ಸಂದರ್ಭ: ತೈಲದ ಮೇಲೆ ರಾಷ್ಟ್ರೀಯ ಹಿಡಿತ ಸಡಿಲಿಸುವ ಮಸೂದೆಯ ಕುರಿತ ಚರ್ಚೆಯನ್ನು ವೆನೆಜುವೆಲಾ ಆರಂಭಿಸಿತು. • ಸಮಾಜವಾದಿ ನಾಯಕ ಹೂಗೋ ಚಾವೆಜ್ ಅವರು 2007ರಲ್ಲಿ ತೈಲೋದ್ಯಮವನ್ನು ರಾಷ್ಟ್ರೀಕರಣಗೊಳಿ-ಸಿದ ನಂತರ ಮೊದಲ ಬಾರಿಗೆ ಈ ಕುರಿತ ಚರ್ಚೆನಡೆದಿದೆ. • ಈ ಮಸೂದೆಯು ತೈಲ ಉದ್ಯಮದಲ್ಲಿ ಖಾಸಗಿ ಕಂಪನಿಗಳಿಗೆ ಹೂಡಿಕೆ ಮಾಡಲು ಮತ್ತು ಹೂಡಿಕೆ ವಿವಾದಗಳಿಗೆ ಅಂತರರಾಷ್ಟ್ರೀಯ ಮಧ್ಯಸ್ಥಿಕೆಯನ್ನು ಸ್ಥಾಪಿಸಲು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. • ವೆನೆಜುವೆಲಾದ ಅಧ್ಯಕ್ಷರಾಗಿದ್ದ ನಿಕೋಲಸ್ ಮಡೂರೊ ಅವರನ್ನು ಈ ತಿಂಗಳ ಆರಂಭದಲ್ಲಿ ಟ್ರಂಪ್ ಆಡಳಿತವು ಸೆರೆ ಹಿಡಿದಿತ್ತು.
ಸಂದರ್ಭ: ವಿಶ್ವ ಆರೋಗ್ಯ ಸಂಸ್ಥೆಯಿಂದ(ಡಬ್ಲ್ಯುಎಚ್ಒ) ಹೊರಬರುವ ಪ್ರಕ್ರಿಯೆಯನ್ನು ಅಮೆರಿಕ ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರ.
ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡವೇಳೆ, ‘ಅಮೆರಿಕವು ವಿಶ್ವ ಆರೋಗ್ಯಸಂಸ್ಥೆಯೊಂದಿಗೆ ಹೊಂದಿರುವ 78 ವರ್ಷಗಳ ನಂಟನ್ನು ಕೊನೆಗೊಳಿಸಲಿದೆ’ ಎಂದು ಘೋಷಿಸಿದ್ದರು. ಅದು, ಈಗ ಕಾರ್ಯಗತಗೊಂಡಂತಾಗಿದೆ.
ಸಂಸ್ಥೆಗೆ ಅಮೆರಿಕ ತನ್ನ ಪಾಲಿನ ವಂತಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಈ ಮೊತ್ತ 13 ಕೋಟಿ ಡಾಲರ್ ಗೂ (ಅಂದಾಜು ₹1,200 ಕೋಟಿ) ಹೆಚ್ಚು ಎಂದುಡಬ್ಲ್ಯುಎಚ್‌ಒಹೇಳಿದೆ.
‘ಈ ಬೆಳವಣಿಗೆ ಹಲವು ಸಮಸ್ಯೆಗಳಿಗೆ ಕಾರಣವಾಗಲಿದೆ.ವಿವಿಧ ದೇಶಗಳಲ್ಲಿ ಕಂಡುಬರುವ ಸೋಂಕು/ರೋಗಗಳ ಕುರಿತು ಅಧ್ಯಯನ ಕೈಗೊಳ್ಳಲು, ಔಷಧಿ/ಲಸಿಕೆ ಅಭಿವೃದ್ಧಿಪಡಿಸುವುದಕ್ಕೆ ಅಮೆರಿಕದ ವಿಜ್ಞಾನಿಗಳಿಗೆ ಹಾಗೂ ಔಷಧ ಕಂಪನಿಗಳಿಗೆ ಕಷ್ಟವಾಗಲಿದೆ’ ಎಂದುಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಸಾರ್ಜನಿಕ ಆರೋಗ್ಯಕಾನೂನು ತಜ್ಞ ಲಾರೆನ್ಸ್ ಗಾಸ್ಪಿನ್ ಹೇಳಿದ್ದಾರೆ.
ಸಂದರ್ಭ: ‘ಪ್ರಶ್ನೆಗಾಗಿ ಲಂಚ’ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾಮೊಯಿತ್ರಾ ವಿರುದ್ಧಆರೋಪ ಪಟ್ಟಿಸಲ್ಲಿಸಲು ಸಿಬಿಐಗೆ ಅನುಮತಿ ನೀಡುವ ವಿಚಾರವನ್ನು ಕಾನೂನಿನ ಪ್ರಕಾರ ಪರಿಗಣಿಸಲು ಲೋಕಪಾಲಕ್ಕೆ ನೀಡಿದ್ದ ಕಾಲಾವಕಾಶವನ್ನು ದೆಹಲಿ ಹೈಕೋರ್ಟ್ ಎರಡು ತಿಂಗಳು ವಿಸ್ತರಿಸಿದೆ.
ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ಪೀಠವು, ಸಮಯ ವಿಸ್ತರಣೆ ಕೋರಿ ಇನ್ನು ಮುಂದೆ ಸಲ್ಲಿಸುವ ಯಾವುದೇ ಮನವಿಯನ್ನು ಪರಿಗಣಿಸುವುದಿಲ್ಲ ಎಂದು ಹೇಳಿತು.
ಮಹುವಾ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಪರ ವಾದ ಮಂಡಿಸಿದ ವಕೀಲರು, ‘ಕಾಲಾವಕಾಶವನ್ನು ಎರಡು ತಿಂಗಳು ವಿಸ್ತರಿಸಬೇಕೆಂಬ ಲೋಕಪಾಲದ ಮನವಿಯನ್ನು ನಾವು ವಿರೋಧಿಸುತ್ತಿಲ್ಲ’ ಎಂದು ಹೇಳಿದರು.
ಲೋಕಪಾಲ್ (Lokalpal) ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವ ಅತ್ಯುನ್ನತ ಸಂಸ್ಥೆಯಾಗಿದೆ. ಲೋಕಪಾಲ್ ಕಾಯ್ದೆ 2013 ರಲ್ಲಿ ಅಂಗೀಕಾರವಾಯಿತು. 1 ಜನವರಿ 2014 ರಿಂದ ಜಾರಿಗೆ ಬಂದಿತು. ಮೊದಲ ಅಧ್ಯಕ್ಷರು: ಪಿನಾಕಿ ಚಂದ್ರ ಘೋಷ್ (P.C. Ghosh).
ಲೋಕಪಾಲ್: ತನಿಖೆ ಮತ್ತು ವಿಚಾರಣೆಯ ಕಾಲಮಿತಿ
ಲೋಕಪಾಲ್ ಸಂಸ್ಥೆಯ ಇತರ ಪ್ರಮುಖ ಅಂಶಗಳು:
ಹಂತ
ಕಾಲಾವಕಾಶ (Time Limit)
ವಿಸ್ತರಣೆ (Extension)
ಪ್ರಾಥಮಿಕ ವಿಚಾರಣೆ (Preliminary Inquiry)
30 ದಿನಗಳು
ಅಗತ್ಯವಿದ್ದರೆ ಲಿಖಿತ ಕಾರಣಗಳೊಂದಿಗೆ 3 ತಿಂಗಳವರೆಗೆ ವಿಸ್ತರಿಸಬಹುದು.
ತನಿಖಾ ವರದಿ ಸಲ್ಲಿಕೆ (Inquiry Report)
ಪ್ರಾಥಮಿಕ ವಿಚಾರಣೆ ಮುಗಿದ ನಂತರ 60 ದಿನಗಳೊಳಗೆ ಲೋಕಪಾಲ್‌ಗೆ ಸಲ್ಲಿಸಬೇಕು.
–
ಪೂರ್ಣ ಪ್ರಮಾಣದ ತನಿಖೆ (Investigation)
6 ತಿಂಗಳು
ವಿಶೇಷ ಸಂದರ್ಭಗಳಲ್ಲಿ ಏಕಕಾಲಕ್ಕೆ 6 ತಿಂಗಳವರೆಗೆ ವಿಸ್ತರಿಸಬಹುದು.
ವಿಚಾರಣೆ ಪೂರ್ಣಗೊಳಿಸುವುದು (Trial)
1 ವರ್ಷ
ವಿಶೇಷ ಕಾರಣಗಳಿದ್ದರೆ ಗರಿಷ್ಠ 2 ವರ್ಷಗಳವರೆಗೆ ವಿಸ್ತರಿಸಬಹುದು.
ರಚನೆ: ಒಬ್ಬರು ಅಧ್ಯಕ್ಷರು ಮತ್ತು ಗರಿಷ್ಠ 8 ಜನ ಸದಸ್ಯರಿರುತ್ತಾರೆ (ಇದರಲ್ಲಿ 50% ನ್ಯಾಯಾಂಗ ಸದಸ್ಯರು ಮತ್ತು 50% SC/ST/OBC/ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿರಬೇಕು).
ವ್ಯಾಪ್ತಿ (Jurisdiction): ಪ್ರಧಾನ ಮಂತ್ರಿ (ಕೆಲವು ವಿನಾಯಿತಿಗಳೊಂದಿಗೆ), ಕೇಂದ್ರ ಸಚಿವರು, ಸಂಸತ್ ಸದಸ್ಯರು ಮತ್ತು ಗ್ರೂಪ್ A, B, C, D ಅಧಿಕಾರಿಗಳು ಲೋಕಪಾಲ್ ವ್ಯಾಪ್ತಿಗೆ ಬರುತ್ತಾರೆ.
ಆಯ್ಕೆ ಸಮಿತಿ: ಪ್ರಧಾನ ಮಂತ್ರಿ (ಅಧ್ಯಕ್ಷರು), ಲೋಕಸಭೆಯ ಸ್ಪೀಕರ್, ಲೋಕಸಭೆಯ ವಿರೋಧ ಪಕ್ಷದ ನಾಯಕರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು (CJI) ಅಥವಾ ಅವರು ಸೂಚಿಸಿದ ನ್ಯಾಯಾಧೀಶರು ಮತ್ತು ಒಬ್ಬ ಖ್ಯಾತ ನ್ಯಾಯಶಾಸ್ತ್ರಜ್ಞರು ಈ ಸಮಿತಿಯಲ್ಲಿರುತ್ತಾರೆ.
ಸಂದರ್ಭ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್ ಪಿಂಚಣಿ ಯೋಜನೆಯನ್ನು 2030-31ನೇ ಹಣಕಾಸು ವರ್ಷದ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. • ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು, ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕೆ ರೂಪಿಸಿರುವ ಯೋಜನೆಗಳಿಗೆ ಆರ್ಥಿಕ ನೆರವು ಮುಂದುವರಿಸುವುದಕ್ಕೂ ಅನುಮೋದನೆ ನೀಡಿದೆ ಎಂದು `ಪ್ರಕಟಣೆ ತಿಳಿಸಿದೆ. • ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯ ದಲ್ಲಿ ಆದಾಯ ಭದ್ರತೆ ಒದಗಿಸುವ ದೃಷ್ಟಿಯಿಂದ ಅಟಲ್ ಪಿಂಚಣಿ ಯೋಜನೆಯನ್ನು 2015ರ ಮೇ 9ರಂದು ಆರಂಭಿಸಲಾಯಿತು. ಪ್ರಸ್ತುತ, 8.66 ಕೋಟಿ ಜನರು ಈ ಯೋಜನೆಯಡಿ ನೋಂದಾಯಿಸಿ ಕೊಂಡಿದ್ದಾರೆ. • ನೋಂದಾಯಿತ ಸದಸ್ಯರು ಪಾವತಿಸಿದ ವಂತಿಗೆ ಆಧಾರದಲ್ಲಿ, ಫಲಾನುಭವಿಗೆ 60 ವರ್ಷ ತುಂಬಿದ ನಂತರ ಮಾಸಿಕ ಕನಿಷ್ಠ ಒಂದು ಸಾವಿರ ರೂಪಾಯಿಯಿಂದ ₹5 ಸಾವಿರ ವರೆಗೆ ಪಿಂಚಣಿ ನೀಡಲಾಗುತ್ತದೆ.
ಅಂಶ
ವಿವರಗಳು
ಯೋಜನೆಯ ಹೆಸರು
ಅಟಲ್ ಪಿಂಚಣಿ ಯೋಜನೆ (Atal Pension Yojana)
ಪ್ರಾರಂಭ
9 ಮೇ 2015 (ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿಯವರಿಂದ ಚಾಲನೆ)
ಉಸ್ತುವಾರಿ ಸಂಸ್ಥೆ
PFRDA (Pension Fund Regulatory and Development Authority)
ಅರ್ಹತೆ
ಭಾರತೀಯ ನಾಗರಿಕನಾಗಿರಬೇಕು.
ವಯೋಮಿತಿ
18 ರಿಂದ 40 ವರ್ಷಗಳು.
ಪಿಂಚಣಿ ಲಭ್ಯತೆ
60 ವರ್ಷ ತುಂಬಿದ ನಂತರ.
ಪಿಂಚಣಿ ಸ್ಲ್ಯಾಬ್‌ಗಳು
₹1,000, ₹2,000, ₹3,000, ₹4,000 ಮತ್ತು ₹5,000 (ತಿಂಗಳಿಗೆ).
ವಂತಿಗೆ ಅವಧಿ
ಕನಿಷ್ಠ 20 ವರ್ಷಗಳ ಕಾಲ ವಂತಿಗೆ (Contribution) ಪಾವತಿಸಬೇಕು.
ತೆರಿಗೆದಾರರಿಗೆ ನಿಯಮ
1 ಅಕ್ಟೋಬರ್ 2022 ರಿಂದ, ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಸೇರಲು ಅರ್ಹರಲ್ಲ.
ನಾಮಿನಿ ಸೌಲಭ್ಯ
ಚಂದಾದಾರರ ಮರಣದ ನಂತರ ಸಂಗಾತಿಗೆ (Spouse) ಪಿಂಚಣಿ ಸಿಗುತ್ತದೆ. ಇಬ್ಬರ ಮರಣದ ನಂತರ ಕಾರ್ಪಸ್ ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ.
ಹೂಡಿಕೆ ವಿಧಾನ
ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕವಾಗಿ ಬ್ಯಾಂಕ್ ಖಾತೆಯಿಂದ ‘ಆಟೋ ಡೆಬಿಟ್’ ಮೂಲಕ ಹಣ ಕಡಿತವಾಗುತ್ತದೆ.
ಸಂದರ್ಭ: 2025ನೇ ಸಾಲಿನ ‘ಇಂದಿರಾ ಗಾಂಧಿ ಶಾಂತಿ’ ಪ್ರಶಸ್ತಿಯು ಮೊಜಾಂಬಿಕದ ಹೋರಾಟಗಾರ್ತಿ ಗ್ರಾಸಾಮಾ ಶೆಲ್ಅವರಿಗೆ ಸಂದಿದೆ.
ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ ವಲಯ ಹಾಗೂ ಕಷ್ಟಕರ ಸಂದರ್ಭಗಳಲ್ಲಿ ಮಾನವೀಯ ನೆರವು ಮತ್ತು ಆರ್ಥಿಕ ಸಬಲೀಕರಣ ಕ್ಷೇತ್ರಗಳಲ್ಲಿ ಮಾಡಿದ ಕಾರ್ಯಗಳನ್ನು ಪರಿಗಣಿಸಿ ರಾಷ್ಟ್ರೀಯ ಭದ್ರತೆಯ ಮಾಜಿ ಸಲಹೆಗಾರ ಶಿವಶಂಕರ್ ಮೆನನ್ ಅವರ ಅಧ್ಯಕ್ಷತೆಯ ಸಮಿತಿಯು ಗ್ರಾಸಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಬುಧವಾರ ತಿಳಿಸಿದೆ.
ಪ್ರಶಸ್ತಿಯು ₹1 ಕೋಟಿ ಮೊತ್ತ. ಫಲಕ ಹಾಗೂ ಪ್ರಶಂಸನಾ ಪತ್ರ ಒಳಗೊಂಡಿದೆ. ಮೊಜಾಂಬಿಕದ ಮೊದಲ ಅಧ್ಯಕ್ಷ ಸಮೋರಾ ಮೊಯಿಸೆಸ್ ಮಾಶೆಲ್ ಅವರನ್ನು ಗ್ರಾಸಾ ಮದುವೆ ಯಾಗಿದ್ದರು. ಸಮೋರಾ 1986ರಲ್ಲಿ ನಿಧನರಾದ ಬಳಿಕ ದಕ್ಷಿಣ ಆಫ್ರಿಕಾದ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರನ್ನು ವಿವಾಹವಾದರು. ಮೊಜಾಂಬಿಕ ಶಿಕ್ಷಣ ಮತ್ತು ಸಂಸ್ಕೃತಿ ಖಾತೆಯ ಮೊದಲ ಸಚಿವರಾಗಿಯೂ ಅವರು ಕಾರ್ಯನಿರ್ವಹಿಸಿದರು.
ಸಂದರ್ಭ: ಭಾರತದ ತಲಾವಾರು ಒಟ್ಟು ರಾಷ್ಟ್ರೀಯ ಆದಾಯದ ಬಗ್ಗೆ ಎಸ್‌ಬಿಐ ಅಂದಾಜು ಇನ್ನು ನಾಲ್ಕು ವರ್ಷಗಳಲ್ಲಿ ಭಾರತವು ಮೇಲ್ಮಧ್ಯಮ ವರ್ಗದ ಆದಾಯ ಹೊಂದಿರುವ ದೇಶವಾಗಿ ಪರಿವರ್ತನೆ ಕಾಣಲಿದೆ, ಆ ಮೂಲಕ ಚೀನಾ ಮತ್ತು ಇಂಡೊನೇಷ್ಯಾ ದೇಶಗಳ ಸಾಲಿಗೆ ಸೇರಲಿದೆ ಎಂದು ಎಸ್‌ಬಿಐ ರಿಸರ್ಚ್‌ನ ವರದಿಯು ಅಂದಾಜು ಮಾಡಿದೆ.
ಅಷ್ಟೇ ಅಲ್ಲ, 2028ರ ಸುಮಾರಿಗೆ ಭಾರತವು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಮೂರನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿ ಬೆಳೆಯಲಿದೆ ಎಂದೂ ಹೇಳಿದೆ. ಮೊದಲ ಸ್ಥಾನದಲ್ಲಿ ಅಮೆರಿಕ. ಎರಡನೆಯ ಸ್ಥಾನದಲ್ಲಿ ಚೀನಾ ಇರಲಿವೆ. 1990ರಲ್ಲಿ 14ನೇ ಸ್ಥಾನದಲ್ಲಿದ್ದ ಭಾರತದ ಅರ್ಥ ವ್ಯವಸ್ಥೆಯ ಗಾತ್ರವು 2025ರಲ್ಲಿ ನಾಲ್ಕನೆಯ ಸ್ಥಾನಕ್ಕೆ ಏರಿಕೆ ಕಂಡಿದೆ.
ತಲಾವಾರು ಒಟ್ಟು ರಾಷ್ಟ್ರೀಯ ಆದಾಯವನ್ನು ಅಮೆರಿಕದ ಡಾಲರ್ ಲೆಕ್ಕದಲ್ಲಿ ಅಂದಾಜಿಸಿ ದೇಶಗಳನ್ನು ಕಡಿಮೆ ಆದಾಯ, ಕೆಳ ಮಧ್ಯಮ ಆದಾಯ, ಮೇಲ್ಮಧ್ಯಮ ಆದಾಯ, ಹೆಚ್ಚಿನ ಆದಾಯದ ರಾಷ್ಟ್ರಗಳು ಎಂದು ವಿಶ್ವ ಬ್ಯಾಂಕ್ ವರ್ಗೀಕರಿಸಿದೆ.
1990 ರಲ್ಲಿ ವಿಶ್ವ ಬ್ಯಾಂಕ್ ಒಟ್ಟು 218 ದೇಶಗಳನ್ನು ಹೀಗೆ ವರ್ಗೀಕರಿಸಿತ್ತು. 51 ದೇಶಗಳು ಕಡಿಮೆ ಆದಾಯದ ವರ್ಗದಲ್ಲಿ ಇದ್ದವು, 56 ದೇಶಗಳು ಕೆಳ ಮಧ್ಯಮ ಆದಾಯದ ವರ್ಗದಲ್ಲಿ, 29 ದೇಶಗಳು ಮೇಲ್ಮಧ್ಯಮ ಆದಾಯದ ವರ್ಗದಲ್ಲಿ ಹಾಗೂ 39 ದೇಶಗಳು ಹೆಚ್ಚಿನ ಆದಾಯದ ವರ್ಗದಲ್ಲಿ ಇದ್ದವು.
2024 ಪ್ರಕಟವಾಗಿರುವ ಅಂಕಿ ಅಂಶಗಳ ಪ್ರಕಾರ 26 ದೇಶಗಳು ಮಾತ್ರವೇ ಕಡಿಮೆ ಆದಾಯದ ವರ್ಗದಲ್ಲಿವೆ. 87 ದೇಶಗಳು ಹೆಚ್ಚಿನ ಆದಾಯದ ವರ್ಗಕ್ಕೆ ಬಂದಿವೆ.
ಕಡಿಮೆ ಆದಾಯದ ವರ್ಗದಲ್ಲಿ ಇದ್ದ ಭಾರತವು ಕೆಳ ಮಧ್ಯಮ ಆದಾಯ ವರ್ಗಕ್ಕೆ ಬರಲು 60 ವರ್ಷ ತೆಗೆದುಕೊಂಡಿತು. 1962ರಲ್ಲಿ 90 ಡಾಲರ್‌ನಷ್ಟು ಇದ್ದ ಭಾರತದ ತಲಾ ವಾರು ಒಟ್ಟು ರಾಷ್ಟ್ರೀಯ ಆದಾಯವು 2007ರಲ್ಲಿ 910 ಡಾಲರ್‌ಗೆ ಹೆಚ್ಚಾಗಿದೆ. ಅದು ವಾರ್ಷಿಕವಾಗಿ ಶೇ 5.3ರಷ್ಟು ಬೆಳವಣಿಗೆ ಕಂಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ವಿಕಸಿತ ಭಾರತ ಗುರಿಯ ಪ್ರಕಾರ 2047ರ ವೇಳೆಗೆ ದೇಶದ ತಲಾವಾರು ಒಟ್ಟು ರಾಷ್ಟ್ರೀಯ ಆದಾಯವನ್ನು 13.936 ಡಾಲರ್ಗೆಗೆ ಹೆಚ್ಚಿಸಬೇಕು ಎಂದಾದರೆ, ದೇಶದ ತಲಾವಾರು ಒಟ್ಟು ರಾಷ್ಟ್ರೀಯ ಆದಾಯವು ಶೇ 7.5ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು (ಸಿಎಜಿಆರ್) ದಾಖಲಿಸಬೇಕು. ರ ಗುರಿಯನ್ನು ಸಾಧಿಸಲು ಸಾಧ್ಯವಿದೆ ಎಂಬಂತೆ ಕಾಣುತ್ತಿದೆ. ಏಕೆಂದರೆ 2001ರಿಂದ 2024ರವರೆಗೆ ಅದು ಶೇ 8.3ರಷ್ಟು ಸಿಎಜಿಆರ್ ದರದಲ್ಲಿ ಬೆಳೆದಿದೆ’ ಎಂದು ವರದಿ ವಿವರಿಸಿದೆ.
ಸಂದರ್ಭ: ಭಾರತ ಮತ್ತು ಯುಎಇ 2032ರವರೆಗೆ ಪ್ರತಿ ವರ್ಷವೂ ಸುಮಾರು ₹18.17 ಲಕ್ಷ ಕೋಟಿ (200 ಬಿಲಿಯನ್ ಡಾಲರ್) ವ್ಯಾಪಾರ ನಡೆಸುವ ಗುರಿ ನಿಗದಿಪಡಿಸಿವೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮೂರೂವರೆ ಗಂಟೆಗಳಿಗಾಗಿ ಭಾರತಕ್ಕೆ ಭೇಟಿ ನೀಡಿದ್ದರು.
ಇವರೊಂದಿಗೆ ಅಧ್ಯಕ್ಷರ ತಾಯಿ ಶೇಖ್ ಫಾತಿಮಾ ಬಿಂತ್ ಮುಬಾರಕ್ ಅಲ್ ಕೆತ್ತಿ ಅವರೂ ಆಗಮಿಸಿದ್ದರು. ತಾಯಿ ಫಾತಿಮಾ ಅವರಿಗೆ ಕಾಶ್ಮೀರದ ಪಶ್ಚಿನಾ ಶಾಲನ್ನು ಮತ್ತು ಕಾಶ್ಮೀರ ಕಣಿವೆಯಲ್ಲಿ ಬೆಳೆದ ಕೇಸರಿಯನ್ನು ತೆಲಂಗಾಣದಲ್ಲಿ ತಯಾರಿಸಿದ ಬೆಳ್ಳಿ ಬಾಕ್ಸ್ ಗಳಲ್ಲಿ ಇರಿಸಿ ಪ್ರಧಾನಿ ಮೋದಿ ಉಡುಗೊರೆ ನೀಡಿದರು.
ಪ್ರಧಾನಿ ನಿವಾಸದಲ್ಲಿಯೇ ಇಬ್ಬರು ನಾಯಕರು ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದರು. ಇಂಧನ, ಬಾಹ್ಯಾಕಾಶ ಮತ್ತು ನಾಗರಿಕ ಪರಮಾಣು ವಲಯದಲ್ಲಿ ಪರಸ್ಪರ ಸಹಕಾರ ನೀಡುವ ಬಗ್ಗೆ ಚರ್ಚಿಸಲಾಯಿತು.
ಪ್ರತಿ ವರ್ಷವೂ 5 ಲಕ್ಷ ಟನ್‌ನಷ್ಟು ದ್ರವೀಕೃತ ನೈಸರ್ಗಿಕ ಅನಿಲವನ್ನು (ಎಲ್‌ಎನ್‌ಜಿ) ಭಾರತಕ್ಕೆ ಪೂರೈಕೆ ಮಾಡುವ ದೀರ್ಘಾವಧಿ ಒಪ್ಪಂದ ಮಾಡಿಕೊಳ್ಳಲಾಯಿತು.
ಭಾರತ – ಯುಎಇ ಸಂಬಂಧಗಳ ಮುಖ್ಯಾಂಶಗಳು (2026)
ವಲಯ
ಪ್ರಮುಖ ಅಂಶಗಳು
ವ್ಯಾಪಾರ ಮತ್ತು ಆರ್ಥಿಕತೆ
2022ರಲ್ಲಿ CEPA ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಪ್ರಸ್ತುತ ದ್ವಿಪಕ್ಷೀಯ ವ್ಯಾಪಾರವು $100 ಬಿಲಿಯನ್ ದಾಟಿದ್ದು, 2032ರ ವೇಳೆಗೆ ಇದನ್ನು $200 ಬಿಲಿಯನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಇಂಧನ ಭದ್ರತೆ
ಯುಎಇ ಭಾರತದ ಪ್ರಮುಖ ತೈಲ ಮತ್ತು ಅನಿಲ ಪೂರೈಕೆದಾರ. ಇತ್ತೀಚೆಗೆ 2028ರಿಂದ ಜಾರಿಗೆ ಬರುವಂತೆ 10 ವರ್ಷಗಳ ಕಾಲ ವಾರ್ಷಿಕ 5 ಲಕ್ಷ ಟನ್ LNG ಪೂರೈಕೆಯ ಒಪ್ಪಂದ ಮಾಡಿಕೊಳ್ಳಲಾಗಿದೆ.
ರಕ್ಷಣಾ ಸಹಕಾರ
ಜನವರಿ 2026ರಲ್ಲಿ ‘ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆ’ (Strategic Defence Partnership) ಗೆ ಸಹಿ ಹಾಕಲಾಗಿದೆ. ಇದು ಜಂಟಿ ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಸೈಬರ್ ಭದ್ರತೆಗೆ ಒತ್ತು ನೀಡುತ್ತದೆ.
ತಂತ್ರಜ್ಞಾನ ಮತ್ತು ಬಾಹ್ಯಾಕಾಶ
ಭಾರತದ IN-SPACe ಮತ್ತು ಯುಎಇ ಬಾಹ್ಯಾಕಾಶ ಸಂಸ್ಥೆ ನಡುವೆ ಒಪ್ಪಂದ ನಡೆದಿದೆ. ಭಾರತದಲ್ಲಿ ಸೂಪರ್ ಕಂಪ್ಯೂಟಿಂಗ್ ಕ್ಲಸ್ಟರ್ ಮತ್ತು ಡಿಜಿಟಲ್ ಡೇಟಾ ಎಂಬಸ್ಸಿ ಸ್ಥಾಪಿಸಲು ನಿರ್ಧರಿಸಲಾಗಿದೆ.
ಹಣಕಾಸು ಮತ್ತು ಡಿಜಿಟಲ್
ಭಾರತದ UPI ಮತ್ತು ಯುಎಇಯ AANI ಪಾವತಿ ವ್ಯವಸ್ಥೆಗಳನ್ನು ಲಿಂಕ್ ಮಾಡಲಾಗುತ್ತಿದೆ. ಗುಜರಾತ್‌ನ GIFT City ಯಲ್ಲಿ ಯುಎಇ ಕಂಪನಿಗಳು (FAB, DP World) ಕಾರ್ಯಾಚರಣೆ ಆರಂಭಿಸಿವೆ.
ಸಾಂಸ್ಕೃತಿಕ ಮತ್ತು ಶಿಕ್ಷಣ
ಅಬುಧಾಬಿಯಲ್ಲಿ ‘ಹೌಸ್ ಆಫ್ ಇಂಡಿಯಾ’ (ಮ್ಯೂಸಿಯಂ) ಸ್ಥಾಪನೆ. ಅಬುಧಾಬಿಯಲ್ಲಿ ಈಗಾಗಲೇ IIT Delhi ತನ್ನ ಕ್ಯಾಂಪಸ್ ಆರಂಭಿಸಿದೆ.
ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 7.2ರಷ್ಟಾಗುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ತನ್ನ ಆಂದಾಜನ್ನು ಪರಿಷ್ಕರಿಸಿದೆ. • ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದು, ತೆರಿಗೆ ಸುಧಾರಣೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳ ಗಳಿಕೆಯಲ್ಲಿ ಹೆಚ್ಚಳವಾಗಿರುವುದು ಜಿಡಿಪಿ ಹೆಚ್ಚಳಕ್ಕೆ ನೆರವಾಗಲಿದೆ ಎಂದು ಹೇಳಿದೆ. ಭಾರತವು ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಲಿದೆ ಎಂದು ಹೇಳಿದೆ. • ಜೂನ್ನಲ್ಲಿ ವಿಶ್ವಬ್ಯಾಂಕ್ ಭಾರತದ ಜಿಡಿಪಿ ಬೆಳವಣಿಗೆ ಶೇ 6.3ರಷ್ಟಾಗಲಿದೆ ಎಂದು ಹೇಳಿತ್ತು. • 2026-27ರಲ್ಲಿ ದೇಶದ ಜಿಡಿಪಿ ಶೇ 6.5 ಮತ್ತು 2027-28ರಲ್ಲಿ ಶೇ 6.6ರಷ್ಟಾಗಬಹುದು ಎಂದು ಹೇಳಿದೆ. • ಅಮೆರಿಕದ ಸುಂಕ ಹೆಚ್ಚಳ ಮತ್ತು ವ್ಯಾಪಾರ ಸಂಬಂಧಿತ ಅನಿಶ್ಚಿತತೆ ಯಿಂದಾಗಿ ಬಂಡವಾಳದ ಹೊರಹರಿವು ಹೆಚ್ಚಾಗಿದೆ. ಇದರಿಂದ ಮೇ ತಿಂಗಳಿನಿಂದ ಭಾರತದ ರೂಪಾಯಿ ಮೌಲ್ಯ ಕುಸಿದಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. • ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮೊದಲ ಅಂದಾಜಿನ ಪ್ರಕಾರ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ 7.4ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿತ್ತು.