ಸಂದರ್ಭ:‘ಸಂಸ್ಕರಿಸಿದನೀರಿನಗುಣಮಟ್ಟದಖಾತ್ರಿಗಾಗಿರಾಷ್ಟ್ರಮಟ್ಟದಲ್ಲಿಏಕರೂಪದನೀತಿರೂಪಿಸಲುಕೇಂದ್ರಸರ್ಕಾರಚಿಂತನೆನಡೆಸಿದೆ’ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ತಿಳಿಸಿದರು.
ನೀತಿ ಆಯೋಗವು ಬೆಂಗಳೂರು ಜಲ ಮಂಡಳಿಯ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿರುವ ಭಾರತದಲ್ಲಿ ಸಂಸ್ಕರಿಸಿದ ನೀರಿನ ಪುನರ್‌ಬಳಕೆ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಗರೀಕರಣದ ಪ್ರಭಾವದಿಂದಾಗಿ ನೀರಿನ ಬಳಕೆ ಪ್ರಮಾಣ ಹೆಚ್ಚಳವಾಗಿದೆ. ಆದರೆ, ಭಾರತದಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ. ಅಂತರ್ಜಲ ಹಾಗೂ ನದಿ ನೀರಿನ ಅವಲಂಬನೆ ಜತೆಗೆ ಬಳಸಿದ ನೀರಿನ ಸಂಸ್ಕರಣೆಗೆ ಒತ್ತು ನೀಡಲಾಗುತ್ತಿದೆ.
ಈಗಾಗಲೇಕರ್ನಾಟಕವೂಸೇರಿ 11 ರಾಜ್ಯಗಳಲ್ಲಿಸಂಸ್ಕರಿಸಿದನೀರಿನಪುನರ್ಬಳಕೆನೀತಿಇದೆ. 2030ರೊಳಗೆ ಶೇ 50, 2045ರ ಹೊತ್ತಿಗೆ ಶೇ 100ರಷ್ಟು ನೀರಿನ ಪುನರ್ ಬಳಕೆಯನ್ನು ಮಾಡುವತ್ತ ದೇಶ ಹೆಜ್ಜೆ ಇಡಲೇಬೇಕಾಗಿರುವುದರಿಂದ ಏಕರೂಪದ ನೀತಿ ಜಾರಿಗೆ ಪ್ರಯತ್ನ ನಡೆದಿದೆ’ ಎಂದು ವಿವರಿಸಿದರು.
‘ಭಾರತದ ನಗರ ಪ್ರದೇಶಗಳಲ್ಲಿ ಪ್ರತಿ ನಿತ್ಯ 72,368 ಮಿಲಿಯನ್ ಲೀಟರ್ (ಎಂಎಲ್‌ಡಿ) ಕೊಳಚೆ ನೀರು ಉತ್ಪಾದನೆಯಾಗುತ್ತಿದೆ. ಇದರಲ್ಲಿ 31,885 ಎಂಎಲ್‌ಡಿ ಸಂಸ್ಕರಣೆ ಯಾಗುತ್ತಿದೆ. ಶೇ 60ರಷ್ಟು ಇನ್ನೂ ಸಂಸ್ಕರಣೆಯಾಗಬೇಕಿದೆ. ಬೆಂಗಳೂರಿನಲ್ಲಿನಿತ್ಯ 2,200 ಎಂಎಲ್ಡಿಕೊಳಚೆನೀರುಸಂಗ್ರಹವಾಗುತ್ತಿದ್ದು 1,300 ಎಂಎಲ್ಡಿಸಂಸ್ಕರಣೆಯಾಗುತ್ತಿದೆ. ಈ ಕಾರ್ಯ ಶ್ಲಾಘನೀಯ’ ಎಂದರು.
ಇದಕ್ಕಾಗಿ ಐದು ವರ್ಷಗಳಿಗೆ ₹518.27 ಕೋಟಿ ನಿಗದಿ ಮಾಡಲಾಗಿದೆ. ಬೆಂಗಳೂರಿನಲ್ಲಿ 15 ಸಾವಿರ ಮತ್ತು ರಾಜ್ಯದ ಇತರ ನಗರಗಳಲ್ಲಿ 10 ಸಾವಿರ ನವೋದ್ಯಮಗಳು ಸ್ಥಾಪನೆಗೊಳ್ಳಲಿವೆ.
ರಾಜ್ಯದಲ್ಲಿ ನವೋದ್ಯಮ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅನುದಾನ, ಇನ್‌ಕ್ಯುಬೇಷನ್, ಮೂಲಸೌಕರ್ಯ, ಮಾರ್ಗದರ್ಶನ, ಕೌಶಲ ಅಭಿವೃದ್ಧಿ, ಮಾರುಕಟ್ಟೆ ಪ್ರವೇಶ, ವಿಸ್ತರಣೆ, ಅಂತರರಾಷ್ಟ್ರೀಯ ಸಹಯೋಗವನ್ನು ನವೋದ್ಯಮ ನೀತಿ ಒಳಗೊಂಡಿದೆ.
ಉದಯೋನ್ಮುಖ ಮತ್ತು ಮುಂದುವರಿದ ತಂತ್ರಜ್ಞಾನಗಳಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಇತರ ಆಳವಾದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಾವೀನ್ಯವನ್ನು ಪ್ರೋತ್ಸಾಹಿಸಲಾಗುವುದು. ರಾಜ್ಯದ ವಿವಿಧ ನಗರಗಳಲ್ಲಿ ಉದ್ಯಮಿಗಳನ್ನು ಬೆಂಬಲಿಸಲು ನಾವೀನ್ಯ ಕೇಂದ್ರಗಳು, ಇನ್‌ಕ್ಯುಬೇಶನ್ ಕೇಂದ್ರಗಳನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.
‘ಇಂದಿರಾಕಿಟ್’ಪದಾರ್ಥಮಾರ್ಪಾಡು
ಇಂದಿರಾ ಆಹಾರ ಕಿಟ್‌ನಲ್ಲಿ ಫಲಾನುಭವಿಗಳಿಗೆ ತೊಗರಿ ಬೇಳೆ 1 ಕೆ.ಜಿ, ಅಡುಗೆ ಎಣ್ಣೆ 1 ಲೀಟರ್, ಸಕ್ಕರೆ 1 ಕೆ.ಜಿ, ಉಪ್ಪು 1 ಕೆ.ಜಿ ನೀಡಲಾಗುತ್ತದೆ. 1 ಕೆ.ಜಿ ಹೆಸರು ಕಾಳಿನ ಬದಲಿಗೆ ಅದರ ವೆಚ್ಚಕ್ಕನುಗುಣವಾಗಿ 1ರಿಂದ 3 ಸದಸ್ಯರಿಗೆ 1/4 ಕೆ.ಜಿ, 3 ರಿಂದ 4 ಸದಸ್ಯರಿರುವ ಕುಟುಂಬಕ್ಕೆ 1/2 ಕೆ.ಜಿ ಹಾಗೂ 5 ಕ್ಕೂ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ 3/4 ಕೆ.ಜಿ ತೊಗರಿ ಬೇಳೆಯನ್ನು ವಿತರಿಸಲು ತೀರ್ಮಾನಿಸಲಾಗಿದೆ.
ಐಎಂಎಸ್ ಫೌಂಡೇಷನ್, ಲಘು ಉದ್ಯೋಗ ಭಾರತಿ–ಕರ್ನಾಟಕ ಸಹಯೋಗದೊಂದಿಗೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದ ಭಾರತದ ಉತ್ಪಾದನಾ ಪ್ರದರ್ಶನ–7ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು.
‘ಈ ಹಿಂದೆ ಶೇಕಡ 70ರಷ್ಟು ರಕ್ಷಣಾ ಸಾಮಗ್ರಿಗಳು ಆಮದು ಆಗುತ್ತಿದ್ದವು. ಈಗ ಎಲ್ಲವೂ ಸ್ವದೇಶದಲ್ಲೇ ತಯಾರಾಗುತ್ತಿವೆ. ಇದು ದೇಶದ ಸೌರ್ವಭೌಮತ್ವಕ್ಕೆ ಹಿಡಿದ ಕನ್ನಡಿ. ಈ ಎಲ್ಲಾ ಬೆಳವಣಿಗೆಗೂ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ, ಸ್ಟಾರ್ಟ್‌ಅಪ್‌ಗಳು ಹಾಗೂ ಖಾಸಗಿ ಅನ್ವೇಷಕರ ಕೊಡುಗೆ ಬಹು ದೊಡ್ಡದು’ ಎಂದರು.
‘ಬೆಳವಣಿಗೆ ಹಾದಿಯಲ್ಲಿದ್ದರೂ ಕೈಗಾರಿಕೆಗಳನ್ನು ಅನುಮಾನಗಳಿಂದ ನೋಡುವ ಕಾಲವಿತ್ತು. ಆದರೆ, ಇಂದು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದೆ’ ಎಂದು ಹೇಳಿದರು.
80ರ ದಶಕದ ಘಟನೆ ನೆನಪಿಸಿಕೊಂಡ ಸಚಿವರು, ‘1984ರಲ್ಲಿ ನನ್ನ ತಂದೆ ಒಂದು ಚೀಲ ಸಿಮೆಂಟ್‌ಗಾಗಿ ದಿನವಿಡೀ ಸರದಿ ಸಾಲಿನಲ್ಲಿ ನಿಂತಿದ್ದರು. ಅಂದು ಅಷ್ಟು ಅಭಾವವಿತ್ತು. ಇಂದು ಪರಿಸ್ಥಿತಿ ಬದಲಾಗಿದ್ದು, ಇಸ್ರೊ ಅಗ್ಗದ ವೆಚ್ಚದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ. ಇದು ನವ ಭಾರತ’ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಸೂಕ್ಷ್ಮ, ಸಣ್ಣಹಾಗೂಮಧ್ಯಮಕೈಗಾರಿಕೆಉದ್ಯಮವುದೇಶದಆರ್ಥಿಕತೆಯಬೆನ್ನೆಲುಬುಆಗಿದೆ. ಈಕ್ಷೇತ್ರದಲ್ಲಿ 30 ಕೋಟಿಜನರುಕೆಲಸಮಾಡುತ್ತಿದ್ದು, ದೇಶದಆರ್ಥಿಕತೆಗೆಶೇಕಡ 30ರಷ್ಟುಕೊಡುಗೆಇದೆ. ತಯಾರಿಕಾವಲಯದಲ್ಲಿಶೇಕಡ 45 ಹಾಗೂರಫ್ತುಕ್ಷೇತ್ರದಲ್ಲಿಶೇಕಡ 40 ರಷ್ಟುಕೊಡುಗೆನೀಡಿದೆ. ಇಸ್ರೊ, ಡಿಆರ್ಡಿಒ, ಎಚ್ಎಎಲ್, ಬಿಎಚ್ಇಎಲ್ಸಂಸ್ಥೆಗಳುತಮ್ಮಪೂರೈಕೆಸರಪಳಿಯಲ್ಲಿಸಣ್ಣಮತ್ತುಕೈಗಾರಿಕಾವಲಯವನ್ನುಸೇರಿಸಿಕೊಂಡುಬೆಳೆಯಬೇಕು’ ಎಂದು ಹೇಳಿದರು.
ಇಸ್ರೊ ನಡೆದು ಬಂದ ಹಾದಿಯನ್ನು ವಿವರಿಸಿದ ಅಧ್ಯಕ್ಷ ವಿ.ನಾರಾಯಣನ್, ‘ಕೆಲ ದಿನಗಳ ಹಿಂದೆ ಸ್ವದೇಶಿನಿರ್ಮಿತ ‘ಬಾಹುಬಲಿ’ ರಾಕೆಟ್ ಮೂಲಕಅತ್ಯಂತಭಾರವಾದಉಪಗ್ರಹವನ್ನುಕಕ್ಷೆಗೆಸೇರಿಸುವುದರೊಂದಿಗೆಚಾರಿತ್ರಿಕಸಾಧನೆಮಾಡಿದ್ದೇವೆ. 4,410 ಕೆ.ಜಿತೂಕದಸಂವಹನಉಪಗ್ರಹವನ್ನು (ಸಿಎಂಎಸ್–03) ಹೊತ್ತುನಭಕ್ಕೆಚಿಮ್ಮಿದಲಾಂಚ್ ವೆಹಿಕಲ್ಮಾರ್ಕ್–3 (ಎಲ್ವಿಎಂ3-ಎಂ5) ‘ಬಾಹುಬಲಿ’ಯು ‘ಆತ್ಮನಿರ್ಭರಭಾರತ’ದಸಾಧನೆಗೆಸಾಕ್ಷಿ. ಪ್ರಸ್ತುತ 450 ಕ್ಕೂಹೆಚ್ಚುದೇಶಿಯಕಂಪನಿಗಳೊಂದಿಗೆಇಸ್ರೊಪಾಲುದಾರಿಕೆಹೊಂದಿದೆ’ ಎಂದು ತಿಳಿಸಿದರು.
ಸಕ್ಕರೆಕಾರ್ಖಾನೆ
ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿ ಪಡಿಸಿದಷ್ಟು ಎಫ್‌ಆರ್‌ಪಿ (₹3,550) ನೀಡಬೇಕು ಎಂದು ಆಗ್ರಹಿಸಿ ರಾಜ್ಯದ ಕಬ್ಬು ಬೆಳೆಗಾರರು ಪ್ರತಿಭಟನೆ ತೀವ್ರಗೊಳಿಸಿರುವುದರ ನಡುವೆಯೇ ರಾಜ್ಯದಲ್ಲಿರುವ ಕಾರ್ಖಾನೆಗಳ ಮಾಲೀಕತ್ವದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿದ್ದು, ಈ ಪೈಕಿ ಬೆಳಗಾವಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಯಲ್ಲಿಯೇ 53 ಇವೆ. ಹಲವು ಕಾರ್ಖಾನೆಗಳು ಸಚಿವರು, ಶಾಸಕರು, ರಾಜಕಾರಣಿಗಳು ಹಾಗೂ ಅವರ ಸಂಬಂಧಿಕರ ನೇರ ಮಾಲೀಕತ್ವದಲ್ಲಿವೆ.
ಸಹಕಾರಿ ವ್ಯವಸ್ಥೆಯಡಿ ಹಲವು ಕಾರ್ಯನಿರ್ವಹಿಸುತ್ತಿದ್ದು, ಪರೋಕ್ಷವಾಗಿ ಪ್ರಭಾವಿ ರಾಜಕಾರಣಿಗಳ ಹಿಡಿತದಲ್ಲಿವೆ. ನಷ್ಟದ ಸುಳಿಗೆ ಸಿಲುಕಿರುವ ಕೆಲವು ಸಹಕಾರಿ ಕಾರ್ಖಾನೆಗಳನ್ನು ರಾಜಕಾರಣಿಗಳೇ ಗುತ್ತಿಗೆಗೆ ಪಡೆದು ನಿರ್ವಹಿಸುತ್ತಿದ್ದಾರೆ. ಉದ್ಯಮಿಗಳೇ ನೇರವಾಗಿ ನಡೆಸುತ್ತಿರುವ ಕಾರ್ಖಾನೆಗಳ ಸಂಖ್ಯೆ ಕೆಲವೇ ಕೆಲವು
‘ಸರ್ಕಾರವು ತೀರ್ಮಾನ ತೆಗೆದುಕೊಳ್ಳುವ ಮೊದಲು ಬಹಳಷ್ಟು ಕೆಲಸಗಳು ಆಗಬೇಕಿವೆ. ಈಗಾಗಲೇ ಅಸ್ತಿತ್ವದಲ್ಲಿರುವ ಬ್ಯಾಂಕ್‌ಗಳಿಂದ ಒಂದು ಬ್ಯಾಂಕ್ ಸೃಷ್ಟಿಸುವ ಮೂಲಕ ಈ ಕೆಲಸ ಆಗದು. ವಿಲೀನದ ಮೂಲಕ ಅದನ್ನು ಮಾಡಬಹುದು, ಅದು ಕೂಡ ಒಂದು ಮಾರ್ಗ. ಆದರೆ ಹೆಚ್ಚಿನ ಬ್ಯಾಂಕ್‌ಗಳು ಕೆಲಸ ಮಾಡಲು ಅವಕಾಶ ನೀಡುವ ವ್ಯವಸ್ಥೆಯೊಂದು ರೂಪುಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲೇಸಿದ್ಧವಾಗಲಿವೆ ‘ಎಐಸರ್ವರ್’
ಸಂದರ್ಭ: ಕೃತಕಬುದ್ಧಿಮತ್ತೆತಂತ್ರಜ್ಞಾನದಿಂದಕಾರ್ಯನಿರ್ವಹಿಸುವಅತ್ಯಾಧುನಿಕ ‘ಎಐಸರ್ವರ್’ಗಳನ್ನುಅಮೆರಿಕದಬುರ್ಕಾನ್ ವರ್ಲ್ಡ್ ಇನ್ವೆಸ್ಟ್‌ಮೆಂಟ್ ಗ್ರೂಪ್ ಕರ್ನಾಟಕದಲ್ಲೇತಯಾರಿಸಲಿದೆ.
ಬುರ್ಕಾನ್ ವರ್ಲ್ಡ್‌ನ ಅಧೀನ ಸಂಸ್ಥೆ ದಿ ಘಾಜಿ ಗ್ರೂಪ್ ಸಿಇಒ ಶಫಿ ಖಾನ್ ಅವರ ನೇತೃತ್ವದ ನಿಯೋಗದ ಜತೆ ಹೂಡಿಕೆ ಕುರಿತು ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಈ ವಿಷಯ ತಿಳಿಸಿದರು.
ಅಮೆರಿಕದ ಮಿಯಾಮಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಕಂಪನಿ ರಾಜ್ಯದಲ್ಲಿ ₹1,500 ಕೋಟಿ ಬಂಡವಾಳ ಹೂಡಲು ಮುಂದೆ ಬಂದಿದೆ. ದೇವನಹಳ್ಳಿ ಸಮೀಪ 10-15 ಎಕರೆ ಭೂಮಿ ನೀಡಲಾಗುವುದು. ಹೂಡಿಕೆಯಿಂದ ತಯಾರಿಕಾ ವಲಯದಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.
ಡೇಟಾ ಕೇಂದ್ರಗಳಲ್ಲಿ ಬಳಕೆಯಾಗುವ ಸರ್ವರ್‌ಗಳಿಗೆ ಬಹು ಬೇಡಿಕೆ ಇದೆ. ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲು ಸಹಕಾರ ನೀಡಲಾಗುವುದು. ಅತ್ಯಾ ಧುನಿಕ ಸಿಪಿಯು, ಜಿಪಿಯು, ಎಐ-ರೆಡಿ ನೆಟ್ವರ್ಕ್ ಸ್ವಿಚ್ ತಯಾರಿಕೆಯನ್ನೂ ಕಂಪನಿ ಆರಂಭಿಸಲಿದೆ. ಜಾಗತಿಕ ತಾಂತ್ರಿಕ ಪಾಲುದಾರ ಕಂಪನಿಗಳಾದ ಗಿಗಾಬೈಟ್ ಮತ್ತು ಸೆರಾ ನೆಟ್‌ವರ್ಕ್ ಸಹಯೋಗ ನೀಡಲಿವೆ. ಸೆಮಿಕಂಡಕ್ಟರ್, ಎಐ ಹಾರ್ಡ್-ವೇರ್, ಆಧುನಿಕ ಎಲೆಕ್ಟ್ರಾನಿಕ್ಸ್ ಕಾರ್ಯಪರಿಸರದ ಬಲವರ್ಧನೆ ಆಗಲಿದೆ. ಸ್ಥಳೀಯವಾಗಿ ಆರ್ ಆ್ಯಂಡ್ ಡಿ, ತಂತ್ರಜ್ಞಾನ ವರ್ಗಾವಣೆ, ಶಿಕ್ಷಣ ಸಂಸ್ಥೆಗಳು ಮತ್ತು ಇಲ್ಲಿಯ ಕೈಗಾರಿಕೆಗಳ ಸಹಭಾಗಿತ್ವ ಸಿಗಲಿದೆ ಎಂದರು.
ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಸೆಪ್ಟೆಂಬರ್‌ನಲ್ಲಿ 60.9 ದಾಖಲಾಗಿತ್ತು. ಆದರೆ, ಅಕ್ಟೋಬರ್‌ನಲ್ಲಿ 58.9ಕ್ಕೆ ಇಳಿದಿದೆ.
‘ಹೆಚ್ಚಿದ ಸ್ಪರ್ಧಾತ್ಮಕತೆಯ ಒತ್ತಡ ಮತ್ತು ಭಾರಿ ಮಳೆಯು ಚಟುವಟಿಕೆಯ ಇಳಿಕೆಗೆ ಕಾರಣವಾದವು. ಇದು ಸೂಚ್ಯಂಕ ಇಳಿಕೆಗೆ ದಾರಿ ಮಾಡಿಕೊಟ್ಟಿತು’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್ ಭಂಡಾರಿ ಹೇಳಿದ್ದಾರೆ.
ಹೆಚ್ಚಿದ ಬೇಡಿಕೆ ಮತ್ತು ಜಿಎಸ್‌ಟಿ ದರ ಇಳಿಕೆಯಂತಹ ಅಂಶಗಳು ಕಾರ್ಯಾಚರಣೆಯ ಸ್ಥಿತಿ ಸುಧಾರಿಸಲು ನೆರವಾದವು. ಆದರೂ, ಸ್ಪರ್ಧಾತ್ಮಕತೆ ಮತ್ತು ಹೆಚ್ಚಿನ ಮಳೆಯಿಂದ ಬೆಳವಣಿಗೆಯು ನಿಧಾನವಾಯಿತು ಎಂದು ಹೇಳಿದ್ದಾರೆ.
ಸಂದರ್ಭ: ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಭಾರತ ಸಂಜಾತ ಜೊಹ್ರಾನ್ ಮಮ್ದಾನಿ (34) ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ.
ಅಮೆರಿಕದ ಅತಿ ದೊಡ್ಡ ನಗರವಾದ ನ್ಯೂಯಾರ್ಕ್‌ನ ‘ಪ್ರಥಮಪ್ರಜೆ’ಯಾಗಿಆಯ್ಕೆಯಾದಮೊದಲಮುಸ್ಲಿಂಹಾಗೂದಕ್ಷಿಣಏಷ್ಯಾದಮೊದಲವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಜೊಹ್ರಾನ್ ಅವರು ಭಾರತದಸಿನಿಮಾನಿರ್ದೇಶಕಿಮತ್ತುನಿರ್ಮಾಪಕಿಮೀರಾನಾಯರ್ಮತ್ತುಪ್ರೊ. ಮಹಮದ್ ಮಮ್ದಾನಿಅವರಪುತ್ರ.
ಮಮ್ದಾನಿಜನಿಸಿದ್ದುಉಗಾಂಡಾದಕಂಪಾಲದಲ್ಲಿ. ಅವರಿಗೆ 5 ವರ್ಷವಿದ್ದಾಗದಕ್ಷಿಣಆಫ್ರಿಕಾದಕೇಪ್ ಟೌನ್ಗೆ, ನಂತರ 7 ವರ್ಷಇದ್ದಾಗನ್ಯೂಯಾರ್ಕ್ಗೆವಲಸೆಬಂದುಅವರಕುಟುಂಬನೆಲೆಗೊಂಡಿತ್ತು. ಮಮ್ದಾನಿಅವರಿಗೆ 2018ರಲ್ಲಿಅಮೆರಿಕದಪೌರತ್ವಲಭಿಸಿತ್ತು.ಅಮೆರಿಕನ್ಅನಿಮೇಟರ್ ರಮಾಸವಾಫ್ದುವಾಜಿಅವರಪತ್ನಿ.
ಯಾರ್ಕ್‌ನ ಮಾಜಿ ಗವರ್ನರ್, ಪ್ರಭಾವಿ ರಾಜಕೀಯ ಮುಖಂಡ ಆ್ಯಂಡ್ರ್ಯೂ ಕೌಮೊ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಮಮ್ದಾನಿ ಸೋಲಿಸಿದ್ದಾರೆ.
ಮಮ್ದಾನಿ ಅವರು ಜನವರಿ 1ರಂದು ಅಮೆರಿಕದ ಅತಿ ದೊಡ್ಡ ನಗರವಾದ ನ್ಯೂಯಾರ್ಕ್‌ನ ಮೇಯರ್ ಪಟ್ಟಕ್ಕೇರು ವಾಗ, ಈ ಸ್ಥಾನ ಅಲಂಕರಿಸುತ್ತಿರುವ ಮೊದಲ ಮುಸ್ಲಿಂ, ಮೊದಲ ಭಾರತೀಯ, ಆಫ್ರಿಕಾದಲ್ಲಿ ಜನಿಸಿದ ಮೊದಲ ವ್ಯಕ್ತಿ ಮತ್ತು ಕಳೆದೊಂದು ಶತಮಾನದಲ್ಲಿ ಮೇಯರ್ ಹುದ್ದೆಗೇರಿದ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗಳಿಗೂ ಪಾತ್ರರಾಗಲಿದ್ದಾರೆ.
ಮಮ್ದಾನಿ ಗೆಲುವಿನೊಂದಿಗೆ ನ್ಯೂಯಾರ್ಕ್ ನಗರ ಮತ್ತು ಅಮೆರಿಕವು ಹೊಸ ರಾಜಕೀಯ ಮತ್ತು ಸೈದ್ಧಾಂತಿಕ ಯುಗಕ್ಕೆ ಮುನ್ನುಡಿ ಬರೆದಿದೆ. ಬಂಡವಾಳಶಾಹಿಯ ವಿರುದ್ಧ ಪ್ರಜಾಪ್ರಭುತ್ವವಾದಿ, ಸಮಾಜವಾದಿಯ ಐತಿಹಾಸಿಕ ಗೆಲುವು, ದೇಶದ ರಾಜಕೀಯ ಸ್ಥಿತ್ಯಂತರಕ್ಕೂ ಕಾರಣವಾಗಲಿವೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.
ಮಮ್ದಾನಿ ಅವರು ಬ್ರಾಂಕ್ಸ್ ಹೈಸ್ಕೂಲ್ ಆಫ್ ಸೈನ್ಸ್‌ನಲ್ಲಿ ಪ್ರೌಢ ಶಿಕ್ಷಣ ಹಾಗೂ ಬೌಡೊಯಿನ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಪ್ರೌಢಶಾಲಾ ಹಂತದ ಕ್ರಿಕೆಟ್ ತಂಡದಲ್ಲೂ ಅವರು ಪ್ರಮುಖ ಆಟಗಾರರಾಗಿದ್ದರು.
ವಸತಿ ಸಲಹೆಗಾರ ಅಧಿಕಾರಿ ಯಾಗಿಯೂ ಕಾರ್ಯನಿರ್ವಹಿಸಿದ್ದ ಅವರು, ನ್ಯೂಯಾರ್ಕ್‌ನಲ್ಲಿ ಕಡಿಮೆ ಆದಾಯ ಹೊಂದಿರುವ ವಲಸಿಗರನ್ನು ಮನೆಗಳಿಂದ ಹೊರಹಾಕುವುದನ್ನು ತಡೆಗಟ್ಟಲು ಅಪಾರವಾಗಿ ಶ್ರಮಿಸಿದ್ದರು. ಈ ಕಾರ್ಯಕ್ಕಾಗಿ ವಲಸಿಗರ, ಕಾರ್ಮಿಕರ ವಿಶ್ವಾಸ ಗಳಿಸಿದ್ದ ಅವರು, 2020ರಲ್ಲಿ ಮೊದಲ ಬಾರಿ ನ್ಯೂಯಾರ್ಕ್ ಅಸೆಂಬ್ಲಿಗೆ ಆಯ್ಕೆಯಾಗಿದ್ದರು.
ನ್ಯೂಯಾರ್ಕ್ ಮೇಯರ್ ಚುನಾವಣೆಯ ಪ್ರಾಥಮಿಕ ಹಂತದಿಂದಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಮ್ದಾನಿ ಅವರನ್ನು ವಿರೋಧಿ ಸಿಕೊಂಡು ಬಂದಿದ್ದರು.
‘ವೆಚ್ಚಕಡಿಮೆಗೊಳಿಸಿ, ಜೀವನಸುಗಮಗೊಳಿಸಿ’
ಬೆಲೆ ಏರಿಕೆ, ಹಣದುಬ್ಬರ ಹೆಚ್ಚಳ, ಉದ್ಯೋಗ ಕಡಿತ ಸೇರಿದಂತೆ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆ ಎದುರಿಸುತ್ತಿರುವ ಅಮೆರಿಕನ್ನರಿಗೆ, ವಿಶೇಷವಾಗಿ ನ್ಯೂಯಾರ್ಕ್‌ನ ಜನರಿಗೆ, ‘ಜೀವನ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡಲೆಂದೇ ನ್ಯೂಯಾರ್ಕ್‌ನ ಮೇಯರ್ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ’ ಎಂಬ ಮಮ್ದಾನಿ ಅವರ ಭರವಸೆಯ ನುಡಿಗಳು ವಿಶ್ವಾಸ ಮೂಡಿಸಿದ್ದವು. ನಗರ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ, ಮಕ್ಕಳಿಗಾಗಿ ಸಾರ್ವಜನಿಕ ಆಸ್ಪತ್ರೆ, ಕಡಿಮೆ ವೆಚ್ಚದ ಮನೆಗಳು ಸೇರಿದಂತೆ ‘ವೆಚ್ಚ ಕಡಿಮೆಗೊಳಿಸಿ, ಜೀವನ ಸುಗಮಗೊಳಿಸಿ’ ಎನ್ನುವುದು ಅವರ ಚುನಾವಣಾ ಘೋಷಣೆಯಾಗಿತ್ತು.
ಬಂಡವಾಳಶಾಹಿ ವ್ಯವಸ್ಥೆಗೆ ವಿರುದ್ಧವಾಗಿದ್ದ ಈ ಯುವ ರಾಜಕಾರಣಿಯು ನ್ಯೂಯಾರ್ಕ್‌ನ ಯುವಸಮೂಹ ಹಾಗೂ ಶ್ರಮಿಕ ವರ್ಗದ ಅಪಾರ ಬೆಂಬಲವನ್ನು ಗಳಿಸಿರುವುದು ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ.
ಭಾರತದನಂಟು
ತಮ್ಮ ಮೊದಲ ವಿಜಯೋತ್ಸವ ಭಾಷಣದಲ್ಲಿ ಮಮ್ದಾನಿ, ಭಾರತ ಅಥವಾ ಭಾರತೀಯರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ನೆಹರೂ ಮತ್ತು ‘ಧೂಮ್ ಮಚಾಲೆ’ ಹಾಡಿನ ಮೂಲಕ ತಮ್ಮ ಭಾರತೀಯ ಬೇರನ್ನು ಸ್ಮರಿಸಲು ಮರೆಯಲಿಲ್ಲ. ವಿಜಯೋತ್ಸವ ಭಾಷಣದ ಬೆನ್ನಲ್ಲೇ ವೇದಿಕೆಯಲ್ಲಿ ಬಾಲಿವುಡ್‌ನ ಜನಪ್ರಿಯ ‘ಧೂಮ್ ಮಚಾಲೆ’ ಹಾಡು ಕೇಳಿಬಂತು. ಮಮ್ದಾನಿ ಅವರ ವಾಕ್ಚಾತುರ್ಯ ಮತ್ತು ಸಾಮಾಜಿಕ ಮಾಧ್ಯಮದ ಮೇಲಿನ ಹಿಡಿತ ಕೂಡ ಅವರ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ.
ದಾಖಲೆಮತಚಲಾವಣೆ
ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ 1969ರ ಬಳಿಕ ಇದೇ ಮೊದಲ ಬಾರಿಗೆ 20 ಲಕ್ಷ ಮತಗಳು ಚಲಾವಣೆಯಾಗಿವೆ ಎಂದು ನ್ಯೂಯಾರ್ಕ್‌ನ ಚುನಾವಣಾ ಮಂಡಳಿ ಹೇಳಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲ ಯವು ಸ್ಯಾಮ್‌ಸಂಗ್ ಕಂಪನಿಯೊಂದಿಗೆ ಎಐ ಮತ್ತು ಎಂಎಲ್ ವಿಷಯದ ತರಬೇತಿ ನೀಡುವ ಕುರಿತು ಒಪ್ಪಂದ ಮಾಡಿಕೊಂಡಿದೆ. ಸ್ಯಾಮ್‌ಸಂಗ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ಮೊದಲ ಹಂತದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ 300 ವಿದ್ಯಾರ್ಥಿಗಳಿಗೆ ಎಐ–ಎಂಎಲ್ ವಿಷಯದ ಬಗ್ಗೆ 80 ಗಂಟೆಗಳ ಕಾಲ ಆನ್‌ಲೈನ್ ಹಾಗೂ ಆಫ್‌ಲೈನ್ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ.
‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ದ ಪ್ರಥಮ ವರ್ಷದ ಪದವಿಯ ಎರಡನೇ ಸೆಮಿಸ್ಟರ್‌ನಲ್ಲಿ ಎಐ–ಎಂಎಲ್ ವಿಷಯ ಇರಲಿದ್ದು, ಇದಕ್ಕೆ ಅಂಕಗಳು ಇರುವುದಿಲ್ಲ. ಆದರೆ ಕಡ್ಡಾಯವಾಗಿ ಉತ್ತೀರ್ಣ ಆಗಬೇಕು. ಎಂ.ಎಸ್ಸಿ ಪ್ರಥಮ ವರ್ಷದ ಎರಡನೇ ಸೆಮಿಸ್ಟರ್‌ಗೆ ಎಐ–ಎಲ್ ವಿಷಯ ಇರಲಿದ್ದು, ವಿದ್ಯಾರ್ಥಿಗಳಿಗೆ ಆರು ತಿಂಗಳ ತರಬೇತಿ ನೀಡಲಾಗುತ್ತದೆ.
‘ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಮಷಿನ್ ಲರ್ನಿಂಗ್ (ಎಂಎಲ್) ಎಂಬ ನೂತನ ವಿಭಾಗವನ್ನು ಪ್ರಾರಂಭಿಸಲಾಗಿದೆ. ಇದು ಬಹುಶಿಸ್ತೀಯ ಅಧ್ಯಯನ ವಿಭಾಗವಾಗಿದ್ದು, ಕಂಪ್ಯೂಟರ್ ತಂತ್ರಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ಇರುವವರನ್ನು ಇದರ ಮುಖ್ಯಸ್ಥರನ್ನಾಗಿ ಮಾಡಲಾಗುತ್ತದೆ’ ಎಂದು ಹೇಳಿದರು.
‘ಎಐ–ಎಂಎಲ್ ನೂತನ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನಗರದ ಹಲವು ಎಂಜಿನಿಯರಿಂಗ್ ಕಾಲೇಜುಗಳ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತದೆ. ಇದರ ಭಾಗವಾಗಿ ಈಗಾಗಲೇ ಗೀತಂ ವಿಶ್ವ ವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರೇವಾ ವಿಶ್ವವಿದ್ಯಾಲಯ, ಮಣಿಪಾಲ್ ಅಕಾಡೆಮಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಯುತ್ತಿದೆ. ಎಐ–ಎಂಎಲ್‌ಗೆ ಸಂಬಂಧಿಸಿದ ಕಂಪ್ಯೂಟರ್ ಆಧಾರಿತ ಪಠ್ಯ ವಿಷಯಗಳ ಬಗ್ಗೆ ಎಂಜಿನಿಯರಿಂಗ್ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಅಧ್ಯಾಪಕರು ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ’ ಎಂದರು.
‘ಸ್ಯಾಮ್‌ಸಂಗ್ ಕಂಪನಿಯೊಂದಿಗೆ ಮತ್ತೊಂದು ಒಪ್ಪಂದ ಮಾಡಿಕೊಳ್ಳ ಲಾಗುತ್ತಿದ್ದು, ನೂತನ ಎಐ–ಎಂಎಲ್‌ನ ವಿಭಾಗದ ವಿಷಯಗಳಿಗೆ ಸಂಬಂಧಿಸಿದಂತೆ ಕಂಪನಿಯ ಸಿಬ್ಬಂದಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಪದವಿ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಇಂತಹ ಈ ವಿಷಯಗಳನ್ನು ಪರಿಚಯಿಸುತ್ತಿದ್ದೇವೆ. ವಿದ್ಯಾರ್ಥಿಗಳು ಉತ್ತೀರ್ಣರಾದ ನಂತರ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ಸಹಾಯಕವಾಗಲಿದೆ’ ಎಂದು ತಿಳಿಸಿದರು.
‘ಎಐ–ಎಂಎಲ್ ಪದವಿಪ್ರಾರಂಭಿಸುವಚಿಂತನೆ’
‘ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಎಐ–ಎಂಎಲ್ ಕೋರ್ಸ್ ಅನ್ನು ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ನಾಲ್ಕು ವರ್ಷಗಳ ನಂತರ ಬಿ.ಎಸ್ಸಿ ಅಗ್ರಿ ಇನ್ ಎಐ–ಎಂಎಲ್, ಬಿ.ಎಸ್ಸಿ ಹಾರ್ಟಿಕಲ್ಚರ್ ಇನ್ ಎಐ–ಎಂಲ್ ವಿಷಯಗಳಲ್ಲಿ ಪದವಿಯನ್ನೂ ಪ್ರಾರಂಭಿಸುವ ಚಿಂತನೆ ಇದೆ’ ಎಂದು ಎಸ್.ವಿ. ಸುರೇಶ ತಿಳಿಸಿದರು.
‘ಈಗ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಎಐ–ಎಂಎಲ್ ಆಕ್ರಮಿಸಿಕೊಂಡಿದೆ. ಆದ್ದರಿಂದ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರಲು ವಿದ್ಯಾರ್ಥಿಗಳನ್ನು ಈ ನೂತನ ಕೋರ್ಸ್‌ಗೆ ಅಣಿಗೊಳಿಸುತ್ತಿದ್ದೇವೆ’ ಎಂದರು.
ಅರಣ್ಯ: ಕಾಮಗಾರಿಗಳಿಗೆಷರತ್ತುಬದ್ಧಒಪ್ಪಿಗೆ
ಸಂದರ್ಭ: ವನ್ಯಜೀವಿಮಂಡಳಿಸ್ಥಾಯಿಸಮಿತಿಸಭೆ l ಚಿತ್ತಾಪುರದಲ್ಲಿಚಿರತೆಸಂರಕ್ಷಣಾಮೀಸಲುಪ್ರಸ್ತಾವ: ಶರಾವತಿಸಿಂಗಳೀಕವನ್ಯಜೀವಿಧಾಮ, ರಂಗನತಿಟ್ಟುಪಕ್ಷಿಧಾಮಪರಿಸರಸೂಕ್ಷ್ಮವಲಯಹಾಗೂಸೋಮೇಶ್ವರವನ್ಯಜೀವಿಧಾಮದಲ್ಲಿರಸ್ತೆನಿರ್ಮಾಣಮತ್ತುರಸ್ತೆಅಗಲೀಕರಣದಯೋಜನೆಗಳಿಗೆನಡೆದವನ್ಯಜೀವಿಮಂಡಳಿಯಸ್ಥಾಯಿಸಮಿತಿಸಭೆಷರತ್ತುಬದ್ಧಒಪ್ಪಿಗೆನೀಡಿದೆ.
ವನ್ಯಜೀವಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಯೋಜನೆಯನ್ನು ರೂಪಿಸಬೇಕು ಎಂಬ ಕರಾರು ವಿಧಿಸಿ ಸಭೆ ಅನುಮೋದನೆ ನೀಡಿತು. ಚಿತ್ತಾಪುರದಲ್ಲಿ ಚಿರತೆ ಸಂರಕ್ಷಣಾ ಮೀಸಲು ಸ್ಥಾಪಿಸುವ ಕುರಿತು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
ಸಿಂಗಳೀಕ ವನ್ಯಜೀವಿಧಾಮದ ವ್ಯಾಪ್ತಿಯ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹಿರೇಬೈಲ್ ಗ್ರಾಮದ ಅಂದಬಳ್ಳಿ ಮತ್ತು ಇತರ 5 ಗ್ರಾಮಗಳ 325 ಮನೆಗಳಿಗೆ, ಹೊನ್ನಾವರ ಪಟ್ಟಣ ಮತ್ತು ಮಾರ್ಗದಲ್ಲಿರುವ 9 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರಿನ ಪೈಪ್‌ಲೈನ್ ಯೋಜನೆಗೆ 0.976 ಹೆಕ್ಟೇರ್ ಅರಣ್ಯ ಪ್ರದೇಶವನ್ನು ನೀಡುವ ಯೋಜನೆಗೆ ಅನುಮೋದನೆ ಪಡೆಯಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವ ಕಳುಹಿಸಲು ಸಭೆ ತೀರ್ಮಾನಿಸಿದೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 291 ಜನವಸತಿ ಪ್ರದೇಶಗಳಿಗೆ (ಯೋಜನೆ ಹಂತ–2 ರಲ್ಲಿ 193 ಜನವಸತಿ ಪ್ರದೇಶಗಳಿಗೆ) ಕುಡಿಯುವ ನೀರಿನ ಸಂಪರ್ಕ ನೀಡುವ ಪ್ರಸ್ತಾವದ ಬಗ್ಗೆ ಚರ್ಚಿಸಿದ ಮಂಡಳಿ, ಇದಕ್ಕಾಗಿ 4.4 ಹೆಕ್ಟೇರ್ ಅರಣ್ಯ ಭೂಮಿ ನೀಡುವ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆಗೆ ಕಳುಹಿಸಲು ತೀರ್ಮಾನಿಸಲಾಗಿದೆ.
ಅತ್ತಿವೇರಿ ಪಕ್ಷಿಧಾಮ, ಶರಾವತಿ ಸಿಂಗಳೀಕ ವನ್ಯಜೀವಿಧಾಮ ಹಾಗೂ ಸೋಮೇಶ್ವರ ವನ್ಯಜೀವಿಧಾಮದಲ್ಲಿ ಸಂವಹನ ಕಂಬಗಳನ್ನು ಅಳವಡಿಸುವ ಕುರಿತಾದ ಬಿಎಸ್‌ಎನ್‌ಎಲ್ ಪ್ರಸ್ತಾವವನ್ನು ಮುಂದೂಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂವಹನ ಕಂಬಗಳಿಂದ ಪರಿಸರಕ್ಕೆ, ಪಶುಪಕ್ಷಿ ಗಳಿಗೆ ಆಗುವ ತೊಂದರೆ ಕುರಿತು ವಿವರ ಮಂಡಿಸಲು ಸೂಚಿಸಲಾಯಿತು.
ಪಶ್ಚಿಮಘಟ್ಟದಲ್ಲಿ ಕಾರ್ಯಗತವಾಗಿರುವ ರಸ್ತೆ ಮತ್ತಿತರ ಅಭಿವೃದ್ಧಿ ಯೋಜನೆಗಳಲ್ಲಿ ಷರತ್ತುಗಳ ಪಾಲನೆ ಆಗಿದೆಯೇ ಇಲ್ಲವೇ ಎಂಬ ಬಗ್ಗೆ ಪರಾಮರ್ಶೆ ನಡೆಸುವಂತೆ ಈಶ್ವರ ಖಂಡ್ರೆ ಸೂಚಿಸಿದರು.
ಅರಣ್ಯ ಮತ್ತು ವನ್ಯಜೀವಿಧಾಮಗಳಲ್ಲಿ ಯಾವುದೇ ಯೋಜನೆಗೆ ಅನುಮತಿ ನೀಡುವಾಗ ವನ್ಯಜೀವಿಗಳಿಗೆ ತೊಂದರೆ ಆಗದಂತೆ ಅಪಾಯ ತಗ್ಗಿಸುವ ಪರಿಹಾರಗಳೊಂದಿಗೆ ಪ್ರಸ್ತಾವನೆ ಮಂಡಿಸುವುದನ್ನು ಕಡ್ಡಾಯಗೊಳಿಸುವಂತೆ ಅವರು ನಿರ್ದೇಶನ ನೀಡಿದರು.
‘ರೇಡಿಯೊಕಾಲರ್ಹಾಕಿಕಾಡಿಗೆಬಿಡಿ’
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಬಳಿಯ ಕೆರೆಕಟ್ಟೆ ಸಮೀಪ ಸೆರೆ ಹಿಡಿಯಲಾಗಿರುವ ಆನೆಗೆ ರೇಡಿಯೊ ಕಾಲರ್ ಅಳವಡಿಸಿ ಕಾಡಿಗೆ ಬಿಡುವುದು ಸೂಕ್ತ ಎಂದು ಸಚಿವ ಈಶ್ವರ ಖಂಡ್ರೆ ಸಭೆಯಲ್ಲಿ ಸೂಚಿಸಿದರು.
ಕುಂಬ್ಳೆಕರೆಯಲುಸೂಚನೆ
ಅರಣ್ಯ ಮತ್ತು ವನ್ಯಜೀವಿ ರಾಯಭಾರಿ ಯಾಗಿ ನೇಮಕಗೊಂಡಿರುವ ಅನಿಲ್ ಕುಂಬ್ಳೆ ಅವರನ್ನು ಮುಂದಿನ ಸಭೆಗಳಿಗೆ ಆಹ್ವಾನಿಸುವಂತೆ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಖಂಡ್ರೆ ಸೂಚನೆ ನೀಡಿದರು.
2025ನೇ ಸಾಲಿನಲ್ಲಿ ಕಾಣಿಸಿ ಕೊಳ್ಳುವ ಮೂರು ಸೂಪರ್ ಮೂನ್‌ಗಳ ಪೈಕಿ ಇದು ಎರಡನೆಯದ್ದಾಗಿದ್ದು, ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ ಈ ಸೂಪರ್ ಮೂನ್ ಶೇಕಡ 14ರಷ್ಟು ದೊಡ್ಡದಾಗಿ ಹಾಗೂ ಶೇ 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡಿದೆ.
ಭೂಮಿಯಿಂದ 3,57,000 ಕಿ.ಮೀ.ದೂರದಲ್ಲಿ ಅಂದರೆ ಅತ್ಯಂತ ಸಮೀಪದಲ್ಲಿ ಚಂದ್ರ ಗೋಚರಿಸಿರುವ ಕಾರಣ, ಇದು ಅತ್ಯಂತ ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಕಾಣಿಸಿಕೊಂಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸಂಜೆ 6.49ರ ಸುಮಾರಿಗೆ ದೇಶದ ವಿವಿಧ ಭಾಗಗಳಲ್ಲಿ ಜನರು ಸೂಪರ್ ಮೂನ್ ವೀಕ್ಷಿಸಲು ಸಾಧ್ಯವಾಗಿದ್ದು, ಹಲವರು ‘ಅತ್ಯಂತ ಪ್ರಕಾಶಮಾನವಾದ ಸೂಪರ್ ಮೂನ್’ ಎಂಬ ಶೀರ್ಷಿಕೆಗಳೊಂದಿಗೆ ಫೋಟೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈಗ ಸರ್ಕಾರವು ಕೃತಕ ಬುದ್ಧಿಮತ್ತೆ ವಲಯದಲ್ಲಿನ ಆವಿಷ್ಕಾರಗಳ ಮೇಲೆ ಗಮನ ನೀಡುತ್ತಿದೆ. ಎ.ಐ. ಮೂಲಕ ದೇಶದ ಜನರಿಗೆ ಅತ್ಯಂತ ಹೆಚ್ಚಿನ ಲಾಭ ತಂದುಕೊಡಲು ಸರ್ಕಾರ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ.
‘ಆವಿಷ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ಅಗತ್ಯ ಎಂದು ಭಾವಿಸುವುದಾದರೆ, ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವುದು ಇಂದಿನ ಆದ್ಯತೆ ಆಗುವುದಿಲ್ಲ… ಆದರೆ ನಿಯಂತ್ರಣ ಕ್ರಮಗಳಿಗೆ ಅಥವಾ ಕಾನೂನಿನ ಜಾರಿಗೆ ಅಗತ್ಯ ಎದುರಾದರೆ ಸರ್ಕಾರ ಆಗ ಹಿಂದೇಟು ಹಾಕುವುದಿಲ್ಲ’ ಎಂದು ಕೃಷ್ಣನ್ ತಿಳಿಸಿದ್ದಾರೆ.
ರಷ್ಯಾದ ರೊಸ್ನೆಫ್ಟ್ ಹಾಗೂ ಲುಕಾಯಿಲ್ ಕಂಪನಿಗಳ ಮೇಲೆ ಅಮೆರಿಕವು ವಿಧಿಸಿರುವ ನಿರ್ಬಂಧಕ್ಕೆ ಅನುಗುಣವಾಗಿ ಭಾರತದ ತೈಲ ಸಂಸ್ಕರಣಾ ಕಂಪನಿಗಳು ನಡೆದುಕೊಳ್ಳುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಇದರಿಂದಾಗಿ ಡಿಸೆಂಬರ್‌ನಲ್ಲಿ ಭಾರತಕ್ಕೆ ಬರುವ ರಷ್ಯಾದ ಕಚ್ಚಾ ತೈಲದ ಪ್ರಮಾಣ ತೀವ್ರವಾಗಿ ತಗ್ಗಲಿದೆ. ನಂತರದಲ್ಲಿ, 2026ರ ಆರಂಭದಿಂದ ಮಧ್ಯವರ್ತಿಗಳು ಹಾಗೂ ಪರ್ಯಾಯ ವ್ಯಾಪಾರ ಮಾರ್ಗಗಳ ಮೂಲಕ ರಷ್ಯಾದ ಕಚ್ಚಾ ತೈಲದ ಆಮದು ನಿಧಾನವಾಗಿ ಹೆಚ್ಚಳವಾಗುವ ಅಂದಾಜು ಇದೆ.
ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಕಂಪನಿಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಲ್ಲಿಂದ ಖರೀದಿಯನ್ನು ನಿಲ್ಲಿಸಲಿದೆ. ಸರ್ಕಾರಿ ಸ್ವಾಮ್ಯದ ಇತರ ಎರಡು ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ತೈಲ ಆಮದು ನಿಲ್ಲಿಸುವುದಾಗಿ ಹೇಳಿವೆ. ಎಂಆರ್‌ಪಿಎಲ್ ಹಾಗೂ ಎಚ್‌ಪಿಸಿಎಲ್–ಮಿತ್ತಲ್ ಎನರ್ಜಿ ಲಿಮಿಟೆಡ್ ಕಂಪನಿ ಮುಂದಿನ ದಿನಗಳಲ್ಲಿ ಆಮದನ್ನು ಅಮಾನತಿನಲ್ಲಿ ಇರಿಸುವ ಆಲೋಚನೆ ಇರುವುದಾಗಿ ಹೇಳಿವೆ.
ಆದರೆ ನಯಾರಾ ಎನರ್ಜಿ ಕಂಪನಿಯ ವಾದಿನಾರ್ ತೈಲ ಸಂಸ್ಕರಣಾ ಘಟಕವು ರಷ್ಯಾದಿಂದ ತೈಲ ಆಮದನ್ನು ಮುಂದುವರಿಸುವ ನಿರೀಕ್ಷೆ ಇದೆ. ನಯಾರಾ ಕಂಪನಿಯಲ್ಲಿ ರೊಸ್ನೆಫ್ಟ್‌ನ ಹೂಡಿಕೆ ಇದೆ.
ದತ್ತಾಂಶ ವಿಶ್ಲೇಷಣಾ ಸಂಸ್ಥೆ ಕೆಪ್ಲರ್‌ನ ಮುಖ್ಯ ಸಂಶೋಧನಾ ವಿಶ್ಲೇಷಕ ಸುಮಿತ್ ರಿತೋಲಿಯಾ ಅವರ ಪ್ರಕಾರ, ಅಕ್ಟೋಬರ್‌ನಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಸಿದ ದೇಶಗಳ ಸಾಲಿನಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದೆ. ಇರಾಕ್ ಮತ್ತು ಸೌದಿ ಅರೇಬಿಯಾ ನಂತರದ ಸ್ಥಾನಗಳಲ್ಲಿವೆ.
ತಜ್ಞರ ಪ್ರಕಾರ ರಷ್ಯಾದಿಂದ ಕಚ್ಚಾ ತೈಲ ಆಮದು ಸಂಪೂರ್ಣವಾಗಿ ನಿಲ್ಲುವ ಸಾಧ್ಯತೆ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಆಮದು ಹೆಚ್ಚು ಸಂಕೀರ್ಣವಾದ ಸಾಗಣೆ ಮತ್ತು ಖರೀದಿ ವ್ಯವಸ್ಥೆಯನ್ನು ಆಶ್ರಯಿಸಲಿದೆ.
‘ಡಿಸೆಂಬರ್‌ನಲ್ಲಿ ರಷ್ಯಾದ ಕಚ್ಚಾ ತೈಲ ಆಮದು ಗಣನೀಯವಾಗಿ ಕಡಿಮೆ ಆಗಬಹುದು. 2026ರ ಮೊದಲಾರ್ಧದ ಮಧ್ಯಭಾಗದಲ್ಲಿ ಅಥವಾ ಕೊನೆಯ ಹಂತದಲ್ಲಿ, ಹೊಸ ಮಧ್ಯವರ್ತಿಗಳು ಹಾಗೂ ಪರ್ಯಾಯ ಮಾರ್ಗಗಳು ಸೃಷ್ಟಿಯಾದ ನಂತರ ಅಲ್ಲಿಂದ ತೈಲ ತರಿಸಿಕೊಳ್ಳುವುದು ಹಂತ ಹಂತವಾಗಿ ಹೆಚ್ಚಳವಾಗಬಹುದು’ ಎಂದು ಹೇಳಿದ್ದಾರೆ.
ಮಹಾರಾಷ್ಟ್ರವು ಸ್ಟಾರ್‌ಲಿಂಕ್ ಜೊತೆಗೆ ಒಪ್ಪಂದ ಮಾಡಿಕೊಂಡ ದೇಶದ ಮೊದಲ ರಾಜ್ಯವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಈ ಕುರಿತ ಒಪ್ಪಂದಕ್ಕೆ ಸರ್ಕಾರವು ಸ್ಟಾರ್‌ಲಿಂಕ್ ಸ್ಯಾಟ್‌ಲೈಟ್ ಕಮ್ಯುನಿಕೇಷನ್ಸ್ ಪ್ರೈವೆಟ್ ಲಿಮಿಟೆಡ್‌ನೊಂದಿಗೆ ಸಹಿ ಹಾಕಿದೆ.
‘ಈ ಒಪ್ಪಂದದಿಂದ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆಯನ್ನು ಸರ್ಕಾರಿ ಸಂಸ್ಥೆಗಳು, ಗ್ರಾಮೀಣ ಪ್ರದೇಶಗಳು, ಕುಗ್ರಾಮ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಒದಗಿಸಲಾಗುವುದು’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
‘ಸ್ಟಾರ್‌ಲಿಂಕ್ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಕ್ಷೇತ್ರದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯೊಂದಿಗೆ ಮಹಾರಾಷ್ಟ್ರ ಒಪ್ಪಂದ ಹೊಂದಿರುವುದು ನಮಗೆ ಗೌರವವಾಗಿದೆ’ ಎಂದು ತಿಳಿಸಿದ್ದಾರೆ.
ಈ ಸಹಯೋಗವು ಡಿಜಿಟಲ್ ಮಹಾರಾಷ್ಟ್ರ ಮಿಷನ್, ಕರಾವಳಿ ಅಭಿವೃದ್ಧಿ ಸೇರಿ ಹಲವು ಅಭಿವೃದ್ಧಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.
ಡೆಟ್ರಾಯಿಟ್: ಮೊದಲಮಹಿಳಾಮೇಯರ್ ಆಯ್ಕೆ
ಡೆಟ್ರಾಯಿಟ್‌ನ ಮೊದಲ ಮಹಿಳಾ ಮೇಯರ್ ಆಗಿ ಮೇರಿ ಶೆಫೀಲ್ಡ್ ಅವರು ಆಯ್ಕೆಯಾಗಿದ್ದಾರೆ. ಸದ್ಯ ಅವರು ಸಿಟಿ ಕೌನ್ಸಿಲ್ ಅಧ್ಯಕ್ಷೆ ಆಗಿದ್ದಾರೆ.
ಪ್ರಮುಖ ಚರ್ಚ್‌ವೊಂದರ ಪ್ರಸಿದ್ಧ ಪಾದ್ರಿ ಸೊಲೊಮನ್ ಕಿನ್ನೊಚ್ ಅವರನ್ನು ಶೆಫೀಲ್ಡ್ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಭವಗೊಳಿಸಿದ್ದಾರೆ. ಮೇಯರ್ ಆಗಿ ಜನವರಿಯಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
2013ರಲ್ಲಿ ಶೆಫೀಲ್ಡ್ ತಮ್ಮ 26ನೇ ವಯಸ್ಸಿನಲ್ಲಿ ಸಿಟಿ ಕೌನ್ಸಿಲ್‌ಗೆ ಆಯ್ಕೆಯಾಗಿದ್ದು, 2022ರಲ್ಲಿ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು.
‘ಡೆಟ್ರಾಯಿಟ್‌ನ ಮಕ್ಕಳಿಗೆ ಶಿಕ್ಷಣ ನೀಡುವ ಕಡೆ ಹೆಚ್ಚು ಗಮನ ನೀಡುತ್ತೇನೆ. ಸಾರ್ವಜನಿಕರ ಸುರಕ್ಷತೆ ಮತ್ತು ಜೀವನಮಟ್ಟ ಸುಧಾರಿಸುವುದು ಚುನಾಯಿತ ಮೇಯರ್ ಆಗಿ ನನ್ನ ಆದ್ಯತೆಯಾಗಿದೆ’ ಎಂದು ಮೇರಿ ಶೆಫೀಲ್ಡ್ ಹೇಳಿದ್ದಾರೆ.
ಸಾಲ ನೀಡುವ ವೇದಿಕೆ ಎಂ–ಪಾಕೆಟ್ ನಡೆಸಿರುವ ಸಮೀಕ್ಷೆಯ ಪ್ರಕಾರ ಇಂದಿನ ತಲೆಮಾರಿನ ಜನರಿಗೆ ಸಾಲ ಪಡೆಯುವುದು ಹೊಸ ಸಾಧ್ಯತೆಗಳನ್ನು ಅರಸಲು ಇರುವ ಒಂದು ಮಾರ್ಗ.
ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರ ಪೈಕಿ ಶೇಕಡ 63ರಷ್ಟು ಮಂದಿ ಸಾಲದಿಂದಾಗಿ ತಮ್ಮ ಹಣಕಾಸಿನ ಸ್ಥಿತಿಯ ಮೇಲೆ ಉತ್ತಮ ಪರಿಣಾಮ ಉಂಟಾಗಿದೆ ಎಂದು ಹೇಳಿದ್ದಾರೆ, ಶೇ 40ರಷ್ಟು ಮಂದಿ ಸಾಲವನ್ನು ವೃತ್ತಿಯಲ್ಲಿ ಮುಂದೆ ಬರಲು, ಜೀವನಶೈಲಿಯಲ್ಲಿ ಸುಧಾರಣೆ ತರಲು, ಶಿಕ್ಷಣಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ.
ಮೂರು ಸಾವಿರಕ್ಕೂ ಹೆಚ್ಚು ಯುವಕರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಶೇ 23.4ರಷ್ಟು ಮಂದಿ ಆರೋಗ್ಯ ವೆಚ್ಚ ನಿಭಾಯಿಸಲು ಸಾಲ ಪಡೆಯುತ್ತಿದ್ದಾರೆ, ಶೇ 12.4ರಷ್ಟು ಮಂದಿ ತುರ್ತು ಸಂದರ್ಭ ನಿಭಾಯಿಸಲು ಸಾಲ ಪಡೆಯುತ್ತಿದ್ದಾರೆ. ಯುವಕರು ಸಾಲ ಪಡೆದು ತಮ್ಮ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು, ದೀರ್ಘಾವಧಿಯಲ್ಲಿ ಬೆಳವಣಿಗೆ ಸಾಧಿಸಲು ಅದನ್ನು ಬಳಸಿಕೊಳ್ಳುತ್ತಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ.
ಅಣ್ವಸ್ತ್ರಪರೀಕ್ಷೆ ಪುನರಾರಂಭ: ವ್ಲಾದಿಮಿರ್ ಪುಟಿನ್ ಸೂಚನೆ
ಅಮೆರಿಕವು ಅಣ್ವಸ್ತ್ರ ಪರೀಕ್ಷೆಗಳನ್ನು ಪುನರಾರಂಭಿಸುವ ಬಗ್ಗೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಯಾಗಿ ರಷ್ಯಾ ಈ ಪ್ರತಿಕ್ರಿಯೆ ನೀಡಿದೆ.
ಭದ್ರತಾ ಮಂಡಳಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ಪುಟಿನ್, ‘ಅಮೆರಿಕ ಮೊದಲು ಅಣ್ವಸ್ತ್ರ ಪರೀಕ್ಷೆ ನಡೆಸಿದರೆ ಮಾತ್ರ ರಷ್ಯಾ ಅಣ್ವಸ್ತ್ರ ಪರೀಕ್ಷೆಗಳನ್ನು ಪುನರಾರಂಭಿಸುತ್ತದೆ’ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ದೃಢಪಡಿಸಿದರು.
ಇದರೊಂದಿಗೆ ಡೆಮಾಕ್ರಟ್‌ಗಳು ಸಿನ್ಸಿನಾಟಿಯ ಸ್ಥಳೀಯ ಸರ್ಕಾರದ ಹಿಡಿತವನ್ನು ಪಡೆದಿದ್ದಾರೆ ಮತ್ತು ಒಹಿಯೊನಲ್ಲಿ ಪುರೆವಾಲ್ ಅವರ ರಾಜಕೀಯ ಭವಿಷ್ಯವು ಉಜ್ವಲವಾಗುವ ಸೂಚನೆ ಲಭಿಸಿದೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಯೋಜನೆಯ ಮೂಲಕ ಮಹಿಳೆಯರ ನೇತೃತ್ವದ 200 ಉದ್ಯಮಗಳನ್ನು ಒಎನ್‌ಡಿಸಿ ನೆಟ್‌ವರ್ಕ್ ವ್ಯಾಪ್ತಿಗೆ ತರಲಾಗಿದೆ, ಅವರಿಗೆ ಇ–ವಾಣಿಜ್ಯ ಮಾರುಕಟ್ಟೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
‘ಭಾರತದ ಇ–ವಾಣಿಜ್ಯ ಮಾರುಕಟ್ಟೆಯು 2034ರ ವೇಳೆಗೆ ಅಮೆರಿಕದ ಇ–ವಾಣಿಜ್ಯ ಮಾರುಕಟ್ಟೆಯನ್ನು ಮೀರಿ ಬೆಳೆಯುವ ಅಂದಾಜು ಇದೆ. ಹೀಗಿದ್ದರೂ, ಈ ವಲಯದಲ್ಲಿ ಬೆಳೆಯಲು ಬೇಕಿರುವ ಡಿಜಿಟಲ್ ಪರಿಣತಿಯು ಸಣ್ಣ ಹಾಗೂ ಮಧ್ಯಮ ಗಾತ್ರದ ವ್ಯಾಪಾರಿಗಳ ಪೈಕಿ ಹಲವರಿಗೆ ಈಗಲೂ ಇಲ್ಲ.
ಒಎನ್‌ಡಿಸಿ ಜೊತೆಗಿನ ನಮ್ಮ ಪಾಲುದಾರಿಕೆಯು 200ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳಿಗೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಬೆಳವಣಿಗೆ ಸಾಧಿಸಲು ನೆರವಾಗಿದೆ’ ಎಂದು ನಾಸ್ಕಾಂ ಫೌಂಡೇಷನ್‌ನ ಸಿಇಒ ಜ್ಯೋತಿ ಶರ್ಮಾ ಹೇಳಿದ್ದಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಉಡುಪಿ ಸೇರಿದಂತೆ 22 ಜಿಲ್ಲೆಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಸಂದರ್ಭ: ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನ್ಯಾಯಾಲಯಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆ, ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ತ್ವರಿತ ನ್ಯಾಯಾಲಯ ಸ್ಥಾಪಿಸುವುದೂ ಸೇರಿದಂತೆ ಜಿಲ್ಲಾ ನ್ಯಾಯಾಂಗಕ್ಕೆ ಸಮಗ್ರ ಸುಧಾರಣೆ ತರಲು ಸರ್ಕಾರ ಮುಂದಡಿ ಇಟ್ಟಿದೆ.
ಈ ಉದ್ದೇಶದಿಂದ ‘ಕರ್ನಾಟಕ ಜಿಲ್ಲಾ ನ್ಯಾಯಾಂಗ ಸುಧಾರಣೆಗಳ ಮಸೂದೆ– 2025’ರ ಕರಡು ಸಿದ್ಧಗೊಂಡಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆ ಮಂಡಿಸುವ ತಯಾರಿಯೂ ನಡೆದಿದೆ.
ನ್ಯಾಯಾಂಗ ಪ್ರಕ್ರಿಯೆ ಗಳಲ್ಲಿ ವೇಗ, ನಿಖರತೆ, ಪಾರದರ್ಶಕತೆ ಮತ್ತು ವಸ್ತುನಿಷ್ಠತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ (ಎಐ) ಸಾಧನ ಬಳಸಬೇಕು ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಪರಿಚಯಿಸಬೇಕು. ಆ ಮೂಲಕ ಜಿಲ್ಲಾ ನ್ಯಾಯಾಂಗದಲ್ಲಿ ನ್ಯಾಯದಾನ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸಲು ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ಸಮನ್ವಯದಿಂದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಪ್ರಸ್ತಾವ ಮಸೂದೆಯಲ್ಲಿದೆ.
ಮಸೂದೆಯಲ್ಲಿಏನಿದೆ?: ರೈತರು, ನಿರುದ್ಯೋಗಿಗಳು, ಉದ್ಯೋಗ ವಂಚಿತರು, ಭೂ ವಿವಾದಗಳು, ಕೃಷಿ ಸಾಲಗಳು, ಬೆಳೆ ವಿಮೆ ಮತ್ತು ಹಿಡುವಳಿ ಸಮಸ್ಯೆಗಳು ಸೇರಿದಂತೆ ಕೃಷಿ ವಿವಾದಗಳನ್ನು ಒಳಗೊಂಡ ಸಿವಿಲ್ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದಕ್ಕೆ ಅನುಗುಣವಾಗಿ ಪ್ರತಿ ಜಿಲ್ಲೆಗೆ ಕನಿಷ್ಠ ಒಂದು ‘ತ್ವರಿತ ನ್ಯಾಯಾಲಯ’ ಸ್ಥಾಪಿಸಬೇಕು.
ಈ ನ್ಯಾಯಾಲಯಗಳ ಮುಂದಿರುವ ಎಲ್ಲ ಪ್ರಕರಣಗಳಿಗೆ ಮಧ್ಯಸ್ಥಿಕೆ ಕೇಂದ್ರಗಳು, ಲೋಕ ಅದಾಲತ್‌ಗಳು ಅಥವಾ ಪರ್ಯಾಯ ವಿವಾದ ಪರಿಹಾರ ಕೇಂದ್ರಗಳ ಮೂಲಕ ಪೂರ್ವ ವಿಚಾರಣೆಯ ಮಧ್ಯಸ್ಥಿಕೆ ಕಡ್ಡಾಯವಾಗಿ ಮಾಡಬೇಕು.
ತ್ವರಿತ ನ್ಯಾಯಾಲಯಗಳ ಕಾರ್ಯಕ್ಷಮತೆಯ ಬಗ್ಗೆ ಜಿಲ್ಲಾ ನ್ಯಾಯಾಂಗ ಮೇಲ್ವಿಚಾರಣಾ ಸಮಿತಿಯು ತ್ರೈಮಾಸಿಕ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು. ಈ ನ್ಯಾಯಾಲಯಗಳ ಪೀಠಾಸೀನ ಅಧಿಕಾರಿಯು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದೊಂದಿಗೆ ಸಮನ್ವಯ ಸಾಧಿಸಿ, ರೈತರಿಗೆ, ನಿರುದ್ಯೋಗಿಗಳಿಗೆ ಮತ್ತು ಉದ್ಯೋಗ ವಂಚಿತರಿಗೆ ಕಾನೂನು ನೆರವಿನ ಲಭ್ಯತೆಯನ್ನು ಖಾತರಿಪಡಿಸಬೇಕು.
10 ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ಬಾಕಿ ಇರುವ ಪ್ರಕರಣ ಗಳನ್ನು (ವಿಶೇಷ ಕಾರಣಗಳಿಗಾಗಿ ಹೈಕೋರ್ಟ್ ನಿರ್ದೇಶನ ನೀಡದ ಹೊರತು) ಪ್ರಾದೇಶಿಕ ಮತ್ತು ವಿಷಯದ ಅಧಿಕಾರ ವ್ಯಾಪ್ತಿ ಹೊಂದಿರುವ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಬೇಕು.
ಐದು ಮತ್ತು ಹತ್ತು ವರ್ಷಗಳ ನಡುವೆ ಬಾಕಿ ಉಳಿದಿರುವ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಧೀಶರ ಶಿಫಾರಸಿನ ಆಧಾರದಲ್ಲಿ ಅಥವಾ ಹೈಕೋರ್ಟ್ ನಿರ್ದೇಶನದ ಮೂಲಕ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಬಹುದು. ಹೀಗೆ ವರ್ಗಾಯಿಸಿದ ಪ್ರತಿಯೊಂದು ಪ್ರಕರಣವನ್ನು ಸಾಧ್ಯವಾದಷ್ಟು ಮಟ್ಟಿಗೆ ವರ್ಗಾವಣೆಯಾದ ದಿನದಿಂದ 12 ತಿಂಗಳ ಒಳಗೆ ವಿಲೇವಾರಿ ಮಾಡಬೇಕು. ಈ ಬಗ್ಗೆ ಹೈಕೋರ್ಟ್‌ಗೆ ಪ್ರಗತಿ ವರದಿ ಸಲ್ಲಿಸಬೇಕು.
ಮೇಲ್ವಿಚಾರಣಾ ಸಮಿತಿ ರಚನೆ: ಪ್ರತಿ ಜಿಲ್ಲೆಯಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ, ಇಬ್ಬರು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ವಕೀಲರ ಸಂಘದ ಒಬ್ಬ ಪ್ರತಿನಿಧಿಯನ್ನು ಒಳಗೊಂಡ ‘ಜಿಲ್ಲಾ ನ್ಯಾಯಾಂಗ ಮೇಲ್ವಿಚಾರಣಾ ಸಮಿತಿ’ಯನ್ನು ಹೈಕೋರ್ಟ್ ಸ್ಥಾಪಿಸಬೇಕು ಎಂದೂ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಜನಸಂಖ್ಯೆಯ ಶೇಕಡ 60ಕ್ಕಿಂತ ಹೆಚ್ಚು ಜನರು 35 ವರ್ಷದ ಒಳಗೆ ಇದ್ದಾರೆ. ಯುವಪೀಳಿಗೆಯನ್ನು ಸರಿಯಾದ ಕೌಶಲ ಮತ್ತು ಆತ್ಮ ವಿಶ್ವಾಸದಿಂದ ಸಜ್ಜುಗೊಳಿಸ ಬೇಕಿದೆ.ನವೋದ್ಯಮ ರಾಜಧಾನಿಯಾಗಿ ರೂಪಾಂತರಗೊಂಡಿರುವ ಬೆಂಗಳೂರು ನಗರ, ಈಗ ಭಾರತದ ಕೌಶಲ ರಾಜಧಾನಿ ಆಗಿರುವುದು ಹೆಮ್ಮೆಎಂದರು.
‘ಬಜೆಟ್ನಲ್ಲಿಘೋಷಿಸಿದ್ದಕರ್ನಾಟಕಕೌಶಲಾಭಿವೃದ್ಧಿನೀತಿ 2025-32 ಅನ್ನುಕೌಶಲಶೃಂಗಸಭೆ–2025ರಮೂಲಕಕಾರ್ಯರೂಪಕ್ಕೆತರಲಾಗುತ್ತಿದೆ. ಏಳು ವರ್ಷದ ಕಾರ್ಯತಂತ್ರದ ನೀಲನಕ್ಷೆಗೆ ₹4,432 ಕೋಟಿ ಅನುದಾನ ನೀಡಿ, ರಾಜ್ಯವನ್ನು ಕೌಶಲಭರಿತ ಹಾಗೂ ಭವಿಷ್ಯದ ಸವಾಲುಗಳಿಗೆ ಸನ್ನದ್ಧ ವಾಗಿಸುವ ಹಾಗೂ ಕಾರ್ಮಿಕ ಶಕ್ತಿಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಉದ್ದೇಶವಿದೆ’ ಎಂದು ವಿವರಿಸಿದರು.
2032ರವೇಳೆಗೆಸುಮಾರು 30 ಲಕ್ಷಯುವಜನರಿಗೆಕೌಶಲತರಬೇತಿನೀಡಲಾಗುವುದು. ಐಟಿಐಗಳಲ್ಲಿ ಮಹಿಳೆಯರ ಪ್ರವೇಶವನ್ನು ಶೇಕಡ 33ಕ್ಕೆ ಹೆಚ್ಚಿಸುವ ಹಾಗೂ ಅಂತರರಾಷ್ಟ್ರೀಯ ವಲಸೆ ಕೇಂದ್ರ ಮೂಲಕ ಜಾಗತಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು..
ನೀಲನಕ್ಷೆಬಿಡುಗಡೆ: 2025–2032 ಹಾಗೂ ಕರ್ನಾಟಕ ವರ್ಕ್‌ಫೋರ್ಸ್ ಬ್ಲೂಪ್ರಿಂಟ್–2030 ಬಿಡುಗಡೆ ಮಾಡಲಾಯಿತು.
‘ಆಹಾರಸುರಕ್ಷತೆಗೆಮಾನದಂಡರೂಪಿಸಿ’
ಸಂದರ್ಭ: ‘ಬೀದಿಬದಿವ್ಯಾಪಾರಿಗಳುಹಾಗೂದೊಡ್ಡ–ದೊಡ್ಡರೆಸ್ಟೋರೆಂಟ್ಗಳುಆರೋಗ್ಯಮತ್ತುಸುರಕ್ಷತಾಮಾನದಂಡನಿಯಮಗಳನ್ನುಚಾಚೂತಪ್ಪದೆಅನುಸರಣೆಮಾಡುವಜತೆಗೆ, ನಿಯಮಗಳಕಟ್ಟುನಿಟ್ಟಿನಅನುಷ್ಠಾನದಬಗ್ಗೆನಿಗಾಇರಿಸುವುದಕ್ಕೆಸೂಕ್ತಕಾರ್ಯವಿಧಾನವೊಂದನ್ನುರೂಪಿಸಬೇಕು’ಎಂದುರಾಜ್ಯಸರ್ಕಾರಕ್ಕೆಹೈಕೋರ್ಟ್ಮಹತ್ವದನಿರ್ದೇಶನ ನೀಡಿದೆ.
‘ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘ’ದ ಗೌರವ ಕಾರ್ಯದರ್ಶಿ ನಾಗರಾಜ ಧನ್ಯ ಮತ್ತು ‘ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ’ದ ಅಧ್ಯಕ್ಷ ಕೆ.ಎನ್. ವಾಸುದೇವ ಅಡಿಗ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದೆ.
ನ್ಯಾಯಪೀಠಹೇಳಿದ್ದೇನು?
‘ಮಾನವನ ಆಹಾರ ಸೇವನೆ ಎಲ್ಲಿಯವರೆಗೆ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೂ ಸೇವಿಸುವ ಆಹಾರ ಆರೋಗ್ಯಕರವಾಗಿ ಇರಬೇಕು. ಆರೋಗ್ಯ ಕಾರಣಗಳಿಗಾಗಿ, ಪ್ರತಿಯೊಬ್ಬ ನಾಗರಿಕನೂ ತನ್ನ ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ.
‘ಭಾರತದಲ್ಲಿ ಬೀದಿ ಬದಿ ಆಹಾರಕ್ಕೆ ಅದರದೇ ಆದ ಸಾಂಸ್ಕೃತಿಕ ಆಯಾಮವಿದೆ. ರಸ್ತೆಬದಿಯ ಸಾಮಾನ್ಯ ಅಂಗಡಿಗಳಿಂದ ಹಿಡಿದು ಆಧುನಿಕ ರೆಸ್ಟೋರೆಂಟ್‌ಗಳವರೆಗೆ, ಭಾರತೀಯ ಪಾಕಪದ್ಧತಿಯ ವಿಶೇಷ ಘಮಲು ಚೈತನ್ಯಶೀಲ ಅಭಿವೃದ್ಧಿ ಉದ್ಯಮದ ಸಂಕೇತವಾಗಿದೆ. ಆದ್ದರಿಂದ, ಈ ಎಲ್ಲ ಉದ್ಯಮಗಳ ವಾರ್ಷಿಕ ವಹಿವಾಟನ್ನು ಆರ್ಥಿಕ ಮಾಪಕದ ಮೂಲಕ ಆಹಾರ ವ್ಯವಹಾರಗಳ ಪರವಾನಗಿ ಮತ್ತು ನೋಂದಣಿ ನಿಯಮಗಳು-2011ರಡಿ ಸಣ್ಣ ಮತ್ತು ದೊಡ್ಡ ರೆಸ್ಟೋರೆಂಟ್‌ಗಳೆಂದು ಪ್ರತ್ಯೇಕಿಸುತ್ತವೆ ಎಂಬುದು ಗಮನಾರ್ಹ.’
‘ಮನುಷ್ಯರ ಆರೋಗ್ಯಕ್ಕೆ ಎದುರಾಗುವ ಅಪಾಯಗಳ ಬಗ್ಗೆ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006ರ ನಿಯಮಗಳ ಅಡಿಯಲ್ಲಿ ಸಣ್ಣ, ಮಧ್ಯಮ ಮತ್ತು ಬೃಹತ್ ರೆಸ್ಟೋರೆಂಟ್‌ಗಳಿಗೆ ತ್ರಿಪಕ್ಷೀಯ ಮಾರ್ಗಸೂಚಿಯೊಂದನ್ನು ರೂಪಿಸಬೇಕು’ ಎಂದೂ ನ್ಯಾಯಪೀಠ ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಖಡಕ್ ತಾಕೀತು ಮಾಡಿದೆ.
‘ಅರ್ಜಿದಾರರು ಆಕ್ಷೇಪಿಸಿರುವ ನಿಬಂಧನೆಗಳನ್ನು ಅಸಾಂವಿಧಾನಿಕ ಎಂದು ನಿರ್ಣಯಿಸಿ ಅವುಗಳನ್ನು ರದ್ದುಗೊಳಿಸಲು ಯಾವುದೇ ಕಾರಣಗಳಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಏನಿದುಅರ್ಜಿ?: ‘ಆಹಾರ ಸುರಕ್ಷತೆ ದೃಷ್ಟಿಯಿಂದ ನಿಯಮಗಳನ್ನು ರೂಪಿಸಿ, ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು’ ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಈ ಸಂಬಂಧ ಆಹಾರ ಸುರಕ್ಷಾ ಆಯುಕ್ತರು 2012ರ ಮಾರ್ಚ್ 13ರಂದು ಅಧಿಸೂಚನೆ ಹೊರಡಿಸಿದ್ದರು.
‘ಈ ಅಧಿಸೂಚನೆಯನ್ನು ರದ್ದುಪಡಿಸಬೇಕು’ ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ‘ಆಹಾರಸುರಕ್ಷತೆಮತ್ತುಮಾನದಂಡಗಳನಿಯಂತ್ರಣ, (ಪ್ಯಾಕೇಜಿಂಗ್ಮತ್ತುಲೇಬಲಿಂಗ್) ನಿಯಮಗಳು-2011, ಆಹಾರಸುರಕ್ಷತೆಮತ್ತುಮಾನದಂಡಗಳು, ಆಹಾರಉತ್ಪನ್ನಗಳಮಾನದಂಡಗಳುಮತ್ತುಆಹಾರಸೇರ್ಪಡೆಗಳನಿಯಮಗಳು-2011 ಮತ್ತುಆಹಾರಸುರಕ್ಷತೆಮತ್ತುಪ್ರಮಾಣಿತಕಾಯ್ದೆ-2006ರ 50 ರಿಂದ 65 ರವರೆಗಿನ ಕಲಂಗಳುಅಸಾಂವಿಧಾನಿಕ’ ಎಂದುಅರ್ಜಿದಾರರುಆಕ್ಷೇಪಿಸಿದ್ದರು.
‘ಮಾನದಂಡಗಳನ್ನು ಅನ್ವಯಿಸಲು ನಮಗೆ ಸಾಧ್ಯವಿಲ್ಲ’ ಎಂದು ಅರ್ಜಿದಾರರಾದ ಹೋಟೆಲ್ ಸಂಘಗಳು ಪ್ರತಿಪಾದಿಸಿದ್ದವು.
ಶಕ್ತಿ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರ (ಸಿಆರ್‌ಇಎ) ಬಿಡುಗಡೆ ಮಾಡಿದ ಅಕ್ಟೋಬರ್ ತಿಂಗಳ ವಾಯು ಗುಣಮಟ್ಟದ ವರದಿಯ ಪ್ರಕಾರ, ಹರಿಯಾಣದ ಧಾರುಹೆಡಾ ನಗರವು ಅಕ್ಟೋಬರ್‌ನಲ್ಲಿ ವಾಯು ಮಾಲಿನ್ಯದಲ್ಲಿ ಮೊದಲ ಸ್ಥಾನದಲ್ಲಿತ್ತು. ಅಲ್ಲಿ ಪ್ರತಿ ಘನ ಮೀಟರ್ ಗಾಳಿಯಲ್ಲಿ 123 ಮೈಕ್ರೋ ಗ್ರಾಂನಷ್ಟು ಮಾಲಿನ್ಯಕಾರಕ ಕಣಗಳು ಪತ್ತೆಯಾಗಿದ್ದವು.
ದೇಶದಾದ್ಯಂತ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಇಂಡೋ–ಗಂಗಾ ಬಯಲು (ಐಜಿಪಿ), ವಿಶೇಷವಾಗಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಆರ್‌ಸಿ) ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಈ ಸಂಬಂಧ ಕಾನೂನು ನಿಬಂಧನೆಗಳ ಕುರಿತು ಬಾಲಕರು ಮತ್ತು ಪುರುಷರಿಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಆರ್. ಮಹದೇವನ್ ಅವರ ಪೀಠ ಒತ್ತಿ ಹೇಳಿದೆ.
‘ದೇಶದಲ್ಲಿ ಬಾಲಕಿಯರು ಮತ್ತು ಮಹಿಳೆಯರಿಗೆ ಸುರಕ್ಷಿತ ವಾತಾವರಣ ಮೂಡಿಸಲು ‘ಪೋಕ್ಸೊ’ ಕಾಯ್ದೆ ಬಗ್ಗೆ ಜನರಲ್ಲಿ ಸಂವೇದನಾಶೀಲತೆ ಬೆಳೆಯುವಂತೆ ಮಾಡಬೇಕಿದೆ. ಅದಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು’ ಎಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ಪೀಠ ನಡೆಸಿತು.
ಮೂರು ಕೇಂದ್ರಾಡಳಿತ ಪ್ರದೇಶ ಮತ್ತು 9 ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಚುನಾವಣಾ ಆಯೋಗವು ಆರಂಭಿಸಿದೆ.
ಮತಗಟ್ಟೆ ಹಂತದ ಅಧಿಕಾರಿಗಳು ಮನೆ ಮನೆಗೆ ತೆರಳಿ ಸ್ವಯಂ ಮಾಹಿತಿ ಗಳನ್ನು ತುಂಬುವ ನಮೂನೆಗಳನ್ನು ವಿತರಿಸಿದರು.
ಪಶ್ವಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಎಸ್‌ಐ ಆರ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ‘ಎಸ್‌ಐಆರ್ ಅಂದರೆ ಮತ್ತೇನೂ ಅಲ್ಲ, ಅದು ‘ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)’ ಇದ್ದಂತೆ’ ಎಂದಿರುವ ತಮಿಳುನಾಡು ಸರ್ಕಾರ, ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಎಸ್‌ಐಆರ್ ಕುರಿತು ನಿರ್ಧಾರ ಕೈಗೊಳ್ಳಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಆನ್‌ಲೈನ್ ಮೂಲಕ ಸರ್ವ ಪಕ್ಷ ಸಭೆ ಕರೆದಿದ್ದಾರೆ.
ವ್ಯಕ್ತಿಆತ್ಮಹತ್ಯೆ:‘ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭಗೊಂಡ ಕಾರಣ, ದಾಖಲೆಗಳಲ್ಲಿ ಇರುವ ತನ್ನ ಹೆಸರಿನ ಕಾಗುಣಿತದಲ್ಲಿ ತಪ್ಪುಗಳಿವೆ ಎಂದು ಹೆದರಿ ಹೌರಾ ಜಿಲ್ಲೆಯ ಜಾಹಿರ್ ಮಲ್ (30) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ದೇಶಿ ಉತ್ಪಾದನೆ ಹೆಚ್ಚಿಸುವುದು ಹಾಗೂ ಆಮದನ್ನು ತಗ್ಗಿಸುವುದು ಕೂಡ ಪಿಎಲ್‌ಐ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ. ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಯೋಜನೆಗೆ ಚಾಲನೆ ನೀಡಿದರು.
ರಕ್ಷಣೆ, ವೈಮಾಂತರಿಕ್ಷ, ಇಂಧನ, ವಾಹನ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಬಳಕೆ ಮಾಡುವ ‘ವಿಶೇಷ ಬಳಕೆ ಉದ್ದೇಶದ ಉಕ್ಕು’ ತಯಾರಿಕಾ ವಲಯಕ್ಕೆ ಸಂಬಂಧಿಸಿದ ಪಿಎಲ್‌ಐ ಯೋಜನೆಗೆ ಕೇಂದ್ರ ಸಚಿವ ಸಂಪುಟವು 2021ರ ಜುಲೈನಲ್ಲಿ ಒಪ್ಪಿಗೆ ನೀಡಿತ್ತು. ಇದಕ್ಕೆ ₹6,322 ಕೋಟಿ ಅನುದಾನ ನಿಗದಿ ಮಾಡಲಾಗಿತ್ತು.
ಈ ಯೋಜನೆಯು ಮೊದಲ ಎರಡು ಸುತ್ತುಗಳಲ್ಲಿ ಇದುವರೆಗೆ ₹43,874 ಕೋಟಿ ಹೂಡಿಕೆಯನ್ನು ಆಕರ್ಷಿಸಿದೆ. ಈ ಪೈಕಿ ₹22,973 ಕೋಟಿ ಈಗಾಗಲೇ ಹೂಡಿಕೆ ಆಗಿದೆ. ಅಲ್ಲದೆ, ಮೊದಲ ಎರಡು ಸುತ್ತುಗಳ ಮೂಲಕ 13 ಸಾವಿರಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿದೆ.
‘ಮೊದಲ ಎರಡು ಸುತ್ತುಗಳಲ್ಲಿ ದೊರೆತ ಸ್ಪಂದನೆಯು ಉತ್ತೇಜನಕಾರಿ ಯಾಗಿದೆ. ಆ ಯಶಸ್ಸು ಸುಧಾರಣೆ ಆಧಾರಿತ ಹಾಗೂ ಕೈಗಾರಿಕೆಗಳಿಗೆ ಅಗತ್ಯವಿರುವ ನೀತಿಗಳ ಶಕ್ತಿಯನ್ನು ಹೇಳುತ್ತಿದೆ’ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
‘ಈ ಯೋಜನೆಯ ಮೂಲಕ ನಾವು ಭಾರತದಲ್ಲಿ ಉಕ್ಕು ತಯಾರಿಕೆ ಮಾಡುವುದಕ್ಕೆ ಮಾತ್ರ ಗಮನ ನೀಡುತ್ತಿಲ್ಲ. ಬದಲಿಗೆ, ಭಾರತದಿಂದ ಜಗತ್ತಿಗೆ ಉಕ್ಕು ಪೂರೈಕೆ ಮಾಡುವತ್ತಲೂ ಆಲೋಚನೆ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.
ಯೋಜನೆಯ ಮೂರನೆಯ ಸುತ್ತು ಹೊಸ ಉದ್ದಿಮೆಗಳಿಗೆ ಹಾಗೂ ಈಗಾಗಲೇ ಇರುವ ಉದ್ದಿಮೆಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
1969ರಲ್ಲಿ ನಡೆದ ಬ್ಯಾಂಕ್‌ಗಳ ರಾಷ್ಟ್ರೀಕರಣ ಪ್ರಕ್ರಿಯೆಯು ಹಣಕಾಸಿನ ಒಳಗೊಳ್ಳುವಿಕೆಯ ವಿಚಾರದಲ್ಲಿ ಅಪೇಕ್ಷಿತ ಫಲಿತಾಂಶವನ್ನು ನೀಡಿಲ್ಲ ಎಂದು ಅವರು ಹೇಳಿದರು.
ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಷ್ಟ್ರೀಕರಣದಿಂದಾಗಿ ಆದ್ಯತಾ ವಲಯಗಳಿಗೆ ಸಾಲ ನೀಡುವ ವಿಚಾರದಲ್ಲಿ, ಸರ್ಕಾರದ ಯೋಜನೆಗಳ ವಿಚಾರದಲ್ಲಿ ಅನುಕೂಲ ಆಗಿದ್ದು ನಿಜ. ಆದರೆ ಸರ್ಕಾರದ ನಿಯಂತ್ರಣದ ಕಾರಣದಿಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ವೃತ್ತಿಪರತೆ ಯನ್ನು ಕಳೆದುಕೊಂಡವು’ ಎಂದು ಹೇಳಿದರು.
‘ನಾವು ಬ್ಯಾಂಕ್‌ಗಳನ್ನು ವೃತ್ತಿಪರವಾಗಿಸಿದ ನಂತರದಲ್ಲಿ’ ರಾಷ್ಟ್ರೀಕರಣದ ಉದ್ದೇಶಗಳು ‘ಬಹಳ ಚೆಂದವಾಗಿ ಅನುಷ್ಠಾನ ಗೊಳ್ಳುತ್ತಿವೆ’ ಎಂದು ನಿರ್ಮಲಾ ವಿವರಿಸಿದರು. ‘ಬ್ಯಾಂಕ್‌ಗಳನ್ನು ವೃತ್ತಿಪರವಾಗಿ ಸಲು ಯತ್ನಿಸಿದಾಗ, ಅಥವಾ ಅವುಗಳ ಖಾಸಗೀಕರಣದ ಉದ್ದೇಶ ಹೊಂದಿದಾಗ, ಬ್ಯಾಂಕ್‌ಗಳನ್ನು ಎಲ್ಲರಿಗೂ ತೆರೆದು ಕೊಳ್ಳುವಂತೆ ಮಾಡುವ ಉದ್ದೇಶವು ಸೋಲುತ್ತದೆ ಎಂಬ ಗ್ರಹಿಕೆ ತಪ್ಪು’ ಎಂದು ವಿವರಿಸಿದರು.
ಬ್ಯಾಂಕ್‌ಗಳು ವೃತ್ತಿಪರವಾಗಿ ನಡೆಯಲು ಅವಕಾಶ ಕಲ್ಪಿಸಿದಾಗ, ಬ್ಯಾಂಕ್‌ಗಳಿಗೆ ಸಂಬಂಧಿಸಿದ ತೀರ್ಮಾನಗಳನ್ನು ಅಲ್ಲಿನ ಆಡಳಿತ ಮಂಡಳಿಗಳೇ ತೆಗೆದುಕೊಂಡಾಗ, ರಾಷ್ಟ್ರೀಯ ಹಿತಾಸಕ್ತಿ ಹಾಗೂ ಬ್ಯಾಂಕಿನ ಹಿತಾಸಕ್ತಿಗಳು ಈಡೇರುತ್ತವೆ ಎಂದು ಹೇಳಿದರು.
ಬ್ಯಾಂಕ್ ಖಾಸಗೀಕರಣದ ಭಾಗವಾಗಿ ಕೇಂದ್ರ ಸರ್ಕಾರವು ಐಡಿಬಿಐ ಬ್ಯಾಂಕ್‌ನ ಶೇ 51ರಷ್ಟು ಷೇರುಗಳನ್ನು ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) 2019ರಲ್ಲಿ ಮಾರಾಟ ಮಾಡಿದೆ.
ಮಹಿಳಾ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಅಮೋಘ ಶತಕ ದಾಖಲಿಸಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಟ್ ಎರಡು ಸ್ಥಾನಗಳ ಬಡ್ತಿ ಪಡೆದು, ಮಂದಾನ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
ಟೂರ್ನಿಯಲ್ಲಿ ದಾಖಲೆಯ 571 ರನ್ ಗಳಿಸಿದ ವೋಲ್ವಾರ್ಟ್ ಅವರು ವೃತ್ತಿಜೀವನದಲ್ಲೇ ಗರಿಷ್ಠ ರೇಟಿಂಗ್ (814) ಸಂಪಾದಿಸಿದ್ದಾರೆ. ಮಂದಾನ ಎರಡನೇ ಸ್ಥಾನ ಸ್ಥಾನಕ್ಕೆ ಸರಿದಿದ್ದಾರೆ.
ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ ಶತಕ ದಾಖಲಿಸಿದ್ದ ಜೆಮಿಮಾ ಒಂಬತ್ತು ಸ್ಥಾನಗಳ ಬಡ್ತಿ ಪಡೆದು 10ನೇ ಸ್ಥಾನಕ್ಕೆ ಜಿಗಿದಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ನಾಲ್ಕು ಸ್ಥಾನಗಳ ಬಡ್ತಿಯೊಂದಿಗೆ 14ನೇ ಸ್ಥಾನದಲ್ಲಿದ್ದಾರೆ.
ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೊನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ದೀಪ್ತಿ ಶರ್ಮಾ ಐದನೇ ಸ್ಥಾನದಲ್ಲಿದ್ದಾರೆ.
ಭಾರತದ ತಂಡದ ಜಯದಲ್ಲಿ ಈ ಮೂವರೂ ಉತ್ತಮ ಕಾಣಿಕೆ ನೀಡಿದ್ದಾರೆ. ಆದ್ದರಿಂದ ಅವರನ್ನು ತಂಡಕ್ಕೆ ಪರಿಗಣಿಸ ಲಾಗಿದೆ.
ರನ್ನರ್ಸ್ ಅಪ್ ದಕ್ಷಿಣ ಆಫ್ರಿಕಾ ತಂಡದ ಲಾರಾ ವೊಲ್ವಾರ್ಟ್ ಅವರನ್ನು ಈ ತಂಡಕ್ಕೆ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ. ಪಾಕಿಸ್ತಾನದ ಸಿದ್ರಾ ನವಾಜ್ ಅವರನ್ನು ವಿಕೆಟ್‌ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.
31 ವರ್ಷ ವಯಸ್ಸಿನ ಚಾನು 2020ರ ಟೋಕಿಯೊ ಕ್ರೀಡೆಗಳ 49 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಕೊಂಡಿದ್ದರು. ಆದರೆ 2028ರ ಕ್ರೀಡೆಗಳ ವೇಟ್‌ಲಿಫ್ಟಿಂಗ್ ಸ್ಪರ್ಧೆಗಳು 53 ಕೆ.ಜಿ. ತೂಕ ವಿಭಾಗದಿಂದ ಆರಂಭವಾಗಲಿವೆ. ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು ಸ್ಪರ್ಧೆಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲು ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿರ್ಧರಿಸಿದೆ.
53 ಕೆ.ಜಿ. ತೂಕ ವಿಭಾಗದಲ್ಲಿ ಸ್ಪರ್ಧಿ ಸುವುದರಿಂದ ಚಾನು ಅವರಿಗೆ ಅನು ಕೂಲವಾಗಲಿದೆ. ಆದರೆ ಮಣಿಪುರದ ಸ್ಪರ್ಧಿಯು ಮುಂದಿನ ವರ್ಷದ ಏಷ್ಯನ್ ಗೇಮ್ಸ್‌ವರೆಗೆ ಈ ಹಿಂದಿನಂತೆ 49 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸಲಿದ್ದಾರೆ ಎಂದು ರಾಷ್ಟ್ರೀಯ ಮುಖ್ಯ ಕೋಚ್ ವಿಜಯ್ ಶರ್ಮಾ ತಿಳಿಸಿದ್ದಾರೆ.
ಪುರುಷರ ವಿಭಾಗ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಲಾ ಆರು ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ವರ್ಷ ಎರಡನೇ ಬಾರಿ ಅಂತರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ ತೂಕ ವಿಭಾಗಗಳಲ್ಲಿ ಬದಲಾವಣೆ ತಂದಿದೆ. ಈ ಹಿಂದಿನ ಪಟ್ಟಿಯ ಪ್ರಕಾರ ಅವರು 48 ಕೆ.ಜಿ. ವಿಭಾಗದಲ್ಲಿ (49 ಕೆ.ಜಿ. ತೆಗೆದುಹಾಕಿದ ಕಾರಣ) ಕಣಕ್ಕಿಳಿಯಲು ಯೋಚಿಸಿದ್ದರು.
48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲು ಆಗುತ್ತಿರುವ ದೈಹಿಕ ಸವಾಲುಗಳ ಬಗ್ಗೆ ಚಾನು ಹಲವು ಬಾರಿ ಮಾತನಾಡಿದ್ದರು. ‘ಏಷ್ಯನ್ ಗೇಮ್ಸ್ ನಂತರ 53 ಕೆ.ಜಿ. ತೂಕ ವಿಭಾಗದಲ್ಲಿ ಸ್ಪರ್ಧಿಸಲು ಬೇಕಾದ ಪ್ರಕ್ರಿಯೆಗಳನ್ನು ಆರಂಭಿಸುತ್ತೇವೆ’ ಎಂದು ಶರ್ಮಾ ಹೇಳಿದ್ದಾರೆ.
ಹರಿಯಾಣದ ವೃದ್ಧ ದಂಪತಿ ತಾವು ‘ಡಿಜಿಟಲ್ ಅರೆಸ್ಟ್’ನಲ್ಲಿ ₹1.5 ಕೋಟಿ ಕಳೆದುಕೊಂಡಿರುವ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.
ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ನಡೆದ ಇಂಥ ಪ್ರಕರಣಗಳ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಅ.27ರಂದು ನಡೆದ ವಿಚಾರಣೆ ವೇಳೆ ಸೂಚನೆ ನೀಡಿತ್ತು. ಇದರಂತೆ, ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬಿಐ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿವೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ಜಲ್ ಭುಯಾನ್ ಮತ್ತು ಜಾಯ್ ಮಾಲ್ಯಾ ಬಾಗ್ಚಿ ಅವರಿರುವ ಪೀಠವು ಈ ವರದಿಯನ್ನು ಪರಿಶೀಲಿಸಿತು. ‘ಗೃಹ ಸಚಿವಾಲಯ ಮತ್ತು ಸಿಬಿಐ ವರದಿಯನ್ನು ಪರಿಶೀಲಿಸಿ ನಮ್ಮ ಕಚೇರಿಯು ಸಣ್ಣ ವರದಿಯೊಂದನ್ನು ಸಿದ್ಧಪಡಿಸಿದೆ’ ಎಂದು ಪೀಠ ತಿಳಿಸಿತು.
‘ಡಿಜಿಟಲ್ ಅರೆಸ್ಟ್’ ಎನ್ನವುದು ನಾವು ಅಂದುಕೊಂಡಿದ್ದಕ್ಕಿಂತ ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವರದಿಯನ್ನು ನೋಡಿದರೆ ದಿಗಿಲಾಗುತ್ತಿದೆ ಎಂದರು.
ಅಮಿಕಸ್ ಕ್ಯೂರಿನೇಮಕ: ಸೈಬರ್ ಅಪರಾಧ, ಪ್ರಮುಖವಾಗಿ ‘ಡಿಜಿಟಲ್ ಅರೆಸ್ಟ್’ ಹೆಸರಿನ ವಂಚನೆ ನಿಯಂತ್ರಣ ಕುರಿತು ನ್ಯಾಯಾಲಯಕ್ಕೆ ಸಲಹೆ ಮತ್ತು ಸಹಕಾರ ನೀಡಲು ಅಮಿಕಸ್ ಕ್ಯೂರಿಯನ್ನು ನೇಮಿಸಲಾಗುವುದು ಎಂದು ಪೀಠ ಹೇಳಿತು. ಹಿರಿಯ ವಕೀಲೆ, ಸೈಬರ್ ಕಾನೂನು ತಜ್ಞೆ ಎನ್.ಎಸ್. ನಪ್ಪಿನಾಯ್ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿತು. ಸೈಬರ್ ಅಪರಾಧಗಳಿಗೆ ಸಂಬಂಧಿಸಿ ಕಾನೂನುಗಳ ಬಗ್ಗೆ ಮಾಹಿತಿ ನೀಡುವ ‘ಸೈಬರ್ ಸಾಥಿ’ ಎಂಬ ವೆಬ್‌ಸೈಟ್ ಅನ್ನೂ ಇವರು ಸ್ಥಾಪಿಸಿದ್ದಾರೆ.
‘ಕೇಂದ್ರ ಗೃಹ ಸಚಿವಾಲಯದಲ್ಲಿ ಪ್ರತ್ಯೇಕ ತಂಡವೊಂದು ಸೈಬರ್ ಅಪರಾಧಗಳಿಗೆ ಸಂಬಂಧಿಸಿ ಕೆಲಸ ಮಾಡುತ್ತಿದೆ, ಬೇಕಾದ ಕ್ರಮಗಳನ್ನೂ ಕೈಗೊಂಡಿದೆ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದರು. ಅಮಿಕಸ್ ಕ್ಯೂರಿ ಅವರಿಂದ ಸಲಹೆ ಪಡೆದ ಬಳಿಕ ಕೆಲವು ಮಾರ್ಗಸೂಚಿಗಳನ್ನು ನೀಡುವುದಾಗಿ ಹೇಳಿದ ಪೀಠವು, ಮುಂದಿನ ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು.
‘ಒನ್ ವೇ ಸ್ಟ್ರೀಟ್’ ಸಿದ್ಧಾಂತವನ್ನು ವಿವರಿಸಿದ ಅವರು, ‘ನಾನು ಸಮೃದ್ಧಿ ಮತ್ತು ಪ್ರಗತಿ ಬಗ್ಗೆ ಯೋಚಿಸುವಾಗ, ಈ ವಿಚಾರಗಳ ಕುರಿತ ಚಿಂತನೆ ಯಾವಾಗ ಪ್ರಾರಂಭವಾಯಿತು’ ಎಂಬ ಪ್ರಶ್ನೆ ತಲೆದೋರುತ್ತದೆ. ಇದನ್ನು ವಿಶ್ವ ಇತಿಹಾಸದ ಅನೇಕ ಹಂತಗಳಲ್ಲಿ ಪರಿಗ ಣಿಸಬಹುದು. ಆದರೆ, ಅದಕ್ಕೆ ಒಂದು ಉಲ್ಲೇಖದ ಬಿಂದುವಾಗಿ ಇಬ್ಬರು ಸ್ಕಾಟ್‌ಲೆಂಡ್ ಚಿಂತಕರು 18ನೇಶತಮಾನದಲ್ಲಿನಡೆದನಗರೀಕರಣ, ಕೈಗಾರೀಕರಣ, ಸಾಮಾಜಿಕಬದಲಾವಣೆಗಮನಿಸುತ್ತಾ ಒಂದು ಸಿದ್ಧಾಂತ ರೂಪಿಸಿ ದರು. ಅದನ್ನು ‘ಒನ್ ವೇ ಸ್ಟ್ರೀಟ್ ಸಿದ್ಧಾಂತ’ ಎಂದು ಕರೆಯುವೆ’ ಎಂದರು.
ಸಿಗದಎಫ್ಆರ್ಪಿರಾಜ್ಯದಕಬ್ಬುನೆರೆರಾಜ್ಯಕ್ಕೆ
ಕೇಂದ್ರ ಸರ್ಕಾರವು ಪ್ರತಿ ಟನ್ ಕಬ್ಬಿಗೆ ನಿಗದಿಪಡಿಸಿರುವ ನ್ಯಾಯಸಮ್ಮತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ಆಧಾರದಲ್ಲಿ ರಾಜ್ಯದಲ್ಲಿ ಬೆಲೆ ನಿಗದಿ ಮಾಡಲಾಗಿದ್ದರೂ ಸಕ್ಕರೆ ಕಾರ್ಖಾನೆಗಳು ಕಡಿಮೆ ದರ ನೀಡಲು ಮುಂದಾಗಿವೆ. ಈ ಕಾರಣಕ್ಕೆ ರಾಜ್ಯದ ಗಡಿ ಭಾಗದ ಜಿಲ್ಲೆಗಳ ಕಬ್ಬು ಬೆಳೆಗಾರರು ಹೆಚ್ಚಿನ ದರ ನೀಡುತ್ತಿರುವ ಮತ್ತು ಸಕಾಲದಲ್ಲಿ ಹಣ ಪಾವತಿಸುತ್ತಿರುವ ಹೊರರಾಜ್ಯಗಳ ಸಕ್ಕರೆ ಕಾರ್ಖಾನೆಗಳತ್ತ ಮುಖ ಮಾಡುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದ ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಕಲಬುರಗಿಯ ಕಬ್ಬು ಬೆಳೆಗಾರರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಮಾರಾಟ ಮಾಡುತ್ತಿದ್ದಾರೆ. ದಕ್ಷಿಣದ ಚಾಮರಾಜನಗರ ಜಿಲ್ಲೆಯಲ್ಲಿ ಬೆಳೆಗಾರರು ತಮಿಳುನಾಡಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ.
ಕೇಂದ್ರ ಸರ್ಕಾರವು 2025ರ ಸಾಲಿಗೆ ಶೇ 10.25ರಷ್ಟು ಇಳುವರಿ (recovery rate) ಇರುವ ಟನ್ ಕಬ್ಬಿಗೆ ₹3,550 ನಿಗದಿ ಮಾಡಿದೆ. ಇದರ ಆಧಾರದಲ್ಲಿ ರಾಜ್ಯ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ರಾಜ್ಯದಲ್ಲಿರುವ 81 ಕಾರ್ಖಾನೆಗಳು 2025–26ನೇ ಸಾಲಿಗೆ ಬೆಳೆಗಾರರಿಗೆ ಮೊದಲ ಕಂತಿನಲ್ಲಿ ಪಾವತಿಸಬೇಕಾದ ದರವನ್ನು ನಿಗದಿಪಡಿಸಿ ಸೆಪ್ಟೆಂಬರ್ 15ರಂದು ಆದೇಶ ಹೊರಡಿಸಿದ್ದಾರೆ. 2024–25ನೇ ಸಾಲಿನಲ್ಲಿ ಕಾರ್ಖಾನೆಗಳಲ್ಲಿ ಅರೆದ ಕಬ್ಬಿನಿಂದ ಉತ್ಪಾದನೆಯಾದ ಸಕ್ಕರೆಯ ಆಧಾರದಲ್ಲಿ ಎಫ್‌ಆರ್‌ಪಿ ನಿಗದಿಪಡಿಸಲಾಗಿದೆ.
ಆದರೆ, ರಾಜ್ಯದ ಯಾವ ಕಾರ್ಖಾನೆಯೂ ಇಷ್ಟು ಬೆಲೆ ನೀಡಲು ಮುಂದಾಗಿಲ್ಲ. ₹2,700ರಿಂದ ₹3,100ರವರೆಗೆ ದರ ನೀಡಲು ತೀರ್ಮಾನಿಸಿವೆ .
ಸಾಮಾನ್ಯವಾಗಿ ಕಾರ್ಖಾನೆಗಳು ಕಬ್ಬಿನ ಕಟಾವು ಮತ್ತು ಸಾಗಣೆ ವೆಚ್ಚವನ್ನು ಲೆಕ್ಕಹಾಕಿ ಅದನ್ನು ದರದಲ್ಲಿ ಕಡಿತ ಮಾಡುತ್ತವೆ. ₹800ರಿಂದ ₹900ವರೆಗೂ ಕಡಿತ ಮಾಡುತ್ತವೆ. ಹಾಗಾದಾಗ, ಟನ್ ಕಬ್ಬಿನ ದರ ಇನ್ನಷ್ಟು ಕಡಿಮೆಯಾಗುತ್ತದೆ.
‘ರಾಜ್ಯದಲ್ಲಿ ಕಾರ್ಖಾನೆಗಳು ನೀಡುವ ದರವನ್ನು ನೋಡಿದಾಗ, ಮಹಾರಾಷ್ಟ್ರದಲ್ಲಿ ಇಲ್ಲಿಗಿಂತ ಪ್ರತಿ ಟನ್‌ಗೆ ₹300–₹400 ಹೆಚ್ಚು ಸಿಗುತ್ತಿದೆ. ಅಲ್ಲಿನ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹3,400 ನೀಡುತ್ತಿವೆ. ರಾಜ್ಯದ ಕಾರ್ಖಾನೆಗಳು ಹಣ ಪಾವತಿಯನ್ನು ವಿಳಂಬ ಮಾಡುತ್ತಿವೆ. ಅಲ್ಲಿನ ಕಾರ್ಖಾನೆಗಳು ತಕ್ಷಣ ಪಾವತಿಸುತ್ತಿವೆ. ಇಲ್ಲಿ ಕಡಿಮೆ ಪಾವತಿಯ ಜೊತೆಗೆ ತೂಕ, ಇಳುವರಿ ಪ್ರಮಾಣದಲ್ಲೂ ಕಾರ್ಖಾನೆಗಳು ಮೋಸ ಮಾಡುತ್ತವೆ’ ಎಂದು ಹೇಳುತ್ತಾರೆ ಕಬ್ಬು ಬೆಳೆಗಾರರು.
‘ಕೇಂದ್ರ ಸರ್ಕಾರವು ಶೇ 10.25ರಷ್ಟು ಇಳುವರಿ ದರ ಆಧರಿಸಿ ಎಫ್‌ಆರ್‌ಪಿ ನಿಗದಿ ಮಾಡಿದೆ. ಇದು ಕೂಡ ಅವೈಜ್ಞಾನಿಕ. ಇಳುವರಿ ಪ್ರಮಾಣ ಶೇ 9.5ರ ಆಧಾರದ ಮೇಲೆ ಎಫ್‌ಆರ್‌ಪಿ ಘೋಷಿಸಬೇಕು. ಆಗ ಮಾತ್ರ ರೈತರಿಗೆ ಲಾಭದಾಯಕ ದರ ಸಿಗಲು ಸಾಧ್ಯ. ಎಫ್‌ಆರ್‌ಪಿ ಘೋಷಣೆ ಮಾಡಿದ ಮೇಲೂ ದರ ಪರಿಷ್ಕರಣೆ ಮಾಡುವ ಅಧಿಕಾರ ಕರ್ನಾಟಕ ಕಬ್ಬು ನಿಯಂತ್ರಣ ಮಂಡಳಿಗೆ ಇದೆ. ರಾಜ್ಯದ ಬಹುಪಾಲು ಕಾರ್ಖಾನೆಗಳನ್ನು ಜನಪ್ರತಿನಿಧಿಗಳು, ರಾಜಕಾರಣಿಗಳೇ ನಡೆಸುತ್ತಿದ್ದಾರೆ. ಅವರು ಮಂಡಳಿಯನ್ನು ಹಿಡಿತದಲ್ಲಿಟ್ಟು ದರ ಪರಿಷ್ಕರಣೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ’ ಎಂಬುದು ಅವರ ತಕರಾರು.
10 ಲಕ್ಷ ಟನ್ ಕಬ್ಬು ಮಹಾರಾಷ್ಟ್ರಕ್ಕೆ: ನೆರೆಯ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ ಮತ್ತು ಕಾಗವಾಡ ತಾಲ್ಲೂಕುಗಳ ಹಲವು ರೈತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಾರೆ.
ಅಂದಾಜಿನ ಪ್ರಕಾರ, ಪ್ರತಿ ವರ್ಷ 10 ಲಕ್ಷ ಟನ್‌ಗಳಷ್ಟು ಜಿಲ್ಲೆಯ ಕಬ್ಬು ‘ಮಹಾ’ ಕಾರ್ಖಾನೆಗಳಲ್ಲಿ ನುರಿಯುತ್ತಿದೆ. ಜಿಲ್ಲೆಯಲ್ಲಿ 29 ಸಕ್ಕರೆ ಕಾರ್ಖಾನೆಗಳು ಇದ್ದಾಗ್ಯೂ ಮಹಾರಾಷ್ಟ್ರಕ್ಕೆ ಅಪಾರ ಪ್ರಮಾಣದ ಕಬ್ಬು ಸಾಗಣೆಯಾಗುತ್ತಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ಕಲ್ಲಪ್ಪಣ್ಣ ಅವಾಡೆ ಸಹಕಾರ ಸಕ್ಕರೆ ಕಾರ್ಖಾನೆ (ಹುಪರಿ), ದತ್ತ ಸೇತ್ಕರಿ ಸಹಕಾರ ಸಕ್ಕರೆ ಕಾರ್ಖಾನೆ (ಶಿರೋಳ), ಪಂಚಗಂಗಾ ಸಹಕಾರ ಸಕ್ಕರೆ ಕಾರ್ಖಾನೆ (ಇಚಲಕರಂಜಿ), ಛತ್ರಪತಿ ಶಾಹೂ ಸಹಕಾರ ಸಕ್ಕರೆ ಕಾರ್ಖಾನೆ (ಕಾಗಲ್), ಸದಾಶಿವರಾವ್ ಮಂಡಲಿಕ್ ಸಹಕಾರ ಸಕ್ಕರೆ ಕಾರ್ಖಾನೆ (ಹಮೀದವಾಡ), ಸಂತಾಜಿ ಘೋರ್ಪಡೆ ಸಹಕಾರ ಸಕ್ಕರೆ ಕಾರ್ಖಾನೆ (ಸೇನಾಪತಿ ಕಾಪಸಿ), ದೂದಗಂಗಾ ವೇದಗಂಗಾ ಸಹಕಾರ ಸಕ್ಕರೆ ಕಾರ್ಖಾನೆ (ಬಿದರಿ), ಗುರುದತ್ತ ಸಕ್ಕರೆ ಕಾರ್ಖಾನೆ (ಟಾಕಳಿ) ಮುಂತಾದ ಕಾರ್ಖಾನೆಗಳು ಬೆಳಗಾವಿ ಜಿಲ್ಲೆಯ ರೈತರ ಕಬ್ಬನ್ನೇ ನೆಚ್ಚಿಕೊಂಡಿವೆ.
ಜಿಲ್ಲೆಯ ಕಾರ್ಖಾನೆಗಳು ಟನ್ ಕಬ್ಬಿಗೆ ₹3,010 ದರ ವಾಗ್ದಾನ ಮಾಡಿವೆ. ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಇದನ್ನು ₹3,200ಕ್ಕೆ ಏರಿಸುವ ಭರವಸೆ ನೀಡಲಾಗಿದೆ. ಆದರೆ, ₹3,500ಕ್ಕೆ ಏರಿಸಲೇಬೇಕು ಎಂದು ರೈತರು ಜಿಲ್ಲೆಯಾದ್ಯಂತ ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಿದ್ದಾರೆ.
‘ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿದರೂ ಉತ್ತಮ ದರ ಸಿಗುತ್ತಿಲ್ಲ. ಸದ್ಯ ಕಾರ್ಖಾನೆಗಳು ಕಬ್ಬು ಕಟಾವು ಹಾಗೂ ಸಾಗಣೆ ವೆಚ್ಚ ಸೇರಿಸಿ ₹3,200 ದರ ನೀಡುವುದಾಗಿ ಹೇಳಿವೆ. ಸಾಗಣೆ ವೆಚ್ಚವನ್ನೂ ರೈತರ ಕಬ್ಬಿನ ಬಿಲ್ಲಿನಿಂದಲೇ ಕತ್ತರಿಸಿ ವಾಹನದವರಿಗೆ ನೀಡುತ್ತಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ಕಟಾವು ಮತ್ತು ಸಾಗಣೆ ವೆಚ್ಚದ ಹೊರತಾಗಿ ₹3,500 ದರ ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ’ ಎನ್ನುವುದು ಕಬ್ಬು ಬೆಳೆಗಾರ, ರೈತ ಮುಖಂಡ ಚೂಣಪ್ಪ ಪೂಜಾರಿ ಅವರ ಮಾತು.
ಕಬ್ಬು ಸಾಗಿಸಲು ಅಣಿ: ವಿಜಯಪುರ ಜಿಲ್ಲೆಯಲ್ಲಿ ಇದೇ 1ರಿಂದ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆ ಆರಂಭವಾಗಬೇಕಿತ್ತು. ಆದರೆ, ಈವರೆಗೆ ಯಾವೊಂದು ಸಕ್ಕರೆ ಕಾರ್ಖಾನೆಯೂ ಕಬ್ಬಿನ ದರವನ್ನು ಘೋಷಿಸಿಲ್ಲ. ಜಿಲ್ಲೆಯ 10 ಸಕ್ಕರೆ ಕಾರ್ಖಾನೆಗಳು ಬೆಳೆಗಾರರಿಗೆ ನೀಡಬೇಕಾದ ದರವನ್ನು ಜಿಲ್ಲಾಧಿಕಾರಿಯವರು ನಿಗದಿಪಡಿಸಿದ್ದಾರೆ. ಇನ್ನೂ ಕಬ್ಬು ನುರಿಯುವಿಕೆ ಆರಂಭವಾಗಿಲ್ಲ.
ಇದರ ನಡುವೆಯೇ ಜಿಲ್ಲೆಯ ಗಡಿಭಾಗದ ಇಂಡಿ, ಚಡಚಣ, ಆಲಮೇಲ ಭಾಗದ ಕಬ್ಬು ಬೆಳೆಗಾರರಿಗೆ ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ದರ ನೀಡುವ ಭರವಸೆ ನೀಡಿದ್ದು, ಬೆಳೆಗಾರರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಲು ಅಣಿಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಕಬ್ಬು ನುರಿಸುವ ಹಂಗಾಮು ನವೆಂಬರ್ 1 ರಿಂದ ಆರಂಭವಾಗಿದೆ. ಸೋಲಾಪುರದ ಸಿದ್ದೇಶ್ವರ, ಲೋಕಮಂಗಲ, ಸಿದ್ದನಾಥ ಮತ್ತು ಅಕ್ಕಲಕೋಟದ ಜೈನ್ ಸಕ್ಕರೆ ಕಾರ್ಖಾನೆ ಸೇರಿದಂತೆ ಇತರೆ ಕಾರ್ಖಾನೆಗಳು ಪ್ರತಿ ಟನ್‌ಗೆ ₹3,500 ನೀಡುವುದಾಗಿ ರೈತರೊಂದಿಗೆ ಮಾತುಕತೆ ನಡೆಸಿವೆ. ಸಾಗಣೆ ವೆಚ್ಚ ಪಡೆಯದೇ ಜಿಲ್ಲೆಯ ಕಬ್ಬು ಖರೀದಿಸಲು ಮುಂದಾಗಿವೆ. ಅದಲ್ಲದೆ, ಮಹಾರಾಷ್ಟ್ರದ ಬಹುತೇಕ ಕಾರ್ಖಾನೆಗಳು ಎಥೆನಾಲ್ ಘಟಕ ಹೊಂದಿದ್ದು, ಕಬ್ಬು ಖರೀದಿಗೆ ಪೈಪೋಟಿ ಒಡ್ಡುತ್ತಿವೆ. ಒಂದು ವೇಳೆ ಮಹಾರಾಷ್ಟ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಸಾಗಣೆಯಾದರೆ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ತೆರಿಗೆ ನಷ್ಟವಾಗಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ.
ಕಾರ್ಖಾನೆಗಳು ಸಮೀಪದಲ್ಲಿವೆ ಮತ್ತು ಸಕಾಲದಲ್ಲಿ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಮಹಾರಾಷ್ಟ್ರ ಹಾಗೂ ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿರುವ ಕಲಬುರಗಿ ಜಿಲ್ಲೆಯ ಗಡಿ ಭಾಗದ ಗ್ರಾಮಗಳ ಬೆಳೆಗಾರರು ನೆರೆ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬನ್ನು ಸಾಗಿಸುತ್ತಾರೆ.
ಜಿಲ್ಲೆಯಲ್ಲಿ ಹೆಚ್ಚು ಕಬ್ಬನ್ನು ಬೆಳೆಯುವ ಅಫಜಲಪುರ ತಾಲ್ಲೂಕಿನಲ್ಲಿ ರೇಣುಕಾ ಶುಗರ್ಸ್ ಹಾಗೂ ಕೆಪಿಆರ್ ಶುಗರ್ಸ್ ಸಕ್ಕರೆ ಕಾರ್ಖಾನೆಗಳಿದ್ದು, ಹೆಚ್ಚಿನ ಪ್ರಮಾಣದ ಕಬ್ಬನ್ನು ಇವೆರಡು ಕಾರ್ಖಾನೆಗಳಿಗೇ ಸಾಗಿಸಲಾಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಕಾಲಕ್ಕೆ ಬಾಕಿ ಪಾವತಿ ಮಾಡದೇ ಇರುವುದರಿಂದ ಹಾಗೂ ಬೆಲೆಯೂ ಕಮ್ಮಿ ನಿಗದಿ ಆಗುವುದರಿಂದ ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬನ್ನು ಪೂರೈಸುತ್ತಿದ್ದಾರೆ.
‘ಮಹಾರಾಷ್ಟ್ರದ 10 ಸಕ್ಕರೆ ಕಾರ್ಖಾನೆಗಳಿಗೆ ಅಫಜಲಪುರ, ಆಳಂದ ತಾಲ್ಲೂಕಿನ ರೈತರು ಕಬ್ಬು ಸಾಗಣೆ ಮಾಡುತ್ತಾರೆ. ಸೋಲಾಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಪ್ರತಿ ಟನ್ ಕಬ್ಬಿಗೆ ₹3,440 ಬೆಲೆ ನಿಗದಿ ಮಾಡಿವೆ. ಹೀಗಾಗಿ ಕಬ್ಬು ಬೆಳೆಗಾರರು ಅಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ’ ಎಂಬುದು ಕಲಬುರಗಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ಅನಿಸಿಕೆ.
ಚಾ.ನಗರದಿಂದ ತಮಿಳುನಾಡಿಗೆ
ಚಾಮರಾಜನಗರ ಜಿಲ್ಲೆಯ ಕೆಲವು ಬೆಳೆಗಾರರು ಕಬ್ಬನ್ನು ಕೊಳ್ಳೇಗಾಲ ಸಮೀಪದ ಕುಂತೂರಿನಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಬದಲಿಗೆ ತಮಿಳುನಾಡಿನ ಈರೋಡ್‌ನಲ್ಲಿರುವ ಶಕ್ತಿ ಶುಗರ್ಸ್ ಸೇರಿದಂತೆ ಇತರೆ ಕಾರ್ಖಾನೆಗಳಿಗೆ ಪೂರೈಸುತ್ತಿದ್ದಾರೆ.
‘ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯು ಪ್ರತಿ ಟನ್‌ಗೆ ₹3,320 ನೀಡುತ್ತಿದ್ದು, ತಮಿಳುನಾಡಿನ ಕಾರ್ಖಾನೆಗಳು ₹4,000ವರೆಗೂ ನೀಡಲು ಮುಂದೆ ಬಂದಿವೆ. ಹೆಚ್ಚು ಬೆಲೆ ಸಿಗುವ ಕಾರಣಕ್ಕೆ ರೈತರು ಅಲ್ಲಿನ ಕಾರ್ಖಾನೆಗಳಿಗೆ ಸಾಗಿಸುತ್ತಿದ್ದಾರೆ’ ಎಂದು ರೈತ ಮುಖಂಡರು ಹೇಳಿದ್ದಾರೆ.
ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಹಾಗೂ ಉತ್ತಮ ದರ ಸಿಗಬೇಕು ಎಂಬ ಕಾರಣಕ್ಕೆ ಜಿಲ್ಲೆಯಿಂದ ಹೊರಜಿಲ್ಲೆ ಹಾಗೂ ರಾಜ್ಯಗಳಿಗೆ ಕಬ್ಬು ಪೂರೈಕೆ ಮಾಡಲು ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ.
ನಷ್ಟ ಅನುಭವಿಸಬೇಕೇ?
‘ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕತ್ವ ಸಚಿವರು, ಶಾಸಕರು, ಸಂಸದರು, ರಾಜಕಾರಣಿಗಳಲ್ಲಿದೆ. ಇವರು ಯಾರೂ ಬೆಳೆಗಾರರ ಪರವಾಗಿ ಯೋಚನೆ ಮಾಡುವುದಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ದರವನ್ನು ನೀಡಲೂ ಕಾರ್ಖಾನೆಗಳು ಹಿಂದೆ ಮುಂದೆ ನೋಡುತ್ತವೆ. ಕೇಂದ್ರವು ಶೇ 10.25ರಷ್ಟು ಇಳುವರಿ ದರ ಆಧರಿಸಿ ಎಫ್‌ಆರ್‌ಪಿ ನಿಗದಿಪಡಿಸಿದೆ. ಒಂದು ವೇಳೆ ಇಳುವರಿ ಪ್ರಮಾಣ ಹೆಚ್ಚಿದ್ದರೆ ಹೆಚ್ಚು ದರ ನೀಡಬೇಕು. ಇಳುವರಿ ಶೇ 1ರಷ್ಟು ಹೆಚ್ಚಿದ್ದರೆ ₹346 ಹೆಚ್ಚುವರಿ ನೀಡಬೇಕು. ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಕಬ್ಬಿನ ಇಳುವರಿ ಪ್ರಮಾಣ ಶೇ 12– ಶೇ 13ರವರೆಗೂ ಇದೆ. ಈ ಲೆಕ್ಕದಲ್ಲಿ ಕಾರ್ಖಾನೆಗಳು ಹೆಚ್ಚು ದರ ನೀಡಬೇಕು. ಆದರೆ, ಯಾವ ಕಾರ್ಖಾನೆಗಳೂ ನೀಡುತ್ತಿಲ್ಲ. ರೈತರು ನಷ್ಟ ಅನುಭವಿಸುವುದನ್ನು ತಪ್ಪಿಸಲು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಾರೆ ಇದು ತಪ್ಪೇ’ ಎಂದು ಪ್ರಶ್ನಿಸುತ್ತಾರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್.
‘ಮಹಾರಾಷ್ಟ್ರದಲ್ಲಿ ಸಹಕಾರಿ ಕಾರ್ಖಾನೆಗಳು ಹೆಚ್ಚಿವೆ. ಉತ್ತಮ ಬೆಲೆ ಜೊತೆಗೆ ಸಕಾಲದಲ್ಲಿ ಹಣ ಪಾವತಿ ಮಾಡುತ್ತಿವೆ. ರಾಜ್ಯದ ಬಹುತೇಕ ಕಾರ್ಖಾನೆಗಳು ತೂಕ, ಇಳುವರಿ ದರದಲ್ಲಿ ಮೋಸ ಮಾಡುವುದರ ಜೊತೆಗೆ ಕಟಾವು, ಸಾಗಣೆ ವೆಚ್ಚವನ್ನು ಹೆಚ್ಚು ಕಡಿತ ಮಾಡುತ್ತವೆ. ವಿಳಂಬವಾಗಿ ಪಾವತಿ ಮಾಡುತ್ತವೆ’ ಎಂಬುದು ಅವರ ದೂರು.
ಮಾರಾಟಕ್ಕೆ ಅವಕಾಶ
ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಕಾಯ್ದೆಗೆ 2014ರಲ್ಲಿ ತಿದ್ದುಪಡಿಯಾಗಿದೆ. ಆದರೆ, ಇದು ರೈತರ ಕಬ್ಬು ಸಾಗಣೆ ಮೇಲೆ ಯಾವುದೇ ನಿಯಂತ್ರಣ ಹೇರುವುದಿಲ್ಲ. ಹಾಗಾಗಿ, ಕೃಷಿಕ ತನ್ನ ಉತ್ಪನ್ನವನ್ನು ಎಲ್ಲಿಯಾದರೂ (ಅಂತರ ಜಿಲ್ಲೆ, ಅಂತರ ರಾಜ್ಯ) ಮಾರಲು ಸ್ವತಂತ್ರ. ಆದರೆ, ಕಾರ್ಖಾನೆಗಳು ನೆರೆ ರಾಜ್ಯದ ಕಬ್ಬು ತರಿಸಿಕೊಳ್ಳಬೇಕಿದ್ದರೆ, ನಿಯಮ ಪಾಲಿಸಬೇಕು. ಇದಕ್ಕಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿರುವ ಬಹುತೇಕ ಕಾರ್ಖಾನೆಗಳು ಅಂತರರಾಜ್ಯ ಅನುಮತಿ (ಮಲ್ಟಿಸ್ಟೇಟ್ ಲೈಸನ್ಸ್) ಪಡೆದಿರುತ್ತವೆ. ಆದರೆ, ರಾಜ್ಯದ ಬಹುಪಾಲು ಸಕ್ಕರೆ ಕಾರ್ಖಾನೆಗಳು, ಸ್ಥಳೀಯವಾಗಿ ಬೆಳೆದ ಕಬ್ಬನ್ನು ತಮಗೇ ಮಾರಾಟ ಮಾಡಬೇಕು ಎಂದು ಬೆಳೆಗಾರರಿಗೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾಡಳಿತಗಳನ್ನು ಒತ್ತಾಯಿಸತ್ತಲೇ ಬಂದಿವೆ.
ಡಿಸೆಂಬರ್ 4ಕ್ಕೆ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಡಿ.9ಕ್ಕೆ ಮತದಾರರ ಪಟ್ಟಿಯ ಕರಡನ್ನು ಚುನಾವಣಾ ಆಯೋಗವು ಬಿಡುಗಡೆ ಮಾಡಲಿದೆ. ಅಂತಿಮ ಪಟ್ಟಿಯನ್ನು 2026ರ ಫೆ.7ರಂದು ಬಿಡುಗಡೆ ಮಾಡಲಿದೆ. ಆಯೋಗವು ಬಿಹಾರದಲ್ಲಿ ಇತ್ತೀಚೆಗಷ್ಟೇ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಿತ್ತು.
ಈ ಪೈಕಿ ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಕೇರಳದಲ್ಲಿ 2026ರಲ್ಲಿ ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ಎಸ್‌ಐಆರ್ ನಡೆಸದಂತೆ ತಡೆಯಲು ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಅಲ್ಲಿನ ಸರ್ಕಾರ ಹೇಳಿದೆ.
‘ಅಸ್ಸಾಂಗೆಪ್ರತ್ಯೇಕದಿನಾಂಕ’
‘ಅಸ್ಸಾಂನಲ್ಲಿ ಪೌರತ್ವವನ್ನು ಪರಿಶೀಲಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯವು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಆದ್ದರಿಂದ, ಈ ರಾಜ್ಯದಲ್ಲಿ ಎಸ್‌ಐಆರ್ ಆರಂಭಿಸಲು ಪ್ರತ್ಯೇಕವಾಗಿ ದಿನಾಂಕ ಘೋಷಿಸಲಾಗುವುದು’ ಎಂದು ಚುನಾವಣಾ ಆಯೋಗ ಹೇಳಿದೆ. ಅಸ್ಸಾಂನಲ್ಲಿ 2026ರಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
‘ಐತಿಹಾಸಿಕಸಾಧನೆ’
ಬಿಹಾರದಲ್ಲಿ ಎಸ್‌ಐಆರ್ ನಡೆದಿದ್ದು, ಜಗತ್ತಿನಲ್ಲೇ ಅತಿ ದೊಡ್ಡ ‘ಶುದ್ಧೀಕರಣ’ ಪ್ರಕ್ರಿಯೆಯಾಗಿತ್ತು. ಜೊತೆಗೆ, ಭಾರತದ ಪ್ರಜಾಪ್ರಭುತ್ವಕ್ಕೆ ಇದೊಂದು ಮೈಲಿಗಲ್ಲು. ಸದ್ಯ ಬಿಹಾರದಲ್ಲಿ ಮಾತ್ರವೇ ಈ ಪ್ರಕ್ರಿಯೆ ಪೂರ್ಣಗೊಂಡಿದೆ.
ಈ ಪ್ರಕ್ರಿಯೆ ಯನ್ನು ದೇಶದಾದ್ಯಂತ ವಿಸ್ತರಿಸಿದರೆ, ಅದು ದೇಶದ ಮತ್ತು ಚುನಾವಣಾ ಆಯೋಗದ ಅತ್ಯಂತ ದೊಡ್ಡ ಐತಿಹಾಸಿಕ ಸಾಧನೆಯಾಗಲಿದೆ.
ದೇಶದಾದ್ಯಂತ ಈ ಪ್ರಕ್ರಿಯೆಯು ಪೂರ್ಣಗೊಂಡರೆ, ಆಯೋಗದ ಕುರಿತು ಮಾತ್ರವಲ್ಲ, ನಮ್ಮ ದೇಶ ಪ್ರಜಾತಂತ್ರ ವ್ಯವಸ್ಥೆ ಬಗ್ಗೆಯೇ ದೇಶದ ಜನರು ಹೆಮ್ಮೆ ಪಡುತ್ತಾರೆ
ಯುಪಿಐವಹಿವಾಟು ₹27.28 ಲಕ್ಷಕೋಟಿ
ಸಂದರ್ಭ: ಅಕ್ಟೋಬರ್ತಿಂಗಳಿನಲ್ಲಿಏಕೀಕೃತಪಾವತಿವ್ಯವಸ್ಥೆ (ಯುಪಿಐ) ಮೂಲಕ 2,070 ಕೋಟಿವಹಿವಾಟುಗಳುನಡೆದಿವೆ. ಹಣದಲೆಕ್ಕದಲ್ಲಿಒಟ್ಟು ₹27.28 ಲಕ್ಷಕೋಟಿಯಷ್ಟುವಹಿವಾಟುಗಳುನಡೆದಿವೆಎಂದುರಾಷ್ಟ್ರೀಯಪಾವತಿನಿಗಮ (ಎನ್ಪಿಸಿಐ) ತಿಳಿಸಿದೆ.
ಹಬ್ಬದ ಋತುವಿನ ಅಂಗವಾಗಿ ಖರೀದಿ ಹೆಚ್ಚಿದ ಕಾರಣದಿಂದಾಗಿ ವಹಿವಾಟು ಹೆಚ್ಚಳ ಆಗಿದೆ ಎಂದು ನಿಗಮ ತಿಳಿಸಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ₹23.49 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿತ್ತು. ಇದಕ್ಕೆ ಹೋಲಿಸಿದರೆ ಶೇ 16ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಹೇಳಿದೆ. ಅಕ್ಟೋಬರ್‌ನಲ್ಲಿ ದಿನನಿತ್ಯ ಸರಾಸರಿ 66.8 ಕೋಟಿ ವಹಿವಾಟುಗಳು ನಡೆದಿವೆ. ಇದರ ಮೌಲ್ಯ ದಿನಕ್ಕೆ ಸರಾಸರಿ ₹87,993 ಕೋಟಿ.
ಈ ವರ್ಷದ ಮೇ ತಿಂಗಳಿನಲ್ಲಿ ₹25.14 ಲಕ್ಷ ಕೋಟಿಯಷ್ಟು ಮೌಲ್ಯದ ವಹಿವಾಟು ನಡೆದಿತ್ತು. ಇದು ಆವರೆಗಿನ ಗರಿಷ್ಠ ಮಟ್ಟದ ವಹಿವಾಟು ನಡೆದ ತಿಂಗಳಾ ಗಿತ್ತು. ಆದರೆ, ಅಕ್ಟೋಬರ್ ವಹಿವಾಟು ಇದಕ್ಕಿಂತಲೂ ಹೆಚ್ಚಳವಾಗಿದೆ.
ಸಂದರ್ಭ:‘28ನೇಆವೃತ್ತಿಯಬೆಂಗಳೂರುಟೆಕ್ಶೃಂಗಸಭೆತುಮಕೂರುರಸ್ತೆಯಬೆಂಗಳೂರುಅಂತರರಾಷ್ಟ್ರೀಯವಸ್ತುಪ್ರದರ್ಶನಕೇಂದ್ರದಲ್ಲಿ (ಬಿಐಇಸಿ) ಇದೇ 18ರಿಂದಮೂರುದಿನನಡೆಯಲಿದೆ’ಎಂದುಮಾಹಿತಿಮತ್ತುಜೈವಿಕತಂತ್ರಜ್ಞಾನಸಚಿವಪ್ರಿಯಾಂಕ್ಖರ್ಗೆತಿಳಿಸಿದರು.
‘ಈ ಶೃಂಗಸಭೆ ಯಲ್ಲಿ 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ತಂತ್ರಜ್ಞಾನ ಮತ್ತು ಉದ್ಯಮವನ್ನು ಒಂದೇ ವೇದಿಕೆಗೆ ತರುವ ಜಾಗತಿಕ ಕಾರ್ಯಕ್ರಮ ಇದಾಗಿದ್ದು, ಈ ಬಾರಿ ಕ್ವಾಂಟಮ್ಕಂಪ್ಯೂಟಿಂಗ್, ಎಐ, ಸ್ಪೇಸ್ಟೆಕ್, ಹೆಲ್ತ್ ಟೆಕ್ಗೆವಿಶೇಷಗಮನನೀಡಲಾಗುವುದು’ ಎಂದು ಹೇಳಿದರು.
‘20ರಂದು ಫ್ಯೂಚರ್ ಮೇಕರ್ಸ್ ಕಾನ್‌ಕ್ಲೇವ್ ನಡೆಯ ಲಿದ್ದು, 10 ಸಾವಿರಕ್ಕೂ ಹೆಚ್ಚಿನ ಉದ್ಯಮಿಗಳು, ಹೂಡಿಕೆದಾರರು, ಸ್ಟಾರ್ಟ್ ಅಪ್ ಸಂಸ್ಥಾಪಕರು ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆವಿಷ್ಕಾರ ಮಾಡಿ ರುವವರು ಪಾಲ್ಗೊಳ್ಳಲಿದ್ದಾರೆ’ ಎಂದರು.
ಹೊಸನೀತಿ:‘ಸ್ಟಾರ್ಟ್ಅಪ್ಐಟಿಸ್ಪೇಸ್ಟೆಕ್ಗೆಹೊಸನೀತಿತರಲುನಿರ್ಧರಿಸಲಾಗಿದೆ. ಒಟ್ಟಾರೆ, ಈಬಾರಿನೀತಿಗಳನ್ನುಜಾಗತಿಕದೃಷ್ಟಿಕೋನದಲ್ಲೇರೂಪಿಸಲಾಗಿದೆ. ಮಾಹಿತಿತಂತ್ರಜ್ಞಾನ, ಸ್ಟಾರ್ಟ್ಅಪ್, ಸ್ಪೇಸ್ ಟೆಕ್ನಲ್ಲಿಕರ್ನಾಟಕಮುಂಚೂಣಿಯಲ್ಲಿದೆ. ಈನೀತಿಯಮೂಲಕಕರ್ನಾಟಕದಲ್ಲಿರುವಇನ್ನಷ್ಟುಅವಕಾಶಗಳಅರಿವುಮೂಡಿಸಲುಪ್ರಯತ್ನಿಸಲಾಗುವುದು’ ಎಂದರು.
₹600 ಕೋಟಿಹೂಡಿಕೆ: ‘ಕರ್ನಾಟಕವನ್ನು ಭಾರತದ ಡೀಪ್ ಟೆಕ್ ರಾಜಧಾನಿಯಾಗಿ ರೂಪಿಸುವ ಉದ್ದೇಶದಿಂದ ಸರ್ಕಾರ ₹600 ಕೋಟಿ ಹೂಡಿಕೆಗೆ ಬದ್ಧವಾಗಿದೆ. ಇದರಲ್ಲಿ ಎಐ, ಕ್ವಾಂಟಮ್ ಕಂಪ್ಯೂಟಿಂಗ್, ರೋಬೊಟಿಕ್ಸ್ ಹಾಗೂ ಸುಸ್ಥಿರತೆ ಆಧಾರಿತ ಆವಿಷ್ಕಾರಗಳಿಗೂ ಪ್ರೋತ್ಸಾಹ ನೀಡಲಾಗುವುದು’ ಎಂದೂ ಅವರು ತಿಳಿಸಿದರು.
ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯು ನಿರ್ವಹಿಸುವ ‘ಎಚ್‌ಎಸ್‌ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕ’ವು ಸೆಪ್ಟೆಂಬರ್ ತಿಂಗಳಲ್ಲಿ 57.7 ದಾಖಲಾಗಿತ್ತು. ಇದು ಅಕ್ಟೋಬರ್‌ನಲ್ಲಿ 59.2ಕ್ಕೆ ಏರಿಕೆಯಾಗಿದೆ.
ಪಿಎಂಐಸೂಚ್ಯಂಕವು 50ಕ್ಕಿಂತಹೆಚ್ಚಿನಮಟ್ಟದಲ್ಲಿಇದ್ದರೆಅದನ್ನುಬೆಳವಣಿಗೆ ಎಂದು ಗುರುತಿಸಲಾಗುತ್ತದೆ.
ಜಿಎಸ್‌ಟಿ ಇಳಿಕೆಯಿಂದ ಖರೀದಿ ಹೆಚ್ಚಳವಾಯಿತು. ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳಿಗೆ ಹೆಚ್ಚಿದ ಬೇಡಿಕೆ ಮತ್ತು ಹೊಸ ರಫ್ತು ಕಾರ್ಯಾದೇಶದಿಂದ ಸೂಚ್ಯಂಕವು ಏರಿಕೆ ಕಂಡಿದೆ ಎಂದು ತಿಳಿಸಿದೆ. ಜೊತೆಗೆ ತಂತ್ರಜ್ಞಾನ ಕಂಪನಿಗಳು ಹೂಡಿಕೆ ಪ್ರಮಾಣವನ್ನು ಹೆಚ್ಚಿಸಿದ್ದು ಸಹ ಸೂಚ್ಯಂಕಗಳ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಿದೆ.
ಆದರೆ, ಇದೇ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಂದಗೊಂಡಿದೆ ಎಂದು ಹೇಳಿದೆ.
‘ಅಕ್ಟೋಬರ್‌ನಲ್ಲಿ ತಯಾರಿಕಾ ವಲಯದ ಉತ್ಪಾದನೆ ಏರಿಕೆಯಾಗಿದೆ. ಹೊಸ ಕಾರ್ಯಾದೇಶ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಳವಾಗಿದೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್ ಭಂಡಾರಿ ಹೇಳಿದ್ದಾರೆ.
ಅಣ್ವಸ್ತ್ರಪರೀಕ್ಷೆ: ಟ್ರಂಪ್ಸಮರ್ಥನೆ
ಸಂದರ್ಭ:‘ಅಣ್ವಸ್ತ್ರಗಳನ್ನುಪರೀಕ್ಷಿಸುತ್ತಿರುವದೇಶಗಳಲ್ಲಿಪಾಕಿಸ್ತಾನಮತ್ತುಚೀನಾಸೇರಿವೆ’ಎಂದುಅಮೆರಿಕಅಧ್ಯಕ್ಷಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮೂರು ದಶಕಗಳ ನಂತರ ಅಮೆರಿಕದ ಸ್ವಂತ ಅಣ್ವಸ್ತ್ರಗಳ ಪರೀಕ್ಷೆಯನ್ನು ಪುನರಾರಂಭಿಸುವ ತಮ್ಮ ಆಡಳಿತದ ಯೋಜನೆಗಳನ್ನು ಸಮರ್ಥಿಸಿಕೊಳ್ಳುವ ಭಾಗವಾಗಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ವಾರ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗಿನ ಭೇಟಿಗೂ ಮುನ್ನ ಟ್ರಂಪ್ ಅವರು, ಅಮೆರಿಕವು ಪ್ರತಿಸ್ಪರ್ಧಿ ಶಕ್ತಿಗಳೊಂದಿಗೆ ಸರಿಸಮವಾಗಿ ಅಣ್ವಸ್ತ್ರಗಳ ಪರೀಕ್ಷೆ ಆರಂಭಿಸುವುದಾಗಿ ಘೋಷಿಸಿದ್ದರು.
‘ಸಿಬಿಎಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು, ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವ ದೇಶಗಳೆಂದು ಹೆಸರಿಸಿದರು.
‘ರಷ್ಯಾ, ಚೀನಾ ಪರೀಕ್ಷೆ ನಡೆಸುತ್ತಿವೆ. ಆದರೆ, ಅವರು ಅದರ ಬಗ್ಗೆ ಮಾತನಾಡುವು ದಿಲ್ಲ. ಉತ್ತರ ಕೊರಿಯಾ, ಪಾಕಿಸ್ತಾನ ಪರೀಕ್ಷೆ ನಡೆಸುತ್ತಿ ರುವುದು ನಿಸ್ಸಂಶಯ’ ಎಂದು ಟ್ರಂಪ್ ಹೇಳಿದರು.
‘ನಾವೂ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಬೇಕು. ಶಸ್ತ್ರಾಸ್ತ್ರಗಳ ವಿಶ್ವಾಸಾರ್ಹತೆ ಯನ್ನು ಖಚಿತಪಡಿಸಿ ಕೊಳ್ಳಲು ಇಂತಹ ಪರೀಕ್ಷೆ ಅಗತ್ಯ’ ಎಂದು ಟ್ರಂಪ್ ಹೇಳಿದರು.
ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ‘ಅಮೆರಿಕ ಸೇನೆಯು ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ತನ್ನ ಕ್ಷಿಪಣಿಗಳನ್ನು ನಿಯಮಿತವಾಗಿ ಪರೀಕ್ಷಿಸುತ್ತದೆ. ಆದರೆ, 1992ರಿಂದ ಶಸ್ತ್ರಾಸ್ತ್ರಗಳನ್ನು ಸ್ಫೋಟಿಸಿಲ್ಲ.
ರಷ್ಯಾ ಪೋಸಿಡಾನ್ ಪರಮಾಣು ಸಾಮರ್ಥ್ಯದ ಸೂಪರ್ ಟಾರ್ಪಿಡೊವನ್ನು ಪರೀಕ್ಷಿಸಿದೆ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಳೆದ ವಾರ ಹೇಳಿದ್ದರು.
ಸಂದರ್ಭ: ಮಹಿಳಾ ಕ್ರಿಕೆಟ್ ರಂಗದಲ್ಲಿ ಹೊಸ ಶಕೆ ಆರಂಭವಾಯಿತು. ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಭಾರತ ತಂಡವು ಮೊದಲ ಬಾರಿಗೆ ವಿಶ್ವ ಕಿರೀಟ ಮುಡಿಗೇರಿಸಿಕೊಂಡು ಚಾರಿತ್ರಿಕ ಸಾಧನೆ ಮೆರೆಯಿತು. ಹಲವು ವರ್ಷಗಳಿಂದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಂಡಿದ್ದ ಕನಸು ನನಸಾಯಿತು. ಹರ್ಮನ್ ಪ್ರೀತ್ ಕೌರ್ ಬಳಗದ ಆಟಗಾರ್ತಿಯರು ಹರ್ಷದ ಹೊನಲಲ್ಲಿ ತೇಲಿದರು.
2005 ಮತ್ತು 2017ರ ಟೂರ್ನಿಗಳಲ್ಲಿ ಫೈನಲ್‌ನಲ್ಲಿ ಎಡವಿದ್ದ ಭಾರತ ತಂಡ ಈ ಬಾರಿ ಗುರಿ ತಪ್ಪಲಿಲ್ಲ. ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ಅವರ ಆಲ್‌ರೌಂಡ್ ಆಟದ ಬಲದಿಂದ ಭಾರತವು 52 ರನ್‌ಗಳಿಂದ ದಕ್ಷಿಣ ಆಫ್ರಿಕಾ ವನಿತೆಯರ ಎದುರು ಜಯಭೇರಿ ಬಾರಿಸಿತು.
ದಕ್ಷಿಣ ಆಫ್ರಿಕಾ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಜಯಿಸುವ ಅವಕಾಶ ಕೈತಪ್ಪಿತು. ಆದರೆ ತಂಡದ ನಾಯಕಿ ಲಾರಾ ವೋಲ್ವಾರ್ಟ್ (101; 98 ಎಸೆತ; 4X11, 6X1) ಅವರ ಅಮೋಘ ಶತಕವು ಇತಿಹಾಸದ ಪುಟ ಸೇರಿತು. ಅವರ ಬಳಗದ ದಿಟ್ಟ ಹೋರಾಟವೂ ಮನಗೆದ್ದಿತು.
ಏಳು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೆಮಿಫೈನಲ್ ನಲ್ಲಿ ಸೋಲಿಸಿದ್ದ ಭಾರತ ಮತ್ತು ನಾಲ್ಕು ಸಲ ಕಿರೀಟ ಧರಿಸಿದ್ದ ಇಂಗ್ಲೆಂಡ್ ತಂಡ ವನ್ನು ಮಣಿಸಿದ್ದ ದಕ್ಷಿಣ ಆಫ್ರಿಕಾ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದವು.
ಹೊಸ ತಲೆಮಾರಿನ, ಸ್ವದೇಶಿ ನಿರ್ಮಿತ ‘ಬಾಹುಬಲಿ’ ರಾಕೆಟ್ ಮೂಲಕ ಅತ್ಯಂತ ಭಾರವಾದ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದರೊಂದಿಗೆ ಇಸ್ರೊ ಚಾರಿತ್ರಿಕ ಸಾಧನೆ ಮಾಡಿದೆ.
ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ 4,410 ಕೆ.ಜಿ ತೂಕದ ಸಂವಹನ ಉಪಗ್ರಹವನ್ನು (ಸಿಎಂಎಸ್–03) ಹೊತ್ತು ನಭಕ್ಕೆ ಚಿಮ್ಮಿದ ಲಾಂಚ್ ವೆಹಿಕಲ್ ಮಾರ್ಕ್–3 (ಎಲ್ವಿಎಂ3-ಎಂ5) ‘ಬಾಹುಬಲಿ’ಯು ‘ಆತ್ಮನಿರ್ಭರ ಭಾರತ’ದ ಸಾಧನೆಗೆ ಸಾಕ್ಷಿಯಾಯಿತು.
ದೇಶದ ಬಾಹ್ಯಾಕಾಶ ಕೇಂದ್ರ ದಿಂದ ಮೊದಲ ಬಾರಿಗೆ ಉಡ್ಡಯನ ಮಾಡಲಾಗುತ್ತಿರುವ ಭಾರಿ ತೂಕದ ಉಪಗ್ರಹ ಎಂಬ ಹೆಗ್ಗಳಿಕೆಗೆ ‘ಸಿಎಂಎಸ್–03’ ಪಾತ್ರವಾಯಿತು. ಇದರ ಉಡ್ಡಯನಕ್ಕೆ ಬಳಸಿದ ಭಾರಿ ಗಾತ್ರದ ರಾಕೆಟ್ (ಎಲ್‌ವಿಎಂ3-ಎಂ5) ಕೂಡ ‘ಬಾಹುಬಲಿ’ ಹೆಸರಿನ ಹಿರಿಮೆಯನ್ನು ಹೆಚ್ಚಿಸಿತು.
7 ಉಪಗ್ರಹಉಡಾವಣೆಗುರಿ
ಇಸ್ರೊದ ಮಹತ್ವಾಕಾಂಕ್ಷೆಯ ಗಗನಯಾನ ಕಾರ್ಯಕ್ರಮದಡಿ ಮೊದಲ ಮಾನವ ರಹಿತ ಯೋಜನೆಯೂ ಸೇರಿದಂತೆ 2026ರ ಮಾರ್ಚ್ ಒಳಗೆ 7 ಉಪಗ್ರಹ ಉಡಾವಣೆಗಳನ್ನು ನಡೆಸುವ ಗುರಿಯನ್ನು ಇಸ್ರೊ ಹೊಂದಿದೆ.
ಉಪಗ್ರಹದತೂಕ: 4,410 ಕೆ.ಜಿ
ಉಡ್ಡಯನಕ್ಕೆಬಳಸಿದರಾಕೆಟ್ನಎತ್ತರ: 43.5 ಮೀಟರ್
ಉಪಗ್ರಹದಕಾರ್ಯನಿರ್ವಹಣೆಯಅವಧಿ :15 ವರ್ಷ
ಕನಿಷ್ಠ 15 ವರ್ಷಕಾರ್ಯಾಚರಣೆ: ಉಪಗ್ರಹವನ್ನು ಭೂಹೊಂದಾಣಿಕೆ ವರ್ಗಾವಣೆ ಕಕ್ಷೆಗೆ (ಜಿಟಿಒ) ಸೇರಿಸಲಾಗಿದ್ದು, ಇದು 2013ರಲ್ಲಿ ಉಡಾವಣೆ ಮಾಡಿದ ‘ಜಿಎಸ್‌ಎಟಿ–7’ ಸರಣಿಯ ಉಪಗ್ರಹಕ್ಕೆ ಬದಲಿಯಾಗಿ, ಮುಂದಿನ 15 ವರ್ಷಗಳವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ಇಸ್ರೊ ಹೇಳಿದೆ.
ಸಾಗರಯಾನಕ್ಕೆ,ಭೂಮೇಲ್ಮೈ ನಲ್ಲಿ ನಡೆಯುವ ಚಟುವಟಿಕೆಗೆ ಅಗತ್ಯವಿರುವ ಸಂವಹನ ಸೇವೆಯನ್ನು ಈ ಉಪಗ್ರಹದ ಮೂಲಕ ನೀಡಲಾಗುತ್ತದೆ.
ಎಲ್‌ವಿಎಂ–3 ಮೂಲಕ ನಡೆದಿರುವ ಉಡಾವಣೆಗಳು ಶೇ 100ರಷ್ಟು ಯಶಸ್ಸಿನ ದರ ಹೊಂದಿವೆ. ಚಂದ್ರಯಾನ– 3ರ (3,841.4 ಕೆ.ಜಿ) ಉಡಾವಣೆ ನಂತರ ಈ ರಾಕೆಟ್, ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ.
ಇಸ್ರೊದ ಗಗನಯಾನ ಯೋಜನೆಯಲ್ಲಿ ‘ಎಲ್‌ವಿಎಂ–3’ ರಾಕೆಟ್ ಬಳಸುವ ಯೋಜನೆ ಇದ್ದು, ಇದಕ್ಕೆ ‘ಎಚ್‌ಆರ್‌ಎಲ್‌ವಿ’ ಎಂದು ಹೆಸರಿಡಲಾಗಿದೆ. 2018ರಲ್ಲಿ ಜಿಸ್ಯಾಟ್–11 (5,854 ಕೆ.ಜಿ) ಉಪಗ್ರಹವನ್ನು ಫ್ರೆಂಚ್ ಗಯಾನದಿಂದ ಉಡ್ಡಯನ ಮಾಡಲಾಗಿತ್ತು.
ವಿಂಡ್ ಟರ್ಬೈನ್ ತಯಾರಕರ ಸಂಘ (ಐಡಬ್ಲ್ಯುಟಿಎಂಎ) ಚೆನ್ನೈನ ಟ್ರೇಡ್ ಸೆಂಟರ್‌ನಲ್ಲಿ ಆಯೋಜಿಸಿದ್ದ ‘ವಿಂಡ್ ಎನರ್ಜಿ ಇಂಡಿಯಾ 2025’ರ ಏಳನೇ ಆವೃತ್ತಿಯಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು ಕ್ರೆಡಲ್ ಅಧ್ಯಕ್ಷರೂ ಆದ ಶಾಸಕ ಟಿ.ಡಿ. ರಾಜೇಗೌಡ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಮಾತನಾಡಿದ ರಾಜೇಗೌಡ, ‘ಇದು ನಮ್ಮ ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಶುದ್ಧ ಇಂಧನ ಉತ್ಪಾದನೆ ಮತ್ತು ಬಳಕೆಗೆ ಆದ್ಯತೆ ನೀಡಿ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಎಲ್ಲಾ ಪಾಲುದಾರರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದರು.
‘ಅನುಷ್ಠಾನ ಹಂತದಲ್ಲಿರುವ ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಕರ್ನಾಟಕವು ದೇಶದಲ್ಲಿ ಮೊದಲ ಸ್ಥಾನ ಹೊಂದಿದೆ. ಇದನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
‘ಇಂಧನ ವಲಯದಲ್ಲಿನ ಹೊಸ ನೀತಿಗಳು ರಾಜ್ಯವನ್ನು ನವೀಕರಿಸಬಹುದಾದ ಇಂಧನದ ಶಕ್ತಿ ಕೇಂದ್ರವನ್ನಾಗಿ ರೂಪಿಸುತ್ತಿವೆ’ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದ್ದಾರೆ.
‘ನವೀಕರಿಸಬಹುದಾದ ಇಂಧನದ ರಾಷ್ಟ್ರೀಯ ಗುರಿಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಅವಿರತ ಪ್ರಯತ್ನಕ್ಕೆ ಈ ಪ್ರಶಸ್ತಿ ಸಂದಿದೆ’ ಎಂದು ಕೆ.ಪಿ. ರುದ್ರಪ್ಪಯ್ಯ ಅವರು ತಿಳಿಸಿದ್ದಾರೆ.
ಈ ಪ್ರಶಸ್ತಿಯು ₹ 10 ಸಾವಿರ ನಗದು ಒಳಗೊಂಡಿದೆ. ಶಿವಕುಮಾರ್ ಕಂಪ್ಲಿ ಅಧ್ಯಕ್ಷತೆಯಲ್ಲಿ ತುರುವನೂರು ಮಂಜುನಾಥ, ಶ್ರೀದೇವಿ ಕೆರೆಮನೆ ಮತ್ತು ಪರಶಿವ ಧನಗೂರು ಅವರ ಸಮಿತಿ ಈ ಆಯ್ಕೆ ಮಾಡಿದೆ.
‘ಕೆಂಧೂಳಿ ಪತ್ರಿಕೆ ಐದು ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಸಾಹಿತ್ಯ, ಪತ್ರಿಕೋದ್ಯಮ, ಕೃಷಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಲು ತೀರ್ಮಾನಿಸಿದೆ’ ಎಂದು ಪತ್ರಿಕೆ ಸಂಪಾದಕ ತುರುವನೂರು ಮಂಜುನಾಥ ತಿಳಿಸಿದ್ದಾರೆ.
‘1956 ಆಗಸ್ಟ್ 28ರಂದು ದೇಶದ ನದಿಗಳ ಮತ್ತು ಕಣಿವೆ ವಿವಾದಗಳ ನ್ಯಾಯ ನಿರ್ಣಯಕ್ಕೆ ಜಾರಿಗೊಳಿಸಲಾದ ಅಂತರರಾಷ್ಟ್ರೀಯ ಜಲ ಕಾಯ್ದೆ, ಜಲ ಒಪ್ಪಂದಗಳು ಯಾವುವು, ಆ ದೇಶಗಳು ಕೈಗೊಂಡ ನಿರ್ಧಾರಗಳೇನು? ಭಾರತದ ನಿಲುವುಗಳು ಏನಾಗಿತ್ತು? ದೇಶದ ನದಿಗಳ ಜೋಡಣೆ ಬಿಕ್ಕಟ್ಟು, ಪರಿಹಾರ ಹಾಗೂ ಜೋಡಣೆ ಸಾಧ್ಯವೇ? ದೇಶದಲ್ಲಿನ ನದಿಗಳ ವಿವಾದ ಮತ್ತು ಅಲ್ಲಿನ ಪರಿಸ್ಥಿತಿ ಏನು ಎಂಬುದರ ಬಗ್ಗೆ ಈ ಕೃತಿಯಲ್ಲಿ ದಾಖಲಿಸಿದ್ದೇನೆ. ರಾಜ್ಯದ ಮಹದಾಯಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಬಗ್ಗೆಯೂ ಸಮಗ್ರ ಮಾಹಿತಿಯಿದೆ’ ಎಂದರು.
‘ಬಾಂಗ್ಲಾದೇಶದೊಂದಿಗೆ ಬೇಸಿಗೆ ಅವಧಿಯಲ್ಲಿ ನೀರಿನ ಹರಿವು ಹಂಚಿ ಕೊಳ್ಳಬೇಕೆಂಬ ಒಪ್ಪಂದ ಮಾಡಿಕೊಳ್ಳ ಲಾಗಿತ್ತು.
ಮಹಾನದಿ, ಶಾರದಾ ಒಪ್ಪಂದಕ್ಕೆ ಅಂದಿನ ಪ್ರಧಾನಿ ದೇವೇಗೌಡರು ಸಹಿ ಹಾಕಿ, ಪ್ರಮುಖ 12 ಅಧ್ಯಾಯಗಳನ್ನು ಒಳಗೊಂಡ ನಿಯಮಾವಳಿ ರೂಪಿಸಲಾಗಿತ್ತು.
ನಂತರದಲ್ಲಿ ದೇಶದ ನದಿ ಜೋಡಣೆ ವಿಚಾರ ಮುನ್ನೆಲೆಗೆ ಬಂತು. ಕೇಂದ್ರ ಸರ್ಕಾರದ ರಾಷ್ಟ್ರೀಯ ನೀರಾವರಿ ಅಭಿವೃದ್ಧಿ ಸಂಸ್ಥೆಯು ಹಿಮಾಲಯದ 14 ನದಿ, ದಕ್ಷಿಣ ಭಾರತದ 16 ನದಿ ಜೋಡಣೆ ಹಾಗೂ ರಾಜ್ಯದ ಒಳಗಿನ 37 ನದಿ ಜೋಡಣೆಗೆ ವರದಿ ನೀಡಿತ್ತು. ಆ ಎಲ್ಲ ವಿಷಯಗಳು ಈ ಕೃತಿಯಲ್ಲಿದೆ’ ಎಂದು ವಿವರಿಸಿದರು.
‘1952ರ ಸೆ. 29ರಂದು ಕೃಷ್ಣಾ ನದಿ ಅಣೆಕಟ್ಟು ನಿರ್ಮಾಣಕ್ಕೆ ಶಂಕುಸ್ಥಾಪನೆಗೆ ಬಂದಿದ್ದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಅಣೆಕಟ್ಟುಗಳು ಆಧುನಿಕ ಭಾರತದ ದೇಗುಲಗಳಿದ್ದಂತೆ ಎಂದು ಉಲ್ಲೇಖಿಸಿದ್ದರು. ಅದನ್ನೂ ಉಲ್ಲೇಖಿಸಿ ದ್ದೇನೆ. ಕೃತಿಯಲ್ಲಿ ಯಾರನ್ನೂ ಟೀಕೆ ಮಾಡಿಲ್ಲ. ರಾಜಕೀಯ ವಿಚಾರಗಳ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ. ವಾಸ್ತವಾಂಶಗಳನ್ನಷ್ಟೆ ದಾಖಲಿಸಿದ್ದೇನೆ’ ಎಂದೂ ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯ ಸರಗೂರು ತಾಲ್ಲೂಕಿನ ನುಗು ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದ ಸನಿಹದಲ್ಲಿರುವ ಅರಣ್ಯ ಪ್ರದೇಶ ಸೇರಿ 13 ಗ್ರಾಮಗಳಲ್ಲಿ ಸಿಲಿಮನೈಟ್ ಮತ್ತು ಕಯನೈಟ್ ಅದಿರಿನ ಶೋಧ ನಡೆಸಲು ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆಯು (ಜಿಎಸ್‌ಐ) ಅರಣ್ಯ ಇಲಾಖೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರಸ್ತಾವವು ಪರಿಶೀಲನಾ ಹಂತದಲ್ಲಿದೆ.
ಒಂದು ವೇಳೆ ಅನುಮತಿ ದೊರೆತಲ್ಲಿ ಸರಗೂರು ತಾಲ್ಲೂಕಿನ ಹೊನಗನಹಳ್ಳಿ ಮತ್ತು ಶಾಂತಿಪುರ ವಲಯದ 499 ಹೆಕ್ಟೇರ್ ಅರಣ್ಯ ಪ್ರದೇಶ ಹಾಗೂ 1,001 ಅರಣ್ಯೇತರ ಭೂಮಿಯಲ್ಲಿ ಉದ್ದೇಶಿತ ಅದಿರು ಅನ್ವೇಷಣೆ ನಡೆಯಲಿದೆ. ಹಿರಿಯ ಭೂವಿಜ್ಞಾನಿ ನೇತೃತ್ವದ ಮೂವರು ಸಿಬ್ಬಂದಿಯನ್ನು ಅ.16ರಂದು ‘ಜಿಎಸ್‌ಐ’ ನಿಯೋಜಿಸಿದೆ. ‘50 ದಿನಗಳಲ್ಲಿ ಶೋಧ ನಡೆಸಿ, ವರದಿ ತಯಾರಿಸಲಿದ್ದಾರೆ’ ಎಂದು ಅರ್ಜಿಯಲ್ಲಿ ಹೇಳಿದೆ.
ಎಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳ ಗಡಿಯಾಗಿ ಹರಿಯುವ ಕಬಿನಿ ನದಿ ತೀರದಲ್ಲಿರುವ ಶಾಂತಿಪುರ ಗ್ರಾಮದ ಎರಡು ಬೃಹತ್ ಬೆಟ್ಟಗಳ ಅರಣ್ಯ ಭೂಮಿ ಹಾಗೂ ಸುತ್ತಲ ಗ್ರಾಮಗಳಲ್ಲಿ ಶೋಧ ನಡೆಯಲಿದೆ. ಇಲ್ಲಿಂದ ನುಗು ಜಲಾಶಯ 4.5 ಕಿ.ಮೀ ಹಾಗೂ ಕಬಿನಿ ಜಲಾಶಯದ ಅಣೆಕಟ್ಟೆ 6.8 ಕಿ.ಮೀ ದೂರದಲ್ಲಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ನುಗು ವನ್ಯಜೀವಿಧಾಮ ಕೂಡ ಸನಿಹದಲ್ಲಿವೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಿಕ್ಕದೇವಮ್ಮ ಬೆಟ್ಟವೂ 1.5 ಕಿ.ಮೀ ದೂರದಲ್ಲಿದೆ.
‘ಮಾನವ– ವನ್ಯಜೀವಿ ಸಂಘರ್ಷದಲ್ಲಿ ನಲುಗಿರುವ ಪರಿಸರ ಸೂಕ್ಷ್ಮ ವಲಯದ ಈ ಭಾಗದಲ್ಲಿ ಗಣಿಗಾರಿಕೆ ಆರಂಭವಾದರೆ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಲಿದೆ’ ಎಂಬ ಆತಂಕವೂ ಇದೇ ವೇಳೆ ಪರಿಸರ ಹೋರಾಟಗಾರರಿಂದ ವ್ಯಕ್ತವಾಗಿದೆ.
‘ವನ್ಯಜೀವಿ ಹಾಗೂ ಜನರ ಮೇಲೆ ಪರಿಣಾಮ ಬೀರುವ ಗಣಿಗಾರಿಕೆ, ವಾಣಿಜ್ಯ ಪ್ರವಾಸೋದ್ಯಮದಂಥ ಯೋಜನೆ ತರುವ ಮೊದಲು ಸ್ಥಳೀಯರು, ಸಂಘ– ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೂಕ್ತ’ ಎನ್ನುತ್ತಾರೆ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ.
ಎಲ್ಲೆಲ್ಲಿಶೋಧ?: ಸರಗೂರು ಪಟ್ಟಣಕ್ಕೆ ಸಮೀಪದಲ್ಲೇ ಇರುವ ಶಾಂತಿಪುರ ಗ್ರಾಮದ ಸರ್ವೆ ಸಂಖ್ಯೆ 49, ಮಂಚಹಳ್ಳಿಯ ಸರ್ವೆ ಸಂಖ್ಯೆ 7, ಹುಣಸೇಹಳ್ಳಿಯ ಸರ್ವೆ ಸಂಖ್ಯೆ 54ರ ಅರಣ್ಯ ಪ್ರದೇಶ, ಅಡಹಳ್ಳಿ, ಹಳೆ ಮಂಚನಹಳ್ಳಿ, ಹುನುಗಹಳ್ಳಿ, ಇಟ್ನ, ಕಾಟೂರು, ಕೂಲ್ಯ, ಕುಂದಾಪಟ್ಟಣ, ಕೆ.ಬೆಳತೂರು, ಲಕ್ಕೂರು, ಮನುಗನಹಳ್ಳಿಯಲ್ಲಿ ಅದಿರು ಶೋಧ ನಡೆಯಲಿದೆ.
ವಿದೇಶಿಪ್ರವಾಸಿಗರು: ಹಿಂದೆಬಿದ್ದರಾಜ್ಯ
₹14 ಸಾವಿರಕೋಟಿವಿದೇಶಿಹೂಡಿಕೆ
ಸಂದರ್ಭ: ಸತತಮೂರುತಿಂಗಳುಗಳಿಂದದೇಶದಬಂಡವಾಳಮಾರುಕಟ್ಟೆಗಳಿಂದಹಣವನ್ನುಹಿಂದಕ್ಕೆಪಡೆಯುತ್ತಿದ್ದವಿದೇಶಿಹೂಡಿಕೆದಾರರು (ಎಫ್ಪಿಐ) ಅಕ್ಟೋಬರ್ ತಿಂಗಳಲ್ಲಿನಿವ್ವಳ ₹14,610 ಕೋಟಿಹೂಡಿಕೆಮಾಡಿದ್ದಾರೆ.
ದೇಶದ ಕಾರ್ಪೊರೇಟ್ ಕಂಪನಿಗಳ ವರಮಾನ ಗಳಿಕೆಯು ಚೆನ್ನಾಗಿ ಇರುವುದು, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಇಳಿಕೆ ಮಾಡಿರುವುದು ಮತ್ತು ಭಾರತ–ಅಮೆರಿಕ ನಡುವೆ ವಾಣಿಜ್ಯ ಒಪ್ಪಂದವೊಂದು ಶೀಘ್ರವೇ ಸಾಧ್ಯವಾಗ ಬಹುದು ಎಂಬ ಆಶಾಭಾವನೆಯಲ್ಲಿ ಅವರು ಈ ಹೂಡಿಕೆ ಮಾಡಿದ್ದಾರೆ.
ವಿದೇಶಿ ಹೂಡಿಕೆದಾರರು ಸೆಪ್ಟೆಂಬರ್‌ನಲ್ಲಿ ₹23,885 ಕೋಟಿ, ಆಗಸ್ಟ್‌ನಲ್ಲಿ ₹34,990 ಕೋಟಿ ಹಾಗೂ ಜುಲೈನಲ್ಲಿ ₹17,700 ಕೋಟಿ ಹೂಡಿಕೆಯನ್ನು ಹಿಂಪಡೆದಿದ್ದರು. ಅಕ್ಟೋಬರ್ ತಿಂಗಳಲ್ಲಿ ವಿದೇಶಿ ಹೂಡಿಕೆದಾರರ ನಿಲುವು ಬದಲಾಗಿದೆ. ಅಂದರೆ, ಜಾಗತಿಕ ಹೂಡಿಕೆದಾರರಿಗೆ ಭಾರತದ ಬಂಡವಾಳ ಮಾರುಕಟ್ಟೆಗಳ ಮೇಲೆ ಹೊಸದಾಗಿ ವಿಶ್ವಾಸ ಮೂಡಿದೆ.
ದೇಶದ ಷೇರುಪೇಟೆಗಳಲ್ಲಿ ಈಚೆಗೆ ಕಂಡುಬಂದ ಇಳಿಕೆ ಹಾಗೂ ಕಾರ್ಪೊರೇಟ್ ಕಂಪನಿಗಳು ಉತ್ತಮ ಫಲಿತಾಂಶ ತೋರಿರುವ ಕಾರಣದಿಂದಾಗಿ ದೇಶದ ಷೇರುಗಳ ಮೌಲ್ಯವು ಆಕರ್ಷಕವಾಗಿ ಕಾಣಲಾರಂಭಿಸಿದೆ. ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಗಳತ್ತ ಮತ್ತೆ ಮರಳಿ ರುವುದಕ್ಕೆ ಇದೂ ಒಂದು ಕಾರಣ ಎಂದು ಮಾರ್ನಿಂಗ್‌ಸ್ಟಾರ್ ಇನ್ವೆಸ್ಟ್‌ಮೆಂಟ್ ರಿಸರ್ಚ್ ಇಂಡಿಯಾ ಸಂಸ್ಥೆಯ ಸಂಶೋಧನಾ ನಿರ್ವಾಹಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.
ದೇಶದ ಅರ್ಥ ವ್ಯವಸ್ಥೆಯಲ್ಲಿನ ಸ್ಥಿರತೆ, ಜಾಗತಿಕ ಮಟ್ಟದಲ್ಲಿ ಪೂರಕ ಪರಿಸ್ಥಿತಿ ಹಾಗೂ ದೇಶದ ಕಾರ್ಪೊರೇಟ್ ಕಂಪನಿಗಳ ವರಮಾನದಲ್ಲಿ ಸ್ಥಿರತೆ ಕಂಡುಬಂದರೆ ಮುಂದಿನ ದಿನಗಳಲ್ಲಿಯೂ ವಿದೇಶಿ ಹೂಡಿಕೆದಾರರು ಹೂಡಿಕೆಯನ್ನು ಮುಂದುವರಿಸಬಹುದು ಎಂದು ಶ್ರೀವಾಸ್ತವ ಹೇಳಿದ್ದಾರೆ.
‘ಕಾರ್ಪೊರೇಟ್ ಕಂಪನಿಗಳ ವರಮಾನವು ಸುಧಾರಿಸಿದ ಸ್ಪಷ್ಟ ಲಕ್ಷಣಗಳು ಇವೆ. ಬೇಡಿಕೆಯಲ್ಲಿ ಉತ್ತಮ ಮಟ್ಟವು ಮುಂದುವರಿದರೆ ವರಮಾನವು ಇನ್ನಷ್ಟು ಹೆಚ್ಚಾಗುತ್ತದೆ. ಆಗ ಷೇರುಗಳ ಮೌಲ್ಯವು ಇನ್ನಷ್ಟು ಸಮಾಧಾನಕರವಾಗುತ್ತದೆ. ಹಾಗೆ ಆದಾಗ ವಿದೇಶಿ ಹೂಡಿಕೆದಾರರು ಹೂಡಿಕೆ ಮುಂದುವರಿಸುವ ಸಾಧ್ಯತೆ ಇದೆ’ ಎಂದು ಜಿಯೋಜಿತ್ ಇನ್ವೆಸ್ಟ್ ಮೆಂಟ್ಸ್ ಸಂಸ್ಥೆಯ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.
ಸಂದರ್ಭ: ಅಧಿಸೂಚಿತ ಅರಣ್ಯ ಪ್ರದೇಶಗಳಲ್ಲಿ 1980ರ ನಂತರ ಖಾಸಗಿ ವ್ಯಕ್ತಿಗಳು, ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಮಂಜೂರು ಮಾಡಿದ ಎಲ್ಲ ಭೂಮಿಯೂ ಕಾನೂನುಬಾಹಿರ ವಾಗಿದ್ದು, ಇಂತಹ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಮಟ್ಟದ ವಿಶೇಷ ತನಿಖಾ ತಂಡಗಳಿಗೆ (ಎಸ್‌ಐಟಿ) ಸರ್ಕಾರ ಸೂಚಿಸಿದೆ.
ಜಿಲ್ಲಾ ಮಟ್ಟದ ಎಸ್‌ಐಟಿಗಳು ನಿರ್ವಹಿಸಬೇಕಾದ ಕಾರ್ಯವಿಧಾನ ಕುರಿತು ಅರಣ್ಯ ಇಲಾಖೆಯು ಹೊರಡಿಸಿದ ಸುತ್ತೋಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಅಧಿಸೂಚಿತ ಅರಣ್ಯ ಪ್ರದೇಶಗಳಲ್ಲಿ ಹಂಚಿಕೆ, ಮಂಜೂರು ಮಾಡಿದ ಪ್ರದೇಶಗಳ ಪಟ್ಟಿಯನ್ನು ರಾಜ್ಯ ಮಟ್ಟದ ವಿಶೇಷ ತನಿಖಾ ತಂಡಕ್ಕೆ ಸಲ್ಲಿಸುವಂತೆ ಹೇಳಿದೆ.
ಅರಣ್ಯ ಸಂರಕ್ಷಣಾ ಕಾಯಿದೆ–1980ರ ಪೂರ್ವದಲ್ಲಿ ಕಂದಾಯ ಇಲಾಖೆಯು ಅಧಿಸೂಚಿತ ಅರಣ್ಯ ಪ್ರದೇಶಗಳಲ್ಲಿ ಮಾಡಿರುವ ಮಂಜೂರಾತಿಯನ್ನು ಸಕ್ಷಮ ಪ್ರಾಧಿಕಾರದಿಂದ ಮಾಡಲಾಗಿದೆಯೇ? ಒಂದು ವೇಳೆ ಸಕ್ಷಮ ಪ್ರಾಧಿಕಾರದಿಂದ ಮಂಜೂರು ಮಾಡಿದ್ದರೆ ಅಂತಹ ಅಧಿಕಾರವನ್ನು ಯಾವ ಕಾಯ್ದೆ, ನಿಯಮ, ಆದೇಶಗಳ ಮೂಲಕ ನೀಡಲಾಗಿದೆ ಎನ್ನುವ ಕುರಿತು ದಾಖಲೆಗಳನ್ನು ಸಂಗ್ರಹಿಸಬೇಕು. ಕಂದಾಯ ಇಲಾಖೆಯ ಸಕ್ಷಮ ಪ್ರಾಧಿಕಾರ ಹೊರತುಪಡಿಸಿ, ಇತರೆ ಪ್ರಾಧಿಕಾರಗಳು ಮಂಜೂರು ಮಾಡಿದ ವಿವರಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
1996ರ ನಂತರ ಸರ್ಕಾರಿ ದಾಖಲೆಗಳಲ್ಲಿ ಅರಣ್ಯ ಎಂದು ನಮೂದಿಸಿ ರುವ ಪ್ರದೇಶಗಳಲ್ಲಿ ಕಂದಾಯ ಇಲಾಖೆ ಭೂ ಮಂಜೂರಾತಿ ಮಾಡಿದ್ದರೆ ಅಂತಹ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಸೂಕ್ತ ಶಿಫಾರಸು ಗಳೊಂದಿಗೆ ರಾಜ್ಯಮಟ್ಟದ ವಿಶೇಷ ತನಿಖಾ ತಂಡಕ್ಕೆ ಸಲ್ಲಿಸಬೇಕು ಎಂದು ವಿವರಿಸಲಾಗಿದೆ.
ದಂಡವಸೂಲಿಗೆಮಾರ್ಗಸೂಚಿದರ
ಕಾನೂನುಬಾಹಿರವಾಗಿ ಮಂಜೂರು ಮಾಡಿದ ಪ್ರತಿ ಪ್ರಕರಣ ಪಟ್ಟಿ ಮಾಡಿ, ಅಂತಹ ಪ್ರದೇಶಗಳನ್ನು ಮರಳಿ ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಮಂಜೂರಾತಿ ನೀಡಿದ ಅರಣ್ಯ ಪ್ರದೇಶವನ್ನು ಮರಳಿ ವಶಕ್ಕೆ ಪಡೆಯುವುದು ಸಾರ್ವಜನಿಕ ಹಿತದೃಷ್ಟಿಯಿಂದ ಪೂರಕವಲ್ಲದಿದ್ದರೆ, ಸರ್ಕಾರದ ಮಾರ್ಗಸೂಚಿ ದರಗಳ ಅನುಸಾರ ಭೂಮಾಲೀಕರಿಂದ ದಂಡ ವಸೂಲಿ ಮಾಡುವುದೂ ಸೇರಿದಂತೆ ಅಳಡಿಸಿಕೊಳ್ಳ ಬಹುದಾದ ವಿಧಾನದ ಕುರಿತು ವರದಿಯಲ್ಲಿ ಉಲ್ಲೇಖಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.
ಕರ್ನಾಟಕ ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರವು ಅರಣ್ಯ ಭೂಮಿಗಳ ಕ್ರೋಡೀಕೃತ ದಾಖಲೆಗಳನ್ನು ತಯಾರಿಸಲು ಅಭಿವೃದ್ಧಿಪಡಿಸಲಾದ ಪೋರ್ಟಲ್ ಅನ್ನು ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ಸಂಖ್ಯೆ, ವಿಸ್ತೀರ್ಣವನ್ನು ಗುರುತಿಸಲು ಉಪಯೋಗಿಸಿಕೊಳ್ಳಲು ಹೇಳಿದೆ.
ಆಯೋಗವು ನಡಸಿದ್ದ ಸಮೀಕ್ಷೆಯ ಮನೆ–ಮನೆ ಭೇಟಿ ಹಂತವು (ಅಕ್ಟೋಬರ್ 31ಕ್ಕೆ) ಕೊನೆಗೊಂಡಿದೆ.
ರಾಜ್ಯದಾದ್ಯಂತ ಒಟ್ಟು 6.85 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಅದರಲ್ಲಿ 6.13 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು, 72 ಲಕ್ಷ ಜನರು ಸಮೀಕ್ಷೆಯಲ್ಲಿ ಭಾಗಿಯಾಗಿಲ್ಲ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ರಾಜ್ಯದಾದ್ಯಂತ ನಡೆದ ಸಮೀಕ್ಷೆಯ ವೇಳೆ 34.49 ಲಕ್ಷ ಮನೆಗಳಿಗೆ ಬೀಗ ಹಾಕಲಾಗಿತ್ತು ಇಲ್ಲವೇ ಮನೆಗಳು ಖಾಲಿ ಇದ್ದವು. ಈ ಪೈಕಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲೇ 29 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಖಾಲಿ/ಬೀಗ ಹಾಕಲಾದ/ಸಮೀಕ್ಷೆ ಮಾಡಲಾಗದ ಮನೆಗಳು ಎಂದು ಗುರುತಿಸಲಾಗಿದೆ. ರಾಜ್ಯದಾದ್ಯಂತ ಒಟ್ಟು
ಸಮೀಕ್ಷೆಯ ಮನೆ–ಮನೆ ಭೇಟಿ ಹಂತವು ಕೊನೆಗೊಂಡಿದ್ದರೂ, ಆನ್‌ಲೈನ್‌ನಲ್ಲಿ ಮಾಹಿತಿ ನಮೂದಿಸಲು ನವೆಂಬರ್ 10ರವರೆಗೆ ಅವಕಾಶವಿದೆ.
ಬೆಳೆ ವಿಮೆ (ಫಸಲ್ ಬಿಮಾ) ಯೋಜನೆಯಡಿ 2024ರ ಏಪ್ರಿಲ್‌ನಿಂದ 2025ರ ಮಾರ್ಚ್ ಅವಧಿಯಲ್ಲಿ ದ್ರಾಕ್ಷಿ ಬೆಳೆಗೆ ವಿಮೆ ಮಾಡಿಸಿದ್ದ ರಾಜ್ಯದ 31,470 ಬೆಳೆಗಾರರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
ದ್ರಾಕ್ಷಿಯನ್ನುವಿಜಯಪುರ, ಬೆಳಗಾವಿ, ಬಾಗಲಕೋಟೆ, ಬೆಂಗಳೂರುಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕಲಬುರಗಿ, ಕೊಪ್ಪಳ, ಯಾದಗಿರಿ, ಬೀದರ್, ಕೋಲಾರಜಿಲ್ಲೆಗಳಲ್ಲಿಹವಾಮಾನಆಧಾರಿತಬೆಳೆಯಾಗಿಬೆಳೆಯಲಾಗುತ್ತದೆ. ರಾಜ್ಯದಲ್ಲಿ 42 ಸಾವಿರಹೆಕ್ಟೇರ್ಗಿಂತಹೆಚ್ಚಿನಪ್ರದೇಶದಲ್ಲಿಬೆಳೆಇದೆ. ಮಳೆ, ಪ್ರತಿಕೂಲ ಹವಾಮಾನದಿಂದ ಕಳೆದ ವರ್ಷ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿತ್ತು.
ಬೆಳೆ ವಿಮೆ ಯೋಜನೆಯಡಿ 31,470 ರೈತರು ಹೆಕ್ಟೇರ್‌ಗೆ ₹14 ಸಾವಿರ ಕಂತು (ಪ್ರೀಮಿಯಂ) ಪಾವತಿಸಿದ್ದರು. 27,953 ಹೆಕ್ಟೇರ್ ವಿಮೆ ಯೋಜನೆಗೆ ಒಳಪಟ್ಟಿತ್ತು. ₹39.13 ಕೋಟಿ ವಿಮೆ ಮೊತ್ತ ಪಾವತಿಯಾಗಿತ್ತು.
ಬೆಳೆ ಹಾನಿಯಾದರೆ ಪ್ರತಿ ಹೆಕ್ಟೇರ್‌ಗೆ ₹2.80 ಲಕ್ಷ ಪರಿಹಾರ ಬರಬೇಕಿತ್ತು. ಆದರೆ, ವಿಮೆ ಅವಧಿ ಮುಗಿದರೂ ಹಣ ಕೈಸೇರಿಲ್ಲ. ಪ್ರಕ್ರಿಯೆ ವಿಳಂಬವಾಗಿದ್ದರಿಂದ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ.
‘ನಾನು ನಾಲ್ಕು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದು, ವಿಮೆಯನ್ನೂ ಮಾಡಿಸಿದ್ದೆ. ಹವಾಮಾನ ವೈಪರೀತ್ಯದಿಂದ ಬೆಳೆ ಕೈಕೊಟ್ಟಿತು. ಈಗ ವಿಮೆ ಪರಿಹಾರವೂ ಸಿಗದೆ ತೊಂದೆರೆಯಾಗಿದೆ’ ಎಂದು ಅಥಣಿ ತಾಲ್ಲೂಕಿನ ತೆಲಸಂಗದ ರೈತ ರವಿ.
‘ಅಕ್ರಮವಾಗಿ ವಿಮೆ ಪರಿಹಾರ ಪಡೆಯಲು ಕೆಲ ರೈತರು ಯತ್ನಿಸಿದ್ದಾರೆ. ದ್ರಾಕ್ಷಿ ಬೆಳೆಯದಿದ್ದರೂ ವಿಮೆ ಮಾಡಿಸಿದ್ದಾರೆ ಎಂಬ ಆರೋಪವಿದೆ. ಪರಿಶೀಲನೆ ನಂತರ ಪರಿಹಾರ ಕೊಡುತ್ತೇವೆ ಎಂದು ವಿಮೆ ಕಂಪನಿ ಅಧಿಕಾರಿಗಳು ಹೇಳುತ್ತಾರೆ’ ಎಂದು ಹೇಳಿದರು.
ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ಇದು ₹5.73 ಲಕ್ಷ ಕೋಟಿಯಾಗಿದೆ ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರ (ಸಿಜಿಎ) ವರದಿ ಶುಕ್ರವಾರ ತಿಳಿಸಿದೆ.
ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ₹4.7 ಲಕ್ಷ ಕೋಟಿಯಷ್ಟು (ಶೇ 29) ಇತ್ತು. 2025–26ರಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.4ಕ್ಕೆ (ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ₹15.69 ಲಕ್ಷ ಕೋಟಿ) ತಗ್ಗಿಸಲು ಸರ್ಕಾರ ಬಜೆಟ್‌ನಲ್ಲಿ ಗುರಿ ನಿಗದಿಪಡಿಸಲಾಗಿದೆ.
ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ ಸರ್ಕಾರವು ₹17.3 ಲಕ್ಷ ಕೋಟಿ (ಶೇ 49.5) ವರಮಾನ ಸ್ವೀಕರಿಸಿದೆ. ಒಟ್ಟು ವೆಚ್ಚವು ₹23 ಲಕ್ಷ ಕೋಟಿ ಆಗಿದೆ. ಇದು ಬಜೆಟ್ ಅಂದಾಜಿನ ಶೇ 45ರಷ್ಟಾಗಿದೆ.
ಕೇಂದ್ರ ಸರ್ಕಾರ ಸ್ವೀಕರಿಸಿದ ಒಟ್ಟು ಮೊತ್ತದ ಪೈಕಿ ₹12.29 ಲಕ್ಷ ಕೋಟಿ ತೆರಿಗೆ ವರಮಾನದಿಂದ ಸಂಗ್ರಹಿಸಿದೆ. ₹4.66 ಲಕ್ಷ ಕೋಟಿ ತೆರಿಗೆಯೇತರ ವರಮಾನ ಮತ್ತು ಇತರೆ ಮೂಲಗಳಿಂದ ₹34,770 ಕೋಟಿ ಸಂಗ್ರಹಿಸಿದೆ.
ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಗಳಿಗೆ ₹6.31 ಲಕ್ಷ ಕೋಟಿಯನ್ನು ತೆರಿಗೆ ಪಾಲಾಗಿ ವರ್ಗಾಯಿಸಿದೆ. ಇದು ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹86,948 ಕೋಟಿಯಷ್ಟು ಅಧಿಕವಾಗಿದೆ ಎಂದು ತಿಳಿಸಿದೆ.
ವಿದೇಶಿವಿನಿಮಯಸಂಗ್ರಹಇಳಿಕೆ
ಸಂದರ್ಭ: ಅಕ್ಟೋಬರ್ 24ಕ್ಕೆಅಂತ್ಯಗೊಂಡವಾರದಲ್ಲಿದೇಶದವಿದೇಶಿವಿನಿಮಯಮೀಸಲುಸಂಗ್ರಹದಪ್ರಮಾಣವು ₹61,434 ಕೋಟಿಯಷ್ಟುಕಡಿಮೆಆಗಿದೆ.
ಪ್ರಸ್ತುತ ಒಟ್ಟು ಮೀಸಲು ಸಂಗ್ರಹ ₹61.69 ಲಕ್ಷ ಕೋಟಿಯಷ್ಟಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.
ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ ₹34,266 ಕೋಟಿಯಷ್ಟು ಕಡಿಮೆಯಾಗಿದ್ದು, ₹50.26 ಲಕ್ಷ ಕೋಟಿಯಾಗಿದೆ. ಚಿನ್ನದ ಮೀಸಲು ಸಂಗ್ರಹದಲ್ಲಿ ₹26,706 ಕೋಟಿ ಇಳಿಕೆಯಾಗಿದ್ದು, ₹9.36 ಲಕ್ಷ ಕೋಟಿಯಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್) ₹1.65 ಲಕ್ಷ ಕೋಟಿ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪಾಲು ₹40,887 ಕೋಟಿಯಾಗಿದೆ ಎಂದು ತಿಳಿಸಿದೆ.
ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ – ಸಿಇಒ ಶೃಂಗದಲ್ಲಿ ಮಾತನಾಡಿದ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗೆ ‘ಅಪಾರ ಗೌರವ ಹಾಗೂ ಪ್ರೀತಿ’ ಇರುವುದಾಗಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಜೊತೆಗಿನ ತಮ್ಮ ಸ್ನೇಹ ಬಹಳ ದೊಡ್ಡದು ಎಂದೂ ಟ್ರಂಪ್ ಹೇಳಿಕೊಂಡಿದ್ದಾರೆ.ಆದರೆ ವಾಣಿಜ್ಯ ಒಪ್ಪಂದದ ಕುರಿತಾಗಿ ಅವರು ಹೆಚ್ಚಿನ ಮಾಹಿತಿ ನೀಡಲಿಲ್ಲ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಕ್ವಾಲಾಲಂಪುರದಲ್ಲಿ ಭೇಟಿಯಾಗಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ವ್ಯಾಪಾರ ಒಪ್ಪಂದದ ಕುರಿತಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಆದರೆ, ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಭಾರತದ ಮೇಲೆ ಹೆಚ್ಚುವರಿಯಾಗಿ ವಿಧಿಸಿರುವ ಶೇ 25ರಷ್ಟು ತೆರಿಗೆಯನ್ನು ರದ್ದುಪಡಿಸುವ ಬಗ್ಗೆ ಅಮೆರಿಕದಿಂದ ಭರವಸೆ ಸಿಕ್ಕಿರುವ ಸೂಚನೆ ಇಲ್ಲ. ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದವು ಅಂತಿಮ ಹಂತಕ್ಕೆ ಬಹಳ ಹತ್ತಿರದಲ್ಲಿದೆ ಎಂದು ಭಾರತದ ಅಧಿಕಾರಿಯೊಬ್ಬರು ಕಳೆದ ವಾರ ಹೇಳಿದ್ದಾರೆ.
‘ಫೆಬ್ರುವರಿಯಲ್ಲಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ವೇಳೆ ಅಲ್ಲಿನ ಜನರಿಗೆ ಪೆಟ್ ಪ್ಲಾನೆಟ್ ಬಗ್ಗೆ ತಿಳಿಸಿದ್ದೆ. ಅಲ್ಲಿನ ನಿವಾಸಿಗಳು ಹಣದ ಬದಲು ಚಮರಿಮೃಗಗಳನ್ನು ಕೊಡುಗೆ ನೀಡು ತ್ತೇವೆ. ಅವುಗಳನ್ನು ನೋಡಲು ಪ್ರವಾಸಿಗರಿಗೂ ಖುಷಿಯಾಗುತ್ತದೆ ಎಂದು ಮೂರು ಚಮರಿಮೃಗಗಳನ್ನು ವಾಹನದಲ್ಲಿ ಕಳುಹಿಸಿದ್ದು, ಎಲ್ಲವೂ ಆರೋಗ್ಯವಾಗಿವೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ’ ಎಂದು ಪ್ಲಾನೆಟ್‌ನ ಪ್ರಮುಖ ರಾಜೇಂದ್ರ ಶಿರ್ಸಿಕರ ಮಾಹಿತಿ ಹಂಚಿಕೊಂಡರು.
‘14 ವರ್ಷ ಮತ್ತು 10 ತಿಂಗಳ ಹೆಣ್ಣು ಮತ್ತು 2 ವರ್ಷದ ಒಂದು ಗಂಡು ಚಮರಿ ಮೃಗವಿದೆ. ಹಿಮಾಚಲದ ವಾತಾ ವರಣದ ಅನುಭವಕ್ಕಾಗಿ ಶೆಡ್ ಫ್ಯಾನ್ ಅಳವಡಿಸ ಲಾಗಿದೆ. ಪಶ್ಚಿಮಘಟ್ಟದ ವಾತಾವರಣಕ್ಕೆ ಬಹುತೇಕ ಎಲ್ಲ ಪ್ರಬೇಧಗಳ ಪ್ರಾಣಿಗಳು ಹೊಂದಿಕೊಳ್ಳುತ್ತವೆ’ ಎಂದರು.
ವಿಜಯಪುರದಲ್ಲಿಲಘುಭೂಕಂಪನ
ಸಂದರ್ಭ: ನಗರದಲ್ಲಿ28th Oct 11.41, ರಾತ್ರಿ 12.38 ಮತ್ತು29th Oct ಬೆಳಿಗ್ಗೆ 5.30ಕ್ಕೆಮೂರುಬಾರಿಸರಣಿಲಘುಭೂಕಂಪನದಅನುಭವವಾಗಿದೆ.
‘ಗುಡುಗಿದ ಶಬ್ದ ಕೇಳಿಬಂದಿದೆ. ಜೊತೆಗೆ ಭೂಮಿ ಕಂಪಿಸಿದ್ದು, ಭಯದಿಂದ ಜನರು ಮನೆಯಿಂದ ಹೊರಗೆ ಓಡಿಬಂದರು. ಆತಂಕದಲ್ಲೇ ರಾತ್ರಿ ಕಳೆದರು. ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯ ಸೆರೆಯಾಗಿದೆ.
‘ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ ದಾಖಲಾಗಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ’ ಎಂದು ಜಿಲ್ಲಾಡಳಿತ ತಿಳಿಸಿದೆ.
ಸ್ವಿಡ್ಜರ್ಲೆಂಡ್‌ನಲ್ಲಿ ಈಚೆಗೆ ನಡೆದ ಸ್ವಿಸ್‌ನೆಕ್ಸ್ ಕ್ವಾಂಟಮ್ ಸಮಾವೇಶದಲ್ಲಿ ಭಾಗಿಯಾಗಿದ್ದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ‘ಕ್ವಾಂಟಮ್ ಕ್ಷೇತ್ರದಲ್ಲಿ ಹೂಡಿಕೆಗೆ ಇರುವ ಅವಕಾಶಗಳು ಹಾಗೂ ಈ ಕ್ಷೇತ್ರದ ಅಭಿವೃದ್ಧಿಗೆ ಕರ್ನಾಟಕದಲ್ಲಿ ಇರುವ ಅವಕಾಶಗಳ ಬಗ್ಗೆ ಸಮಾವೇಶದಲ್ಲಿ ಭಾಗಿಯಾಗಿದ್ದ ಕಂಪನಿಗಳಿಗೆ ವಿವರಿಸಲಾಗಿದೆ’ ಎಂದು ಹೇಳಿದರು.
‘ದೇಶದ ಮೊದಲ ಕ್ವಾಂಟಮ್ ಸಮಾವೇಶ ಬೆಂಗಳೂರಿನಲ್ಲಿ ನಡೆದಿತ್ತು ಮತ್ತು ಅದರಲ್ಲಿ ಘೋಷಿಸಿದ್ದಂತೆ ಕ್ವಾಂಟಮ್ ಸಿಟಿ ಸ್ಥಾಪನೆಗೆ ರಾಜ್ಯ ಸರ್ಕಾರವು ಈಗಾಗಲೇ ಜಮೀನು ಮಂಜೂರು ಮಾಡಿದೆ. ಜತೆಗೆ ಕ್ವಾಂಟಮ್ ತಂತ್ರಜ್ಞಾನದಲ್ಲಿ ಪರಿಣಿತರನ್ನು ರೂಪಿಸುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಈ ಅಂಶಗಳು ಕ್ವಾಂಟಮ್ ಕ್ಷೇತ್ರದ ಜಾಗತಿಕ ಮಟ್ಟದ ಕಂಪನಿಗಳನ್ನು ಆಕರ್ಷಿಸಿವೆ’ ಎಂದರು.
‘ಈ ಪ್ರವಾಸದ ವೇಳೆ ಕ್ವಾಂಟಮ್ ಬೇಸೆಲ್, ಸಿಇಆರ್‌ಎನ್, ಇಟಿಎಚ್ ಝ್ಯೂರಿಚ್ ಆ್ಯಂಡ್ ಝ್ಯೂರಿಚ್ ಇನ್‌ಸ್ಟ್ರುಮೆಂಟ್ಸ್ ಸಂಸ್ಥೆಗಳಿಗೆ ಭೇಟಿ ನೀಡಲಾಗಿತ್ತು. ಬೆಂಗಳೂರಿನ ಕ್ವಾಂಟಮ್ ಸಿಟಿಯಲ್ಲಿ ಹೂಡಿಕೆ ಮಾಡುವಂತೆ ಈ ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ. ಕಂಪನಿಗಳ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಜಿಡಿಪಿಪ್ರಗತಿಶೇ 7ರಷ್ಟುನಿರೀಕ್ಷೆ’
ಸಂದರ್ಭ: ‘ಪ್ರಸಕ್ತಆರ್ಥಿಕವರ್ಷದಲ್ಲಿದೇಶದಜಿಡಿಪಿಬೆಳವಣಿಗೆಶೇ 7ಕ್ಕೆತಲುಪುವಸಾಧ್ಯತೆಇದೆ’ಎಂದುಕೇಂದ್ರಸರ್ಕಾರದಮುಖ್ಯಆರ್ಥಿಕಸಲಹೆಗಾರ (ಸಿಇಎ) ವಿ. ಅನಂತನಾಗೇಶ್ವರನ್ ಹೇಳಿದ್ದಾರೆ.
ಮೂರು ಜಾಗತಿಕ ರೇಟಿಂಗ್ ಸಂಸ್ಥೆಗಳು ಇತ್ತೀಚೆಗೆ ದೇಶದ ರೇಟಿಂಗ್ ಹೆಚ್ಚಿಸಿವೆ. ದೇಶವು ಇದೇ ಪಥದಲ್ಲಿ ಮುಂದುವರಿದರೆ ಶೀಘ್ರ ‘ಎ’ ರೇಟಿಂಗ್ ವರ್ಗಕ್ಕೆ ಸೇರ್ಪಡೆ ಆಗಬಹುದು ಎಂದು ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತೆಗೆದುಕೊಂಡ ಕ್ರಮಗಳು ದೇಶದ ಆರ್ಥಿಕತೆಯನ್ನು ‘ಆರಾಮದಾಯಕ ಸ್ಥಾನದಲ್ಲಿ’ ಇರಿಸುತ್ತವೆ. ಆದಾಯ ತೆರಿಗೆ ವಿನಾಯಿತಿ ಮತ್ತು ಜಿಎಸ್‌ಟಿ ಇಳಿಕೆಯಂತಹ ಆರ್ಥಿಕ ಕ್ರಮಗಳು ದೇಶದ ಆರ್ಥಿಕ ಪ್ರಗತಿಯನ್ನು ಹೆಚ್ಚಿಸಲಿವೆ ಎಂದು ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.3ಕ್ಕೆ ಇಳಿಕೆ ಆಗಬಹುದು ಎಂದು ಫೆಬ್ರುವರಿಯಲ್ಲಿ ಅನಂತ ನಾಗೇಶ್ವರನ್ ಹೇಳಿದ್ದರು. ಅಮೆರಿಕದ ಸುಂಕದಿಂದ ಜಿಡಿಪಿ ಶೇ 6ಕ್ಕೆ ಇಳಿಯುವ ನಿರೀಕ್ಷೆ ಇದೆ ಎಂದು ಹೇಳಿದ್ದರು.
ಇಂದಿನಿಂದಸ್ಟಾರ್ಲಿಂಕ್ ಪರೀಕ್ಷಾರ್ಥಪ್ರಯೋಗ
ಸಂದರ್ಭ: ಉದ್ಯಮಿಇಲಾನ್ ಮಸ್ಕ್ ಒಡೆತನದಸ್ಟಾರ್ಲಿಂಕ್, ದೇಶದಲ್ಲಿಉಪಗ್ರಹಆಧಾರಿತಬ್ರಾಡ್ಬ್ಯಾಂಡ್ ಸೇವೆಆರಂಭಿಸುವುದಕ್ಕೆಸಂಬಂಧಿಸಿದಪರೀಕ್ಷಾರ್ಥಪ್ರಯೋಗವನ್ನುಅಕ್ಟೋಬರ್ 30 ಮತ್ತು 31ರಂದುಮುಂಬೈನಲ್ಲಿನಡೆಸಲಿದೆಎಂದುಮೂಲಗಳುತಿಳಿಸಿವೆ.
ಕಾನೂನು ಜಾರಿ ಪ್ರಾಧಿಕಾರಗಳ ಸಮಕ್ಷಮದಲ್ಲಿ ಈ ಪರೀಕ್ಷಾರ್ಥ ಪ್ರಯೋಗ ನಡೆಸಲಿದೆ. ಇದು ಸ್ಟಾರ್‌ಲಿಂಕ್‌ಗೆ ಹಂಚಿಕೆ ಮಾಡಿರುವ ತಾತ್ಕಾಲಿಕ ತರಂಗಾತರವನ್ನು ಆಧರಿಸಿದೆ ಎಂದು ತಿಳಿಸಿವೆ.
ಸ್ಟಾರ್‌ಲಿಂಕ್ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆ ಆರಂಭಿಸಲು ಈ ಪರೀಕ್ಷಾರ್ಥ ಪ್ರಯೋಗ ಕಡ್ಡಾಯವಾಗಿದೆ. ಸ್ಟಾರ್‌ಲಿಂಕ್ ತನ್ನ ವಾಣಿಜ್ಯ ಸೇವೆ ಆರಂಭಿಸುವುದಕ್ಕೂ ಮುನ್ನ ಅನುಮತಿ ಪಡೆಯವುದು ಅತ್ಯವಶ್ಯಕವಾಗಿದೆ.
2024–25ರಲ್ಲಿ ದೇಶದ ಸಕ್ಕರೆ ಕಾರ್ಖಾನೆಗಳು 34 ಲಕ್ಷ ಟನ್ ಸಕ್ಕರೆಯನ್ನು ಮಾತ್ರ ಎಥೆನಾಲ್ ಉತ್ಪಾದನೆಗೆ ಬಳಸಿಕೊಂಡವು. ಆ ವರ್ಷದಲ್ಲಿ ಕಾರ್ಖಾನೆಗಳು 45 ಲಕ್ಷ ಟನ್ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸುವ ನಿರೀಕ್ಷೆ ಇತ್ತು.
ಎಥೆನಾಲ್‌ಗೆ ಸಕ್ಕರೆ ಬಳಕೆ ಕಡಿಮೆಯಾದ ಪರಿಣಾಮವಾಗಿ 2025–26ನೇ ಮಾರುಕಟ್ಟೆ ವರ್ಷದ ಆರಂಭದಲ್ಲಿ ಸಕ್ಕರೆ ದಾಸ್ತಾನು ಹೆಚ್ಚಿನ ಮಟ್ಟದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ವರ್ಷದ ಅಕ್ಟೋಬರ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯನ್ನು ಮಾರುಕಟ್ಟೆ ವರ್ಷ ಎಂದು ಪರಿಗಣಿಸಲಾಗುತ್ತದೆ.
ಸಕ್ಕರೆ ರಫ್ತಿಗೆ ಅವಕಾಶ ಕಲ್ಪಿಸಬೇಕು ಎಂದು ಕಾರ್ಖಾನೆಗಳು ಆಗ್ರಹಿಸುತ್ತಿವೆ. ಈ ಕುರಿತು ಚೋಪ್ರಾ ಅವರನ್ನು ಪ್ರಶ್ನಿಸಿದಾಗ ‘ನಮ್ಮಲ್ಲಿ ಸಕ್ಕರೆ ದಾಸ್ತಾನು ಹೆಚ್ಚಿರುವುದು ನಿಜ… ರಫ್ತಿಗೆ ಅವಕಾಶ ಕಲ್ಪಿಸುವುದನ್ನು ನಾವು ಪರಿಶೀಲಿಸು ತ್ತಿದ್ದೇವೆ’ ಎಂದು ಉತ್ತರಿಸಿದ್ದಾರೆ.
ಈ ವಿಚಾರವಾಗಿ ತೀರ್ಮಾನವು ಶೀಘ್ರವೇ ಆಗಬಹುದು ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ. ತೀರ್ಮಾನ ತೆಗೆದುಕೊಳ್ಳಲು ಸಚಿವರ ಸಮಿತಿಯೊಂದು ಮುಂದಿನ ವಾರ ಸಭೆ ಸೇರುವ ಸಾಧ್ಯತೆ ಇದೆ.
ಕಳೆದ ಮಾರುಕಟ್ಟೆ ವರ್ಷದಲ್ಲಿ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಅನುಮತಿ ನೀಡಲಾಗಿತ್ತು. ಆದರೆ ಆ ವರ್ಷದಲ್ಲಿ ದೇಶದಿಂದ ಒಟ್ಟು 8 ಲಕ್ಷ ಟನ್ ಸಕ್ಕರೆಯನ್ನು ರಫ್ತು ಮಾಡಲಾಗಿದೆ.
ಪಿಎಂ–ಶ್ರೀಯೋಜನೆಅನುಷ್ಠಾನಕ್ಕೆತಡೆ
ಸಂದರ್ಭ:ರಾಜ್ಯದಲ್ಲಿ ‘ಪ್ರಧಾನಮಂತ್ರಿಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ’ (ಪಿಎಂ–ಶ್ರೀ) ಯೋಜನೆಅನುಷ್ಠಾನಗೊಳಿಸುವನಿರ್ಧಾರವನ್ನುತಡೆಹಿಡಿಯಲುಕೇರಳಸರ್ಕಾರನಿರ್ಧರಿಸಿದೆ. ಯೋಜನೆಗೆಸಿಪಿಐತೀವ್ರಆಕ್ಷೇಪವ್ಯಕ್ತಪಡಿಸುತ್ತಿರುವಕಾರಣಈನಿರ್ಧಾರಕ್ಕೆಬಂದಿದೆ.
‘ಏಳು ಮಂದಿ ಸದಸ್ಯರನ್ನು ಒಳಗೊಂಡ ಸಂಪುಟ ಉಪ ಸಮಿತಿಯು ಯೋಜನೆಯನ್ನು ಪರಿಶೀಲಿಸಲಿದೆ. ಸಮಿತಿಯ ವರದಿ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಿಳಿಸಿದರು.
ಉಪ ಸಮಿತಿ ಪರಿಶೀಲನೆ ನಂತರವೇ ಪಿಎಂ–ಶ್ರೀ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆಗೆ ಪತ್ರದ ಮೂಲಕ ತಿಳಿಸಲಾಗಿದೆ.
‘ಮೊಂಥಾ’ ಕಾರಣದಿಂದಾಗಿ ರಾಜ್ಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ’ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು. ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ತಲೆ ಮೇಲೆ ಮರ ಬಿದ್ದು ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದಾರೆ. ಖಮ್ಮಂ ಜಿಲ್ಲೆಯಲ್ಲಿ ಟ್ರಕ್‌ನಲ್ಲಿ ಸಂಚರಿಸುತ್ತಿದ್ದಾಗ ಮಳೆ ನೀರಿನಲ್ಲಿ ಚಾಲಕ ಕೊಚ್ಚಿ ಹೋಗಿದ್ದಾರೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರಿ ಮಳೆಯಾಗಿದೆ. ತೆಲಂಗಾಣದ 8 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.
ತೀವ್ರ ಮಳೆಗೆ ಒಳಗಾದ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ನಾಯ್ಡು ಅವರು ವೈಮಾನಿಕ ಸಮೀಕ್ಷೆ ನಡೆಸಿದರು. ವೇಗದ ಗಾಳಿ ಬೀಸಿದ್ದರಿಂದ ಆಂಧ್ರದಲ್ಲಿ ಸಾವಿರಾರು ಮರಗಳು ಧರೆಗುರುಳಿವೆ. ನೂರಾರು ವಿದ್ಯುತ್ ಕಂಬಗಳು ಬಿದ್ದಿವೆ. ‘380 ಕಿ.ಮೀ ರಸ್ತೆಗಳು, 14 ಸೇತುವೆಗಳಿಗೆ ಹಾನಿಯಾಗಿವೆ’ ಎಂದು ನಾಯ್ಡು ಮಾಹಿತಿ ನೀಡಿದರು. ‘ಒಡಿಶಾದಲ್ಲಿ ‘ಮೊಂಥಾ’ದ ಪರಿಣಾಮವು ಹೆಚ್ಚೇನು ಆಗಿಲ್ಲ’ ಎಂದು ಮುಖ್ಯಮಂತ್ರಿ ಮೋಹನ್ ಚರನ್ ಮಾಂಝಿ ಹೇಳಿದರು.
50 ಕೆ.ಜಿಅಕ್ಕಿವಿತರಣೆ
lಮೀನುಗಾರರು ಮತ್ತು ನೇಕಾರರಿಗೆ ಬುಧವಾರದಿಂದ ₹50 ಕೆ.ಜಿ ಅಕ್ಕಿ, 1 ಕೆ.ಜಿ ಬೆಳೆ, 1 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ. ಈರುಳ್ಳಿ, 1 ಕೆ.ಜಿ. ಆಲೂಗೆಡ್ಡೆ ಮತ್ತು 1 ಕೆ.ಜಿ. ಸಕ್ಕರೆ ನೀಡಲು ಆಂಧ್ರ ಸರ್ಕಾರ ನಿರ್ಧರಿಸಿದೆ
ಬೆಳೆಹಾನಿ
lಆಂಧ್ರದ ಭತ್ತ, ಹತ್ತಿ, ಜೋಳ ಮತ್ತು ಹೆಸರುಕಾಳು ಬೆಳೆಗಳಿಗೆ ಮತ್ತು ತೋಟಗಾರಿಕಾ ಬೆಳೆಗಳಿಗೆ ತೀವ್ರ ಹಾನಿಯಾಗಿದೆ. 87 ಸಾವಿರ ಹೆಕ್ಟೇರ್‌ನಷ್ಟು ಬೆಳೆಗಳು ನಾಶವಾಗಿವೆ.59 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿನ ಬೆಳೆಗಳು ನೀರಿನಲ್ಲಿ ಮುಳುಗಿವೆ. ವೇಗದ ಗಾಳಿಗೆ ಕೊನಸೀಮಾ ಜಿಲ್ಲೆಯಲ್ಲಿನ ಭತ್ತ ಮತ್ತು ಬಾಳೆಮರಗಳು ನೆಲಸಮವಾಗಿವೆ
lಮಳೆಯ ಕಾರಣ ಭತ್ತ ಮತ್ತು ಹತ್ತಿ ಬೆಳೆಗಳಿಗೆ ಆಗುವ ಹಾನಿಯನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರುಜನ
38 ವರ್ಷ ವಯಸ್ಸಿನ ಮುಂಬೈ ಆಟಗಾರ ರೋಹಿತ್ ಅವರು ಎರಡು ಸ್ಥಾನ ಬಡ್ತಿ ಪಡೆದಿದ್ದಾರೆ. ಅವರ ವೃತ್ತಿಜೀವನದಲ್ಲಿ ಅಗ್ರಸ್ಥಾನಕ್ಕೇರಿದ್ದು ಇದೇ ಮೊದಲು.
ಈಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅಜೇಯ 121 ರನ್ ಗಳಿಸಿದ್ದರು. ಗೆಲುವಿನ ರೂವಾರಿಯಾಗಿದ್ದರು. ಸರಣಿಶ್ರೇಷ್ಠ ಗೌರವ ಕೂಡ ಗಳಿಸಿದ್ದರು. ರೋಹಿತ್ ಅವರು ಒಟ್ಟು 781 ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ.
ರೋಹಿತ್ 2007ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇತ್ತೀಚೆಗೆ ಅವರು ಟೆಸ್ಟ್ ಮತ್ತು ಟಿ20 ಮಾದರಿಗಳಿಗೆ ನಿವೃತ್ತಿ ಘೋಷಿಸಿದ್ದರು. ಏಕದಿನ ಕ್ರಿಕೆಟ್ ಮಾದರಿ ಯಲ್ಲಿ ಮಾತ್ರ ಮುಂದುವರಿದಿದ್ದಾರೆ.
ಈ ಸಾಧನೆಯಿಂದಾಗಿ ಅವರು ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದ ಅಫ್ಗಾನಿಸ್ತಾನದ ಇಬ್ರಾಹಿಂ ಝದ್ರಾನ್ ಅವರನ್ನು ಹಿಂದಿಕ್ಕಿದರು. ಭಾರತದ ಶುಭಮನ್ ಗಿಲ್ ಅವರು ಮೂರನೇ ಸ್ಥಾನ ಪಡೆದರು. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರು ಕ್ರಮವಾಗಿ 6 ಮತ್ತು 9ನೇ ಸ್ಥಾನದಲ್ಲಿದ್ದಾರೆ.
‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ನಿರ್ದೇಶಕ ಎನ್.ಆರ್.ನಂಜುಂಡೇಗೌಡ, ‘ಡಾ.ವಿಷ್ಣುವರ್ಧನ್ ಪ್ರಶಸ್ತಿ’ಗೆ ನಿರ್ಮಾಪಕ–ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ ಅವರು ಆಯ್ಕೆಯಾಗಿದ್ದಾರೆ. ಈ ಮೂರೂ ಪ್ರಶಸ್ತಿಗಳು ತಲಾ 50 ಗ್ರಾಂ ಚಿನ್ನದ ಪದಕ ಮತ್ತು ₹5 ಲಕ್ಷ ನಗದು ಒಳಗೊಂಡಿವೆ.
ಅದೇ ಸಾಲಿನ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ‘ಪ್ರಜಾವಾಣಿ’ಯ ಅಭಿಮತ ಸಂಪಾದಕ ರಘುನಾಥ ಚ.ಹ. ಅವರು ಬರೆದಿರುವ ‘ಬೆಳ್ಳಿತೊರೆ– ಸಿನಿಮಾ ಪ್ರಬಂಧಗಳು’ ಆಯ್ಕೆಯಾಗಿದೆ. ಪ್ರಶಸ್ತಿಯು ₹20,000 ನಗದು ಮತ್ತು 50 ಗ್ರಾಂ ಬೆಳ್ಳಿಯ ಪದಕ ಒಳಗೊಂಡಿದೆ. ಪುಸ್ತಕದ ಪ್ರಕಾಶಕ, ಅಂಕಿತ ಪುಸ್ತಕದ ಪ್ರಕಾಶ ಕಂಬತ್ತಳ್ಳಿ ಅವರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ₹20,000 ನಗದು ಮತ್ತು 50 ಗ್ರಾಂ ಬೆಳ್ಳಿಯ ಪದಕ ಒಳಗೊಂಡಿದೆ.
ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಶ್ರೀನಾಥ್ ಎಸ್. ಹಡಗಲಿ ಅವರ ನಿರ್ದೇಶನದ ‘ಗುಳೆ’ ಕಿರುಚಿತ್ರ ಆಯ್ಕೆಯಾಗಿದೆ. ನಿರ್ದೇಶಕ ಶ್ರೀನಾಥ್ ಮತ್ತು ನಿರ್ಮಾಪಕ ಮನೋಹರ್ ಎಸ್.ಐಯರ್ ಅವರಿಗೆ ತಲಾ ₹25,000 ನಗದು ಮತ್ತು 50 ಗ್ರಾಂ ಬೆಳ್ಳಿಯ ಪದಕ ನೀಡಲಾಗುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ತಿಳಿಸಿದೆ.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಗ್ರಾಮೀಣಾಭಿವೃದ್ಧಿಯ ಇ-ಆಡಳಿತ ವಿಭಾಗವು ಪಂಚತಂತ್ರ ತಂತ್ರಾಂಶದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಕ್ಷಮತೆಯ ಶ್ರೇಯಾಂಕ ವರದಿಯಲ್ಲಿ ಗುರುತಿಸುವಂತೆ ಕೊನೆಯ ಸ್ಥಾನಗಳಲ್ಲಿರುವ ಗ್ರಾಮ ಪಂಚಾಯತಿಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿವಿಧ ಇಲಾಖೆಗಳ ಸಮನ್ವಯದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಲಾಗುವುದು. ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳುವರು’ ಎಂದರು.
ಗ್ರಾಮ ಪಂಚಾಯಿತಿಗಳನ್ನು ಹಿರಿಯ ಅಧಿಕಾರಿಗಳು ದತ್ತು ಪಡೆದು ಅಭಿವೃದ್ಧಿಪಡಿಸಲು ಹೊಸ ಯೋಜನೆ ರೂಪಿಸಲಾಗುವುದು ಎಂದು ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಿಸಿದ್ದರು.
ಬಸವಣ್ಣನವರ ಕಾಯಕದ ಸಂದೇಶವನ್ನು ಸಾಕಾರಗೊಳಿಸಲು ‘ಕಾಯಕ ಗ್ರಾಮ’ ಯೋಜನೆ ರೂಪಿಸಲಾಗಿದೆ ಎಂದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳು ಸೇರಿದಂತೆ ಆರು ಅಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ಮೂವರು ಅಧಿಕಾರಿಗಳು ಹಾಗೂ ರಾಜ್ಯ ಮಟ್ಟದಲ್ಲಿ ಜಿಲ್ಲಾವಾರು ನೇಮಕ ಮಾಡಲಾಗಿರುವ ನೋಡಲ್ ಅಧಿಕಾರಿಗಳು ಇರುತ್ತಾರೆ ಎಂದರು.
lಕರ್ನಾಟಕ ನವೋದ್ಯಮ ನೀತಿ 2022–27ರ ಅಡಿ ಐದು ವರ್ಷಗಳ ಅವಧಿಗೆ ₹80 ಕೋಟಿ ಅನುದಾನ ಹಂಚಿಕೆಯೊಂದಿಗೆ ಒಟ್ಟು ಎಂಟು ಟೆಕ್ನಾಲಜಿ ಇನ್‌ಕ್ಯುಬೇಟರ್ 2.0 ಸ್ಥಾಪಿಸಲು ತೀರ್ಮಾನ.
lಕಾರವಾರ, ಹಳೆ ಮಂಗಳೂರು(ಬೆಂಗ್ರೆ), ಹಳೆ ಮಂಗಳೂರು(ನಗರ ಬದಿ) ಮತ್ತು ಮಲ್ಪೆಯ ಬರ್ತ್‌ಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ ನಿರ್ವಹಿಸಲು ತೀರ್ಮಾನ
lಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಥಮಿಕ ಹಂತಕ್ಕಾಗಿ ₹23.25 ಕೋಟಿ ಮೊತ್ತದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ದುರಸ್ತಿ ಮತ್ತು ನವೀಕರಣ ಕಾಮಗಾರಿ
lಕಾರವಾರ ಕ್ಯಾನ್ಸರ್ ಕೇರ್ ಘಟಕದ ಸ್ಥಾಪನೆಗೆ ಅಗತ್ಯವಿರುವ ಹೆಚ್ಚುವರಿ ಉಪಕರಣಗಳಿಗೆ ತಗಲುವ ಅನುದಾನವನ್ನು ಈಗಾಗಲೇ ಅನುಮೋದನೆ ಆಗಿರುವ ₹18.25 ಕೋಟಿ ಸರ್ಕಾರದ ವತಿಯಿಂದ ಭರಿಸಲಾಗುವುದು. ಇನ್ನುಳಿದ ಮೊತ್ತ ₹13.38 ಕೋಟಿಯನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಭರಿಸಲು ಒಪ್ಪಿಗೆ.
lತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೇರ್ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಮೊದಲ ಹಂತದ ಉಪಕರಣಗಳ ಖರೀದಿಗೆ ₹50 ಕೋಟಿ.
lಕೆ–ಶೋರ್ ಯೋಜನೆಗೆ ತಾಂತ್ರಿಕ ಮತ್ತು ನಿರ್ವಹಣಾ ಸಲಹೆಗಾರರ ಸೇವೆಗಳನ್ನು ಪಡೆಯಲು ₹20.47 ಕೋಟಿಗೆ ಆಡಳಿತಾತ್ಮಕ ಅನುಮೋದನೆ.
lಯಾದಗಿರಿ ಜಿಲ್ಲೆ ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ ಕನಕಭವನ ನಿರ್ಮಾಣಕ್ಕೆ 300.14 ಚದರ ಮೀಟರ್ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಉಚಿತವಾಗಿ ಮಂಜೂರು ಮಾಡಲು ತೀರ್ಮಾನ
l2025–26 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ವಿವಿಧ ಮಾದರಿಯ 241 ವಾಹನಗಳನ್ನು ₹34.95 ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ
lಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ, ಉಡುಪಿ ಜಿಲ್ಲೆ ಅಂಜಾರು ಗ್ರಾಮ, ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಜಮೀನು ಮಂಜೂರು
ಭಾರತೀಯ ಕೈಗಾರಿಕೆಗಳ ಒಕ್ಕೂಟವು ಆಯೋಜಿಸಿದ್ದ ‘ಕೌಶಲ ಶೃಂಗಸಭೆ–2025’ಯಲ್ಲಿ ಅವರು ಮಾತನಾಡಿದರು.
‘ಪದವಿ, ವೃತ್ತಿಪರ ಕೋರ್ಸ್‌ಗಳನ್ನು ಮಾಡಿದ ವಿದ್ಯಾರ್ಥಿಗಳಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುವ ಅಗತ್ಯವಿದೆ. ಇದಕ್ಕಾಗಿ ಉದ್ಯಮಗಳ ಸಹಯೋಗದಲ್ಲೇ ತರಬೇತಿ ಕೇಂದ್ರ ಅಥವಾ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕಿದೆ. ಇದಕ್ಕೆ ಸರ್ಕಾರವು ಅಗತ್ಯ ನೆರವುಗಳನ್ನು ನೀಡಲಿದೆ’ ಎಂದರು.
‘ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾ ಲಯದಲ್ಲಿ ಬಜಾಜ್ ಕಂಪನಿಯು ಎಂಜಿನಿಯರಿಂಗ್ ಕೌಶಲ ತರಬೇತಿ ಕೇಂದ್ರವನ್ನು ಆರಂಭಿಸಿದೆ. ಖಾಸಗಿ–ಸರ್ಕಾರಿ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೆಕಾಟ್ರಾನಿಕ್ಸ್, ರೊಬೊಟಿಕ್ಸ್ ಮೊದಲಾದ ಕ್ಷೇತ್ರಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತಿದೆ. ರಾಜ್ಯದ ಹಲವೆಡೆ ಇಂತಹ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶಗಳಿವೆ’ ಎಂದು ಹೇಳಿದರು.
‘ಶೈಕ್ಷಣಿಕ ಕಲಿಕೆ ಮತ್ತು ಪ್ರಾಯೋಗಿಕ ತರಬೇತಿ ಎರಡಕ್ಕೂ ಅವಕಾಶವಿರುವ ‘ಡ್ಯುಯಲ್ ಅಪ್ರೆಂಟಿಸ್‌ಶಿಪ್’ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಈ ಯೋಜನೆಯನ್ನು ಸಾಕಾರಗೊಳಿಸಲು ಉದ್ಯಮರಂಗದ ಸಹಕಾರ ಅಗತ್ಯ. ಶಿಕ್ಷಣ–ಉದ್ಯಮ ಸಹಯೋಗವನ್ನು ಹೊಸ ಎತ್ತರಕ್ಕೆ ಒಯ್ಯೋಣ’ ಎಂದು ಉದ್ಯಮಿಗಳಿಗೆ ಆಹ್ವಾನ ನೀಡಿದರು.
ಜಿಯೊಬಳಕೆದಾರರಿಗೆಗೂಗಲ್ ಎ.ಐಪ್ರೊಉಚಿತ
ಸಂದರ್ಭ:ಗೂಗಲ್ ಕಂಪನಿಯಎ.ಐ. ಪರಿಕರ ‘ಗೂಗಲ್ಎ.ಐ. ಪ್ರೊ’ಚಂದಾದಾರಿಕೆಯುಅರ್ಹಜಿಯೊಬಳಕೆದಾರರಿಗೆ 18 ತಿಂಗಳುಉಚಿತವಾಗಿಸಿಗಲಿದೆಎಂದುರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಇಂಟೆಲಿಜೆನ್ಸ್, ಗೂಗಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಪಾಲುದಾರಿಕೆಯ ಮೂಲಕ ರಿಲಯನ್ಸ್, ಜಿಯೊ 5ಜಿ ಅನ್‌ಲಿಮಿಟೆಡ್ ಯೋಜನೆ ಹೊಂದಿರುವ ಬಳಕೆದಾರರಿಗೆ ಈ ಕೊಡುಗೆ ನೀಡಿದೆ.
ಹಣಕಾಸಿನ ಮೌಲ್ಯದಲ್ಲಿ ಈ ಕೊಡುಗೆ ಬೆಲೆ ₹35,100 ಆಗಿದೆ ಎಂದು ಕಂಪನಿ ಹೇಳಿದೆ. ಆರಂಭಿಕವಾಗಿ 18–25 ವರ್ಷದ ನಡುವಿನವರಿಗೆ ಈ ಕೊಡುಗೆ ದೊರೆಯಲಿದೆ. ನಂತರ ಎಲ್ಲ ಬಳಕೆದಾರರಿಗೆ ಈ ಸೇವೆ ದೊರೆಯುವಂತೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಈ ಪ್ಲ್ಯಾನ್ ಜೊತೆಗೆ ಗೂಗಲ್ ಜೆಮಿನಿ 2.5 ಪ್ರೊ, ಇತ್ತೀಚಿನ ನ್ಯಾನೋ ಬನಾನಾ ಮತ್ತು ವಿಯೋ 3.1 ಮಾದರಿಗಳೊಂದಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಲು ಬಳಕೆದಾರರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.
ಅಧ್ಯಯನ ಮತ್ತು ಸಂಶೋಧನೆಗಾಗಿ ನೋಟ್‌ಬುಕ್ ಎಲ್ಎಂಗೆ ಹೆಚ್ಚಿನ ಅವಕಾಶ ಮತ್ತು 2 ಟಿಬಿ ಕ್ಲೌಡ್ ಸಂಗ್ರಹದ ಸೌಲಭ್ಯ ಕೂಡ ದೊರೆಯಲಿದೆ ಎಂದು ತಿಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಕ್ಟೋಬರ್ 29ರಿಂದ ಜಾರಿಗೆ ಬರುವಂತೆ ಆರು ತಿಂಗಳವರೆಗೆ ವಿನಾಯಿತಿ ನೀಡಿ ಆದೇಶಿಸಿದ್ದಾರೆ ಎಂದು ಅವರು ಹೇಳಿದರು.
ಛಾಬಹಾರ್ ಬಂದರಿನ ಕಾರ್ಯನಿರ್ವಹಣೆ ಕುರಿತು ಇರಾನ್ ಮತ್ತು ಭಾರತ ಸರ್ಕಾರ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿವೆ. ಈ ಬಂದರು ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧ ಎರಡೂ ಸರ್ಕಾರಗಳು 2003, 2015 ಮತ್ತು 2017ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. 2018ರಿಂದ ಈ ಬಂದರನ್ನು ಭಾರತವೇ ನಿರ್ವಹಿಸುತ್ತಿದೆ. ಅದನ್ನು 10 ವರ್ಷಗಳಿಗೆ ವಿಸ್ತರಿಸಿ ಕಳೆದ ವರ್ಷ ಒಪ್ಪಂದ ಮಾಡಿಕೊಳ್ಳಲಾಗಿದೆ.
ಅಫ್ಗಾನಿಸ್ತಾನದ ಸಾರ್ವಭೌಮತ್ವಕ್ಕೆ ಭಾರತ ಬದ್ಧ: ಪಾಕಿಸ್ತಾನ– ಅಫ್ಗಾನಿಸ್ತಾನ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಫ್ಗಾನಿಸ್ತಾನವನ್ನು ಬೆಂಬಲಿಸಿರುವ ಭಾರತವು, ಅಫ್ಗಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯವನ್ನು ಪೂರ್ಣವಾಗಿ ಗೌರವಿಸುತ್ತದೆ ಮತ್ತು ಅದಕ್ಕೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದೆ.
ತೈಲಖರೀದಿ– ಅಮೆರಿಕನಿರ್ಬಂಧ: ಪರಿಣಾಮಗಳಬಗ್ಗೆಭಾರತಅಧ್ಯಯನ
ಸಂದರ್ಭ: ರಷ್ಯಾದಬೃಹತ್ ತೈಲಕಂಪನಿಗಳಾದ ‘ರೋಸ್ನೆಫ್ಟ್’ಮತ್ತು ‘ಲುಕೋಯಿಲ್’ಮೇಲೆಇತ್ತೀಚೆಗೆಅಮೆರಿಕವಿಧಿಸಿರುವನಿರ್ಬಂಧದಿಂದಉಂಟಾಗುವಪರಿಣಾಮಗಳಬಗ್ಗೆಭಾರತಅಧ್ಯಯನನಡೆಸುತ್ತಿದೆಎಂದುರಣಧೀರ್ ಜೈಸ್ವಾಲ್ ತಿಳಿಸಿದರು.
‘ಭಾರತವು ಜಾಗತಿಕ ಮಾರುಕಟ್ಟೆಯ ಚಲನಶೀಲತೆಯನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ನಮ್ಮ 140 ಕೋಟಿ ಜನರ ಇಂಧನದ ಅಗತ್ಯಗಳನ್ನು ಪೂರೈಸಲು ವೈವಿಧ್ಯಮಯ ಮೂಲಗಳಿಂದ ಕೈಗೆಟುಕುವ ದರದಲ್ಲಿ ಇಂಧನ ಖರೀದಿಸಲು ಒತ್ತು ನೀಡುತ್ತದೆ’ ಎಂದೂ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭಾರತದ ತೈಲ ಖರೀದಿದಾರರು ರಷ್ಯಾದ ಕಚ್ಚಾ ತೈಲ ಖರೀದಿಯನ್ನು ನಿಧಾನವಾಗಿ ಕಡಿಮೆ ಮಾಡುತ್ತಿದ್ದಾರೆ ಮತ್ತು ಅಮೆರಿಕದಿಂದ ಪೆಟ್ರೋಲಿಯಂ ಉತ್ಪನ್ನಗಳ ಆಮದನ್ನು ಎದುರು ನೋಡುತ್ತಿ ದ್ದಾರೆ ಎಂಬ ಮಾಹಿತಿ ಬೆನ್ನಲ್ಲೇ ಜೈಸ್ವಾಲ್ ಅವರಿಂದ ಪ್ರತಿಕ್ರಿಯೆ ಬಂದಿದೆ.
ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ಭಾರತ ಮತ್ತು ಅಮೆರಿಕ ನಿರತವಾಗಿವೆ ಎಂದು ಅವರು ಇದೇ ವೇಳೆ ಪ್ರತಿಕ್ರಿಯಿಸಿದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಈ ನಡೆಯಿಂದ, ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಭಾರಿ ಸಂಖ್ಯೆಯ ಭಾರತೀಯರಿಗೆ ತೊಂದರೆಯಾಗಲಿದೆ.
ಭದ್ರತಾ ಇಲಾಖೆಯು ಈ ಕುರಿತು ಘೋಷಣೆ ಮಾಡಿದೆ. ‘ವಿದೇಶಿಯರ ಉದ್ಯೋಗ ದೃಢೀಕರಣ ದಾಖಲೆಗಳ (ಇಎಡಿ) ಸಿಂಧುತ್ವವನ್ನು ವಿಸ್ತರಣೆ ಮಾಡುವು ದಕ್ಕೂ ಮುನ್ನ ವ್ಯಾಪಕ ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದೆ.
‘ಹೊಸ ನಿಯಮದ ಪ್ರಕಾರ, 2025ರ ಅಕ್ಟೋಬರ್ 30ರಂದು ಅಥವಾ ನಂತರ ತಮ್ಮ ಇಎಡಿ ನವೀಕರಣಕ್ಕೆ ಅರ್ಜಿ ಸಲ್ಲಿಸುವ ವಿದೇಶಿಯರ ಉದ್ಯೋಗ ಪರವಾನಗಿ ಅವಧಿಯು ಸ್ವಯಂಚಾಲಿತವಾಗಿ ವಿಸ್ತರಣೆ ಆಗುವುದಿಲ್ಲ’ ಎಂದು ಇಲಾಖೆ ತಿಳಿಸಿದೆ.
‘ಅಕ್ಟೋಬರ್ 30ರ ಒಳಗಾಗಿ, ಪರವಾನಗಿಯನ್ನು ಸ್ವಯಂಚಾಲಿತ ವಾಗಿ ವಿಸ್ತರಣೆ ಮಾಡಲಾಗಿರುವ ಇಎಡಿಗಳಿಗೆ ಈ ಮಧ್ಯಂತರ ನಿಯಮ ಅನ್ವಯಿಸದು’ ಎಂದು ಸ್ಪಷ್ಟಪಡಿಸಿದೆ.
‘ಇಎಡಿ ಅವಧಿ ಕೊನೆಗೊಳ್ಳುವುದಕ್ಕೂ 180 ದಿನಗಳ ಮೊದಲೇ ನವೀಕರಣಕ್ಕೆ ವಿದೇಶಿಯರು ಅರ್ಜಿ ಸಲ್ಲಿಸಬೇಕು’ ಎಂದೂ ಇಲಾಖೆ ಸೂಚಿಸಿದೆ.
ಜೋ ಬೈಡನ್ ಅವರು ಅಧ್ಯಕ್ಷ ರಾಗಿದ್ದ ವೇಳೆ, ಇಎಡಿ ನವೀಕರಣ ಕೋರಿ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸುವ ವಿದೇಶಿಯರ ಉದ್ಯೋಗ ಪರವಾನಗಿಯು ಸ್ವಯಂಚಾಲಿತವಾಗಿ 540 ದಿನಗಳಷ್ಟು ವಿಸ್ತರಣೆಯಾಗುತ್ತಿತ್ತು.
2026–27ರ ಶೈಕ್ಷಣಿಕ ವರ್ಷದಿಂದ ತನ್ನ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಎ.ಐ ಪಠ್ಯಕ್ರಮವನ್ನು ಅಳವಡಿಸುವ ಪ್ರಯತ್ನದ ಭಾಗವಾಗಿ ಸಮಿತಿ ರಚಿಸಲಾಗಿದೆ.
‘ಸಿಬಿಎಸ್‌ಇ, ಎನ್‌ಸಿಇಆರ್‌ಟಿ, ಕೆವಿಎಸ್, ಎನ್‌ವಿಎಸ್ ತಜ್ಞರು ಮತ್ತು ಬಾಹ್ಯ ತಜ್ಞರೊಂದಿಗೆ ಮಂಡಳಿಯ ಪ್ರಮುಖರು ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಮದ್ರಾಸ್ ಐಐಟಿಯ ದತ್ತಾಂಶ ವಿಜ್ಞಾನ (ಡೆಟಾ ಸೈನ್ಸ್) ಮತ್ತು ಎ.ಐ ವಿಭಾಗದ ಪ್ರಾಧ್ಯಾಪಕ ಕಾರ್ತಿಕ್ ರಮಣ್ ನೇತೃತ್ವದಲ್ಲಿ ಪಠ್ಯಕ್ರಮ ರಚನಾ ಸಮಿತಿ ರಚಿಸಲಾಯಿತು’ ಎಂದು ಶಾಲಾ ಶಿಕ್ಷಣ ಕಾರ್ಯದರ್ಶಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
‘ವಿಶಾಲವಾದ, ಸಮಗ್ರವಾದ ಮತ್ತು ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮ ಸ್ವರೂಪದ (ಎನ್‌ಸಿಎಫ್–ಎಸ್‌ಇ) ಪರಿಧಿಯಲ್ಲಿ ಎಐ ಪಠ್ಯಕ್ರಮ ರಚಿಸಲಾಗುತ್ತದೆ. ಪ್ರತಿಯೊಂದು ಮಗುವಿನ ವಿಶಿಷ್ಟ ಸಾಮರ್ಥ್ಯ ನಮ್ಮ ಆದ್ಯತೆ’ ಎಂದು ಹೇಳಿದರು.
ಪ್ರಸ್ತುತ, ದೇಶದ 18,000 ಸಿಬಿಎಸ್‌ಇ ಶಾಲೆಗಳು 6ನೇ ತರಗತಿ ನಂತರ ಕೃತಕ ಬುದ್ಧಿಮತ್ತೆಯನ್ನು ಕೌಶಲ ವಿಷಯದ ರೂಪದಲ್ಲಿ 15 ಗಂಟೆಗಳಷ್ಟು ಕಾಲ ಬೋಧಿಸುತ್ತಿವೆ. 9ರಿಂದ 12ನೇ ತರಗತಿವರೆಗೆ ಇದು ಐಚ್ಛಿಕ ವಿಷಯವಾಗಿದೆ.
12 ಚಿನ್ನ, 15 ಬೆಳ್ಳಿ ಮತ್ತು 14 ಕಂಚು ಸೇರಿದಂತೆ 41 ಪದಕ ಗೆದ್ದ ಭಾರತ ಪದಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಚೀನಾ (136 ಪದಕ) ಅಗ್ರಸ್ಥಾನದಲ್ಲಿದೆ.
ಮಹಿಳಾ ಬಾಕ್ಸರ್‌ಗಳಾದ ಖುಷಿ ಚಂದ್, ಅಹಾನಾ ಶರ್ಮಾ ಮತ್ತು ಚಂದ್ರಿಕಾ ಪೂಜಾರಿ ಅವರು ಚಿನ್ನಕ್ಕೆ ಕೊರಳೊಡ್ಡಿದರು.ಪುರುಷರ ವಿಭಾಗದಲ್ಲಿ ಲ್ಯಾಂಚೆನ್ಬಾ ಸಿಂಗ್ ಬೆಳ್ಳಿ ಪದಕವನ್ನು ಜಯಿಸಿದರು.
46 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಖುಷಿ 4–1ರಿಂದ ಚೀನಾದ ಲುವೊ ಜಿನ್ಸಿಯು ವಿರುದ್ಧ ಗೆಲುವು ಸಾಧಿಸಿದರು. ಚಂದ್ರಿಕಾ 54 ಕೆಜಿ ವಿಭಾಗದಲ್ಲಿ 5–0ಯಿಂದ ಉಜ್ಬೇಕಿಸ್ತಾನದ ಮುಹಮ್ಮದೋವಾ ಕುಮ್ರಿನಿಸೊ ಅವರನ್ನು ಮಣಿಸಿದರು. ಅಹಾನಾ 50 ಕೆ.ಜಿ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಆರ್‌ಎಸ್‌ಸಿ ಆಧಾರದಲ್ಲಿ ಮಾ ಜೊಂಗ್ ಹಯಾಂಗ್ ವಿರುದ್ಧ ಜಯ ಗಳಿಸಿದರು.
ಬೀಚ್ ಕುಸ್ತಿಯಲ್ಲಿ ಐದು ಪದಕ: ಬೀಚ್ ಕುಸ್ತಿಯಲ್ಲಿ ಅರ್ಜುನ್ ರುಹಿಲ್ (ಬಾಲಕರ 90 ಕೆಜಿ), ಸಾನಿ ಸುಭಾಷ್ ಫುಲ್ಮಾಲಿ (ಬಾಲಕರ 60 ಕೆಜಿ), ಅಂಜಲಿ (ಬಾಲಕಿಯರ 55 ಕೆಜಿ) ಚಿನ್ನದ ಸಾಧನೆ ಮಾಡಿದರು.
‘ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆ ಗಳು ಸರ್ಕಾರದ ಸ್ಥಳ, ಆವರಣ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಬಳಸುವ ಮುನ್ನ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು’ ಎಂಬ ರಾಜ್ಯ ಸರ್ಕಾರದ ಆದೇಶ ಅನುಷ್ಠಾನಕ್ಕೆ ಹೈಕೋರ್ಟ್ ತಡೆ ನೀಡಿದೆ.
ರಾಜ್ಯ ಸಚಿವ ಸಂಪುಟದ ಈ ನಿರ್ಣಯವನ್ನು ಪ್ರಶ್ನಿಸಿ ಹುಬ್ಬಳ್ಳಿಯ, ‘ಪುನಶ್ಚೇತನ ಸೇವಾ ಸಂಸ್ಥೆ’ ಅಧ್ಯಕ್ಷ ವಿನಾಯಕ ಮತ್ತು ‘ವಿ ಕೇರ್ ಫೌಂಡೇಶನ್’ ಅಧ್ಯಕ್ಷ ಗಂಗಾಧರಯ್ಯ, ಧಾರವಾಡದ ರಾಜೀವ ಮಲ್ಹಾರ ಕುಲಕರ್ಣಿ ಹಾಗೂ ಬೆಳಗಾವಿಯ ಉಮಾ ಸತ್ಯಜಿತ್ ಚವಾಣ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರ ವಾದ ಆಲಿಸಿದ ನ್ಯಾಯಪೀಠ, ‘ಸರ್ಕಾರದ ಈ ಆದೇಶವು ಸಂವಿಧಾನದ 13(2)ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ, ಈ ಆಕ್ಷೇಪಾರ್ಹ ಆದೇಶದ ಕಾರ್ಯಾಚರಣೆ ಮತ್ತು ಅದರಿಂದ ಈಗಾಗಲೇ ಹೊರಹೊಮ್ಮಿರುವ ಎಲ್ಲಾ ಪರಿಣಾಮಗಳ ಪ್ರಕ್ರಿಯೆಗಳನ್ನು ಮುಂದಿನ ವಿಚಾರಣೆ ಯವರೆಗೆ ತಡೆಹಿಡಿಯುವುದು ಸೂಕ್ತವೆಂದು ಪರಿಗಣಿಸಿ ಈ ಆದೇಶ ನೀಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿತು.
‘ಆಕ್ಷೇಪಾರ್ಹ ಆದೇಶವು ಸಂವಿಧಾನದ 13(2)ನೇ ವಿಧಿಗೆ ವಿರುದ್ಧವಾಗಿದೆ ಮತ್ತು ಈ ಮೂಲಕ 19(1)(ಎ) ಮತ್ತು (ಬಿ) ವಿಧಿಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಕೊಡಮಾಡಲಾಗಿರುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತದೆ. ಮೂಲಭೂತ ಹಕ್ಕುಗಳನ್ನು ಕಾರ್ಯಕಾರಿ ಆದೇಶಗಳಿಂದ ಮೊಟಕುಗೊಳಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
‘ಸಾರ್ವಜನಿಕ ಸಭೆಗಳು ಮತ್ತು ಮೆರವಣಿಗೆಗಳನ್ನು ನಿಯಂತ್ರಿಸುವ ಬಗ್ಗೆ, ಕರ್ನಾಟಕ ಪೊಲೀಸ್ ಕಾಯ್ದೆ–1963ರ ಕಲಂ 31ರಲ್ಲಿ ಈಗಾಗಲೇ ವಿಶೇಷವಾಗಿ ವಿವರಿಸಲಾಗಿದೆ. ಇಂತಹ ಸಂದರ್ಭಗಳ ನಿಯಂತ್ರಣದ ಬಗ್ಗೆ ಕಲಂ 31ರ ಉಪ ವಿಭಾಗ (6)ರಲ್ಲಿ ಏನೆಲ್ಲಾ ವಿಧಾನಗಳನ್ನು ಅನುಸರಿಸ ಬೇಕೆಂಬುದನ್ನು ನಿಖರವಾಗಿ ಸೂಚಿಸಲಾಗಿದೆ. ಇಂತಹುದೊಂದು ಶಾಸನಬದ್ಧ ಕಲಂ ಅಸ್ತಿತ್ವದಲ್ಲಿ ಇರುವಾಗ ಸರ್ಕಾರದ ಹೊಸ ಆದೇಶ ಸಂವಿಧಾನ ವಿರೋಧಿ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ನೋಟಿಸ್: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ ಕಾರ್ಯದರ್ಶಿ, ಡಿಜಿ-ಐಜಿಪಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಶನರ್ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ನವೆಂಬರ್ 17ರ ಮಧ್ಯಾಹ್ನ 2:30ಕ್ಕೆ ನಿಗದಿ ಮಾಡಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಮಲ್ಲಿಕಾರ್ಜುನ ಹಿರೇಮಠ ವಕಾಲತ್ತು ವಹಿಸಿದ್ದಾರೆ.
ಅಶೋಕಹಾರನಹಳ್ಳಿವಾದಾಂಶ
l ಕರ್ನಾಟಕ ರಾಜ್ಯದಾದ್ಯಂತ ನಾಗರಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳು, ನಡಿಗೆದಾರರ ಸಂಘಗಳು, ಯೋಗ ಕ್ಲಬ್‌ಗಳು ಮತ್ತು ಓಟಗಾರರ ಗುಂಪುಗಳು, ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ನಿಯಮಿತ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿವೆ. ಆದರೆ, ಸರ್ಕಾರ ಹೊರಡಿಸಿರುವ ಆದೇಶದ ಅನುಸಾರ ಪೂರ್ವಾನುಮತಿ ಕೊರತೆಯಿಂದಾಗಿ ಕ್ರಿಮಿನಲ್ ಕ್ರಮಕ್ಕೆ ಗುರಿಯಾಗಬಹುದು.
lಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳಿಂದ ಕೂಡಿದ ಸಂಘ, ಸಂಸ್ಥೆಗಳು, ಅಥವಾ ವ್ಯಕ್ತಿಗಳ ಗುಂಪು ಅಥವಾ ಅವರ ಪರವಾಗಿ ಯಾವುದೇ ಇತರ ವ್ಯಕ್ತಿಯ ಸಂಸ್ಥೆಯು ಈ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಸರ್ಕಾರಿ ಆಸ್ತಿಗಳಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆಯನ್ನು ನಡೆಸಿದರೆ, ಅಂತಹುದನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ ಮತ್ತು ಭಾರತೀಯ ನ್ಯಾಯ ಸಂಹಿತೆ–2023ರ (ಬಿಎನ್‌ಎಸ್) ಕಲಂಗಳ ಪ್ರಕಾರ ಸಭೆ ಸೇರುವುದನ್ನು ಕಾನೂನುಬಾಹಿರ ಸಭೆ ಎಂದು ಪರಿಗಣಿಸಲಾಗುತ್ತದೆ.
l ಸರ್ಕಾರಿ ಆಸ್ತಿ ಎಂದರೆ: ಸ್ಥಳೀಯ ಪ್ರಾಧಿಕಾರ ಅಥವಾ ಇಲಾಖೆ, ಮಂಡಳಿಗಳು, ಬೆಳೆಗಾರರ ಒಡೆತನದಲ್ಲಿರುವ ಮತ್ತು ನಿರ್ವಹಿಸುವ ಯಾವುದೇ ಭೂಮಿ, ಕಟ್ಟಡ, ರಚನೆ, ರಸ್ತೆ, ಉದ್ಯಾನವನ, ಆಟದ ಮೈದಾನ, ಜಲಮೂಲ ಅಥವಾ ಕರ್ನಾಟಕ ಸರ್ಕಾರದ ನಿಯಂತ್ರಣದಲ್ಲಿರುವ ಅಥವಾ ನಿಹಿತವಾಗಿರುವ, ವಹಿಸಲಾಗಿರುವ ಅಥವಾ ನಿರ್ವಹಿಸುವ ಯಾವುದೇ ಇತರ ಸ್ಥಿರ ಆಸ್ತಿ.
ಅರ್ಜಿದಾರರಪ್ರಶ್ನೆಯಮುಖ್ಯಾಂಶಗಳು
l16.10.2025: ಖಾಸಗಿ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳನ್ನು ದುರುಪಯೋಗ ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ‘ಪರಿಹಾರ ಮತ್ತು ನಿಯಂತ್ರಣ’ಕ್ಕಾಗಿ ಸಂಪುಟ ಸಭೆ ಕೈಗೊಂಡ ನಿರ್ಧಾರ
l ಇದಕ್ಕೆ ಅನುಗುಣವಾಗಿ 18.10.2025ರಂದು ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ ಹೊರಡಿಸಿದ ಆದೇಶ.
l19.10.2025 ಮತ್ತು 20.10.2025ರಂದು ಕೆಲವು ಸಚಿವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಂಪುಟದ ನಿರ್ಧಾರವನ್ನು ಸಮರ್ಥಿಸಿಕೊಂಡರು
lಅದರಲ್ಲೂ ಐ.ಟಿ–ಬಿ.ಟಿ ಸಚಿವ ಪ್ರಿಯಾಂಕ್ ಖರ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಾಖೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ಜಾಗ ಬಳಸಲು ಅನುಮತಿ ನೀಡಲಾಗುವುದಿಲ್ಲ ಎಂದು ಉಚ್ಚರಿಸಿದರು. ಈ ಮಾತುಗಳಲ್ಲಿ ಅವರು ಯಾರನ್ನು ಉದ್ದೇಶಿಸಿ ಈ ನಿರ್ಧಾರ ಕೈಗೊಂಡರು ಎಂಬುದು ಸ್ಪಷ್ಟವಾಗಿದೆ
lಕೋರಿಕೆಏನು?: ಸರ್ಕಾರಿಸ್ಥಳಗಳಲ್ಲಿಅನುಮತಿಯಿಲ್ಲದಮೆರವಣಿಗೆ, ಸಭೆನಡೆಸುವುದನ್ನುನಿರ್ಬಂಧಿಸಿಸರ್ಕಾರಇದೇ 18ರಂದುಹೊರಡಿಸಿರುವಆದೇಶವುಸಂವಿಧಾನದ 13, 14 ಮತ್ತು 19ನೇವಿಧಿಗಳಸ್ಪಷ್ಟಉಲ್ಲಂಘನೆಯಾಗಿದೆ. ಆದ್ದರಿಂದ, ಈಆದೇಶವನ್ನುರದ್ದುಗೊಳಿಸಬೇಕು
ಸರ್ಕಾರಿಸ್ಥಳದಲ್ಲಿಜನಜಮಾವಣೆಸ್ವರೂಪ
l‘ಮೆರವಣಿಗೆ ಅಥವಾ ರ್‍ಯಾಲಿ’ ಎಂದರೆ ಮದುವೆ ಮತ್ತು ಅಂತ್ಯಕ್ರಿಯೆ ಸಭೆಗಳು ಮತ್ತು ಚಳವಳಿಗಳನ್ನು ಹೊರತುಪಡಿಸಿ, ಸಂಗೀತ ಅಥವಾ ಇತರ ರೀತಿಯಲ್ಲಿ, ಸರ್ಕಾರಿ ಆಸ್ತಿಯ ಮೂಲಕ ಹಾದುಹೋಗುವ ಸಾಮಾನ್ಯ ಚಳವಳಿ ಅಥವಾ ಮಾರ್ಗ ಮೆರವಣಿಗೆಯನ್ನು ನಡೆಸಲು ಸಾಮಾನ್ಯ ಉದ್ದೇಶ ಹೊಂದಿರುವ ಅಥವಾ ಯಾವುದೇ ಇತರ ಚಟುವಟಿಕೆಯೊಂದಿಗೆ ಯಾವುದೇ ಹೆಸರಿನಿಂದ ಕರೆಯಲಾಗುವ 10ಕ್ಕೂ ಹೆಚ್ಚು ಜನರ ಸಭೆ.
lಪೂರ್ವಾನುಮತಿ ಇಲ್ಲದೆ 10ಕ್ಕೂ ಹೆಚ್ಚು ವ್ಯಕ್ತಿಗಳು ಸಭೆ ಸೇರುವುದನ್ನು ಸರ್ಕಾರದ ಹೊಸ ಆದೇಶ ನಿಷೇಧಿಸುತ್ತದೆ. ಅಂತಹ ಸಭೆಯನ್ನು ಕಾನೂನುಬಾಹಿರ ಸಭೆ ಎಂದು ಘೋಷಿಸುತ್ತದೆ. ಇದರಿಂದಾಗಿ ಈ ರೀತಿ ಸಭೆಯಲ್ಲಿ ಭಾಗವಹಿಸು ವವರು ಬಿಎನ್‌ಎಸ್ ಕಾಯ್ದೆಯ ಅಡಿಯಲ್ಲಿ ದಂಡದ ಪರಿಣಾಮಗಳಿಗೆ ಗುರಿಯಾಗುತ್ತಾರೆ. ಅನುಮತಿ ಉಲ್ಲಂಘಿಸಿ ನಡೆಸುವ ಅಪರಾಧಗಳನ್ನು ತಡೆಗಟ್ಟಲು ಅಥವಾ ವಿಚಾರಣೆಗೆ ಒಳಪಡಿಸಲು ನ್ಯಾಯವ್ಯಾಪ್ತಿಯ ಅನುಸಾರ ಆದೇಶವು ಪೊಲೀಸರಿಗೆ ಅಧಿಕಾರ ನೀಡಲಾಗಿದೆ.
ಸಂದರ್ಭ: 8ನೇವೇತನಆಯೋಗದಶಿಫಾರಸುಜಾರಿಯುಮಧ್ಯಂತರವರದಿಬಂದನಂತರಖಚಿತವಾಗುತ್ತದೆ. ಆದರೂ, ಇದು 2026ರಜ.1ರಿಂದಲೇಜಾರಿಗೆಬರಬಹುದುಅಶ್ವಿನಿವೈಷ್ಣವ್, ಕೇಂದ್ರಸಚಿವ 8ನೇವೇತನಆಯೋಗರಚನೆಯನಿಯಮಮತ್ತುನಿಬಂಧನೆಗಳಿಗೆ (ಟಿಒಆರ್) ಕೇಂದ್ರಸಚಿವಸಂಪುಟವುಮಂಗಳವಾರಅನುಮೋದನೆನೀಡಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅಧ್ಯಕ್ಷತೆಯಲ್ಲಿ 8ನೇ ವೇತನ ಆಯೋಗ ರಚಿಸಲಾಗಿದೆ. ಆಯೋಗಕ್ಕೆ ತಾತ್ವಿಕ ಒಪ್ಪಿಗೆ ಲಭಿಸಿ ಒಂಬತ್ತು ತಿಂಗಳಾದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿನ ಕೇಂದ್ರ ಸಚಿವ ಸಂಪುಟ ‘ಟಿಒಆರ್‌ಗೆ’ ಅನುಮೋದನೆ ನೀಡಿದೆ.
ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಗೆ ಮುನ್ನ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದೆ.
ಆಯೋಗ ರಚನೆಯಾದ ದಿನದಿಂದ 18 ತಿಂಗಳ ಒಳಗಾಗಿ ಅಂತಿಮ ವರದಿ ಸಲ್ಲಿಸಬೇಕಿದೆ. ಆಯೋಗದ ಶಿಫಾರಸುಗಳು 2026ರ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಯಾಗುವ ಸಾಧ್ಯತೆ ಇದೆ.
‘ಕೇಂದ್ರ ಸರ್ಕಾರದ ಸುಮಾರು 50 ಲಕ್ಷದಷ್ಟು ನೌಕರರಿಗೆ, 69 ಲಕ್ಷದಷ್ಟು ಪಿಂಚಣಿದಾರರಿಗೆ 8ನೇ ವೇತನ ಆಯೋಗದ ಶಿಫಾರಸಿನ ಪ್ರಯೋಜನ ಗಳು ದೊರೆಯಲಿವೆ. ಆಯೋಗವು ಕೇಂದ್ರ ಸರ್ಕಾರ ಮತ್ತು ಖಾಸಗಿ ವಲಯದ ನೌಕರರಿಗೆ ಈಗಿರುವ ವೇತನ, ಭತ್ಯೆ ಮತ್ತಿತರೆ ಸೌಲಭ್ಯಗಳು ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಲಭ್ಯ ಇರುವ ಸಂಪನ್ಮೂಲಗಳನ್ನು ಗಮನಕ್ಕೆ ತೆಗೆದುಕೊಳ್ಳಲಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ಅಗತ್ಯ ಬದಲಾವಣೆಗಳನ್ನು ಶಿಫಾರಸು ಮಾಡಲಿದೆ.
8ನೇ ವೇತನ ಆಯೋಗದಲ್ಲಿ ಬೆಂಗಳೂರಿನ ಐಐಎಂನ ಪ್ರೊ. ಪುಲಕ್ ಘೋಷ್ ಅರೆಕಾಲಿಕ ಸದಸ್ಯರಾಗಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಅವರು ಸದಸ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ರಂಜನಾ ಪ್ರಕಾಶ್ ದೇಸಾಯಿ ಅವರು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷೆಯೂ ಆಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್‌ವಿಂಗಡಣಾ ಆಯೋಗ ಮತ್ತು ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯ ತಜ್ಞರ ಸಮಿತಿ ಅಧ್ಯಕ್ಷೆಯಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ನಂತರ ಅವರು ವಹಿಸಿಕೊಳ್ಳುತ್ತಿರುವ ನಾಲ್ಕನೆಯ ಮಹತ್ವದ ಹೊಣೆಗಾರಿಕೆ ಇದಾಗಿದೆ.
ರಸಗೊಬ್ಬರಸಬ್ಸಿಡಿಏರಿಕೆ
2025–26ನೇ ಸಾಲಿನ ಹಿಂಗಾರು ಹಂಗಾಮಿಗೆ ಯೂರಿಯಾ ಹೊರತು ಪಡಿಸಿ, ರಂಜಕ –ಪಿ ಮತ್ತು ಗಂಧಕ–ಎಸ್ (ಡಿಎಪಿ, ಎಂಒಪಿ, ಎಸ್‌ಎಸ್‌ಪಿ, ಎನ್‌ಪಿಕೆ, ಕಾಂಪ್ಲೆಕ್ಸ್) ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ₹37,952 ಕೋಟಿಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಹಿಂಗಾರು ಹಂಗಾಮು ಅಕ್ಟೋಬರ್ 10ರಿಂದ ಆರಂಭಗೊಂಡಿದ್ದು, ಮುಂದಿನ ವರ್ಷದ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. 2025ರ ಮುಂಗಾರು ಹಂಗಾಮಿನ ರಸಗೊಬ್ಬರ ಸಬ್ಸಿಡಿಗೆ ಹೋಲಿಸಿದರೆ ಈ ಮೊತ್ತವು ₹736 ಕೋಟಿಯಷ್ಟು ಹೆಚ್ಚಿದೆ.
ಕೆ.ಜಿಗೆ ₹43.60 ಇದ್ದ ರಂಜಕದ ಸಬ್ಸಿಡಿಯು ಈಗ ₹47.96ಕ್ಕೆ ಏರಿಕೆಯಾಗಿದೆ. ಗಂಧಕದ ಸಬ್ಸಿಡಿ ಕೆ.ಜಿಗೆ ₹1.77ರಿಂದ ₹2.87ಕ್ಕೆ ಏರಿಕೆಯಾಗಿದೆ. ನೈಟ್ರೊಜನ್ ಮತ್ತು ಪೊಟ್ಯಾಶ್ ರಸಗೊಬ್ಬರದ ಸಬ್ಸಿಡಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇವು ಕ್ರಮವಾಗಿ ಕೆ.ಜಿಗೆ ₹43.02 ಮತ್ತು ₹2.38 ಇವೆ. ಡಿಎಪಿ ಮತ್ತು ಟಿಎಸ್‌ಪಿ ರಸಗೊಬ್ಬರದ ದರದಲ್ಲಿ ಸರ್ಕಾರ ಪರಿಷ್ಕರಣೆ ಮಾಡಿಲ್ಲ.
10 ವರ್ಷಗಳಿಗೊಮ್ಮೆಶಿಫಾರಸುಜಾರಿ
ಸಾಮಾನ್ಯವಾಗಿ ವೇತನ ಆಯೋಗದ ಶಿಫಾರಸುಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಜಾರಿಗೊಳಿಸಲಾಗುತ್ತದೆ. ಇದೇ ಸಂಪ್ರದಾಯದಂತೆ 8ನೇ ವೇತನ ಆಯೋಗದ ಶಿಫಾರಸುಗಳು 2026ರ ಜ.1ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
7ನೇ ವೇತನ ಆಯೋಗವನ್ನು 2014ರ ಫೆಬ್ರುವರಿಯಲ್ಲಿ ರಚಿಸಲಾಗಿತ್ತು. ಆಯೋಗದ ಶಿಫಾರಸುಗಳು 2016ರ ಜನವರಿ 1ರಿಂದ ಜಾರಿಗೆ ಬಂದಿದ್ದವು.
‘ರಾತ್ರಿ 7.23ರ ಸುಮಾರಿಗೆ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ನಂತರದ 6 ತಾಸು ಮುಂದುವರಿದಿದೆ’ ಎಂದು ಇಲಾಖೆ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಆಂಧ್ರ ಪ್ರದೇಶ ಮತ್ತು ಒಡಿಶಾದ ಮೇಲೆಯೇ ಚಂಡ ಮಾರುತವು ಹೆಚ್ಚು ಪರಿಣಾಮ ಬೀರಲಿದೆ.
‘ಯಾವುದೇ ಸಾವು ನೋವು ಸಂಭವಿಸದಂತೆ ನೋಡಿಕೊಳ್ಳುವುದೇ ಸರ್ಕಾರದ ಗುರಿ’ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಹೇಳಿದರು. ತೀವ್ರ ಮಳೆಯಾಗುವ ಪ್ರದೇಶಗಳು, ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಈ ರಾಜ್ಯಗಳಲ್ಲಿ ನಡೆಸಲಾಗುತ್ತಿದೆ. ಶಾಲೆಗಳು, ಅಂಗನ ವಾಡಿಗಳಿಗೆ ಅ.30ರವರೆಗೆ ಇಲ್ಲಿ ರಜೆ ಘೋಷಿಸಲಾಗಿದೆ.
ಒಡಿಶಾ: ಭೂಕುಸಿತ
‘ಮೊಂಥಾ’ದಿಂದ ಒಡಿಶಾದ ಕರಾವಳಿ ಮತ್ತು ದಕ್ಷಿಣ ಭಾಗದ 8 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿದೆ. ಹಲವು ಮರಗಳು ಧರೆಗೆ ಉರುಳಿದ್ದು, ಕೆಲವು ಮನೆಗಳು ನೆಲಸಮವಾಗಿವೆ.
ಗಜಪತಿ ಜಿಲ್ಲೆಯ ಅನಕ ಗ್ರಾ.ಪಂ.ನಲ್ಲಿ ಗುಡ್ಡಗಳಿಂದ ದೊಡ್ಡ ಗಾತ್ರದ ಬಂಡೆಗಳು ರಸ್ತೆಗೆ ಉರುಳಿವೆ. ಇದರಿಂದ ಈ ಭಾಗದ ಐದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇದೇ ಜಿಲ್ಲೆಯ ಮತ್ತೊಂದು ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಭೂಕುಸಿತ ವಾಗಿದೆ. ಇದೇ ಜಿಲ್ಲೆಯಲ್ಲಿ ಮಣ್ಣಿನ ಮನೆಯೊಂದು ಕುಸಿದು ಬಿದ್ದು, ವ್ಯಕ್ತಿಗೆ ಗಾಯವಾಗಿದೆ.
ಆಂಧ್ರದ ನೆಲ್ಲೂರು ಜಿಲ್ಲೆಯ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮಳೆ ಸುರಿದಿದೆ. ಒಡಿಶಾದ ಎಂಟು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮೊಂಥಾ ಪರಿಣಾಮವು ರಾಜಸ್ಥಾನದವರೆಗೂ ಹಬ್ಬಿಕೊಂಡಿದ್ದು, ಬೂಂದಿ ಜಿಲ್ಲೆಯಲ್ಲಿ 13 ಸೆಂ.ಮೀ ಮಳೆ ಸುರಿದಿದೆ. ಅ.13ರಂದು ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಂಧ್ರದಲ್ಲಿ ಬೆಳೆ ನಾಶ: ‘ತೀವ್ರ ಮಳೆಯ ಕಾರಣ ಆಂಧ್ರಪ್ರದೇಶದ 38 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ನಾಶವಾಗಿದೆ ಮತ್ತು 1.38 ಲಕ್ಷ ಹೆಕ್ಟೇರ್ ನಲ್ಲಿನ ತೋಟಗಾರಿಕಾ ಬೆಳೆ ನಾಶವಾಗಿದೆ’ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ಕರ್ನಾಟಕ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ ಅನುಷ್ಠಾನ ಕುರಿತ ಉನ್ನತ ಮಟ್ಟದ ಸಬಲೀಕರಣ ಸಮಿತಿ ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ಅವರು, ‘ನೆರೆ ರಾಜ್ಯಗಳ ಜವಳಿ ಉದ್ಯಮಿಗಳನ್ನು ಆಕರ್ಷಿಸಲು ಅಧ್ಯಯನ ವರದಿ ಅಗತ್ಯವಿದೆ. ಇತರೆ ರಾಜ್ಯಗಳು ಉದ್ಯಮಿಗಳಿಗೆ ಯಾವ ಸವಲತ್ತುಗಳನ್ನು ನೀಡುತ್ತಿವೆ ಎಂಬ ಮಾಹಿತಿಯ ಆಧಾರದಲ್ಲಿ ರಾಜ್ಯದ ನೀತಿಗಳನ್ನು ಬದಲಾವಣೆ ಮಾಡಲಾಗುವುದು’ ಎಂದರು.
‘ಬಾಂಗ್ಲಾದೇಶದ ಪ್ರತಿಕೂಲ ಪರಿಸ್ಥಿತಿ ಪರಿಣಾಮ ಅಲ್ಲಿನ ಜವಳಿ ಉದ್ಯಮ ಬೇರೆಡೆಗೆ ಸ್ಥಳಾಂತರವಾಗುತ್ತಿದೆ. ಅಲ್ಲಿನ ಉದ್ಯಮಿಗಳನ್ನು ಕರ್ನಾಟಕಕ್ಕೆ ಸೆಳೆಯಲು ಯೋಜನೆ ರೂಪಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಉದ್ಯಮ ಸುಸ್ಥಿತಿಯಲ್ಲಿದೆ. ಬಹುತೇಕ ಉದ್ಯಮಿಗಳು ತಮಿಳುನಾಡಿನಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಕರ್ನಾಟಕ ರಾಜ್ಯದತ್ತ ಸೆಳೆಯಲು ಏನು ಮಾಡಬೇಕು ಎನ್ನುವ ಕುರಿತು ಅಧ್ಯಯನ ಮಾಡಬೇಕಿದೆ. ಮಹಾರಾಷ್ಟ್ರ ಸರ್ಕಾರ ವಿದ್ಯುತ್ ಬಿಲ್‌ನಲ್ಲೇ ಸಹಾಯಧನ ನೀಡುತ್ತಿದೆ. ನಮ್ಮಲ್ಲಿಯೂ ಈ ಪದ್ಧತಿ ಅನುಸರಿಸಿದರೆ ಮಹಾರಾಷ್ಟ್ರದ ಜವಳಿ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಸಿದ್ಧರಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಪಿಎಂಮಿತ್ರಪಾರ್ಕ್’ಗೆಸಾವಿರಎಕರೆ
‘ಪಿಎಂ ಮಿತ್ರ ಪಾರ್ಕ್’ ಯೋಜನೆಗೆ ರಾಜ್ಯ ಸರ್ಕಾರ ಒಂದು ಸಾವಿರ ಎಕರೆ ಭೂಮಿ ಜಮೀನು ನೀಡಿದ್ದು, ಮೂಲಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಿದೆ. ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ’ ಎಂದು ಶಿವಾನಂದ ಪಾಟೀಲ ಹೇಳಿದರು.
‘ನೂರಾರು ವರ್ಷಗಳಿಂದ ಮನೆಯಲ್ಲೇ ಕೈಮಗ್ಗ ಹಾಕಿಕೊಂಡವರಿಗೆ, ಪೂರ್ಣ ಪ್ರಮಾಣದಲ್ಲಿ ಇರುವ ನೇಕಾರರ ಕಾಲೊನಿಗಳಿಗೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿನಾಯಿತಿ ಕೊಡಿಸುವ ಪ್ರಯತ್ನ ಆಗಬೇಕಿದೆ. ಬೆಂಗಳೂರಿನ ಕಬ್ಬನ್ ಪೇಟೆ, ಕಾಟನ್ ಪೇಟೆ ಮತ್ತಿತರ ಕಡೆ ಇರುವ ನೇಕಾರರಿಗೆ ಸಮಸ್ಯೆಯಾಗಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
ಮಾಸ್ಕೊದ ಯುನೈಟೆಡ್ ಏರ್ ಕಾರ್ಪೊರೇಷನ್‌ನೊಂದಿಗೆ ಎಚ್‌ಎಎಲ್ ಸಂಸ್ಥೆ ಸೋಮವಾರ ಈ ಒಪ್ಪಂದಕ್ಕೆ ಸಹಿ ಹಾಕಿದೆ. ಎಚ್‌ಎಎಲ್ ಸಿಎಂಡಿ ಡಿ.ಕೆ ಸುನೀಲ್ ಮತ್ತು ಯುಎಸಿ ಕಂಪನಿಯ ಮಹಾನಿರ್ದೇಶಕ ವಾಡಿಮ್ ಬಡೇಖಾ ಅವರ ಸಮ್ಮುಖದಲ್ಲಿ ಎಚ್‌ಎಲ್‌ನ ಪ್ರಭಾತ್ ರಂಜನ್ ಮತ್ತು ಯುಎಸಿ ಕಂಪನಿಯ ಒಲೆಗ್ ಬೊಗೊಮೊಲೊವ್ ಈ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಒಪ್ಪಂದದ ಪ್ರಕಾರ ಎಚ್‌ಎಲ್, ದೇಶೀಯ ಗ್ರಾಹಕರಿಗಾಗಿ ಡಬ್ಬಲ್ ಎಂಜಿನ್ ಹೊಂದಿರುವ, ಸಣ್ಣ ಗಾತ್ರದ, ಎಸ್–ಜೆ 100(SJ-100) ವಿಮಾನವನ್ನು ತಯಾರಿಸಲಿದೆ. ಈಗಾಗಲೇ 200 ಕ್ಕೂ ಹೆಚ್ಚು ಎಸ್‌ಜೆ–100 ವಿಮಾನಗಳನ್ನು ತಯಾರಿಸಲಾಗಿದ್ದು, ವಿಶ್ವದ 16 ಕ್ಕೂ ಹೆಚ್ಚು ವಾಣಿಜ್ಯ ವಿಮಾನಯಾನ ಕಂಪನಿಗಳು ಇವುಗಳನ್ನು ಬಳಸುತ್ತಿವೆ.
‘ಎಸ್‌ಜೆ–100 ವಿಮಾನವು, ಭಾರತದಲ್ಲಿ ‘ಉಡಾನ್’ ಯೋಜನೆಯಡಿಯಲ್ಲಿ ಕಡಿಮೆ ದೂರ ಸಂಪರ್ಕದಲ್ಲಿ ಗೇಮ್ ಚೇಂಜರ್ ಆಗಲಿದೆ’ ಎಂದು ಎಚ್‌ಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಿಮಾನವು ರಷ್ಯಾದ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿದ್ದು, ಅಲ್ಲಿನ ಒಂಬತ್ತು ವಿಮಾನಯಾನ ಸಂಸ್ಥೆಗಳು ಈ ಇವುಗಳನ್ನು ಬಳಕೆ ಮಾಡುತ್ತಿವೆ. ಇದು ಗರಿಷ್ಠ 103 ಆಸನಗಳ ಸಾಮರ್ಥ್ಯ ವನ್ನು ಹೊಂದಿದ್ದು, 3500 ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿಯ ರೇಂಜ್ ಹೊಂದಿದೆ.
‘ಎಸ್‌ಜೆ–100 ವಿಮಾನಗಳ ತಯಾರಿಕೆಯು ಭಾರತೀಯ ವಾಯುಯಾನ ಉದ್ಯಮದ ಇತಿಹಾಸದಲ್ಲಿ ಹೊಸ ಅಧ್ಯಾಯದ ಆರಂಭದ ಸೂಚನೆಯಾಗಿದೆ. ಇದು ಖಾಸಗಿ ವಲಯವನ್ನು ಬಲಪಡಿಸುತ್ತದೆ. ಮಾತ್ರವಲ್ಲ, ವಾಯುಯಾನ ಉದ್ಯಮದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ’ ಎಂದು ಎಚ್‌ಎಎಲ್ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಹಮಾಸ್, ಒತ್ತೆಯಾಳುಗಳ ಮೃತದೇಹ ಹಸ್ತಾಂತರ ಪ್ರಕ್ರಿಯೆಯನ್ನು ವಿಳಂಬ ಮಾಡುವುದಾಗಿ ಹೇಳಿದೆ.
ಈ ಹಠಾತ್ ಬೆಳವಣಿಗೆಯು ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಇಸ್ರೇಲ್–ಹಮಾಸ್ ಕದನ ವಿರಾಮ ಒಪ್ಪಂದ ಮುರಿಯಲು ಕಾರಣವಾಗುವ ಸಾಧ್ಯತೆ ಇದೆ. ಗಾಜಾ ನಗರ ಮತ್ತು ದೀರ್ ಅಲ್–ಬಲಾಹ್ ಸೇರಿದಂತೆ ಗಾಜಾದ ಹಲವೆಡೆ ಟ್ಯಾಂಕರ್ ದಾಳಿ ಮತ್ತು ಸ್ಫೋಟದ ಸದ್ದು ಕೇಳಿಬಂದಿದೆ.
ಹಮಾಸ್ ಬಂಡುಕೋರರು ದಕ್ಷಿಣ ಗಾಜಾದಲ್ಲಿ ಇಸ್ರೇಲ್ ಸೇನಾಪಡೆಗಳ ಮೇಲೆ ದಾಳಿ ನಡೆಸಿದ್ದಾಗಿ ಇಸ್ರೇಲ್ ಅಧಿಕಾರಿಗಳು ಹೇಳಿದ ಬೆನ್ನಲ್ಲೇ ನೆತನ್ಯಾಹು ಅವರು ಈ ಆದೇಶ ನೀಡಿದ್ದಾರೆ.
ರಾಜಧಾನಿಯ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವು ವಿದ್ಯುತ್ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿದೆ.
ಸೌರ ವಿದ್ಯುತ್ ಒದಗಿಸುವ ವಾಹನ ಮತ್ತು ಉಪಕರಣಗಳನ್ನು ಮೃಗಾಲಯಗಳಲ್ಲಿ ಬಳಸುತ್ತಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಘಟಕ ಇರಲಿಲ್ಲ. ಇದಕ್ಕಾಗಿ ಯೋಜನೆ ರೂಪಿಸಲಾಗಿದ್ದು, ಮುಂದಿನ ವಾರ ಸೌರ ವಿದ್ಯುತ್ ಘಟಕಕ್ಕೆ ಚಾಲನೆ ಸಿಗಲಿದೆ. ಐದಾರು ತಿಂಗಳಲ್ಲಿ ಸುಸಜ್ಜಿತ ವಿದ್ಯುತ್ ಘಟಕ ಸೇವೆಗೆ ಅಣಿಯಾಗಲಿದೆ. ಬಳಕೆ ಪ್ರಮಾಣ ನೋಡಿಕೊಂಡು ಘಟಕದ ಸಾಮರ್ಥ್ಯ ಹೆಚ್ಚಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ ಮಂಡಳಿ ನಿರ್ಧರಿಸಿದೆ.
ಸಾಮಾಜಿಕ ಹೊಣೆಗಾರಿಕೆ ನಿಧಿ ( ಸಿಎಸ್ಆರ್) ಬಳಸಿಕೊಂಡು ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಇದರ ಅನುಷ್ಠಾನದ ಜವಾಬ್ದಾರಿ ಯನ್ನು ಐಸಿಐಸಿಐ ಫೌಂಡೇಷನ್ ಹೊತ್ತುಕೊಂಡಿದೆ. ಉದ್ಯಾನದ ಒಳಗೆ ಮೂರು ಎಕರೆ ವಿಶಾಲ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನೆ ಘಟಕವನ್ನು ಆರಂಭಿಸಲಾಗುತ್ತಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವೇ ವಿದ್ಯುತ್ ವಿತರಣೆಗೆ ಬೇಕಾದ ಗ್ರಿಡ್ ಅನ್ನು ನಿರ್ಮಿಸಿಕೊಳ್ಳಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್ ಬಳಕೆ, ಹೆಚ್ಚುವರಿ ವಿದ್ಯುತ್ ಸರಬರಾಜಿಗೆ ಬೇಕಾದ ಅನುಮತಿ ಪಡೆಯುವ ಹೊಣೆ ಹೊತ್ತುಕೊಳ್ಳಲಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅವಿಭಾಜ್ಯ ಅಂಗವಾಗಿ ರುವ ಜೈವಿಕ ಉದ್ಯಾನವು 2002ರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವು 780 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ.
ಉದ್ಯಾನಗಳ ನಿರ್ವಹಣೆ ಸಹಿತ ಹಲವು ಉದ್ದೇಶಗಳಿಗೆ ವಿದ್ಯುತ್ ಬಳಸಲಾಗುತ್ತಿದೆ. ಪ್ರತಿವರ್ಷ ವಿದ್ಯುತ್ ನಿರ್ವಹಣೆಗೆ ₹40 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಬೆಸ್ಕಾಂನಿಂದಲೇ ವಿದ್ಯುತ್ ಅನ್ನು ಪಡೆದುಕೊಳ್ಳಲಾಗುತ್ತಿದೆ. ತುರ್ತು ಬಳಕೆಗೆ ಜನರೇಟರ್ ವ್ಯವಸ್ಥೆಯಿದೆ.
ಸೌರ ವಿದ್ಯುತ್ ಘಟಕ ಸ್ಥಾಪನೆಯಾದರೆ ವಿದ್ಯುತ್ ವೆಚ್ಚ ಉಳಿತಾಯವಾಗಲಿದೆ. ಅಲ್ಲದೇ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ ಅದರಲ್ಲೂ ಆದಾಯ ಪಡೆಯುವ ಉದ್ಧೇಶ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ದೇಶದ ಯಾವುದೇ ಜೈವಿಕ ಉದ್ಯಾನ, ಮೃಗಾಲಯದಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡುವ ಘಟಕವಿಲ್ಲ. ಅಗತ್ಯ ನೋಡಿಕೊಂಡು ಯೋಜನೆ ವಿಸ್ತರಿಸಲಾಗುವುದು’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯಸೇನ್ ತಿಳಿಸಿದರು.
‘ಮೆಗಾವಾಟ್’ನಮೊದಲಕೇಂದ್ರ
ಚೆನ್ನೈನ ವ್ಯಾಂಡಲೂರ್ ಮೃಗಾಲಯದಲ್ಲಿ ಸೌರ ವಿದ್ಯುತ್ ಉತ್ಪಾದನೆ ಘಟಕ ವಿದ್ದರೂ ಅಲ್ಲಿ ಬರೀ 100 ಕಿಲೋ ವಾಟ್ ವಿದ್ಯುತ್ ಮಾತ್ರ ಉತ್ಪಾದಿಸಲಾಗುತ್ತಿದೆ. ಅದನ್ನು ಬಿಟ್ಟರೆ ಭಾರತದಲ್ಲಿರುವ ಪ್ರಮುಖ ಮೃಗಾಲಯ ಹಾಗೂ ಜೈವಿಕ ಉದ್ಯಾನಗಳಲ್ಲಿ 1 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸುವ ಮೊದಲ ಕೇಂದ್ರವೆಂಬ ಹೆಗ್ಗಳಿಕೆಗೆ ಬನ್ನೇರುಘಟ್ಟ ಉದ್ಯಾನ ಪಾತ್ರವಾಗಲಿದೆ.
‘ಯಾವುದೇ ಒಂದು ಕೆಲಸವನ್ನು ಅಸಾಧ್ಯ ಎಂದು ನೀವು ಒಪ್ಪಲು ತಯಾರಿಲ್ಲದಿದ್ದರೆ, ಅದು ಹೇಗೆ ಅಸಾಧ್ಯವಾಗಲು ಸಾಧ್ಯ?’ ಎನ್ನುತ್ತಾರೆ, ಡಾ. ಸುಸುಮು ಕಿಟಾಗವಾ. ಈ ಬಾರಿ ರಸಾಯನ ವಿಜ್ಞಾನದಲ್ಲಿ ರಿಚರ್ಡ್ ರಾಬ್ಸನ್ ಮತ್ತು ಓಮರ್ ಯಾಘಿಯವರ ಜೊತೆಗೆ ನೊಬೆಲ್ ಪ್ರಶಸ್ತಿಗೆ ಭಾಜನರಾದ ಸುಸುಮು ಅವರ ಮಾತುಗಳನ್ನು ಕೇಳಿದರೆ, ಸ್ಥೈರ್ಯಗುಂದಿದ ಯಾರೇ ಆದರೂ, ಮತ್ತೊಮ್ಮೆ ಫೀನಿಕ್ಸ್‌ನಂತೆ ಎದ್ದುನಿಲ್ಲುವಂತಾಗುತ್ತದೆ; ಅಷ್ಟು ಧನಾತ್ಮಕತೆ, ಅಷ್ಟು ಗುರಿ ಕೇಂದ್ರೀಕೃತ ಮನಸ್ಸು ಮತ್ತು ಅಂತಹ ಛಲ ಬಿಡದ ಮನೋಭಾವ ಇವರದ್ದು.
ಜಗತ್ತನ್ನು ಪೊರೆದದ್ದು ಅಚಾನಕ್ಕಾಗಿ ಆದ ಅನೇಕ ಆವಿಷ್ಕಾರಗಳು ಎಂಬ ಮಾತಿದೆ. ಏನೋ ಮಾಡಲು ಹೋಗಿ ಮತ್ತೇನೋ ಆದ ಕಥೆಗಳು ವಿಜ್ಞಾನಲೋಕದಲ್ಲಿ ಸಾಮಾನ್ಯ. ‘ಪೆನಿಸಿಲಿನ್’ ಎಂಬ ಮೊದಲ ಆ್ಯಂಟಿಬಯೋಟಿಕ್, ಎಕ್ಸ್–ರೇ, ಪೇಸ್‌ಮೇಕರ್, ಮೈಕ್ರೋವೇವ್ ಓವನ್ – ಹೀಗೆ ಪಟ್ಟಿ ದೊಡ್ಡದಿದೆ. ‘ಅಂತಹದ್ದೇ ಒಂದು ಅಚಾನಕ್ಕಾಗಿ ಆದ ಆವಿಷ್ಕಾರವೇ ಈ ಲೋಹ-ಸಾವಯವ ಚೌಕಟ್ಟುಗಳೊಳಗೆ ರಂಧ್ರಗಳಿವೆ ಮತ್ತು ಅವುಗಳನ್ನು ಅನಿಲದ ಅಣುಗಳನ್ನು, ಲೋಹದ ಅಣುಗಳನ್ನು ಹಿಡಿದಿಡಲು ಬಳಸಬಹುದು ಎಂಬುದು’ ಎನ್ನುತ್ತಾರೆ. ಸುಸುಮು.
ಹಿನ್ನೆಲೆ
1951ರ ಜುಲೈ 4ರಂದು ಜಪಾನಿನ ಕ್ಯೋಟೋದಲ್ಲಿ ಜನಿಸಿದ ಸುಸುಮು ಅವರು, ಚಿಕ್ಕಂದಿನಿಂದಲೂ ವಿಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದವರು; ಕ್ಯೋಟೋದಲ್ಲಿಯೇ ತಮ್ಮ ಶಿಕ್ಷಣ ಮತ್ತು ಸಂಶೋಧನೆಯನ್ನು ನಡೆಸಿದರು. ಅಸಾವಯವ ರಸಾಯನವಿಜ್ಞಾನ ಇವರ ಕಾರ್ಯಕ್ಷೇತ್ರ. ಕಿಂಡೈ ವಿಶ್ವವಿದ್ಯಾಲಯ, ಟೋಕ್ಯೋ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಾ, ಟೆಕ್ಸಸ್ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲೂ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸಿದರು; ತಮ್ಮ ವೃತ್ತಿಬದುಕಿನಲ್ಲಿ ವಿದ್ಯಾರ್ಥಿಗಳನ್ನು ಸಂಶೋಧನೆಯೆಡೆಗೆ ಸೆಳೆಯುವ ಮತ್ತು ವೈಜ್ಞಾನಿಕ ಮನೋಭಾವವನ್ನು ಅವರಲ್ಲಿ ಹಾಸುಹೊಕ್ಕಾಗಿಸುವ ಜವಾಬ್ದಾರಿಯನ್ನು ಹೊತ್ತ ಸುಸುಮು ಅವರು, ಐ.ಸಿ.ಇ.ಎಂ.ಎಸ್. ಸೇರಿದಂತೆ ಅನೇಕ ವಿಜ್ಞಾನ ಸಂಸ್ಥೆಗಳ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಕಾರ್ಯಪ್ರವೃತ್ತರಾಗಿದ್ದರು. ನೊಬೆಲ್ ಪ್ರಶಸ್ತಿ ಘೋಷಣೆಯಾದ ನಂತರ ನಡೆದ ಇವರ ಸಂದರ್ಶನದಲ್ಲಿ, ಸುಸುಮು ಕಿಟಾಗವಾ ಅವರು ನಗುತ್ತಾ, ‘ಯಾರಾದರೂ ಅಸಾಧ್ಯವೆಂದದ್ದನ್ನು ಸಾಧ್ಯ ಮಾಡಿತೋರಿಸಲು ನನಗೆ ಬಹಳ ಹುರುಪು’ ಎಂದು ಹೇಳಿದ್ದು, ಸಣ್ಣ ಸೋಲುಗಳಿಗೆ, ಚಿಕ್ಕ ಟೀಕೆಯೊಂದಕ್ಕೇ ಕೈಚೆಲ್ಲುವ ಹಲವರಿಗೆ ಸ್ಫೂರ್ತಿ ನೀಡುವಂತಿದೆ.
90ರ ದಶಕದಲ್ಲಿ ಲೋಹ-ಸಾವಯವ ಚೌಕಟ್ಟಿನ ರಂಧ್ರಗಳೊಳಗೆ ಅನಿಲದ ಅಣುಗಳನ್ನು ಹಿಡಿದಿಡಬಹುದು ಎಂದು ಸುಸುಮು ಮತ್ತು ಇನ್ನಿತರ ರಸಾಯನವಿಜ್ಞಾನಿಗಳು ಪ್ರತಿಪಾದಿಸಿದಾಗ, ಅದನ್ನು ಒಪ್ಪಲು ಬಹುಪಾಲು ವಿಜ್ಞಾನಿಗಳು ತಯಾರಿರಲಿಲ್ಲ. ‘ಅವರ ಅಪನಂಬಿಕೆಯೇ ನನ್ನ ಬಲವಾಯ್ತು’ ಎನ್ನುತ್ತಾರೆ, ಸುಸುಮು. ಬೇರೆ ಯಾವುದೇ ಸಂಶೋಧನೆ ಮಾಡುತ್ತಿದ್ದರೂ, ಈ ವಿಷಯವೊಂದು ಅವರ ಮನಸ್ಸಿನ ಮೂಲೆಯಲ್ಲಿ ಕುಳಿತು ಕುದಿಯುತ್ತಲೇ ಇತ್ತು. ಮತ್ತೇನೋ ವಿಷಯದ ಸಲುವಾಗಿ, ಲೋಹ-ಸಾವಯವ ಚೌಕಟ್ಟಿನ ಸ್ಫಟಿಕದ ರಚನೆಯನ್ನು ವಿಶ್ಲೇಷಣೆ ಮಾಡಲು ಖಾಸಗಿ ವಿಶ್ವವಿದ್ಯಾಲಯವೊಂದಕ್ಕೆ ಸುಸುಮು ಹೋಗಿದ್ದರು. ಅಲ್ಲಿ ಕಂಪ್ಯೂಟರ್ ಕೇಂದ್ರದಲ್ಲಿ, ಸ್ಫಟಿಕದ ವಿಶ್ಲೇಷಣೆಯ ಸಮಯದಲ್ಲಿ, ಈ ಲೋಹ-ಸಾವಯವ ಚೌಕಟ್ಟಿನಲ್ಲಿರುವ ವಿಶಿಷ್ಟ, ನಿರ್ದಿಷ್ಟ ಬಗೆಯ ರಂಧ್ರಗಳು ಅಚಾನಕ್ಕಾಗಿ ಕಣ್ಣಿಗೆ ಬಿದ್ದವು. ಇಂತಹ ಅಚಾನಕ್ ಆವಿಷ್ಕಾರವೇ, ನಿಜಜೀವನದಲ್ಲಿ ಅನೇಕ ಕ್ಷೇತ್ರಗಳಲ್ಲಿ ಲೋಹ-ಸಾವಯವ ಚೌಕಟ್ಟಿನ ಸಾರ್ಥಕ ಅನ್ವಯಿಕೆಗೆ, ನೊಬೆಲ್ ಪ್ರಶಸ್ತಿಯು ಒಲಿಯುವುದಕ್ಕೆ, ಜನರ ಅಪನಂಬಿಕೆಯನ್ನು ಹುಸಿಯಾಗಸಲು ದಾರಿ ಮಾಡಿಕೊಟ್ಟಿತು.
ಒಂದೇ ಗುಂಗಿನಲ್ಲಿ, ಅಪರಿಮಿತ ಏಕಾಗ್ರತೆಯಲ್ಲಿ ಸಂಶೋಧನೆಯಲ್ಲಿ ತೊಡಗುವುದು ಎಷ್ಟು ಮುಖ್ಯವೋ, ಸಂಶೋಧನಾ ಪರಿಸರವೂ ಅಷ್ಟೇ ಮುಖ್ಯ ಎಂಬ ಸುಸುಮು ಅವರ ಮಾತನ್ನು ಎಲ್ಲ ವಿಜ್ಞಾನಿಗಳೂ ಖಂಡಿತವಾಗಿ ಒಪ್ಪುತ್ತಾರೆ. ಜಪಾನಿಗೆ ವಿಜ್ಞಾನದಲ್ಲಿ ನೊಬೆಲ್ ತಂದುಕೊಟ್ಟ ಅನೇಕ ಸಂಶೋಧಕರು ಸುಸುಮು ಅವರ ಮಾರ್ಗದರ್ಶಿಗಳು ಮತ್ತು ಒಡನಾಡಿಗಳು. ನೊಬೆಲ್ ವಿಜೇತ ಕೆನಿಚಿ ಫುಕುಯಿ ಅವರನ್ನಂತೂ ಸುಸುಮು ಅವರು ತಮ್ಮ ‘ಶೈಕ್ಷಣಿಕ ಪಿತಾಮಹ’ ಎಂದೇ ಬಣ್ಣಿಸುತ್ತಾರೆ.
ಕೆನಿಚಿ ಫುಕುಯಿ, ಅಕಿರಾ ಯೊಶಿನೋರಂತಹ ವಿಜ್ಞಾನಲೋಕದ ದಿಗ್ಗಜಗಳು ಕಾರ್ಯನಿರ್ವಹಿಸಿದ ಪ್ರಯೋಗಾಲಯಗಳಲ್ಲೇ ತಾವೂ ಸಂಶೋಧನೆ ಮಾಡುತ್ತಾ, ಅವರ ಪರಂಪರೆಯಿಂದ ಸ್ಫೂರ್ತಿ ಪಡೆಯುತ್ತಾ, ಮುಂದಿನ ತಲೆಮಾರಿಗೆ ಪ್ರೇರಣೆ ಒದಗಿಸಿದ್ದಾರೆ, ಸುಸುಮು ಕಿಟಾಗವಾ. ಇವರ ಲೋಹ-ಸಾವಯವ ಚೌಕಟ್ಟುಗಳು ಅನಿಲದ ಅಣುಗಳನ್ನು, ವೇಗವರ್ಧಕಗಳನ್ನು ಹಿಡಿದಿಟ್ಟುಕೊಳ್ಳುವ ಹಾಗೆ, ಇವರ ಕಾರ್ಯವೈಖರಿಯು ಯುವಜನರನ್ನೂ ಸೆಳೆದು, ವಿಜ್ಞಾನದೆಡೆಗೆ ಗಮನ ಹರಿಯುವಂತೆ ಮಾಡಿದ ಇವರಿಗೆ ಅಭಿನಂದನೆಗಳು ಸಲ್ಲಿಸಲೇಬೇಕು. v
‘ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ 1,600 ಮೆಗಾ ವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾವಕ್ಕೆ ಸಮ್ಮತಿ ಸಿಕ್ಕಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ರಾಜ್ಯದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚುವ ಅವಧಿಯಲ್ಲಿ ತಡೆರಹಿತ ವಿದ್ಯುತ್ ಪೂರೈಕೆಗೆ 2 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ, ಈ ಯೋಜನೆಗೆ ಪರಿಸರ, ವನ್ಯಜೀವಿ ಮತ್ತು ಅರಣ್ಯ ಅನುಮತಿ ಸಿಗುವುದು ಬಾಕಿ ಇದೆ’ ಎಂದರು.
ಮಾದಕವಸ್ತು (ಡ್ರಗ್ಸ್) ಪೂರೈಕೆ, ಮಾರಾಟ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಮಾದರಿಯಲ್ಲಿಯೇ ರಾಜ್ಯದಲ್ಲೂ ‘ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ’ (ಎಎನ್‌ಟಿಎಫ್) ಅಸ್ತಿತ್ವಕ್ಕೆ ಬಂದಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಅವರು ಕಾರ್ಯಪಡೆಗೆ ಚಾಲನೆ ನೀಡಿದರು. ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ‘ಪೀಕ್ ಕ್ಯಾಪ್’ ವಿತರಿಸಿದರು.
ಸಿದ್ದರಾಮಯ್ಯ ಮಾತನಾಡಿ, ‘ಎಡಿಜಿಪಿ ಮಟ್ಟದ ಅಧಿಕಾರಿ ಕಾರ್ಯಪಡೆ ಮುಖ್ಯಸ್ಥರಾಗಿ ಇರಲಿದ್ದು, ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಸೇರಿ 56 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ’ ಎಂದರು.
‘ಐದು ದಶಕಗಳ ಬಳಿಕ ಪೊಲೀಸ್ ಸಿಬ್ಬಂದಿಯ ಕ್ಯಾಪ್‌ನಲ್ಲಿ ಬದಲಾವಣೆ ಆಗಿದೆ. ಕಾರ್ಯಕ್ಷಮತೆಯೂ ಬದಲಾಗಬೇಕು. ದಕ್ಷವಾಗಿ ಕಾರ್ಯ ನಿರ್ವಹಿಸುವ ಮೂಲಕ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ಕಡಿಮೆ ಮಾಡಬೇಕು ಮತ್ತು ಸರ್ಕಾರಕ್ಕೂ ಒಳ್ಳೆಯ ಹೆಸರು ತರಬೇಕು’ ಎಂದು ಕಿವಿಮಾತು ಹೇಳಿದರು.
‘ರಾಜ್ಯದ ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿದ್ದ ‘ಸ್ಲೋಚ್ ಹ್ಯಾಟ್’ ಬದಲಿಗೆ ‘ಪೀಕ್ ಕ್ಯಾಪ್’ಗಳನ್ನು ಆಯ್ಕೆ ಮಾಡಿದ್ದು ನಾನೇ. ಇಂಡಿಯಾ ಜಸ್ಟೀಸ್ ವರದಿಯಂತೆ ಅತ್ಯುತ್ತಮ ಪೊಲೀಸ್ ಪಡೆಗಳಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನ ಪಡೆದಿರುವುದು ರಾಜ್ಯದ ಘನತೆ ಹೆಚ್ಚಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ಗಲಭೆಪೀಡಿತ ನಗರವಾಗಿತ್ತು. ಪೊಲೀಸ್ ಅಧಿಕಾರಿ ಗಳನ್ನು ಬದಲಾವಣೆ ಮಾಡಿದ್ದರಿಂದ ನಿಯಂತ್ರಣಕ್ಕೆ ಬಂದಿದೆ. ಕೆಲವು ಪೊಲೀಸರು ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆ ಶಾಮೀಲಾಗುತ್ತಾರೆ. ಡ್ರಗ್ಸ್ ಪೆಡ್ಲರ್ಗಳು, ಯಾರು ರೌಡಿಗಳು ಎಂದು ಗೊತ್ತಿದ್ದರೂ ಅವರನ್ನು ಬಂಧಿಸದೇ ಪೊಲೀಸರು ಬಿಟ್ಟುಬಿಡುತ್ತಾರೆ. ಇವರನ್ನು ಮೊಳಕೆಯಲ್ಲಿ ಚಿವುಟಿ ಹಾಕಬೇಕು. ಇಲ್ಲದಿದ್ದರೆ ದೊಡ್ಡ ಕ್ರಿಮಿನಲ್ಗಳಾಗುತ್ತಾರೆ ಎಂದು ಎಚ್ಚರಿಸಿದರು. ‘ಅಪರಾಧಿ ಹಾಗೂ ಕ್ರಿಮಿನಲ್ಗಳೊಂದಿಗೆ ಸಂಬಂಧ ಇಟ್ಟುಕೊಳ್ಳ ಬಾರದು. ದಿನೇ ದಿನೇ ಪೊಲೀಸರೆಂದರೆ ಕ್ರಿಮಿನಲ್ಗಳಿಗೆ ಭಯ ಕಡಿಮೆಯಾ ಗುತ್ತಿದೆ. ಯಾಕೆ ಕಡಿಮೆಯಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ’ ಎಂದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ‘ಬೆಂಗಳೂರು ನಗರ ಹಾಗೂ ಇತರೆ ನಗರ ಪ್ರದೇಶಗಳಲ್ಲಿ ಪ್ರತಿ ಮನೆಯಲ್ಲಿ ಮನೆಗೆಲಸದವರು, ಚಾಲಕರು, ಕಾವಲುಗಾರರ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಗ ಎಷ್ಟೋ ಮಟ್ಟಿಗೆ ಅಪರಾಧ ನಿಯಂತ್ರಣಕ್ಕೆ ಬರುತ್ತದೆ. ನೆರೆ ಮನೆಯ ಆದಿಕೇಶವಲು ಮನೆಯಲ್ಲಿ ಕಳ್ಳತನವಾಗಿ ಎಷ್ಟೋ ದಿನಗಳಾದರೂ ಅವರಿಗೆ ಗೊತ್ತಾಗಿರಲಿಲ್ಲ. ಆಭರಣ ಮಾರಾಟವಾಗಿ ಬೇರೆಯವರು ಧರಿಸಿದ್ದನ್ನು ನೋಡಿದ ಬಳಿಕ ಮನೆಯಲ್ಲಿ ಬಂದು ಹುಡುಕುತ್ತಾರೆ. ಮೂರು ವರ್ಷಗಳ ಬಳಿಕ ಕಳ್ಳತನವಾಗಿದೆ ಎಂದು ತಿಳಿಯಿತು. ಹೀಗಾಗಿ ನೀವು ಪ್ರತಿ ಮನೆಯಲ್ಲಿ ಕೆಲಸ ಮಾಡುವವರ ದಾಖಲೆ ಇಟ್ಟುಕೊಳ್ಳಿ. ಈ ಬಗ್ಗೆ ಆಲೋಚನೆ ಮಾಡಿ’ ಎಂದು ಸಲಹೆ ನೀಡಿದರು.
‘ಯಾವುದೇ ಸರ್ಕಾರ ಬಂದರೂ ಆತ್ಮವಿಶ್ವಾಸ ಹಾಗೂ ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬಾರದು. ಒಂದು ವೇಳೆ ರಾಜಿ ಮಾಡಿಕೊಂಡರೆ ಸಂಪೂರ್ಣವಾಗಿ ವ್ಯವಸ್ಥೆ ಕುಸಿಯಲಿದೆ. ರಾಜಕಾರಣಿಗಳ ಹಿಂಬಾಲಕರಾದರೇ ಆಗ ನಿಮ್ಮನ್ನು ಯಾರು ನಂಬುತ್ತಾರೆ? ಹೀಗಾಗಿ ಇಂತಹ ಪದ್ಧತಿಗೆ ಅವಕಾಶ ಮಾಡಿಕೊಡಬೇಡಿ’ ಎಂದು ಕಿವಿ ಮಾತು ಹೇಳಿದರು.
‘ಬೆಂಗಳೂರಿನಲ್ಲಿ 1.40 ಕೋಟಿ ಜನರಿದ್ದಾರೆ. 1.23 ಕೋಟಿ ವಾಹನಗಳಿವೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆ ವಿಸ್ತರಣೆ ಕಷ್ಟವಾಗಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಸಂಚಾರ ದಟ್ಟಣೆ ನಿವಾರಣೆಗೆ ಇರುವ ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಿ’ ಎಂದು ತಿಳಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಮಾತನಾಡಿ, ‘ಪೊಲೀಸ್ ಇಲಾಖೆಯಲ್ಲಿ ಶೇಕಡ 85ರಷ್ಟು ಸಿಬ್ಬಂದಿಯ ಬಹುವರ್ಷಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಇದರಿಂದ ಸಿಬ್ಬಂದಿಯ ಆತ್ಮವಿಶ್ವಾಸ ಹೆಚ್ಚಾಗಲಿದೆ’ ಎಂದರು.
ಶಾಸಕ ರಿಜ್ವಾನ್ ಅರ್ಷದ್, ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಡಿಜಿಪಿಗಳಾದ ರಾಮಚಂದ್ರರಾವ್, ಪ್ರಣವ್ ಮೊಹಾಂತಿ ಹಾಜರಿದ್ದರು.
‘ಸನ್ಮಿತ್ರ’ಪರಿಚಯ
ಮಾದಕ ವಸ್ತು ಸೇವನೆ ಪ್ರಕರಣ ದಲ್ಲಿ ಶಿಕ್ಷೆ ಅನುಭವಿಸಿ ಹೊರ ಬಂದ ವ್ಯಕ್ತಿ ಮತ್ತೆ ವ್ಯಸನಕ್ಕೆ ಒಳಗಾಗದಂತೆ ನಿಗಾವಹಿಸಲು ಪೊಲೀಸ್ ಇಲಾಖೆಯು ‘ಸನ್ಮಿತ್ರ’ ಕಾರ್ಯಕ್ರಮವನ್ನು ಪರಿಚಯಿಸಿದೆ. ಮತ್ತೆ ಡ್ರಗ್ಸ್ ಚಟಕ್ಕೆ ಬೀಳಬಾರದು ಹಾಗೂ ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಆ ವ್ಯಕ್ತಿಯ ಮೇಲೆ ನಿಗಾ ಇಡಲು ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ನಿಯೋಜಿಸಲಾಗು ತ್ತದೆ. ಮೂರು ವರ್ಷದವರೆಗೆ ಈ ವ್ಯಕ್ತಿಯ ಮೇಲೆ ಪೊಲೀಸರು ನಿಗಾವಹಿಸಲಿದ್ದು, ಅವರಿಗೆ ಚಿಕಿತ್ಸೆ, ಪುನರ್ವಸತಿ ಮತ್ತು ಆರೈಕೆಗೆ ನೆರವು ನೀಡಲಿದ್ದಾರೆ.
ಆಂಧ್ರ, ಒಡಿಶಾಮೊಂಥಾಮೊರೆತ
ಮೊಂಥಾ ಚಂಡಮಾರುತವು ಅಬ್ಬರಿಸಲು ಶುರುವಿಟ್ಟಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಬುಡ ಮೇಲಾಗಿ ಬಿದ್ದ ಮರಗಳು. ಸಮುದ್ರ ತೀರದಲ್ಲಿ ಕಟ್ಟೆಚ್ಚರ. ಎತ್ತರದ ಅಲೆಗಳಿಗೆ ಮುಖ ಮಾಡಿ ಓಡುವ ಜನರನ್ನು ಕೂಗಿ ಕರೆದು, ಮನೆಗೆ ಕಳುಹಿಸುತ್ತಿರುವ ಪೊಲೀಸರು. ಸಮುದ್ರ ತೀರದ ರಸ್ತೆಗಳ ಮೇಲೆ ಹರಿದು ಸಾಗುತ್ತಿರುವ ಸಮುದ್ರದ ಅಲೆಗಳು. ಹೀಗೆ ಹರಿಯುವಾಗ ರಸ್ತೆಗಳ ಮೇಲೆಲ್ಲಾ ಕಲ್ಲುಗಳನ್ನು ಹೊತ್ತು ತರುತ್ತಿರುವ ಅಲೆಗಳು. ತೀರದಲ್ಲಿ ವಿರಮಿಸುತ್ತಿರುವ ಮೀನುಗಾರಿಕೆ ದೋಣಿಗಳು… ‘ಮೊಂಥಾ’ದಿಂದಾಗಿ ಆಂಧ್ರ ಪ್ರದೇಶ ಮತ್ತು ಒಡಿಶಾ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಕಂಡುಬಂದ ಚಿತ್ರಣವಿದು.
ಈ ರಾಜ್ಯಗಳು ‘ಮೊಂಥಾ’ವನ್ನು ಎದುರಿಸಲು ಸಜ್ಜುಗೊಂಡಿವೆ. ಆಂಧ್ರ ಪ್ರದೇಶದ 19 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಚಂಡಮಾರುತದ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರಿ ವಾಹನ ಸಂಚಾರವನ್ನು ಆಂಧ್ರ ಪ್ರದೇಶದಲ್ಲಿ ರದ್ದು ಮಾಡಲಾಗಿದೆ. ಒಡಿಶಾಕ್ಕೆ ಚಂಡಮಾರುತವು ಹೊಸ ವಿಚಾರವೇನೂ ಅಲ್ಲ. ಭಾರಿ ಚಂಡಮಾರುತಗಳನ್ನು ಎದುರಿಸಿರುವ ಅನುಭವಿಯಾದ ಒಡಿಶಾವು ‘ಮೊಂಥಾ’ಕ್ಕೂ ಸಕಲ ತಯಾರಿ ನಡೆಸಿದೆ. ಎರಡೂ ರಾಜ್ಯಗಳಲ್ಲಿ ‘ಮೊಂಥಾ’ ಪರಿಣಾಮದ ಜಿಲ್ಲೆಗಳಲ್ಲಿನ ಪ್ರವಾಸಿತಾಣಗಳಿಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ.
ಎರಡನೇ ಚಂಡಮಾರುತ
ಈ ವರ್ಷ ದೇಶದ ಪಶ್ಚಿಮ ಹಾಗೂ ಪೂರ್ವ ಕರಾವಳಿಯಲ್ಲಿ ಹಲವು ಬಾರಿ ವಾಯುಭಾರ ಕುಸಿತ ಉಂಟಾಗಿದ್ದರೂ ಅದು ಚಂಡಮಾರುತವಾಗಿ ಪರಿವರ್ತನೆಯಾಗಿದ್ದು ಎರಡು ಬಾರಿ ಮಾತ್ರ. ಈ ತಿಂಗಳ ಮೊದಲ ವಾರದಲ್ಲಿ ಅರಬ್ಬೀ ಸಮುದ್ರದಲ್ಲಿ ಉಂಟಾದ ‘ಶಕ್ತಿ’ ಮೊದಲನೆಯದ್ದಾದರೆ, ಈಗಿನ ‘ಮೊಂಥಾ’ ಎರಡನೆಯದ್ದು. ‘ಶಕ್ತಿ’ ಚಂಡಮಾರುತವು ಪ್ರತಿ ಗಂಟೆಗೆ 100 ಕಿ.ಮೀಗಿಂತಲೂ ಹೆಚ್ಚು ವೇಗದಲ್ಲಿ ಮಹಾರಾಷ್ಟ್ರ, ಗುಜರಾತ್, ಗೋವಾ ಕರಾವಳಿಗೆ ಅಪ್ಪಳಿಸಿತ್ತು. ಗುಜರಾತ್ ಕರಾವಳಿ ಪ್ರದೇಶದಲ್ಲಿ ಇದರ ತೀವ್ರತೆ ಹೆಚ್ಚಾಗಿತ್ತು. ರಾಜ್ಯಗಳು ಮುನ್ನೆಚ್ಚರಿಕೆ ವಹಿಸಿದ್ದರಿಂದ ಹೆಚ್ಚಿನ ಹಾನಿಯಾಗಿರಲಿಲ್ಲ.
ಅರಬ್ಬೀ ಸಮುದ್ರದಲ್ಲೂ ವಾಯುಭಾರ ಕುಸಿತ
ಬಂಗಾಳ ಕೊಲ್ಲಿಯಲ್ಲಿ ‘ಮೊಂಥಾ’ ಚಂಡಮಾರುತದ ವೇಗ ತೀವ್ರಗೊಳ್ಳುವ ಹೊತ್ತಿನಲ್ಲೇ ಪಶ್ಚಿಮದ ಅರಬ್ಬೀ ಸಮುದ್ರದಲ್ಲೂ ವಾಯುಭಾರ ಕುಸಿತ ಕಂಡುಬಂದಿದೆ. ಇದರ ಪರಿಣಾಮದಿಂದಾಗಿ ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಆದರೆ, ಗಾಳಿಯ ತೀವ್ರತೆ ಹೆಚ್ಚಿಲ್ಲ. ಮಂಗಳವಾರ ಬೆಳಿಗ್ಗೆ ಸಮುದ್ರದ ಪೂರ್ವ–ಕೇಂದ್ರ ಪ್ರದೇಶದಲ್ಲಿ ಕಂಡು ಬಂದಿದ್ದ ವಾಯುಭಾರ ಕುಸಿತವು ಪ್ರತಿ ಗಂಟೆಗೆ 7 ಕಿ.ಮೀ ವೇಗದಲ್ಲಿ ಈಶಾನ್ಯದತ್ತ ಸಾಗಿದೆ. ಮುಂದಿನ 24 ಗಂಟೆಗಳಲ್ಲಿ ಅದೇ ದಿಕ್ಕಿನಲ್ಲಿ ಸಾಗುವ ಅಂದಾಜು ಇದೆ. ಪ್ರತಿ ಗಂಟೆಗೆ 46ರಿಂದ 65 ಕಿ.ಮೀವರೆಗೆ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
l ಚಂಡಮಾರುತಕ್ಕೆ ಆಂಧ್ರಪ್ರದೇಶ, ಒಡಿಶಾ ಮತ್ತು ತೆಲಂಗಾಣದಲ್ಲಿನ ಇಲಾಖೆಯ ಸಿದ್ಧತೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಪರಿಶೀಲನೆ ನಡೆಸಿದರು. ಪೂರ್ವ ಕರಾವಳಿ ರೈಲ್ವೆ ವಲಯದ ಹಲವು ರೈಲುಗಳ ಸಂಚಾರವನ್ನು ಮಂಗಳವಾರ ರದ್ದು ಮಾಡಲಾಗಿತ್ತು
l ವಿಶಾಖಪಟ್ಟಣ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 32 ವಿಮಾನಗಳ (ದೇಶೀಯ ಹಾಗೂ ಅಂತರರಾಷ್ಟ್ರೀಯ) ಹಾರಾಟವನ್ನು ಮಂಗಳವಾರ ರದ್ದು ಮಾಡಲಾಯಿತು
l ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ ಚಂಡಮಾರುತ ಬಾಧಿತ ರಾಜ್ಯಗಳಲ್ಲಿ ಒಟ್ಟು 45 ತಂಡಗಳನ್ನು ಎನ್‌ಡಿಆರ್‌ಎಫ್ ನಿಯೋಜಿಸಲಾಗಿದೆ
l ಆಂಧ್ರ ಪ್ರದೇಶದಲ್ಲಿ ಸಮುದ್ರದ ಅಲೆಗಳು 4.7 ಮೀ. ಎತ್ತರಕ್ಕೆ ಏಳಲಿವೆ ಎಂದು ಸಾಗರ ಮಾಹಿತಿ ಸೇವೆಗಳ ರಾಷ್ಟ್ರೀಯ ಕೇಂದ್ರ ಹೇಳಿದೆ
ಚಂಡಮಾರುತಗಳಿಗೆ ಹೇಗೆ ಹೆಸರಿಡಲಾಗುತ್ತದೆ?
ನವದೆಹಲಿಯ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರವು (ಆರ್‌ಎಸ್‌ಎಂಸಿ) ಉತ್ತರ ಹಿಂದೂ ಮಹಾಸಾಗರದಲ್ಲಿ ಕಾಣಿಸಿಕೊಳ್ಳುವ ಚಂಡಮಾರುತಗಳ ನಾಮಕರಣವನ್ನು ಮಾಡುತ್ತದೆ. ಆರ್‌ಎಸ್‌ಎಂಸಿಯನ್ನು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ (ಏಷ್ಯಾ ಮತ್ತು ಪೆಸಿಫಿಕ್) ಉಸ್ತುವಾರಿಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನಿರ್ವಹಿಸುತ್ತದೆ.
ಚಂಡಮಾರುತಗಳ ಹೆಸರುಗಳನ್ನು ಆ ಪ್ರದೇಶದ ವ್ಯಾಪ್ತಿಯಲ್ಲಿರುವ 13 ದೇಶಗಳು ಸರತಿ ಪ್ರಕಾರ ನಿರ್ಧರಿಸುತ್ತವೆ. ಈ ಪ್ರದೇಶದಲ್ಲಿರುವ ಭಾರತ, ಬಾಂಗ್ಲಾದೇಶ, ಮಾಲ್ದೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಶ್ರೀಲಂಕಾ, ಥಾಯ್ಲೆಂಡ್, ಯೆಮನ್, ಇರಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಮುಂತಾದ ದೇಶಗಳು ಹೆಸರುಗಳನ್ನು ಸೂಚಿಸುತ್ತವೆ. ಪ್ರತಿ ದೇಶವೂ 13 ಹೆಸರುಗಳ ಪಟ್ಟಿಯನ್ನು ಪೂರ್ವಭಾವಿಯಾಗಿಯೇ ಸಲ್ಲಿಸಿರುತ್ತದೆ. ಹೊಸ ಚಂಡಮಾರುತ ಕಾಣಿಸಿಕೊಂಡಾಗ, 169 ಹೆಸರುಗಳ ಪಟ್ಟಿಯಿಂದ ಒಂದು ಹೆಸರನ್ನು ಸರತಿಯ ಪ್ರಕಾರ ಐಎಂಡಿ ಆಯ್ಕೆ ಮಾಡುತ್ತದೆ.
ಥಾಯ್ ಭಾಷೆಯಲ್ಲಿ ಮೊಂಥಾ ಎಂದರೆ, ಸುಂದರವಾದ ಅಥವಾ ಸುವಾಸನೆಯುಕ್ತ ಹೂವು.
ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶದಲ್ಲಿ ಈ ಪ್ರಯೋಗವನ್ನು ವಿಸ್ತರಿಸಲಾಗುವುದು ಎಂದು ಪರಿಸರ ಇಲಾಖೆ ಸಚಿವ ಮಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
ಮೋಡಬಿತ್ತನೆ ಮಾಡುವ ವಿಮಾನವು ಕಾನ್ಪುರದಿಂದ ಹಾರಾಟ ಆರಂಭಿಸಿ, ದೆಹಲಿ ಸುತ್ತಮುತ್ತಲಿನ ಪ್ರದೇಶಗಳಾದ ಬುರಾರಿ, ಉತ್ತರ ಕರೋಲ್ ಬಾಘ್ ಮತ್ತು ಮಯೂರ್ ವಿಹಾರ ಪ್ರದೇಶಗಳಲ್ಲಿ ಕಾರ್ಯಾಚರಣೆ ಪೂರ್ಣಗೊಳಿಸಿ, ಮೀರತ್ ವಾಯ ನೆಲೆಯಲ್ಲಿ ಇಳಿಯಿತು.
‘ಎಂಟು ಗನ್‌ಗಳ ಮೂಲಕ ಅರ್ಧ ಗಂಟೆಗಳ ಕಾಲ ರಾಸಾಯನಿಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡಿತು’ ಎಂದು ಸಚಿವ ಸಿರ್ಸಾ ವಿಡಿಯೊ ಮೂಲಕ ಮಾಹಿತಿ ನೀಡಿದ್ದಾರೆ.
ಮೋಡ ಬಿತ್ತನೆಯ ಎರಡನೇ ಪ್ರಯೋಗ ದೆಹಲಿಯ ಹೊರವಲಯದಲ್ಲಿ ನಡೆಸಲಾಗುತ್ತದೆ. ಇಂಥ ಸುಮಾರು ಹತ್ತು ಪ್ರಯೋಗಗಳನ್ನು ದೆಹಲಿಯ ಸುತ್ತಮುತ್ತ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.
‘ಮಾಲಿನ್ಯವನ್ನು ತಗ್ಗಿಸಲು ಸರ್ಕಾರ ತೆಗೆದುಕೊಂಡ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ಪ್ರಯೋಗಗಳು ಯಶಸ್ವಿಯಾದರೆ, ದೀರ್ಘಾವಧಿಯಲ್ಲಿ ಯೋಜನೆಯನ್ನು ರೂಪಿಸಲಿದ್ದೇವೆ’ ಎಂದು ಸಿರ್ಸಾ ಭವಿಷ್ಯದ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಕಳೆದ ವಾರ ಬುರಾರಿ ಪ್ರದೇಶದಲ್ಲಿ ಪರೀಕ್ಷಾರ್ಥವಾಗಿ ಮೋಡಬಿತ್ತನೆ ಕಾರ್ಯವನ್ನು ನಡೆಸಲಾಗಿತ್ತು. ಮೋಡಬಿತ್ತನೆಗೆ ಬಳಸುವ ಸಿಲ್ವರ್ ಅಯೋಡೈಡ್ ಮತ್ತು ಸೋಡಿಯಂ ಕ್ಲೋರೈಡ್ ಸಂಯುಕ್ತಗಳ ರಾಸಾಯನಿಕ ವನ್ನು ಅಲ್ಪ ಪ್ರಮಾಣದಲ್ಲಿ ಸಿಂಪಡಿಸಲಾಗಿತ್ತು.
ತಯಾರಿಕಾ ವಲಯದಲ್ಲಿ ಉತ್ತಮ ಪ್ರಮಾಣದ ಚಟುವಟಿಕೆ ಕಂಡುಬಂದ ಕಾರಣದಿಂದಾಗಿ ದೇಶದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ಪ್ರಮಾಣವು ಸೆಪ್ಟೆಂಬರ್‌ನಲ್ಲಿ ಶೇಕಡ 4ರಷ್ಟು ಆಗಿದೆ.
ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು (ಐಐಪಿ) ಶೇ 3.2ರಷ್ಟು ಬೆಳವಣಿಗೆ ಕಂಡಿತ್ತು ಎಂದು ಕೇಂದ್ರ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಂಗಳವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ.
‘ಜಿಎಸ್‌ಟಿ ದರದಲ್ಲಿ ಆಗಿರುವ ಪರಿಷ್ಕರಣೆ, ಹಬ್ಬಗಳ ಋತು ಬೇಗನೆ ಶುರುವಾಗಿದ್ದುದು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸಿರುವಂತಿವೆ. ಅಕ್ಟೋಬರ್ ತಿಂಗಳಲ್ಲಿಯೂ ತಯಾರಿಕಾ ವಲಯದ ಚಟುವಟಿಕೆಗಳು ಹೆಚ್ಚಿನ ಮಟ್ಟದಲ್ಲಿ ಇರುವ ನಿರೀಕ್ಷೆ ಇದೆ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥ ಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
ಜಿಎಸ್‌ಟಿ ದರ ಪರಿಷ್ಕರಣೆಯು ಸಣ್ಣ ಮೊತ್ತದ, ದಿನಬಳಕೆಯ ಉತ್ಪನ್ನ ಗಳಿಗೆ ಬೇಡಿಕೆಯನ್ನು ಉತ್ತಮ ಮಟ್ಟದಲ್ಲಿ ಇರಿಸುತ್ತದೆ. ಆದರೆ ಹೆಚ್ಚಿನ ಬೆಲೆಯ ಉತ್ಪನ್ನಗಳಿಗೆ ಬೇಡಿಕೆಯು ಉಳಿದು ಕೊಳ್ಳುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ ಎಂದು ನಾಯರ್ ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಐಐಪಿ ಹೆಚ್ಚಳ ಕಂಡಿದ್ದರೂ, ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್–ಸೆಪ್ಟೆಂಬರ್ ಅವಧಿ) ಕೈಗಾರಿಕಾ ಉತ್ಪಾದನೆಯು ಶೇ 3ರಷ್ಟು ಮಾತ್ರ ಬೆಳವಣಿಗೆ ಕಂಡಿದೆ. ಹಿಂದಿನ ವರ್ಷದ ಮೊದಲಾರ್ಧದಲ್ಲಿ ಇದು ಶೇ 4.1ರಷ್ಟು ಬೆಳವಣಿಗೆ ದಾಖಲಿಸಿತ್ತು.
ನವೆಂಬರ್ 4ರಿಂದ ಆರಂಭವಾಗುವ ಸೀಮಿತ ಅವಧಿಯ ಕೊಡುಗೆ ಸಂದರ್ಭದಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಬಳಕೆ ದಾರರಿಗೆ ಮಾತ್ರ ಇದು ಸಿಗಲಿದೆ.
‘ಚಾಟ್‌ಜಿಪಿಟಿ ಗೊ’ ಆವೃತ್ತಿಯನ್ನು ಚಂದಾ ಆಧಾರದಲ್ಲಿ ಓಪನ್‌ಎಐ ಕಂಪನಿಯು ಆಗಸ್ಟ್‌ನಲ್ಲಿ ಅನಾವರಣ ಮಾಡಿದೆ. ಅನಾವರಣಗೊಳಿಸಿದ ಒಂದೇ ತಿಂಗಳಲ್ಲಿ ಭಾರತದಲ್ಲಿ ಚಾಟ್‌ಜಿಪಿಟಿ ಚಂದಾದಾರರ ಸಂಖ್ಯೆಯು ಎರಡು ಪಟ್ಟಿಗಿಂತ ಹೆಚ್ಚಳ ಕಂಡಿದೆ. ಓಪನ್‌ಎಐ ಪಾಲಿಗೆ ಭಾರತವು ಎರಡನೆಯ ಅತಿದೊಡ್ಡ ಮಾರುಕಟ್ಟೆಯಾಗಿದೆ.‘ಚಾಟ್‌ಜಿಪಿಟಿ ಗೊ’ ಆವೃತ್ತಿಗೆ ಈಗಾಗಲೇ ಚಂದಾದಾರರಾಗಿರುವ ಭಾರತೀಯರು 12 ತಿಂಗಳ ಉಚಿತ ಕೊಡುಗೆಗೆ ಅರ್ಹರು.
‘ರಷ್ಯಾತೈಲಖರೀದಿನಿಲ್ಲದು’
ಸಂದರ್ಭ: ಇಂಡಿಯನ್ ಆಯಿಲ್ಕಾರ್ಪೊರೇಷನ್ (ಐಒಸಿ) ಹಾಗೂಭಾರತದಇತರತೈಲಸಂಸ್ಕರಣಾಕಂಪನಿಗಳುರಷ್ಯಾದಿಂದಕಚ್ಚಾತೈಲಖರೀದಿಸುವುದನ್ನುಸಂಪೂರ್ಣವಾಗಿಕೈಬಿಡುವಸಾಧ್ಯತೆಇಲ್ಲ.
ಅಮೆರಿಕವು ನಿರ್ಬಂಧ ವಿಧಿಸಿರುವುದು ರಷ್ಯಾದ ಕೆಲವು ಕಂಪನಿಗಳ ಮೇಲೆ; ನಿರ್ಬಂಧವು ರಷ್ಯಾದ ಕಚ್ಚಾ ತೈಲದ ಮೇಲೆ ಇಲ್ಲ. ಹೀಗಾಗಿ ನಿರ್ಬಂಧ ಇಲ್ಲದ ಕಂಪನಿಗಳ ಮೂಲಕ ಖರೀದಿಯು ಮುಂದುವರಿಯುವ ಸಾಧ್ಯತೆ ಇದೆ.
ರೊಸ್ನೆಫ್ಟ್ ಸೇರಿ ರಷ್ಯಾದ ನಾಲ್ಕು ಕಂಪನಿಗಳ ಮೇಲೆ ಇದುವರೆಗೆ ನಿರ್ಬಂಧ ಹೇರಲಾಗಿದೆ. ಆದರೆ ರೊಸ್ನೆಫ್ಟ್ ಕಂಪನಿಯು ತೈಲ ಉತ್ಪಾದಕ ಅಲ್ಲ; ಅದು ಉತ್ಪಾದಕರಿಂದ ಕಚ್ಚಾ ತೈಲವನ್ನು ಗ್ರಾಹಕರಿಗೆ ಒದಗಿಸಿಕೊಡುವ ಕಂಪನಿ. ರೊಸ್ನೆಫ್ಟ್ ಮಾಡುವ ಕೆಲಸವನ್ನು ರಷ್ಯಾದಲ್ಲಿ ಇತರ ಕಂಪನಿಗಳು ಮಾಡಬಹುದು, ಆಗ ಕಚ್ಚಾ ತೈಲದ ಪೂರೈಕೆಗೆ ಅಡ್ಡಿ ಇರುವುದಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ರೊಸ್ನೆಫ್ಟ್ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ನಿರ್ಬಂಧವಿದೆ. ರಷ್ಯಾದ ಕಚ್ಚಾ ತೈಲದ ಮೇಲೆ ನಿರ್ಬಂಧ ಇಲ್ಲ. ನಿರ್ಬಂಧಕ್ಕೆ ಗುರಿಯಾಗಿರದ ರಷ್ಯಾದ ಇತರ ಕಂಪನಿಗಳಿಂದ ಖರೀದಿಯನ್ನು ಪರಿಗಣಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
‘ನಿರ್ಬಂಧದ ನಿಯಮಗಳನ್ನು ಪಾಲಿಸಲಾಗುತ್ತದೆ. ಆದರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಾವು ನಿಲ್ಲಿಸುವುದಿಲ್ಲ. ರಷ್ಯಾದ ಕಚ್ಚಾ ತೈಲದ ಮೇಲೆ ನಿರ್ಬಂಧ ಇಲ್ಲ’ ಎಂದು ಐಒಸಿ ನಿರ್ದೇಶಕ ಅನುಜ್ ಜೈನ್ ಹೇಳಿದ್ದಾರೆ.
ಸ್ಮೃತಿಜೀವನಶ್ರೇಷ್ಠರೇಟಿಂಗ್
ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು ಐಸಿಸಿ ಏಕದಿನ ಕ್ರಿಕೆಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿರುವ ಅವರು ತಮ್ಮ ವೃತ್ತಿಜೀವನದಲ್ಲೇ ಅತ್ಯುತ್ತಮ ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ.
29 ವರ್ಷದ ಎಡಗೈ ಬ್ಯಾಟರ್ ಮಂದಾನ ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ವಿರುದ್ಧ 109 ರನ್ ಮತ್ತು ಬಾಂಗ್ಲಾದೇಶ ವಿರುದ್ಧ ಔಟಾಗದೇ 34 ರನ್ ಗಳಿಸಿದ್ದಾರೆ. ಇದರೊಂದಿಗೆ ರೇಟಿಂಗ್ ಪಾಯಿಂಟ್ಸ್‌ಗಳನ್ನು 828ಕ್ಕೆ ಹೆಚ್ಚಿಸಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವೇಳಾಪಟ್ಟಿ ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ‘ಈಗ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆಯು ಸ್ವಾತಂತ್ರ್ಯದ ಬಳಿಕ ನಡೆಯುತ್ತಿರುವ ಒಂಬತ್ತನೇ ಪ್ರಕ್ರಿಯೆಯಾಗಿದೆ. 2002–04ರಲ್ಲಿಕೊನೆಯದಾಗಿಎಸ್ಐಆರ್ನಡೆದಿತ್ತು’ ಎಂದರು.
ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 30ರಂದು ಪ್ರಕಟಿಸಿದ ಅಂತಿಮ ಪಟ್ಟಿಯಲ್ಲಿ 7.42 ಕೋಟಿ ಮತದಾರರ ಹೆಸರುಗಳು ಇವೆ. ವಿಶೇಷ ಪರಿಷ್ಕರಣೆ ಬಳಿಕ 3.66 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಬಿಹಾರದ ಎಸ್‌ಐಆರ್ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ.
ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರಿಗೆ ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ನೆರವಾಗುವಂತೆ ಬಿಹಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಇದುವರೆಗೂ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿದೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ನವೆಂಬರ್ 6 ಹಾಗೂ 11ರಂದು ಮತದಾನ ಹಾಗೂ ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿರುವ ಕೇರಳದಲ್ಲಿ ಎಸ್‌ಐಆರ್‌ಅನ್ನು ಮುಂದೂಡಬೇಕೆಂಬ ಮನವಿಯ ಕುರಿತ ಪ್ರಶ್ನೆಗೆ ಅವರು, ‘ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಇದುವರೆಗೆ ಯಾವುದೇ ಅಧಿಸೂಚನೆ ಹೊರಡಿಸಲಾಗಿಲ್ಲ. ಆದ್ದರಿಂದ ಕೇರಳದಲ್ಲಿ ಎರಡನೇ ಹಂತದಲ್ಲಿ ಎಸ್ಐಆರ್ ನಡೆಸಲು ಆಯೋಗ ಮುಂದಾಗಿದೆ’ ಎಂದು ಹೇಳಿದರು.
ಎಸ್‌ಐಆರ್ ಕುರಿತು ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ (ಸಿಇಒ) ಕೇಂದ್ರ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಈಚೆಗೆ ಸಭೆ ನಡೆಸಿದ್ದರು. ತಮ್ಮ ತಮ್ಮ ರಾಜ್ಯಗಳಲ್ಲಿ ಕೊನೆಯದಾಗಿ ಎಸ್ಐಆರ್ ಪ್ರಕ್ರಿಯೆ ನಡೆದ ಬಳಿಕ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಿದ್ದರು.
ಹಲವು ರಾಜ್ಯಗಳ ಚುನಾವಣಾಧಿಕಾರಿಗಳು ತಮ್ಮ ಕೊನೆಯ ಎಸ್‌ಐಆರ್ ನಂತರ ಪ್ರಕಟವಾದ ಮತದಾರರ ಪಟ್ಟಿಗಳನ್ನು ಈಗಾಗಲೇ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಬಹುತೇಕ ರಾಜ್ಯಗಳಲ್ಲಿ 2002 ಮತ್ತು 2004ರ ನಡುವೆ ಕೊನೆಯದಾಗಿ ಎಸ್ಐಆರ್ ನಡೆದಿತ್ತು.
‘ಬಂಗಾಳ: ಅಡ್ಡಿಎದುರಾಗದು’
‘ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆಸಲು ಯಾವುದೇ ಅಡ್ಡಿ ಎದುರಾಗದು’ ಎಂಬುದನ್ನು ಚುನಾವಣಾ ಅಯೋಗ (ಇ.ಸಿ) ಪುನರುಚ್ಚರಿಸಿದೆ. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆದರೆ ಅಲ್ಲಿ ‘ರಕ್ತಪಾತ’ ಆಗಲಿದೆ ಎಂದು ವರದಿಯಾಗಿರುವ ಬಗ್ಗೆ ಎದುರಾದ ಪ್ರಶ್ನೆಗೆ ಜ್ಞಾನೇಶ್ ಕುಮಾರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
‘ಇ.ಸಿ ತನ್ನ ಕರ್ತವ್ಯ ನಿರ್ವಹಿಸುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಸಾಂವಿಧಾನಿಕವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಬದ್ಧವಾಗಿವೆ. ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಸಂವಿಧಾನದಲ್ಲಿ ತಿಳಿಸಿರುವಂತೆ ತಮ್ಮ ಜವಾಬ್ದಾರಿ ನಿರ್ವಹಿಸುತ್ತವೆ’ ಎಂದು ಹೇಳಿದರು.
‘ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಮತದಾರರ ಪಟ್ಟಿ ಸಿದ್ಧಪಡಿಸಲು ಮತ್ತು ಚುನಾವಣೆ ನಡೆಸಲು ಇ.ಸಿಗೆ ಅಗತ್ಯವಿರುವ ಸಿಬ್ಬಂದಿಯನ್ನು ಒದಗಿಸಲು ರಾಜ್ಯಗಳು ಬದ್ಧವಾಗಿವೆ’ ಎಂದರು.
ಸಿಜೆಐ ಗವಾಯಿ ಅವರ ಬಳಿಕ ನ್ಯಾ. ಸೂರ್ಯಕಾಂತ್ ಅವರೇ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಗವಾಯಿ ಅವರು ನ. 23ರಂದು ನಿವೃತ್ತಿಯಾಗಲಿದ್ದಾರೆ. ಈಬಳಿಕಸೂರ್ಯಕಾಂತ್ 53ನೇಸಿಜೆಐಆಗಲಿದ್ದಾರೆ.
ಸುಪ್ರೀಂ ಕೋರ್ಟ್‌ನ ನ್ಯಾಯ ಮೂರ್ತಿಯಾಗಿ ನ್ಯಾ. ಸೂರ್ಯಕಾಂತ್ ಅವರು 2019ರ ಮೇ 24ರಂದು ಬಡ್ತಿ ಪಡೆದಿದ್ದರು. ಇವರು 2027ರ ಫೆ. 9ರಂದು ನಿವೃತ್ತಿಯಾಗಲಿದ್ದಾರೆ. ಇವರು ಸುಮಾರು 15 ತಿಂಗಳವರೆಗೆ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸಿಜೆಐ ಆಗಿದ್ದವರು ತಮ್ಮ ನಿವೃತ್ತಿಗೆ ಒಂದು ತಿಂಗಳು ಇರುವಂತೆ ಮುಂದಿನ ಸಿಜೆಐ ಆಗುವವರ ಹೆಸರನ್ನು ಶಿಫಾರಸು ಮಾಡಬೇಕಾಗುತ್ತದೆ.
ಈ ವಿಚಾರವಾಗಿ ಕೇಂದ್ರ ಹಣಕಾಸು ಸಚಿವಾಲಯವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜೊತೆ ಚರ್ಚೆ ನಡೆಸಿದೆ. ಕಳೆದ ಎರಡು ತಿಂಗಳುಗಳಿಂದ ಚರ್ಚೆ ನಡೆಯುತ್ತಿದೆ ಎಂದು ಮೂಲವೊಂದು ಹೇಳಿದೆ. ಆದರೆ ಈ ವಿಚಾರವಾಗಿ ಅಂತಿಮ ತೀರ್ಮಾನ ಇನ್ನೂ ಆಗಿಲ್ಲ.
ಭಾರತದ ಬ್ಯಾಂಕಿಂಗ್ ಉದ್ಯಮದಲ್ಲಿ ವಿದೇಶಿ ಕಂಪನಿಗಳು ಹೆಚ್ಚಿನ ಮಟ್ಟದ ಆಸಕ್ತಿ ತೋರಿಸಿವೆ. ದುಬೈ ಮೂಲದ ಎಮಿರೇಟ್ಸ್ ಎನ್‌ಬಿಡಿ ಸಂಸ್ಥೆಯು ಖಾಸಗಿ ವಲಯದ ಆರ್‌ಬಿಎಲ್ ಬ್ಯಾಂಕ್‌ನ ಶೇಕಡ 60ರಷ್ಟು ಪಾಲನ್ನು ಖರೀದಿಸಿದೆ. ಯೆಸ್ ಬ್ಯಾಂಕ್‌ನ ಶೇ 20ರಷ್ಟು ಪಾಲನ್ನು ಜಪಾನ್‌ನ ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್ ಕಾರ್ಪ್ ಖರೀದಿಸಿ, ನಂತರ ಹೆಚ್ಚುವರಿಯಾಗಿ ಶೇ 4.99ರಷ್ಟು ಪಾಲು ಖರೀದಿಸಿದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಗ್ಗೆಯೂ ವಿದೇಶಿ ಹೂಡಿಕೆದಾರರು ಆಸಕ್ತಿ ವಹಿಸಿದ್ದಾರೆ. ಈ ಬ್ಯಾಂಕ್ ಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಇರುವ ಮಿತಿಯನ್ನು ಹೆಚ್ಚಿಸಿದರೆ ಅವುಗಳಿಗೆ ಭವಿಷ್ಯದಲ್ಲಿ ಹೆಚ್ಚಿನ ಬಂಡವಾಳ ಹೊಂದಲು ಆಗುತ್ತದೆ ಎಂದು ಮೂಲಗಳು ವಿವರಿಸಿವೆ.
ಶಾಲೆಯ ಆಡಳಿತಾಧಿಕಾರಿ ಆರೋಗ್ಯಪ್ಪ ಮಾತನಾಡಿ, ‘ನಮ್ಮ ಶಾಲೆಯ ವಿದ್ಯಾರ್ಥಿನಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಠಿಣ ಶ್ರಮದಿಂದ ಅಮೋಘ ಸಾಧನೆ ಮಾಡುವ ಮೂಲಕ ಚರಿತಾ ಪದಕ ಗೆದ್ದು ಬರಲಿ’ ಎಂದು ಹಾರೈಸಿದರು.
ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (ಕೆಎಎಸ್‌ಎಸ್) ಅ.1 ರಿಂದ ಜಾರಿಯಾಗಿದ್ದು, ಇದುವರೆಗೆ 4.83 ಲಕ್ಷ ನೌಕರರು ಸಮ್ಮತಿ ಸೂಚಿಸಿದ್ದಾರೆ.
ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತಾದರೂ ಕೆಲ ತಾಂತ್ರಿಕ ಕಾರಣಗಳಿಂದ ಅನುಷ್ಠಾನ ವಿಳಂಬವಾಗಿತ್ತು. ಅಂತಿಮವಾಗಿ ಅ.1 ರಿಂದ ಅನುಷ್ಠಾನಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು.
ಎಲ್ಲವರ್ಗದನೌಕರರುಪ್ರತಿತಿಂಗಳುತಮ್ಮಪಾಲಿನಕಂತುಪಾವತಿಸಬೇಕಿದೆ. ಪತಿ–ಪತ್ನಿಇಬ್ಬರೂಸರ್ಕಾರಿನೌಕರರಾಗಿದ್ದಲ್ಲಿಯಾರಾದರೂಒಬ್ಬರವೇತನದಿಂದಮಾತ್ರಒಂದುಕಂತುಪಾವತಿಸಬಹುದು. ಎಚ್ಆರ್ಎಂಎಸ್ ವ್ಯಾಪ್ತಿಯಲ್ಲಿಇರದಇತರೆಸರ್ಕಾರಿಸಂಸ್ಥೆಗಳನೌಕರರಕಂತಿನಮೊತ್ತವನ್ನುಆಯಾಸಂಸ್ಥೆಗಳುಹಿಡಿದುಕೊಂಡುಟ್ರಸ್ಟ್ ಖಾತೆಗೆಜಮೆಮಾಡಬೇಕು. ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲ ನೌಕರರ ಕಂತನ್ನು ಅಕ್ಟೋಬರ್ ತಿಂಗಳ ವೇತನದಿಂದಲೇ ಕಡಿತ ಮಾಡಲಾಗುತ್ತದೆ. ನಂತರ ಒಟ್ಟು ಮೊತ್ತವನ್ನು ಖಜಾನೆ–2 ಮೂಲಕ ಟ್ರಸ್ಟ್ ಖಾತೆಗೆ ಜಮೆ ಮಾಡಲಾಗುತ್ತದೆ.
ಆರಂಭಿಕತೊಡಕು, ಮರುಪಾವತಿಸೌಲಭ್ಯವಿಸ್ತರಣೆ: ಸರ್ಕಾರಿ ನೌಕರರು ಯಾವುದೇ ಸಾರ್ವಜನಿಕ ಆಸ್ಪತ್ರೆಗಳು, ಬೋಧನಾ ಆಸ್ಪತ್ರೆಗಳು, ಸ್ಥಳೀಯ ಸಂಸ್ಥೆಗಳ ಆಸ್ಪತ್ರೆಗಳು ಹಾಗೂ ಯೋಜನೆಗೆ ನೋಂದಾಯಿಸಿಕೊಂಡ ಖಾಸಗಿ ಆಸ್ಪತ್ರೆ ಗಳಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಸರ್ಕಾರಿ ನೌಕರರ ಹೆಸರು ಎಚ್‌ಆರ್‌ಎಂಎಸ್‌ನಲ್ಲೇ ದಾಖಲಾಗಿ ರುತ್ತದೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದರೆ ನಗದುರಹಿತ ಚಿಕಿತ್ಸೆಗೆ ಸಮಸ್ಯೆ ಯಾಗದು. ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಪುರುಷ ನೌಕರರ ತಂದೆ–ತಾಯಿಗೆ ಮಾತ್ರ ಸಿಗುತ್ತಿದ್ದ ಆರೋಗ್ಯ ಸೌಲಭ್ಯವನ್ನು ಈ ಬಾರಿ ಮಹಿಳಾ ನೌಕರರ ತಂದೆ– ತಾಯಿಗೂ ವಿಸ್ತರಿಸಲಾಗಿದೆ. ಈ ಎಲ್ಲ ಅವಲಂಬಿತರ ಹೆಸರು ಸೇರ್ಪಡೆ ಕಾರ್ಯವನ್ನು ಹಲವು ನೌಕರರು ಪೂರ್ಣಗೊಳಿಸಿಲ್ಲ. ಇದರಿಂದ ಅವಲಂಬಿತರನ್ನು ಆಸ್ಪತ್ರೆಗೆ ದಾಖಲಿಸಿದಾಗ ಸಮಸ್ಯೆ ಎದುರಿಸು ವಂತಾಗಿದೆ. ಇಂತಹ ತಾಂತ್ರಿಕ ಕಾರಣಗಳಿಂದಾಗಿ ನಗದು ಚಿಕಿತ್ಸಾ ಸೌಲಭ್ಯ ಆರಂಭವಾಗಿ ದ್ದರೂ, ವೈದ್ಯಕೀಯ ವೆಚ್ಚ ಮರು ಪಾವತಿ ಸೌಲಭ್ಯವನ್ನೂ ಸರ್ಕಾರ 6 ತಿಂಗಳ ವರೆಗೆ ವಿಸ್ತರಿಸಿದೆ. ಮುಂಗಡ ಪಾವತಿಸಿ, ಚಿಕಿತ್ಸೆ ಪಡೆದ ನೌಕರರು ತಾವು ಮಾಡಿದ ವೆಚ್ಚದ ಮೊತ್ತವನ್ನು ಮರಳಿ ಪಡೆಯಬಹುದು.
‘ಯೋಜನೆ ವ್ಯಾಪ್ತಿಗೆ ಇನ್ನಷ್ಟು ಆಸ್ಪತ್ರೆಗಳನ್ನು ಸೇರ್ಪಡೆ ಮಾಡುವ ಕೆಲಸ ನಡೆದಿದೆ. ಚಿಕಿತ್ಸಾ ವೆಚ್ಚಗಳ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಸಮ್ಮತಿ ನೀಡುವ ಭರವಸೆ ಇದೆ. ಅವಲಂಬಿತ ಹೆಸರು ಸೇರ್ಪಡೆ ಕಾರ್ಯವೂ ಪ್ರಗತಿಯಲ್ಲಿದೆ. ಯೋಜನೆಯಿಂದ ನೌಕರರ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ’ ಎನ್ನುತ್ತಾರೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ.
ಆಂಧ್ರ ಪ್ರದೇಶ ಹಾಗೂ ಒಡಿಶಾ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಸಿದ್ಧತೆಗಳನ್ನು ಮಾಡಿಕೊಂಡಿವೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಿದ್ಧತಾ ಕಾರ್ಯಗಳ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಾಯ್ಡು ಅವರಿಗೆ ಭರವಸೆ ನೀಡಿದ್ದಾರೆ.
ಪ್ರತಿ ಗಂಟೆಗೆ 90 ಕಿ.ಮೀನಿಂದ 100 ಕಿ.ಮೀವರೆಗೂ ಗಾಳಿ ಬೀಸಲಿದೆ. ಗಾಳಿಯ ವೇಗವು ಗಂಟೆಗೆ 110 ಕಿ.ಮೀವರೆಗೂ ತಲುಪಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಚಂಡಮಾರುತದ ಪ್ರಭಾವವು ಆಂಧ್ರದಲ್ಲಿ ಈಗಾಗಲೇ ಆರಂಭವಾಗಿದ್ದು, ಸೋಮವಾರ ಬೆಳಿಗ್ಗೆಯಿಂದ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಮಂಗಳವಾರದಿಂದ ಶುಕ್ರವಾರದವರೆಗೆ ಪಶ್ಚಿಮ ಬಂಗಾಳ ದಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಒಡಿಶಾದ ದಕ್ಷಿಣ ಭಾಗದ ಎಂಟು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಈ ಭಾಗದ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಸರ್ಕಾರ ಆರಂಭಿಸಿದೆ.
ಆಂಧ್ರದಲ್ಲಿ ಸರ್ಕಾರಿ ನೌಕರರ ರಜೆಗಳನ್ನು ರದ್ದು ಮಾಡಲಾಗಿದ್ದು, ಮುನ್ನೆಚ್ಚರಿಕಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೂಚಿಸಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ತೆಲಂಗಾಣದ ಕೆಲವು ಪ್ರದೇಶ ಗಳಲ್ಲಿಯೂ ಭಾರಿ ಮಳೆಯಾಗಲಿದೆ.
ಸಂದರ್ಭ: ಆಮದುಪ್ರಮಾಣದಿನವೊಂದಕ್ಕೆ 5.40 ಲಕ್ಷಬ್ಯಾರಲ್ಗೆಏರಿಕೆ: ಭಾರತವುಅಮೆರಿಕದಿಂದಆಮದುಮಾಡಿಕೊಳ್ಳುವಕಚ್ಚಾತೈಲದಪ್ರಮಾಣವುಅಕ್ಟೋಬರ್ನಲ್ಲಿಹೆಚ್ಚಳಕಂಡಿದೆ. ಇದು 2022ರನಂತರದಗರಿಷ್ಠಮಟ್ಟ.
ಕಚ್ಚಾ ತೈಲದ ಆಮದು ಪ್ರಮಾಣವನ್ನು ರಷ್ಯಾ ಹೊರಗೂ ಹೆಚ್ಚಿಸಿಕೊಳ್ಳುವ, ಅಮೆರಿಕದ ಜೊತೆ ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ಮೂಡಿರುವ ಬಿಕ್ಕಟ್ಟನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿ ಭಾರತವು ಈ ಹೆಜ್ಜೆ ಇರಿಸಿದೆ ಎನ್ನಲಾಗಿದೆ.
ಅಕ್ಟೋಬರ್ 27, ಹೊತ್ತಿಗೆ ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ದಿನವೊಂದಕ್ಕೆ 5.40 ಲಕ್ಷ ಬ್ಯಾರಲ್‌ಗೆ ತಲುಪಿದೆ ಎಂದು ದತ್ತಾಂಶಗಳ ಮೇಲೆ ಗಮನ ಇರಿಸುವ ಕೆಪ್ಲರ್ ಸಂಸ್ಥೆ ಹೇಳಿದೆ.
ಅಕ್ಟೋಬರ್ ಅಂತ್ಯದ ಹೊತ್ತಿಗೆ ಆಮದು ಪ್ರಮಾಣವು ದಿನವೊಂದಕ್ಕೆ 5.75 ಲಕ್ಷ ಬ್ಯಾರಲ್‌ಗೆ ತಲುಪಬಹುದು. ನವೆಂಬರ್‌ನಲ್ಲಿ ಆಮದು ಪ್ರಮಾಣವು ದಿನವೊಂದಕ್ಕೆ 4 ಲಕ್ಷದಿಂದ 4.5 ಲಕ್ಷ ಬ್ಯಾರಲ್‌ವರೆಗೆ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಈ ವರ್ಷದಲ್ಲಿ ಇದುವರೆಗೆ ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ತೈಲದ ಸರಾಸರಿ ಪ್ರಮಾಣಕ್ಕೆ (ದಿನವೊಂದಕ್ಕೆ 3 ಲಕ್ಷ ಬ್ಯಾರಲ್) ಹೋಲಿಸಿದರೆ ಇದು ಹೆಚ್ಚು.
ಹಣಕಾಸಿನ ಲೆಕ್ಕಾಚಾರ ಆಧರಿಸಿ ಅಮೆರಿಕದಿಂದ ಆಮದು ಪ್ರಮಾಣ ಹೆಚ್ಚಿಸಲಾಗಿದೆ. ಬ್ರೆಂಟ್ ಕಚ್ಚಾ ತೈಲಕ್ಕಿಂತ ಡಬ್ಲ್ಯುಟಿಐ ಮಿಡ್‌ಲ್ಯಾಂಡ್ ಕಚ್ಚಾ ತೈಲವು ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳಿಗೆ ಕಡಿಮೆ ದರಕ್ಕೆ ಸಿಕ್ಕಿದೆ ಎಂದು ಕೆಪ್ಲರ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಸುಮಿತ್ ರಿತೋಲಿಯಾ ಹೇಳಿದ್ದಾರೆ.
ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳು ಅಮೆರಿಕದ ಕಚ್ಚಾ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಮುಂದಾಗಿವೆ. ತಮ್ಮ ಪೂರೈಕೆ ಜಾಲವನ್ನು ವಿಸ್ತರಿಸಿಕೊಳ್ಳುವ ಜೊತೆಗೆ, ಅಮೆರಿಕದ ಜೊತೆ ಸಹಕರಿಸಲು ಸಿದ್ಧ ಎಂಬ ಸಂದೇಶ ರವಾನಿಸುವ ಉದ್ದೇಶವೂ ಇದರ ಹಿಂದಿದೆ ಎಂದು ಸರ್ಕಾರ ಹಾಗೂ ವರ್ತಕರ ವಲಯದ ಮೂಲಗಳು ಹೇಳಿವೆ.
ಆದರೆ ಅಮೆರಿಕದಿಂದ ಕಚ್ಚಾ ತೈಲ ಆಮದು ಇನ್ನೂ ಹೆಚ್ಚಾಗುವ ಸಾಧ್ಯತೆ ಕಡಿಮೆ ಎಂದು ರಿತೊಲಿಯಾ ಅಭಿಪ್ರಾಯಪಟ್ಟಿದ್ದಾರೆ. ‘ಈಗ ಭಾರತವು ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸಿರುವುದಕ್ಕೆ ಒಂದು ಕಾರಣ ಒಳ್ಳೆಯ ಬೆಲೆಗೆ ಅದು ಸಿಕ್ಕಿರುವುದು. ಅಲ್ಲಿಂದ ಭಾರತಕ್ಕೆ ಕಚ್ಚಾ ತೈಲ ತರಲು ಹೆಚ್ಚಿನ ಸಮಯ ಬೇಕು, ಸಾಗಣೆ ವೆಚ್ಚ ಹೆಚ್ಚಾಗಿರುತ್ತದೆ. ಹೀಗಾಗಿ ಅಲ್ಲಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿ ಆಗಲಿಕ್ಕಿಲ್ಲ’ ಎಂದು ಅವರು ಹೇಳಿದ್ದಾರೆ.
ಐಒಸಿಲಾಭಹಲವುಪಟ್ಟುಏರಿಕೆ
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ (ಐಒಸಿ) ಸೆಪ್ಟೆಂಬರ್ ತ್ರೈಮಾಸಿಕದ ಲಾಭವು ಹಲವು ಪಟ್ಟು ಹೆಚ್ಚಾಗಿ ₹7,610 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಲಾಭವು ₹180 ಕೋಟಿ ಆಗಿತ್ತು.
ಸಂದರ್ಭ: ‘ಎಲ್ಲಬಗೆಯನಿರ್ಬಂಧಗಳನ್ನುಪಾಲಿಸಲಾಗುವುದು’ಎಂದುಐಒಸಿಅಧ್ಯಕ್ಷಅರವಿಂದರ್ಸಿಂಗ್ಸಾಹ್ನಿಹೇಳಿದ್ದಾರೆ. ಆದರೆ, ರಷ್ಯಾದಿಂದಕಚ್ಚಾತೈಲಆಮದುಮಾಡಿಕೊಳ್ಳುವುದರಕುರಿತಪ್ರಶ್ನೆಗೆಅವರುಪ್ರತಿಕ್ರಿಯೆನೀಡಲುನಿರಾಕರಿಸಿದ್ದಾರೆ.
ಐಒಸಿದೇಶದಅತಿದೊಡ್ಡತೈಲಕಂಪನಿ. ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಐಒಸಿ ಆಮದು ಮಾಡಿಕೊಂಡ ಕಚ್ಚಾ ತೈಲದಲ್ಲಿ ರಷ್ಯಾದಿಂದ ಬಂದ ಕಚ್ಚಾ ತೈಲದ ಪಾಲು ಶೇ 21ರಷ್ಟಿದೆ.
ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳು ಆಮದು ಮೂಲವನ್ನು ಹೆಚ್ಚಿಸಿಕೊಳ್ಳಲು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರಂಭಿಸಿವೆ. ಅವು ಕೊಲಂಬಿಯಾ, ಕೆನಡಾ ಮತ್ತು ಪಶ್ಚಿಮ ಏಷ್ಯಾದಿಂದ ಆಮದು ಮಾಡಿಕೊಳ್ಳುವುದನ್ನು ಹೆಚ್ಚಿಸಿವೆ.
ಭಾರತದ ಕಂಪನಿಗಳು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಪ್ರತಿದಿನ 16.8 ಲಕ್ಷ ಬ್ಯಾರಲ್ ಆಗಿತ್ತು. ಇದು ಜೂನ್ ತ್ರೈಮಾಸಿಕದ ಆಮದು ಪ್ರಮಾಣಕ್ಕೆ ಹೋಲಿಸಿದರೆ ಶೇ 13ರಷ್ಟು ಕಡಿಮೆ.
ಶಿಕ್ಷಣ ಸಚಿವ ಅಮಡೌ ಸೈ ಸವಾನೆ ಈ ಬಗ್ಗೆ ಮಾಹಿತಿ ನೀಡಿದ್ದು, ‘ಇಂಧನ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಶಾಲಾ–ಕಾಲೇಜುಗಳ ಸಿಬ್ಬಂದಿಯ ಸಂಚಾರಕ್ಕೂ ತೊಡಕಾಗುತ್ತಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದಿದ್ದಾರೆ.
ಅಲ್ಲದೇ, ನವೆಂಬರ್ 10ರಂದು ಶಾಲೆಗಳನ್ನು ಮತ್ತೆ ತೆರೆಯಲಾಗುವುದು. ಅಷ್ಟರೊಳಗೆ ಸಹಜ ಸ್ಥಿತಿಯನ್ನು ಮರುಸ್ಥಾಪಿಸಲು ಆಡಳಿತ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದೂ ಹೇಳಿದ್ದಾರೆ.
ಅಲ್–ಖೈದಾ ಬೆಂಬಲಿತ ಜಮಾತ್ ನುಸೃತ್ ಅಲ್–ಇಸ್ಲಾಮ್ ವಲ್–ಮುಸ್ಲಿಮೀನ್ ಎಂಬ ಭಯೋತ್ಪಾದಕ ಸಂಘಟನೆಯು ಮಾಲಿಯ ಸುತ್ತ ಮುತ್ತಲಿನ ದೇಶಗಳಿಂದ ಇಂಧನ ಆಮದು ಮಾಡಿಕೊಳ್ಳದಂತೆ ಸೆಪ್ಟೆಂಬರ್‌ನಲ್ಲಿ ನಿರ್ಬಂಧ ಹೇರಿದೆ.
ಇಂಧನ ಹೊತ್ತು ತರುವ ಟ್ಯಾಂಕರ್‌ಗಳನ್ನು ಗಡಿಯಲ್ಲೇ ತಡೆದು, ಅವುಗಳ ಮೇಲೆ ದಾಳಿ ನಡೆಸಿ, ಇಂಧನ ಪೂರೈಕೆಗೆ ಭಯೋತ್ಪಾದಕರು ತಡೆ ಒಡ್ಡಿದ್ದಾರೆ. ಇದು ಮಾಲಿಯಲ್ಲಿ ಆರ್ಥಿಕ, ಸಾಮಾಜಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
ರೈತ ಹೇಮರೆಡ್ಡಿ ಬ.ಮೇಟಿ ಬಾಳೆಯನ್ನು ಇರಾಕ್, ಇರಾನ್ ದೇಶಗಳಿಗೆ ರಫ್ತು ಮಾಡಲು ಮುಂದಾಗಿದ್ದಾರೆ. 20 ಎಕರೆ ಜಮೀನಿನಲ್ಲಿ ಬೆಳೆದಿರುವ ಬಾಳೆ ಭಾಗಶಃ ಕಟಾವಿಗೆ ಬಂದಿದೆ. ಅವರ ಪುತ್ರ ಬಾಪುಗೌಡ ಮೇಟಿ ವಿದೇಶಿ ಮಾರುಕಟ್ಟೆಯ ಸಂಪರ್ಕ ಸಾಧಿಸಿದ್ದಾರೆ.
‘ಮಧ್ಯಪ್ರದೇಶ, ಗುಜರಾತ್‌ದಿಂದ ಸಸಿಗಳನ್ನು ತರಿಸಿಕೊಂಡಿದ್ದೆವು. ಸ್ಥಳೀಯ ಮಾರುಕಟ್ಟೆಯಲ್ಲಿ ಕೆ.ಜಿಗೆ ₹3ರಿಂದ ₹4ಕ್ಕೆ ಕೇಳುತ್ತಾರೆ. ಇಷ್ಟು ಕಡಿಮೆಗೆ ನೀಡಿದರೆ ನಷ್ಟ ಖಂಡಿತ. ಎಕರೆಗೆ ತಲಾ ₹1.15 ಲಕ್ಷದಂತೆ ಖರ್ಚು ಮಾಡಿದ್ದು, 20 ಎಕರೆಗೆ 1 ಸಾವಿರ ಟನ್ ಬಾಳೆ ಬರುವ ನಿರೀಕ್ಷೆ ಇದೆ’ ಎಂದು ಹೇಮರೆಡ್ಡಿ ಮೇಟಿ ತಿಳಿಸಿದರು.
‘ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬೆಳೆ ತಲುಪಿಸಲು ಮೀರಜ್‌ನ ಚಾಂದ್ ಫ್ರೂಟ್ಸ್ ಅವರನ್ನು ಸಂಪರ್ಕಿಸಲಾಗಿತ್ತು. ಅವರು ಖರೀದಿಗೆ ಒಪ್ಪಿದರು. ಕಂಟೇನರ್‌ಗಳಲ್ಲಿ ಬಾಳೆ ಕಾಯಿಗಳನ್ನು ಸಂಗ್ರಹಿಸಿ ಹಡಗುಗಳ ಮೂಲಕ ಇರಾಕ್, ಇರಾನ್‌ಗೆ ಕಳುಹಿಸು ತ್ತಿದ್ದೇವೆ. ಕೆ.ಜಿಗೆ ₹13ರಂತೆ ಈವರೆಗೆ 35 ಟನ್ ಬಾಳೆಕಾಯಿ ಕಳುಹಿಸಲಾಗಿದೆ’ ಎಂದು ತಿಳಿಸಿದರು.
ಪಶ್ಚಿಮ ಬಂಗಾಳದ ಕಾರ್ಮಿಕರು: ಬಾಳೆ ಗೊನೆಯನ್ನು ಕತ್ತರಿಸಿ, ಅದು ಕೆಡದಂತೆ ವೈಜ್ಞಾನಿಕ ಕ್ರಮದಲ್ಲಿ ಪ್ಯಾಕಿಂಗ್ ಮಾಡಲು ಪಶ್ಚಿಮ ಬಂಗಾಳದ 25 ಕಾರ್ಮಿಕರು ನಾಲ್ಕು ದಿನಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
‘ಗ್ರಾಮದ ರೈತರೊಬ್ಬರು ಬೆಳೆದಿರುವ ಬಾಳೆ ಅನ್ಯ ದೇಶಕ್ಕೆ ಹೋಗುತ್ತಿದೆ. ನಮ್ಮಲ್ಲೂ ಉತ್ಕೃಷ್ಟ ದರ್ಜೆಯ ಬಾಳೆ ಕೃಷಿ ನಡೆದಿರುವುದು ಹೆಮ್ಮೆಯ ಸಂಗತಿ’ ಎಂದು ಸ್ಥಳೀಯ ರೈತರು ಹೇಳುತ್ತಾರೆ.
ಗುಣಮಟ್ಟದಬಾಳೆ
‘ದೇವರ ನಿಂಬರಗಿಯ ಯಂಕಣ್ಣ ಬಿರಾದಾರ ಅವರು ಬಸರಕೋಡದಲ್ಲಿ ಗುಣಮಟ್ಟದ ಬಾಳೆ ಇದೆ ಎಂದು ತಿಳಿಸಿದ್ದರು. ಹೇಮರೆಡ್ಡಿ ಅವರು ಬೆಳೆದ ಬಾಳೆ ರಫ್ತುಮಾಡಲು ಯೋಗ್ಯ ವಾಗಿದೆ. ಖರೀದಿ ಒಪ್ಪಂದ ಆಗಿದೆ. ಈ ಬಾಳೆಯು ನ. 1ರಂದು ಗುಣಮಟ್ಟದ ಪ್ಯಾಕಿಂಗ್‌ನಲ್ಲಿ ಇರಾನ್, ಇರಾಕ್, ಸೌದಿ ಅರೇಬಿಯಾಕ್ಕೆ ರವಾನೆಯಾಗ ಲಿದೆ’ ಎನ್ನುತ್ತಾರೆ ಬಾಳೆ ಖರೀದಿ ದಾರ ಅಬೂಬಕರ ಖರೋಷಿ.
ಸರ್ಕಾರಿ ಬ್ಯಾಂಕ್‌ಗಳಲ್ಲಿ ಎಫ್‌ಡಿಐ ಹೆಚ್ಚಳವು, ನಿಯಮಗಳ ವಿಚಾರದಲ್ಲಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳ ನಡುವಿನ ಅಂತರವನ್ನು ತಗ್ಗಿಸುವ ಪ್ರಯತ್ನದ ಭಾಗವೂ ಆಗಿದೆ ಎಂದು ಮೂಲಗಳು ಹೇಳಿವೆ. ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಶೇ 74ರಷ್ಟು ಎಫ್‌ಡಿಐಗೆ ಅವಕಾಶ ಇದೆ.
ಈ ವಿಚಾರವಾಗಿ ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯದಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ದೇಶದ ಆರ್ಥಿಕ ಬೆಳವಣಿಗೆ ದರವು ಕಳೆದ ಮೂರು ವರ್ಷಗಳಿಂದ ಸರಾಸರಿ ಶೇ 8ರಷ್ಟಿದೆ. ಇದರಿಂದಾಗಿ ಸಾಲಕ್ಕೆ ಬೇಡಿಕೆ ಹೆಚ್ಚಾಗಿದೆ, ದೇಶದ ಬ್ಯಾಂಕ್‌ಗಳು ಹೂಡಿಕೆಗೆ ಆಕರ್ಷಕವಾಗುತ್ತಿವೆ.
ದೇಶದಲ್ಲಿ 12 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿವೆ. ಈ ಬ್ಯಾಂಕ್‌ಗಳಲ್ಲಿ ಕನಿಷ್ಠ ಶೇ 51ರಷ್ಟು ಪಾಲನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈಗ ದೇಶದ ಸರ್ಕಾರಿ ಬ್ಯಾಂಕ್‌ಗಳಲ್ಲಿ ಎಫ್‌ಡಿಐ ಪ್ರಮಾಣವು ಒಂದೊಂದು ಬ್ಯಾಂಕ್‌ನಲ್ಲಿ ಒಂದೊಂದು ಮಟ್ಟದಲ್ಲಿದೆ. ಕೆನರಾ ಬ್ಯಾಂಕ್‌ನಲ್ಲಿ ಅದು ಶೇ 12ರಷ್ಟಿದೆ.
ಸಮಾಜದ ದುರ್ಬಲ ವರ್ಗಗಳಿಗೂ ಸಾಲ ನೀಡುವ ಹೊಣೆಯು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮೇಲೆ ಇರುವ ಕಾರಣ ಹೂಡಿಕೆಯ ದೃಷ್ಟಿಯಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಖಾಸಗಿ ವಲಯದ ಬ್ಯಾಂಕ್‌ಗಳಷ್ಟು ಬಲಿಷ್ಠವಲ್ಲ ಎಂಬ ನಂಬಿಕೆ ಇದೆ.
ವಿಶ್ವಕುಸ್ತಿ: ಸ್ವರ್ಣಜಯಿಸಿದಸುಜೀತ್
ಸಂದರ್ಭ: ಭಾರತದಉದಯೋನ್ಮುಖಕುಸ್ತಿಪಟುಸುಜೀತ್ ಕಲ್ಕಲ್ ಅವರು 23 ವರ್ಷದೊಳಗಿನವರವಿಶ್ವಕುಸ್ತಿಚಾಂಪಿಯನ್ಷಿಪ್ನಲ್ಲಿಚಿನ್ನದಪದಕಜಯಿಸಿದರು.
ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಕಣಕ್ಕಿಳಿದಿರುವ ಸುಜೀತ್ ಅವರು ಸೋಮವಾರ ನಡೆದ ಫೈನಲ್ ಹಣಾಹಣಿಯಲ್ಲಿ 10–0ಯಿಂದ ಉಜ್ಬೇಕಿಸ್ತಾನದ ಉಮಿಜೊನ್ ಜಲಲೊವ್ ಅವರನ್ನು ಅಧಿಕಾರಯುತವಾಗಿ ಮಣಿಸಿದರು. 22 ವರ್ಷ ವಯಸ್ಸಿನ ಸುಜೀತ್ ಕಳೆದ ಬಾರಿ ಈ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದರು.
ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗ, ಅರ್ಕಾಡಿಸ್ ಇಂಡಿಯಾ ಮತ್ತು ಮ್ಯಾಪಲ್ಸ್ (ಮ್ಯಾಪ್ ಮೈ ಇಂಡಿಯಾ) ಜಂಟಿಯಾಗಿ ಈ ಉಪಕ್ರಮವನ್ನು ಜಾರಿಗೊಳಿಸಿವೆ.
ಮ್ಯಾಪಲ್ಸ್ ಆ್ಯಪ್ ಬಳಕೆದಾರರು ಬೆಂಗಳೂರು ನಗರದ ಟ್ರಾಫಿಕ್ ಸಿಗ್ನಲ್‌ಗಳು ಸಮೀಪಿಸುತ್ತಿದ್ದಂತೆಯೇ ಟ್ರಾಫಿಕ್ ಸಿಗ್ನಲ್‌ಗಳು ಕೆಂಪು ಅಥವಾ ಹಸಿರು ನಿಶಾನೆಗೆ ಬದಲಾಗಲು ಎಷ್ಟು ಸೆಕೆಂಡುಗಳಿವೆ ಎಂಬ ನಿಖರ ಮಾಹಿತಿಯನ್ನು ಈಗ ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದು.
ಪ್ರತಿ ಸಿಗ್ನಲ್‌ಗೂ ಕಾಲಮಿತಿ ಅಳವಡಿಸಿ ವಾಹನ ಸಂಚಾರ ನಿಯಂತ್ರಣ ಮಾಡುವ ಹಳೆಯ ವ್ಯವಸ್ಥೆಯ ಬದಲಿಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ಹಸಿರು ನಿಶಾನೆ ನೀಡುವ ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ಎಟಿಸಿಎಸ್) ನಗರದ 169 ಜಂಕ್ಷನ್‌ಗಳಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಈ ಟ್ರಾಫಿಕ್ ಸಿಗ್ನಲ್‌ಗಳು ಎಷ್ಟು ಸೆಕೆಂಡುಗಳ ಕಾಲ ಹಸಿರು, ಕೆಂಪು ನಿಶಾನೆ ತೋರುತ್ತವೆ ಎಂಬುದನ್ನು ಮ್ಯಾಪಲ್ಸ್ ಆ್ಯಪ್‌ನಲ್ಲಿ ನೋಡಬಹುದು.
‘ಈ ಎಐ ಚಾಲಿತ ಸ್ಮಾರ್ಟ್ ಸಿಗ್ನಲ್‌ಗಳಲ್ಲಿ ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್ಡ್ (ವಿಎಸಿ) ತಂತ್ರಜ್ಞಾನದ ಸಹಾಯದಿಂದ ಸಿಗ್ನಲ್‌ಗಳಲ್ಲಿ ಬಿತ್ತರಿಸುವ ನೈಜ ಸಮಯವನ್ನು ಮ್ಯಾಪಲ್ಸ್ ಆ್ಯಪ್‌ನಲ್ಲಿ ತೋರಿಸಲಾಗುತ್ತದೆ. ಇದನ್ನು ಸಂಚಾರ ವಿಭಾಗದ ಪೊಲೀಸರು ಮ್ಯಾನ್ಯುಯಲ್ ಆಗಿ ನಿರ್ವಹಣೆ ಮಾಡಿದರೆ, ಆ್ಯಪ್‌ನಲ್ಲಿ ಮಾಹಿತಿ ಸಿಗುವುದಿಲ್ಲ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಎಐ ಸಿಗ್ನಲ್‌ಗಳಲ್ಲಿ ಬರುವ ಕೌಂಟ್‌ಡೌನ್ ಅವಧಿಯನ್ನು ಮ್ಯಾಪಲ್ಸ್ ಆ್ಯಪ್‌ನಲ್ಲಿ ತೋರಿಸಲಾಗುತ್ತಿದೆ. ಇದರಿಂದ ವಾಹನ ಸವಾರರು ಟ್ರಾಫಿಕ್ ಸಿಗ್ನಲ್‌ನ 500 ಮೀಟರ್ ದೂರದಿಂದಲೇ ಹಸಿರು ಅಥವಾ ಕೆಂಪು ನಿಶಾನೆ ಬರಲು ಎಷ್ಟು ಸೆಕೆಂಡುಗಳಿವೆ ಎಂಬುದನ್ನು ತಿಳಿದುಕೊಂಡು, ಬೇರೆ ಮಾರ್ಗದ ಮೂಲಕ ತೆರಳಲು ಅವಕಾಶ ಕಲ್ಪಿಸುತ್ತದೆ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಇದು ಸಹಾಯಕವಾಗಲಿದೆ’ ಎಂದು ಅವರು ವಿವರಿಸಿದರು.
‘ಹಲವುಆವಿಷ್ಕಾರಗಳಿಗೆಮ್ಯಾಪಲ್ಸ್ ಸಾಕ್ಷಿ’
‘ಟ್ರಾಫಿಕ್ ಸಿಗ್ನಲ್‌ನ ಹಸಿರು ಅಥವಾ ಕೆಂಪು ನಿಶಾನೆ ತೋರುವ ಸಮಯ ಎಷ್ಟು ಸೆಂಕಡ್‌ಗಳವರೆಗೆ ಇರಲಿದೆ ಎಂಬ ಮಾಹಿತಿಯನ್ನು ಈಗ ಮ್ಯಾಪಲ್ಸ್ ಆ್ಯಪ್‌ನಲ್ಲಿಯೂ ನೋಡಬಹುದು. ಸ್ವದೇಶಿ ನಿರ್ಮಿತ್ ಆ್ಯಪ್ ಇನ್ನೂ ಹಲವು ಆವಿಷ್ಕಾರಗಳಿಗೆ ಸಾಕ್ಷಿಯಾಗಲಿದೆ’ ಎಂದು ಮ್ಯಾಪ್ ಮೈ ಇಂಡಿಯಾ ನಿರ್ದೇಶಕ ರೋಹನ್ ವರ್ಮಾ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸುಧಾರಣೆಯ ಹಾದಿಯಲ್ಲಿ ಎನ್‌ಪಿಎಸ್
ಖಾಸಗಿ ವಲಯದ ಬಹುತೇಕ ಉದ್ಯೋಗಿಗಳು ಬಾಳಿನ ಮುಸ್ಸಂಜೆಯಲ್ಲಿ ಜೀವನ ನಿರ್ವಹಣೆಗೆ ಇಡುಗಂಟು ಇಲ್ಲದೆ ತೊಂದರೆಗೆ ಸಿಲುಕುತ್ತಾರೆ. ನಿವೃತ್ತಿ ನಂತರದ ಬದುಕಿನ ಬಂಡಿ ಎಳೆಯಲು ಪೂರ್ವಸಿದ್ಧತೆ ಇಲ್ಲದವರ ಕೊರಳಿಗೆ ಸಂಕಷ್ಟಗಳ ಸಂಕೋಲೆ ಬೀಳುತ್ತದೆ. ಅಂಥವರಿಗೆ ನೆರವಾಗಲೆಂದೇ ಕೇಂದ್ರ ಸರ್ಕಾರವು ಪಿಂಚಣಿ ಯೋಜನೆಯನ್ನು ಖಾಸಗಿಯವರಿಗೂ ವಿಸ್ತರಿಸಿತ್ತು.
2004ರಲ್ಲಿ ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್) ರದ್ದುಪಡಿಸಿ, ಸಾಮಾಜಿಕ ಭದ್ರತೆಯ ಭಾಗವಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ಜಾರಿಗೊಳಿಸಿತು. ಆರಂಭದಲ್ಲಿ ಈ ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗಷ್ಟೆ ಸೀಮಿತವಾಗಿತ್ತು. 2009ರಿಂದ ಖಾಸಗಿ ವಲಯದ ಉದ್ಯೋಗಿಗಳಿಗೂ ಇದನ್ನು ವಿಸ್ತರಿಸಿತು. ಪ್ರಸ್ತುತ ಈ ಯೋಜನೆಯು ಸಾರ್ವಜನಿಕ, ಖಾಸಗಿ, ಅಸಂಘಟಿತ ವಲಯದ ಉದ್ಯೋಗಿಗಳು ಮತ್ತು ಮಕ್ಕಳೂ ಸೇರಿದಂತೆ ಎಲ್ಲಾ ನಾಗರಿಕರಿಗೂ ಮುಕ್ತವಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಇದರ ನಿರ್ವಹಣೆಯ ಹೊಣೆ ಹೊತ್ತಿದೆ.
ಎನ್‌ಪಿಎಸ್, ಷೇರು ಮಾರುಕಟ್ಟೆ ಸಂಯೋಜಿತ ಹೂಡಿಕೆ ಮತ್ತು ಉಳಿತಾಯ ಯೋಜನೆ. ನಿವೃತ್ತಿ ನಂತರವೂ ನಿಯಮಿತ ಆದಾಯವನ್ನು ಒದಗಿಸುತ್ತದೆ. ಜೊತೆಗೆ, ಚಂದಾದಾರರಿಗೆ ಆರ್ಥಿಕ ಸ್ಥಿರತೆ ಮತ್ತು ಭದ್ರತೆಯನ್ನೂ ಖಾತರಿಪಡಿಸುತ್ತದೆ. ಇದರಡಿ ಹೂಡಿಕೆ ಮಾಡುವವರಿಗೆ ಆದಾಯ ತೆರಿಗೆಯ ವಿನಾಯಿತಿ ಲಭಿಸುತ್ತದೆ. ಎನ್‌ಪಿಎಸ್‌ನಡಿ ಹೂಡಿಕೆ ಮಾಡಿದರೆ ಸೆಕ್ಷನ್ 80ಸಿ ಅಡಿ ₹1.50 ಲಕ್ಷ ಹಾಗೂ ಸೆಕ್ಷನ್ 80ಸಿಸಿಡಿ (1ಬಿ) ಅಡಿ ₹50 ಸಾವಿರ ವಿನಾಯಿತಿ ದೊರೆಯುತ್ತದೆ.
ಮತ್ತೊಂದೆಡೆ, ಮ್ಯೂಚುವಲ್ ಫಂಡ್‌ಗಳ ನಿರ್ವಹಣಾ ಶುಲ್ಕಕ್ಕೆ ಹೋಲಿಸಿದರೆ ಎನ್‌ಪಿಎಸ್ ನಿರ್ವಹಣಾ ಶುಲ್ಕ ಅತ್ಯಲ್ಪ. ಮ್ಯೂಚುವಲ್ ಫಂಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕ ಶೇ 1ರಿಂದ ಶೇ 2.5ರಷ್ಟಿದೆ. ಎನ್‌ಪಿಎಸ್‌ನಲ್ಲಿ ವಾರ್ಷಿಕ ನಿರ್ವಹಣಾ ಶುಲ್ಕ ಶೇ 0.09ರಷ್ಟಿದೆ. ಅಂದರೆ ₹1 ಲಕ್ಷ ಹೂಡಿಕೆ ಮೊತ್ತಕ್ಕೆ ಚಂದಾದಾರರು ಕೇವಲ ₹90 ಶುಲ್ಕವನ್ನಷ್ಟೆ ಭರಿಸುತ್ತಾರೆ. ಈ ಯೋಜನೆಯಡಿ ಇಂಥ ಸಾಕಷ್ಟು ಅನುಕೂಲಗಳಿದ್ದರೂ ಅರಿವಿನ ಕೊರತೆಯಿಂದಾಗಿ ಹೆಚ್ಚು ಜನಪ್ರಿಯತೆ ಪಡೆದಿಲ್ಲ.
ನಿಯಮ ಇನ್ನಷ್ಟು ಸರಳ:ಇದಕ್ಕಾಗಿಯೇ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಎನ್‌ಪಿಎಸ್‌ನಲ್ಲಿ ಹೂಡಿಕೆ, ಚಂದಾದಾರಿಕೆ ಅಂತ್ಯಗೊಳಿಸುವ ಮತ್ತು ಹಣ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಅಣಿಯಾಗಿದೆ. ಇದಕ್ಕಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ನಿರ್ಗಮನ ಮತ್ತು ಹಿಂಪಡೆಯುವಿಕೆ) ನಿಯಮಗಳು– 2015ರ ತಿದ್ದುಪಡಿ ಕರಡು ಪ್ರಕಟಿಸಿದೆ. ಉದ್ದೇಶಿತ ತಿದ್ದುಪಡಿ ನಿಯಮಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲ ರೀತಿಯ ಉದ್ಯೋಗಿಗಳಿಗೂ ಅನ್ವಯಿಸುತ್ತವೆ.
ಎನ್‌ಪಿಎಸ್ ಸ್ವಾವಲಂಬನೆ (ಅಸಂಘಟಿತ ವಲಯ), ಎನ್‌ಪಿಎಸ್ ವಾತ್ಸಲ್ಯ (ಮಕ್ಕಳ ಹೆಸರಿನಲ್ಲಿ ಚಂದಾದಾರಿಕೆ), ಎಲ್ಲ ನಾಗರಿಕರು, ಕಾರ್ಪೊರೇಟ್ ವಲಯಗಳ ಸಿಬ್ಬಂದಿಗೆ (ಎನ್‌ಪಿಎಸ್‌ನ ಟೈರ್–1 ಖಾತೆ) ಈ ನಿಯಮಗಳು ಅನ್ವಯಿಸುತ್ತವೆ.
ಶೇ 80ರಷ್ಟು ಇಡುಗಂಟು ಲಭ್ಯ
ಪಿಎಫ್‌ಆರ್‌ಡಿಎ ಪ್ರಕಟಿಸಿರುವ ಹೊಸ ಪ್ರಸ್ತಾವದನ್ವಯ ಚಂದಾದಾರರಿಗೆ ಹೆಚ್ಚಿನ ಅನುಕೂಲ ಲಭಿಸಲಿದೆ. ಹಾಲಿ ನಿಯಮದ (ಸಾಮಾನ್ಯ ಯೋಜನೆ) ಅನ್ವಯ ಚಂದಾದಾರರಿಗೆ ಯೋಜನೆಯಿಂದ ಹೊರಬರಲು ನಿವೃತ್ತಿಯ ವಯಸ್ಸು ಅಂದರೆ 60 ವರ್ಷದ ಮಿತಿ ನಿಗದಿಪಡಿಸಲಾಗಿತ್ತು. ಈ ವೇಳೆ ದೊರೆಯುವ ಪಿಂಚಣಿಯ ಇಡುಗಂಟಿನಲ್ಲಿ (ಕಾರ್ಪಸ್) ಶೇ 60ರಷ್ಟು ಮೊತ್ತ ಹಿಂಪಡೆಯಲು ಅವಕಾಶವಿತ್ತು. ಈ ಮೊತ್ತವು ಆದಾಯ ತೆರಿಗೆಯಿಂದ ಮುಕ್ತವಾಗಿದೆ. ಉಳಿದ ಶೇ 40ರಷ್ಟು ನಿಧಿಯನ್ನು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ (ಪರ್ಚೇಸ್ ಆಫ್ ಆ್ಯನುಟಿ) ಕಡ್ಡಾಯವಾಗಿ ಹೂಡಿಕೆ ಮಾಡಬೇಕಿತ್ತು.
ಕರಡಿನಲ್ಲಿ ಇಡುಗಂಟು ಹಿಂಪಡೆಯುವಿಕೆ ಪ್ರಮಾಣವನ್ನು ಶೇ 80ಕ್ಕೆ ಹೆಚ್ಚಿಸುವ ಕುರಿತು ಪ್ರಸ್ತಾಪಿಸಲಾಗಿದೆ (ಈ ಪೈಕಿ ಶೇ 60ರಷ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ಇದ್ದರೆ, ಉಳಿದ ಶೇ 20ರಷ್ಟು ಮೊತ್ತವು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ). ಉಳಿದ ಶೇ 20ರಷ್ಟು ಮೊತ್ತವನ್ನು ಚಂದಾದಾರರು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡುವುದು ಕಡ್ಡಾಯ. ಹೊಸ ಪ್ರಸ್ತಾವವು ಖಾತೆದಾರರಿಗೆ ಹೆಚ್ಚಿನ ಆರ್ಥಿಕ ಭದ್ರತೆ ಒದಗಿಸಲಿದೆ. ಅಲ್ಲದೆ, ಆರ್ಥಿಕ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು ನೆರವಾಗಲಿದೆ ಎನ್ನುತ್ತಾರೆ ಹೂಡಿಕೆ ತಜ್ಞರು.
ಸಾಮಾನ್ಯ ಚಂದಾದಾರಿಕೆ ಹೊರಬರುವ ವ್ಯವಸ್ಥೆಯಡಿ (60 ವರ್ಷಕ್ಕೆ) ಚಂದಾದಾರರ ಖಾತೆಯಲ್ಲಿ ₹2.5 ಲಕ್ಷ ಇಡುಗಂಟು ಇದ್ದರೆ, ಇಡೀ ಮೊತ್ತ ಹಿಂಪಡೆಯಲು ಹಾಲಿ ನಿಯಮದಲ್ಲಿ ಅವಕಾಶವಿದೆ. ಈ ಮೊತ್ತದ ಪ್ರಮಾಣ ಹೆಚ್ಚಿಸಲು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ. ಇಡುಗಂಟು ₹12 ಲಕ್ಷಕ್ಕಿಂತ ಕಡಿಮೆ ಇದ್ದರೆ ಆ ಮೊತ್ತದಲ್ಲಿ ಶೇ 50ರಷ್ಟನ್ನು ಒಂದೇ ಬಾರಿಗೆ ಹಿಂಪಡೆಯಬಹುದಾಗಿದೆ. ಉಳಿದ ಶೇ 50ರಷ್ಟು ಮೊತ್ತವನ್ನು ಐದು ವರ್ಷಗಳಲ್ಲಿ ವ್ಯವಸ್ಥಿತವಾಗಿ ಹಿಂಪಡೆಯಲು ಅವಕಾಶವಿದೆ ಅಥವಾ ಚಂದಾದಾರರು ಇಚ್ಛಿಸಿದರೆ ಈ ಮೊತ್ತವನ್ನು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಕೆಲವು ಚಂದಾದಾರರು ಅವಧಿ ಮುಗಿಯುವ ಮೊದಲೇ ಇಡುಗಂಟು ಹಿಂಪಡೆಯಲು ಇಚ್ಛಿಸುವುದುಂಟು. ಹಾಲಿ ನಿಯಮದಡಿ ₹2.5 ಲಕ್ಷ ಇಡುಗಂಟು ಇದ್ದರೆ ಇಡೀ ಮೊತ್ತವನ್ನು ಹಿಂಪಡೆಯಬಹುದಾಗಿದೆ. ಈ ಮೊತ್ತ ಹೆಚ್ಚಿಸುವ ಕುರಿತು ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ. ₹4 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮೊತ್ತ ಇದ್ದರೆ ಸಂಪೂರ್ಣವಾಗಿ ಹಿಂಪಡೆಯಲು ಅವಕಾಶ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಂತಹ ಚಂದಾದಾರರು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡುವ ಪ್ರಮೇಯ ಇರುವುದಿಲ್ಲ.
ಪ್ರಸ್ತುತ ಎನ್‌ಪಿಎಸ್ ಸೇರ್ಪಡೆಗೆ ಗರಿಷ್ಠ ವಯಸ್ಸು 70 ವರ್ಷ. 75 ವರ್ಷದವರೆಗೂ ಖಾತೆ ಮುಂದುವರಿಸಬಹುದು. ತಿದ್ದುಪಡಿಯಲ್ಲಿ ಸೇರ್ಪಡೆ ಮತ್ತು ಖಾತೆ ಮುಂದುವರಿಸುವ ಅವಧಿಯನ್ನು 85 ವರ್ಷದವರೆಗೆ ವಿಸ್ತರಿಸುವ ಕುರಿತು ಉಲ್ಲೇಖಿಸಲಾಗಿದೆ. ಪ್ರಸ್ತುತ ಚಂದಾದಾರರ ಎನ್‌ಪಿಎಸ್ ಮೊತ್ತಕ್ಕೆ ಸಾಲ ಸೌಲಭ್ಯವಿಲ್ಲ. ಕರಡಿನಲ್ಲಿ, ಸಾಲ ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಬಹು ಯೋಜನೆಯ ಚೌಕಟ್ಟು
ಎನ್‌ಪಿಎಸ್ ಬಲವರ್ಧನೆಗೆ ಪ್ರಾಧಿಕಾರವು ಬಹು ಯೋಜನೆ ಚೌಕಟ್ಟು (ಎಂಎಸ್‌ಎಫ್) ರೂಪಿಸಿದೆ. ಇದರಡಿ ಅನುಷ್ಠಾನಗೊಳಿಸಿರುವ ಹೊಸ ಯೋಜನೆಯು ಚಂದಾದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.
ಪ್ರಸ್ತುತ ಎನ್‌ಪಿಎಸ್ ಚಂದಾದಾರರ ಕೊಡುಗೆಯನ್ನು ಷೇರುಪೇಟೆ, ಸರ್ಕಾರಿ ಬಾಂಡ್, ಕಾರ್ಪೊರೇಟ್ ಬಾಂಡ್ ಮತ್ತು ಇತರ ನಿಧಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಯಾವ ಹೂಡಿಕೆಗೆ ಎಷ್ಟು ಮೊತ್ತ ಹಂಚಿಕೆ ಮಾಡಬೇಕು ಎಂಬುದನ್ನು ಚಂದಾದಾರರೇ ನಿರ್ಧರಿಸಬಹುದು. ಚಂದಾದಾರರ ಸೂಚನೆ ಅನ್ವಯ ಫಂಡ್ ಮ್ಯಾನೇಜರ್‌ಗಳು ಹೂಡಿಕೆಯನ್ನು ನಿರ್ವಹಣೆ ಮಾಡುತ್ತಾರೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗಿರುವ ಎನ್‌ಪಿಎಸ್ ಮೊತ್ತವು ವಾರ್ಷಿಕ ಶೇ 13ರಷ್ಟು ರಿಟರ್ನ್ಸ್ ತಂದುಕೊಟ್ಟಿದೆ. ಕಾರ್ಪೊರೇಟ್ ಬಾಂಡ್ ಮತ್ತು ಸರ್ಕಾರಿ ಬಾಂಡ್‌ಗಳಲ್ಲಿನ ಹೂಡಿಕೆಯು ಶೇ 9ರಷ್ಟು ರಿಟರ್ನ್ಸ್ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸದ್ಯ ಎನ್‌ಪಿಎಸ್ ಚಂದಾದಾರರು ತಮ್ಮ ಕೊಡುಗೆಯ ಶೇ 75ರಷ್ಟು ಮೊತ್ತವನ್ನಷ್ಟೇ ಷೇರುಪೇಟೆಯಲ್ಲಿ ಹೂಡಲು ಅವಕಾಶವಿದೆ. ಆದರೆ, ಬಹಳಷ್ಟು ಚಂದಾದಾರರು ಹೆಚ್ಚಿನ ರಿಟರ್ನ್ಸ್ ಅನ್ನು ಅಪೇಕ್ಷಿಸುತ್ತಾರೆ. ಅಂತಹ ಚಂದಾದಾರರಿಗೆ ತಮ್ಮ ಕೊಡುಗೆಯ ಶೇ 100ರಷ್ಟು ಮೊತ್ತವನ್ನೂ ಷೇರುಪೇಟೆಯಲ್ಲಿ ಹೂಡಿಕೆಗೆ ಬಹು ಯೋಜನೆ ಚೌಕಟ್ಟಿನಡಿ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 1ರಿಂದಲೇ ಇದು ಜಾರಿಗೆ ಬಂದಿದೆ.
‘ಜೆನ್-ಝೀ’ ಪೀಳಿಗೆ ಮತ್ತು ಗಿಗ್ ಕಾರ್ಮಿಕರು ಎನ್‌ಪಿಎಸ್‌ನಿಂದ ದೂರವಿದ್ದಾರೆ. ಅವರನ್ನು ಈ ಯೋಜನೆಯತ್ತ ಆಕರ್ಷಿಸುವ ಉದ್ದೇಶದಿಂದ ಪಿಎಫ್‌ಆರ್‌ಡಿಎ ಈ ಚೌಕಟ್ಟು ರೂಪಿಸಿದೆ. ಆದರೆ, ಜಾಗತಿಕ ಹಾಗೂ ದೇಶೀಯ ವಿದ್ಯಮಾನಗಳು ದೇಶೀಯ ಷೇರುಪೇಟೆ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ, ಹೆಚ್ಚಿನ ರಿಟರ್ನ್ಸ್ ನಿರೀಕ್ಷಿಸುವ ಚಂದಾದಾರರು ರಿಸ್ಕ್ ಭರಿಸಲೂ ಸಿದ್ಧವಿರಬೇಕಿದೆ.
ಆಧಾರ: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವೆಬ್‌ಸೈಟ್, ಎನ್‌ಪಿಸ್‌ಟ್ರಸ್ಟ್.ಒಆರ್‌ಜಿ.ಇನ್,
15 ವರ್ಷಕ್ಕೆ ಹೊರಬರಲು ಅವಕಾಶ
ಪ್ರಸ್ತಾವಿತ ತಿದ್ದುಪಡಿ ನಿಯಮದಲ್ಲಿ 15 ವರ್ಷಗಳಿಗೆ ಎನ್‌ಪಿಎಸ್‌ನಿಂದ ಹೊರಬರುವುದಕ್ಕೆ ಅವಕಾಶ ಕಲ್ಪಿಸಲಾಗಿದೆ (ಹಾಲಿ ನಿಯಮದಡಿ 60 ವರ್ಷ ಆಗಿರಬೇಕು). ಉದಾಹರಣೆಗೆ, ಒಬ್ಬ ಖಾಸಗಿ ವಲಯದ ಉದ್ಯೋಗಿಯು 30ನೇ ವಯಸ್ಸಿಗೆ ಎನ್‌ಪಿಎಸ್ ಖಾತೆ ತೆರೆದು 45ನೇ ವಯಸ್ಸಿಗೆ ತನ್ನ ಚಂದಾದಾರಿಕೆಯನ್ನು ಕೊನೆಗೊಳಿಸಬಹುದು.
ಆ ಸಮಯದಲ್ಲಿ ಆ ಉದ್ಯೋಗಿಯ ಎನ್‌ಪಿಎಸ್ ಖಾತೆಯಲ್ಲಿ ₹50 ಲಕ್ಷ ಹೊಂದಿದ್ದರೆ, ಆ ಪೈಕಿ ಶೇ 60ರಷ್ಟು ಮೊತ್ತ (₹30 ಲಕ್ಷ) ಹಿಂಪಡೆಯಬಹುದು. ಉಳಿದ ಶೇ 40ರಷ್ಟು ಮೊತ್ತವನ್ನು (₹20 ಲಕ್ಷ) ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಲು ಮೀಸಲಿಡಬೇಕಿದೆ.
18 ತುಂಬಿದ ನಂತರವಷ್ಟೇ ಚಂದಾದಾರಿಕೆ ಅಂತ್ಯ
ಎನ್‌ಪಿಎಸ್ –ವಾತ್ಸಲ್ಯ ಚಂದಾದಾರರಿಗೆ ಸಂಬಂಧಿಸಿದಂತೆ ಮಕ್ಕಳಿಗೆ 18 ವರ್ಷ ತುಂಬಿದ ಬಳಿಕಷ್ಟೇ ಅವರು ಚಂದಾದಾರಿಕೆಯಿಂದ ಹೊರಬರಬಹುದು ಎಂದು ಕರಡು ನಿಯಮದಲ್ಲಿ ಹೇಳಲಾಗಿದೆ. ಚಂದಾದಾರಿಕೆ ಅಂತ್ಯಗೊಳಿಸಿದ ನಂತರ ನಿಧಿಯಲ್ಲಿ ಸಂಗ್ರಹವಾಗಿರುವ ಮೊತ್ತದಲ್ಲಿ ಶೇ 80ರಷ್ಟನ್ನು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಶೇ 20ರಷ್ಟನ್ನು ಇಡುಗಂಟು ರೂಪದಲ್ಲಿ ನೀಡಲಾಗುತ್ತದೆ. ಒಂದು ವೇಳೆ, ಎನ್‌ಪಿಎಸ್ ಖಾತೆಯಲ್ಲಿ ಸಂಗ್ರಹವಾದ ಮೊತ್ತ ₹4 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಒಂದೇ ಸಲಕ್ಕೆ ಪೂರ್ಣ ಮೊತ್ತವನ್ನು ವಾಪಸ್ ಪಡೆಯುವುದಕ್ಕೂ ಅವಕಾಶ ಇದೆ. ಇದನ್ನು ಆಯ್ಕೆ ಮಾಡಿಕೊಂಡವರಿಗೆ ನಂತರ ಪಿಂಚಣಿ ಆದಾಯ ಸಿಗುವುದಿಲ್ಲ.
ಮಕ್ಕಳಿಗೆ 18 ವರ್ಷ ಪೂರ್ಣವಾದ ನಂತರವೂ ಚಂದಾದಾರಿಕೆಯಿಂದ ಹೊರಬಾರದೇ ಇದ್ದ ಪಕ್ಷದಲ್ಲಿ ಚಂದಾದಾರಿಕೆಯು ಎನ್‌ಪಿಎಸ್‌ನ ಎಲ್ಲ ನಾಗರಿಕರು (All citizens) ವಿಭಾಗದಲ್ಲಿ ಮುಂದುವರಿಯುತ್ತದೆ.
ಶಾಲೆಯಲ್ಲಿ 1ರಿಂದ 3ನೇತರಗತಿಯವರೆಗೆನಲಿ–ಕಲಿಶಿಕ್ಷಣಕ್ರಮವಿದೆ. 1, 2ನೇ ತರಗತಿಯಲ್ಲಿ 7 ಮಕ್ಕಳಿದ್ದಾರೆ. 3ನೇ ತರಗತಿಯಲ್ಲಿ ಮಕ್ಕಳಿಲ್ಲ. ಹೀಗಾಗಿ, ದಾಖಲಾತಿ ಹೆಚ್ಚಳಕ್ಕಾಗಿ ಹೊಳಜೋಗಿ ಅವರು ‘ದಿನಕ್ಕೆ ₹ 1 ಯೋಜನೆ’ ರೂಪಿಸಿದ್ದಾರೆ.
ಸರ್ಕಾರಿ ಕನ್ನಡ ಶಾಲೆಗೆ ದಾಖಲಾಗುವ ಮಕ್ಕಳ ಹೆಸರಿನಲ್ಲಿ ಸದ್ಯ ₹ 1,111 ಠೇವಣಿ ಇರಿಸಿರುವ ಹೊಳಜೋಗಿ, ಅದರ ಜೊತೆಗೆ ದಿನಕ್ಕೆ ₹ 1 ನೀಡುವುದಾಗಿ ಘೋಷಿಸಿದ್ದಾರೆ.
‘ಮಕ್ಕಳ ಹೆಸರಿನಲ್ಲಿ ಪೋಷಕರು ಈಗಾಗಲೇ ಬ್ಯಾಂಕ್ ಖಾತೆ ತೆರೆದಿದ್ದಾರೆ. ಅದೇ ಖಾತೆಗೆ ದಿನದ ಲೆಕ್ಕದಲ್ಲಿ ಪ್ರತಿ ತಿಂಗಳೂ ಹಣ ಜಮೆ ಮಾಡುತ್ತೇನೆ. ಮಕ್ಕಳು ಸರ್ಕಾರಿ ಶಾಲೆಗೆ ಬರಲಿ ಎಂಬ ಕಾರಣಕ್ಕೆ ಈ ಕ್ರಮವಹಿಸಿದ್ದೇನೆ. ಜೊತೆಗೆ, ಹಣ ಉಳಿತಾಯದ ಬಗ್ಗೆಯೂ ಮಕ್ಕಳಲ್ಲಿ ಜಾಗೃತಿ ಮೂಡುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.
ಪಶ್ಚಿಮಏಷ್ಯಾದೇಶಗಳಿಂದಕಚ್ಚಾತೈಲಖರೀದಿ?
ಸಂದರ್ಭ: ರಷ್ಯಾದತೈಲಕಂಪನಿಗಳಮೇಲಿನನಿರ್ಬಂಧ: ಬೇರೆಡೆಖರೀದಿಗೆಮುಂದಾದಭಾರತದಕಂಪನಿಗಳುರಷ್ಯಾದಿಂದತೈಲಖರೀದಿಗೆಸಂಬಂಧಿಸಿದಂತೆಅಮೆರಿಕಮತ್ತುಇತರೆಪಾಶ್ಚಿಮಾತ್ಯದೇಶಗಳುವಿಧಿಸಿರುವನಿರ್ಬಂಧಗಳನ್ನುಪಾಲಿಸಲಾಗುವುದುರಿಲಯನ್ಸ್ಇಂಡಸ್ಟ್ರೀಸ್ರಷ್ಯಾದಎರಡುಪ್ರಮುಖತೈಲಕಂಪನಿಗಳಮೇಲೆಅಮೆರಿಕನಿರ್ಬಂಧವಿಧಿಸಿದೆ. ಇದರಿಂದಾಗಿ, ಕಚ್ಚಾತೈಲಆಮದಿನಲ್ಲಿಉಂಟಾಗುವಕೊರತೆಯನ್ನುಸರಿದೂಗಿಸಿಕೊಳ್ಳಲುಭಾರತೀಯತೈಲಸಂಸ್ಕರಣಾಕಂಪನಿಗಳುಪಶ್ಚಿಮಏಷ್ಯಾ, ಲ್ಯಾಟಿನ್ಅಮೆರಿಕಮತ್ತುಅಮೆರಿಕದಿಂದಕಚ್ಚಾತೈಲಖರೀದಿಯನ್ನುಹೆಚ್ಚಿಸುವಸಾಧ್ಯತೆಯಿದೆ.
ಕಚ್ಚಾತೈಲಉತ್ಪನ್ನಮಾಡುವರಷ್ಯಾದಅತಿದೊಡ್ಡಕಂಪನಿಗಳಾದ ‘ರೊಸ್ನೆಫ್ಟ್’ ಮತ್ತು ‘ಲುಕಾಯಿಲ್’ ಮೇಲೆ ಅಕ್ಟೋಬರ್ 22ರಂದು ಅಮೆರಿಕ ನಿರ್ಬಂಧ ವಿಧಿಸಿದೆ. ಆ ಮೂಲಕ, ಈ ಕಂಪನಿಗಳು ಮತ್ತು ಅವುಗಳ ಅಂಗ ಸಂಸ್ಥೆಗಳೊಂದಿಗೆ ಅಮೆರಿಕದ ಕಂಪನಿಗಳು ಮತ್ತು ವ್ಯಕ್ತಿಗಳು ವಹಿವಾಟು ನಡೆಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಅವುಗಳಿಂದ ಅಮೆರಿಕದ್ದಲ್ಲದ ಕಂಪನಿಗಳು ತೈಲ ಖರೀದಿಸಿದರೆ ಅಂತಹ ಸಂಸ್ಥೆಗಳೂ ನಿರ್ಬಂಧದ ಪರಿಣಾಮವನ್ನು ಎದುರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದ ಈ ಎರಡೂ ಕಂಪನಿಗಳ ಜತೆಗಿನ ವಹಿವಾಟುಗಳನ್ನು ನವೆಂಬರ್ 21ರೊಳಗೆ ಅಂತ್ಯಗೊಳಿಸಬೇಕು ಎಂದು ಅಮೆರಿಕ ಹೇಳಿದೆ.
‘ರಷ್ಯಾದಿಂದ ನವೆಂಬರ್ 21ರವರೆಗೆ ನಿಗದಿಯಂತೆ ಕಚ್ಚಾ ತೈಲ ಆಮದು ಆಗಲಿದೆ. ಆ ನಂತರ ತೈಲ ಖರೀದಿ ಪ್ರಮಾಣ ಇಳಿಕೆಯಾಗಲಿದೆ. ಅಮೆರಿಕ ವಿಧಿಸಿರುವ ನಿರ್ಬಂಧದ ಪರಿಣಾಮಗಳನ್ನು ತಪ್ಪಿಸಿಕೊಳ್ಳಲು ಭಾರತದ ತೈಲ ಸಂಸ್ಕರಣಾಗಾರಗಳು ಪ್ರಯತ್ನಿಸುತ್ತಿವೆ’ ಎಂದು ಕೆಪ್ಲೆರ್‌ನ ಸಂಶೋಧನಾ ವಿಶ್ಲೇಷಕ (ಸಂಸ್ಕರಣೆ ಮತ್ತು ಮಾಡೆಲಿಂಗ್) ಸುಮಿತ್ ರಿಟೋಲಿಯಾ ಹೇಳಿದ್ದಾರೆ.
‘ದಿನಕ್ಕೆ 5 ಲಕ್ಷ ಬ್ಯಾರಲ್‌ನಂತೆ 25 ವರ್ಷ ಕಚ್ಚಾ ತೈಲ ಪೂರೈಕೆ ಮಾಡಲು ರಿಲಯನ್ಸ್, ರೊಸ್ನೆಫ್ಟ್ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ನಯಾರಾ ಎನರ್ಜಿ, ರಷ್ಯಾದ ತೈಲ ಕಂಪನಿಗಳ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದೆ. ಅದಕ್ಕಿರುವ ಆಯ್ಕೆ ಕಡಿಮೆ. ಆದರೂ, ಸಂಸ್ಕರಣಾಗಾರರು ಮಧ್ಯವರ್ತಿಗಳ ಮೂಲಕ ಖರೀದಿಯನ್ನು ಮುಂದುವರಿಸಬಹುದು’ ಎಂದು ಅವರು ಹೇಳಿದ್ದಾರೆ.
ಕಚ್ಚಾ ತೈಲ ಆಮದಿನಲ್ಲಿ ಉಂಟಾಗುವ ಕೊರತೆಯನ್ನು ಸರಿದೂಗಿಸಿಕೊಳ್ಳಲು ಭಾರತವುಪಶ್ಚಿಮಏಷ್ಯಾ, ಬ್ರೆಜಿಲ್, ಲ್ಯಾಟಿನ್ಅಮೆರಿಕ, ಪಶ್ಚಿಮಆಫ್ರಿಕಾ, ಕೆನಡಾ, ಅಮೆರಿಕದಿಂದಹೆಚ್ಚಿನಪ್ರಮಾಣದಲ್ಲಿತೈಲಖರೀದಿಸುವನಿರೀಕ್ಷೆಯಿದೆ. ಅಮೆರಿಕದ ನಿರ್ಬಂಧಗಳು ಭಾರತದ ತೈಲ ಖರೀದಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಭಾರತವು ಬೇರೆ ದೇಶಗಳಿಂದ ತೈಲ ಖರೀದಿಸಿದರೆ ವೆಚ್ಚ ಹೆಚ್ಚಳವಾಗ ಬಹುದು ಎಂದು ಅವರು ವಿವರಿಸಿದ್ದಾರೆ.
‘ಪಿ.ಎಂ.ಶ್ರೀ ಶಾಲಾ ಯೋಜನೆ’ ಮೂಲಕ ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಸೂಚಿಯನ್ನು ಜಾರಿಗೊಳಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಸಿಪಿಐ ಈ ಹಿಂದೆ ಸೇರ್ಪಡೆಯಾಗದಂತೆ ತಡೆ ಹಿಡಿದಿತ್ತು. ಆದರೆ, ಈ ಬಾರಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಸದೇ, ಕೇಂದ್ರ ಸರ್ಕಾರದ ಯೋಜನೆಗೆ ಸೇರ್ಪಡೆಯಾಗಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಶಿಕ್ಷಣ ಇಲಾಖೆ ಕಾರ್ಯದರ್ಶಿ ಕೆ. ವಾಸುಕಿ ಅವರು ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಒಪ್ಪಂದಕ್ಕೆ ಸಹಿ ಹಾಕಿರುವುದೇ ವಿವಾದ ಸೃಷ್ಟಿಸಿದೆ.
ಸಿಪಿಐ ಈ ಹಿಂದೆ ಎರಡು ಸಲ ರಾಜ್ಯ ಸರ್ಕಾರದ ನಿರ್ಧಾರವನ್ನು ತಡೆಹಿಡಿದಿತ್ತು. ಮೈತ್ರಿ ಪಕ್ಷ ಸಿಪಿಐ ಅನ್ನು ಹಿರಿಯ ಪಾಲುದಾರ ಸಿಪಿಎಂ ಪಕ್ಕಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿತ್ತು. ಇದರಿಂದಾಗಿಯೇ, ಒಪ್ಪಂದಕ್ಕೆ ಸಹಿಹಾಕಲು ಒಂದು ತಿಂಗಳ ಕಾಲ ಹಿಂಜರಿದಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು, ಸಿಪಿಐ ಪ್ರಬಲ ವಿರೋಧದ ಹೊರತಾಗಿಯೂ ‘ಪ್ರಧಾನಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್’ (ಪಿಎಂ–ಶ್ರೀ) ಸಹಿಹಾಕಲು ಒಪ್ಪಿಗೆ ಸೂಚಿಸಿದ್ದರು.
ಎಡ್ವಿನಾ ಅವರು ಫೈನಲ್‌ನಲ್ಲಿ 55.43 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಯುಎಇಯ ಆಯಿಷಾ ತಾರಿಕ್ (54.26ಸೆ) ಚಿನ್ನ ಗೆದ್ದರೆ, ತೈವಾನ್‌ನ ಚಿಯಾ ಯಿಂಗ್ (56.60ಸೆ) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಡಿಸ್ಕಸ್ ಥ್ರೋನಲ್ಲಿ ಓಶಿನ್ 43.38 ಮೀಟರ್ ಸಾಧನೆಯೊಂದಿಗೆ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ತಂದುಕೊಟ್ಟರು. ಚೀನಾದ ಕ್ಸಿನ್ಯಿ ವಾಂಗ್ (55.38 ಮೀ) ಚಿನ್ನ ಗೆದ್ದರು. ತೈವಾನ್‌ನ ಶಿಹ್ ಯುಹ್-ಜೆನ್ (43 ಮೀ) ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಪಲಾಶ್ ಮಂಡಲ್ ಅವರು ಬಾಲಕರ 5,000 ಮೀ. ನಡಿಗೆ ಸ್ಪರ್ಧೆಯಲ್ಲಿ ಶುಕ್ರವಾರ ಕಂಚಿನ ಪದಕ ಗೆದ್ದುಕೊಂಡರು. ಮಂಡಲ್ ಈ ದೂರವನ್ನು 24ನಿ.48.92 ಸೆ. ಗಳಲ್ಲಿ ಕ್ರಮಿಸಿದರು. ಚೀನಾದ ಹಾವೊಝ್ ಝಾಂಗ್ (21ನಿ.43.82 ಸೆ.) ಚಿನ್ನ ಗೆದ್ದರೆ, ಅದೇ ದೇಶದ ಯುಜೀ ಲು (22ನಿ.28.64 ಸೆ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಪುರುಷರ ಹೈಜಂಪ್‌ನಲ್ಲಿ ಜುಬಿನ್ ಗೊಹೈನ್ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ತಂದುಕೊಟ್ಟರು. ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 2.03 ಮೀ ಎತ್ತರ ಜಿಗಿದರು.
ಭಾರತದ ಶೌರ್ಯಾ ಅಂಬುರೆ ಅವರು ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಅವರು 13.73 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.
ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಧ್ವಜಧಾರಿಯಾಗಿದ್ದ ಗಿಲ್ ಅವರು ಪುರುಷರ ಶಾಟ್‌ಪಟ್ ಸ್ಪರ್ಧೆಯಲ್ಲಿ 19.59 ಮೀಟರ್ ಸಾಧನೆ ಮೆರೆದರು. 2008ರ ಆವೃತ್ತಿಯಲ್ಲಿ ಎಸ್. ಕುಮಾರ್ ಸಿಂಗ್ ಸ್ಥಾಪಿಸಿದ (17.71 ಮೀಟರ್) ದಾಖಲೆಯನ್ನು ಮುರಿದರು. ಭಾರತದವರೇ ಆದ ರವಿ ಕುಮಾರ್ (17.95 ಮೀ) ಬೆಳ್ಳಿ ಗೆದ್ದರೆ, ಶ್ರೀಲಂಕಾದ ಮಿಥುನ್ರಾಜ್ ಕಂಚಿನ ಪದಕ ಪಡೆದರು.
5000 ಮೀಟರ್ ಓಟದಲ್ಲಿ ಭಾರತದ ಅಥ್ಲೀಟ್‌ಗಳು ಪಾರಮ್ಯ ಮೆರೆದರು. ಪುರುಷರ ವಿಭಾಗದಲ್ಲಿ ಪ್ರಿನ್ಸ್ ಕುಮಾರ್ 14 ನಿಮಿಷ 22.17 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಶ್ರೀಲಂಕಾದ ವಕ್ಷನ್ ವಿಕ್ನರಾಜ್ (14:23.21) ಬೆಳ್ಳಿ ಪದಕ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಸಂಜನಾ ಸಿಂಗ್ ಚಿನ್ನ, ಸೀಮಾ ಬೆಳ್ಳಿ ಪದಕವನ್ನು ಗೆದ್ದರು.
ಪುರುಷರ 100 ಮೀಟರ್ ಓಟದಲ್ಲಿ ಶ್ರೀಲಂಕಾದ ಯೊಡಸಿಂಘೆ ಚಾಮೊ (10.30ಸೆ) ಚಿನ್ನ ಗೆದ್ದರು. ಭಾರತದ ಪ್ರಣವ್ ಗುರವ್ (10.32) ಮತ್ತು ಹರ್ಷ್ ರಾವತ್ (10.42) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.