ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.
“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ಪೋಕ್ಸ್ ಪ್ರಕರಣ: ಖಾಸಗಿ ಆಸ್ಪತ್ರೆಗಳಿಗೂ ವರದಿ ಕಡ್ಡಾಯ ಸಂದರ್ಭ: ಬಾಲ ಗರ್ಭಿಣಿ ಪ್ರಕರಣಗಳ ವಿವರವನ್ನು ಖಾಸಗಿ ಆಸ್ಪತ್ರೆಗಳೂ ಕಡ್ಡಾಯವಾಗಿ ಪೋಟೊ ಕಾಯ್ದೆಯಡಿ ವರದಿ ಮಾಡಬೇಕು ಎಂದು ಸೂಚಿಸಿರುವ ಆರೋಗ್ಯ ಇಲಾಖೆ, ಒಂದು ವೇಳೆ ವರದಿ ಮಾಡಲು ವಿಫಲವಾದಲ್ಲಿ ವೈದ್ಯರು ಮತ್ತು ಆಸ್ಪತ್ರೆಗಳ ವಿರುದ್ಧ ಕಾನೂನಿನಡಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಪೋಕ್ಕೂ ಕಾಯ್ದೆ ಅನ್ವಯ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಬಾಲ ಗರ್ಭಿಣಿ ಪ್ರಕರಣಗಳ ವಿವರವನ್ನು ಕಾನೂನುಬದ್ಧವಾಗಿ ವರದಿ ಮಾಡಬೇಕಿದೆ. ಯಾವುದೇ ಬಾಲ ಗರ್ಭಿಣಿ ಖಾಸಗಿ ಆಸ್ಪತ್ರೆಗೆ ದಾಖಲಾದಲ್ಲಿ ಸಂಬಂಧಿತ ವೈದ್ಯರು ತಕ್ಷಣ ಸಮೀಪದ ವಿಶೇಷ ಬಾಲ ನ್ಯಾಯ ಪೊಲೀಸ್ ಘಟಕ ಅಥವಾ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದೆ.
ಇಂತಹ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿ, ಮಾಹಿತಿ ನೀಡಬೇಕು. ಇದರಿಂದ ರಕ್ಷಣಾತ್ಮಕ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದೆ.
ಖಾಸಗಿ ಆಸ್ಪತ್ರೆಗಳು ಪೋಕ್ಸ್ ಪ್ರಕರಣದ ವಿವರಗಳನ್ನು ಸೂಕ್ತವಾಗಿ ದಾಖಲಿಸಬೇಕು. ವೈದ್ಯಕೀಯ ದಾಖಲೆಗಳನ್ನು ಕಾನೂನುಬದ್ಧವಾಗಿ ಸಂಗ್ರಹಿಸಬೇಕು ರೋಗಿಯ ಗೋಪ್ಯತೆಯನ್ನು ಕಾಪಾಡಬೇಕು ತನಿಖಾ ಅಧಿಕಾರಿಗೆ ಅಗತ್ಯ ಸಹಕಾರ ನೀಡಬೇಕು. ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮ ವೈದ್ಯರು ಹಾಗೂ ಸಿಬ್ಬಂದಿಗೆ ಪೋಟ್ರೊ ಕಾಯ್ದೆಯ ವಿಧಿನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಲಾಗಿದೆ.
ಎನ್ಸಿಇಆರ್ಟಿಗೆ ಡೀಮ್ಸ್ ವಿಶ್ವವಿದ್ಯಾಲಯ ಸ್ಥಾನಮಾನ ಸಂದರ್ಭ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ ಸಿಇಆರ್ಟಿ) ಮತ್ತು ಅದರ ಆರು ಘಟಕಗಳಿಗೆ ಶಿಕ್ಷಣ ಸಚಿವಾಲಯವು ವಿಶಿಷ್ಟ ವರ್ಗದಡಿ ಡೀಮ್ಸ್ ವಿಶ್ವವಿದ್ಯಾಲಯ ಸ್ನಾನಮಾನವನ್ನು ನೀಡಿದೆ.
ಆ ಮೂಲಕ ಎನ್‌ಸಿಇಆರ್‌ಟಿಯ ಅಧಿಕಾರವನ್ನು ವಿಸ್ತರಿಸಲಾಗಿದೆ ಮತ್ತು ಅದನ್ನು ಯುಜಿಸಿ ವ್ಯಾಪ್ತಿಗೆ ತರಲಾಗಿದೆ. ಜೊತೆಗೆ ಎನ್‌ಸಿಇಆರ್‌ಟಿ ತನ್ನದೇ ಆದ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲು, ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡಲು ಸಾಧ್ಯವಾಗುತ್ತದೆ.
ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸಲಹೆಯ ಮೇರೆಗೆ ಶಿಕ್ಷಣ ಸಚಿವಾಲಯವು ಈ ಸ್ನಾನಮಾನ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
‘ಸಂಜೀವಿನಿ’ಗೆ ತೊಡಕಾದ ನಿರಾಸಕ್ತಿ ಸಂದರ್ಭ:ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಒಪ್ಪಿಕೊಳ್ಳಲು ಬಹುತೇಕ ಖಾಸಗಿ ಆಸ್ಪತ್ರೆಗಳು ನಿರಾಸಕ್ತಿ ತೋರುತ್ತಿರುವುದು ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರ ನಗದುರಹಿತ ಚಿಕಿತ್ಸೆಗೆ ತೊಡಕಾಗಿದೆ.
ರಾಜ್ಯ ಸರ್ಕಾರ ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಿತ್ತಾದರೂ 2025ರ ಅ.1ರಿಂದ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಲಾಗಿದೆ. ಯೋಜನೆ ಜಾರಿಗೂ ಮೊದಲು ಒಂದು ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳು ನಗದು ರಹಿತ ಚಿಕಿತ್ಸೆ ನೀಡಲು ಸರ್ಕಾರದ ಜತೆ ಒಪ್ಪಂದಮಾಡಿಕೊಳ್ಳುವ ಕುರಿತು ಭರವಸೆ ನೀಡಿದ್ದವು.
ಆದರೆ, ಯೋಜನೆ ಆರಂಭವಾಗಿ ಆರು ತಿಂಗಳು ಕಳೆದರೂ ಯೋಜನೆ ಅಳವಡಿಸಿ ಕೊಂಡ ಆಸ್ಪತ್ರೆಗಳ ಸಂಖ್ಯೆ 243 ಮಾತ್ರ. ಆರಂಭದಲ್ಲಿ ಸಹಿ ಹಾಕಿದ್ದ ಸುಮಾರು 25 ಆಸ್ಪತ್ರೆಗಳು ಒಪ್ಪಂದದಿಂದ ಹಿಂದೆ ಸರಿದಿವೆ. 700ಕ್ಕೂ ಹೆಚ್ಚು ಆಸ್ಪತ್ರೆಗಳು ಯೋಜನೆಗೆ ಒಳಪಡಲು ಮೀನಮೇಷ ಎಣಿಸುತ್ತಿವೆ.
ದರ ಪರಿಷ್ಕರಣೆ ಸಮಸ್ಯೆ ‘ರಾಜ್ಯ ಸರ್ಕಾರಿ ನೌಕರರು, ನಿಗಮ, ಮಂಡಳಿ, ಅನುದಾನಿತ ಸಂಸ್ಥೆಗಳ ಸಿಬ್ಬಂದಿ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಪುರುಷ ನೌಕರರ ತಂದೆ-ತಾಯಿಗೆ ಮಾತ್ರ ಸಿಗುತ್ತಿದ್ದ ಆರೋಗ್ಯ ಸೌಲಭ್ಯವನ್ನು ಹೊಸ ಯೋಜನೆಯಲ್ಲಿ ಮಹಿಳಾ ನೌಕರರ ತಂದೆ-ತಾಯಿಗೂ ವಿಸ್ತರಿಸಲಾಗಿತ್ತು.
ಆದರೆ, ಆಸ್ಪತ್ರೆಗಳಿಗೆ ನೀಡುತ್ತಿರುವ ಚಿಕಿತ್ಸಾ ವೆಚ್ಚವನ್ನು ರಾಷ್ಟ್ರೀಯ ಆರೋಗ್ಯ ಯೋಜನೆಯ ದರಗಳಿಗೆ ಅನುಗುಣವಾಗಿ ಪರಿಷ್ಕರಿಸಿಲ್ಲ. ಹೆರಿಗೆ, ಕ್ಯಾನ್ಸರ್, ಶ್ವಾಸಕೋಶ ಸಮಸ್ಯೆ ಕಣ್ಣಿನ ಚಿಕಿತ್ಸೆ ಸೇರಿದಂತೆ ಬಹತೇಕ ಕಾಯಿಲೆಗಳ ಚಿಕಿತ್ಸಾ ವೆಚ್ಚ ಅತ್ಯಂತ ಕಡಿಮೆ ಇದೆ. ಅಷ್ಟು ಮೊತ್ತದಲ್ಲಿ ಸೌಲಭ್ಯ ನೀಡಲು ಸಾಧ್ಯವಿಲ್ಲ’ ಎನ್ನುವುದು ಯೋಜನೆ ವ್ಯಾಪ್ತಿಯಿಂದ ಹೊರ ಹೋಗುತ್ತಿರುವ, ಯೋಜನೆ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಖಾಸಗಿ ಆಸ್ಪತ್ರೆಗಳ ವಾದ.
ಸುವರ್ಣ ಕರ್ನಾಟಕ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್‌ಎಎಸ್‌ಟಿ) ಯೋಜನೆಯ ಅನುಷ್ಠಾನದ ಸಂಸ್ಥೆಯಾಗಿ ಹೊಣೆ ನಿರ್ವಹಿಸುತ್ತಿದ್ದು. ಎಲ್ಲ ವರ್ಗದ ನೌಕರರು ಪ್ರತಿ ತಿಂಗಳು ತಮ್ಮ ಪಾಲಿನ ಕಂತು ಪಾವತಿಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ನೌಕರರು ಪಾವತಿಸಿದ ಕಂತು ₹120 ಕೋಟಿಗೂ ಅಧಿಕ. ಟ್ರಸ್ಟ್ ಪಾವತಿಸಿರುವ ಚಿಕಿತ್ಸಾ ವೆಚ್ಚ ₹35 ಕೋಟಿ
‘ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲ ನೌಕರರ ಕಂತನ್ನು ಅಕ್ಟೋಬರ್ ತಿಂಗಳ ವೇತನದಿಂದಲೇ ಕಟಾವು ಮಾಡಿ, ಖಜಾನೆ-2 ಮೂಲಕ ಟ್ರಸ್ಟ್ ಖಾತೆಗೆ ಜಮೆ ಮಾಡಲಾಗುತ್ತಿದೆ ಟ್ರಸ್ಟ್‌ನಲ್ಲಿ ಸಾಕಷ್ಟು ಹಣ ಸಂಗ್ರಹವಾದರೂ ರಾಜ್ಯದ ಪ್ರಮುಖ ಆಸ್ಪತ್ರೆಗಳು ಸೇರಿದಂತೆ ಬಹುತೇಕ ಖಾಸಗಿ ಆಸ್ಪತ್ರೆಗಳು ಯೋಜನೆ ಅಡಿ ಚಿಕಿತ್ಸೆ ನೀಡಲು ಒಲವು ತೋರಿಲ್ಲ ಹಾಗಾಗಿ, ನೌಕರರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಸೌಲಭ್ಯ ಸಿಗುತ್ತಿಲ್ಲ. ಯೋಜನೆ ನಿರೀಕ್ಷಿತ ಫಲ ನೀಡುತ್ತಿಲ್ಲ’ ಎನ್ನುತ್ತಾರೆ ಶಿಕ್ಷಕ ಸದಾನಂದ.
‘ಸಂಜೀವಿನಿ’ಗೆ ತೊಡಕಾದ ನಿರಾಸಕ್ತಿ ಸಂದರ್ಭ: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಒಪ್ಪಿಕೊಳ್ಳಲು ಬಹುತೇಕ ಖಾಸಗಿ ಆಸ್ಪತ್ರೆಗಳು ನಿರಾಸಕ್ತಿ ತೋರುತ್ತಿರುವುದು ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರ ನಗದುರಹಿತ ಚಿಕಿತ್ಸೆಗೆ ತೊಡಕಾಗಿದೆ.
ಬಾಬೂ ಜಗಜೀವನ್ ರಾಮ್’ ಪ್ರಶಸ್ತಿಗೆ ಐವರು ಆಯ್ಕೆ ಸಂದರ್ಭ: ರಾಜ್ಯಸರ್ಕಾರ ನೀಡುವ 2026ನೇ ಸಾಲಿನ ಬಾಬೂ ಜಗಜೀವನ್ ರಾಮ್ ಪ್ರಶಸ್ತಿಗೆ ಸಾಮಾಜಿಕ ಕಾರ್ಯಕರ್ತೆ ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐವರು ಭಾಜನರಾಗಿದ್ದಾರೆ.
ರಾಯಚೂರು ಜಿಲ್ಲೆ ಅಶಾಪುರದ ಜಾನಪದ ಕಲಾವಿದ ಡಿಂಗಿ ನರಸಪ್ಪ, ಬೆಳಗಾವಿಯ ಪತ್ರಕರ್ತ ಸರಜೂ ಕಾಟ್ಕರ್, ಮೈಸೂರಿನ ಮಾಜಿ ಮೇಯರ್ ನಾರಾಯಣ. ತುಮಕೂರಿನ ನಗರಸಭೆ ಮಾಜಿ ಸದಸ್ಯ ನರಸೀಯಪ್ಪ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಶಸ್ತಿಯು ತಲಾ 15 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಬಾಬೂ ಜಗಜೀವನ್ ರಾಮ್ ಅವರ ಜನ್ಮದಿನವಾದ ಏ.5ರಂದು ವಿಧಾನಸೌಧದ ಅವರಣದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ನೀಡಿದ್ದಾರೆ.
ಬಸವರಾಜ ಆಚಾರ್ಗೆ ‘ಪ್ರಿಂಟ್ ಬಿನಾಲೆ ಇಂಡಿಯಾ’ ಪ್ರಶಸ್ತಿ ಸಂದರ್ಭ: ಹಾಸನ ಜಿಲ್ಲೆಯ ಕಲಾವಿದ ಕೆ.ಆರ್.ಬಸವರಾಜ ಆಚಾರ್ ಅವರಿಗೆ ಕೇಂದ್ರ ಲಲಿತಕಲಾ ಅಕಾಡೆಮಿ ಕೊಡುವ ಅಂತರರಾಷ್ಟ್ರೀಯ ಮಟ್ಟದ ‘ಪ್ರಿಂಟ್ ಬಿನಾಲೆ ಇಂಡಿಯಾ’ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಮೊತ್ತ 12 ಲಕ್ಷ ನಗದು, ಪಾರಿತೋಷಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ.
ಮುದ್ರಣ ಮಾಧ್ಯಮದ ಕಲೆ ಉತ್ತೇಜಿಸುವ ದೃಷ್ಟಿಯಿಂದ ಪ್ರಪಂಚದಾದ್ಯಂತ ಇರುವ ವೃತ್ತಿಪರ ಐವರು ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಕೊಡಲಾಗುತ್ತದೆ. ಇದರಲ್ಲಿ ಭಾರತಕ್ಕೆ ಎರಡು ಪ್ರಶಸ್ತಿ ಬಂದಿದೆ. ಬಸವರಾಜ ಆಚಾರ್ ಜೊತೆಗೆ, ಮಧ್ಯಪ್ರದೇಶದ ಭೋಪಾಲ್‌ನ ರವೀಂದ್ರ ರಾಯ್ ಅವರಿಗೆ ಪ್ರಶಸ್ತಿ ಲಭಿಸಿದೆ.
ಜೊತೆಗೆ ಫ್ರಾನ್ಸ್, ಪೋಲೆಂಡ್, ಕೊರಿಯಾ ದೇಶದ ತಲಾ ಒಬ್ಬೊಬ್ಬರು ಕಲಾವಿದರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಭಾರತ ಹಾಗೂ ಇತರೆ 34 ದೇಶಗಳಿಂದ ಸುಮಾರು 1449 ಪ್ರವೇಶಗಳು ಬಂದಿದ್ದವು.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ವಿಶ್ವಸಂಸ್ಥೆ: ಹೊರ್ಮುಜ್ ತೆರೆಸುವ ಪ್ರಸ್ತಾವ ಮತಕ್ಕೆ ಸಂದರ್ಭ: ಸೇನಾ ಶಕ್ತಿ ಬಳಸಿ ಹೊರ್ಮುಜ್ ಜಲಸಂಧಿಯನ್ನು ಜಾಗತಿಕ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವ ಪ್ರಸ್ತಾವವನ್ನು ರಷ್ಯಾ ಮತ್ತು ಚೀನಾ ವಿರೋಧದ ಮಧ್ಯೆಯೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತಕ್ಕೆ ಹಾಕಲು ನಿರ್ಧರಿಸಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಸೃಷ್ಟಿಯಾದ ನಂತರ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ. ವಿಶ್ವದ ಐದನೇ ಒಂದರಷ್ಟು ತೈಲ ಈ ಮಾರ್ಗದಿಂದ ಸಾಗಣೆಯಾಗುತ್ತದೆ. ಹಡಗು ಸಂಚಾರಕ್ಕೆ ಆದ ಅಡ್ಡಿಯು ಜಾಗತಿಕವಾಗಿ ತೈಲ ಬೆಲೆಯ ಭಾರಿ ಏರಿಕೆ ಮತ್ತು ಆರ್ಥಿಕತೆಯ ಕುಸಿತಕ್ಕೆ ಕಾರಣವಾಗಿದೆ.
ಹೊರ್ಮುಜ್ ಜಲಸಂಧಿಯನ್ನು ಸೇನಾ ಪಡೆ ಬಳಸಿ ಮುಕ್ತಗೊಳಿಸುವ ಪ್ರಸ್ತಾವ ಇದಾಗಿದೆ. ಆದರೆ ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಹೊಂದಿರುವ 5 ಸದಸ್ಯ ರಾಷ್ಟ್ರಗಳ ಪೈಕಿ ಚೀನಾ ಮತ್ತು ರಷ್ಯಾ ಸೇನಾ ಬಲ ಬಳಕೆಗೆ ವಿರೋಧ ವ್ಯಕ್ತಪಡಿಸಿವೆ. ಇದರ ಮಧ್ಯೆಯೂ ‘ಬಹರೇನ್ ಪ್ರಸ್ತಾವ’ದ ಕರಡು ಅಂತಿಮಗೊಂಡಿದೆ.
ಯಾವುದೇ ಹಾನಿ ಮಾಡದೇ ರಕ್ಷಣಾತ್ಮಕವಾಗಿ ಪಡೆಗಳನ್ನು ಬಳಸಬೇಕು ಎಂಬ ಅಂಶ ಪ್ರಸ್ತಾವದಲ್ಲಿದೆ. ಬಹುರಾಷ್ಟ್ರೀಯ ನೌಕಾ ಪಾಲುದಾರಿಕೆ ಹೊಂದಿರುವ ದೇಶಗಳು ‘ಹೊರ್ಮುಜ್ ಜಲಸಂಧಿ, ಕೊಲ್ಲಿ ಮತ್ತು ಗಲ್ಸ್ ಆಫ್ ಒಮನ್’ನಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ‘ಎಲ್ಲ ಅಗತ್ಯ ವಿಧಾನ ಅನುಸರಿಸಲು ಅವಕಾಶ ಕಲ್ಪಿಸುತ್ತದೆ’ ವಿಶ್ವಸಂಸ್ಥೆ ಪ್ರಕಾರ ಸೇನಾ ಕಾರ್ಯಾಚರಣೆಯ ಸಾಧ್ಯತೆಯೂ ಇದರಲ್ಲಿದೆ.
ಕನಿಷ್ಠ ಆರು ತಿಂಗಳವರೆಗಾದರೂ ಈ ಮಾರ್ಗವನ್ನು ಅಂತರರಾಷ್ಟ್ರೀಯ ಹಡಗು ಸಂಚಾರಕ್ಕೆ ಸುರಕ್ಷಿತಗೊಳಿಸಲು ಹೊಣೆ ಹೊತ್ತ ರಾಷ್ಟ್ರಗಳು ಎಲ್ಲ ರೀತಿಯ ರಕ್ಷಣಾತ್ಮಕ ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ‘ಮುಂಚಿತವಾಗಿ ಭದ್ರತಾ ಮಂಡಳಿಯ ಗಮನಕ್ಕೆ ತರಬೇಕು’ ಎಂಬ ಅಂಶ ಪ್ರಸ್ತಾವದಲ್ಲಿದೆ.
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
50 ವರ್ಷಗಳ ಬಳಿಕ ನಾಸಾ ಕೈಗೊಂಡ ಯೋಜನೆ: ಚಂದ್ರನತ್ತ ಹೊರಟ ‘ಅರ್ಟೆಮಿಸ್-2’ ಸಂದರ್ಭ: ಐದು ದಶಕಗಳ ಬಳಿಕ ಚಂದ್ರನ ಕಕ್ಷೆಗೆ ಗಗನಯಾನಿಗಳನ್ನು ಕಳುಹಿಸಲು ಮುಂದಾಗಿರುವ ನಾಸಾ, ತನ್ನ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಕಾರ್ಯಕ್ರಮ ‘ಆರ್ಟೆಮಿಸ್-2’ರ ರಾಕೆಟ್ ಅನ್ನು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಗಗನನೌಕೆ ಹೊತ್ತ ರಾಕೆಟ್ ವರ್ಷದ ಆರಂಭದಲ್ಲಿಯೇ ಅಂತರಿಕ್ಷಯಾನ ಆರಂಭಿಸಬೇಕಿತ್ತು. ಆದರೆ, ಉಡ್ಡ ಯನಕ್ಕೂ ಕೆಲ ಗಂಟೆಗಳ ಮುನ್ನ ರಾಕೆಟ್‌ನಲ್ಲಿನ ಇಂಧನ ಜಲಜನಕ ಸೋರಲು ಆರಂಭಿಸಿದ್ದರಿಂದ ಉಡ್ಡಯನ ವನ್ನು ಮುಂದೂಡಲಾಗಿತ್ತು.
32 ಮಹಡಿಯ ಈ ರಾಕೆಟ್ ಗೆ 26 ಲಕ್ಷ ಲೀಟರ್ ಇಂಧನ ತುಂಬಬೇಕಿತ್ತು. ಈ ಕಾರ್ಯ ಪೂರ್ಣಗೊಂಡ ಬಳಿಕ ರಾಕೆಟ್ ನಭಕ್ಕೆ ಚಿಮ್ಮಿದೆ.
10 ದಿನಗಳ ಕಾಲ ಯೋಜನೆಯು ನಡೆಯಲಿದ್ದು, ಅಮೆರಿಕದ ರೀಡ್ ವೈಸ್‌ಮನ್, ವಿಕ್ಟರ್ ಗೋವರ್, ಕ್ರಿಸ್ಟಿನಾ ಕೋಚ್ ಹಾಗೂ ಕೆನಡಾದ ಜೆರೆಮಿ ಹ್ಯಾನ್ಸನ್ ತಂಡದಲ್ಲಿದ್ದಾರೆ.
ಉಡಾವಣೆಗೊಂಡ 25 ಗಂಟೆಗಳ ನಂತರ ನಾಲ್ವರೂ ಭೂಮಿಯ ಕಕ್ಷೆಯಿಂದ ಹೊರಗೆ ಇದ್ದರೂ, ಭೂಮಿಗೆ ಹತ್ತಿರವೇ ಇರಲಿದ್ದಾರೆ. ಕೋಶವನ್ನು (ಕ್ಯಾಪ್ಸುಲ್) ಭೂಮಿಯ ಹತ್ತಿರ ಪರೀಕ್ಷಿಸಲಿದ್ದಾರೆ. ನಂತರ ಚಂದ್ರನ ಸಮೀಪದಲ್ಲಿ ಪ್ರಯಾಣಿ ಸಲಿದ್ದಾರೆ ನಿಗದಿತ ಅವಧಿವರೆಗೆ ಪರಿಭ್ರಮಣೆ ಮಾಡಿದ ಬಳಿಕ ಅವರು ಭೂಮಿಗೆ ಮರಳಲಿದ್ದು, ಅವರನ್ನು ಹೊತ್ತ ಬಾಹ್ಯಾಕಾಶ ಕೋಶವು ಪೆಸಿಫಿಕ್ ಸಾಗರದಲ್ಲಿ ಇಳಿಯಲಿದೆ.
‘ಎಲ್ಲ ನನ್ನ ಮಿತ್ರರೇ, 1972ರ ಅಪೋಲೊ-17ರ ನಂತರ ಮಾನವರು ಭೂಮಿಯ ಕಕ್ಷೆಯನ್ನು ದಾಟಿ ಮುಂದೆ ಸಾಗಿದ್ದಾರೆ’ ಎಂದು ನಾಸಾದ ಹಿರಿಯ ವಿಜ್ಞಾನಿ ಲೊರೊ ಗೋಜ್ ತಿಳಿಸಿದ್ದಾರೆ.
‘ರಾಕೆಟ್ ಇಂಧನ ತುಂಬಿಸುವ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಲಿಲ್ಲ’ ಎಂದು ಹೇಳಿದ್ದಾರೆ.
‘ಮಾನವೀಯ ಸಾಮರ್ಥ್ಯ ಏನೆಂಬುದನ್ನು ಮತ್ತೊಮ್ಮೆ ತೋರಿಸಿದೆ. ನಿಮ್ಮ ಭವಿಷ್ಯದ ಭರವಸೆಗಳೇ ನಮ್ಮನ್ನು ಚಂದ್ರನ ಸುತ್ತ ಈ ಪ್ರಯಾಣದಲ್ಲಿ ಕರೆದೊಯ್ದಿದೆ’ ಎಂದು ಗಗನಯಾನಿ ಜೆರೆಮಿ ಹ್ಯಾನ್ಸನ್ ತಿಳಿಸಿದ್ದಾರೆ.
1972ರಲ್ಲಿ ಅಪೋಲೊ-17 ಕಾರ್ಯಕ್ರಮದಡಿ ಗಗನಯಾನಿಗಳು ಕೊನೆಯದಾಗಿ ಚಂದ್ರನ ಅಂಗಳದಲ್ಲಿ ಇಳಿದಿದ್ದರು.
ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.
“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರ ಪ್ರಮುಖ ಯೋಜನೆಗಳು
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.
“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
2025-26ರ ಏಪ್ರಿಲ್ನಿಂದ ಮಾರ್ಚ್ ವರೆಗೆ ₹22.27 ಲಕ್ಷ ಕೋಟಿ ಸಂಗ್ರಹ: ಜಿಎಸ್ಟಿ: ₹2 ಲಕ್ಷ ಕೋಟಿ ಸಂಗ್ರಹ ಸಂದರ್ಭ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮೂಲಕ ಮಾರ್ಚ್ ತಿಂಗಳಿನಲ್ಲಿ ₹2 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಇದು ಈ ಆರ್ಥಿಕ ವರ್ಷದಲ್ಲಿ ಮೂರನೇ ಅತಿದೊಡ್ಡ ಮಾಸಿಕ ಸಂಗ್ರಹವಾಗಿದೆ.
ಕಳೆದ ವರ್ಷದ ಮಾರ್ಚ್‌ನಲ್ಲಿ ₹1.83 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ವರಮಾನ ಸಂಗ್ರಹವು ಶೇ 8.8ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆಮದು ಮಾಡಿಕೊಂಡ ಸರಕು ಗಳಿಂದ ಬಂದ ವರಮಾನದಲ್ಲಿ ಏರಿಕೆಯಾಗಿರುವುದು, ದೇಶದ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ಖರೀದಿ ಹೆಚ್ಚಳ ಆಗಿರುವುದು ಜಿಎಸ್‌ಟಿ ಸಂಗ್ರಹ ಜಾಸ್ತಿ ಆಗಿರುವುದಕ್ಕೆ ಕಾರಣ ಎಂದು ತಿಳಿಸಿದೆ.
ದೇಶದ ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್‌ಟಿ ವರಮಾನ ದಲ್ಲಿ ಶೇ5.9ರಷ್ಟು ಹೆಚ್ಚಳವಾಗಿ, ₹1.46 ಲಕ್ಷ ಕೋಟಿ ಆಗಿದೆ. ಆಮದು ಸರಕುಗಳಿಂದ ಬಂದ ವರಮಾನದಲ್ಲಿ ಶೇ 17.8ರಷ್ಟು ಏರಿಕೆಯಾಗಿದ್ದು, ₹53,861 ಕೋಟಿ ಆಗಿದೆ. ಒಟ್ಟು ಮರುಪಾವತಿಯು ₹22,074 ಕೋಟಿಯಾಗಿದ್ದು, ಶೇ 13.8ರಷ್ಟು ಹೆಚ್ಚಳವಾಗಿದೆ.
ಮರುಪಾವತಿ ಬಳಿಕ ನಿವ್ವಳ ಜಿಎಸ್‌ಟಿ ವರಮಾನ ₹1.78 ಲಕ್ಷ ಕೋಟಿಯಾಗಿದ್ದು ಹಿಂದಿನ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಶೇ 8.2ರಷ್ಟು ಏರಿಕೆಯಾಗಿದೆ.
2025-26ರ ಆರ್ಥಿಕ ವರ್ಷದ ಏಪ್ರಿಲ್ನಿಂದ ಮಾರ್ಚ್‌ವರೆಗೆ ಒಟ್ಟು ಜಿಎಸ್‌ಟಿ ಸಂಗ್ರಹ ₹22.27 ಲಕ್ಷ ಕೋಟಿಯಾಗಿದ್ದು, ಶೇ8.3ರಷ್ಟು ಏರಿಕೆ ಆಗಿದೆ. ಮರುಪಾವತಿ ಹಂಚಿಕೆ ಬಳಿಕ ವರಮಾನವು ₹19.34 ಲಕ್ಷ ಕೋಟಿಯಾಗಿದ್ದು ಶೇ7.1ರಷ್ಟು ಬೆಳವಣಿಗೆ ದಾಖಲಿಸಿದೆ.
ಏಪ್ರಿಲ್‌ನಲ್ಲಿ ಅತ್ಯಧಿಕ ₹2.36 ಲಕ್ಷ ಕೋಟಿ ಮತ್ತು ಮೇ ತಿಂಗಳಿನಲ್ಲಿ ₹2.01 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದು ಈ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ವರಮಾನ ಸಂಗ್ರಹವಾದ ತಿಂಗಳಾಗಿವೆ. ಇದೀಗ ಮಾರ್ಚ್‌ನಲ್ಲಿ ₹2 ಲಕ್ಷ ಕೋಟಿ ಸಂಗ್ರಹವಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಜಿಎಸ್‌ಟಿ ದರ ಪರಿಷ್ಕರಣೆ ಆಯಿತು. ಇದರಿಂದ ನವೆಂಬರ್ ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹ ಇಳಿಕೆಯಾಗಿ, ₹1.70 ಲಕ್ಷ ಕೋಟಿ ಸಂಗ್ರಹವಾಗಿತ್ತು ಡಿಸೆಂಬರ್ಗೆಗೆ ಸಂಗ್ರಹವು ಏರಿಕೆಯಾಗಿ, ₹1.74 ಲಕ್ಷ ಕೋಟಿಯಷ್ಟಾಯಿತು.
ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣದಂತಹ ದೊಡ್ಡ ರಾಜ್ಯಗಳು ಸಂಗ್ರಹದಲ್ಲಿ ಸದೃಢ ಏರಿಕೆ ಕಂಡಿವೆ. ಹರಿಯಾಣ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸಂಗ್ರಹವು ನಿಧಾನವಾಗಿ ಪ್ರಗತಿ ಕಂಡಿದೆ ಎಂದು ತಿಳಿಸಿದೆ.
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆಗೆ ‘ತಡೆ’ ಸಂದರ್ಭ: ವಿಪಕ್ಷಗಳು ಹಾಗೂ ಕ್ರೈಸ್ತ ನಾಯಕರ ವಿರೋಧ ಮತ್ತು ಬಿಜೆಪಿ ಕೇರಳ ಘಟಕದ ಒತ್ತಡದಿಂದ, ವಿಧಾನಸಭಾ ಚುನಾವಣೆಯಲ್ಲಿ ಹೊಡೆತ ಬೀಳಬಹುದು ಎಂಬ ಆತಂಕದಿಂದ ಕೇಂದ್ರ ಸರ್ಕಾರವು ವಿವಾದಾತ್ಮಕ ‘ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ’ಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯುವುದನ್ನು ಮುಂದೂಡಿದೆ.
ಮಸೂದೆಯ ಹಿನ್ನೆಲೆ ಮತ್ತು ವಿವಾದ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಅಡಿಯಲ್ಲಿ ತಿದ್ದುಪಡಿ ತರುವ ಮೂಲಕ ಸ್ವಯಂ ಸೇವಾ ಸಂಸ್ಥೆಗಳು (NGOs) ಮತ್ತು ಧಾರ್ಮಿಕ ಸಂಸ್ಥೆಗಳಿಗೆ ವಿದೇಶದಿಂದ ಬರುವ ಹಣದ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ, ಈ ತಿದ್ದುಪಡಿಯು ಕೆಲವು ನಿರ್ದಿಷ್ಟ ಸಮುದಾಯಗಳು ಮತ್ತು ಸಾಮಾಜಿಕ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ ಎಂಬ ಟೀಕೆ ವ್ಯಕ್ತವಾಯಿತು.
ತಡೆಹಿಡಿಯಲು ಪ್ರಮುಖ ಕಾರಣಗಳು ಕೇರಳ ವಿಧಾನಸಭಾ ಚುನಾವಣೆ (ಏಪ್ರಿಲ್ 2026): ಕೇರಳದಲ್ಲಿ ಕ್ರೈಸ್ತ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಈ ಮಸೂದೆಯಿಂದ ಕ್ರೈಸ್ತ ಧಾರ್ಮಿಕ ಸಂಸ್ಥೆಗಳು ಮತ್ತು ಮಿಷನರಿಗಳಿಗೆ ಬರುವ ದೇಣಿಗೆಗೆ ಅಡ್ಡಿಯಾಗಬಹುದು ಎಂಬ ಆತಂಕವಿತ್ತು. ಇದು ಚುನಾವಣೆಯಲ್ಲಿ ಬಿಜೆಪಿ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಕೇರಳ ಬಿಜೆಪಿ ಘಟಕವು ಕೇಂದ್ರಕ್ಕೆ ವರದಿ ನೀಡಿತ್ತು. ಕ್ರೈಸ್ತ ನಾಯಕರ ವಿರೋಧ: ದಕ್ಷಿಣ ಭಾರತದ, ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನ ಕ್ರೈಸ್ತ ಮುಖಂಡರು ಈ ಮಸೂದೆಯು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸೇವಾ ಚಟುವಟಿಕೆಗಳಿಗೆ ಧಕ್ಕೆ ತರುತ್ತದೆ ಎಂದು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು. ವಿಪಕ್ಷಗಳ ಒಗ್ಗಟ್ಟು: ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಈ ಮಸೂದೆಯನ್ನು ‘ಅಪ್ರಜಾಪ್ರಭುತ್ವ’ ಎಂದು ಕರೆದು ಸದನದ ಒಳಗೂ ಮತ್ತು ಹೊರಗೂ ಪ್ರತಿಭಟನೆ ನಡೆಸಿದ್ದವು.
ಮಸೂದೆಯಲ್ಲಿನ ಪ್ರಮುಖ ಅಂಶಗಳೇನು? ಈ ತಿದ್ದುಪಡಿ ಮಸೂದೆಯು ಈ ಕೆಳಗಿನ ಬದಲಾವಣೆಗಳನ್ನು ಪ್ರಸ್ತಾಪಿಸಿತ್ತು: ಆಧಾರ್ ಕಡ್ಡಾಯ: ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಯ ಪದಾಧಿಕಾರಿಗಳು ಆಧಾರ್ ಕಾರ್ಡ್ ನೀಡುವುದು ಕಡ್ಡಾಯ. ಆಡಳಿತಾತ್ಮಕ ವೆಚ್ಚದ ಮಿತಿ: ವಿದೇಶಿ ದೇಣಿಗೆಯನ್ನು ಆಡಳಿತಾತ್ಮಕ ವೆಚ್ಚಗಳಿಗಾಗಿ (Administrative expenses) ಬಳಸುವ ಮಿತಿಯನ್ನು ಈಗಿರುವ ಶೇ. 20ರಿಂದ ಇನ್ನಷ್ಟು ಕಡಿಮೆ ಮಾಡುವುದು. ಕೇಂದ್ರೀಕೃತ ಖಾತೆ: ಎಲ್ಲಾ ವಿದೇಶಿ ದೇಣಿಗೆಗಳು ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯ ಮೂಲಕವೇ ಬರಬೇಕು.
ಮುಂದಿನ ಹಾದಿ ಸರ್ಕಾರವು ಸದ್ಯಕ್ಕೆ ಈ ಮಸೂದೆಯನ್ನು “ತಡೆಹಿಡಿದಿದೆ” (Deferred) ಅಷ್ಟೆ, ಸಂಪೂರ್ಣವಾಗಿ ಕೈಬಿಟ್ಟಿಲ್ಲ. ಚುನಾವಣೆಗಳ ನಂತರ ಈ ಮಸೂದೆಯನ್ನು ಮತ್ತೆ ಚರ್ಚೆಗೆ ತರುವ ಸಾಧ್ಯತೆ ಇದೆ. ಇದರ ನಡುವೆ, ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐ (CBI) ಮೂಲಕ ಈಗಾಗಲೇ ನಿಯಮ ಉಲ್ಲಂಘಿಸಿರುವ ಕೆಲವು ಎನ್‌ಜಿಒಗಳ ಮೇಲೆ ತನಿಖೆ ಮುಂದುವರಿಯುತ್ತಿದೆ.
ರಾಷ್ಟ್ರಪತಿ ಅಂಕಿತ ಸಂದರ್ಭ: ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.
ಕೇಂದ್ರ ಸರ್ಕಾರವು ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ- 2026 ಅನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆದಿತ್ತು.
ಪ್ರಮುಖ ತಿದ್ದುಪಡಿಗಳು ಮತ್ತು ಬದಲಾವಣೆಗಳು ಸ್ವಯಂ ಘೋಷಿತ ಗುರುತಿನ ಹಕ್ಕು ರದ್ದು: 2019ರ ಕಾಯ್ದೆಯು ವ್ಯಕ್ತಿಗಳು ತಮ್ಮನ್ನು ತಾವು ಲಿಂಗತ್ವ ಅಲ್ಪಸಂಖ್ಯಾತರೆಂದು ಗುರುತಿಸಿಕೊಳ್ಳಲು (Self-identification) ಅವಕಾಶ ನೀಡಿತ್ತು. ಆದರೆ, 2026ರ ತಿದ್ದುಪಡಿಯು ಇದನ್ನು ಕೈಬಿಟ್ಟಿದೆ. ವೈದ್ಯಕೀಯ ಮಂಡಳಿಯ ಕಡ್ಡಾಯ ತಪಾಸಣೆ: ಇನ್ನು ಮುಂದೆ ಲಿಂಗತ್ವ ಅಲ್ಪಸಂಖ್ಯಾತ ಎಂಬ ಗುರುತಿನ ಚೀಟಿ ಪಡೆಯಲು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದಾಗ, ಸರ್ಕಾರ ನಿಗದಿಪಡಿಸಿದ ವೈದ್ಯಕೀಯ ಮಂಡಳಿಯು (Medical Board) ಆ ವ್ಯಕ್ತಿಯನ್ನು ಪರೀಕ್ಷಿಸಿ ಶಿಫಾರಸು ಮಾಡುವುದು ಕಡ್ಡಾಯವಾಗಿದೆ. ಸೀಮಿತ ವ್ಯಾಖ್ಯಾನ: ಈ ಕಾಯ್ದೆಯು ‘ಲಿಂಗತ್ವ ಅಲ್ಪಸಂಖ್ಯಾತ’ ಎಂಬ ಪದವನ್ನು ಹೆಚ್ಚು ಸ್ಪಷ್ಟವಾಗಿ ಮತ್ತು ಸಂಕುಚಿತವಾಗಿ ವ್ಯಾಖ್ಯಾನಿಸಿದೆ. ಇದು ಕೇವಲ ಜೈವಿಕ ವ್ಯತ್ಯಾಸಗಳು ಅಥವಾ ನಿರ್ದಿಷ್ಟ ಸಾಂಸ್ಕೃತಿಕ ಸಮುದಾಯಗಳಿಗೆ (ಹಿಜ್ರಾ, ಕಿನ್ನರ್, ಅರವಣಿ ಇತ್ಯಾದಿ) ಸೇರಿದವರನ್ನು ಮಾತ್ರ ಒಳಗೊಳ್ಳುತ್ತದೆ. ಲೈಂಗಿಕ ಆಸಕ್ತಿಗಳ ಹೊರಗಿಡುವಿಕೆ: ಈ ಕಾಯ್ದೆಯು ವಿಭಿನ್ನ ಲೈಂಗಿಕ ಆಸಕ್ತಿಗಳನ್ನು (Sexual Orientation – ಉದಾಹರಣೆಗೆ ಗೇ, ಲೆಸ್ಬಿಯನ್) ಈ ವ್ಯಾಖ್ಯಾನದಿಂದ ಸ್ಪಷ್ಟವಾಗಿ ಹೊರಗಿಟ್ಟಿದೆ.
ಶಿಕ್ಷೆ ಮತ್ತು ದಂಡದ ಪ್ರಮಾಣದಲ್ಲಿ ಹೆಚ್ಚಳ ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ: ಬಾಧಿತರಾಗುವವರಿಗೆ ರಕ್ಷಣೆ: ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ದೈಹಿಕ ಹಲ್ಲೆ ಅಥವಾ ಗಂಭೀರ ಗಾಯ ಮಾಡಿದರೆ ಅಪರಾಧಿಗಳಿಗೆ ಕಠಿಣ ಶಿಕ್ಷೆಯಿದೆ. ಬಲವಂತದ ಗುರುತು ಬದಲಾವಣೆ: ಒಬ್ಬ ವ್ಯಕ್ತಿಯನ್ನು ಬಲವಂತವಾಗಿ ಲಿಂಗತ್ವ ಅಲ್ಪಸಂಖ್ಯಾತ ಚಹರೆ ಅಳವಡಿಸಿಕೊಳ್ಳುವಂತೆ ಪೀಡಿಸಿದರೆ ಅಥವಾ ಅಪಹರಿಸಿದರೆ 10 ವರ್ಷದಿಂದ ಜೀವಾವಧಿ ಶಿಕ್ಷೆ ಮತ್ತು ₹2 ಲಕ್ಷಕ್ಕೂ ಅಧಿಕ ದಂಡ ವಿಧಿಸಲು ಅವಕಾಶವಿದೆ. ಬಾಲಕಾರ್ಮಿಕ ಅಥವಾ ಭಿಕ್ಷಾಟನೆ: ಮಕ್ಕಳನ್ನು ಅಥವಾ ವಯಸ್ಕರನ್ನು ಬಲವಂತವಾಗಿ ಭಿಕ್ಷಾಟನೆ ಅಥವಾ ಜೀತ ಪದ್ಧತಿಗೆ ದೂಡಿದರೆ 10 ರಿಂದ 14 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ.
ವಿವಾದ ಮತ್ತು ಟೀಕೆಗಳು ಈ ಮಸೂದೆಯು ಅಂಗೀಕಾರವಾಗುವ ಸಮಯದಲ್ಲಿ ವಿರೋಧ ಪಕ್ಷಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು: ಹಿನ್ನಡೆ: ಸುಪ್ರೀಂ ಕೋರ್ಟ್ ನೀಡಿದ್ದ ‘ನಾಲ್ಸಾ’ (NALSA) ತೀರ್ಪಿನ ಆಶಯಕ್ಕೆ ವಿರುದ್ಧವಾಗಿ, ವ್ಯಕ್ತಿಯ ಸ್ವಯಂ ಗುರುತಿನ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂಬುದು ಪ್ರಮುಖ ಟೀಕೆ. ವೈದ್ಯಕೀಯ ಹಸ್ತಕ್ಷೇಪ: ವೈದ್ಯಕೀಯ ಮಂಡಳಿಯ ತಪಾಸಣೆಯು ವ್ಯಕ್ತಿಯ ಘನತೆ ಮತ್ತು ಖಾಸಗಿತನಕ್ಕೆ ಧಕ್ಕೆ ತರುತ್ತದೆ ಎಂದು ಹೋರಾಟಗಾರರು ವಾದಿಸಿದ್ದಾರೆ.
ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.
“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.
“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ವಿಶ್ವ ವುಶು: ಭಾರತಕ್ಕೆ 3 ಸ್ವರ್ಣ ಸಂದರ್ಭ: ಭಾರತದ ಅಥೀಟ್ಗಳು ಇಲ್ಲಿ ನಡೆಯುತ್ತಿರುವ 10ನೇ ವಿಶ್ವ ಜೂನಿಯರ್ ವುಶು ಚಾಂಪಿಯನ್ಷಿಪ್ನಲ್ಲಿ ಮೂರು ಚಿನ್ನ ಸೇರಿ 10 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದರು.
ಸ್ಯಾಂಡಾ (ಕುಸ್ತಿ) ಸ್ಪರ್ಧೆಯಲ್ಲಿ ಪಾರಮ್ಯ ಸಾಧಿಸಿದ ಭಾರತದ ಅಥೀಟ್ ಗಳು ಮೂರು ಚಿನ್ನದ ಪದಕ ಬಾಚಿದರು. ಉಪೇಂದ್ರೆ ತೌಗಮ್ (ಬಾಲಕರ 45 ಕೆ.ಜಿ.), ನೊಂಗಮ್ಮೆಥಮ್ ಪಮ್‌ಹೀಬಾ (ಜೂನಿಯರ್ ಬಾಲಕರ 52 ಕೆ.ಜಿ.) ಹಾಗೂ ಲಾಯ್ಕಂಗ್‌ಬಮ್ ವಿಕ್ಟರ್ (ಯುವ ಬಾಲಕರು 52 ಕೆ.ಜಿ.) ಸೋಮವಾರ ಸ್ವರ್ಣಕ್ಕೆ ಮುತ್ತಿಕ್ಕಿದರು.
ಬಾಲಕರ 48 ಕೆ ಜಿ. ವಿಭಾಗದಲ್ಲಿ ಯುವರಾಜ್ ಬೆಳ್ಳಿ ಜಯಿಸಿದರು. ಗೌತಮ್ ಮಂಕಾಸ್ (ಜೂನಿಯರ್ ಬಾಲಕರ 48 ಕೆ.ಜಿ.) ಹಾಗೂ ಅನು (ಯುವ ಬಾಲಕಿಯರು 48 ಕೆ.ಜಿ.) ಅವರು ಭಾನುವಾರ ಕಂಚು ಜಯಿಸಿದ್ದರು.
ಟೌಲೊ (ಕಲಾತ್ಮಕ) ಸ್ಪರ್ಧೆಗಳಲ್ಲಿ ಕೊಂಥ್ಜಮ್ ದೇವಿಕರಣಿ ದೇವಿ ಅವರು ತಲಾ ಒಂದು ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು. ರಾಜಕುಮಾರಿ ಲಾನ್‌ಚೆನ್ನಿ ಚಾನು ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ವುಶು (Wushu) ಎಂಬುದು ಚೀನಾದ ಸಾಂಪ್ರದಾಯಿಕ ಸಮರ ಕಲೆಗಳ (Martial Arts) ಒಂದು ಆಧುನಿಕ ರೂಪವಾಗಿದೆ. ಇದು ಕೇವಲ ಕ್ರೀಡೆಯಲ್ಲದೆ, ಆತ್ಮರಕ್ಷಣೆ ಮತ್ತು ದೈಹಿಕ ಶಿಸ್ತಿನ ಸಮನ್ವಯವಾಗಿದೆ. ೧. ವುಶು ಎಂದರೇನು? ‘ವುಶು’ ಎಂಬ ಪದವು ಎರಡು ಚೀನೀ ಪದಗಳಿಂದ ಬಂದಿದೆ: ‘Wu’ (ಮಿಲಿಟರಿ/ಸಮರ) ಮತ್ತು ‘Shu’ (ಕಲೆ). ಇದನ್ನು ಸಾಮಾನ್ಯವಾಗಿ ಎರಡು ವಿಭಾಗಗಳಲ್ಲಿ ಸ್ಪರ್ಧಿಸಲಾಗುತ್ತದೆ: ತಾವೊಲು (Taolu): ಇದು ಕತ್ತಿವರಸೆ, ಲಾಠಿ ಅಥವಾ ಬರಿಗೈ ಮೂಲಕ ಮಾಡುವ ಕಲಾತ್ಮಕ ಚಲನೆಗಳನ್ನು ಒಳಗೊಂಡಿರುತ್ತದೆ. ಇದು ಜಿಮ್ನಾಸ್ಟಿಕ್ಸ್‌ನಂತೆ ಪ್ರದರ್ಶನ ಆಧಾರಿತವಾಗಿರುತ್ತದೆ. ಸಂದಾ (Sanda): ಇದು ಪೂರ್ಣ-ಸಂಪರ್ಕದ (Full-contact) ಹೋರಾಟವಾಗಿದೆ. ಇದರಲ್ಲಿ ಬಾಕ್ಸಿಂಗ್, ಕಿಕ್-ಬಾಕ್ಸಿಂಗ್ ಮತ್ತು ಕುಸ್ತಿಯ ಅಂಶಗಳಿರುತ್ತವೆ.
೨. ವಿಶ್ವ ವುಶು ಚಾಂಪಿಯನ್‌ಶಿಪ್ (World Wushu Championships – WWC) ಇದು ಅಂತರಾಷ್ಟ್ರೀಯ ವುಶು ಫೆಡರೇಶನ್ (IWUF) ಆಯೋಜಿಸುವ ಅತ್ಯುನ್ನತ ಮಟ್ಟದ ಜಾಗತಿಕ ಸ್ಪರ್ಧೆಯಾಗಿದೆ. ಆರಂಭ: ಮೊದಲ ವಿಶ್ವ ಚಾಂಪಿಯನ್‌ಶಿಪ್ 1991 ರಲ್ಲಿ ಬೀಜಿಂಗ್‌ನಲ್ಲಿ ನಡೆಯಿತು. ಆವರ್ತನ: ಇದು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಪ್ರಾಮುಖ್ಯತೆ: ಇದು ವಿಶ್ವದಾದ್ಯಂತ ಇರುವ ಅತ್ಯುತ್ತಮ ವುಶು ಕ್ರೀಡಾಪಟುಗಳನ್ನು ಒಂದೆಡೆ ಸೇರಿಸುತ್ತದೆ.
೩. ಭಾರತ ಮತ್ತು ವುಶು ಇತ್ತೀಚಿನ ವರ್ಷಗಳಲ್ಲಿ ಭಾರತವು ವಿಶ್ವ ವುಶು ವೇದಿಕೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ: ರೋಶಿಬಿನಾ ದೇವಿ (Roshibina Devi): ಇವರು ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದು ಭಾರತದ ಹೆಮ್ಮೆಯಾಗಿದ್ದಾರೆ. ಪೂಜಾ ಕಾದಿಯನ್ (Pooja Kadian): 2017ರಲ್ಲಿ ವಿಶ್ವ ವುಶು ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದರು. ಸಂತೋಷ್ ಕುಮಾರ್ ಮತ್ತು ಸೂರ್ಯ ಭಾನು ಪ್ರತಾಪ್ ಸಿಂಗ್: ಇವರು ಸಹ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತರಾಗಿದ್ದಾರೆ.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಜನಸಂಖ್ಯಾಶಾಸ್ತ್ರ: ನಾಳೆಯಿಂದ ಜನಗಣತಿ ಸಂದರ್ಭ: ಕರ್ನಾಟಕದಲ್ಲಿ ಏಪ್ರಿಲ್ 1ರಿಂದ ಸ್ವಯಂ ಗಣತಿಯೊಂದಿಗೆ ‘ಜನಗಣತಿ-2027’ ಆರಂಭವಾಗಲಿದೆ. ಏಪ್ರಿಲ್ 16ರಿಂದ ಒಂದು ತಿಂಗಳು ‘ಮನೆಗಳ ಪಟ್ಟಿ ತಯಾರಿಕೆ ಮತ್ತು ವಸತಿ ಗಣತಿ’ ನಡೆಯಲಿದೆ.
ಕೇಂದ್ರ ಗೃಹ ಸಚಿವಾಲಯ 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಿದ್ದು. ಮೊದಲ ಹಂತದಲ್ಲಿ ಮನೆಪಟ್ಟಿ ಮತ್ತು ಮನೆ ಗಣತಿಯನ್ನು ಏಪ್ರಿಲ್ 1ರಿಂದ 15ರವರೆಗೆ ವೆಬ್ ಪೋರ್ಟಲ್ (https://se.census.gov.in) ಮೂಲಕ ಸ್ವಯಂ-ಗಣತಿಗೆ ಅವಕಾಶ ಕಲ್ಪಿಸಿರುತ್ತದೆ.ಮನೆಯ ಯಾವುದೇ ಒಬ್ಬ ಸದಸ್ಯ ಸುಮಾರು 15ರಿಂದ 20 ನಿಮಿಷಗಳಲ್ಲಿ ಸ್ವಯಂ-ಗಣತಿ ಮಾಡಿ, ಮನೆಯ ವಿವರಗಳನ್ನು ಒದಗಿಸಬಹುದು ಮತ್ತು ಮೊಬೈಲ್/ಇಮೇಲ್‌ನಲ್ಲಿ ‘ಸ್ವಯಂ-ಗಣತಿ ಐಡಿ’ಯನ್ನು ಪಡೆಯ ಬಹುದಾಗಿರುತ್ತದೆ. ಸ್ವಯಂ ಗಣತಿ ಪ್ರಕ್ರಿಯೆಗಾಗಿ ನಿಗದಿಪಡಿಸಿರುವ ಅವಧಿಯಲ್ಲಿ ನಾಗರಿಕರು ತಮ್ಮ ಮಾಹಿತಿಯನ್ನು ದಾಖಲಿಸಲು ಅವಕಾಶವಿದ್ದು, ಇದರಿಂದ ಜನಗಣತಿ ಕಾರ್ಯದಲ್ಲಿ ಪಾರದರ್ಶಕತೆ, ವೇಗ ಮತ್ತು ನಿಖರತೆ ಹೆಚ್ಚಲಿದೆ.
ಜನಗಣತಿಯ ಎರಡನೇ ಹಂತ ಏಪ್ರಿಲ್ 16ರಿಂದ ಮೇ 15ರವರೆಗೆ ನಡೆಯಲಿದ್ದು, ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮನೆಪಟ್ಟಿ ಮತ್ತು ಮನೆ ಗಣತಿ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ ಗಣತಿ ದಾರರು ಮನೆಗೆ ಭೇಟಿ ನೀಡಿದಾಗ, ದೃಢೀಕರಿಸಲು ಮತ್ತು ಸ್ವಯಂ-ಗಣತಿ ದತ್ತಾಂಶದ ಅಂತಿಮ ಸಲ್ಲಿಕೆಗಾಗಿ ಸ್ವಯಂ-ಗಣತಿ ಐಡಿಯನ್ನು ಗಣತಿದಾರರೊಂದಿಗೆ ಹಂಚಿಕೊಳ್ಳಬೇಕಾಗಿರುತ್ತದೆ.
‘ಮನೆಗಳ ಪಟ್ಟಿ ತಯಾರಿಕೆ ಮತ್ತು ವಸತಿ ಗಣತಿ’ಯು ಜನಗಣತಿಯ ಮೊದಲ ಹಂತವಾಗಿದ್ದು, ದೇಶದಾದ್ಯಂತ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಸಲಾಗುವುದು. ಈ ಸಮಯದಲ್ಲಿ ಮನೆಗಳ ಸ್ಥಿತಿಗತಿಗಳು, ಆಸ್ತಿಗಳು ಮತ್ತು ಮನೆಗಳ ಸೌಕರ್ಯಗಳಿಗೆ ಸಂಬಂಧಿಸಿದ ವಿವರಗಳನ್ನು ಕಲೆ ಹಾಕಲಾಗುತ್ತದೆ.
ಕರ್ನಾಟಕದೊಂದಿಗೆ ಇತರ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ ಕರ್ನಾಟಕದಲ್ಲಿ ಏಪ್ರಿಲ್ 1ರಿಂದ 15ರ ವರೆಗೆ ಸ್ವಯಂ ಗಣತಿ ಜರುಗಲಿದೆ. ಮನೆ-ಮನೆಗೆ ತೆರಳಿ ಮಾಹಿತಿ ಕಲೆ ಹಾಕುವ ಪ್ರಕ್ರಿಯೆ ಏಪ್ರಿಲ್ 16ರಂದು ಪ್ರಾರಂಭವಾಗಿ ಮೇ 15ರಂದು ಕೊನೆಗೊಳ್ಳಲಿದೆ.
ಸ್ವಯಂ ಎಣಿಕೆ ಪ್ರಕ್ರಿಯೆಯ ಸಂದರ್ಭದಲ್ಲಿ ವ್ಯಕ್ತಿಯು ಪೋರ್ಟಲ್‌ನಲ್ಲಿ ತಮ್ಮ ಮನೆಯ ವಿವರಗಳನ್ನು ಭರ್ತಿ ಮಾಡಬೇಕು. ಬಳಿಕ ಸ್ವಯಂ ಗಣತಿಯ ಸಂಖ್ಯೆ ಲಭ್ಯವಾಗುತ್ತದೆ. ಈ ಸಂಖ್ಯೆಯನ್ನು ಗಣತಿದಾರರಿಗೆ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ನೀಡಬೇಕು ಮತ್ತು ಸ್ವಯಂ ಎಣಿಕೆಯ ದತ್ತಾಂಶಗಳನ್ನು ದೃಢೀಕರಿಸಿದ ನಂತರ ಗಣತಿದಾರರು ಇದನ್ನು ಮೂಲ ದತ್ತಾಂಶದಲ್ಲಿ ಸೇರಿಸುತ್ತಾರೆ.
ಪಶ್ಚಿಮ ಬಂಗಾಳ ಹೊರತುಪಡಿಸಿ, ಚುನಾವಣೆ ನಡೆಯಲಿರುವ ರಾಜ್ಯಗಳ ಗಣತಿ ವೇಳಾಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ. ಪುದುಚೇರಿಯಲ್ಲಿ ಮೇ 17ರಿಂದ ಸ್ವಯಂ ಎಣಿಕೆ ಮತ್ತು ಜೂನ್ 1ರಿಂದ ಮನೆ ಮನೆಗೆ ತೆರಳಿ ಎಣಿಕೆ ನಡೆಯಲಿದೆ. ಕೇರಳದಲ್ಲಿ ಕ್ರಮವಾಗಿ ಜೂನ್ 16 ಮತ್ತು ಜುಲೈ 1ರಂದು ಗಣತಿ ನಡೆಯಲಿದೆ ತಮಿಳುನಾಡಿನಲ್ಲಿ ಕ್ರಮವಾಗಿ ಜುಲೈ 17 ಮತ್ತು ಆಗಸ್ಟ್ 1 ರಂದು ಹಾಗೂ ಅಸ್ಸಾಂನಲ್ಲಿ ಆಗಸ್ಟ್ 2 ಮತ್ತು ಆಗಸ್ಟ್ 17 ರಂದು ಗಣತಿ ಜರುಗಲಿದೆ ಸ್ವಯಂ ಗಣತಿ ಆರಂಭವಾಗುವ (ಆಗಸ್ಟ್ 17ರಿಂದ) ಮತ್ತು ಮನೆ ಮನೆ ಎಣಿಕೆ ಪ್ರಕ್ರಿಯೆ (ಸೆಪ್ಟೆಂಬರ್ 1ರಿಂದ 30) ಪೂರ್ಣಗೊಳಿಸುವ ಕೊನೆಯ ರಾಜ್ಯ ಮಣಿಪುರವಾಗಲಿದೆ.
ಮುಂದಿನ ವರ್ಷದ ಫೆಬ್ರುವರಿಯಲ್ಲಿ ಎರಡನೇ ಹಂತದ ಗಣತಿ ನಡೆಯಲಿದೆ.ಆಗ ಜನಸಂಖ್ಯೆ ಎಣಿಕೆ ಮಾಡಲಾಗುತ್ತದೆ. ಆಗ ಪ್ರತಿಯೊಂದು ಮನೆಯ ಪ್ರತಿ ವ್ಯಕ್ತಿಯ ಜಾತಿ, ಸಾಮಾಜಿಕ-ಆರ್ಥಿಕ ಸಾಮಾಜಿಕ ಮತ್ತು ಇತರ ವಿವರ ಸಂಗ್ರಹಿಸಲಾಗುತ್ತದೆ.
ಜನಗಣತಿ ಮಾಹಿತಿಯ ಆಧಾರದ ಮೇಲೆ ಭವಿಷ್ಯದ ನಗರ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂಸಾರ್ವಜನಿಕ ಕಲ್ಯಾಣ ಕಾರ್ಯಕ್ರಮ ಗಳನ್ನು ರೂಪಿಸಲಾಗುತ್ತದೆ.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
“ಪ್ರಜಾಪ್ರಭುತ್ವ ಎನ್ನುವುದು ಕೇವಲ ಅಂಕಿಅಂಶಗಳ ಆಟವಲ್ಲ, ಅದು ಸಮಾನ ಧ್ವನಿಯ ಹಕ್ಕು. ಭಾರತದ ಸಂದರ್ಭದಲ್ಲಿ, ಚುನಾವಣಾ ಗಣಿತಕ್ಕಿಂತ ಒಕ್ಕೂಟ ವ್ಯವಸ್ಥೆಯ ಸ್ಥಿರತೆಯು ಹೆಚ್ಚು ಮುಖ್ಯವಾಗಿದೆ – ಚರ್ಚಿಸಿ.”
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
“ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ, ಕರ್ನಾಟಕದ ಎಲೆಕ್ಟ್ರಿಕ್ ವಾಹನ (EV) ನೀತಿಯು ರಾಜ್ಯವನ್ನು ಸುಸ್ಥಿರ ಸಾರಿಗೆಯತ್ತ ಕೊಂಡೊಯ್ಯುವಲ್ಲಿ ಎಷ್ಟು ಯಶಸ್ವಿಯಾಗಿದೆ? ವಿಮರ್ಶಿಸಿ.”
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಸಾರ್ವಜನಿಕ ವಿತರಣೆ ವ್ಯವಸ್ಥೆಯ (ಪಿಡಿಎಸ್): ಸೀಮೆಎಣ್ಣೆ ವಿತರಣೆಗೆ ಮುಂದಾದ ಕೇಂದ್ರ ಸಂದರ್ಭ: ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ದಿಂದ ತೊಂದರೆ ಅನುಭವಿಸುತ್ತಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಗೃಹ ಬಳಕೆ ಉದ್ದೇಶಗಳಿಗಾಗಿ ತಾತ್ಕಾಲಿಕವಾಗಿ ಸೀಮೆಎಣ್ಣೆ ವಿತರಣೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮುಂದಾಗಿದೆ.
‘ಸೀಮೆಎಣ್ಣೆ ಮುಕ್ತ’ ಎಂದು ಘೋಷಿಸಿರುವ ರಾಜ್ಯಗಳೂ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾರ್ವಜನಿಕ ವಿತರಣೆ ವ್ಯವಸ್ಥೆಯ (ಪಿಡಿಎಸ್) ಅಡಿಯಲ್ಲಿ ತಾತ್ಕಾಲಿಕವಾಗಿ ಸೀಮೆಎಣ್ಣೆ ಹಂಚಿಕೆ ಮಾಡಲಾಗುವುದು ಎಲ್‌ಪಿಜಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮನೆಗಳಲ್ಲಿ ಅಡುಗೆ ಮಾಡಲು ಮತ್ತು ದೀಪದ ಅಗತ್ಯಗಳನ್ನು ಪೂರೈಸಿಕೊಳ್ಳಲು ಇದು ನೆರವಾಗಲಿದೆ.
ಅಧಿಸೂಚನೆ ಪ್ರಕಾರ, ಪ್ರತಿ ಜಿಲ್ಲೆಗೆ ಗೊತ್ತುಪಡಿಸಿದ ಎರಡು ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಮಾಲೀಕತ್ವದ ಸೇವಾ ಕೇಂದ್ರಗಳು 5 ಸಾವಿರ ಲೀಟರ್‌ವರೆಗೆ ಸೀಮೆಎಣ್ಣೆ ದಾಸ್ತಾನು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಟ್ಟಿದ್ದು. ಮುಂದಿನ 60 ದಿನದವರೆಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿದೆ.
ಲಭ್ಯವಿರುವ ಎಲ್‌ಪಿಜಿಯಲ್ಲಿ ಗೃಹ ಬಳಕೆಗೆ ಆದ್ಯತೆ ನೀಡಲಾಗಿದ್ದರೂ ಸೀಮಿತ ದಾಸ್ತಾನಿನ ಆತಂಕದಿಂದ ಜನರು ಭೀತಿಗೊಂಡು ಖರೀದಿಸಲು ಮುಂದಾಗಿದ್ದಾರೆ ಎಲ್‌ಪಿಜಿ ಮೇಲಿನ ಒತ್ತಡ ಕಡಿಮೆ ಮಾಡಲು ಇದೀಗ ಸೀಮೆ ಎಣ್ಣೆ ವಿತರಣೆಗೆ ಸರ್ಕಾರ ಮುಂದಾಗಿದೆ.
ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ: ಸಂಹಿತೆಯಲ್ಲಿ 12 ತಿದ್ದುಪಡಿ: ಆಡಳಿತ ಸುಧಾರಣೆಗೆ ಸಹಕಾರಿ: ದಿವಾಳಿತನ ಮಸೂದೆಗೆ ಲೋಕಸಭೆ ಒಪ್ಪಿಗೆ ಸಂದರ್ಭ: ದಿವಾಳಿತನ ಮತ್ತು ದಿವಾಳಿತನ ಸಂಹಿತೆ ತಿದ್ದುಪಡಿ ಮಸೂದೆಗೆ ಲೋಕಸಭೆ ಸೋಮವಾರ ಒಪ್ಪಿಗೆ ನೀಡಿದೆ.
ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಅವರು ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು.
2016ರಲ್ಲಿ ಜಾರಿಗೊಂಡಿದ್ದ ದಿವಾಳಿತನ ಮತ್ತು ದಿವಾಳಿತನ ಸಂಹಿತೆಗೆ (ಐಬಿಸಿ) 12 ತಿದ್ದುಪಡಿಗಳನ್ನು ಮಾಡಲಾಗುತ್ತಿದೆ. ಇದು ಪಾಲುದಾರರ ಮೌಲ್ಯವನ್ನು ಗರಿಷ್ಠಗೊಳಿಸಲು ಮತ್ತು ಆಡಳಿತ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡಲಿದೆ.
ತಿದ್ದುಪಡಿಗಳು ಅಸ್ತಿತ್ವ ದಲ್ಲಿರುವ ದಿವಾಳಿತನ ಚೌಕಟ್ಟನ್ನು ಬಲಪಡಿಸಲು, ಎದುರಾಗುವ ಸವಾಲುಗಳನ್ನು ಪರಿಹರಿಸಲು ಹಾಗೂ ವಿಕಸನಗೊಳ್ಳುತ್ತಿರುವ ಜಾಗತಿಕ ರೂಢಿಗಳನ್ನು ಅಳವಡಿಸಲು ಯತ್ನಿಸುತ್ತವೆ.
ದೇಶದ ಬ್ಯಾಂಕಿಂಗ್ ಕ್ಷೇತ್ರದ ಆರೋಗ್ಯ ಸುಧಾರಿಸುವಲ್ಲಿ ಈ ಕಾಯ್ದೆಯು ನಿರ್ಣಾಯಕ ಪಾತ್ರ ವಹಿಸಲಿದೆ.
ಐಬಿಸಿ ತಿದ್ದುಪಡಿ ಮಾಡಲು ಸರ್ಕಾರವು 2025ರ ಆಗಸ್ಟ್ 12ರಂದು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿತ್ತು.
ದಿವಾಳಿತನ ಪರಿಹಾರ ಅರ್ಜಿಗಳನ್ನು ವಿಲೇವಾರಿಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ನಿಬಂಧನೆಗಳು ಒಳಗೊಂಡಂತೆ ಹಲವು ಬದಲಾವಣೆಗಳನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು.
ಈ ಮಸೂದೆಯನ್ನು ಲೋಕಸಭೆಯ ಪರಿಶೀಲನಾ ಸಮಿತಿಗೆ ಸ್ಥಳುಹಿಸಲಾಗಿತ್ತು ಸಮಿತಿಯು 2025ರ ಡಿಸೆಂಬರ್‌ನಲ್ಲಿ ತನ್ನ ವರದಿ ಸಲ್ಲಿಸಿತ್ತು. ಸಮಿತಿಯ ಎಲ್ಲ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ.
ದಿವಾಳಿತನ ಮತ್ತು ದಿವಾಳಿತನ ಸಂಹಿತೆ (Insolvency and Bankruptcy Code – IBC), 2016ರಲ್ಲಿ ಜಾರಿಗೆ ಬಂದ ಈ ಕಾಯಿದೆಯು ಭಾರತದ ಆರ್ಥಿಕ ಸುಧಾರಣೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು.
೧. ಸಂಹಿತೆಯ ಮುಖ್ಯ ಉದ್ದೇಶ IBC ಜಾರಿಗೆ ಬರುವ ಮೊದಲು, ಸಾಲ ಮರುಪಾವತಿ ಮಾಡದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅನೇಕ ಹಳೆಯ ಕಾಯಿದೆಗಳಿದ್ದವು (ಉದಾ: SICA, SARFAESI). ಇವುಗಳಿಂದಾಗಿ ಪ್ರಕ್ರಿಯೆಗಳು ವಿಳಂಬವಾಗುತ್ತಿದ್ದವು. IBC ಈ ಕೆಳಗಿನ ಗುರಿಗಳನ್ನು ಹೊಂದಿದೆ: ಸಮಯ ಮಿತಿ: ಸಾಲದ ಸುಳಿಯಲ್ಲಿರುವ ಕಂಪನಿಗಳ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ (ಗರಿಷ್ಠ 330 ದಿನಗಳು) ಪರಿಹರಿಸುವುದು. ವ್ಯಾಪಾರ ಸುಲಭೀಕರಣ (Ease of Doing Business): ವಿಫಲವಾದ ಕಂಪನಿಗಳಿಂದ ಬಂಡವಾಳವನ್ನು ಮುಕ್ತಗೊಳಿಸಿ ಆರ್ಥಿಕತೆಯನ್ನು ಚುರುಕುಗೊಳಿಸುವುದು. ಹೂಡಿಕೆದಾರರ ರಕ್ಷಣೆ: ಸಾಲ ನೀಡಿದ ಬ್ಯಾಂಕುಗಳು ಮತ್ತು ಇತರ ಸಂಸ್ಥೆಗಳ ಹಿತಾಸಕ್ತಿ ಕಾಪಾಡುವುದು.
೨. ಪ್ರಮುಖ ತಿದ್ದುಪಡಿಗಳು (IBC Amendment Bills) ಕಾಲಕಾಲಕ್ಕೆ ಸರ್ಕಾರವು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ತಿದ್ದುಪಡಿಗಳನ್ನು ತಂದಿದೆ. ಇತ್ತೀಚಿನ ಪ್ರಮುಖ ಬದಲಾವಣೆಗಳು ಇಲ್ಲಿವೆ: ಅ) ಪ್ರಿ-ಪ್ಯಾಕೇಜ್ಡ್ ದಿವಾಳಿತನ ಪರಿಹಾರ ಪ್ರಕ್ರಿಯೆ (Pre-packaged Insolvency Resolution – PPIRP) ಇದು ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSMEs) ಸಹಾಯ ಮಾಡುತ್ತದೆ. ಇಲ್ಲಿ ಕಂಪನಿಯು ದಿವಾಳಿಯಾದಾಗ, ಕೋರ್ಟ್‌ಗೆ ಹೋಗುವ ಮೊದಲೇ ಸಾಲಗಾರರು ಮತ್ತು ಮಾಲೀಕರು ಒಪ್ಪಂದಕ್ಕೆ ಬರಲು ಅವಕಾಶವಿರುತ್ತದೆ. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ.
ಆ) ಮನೆ ಖರೀದಿದಾರರ ಹಕ್ಕುಗಳು (Homebuyers’ Rights) ತಿದ್ದುಪಡಿಯ ಮೂಲಕ ಮನೆ ಖರೀದಿದಾರರನ್ನು ‘ಹಣಕಾಸು ಸಾಲಗಾರರು’ (Financial Creditors) ಎಂದು ಪರಿಗಣಿಸಲಾಗಿದೆ. ಅಂದರೆ, ಬಿಲ್ಡರ್ ಕಂಪನಿ ದಿವಾಳಿಯಾದರೆ, ಬ್ಯಾಂಕುಗಳಂತೆಯೇ ಮನೆ ಖರೀದಿದಾರರಿಗೂ ಸಮಾನ ಹಕ್ಕುಗಳು ಸಿಗುತ್ತವೆ.
ಇ) ಗಡಿಯಾಚೆಗಿನ ದಿವಾಳಿತನ (Cross-border Insolvency) ಭಾರತೀಯ ಕಂಪನಿಗಳು ವಿದೇಶದಲ್ಲಿ ಆಸ್ತಿ ಹೊಂದಿದ್ದರೆ ಅಥವಾ ವಿದೇಶಿ ಕಂಪನಿಗಳು ಭಾರತದಲ್ಲಿ ಸಾಲ ಬಾಕಿ ಇರಿಸಿದ್ದರೆ, ಅಂತಹ ಪ್ರಕರಣಗಳನ್ನು ನಿರ್ವಹಿಸಲು ಹೊಸ ನಿಯಮಗಳನ್ನು ತರಲಾಗುತ್ತಿದೆ.
೩. IBC ಕಾರ್ಯನಿರ್ವಹಿಸುವ ಸಂಸ್ಥೆಗಳು ಈ ಸಂಹಿತೆಯನ್ನು ಜಾರಿಗೊಳಿಸಲು ನಾಲ್ಕು ಪ್ರಮುಖ ಪಿಲ್ಲರ್‌ಗಳಿವೆ: Insolvency Professionals (IPs): ದಿವಾಳಿಯಾದ ಕಂಪನಿಯ ಆಡಳಿತವನ್ನು ತಾತ್ಕಾಲಿಕವಾಗಿ ನೋಡಿಕೊಳ್ಳುವ ವೃತ್ತಿಪರರು. Insolvency Agencies: ಇವರು ಈ ವೃತ್ತಿಪರರನ್ನು (IPs) ನೋಂದಾಯಿಸುತ್ತಾರೆ ಮತ್ತು ನಿಯಂತ್ರಿಸುತ್ತಾರೆ. Information Utilities (IU): ಸಾಲ ಮತ್ತು ಮರುಪಾವತಿಯ ಬಗ್ಗೆ ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸುವ ಕೇಂದ್ರಗಳು. IBBI (Insolvency and Bankruptcy Board of India): ಈ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವ ಉನ್ನತ ಸಂಸ್ಥೆ.
೪. ನ್ಯಾಯಾಂಗ ವ್ಯವಸ್ಥೆ (Adjudicating Authority) ದಿವಾಳಿತನ ಪ್ರಕರಣಗಳ ವಿಚಾರಣೆ ಎರಡು ಪ್ರತ್ಯೇಕ ವೇದಿಕೆಗಳಲ್ಲಿ ನಡೆಯುತ್ತದೆ: NCLT (National Company Law Tribunal): ಕಂಪನಿಗಳು ಮತ್ತು ಎಲ್‌ಎಲ್‌ಪಿಗಳಿಗೆ (LLP). DRT (Debt Recovery Tribunal): ವ್ಯಕ್ತಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳಿಗೆ.
೫. ಸವಾಲುಗಳು ನ್ಯಾಯಾಲಯಗಳಲ್ಲಿನ ವಿಳಂಬ: ನಿಗದಿತ ಸಮಯದಲ್ಲಿ ಪ್ರಕರಣಗಳು ಮುಗಿಯುತ್ತಿಲ್ಲ. ಕಡಿಮೆ ರಿಕವರಿ ದರ: ಸಾಲ ನೀಡಿದವರಿಗೆ ಸಿಗುತ್ತಿರುವ ಹಣದ ಪ್ರಮಾಣ (Recovery Rate) ನಿರೀಕ್ಷೆಗಿಂತ ಕಡಿಮೆಯಿದೆ. ಸಿಬ್ಬಂದಿ ಕೊರತೆ: NCLT ಗಳಲ್ಲಿ ನ್ಯಾಯಾಧೀಶರ ಕೊರತೆ ಇರುವುದು ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದೆ.೫. ಸವಾಲುಗಳು ನ್ಯಾಯಾಲಯಗಳಲ್ಲಿನ ವಿಳಂಬ: ನಿಗದಿತ ಸಮಯದಲ್ಲಿ ಪ್ರಕರಣಗಳು ಮುಗಿಯುತ್ತಿಲ್ಲ. ಕಡಿಮೆ ರಿಕವರಿ ದರ: ಸಾಲ ನೀಡಿದವರಿಗೆ ಸಿಗುತ್ತಿರುವ ಹಣದ ಪ್ರಮಾಣ (Recovery Rate) ನಿರೀಕ್ಷೆಗಿಂತ ಕಡಿಮೆಯಿದೆ. ಸಿಬ್ಬಂದಿ ಕೊರತೆ: NCLT ಗಳಲ್ಲಿ ನ್ಯಾಯಾಧೀಶರ ಕೊರತೆ ಇರುವುದು ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದೆ.
1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ: ಬಡ್ಡಿ ಆದಾಯಕ್ಕೂ ಟಿಡಿಎಸ್ ಕಡಿತ ಸಂದರ್ಭ: 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಲ್ಲಿನ ‘ಬ್ಯಾಂಕಿಂಗ್ ಕಂಪನಿ’ ವ್ಯಾಖ್ಯಾನದ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಣಕಾಸು ಸಂಸ್ಥೆಗಳು (50,000ಕ್ಕಿಂತ ಹೆಚ್ಚಿನ ಮೊತ್ತದ ಬಡ್ಡಿ ವರಮಾನದ ಮೇಲೆ ಇನ್ನು ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್) ಮಾಡಲಿವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಬ್ಯಾಂಕ್ ಅಥವಾ ಅಂಚೆ ಕಚೇರಿ ಠೇವಣಿಗಳಿಂದ ಬರುವ ಬಡ್ಡಿ ಆದಾಯವು ಆರ್ಥಿಕ ವರ್ಷವೊಂದರಲ್ಲಿ ಸಾಮಾನ್ಯ ನಾಗರಿಕರಿಗೆ ₹50,000 ಮತ್ತು ಹಿರಿಯ ನಾಗರಿಕರಿಗೆ ₹1 ಲಕ್ಷದ ಮಿತಿ ಮೀರಿದರೆ ಅದರಿಂದ ಟಿಡಿಎಸ್ ಕಡಿತಗೊಳಿಸಲಾಗುವುದು. 2025ರ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ‘ಎಕ್ಸ್’ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ.
ಮೂಲದಲ್ಲೇ ತೆರಿಗೆ ಕಡಿತ (Tax Deducted at Source – TDS) ಎಂಬುದು ಭಾರತೀಯ ಆದಾಯ ತೆರಿಗೆ ವ್ಯವಸ್ಥೆಯ ಒಂದು ಪ್ರಮುಖ ಭಾಗವಾಗಿದೆ. “ಗಳಿಸಿದಾಗ ಪಾವತಿಸು” (Pay as you earn) ಎಂಬ ತತ್ವದ ಮೇಲೆ ಇದು ಕಾರ್ಯನಿರ್ವಹಿಸುತ್ತದೆ.
೧. ಟಿಡಿಎಸ್ (TDS) ಎಂದರೇನು? ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯು (Deductor) ಮತ್ತೊಬ್ಬರಿಗೆ ಹಣವನ್ನು ಪಾವತಿಸುವಾಗ, ಆ ಮೊತ್ತದಲ್ಲಿ ನಿರ್ದಿಷ್ಟ ಪ್ರಮಾಣದ ತೆರಿಗೆಯನ್ನು ಮೊದಲೇ ಕಡಿತಗೊಳಿಸಿ ಉಳಿದ ಹಣವನ್ನು ನೀಡಲಾಗುತ್ತದೆ. ಹೀಗೆ ಕಡಿತಗೊಳಿಸಿದ ಮೊತ್ತವನ್ನು ಪಾವತಿದಾರರು ಸರ್ಕಾರದ ಪರವಾಗಿ ಆದಾಯ ತೆರಿಗೆ ಇಲಾಖೆಗೆ ಜಮಾ ಮಾಡುತ್ತಾರೆ.
೨. ಟಿಡಿಎಸ್ ಯಾವುದಕ್ಕೆ ಅನ್ವಯಿಸುತ್ತದೆ? ಆದಾಯ ತೆರಿಗೆ ಕಾಯಿದೆಯಡಿ ವಿವಿಧ ರೀತಿಯ ಪಾವತಿಗಳಿಗೆ ಟಿಡಿಎಸ್ ಅನ್ವಯಿಸುತ್ತದೆ: ವೇತನ (Salary): ಉದ್ಯೋಗದಾತರು ಸಂಬಳ ನೀಡುವಾಗ. ಬಡ್ಡಿ (Interest): ಬ್ಯಾಂಕ್ ಠೇವಣಿ ಅಥವಾ ಇತರ ಹೂಡಿಕೆಗಳ ಮೇಲಿನ ಬಡ್ಡಿ. ಬಾಡಿಗೆ (Rent): ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮನೆ ಅಥವಾ ಭೂಮಿಯ ಬಾಡಿಗೆ. ವೃತ್ತಿಪರ ಶುಲ್ಕ (Professional Fees): ಸಲಹೆಗಾರರು, ವಕೀಲರು ಅಥವಾ ತಾಂತ್ರಿಕ ಸೇವೆಗಳಿಗೆ ನೀಡುವ ಶುಲ್ಕ. ಗುತ್ತಿಗೆ ಪಾವತಿ (Contract Payments): ಸಿವಿಲ್ ಅಥವಾ ಇತರ ಗುತ್ತಿಗೆದಾರರಿಗೆ ನೀಡುವ ಹಣ. ಕಮಿಷನ್ ಅಥವಾ ಬ್ರೋಕರೇಜ್ (Commission). ಗಿಗ್ ಎಕಾನಮಿ (Gig Economy): ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಯುವ ಪಾವತಿಗಳಿಗೂ ಇದು ಅನ್ವಯಿಸುತ್ತಿದೆ.
೩. ಟಿಡಿಎಸ್ ಕೆಲಸ ಮಾಡುವ ವಿಧಾನ ಕಡಿತ (Deduction): ಪಾವತಿದಾರರು (ಉದಾಹರಣೆಗೆ ಬ್ಯಾಂಕ್ ಅಥವಾ ಕಂಪನಿ) ಹಣ ನೀಡುವಾಗಲೇ ತೆರಿಗೆ ಕಡಿತ ಮಾಡುತ್ತಾರೆ. ಠೇವಣಿ (Deposit): ಕಡಿತಗೊಳಿಸಿದ ತೆರಿಗೆಯನ್ನು ಪ್ರತಿ ತಿಂಗಳು ಸರ್ಕಾರಕ್ಕೆ ಜಮಾ ಮಾಡಬೇಕು. ರಿಟರ್ನ್ ಸಲ್ಲಿಕೆ (TDS Return): ಕಡಿತ ಮಾಡಿದವರು ಪ್ರತಿ ತ್ರೈಮಾಸಿಕಕ್ಕೊಮ್ಮೆ ಯಾರಿಂದ ಎಷ್ಟು ತೆರಿಗೆ ಕಡಿತ ಮಾಡಲಾಗಿದೆ ಎಂಬ ವಿವರವನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಟಿಡಿಎಸ್ ಪ್ರಮಾಣಪತ್ರ (Form 16/16A): ತೆರಿಗೆ ಕಡಿತ ಮಾಡಿದ ನಂತರ, ಪಾವತಿದಾರರು ನಿಮಗೆ ‘ಫಾರ್ಮ್ 16’ ಅಥವಾ ‘ಫಾರ್ಮ್ 16A’ ನೀಡುತ್ತಾರೆ. ಇದು ನೀವು ತೆರಿಗೆ ಪಾವತಿಸಿದ್ದೀರಿ ಎಂಬುದಕ್ಕೆ ಸಾಕ್ಷಿ.
೪. ಪ್ರಮುಖ ಅಂಶಗಳು PAN ಕಾರ್ಡ್ ಅನಿವಾರ್ಯ: ನಿಮ್ಮ ಪ್ಯಾನ್ (PAN) ವಿವರಗಳನ್ನು ಪಾವತಿದಾರರಿಗೆ ನೀಡದಿದ್ದರೆ, ಹೆಚ್ಚಿನ ದರದಲ್ಲಿ (ಸಾಮಾನ್ಯವಾಗಿ 20%) ಟಿಡಿಎಸ್ ಕಡಿತಗೊಳಿಸಲಾಗುತ್ತದೆ. Form 15G/15H: ನಿಮ್ಮ ಒಟ್ಟು ಆದಾಯವು ತೆರಿಗೆ ಮಿತಿಗಿಂತ ಕಡಿಮೆ ಇದ್ದರೆ, ಬ್ಯಾಂಕ್ ಬಡ್ಡಿಯಲ್ಲಿ ಟಿಡಿಎಸ್ ಕಡಿತ ಮಾಡದಂತೆ ತಡೆಯಲು ಈ ಫಾರ್ಮ್‌ಗಳನ್ನು ಸಲ್ಲಿಸಬಹುದು. Form 26AS: ನಿಮ್ಮ ಹೆಸರಿನಲ್ಲಿ ಎಷ್ಟು ಟಿಡಿಎಸ್ ಕಡಿತವಾಗಿದೆ ಮತ್ತು ಸರ್ಕಾರಕ್ಕೆ ಜಮೆಯಾಗಿದೆ ಎಂಬುದನ್ನು ನಿಮ್ಮ ಆದಾಯ ತೆರಿಗೆ ಪೋರ್ಟಲ್‌ನಲ್ಲಿರುವ ‘Form 26AS’ ಮೂಲಕ ಪರಿಶೀಲಿಸಬಹುದು.
೫. ಪ್ರಯೋಜನಗಳು ಸರ್ಕಾರಕ್ಕೆ: ವರ್ಷವಿಡೀ ನಿಯಮಿತವಾಗಿ ತೆರಿಗೆ ಸಂಗ್ರಹವಾಗುತ್ತದೆ ಮತ್ತು ತೆರಿಗೆ ವಂಚನೆಯನ್ನು ತಡೆಯಬಹುದು. ತೆರಿಗೆದಾರರಿಗೆ: ವರ್ಷದ ಕೊನೆಯಲ್ಲಿ ಒಂದೇ ಬಾರಿಗೆ ದೊಡ್ಡ ಮೊತ್ತದ ತೆರಿಗೆ ಪಾವತಿಸುವ ಹೊರೆ ತಪ್ಪುತ್ತದೆ.
ಪ್ರತಿ ವರ್ಷದ ಬಜೆಟ್‌ನಲ್ಲಿ ಟಿಡಿಎಸ್ ದರಗಳು ಮತ್ತು ಮಿತಿಗಳಲ್ಲಿ ಬದಲಾವಣೆಗಳಾಗಬಹುದು. 2026-27ರ ಆರ್ಥಿಕ ವರ್ಷದ ಇತ್ತೀಚಿನ ನಿಯಮಗಳ ಪ್ರಕಾರ, ಡಿಜಿಟಲ್ ಪಾವತಿಗಳು ಮತ್ತು ಹೊಸ ಆರ್ಥಿಕ ಚಟುವಟಿಕೆಗಳ ಮೇಲೆಯೂ ಟಿಡಿಎಸ್ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ.
ವಿತ್ತೀಯ ಕೊರತೆ ₹12.52 ಲಕ್ಷ ಕೋಟಿ ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಫೆಬ್ರುವರಿ ವರೆಗೆ ಕೇಂದ್ರ ಸರ್ಕಾರದ ವರ ಮಾನ ಮತ್ತು ವೆಚ್ಚದ ನಡುವಿನ ಅಂತರ ವಾದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 80.4ರಷ್ಟಾಗಿದೆ. ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ಇದು ₹12.52 ಲಕ್ಷ ಕೋಟಿಯಾಗಿದೆ.
2024-25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಶೇ85.8ರಷ್ಟಿತ್ತು ಎಂದು ಬಿಡುಗಡೆ ಆಗಿರುವ ಲೆಕ್ಕಪತ್ರಗಳಮಹಾನಿಯಂತ್ರಕರ ವರದಿ ತಿಳಿಸಿದೆ.
ಏಪ್ರಿಲ್‌ನಿಂದ ಫೆಬ್ರುವರಿ ವರೆಗೆ ಸರ್ಕಾರವು ₹27.91 ಲಕ್ಷ ಕೋಟಿ ವರಮಾನ ಸ್ವೀಕರಿಸಿದೆ. ಇದೇ ಅವಧಿಯಲ್ಲಿ ಸರ್ಕಾರದ ಒಟ್ಟು ವೆಚ್ಚವು ₹40.44 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
ವಿತ್ತೀಯ ಕೊರತೆ (Fiscal Deficit) ಎನ್ನುವುದು ಒಂದು ದೇಶದ ಹಣಕಾಸಿನ ಆರೋಗ್ಯವನ್ನು ಅಳೆಯುವ ಪ್ರಮುಖ ಸೂಚಕವಾಗಿದೆ. ಸರಳವಾಗಿ ಹೇಳುವುದಾದರೆ, ಸರ್ಕಾರದ ಒಟ್ಟು ಆದಾಯಕ್ಕಿಂತ ಅದರ ಒಟ್ಟು ವೆಚ್ಚ ಹೆಚ್ಚಾದಾಗ ಉಂಟಾಗುವ ವ್ಯತ್ಯಾಸವೇ ವಿತ್ತೀಯ ಕೊರತೆ. ೧. ವಿತ್ತೀಯ ಕೊರತೆ ಎಂದರೇನು? (ಅರ್ಥ) ಸರ್ಕಾರವು ಸಾಲವನ್ನು ಹೊರತುಪಡಿಸಿ ಪಡೆಯುವ ಒಟ್ಟು ಆದಾಯಕ್ಕಿಂತ (Total Receipts), ಅದು ಮಾಡುವ ಒಟ್ಟು ವೆಚ್ಚ (Total Expenditure) ಹೆಚ್ಚಾದಾಗ ವಿತ್ತೀಯ ಕೊರತೆ ಉಂಟಾಗುತ್ತದೆ. ಸೂತ್ರ: ವಿತ್ತೀಯ ಕೊರತೆ = ಒಟ್ಟು ವೆಚ್ಚ – (ಕಂದಾಯ ಆದಾಯ + ಸಾಲವಲ್ಲದ ಬಂಡವಾಳ ಆದಾಯ) (ಗಮನಿಸಿ: ಸಾಲವಲ್ಲದ ಬಂಡವಾಳ ಆದಾಯ ಎಂದರೆ ಸಾಲ ವಸೂಲಾತಿ ಮತ್ತು ಸರ್ಕಾರಿ ಸಂಸ್ಥೆಗಳ ಮಾರಾಟದಿಂದ ಬರುವ ಹಣ).
೨. ಸರ್ಕಾರ ಈ ಕೊರತೆಯನ್ನು ಹೇಗೆ ತುಂಬುತ್ತದೆ? ವಿತ್ತೀಯ ಕೊರತೆಯನ್ನು ನೀಗಿಸಲು ಸರ್ಕಾರವು ಮುಖ್ಯವಾಗಿ ಸಾಲ (Borrowing) ಮಾಡುತ್ತದೆ. ಈ ಸಾಲವನ್ನು ಎರಡು ಮೂಲಗಳಿಂದ ಪಡೆಯಬಹುದು: ಆಂತರಿಕ ಮೂಲ: ಭಾರತೀಯ ರಿಸರ್ವ್ ಬ್ಯಾಂಕ್ (RBI), ವಾಣಿಜ್ಯ ಬ್ಯಾಂಕುಗಳು ಅಥವಾ ಸಾರ್ವಜನಿಕರಿಂದ ಬಾಂಡ್‌ಗಳ ಮೂಲಕ. ಬಾಹ್ಯ ಮೂಲ: ವಿಶ್ವ ಬ್ಯಾಂಕ್ (World Bank), ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಅಥವಾ ಇತರ ದೇಶಗಳಿಂದ.
೩. ವಿತ್ತೀಯ ಕೊರತೆ ಹೆಚ್ಚಾದರೆ ಏನಾಗುತ್ತದೆ? ಒಂದು ಮಿತಿಯಲ್ಲಿ ವಿತ್ತೀಯ ಕೊರತೆ ಇರುವುದು ಅಭಿವೃದ್ಧಿಗೆ ಪೂರಕ (ರಸ್ತೆ, ಶಾಲೆ, ಆಸ್ಪತ್ರೆ ನಿರ್ಮಾಣಕ್ಕಾಗಿ ವೆಚ್ಚ ಮಾಡಿದರೆ). ಆದರೆ ಅದು ಅತಿಯಾದರೆ ಈ ಕೆಳಗಿನ ಸಮಸ್ಯೆಗಳು ಎದುರಾಗುತ್ತವೆ: ಹಣದುಬ್ಬರ (Inflation): ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಾಗಿ ವಸ್ತುಗಳ ಬೆಲೆ ಏರಿಕೆಯಾಗಬಹುದು. ಸಾಲದ ಹೊರೆ: ಭವಿಷ್ಯದ ಪೀಳಿಗೆಯ ಮೇಲೆ ಹೆಚ್ಚಿನ ಸಾಲ ಮತ್ತು ಬಡ್ಡಿಯ ಹೊರೆ ಬೀಳುತ್ತದೆ. ಖಾಸಗಿ ಹೂಡಿಕೆಗೆ ಅಡ್ಡಿ (Crowding Out Effect): ಸರ್ಕಾರವೇ ಬ್ಯಾಂಕುಗಳಿಂದ ಹೆಚ್ಚಿನ ಸಾಲ ಪಡೆದರೆ, ಖಾಸಗಿ ಉದ್ಯಮಿಗಳಿಗೆ ಸಾಲ ಸಿಗುವುದು ದುಬಾರಿಯಾಗುತ್ತದೆ.
೪. FRBM ಕಾಯಿದೆ (Fiscal Responsibility and Budget Management Act) ಸರ್ಕಾರದ ವಿತ್ತೀಯ ಶಿಸ್ತನ್ನು ಕಾಪಾಡಲು 2003ರಲ್ಲಿ ಈ ಕಾಯಿದೆಯನ್ನು ತರಲಾಯಿತು. ಇದರ ಉದ್ದೇಶ ವಿತ್ತೀಯ ಕೊರತೆಯನ್ನು ಜಿಡಿಪಿಯ (GDP) ಶೇ. 3ಕ್ಕೆ ಸೀಮಿತಗೊಳಿಸುವುದಾಗಿದೆ. ಕರ್ನಾಟಕ ಸರ್ಕಾರವು ಸಹ ತನ್ನದೇ ಆದ ‘ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯಿದೆ’ (Karnataka Fiscal Responsibility Act) ಅನ್ನು ಅಳವಡಿಸಿಕೊಂಡಿದ್ದು, ರಾಜ್ಯದ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತದೆ.
೫. ಪ್ರಸ್ತುತ ಸಂದರ್ಭ (2026-27) ಇತ್ತೀಚಿನ ಕರ್ನಾಟಕ ಬಜೆಟ್‌ನಲ್ಲಿ, ಸರ್ಕಾರವು ವಿವಿಧ ಗ್ಯಾರಂಟಿ ಯೋಜನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಶ್ರಮಿಸುತ್ತಿದೆ. ಬಜೆಟ್‌ನಲ್ಲಿ ವಿತ್ತೀಯ ಕೊರತೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ನಿಗದಿತ ಮಿತಿಯೊಳಗೆ (ಸಾಮಾನ್ಯವಾಗಿ ಶೇ. 3) ಇದೆಯೇ ಎಂಬುದು ಆರ್ಥಿಕ ವಿಶ್ಲೇಷಣೆಯ ಪ್ರಮುಖ ಭಾಗವಾಗಿರುತ್ತದೆ.
ಸಂಕ್ಷಿಪ್ತವಾಗಿ: ವಿತ್ತೀಯ ಕೊರತೆಯು ಸರ್ಕಾರವು ತನ್ನ ವೆಚ್ಚವನ್ನು ಭರಿಸಲು ಆ ವರ್ಷ ಎಷ್ಟು ಸಾಲ ಮಾಡಬೇಕಾಗುತ್ತದೆ ಎಂಬುದನ್ನು ತೋರಿಸುತ್ತದೆ.
ಕೈಗಾರಿಕಾ ಉತ್ಪಾದನೆ ಏರಿಕೆ ಸಂದರ್ಭ: ದೇಶದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು (ಐಐಪಿ) ಫೆಬ್ರುವರಿ ತಿಂಗಳಿನಲ್ಲಿ ಏರಿಕೆಯಾಗಿದ್ದು, ಶೇ 5.2ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಅಂಕಿ-ಅಂಶಗಳು ತಿಳಿಸಿವೆ.
ಕಳೆದ ವರ್ಷದ ಫೆಬ್ರುವರಿಯಲ್ಲಿ ಕೈಗಾರಿಕಾ ಉತ್ಪಾದನೆಯ ಪ್ರಗತಿ ಶೇ 2.7ರಷ್ಟಿತ್ತು ತಯಾರಿಕಾ ವಲಯದ ಉತ್ಪಾದನೆಯಲ್ಲಿನ ಹೆಚ್ಚಳವು ಬೆಳವಣಿಗೆಗೆ ಕಾರಣ ಎಂದು ತಿಳಿಸಿದೆ.
ಕಳೆದ ವರ್ಷದ ಫೆಬ್ರುವರಿಯಲ್ಲಿ ತಯಾರಿಕಾ ವಲಯದ ಉತ್ಪಾದನೆ ಶೇ 2.8ರಷ್ಟಿತ್ತು. ಅದು ಈ ಫೆಬ್ರುವರಿಯಲ್ಲಿ ಶೇ 6ಕ್ಕೆ ಏರಿಕೆಯಾಗಿದೆ. ಗಣಿಗಾರಿಕೆ ವಲಯದ ಉತ್ಪಾದನೆ ಶೇ 1.6ರಿಂದ ಶೇ 3.1ಕ್ಕೆ ಹೆಚ್ಚಳವಾಗಿದೆ.
2025-26ರ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಫೆಬ್ರುವರಿವರೆಗೆ ದೇಶದ ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಶೇ 4. 1ರಷ್ಟಾಗಿದೆ.
ಕೈಗಾರಿಕಾ ಉತ್ಪಾದನೆ (Industrial Production) ಒಂದು ದೇಶ ಅಥವಾ ರಾಜ್ಯದ ಆರ್ಥಿಕ ಪ್ರಗತಿಯನ್ನು ಅಳೆಯುವ ಪ್ರಮುಖ ಮಾನದಂಡವಾಗಿದೆ. ೧. ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP – Index of Industrial Production) ಕೈಗಾರಿಕಾ ವಲಯದ ಬೆಳವಣಿಗೆಯನ್ನು ಅಳೆಯಲು IIP ಅನ್ನು ಬಳಸಲಾಗುತ್ತದೆ. ಇದು ಒಂದು ನಿರ್ದಿಷ್ಟ ಅವಧಿಯಲ್ಲಿ ಕೈಗಾರಿಕಾ ಉತ್ಪನ್ನಗಳ ಉತ್ಪಾದನೆಯ ಪ್ರಮಾಣದಲ್ಲಾಗುವ ಬದಲಾವಣೆಯನ್ನು ತೋರಿಸುತ್ತದೆ. ಬಿಡುಗಡೆ ಮಾಡುವವರು: ಕೇಂದ್ರ ಸಾಂಖ್ಯಿಕ ಕಚೇರಿ (NSO), ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ. ಆಧಾರ ವರ್ಷ (Base Year): ಪ್ರಸ್ತುತ 2011-12 ಅನ್ನು ಆಧಾರ ವರ್ಷವಾಗಿ ಬಳಸಲಾಗುತ್ತಿದೆ.
ಪ್ರಮುಖ ವಲಯಗಳು: IIP ಯಲ್ಲಿ ಮೂರು ಮುಖ್ಯ ವಲಯಗಳಿವೆ: ಗಣಿಗಾರಿಕೆ (Mining) ತಯಾರಿಕೆ (Manufacturing) – ಇದು ಅತಿ ಹೆಚ್ಚು ತೂಕವನ್ನು (Weightage) ಹೊಂದಿದೆ. ವಿದ್ಯುತ್ (Electricity)
೨. ಎಂಟು ಪ್ರಮುಖ ಕೈಗಾರಿಕೆಗಳು (Eight Core Industries) ಭಾರತದ ಒಟ್ಟು ಕೈಗಾರಿಕಾ ಉತ್ಪಾದನೆಯ ಸುಮಾರು ೪೦.೨೭% ಭಾಗವನ್ನು ಈ ಎಂಟು ವಲಯಗಳು ಪ್ರತಿನಿಧಿಸುತ್ತವೆ:
ಕ್ರಮ ಸಂಖ್ಯೆ
ಕೈಗಾರಿಕಾ ವಲಯ (Core Industry)
ತೂಕದ ಶೇಕಡಾವಾರು (Weightage in %)
1
ಪೆಟ್ರೋಲಿಯಂ ಸಂಸ್ಕರಣಾ ಉತ್ಪನ್ನಗಳು (Refinery Products)
28.04% (ಅತಿ ಹೆಚ್ಚು)
2
ವಿದ್ಯುತ್ (Electricity)
19.85%
3
ಉಕ್ಕು (Steel)
17.92%
4
ಕಲ್ಲಿದ್ದಲು (Coal)
10.33%
5
ಕಚ್ಚಾ ತೈಲ (Crude Oil)
8.98%
6
ನೈಸರ್ಗಿಕ ಅನಿಲ (Natural Gas)
6.88%
7
ಸಿಮೆಂಟ್ (Cement)
5.37%
8
ರಸಗೊಬ್ಬರ (Fertilizers)
2.63% (ಅತಿ ಕಡಿಮೆ)
ಒಟ್ಟು
ಎಂಟು ಪ್ರಮುಖ ಕೈಗಾರಿಕೆಗಳ ಒಟ್ಟು ಪಾಲು
40.27%
ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು; ಭಾರತದ ಆರ್ಥಿಕತೆಗೆ ಪೆಟ್ಟು? ಸಂದರ್ಭ: ಪಶ್ಚಿಮ ಏಷ್ಯಾದಲ್ಲಿ ತಿಂಗಳಿಂದ ನಡೆಯುತ್ತಿರುವ ಯುದ್ಧದಿಂದ ಭಾರತದ ಹಲವು ವಲಯಗಳ ಮೇಲೆ ಪರಿಣಾಮ ಉಂಟಾಗುತ್ತಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದದ ಸಾಲುಗಳು, ಎಲ್‌ಪಿಜಿ ವಿತರಕರ ಕಚೇರಿಗಳಿಗೆ ಆತಂಕದ ಕರೆಗಳು, ವಾಣಿಜ್ಯ ಸಿಲಿಂಡರ್ಗಗಳ ಕೊರತೆ, ಬಾಗಿಲು ಮುಚ್ಚಿದ ರೆಸ್ಟೋರೆಂಟ್‌ಗಳು… ಕಳೆದ ಕೆಲವು ವಾರಗಳಿಂದ ಕರ್ನಾಟಕ, ತೆಲಂಗಾಣ, ಗುಜರಾತ್, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ ಸೇರಿನಂತೆ ದೇಶದ ಹಲವೆಡೆ ಈ ದೃಶ್ಯಗಳು ಕಂಡುಬರುತ್ತಿವೆ.
ಭಾರತವು ಇರಾನ್‌ನಿಂದ ತೈಲ ರಫ್ತು ಮಾಡಿಕೊಳ್ಳುವುದನ್ನು 2019ರಲ್ಲೇ ಬಹುತೇಕ ನಿಲ್ಲಿಸಿದೆ. ಆದರೆ, ದೇಶಕ್ಕೆ ಆಮದಾಗುವ ಶೇ 40ರಷ್ಟು ಕಚ್ಚಾ ತೈಲ, ಶೇ 80ರಷ್ಟು ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಮತ್ತು ಶೇ 90ರಷ್ಟು ಅಡುಗೆ ಅನಿಲ (ಎಲ್‌ಪಿಜಿ) ಸಾಗಣೆಯಾಗುವುದು ಇರಾನ್ ಮತ್ತು ಒಮಾನ್ ನಡುವಿನ ಹೊರ್ಮುಜ್ ಜಲಸಂಧಿ ಮೂಲಕ ದೇಶದ ಇಂಧನ ಮತ್ತು ಎಲ್‌ಪಿಜಿ ಅಗತ್ಯಗಳಿಗಾಗಿ ಹೆಚ್ಚಿನ ಪಾಲು ಆಮದನ್ನೇ ಅವಲಂಬಿಸಿರುವ ಭಾರತದಲ್ಲಿ ಇರಾನ್ ಯುದ್ಧವು ಹಲವು ರೀತಿಯ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ.
ಯುದ್ಧ ಆರಂಭವಾದ ನಂತರ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಶೇ 75ರಷ್ಟು ಹೆಚ್ಚಳವಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ಇಂಧನ ಮತ್ತು ಎಲ್‌ಪಿಜಿ ದರ ಹೆಚ್ಚಿಸಲಾಗಿದೆ. ಅಮರಿಕ, ಕೆನಡಾ ಸೇರಿದಂತ ಉತ್ತರ ಅಮೆರಿಕದಲ್ಲಿ ಶೇ 30, ಆತ್ಮೀಯ ಏಷ್ಯಾದಲ್ಲಿ ಶೇ 30ರಿಂದ ಶೇ 50, ಯುರೋಪ್‌ನಲ್ಲಿ ಶೇ 20, ಆಫ್ರಿಕಾದ ರಾಷ್ಟ್ರಗಳಲ್ಲಿ ಶೇ 50ರಷ್ಟು ದರ ಹೆಚ್ಚಳವಾಗಿದೆ. ಭಾರತದಲ್ಲಿ ಅಡುಗೆ ಅನಿಲ, ಕೈಗಾರಿಕಾ ಡೀಸೆಲ್ ಮತ್ತು ಪ್ರೀಮಿಯಂ ಪೆಟ್ರೋಲ್ ದರಗಳಲ್ಲಿ ಹೆಚ್ಚಳವಾಗಿದೆ. ಆದರೆ, ಸಾಮಾನ್ಯ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿಲ್ಲ ಇದರಿಂದ ಇಂಧನ ಕಂಪನಿಗಳಿಗೆ ಲೀಟರ್ ಪೆಟ್ರೋಲ್‌ಗೆ ₹24 ಮತ್ತು ಲೀಟರ್ ಡೀಸೆಲ್‌ಗೆ ₹30 ನಷ್ಟ ಉಂಟಾಗುತ್ತಿದ್ದು, ಕಂಪನಿಗಳಿಗೆ ದಿನಕ್ಕೆ ₹2,400 ಕೋಟಿ ನಷ್ಟವಾಗುತ್ತಿದೆ.
ಇಂಧನ ಕಂಪನಿಗಳ ನಷ್ಟವನ್ನು ಕಡಿಮೆ ಮಾಡಲು ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೆಸ್ ಸುಂಕದಲ್ಲಿ ಲೀಟರ್ಗೆಗೆ ₹10 ಕಡಿಮೆ ಮಾಡಿದೆ. ಜತೆಗೆ ಹಲವು ರೀತಿಯ ಹೆಚ್ಚುವರಿ ಎಕ್ಸೆಸ್ ಸುಂಕವನ್ನೂ ಕಡಿತಗೊಳಿಸಿದೆ ಇದರಿಂದ ಕೇಂದ್ರಕ್ಕೆ 15 ದಿನಕ್ಕೆ ಅಂದಾಜು ₹7,000 ಕೋಟಿ ಆದಾಯ ನಷ್ಟವಾಗಲಿದೆ ಇದರಿಂದಾಗಿ 2026-27ರಲ್ಲಿ ₹1 ಲಕ್ಷ ಕೋಟಿಯಿಂದ 12 ಲಕ್ಷ ಕೋಟಿವರೆಗೆ ನಷ್ಟವಾಗಲಿದೆ.
ವ್ಯಾಪಕ ಪರಿಣಾಮ: ಪಶ್ಚಿಮ ಏಷ್ಯಾ ಬಿಕ್ಕಟ್ಟು ಪೆಟ್ರೋಲ್, ಡೀಸೆಲ್ ದರಗಳ ಆಚೆಗೂ ಭಾರತದ ಮೇಲೆ ಗಂಭೀರ ಪರಿಣಾಮ ಉಂಟುಮಾಡುವ ಸಂಭವವಿದೆ. ಕಚ್ಚಾ ಪದಾರ್ಥಗಳಿಗಾಗಿ ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿರುವ ಸಿಮೆಂಟ್, ರಸಗೊಬ್ಬರ, ಔಷಧಿ ಇತ್ಯಾದಿ ಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಜತೆಗೆ, ದೇಶದ ಆರ್ಥಿಕತೆಯ ಪ್ರಮುಖ ಸೂಚಕಗಳಾದ ಜಿಡಿಪಿ, ಹಣದುಬ್ಬರ, ವಿತ್ತೀಯ ಕೊರತೆ ಮತ್ತು ವ್ಯಾಪಾರ ಕೊರತೆ ಅಂತರ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ. ತೆರಿಗೆ ಆದಾಯದಲ್ಲಿ ಇಳಿಮುಖವಾಗುವುದು, ಹೆಚ್ಚು ಸಬ್ಸಿಡಿ-ವಿನಾಯ್ತಿ ನೀಡುವುದು ಬಂಡವಾಳ ವೆಚ್ಚದ ಮೇಲೆ ಪರಿಣಾಮ ಬೀರಲಿದ್ದು ಇದು ದೇಶದ ಬೆಳವಣಿಗೆಯ ಮೇಲೆ ಮಧ್ಯಮ ಅವಧಿ ಮತ್ತು ದೀರ್ಘಾವಧಿಯ ಪರಿಣಾಮಗಳನ್ನು ಉಂಟುಮಾಡಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ.
ಜಿಡಿಪಿ ಕುಸಿತ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2026ರ ಎಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಶೇ 6.9ರಷ್ಟು ಮತ್ತು ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಶೇ 7ರಷ್ಟು ಜಿಡಿಪಿ ಬೆಳವಣಿಗೆ ದರವನ್ನು ಅಂದಾಜಿಸಿತ್ತು. ಕಚ್ಚಾ ತೈಲದ ದರ ಬ್ಯಾರಲ್‌ಗೆ 70 ಡಾಲರ್ ಆಧಾರದಲ್ಲಿ ಈ ಅಂದಾಜು ಮಾಡಲಾಗಿದೆ. ಆದರೆ, ಯುದ್ಧದಿಂದ ಕಚ್ಚಾ ತೈಲದ ದರ ಹೆಚ್ಚಾಗಿದೆ. ಕಚ್ಚಾ ತೈಲವು ಬ್ಯಾರಲ್‌ಗೆ 10 ಡಾಲರ್ಗೆಗೆ ಹೆಚ್ಚಾದರೆ, ಅದು ಆರ್ಥಿಕ ಬೆಳವಣಿಗೆಯನ್ನು 10 ಮೂಲಾಂಕಗಳನ್ನು ಕಡಿಮೆ ಮಾಡುತ್ತದೆ. ಬ್ಯಾರಲ್‌ಗೆ 120 ಡಾಲರ್ ಇದ್ದರೆ ಜಿಡಿಪಿ ಬೆಳವಣಿಗೆಯು ಶೇ 6.2ಕ್ಕೆ ಕುಸಿಯುತ್ತದೆ ಎಂದು ವಿಶ್ಲೇಷಿಸಲಾಗಿದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಪ್ರಕಾರ, 2026-27ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು ಶೇ 6.1ಕ್ಕೆ ಕುಸಿಯಲಿದೆ. ಗೋಲ್ಡ್‌ಮನ್ ಸ್ಯಾಕ್ಸ್ ಶೇ 5.9ರ ಬೆಳವಣಿಗೆ ದರವನ್ನು ಅಂದಾಜಿಸಿದೆ.
ಹಣದುಬ್ಬರ ಏರಿಕೆ: ಇಂದನ ಬೆಲೆ ಹೆಚ್ಚಳ ಮಾಡಿದರೆ, ಅದು ಬಹುತೇಕ ಸರಕುಗಳು, ಗ್ರಾಹಕ ಉತ್ಪನ್ನಗಳು ಮತ್ತು ಸೇವೆಗಳ ದರ ಹೆಚ್ಚಳಕ್ಕೆ ಕಾರಣವಾಗುತ್ತದೆ. ವಿದ್ಯುತ್ ಉತ್ಪಾದನೆ, ರಾಸಾಯನಿಕಗಳು, ಪ್ಲಾಸ್ಟಿಕ್, ಸಿಂಥೆಟಿಕ್ ವಸ್ತುಗಳ ಉತ್ಪಾದನೆ ಮತ್ತು ಬೆಲೆಗಳ ಮೇಲೂ ಇದು ಪರಿಣಾಮ ಬೀರಲಿದೆ. ಇಂಧನ ದರ ಹೆಚ್ಚಳ ಮತ್ತು ಉತ್ಪನ್ನಗಳ ಬೆಲೆ ಹೆಚ್ಚಳವು ಹಲವು ಸರಕು/ಸೇವೆಗಳ ಬೇಡಿಕೆಯನ್ನು ಕಡಿಮೆ ಮಾಡಲಿದ್ದು, ಅದು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲಿದೆ.
ಹಣದುಬ್ಬರ ಕಳೆದೊಂದು ವರ್ಷದಲ್ಲಿ ಇಳಿಮುಖವಾಗುತ್ತಾ ಸಾಗಿತ್ತು ಆದರೆ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು 10 ತಿಂಗಳಲ್ಲಿಯೇ ಅತಿಹಚ್ಚು (ಶೇ 3.21ರಷ್ಟು) ಏರಿಕೆ ಕಂಡಿದೆ. ಸಗಟು ಹಣದುಬ್ಬರವು 11 ತಿಂಗಳಲ್ಲಿಯೇ ಅತಿ ಹೆಚ್ಚು (ಶೇ 2 13) ಏರಿಕೆ ಕಂಡಿದೆ ಆಹಾರ ಪದಾರ್ಥಗಳು ಮತ್ತು ಇಂಧನ ಬೆಲೆಗಳು ಇತ್ತೀಚೆಗೆ ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟಿದ್ದವು. ಆದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ ಅರ್ನ್ಸ್ ಆ್ಯಂಡ್ ಯಂಗ್ ಪ್ರಕಾರ, ಪಶ್ಚಿಮ ಏಷ್ಯಾದ ಬಿಕ್ಕಟ್ಟು ಆರ್ಥಿಕ ವರ್ಷದ ಉದ್ದಕ್ಕೂ ವಿಸ್ತರಿಸಿದರೆ, ಭಾರತದ ಜಿಡಿಪಿ ಶೇ 6ಕ್ಕೆ ಕುಸಿಯಲಿದ್ದು, ಸಿಪಿಐ ಹಣದುಬ್ಬರ ಶೇ5.5ಕ್ಕೆ ಏರಲಿದೆ.
ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.
“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ವಿಶ್ವ ವುಶು ಚಾಂಪಿಯನ್ಷಿಪ್: ಭಾರತಕ್ಕೆ 2 ಕಂಚು ಸಂದರ್ಭ: ಭಾರತದ ಗೌತಮ್ ಮಂಕಾಸ್ ಹಾಗೂ ಅನು ಅವರು ಇಲ್ಲಿ ನಡೆಯುತ್ತಿರುವ 10ನೇ ವಿಶ್ವ ವುಶು ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಭಾನುವಾರ ಕಂಚಿನ ಪದಕ ಗೆದ್ದುಕೊಂಡರು. ಉಪೇಂದ್ರೋ ಚೌಗಮ್, ಪಮಾ ಹೀಬಾ ಸಿಂಗ್, ಯುವರಾಜ್ ಹಾಗೂ ವಿಕ್ಟರ್ ಅವರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು.
ಗೌತಮ್ ಅವರು ಬಾಲಕರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಪರಾಭವಗೊಂಡರು. ಅನು ಅವರು ನಾಲ್ಕರ ಘಟದಲ್ಲಿ ಚೀನಾದ ಝಾಂಗ್ ಲಿನಿಂಗ್ ವಿರುದ್ಧ ಸೋತರು.
ಉಪೇಂದ್ರೋ ಅವರು ಸೆಮಿಫೈನಲ್ ಪಂದ್ಯದಲ್ಲಿ ಈಜಿಪ್ಟ್ನ ಅಹ್ಮದ್ ಮೊಹಮ್ಮದ್ ಅವರನ್ನು ಸೋಲಿಸಿದರು. ಪಮಾ ಅವರು ಸೆನೆಗಲ್‌ನ ಅಲಿಮೂ ಸಿ ಅವರನ್ನು ಮಣಿಸಿ, ಫೈನಲ್ ಪ್ರವೇಶಿಸಿದರು. ಯುವರಾಜ್ ಹಾಗೂ ವಿಕ್ಟರ್ ಅವರು ಸೆಮಿಫೈನಲ್ ಪಂದ್ಯಗಳಲ್ಲಿ ಕ್ರಮವಾಗಿ ಫಿಲಿಪ್ಪಿನ್ಸ್‌ನ ಷಿವೀಲ್ ಬಂಟಾಲಿ ಮತ್ತು ಈಜಿಪ್ಟ್ನ ಸಯೀದ್ ಕರೀಂ ಮೊಹಮ್ಮದ್ ವಿರುದ್ಧ ಗೆಲುವು ಸಾಧಿಸಿದರು.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಕಾಂಗ್ರೆಸ್ ಪಕ್ಷವು ಒಟ್ಟು ಐದು ಗ್ಯಾರಂಟಿಗಳನ್ನು ಅಸ್ಸಾಂ ಜನತೆಗೆ ನೀಡಿದೆ
ಅಸ್ಸಾಂ ವಿಧಾನಸಭೆ ಚುನಾವಣೆ 2026ರ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂನ ನೌಬೋಯಿಚಾದಲ್ಲಿ ಸಾರ್ವಜನಿಕ ರಾಲಿಯನ್ನುದ್ದೇಶಿಸಿ ಮಾತನಾಡುತ್ತಾ **’ಐದು ಗ್ಯಾರಂಟಿ’**ಗಳನ್ನು ಘೋಷಿಸಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದ ಮಾದರಿಯಲ್ಲೇ ಈ ಯೋಜನೆಗಳನ್ನು ರೂಪಿಸಲಾಗಿದೆ.
ಅಸ್ಸಾಂ ಜನತೆಗೆ ನೀಡಲಾದ ಆ ಐದು ಮುಖ್ಯ ಗ್ಯಾರಂಟಿಗಳು ಇಲ್ಲಿವೆ:
ಮಹಿಳಾ ಸಬಲೀಕರಣ (ಮಹಿಳೆಯರಿಗೆ ಆರ್ಥಿಕ ನೆರವು) ಪ್ರತಿಯೊಬ್ಬ ಮಹಿಳೆಗೆ ಯಾವುದೇ ಷರತ್ತುಗಳಿಲ್ಲದೆ ಮಾಸಿಕ ನಗದು ವರ್ಗಾವಣೆ. ಇದರೊಂದಿಗೆ, ಮಹಿಳಾ ಉದ್ಯಮಿಗಳಿಗೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ₹50,000 ಧನಸಹಾಯ.
ಆರೋಗ್ಯ ರಕ್ಷಣೆ (ಕ್ಯಾಶ್‌ಲೆಸ್ ವಿಮೆ) ಪ್ರತಿ ಕುಟುಂಬಕ್ಕೆ ₹25 ಲಕ್ಷ ವರೆಗಿನ ನಗದು ರಹಿತ (Cashless) ಆರೋಗ್ಯ ವಿಮಾ ಸೌಲಭ್ಯ. ಈ ಯೋಜನೆಯನ್ನು ಈಗಾಗಲೇ ರಾಜಸ್ಥಾನ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಜಾರಿಗೆ ತಂದಿರುವ ಮಾದರಿಯಲ್ಲೇ ರೂಪಿಸಲಾಗಿದೆ.
ಭೂಮಿ ಹಕ್ಕು (ಶಾಶ್ವತ ಪಟ್ಟಾ) ಅಸ್ಸಾಂನ ಸುಮಾರು 10 ಲಕ್ಷ ಮೂಲ ನಿವಾಸಿಗಳಿಗೆ (Indigenous people) ವಾರ್ಷಿಕ ಪಟ್ಟಾಗಳ ಬದಲಿಗೆ ಶಾಶ್ವತ ಭೂಮಿ ಪಟ್ಟಾ (Land Rights) ನೀಡುವ ಭರವಸೆ.
ಹಿರಿಯ ನಾಗರಿಕರ ಗೌರವ (ಪಿಂಚಣಿ) ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹1,250 ಮಾಸಿಕ ಪಿಂಚಣಿ ನೀಡುವ ಯೋಜನೆ.
ಸಾಂಸ್ಕೃತಿಕ ನ್ಯಾಯ (ಜುಬಿನ್ ಗಾರ್ಗ್ ಪ್ರಕರಣ) ಅಸ್ಸಾಂನ ಜನಪ್ರಿಯ ಗಾಯಕ ದಿವಂಗತ ಜುಬಿನ್ ಗಾರ್ಗ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
3 ವರ್ಷದ ಹಿಂದೆ ಬಿಎಂಟಿಸಿ ಬಸ್ಗಳಲ್ಲಿ ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗ ಸಂದರ್ಭ: ಪ್ರಯೋಗಕ್ಕೆ ಸೀಮಿತವಾದ ಮಿಥೆನಾಲ್: ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡಲು, ವಾಯುಮಾಲಿನ್ಯ ತಡೆಯಲು ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗವನ್ನು ಮೂರು ವರ್ಷಗಳ ಹಿಂದೆ ಬಿಎಂಟಿಸಿ ಬಸ್ಗಳಲ್ಲಿ ನಡೆಸಲಾಗಿತ್ತು ಇದು ಪ್ರಯೋಗಕ್ಕೆ ಸೀಮಿತಗೊಂಡಿದ್ದು, ಬಿಎಂಟಿಸಿಯ ಯಾವುದೇ ಬಸ್ಗಳಲ್ಲಿ ಇದುವರೆಗೆ ಅಳವಡಿಕೆಯಾಗಿಲ್ಲ.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಸೂಚನೆಯಂತೆ 2016ರಲ್ಲಿ ನೀತಿ ಆಯೋಗವು ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗ ಆರಂಭಿಸಿತ್ತು ಸತತ 7 ವರ್ಷ ವಿವಿಧ ವಾಹನಗಳಲ್ಲಿ ಪ್ರಯೋಗ ನಡೆಸಿತ್ತು ಸಕಾರಾತ್ಮಕ ಫಲಿತಾಂಶ ಬಂದ ಬಳಿಕ ಸಾರಿಗೆ ವಾಹನಗಳಲ್ಲಿ ಈ ಪ್ರಯೋಗ ನಡೆಸಲು ನಿರ್ಧರಿಸಿತ್ತು. 2023ರ ಮಾರ್ಚ್‌ನಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಬಿಎಂಟಿಸಿಯ 20 ಬಸ್‌ಗಳಲ್ಲಿ ಪ್ರಯೋಗ ಆರಂಭಿಸಿತ್ತು ನಾಲ್ಕು ತಿಂಗಳು ಈ ಬಸ್‌ಗಳು ಮಿಥೆನಾಲ್ ಮಿಶ್ರಿತ ಇಂಧನದಲ್ಲಿ ಸಂಚರಿಸಿದ್ದವು.
‘ಅಶೋಕ ಲೈಲ್ಯಾಂಡ್ ಕಂಪನಿಯು ತಯಾರಿಸಿದ ಬಸ್‌ಗಳನ್ನು ಪ್ರಯೋಗಕ್ಕೆ ಬಳಸಲಾಗಿತ್ತು. 3.2 ಲಕ್ಷ ಕಿ.ಮೀ. ಓಡಾಟ ನಡೆಸಿದ ಬಳಿಕ ಎರಡು ಬಸ್‌ಗಳ ಎಂಜಿನ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಪ್ರಯೋಗಾಲಯದ ವರದಿ, ಸಂಚಾರದ ಸಮಯದ ಸ್ಥಿತಿಗತಿ ಎಲ್ಲ ಸೇರಿಸಿ ಸಾರಿಗೆ ಸಚಿವಾಲಯಕ್ಕೆ ವರದಿ ನೀಡಲಾಗಿದೆ’ ಎಂದು ಮಿಥನಾಲ್ ಕೋರ್ ಕಮಿಟಿ ಸದಸ್ಯ.
‘ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗದ ಸಂದರ್ಭದಲ್ಲಿ ಪ್ರತಿ ಕಿಲೋಮೀಟರ್ಗೆಗೆ ಸುಮಾರು 10 ಉಳಿತಾಯವಾಗಿದೆ. ಡೀಸೆಲ್ ಎಂಜಿನ್ ವಾಹನಗಳನ್ನೇ ಇದಕ್ಕೆ ಬಳಸಲಾಗಿತ್ತು ಸಣ್ಣ ಅವಧಿಯ ಪ್ರಯೋಗದ ಸಮಯದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಕಾಣಿಸಿಕೊಂಡಿಲ್ಲ, ದೀರ್ಘ ಕಾಲ ಬಳಸಿದಾಗ ಪರಿಣಾಮ ಹೇಗಿರುತ್ತದೆ ಎಂಬುದು ಗೊತ್ತಾಗಿಲ್ಲ ಡೀಸೆಲ್ ಎಂಜಿನ್ ವಾಹನದಲ್ಲಿ ಮಿಥೆನಾಲ್ ಮಿಶ್ರಿತ ಡೀಸೆಲ್ ಬಳಸಿದಾಗ ಎಂಜಿನ್ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಇಂಧನದಲ್ಲಿ ಉಳಿತಾಯ ಆಗಿದ್ದಕ್ಕಿಂತ ಹೆಚ್ಚು ಎಂಜಿನ್‌ಗೆ ವೆಚ್ಚವಾದರೆ ಕಷ್ಟ’ ಎಂದು ಬಿಎಂಟಿಸಿ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.
‘ಯುದ್ಧದ ಕರಿನೆರಳು ಪೆಟ್ರೋಲ್ ಡೀಸೆಲ್ ಮೇಲೂ ಬೀಳುತ್ತಿರುವುದರಿಂದ ಮಿಥನಾಲ್ ಬಳಕೆ ಮಾಡಿದ್ದರೆ ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡಬಹುದಿತ್ತು ಮಿಥನಾಲ್ ಬೆಲೆ ₹25ರಿಂದ ₹27 ಇರುವುದರಿಂದ ವೆಚ್ಚ ಕಡಿಮೆಯಾಗುತ್ತಿತ್ತು ಎಂದು ಚಾಲಕರೊಬ್ಬರು ತಿಳಿಸಿದರು.
ಪ್ರಯೋಗವೇನು?
ಈ 15ರಷ್ಟು ಮಿಥನಾಲ್ ಶೇ 12ರಷ್ಟು ಕಪ್ಪರ್ಸ್, ಶೇ 2ರಷ್ಟು ಸಿಟೇನ್ ಇಂಪವರ್ ಹಾಗೂ ಶೇ 71 ಭಾಗ ಡೀಸೆಲ್ ಮಿಶ್ರಣ ಮಾಡಿ ಬಳಸಲಾಗುತ್ತದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಿಥೆನಾಲ್ ಮಿಶ್ರಣ ಮಾಡಿ ಇಂಧನ ಒದಗಿಸಿತ್ತು 80 ಸಾವಿರ ಲೀಟರ್ ಮಿಥನಾಲ್ ಮಿಶ್ರಣ ಇಂಧನ ಬಳಕೆ ಮಾಡಲಾಗಿತ್ತು.
ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.
“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ರಷ್ಯಾದಿಂದ ಎಸ್-400 ಖರೀದಿ: ಭಾರತ ಒಪ್ಪಂದ ಸಂದರ್ಭ: ರಷ್ಯಾದಿಂದ ಐದು ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸಲು ಭಾರತವು ಒಪ್ಪಂದಕ್ಕೆ ಸಹಿ ಹಾಕಿದೆ.
ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ರಷ್ಯಾದಿಂದ ಐದು ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ) ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸಲು ಭಾರತವು ಒಟ್ಟು ₹2.38 ಲಕ್ಷ ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.
ಹಳೆಯದಾದ ಎಎನ್-32 ವಿಮಾನಗಳ ಬದಲು ಮಧ್ಯಮ ಶ್ರೇಣಿಯ 60 ಸಾರಿಗೆ ವಿಮಾನಗಳ ಖರೀದಿಯೂ ಈ ಒಪ್ಪಂದಲ್ಲಿ ಸೇರಿದೆ. ಖರೀದಿ ಒಪ್ಪಂದಗಳಿಗೆ ರಕ್ಷಣಾ ಸಚಿವ ಅಧ್ಯಕ್ಷತೆಯ ಸಮಿತಿಯು ಅನುಮೋದನೆ ನೀಡಿದೆ.
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಭಾರತಕ್ಕೆ ಬರುವುದು ತಡವಾಗಿತ್ತು. ಈ ವರ್ಷಾಂತ್ಯದೊಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯು, ದೂರದಿಂದಲೇ ಶತ್ರು ಪಡೆಯ ಕ್ಷಿಪಣಿಯನ್ನು ಗುರುತಿಸಿ, ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ರಷ್ಯಾದಿಂದ ತಂಗುಸ್ಕಾ ಹೆಸರಿನ ವಾಯು ರಕ್ಷಣಾ ಕ್ಷಿಪಣಿ ಖರೀದಿಗೆ ₹445 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ.
ನೌಕಾಪಡೆಯ ‘ಪಿಐ’ ಯುದ್ಧ ವಿಮಾನಗಳ ನಿರ್ವಹಣೆಗಾಗಿ ಬೋಯಿಂಗ್ ಕಂಪನಿಯೊಂದಿಗೆ ₹413 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ರಷ್ಯಾದಿಂದ ಭಾರತ ಖರೀದಿಸಿರುವ S-400 ಟ್ರಯಂಫ್ (Triumf) ಎಂಬುದು ವಿಶ್ವದ ಅತ್ಯಾಧುನಿಕ ‘ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ’ (Air Defence Missile System) ಆಗಿದೆ. ಇದನ್ನು ಭಾರತೀಯ ಸೇನೆಯಲ್ಲಿ ‘ಸುದರ್ಶನ ಚಕ್ರ’ ಎಂದು ಹೆಸರಿಸಲಾಗಿದೆ.
S-400 ಎಂದರೇನು? ಇದು ಶತ್ರು ದೇಶಗಳ ವಿಮಾನಗಳು, ಕ್ಷಿಪಣಿಗಳು ಅಥವಾ ಡ್ರೋನ್‌ಗಳು ಭಾರತದ ವಾಯುಗಡಿಯೊಳಗೆ ಪ್ರವೇಶಿಸದಂತೆ ತಡೆಯುವ ಒಂದು ‘ರಕ್ಷಣಾ ಕವಚ’. ಇದು ಭೂಮಿಯಿಂದ ಆಗಸಕ್ಕೆ (Surface-to-Air) ಚಿಮ್ಮುವ ಕ್ಷಿಪಣಿ ವ್ಯವಸ್ಥೆಯಾಗಿದೆ.
ಪ್ರಮುಖ ವೈಶಿಷ್ಟ್ಯಗಳು: ವ್ಯಾಪ್ತಿ (Range): ಇದು ಸುಮಾರು 400 ಕಿ.ಮೀ ದೂರದವರೆಗಿನ ಶತ್ರು ಗುರಿಗಳನ್ನು ಗುರುತಿಸಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಏಕಕಾಲದ ದಾಳಿ: ಒಂದೇ ಸಮಯದಲ್ಲಿ ಸುಮಾರು 36 ಗುರಿಗಳನ್ನು ಏಕಕಾಲಕ್ಕೆ ಟ್ರ್ಯಾಕ್ ಮಾಡಬಹುದು ಮತ್ತು ಅವುಗಳ ಮೇಲೆ ದಾಳಿ ಮಾಡಬಹುದು. ವೇಗ: ಇದರ ಕ್ಷಿಪಣಿಗಳು ಶಬ್ದಕ್ಕಿಂತ ಸುಮಾರು 14 ಪಟ್ಟು ವೇಗವಾಗಿ (Mach 14) ಚಲಿಸಬಲ್ಲವು. ಬಹುಪದರದ ರಕ್ಷಣೆ: ಇದರಲ್ಲಿ ನಾಲ್ಕು ವಿಧದ ಕ್ಷಿಪಣಿಗಳಿವೆ. ಇವು 40 ಕಿ.ಮೀ ನಿಂದ 400 ಕಿ.ಮೀ ವರೆಗಿನ ವಿಭಿನ್ನ ದೂರದ ಗುರಿಗಳನ್ನು ನಾಶಪಡಿಸುತ್ತವೆ. ಗುರುತಿಸುವಿಕೆ: ಇದರ ಅತ್ಯಾಧುನಿಕ ರಾಡಾರ್ ವ್ಯವಸ್ಥೆಯು 600 ಕಿ.ಮೀ ದೂರದಲ್ಲೇ ಶತ್ರು ವಿಮಾನಗಳ ಚಲನವಲನವನ್ನು ಪತ್ತೆಹಚ್ಚಬಲ್ಲದು.
ಭಾರತಕ್ಕೆ ಇದರ ಮಹತ್ವವೇನು? ದ್ವಿಮುಖ ಬೆದರಿಕೆ: ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಏಕಕಾಲಕ್ಕೆ ರಕ್ಷಣೆ ನೀಡಲು ಇದು ಅತ್ಯಗತ್ಯ. ಕಾರ್ಯಾಚರಣೆ ಸಿಂಧೂರ್: ಇತ್ತೀಚಿನ ವರದಿಗಳ ಪ್ರಕಾರ, ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಈ ವ್ಯವಸ್ಥೆಯು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ರಕ್ಷಣಾ ಕವಚ: ದೆಹಲಿ ಅಥವಾ ಮುಂಬೈನಂತಹ ಪ್ರಮುಖ ನಗರಗಳ ಮೇಲೆ ಕ್ಷಿಪಣಿ ದಾಳಿಯಾದಾಗ, ಅವು ನಗರ ತಲುಪುವ ಮೊದಲೇ ಆಕಾಶದಲ್ಲೇ ನಾಶಪಡಿಸಲು ಇದು ಸಹಕಾರಿ.
ಒಪ್ಪಂದದ ಸ್ಥಿತಿಗತಿ (2026ರ ಅಂಕಿಅಂಶ): ಭಾರತವು 2018ರಲ್ಲಿ ಸುಮಾರು 35,000 ಕೋಟಿ ರೂ. ಮೊತ್ತಕ್ಕೆ 5 ಘಟಕಗಳ (Regiments) ಒಪ್ಪಂದ ಮಾಡಿಕೊಂಡಿತ್ತು. ಈಗಾಗಲೇ 3 ಘಟಕಗಳು ಭಾರತಕ್ಕೆ ತಲುಪಿದ್ದು, ಉಳಿದ 2 ಘಟಕಗಳು 2026ರ ಅಂತ್ಯದ ವೇಳೆಗೆ ಭಾರತಕ್ಕೆ ತಲುಪಲಿವೆ ಎಂದು ರಷ್ಯಾ ದೃಢಪಡಿಸಿದೆ. ಇತ್ತೀಚೆಗೆ (ಮಾರ್ಚ್ 2026), ಭಾರತವು ತನ್ನ ವಾಯು ರಕ್ಷಣೆಯನ್ನು ಇನ್ನಷ್ಟು ಬಲಪಡಿಸಲು ಹೆಚ್ಚುವರಿ S-400 ಘಟಕಗಳ ಖರೀದಿಗೆ ಒಪ್ಪಿಗೆ ನೀಡಿದೆ.
ಏಷ್ಯಾ ಕಪ್ ಆರ್ಚರಿ: ಭಾರತಕ್ಕೆ 10 ಪದಕ ಸಂದರ್ಭ: ಭಾರತದ ಕಾಂಪೌಂಡ್ ಆರ್ಚರಿ ಸ್ಪರ್ಧಿಗಳು, ಏಷ್ಯಾ ಕಪ್-ವಿಶ್ವ ಬ್ಯಾಂಕಿಂಗ್ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದರು. ಮಿಶ್ರ ತಂಡ ವಿಭಾಗದಲ್ಲಿ ಚಿನ್ನ, ಮಹಿಳಾ ತಂಡ ವಿಭಾಗದಲ್ಲಿ ಬೆಳ್ಳಿ ಜಯಿಸಿದರಲ್ಲದೇ,ಪುರುಷರ ವೈಯಕ್ತಿಕ ವಿಭಾಗದಲ್ಲಿ ಮೂರೂ ಪದಕಗಳನ್ನು ಬಾಚಿಕೊಂಡರು.
ರಿಕರ್ವ್ ವಿಭಾಗದಲ್ಲಿ ಭಾರತ ಎರಡು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು. ಒಟ್ಟು ಎರಡು ಚಿನ್ನ. ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು.
ಆದರೆ ಚಿನ್ನದ ಲೆಕ್ಕ ತೆಗೆದು ಕೊಂಡರೆ, ಭಾರತದ ಸಾಧನೆ ಕಡಿಮೆ ಎನಿಸಿತು. ಕಳೆದ ಆವೃತ್ತಿಯಲ್ಲಿ ಭಾರತ ಐದು ಚಿನ್ನ ಗೆದ್ದುಕೊಂಡಿತ್ತು
ರಿಕರ್ವ್ ವಿಭಾಗದ ಕಳಪೆ ಸಾಧನೆ ಇದಕ್ಕೆ, ಕಾರಣವಾಯಿತು. ಈ ವಿಭಾಗದಲ್ಲಿ ಭಾರತ ಒಂದೂ ಚಿನ್ನ ಗೆಲ್ಲಲಾಗಲಿಲ್ಲ, ಪುರುಷರ ವೈಯಕ್ತಿಕ ವಿಭಾಗ ಮತ್ತು ಮಿಶ್ರ ತಂಡ ವಿಭಾಗದಲ್ಲಿ ಭಾರತದ ಸ್ಪರ್ಧಿಗಳಿಗೆ ಪದಕ ಗಳಿಸಲು ವಿಫಲರಾದರು.
ಏಷ್ಯಾ ಕಪ್ ಆರ್ಚರಿ (Asia Cup Archery) ಎಂಬುದು ಏಷ್ಯಾ ಖಂಡದ ಬಿಲ್ಲುಗಾರಿಕೆ (Archery) ಕ್ರೀಡಾಪಟುಗಳಿಗಾಗಿ ನಡೆಸಲಾಗುವ ಒಂದು ಪ್ರತಿಷ್ಠಿತ ಅಂತರರಾಷ್ಟ್ರೀಯ ಪಂದ್ಯಾವಳಿಯಾಗಿದೆ. ಪ್ರಸ್ತುತ 2026ರ ಮಾರ್ಚ್ ತಿಂಗಳಿನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯಾ ಕಪ್ ಆರ್ಚರಿ ಸ್ಟೇಜ್-1 ಪಂದ್ಯಾವಳಿಯಲ್ಲಿ ಭಾರತದ ಕ್ರೀಡಾಪಟುಗಳು ಅತ್ಯಂತ ಅದ್ಭುತ ಪ್ರದರ್ಶನ ನೀಡಿದ್ದಾರೆ.
1. ಭಾರತದ ಸಾಧನೆ (2026 – ಸ್ಟೇಜ್ 1) ಬ್ಯಾಂಕಾಕ್‌ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಭಾರತವು ಒಟ್ಟು 10 ಪದಕಗಳನ್ನು (2 ಚಿನ್ನ, 4 ಬೆಳ್ಳಿ ಮತ್ತು 4 ಕಂಚು) ಗೆದ್ದು ಬೀಗಿದೆ. ಕಂಪೌಂಡ್ ವಿಭಾಗದ ಪ್ರಾಬಲ್ಯ: ಪುರುಷರ ವೈಯಕ್ತಿಕ ಕಂಪೌಂಡ್ (Compound) ವಿಭಾಗದಲ್ಲಿ ಭಾರತದ ಕ್ರೀಡಾಪಟುಗಳು ಮೊದಲ ಮೂರೂ ಪದಕಗಳನ್ನು (ಚಿನ್ನ, ಬೆಳ್ಳಿ, ಕಂಚು) ಗೆದ್ದು ‘ಕ್ಲೀನ್ ಸ್ವೀಪ್’ ಸಾಧನೆ ಮಾಡಿದ್ದಾರೆ. ಪ್ರಮುಖ ಚಿನ್ನದ ಪದಕ ವಿಜೇತರು: ಉದಯ್ ಕಾಂಬೋಜ್ (Uday Kamboj): ಪುರುಷರ ವೈಯಕ್ತಿಕ ಕಂಪೌಂಡ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಚಿಕಿತಾ ತನಿಪರ್ತಿ ಮತ್ತು ರಜತ್ ಚೌಹಾಣ್: ಮಿಶ್ರ ತಂಡ (Mixed Team) ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
2. ಪದಕ ವಿಜೇತರ ಪಟ್ಟಿ (2026):
ಪದಕ
ವಿಜೇತರು
ವಿಭಾಗ
ಚಿನ್ನ
ಉದಯ್ ಕಾಂಬೋಜ್
ಪುರುಷರ ವೈಯಕ್ತಿಕ ಕಂಪೌಂಡ್
ಚಿನ್ನ
ಚಿಕಿತಾ ಮತ್ತು ರಜತ್ ಚೌಹಾಣ್
ಮಿಶ್ರ ತಂಡ ಕಂಪೌಂಡ್
ಬೆಳ್ಳಿ
ಪ್ರಥಮೇಶ್ ಜಾವ್ಕರ್
ಪುರುಷರ ವೈಯಕ್ತಿಕ ಕಂಪೌಂಡ್
ಬೆಳ್ಳಿ
ರಿದ್ಧಿ ಪೋರ್ (Ridhi Phor)
ಮಹಿಳೆಯರ ವೈಯಕ್ತಿಕ ರಿಕರ್ವ್ (Recurve)
ಬೆಳ್ಳಿ
ಪುರುಷರ ತಂಡ
ಪುರುಷರ ರಿಕರ್ವ್ ತಂಡ
ಬೆಳ್ಳಿ
ಮಹಿಳೆಯರ ತಂಡ
ಮಹಿಳೆಯರ ಕಂಪೌಂಡ್ ತಂಡ
ಕಂಚು
ರಜತ್ ಚೌಹಾಣ್
ಪುರುಷರ ವೈಯಕ್ತಿಕ ಕಂಪೌಂಡ್
ಕಂಚು
ತೇಜಲ್ ಸಾಳ್ವೆ
ಮಹಿಳೆಯರ ವೈಯಕ್ತಿಕ ಕಂಪೌಂಡ್
3.ಪರೀಕ್ಷಾ ದೃಷ್ಟಿಕೋನ (Key Highlights): ಪಂದ್ಯಾವಳಿ ನಡೆದ ಸ್ಥಳ: ಬ್ಯಾಂಕಾಕ್, ಥೈಲ್ಯಾಂಡ್ (ಮಾರ್ಚ್ 2026). ಕಂಪೌಂಡ್ ವರ್ಸಸ್ ರಿಕರ್ವ್:ಬಿಲ್ಲುಗಾರಿಕೆಯಲ್ಲಿ ಎರಡು ವಿಧದ ಬಿಲ್ಲುಗಳಿರುತ್ತವೆ. ರಿಕರ್ವ್ (Recurve – ಒಲಿಂಪಿಕ್ಸ್‌ನಲ್ಲಿರುವ ವಿಧ) ಮತ್ತು ಕಂಪೌಂಡ್ (Compound – ಹೆಚ್ಚು ತಾಂತ್ರಿಕವಾದ ಬಿಲ್). ಭಾರತವು ಈ ಬಾರಿ ಕಂಪೌಂಡ್ ವಿಭಾಗದಲ್ಲಿ ವಿಶ್ವಮಟ್ಟದ ಪ್ರಾಬಲ್ಯ ಸಾಧಿಸಿದೆ. ಲಕ್ಷ್ಯ 2028:ಕಂಪೌಂಡ್ ಮಿಶ್ರ ತಂಡ ವಿಭಾಗವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಪದಕದ ವಿಭಾಗವಾಗಿ ಸೇರ್ಪಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತದ ಈ ಚಿನ್ನದ ಪದಕವು ಬಹಳ ಮಹತ್ವದ್ದಾಗಿದೆ.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಗಿರಿಜಾಗೆ ವರನಟ ಡಾ.ರಾಜಕುಮಾರ್’ ಪ್ರಶಸ್ತಿ ಸಂದರ್ಭ: ಕನ್ನಡ ಜನಶಕ್ತಿ ಕೇಂದ್ರ ನೀಡುವ 2026ನೇ ಸಾಲಿನ ‘ವರನಟ ಡಾ.ರಾಜಕುಮಾರ್’ ಪ್ರಶಸ್ತಿಗೆ ರಂಗಭೂಮಿ ಕಲಾವಿದೆ ಗಿರಿಜಾ ಲೋಕೇಶ್ ಆಯ್ಕೆ ಆಗಿದ್ದಾರೆ.
ಪ್ರಶಸ್ತಿಯು 25 ಸಾವಿರ ನಗದು. ಕಂಚಿನ ಫಲಕ ಹಾಗೂ ಪ್ರಶಸ್ತಿ ಗಿರಿಜಾ ಲೋಕೇಶ್ ಪತ್ರವನ್ನು ಒಳಗೊಂಡಿದೆ.
ಪ್ರಶಸ್ತಿ ವಿವರಗಳು
ಅಂಶ
ವಿವರ
ಪ್ರಶಸ್ತಿಯ ಹೆಸರು
‘ವರನಟ ಡಾ. ರಾಜಕುಮಾರ್’ ಪ್ರಶಸ್ತಿ
ಪ್ರಶಸ್ತಿ ನೀಡುವ ಸಂಸ್ಥೆ
ಕನ್ನಡ ಜನಶಕ್ತಿ ಕೇಂದ್ರ
2026ರ ಸಾಲಿನ ಪುರಸ್ಕೃತರು
ಗಿರಿಜಾ ಲೋಕೇಶ್ (ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ)
ಪ್ರಶಸ್ತಿಯ ಮೊತ್ತ
₹25,000 (ಇಪ್ಪತ್ತೈದು ಸಾವಿರ) ನಗದು
ಗೌರವ
ಕಂಚಿನ ಫಲಕ ಮತ್ತು ಪ್ರಶಸ್ತಿ ಪತ್ರ
ಕನ್ನಡ ಜನಶಕ್ತಿ ಕೇಂದ್ರ ಪ್ರಶಸ್ತಿಗಳು – 2026
ಪ್ರಶಸ್ತಿಯ ಹೆಸರು
ಪುರಸ್ಕೃತರು
ಕ್ಷೇತ್ರ / ಕೊಡುಗೆ
ವರನಟ ಡಾ. ರಾಜ್‌ಕುಮಾರ್ ಪ್ರಶಸ್ತಿ
ಗಿರಿಜಾ ಲೋಕೇಶ್
ರಂಗಭೂಮಿ ಮತ್ತು ಚಲನಚಿತ್ರ (ನಟನೆ)
ಪಂಪ ಭಾರತ ಪ್ರಶಸ್ತಿ
ಡಾ. ಎಚ್.ಎಸ್. ವೆಂಕಟೇಶಮೂರ್ತಿ
ಸಾಹಿತ್ಯ (ಕವನ ಮತ್ತು ನಾಟಕಗಳು)
ಕುವೆಂಪು ವಿಶ್ವಮಾನವ ಪ್ರಶಸ್ತಿ
ಪ್ರೊ. ಬರಗೂರು ರಾಮಚಂದ್ರಪ್ಪ
ಸಾಮಾಜಿಕ ಕ್ರಿಯಾಶೀಲತೆ ಮತ್ತು ಸಾಹಿತ್ಯ
ಕಾಯಕ ರತ್ನ ಪ್ರಶಸ್ತಿ
ಸಾಲುಮರದ ತಿಮ್ಮಕ್ಕ
ಪರಿಸರ ಸಂರಕ್ಷಣೆ
ಕನ್ನಡ ಶಕ್ತಿ ಪ್ರಶಸ್ತಿ
ಗಣೇಶ್ ಕಾರ್ಣಿಕ್
ಶಿಕ್ಷಣ ಮತ್ತು ಸಾರ್ವಜನಿಕ ಸೇವೆ
ಮಾಧ್ಯಮ ರತ್ನ ಪ್ರಶಸ್ತಿ
ರಂಗನಾಥ್ ಭಾರದ್ವಾಜ್
ಪತ್ರಿಕೋದ್ಯಮ (ಎಲೆಕ್ಟ್ರಾನಿಕ್ ಮೀಡಿಯಾ)
15 ಅಂಶಗಳ ಪ್ರಶ್ನಾವಳಿ: ‘ವಿ.ಆರ್.ಸಿಟಿ 2026’ ವರದಿ ಪ್ರಕಟ ಸಂದರ್ಭ: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್ ದೇಶದ ಅತ್ಯಂತ ವಾಸಯೋಗ್ಯ ನಗರವಾಗಿ ಹೈದರಾಬಾದ್ ಹೊರಹೊಮ್ಮಿದ್ದು, ಬೆಂಗಳೂರು ನಗರವನ್ನು ಹಿಂದಿಕ್ಕಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಈ ಎರಡೂ ನಗರಗಳು ಅತಿ ವೇಗವಾಗಿ ಬೆಳೆಯುತ್ತಿವೆ.
ಸುಮಾರು 15 ಅಂಶಗಳ ಪ್ರಶ್ನಾವಳಿಗಳನ್ನು ಆಧಾರವಾಗಿಟ್ಟುಕೊಂಡು ಬೆಂಗಳೂರು ಮೂಲದ ಅನ್‌ಬಾಕ್ಸಿಂಗ್ ಬಿಎಲ್‌ಆರ್ ಸಂಸ್ಥೆ ನಡೆಸಿರುವ ಸಮೀಕ್ಷೆ- ‘ವಿ.ಆರ್.ಸಿಟಿ 2026’ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.
ಉದ್ಯೋಗ, ಬೆಳವಣಿಗೆ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳೊಂದಿಗೆ ದೇಶದ ಭವಿಷ್ಯದ ನಗರಗಳಾಗಿ ರೂಪುಗೊಂಡಿರುವ ಎರಡೂ ನಗರಗಳ ಮೇಲೆ ಈ ವರದಿ ಬೆಳಕು ಚೆಲ್ಲಿದೆ.
159 ಪುಟಗಳ ಈ ವರದಿಯಲ್ಲಿ ವಾಸಕ್ಕೆ ಯೋಗ್ಯವಾದ 8 ನಗರಗಳ ಮಾಹಿತಿ ಇದೆ. ಇದರಲ್ಲಿ ಸಂಪರ್ಕ, ವೈವಿಧ್ಯ, ಪ್ರವಾಸ, ವಸತಿ, ಮೂಲಸೌಕರ್ಯ ಹಾಗೂ ಹವಾಮಾನ ಆಧರಿಸಿ ಮಾಹಿತಿ ಸಂಗ್ರಹಿಸಲಾಗಿದೆ.
ಈ ಪಟ್ಟಿಯಲ್ಲಿ ಹೈದರಾಬಾದ್ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಬೆಂಗಳೂರು ಮತ್ತು ಕೋಲ್ಕತ್ತ ನಗರಗಳು ಇವೆ. ಗುಜರಾತ್‌ನ ಅಹಮದಾಬಾದ್ ಈ ಪಟ್ಟಿಯ ಕೊನೆ ಸ್ಥಾನದಲ್ಲಿದೆ. ಉಳಿದಂತೆ ಚೆನ್ನೈ ದೆಹಲಿ ಎನ್,ಆರ್. ಪುಣೆ, ಗ್ರೇಟರ್ ಮುಂಬೈ ಕ್ರಮವಾಗಿ ನಾಲ್ಕು, ಐದು, ಆರು ಮತ್ತು ಏಳನೇ ಸ್ಥಾನದಲ್ಲಿವೆ
ಬೆಂಗಳೂರು ಹವಾಗುಣ ವೈವಿಧ್ಯದಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ಹೈದರಾಬಾದ್ ಸಹ ಈ ಎಲ್ಲಾ ವಿಷಯಗಳಲ್ಲಿ ಸಮಾನ ಪೈಪೋಟಿ ನೀಡಿದೆ ಜತೆಗೆ ಇಲ್ಲಿನ ವಾಹನ ದಟ್ಟಣೆ ಬೆಂಗಳೂರಿನಷ್ಟೇ ಇದೆ
ಎರಡೂ ನಗರಗಳಲ್ಲಿ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನತ್ತ ಸಾಗಲು ಸಾಮಾನ್ಯವಾಗಿ 22 ಕಿ.ಮೀ. ಕ್ರಮಿಸಲು ಸರಾಸರಿ ಅವಧಿ 58ರಿಂದ 59 ನಿಮಿಷಗಳು.
ಪ್ರತಿಷ್ಠಿತ ಬಡಾವಣೆಗಳಲ್ಲಿ ಅತ್ಯಾಧುನಿಕ ಸೌಲಭ್ಯವಿರುವ ಕಚೇರಿ ಸ್ಥಳಾವಕಾಶದ ವಿಷಯದಲ್ಲಿ ಈ ಎರಡೂ ನಗರಗಳು ಶೇಕಡ 53ರಷ್ಟು ಪಾಲು ಹೊಂದಿವೆ ದಿಲ್ಲಿ-ಎನ್‌ಸಿಆರ್ ಮತ್ತು ಗ್ರೇಟರ್ ಮುಂಬೈಗಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳಾದರೂ ತಮ್ಮ ಸಾಮರ್ಥ್ಯ ಮೀರಿ ಸಾಧನೆ ಮಾಡುತ್ತಿವೆ
ಕಳೆದ ಎರಡು ವರ್ಷಗಳಲ್ಲಿ ದೇಶದ ಅಗ್ರ 8 ನಗರಗಳ ನಡುವೆ ಹೊಸ ದೇಶಿಯ ವಿಮಾನ ಸಂಚಾರದಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ಶೇಕಡ ಎರಡೂ ನಗರಗಳು ತಂತ್ರಜ್ಞಾನ ಆಧರಿತ ಬೆಳವಣಿಗೆ ಸಾಧಿಸಿವೆ. ಆದರೆ, ಕಾರ್ಯನಿರ್ವಹಣಾ ರೀತಿ, ಬೆಳವಣಿಗೆಗಳಲ್ಲಿ ತುಂಬ ಅಂತರಗಳಿವೆ. ನವೋದ್ಯಮ, ಹಣಕಾಸು ನೆರವು, ನಾವೀನ್ಯ ಮತ್ತು ಹೊಸ ಉದ್ಯೋಗಳ ಸೃಷ್ಟಿಯಲ್ಲಿ ಬೆಂಗಳೂರು ಮುನ್ನಡೆ ಸಾಧಿಸಿದ್ದು ದೇಶದ ನವೋದ್ಯಮ ರಾಜಧಾನಿಯಾಗಿದೆ.
ಇಲ್ಲಿ ಬ್ಯಾಂಕ್ ಠೇವಣಿ ಪ್ರಮಾಣ ಹೆಚ್ಚಿದೆ. ಹೈದರಾಬಾದ್ ಜಾಗತಿಕ ಸಾಮರ್ಥ್ಯ ಕೇಂದ್ರದ ಹಬ್ ಆಗಿ ಹೊರಹೊಮ್ಮುತ್ತಿದೆ. ಟೆಕ್ ಜಾಬ್‌ಗಳಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಡುವಣ ಅಂತರ ಕಡಿಮೆಯಾಗುತ್ತಿದೆ.
ಗ್ರಾಹಕರು ಮತ್ತು ಸಣ್ಣ ಉದ್ಯಮಿಗಳಿಗೆ ನೇರವಾಗಿ ನೀಡುವ ಸಾಲ, ಗೃಹ ಸಾಲದಲ್ಲಿ ಹೈದರಾಬಾದ್ ಮುಂದಿದೆ. ಮೂಲಸೌಕರ್ಯ ಅಭಿವೃದ್ಧಿ, ಮಹಿಳೆಯರ ಸುರಕ್ಷತೆಯಲ್ಲಿ ಹೈದರಾಬಾದ್ ಮುಂದಿದೆ. ಐಟಿ, ತಯಾರಿಕಾ ವಲಯ, ಔಷಧ ಮತ್ತು ಬಿಎಫ್‌ಎಸ್‌ಐ ವಲಯಗಳಲ್ಲಿ ಉದ್ಯೋಗಿಗಳ ನೇಮಕದಲ್ಲಿ ಎರಡೂ ನಗರಗಳು ಪ್ರಾಬಲ್ಯ ಸಾಧಿಸಿವೆ.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
“ಭಾರತದ ಬ್ರಹ್ಮಾಂಡದ ಜಿಗಿತ – ಚಂದ್ರಯಾನದಿಂದ ಶುಕ್ರಯಾನದವರೆಗೆ: ತಾಂತ್ರಿಕ ಉದ್ದೇಶಗಳ ವಿಕಾಸ, ವೈಜ್ಞಾನಿಕ ಸಾರ್ವಭೌಮತ್ವದ ಕಾರ್ಯತಂತ್ರದ ಅನ್ವೇಷಣೆ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗೆ ಆಳವಾದ ಬಾಹ್ಯಾಕಾಶ ಸಂಶೋಧನೆಯ ಸಾಮಾಜಿಕ-ಆರ್ಥಿಕ ಸಮರ್ಥನೆ.”
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
“ನಗರೀಕರಣದ ಅನಿವಾರ್ಯತೆ ಮತ್ತು ಪರಿಸರದ ಸುಸ್ಥಿರತೆಯ ನಡುವಿನ ಸಂಘರ್ಷ: ‘ನಗರ ತಾಪ ದ್ವೀಪ’ (Urban Heat Island) ಪರಿಣಾಮದ ಹಿನ್ನೆಲೆಯಲ್ಲಿ ಬೆಂಗಳೂರಿನಂತಹ ಮಹಾನಗರಗಳ ಸವಾಲುಗಳು ಮತ್ತು ಅವುಗಳಿಗೆ ಪರಿಹಾರಾತ್ಮಕ ಕ್ರಮಗಳನ್ನು ವಿಶ್ಲೇಷಿಸಿ.”
ವಿದೇಶಿ ವಿನಿಮಯ ಸಂಗ್ರಹ ಇಳಿಕೆ ಸಂದರ್ಭ: ಮಾರ್ಚ್ 20ಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹1.08 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ.
ಒಟ್ಟು ಮೀಸಲು ಸಂಗ್ರಹವು ₹66.16 ಲಕ್ಷ ಕೋಟಿಗೆ ಇಳಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ. ಚಿನ್ನದ ಮೀಸಲು ಸಂಗ್ರಹದಲ್ಲಿನ ಇಳಿಕೆಯೇ ಒಟ್ಟಾರೆ ಮೀಸಲು ಸಂಗ್ರಹ ಕಡಿಮೆಯಾಗಲು ಕಾರಣವಾಗಿದೆ.
ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ ₹20.154 ಕೋಟಿಯಷ್ಟು ಹೆಚ್ಚಳವಾಗಿದ್ದು, ₹52.84 ಲಕ್ಷ ಕೋಟಿಯಾಗಿದೆ.
ಚಿನ್ನದ ಮೀಸಲು ಸಂಗ್ರಹದಲ್ಲಿ ₹1.27 ಲಕ್ಷ ಕೋಟ ಇಳಿಕೆಯಾಗಿದ್ದು, ₹11.09 ಲಕ್ಷ ಕೋಟಿಯಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ (ಎಸ್‌ಡಿಆರ್) ₹1.76 ಲಕ್ಷ ಕೋಟಿ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪಾಲು ₹45,795 ಕೋಟಿಯಾಗಿದೆ ಎಂದು ತಿಳಿಸಿದೆ.
ವಿದೇಶಿ ವಿನಿಮಯ ಸಂಗ್ರಹ ಅಥವಾ ವಿದೇಶಿ ವಿನಿಮಯ ಮೀಸಲು (Foreign Exchange Reserves / Forex Reserves) ಎನ್ನುವುದು ಒಂದು ದೇಶದ ಕೇಂದ್ರೀಯ ಬ್ಯಾಂಕ್ (ಭಾರತದಲ್ಲಿ RBI – ಭಾರತೀಯ ರಿಸರ್ವ ಬ್ಯಾಂಕ್) ಸಂಗ್ರಹಿಸಿಟ್ಟುಕೊಂಡಿರುವ ವಿದೇಶಿ ಕರೆನ್ಸಿ ಮತ್ತು ಇತರ ಆಸ್ತಿಗಳ ಮೊತ್ತವಾಗಿದೆ. ಸರಳವಾಗಿ ಹೇಳುವುದಾದರೆ, ತುರ್ತು ಸಂದರ್ಭಗಳಲ್ಲಿ ಅಥವಾ ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ದೇಶವು ತನ್ನ ಬಳಿ ಇಟ್ಟುಕೊಂಡಿರುವ “ವಿದೇಶಿ ಹಣದ ಬ್ಯಾಂಕ್ ಬ್ಯಾಲೆನ್ಸ್” ಇದಾಗಿದೆ.
ವಿದೇಶಿ ವಿನಿಮಯ ಸಂಗ್ರಹದಲ್ಲಿ ಏನೇನಿರುತ್ತದೆ? (Components) ಭಾರತದ ಫೋರೆಕ್ಸ್ ರಿಸರ್ವ್ ಮುಖ್ಯವಾಗಿ ನಾಲ್ಕು ಅಂಶಗಳನ್ನು ಒಳಗೊಂಡಿದೆ: 1. ವಿದೇಶಿ ಕರೆನ್ಸಿ ಆಸ್ತಿಗಳು (Foreign Currency Assets – FCA): ಅಮೆರಿಕದ ಡಾಲರ್ ($), ಯುರೋ, ಬ್ರಿಟಿಷ್ ಪೌಂಡ್ ಮತ್ತು ಜಪಾನಿನ ಯೆನ್ ರೂಪದಲ್ಲಿರುವ ಹಣ. ಇದು ಸಂಗ್ರಹದ ಬಹುದೊಡ್ಡ ಭಾಗವಾಗಿದೆ. 2. ಚಿನ್ನದ ಮೀಸಲು (Gold Reserves): ಆರ್‌ಬಿಐ ತನ್ನ ಬಳಿ ಇಟ್ಟುಕೊಂಡಿರುವ ಬಂಗಾರ. 3. ವಿಶೇಷ ಹಿಂಪಡೆಯುವಿಕೆ ಹಕ್ಕುಗಳು (SDR): ಇದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಸೃಷ್ಟಿಸಿರುವ ಒಂದು ರೀತಿಯ ಅಂತರರಾಷ್ಟ್ರೀಯ ಮೀಸಲು ಆಸ್ತಿ. 4. ಐಎಂಎಫ್‌ನಲ್ಲಿನ ಮೀಸಲು ಸ್ಥಿತಿ (Reserve Position in IMF): ಭಾರತವು ಐಎಂಎಫ್‌ನಲ್ಲಿ ಇಟ್ಟಿರುವ ಹಣ.
ಇದರ ಮಹತ್ವವೇನು? (Importance) ಆಮದು ಬಿಲ್ ಪಾವತಿ:ನಾವು ವಿದೇಶದಿಂದ ತೈಲ (Oil), ಎಲೆಕ್ಟ್ರಾನಿಕ್ಸ್ ಅಥವಾ ಶಸ್ತ್ರಾಸ್ತ್ರಗಳನ್ನು ಖರೀದಿಸಿದಾಗ ಪಾವತಿಯನ್ನು ಡಾಲರ್ ರೂಪದಲ್ಲೇ ಮಾಡಬೇಕಾಗುತ್ತದೆ. ಈ ಪಾವತಿಗೆ ಫೋರೆಕ್ಸ್ ರಿಸರ್ವ್ ಅಗತ್ಯ. ರೂಪಾಯಿ ಮೌಲ್ಯದ ಸ್ಥಿರತೆ:ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿಯ ಮೌಲ್ಯ ಕುಸಿಯದಂತೆ ತಡೆಯಲು ಆರ್‌ಬಿಐ ಈ ಸಂಗ್ರಹವನ್ನು ಬಳಸುತ್ತದೆ. ಆರ್ಥಿಕ ಭದ್ರತೆ: ದೇಶಕ್ಕೆ ಆರ್ಥಿಕ ಸಂಕಷ್ಟ ಎದುರಾದಾಗ ಅಥವಾ ಜಾಗತಿಕ ಮಾರುಕಟ್ಟೆಯಲ್ಲಿ ಏರುಪೇರಾದಾಗ ಈ ಸಂಗ್ರಹವು “ರಕ್ಷಣಾ ಕವಚ”ವಾಗಿ ಕೆಲಸ ಮಾಡುತ್ತದೆ.
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ಬಾಹ್ಯಾಕಾಶ ಕಾರ್ಯಕ್ರಮಗಳು ವಿಳಂಬ ಸಾಧ್ಯತೆ: ಸಂಸದೀಯ ಸಮಿತಿ ಸಂದರ್ಭ: ಬಿಡುಗಡೆಯಾದ ಅನುದಾನದ ಬಳಕೆ ಹಾಗೂ ಯೋಜನೆ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಆಗದಿರುವ ಕಾರಣ, ಇಸ್ರೋದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಕಾರ್ಯಕ್ರಮಗಳು ನಿಗದಿತ ಕಾಲಮಿತಿಯಲ್ಲಿ ಕೈಗೂಡುವುದಿಲ್ಲ ಎಂದು ಸಂಸದೀಯ ಸಮಿತಿಯೊಂದು ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
‘ಯೋಜನೆ ಅನುಷ್ಠಾನದಲ್ಲಿನ ಈ ವಿಳಂಬದಿಂದಾಗಿ ಉದ್ದೇಶಿತ ಬಾಹ್ಯಾಕಾಶ ಕಾರ್ಯಕ್ರಮಗಳು ಇಸ್ರೋಗೆ ಸವಾಲುಗಳಾಗಿ ಪರಿಣಮಿಸುವ ಸಾಧ್ಯತೆ ಇದೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.
ಚಂದ್ರಯಾನ-4, ಚಂದ್ರಯಾನ-5 ಹಾಗೂ ಶುಕ್ರ ಗ್ರಹ ಕಕ್ಷೆಗಾಮಿ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಬಿಡುಗಡೆಯಾದ ಅನುದಾನ, ಈ ವರೆಗೆ ಆಗಿರುವ ವೆಚ್ಚ. ಯೋಜನೆಗಾಗಿ ಸಾಧನಗಳ ಖರೀದಿ ಕುರಿತಂತೆ ಬಾಹ್ಯಾಕಾಶ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ, ಸಮಿತಿ ಈ ವರದಿ ಸಿದ್ಧಪಡಿಸಿದೆ.
ಈ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಬಳಸುವ ಗಗನನೌಕೆಯ ವಿನ್ಯಾಸದಲ್ಲಿ ಮಾಡಿರುವ ಬದಲಾವಣೆಗಳು, ಕಚ್ಚಾ ವಸ್ತುಗಳ ಖರೀದಿ ಮುಂದೂಡಿರುವುದು ಸೇರಿ ವಿವಿಧ ಕಾರಣಗಳಿಂದಾಗಿ ಅನುದಾನ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2027ರ ಅಕ್ಟೋಬರ್‌ನಲ್ಲಿ ಕಾರ್ಯಗತಗೊಳಿಸುವ ಉದ್ದೇಶದ ಚಂದ್ರಯಾನ-4, ₹2,104 ಕೋಟಿ ವೆಚ್ಚದ ಯೋಜನೆ 2025-26ನೇ ಸಾಲಿನ ಬಜೆಟ್‌ನಲ್ಲಿ ₹129 ಕೋಟಿ ಹಂಚಿಕೆಯಾಗಿತ್ತು. ಈ ಪೈಕಿ ಜನವರಿ 31ರ ವರೆಗೆ ಇಸ್ರೋ ₹34 ಕೋಟಿ ಮಾತ್ರ ಖರ್ಚು ಮಾಡಿದೆ ₹982 ಕೋಟಿ ವೆಚ್ಚದ ಚಂದ್ರಯಾನ-6 ಯೋಜನೆ ಪೈಕಿ ₹58 ಲಕ್ಷ, ₹29 5 ಕೋಟಿ ವೆಚ್ಚದ ಶುಕ್ರ ಗ್ರಹ ಕಾರ್ಯಕ್ರಮದಡಿ ₹5.12 ಕೋಟಿ ಖರ್ಚು ಮಾಡಿದೆ.
1.ಚಂದ್ರಯಾನ-4 (LUPEX – Lunar Polar Exploration) ಇದು ಚಂದ್ರಯಾನ-3ರ ಮುಂದುವರಿದ ಭಾಗವಾಗಿದ್ದು, ಭಾರತ (ISRO) ಮತ್ತು ಜಪಾನ್ (JAXA) ಜಂಟಿಯಾಗಿ ಹಮ್ಮಿಕೊಂಡಿರುವ ಯೋಜನೆಯಾಗಿದೆ. ಉದ್ದೇಶ: ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿನ ಅಂಶ ಮತ್ತು ಮಂಜುಗಡ್ಡೆಯ ಪ್ರಮಾಣವನ್ನು ನಿಖರವಾಗಿ ಪತ್ತೆಹಚ್ಚುವುದು. ವಿಶೇಷತೆ: ಇದು ‘ಸ್ಯಾಂಪಲ್ ರಿಟರ್ನ್’ (Sample Return) ಮಿಷನ್ ಆಗಿರಲಿದ್ದು, ಚಂದ್ರನ ಮೇಲ್ಮೈಯಿಂದ ಮಣ್ಣು ಮತ್ತು ಬಂಡೆಗಳ ಮಾದರಿಯನ್ನು ಸಂಗ್ರಹಿಸಿ ಮತ್ತೆ ಭೂಮಿಗೆ ತರುವ ಗುರಿ ಹೊಂದಿದೆ. ಉಡಾವಣೆ: ಸರಿಸುಮಾರು 2028-2029ರ ಅವಧಿಯಲ್ಲಿ ನಿರೀಕ್ಷಿಸಲಾಗಿದೆ.
2. ಚಂದ್ರಯಾನ-5 (Lunar Night Survival) ಚಂದ್ರಯಾನ-4ರ ನಂತರದ ಈ ಯೋಜನೆಯು ಚಂದ್ರನ ಮೇಲಿನ ದೀರ್ಘಾವಧಿಯ ಸಂಶೋಧನೆಗೆ ಒತ್ತು ನೀಡುತ್ತದೆ. ಉದ್ದೇಶ: ಚಂದ್ರನ ಮೇಲೆ ಸತತ 14 ದಿನಗಳ ಕಾಲ ಇರುವ ಕತ್ತಲೆಯ ಅವಧಿಯಲ್ಲಿ (Lunar Night) ತಾಪಮಾನವು -200°C ಗಿಂತ ಕಡಿಮೆಯಿರುತ್ತದೆ. ಈ ಭೀಕರ ಚಳಿಯಲ್ಲಿಯೂ ಉಪಕರಣಗಳು ಕಾರ್ಯನಿರ್ವಹಿಸುವಂತೆ ಮಾಡುವ ತಂತ್ರಜ್ಞಾನವನ್ನು ಇದು ಪರೀಕ್ಷಿಸಲಿದೆ. ಗುರಿ: ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವ ನೆಲೆಗಳನ್ನು ಸ್ಥಾಪಿಸಲು ಬೇಕಾದ ಮೂಲಸೌಕರ್ಯಗಳ ಬಗ್ಗೆ ಸಂಶೋಧನೆ ನಡೆಸುವುದು.
3. ಶುಕ್ರಯಾನ-1 (Venus Orbiter Mission – Shukrayaan) ಮಂಗಳಯಾನದ ಯಶಸ್ಸಿನ ನಂತರ ಇಸ್ರೋ ಈಗ ‘ಶುಕ್ರ’ ಗ್ರಹದತ್ತ ಮುಖ ಮಾಡಿದೆ. ಉದ್ದೇಶ: ಶುಕ್ರ ಗ್ರಹದ ಮೇಲ್ಮೈ ಮತ್ತು ಅದರ ದಟ್ಟವಾದ ವಾತಾವರಣವನ್ನು ಅಧ್ಯಯನ ಮಾಡುವುದು. ಶುಕ್ರ ಗ್ರಹದಲ್ಲಿ ಸಲ್ಫ್ಯೂರಿಕ್ ಆಮ್ಲದ ಮೋಡಗಳಿದ್ದು, ಅಲ್ಲಿನ ‘ಗ್ರೀನ್‌ಹೌಸ್ ಪರಿಣಾಮ’ (Greenhouse Effect) ಭೂಮಿಗಿಂತ ವಿಪರೀತವಾಗಿದೆ, ಇದನ್ನು ಅಧ್ಯಯನ ಮಾಡುವುದು ಇದರ ಗುರಿ. ವೈಶಿಷ್ಟ್ಯ: ಗ್ರಹದ ಮೇಲ್ಮೈಯನ್ನು ಸ್ಕ್ಯಾನ್ ಮಾಡಲು ‘ಸಿಂಥೆಟಿಕ್ ಅಪರ್ಚರ್ ರಾಡಾರ್’ (SAR) ಅನ್ನು ಬಳಸಲಾಗುತ್ತದೆ. ಪ್ರಾಮುಖ್ಯತೆ: ಭೂಮಿ ಮತ್ತು ಶುಕ್ರ ಗ್ರಹಗಳು ಗಾತ್ರದಲ್ಲಿ ಸಮನಾಗಿದ್ದರೂ, ಜೀವನ ವಿಕಾಸದ ಹಾದಿ ಏಕೆ ಬೇರೆಯಾಯಿತು ಎಂಬ ರಹಸ್ಯವನ್ನು ಇದು ಭೇದಿಸಬಹುದು.
ಪ್ರಮುಖ ಅಂಶಗಳು (Key Highlights):
ಯೋಜನೆ
ಲಕ್ಷ್ಯ
ಪ್ರಮುಖ ತಂತ್ರಜ್ಞಾನ
ಚಂದ್ರಯಾನ-4
ಮಾದರಿ ಸಂಗ್ರಹ (Sample Return)
ಡಾಕಿಂಗ್ ಮತ್ತು ಮರು-ಪ್ರವೇಶ ತಂತ್ರಜ್ಞಾನ
ಚಂದ್ರಯಾನ-5
ದೀರ್ಘಾವಧಿ ಉಳಿವಿಕೆ
ರೇಡಿಯೋ ಐಸೋಟೋಪ್ ಹೀಟರ್‌ಗಳು
ಶುಕ್ರಯಾನ
ಶುಕ್ರ ಗ್ರಹದ ಕಕ್ಷೆ
ರಾಡಾರ್ ಇಮೇಜಿಂಗ್ ಮತ್ತು ವಾತಾವರಣದ ವಿಶ್ಲೇಷಣೆ
ಇತ್ತೀಚಿನ ವರದಿಗಳ ಪ್ರಕಾರ, ಇಸ್ರೋ ಈ ಯೋಜನೆಗಳಿಗಾಗಿ ಹೊಸ ತಲೆಮಾರಿನ ಉಡಾವಣಾ ವಾಹನವಾದ NGLV (Next Generation Launch Vehicle) ಅಥವಾ ‘ಸೋಮನಾಥ್’ ರಾಕೆಟ್ ಅನ್ನು ಬಳಸಲು ಸಿದ್ಧತೆ ನಡೆಸುತ್ತಿದೆ.
ಭಾರತದ ಚಂದ್ರಯಾನ ಯೋಜನೆಗಳ ಕಾಲಾನುಕ್ರಮ ಮತ್ತು ವೈಶಿಷ್ಟ್ಯಗಳು:
ಮಿಷನ್ (ಯೋಜನೆ)
ವರ್ಷ
ಪ್ರಮುಖ ಉದ್ದೇಶ ಮತ್ತು ಸಾಧನೆಗಳು
ಪ್ರಸ್ತುತ ಸ್ಥಿತಿ
ಚಂದ್ರಯಾನ-1
2008
ಚಂದ್ರನ ಕಕ್ಷೆಗಾಮಿ (Orbiter). ಚಂದ್ರನ ಮೇಲೆ ನೀರಿನ ಅಣುಗಳ ($H_2O$) ಇರುವಿಕೆಯನ್ನು ಮೊದಲ ಬಾರಿಗೆ ಜಗತ್ತಿಗೆ ದೃಢಪಡಿಸಿತು.
ಯಶಸ್ವಿ
ಚಂದ್ರಯಾನ-2
2019
ಆರ್ಬಿಟರ್, ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್). ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಪ್ರಯತ್ನ. ತಾಂತ್ರಿಕ ಕಾರಣದಿಂದ ಲ್ಯಾಂಡರ್ ಪತನವಾಯಿತು.
ಪಾರ್ಶ್ವ ಯಶಸ್ವಿ (ಆರ್ಬಿಟರ್ ಇಂದಿಗೂ ಕಾರ್ಯನಿರ್ವಹಿಸುತ್ತಿದೆ)
ಚಂದ್ರಯಾನ-3
2023
ಚಂದ್ರನ ದಕ್ಷಿಣ ಧ್ರುವದ ಸಮೀಪ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆ. ಮಣ್ಣಿನ ರಾಸಾಯನಿಕ ವಿಶ್ಲೇಷಣೆ ನಡೆಸಿತು.
ಪೂರ್ಣ ಯಶಸ್ವಿ
ಚಂದ್ರಯಾನ-4
2028*
‘ಸ್ಯಾಂಪಲ್ ರಿಟರ್ನ್’ (Sample Return): ಚಂದ್ರನ ಮೇಲಿನ ಮಣ್ಣು ಮತ್ತು ಬಂಡೆಗಳ ಮಾದರಿಯನ್ನು ಸಂಗ್ರಹಿಸಿ ಮತ್ತೆ ಭೂಮಿಗೆ ತರುವ ಅತ್ಯಂತ ಸಂಕೀರ್ಣ ಯೋಜನೆ.
ಅನುಮೋದನೆ ನೀಡಲಾಗಿದೆ
ಚಂದ್ರಯಾನ-5
2030+
LUPEX ಯೋಜನೆ: ಜಪಾನ್‌ನ ‘ಜಾಕ್ಸಾ’ (JAXA) ಜೊತೆಗಿನ ಜಂಟಿ ಯೋಜನೆ. ಚಂದ್ರನ ಕತ್ತಲೆಯ ಭಾಗದಲ್ಲಿರುವ ಮಂಜುಗಡ್ಡೆಯ ಪ್ರಮಾಣವನ್ನು ಅಳೆಯುವುದು ಇದರ ಗುರಿ.
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ಹರ ಪಾರ್ವತಿ ಕಥಾಕ್ಕೆ ‘ಸರಸ್ವತಿ ಸಮ್ಮಾನ್’ ಸಂದರ್ಭ: ಬೆಂಗಳೂರು ಲೇಖಕ ರಾಮ್ ಕುಮಾರ್ ಮುಖ್ಯೋಪಾಧ್ಯಾಯ ಅವರ ‘ಹರ ಪಾರ್ವತಿ ಕಥಾ’ ಬಂಗಾಳಿ ಕಾದಂಬರಿಯು 2025ನೇ ಸಾಲಿನ ‘ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಕಾದಂಬರಿಯು ಶಿವ ಮತ್ತು ಪಾರ್ವತಿ ಕುರಿತ ಪೌರಾಣಿಕ ಕಥಾಹಂದರವನ್ನು ಹೊಂದಿದೆ.
ಪ್ರಶಸ್ತಿಯ ಬಗ್ಗೆ:
ಭಾರತೀಯ ಪ್ರಜೆಗಳು ದೇಶದ ಯಾವುದೇ ಭಾಷೆಯಲ್ಲಿ ಬರೆದ ಶ್ರೇಷ್ಠ ಸಾಹಿತ್ಯ ಕೃತಿಗೆ.
ಕೆ.ಕೆ. ಬಿರ್ಲಾ ಫೌಂಡೇಷನ್ 1991ರಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ.
ಅರ್ಹತೆ: ಕಳೆದ 10 ವರ್ಷಗಳಲ್ಲಿ 23 ಮಾನ್ಯತೆ ಪಡೆದ ಭಾರತೀಯ ಭಾಷೆಗಳಲ್ಲಿ ಯಾವುದಾದರೂ ಒಂದರಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗಳು (ಗದ್ಯ ಅಥವಾ ಕಾವ್ಯ).
ಪ್ರಶಸ್ತಿಯು ₹15 ಲಕ್ಷ ನಗದು ಮತ್ತು ಪಾರಿತೋಷಕವನ್ನು ಒಳಗೊಂಡಿದೆ.
ಲೇಖಕ ರಾಮ್ ಕುಮಾರ್ ಮುಖ್ಯೋಪಾಧ್ಯಾಯ ಅವರ ಬಗ್ಗೆ:
ರಾಮ್ ಕುಮಾರ್ ಮುಖ್ಯೋಪಾಧ್ಯಾಯ ಅವರು ಕೋಲ್ಕತ್ತದಲ್ಲಿ 1956 ಅಕ್ಟೋಬರ್ 5ರಂದು ಜನಿಸಿದರು. ಹೌರಾದ ರಾಮಕೃಷ್ಣ ಮಿಷನ್ ವಿದ್ಯಾಮಂದಿರದಲ್ಲಿ ಪದವಿ ಮತ್ತು ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯ ಪೂರ್ವ ಮತ್ತು ಈಶಾನ್ಯ ಪ್ರದೇಶದ ಕಾರ್ಯದರ್ಶಿಯಾಗಿ ಮತ್ತು ವಿಶ್ವಭಾರತಿ ಪ್ರಕಾಶನ ಇಲಾಖೆಯಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಬಹುಮುಖಿ ಪ್ರತಿಭೆಯನ್ನು ಹೊಂದಿರುವ ಅವರು ಈವರೆಗೆ 9 ಕಾದಂಬರಿಗಳು, 11 ಕಥಾ ಸಂಗ್ರಹ ಮತ್ತು ನಾಲ್ಕು ಪ್ರಬಂಧ ಸಂಗ್ರಹ ಹೊರತಂದಿದ್ದಾರೆ. ಎರಡು ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಅಲ್ಲದೇ, 54 ಭಾಷೆಗಳ ಸುಮಾರು 128 ಜನಪದ ಕಥೆಗಳನ್ನು ಸಂಗ್ರಹಿಸಿದ್ದಾರೆ.
ಬಂಕಿಮಚಂದ್ರ ಪುರಸ್ಕಾರ ಮತ್ತು ಬಾಂಗ್ಲಾ ಅಕಾಡೆಮಿ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ ಸಂದರ್ಭ: ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಗೌರವ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ.
ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಸಾಹಿತಿಗಳಾದ ಪ್ರೊ.ಶಿವರಾಮಯ್ಯ (ಬೆಂಗಳೂರು), ಚಂದ್ರಶೇಖರ ತಾಳ್ಯ (ಚಿತ್ರದುರ್ಗ), ಚಂದ್ರಕಾಂತ ಪೋಕಳೆ (ಬೆಳಗಾವಿ), ಡಾ. ವಸುಂಧರಾ ಭೂಪತಿ (ಬಳ್ಳಾರಿ) ಹಾಗೂ ಎಸ್. ತುಕಾರಾಂ (ಮೈಸೂರು) ಆಯ್ಕೆಯಾಗಿದ್ದಾರೆ. ‘ಗೌರವ ಪ್ರಶಸ್ತಿ’ಯು ತಲಾ ₹50 ಸಾವಿರ ನಗದು ಬಹುಮಾನ ಒಳಗೊಂಡಿದೆ.
2025ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿಗೆ ನಿಷ್ಠ ರುದ್ರಪ್ಪ (ಬಳ್ಳಾರಿ), ವೀರೇಶ ಬಡಿಗೇರ (ಬಾಗಲಕೋಟೆ), ಸಿ.ಜಿ. ಲಕ್ಷ್ಮೀಪತಿ (ಚಿತ್ರದುರ್ಗ), ಕಂನಾಡಿಗ ನಾರಾಯಣ (ಬೆಂಗಳೂರು), ರೂಪ ಹಾಸನ (ಹಾಸನ), ಜಯರಾಮ್ ರಾಯಪುರ (ವಿಜಯವಾಡ), ಕುಮುದಾ ಸುಶೀಲ್ (ದಾವಣಗೆರೆ), ಓ. ನಾಗರಾಜು (ತುಮಕೂರು), ಬಿ.ಎಂ ಬಷೀರ್ (ಮಂಗಳೂರು) ಹಾಗೂ ಜ್ಯೋತಿ (ಬೆಂಗಳೂರು) ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ ₹25 ಸಾವಿರ ಒಳಗೊಂಡಿದೆ.
2024ರ ಪುಸ್ತಕ ಬಹುಮಾನಕ್ಕೆ ವಿಮರ್ಶಕರ ಅಭಿಪ್ರಾಯ ಆಧರಿಸಿ 17 ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಬಹುಮಾನವು ತಲಾ ₹25 ಸಾವಿರ ನಗದು ಒಳಗೊಂಡಿದೆ.
2024ರ ವಿವಿಧ ದತ್ತಿ ಬಹುಮಾನಗಳಿಗೆ 11 ಕೃತಿಗಳು ಆಯ್ಕೆಯಾಗಿವೆ.
ಆದಿಕವಿ ಪಂಪ ಪ್ರತಿಷ್ಠಾನ ರಚನೆ ಸಂದರ್ಭ: ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಆದಿಕವಿ ಪಂಪ ಪ್ರತಿಷ್ಠಾನ ರಚಿಸಿದೆ.
ಪಂಪ ಮೊದಲ ಬಾರಿಗೆ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಕವಿ. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪವಾಣಿಯು ಇಂದಿಗೂ ಪ್ರಸ್ತುತವಾಗಿದೆ ‘ವಿಕ್ರಮಾರ್ಜುನ ವಿಜಯಂ’ ಕಾವ್ಯದಲ್ಲಿ ಕರ್ಣನ ಪಾತ್ರವನ್ನು ಕುಲಪದ್ಮತಿಯ ಪ್ರತಿರೋಧದ ರೂಪಕವಾಗಿ ಬಳಸಿ ಜಾತಿ ಪದ್ಧತಿಯನ್ನು ವಿರೋಧಿಸಿದ್ದರು.
ಪಂಪ ಮಹಾಕವಿಯ ಸ್ಮಾರಕವನ್ನು ನಿರ್ಮಿಸಿ, ಪಂಪ ಭವನವನ್ನು ಉನ್ನತೀಕರಿಸಿ, ಜಾತ್ಯತೀತ, ದ್ವೇಷಾತೀತ, ಸೃಜನಶೀಲ ಕೆಲಸಗಳನ್ನು ಮಾಡಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಕೋರಿದ್ದರು. ಈ ಪುಸ್ತಾವದಂತೆ ಪಂಪ ಪ್ರತಿಷ್ಠಾನ ರಚಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಬರಗೂರು ಒತ್ತಾಯದ ಫಲ: ಪಂಪ ಮಹಾಕವಿಯ ಪ್ರತಿಷ್ಠಾನ ಆರಂಭಿಸಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಅವರನ್ನು ಭೇಟಿ ಮಾಡಿ ಒತ್ತಾಯ ಮಾಡಿದ್ದರು.
ಆರ್‌ಸಿಬಿಗೆ ಕೆಎಂಎಫ್ ಪ್ರಾಯೋಜಕತ್ವ
ಸಂದರ್ಭ: ಕರ್ನಾಟಕ ಹಾಲು ಮಹಾ ಮಂಡಳಿಯು ನಂದಿನಿ ಉತ್ಪನ್ನಗಳ ಪ್ರಚಾರದ ಭಾಗವಾಗಿ ಐಪಿಎಲ್-2026 ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಪ್ರಾಯೋಜಕತ್ವ ವಹಿಸಲಿದೆ.
ಎರಡು ವರ್ಷದ ಹಿಂದೆ ಸ್ಯಾಟೆಂಡ್, ಐರ್ಲೆಂಡ್ ತಂಡಗಳಿಗೆ ಕೆಎಂಎಫ್ ಪ್ರಾಯೋಜಕತ್ವ ನೀಡಿತ್ತು. ಈ ಬಾರಿ ಆರ್‌ಸಿಬಿ ತಂಡದ ಅಧಿಕೃತ ಪಾಲುದಾರರಾಗಿ ಕಾರ್ಯ ನಿರ್ವಹಿಸಲಿದ್ದು, ಇದಕ್ಕಾಗಿ ₹4.80 ಕೋಟಿ ವಿನಿಯೋಗ ಮಾಡಲಿದೆ.
‘ಕ್ರೀಡೆ ಮತ್ತು ಯುವಜನರನ್ನು ಪ್ರೋತ್ಸಾಹಿಸುವ ಧೈಯವನ್ನು ನಂದಿನಿ ಬ್ಯಾಂಡ್ ಹೊಂದಿದೆ. ಕರ್ನಾಟಕದ ಹೆಮ್ಮೆಯ ಎರಡು ಪ್ರತಿಷ್ಠಿತ ಬ್ಯಾಂಡ್‌ಗಳಾದ ‘ನಂದಿನಿ’ ಮತ್ತು ‘ಆರ್‌ಸಿಬಿ’ ಒಂದಾಗಿರುವುದು ಸಂತೋಷದ ವಿಷಯ. ಆರ್‌ಸಿಬಿ ಅಭಿಮಾನಿಗಳೊಂದಿಗೆ ನಂಟನ್ನು ವಿಸ್ತರಿಸಿ ಲೀಗ್‌ನಲ್ಲಿ ಸಂಭ್ರಮಿಸಲು ಎದುರು ನೋಡುತ್ತಿದ್ದೇವೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದ್ದಾರೆ.
‘ನಂದಿನಿ ಬ್ಯಾಂಡ್‌ನ ಯಾವುದೇ ಜಾಹೀರಾತು ಕ್ರೀಡಾಂಗಣದಲ್ಲಿ ಪ್ರಕಟವಾಗುವುದಿಲ್ಲ ಆಟಗಾರರ ಜರ್ಸಿಗಳ ಮೇಲೂ ನಂದಿನಿ ಲಾಂಛನ ಇರುವುದಿಲ್ಲ ಬದಲಿಗೆ ನಂದಿನಿ ಉತ್ಪನ್ನಗಳ ಜಾಹೀರಾತಿನಲ್ಲಿ ಆರ್‌ಸಿಬಿ ಆಟಗಾರರಾದ ವಿರಾಟ್ ಕೊಹ್ಲಿ. ರಜತ್ ಪಾಟೀದಾರ್, ದೇವದತ್ತ ಪಡಿಕಲ್ ಅವರ ಭಾವಚಿತ್ರ ಬಳಸಿಕೊಳ್ಳಲು ಅವಕಾಶ ಇರಲಿದೆ’ ಎಂದು ಹೇಳಿದ್ದಾರೆ.
ಚೊಚ್ಚಲ ಖೇಲೊ ಇಂಡಿಯಾ’ ಆದಿವಾಸಿ ಕ್ರೀಡಾಕೂಟ: ಈಜು: 5 ಚಿನ್ನ ಬಾಚಿದ ಕರ್ನಾಟಕ ಸಂದರ್ಭ: ಈಜಿನಲ್ಲಿ ‘ಪವರ್ಹೌಸ್’ ಎನಿಸಿರುವ ಕರ್ನಾಟಕ ತಂಡದ ಸ್ಪರ್ಧಿಗಳು, ಆರಂಭವಾದ ಮೊತ್ತಮೊದಲ ಖೇಲೊ ಇಂಡಿಯಾ ಆದಿವಾಸಿ ಕ್ರೀಡಾಕೂಟ ದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದರು. ಪಣಕ್ಕಿದ್ದ ಆರು ಚಿನ್ನದ ಪದಕಗಳಲ್ಲಿ ಐದನ್ನು ಬಾಚಿಕೊಂಡರು. ಕರ್ನಾಟಕದ ಧೋನೀಶ್ ಎನ್ ಪುರುಷರ 200 ಮೀ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಗಮನ ಸೆಳೆದರು.
ಕರ್ನಾಟಕದ ಮಣಿಕಂಠ ಮತ್ತು ಮೆಹಂಜಲಿ ತಲಾ ಎರಡು ಚಿನ್ನದ ಪದಕಗಳನ್ನು ಗೆದ್ದರು.
ಧೋನೀಶ್ 32 03.55 ಸೆ.ಗಳಲ್ಲಿ ಗುರಿತಲುಪಿದರು. ಕರ್ನಾಟಕದ ಇನ್ನೊಬ್ಬ ಸ್ಪರ್ಧಿ ಕೀರ್ತನ್ ಶರತ್ (2ನಿ:1099) ಸುಮಾರು ಏಳು ಸೆಕೆಂಡುಗಳು ಅಂತರದಲ್ಲಿ ಹಿಂದೆಬಿದ್ದು ಬೆಳ್ಳಿ ಗೆದ್ದರು. ಮಹಾರಾಷ್ಟ್ರದ ಭಕ್ತಿಶ್ ಕುಮೆ (2ನಿ:14.73 ಸೆ.) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಮೊದಲ ದಿನದ ಸ್ಪರ್ಧೆಗಳ ನಂತರ ಕರ್ನಾಟಕ ಪದಕ ಪಟ್ಟಿಯಲ್ಲಿ (5 ಚಿನ್ನ ಸಹಿತ 7 ಪದಕ) ಅಗ್ರಸ್ಥಾನದಲ್ಲಿದೆ.ಒಡಿಶಾ (1 ಚಿನ್ನ ಸೇರಿ 4 ಪದಕ) ಎರಡನೇ ಮತ್ತು ಆತಿಥೇಯ ಛತ್ತೀಸಗಢ (2 ಪದಕ) ನಾಲ್ಕನೇ ಸ್ನಾನದಲ್ಲಿದೆ.
ಒಡಿಶಾದ ಅಂಜುಲಿ ಮುಂಡಾ ಮಹಿಳೆಯರ 200 ಮೀ ಫ್ರೀಸ್ಟೈಲ್ ಸ್ಪರ್ಧೆಯನ್ನು 2ನಿ.39.02 ಸೆ.ಗಳಲ್ಲಿ ಜಯಿಸಿ ಕರ್ನಾಟಕದ ಏಕಸ್ವಾಮ್ಯ ತಡೆದರು. ಕೂದಲೆಳೆ ಅಂತರದಲ್ಲಿ ಹಿಂದೆಬಿದ್ದ ಕರ್ನಾಟಕದ ನಿಧಿ ಎಸ್. (2:39.09 ಸೆ.) ಎರಡನೇ ಸ್ಥಾನ ಮತ್ತು ಒಡಿಶಾದ ಶ್ರೀಯಾ ಪದಿಯಾಮಿ (2:49.04) ಮೂರನೇ ಸ್ಥಾನ ಗಳಿಸಿದರು.
ಪುರುಷರ 100 ಮೀ ಬ್ರೆನ್ಸಸ್ಟೋಕ್‌ನಲ್ಲಿ ಮಣಿಕಂಠ 1ನಿ.07.41ಸೆ.ಗಳಲ್ಲಿ ಗುರಿತಲುಪಿದರೆ, ಮಹಾರಾಷ್ಟ್ರದ ಪಲಾಶ್ ಠಾಕೂರ್ (1.11.69 ಸೆ.) ನಾಲ್ಕು ಸೆಕೆಂಡುಗಳ ಅಂತರದಲ್ಲಿ ಎರಡನೇ ಸ್ನಾನಕ್ಕೆ ಸರಿದರು.
ಮಣಿಕಂಠ ಅವರು 50 ಮೀ ಬಟಿರ್‌ಫೈನಲ್ಲೂ 27.60 ಸೆ.ಗಳ ಅವಧಿಯೊಡನೆ ಚಿನ್ನ ಗೆದ್ದರು ಅಸ್ಸಾಮಿನ ಫಿಮಿನೊ ಇಮೋನ್ ಲಾಲುಂಗ್ (27 69 ಸೆ) ಎರಡನೇ ಸ್ಥಾನ ಗಳಿಸಿದರು
ಮಹಿಳೆಯರ ವಿಭಾಗದಲ್ಲಿ ಮೆಹಂಜಲಿ ಸಾಧನೆ ಎದ್ದುಕಂಡಿತು 100 ಮೀ ಬ್ರೆನ್ಸಸ್ಟೋಕ್‌ನಲ್ಲಿ 1ನಿ 25 81 ಸೆ.ಗಳಲ್ಲಿ ಗುರಿತಲುಪಿದ ಅವರು ಮೊದಲಿಗರಾದರು ಛತ್ತೀಸಗಡದ ಅನುಷ್ಕಾ ಭಗತ್ (1.29 10) ಎರಡನೇ ಸ್ಥಾನ ಗಳಿಸಿದರು. ಅವರು ನಂತರ 50 ಮೀ. ಬಟರ್‌ಪ್ಲೇ ಸ್ಪರ್ಧೆಯನ್ನು 34.67 ಸೆ.ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
“ನಲ್ಸಾ (NALSA) ತೀರ್ಪಿನಿಂದ 2026ರ ತಿದ್ದುಪಡಿ ಮಸೂದೆಯವರೆಗೆ: ಲಿಂಗತ್ವ ಅಲ್ಪಸಂಖ್ಯಾತರ ಸ್ವಯಂ-ಗುರುತಿಸುವಿಕೆಯ ಹಕ್ಕು, ವೈದ್ಯಕೀಯ ತಪಾಸಣೆಯ ಸವಾಲುಗಳು ಮತ್ತು ಸಾಮಾಜಿಕ ನ್ಯಾಯದ ಹಾದಿಯಲ್ಲಿನ ಸಾಂವಿಧಾನಿಕ ಸಂಘರ್ಷ – ಒಂದು ವಿಶ್ಲೇಷಣೆ.”
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
“ಕರ್ನಾಟಕವು ತನ್ನ ಜನಸಂಖ್ಯಾ ಲಾಭಾಂಶದ (Demographic Dividend) ಉತ್ತುಂಗವನ್ನು ದಾಟಿದೆ: ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಉಳಿಸಿಕೊಳ್ಳಲು ‘ಉದ್ಯೋಗ ಸೃಜನೆ’ಯಿಂದ ‘ಉದ್ಯೋಗದ ಗುಣಮಟ್ಟ’ವನ್ನು ಖಚಿತಪಡಿಸಿಕೊಳ್ಳುವತ್ತ ಅಗತ್ಯವಿರುವ ಕಾರ್ಯತಂತ್ರದ ಬದಲಾವಣೆಯನ್ನು ಚರ್ಚಿಸಿ.”
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಪೂರ್ಣ ಬಜೆಟ್ ವಿಧಾನಸಭೆ ಒಪ್ಪಿಗೆ ಸಂದರ್ಭ: ವಿಧಾನಸಭೆಯು 2026-27ನೇ ಸಾಲಿನ ಹಣಕಾಸು ವರ್ಷಕ್ಕಾಗಿ ₹4.67 ಲಕ್ಷ ಕೋಟಿ ಮೊತ್ತದ ಪೂರ್ಣ ಪ್ರಮಾಣದ ಬಜೆಟ್ಗೆ ಅನುಮೋದನೆ ನೀಡಿತು.
ಬಜೆಟ್ ಮೇಲಿನ ಚರ್ಚೆಗೆ ತಾವು ಉತ್ತರ ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2026ರ ಕರ್ನಾಟಕ ಧನವಿನಿಯೋಗ ಮಸೂದೆಯನ್ನು ಮಂಡಿಸಿದರು.
ಬಜೆಟ್ ಮಂಡನೆಯ ವೇಳೆ ಬಜೆಟ್‌ನ ಗಾತ್ರ ₹4.48 ಲಕ್ಷ ಕೋಟಿ ಎಂದು ಉಲ್ಲೇಖಿಸಲಾಗಿತ್ತು ಧನವಿನಿಯೋಗ ಮಸೂದೆಯಲ್ಲಿ ಬಜೆಟ್ ಗಾತ್ರವನ್ನು ಸುಮಾರು ₹19,000 ಕೋಟಿಯಷ್ಟು ಹೆಚ್ಚಿಗೆ ತೋರಿಸಲಾಗಿದೆ. ಕೇಂದ್ರದ ಅನುದಾನ, ಸಹಾಯಾನುದಾನ, ಪ್ರಕೃತಿ ವಿಕೋಪಕ್ಕೆ ಪರಿಹಾರ ಎಲ್ಲವೂ ಸೇರಿ ಈ ಮೊತ್ತ ಹೆಚ್ಚಳವಾಗಿದೆ.
ಆರ್ಥಿಕ ವರ್ಷದ ಕೊನೆಯಲ್ಲಿ ಮಂಡಿಸಲಾದ ಅಂತಿಮ ಹಾಗೂ ಕೊನೆಯ ಕಂತಿನ ₹14 ಸಾವಿರ ಕೋಟಿ ಮೊತ್ತದ ಪೂರಕ ಅಂದಾಜಿಗೂ ವಿಧಾನಸಭೆ ಒಪ್ಪಿಗೆ ಸೂಚಿಸಿತು.
ಪರಿಷ್ಕೃತ ಉಡಾನ್ ಯೋಜನೆ ₹28,840 ಕೋಟಿ ಎತ್ತಿಟ್ಟ ಕೇಂದ್ರ
ಸಂದರ್ಭ: ಪ್ರಾದೇಶಿಕ ವಿಮಾನ ಸಂಪರ್ಕವನ್ನು ಬಲಪಡಿಸುವ ಸಲುವಾಗಿ ‘ಪರಿಷ್ಕೃತ ಉಡಾನ್ ಯೋಜನೆ’ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ನಾಲ್ಕು ಕೋಟಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಒಟ್ಟು ₹28,840 ಕೋಟಿ ವೆಚ್ಚದಲ್ಲಿ 2026-27ನೇ ಹಣಕಾಸು ವರ್ಷದಿಂದ 2035-36ರವರೆಗೆ ಈ ಯೋಜನೆ ಜಾರಿಗೊಳಿಸಲಾಗುವುದು.
ಈ ಯೋಜನೆಯಡಿ, ಪ್ರಾದೇಶಿಕ ಸಂಪರ್ಕ ಹೆಚ್ಚಿಸಲು ಪ್ರಸ್ತುತ ಬಳಕೆಯಲ್ಲಿಲ್ಲದ 100 ಏರ್ ಸ್ಕ್ರಿಪ್‌ಗಳನ್ನು ವಿಮಾನ ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಮುಂದಿನ ಎಂಟು ವರ್ಷಗಳಲ್ಲಿ ₹12,159 ಕೋಟಿ ವೆಚ್ಚ ಮಾಡಲಾಗುವುದು.
ಕೇವಲ ಪ್ರಾದೇಶಿಕ ಸಂಪರ್ಕ ಯೋಜನೆ ಅಡಿಯಲ್ಲಿ ಬರುವ ವಿಮಾನ ನಿಲ್ದಾಣಗಳಿಗೆ ಅಧಿಕ ನಿರ್ವಹಣಾ ವೆಚ್ಚ ತಗಲುತ್ತಿದೆ ಆದರೆ, ಈ ನಿಲ್ದಾಣಗಳಿಗೆ ಸೀಮಿತ ಆದಾಯ ಇದೆ. ಹೀಗಾಗಿ ಈ ಯೋಜನೆಯಡಿ ವಿಮಾನ ನಿಲ್ದಾಣಗಳಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆ ಬೆಂಬಲ ನೀಡಲಾಗುತ್ತದೆ ಪ್ರತಿ ವಿಮಾನ ನಿಲ್ದಾಣಕ್ಕೆ ವರ್ಷಕ್ಕೆ ಗರಿಷ್ಠ ₹3.06 ಕೋಟಿ ಮತ್ತು ಪ್ರತಿ ಹಲಿಪೋರ್ಟ್/ವಾಟರ್ ಏರೋಡೋಮ್ ಗೆ ವರ್ಷಕ್ಕೆ ₹90 ಲಕ್ಷದಂತೆ ಮೂರು ವರ್ಷ ನೆರವು ನೀಡಲಾಗುತ್ತದೆ 441 ನಿಲ್ದಾಣಗಳಿಗಾಗಿ ₹2,577 ಕೋಟಿ ಮೀಸಲಿಡಲಾಗಿದೆ.
ಗುಡ್ಡಗಾಡು, ದೂರದ ಪ್ರದೇಶಗಳು, ದ್ವೀಪಗಳು ಮತ್ತು ಅಭಿವೃದ್ಧಿ ಆಕಾಂಕ್ಷಿ ಜಿಲ್ಲೆಗಳಲ್ಲಿ ತಲಾ ₹15 ಕೋಟಿ ವೆಚ್ಚದಲ್ಲಿ 200 ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗುವುದು ಇದಕ್ಕೆ ಎಂಟು ವರ್ಷಗಳಲ್ಲಿ ₹3,661 ಕೋಟಿ ವೆಚ್ಚ ಮಾಡಲಾಗುವುದು.
ವಿಮಾನಯಾನ ಸಂಸ್ಥೆಗಳು ನಿಗದಿತ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲು ಕಾರ್ಯಸಾಧ್ಯತಾ ಅಂತರ ನಿಧಿ (ವಿಜಿಎಫ್) ನೀಡಲಾಗು ವುದು ಮುಂದಿನ 10 ವರ್ಷಗಳಲ್ಲಿ ವಿಮಾನಯಾನ ಸಂಸ್ಥೆಗಳಿಗೆ ₹10.043 ಕೋಟಿ ನಿಧಿ ನೀಡಲು ಉದ್ದೇಶಿಸಲಾಗಿದೆ.
ದೂರದ ಮತ್ತು ದುರ್ಗಮ ಭೂಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ಸಣ್ಣ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಕೊರತೆ ನೀಗಿಸಲು ಪವನ್ ಹನ್ಸ್ ಸಂಸ್ಥೆಗೆ ಎರಡು ‘ಎಚ್‌ಎಎಲ್ ಧ್ರುವ’ ಹೆಲಿಕಾಪ್ಟರ್‌ಗಳನ್ನು ಮತ್ತು ಅಲಯನ್ಸ್ ಏರ್ ಸಂಸ್ಥೆಗೆ ಎರಡು ‘ಎಚ್‌ಎಎಲ್ ಡಾರ್ನಿಯರ್’ ವಿಮಾನಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ.
ಯೋಜನೆಯ ಪ್ರಮುಖ ವೈಶಿಷ್ಟ್ಯಗಳು
ಟೈರ್-2 ಮತ್ತು ಟೈರ್-3 ನಗರಗಳ ಸಂಪರ್ಕ: ಕೇವಲ ಮೆಟ್ರೋ ನಗರಗಳಲ್ಲದೆ, ರಾಜ್ಯದ ಶಿವಮೊಗ್ಗ, ರಾಯಚೂರು, ವಿಜಯಪುರದಂತಹ ನಗರಗಳನ್ನು ಪ್ರಮುಖ ವಾಣಿಜ್ಯ ಕೇಂದ್ರಗಳೊಂದಿಗೆ ಬೆಸೆಯುವುದು.
ಹೆಲಿ-ಉಡಾನ್ (Heli-UDAN): ಪ್ರವಾಸಿ ತಾಣಗಳು ಮತ್ತು ತುರ್ತು ಸಂದರ್ಭಗಳಲ್ಲಿ ಸುಲಭ ಸಂಚಾರಕ್ಕಾಗಿ ಹೆಲಿಕಾಪ್ಟರ್ ಸೇವೆಗಳಿಗೆ ಹೆಚ್ಚಿನ ಉತ್ತೇಜನ.
ಅಂತರಾಷ್ಟ್ರೀಯ ಉಡಾನ್: ಆಯ್ದ ರಾಜ್ಯಗಳಿಂದ ಸೀಮಿತ ಅಂತರಾಷ್ಟ್ರೀಯ ತಾಣಗಳಿಗೆ (ಉದಾಹರಣೆಗೆ ಆಗ್ನೇಯ ಏಷ್ಯಾ ರಾಷ್ಟ್ರಗಳು) ಕಡಿಮೆ ದರದಲ್ಲಿ ವಿಮಾನ ಯಾನ ಆರಂಭಿಸುವ ಪ್ರಸ್ತಾವನೆ.
ಸುಸ್ಥಿರ ಇಂಧನ ಬಳಕೆ: ನೂತನ ವಿಮಾನ ನಿಲ್ದಾಣಗಳಲ್ಲಿ ಸೌರಶಕ್ತಿ ಮತ್ತು ಹಸಿರು ಇಂಧನ ಬಳಕೆಗೆ ಒತ್ತು ನೀಡುವುದು.
ಕರ್ನಾಟಕದ ಮೇಲೆ ಪ್ರಭಾವ ಈ ಬೃಹತ್ ಅನುದಾನದಡಿ ಕರ್ನಾಟಕಕ್ಕೆ ಹಲವಾರು ಪ್ರಯೋಜನಗಳು ಸಿಗಲಿವೆ:
ಹೊಸ ವಿಮಾನ ನಿಲ್ದಾಣಗಳು: ಕಾರವಾರ ಮತ್ತು ಧರ್ಮಸ್ಥಳದಂತಹ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳ ಬಳಿ ಏರ್‌ಸ್ಟ್ರಿಪ್‌ಗಳ ನಿರ್ಮಾಣಕ್ಕೆ ಅವಕಾಶ.
ಕೈಗಾರಿಕಾ ಪ್ರಗತಿ: ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದ ನಗರಗಳಿಗೆ ವಿಮಾನ ಸಂಪರ್ಕ ಸಿಗುವುದರಿಂದ ಹೂಡಿಕೆದಾರರಿಗೆ ಅನುಕೂಲವಾಗಲಿದೆ.
ಪ್ರವಾಸೋದ್ಯಮ ವೃದ್ಧಿ: ಹಂಪಿ, ಬಾದಾಮಿಯಂತಹ ತಾಣಗಳಿಗೆ ಹತ್ತಿರದ ವಿಮಾನ ನಿಲ್ದಾಣಗಳಿಂದ ನೇರ ಸಂಪರ್ಕ ಕಲ್ಪಿಸುವುದು.
ಯೋಜನೆಯ ಆರಂಭ ಅಧಿಕೃತ ಚಾಲನೆ: ಈ ಯೋಜನೆಯನ್ನು ಅಕ್ಟೋಬರ್ 21, 2016 ರಂದು ನವದೆಹಲಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ಮೊದಲ ವಿಮಾನ ಯಾನ: ಈ ಯೋಜನೆಯಡಿ ಮೊದಲ ವಿಮಾನವು ಏಪ್ರಿಲ್ 27, 2017 ರಂದು ಶಿಮ್ಲಾದಿಂದ ದೆಹಲಿಗೆ ಸಂಚರಿಸಿತು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು. ಧ್ಯೇಯವಾಕ್ಯ: “ಹವಾಯಿ ಚಪ್ಪಲಿ ಹಾಕುವವರೂ ವಿಮಾನ ಯಾನ ಮಾಡಬೇಕು” ಎಂಬ ಆಶಯದೊಂದಿಗೆ ಇದನ್ನು ಜಾರಿಗೆ ತರಲಾಯಿತು.
ಉಡಾನ್ ಯೋಜನೆಯ ವಿವಿಧ ಹಂತಗಳು (Phases)
ಹಂತ (Phase)
ವರ್ಷ
ಗಮನಹರಿಸಿದ ಅಂಶಗಳು
ಉಡಾನ್ 1.0
2017
70 ವಿಮಾನ ನಿಲ್ದಾಣಗಳ ಸಂಪರ್ಕಕ್ಕೆ ಚಾಲನೆ.
ಉಡಾನ್ 2.0
2018
ಮೊದಲ ಬಾರಿಗೆ ಹೆಲಿಪ್ಯಾಡ್‌ಗಳನ್ನು ಯೋಜನೆಯಡಿ ತರಲಾಯಿತು.
ಉಡಾನ್ 3.0
2019
ಪ್ರವಾಸಿ ತಾಣಗಳು ಮತ್ತು ಜಲ ವಿಮಾನ (Seaplanes) ಸೌಲಭ್ಯಕ್ಕೆ ಒತ್ತು.
ಉಡಾನ್ 4.0
2020
ಈಶಾನ್ಯ ರಾಜ್ಯಗಳು ಮತ್ತು ದ್ವೀಪ ಪ್ರದೇಶಗಳ ಸಂಪರ್ಕಕ್ಕೆ ಆದ್ಯತೆ.
ಉಡಾನ್ 5.0
2023
600 ಕಿ.ಮೀ ದೂರದ ಮಿತಿಯನ್ನು ತೆಗೆದುಹಾಕಿ ದೀರ್ಘ ಪ್ರಯಾಣಕ್ಕೆ ಅವಕಾಶ.
ಪರಿಷ್ಕೃತ ಉಡಾನ್
2026
ಮುಂದಿನ 10 ವರ್ಷಗಳ ಸುಸ್ಥಿರ ಅಭಿವೃದ್ಧಿಗಾಗಿ ₹28,840 ಕೋಟಿ ಮೀಸಲು.
ಐವಿಎಫ್‌ಆರ್‌ಟಿ ಮುಂದುವರಿಕೆ:
ವಲಸೆ, ವೀಸಾ, ವಿದೇಶಿಯರ ನೋಂದಣಿ ಮತ್ತು ಟ್ರ್ಯಾಕಿಂಗ್ (ಐವಿಎಫ್‌ಆರ್‌ಟಿ) ಯೋಜನೆಯನ್ನು 2031ರ ಮಾರ್ಚ್ ಅಂತ್ಯದವರೆಗೆ ಮುಂದುವರಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ₹1,800 ಕೋಟಿ ಮೀಸಲಿಡಲಾಗಿದೆ.
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಎಲ್ಜಿಬಿಟಿಕ್ಕು ಸಮುದಾಯದಲ್ಲಿ ಆತಂಕ ಮೂಡಿಸಿದ ಕೇಂದ್ರದ ನಡೆ: ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕು ಮೊಟಕು? ಸಂದರ್ಭ: ಕೇಂದ್ರ ಸರ್ಕಾರವು ಲಿಂಗತ್ವ ಅಲ್ಪ ಸಂಖ್ಯಾತರ ಕಾಯ್ದೆ-2019ಕ್ಕೆ ಕೆಲವು ಬದಲಾವಣೆಗಳನ್ನು ಮಾಡಿ, ಲಿಂಗತ್ವ ಅಲ್ಪ ಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ-2026ಕ್ಕೆ ಲೋಕಸಭೆಯಲ್ಲಿ ಅಂಗೀಕಾರ ಪಡೆದಿದೆ. ರಾಜ್ಯಸಭೆಯಲ್ಲಿಯೂ ಅಂಗೀಕಾರ ಸಿಕ್ಕಿದೆ.
ಲಿಂಗತ್ಯ ಅಲ್ಪಸಂಖ್ಯಾತರ ಕುರಿತ ವ್ಯಾಖ್ಯಾನವು ಅಸ್ಪಷ್ಟವಾಗಿದ್ದು, ನಿಜವಾದ ಸಂತ್ರಸ್ತರನ್ನು ಗುರುತಿಸಿ, ಅವರಿಗೆ ಕಾಯ್ದೆಯ ಪ್ರಯೋಜನಗಳನ್ನು ದೊರಕಿಸುವುದು ಅಸಾಧ್ಯವಾಗಿದೆ ತಮ್ಮ ಯಾವ ತವೂ ಇಲ್ಲದೇ ಜೈವಿಕ ಕಾರಣದಿಂದ ತೀವ್ರ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರುವಂಥವರ ಹಕ್ಕುಗಳನ್ನು ಮಾತ್ರವೇ ರಕ್ಷಣೆ ಮಾಡುವುದು ಮಸೂದೆಯ ಉದ್ದೇಶ ಎಂದು ಕೇಂದ್ರವು ಪ್ರತಿಪಾದಿಸಿದೆ.
2019ರ ಕಾಯ್ದೆಯ ಪ್ರಕಾರ, ಲಿಂಗತ್ವ ಅಲ್ಪ ಸಂಖ್ಯಾತರು ಎಂದರೆ, ಹುಟ್ಟಿನಿಂದ ದತ್ತವಾದ ಲಿಂಗತ್ಯಕ್ಕಿಂತ ಭಿನ್ನವಾದ ಲಿಂಗತ್ಯ ಹೊಂಗ್ಲಿರುವವರು. ಹುಟ್ಟಿದಾಗ ಗಂಡಾಗಿದ್ದು ನಂತರ ಹೆಣ್ಣಾಗಿರಬಹುದು (ಟ್ರಾನ್ಸ್ ವುಮನ್), ಹುಟ್ಟಿದಾಗ ಹೆಣ್ಣಾಗಿ ನಂತರ ಗಂಡಾಗಿರಬಹುದು (ಟ್ರಾನ್ಸ್ ಮನ್). ಅಂತರಲಿಂಗತ್ವ ಹೊಂದಿರಬಹುದು, ಇಲ್ಲವೇ ಕಿನ್ನರ್, ಹಿಜ್ರಾ, ಅರವಣೆ, ಮತ್ತು ಜೋಗತಿ-ಇಂಥ ಸಾಮಾಜಿಕ ಸಾಂಸ್ಕೃತಿಕ ಚಹರೆಗಳನ್ನು ಹೊಂದಿರುವವರು, ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ, ಲೇಸರ್ ಥೆರಪಿ, ಹಾರ್ಮೋನ್ ಥೆರಪಿ ಇತ್ಯಾದಿಗಳಿಗೆ ಒಳಗಾಗಿರಬಹುದು ಇಲ್ಲದಿರಬಹುದು. ಎಲ್ಲರನ್ನೂ ವಿಶಾಲ ಅರ್ಥದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎಂದೇ ಗುರುತಿಸಲಾಗುತ್ತಿತ್ತು.
2019ರ ಕಾಯ್ದೆಯಲ್ಲಿನ ಕೆಲವು ವಿಚಾರಗಳಲ್ಲಿ ಗೊಂದಲಗಳಿದ್ದು, ಅವು ಕಾಯ್ದೆ ಜಾರಿಗೆ ಅಡ್ಡಿಯಾಗಿವೆ; ಲಿಂಗತ್ವ ಅಲ್ಪಸಂಖ್ಯಾತರು ಎಂದರೆ ಯಾರು, ಅವರನ್ನು ಹೇಗೆ ಗುರುತಿಸಲಾಗುತ್ತಿದೆ ಎನ್ನುವ ಅಂಶಗಳು ಕಾಯ್ದೆ ಜಾರಿಯಲ್ಲಿ ನಿರ್ಣಾಯಕವಾಗಿವೆ ಎಂದು ಕೇಂದ್ರವು ಹೇಳಿದೆ. ಈ ಅಂಶಗಳನ್ನು ಮಸೂದೆಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯ ಬಗ್ಗೆಯೇ ಲಿಂಗತ್ವ ಅಲ್ಪ ಸಂಖ್ಯಾತರು ಆಕ್ಷೇಪಣೆ ಎತ್ತಿರುವುದು.
ಸ್ವಯಂ ಗುರುತಿಸಿಕೊಳ್ಳುವಿಕೆ ರದ್ದು: ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಲಿಂಗತ್ಯದ ಗ್ರಹಿಕೆಯ ಆಧಾರದ ಮೇಲೆ ಲಿಂಗತ್ವ ಅಲ್ಪ ಸಂಖ್ಯಾತರೆಂದು ಸ್ವಯಂ ಗುರುತಿಸಿಕೊಳ್ಳಲು 2019ರ ಕಾಯ್ದೆಯ ಸೆಕ್ಷನ್ 4 (2) ಅವಕಾಶ ಕಲ್ಪಿಸಿತ್ತು ತಿದ್ದುಪಡಿ ಮಸೂದೆಯಲ್ಲಿ ಈ ಅಂಶವನ್ನು ಕೈಬಿಡಲಾಗಿದೆ.
ತಿದ್ದುಪಡಿ ಮಸೂದೆಯಲ್ಲಿ ‘ಲಿಂಗತ್ವ ಅಲ್ಪ ಸಂಖ್ಯಾತರು ಎಂದರೆ ಯಾರು ಎನ್ನುವುದನ್ನು ಸೀಮಿತವಾಗಿ ವ್ಯಾಖ್ಯಾನಿಸಲಾಗಿದೆ. ಲಿಂಗತ್ಯ ಅಲ್ಪಸಂಖ್ಯಾತರು ಎಂದರೆ, ಜೈವಿಕ ಕಾರಣಗಳಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿರುವ ಹಿಜ್ರಾ, ಕಿನ್ನರ್, ಅರವಾಣಿ, ಜೋಗತಿ ಮೊದಲಾದ ನಿರ್ದಿಷ್ಟ ಸಾಮಾಜಿಕ-ಸಾಂಸ್ಕೃತಿಕ ಸಮುದಾಯಗಳಿಗೆ ಸೇರಿದವರು, ಅಂತರಲಿಂಗಿಗಳು, ನಿರ್ದಿಷ್ಟ ದೈಹಿಕ ಚಹರೆಗಳನ್ನು ಹೊಂದಿರುವವರು, ಶಸ್ತ್ರಚಿಕಿತ್ಸೆಗೆ ಒಳಗಾದವರು.
ವೈದ್ಯಕೀಯ ಮಂಡಳಿ: ಸರ್ಕಾರದ ಯೋಜನೆಗಳ ನೆರವು ಪಡೆಯಲು ಲಿಂಗತ್ವ ಅಲ್ಪ ಸಂಖ್ಯಾತರು ಗುರುತಿನ ಚೀಟಿ ಹೊಂದಿರಬೇಕು. ಅದು ಅವರ ಗುರುತಿನ ಪ್ರಾಥಮಿಕ ದಾಖಲೆಯಾಗಿದೆ. ಒಬ್ಬ ವ್ಯಕ್ತಿ ತಾನು ಲಿಂಗತ್ವ ಅಲ್ಪಸಂಖ್ಯಾತ ಎಂದು ಗುರುತಿನ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದರೆ, 2019ರ ಕಾಯ್ದೆ ಪ್ರಕಾರ, ಜಿಲ್ಲಾಧಿಕಾರಿ ಪ್ರಮಾಣ ಪತ್ರ ನೀಡುತ್ತಿದ್ದರು. ಅದಕ್ಕೆ ಯಾವುದೇ ವೈದ್ಯಕೀಯ ತಪಾಸಣೆಯ ಅಗತ್ಯವಿರಲಿಲ್ಲ ಆದರೆ, ಈ ಅಂಶವನ್ನು 2026ರ ಮಸೂದೆಯಲ್ಲಿ ತಿದ್ದುಪಡಿ ಮಾಡಲಾಗಿದೆ.
ಲಿಂಗತ್ವ ಅಲ್ಪ ಸಂಖ್ಯಾತರ ಗುರುತಿನ ಚೀಟಿ ನೀಡಲು ವೈದ್ಯಕೀಯ ಮಂಡಳಿ’ಯು ಅವರನ್ನು ತಪಾಸಣೆ ಮಾಡುತ್ತದೆ ಮತ್ತು ಅದರ ಆಧಾರದಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ, ಜತೆಗೆ, ಲಿಂಗತ್ವ ಅಲ್ಪ ಸಂಖ್ಯಾತ ವ್ಯಕ್ತಿಯು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದನ್ನು ದೃಢೀಕ್ಷೆಸುವ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು (ಸೆಕ್ಷನ್ 5 (1ಎ). ಅವುಗಳನ್ನು ಪರಿಶೀಲಿಸಿ ವ್ಯಕ್ತಿಗೆ ಗುರುತಿನ ಚೀಟಿ ನೀಡಬೇಕೇ ಅಥವಾ ಬೇಡವೇ ಎನ್ನುವ ಅಂತಿಮ ನಿರ್ಧಾರವನ್ನು ಜಿಲ್ಲಾಧಿಕಾರಿಗಳು ಕೈಗೊಳ್ಳುತ್ತಾರೆ.
ಅಪರಾಧ ವ್ಯಾಪ್ತಿ ವಿಸ್ತರಣೆ: ಲಿಂಗತ್ವ ಅಲ್ಪ ಸಂಖ್ಯಾತರನ್ನು ಒಲ್ಲದ ಕೆಲಸಕ್ಕೆ ಒಲವಂತಪಡಿಸುವುದು, ಸಾರ್ವಜನಿಕ ಸ್ಥಳ ಪ್ರವೇಶಿಸುವುದಕ್ಕೆ ಅಡ್ಡಿಪಡಿಸುವುದು, ಮನೆ/ಹಳ್ಳಿ ತೊರೆಯುವಂತೆ ಮಾಡುವುದು, ದೈಹಿಕ, ಮಾನಸಿಕ, ಲೈಂಗಿಕ ಕಿರುಕುಳ ನೀಡುವುದು ಇತ್ಯಾದಿಗಳನ್ನು ಅಪರಾಧ ಎಂದು ಪರಿಗಣಿಸಿ, ಶಿಕ್ಷೆ ವಿಧಿಸುವ ನಿಬಂಧನೆಗಳನ್ನು 2019ರ ಕಾಯ್ದೆಯು (ಸೆಕ್ಷನ್ 18) ಒಳಗೊಂಡಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಿದರೆ, ಅದರ ಸ್ವರೂಪವನ್ನು ಆಧರಿಸಿ ಅವರಿಗೆ 6 ತಿಂಗಳಿನಿಂದ ಎರಡು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾಯ್ದೆ ಅವಕಾಶ ನೀಡಿದೆ.
ತಿದ್ದುಪಡಿ ಮಸೂದೆಯಲ್ಲಿ ಸೆಕ್ಷನ್ 18ಕ್ಕೆ ನಾಲ್ಕು ಉಪನಿಯಮಗಳನ್ನು ಸೇರಿಸಿ ಅಪರಾಧದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರು ಯಾವುದೇ ವಯಸ್ಕನನ್ನು/ಮಗುವನ್ನು ಬಲವಂತ ಆಮಿಷ ಪ್ರಲೋಭನೆ, ವಂಚನೆ, ಪ್ರಭಾವದಿಂದ ಅವರ ಒಪ್ಪಿಗೆ ಇಲ್ಲದೆಯೇ ಶಸ್ತ್ರಚಿಕಿತ್ಸೆ/ಹಾರ್ಮೋನ್ ಬದಲಾವಣೆ ಮೂಲಕ ಲಿಂಗತ್ವ ಅಲ್ಪಸಂಖ್ಯಾತರ ಗುರುತನ್ನು ಆಳವಡಿಸಿಕೊಳ್ಳುವಂತೆ ಒತ್ತಾಯಿಸಿದರೆ, ಅದನ್ನು ಅಪರಾಧ ಎಂದು ವರ್ಗೀಕರಿಸಲಾಗಿದೆ ಇದಕ್ಕೆ. ಅಪರಾಧದ ಸ್ವರೂಪವನ್ನು ಆಧರಿಸಿ ₹1 ಲಕ್ಷದಿಂದ ಆರಂಭಿಸಿ ₹5 ಲಕ್ಷದವರೆಗೆ ದಂಡ ಮತ್ತು ಐದು ವರ್ಷಗಳಿಂದ ಜೀವಿತಾವಧಿವರೆಗೆ ಜೈಲು ಶಿಕ್ಷೆ ವಿಧಿಸಲು ಈ ಉಪನಿಯಮಗಳು ಅವಕಾಶ ಕಲ್ಪಿಸುತ್ತವೆ.
ನಲ್ಸಾv/s ಭಾರತಸರ್ಕಾರ
ಲಿಂಗತ್ವ ಅಲ್ಪ ಸಂಖ್ಯಾತರನ್ನು ಅಧಿಕೃತವಾಗಿ ಗುರುತಿಸಲು ಕಾರಣವಾಗಿದ್ದು ನಲ್ಸಾ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ 2014ರಲ್ಲಿ ನೀಡಿದ್ದ ತೀರ್ಪು ಈ ತೀರ್ಪು ಎರಡು ಮುಖ್ಯ ಅಂಶಗಳನ್ನು ಒಳಗೊಂಡಿದೆ.
ಒಂದು, ಹೆಣ್ಣು, ಗಂಡು ಇದ್ದಂತೆ ಲಿಂಗತ್ಯ ಅಲ್ಪಸಂಖ್ಯಾತರು ತೃತೀಯ ಲಿಂಗಿಗಳಾಗಿದ್ದು, ಅವರಿಗೆ ಸಂವಿಧಾನದ ಎಲ್ಲ ಮೂಲಭೂತ ಹಕ್ಕುಗಳೂ ಇವೆ. ಎರಡು, ಒಬ್ಬ ವ್ಯಕ್ತಿ ತನ್ನನ್ನು ತಾನು ಹೆಣ್ಣು, ಗಂಡು, ಲಿಂಗತ್ವ ಅಲ್ಪಸಂಖ್ಯಾತ ಎಂದು ಸ್ವಯಂ ಗುರುತಿಸಿಕೊಳ್ಳಬಹುದು.
ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ಖಾತರಿಪಡಿಸುವುದಕ್ಕಾಗಿ ಮತ್ತು ಅವರ ಅಭ್ಯುದಯಕ್ಕಾಗಿ ಸೂಕ್ತ ಕಾನೂನು ರೂಪಿಸುವಂತೆಯೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸರ್ಕಾರಕ್ಕೆ ಸೂಚಿಸಿತ್ತು. ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆ-2019 ಅಸ್ತಿತ್ವಕ್ಕೆ ಬರಲು ಇದೇ ಪ್ರಮುಖ ಕಾರಣವಾಗಿತ್ತು.
‘ಪರವಾನಗಿ ರದ್ದು ಗೊಂಡ ಎನ್ಜಿಒ ಸ್ವತ್ತು ನಿರ್ವಹಣೆಗೆ ಹೊಸ ಪ್ರಾಧಿಕಾರ’ ಸಂದರ್ಭ: ವಿದೇಶಗಳಿಂದ ದೇಣಿಗೆ ಪಡೆಯುವ ಎನ್ಜಿಒಗಳ ಮೇಲಿನ ಮೇಲ್ವಿಚಾರಣೆಯನ್ನು ಮತ್ತಷ್ಟು ಬಿಗಿಗೊಳಿಸುವುದು ಹಾಗೂ ಪರವಾನಗಿ ರದ್ದು ಗೊಂಡ ಎನ್ಜಿಒಗಳ ಸ್ವತ್ತುಗಳ ಜಪ್ತಿ ಮತ್ತು ನಿರ್ವಹಣೆಗೆ ಹೊಸ ಪ್ರಾಧಿಕಾರ ರಚನೆ ಸೇರಿ ಹಲವು ಅವಕಾಶಗಳನ್ನು ಒಳಗೊಂಡ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.
ಗೃಹ ಖಾತೆ ರಾಜ್ಯ ಸಚಿವ ‘ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ-2026 ಅನ್ನು ಲೋಕಸಭೆಯಲ್ಲಿ ಮಂಡಿಸಿದರು.
ವಿದೇಶಗಳಿಂದ ಪಡೆಯುವ ದೇಣಿಗೆಗಳ ಮೇಲ್ವಿಚಾರಣೆ, ನಿರ್ವಹಣೆಗೆ ‘ಉದ್ದೇಶಿತ ಪ್ರಾಧಿಕಾರ’ದ ಮೂಲಕ ಸಮಗ್ರ ಚೌಕಟ್ಟು ರೂಪಿಸುವ ಅವಕಾಶ ಗಳನ್ನು ಈ ಮಸೂದೆ ಒಳಗೊಂಡಿದೆ.
‘ಎನ್‌ಜಿಒಗಳ ನೋಂದಣಿರನ್ನು ಗೊಂಡ ಅಥವಾ ಒಪ್ಪಿಸಿದ ಸಂದರ್ಭ ಗಳಲ್ಲಿ ಅವುಗಳು ಪಡೆಯು ತ್ತಿದ್ದ ವಿದೇಶಿ ದೇಣಿಗೆಗಳು ಹಾಗೂ ಅವುಗಳಿಂದ ಸೃಜಿಸಲಾದ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿ ಕೆಲ ಕಾನೂನಾತ್ಮಕ ನ್ಯೂನತೆ ಗಳಿರುವುದನ್ನು ಗುರುತಿಸ ಲಾಗಿದೆ’.
‘ಪೂರ್ವಾನುಮತಿ ಪಡೆದ ಬಳಿಕ ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ಹಾಗೂ ಬಳಕೆ ಮಾಡಿಕೊಳ್ಳುವುದಕ್ಕೆ ಕಾಲಮತಿ ನಿಗದಿ ಮಾಡುವ ಅವಕಾಶ ಗಳನ್ನು ಈ ಮಸೂದೆ ಒಳ ಗೊಂಡಿದೆ ಪರವಾನಗಿ ಅವಧಿ ಮುಕ್ತಾಯಗೊಂಡ ಸಂದರ್ಭದಲ್ಲಿ ಎನ್‌ಜಿಒಗಳ ಕಾರ್ಯಾಚರಣೆ ಸಮಾಪ್ತಿಗೊಳಿಸುವ ಪ್ರಕ್ರಿಯೆ ನೆರವೇರಿಸುವುದು, ನವೀಕರಣ, ದಂಡಗಳನ್ನು ತರ್ಕಬದ್ಧಗೊಳಿಸುವುದು ಹಾಗೂ ತನಿಖೆ ಆರಂಭಕ್ಕೂ ಮುನ್ನ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಬೇಕು ಎಂಬ ಹಲವಾರು ಅವಕಾಶಗಳು ಕೂಡ ಮಸೂದೆಯಲ್ಲಿವೆ’.
ಪ್ರಮುಖಅಂಶಗಳು
ವಿದೇಶಿ ದೇಣಿ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) 2010 ಅನ್ನು 2011ರ ಮೇ 1ರಂದು ಜಾರಿಗೊಳಿಸಲಾಯಿತು. 2016, 2018 ಹಾಗೂ 2020ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
ಎಫ್‌ಸಿಆರ್‌ಎ ಅಡಿ ದೇಶದಲ್ಲಿ ಪ್ರಸ್ತುತ 16 ಸಾವಿರ ಎನ್‌ಜಿಒಗಳು ನೋಂದಣಿ ಮಾಡಿಸಿವೆ.
ಈ ಎನ್‌ಜಿಒಗಳು ವಾರ್ಷಿಕ ಅಂದಾಜು ₹22 ಸಾವಿರ ಕೋಟಿಗೂ ಅಧಿಕ ವಿದೇಶಿ ದೇಣಿಗೆ ಪಡೆಯುತ್ತಿವೆ.
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ಪತ್ರಿಕೆ-V: ಸಾಮಾನ್ಯ ಅಧ್ಯಯನ-4
ನೈತಿಕ ಪ್ರಕರಣ ಅಧ್ಯಯನ (Ethics Case Study) ವಿಷಯ: ಘನತೆಯುಕ್ತ ಸಾವು (Death with Dignity) ಮತ್ತು ನಿಷ್ಕ್ರಿಯ ದಯಾಮರಣ (Passive Euthanasia).
೧. ಪ್ರಕರಣದ ಸಾರಾಂಶ (Case Summary): ಹರೀಶ್ ರಾಣಾ ಎಂಬ 32 ವರ್ಷದ ಯುವಕ ಕಳೆದ 13 ವರ್ಷಗಳಿಂದ ‘ವೆಜಿಟೇಟಿವ್ ಸ್ಟೇಟ್’ನಲ್ಲಿ (ಸಸ್ಯದಂತಹ ಸ್ಥಿತಿ) ಇದ್ದರು. 2013 ರಲ್ಲಿ ಕಟ್ಟಡದಿಂದ ಬಿದ್ದು 100% ಪಾರ್ಶ್ವವಾಯು ಪೀಡಿತರಾಗಿದ್ದ ಅವರಿಗೆ ವೈದ್ಯಕೀಯ ನೆರವಿನ ಮೂಲಕ ಪೋಷಣೆ ನೀಡಲಾಗುತ್ತಿತ್ತು (CANH). ಸುಪ್ರೀಂ ಕೋರ್ಟ್ ಇತ್ತೀಚೆಗೆ ಈ ವೈದ್ಯಕೀಯ ನೆರವನ್ನು ಹಿಂತೆಗೆದುಕೊಳ್ಳಲು ಅನುಮತಿ ನೀಡಿತು, ಇದು ಭಾರತದ ಇತಿಹಾಸದಲ್ಲೇ ಇಂತಹ ಮೊದಲ ತೀರ್ಪಾಗಿದೆ. ತೀರ್ಪು ಬಂದ ಕೆಲವೇ ದಿನಗಳಲ್ಲಿ ರಾಣಾ ನಿಧನರಾದರು ಮತ್ತು ಅವರ ಕುಟುಂಬವು ಅವರ ಕಣ್ಣು ಹಾಗೂ ಹೃದಯದ ಕವಾಟಗಳನ್ನು ದಾನ ಮಾಡಿತು.
೨. ಈ ಪ್ರಕರಣದಲ್ಲಿರುವ ನೈತಿಕ ದ್ವಂದ್ವಗಳು (Ethical Dilemmas):
ಬದುಕುವ ಹಕ್ಕು ವರ್ಸಸ್ ಘನತೆಯುಕ್ತ ಸಾವಿನ ಹಕ್ಕು: ಸಂವಿಧಾನದ 21ನೇ ವಿಧಿಯು ಬದುಕುವ ಹಕ್ಕನ್ನು ನೀಡುತ್ತದೆ. ಆದರೆ, ಕೇವಲ ಯಂತ್ರಗಳ ಸಹಾಯದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ದಶಕಗಳ ಕಾಲ ಬದುಕುವುದು ‘ಘನತೆಯುಕ್ತ ಜೀವನ’ವೇ? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.
ಪೋಷಕರ ಸಂಕಟ ಮತ್ತು ಕರ್ತವ್ಯ: ಒಬ್ಬ ಪೋಷಕನಾಗಿ ಮಗನ ಜೀವ ಉಳಿಸುವುದು ಕರ್ತವ್ಯವೋ ಅಥವಾ ಮಗ ಅನುಭವಿಸುತ್ತಿರುವ ಅಸಹನೀಯ ನೋವನ್ನು ಕೊನೆಗಾಣಿಸುವುದು ಪ್ರೀತಿಯೋ?
ವೈದ್ಯಕೀಯ ಧರ್ಮ (Beneficence vs Non-maleficence): ವೈದ್ಯರ ಕೆಲಸ ಜೀವ ಉಳಿಸುವುದು. ಆದರೆ ಗುಣಪಡಿಸಲು ಅಸಾಧ್ಯವಾದ ಸ್ಥಿತಿಯಲ್ಲಿ ಚಿಕಿತ್ಸೆಯನ್ನು ಮುಂದುವರಿಸುವುದು ರೋಗಿಗೆ ನೀಡುವ ಹಿಂಸೆಯಾಗುತ್ತದೆಯೇ?
ಅಂಗಾಂಗ ದಾನದ ಔಚಿತ್ಯ: ಮರಣದ ನಂತರವೂ ಸಮಾಜಕ್ಕೆ ಕೊಡುಗೆ ನೀಡುವುದು ಒಬ್ಬ ವ್ಯಕ್ತಿಯ ಘನತೆಯನ್ನು ಹೇಗೆ ಹೆಚ್ಚಿಸುತ್ತದೆ?
೩. ವಿಶ್ಲೇಷಣಾತ್ಮಕ ಪ್ರಶ್ನೆಗಳು (Questions for Analysis): ಪ್ರಶ್ನೆ ೧: ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ನೀವು ನೈತಿಕವಾಗಿ ಸಮರ್ಥಿಸುತ್ತೀರಾ? ನಿಮ್ಮ ವಾದಕ್ಕೆ ಕಾರಣಗಳನ್ನು ನೀಡಿ. ಮಾದರಿ ಉತ್ತರ ಹಾದಿ: ಇಲ್ಲಿ ‘ಅರಿಷ್ಟಾಟಲ್’ ಅವರ ‘ಸುವರ್ಣ ಮಧ್ಯಮ’ ಅಥವಾ ‘ಯುಟಿಲಿಟೇರಿಯನಿಸಂ’ (ಗರಿಷ್ಠ ಜನರಿಗೆ ಗರಿಷ್ಠ ಸುಖ) ಸಿದ್ಧಾಂತವನ್ನು ಬಳಸಬಹುದು. ದಶಕಗಳ ಕಾಲ ಚಿಕಿತ್ಸೆ ನೀಡಿದರೂ ಚೇತರಿಕೆ ಕಾಣದಿದ್ದಾಗ, ವ್ಯಕ್ತಿಯನ್ನು ನೋವಿನಿಂದ ಮುಕ್ತಗೊಳಿಸುವುದು ಮಾನವೀಯತೆಯ ದೃಷ್ಟಿಯಿಂದ ಸರಿ ಎಂಬ ವಾದ ಮಂಡಿಸಬಹುದು.
ಪ್ರಶ್ನೆ ೨: ಇಂತಹ ಪ್ರಕರಣಗಳಲ್ಲಿ ಕುಟುಂಬದ ಒಪ್ಪಿಗೆ ಮತ್ತು ವೈದ್ಯಕೀಯ ಮಂಡಳಿಯ ವರದಿಯ ನಡುವೆ ಯಾವುದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಬೇಕು? ಮಾದರಿ ಉತ್ತರ ಹಾದಿ: ವೈದ್ಯಕೀಯ ವರದಿಯು ತಾಂತ್ರಿಕ ಸತ್ಯವನ್ನು ಹೇಳಿದರೆ, ಕುಟುಂಬದ ಒಪ್ಪಿಗೆಯು ಭಾವನಾತ್ಮಕ ಮತ್ತು ನೈತಿಕ ಸತ್ಯವನ್ನು ಹೇಳುತ್ತದೆ. ಕಾನೂನು ಈ ಎರಡನ್ನೂ ಸಮತೋಲನದಲ್ಲಿರಿಸಬೇಕು.
ಪ್ರಶ್ನೆ ೩: ಹರೀಶ್ ರಾಣಾ ಅವರ ಕುಟುಂಬದ ಅಂಗಾಂಗ ದಾನದ ನಿರ್ಧಾರವು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತದೆ? ಮಾದರಿ ಉತ್ತರ ಹಾದಿ: ಇದು ‘ಪರೋಪಕಾರ’ದ (Altruism) ಅತ್ಯುನ್ನತ ಉದಾಹರಣೆ. ಸಾವಿನಲ್ಲೂ ಸಾರ್ಥಕತೆ ಕಾಣುವ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಇದು ಪ್ರತಿಬಿಂಬಿಸುತ್ತದೆ.
೪. ಪ್ರಮುಖ ಪರಿಕಲ್ಪನೆಗಳು (Key Concepts to highlight): ನಿಷ್ಕ್ರಿಯ ದಯಾಮರಣ (Passive Euthanasia): ಬದುಕನ್ನು ಉಳಿಸುವ ಕೃತಕ ನೆರವನ್ನು (ಉದಾಹರಣೆಗೆ ವೆಂಟಿಲೇಟರ್ ಅಥವಾ ಪೋಷಣೆ) ಹಿಂತೆಗೆದುಕೊಳ್ಳುವುದು. ಲಿವಿಂಗ್ ವಿಲ್ (Living Will): ಒಬ್ಬ ವ್ಯಕ್ತಿಯು ತಾನು ಪ್ರಜ್ಞಾಹೀನ ಸ್ಥಿತಿಗೆ ಹೋದರೆ ತನಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಅಥವಾ ನೀಡಬಾರದು ಎಂದು ಮುಂಚಿತವಾಗಿ ಬರೆದಿಡುವ ದಾಖಲೆ. ಅರುಣಾ ಶಾನ್‌ಬಾಗ್ ಪ್ರಕರಣ: ಈ ಪ್ರಕರಣದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ದಯಾಮರಣದ ಬಗ್ಗೆ ಚರ್ಚೆ ಆರಂಭಿಸಿತ್ತು.
೫. ತೀರ್ಮಾನ (Conclusion): ಹರೀಶ್ ರಾಣಾ ಅವರ ಪ್ರಕರಣವು ಕಾನೂನು ಮತ್ತು ಭಾವನೆಗಳ ನಡುವಿನ ಸೇತುವೆಯಾಗಿದೆ. “ಜೀವನದ ಉದ್ದಕ್ಕಿಂತ ಜೀವನದ ಆಳ ಮತ್ತು ಗುಣಮಟ್ಟ ಮುಖ್ಯ” ಎಂಬ ಸತ್ಯವನ್ನು ಇದು ಎತ್ತಿ ತೋರಿಸುತ್ತದೆ. ಈ ಪ್ರಕರಣವು ಭವಿಷ್ಯದಲ್ಲಿ ಇಂತಹ ಕಠಿಣ ಪರಿಸ್ಥಿತಿಯಲ್ಲಿರುವ ಸಾವಿರಾರು ಕುಟುಂಬಗಳಿಗೆ ಒಂದು ದಿಕ್ಸೂಚಿಯಾಗಲಿದೆ.
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
‘ಭಾರತಕ್ಕೆ ಹೊರ್ಮುಜ್ ಜಲಸಂಧಿ ಮುಕ್ತ’ ಸಂದರ್ಭ: ಅಮೆರಿಕ ಹಾಗೂ ಮಿತ್ರದೇಶಗಳನ್ನು ಹೊರತುಪಡಿಸಿದ ರಾಷ್ಟ್ರಗಳ ಹಡಗುಗಳು ಹೊರ್ಮುಜ್ ಜಲಸಂಧಿ ಮೂಲಕ ಸಾಗಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕಡಲ ಸಂಘಟನೆಗಳ ಸದಸ್ಯರಾಷ್ಟ್ರಗಳಿಗೆ ಇರಾನ್ ತಿಳಿಸಿದೆ.
ಇತಿಹಾಸ ಮತ್ತು ಸ್ಥಾಪನೆ ಸ್ಥಾಪನೆ: 17 ಮಾರ್ಚ್ 1948 ರಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಡಿ ಸ್ಥಾಪನೆ. ಕಾರ್ಯಾರಂಭ: 1959ರಲ್ಲಿ ಅಧಿಕೃತವಾಗಿ ಕಾರ್ಯಾರಂಭ. ಮುಖ್ಯ ಉದ್ದೇಶ: ಸಮುದ್ರ ಸಾರಿಗೆ ಸುರಕ್ಷತೆ, ಮಾಲಿನ್ಯ ನಿಯಂತ್ರಣ, ಮತ್ತು ಅಂತರರಾಷ್ಟ್ರೀಯ ಸಾಗರ ಕಾನೂನುಗಳ ರೂಪಣೆ.
ಮುಖ್ಯ ಕಾರ್ಯಗಳು ಸಮುದ್ರ ಸುರಕ್ಷತೆ: ಹಡಗುಗಳ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆಗಳಿಗೆ ಅಂತರರಾಷ್ಟ್ರೀಯ ಮಾನದಂಡ. ಪರಿಸರ ಸಂರಕ್ಷಣೆ: ಸಮುದ್ರ ಮಾಲಿನ್ಯ ತಡೆ (oil spills, plastics, chemical discharge). ಸಾಗರ ಕಾನೂನು: ಹಡಗುಗಳ ನೋಂದಣಿ, ಸಮುದ್ರ ಮಾರ್ಗಗಳಲ್ಲಿ ಸುರಕ್ಷಿತ ಸಂಚಾರ. ಸಮುದ್ರ ಕಾರ್ಮಿಕರ ಹಕ್ಕುಗಳು: ನಾವಿಕರ ಸುರಕ್ಷತೆ ಮತ್ತು ಕಲ್ಯಾಣ. ಅಂತರರಾಷ್ಟ್ರೀಯ ಸಹಕಾರ: ಸದಸ್ಯ ರಾಷ್ಟ್ರಗಳ ನಡುವೆ ಸಮುದ್ರ ಸಾರಿಗೆ ನಿಯಮಗಳ ಏಕೀಕರಣ.
ಪ್ರಸ್ತುತ ಪರಿಸ್ಥಿತಿ (2026) ಮಧ್ಯಪ್ರಾಚ್ಯ ಸಂಕಷ್ಟ: ಹೋರ್ಮುಜ್ ಕಣಿವೆಯಲ್ಲಿ ಹಡಗುಗಳ ಮೇಲೆ ದಾಳಿಗಳನ್ನು IMO ಖಂಡಿಸಿದೆ. ತುರ್ತು ಸಭೆ: ಲಂಡನ್‌ನಲ್ಲಿ ವಿಶೇಷ ಸಭೆ ನಡೆಸಿ, ಹಡಗುಗಳ ಸುರಕ್ಷಿತ ಸಂಚಾರಕ್ಕೆ ಅಂತರರಾಷ್ಟ್ರೀಯ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದೆ. ಸಚಿವರ ಹೇಳಿಕೆ: “ನಾವಿಕರ ಸಾವನ್ನು ಸಹಿಸಲಾಗುವುದಿಲ್ಲ, ಅವರು ಗುರಿಯಾಗಬಾರದು” ಎಂದು ಪ್ರಧಾನ ಕಾರ್ಯದರ್ಶಿ ಅರ್‌ಸೆನಿಯೋ ಡೊಮಿಂಗ್ವೆಜ್ ಹೇಳಿದ್ದಾರೆ.
ಮಹತ್ವ ಭಾರತಕ್ಕೆ ಪ್ರಾಮುಖ್ಯತೆ: 90% ಕ್ಕಿಂತ ಹೆಚ್ಚು ವಿದೇಶಿ ವ್ಯಾಪಾರ ಸಮುದ್ರ ಮಾರ್ಗದ ಮೂಲಕ ಸಾಗುತ್ತದೆ. IMO ನಿಯಮಗಳು ಭಾರತದ ಹಡಗುಗಳು, ಬಂದರುಗಳು ಮತ್ತು ಸಮುದ್ರ ಸಾರಿಗೆ ಸುರಕ್ಷತೆಗೆ ನೇರ ಪರಿಣಾಮ ಬೀರುತ್ತವೆ. ಜಾಗತಿಕ ಆರ್ಥಿಕತೆ: IMO ನಿಯಮಗಳು ಜಾಗತಿಕ ವ್ಯಾಪಾರ, ಇಂಧನ ಸಾಗಣೆ, ಮತ್ತು ಪರಿಸರ ಸಂರಕ್ಷಣೆಗೆ ಮೂಲಭೂತ.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಜಲ ಜೀವನ್ ಮಿಷನ್ (ಜೆಜೆಎಂ)
ಸಂದರ್ಭ:‘ಮನೆ ಮನೆಗೆ ಪೈಪ್ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಜಲ ಜೀವನ್ ಮಿಷನ್ (ಜೆಜೆಎಂ) ನಿಧಿಯಡಿ ಕೇಂದ್ರ ದಿಂದ ಹಂಚಿಕೆಯಾದ ₹24,819.48 ಕೋಟಿಯಲ್ಲಿ ರಾಜ್ಯಕ್ಕೆ ಕೇವಲ ₹ 11,189 ಕೋಟಿ ಪಡೆಯಲಷ್ಟೆ ಸಾಧ್ಯವಾಗಿದೆ’ ಎಂದು ಜಲ ಜೀವನ್ ಮಿಷನ್ ಅನುಷ್ಠಾನ ಕುರಿತ ಮಹಾಲೇಖಪಾಲರ ವರದಿ ಉಲ್ಲೇಖಿಸಿದೆ.
‘2019-20ರಿಂದ 2023-24 ರವರೆಗಿನ ಅವಧಿಯ ಕುರಿತ ಕಾರ್ಯ ನಿರ್ವಹಣಾ ವರದಿಯನ್ನು ವಿಧಾನಸಭೆ ಯಲ್ಲಿ ಮಂಡಿಸಲಾಯಿತು.
ಟೆಂಡರ್ ವಿಳಂಬ, ಭೂಮಿ ಲಭ್ಯತೆಗೂ ಮೊದಲೇ ಕಾಮಗಾರಿ ವಹಿಸಿರುವುದು, ಭೂ ಮಂಜೂರಾತಿ ಪಡೆಯಲು ವಿಳಂಬ, ಡಿಪಿಆರ್‌ಗಳ ಕೊರತೆ ಮತ್ತಿತರ ನಾನಾ ಕಾರಣಗಳಿಗೆ ರಾಜ್ಯಕ್ಕೆ ಕೇಂದ್ರದಿಂದ ಅನುದಾನ ಪಡೆಯಲು ಸಾಧ್ಯ ಆಗಿಲ್ಲ. ರಾಜ್ಯ ಸರ್ಕಾರವು ಬಳಕೆ ಪ್ರಮಾಣಪತ್ರ ಮತ್ತು ಲೆಕ್ಕಪರಿಶೋಧಕ ವರದಿ ಸಲ್ಲಿಸಲು 3ರಿಂದ 9 ತಿಂಗಳವರೆಗೆ ವಿಳಂಬ ಆಗಿರುವುದು ಅನುದಾನ ಬಳಕೆ ಆಗದಿರಲು ಕಾರಣ’ ಎಂದೂ ವರದಿ ಹೇಳಿದೆ.
ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿರುವ ಈ ಯೋಜನೆಯಲ್ಲಿ ಸಮುದಾಯಗಳ ಸಹಭಾಗಿತ್ವವೂ ಇದೆ ಸಮುದಾಯವೂ ಕೊಡುಗೆ ನೀಡಬೇಕು. ಆದರೆ, ರಾಜ್ಯದಲ್ಲಿ ಸಮುದಾಯದ ಕೊಡುಗೆ ಅತ್ಯಲ್ಪವಾಗಿದ್ದು, ನಿರೀಕ್ಷಿತ ₹1,594.90 ಕೋಟಿಯಲ್ಲಿ ಕೇವಲ ₹22.57 ಕೋಟಿ ಮಾತ್ರ ಸಂಗ್ರಹಿಸ ಲಾಗಿದೆ ಎಂದು ವರದಿ ಬೊಟ್ಟು ಮಾಡಿದೆ.
‘ರಾಜ್ಯದ 533 ಗ್ರಾಮಗಳಲ್ಲಿ ಕ್ಷೇತ್ರ ತಪಾಸಣಾ ಕಿಟ್ ಗಳನ್ನು ಬಳಸುವ ಬಗ್ಗೆ, ಮಹಿಳೆಯರಿಗೆ ತರಬೇತಿ ನೀಡಿರಲಿಲ್ಲ ಕಲುಷಿತ ನೀರಿನ ಮಾದರಿಗಳ ಪರೀಕ್ಷೆಯನ್ನು 2023-24ರಲ್ಲಿ ಮಾತ್ರ ಮಾಡಲಾಗಿದೆ. ಅದೂ ಕೇವಲ ಶೇ 18ರಷ್ಟು 31 ಜಿಲ್ಲಾ ಮಟ್ಟದ ಮತ್ತು 48 ತಾಲ್ಲೂಕು ಮಟ್ಟದ ಪ್ರಯೋಗಾಲಯಗಳಲ್ಲಿ ನೀರಿನಲ್ಲಿ ಆರ್ಸೆನಿಕ್ ಮಟ್ಟ ಪರೀಕ್ಷೆ ಮಾಡುವ ವ್ಯವಸ್ಥೆ ಇಲ್ಲ. ಸೂಕ್ಷ್ಮ ಜೀವ ವೈಜ್ಞಾನಿಕ ನಿಯಾಂತಗಳನ್ನು ಪರೀಕ್ಷಿಸಲು 17 ಜಿಲ್ಲಾಮಟ್ಟದ ಮತ್ತು 4 ತಾಲ್ಲೂಕು ಮಟ್ಟದ ಪ್ರಯೋಗಾಲಯಗಳನ್ನು ಮಾತ್ರ ಸಜ್ಜುಗೊಳಿಸಲಾಗಿತ್ತು 2019-10ರಿಂದ 2023-24ರ ಅವಧಿಯಲ್ಲಿ ಗೊತ್ತುಪಡಿಸಿದ ರಾಜ್ಯದ ಪ್ರಯೋಗಾಲಯದಿಂದ ಒಂದೇ ಒಂದು ಮಾದರಿಯನ್ನು ಪರೀಕ್ಷಿಸಲು ಇಲಾಖೆ ವಿಫಲವಾಗಿತ್ತು’ ಎಂದು ವರದಿಯಲ್ಲಿದೆ.
ಪರಿಣಾಮ ‘ಪ್ರಾಥಮಿಕ ಶಾಲೆಗೆ ಹೋಗುವ ವಿದ್ಯಾರ್ಥಿನಿಯರ ಶಾಲೆ ಬಿಡುವ ಪ್ರಮಾಣ ಕಡಿಮೆ ಮಾಡಲುಸುತ್ತು ಮಹಿಳೆಯರ ಹೊರೆಯನ್ನು ಕಡಿಮೆ ಮಾಡಲು ಈ ಯೋಜನೆ ಸಹಾಯ ಮಾಡಿದೆ. ಆದರೆ, ಉದ್ಯೋಗ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಅಷ್ಟೊಂದು ಪರಿಣಾಮ ಬೀರಿಲ್ಲ’ ಎಂದೂ ವರದಿ ಅಭಿಪ್ರಾಯಪಟ್ಟಿದೆ.
ಶಿಫಾರಸು ಜೆಜೆಎಂ ಅನುಷ್ಠಾನ ಮೇಲ್ವಿಚಾರಣೆಗೆ ರಚಿಸಲಾದ ಸಮಿತಿಗಳು ಸಂಪನ್ಮೂಲ ಬಳಕೆಯ ಸಮನ್ವಯ ಕಡೆಗೆ ರಾಜ್ಯ ಸರ್ಕಾರ ಗಮನಹರಿಸಬೇಕು, ಕಾಮಗಾರಿಗಳನ್ನು ಪೂರ್ಣಗೊಳಿಸುವಾಗ ಆಗುವ ವಿಳಂಬ ತಪ್ಪಿಸಲು ಭೂಮಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಗುತ್ತಿಗೆದಾರರ ಟೆಂಡರ್ ಸಾಮರ್ಥ್ಯ ಪರಿಗಣಿಸಿದ ನಂತರ ಕಾಮಗಾರಿ ವಹಿಸಬೇಕು ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಪಡೆದುಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ನೀರಿನ ಗುಣಮಟ್ಟದ ಪರೀಕ್ಷೆಗೆ ಆದ್ಯತೆ ನೀಡಬೇಕು ತಪ್ಪಾದ ವರದಿ ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್ಲೋಡ್ ಆಗದಂತೆ ರಾಜ್ಯ ಸರ್ಕಾರ ಪರಿಶೀಲಿಸಬೇಕು ಎಂದೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಈ ಯೋಜನೆಯ ಅವಧಿ 2024ರ ಮಾರ್ಚ್ 31ಕ್ಕೆ ಕೊನೆಗೊಂಡಿದೆ. ಆದರೆ, ಅದೇ ವರ್ಷದ ನವೆಂಬರ್‌ವರೆಗೆ 72.14 ಲಕ್ಷ ಮನೆಗಳ ಪೈಕಿ ಇನ್ನೂ 24.52 ಲಕ್ಷ ಮನೆಗಳಿಗೆ (ಶೇ 34) ನಲ್ಲಿಯ ಸಂಪರ್ಕ ಒದಗಿಸಿಲ್ಲ ಎಂದೂ ವರದಿ ಉಲ್ಲೇಖಿಸಿದೆ.
‘ಹಲವು ಕಡೆ ವಾಸಸ್ಥಳಗಳಲ್ಲಿ ಮನೆಗಳ ಸಂಖ್ಯೆ ಕಡಿಮೆ ಆಗಿರುವುದರಿಂದ ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಕಾಮಗಾರಿಗಳನ್ನು ಕೈಬಿಡಲಾಗಿದೆ. ಕೆಲವು ಕಡೆ ಓವರ್ ಹೆಡ್ ಟ್ಯಾಂಕ್ (ಒಎಚ್ ಟಿ) ನಿರ್ಮಾಣಕ್ಕೆ ಭೂಮಿಯನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸದ ಕಾರಣ ಕಾಮಗಾರಿ ಆರಂಭಿಸಲು ಸಾಧ್ಯ ಆಗಿಲ್ಲ.
ಪಂಚಾಯತ್‌ರಾಜ್ ಇಲಾಖೆಯು 2024ರ ಮೇ ವೇಳೆಗೆ ತೆರೆದ ಬಾವಿಯನ್ನು ನಿರ್ಮಿಸಿ, ಕೊಳವೆಗಳನ್ನು ಹಾಕಲು ₹ 60.41 ಲಕ್ಷ ವೆಚ್ಚ ಮಾಡಿದ್ದರೂ ಕಾಮಗಾರಿ ಅರ್ಥದಲ್ಲಿಯೇ ಸ್ಥಗಿತಗೊಂಡಿದೆ ಹೀಗಾಗಿ, 435 ಮನೆಗಳಿಗೆ ನೀರು ಪೂರೈಸುವ ಉದ್ದೇಶ ಈಡೇರಿಲ್ಲ’ ಎಂದು ವರದಿ ಹೇಳಿದೆ.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
“ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಕುರಿತು ಇತಿಹಾಸ, ಕಾನೂನು ಪ್ರಕ್ರಿಯೆ ಹಾಗೂ ರಾಜಕೀಯ ಪರಿಣಾಮಗಳನ್ನು ಚರ್ಚಿಸಿ. 2029ರೊಳಗೆ ಮಹಿಳಾ ಪ್ರತಿನಿಧಿತ್ವವನ್ನು ಖಚಿತಪಡಿಸಲು ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ಹಾಗೂ ಸಂವಿಧಾನ ತಿದ್ದುಪಡಿ ಪ್ರಸ್ತಾಪಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.”
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
“ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಅನುಷ್ಠಾನವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. ಕೇಂದ್ರದಿಂದ ಹಂಚಿಕೆಯಾದ ₹24,819.48 ಕೋಟಿಯಲ್ಲಿ ರಾಜ್ಯವು ಕೇವಲ ₹11,189 ಕೋಟಿ ಮಾತ್ರ ಬಳಸಲು ಸಾಧ್ಯವಾದ ಕಾರಣವೇನು? ಅನುಷ್ಠಾನದಲ್ಲಿ ಎದುರಾದ ಸವಾಲುಗಳು, ಮಹಾಲೇಖಪಾಲರ ವರದಿ ಉಲ್ಲೇಖಗಳು ಹಾಗೂ ಮನೆ ಮನೆಗೆ ಪೈಪ್ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಪರಿಣಾಮಕಾರಿ ಕ್ರಮಗಳನ್ನು ಸೂಚಿಸಿ.”
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಮತಾಂತರ, ಆಂಧ್ರಪ್ರದೇಶ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್: ಎಸ್ಸಿ ಸ್ಥಾನಮಾನ ನಷ್ಟ ಸಂದರ್ಭ: ಪರಿಶಿಷ್ಟ ಜಾತಿಗೆ (ಎಸ್ಸಿ) ಸೇರಿದ ವ್ಯಕ್ತಿಯು ಹಿಂದೂ, ಬೌದ್ಧ ಅಥವಾ ಸಿಖ್ ಧರ್ಮ ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರಗೊಂಡಲ್ಲಿ ಆತ/ಆಕೆಯ ಎಸ್ಸಿ ಸ್ನಾನಮಾನ ನಷ್ಟವಾಗಲಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳನ್ನು ಹೊರತುಪಡಿಸಿ ಇತರ ಧರ್ಮಗಳಲ್ಲಿ ಶ್ರದ್ಧೆ-ನಂಬಿಕೆ ಹೊಂದಿರುವುದಾಗಿ ಘೋಷಿಸಿಕೊಳ್ಳುವ ವ್ಯಕ್ತಿಯು ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದವರು ಎಂದು ಪರಿಭಾವಿಸು ವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪರಿಶಿಷ್ಟ ಪಂಗಡದವರ (ಎಸ್‌ಟಿ) ಮತಾಂತರಕ್ಕೆ ಸಂಬಂಧಪಟ್ಟಂತೆ ಈ ಆದೇಶವು ಅನ್ವಯಿಸದು. ಏಕೆಂದರೆ, ಎಸ್‌ಟಿ ಸ್ನಾನಮಾನವು ಧರ್ಮ ಆಧಾರಿತ ವಾಗಿಲ್ಲ. ಈ ಪಂಗಡಕ್ಕೆ ಸೇರಿದವರು ಅನುಸರಿಸುವ ಸಂಪ್ರದಾಯ, ಜೀವನ ಪದ್ಧತಿ ಮತ್ತು ಸಂಬಂಧಿಸಿದ ಬುಡಕಟ್ಟು ಗುಂಪು ಈ ಸಮುದಾಯವನ್ನು ಹೇಗೆ ಸ್ವೀಕರಿಸುತ್ತದೆ ಎಂಬುದರ ಮೇಲೆ ಎಸ್‌ಟಿ ಸ್ನಾನಮಾನ ನಿರ್ಧಾರವಾಗುತ್ತದೆ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.
‘ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯು ಇತರ ಧರ್ಮಕ್ಕೆ ಮತಾಂತರಗೊಂಡಾಗ ಆ ಕ್ಷಣವೇ ಹಾಗೂ ಸಂಪೂರ್ಣವಾಗಿ ಆತ/ಆಕೆ ಎಸ್‌ಸಿ ಸ್ನಾನಮಾನವನ್ನು ಕಳೆದುಕೊಳ್ಳುವರು’ ಎಂಬ ಆಂಧ್ರ ಪ್ರದೇಶ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿದ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
‘ಯಾವುದೇ ವ್ಯಕ್ತಿಯು ಕ್ರೈಸ್ತ ಧರ್ಮ ಸ್ವೀಕರಿಸಿ, ಆ ಧರ್ಮದಲ್ಲಿ ಶ್ರದ್ಧೆ ಹೊಂದಿದ್ದಾಗಿ ಘೋಷಿಸಿ ಹಾಗೂ ಅದನ್ನು ಪಾಲನೆ ಮಾಡುವುದನ್ನು ಆರಂಭಿಸಿದ ಬಳಿಕ ಆ ವ್ಯಕ್ತಿಯು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು ಎಂಬುದಾಗಿ ಪರಿಗಣಿಸಲಾಗದು’ ಎಂದು ಆಂಧ್ರ ಪ್ರದೇಶ ಹೈಕೋರ್ಟ್ ಕಳೆದ ವರ್ಷ ಏಪ್ರಿಲ್ 30ರಂದು ಆದೇಶಿಸಿತ್ತು.
‘ಜಾತಿ ವ್ಯವಸ್ಥೆ ಕ್ರೈಸ್ತ ಧರ್ಮಕ್ಕೆ ವಿರುದ್ಧವಾದುದು. ಹೀಗಾಗಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು ‘ಎಸ್‌ಸಿ, ಎಸ್‌ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ’ಯ ಅವಕಾಶಗಳಡಿ ಪರಿಹಾರ ಕೇಳುವುದನ್ನು ನಿರ್ಬಂಧಿಸಲಾಗಿದೆ’ ಎಂದು ಹೈಕೋರ್ಟ್ ಹೇಳಿತ್ತು.
ಈ ಆದೇಶ ಪ್ರಶ್ನಿಸಿ, ಪಾದ್ರಿ ಚಿಂತಾಡ ಆನಂದ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪ್ರಶಾಂತ ಕುಮಾರ್ ಮಿಶ್ರಾ, ಎನ್.ವಿ.ಅಂಜಾರಿಯಾ ಹಾಗೂ ಮನಮೋಹನ್ ಅವರು ಇದ್ದ ಪೀಠ ನಡೆಸಿತು.
ಚಿಂತಾಡ ಆನಂದ ಅವರ ಮೇಲ್ಮನವಿಯನ್ನು ವಜಾಗೊಳಿಸುವ ಜೊತೆಗೆ, ಎಸ್‌ಸಿ, ಎಸ್‌ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯ ಅವಕಾಶಗಳಡಿ ವ್ಯಕ್ತಿಯೊಬ್ಬರ ವಿರುದ್ಧ ಹೊರಿಸಿದ್ದ ಆರೋಪಗಳನ್ನು ನ್ಯಾಯಪೀಠ ರದ್ದು ಮಾಡಿದೆ.
ಈ ಪ್ರಕರಣದಲ್ಲಿ ಮೇಲ್ಮನವಿದಾರ ಕ್ರೈಸ್ತ ಧರ್ಮದಿಂದ ಪುನಃ ತನ್ನ ಮೂಲ ಧರ್ಮಕ್ಕೆ ಮತಾಂತರಗೊಂಡಿಲ್ಲ ಅಥವಾ ಆತ ಸಮುದಾಯಕ್ಕೆ ಮರಳಿರುವುದಾಗಿ ಮಾದಿಗ ಸಮುದಾಯ ಒಪ್ಪಿಕೊಂಡಿಲ್ಲ ಎಂಬುದನ್ನು ಪೀಠ ಗಮನಿಸಿದೆ.
ಮೇಲ್ಮನವಿದಾರ ಕ್ರೈಸ್ತ ಧರ್ಮದಲ್ಲಿ ಶ್ರದ್ಧೆ-ನಂಬಿಕೆ ಹೊಂದಿದ್ದು ಅದನ್ನು ಪಾಲನೆ ಮಾಡುತ್ತಿದ್ದಾರೆ. ದಶಕಕ್ಕೂ ಹೆಚ್ಚು ಕಾಲ ಪಾದ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಂಧ್ರಪ್ರದೇಶದ ಬಾಪಟ್ಟ ಜಿಲ್ಲೆಯ ಪಿಟ್ಟಲವಾನಿಪಾಲೆಂನಲ್ಲಿ ಪಾದ್ರಿಗಳ ಫೆಲೋಶಿಪ್‌ನ ಖಜಾಂಚಿಯೂ ಆಗಿದ್ದಾರೆ. ಗ್ರಾಮದ ಮನೆಗಳಲ್ಲಿ ಪ್ರತಿ ಭಾನುವಾರ ಪ್ರಾರ್ಥನಾ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಅವರ ಈ ಉದ್ಯೋಗ ಹಾಗೂ ವರ್ತನೆಯು ಮೇಲ್ಮನವಿದಾರ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಹೊಂದಿರುವುದನ್ನು ಸಾರ್ವಜನಿಕವಾಗಿ ಘೋಷಿಸಿದಂತೆಯೆ ಆಗಿದೆ ಎಂದೂ ಪೀಠ ಹೇಳಿದೆ.
ದಯಾಮರಣ: ಹರೀಶ್ ಇನ್ನಿಲ್ಲ ಸಂದರ್ಭ: ದೇಶದಲ್ಲಿ ಪರೋಕ್ಷ ದಯಾಮರಣಕ್ಕೆ ಅವಕಾಶ ಪಡೆದುಕೊಂಡ ಮೊದಲ ವ್ಯಕ್ತಿ, 13 ವರ್ಷಗಳಿಂದ ಕೋಮಾ ದಲ್ಲಿದ್ದ ಗಾಜಿಯಾಬಾದ್ನ ಹರೀಶ್ ರಾಣಾ (31) ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ನಿಧನರಾದರು.
ದಶಕಕ್ಕೂ ಹೆಚ್ಚು ಕಾಲ ಹಾಸಿಗೆ ಯಲ್ಲಿಯೇ ಜೀವಚ್ಛವದಂತೆ ಇದ್ದ ಅವರ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಮಾರ್ಚ್ 11ರಂದು ಅನುಮತಿ ನೀಡಿತ್ತು ಸುಪ್ರೀಂಕೋರ್ಟ್ನ 2023ರ ಪರಿಷ್ಕೃತ ಮಾರ್ಗಸೂಚಿ ಅನ್ವಯ ದೇಶದಲ್ಲಿ ದಯಾಮರಣಕ್ಕೆ ಅವಕಾಶ ಪಡೆದ ಮೊದಲ ಪ್ರಕರಣ ಹರೀಶ್ ರಾಣಾ ಅವರದ್ದಾಗಿದೆ.
ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದ ರಾಣಾ, 2013ರಲ್ಲಿ ವಸತಿ ನಿಲಯದ ನಾಲ್ಕನೇ ಮಹಡಿಯಿಂದ ಆಕಸ್ಮಿಕ ವಾಗಿ ಜಾರಿ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿ ಕೋಮಾಕ್ಕೆ ಜಾರಿದ್ದರು.
‘ಇವ ನಮ್ಮವ’ ಮಸೂದೆ ಅಂಗೀಕಾರ ಸಂದರ್ಭ: ಮರ್ಯಾದೆಗೇಡು ಹತ್ಯೆಯಂತಹ ಅಮಾನವೀಯ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದ ‘ಇವ ನಮ್ಮವ ಇವ ನಮ್ಮವ ಮಸೂದೆ’ಗೆ ಸುದೀರ್ಘ ಅವಧಿಯ ಚರ್ಚೆಯ ನಂತರ ವಿಧಾನ ಪರಿಷತ್ತು ಅಂಗೀಕಾರ ನೀಡಿತು.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಪರಿಷತ್ತಿನ ಕಲಾಪದಲ್ಲಿ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ಮಸೂದೆ-2026’ ಅನ್ನು ಮಂಡಿಸಿದರು.
ಆಡಳಿತ ಮತ್ತು ವಿರೋಧ ಪಕ್ಷದ ಒಟ್ಟು 23 ಸದಸ್ಯರು ಮಸೂದೆಯಲ್ಲಿನ ಅಂಶಗಳ ಕುರಿತು 4 ಗಂಟೆ 25 ನಿಮಿಷ ಮಾತನಾಡಿ, ಮಸೂದೆಯನ್ನು ಸ್ವಾಗತಿಸಿದರು.
ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸಬೇಕು, ಈ ಮಸೂದೆಯ ನಿಯಮಗಳಂತೆ ವಿವಾಹವಾಗಲು ಇಚ್ಛಿಸುವ ಜೋಡಿಗಳಿಗೆ ಆಪ್ತ ಸಮಾಲೋಚನೆ ನೀಡುವ ವ್ಯವಸ್ಥೆಯನ್ನು ಮಾಡಬೇಕು, ಶಿಕ್ಷೆ ಪ್ರಮಾಣವನ್ನು ಐದು ವರ್ಷದಿಂದ ಜೀವಾವಧಿಗೆ ಹೆಚ್ಚಿಸಬೇಕು ಎಂಬ ಸಲಹೆ ಚರ್ಚೆಯ ವೇಳೆ ವ್ಯಕ್ತವಾಯಿತು.
‘ನಾನೇ ಕ್ಷೌರ ಮಾಡಿಕೊಳ್ಳುತ್ತೇನೆ’ ‘ನಮ್ಮೂರಿನಲ್ಲಿ ನಮ್ಮವರಿಗೆ ಕ್ಷೌರಿಕ ಕ್ಷೌರ ಮಾಡುತ್ತಿರಲಿಲ್ಲ. ನಮ್ಮಪ್ಪ ಮನೆಯಲ್ಲೇ ಕ್ಷೌರ ಮಾಡುವ ಸಾಮಗ್ರಿ ಇಟ್ಟುಕೊಂಡಿದ್ದರು ಅಪ್ಪನೇ ನಮಗೆ ಕ್ಷೌರ ಮಾಡುತ್ತಿದ್ದರು ಕಾಲೇಜು ದಿನಗಳಲ್ಲಿ ಒಮ್ಮೆ ಕ್ಷೌರದ ಅಂಗಡಿಗೆ ಹೋಗಿದ್ದೆ ಜಾತಿ ಕಾರಣಕ್ಕೆ ಗದರಿಸಿ ಅಲ್ಲಿಂದ ಹೊರ ಕಳುಹಿಸಿದ್ದರು ಅಂದಿನಿಂದ ಇಲ್ಲಿಯವರೆಗೂ ನಾನೇ ಕ್ಷೌರ ಮಾಡಿಕೊಳ್ಳುತ್ತಿದ್ದೇನೆ, ಮರ್ಯಾದೆಗೇಡು ಹತ್ಯೆ ತಡೆಗೆ ಮಸೂದೆ ರೂಪಿಸುವ ಸರ್ಕಾರದ ನಿರ್ಧಾರ ಒಳ್ಳೆಯ ನಡೆ’ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಲೋಕಸಭೆ, ವಿಧಾನಸಭೆಗಳಲ್ಲಿ ಶೇ 33ರಷ್ಟು ಪ್ರಾತಿನಿಧ್ಯ ಕಲ್ಪಿಸಲು ಕೇಂದ್ರದ ಚಿಂತನೆ ಸಂದರ್ಭ: ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ ದೊರಕಿಸಿಕೊಡುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಹಾಕಲು ಮುಂದಾಗಿದೆ.
ಲೋಕಸಭೆಯಲ್ಲಿ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವುದಕ್ಕಾಗಿ ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿಯೇ ಎರಡು ಮಸೂದೆಗಳನ್ನು ಮಂಡಿಸಲಿದೆ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯ ಜತೆಯಲ್ಲೇ ಮಹಿಳಾ ಮೀಸಲಾತಿ ಜಾರಿ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎನ್ನಲಾಗುತ್ತಿದೆ.
ಲೋಕಸಭೆ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಬೇಕು ಎನ್ನುವುದು ಬಹಳ ಹಳೆಯ ಬೇಡಿಕೆ. 2029ರ ಲೋಕಸಭಾ ಚುನಾವಣೆಯಲ್ಲೇ ಆ ಬೇಡಿಕೆ ಈಡೇರಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಚಿಂತನೆ ನಡೆಸಿದ್ದು. ಅದಕ್ಕಾಗಿ ತಂತ್ರಗಾರಿಕೆಯಲ್ಲಿ ತೊಡಗಿದೆ ನಾರಿ ಶಕ್ತಿ ವಂದನಾ ಅಧಿನಿಯಮಕ್ಕೆ (ಮಹಿಳಾ ಮೀಸಲಾತಿ ಕಾಯ್ದೆ) ತಿದ್ದುಪಡಿ ತರಲು ಸಂವಿಧಾನ ತಿದ್ದುಪಡಿ ಮಾಡುವ ಮಸೂದೆ, ಕ್ಷೇತ್ರ ಮರುವಿಂಗಡಣೆ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಈ ಅಧಿವೇಶನದಲ್ಲೇ ಕೇಂದ್ರವು ಸಂಸತ್‌ನಲ್ಲಿ ಮಂಡಿಸಲು ಬಯಸಿದೆ. ಒಂದು ವೇಳೆ ಸಾಧ್ಯವಾಗದಿದ್ದರೆ, ಅದಕ್ಕಾಗಿಯೇ ತುರ್ತಾಗಿ ವಿಶೇಷ ಅಧಿವೇಶನ ಕರೆಯುವುದಕ್ಕೂ, ಅದು ಯೋಚಿಸಿದೆ ಎಂದು ವರದಿಯಾಗಿದೆ.
ಸಂವಿಧಾನಕ್ಕೆ 106ನೇ ತಿದ್ದುಪಡಿ ತಂದು ಮಹಿಳೆಯರಿ ಶೇ 33ರನ್ನು ಮೀಸಲಾತಿ ಕಲ್ಪಿಸುವ ಮಸೂದೆಯನ್ನು 2023ರಲ್ಲಿ ಸಂಸತ್ತು ಮೂರನೇ ಎರಡು ಬಹುಮತದೊಂದಿಗೆ ಅಂಗೀಕರಿಸಿತ್ತು ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು ಸೆಪ್ಟೆಂಬರ್‌ನಲ್ಲಿ ಮಸೂದೆಗೆ ಅಂಕಿತ ಹಾಕಿದ್ದರು. 2027ರಲ್ಲಿ ನಡೆಯಲಿರುವ ಜನಗಣತಿ ಆಧಾರದಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು ಇನ್ನು ಆರಂಭವಾಗಲಿರುವ ಜನಗಣತಿಯ ಮಾಹಿತಿ ಪಡೆಯಲು 2030ರವರೆಗೆ ಕಾಯಬೇಕು ಆದರೆ, 2029ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಹೀಗಾಗಿ 2011ರ ಜನಗಣತಿಯ ದತ್ತಾಂಶದ ಆಧಾರದಲ್ಲಿಯೇ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಮಾಡುವುದು ಸರ್ಕಾರದ ಚಿಂತನೆ ಆದರೆ, ಅದಕ್ಕಾಗಿ ಸಂವಿಧಾನ ತಿದ್ದುಪಡಿಯ ಅಗತ್ಯವಿದೆ.
ಈ ಮಸೂದೆಗಳು ಅಂಗೀಕಾರಗೊಂಡು ಕಾಯ್ದೆಗಳಾದರೆ, 2029ರ ಮಾರ್ಚ್ 31ರಿಂದ ಜಾರಿಗೆ ಬರಲಿವೆ. ಮುಂದಿನ ಲೋಕಸಭಾ ಚುನಾವಣೆ ಮತ್ತು ಒಡಿಶಾ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಕಾಯ್ದೆಗಳ ಪ್ರಯೋಜನ ಸಿಗಲಿದೆ.
ಕ್ಷೇತ್ರ ಮರುವಿಂಗಡಣೆ ಮಹಿಳಾ ಮೀಸಲಾತಿ ಕಾಯ್ಕ ಜಾರಿಗೊಳಿಸುವುದರ ಜತೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಕ್ಷೇತ್ರ ಮರುವಿಂಗಡಣೆ ಮಾಡುವುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ ಅದನ್ನು ಕ್ಷೇತ್ರ ಮರುವಿಂಗಡಣೆ ಅಥವಾ ಗಡಿ ಆಯೋಗವು ಮಾಡುತ್ತದೆ ಅದು ತಟಸ್ಕ ಸಂಸ್ಥೆಯಾಗಿದ್ದು, ಅದರ ತೀರ್ಮಾನಗಳನ್ನು ಸುಪ್ರೀಂ ಕೋರ್ಟ್ ನಲ್ಲಿಯೂ ಪ್ರಶ್ನಿಸಲಾಗುವುದಿಲ್ಲ.
ಈ ಹಿಂದಿನ ಕ್ಷೇತ್ರ ಮರುವಿಂಗಡಣೆಯ ಸಂದರ್ಭದಲ್ಲಿ ಜನಸಂಖ್ಯೆಯನ್ನು ಆಧರಿಸಿ ಲೋಕಸಭೆ ಮತ್ತು ವಿಧಾನಭೆಗಳಲ್ಲಿ ಎಸ್‌ಸಿ ಎಸ್‌ಟಿ ಮೀಸಲಾತಿ ಕಲ್ಪಿಸಲಾಗಿತ್ತು ಮಹಿಳಾ ಮೀಸಲು ಕ್ಷೇತ್ರಗಳನ್ನು ಗುರುತಿಸಲೂ ಇದೇ ಮಾರ್ಗವನ್ನು ಅನುಸರಿಸುವ ಸಾಧ್ಯತೆ ಇದೆ. ಜತೆಗೆ, ಆವರ್ತನ ಪದ್ಮತಿಯ ಆಧಾರದಲ್ಲಿಯೂ ಮಹಿಳಾ ಮೀಸಲು ಕ್ಷೇತ್ರಗಳನ್ನು ನಿಗದಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಮಹಿಳಾ ಮೀಸಲು ಸ್ಥಾನಗಳಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಇರುತ್ತದೆ ಆದರೆ ಒಬಿಸಿ ಮೀಸಲಾತಿ ಇರುವುದಿಲ್ಲ, ಎನ್ನಲಾಗುತ್ತಿದೆ ಮಹಿಳಾ ಮೀಸಲಿನಲ್ಲಿ ಎಸ್‌ಸಿ ಎಸ್‌ಟಿ, ಒಬಿಸಿ ಮಹಿಳೆಯರಿಗೆ ಒಳಮೀಸಲಾತಿ ಕಲ್ಪಿಸಬೇಕು ಎನ್ನುವುದು ಪ್ರಬಲ ಒತ್ತಾಯವಾಗಿತ್ತು ಈ ಕಾರಣಕ್ಕೆ ಹಿಂದೆ ಹಲವು ಬಾರಿ ಸಂಸತ್ ನಲ್ಲಿ ಮಸೂದೆ ಅಂಗೀಕಾರಗೊಂಡಿರಲಿಲ್ಲ.
ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ಅಸ್ತು ಸಂದರ್ಭ: ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ಲೋಕಸಭೆಯು ಅನುಮೋದನೆ ನೀಡಿತು.
ಮಸೂದೆ ಬಗ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು, ‘ಲಿಂಗದ ಕಾರಣಕ್ಕಾಗಿಯೇ ಬಹಿಷ್ಕಾರದ ಶಿಕ್ಷೆಯನ್ನು ಎದುರಿಸುವವರನ್ನು ರಕ್ಷಿಸುವ ಉದ್ದೇಶವನ್ನು ಈ ಮಸೂದೆಯು ಹೊಂದಿದೆ’ ಎಂದು ಹೇಳಿದರು.
‘ಲಿಂಗತ್ಯ ಅಲ್ಪ ಸಂಖ್ಯಾತರಿಗೆ ಕಾನೂನಾತ್ಮಕ ಮಾನ್ಯತೆ ಮತ್ತು ರಕ್ಷಣೆಯನ್ನೂ ಒದಗಿಸಲಿದೆ’ ಎಂದು ಅವರು ಒತ್ತಿ ಹೇಳಿದರು.
2019ರ ಕಾನೂನು ಇಂಥವರ ವಿರುದ್ಧದ ದೌರ್ಜನ್ಯಕ್ಕೆ ಗರಿಷ್ಠ 2 ವರ್ಷ ಕಾರಾಗೃಹ ಶಿಕ್ಷೆ ನೀಡುವ ಅವಕಾಶ ನೀಡುತ್ತಿತ್ತು ತಿದ್ದುಪಡಿ ಮಸೂದೆಯು ಗರಿಷ್ಠ 14 ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಅವಕಾಶ ನೀಡುತ್ತದೆ ಎಂದು ಹೇಳಿದರು.
ಪ್ರಸ್ತಾವಿತ ಮಸೂದೆಯು ಲಿಂಗತ್ಯದ ಚಹರೆಗಳನ್ನು ನಿರ್ಣಯಿಸುವ ಹಕ್ಕನ್ನು ಕಸಿದುಕೊಳ್ಳಲಿದೆ ಇದನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ಸಾಮಾಜಿಕ ಜಾಲತಾಣ ನಿರ್ಬಂಧಿಸಲು ಶಾಲೆಗಳಲ್ಲಿ ಜಾಗೃತಿ ಜತೆಗೆ ತರಬೇತಿ: ಡಿಜಿಟಲ್ ಸಾಧನ ಬಳಕೆಗೆ ಕರಡು ನೀತಿ ಸಿದ್ಧ ಸಂದರ್ಭ: ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಮಾನಸಿಕ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ, ರಾಜ್ಯ ಸರ್ಕಾರವು ಮಕ್ಕಳ ಜವಾಬ್ದಾರಿಯುತ ಡಿಜಿಟಲ್ ಬಳಕೆಗೆ ಕರಡು ನೀತಿ ರೂಪಿಸಿದೆ.
ಡಿಜಿಟಲ್ ಸಾಧನಗಳ ಬಳಕೆ ಕುರಿತು ಜಾಗೃತಿ, ಶಿಕ್ಷಕರಿಗೆ ತರಬೇತಿ, ಡಿಜಿಟಲ್ ಕ್ಷೇಮ ಸಮಿತಿ ರಚನೆಯಂತಹ ಕ್ರಮಗಳನ್ನೂ ಸೂಚಿಸಲಾಗಿದೆ.
ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಹಾಗೂ ನಿಮ್ಹಾನ್ಸ್ ತಜ್ಞರು ಪೋಷಕರ ಜತೆಗೆ ಸಮಾಲೋಚನೆ ನಡೆಸಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕರಡು ನೀತಿ ರಚಿಸಿದ್ದಾರೆ. ಡಿಜಿಟಲ್ ಸಾಧನಗಳ ಬಳಕೆ ಮತ್ತು ಮಾನಸಿಕ ಅನಾರೋಗ್ಯ ಸಮಸ್ಯೆಗಳ ನಿರ್ವಹಣೆ ಬಗ್ಗೆ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಹಾಗೂ ಪಾಲಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ.
‘ಮಾನಸಿಕ ಅನಾರೋಗ್ಯ ಸಮಸ್ಯೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳವಾಗುತ್ತಿವೆ. ಅತಿಯಾದ ಮತ್ತು ಅನಿಯಂತ್ರಿತ ತಂತ್ರಜ್ಞಾನ ಬಳಕೆಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಧ್ಯಯನಗಳ ಪ್ರಕಾರ, ಶೇ 25ರಷ್ಟು ಹದಿಹರೆಯದವರು ಸಾಮಾಜಿಕ ಜಾಲತಾಣಗಳ ವ್ಯಸನಿಗಳಾಗಿದ್ದಾರೆ. ಅವರಲ್ಲಿ ಅನೇಕರು ಆತಂಕ, ಉದ್ವಿಗ್ನತೆ, ನಿದ್ರಾಹೀನತೆ ಹಾಗೂ ಏಕಾಗ್ರತೆ ಕೊರತೆಯಂತಹ ಸಮಸ್ಯೆ ಎದುರಿಸುತ್ತಿದ್ದಾರೆ ಆದ್ದರಿಂದ ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಮತ್ತು ಅವುಗಳಿಂದ ಉಂಟಾಗುವ ಮಾನಸಿಕ ಸಮಸ್ಯೆಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಬೇಕಿದೆ. ಮಕ್ಕಳಲ್ಲಿ ಆರೋಗ್ಯಕರ ಮತ್ತು ಸಮತೋಲಿತ ತಂತ್ರಜ್ಞಾನ ಅಭ್ಯಾಸ ಉತ್ತೇಜಿಸಬೇಕಿದೆ. ಹಾಗಾಗಿ, ಶಿಕ್ಷಕರು ಮತ್ತು ಪೋಷಕರ ತರಬೇತಿ ಕಾರ್ಯಕ್ರಮ ತುರ್ತು ಅಗತ್ಯ’ ಎಂದು ಕರಡು ನೀತಿಯಲ್ಲಿ ತಿಳಿಸಲಾಗಿದೆ.
ಡಿಜಿಟಲ್ ಸಾಕ್ಷರತೆ ಶಾಲಾ ಪಠ್ಯಕ್ರಮದಲ್ಲಿ ಡಿಜಿಟಲ್ ಸಾಕ್ಷರತೆ ಅಳವಡಿಕೆ ಬಗ್ಗೆಯೂ ಸೂಚಿಸಲಾಗಿದೆ. ಸಕಾರಾತ್ಮಕ ಡಿಜಿಟಲ್ ಅಭ್ಯಾಸ, ಆನ್‌ಲೈನ್ ಶಿಷ್ಟಾಚಾರ, ಅಂತರ್ಜಾಲ ತಾಣಗಳ ಸುರಕ್ಷಿತ ಬಳಕೆಯ ಬಗ್ಗೆ, ವಯಸ್ಸಿಗೆ ಅನುಗುಣವಾಗಿ ತಿಳಿಸುವಿಕೆ, ವಿದ್ಯಾರ್ಥಿಗಳಲ್ಲಿನ ಆತಂಕ, ಒತ್ತಡ ಹಾಗೂ ಅಧ್ಯಯನ ಸಾಮರ್ಥ್ಯ ಕುಂಠಿತವಾಗುವ ಬಗ್ಗೆ ಜಾಗೃತಿ ಮೂಡಿಸುವಿಕೆಯಂತಹ ಕ್ರಮಗಳ ಬಗ್ಗೆ ಕರಡು ನೀತಿಯಲ್ಲಿ ಹೇಳಲಾಗಿದೆ.
ಪ್ರತಿಯೊಂದು ಶಾಲೆಯೂ ಡಿಜಿಟಲ್ ಸಾಧನಗಳ ಬಳಕೆ ಬಗ್ಗೆ, ನೀತಿ ರೂಪಿಸಿ, ಜಾರಿಗೊಳಿಸಬೇಕೆಂದು ಸೂಚಿಸಲಾಗಿದೆ ಡಿಜಿಟಲ್ ಸಾಧನಗಳ ಬಳಕೆ ಮೇಲೆ ನಿಗಾ ಇಡುವ ಜತೆಗೆ, ಶಾಲಾ ಕೆಲಸದ ಹೊರತಾಗಿ ಡಿಜಿಟಲ್ ಸಾಧನಗಳ ಬಳಕೆಯ ಅವಧಿಯನ್ನು ದಿನಕ್ಕೆ ಒಂದು ಗಂಟೆಗೆ ನಿಗದಿಪಡಿಸಬೇಕು ಎಂದು ಹೇಳಲಾಗಿದೆ ವಿದ್ಯಾರ್ಥಿಗಳನ್ನು ವಾಟ್ಸ್ಆ್ಯಪ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸುವ ಬದಲು ಮೊದಲಿನಂತೆ ದಿನಚರಿ ವ್ಯವಸ್ಥೆ (ಡೈರಿ) ಮೂಲಕ ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ವೃತ್ತಿ ತೆರಿಗೆ ವಿವರ ಪ್ರತ್ಯೇಕ ಸಲ್ಲಿಕೆ ಅನಗತ್ಯ: ಮಸೂದೆ ಸಂದರ್ಭ: ಆದಾಯ ತೆರಿಗೆಯ ವಿವರಗಳನ್ನು (ಐ.ಟಿ ರಿಟರ್ನ್ಸ್) ಸಲ್ಲಿಸಿದ ಬಳಿಕವೂ ವೃತ್ತಿ ತೆರಿಗೆಯ ವಿವರಗಳನ್ನು ಸಲ್ಲಿಸಬೇಕೆಂಬ ಷರತ್ತನ್ನು ತೆಗೆದುಹಾಕುವ ಉದ್ದೇಶದಿಂದ ಸರ್ಕಾರ ಮಂಡಿಸಿದ ‘ಕರ್ನಾಟಕ ವೃತ್ತಿಗಳ ಕಸುಬುಗಳ ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆಗಳ ತಿದ್ದುಪಡಿ ಮಸೂದೆ’ಗೆ ವಿಧಾನಸಭೆ ಅಂಗೀಕಾರ ನೀಡಿತು.
ಮಸೂದೆ ಮಂಡಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಒಮ್ಮೆ ತೆರಿಗೆ ಹಣ ಪಾವತಿಸಿದ ನಂತರ ಮತ್ತೆ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ ಎಂಬ ಸರಳ ತಿದ್ದುಪಡಿ ತರಲಾಗಿದೆ.
ಹಿರಿಯ ನಾಗರಿಕರು, ಸೈನಿಕರು, ದೈಹಿಕ-ಮಾನಸಿಕ ಅಂಗಡಿಕಲರು ವೃತ್ತಿ ತೆರಿಗೆ ಸಲ್ಲಿಸುವ ಅಗತ್ಯ ಇಲ್ಲದಿದ್ದರೂ ‘ನಿಲ್ ರಿಟರ್ನ್ಸ್ ಸಲ್ಲಿಸಬೇಕಿತ್ತು. ಆದರೆ, ‘ನಿಲ್ ರಿಟರ್ನ್ಸ್ ಸಲ್ಲಿಸಲೂ ಕೂಡಾ ಈ ಮಸೂದೆಯಲ್ಲಿ ವಿನಾಯಿತಿ ನೀಡಲಾಗಿದೆ’.
ಸಬ್ಸಿಡಿ – ವ್ಯಾಖ್ಯಾನ ಮತ್ತು ಪ್ರಕಾರಗಳು (ಭಾರತ ಮತ್ತು ಕರ್ನಾಟಕ)
ವ್ಯಾಖ್ಯಾನ ಸಬ್ಸಿಡಿ (Subsidy): ಸರ್ಕಾರವು ನಾಗರಿಕರು ಅಥವಾ ಉತ್ಪಾದಕರ ಮೇಲಿನ ಭಾರವನ್ನು ಕಡಿಮೆ ಮಾಡಲು ನೀಡುವ ಆರ್ಥಿಕ ಸಹಾಯ. ಇದು ನಗದು ಸಹಾಯ, ಕಡಿತ ಬೆಲೆ, ತೆರಿಗೆ ವಿನಾಯಿತಿ, ಅಥವಾ ಭರವಸೆ ಯೋಜನೆಗಳ ರೂಪದಲ್ಲಿರಬಹುದು. ಉದ್ದೇಶ: ಸಾಮಾಜಿಕ ನ್ಯಾಯ + ಆರ್ಥಿಕ ಉತ್ತೇಜನ + ಕಲ್ಯಾಣ ಬೆಂಬಲ.
ಭಾರತದಲ್ಲಿ ಸಬ್ಸಿಡಿಗಳ ಪ್ರಕಾರಗಳು
ಪ್ರಕಾರ
ಉದಾಹರಣೆಗಳು
ಅನ್ನ ಸಬ್ಸಿಡಿ
ಸಾರ್ವಜನಿಕ ವಿತರಣಾ ವ್ಯವಸ್ಥೆ (PDS), NFSA ಅಡಿಯಲ್ಲಿ ಉಚಿತ ಅಕ್ಕಿ/ಗೋಧಿ.
ರಸಗೊಬ್ಬರ ಸಬ್ಸಿಡಿ
ಯೂರಿಯಾ, DAP ಮುಂತಾದ ಗೊಬ್ಬರಗಳನ್ನು ಕಡಿಮೆ ಬೆಲೆಗೆ ರೈತರಿಗೆ.
ಇಂಧನ/ಶಕ್ತಿ ಸಬ್ಸಿಡಿ
LPG ಸಿಲಿಂಡರ್ ಸಬ್ಸಿಡಿ, ಕೆರೋಸಿನ್, ವಿದ್ಯುತ್ ದರ ರಿಯಾಯಿತಿ.
ಶಿಕ್ಷಣ ಸಬ್ಸಿಡಿ
ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ಮಧ್ಯಾಹ್ನ ಊಟ ಯೋಜನೆ.
ಆರೋಗ್ಯ ಸಬ್ಸಿಡಿ
ಆಯುಷ್ಮಾನ್ ಭಾರತ, ಉಚಿತ ಔಷಧಿ, ಆರೋಗ್ಯ ವಿಮೆ ಪ್ರೀಮಿಯಂ ಬೆಂಬಲ.
ಉದ್ಯೋಗ ಸಬ್ಸಿಡಿ
MGNREGA ವೇತನ, ಕೌಶಲ್ಯಾಭಿವೃದ್ಧಿ ಪ್ರೋತ್ಸಾಹ.
ಸಾರಿಗೆ ಸಬ್ಸಿಡಿ
ರೈಲು ರಿಯಾಯಿತಿ, ವಿದ್ಯಾರ್ಥಿ/ಹಿರಿಯ ನಾಗರಿಕರಿಗೆ ಬಸ್ ಪಾಸ್.
ವಸತಿ ಸಬ್ಸಿಡಿ
ಪ್ರಧಾನಮಂತ್ರಿ ಆವಾಸ್ ಯೋಜನೆ (PMAY), ಗೃಹ ಸಾಲ ಬಡ್ಡಿ ರಿಯಾಯಿತಿ.
ಕರ್ನಾಟಕದಲ್ಲಿ ಸಬ್ಸಿಡಿಗಳ ಪ್ರಕಾರಗಳು
ಪ್ರಕಾರ
ಉದಾಹರಣೆಗಳು (ಭರವಸೆ ಯೋಜನೆಗಳು)
ಅನ್ನ ಭದ್ರತೆ
ಅನ್ನ ಭಾಗ್ಯ – ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ.
ಮಹಿಳಾ ಸಬಲೀಕರಣ
ಗೃಹ ಲಕ್ಷ್ಮಿ – ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ ₹2,000.
ಸಾರಿಗೆ ಸಬ್ಸಿಡಿ
ಶಕ್ತಿ – ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ.
ಉದ್ಯೋಗ ಸಬ್ಸಿಡಿ
ಯುವ ನಿಧಿ – ಪದವಿ/ಡಿಪ್ಲೊಮಾ ನಿರುದ್ಯೋಗಿಗಳಿಗೆ ಭತ್ಯೆ.
ಶಕ್ತಿ ಸಬ್ಸಿಡಿ
ಗೃಹ ಜ್ಯೋತಿ – ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್.
ಕೃಷಿ ಸಬ್ಸಿಡಿ
ಇನ್ಪುಟ್ ಸಬ್ಸಿಡಿ, ನೀರಾವರಿ ಬೆಂಬಲ, ಬೆಳೆ ವಿಮೆ ಪ್ರೀಮಿಯಂ.
ಶಿಕ್ಷಣ ಸಬ್ಸಿಡಿ
SC/ST/OBC ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ, ವಿದ್ಯಾಸಿರಿ ಯೋಜನೆ.
ಆರೋಗ್ಯ ಸಬ್ಸಿಡಿ
ಆರೋಗ್ಯ ಕರ್ನಾಟಕ – ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ.
ಭಾರತ: ಆಹಾರ, ಇಂಧನ, ರಸಗೊಬ್ಬರ, ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕ ಸಬ್ಸಿಡಿ.
ಕರ್ನಾಟಕ: ವಿಶೇಷವಾಗಿ ಭರವಸೆ ಯೋಜನೆಗಳು (ಅನ್ನ ಭಾಗ್ಯ, ಗೃಹ ಲಕ್ಷ್ಮಿ, ಶಕ್ತಿ, ಯುವ ನಿಧಿ, ಗೃಹ ಜ್ಯೋತಿ) ಜೊತೆಗೆ ಕೃಷಿ, ಶಿಕ್ಷಣ, ಆರೋಗ್ಯದಲ್ಲಿ ಸಬ್ಸಿಡಿ.
ಆರ್ಥಿಕ ಪಾತ್ರ: ಸಬ್ಸಿಡಿಗಳು ಕಲ್ಯಾಣ ಬೆಂಬಲ ಮತ್ತು ಆರ್ಥಿಕ ಉತ್ತೇಜನ ಎರಡನ್ನೂ ಒದಗಿಸುತ್ತವೆ, ವಿಶೇಷವಾಗಿ ದುರ್ಬಲ ವರ್ಗಗಳಿಗೆ.
ಸಬ್ಸಿಡಿಗಳು ಮತ್ತು ಕರ್ನಾಟಕದ ಆರ್ಥಿಕತೆ – ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳು
ಅಂಶ
ಸಕಾರಾತ್ಮಕ (ಸಚಿವರ ಅಭಿಪ್ರಾಯ)
ನಕಾರಾತ್ಮಕ (ವಿರೋಧ ಪಕ್ಷದ ಚಿಂತೆ)
ಆರ್ಥಿಕ ಪರಿಣಾಮ
ಸಬ್ಸಿಡಿಗಳು ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸಿ ಆರ್ಥಿಕತೆಯನ್ನು ಬಲಪಡಿಸುತ್ತವೆ. ಕರ್ನಾಟಕ GST ಆದಾಯ ವೃದ್ಧಿ ಮತ್ತು ತಲಾ ಆದಾಯದಲ್ಲಿ ದೇಶದದಲ್ಲಿ ಮೊದಲ ಸ್ಥಾನ.
ಬಜೆಟ್‌ನ 14% ಸಬ್ಸಿಡಿಗಳಿಗೆ ಮೀಸಲಾದ್ದರಿಂದ ದೀರ್ಘಾವಧಿಯಲ್ಲಿ ಹಣಕಾಸಿನ ಆರೋಗ್ಯಕ್ಕೆ ಒತ್ತಡ.
ಸಿದ್ಧಾಂತ ಆಧಾರ
ಕೀನ್ಸಿಯನ್ ಆರ್ಥಿಕತೆಯ ಪ್ರಕಾರ – ಸರ್ಕಾರದ ಹಸ್ತಕ್ಷೇಪ (ಸಬ್ಸಿಡಿ) recession ಸಮಯದಲ್ಲಿ ಆರ್ಥಿಕತೆಯನ್ನು ಸ್ಥಿರಗೊಳಿಸುತ್ತದೆ.
ಸಬ್ಸಿಡಿಗಳ ಮೇಲೆ ಅವಲಂಬನೆ ಉತ್ಪಾದನಾ ಕ್ಷೇತ್ರದ ಸುಧಾರಣೆ (ತೆರಿಗೆ ಕಡಿತ, ಹೂಡಿಕೆ ಪ್ರೋತ್ಸಾಹ)ಗಳನ್ನು ಹಿಂದುಳಿಸಬಹುದು.
ಸಂಚಲನ ಪರಿಣಾಮ
ಬಡವರಿಗೆ ನೀಡಿದ ₹1 ಐದು ಬಾರಿ ಸಂಚರಿಸಿ ಆರ್ಥಿಕತೆಯಲ್ಲಿ multiplier ಪರಿಣಾಮ ಉಂಟುಮಾಡುತ್ತದೆ.
ಸಬ್ಸಿಡಿಗಳು ಸರಿಯಾಗಿ ಗುರಿಪಡಿಸದಿದ್ದರೆ multiplier ಪರಿಣಾಮ ಉಂಟಾಗುವುದಿಲ್ಲ.
ಸಾಮಾಜಿಕ ನ್ಯಾಯ
ಬಡ ಕುಟುಂಬಗಳಿಗೆ ಮೂಲ ಅಗತ್ಯಗಳನ್ನು ಪೂರೈಸಲು ಸಹಾಯ, ಖರೀದಿ ಶಕ್ತಿ ಹೆಚ್ಚಳ, ಅಸಮಾನತೆ ಕಡಿತ.
“ಸಬ್ಸಿಡಿಗಳನ್ನು villainise ಅಥವಾ criminalise ಮಾಡಬಾರದು” – ಕಲ್ಯಾಣದ ನ್ಯಾಯಸಮ್ಮತ ಸಾಧನ.
ಅತಿಯಾದ ಅವಲಂಬನೆ ತಪ್ಪಿಸಲು, ಬಡವರಿಗೆ ಮಾತ್ರ ಗುರಿಪಡಿಸಬೇಕು ಎಂದು ವಿರೋಧ ಪಕ್ಷದ ಒತ್ತಾಯ.
ಹಣಕಾಸಿನ ಸಮತೋಲನ
ಸರ್ಕಾರ ಭವಿಷ್ಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಹಣಕಾಸಿನ ಶಿಸ್ತನ್ನು ಕಾಪಾಡುತ್ತಿದೆ.
ಭರವಸೆ ಯೋಜನೆಗಳು ಇದೇ ಪ್ರಮಾಣದಲ್ಲಿ ಮುಂದುವರಿದರೆ ದೀರ್ಘಾವಧಿಯಲ್ಲಿ ಸ್ಥಿರತೆ ಕುಸಿಯುವ ಭೀತಿ.
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪರ್ಯಾಲೋಚನೆಗೆ ಮಂಡಿಸಿದರು.
‘ಇವಿಎಂಗಳ ಮೇಲೆ ಜನರ ವಿಶ್ವಾಸ ಕಡಿಮೆಯಾಗುತ್ತಿದೆ. ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆಗಳಲ್ಲೂ ಮತದಾನದ ಪ್ರಮಾಣದಲ್ಲಿ ದಿಢೀರ್ ಏರಿಕೆಯಾದ ಉದಾಹರಣೆಗಳಿವೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದಿಂದ ಸೂಕ್ತ ಸ್ಪಷ್ಟನೆ ಸಿಗದ ಕಾರಣ, ಚುನಾವಣೆಯಲ್ಲಿ ಪಾರದರ್ಶಕತೆ ತರಲು ಮತಪತ್ರ ಮತ್ತು ಮತಪೆಟ್ಟಿಗೆ ವ್ಯವಸ್ಥೆ ಜಾರಿಗೆ ತೀರ್ಮಾನಿಸಲಾಗಿದೆ’ ಎಂದರು.
ಆಯಾಮ (Dimension)
ವಿವರಗಳು (Details)
ಮಸೂದೆಯ ಹೆಸರು
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ, 2026.
ಪ್ರಮುಖ ಬದಲಾವಣೆ
ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಇವಿಎಂ (EVM) ಬದಲು ಪುನಃ ಮತಪತ್ರ (Ballot Paper) ಬಳಕೆ.
ಹಿನ್ನೆಲೆ (Context)
ಇವಿಎಂ ವಿಶ್ವಾಸಾರ್ಹತೆ ಕುರಿತಾದ ಸಾರ್ವಜನಿಕ ಅನುಮಾನಗಳು ಮತ್ತು ಇತ್ತೀಚಿನ ವರ್ಷಗಳಲ್ಲಿ ಬೇರೆ ರಾಜ್ಯಗಳಲ್ಲಿ ಕಂಡುಬಂದ ‘Turnout’ ಅಂಕಿ-ಅಂಶಗಳ ವ್ಯತ್ಯಾಸದ ಹಿನ್ನೆಲೆಯಲ್ಲಿ ಈ ನಿರ್ಧಾರ.
ಅಧಿಕಾರ ವ್ಯಾಪ್ತಿ
ಈ ತಿದ್ದುಪಡಿಯು ಕೇವಲ ಸ್ಥಳೀಯ ಸಂಸ್ಥೆಗಳ (Local Bodies) ಚುನಾವಣೆಗಳಿಗೆ ಮಾತ್ರ ಸೀಮಿತವಾಗಿದೆ (ವಿಧಾನಸಭೆ ಅಥವಾ ಲೋಕಸಭೆಗಲ್ಲ).
ಮತದಾರರ ಪಟ್ಟಿ
ಇನ್ನು ಮುಂದೆ ಚುನಾವಣೆಗಳು ರಾಜ್ಯ ಚುನಾವಣಾ ಆಯೋಗ (SEC) ಸಿದ್ಧಪಡಿಸಿದ ಪ್ರತ್ಯೇಕ ಮತದಾರರ ಪಟ್ಟಿಯ ಆಧಾರದ ಮೇಲೆ ನಡೆಯಲಿವೆ.
ತಾಂತ್ರಿಕ ಉಸ್ತುವಾರಿ
ಸಚಿವ ಪ್ರಿಯಾಂಕ್ ಖರ್ಗೆ ಅವರು ಸೂಚಿಸಿದ 6 ಪ್ರಕ್ರಿಯಾತ್ಮಕ ಬದಲಾವಣೆಗಳ ಮೂಲಕ ಚುನಾವಣಾ ಅಕ್ರಮ ತಡೆಗೆ ಒತ್ತು ನೀಡಲಾಗಿದೆ.
2026 ತಿದ್ದುಪಡಿ ಮಸೂದೆ ಪ್ರಮುಖ ಅಂಶಗಳು ಮತಪತ್ರ ಮತದಾನ: ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಇವಿಎಂ ಬದಲು ಮತಪತ್ರ ಬಳಕೆ. ಮತದಾರರ ಪಟ್ಟಿ: ಚುನಾವಣೆಗಳನ್ನು ರಾಜ್ಯ ಚುನಾವಣಾ ಆಯೋಗ (SEC) ಸಿದ್ಧಪಡಿಸಿದ ಪಟ್ಟಿಯ ಆಧಾರದ ಮೇಲೆ ನಡೆಸಲಾಗುವುದು; ಭಾರತ ಚುನಾವಣಾ ಆಯೋಗದ ಪಟ್ಟಿಯ ಆಧಾರವಲ್ಲ. ಪಾರದರ್ಶಕತೆ ಮತ್ತು ಗೌಪ್ಯತೆ: ಮತದಾನದಲ್ಲಿ ಅನಾಮಿಕತೆ ಮತ್ತು ಪಾರದರ್ಶಕತೆ ಹೆಚ್ಚಿಸಲು ಒತ್ತು. ಆರು ಬದಲಾವಣೆಗಳು: ಸಚಿವ ಪ್ರಿಯಾಂಕ್ ಖರ್ಗೆ ಅವರು ಆರು ಪ್ರಕ್ರಿಯಾತ್ಮಕ ಬದಲಾವಣೆಗಳನ್ನು ವಿವರಿಸಿದರು – ಮತದಾರರ ಹಾಜರಾತಿ ಮೇಲ್ವಿಚಾರಣೆ, ಮತಪತ್ರ ನಿರ್ವಹಣೆ, ಹಾಗೂ ಚುನಾವಣಾ ಪ್ರಕ್ರಿಯೆಯ ಕಟ್ಟುನಿಟ್ಟಾದ ನಿಯಂತ್ರಣ.
ಚುನಾವಣಾ ಪ್ರಕ್ರಿಯೆಯಲ್ಲಿನ ಆರು (6) ಪ್ರಮುಖ ಬದಲಾವಣೆಗಳು ಸಚಿವ ಸಂಪುಟವು ಅನುಮೋದಿಸಿದ ಈ ತಿದ್ದುಪಡಿಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಆರು ಹಂತದ ಸುಧಾರಣೆಗಳನ್ನು ತರಲಾಗಿದೆ: 1. ಮತದಾರರ ಹಾಜರಾತಿ ಮೇಲ್ವಿಚಾರಣೆ: ಮತದಾನದ ದಿನದಂದು ಮತದಾರರ ಸಂಖ್ಯೆ ಮತ್ತು ನೈಜ ಹಾಜರಾತಿಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವುದು. 2. ಮತಪತ್ರಗಳ ಸರಣಿ ಸಂಖ್ಯೆ ನಿರ್ವಹಣೆ: ಪ್ರತಿ ಮತಪತ್ರದ ಹಂಚಿಕೆ ಮತ್ತು ಬಳಕೆಯ ಮೇಲೆ ನಿಖರವಾದ ನಿಗಾ ಇಡುವುದು. 3. ಅನಾಮಿಕತೆ ಮತ್ತು ಗೌಪ್ಯತೆ: ಮತದಾರನು ಯಾರಿಗೆ ಮತ ಹಾಕಿದ್ದಾನೆ ಎಂಬುದು ಯಾವುದೇ ಹಂತದಲ್ಲೂ ಬಹಿರಂಗವಾಗದಂತೆ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವುದು. 4. ಪರಿಶೀಲನಾ ಪ್ರಕ್ರಿಯೆ: ಮತ ಎಣಿಕೆಯ ಸಮಯದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಭೌತಿಕ ದಾಖಲೆಗಳ (Physical Audit) ಲಭ್ಯತೆ ಖಚಿತಪಡಿಸುವುದು. 5. SEC ಸ್ವಾತಂತ್ರ್ಯ: ಭಾರತ ಚುನಾವಣಾ ಆಯೋಗದ (ECI) ಪಟ್ಟಿಯ ಮೇಲಿನ ಅವಲಂಬನೆ ಕಡಿಮೆ ಮಾಡಿ, ರಾಜ್ಯ ಚುನಾವಣಾ ಆಯೋಗಕ್ಕೆ ಹೆಚ್ಚಿನ ಸ್ವಾಯತ್ತತೆ ನೀಡುವುದು. 6. ಚುನಾವಣಾ ಸಿಬ್ಬಂದಿ ತರಬೇತಿ: ಮತಪತ್ರದ ಮೂಲಕ ಚುನಾವಣೆ ನಡೆಸಲು ಸಿಬ್ಬಂದಿಗಳಿಗೆ ವಿಶೇಷ ತರಬೇತಿ ಮತ್ತು ಭದ್ರತಾ ನಿಯಮಗಳ ಅನುಷ್ಠಾನ.
ಮತಪತ್ರದ ಮೂಲಕ ಚುನಾವಣೆ: ಸಾಧಕ ಮತ್ತು ಬಾಧಕಗಳ ತುಲನಾತ್ಮಕ ನೋಟ
ಆಯಾಮ (Dimension)
ಅನುಕೂಲಗಳು (Pros / Benefits)
ಸವಾಲುಗಳು (Cons / Challenges)
ವಿಶ್ವಾಸಾರ್ಹತೆ (Trust)
ಹೆಚ್ಚಿನ ವಿಶ್ವಾಸ: ಮತದಾರರಲ್ಲಿ ತಾನು ಹಾಕಿದ ಮತ ಸರಿಯಾದ ಅಭ್ಯರ್ಥಿಗೆ ದಾಖಲಾಗಿದೆ ಎಂಬ ಮಾನಸಿಕ ತೃಪ್ತಿ ಮತ್ತು ಭರವಸೆ ಇರುತ್ತದೆ.
ನಿರ್ವಹಣಾ ಸವಾಲು: ಮತಪತ್ರಗಳ ವಿನ್ಯಾಸ ಮತ್ತು ಮುದ್ರಣದಲ್ಲಿ ತಪ್ಪುಗಳಾದರೆ ಇಡೀ ಪ್ರಕ್ರಿಯೆಯ ವಿಶ್ವಾಸಾರ್ಹತೆ ಕುಗ್ಗಬಹುದು.
ವಿವಾದ ಬಗೆಹರಿಸುವಿಕೆ
ಮರು-ಎಣಿಕೆ ಸುಲಭ: ಫಲಿತಾಂಶದ ಬಗ್ಗೆ ಅನುಮಾನ ಬಂದಾಗ ಭೌತಿಕವಾಗಿ ಮತಪತ್ರಗಳನ್ನು ಎಣಿಸುವ ಮೂಲಕ ವಿವಾದವನ್ನು ಪಾರದರ್ಶಕವಾಗಿ ಬಗೆಹರಿಸಬಹುದು.
ಮಾನವ ದೋಷ: ಮತ ಎಣಿಕೆಯ ಸಮಯದಲ್ಲಿ ಸಿಬ್ಬಂದಿ ಮಾಡುವ ಸಣ್ಣ ತಪ್ಪುಗಳು ದೊಡ್ಡ ವಿವಾದಗಳಿಗೆ ಕಾರಣವಾಗಬಹುದು.
ತಾಂತ್ರಿಕತೆ
ದೋಷ ಮುಕ್ತ: ಇವಿಎಂ ಹ್ಯಾಕಿಂಗ್, ಚಿಪ್ ಮಟ್ಟದ ಬದಲಾವಣೆ ಅಥವಾ ಸಾಫ್ಟ್‌ವೇರ್ ವೈಫಲ್ಯದಂತಹ ತಾಂತ್ರಿಕ ಆರೋಪಗಳಿಗೆ ಇಲ್ಲಿ ಅವಕಾಶವಿಲ್ಲ.
ಹಳೆಯ ಪದ್ಧತಿ: ಆಧುನಿಕ ಡಿಜಿಟಲ್ ಯುಗದಲ್ಲಿ ಮತ್ತೆ ಹಳೆಯ ಪದ್ಧತಿಗೆ ಮರಳುವುದು ತಾಂತ್ರಿಕ ಹಿನ್ನಡೆ ಎಂದು ಕೆಲವರು ವಾದಿಸಬಹುದು.
ಅಕ್ರಮಗಳ ಅಪಾಯ: ಹಳೆಯ ಕಾಲದ ‘ಬೂತ್ ಕ್ಯಾಪ್ಚರಿಂಗ್’, ಮತಪೆಟ್ಟಿಗೆಗಳ ಲೂಟಿ ಅಥವಾ ನಕಲಿ ಮತದಾನ ತಡೆಯಲು ಹೆಚ್ಚಿನ ಪೊಲೀಸ್ ಭದ್ರತೆ ಬೇಕಾಗುತ್ತದೆ.
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ದೇಶೀಯ ಪಥದರ್ಶಕ ವ್ಯವಸ್ಥೆಯ ಮತ್ತೊಂದು ಉಪಗ್ರಹ ಕಾರ್ಯಾಚರಣೆ ಸ್ಥಗಿತ
ನಾವಿಕ್‌ಗೆ ಹಿನ್ನಡೆ ಅದು ಕಾರ್ಗಿಲ್ ಯುದ್ಧದ ಸಂದರ್ಭ. ಪಾಕಿಸ್ತಾನದ ಸೇನಾ ನೆಲೆಗಳ ಬಗ್ಗೆ ಜಿಪಿಎಸ್ (ಜಾಗತಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯ) ಮಾಹಿತಿ ನೀಡುವಂತೆ ಭಾರತವು ಅಮೆರಿಕವನ್ನು ಕೋರಿತ್ತು. ಆದರೆ, ಅಮೆರಿಕ ನಿರಾಕರಿಸಿತ್ತು. ದೇಶೀಯ ಪಥದರ್ಶಕ ವ್ಯವಸ್ಥೆಯೊಂದರ ಅಗತ್ಯವಿದೆ ಎಂದು ಭಾರತ ಮನಗಂಡಿದ್ದು ಆಗಲೇ. ಸ್ವದೇಶಿ ಪಥದರ್ಶಕ ಉಪಗ್ರಹ ವ್ಯವಸ್ಥೆ ರೂಪಿಸಲು ಅದೇ ನಾಂದಿಯಾಯಿತು. ಅದರ ಅಭಿವೃದ್ಧಿಯ ಜವಾಬ್ದಾರಿ ಹೊತ್ತುಕೊಂಡಿದ್ದು ಇಸ್ರೋ. 2013ರ ನಂತರ ತನ್ನದೇ ಆದ ಪಥದರ್ಶಕ ವ್ಯವಸ್ಥೆ ರೂಪಿಸಲು ಭಾರತಕ್ಕೆ ಸಾಧ್ಯವಾಗಿದ್ದರೂ ಅದು ಪೂರ್ಣವಾಗಿ ಕಾರ್ಯಾರಂಭ ಮಾಡಿಲ್ಲ.
ಆರಂಭದಿಂದಲೂ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುತ್ತಲೇ ಬಂದ ಈ ಯೋಜನೆಗೆ, ಈಗ ಗಂಭೀರ ಸ್ವರೂಪದ ಹಿನ್ನಡೆಯೇ ಆಗಿದೆ. ದೀರ್ಘಕಾಲದ ನಿರ್ಲಕ್ಷ್ಯ,, ತಾಂತ್ರಿಕ ವೈಫಲ್ಯಗಳು, ಅವಧಿ ಮೀರಿದ ಉಪಗ್ರಹಗಳು ಮತ್ತು ಬದಲಿ ಉಪಗ್ರಹಗಳ ಉಡಾವಣೆ ವಿಳಂಬದಿಂದಾಗಿ ‘ನಾವಿಕ್’ ಕಾರ್ಯಾರಂಭ ಸ್ಥಗಿತಗೊಳಿಸುವ ಹಂತ ತಲುಪಿದೆ.
‘ನಾವಿಕ್’ ಅನ್ನು ವಿಮಾನಯಾನ, ನೌಕಾಯಾನ, ಸಾರಿಗೆ ವ್ಯವಸ್ಥೆ, ಸೇನೆ, ಪ್ರಕೃತಿ ವಿಕೋಪ ಇನ್ನಿತರ ತುರ್ತು ಪರಿಸ್ಥಿತಿಗಳಲ್ಲಿ ಬಳಸಲಾಗುತ್ತಿದೆ. ಉಪಗ್ರಹಗಳು ನಿಷ್ಕ್ರಿಯವಾಗುತ್ತಿರುವುದರಿಂದ, ಇದು ದೇಶದ ಸ್ಪರ್ಧಾತ್ಮಕತೆ, ಆರ್ಥಿಕತೆ ಮತ್ತು ರಕ್ಷಣಾ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಂಭವ ಇದೆ. ಗಗನಯಾನ, ಬಾಹ್ಯಾಕಾಶದಲ್ಲಿ ತನ್ನದೇ ಆದ ನಿಲ್ದಾಣವನ್ನು ಹೊಂದುವ ಬೃಹತ್ ಯೋಜನೆಗಳೆಡೆಗೆ ಇಸ್ರೋ ಅತಿಯಾದ ಒತ್ತು ನೀಡಿದ್ದರಿಂದ ನಾವಿಕ್‌ನಂಥ ಪ್ರಮುಖ ಹಾಗೂ ಯುದ್ಧದಂಥ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅತ್ಯಗತ್ಯವಾದ ಯೋಜನೆಗೆ ಹಿನ್ನಡೆ ಉಂಟಾಗಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಉಡಾವಣೆ ಮಾಡಿದ ಉಪಗ್ರಹಗಳೆಷ್ಟು?
ಸ್ವಂತದ ಪಥದರ್ಶಕ ವ್ಯವಸ್ಥೆಯನ್ನು ಹೊಂದುವ ಪ್ರಯತ್ನವನ್ನು 2000ದಿಂದಲೇ ಭಾರತ ಆರಂಭಿಸಿತ್ತು. ಇದಕ್ಕಾಗಿ ಎಳು ಉಪಗ್ರಹಗಳ ಗುಚ್ಛವನ್ನು ಆಗಸದಲ್ಲಿ ಸ್ಥಾಪಿಸುವ ಯೋಜನೆ ರೂಪಿಸಿದ ಇಸ್ರೋ, 2013ರ ಜುಲೈ 1ರಂದು ಐಆರ್‌ಎನ್‌ಎಸ್-1ಎ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಆ ಬಳಿಕ 2016ರವರೆಗೆ ಮತ್ತೆ ಆರು ಉಪಗ್ರಹಗಳನ್ನು (ಐಆರ್‌ಎನ್‌ಎಸ್‌ಎಸ್-1ಬಿ, 1ಸಿ, 1ಡಿ, 1ಇ, 1ಎಫ್, 1ಜಿ) ಕಕ್ಷೆಗೆ ಬಿಟ್ಟಿತ್ತು 2016ರ ಏಪ್ರಿಲ್‌ನಲ್ಲಿ ಐರ್‌ಎನ್‌ಎಸ್‌ಎಸ್-1ಜಿ ಉಪಗ್ರಹವನ್ನು ಉಡಾವಣೆ ಮಾಡುವ ಮೂಲಕ ದೇಶೀಯ ಪಥದರ್ಶಕ ವ್ಯವಸ್ಥೆಯ ಮೊದಲ ಹಂತದ ಯೋಜನೆಯನ್ನು ಇಸ್ರೋ ಪೂರ್ಣಗೊಳಿಸಿತ್ತು. ಆ ಬಳಿಕ ಈ ವ್ಯವಸ್ಥೆಗೆ ‘ನಾವಿಕ್’ ಎಂಬ ಹೆಸರು ಬಂದಿದ್ದು.
ಈ ಉಪಗ್ರಹಗಳ ಕಾರ್ಯಾಚರಣೆ ಅವಧಿ 10 ವರ್ಷಗಳು, 1ಎ ಉಪಗ್ರಹ ಸ್ವಲ್ಪ ಬೇಗವೇ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಹೀಗಾಗಿ, ಅದರ ಬದಲಿಗೆ 2017ರಲ್ಲಿ ಆಗಸ್ಟ್-31ರಂದು ಐಆರ್‌ಎನ್‌ಎಸ್‌ಎಸ್-1ಎಚ್ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿತ್ತು. ಆದರೆ, ಅದನ್ನು ಕಕ್ಷೆಗೆ ಸೇರಿಸುವಲ್ಲಿ ವಿಫಲವಾಗಿತ್ತು. 2018ರ ಏಪ್ರಿಲ್ 12ರಂದು ಐಆರ್‌ಎನ್‌ಎಸ್‌ಎಸ್ 1ಐ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿ ಕಕ್ಷೆಯಲ್ಲಿ ಕೂರಿಸಿದೆ. ಈ ‘ನಾವಿಕ್‌ಗೆ ಇನ್ನಷ್ಟು ಬಲ ತುಂಬುವ ಉದ್ದೇಶದಿಂದ ಇಸ್ರೋ 2023ರಲ್ಲಿ ‘ಎನ್‌ವಿಎಸ್-01 ಹೆಸರಿನ ಹೊಸ ಪೀಳಿಗೆಯ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. 2025ರ ಜನವರಿಯಲ್ಲಿ ‘ಎನ್‌ವಿಎಸ್-02’ ಉಪಗ್ರಹದ ಉಡಾವಣೆ ಯಶಸ್ವಿಯಾಗಿದ್ದರೂ ತಾಂತ್ರಿಕ ಕಾರಣದಿಂದ ಅದು ಕಕ್ಷೆಗೆ ಸೇರಲು ವಿಫಲಗೊಂಡಿತ್ತು.
2013ರಿಂದ ಇಲ್ಲಿಯವರೆಗೆ ‘ನಾವಿಕ್’ಗಾಗಿ ಇಸ್ರೋ ಒಟ್ಟು 11 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಇವುಗಳಲ್ಲಿ ಒಂಬತ್ತು ಮೊದಲ ಪೀಳಿಗೆಯ ಉಪಗ್ರಹಗಳಾಗಿದ್ದರೆ, ಎರಡು ಉಪಗ್ರಹಗಳು ಎರಡನೇ ಪೀಳಿಗೆಯವು.
ಜಿಪಿಎಸ್ ಒಂದೇ ಅಲ್ಲ
ಜಗತ್ತಿನಲ್ಲಿ ನಾಲ್ಕು ಜಾಗತಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಗಳಿವೆ. ಅವುಗಳೆಂದರೆ, ಅಮೆರಿಕದ ‘ಜಿಪಿಎಸ್’ (31 ಉಪಗ್ರಹಗಳು), ರಷ್ಯಾದ ‘ಜಿಎಲ್‌ಎನ್‌ಎಎನ್ಎಸ್ಎಸ್’ (24 ಉಪಗ್ರಹಗಳು), ಚೀನಾದ ‘ಬೈದೊ’ (40ಕ್ಕೂ ಹೆಚ್ಚು ಉಪಗ್ರಹಗಳು) ಮತ್ತು ಐರೋಪ್ಯ ಒಕ್ಕೂಟದ ಗೆಲಿಲಿಯೊ (30 ಉಪಗ್ರಹಗಳು).
ಜಪಾನ್ ನಾಲ್ಕು ಉಪಗ್ರಹಗಳನ್ನು ಒಳಗೊಂಡ ಕ್ಯುಜಡ್‌ಎಸ್‌ಎಸ್ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯನ್ನು ಒಳಗೊಂಡಿದೆ. ಪ್ರಾದೇಶಿಕ ಪಥದರ್ಶಕ ವ್ಯವಸ್ಥೆ ವ್ಯವಸ್ಥಿತವಾಗಿ ಕಾರ್ಯಾಚರಿಸಲು ಕನಿಷ್ಠ ಮೂರರಿಂದ ನಾಲ್ಕು ಉಪಗ್ರಹಗಳು ಅಗತ್ಯ.
ಭಾರತವು ಮೊದಲು ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ ರೂಪಿಸಿ ನಂತರ ಅದನ್ನು ಜಾಗತಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯಾಗಿ ಪರಿವರ್ತಿಸುವ ಯೋಜನೆ ಹೊಂದಿತ್ತು. ಆದರೆ, ಈಗ ಪ್ರಾದೇಶಿಕ ವ್ಯವಸ್ಥೆಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಪರಮಾಣು ಗಡಿಯಾರ ಎಂದರೇನು?
ಇದು ಪಥದರ್ಶಕ ಉಪಗ್ರಹದ ಬಹುಮುಖ್ಯ ಭಾಗ. ಅಣುಗಳ ಕಂಪನವನ್ನು ಆಧರಿಸಿ ಸಮಯವನ್ನು ಅತ್ಯಂತ ಖಚಿತವಾಗಿ ಅಳೆಯುವ ತಂತ್ರಜ್ಞಾನವೇ ಪರಮಾಣು ಗಡಿಯಾರ. ಪರಮಾಣುಗಳಲ್ಲಿ ಇರುವ ಎಲೆಕ್ಟ್ರಾನ್‌ಗಳ ಚಲನೆಯನ್ನು ಆಧರಿಸಿ ಸಮಯವನ್ನು ಅಳೆಯಲಾಗುತ್ತದೆ.ಈ ಗಡಿಯಾರಗಳಲ್ಲಿ ಪರಮಾಣುಗಳಲ್ಲಿರುವ ಎಲೆಕ್ಟ್ರಾನ್‌ಗಳನ್ನು ಪ್ರಚೋದಿಸಲಾಗುತ್ತದೆ. ಎಲೆಕ್ಟ್ರಾನ್ ಗಳಲ್ಲಿ ಬೇರೆ, ಬೇರೆ ಶಕ್ತಿಗಳು ಇರುವುದರಿಂದ ಇವನ್ನು ಒಂದೇ ನೆಲೆಗೆ ತಂದು ಅನಂತರ ಕಾಲವನ್ನು ಅಳೆಯಬೇಕು. ಇದಕ್ಕಾಗಿ ಲೇಸರ್ ಇಲ್ಲವೇ ಮೈಕ್ರೋವೇವ್‌ಗಳನ್ನು ಬಳಸುತ್ತಾರೆ. ಪರಮಾಣು ಗಡಿಯಾರಗಳಲ್ಲಿ ಸಾಮಾನ್ಯವಾಗಿ ಸೀಸಿಯಂ ಮತ್ತು ರುಬಿಡಿಯಂ ಪರಮಾಣುಗಳನ್ನು ಬಳಸುತ್ತಾರೆ.
ಪರಮಾಣು ಗಡಿಯಾರಗಳು ಯಾವುದೇ ಒಂದು ಪಥದರ್ಶಕ ಉಪಗ್ರಹ ವ್ಯವಸ್ಥೆಯ ಹೃದಯವಿದ್ದಂತೆ. ಇದು ವಿಫಲಗೊಂಡರೆ, ಆ ಉಪಗ್ರಹಗಳು ನಿಖರ ಸಮಯವನ್ನು ಅಳೆಯುವುದು ಸಾಧ್ಯವಿಲ್ಲ. ಆರಂಭದಲ್ಲಿ ಭಾರತವು ಪರಮಾಣು ಗಡಿಯಾರಗಳನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿತ್ತು. ನಂತರ ಅದರ ಮಹತ್ವ ಅರಿತ ಇಸ್ಕೊ, ಸ್ವದೇಶಿ ಪರಮಾಣು ಗಡಿಯಾರಗಳ ತಯಾರಿಕೆಯಲ್ಲಿ ತೊಡಗಿತ್ತು ಎನ್‌ವಿಎಸ್-01 ನಲ್ಲಿ ದೇಶಿಯಾವಾಗಿ ಅಭಿವೃದ್ಧಿ ಪಡಿಸಿದ ಗಡಿಯಾರಗಳನ್ನು ಬಳಸಲಾಗಿದೆ.
ಅತ್ಯಂತ ನಿಖರವಾದ ಸಮಯದ ಅಳತೆ ಬೇಡುವ ಪಥದರ್ಶಕ ಉಪಗ್ರಹ ವ್ಯವಸ್ಥೆ, ಸಂಶೋಧನೆ, ದೂರಸಂಪರ್ಕ, ಉದ್ಯಮಗಳು ಮುಂತಾದ ವಲಯಗಳಲ್ಲಿ ಪರಮಾಣು ಗಡಿಯಾರಗಳನ್ನು ಬಳಸುತ್ತಾರೆ.
ಮುಂದೇನು?
ಪಥದರ್ಶಕ ವ್ಯವಸ್ಥೆಯನ್ನು ಬಲಪಡಿಸುವ ಇರಾದೆ ಇಸ್ರೋಗೆ ಇದ್ದರೂ, ಹಳೆಯ ಉಪಗ್ರಹಗಳಿಗೆ ಬದಲಿ ಹೊಸ ಉಪಗ್ರಹಗಳನ್ನು ಕಳುಹಿಸುವ ಪ್ರಕ್ರಿಯೆ ನಿಧಾನವಾಗಿರುವುದು, 2025ರಲ್ಲಿ ಎನ್‌ವಿಎಸ್-02 ಉಪಗ್ರಹ ಉಡಾವಣಾ ವೈಫಲ್ಯ ಈ ಮಹತ್ವಾಕಾಂಕ್ಷಿ ಯೋಜನೆಗೆ ತೀವ್ರ ಹಿನ್ನಡೆ ಉಂಟುಮಾಡಿದೆ.
ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಮತ್ತು ಹಳೆಯ ಉಪಗ್ರಹಗಳ ಬದಲಿಗೆ 2026ರ ವರ್ಷಾಂತ್ಯದ ವೇಳೆಗೆ ಮೂರು ಉಪಗ್ರಹಗಳನ್ನು ಉಡಾವಣೆ ಮಾಡುವುದಾಗಿ ಇಸ್ರೋ ಈ ಹಿಂದೆ ಹೇಳಿತ್ತು ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ಏನಿದು ‘ನಾವಿಕ್ ?
ನಾವಿಕ್ (NaviC) ವಿಸ್ತ್ರತ ರೂಪ ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್‌ಸ್ಟಲೇಷನ್ ಕನ್ನಡದಲ್ಲಿ ಹೇಳುವುದಾದರೆ, ಭಾರತದ ಉಪಗ್ರಹಗಳ ಗುಚ್ಛದ ಮೂಲಕ ಪಥದರ್ಶನ. ಇದರ ಮೂಲ ಹೆಸರು ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್‌ಎನ್‌ಎಸ್‌ಎಸ್–ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಿಲೈಟ್ ಸಿಸ್ಟಮ್). ಇದು, ಅಮೆರಿಕದ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಮಾದರಿಯಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ). ಸ್ವತಂತ್ರವಾಗಿ ಮತ್ತು ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಪಥದರ್ಶಕ ವ್ಯವಸ್ಥೆ, 2016ರಲ್ಲಿ ಇದಕ್ಕೆ ‘ನಾವಿಕ್’ ಎಂದು ಮರುನಾಮಕರಣ ಮಾಡಲಾಯಿತು.
ಭೂಸ್ಥಿರ ಮತ್ತು ಭೂಸಮನ್ವಯ ಕಕ್ಷೆಗಳಲ್ಲಿ ಸುತ್ತುತ್ತಿರುವ ಏಳು ಉಪಗ್ರಹಗಳ ಗುಚ್ಛವು ಜಿಪಿಎಸ್ ಮಾದರಿಯಲ್ಲಿ ಪಥದರ್ಶನ (ದಿಕ್ಕು), ನಿಖರ ಸ್ಥಳದ ಮಾಹಿತಿ (ಪೊಸಿಷನಿಂಗ್) ಮತ್ತು ಸಮಯದ (ಟೈಮಿಂಗ್) ಮಾಹಿತಿ ನೀಡುತ್ತದೆ. ಭಾರತದ ಸಂಪೂರ್ಣ ಭೂಭಾಗ ಮತ್ತು ಸುತ್ತಲಿನ 1,500 ಕಿ.ಮೀ. ವ್ಯಾಪ್ತಿಯಲ್ಲಿ ನಿಖರ ಪಥದರ್ಶನ, ಸ್ಥಳದ ಮಾಹಿತಿ ನೀಡುವ ಸಾಮರ್ಥ್ಯ ಇದು ಹೊಂದಿದೆ (ಅಮೆರಿಕ, ರಷ್ಯಾ, ಚೀನಾ, ಯುರೋಪಿನ ಪಥದರ್ಶಕ ವ್ಯವಸ್ಥೆಯು ಇಡೀ ಜಗತ್ತನ್ನೇ ವ್ಯಾಪಿಸಿವೆ).
ಏನೆಲ್ಲಾ ಸೇವೆ?
ಪ್ರಮುಖವಾಗಿ ಎರಡು ಸೇವೆಗಳನ್ನು ಇದು ನೀಡುತ್ತದೆ. ಒಂದು ನಿಗದಿತ ಸ್ಥಳದ ಮಾಹಿತಿ ಸೇವೆ (ಸ್ಯಾಂಡರ್ಡ್ ಪೊಸಿಷನಿಂಗ್ ಸರ್ವಿಸ್ -ಎಸ್‌ಪಿಎಸ್). ಎಲ್ಲ ಬಳಕೆದಾರರಿಗೆ ಅಂದರೆ, ಸಾರ್ವಜನಿಕರಿಗೆ ಈ ಸೇವೆ ಲಭ್ಯ ಇನ್ನೊಂದು ನಿರ್ಬಂಧಿತ ಸೇವೆ (ರಿಟೈಡ್ ಸರ್ವಿಸ್-ಆರ್‌ಎಸ್) ಸೇನೆ ಮುಂತಾದ ಅಧಿಕೃತ ಬಳಕೆದಾರರಿಗೆ ಮಾತ್ರ ಈ ಸೇವೆಯನ್ನು ಇಸ್ಕೊ ನೀಡುತ್ತದೆ. ಇಸ್ಕೊ ಪ್ರಕಾರ, ಈ ವ್ಯವಸ್ಥೆಯು ಬಳಕೆದಾರ ಇರುವ ಸ್ಥಳದ ಮಾಹಿತಿಯನ್ನು ನಿಖರವಾಗಿ ಹೇಳುವ (ಗುರುತಿಸಿದ ಸ್ಥಳದ 20 ಮೀಟರ್ ವ್ಯಾಪ್ತಿಯ ಒಳಗೆ) ಸಾಮರ್ಥ್ಯವನ್ನು ಹೊಂದಿದೆ.
ಯಾವುದಕ್ಕೆ ಬಳಕೆ?
ದೇಶದಲ್ಲಿ ವಿಮಾನಯಾನ, ನೌಕಾಯಾನ, ರೈಲ್ವೆ, ಸೇನೆ ಉದ್ದೇಶಗಳು, ಪ್ರವಾಹ, ಭೂಕುಸಿತ, ಚಂಡಮಾರುತದಂತಹ ಪ್ರಾಕೃತಿಕ ವಿಕೋಪದ ತುರ್ತು ಪರಿಸ್ಥಿತಿಗಳಲ್ಲಿ ‘ನಾವಿಕ್ ಅನ್ನು ಬಳಸಲಾಗುತ್ತಿದೆ. ಜನಸಮಾನ್ಯರಿಗೆ ಇದು ಲಭ್ಯವಿದ್ದರೂ, ಇದನ್ನು ಬಳಸುವವರ ಸಂಖ್ಯೆ ಕಡಿಮೆ ಜಿಪಿಎಸ್‌ನಷ್ಟು ಜನಪ್ರಿಯತೆ ಪಡೆದಿಲ್ಲ.
ಈಗ ಏನಾಗಿದೆ?
ಪಥದರ್ಶಕ ವ್ಯವಸ್ಥೆಗಾಗಿ ಇಸ್ರೋ, 2013ರಿಂದ 2018ರವರೆಗೆ ಒಂಬತ್ತು ಉಪಗ್ರಹಗಳನ್ನು ಉಡಾವಣೆ ಮಾಡಿತ್ತು ಅದರಲ್ಲಿ ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿತ್ತು. ಪಥದರ್ಶಕ ಉಪಗ್ರಹಗಳಲ್ಲಿ ಪರಮಾಣು ಗಡಿಯಾರ ಅತ್ಯಂತ ಪ್ರಮುಖ ಸಾಧನವಾಗಿದ್ದು, ಅದು ಕಾರ್ಯಸ್ಥಗಿತಗೊಳಿಸಿದರೆ ಉಪಗ್ರಹದ ಕಾರ್ಯಾಚರಣೆ ಬಹುತೇಕ ಸ್ಥಗಿತಗೊಳ್ಳುತ್ತದೆ. 2025ರಲ್ಲಿ ಆರ್‌ಟಿಐ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಇಸ್ಕೊ, ಎಂಟರ ಪೈಕಿ ಐದು ಉಪಗ್ರಹಗಳಲ್ಲಿನ (1ಎ, 1ಸಿ, 1ಡಿ, 1ಇ, 1ಜಿ) ಪರಮಾಣು ಗಡಿಯಾರಗಳು ಸ್ಥಗಿತಗೊಂಡಿದ್ದು. (ಒಂದು ಉಪಗ್ರಹದಲ್ಲಿ ಮೂರು ಗಡಿಯಾರಗಳಿರುತ್ತವೆ) ನಾವಿಕ್‌ಗೆ ಅವುಗಳ ಸೇವೆ ಸಿಗುತ್ತಿಲ್ಲ ಎಂದು ಹೇಳಿತ್ತು.
ಇದೇ 13ರಂದು ಇಸ್ರೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಯೋಜನೆಯ ಅಡಿ ಉಡಾವಣೆ ಮಾಡಿದ್ದ 1ಎಫ್ ಉಪಗ್ರಹವು ತನ್ನ 10 ವರ್ಷಗಳ ಕಾರ್ಯಾಚರಣೆ ಅವಧಿಯನ್ನು ಮಾರ್ಚ್ 10ಕ್ಕೆ ಪೂರೈಸಿದೆ. ಅದರಲ್ಲಿರುವ ಪರಮಾಣು ಗಡಿಯಾರವು ಮಾರ್ಚ್ 13ರಂದು ಸ್ಥಗಿತಗೊಂಡಿದೆ. ಆದರೂ, ಉಪಗ್ರಹವು ಕಕ್ಷೆಯಲ್ಲಿ ಕಾರ್ಯಾಚರಣೆ ಮುಂದುವರಿಸಲಿದೆ. ಏಕಮುಖ ಸಂದೇಶ ಕಳುಹಿಸುವ ಉದ್ದೇಶಕ್ಕೆ ಇದು ಬಳಕೆಯಾಗಲಿದೆ’ ಎಂದು ಹೇಳಿದೆ.
ಇದರೊಂದಿಗೆ, ಬಾಕಿ ಉಳಿದಿದ್ದ ಮೂರು ಉಪಗ್ರಹಗಳ (1ಬಿ, 1ಎಫ್ ಮತ್ತು 1ಐ) ಪೈಕಿ ಮತ್ತೊಂದು ನಿಷ್ಕ್ರಿಯವಾದಂತಾಗಿದೆ. ಹೀಗಾಗಿ, ಮೊದಲು ಕಳುಹಿಸಿದ್ದ ಎರಡು ಉಪಗ್ರಹಗಳೊಂದಿಗೆ, 2023ರಲ್ಲಿ ಕಕ್ಷೆ ಸೇರಿಸಿರುವ ಎನ್‌ವಿಎಸ್-01 ಸೇರಿದಂತೆ ಒಟ್ಟು ಮೂರು ಉಪಗ್ರಹಗಳು ಮಾತ್ರ ‘ನಾವಿಕ್’ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.