Tue. May 5th, 2026

Kannada

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

10 ಕೋಟಿ ದಾಟಿದ ಮೋದಿ ಇನ್ಸ್ಟಾಗ್ರಾಮ್ ಫಾಲೋವರ್ಸ್
ಸಂದರ್ಭ: ಪ್ರಧಾನಿ ನರೇಂದ್ರ ಮೋದಿ ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ಗಳ ಸಂಖ್ಯೆ 10 ಕೋಟಿ ದಾಟಿದೆ. ಈ ಮೂಲಕ ಅವರು ಇಷ್ಟು ದೊಡ್ಡ ಸಂಖ್ಯೆಯ ಫಾಲೋವರ್ಸ್ಗಳನ್ನು ಹೊಂದಿರುವ ವಿಶ್ವದ ಮೊದಲ ನಾಯಕ ಮತ್ತು ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  • 2014ರಲ್ಲಿ ಮೋದಿ ಅವರು ಇನ್‌ಸ್ಟಾಗ್ರಾಮ್ ಖಾತೆ ಆರಂಭಿಸಿದ್ದರು. ಜಾಗತಿಕ ನಾಯಕರಿಗೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ಮೋದಿ ಅವರ ಖಾತೆಯು ಅತಿ ಹೆಚ್ಚು ಬಳಕೆಯಾದ ಡಿಜಿಟಲ್ ವೇದಿಕೆಯಾಗಿದೆ. ವಿಶ್ವದ ಐವರು ಪ್ರಭಾವಿ ನಾಯಕರ ಫಾಲೋವರ್ಸ್‌ಗಿಂತಲೂ ಮೋದಿ ಅವರ ಫಾಲೋವರ್ಸ್ ಹೆಚ್ಚಿದ್ದಾರೆ.
  • ಎರಡನೇ ಸ್ಥಾನದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಮಾಧ್ಯಮ ವೇದಿಕೆಗಿಂತಲೂ (4.32 ಕೋಟಿ ಫಾಲೋವರ್ಸ್) ಮೋದಿ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳ ಸಂಖ್ಯೆ ಎರಡುಪಟ್ಟು.
  • ಮಕರ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೋ (1.50 ಕೋಟಿ), ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ ಲೂಲಾ ಡಾ ಸಿಲ್ವಾ (1.44 ಕೋಟಿ), ಟರ್ಕಿಯ ಅಧ್ಯಕ್ಷ ರಜಬ್ ತಯ್ಯಬ್ ಇರ್ದುಗನ್ (1.16 ಕೋಟಿ) ಮತ್ತು ಅರ್ಜೆಂಟಿನಾ ಅಧ್ಯಕ್ಷ ಜೀವಿಯರ್ ಮಾಯಿಲಿ ಅವರು 64 ಲಕ್ಷ ಫಾಲೋವ ರ್ಸ್‌ಗಳನ್ನು ಹೊಂದಿದ್ದಾರೆ.
  • ಭಾರತದಲ್ಲಿ ಮೋದಿ ಅವರ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರು ಸುಮಾರು 1.61 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಆನಂತರದ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರಿಗೆ ಅಂದಾಜು 1.20 ಕೋಟಿ ಪಾಲೋವರ್ಸ್‌ಗಳಿದ್ದಾರೆ.

ಡಿಜಿಟಲ್ ಕರೆನ್ಸಿ ಮೂಲಕ ಆಹಾರ ಸಬ್ಸಿಡಿ: ಪುದುಚೇರಿಯಲ್ಲಿ ಚಾಲನೆ

  • ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಆಧಾರಿತ ಆಹಾರ ಸಬ್ಸಿಡಿ ವಿತರಣಾ ಯೋಜನೆಗೆ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ನೀಡಿದರು. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಆಹಾರ ಸಬ್ಸಿಡಿ ವಿತರಣೆಯಲ್ಲಿ ಈ ಯೋಜನೆ ಪಾರದರ್ಶಕವಾಗಿದೆ. ಇದು ಡಿಜಿಟಲ್ ರೂಪಾಂತರದ ಮುಂದಿನ ಹಂತವಾಗಿದೆ.
  • ಸರ್ಕಾರ ನೀಡುವ ಆಹಾರ ಮತ್ತು ಸೌಲಭ್ಯಗಳು ಯಾವುದೇ ಸೋರಿಕೆ ಅಥವಾ ಭ್ರಷ್ಟಾಚಾರವಿಲ್ಲದೆ ನೇರವಾಗಿ ಅರ್ಹ ಫಲಾನುಭವಿಗಳನ್ನು ತಲುಪಬೇಕು ಎಂಬುದು ಪ್ರಮುಖ ಆಶಯವಾಗಿದೆ.

ಯೋಜನೆಯ ಪ್ರಮುಖ ಅಂಶಗಳು

  • ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯ ಫಲಾನುಭವಿಗಳಿಗೆ ನೇರವಾಗಿ ಸುರಕ್ಷಿತ ಡಿಜಿಟಲ್ ನಗದು ಒದಗಿಸುವ ಮೂಲಕ ಡಿಬಿಟಿ ವ್ಯವಸ್ಥೆ ಮೇಲ್ದರ್ಜೆಗೆ
  • ಆರ್‌ಬಿಐ ಹೊರತಂದಿರುವ ಡಿಜಿಟಲ್ ರೂಪಾಯಿಯನ್ನು ಡಿಬಿಟಿ ವ್ಯವಸ್ಥೆಯೊಂದಿಗೆ ಸಂಯೋಜಿಸಿ, ಸಬ್ಸಿಡಿ ಹಣ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಜನರನ್ನು ತಲುಪಲಿದೆ.
  • ಜನರ ಪೌಷ್ಟಿಕಾಂಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಆದ್ಯತೆ ನೀಡಿದ್ದು, ಫಲಾನುಭವಿಗಳಿಗೆ ಸಿರಿಧಾನ್ಯಗಳನ್ನು ಪೂರೈಸಲಾಗುತ್ತಿದೆ.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

‘ಆಶಾಕಿರಣ’ ಯೋಜನೆಯಡಿ ರಾಜ್ಯದಲ್ಲಿ 1.40 ಕೋಟಿ ಜನರಿಗೆ ನೇತ್ರ ತಪಾಸಣೆ
ಸಂದರ್ಭ: ರಾಜ್ಯದಲ್ಲಿ ‘ಆಶಾಕಿರಣ’ ಯೋಜನೆಯಡಿ 1.40 ಕೋಟಿ ಮಂದಿಗೆ ಕಣ್ಣಿನ ತಪಾಸಣೆ ನಡೆಸಲಾಗಿದ್ದು, 24.50 ಲಕ್ಷ ಜನರಲ್ಲಿ ನೇತ್ರ ಸಮಸ್ಯೆ ದೃಢಪಟ್ಟಿದೆ.

  • 2022ರಲ್ಲಿ ಪ್ರಾರಂಭ: ಡಿಜಿಟಲ್ ಸಾಧನಗಳ ಅತಿಯಾದ ಬಳಕೆ, ವಾಯು ಮಾಲಿನ್ಯ ಸೇರಿ ವಿವಿಧ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿದೋಷ ಸಮಸ್ಯೆಗೆ ಒಳಪಡುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ. ಚಿಕಿತ್ಸೆ ವಿಳಂಬವಾದಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದು, ದೃಷ್ಟಿ ನಷ್ಟವಾಗುವ ಸಾಧ್ಯತೆಯಿರುತ್ತದೆ. ಅದ್ದರಿಂದ ಆರಂಭಿಕ ಹಂತದಲ್ಲಿಯೇ ನೇತ್ರ ಸಮಸ್ಯೆ ಪತ್ತೆ ಮಾಡಿ, ಚಿಕಿತ್ಸೆ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣ ಕಾರ್ಯಕ್ರಮದಡಿ ಈ ಯೋಜನೆಯನ್ನು 2022ರಲ್ಲಿ ಪ್ರಾರಂಭಿಸಲಾಗಿತ್ತು.
  • ಮೊದಲೆರಡು ಹಂತದಲ್ಲಿ ಆಯ್ದ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ನೇತ್ರ ತಪಾಸಣೆ ನಡೆಸಿ ಸಮಸ್ಯೆ ಪತ್ತೆ ಮಾಡಿದ್ದರು. ಈಗ ರಾಜ್ಯದಾದ್ಯಂತ ಶಾಕಿರಣ ದೃಷ್ಟಿ ಕೇಂದ್ರ’ಗಳಲ್ಲಿಯೂ ತಪಾಸಣೆ ನಡೆಸಲಾಗುತ್ತಿದೆ.
  • ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಯೋಜನೆ ಜಾರಿಗೆ ತರಲಾಗಿತ್ತು.
  • ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ವಿಸ್ತರಿಸಿ, ನೇತ್ರ ತಪಾಸಣೆ ಮಾಡಲಾಗಿತ್ತು.
  • 2025ರ ಜುಲೈನಲ್ಲಿ ಈ ಯೋಜನೆಯನ್ನು ಮರುವಿನ್ಯಾಸ ಮಾಡಿ, ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 393 ‘ಆಶಾಕಿರಣ ದೃಷ್ಟಿ ಕೇಂದ್ರ’ಗಳನ್ನು ಸ್ಥಾಪಿಸಲಾಗಿದೆ.
  • ಶಸ್ತ್ರಚಿಕಿತ್ಸೆ: ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗುತ್ತಿದೆ. ಕಣ್ಣಿನ ಪೊರೆ ಸಮಸ್ಯೆ ದೃಢಪಟ್ಟಲ್ಲಿ ಉನ್ನತ ಆರೋಗ್ಯ ಕೇಂದ್ರಗಳಿಗೆ ಶಿಫಾರಸು ಮಾಡ ಲಾಗುತ್ತಿದ್ದು, ಅಲ್ಲಿ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ.
  • ಯೋಜನೆಯಡಿ ಈ ವರ್ಷ ಜನವರಿ ಅಂತ್ಯಕ್ಕೆ 4.19 ಲಕ್ಷ ಜನರಿಗೆ ಯಶಸ್ವಿ ಯಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆ ಗಳಲ್ಲಿ 58,582 ಮಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿದರೆ, ಉಳಿದವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
  • ‘ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ ನೇತ್ರ ತಪಾಸಣೆ ನಡೆಸಿ, ಸಮಸ್ಯೆಯನ್ನು ಪತ್ತೆ ಮಾಡಲಾಗುತ್ತಿದೆ. ಸಮಸ್ಯೆ ಇರುವವರಿಗೆ ಚಿಕಿತ್ಸೆ ಜತೆಗೆ ಕನ್ನಡಕ ವಿತರಣೆಗೆ ಕ್ರಮವಹಿಸಲಾಗಿದೆ. ಆಸ್ಪತ್ರೆ ಗಳಲ್ಲಿ ಶಾಶ್ವತ ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಿರುವುದರಿಂದ, ಸಾರ್ವಜನಿಕರು ಹತ್ತಿರದ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ’.

ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆ ಅನುಷ್ಠಾನಕ್ಕೆ ಸಂಪುಟ ಅಸ್ತು

  • 2026-27ನೇ ಸಾಲಿನಿಂದ ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕಂಪ್ಲಿಟ್ ರಿಸ್ಕ್ ಟ್ರಾನ್ಸ್‌ಫ‌ರ್ ಮೆಕಾನಿಸಂ(ಸಿಆರ್ ಟಿಎಂ) ಮಾದರಿಯಲ್ಲಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
  • ಈ ಮೂಲಕ ಬೆಳೆ ಹಾನಿಯಿಂದ ಉಂಟಾಗುವ ಆರ್ಥಿಕ ಆಘಾತವನ್ನು ರೈತರಿಂದ ವಿಮಾ ಕಂಪನಿಗಳಿಗೆ ಸಂಪೂರ್ಣವಾಗಿ ವರ್ಗಾಯಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.

1) ಯೋಜನೆಯ ಉದ್ದೇಶಗಳು
ಪ್ರಕೃತಿ ವಿಪತ್ತು, ಅತಿವೃಷ್ಠಿ/ಬರ, ಗಾಳಿ-ಮಳೆ, ಕೀಟ-ರೋಗಗಳಿಂದ ಉಂಟಾಗುವ ಬೆಳೆ ಹಾನಿಗೆ ಆರ್ಥಿಕ ರಕ್ಷಣೆ
ರೈತರ ಆದಾಯ ಸ್ಥಿರತೆ ಮತ್ತು ಕೃಷಿಯಲ್ಲಿ ವಿಶ್ವಾಸ ವೃದ್ಧಿ
ಸಾಲದ ಅವಲಂಬನೆ ಕಡಿಮೆ ಮಾಡಿ ಕೃಷಿ ಹೂಡಿಕೆ ಪ್ರೋತ್ಸಾಹ
ತ್ವರಿತ ಪರಿಹಾರದಿಂದ ಸಾಮಾಜಿಕ ಭದ್ರತೆ

2) CRTM (Complete Risk Transfer Mechanism) ಎಂದರೇನು?
ಸರ್ಕಾರದ ಪಾಲಿನ ಪ್ರೀಮಿಯಂ ನೀಡಿದ ನಂತರ ಹಾನಿ ಪರಿಹಾರದ ಸಂಪೂರ್ಣ ಅಪಾಯವನ್ನು ವಿಮಾ ಕಂಪನಿ ಹೊರುತ್ತದೆ
ರಾಜ್ಯಕ್ಕೆ ಅನಿರೀಕ್ಷಿತ ಹೆಚ್ಚಿನ ಹಾನಿ ಸಂದರ್ಭಗಳಲ್ಲಿ ಹಣಕಾಸು ಒತ್ತಡ ಕಡಿಮೆ
ಕ್ಲೇಮ್‌ಗಳ ಲೆಕ್ಕಾಚಾರ, ಪಾವತಿ ಪ್ರಕ್ರಿಯೆಗಳಿಗೆ ಸ್ಪಷ್ಟ ಜವಾಬ್ದಾರಿ ಮತ್ತು ಸಮಯಬದ್ಧತೆ

3) ವ್ಯಾಪ್ತಿ ಮತ್ತು ಅರ್ಹತೆ
ಸಣ್ಣ, ಅತಿಸಣ್ಣ, ದೊಡ್ಡ ರೈತರು – ಎಲ್ಲ ವರ್ಗಗಳಿಗೂ ಅನ್ವಯ
ಸಾಲ ಪಡೆದ ರೈತರು (loanee) ಮತ್ತು ಸ್ವಯಂ ಸೇರ್ಪಡೆಗೊಂಡ ರೈತರು (non-loanee)
ಆಹಾರ ಧಾನ್ಯ, ಪಲ್ಸ್, ತೈಲಬೀಜ, ವಾಣಿಜ್ಯ ಬೆಳೆಗಳು – ಅಧಿಸೂಚಿತ ಬೆಳೆಗಳು
ಹಾನಿ ಕಾರಣಗಳು: ಬರ/ಅತಿವೃಷ್ಠಿ, ಚಂಡಮಾರುತ, ಪ್ರವಾಹ, ಕೀಟ-ರೋಗ, ಕೊಯ್ಲಿನ ನಂತರದ ಹಾನಿ

4) ಪ್ರೀಮಿಯಂ ಹಂಚಿಕೆ (ಸಾಮಾನ್ಯ ಮಾರ್ಗಸೂಚಿ)
ರೈತರ ಪಾಲು: ಕಡಿಮೆ ಶೇಕಡಾವಾರು (ಉದಾ., ಖರೀಫ್ – 2%, ರಬಿ – 1.5%, ವಾಣಿಜ್ಯ ಬೆಳೆ – 5%)*
ಉಳಿದ ಪ್ರೀಮಿಯಂ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಂಚಿಕೆ
(*ಅಂತಿಮ ದರಗಳನ್ನು ಅಧಿಸೂಚನೆಯಂತೆ ನಿಗದಿಪಡಿಸಲಾಗುತ್ತದೆ)

5) ಪರಿಹಾರ ಲೆಕ್ಕಾಚಾರ ಮತ್ತು ಪಾವತಿ
ಎರಿಯಾ ಅಪ್ರೋಚ್ ಆಧಾರಿತ ಬೆಳೆ ಉತ್ಪಾದನೆ ಅಂದಾಜು
ಕ್ರಾಪ್ ಕಟಿಂಗ್ ಎಕ್ಸ್‌ಪೆರಿಮೆಂಟ್‌ಗಳು (CCE), ಉಪಗ್ರಹ/ಡ್ರೋನ್ ಡೇಟಾ ಬಳಕೆ
ಹಾನಿ ದೃಢಪಟ್ಟ ಬಳಿಕ DBT ಮೂಲಕ ನೇರವಾಗಿ ರೈತರ ಖಾತೆಗೆ ಪಾವತಿ
ನಿಗದಿತ ಕಾಲಾವಧಿಯೊಳಗೆ ಕ್ಲೇಮ್ ಪರಿಹಾರ

ಗಮನಿಸಿ: ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನದ ಪ್ರಚಲಿತ ವಿದ್ಯಮಾನಗಳನ್ನು ಮುಖ್ಯ ಪರೀಕ್ಷೆಯ ಆಯಾ ವಿಷಯಗಳೊಂದಿಗೆ ಕೆಳಗೆ ಸಂಯೋಜಿಸಲಾಗಿದೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1:

“ಬಹುಧ್ರುವೀಯ ಜಾಗತಿಕ ವ್ಯವಸ್ಥೆಯಲ್ಲಿ ಭಾರತದ ಬಹು-ಸಂಯೋಜನಾ (Multi-alignment) ತಂತ್ರವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.”

ಪ್ರಬಂಧ-2:

“ಭಾರತದ ನವೀಕರಿಸಬಹುದಾದ ಇಂಧನ ಮಿಷನ್‌ಗೆ ಕರ್ನಾಟಕದ ಕೊಡುಗೆಯನ್ನು, ವಿಶೇಷವಾಗಿ ಸೌರ ಮತ್ತು ಗಾಳಿ ವಿದ್ಯುತ್ ಯೋಜನೆಗಳ ದೃಷ್ಟಿಯಿಂದ ಮೌಲ್ಯಮಾಪನ ಮಾಡಿ.”

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಜಿಡಿಪಿ ಬೆಳವಣಿಗೆ ಶೇ 7.2ರಷ್ಟು ನಿರೀಕ್ಷೆ
ಸಂದರ್ಭ: ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.8ರಿಂದ ಶೇ 7.2ರ ನಡುವೆ ಇರಬಹುದು ಎಂದು ‘ಇ.ವೈ ಎಕಾನಮಿ ವಾಚ್’ ವರದಿ ತಿಳಿಸಿದೆ.

  • 2047ರ ವೇಳೆಗೆ ವಿಕಸಿತ ಭಾರತ ಗುರಿ ಸಾಧಿಸಲು, ತೆರಿಗೆ ಸುಧಾರಣೆಗಳ ಮೂಲಕ ದೇಶವು ತನ್ನ ತೆರಿಗೆ ಜಿಡಿಪಿ ಅನುಪಾತವನ್ನು ಹೆಚ್ಚಿಸಬೇಕಿದೆ ಎಂದು ತಿಳಿಸಿದೆ.
  • ಪ್ರಮುಖ ದೇಶಗಳೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಕಾರಣದಿಂದಾಗಿ ದೇಶದ ಮಧ್ಯಮ ಅವಧಿಯ ಆರ್ಥಿಕ ಸ್ಥಿತಿಯು ಉಜ್ವಲವಾಗಿರುವಂತೆ ಕಾಣುತ್ತಿದೆ.
  • 2026-27ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 6.8ರಿಂದ ಶೇ 7.2ರ ನಡುವೆ ಇರುವ ಅಂದಾಜಿದೆ ಎಂದು ಇ.ವೈ ಇಂಡಿಯಾದ ಮುಖ್ಯ ನೀತಿ ಸಲಹೆಗಾರ ತಿಳಿಸಿದ್ದಾರೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಭಾರತ–ಇಸ್ರೇಲ್ ಸಂಬಂಧ
ಸಂದರ್ಭ:
ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯವು ಕಳೆದ ಕೆಲವು ದಶಕಗಳಲ್ಲಿ ಬಹಳ ಗಟ್ಟಿಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ “ವಿಶೇಷ ತಂತ್ರಜ್ಞಾನದ ಸಹಭಾಗಿತ್ವ” (Special Strategic Partnership) ಮಟ್ಟಕ್ಕೆ ಏರಿದೆ.

ಇತಿಹಾಸಿಕ ಹಿನ್ನೆಲೆ

Image Credits: Samyukta Karnataka

ಪ್ರಮುಖ ಕ್ಷೇತ್ರಗಳು
ರಕ್ಷಣಾ ಸಹಕಾರ: ಡ್ರೋನ್‌ಗಳು, ಕ್ಷಿಪಣಿ ವ್ಯವಸ್ಥೆಗಳು, ಸೈಬರ್ ಸೆಕ್ಯೂರಿಟಿ.
ಕೃಷಿ ಮತ್ತು ನೀರಿನ ನಿರ್ವಹಣೆ: ಇಸ್ರೇಲ್‌ನ ತಂತ್ರಜ್ಞಾನವನ್ನು ಭಾರತದಲ್ಲಿ “ಕೃಷಿ ಕೇಂದ್ರಗಳು” ಮೂಲಕ ಬಳಸಲಾಗುತ್ತಿದೆ.
ವ್ಯಾಪಾರ ಮತ್ತು ಹೂಡಿಕೆ: 2026ರಲ್ಲಿ ಉಚಿತ ವ್ಯಾಪಾರ ಒಪ್ಪಂದ (FTA) ಕುರಿತು ಮಾತುಕತೆಗಳು ನಡೆಯುತ್ತಿವೆ.
ಶಿಕ್ಷಣ ಮತ್ತು ಸಂಶೋಧನೆ: ವಿದ್ಯಾರ್ಥಿ ವಿನಿಮಯ, ಸಂಯುಕ್ತ ಸಂಶೋಧನಾ ಯೋಜನೆಗಳು.
ಹೊಸ ಒಕ್ಕೂಟಗಳು: I2U2 (India, Israel, UAE, USA) ಮೂಲಕ ತಂತ್ರಜ್ಞಾನ ಮತ್ತು ಆರ್ಥಿಕ ಸಹಕಾರ.

ಇತ್ತೀಚಿನ ಬೆಳವಣಿಗೆಗಳು (2026)
ಪ್ರಧಾನಿ ಮೋದಿ ಅವರ ಇಸ್ರೇಲ್ ಪ್ರವಾಸದಲ್ಲಿ ಹಲವು MoUಗಳು ಮತ್ತು ಒಪ್ಪಂದಗಳು ಸಹಿ.
ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯೂರಿಟಿ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳು.
ಉಚಿತ ವ್ಯಾಪಾರ ಒಪ್ಪಂದ (FTA) ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆ.

ಡಿಪಿಡಿಪಿ ಕಾಯ್ದೆ ಆರ್‌ಟಿಐ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

Content Credits/Source: Vartha Bharathi

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಗ್ರಾಮಾಂತರ ಪ್ರದೇಶಗಳಲ್ಲಿ ವೈ-ಫೈ ಯೋಜನೆಗೆ ಚಾಲನೆ (Rural Wi-Fi Project)
ಸಂದರ್ಭ: ರಾಜ್ಯದ ಕೆಲವು ದುರ್ಗಮ ಪ್ರದೇಶಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸುವ ಉದ್ದೇಶದ ಯೋಜನೆಗೆ ಚಾಲನೆ.

  • ಇದರ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಯಾಣ ಹಾಗೂ ಸಹಸ್ರಲಿಂಗದಲ್ಲಿ ಸಾರ್ವಜನಿಕ ವೈ-ಫೈ ಸೌಲಭ್ಯ ಆರಂಭಿಸಲಾಗಿದೆ ಎಂದು ಜಿಎನ್ಎ ಇಂಡಿಯಾ ಕಂಪನಿಯ ಸಿಇಒ ತಿಳಿಸಿದ್ದಾರೆ. ಈ ಕಂಪನಿಯು ಯೋಜನೆಯ ಅಡಿಯಲ್ಲಿ ವೈ-ಫೈ ಕೇಂದ್ರಗಳನ್ನು ಆರಂಭಿಸುತ್ತಿದೆ.
  • ‘ಆರಂಭಿಕ ಹೆಜ್ಜೆಯಾಗಿ ನಾವು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಯಾಣ ಹಾಗೂ ಸಹಸ್ರಲಿಂಗದಲ್ಲಿ ಈ ಸೌಲಭ್ಯ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯದ ಇನ್ನಷ್ಟು ಸ್ಥಳಗಳಿಗೆ ವಿಸ್ತರಿಸ ಲಿದ್ದೇವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ, ಇಂಟರ್ನೆಟ್ ಇನ್ನೂ ತಲುಪಿಲ್ಲದ ಸ್ಥಳಗಳನ್ನು ಗುರುತಿಸಿ ಅಲ್ಲಿ ವೈ-ಫೈ ಸೌಲಭ್ಯ ಆರಂಭಿಸಲಾಗುವುದು’.
  • ವೈ-ಫೈ ಸೌಲಭ್ಯ ಕಲ್ಪಿಸಲು ಜಿಎನ್ಎ ಕಂಪನಿಯು ಬಿಎಸ್‌ಎನ್‌ಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.
  • ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಗಳಲ್ಲಿ ಇಂಟರ್ನೆಟ್ ಸೌಲಭ್ಯ ಇಲ್ಲವೆಂದಾದರೆ ಅಲ್ಲಿ ಯುಪಿಐ ಪಾವತಿಯಿಂದ ಆರಂಭಿಸಿ ಇಂಟರ್ನೆಟ್ ಆಧಾರಿಸಿದ ಯಾವ ಅನುಕೂಲಗಳೂ ಲಭ್ಯವಾಗುವುದಿಲ್ಲ. ಹೀಗಾಗಿ ಈ ಯೋಜನೆ ಆರಂಭಿಸಲಾಗಿದೆ.
  • ‘ನಮ್ಮ ಭಾಗದ ಗ್ರಾಮಾಂತರ ಪ್ರದೇಶ ಗಳನ್ನು ಈ ಯೋಜನೆಯು ಇಂಟರ್ನೆಟ್ ಜಾಲದ ಜೊತೆ ಬೆಸೆಯುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಈ ಸೌಲಭ್ಯ ಸಿಗುವ ಪರಿಣಾಮವಾಗಿ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸಾಧ್ಯ ವಾಗುತ್ತದೆ.

ಗಡಿಗೆ ಮಾನವರ ಬದಲಿಗೆ ಎಐ ಕಾವಲು: ಗಡಿ ನಿರ್ವಹಣಾ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ

ಸಂದರ್ಭ: ಗಡಿ ನಿರ್ವಹಣಾ ವ್ಯವಸ್ಥೆ ಯಲ್ಲಿ ಕ್ರಾಂತಿ ಸೃಷ್ಟಿಸುವ ಉದ್ದೇಶ ಹೊಂದಿರುವ ಗಡಿಭದ್ರತಾ ಪಡೆ (ಬಿಎಸ್‌ಎಫ್)ಯು ಇದೀಗ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಗಡಿ ವೀಕ್ಷಣೆ ಹಾಗೂ ನಿಗಾವಣೆ ವ್ಯವಸ್ಥೆ ( ಸ್ಮಾರ್ಟ್ ಬಾರ್ಡರ್ ಆಟ್ಸರ್‌ವೇಶನ್ ಆಂಡ್ ಮಾನಿಟರಿಂಗ್ ಸಿಸ್ಟಮ್) ಯನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಗಡಿ ಯುದ್ದಕ್ಕೂ ಇರುವ ಮೂಲ ಸೌಕರ್ಯಗಳ ಜೊತೆ ಸಂಯೋಜಿಸುವ ಗುರಿಯನ್ನು ಹೊಂದಿದೆ.

  • ಮಾನವ ಕೇಂದ್ರೀತ ಗಡಿಕಣ್ಣಾವಲು ವ್ಯವಸ್ಥೆಯ ಮೇಲಿನ ಅವ ಲಂಬನೆಯನ್ನು ಕಡಿಮೆಗೊಳಿಸು ವುದರ ಜೊತೆಗೆ ಸ್ವಯಂಚಾಲಿತ ಹಾಗೂ ತಕ್ಷಣದ ಬೇಹುಗಾರಿಕಾ ಮಾಹಿತಿಯನ್ನು ಒದಗಿಸುವ ಮೂಲಕ ಗಡಿಗಳನ್ನು ಸುಭದ್ರವಾಗಿಡುವ ಉದ್ದೇಶವನ್ನು ಹೊಂದಿದೆ.
  • ಗಡಿಗಳ ಸುರಕ್ಷತೆಗಾಗಿ ಮುಂದಿನ ತಲೆಮಾ ರಿನ ಕಣ್ಣಾವಲು ವ್ಯವಸ್ಥೆಯ ನೀಲನಕಾಶೆಯನ್ನು 2025ರ ಡಿಸೆಂಬರ್‌ನಲ್ಲಿ ಅಂತಿಮಗೊಳಿಸಲಾ ಗಿತ್ತು. ಏಕೀಕೃತ ಎಐ ಪ್ಲಾಟ್‌ ಫಾರಂ ಅನ್ನು ನಿಯೋಜಿಸುವುದೇ ಬಿಎಸ್‌ಎಫ್‌ನ ಉದ್ದೇಶವಾಗಿದೆ.
  • ಗಡಿಗಳಲ್ಲಿ ಒಳನುಸುಳುವಿಕೆ ಪತ್ತೆಹಚ್ಚುವಿಕೆ, ಸಂಚಾರ ವೀಕ್ಷಣೆ ಹಾಗೂ ಏಕ ಹಾಗೂ ಸಮಗ್ರ ವ್ಯವಸ್ಥೆಯೊಂದಿಗೆ ಇತರ ಸೆನ್ಸರ್ ದತ್ತಾಂಶಗಳ ಪರಿಷ್ಕರಣೆಯನ್ನು ಈ ವ್ಯವಸ್ಥೆಯು ಒದಗಿಸಲಿದೆ. ಈಗ ಅಳವಡಿಸಲಾಗಿರುವ ಅಥವಾ ನೂತನ ಸಿಸಿಟಿವಿ ಕ್ಯಾಮರಾಗಳಿಂದ ನೇರವಾಗಿ ವೀಡಿಯೊಗಳ ಪ್ರಸಾರ ಕೂಡಾ ಈ ವ್ಯವಸ್ಥೆಯಡಿ ಲಭ್ಯವಿದೆ.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ನೈತಿಕ ಪ್ರಕರಣ ಅಧ್ಯಯನ – ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಿಂಡು ಮತ್ತು ಮಾನವ–ವೈಲ್ಡ್‌ಲೈಫ್ ಸಂಘರ್ಷ
ಹಿನ್ನಲೆ:

ಚಿಕ್ಕಮಗಳೂರು ಜಿಲ್ಲೆಯ ಬೆಟ್ಟ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಗ್ರಾಮಗಳಿಗೆ ನುಗ್ಗಿ ಬೆಳೆ ಹಾನಿ ಮತ್ತು ಜನರಲ್ಲಿ ಆತಂಕ ಉಂಟುಮಾಡಿದೆ. ಇತ್ತೀಚಿನ ಘಟನೆಯಲ್ಲಿ ಸುಮಾರು 30–35 ಕಾಡಾನೆಗಳು ಕೃಷಿಭೂಮಿಗೆ ನುಗ್ಗಿ ಕಾಫಿ, ಮಕ್ಕೆಜೋಳ ಮತ್ತು ಇತರ ಬೆಳೆಗಳಿಗೆ ಹಾನಿ ಮಾಡಿವೆ. ಸ್ಥಳೀಯ ರೈತರು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದು, ಸರ್ಕಾರದಿಂದ ತಕ್ಷಣದ ಪರಿಹಾರ ಮತ್ತು ಕಾಡಾನೆಗಳನ್ನು ಕಾಡಿಗೆ ಹಿಂತಿರುಗಿಸುವ ಕ್ರಮಗಳನ್ನು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ಕಾಡಾನೆಗಳನ್ನು ತಳ್ಳಿಹಾಕಲು ಕಾರ್ಯಾಚರಣೆ ನಡೆಸುತ್ತಿದ್ದರೂ, ಕೆಲವು ಸಂಘಟನೆಗಳು ಪ್ರಾಣಿಹಕ್ಕುಗಳ ದೃಷ್ಟಿಯಿಂದ ಕಾಡಾನೆಗಳನ್ನು ಹಿಡಿಯುವುದು ಅಥವಾ ಸ್ಥಳಾಂತರಿಸುವುದು ಸೂಕ್ತವಲ್ಲ ಎಂದು ವಾದಿಸುತ್ತಿವೆ. ಪರಿಸರ ಸಂರಕ್ಷಣೆ, ಮಾನವ ಸುರಕ್ಷತೆ ಮತ್ತು ರೈತರ ಜೀವನೋಪಾಯ – ಇವುಗಳ ನಡುವೆ ಸಮತೋಲನ ಸಾಧಿಸುವುದು ದೊಡ್ಡ ಸವಾಲಾಗಿದೆ.

ನೀವು ಜಿಲ್ಲೆಯ ಉಪ ಆಯುಕ್ತ (Assistant District Collector) ಆಗಿದ್ದು, ಈ ಸಮಸ್ಯೆಗೆ ತಕ್ಷಣ ಮತ್ತು ದೀರ್ಘಕಾಲೀನ ಪರಿಹಾರ ಕಂಡುಹಿಡಿಯುವ ಜವಾಬ್ದಾರಿಯನ್ನು ಹೊಂದಿದ್ದೀರಿ.
ಪ್ರಮುಖ ನೈತಿಕ ಪ್ರಶ್ನೆಗಳು
1.ಮಾನವ ಸುರಕ್ಷತೆ vs ವನ್ಯಜೀವಿ ಸಂರಕ್ಷಣೆ
2.ರೈತರ ಜೀವನೋಪಾಯ vs ಪರಿಸರ ಸಮತೋಲನ
3.ತಕ್ಷಣದ ಪರಿಹಾರ vs ದೀರ್ಘಕಾಲೀನ ಶಾಶ್ವತ ಕ್ರಮಗಳು
4.ಭಾವನಾತ್ಮಕ ಒತ್ತಡ vs ವೈಜ್ಞಾನಿಕ ನಿರ್ಧಾರಗಳು
5.ಸಾರ್ವಜನಿಕ ಒತ್ತಡ vs ಕಾನೂನುಬದ್ಧ ಅರಣ್ಯ ನಿಯಮಗಳು

ಪಾಲುದಾರರು (Stakeholders)

  • ಸ್ಥಳೀಯ ರೈತರು ಮತ್ತು ಗ್ರಾಮಸ್ಥರು
  • ಅರಣ್ಯ ಇಲಾಖೆ
  • ವನ್ಯಜೀವಿ ತಜ್ಞರು
  • ಪ್ರಾಣಿಹಕ್ಕು ಸಂಘಟನೆಗಳು
  • ಜಿಲ್ಲಾ ಆಡಳಿತ
  • ರಾಜ್ಯ ಸರ್ಕಾರ

ನಿಮ್ಮ ಮುಂದಿರುವ ಆಯ್ಕೆಗಳು
ಆಯ್ಕೆ 1:
ಕಾಡಾನೆಗಳನ್ನು ತಕ್ಷಣ ಹಿಡಿದು ಸ್ಥಳಾಂತರಿಸುವುದು.

ಆಯ್ಕೆ 2:
ತಾತ್ಕಾಲಿಕವಾಗಿ ಗ್ರಾಮಗಳ ಸುತ್ತ ಕಾವಲು ಬಲಪಡಿಸಿ, ಪರಿಹಾರ ಮೊತ್ತ ನೀಡುವುದು.

ಆಯ್ಕೆ 3:
ಮಾನವ–ವೈಲ್ಡ್‌ಲೈಫ್ ಸಂಘರ್ಷ ಕಡಿಮೆ ಮಾಡಲು ದೀರ್ಘಕಾಲೀನ ಯೋಜನೆ ರೂಪಿಸುವುದು (ಎಲಿಫೆಂಟ್ ಕಾರಿಡಾರ್, ಸೌರ ಬೇಲಿ, ತ್ವರಿತ ಪರಿಹಾರ ವ್ಯವಸ್ಥೆ).

Sources: Prajavani, Vijayavani, Samyukta Karntaka, Vishwavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಸೌರ ಉತ್ಪನ್ನಗಳಿಗೆ ಭಾರಿ ಸುಂಕ
ಸಂದರ್ಭ: ಭಾರತದಿಂದ ಅಮೆರಿಕ ಪ್ರವೇಶಿಸುವ ಕೆಲವು ಬಗೆಯ ಸೌರ ಉತ್ಪನ್ನಗಳ ಮೇಲೆ ಅಲ್ಲಿನ ಆಡಳಿತವು ಶೇಕಡ 125.87ರಷ್ಟು ಸುಂಕ ವಿಧಿಸಿದೆ.

  • ಈ ಸೌರ ಉತ್ಪನ್ನಗಳಿಗೆ ಭಾರತದ ಸರ್ಕಾರವು ‘ನ್ಯಾಯಸಮ್ಮತವಲ್ಲದ ಬಗೆಯಲ್ಲಿ ಸಬ್ಸಿಡಿಗಳನ್ನು ನೀಡುತ್ತಿರುವ ಕಾರಣಕ್ಕಾಗಿ ಹೆಚ್ಚುವರಿ ಸುಂಕ ವಿಧಿಸಲಾಗಿದೆ’ ಎಂದು ಅಮೆರಿಕ ಹೇಳಿದೆ. ಇಂಡೊನೇಷ್ಯಾ ಮತ್ತು ಲಾವೋಸ್‌ನಿಂದ ಅಮೆರಿಕ ಪ್ರವೇಶಿಸುವ ನಿರ್ದಿಷ್ಟ ಸೌರ ಉತ್ಪನ್ನಗಳ ಮೇಲೆಯೂ ಅಮೆರಿಕ ಸರ್ಕಾರ ಬೇರೆ ಬೇರೆ ಪ್ರಮಾಣದಲ್ಲಿ ಸುಂಕ ವಿಧಿಸಿದೆ.
  • ಭಾರತದ ಸೌರ ಉತ್ಪನ್ನಗಳ ಮೇಲೆ ವಿಧಿಸಿರುವ ಸುಂಕವು ಈಗಾಗಲೇ ಜಾರಿಗೆ ಬಂದಿರುವ ಶೇ 10ರಷ್ಟು ಸುಂಕದ ಮೇಲೆ ಹೆಚ್ಚುವರಿಯಾಗಿ ಅನ್ವಯ ಆಗಲಿದೆ. ಅಮೆರಿಕ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ನೀಡಿರುವ ವಿವರದ ಪ್ರಕಾರ, 2022ರಲ್ಲಿ ಅಮೆರಿಕವು ಭಾರತದಿಂದ ಆಮದು ಮಾಡಿಕೊಂಡ ಸೌರ ಉತ್ಪನ್ನಗಳ ಮೊತ್ತವು 83.86 ಮಿಲಿಯನ್ ಡಾಲರ್ (ಇಂದಿನ ಅಂದಾಜು ₹762 ಕೋಟಿ) ಆಗಿತ್ತು. ಇದು, 2024ರಲ್ಲಿ 792 ಮಿಲಿಯನ್ ಡಾಲರ್‌ಗೆ (ಇಂದಿನ ಅಂದಾಜು ₹7.204 ಕೋಟಿ) ತಲುಪಿದೆ.
  • ಭಾರತದಲ್ಲಿ ಉತ್ತೇಜನ: ಭಾರತದಲ್ಲಿ ನವೀಕರಿಸಬಹುದಾದ ಮೂಲಗಳಿಂದ ಇಂಧನ ಉತ್ಪಾದನೆ ಹೆಚ್ಚಿಸಲು, ಈ ಕ್ಷೇತ್ರದಲ್ಲಿ ಅಮದು ಅವಲಂಬನೆ ಕಡಿಮೆ ಮಾಡಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸೌರವಿದ್ಯುತ್ ಉತ್ಪಾದನಾ ಕ್ಷೇತ್ರಕ್ಕೆ ಕೂಡ ಈ ಕ್ರಮಗಳ ಅಡಿಯಲ್ಲಿ ಆದ್ಯತೆ ನೀಡಲಾಗಿದೆ.
  • ಜಗತ್ತಿನಲ್ಲಿ ಸೌರವಿದ್ಯುತ್‌ ಉತ್ಪಾದನೆಯಲ್ಲಿ ಭಾರತವು ಈಗ ಮೂರನೆಯ ಸ್ಥಾನದಲ್ಲಿದೆ.
  • ದೇಶದಲ್ಲಿ ಸೌರಫಲಕಗಳ, ಸೌರವಿದ್ಯುತ್ ಉತ್ಪಾದನೆಯಲ್ಲಿ ಬಳಕೆಯಾಗುವ ಇತರ ವಸ್ತುಗಳ ತಯಾರಿಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು, ಮೇಲಾವಣೆ ಸೌರವಿದ್ಯುತ್ ಯೋಜನೆ, ಪಿಎಂ-ಕುಸುಮ್ ಯೋಜನೆಯಲ್ಲಿ ಭಾರತದಲ್ಲಿಯೇ ತಯಾರಾದ ಉತ್ಪನ್ನಗಳ ಬಳಕೆಯನ್ನು ಕಡ್ಡಾಯ ಮಾಡಿದೆ.
  • ಕೇಂದ್ರ ಸರ್ಕಾರವು 2022ರಲ್ಲಿ ಸೌರ ಕೋಶಗಳು, ಸೌರ ಮಾಡ್ಯೂಲ್‌ಗಳ ಮೇಲೆ ಮೂಲ ಸೀಮಾ ಸುಂಕವನ್ನು ವಿಧಿಸಿದೆ. ಆಮದು ತಗ್ಗಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ.

ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಲಿಂಗತ್ವ ಅಲ್ಪಸಂಖ್ಯಾತರ ಲೋಕದಲ್ಲಿ…

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1:

ಮೆರಿಟೋಕ್ರಸಿಯಿಂದ ಕಾರ್ಯಕ್ಷಮತೆ ಆಧಾರಿತ ಆಡಳಿತದತ್ತ: ನಾಗರಿಕ ಸೇವಾ ಸುಧಾರಣೆಗಳ ಅಗತ್ಯತೆ ಮತ್ತು ಸವಾಲುಗಳ ಕುರಿತು ಚರ್ಚಿಸಿ.

Reference:

ಪ್ರಬಂಧ–2:

ಕರ್ನಾಟಕದಲ್ಲಿ ಲಿಂಗ ಅಲ್ಪಸಂಖ್ಯಾತರು ಮತ್ತು ದೇವದಾಸಿಯರ ಸಾಮಾಜಿಕ ಆರ್ಥಿಕ ಸಮೀಕ್ಷೆ: ಒಳಗೊಳ್ಳುವ ನೀತಿ ನಿರೂಪಣೆಯತ್ತ ಒಂದು ಹೆಜ್ಜೆ? ಚರ್ಚಿಸಿ.

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ರಫ್ತು: ಫೋನ್‌ಗೆ ಅಗ್ರ ಸ್ಥಾನ

ಸಂದರ್ಭ: ಭಾರತದಿಂದ ರಫ್ತಾಗುವ ಸರಕುಗಳ ವರ್ಗದಲ್ಲಿ ಈಗ ಸ್ಮಾರ್ಟ್‌ಫೋನ್‌ಗಳು ಮೊದಲ ಸ್ಥಾನಕ್ಕೆ ಬಂದಿವೆ.

  • 2024-25 ಭಾರತದಲ್ಲಿ ಅಂದಾಜು ಸಾಲಿನಲ್ಲಿ 25.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ತಯಾರು ಮಾಡಲಾಗಿದೆ.
  • 2025ರಲ್ಲಿ ದೇಶದಿ೦ದ ರಫ್ತಾಗಿರುವ ಎಲೆಕ್ಟ್ರಾನಿಕ್ಸ್ ಸರಕುಗಳ ಮೌಲ್ಯವು ₹4 ಲಕ್ಷ ಕೋಟಿಯನ್ನು ದಾಟಿದೆ. ದೇಶದಲ್ಲಿ ನಾಲ್ಕು ಸೆಮಿಕಂಡಕ್ಟರ್ ತಯಾರಿಕಾ ಘಟಕಗಳು ಈ ವರ್ಷ ಉತ್ಪಾದನೆ ಆರಂಭಿಸಿದ ನಂತರದಲ್ಲಿ ಈ ಮೌಲ್ಯವು ಇನ್ನಷ್ಟು ಹೆಚ್ಚಾಗಲಿದೆ ಎಂಬ ಅಂದಾಜು ಮಾಡಲಾಗಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ವಿಶ್ವಸಂಸ್ಥೆ ನಿರ್ಣಯದ ಮೇಲಿನ ಮತದಾನದಿಂದ ದೂರವುಳಿದ ಭಾರತ

  • ಭಾರತ ಸೇರಿದಂತೆ 51 ದೇಶಗಳು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ರಷ್ಯ ಮತ್ತು ಉಕ್ರೇನ್ ನಡುವೆ ‘ತಕ್ಷಣದ, ಸಂಪೂರ್ಣ ಮತ್ತು ಬೇಷರತ್ ಕದನ ವಿರಾಮ’ಕ್ಕೆ ಕರೆ ನೀಡಿರುವ ನಿರ್ಣಯದ ಮೇಲಿನ ಮತದಾನದಿಂದ ದೂರವುಳಿದಿವೆ.
  • ಉಕ್ರೇನ್ ಮಂಡಿಸಿದ ನಿರ್ಣಯವನ್ನು 193 ಸದಸ್ಯರ ಅಧಿವೇಶನವು ಅಂಗೀಕರಿಸಿತು. ನಿರ್ಣಯದ ಪರವಾಗಿ 107 ಮತ್ತು ನಿರ್ಣಯದ ವಿರುದ್ಧವಾಗಿ 12 ದೇಶಗಳು ಮತ ಚಲಾಯಿಸಿದ್ದವು.
  • ಭಾರತವಲ್ಲದೆ ನಿರ್ಣಯದಿಂದ ದೂರವುಳಿದ ಇತರ 50 ಸದಸ್ಯ ರಾಷ್ಟ್ರಗಳಲ್ಲಿ ಬಹರೈನ್,ಬಾಂಗ್ಲಾದೇಶ, ಬ್ರೆಝಿಲ್, ಚೀನಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಯುಎಇ ಮತ್ತು ಅಮೆರಿಕ ಸೇರಿವೆ.
  • ನಿರ್ಣಯವು ಉಕ್ರೇನ್‌ನ ಸಾರ್ವಭೌಮತೆ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಅಖಂಡತೆಗೆ ಬೆಂಬಲವನ್ನು ಪುನರುಚ್ಚರಿಸಿದೆ. ಜೊತೆಗೆ ಯುದ್ಧಕೈದಿಗಳ ವಿನಿಮಯ ಹಾಗೂ ಬಲವಂತದಿಂದ ಸ್ಥಳಾಂತರಿಸಲ್ಪಟ್ಟ ಅಥವಾ ಗಡಿಪಾರುಗೊಂಡ ನಾಗರಿಕರು ಮತ್ತು ಮಕ್ಕಳನ್ನು ಮರಳಿಸುವಂತೆ ಒತ್ತಾಯಿಸಿದೆ.
  • ನಾಗರಿಕರು, ನಾಗರಿಕ ಆಸ್ತಿಗಳು ಮತ್ತು ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ರಶ್ಯದಿಂದ ನಿರಂತರ ಮತ್ತು ತೀವ್ರ ದಾಳಿಗಳು ಹಾಗೂ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ಕುರಿತು ಕಳವಳವನ್ನೂ ನಿರ್ಣಯವು ವ್ಯಕ್ತಪಡಿಸಿದೆ.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ನೈತಿಕ ಪ್ರಕರಣ ಅಧ್ಯಯನ – ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಉಲ್ಲಂಘನೆ

ಹಿನ್ನಲೆ:
ಬೆಂಗಳೂರಿನ ಗಿಜಿಗುಡಿದ ವಾಣಿಜ್ಯ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡವು ಅಗ್ನಿ ಸುರಕ್ಷತಾ ನಿಯಮಗಳ ಗಂಭೀರ ಉಲ್ಲಂಘನೆಗಳನ್ನು ಬಹಿರಂಗಪಡಿಸಿದೆ. ಅನೇಕ ಅಂಗಡಿಗಳು ಮತ್ತು ಸಣ್ಣ ವ್ಯಾಪಾರಗಳನ್ನು ಹೊಂದಿರುವ ಕಟ್ಟಡದಲ್ಲಿ ತುರ್ತು ನಿರ್ಗಮನ ದ್ವಾರಗಳು, ಕಾರ್ಯನಿರ್ವಹಣೆಯಲ್ಲಿರುವ ಅಗ್ನಿ ನಂದಕಗಳು, ಸರಿಯಾದ ವಿದ್ಯುತ್ ಸಂಪರ್ಕ ವ್ಯವಸ್ಥೆ ಇತ್ಯಾದಿ ಮೂಲಭೂತ ಸುರಕ್ಷತಾ ಸೌಲಭ್ಯಗಳು ಅಪೂರ್ಣವಾಗಿದ್ದವು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸದಿದ್ದರೂ, ಸಾರ್ವಜನಿಕ ಸುರಕ್ಷತೆ, ಆಡಳಿತಾತ್ಮಕ ಜವಾಬ್ದಾರಿ ಮತ್ತು ನಿಯಂತ್ರಣದ ಪರಿಣಾಮಕಾರಿತ್ವದ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಟ್ಟಡಕ್ಕೆ ಹಿಂದೆ ಅಗ್ನಿಶಾಮಕ ಇಲಾಖೆಯಿಂದ ನೋಟಿಸ್‌ಗಳು ನೀಡಲಾಗಿದ್ದರೂ, ತಿದ್ದುಪಡಿ ಕ್ರಮಗಳು ಪೂರ್ಣವಾಗಿ ಜಾರಿಯಾಗಿರಲಿಲ್ಲ. ಮೇಲ್ವಿಚಾರಣೆ ಮತ್ತು ಅನುಷ್ಠಾನದಲ್ಲಿ ನಿರ್ಲಕ್ಷ್ಯವೋ, ಅಥವಾ ಅಕ್ರಮಗಳೇ ನಡೆದಿವೆಯೋ ಎಂಬ ಅನುಮಾನವೂ ವ್ಯಕ್ತವಾಗಿದೆ.

ನೀವು ಜಿಲ್ಲೆಯ ಹಿರಿಯ ಆಡಳಿತಾಧಿಕಾರಿಯಾಗಿ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಹೊಂದಿದ್ದೀರಿ.
ಪ್ರಮುಖ ನೈತಿಕ ಪ್ರಶ್ನೆಗಳು
:

  1. ಸಾರ್ವಜನಿಕ ಸುರಕ್ಷತೆ vs ವ್ಯಾಪಾರ ಹಿತಾಸಕ್ತಿ
  2. ನಿಯಂತ್ರಣ ಜವಾಬ್ದಾರಿ vs ಆಡಳಿತಾತ್ಮಕ ನಿರ್ಲಕ್ಷ್ಯ
  3. ಅಕ್ರಮ/ಭ್ರಷ್ಟಾಚಾರ vs ಸತ್ಯನಿಷ್ಠೆ
  4. ನಗರ ಅಭಿವೃದ್ಧಿ vs ಸುರಕ್ಷತಾ ಮಾನದಂಡಗಳು
  5. ಸಂಸ್ಥೆಯ ಪ್ರತಿಷ್ಠೆ vs ಪೀಡಿತರ ನ್ಯಾಯ

ಪಾಲುದಾರರು
ಅಂಗಡಿ ಮಾಲೀಕರು ಮತ್ತು ವ್ಯಾಪಾರಿಗಳು
ಉದ್ಯೋಗಿಗಳು ಮತ್ತು ಗ್ರಾಹಕರು
ಸ್ಥಳೀಯ ನಿವಾಸಿಗಳು
ಅಗ್ನಿಶಾಮಕ ಇಲಾಖೆ
ಮಹಾನಗರ ಪಾಲಿಕೆ
ಜಿಲ್ಲಾಡಳಿತ
ಸಾಮಾನ್ಯ ಸಾರ್ವಜನಿಕರು

ನಿಮ್ಮ ಮುಂದಿರುವ ಆಯ್ಕೆಗಳು
ಆಯ್ಕೆ 1:
ಕಟ್ಟಡವನ್ನು ತಕ್ಷಣ ಸೀಲ್ ಮಾಡಿ, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದು.

ಆಯ್ಕೆ 2:
ಹೊಸ ನೋಟಿಸ್ ನೀಡಿ, ದಂಡ ವಿಧಿಸಿ, ನಿಗದಿತ ಅವಧಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡುವುದು.

ಆಯ್ಕೆ 3:
ಸ್ವತಂತ್ರ ತನಿಖೆ ಆದೇಶಿಸಿ, ಜವಾಬ್ದಾರಿಯನ್ನು ನಿಗದಿಪಡಿಸಿ, ನಗರಮಟ್ಟದಲ್ಲಿ ಸಮಗ್ರ ಸುರಕ್ಷತಾ ಪರಿಶೀಲನೆ ಆರಂಭಿಸುವುದು.

Sources: Prajavani, Vishwavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1:

ಮೊಬೈಲ್ ಬಳಕೆ ನಿಯಂತ್ರಣ: ಇದು ವೈಯಕ್ತಿಕ ಹೊಣೆಗಾರಿಕೆಯೇ ಅಥವಾ ಸರ್ಕಾರದ ಹಸ್ತಕ್ಷೇಪ ಅಗತ್ಯವೇ? ಚರ್ಚಿಸಿ.

ಪ್ರಬಂಧ2:

ಗರಿಷ್ಠ ಗ್ಯಾರಂಟಿ ಯೋಜನೆಗಳು: ಸಾಮಾಜಿಕ ನ್ಯಾಯವೇ ಅಥವಾ ಹಣಕಾಸು ಒತ್ತಡವೇ?

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

₹3.25 ಲಕ್ಷ ಕೋಟಿ ಜೈವಿಕ ಆರ್ಥಿಕತೆ
ಸಂದರ್ಭ: ರಾಜ್ಯದಲ್ಲಿ ಜೈವಿಕ ಆರ್ಥಿಕತೆಯು (ಬಯೋ ಎಕಾನಮಿ) 2025 ರಲ್ಲಿ ₹3.25,360 ಕೋಟಿಗಳಿಗೆ (39.2 ಶತಕೋಟಿ ಡಾಲರ್) ಏರಿಕೆಯಾಗಿದೆ. ಹಿಂದಿನ ವರ್ಷಕ್ಕಿಂತ ಗರಿಷ್ಠ ಬೆಳವಣಿಗೆ ದಾಖಲಿಸಿದೆ.

  • ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯು (ಕೆಐಟಿಎಸ್), ಜೈವಿಕ ತಂತ್ರಜ್ಞಾನ ಉದ್ಯಮಗಳ ಸಂಘದ (ಎಬಿಎಲ್‌ಇ) ಸಹಯೋಗದಲ್ಲಿ ಸಿದ್ಧಪಡಿಸಿರುವ ರಾಜ್ಯದ ಜೈವಿಕ ಆರ್ಥಿಕ ವರದಿ 2025 ರಲ್ಲಿ ಈ ಮಾಹಿತಿ ಇದೆ. ಈ ವರದಿಯನ್ನು ಐಟಿ ಬಿಟಿ ಸಚಿವ ಬಿಡುಗಡೆ ಮಾಡಿದರು.
  • ‘ಕರ್ನಾಟಕವು ದೇಶದ ಜೈವಿಕ ಆರ್ಥಿಕತೆಗೆ ಶೇ 21ರಷ್ಟು ಕೊಡುಗೆ ನೀಡುತ್ತಿದೆ. ರಾಜ್ಯದ ಒಟ್ಟು ಅಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಶೇ 10 ಕ್ಕಿಂತ ಹೆಚ್ಚು ಪಾಲು ಹೊಂದಿದೆ. ಜೈವಿಕ ತಂತ್ರಜ್ಞಾನವು ಅರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿರುವುದಕ್ಕೆ ನಿದರ್ಶನವಾಗಿದೆ. ದೇಶದ ಅತ್ಯಂತ ಪ್ರಬುದ್ಧ ಮತ್ತು ನಾವೀನ್ಯ ಆಧಾರಿತ ಜೈವಿಕ ತಂತ್ರಜ್ಞಾನ ವ್ಯವಸ್ಥೆಯಾಗಿ ಸುಸ್ಥಿರ ರೀತಿಯಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿರುವುದನ್ನು ಈ ವರದಿ ಬೆಳಕು ಚೆಲ್ಲಿದೆ’.
  • ಜೈವಿಕ ತಂತ್ರಜ್ಞಾನವು ಇನ್ನು ಮುಂದೆ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಾಗಿರದೇ ಆರ್ಥಿಕ ಬೆಳವಣಿಗೆ, ಕೈಗಾರಿಕಾ ನಾವೀನ್ಯತೆ ಮತ್ತು ಸಾಮಾಜಿಕ ಪ್ರಭಾವದ ಕೇಂದ್ರ ಚಾಲಕ ಶಕ್ತಿಯಾಗಲಿದೆ. ಡೀಪ್ ಟೆಕ್ ನವೋದ್ಯಮಗಳಿಗೆ ಬೆಂಬಲ, ನಾವೀನ್ಯತೆ, ಮೂಲ ಸೌಕರ್ಯಗಳ
  • ಬಲಪಡಿಸುವಿಕೆ ಮತ್ತು ಬೆಳವಣಿಗೆಯು ಬೆಂಗಳೂರು ಅಚೆಗಿನ ಪ್ರತಿಯೊಂದು ಪ್ರದೇಶಕ್ಕೂ ತಲುಪುವಂತೆ ನೋಡಿಕೊಳ್ಳಬೇಕಾಗಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ತಕ್ಷಣವೇ ಸಿಗಲಿದೆ ಮ್ಯುಟೇಷನ್ ಪ್ರತಿ

ಸಂದರ್ಭ: ಕೃಷಿ ಭೂಮಿ ಸೇರಿದಂತೆ ಯಾವುದೇ ಸ್ವತ್ತಿಗೆ ಸ್ವಯಂ ಚಾಲಿತವಾಗಿ ಮ್ಯುಟೇಷನ್ ಪಡೆಯಬಹುದಾದ ಹೊಸ ವ್ಯವಸ್ಥೆಗೆ ಕಂದಾಯ ಸಚಿವ ಚಾಲನೆ ನೀಡಿದರು.

  • ಚಾಲಿತ ಎಲ್ಲ 7 ದಿನಗಳ ಮತ್ತು 15 ದಿನಗಳ ನೋಟಿಸ್ ಅವಧಿ ಹೊಂದಿರುವ ಮ್ಯುಟೇಷನ್‌ಗಳನ್ನು ನೋಟಿಸ್ ಅವಧಿ ಮುಕ್ತಾಯವಾದ ನಂತರ ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂ ತಂತ್ರಾಂಶದ ಮೂಲಕ ಸರ್ವರ್ ಸಹಿ ಇರುವ ಮ್ಯುಟೇಷನ್ ಪಡೆಯ ಬಹುದಾಗಿದೆ. ಇದರಿಂದಾಗಿ ಕ್ರಯ, ವಿಭಾಗ, ದಾನ, ಪೌತಿ, ಉಯಿಲುಗಳ ಮ್ಯುಟೇಷನ್ ಸ್ವಯಂಚಾಲಿತವಾಗಿ ಪಡೆಯಬಹುದು.
  • ಒಂದು ವೇಳೆ 7 ಕೆಲಸದ ದಿನಗಳು ಅದವಾ 15 ಕೆಲಸದ ದಿನಗಳ ನೋಟಿಸ್ ಅವಧಿಯೊಳಗೆ ಕಂದಾಯ ನಿರೀಕ್ಷಕರು (ಸರ್ಕಾರಿ ಆಕ್ಷೇಪ) ಅಥವಾ ಸಾರ್ವಜನಿಕರು ತಕರಾರು ಸಲ್ಲಿಸಿದರೆ, ಅಂತಹ ಮ್ಯುಟೇಷನ್‌ಗಳನ್ನು ಪೂರ್ಣಗೊಳಿಸದೆ, ಅರ್‌ಸಿಸಿಎಂಎಸ್ ತಂತ್ರಾಂಶದ ಮೂಲಕ ತಹಶೀಲ್ದಾರ್ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ತಹಶೀಲ್ದಾರರ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
  • ಈ ಹಿಂದೆ ಮ್ಯುಟೇಷನ್ ಗಳಿಗೆ ಆಕ್ಷೇಪಣೆ ಇದ್ದಲ್ಲಿ ಅಥವಾ ಅನುಮೋದನೆ ನೀಡಬೇಕಾದಲ್ಲಿ, ರಾಜಸ್ವ ನಿರೀಕ್ಷಕರು ಖುದ್ದಾಗಿ ತಾಲ್ಲೂಕು ಕಚೇರಿಗಳಿಗೆ ಬಂದು ಸಲ್ಲಿಸಬೇಕಾ ಗಿತ್ತು. ಈಗ ರಾಜಸ್ವ ನಿರೀಕ್ಷಕರಿಗೆ ಲಾಗಿನ್ ನೀಡಿದ್ದು, ಯಾವುದೇ ಸ್ಥಳದಿಂದ ಆಕ್ಷೇಪಣೆ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ನೀಡಲಾಗಿದೆ.

ಕೇರಳ ಶೀಘ್ರದಲ್ಲೇ ಆಗಲಿದೆ ‘ಕೇರಳಂ’:  ‘ಕೇರಳಂ’ ಹೆಸರಿಗೆ ಸಂಪುಟ ಒಪ್ಪಿಗೆ

ಸಂದರ್ಭ: ಕೇರಳ ಶೀಘ್ರದಲ್ಲೇ ‘ಕೇರಳಂ’ ಆಗಲಿದೆ. ರಾಜ್ಯದ ಮರು ನಾಮಕರಣ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

  • ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
  • ಕೇರಳದ ಹೆಸರನ್ನು ಅಧಿಕೃತ ವಾಗಿ ‘ಕೇರಳಂ’ ಎಂದು ಬದಲಾಯಿಸುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯ ‘ವನ್ನು ಕೇರಳ ವಿಧಾನಸಭೆಯು 2023ರ * ಅಗಸ್ಟ್ 9ರಂದು ಅಂಗೀಕರಿಸಿತ್ತು.
  • ‘ಭಾಷೆಗಳ ಆಧಾರದಲ್ಲಿ 1956ರ ನ.1ರಂದು ರಾಜ್ಯಗಳನ್ನು ರಚಿಸಲಾಗಿತ್ತು. ಕೇರಳ ಪಿರವಿ ದಿನವನ್ನೂ ನ.1 ರಂದು ಆಚರಿಸಲಾಗುತ್ತದೆ. ರಾಜ್ಯವನ್ನು ಮಲಯಾಳ ಭಾಷೆಯಲ್ಲಿ ‘ಕೇರಳಂ* ಎಂದೇ ಕರೆಯಲಾಗುತ್ತಿದೆ. ಆದರೆ, ಇತರ ಭಾಷೆಗಳಲ್ಲಿ ರಾಜ್ಯದ ಹೆಸರು ಇನ್ನೂ ಕೇರಳವಾಗಿದೆ. ಸಂವಿಧಾನದ 3ನೇ ವಿಧಿದಡಿ ‘ಕೇರಳಂ’ ಎಂದು ತಿದ್ದುಪಡಿ ಮಾಡಲು ಮತ್ತು ಸಂವಿಧಾನದ 8ನೇ ವಿಧಿಯಡಿದಲ್ಲಿ ಉಲ್ಲೇಖಿಸಿರುವ ಎಲ್ಲ ಭಾಷೆಗಳಲ್ಲಿ ‘ಕೇರಳಂ’ ಎಂದು ಮರು ನಾಮಕರಣ ತಕ್ಷಣ ಮಾಡಲು ಕ್ರಮ ಕೈಗೊಳ್ಳುವಂತೆ ವಿಧಾನಸಭೆ ಸರ್ವಾನುಮತದಿಂದ ಕೇಂದ್ರ ಸರ್ಕಾರ ವನ್ನು ಕೋರುತ್ತದೆ’ ಎಂದು ನಿರ್ಣಯ ತೆಗೆದುಕೊಂಡಿತ್ತು.
  • ಮೊದಲ ಬಾರಿ ಕಳುಹಿಸಿದ್ದನಿರ್ಣಯವನ್ನು ಪರಿಶೀಲಿಸಿದ್ದ ಕೇಂದ್ರ ಗೃಹ ಸಚಿವಾಲಯವು ಕೆಲ ತಾಂತ್ರಿಕ ಬದಲಾವಣೆ ಮಾಡುವಂತೆ ಹೇಳಿತ್ತು. ಹೀಗಾಗಿ, ಕೇರಳ

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಎಚ್‌ಪಿವಿ ಲಸಿಕೆ ಅಭಿಯಾನ ಶೀಘ್ರ

ಸಂದರ್ಭ: ಗರ್ಭಕಂಠದ ಕ್ಯಾನ್ಸರ್ ತಡೆಗೆ ಕೇಂದ್ರ ಸರ್ಕಾರದಿಂದ ಕ್ರಮ 14 ವರ್ಷದ ಹೆಣ್ಣುಮಕ್ಕಳಿಗೆ ಎಚ್ಪಿವಿ ಲಸಿಕೆ (ಗರ್ಭಕಂಠದ ಕ್ಯಾನ್ಸರ್ ತಡೆಯಲು) ನೀಡುವ ವಿಶೇಷ ಅಭಿಯಾನವನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಆರಂಭಿಸಲಿದೆ.

  • ಪ್ರತಿವರ್ಷ ಎಲ್ಲ ಸಾಮಾಜಿಕ ಆರ್ಥಿಕ ವರ್ಗದ 1.15 ಕೋಟಿ ಹೆಣ್ಣುಮಕ್ಕಳಿಗೆ ಲಸಿಕೆಯನ್ನು ಉಚಿತವಾಗಿ ನೀಡ ಲಾಗುವುದು ಎಂದು ಮಾಹಿತಿ ನೀಡಿವೆ.
  • ಭಾರತೀಯ ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಮಾಣ ಎರಡನೆಯದಾಗಿದೆ. ಹೆಣ್ಣುಮಕ್ಕಳನ್ನು ಇದರ ಕಬಂಧಬಾಹುವಿನಿಂದ ರಕ್ಷಿಸುವ ಉದ್ದೇಶದಿಂದ ವರ್ಷಗಟ್ಟಲೆ ಲಸಿಕೆಯ ಪರೀಕ್ಷೆ ನಡೆಸಿದ್ದ ಕೇಂದ್ರ ಸರ್ಕಾರ, ಈ ವಾರದಿಂದಲೇ ರಾಷ್ಟ್ರದಾದ್ಯಂತ ಲಸಿಕೆ ಅಭಿಯಾನ ಆರಂಭಿಸಲು ಮುಂದಾಗಿದೆ.
  • ಇದು ವಿಶೇಷ ಅಭಿಯಾನವಾಗಿದ್ದು, ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದ ಭಾಗ ಅಲ್ಲ. ಮೆರ್ಕ್ ಕಂಪನಿಯ ಗಾರ್ಡಸಿಲ್ ಲಸಿಕೆಯನ್ನು ಪೂರೈಸಲಾಗುತ್ತದೆ.
  • ಜನನ ಪ್ರಮಾಣಪತ್ರ, ಆಧಾರ್ ಅಥವಾ ಪಡಿತರ ಚೀಟಿಯಂತಹ ಸರ್ಕಾರಿ ಗುರುತಿನ ಚೀಟಿಯ ಮೇಲೆ ನಮೂದಾಗಿರುವ ಜನ್ಮ ದಿನಾಂಕದ ಆಧಾರದಲ್ಲಿ ವಯಸ್ಸನ್ನು ನಿರ್ಧರಿಸಿ ಲಸಿಕೆಯನ್ನು ವಿತರಿಸಲಾಗುತ್ತದೆ.
  • ಈ ಲಸಿಕೆಯು ಜಗತ್ತಿನಾದ್ಯಂತ ವ್ಯಾಪಕವಾಗಿ ಸಂಶೋಧನೆಗೆ ಒಳಪಟ್ಟಿದ್ದು, ಶೇ 93 100ರಷ್ಟು ಪರಿಣಾಮಕಾರಿಯಾಗಿ ಕ್ಯಾನ್ಸರ್ ತಡೆಗಟ್ಟುತ್ತದೆ ಎಂದು ದೃಢಪಟ್ಟಿದೆ.
  • ‘ಶಿಫಾರಸು ಮಾಡಲಾದ ನಿರ್ದಿಷ್ಟ ವಯೋಮಾನದ ಹೆಣ್ಣುಮಕ್ಕಳಿಗೆ ಈ ಲಸಿಕೆ ನೀಡಿದಲ್ಲಿ ಗರ್ಭಕಂಠ ಕ್ಯಾನ್ಸರ್‌ನಿಂದ ದೀರ್ಘಕಾಲದವರೆಗೆ ರಕ್ಷಣೆ ಪಡೆಯಬಹುದು ಎಂದು ಜಾಗತಿಕ ಮತ್ತು ಭಾರತೀಯ ವೈಜ್ಞಾನಿಕ ಸಾಕ್ಷ್ಯಗಳು ದೃಢಪಡಿಸಿವೆ’ ಎಂದು ಮೂಲಗಳು ತಿಳಿಸಿವೆ.
  • ಈ ಲಸಿಕೆ ವಿತರಣೆಗೆ 2006ರಲ್ಲಿ ಪರವಾನಗಿ ಲಭಿಸಿದ್ದು, ಈವರೆಗೆ ಜಗತ್ತಿನಾದ್ಯಂತ 50 ಕೋಟಿ ಡೋಸ್ ಪೂರೈಕೆ ಮಾಡಲಾಗಿದೆ.
  • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024ರ ಬಜೆಟ್ ಭಾಷಣದಲ್ಲಿ ಎಚ್‌.ಪಿವಿ ಲಸಿಕೆ ಅಭಿಯಾನದ ಬಗ್ಗೆ ಘೋಷಣೆ ಮಾಡಿದ್ದರು.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ನೈತಿಕ ಪ್ರಕರಣ ಅಧ್ಯಯನ (Ethics Case Study) – ಕೊಪ್ಪಳ ಜಿಲ್ಲೆಯ ಕಾರ್ಖಾನೆ ವಿವಾದ
ಹಿನ್ನಲೆ (Background):

ಕೊಪ್ಪಳ ಜಿಲ್ಲೆಯ ಒಂದು ಗ್ರಾಮದಲ್ಲಿ ಸ್ಥಾಪನೆಯಾಗುತ್ತಿರುವ ಕೈಗಾರಿಕಾ ಘಟಕ (ಕಾರ್ಖಾನೆ) ಕುರಿತಾಗಿ ಸ್ಥಳೀಯ ಜನರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕಾರ್ಖಾನೆ ಸ್ಥಾಪನೆಯಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬುದು ಸರ್ಕಾರದ ವಾದ. ಆದರೆ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು, ಕಾರ್ಖಾನೆಯಿಂದ ಪರಿಸರ ಮಾಲಿನ್ಯ, ಕೃಷಿ ಭೂಮಿಗೆ ಹಾನಿ, ನೀರಿನ ಮೂಲಗಳ ಮೇಲೆ ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಟನೆಗಳು ಶಾಂತಿಯುತವಾಗಿ ಆರಂಭವಾದರೂ, ಕ್ರಮೇಣ ಉದ್ವಿಗ್ನತೆಗೆ ತಿರುಗುವ ಲಕ್ಷಣಗಳು ಕಾಣಿಸುತ್ತಿವೆ. ಸ್ಥಳೀಯ ಆಡಳಿತಾಧಿಕಾರಿಯಾಗಿ ನೀವು ಈ ವಿಷಯವನ್ನು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಹೊಂದಿದ್ದೀರಿ. ಒಂದು ಕಡೆ ಅಭಿವೃದ್ಧಿ ಮತ್ತು ಕೈಗಾರಿಕೀಕರಣದ ಅಗತ್ಯ, ಮತ್ತೊಂದು ಕಡೆ ಪರಿಸರ ಸಂರಕ್ಷಣೆ, ಜನರ ಜೀವನೋಪಾಯ ಮತ್ತು ಸಾರ್ವಜನಿಕ ಶಾಂತಿ – ಇವುಗಳ ನಡುವೆ ಸಮತೋಲನ ಸಾಧಿಸುವುದು ನಿಮ್ಮ ಮುಂದೆ ಇರುವ ಸವಾಲಾಗಿದೆ.

ಪ್ರಮುಖ ನೈತಿಕ ಪ್ರಶ್ನೆಗಳು (Ethical Issues)
1.ಆರ್ಥಿಕ ಅಭಿವೃದ್ಧಿ vs ಪರಿಸರ ಸಂರಕ್ಷಣೆ
2.ಉದ್ಯೋಗ ಸೃಷ್ಟಿ vs ಆರೋಗ್ಯ ಮತ್ತು ಜೀವನೋಪಾಯ ರಕ್ಷಣೆ
3.ಸಾರ್ವಜನಿಕ ಹಿತಾಸಕ್ತಿ vs ಖಾಸಗಿ ಹೂಡಿಕೆದಾರರ ಲಾಭ
4.ಕಾನೂನು ಪಾಲನೆ vs ರಾಜಕೀಯ/ಆರ್ಥಿಕ ಒತ್ತಡ

ಪಾಲುದಾರರು (Stakeholders)
ಸ್ಥಳೀಯ ರೈತರು ಮತ್ತು ಗ್ರಾಮಸ್ಥರು
ಕಾರ್ಖಾನೆ ಸ್ಥಾಪಿಸುವ ಕಂಪನಿ
ರಾಜ್ಯ ಸರ್ಕಾರ
ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ
ಪರಿಸರ ನಿಯಂತ್ರಣ ಮಂಡಳಿ
ನಾಗರಿಕ ಸಮಾಜ ಸಂಘಟನೆಗಳು

ನಿಮ್ಮ ಮುಂದಿರುವ ಆಯ್ಕೆಗಳು (Options)
ಆಯ್ಕೆ 1:
ಕಾರ್ಖಾನೆ ಸ್ಥಾಪನೆಗೆ ತಕ್ಷಣ ಅನುಮತಿ ನೀಡುವುದು.

ಆಯ್ಕೆ 2:
ಎಲ್ಲಾ ಅನುಮತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಪರಿಸರ ಪರಿಣಾಮ ಅಧ್ಯಯನ (EIA) ಮರುಪರಿಶೀಲನೆ ಮಾಡುವುದು.

ಆಯ್ಕೆ 3:
ಸ್ಥಳೀಯ ಜನರೊಂದಿಗೆ ಸಂವಾದ ನಡೆಸಿ, ಪರಿಹಾರ ಮತ್ತು ಪರಿಹಾರ ಕ್ರಮಗಳೊಂದಿಗೆ ಸಮ್ಮತ ಪರಿಹಾರ ರೂಪಿಸುವುದು.

Sources: Prajavani, Vijayavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಇಂದಿನಿಂದ ಶೇ 10ರಷ್ಟು ಸುಂಕ
ಸಂದರ್ಭ: ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಶೇ 10ರಷ್ಟು ಹೆಚ್ಚುವರಿ ಸುಂಕವು ಜಾರಿಗೆ ಬರಲಿದೆ. ಈ ಆದೇಶವು 150 ದಿನಗಳವರೆಗೆ ಜಾರಿಯಲ್ಲಿ ಇರಲಿದೆ.

  • ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರುವರಿ 24ರಿಂದ ಎಲ್ಲ ದೇಶಗಳಿಂದ ಅಮರಿಕಕ್ಕೆ ಪ್ರವೇಶಿಸುವ ಸರಕುಗಳ ಮೇಲೆ ಶೇ 15ರಷ್ಟು ಸುಂಕ ವಿಧಿಸುವುದಾಗಿ ಹೇಳಿದ್ದಾರೆ. ಆದರೆ, ಇದರ ಅಧಿಕೃತ ಆದೇಶ ಇದುವರೆಗೆ ಜಾರಿ ಆಗಿಲ್ಲ.
  • ಅಮೆರಿಕದ ಸುಪ್ರೀಂ ಕೋರ್ಟ್, ಡೊನಾಲ್ಡ್ ಟ್ರಂಪ್ ಅವರು ಅಮೆರಿಕಕ್ಕೆ ಪ್ರವೇಶಿಸುವ ಸರಕುಗಳ ಮೇಲೆ ಈ ಹಿಂದೆ ವಿಧಿಸಿದ್ದ ಪ್ರತಿಸುಂಕವನ್ನು ಅನೂರ್ಜಿತಗೊಳಿಸಿದೆ. ತೀರ್ಪಿನ ಬಳಿಕ ಟ್ರಂಪ್ ಅವರು ಎಲ್ಲ ದೇಶಗಳಿಂದ ಆಮದಾಗುವ ಸರಕುಗಳ ಮೇಲೆ ಶೇ 10ರಷ್ಟು ಸುಂಕ ವಿಧಿಸಿದ್ದರು. ಆದರೆ, ಈ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಸುಂಕವನ್ನು ಶೇ 15ಕ್ಕೆ ಹೆಚ್ಚಳ ಮಾಡಿದ್ದಾರೆ.
  • 150 ದಿನಗಳ ನಂತರ ಏನಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಈ ಸುಂಕದ ಬಗ್ಗೆಯೂ ಗೊಂದಲವಿದೆ.

ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ನಲಿ-ಕಲಿ ರದ್ದು ಶಾಲೆಗಳಿಗೆ ಮಾರಕ?
ಸಂದರ್ಭ: ಪ್ರಾಥಮಿಕ ಶಾಲಾ ಶಿಕ್ಷಕರ ಮನವಿಯಂತೆ ರಾಜ್ಯದಲ್ಲಿ ನಲಿ-ಕಲಿ ಯೋಜನೆಯನ್ನು ರದ್ದುಗೊಳಿಸುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿ ನಡೆಯುತ್ತಿದೆ.

  • ರಾಜ್ಯದಲ್ಲಿ ಅಂದಾಜು 6,500ಕ್ಕೂ ಹೆಚ್ಚಿನ ಏಕಶಿಕ್ಷಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವೂ ಸಾಮಾನ್ಯ ವಾಗಿ ಮೂಲಸೌಕರ್ಯ ಕಲ್ಪಿಸದ ಕುಗ್ರಾಮಗಳಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ.
  • ಪ್ರಸ್ತುತ 1ರಿಂದ 3ನೇ ತರಗತಿವರೆಗೂ ಒಂದೇ ಕೊಠಡಿಯಲ್ಲಿ ಮೂರೂ ತರಗತಿಗಳ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಪಾಲಕರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಮೂರು ವರ್ಷ ಒಂದೇ ರೀತಿಯ ಪಾಠ-ಪ್ರವಚನ ನಡೆಯಲಿವೆ. ಮಕ್ಕಳ ಕಲಿಕೆ, ಕೌಶಲದಲ್ಲಿ ಬೆಳವಣಿಗೆಯಾಗುವುದಿಲ್ಲವೆಂಬ ಕಾರಣಕ್ಕಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

“ಎಐ ಇಂಪ್ಯಾಕ್ಟ್ ಶೃಂಗಸಭೆ’ ಕೃತಕ ಬುದ್ಧಿಮತ್ತೆ ಕ್ಷೇತ್ರದ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಿದೆ ಹಾಗೂ ಆ ಕ್ಷೇತ್ರದಲ್ಲಿನ ಚರ್ಚೆಗಳಲ್ಲಿ ಭಾರತೀಯರಿಗೆ ವೇದಿಕೆ ದೊರಕಿಸುವ ಪ್ರಯತ್ನವಾಗಿದೆ, ವಿವರಿಸಿ.

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಮಿಷನರಿ ಮುದ್ರಣಾಲಯಗಳಿಂದ ಆಧುನಿಕ ಡಿಜಿಟಲ್ ಮುದ್ರಣವರೆಗೆ ಕನ್ನಡ ಮುದ್ರಣೋದ್ಯಮದ ಇತಿಹಾಸ ಅಭಿವೃದ್ಧಿ ಮತ್ತು ಪಯಣ ಕುರಿತು ಮುದ್ರಣ ತಂತ್ರಜ್ಞಾನದ ಮಹತ್ವ ಚರ್ಚಿಸಿ.

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ರಾಜಾಜಿ ಪ್ರತಿಮೆ ಅನಾವರಣ
ಸಂದರ್ಭ: ಸ್ವತಂತ್ರ ಭಾರತದ ಮೊದಲ ಮತ್ತು ಏಕೈಕ ಭಾರತೀಯ ಗವರ್ನರ್ ಜನರಲ್, ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಅವರ ಪ್ರತಿಮೆಯನ್ನು ರಾಷ್ಟ್ರಪತಿ ದೌಪದಿ ಮುರ್ಮುಅವರು ರಾಷ್ಟ್ರಪತಿ ಭವನದಲ್ಲಿ ಅನಾವರಣಗೊಳಿಸಿದರು.

  • ವಸಾಹತುಶಾಹಿ ಕುರುಹುಗಳನ್ನು ತೊಡೆದುಹಾಕಲು ತೆಗೆದುಕೊಳ್ಳಲಾಗುತ್ತಿರುವ ಸರಣಿ ಕ್ರಮಗಳ ಭಾಗವಾಗಿ ಈ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಷ್ಟ್ರಪತಿ ಕಚೇರಿ ಹೇಳಿದೆ.
  • ರಾಷ್ಟ್ರ ಪತಿ ಭವನದ ಅಶೋಕ ಮಂಟಪದ ಬಳಿಯಿರುವ ಭವ್ಯವಾದ ತೆರೆದ ಮೆಟ್ಟಿಲುಗಳಲ್ಲಿ ಇದ್ದ. ನವ ದೆಹಲಿಯ ಹಲವಾರು ಕಟ್ಟಡಗಳ ಪ್ರಮುಖ ವಾಸ್ತುಶಿಲ್ಪಿ ಎಡ್ರಿನ್ ಲಟೈನ್ಸ್ ಅವರ ಪ್ರತಿಮೆಯನ್ನು ತೆರವುಗೊಳಿಸಿ. ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಇಡಲಾಗಿದೆ.
  • ವಸಾಹತುಶಾಹಿ ಮನಃಸ್ಥಿತಿಯ ಕುರುಹುಗಳನ್ನು ತೊಡೆದುಹಾಕಲು ಮತ್ತು ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಅಳವಡಿಸಿಕೊಳ್ಳಲು ಹಾಗೂ ಭಾರತಮಾತೆಗೆ ಅಸಾಧಾರಣ ಸೇವೆ ಸಲ್ಲಿಸಿದವರನ್ನು ಗೌರವಿಸಲು ತೆಗೆದುಕೊಳ್ಳುತ್ತಿ-ರುವ ಸರಣಿ ಕ್ರಮಗಳ ಭಾಗವಾಗಿ ಪ್ರತಿಮೆ ಅನಾವರಣ ಮಾಡಲಾಗಿದೆ’ಎಂದು ರಾಷ್ಟ್ರಪತಿ ಕಚೇರಿ ‘ಎಕ್ಸ್’ ಮಾಡಿದೆ.

3.25 ಲಕ್ಷ ಕೋಟಿ ದಾಟಿದ ಜೈವಿಕ ಆರ್ಥಿಕತೆ
ಸಂದರ್ಭ: ರಾಜ್ಯ ಜೈವಿಕ ಆರ್ಥಿಕತೆಯು 2025ರಲ್ಲಿ 3,25,360 ಕೋಟಿ ರೂ.ಗಳಿಗೆ ತಲುಪಿದೆ. ಸಂಶೋಧನೆ ನೇತೃತ್ವದ ಜತೆಗೆ ತಯಾರಿಕೆ, ವಿತರಣೆ, ಸೇವೆಗಳವರೆಗೆ ಸರಪಳಿ ಒಳಗೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

  • ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್), ಜೈವಿಕ ತಂತ್ರಜ್ಞಾನ ಉದ್ಯಮಗಳ ಸಂಘದ (ಎಬಿಎಲ್‌ಇ) ಸಹಯೋಗದಲ್ಲಿ ಸಿದ್ಧಪಡಿಸಿರುವ ವರದಿಯಲ್ಲಿ ಈ ಸಂಗತಿ ಉಲ್ಲೇಖವಾಗಿದೆ.
  • ದೇಶದ ಅತ್ಯಂತ ಪ್ರಬುದ್ಧ ಮತ್ತು ನಾವೀನ್ಯತೆ ಆಧಾರಿತ ಜೈವಿಕ ತಂತ್ರಜ್ಞಾನ ವ್ಯವಸ್ಥೆಯಾಗಿ ರಾಜ್ಯ ಸುಸ್ಥಿರ ರೀತಿಯಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ.
  • ಜೈವಿಕ ತಂತ್ರಜ್ಞಾನವು ಪ್ರಯೋಗಾಲಯಗಳಿಗೆ ಸೀಮಿತವಾಗಿಲ್ಲ. ಆರ್ಥಿಕ ಬೆಳವಣಿಗೆ, ಕೈಗಾರಿಕಾ ನಾವೀನ್ಯತೆ ಮತ್ತು ಸಾಮಾಜಿಕ ಪ್ರಭಾವದ ಕೇಂದ್ರ ಚಾಲಕ ಶಕ್ತಿಯಾಗಿ ಅಭಿವೃದ್ಧಿಗೊಳ್ಳುತ್ತಾ ಮುನ್ನಡೆಯುತ್ತಿದೆ.
  • ಡೀಪ್-ಟೆಕ್ ಸ್ಟಾರ್ಟ್‌ ಅಪ್‌ಗಳಿಗೆ ಬೆಂಬಲ, ನಾವೀನ್ಯತೆ ಮೂಲಸೌಕರ್ಯಗಳ ಬಲಪಡಿಸುವಿಕೆ ಮತ್ತು ಬೆಳವಣಿಗೆಯು ಬೆಂಗಳೂರು ಆಚೆಗಿನ ಪ್ರತಿಯೊಂದು ಪ್ರದೇಶಕ್ಕೂ ತಲುಪುವಂತೆ ನೋಡಿಕೊಳ್ಳುವ ಮೂಲಕ ಸಮಗ್ರ ಜೈವಿಕ ಉತ್ಪಾದನಾ ಆರ್ಥಿಕತೆ ನಿರ್ಮಿಸುವುದರತ್ತ ಸರ್ಕಾರವು ಹೆಚ್ಚು ಗಮನನೀಡಬೇಕಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಹೊಸ ನೀತಿ ಅನಾವರಣಗೊಳಿಸಿದ ಗೃಹ ಸಚಿವಾಲಯ: ಉಗ್ರರ ನಿಗ್ರಹಕ್ಕೆಪ್ರಹಾರ್

ಸಂದರ್ಭ: ಭಯೋತ್ಪಾದಕಚಟುವಟಿಕೆಗಳನ್ನುಹತ್ತಿಕ್ಕಲು ಮತ್ತುಉಗ್ರರದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಕಾರ್ಯತಂತ್ರ ಒಳಗೊಂಡ ದೇಶದ ಮೊತ್ತ ಮೊದಲ ಭಯೋತ್ಪಾದಕ ನಿಗ್ರಹನೀತಿ ‘ಪ್ರಹಾರ್’ ಅನ್ನುಕೇಂದ್ರಗೃಹಸಚಿವಾಲಯಅನಾವರಣಗೊಳಿಸಿದೆ.

  • ಪಹಲ್ಲಾಮ್ ಉಗ್ರ ದಾಳಿ ಬಳಿಕ ಭಯೋತ್ಪಾದನೆ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ನೀತಿ ಕಠಿಣಗೊಳಿಸಿರುವ ಕೇಂದ್ರ ಸರ್ಕಾರ, ದೇಶದ ಭದ್ರತೆಯನ್ನು ಸಮಗ್ರ ದಿಕ್ಕುಗಳಲ್ಲೂ ಬಲಪಡಿಸುವ ಉದ್ದೇಶದಿಂದ ‘ಪ್ರಹಾರ್’ ಹೆಸರಿನ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿಯನ್ನು ಬಿಡುಗಡೆ ಮಾಡಿದೆ. ಗಡಿಯಾಚೆಯ ಭಯೋತ್ಪಾದನೆ, ಸೈಬರ್ ದಾಳಿ, ಡೋಣ್‌ಗಳ ದುರ್ಬಳಕೆ ಹಾಗೂ ತಂತ್ರಜ್ಞಾನ ಬಳಸಿಕೊಂಡು ಅಪತ್ತು ಸೃಷ್ಟಿಸುವ ಪ್ರಯತ್ನಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ನೂತನ ನೀತಿ ರೂಪಿಸಲಾಗಿದೆ.
  • ಕೇಂದ್ರ ಸರ್ಕಾರದ ಈ ಕಾರ್ಯತಂತ್ರವು ಬದಲಾಗು ತ್ತಿರುವ ಭಯೋತ್ಪಾದನೆಯ ಸ್ವರೂಪವನ್ನು ಎದುರಿಸಲು ಸಮಗ್ರ ಚೌಕಟ್ಟನ್ನು ರೂಪಿಸಿದೆ. ಕೇಂದ್ರ ಗೃಹ ಸಚಿವಾಲಯವು ಬಿಡುಗಡೆ ಮಾಡಿರುವ ಈ ಹೊಸ ನೀತಿಯು ಭಯೋ ತ್ಪಾದನೆಯನ್ನು ಯಾವುದೇ ಧರ್ಮ, ಜನಾಂಗ ಅಥವಾ ರಾಷ್ಟ್ರೀಯತೆಗೆ ಜೋಡಿಸದೆ, ಹಿಂಸಾಚಾರಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂಬ ದೃಢ ನಿಲುವನ್ನು ಪ್ರತಿಪಾದಿಸಿದೆ. ಗೃಹ ಸಚಿವಾಲಯದ ವರದಿ ಪ್ರಕಾರ, ಗಡಿಯಾಚೆಗಿನ ಪ್ರಾಯೋಜಿತ ಭಯೋತ್ಪಾದನೆ ಭಾರತಕ್ಕೆ ದೊಡ್ಡ ಸವಾಲಾಗಿದೆ. ಅಲ್‌ಖೈದಾ ಮತ್ತು ಐಸಿಸ್‌ನಂಥ ಜಾಗತಿಕ ಸಂಘಟನೆಗಳು ‘ಸ್ವೀಪರ್ ಸೆಲ್’ಗಳ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಯತ್ನಿಸುತ್ತಿವೆ.
  • ಭಯೋತ್ಪಾದನೆ ನಿಗ್ರಹ ಕಾರ್ಯದಲ್ಲಿ ತೊಡಗಿರುವ ಏಜೆನ್ಸಿಗಳ ನಡುವೆ ಸಮನ್ವಯತೆ ಸಾಧಿಸುವುದು, ತನಿಖೆಯ ಪ್ರತಿಯೊಂದು ಹಂತದಲ್ಲೂ ಕಾನೂನು ತಜ್ಞರ ಸೇವೆ ಲಭ್ಯವಾಗುವಂತೆ ಮಾಡುವುದು ಹಾಗೂ ಭಯೋತ್ಪಾದಕ ರಿಗೆ ಹಣಕಾಸಿನ ನೆರವು, ಶಸ್ತ್ರಾಸ್ತ್ರ ಗಳು ಲಭ್ಯವಾಗುವುದನ್ನು ತಡೆಯುವ ಗುರಿಯನ್ನು ಈನೀತಿ ಹೊಂದಿದೆ.
  • ಗೃಹ ಸಚಿವಾಲಯ ಸಿದ್ಧಪಡಿಸಿರುವ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ಕಾರ್ಯತಂತ್ರ ನೀತಿಯು, ‘ದೇಶದ ಒಳಗಿನ ಮತ್ತು ಹೊರಗಿನ ಕೆಲವು ಶಕ್ತಿಗಳು ಡೋನ್‌ಗಳು ಹಾಗೂ ರೊಬಾಟಿಕ್ ಅನ್ನು ಭಯೋತ್ಪಾದನೆಗಾಗಿ ದುರುಪಯೋಗಪಡಿಸಿಕೊಳ್ಳುವುದು’ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದೆ.
  • ಪಹಲ್ಲಾಮ್ ಉಗ್ರ ದಾಳಿ ಬಳಿಕ ಭಯೋತ್ಪಾದನೆ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ನೀತಿ ಕಠಿಣಗೊಳಿಸಿರುವ ಕೇಂದ್ರ ಸರ್ಕಾರ, ದೇಶದ ಭದ್ರತೆಯನ್ನು ಸಮಗ್ರ ದಿಕ್ಕುಗಳಲ್ಲೂ ಬಲಪಡಿಸುವ ಉದ್ದೇಶದಿಂದ ‘ಪ್ರಹಾರ್’ ಹೆಸರಿನ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿಯನ್ನು ಬಿಡುಗಡೆ ಮಾಡಿದೆ. ಗಡಿಯಾಚೆಯ ಭಯೋತ್ಪಾದನೆ, ಸೈಬರ್ ದಾಳಿ, ಡೋಣ್‌ಗಳ ದುರ್ಬಳಕೆ ಹಾಗೂ ತಂತ್ರಜ್ಞಾನ ಬಳಸಿಕೊಂಡು ಅಪತ್ತು ಸೃಷ್ಟಿಸುವ ಪ್ರಯತ್ನಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ನೂತನ ನೀತಿ ರೂಪಿಸಲಾಗಿದೆ.
  • ಕೇಂದ್ರ ಸರ್ಕಾರದ ಈ ಕಾರ್ಯತಂತ್ರವು ಬದಲಾಗು ತ್ತಿರುವ ಭಯೋತ್ಪಾದನೆಯ ಸ್ವರೂಪವನ್ನು ಎದುರಿಸಲು ಸಮಗ್ರ ಚೌಕಟ್ಟನ್ನು ರೂಪಿಸಿದೆ. ಕೇಂದ್ರ ಗೃಹ ಸಚಿವಾಲಯವು ಬಿಡುಗಡೆ ಮಾಡಿರುವ ಈ ಹೊಸ ನೀತಿಯು ಭಯೋ ತ್ಪಾದನೆಯನ್ನು ಯಾವುದೇ ಧರ್ಮ, ಜನಾಂಗ ಅಥವಾ ರಾಷ್ಟ್ರೀಯತೆಗೆ ಜೋಡಿಸದೆ, ಹಿಂಸಾಚಾರಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂಬ ದೃಢ ನಿಲುವನ್ನು ಪ್ರತಿಪಾದಿಸಿದೆ. ಗೃಹ ಸಚಿವಾಲಯದ ವರದಿ ಪ್ರಕಾರ, ಗಡಿಯಾಚೆಗಿನ ಪ್ರಾಯೋಜಿತ ಭಯೋತ್ಪಾದನೆ ಭಾರತಕ್ಕೆ ದೊಡ್ಡ ಸವಾಲಾಗಿದೆ. ಅಲ್‌ಖೈದಾ ಮತ್ತು ಐಸಿಸ್‌ನಂಥ ಜಾಗತಿಕ ಸಂಘಟನೆಗಳು ‘ಸ್ವೀಪರ್ ಸೆಲ್’ಗಳ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಯತ್ನಿಸುತ್ತಿವೆ.
  • ಸವಾಲುಗಳ ಎಚ್ಚರಿಕೆ: ವಿಶೇಷವಾಗಿ ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಡೋನ್ ತಂತ್ರಜ್ಞಾನದ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಸಾಗಾಟ ನಡೆಯುತ್ತಿದೆ. ಭಯೋತ್ಪಾದಕರು ಸಂವಹನಕ್ಕಾಗಿ ಎನ್‌ಕ್ರಿಪ್ಪೆಡ್ ಆ್ಯಪ್‌ಗಳು, ಡಾರ್ಕ್ ವೆಬ್ ಮತ್ತು ಕ್ರಿಪ್ಲೋ ವ್ಯಾಲೆಟ್‌ಗಳನ್ನು ಬಳಸುತ್ತಿರುವುದು ಭದ್ರತಾ ಸಂಸ್ಥೆಗಳಿಗೆ ಹೊಸ ಸವಾಲಾಗಿದೆ. ಅಲ್ಲದೆ, ಸೈಬರ್ ದಾಳಿಗಳು ಮತ್ತು ರಾಹಾಯವಿಕ ವಾಡ ಡಿಜಿಟಲ್ ಶಸ್ತ್ರಾಸ್ತ್ರಗಳ
  • ಅಂತಾರಾಷ್ಟ್ರೀಯ ಸಹಕಾರ: ಭಯೋತ್ಪಾದನೆ ಜಾಗತಿಕ ಸಮಸ್ಯೆ ಆಗಿರುವುದರಿಂದ, ಇತರ ರಾಷ್ಟ್ರಗಳೊಂದಿಗೆ ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಅಪರಾಧಿಗಳ ಹಸ್ತಾಂತರ ಪ್ರಕ್ರಿಯೆ ವೇಗಗೊಳಿಸಲು ಭಾರತ ನಿರ್ಧರಿಸಿದೆ.

ದತ್ತಾಂಶ ಹಂಚಿಕೆ: ಬಳಕೆದಾರರ ಆಯ್ಕೆಗೆ
ಸಂದರ್ಭ: ಮೆಟಾ ಪ್ಲಾಟ್‌ಫಾರ್ಮ್ಸ್ ಅಥವಾ ಮೆಟಾ ಸಮೂಹದ ಇತರ ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಳ್ಳುವ ಆಯ್ಕೆಯನ್ನು ಬಳಕೆದಾರರಿಗೇ ಬಿಡಬೇಕು ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ನೀಡಿರುವ ಆದೇಶವನ್ನು ಜಾರಿಗೆ ತರುವುದಾಗಿ ವಾಟ್ಸ್ಆ್ಯಪ್, ಸುಪ್ರೀಂ ಕೋರ್ಟ್‌ ತಿಳಿಸಿದೆ.

  • ಸಿಸಿಐ ಶಿಫಾರಸು ಗಮನದಲ್ಲಿ ಇಟ್ಟುಕೊಂಡು, ವಾಟ್ಸ್ಆ್ಯಪ್ ಮತ್ತು ಅದರ ಮಾತೃಸಂಸ್ಥೆ ಮೆಟಾ ಪ್ಲಾಟ್‌ಫಾರ್ಮ್ನಲ್ಲಿ ಜಾಹೀರಾತುಗಳ ಮೇಲೆ ಐದು ವರ್ಷ ನಿಷೇಧ ಹೇರಬೇಕು ಎಂಬ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಈ ಎರಡೂ ಕಂಪನಿಗಳಿಗೆ ಸಿಜೆಐ ನೇತೃತ್ವದ ಪೀಠವು ಸೂಚಿಸಿತು.

ಒಂದು ದೇಶ ಒಂದು ಮತಪಟ್ಟಿ: ಚುನಾವಣಾ ಆಯೋಗದಿಂದ ಮಹತ್ವದ ಹೆಜ್ಜೆ
ಸಂದರ್ಭ: ದೇಶಾದ್ಯಂತ ಚುನಾವಣೆಗಳಲ್ಲಿ ಪಾರದರ್ಶಕತೆ ಮತ್ತು ಏಕರೂಪತೆ ತರುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ದೆಹಲಿಯ ಭಾರತ ಮಂಟಪದಲ್ಲಿ ರಾಜ್ಯ ಚುನಾವಣಾ ಆಯುಕ್ತರ ರಾಷ್ಟ್ರೀಯ ದುಂಡುಮೇಜಿನ ಸಮ್ಮೇಳನವನ್ನು ಆಯೋಜಿಸಿದ್ದು, ಬರೋಬ್ಬರಿ 27 ವರ್ಷಗಳ ನಂತರ ಇಂಥದ್ದೊಂದು ಬೃಹತ್ ಸಭೆ ನಡೆಯುತ್ತಿರುವುದು ವಿಶೇಷ.

  • ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯ ಪ್ರಮುಖ ಉದ್ದೇಶ ‘ಒಂದೇ ಮತದಾರರ ಪಟ್ಟಿ’ ಪರಿಕಲ್ಪನೆಯನ್ನು ಜಾರಿಗೆ ತರುವುದಾಗಿದೆ ಎನ್ನಲಾಗಿದೆ.
  • ಪ್ರಸ್ತುತ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಕೇಂದ್ರ ಆಯೋಗವು ಪಟ್ಟಿ ಸಿದ್ಧಪಡಿಸಿದರೆ, ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ರಾಜ್ಯ ಚುನಾವಣಾ ಆಯೋಗಗಳು ಪ್ರತ್ಯೇಕ ಪಟ್ಟಿ ತಯಾರಿಸುತ್ತವೆ. ಇದರಿಂದ ಮತದಾರರ ಸಂಖ್ಯೆಯಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದ್ದು, ಗೊಂದಲ ಸೃಷ್ಟಿಯಾಗುತ್ತಿದೆ. ಉದಾಹರಣೆಗೆ, ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಇಂತಹ ವ್ಯತ್ಯಾಸಗಳು ಕಂಡುಬಂದಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ನಿರ್ಣಾಯಕ ಸಮಾವೇಶ:

  • ಈ ಸಭೆಯಲ್ಲಿ ‘ಇಸಿಐನೆಟ್’ ಎಂಬ ಡಿಜಿಟಲ್ ಫ್ಲ್ಯಾಟ್‌ಫಾರ್ಮ್ ಸೇರಿದಂತೆ ಹಲವು ತಾಂತ್ರಿಕ ಸುಧಾರಣೆಗಳನ್ನು ಪರಿಚಯಿಸಲಾಗುವುದು. ಅಲ್ಲದೆ, ಇವಿಎಂ ಯಂತ್ರಗಳ ಭದ್ರತೆ, ಪಾರದರ್ಶಕತೆ ಮತ್ತು ಮತದಾರರ ಅರ್ಹತೆ ಬಗ್ಗೆಯೂಸುದೀರ್ಘಟರ್ಟೆ ನಡೆಯಲಿದೆ.
  • 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಮತದಾರರ ಅರ್ಹತೆಯ ಮೇಲಿನ ತುಲನಾತ್ಮಕ ಅಭ್ಯಾಸಗಳ ಜತೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳ ದೃಢತೆ, ಪಾರದರ್ಶಕತೆ ಮತ್ತು ಸುರಕ್ಷತೆಯ ಚರ್ಚೆಗಳು ಇದರಲ್ಲಿರಲಿವೆ.
  • ಒಟ್ಟು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಆಯುಕ್ತರು ಇದರಲ್ಲಿ ಭಾಗವಹಿಸಲಿದ್ದು, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಸಮಾವೇಶ ನಿರ್ಣಾಯಕ ಎನ್ನಲಾಗಿದೆ.
  • ಭಾರತೀಯ ಚುನಾವಣಾ ಆಯೋಗವು ಲೋಕಸಭೆ, ವಿಧಾನಸಭೆ, ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣಿಗಳಿಗೆ ಜವಾಬ್ದಾರರಾಗಿದ್ದರೆ, ಸಾಂವಿಧಾನಿಕ ನಿಬಂಧನೆಗಳಡಿ ರಚಿಸಲಾದ ರಾಜ್ಯ ಚುನಾವಣಾ ಆಯೋಗಗಳು ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾರರ ಪಟ್ಟಿ ಸಿದ್ಧಪಡಿಸುವ ಮತ್ತು ಅವುಗಳ ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಹೊಂದಿವೆ.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಅಪ್ಪೆಮಿಡಿ: ವಿಶಿಷ್ಟ ತಳಿಗಳ ಭಂಡಾರ ರಕ್ಷಣೆಗೆ ಕೂಗು
ಸಂದರ್ಭ: ಉತ್ತರ ಕನ್ನಡದ ಅಘನಾಶಿನಿ ನದಿ ಪಾತ್ರದಲ್ಲಿ ಕಂಡುಬರುವ ಅಪರೂಪದ ಅಪ್ಪೆಮಿಡಿ ಮಾವಿನ ವೈವಿಧ್ಯ ಸಂರಕ್ಷಣೆಗಾಗಿ ಈ ಪ್ರದೇಶವನ್ನು ಜೀವವೈವಿಧ್ಯ ಪರಂಪರೆ ತಾಣ’ ಎಂದು ಘೋಷಿಸಬೇಕು ಎಂದು ಪರಿಸರ ತಜ್ಞರು ಮತ್ತು ಪರಿಸರ ಪ್ರೇಮಿಗಳು ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.

  • 30 ಕಿ.ಮೀ ಉದ್ದದ ನದಿದಂದೆಯಲ್ಲಿನ ಅಪ್ಪೆಮಿಡಿ ವೈವಿಧ್ಯದ ರಕ್ಷಣೆ ಇದರ ಉದ್ದೇಶ.
  • ‘ಜೈವಿಕ ವೈವಿಧ್ಯ ಕಾಯ್ದೆ 2002ರ ಅನುಬಂಧ 37ರಡಿ ಈ ವಿಶಿಷ್ಟ ಅನುವಂಶಿಕ ಭಂಡಾರವನ್ನು ರಕ್ಷಿಸಬೇಕು’ ಹಕ್ಕೊತ್ತಾಯ ಮಂಡಿಸಿದ್ದಾರೆ. ‘ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕು ವ್ಯಾಪ್ತಿಯ ಸರಕುಳಿಯಿಂದ ಉಂಚಳ್ಳಿ ಜಲಪಾತದವರೆಗಿನ ನದಿ ದಂಡೆಯ ಎರಡೂ ಬದಿಯ 100 ಮೀಟರ್ ವ್ಯಾಪ್ತಿಯನ್ನು ಈ ಸಂರಕ್ಷಿತ ವಲಯದಲ್ಲಿ ಸೇರಿಸಬೇಕು’ ಎಂದು ಕೋರಿದ್ದಾರೆ.
  • ‘ಅಘನಾಶಿನಿ ಯಾವ ಅಣೆಕಟ್ಟುಗಳಿಲ್ಲದ ಮುಕ್ತ ಹರಿವಿನ ನದಿ. ಇಲ್ಲಿನ ವಿಶಿಷ್ಟ ಪರಿಸರ ವ್ಯವಸ್ಥೆಯಲ್ಲಿ ಅನಂತ ಭಟ್ಟನ ಅಪ್ಪೆ, ಜೀರಿಗೆ ಮಿಡಿ, ಕಂಚಿಪ್ಪ ಮತ್ತು ಗಿಳಿಸುಂಡಿಯಂಥ ನೂರಾರು ಅಪರೂಪದ ಅಪ್ಪೆಮಿಡಿ ತಳಿಗಳಿವೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, 10 ಕಿ.ಮೀ. ವ್ಯಾಪ್ತಿಯಲ್ಲಿ ವಿಶಿಷ್ಟ ಪರಿಮಳ ಹಾಗೂ ರುಚಿಯ ಸಾವಿರಕ್ಕೂ ಹೆಚ್ಚು ಮರಗಳಿವೆ’ ಎಂದು ಉಲ್ಲೇಖಿಸಿದ್ದಾರೆ.
  • ‘2023ರಲ್ಲಿ ಅಘನಾಶಿನಿ ಮುಖಜ ಭೂಮಿಗೆ’ ರಾಮ್‌ಸರ್ ತಾಣ’ದ ಮಾನ್ಯತೆ ಸಿಕ್ಕ ಬೆನ್ನಲ್ಲೇ, ನದಿ ಮೇಲ್ಬಾಗದ ಜೈವಿಕ ಸಂಪತ್ತು ಉಳಿಸುವ ತುರ್ತು ಅಗತ್ಯ ಕುರಿತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಇಲ್ಲಿ ಅತಿಕ್ರಮಣ, ವಾಣಿಜ್ಯ ಏಕದಳ ಕೃಷಿ, ಹವಾಮಾನ ಬದಲಾವಣೆಯಂಥ ಬೆದರಿಕೆ ಇದೆ’
  • ಈ ವ್ಯಾಪ್ತಿಯ ಅಣಲೆಬೈಲ್, ನೆಗ್ಗು, ಕಾನಸೂರು, ಹಸರಗೋಡು, ಹಾರ್ಸಿಕಟ್ಟಾ, ಸೋವಿನಕೊಪ್ಪ ಮತ್ತು ಹೆಗ್ಗರಣಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮುದಾಯದ ಸಹಭಾಗಿತ್ತದೊಂದಿಗೆ ಜೀನ್ ಮ್ಯಾಪಿಂಗ್, ಪಾರಂಪರಿಕ ಹಬ್ಬಗಳು ಮತ್ತು ಸಂಶೋಧನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ.
  • ‘ಜೀವವೈವಿಧ್ಯ ಪರಂಪರೆ ತಾಣ’ ಘೋಷಣೆ ಬೇಡಿಕೆಗೆ ಮಾನ್ಯತೆ ಸಿಕ್ಕರೆ, ಸ್ಥಳೀಯ ಕೃಷಿಕರ ಹಕ್ಕುಗಳಿಗೆ ಆದ್ಯತೆ ಸಿಗುತ್ತದೆ. ಅಲ್ಲದೇ, ಪಶ್ಚಿಮ ಘಟ್ಟಗಳ ಈ ಅಪರೂಪದ ಜೈವಿಕ ಹಾಗೂ ಸಾಂಸ್ಕೃತಿಕ ಪರಂಪರೆಯು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರ ವಾಗಲಿದೆ’.

ಸೂರ್ಯಘರ್ ಅಡಿ 30 ಲಕ್ಷ ಮನೆಗೆ ಸೌರಶಕ್ತಿ: ಮೈಲಿಗಲ್ಲು

  • ಪ್ರಧಾನ ಮಂತ್ರಿ ಸೂರ್ಯಘರ್‌ಯೋಜನೆ ಅಡಿ 30 ಲಕ್ಷ ಮನೆಗಳಿಗೆ ಸೌರಫಲಕ ಆಳವಡಿಸುವ ಮೂಲಕ ಕೇಂದ್ರ ಸರ್ಕಾರ ಮತ್ತೊಂದು ಮೈಲಿಗಲ್ಲು ದಾಟಿದೆ.
  • ‘ಸೂರ್ಯಘರ್ ಮೂಲಕ ಸೌರಶಕ್ತಿ ಫಲಕ ಅಳವಡಿಕೆಯಿಂದ ಇಂಧನ ಸ್ವಾವಲಂಬನೆ ಆಗಲಿದೆ ಹಾಗೂ ವಿದ್ಯುತ್ ಬಿಲ್ ಕಡಿಮೆ ಆಗಲಿದೆ.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ನೈತಿಕ ಪ್ರಕರಣ ಅಧ್ಯಯನ (Ethics Case Study)
ಹಿನ್ನಲೆ (Background):

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನಲ್ಲಿ ಅನಧಿಕೃತ ಮಾರಾಟಗಾರನಿಂದ ಪೂರೈಸಲಾದ ಕಲಬೆರಕೆ ಹಾಲನ್ನು ಸೇವಿಸಿದ ಪರಿಣಾಮ ಎರಡು ದಿನಗಳಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದು, 12 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಕಲಬೆರಕೆ ಹಾಲು ಸೇವನೆಯಿಂದ ಮೂತ್ರಪಿಂಡ ವೈಫಲ್ಯ ಉಂಟಾಗಿ ಸಾವು ಸಂಭವಿಸಿದೆ. ಹಾಲು ಪೂರೈಸಿದ ಮಾರಾಟಗಾರನು 46 ಹಸುಗಳು ಹಾಗೂ ಸ್ಥಳೀಯ ರೈತರಿಂದ ಹಾಲು ಸಂಗ್ರಹಿಸಿ ಮನೆಗಳಿಗೆ ವಿತರಿಸುತ್ತಿದ್ದನು. ಸರ್ಕಾರ ತನಿಖೆ ಆರಂಭಿಸಿ, ಪರಿಹಾರ ಘೋಷಿಸಿದೆ ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ.

ನೀವು ಆ ಜಿಲ್ಲೆಯ ಜಿಲ್ಲಾಧಿಕಾರಿ (District Collector) ಆಗಿದ್ದೀರಿ:
1.ಪ್ರಕರಣದಲ್ಲಿರುವ ನೈತಿಕ ಸಮಸ್ಯೆಗಳು (Ethical Issues)?

2.ಪಾಲುದಾರರು (Stakeholders)?
3.ಒಳಗೊಂಡಿರುವ ಮೌಲ್ಯಗಳು (Values Involved)

4.ಜಿಲ್ಲಾಧಿಕಾರಿಯಾಗಿ ನಿಮ್ಮ ಆಯ್ಕೆಗಳು (Options)?
ಆಯ್ಕೆ 1: ಕೇವಲ ತನಿಖೆ ನಡೆಸಿ ಕಾನೂನು ಕ್ರಮಕ್ಕೆ ಸೀಮಿತವಾಗುವುದು
ಆಯ್ಕೆ 2: ತುರ್ತು ಸಾರ್ವಜನಿಕ ಆರೋಗ್ಯ ಕ್ರಮಗಳ ಜೊತೆಗೆ ಕಠಿಣ ಆಡಳಿತಾತ್ಮಕ ಕ್ರಮಗಳು
ಆಯ್ಕೆ 3: ದೀರ್ಘಕಾಲಿಕ ಆಹಾರ ಸುರಕ್ಷತಾ ಸುಧಾರಣೆಗಳನ್ನು ಜಾರಿಗೆ ತರುವುದು

    Sources: Prajavani, Kannada Prabha, Vijayavani

    ಸಹಕಾರಿ ‘ಭಾರತ್ ಟ್ಯಾಕ್ಸಿ’ ಸೇವೆ ಶುರು

    ಸಂದರ್ಭ: ಭಾರತ್‌ ಟ್ಯಾಕ್ಸಿ’ ಸೇವೆಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಚಾಲನೆ ನೀಡಿದ್ದಾರೆ. ಇದು ದೇಶದಲ್ಲಿ ಸಹಕಾರ ತತ್ತ್ವದಲ್ಲಿ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಮೊದಲ ವೇದಿಕೆ ಆಗಿದೆ.

    • ಮುಂದಿನ ಮೂರು ವರ್ಷಗಳಲ್ಲಿ ಭಾರತ್ ಟ್ಯಾಕ್ಸಿ ಸೇವೆಯನ್ನು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಮತ್ತು ದ್ವಾರಕಾದಿಂದ ಕಾಮಾಕ್ಯದವರೆಗೆ ವಿಸ್ತರಿಸಲಾಗುವುದು.
    • ಭಾರತ್ ಟ್ಯಾಕ್ಸಿ ಜೊತೆ ಸೇರಿರುವ ಚಾಲಕರೊಂದಿಗೆ ಲಾಭವನ್ನು ಹಂಚಿಕೊಳ್ಳಲಾಗುವುದು ಚಾಲಕರುಗಳಿಸುವ ಪ್ರತಿ 1 ಖಾತೆಗೆ ಜಮಾ ಆಗಲಿದೆ. ಉಳಿದ ₹20 ವೇದಿಕೆಯಲ್ಲಿ ಉಳಿಯಲಿದೆ. ಆ ₹20ಕ್ಕೂ ಚಾಲಕರೇ ಮಾಲೀಕರಾಗಿ ಇರುತ್ತಾರೆ ಎಂದಿದ್ದಾರೆ.
    • ಗ್ರಾಹಕರು ಈ ವೇದಿಕೆಯ ಮೂಲಕ ಕಾರು, ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳ ಸೇವೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
    • ಈಗ ದೇಶದಲ್ಲಿ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಮಾರುಕಟ್ಟೆಯಲ್ಲಿ ಊಬರ್, ಓಲಾ ಮತ್ತು ರಾಪಿಡೊ ಪ್ರಾಬಲ್ಯ ಹೊಂದಿವೆ.
    • ಚಾಲಕರೇ ಮಾಲೀಕರಾಗುವ ಅವಕಾಶವನ್ನು ಇಂತಹ ಈ ವೇದಿಕೆಯು ನೀಡಲಿದೆ. ಅವಕಾಶವನ್ನು ಇತರೆ ಯಾವುದೇ ವೇದಿಕೆ ಒದಗಿ-ಸುತ್ತಿಲ್ಲ.
    • ಅಮೂಲ್ ಸೇರಿದಂತೆ ದೇಶದ ಎಂಟು ಪ್ರಮುಖ ಸಹಕಾರ ಸಂಘಗಳ ನೆರವಿನೊಂದಿಗೆ ಕಳೆದ ಡಿಸೆಂಬರ್ 2ರಂದು ದೆಹಲಿ ಎನ್‌ಸಿಆರ್ ಮತ್ತು ಗುಜರಾತ್‌ನಲ್ಲಿ ಪ್ರಾಯೋಗಿಕವಾಗಿ ಈ ಸೇವೆಯನ್ನು ಆರಂಭಿಸಲಾಯಿತು.
    • ಸಹಕಾರ ತತ್ತ್ವದ ಆಧಾರದಲ್ಲಿ ಆ್ಯಪ್ ಮೂಲಕ ಟ್ಯಾಕ್ಸಿ ಸೇವೆ ಒದಗಿಸುವ ಜಗತ್ತಿನ ಅತಿದೊಡ್ಡ ವೇದಿಕೆ ಇದಾಗಿದೆ. ಅಲ್ಲದೆ, ಚಾಲಕರ ಮಾಲೀಕತ್ವದ ವಿಶ್ವದ ಅತಿದೊಡ್ಡ ವೇದಿಕೆಯೂ ಹೌದು ಎಂದು ಸಹಕಾರ ಸಚಿವಾಲಯ ಹೇಳಿದೆ.
    • ಈ ಸೇವೆ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ 3 ಲಕ್ಷಕ್ಕೂ ಅಧಿಕ ಚಾಲಕರು ಈ ವೇದಿಕೆ ಸೇರಿದ್ದಾರೆ. 1 ಲಕ್ಷ ಹೆಚ್ಚು ಬಳಕೆದಾರರು ನೋಂದಣಿ ಆಗಿದ್ದಾರೆ.
    • ಮುಂಬರುವ ವರ್ಷಗಳಲ್ಲಿ ಸಂಘಗಳು ಹೊಸ ಸಹಕಾರ ವ್ಯವಹಾರಗಳಿಗೆ ಪ್ರವೇಶಿಸಲಿವೆ. ಈ ಚಾಲಕರನ್ನು ‘ಸಾರಥಿಗಳು’ ಎಂದು ಕರೆಯಲಾಗುತ್ತದೆ. ಈ ಚಾಲಕರಿಗೆ ಇನ್ನೊ-ಟೋಕಿಯೊ ಜನರಲ್‌ ಇನ್ಸೂರೆನ್ಸ್ ಕಂಪನಿಯು ವೈಯಕ್ತಿಕ ಅಪಘಾತ ಮತ್ತು ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
    • ಭಾರತ್ ಟ್ಯಾಕ್ಸಿ ಸೇವೆಯು ಸಾರ್ವಜನಿಕರಿಗೆ ಕೈಗೆಟಕುವ, ಸುರಕ್ಷಿತ ಸೇವೆಯನ್ನು ಒದಗಿಸಲು ಪ್ರಯತ್ನಿಸುತ್ತದೆ ಎಂದಿದ್ದಾರೆ.

    Source: PV

    ರಾಷ್ಟ್ರಪತಿ ಅಂಕಿತಕ್ಕೆ ‘ದ್ವೇಷಭಾಷಣ ತಡೆ’ ಮಸೂದೆ

    ಸಂದರ್ಭ: ಹಲವು ಕಾರಣಗಳನ್ನು ನೀಡಿ ಅಂಕಿತ ಹಾಕದೆ ಆರ್. ರಾಷ್ಟ್ರಪತಿಯ ವಿವೇಚನೆಗೆ ರಾಜ್ಯಪಾಲರು ಕಾಯ್ದಿರಿಸಿದ್ದ ದ್ವೇಷ ಭಾಷಣ ತಡೆ ಮಸೂದೆಯನ್ನು ರಾಷ್ಟ್ರಪತಿಯವರ ಅಂಕಿತಕ್ಕಾಗಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ (ನ್ಯಾಯಾಂಗ) ರಾಜ್ಯ ಸರ್ಕಾರವು (ಫೆ. 4) ರವಾನಿಸಿದೆ.

    • ದ್ವೇಷ ಭಾಷಣ ಹಾಗೂ ದ್ವೇಷಾಪರಾಧಗಳನ್ನು ತಡೆಯಲು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ -2025’ ಅನ್ನು ಸರ್ಕಾರ ರೂಪಿಸಿ, ಅಂಕಿತ ಹಾಕುವಂತೆ ಕೋರಿ ಲೋಕಭವನಕ್ಕೆ ಕಳುಹಿಸಿತ್ತು.
    • ಆದರೆ, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ನೀಡಿದ್ದ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ಮತ್ತು ಸಾಂವಿಧಾನಿಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಉಂಟು ಮಾಡುವ ಸಾಧ್ಯತೆಯ ಆತಂಕ ವ್ಯಕ್ತಪಡಿಸಿ ಈ ಮಸೂದೆಯನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು.

    ಖೇಮಚಂದ್ ಮಣಿಪುರ ಮುಖ್ಯಮಂತ್ರಿ: ರಾಷ್ಟ್ರಪತಿ ಆಳ್ವಿಕೆರದ್ದು

    • ಸರ್ಕಾರ ರಚನೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೆ ರಾಜ್ಯದಲ್ಲಿದ್ದ ರಾಷ್ಟ್ರ ಪತಿ ಆಳ್ವಿಕೆಯನ್ನೂ ರದ್ದುಗೊಳಿಸಲಾಗಿದೆ.
    • 2025ರ ಫೆಬ್ರುವರಿ 13ರಂದು ಮಣಿಪುರದಲ್ಲಿ ಜಾರಿಗೊಳಿಸಲಾಗಿದ್ದ ರಾಷ್ಟ್ರಪತಿ ಅಳ್ವಿಕೆಯನ್ನು ಸಂವಿಧಾನದ 356ನೇ ವಿಧಿಯ ಷರತ್ತು (2)ರ ಅನ್ವಯ ನೀಡಲಾದ ಹಕ್ಕುಗಳನ್ನು ಚಲಾಯಿಸಿ 2026ರ ಫೆಬ್ರುವರಿ 4ರಂದು ಹಿಂಪಡೆಯುತ್ತಿರುವುದಾಗಿ ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು ಪ್ರಕಟಣೆ ಹೊರಡಿಸಿದ್ದಾರೆ.

    ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ಉನ್ನತೀಕರಣ ಯೋಜನೆ(ಪಿಎಂಎಫ್‌ಎಂಇ) ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನ

    ಸಂದರ್ಭ: ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ಉನ್ನತೀಕರಣ ಯೋಜನೆ (ಪಿಎಂಎಫ್ಎಂಇ) ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಸಾಲ ವಿತರಣೆಯಲ್ಲಿ ಕರ್ನಾಟಕದ ಜೊತೆಗೆ ತಮಿಳುನಾಡು ಕೂಡ ಮೊದಲ ಸ್ಥಾನ ಹಂಚಿಕೊಂಡಿದೆ.

    • ಕರ್ನಾಟಕದಲ್ಲಿ ಪಿಎಂಎಫ್‌ಎಂಇ ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ‘ಕರ್ನಾಟಕ ಆಹಾರ ಸಂಸ್ಕರಣೆ ಮತ್ತು ರಫ್ತು ನಿಗಮ’ವು (ಕೆಪೆಕ್) ಈ ಸಾಧನೆ ಮಾಡಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಹೇಳಿದ್ದಾರೆ.
    • 2021-22ರಲ್ಲಿ ಶುರುವಾದ ಈ ಯೋಜನೆಯ ಆಡಿ ನೆರವು ಬಯಸಿ ಕೆಪೆಕ್‌ಗೆ ಜನವರಿ ಅಂತ್ಯಕ್ಕೆ 8,734 ಅರ್ಜಿಗಳು ಬಂದಿದ್ದವು. ಈ ಪೈಕಿ 7,872 ಅರ್ಜಿದಾರರಿಗೆ ಸಾಲ ವಿತರಿಸಲಾಗಿದೆ. 2025-26ರ ಆರ್ಥಿಕ ವರ್ಷದಲ್ಲೇ 8.162 ಅರ್ಜಿಗಳನ್ನು ಸ್ವೀಕರಿಸಿ 2,346 ಅರ್ಜಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. 2,486 ಅರ್ಜಿಗಳು ಬ್ಯಾಂಕುಗಳಲ್ಲಿ ಪರಿಶೀಲನಾ ಹಂತದಲ್ಲಿವೆ. ಯೋಜನೆ ಪ್ರಾರಂಭವಾದ ಐದು ವರ್ಷಗಳಲ್ಲಿ ಇದು ಗರಿಷ್ಠ ಸಾಧನೆ ಎಂದು ಪ್ರಕಟಣೆ ತಿಳಿಸಿದೆ.

    ‘ಪಿನಾಕಿನಿ: ನ್ಯಾಯಮಂಡಳಿ ಸ್ಥಾಪಿಸಿ’

    ಸಂದರ್ಭ: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ. ಇದ ರಿಂದಾಗಿ, ಮಾತುಕತೆ ಮೂಲಕವೇ ವಿವಾದ ಬಗೆಹರಿಸಲು ಮುಂದಾಗಿದ್ದ ಕರ್ನಾಟಕಕ್ಕೆ ಹಿನ್ನಡೆಯಾಗಿದೆ.

    • ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯ ಮೂರ್ತಿಗಳಾದ ವಿಕ್ರಮ್ನಾಥ್ ಹಾಗೂ ಎನ್.ವಿ.ಅಂಜಾರಿಯಾ ಅವರಿದ್ದ ಪೀಠವು, ‘1956ರ ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆಯಡಿ ಕೇಂದ್ರ ಸರ್ಕಾರವು ಶಾಸನಬದ್ದ ಕಾರ್ಯಗಳನ್ನು ನಡೆಸಲು ಯಾವುದೇ ಕಾನೂನು ಅಡಚಣೆ ಇಲ್ಲ’ ಎಂದು ಸ್ಪಷ್ಟಪಡಿಸಿದೆ.
    • ವಿವಾದ ಪರಿಹರಿಸಲು ನ್ಯಾಯ ಮಂಡಳಿ ರಚಿಸುವುದಕ್ಕೆ ಕೇಂದ್ರಕ್ಕೆ ಯಾವುದೇ ಅಡಚಣೆ ಇಲ್ಲ.
    • ತಮಿಳುನಾಡು ತನ್ನ ದೂರನ್ನು ನ್ಯಾಯ ಮಂಡಳಿಯ ಮುಂದೆ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿತು. 2018ರಲ್ಲಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಲೇವಾರಿ ಮಾಡಿತು.
    • ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟ ಕೆರೆಯಿಂದ ಹೊಸ-ಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.
    • ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ಗೆ 2018ರ ಮೇ 18ರಂದು ಅರ್ಜಿ ಸಲ್ಲಿಸಿತ್ತು. ಜಲವಿವಾದ ನ್ಯಾಯಮಂಡಳಿ ಒತ್ತಾಯಿಸಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2019ರ ನವೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು.
    • ಜಲಶಕ್ತಿ ಸಚಿವಾಲಯವು 2020ರಲ್ಲಿ ಸಂಧಾನ ಸಭೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿರಲಿಲ್ಲ. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರವನ್ನು 2024ರ ಜೂನ್‌ನಲ್ಲಿ ಒತ್ತಾಯಿಸಿತ್ತು.
    • ಈ ನಡುವೆ, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲಶಕ್ತಿ ಸಚಿವಾಲಯವು ಹೊಸ ಸಂಧಾನ ಸಮಿತಿ ರಚಿಸಿತ್ತು. ಈ ಸಮಿತಿಯು ಉಭಯ ರಾಜ್ಯಗಳ ನಡುವೆ ಒಂಬತ್ತು ಸಭೆಗಳನ್ನು ನಡೆಸಿತ್ತು.
    • జల ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಮಾತುಕತೆಯ ಮೂಲಕ ಈ ವಿವಾದವನ್ನು ಸೌಹಾರ್ದ-ಯುತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರವು ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದಿತ್ತು.
    • ಕರ್ನಾಟಕದ ಜಲಾನಯನ ಪ್ರದೇಶದಲ್ಲಿ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿ ನೀರನ್ನು ಬಳಸಲು ಯೋಜಿಸಲಾಗಿದೆ. ಇದರಲ್ಲಿ 2 ಟಿಎಂಸಿ ಮತ್ತು ವಾಡಿಕೆಗಿಂತ ಹೆಚ್ಚು ಮಳೆ ಬಂದಾಗ ದೊರೆಯುವ ಹೆಚ್ಚುವರಿ ನೀರು ತಮಿಳುನಾಡಿಗೆ ಉಳಿಯುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು.