Tue. Jun 23rd, 2026

Kannada

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಮ್ಯಾರಥಾನ್: ಕೆನ್ಯಾದ ಸಾವೆ ವಿಶ್ವದಾಖಲೆ

  • ಕೀನ್ಯಾದ ದೂರ ಅಂತರದ ಓಟಗಾರ ಸಬಾಸ್ಟಿಯನ್ ಸಾವ ಅವರು ಪುರುಷರ ಮ್ಯಾರಥಾನ್ ಸ್ಪರ್ಧೆಯಲ್ಲಿ ಎರಡು ಗಂಟೆಯೊಳಗೆ ಗುರಿ ತಲುಪಿ ವಿಶ್ವದಾಖಲೆ ಬರೆದರು ಇಥಿಯೋಪಿಯಾದ ಟಿಸ್ಟ್ ಅಸಫಾ ಅವರು ಮಹಿಳೆಯರ ವಿಭಾಗದಲ್ಲಿ ತಮ್ಮದೇ ವಿಶ್ವದಾಖಲೆಯನ್ನು ಉತ್ತಮ ಪಡಿಸಿಕೊಂಡರು.
  • ಹಾಲಿ ಚಾಂಪಿಯನ್ ಸಾವೆ ಅವರು 42.195 ಕಿಲೋ ಮೀಟರ್ ದೂರವನ್ನು 1 ಗಂಟೆ 59 ನಿಮಿಷ 30 ಸೆಕೆಂಡುಗಳಲ್ಲಿ ಕ್ರಮಿಸಿದರು. ಈ ಸ್ಪರ್ಧೆಯಲ್ಲಿ ಎರಡು ಗಂಟೆಗಳಿಗೂ ಮೊದಲು ಗುರಿ ಮುಟ್ಟಿದ ಮೊದಲ ಅಥ್ಲೆಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
  • ಸ್ಪರ್ಧೆಯಲ್ಲಿ 31 ವರ್ಷದ ಸಾವೆ ಅವರಿಗೆ ಇಥಿಯೋಪಿಯಾದ ಯೋಮಿಫ್ ಕಜಿಲ್ಲಾ (1:59:41) ಮತ್ತು ಉಗಾಂಡಾದ ಜೇಕಬ್ ಕಿಪ್ಲೋಮ (200 28) ಅವರಿಂದ ಪ್ರಬಲ ಪೈಪೋಟಿ ಎದುರಾಯಿತು ಅವರಿಬ್ಬರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
  • ಈ ಮೂವರೂ ಹಿಂದಿನ ವಿಶ್ವದಾಖಲೆಯ ಸಮಯಕ್ಕಿಂತ ಬೇಗ ಗುರಿ ತಲುಪಿದ್ದು ವಿಶೇಷವಾಗಿತ್ತು 2023ರ ಷಿಕಾಗೊ ಮ್ಯಾರಥಾನ್ನಲ್ಲಿ ಕೆನ್ನಾದ ಕೆಲಿನ್ ಕಿಪ್ರಮ್ (200 35) ವಿಶ್ವದಾಖಲೆ ನಿರ್ಮಿಸಿದ್ದರು. 24 ವರ್ಷದ ಕಲ್ವಿನ್ 2024ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ
  • ಮಹಿಳೆಯರ ಓಟದಲ್ಲಿ ಹಾಲಿ ಒಲಿಂಪಿಕ್ ಅಸಫಾ 2 ಗಂಟೆ 15 ನಿಮಿಷ 41 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು 29 ವರ್ಷದ ಓಟಗಾರ್ತಿ 2025ರ ಲಂಡನ್ ಮ್ಯಾರಥಾನ್‌ನಲ್ಲಿ (2:15:50) ವಿಶ್ವದಾಖಲೆ ನಿರ್ಮಿಸಿದ್ದರು.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಸರ್ಕಾರಿ ಶಾಲೆಗಳ ಬಲವರ್ಧನೆಗೆ ಎಂಟು ‘ಗ್ಯಾರಂಟಿ’

ಸಂದರ್ಭ: ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಬಲವರ್ಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂಟು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.

  • ಪ್ರತಿ ಶಾಲೆಗೂ ಸುಸಜ್ಜಿತ ಕಟ್ಟಡ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಕೊಠಡಿಗಳು, ಕುಡಿಯುವ ನೀರು, ಶೌಚಾಲಯಗಳ ನಿರ್ಮಾಣ. ಮಕ್ಕಳು ಹಾಗೂ ಪೋಷಕರ ಇಚ್ಛೆಗೆ ಅನುಗುಣವಾಗಿ ಭಾಷಾ ಮಾಧ್ಯಮ ಆಯ್ಕೆ. ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಸುತ್ತಲ ಗ್ರಾಮ, ವಾರ್ಡ್‌ಗಳಿಂದ ಬರುವ ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ಪ್ರತಿ ಶಾಲೆಗಳಲ್ಲೂ ಆಧುನಿಕ ಶಿಕ್ಷಣಕ್ಕೆ ಅನುಗುಣವಾಗಿ ಡಿಜಿಟಲ್ ಕಲಿಕೆಗೆ ಅವಕಾಶ, ಸ್ಮಾರ್ಟ್ ಕ್ಲಾಸ್‌ಗಳ ನಿರ್ಮಾಣ. ವಿವಿಧ ಕಲೆಗಳು, ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ಪ್ರತಿ ಶಾಲೆಯಲ್ಲೂ ಶೈಕ್ಷಣಿಕ ಗುಣಮಟ್ಟದ ಮೇಲ್ವಿಚಾರಣೆಗೆ ಪ್ರತ್ಯೇಕ ಸಮಿತಿ ರಚನೆ ಭವಿಷ್ಯದಲ್ಲಿ ಉದ್ಯೋಗ ಸಿಗುವಂತಹ ಶಿಕ್ಷಣ ಕಲಿಕೆಗೆ ಅವಕಾಶ ನೀಡಲು ಶಾಲಾ ಹಂತದಿಂದಲೇ ಮಕ್ಕಳಿಗೆ ಕೌಶಲಾಧಾರಿತ ತರಬೇತಿಯ ಭರವಸೆ ನೀಡಿದ್ದಾರೆ.
  • `ಸರ್ಕಾರಿ ಶಾಲೆಗಳ ಬಲರ್ಧನೆಗೆ ಕೈಗೊಳ್ಳಲಿರುವ ಸುಧಾರಣೆಗಳು 50 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪ್ರಯೋಜನಕಾರಿಯಾಗಲಿವೆ. ಈ ಎಲ್ಲ ಬದಲಾವಣೆಗಳು 2025-27ನೇ ಸಾಲಿನಿಂದಲೇ ಆರಂಭವಾಗಲಿವೆ. ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಪೋಷಕರು ಮತ್ತು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವ ಮೂಲಕ ಈ ಪರಿವರ್ತನಾ ಪ್ರಯಾಣದ ಭಾಗವಾಗಬೇಕು’ ಎಂದು ಕರೆ ನೀಡಿದ್ದಾರೆ.

ವಿಶ್ವ ಬ್ಯಾಲಿ: ಮಸ್ಕರೇನಾಸ್-ಗಗನ್ ಜೋಡಿಗೆ 48ನೇ ಸ್ಥಾನ

  • ಕರ್ನಾಟಕದ ಜೋಡಿ ಡೀನ್ ಮಸ್ಕರೇನಾಸ್ ಮತ್ತು ಗಗನ್ ಕರುಂಬಯ್ಯ ಅವರು ಸ್ಪೇನ್‌ ಕೆನರಿ ದ್ವೀಪದಲ್ಲಿ ನಡೆದ ವಿಶ್ವ ಬ್ಯಾಲಿ ಚಾಂಪಿಯನ್‌ಷಿಪ್‌ನ ಕ್ಲಾಸ್-3 ಸ್ಪರ್ಧೆಯಲ್ಲಿ ಭಾನುವಾರ 7 ಸ್ಥಾನದೊಂದಿಗೆ ರೇಸ್ ಪೂರ್ಣಗೊಳಿಸಿದರು.
  • ಮಂಗಳೂರಿನ ಮಸ್ಮರೇನಾಸ್ ಅವರು ಚಾಲಕರಾಗಿ ಹಾಗೂ ಕೊಡಗಿನ ಗಗನ್ ಅವರು ಇದೇ ಮೊದಲ ಬಾರಿಗೆ ವಿಶ್ವ ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿದಿದ್ದರು ಈ ಜೋಡಿಯು ಯುರೋಪ್ ಮೂಲದ ‘ಪಿಎಚ್ ಸ್ಪೋರ್ಟ್ಸ್ ಸಂಸ್ಥೆ ಸಿದ್ಧಪಡಿಸಿದ ಫೋರ್ಡ್ ಫಿಯಸ್ಮಾ ರಾಲಿ-3 ಕಾರನ್ನು ಚಲಾಯಿಸಿತು ರಾಲಿಯಲ್ಲಿ ಒಟ್ಟಾರೆ 48ನೇ ಸ್ಥಾನ ಪಡೆಯಿತು.
  • ಟಿಎಸ್‌ಐ ರೇಸಿಂಗ್‌ನ ಮಸ್ಕರೇನಾಸ್ ಅವರು ನರೇನ್‌ಕುಮಾರ್ ಹಾಗೂ ಗೌರವ್ ಗಿಲ್ ಅವರ ಬಳಿಕ ಈ ಪ್ರತಿಷ್ಠಿತ ರಾಲಿಯಲ್ಲಿ ಭಾಗವಹಿಸಿದ ಭಾರತದ ಮೂರನೇ ಚಾಲಕ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಭಾರತ–ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ: ಹಿನ್ನೆಲೆ, ಮಹತ್ವ ಮತ್ತು ಇತರ ಆಯಾಮಗಳು
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದು ಭಾರತದ ವ್ಯಾಪಾರ ರಾಜತಾಂತ್ರಿಕತೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈ ಒಪ್ಪಂದವು ಕೇವಲ ಸರಕುಗಳ ಮೇಲಿನ ಸುಂಕ ಕಡಿತಕ್ಕೆ ಮಾತ್ರ ಸೀಮಿತವಲ್ಲ; ಇದು ಹೂಡಿಕೆ, ಸೇವಾ ವಲಯ, ವೃತ್ತಿಪರರ ಚಲನೆ, ಕೃಷಿ ಉತ್ಪಾದಕತೆ, MSME ಅಭಿವೃದ್ಧಿ, ವಿದ್ಯಾರ್ಥಿ ಚಲನೆ ಮತ್ತು ತಂತ್ರಜ್ಞಾನ ಸಹಕಾರವನ್ನು ಒಳಗೊಂಡಿರುವ ಸಮಗ್ರ ಆರ್ಥಿಕ ಸಹಭಾಗಿತ್ವವಾಗಿದೆ. ಒಪ್ಪಂದವು ಎರಡೂ ದೇಶಗಳ ಒಳನಾಡು ಪ್ರಕ್ರಿಯೆಗಳು ಮತ್ತು ಅನುಮೋದನೆಗಳ ನಂತರ ಜಾರಿಗೆ ಬರಲಿದೆ.


ಹಿನ್ನೆಲೆ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಆರ್ಥಿಕ ಸಂಬಂಧಗಳು ದೀರ್ಘಕಾಲದಿಂದ ಇದ್ದರೂ, ದ್ವಿಪಕ್ಷೀಯ ವ್ಯಾಪಾರದ ಪ್ರಮಾಣವು ಎರಡೂ ದೇಶಗಳ ಸಾಮರ್ಥ್ಯಕ್ಕೆ ಹೋಲಿಸಿದರೆ ಕಡಿಮೆ ಇತ್ತು. 2024ರಲ್ಲಿ ಸರಕು ಮತ್ತು ಸೇವೆಗಳ ಒಟ್ಟು ದ್ವಿಪಕ್ಷೀಯ ವ್ಯಾಪಾರವು ಸುಮಾರು 2.4 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. FY 2024–25ರಲ್ಲಿ ಸರಕು ವ್ಯಾಪಾರವು ಸುಮಾರು 1.3 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, ಹಿಂದಿನ ವರ್ಷದಿಗಿಂತ 49% ಬೆಳವಣಿಗೆ ಕಂಡಿತ್ತು. ಈ ಹಿನ್ನೆಲೆಯಲ್ಲಿ FTA ಮೂಲಕ ವ್ಯಾಪಾರವನ್ನು ವಿಸ್ತರಿಸುವ ಪ್ರಯತ್ನ ನಡೆದಿದೆ.
ಭಾರತವು ಇತ್ತೀಚಿನ ವರ್ಷಗಳಲ್ಲಿ UAE, ಆಸ್ಟ್ರೇಲಿಯಾ, EFTA ಮುಂತಾದ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಈಗ ನ್ಯೂಜಿಲೆಂಡ್ ಜೊತೆಗೆ ಒಪ್ಪಂದವು ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಭಾರತದ ಆರ್ಥಿಕ ಸಂಪರ್ಕವನ್ನು ವಿಸ್ತರಿಸುವ ನೀತಿಯ ಭಾಗವಾಗಿದೆ.
ಒಪ್ಪಂದದ ಪ್ರಮುಖ ಅಂಶಗಳು

ಕ್ಷೇತ್ರಪ್ರಮುಖ ಅಂಶ
ಸರಕು ವ್ಯಾಪಾರಭಾರತದಿಂದ ನ್ಯೂಜಿಲೆಂಡ್‌ಗೆ ರಫ್ತಾಗುವ 100% ಉತ್ಪನ್ನಗಳಿಗೆ ಸುಂಕರಹಿತ ಪ್ರವೇಶ
ನ್ಯೂಜಿಲೆಂಡ್ ರಫ್ತುಭಾರತವು 70.03% tariff lines ಮೇಲೆ ಸುಂಕ ಉದಾರೀಕರಣ ನೀಡಲಿದೆ
ರಕ್ಷಣಾತ್ಮಕ ಕ್ರಮ29.97% ಉತ್ಪನ್ನಗಳನ್ನು ವಿನಾಯಿತಿ ಪಟ್ಟಿಯಲ್ಲಿ ಇಟ್ಟು ಭಾರತೀಯ ರೈತರು ಮತ್ತು ಸೂಕ್ಷ್ಮ ವಲಯಗಳ ರಕ್ಷಣೆ
ಹೂಡಿಕೆಭಾರತಕ್ಕೆ 20 ಬಿಲಿಯನ್ ಡಾಲರ್ ಹೂಡಿಕೆ ಬರುವ ನಿರೀಕ್ಷೆ
ಸೇವಾ ವಲಯ118 ಸೇವಾ ಕ್ಷೇತ್ರಗಳಲ್ಲಿ ಭಾರತದ ವೃತ್ತಿಪರರಿಗೆ ಅವಕಾಶ
ವೀಸಾ5,000 Temporary Employment Entry visa ಕೋಟಾ
ವಿದ್ಯಾರ್ಥಿಗಳುSTEM ಪದವೀಧರರಿಗೆ post-study work ಅವಕಾಶ
ಕೃಷಿಸೇಬು, ಕಿವಿ, ಮನೂಕಾ ಹನಿ ಮುಂತಾದವುಗಳಿಗೆ quota ಆಧಾರಿತ ಸೌಲಭ್ಯ
MSMEಜವಳಿ, ಚರ್ಮ, ಪಾದರಕ್ಷೆ, ಎಂಜಿನಿಯರಿಂಗ್, ಸಂಸ್ಕರಿತ ಆಹಾರಕ್ಕೆ ಮಾರುಕಟ್ಟೆ ಪ್ರವೇಶ
  1. ಭಾರತದ ರಫ್ತುಗಳಿಗೆ ದೊಡ್ಡ ಅವಕಾಶ
    ಈ ಒಪ್ಪಂದದಿಂದ ಭಾರತದ ಜವಳಿ, ಸಿದ್ಧ ಉಡುಪು, ಚರ್ಮೋತ್ಪನ್ನ, ಪಾದರಕ್ಷೆ, ಹವಳ ಮತ್ತು ಆಭರಣ, ಎಂಜಿನಿಯರಿಂಗ್ ಉತ್ಪನ್ನಗಳು, ಸಂಸ್ಕರಿತ ಆಹಾರ, ಸೆರಾಮಿಕ್, ಕಾರ್ಪೆಟ್, ವಾಹನ ಮತ್ತು ವಾಹನ ಬಿಡಿಭಾಗಗಳು ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಬಹುದು. ಹಿಂದೆ ಕೆಲವು ಉತ್ಪನ್ನಗಳ ಮೇಲೆ ನ್ಯೂಜಿಲೆಂಡ್ನಲ್ಲಿ 10%ರವರೆಗೆ ಸುಂಕವಿತ್ತು; ಈಗ 100% ಭಾರತೀಯ ರಫ್ತುಗಳಿಗೆ duty-free access ದೊರೆಯಲಿದೆ.
    ಇದು ವಿಶೇಷವಾಗಿ ಕಾರ್ಮಿಕಾಧಾರಿತ ವಲಯಗಳಿಗೆ ಲಾಭದಾಯಕ. ಉದ್ಯೋಗ ಸೃಷ್ಟಿ, ಮಹಿಳಾ ಉದ್ಯಮಶೀಲತೆ, ಗ್ರಾಮೀಣ ಕುಶಲಕರ್ಮಿಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಹೊಸ ಮಾರುಕಟ್ಟೆ ಲಭ್ಯವಾಗಬಹುದು.
  2. MSME ಮತ್ತು ಉದ್ಯೋಗ ಸೃಷ್ಟಿ
    ಭಾರತದ ಬಹುಪಾಲು ರಫ್ತುಗಳಲ್ಲಿ MSME ವಲಯದ ಪಾತ್ರ ಮಹತ್ವದ್ದಾಗಿದೆ. FTA ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಜಾಗತಿಕ ಮಾರುಕಟ್ಟೆಗೆ ಪ್ರವೇಶ ಸುಲಭವಾಗುತ್ತದೆ. ಕಡಿಮೆ ಸುಂಕ, ಸರಳ customs procedure, trade facilitation ಮತ್ತು regulatory certainty ಇವುಗಳಿಂದ MSMEಗಳು ರಫ್ತು ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬಹುದು.
    ಉದಾಹರಣೆ: ತಿರುಪ್ಪೂರಿನ ಉಡುಪು ಉದ್ಯಮ, ಕಾನ್ಪುರದ ಚರ್ಮೋತ್ಪನ್ನ, ಮೊರ್ಬಿಯ ಸೆರಾಮಿಕ್, ಸೂರತ್ನ ವಸ್ತ್ರೋದ್ಯಮ, ರಾಜಸ್ಥಾನದ ಹಸ್ತಶಿಲ್ಪ ವಲಯಗಳು ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಅವಕಾಶ ಪಡೆಯಬಹುದು.
  3. ಭಾರತದ ತಯಾರಿಕಾ ವಲಯಕ್ಕೆ ಕಡಿಮೆ ವೆಚ್ಚದ ಇನ್ಪುಟ್ಗಳು
    ನ್ಯೂಜಿಲೆಂಡ್ನಿಂದ ಮರದ ದಿಮ್ಮಿಗಳು, ಕಿಟ್ಟಿಯುಕ್ತ ಕಲ್ಲಿದ್ದಲು, ಲೋಹದ ತ್ಯಾಜ್ಯ ಮತ್ತು scrap materials ಸುಂಕರಹಿತವಾಗಿ ಅಥವಾ ಕಡಿಮೆ ಸುಂಕದಲ್ಲಿ ಬರಬಹುದು. ಇವು ಭಾರತದಲ್ಲಿ ತಯಾರಿಕಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯಕವಾಗಬಹುದು. ಇದರಿಂದ Make in India, ಉತ್ಪಾದನಾ ಸ್ಪರ್ಧಾತ್ಮಕತೆ ಮತ್ತು supply chain resilience ಗೆ ಉತ್ತೇಜನ ಸಿಗುತ್ತದೆ.
  4. ರೈತರ ಹಿತಾಸಕ್ತಿ ರಕ್ಷಣೆಯ ಆಯಾಮ
    FTAಗಳಲ್ಲಿ ಸಾಮಾನ್ಯವಾಗಿ ಕೃಷಿ ವಲಯದ ಮೇಲೆ ಒತ್ತಡ ಉಂಟಾಗುವ ಭೀತಿ ಇರುತ್ತದೆ. ಅದಕ್ಕಾಗಿ ಭಾರತವು dairy, milk, cream, cheese, yoghurt, whey, onions, sugar, spices, edible oils, rubber ಮುಂತಾದ ಸೂಕ್ಷ್ಮ ಉತ್ಪನ್ನಗಳನ್ನು market access ನಿಂದ ಹೊರಗಿಟ್ಟಿದೆ. ಇದು ಭಾರತೀಯ ರೈತರು ಮತ್ತು ಗ್ರಾಮೀಣ ಆರ್ಥಿಕತೆಯನ್ನು ರಕ್ಷಿಸುವ ಪ್ರಯತ್ನವಾಗಿದೆ.
    ಸೇಬು, ಕಿವಿ ಹಣ್ಣು, ಮನೂಕಾ ಹನಿ ಮುಂತಾದ ಉತ್ಪನ್ನಗಳಿಗೆ Tariff Rate Quota ವ್ಯವಸ್ಥೆ ಇರಲಿದೆ. ಅಂದರೆ ನಿರ್ದಿಷ್ಟ ಪ್ರಮಾಣದವರೆಗೆ ಮಾತ್ರ ಕಡಿಮೆ ಸುಂಕ ಅಥವಾ ಸೌಲಭ್ಯ ದೊರೆಯುತ್ತದೆ. ಇದರಿಂದ ಗ್ರಾಹಕರಿಗೆ ಆಯ್ಕೆ ಸಿಗುತ್ತದೆ, ಆದರೆ ದೇಶೀಯ ರೈತರ ಮೇಲೆ ಅತಿಯಾದ ಒತ್ತಡ ಬರುವುದನ್ನು ತಡೆಯಬಹುದು.
  5. ಸೇವಾ ವಲಯ ಮತ್ತು ವೃತ್ತಿಪರರ ಚಲನೆ
    ಈ ಒಪ್ಪಂದದ ಪ್ರಮುಖ ವಿಶೇಷತೆಯೆಂದರೆ ಸೇವಾ ವಲಯಕ್ಕೆ ನೀಡಿರುವ ಮಹತ್ವ. ಭಾರತದ ಐಟಿ, ಎಂಜಿನಿಯರಿಂಗ್, ಆರೋಗ್ಯ ಸೇವೆ, ಶಿಕ್ಷಣ, ನಿರ್ಮಾಣ, ಯೋಗ, ಆಯುಷ್, ಬಾಣಸಿಗರು, ಸಂಗೀತ ಶಿಕ್ಷಕರು ಮುಂತಾದ ವೃತ್ತಿಪರರಿಗೆ ನ್ಯೂಜಿಲೆಂಡ್ನಲ್ಲಿ ಅವಕಾಶಗಳು ಹೆಚ್ಚಾಗಬಹುದು. FTA ಅಡಿಯಲ್ಲಿ 5,000 Temporary Employment Entry visa ಕೋಟಾ ಭಾರತೀಯ ವೃತ್ತಿಪರರಿಗೆ ಮಹತ್ವದ ಅವಕಾಶವಾಗಲಿದೆ.
    ಇದು ಭಾರತಕ್ಕೆ ಕೇವಲ ಸರಕು ರಫ್ತು ಮಾತ್ರವಲ್ಲದೆ talent export ಮತ್ತು services diplomacy ಯಲ್ಲಿಯೂ ಅವಕಾಶವನ್ನು ನೀಡುತ್ತದೆ.
  6. ವಿದ್ಯಾರ್ಥಿಗಳು ಮತ್ತು ಯುವಕರಿಗೆ ಅವಕಾಶ
    ನ್ಯೂಜಿಲೆಂಡ್ನಲ್ಲಿ ಉನ್ನತ ಶಿಕ್ಷಣ ಪಡೆಯುವ ಭಾರತೀಯ ವಿದ್ಯಾರ್ಥಿಗಳಿಗೆ post-study work rights ಹೆಚ್ಚು ಸ್ಪಷ್ಟವಾಗಲಿವೆ. STEM Bachelor’s ಮತ್ತು Master’s ಪದವೀಧರರಿಗೆ 3 ವರ್ಷಗಳವರೆಗೆ, Doctoral scholars ಗೆ 4 ವರ್ಷಗಳವರೆಗೆ post-study work ಅವಕಾಶ ಇರುವುದಾಗಿ ಹೇಳಲಾಗಿದೆ. ಇದರಿಂದ ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗದ ನಡುವಿನ ಸಂಪರ್ಕ ಬಲವಾಗುತ್ತದೆ.
  7. ಆಯುಷ್, ಯೋಗ ಮತ್ತು ಸಾಂಸ್ಕೃತಿಕ ಆರ್ಥಿಕತೆ
    ಈ ಒಪ್ಪಂದದಲ್ಲಿ ಆಯುಷ್, ಯೋಗ, ಪರಂಪರাগত ಜ್ಞಾನ, wellness services, creative industries ಮತ್ತು cultural exchange ಗಳಿಗೂ ಸ್ಥಾನ ನೀಡಲಾಗಿದೆ. ಇದರಿಂದ ಭಾರತದ soft power diplomacyಗೆ ಬಲ ಸಿಗುತ್ತದೆ. ಆಯುರ್ವೇದ, ಯೋಗ, ನೈಸರ್ಗಿಕ ಚಿಕಿತ್ಸಾ ಪದ್ಧತಿಗಳು ಮತ್ತು wellness tourism ಗಳಿಗೆ ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಅಧಿಕೃತ ಮಾನ್ಯತೆ ಮತ್ತು ಅವಕಾಶಗಳು ಹೆಚ್ಚಾಗಬಹುದು.
  8. ಔಷಧಿ ಮತ್ತು ವೈದ್ಯಕೀಯ ಸಾಧನಗಳ ರಫ್ತು
    ಭಾರತದ ಔಷಧಿ ಮತ್ತು medical devices ವಲಯಕ್ಕೆ ಕೂಡ ಅವಕಾಶ ಸಿಗಲಿದೆ. comparable regulators ಗಳ ಪರಿಶೀಲನೆ ವರದಿಗಳನ್ನು ಒಪ್ಪಿಕೊಳ್ಳುವ ವ್ಯವಸ್ಥೆಯಿಂದ duplicated inspection ಕಡಿಮೆಯಾಗಬಹುದು. ಇದರಿಂದ ಭಾರತೀಯ ಔಷಧ ಕಂಪನಿಗಳಿಗೆ ನ್ಯೂಜಿಲೆಂಡ್ ಮಾರುಕಟ್ಟೆಗೆ ಪ್ರವೇಶ ಸುಲಭವಾಗಬಹುದು.
  9. ಜಿಯೋ-ಆರ್ಥಿಕ ಮತ್ತು ಇಂಡೋ-ಪೆಸಿಫಿಕ್ ಆಯಾಮ
    ಈ ಒಪ್ಪಂದವು ಕೇವಲ ದ್ವಿಪಕ್ಷೀಯ ವ್ಯಾಪಾರಕ್ಕೆ ಮಾತ್ರ ಸೀಮಿತವಲ್ಲ. ಜಾಗತಿಕ ವ್ಯಾಪಾರದಲ್ಲಿ ಅನಿಶ್ಚಿತತೆ, supply chain disruption, ಚೀನಾದ ಮೇಲೆ ಅವಲಂಬನೆ ಕಡಿಮೆ ಮಾಡುವ ಪ್ರಯತ್ನ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಆರ್ಥಿಕ ಸಹಕಾರ ಹೆಚ್ಚಿಸುವ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದೆ. ನ್ಯೂಜಿಲೆಂಡ್ಗೂ ಭಾರತವು ದೊಡ್ಡ ಗ್ರಾಹಕ ಮಾರುಕಟ್ಟೆ ಮತ್ತು ಹೂಡಿಕೆ ಗುರಿಯಾಗಿದ್ದರೆ, ಭಾರತಕ್ಕೆ ನ್ಯೂಜಿಲೆಂಡ್ ಒಂದು ಅಭಿವೃದ್ಧಿ ಹೊಂದಿದ, ಉನ್ನತ ಗುಣಮಟ್ಟದ ಮಾರುಕಟ್ಟೆಯಾಗಿದೆ.
  10. ಸಂಭವನೀಯ ಸವಾಲುಗಳು
    ಈ ಒಪ್ಪಂದದ ಫಲಿತಾಂಶಗಳು ಸ್ವಯಂಚಾಲಿತವಾಗಿ ಬರುವುದಿಲ್ಲ. ಭಾರತೀಯ ಉತ್ಪನ್ನಗಳು ನ್ಯೂಜಿಲೆಂಡ್ನ ಗುಣಮಟ್ಟ, phytosanitary, packaging, environmental ಮತ್ತು labour standardsಗಳನ್ನು ಪೂರೈಸಬೇಕಾಗುತ್ತದೆ. MSMEಗಳಿಗೆ ಜಾಗತಿಕ ಮಾನದಂಡಗಳ ಅರಿವು, ಉತ್ಪನ್ನ ಪ್ರಮಾಣೀಕರಣ, logistics ಮತ್ತು branding ಸಹಾಯ ಅಗತ್ಯವಾಗುತ್ತದೆ. ಜೊತೆಗೆ ಕಡಿಮೆ ಸುಂಕದ ಆಮದುಗಳಿಂದ ಕೆಲವು domestic sectors ಮೇಲೆ ಒತ್ತಡ ಬರುವ ಸಾಧ್ಯತೆಯೂ ಇದೆ. ಅದಕ್ಕಾಗಿ safeguards ಮತ್ತು Rules of Origin ನಿಯಮಗಳ ಪರಿಣಾಮಕಾರಿ ಅನುಷ್ಠಾನ ಮುಖ್ಯ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಲಡಾಖ್: 5 ಹೊಸ ಜಿಲ್ಲೆಗಳ ರಚನೆಗೆ ಒಪ್ಪಿಗೆ

ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಐದು ಹೊಸ ಜಿಲ್ಲೆಗಳ ರಚನೆಗೆ ಲಡಾಖ್ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಕೇನಾ ಅವರು ಒಪ್ಪಿಗೆ ನೀಡಿದ್ದಾರೆ. ಇದರೊಂದಿಗೆ ಈ ಪ್ರದೇಶದ ಜನರ ಬಹುಕಾಲದ ಆಕಾಂಕ್ಷೆ ಈಡೇರಿದಂತಾಗಿದೆ.

ನುಬ್ರಾ, ಶಾಮ್, ಚಾಂಗ್‌ಥಾಂಗ್, ಜಾಂಸ್ಕರ್ ಮತ್ತು ದ್ರಾಸ್- ಈ ಐದು ಹೊಸ ಜಿಲ್ಲೆಗಳ ರಚನೆಯೊಂದಿಗೆ ಲಡಾಖ್‌ ನ ಒಟ್ಟು ಜಿಲ್ಲೆಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಈ ಮೊದಲು ಲಡಾಖ್‌ನಲ್ಲಿ ಎರಡು ಜಿಲ್ಲೆಗಳು (ಲೇಹ್ ಹಾಗೂ ಕಾರ್ಗಿಲ್) ಮಾತ್ರ ಇದ್ದವು. ಈ ಐದು ಹೊಸ ಜಿಲ್ಲೆಗಳ ರಚನೆಗೆ ಕೇಂದ್ರ ಗೃಹ ಸಚಿವಾಲಯವು 2024ರ ಆಗಸ್ಟ್‌ನಲ್ಲಿ ಅನುಮೋದನೆ ನೀಡಿತ್ತು; 2026ರ ಏಪ್ರಿಲ್ 27ರಂದು ಅಧಿಕೃತ ಅಧಿಸೂಚನೆ ಹೊರಡಿಸಲಾಯಿತು.

ಹಿನ್ನೆಲೆ

ಲಡಾಖ್‌ 2019ರಲ್ಲಿ ಜಮ್ಮು-ಕಾಶ್ಮೀರದಿಂದ ಬೇರ್ಪಟ್ಟು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಯಿತು. ಭೌಗೋಳಿಕವಾಗಿ ವಿಸ್ತಾರವಾದ ಪ್ರದೇಶವಾಗಿದ್ದರೂ ಜನಸಂಖ್ಯೆ ಕಡಿಮೆ, ವಾಸಸ್ಥಾನಗಳು ದೂರದೂರದಲ್ಲಿವೆ, ಹವಾಮಾನ ಕಠಿಣವಾಗಿದೆ. ಅನೇಕ ಗ್ರಾಮಗಳ ಜನರು ಜಿಲ್ಲಾ ಕೇಂದ್ರಗಳಿಗೆ ತಲುಪಲು ಬಹಳ ದೂರ ಪ್ರಯಾಣಿಸಬೇಕಾಗುತ್ತಿತ್ತು. ಆದ್ದರಿಂದ, ಆಡಳಿತವನ್ನು ಜನರ ಸಮೀಪಕ್ಕೆ ತರಲು ಹೊಸ ಜಿಲ್ಲೆಗಳ ಬೇಡಿಕೆ ಬಹುಕಾಲದಿಂದ ಇತ್ತು.

ಹೊಸ ಜಿಲ್ಲೆಗಳ ಆಡಳಿತಾತ್ಮಕ ವಿನ್ಯಾಸ

ಹೊಸ ಜಿಲ್ಲೆಜಿಲ್ಲಾ ಕೇಂದ್ರರಚನೆಯಾದ ಹಳೆಯ ಜಿಲ್ಲೆ
ನುಬ್ರಾಡಿಸ್ಕಿಟ್ಲೇಹ್
ಶಾಮ್ಖಲ್ಸಿಲೇಹ್
ಚಾಂಗ್‌ಥಾಂಗ್ನ್ಯೋಮಾಲೇಹ್
ಜಾಂಸ್ಕರ್ಪದಮ್ಕಾರ್ಗಿಲ್
ದ್ರಾಸ್ದ್ರಾಸ್-ರನ್‌ಬೀರ್‌ಪುರಕಾರ್ಗಿಲ್

ಈ ಪುನರ್‌ವಿಂಗಡಣೆಯ ಮೂಲಕ ಲೇಹ್ ಜಿಲ್ಲೆಯಿಂದ ಮೂರು ಜಿಲ್ಲೆಗಳು ಮತ್ತು ಕಾರ್ಗಿಲ್ ಜಿಲ್ಲೆಯಿಂದ ಎರಡು ಜಿಲ್ಲೆಗಳು ರಚನೆಯಾಗಿವೆ.

ಪ್ರಮುಖ ಆಯಾಮಗಳು

1. ಆಡಳಿತಾತ್ಮಕ ವಿಕೇಂದ್ರೀಕರಣ

ಹೊಸ ಜಿಲ್ಲೆಗಳ ರಚನೆಯು ಆಡಳಿತದ ವಿಕೇಂದ್ರೀಕರಣಕ್ಕೆ ಮಹತ್ವದ ಹೆಜ್ಜೆಯಾಗಿದೆ. ಜನರು ಆದಾಯ ದಾಖಲೆ, ಕಲ್ಯಾಣ ಯೋಜನೆಗಳು, ಪೊಲೀಸ್ ವ್ಯವಸ್ಥೆ, ಆರೋಗ್ಯ ಸೇವೆಗಳು, ಶಿಕ್ಷಣ ಸಂಬಂಧಿತ ಕೆಲಸಗಳು ಮುಂತಾದ ಸೇವೆಗಳಿಗಾಗಿ ದೂರ ಪ್ರಯಾಣಿಸುವ ಅವಶ್ಯಕತೆ ಕಡಿಮೆಯಾಗುತ್ತದೆ. ಇದರಿಂದ ಸಾರ್ವಜನಿಕ ಸೇವೆಗಳ ವೇಗ ಮತ್ತು ಗುಣಮಟ್ಟ ಸುಧಾರಿಸಬಹುದು.

2. ಗಡಿ ಭದ್ರತೆ ಮತ್ತು ತಂತ್ರಾತ್ಮಕ ಮಹತ್ವ

ಲಡಾಖ್ ಭಾರತಕ್ಕೆ ಅತ್ಯಂತ ತಂತ್ರಾತ್ಮಕ ಮಹತ್ವ ಹೊಂದಿರುವ ಪ್ರದೇಶ. ಇದು ಚೀನಾ ಮತ್ತು ಪಾಕಿಸ್ತಾನ ಗಡಿಗಳಿಗೆ ಸಮೀಪದಲ್ಲಿದೆ. ನುಬ್ರಾ, ಚಾಂಗ್‌ಥಾಂಗ್, ದ್ರಾಸ್ ಮೊದಲಾದ ಪ್ರದೇಶಗಳು ಭದ್ರತಾ ದೃಷ್ಟಿಯಿಂದ ಪ್ರಮುಖವಾಗಿವೆ. ಜಿಲ್ಲಾಮಟ್ಟದ ಆಡಳಿತ ಬಲವಾದರೆ ಮೂಲಸೌಕರ್ಯ, ರಸ್ತೆ, ಸಂವಹನ ಮತ್ತು ಸ್ಥಳೀಯ ಗುಪ್ತಚರ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಬಹುದು.

3. ಬುಡಕಟ್ಟು ಮತ್ತು ಸ್ಥಳೀಯ ಸಮುದಾಯಗಳ ಅಭಿವೃದ್ಧಿ

ಲಡಾಖ್‌ನಲ್ಲಿ ಬಹುತೇಕ ಜನರು ಬುಡಕಟ್ಟು ಸಮುದಾಯಗಳಿಗೆ ಸೇರಿದವರು. ಚಾಂಗ್‌ಥಾಂಗ್ ಪ್ರದೇಶದ ಚಾಂಗ್ಪಾ ಸಮುದಾಯ, ಜಾಂಸ್ಕರ್ ಮತ್ತು ನುಬ್ರಾ ಪ್ರದೇಶದ ಪರ್ವತ ಸಮುದಾಯಗಳು ತಮ್ಮದೇ ಆದ ಸಂಸ್ಕೃತಿ, ಜೀವನೋಪಾಯ ಮತ್ತು ಪರಿಸರಾಧಾರಿತ ಬದುಕನ್ನು ಹೊಂದಿವೆ. ಹೊಸ ಜಿಲ್ಲೆಗಳ ರಚನೆಯಿಂದ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಯೋಜನೆ ರೂಪಿಸುವುದು ಸುಲಭವಾಗುತ್ತದೆ.

4. ಪ್ರವಾಸೋದ್ಯಮಕ್ಕೆ ಉತ್ತೇಜನ

ನುಬ್ರಾ ಕಣಿವೆ, ಜಾಂಸ್ಕರ್ ಕಣಿವೆ, ದ್ರಾಸ್, ಚಾಂಗ್‌ಥಾಂಗ್ ಸರೋವರ ಪ್ರದೇಶಗಳು ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳಾಗಿವೆ. ಹೊಸ ಜಿಲ್ಲೆಗಳ ಮೂಲಕ ಪ್ರವಾಸೋದ್ಯಮ ಮೂಲಸೌಕರ್ಯ, ಹೋಂಸ್ಟೇಗಳು, ಸ್ಥಳೀಯ ಹಸ್ತಕಲೆ, ಸಾರಿಗೆ ವ್ಯವಸ್ಥೆ ಮತ್ತು ಉದ್ಯೋಗಾವಕಾಶಗಳಿಗೆ ಉತ್ತೇಜನ ದೊರೆಯಬಹುದು.

5. ಉದ್ಯೋಗ ಮತ್ತು ಉದ್ಯಮಶೀಲತೆ

ಹೊಸ ಜಿಲ್ಲೆಗಳ ರಚನೆಯಿಂದ ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ವ್ಯವಸ್ಥೆ, ಆರೋಗ್ಯ, ಶಿಕ್ಷಣ, ಪಂಚಾಯತ್ ರಾಜ್, ಆದಾಯ ಇಲಾಖೆ ಸೇರಿದಂತೆ ಹಲವು ಕಚೇರಿಗಳು ಸ್ಥಾಪನೆಯಾಗುತ್ತವೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಸರ್ಕಾರಿ ಮತ್ತು ಅರೆಸರ್ಕಾರಿ ಉದ್ಯೋಗಾವಕಾಶಗಳು, ಕಟ್ಟಡ ನಿರ್ಮಾಣ, ಸಾರಿಗೆ, ವಸತಿ, ಸಣ್ಣ ವ್ಯಾಪಾರ ಮತ್ತು ಸೇವಾ ವಲಯಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಬಹುದು.

6. ಪರಿಸರ ಮತ್ತು ಹವಾಮಾನ ಸೂಕ್ಷ್ಮತೆ

ಲಡಾಖ್ ಒಂದು ಶೀತ ಮರುಭೂಮಿ ಪ್ರದೇಶ. ಇಲ್ಲಿ ಹಿಮನದಿಗಳು, ಪರ್ವತ ಪರಿಸರ ವ್ಯವಸ್ಥೆ, ಕಡಿಮೆ ಮಳೆ, ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು ಸ್ಪಷ್ಟವಾಗಿ ಕಂಡುಬರುತ್ತಿವೆ. ಅಭಿವೃದ್ಧಿ ಚಟುವಟಿಕೆಗಳು ಹೆಚ್ಚಾದಂತೆ ಪರಿಸರ ಸಮತೋಲನದ ಮೇಲೆ ಒತ್ತಡವೂ ಹೆಚ್ಚಬಹುದು. ಆದ್ದರಿಂದ ಹೊಸ ಜಿಲ್ಲೆಗಳ ಅಭಿವೃದ್ಧಿ ಸಸ್ಥಿರ ಅಭಿವೃದ್ಧಿ ಮಾದರಿಯನ್ನು ಆಧರಿಸಿರಬೇಕು.

7. ಪ್ರಾದೇಶಿಕ ಸಮತೋಲನ

ಹಿಂದೆ ಲಡಾಖ್‌ನಲ್ಲಿ ಕೇವಲ ಎರಡು ಜಿಲ್ಲೆಗಳು ಇದ್ದುದರಿಂದ ದೂರದ ಪ್ರದೇಶಗಳಿಗೆ ಆಡಳಿತಾತ್ಮಕ ಗಮನ ಕಡಿಮೆಯಾಗುವ ಸಾಧ್ಯತೆ ಇತ್ತು. ಹೊಸ ಜಿಲ್ಲೆಗಳ ರಚನೆಯು ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ. ವಿಶೇಷವಾಗಿ ಜಾಂಸ್ಕರ್, ದ್ರಾಸ್, ನುಬ್ರಾ ಮುಂತಾದ ದೂರದ ಪ್ರದೇಶಗಳಿಗೆ ಪ್ರತ್ಯೇಕ ಆಡಳಿತಾತ್ಮಕ ಗುರುತು ದೊರೆಯುತ್ತದೆ.

ಸಂಭವನೀಯ ಸವಾಲುಗಳು

ಹೊಸ ಜಿಲ್ಲೆಗಳ ರಚನೆಯಿಂದ ತಕ್ಷಣವೇ ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಕಠಿಣ ಭೌಗೋಳಿಕ ಪರಿಸ್ಥಿತಿ, ಚಳಿಗಾಲದಲ್ಲಿ ರಸ್ತೆ ಸಂಪರ್ಕ ಕಡಿತ, ಕಡಿಮೆ ಜನಸಾಂದ್ರತೆ, ಆಡಳಿತ ವೆಚ್ಚದ ಹೆಚ್ಚಳ, ಅಧಿಕಾರಿಗಳ ನಿಯೋಜನೆ, ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ಜನರ ನಿರೀಕ್ಷೆಗಳನ್ನು ಸಮತೋಲನಗೊಳಿಸುವುದು ಪ್ರಮುಖ ಸವಾಲುಗಳಾಗಿವೆ.

ಮುಖ್ಯಮಂತ್ರಿ, ಪ್ರಧಾನಿ ಪದಚ್ಯುತಿ ಮಸೂದೆ: ಜೆಪಿಸಿ ಸಭೆ
ಪ್ರಧಾನಿ, ಮುಖ್ಯಮಂತ್ರಿಗಳು ಹಾಗೂ ಸಚಿವರು ಗಂಭೀರ ಕ್ರಿಮಿನಲ್ ಆರೋಪಕ್ಕೆ ಸಂಬಂಧಿಸಿ ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ/ಕಸ್ಟಡಿಯಲ್ಲಿ ಇದ್ದರೆ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಕುರಿತು ಪ್ರಸ್ತಾಪಿಸಿರುವ ಸಂವಿಧಾನ (130ನೇ ತಿದ್ದುಪಡಿ) ಮಸೂದೆ, 2025 ಅನ್ನು ಜಂಟಿ ಸಂಸತ್ತಿನ ಸಮಿತಿ ಪರಿಶೀಲಿಸುತ್ತಿದೆ. ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರ ಅಧ್ಯಕ್ಷತೆಯ ಜೆಪಿಸಿ ಮಹಾರಾಷ್ಟ್ರ ಸರ್ಕಾರ, ಅಧಿಕಾರಿಗಳು, ಮಾನವ ಹಕ್ಕುಗಳ ಆಯೋಗ ಹಾಗೂ ಇತರ ಹಿತಾಸಕ್ತಿಪಕ್ಷಗಳ ಅಭಿಪ್ರಾಯವನ್ನು ಮುಂಬೈನಲ್ಲಿ ಸಂಗ್ರಹಿಸಿದೆ. ಸಮಿತಿ ನಂತರ ತನ್ನ ವರದಿಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಿದೆ.

ಮಸೂದೆಯ ಹಿನ್ನೆಲೆ
ಭಾರತೀಯ ರಾಜಕೀಯದಲ್ಲಿ ಅಪರಾಧೀಕರಣ, ಭ್ರಷ್ಟಾಚಾರ ಆರೋಪಗಳು, ತನಿಖೆಯಲ್ಲಿರುವ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕ ಹುದ್ದೆಯ ನೈತಿಕತೆ ಕುರಿತು ದೀರ್ಘಕಾಲದಿಂದ ಚರ್ಚೆ ನಡೆಯುತ್ತಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಜನಪ್ರತಿನಿಧಿಯ ಅನರ್ಹತೆ ದೋಷಾರೋಪಣೆ ಸಾಬೀತಾದ ನಂತರ/ಶಿಕ್ಷೆ ವಿಧಿಸಲ್ಪಟ್ಟ ನಂತರ ಹೆಚ್ಚು ಸ್ಪಷ್ಟವಾಗಿ ಜಾರಿಯಾಗುತ್ತದೆ. ಆದರೆ ಪ್ರಸ್ತಾವಿತ 130ನೇ ತಿದ್ದುಪಡಿ ಮಸೂದೆ ದೋಷ ಸಾಬೀತಾಗುವ ಮೊದಲು, ಅಂದರೆ ಬಂಧನ ಮತ್ತು ಸತತ 30 ದಿನಗಳ ಕಸ್ಟಡಿ ಆಧಾರದ ಮೇಲೆ ಹುದ್ದೆಯಿಂದ ತೆರವುಗೊಳಿಸುವ ವ್ಯವಸ್ಥೆಯನ್ನು ತರುತ್ತದೆ.
ಈ ಮಸೂದೆಗೆ ಸಂಬಂಧಿಸಿ ಇನ್ನೂ ಎರಡು ಮಸೂದೆಗಳನ್ನೂ ಪರಿಶೀಲಿಸಲಾಗುತ್ತಿದೆ: ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ತಿದ್ದುಪಡಿ ಮಸೂದೆ, 2025 ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ತಿದ್ದುಪಡಿ ಮಸೂದೆ, 2025. ಇವು ಪುದುಚೇರಿ ಮತ್ತು ಜಮ್ಮು-ಕಾಶ್ಮೀರದಂತಹ ಕೇಂದ್ರಾಡಳಿತ ಪ್ರದೇಶಗಳಿಗೂ ಇಂತಹ ನಿಯಮಗಳನ್ನು ಅನ್ವಯಿಸಲು ಉದ್ದೇಶಿಸುತ್ತವೆ.

ಮಸೂದೆಯ ಪ್ರಮುಖ ಉದ್ದೇಶ
ಈ ಮಸೂದೆಯ ಪ್ರಮುಖ ಉದ್ದೇಶವೆಂದರೆ ಉನ್ನತ ಸಾರ್ವಜನಿಕ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳ ನೈತಿಕ ಹೊಣೆಗಾರಿಕೆಯನ್ನು ಹೆಚ್ಚಿಸುವುದು. ಜನರಿಂದ ಆಯ್ಕೆಯಾದ ಅಥವಾ ಜನಪ್ರತಿನಿಧಿಗಳ ವಿಶ್ವಾಸದ ಮೇಲೆ ಅಧಿಕಾರದಲ್ಲಿರುವ ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವರು ಗಂಭೀರ ಅಪರಾಧ ಪ್ರಕರಣದಲ್ಲಿ ದೀರ್ಘಕಾಲ ಕಸ್ಟಡಿಯಲ್ಲಿ ಇದ್ದರೂ ಹುದ್ದೆಯಲ್ಲಿ ಮುಂದುವರಿಯುವುದು ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆ ತರುತ್ತದೆ ಎಂಬ ವಾದದ ಮೇಲೆ ಈ ಮಸೂದೆ ಆಧಾರಿತವಾಗಿದೆ.

ಪ್ರಮುಖ ನಿಯಮಗಳು

ಅಂಶಪ್ರಸ್ತಾವಿತ ನಿಯಮ
ಯಾರಿಗೆ ಅನ್ವಯ?ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳ ಸಚಿವರು
ಯಾವ ಅಪರಾಧಗಳಿಗೆ?5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಗುರಿಯಾಗಬಹುದಾದ ಅಪರಾಧಗಳು
ಮುಖ್ಯ ಷರತ್ತುಸತತ 30 ದಿನಗಳ ಕಾಲ ಬಂಧನ/ಕಸ್ಟಡಿ
ಯಾವಾಗ ಹುದ್ದೆ ಕಳೆದುಕೊಳ್ಳುತ್ತಾರೆ?31ನೇ ದಿನದಿಂದ
ಸಚಿವರ ತೆರವುರಾಷ್ಟ್ರಪತಿ ಅಥವಾ ರಾಜ್ಯಪಾಲರು ಕ್ರಮ ಕೈಗೊಳ್ಳಬಹುದು; ನಿರ್ದಿಷ್ಟ ಸಂದರ್ಭಗಳಲ್ಲಿ ಸ್ವಯಂಚಾಲಿತವಾಗಿ ಹುದ್ದೆ ಕಳೆದುಕೊಳ್ಳುತ್ತಾರೆ
ಪ್ರಧಾನಿ/ಮುಖ್ಯಮಂತ್ರಿ ವಿಚಾರದಲ್ಲಿ30 ದಿನಗಳ ನಂತರ ರಾಜೀನಾಮೆ ನೀಡದಿದ್ದರೆ 31ನೇ ದಿನದಿಂದ ಹುದ್ದೆ ಕಳೆದುಕೊಳ್ಳುತ್ತಾರೆ
ಪ್ರಸ್ತುತ ಸ್ಥಿತಿಮಸೂದೆ ಇನ್ನೂ ಕಾನೂನಾಗಿಲ್ಲ; ಜೆಪಿಸಿ ಪರಿಶೀಲನೆಯಲ್ಲಿದೆ

ಯಾವ ಸಂವಿಧಾನ ವಿಧಿಗಳನ್ನು ತಿದ್ದುಪಡಿ ಮಾಡಲು ಪ್ರಯತ್ನ?
ಈ ಮಸೂದೆ ಮುಖ್ಯವಾಗಿ ಕೆಳಗಿನ ವಿಧಿಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದೆ:

  1. ಸಂವಿಧಾನದ ವಿಧಿ 75
    ಕೇಂದ್ರ ಮಟ್ಟದಲ್ಲಿ ಪ್ರಧಾನಿ ಮತ್ತು ಕೇಂದ್ರ ಸಚಿವರ ನೇಮಕ, ಹುದ್ದೆ ಮತ್ತು ಸಚಿವ ಸಂಪುಟದ ಹೊಣೆಗಾರಿಕೆಗೆ ಸಂಬಂಧಿಸಿದೆ.
  2. ಸಂವಿಧಾನದ ವಿಧಿ 164
    ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯ ಸಚಿವರ ನೇಮಕ, ಹುದ್ದೆ ಮತ್ತು ಸಚಿವ ಸಂಪುಟದ ಹೊಣೆಗಾರಿಕೆಗೆ ಸಂಬಂಧಿಸಿದೆ.
  3. ಸಂವಿಧಾನದ ವಿಧಿ 239AA
    ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ವಿಶೇಷ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದೆ.
    ಈ ತಿದ್ದುಪಡಿ ಮೂಲಕ ಕೇಂದ್ರ, ರಾಜ್ಯ ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಚಿವರು ಮತ್ತು ಸರ್ಕಾರದ ಮುಖ್ಯಸ್ಥರ ಮೇಲೆ ಒಂದೇ ರೀತಿಯ ನೈತಿಕ ಹೊಣೆಗಾರಿಕೆ ತರಲು ಪ್ರಯತ್ನಿಸಲಾಗಿದೆ.

ಜೆಪಿಸಿಯ ಪಾತ್ರ
ಜಂಟಿ ಸಂಸತ್ತಿನ ಸಮಿತಿ ಈ ಮಸೂದೆಯನ್ನು ವಿವಿಧ ಆಯಾಮಗಳಿಂದ ಪರಿಶೀಲಿಸುತ್ತಿದೆ. ಮಹಾರಾಷ್ಟ್ರದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ, ಅಧಿಕಾರಿಗಳು, ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗ, ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳ ಅಭಿಪ್ರಾಯ ಕೇಳಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮೂರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ ಎಂದು ಜೆಪಿಸಿ ಅಧ್ಯಕ್ಷೆ ಹೇಳಿದ್ದಾರೆ.
ಜೆಪಿಸಿ ಎಲ್ಲ ಅಭಿಪ್ರಾಯಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಸಮಗ್ರ ವರದಿಯನ್ನು ಲೋಕಸಭಾ ಸ್ಪೀಕರ್‌ಗೆ ಸಲ್ಲಿಸಲಿದೆ. ಈ ವರದಿ ಮಸೂದೆ ಮುಂದಿನ ಹಂತಕ್ಕೆ ಹೋಗುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಮಸೂದೆಯ ಪರವಾದ ವಾದಗಳು

  1. ರಾಜಕೀಯದ ಅಪರಾಧೀಕರಣಕ್ಕೆ ಕಡಿವಾಣ
    ಗಂಭೀರ ಅಪರಾಧ ಪ್ರಕರಣಗಳಲ್ಲಿ ದೀರ್ಘಕಾಲ ಬಂಧನದಲ್ಲಿರುವವರು ಉನ್ನತ ಹುದ್ದೆಯಲ್ಲಿ ಮುಂದುವರಿಯಬಾರದು ಎಂಬುದು ಈ ಮಸೂದೆಯ ಪ್ರಮುಖ ವಾದ. ಇದು ಸಾರ್ವಜನಿಕ ಜೀವನದ ಶುದ್ಧೀಕರಣಕ್ಕೆ ಸಹಾಯಕವಾಗಬಹುದು.
  2. ಸಾರ್ವಜನಿಕ ವಿಶ್ವಾಸ ಹೆಚ್ಚಳ
    ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವರು ಕಸ್ಟಡಿಯಲ್ಲಿ ಇದ್ದರೂ ಅಧಿಕಾರದಲ್ಲಿ ಮುಂದುವರಿದರೆ ಆಡಳಿತದ ವಿಶ್ವಾಸಾರ್ಹತೆ ಕುಗ್ಗಬಹುದು. ಈ ಮಸೂದೆ ಸಾರ್ವಜನಿಕ ಹುದ್ದೆಯ ಗೌರವವನ್ನು ಕಾಪಾಡಲು ಸಹಾಯ ಮಾಡಬಹುದು.
  3. ನೈತಿಕ ಆಡಳಿತಕ್ಕೆ ಉತ್ತೇಜನ
    ಸಂವಿಧಾನಾತ್ಮಕ ಹುದ್ದೆಗಳು ಕೇವಲ ಕಾನೂನುಬದ್ಧ ಅಧಿಕಾರವಲ್ಲ; ಅವುಗಳಿಗೆ ನೈತಿಕ ಹೊಣೆಗಾರಿಕೆಯೂ ಇದೆ. ಈ ಮಸೂದೆ “ಸಾರ್ವಜನಿಕ ಹುದ್ದೆ = ಹೆಚ್ಚಿನ ಜವಾಬ್ದಾರಿ” ಎಂಬ ತತ್ವವನ್ನು ಬಲಪಡಿಸುತ್ತದೆ.
  4. ಆಡಳಿತದ ನಿರಂತರತೆ
    ಒಬ್ಬ ಸಚಿವ ಅಥವಾ ಮುಖ್ಯಮಂತ್ರಿ ದೀರ್ಘಕಾಲ ಕಸ್ಟಡಿಯಲ್ಲಿ ಇದ್ದರೆ ಕಡತಗಳ ನಿರ್ವಹಣೆ, ನಿರ್ಧಾರ ಪ್ರಕ್ರಿಯೆ ಮತ್ತು ಆಡಳಿತ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀಳಬಹುದು. ಆದ್ದರಿಂದ ಹುದ್ದೆಯ ತೆರವು ಆಡಳಿತಾತ್ಮಕ ದೃಷ್ಟಿಯಿಂದ ಅಗತ್ಯ ಎಂದು ಬೆಂಬಲಕರು ವಾದಿಸುತ್ತಾರೆ.

ಮಸೂದೆಯ ವಿರೋಧದ ವಾದಗಳು

  1. ದೋಷ ಸಾಬೀತಾಗುವ ಮೊದಲು ಶಿಕ್ಷೆಯಂತಾಗುವ ಭೀತಿ
    ಬಂಧನವೆಂದರೆ ದೋಷ ಸಾಬೀತಾಗಿದೆ ಎಂದಲ್ಲ. ಮಸೂದೆ ದೋಷ ಸಾಬೀತಾಗುವ ಮೊದಲು ಹುದ್ದೆ ಕಳೆದುಕೊಳ್ಳುವ ವ್ಯವಸ್ಥೆ ತರಲು ಪ್ರಯತ್ನಿಸುತ್ತಿರುವುದರಿಂದ ಇದು natural justice ತತ್ವಕ್ಕೆ ವಿರುದ್ಧವಾಗಬಹುದು.
  2. ತನಿಖಾ ಸಂಸ್ಥೆಗಳ ದುರುಪಯೋಗದ ಭೀತಿ
    ತನಿಖಾ ಸಂಸ್ಥೆಗಳು ಕೇಂದ್ರ ಅಥವಾ ರಾಜ್ಯ ಕಾರ್ಯಾಂಗದ ಭಾಗವಾಗಿರುವುದರಿಂದ, ರಾಜಕೀಯ ಪ್ರತಿಸ್ಪರ್ಧಿಗಳನ್ನು ಬಂಧಿಸಿ ಸರ್ಕಾರ ಅಸ್ಥಿರಗೊಳಿಸಲು ಈ ನಿಯಮ ದುರುಪಯೋಗವಾಗಬಹುದು ಎಂಬ ಆತಂಕವಿದೆ.
  3. ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಪರಿಣಾಮ
    ಪ್ರಧಾನಿ ಲೋಕಸಭೆಯ ಬಹುಮತದ ವಿಶ್ವಾಸದಿಂದ ಅಧಿಕಾರದಲ್ಲಿರುತ್ತಾರೆ; ಮುಖ್ಯಮಂತ್ರಿ ರಾಜ್ಯ ವಿಧಾನಸಭೆಯ ಬಹುಮತದ ವಿಶ್ವಾಸದಿಂದ ಅಧಿಕಾರದಲ್ಲಿರುತ್ತಾರೆ. ಅವರನ್ನು ತೆಗೆದುಹಾಕುವ ಅಧಿಕಾರ ಮೂಲತಃ ಶಾಸನಾಂಗದ ವಿಶ್ವಾಸ ಪರೀಕ್ಷೆಯ ಮೂಲಕ ನಿರ್ಧಾರವಾಗಬೇಕು. ಬಂಧನದ ಆಧಾರದ ಮೇಲೆ ಸ್ವಯಂ ಹುದ್ದೆ ಕಳೆದುಕೊಳ್ಳುವ ವ್ಯವಸ್ಥೆ ಸಂಸದೀಯ ತತ್ವಕ್ಕೆ ಧಕ್ಕೆ ತರಬಹುದು.
  4. ಸಂಘೀಯ ವ್ಯವಸ್ಥೆಯ ಮೇಲೆ ಪರಿಣಾಮ
    ಒಂದು ರಾಜ್ಯದ ತನಿಖಾ ಸಂಸ್ಥೆ ಪ್ರಧಾನಿಯನ್ನು ಅಥವಾ ಇನ್ನೊಂದು ರಾಜ್ಯದ ಮುಖ್ಯಮಂತ್ರಿಯನ್ನು ಪ್ರಕರಣದಲ್ಲಿ ಬಂಧಿಸಿದರೆ, ಕೇಂದ್ರ-ರಾಜ್ಯ ಸಂಬಂಧಗಳಲ್ಲಿ ಗಂಭೀರ ರಾಜಕೀಯ ಸಂಕಷ್ಟ ಉಂಟಾಗಬಹುದು. ಹಾಗೆಯೇ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ರಾಜ್ಯ ಮುಖ್ಯಮಂತ್ರಿಗಳ ವಿರುದ್ಧ ಕ್ರಮವಾದರೆ ಸಂಘೀಯ ಸಮತೋಲನದ ಬಗ್ಗೆ ಪ್ರಶ್ನೆಗಳು ಎದ್ದುಕೊಳ್ಳಬಹುದು. PRS ವಿಶ್ಲೇಷಣೆಯ ಪ್ರಕಾರ ಈ ಮಸೂದೆ ಸಂಘೀಯತೆ, ಅಧಿಕಾರ ವಿಭಜನೆ, ಸಂಸದೀಯ ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಳ್ವಿಕೆ ಎಂಬ ಮೂಲಭೂತ ರಚನೆಯ ಅಂಶಗಳ ಕುರಿತು ಪ್ರಶ್ನೆಗಳನ್ನು ಎಬ್ಬಿಸಬಹುದು.

ಪ್ರಸ್ತುತ ಕಾನೂನು ವ್ಯವಸ್ಥೆಯಿಂದ ವ್ಯತ್ಯಾಸ
ಪ್ರಸ್ತುತ ಕಾನೂನು ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಅಪರಾಧ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ನಂತರ ಮತ್ತು ನಿರ್ದಿಷ್ಟ ಶಿಕ್ಷೆ ವಿಧಿಸಲ್ಪಟ್ಟ ನಂತರ ಅನರ್ಹರಾಗುವ ವ್ಯವಸ್ಥೆ ಮುಖ್ಯವಾಗಿದೆ. ಆದರೆ ಈ ಮಸೂದೆ ಕಸ್ಟಡಿ ಹಂತದಲ್ಲೇ ಹುದ್ದೆ ಕಳೆದುಕೊಳ್ಳುವ ವ್ಯವಸ್ಥೆಯನ್ನು ತರುತ್ತದೆ. ಇದು ದೊಡ್ಡ ಬದಲಾವಣೆ.
ಅಂದರೆ, ಪ್ರಸ್ತುತ ವ್ಯವಸ್ಥೆಯಲ್ಲಿ ಮುಖ್ಯ ಪ್ರಶ್ನೆ: “ದೋಷ ಸಾಬೀತಾಯಿತೇ?”
ಪ್ರಸ್ತಾವಿತ ಮಸೂದೆಯಲ್ಲಿ ಮುಖ್ಯ ಪ್ರಶ್ನೆ: “ಗಂಭೀರ ಅಪರಾಧ ಪ್ರಕರಣದಲ್ಲಿ ಸತತ 30 ದಿನ ಕಸ್ಟಡಿಯಲ್ಲಿ ಇದ್ದಾರೆಯೇ?”

ಸಂವಿಧಾನಾತ್ಮಕ ಆಯಾಮಗಳು

  1. ಸಂಸದೀಯ ಪ್ರಜಾಪ್ರಭುತ್ವ
    ಪ್ರಧಾನಿ ಮತ್ತು ಮುಖ್ಯಮಂತ್ರಿ ಶಾಸನಮಂಡಳಿಯ ವಿಶ್ವಾಸದ ಮೇಲೆ ಅಧಿಕಾರದಲ್ಲಿರುತ್ತಾರೆ. ಆದ್ದರಿಂದ ಅವರ ಪದಚ್ಯುತಿ ಕೂಡ ಶಾಸನಮಂಡಳಿಯ ವಿಶ್ವಾಸ/ಅವಿಶ್ವಾಸದ ಮೂಲಕವೇ ಆಗಬೇಕು ಎಂಬುದು ಒಂದು ಸಂವಿಧಾನಾತ್ಮಕ ವಾದ.
  2. ಅಧಿಕಾರ ವಿಭಜನೆ
    ತನಿಖಾ ಸಂಸ್ಥೆಗಳು ಕಾರ್ಯಾಂಗದ ಭಾಗವಾಗಿವೆ. ಅವುಗಳ ಕ್ರಮದಿಂದ ನೇರವಾಗಿ ಸರ್ಕಾರದ ಮುಖ್ಯಸ್ಥ ಹುದ್ದೆ ಕಳೆದುಕೊಳ್ಳುವಂತಾದರೆ, ಕಾರ್ಯಾಂಗದ ಒಂದು ಭಾಗವೇ ಆಯ್ಕೆಯಾದ ಸರ್ಕಾರದ ಭವಿಷ್ಯವನ್ನು ನಿರ್ಧರಿಸುವಂತಾಗಬಹುದು.
  3. ಕಾನೂನಿನ ಆಳ್ವಿಕೆ
    ಕಾನೂನಿನ ಆಳ್ವಿಕೆಯ ಪ್ರಕಾರ ಯಾವುದೇ ವ್ಯಕ್ತಿಯನ್ನು ದೋಷಿ ಎಂದು ಪರಿಗಣಿಸಲು ನ್ಯಾಯಾಂಗ ಪ್ರಕ್ರಿಯೆ ಅಗತ್ಯ. ಬಂಧನ ಅಥವಾ ಕಸ್ಟಡಿ ಮಾತ್ರ ಅಂತಿಮ ಅಪರಾಧ ಸಾಬೀತಲ್ಲ.
  4. ಸಂಘೀಯತೆ
    ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳ ಅಧಿಕಾರಗಳು ಪ್ರತ್ಯೇಕವಾಗಿವೆ. ಈ ಮಸೂದೆ ಕೇಂದ್ರ–ರಾಜ್ಯ ರಾಜಕೀಯ ಸಂಘರ್ಷಗಳಲ್ಲಿ ಸೂಕ್ಷ್ಮ ಪರಿಣಾಮ ಬೀರುವ ಸಾಧ್ಯತೆ ಇದೆ.

ಮಾನವ ಹಕ್ಕು ಮತ್ತು ನಾಗರಿಕ ಸ್ವಾತಂತ್ರ್ಯದ ದೃಷ್ಟಿಕೋನ
ಈ ಮಸೂದೆಗೆ ಮಾನವ ಹಕ್ಕುಗಳ ದೃಷ್ಟಿಯಿಂದಲೂ ಪ್ರಶ್ನೆಗಳು ಎದ್ದುಕೊಳ್ಳುತ್ತವೆ. ಬಂಧನದಲ್ಲಿರುವ ವ್ಯಕ್ತಿಗೂ ನಿರ್ದೋಷಿತ್ವದ ಪೂರ್ವಧಾರಣೆ, ನ್ಯಾಯಯುತ ವಿಚಾರಣೆ, ಜಾಮೀನು ಹಕ್ಕು ಮತ್ತು ರಾಜಕೀಯ ಹಕ್ಕುಗಳ ಪ್ರಶ್ನೆಗಳು ಸಂಬಂಧಿಸುತ್ತವೆ. ಆದ್ದರಿಂದ ಮಸೂದೆಯಲ್ಲಿ ದುರುಪಯೋಗ ತಡೆಗೆ ಸ್ಪಷ್ಟ safeguards ಅಗತ್ಯವಿದೆ.

ಸುಧಾರಣಾ ಸಲಹೆಗಳು

  • ಕೇವಲ ಬಂಧನದ ಆಧಾರದ ಮೇಲೆ ಅಲ್ಲ, ನ್ಯಾಯಾಲಯದಿಂದ ಆರೋಪ ರಚನೆ ಆದ ನಂತರ ಮಾತ್ರ ಕ್ರಮ ಕೈಗೊಳ್ಳುವ ವ್ಯವಸ್ಥೆ.
  • ರಾಜಕೀಯ ದುರುಪಯೋಗ ತಪ್ಪಿಸಲು ಸ್ವತಂತ್ರ ಪರಿಶೀಲನಾ ಪ್ರಾಧಿಕಾರ ಅಥವಾ ನ್ಯಾಯಾಂಗ ಮೇಲ್ವಿಚಾರಣೆ.
  • ಸುಳ್ಳು ಅಥವಾ ರಾಜಕೀಯ ಪ್ರೇರಿತ ಪ್ರಕರಣಗಳಲ್ಲಿ ತ್ವರಿತ ಪರಿಹಾರ ವ್ಯವಸ್ಥೆ.
  • 30 ದಿನಗಳ ಕಸ್ಟಡಿ ನಿಯಮಕ್ಕೆ ಸ್ಪಷ್ಟ ವ್ಯಾಖ್ಯಾನ.
  • ಗಂಭೀರ ಅಪರಾಧಗಳ ಸ್ಪಷ್ಟ ಪಟ್ಟಿ.
  • ಜಾಮೀನು ನಿರಾಕರಣೆ ಮತ್ತು ತನಿಖಾ ವಿಳಂಬದಿಂದ ಉಂಟಾಗುವ ಅನ್ಯಾಯ ತಪ್ಪಿಸಲು ಸಮಯಮಿತಿ.
  • ನಂತರ ದೋಷಮುಕ್ತರಾದರೆ ರಾಜಕೀಯ ಪುನರ್‌ಸ್ಥಾಪನೆಗೆ ಸ್ಪಷ್ಟ ನಿಯಮ.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Sources: Prajavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಶಾಂಭವಿ-ದಿವಾಂಶುಗೆ ವಿಶ್ವದಾಖಲೆ ಚಿನ್ನ
ಸಂದರ್ಭ: ಭಾರತದ ಶಾಂಭವಿ ಕ್ಷೀರಸಾಗರ ಹಾಗೂ ದಿವ್ಯಾಂಶು ದೇವಾಂಗನ್ ಜೋಡಿಯು ಐಎಸ್‌ಎಸ್ಎಫ್‌ ಜೂನಿಯರ್ ಶೂಟಿಂಗ್ ವಿಶ್ವಕಪ್‌ನ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ವಿಶ್ವದಾಖಲೆಯೊಂದಿಗೆ ಸ್ವರ್ಣ ಜಯಿಸಿತು.

  • ಫೈನಲ್ ಸುತ್ತಿನಲ್ಲಿ ಶಾಂಭವಿ- ದಿವ್ಯಾಂಶು ಅವರು 499.9 ಅಂಕ ಸಂಪಾದಿಸಿದರು. ಭಾರತದವರೇ ಆದ ಇಳವೆನಿಲ್ ವಾಳರಿವನ್-ದಿವ್ಯಾಂಶ್ ಸಿಂಗ್ ಪನ್ಮರ್ ಜೋಡಿ 2018ರ ಆವೃತ್ತಿಯಲ್ಲಿ 498.6 ಅಂಕ ಗಳಿಸಿದ್ದರು. ಅದು ಈವೆರೆಗಿನ ವಿಶ್ವದಾಖಲೆಯಾಗಿತ್ತು.
  • ಶೈವಾನ್‌ ಸೈ ಚೀಹ್-ಯಿಂಗ್ ಹಾಗೂ ಶೆನ್ ಯುವಾನ್ ಜೋಡಿ 498.3 ಅಂಕಗಳೊಂದಿಗೆ ಬೆಳ್ಳಿ ಪದಕ ತಮ್ಮ ದಾಗಿಸಿಕೊಂಡಿತು ಫ್ರಾನ್ಸ್‌ ನ ಟೀಫನ್ ಪೋಮ್ಸ್- ಗ್ಯಾಸ್ಟರ್ಡ್ ಲೆಸ್ತೂರ್ ಜೋಡಿ (434.4 ಅಂಕ) ಕಂಚು ಜಯಿಸಿತು.
  • ಶಾಂಭವಿ- ದಿವ್ಯಾಂಶು ಅವರು ಕ್ಯಾಲಿಫಿಕೇಶನ್ ಸುತ್ತಿನಲ್ಲಿಯೂ ಅಗ್ರಸ್ಥಾನ (632 ಅಂಕ) ಪಡೆದಿದ್ದರು.
  • ಭಾರತವು ನಾಲ್ಕು ಚಿನ್ನ ಸೇರಿ 12 ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ
ಪ್ರಮುಖ ಯೋಜನೆಗಳು

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪಶ್ಚಿಮ ಏಷ್ಯಾದ ಬಿಕ್ಕಟ್ಟು ಭಾರತೀಯ ಆರ್ಥಿಕತೆಯ ಮೇಲೆ ಉಂಟುಮಾಡಿರುವ ಪರಿಣಾಮವನ್ನು, ವಿಶೇಷವಾಗಿ ಹಣದುಬ್ಬರ, ವ್ಯಾಪಾರ ಮತ್ತು ಬೆಳವಣಿಗೆಯ ಭವಿಷ್ಯದ ಮೇಲೆ ಅದರ ಪರಿಣಾಮಗಳನ್ನು ಉಲ್ಲೇಖಿಸಿ ವಿಶ್ಲೇಷಿಸಿ.

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಸಂವಿಧಾನಿಕ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಆಡಳಿತಾತ್ಮಕ ಕಾರ್ಯಸಾಧ್ಯತೆಗಳ ದೃಷ್ಟಿಯಿಂದ ಕರ್ನಾಟಕದ ಆಂತರಿಕ ಮೀಸಲಾತಿ ಮಾದರಿಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್: ಪರವಾನಗಿ ರದ್ದು
ಸಂದರ್ಭ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನೀಡಲಾದ ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.

  • ಬ್ಯಾಂಕ್ ಮತ್ತು ಠೇವಣಿದಾರರ ಹಿತಾಸಕ್ತಿಗೆ ವಿರುದ್ಧವಾದ ರೀತಿಯಲ್ಲಿ ವ್ಯವಹಾರಗಳನ್ನು ನಡೆಸಿದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಹೇಳಿದೆ ‘ಬ್ಯಾಂಕ್‌ನ ಆಡಳಿತ ಮಂಡಳಿಯ ವರ್ತನೆಯು ಠೇವಣಿದಾರರು ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಇದರ ಪರಿಣಾಮವಾಗಿ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಭವಿಷ್ಯದಲ್ಲಿ ಯಾವುದೇ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸದಂತೆ ನಿಷೇಧಿಸಲಾಗಿದೆ ಎಂದಿದೆ.
  • ‘ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮುಚ್ಚಲು ಕೋರ್ಟ್‌ ಅರ್ಜಿ ಸಲ್ಲಿಸಲಾಗುವುದು ಬ್ಯಾಂಕ್‌ಗೆ ಬಾಗಿಲು ಹಾಕಬೇಕಾದ ಸಂದರ್ಭ ಬಂದರೂ ತನ್ನೆಲ್ಲಾ ಠೇವಣಿದಾರರ ಹಣವನ್ನು ಮರುಪಾವತಿಸಲು ಬೇಕಾದಷ್ಟೂ ನಗದನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊಂದಿದೆ’ ಎಂದು ಆರ್‌ಬಿಐ ಹೇಳಿದೆ.
  • 2022ರ ಮಾರ್ಚ್ 11ರಿಂದ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ ವಿಧಿಸಿತ್ತು.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಒಳಮೀಸಲು: ಸ್ಪೃಶ್ಯ, ಅಲೆಮಾರಿಗಳಿಗೆ ಶೇ 4.5: ಬಲಗೈ-ಎಡಗೈ: ತಲಾ ಶೇ 5.25
ಸಂದರ್ಭ: ಸುಮಾರು ನಾಲ್ಕು ದಶಕಗಳಿಂದ ಕಗ್ಗಂಟಾಗಿಯೇ ಉಳಿದಿದ್ದ ಮತ್ತು ಪ್ರಬಲ ಹೋರಾಟಗಳಿಗೆ ದಾರಿ ಮಾಡಿಕೊಟ್ಟಿದ್ದ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯ ಗೊಂದಲಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಂದು ಹಂತದ ತೆರೆ ಎಳೆದಿದೆ.

  • ಪರಿಶಿಷ್ಟ ಜಾತಿಯಲ್ಲಿನ ಎಡಗೈ-ಬಲಗೈ ಜಾತಿಯವರು ಮತ್ತು ಅಲೆಮಾರಿ ಸಮುದಾಯವನ್ನು ಸಮಾಧಾನಪಡಿಸುವ ಮಹತ್ವದ ತೀರ್ಮಾನವನ್ನು ವಿಶೇಷ ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ.
  • ಪರಿಶಿಷ್ಟ ಜಾತಿಗೆ ಲಭ್ಯ ಇರುವ ಶೇ 15ರಷ್ಟು ಮೀಸಲಾತಿಯಲ್ಲಿ ಈ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಪರಿಶಿಷ್ಟ ಜಾತಿಗಿದ್ದ ಶೇ 15ರಷ್ಟು ಮೀಸಲಾತಿ ಪ್ರಮಾಣವನ್ನು ಶೇ 17ಕ್ಕೆ ಹೆಚ್ಚಿಸಿ ನಿರ್ಧಾರ ತೆಗೆದುಕೊಂಡಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಒಳಮೀಸಲಾತಿ ಹಂಚಿಕೆ ಮಾಡಿತ್ತು ಇದರಿಂದಾಗಿ ಒಟ್ಟು ಮೀಸಲಾತಿ ಪ್ರಮಾಣ ಶೇ 56ಕ್ಕೆ ಏರಿಕೆಯಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಶೇ 17ರಷ್ಟು ಮೀಸಲಾತಿಯಲ್ಲಿ ಬಲಗೈ ಹಾಗೂ ಎಡಗೈಗೆ ತಲಾ ಶೇ 6 ಹಾಗೂ ಸ್ಪೃಶ್ಯ ಜಾತಿಗಳಿಗೆ ಶೇ 5ರಷ್ಟು ಹಂಚಿಕೆ ಮಾಡಲಾಗಿತ್ತು.

ರೋಸ್ಟರ್ ಬಿಂದುವಿಗೆ ಪರಿಹಾರ

  • ‘ರೋಸ್ಟರ್ ಬಿಂದು ಗೊಂದಲವನ್ನು ಸರಿಪಡಿಸಲು ಎಲ್ಲರಿಗೂ ಒಪ್ಪಿತವಾಗುವ ತೀರ್ಮಾನ, ಆ ಪ್ರಕಾರ, 1 ಅಥವಾ 2 ಹುದ್ದೆಗಳು ಇದೆ ಸಂದರ್ಭದಲ್ಲಿ ಅವುಗಳನ್ನು ‘ಎಸ್‌ಸಿ ಜನರಲ್’ ಎಂದು ಮಾಡಲಾಗುವುದು ಎ. ಬಿ. ಸಿ ವರ್ಗದವರು ಆ ಹುದ್ದೆಗೆ ಸ್ಪರ್ಧಿಸಬಹುದು.

ಅಲೆಮಾರಿಗಳಿಗೆ ‘ಸಿ’ ಶ್ರೇಣಿಯ ಹುದ್ದೆಗಳಲ್ಲಿ ಶೇ 20 ಮೀಸಲು

  • ‘ಸಿ’ ಶ್ರೇಣಿಯ ಹುದ್ದೆಗಳಲ್ಲಿ ಶೇ 20ರಷ್ಟು ಹುದ್ದೆಗಳನ್ನು ‘ಸಿ’ ವರ್ಗದ ಪಟ್ಟಿಯಲ್ಲಿರುವ 59 ಅಲೆಮಾರಿ ಜಾತಿಗಳಿಗೆ ಮೀಸಲಾಗಿ ಇಡಲಾಗುವುದು. ಕಾಯ್ದೆಯಲ್ಲೂ ಇದನ್ನು ಸೇರಿಸಲಾಗಿದೆ.

ಹೊಸ ಸೂತ್ರ: ಶೇ 15ರಷ್ಟು ಮೀಸಲಾತಿ ಅನ್ವಯ ಎಡಗೈ ಜಾತಿಗಳಿರುವ ಗ್ರೂಪ್ ‘ಎ’ಗೆ ಶೇ. 5.25, ಬಲಗೈ ಜಾತಿಗಳಿರುವ ಗ್ರೂಪ್ ‘ಬಿ’ಗೆ ಶೇ. 5.25 ಮತ್ತು ಸ್ಪೃಶ್ಯ ಜಾತಿಗಳಿರುವ ಗ್ರೂಪ್ ‘ಸಿ’ಗೆ ಶೇ. 4.5 ಒಳ ಮೀಸಲಾತಿ ನಿಗದಿಪಡಿಸಲಾಗಿದೆ. ಅಲೆಮಾರಿ ಸಮುದಾಯಗಳ 59 ಜಾತಿಗಳನ್ನು ‘ಸಿ’ ಗುಂಪಿಗೇ ಸೇರಿಸಲಾಗಿದೆ.

  • ರೋಸ್ಟರ್ ಬಿಂದು ಗೊಂದಲ ಸರಿಪಡಿಸಲು ‘ಎಸ್‌ಸಿ ಜನರಲ್’ ಎಂಬ ಹೊಸ ಸೂತ್ರವನ್ನು ಪರಿಹಾರವಾಗಿ ನೀಡಲಾಗಿದೆ. ಈ ಒಳಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ಸರ್ಕಾರಿ ನೇಮಕ ಪ್ರಕ್ರಿಯೆ ನಡೆಯಲಿದೆ.
  • ‘ಶೇ 50 ಮೀಸಲಾತಿಗೆ ಅನುಗುಣವಾಗಿ ಶೇ 15ರಷ್ಟರಲ್ಲೇ ಒಳಮೀಸಲಾತಿ ನಿಗದಿ. ಇದಕ್ಕೆ ಮೊದಲು ಎಸ್‌ಸಿ ಶೇ 17, ಎಸ್‌ಟಿ ಶೇ 7 ಸೇರಿ ಒಟ್ಟು ಶೇ 24 ಮೀಸಲಾತಿ ನಿಗದಿ ಮಾಡಿದ್ದರಿಂದ ಮೀಸಲಾತಿ ಪ್ರಮಾಣ ಶೇ 56ಕ್ಕೆ ಏರಿತ್ತು ಅದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತು. ಇದು ಇತ್ಯರ್ಥವಾಗುವವರೆಗೆ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಕ್ಕೆ ಹೆಚ್ಚಿಸಲಾಗಿರುವ ಶೇ 6ರಷ್ಟು ಮೀಸಲಾತಿಯನ್ನು ಅನ್ನು ಬ್ಯಾಕ್‌ಲಾಗ್ ಎಂದು ಪರಿಗಣಿಸಲಾಗುವುದು ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಒಳಮೀಸಲಾತಿ ಪ್ರಮಾಣ ಬದಲಾವಣೆ ತೀರ್ಮಾನ ಕಾಯ್ದಿರಿಸಲಾಗಿದೆ.

2024ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ಒಳಮೀಸಲಾತಿ ನೀಡಬಹುದು ಎಂದು ತೀರ್ಪು ನೀಡಿತು ಆ ತೀರ್ಪಿನ ಹಿನ್ನೆಲೆಯಲ್ಲಿ ನ್ಯಾ.ನಾಗಮೋಹನದಾಸ್ ಅಧ್ಯಕ್ಷತೆಯ ಏಕವ್ಯಕ್ತಿ ಆಯೋಗ ರಚಿಸಲಾಯಿತು. ಆಯೋಗ ನೀಡಿದ ವರದಿಯನ್ನು ಸಂಪುಟ ಸರ್ವಾನುಮತದಿಂದ ಒಪ್ಪಿಕೊಂಡಿತು. ಆಯೋಗವು ಎ, ಬಿ, ಸಿ, ಡಿ ಎಂದು ವರ್ಗೀಕರಣ ಮಾಡಿ ಕ್ರಮವಾಗಿ 6, 5, 5, 1 ಒಳಮೀಸಲಾತಿ ಶಿಫಾರಸು ಮಾಡಿತ್ತು ಕಾಂಗ್ರೆಸ್ ಸರ್ಕಾರ ಅದನ್ನು 6 6 5 ಎಂದು ಮಾಡಿತ್ತು ಎಡ ಮತ್ತು ಬಲ ಸಮುದಾಯಗಳಿಗೆ ತಲಾ ಶೇ 6 ಮತ್ತು ಕೊರಮ, ಕೊರಚ, ಲಂಬಾಣಿ ಮತ್ತು ಅಲೆಮಾರಿಗಳನ್ನು ಸೇರಿಸಿ ಶೇ5 ಮೀಸಲಾತಿ ನೀಡಲು ತೀರ್ಮಾನಿತ್ತು, ಇದಕ್ಕೆ ರಾಜ್ಯಪಾಲರೂ ಸಹಿ ಮಾಡಿದ್ದರು ಮತ್ತೆ ಗೊಂದಲ ಶುರುವಾಯಿತು. ಅಲೆಮಾರಿ ಸಮುದಾಯದವರು ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಈಗ ಎಲ್ಲ ಗೊಂದಲವನ್ನೂ ಪರಿಹರಿಸಲಾಗಿದೆ’.

ಚಡ್ಡಾ ಸೇರಿ ಎಎಪಿಯ 7 ರಾಜ್ಯಸಭಾ ಸದಸ್ಯರು ಬಿಜೆಪಿಗೆ
ಸಂದರ್ಭ: ರಾಘವ್ ಚಡ್ತಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್ ಸೇರಿ ಆಮ್ ಆದ್ಮ ಪಕ್ಷದ (ಎಎಪಿ) 7 ಮಂದಿ ರಾಜ್ಯಸಭಾ ಸದಸ್ಯರು ಪಕ್ಷ ತೊರೆದಿದ್ದು, ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.

  • ಎಎಪಿಯ 10 ಮಂದಿ ರಾಜ್ಯಸಭಾ ಸದಸ್ಯರಲ್ಲಿ 7 ಮಂದಿ ಪಂಜಾಬ್ ಮತ್ತು ಮೂವರು ದೆಹಲಿಗೆ ಸೇರಿದವರಾಗಿದ್ದಾರೆ ಒಂದು ಪಕ್ಷದ ಕನಿಷ್ಠ ಮೂರನೆಯ ಎರಡರಷ್ಟು ಶಾಸಕರು ಪಕ್ಷಾಂತರಗೊಂಡರಪಕ್ಷಾಂತರ ನಿಷೇಧ ಕಾನೂನಿನಡಿ ಅನರ್ಹತೆ ತಪ್ಪುತ್ತದೆ.

ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಲ

  • ಎಎಪಿಯ 7 ರಾಜ್ಯಸಭಾ ಸದಸ್ಯರು ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೆಸ್, ಎನ್‌ಡಿಎಗೆ ಮತ್ತಷ್ಟು ಬಡ್ತಿ ಬಂದಿದೆ. ಆದರೆ, ರಾಜ್ಯಸಭೆ ಯಲ್ಲಿ ಮೂರನೆಯ ಎರಡರಷ್ಟು ಬಹುಮತಕ್ಕೆ ಎನ್‌ಡಿಎಗೆ ಇನ್ನೂ 18 ಸದಸ್ಯರ ಕೊರತೆ ಇದೆ. ಮೇಲ್ಮನೆಯಲ್ಲಿ ಸರಳ ಬಹುಮತಕ್ಕೆ ಬಿಜೆಪಿಗೆ 10 ಸಂಸದರ ಕೊರತೆ ಇದೆ.
  • ರಾಜ್ಯಸಭೆಯಲ್ಲಿ ಎನ್‌ಡಿಎಗೆ 145 ಸದಸ್ಯರ ಬೆಂಬಲ ಇದೆ. ಒಟ್ಟು 244 ಸದಸ್ಯ ಬಲದ ರಾಜ್ಯಸಭೆಯಲ್ಲಿ ಮೂರನೆಯ ಎರಡರಷ್ಟು ಬಹುಮತಕ್ಕೆ 163 ಸದಸ್ಯ ಬಲ ಬೇಕಾಗುತ್ತದೆ.
  • ಬಿಜೆಪಿ ರಾಜ್ಯಸಭೆಯಲ್ಲಿ ಮೂರನೆಯ ಎರಡರಷ್ಟು ಬಹುಮತ ಪಡೆದುಕೊಂಡರೆ ಸಂವಿಧಾನ ತಿದ್ದುಪಡಿ ಅಗತ್ಯವಿರುವ ಕೆಲವು ನಿರ್ಣಾಯಕ ಮಸೂದೆಗಳನ್ನು ಜಾರಿಗೊಳಿಸುವುದು ಸುಲಭವಾಗಲಿದೆ.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Sources: Prajavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಭುವನೇಶ್ವರದಲ್ಲಿ 61ನೇ ಆವೃತ್ತಿಯ ಗ್ರಾಂಡ್ ಫಿನಾಲೆ: ಸಾಧಿ ‘ಫೆಮಿನಾ ಮಿಸ್ ಇಂಡಿಯಾ’
ಸಂದರ್ಭ: ಭುವನೇಶ್ವರದ ಕಳಿಂಗಾ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಕ್ಯಾಂಪಸ್‌ನಲ್ಲಿ ನಡೆದ ‘ಭಮಿನಾ ಮಿಸ್ ಇಂಡಿಯಾ-2026 ಸ್ಪರ್ಧೆಯಲ್ಲಿ ಕಾರವಾರ ಶಾಸಕ ಸತೀಶ ಸೈಲ್ ಅವರ ಹಿರಿಯ ಪುತ್ರಿ ಸಾಧಿ ಸ್ಟೈಲ್ ವಿಜೇತೆಯಾಗಿದ್ದಾರೆ.

  • ಶಾಸಕ ಸತೀಶ ಸೈಲ್ ಅವರ ಪುತ್ರಿ ಸಾಧ್ಯ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದರು. ಕಾರವಾರದವರೇ ಆಗಿದ್ದರೂ ಗೋವಾದಲ್ಲಿ ಜನಿಸಿದ್ದರಿಂದ ಜನ್ಮದಾಖಲೆಗಳಲ್ಲಿ ಗೋವಾ ವಿಳಾಸ ಇತ್ತು. ಈ ಕಾರಣಕ್ಕೆ ಗೋವಾದಿಂದಲೇ ರಾಷ್ಟ್ರಮಟ್ಟದ ಸ್ಪರ್ಧೆಗೆ ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು.
  • ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಕಾರವಾರದಲ್ಲಿ ಪೂರ್ಣಗೊಳಿಸಿರುವ ಸಾಧಿ ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದಾರೆ. ಬಳಿಕ ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕನ್ನಡ ಸೇರಿ 7 ಭಾಷೆಗಳಲ್ಲಿ ನಿರರ್ಗಳವಾಗಿ ಅವರು ಮಾತನಾಡಬಲ್ಲರು. ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜತೆಗೆ ಬೆಂಗಳೂರಿನಲ್ಲಿ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮವನ್ನೂ ನಡೆಸುತ್ತಿದ್ದಾರೆ.
  • ಪುತ್ರಿ ಸಾಧಿ, ಖ್ಯಾತ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರಿಂದ ಪ್ರೇರಣೆಗೊಂಡು ಅರ್ಥಶಾಸ್ತ್ರ, ವಿಷಯ ಅಧ್ಯಯನ ಮಾಡಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿರುವ ಸಾಧಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ನೆರವಾಗಲು ಕಿಟ್ರೊ ಎಂಬ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ. ಮಕ್ಕಳ ಆರೋಗ್ಯ ಕಾಳಜಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ನೆರವಾಗುತ್ತಿದ್ದಾರೆ.

ಅಸ್ಸಾಂನ ಬಿಹು ಪ್ರದರ್ಶಿಸಿದ ಅಮೆರಿಕ ಗಗನಯಾತ್ರಿ
ಸಂದರ್ಭ: ಅಮೆರಿಕದ ಗಗನಯಾತ್ರಿಯೊಬ್ಬರು ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅಸ್ಸಾಂನ ಸಾಂಪುದಾಯಿಕ ‘ಬಿಹು’ ಪ್ರದರ್ಶನ ನೀಡಿದ್ದಾರೆ. ಮುಖ್ಯಮಂತ್ರಿ ಹಿಮಂತ ಬಿಸ್ನಾ ಶರ್ಮಾ ಅವರು ಗಗನಯಾತ್ರಿಯನ್ನು ಅಭಿನಂದಿಸಿದ್ದಾರೆ.

  • ಗಗನಯಾತ್ರಿ ಮೈಸ್ ಫಿಂಕೆ ಅವರು ಅಸ್ಸಾಂನ ರೆನಿಟಾ ಸೈಕಿಯಾ ಅವರನ್ನು ವಿವಾಹವಾಗಿದ್ದಾರೆ. ಬಾಹ್ಯಾಕಾಶದಲ್ಲಿ ಅವರು ಕುತ್ತಿಗೆಗೆ ಸಾಂಪ್ರದಾಯಿಕ ‘ಗಮೋಸಾ’ (ಸ್ಯಾರ್ಘ) ಧರಿಸಿ, ಬಿಹು ಸಂಗೀತದೊಂದಿಗೆ ನೃತ್ಯ ಪ್ರದರ್ಶಿಸಿದ್ದಾರೆ.
  • ಈ ವಿಡಿಯೋವನ್ನು ‘ಎಕ್ಸ್ನಲ್ಲಿ ಹಂಚಿಕೊಂಡಿರುವ ಹಿಮಂತ ಬಿನ್ನಾ ಅವರು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಿಹು ಪ್ರದರ್ಶನಗೊಂಡಿದೆ. ಅಸ್ಸಾಂನ ಸಂಸ್ಕೃತಿಗೆ ವಿಶೇಷ ಗೌರವ ನೀಡಿದ್ದಕ್ಕಾಗಿ ಮೈಕ್ ಫಿಂಕೆ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
  • ‘ರೊಂಗಾಲಿ ಬಿಹು ಹಬ್ಬದ ಮೂಲಕ ಅಸ್ಸಾಂನಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ.

ಅಸ್ಸಾಂನ ಬಿಹು ಅಸ್ಸಾಂ ರಾಜ್ಯದ ಅತ್ಯಂತ ಪ್ರಮುಖ ಹಾಗೂ ಪ್ರಸಿದ್ಧ ಜನಪದ ಹಬ್ಬವಾಗಿದೆ. ಇದು ಅಸ್ಸಾಮಿ ಸಂಸ್ಕೃತಿ, ಕೃಷಿ ಜೀವನ ಮತ್ತು ಸಮುದಾಯ ಏಕತೆಯ ಸಂಕೇತವಾಗಿದೆ. ಬಿಹು ಹಬ್ಬವು ಮುಖ್ಯವಾಗಿ ಕೃಷಿ ಚಕ್ರದ ವಿವಿಧ ಹಂತಗಳಿಗೆ ಸಂಬಂಧಿಸಿದ್ದು, ರೈತರ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿದೆ. ಈ ಹಬ್ಬದ ಸಂದರ್ಭದಲ್ಲಿ ಜನರು ಸಂಪ್ರದಾಯಬದ್ಧ ನೃತ್ಯ, ಹಾಡು, ವಾದ್ಯ, ಹಬ್ಬದ ಊಟ ಮತ್ತು ಸಮೂಹ ಆಚರಣೆಗಳ ಮೂಲಕ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.

ಬಿಹುವಿನ ಪ್ರಮುಖ ವಿಧಗಳು:

ಬಿಹುವಿನ ಹೆಸರುಆಚರಿಸುವ ಕಾಲಮಹತ್ವ
ರೊಂಗಾಲಿ ಬಿಹು / ಬೋಹಾಗ್ ಬಿಹುಏಪ್ರಿಲ್ಅಸ್ಸಾಮಿ ಹೊಸ ವರ್ಷದ ಆರಂಭ, ವಸಂತ ಮತ್ತು ಬಿತ್ತನೆ ಕಾಲದ ಹಬ್ಬ
ಭೋಗಾಲಿ ಬಿಹು / ಮಾಘ್ ಬಿಹುಜನವರಿಕೊಯ್ಲಿನ ನಂತರ ಸಮೃದ್ಧಿ ಮತ್ತು ಸಂಭ್ರಮದ ಹಬ್ಬ
ಕೋಂಗಾಲಿ ಬಿಹು / ಕಾತಿ ಬಿಹುಅಕ್ಟೋಬರ್ಬೆಳೆ ಬೆಳೆಯುವ ಅವಧಿಯಲ್ಲಿ ಪ್ರಾರ್ಥನೆ ಮತ್ತು ಸರಳ ಆಚರಣೆಯ ಹಬ್ಬ

ಪ್ರಮುಖ ಲಕ್ಷಣಗಳು:
1.ಕೃಷಿ ಆಧಾರಿತ ಹಬ್ಬ
2.ಅಸ್ಸಾಮಿ ಹೊಸ ವರ್ಷದೊಂದಿಗೆ ಸಂಬಂಧ
3.ಬಿಹು ನೃತ್ಯ ಮತ್ತು ಬಿಹು ಹಾಡುಗಳು ಪ್ರಸಿದ್ಧ
4.ಢೋಲ್, ಪೇಪಾ, ಗೊಗೊನಾ ಮುಂತಾದ ಸಂಪ್ರದಾಯಬದ್ಧ ವಾದ್ಯಗಳ ಬಳಕೆ
5.ಸಮುದಾಯ ಏಕತೆ ಮತ್ತು ಸಾಂಸ್ಕೃತಿಕ ಗುರುತಿನ ಸಂಕೇತ

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಮದ್ಯ ಸುಂಕ: ರಾಜ್ಯದ ಕ್ರಮಕ್ಕೆ ಬಿಎಐ ಸ್ವಾಗತ
ಸಂದರ್ಭ:
ಪೇಯದಲ್ಲಿ ಇರುವ ಮದ್ಯದ ಪ್ರಮಾಣಕ್ಕೆ ಅನುಗುಣವಾಗಿ ಸುಂಕ ವಿಧಿಸುವ ಕರ್ನಾಟಕದ ಕ್ರಮವನ್ನು ಇತರ ರಾಜ್ಯಗಳೂ ಅನುಕರಿಸಬೇಕು ಎಂಬ ನಿರೀಕ್ಷೆ ಹೊಂದಿರುವುದಾಗಿ ಭಾರತೀಯ ಮದ್ಯ ತಯಾರಕರ ಸಂಘ (ಬಿಎಐ) ಹೇಳಿದೆ.

  • ಮದ್ಯದ ಪ್ರಮಾಣಕ್ಕೆ ಅನುಗುಣವಾಗಿ ಪೇಯದ ಮೇಲೆ ಸುಂಕ ವಿಧಿಸುವುದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರವು ಹೊರಡಿಸಿದೆ.
  • ಕರ್ನಾಟಕ ಇರಿಸಿರುವ ಹೆಜ್ಜೆಯು ಮಹತ್ವದ ಪರಿವರ್ತನೆ ತರುವಂಥದ್ದು ಎಂದು ಹೇಳಿರುವ ಬಿಎಐ, ಇದರಿಂದಾಗಿ ವರಮಾನ ಸಂಗ್ರಹವು ಉತ್ತಮವಾಗಲಿದೆ ಎಂದು ಹೇಳಿದೆ.
  • ಮದ್ಯದ ಮೇಲೆ ತೆರಿಗೆ ವಿಧಿಸಬೇಕೇ ವಿನಾ ಅದರ ಜೊತೆ ಇರುವ ನೀರಿನ ಮೇಲೆ ಅಲ್ಲ ಎಂಬ ನಂಬಿಕೆಯ ಆಧಾರದಲ್ಲಿ ‘ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕಗಳ ತಿದ್ದುಪಡಿ) ನಿಯಮ – 2026’ ಹೊಸ ತೆರಿಗೆ ವ್ಯವಸ್ಥೆಯನ್ನು ರೂಪಿಸುತ್ತದೆ ಎಂದು ಬಿಎಐ ಹೇಳಿದೆ.
  • ‘ಇದು ಮದ್ಯದ ಮೇಲಿನ ತೆರಿಗೆಯ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ ಒ) ಶಿಫಾರಸು ಮಾಡಿರುವುದಕ್ಕೆ ಅನುಗುಣವಾಗಿದೆ. ಇದನ್ನು ಜಾಗತಿಕವಾಗಿ ವ್ಯಾಪಕವಾಗಿ ಅನುಸರಿಸಲಾಗುತ್ತಿದೆ’ ಎಂದೂ ಬಿಎಐ ಹೇಳಿದೆ.
  • ದೇಶದ ಪ್ರಮುಖ ಮದ್ಯ ತಯಾರಿಕಾ ಕಂಪನಿಗಳಾದ ಯುನೈಟೆಡ್ ಬ್ರಿವರಿಸ್, ಎಬಿಇನ್‌ಬೆವ್ ಕಾರ್ಲ್ಸ್ ಬರ್ಗ್ ಈ ಸಂಘಟನೆಯ ಸದಸ್ಯತ್ವ ಹೊಂದಿವೆ ಇವು ಒಟ್ಟಾಗಿ ದೇಶದ ಬಿಯರ್ ಮಾರುಕಟ್ಟೆಯಲ್ಲಿ ಶೇ 85ರಮ್ಮ ಪಾಲು ಹೊಂದಿವೆ.
  • ಪೇಯದಲ್ಲಿ ಇರುವ ಮದ್ಯದ ಪ್ರಮಾಣಕ್ಕೆ ಅನುಗುಣವಾದ ಸುಂಕ ವಿಧಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಅವರು ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದರು.
  • ‘ಈ ಬಗೆಯ ತೆರಿಗೆ ವ್ಯವಸ್ಥೆಯನ್ನು ಘೋಷಿಸುವ ಮೂಲಕ ಕರ್ನಾಟಕವು ವರಮಾನ ಹೆಚ್ಚಳ ಗುರಿಯನ್ನು ಅಪೇಕ್ಷಿತ ಸಾರ್ವಜನಿಕ ಆರೋಗ್ಯದ ಜೊತೆ ಜೋಡಿಸಿದ ಮೊದಲ ರಾಜ್ಯವಾಗಿದೆ’.

ಭಾರತೀಯ ಮದ್ಯ ತಯಾರಕರ ಸಂಘ (ಬಿಎಐ) ಭಾರತದಲ್ಲಿನ ಬಿಯರ್ ಉದ್ಯಮದ ಪ್ರಮುಖ ಕೈಗಾರಿಕಾ ಸಂಘವಾಗಿದ್ದು, United Breweries, AB InBev ಮತ್ತು Carlsberg ಕಂಪನಿಗಳು ಸೇರಿ ಇದನ್ನು ಸ್ಥಾಪಿಸಿವೆ. ಈ ಸಂಘವು World Brewing Alliance ಜೊತೆ ಸಹಭಾಗಿತ್ವದಲ್ಲಿದೆ.

  • ಈ ಸಂಘದ ಉದ್ದೇಶ ಭಾರತದಲ್ಲಿ ಬಿಯರ್ ವಲಯದ ವೃದ್ಧಿ, ಜವಾಬ್ದಾರಿಯುತ ಬಳಕೆ ಕುರಿತು ಜಾಗೃತಿ, ಸರ್ಕಾರದ ನೀತಿಗಳ ಬಗ್ಗೆ ಕೈಗಾರಿಕಾ ಪ್ರತಿನಿಧಿತ್ವ, ಹಾಗೂ ಸಸ್ಟೇನಬಿಲಿಟಿ ಮತ್ತು ನಿಯಂತ್ರಣ ಸುಧಾರಣೆಗಳಿಗೆ ಬೆಂಬಲ ನೀಡುವುದಾಗಿದೆ. ದೆಹಲಿಯನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಸಂಘದ ಡೈರೆಕ್ಟರ್ ಜನರಲ್ ವಿನೋದ್ ಗಿರಿ ಆಗಿದ್ದಾರೆ.
  • ಸ್ಥಾಪನೆ – 2024ರಲ್ಲಿ ರೂಪುಗೊಂಡಿತು
  • ಸ್ಥಾಪಕ ಕಂಪನಿಗಳು – United Breweries, AB InBev, Carlsberg
  • ಸಹಭಾಗಿತ್ವ – World Brewing Alliance
  • ಮುಖ್ಯ ಉದ್ದೇಶ – ಬಿಯರ್ ಉದ್ಯಮ ವೃದ್ಧಿ, ನೀತಿ ಪ್ರತಿನಿಧಿತ್ವ, ಜವಾಬ್ದಾರಿಯುತ ಬಳಕೆ, ಸಸ್ಟೇನಬಿಲಿಟಿ
  • ಪ್ರತಿನಿಧಿತ್ವ – ಈ ಸಂಘಕ್ಕೆ ಸೇರಿರುವ ಕಂಪನಿಗಳು ಭಾರತದಲ್ಲಿ ಮಾರಾಟವಾಗುವ ಬಿಯರ್‌ನ ಸುಮಾರು 85% ಅನ್ನು ಪ್ರತಿನಿಧಿಸುತ್ತವೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಭಾರತದ ಜನಸಾಂಖ್ಯಿಕ ಲಾಭಾಂಶವನ್ನು ನಿಜವಾದ ಆರ್ಥಿಕ ಶಕ್ತಿಯಾಗಿ ಪರಿವರ್ತಿಸಲು ಯಾವ ನೀತಿಪರ ಬದಲಾವಣೆಗಳು ಅಗತ್ಯ? ವಿಶ್ಲೇಷಿಸಿ.

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಪಿಂಚಣಿ ಕ್ಷೇತ್ರ: ಶೇ 100ರಷ್ಟು ಎಫ್‌ಡಿಐ ?
ಸಂದರ್ಭ: ಪಿಂಚಣಿ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಕೇಂದ್ರ ಸರ್ಕಾರವು ಶೇಕಡ 100ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ಮಸೂದೆಯೊಂದನ್ನು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

  • ವಿಮಾ ವಲಯದಲ್ಲಿ ಶೇ 100ರು ಎಫ್‌ಡಿಐಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಮಸೂದೆಗೆ ಸಂಸತ್ತು ಕಳೆದ ವರ್ಷ ಒಪ್ಪಿಗೆ ನೀಡಿದೆ.
  • ಪಿಂಚಣಿ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಶೇ 100ಕ್ಕೆ ಹೆಚ್ಚಿಸುವ ಅವಕಾಶ ಕಲ್ಪಿಸಲು ‘ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ಕೆ – 2013’ಕ್ಕೆ ಅಗತ್ಯ ತಿದ್ದುಪಡಿಗಳನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಥವಾ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಈಗ ಪಿಂಚಣಿ ವಲಯದಲ್ಲಿ ಶೇ 49ರಷ್ಟು ಎಫ್‌ಡಿಐಗೆ ಅವಕಾಶ ಇದೆ.
  • ಕಾಯ್ಕೆಗೆ ತಿನ್ನುವಡಿ ತರುವ ಮಸೂದೆಯು ಎನ್‌ಪಿಎಸ್ ಟ್ರು ಅನ್ನು ಪಿಎಫ್‌ಆರ್‌ಡಿ ವ್ಯಾಪ್ತಿಯಿಂದ ಹೊರಗೆ ತರುವ ಅಂಶವನ್ನೂ ಒಳಗೊಳ್ಳು ಹುದು ಎನ್ನಲಾಗಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
‘ರಾಷ್ಟ್ರೀಯ ಜಲ ಜೀವನ್ ಮಿಷನ್ ಯೋಜನೆ

  • 2019ರ ಆಗುತ್ತ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ‘ರಾಷ್ಟ್ರೀಯ ಜಲ ಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಿದರು. ಪ್ರತಿ ಮನೆಗೂ ಕೊಳಾಯಿ ನೀರು ನೀಡುವುದು ಯೋಜನೆಯ ಉದ್ದೇಶ.
  • 2024ರ ಹೊತ್ತಿಗೆ ಭಾರತದ ಗ್ರಾಮೀಣ ಪ್ರದೇಶಗಳ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ಶುದ್ಧ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಅದಾಗಿತ್ತು ಆಯೋಜನೆಯ ಮೂಲ ಅಂದಾಜು ವೆಚ್ಚ ₹3.6 ಲಕ್ಷ ಕೋಟಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮವನ್ನು ಪುನರ್ ರಚಿಸಿ ಆರಂಭಿಸಿದ ಈ ಯೋಜನೆ, ಜಗತ್ತಿನ ಅತಿದೊಡ್ಡ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಹೊಂದಿದೆ.
  • 2019ರಲ್ಲಿ ದೇಶದ 3.23 ಕೋಟಿ ( 17) ಗ್ರಾಮೀಣ ಕುಟುಂಬಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕವಿತ್ತು 2025ರ ಫೆಬ್ರುವರಿ ವೇಳೆಗೆ 15.44 ಕೋಟಿ (ಶೇ 79.74) ಗ್ರಾಮೀಣ ಕುಟುಂಬಗಳಿಗೆ ನಲ್ಲಿ ಸಂಪರ್ತ ನೀಡಲಾಗಿದೆ.

ಅದಾನಿ ಏಷ್ಯಾದ ಶ್ರೀಮಂತ ವ್ಯಕ್ತಿ
ಸಂದರ್ಭ:
ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮತ್ತೆ ಹೊರಹೊಮ್ಮಿದ್ದಾರೆ.

  • ರಿಲಯನ್ನು ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಇದುವರೆಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಇದೀಗ ಅಂಬಾನಿಯನ್ನು ಹಿಂದಿಕ್ಕಿ ಅದಾನಿ, ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅದಾನಿ ಸಮೂಹದ ಷೇರು ಮೌಲ್ಯದಲ್ಲಿ ಏರಿಕೆ ಕಂಡುಬಂದ ಕಾರಣ ಅದಾನಿ ಅವರ ನಿವ್ವಳ ಆಸ್ತಿ ಮೌಲ್ಯವು ಗಣನೀಯವಾಗಿ ಹೆಚ್ಚಾಗಿದೆ.
  • ಗೌತಮ್ ಅದಾನಿ ಅವರ ನಿವ್ವಳ ಸಂಪತ್ತಿನ ಮೌಲ್ಯ ₹8.59 ಲಕ್ಷ ಕೋಟಿಗೆ (92.6 ಬಿಲಿಯನ್ ಡಾಲರ್) ಏರಿಕೆ ಆಗಿದೆ. ಅಂಬಾನಿ ಸಂಪತ್ತು 28.42 ಲಕ್ಷ ಕೋಟಿ (90.8 ಬಿಲಿಯನ್ ಡಾಲರ್) ಇದೆ.
  • ಬ್ಲೂಮ್‌ಬರ್ಗ್ ಶುಕ್ರವಾರ ಪ್ರಕಟಿಸಿ ರುವ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಅದಾನಿ 19ನೇ ಸ್ನಾನ ಪಡೆದಿದ್ದಾರೆ. ಜಗತ್ತಿನ 500 ಶ್ರೀಮಂತ ವ್ಯಕ್ತಿಗಳ ಹೆಸರನ್ನು ದಿನನಿತ್ಯ ಬ್ಲೂಮ್‌ಬರ್ಗ್ ನವೀಕರಿಸುತ್ತದೆ.
  • ಅದಾನಿ ಅವರ ಸಂಪತ್ತಿನ ಬಹುಪಾಲು ಆದಾಯವು ಅವರ ಸಮೂಹದ ಪ್ರಮುಖ 10 ಕಂಪನಿಗಳ ಷೇರುಗಳಿಂದ ಬರುತ್ತದೆ ಇತ್ತೀಚಿನ ದಿನಗಳಲ್ಲಿ ಅದಾನಿ ಸಮೂಹದ ಷೇರುಗಳ ಬೆಲೆ ಏರಿಕೆಯಾಗಿದ್ದು. ಸಮೂಹದ ಮಾರುಕಟ್ಟೆ ಮೌಲ್ಯಕ್ಕೆ ಶತಕೋಟಿ ಡಾಲ‌ಗರ್‌ಳನ್ನು ಸೇರಿಸಿದೆ.
  • ಆದರೆ, ರಿಲಯನ್ಸ್ ಇಂಡಸ್ಟ್ರೀಸ್ ಇಂಧನ ದೂರಸಂಪರ್ಕ ಮತ್ತು ರಿಟೇಲ್ ವಹಿವಾಟಿನಲ್ಲಿ ಲಾಭದ ಪ್ರಮಾಣವು ಇಳಿಕೆಯಾಗಿದೆ ಇದು ಅಂಬಾನಿ ಸಂಪತ್ತು ಇಳಿಕೆಗೆ ಕಾರಣವಾಗಿದೆ ಅದರಿಂದ ಶತಕೋಟ್ಯಧಿಪತಿಗಳ(ಬಿಲಿಯನೇರ್‌ಗಳು) ಶ್ರೇಯಾಂಕದಲ್ಲಿ ಬದಲಾವಣೆ ಆಗಿದೆ.
  • ಟೆಸ್ನಾ ಕಂಪನಿಯ ಸಿಇಒ ಇಲಾನ್ ಮಸ್ಕ್ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಇವರ ಸಂಪತ್ತಿನ ನಿವ್ವಳ ಮೌಲ್ಯ ₹60 ಲಕ್ಷ ಕೋಟಿ (656 ಬಿಲಿಯನ್ ಡಾಲರ್) ಆಗಿದೆ.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ
ಪ್ರಮುಖ ಯೋಜನೆಗಳು

ಜಲಮಂಡಳಿಗೆ ಐಎಸ್ಒ ಮಾನ್ಯತೆ
ಸಂದರ್ಭ:
ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಐಎಸ್ಒ 50001: 2018 ಪ್ರಮಾಣಪತ್ರ ಪಡೆದಿದೆ. ಈ ಪ್ರಮಾಣಪತ್ರ ಪಡೆದ ದೇಶದ ಮೊದಲ ಜಲ ಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

  • ಬ್ಯೂರೋ ವೆರಿಟಾಸ್ ಅಧಿಕೃತವಾಗಿ ನೀಡಿರುವ ಈ ಪ್ರತಿಷ್ಠಿತ ಪ್ರಮಾಣಪತ್ರವು, ಮಂಡಳಿಯ ಅತ್ಯುತ್ತಮ ಇಂಧನ ನಿರ್ವಹಣಾ ವ್ಯವಸ್ಥೆಗಳನ್ನು ಔಪಚಾರಿಕವಾಗಿ ಗುರುತಿಸಿದೆ.
  • ಮಂಡಳಿಯ ಕಾವೇರಿ ಜಲಸಂಗ್ರಹದ ಮೂಲವಾದ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ. ಕನಕಪುರ ತಾಲ್ಲೂಕಿನ ಹಾರೋಹಳ್ಳಿ, ಮತ್ತು ತಾತಗುಣಿ ಮೂರು ಪ್ರಮುಖ ಸ್ಥಳಗಳಲ್ಲಿರುವ ತನ್ನ ಬೃಹತ್ ನೀರು ಸರಬರಾಜು ವಂಪಿಂಗ್ ಸ್ಟೇಷನ್ಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸುತ್ತಿರುವುದಕ್ಕಾಗಿ ಜಲಮಂಡಳಿಗೆ ಈ ಪ್ರಮಾಣವತ್ರವನ್ನು ನೀಡಿ ಗೌರವಿಸಲಾಗಿದೆ.
  • ಪ್ರಮಾಣ ಪತ್ರವು ಕಾವೇರಿ ಭವನದಲ್ಲಿರುವ ಪ್ರಧಾನ ಕಚೇರಿಯ ಪ್ರಮುಖ ಪೂರಕ ಕಾರ್ಯಗಳನ್ನು ಹಾಗೂ ಬೃಹತ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿರಂತರ ನೀರು ಸರಬರಾಜು ಮಾಡುವ ಒಟ್ಟಾರೆ ಪ್ರಕ್ರಿಯೆಯನ್ನು ಒಳಗೊಂಡಿದೆ.
  • ಕಳೆದ ವರ್ಷವಷ್ಟೇ ಕೊಳವೆ ಮೂಲಕ ಕುಡಿಯುವ ನೀರು ಸರಬರಾಜು ನಿರ್ವಹಣಾ ವ್ಯವಸ್ಥೆಗಾಗಿ ಭಾರತೀಯ ಮಾನದಂಡಗಳ ಬ್ಯೂರೋ ಪ್ರಮಾಣಪತ್ರವನ್ನು ಪಡೆದಿತ್ತು.

ಯಾಣ ಭೂಪಾರಂಪರಿಕ ತಾಣ: ಜಿಎಸ್ಐ ನಿರ್ಣಯ
ಸಂದರ್ಭ:
ಪ್ರಾಕೃತಿಕ ವೈಶಿಷ್ಟ್ಯದ ಯಾಣ ಪ್ರದೇಶವನ್ನು ರಾಷ್ಟ್ರೀಯ ಭೂಪಾರಂಪರಿಕ ತಾಣ ಎಂದು ಘೋಷಿಸಲು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ (ಜಿಎಸ್ಐ) ತನ್ನ 176ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ನಿರ್ಧರಿಸಿದೆ.

  • ‘2,700 ದಶಲಕ್ಷ ವರ್ಷಗಳ ಹಿಂದೆಸುಣ್ಣದ ಕಲ್ಲಿನ ರಚನೆಯಂತಹ ಬಂಡೆ ಗಳಿಂದ ರಚನೆಯಾದ ಅವರೂಪದ ತಾಣವಾದ ಯಾಣ ಭೂ ಸಂರಕ್ಷಣೆ, ಭೂ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ತಾಣವಾಗಿಸಲು ರಾಷ್ಟ್ರೀಯ ಮಹತ್ವದ ಭೂಪಾರಂಪರಿಕ ತಾಣ ಎಂದು ಘೋಷಿಸಲು ನಿರ್ಧರಿಸಲಾಗಿದೆ’ ಎಂದು ಜಿಎಸ್‌ಐ ಏ.13ರಂದುರಾಜ್ಯದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
  • ‘ಯಾಣದಲ್ಲಿರುವ ಗುಹೆಗಳ ಸುಣ್ಣದ ಕಲ್ಲಿನ ರಚನೆಗಳು ಭೂದೃಶ್ಯದವ್ರತಿಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನೈಸರ್ಗಿಕ ಪ್ರಯೋಗಾಲಯದಂತಿವೆ. ಈ ಸ್ಥಳವು ಹೆಚ್ಚಿನ ಭೌಗೋಳಿಕ ಮತ್ತು ಶೈಕ್ಷಣಿಕ ಮೌಲ್ಯವನ್ನು ಹೊಂದಿದ್ದು ಜೀವವೈವಿಧ್ಯ ಸಮ್ಮದ ಪಶ್ಚಿಮ ಘಟ್ಟಗಳಲ್ಲಿ ಹುದುಗಿರುವ ಭೂರೂಪಗಳ ನಿಧಾನ ಭೂವೈಜ್ಞಾನಿಕ ಪ್ರಕ್ರಿಯೆಗಳ ಶಕ್ತಿಯನ್ನು ಪ್ರದರ್ಶಿಸುತ್ತವೆ. ಇಲ್ಲಿನಶಿಲೆಗಳನ್ನು ರಕ್ಷಿಸುವುದು, ಸಂರಕ್ಷಿಸು ವುದು ಮತ್ತು ನಿರ್ವಹಿಸು ವುದು ಅವಶ್ಯಕವಾಗಿದೆ. ಮುಂದಿನ ಪೀಳಿಗೆಯ ಜ್ಞಾನಕ್ಕಾಗಿ ಇಂತಹ ತಾಣದ ಸಂರಕ್ಷಣೆ ತುರ್ತು ಅಗತ್ಯ’ ಎಂದು ಜಿಎಸ್‌ಐ ಹೇಳಿದೆ.
  • ‘ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಮೂಲಸೌಕರ್ಯಗಳಿಗೆ ಬಲಬರಬಹುದು ಗಣಿಗಾರಿಕೆ ನಡೆಸಿ ಪರಿಸರಕ್ಕೆ ಧಕ್ಕೆ ತರುವ ಚಟುವಟಿಕೆಗಳಿಗೆ ಕಡಿವಾಣ ಬೀಳಬಹುದು’.


ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

721 ಟನ್ ಚಿನ್ನ, 7,334 ಟನ್ ಬೆಳ್ಳಿ ಆಮದು: ವಾಣಿಜ್ಯ ಸಚಿವಾಲಯ: ₹6.68 ಲಕ್ಷ ಕೋಟಿ ಚಿನ್ನ ಆಮದು
ಸಂದರ್ಭ:
2025-26ರ ಆರ್ಥಿಕ ವರ್ಷದಲ್ಲಿ ₹6.68 ಲಕ್ಷ ಕೋಟಿ ಮೌಲ್ಯದ ಚಿನ್ನ ದೇಶಕ್ಕೆ ಆಮದಾಗಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ತಿಳಿಸಿದೆ.

  • 2024-25ರಲ್ಲಿ ₹5.38 ಲಕ್ಷ ಕೋಟಿ ಮೌಲ್ಯದ ಚಿನ್ನ ದೇಶಕ್ಕೆ ಆಮದಾಗಿತ್ತು. ಇದಕ್ಕೆ ಹೋಲಿಸಿದರೆ ಚಿನ್ನದ ಆಮದು ಪ್ರಮಾಣ ಶೇ 24ರಷ್ಟು ಹೆಚ್ಚಳವಾಗಿದೆ. ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದ್ದರಿಂದ ಆಮದು ಮೌಲ್ಯ ಏರಿಕೆಯಾಗಿದೆ ಎಂದು ತಿಳಿಸಿದೆ.
  • 2024-25ರಲ್ಲಿ 757.09 ಟನ್‌ನಷ್ಟು ಚಿನ್ನ ಆಮದಾಗಿತ್ತು. ಕಳೆದ ಆರ್ಥಿಕ ವರ್ಷದಲ್ಲಿ 721.03 ಟನ್ ಆಮದಾಗಿದ್ದು, ಶೇ 4.76ರಷ್ಟು ಆಮದು ಪ್ರಮಾಣವು ಇಳಿಕೆ ಆಗಿದೆ.
  • ಕಳೆದ ಆರ್ಥಿಕ ವರ್ಷದಲ್ಲಿ ಬೆಳ್ಳಿ, ಆಮದು ಶೇ 150ರಷ್ಟು ಹೆಚ್ಚಳವಾಗಿದ್ದು. ₹1.11 ಲಕ್ಷ ಕೋಟಿ ಮೌಲ್ಯದಷ್ಟು ಆಮದಾಗಿತ್ತು ಗಾತ್ರದ ಲೆಕ್ಕದಲ್ಲಿ 7,334.96 ಟನ್‌ನಮ್ಮ ಆಮದಾಗಿದ್ದು ಶೇ 42ರಷ್ಟು ಏರಿಕೆಯಾಗಿದೆ.
  • ಈ ಲೋಹಗಳ ಆಮದು ಹೆಚ್ಚಳದಿಂದ ದೇಶದ ವ್ಯಾಪಾರ ಕೊರತೆ ₹30.93 ಲಕ್ಷ ಕೋಟಿಗೆ ಏರಿಕೆಯಾಗಿದೆ. ರಫ್ತು ಮೌಲ್ಯಕ್ಕಿಂತ ಆಮದು ಮೌಲ್ಯ ಹೆಚ್ಚಿದ್ದರೆ ಅದನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.
  • ದೇಶದ ಒಟ್ಟು ಬೇಡಿಕೆಯ ಪೈಕಿ ಶೇ 40ರಷ್ಟು ಚಿನ್ನ ಸ್ಕಿಟ್ನರ್ಲೆಂಡ್‌ ನಿಂದ ಆಮದಾಗುತ್ತದೆ. ಯುಎ ಇನಿಂದ ಶೇ 16 ಮತ್ತು ದಕ್ಷಿಣ ಆಫ್ರಿಕಾದಿಂದ ಶೇ 10ರಷ್ಟು ಚಿನ್ನ ಆಮದಾಗುತ್ತದೆ ದೇಶದ ಒಟ್ಟು ಆಮದಿನಲ್ಲಿ ಅಮೂಲ್ಯ ಲೋಹಗಳ ಆಮದು ಪ್ರಮಾಣ ಶೇ 5ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.
  • ಕಳೆದ ಆರ್ಥಿಕ ವರ್ಷದಲ್ಲಿ ಸ್ವಿಟ್ಸರ್ಲೆಂಡ್‌ನಿಂದ ₹2.25 ಲಕ್ಷ ಕೋಟಿ ಮೌಲ್ಯದ ಚಿನ್ನ ಆಮದಾಗಿದ್ದು 2024-25ಕ್ಕೆ ಹೋಲಿಸಿದರೆ ಶೇ 11ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
  • ಚೀನಾ ಬಳಿಕ ಭಾರತವು ಜಗತ್ತಿನ ಎರಡನೇ ಅತಿದೊಡ್ಡ, ಚಿನ್ನದ ಗ್ರಾಹಕ ರಾಷ್ಟ್ರವಾಗಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಗೆ ಸರ್ಕಾರದ ಕ್ರಮ: ‘ರೋಹಿತ್ ವೇಮುಲ’ ಮಸೂದೆಗೆ ಅಸ್ತು
ಸಂದರ್ಭ:
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಮತ್ತು ಶಿಕ್ಷಣದ ಹಕ್ಕು ಕಲ್ಪಿಸುವ ಉದ್ದೇಶದಿಂದ ರೂಪಿಸಿರುವ ‘ಕರ್ನಾಟಕ ರೋಹಿತ್ ವೇಮುಲ ಮಸೂದೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

  • ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಮ ತಡೆಯಲು ‘ಕರ್ನಾಟಕ ರೋಹಿತ್ ವೇಮುಲ’ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು ಮಸೂದೆಯನ್ನು ಸರ್ಕಾರ ರೂಪಿಸಿದೆ.
  • ‘ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಮ ಎದುರಿಸಬಾರದು ಇದನ್ನು ಖಾತ್ರಿಪಡಿಸಲು ‘ರೋಹಿತ್ ವೇಮುಲ ಕಾಯ್ದೆ ಹೆಸರಿನ ಕಾನೂನು ಕರ್ನಾಟಕ ದಲ್ಲೂ ರೂಪಿಸಿ, ಜಾರಿಗೊಳಿಸಬೇಕು’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಪತ್ರ ಬರೆದು ಆಗ್ರಹಿಸಿದ್ದರು.
  • ಮಸೂದೆಯು ಕಾಯ್ಕೆಯಾಗಿ ಜಾರಿಗೆ ಬಂದ ನಂತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಗಗಳು, ಹಾತಿಗಳು ಮತಗಳು, ಲಿಂಗ, ದೇಶ ಎಂಬ ತಾರತಮ್ಮ ಇಲ್ಲದೆ ಮುಕ್ತ ವಾತಾವರಣ ಇರಲಿದೆ. ಈ ಸಂಸ್ಥೆಗಳಲ್ಲಿನ ಪ್ರದೇಶವು ಜಾತಿ, ವರ್ಗ, ಮತ, ಲಿಂಗ ಅಥವಾ ದೇಶ ಎಂಬ ಭೇದ ಇಲ್ಲದೆ ಎಲ್ಲರಿಗೂ ಮುಕ್ತವಾಗಿರುತ್ತದೆ. ಅರ್ಹತಾ ಪರೀಕ್ಷೆಗಳಲ್ಲಿನ ಅಂಕಗಳ ಆಧಾರದಲ್ಲಿ ಪ್ರದೇಶಾತಿ ಸಿಗಲಿದೆ. ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ, 10 ಸಾವಿರ ದಂಡ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
  • ಸಂತ್ರಸ್ತನಿಗೆ ಆರೋಪಿಯು ಸೂಕ್ತ ವರಿಹಾರ ನೀಡುವಂತೆ ನ್ಯಾಯಾಲಯ ಅನುಮತಿಸಲು ಕೂಡ ಅವಕಾಶ ಸಿಗಲಿದೆ ಆ ಮೊತ್ತವು ಗರಿಷ್ಠ 21 ಲಕ್ಷದವರೆಗೆ ಮತ್ತು ಅದಕ್ಕೆ ಹೆಚ್ಚುವರಿಯಾಗಿ ಬಡ್ಡಿಯೂ ಇರಲಿದೆ. ಈ ಹಿಂದೆ ಅವರಾಧ ಎಸಗಿದ ಕಾರಣಕ್ಕೆ ಶಿಕ್ಷೆಗೊಳಗಾದವರು ಮತ್ತೆ ಈ ಕಾಯ್ಕೆಯಡಿ ಶಿಕ್ಷೆಗೆ ಒಳಗಾದರೆ, ಅಂಥವರಿಗೆ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಮತ್ತು ₹1 ಲಕ್ಷ ದಂಡ ವಿಧಿಸಬೇಕೆಂಬ ಪ್ರಸ್ತಾವವೂ ಈ ಮಸೂದೆಯಲ್ಲಿದೆ.
  • ಈ ಕಾಯ್ದೆಯಡಿ ಎಸಗುವ ಪ್ರತಿಯೊಂದು ಅಪರಾಧವು ಸಂಜೆಯ ಮತ್ತು ಜಾಮೀನು ರಹಿತ ಎಂದು ಪರಿಗಣಿಸಲಾಗುವುದು ಕಾಯ್ಕೆಯ ನಿಬಂಧನೆಗಳನ್ನು ಉಲ್ಲಂಘಿಸುವ ಸಂಸ್ಥೆಗೆ ರಾಜ್ಯ ಸರ್ಕಾರವು ಯಾವುದೇ ಆರ್ಥಿಕ ನೆರವು ಅಥವಾ ಅನುದಾನ ನೀಡಬಾರದು ಅಪರಾಧ ಎಸಗುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಕೃತ್ಯ ಎಸಗಲು ಇನ್ನೊಬ್ಬರಿಗೆ ಸಹಾಯ ಮಾಡುವ ಅಥವಾ ಪ್ರಚೋದಿಸುವ ವ್ಯಕ್ತಿ ಕೂಡ ಅವರಾಧದಲ್ಲಿ ಭಾಗವಹಿಸಿದ್ದಾರೆಂದು ಪರಿಗಣಿಸಲಾಗುತ್ತದೆ ಎಂದು ಮಸೂದೆ ಪ್ರಸ್ತಾಪಿಸಿದೆ.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Source: Prajavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಮುಖ್ಯಮಂತ್ರಿಯಾಗಿ ಸಾಮ್ರಾಟ್ ಪ್ರಮಾಣ
ಸಂದರ್ಭ:
ಬಿಹಾರದ 24ನೇ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅವರು ಪ್ರಮಾಣವಚನ ಸ್ವೀಕರಿಸಿದರು.

  • ಈ ಮೂಲಕ ಮೊದಲ ಬಾರಿಗೆ ಬಿಜೆಪಿಯ ನಾಯಕರೊಬ್ಬರು ರಾಜ್ಯದ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ರಾಜ್ಯಪಾಲರಾದ ಸೈಯದ್ ಅತಾ ಹಸನ್ ಅವರು ಸಾಮ್ರಾಟ್(57) ಅವರಿಗೆ ಲೋಕ ಭವನದಲ್ಲಿ ಪ್ರಮಾಣವಚನ ಬೋಧಿಸಿದರು.
  • ಇದೇ ವೇಳೆ, ಜೆಡಿಯು ನಾಯಕರಾದ ಬಿಜೇಂದ್ರ ಪ್ರಸಾದ್ ಯಾದವ್ ಮತ್ತು ವಿಜಯ್ ಕುಮಾರ್ ಚೌಧರಿ ಪ್ರಮಾಣವಚನ ಸ್ವೀಕರಿಸಿದರು. ಈ ಇಬ್ಬರಿಗೂ ಉಪ ಮುಖ್ಯಮಂತ್ರಿ ಸ್ಥಾನ ಕಲ್ಪಿಸಲಾಗಿದೆ.
  • ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿದ್ದು, ಜೆಡಿಯು ಮುಖ್ಯಸ್ಥ ನಿತೀಶ್ ಮುಖ್ಯಮಂತ್ರಿಯಾಗಿದ್ದಾಗ ಸಾಮ್ರಾಟ್ ಚೌಧರಿ ಮತ್ತು ಬಿಜೆಪಿಯ ಇನ್ನೊಬ್ಬ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರು ಉಪಮುಖ್ಯಮಂತ್ರಿಗಳಾಗಿದ್ದರು. ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ಜೆಡಿಯು ಪಾಲಾಗಿದೆ.
  • ಸಾಮ್ರಾಟ್ ಚೌಧರಿ ಅವರು ಗೃಹ ಕಂದಾಯ ಸೇರಿದಂತೆ 30 ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

‘ಟೈಮ್’ ಪ್ರಭಾವಿಗಳ ಪಟ್ಟಿಯಲ್ಲಿ ಪಿಚೈ, ರಣಬೀರ್ ಕಪೂರ್
ಸಂದರ್ಭ:
ನ್ಯೂಯಾರ್ಕ್ (ಪಿಟಿಐ): ಟೈಮ್ ನಿಯತಕಾಲಿಕ 2026ರ ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

  • ಪಟ್ಟಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚ್, ಮೈಕಲಿನ್ ಸ್ಟ್ರಾರ್ ಪ್ರಶಸ್ತಿ ವಿಜೇತ ಬಾಣಸಿಗ ವಿಕಾಸ್ ಖನ್ನ, ನಟ ರಣಬೀರ್ ಕಪೂರ್, ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ಮಾನಿ, ಯೂಟ್ಯೂಬ್ ಮುಖ್ಯಸ್ಥ ನೀಲ್ ಮೋಹನ್ ಮತ್ತು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಸ್ಥಾನ ಪಡೆದಿದ್ದಾರೆ.
  • ಟೈಮ್ ಬಿಡುಗಡೆ ಮಾಡಿರುವ ಸಮಗ್ರ ಪಟ್ಟಿಯಲ್ಲಿ ಜಾಗತಿಕ ಸಾಧಕರು, ನಾಯಕರು, ಉದ್ಯಮ ದಿಗ್ಗಜರು, ಕಲಾವಿದರು, ಸಂಶೋಧಕರು ಮತ್ತು ಗಣ್ಯರು ಇದ್ದಾರೆ ಪಟ್ಟಿಯಲ್ಲಿ ಸ್ಥಾನ ಪಡೆದವರು ಸಂಸ್ಕೃತಿಯನ್ನು ಅಭೂತಪೂರ್ವ ರೀತಿಯಲ್ಲಿ ಬದಲಾಯಿಸಿದ್ದಾರೆ ಎಂದು ಟೈಮ್ ಒತ್ತಿ ಹೇಳಿದೆ.

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಮಹಿಳಾ ವಿಭಾಗದಲ್ಲಿ ಅಗ್ರಸ್ಥಾನ: ವೈಶಾಲಿ ಮುಡಿಗೆ ಕಿರೀಟ
ಸಂದರ್ಭ: ಗ್ರಾಂಡ್‌ಮಾಸ್ಟರ್ ಆರ್. ವೈಶಾಲಿ ಅವರು ರಷ್ಯಾದ ಕ್ಯಾತರಿನಾ ಲಾಗ್ಲೆ ಅವರನ್ನು ಅಂತಿಮ ಸುತ್ತಿನಲ್ಲಿ ಸೋಲಿಸಿ ಕ್ಯಾಂಡಿಡೇಟ್ಸ್ ಟೂರ್ನಿಯ ಮಹಿಳಾ ವಿಭಾಗದ ಚಾಂಪಿಯನ್ ಆದರು. ಅವರು ಈ ಸಾಧನೆಗೆ ಪಾತ್ರರಾದ ಭಾರತದ ಮೊದಲ ಆಟಗಾರ್ತಿ.

  • ಟೂರ್ನಿ ಗೆಲ್ಲುವ ಮೂಲಕ ಚೆನ್ನೈನ 24 ವರ್ಷ ವಯಸ್ಸಿನ ಆಟಗಾರ್ತಿ, ವಿಶ್ವ ಚಾಂಪಿಯನ್ ಜು ವೆನ್‌ಜುನ್ (ಚೀನಾ) ಅವರಿಗೆ ‘ಚಾಲೆಂಜರ್’ ಆಗುವ ಅರ್ಹತೆ ಪಡೆದರು. ಈ ವರ್ಷದ ಕೊನೆಗೆ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್ ಹಣಾಹಣಿಗೆ ತಾಣ ಮತ್ತು ದಿನಾಂಕ ಇನ್ನಷ್ಟೇ ನಿಗದಿ ಆಗಬೇಕಾಗಿದೆ.
  • ಈ ಟೂರ್ನಿಯ ಓಪನ್ ವಿಭಾಗದಲ್ಲಿ ಪ್ರಶಸ್ತಿಗೆ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದ ಆರ್.ಪ್ರಜ್ಞಾನಂದ ನಿರಾಸೆ ಮೂಡಿಸಿದರು. ಆದರೆ ಅಕ್ಕ ವೈಶಾಲಿ ಆ ನಿರಾಸೆ ಮರೆಸುವಂತೆ ಆಡಿ ಮಿಂಚಿದರು. ಕೊನೆಯ ಸುತ್ತಿನಲ್ಲಿ ಲಾಗೊ (6.5) ಅವರನ್ನು 48 ನಡೆಗಳಲ್ಲಿ ಅಧಿಕಾರಯುತವಾಗಿ ಮಣಿಸಿದರು. ಆಗ ಅವರ ಬಳಿ ‘ಕ್ಲೀನ್ ಜೊತೆ ಎರಡು ‘ರೂಕ್’ಗಳು ಉಳಿದಿದರೆ, ಲಾಗೊ ಬಳಿ ‘ಕ್ರೀನ್ ಮತ್ತು ‘ಬಿಷಪ್’ ಉಳಿದಿದ್ದವು.
  • ಅಂತಿಮ ಸುತ್ತಿನ ಗೆಲುವಿನ ನಂತರ 8.5 ಅಂಕ ಗಳಿಸಿದ ವೈಶಾಲಿ ಅರ್ಧ ಪಾಯಿಂಟ್ ಅಂತರದಿಂದ ಒಂಟಿಯಾಗಿ ಅಗ್ರಸ್ಥಾನ ಪಡೆದರು. ಕಜಾಕಸ್ತಾನದ ಬಿಬಿಸಾರ ಅಸೌಬಯೇವಾ (8) ಎರಡನೇ ಸ್ಥಾನ ಪಡೆದರು. ಅವರು ಅಂತಿಮ ಸುತ್ತಿನಲ್ಲಿ ಭಾರತದ ದಿವ್ಯಾ ದೇಶಮುಖ್ (5.5) ವಿರುದ್ಧ ಗೆಲುವಿಗೆ ಯತ್ನಿಸಿ ವಿಫಲರಾದರು.
  • ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚೈನಾ ಮತ್ತು ಚೀನಾದಝು ಜಿನೆರ್ (ತಲಾ 7.5) ಅವರು ಮೂರನೇ ಸ್ನಾನ ಹಂಚಿಕೊಂಡರು.ವೈಶಾಲಿ ಸಾಧನೆಯಿಂದ ವಿಶ್ವ ಚೆಸ್‌ನಲ್ಲಿ ಭಾರತದ ವರ್ಚಸ್ಸು ಇನ್ನಷ್ಟು ಹೆಚ್ಚಿದೆ.
  • ಓಪನ್ ವಿಭಾಗದಲ್ಲಿ ಉದ್ರೇಕಿಸ್ತಾನದ ಜಾವೊಖಿರ್ ಸಿಂದರೋಪ್ (10 ಪಾಯಿಂಟ್ಸ್) ಒಂದು ಸುತ್ತು ಮೊದಲೇ ಚಾಂಪಿಯನ್ ಆಗಿದ್ದು, ಅವರು ಕೊನೆಯ ಸುತ್ತಿನಲ್ಲಿ ಚೀನಾದ ವೀ ಯಿ (7) ಜೊತೆ ಡ್ರಾ ಮಾಡಿಕೊಂಡರು.
  • ಪ್ರಜ್ಞಾನಂದ (6) ಕೊನೆಯ ಸುತ್ತಿನಲ್ಲಿ ಅಮೆರಿಕದ ಹಿಕಾರು ನಕಾಮುರ (6.5) ಜೊತೆ ಡ್ರಾ ಮಾಡಿಕೊಂಡರು. ಜರ್ಮನಿಯ ಮಥಾಯಸ್ ಬೂಬಾಮ್ (7) ಅವರನ್ನು ಸೋಲಿಸಿದ ನೆದರ್ಲೆಂಡಪ್ಪನ ಅನಿಶ್ ಗಿರಿ (8.5) ಎರಡನೇ ಸ್ನಾನ ಪಡೆದರು.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ
ಪ್ರಮುಖ ಯೋಜನೆಗಳು

ಭಾನುಕೀರ್ತಿ ಭಟ್ಟಾರಕರಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ: ಸಿದ್ದರಾಮರಿಗೆ ‘ಬಸವ’, ದೇವನೂರಗೆ ‘ಪಂಪ’
ಸಂದರ್ಭ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2025-26ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಘೋಷಿಸಿದೆ.

  • ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಕೌಠಾ(ಬಿ) ಬಸವ ಯೋಗಾಶ್ರಮದ ಬೆಲ್ಲಾಳ ಸಿದ್ಧರಾಮ ಶರಣರು, ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ’ಗೆ ಮಂಡ್ಯದ ಕಂಬದಹಳ್ಳಿಯ ಜೈನ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಭಾಜನರಾಗಿದ್ದಾರೆ. ಈ ಎರಡೂ ಪ್ರಶಸ್ತಿಗಳು ತಲಾ ₹10 ಲಕ್ಷ ನಗದು ಒಳಗೊಂಡಿವೆ.
  • ಪಂಪ ಪ್ರಶಸ್ತಿಗೆ ಸಾಹಿತಿ ದೇವನೂರ ಮಹಾದೇವ (ಮೈಸೂರು), ‘ಸಂಗೊಳ್ಳಿ, ರಾಯಣ್ಣ ಪ್ರಶಸ್ತಿ’ಗೆ ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ (ಧಾರವಾಡ), ‘ಅಕ್ಕಮಹಾದೇವಿ ಪ್ರಶಸ್ತಿ’ಗೆ ಸಾಮಾಜಿಕ ಹೋರಾಟಗಾರ್ತಿಕೆ. ನೀಲಾ (ಕಲಬುರಗಿ), ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿ’ಗೆ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ (ತುಮಕೂರು) ಅವರನ್ನು ಆಯ್ಕೆ ಮಾಡಲಾಗಿದೆ.
  • ‘ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಲೇಖಕ ಅಲ್ಲಾಬಕ್ಷ ಮೀರಾಸಾಹೇಬ ಮಿರ್ಜಿ (ವಿಜಯಪುರ), ‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ಗೆ ಲೇಖಕಿ ಸುಕನ್ಯಾ ಮಾರುತಿ (ಬಳ್ಳಾರಿ), ‘ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ’ಗೆ ಕಲಾವಿದೆ ಜಿ.ವಿ. ಶಾರದಾ (ತುಮಕೂರು), ‘ಬಿ.ವಿ. ಕಾರಂತ ಪ್ರಶಸ್ತಿ’ಗೆ ರಂಗಕರ್ಮಿ ಪ್ರಸನ್ನ (ಶಿವಮೊಗ್ಗ) ಹಾಗೂ ‘ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ’ಗೆ ಸಾಹಿತಿ ಗಂಗಾರಾಂ ಚಂಡಾಳ (ಕೋಲಾರ) ಆಯ್ಕೆಯಾಗಿದ್ದಾರೆ.
  • ಕಲಾ ಪ್ರಶಸ್ತಿ ವಿಭಾಗದಲ್ಲಿ ‘ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ಗೆ ಕಲಾವಿದ ವಿ.ಹರಿರಾಮ್ (ಬೆಂಗಳೂರು), ‘ಜಕಣಾಚಾರಿ ಪ್ರಶಸ್ತಿ’ಗೆ ಅಶೋಕ್ ಗುಡಿಗಾರ್ (ಶಿವಮೊಗ,), ‘ಜಾನಪದ ಶ್ರೀ ಪ್ರಶಸ್ತಿ’ಗೆ ಕಲಾವಿದರಾದ ಎಂ. ಮಹದೇವಸ್ವಾಮಿ (ಮಂಡ್ಯ) ಹಾಗೂ ಬಿ. ಲಕ್ಷ್ಮಣ ಗುತ್ತೇದಾರ (ಯಾದಗಿರಿ) ಆಯ್ಕೆಯಾಗಿದ್ದಾರೆ.
  • ಸಂಗೀತ-ನೃತ್ಯ ಪ್ರಶಸ್ತಿ ವಿಭಾಗದಲ್ಲಿ ‘ಕುಮಾರವ್ಯಾಸ ಪ್ರಶಸ್ತಿ’ಗೆ ಕಲ್ಲಿನಾಥ ಶಾಸ್ತ್ರಿ (ಗದಗ) ಹಾಗೂ ‘ಶಾಂತಲಾ ನಾಟ್ಯರಾಣಿ ಪ್ರಶಸ್ತಿ’ಗೆ ಪ್ರತಿಭಾ ಪ್ರಹ್ಲಾದ್ (ಮೈಸೂರು) ಭಾಜನರಾಗಿದ್ದಾರೆ ಈ ಪ್ರಶಸ್ತಿಗಳು ತಲಾ ₹5 ಲಕ್ಷ ನಗದು ಒಳಗೊಂಡಿವೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

2011ರ ಜನಗಣತಿಯನ್ನು ಆಧಾರವಾಗಿಸಿಕೊಂಡ ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಭಾರತದ ಪ್ರತಿನಿಧಿತ್ವ, ಪ್ರಾದೇಶಿಕ ಸಮತೋಲನ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಉತ್ತರ ಮತ್ತು ದಕ್ಷಿಣ ರಾಜ್ಯಗಳ ಹಿನ್ನೆಲೆಯಲ್ಲಿಚರ್ಚಿಸಿ.

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ರಾಜ್ಯಗಳ ಮೂಲಸೌಕರ್ಯ, ನೀರಾವರಿ, ಸಾರಿಗೆ ಮತ್ತು ಹಣಕಾಸು ನೆರವು ಸಂಬಂಧಿತ ಬೇಡಿಕೆಗಳು ಕೇಂದ್ರ–ರಾಜ್ಯ ಸಂಬಂಧಗಳ ಸ್ವಭಾವವನ್ನು ಹೇಗೆ ಪ್ರತಿಬಿಂಬಿಸುತ್ತವೆ? ಕರ್ನಾಟಕದ ಉದಾಹರಣೆಯೊಂದಿಗೆ ಚರ್ಚಿಸಿ.

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಸಗಟು ಹಣದುಬ್ಬರ 3 ವರ್ಷಗಳ ಗರಿಷ್ಠ
ಸಂದರ್ಭ: ಇಂಧನ, ವಿದ್ಯುತ್ ಹಾಗೂ ತಯಾರಿಸಿದ ಉತ್ಪನ್ನಗಳ ಬೆಲೆ ಯಲ್ಲಿನ ಹೆಚ್ಚಳದ ಪರಿಣಾಮವಾಗಿ ಸಗಟು ಹಣದುಬ್ಬರ ಪ್ರಮಾಣವು ಮಾರ್ಚ್ ತಿಂಗಳಲ್ಲಿ ಶೇ 3.88ಕ್ಕೆ ತಲು ಪಿದೆ. ಇದು ಮೂರು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ದಾಖಲಾಗಿರುವ ಗರಿಷ್ಠ ಮಟ್ಟದ ಸಗಟು ಹಣದುಬ್ಬರ ಪ್ರಮಾಣ.

  • ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ದರವು ಸತತ ಐದನೆಯ ತಿಂಗಳಿನಲ್ಲಿಯೂ ಏರಿಕೆ ಆಗಿರುವುದನ್ನು ಕೇಂದ್ರ ಕೈಗಾರಿಕಾ ಸಚಿವಾಲಯ ಬುಧವಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳುತ್ತಿವೆ.
  • ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಆರಂಭವಾದ ನಂತರದಲ್ಲಿ ಜಾಗತಿಕ ಮಟ್ಟದಲ್ಲಿ ಸರಕುಗಳ ಬೆಲೆಯು ದುಬಾರಿ ಆಗಿರು ವುದನ್ನು ಇಂಧನ ಬೆಲೆ ಹೆಚ್ಚಾಗಿರುವು ದನ್ನು ಮಾರ್ಚ್ ತಿಂಗಳ ಸಗಟು ಹಣದುಬ್ಬರ ಹೆಚ್ಚಳ ಆಗಿರುವುದು ಸೂಚಿಸುತ್ತಿದೆ ಫೆಬ್ರುವರಿಯಲ್ಲಿ ಸಗಟು ಹಣದುಬ್ಬರ ಪ್ರಮಾಣ ಶೇ 2.13ರಷ್ಟು ಕಳೆದ ವರ್ಷದ ಮಾರ್ಚ್‌ನಲ್ಲಿ ಶೇ 2.25ರಷ್ಟು ಇತ್ತು.
  • ‘ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಇತರ ತಯಾರಿಕೆಗಳು, ಆಹಾರೇತರ ವಸ್ತುಗಳು, ಮೂಲ ಲೋಹಗಳ ತಯಾರಿಕೆ ಮತ್ತು ಆಹಾರ ಉತ್ಪನ್ನಗಳ ಬೆಲೆ ಏರಿಕೆಯು ಈ ವರ್ಷದ ಮಾರ್ಚ್‌ನಲ್ಲಿ ಹಣದುಬ್ಬರ ಹೆಚ್ಚಾಗಿರುವುದಕ್ಕೆ ಮುಖ್ಯ ಕಾರಣ’ ಎಂದು ಕೈಗಾರಿಕಾ ಸಚಿವಾಲಯ ಹೇಳಿದೆ.
  • ‘ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಯು ಹೆಚ್ಚಿನ ಮಟ್ಟದಲ್ಲಿದೆ. ಹಂತಹಂತವಾಗಿ ಇದರ ಪರಿಣಾಮವು ಇತರ ಸರಕುಗಳ ಬೆಲೆಯ ಮೇಲೆಯೂ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಮುಂದಿನ ದಿನಗಳಲ್ಲಿಯೂ ಸಗಟು ಹಣದುಬ್ಬರ ಪ್ರಮಾಣ ಹೆಚ್ಚಳ ಆಗುತ್ತದೆ ಎಂಬುದು ನಮ್ಮ ನಿರೀಕ್ಷೆ’ ಎಂದು ಬಾಕ್ಸಸ್ ಸಂಸ್ಥೆ ಅಂದಾಜು ಮಾಡಿದೆ.
  • ಆರ್‌ಬಿಐ ರೆವೊ ದರವನ್ನು ಈ ವರ್ಷ ದುದ್ದಕ್ಕೂ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳ ಲಿದೆ ಎಂದೂ ಅದು ಅಂದಾಜಿಸಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಕೋಟ್ಯಂತರ ಜನರ ನಂಬಿಕೆ ತಪ್ಪು ಎನ್ನುವುದು ಕಷ್ಟ: ‘ಸುಪ್ರೀಂ’
ಸಂದರ್ಭ: ಕೋಟ್ಯಂತರ ಜನರ ನಂಬಿಕೆ ಗಳನ್ನು ತಪ್ಪು ಅಥವಾ ಸಮರ್ಪಕವಲ್ಲದ್ದು ಎಂದು ಘೋಷಿಸುವುದು ತುಂಬಾ ಕಷ್ಟಕರವಾದ ಕೆಲಸ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

  • ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಮತ್ತು ಬಹು ಧರ್ಮೀಯರು ಆಚರಿಸುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ಹೇಳಿಕೆ ನೀಡಿತು.
  • ‘ಹಲವು ನಂಬಿಕೆಗಳು ಹಾಗೂ ಆಚರಣೆಗಳನ್ನು ಆಧರಿಸಿ ಧರ್ಮ ಎಂದು ನಿರ್ಧರಿಸಲಾಗಿರುತ್ತದೆ. ನಿರ್ದಿಷ್ಟ ಸಮುದಾಯಗಳು ಅನುಸರಿಸುವ ಇವುಗಳು ತಪ್ಪೋ ಸರಿಯೋ ಎಂದು ನ್ಯಾಯಾಲಯ ಹೇಳಲು ಸಾಧ್ಯವಿಲ್ಲ’ ಎಂದು ತಿರುವಾಂಕೂರು ದೇವಸ್ಥ ಮಂಡಳಿಯ (ಟಿಡಿಬಿ) ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎ.ಎಂ. ಸಂಘ ಪ್ರತಿಪಾದಿಸಿದರು.
  • ಸಂವಿಧಾನದ 25 (2) (ಬಿ) ವಿಧಿಯ ಅನ್ವಯ ಎಲ್ಲ ಹಿಂದೂಗಳು ದೇವಸ್ಥಾನ ಪ್ರದೇಶಬಹುದು ಎಂದು ಹೇಳುವಂತೆಯೇ, 26 (ಬಿ) ವಿಧಿಯಂತೆ ನಿರ್ದಿಷ್ಟ ಕಟ್ಟುಪಾಡುಗಳನ್ನು ದೇವಸ್ಥಾನದ ಪ್ರದೇಶಕ್ಕೆ ಹಾಕಿಕೊಳ್ಳುವ ಅವಕಾಶವನ್ನೂ ಕಲ್ಪಿಸಬಹುದು ಎಂದು ಸಂಖ್ಯೆ ಅವರು ವಾದಿಸಿದರು.
  • ಸಂವಿಧಾನದ 25 (2) (ಬಿ) ವಿಧಿಯನ್ನು ಉಲ್ಲೇಖಿಸುವಾಗ ಸಾರ್ವಜನಿಕ ಆದೇಶ, ನೈತಿಕತೆ ಅಥವಾ ಆರೋಗ್ಯಎಂಬ ಪದಗಳನ್ನು ಬಳಸುವುದರ ಬದಲು ಸಾಮಾಜಿಕ ಸುಧಾರಣೆಎಂಬ ಪದಪುಂಜ ಉಪಯೋಗಿಸುವುದು ಸೂಕ್ತಎಂದು ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು ಸಲಹೆ ನೀಡಿತು
  • ಸಾಮಾಜಿಕ ಸುಧಾರಣೆಯ ನೆವದಲ್ಲಿ ಧರ್ಮವನ್ನು ಟೊಳ್ಳಾಗಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಹೇಳಿದ್ದನ್ನು ಸಂಘ ಒಪ್ಪಿಕೊಂಡರು ಆದರೆ ಶತಮಾನಗಳಿಂದ ನಿರ್ದಿಷ್ಟ ಆಚರಣೆ ಗಳನ್ನು ನಡೆಸಿಕೊಂಡು ಬಂದಿರುವ ಶಬರಿಮಲೆ ಗುರುವಾಯೂರು ದೇಗುಲಗಳ ವಿಧಿ-ವಿಧಾನಗಳನ್ನು ಪ್ರಶ್ನಿಸಿ ದಿಢೀರ್ ಪಿಐಎಲ್ ಹಾಕುವುದು ಸರಿಯಲ್ಲ ಎಂದು ವಾದಿಸಿದರು.

ಮತಪತ್ರ ಬಳಕೆ: ರಾಜ್ಯಪಾಲರ ಅಸ್ತು
ಸಂದರ್ಭ:
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಬದಲಿಗೆ ಮತಪತ್ರ (ಬ್ಯಾಲೆಟ್) ಬಳಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರೂಪಿಸಿದ್ಧ ಮಸೂದೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಂಕಿತ ಹಾಕಿದ್ದಾರೆ.

  • ಈ ಉದ್ದೇಶಕ್ಕಾಗಿ ತಂದಿದ್ದ ಮಸೂದೆಗೆ ವಿಧಾನಮಂಡಲ ಅನುಮೋದನೆ ನೀಡಿತ್ತು. ರಾಜ್ಯಪಾಲರ ಅಂಕಿತದೊಂದಿಗೆ ಇದು ಕಾಯ್ಕೆಯಾಗಲಿದ್ದು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ಅನುವಾಗಲಿದೆ.
  • ಸಂವಿಧಾನದ 326ನೇ ವಿಧಿ ಅಡಿ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಮುಖ್ಯವಾಗಿ, ಮತದಾರರ ಮತಪತ್ರದ ಗೋಪ್ಯತೆ ಖಚಿತಪಡಿಸಿಕೊಳ್ಳಲು ಮತ್ತು ಮತದಾರರನ್ನು ದಬ್ಬಾಳಿಕೆ, ಬೆದರಿಕೆ ಮತ್ತು ಅನಗತ್ಯ ಪ್ರಭಾವದಿಂದ ರಕ್ಷಿಸಿ. ಆ ಮೂಲಕ ಪ್ರಜಾವುಭುತ್ವ ಪ್ರಕ್ರಿಯೆಯ ವಾವಿತ್ರ್ಯವನ್ನು ಸುರಕ್ಷಿತಗೊಳಿಸುವುದು ರಾಜ್ಯ ಸರ್ಕಾರದ ಉದ್ದೇಶ, ಇವಿಎಂ ಕಾರ್ಯನಿರ್ವಹಣೆಯ ಕುರಿತು ಕಳವಳ ವ್ಯಕ್ತವಾಗಿದ್ದು ಸಾರ್ವಜನಿಕ ನಂಬಿಕೆ ಮರುಸ್ಥಾಪಿಸಲು ಸದೃಢ ರಹಸ್ಯ ಮತದಾನ ಪದ್ಧತಿಗೆ ಮರಳುವುದು ಅವಶ್ಯಕ ಎಂದೂ ತಿದ್ದುಪಡಿ ಮಸೂದೆ ಪ್ರಸ್ತಾಪಿಸಿತ್ತು
  • ಜಿಲ್ಲಾ ಪಂಚಾಯತಿಯ ಪ್ರತಿಯೊಂದು ಮತ ಕ್ಷೇತ್ರದಲ್ಲಿ ರಾಜ್ಯ ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳವಟ್ಟು ಮತದಾರರ ಪಟ್ಟಿ ಸಿದ್ದ ಪಡಿಸುವ ಹೊಣೆಯನ್ನು ಉಪ ವಿಭಾಗಾಧಿಕಾರಿಗೆ ನೀಡಲಾಗಿದೆ.
  • ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ಆಧರಿಸಿ ಸ್ಥಳೀಯ ಸಂಸ್ಥೆಗಳ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿತ್ತು ಅದನ್ನು ಕೈಬಿಡಲಾಗಿದೆ. ರಾಜ್ಯ ಚುನಾವಣಾ ಆಯೋಗವೇ ಪ್ರತ್ಯೇಕವಾಗಿ ಮತದಾರರ ಪಟ್ಟಿ ಸಿದ್ಧಪಡಿಸುವ ಅವಕಾಶ ಸಿಗಲಿದೆ.

ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ: 2011ರ ಜನಗಣತಿ ಅಧಾರದಲ್ಲಿ ಕ್ರಮ: ಉತ್ತರದ ರಾಜ್ಯಗಳಿಗೆ ಲಾಭ- ದಕ್ಷಿಣಕ್ಕೆ ಹೊಡೆತ
ಸಂದರ್ಭ:
2011ರ ಜನಗಣತಿ ಆಧಾರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ನಡೆದಾಗ ಲೋಕಸಭೆಯಲ್ಲಿ ದಕ್ಷಿಣದ ಐದು ರಾಜ್ಯಗಳ ಪಾಲು ಶೇ 20.1ರಿಂದ ಶೇ 18ಕ್ಕೆ ಕುಸಿಯಲಿದೆ. ಬಿಹಾರ ಹಾಗೂ ಉತ್ತರ ಪ್ರದೇಶ ರಾಜ್ಯಗಳ ವಾಲು ಶೇ 221ರಿಂದ ಶೇ 25 1ಕ್ಕೆ ಏರಿಕೆಯಾಗಲಿದೆ.

  • ಕೇಂದ್ರ ಸರ್ಕಾರವು ಮಂಡಿಸಲಿರುವ ‘ಸಂವಿಧಾನ (131ನೇ ತಿನ್ನುವಡಿ) ಮಸೂದೆ- 2026’ರ ಪ್ರಕಾರ, ಸಂಸದರ ಸಂಖ್ಯೆ ಗರಿಷ್ಠ 850ಕ್ಕೆ ಏರಿಕೆಯಾದರೆ, ಲೋಕಸಭೆಯಲ್ಲಿ ರಾಜ್ಯಗಳ ಅನುಪಾತದಲ್ಲಿ ಗಣನೀಯವಾಗಿ ಬದಲಾವಣೆ ಆಗಲಿದೆ ಉತ್ತರದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹಾಗೂ ಅನುಪಾತದಲ್ಲಿ ಭಾರಿ ಹೆಚ್ಚಳವಾದರೆ, ದಕ್ಷಿಣದ ರಾಜ್ಯಗಳ ಅನುವಾತ ಕಡಿಮೆ ಆಗಲಿದೆ.
  • ಈ ಸಂವಿಧಾನ ತಿದ್ದುಪಡಿ ಮಸೂದೆ ಬಗ್ಗೆ ವಿಪಕ್ಷಗಳ ನಾಯಕರು ಹಾಗೂ ದಕ್ಷಿಣದ ರಾಜ್ಯಗಳ ಜನಪ್ರತಿನಿಧಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಏಕೆಂದರ, ಶೇ 33 ಮಹಿಳಾ ಕೋಟಾವನ್ನು ಜಾರಿಗೊಳಿಸಲು ಜನಸಂಖ್ಯೆಯನ್ನು ಆಧಾರವಾಗಿ ಪರಿಗಣಿಸುವ ಅಸ್ತಿತ್ವದಲ್ಲಿರುವ ನಿಬಂಧನೆಯಲ್ಲಿ ಯಾವುದೇ ಬದಲಾವಣೆಯನ್ನು ಈ ಮಸೂದೆ ಪ್ರಸ್ತಾಪಿಸುವುದಿಲ್ಲ. 2011ರ ಜನಗಣತಿಯ ಆಧಾರದಲ್ಲೇ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ವಿಪಕ್ಷಗಳ ಆರೋಪ ತಳ್ಳಿ ಹಾಕಿರುವ ಕೇಂದ್ರ ಸರ್ಕಾರ, ದಕ್ಷಿಣದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಳ ಆಗಲಿದೆ ಎಂದೂ ಸ್ಪಷ್ಟಪಡಿಸಿದೆ.
  • ಜನಸಂಖ್ಯಾ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿರುವ ದಕ್ಷಿಣದ ರಾಜ್ಯಗಳ ಹಿತಾಸಕ್ತಿಗಳಿಗೆ ಈ ಮಸೂದೆ ಮಾರಕವಾಗಿದೆ ಎಂದು ವಿರೋಧ ಪಕ್ಷಗಳು ದೂಷಿಸಿವೆ. ಪಂಜಾಬ್, ಹರಿಯಾಣ ಹಾಗೂ ಈಶಾನ್ಯ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳು ಹೆಚ್ಚಿನ ಸ್ನಾನಗಳನ್ನು ಹಾಗೂ ಅನುಪಾತಗಳನ್ನು ವಡೆಯಲಿವೆ.
  • ಸಂವಿಧಾನ (131ನೇ ತಿದ್ದುಪಡಿ) ಮಸೂದೆ– 2026 81(2)() ಪರಿಚ್ಛೇದಕ್ಕೆ ತಿದ್ದುಪಡಿಯನ್ನು ಪ್ರಸ್ತಾಪಿಸುವುದಿಲ್ಲ. ಪರಿಚ್ಛೇದದ ಪ್ರಕಾರ ರಾಜ್ಯದ ಕ್ಷೇತ್ರ ಸಂಖ್ಯೆ ಮತ್ತು ಜನಸಂಖ್ಯೆಯ ನಡುವಿನ ಅನುಪಾತವು ಸಾಧ್ಯವಾದಷ್ಟು ಎಲ್ಲ ರಾಜ್ಯಗಳಿಗೆ ಒಂದೇ ಆಗಿರುವ ರೀತಿಯಲ್ಲಿ ವ್ರತಿ ರಾಜ್ಯಕ್ಕೂ ಲೋಕಸಭಾ ಸ್ಥಾನಗಳನ್ನು ಹಂಚಿಕೆ ಮಾಡಬೇಕು.
  • ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರವು ಹಲವು ಪಕ್ಷಗಳ ಜತೆಗೆ ಸಮಾಲೋಚನೆ ನಡೆಸಿ ವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಿತ್ತು ಲೋಕಸಭೆಯಲ್ಲಿನ ಸ್ಥಾನಗಳ ಸಂಖ್ಯೆಯನ್ನು ಎಲ್ಲ ರಾಜ್ಯಗಳಿಗೆ ಶೇ 50ರಷ್ಟು ಹೆಚ್ಚಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ, ಇದಕ್ಕೆ ಕಾಂಗ್ರೆಸ್, ಡಿಎಂಕೆ, ಸಿಪಿಎಂ ಮತ್ತು ಎಎಪಿಯಂತಹ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

‘ಕಾಯಂ ಸದಸ್ಯತ್ವ ಸಂಖ್ಯೆ ಹೆಚ್ಚಿಸಿ’
ಸಂದರ್ಭ:
ವಿಶ್ವಸಂಸ್ಥೆ (ಪಿಟಿಐ): ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರುವುದಾದರೆ, ಪರಮಾಧಿಕಾರ ಹೊಂದಿರುವ ಕಾಯಂ ಸದಸ್ಯರ ಸಂಖ್ಯೆಯನ್ನು ಅಧಿಕಗೊಳಿಸಬೇಕು. ಇಲ್ಲವಾದಲ್ಲಿ ವಿಶ್ವಸಂಸ್ಥೆಯಲ್ಲಿ ಈಗಾಗಲೇ ಇರುವ ಅಧಿಕಾರದ ಅಸಮಾನತೆಯು ಇನ್ನಷ್ಟು ಹೆಚ್ಚಾಗಲಿದೆ’ ಎಂದು ಭಾರತ ಪ್ರತಿಪಾದಿಸಿದೆ.

  • ಸರ್ಕಾರಗಳ ನಡುವಿನ ಮಾತುಕತೆ (ಐಜಿಎನ್) ಸಭೆಯಲ್ಲಿ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಆಗಿರುವ ಪರ್ವತನೇನಿ ಹರೀಶ್ ಮಾತನಾಡಿದರು. ಕಾಯಂ ಸದಸ್ಯತ್ವ ನೀಡಬೇಕು ಎಂಬುದು ಭಾರತದ ಹಲವು ದಶಕಗಳ ಬೇಡಿಕೆಯಾಗಿದೆ.
  • ‘ಭದ್ರತಾ ಮಂಡಳಿಯಲ್ಲಿ ಸಾಂಸ್ಥಿಕ ಸ್ವರೂಪದಲ್ಲಿ ಬದಲಾವಣೆಗಳು ಆಗಬೇಕಿದೆ. ಹಳೆಯ ಸ್ವರೂಪಕ್ಕೆ 80 ವರ್ಷ ಕಳೆದಿದೆ ಈ ಸ್ವರೂಪವು ಈಗಿನ ಕಾಲದ ಬದಲಾದ ಅಂತರರಾಷ್ಟ್ರೀಯ ರಾಜಕಾರಣಕ್ಕೆ ಒಗ್ಗುವುದಿಲ್ಲ

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ಪ್ರಕರಣ: ಕೈಗಾರಿಕಾ ಘಟಕದಲ್ಲಿ ಆಹಾರ ಸುರಕ್ಷತೆ ಮತ್ತು ಆಡಳಿತಾತ್ಮಕ ನೈತಿಕತೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯೊಂದರಲ್ಲಿ ಇರುವ ಏರೋಸ್ಪೇಸ್ ಕಂಪನಿಯಲ್ಲಿ ಮಧ್ಯಾಹ್ನದ ಊಟ ಸೇವಿಸಿದ ನಂತರ 90ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥರಾಗುತ್ತಾರೆ. ಅವರಿಗೆ ವಾಂತಿ, ಭೇದಿ, ಹೊಟ್ಟೆನೋವು ಮುಂತಾದ ಲಕ್ಷಣಗಳು ಕಾಣಿಸುತ್ತವೆ. ಒಟ್ಟು ಸುಮಾರು 722 ಕಾರ್ಮಿಕರು ಆಹಾರ ಸೇವಿಸಿದ್ದರೆಂದು ತಿಳಿದುಬರುತ್ತದೆ. ಅಸ್ವಸ್ಥರಾದವರಲ್ಲಿ ಕೆಲವರನ್ನು ಸರ್ಕಾರಿ ಆಸ್ಪತ್ರೆಗೆ, ಇನ್ನೂ ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆಹಾರ ಮಾದರಿ, ರಕ್ತ ಮತ್ತು ಮಲದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುತ್ತಾರೆ. ಕಾರ್ಮಿಕರು ಕಂಪನಿಯ ಆಹಾರದ ಗುಣಮಟ್ಟ, ಶುದ್ಧತೆ, ಅಡುಗೆಮನೆಯ ಪರಿಸ್ಥಿತಿ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಕಂಪನಿ ಆಡಳಿತವು ಘಟನೆ ದೊಡ್ಡದಾಗಿ ತೋರಿಸಲಾಗುತ್ತಿದೆ ಎಂದು ಹೇಳಿ, ಉತ್ಪಾದನೆ ಮೇಲೆ ಪರಿಣಾಮ ಬಾರದೇ ನೋಡಬೇಕೆಂದು ಒತ್ತಡ ತರುತ್ತದೆ. ಇದೇ ವೇಳೆ ಮಾಧ್ಯಮಗಳು, ಕಾರ್ಮಿಕ ಸಂಘಟನೆಗಳು ಮತ್ತು ಸಾರ್ವಜನಿಕರು ತಕ್ಷಣದ ಕ್ರಮವನ್ನು ಆಗ್ರಹಿಸುತ್ತಾರೆ.

ನೀವು ಆ ಜಿಲ್ಲೆಯ ಜಿಲ್ಲಾಧಿಕಾರಿ / ಉಪವಿಭಾಗಾಧಿಕಾರಿ / ಫ್ಯಾಕ್ಟರಿ ಸುರಕ್ಷತಾ ಪರಿಶೀಲನಾ ಅಧಿಕಾರಿ ಎಂದು ಊಹಿಸಿಕೊಳ್ಳಿ.
ಪ್ರಶ್ನೆಗಳು:
ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ನೈತಿಕ ಸಮಸ್ಯೆಗಳು ಯಾವುವು?
ಈ ಪ್ರಕರಣದ ಪ್ರಮುಖ ಹಿತಾಸಕ್ತಿಪಕ್ಷಗಳು (stakeholders) ಯಾರು?
ನೀವು ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು ಯಾವುವು?
ಸತ್ಯಾನ್ವೇಷಣೆ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಯಾವ ಆಡಳಿತಾತ್ಮಕ ಹಾಗೂ ನೈತಿಕ ತತ್ವಗಳನ್ನು ಅನುಸರಿಸುತ್ತೀರಿ?
ಇಂತಹ ಘಟನೆಗಳು ಮರುಕಳಿಸದಂತೆ ದೀರ್ಘಕಾಲೀನ ಕ್ರಮಗಳು ಯಾವುವು?

ಉತ್ತರ ಬರೆಯಲು ಸೂಚನೆ / Framework
1) ನೈತಿಕ ಸಮಸ್ಯೆಗಳು
ಕಾರ್ಮಿಕರ ಆರೋಗ್ಯ ಮತ್ತು ಜೀವಭದ್ರತೆಗೆ ಧಕ್ಕೆಯಾದದ್ದು
ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ
ಕಂಪನಿಯ ಜವಾಬ್ದಾರಿತನ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ
ನಿಜಾಂಶಗಳನ್ನು ಮರೆಮಾಚುವ ಸಾಧ್ಯತೆ
ಲಾಭಕ್ಕಿಂತ ಮಾನವ ಗೌರವ ಮತ್ತು ಕಾರ್ಮಿಕ ಕಲ್ಯಾಣಕ್ಕೆ ಆದ್ಯತೆ ನೀಡಬೇಕಾದ ಅವಶ್ಯಕತೆ
ಸಾರ್ವಜನಿಕ ವಿಶ್ವಾಸ ಮತ್ತು ಆಡಳಿತದ ಹೊಣೆಗಾರಿಕೆ
2) ಹಿತಾಸಕ್ತಿಪಕ್ಷಗಳು
ಅಸ್ವಸ್ಥರಾದ ಕಾರ್ಮಿಕರು
ಅವರ ಕುಟುಂಬಗಳು
ಕಂಪನಿ ಆಡಳಿತ
ಆಹಾರ ಗುತ್ತಿಗೆದಾರ / ಕ್ಯಾಟರಿಂಗ್ ಸಂಸ್ಥೆ
ಆರೋಗ್ಯ ಇಲಾಖೆ
ಕಾರ್ಮಿಕ ಇಲಾಖೆ / ಫ್ಯಾಕ್ಟರಿ ಪರಿಶೀಲನಾ ಇಲಾಖೆ
ಜಿಲ್ಲಾ ಆಡಳಿತ
ಸ್ಥಳೀಯ ಸಾರ್ವಜನಿಕರು ಮತ್ತು ಮಾಧ್ಯಮ
3) ತಕ್ಷಣದ ಕ್ರಮಗಳು
ಎಲ್ಲಾ ಅಸ್ವಸ್ಥರಿಗೆ ತಕ್ಷಣದ ಚಿಕಿತ್ಸೆ ಮತ್ತು ವೈದ್ಯಕೀಯ ಮೇಲ್ವಿಚಾರಣೆ
ಆಹಾರ ಮಾದರಿ, ನೀರಿನ ಮಾದರಿ, ಅಡುಗೆಮನೆಯ ಸ್ವಚ್ಛತೆ ಬಗ್ಗೆ ತುರ್ತು ಪರಿಶೀಲನೆ
ಸಂಬಂಧಿತ ಕ್ಯಾಂಟೀನ್/ಆಹಾರ ಸರಬರಾಜು ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಿಸಿ ಪರಿಶೀಲನೆ
ಕಾರ್ಮಿಕರಿಗೆ ಸುರಕ್ಷಿತ ಆಹಾರ, ಕುಡಿಯುವ ನೀರು ಮತ್ತು ವೈದ್ಯಕೀಯ ನೆರವು ಒದಗಿಸುವುದು
ಘಟನೆ ಕುರಿತು ಪಾರದರ್ಶಕ ಮಾಹಿತಿ ಬಿಡುಗಡೆ ಮಾಡುವುದು
ತಪ್ಪಿತಸ್ಥರ ವಿರುದ್ಧ ಪ್ರಾಥಮಿಕ ಕ್ರಮ
4) ಅನುಸರಿಸಬೇಕಾದ ನೈತಿಕ ತತ್ವಗಳು
ಮಾನವೀಯತೆ
ಜವಾಬ್ದಾರಿತನ
ಪಾರದರ್ಶಕತೆ
ಹೊಣೆಗಾರಿಕೆ
ನ್ಯಾಯಸಮ್ಮತತೆ
ಸಾರ್ವಜನಿಕ ಹಿತಾಸಕ್ತಿ
ನಿರ್ಭಯ ಆಡಳಿತ
5) ದೀರ್ಘಕಾಲೀನ ಕ್ರಮಗಳು
ಕಾರ್ಖಾನೆ ಕ್ಯಾಂಟೀನ್‌ಗಳಿಗೆ ನಿಯಮಿತ ಆರೋಗ್ಯ ತಪಾಸಣೆ
ಆಹಾರ ಗುಣಮಟ್ಟ ಮತ್ತು ನೀರಿನ ಸುರಕ್ಷತೆ ಕುರಿತು ಕಟ್ಟುನಿಟ್ಟಿನ ಮೇಲ್ವಿಚಾರಣೆ
ಗುತ್ತಿಗೆದಾರರ ಲೈಸೆನ್ಸ್, ಮಾನದಂಡ ಮತ್ತು ಹೊಣೆಗಾರಿಕೆ ನಿಗದಿ
ಕಾರ್ಮಿಕರಿಗೆ ದೂರು ದಾಖಲಿಸುವ ವ್ಯವಸ್ಥೆ
ತುರ್ತು ವೈದ್ಯಕೀಯ ಪ್ರತಿಕ್ರಿಯಾ ವ್ಯವಸ್ಥೆ
ಆಹಾರ ಸುರಕ್ಷತೆ ಕುರಿತ ತರಬೇತಿ ಮತ್ತು ಆಡಿಟ್
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಹಾಗೂ ಪರಿಹಾರ ವ್ಯವಸ್ಥೆ
ತೀರ್ಮಾನ
ಈ ಪ್ರಕರಣವು ಕೈಗಾರಿಕಾ ಉತ್ಪಾದನೆಯಲ್ಲಿ ಲಾಭಕ್ಕಿಂತ ಮಾನವ ಜೀವ, ಆರೋಗ್ಯ, ಗೌರವ ಮತ್ತು ಆಡಳಿತಾತ್ಮಕ ಹೊಣೆಗಾರಿಕೆ ಮುಖ್ಯವೆಂಬುದನ್ನು ತೋರಿಸುತ್ತದೆ. ಒಬ್ಬ ನೈತಿಕ ಅಧಿಕಾರಿಯು ತಕ್ಷಣದ ಪರಿಹಾರ ಮಾತ್ರವಲ್ಲ, ದೀರ್ಘಕಾಲೀನ ವ್ಯವಸ್ಥಾತ್ಮಕ ಸುಧಾರಣೆಯನ್ನೂ ಖಚಿತಪಡಿಸಬೇಕು.

Source: Prajavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಭಾರತದ ಬೆಳವಣಿಗೆ ಹೆಚ್ಚಳ
ಸಂದರ್ಭ:
ಏಪ್ರಿಲ್ 1ರಿಂದ ಆರಂಭವಾಗಿರುವ ಪ್ರಸಕ್ತ ಆರ್ಥಿಕ ವರ್ಷದಲ್ಲಿ (2026-27) ಭಾರತದ ಜಿಡಿಪಿ ಬೆಳವಣಿಗೆ ದರವು ಶೇ 6.6ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜು ಮಾಡಿದೆ.

  • ಜನವರಿಯಲ್ಲಿ ಒಂದು ಅಂದಾಜನ್ನು ಬಿಡುಗಡೆ ಮಾಡಿದ್ದ ವಿಶ್ವ ಬ್ಯಾಂಕ್, 2026-27ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 6.5ರಷ್ಟು ಆಗಬಹುದು ಎಂದು ಹೇಳಿತ್ತು. ಆದರೆ ಈಗಿನ ಅಂದಾಜು ಅದಕ್ಕಿಂತ ಹೆಚ್ಚು.

ಫೈನಲ್ ಗೆದ್ದ ಮೀನಾಕ್ಷಿ, ಪ್ರೀತಿ, ಪ್ರಿಯಾ, ಅರುಂಧತಿ: ಬಾಕ್ಸಿಂಗ್: ಒಂದೇ ದಿನ ನಾಲ್ಕು ಚಿನ್ನ
ಸಂದರ್ಭ: ಹಾಲಿ ವಿಶ್ವ ಚಾಂಪಿಯನ್ ಮೀನಾಕ್ಷಿ ಹೂಡಾ, ಪ್ರೀತಿ ಪವಾರ್ ಸೇರಿದಂತೆ ಭಾರತದ ನಾಲ್ವರು ಮಹಿಳೆಯರು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

  • ಮೀನಾಕ್ಷಿ (48 ಕೆ.ಜಿ.) ಮತ್ತು ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ (54 ಕೆ.ಜಿ) ಜೊತೆಗೆ ಪ್ರಿಯಾ ಘಂಗಾಸ್ (60 ಕೆ.ಜಿ.) ಮತ್ತು ವಿಶ್ವ ಬಾಕ್ಸಿಂಗ್ ಕಪ್ ಸ್ವರ್ಣ ವಿಜೇತೆ ಅರುಂಧತಿ ಚೌಧರಿ (70 ಕೆ.ಜಿ.) ಅವರೂ ಬಂಗಾರದ ಪದಕಕ್ಕೆ ಕೊರಳೊಡ್ಡಿದರು.
  • ಆದರೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದ್ದು ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ. ಈ ಸೆಣಸಾಟದಲ್ಲಿ ಹಾಲಿ ವಿಶ್ವ ಚಾಂಪಿಯನ್ ಜೈಸ್ಮಿನ್ ಲಂಬೋರಿಯಾ ಅವರು 0-5 ರಿಂದ ಎರಡು ಬಾರಿಯ ವಿಶ್ವ ಚಾಂಪಿಯನ್ ಪುನವೀ ರುಕ್ರೋಸ್ (ಥಾಯ್ಲೆಂಡ್) ಅವರಿಗೆ ಮಣಿದರು.
  • ಭಾರತದ ಅಲ್ಪಿಯಾ ಪಠಾಣ್ 80 ಕೆ.ಜಿ + ವಿಭಾಗದಲ್ಲಿ ರನ್ನರ್ ಅಪ್ ಆದರು. ಅವರು ಫೈನಲ್‌ನಲ್ಲಿ 0-5 ರಿಂದ ಕಜಾಕಸ್ತಾನದ ದೀನಾ ಇಸ್ಲಾಮ್‌ಬೆಕೊವಾ ಅವರಿಗೆ ಮಣಿದರು.
  • ಭಾರತದ ಮಹಿಳೆಯರು ಒಟ್ಟು 10 ಪದಕಗಳನ್ನು ಗೆದ್ದು ಪ್ರಭಾವಶಾಲಿ ಪ್ರದರ್ಶನ ನೀಡಿದರು. ಇವುಗಳಲ್ಲಿ ನಾಲ್ಕು ಚಿನ್ನ. ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳಿವೆ.
  • ಆದರೆ ಕೆಲವು ವಿಭಾಗಗಳಲ್ಲಿ 2-3 ಸ್ಪರ್ಧಿಗಳಿದ್ದ ಕಾರಣ, ಲವಿನಾ ಬೊರ್ಗೊಹ್ಮನ್ (75 ಕೆ ಜಿ), ಪೂಜಾ ರಾಣಿ (80 ಕೆ.ಜಿ) ಮತ್ತು ಅಗ್ನಿಯಾ ಭಾಗವಹಿಸಿದ ಮಾತ್ರಕ್ಕೆ ಪದಕ ಪಡೆದರು.
  • ಮೀನಾಕ್ಷಿ ಅವರು 5-0 ಯಿಂದ ಮಂಗೋಲಿಯಾದ ನೊಮುನ್ನರಿ ಎನ್-ಅಮ್ರಲನ್ ಅವರನ್ನು ಸೋಲಿಸಿ ಭಾರತದ ಚಿನ್ನದ ಬೇಟೆ ಆರಂಭಿಸಿದರು ಪ್ರೀತಿ ಮೂರು ಬಾರಿಯ ವಿಶ್ವ ಚಾಂಪಿಯನ್ ಹುವಾಂಗ್ ಸಿಯಾವೊವೆನ್ (ತೈವಾನ್) ಅವರನ್ನು 5-0 ಸರ್ವಾನುಮತದ ತೀರ್ಪಿನಲ್ಲಿ ಸೋಲಿಸಿದರು.
  • ಪ್ರಿಯಾ 3-0 ಯಿಂದ ಉತ್ತರ ಕೊರಿಯಾದ ವೊನ್ ಉನ್-ಗ್ಯಾಂಗ್ ಅವರನ್ನು ಮಣಿಸಿದರೆ ಆರುಂಧತಿ ಫೈನಲ್‌ನಲ್ಲಿ 4-1 ರಿಂದ ಕಜಾಕಸ್ತಾನದ ಬಕಿಟ್ ಸೀದಿಶ್ ಅವರನ್ನು ಮಣಿಸಿದರು.

ಕುಸ್ತಿ: ಹನ್ಸಿಕಾ, ನೇಹಾಗೆ ಕಂಚು

  • ಹನ್ಸಿಕಾ ಲಂಬಾ ಮತ್ತು ನೇಹಾ ಅವರು ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ 55 ಕೆ.ಜಿ. ಮತ್ತು 59 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು.
  • ಎರಡು ಬಾರಿಯ ರಾಷ್ಟ್ರೀಯ ಚಾಂಪಿಯನ್ ಮೀನಾಕ್ಷಿ ಗೋಯತ್ ಅವರು ಸೋಲಿನ ಸುಳಿಯಿಂದ ಚೇತರಿಸಿ ದಕ್ಷಿಣ ಕೊರಿಯಾದ ಸಿಯೊಂಗ್ ಪಾರ್ಕ್ ವಿರುದ್ಧ ಗೆದ್ದು 53 ಕೆ.ಜಿ. ವಿಭಾಗದಲ್ಲಿ ಫೈನಲ್‌ಗೆ ಲಗ್ಗೆಯಿಟ್ಟರು.
  • 55 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕೆ ನಡೆದ ಸ್ಪರ್ಧೆಯಲ್ಲಿ 19 ವರ್ಷ ವಯಸ್ಸಿನ ಹನ್ನಿಕಾ, ಆತಿಥೇಯ ಕಿರ್ಗಿಸ್ತಾನದ ಅರುಕ ಕದಿರ್ಬೆಕ್ ಕಿಝಿ ಅವರನ್ನು 6-1 ರಿಂದ ಮಣಿಸಿದರು.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಆಯುಷ್ಮಾನ್: ರೂಟ್ ಕೆನಾಲ್ ಚಿಕಿತ್ಸೆ ಸೇರ್ಪಡೆ
ಸಂದರ್ಭ:
ರಾಜ್ಯದಲ್ಲಿ ಜಾರಿಯಲ್ಲಿರುವ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ-ಮುಖ್ಯಮಂತ್ರಿ ಯವರ ಆರೋಗ್ಯ ಕರ್ನಾಟಕ ಯೋಜನೆಯಡಿ’ ರೂಟ್ ಕೆನಾಲ್ ಚಿಕಿತ್ಸೆಯನ್ನು ಸೇರ್ಪಡೆ ಮಾಡಲಾಗಿದೆ.

  • ಈ ಬಗ್ಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ರೂಟ್ ಕೆನಾಲ್ ಚಿಕಿತ್ಸೆಯು ಹುಳುಕು ಹಲ್ಲು ಅಥವಾ ಸೋಂಕಿನಿಂದ ಹಾನಿಗೊಳಗಾದ ಹಲ್ಲನ್ನು ಉಳಿಸಲು ಬಳಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಬಾಯಿಯ ಆರೋಗ್ಯ ಸುಧಾರಣೆಗೆ ಇದು ಸಹಕಾರಿಯಾಗಿದೆ.
  • ಅಧಿಕ ಚಿಕಿತ್ಸಾ ವೆಚ್ಚ ಮತ್ತು ಜಾಗೃತಿ ಕೊರತೆಯಿಂದಾಗಿ ಹೆಚ್ಚಿನ ಜನರು ರೂಟ್ ಕೆನಾಲ್ ಬದಲಿಗೆ, ದಂತ ತೆಗೆಯುವ ವಿಧಾನವನ್ನೇ ಆಯ್ಕೆ ಮಾಡಿ ಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಚಿಕಿತ್ಸೆಯನ್ನು ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ.
  • ಯೋಜನೆಯಡಿ ಮುಂಭಾಗದ ಮತ್ತು ಹಿಂಭಾಗದ ಹಲ್ಲುಗಳಿಗೆ ರೂಟ್ ಕೆನಾಲ್ ಚಿಕಿತ್ಸೆ ಒದಗಿಸಲಾಗುತ್ತದೆ. ಇವುಗಳನ್ನು ಸಂಕೀರ್ಣ ದ್ವಿತೀಯ ಕಾರ್ಯವಿಧಾನಗಳು (2ಬಿ) ಎಂದು ವರ್ಗೀಕರಿಸಲಾಗಿದೆ. ಚಿಕಿತ್ಸೆಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ (ಸಿಜಿಎಚ್‌ಎಸ್) ದರಗಳನ್ನು ಅಳವಡಿಸಿಕೊಳ್ಳಲು ನಿರ್ದೇಶಿಸಲಾಗಿದೆ. ಅದರಂತೆ, ಮುಂಭಾಗದ ಹಲ್ಲುಗಳಿಗೆ ₹1,360 ಮತ್ತು ಹಿಂಭಾಗದ ಹಲ್ಲುಗಳಿಗೆ ₹2,040 ನಿಗದಿಪಡಿಸಲಾಗಿದೆ.
  • ಯೋಜನೆಯಡಿ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬದ ಸದಸ್ಯರು ಪ್ರಯೋಜನ ಪಡೆಯಬಹು ದಾಗಿದೆ. ಯೋಜನೆಯ ಸೌಲಭ್ಯವನ್ನು ಸರ್ಕಾರವು 50 ಸಾವಿರ ಪ್ರಕರಣಗಳಿಗೆ ಅಥವಾ 5 ಕೋಟಿ ಆರ್ಥಿಕ ವೆಚ್ಚಕ್ಕೆ ಮಿತಿಗೊಳಿಸಿದೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಆಧಾರ್: ‘ಸುಪ್ರೀಂ’ಗೆ ಪಿಐಎಲ್ ಸಲ್ಲಿಕೆ
ಸಂದರ್ಭ:
ಆರು ವರ್ಷದೊಳಗಿನ ಭಾರತೀಯ ಪ್ರಜೆಗಳಿಗೆ ಮಾತ್ರ ಆಧಾರ್ ಕಾರ್ಡ್ ವಿತರಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ.

  • ಒಳ ನುಸುಳುಕೋರರಿಂದ ಆಗುತ್ತಿರುವ ದುರ್ಬಳಕೆ ತಡೆಯಲು ಆರು ವರ್ಷದೊಳಗಿನ ಭಾರತೀಯ ಪ್ರಜೆಗಳಿಗೆ ಮಾತ್ರ ಆಧಾರ್ ಕಾರ್ಡ್ ವಿತರಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ (ಯುಐಡಿಎಐ) ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ.
  • ಭಾರತೀಯ ನಾಗರಿಕರು ಎಂದು ನುಸುಳುಕೋರರು ಬಿಂಬಿಸಿಕೊಳ್ಳುವುದನ್ನು ನಿಯಂತ್ರಿಸುವ ಉದ್ದೇಶದಿಂದ ಹರೆಯದವರು ಮತ್ತು ವಯಸ್ಕರಿಗೆ ಆಧಾರ್ ವಿತರಿಸಲು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯ ಇದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
  • ವಕೀಲರಾದ ಅಶ್ವಿನಿ ಉಪಾಧ್ಯಾಯ ಎಂಬುವರು ಅಶ್ವಿನಿ ದುಬೆ ಎಂಬುವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
  • ’12 ಅಂಕಿಗಳ ಡಿಜಿಟಲ್ ಆಧಾರ್ ಸಂಖ್ಯೆ ಗುರುತಿನ ದಾಖಲೆಯೇ ಹೊರತು ಪೌರತ್ನದ ಆಧಾರವಲ್ಲ’ ಎಂಬ ಪ್ರದರ್ಶನ ಫಲಕಗಳನ್ನು ಆಧಾ‌ರ್ ಸೇವಾ ಕೇಂದ್ರಗಳ ಮುಂದೆ ಆಳವಡಿಸಬೇಕು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.
  • ಪ್ರಾಧಿಕಾರ 144 ಕೋಟಿ ಆಧಾರ್ ಕಾರ್ಡ್ ವಿತರಿಸಿದೆ. ಶೇ 99ರಷ್ಟು ಭಾರತೀಯರು ನೋಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಇನ್ನು ಮುಂದೆ ಆರು ವರ್ಷದ ಒಳಗಿನವರಿಗೆ ಮಾತ್ರ ಆಧಾರ್ ಸಂಖ್ಯೆ ವಿತರಿಸುವಂತೆ ಸಂವಿಧಾನದ 32ನೇ ವಿಧಿಯ ಅವಕಾಶ ಬಳಸಿಕೊಂಡು ಅರ್ಜಿದಾರರು ಕೋರಿದ್ದಾರೆ.
  • ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಹಾಗೂ ಇತರೆ ಗುರುತಿನ ಚೀಟಿಗಳನ್ನು ಪಡೆಯಲು ಇತ್ತೀಚೆಗೆ ಆಧಾರ್ ಕಾರ್ಡ್ ಮೂಲ ದಾಖಲೆಯಾಗಿ ಬಳಕೆಯಾಗುತ್ತಿದೆ. ಆಧಾರ್ ನೀಡಲು ಅನುಸರಿಸುವ ಪರಿಶೀಲನಾ ಪ್ರಕ್ರಿಯೆ ದುರ್ಬಲವಾಗಿವೆ. ನುಸುಳುಕೋರರು ಸುಲಭವಾಗಿ ದಾಖಲೆ ತಿರುಚುತ್ತಿದ್ದಾರೆ ಹೀಗಾಗಿ ಕಠಿಣ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯ ಇದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
  • ವಿದೇಶಿಗರು ಆಧಾರ್‌ಗಾಗಿ ವಿದೇಶಿ ವಿಭಾಗದಲ್ಲಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ನುಸುಳುಕೋರರು ಭಾರತೀಯ ನಾಗರಿಕ’ ವಿಭಾಗದಲ್ಲಿ ಅರ್ಜಿ ಸಲ್ಲಿಸಿ ಸುಲಭವಾಗಿ ಪಡೆಯುತ್ತಿದ್ದಾರೆ ಆನಂತರ ವಾಸ ದೃಢೀಕರಣ, ಚಾಲನಾ ಪರವಾನಗಿ ಸೇರಿ ಇತರೆ ದಾಖಲೆ ಪಡೆದು ಸುಲಭವಾಗಿ ಭಾರತೀಯ ಪ್ರಜೆ ಎನಿಸಿಕೊಳ್ಳುತ್ತಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
  • ವಿದೇಶಿಯರನ್ನು ಭಾರತೀಯ ಪ್ರಜೆಯಿಂದ ಬೇರ್ಪಡಿಸುವಲ್ಲಿ, ಆಧಾರ್ ಕಾಯ್-2026 ವಿಫಲವಾಗಿದೆಯೇ ಎಂಬ ಕಾನೂನಾತ್ಮಕ ಪ್ರಶ್ನೆಯನ್ನೂ ಈ ಅರ್ಜಿ ಎತ್ತಿದೆ.
  • ಆಧಾರ್ ದುರ್ಬಳಕೆಯು ಕಲ್ಯಾಣ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಂಪನ್ಮೂಲ ಅನರ್ಹರ ಪಾಲಾಗುವುದನ್ನು ಹೆಚ್ಚಿಸಿದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
  • ಮತದಾರರ ಗುರುತಿನ ಚೀಟಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಸಾಂವಿಧಾನಿಕ ಅವಕಾಶಗಳ ಬಗ್ಗೆಯೂ ಅರ್ಜಿಯಲ್ಲಿ ಗಮನಸೆಳೆಯಲಾಗಿದೆ. ಅಕ್ರಮ ನೋಂದಣಿಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಹಾಳುಮಾಡುತ್ತವೆ ಎಂಬ ಆತಂಕ ಅರ್ಜಿಯಲ್ಲಿ ವ್ಯಕ್ತವಾಗಿದೆ.

ಶಬರಿಮಲೆ: ಮಹಿಳೆಯರ ನಿಷೇಧಕ್ಕೆ ಬೆಂಬಲ
ಸಂದರ್ಭ:
ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಋತುಚಕ್ರದ ವಯಸ್ಸಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವನ್ನು ಬೆಂಬಲಿಸಿದ ಕೇಂದ್ರ ಸರ್ಕಾರ, 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಪುರುಷರು ಶ್ರೇಷ್ಠರು ಮತ್ತು ಮಹಿಳೆಯರು ಕೆಳಮಟ್ಟದಲ್ಲಿ ದ್ದಾರೆ ಎಂಬ ಭಾವನೆಯನ್ನು ಆಧರಿಸಿದೆ ಎಂದು ತಿಳಿಸಿದೆ.

  • ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಮತ್ತು ವಿವಿಧ ಧರ್ಮಗಳ ಜನರ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಮುಂದೆ ಸರ್ಕಾರ ಈ ಹೇಳಿಕೆ ನೀಡಿದೆ.
  • ಕೇಂದ್ರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ, ಈ ಕುರಿತು ಪೀಠಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದರು ಅಲ್ಲದೆ, ಕೆಲ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶ ನಿರಾಕರಣೆ ಇರುವು ದರ ಮಾಹಿತಿಯನ್ನೂ ತಿಳಿಸಿದರು.
  • ಕೇರಳದ ಕೊಟ್ಟಂಕುಳಂಕರದ ಶ್ರೀ ಭಗವತಿ ಕ್ಷೇತ್ರಲ್ಲಿನ ಕೆಲ ನಂಬಿಕೆ ಆಚರಣೆಗಳ ಬಗ್ಗೆ, ಅವರು ಈ ವೇಳೆ ವಿವರಿಸಿದರು. ‘ಈ ದೇಗುಲದಲ್ಲಿ ಪುರುಷರು ಮಹಿಳೆಯರಂತೆ ವೇಷ ಭೂಷಣ ತೊಡಬೇಕು ಎಂಬುದನ್ನು ನಾನು ಓದಿದ್ದೇನೆ. ಈ ದೇಗುಲ ಪ್ರವೇಶಕ್ಕೂ ಮುನ್ನ ಪುರುಷರು ಬ್ಯೂಟಿ ಪಾರ್ಲಗ್ರ ಹೋಗುತ್ತಾರೆ, ಅಲ್ಲಿ ಕುಟುಂಬದ ಮಹಿಳಾ ಸದಸ್ಯರು ಅವರಿಗೆ ಸೀರೆ ಉಡಲು ನೆರವಾಗುತ್ತಾರೆ’ ಎಂದು ಅವರು ಉಲ್ಲೇಖಿಸಿದರು.
  • ಈ ದೇಗುಲದಲ್ಲಿ ವಾರ್ಷಿಕವಾಗಿ ನಡೆಯುವ ‘ಚಮಯವಿಳಕ್ಕು’ ಉತ್ಸವಕ್ಕೆ ಪುರುಷರು ಮಹಿಳೆಯರಂತೆಯೇ ವೇಷ ಧರಿಸಬೇಕು. ಶತಮಾನಗಳ ಹಿಂದಿನಿಂದಲೂ ಈ ಸಂಪ್ರದಾಯ ಇಲ್ಲಿ ನಡೆದುಕೊಂಡು ಬಂದಿದೆ ಎಂದು ಅವರು ಹೇಳಿದರು.
  • ಹೀಗಾಗಿ ಇದು ಪುರುಷ ಕೇಂದ್ರಿತ ಅಥವಾ ಮಹಿಳಾ ಕೇಂದ್ರಿದ ಧಾರ್ಮಿಕ ನಂಬಿಕೆಗಳ ಪ್ರಶ್ನೆಯಲ್ಲ. ಆದರೆ, ಶಬರಿಮಲೆ ಪ್ರಕರಣವನ್ನು ಮಹಿಳಾ ಕೇಂದ್ರಿತವಾಗಿಸಲಾಗಿದೆ ಎಂದು ಮೆಹ್ರಾ ಬೇಸರ ವ್ಯಕ್ತಪಡಿಸಿದರು.
  • ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಎಂ.ಎಂ.ಸುಂದರೇಶ್, ಅಹ್ವಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಆಗಸ್ಮಿನ್ ಜಾರ್ಜ್ ಮಸೀಹ್, ಪ್ರಸನ್ನ ಬಿ. ವರಾಳೆ, ಆರ್. ಮಹದೇವನ್ ಮತ್ತು ಜಾಯ್‌ಲ್ಯಾ ಬಾಗ್ನಿ ಅವರು ಈ ಪೀಠದಲ್ಲಿದ್ದಾರೆ.
  • 2018ರಲ್ಲಿ ಐವರು ನ್ಯಾಯಮೂರ್ತಿ ಗಳ ಸಂವಿಧಾನ ಪೀಠವು 4:1ರ ಬಹುಮತದ ತೀರ್ಪಿನ ಮೂಲಕ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರು ಪ್ರವೇಶಿಸಲು ಇದ್ದ ನಿಷೇಧವನ್ನು ರದ್ದುಗೊಳಿಸಿತು. ಶತಮಾನಗಳಷ್ಟು ಹಳೆಯದಾದ ಈ ಹಿಂದೂ ಧಾರ್ಮಿಕ ಪದ್ಧತಿಯು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ತೀರ್ಪು ನೀಡಿತು.
  • ಬಳಿಕ 2019ರ ನವೆಂಬರ್ 14ರಂದು ಆಗಿನ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಮತ್ತೊಂದು ಐವರು ನ್ಯಾಯಮೂರ್ತಿಗಳ ಪೀಠವು 3:2ರ ಬಹುಮತದಿಂದ ವಿವಿಧ ಪೂಜಾ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯದ ವಿಷಯವನ್ನು ವಿಸ್ತ್ರತ ಪೀಠಕ್ಕೆ ಉಲ್ಲೇಖಿಸಿತ್ತು.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ದೇಶದ ಆನ್ಲೈನ್ ರಿಟೇಲ್ ಮಾರುಕಟ್ಟೆ ಗಾತ್ರ ₹6 ಲಕ್ಷ ಕೋಟಿ
ಸಂದರ್ಭ:
ಕಳೆದ ವರ್ಷ ದೇಶದ ಆನ್ಲೈನ್ ರಿಟೇಲ್ ಮಾರುಕಟ್ಟೆಯ (ಇ-ಕಾಮರ್ಸ್) ಗಾತ್ರವು ₹6 ಲಕ್ಷ ಕೋಟಿಗಿಂತ ಹೆಚ್ಚಾಗಿದೆ. ಇದು 2024ಕ್ಕೆ ಹೋಲಿಸಿದರೆ ಶೇ 21ರಷ್ಟು ಅಧಿಕವಾಗಿದೆ.

  • ಕ್ನಿಕ್ ಕಾಮರ್ಸ್ ವಲಯದಲ್ಲಿ ಭಾರತವು, ಜಾಗತಿಕ ಮಟ್ಟದಲ್ಲಿ ನಾಯಕನ ಸ್ಥಾನದಲ್ಲಿದೆ ಎಂದು ಇ-ಕಾಮರ್ಸ್ ಕಂಪನಿ ಸ್ಲಿಪ್‌ಕಾರ್ಟ್ ಸಹಯೋಗದೊಂದಿಗೆ ಸಲಹಾ ಸಂಸ್ಥೆ ಬೈನ್ ಆ್ಯಂಡ್ ಕಂಪನಿ ಸಿದ್ಧಪಡಿಸಿರುವ ವರದಿ ತಿಳಿಸಿದೆ.
  • 2030ರ ವೇಳೆಗೆ ದೇಶದ ಆನ್‌ಲೈನ್ ರಿಟೇಲ್ ಮಾರುಕಟ್ಟೆಯ ಗಾತ್ರವು ₹16 ಲಕ್ಷ ಕೋಟಿಯಷ್ಟಾಗುವ ನಿರೀಕ್ಷೆ ಇದ್ದು, ವಾರ್ಷಿಕ ಶೇ 20ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ.
  • 2025ರಲ್ಲಿ ಆನ್‌ಲೈನ್ ರಿಟೇಲ್ ಮಾರುಕಟ್ಟೆಯ ಒಟ್ಟು ಮಾರಾಟದ ಮೌಲ್ಯದಲ್ಲಿ ಕ್ರಿಕ್ ಕಾಮರ್ಸ್ ವಲಯವು ₹1 ಲಕ್ಷ ಕೋಟಿಯನ್ನು ಪಾಲು ಹೊಂದಿದೆ. ಇದು 2030ರ ವೇಳೆಗೆ ಇದು ₹6.48 ಲಕ್ಷ ಕೋಟಿಯಷ್ಟಾಗುವ ನಿರೀಕ್ಷೆಯಿದ್ದು. ಒಟ್ಟು ಮಾರುಕಟ್ಟೆಯ ಗಾತ್ರದ ಶೇ 45ರಿಂದ ಶೇ 50ರಷ್ಟಾಗಲಿದೆ ಎಂದು ತಿಳಿಸಿದೆ.
  • 2022ರಿಂದ 2024ರವರೆಗೆ ಕುಟುಂಬಗಳು ಸರಕು ಮತ್ತು ಸೇವೆಗಳಿಗೆ ಖರ್ಚು ಮಾಡುವ ಪ್ರಮಾಣ ವಾರ್ಷಿಕ ಶೇ 8ರಷ್ಟು ಬೆಳವಣಿಗೆ ಕಂಡಿತ್ತು. ಇದು 2025ರ ವೇಳೆಗೆ ಈ 10.5ಕ್ಕೆ ಏರಿಕೆಯಾಗಿದೆ. ಜಿಎಸ್‌ಟಿ ದರ ಪರಿಷ್ಕರಣೆ, ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ, ಹಣದುಬ್ಬರ ಇಳಿಕೆ ಮತ್ತು ಕಡಿಮೆ ಬಡ್ಡಿ ದರದ ಸಾಲವು ಕುಟುಂಬಗಳು ಖರ್ಚು ಮಾಡುವ ಪ್ರಮಾಣವನ್ನು ಹೆಚ್ಚಿಸಿವೆ ಎಂದು ತಿಳಿಸಿದೆ.
  • ಕಳೆದ ಐದು ವರ್ಷದಲ್ಲಿ ದೇಶದ ಆನ್‌ಲೈನ್ ಶಾಪಿಂಗ್ ಮಾರುಕಟ್ಟೆಯ ಗಾತ್ರ ಎರಡು ಪಟ್ಟಿಗಿಂತಲೂ ಹೆಚ್ಚು ಬೆಳವಣಿಗೆ ಕಂಡಿದೆ.
  • ದೇಶದ ಜಿಡಿಪಿ ಗಾತ್ರಕ್ಕೆ ಹೋಲಿಸಿದರೆ ಆನ್‌ಲೈನ್ ರಿಟೇಲ್ ಮಾರುಕಟ್ಟೆಯು ಶೇ1.6ರಷ್ಟಿದೆ ಆದರೆ ಚೀನಾದಲ್ಲಿ ಶೇ 14ರು ಮತ್ತು ಇಂಡೊನೇಷ್ಯಾ ಶೇ 4 5ರಷ್ಟಿದೆ ಎಂದು ತಿಳಿಸಿದೆ.

ಇ.ವಿ ವಾಹನ ಮಾರುಕಟ್ಟೆ ಪ್ರವೇಶಿಸಿದ ರಾಯಲ್ ಎನ್ಫೀಲ್ಡ್
ಸಂದರ್ಭ:
ಐಷರ್ ಮೋಟರ್ಸ್ ಸಮೂಹಕ್ಕೆ ಸೇರಿರುವ ರಾಯಲ್ ಎನ್ಫೀಲ್ಡ್, ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ. ತನ್ನ ಮೊದಲ ಇ.ವಿ. ದ್ವಿಚಕ್ರ ವಾಹನ ‘ಪ್ರೈಯಿಂದ ಫ್ರೀ ಸಿ6’ ವಾಹನವನ್ನು ಬಿಡುಗಡೆ ಮಾಡಿದೆ.

  • ಇದರ ಎಕ್ಸ್ ಷೋರೂಂ ಬೆಲೆಯು ₹2.79 ಲಕ್ಷ ಆದರೆ, ಬ್ಯಾಟರಿಯನ್ನು ಒಂದು ಸೇವೆಯ ರೂಪದಲ್ಲಿ ಪಡೆದರೆ ಈ ವಾಹನವು ₹1.99 ಲಕ್ಷಕ್ಕೆ ಸಿಗುತ್ತದೆ ಎಂದು ಐಷರ್ ಮೋಟರ್ಸ್ ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
  • ಕಂಪನಿಯು ಈ ವಾಹನವನ್ನು ಗ್ರಾಹಕರಿಗೆ ವಿತರಿಸುವ ಕೆಲಸವನ್ನು ಮೇ ತಿಂಗಳ ಕೊನೆಯ ಭಾಗದಿಂದ ಶುರು ಮಾಡಲಿದೆ ವಾಹನವು ಗಂಟೆಗೆ ಗರಿಷ್ಠ 115 ಕಿ.ಮೀ. ವೇಗದಲ್ಲಿ ಸಾಗಬಲ್ಲದು

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಕದನ ವಿರಾಮ: ತಾತ್ಕಾಲಿಕ ಸಮಾಧಾನ: ಪಾಕ್‌ ಮಧ್ಯಸ್ಥಿಕೆಯಲ್ಲಿ ಅಮೆರಿಕ-ಇಸ್ರೇಲ್, ಇರಾನ್ ಸಮ್ಮತಿ
ಸಂದರ್ಭ: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಬುಧವಾರ ಸಮ್ಮತಿಸಿವೆ. ಇದರೊಂದಿಗೆ ಕಳೆದ 40 ದಿನಗಳಿಂದ ನಡೆಯುತ್ತಿರುವ ಯುದ್ಧದಿಂದ ನಲುಗಿದ್ದ ಪಶ್ಚಿಮ ಏಷ್ಯಾ ಸೇರಿ ವಿಶ್ವವೇ ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

  • ಈ ತಾತ್ಕಾಲಿಕ ಕದನ ವಿರಾಮಕ್ಕೆ ಸಂಬಂಧಿಸಿ 10 ಅಂಶಗಳನ್ನು ಒಳಗೊಂಡ ಪ್ರಸ್ತಾವ ಮುಂದಿಟ್ಟಿರುವ ಇರಾನ್, ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಈ ಕುರಿತು ವಿಸ್ತ್ರತ ಮಾತುಕತೆ ನಡೆಸುವುದಾಗಿ ಹೇಳಿದೆ.
  • ‘ಇರಾನ್ ಮುಂದಿಟ್ಟಿರುವ ಷರತ್ತುಗಳು ‘ಕಾರ್ಯಸಾಧ್ಯವಾದವುಗಳು’ ಎಂದು ಈ ಮೊದಲು ಹೇಳಿದ್ದ ಟ್ರಂಪ್ ಈಗ ತಮ್ಮ ನಿಲುವು ಬದಲಾಯಿಸಿದ್ದಾರೆ. ‘ಈ ಅಂಶಗಳ ಕುರಿತು ವಿಸ್ತ್ರತವಾದ ವಿವರಣೆ ನೀಡದಿದ್ದಲ್ಲಿ ಕದನ ವಿರಾಮ ಕುರಿತ ಇರಾನ್ ಯೋಜನೆಯೇ ವಂಚನೆ ಎನಿಸಲಿದೆ’ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಅವರು ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟೂಥ್ ಸೋಷಿಯಲ್’ನಲ್ಲಿ ಬರೆದುಕೊಂಡಿದ್ದಾರೆ. ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವುದನ್ನು ಖಚಿತಪಡಿಸಿ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ನಿ ನೀಡಿರುವ ಹೇಳಿಕೆಯನ್ನು ಕೂಡ ಟ್ರಂಪ್ ಹಂಚಿಕೊಂಡಿದ್ದಾರೆ.
  • ಇರಾನ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದೆ. ‘ಅಮೆರಿಕ ಮುಂದಿಟ್ಟಿರುವ ಎರಡು ವಾರಗಳ ಕದನ ವಿರಾಮ ಪ್ರಸ್ತಾವವನ್ನು ಒಪ್ಪಿಕೊಂಡಿದ್ದೇವೆ. ಇಸ್ಲಾಮಾಬಾದ್‌ನಲ್ಲಿ ನಡೆಯುವ ಸಭೆಯಲ್ಲಿ ಅಮೆರಿಕದೊಂದಿಗೆ ಮಾತುಕತೆ ನಡೆಸಲಾಗುವುದು’ ಎಂದು ಇರಾನ್‌ ರಾಷ್ಟ್ರೀಯ ಭದ್ರತಾ ಪರಿಷತ್ತು ಟೆಹರಾನ್‌ನಲ್ಲಿ ಪ್ರತಿಕ್ರಿಯಿಸಿದೆ.

ಜಂಟಿ ಅಗ್ರಸ್ಥಾನಕ್ಕೆ ಏರಿದ ವೈಶಾಲಿ

  • ವಿಶ್ವಕಪ್ ವಿಜೇತೆ ಹಾಗೂ ಸ್ವದೇಶದ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಬುಧವಾರ ಸೋಲಿಸಿದ ಭಾರತದ ವೈಶಾಲಿ ಆರ್. ಅವರು ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಒಂಬತ್ತನೇ ಸುತ್ತಿನ ನಂತರ ಚೀನಾದ ಝು ಜಿನರ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
  • ವೈಶಾಲಿ ಮತ್ತು ಜಿನೆರ್ ತಲಾ 5.5 ಅಂಕ ಗಳಿಸಿದ್ದಾರೆ. ಜಿನೆರ್ ಒಂಬತ್ತನೇ ಸುತ್ತಿನಲ್ಲಿ ರಷ್ಯಾದ ಕ್ಯಾತರಿನಾ ಲಾಗೊ (4.5) ಅವರನ್ನು ಮಣಿಸಿದರು.

ಕುಸ್ತಿ: ಬೆಳ್ಳಿ ಜಯಿಸಿದ ನಿತೇಶ್‌
ಸಂದರ್ಭ: ಭಾರತದ ಗ್ರೀಕೊ-ರೋಮನ್ ಕುಸ್ತಿಪಟುಗಳು ಕಿರ್ಗಿಸ್ತಾನದ ಬಿಪೈಕ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದರು.

  • ಅನುಭವಿ ಪೈಲ್ವಾನ್ ನಿತೇಶ್ ಸಿವಾಚ್ ಅವರು ಪುರುಷರ 97 ಕೆ.ಜಿ. ವಿಭಾಗದಲ್ಲಿ ರಜತ ಜಯಿಸಿದರು. ಸಚಿನ್ ಹಾಗೂ ಪ್ರಿನ್ಸ್ ಕಂಚಿನ ಪದಕ ಜಯಿಸಿದರು.
  • ನಿತೇಶ್ ಅವರು ಫೈನಲ್‌ನಲ್ಲಿ 1-7ರಿಂದ ಇರಾನ್‌ ಮೊಹಮ್ಮದಾದಿ ಮೊಹಮ್ಮದ್ಹದಿ ಸರವಿ ವಿರುದ್ಧ ಪರಾಭವಗೊಂಡರು. ಅದರೊಂದಿಗೆ ಸರವಿ ಅವರು ಸತತ ಎರಡನೇ ಬಾರಿಗೆ ಸ್ವರ್ಣ ತಮ್ಮದಾಗಿಸಿಕೊಂಡರು.
  • ಪುರುಷರ 67 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಸಚಿನ್ 6-5ರಿಂದ ಉಜೇಕಿಸ್ತಾನದ ಅಬ್ಬುಮಲಿಕ್ ಅಮಿನೊವ್ ವಿರುದ್ಧ ರೋಚಕ ಜಯ ಸಾಧಿಸಿದರು.
  • ಪ್ರಿನ್ಸ್ ಅವರು ಪುರುಷರ 82 ಕೆ.ಜಿ. ವಿಭಾಗದಲ್ಲಿ 10-1ರಿಂದ ತುರ್ಕಮೆನಿ ಸ್ನಾನದ ದೀದರ್ ಅಮನ್ನಝರೊವ್ ಅವರನ್ನು ಮಣಿಸಿ, ಕಂಚಿನ ಪದಕಕ್ಕೆ ಕೊರಳೊಡ್ಡಿದರು.

‘ಸಾತ್ವಿಕ್’ ಬ್ಯಾಂಡ್ ಖರೀದಿಸಿದ ‘ಸೈಕಲ್ ಪ್ಯೂರ್’

  • ಅಗರಬತ್ತಿ ಮಾರುಕಟ್ಟೆಯಲ್ಲಿ ಮುಂಚೂಣಿ ಕಂಪನಿಯಾಗಿರುವ ಸೈಕಲ್ ವ್ಯೂರ್. ಪೂಜಾ ಸಾಮಗ್ರಿಗಳ ಕಂಪನಿ ‘ಸಾತ್ವಿಕ್ ಅನ್ನು ಸ್ವಾಧೀನಪಡಿಸಿಕೊಂಡಿದೆ.
  • ಈ ಸ್ವಾಧೀನದ ಮೂಲಕ, ಡಿಜಿಟಲ್ ಲೋಕದಲ್ಲಿ ‘ಸಾತ್ವಿಕ್ ಬ್ಯಾಂಡ್ ಹೊಂದಿರುವ ಪ್ರಾಬಲ್ಯವನ್ನು ಬಳಸಿಕೊಳ್ಳಲು, ಪೂಜಾ ಸಾಮಗ್ರಿಗಳಿಗೆ ಇರುವ ಬೇಡಿಕೆಗೆ ಸ್ಪಂದಿಸಲು ಸಾಧ್ಯವಾಗಲಿದೆ ಎಂದು ಸೈಕಲ್ ಪ್ಯೂರ್ ಕಂಪನಿ ಹೇಳಿದೆ.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಎಐ ಕಾರ್ಖಾನೆ: ದಯಾನಂದ ಸಾಗರ್ ವಿ.ವಿ ಒಪ್ಪಂದ
ಸಂದರ್ಭ: ಭಾರತದಲ್ಲಿ ಮೊದಲ ಎಐ ಕಾರ್ಖಾನೆಯನ್ನು ನಿರ್ಮಿಸಲು ದಯಾನಂದ ಸಾಗರ್ ವಿಶ್ವವಿದ್ಯಾಲಯವು ಎನ್‌ಡಿಯಾದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.

  • ಎನ್‌ಡಿಯಾವು ಮುಂದಿನ ಪೀಳಿಗೆಯ ಎಐ ಸೂಪರ್ ಕಂಪ್ಯೂಟಿಂಗ್ ವೇದಿಕೆಯಾಗಿರುವ ‘ಬ್ಲ್ಯಾಕ್‌ವೆಲ್ ಬಳಸಿಕೊಳ್ಳಲಿದೆ. ಕಡಿಮೆ ಸುಸಜ್ಜಿತ ಮೂಲಸೌಕರ್ಯ, ವಿದೇಶಿ ಎಐ ಮಾದರಿಗಳ ಬಳಕೆ, ದೇಶೀಯ ಸೂಪರ್ ಕಂಪ್ಯೂಟಿಂಗ್ ತಂತ್ರಜ್ಞಾನಗಳ ಕೊರತೆ ಮತ್ತು ಶೈಕ್ಷಣಿಕ ತರಬೇತಿ ಮತ್ತು ಉದ್ಯಮ ನಿಯೋಜನೆ ಅಗತ್ಯಗಳ ನಡುವಿನ ನ್ಯೂನತೆಗಳನ್ನು ನಿವಾರಿಸುವ ಉದ್ದೇಶವನ್ನು ಈ ಒಡಂಬಡಿಕೆ ಹೊಂದಿದೆ.
  • ದಯಾನಂದ ಸಾಗ‌ರ್ ವಿಶ್ವವಿದ್ಯಾಲಯವು ₹175 ಕೋಟಿ ಹೂಡಿಕೆ ಮಾಡಲಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟದ ಎಐ ಕಂಪ್ಯೂಟಿಂಗ್ ಬಳಕೆಯಾಗಲಿದೆ.
  • ‘ಎನ್‌ವಿಡಿಯಾ ಜೊತೆಗಿನ ಸಹಯೋಗದಿಂದಾಗಿ ವಿಶ್ವವಿದ್ಯಾಲಯವು ಎಐ ಕ್ಷೇತ್ರದಲ್ಲಿ ನಾವಿನ್ಯತೆಯನ್ನು ಬಳಸಿಕೊಳ್ಳಲಿದೆ.
  • ‘ಎನ್‌ವಿಡಿಯಾ ಚಾಲಿತ ಎಐ ಕಾರ್ಖಾನೆ ಸ್ಥಾಪಿಸಲಾಗುವುದು ಆ ಮೂಲಕ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಎಐ ವ್ಯವಸ್ಥೆಗಳಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡಲಾಗುವುದು, ಆತ್ಮನಿರ್ಭರ ಭಾರತ, ತಂತ್ರಜ್ಞಾನ ಅಭಿವೃದ್ಧಿ, ಜವಾಬ್ದಾರಿಯುತವಾಗಿ ಎಐ ಬಳಕೆ ಸೇರಿದಂತೆ ದೀರ್ಘಕಾಲೀನ ಗುರಿಗಳನ್ನು ಹೊಂದಿದೆ.
  • ದಯಾನಂದ ಸಾಗರ್ ವಿಶ್ವವಿದ್ಯಾಲಯವು ಆರೋಗ್ಯ, ಎಂಜಿನಿಯರಿಂಗ್, ರಕ್ಷಣೆ, ಸೈಬರ್ ಭದ್ರತೆ, ಅರೆವಾಹಕಗಳು, ಸ್ಮಾರ್ಟ್ ಚಲನಶೀಲತೆ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುವ ಕೆಪೆಕ್ಸ್‌ನಲ್ಲಿ 150 ಕೋಟಿಗೂ ಅಧಿಕ ವೆಚ್ಚದಲ್ಲಿ ಆರು ಉದ್ಯಮ-ಸಂಯೋಜಿತ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಕೇಂದ್ರಗಳು ವಿಶೇಷ ಎಐ ಸಂಶೋಧನೆ ಮತ್ತು ಅನ್ವಯಿಕಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಎನ್‌ಪಿಎಸ್ ಸ್ವಾಸ್ಥ್ಯ ಯೋಜನೆ
ಸಂದರ್ಭ: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್) ಅಡಿ ವಿವಿಧ ಕಂಪನಿಗಳ ಸಹಯೋಗದಲ್ಲಿ ರೂಪಿಸಿರುವ ಎನ್‌ಪಿಎಸ್ ಸ್ವಾಸ್ಥ್ಯ ಯೋಜನೆಯ ಸೇವೆಗಳನ್ನು ವಿಸ್ತರಿಸಿದೆ.

  • ನಿವೃತ್ತ ನೌಕರರ ಉಳಿತಾಯದ ಹಣ ಹಾಗೂ ಆರೋಗ್ಯ ಸೇವೆಗಳನ್ನು ಒಂದೆಡೆ ಬಳಸಿಕೊಳ್ಳಲು ಸಹಕಾರಿಯಾಗುವಂತೆ ಪ್ರಾಧಿಕಾರ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಪ್ರಮುಖ ಆರೋಗ್ಯ ವಿಮಾ ಸೇವಾ ಕಂಪನಿಗಳು ನೌಕರರಿಗೆ ಸೇವೆಗಳನ್ನು ಒದಗಿಸಲಿವೆ.
  • ಎನ್‌ಪಿಎಸ್ ಸ್ವಾಸ್ಥ್ಯ ಯೋಜನೆಯಡಿ ಹೊರ ರೋಗಿಗಳಿಗೆ ಸೇವೆ ಒದಗಿಸುವ ಕುರಿತು ಮೂರು ತಿಂಗಳ ಹಿಂದೆಯೇ ಮಾರ್ಗಸೂಚಿ ಬಿಡುಗಡೆ ಮಾಡ ಲಾಗಿತ್ತು ಈಗ ಒಳ ರೋಗಿಗಳು ಹಾಗೂ ಆಸ್ಪತ್ರೆಗೆ ದಾಖಲಾಗುವವರಿಗೆ ನೀಡುವ ಸೌಲಭ್ಯಗಳ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
  • ಎನ್‌ಪಿಎಸ್‌ ಸೌಲಭ್ಯವನ್ನು ಪಡೆದ ನೌಕರರು ನಿವೃತ್ತಿವರೆಗೂ ಉಳಿತಾಯ ವನ್ನು ಬಳಸಲು ಅವಕಾಶವಿರಲಿಲ್ಲ ಆದರೆ ಎನ್‌ಪಿಎಸ್ ಸ್ವಾಸ್ಥ್ಯ ಅಡಿಯಲ್ಲಿ ಗ್ರಾಹಕರು ಉಳಿತಾಯದ ಶೇಕಡ 25ರಷ್ಟು ಮೊತ್ತವನ್ನು ಬಳಸಿಕೊಳ್ಳಲು ಅವಕಾಶವಿದೆ. ಇದನ್ನು ವೈದ್ಯಕೀಯ ವೆಚ್ಚಗಳಿಗೆ ಉಪಯೋಗಿಸಬಹುದು. ಮೆಡಿ ಅಸಿಸ್ಟ್ ಹೆಲ್ತ್ ಕೇರ್ ಸರ್ವೀಸಸ್ ರೂಪಿಸಿರುವ ಮಾವೆನ್ ಆ್ಯಪ್ ಬಳಸಿ ಸೇವೆ ಪಡೆಯಬಹುದು.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಬೇಡ್ತಿ-ವರದಾ: ಆಂಧ್ರ ಪ್ರದೇಶ ಸರ್ಕಾರದ ತಗಾದೆ: ‘ನದಿ ಜೋಡಣೆಯಲ್ಲೂ ಪಾಲು’
ಸಂದರ್ಭ: ಪ್ರಸ್ತಾವಿತ ಬೇಡ್ತಿ-ವರದಾ ನದಿಗಳ ಜೋಡಣೆ ವೇಳೆಯಲ್ಲಿ ತಮ್ಮ ರಾಜ್ಯಕ್ಕೆ ನ್ಯಾಯಬದ್ಧವಾದ ನೀರು ಹಂಚಿಕೆ ಮಾಡಬೇಕು ಎಂದು ಆಂಧ್ರ ಪ್ರದೇಶ ಸರ್ಕಾರ ತಗಾದೆ ಎತ್ತಿದೆ.

  • ಆಲಮಟ್ಟಿ ಅಣೆಕಟ್ಟಿ ಎತ್ತರ ಹೆಚ್ಚಳಕ್ಕೆ ಅನುವು ಮಾಡಿಕೊಡಬಾರದು ಎಂದು ಅಂಧ್ರ ಪ್ರದೇಶ ಸರ್ಕಾರವು ಜಲಶಕ್ತಿ ಸಚಿವಾಲಯಕ್ಕೆ ಜನವರಿಯಲ್ಲಿ ಪತ್ರ ಬರೆದಿತ್ತು ಅದರ ಬೆನ್ನಲ್ಲೇ, ನೆರೆ ರಾಜ್ಯವು ನದಿ ಜೋಡಣೆಯ ನೀರು ಹಂಚಿಕೆ ವಿಷಯದಲ್ಲೂ ತಕರಾರು ಶುರು ಮಾಡಿದೆ.
  • ನದಿ ಜೋಡಣೆಯ ವಿಷಯದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ತನ್ನ ನಿಲುವನ್ನು ತಿಳಿಸಿರುವ ಆಂಧ್ರ ಪ್ರದೇಶ ಸರ್ಕಾರ, ‘ಈ ನದಿಗಳನ್ನು ಜೋಡಿಸುವ ಮೂಲಕ 18.50 ಟಿಎಂಸಿ ಅಡಿ ನೀರನ್ನು ಕೃಷ್ಣಾ ಜಲಾನಯನ ಪ್ರದೇಶಕ್ಕೆ ತಿರುಗಿಸಲು ಪ್ರಸ್ತಾಪಿಸಲಾಗಿದೆ. ಹೀಗಾಗಿ, ಕೃಷ್ಣಾ ನ್ಯಾಯಮಂಡಳಿ ತೀರ್ಪಿನ ಪ್ರಕಾರ, ರಾಜ್ಯಕ್ಕೆ ಪಾಲು ನೀಡಬೇಕು’ ಎಂದು ಆಗ್ರಹಿಸಿದೆ. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ನದಿ ಜೋಡಣೆಯ ವಿಶೇಷ ಸಮಿತಿಯ ಸಭೆಯಲ್ಲೂ ಈ ಬೇಡಿಕೆ ಮುಂದಿಟ್ಟಿದೆ. ಇನ್ನೊಂದೆಡೆ, ನದಿ ಜೋಡಣೆ ಕುರಿತು ರಾಜ್ಯಗಳು ಒಮ್ಮತಕ್ಕೆ ಬಂದಿಲ್ಲ. ಜತೆಗೆ, ರಾಜ್ಯಕ್ಕೆ ಕನಿಷ್ಠ ಪಾಲು ಹಂಚಿಕೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಅಂತರ್ ರಾಜ್ಯ ವಿವಾದಗಳು ಬಗೆಹರಿದ ಬಳಿಕವಷ್ಟೇ ನದಿಗಳ ಜೋಡಣೆಯ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.
  • ಗೋದಾವರಿ-ಕಾವೇರಿ ನದಿ ಜೋಡಣೆಯ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿತ್ತು ರಾಜ್ಯಕ್ಕೆ ಹಂಚಿಕೆ ಮಾಡಿರುವ ನೀರಿನ ಪ್ರಮಾಣ ಭಾರಿ ಕಡಿಮೆ ಇದ್ದು. ಪಾಲು ಹೆಚ್ಚಿಸಿದರೆ ಮಾತ್ರ ಒಪ್ಪಂದಕ್ಕೆ ಸಹಿ ಹಾಕುವುದಾಗಿ ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು ಆ ಬಳಿಕ, ಬೇಡ್ತಿ-ವರದಾ ನದಿಗಳ ಜೋಡಣೆ ಪ್ರಸ್ತಾವವನ್ನು ಈ ಯೋಜನೆಯಲ್ಲಿ ಸೇರಿಸಲಾಗಿತ್ತು.
  • ಧಾರವಾಡ ಜಿಲ್ಲೆಯಲ್ಲಿ ಉಗಮಗೊಂಡು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿದು ಅರಬ್ಬಿ ಸಮುದ್ರ ಸೇರುವ ಬೇಡ್ತಿ ನದಿಯನ್ನು ಹಾವೇರಿ ಮತ್ತು ಗದಗ ಜಿಲ್ಲೆಯ ವ್ಯಾಪ್ತಿಗೆ ನೀರು ಪೂರೈಕೆಗೆ ವರದಾ ನದಿಗೆ ಜೋಡಿಸಲು ವಿಸ್ತ್ರತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ, ಕರ್ನಾಟಕ ಸರ್ಕಾರ ಒಪ್ಪಿಗೆ ಸೂಚಿಸಿದೆ.
  • ಹಾವೇರಿ, ಗದಗ, ರಾಯಚೂರು ಜಿಲ್ಲೆ ವ್ಯಾಪ್ತಿಯಲ್ಲಿ ನೀರಾವರಿ, ಕುಡಿಯುವ ನೀರು ಪೂರೈಕೆ ಕೈಗಾರಿಕೆಗಳಿಗೆ ನೀರು ಒದಗಿಸುವುದು ಈ ಯೋಜನೆಯ ಉದ್ದೇಶ ನದಿ ನೀರು ಸಂಗ್ರಹಕ್ಕೆ ಶಿರಸಿಯ ಸಹಸ್ರಲಿಂಗ ಮತ್ತು ಪಟ್ಟಣದ ಹೊಳೆ ಬಳಿ ಹಾಗೂ ಯಲ್ಲಾಪುರದ ಬೇಡ್ತಿ ಸೇತುವೆ ಸಮೀಪ ಕಿರು ಅಣೆಕಟ್ಟಿ ನಿರ್ಮಾಣ ಮಾಡಲಾಗುತ್ತದೆ ಅಲ್ಲಿಂದ 246.58 ಕಿ.ಮೀ ಪೈಪ್‌ಲೈನ್ ಮೂಲಕ ನೀರುಕೊಂಡೊಯ್ಯಲಾಗುತ್ತದೆ ಈ ನದಿಗಳ ಜೋಡಣೆಯಿಂದಾಗಿ 1.04 ಲಕ್ಷ ಹೆಕ್ಟೇರ್‌ಗೆ ನೀರಾವರಿ ಒದಗಿಸಬಹುದು ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ.
  • ತೆಲಂಗಾಣದಿಂದಲೂ ರಗಳೆ: ಗೋದಾವರಿ-ಕಾವೇರಿ ನದಿಗಳ ಜೋಡಣೆ ಸಂದರ್ಭದಲ್ಲಿ ಬದಲಿ ವಿಧಾನದ ಮೂಲಕ ಆಲಮಟ್ಟಿಯಿಂದ ಕರ್ನಾಟಕಕ್ಕೆ 16 ಟಿಎಂಸಿ ಅಡಿ ನೀರು ಹಂಚಿಕೆ ಮಾಡುವುದನ್ನು ಮರು ಪರಿಶೀಲಿಸಬೇಕು ಎಂದು ತೆಲಂಗಾಣ ಸರ್ಕಾರವು ಜಲಶಕ್ತಿ ಸಚಿವಾಲಯದ ಮೇಲೆ ಒತ್ತಡ ಹೇರಿದೆ. ನೀರಿನ ಹಂಚಿಕೆಯಿಂದ ತೆಲಂಗಾಣದ ಜುರಾಲಾ ಯೋಜನೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ದೂರಿದೆ.

‘ಸುಪ್ರೀಂ’ ಎರಡು ತೀರ್ಪುಗಳು ಒಳ್ಳೆಯ ಕಾನೂನಲ್ಲ: ಕೇಂದ್ರ

ಸಂದರ್ಭ: ‘ವ್ಯಭಿಚಾರ ಮತ್ತು ಸಲಿಂಗಕಾಮಿಗಳ ಒಪ್ಪಿತ ಸಂಬಂಧ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಎರಡು ಮಹತ್ವದ ತೀರ್ಪುಗಳು ಒಳ್ಳೆಯ ಕಾನೂನುಗಳಲ್ಲ’ ಎಂದು ಕೇಂದ್ರ ಸರ್ಕಾರ ಹೇಳಿದೆ.

  • ‘ಈ ತೀರ್ಪುಗಳು ಸಾಂವಿಧಾನಿಕ ನೈತಿಕತೆಯ ವ್ಯಕ್ತಿನಿಷ್ಠ ಅಭಿಪ್ರಾಯವನ್ನು ಆಧರಿಸಿದ್ದಾಗಿವೆ. ಹಾಗಾಗಿ, ಇವನ್ನು ಒಳ್ಳೆಯ ಕಾನೂನುಗಳಲ್ಲ ಎಂದು ಘೋಷಿಸಬೇಕು’ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
  • ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಎದುರು ಕೇಂದ್ರ ಈ ಮನವಿ ಸಲ್ಲಿಸಿದೆ.
  • ‘ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ’ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಂಬತ್ತು ಪ್ರಶ್ನೆಗಳನ್ನು ರೂಪಿಸಿದೆ ಸಂವಿಧಾನದ 25 ಮತ್ತು 26ನೇ ವಿಧಿಯಲ್ಲಿನ ನೈತಿಕತೆ ಎಂಬ ಪದದ ವ್ಯಾಪ್ತಿ ಏನು, ಇದು ಸಾಂವಿಧಾನಿಕ ನೈತಿಕತೆಯನ್ನು ಒಳಗೊಳ್ಳುವುದೇ’ ಎಂದು ಕೇಂದ್ರಕ್ಕೆ ಪ್ರಶ್ನಿಸಿದೆ.
  • ‘ಸಾಂವಿಧಾನಿಕ ನೈತಿಕತೆ ಎನ್ನುವುದು ಒಂದು ಭಾವನೆಯಾಗಿದೆ. ಈ ವ್ಯಕ್ತಿನಿಷ್ಠ ಪರಿಲ್ಪನೆಯನ್ನು ನ್ಯಾಯಾಂಗವು ಶಾಸನ ಪರಿಶೀಲನೆಗೆ ಬಳಸಬಾರದು’ ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಪೀಠಕ್ಕೆ ಮನವಿ ಮಾಡಿದರು.

‘ಮೂಢನಂಬಿಕೆ ನಿರ್ಧರಿಸುವ ಹಕ್ಕಿದೆ’
ಸಂದರ್ಭ: ಧಾರ್ಮಿಕ ಆಚರಣೆಯು ಮೂಢನಂಬಿಕೆಯೋ, ಅಲ್ಲವೋ ಎಂಬುದನ್ನು ಪರಿಗಣಿಸುವ ಹಕ್ಕನ್ನು ತಾನು ಹೊಂದಿರುವುದಾಗಿ ಹೇಳಿದ ಸುಪ್ರೀಂ ಕೋರ್ಟ್, ‘ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಭಕ್ತರಲ್ಲದವರು ದೇಗುಲದ ಪದ್ಧತಿಯನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಬಹುದೇ ಎಂದು ಪ್ರಶ್ನಿಸಿದೆ.

  • ಯಾವುದೇ ಧಾರ್ಮಿಕ ಆಚರಣೆಯು ಮೂಢನಂಬಿಕೆಯೋ ಅಥವಾ ಅಲ್ಲವೋ ಎಂಬುದನ್ನು ಪರಿಗಣಿಸುವ ಹಕ್ಕು ಮತ್ತು ನ್ಯಾಯವ್ಯಾಪ್ತಿ ಯನ್ನು ತಾನು ಹೊಂದಿರುವುದಾಗಿ ಹೇಳಿದ ಸುಪ್ರೀಂ ಕೋರ್ಟ್, ‘ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಭಕ್ತರಲ್ಲದವರು ದೇಗುಲದ ಪದ್ಧತಿಯನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಬಹುದೇ’ ಎಂದು ಬುಧವಾರ ಪ್ರಶ್ನಿಸಿದೆ.
  • ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಮತ್ತು ಬಹು ಧರ್ಮೀಯರು ಆಚರಿಸುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ ಕುರಿತು ಸಲ್ಲಿಕೆ ಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ಹೇಳಿಕೆ ನೀಡಿದೆ.
  • ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಎಂ.ಎಂ.ಸುಂದರೇಶ್, ಅಜ್ಞಾನುದ್ದೀನ್ ಅಮಾನುಲ್ಲಾ ಅರವಿಂದ್ ಕುಮಾರ್, ಆಗಸ್ಟ್ರೀನ್ ಜಾರ್ಜ್ ಮಸೀಹ್, ಪ್ರಸನ್ನ ಬಿ. ವರಾಳೆ, ಆರ್. ಮಹದೇವನ್ ಮತ್ತು ಜಾಯ್‌ಮಾಲ್ಯಾ ಬಾಗ್ನಿ ಅವರು ಈ ಪೀಠದಲ್ಲಿದ್ದಾರೆ
  • ಕೇಂದ್ರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ, ‘ಯಾವುದೇ ಆಚರಣೆಯನ್ನು ಮೂಢನಂಬಿಕೆ ಎಂದು ಊಹಿಸಿದರೂ, ಅದು ಮೂಢನಂಬಿಕೆ ಎಂದು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ ಅದು ಶಾಸಕಾಂಗದ ಕೆಲಸ ಶಾಸಕಾಂಗವು ಮಧ್ಯಪ್ರವೇಶಿಸಿ ಸುಧಾರಣೆಗಾಗಿ ಕಾನೂನು ರೂಪಿಸುತ್ತದೆ ಎಂದು ಪ್ರತಿಪಾದಿಸಿದರು
  • ‘ನಿರ್ಧರಿಸುವ ಹಕ್ಕಿದೆ’ ಸರ್ಕಾರದ ಈ ವಾದವನ್ನು ಒಪ್ಪದ ಪೀಠವು, ಮೂಢನಂಬಿಕೆಯನ್ನು ನಿರ್ಧರಿಸುವ ಹಕ್ಕು ಮತ್ತು ನ್ಯಾಯವ್ಯಾಪ್ತಿಯನ್ನು ನ್ಯಾಯಾಲಯ ಹೊಂದಿದೆ ಆನಂತರ ಏನು ಮಾಡಬೇಕು ಎಂಬುದನ್ನು ಶಾಸಕಾಂಗ ತೀರ್ಮಾನಿಸಬೇಕು. ಆದರೆ, ಶಾಸಕಾಂಗದ ನಿರ್ಧಾರವೇ ಕೊನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು.
  • ತತ್ತ್ವ ಶಾಸ್ತ್ರದ ಮಸೂರದಿಂದ ಗಮನಿಸಬೇಕು. ‘ಅಗತ್ಯ ಧಾರ್ಮಿಕ ಆಚರಣೆ ಯಾವುದು ಎಂಬುದನ್ನು ನಿರ್ಧರಿಸುವಾಗ ನ್ಯಾಯಾಲಯವು ಆ ನಿರ್ದಿಷ್ಟ ಧರ್ಮದ ತತ್ತ್ವಶಾಸ್ತ್ರದ ಮಸೂರದ ಮೂಲಕ ನೋಡಬೇಕು’ ಎಂದು ನ್ಯಾ ನಾಗರತ್ನ ಅವರು ಅಭಿಪ್ರಾಯಪಟ್ಟರು.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Source: Prajavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಪಲಕ್-ಮುಕೇಶ್ ವಿಶ್ವದಾಖಲೆ
ಸಂದರ್ಭ:
ಭಾರತದ ಶೂಟರ್ಗಳಾದ ಪಲಕ್ ಮತ್ತು ಮುಕೇಶ್ ನೆಲವಲ್ಲಿ ಜೋಡಿ, ಐಎಸ್ಎಸ್ಎಫ್ ವಿಶ್ವ ಕಪ್ ಶೂಟಿಂಗ್ ಚಾಂಪಿಯನ್ಷಿಪ್ನ 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿತು. ಆ ಹಾದಿಯಲ್ಲಿ ವಿಶ್ವ ದಾಖಲೆಯನ್ನೂ ಬರೆಯಿತು.

  • ಭಾರತದ ಜೋಡಿ ಫೈನಲ್‌ನಲ್ಲಿ 487.7 ಸ್ಕೋರ್ ಗಳಿಸಿತು. ಇದು ಜೂನಿಯರ್ ವಿಶ್ವ ದಾಖಲೆ ಕೂಡ. ಅರ್ಹತಾ ಸುತ್ತಿನಲ್ಲೇ ಉತ್ತಮ ಗುರಿ ಪ್ರದರ್ಶಿಸಿ 581 ಅಂಕ ದಾಖಲಿಸಿತ್ತು.
  • ಚೀನಾದ ಕ್ರಿಯಾನ್‌ಮನ್ ಯಾವೊ ಮತ್ತು ಕಯ್ ಹು ಜೋಡಿ 484.8 ಸ್ಕೋರ್‌ನೊಡನೆ ಬೆಳ್ಳಿ ಗೆದ್ದಿತು. ಹಂಗೆರಿಯ ವೆರೋನಿಕಾ ಮೇಜರ್ ಮತ್ತು ಅಕೋಸ್ ಕರೋಲಿ ಜೋಡಿ (414.9) ಕಂಚಿನ ಪದಕ ಗಳಿಸಿತು.
  • ಭಾರತದ ಪರ ಫೈನಲ್‌ನಲ್ಲಿ ಪಲಕ್ 243 ಮತ್ತು ಮುಕೇಶ್ 244 7 ಸ್ಕೋರ್ ದಾಖಲಿಸಿದರು. ಕ್ಯಾಲಿಫಿಕೇಷನ್ ಸುತ್ತಿನಲ್ಲಿ ಭಾರತದ ಜೋಡಿ ಎರಡನೇ ಸ್ಥಾನದಲ್ಲಿತ್ತು.
  • 18 ವರ್ಷ ವಯಸ್ಸಿನ ಪಲಕ್, 2023ರ ಏಷ್ಯನ್ ಕ್ರೀಡೆಗಳ 10 ಮೀ ಏರ್ ಪಿಸ್ತೂಲ್ ವೈಯಕ್ತಿಕ ಚಿನ್ನ ಮತ್ತು ತಂಡ ವಿಭಾಗದಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಪ್ರವರ್ಧಮಾನಕ್ಕೆ ಬಂದಿದ್ದರು.

ಕುಸ್ತಿ: ಲಲಿತ್‌ಗೆ ಬೆಳ್ಳಿ, ಸುನಿಲ್‌ಗೆ ಕಂಚು
ಸಂದರ್ಭ:
ಅನುಭವಿ ಪೈಲ್ಮಾನ್ ಲಲಿತ್ ಅವರು ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆ.ಜಿ ವಿಭಾಗದ ಗ್ರೀಕೊ ರೋಮನ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು ಇದು ಚಾಂಪಿಯನ್‌ಷಿಪ್ ನಲ್ಲಿ ಭಾರತಕ್ಕೆ ಮೊದಲ ಪದಕ ಎನಿಸಿತು.

  • ಭಾರತದ ನಿತೇಶ್ 97 ಕೆ.ಜಿ ವಿಭಾಗದಲ್ಲಿ ಪ್ರಶಸ್ತಿ ಸುತ್ತನ್ನು ಪ್ರವೇಶಿಸಿದರು.
  • 23 ವರ್ಷದೊಳಗಿನವರ ಮಾಜಿ ಏಷ್ಯನ್ ಕಂಚಿನ ಪದಕ ವಿಜೇತರಾದ ಲಲಿತ ಸೆಮಿಫೈನಲ್‌ನಲ್ಲಿ ಚೀನಾದ ಹುವೊಯಿಂಗ್ ಶಿ ಅವರನ್ನು ಸೋಲಿಸಿದ್ದರು ಫೈನಲ್‌ನಲ್ಲಿ ಉಕಿಸ್ತಾನದ ಇಕ್ತಿಯಾರ್ ಬೊಟಿರೋವ್ ಎದುರು ಪ್ರತಿರೋಧ ತೋರಿದರೂ 0-9 ರಿಂದ ಸೋತರು.
  • 87 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕೆ ನಡೆದ ಹಣಾಹಣಿಯಲ್ಲಿ ಮಾಜಿ ಚಾಂಪಿಯನ್ ಸುನಿಲ್ ಕುಮಾರ್ ಅವರು ಮೊದಲ ಸುತ್ತಿನಲ್ಲಿ 0-4 ಹಿನ್ನಡೆಯಿಂದ ಅಮೋಘವಾಗಿ ಚೇತರಿಸಿ ಉಜೈಕಿಸ್ತಾನದ ಮುಖಮಡ್ಗದಿರ್ ರಸುಲೋವ್ ಅವರನ್ನು 5-4 ರಿಂದ ಸೋಲಿಸಿದರು. ಇದು ಅವರಿಗೆ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಕಂಚು ಎನಿಸಿತು
  • ಇದಕ್ಕೆ ಮೊದಲು, 23 ವರ್ಷ ವಯಸ್ಸಿನ ನಿತೇಶ್ 97 ಕೆ.ಜಿ. ಗ್ರೀಕೊ ರೋಮನ್ ಕೆಟಗರಿಯಲ್ಲಿ ಫೈನಲ್ ತಲುಪಿದರು ಕಳೆದ ವರ್ಷ ಕಂಚಿನ ಪದಕ ಗೆದ್ದುಕೊಂಡಿದ್ದ ಅವರು ಈ ಬಾರಿ ಸುಧಾರಿತ ಫಲಿತಾಂಶ ಕಾಣುವುದು ಖಚಿತವಾಯಿತು ನಿತೀಶ್ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮೊಹಮ್ಮದ್‌ಹದಿ ಸರವಿ (ಇರಾನ್) ಅವರನ್ನು ಸೋಲಿಸಿದರು.
  • 82 ಕೆ.ಜಿ ಗ್ರೀಕೊ ರೋಮನ್ ಸ್ಪರ್ಧೆಯಲ್ಲಿ ಪ್ರಿನ್ಸ್ ಅವರು ಕಂಚಿನ ಪದಕಕ್ಕಾಗಿ ನಡೆಯುವ ಸೆಣಸಾಟದಲ್ಲಿ ತುರ್ಕಮೆನಿಸ್ತಾನದ ದಿದಾ‌ರ್ ಅಮ್ಮಾನಝರೋವ್ ಅವರನ್ನು ಎದುರಿಸಲಿದ್ದಾರೆ 20 ವರ್ಷ ವಯಸ್ಸಿನ ಪ್ರಿನ್ನು ಸೆಮಿಫೈನಲ್‌ನಲ್ಲಿ ಇರಾನ್‌ ಮೊಹಮ್ಮದಮಿನ್ ಹುಸೇನಿ ಅವರಿಗೆ ಮಣಿದಿದ್ದರು.
  • ಅಮನ್‌ಗೆ ಹಿನ್ನಡೆ ಆದರೆ ಭಾರತದ ಪ್ರಮುಖ ಸ್ಪರ್ಧಿ ಅಮನ್ ಅವರಿಗೆ ಒಂದು ಪಾಯಿಂಟ್ ಅಂತರದಿಂದ ಹಿನ್ನಡೆಯಾಯಿತು 77 ಕೆ.ಜಿ ಗ್ರೀಕ್ ರೋಮನ್ ಕೆಟಗರಿಯಲ್ಲಿ ಕಂಚಿನ ಪದಕಕ್ಕೆ, ನಡೆದ ಸೆಣಸಾಟದಲ್ಲಿ ಅವರು ದಕ್ಷಿಣ ಕೊರಿಯಾದ ಯೊನ್ನಮ್ ನ್ಯೂ ಅವರಿಗೆ 14-15ರಲ್ಲಿ ಸೋತರು ಸಚಿನ್ ಸಹಾವತ್ (67 ಕೆ.ಜಿ ಗ್ರೀಕೊ ರೋಮನ್) ಅವರು ಕಂಚಿನ ಪದಕಕ್ಕೆ ಸೆಣಸುವ ಆರ್ಹತೆ ಪಡೆದರು ಅವರು ಬುಧವಾರ ರಜೆನಾಜ್ ಸುತ್ತಿನಲ್ಲಿ ಚೀನಾದ ಜಿ ಬೆಂಗ್ ವಿರುದ್ಧ ಅಖಾಡಕ್ಕಿಳಿಯಲಿದ್ದಾರೆ

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಬಾಲಕಿಯರ ಗರ್ಭಧಾರಣೆ: ಲೆಕ್ಕಪರಿಶೋಧನೆ ಕಡ್ಡಾಯ
ಸಂದರ್ಭ:
ರಾಜ್ಯದಲ್ಲಿ 10-18 ವರ್ಷ ವಯಸ್ಸಿನ ಹೆಣ್ಣು ಮಕ್ಕಳ ಆರೋಗ್ಯ ಬಲಪಡಿಸುವ ಸಲುವಾಗಿ ಹದಿಹರೆಯದ ಗರ್ಭಧಾರಣೆ ಪ್ರಕರಣಗಳನ್ನು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಆರ್ಸಿಎಚ್ ವೇದಿಕೆಯಲ್ಲಿ ಕಡ್ಡಾಯವಾಗಿ ವರದಿ ಮಾಡಬೇಕು. ಸಂಬಂಧಪಟ್ಟ ತಾಲ್ಲೂಕು ಆರೋಗ್ಯಾಧಿಕಾರಿ ಲೆಕ್ಕಪರಿಶೋಧನೆ ನಡೆಸಿ ವರದಿ ನೀಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

  • ಈ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಗರ್ಭಧಾರಣೆಯು ತಾಯಿಗೆ ತೊಡಕು, ಹೆರಿಗೆಯ ವೇಳೆ ಅನಾನುಕೂಲ, ಸಾಮಾಜಿಕ ಸಮಸ್ಯೆಗಳ ಅಪಾಯವನ್ನು ಸೃಷ್ಟಿಸುತ್ತದೆ ಹದಿಹರೆಯದ ಗರ್ಭಧಾರಣೆಗಳು ವರದಿ ಆಗುತ್ತಲೇ ಇವೆ. ಇವು ಬಾಲ್ಯವಿವಾಹ, ಶಿಕ್ಷಣ ಮೊಟಕುಗೊಳಿಸುವುದು, ಸಾಮಾಜಿಕ ಸಮಸ್ಯೆ.
  • ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ಅಡಚಣೆ ಉಂಟು ಮಾಡಬಹುದು ಹೀಗಾಗಿ ಅಂತಹ ಪ್ರಕರಣಗಳನ್ನು ಪರಿಶೀಲಿಸಲು ವ್ಯವಸ್ಥಿತ ಕಾರ್ಯವಿಧಾನ ಅಗತ್ಯ ಹಾಗಾಗಿ ಕಡ್ಡಾಯ ಲೆಕ್ಕ ಪರಿಶೋಧನೆ ನಡೆಸಬೇಕು. ಈ ಮೂಲಕ ಹದಿಹರೆಯದ ಗರ್ಭಧಾರಣೆಯನ್ನು ತಡೆಗಟ್ಟುವ ಗುರಿ ಹೊಂದಲಾಗಿದೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ದಕ್ಷಿಣದ ಜನಸಂಖ್ಯೆ ಕುಸಿತ: ಸಣ್ಣದಲ್ಲ ಈ ಸವಾಲು
ಸಂದರ್ಭ:
ಹೆಚ್ಚು ಮಕ್ಕಳನ್ನು ಹೊಂದಲು ಪೋಷಕರನ್ನು ಪ್ರೋತ್ಸಾಹಿಸುವ ಸಂಬಂಧ ಕಾನೂನು ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಇತ್ತೀಚೆಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ. ಅದು ರಾಜಕೀಯ ಘೋಷಣೆಯಂತೆ ಕಾಣಬಹುದು. ಆದರೆ, ವಾಸ್ತವವಾಗಿ ಅದು ಆಪತ್ಕಾಲದ ಕೂಗು; ಭಾರತದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸಿರುವ ದಕ್ಷಿಣ ರಾಜ್ಯಗಳಲ್ಲಿ ಸದ್ದಿಲ್ಲದೇ ಘಟಿಸುತ್ತಿರುವ ಜನಸಂಖ್ಯೆ ಕುಸಿತದ ಸವಾಲನ್ನು ಬಹಿರಂಗವಾಗಿ ಒಪ್ಪಿಕೊಂಡ ಹೇಳಿಕೆಯಾಗಿದೆ.

  • ಮಹಿಳಾ ಸಾಕ್ಷರತೆ, ಮಹಿಳಾ ಸಬಲೀಕರಣ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ದಶಕಗಳವರೆಗೆ ದಕ್ಷತೆಯಿಂದ ಅನುಷ್ಠಾನ ಮಾಡುವ ಮೂಲಕ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಪ್ರತಿ ಮಹಿಳೆಗೆ 21 ಮಕ್ಕಳಂತೆ ಬದಲಿ (ಜನಸಂಖ್ಯೆಯ ಪ್ರಮಾಣವನ್ನು ಕಾಯ್ದುಕೊಳ್ಳಲು ಅಗತ್ಯವಾದ) ಫಲವಂತಿಕೆಯ ಮಟ್ಟ ಮುಟ್ಟಿದ್ದವು.
  • ಆದರೆ, ಕಷ್ಟಪಟ್ಟು ಸಾಧಿಸಿದ ಈ ಜನಸಂಖ್ಯಾ ನಿಯಂತ್ರಣವು ಈಗ ತೀವ್ರ ಆರ್ಥಿಕ ಆತಂಕವಾಗಿ ಬದಲಾಗುತ್ತಿದೆ. ಇದು ಮಕ್ಕಳ ಜನನದ ವಿಚಾರ ಮಾತ್ರವಾಗಿರದೇ ಕಾರ್ಮಿಕರ ಪೂರೈಕೆ, ಪ್ರಗತಿ, ಸಾರ್ವಜನಿಕ ಹಣಕಾಸಿನ ವಿಚಾರವೂ ಆಗಿದೆ. ಜತೆಗೆ, ಒಂದು ಕಾಲದಲ್ಲಿ ತಾವು ಹಿಂದಿಕ್ಕಿದ ಉತ್ತರದ ರಾಜ್ಯಗಳನ್ನೇ ದಕ್ಷಿಣದ ರಾಜ್ಯಗಳು ಅವಲಂಬಿಸಬೇಕಾಗಿದೆ.
  • ಮಾದರಿ ನೋಂದಣಿ ವ್ಯವಸ್ಥೆಯ (ಎಸ್‌ಆರ್‌ಎಸ್) 2021ರ ಹೊಸ ದತ್ತಾಂಶವು ಜನಸಂಖ್ಯಾ ಸ್ವರೂಪದಲ್ಲಿನ ಬದಲಾವಣೆಯ ತೀವ್ರತೆಯನ್ನು ತೋರುತ್ತಿದೆ. ದಕ್ಷಿಣದ ಎಲ್ಲ ಐದು ರಾಜ್ಯಗಳ ಒಟ್ಟು ಫಲವಂತಿಕೆ ದರ (ಟಿಎಫ್‌ಆರ್) ಪ್ರತಿ ಮಹಿಳೆಗೆ 1.5 ಮತ್ತು 1.6 ಮಕ್ಕಳ ನಡುವೆ ಇದ್ದು ಇದು ಇತ್ತೀಚಿನ ಅಂದಾಜುಗಳಿಗಿಂತಲೂ ಕಡಿಮೆ ಇದೆ. ಈ ರೀತಿ ಪ್ರತಿ ತಲೆಮಾರಿನ ಗಾತ್ರ ತನ್ನ ಹಿಂದಿನ ತಲೆಮಾರಿಗಿಂತ ಸುಮಾರು ಶೇ 25ರಷ್ಟು ಕಡಿಮೆ ಆಗುತ್ತಿದ್ದು, ಇದು ಸಮುದಾಯಗಳು ಕುಗ್ಗುತ್ತಿರುವುದನ್ನು ಸೂಚಿಸುತ್ತಿದೆ. ಜತೆಗೆ, ಇದು ಕಾರ್ಮಿಕ ಮಾರುಕಟ್ಟೆಯಲ್ಲಿ ಕೊರತೆ ಸೃಷ್ಟಿಸಿ, ಕಾಲಾಂತರದಲ್ಲಿ ಸಾರ್ವಜನಿಕ ಹಣಕಾಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
  • ಉತ್ತರ ಭಾರತದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ ಬಿಹಾರವು ಟಿಆರ್‌ಎಫ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ (3.0), ಉತ್ತರ ಪ್ರದೇಶದಲ್ಲಿ 2.7 ಮತ್ತು ಮಧ್ಯಪ್ರದೇಶದಲ್ಲಿ 2.6 ಇದ್ದು ದಕ್ಷಿಣದ ರಾಜ್ಯಗಳಿಗಿಂತ ಎರಡರಷ್ಟಿದೆ ಬಿಹಾರದಲ್ಲಿ ಪ್ರತಿ 1,000 ಮಂದಿಗೆ ಶಿಶು ಜನನ ಪ್ರಮಾಣವು 25.6ರಷ್ಟು ಇದ್ದರೆ, ಕೇರಳದಲ್ಲಿ 12 9ರಷ್ಟು ಇದೆ ಇವು ಕೇವಲ ಅಲ್ಪ ವ್ಯತ್ಯಾಸಗಳಲ್ಲ ‘ಎರಡು ಭಾರತಗಳು’ ಜನಸಂಖ್ಯೆಯ ಸ್ವರೂಪದಲ್ಲಿ ವಿರುದ್ಧ ದಿಕ್ಕಿನಲ್ಲಿ ಮತ್ತು ಸಂಘರ್ಷದ ಹಾದಿಯಲ್ಲಿ ಸಾಗುತ್ತಿರುವುದನ್ನು ಇವು ಸೂಚಿಸುತ್ತಿವೆ.
  • ವಲಸೆ ಮತ್ತು ಅಭಿವೃದ್ಧಿಯ ಅಂತರರಾಷ್ಟ್ರೀಯ ಸಂಸ್ಥೆ ಮತ್ತು ಭಾರತದ ಜನಸಂಖ್ಯಾ ಫೌಂಡೇಷನ್‌ ಮುನ್ನೋಟ ವರದಿಯು ಜನಸಂಖ್ಯಾಶಾಸ್ತ್ರಜ್ಞರು ಈ ಬಗ್ಗೆ ಹಿಂದೆಯೇ ನೀಡಿದ್ದ ಎಚ್ಚರಿಕೆಯನ್ನು ದೃಢಪಡಿಸಿದೆ ದಕ್ಷಿಣದ ರಾಜ್ಯಗಳಲ್ಲಿ, 2041ರ ನಂತರ ಜನಸಂಖ್ಯೆಯಲ್ಲಿ ತೀವ್ರ ಕುಸಿತ ಆರಂಭವಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಕೆ ನೀಡಿದ್ದರು.
  • ‘ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ 1981 ಮತ್ತು 2021ರ ನಡುವೆ ಭಾರತದ ಜಿಡಿಪಿಗೆ ಜನಸಂಖ್ಯೆಯು ವಾರ್ಷಿಕವಾಗಿ ಶೇ 19ರನ್ನು ಕೊಡುಗೆ ನೀಡಿದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಿರುವ ದೇಶದ ಅತ್ಯಂತ ಪ್ರಮುಖ ರಾಜ್ಯಗಳಲ್ಲಿ ದುಡಿಯುವ ವಯಸ್ಸಿನ ಜನರ ಕೊರತೆಯುಂಟಾದರೆ, ಜನಸಂಖ್ಯೆಯಿಂದ ಆಗುತ್ತಿದ್ದ ಪ್ರಯೋಜನಗಳು ಹಿಮ್ಮುಖವಾಗಬಹುದು.
  • ಭಾರತದ ಅಗ್ರಗಣ್ಯ ಜನಸಂಖ್ಯಾಶಾಸ್ತ್ರಜ್ಞರಲ್ಲಿ ಒಬ್ಬರಾದ ಎಸ್ ಇರುದಯ ರಾಜನ್ ಅವರು ಟಿಎಫ್‌ಆರ್ ಪ್ರವೃತ್ತಿಯ ಬಗ್ಗೆ, ಮಾತನಾಡಿದ್ದು, ಫಲವಂತಿಕೆ ನಿಯಂತ್ರಿಸಲು ದಶಕಗಳ ಕಾಲ ರಾಜಕೀಯ ಬದ್ಧತೆ ತೋರಿದ್ದರ ಅನಿವಾರ್ಯ ಫಲಿತಾಂಶ ಇದು ಎಂದಿದ್ದಾರೆ. 1970ರ ದಶಕದಲ್ಲಿ ಕೇರಳದಲ್ಲಿ ನಡೆದ ಒಂದು ಅಭಿಯಾನದತ್ತ ಅವರು ಗಮನ ಸೆಳೆಯುತ್ತಾರೆ. ಆಗ ಸರ್ಕಾರದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಅಭಿಯಾನವನ್ನು ಸಾರ್ವಜನಿಕ ಉತ್ಸವದಂತೆ ನಡೆಸಲಾಗಿತ್ತು.
  • ‘ಈಗ ಅವರು ಹೆಚ್ಚು ಮಕ್ಕಳನ್ನು ಹೊಂದುವಂತೆ ಒತ್ತಾಯಿಸು ತ್ತಿದ್ದಾರೆ. ಕಡಿಮೆ ಮಕ್ಕಳನ್ನು ಹೊಂದುವ ದಿಸೆಯಲ್ಲಿ ಸರ್ಕಾರವು ಸಣ್ಣ ಕುಟುಂಬಗಳಿಗೆ ಪ್ರೋತ್ಸಾಹ ನೀಡಿದಾಗ, ಜನರು ಅದನ್ನು ಅನುಸರಿಸಿದ್ದರು. ಆದರೆ, ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವನ್ನು ಜನ ಅದೇ ರೀತಿಯಲ್ಲಿ ಸ್ವೀಕರಿಸದೇ ಇರಬಹುದು. ಇಂದಿನ ತಲೆಮಾರು ಕೂಡ ತಮ್ಮ ಪೋಷಕರು ಹುಟ್ಟುಹಾಕಿದ ಮಾದರಿಯನ್ನೇ ಅನುಸರಿಸುವ ಸಾಧ್ಯತೆಯಿದೆ. ಮುಂದಿನ ಪೀಳಿಗೆಯು ವಿಭಿನ್ನವಾಗಿ ಯೋಚಿಸಬಹುದೇನೋ. ಆದರೆ, ಅದು 30 ರಿಂದ 40 ವರ್ಷಗಳನ್ನು ತೆಗೆದುಕೊಳ್ಳಬಹುದು’ ಎಂದು ಅವರು ಹೇಳುತ್ತಾರೆ.
  • ಪ್ರೋತ್ಸಾಹ ಧನದ ನೀಡುವಂತಹ ಕ್ರಮಗಳಿಗಿಂತ ನೀತಿಯ ಮಟ್ಟದಲ್ಲಿ ಬದಲಾವಣೆ ತರುವುದು ಉತ್ತಮ ಎನ್ನುವುದು ರಾಜನ್ ಅವರ ಅನಿಸಿಕೆ ಮಕ್ಕಳನ್ನು ಪಡೆದ ನಂತರ ಮತ್ತೆ ಕೆಲಸಕ್ಕೆ ಹಿಂದಿರುಗುವ ಬಗ್ಗೆ ಮಹಿಳೆಯರಿಗೆ ಖಾತರಿ ಬೇಕು’ ಎಂದು ಅವರು ಹೇಳುತ್ತಾರೆ:
  • ಅಂತರರಾಷ್ಟ್ರೀಯ ಪುರಾವೆಗಳೂ ರಾಜನ್ ಅವರ ನಿಲುವನ್ನು ಸಮರ್ಥಿಸುತ್ತವೆ. ಹೆಚ್ಚು ಮಕ್ಕಳನ್ನು ಹೆರುವಂತೆ ಉತ್ತೇಜಿಸುವ ಚೀನಾದ (ಪ್ರೋನಾಟಲಿಸ್) ಕಾರ್ಯಕ್ರಮವು ಫಲವಂತಿಕೆ ಕುಸಿತವನ್ನು ಹಿಮ್ಮೆಟ್ಟಿಸುವ ವಿಫಲವಾಗಿದೆ ಎಂದು ರಾಂಡ್ ಕಾರ್ಪೊರೇಷನ್ 2025 ನವೆಂಬರ್‌ನಲ್ಲಿ ನಡೆಸಿದ ಮೌಲ್ಯಮಾಪನ ವರದಿಯಲ್ಲಿ ತಿಳಿಸಿದೆ.
  • ರಾಜನ್ ಅವರ ಪ್ರಕಾರ. ಮಕ್ಕಳನ್ನು ಹೊಂದು ಬಗೆಗಿನಮೂಲಭೂತ ಲೆಕ್ಕಾಚಾರವು ತಲೆಕೆಳಗಾಗಿದೆ. ‘ಮೊದಲು ಮಕ್ಕಳನ್ನು ಆಸ್ತಿ ಎಂದು ಪರಿಗಣಿಸಲಾಗುತ್ತಿತ್ತು ಈಗ ಅವರು ಹೊಣೆಗಾರಿಕೆಗಳಂತೆ ಆಗಿದ್ದಾರೆ’ ಎಂದು ಅವರು ಹೇಳುತ್ತಾರೆ
  • ಗ್ರಹಿಕೆಯಲ್ಲಿನ ಬದಲಾವಣೆಯು ಜೀವನದ ವಿವಿಧ ಹಂತಗಳಲ್ಲಿ ಗೋಚರಿಸುತ್ತಿದೆ ಒಂದು ಕಾಲದಲ್ಲಿ ಮನೆಗಳಲ್ಲಿಯೇ ಮಕ್ಕಳ ಜನನ ಆಗುತ್ತಿತ್ತು. ಆದರೆ, ಈಗ ಹೆಚ್ಚಿನ ಹರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿದ್ದು, ಅದಕ್ಕೆ ದುಬಾರಿ ವೆಚ್ಚ ಭರಿಸಬೇಕು ಸಣ್ಣ ಕುಟುಂಬಗಳು ನಗರಕ್ಕೆ ವಲಸೆ ಬರುವ ಪ್ರಮತ್ತಿ ಹೆಚ್ಚಾಗಿದ್ದು, ಮಕ್ಕಳ ಅನೌಪಚಾರಿಕ ಪಾಲನೆ ಕಣ್ಮರೆಯಾಗಿದೆ ಇದರಿಂದ ಮಹಿಳೆಯರು ಹೆಚ್ಚುವರಿ ಸವಾಲನ್ನು ಎದುರಿಸಬೇಕಾಗಿ ಬಂದಿದೆ. ಮಕ್ಕಳ ಪಾಲನೆಗಾಗಿ ವೃತ್ತಿಜೀವನದ ಮಧ್ಯೆ ಬಿಡುವು ಪಡೆಯುವ ಅವರಿಗೆ ನಂತರ ಕೆಲಸಕ್ಕೆ ಹಿಂದಿರುಗುವ ಅವಕಾಶಗಳು ಸೀಮಿತವಾಗುತ್ತವೆ
  • ಇದೆಲ್ಲದರ ಪರಿಣಾಮವಾಗಿ ಫಲವಂತಿಕೆ ಪ್ರಮಾಣವು ಕುಸಿದಿದ್ದು ಅದು ಹೆಚ್ಚಾಗುವ ಯಾವುದೇ ಸೂಚನೆ ಪ್ರಸ್ತುತ ಕಾಣುತ್ತಿಲ್ಲ, ರಾಜನ್ ಅವರು ಹೇಳುವಂತೆ, ಇದು ವೈಯಕ್ತಿಕ ಬೆಳವಣಿಗೆಯ ಮಾನದಂಡವಾಗಿ ರೂಢಿಗೆ ಬಂದಿದ್ದು ಸಾಮಾಜಿಕ ಪದ್ದತಿ’ಯಾಗಿ ಮಾರ್ಪಟ್ಟಿದೆ. ಜ್ಞಾನದ ರೀತಿಯಲ್ಲಿಯೇ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದೆ.

ವಲಸಿಗರನ್ನು ಆಧರಿಸಿದ ಆರ್ಥಿಕತೆ

  • ಜನಸಂಖ್ಯೆಯ ಸ್ವರೂಪದಲ್ಲಿ ಆಗುವ ಬದಲಾವಣೆಯಿಂದಾಗಿ ಅತ್ಯಂತ ಹೆಚ್ಚು ಪರಿಣಾಮವಾಗುವುದು ವಲಸೆ ಮತ್ತು ವಿದೇಶದಲ್ಲಿರುವ ಭಾರತೀಯರು ತಾಯ್ತಾಡಿಗೆ ಕಳುಹಿಸುವ ಹಣದ ಆರ್ಥಿಕತೆಯ ಮೇಲೆ ಈ ಆರ್ಥಿಕತೆಯೇ ದಕ್ಷಿಣ ಭಾರತದ ರಾಜ್ಯಗಳನ್ನು ದೀರ್ಘ ಸಮಯದಿಂದ ಪೋಷಿಸುತ್ತಾ ಬಂದಿದೆ. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ದಶಕಗಳಿಂದ ಕೌಶಲ ಮತ್ತು ಅರೆಕೌಶಲ ಹೊಂದಿರುವ ಕಾರ್ಮಿಕರನ್ನು ಕೊಲ್ಲಿ ಮತ್ತು ಬೇರೆ ರಾಷ್ಟ್ರಗಳಿಗೆ ಕಳುಹಿಸುತ್ತಾ ಬಂದಿವೆ.
  • ವಿದೇಶಗಳಲ್ಲಿರುವ ಭಾರತೀಯರು ತಾಯ್ಯಾಡಿಗೆ ಕಳುಹಿಸುತ್ತಿರುವ ಹಣದಲ್ಲಿ ಕೇರಳದ ಪಾಲು 2017ರಲ್ಲಿ ಶೇ 19ರಷ್ಟು ಇದ್ದದ್ದು, 2024ರ ಹೊತ್ತಿಗೆ ಶೇ 19.7ಕ್ಕೆ ಏರಿಕೆಯಾಗಿತ್ತು ತಮಿಳುನಾಡಿನ ಪಾಲು ಶೇ 8ರಿಂದ ಶೇ 10.4ಕ್ಕೆ ಏರಿಕೆ ಕಂಡಿತ್ತು ಕೇರಳದ ಬ್ಯಾಂಕುಗಳಲ್ಲಿ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಇರಿಸಿರುವ ಠೇವಣಿ ಮೊತ್ತ 3 ಲಕ್ಷ ಕೋಟಿ.
  • ಕೇರಳದಿಂದ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ. ಸ್ಥಳೀಯವಾಗಿ ಕೌಶಲ ಮಟ್ಟ ಹೆಚ್ಚಾಗುತ್ತಿರುವುದು ಮತ್ತು ಉತ್ತಮ ಸಂಬಳ ಸಿಗುತ್ತಿರುವುದರಿಂದ ವಿದೇಶದಲ್ಲಿ ಕಡಿಮೆ ಸಂಬಳದ ಕೆಲಸಕ್ಕೆ ಹೋಗಲು ಜನರು ಹಿಂದೇಟು ಹಾಕುತ್ತಿರುವುದು ಇದಕ್ಕೆ ಭಾಗಶಃ ಕಾರಣ. ಇದರ ನಡುವೆಯೇ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ ಕಡಿಮೆ ಮತ್ತು ಅರೆಕೌಶಲ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡ ನಿರ್ಮಾಣ, ಆತಿಥ್ಯ ಮತ್ತು ಸೇವಾ ಕ್ಷೇತ್ರಗಳಲ್ಲಿ ಕೆಲಸ ಅರಸಿಕೊಂಡು ಕೊಲ್ಲಿ ರಾಷ್ಟ್ರಗಳಿಗೆ ಹೋಗಲು ಆರಂಭಿಸಿದ್ದಾರೆ.
  • ‘ವಿದೇಶಗಳಲ್ಲಿರುವ ಕೇರಳದ ಕಾರ್ಮಿಕರು ಈಗ ಕೌಶಲಯುಕ್ತ ಉದ್ಯೋಗಗಳನ್ನು ಬಯಸುತ್ತಿದ್ದಾರೆ ರಾಜ್ಯದಲ್ಲಿ ಸುಲಭವಾಗಿ ಶಿಕ್ಷಣ ಸಿಗುತ್ತಿರುವುದರಿಂದ ಇದು ಸಾಧ್ಯವಾಗಿದೆ’ ಎಂದು ಹೇಳುತ್ತಾರೆ ಕೇರಳದ ವಲಸೆ ಮತ್ತು ಎಲ್ಲರನ್ನೊಳಗೊಂಡ ಅಭಿವೃದ್ಧಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಬಿನೋಯ್ ಪೀಟರ್ ಹೇಳುತ್ತಾರೆ. ‘ಆದರೆ ಈಗ ಹೆಚ್ಚಿನ ಮಲಯಾಳಿಗಳು ಅದರಲ್ಲೂ ಹೆಚ್ಚಾಗಿ ವಿದ್ಯಾರ್ಥಿಗಳು ಯುರೋಪ್ ಕೆನಡಾ ಮತ್ತು ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದು ಭವಿಷ್ಯದಲ್ಲಿ ಅಲ್ಲಿಯೇ ಅವರು ನೆಲಸುವ ಸಾಧ್ಯತೆ ಇದೆ ಹೀಗಾದರೆ, ತಾನ್ನಾಡಿಗೆ ಬರುವ ಹಣ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಅವರು

ಫಲವಂತಿಕೆ ಕುಸಿತದ ಪರಿಣಾಮ

  • ಇನ್ನೊಂದು ಕಡೆ ದಕ್ಷಿಣದ ರಾಜ್ಯಗಳಲ್ಲಿ ಕಡಿಮೆಯಾಗುತ್ತಿರುವ ಜನನ ಪ್ರಮಾಣವು ಈ ಪ್ರದೇಶದ ಕಾರ್ಮಿಕರ ಚಿತ್ರಣಕ್ಕೆ ಹೊಸ ರೂಪ ನೀಡುತ್ತಿದೆ
  • ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಿಂದ ವಲಸೆ ಬಂದಿರುವ ಕಾರ್ಮಿಕರು ಕರ್ನಾಟಕ, ಕೇರಳ, ತಮಿಳುನಾಡಿನಾದ್ಯಂತ ಕಟ್ಟಡ ನಿರ್ಮಾಣ, ಕೈಗಾರಿಕೆ, ಮೀನುಗಾರಿಕಾ ಬಂದರು ಮತ್ತು ಮನೆಗಳ ಅಡುಗೆ ಕೋಣೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
  • ‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಟ್ಟು ಫಲವಂತಿಕೆ ದರ ಕುಸಿದಿರುವುದು ಉತ್ತರದಿಂದ ದಕ್ಷಿಣದೆಡೆಗೆ ಆಂತರಿಕ ವಲಸೆ ಹೆಚ್ಚಾಗುತ್ತಿರುವುದಕ್ಕೆ ನೇರ ಕಾರಣ’ ಎಂಬುದು ಪಾಪ್ಯುಲೇಷನ್ ಫೌಂಡೇಷನ್ ಆಫ್ ಇಂಡಿಯಾದ ಹಿರಿಯ ರಿಸರ್ಚ್ ಫೆಲೋ ರತ್ನಕುಮಾರ್ ಅವರ ಸ್ಪಷ್ಟ ಅಭಿಪ್ರಾಯ.
  • ‘ಇದರ ತಕ್ಷಣದ ಪರಿಣಾಮವೇ ಕಾರ್ಮಿಕರ ಕೊರತೆ ಭವಿಷ್ಯದಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ’ ಎಂದು ಹೇಳುತ್ತಾರೆ ಅವರು.
  • ಇದರ ಇನ್ನೊಂದು ಪರಿಣಾಮ ಏನೆಂದರೆ, ಯುವಜನರ ಸಂಖ್ಯೆ ಕಡಿಮೆಯಾಗಿ ವಯಸ್ಕರ, ವೃದ್ಧರ ಸಂಖ್ಯೆ ಹೆಚ್ಚಾಗುತ್ತಿರುವುದು. ಇದಕ್ಕೆ ಕೇರಳದ ಪಟ್ಟಣಂತಿಟ್ಟಿದ ಉದಾಹರಣೆಯನ್ನು ರತ್ನಕುಮಾರ್ ಕೊಡುತ್ತಾರೆ. ಈ ಜಿಲ್ಲೆಯು ದೇಶದಲ್ಲೇ ಅತ್ಯಂತ ಕಡಿಮೆ ಫಲವಂತಿಕೆ ದರವನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆಯಲ್ಲಿ ವಯಸ್ಸಾದವರೇ ಹೆಚ್ಚಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಶಾಲೆಗಳು ಮುಚ್ಚುತ್ತಿವೆ. ಯುವ ಗ್ರಾಹಕರನ್ನು ಅವಲಂಬಿಸಿದ ವ್ಯಾಪಾರಕ್ಕೂ ಧಕ್ಕೆಯಾಗುತ್ತಿದೆ. ಇದು ಈ ಜಿಲ್ಲೆ ಒಂದರ ಕಥೆಯಲ್ಲ, ಭವಿಷ್ಯದಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಬಹುದು ಎಂಬುದು ಅವರ ಕಳವಳ.

ಹಣಕಾಸಿನ ಒತ್ತಡ

  • ಫಲವಂತಿಕೆ ಕುಸಿತದಿಂದ ಕಾರ್ಮಿಕ ಬಲಕ್ಕೆ ಸೇರ್ಪಡೆಗೊಳ್ಳುವ ಯುವಜನರ ಸಂಖ್ಯೆ ಕಡಿಮೆಯಾಗುತ್ತಿದ್ದು ಅವಲಂಬನೆ ಅನುಪಾತ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗ ಮಾಡುವ ಪ್ರತಿ ವಯಸ್ಕನೂ ಹಿರಿಯ ನಾಗರಿಕರಿಗೆ ಬೆಂಬಲವಾಗಿ ನಿಲ್ಲಬೇಕಾಗುತ್ತದೆ. ದಕ್ಷಿಣದ ರಾಜ್ಯಗಳು ಉದಾರವಾಗಿರುವಂತಹ ಜನಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿವೆ. ಆದರೂ, ಇದು ದೀರ್ಘಾವಧಿಯಲ್ಲಿ ಸರ್ಕಾರದ ಮೇಲಿನ ಹಣಕಾಸಿನ ಹೊರೆ ಹೆಚ್ಚಿಸುತ್ತದೆ. ಮುಂದಿನ ಎರಡು ದಶಕಗಳಲ್ಲಿ ದಕ್ಷಿಣದ ರಾಜ್ಯಗಳ ಜನಸಂಖ್ಯಾ ಸ್ವರೂಪದಲ್ಲಿ ಬದಲಾವಣೆ ಆರಂಭವಾಗುವ ನಿರೀಕ್ಷೆ ಇದೆ.
  • ಯುವಜನರ ಸಂಖ್ಯೆ ಕುಸಿದು, ಹಿರಿಯರ ಸಂಖ್ಯೆ ಹೆಚ್ಚಾಗಲಿರುವುದರಿಂದ ಕಾರ್ಮಿಕ ಮತ್ತು ಸಾಮಾಜಿಕ ನೀತಿಗಳು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾದ ಅಗತ್ಯವಿದೆ ಮಹಿಳೆಯರು ಕಾರ್ಮಿಕಬಲದಲ್ಲಿ ತೊಡಗಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುವುದು, ಹಿರಿಯ ಕಾರ್ಮಿಕರ ಸಾಮರ್ಥ್ಯವನ್ನು ಬಳಸಿಕೊಳ್ಳುವುದು, ವಲಸೆ ಕಾರ್ಮಿಕರನ್ನು ಪರಿಣಾಮಕಾರಿಯಾಗಿ ಸಂಯೋಜಿಸುವುದು ಮತ್ತು ಬದಲಾಗುತ್ತಿರುವ ಜನಸಂಖ್ಯೆಯ ಸ್ಮರೂಪಕ್ಕೆ ಅನುಗುಣವಾಗಿ ಸಾರ್ವಜನಿಕ ವೆಚ್ಚವನ್ನು ಮರುಮಾಪನಕ್ಕೆ ಒಳಪಡಿಸುವುದು ಮುಂತಾದ ಪ್ರಮುಖ ವಿಷಯಗಳತ್ತ ಸರ್ಕಾರ ಗಮನ ಹರಿಸಬೇಕಾಗಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಕಾಳಿ ಹುಲಿ ಅಭಯಾರಣ್ಯ: 663 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ
ಸಂದರ್ಭ:
ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ 663 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ.

  • ಅರಣ್ಯದ ಅಂಚಿನಿಂದ 10ಕಿ.ಮೀ. ವರೆಗಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ.
  • ಭೀಮಗಡ ವನ್ಯಜೀವಿಧಾಮವು ಪಕ್ಕದಲ್ಲಿ ಇರುವುದರಿಂದ ಉತ್ತರ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸಿಲ್ಲ ಈಶಾನ್ಯದಲ್ಲಿ 5 ಕಿ ಮೀ.ಯಿಂದ 10 ಕಿ.ಮೀ. ಪೂರ್ವದಲ್ಲಿ 1ಕಿ.ಮೀ.ಯಿಂದ 7ಕಿ.ಮೀ. ವರೆಗೆ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ.
  • ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ 75 ಚ.ಕಿ.ಮೀ. ಕಂದಾಯ ಪ್ರದೇಶ, 84 ಚ.ಕಿ.ಮೀ ಕಂದಾಯ ಗ್ರಾಮಗಳು ಹಾಗೂ 503 ಚ.ಕಿ.ಮೀ. ಅರಣ್ಯ ಸೇರಿವೆ. ಆಕ್ಷೇಪಣೆ ಸಲ್ಲಿಕೆಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ.
  • ಅಂತಿಮ ಅಧಿಸೂಚನೆ ಪ್ರಕಟಗೊಂಡ ಬಳಿಕ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರವು ವಲಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು ಸ್ಥಳೀಯ ಜನರೊಂದಿಗೆ ಸಮಾಲೋಚಿಸಿ ಈ ಪ್ರಕ್ರಿಯೆ ನಡೆಸಬೇಕು’ ಎಂದು ಸಚಿವಾಲಯ ಸೂಚಿಸಿದೆ.

ಕಾಳಿ ಹುಲಿ ಅಭಯಾರಣ್ಯವು (Kali Tiger Reserve) ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮತ್ತು ಜೊಯಿಡಾ ತಾಲ್ಲೂಕುಗಳಲ್ಲಿ ಹರಡಿಕೊಂಡಿರುವ ಒಂದು ಪ್ರಮುಖ ಸಂರಕ್ಷಿತ ಪ್ರದೇಶವಾಗಿದೆ.
೧. ಹಿನ್ನೆಲೆ ಮತ್ತು ಹೆಸರು:
ಇದನ್ನು ಮೊದಲು ‘ದಾಂಡೇಲಿ-ಅಂಶಿ ಹುಲಿ ಅಭಯಾರಣ್ಯ’ ಎಂದು ಕರೆಯಲಾಗುತ್ತಿತ್ತು.
೨೦೧೫ರಲ್ಲಿ ಕರ್ನಾಟಕ ಸರ್ಕಾರವು ಇದರ ಹೆಸರನ್ನು ‘ಕಾಳಿ ಹುಲಿ ಅಭಯಾರಣ್ಯ’ ಎಂದು ಬದಲಾಯಿಸಿತು. ಈ ಪ್ರದೇಶದ ಜೀವನದಿಯಾಗಿರುವ ‘ಕಾಳಿ’ ನದಿಯ ಹೆಸರನ್ನು ಇದಕ್ಕೆ ಇಡಲಾಗಿದೆ.

೨. ಭೌಗೋಳಿಕತೆ:
ಇದು ಪಶ್ಚಿಮ ಘಟ್ಟಗಳ ಉತ್ತರ ಭಾಗದಲ್ಲಿದೆ.
ಈ ಅಭಯಾರಣ್ಯವು ದಟ್ಟವಾದ ಎಲೆ ಉದುರಿಸುವ ಕಾಡುಗಳು ಮತ್ತು ನಿತ್ಯಹರಿದ್ವರ್ಣದ ಕಾಡುಗಳಿಂದ ಕೂಡಿದೆ.

೩. ವನ್ಯಜೀವಿಗಳು:
ಹುಲಿ: ಇಲ್ಲಿನ ಪ್ರಮುಖ ಆಕರ್ಷಣೆ.
ಕಪ್ಪು ಚಿರತೆ (Black Panther): ಈ ಅಭಯಾರಣ್ಯವು ಕಪ್ಪು ಚಿರತೆಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ. ದಟ್ಟವಾದ ಕಾಡು ಇರುವುದರಿಂದ ಇಲ್ಲಿ ಕಪ್ಪು ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.
ಇತರ ಪ್ರಾಣಿಗಳು: ಆನೆ, ಕಾಟಿ (Indian Bison), ಚಿರತೆ, ಜಿಂಕೆ, ಮತ್ತು ಹನುಮಾನ್ ಲಂಗೂರ್.
ಪಕ್ಷಿಗಳು: ಗ್ರೇಟ್ ಹಾರ್ನ್‌ಬಿಲ್ (ಮಲಬಾರ್ ಪೈಡ್ ಹಾರ್ನ್‌ಬಿಲ್) ಸೇರಿದಂತೆ ನೂರಾರು ಜಾತಿಯ ಪಕ್ಷಿಗಳಿಗೆ ಇದು ಆಶ್ರಯತಾಣವಾಗಿದೆ.

೪. ನದಿ ಮತ್ತು ಪ್ರವಾಸೋದ್ಯಮ:
ಕಾಳಿ ನದಿ: ಈ ನದಿಯು ಅಭಯಾರಣ್ಯದ ಮಧ್ಯದಲ್ಲಿ ಹರಿಯುತ್ತದೆ.
ಸಾಹಸ ಕ್ರೀಡೆಗಳು: ಇಲ್ಲಿ ರಿವರ್ ರಾಫ್ಟಿಂಗ್ (River Rafting) ಅತ್ಯಂತ ಜನಪ್ರಿಯ. ಜೊತೆಗೆ ಕಯಾಕಿಂಗ್ ಮತ್ತು ಜಂಗಲ್ ಸಫಾರಿಗೂ ಇದು ಹೆಸರುವಾಸಿ.
ಪ್ರಮುಖ ಸ್ಥಳಗಳು: ಸಿನೆರಿ ರಾಕ್, ಕವಳ ಗುಹೆಗಳು ಮತ್ತು ಉಳವಿ ಚನ್ನಬಸವೇಶ್ವರ ದೇವಸ್ಥಾನ ಈ ಭಾಗದ ಪ್ರಮುಖ ಆಕರ್ಷಣೆಗಳು.

೫. ಪರಿಸರ ಮಹತ್ವ:
ಇದು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿರುವ ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದೆ. ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಈ ಅಭಯಾರಣ್ಯದ ಪಾತ್ರ ಬಹಳ ದೊಡ್ಡದಿದೆ.

ದಕ್ಷಿಣ ಧ್ರುವದಲ್ಲಿ ಮಾನವ ಹೆಜ್ಜೆ ಇಡುವ ಪ್ರಯತ್ನಕ್ಕೆ ಮುನ್ನುಡಿ: ಚಂದ್ರನ ಪರಿಭ್ರಮಣ ನಡೆಸಿದ ‘ಆರ್ಟೆಮಿಸ್-2’
ಸಂದರ್ಭ:
ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟಿಮಿಸ್-2’ನ ಓರಿಯೋನ್ ಕೋಶವು ಸೋಮವಾರ ರಾತ್ರಿ ಚಂದ್ರನ ಸುತ್ತ ಐತಿಹಾಸಿಕ ಪರಿಭ್ರಮಣ ನಡೆಸಿದೆ.

  • ನಾಲ್ವರು ಗಗನಯಾನಿಗಳಿದ್ದ ಅಮೆರಿಕದ ಓರಿಯೊನ್ ಕೋಶವು ಚಂದ್ರನ ಸುತ್ತ ಏಳು ಗಂಟೆ ಪರಿಭ್ರಮಣ ಮಾಡಿದ ವೇಳೆ ಭೂಮಿಗೆ ಗೋಚರಿಸದ, ಚಂದ್ರನ ಇನ್ನೊಂದು ಬದಿಯ ಈ ಹಿಂದೆ ಕಂಡಿರದ ಹಲವು ಚಿತ್ರಗಳನ್ನು ಸೆರೆಹಿಡಿದು ನಾಸಾಗೆ ಕಳುಹಿಸುತ್ತಿದೆ.
  • ಐದು ದಶಕಗಳ ಬಳಿಕ ಚಂದ್ರನ ಕಕ್ಷೆಗೆ ನಾಸಾ, ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನಿಗಳನ್ನು ಕಳುಹಿಸಿತ್ತು. ಈ ಪರಿಭ್ರಮಣವು ‘ಅಪೋಲೊ ಯುಗ’ದ ನಂತರ ಚಂದ್ರನಲ್ಲಿ ನಾಸಾದ ಮೊದಲ ಪಯಣವಾಗಿದೆ. ಮುಂದಿನ 2 ವರ್ಷಗಳಲ್ಲಿ ದಕ್ಷಿಣ ಧ್ರುವದಲ್ಲಿ ಮಾನವ ಹೆಜ್ಜೆ ಇಡುವ ಪ್ರಯತ್ನಕ್ಕೆ ಇದು ಮುನ್ನುಡಿ ಬರೆದಿದೆ.
  • 1972ರಲ್ಲಿ ‘ಆಪೋಲೊ-13’ ತಂಡವು ಚಂದ್ರನಲ್ಲಿಗೆ ಪಯಣಿಸಿತ್ತು. 2,48,655 ಮೈಲಿ( 4,00।71 ಕಿಲೋಮೀಟರ್) ದೂರ ಕ್ರಮಿಸಿದ ಅಪೋಲೊದ ದಾಖಲೆಯನ್ನು ‘ಆರ್ಟಿಮಿಸ್-2’ ಮೀರಿದೆ.
  • ‘ಚಂದ್ರನನ್ನು ಈಗ ಬರಿಗಣ್ಣಿನಲ್ಲಿ ನೋಡಬಹುದು ಎಂದು ನನ್ನ ಮನಸ್ಸಿಗೆ ಅನ್ನಿಸಿತು. ಇದು ನಂಬಲಸಾಧ್ಯವಾದುದು ಈ ಪೀಳಿಗೆ ಮತ್ತು ಮುಂದಿನ ಪೀಳಿಗೆ ಈ ದಾಖಲೆಯನ್ನು ಬೇಗ ಮುರಿಯಬೇಕು ಎಂದು ಕೆನಡಾದ ಗಗನಯಾನಿ ಜೆರೆಮಿ ಹ್ಯಾನ್ಸನ್ ಅವರು ರೇಡಿಯೊ ಸಂದೇಶ ರವಾನಿಸಿದ್ದಾರೆ.
  • ‘ಅಪೋಲೊ 13’ರ ದಾಖಲೆಯನ್ನು ಅಳಿಸಿಹಾಕಿದ ನಂತರ ಈ ಗಗನಯಾನಿಗಳು ಈಗಾಗಲೇ ಗುರ್ತಿಸಿರುವ ಚಂದ್ರನ ಎರಡು ಹೊಸ ಕುಳಿಗಳಿಗೆ ಹೆಸರು ಇಡಲು ಅನುಮತಿ ಕೋರಿದರು. ತಾವು ತೆರಳಿದ ಕೋಶದ ಹೆಸರು ಮತ್ತು 2020ರಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದ ಕಮಾಂಡರ್ ರೀಡ್ ವೈಸ್‌ಮನ್ ಅವರ ಪತ್ನಿಯ ಹೆಸರನ್ನು ನಾಮಕರಣ ಮಾಡುವುದಾಗಿ ಹೇಳಿದರು.
  • ಈ ಮನವಿಯಿಂದ ವೈಸ್‌ಮನ್ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂದವು. ನಾಲ್ವರೂ ಗಗನಯಾನಿಗಳು ಭಾವುಕರಾದರು. ಇಡೀ ದೃಶ್ಯವನ್ನು ಚಿತ್ರಗಳ ರೂಪದಲ್ಲಿ ರೇಡಿಯೊದಲ್ಲಿ ಪ್ರಸಾರ ಮಾಡಲಾಯಿತು.
  • ಚಂದ್ರ ಮತ್ತು ಭೂಮಿಯನ್ನು ಒಂದೇ ಬಾರಿಗೆ ಸೆರೆಹಿಡಿದಿರುವುದಾಗಿ ಗಗನಯಾನಿಗಳು ಹೂನ್‌ನಲ್ಲಿರುವ ವಿಜ್ಞಾನಿಗಳಿಗೆ ವಿವರಣೆ ನೀಡಿದರು.
  • ‘ಕೆಲವು ಶಿಖರಗಳು ಹೊಳೆಯುತ್ತಿದ್ದವು ಹಿಮದಿಂದ ಆವೃತ್ತವಾಗಿದ್ದರೂ ಅವು ಗೋಚರಿಸಿದವು’ ಎಂದು ಪೈಲಟ್ ವಿಕ್ಟರ್ ಗೋವರ್ ಅವರು ಹೇಳಿದರು.
  • ನಿಕಾನ್ ಕಾಮರಾದ ಮೂಲಕ ಚಿತ್ರ ಸೆರೆಹಿಡಿಯಲಾಗಿದೆ ಕೆಲವು ಚಿತ್ರಗಳನ್ನು, ಸೆರೆಹಿಡಿಯಲು ಗಗನಯಾನಿಗಳು ತಮ, ಐಪೋನ್‌ಗಳನ್ನೂ ಬಳಸಿದರು.
  • ಅಮೆರಿಕದ ರೀಡ್ ವೈಸ್‌ಮನ್, ವಿಕ್ಟರ್ ಗೋವರ್. ಕ್ರಿಸ್ಟಿನಾ ಕೋಚ್ ಹಾಗೂ ಕೆನಡಾದ ಜೆರೆಮಿ ಹ್ಯಾನ್ಸನ್ ತಂಡದಲ್ಲಿದ್ದರು. 54 ವರ್ಷಗಳ ಬಳಿಕ ಚಂದ್ರನನ್ನು ಮನುಷ್ಯ ಮತ್ತೊಮ್ಮೆ ಹತ್ತಿರದಿಂದ ನೋಡಿದ ದಾಖಲೆಯನ್ನು ಈ ತಂಡ ಬರೆದಿದೆ.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Source: Prajavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ವಿಶ್ವ 10ಕೆ ಓಟ: ಬ್ಲಾಂಕಾ ಗ್ಲಾಸಿಕ್ ರಾಯಭಾರಿ
ಸಂದರ್ಭ: ದಿಗ್ಗಜ ಹೈಜಂಪ್ ಅಸ್ಟ್ರೀಟ್, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತರಾದ ಬ್ಯಾಂಕಾ ಪ್ಲಾಸಿಕ್ ಅವರು ಇದೇ 26ರಂದು ‘ಸಿಲಿಕಾನ್ ಸಿಟಿ’ಯಲ್ಲಿ ನಡೆಯುವ ‘ಟಿಸಿಎಸ್ ವಿಶ್ವ 10ಕೆ ಬೆಂಗಳೂರು’ ಓಟದ ರಾಯಭಾರಿಯಾಗಿದ್ದಾರೆ.

  • ವಿಶ್ವ ಅಥ್ಲೆಟಿಕ್ಸ್ನಿಂದ ‘ಗೋಲ್ಡ್ ಲೇಬಲ್ ರೇಸ್’ ಮಾನ್ಯತೆ ಪಡೆದಿರುವ 18ನೇ ಆವೃತ್ತಿಯ ಓಟದ ಸ್ಪರ್ಧೆಯು ಒಟ್ಟು ₹1.97 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತನಾಮ ಅಥ್ಲೆಟ್‌ಗಳು ಕಣಕ್ಕಳಿಯಲಿದ್ದಾರೆ.
  • 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ, 2016ರ ರಿಯೊ ಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಪ್ರೊವೇಷ್ಯಾದ ವ್ಯಾಸಿಕ್ ಅವರು ವಿಶ್ವ ಚಾಂಪಿಯನ್‌ಷಿಪ್ ಮತ್ತು ವಿಶ್ವ ಒಳಾಂಗಣ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2009ರಲ್ಲಿ ಅವರು ಸಾಧಿಸಿದ 2.08 ಮೀಟರ್ ಜಿಗಿತವು ಪ್ರೊವೇಷ್ಯಾದ ರಾಷ್ಟ್ರೀಯ ದಾಖಲೆಯಾಗಿ ಉಳಿದಿದೆ.
  • ‘ವಿಶ್ವ 10ಕೆ 18ನೇ ಆವೃತ್ತಿಯ ಭಾಗವಾಗಲು ನನಗೆ ಹೆಮ್ಮೆ ಇದೆ. ಒಟದ ಮೂಲಕ ಸಾವಿರಾರು ಜನರನ್ನು ಒಟ್ಟುಗೂಡಿಸುವ ಈ ಕಾರ್ಯಕ್ರಮ ನಿಜವಾಗಿಯೂ ಸ್ಫೂರ್ತಿದಾಯಕ ಮತ್ತು ಶಕ್ತಿಯುತವಾಗಿದೆ. ಒಟವು ನಮ್ಮನ್ನು ದೈಹಿಕವಾಗಿ ಸಕ್ರಿಯವಾಗಿಸುವ ಜೊತೆಗೆ ಮಾನಸಿಕವಾಗಿ ಸದೃಢಗೊಳಿಸುತ್ತದೆ’ ಎಂದು ಕ್ಲಾಸಿಕ್ ಹೇಳಿದ್ದಾರೆ.


ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಆರ್ಥಿಕತೆಯಲ್ಲಿ ಹಣದ ಪೂರೈಕೆ ಮತ್ತು ಬಡ್ಡಿದರಗಳನ್ನು ನಿಯಂತ್ರಿಸಲು ಬಳಸುವ ಕ್ರಮಗಳೇ ವಿತ್ತೀಯ ನೀತಿ (Monetary Policy).
ಪ್ರಸ್ತುತ ಏಪ್ರಿಲ್ 2026ರ ಸಂದರ್ಭಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇಲ್ಲಿದೆ:

  1. ಇತ್ತೀಚಿನ ಬೆಳವಣಿಗೆ (ಏಪ್ರಿಲ್ 2026)
    ಆರ್‌ಬಿಐನ ಹಣಕಾಸು ನೀತಿ ಸಮಿತಿಯು (MPC) ಏಪ್ರಿಲ್ 6 ರಿಂದ 8, 2026 ರವರೆಗೆ ತನ್ನ ಮೊದಲ ದ್ವೈಮಾಸಿಕ ಸಭೆಯನ್ನು ನಡೆಸುತ್ತಿದೆ. ಸದ್ಯದ ಮಾರುಕಟ್ಟೆ ವಿಶ್ಲೇಷಣೆಗಳ ಪ್ರಕಾರ:
    ರೆಪೋ ದರ (Repo Rate): ಶೇ. 5.25 ರಷ್ಟು ಸ್ಥಿರವಾಗಿರುವ ಸಾಧ್ಯತೆಯಿದೆ.
    ಕಾರಣ: ಜಾಗತಿಕ ಅನಿಶ್ಚಿತತೆ, ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಆರ್‌ಬಿಐ ‘ಕಾದು ನೋಡುವ’ ತಂತ್ರ ಅನುಸರಿಸುತ್ತಿದೆ.
  2. ಪ್ರಮುಖ ಬಡ್ಡಿದರಗಳು (ಏಪ್ರಿಲ್ 2026 ರಂತೆ)
ಅಂಶದರ (%)ವಿವರಣೆ
ರೆಪೋ ದರ5.25%ಆರ್‌ಬಿಐ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ.
ರಿವರ್ಸ್ ರೆಪೋ ದರ3.35%ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಹಣಕ್ಕೆ ಸಿಗುವ ಬಡ್ಡಿ.
SDF ದರ5.00%ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ.
MSF & ಬ್ಯಾಂಕ್ ದರ5.50%ತುರ್ತು ಸಂದರ್ಭದಲ್ಲಿ ಬ್ಯಾಂಕುಗಳು ಪಡೆಯುವ ಸಾಲದ ದರ.
  1. ವಿತ್ತೀಯ ನೀತಿಯ ಮುಖ್ಯ ಉದ್ದೇಶಗಳು
    ಬೆಲೆ ಸ್ಥಿರತೆ (Price Stability): ಹಣದುಬ್ಬರವನ್ನು (Inflation) ನಿಯಂತ್ರಣದಲ್ಲಿಡುವುದು. ಕೇಂದ್ರ ಸರ್ಕಾರವು 2026 ರಿಂದ 2031 ರ ಅವಧಿಗೆ ಹಣದುಬ್ಬರ ಗುರಿಯನ್ನು ಶೇ. 4 (+/- 2%) ಎಂದು ನಿಗದಿಪಡಿಸಿದೆ.
    ಆರ್ಥಿಕ ಬೆಳವಣಿಗೆ (Economic Growth): ಕೈಗಾರಿಕೆ ಮತ್ತು ಸೇವಾ ವಲಯಕ್ಕೆ ಸುಲಭವಾಗಿ ಸಾಲ ಸಿಗುವಂತೆ ಮಾಡುವುದು.
    ವಿನಿಮಯ ದರ ಸ್ಥಿರತೆ: ರೂಪಾಯಿ ಮೌಲ್ಯವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿಯದಂತೆ ನೋಡಿಕೊಳ್ಳುವುದು.
  2. ವಿತ್ತೀಯ ನೀತಿಯ ವಿಧಗಳು
    ವಿಸ್ತರಣಾ ನೀತಿ (Expansionary Policy): ಆರ್ಥಿಕ ಹಿಂಜರಿತವಿದ್ದಾಗ ಬಡ್ಡಿದರಗಳನ್ನು ಕಡಿಮೆ ಮಾಡಿ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಿಸುವುದು.
    ಸಂಕೋಚನ ನೀತಿ (Contractionary Policy): ಹಣದುಬ್ಬರ ಹೆಚ್ಚಾದಾಗ ಬಡ್ಡಿದರಗಳನ್ನು ಏರಿಸಿ ಮಾರುಕಟ್ಟೆಯಿಂದ ಹಣವನ್ನು ಹಿಂತೆಗೆದುಕೊಳ್ಳುವುದು.
    ಗಮನಿಸಿ: ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಸಮಿತಿಯು ಏಪ್ರಿಲ್ 8 ರಂದು ಅಧಿಕೃತವಾಗಿ ದರ ಘೋಷಣೆ ಮಾಡಲಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಭಾರತ ಮತ್ತು ವಿಶ್ವದಲ್ಲಿ ಯೂರಿಯಾ ಉತ್ಪಾದನೆ (2026ರ ಸ್ಥಿತಿಗತಿ)

  1. ಭಾರತದಲ್ಲಿ ಯೂರಿಯಾ ಉತ್ಪಾದನೆ (2026ರ ವರದಿ)
    ಭಾರತವು ವಿಶ್ವದ ಎರಡನೇ ಅತಿದೊಡ್ಡ ಯೂರಿಯಾ ಗ್ರಾಹಕ ಮತ್ತು ಉತ್ಪಾದಕ ದೇಶವಾಗಿದೆ. 2026-27ರ ಅಂತ್ಯದ ವೇಳೆಗೆ ಯೂರಿಯಾದಲ್ಲಿ “ಆತ್ಮನಿರ್ಭರತೆ” (ಸ್ವಾವಲಂಬನೆ) ಸಾಧಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.
    ಉತ್ಪಾದನಾ ಸಾಮರ್ಥ್ಯ: ಭಾರತವು ತನ್ನ ದೇಶೀಯ ಯೂರಿಯಾ ಉತ್ಪಾದನೆಯನ್ನು 2015ರಲ್ಲಿ ಇದ್ದ ~22.5 ಮಿಲಿಯನ್ ಮೆಟ್ರಿಕ್ ಟನ್‌ಗಳಿಂದ (LMT) 2026ರ ವೇಳೆಗೆ 31 ಮಿಲಿಯನ್ ಮೆಟ್ರಿಕ್ ಟನ್‌ಗಿಂತಲೂ ಹೆಚ್ಚು ಹೆಚ್ಚಿಸಿದೆ.
    “ಶೇ. 90 ಪೂರೈಕೆ”ಯ ಕಾರ್ಯತಂತ್ರ: ಪೆಟ್ರೋಲಿಯಂ ಸಚಿವಾಲಯವು ಯೂರಿಯಾ ಸ್ಥಾವರಗಳಿಗೆ ನೈಸರ್ಗಿಕ ಅನಿಲ (LNG) ಪೂರೈಕೆಯನ್ನು ಅವುಗಳ ಸಾಮರ್ಥ್ಯದ ಶೇ. 90ಕ್ಕೆ ಹೆಚ್ಚಿಸಿದೆ (ಸಂಘರ್ಷದ ಸಮಯದಲ್ಲಿ ಇದು ಶೇ. 60ಕ್ಕೆ ಇಳಿದಿತ್ತು). ಜೂನ್‌ನಲ್ಲಿ ಪ್ರಾರಂಭವಾಗುವ ಖಾರಿಫ್ ಹಂಗಾಮಿಗೆ ಮುಂಚಿತವಾಗಿ ದೇಶೀಯ ಘಟಕಗಳು ಗರಿಷ್ಠ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಇದು ಸಹಕಾರಿಯಾಗಿದೆ.
    ಕಚ್ಚಾವಸ್ತುಗಳ ಪೂರೈಕೆ ಮೂಲ ಬದಲಾವಣೆ: ಭಾರತದ ಶೇ. 80ರಷ್ಟು ಯೂರಿಯಾವನ್ನು ಎಲ್‌ಎನ್‌ಜಿ (LNG) ಬಳಸಿ ಉತ್ಪಾದಿಸಲಾಗುತ್ತದೆ. ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ, ಭಾರತವು ತನ್ನ ಎಲ್‌ಎನ್‌ಜಿ ಆಮದನ್ನು ಕತಾರ್‌ನಿಂದ ಅಮೆರಿಕ, ಆಸ್ಟ್ರೇಲಿಯಾ ಮತ್ತು ರಷ್ಯಾಕ್ಕೆ ಬದಲಾಯಿಸಿದೆ. ವ್ಯಾಪಾರ ಮಾರ್ಗಗಳ ಅಡಚಣೆಯನ್ನು ತಪ್ಪಿಸಲು ‘ಸ್ಪಾಟ್ ಮಾರ್ಕೆಟ್’ ಮೂಲಕ ಇವುಗಳನ್ನು ಖರೀದಿಸಲಾಗುತ್ತಿದೆ.
    ಹೊಸ ಘಟಕಗಳು: ಐದು ಪ್ರಮುಖ ಘಟಕಗಳ ಪುನಶ್ಚೇತನ (ರಾಮಗುಂಡಂ, ತಾಲ್ಚರ್, ಗೋರಖ್‌ಪುರ, ಸಿಂದ್ರಿ ಮತ್ತು ಬರೌನಿ) ಈ ಉತ್ಪಾದನಾ ಸಾಮರ್ಥ್ಯದ ಹೆಚ್ಚಳಕ್ಕೆ ಬೆನ್ನೆಲುಬಾಗಿ ನಿಂತಿವೆ.
  2. ವಿಶ್ವ ಯೂರಿಯಾ ಉತ್ಪಾದನೆ (2026ರ ಅಂದಾಜು)
    2026ರಲ್ಲಿ ಜಾಗತಿಕ ಯೂರಿಯಾ ಮಾರುಕಟ್ಟೆಯ ಮೌಲ್ಯ ಅಂದಾಜು 50.7 ಬಿಲಿಯನ್ ಡಾಲರ್ ಆಗಿದೆ. ನೈಸರ್ಗಿಕ ಅನಿಲ ಸಮೃದ್ಧವಾಗಿರುವ ದೇಶಗಳಲ್ಲಿ ಉತ್ಪಾದನೆ ಕೇಂದ್ರೀಕೃತವಾಗಿದೆ.

ಜಾಗತಿಕ ಪ್ರಮುಖ ಉತ್ಪಾದಕರು (2026)

ಶ್ರೇಣಿದೇಶವಾರ್ಷಿಕ ಉತ್ಪಾದನೆ (ಅಂದಾಜು)ಪ್ರಮುಖ ಲಕ್ಷಣಗಳು
1ಚೀನಾ~55 ಮಿಲಿಯನ್ ಟನ್ಅತಿದೊಡ್ಡ ಉತ್ಪಾದಕ; ತನ್ನ ಆಹಾರ ಭದ್ರತೆಗೆ ಆದ್ಯತೆ ನೀಡಲು ರಫ್ತಿನ ಮೇಲೆ ನಿರ್ಬಂಧ ಹೇರಿದೆ.
2ಭಾರತ~32-34 ಮಿಲಿಯನ್ ಟನ್ಹೆಚ್ಚಿನ ಉತ್ಪಾದನೆ ಮತ್ತು ಬಳಕೆ; 2027ರ ವೇಳೆಗೆ ಶೂನ್ಯ ಆಮದು ಗುರಿ ಹೊಂದಿದೆ.
3ಅಮೆರಿಕ~18-19 ಮಿಲಿಯನ್ ಟನ್ಅಗ್ಗದ ಶೇಲ್ ಗ್ಯಾಸ್‌ನಿಂದಾಗಿ ಪ್ರಮುಖ ಉತ್ಪಾದಕ; ಈಗ ಭಾರತಕ್ಕೆ ಪ್ರಮುಖ ರಫ್ತುದಾರ.
4ಮಧ್ಯಪ್ರಾಚ್ಯ~26 ಮಿಲಿಯನ್ ಟನ್(ಸೌದಿ, ಕತಾರ್, ಓಮನ್, ಇರಾನ್). ರಫ್ತು ಆಧಾರಿತ, ಆದರೆ ಪ್ರಸ್ತುತ ಹಡಗು ಸಂಚಾರದ ಅಡಚಣೆ ಎದುರಿಸುತ್ತಿದೆ.
5ರಷ್ಯಾ~11 ಮಿಲಿಯನ್ ಟನ್ಪ್ರಮುಖ ರಫ್ತುದಾರ; ಭಾರತವು ಪೂರೈಕೆಯನ್ನು ಸ್ಥಿರಗೊಳಿಸಲು ರಷ್ಯಾದಿಂದ ಆಮದನ್ನು ಹೆಚ್ಚಿಸಿದೆ.
  1. 2026ರ ಪ್ರಮುಖ ಸವಾಲುಗಳು ಮತ್ತು ಪ್ರವೃತ್ತಿಗಳು
    ಭೂ-ರಾಜಕೀಯ ಪ್ರಭಾವ: ಪಶ್ಚಿಮ ಏಷ್ಯಾದ ಸಂಘರ್ಷವು ಜಾಗತಿಕ ಯೂರಿಯಾ ಬೆಲೆಗಳಲ್ಲಿ ಶೇ. 30-40ರಷ್ಟು ಏರಿಕೆಗೆ ಕಾರಣವಾಗಿದೆ. ಇದು ಭಾರತದಂತಹ ದೇಶಗಳು ತಮ್ಮ ರಸಗೊಬ್ಬರ ಸಬ್ಸಿಡಿ ಬಜೆಟ್ ಅನ್ನು ಹೆಚ್ಚಿಸಲು ಪ್ರೇರೇಪಿಸಿದೆ (2026-27ಕ್ಕೆ ಅಂದಾಜು ₹1.26 ಲಕ್ಷ ಕೋಟಿ).
    ‘ಸ್ಪಾಟ್ ಮಾರ್ಕೆಟ್’ ಕಡೆಗೆ ಒಲವು: ಅರಬ್ ರಾಷ್ಟ್ರಗಳೊಂದಿಗಿನ ದೀರ್ಘಾವಧಿಯ ಒಪ್ಪಂದಗಳ ಬದಲಾಗಿ, ಭಾರತದಂತೆ ಅನೇಕ ರಾಷ್ಟ್ರಗಳು ಅಮೆರಿಕ ಮತ್ತು ಆಸ್ಟ್ರೇಲಿಯಾದಿಂದ ಸ್ಪಾಟ್ ಮಾರ್ಕೆಟ್ ಮೂಲಕ ಅನಿಲ ಖರೀದಿಸುತ್ತಿವೆ.
    ಹಸಿರು ಯೂರಿಯಾ (Green Urea): ನೈಸರ್ಗಿಕ ಅನಿಲದ ಬದಲು ಹಸಿರು ಹೈಡ್ರೋಜನ್ ಬಳಸಿ ಯೂರಿಯಾ ತಯಾರಿಸುವ ಪ್ರವೃತ್ತಿ ಬೆಳೆಯುತ್ತಿದೆ, ಆದರೆ ಇದು ಪ್ರಸ್ತುತ ಒಟ್ಟು ಉತ್ಪಾದನೆಯ ಶೇ. 1ಕ್ಕಿಂತ ಕಡಿಮೆ ಇದೆ.
    ನ್ಯಾನೋ ಯೂರಿಯಾ: ದ್ರವ ರೂಪದ ನ್ಯಾನೋ ಯೂರಿಯಾ ತಂತ್ರಜ್ಞಾನದಲ್ಲಿ ಭಾರತವು ಜಗತ್ತಿಗೆ ಮುಂಚೂಣಿಯಲ್ಲಿದೆ. ಇದು ಸಾಂಪ್ರದಾಯಿಕ ಯೂರಿಯಾ ಚೀಲಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಸಾರಿಗೆ ವೆಚ್ಚವನ್ನು ಉಳಿಸುತ್ತದೆ.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.