Wed. Mar 25th, 2026

Kannada

ಕನ್ನಡಿಗರಿಗೆ ಮೀಸಲು: ಮಸೂದೆ ಅಂತಿಮ

ಭಾರತೀಯ ರಾಜಕೀಯ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ

ಸಂದರ್ಭ:ಖಾಸಗಿ ಉದ್ಯಮ ಮತ್ತುಸಂಸ್ಥೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವಉದ್ದೇಶದ ಮಸೂದೆ ಅಂತಿಮಗೊಂಡಿದೆ.

  • ಯಾವುದೇ ಕಂಪನಿಯ ಆಡಳಿತಾತ್ಮಕ ಹುದ್ದೆಗಳ ಪೈಕಿ ಶೇ 50ರಷ್ಟು, ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ 75ರಷ್ಟು ಮೀಸಲಾತಿ ನೀಡಲು ಈ ಮಸೂದೆ ರೂಪಿಸಲಾಗಿದೆ. ಈ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಮಸೂದೆಯ ಕುರಿತು ಸಚಿವರ ಮಧ್ಯೆ ಒಮ್ಮತ ಮೂಡದ ಕಾರಣ ತಡೆ ಹಿಡಿಯಲಾಗಿತ್ತು.
  • ‘ಈ ಮಸೂದೆಯ ಬಗ್ಗೆ ಇನ್ನಷ್ಟು ವಿಸ್ತ್ರತ ಚರ್ಚೆ ನಡೆಯಬೇಕಾಗಿದ್ದ ಕಾರಣ ತಡೆ ಹಿಡಿಯಲಾಗಿದೆ’ ಎಂದು ಮುಖ್ಯಮಂತ್ರಿ ಹೇಳಿದ್ದರು. ಮಸೂದೆಗಳ ವಿಚಾರದಲ್ಲಿ ಸಚಿವರ ಮಧ್ಯೆ ಸಮನ್ವಯಕ್ಕಾಗಿ ಸಮಿತಿಯನ್ನೂ ರಚಿಸಲಾಗಿತ್ತು. ಮಸೂದೆಯಲ್ಲಿ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಲಾಗಿದೆ. ಸದ್ಯವೇ ಸಚಿವ ಸಂಪುಟ ಸಭೆ ಒಪ್ಪಿಗೆಗೆ ಎಂದು ಮೂಲಗಳು ಹೇಳಿವೆ.
  • ಖಾಸಗಿ ಉದ್ಯಮ ಮತ್ತು ಸಂಸ್ಥೆಯು ನಿಗದಿಪಡಿಸಿದ ಶೇಕಡಾವಾರು ಪ್ರಮಾಣದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡದಿದ್ದರೆ ಅಥವಾ ಅದಕ್ಕಿಂತ ಕಡಿಮೆ ಮೀಸಲಾತಿ ನೀಡಿದ್ದರೆ ಅಂತಹ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಭೂಮಿ, ತೆರಿಗೆ ರಿಯಾಯಿತಿ ಅಥವಾ ತೆರಿಗೆಯ ಮುಂದೂಡಿಕೆ, ಸಹಾಯಧನ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವುದಿಲ್ಲ.
  • ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಸರ್ಕಾರಕ್ಕೆ ಲಿಖಿತ ಭರವಸೆ ನೀಡಿಯೂ ಆ ಪ್ರಕಾರ ನಡೆದುಕೊಳ್ಳದ ಉದ್ಯಮಗಳಿಗೆ ಸರ್ಕಾರ ನೀಡಿದ್ದ ತೆರಿಗೆ ರಿಯಾಯಿತಿ ಅಥವಾ ತೆರಿಗೆಯ ಮುಂದೂಡಿಕೆ, ಸಹಾಯಧನ ಮತ್ತು ಇತರ ಸೌಲಭ್ಯಗಳನ್ನು ಮುಂದುವರಿಸಬಾರದು. ದಂಡ ವಿಧಿಸಬಹುದು ಎಂಬ ಅಂಶವನ್ನೂ ಸೇರಿಸಲಾಗಿತ್ತು.

ಕರ್ನಾಟಕ ರಾಜ್ಯ ಮರ್ಯಾದೆ ಹತ್ಯೆ ತಡೆ ಮಸೂದೆ 2025

ಭಾರತೀಯ ರಾಜಕೀಯ: ಮರ್ಯಾದೆಗೇಡು ಹತ್ಯೆಗೆ ಜೈಲು

ಸಂದರ್ಭ: ಜಾತಿಮೀರಿಪ್ರೀತಿಸುವವರು,ಮದುವೆಯಾದವರನ್ನು’ಮರ್ಯಾದೆ’ಯಹೆಸರಿನಲ್ಲಿಹಲ್ಲೆಮಾಡುವ, ಹತ್ಯೆಗೈಯುವಇಲ್ಲವೆಅವರಿಗೆಬಹಿಷ್ಕಾರಹಾಕುವವರನ್ನುಹೆಡೆಮುರಿಕಟ್ಟಲುಮುಂದಾಗಬೇಕೆಂಬಜನಾಗ್ರಹಕ್ಕೆಸ್ಪಂದಿಸಿರುವಸರ್ಕಾರ, ಇದಕ್ಕಾಗಿಮಸೂದೆಯೊಂದನ್ನುಸಿದ್ಧಪಡಿಸಿದೆ.

  • ಇಂತಹ ಕೃತ್ಯ ಎಸಗುವವರಿಗೆ ಜೀವಾವಧಿ ಜೈಲು ವಾಸ ಹಾಗೂ ₹5 ಲಕ್ಷದವರೆಗೆ ದಂಡ ವಿಧಿಸಲು ಮಸೂದೆ ಅವಕಾಶ ಕಲ್ಪಿಸಿದೆ.
  • ತಾಲ್ಲೂಕಿನ ಇನಾಂ ಇತ್ತೀಚೆಗೆ ಹುಬ್ಬಳ್ಳಿ ವೀರಾಪುರ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿತ್ತು. ಆ ಬೆನ್ನಲ್ಲೆ, ‘ಇಂತಹ ಮೃಗೀಯ, ಅಮಾನವೀಯ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳನ್ನು ತಡೆಯಲು ಪ್ರತ್ಯೇಕ ಕಾಯ್ದೆ ಜಾರಿಗೆ ತರಬೇಕು’ ಎಂಬ ಅಗ್ರಹ ಹೆಚ್ಚಿತ್ತು.
  • ಈ ಅಶಯ ಸಾಕಾರಗೊಳಿಸಲು ಕಾರ್ಯೋನ್ಮುಖ ವಾಗಿರುವ ಸರ್ಕಾರ, ‘ಕರ್ನಾಟಕ ಮದುವೆ ಮತ್ತು ಸಂಗಾತಿ ಆಯ್ಕೆಯ ಸ್ವಾತಂತ್ರ್ಯ, ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ಮಸೂದೆ-2026’ರ ಕರಡು ರೂಪಿಸಿದೆ. ಕಾನೂನು ಮತ್ತು ಸಂಸದೀಯ ಇಲಾಖೆ ಇದನ್ನು ಸಿದ್ಧಪಡಿಸಿದೆ.
  • ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧ ತಡೆಗೆ ಕಾನೂನು ಅವಶ್ಯ. ಮದುವೆ ಮತ್ತು ಸಂಬಂಧಗಳಲ್ಲಿ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಯಾವುದೇ ನಡವಳಿಕೆಯನ್ನು ತಡೆಯಲು, ಶಿಕ್ಷಿಸಲು, ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಉದ್ದೇಶವನ್ನು ಮಸೂದೆ ಹೊಂದಿದೆ.
  • ವೈಯಕ್ತಿಕ ಜೀವನದ ವಿಷಯದಲ್ಲಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಗಾತಿ ಆಯ್ಕೆ ಮತ್ತು ಸಂಬಂಧದ ಹಕ್ಕುಗಳೂ ಸೇರಿವೆ. ತಮ್ಮ ಕುಟುಂಬದ ಸದಸ್ಯರು ಸೇರಿದಂತೆ ಯಾರಿಂದಲೂ ಅಡೆತಡೆ ಇಲ್ಲದೆ, ತಮ್ಮ ಆಯ್ಕೆಯಂತೆ ಮದುವೆಯಾಗುವ ಹಕ್ಕು ವಯಸ್ಕರಿಗೆ ಇದೆ.
  • ಮದುವೆ ಅಥವಾ ಸಂಬಂಧವು ಜಾತಿ, ಬುಡಕಟ್ಟು, ಸಮುದಾಯ. ಧರ್ಮ, ಸಂಪ್ರದಾಯಕ್ಕೆ ಅಗೌರವ ತಂದಿದೆ ಅಥವಾ ಕುಟುಂಬದ ಇಚ್ಛೆಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ವಿರೋಧಿಸುವುದು ಕಾನೂನುಬಾಹಿರ ಹಾಗೂ ಅಪರಾಧ ಎನಿಸಲಿದೆ. ಈ ರೀತಿಯ ವಿರೋಧ ವ್ಯಕ್ತವಾಗುವ ಆತಂಕ ಇರುವವರು ನ್ಯಾಯಾಲಯದ ಮೂಲಕ ಪೊಲೀಸರ ರಕ್ಷಣೆ ಪಡೆಯಬಹುದು. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಪೊಲೀಸರ ಜವಾಬ್ದಾರಿ, ಆದೇಶ, ಉಲ್ಲಂಘಿಸಿದರೆ ಎರಡು ವರ್ಷಗಳವರೆಗೆ ಜೈಲು ಅಥವಾ ₹1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಮಹಿಳೆಯರಿಗೆ ಜೈಲು ಶಿಕ್ಷೆ ಇರುವುದಿಲ್ಲ. ಇಂತಹ ಕೃತ್ಯದ ಪುರಾವೆ ನಾಶ, ಕೃತ್ಯಕ್ಕೆ ಪ್ರೇರೇಪಿಸುವುದು, ಸಂಚು ರೂಪಿಸುವುದು ಅಥವಾ ಆತ್ಮಹತ್ಯೆಗೆ ಪ್ರೋತ್ಸಾಹಿಸುವುದೂ ಅಪರಾಧ. ಇಂತಹ ಅಪರಾಧಗಳಲ್ಲಿ ಸಂಜ್ಞೆಯ, ಜಾಮೀನುರಹಿತ ಮತ್ತು ರಾಜೀ ಸಂಧಾನಕ್ಕೆ ಅವಕಾಶ ಇರುವುದಿಲ್ಲ.
  • ಬಾಧಿತ ದಂಪತಿ ರಕ್ಷಣೆ ಕೋರಿ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಪೊಲೀಸರಿಗೆ ದೂರು ನೀಡಬಹುದು.
  • ದಂಪತಿಗೆ ಸುರಕ್ಷಿತ ಸ್ಥಳದಲ್ಲಿ ಮನೆ, ನಗದು ಅಥವಾ ವಸ್ತುವಿನ ರೂಪದಲ್ಲಿ ಪರಿಹಾರ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ ದೂರಿನ ಮೇಲೆ 60 ದಿನಗಳ ಒಳಗೆ ತನಿಖೆ ನಡೆಸಿ ವಿಶೇಷ ನ್ಯಾಯಾಲಯದಲ್ಲಿ ಆರೋ ಸಲ್ಲಿಸಬೇಕು. ಆರೋಪಪಟ್ಟಿ
  • ಜಿಲ್ಲಾಧಿಕಾರಿ ಅಥವಾ ಎಸ್‌ಪಿಗಳು ದೂರನ್ನು ಸೂಕ್ಷ್ಮವಾಗಿ ನಿರ್ವಹಿಸ ಬೇಕು. ಮದುವೆಯನ್ನು ಶಾಸ್ಕೋ-ಕ್ತವಾಗಿ ನಡೆಸಲು ಮತ್ತು ಅವರು ಬಯಸಿದರೆ ಪೊಲೀಸ್ ರಕ್ಷಣೆಯಲ್ಲಿ ನೋಂದಾಯಿಸಲು ನೆರವು ನೀಡ ಬಹುದು. ಮದುವೆಯ ನಂತರ ದಂಪತಿ ಬಯಸಿದರೆ, ನೆಪ ಮಾತ್ರದ ಶುಲ್ಕ ಪಾವತಿಸಿ ಒಂದು ತಿಂಗಳ ಅವಧಿಗೆ ವಸತಿ ಒದಗಿಸಬಹುದು. ನಂತರ ತಿಂಗಳ ಆಧಾರದಲ್ಲಿ ವಿಸ್ತರಿಸಬಹುದು.
  • ಮೇಲ್ವಿಚಾರಣೆಗೆ ಸಮಿತಿ: ಇಂತಹ ಅಪರಾಧಗಳನ್ನು ತಡೆಗಟ್ಟಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ಕೋಶವನ್ನು ಸರ್ಕಾರ ರಚಿಸಬೇಕು. ಈ ಕೋಶಗಳು ದೂರು ಸ್ವೀಕರಿಸಲು, ಸಹಾಯ ಮತ್ತು ರಕ್ಷಣೆ ನೀಡಲು 24 ಗಂಟೆಗಳ ಸಹಾಯವಾಣಿ ಸ್ಥಾಪಿಸಬೇಕು.
  • ಕಾಯ್ದೆಯ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು. ಈ ಸಮಿತಿಯು ಶಾಸಕರು, ಎಸ್‌ಪಿ, ಮೂವರು ಗ್ರೂಪ್ ‘ಎ’ ಅಧಿಕಾರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಮೂವರು ಸದಸ್ಯರನ್ನು ಒಳಗೊಂಡಿರುತ್ತದೆ. ಸಮಿತಿಯು ಕನಿಷ್ಠ * 3 ತಿಂಗಳಿಗೊಮ್ಮೆ ಸಭೆ ಸೇರಬೇಕು.
  • ಪ್ರಕರಣಗಳ ವಿಚಾರಣೆಗೆ ವಿಶೇಷ ತ್ವರಿತ ಗತಿ ನ್ಯಾಯಾಲಯವನ್ನು ರಚಿಸಬಹುದು ಎಂದೂಮಸೂದೆ ಹೇಳಿದೆ.

ಅಗರಬತ್ತಿಗೆ ಹೊಸ ಬಿಐಎಸ್‌

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯಗ್ರಾಹಕರ ಸುರಕ್ಷತೆಗಾಗಿ ಅಗರಬತ್ತಿಗಳಿಗೆ ಮೀಸಲಾದ ‘ಐಎಸ್‌ 19412:2025’ ಅನ್ನು ಭಾರತೀಯ ಮಾನಕ ಬ್ಯೂರೊ (ಬಿಐಎಸ್‌) ರೂಪಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಅಗರಬತ್ತಿಗಳ ತಯಾರಿಕೆಯಲ್ಲಿ ಕೆಲವು ಕೀಟನಾಶಕ ರಾಸಾಯನಿಕಗಳನ್ನು ನಿಷೇಧಿಸುವ ಮೂಲಕ ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗರಬತ್ತಿ ಮಾರುಕಟ್ಟೆಗೆ ಉತ್ತೇಜನ ನೀಡಲು ಹೊಸ ಮಾನದಂಡವನ್ನು ಹೊರತರಲಾಗಿದೆ ಎಂದು ತಿಳಿಸಿದೆ.

‘ಐಎಸ್‌ 19412:2025’ ಅಗರಬತ್ತಿಗಳಿಗೆ ಮೀಸಲಾದ ಹೊಸ ಮಾನದಂಡವಾಗಿದೆ. ಈ ಮಾನದಂಡವು, ಗ್ರಾಹಕರಿಗೆ ಗುಣಮಟ್ಟದ ಅಗರಬತ್ತಿ ಆಯ್ಕೆಗೆ ನೆರವು ನೀಡಲಿದೆ ಎಂದು ತಿಳಿಸಿದೆ.

ಭಾರತೀಯ ಮಾನಕ ಬ್ಯೂರೊ ಅಗರಬತ್ತಿಗಳು ಅಥವಾ ಧೂಪದ್ರವ್ಯ ತಯಾರಿಕೆಯಲ್ಲಿ ಬಳಸಲು ನಿಷೇಧಿಸಲಾದ ವಸ್ತುಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ ಅಲೆಥ್ರಿನ್, ಪರ್ಮೆಥ್ರಿನ್, ಸೈಪರ್ಮೆಥ್ರಿನ್, ಡೆಲ್ಟಾಮೆಥ್ರಿನ್ ಮತ್ತು ಫಿಪ್ರೊನಿಲ್‌ ನಂತಹ ಕೆಲವು ಕೀಟನಾಶಕ ರಾಸಾಯನಿಕಗಳು ಹಾಗೂ ಬೆಂಜೈಲ್ ಸೈನೈಡ್, ಈಥೈಲ್ ಅಕ್ರಿಲೇಟ್ ಮತ್ತು ಡೈಫೆನಿಲಮೈನ್ ಸಹ ಸೇರಿವೆ.

ಮಾನವನ ಆರೋಗ್ಯ, ತಯಾರಿಕಾ ಘಟಕಗಳ ಒಳಾಂಗಣದಲ್ಲಿ ಗಾಳಿಯ ಗುಣಮಟ್ಟ ಮತ್ತು ಪರಿಸರ ಸುರಕ್ಷತೆಯ ಮೇಲೆ ಇವು ಪರಿಣಾಮ ಬೀರುವುದರಿಂದ ಇವುಗಳಲ್ಲಿ ಹಲವು ವಸ್ತುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಬಂಧಿಸಲಾಗಿದೆ ಅಥವಾ ನಿಷೇಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಕ್ರಮವು ಗ್ರಾಹಕರಲ್ಲಿ ವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ತಯಾರಿಕ ಘಟಕಗಳು ನೈತಿಕ ಮತ್ತು ಸುಸ್ಥಿರ ತಯಾರಿಕಾ ಚಟುವಟಿಕೆ ಅನುಸರಿಸುವಂತೆ ಮಾಡಲಿವೆ ಎಂದು ತಿಳಿಸಿದೆ.

ಭಾರತವು, ಜಗತ್ತಿನಲ್ಲಿ ಅತಿಹೆಚ್ಚು ಅಗರಬತ್ತಿಗಳನ್ನು ಉತ್ಪಾದನೆ ಮತ್ತು ರಫ್ತು ಮಾಡುವ ರಾಷ್ಟ್ರವಾಗಿದ್ದು, ದೇಶದ ಅಗರಬತ್ತಿ ಉದ್ಯಮದ ಮೌಲ್ಯವು ₹8 ಸಾವಿರ ಕೋಟಿಯಷ್ಟಿದೆ. ಈ ಪೈಕಿ ₹1,200 ಕೋಟಿ ಮೌಲ್ಯದಷ್ಟು ಅಗರಬತ್ತಿಗಳನ್ನು 150ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅಮೆರಿಕ, ಮಲೇಷ್ಯಾ, ನೈಜೀರಿಯಾ, ಬ್ರೆಜಿಲ್ ಮತ್ತು ಮೆಕ್ಸಿಕೊ ಪ್ರಮುಖ ಮಾರುಕಟ್ಟೆಗಳಾಗಿವೆ.

Source: Prajavani

ಸಂತಾಲಿ ಭಾಷೆಯಲ್ಲಿ ಭಾರತದ ಸಂವಿಧಾನ (Indian Constitution in Santhali Language)

ರಾಷ್ಟ್ರಪತಿ ದೌಪದಿ ಮುರ್ಮು ಅವರು ಸಂತಾಲಿ ಭಾಷೆಯಲ್ಲಿ ಭಾರತ ಸಂವಿಧಾನವನ್ನು ಬಿಡುಗಡೆ ಮಾಡಿದರು.

‘ಭಾರತೀಯ ಸಂವಿಧಾನವು ಸಂತಾಲಿ ಭಾಷೆಯಲ್ಲಿ ಲಭ್ಯವಿರುವುದು ಸಂತಾಲಿ ಜನರಿಗೆ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ. ಇದನ್ನು ಒಲ್ ಚಿಕಿ ಲಿಪಿಯಲ್ಲಿ ಬರೆಯಲಾಗಿದೆ. ಅವರ ಭಾಷೆಯಲ್ಲಿ ಸಂವಿಧಾನವನ್ನು ಓದಲು ಮತ್ತು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಬ್ರೌಪದಿ ಮುರ್ಮು ಅವರು ಹೇಳಿದರು.

ಒಲ್‌ ಚಿಕಿ ಲಿಪಿಯ ಶತಮಾನೋತ್ಸವದ ಸಂದರ್ಭದಲ್ಲಿ ಸಂವಿಧಾನವನ್ನು ಈ ಲಿಪಿಯಲ್ಲಿ ಹೊರತಂದಿರುವುದಕ್ಕೆ ಕೇಂದ್ರ ಕಾನೂನು ಸಚಿವ ಅವರನ್ನು ಮುರ್ಮು ಶ್ಲಾಘಿಸಿದರು.

ಸಂತಾಲಿ ಭಾಷೆಯನ್ನು 2003ರಲ್ಲಿ, 92ನೇ ಸಂವಿಧಾನಾತ್ಮಕ ತಿದ್ದುಪಡಿ ಕಾಯ್ದೆಯ ಮೂಲಕ ಭಾರತದ ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲಾಯಿತು.

2003ರ 92ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸೇರಿಸಲಾದ ಸಂತಾಲಿ ಭಾಷೆ, ಭಾರತದ ಅತ್ಯಂತ ಪ್ರಾಚೀನ ಜೀವಂತ ಭಾಷೆಗಳಲ್ಲೊಂದು ಆಗಿದೆ.

ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ಗಣನೀಯ ಸಂಖ್ಯೆಯ ಆದಿವಾಸಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ.

1950: ಆರಂಭದಲ್ಲಿ 14 ಭಾಷೆಗಳು

1967: ಸಿಂಧಿ ಸೇರಿಕೆ

1992: ಕೊಂಕಣಿ, ಮಣಿಪುರಿ, ನೇಪಾಳಿ

2004: ಬೋಡೋ, ಡೋಗ್ರಿ, ಮೈಥಿಲಿ, ಸಂಥಾಲಿ
➡️ ಒಟ್ಟು 22 ಭಾಷೆಗಳು

ಮೂಲ ಭಾಷೆಗಳು (1950)ನಂತರ ಸೇರಿಸಲಾದವು
ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು, ಉರ್ದುಸಿಂಧಿ (1967), ಕೊಂಕಣಿ (1992), ಮಣಿಪುರಿ (1992), ನೇಪಾಳಿ (1992), ಬೋಡೋ (2004), ಡೋಗ್ರಿ (2004), ಮೈಥಿಲಿ (2004), ಸಂತಾಲಿ (2004)

🇮🇳 ಭಾರತೀಯ ಸಂವಿಧಾನದ 8ನೇ ಪಟ್ಟಿ – 22 ಅಧಿಕೃತ ಭಾಷೆಗಳು

ಕ್ರಮ ಸಂಖ್ಯೆಭಾಷೆಪ್ರಧಾನವಾಗಿ ಮಾತನಾಡುವ ರಾಜ್ಯಗಳು/ಪ್ರದೇಶಗಳುಮಾನ್ಯತೆ ಪಡೆದ ವರ್ಷ
1ಅಸ್ಸಾಮೀಸ್ಅಸ್ಸಾಂ1950
2ಬಂಗಾಳಿಪಶ್ಚಿಮ ಬಂಗಾಳ, ತ್ರಿಪುರ1950
3ಗುಜರಾತಿಗುಜರಾತ್1950
4ಹಿಂದಿಉತ್ತರ ಭಾರತದ ರಾಜ್ಯಗಳು1950
5ಕನ್ನಡಕರ್ನಾಟಕ1950
6ಕಾಶ್ಮೀರಿಜಮ್ಮು ಮತ್ತು ಕಾಶ್ಮೀರ1950
7ಮಲಯಾಳಂಕೇರಳ, ಲಕ್ಷದ್ವೀಪ1950
8ಮರಾಠಿಮಹಾರಾಷ್ಟ್ರ1950
9ಒಡಿಯಾಒಡಿಶಾ1950
10ಪಂಜಾಬಿಪಂಜಾಬ್1950
11ಸಂಸ್ಕೃತಭಾರತದಾದ್ಯಂತ (ಶಾಸ್ತ್ರೀಯ ಭಾಷೆ)1950
12ತಮಿಳುತಮಿಳುನಾಡು, ಪುದುಚೇರಿ1950
13ತೆಲುಗುಆಂಧ್ರಪ್ರದೇಶ, ತೆಲಂಗಾಣ1950
14ಉರ್ದುತೆಲಂಗಾಣ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ1950
15ಸಿಂಧಿಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ1967
16ಕೊಂಕಣಿಗೋವಾ, ಕರ್ನಾಟಕ, ಮಹಾರಾಷ್ಟ್ರ1992
17ಮಣಿಪುರಿಮಣಿಪುರ1992
18ನೇಪಾಳಿಸಿಕ್ಕಿಂ, ಪಶ್ಚಿಮ ಬಂಗಾಳ (ಡಾರ್ಜಿಲಿಂಗ್)1992
19ಬೋಡೋಅಸ್ಸಾಂ2004
20ಡೋಗ್ರಿಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ2004
21ಮೈಥಿಲಿಬಿಹಾರ, ಜಾರ್ಖಂಡ್2004
22ಸಂಥಾಲಿಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ2004

Source: Prajavani, Gemini AI

ಪ್ರಚಲಿತ ವಿದ್ಯಮಾನಗಳು: 20ನೇ ಡಿಸೆಂಬರ್ 2025

  • ಒಳಮೀಸಲಾತಿ ಮಸೂದೆಗೆ ಪರಿಷತ್ ಒಪ್ಪಿಗೆ

ಸಂದರ್ಭ: ಪರಿಶಿಷ್ಟಜಾತಿ ಯವರಿಗೆ ಒಳಮೀಸಲಾತಿ ಕಲ್ಪಿಸುವ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಉದ್ದೇಶದ ಮಸೂದೆಗೆ ವಿಧಾನ ಪರಿಷತ್ತು ಅಂಗೀಕಾರ ನೀಡಿದೆ.

  • ಸಮಾಜ ಕಲ್ಯಾಣ ಸಚಿವ ವಿಧಾನ ಪರಿಷತ್ತಿನಲ್ಲಿ ‘ಕರ್ನಾಟಕ ಅನುಸೂಚಿತ ಜಾತಿಗಳ (ಉಪವರ್ಗೀ ಕರಣ) ಮಸೂದೆಯನ್ನು ಪರ್ಯಾಲೋಚನೆಗೆ ಮಂಡಿಸಿದರು.

ಇತರ ಮಸೂದೆಗಳು: lಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ2025

  • ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ (ತಿದ್ದುಪಡಿ) ಮಸೂದೆ–2025
  • ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಮಸೂದೆ–2025
  • ಕಾರಾಗೃಹಗಳಲ್ಲಿ ಎಐ ಆಧಾರಿತ ಭದ್ರತೆ

ಸಂದರ್ಭ: ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಭದ್ರತಾ ತಂತ್ರಾಂಶವನ್ನು ಅಳವಡಿಸಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ವಿಧಾನ ಸಭೆಯಲ್ಲಿ ಹೇಳಿದರು.

  • ‘ಕಾರಾಗೃಹಗಳ ಭದ್ರತೆ ಹಾಗೂ ಆಡಳಿತ ವ್ಯವಸ್ಥೆ ಯನ್ನು ಬಲಪಡಿಸಿ, ಬಂದಿಗಳ ಚಲನವಲನಗಳ ಮೇಲೆ ಇನ್ನೂ ಹೆಚ್ಚಿನ ನಿಗಾವಹಿಸಲು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ‘ಎಐ– ಆಡಿಯೊ–ವಿಡಿಯೊ ಅನಾಲಿಟಿಕ್ಸ್‌ ಸಿಸ್ಟಮ್‌’ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದನ್ನು ಎಲ್ಲ ಕಾರಾಗೃಹಗಳಿಗೂ ವಿಸ್ತರಿಸಲಾಗುವುದು’ ಎಂದರು.
  • ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರು ನಿಯಮ 69ರ ಅಡಿ ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಪರಮೇಶ್ವರ, ‘ರಾಜ್ಯದ ಯಾವುದೇ ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳು ಇರದಂತೆ ತಪಾಸಣೆ ಮಾಡಿ, ಡಿ.31ರೊಳಗೆ ಎಲ್ಲ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲು ಕಾರಾಗೃಹ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದರು.
  • ಬಂದಿಗಳನ್ನು ಎ, ಬಿ, ಸಿ ಮಾದರಿಯಲ್ಲಿ ವರ್ಗೀಕರಿಸಿ, ಸೂಕ್ಷ್ಮವಾಗಿ ಮೇಲ್ವಿಚಾರಣೆ ನಡೆಸ ಲಾಗುತ್ತದೆ. ನಿಷೇಧಿತ ವಸ್ತುಗಳನ್ನು ಸರಬರಾಜು ಮಾಡುವ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಿಬ್ಬಂದಿಯ ಕರ್ತವ್ಯದ ಆಡಿಟ್‌ ಮಾಡಿ, ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
  • ಅರಣ್ಯ ಗುತ್ತಿಗೆ ಕಾನೂನುಬಾಹಿರ: ಕೇಂದ್ರದ ಪೂರ್ವಾನುಮತಿ ಇಲ್ಲದೆ ಭೂಬಳಕೆ ಸಲ್ಲ: ಸುಪ್ರೀಂ

ಸಂದರ್ಭ: 1980 ಅರಣ್ಯ (ಸಂರಕ್ಷಣಾ) ಕಾಯ್ದೆಯ ಸೆಕ್ಷನ್ 2 ಅಡಿ ಯಲ್ಲಿ ಕೇಂದ್ರ ಸರ್ಕಾರದ ಪೂರ್ವಾ ನುಮತಿ ಇಲ್ಲದೆ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಲು ಅಥವಾ ಕೃಷಿ ಉದ್ದೇಶಗಳಿಗಾಗಿ ಬಳಸಲು ಸಾಧ್ಯವಿಲ್ಲ. ಕಾನೂನು ಉಲ್ಲಂಘಿಸಿ ನೀಡಿದ ಅಂತಹ ಯಾವುದೇ ಗುತ್ತಿಗೆ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

  • ಕಲಘಟಗಿ ತಾಲ್ಲೂಕಿನ ಗಾಂಧಿ ಜೀವನ್ ಸಾಮೂಹಿಕ ಕೃಷಿ ಸಹಕಾರ ಸಂಘಕ್ಕೆ 134 ಎಕರೆ ಅರಣ್ಯ ಭೂಮಿಯ ಗುತ್ತಿಗೆ ಮುಂದುವರಿಸಲು ಅವಕಾಶ ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್‌ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ರದ್ದುಪಡಿಸಿದೆ.
  • ಅರಣ್ಯ ಭೂಮಿಯನ್ನು ಕೃಷಿ ಉದ್ದೇಶ ಗಳಿಗಾಗಿ ಗುತ್ತಿಗೆ ನೀಡುವುದೇ ಕಾನೂನು ಬಾಹಿರ ಮತ್ತು 1980ರ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿ ರುವ ನ್ಯಾಯಪೀಠವು, ‘ತಜ್ಞರೊಂದಿಗೆ ಸಮಾಲೋಚಿಸಿ ಸ್ಥಳೀಯ ಸಸ್ಯಗಳು ಮತ್ತು ಮರಗಳನ್ನು ನೆಡುವ ಮೂಲಕ 134 ಎಕರೆ ಪ್ರದೇಶದಲ್ಲಿ ಅರಣ್ಯವನ್ನು ಪುನರ್‌ಸ್ಥಾಪಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ 12 ತಿಂಗಳಲ್ಲಿ ಅನುಸರಣಾ ವರದಿ ಸಲ್ಲಿಸಬೇಕು‘ ಎಂದು ನಿರ್ದೇಶನ ನೀಡಿದೆ.
  • ‘ಪ್ರತಿವಾದಿ ಸಹಕಾರ ಸಂಘಕ್ಕೆ ಕೃಷಿ ಉದ್ದೇಶಗಳಿಗಾಗಿ ಅರಣ್ಯಭೂಮಿ ಗುತ್ತಿಗೆ ನೀಡಿದ್ದು ಸರಿಯಲ್ಲ. ಇದರಿಂದಾಗಿ, ಸುಮಾರು 134 ಎಕರೆಗಳಷ್ಟು ವಿಸ್ತಾರ ವಾದ ಅರಣ್ಯ ಪ್ರದೇಶ ನಾಶವಾಯಿತು. ಅಲ್ಲದೇ, ಸಹಕಾರ ಸಂಘವು 10 ವರ್ಷಗಳಿಗೂ ಹೆಚ್ಚು ಕಾಲ ಅರಣ್ಯ ಪ್ರದೇಶದ ಗುತ್ತಿಗೆ ಪಡೆದಿತ್ತು. ಗುತ್ತಿಗೆಯ ವಿಸ್ತರಣೆಗೆ ಸಂಘ ಅರ್ಹತೆಯನ್ನೇ ಹೊಂದಿರಲಿಲ್ಲ’ ಎಂದು ಪೀಠ ಹೇಳಿದೆ.

ಪ್ರಕರಣವೇನು?

  • ಕಲಘಟಗಿ ತಾಲ್ಲೂಕಿನ ಬೆಣಚಿ ಮತ್ತು ತುಮರಿಕೊಪ್ಪ ಗ್ರಾಮಗಳಲ್ಲಿರುವ 134 ಎಕರೆ ಮತ್ತು 6 ಗುಂಟೆಯನ್ನು ಸಹಕಾರ ಸಂಘಕ್ಕೆ ಹತ್ತು ವರ್ಷಗಳ ಅವಧಿಗೆ ಅರಣ್ಯ ಇಲಾಖೆ 1976ರಲ್ಲಿ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಅವಧಿಯಲ್ಲಿ, ಸಂಘದ ಸದಸ್ಯರು ಮರಗಳನ್ನು ಕಡಿದು ಭೂಮಿಯಲ್ಲಿ ಸಾಗುವಳಿ ಮಾಡಿದ್ದರು. ಗುತ್ತಿಗೆ ಅವಧಿಯನ್ನು ವಿಸ್ತರಿಸಲು ಅರಣ್ಯ ಇಲಾಖೆ 1985ರಲ್ಲಿ ನಿರಾಕರಿಸಿತ್ತು.
  • ಈ ಆದೇಶ ಪ್ರಶ್ನಿಸಿ ಸಂಘವು 1987ರಲ್ಲಿ ಹೈಕೋರ್ಟ್‌ ಮೊರೆ ಹೋಗಿತ್ತು. ಈ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಆ ಬಳಿಕ, ಈ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ಅರಣ್ಯ ಇಲಾಖೆ ಪ್ರಕ್ರಿಯೆ ಆರಂಭಿಸಿತ್ತು. ಜಾಗ ಸ್ವಾಧೀನಕ್ಕೆ ಅರಣ್ಯ ಸಂರಕ್ಷಣಾಧಿಕಾರಿ 2004ರಲ್ಲಿ ಆದೇಶ ಹೊರಡಿಸಿದ್ದರು. ಸಂಘ ಸಲ್ಲಿಸಿದ್ದ ಮೇಲ್ಮನವಿಯನ್ನು ಅರಣ್ಯ ಸಂರಕ್ಷಣಾಧಿಕಾರಿ 2006ರಲ್ಲಿ ತಿರಸ್ಕರಿಸಿದ್ದರು. ಅರಣ್ಯ ಇಲಾಖೆಯು ಜಾಗವನ್ನು 2007ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು.
  • ಹೈಕೋರ್ಟ್‌ನ 2009ರ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಅರಣ್ಯ ಇಲಾಖೆ ಸಲ್ಲಿಸಿದ ಸಿವಿಲ್ ಮೇಲ್ಮನವಿ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.
  • ಈ ಜಾಗವು ಅರಣ್ಯ ಇಲಾಖೆಯ ಸ್ವಾಧೀನದಲ್ಲಿದ್ದು, ಯಾವುದೇ ಸಾಗುವಳಿ ಇಲ್ಲ ಎಂದು ಅರಣ್ಯ ಇಲಾಖೆಯು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿತು. ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆಯೇ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ 1996 ಹಾಗೂ 2000ರಲ್ಲಿ ತೀರ್ಪು ನೀಡಿದೆ ಎಂದೂ ವಾದಿಸಿತು.
  • ಈ ವಾದಗಳನ್ನು ಅಂಗೀಕರಿಸಿದ ನ್ಯಾಯಪೀಠವು, ‘ದೊಡ್ಡ ಪ್ರಮಾಣದಲ್ಲಿ ಅರಣ್ಯನಾಶಕ್ಕೆ ಕಾರಣ ಆಗಿರುವುದರಿಂದ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡು ವುದೇ ಅನಪೇಕ್ಷಿತ. ಗುತ್ತಿಗೆ ನೀಡುವ ಹಂತದಲ್ಲಿ ನಡೆದ ಅಕ್ರಮವನ್ನು ಶಾಶ್ವತ ಗೊಳಿಸಲು ಅನುಮತಿಯನ್ನು ಮುಂದು ವರಿಸುವುದು ಸರಿಯಲ್ಲ ಎಂದಿದೆ.
  • ಅರಣ್ಯ ಇಲಾಖೆಯು 2007ರಲ್ಲೇ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿರು ವುದರಿಂದ, ಸಂಘಕ್ಕೆ ಗುತ್ತಿಗೆ ಮುಂದು ವರಿಸಲು ಅವಕಾಶ ನೀಡುವ ಹೈಕೋರ್ಟ್ ನಿರ್ದೇಶನವು ಕಾನೂನಿ ನಲ್ಲಿ ಸಮರ್ಥನೀಯವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
  • ಉತ್ತರ ಅಭಿವೃದ್ಧಿಗೆ ಬದ್ಧ’: ಎಷ್ಟೇ ವೆಚ್ಚವಾದರೂ ಶಿಫಾರಸುಗಳ ಅನುಷ್ಠಾನ: ಸಿ.ಎಂ

ಸಂದರ್ಭ: ‘ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂಬಂಧಿಸಿದಂತೆ ಆರ್ಥಿಕ ತಜ್ಞ ಪ್ರೊ.ಎಂ. ಗೋವಿಂದ ರಾವ್ ಸಮಿತಿ ನೀಡಲಿರುವ ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೆ ತರುವ ಮೂಲಕ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸಲು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

  • ಮುಖ್ಯಮಂತ್ರಿ ಹೇಳಿದ್ದೇನು?: ‘ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ನಂಜುಂಡಪ್ಪ ಸಮಿತಿ ರಚನೆಯಾಗಿತ್ತು. ನಂಜುಂಡಪ್ಪ ವರದಿಯ ಬಳಿಕ ನೀಡಿದ ಅನುದಾನಗಳ ಬಳಕೆ, ಅನುಷ್ಠಾನ ಮತ್ತು ಫಲಿತಾಂಶದ ಬಗ್ಗೆ ಅಧ್ಯಯನ ಮಾಡಲು ಗೋವಿಂದ್ ರಾವ್ ಸಮಿತಿ ರಚನೆ ಮಾಡಿದ್ದೇವೆ. ಸಮಿತಿಯ ವರದಿಯ ಪ್ರಕಾರ, ಯಾವ ಜಿಲ್ಲೆ ಹಿಂದುಳಿದಿದೆಯೊ ಆ ಜಿಲ್ಲೆಗಳಿಗೆ ಹೆಚ್ಚು ಒತ್ತು ಕೊಟ್ಟು ಶಕ್ತಿ ತುಂಬುವ ಕೆಲಸ ಮಾಡಲಾಗುವುದು’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
  • ‘ಕರ್ನಾಟಕದ ಎಲ್ಲ ಜನರ ತಲಾ ಆದಾಯ ಹೆಚ್ಚಬೇಕೆನ್ನುವುದು ನಮ್ಮ ಉದ್ದೇಶ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಇಲ್ಲಿಯವರೆಗೆ ಸರ್ಕಾರ ಕೆಲಸ ಮಾಡಿದೆ. ಮುಂದೆಯೂ ಹೆಚ್ಚು ಒತ್ತು ನೀಡಿ, ಸಾಧ್ಯವಾದ ಮಟ್ಟಿಗೆ ತಲಾದಾಯದ ಅಂತರ ಕಡಿಮೆ ಮಾಡಲಾಗುವುದು’ ಎಂದು ಹೇಳಿದರು.
  • ಜಿಬಿಎ: 12 ಮಾರ್ಗಸೂಚಿ

ಸಂದರ್ಭ: ಐದುನಗರಪಾಲಿಕೆಗಳವಾರ್ಡ್‌ಗಳಿಗೆಮೀಸಲಾತಿನಿಗದಿಪಡಿಸಲು12 ಮಾರ್ಗಸೂಚಿಗಳನ್ನುನಿಗದಿಪಡಿಸಿನಗರಾಭಿವೃದ್ಧಿಇಲಾಖೆಆದೇಶಹೊರಡಿಸಿದೆ.

  • ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ– 2024ರಂತೆ ರಚನೆಯಾಗಿರುವ ಐದು ನಗರ ಪಾಲಿಕೆಗಳ ವಾರ್ಡ್‌ ಮೀಸಲಾತಿ ನಿಗದಿಪಡಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2025ರ ಸೆಪ್ಟೆಂಬರ್‌ 29ರಂದು ಸಮಿತಿ ರಚಿಸಲಾಗಿತ್ತು.
  • ಜಿಬಿಎ ಮುಖ್ಯ ಆಯುಕ್ತ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅವರು ಸಮಿತಿಯ ಸದಸ್ಯರಾಗಿದ್ದರು.
  • ಈ ಸಮಿತಿ ಡಿ.12ರಂದು ಸಭೆ ನಡೆಸಿದ್ದು, ವಾರ್ಡ್‌ ಮೀಸಲಾತಿ ನಿಗದಿಗೆ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಅಭಿಪ್ರಾಯಪಟ್ಟಿತು. ಅದರಂತೆ, ಡಿ.19ರಂದು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
  • ದಕ್ಷಿಣ ಪಿನಾಕಿನಿ ನ್ಯಾಯಮಂಡಳಿ: ‘ಸುಪ್ರೀಂಇಂಗಿತ

ಸಂದರ್ಭ: ತೀರ್ಪು ಕಾಯ್ದಿರಿಸಿದ ದ್ವಿಸದಸ್ಯ ನ್ಯಾಯಪೀಠ l ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ: ನದಿ ತೀರದ ರಾಜ್ಯಗಳು ಮಾತುಕತೆ ನಡೆಸಲು ನಿರಾಕರಿಸಿದರೆ, ಕೇಂದ್ರ ಸರ್ಕಾರವು ಸಭೆ ಕರೆಯಲು ಸಾಧ್ಯವಿಲ್ಲಐಶ್ವರ್ಯ ಭಾಟಿ,ಹೆಚ್ಚುವರಿ ಸಾಲಿಸಿಟರ್ ಜನರಲ್.

  • ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯ ಮಂಡಳಿ ರಚಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಇಂಗಿತ ವ್ಯಕ್ತಪಡಿಸಿದೆ.
  • ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಎನ್‌.ವಿ.ಅಂಜಾರಿಯಾ ಪೀಠವು, ‘ವಿವಾದ ಇತ್ಯರ್ಥಪಡಿಸಲು ನ್ಯಾಯ ಮಂಡಳಿ ರಚಿಸುವುದು ಸೂಕ್ತ. ಆಗ ಉಭಯ ರಾಜ್ಯಗಳು ತಮ್ಮ ವಾದ ಗಳನ್ನು ಅಲ್ಲಿ ಮಂಡಿಸುತ್ತವೆ’ ಎಂದು ಅಭಿಪ್ರಾಯಪಟ್ಟಿತು. ಎರಡೂ ರಾಜ್ಯಗಳ ವಾದಗಳನ್ನು ಆಲಿಸಿದ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿತು.
  • ಜಲವಿವಾದವೇನು?: ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟಿ ಕೆರೆ ಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಹತ್ತಿರ ಪೆನ್ನಾರ್ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ಗೆ 2018 ಮೇ 18ರಂದು ಅರ್ಜಿ ಸಲ್ಲಿಸಿತ್ತು. ಜಲವಿವಾದ ನ್ಯಾಯ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2019 ನವೆಂಬರ್ನಲ್ಲಿ ಮನವಿ ಮಾಡಿತ್ತು.
  • ಜಲಶಕ್ತಿ ಸಚಿವಾಲಯವು 2020ರಲ್ಲಿ ಸಂಧಾನ ಸಭೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿರಲಿಲ್ಲ. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರವನ್ನು 2024ರ ಜೂನ್‌ನಲ್ಲಿ ಒತ್ತಾಯಿಸಿತ್ತು.
  • ಈ ನಡುವೆ, ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ, ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲಶಕ್ತಿ ಸಚಿವಾಲಯವು ಹೊಸ ಸಂಧಾನ ಸಮಿತಿ ರಚಿಸಿತ್ತು. ಈ ಸಮಿತಿಯು ಉಭಯ ರಾಜ್ಯಗಳ ನಡುವೆ 9 ಸಭೆಗಳನ್ನು ನಡೆಸಿತ್ತು. ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು.
  • ಜಲ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಮಾತುಕತೆಯ ಮೂಲಕ ಈ ವಿವಾದವನ್ನು ಸೌಹಾರ್ದ ಯುತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರವು ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದಿತ್ತು.
  • ಕರ್ನಾಟಕದ ಜಲಾನಯನ ಪ್ರದೇಶದಲ್ಲಿ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿ ನೀರನ್ನು ಬಳಸಲು ಯೋಜಿಸಲಾಗಿದೆ. ಇದರಲ್ಲಿ 2 ಟಿಎಂಸಿ ಮತ್ತು ಹೆಚ್ಚುವರಿ ನೀರು ತಮಿಳುನಾಡಿಗೆ ಉಳಿದಿದೆ. ಇದು ತಮಿಳುನಾಡಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು.

ನ್ಯಾಯಮಂಡಳಿ ರಚಿಸುವ ಅಗತ್ಯವಿಲ್ಲ

  • ಕೇಂದ್ರ ಸರ್ಕಾರವು 2025ರ ಜನವರಿ 2ರಂದು ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ಸಚಿವರ ಸಭೆ ನಡೆಸುವ ಮೂಲಕ ಮಾತುಕತೆಯಿಂದಲೇ ಜಲ ವಿವಾದ ಪರಿಹರಿಸಲು ರಾಜ್ಯಗಳಿಗೆ ಇನ್ನೊಂದು ಅವಕಾಶ ನೀಡಬೇಕು. ಇದೊಂದು ಸಣ್ಣ ವಿವಾದ. ನ್ಯಾಯಮಂಡಳಿ ರಚಿಸುವ ಅಗತ್ಯವೇ ಇಲ್ಲ.
  • ಅಣುಶಕ್ತಿ: ಖಾಸಗಿ ಸಹಭಾಗಿತ್ವ ಕೇಂದ್ರ ರ್ಕಾರದ ಹುಲಿಸವಾರಿ

ಸಂದರ್ಭ: ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿದ್ದು, ಮಸೂದೆ ದೇಶದ ಒಟ್ಟಾರೆ ಅಣುಶಕ್ತಿ ನೀತಿಗೆ ಸಂಬಂಧಿಸಿದಂತೆ ಹೊಸ ಸಾಧ್ಯತೆ ಮತ್ತು ಸವಾಲುಗಳಿಗೆ ಅವಕಾಶ ಕಲ್ಪಿಸಲಿದೆ.

  • ‘ಭಾರತದ ಪ್ರಗತಿಗಾಗಿ ಅಣುಶಕ್ತಿ ಸುಸ್ಥಿರ ಉತ್ಪಾದನೆ’ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ)ಹೆಸರಿನ ಮಸೂದೆಯು, ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವದ ಜೊತೆಗೆ ವಿದೇಶಿ ಹೂಡಿಕೆಗೂ ಅವಕಾಶ ಕಲ್ಪಿಸಲಿದೆ.
  • 1962ರ ‘ಅಣುಶಕ್ತಿ ಕಾಯ್ದೆ’ ಹಾಗೂ ಪರಮಾಣು ಹಾನಿಗೆ ಸಂಬಂಧಿಸಿದ 2010ರ ನಾಗರಿಕ ಹೊಣೆಗಾರಿಕೆ ಕಾಯ್ದೆಯನ್ನು ಬದಲಾವಣೆ ಮಾಡಿ ಈ ಮಸೂದೆ ಮಂಡಿಸಲಾಗಿದೆ. ಈ ಎರಡೂ ಕಾಯ್ದೆಗಳು ಪರಮಾಣು ನೀತಿಗೆ ಸಂಬಂಧಿಸಿದಂತೆ ಕಠಿಣ ನಿಬಂಧನೆಗಳನ್ನು ಹೊಂದಿದ್ದವು. ದೇಶದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ ಅಣು ವಿದ್ಯುತ್‌ ಉತ್ಪಾದನೆಯ ಪಾಲು ಶೇ 3ರಷ್ಟಿದೆ.
  • 2047ರ ವೇಳೆಗೆ 100 ಗಿಗಾವಾಟ್‌ನಷ್ಟು ಅಣು ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗೆ ಅಗತ್ಯವಾಗಿರುವ ಉದಾರ ಆಡಳಿತ ನೀತಿಗೆ ಹೊಸ ಮಸೂದೆಯು ಅವಕಾಶ ಕಲ್ಪಿಸಲಿದೆ ಎಂದು ಹೇಳಲಾಗಿದೆ.
  • ತೀವ್ರಗೊಳ್ಳುತ್ತಿರುವ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ, ಕಲ್ಲಿದ್ದಲು ಆಧರಿತ ವಿದ್ಯುತ್‌ ಉತ್ಪಾದನೆಯನ್ನು ನಿಯಂತ್ರಣದಲ್ಲಿ ಇರಿಸುವುದು ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಮಾರ್ಗಗಳನ್ನು ಬಲಪಡಿಸುವುದು ಅನಿವಾರ್ಯ.
  • ಆದರೆ ಜಲಶಕ್ತಿ, ಸೌರಶಕ್ತಿ ಹಾಗೂ ಪವನಶಕ್ತಿ ಬಳಸಿಕೊಂಡು ವಿದ್ಯುತ್‌ ಉತ್ಪಾದಿಸುವುದಕ್ಕೆ ಸಾಕಷ್ಟು ಮಿತಿಗಳಿವೆ. ಹಾಗಾಗಿಯೇ, ಅಣು ವಿದ್ಯುತ್‌ ಉತ್ಪಾದನೆ ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
  • ಅಣು ವಿದ್ಯುತ್‌ ಉತ್ಪಾದನೆಯಲ್ಲಿ ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲದೆ, ದೇಶೀಯ ಹಾಗೂ ವಿದೇಶಿ ಖಾಸಗಿ ಸಂಸ್ಥೆ ಗಳ ಭಾಗವಹಿಸುವಿಕೆಯನ್ನು ಉತ್ತೇಜಿ ಸುವುದು ಈ ಮಸೂದೆಯ ಉದ್ದೇಶ ವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
  • ಈ ಸಂಸ್ಥೆಗಳಿಗೆ ಪರವಾನಗಿ ನೀಡುವ ಅವಕಾಶವನ್ನು ಹೊಸ ಮಸೂದೆ ಕೇಂದ್ರಕ್ಕೆ ಒದಗಿಸಲಿದೆ. ಇಲ್ಲಿಯವರೆಗೆ, ಅಣು ವಿದ್ಯುತ್‌ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಭಾರತೀಯ ಅಣು ವಿದ್ಯುತ್‌ ನಿಗಮ (ಎನ್‌ಪಿಸಿಐಎಲ್‌) ಮಾತ್ರ ಅಧಿಕಾರ ಹೊಂದಿತ್ತು.
  • ಪರಮಾಣು ಸ್ಥಾವರದ ನಿರ್ವಹಣೆ ಮತ್ತು ಪೂರೈಕೆ ನಿರ್ವಹಣೆಗೆ ಸಂಬಂಧಿಸಿದ ಕೆಲವು ಕ್ಷೇತ್ರಗಳಲ್ಲಿ ಖಾಸಗಿ ಭಾಗವಹಿಸು ವಿಕೆ ಇದ್ದರೂ, ಮುಖ್ಯ ಹಾಗೂ ಬಹುಸೂಕ್ಷ್ಮ ಕ್ಷೇತ್ರಗಳ ನಿರ್ವಹಣೆ ಸರ್ಕಾರದ ಅಧೀನದಲ್ಲೇ ಇತ್ತು.
  • ಈ ನಿರ್ಬಂಧಗಳನ್ನು ಮಸೂದೆಯು ತೆರವುಗೊಳಿಸಲಿದ್ದು, ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಶ್ರೇಣೀಕೃತ ಹೊಣೆಗಾರಿಕೆ ವ್ಯವಸ್ಥೆಗೆ ಅವಕಾಶ ಕಲ್ಪಿಸಲಿದೆ.
  • ಕಾನೂನು ಚೌಕಟ್ಟಿನ ಸರಳೀಕರಣ ಹಾಗೂ ವಹಿವಾಟು ವೆಚ್ಚಗಳ ಕಡಿತ ಸಾಧ್ಯವಾಗಲಿದ್ದು, ಆಡಳಿತಾತ್ಮಕ ಅನುಮೋದನೆಗಳಿಗೆ ಸಂಬಂಧಿಸಿದ ವಿಳಂಬವನ್ನೂ ಕಡಿಮೆ ಮಾಡುವ ಗುರಿಯನ್ನು ಮಸೂದೆ ಹೊಂದಿದೆ.
  • ಪೇಟೆಂಟ್‌ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಸಂಶೋಧನೆಗಳನ್ನು ಉತ್ತೇಜಿಸುವ ಗುರಿಯನ್ನೂ ಹೊಂದಿದೆ.
  • ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿಯವರಿಗೆ ಅವಕಾಶ ಕಲ್ಪಿಸುವ ಚಿಂತನೆ ವಿದ್ಯುತ್‌ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾಗಿದ್ದರೂ, ಮಸೂದೆಯಲ್ಲಿನ ಕೆಲವು ಅಂಶಗಳು ಆತಂಕಕ್ಕೆ ಕಾರಣ ಆಗುವಂತಿವೆ.
  • ಯುಪಿಎ ಸರ್ಕಾರದ ಮೈಲಿಗಲ್ಲುಗಳಲ್ಲಿ ಒಂದಾದ ಭಾರತ–ಅಮೆರಿಕ ಪರಮಾಣು ಒಪ್ಪಂದ ಮತ್ತು 2010ರ ಕಾಯ್ದೆಯೂ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ಅಮೆರಿಕದ ಪೂರೈಕೆದಾರರು ಭಾರತೀಯ ಕಾನೂನು ನಿರ್ಬಂಧಗಳ ಬಗ್ಗೆ, ವಿಶೇಷವಾಗಿ ಉತ್ತರದಾಯಿತ್ವದ ಕಾನೂನುಗಳ ಬಗ್ಗೆ ಎಚ್ಚರದಿಂದಿದ್ದರು.
  • ಈ ಹೊಣೆಗಾರಿಕೆಗೆ ವಿಧಿಸಿದ್ದ ನಿಬಂಧನೆಗಳನ್ನು ಪ್ರಸ್ತಾವಿತ ಮಸೂದೆಯು ತೆಗೆದುಹಾಕಿದೆ. ಪರಮಾಣು ಸ್ಥಾವರಗಳಲ್ಲಿ ದುರಂತ ಸಂಭವಿಸಿದರೆ ಸ್ಥಾವರದ ನಿರ್ವಹಣೆ ಹೊತ್ತ ಸಂಸ್ಥೆಯು ಪಾವತಿಸಬೇಕಾದ ಗರಿಷ್ಠ ಹೊಣೆಗಾರಿಕೆಯ ಮೊತ್ತವು, ಆ ಸಂಸ್ಥೆ ಬಳಕೆ ಮಾಡುವ ಪರಮಾಣು ಸ್ಥಾವರದ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ.
  • ಈ ಹೊಣೆಗಾರಿಕೆ ಮೊತ್ತವನ್ನು ₹3 ಸಾವಿರ ಕೋಟಿಗೆ ಮಿತಿಗೊಳಿಸಿದೆ. ಜೊತೆಗೆ ಪರಿಹಾರ ನೀಡಬೇಕಾದ ಜವಾಬ್ದಾರಿಯನ್ನೂ ಮಿತಗೊಳಿಸಲಿದೆ. ಬಹು ಸಂಕೀರ್ಣವಾದ ಅಣುಶಕ್ತಿ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಖಾಸಗಿಯವರಿಗೆ ಅವಕಾಶ ಕಲ್ಪಿಸುವ ಹಾಗೂ ಅವರಿಗೆ ಶಾಸನಬದ್ಧ ಸುರಕ್ಷತೆ ಒದಗಿಸುವ ನಿರ್ಧಾರ ಪ್ರತಿ ಪಕ್ಷಗಳ ಟೀಕೆಗೆ ಸಹಜವಾಗಿಯೇ ಒಳಗಾಗಿದೆ.
  • ಪರಿಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗದ ವ್ಯಾಪ್ತಿಯನ್ನು ಕಿರಿದುಗೊಳಿಸುವುದರ ಜೊತೆಗೆ, ಅಣುಶಕ್ತಿ ಕ್ಷೇತ್ರಕ್ಕೆ ಸಂಬಂಧಿಸಿದ ಸ್ವತಂತ್ರ ನಿಯಂತ್ರಕಗಳನ್ನು ಇಲ್ಲವಾಗಿಸಿರುವುದರ ಬಗ್ಗೆಯೂ ಟೀಕೆಗಳಿವೆ. ಅಣು ವಿದ್ಯುತ್‌ ಸ್ವಾವಲಂಬನೆ ಹೆಸರಿನಲ್ಲಿ ಅಸುರಕ್ಷತೆ, ಅಪಾಯ ಕಲ್ಪಿಸುವ ಸಾಧ್ಯತೆ ಇರುವುದರಿಂದಲೇ, ‘ಎಸ್‌ಎಚ್‌ಎಎನ್‌ಟಿಐ–ಶಾಂತಿ ಮಸೂದೆ’ ಸರ್ಕಾರದ ಪಾಲಿಗೆ ಮುಂದಿನ ದಿನಗಳಲ್ಲಿ ಹುಲಿಸವಾರಿಯಾಗಿ ಪರಿಣಮಿಸಿದರೆ ಅಚ್ಚರಿಯೇನಿಲ್ಲ.
  • ನೇರ ತೆರಿಗೆ ಸಂಗ್ರಹ ಹೆಚ್ಚಳ: ₹17.04 ಲಕ್ಷ ಕೋಟಿ ವರಮಾನ ಸಂಗ್ರಹ: ಮರುಪಾವತಿಯು ಶೇ 14ರಷ್ಟು ಇಳಿಕೆ

ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ 1ರಿಂದ ಡಿಸೆಂಬರ್‌ 17ರವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹವು ₹17.04 ಲಕ್ಷ ಕೋಟಿ ಯಷ್ಟಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿಯ (ಸಿಬಿಡಿಟಿ) ಅಂಕಿಅಂಶಗಳು ತಿಳಿಸಿವೆ.

  • ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೇರ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಶೇ 8ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
  • ಮರುಪಾವತಿಯು ಮಂದಗೊಂಡಿ ರುವುದು ಮತ್ತು ಕಾರ್ಪೊರೇಟ್‌ಗಳಿಂದ ಮುಂಗಡ ತೆರಿಗೆ ಸಂಗ್ರಹದ ಪ್ರಮಾಣದಲ್ಲಿ ಏರಿಕೆಯಾಗಿರುವುದು ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ.
  • ನಿವ್ವಳ ಕಾರ್ಪೊರೇಟ್‌ ತೆರಿಗೆ ಸಂಗ್ರಹದಲ್ಲಿ ಶೇ 10.54ರಷ್ಟು ಹೆಚ್ಚಳವಾಗಿ,₹8.17 ಲಕ್ಷ ಕೋಟಿಯಾಗಿದೆ.  ವೈಯಕ್ತಿಕ ಆದಾಯ ತೆರಿಗೆಯನ್ನು ಒಳಗೊಂಡಿರುವ ಕಾರ್ಪೊರೇಟ್‌ಯೇತರ ತೆರಿಗೆ ಸಂಗ್ರಹವು ₹8.47 ಲಕ್ಷ ಕೋಟಿಯಾಗಿದ್ದು, ಶೇ 6.37ರಷ್ಟು ಏರಿಕೆ ಕಂಡಿದೆ. ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಸಂಗ್ರಹವು ₹40,195 ಕೋಟಿಯಾಗಿದೆ.
  • ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮರುಪಾವತಿಯು (ರೀಫಂಡ್‌) ಶೇ 14ರಷ್ಟು ಇಳಿದಿದ್ದು, ₹2.97 ಲಕ್ಷ ಕೋಟಿಯಾಗಿದೆ.  ಮರುಪಾವತಿಯನ್ನು ಸರಿಹೊಂದಿಸುವ ಮೊದಲು ಒಟ್ಟು ನೇರ ತೆರಿಗೆ ಸಂಗ್ರಹವು ಶೇ 4.16ರಷ್ಟು ಏರಿಕೆಯಾಗಿ, ₹20.01 ಲಕ್ಷ ಕೋಟಿ ದಾಟಿದೆ.
  • ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು, ನೇರ ತೆರಿಗೆ ಮೂಲಕ ₹25.20 ಲಕ್ಷ ಕೋಟಿ ಸಂಗ್ರಹಿಸಲು ಗುರಿ ಹೊಂದಿದೆ. ಇದು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 12.7ರಷ್ಟು ಹೆಚ್ಚಳ. ಷೇರು ವಹಿವಾಟು ತೆರಿಗೆ ಮೂಲಕ ₹78 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.
  • ‘ಕಾರ್ಪೊರೇಟ್‌ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿರುವುದು ಕಾರ್ಪೊರೇಟ್‌ ಕಂಪನಿಗಳ ಸದೃಢ ಗಳಿಕೆಯನ್ನು ಸೂಚಿಸುತ್ತಿದೆ’ ಎಂದು ಡೆಲಾಯ್ಟ್ ಇಂಡಿಯಾ ಪಾಲುದಾರ ರೋಹಿಂಟನ್ ಸಿಧ್ವಾ ಹೇಳಿದ್ದಾರೆ. ಮರುಪಾವತಿ ಸಂಬಂಧಿಸಿದ ಪ್ರಕರಣಗಳ ಹೆಚ್ಚಿನ ಪರಿಶೀಲನೆಯಿಂದಾಗಿ ಮರುಪಾವತಿ ವಿತರಣೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ಹೇಳಿದ್ದಾರೆ.
  • ವಿದೇಶಿ ವಿನಿಮಯ ಸಂಗ್ರಹ ಏರಿಕೆ

ಸಂದರ್ಭ:ಡಿಸೆಂಬರ್12ಕ್ಕೆಕೊನೆಗೊಂಡವಾರದಲ್ಲಿದೇಶದವಿದೇಶಿವಿನಿಮಯಮೀಸಲುಸಂಗ್ರಹದಪ್ರಮಾಣ₹15,144 ಕೋಟಿಯಷ್ಟುಹೆಚ್ಚಳವಾಗಿದೆಎಂದುಆರ್‌ಬಿಐತಿಳಿಸಿದೆ.

  • ಪ್ರಸ್ತುತ ಒಟ್ಟು ಮೀಸಲು ಸಂಗ್ರಹ ₹61.77 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
  • ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ ₹8,122 ಕೋಟಿಯಷ್ಟು ಹೆಚ್ಚಳವಾಗಿದ್ದು, ₹50 ಲಕ್ಷ ಕೋಟಿಯಾಗಿದೆ. ಚಿನ್ನದ ಮೀಸಲು ಸಂಗ್ರಹದಲ್ಲಿ ₹6,795 ಕೋಟಿ ಏರಿಕೆಯಾಗಿದ್ದು, ₹9.65 ಲಕ್ಷ ಕೋಟಿಯಾಗಿದೆ.
  • ಸ್ಪೆಷಲ್ ಡ್ರಾಯಿಂಗ್ ರೈಟ್ಸ್‌ (ಎಸ್‌ಡಿಆರ್) ₹1.68 ಲಕ್ಷ ಕೋಟಿ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪಾಲು ₹42,007 ಕೋಟಿಯಾಗಿದೆ ಎಂದು ತಿಳಿಸಿದೆ.