಸಂದರ್ಭ: ‘ಕೃಷಿ ವಲಯದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವು ಕ್ರಾಂತಿಕಾರಕ ಬದಲಾವಣೆ ತರಲಿದ್ದು, ಇದರಿಂದ ರೈತರ ಜೀವನ ಮಟ್ಟ ಸುಧಾರಿಸಲಿದೆ.

  • ‘ಸದ್ಯ ದೇಶದಲ್ಲಿ 350ರಿಂದ 400 ಕಾರ್ಖಾನೆಗಳು ಎಥೆನಾಲ್‌ ಉತ್ಪಾದಿಸುತ್ತಿವೆ. ಜೋಳದಿಂದ ಎಥೆನಾಲ್‌ ಉತ್ಪಾದಿಸುವುದರಿಂದ ರೈತರಿಗೆ ₹45 ಸಾವಿರ ಕೋಟಿಯಷ್ಟು ಆದಾಯ ಸಿಗುತ್ತಿದೆ. ಮೊದಲು ಜೋಳಕ್ಕೆ ಕ್ವಿಂಟಲ್‌ಗೆ ₹1,200 ದರ ಇತ್ತು. ಈಗ ಅದು ₹2,800ಕ್ಕೆ ಏರಿಕೆಯಾಗಿದೆ.
  • ₹882 ಕೋಟಿ ವೆಚ್ಚದಲ್ಲಿ ಸೌರಕೋಶ ಘಟಕ

ಸಂದರ್ಭ: ‘ಜಪಾನಿನ ಹೊಸಾಡಾ ಹೋಲ್ಡಿಂಗ್ಸ್‌ ಕಂಪನಿಯು ರಾಜ್ಯದಲ್ಲಿ  ಸೌರಕೋಶ ತಯಾರಿಕಾ ಘಟಕವನ್ನು ಸ್ಥಾಪಿಸಲು ₹882 ಕೋಟಿ ಹೂಡಿಕೆ ಮಾಡಲಿದೆ.

  • ಬಂಡವಾಳ ಆಕರ್ಷಣೆಗಾಗಿ ಜಪಾನ್‌ ಪ್ರವಾಸದಲ್ಲಿರುವ ಎಂ.ಬಿ.ಪಾಟೀಲರು ಹೋಸಾಡಾ ಹೋಲ್ಡಿಂಗ್ಸ್‌ ಅಧ್ಯಕ್ಷ ನಕಾಮುರಾ ಸ್ಯಾನ್‌ ಅವರ ಭೇಟಿಯ ನಂತರ ಈ ಮಾಹಿತಿ ನೀಡಿದ್ದಾರೆ.
  • ‘ತೋಂಗ್‌ ತರ್‌ ಎನರ್ಜಿ ಸೊಲ್ಯೂಷನ್ಸ್‌ (ಟಿಟಿಇಎಸ್‌) ಸಹಯೋಗದಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ. ಫೆಬ್ರುವರಿಯಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಟಿಟಿಇಎಸ್‌ ಕಂಪನಿಯು ₹490 ಕೋಟಿ ವೆಚ್ಚದಲ್ಲಿ ಘಟಕ ಆರಂಭಿಸಲು ಒಪ್ಪಂದಕ್ಕೆ ಸಹಿ ಹಾಕಿತ್ತು. ಈಗ ಹೊಸಾಡಾ ಹೋಲ್ಡಿಂಗ್ಸ್‌ ಸಹಯೋಗದಲ್ಲಿ ಒಟ್ಟು ₹882 ಕೋಟಿ ಹೂಡಿಕೆ ಆಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.
  • ‘ಸೌರಫಲಕಗಳಲ್ಲಿ ಬಳಸುವ ಸೌರಕೋಶಗಳ ತಯಾರಿಕೆಯಲ್ಲಿ ಇದು ಮಹತ್ವದ ಮೈಲುಗಲ್ಲಾಗಲಿದೆ. ದೇಶದ ಸೌರಕೋಶಗಳ ಬೇಡಿಕೆ ಪೂರೈಸುವಲ್ಲಿ ರಾಜ್ಯಕ್ಕೆ ಮಹತ್ವದ ಸ್ಥಾನ ದೊರೆಯಲಿದೆ. ಈ ಘಟಕದಿಂದ 500 ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದಿದ್ದಾರೆ.
  • ‘ಕ್ರೀಡಾ ಪರಿಕರಗಳ ತಯಾರಿಕಾ ಕಂಪನಿ ಇನಾಬತಾವು ರಾಜ್ಯದಲ್ಲಿ ತನ್ನ ಘಟಕ ಸ್ಥಾಪಿಸಲಿದ್ದು, 2027ರಲ್ಲಿ ಅದು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಡೈ ತಯಾರಿಕಾ ಕಂಪನಿ ಟೆತ್ಸುಜಿಕಾವಾ ರಾಜ್ಯದಲ್ಲಿನ ತನ್ನ ಘಟಕವನ್ನು ವಿಸ್ತರಿಸುವ ಬಗ್ಗೆ ಆಸಕ್ತಿ ತೋರಿಸಿದೆ’ ಎಂದು ಹೇಳಿದ್ದಾರೆ.
  • ಯುರೋಪ್ಅಡ್ಡಿ: ಮಾತುಕತೆ ಸ್ಥಗಿತ

ಸಂದರ್ಭ:‘ರಷ್ಯಾ–ಉಕ್ರೇನ್‌ ಸಂಘರ್ಷ ಕೊನೆಗೊಳಿಸಿ, ಶಾಂತಿ ಸ್ಥಾಪಿಸುವ ಮಾತುಕತೆಯೂ ಸ್ಥಗಿತಗೊಂಡಿದ್ದು, ಐರೋಪ್ಯ ದೇಶಗಳು ಈ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿವೆ’ ಎಂದು ಕ್ರೆಮ್ಲಿನ್‌ ತಿಳಿಸಿದೆ.

  • ಮಾತುಕತೆಗೆ ರಷ್ಯಾವೂ ಈಗಲೂ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದೆ.
  • ರಷ್ಯಾ ಹಾಗೂ ಉಕ್ರೇನ್‌ನ ಸಂಧಾನಕಾರರು ಈ ವರ್ಷದಲ್ಲಿ ಇಸ್ತಾಂಬುಲ್‌ನಲ್ಲಿ ಮೂರು ಸುತ್ತಿನ ಮಾತುಕತೆ ನಡೆಸಿದ್ದರು. ಜುಲೈ 23ರಂದು ನಡೆದ ಕೊನೆಯ ಮಾತುಕತೆಯಲ್ಲಿ ಯುದ್ಧದಲ್ಲಿ ಸಿಕ್ಕಿಬಿದ್ದ ಯುದ್ಧ ಕೈದಿಗಳು ಹಾಗೂ ಮೃತಪಟ್ಟ ಯೋಧರ ದೇಹಗಳ ಹಸ್ತಾಂತರ ಸಂಬಂಧ ಹಲವು ಮಾತುಕತೆಗಳು ನಡೆದಿದ್ದವು.
  • ಉಕ್ರೇನ್ ‘ವಾಸ್ತವ ಸ್ಥಿತಿಗಳನ್ನು ಒಪ್ಪಿಕೊಳ್ಳುತ್ತಿಲ್ಲ’ ಎಂದು ರಷ್ಯಾ ಆರೋಪಿಸಿದೆ. ತನಗೆ ಸೇರಿದ ಜಾಗವನ್ನು ವಶಕ್ಕೆ ಪಡೆಯಲು ರಷ್ಯಾವು ಹೆಚ್ಚು ಆಸಕ್ತಿ ತೋರಿಸುತ್ತಿದೆ ಎಂದು ಉಕ್ರೇನ್ ದೂರಿದೆ.
  • ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದ ಏರ್ಪಡಿಸಲು ನಡೆಸಿದ ಪ್ರಯತ್ನಗಳು ಕೂಡ ಫಲ ನೀಡಿಲ್ಲ.
  • ‘ಮಾತುಕತೆ ಮಾರ್ಗವೂ ಸಿದ್ಧ ಗೊಂಡಿದ್ದು, ಕಾರ್ಯನಿರ್ವಹಿಸುತ್ತಿವೆ. ಆದರೆ, ಯುರೋಪ್‌ ರಾಷ್ಟ್ರಗಳು ಇದಕ್ಕೆ ಅಡ್ಡಿಯಾಗುತ್ತಿವೆ’ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.
  • ನೇಪಾಳ: ಸುಶೀಲಾ ಕಾರ್ಕಿ ಪ್ರಧಾನಿ

ಸಂದರ್ಭ: ನೇಪಾಳದಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ (73) ಅವರು ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

  • ‘ಜೆನ್‌–ಝಿ’ ಪ್ರತಿಭಟನೆಯಿಂದಾಗಿ ಈ ವಾರದ ಆರಂಭದಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ದಿಢೀರ್‌ ರಾಜೀನಾಮೆಯ ನಂತರ ನೇಪಾಳದಲ್ಲಿ ತಲೆತೋರಿದ್ದ ರಾಜಕೀಯ ಅನಿಶ್ಚಿತತೆಗೆ ಇದರೊಂದಿಗೆ ತೆರೆಬಿದ್ದಂತಾಗಿದೆ.
  • ಸಂಸತ್ತು ವಿಸರ್ಜನೆ: ನೇಪಾಳ ಸಂಸತ್ತನ್ನು ಶುಕ್ರವಾರ ತಡರಾತ್ರಿ ವಿಸರ್ಜಿಸಲಾಯಿತು. ‘ಪ್ರಧಾನ ಮಂತ್ರಿಯ ಶಿಫಾರಸಿನ ಮೇರೆಗೆ ಸಂಸತ್ತನ್ನು ವಿಸರ್ಜಿಸಲಾಗಿದೆ. 2026ರ ಮಾರ್ಚ್‌ 5ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ’ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.
  • ದೇಶದಾದ್ಯಂತ ಪಟಾಕಿ ನಿಷೇಧಿಸಿ

ಸಂದರ್ಭ: ದೆಹಲಿಯಲ್ಲಿ ಮಾತ್ರ ಪಟಾಕಿ ನಿಷೇಧ ಮಾಡಿರುವುದನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌, ದೇಶದಾದ್ಯಂತ ಈ ಬಗ್ಗೆ ನಿಯಮ ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

  • ‘ಶುದ್ಧ ಗಾಳಿಯನ್ನು ಪಡೆಯುವುದು ದೆಹಲಿ ಜನರ ಹಕ್ಕಾಗಿದ್ದರೆ, ದೇಶದ ಇತರ ನಾಗರಿಕರಗೂ ಆ ಹಕ್ಕು ಇರುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್‌ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್‌ ಚಂದ್ರನ್ ಅವರಿದ್ದ ಪೀಠ ತಿಳಿಸಿದೆ.
  • ದೆಹಲಿಯಲ್ಲಿ ಪಟಾಕಿ ನಿಷೇಧ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ‘ಈ ರೀತಿಯ ನಿಯಮಗಳು ದೇಶದಾದ್ಯಂತ ಇರಬೇಕು. ಇದನ್ನು ಕೇವಲ ದೆಹಲಿಗೆ ಸೀಮಿತಗೊಳಿಸಬಾರದು. ಯಾಕೆಂದರೆ, ಉಳಿದವರೂ ಈ ದೇಶದ ನಾಗರಿಕರು’ ಎಂದು ನ್ಯಾಯಪೀಠ ಹೇಳಿದೆ.
  • ಪಕ್ಷಗಳ ನಿಯಂತ್ರಣಕ್ಕೆ ನಿಯಮ: ಆಯೋಗಕ್ಕೆ ನೋಟಿಸ್

ಸಂದರ್ಭ: ಜಾತ್ಯತೀತ, ಪಾರದರ್ಶಕ ಮತ್ತು ನ್ಯಾಯವನ್ನು ಉತ್ತೇಜಿಸಲು ರಾಜಕೀಯ ಪಕ್ಷಗಳ ನೋಂದಣಿ ಮತ್ತು ನಿಯಂತ್ರಣಕ್ಕಾಗಿ ನಿಯಮಗಳನ್ನು ರೂಪಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

  • ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರ್ಧರಿಸಿತು. ಅಲ್ಲದೆ ಅರ್ಜಿಯು ನೋಂದಾಯಿತ ರಾಷ್ಟ್ರೀಯ ರಾಜಕೀಯ ಪಕ್ಷಗಳನ್ನು ಒಳಗೊಳ್ಳುವಂತೆ ಉಲ್ಲೇಖಿಸಲು ಪೀಠವು ಅರ್ಜಿದಾರ ಅಶ್ವಿನಿ ಉಪಾಧ್ಯಾಯ ಅವರಿಗೆ ಹೇಳಿತು.
  • ಈ ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ, ಭಾರತ ಕಾನೂನು ಆಯೋಗಕ್ಕೂ ಪೀಠ ನೋಟಿಸ್‌ ಜಾರಿ ಮಾಡಿತು.
  • ದೇಶದಲ್ಲಿ ರಾಜಕೀಯ ಪಕ್ಷಗಳಿಗೆ ಯಾವುದೇ ನಿಯಮ ಮತ್ತು ನಿಬಂಧನೆಗಳಿಲ್ಲ. ಇದರಿಂದಾಗಿ ಅನೇಕ ಪ್ರತ್ಯೇಕತಾವಾದಿಗಳು ದೇಣಿಗೆ ಸಂಗ್ರಹಿಸಲು ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ರಚಿಸಿಕೊಂಡಿದ್ದಾರೆ. ಪಕ್ಷಗಳ ಕೆಲ ಪದಾಧಿಕಾರಿಗಳು ಪೊಲೀಸರ ರಕ್ಷಣೆಯನ್ನೂ ಪಡೆಯುತ್ತಿ ದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
  • ಮಗಳ ವಿವಾಹದ ವೆಚ್ಚ ಭರಿಸುವುದು ತಂದೆಯ ಕರ್ತವ್ಯ

ಸಂದರ್ಭ: ಮಗಳ ವಿವಾಹದ ವೆಚ್ಚ ಭರಿಸುವುದು ತಂದೆಯ ಕರ್ತವ್ಯ ವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದಂಪತಿಯ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

  • ಮಗಳ ಮದುವೆಯ ಖರ್ಚಿಗಾಗಿ ₹10 ಲಕ್ಷ ನೀಡುವಂತೆ ತಂದೆಗೆ ಸೂಚಿಸಿದ ಪೀಠ, ದಂಪತಿಯ ವಿಚ್ಛೇದನಕ್ಕೆ ಕುಟುಂಬ ನ್ಯಾಯಾಲಯವು ನೀಡಿದ್ದ ಅನುಮತಿಯನ್ನು ಎತ್ತಿಹಿಡಿಯಿತು.
  • ವಿಚ್ಛೇದನದ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರ ಪೀಠ ನಡೆಸಿತು. 1996ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯ ಸಂಬಂಧ ಸಂಪೂರ್ಣ ಬೇರ್ಪಟ್ಟಿರುವುದು ಮತ್ತು ಮಧ್ಯಸ್ಥಿಕೆಯ ಪ್ರಯತ್ನ ವಿಫಲವಾಗಿರುವುದನ್ನು ಪೀಠವು ಗಮನಿಸಿತು.
  • ‘ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯದ ಹೊರತಾಗಿಯೂ ತನ್ನ ಮಗಳ ವಿವಾಹದ ವೆಚ್ಚಗಳನ್ನು ಭರಿಸುವುದು ಪುರುಷನ ಕರ್ತವ್ಯವಾಗಿದೆ. ಆದ್ದರಿಂದ ಈ ಉದ್ದೇಶಕ್ಕಾಗಿ ₹10 ಲಕ್ಷವನ್ನು ನೀಡಬೇಕೆಂದು ಬಯಸುತ್ತೇವೆ’ ಎಂದು ಪೀಠ ತಿಳಿಸಿತು.
  • ದಂಪತಿಯ ವಿಚ್ಛೇದನಕ್ಕೆ ಅನುಮತಿ ನೀಡಿ ಕುಟುಂಬ ನ್ಯಾಯಾಲಯವು 2019ರಲ್ಲಿ ಹಾಗೂ ದೆಹಲಿ ಹೈಕೋರ್ಟ್ 2023ರಲ್ಲಿ ನೀಡಿದ್ದ ತೀರ್ಪಿನಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
  • ಸಭಾಪತಿಯಾಗಿ ರಾಧಾಕೃಷ್ಣನ್ಪದಗ್ರಹಣ

ಸಂದರ್ಭ: ನೂತನ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿ.ಪಿ.ರಾಧಾಕೃಷ್ಣನ್‌ ಅವರು, ರಾಜ್ಯಸಭೆಯ ಸಭಾಪತಿಯಾಗಿ ಪದಗ್ರಹಣ ಮಾಡಿದರು.

  • ರಾಜ್ಯಸಭೆ ಸಭಾಪತಿಗಳ ಕಚೇರಿಗೆ ತೆರಳಿದ ರಾಧಾಕೃಷ್ಣನ್‌ ಅವರು ಮೇಲ್ಮನೆಯ ಚುನಾವಣಾಧಿಕಾರಿ ಕಚೇರಿಯಲ್ಲಿ ಪದಗ್ರಹಣ ದಾಖಲೆಗಳಿಗೆ ಸಹಿ ಮಾಡಿದರು. ಗೃಹ ಇಲಾಖೆಯೂ ಉಪರಾಷ್ಟ್ರಪತಿಯಾಗಿ ರಾಧಾಕೃಷ್ಣನ್‌ ಅವರ ಪದಗ್ರಹಣ ಸಂಬಂಧ ಪ್ರತ್ಯೇಕ ಅಧಿಸೂಚನೆಯನ್ನೂ ಹೊರಡಿಸಿತು.