ಕೆಎಎಸ್ ಪ್ರಚಲಿತ ವಿದ್ಯಮಾನಗಳು
ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ವೃತ್ತಿ ತೆರಿಗೆ ವಿವರ ಪ್ರತ್ಯೇಕ ಸಲ್ಲಿಕೆ ಅನಗತ್ಯ: ಮಸೂದೆ
ಸಂದರ್ಭ: ಆದಾಯ ತೆರಿಗೆಯ ವಿವರಗಳನ್ನು (ಐ.ಟಿ ರಿಟರ್ನ್ಸ್) ಸಲ್ಲಿಸಿದ ಬಳಿಕವೂ ವೃತ್ತಿ ತೆರಿಗೆಯ ವಿವರಗಳನ್ನು ಸಲ್ಲಿಸಬೇಕೆಂಬ ಷರತ್ತನ್ನು ತೆಗೆದುಹಾಕುವ ಉದ್ದೇಶದಿಂದ ಸರ್ಕಾರ ಮಂಡಿಸಿದ ‘ಕರ್ನಾಟಕ ವೃತ್ತಿಗಳ ಕಸುಬುಗಳ ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆಗಳ ತಿದ್ದುಪಡಿ ಮಸೂದೆ’ಗೆ ವಿಧಾನಸಭೆ ಅಂಗೀಕಾರ ನೀಡಿತು.
- ಮಸೂದೆ ಮಂಡಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಒಮ್ಮೆ ತೆರಿಗೆ ಹಣ ಪಾವತಿಸಿದ ನಂತರ ಮತ್ತೆ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ ಎಂಬ ಸರಳ ತಿದ್ದುಪಡಿ ತರಲಾಗಿದೆ.
- ಹಿರಿಯ ನಾಗರಿಕರು, ಸೈನಿಕರು, ದೈಹಿಕ-ಮಾನಸಿಕ ಅಂಗಡಿಕಲರು ವೃತ್ತಿ ತೆರಿಗೆ ಸಲ್ಲಿಸುವ ಅಗತ್ಯ ಇಲ್ಲದಿದ್ದರೂ ‘ನಿಲ್ ರಿಟರ್ನ್ಸ್ ಸಲ್ಲಿಸಬೇಕಿತ್ತು. ಆದರೆ, ‘ನಿಲ್ ರಿಟರ್ನ್ಸ್ ಸಲ್ಲಿಸಲೂ ಕೂಡಾ ಈ ಮಸೂದೆಯಲ್ಲಿ ವಿನಾಯಿತಿ ನೀಡಲಾಗಿದೆ’.
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ದೇಶೀಯ ಪಥದರ್ಶಕ ವ್ಯವಸ್ಥೆಯ ಮತ್ತೊಂದು ಉಪಗ್ರಹ ಕಾರ್ಯಾಚರಣೆ ಸ್ಥಗಿತ
ನಾವಿಕ್‌ಗೆ ಹಿನ್ನಡೆ
ಅದು ಕಾರ್ಗಿಲ್ ಯುದ್ಧದ ಸಂದರ್ಭ. ಪಾಕಿಸ್ತಾನದ ಸೇನಾ ನೆಲೆಗಳ ಬಗ್ಗೆ ಜಿಪಿಎಸ್ (ಜಾಗತಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯ) ಮಾಹಿತಿ ನೀಡುವಂತೆ ಭಾರತವು ಅಮೆರಿಕವನ್ನು ಕೋರಿತ್ತು. ಆದರೆ, ಅಮೆರಿಕ ನಿರಾಕರಿಸಿತ್ತು. ದೇಶೀಯ ಪಥದರ್ಶಕ ವ್ಯವಸ್ಥೆಯೊಂದರ ಅಗತ್ಯವಿದೆ ಎಂದು ಭಾರತ ಮನಗಂಡಿದ್ದು ಆಗಲೇ. ಸ್ವದೇಶಿ ಪಥದರ್ಶಕ ಉಪಗ್ರಹ ವ್ಯವಸ್ಥೆ ರೂಪಿಸಲು ಅದೇ ನಾಂದಿಯಾಯಿತು. ಅದರ ಅಭಿವೃದ್ಧಿಯ ಜವಾಬ್ದಾರಿ ಹೊತ್ತುಕೊಂಡಿದ್ದು ಇಸ್ರೋ. 2013ರ ನಂತರ ತನ್ನದೇ ಆದ ಪಥದರ್ಶಕ ವ್ಯವಸ್ಥೆ ರೂಪಿಸಲು ಭಾರತಕ್ಕೆ ಸಾಧ್ಯವಾಗಿದ್ದರೂ ಅದು ಪೂರ್ಣವಾಗಿ ಕಾರ್ಯಾರಂಭ ಮಾಡಿಲ್ಲ.
ಆರಂಭದಿಂದಲೂ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುತ್ತಲೇ ಬಂದ ಈ ಯೋಜನೆಗೆ, ಈಗ ಗಂಭೀರ ಸ್ವರೂಪದ ಹಿನ್ನಡೆಯೇ ಆಗಿದೆ. ದೀರ್ಘಕಾಲದ ನಿರ್ಲಕ್ಷ್ಯ,, ತಾಂತ್ರಿಕ ವೈಫಲ್ಯಗಳು, ಅವಧಿ ಮೀರಿದ ಉಪಗ್ರಹಗಳು ಮತ್ತು ಬದಲಿ ಉಪಗ್ರಹಗಳ ಉಡಾವಣೆ ವಿಳಂಬದಿಂದಾಗಿ ‘ನಾವಿಕ್’ ಕಾರ್ಯಾರಂಭ ಸ್ಥಗಿತಗೊಳಿಸುವ ಹಂತ ತಲುಪಿದೆ.
‘ನಾವಿಕ್’ ಅನ್ನು ವಿಮಾನಯಾನ, ನೌಕಾಯಾನ, ಸಾರಿಗೆ ವ್ಯವಸ್ಥೆ, ಸೇನೆ, ಪ್ರಕೃತಿ ವಿಕೋಪ ಇನ್ನಿತರ ತುರ್ತು ಪರಿಸ್ಥಿತಿಗಳಲ್ಲಿ ಬಳಸಲಾಗುತ್ತಿದೆ. ಉಪಗ್ರಹಗಳು ನಿಷ್ಕ್ರಿಯವಾಗುತ್ತಿರುವುದರಿಂದ, ಇದು ದೇಶದ ಸ್ಪರ್ಧಾತ್ಮಕತೆ, ಆರ್ಥಿಕತೆ ಮತ್ತು ರಕ್ಷಣಾ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಂಭವ ಇದೆ. ಗಗನಯಾನ, ಬಾಹ್ಯಾಕಾಶದಲ್ಲಿ ತನ್ನದೇ ಆದ ನಿಲ್ದಾಣವನ್ನು ಹೊಂದುವ ಬೃಹತ್ ಯೋಜನೆಗಳೆಡೆಗೆ ಇಸ್ರೋ ಅತಿಯಾದ ಒತ್ತು ನೀಡಿದ್ದರಿಂದ ನಾವಿಕ್‌ನಂಥ ಪ್ರಮುಖ ಹಾಗೂ ಯುದ್ಧದಂಥ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅತ್ಯಗತ್ಯವಾದ ಯೋಜನೆಗೆ ಹಿನ್ನಡೆ ಉಂಟಾಗಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಉಡಾವಣೆ ಮಾಡಿದ ಉಪಗ್ರಹಗಳೆಷ್ಟು?
ಸ್ವಂತದ ಪಥದರ್ಶಕ ವ್ಯವಸ್ಥೆಯನ್ನು ಹೊಂದುವ ಪ್ರಯತ್ನವನ್ನು 2000ದಿಂದಲೇ ಭಾರತ ಆರಂಭಿಸಿತ್ತು. ಇದಕ್ಕಾಗಿ ಎಳು ಉಪಗ್ರಹಗಳ ಗುಚ್ಛವನ್ನು ಆಗಸದಲ್ಲಿ ಸ್ಥಾಪಿಸುವ ಯೋಜನೆ ರೂಪಿಸಿದ ಇಸ್ರೋ, 2013ರ ಜುಲೈ 1ರಂದು ಐಆರ್‌ಎನ್‌ಎಸ್-1ಎ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಆ ಬಳಿಕ 2016ರವರೆಗೆ ಮತ್ತೆ ಆರು ಉಪಗ್ರಹಗಳನ್ನು (ಐಆರ್‌ಎನ್‌ಎಸ್‌ಎಸ್-1ಬಿ, 1ಸಿ, 1ಡಿ, 1ಇ, 1ಎಫ್, 1ಜಿ) ಕಕ್ಷೆಗೆ ಬಿಟ್ಟಿತ್ತು 2016ರ ಏಪ್ರಿಲ್‌ನಲ್ಲಿ ಐರ್‌ಎನ್‌ಎಸ್‌ಎಸ್-1ಜಿ ಉಪಗ್ರಹವನ್ನು ಉಡಾವಣೆ ಮಾಡುವ ಮೂಲಕ ದೇಶೀಯ ಪಥದರ್ಶಕ ವ್ಯವಸ್ಥೆಯ ಮೊದಲ ಹಂತದ ಯೋಜನೆಯನ್ನು ಇಸ್ರೋ ಪೂರ್ಣಗೊಳಿಸಿತ್ತು. ಆ ಬಳಿಕ ಈ ವ್ಯವಸ್ಥೆಗೆ ‘ನಾವಿಕ್’ ಎಂಬ ಹೆಸರು ಬಂದಿದ್ದು.
ಈ ಉಪಗ್ರಹಗಳ ಕಾರ್ಯಾಚರಣೆ ಅವಧಿ 10 ವರ್ಷಗಳು, 1ಎ ಉಪಗ್ರಹ ಸ್ವಲ್ಪ ಬೇಗವೇ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಹೀಗಾಗಿ, ಅದರ ಬದಲಿಗೆ 2017ರಲ್ಲಿ ಆಗಸ್ಟ್-31ರಂದು ಐಆರ್‌ಎನ್‌ಎಸ್‌ಎಸ್-1ಎಚ್ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿತ್ತು. ಆದರೆ, ಅದನ್ನು ಕಕ್ಷೆಗೆ ಸೇರಿಸುವಲ್ಲಿ ವಿಫಲವಾಗಿತ್ತು. 2018ರ ಏಪ್ರಿಲ್ 12ರಂದು ಐಆರ್‌ಎನ್‌ಎಸ್‌ಎಸ್ 1ಐ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿ ಕಕ್ಷೆಯಲ್ಲಿ ಕೂರಿಸಿದೆ. ಈ ‘ನಾವಿಕ್‌ಗೆ ಇನ್ನಷ್ಟು ಬಲ ತುಂಬುವ ಉದ್ದೇಶದಿಂದ ಇಸ್ರೋ 2023ರಲ್ಲಿ ‘ಎನ್‌ವಿಎಸ್-01 ಹೆಸರಿನ ಹೊಸ ಪೀಳಿಗೆಯ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. 2025ರ ಜನವರಿಯಲ್ಲಿ ‘ಎನ್‌ವಿಎಸ್-02’ ಉಪಗ್ರಹದ ಉಡಾವಣೆ ಯಶಸ್ವಿಯಾಗಿದ್ದರೂ ತಾಂತ್ರಿಕ ಕಾರಣದಿಂದ ಅದು ಕಕ್ಷೆಗೆ ಸೇರಲು ವಿಫಲಗೊಂಡಿತ್ತು.
2013ರಿಂದ ಇಲ್ಲಿಯವರೆಗೆ ‘ನಾವಿಕ್’ಗಾಗಿ ಇಸ್ರೋ ಒಟ್ಟು 11 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಇವುಗಳಲ್ಲಿ ಒಂಬತ್ತು ಮೊದಲ ಪೀಳಿಗೆಯ ಉಪಗ್ರಹಗಳಾಗಿದ್ದರೆ, ಎರಡು ಉಪಗ್ರಹಗಳು ಎರಡನೇ ಪೀಳಿಗೆಯವು.
ಜಿಪಿಎಸ್ ಒಂದೇ ಅಲ್ಲ
ಜಗತ್ತಿನಲ್ಲಿ ನಾಲ್ಕು ಜಾಗತಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಗಳಿವೆ. ಅವುಗಳೆಂದರೆ, ಅಮೆರಿಕದ ‘ಜಿಪಿಎಸ್’ (31 ಉಪಗ್ರಹಗಳು), ರಷ್ಯಾದ ‘ಜಿಎಲ್‌ಎನ್‌ಎಎನ್ಎಸ್ಎಸ್’ (24 ಉಪಗ್ರಹಗಳು), ಚೀನಾದ ‘ಬೈದೊ’ (40ಕ್ಕೂ ಹೆಚ್ಚು ಉಪಗ್ರಹಗಳು) ಮತ್ತು ಐರೋಪ್ಯ ಒಕ್ಕೂಟದ ಗೆಲಿಲಿಯೊ (30 ಉಪಗ್ರಹಗಳು).
ಜಪಾನ್ ನಾಲ್ಕು ಉಪಗ್ರಹಗಳನ್ನು ಒಳಗೊಂಡ ಕ್ಯುಜಡ್‌ಎಸ್‌ಎಸ್ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯನ್ನು ಒಳಗೊಂಡಿದೆ. ಪ್ರಾದೇಶಿಕ ಪಥದರ್ಶಕ ವ್ಯವಸ್ಥೆ ವ್ಯವಸ್ಥಿತವಾಗಿ ಕಾರ್ಯಾಚರಿಸಲು ಕನಿಷ್ಠ ಮೂರರಿಂದ ನಾಲ್ಕು ಉಪಗ್ರಹಗಳು ಅಗತ್ಯ.
ಭಾರತವು ಮೊದಲು ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ ರೂಪಿಸಿ ನಂತರ ಅದನ್ನು ಜಾಗತಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯಾಗಿ ಪರಿವರ್ತಿಸುವ ಯೋಜನೆ ಹೊಂದಿತ್ತು. ಆದರೆ, ಈಗ ಪ್ರಾದೇಶಿಕ ವ್ಯವಸ್ಥೆಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಪರಮಾಣು ಗಡಿಯಾರ ಎಂದರೇನು?
ಇದು ಪಥದರ್ಶಕ ಉಪಗ್ರಹದ ಬಹುಮುಖ್ಯ ಭಾಗ. ಅಣುಗಳ ಕಂಪನವನ್ನು ಆಧರಿಸಿ ಸಮಯವನ್ನು ಅತ್ಯಂತ ಖಚಿತವಾಗಿ ಅಳೆಯುವ ತಂತ್ರಜ್ಞಾನವೇ ಪರಮಾಣು ಗಡಿಯಾರ. ಪರಮಾಣುಗಳಲ್ಲಿ ಇರುವ ಎಲೆಕ್ಟ್ರಾನ್‌ಗಳ ಚಲನೆಯನ್ನು ಆಧರಿಸಿ ಸಮಯವನ್ನು ಅಳೆಯಲಾಗುತ್ತದೆ.ಈ ಗಡಿಯಾರಗಳಲ್ಲಿ ಪರಮಾಣುಗಳಲ್ಲಿರುವ ಎಲೆಕ್ಟ್ರಾನ್‌ಗಳನ್ನು ಪ್ರಚೋದಿಸಲಾಗುತ್ತದೆ. ಎಲೆಕ್ಟ್ರಾನ್ ಗಳಲ್ಲಿ ಬೇರೆ, ಬೇರೆ ಶಕ್ತಿಗಳು ಇರುವುದರಿಂದ ಇವನ್ನು ಒಂದೇ ನೆಲೆಗೆ ತಂದು ಅನಂತರ ಕಾಲವನ್ನು ಅಳೆಯಬೇಕು. ಇದಕ್ಕಾಗಿ ಲೇಸರ್ ಇಲ್ಲವೇ ಮೈಕ್ರೋವೇವ್‌ಗಳನ್ನು ಬಳಸುತ್ತಾರೆ. ಪರಮಾಣು ಗಡಿಯಾರಗಳಲ್ಲಿ ಸಾಮಾನ್ಯವಾಗಿ ಸೀಸಿಯಂ ಮತ್ತು ರುಬಿಡಿಯಂ ಪರಮಾಣುಗಳನ್ನು ಬಳಸುತ್ತಾರೆ.
ಪರಮಾಣು ಗಡಿಯಾರಗಳು ಯಾವುದೇ ಒಂದು ಪಥದರ್ಶಕ ಉಪಗ್ರಹ ವ್ಯವಸ್ಥೆಯ ಹೃದಯವಿದ್ದಂತೆ. ಇದು ವಿಫಲಗೊಂಡರೆ, ಆ ಉಪಗ್ರಹಗಳು ನಿಖರ ಸಮಯವನ್ನು ಅಳೆಯುವುದು ಸಾಧ್ಯವಿಲ್ಲ. ಆರಂಭದಲ್ಲಿ ಭಾರತವು ಪರಮಾಣು ಗಡಿಯಾರಗಳನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿತ್ತು. ನಂತರ ಅದರ ಮಹತ್ವ ಅರಿತ ಇಸ್ಕೊ, ಸ್ವದೇಶಿ ಪರಮಾಣು ಗಡಿಯಾರಗಳ ತಯಾರಿಕೆಯಲ್ಲಿ ತೊಡಗಿತ್ತು ಎನ್‌ವಿಎಸ್-01 ನಲ್ಲಿ ದೇಶಿಯಾವಾಗಿ ಅಭಿವೃದ್ಧಿ ಪಡಿಸಿದ ಗಡಿಯಾರಗಳನ್ನು ಬಳಸಲಾಗಿದೆ.
ಅತ್ಯಂತ ನಿಖರವಾದ ಸಮಯದ ಅಳತೆ ಬೇಡುವ ಪಥದರ್ಶಕ ಉಪಗ್ರಹ ವ್ಯವಸ್ಥೆ, ಸಂಶೋಧನೆ, ದೂರಸಂಪರ್ಕ, ಉದ್ಯಮಗಳು ಮುಂತಾದ ವಲಯಗಳಲ್ಲಿ ಪರಮಾಣು ಗಡಿಯಾರಗಳನ್ನು ಬಳಸುತ್ತಾರೆ.
ಮುಂದೇನು?
ಪಥದರ್ಶಕ ವ್ಯವಸ್ಥೆಯನ್ನು ಬಲಪಡಿಸುವ ಇರಾದೆ ಇಸ್ರೋಗೆ ಇದ್ದರೂ, ಹಳೆಯ ಉಪಗ್ರಹಗಳಿಗೆ ಬದಲಿ ಹೊಸ ಉಪಗ್ರಹಗಳನ್ನು ಕಳುಹಿಸುವ ಪ್ರಕ್ರಿಯೆ ನಿಧಾನವಾಗಿರುವುದು, 2025ರಲ್ಲಿ ಎನ್‌ವಿಎಸ್-02 ಉಪಗ್ರಹ ಉಡಾವಣಾ ವೈಫಲ್ಯ ಈ ಮಹತ್ವಾಕಾಂಕ್ಷಿ ಯೋಜನೆಗೆ ತೀವ್ರ ಹಿನ್ನಡೆ ಉಂಟುಮಾಡಿದೆ.
ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಮತ್ತು ಹಳೆಯ ಉಪಗ್ರಹಗಳ ಬದಲಿಗೆ 2026ರ ವರ್ಷಾಂತ್ಯದ ವೇಳೆಗೆ ಮೂರು ಉಪಗ್ರಹಗಳನ್ನು ಉಡಾವಣೆ ಮಾಡುವುದಾಗಿ ಇಸ್ರೋ ಈ ಹಿಂದೆ ಹೇಳಿತ್ತು ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ಏನಿದು ‘ನಾವಿಕ್ ?
ನಾವಿಕ್ (NaviC) ವಿಸ್ತ್ರತ ರೂಪ ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್‌ಸ್ಟಲೇಷನ್ ಕನ್ನಡದಲ್ಲಿ ಹೇಳುವುದಾದರೆ, ಭಾರತದ ಉಪಗ್ರಹಗಳ ಗುಚ್ಛದ ಮೂಲಕ ಪಥದರ್ಶನ. ಇದರ ಮೂಲ ಹೆಸರು ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್‌ಎನ್‌ಎಸ್‌ಎಸ್–ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಿಲೈಟ್ ಸಿಸ್ಟಮ್). ಇದು, ಅಮೆರಿಕದ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಮಾದರಿಯಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ). ಸ್ವತಂತ್ರವಾಗಿ ಮತ್ತು ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಪಥದರ್ಶಕ ವ್ಯವಸ್ಥೆ, 2016ರಲ್ಲಿ ಇದಕ್ಕೆ ‘ನಾವಿಕ್’ ಎಂದು ಮರುನಾಮಕರಣ ಮಾಡಲಾಯಿತು.
ಭೂಸ್ಥಿರ ಮತ್ತು ಭೂಸಮನ್ವಯ ಕಕ್ಷೆಗಳಲ್ಲಿ ಸುತ್ತುತ್ತಿರುವ ಏಳು ಉಪಗ್ರಹಗಳ ಗುಚ್ಛವು ಜಿಪಿಎಸ್ ಮಾದರಿಯಲ್ಲಿ ಪಥದರ್ಶನ (ದಿಕ್ಕು), ನಿಖರ ಸ್ಥಳದ ಮಾಹಿತಿ (ಪೊಸಿಷನಿಂಗ್) ಮತ್ತು ಸಮಯದ (ಟೈಮಿಂಗ್) ಮಾಹಿತಿ ನೀಡುತ್ತದೆ. ಭಾರತದ ಸಂಪೂರ್ಣ ಭೂಭಾಗ ಮತ್ತು ಸುತ್ತಲಿನ 1,500 ಕಿ.ಮೀ. ವ್ಯಾಪ್ತಿಯಲ್ಲಿ ನಿಖರ ಪಥದರ್ಶನ, ಸ್ಥಳದ ಮಾಹಿತಿ ನೀಡುವ ಸಾಮರ್ಥ್ಯ ಇದು ಹೊಂದಿದೆ (ಅಮೆರಿಕ, ರಷ್ಯಾ, ಚೀನಾ, ಯುರೋಪಿನ ಪಥದರ್ಶಕ ವ್ಯವಸ್ಥೆಯು ಇಡೀ ಜಗತ್ತನ್ನೇ ವ್ಯಾಪಿಸಿವೆ).
ಏನೆಲ್ಲಾ ಸೇವೆ?
ಪ್ರಮುಖವಾಗಿ ಎರಡು ಸೇವೆಗಳನ್ನು ಇದು ನೀಡುತ್ತದೆ. ಒಂದು ನಿಗದಿತ ಸ್ಥಳದ ಮಾಹಿತಿ ಸೇವೆ (ಸ್ಯಾಂಡರ್ಡ್ ಪೊಸಿಷನಿಂಗ್ ಸರ್ವಿಸ್ -ಎಸ್‌ಪಿಎಸ್). ಎಲ್ಲ ಬಳಕೆದಾರರಿಗೆ ಅಂದರೆ, ಸಾರ್ವಜನಿಕರಿಗೆ ಈ ಸೇವೆ ಲಭ್ಯ ಇನ್ನೊಂದು ನಿರ್ಬಂಧಿತ ಸೇವೆ (ರಿಟೈಡ್ ಸರ್ವಿಸ್-ಆರ್‌ಎಸ್) ಸೇನೆ ಮುಂತಾದ ಅಧಿಕೃತ ಬಳಕೆದಾರರಿಗೆ ಮಾತ್ರ ಈ ಸೇವೆಯನ್ನು ಇಸ್ಕೊ ನೀಡುತ್ತದೆ. ಇಸ್ಕೊ ಪ್ರಕಾರ, ಈ ವ್ಯವಸ್ಥೆಯು ಬಳಕೆದಾರ ಇರುವ ಸ್ಥಳದ ಮಾಹಿತಿಯನ್ನು ನಿಖರವಾಗಿ ಹೇಳುವ (ಗುರುತಿಸಿದ ಸ್ಥಳದ 20 ಮೀಟರ್ ವ್ಯಾಪ್ತಿಯ ಒಳಗೆ) ಸಾಮರ್ಥ್ಯವನ್ನು ಹೊಂದಿದೆ.
ಯಾವುದಕ್ಕೆ ಬಳಕೆ?
ದೇಶದಲ್ಲಿ ವಿಮಾನಯಾನ, ನೌಕಾಯಾನ, ರೈಲ್ವೆ, ಸೇನೆ ಉದ್ದೇಶಗಳು, ಪ್ರವಾಹ, ಭೂಕುಸಿತ, ಚಂಡಮಾರುತದಂತಹ ಪ್ರಾಕೃತಿಕ ವಿಕೋಪದ ತುರ್ತು ಪರಿಸ್ಥಿತಿಗಳಲ್ಲಿ ‘ನಾವಿಕ್ ಅನ್ನು ಬಳಸಲಾಗುತ್ತಿದೆ. ಜನಸಮಾನ್ಯರಿಗೆ ಇದು ಲಭ್ಯವಿದ್ದರೂ, ಇದನ್ನು ಬಳಸುವವರ ಸಂಖ್ಯೆ ಕಡಿಮೆ ಜಿಪಿಎಸ್‌ನಷ್ಟು ಜನಪ್ರಿಯತೆ ಪಡೆದಿಲ್ಲ.
ಈಗ ಏನಾಗಿದೆ?
ಪಥದರ್ಶಕ ವ್ಯವಸ್ಥೆಗಾಗಿ ಇಸ್ರೋ, 2013ರಿಂದ 2018ರವರೆಗೆ ಒಂಬತ್ತು ಉಪಗ್ರಹಗಳನ್ನು ಉಡಾವಣೆ ಮಾಡಿತ್ತು ಅದರಲ್ಲಿ ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿತ್ತು. ಪಥದರ್ಶಕ ಉಪಗ್ರಹಗಳಲ್ಲಿ ಪರಮಾಣು ಗಡಿಯಾರ ಅತ್ಯಂತ ಪ್ರಮುಖ ಸಾಧನವಾಗಿದ್ದು, ಅದು ಕಾರ್ಯಸ್ಥಗಿತಗೊಳಿಸಿದರೆ ಉಪಗ್ರಹದ ಕಾರ್ಯಾಚರಣೆ ಬಹುತೇಕ ಸ್ಥಗಿತಗೊಳ್ಳುತ್ತದೆ. 2025ರಲ್ಲಿ ಆರ್‌ಟಿಐ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಇಸ್ಕೊ, ಎಂಟರ ಪೈಕಿ ಐದು ಉಪಗ್ರಹಗಳಲ್ಲಿನ (1ಎ, 1ಸಿ, 1ಡಿ, 1ಇ, 1ಜಿ) ಪರಮಾಣು ಗಡಿಯಾರಗಳು ಸ್ಥಗಿತಗೊಂಡಿದ್ದು. (ಒಂದು ಉಪಗ್ರಹದಲ್ಲಿ ಮೂರು ಗಡಿಯಾರಗಳಿರುತ್ತವೆ) ನಾವಿಕ್‌ಗೆ ಅವುಗಳ ಸೇವೆ ಸಿಗುತ್ತಿಲ್ಲ ಎಂದು ಹೇಳಿತ್ತು.
ಇದೇ 13ರಂದು ಇಸ್ರೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಯೋಜನೆಯ ಅಡಿ ಉಡಾವಣೆ ಮಾಡಿದ್ದ 1ಎಫ್ ಉಪಗ್ರಹವು ತನ್ನ 10 ವರ್ಷಗಳ ಕಾರ್ಯಾಚರಣೆ ಅವಧಿಯನ್ನು ಮಾರ್ಚ್ 10ಕ್ಕೆ ಪೂರೈಸಿದೆ. ಅದರಲ್ಲಿರುವ ಪರಮಾಣು ಗಡಿಯಾರವು ಮಾರ್ಚ್ 13ರಂದು ಸ್ಥಗಿತಗೊಂಡಿದೆ. ಆದರೂ, ಉಪಗ್ರಹವು ಕಕ್ಷೆಯಲ್ಲಿ ಕಾರ್ಯಾಚರಣೆ ಮುಂದುವರಿಸಲಿದೆ. ಏಕಮುಖ ಸಂದೇಶ ಕಳುಹಿಸುವ ಉದ್ದೇಶಕ್ಕೆ ಇದು ಬಳಕೆಯಾಗಲಿದೆ’ ಎಂದು ಹೇಳಿದೆ.
ಇದರೊಂದಿಗೆ, ಬಾಕಿ ಉಳಿದಿದ್ದ ಮೂರು ಉಪಗ್ರಹಗಳ (1ಬಿ, 1ಎಫ್ ಮತ್ತು 1ಐ) ಪೈಕಿ ಮತ್ತೊಂದು ನಿಷ್ಕ್ರಿಯವಾದಂತಾಗಿದೆ. ಹೀಗಾಗಿ, ಮೊದಲು ಕಳುಹಿಸಿದ್ದ ಎರಡು ಉಪಗ್ರಹಗಳೊಂದಿಗೆ, 2023ರಲ್ಲಿ ಕಕ್ಷೆ ಸೇರಿಸಿರುವ ಎನ್‌ವಿಎಸ್-01 ಸೇರಿದಂತೆ ಒಟ್ಟು ಮೂರು ಉಪಗ್ರಹಗಳು ಮಾತ್ರ ‘ನಾವಿಕ್’ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಪತ್ರಿಕೆ-V: ಸಾಮಾನ್ಯ ಅಧ್ಯಯನ-4
Sources: Prajavani

















