Wed. Mar 25th, 2026

Kannada

ಪ್ರಚಲಿತ ವಿದ್ಯಮಾನಗಳು: 29ನೇ ಅಕ್ಟೋಬರ್ 2025

  • ಸರ್ಕಾರದ ನಡೆಗೆ ಕೋರ್ಟ್ಅಂಕುಶ

ಸಂದರ್ಭ: ಸರ್ಕಾರಿ ಸ್ಥಳಗಳಲ್ಲಿ 10ಕ್ಕೂ ಹೆಚ್ಚು ಜನರ ಜಮಾವಣೆಗೆ ಪೂರ್ವಾನುಮತಿ ಕಡ್ಡಾಯ ನಿಯಮ: ಸರ್ಕಾರದ ಆದೇಶವು ಸಂವಿಧಾನದ ಅಧ್ಯಾಯ IIIರಲ್ಲಿ ಪ್ರತಿಪಾದಿಸಲಾದ ಹಕ್ಕುಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ 19(1)() ಮತ್ತು (ಬಿ) ಅಡಿಯಲ್ಲಿ ಕೊಡಮಾಡಲಾಗಿರುವ ಸ್ವಾತಂತ್ರ್ಯಗಳನ್ನು ಉಲ್ಲಂಘಿಸುತ್ತದೆಎಂ.ನಾಗಪ್ರಸನ್ನ, ನ್ಯಾಯಮೂರ್ತಿ.

  • ‘ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆ ಗಳು ಸರ್ಕಾರದ ಸ್ಥಳ, ಆವರಣ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಬಳಸುವ ಮುನ್ನ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು’ ಎಂಬ ರಾಜ್ಯ ಸರ್ಕಾರದ ಆದೇಶ ಅನುಷ್ಠಾನಕ್ಕೆ ಹೈಕೋರ್ಟ್ ತಡೆ ನೀಡಿದೆ.
  • ರಾಜ್ಯ ಸಚಿವ ಸಂಪುಟದ ಈ ನಿರ್ಣಯವನ್ನು ಪ್ರಶ್ನಿಸಿ ಹುಬ್ಬಳ್ಳಿಯ, ‘ಪುನಶ್ಚೇತನ ಸೇವಾ ಸಂಸ್ಥೆ’ ಅಧ್ಯಕ್ಷ ವಿನಾಯಕ ಮತ್ತು ‘ವಿ ಕೇರ್ ಫೌಂಡೇಶನ್’ ಅಧ್ಯಕ್ಷ ಗಂಗಾಧರಯ್ಯ, ಧಾರವಾಡದ ರಾಜೀವ ಮಲ್ಹಾರ ಕುಲಕರ್ಣಿ ಹಾಗೂ ಬೆಳಗಾವಿಯ ಉಮಾ ಸತ್ಯಜಿತ್‌ ಚವಾಣ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.
  • ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರ ವಾದ ಆಲಿಸಿದ ನ್ಯಾಯಪೀಠ, ‘ಸರ್ಕಾರದ ಈ ಆದೇಶವು ಸಂವಿಧಾನದ 13(2)ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ, ಈ ಆಕ್ಷೇಪಾರ್ಹ ಆದೇಶದ ಕಾರ್ಯಾಚರಣೆ ಮತ್ತು ಅದರಿಂದ ಈಗಾಗಲೇ ಹೊರಹೊಮ್ಮಿರುವ ಎಲ್ಲಾ ಪರಿಣಾಮಗಳ ಪ್ರಕ್ರಿಯೆಗಳನ್ನು ಮುಂದಿನ ವಿಚಾರಣೆ ಯವರೆಗೆ ತಡೆಹಿಡಿಯುವುದು ಸೂಕ್ತವೆಂದು ಪರಿಗಣಿಸಿ ಈ ಆದೇಶ ನೀಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿತು.
  • ‘ಆಕ್ಷೇಪಾರ್ಹ ಆದೇಶವು ಸಂವಿಧಾನದ 13(2)ನೇ ವಿಧಿಗೆ ವಿರುದ್ಧವಾಗಿದೆ ಮತ್ತು ಈ ಮೂಲಕ 19(1)(ಎ) ಮತ್ತು (ಬಿ) ವಿಧಿಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಕೊಡಮಾಡಲಾಗಿರುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತದೆ. ಮೂಲಭೂತ ಹಕ್ಕುಗಳನ್ನು ಕಾರ್ಯಕಾರಿ ಆದೇಶಗಳಿಂದ ಮೊಟಕುಗೊಳಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
  • ‘ಸಾರ್ವಜನಿಕ ಸಭೆಗಳು ಮತ್ತು ಮೆರವಣಿಗೆಗಳನ್ನು ನಿಯಂತ್ರಿಸುವ ಬಗ್ಗೆ, ಕರ್ನಾಟಕ ಪೊಲೀಸ್ ಕಾಯ್ದೆ–1963ರ ಕಲಂ 31ರಲ್ಲಿ ಈಗಾಗಲೇ ವಿಶೇಷವಾಗಿ ವಿವರಿಸಲಾಗಿದೆ. ಇಂತಹ ಸಂದರ್ಭಗಳ ನಿಯಂತ್ರಣದ ಬಗ್ಗೆ ಕಲಂ 31ರ ಉಪ ವಿಭಾಗ (6)ರಲ್ಲಿ ಏನೆಲ್ಲಾ ವಿಧಾನಗಳನ್ನು ಅನುಸರಿಸ ಬೇಕೆಂಬುದನ್ನು ನಿಖರವಾಗಿ ಸೂಚಿಸಲಾಗಿದೆ. ಇಂತಹುದೊಂದು ಶಾಸನಬದ್ಧ ಕಲಂ ಅಸ್ತಿತ್ವದಲ್ಲಿ ಇರುವಾಗ ಸರ್ಕಾರದ ಹೊಸ ಆದೇಶ ಸಂವಿಧಾನ ವಿರೋಧಿ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
  • ನೋಟಿಸ್‌: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ ಕಾರ್ಯದರ್ಶಿ, ಡಿಜಿ-ಐಜಿಪಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಶನರ್ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ನವೆಂಬರ್ 17ರ ಮಧ್ಯಾಹ್ನ 2:30ಕ್ಕೆ ನಿಗದಿ ಮಾಡಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಮಲ್ಲಿಕಾರ್ಜುನ ಹಿರೇಮಠ ವಕಾಲತ್ತು ವಹಿಸಿದ್ದಾರೆ.

ಅಶೋಕ ಹಾರನಹಳ್ಳಿ ವಾದಾಂಶ

  • l ಕರ್ನಾಟಕ ರಾಜ್ಯದಾದ್ಯಂತ ನಾಗರಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳು, ನಡಿಗೆದಾರರ ಸಂಘಗಳು, ಯೋಗ ಕ್ಲಬ್‌ಗಳು ಮತ್ತು ಓಟಗಾರರ ಗುಂಪುಗಳು, ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ನಿಯಮಿತ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿವೆ. ಆದರೆ, ಸರ್ಕಾರ ಹೊರಡಿಸಿರುವ ಆದೇಶದ ಅನುಸಾರ ಪೂರ್ವಾನುಮತಿ ಕೊರತೆಯಿಂದಾಗಿ ಕ್ರಿಮಿನಲ್ ಕ್ರಮಕ್ಕೆ ಗುರಿಯಾಗಬಹುದು.
  • lಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳಿಂದ ಕೂಡಿದ ಸಂಘ, ಸಂಸ್ಥೆಗಳು, ಅಥವಾ ವ್ಯಕ್ತಿಗಳ ಗುಂಪು ಅಥವಾ ಅವರ ಪರವಾಗಿ ಯಾವುದೇ ಇತರ ವ್ಯಕ್ತಿಯ ಸಂಸ್ಥೆಯು ಈ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಸರ್ಕಾರಿ ಆಸ್ತಿಗಳಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆಯನ್ನು ನಡೆಸಿದರೆ, ಅಂತಹುದನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ ಮತ್ತು ಭಾರತೀಯ ನ್ಯಾಯ ಸಂಹಿತೆ–2023ರ (ಬಿಎನ್‌ಎಸ್‌) ಕಲಂಗಳ ಪ್ರಕಾರ ಸಭೆ ಸೇರುವುದನ್ನು ಕಾನೂನುಬಾಹಿರ ಸಭೆ ಎಂದು ಪರಿಗಣಿಸಲಾಗುತ್ತದೆ.
  • l ಸರ್ಕಾರಿ ಆಸ್ತಿ ಎಂದರೆ: ಸ್ಥಳೀಯ ಪ್ರಾಧಿಕಾರ ಅಥವಾ ಇಲಾಖೆ, ಮಂಡಳಿಗಳು, ಬೆಳೆಗಾರರ ಒಡೆತನದಲ್ಲಿರುವ ಮತ್ತು ನಿರ್ವಹಿಸುವ ಯಾವುದೇ ಭೂಮಿ, ಕಟ್ಟಡ, ರಚನೆ, ರಸ್ತೆ, ಉದ್ಯಾನವನ, ಆಟದ ಮೈದಾನ, ಜಲಮೂಲ ಅಥವಾ ಕರ್ನಾಟಕ ಸರ್ಕಾರದ ನಿಯಂತ್ರಣದಲ್ಲಿರುವ ಅಥವಾ ನಿಹಿತವಾಗಿರುವ, ವಹಿಸಲಾಗಿರುವ ಅಥವಾ ನಿರ್ವಹಿಸುವ ಯಾವುದೇ ಇತರ ಸ್ಥಿರ ಆಸ್ತಿ.

ಅರ್ಜಿದಾರರ ಪ್ರಶ್ನೆಯ ಮುಖ್ಯಾಂಶಗಳು 

  • l16.10.2025: ಖಾಸಗಿ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳನ್ನು ದುರುಪಯೋಗ ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ‘ಪರಿಹಾರ ಮತ್ತು ನಿಯಂತ್ರಣ’ಕ್ಕಾಗಿ ಸಂಪುಟ ಸಭೆ ಕೈಗೊಂಡ ನಿರ್ಧಾರ
  • l ಇದಕ್ಕೆ ಅನುಗುಣವಾಗಿ 18.10.2025ರಂದು ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ ಹೊರಡಿಸಿದ ಆದೇಶ.
  • l19.10.2025 ಮತ್ತು 20.10.2025ರಂದು ಕೆಲವು ಸಚಿವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಂಪುಟದ ನಿರ್ಧಾರವನ್ನು ಸಮರ್ಥಿಸಿಕೊಂಡರು
  • lಅದರಲ್ಲೂ ಐ.ಟಿ–ಬಿ.ಟಿ ಸಚಿವ ಪ್ರಿಯಾಂಕ್ ಖರ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಶಾಖೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ಜಾಗ ಬಳಸಲು ಅನುಮತಿ ನೀಡಲಾಗುವುದಿಲ್ಲ ಎಂದು ಉಚ್ಚರಿಸಿದರು. ಈ ಮಾತುಗಳಲ್ಲಿ ಅವರು ಯಾರನ್ನು ಉದ್ದೇಶಿಸಿ ಈ ನಿರ್ಧಾರ ಕೈಗೊಂಡರು ಎಂಬುದು ಸ್ಪಷ್ಟವಾಗಿದೆ
  • lಕೋರಿಕೆ ಏನು?: ಸರ್ಕಾರಿ ಸ್ಥಳಗಳಲ್ಲಿ ಅನುಮತಿಯಿಲ್ಲದ ಮೆರವಣಿಗೆ, ಸಭೆ ನಡೆಸುವುದನ್ನು ನಿರ್ಬಂಧಿಸಿ ಸರ್ಕಾರ ಇದೇ 18ರಂದು ಹೊರಡಿಸಿರುವ ಆದೇಶವು ಸಂವಿಧಾನದ 13, 14 ಮತ್ತು 19ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ, ಆದೇಶವನ್ನು ರದ್ದುಗೊಳಿಸಬೇಕು

ಸರ್ಕಾರಿ ಸ್ಥಳದಲ್ಲಿ ಜನ ಜಮಾವಣೆ ಸ್ವರೂಪ

  • l‘ಮೆರವಣಿಗೆ ಅಥವಾ ರ್‍ಯಾಲಿ’ ಎಂದರೆ ಮದುವೆ ಮತ್ತು ಅಂತ್ಯಕ್ರಿಯೆ ಸಭೆಗಳು ಮತ್ತು ಚಳವಳಿಗಳನ್ನು ಹೊರತುಪಡಿಸಿ, ಸಂಗೀತ ಅಥವಾ ಇತರ ರೀತಿಯಲ್ಲಿ, ಸರ್ಕಾರಿ ಆಸ್ತಿಯ ಮೂಲಕ ಹಾದುಹೋಗುವ ಸಾಮಾನ್ಯ ಚಳವಳಿ ಅಥವಾ ಮಾರ್ಗ ಮೆರವಣಿಗೆಯನ್ನು ನಡೆಸಲು ಸಾಮಾನ್ಯ ಉದ್ದೇಶ ಹೊಂದಿರುವ ಅಥವಾ ಯಾವುದೇ ಇತರ ಚಟುವಟಿಕೆಯೊಂದಿಗೆ ಯಾವುದೇ ಹೆಸರಿನಿಂದ ಕರೆಯಲಾಗುವ 10ಕ್ಕೂ ಹೆಚ್ಚು ಜನರ ಸಭೆ.
  • lಪೂರ್ವಾನುಮತಿ ಇಲ್ಲದೆ 10ಕ್ಕೂ ಹೆಚ್ಚು ವ್ಯಕ್ತಿಗಳು ಸಭೆ ಸೇರುವುದನ್ನು ಸರ್ಕಾರದ ಹೊಸ ಆದೇಶ ನಿಷೇಧಿಸುತ್ತದೆ. ಅಂತಹ ಸಭೆಯನ್ನು ಕಾನೂನುಬಾಹಿರ ಸಭೆ ಎಂದು ಘೋಷಿಸುತ್ತದೆ. ಇದರಿಂದಾಗಿ ಈ ರೀತಿ ಸಭೆಯಲ್ಲಿ ಭಾಗವಹಿಸು ವವರು ಬಿಎನ್‌ಎಸ್‌ ಕಾಯ್ದೆಯ ಅಡಿಯಲ್ಲಿ ದಂಡದ ಪರಿಣಾಮಗಳಿಗೆ ಗುರಿಯಾಗುತ್ತಾರೆ. ಅನುಮತಿ ಉಲ್ಲಂಘಿಸಿ ನಡೆಸುವ ಅಪರಾಧಗಳನ್ನು ತಡೆಗಟ್ಟಲು ಅಥವಾ ವಿಚಾರಣೆಗೆ ಒಳಪಡಿಸಲು ನ್ಯಾಯವ್ಯಾಪ್ತಿಯ ಅನುಸಾರ ಆದೇಶವು ಪೊಲೀಸರಿಗೆ ಅಧಿಕಾರ ನೀಡಲಾಗಿದೆ.
  • 8ನೇ ವೇತನ ಆಯೋಗ: ಸಂಪುಟ ಒಪ್ಪಿಗೆ : 2026 ಜನವರಿ 1ರಿಂದ ಜಾರಿ ಸಾಧ್ಯತೆ

ಸಂದರ್ಭ: 8ನೇ ವೇತನ ಆಯೋಗದ ಶಿಫಾರಸು ಜಾರಿಯು ಮಧ್ಯಂತರ ವರದಿ ಬಂದ ನಂತರ ಖಚಿತವಾಗುತ್ತದೆ. ಆದರೂ, ಇದು 2026 .1ರಿಂದಲೇ ಜಾರಿಗೆ ಬರಬಹುದುಅಶ್ವಿನಿ ವೈಷ್ಣವ್, ಕೇಂದ್ರ ಸಚಿವ 8ನೇ ವೇತನ ಆಯೋಗ ರಚನೆಯ ನಿಯಮ ಮತ್ತು ನಿಬಂಧನೆಗಳಿಗೆ (ಟಿಒಆರ್‌) ಕೇಂದ್ರ ಸಚಿವ ಸಂಪುಟವು ಮಂಗಳವಾರ ಅನುಮೋದನೆ ನೀಡಿದೆ.

  • ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ ಅಧ್ಯಕ್ಷತೆಯಲ್ಲಿ 8ನೇ ವೇತನ ಆಯೋಗ ರಚಿಸಲಾಗಿದೆ. ಆಯೋಗಕ್ಕೆ ತಾತ್ವಿಕ ಒಪ್ಪಿಗೆ ಲಭಿಸಿ ಒಂಬತ್ತು ತಿಂಗಳಾದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿನ ಕೇಂದ್ರ ಸಚಿವ ಸಂಪುಟ ‘ಟಿಒಆರ್‌ಗೆ’  ಅನುಮೋದನೆ ನೀಡಿದೆ.
  • ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಗೆ ಮುನ್ನ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದೆ.
  • ಆಯೋಗ ರಚನೆಯಾದ ದಿನದಿಂದ 18 ತಿಂಗಳ ಒಳಗಾಗಿ ಅಂತಿಮ ವರದಿ ಸಲ್ಲಿಸಬೇಕಿದೆ. ಆಯೋಗದ ಶಿಫಾರಸುಗಳು 2026ರ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಯಾಗುವ ಸಾಧ್ಯತೆ ಇದೆ.
  • ‘ಕೇಂದ್ರ ಸರ್ಕಾರದ ಸುಮಾರು 50 ಲಕ್ಷದಷ್ಟು ನೌಕರರಿಗೆ, 69 ಲಕ್ಷದಷ್ಟು ಪಿಂಚಣಿದಾರರಿಗೆ 8ನೇ ವೇತನ ಆಯೋಗದ ಶಿಫಾರಸಿನ ಪ್ರಯೋಜನ ಗಳು ದೊರೆಯಲಿವೆ. ಆಯೋಗವು ಕೇಂದ್ರ ಸರ್ಕಾರ ಮತ್ತು ಖಾಸಗಿ ವಲಯದ ನೌಕರರಿಗೆ ಈಗಿರುವ ವೇತನ, ಭತ್ಯೆ ಮತ್ತಿತರೆ ಸೌಲಭ್ಯಗಳು ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಲಭ್ಯ ಇರುವ ಸಂಪನ್ಮೂಲಗಳನ್ನು ಗಮನಕ್ಕೆ ತೆಗೆದುಕೊಳ್ಳಲಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ಅಗತ್ಯ ಬದಲಾವಣೆಗಳನ್ನು ಶಿಫಾರಸು ಮಾಡಲಿದೆ. 
  • 8ನೇ ವೇತನ ಆಯೋಗದಲ್ಲಿ ಬೆಂಗಳೂರಿನ ಐಐಎಂನ ಪ್ರೊ. ಪುಲಕ್‌ ಘೋಷ್‌  ಅರೆಕಾಲಿಕ ಸದಸ್ಯರಾಗಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್‌ ಜೈನ್ ಅವರು ಸದಸ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
  • ರಂಜನಾ ಪ್ರಕಾಶ್‌ ದೇಸಾಯಿ ಅವರು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷೆಯೂ ಆಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್‌ವಿಂಗಡಣಾ ಆಯೋಗ ಮತ್ತು ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯ ತಜ್ಞರ ಸಮಿತಿ ಅಧ್ಯಕ್ಷೆಯಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ನಂತರ ಅವರು ವಹಿಸಿಕೊಳ್ಳುತ್ತಿರುವ ನಾಲ್ಕನೆಯ ಮಹತ್ವದ ಹೊಣೆಗಾರಿಕೆ ಇದಾಗಿದೆ.

ರಸಗೊಬ್ಬರ ಸಬ್ಸಿಡಿ ಏರಿಕೆ

  • 2025–26ನೇ ಸಾಲಿನ ಹಿಂಗಾರು ಹಂಗಾಮಿಗೆ ಯೂರಿಯಾ ಹೊರತು ಪಡಿಸಿ, ರಂಜಕ –ಪಿ ಮತ್ತು ಗಂಧಕ–ಎಸ್‌ (ಡಿಎಪಿ, ಎಂಒಪಿ, ಎಸ್‌ಎಸ್‌ಪಿ, ಎನ್‌ಪಿಕೆ, ಕಾಂಪ್ಲೆಕ್ಸ್‌) ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ₹37,952 ಕೋಟಿಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
  • ಹಿಂಗಾರು ಹಂಗಾಮು ಅಕ್ಟೋಬರ್‌ 10ರಿಂದ ಆರಂಭಗೊಂಡಿದ್ದು, ಮುಂದಿನ ವರ್ಷದ ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿದೆ. 2025ರ ಮುಂಗಾರು ಹಂಗಾಮಿನ ರಸಗೊಬ್ಬರ ಸಬ್ಸಿಡಿಗೆ ಹೋಲಿಸಿದರೆ ಈ ಮೊತ್ತವು ₹736 ಕೋಟಿಯಷ್ಟು ಹೆಚ್ಚಿದೆ.
  • ಕೆ.ಜಿಗೆ ₹43.60 ಇದ್ದ ರಂಜಕದ ಸಬ್ಸಿಡಿಯು ಈಗ ₹47.96ಕ್ಕೆ ಏರಿಕೆಯಾಗಿದೆ. ಗಂಧಕದ ಸಬ್ಸಿಡಿ ಕೆ.ಜಿಗೆ ₹1.77ರಿಂದ ₹2.87ಕ್ಕೆ ಏರಿಕೆಯಾಗಿದೆ. ನೈಟ್ರೊಜನ್‌ ಮತ್ತು ಪೊಟ್ಯಾಶ್‌ ರಸಗೊಬ್ಬರದ ಸಬ್ಸಿಡಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇವು ಕ್ರಮವಾಗಿ ಕೆ.ಜಿಗೆ ₹43.02 ಮತ್ತು ₹2.38 ಇವೆ. ಡಿಎಪಿ ಮತ್ತು ಟಿಎಸ್‌ಪಿ ರಸಗೊಬ್ಬರದ ದರದಲ್ಲಿ ಸರ್ಕಾರ ಪರಿಷ್ಕರಣೆ ಮಾಡಿಲ್ಲ.

10 ವರ್ಷಗಳಿಗೊಮ್ಮೆ ಶಿಫಾರಸು ಜಾರಿ

  • ಸಾಮಾನ್ಯವಾಗಿ ವೇತನ ಆಯೋಗದ ಶಿಫಾರಸುಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಜಾರಿಗೊಳಿಸಲಾಗುತ್ತದೆ. ಇದೇ ಸಂಪ್ರದಾಯದಂತೆ 8ನೇ ವೇತನ ಆಯೋಗದ ಶಿಫಾರಸುಗಳು 2026ರ ಜ.1ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
  • 7ನೇ ವೇತನ ಆಯೋಗವನ್ನು 2014ರ ಫೆಬ್ರುವರಿಯಲ್ಲಿ ರಚಿಸಲಾಗಿತ್ತು. ಆಯೋಗದ ಶಿಫಾರಸುಗಳು 2016ರ ಜನವರಿ 1ರಿಂದ ಜಾರಿಗೆ ಬಂದಿದ್ದವು.
  • ಆಂಧ್ರಕ್ಕೆ ಅಪ್ಪಳಿಸಿದಮೊಂಥಾ

ಸಂದರ್ಭ: ಮೊಂಥಾ ಚಂಡಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಂಧ್ರ ಪ್ರದೇಶದ ಮಚಲಿಪಟ್ಟಣ ಮತ್ತು ಕಾಕಿನಾಡ ನಡುವೆ ರಾತ್ರಿ 7 ಹೊತ್ತಿಗೆ ಅಪ್ಪಳಿಸಿದೆ. ವೇಳೆ ಗಾಳಿಯ ವೇಗವು ಗಂಟೆಗೆ 110 ಕಿ.ಮೀನಷ್ಟು ಇತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

  • ‘ರಾತ್ರಿ 7.23ರ ಸುಮಾರಿಗೆ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ನಂತರದ 6 ತಾಸು ಮುಂದುವರಿದಿದೆ’ ಎಂದು ಇಲಾಖೆ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ಆಂಧ್ರ ಪ್ರದೇಶ ಮತ್ತು ಒಡಿಶಾದ ಮೇಲೆಯೇ ಚಂಡ ಮಾರುತವು ಹೆಚ್ಚು ಪರಿಣಾಮ ಬೀರಲಿದೆ.
  • ‘ಯಾವುದೇ ಸಾವು ನೋವು ಸಂಭವಿಸದಂತೆ ನೋಡಿಕೊಳ್ಳುವುದೇ ಸರ್ಕಾರದ ಗುರಿ’ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್‌ ಚರಣ್ ಮಾಂಝಿ ಹೇಳಿದರು. ತೀವ್ರ ಮಳೆಯಾಗುವ ಪ್ರದೇಶಗಳು, ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಈ ರಾಜ್ಯಗಳಲ್ಲಿ ನಡೆಸಲಾಗುತ್ತಿದೆ. ಶಾಲೆಗಳು, ಅಂಗನ ವಾಡಿ‌ಗಳಿಗೆ ಅ.30ರವರೆಗೆ ಇಲ್ಲಿ ರಜೆ ಘೋಷಿಸಲಾಗಿದೆ.

ಒಡಿಶಾ: ಭೂಕುಸಿತ

  • ‘ಮೊಂಥಾ’ದಿಂದ ಒಡಿಶಾದ ಕರಾವಳಿ ಮತ್ತು ದಕ್ಷಿಣ ಭಾಗದ 8 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿದೆ. ಹಲವು ಮರಗಳು ಧರೆಗೆ ಉರುಳಿದ್ದು, ಕೆಲವು ಮನೆಗಳು ನೆಲಸಮವಾಗಿವೆ.
  • ಗಜಪತಿ ಜಿಲ್ಲೆಯ ಅನಕ ಗ್ರಾ.ಪಂ.ನಲ್ಲಿ ಗುಡ್ಡಗಳಿಂದ ದೊಡ್ಡ ಗಾತ್ರದ ಬಂಡೆಗಳು ರಸ್ತೆಗೆ ಉರುಳಿವೆ. ಇದರಿಂದ ಈ ಭಾಗದ ಐದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇದೇ ಜಿಲ್ಲೆಯ ಮತ್ತೊಂದು ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಭೂಕುಸಿತ ವಾಗಿದೆ. ಇದೇ ಜಿಲ್ಲೆಯಲ್ಲಿ ಮಣ್ಣಿನ ಮನೆಯೊಂದು ಕುಸಿದು ಬಿದ್ದು, ವ್ಯಕ್ತಿಗೆ ಗಾಯವಾಗಿದೆ.
  • ಆಂಧ್ರದ ನೆಲ್ಲೂರು ಜಿಲ್ಲೆಯ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮಳೆ ಸುರಿದಿದೆ. ಒಡಿಶಾದ ಎಂಟು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮೊಂಥಾ ಪರಿಣಾಮವು  ರಾಜಸ್ಥಾನದವರೆಗೂ ಹಬ್ಬಿಕೊಂಡಿದ್ದು, ಬೂಂದಿ ಜಿಲ್ಲೆಯಲ್ಲಿ 13 ಸೆಂ.ಮೀ ಮಳೆ ಸುರಿದಿದೆ. ಅ.13ರಂದು ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
  • ಆಂಧ್ರದಲ್ಲಿ ಬೆಳೆ ನಾಶ: ‘ತೀವ್ರ ಮಳೆಯ ಕಾರಣ ಆಂಧ್ರಪ್ರದೇಶದ 38 ಸಾವಿರ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬೆಳೆ ನಾಶವಾಗಿದೆ ಮತ್ತು 1.38 ಲಕ್ಷ ಹೆಕ್ಟೇರ್‌ ನಲ್ಲಿನ ತೋಟಗಾರಿಕಾ ಬೆಳೆ ನಾಶವಾಗಿದೆ’ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
  • ನೆರೆ ರಾಜ್ಯಗಳ ಜವಳಿ ನೀತಿ ಅಧ್ಯಯನ

ಸಂದರ್ಭ: ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಜವಳಿ ನೀತಿಯನ್ನು ಅಧ್ಯಯನ ಮಾಡಿ, ಸಮಗ್ರ ವರದಿ ಸಿದ್ಧಪಡಿಸಲು ಜವಳಿ ಸಚಿವ ಶಿವಾನಂದ ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

  • ಕರ್ನಾಟಕ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ ಅನುಷ್ಠಾನ ಕುರಿತ ಉನ್ನತ ಮಟ್ಟದ ಸಬಲೀಕರಣ ಸಮಿತಿ ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ಅವರು, ‘ನೆರೆ ರಾಜ್ಯಗಳ ಜವಳಿ ಉದ್ಯಮಿಗಳನ್ನು ಆಕರ್ಷಿಸಲು ಅಧ್ಯಯನ ವರದಿ ಅಗತ್ಯವಿದೆ. ಇತರೆ ರಾಜ್ಯಗಳು ಉದ್ಯಮಿಗಳಿಗೆ ಯಾವ ಸವಲತ್ತುಗಳನ್ನು ನೀಡುತ್ತಿವೆ ಎಂಬ ಮಾಹಿತಿಯ ಆಧಾರದಲ್ಲಿ ರಾಜ್ಯದ ನೀತಿಗಳನ್ನು ಬದಲಾವಣೆ ಮಾಡಲಾಗುವುದು’ ಎಂದರು.
  • ‘ಬಾಂಗ್ಲಾದೇಶದ ಪ್ರತಿಕೂಲ ಪರಿಸ್ಥಿತಿ ಪರಿಣಾಮ ಅಲ್ಲಿನ ಜವಳಿ ಉದ್ಯಮ ಬೇರೆಡೆಗೆ ಸ್ಥಳಾಂತರವಾಗುತ್ತಿದೆ. ಅಲ್ಲಿನ ಉದ್ಯಮಿಗಳನ್ನು ಕರ್ನಾಟಕಕ್ಕೆ ಸೆಳೆಯಲು ಯೋಜನೆ ರೂಪಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಉದ್ಯಮ ಸುಸ್ಥಿತಿಯಲ್ಲಿದೆ. ಬಹುತೇಕ ಉದ್ಯಮಿಗಳು ತಮಿಳುನಾಡಿನಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಕರ್ನಾಟಕ ರಾಜ್ಯದತ್ತ ಸೆಳೆಯಲು ಏನು ಮಾಡಬೇಕು ಎನ್ನುವ ಕುರಿತು ಅಧ್ಯಯನ ಮಾಡಬೇಕಿದೆ. ಮಹಾರಾಷ್ಟ್ರ ಸರ್ಕಾರ ವಿದ್ಯುತ್‌ ಬಿಲ್‌ನಲ್ಲೇ ಸಹಾಯಧನ ನೀಡುತ್ತಿದೆ. ನಮ್ಮಲ್ಲಿಯೂ ಈ ಪದ್ಧತಿ ಅನುಸರಿಸಿದರೆ ಮಹಾರಾಷ್ಟ್ರದ ಜವಳಿ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಸಿದ್ಧರಿದ್ದಾರೆ’ ಎಂದು ಮಾಹಿತಿ ನೀಡಿದರು.

ಪಿಎಂ ಮಿತ್ರ ಪಾರ್ಕ್ಗೆ ಸಾವಿರ ಎಕರೆ

  • ‘ಪಿಎಂ ಮಿತ್ರ ಪಾರ್ಕ್‌’ ಯೋಜನೆಗೆ ರಾಜ್ಯ ಸರ್ಕಾರ ಒಂದು ಸಾವಿರ ಎಕರೆ ಭೂಮಿ ಜಮೀನು ನೀಡಿದ್ದು, ಮೂಲಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಿದೆ. ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ’ ಎಂದು ಶಿವಾನಂದ ಪಾಟೀಲ ಹೇಳಿದರು.
  • ‘ನೂರಾರು ವರ್ಷಗಳಿಂದ ಮನೆಯಲ್ಲೇ ಕೈಮಗ್ಗ ಹಾಕಿಕೊಂಡವರಿಗೆ, ಪೂರ್ಣ ಪ್ರಮಾಣದಲ್ಲಿ ಇರುವ ನೇಕಾರರ ಕಾಲೊನಿಗಳಿಗೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿನಾಯಿತಿ ಕೊಡಿಸುವ ಪ್ರಯತ್ನ ಆಗಬೇಕಿದೆ. ಬೆಂಗಳೂರಿನ ಕಬ್ಬನ್‌ ಪೇಟೆ, ಕಾಟನ್‌ ಪೇಟೆ ಮತ್ತಿತರ ಕಡೆ ಇರುವ ನೇಕಾರರಿಗೆ ಸಮಸ್ಯೆಯಾಗಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
  • ವಿಮಾನ ತಯಾರಿಕೆ: ರಷ್ಯಾಎಚ್ಎಎಲ್ಒಪ್ಪಂದಕ್ಕೆ ಸಹಿ

ಸಂದರ್ಭ: ಪ್ರಾದೇಶಿಕ ಸಂಪರ್ಕ ಯೋಜನೆಗಳ ವಿಸ್ತರಣೆಯೊಂದಿಗೆ ಭಾರತದಲ್ಲಿ ವಿಮಾನಯಾನ ಮಾರುಕಟ್ಟೆ ವೃದ್ಧಿಯಾಗುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನದ ವಾಣಿಜ್ಯ ತಯಾರಿಕೆಗಾಗಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೊನಾಟಿಕ್ಸ್ಲಿಮಿಟೆಡ್‌(ಎಚ್ಎಲ್‌), ರಷ್ಯಾದ ಪ್ರಮುಖ ವಾಣಿಜ್ಯ ವಿಮಾನ ಉತ್ಪಾದಕ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

  • ಮಾಸ್ಕೊದ ಯುನೈಟೆಡ್ ಏರ್ ಕಾರ್ಪೊರೇಷನ್‌ನೊಂದಿಗೆ ಎಚ್‌ಎಎಲ್‌ ಸಂಸ್ಥೆ ಸೋಮವಾರ ಈ ಒಪ್ಪಂದಕ್ಕೆ ಸಹಿ ಹಾಕಿದೆ. ಎಚ್‌ಎಎಲ್‌ ಸಿಎಂಡಿ ಡಿ.ಕೆ ಸುನೀಲ್ ಮತ್ತು ಯುಎಸಿ ಕಂಪನಿಯ ಮಹಾನಿರ್ದೇಶಕ ವಾಡಿಮ್ ಬಡೇಖಾ ಅವರ ಸಮ್ಮುಖದಲ್ಲಿ ಎಚ್‌ಎಲ್‌ನ ಪ್ರಭಾತ್ ರಂಜನ್ ಮತ್ತು ಯುಎಸಿ ಕಂಪನಿಯ ಒಲೆಗ್‌ ಬೊಗೊಮೊಲೊವ್‌ ಈ ಒಪ್ಪಂದಕ್ಕೆ ಸಹಿ ಹಾಕಿದರು.
  • ಈ ಒಪ್ಪಂದದ ಪ್ರಕಾರ ಎಚ್‌ಎಲ್‌, ದೇಶೀಯ ಗ್ರಾಹಕರಿಗಾಗಿ ಡಬ್ಬಲ್‌ ಎಂಜಿನ್ ಹೊಂದಿರುವ, ಸಣ್ಣ ಗಾತ್ರದ, ಎಸ್‌–ಜೆ 100(SJ-100) ವಿಮಾನವನ್ನು ತಯಾರಿಸಲಿದೆ. ಈಗಾಗಲೇ 200 ಕ್ಕೂ ಹೆಚ್ಚು ಎಸ್‌ಜೆ–100 ವಿಮಾನಗಳನ್ನು ತಯಾರಿಸಲಾಗಿದ್ದು, ವಿಶ್ವದ 16 ಕ್ಕೂ ಹೆಚ್ಚು ವಾಣಿಜ್ಯ ವಿಮಾನಯಾನ ಕಂಪನಿಗಳು ಇವುಗಳನ್ನು ಬಳಸುತ್ತಿವೆ.
  • ‘ಎಸ್‌ಜೆ–100 ವಿಮಾನವು, ಭಾರತದಲ್ಲಿ ‘ಉಡಾನ್‌’ ಯೋಜನೆಯಡಿಯಲ್ಲಿ ಕಡಿಮೆ ದೂರ ಸಂಪರ್ಕದಲ್ಲಿ ಗೇಮ್ ಚೇಂಜರ್ ಆಗಲಿದೆ’ ಎಂದು ಎಚ್‌ಎಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.
  • ಈ ವಿಮಾನವು ರಷ್ಯಾದ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿದ್ದು, ಅಲ್ಲಿನ ಒಂಬತ್ತು ವಿಮಾನಯಾನ ಸಂಸ್ಥೆಗಳು ಈ ಇವುಗಳನ್ನು ಬಳಕೆ ಮಾಡುತ್ತಿವೆ. ಇದು ಗರಿಷ್ಠ 103 ಆಸನಗಳ ಸಾಮರ್ಥ್ಯ ವನ್ನು ಹೊಂದಿದ್ದು, 3500 ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿಯ ರೇಂಜ್‌ ಹೊಂದಿದೆ.
  • ‘ಎಸ್‌ಜೆ–100 ವಿಮಾನಗಳ ತಯಾರಿಕೆಯು ಭಾರತೀಯ ವಾಯುಯಾನ ಉದ್ಯಮದ ಇತಿಹಾಸದಲ್ಲಿ ಹೊಸ ಅಧ್ಯಾಯದ ಆರಂಭದ ಸೂಚನೆಯಾಗಿದೆ. ಇದು ಖಾಸಗಿ ವಲಯವನ್ನು ಬಲಪಡಿಸುತ್ತದೆ. ಮಾತ್ರವಲ್ಲ, ವಾಯುಯಾನ ಉದ್ಯಮದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ’ ಎಂದು ಎಚ್‌ಎಎಲ್‌ ಹೇಳಿದೆ.
  • ಇಸ್ರೇಲ್‌–ಹಮಾಸ್ಮಧ್ಯೆ ಮತ್ತೆ ಸಂಘರ್ಷ

ಸಂದರ್ಭ: ಗಾಜಾ ಮೇಲೆ ಕೂಡಲೇಪ್ರಬಲವಾದ ದಾಳಿ ನಡೆಸಲು ಸೇನೆಗೆ ಆದೇಶ ನೀಡಿರುವುದಾಗಿ ಇಸ್ರೇಲ್ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದಾರೆ.

  • ಇದಕ್ಕೆ ಪ್ರತಿಕ್ರಿಯಿಸಿರುವ ಹಮಾಸ್‌, ಒತ್ತೆಯಾಳುಗಳ ಮೃತದೇಹ ಹಸ್ತಾಂತರ ಪ್ರಕ್ರಿಯೆಯನ್ನು ವಿಳಂಬ ಮಾಡುವುದಾಗಿ ಹೇಳಿದೆ.
  • ಈ ಹಠಾತ್‌ ಬೆಳವಣಿಗೆಯು ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಇಸ್ರೇಲ್‌–ಹಮಾಸ್‌ ಕದನ ವಿರಾಮ ಒಪ್ಪಂದ ಮುರಿಯಲು ಕಾರಣವಾಗುವ ಸಾಧ್ಯತೆ ಇದೆ.  ಗಾಜಾ ನಗರ ಮತ್ತು ದೀರ್‌ ಅಲ್‌–ಬಲಾಹ್‌ ಸೇರಿದಂತೆ ಗಾಜಾದ ಹಲವೆಡೆ ಟ್ಯಾಂಕರ್‌ ದಾಳಿ ಮತ್ತು ಸ್ಫೋಟದ ಸದ್ದು ಕೇಳಿಬಂದಿದೆ.
  • ಹಮಾಸ್‌ ಬಂಡುಕೋರರು ದಕ್ಷಿಣ ಗಾಜಾದಲ್ಲಿ ಇಸ್ರೇಲ್‌ ಸೇನಾಪಡೆಗಳ ಮೇಲೆ ದಾಳಿ ನಡೆಸಿದ್ದಾಗಿ ಇಸ್ರೇಲ್ ಅಧಿಕಾರಿಗಳು ಹೇಳಿದ ಬೆನ್ನಲ್ಲೇ ನೆತನ್ಯಾಹು ಅವರು ಈ ಆದೇಶ ನೀಡಿದ್ದಾರೆ.
  • ಬನ್ನೇರುಘಟ್ಟ ಉದ್ಯಾನದಲ್ಲಿ ಸೌರ ಪಾರ್ಕ್

ಸಂದರ್ಭ: ಪ್ರಾಣಿಗಳ ತಾಣದಲ್ಲಿ ವಿದ್ಯುತ್ಸ್ವಾವಲಂಬಿ ಯೋಜನೆ ಜಾರಿಗೆ ಸಿದ್ಧತೆ: ಬನ್ನೇರುಘಟ್ಟ ಜೈವಿಕ ಉದ್ಯಾನದ ಭವಿಷ್ಯದ ಇಂಧನ ಅಗತ್ಯವನ್ನು ಸೌರ ವಿದ್ಯುತ್ನಿಂದಲೇ ಪೂರೈಸುವ ಯೋಜನೆಗೆ ಮುಂದಿನ ವಾರ ಚಾಲನೆ ನೀಡಲಾಗುವುದುಈಶ್ವರ ಬಿ. ಖಂಡ್ರೆ, ಅರಣ್ಯ ಸಚಿವ.

  • ರಾಜಧಾನಿಯ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವು ವಿದ್ಯುತ್ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ‌ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿದೆ.
  • ‌ಸೌರ ವಿದ್ಯುತ್‌ ಒದಗಿಸುವ ವಾಹನ ಮತ್ತು ಉಪಕರಣಗಳನ್ನು ಮೃಗಾಲಯಗಳಲ್ಲಿ ಬಳಸುತ್ತಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಘಟಕ ಇರಲಿಲ್ಲ. ಇದಕ್ಕಾಗಿ ಯೋಜನೆ ರೂಪಿಸಲಾಗಿದ್ದು, ಮುಂದಿನ ವಾರ ಸೌರ ವಿದ್ಯುತ್‌ ಘಟಕಕ್ಕೆ ಚಾಲನೆ ಸಿಗಲಿದೆ. ಐದಾರು ತಿಂಗಳಲ್ಲಿ ಸುಸಜ್ಜಿತ ವಿದ್ಯುತ್‌ ಘಟಕ ಸೇವೆಗೆ ಅಣಿಯಾಗಲಿದೆ. ಬಳಕೆ ಪ್ರಮಾಣ ನೋಡಿಕೊಂಡು ಘಟಕದ ಸಾಮರ್ಥ್ಯ ಹೆಚ್ಚಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ ಮಂಡಳಿ ನಿರ್ಧರಿಸಿದೆ.
  • ಸಾಮಾಜಿಕ ಹೊಣೆಗಾರಿಕೆ ನಿಧಿ ( ಸಿಎಸ್ಆರ್‌) ಬಳಸಿಕೊಂಡು ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಇದರ ಅನುಷ್ಠಾನದ ಜವಾಬ್ದಾರಿ ಯನ್ನು ಐಸಿಐಸಿಐ ಫೌಂಡೇಷನ್‌ ಹೊತ್ತುಕೊಂಡಿದೆ. ಉದ್ಯಾನದ ಒಳಗೆ ಮೂರು ಎಕರೆ ವಿಶಾಲ ಪ್ರದೇಶದಲ್ಲಿ ವಿದ್ಯುತ್‌ ಉತ್ಪಾದನೆ ಘಟಕವನ್ನು ಆರಂಭಿಸಲಾಗುತ್ತಿದೆ.
  • ಬನ್ನೇರುಘಟ್ಟ ಜೈವಿಕ ಉದ್ಯಾನವೇ ವಿದ್ಯುತ್‌ ವಿತರಣೆಗೆ ಬೇಕಾದ ಗ್ರಿಡ್‌ ಅನ್ನು ನಿರ್ಮಿಸಿಕೊಳ್ಳಲಿದೆ. ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್‌ ಬಳಕೆ, ಹೆಚ್ಚುವರಿ ವಿದ್ಯುತ್‌ ಸರಬರಾಜಿಗೆ ಬೇಕಾದ ಅನುಮತಿ ಪಡೆಯುವ ಹೊಣೆ ಹೊತ್ತುಕೊಳ್ಳಲಿದೆ.
  • ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅವಿಭಾಜ್ಯ ಅಂಗವಾಗಿ ರುವ ಜೈವಿಕ ಉದ್ಯಾನವು 2002ರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವು 780 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ.
  • ಉದ್ಯಾನಗಳ ನಿರ್ವಹಣೆ ಸಹಿತ ಹಲವು ಉದ್ದೇಶಗಳಿಗೆ ವಿದ್ಯುತ್‌ ಬಳಸಲಾಗುತ್ತಿದೆ. ಪ್ರತಿವರ್ಷ ವಿದ್ಯುತ್‌ ನಿರ್ವಹಣೆಗೆ ₹40 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಬೆಸ್ಕಾಂನಿಂದಲೇ ವಿದ್ಯುತ್‌ ಅನ್ನು ಪಡೆದುಕೊಳ್ಳಲಾಗುತ್ತಿದೆ. ತುರ್ತು ಬಳಕೆಗೆ ಜನರೇಟರ್ ವ್ಯವಸ್ಥೆಯಿದೆ.
  • ಸೌರ ವಿದ್ಯುತ್‌ ಘಟಕ ಸ್ಥಾಪನೆಯಾದರೆ ವಿದ್ಯುತ್‌ ವೆಚ್ಚ ಉಳಿತಾಯವಾಗಲಿದೆ. ಅಲ್ಲದೇ ಹೆಚ್ಚುವರಿ ವಿದ್ಯುತ್‌ ಅನ್ನು ಮಾರಾಟ ಮಾಡಿ ಅದರಲ್ಲೂ ಆದಾಯ ಪಡೆಯುವ ಉದ್ಧೇಶ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
  • ‘ದೇಶದ ಯಾವುದೇ ಜೈವಿಕ ಉದ್ಯಾನ, ಮೃಗಾಲಯದಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೌರ ವಿದ್ಯುತ್‌ ಉತ್ಪಾದನೆ ಮಾಡುವ ಘಟಕವಿಲ್ಲ. ಅಗತ್ಯ ನೋಡಿಕೊಂಡು ಯೋಜನೆ ವಿಸ್ತರಿಸಲಾಗುವುದು’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯಸೇನ್‌ ತಿಳಿಸಿದರು.

ಮೆಗಾವಾಟ್ ಮೊದಲ ಕೇಂದ್ರ

  • ಚೆನ್ನೈನ ವ್ಯಾಂಡಲೂರ್‌ ಮೃಗಾಲಯದಲ್ಲಿ ಸೌರ ವಿದ್ಯುತ್‌ ಉತ್ಪಾದನೆ ಘಟಕ ವಿದ್ದರೂ ಅಲ್ಲಿ ಬರೀ 100 ಕಿಲೋ ವಾಟ್‌ ವಿದ್ಯುತ್‌ ಮಾತ್ರ ಉತ್ಪಾದಿಸಲಾಗುತ್ತಿದೆ. ಅದನ್ನು ಬಿಟ್ಟರೆ ಭಾರತದಲ್ಲಿರುವ ಪ್ರಮುಖ ಮೃಗಾಲಯ ಹಾಗೂ ಜೈವಿಕ ಉದ್ಯಾನಗಳಲ್ಲಿ 1 ಮೆಗಾವಾಟ್‌ ಸೌರ ವಿದ್ಯುತ್ ಉತ್ಪಾದಿಸುವ ಮೊದಲ ಕೇಂದ್ರವೆಂಬ ಹೆಗ್ಗಳಿಕೆಗೆ ಬನ್ನೇರುಘಟ್ಟ ಉದ್ಯಾನ ಪಾತ್ರವಾಗಲಿದೆ.
  • ಸೋಲಿಗೆ ಸೋಲದ ಸುಸುಮು: ನೊಬೆಲ್ವಿಜ್ಞಾನಿಗಳು 3

ಸಂದರ್ಭ: ಅದು ಯಾವುದೇ ಕ್ಷೇತ್ರವಿರಲಿ, ಗೆದ್ದವರು ಮತ್ತು ಸೋತವರ ನಡುವೆ ಒಂದು ಸ್ಪಷ್ಟ ವ್ಯತ್ಯಾಸವಿರುತ್ತದೆ; ಅದೇ, ಅವರ ಮನೋಬಲ. ನಾವು ಸೋಲುವುದು ಯಾವಾಗ? ಮತ್ತ್ಯಾರೋ ಗೆದ್ದಾಗ ಅಲ್ಲ, ನಾವು ಸೋಲನ್ನು ಒಪ್ಪಿಕೊಂಡಾಗ ಮಾತ್ರ, ಅಲ್ಲವೇ? ಸವಾಲುಗಳೆಂದರೆ ಹೆದರಿ ಹಿಂದೋಡದೆ, ಸವಾಲಿನ ಹಿಂದೋಡಿ, ಅದಕ್ಕೆ ಸರಿಯಾದ ಜವಾಬು ನೀಡುವವರೆಗೂ ಕೈಕಟ್ಟಿಕೂರದ ವಿಜ್ಞಾನಿಯ ಬಗ್ಗೆ ತಿಳಿಯೋಣ ಬನ್ನಿ.

  • ‘ಯಾವುದೇ ಒಂದು ಕೆಲಸವನ್ನು ಅಸಾಧ್ಯ ಎಂದು ನೀವು ಒಪ್ಪಲು ತಯಾರಿಲ್ಲದಿದ್ದರೆ, ಅದು ಹೇಗೆ ಅಸಾಧ್ಯವಾಗಲು ಸಾಧ್ಯ?’ ಎನ್ನುತ್ತಾರೆ, ಡಾ. ಸುಸುಮು ಕಿಟಾಗವಾ. ಈ ಬಾರಿ ರಸಾಯನ ವಿಜ್ಞಾನದಲ್ಲಿ ರಿಚರ್ಡ್ ರಾಬ್ಸನ್ ಮತ್ತು ಓಮರ್ ಯಾಘಿಯವರ ಜೊತೆಗೆ ನೊಬೆಲ್ ಪ್ರಶಸ್ತಿಗೆ ಭಾಜನರಾದ ಸುಸುಮು ಅವರ ಮಾತುಗಳನ್ನು ಕೇಳಿದರೆ, ಸ್ಥೈರ್ಯಗುಂದಿದ ಯಾರೇ ಆದರೂ, ಮತ್ತೊಮ್ಮೆ ಫೀನಿಕ್ಸ್‌ನಂತೆ ಎದ್ದುನಿಲ್ಲುವಂತಾಗುತ್ತದೆ; ಅಷ್ಟು ಧನಾತ್ಮಕತೆ, ಅಷ್ಟು ಗುರಿ ಕೇಂದ್ರೀಕೃತ ಮನಸ್ಸು ಮತ್ತು ಅಂತಹ ಛಲ ಬಿಡದ ಮನೋಭಾವ ಇವರದ್ದು.
  • 2025 ರಸಾಯನವಿಜ್ಞಾನ ನೊಬೆಲ್ ದೊರೆತಿದ್ದು ಲೋಹಸಾವಯವ ಚೌಕಟ್ಟುಗಳಿಗೆ ಎಂಬುದು ನಿಮಗೆ ಈಗಾಗಲೇ ತಿಳಿದಿದೆಯಲ್ಲವೇ? ಅದರ ರಚನೆಯ ಹಿಂದಿನ ಸಿದ್ಧಾಂತ, ರಿಚರ್ಡ್ ರಾಬ್ಸನ್ ಅವರದ್ದು, ಚೌಕಟ್ಟಿಗೆ ಭೌತಿಕ ಬಲ ತುಂಬಿದ್ದು ಓಮರ್ ಯಾಘಿ ಅವರ ಸಂಶೋಧನೆ ಮತ್ತು ಚೌಕಟ್ಟುಗಳ ಆನ್ವಯಿಕತೆಯನ್ನು ಸಾಧ್ಯವಾಗಿಸಿದ್ದು ಸುಸುಮು ಕಿಟಾಗವಾ ಅವರ ಪ್ರಯೋಗಗಳು.
  • ಜಗತ್ತನ್ನು ಪೊರೆದದ್ದು ಅಚಾನಕ್ಕಾಗಿ ಆದ ಅನೇಕ ಆವಿಷ್ಕಾರಗಳು ಎಂಬ ಮಾತಿದೆ. ಏನೋ ಮಾಡಲು ಹೋಗಿ ಮತ್ತೇನೋ ಆದ ಕಥೆಗಳು ವಿಜ್ಞಾನಲೋಕದಲ್ಲಿ ಸಾಮಾನ್ಯ. ‘ಪೆನಿಸಿಲಿನ್’ ಎಂಬ ಮೊದಲ ಆ್ಯಂಟಿಬಯೋಟಿಕ್, ಎಕ್ಸ್–ರೇ, ಪೇಸ್‌ಮೇಕರ್, ಮೈಕ್ರೋವೇವ್ ಓವನ್ – ಹೀಗೆ ಪಟ್ಟಿ ದೊಡ್ಡದಿದೆ. ‘ಅಂತಹದ್ದೇ ಒಂದು ಅಚಾನಕ್ಕಾಗಿ ಆದ ಆವಿಷ್ಕಾರವೇ ಈ ಲೋಹ-ಸಾವಯವ ಚೌಕಟ್ಟುಗಳೊಳಗೆ ರಂಧ್ರಗಳಿವೆ ಮತ್ತು ಅವುಗಳನ್ನು ಅನಿಲದ ಅಣುಗಳನ್ನು, ಲೋಹದ ಅಣುಗಳನ್ನು ಹಿಡಿದಿಡಲು ಬಳಸಬಹುದು ಎಂಬುದು’ ಎನ್ನುತ್ತಾರೆ. ಸುಸುಮು.

ಹಿನ್ನೆಲೆ

  • 1951ರ ಜುಲೈ 4ರಂದು ಜಪಾನಿನ ಕ್ಯೋಟೋದಲ್ಲಿ ಜನಿಸಿದ ಸುಸುಮು ಅವರು, ಚಿಕ್ಕಂದಿನಿಂದಲೂ ವಿಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದವರು; ಕ್ಯೋಟೋದಲ್ಲಿಯೇ ತಮ್ಮ ಶಿಕ್ಷಣ ಮತ್ತು ಸಂಶೋಧನೆಯನ್ನು ನಡೆಸಿದರು. ಅಸಾವಯವ ರಸಾಯನವಿಜ್ಞಾನ ಇವರ ಕಾರ್ಯಕ್ಷೇತ್ರ. ಕಿಂಡೈ ವಿಶ್ವವಿದ್ಯಾಲಯ, ಟೋಕ್ಯೋ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಾ, ಟೆಕ್ಸಸ್ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲೂ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸಿದರು; ತಮ್ಮ ವೃತ್ತಿಬದುಕಿನಲ್ಲಿ ವಿದ್ಯಾರ್ಥಿಗಳನ್ನು ಸಂಶೋಧನೆಯೆಡೆಗೆ ಸೆಳೆಯುವ ಮತ್ತು ವೈಜ್ಞಾನಿಕ ಮನೋಭಾವವನ್ನು ಅವರಲ್ಲಿ ಹಾಸುಹೊಕ್ಕಾಗಿಸುವ ಜವಾಬ್ದಾರಿಯನ್ನು ಹೊತ್ತ ಸುಸುಮು ಅವರು, ಐ.ಸಿ.ಇ.ಎಂ.ಎಸ್. ಸೇರಿದಂತೆ ಅನೇಕ ವಿಜ್ಞಾನ ಸಂಸ್ಥೆಗಳ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಕಾರ್ಯಪ್ರವೃತ್ತರಾಗಿದ್ದರು. ನೊಬೆಲ್ ಪ್ರಶಸ್ತಿ ಘೋಷಣೆಯಾದ ನಂತರ ನಡೆದ ಇವರ ಸಂದರ್ಶನದಲ್ಲಿ, ಸುಸುಮು ಕಿಟಾಗವಾ ಅವರು ನಗುತ್ತಾ, ‘ಯಾರಾದರೂ ಅಸಾಧ್ಯವೆಂದದ್ದನ್ನು ಸಾಧ್ಯ ಮಾಡಿತೋರಿಸಲು ನನಗೆ ಬಹಳ ಹುರುಪು’ ಎಂದು ಹೇಳಿದ್ದು, ಸಣ್ಣ ಸೋಲುಗಳಿಗೆ, ಚಿಕ್ಕ ಟೀಕೆಯೊಂದಕ್ಕೇ ಕೈಚೆಲ್ಲುವ ಹಲವರಿಗೆ ಸ್ಫೂರ್ತಿ ನೀಡುವಂತಿದೆ.
  • 90ರ ದಶಕದಲ್ಲಿ ಲೋಹ-ಸಾವಯವ ಚೌಕಟ್ಟಿನ ರಂಧ್ರಗಳೊಳಗೆ ಅನಿಲದ ಅಣುಗಳನ್ನು ಹಿಡಿದಿಡಬಹುದು ಎಂದು ಸುಸುಮು ಮತ್ತು ಇನ್ನಿತರ ರಸಾಯನವಿಜ್ಞಾನಿಗಳು ಪ್ರತಿಪಾದಿಸಿದಾಗ, ಅದನ್ನು ಒಪ್ಪಲು ಬಹುಪಾಲು ವಿಜ್ಞಾನಿಗಳು ತಯಾರಿರಲಿಲ್ಲ. ‘ಅವರ ಅಪನಂಬಿಕೆಯೇ ನನ್ನ ಬಲವಾಯ್ತು’ ಎನ್ನುತ್ತಾರೆ, ಸುಸುಮು. ಬೇರೆ ಯಾವುದೇ ಸಂಶೋಧನೆ ಮಾಡುತ್ತಿದ್ದರೂ, ಈ ವಿಷಯವೊಂದು ಅವರ ಮನಸ್ಸಿನ ಮೂಲೆಯಲ್ಲಿ ಕುಳಿತು ಕುದಿಯುತ್ತಲೇ ಇತ್ತು. ಮತ್ತೇನೋ ವಿಷಯದ ಸಲುವಾಗಿ, ಲೋಹ-ಸಾವಯವ ಚೌಕಟ್ಟಿನ ಸ್ಫಟಿಕದ ರಚನೆಯನ್ನು ವಿಶ್ಲೇಷಣೆ ಮಾಡಲು ಖಾಸಗಿ ವಿಶ್ವವಿದ್ಯಾಲಯವೊಂದಕ್ಕೆ ಸುಸುಮು ಹೋಗಿದ್ದರು. ಅಲ್ಲಿ ಕಂಪ್ಯೂಟರ್ ಕೇಂದ್ರದಲ್ಲಿ, ಸ್ಫಟಿಕದ ವಿಶ್ಲೇಷಣೆಯ ಸಮಯದಲ್ಲಿ, ಈ ಲೋಹ-ಸಾವಯವ ಚೌಕಟ್ಟಿನಲ್ಲಿರುವ ವಿಶಿಷ್ಟ, ನಿರ್ದಿಷ್ಟ ಬಗೆಯ ರಂಧ್ರಗಳು ಅಚಾನಕ್ಕಾಗಿ ಕಣ್ಣಿಗೆ ಬಿದ್ದವು. ಇಂತಹ ಅಚಾನಕ್ ಆವಿಷ್ಕಾರವೇ, ನಿಜಜೀವನದಲ್ಲಿ ಅನೇಕ ಕ್ಷೇತ್ರಗಳಲ್ಲಿ ಲೋಹ-ಸಾವಯವ ಚೌಕಟ್ಟಿನ ಸಾರ್ಥಕ ಅನ್ವಯಿಕೆಗೆ, ನೊಬೆಲ್ ಪ್ರಶಸ್ತಿಯು ಒಲಿಯುವುದಕ್ಕೆ, ಜನರ ಅಪನಂಬಿಕೆಯನ್ನು ಹುಸಿಯಾಗಸಲು ದಾರಿ ಮಾಡಿಕೊಟ್ಟಿತು.
  • ಒಂದೇ ಗುಂಗಿನಲ್ಲಿ, ಅಪರಿಮಿತ ಏಕಾಗ್ರತೆಯಲ್ಲಿ ಸಂಶೋಧನೆಯಲ್ಲಿ ತೊಡಗುವುದು ಎಷ್ಟು ಮುಖ್ಯವೋ, ಸಂಶೋಧನಾ ಪರಿಸರವೂ ಅಷ್ಟೇ ಮುಖ್ಯ ಎಂಬ ಸುಸುಮು ಅವರ ಮಾತನ್ನು ಎಲ್ಲ ವಿಜ್ಞಾನಿಗಳೂ ಖಂಡಿತವಾಗಿ ಒಪ್ಪುತ್ತಾರೆ. ಜಪಾನಿಗೆ ವಿಜ್ಞಾನದಲ್ಲಿ ನೊಬೆಲ್ ತಂದುಕೊಟ್ಟ ಅನೇಕ ಸಂಶೋಧಕರು ಸುಸುಮು ಅವರ ಮಾರ್ಗದರ್ಶಿಗಳು ಮತ್ತು ಒಡನಾಡಿಗಳು. ನೊಬೆಲ್ ವಿಜೇತ ಕೆನಿಚಿ ಫುಕುಯಿ ಅವರನ್ನಂತೂ ಸುಸುಮು ಅವರು ತಮ್ಮ ‘ಶೈಕ್ಷಣಿಕ ಪಿತಾಮಹ’ ಎಂದೇ ಬಣ್ಣಿಸುತ್ತಾರೆ.
  • ಕೆನಿಚಿ ಫುಕುಯಿ, ಅಕಿರಾ ಯೊಶಿನೋರಂತಹ ವಿಜ್ಞಾನಲೋಕದ ದಿಗ್ಗಜಗಳು ಕಾರ್ಯನಿರ್ವಹಿಸಿದ ಪ್ರಯೋಗಾಲಯಗಳಲ್ಲೇ ತಾವೂ ಸಂಶೋಧನೆ ಮಾಡುತ್ತಾ, ಅವರ ಪರಂಪರೆಯಿಂದ ಸ್ಫೂರ್ತಿ ಪಡೆಯುತ್ತಾ, ಮುಂದಿನ ತಲೆಮಾರಿಗೆ ಪ್ರೇರಣೆ ಒದಗಿಸಿದ್ದಾರೆ, ಸುಸುಮು ಕಿಟಾಗವಾ. ಇವರ ಲೋಹ-ಸಾವಯವ ಚೌಕಟ್ಟುಗಳು ಅನಿಲದ ಅಣುಗಳನ್ನು, ವೇಗವರ್ಧಕಗಳನ್ನು ಹಿಡಿದಿಟ್ಟುಕೊಳ್ಳುವ ಹಾಗೆ, ಇವರ ಕಾರ್ಯವೈಖರಿಯು ಯುವಜನರನ್ನೂ ಸೆಳೆದು, ವಿಜ್ಞಾನದೆಡೆಗೆ ಗಮನ ಹರಿಯುವಂತೆ ಮಾಡಿದ ಇವರಿಗೆ ಅಭಿನಂದನೆಗಳು ಸಲ್ಲಿಸಲೇಬೇಕು. v
  • ಮತ್ತೆರಡು ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಪ್ರಸ್ತಾವ

ಸಂದರ್ಭ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅಲ್ಲದೇ ಬೆಳಗಾವಿ ಜಿಲ್ಲೆ ಸವದತ್ತಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಗೆತ್ತಿ ಕೊಳ್ಳುವ ಪ್ರಸ್ತಾವ ಇದೆ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ಕಾರ್ಯಪಾಲಕ ಎಂಜಿನಿಯರ್ ವಿ.ಎಂ.ವಿಜಯ ತಿಳಿಸಿದರು.

  • ‘ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ 1,600 ಮೆಗಾ ವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾವಕ್ಕೆ ಸಮ್ಮತಿ ಸಿಕ್ಕಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ರಾಜ್ಯದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚುವ ಅವಧಿಯಲ್ಲಿ ತಡೆರಹಿತ ವಿದ್ಯುತ್ ಪೂರೈಕೆಗೆ 2 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ, ಈ ಯೋಜನೆಗೆ ಪರಿಸರ, ವನ್ಯಜೀವಿ ಮತ್ತು ಅರಣ್ಯ ಅನುಮತಿ ಸಿಗುವುದು ಬಾಕಿ ಇದೆ’ ಎಂದರು.
  • ಡ್ರಗ್ಸ್ಕಡಿವಾಣಕ್ಕೆ ಎಎನ್ಟಿಎಫ್

ಸಂದರ್ಭ: ಪೊಲೀಸ್ ಕಾನ್ಸ್ಟೆಬಲ್ಗಳಿಗೆ ಪೀಕ್ಕ್ಯಾಪ್ ವಿತರಣೆ: 8,500 ಪೊಲೀಸ್ ಕಾನ್ಸ್ಟೆಬಲ್ಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಇನ್ನೊಂದು ವಾರದಲ್ಲಿ ಕುರಿತು ಅಧಿಸೂಚನೆ ಹೊರಡಿಸಲಾಗುವುದುಜಿ.ಪರಮೇಶ್ವರ, ಗೃಹ ಸಚಿವ.

  • ಮಾದಕವಸ್ತು (ಡ್ರಗ್ಸ್‌) ಪೂರೈಕೆ, ಮಾರಾಟ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಮಾದರಿಯಲ್ಲಿಯೇ ರಾಜ್ಯದಲ್ಲೂ ‘ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ’ (ಎಎನ್‌ಟಿಎಫ್‌) ಅಸ್ತಿತ್ವಕ್ಕೆ ಬಂದಿದೆ.
  • ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಅವರು ಕಾರ್ಯಪಡೆಗೆ ಚಾಲನೆ ನೀಡಿದರು. ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ‘ಪೀಕ್‌ ಕ್ಯಾಪ್’ ವಿತರಿಸಿದರು.
  • ಸಿದ್ದರಾಮಯ್ಯ ಮಾತನಾಡಿ, ‘‌ಎಡಿಜಿಪಿ ಮಟ್ಟದ ಅಧಿಕಾರಿ ಕಾರ್ಯಪಡೆ ಮುಖ್ಯಸ್ಥರಾಗಿ ಇರಲಿದ್ದು, ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಸೇರಿ 56 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ’ ಎಂದರು.
  • ‘ಐದು ದಶಕಗಳ ಬಳಿಕ ಪೊಲೀಸ್ ಸಿಬ್ಬಂದಿಯ ಕ್ಯಾಪ್‌ನಲ್ಲಿ ಬದಲಾವಣೆ ಆಗಿದೆ. ಕಾರ್ಯಕ್ಷಮತೆಯೂ ಬದಲಾಗಬೇಕು. ದಕ್ಷವಾಗಿ ಕಾರ್ಯ ನಿರ್ವಹಿಸುವ ಮೂಲಕ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ಕಡಿಮೆ ಮಾಡಬೇಕು ಮತ್ತು ಸರ್ಕಾರಕ್ಕೂ ಒಳ್ಳೆಯ ಹೆಸರು ತರಬೇಕು’ ಎಂದು ಕಿವಿಮಾತು ಹೇಳಿದರು.
  • ‘ರಾಜ್ಯದ ಪೊಲೀಸ್‌ ಕಾನ್‌ಸ್ಟೆಬಲ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ಗಳು ಧರಿಸುತ್ತಿದ್ದ ‘ಸ್ಲೋಚ್ ಹ್ಯಾಟ್’ ಬದಲಿಗೆ ‘ಪೀಕ್‌ ಕ್ಯಾಪ್‌’ಗಳನ್ನು ಆಯ್ಕೆ ಮಾಡಿದ್ದು ನಾನೇ. ಇಂಡಿಯಾ ಜಸ್ಟೀಸ್ ವರದಿಯಂತೆ ಅತ್ಯುತ್ತಮ ಪೊಲೀಸ್ ಪಡೆಗಳಲ್ಲಿ ಕರ್ನಾಟಕ ನಂಬರ್‌ ಒನ್‌ ಸ್ಥಾನ ಪಡೆದಿರುವುದು ರಾಜ್ಯದ ಘನತೆ ಹೆಚ್ಚಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
  • ಮಂಗಳೂರು ಗಲಭೆಪೀಡಿತ ನಗರವಾಗಿತ್ತು. ಪೊಲೀಸ್ ಅಧಿಕಾರಿ ಗಳನ್ನು ಬದಲಾವಣೆ ಮಾಡಿದ್ದರಿಂದ ನಿಯಂತ್ರಣಕ್ಕೆ ಬಂದಿದೆ. ಕೆಲವು ಪೊಲೀಸರು ರಿಯಲ್ ಎಸ್ಟೇಟ್​ ಉದ್ಯಮಿಗಳ ಜತೆ ಶಾಮೀಲಾಗುತ್ತಾರೆ. ಡ್ರಗ್ಸ್ ಪೆಡ್ಲರ್​ಗಳು, ಯಾರು ರೌಡಿಗಳು ಎಂದು ಗೊತ್ತಿದ್ದರೂ ಅವರನ್ನು ಬಂಧಿಸದೇ ಪೊಲೀಸರು ಬಿಟ್ಟುಬಿಡುತ್ತಾರೆ. ಇವರನ್ನು ಮೊಳಕೆಯಲ್ಲಿ ಚಿವುಟಿ ಹಾಕಬೇಕು. ಇಲ್ಲದಿದ್ದರೆ ದೊಡ್ಡ ಕ್ರಿಮಿನಲ್​ಗಳಾಗುತ್ತಾರೆ ಎಂದು ಎಚ್ಚರಿಸಿದರು. ‘ಅಪರಾಧಿ ಹಾಗೂ ಕ್ರಿಮಿನಲ್​ಗಳೊಂದಿಗೆ ಸಂಬಂಧ ಇಟ್ಟುಕೊಳ್ಳ ಬಾರದು. ದಿನೇ ದಿನೇ ಪೊಲೀಸರೆಂದರೆ ಕ್ರಿಮಿನಲ್​ಗಳಿಗೆ ಭಯ ಕಡಿಮೆಯಾ ಗುತ್ತಿದೆ. ಯಾಕೆ ಕಡಿಮೆಯಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ’ ಎಂದರು.
  • ಡಿ.ಕೆ.ಶಿವಕುಮಾರ್ ಮಾತನಾಡಿ, ‘ಬೆಂಗಳೂರು ನಗರ ಹಾಗೂ ಇತರೆ ನಗರ ಪ್ರದೇಶಗಳಲ್ಲಿ ಪ್ರತಿ ಮನೆಯಲ್ಲಿ ಮನೆಗೆಲಸದವರು, ಚಾಲಕರು, ಕಾವಲುಗಾರರ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಗ ಎಷ್ಟೋ ಮಟ್ಟಿಗೆ ಅಪರಾಧ ನಿಯಂತ್ರಣಕ್ಕೆ ಬರುತ್ತದೆ. ನೆರೆ ಮನೆಯ ಆದಿಕೇಶವಲು ಮನೆಯಲ್ಲಿ ಕಳ್ಳತನವಾಗಿ ಎಷ್ಟೋ ದಿನಗಳಾದರೂ ಅವರಿಗೆ ಗೊತ್ತಾಗಿರಲಿಲ್ಲ. ಆಭರಣ ಮಾರಾಟವಾಗಿ ಬೇರೆಯವರು ಧರಿಸಿದ್ದನ್ನು ನೋಡಿದ ಬಳಿಕ ಮನೆಯಲ್ಲಿ ಬಂದು ಹುಡುಕುತ್ತಾರೆ. ಮೂರು ವರ್ಷಗಳ ಬಳಿಕ ಕಳ್ಳತನವಾಗಿದೆ ಎಂದು ತಿಳಿಯಿತು. ಹೀಗಾಗಿ ನೀವು ಪ್ರತಿ ಮನೆಯಲ್ಲಿ ಕೆಲಸ ಮಾಡುವವರ ದಾಖಲೆ ಇಟ್ಟುಕೊಳ್ಳಿ. ಈ ಬಗ್ಗೆ ಆಲೋಚನೆ ಮಾಡಿ’ ಎಂದು ಸಲಹೆ ನೀಡಿದರು.
  • ‘ಯಾವುದೇ ಸರ್ಕಾರ ಬಂದರೂ ಆತ್ಮವಿಶ್ವಾಸ ಹಾಗೂ ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬಾರದು. ಒಂದು ವೇಳೆ ರಾಜಿ ಮಾಡಿಕೊಂಡರೆ ಸಂಪೂರ್ಣವಾಗಿ ವ್ಯವಸ್ಥೆ ಕುಸಿಯಲಿದೆ. ರಾಜಕಾರಣಿಗಳ ಹಿಂಬಾಲಕರಾದರೇ ಆಗ ನಿಮ್ಮನ್ನು ಯಾರು ನಂಬುತ್ತಾರೆ? ಹೀಗಾಗಿ ಇಂತಹ ಪದ್ಧತಿಗೆ ಅವಕಾಶ ಮಾಡಿಕೊಡಬೇಡಿ’ ಎಂದು ಕಿವಿ ಮಾತು ಹೇಳಿದರು.
  • ‘ಬೆಂಗಳೂರಿನಲ್ಲಿ 1.40 ಕೋಟಿ ಜನರಿದ್ದಾರೆ. 1.23 ಕೋಟಿ ವಾಹನಗಳಿವೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆ ವಿಸ್ತರಣೆ ಕಷ್ಟವಾಗಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಸಂಚಾರ ದಟ್ಟಣೆ ನಿವಾರಣೆಗೆ ಇರುವ ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಿ’ ಎಂದು ತಿಳಿಸಿದರು.
  • ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಮಾತನಾಡಿ, ‘ಪೊಲೀಸ್ ಇಲಾಖೆಯಲ್ಲಿ ಶೇಕಡ 85ರಷ್ಟು ಸಿಬ್ಬಂದಿಯ ಬಹುವರ್ಷಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಇದರಿಂದ ಸಿಬ್ಬಂದಿಯ ಆತ್ಮವಿಶ್ವಾಸ ಹೆಚ್ಚಾಗಲಿದೆ’ ಎಂದರು.
  • ಶಾಸಕ ರಿಜ್ವಾನ್ ಅರ್ಷದ್, ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಡಿಜಿಪಿಗಳಾದ ರಾಮಚಂದ್ರರಾವ್, ಪ್ರಣವ್ ಮೊಹಾಂತಿ ಹಾಜರಿದ್ದರು.

ಸನ್ಮಿತ್ರ ಪರಿಚಯ

  • ಮಾದಕ ವಸ್ತು ಸೇವನೆ ಪ್ರಕರಣ ದಲ್ಲಿ ಶಿಕ್ಷೆ ಅನುಭವಿಸಿ ಹೊರ ಬಂದ ವ್ಯಕ್ತಿ ಮತ್ತೆ ವ್ಯಸನಕ್ಕೆ ಒಳಗಾಗದಂತೆ ನಿಗಾವಹಿಸಲು ಪೊಲೀಸ್ ಇಲಾಖೆಯು ‘ಸನ್ಮಿತ್ರ’ ಕಾರ್ಯಕ್ರಮವನ್ನು ಪರಿಚಯಿಸಿದೆ. ಮತ್ತೆ ಡ್ರಗ್ಸ್‌ ಚಟಕ್ಕೆ ಬೀಳಬಾರದು ಹಾಗೂ  ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಆ ವ್ಯಕ್ತಿಯ ಮೇಲೆ ನಿಗಾ ಇಡಲು ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರನ್ನು ನಿಯೋಜಿಸಲಾಗು ತ್ತದೆ. ಮೂರು ವರ್ಷದವರೆಗೆ ಈ ವ್ಯಕ್ತಿಯ ಮೇಲೆ ಪೊಲೀಸರು ನಿಗಾವಹಿಸಲಿದ್ದು, ಅವರಿಗೆ ಚಿಕಿತ್ಸೆ, ಪುನರ್ವಸತಿ ಮತ್ತು ಆರೈಕೆಗೆ ನೆರವು ನೀಡಲಿದ್ದಾರೆ.
  • ಆಂಧ್ರ, ಒಡಿಶಾ ಮೊಂಥಾ ಮೊರೆತ

ಮೊಂಥಾ ಚಂಡಮಾರುತವು ಅಬ್ಬರಿಸಲು ಶುರುವಿಟ್ಟಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಬುಡ ಮೇಲಾಗಿ ಬಿದ್ದ ಮರಗಳು. ಸಮುದ್ರ ತೀರದಲ್ಲಿ ಕಟ್ಟೆಚ್ಚರ. ಎತ್ತರದ ಅಲೆಗಳಿಗೆ ಮುಖ ಮಾಡಿ ಓಡುವ ಜನರನ್ನು ಕೂಗಿ ಕರೆದು, ಮನೆಗೆ ಕಳುಹಿಸುತ್ತಿರುವ ಪೊಲೀಸರು. ಸಮುದ್ರ ತೀರದ ರಸ್ತೆಗಳ ಮೇಲೆ ಹರಿದು ಸಾಗುತ್ತಿರುವ ಸಮುದ್ರದ ಅಲೆಗಳು. ಹೀಗೆ ಹರಿಯುವಾಗ ರಸ್ತೆಗಳ ಮೇಲೆಲ್ಲಾ ಕಲ್ಲುಗಳನ್ನು ಹೊತ್ತು ತರುತ್ತಿರುವ ಅಲೆಗಳು. ತೀರದಲ್ಲಿ ವಿರಮಿಸುತ್ತಿರುವ ಮೀನುಗಾರಿಕೆ ದೋಣಿಗಳು… ‘ಮೊಂಥಾ’ದಿಂದಾಗಿ ಆಂಧ್ರ ಪ್ರದೇಶ ಮತ್ತು ಒಡಿಶಾ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಕಂಡುಬಂದ ಚಿತ್ರಣವಿದು.

ಈ ರಾಜ್ಯಗಳು ‘ಮೊಂಥಾ’ವನ್ನು ಎದುರಿಸಲು ಸಜ್ಜುಗೊಂಡಿವೆ. ಆಂಧ್ರ ಪ್ರದೇಶದ 19 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ರೆಡ್‌ ಅಲರ್ಟ್‌ ಘೋಷಿಸಿದೆ. ಚಂಡಮಾರುತದ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರಿ ವಾಹನ ಸಂಚಾರವನ್ನು ಆಂಧ್ರ ಪ್ರದೇಶದಲ್ಲಿ ರದ್ದು ಮಾಡಲಾಗಿದೆ. ಒಡಿಶಾಕ್ಕೆ ಚಂಡಮಾರುತವು ಹೊಸ ವಿಚಾರವೇನೂ ಅಲ್ಲ. ಭಾರಿ ಚಂಡಮಾರುತಗಳನ್ನು ಎದುರಿಸಿರುವ ಅನುಭವಿಯಾದ ಒಡಿಶಾವು ‘ಮೊಂಥಾ’ಕ್ಕೂ ಸಕಲ ತಯಾರಿ ನಡೆಸಿದೆ. ಎರಡೂ ರಾಜ್ಯಗಳಲ್ಲಿ ‘ಮೊಂಥಾ’ ಪರಿಣಾಮದ ಜಿಲ್ಲೆಗಳಲ್ಲಿನ ಪ್ರವಾಸಿತಾಣಗಳಿಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ.

ಎರಡನೇ ಚಂಡಮಾರುತ

ಈ ವರ್ಷ ದೇಶದ ಪಶ್ಚಿಮ ಹಾಗೂ ಪೂರ್ವ ಕರಾವಳಿಯಲ್ಲಿ ಹಲವು ಬಾರಿ ವಾಯುಭಾರ ಕುಸಿತ ಉಂಟಾಗಿದ್ದರೂ ಅದು ಚಂಡಮಾರುತವಾಗಿ ಪರಿವರ್ತನೆಯಾಗಿದ್ದು ಎರಡು ಬಾರಿ ಮಾತ್ರ. ಈ ತಿಂಗಳ ಮೊದಲ ವಾರದಲ್ಲಿ ಅರಬ್ಬೀ ಸಮುದ್ರದಲ್ಲಿ ಉಂಟಾದ ‘ಶಕ್ತಿ’ ಮೊದಲನೆಯದ್ದಾದರೆ, ಈಗಿನ ‘ಮೊಂಥಾ’ ಎರಡನೆಯದ್ದು. ‘ಶಕ್ತಿ’ ಚಂಡಮಾರುತವು ಪ್ರತಿ ಗಂಟೆಗೆ 100 ಕಿ.ಮೀಗಿಂತಲೂ ಹೆಚ್ಚು ವೇಗದಲ್ಲಿ ಮಹಾರಾಷ್ಟ್ರ, ಗುಜರಾತ್‌, ಗೋವಾ ಕರಾವಳಿಗೆ ಅಪ್ಪಳಿಸಿತ್ತು. ಗುಜರಾತ್‌ ಕರಾವಳಿ ಪ್ರದೇಶದಲ್ಲಿ ಇದರ ತೀವ್ರತೆ ಹೆಚ್ಚಾಗಿತ್ತು. ರಾಜ್ಯಗಳು ಮುನ್ನೆಚ್ಚರಿಕೆ ವಹಿಸಿದ್ದರಿಂದ ಹೆಚ್ಚಿನ ಹಾನಿಯಾಗಿರಲಿಲ್ಲ. 

ಅರಬ್ಬೀ ಸಮುದ್ರದಲ್ಲೂ ವಾಯುಭಾರ ಕುಸಿತ

ಬಂಗಾಳ ಕೊಲ್ಲಿಯಲ್ಲಿ ‘ಮೊಂಥಾ’ ಚಂಡಮಾರುತದ ವೇಗ ತೀವ್ರಗೊಳ್ಳುವ ಹೊತ್ತಿನಲ್ಲೇ ಪಶ್ಚಿಮದ ಅರಬ್ಬೀ ಸಮುದ್ರದಲ್ಲೂ ವಾಯುಭಾರ ಕುಸಿತ ಕಂಡುಬಂದಿದೆ. ಇದರ ಪರಿಣಾಮದಿಂದಾಗಿ ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಆದರೆ, ಗಾಳಿಯ ತೀವ್ರತೆ ಹೆಚ್ಚಿಲ್ಲ. ಮಂಗಳವಾರ ಬೆಳಿಗ್ಗೆ ಸಮುದ್ರದ ಪೂರ್ವ–ಕೇಂದ್ರ ಪ್ರದೇಶದಲ್ಲಿ ಕಂಡು ಬಂದಿದ್ದ ವಾಯುಭಾರ ಕುಸಿತವು ಪ್ರತಿ ಗಂಟೆಗೆ 7 ಕಿ.ಮೀ ವೇಗದಲ್ಲಿ ಈಶಾನ್ಯದತ್ತ ಸಾಗಿದೆ. ಮುಂದಿನ 24 ಗಂಟೆಗಳಲ್ಲಿ ಅದೇ ದಿಕ್ಕಿನಲ್ಲಿ ಸಾಗುವ ಅಂದಾಜು ಇದೆ. ಪ್ರತಿ ಗಂಟೆಗೆ 46ರಿಂದ 65 ಕಿ.ಮೀವರೆಗೆ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

l ಚಂಡಮಾರುತಕ್ಕೆ ಆಂಧ್ರಪ್ರದೇಶ, ಒಡಿಶಾ ಮತ್ತು ತೆಲಂಗಾಣದಲ್ಲಿನ ಇಲಾಖೆಯ ಸಿದ್ಧತೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಮಂಗಳವಾರ ಪರಿಶೀಲನೆ ನಡೆಸಿದರು. ಪೂರ್ವ ಕರಾವಳಿ ರೈಲ್ವೆ ವಲಯದ ಹಲವು ರೈಲುಗಳ ಸಂಚಾರವನ್ನು ಮಂಗಳವಾರ ರದ್ದು ಮಾಡಲಾಗಿತ್ತು

l ವಿಶಾಖಪಟ್ಟಣ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 32 ವಿಮಾನಗಳ (ದೇಶೀಯ ಹಾಗೂ ಅಂತರರಾಷ್ಟ್ರೀಯ) ಹಾರಾಟವನ್ನು ಮಂಗಳವಾರ ರದ್ದು ಮಾಡಲಾಯಿತು

l ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ ಚಂಡಮಾರುತ ಬಾಧಿತ ರಾಜ್ಯಗಳಲ್ಲಿ ಒಟ್ಟು 45 ತಂಡಗಳನ್ನು ಎನ್‌ಡಿಆರ್‌ಎಫ್‌ ನಿಯೋಜಿಸಲಾಗಿದೆ

l ಆಂಧ್ರ ಪ್ರದೇಶದಲ್ಲಿ ಸಮುದ್ರದ ಅಲೆಗಳು 4.7 ಮೀ. ಎತ್ತರಕ್ಕೆ ಏಳಲಿವೆ ಎಂದು ಸಾಗರ ಮಾಹಿತಿ ಸೇವೆಗಳ ರಾಷ್ಟ್ರೀಯ ಕೇಂದ್ರ ಹೇಳಿದೆ

ಚಂಡಮಾರುತಗಳಿಗೆ ಹೇಗೆ ಹೆಸರಿಡಲಾಗುತ್ತದೆ? 

ನವದೆಹಲಿಯ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರವು (ಆರ್‌ಎಸ್‌ಎಂಸಿ) ಉತ್ತರ ಹಿಂದೂ ಮಹಾಸಾಗರದಲ್ಲಿ ಕಾಣಿಸಿಕೊಳ್ಳುವ ಚಂಡಮಾರುತಗಳ ನಾಮಕರಣವನ್ನು ಮಾಡುತ್ತದೆ. ಆರ್‌ಎಸ್‌ಎಂಸಿಯನ್ನು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ (ಏಷ್ಯಾ ಮತ್ತು ಪೆಸಿಫಿಕ್‌) ಉಸ್ತುವಾರಿಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನಿರ್ವಹಿಸುತ್ತದೆ.   

ಚಂಡಮಾರುತಗಳ ಹೆಸರುಗಳನ್ನು ಆ ಪ್ರದೇಶದ ವ್ಯಾಪ್ತಿಯಲ್ಲಿರುವ 13 ದೇಶಗಳು ಸರತಿ ಪ್ರಕಾರ ನಿರ್ಧರಿಸುತ್ತವೆ. ಈ ಪ್ರದೇಶದಲ್ಲಿರುವ ಭಾರತ, ಬಾಂಗ್ಲಾದೇಶ, ಮಾಲ್ದೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಶ್ರೀಲಂಕಾ, ಥಾಯ್ಲೆಂಡ್, ಯೆಮನ್, ಇರಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಮುಂತಾದ ದೇಶಗಳು ಹೆಸರುಗಳನ್ನು ಸೂಚಿಸುತ್ತವೆ. ಪ್ರತಿ ದೇಶವೂ 13 ಹೆಸರುಗಳ ಪಟ್ಟಿಯನ್ನು ಪೂರ್ವಭಾವಿಯಾಗಿಯೇ ಸಲ್ಲಿಸಿರುತ್ತದೆ. ಹೊಸ ಚಂಡಮಾರುತ ಕಾಣಿಸಿಕೊಂಡಾಗ, 169 ಹೆಸರುಗಳ ಪಟ್ಟಿಯಿಂದ ಒಂದು ಹೆಸರನ್ನು ಸರತಿಯ ಪ್ರಕಾರ ಐಎಂಡಿ ಆಯ್ಕೆ ಮಾಡುತ್ತದೆ.

ಥಾಯ್ ಭಾಷೆಯಲ್ಲಿ ಮೊಂಥಾ ಎಂದರೆ, ಸುಂದರವಾದ ಅಥವಾ ಸುವಾಸನೆಯುಕ್ತ ಹೂವು.

  • ದೆಹಲಿ: ಮೋಡಬಿತ್ತನೆ

ಸಂದರ್ಭ: ಚಳಿಗಾಲದಲ್ಲಿ ದೆಹಲಿಯಲ್ಲಿ ಉಂಟಾಗುವ ವಾಯುಮಾಲಿನ್ಯ ತಡೆಗಟ್ಟುವುದಕ್ಕಾಗಿ ಐಐಟಿಕಾನ್ಪುರದ ಸಹಯೋಗದಲ್ಲಿ ದೆಹಲಿ ಸರ್ಕಾರ ನಗರದ ಸುತ್ತಮುತ್ತ ಲಿನ ಪ್ರದೇಶದಲ್ಲಿ ಮೋಡಬಿತ್ತನೆ ಕಾರ್ಯ ಕೈಗೊಂಡಿದೆ.

  • ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶದಲ್ಲಿ ಈ ಪ್ರಯೋಗವನ್ನು ವಿಸ್ತರಿಸಲಾಗುವುದು ಎಂದು ಪರಿಸರ ಇಲಾಖೆ ಸಚಿವ ಮಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
  • ಮೋಡಬಿತ್ತನೆ ಮಾಡುವ ವಿಮಾನವು ಕಾನ್ಪುರದಿಂದ ಹಾರಾಟ ಆರಂಭಿಸಿ, ದೆಹಲಿ ಸುತ್ತಮುತ್ತಲಿನ ಪ್ರದೇಶಗಳಾದ ಬುರಾರಿ, ಉತ್ತರ ಕರೋಲ್ ಬಾಘ್‌ ಮತ್ತು ಮಯೂರ್‌ ವಿಹಾರ ಪ್ರದೇಶಗಳಲ್ಲಿ ಕಾರ್ಯಾಚರಣೆ ಪೂರ್ಣಗೊಳಿಸಿ, ಮೀರತ್‌ ವಾಯ ನೆಲೆಯಲ್ಲಿ ಇಳಿಯಿತು.
  • ‘ಎಂಟು ಗನ್‌ಗಳ ಮೂಲಕ ಅರ್ಧ ಗಂಟೆಗಳ ಕಾಲ ರಾಸಾಯನಿಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡಿತು’ ಎಂದು ಸಚಿವ ಸಿರ್ಸಾ ವಿಡಿಯೊ ಮೂಲಕ ಮಾಹಿತಿ ನೀಡಿದ್ದಾರೆ.
  • ಮೋಡ ಬಿತ್ತನೆಯ ಎರಡನೇ ಪ್ರಯೋಗ ದೆಹಲಿಯ ಹೊರವಲಯದಲ್ಲಿ ನಡೆಸಲಾಗುತ್ತದೆ. ಇಂಥ ಸುಮಾರು ಹತ್ತು ಪ್ರಯೋಗಗಳನ್ನು ದೆಹಲಿಯ ಸುತ್ತಮುತ್ತ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.
  • ‘ಮಾಲಿನ್ಯವನ್ನು ತಗ್ಗಿಸಲು ಸರ್ಕಾರ ತೆಗೆದುಕೊಂಡ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ಪ್ರಯೋಗಗಳು ಯಶಸ್ವಿಯಾದರೆ, ದೀರ್ಘಾವಧಿಯಲ್ಲಿ ಯೋಜನೆಯನ್ನು ರೂಪಿಸಲಿದ್ದೇವೆ’ ಎಂದು ಸಿರ್ಸಾ ಭವಿಷ್ಯದ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
  • ಕಳೆದ ವಾರ ಬುರಾರಿ ಪ್ರದೇಶದಲ್ಲಿ ಪರೀಕ್ಷಾರ್ಥವಾಗಿ ಮೋಡಬಿತ್ತನೆ ಕಾರ್ಯವನ್ನು ನಡೆಸಲಾಗಿತ್ತು. ಮೋಡಬಿತ್ತನೆಗೆ ಬಳಸುವ ಸಿಲ್ವರ್ ಅಯೋಡೈಡ್ ಮತ್ತು ಸೋಡಿಯಂ ಕ್ಲೋರೈಡ್ ಸಂಯುಕ್ತಗಳ ರಾಸಾಯನಿಕ ವನ್ನು ಅಲ್ಪ ಪ್ರಮಾಣದಲ್ಲಿ ಸಿಂಪಡಿಸಲಾಗಿತ್ತು.
  • ಕೈಗಾರಿಕಾ ಉತ್ಪಾದನೆ ಪ್ರಮಾಣ ಸ್ಥಿರ

ಸಂದರ್ಭ: ಜಿಎಸ್ಟಿ ಇಳಿಕೆ, ತಯಾರಿಕಾ ವಲಯದ ಚುರುಕಿನ ಚಟುವಟಿಕೆ ಪರಿಣಾಮ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರ ಪರಿಷ್ಕರಣೆ ಹಾಗೂ ಹಬ್ಬಗಳ ಸಂದರ್ಭದಲ್ಲಿನ ಬೇಡಿಕೆ ಹೆಚ್ಚಳವು ತಯಾರಿಕಾ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡಿದೆ.

  • ತಯಾರಿಕಾ ವಲಯದಲ್ಲಿ ಉತ್ತಮ ಪ್ರಮಾಣದ ಚಟುವಟಿಕೆ ಕಂಡುಬಂದ ಕಾರಣದಿಂದಾಗಿ ದೇಶದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ಪ್ರಮಾಣವು ಸೆಪ್ಟೆಂಬರ್‌ನಲ್ಲಿ ಶೇಕಡ 4ರಷ್ಟು ಆಗಿದೆ.
  • ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು (ಐಐಪಿ) ಶೇ 3.2ರಷ್ಟು ಬೆಳವಣಿಗೆ ಕಂಡಿತ್ತು ಎಂದು ಕೇಂದ್ರ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಂಗಳವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ.
  • ‘ಜಿಎಸ್‌ಟಿ ದರದಲ್ಲಿ ಆಗಿರುವ ಪರಿಷ್ಕರಣೆ, ಹಬ್ಬಗಳ ಋತು ಬೇಗನೆ ಶುರುವಾಗಿದ್ದುದು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸಿರುವಂತಿವೆ. ಅಕ್ಟೋಬರ್‌ ತಿಂಗಳಲ್ಲಿಯೂ ತಯಾರಿಕಾ ವಲಯದ ಚಟುವಟಿಕೆಗಳು ಹೆಚ್ಚಿನ ಮಟ್ಟದಲ್ಲಿ ಇರುವ ನಿರೀಕ್ಷೆ ಇದೆ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥ ಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
  • ಜಿಎಸ್‌ಟಿ ದರ ಪರಿಷ್ಕರಣೆಯು ಸಣ್ಣ ಮೊತ್ತದ, ದಿನಬಳಕೆಯ ಉತ್ಪನ್ನ ಗಳಿಗೆ ಬೇಡಿಕೆಯನ್ನು ಉತ್ತಮ ಮಟ್ಟದಲ್ಲಿ ಇರಿಸುತ್ತದೆ. ಆದರೆ ಹೆಚ್ಚಿನ ಬೆಲೆಯ ಉತ್ಪನ್ನಗಳಿಗೆ ಬೇಡಿಕೆಯು ಉಳಿದು ಕೊಳ್ಳುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ ಎಂದು ನಾಯರ್ ಹೇಳಿದ್ದಾರೆ.
  • ಸೆಪ್ಟೆಂಬರ್‌ನಲ್ಲಿ ಐಐಪಿ ಹೆಚ್ಚಳ ಕಂಡಿದ್ದರೂ, ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್‌–ಸೆಪ್ಟೆಂಬರ್‌ ಅವಧಿ) ಕೈಗಾರಿಕಾ ಉತ್ಪಾದನೆಯು ಶೇ 3ರಷ್ಟು ಮಾತ್ರ ಬೆಳವಣಿಗೆ ಕಂಡಿದೆ. ಹಿಂದಿನ ವರ್ಷದ ಮೊದಲಾರ್ಧದಲ್ಲಿ ಇದು ಶೇ 4.1ರಷ್ಟು ಬೆಳವಣಿಗೆ ದಾಖಲಿಸಿತ್ತು.
  • ಚಾಟ್ಜಿಪಿಟಿ ಗೊಒಂದು ವರ್ಷ ಉಚಿತ

ಸಂದರ್ಭ: ಹೆಚ್ಚಿನ ಪ್ರಶ್ನೆಗಳನ್ನು ಕೇಳಲು ಹಾಗೂ ಹೆಚ್ಚು ಚಿತ್ರಗಳನ್ನು ಸೃಷ್ಟಿಸಿಕೊಳ್ಳಲು ಅವಕಾಶ ನೀಡುವಚಾಟ್ಜಿಪಿಟಿ ಗೊ ಆವೃತ್ತಿಯನ್ನು ಭಾರತದ ಬಳಕೆ ದಾರರಿಗೆ1 ವರ್ಷದ ಅವಧಿಗೆ ಉಚಿತ ವಾಗಿ ನೀಡುವುದಾಗಿ ಓಪನ್ಎಐ ಕಂಪನಿ ಮಂಗಳವಾರ ಹೇಳಿದೆ.

  • ನವೆಂಬರ್‌ 4ರಿಂದ ಆರಂಭವಾಗುವ ಸೀಮಿತ ಅವಧಿಯ ಕೊಡುಗೆ ಸಂದರ್ಭದಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಬಳಕೆ ದಾರರಿಗೆ ಮಾತ್ರ ಇದು ಸಿಗಲಿದೆ.
  • ‘ಚಾಟ್‌ಜಿಪಿಟಿ ಗೊ’ ಆವೃತ್ತಿಯನ್ನು ಚಂದಾ ಆಧಾರದಲ್ಲಿ ಓ‍‍ಪನ್‌ಎಐ ಕಂಪನಿಯು ಆಗಸ್ಟ್‌ನಲ್ಲಿ ಅನಾವರಣ ಮಾಡಿದೆ. ಅನಾವರಣಗೊಳಿಸಿದ ಒಂದೇ ತಿಂಗಳಲ್ಲಿ ಭಾರತದಲ್ಲಿ ಚಾಟ್‌ಜಿಪಿಟಿ ಚಂದಾದಾರರ ಸಂಖ್ಯೆಯು ಎರಡು ಪಟ್ಟಿಗಿಂತ ಹೆಚ್ಚಳ ಕಂಡಿದೆ. ಓಪನ್‌ಎಐ ಪಾಲಿಗೆ ಭಾರತವು ಎರಡನೆಯ ಅತಿದೊಡ್ಡ ಮಾರುಕಟ್ಟೆಯಾಗಿದೆ.‘ಚಾಟ್‌ಜಿಪಿಟಿ ಗೊ’ ಆವೃತ್ತಿಗೆ ಈಗಾಗಲೇ ಚಂದಾದಾರರಾಗಿರುವ ಭಾರತೀಯರು 12 ತಿಂಗಳ ಉಚಿತ ಕೊಡುಗೆಗೆ ಅರ್ಹರು.
  • ರಷ್ಯಾ ತೈಲ ಖರೀದಿ ನಿಲ್ಲದು

ಸಂದರ್ಭ: ಇಂಡಿಯನ್ಆಯಿಲ್ ಕಾರ್ಪೊರೇಷನ್ (ಐಒಸಿ) ಹಾಗೂ ಭಾರತದ ಇತರ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಸಂಪೂರ್ಣವಾಗಿ ಕೈಬಿಡುವ ಸಾಧ್ಯತೆ ಇಲ್ಲ.

  • ಅಮೆರಿಕವು ನಿರ್ಬಂಧ ವಿಧಿಸಿರುವುದು ರಷ್ಯಾದ ಕೆಲವು ಕಂಪನಿಗಳ ಮೇಲೆ; ನಿರ್ಬಂಧವು ರಷ್ಯಾದ ಕಚ್ಚಾ ತೈಲದ ಮೇಲೆ ಇಲ್ಲ. ಹೀಗಾಗಿ ನಿರ್ಬಂಧ ಇಲ್ಲದ ಕಂಪನಿಗಳ ಮೂಲಕ ಖರೀದಿಯು ಮುಂದುವರಿಯುವ ಸಾಧ್ಯತೆ ಇದೆ.
  • ರೊಸ್ನೆಫ್ಟ್‌ ಸೇರಿ ರಷ್ಯಾದ ನಾಲ್ಕು ಕಂಪನಿಗಳ ಮೇಲೆ ಇದುವರೆಗೆ ನಿರ್ಬಂಧ ಹೇರಲಾಗಿದೆ. ಆದರೆ ರೊಸ್ನೆಫ್ಟ್ ಕಂಪನಿಯು ತೈಲ ಉತ್ಪಾದಕ ಅಲ್ಲ; ಅದು ಉತ್ಪಾದಕರಿಂದ ಕಚ್ಚಾ ತೈಲವನ್ನು ಗ್ರಾಹಕರಿಗೆ ಒದಗಿಸಿಕೊಡುವ ಕಂಪನಿ. ರೊಸ್ನೆಫ್ಟ್‌ ಮಾಡುವ ಕೆಲಸವನ್ನು ರಷ್ಯಾದಲ್ಲಿ ಇತರ ಕಂಪನಿಗಳು ಮಾಡಬಹುದು, ಆಗ ಕಚ್ಚಾ ತೈಲದ ಪೂರೈಕೆಗೆ ಅಡ್ಡಿ ಇರುವುದಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
  • ರೊಸ್ನೆಫ್ಟ್‌ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ನಿರ್ಬಂಧವಿದೆ. ರಷ್ಯಾದ ಕಚ್ಚಾ ತೈಲದ ಮೇಲೆ ನಿರ್ಬಂಧ ಇಲ್ಲ. ನಿರ್ಬಂಧಕ್ಕೆ ಗುರಿಯಾಗಿರದ ರಷ್ಯಾದ ಇತರ ಕಂಪನಿಗಳಿಂದ ಖರೀದಿಯನ್ನು ಪರಿಗಣಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
  • ‘ನಿರ್ಬಂಧದ ನಿಯಮಗಳನ್ನು ಪಾಲಿಸಲಾಗುತ್ತದೆ. ಆದರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಾವು ನಿಲ್ಲಿಸುವುದಿಲ್ಲ. ರಷ್ಯಾದ ಕಚ್ಚಾ ತೈಲದ ಮೇಲೆ ನಿರ್ಬಂಧ ಇಲ್ಲ’ ಎಂದು ಐಒಸಿ ನಿರ್ದೇಶಕ ಅನುಜ್ ಜೈನ್ ಹೇಳಿದ್ದಾರೆ.
  • ಸ್ಮೃತಿ ಜೀವನಶ್ರೇಷ್ಠ ರೇಟಿಂಗ್
  • ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು ಐಸಿಸಿ ಏಕದಿನ ಕ್ರಿಕೆಟ್‌ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚುತ್ತಿರುವ ಅವರು ತಮ್ಮ ವೃತ್ತಿಜೀವನದಲ್ಲೇ ಅತ್ಯುತ್ತಮ ರೇಟಿಂಗ್‌ ಪಾಯಿಂಟ್ಸ್‌ ಗಳಿಸಿದ್ದಾರೆ.

29 ವರ್ಷದ ಎಡಗೈ ಬ್ಯಾಟರ್‌ ಮಂದಾನ ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ವಿರುದ್ಧ 109 ರನ್‌ ಮತ್ತು ಬಾಂಗ್ಲಾದೇಶ ವಿರುದ್ಧ ಔಟಾಗದೇ 34 ರನ್ ಗಳಿಸಿದ್ದಾರೆ. ಇದರೊಂದಿಗೆ ರೇಟಿಂಗ್‌ ಪಾಯಿಂಟ್ಸ್‌ಗಳನ್ನು  828ಕ್ಕೆ ಹೆಚ್ಚಿಸಿಕೊಂಡಿದ್ದಾರೆ.

ಪ್ರಚಲಿತ ವಿದ್ಯಮಾನಗಳು: 28ನೇ ಅಕ್ಟೋಬರ್ 2025

  • ಎಸ್ಐಆರ್‌: ವೇಳಾಪಟ್ಟಿ ಪ್ರಕಟ

ಸಂದರ್ಭ: 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ. ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ ಮುಂದಡಿಯಿಟ್ಟಿದ್ದು, ಎರಡನೇ ಹಂತದಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕ್ರಿಯೆ ನಡೆಸುವುದಾಗಿ ಘೋಷಿಸಿದೆ.

  • ಸುದ್ದಿಗೋಷ್ಠಿಯಲ್ಲಿ ವೇಳಾ‍‍ಪಟ್ಟಿ ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌, ‘ಈಗ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆಯು ಸ್ವಾತಂತ್ರ್ಯದ ಬಳಿಕ ನಡೆಯುತ್ತಿರುವ ಒಂಬತ್ತನೇ ಪ್ರಕ್ರಿಯೆಯಾಗಿದೆ. 2002–04ರಲ್ಲಿ ಕೊನೆಯದಾಗಿ ಎಸ್ಐಆರ್ ನಡೆದಿತ್ತು ಎಂದರು.
  • 2ನೇ ಹಂತದಲ್ಲಿ ಎಸ್ಐಆರ್ನಡೆಯಲಿರುವ ತಮಿಳುನಾಡು, ಪುದುಚೇರಿ, ಕೇರಳ, ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಸ್ಸಾಂನಲ್ಲೂ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಅಲ್ಲಿನ ಎಸ್ಐಆರ್ಪ್ರಕ್ರಿಯೆಯ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಘೋಷಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಮೊದಲ ಹಂತದಲ್ಲಿ

  • ಎಸ್‌ಐಆರ್‌ ನಡೆದ ಬಿಹಾರದಲ್ಲಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಪಟ್ಟಿಗೆ ಸಂಬಂಧಿಸಿದಂತೆ ಅಲ್ಲಿ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದರು.
  • ‘ಯಾವುದೇ ಅರ್ಹ ಮತದಾರ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಯಾವುದೇ ಅನರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯದಂತೆ ಎಸ್‌ಐಆರ್ ಖಚಿತಪಡಿಸುತ್ತದೆ’ ಎಂದರು.

ಎರಡನೇ ಹಂತ ಎಲ್ಲೆಲ್ಲಿ?

  • ಅಂಡಮಾನ್ಮತ್ತು ನಿಕೋಬಾರ್, ಲಕ್ಷದ್ವೀಪ, ಛತ್ತೀಸಗಢ, ಗೋವಾ, ಗುಜರಾತ್, ಕೇರಳ, ಮಧ್ಯ ಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ.

ಬಿಹಾರದಲ್ಲಿ ಪ್ರಕ್ರಿಯೆ ಪೂರ್ಣ

  • ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೆಪ್ಟೆಂಬರ್‌ 30ರಂದು ಪ್ರಕಟಿಸಿದ ಅಂತಿಮ ಪಟ್ಟಿಯಲ್ಲಿ 7.42 ಕೋಟಿ ಮತದಾರರ ಹೆಸರುಗಳು ಇವೆ. ವಿಶೇಷ ಪರಿಷ್ಕರಣೆ ಬಳಿಕ 3.66 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಬಿಹಾರದ ಎಸ್‌ಐಆರ್‌ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ.
  • ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರಿಗೆ ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ನೆರವಾಗುವಂತೆ ಬಿಹಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಇದುವರೆಗೂ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿದೆ.
  • ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ನವೆಂಬರ್‌ 6 ಹಾಗೂ 11ರಂದು ಮತದಾನ ಹಾಗೂ ನವೆಂಬರ್‌ 14ರಂದು ಮತ ಎಣಿಕೆ ನಡೆಯಲಿದೆ.
  • ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿರುವ ಕೇರಳದಲ್ಲಿ ಎಸ್‌ಐಆರ್‌ಅನ್ನು ಮುಂದೂಡಬೇಕೆಂಬ ಮನವಿಯ ಕುರಿತ ಪ್ರಶ್ನೆಗೆ ಅವರು, ‘ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಇದುವರೆಗೆ ಯಾವುದೇ ಅಧಿಸೂಚನೆ ಹೊರಡಿಸಲಾಗಿಲ್ಲ. ಆದ್ದರಿಂದ ಕೇರಳದಲ್ಲಿ ಎರಡನೇ ಹಂತದಲ್ಲಿ ಎಸ್ಐಆರ್‌ ನಡೆಸಲು ಆಯೋಗ ಮುಂದಾಗಿದೆ’ ಎಂದು ಹೇಳಿದರು.
  • ಎಸ್‌ಐಆರ್‌ ಕುರಿತು ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ (ಸಿಇಒ) ಕೇಂದ್ರ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಈಚೆಗೆ ಸಭೆ ನಡೆಸಿದ್ದರು. ತಮ್ಮ ತಮ್ಮ ರಾಜ್ಯಗಳಲ್ಲಿ ಕೊನೆಯದಾಗಿ ಎಸ್ಐಆರ್‌ ಪ್ರಕ್ರಿಯೆ ನಡೆದ ಬಳಿಕ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಿದ್ದರು.
  • ಹಲವು ರಾಜ್ಯಗಳ ಚುನಾವಣಾಧಿಕಾರಿಗಳು ತಮ್ಮ ಕೊನೆಯ ಎಸ್‌ಐಆರ್‌ ನಂತರ ಪ್ರಕಟವಾದ ಮತದಾರರ ಪಟ್ಟಿಗಳನ್ನು ಈಗಾಗಲೇ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಬಹುತೇಕ ರಾಜ್ಯಗಳಲ್ಲಿ 2002 ಮತ್ತು 2004ರ ನಡುವೆ ಕೊನೆಯದಾಗಿ ಎಸ್‌ಐಆರ್‌ ನಡೆದಿತ್ತು.

ಬಂಗಾಳ: ಅಡ್ಡಿ ಎದುರಾಗದು

  • ‘ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ನಡೆಸಲು ಯಾವುದೇ ಅಡ್ಡಿ ಎದುರಾಗದು’ ಎಂಬುದನ್ನು ಚುನಾವಣಾ ಅಯೋಗ (ಇ.ಸಿ) ಪುನರುಚ್ಚರಿಸಿದೆ. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ನಡೆದರೆ ಅಲ್ಲಿ ‘ರಕ್ತಪಾತ’ ಆಗಲಿದೆ ಎಂದು ವರದಿಯಾಗಿರುವ ಬಗ್ಗೆ ಎದುರಾದ ಪ್ರಶ್ನೆಗೆ ಜ್ಞಾನೇಶ್‌ ಕುಮಾರ್‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
  • ‘ಇ.ಸಿ ತನ್ನ ಕರ್ತವ್ಯ ನಿರ್ವಹಿಸುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಸಾಂವಿಧಾನಿಕವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಬದ್ಧವಾಗಿವೆ. ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಸಂವಿಧಾನದಲ್ಲಿ ತಿಳಿಸಿರುವಂತೆ ತಮ್ಮ ಜವಾಬ್ದಾರಿ ನಿರ್ವಹಿಸುತ್ತವೆ’ ಎಂದು ಹೇಳಿದರು.
  • ‘ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಮತದಾರರ ಪಟ್ಟಿ ಸಿದ್ಧಪಡಿಸಲು ಮತ್ತು ಚುನಾವಣೆ ನಡೆಸಲು ಇ.ಸಿಗೆ ಅಗತ್ಯವಿರುವ ಸಿಬ್ಬಂದಿಯನ್ನು ಒದಗಿಸಲು ರಾಜ್ಯಗಳು ಬದ್ಧವಾಗಿವೆ’ ಎಂದರು.
  • ಮುಂದಿನ ಸಿಜೆಐ ನ್ಯಾ. ಸೂರ್ಯಕಾಂತ್ಹೆಸರು ಶಿಫಾರಸು

ಸಂದರ್ಭ: ನ್ಯಾಯಮೂರ್ತಿ ಸೂರ್ಯಕಾಂತ್ಅವರನ್ನು ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿಯ ನ್ನಾಗಿ ನೇಮಕ ಮಾಡುವಂತೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್‌. ಗವಾಯಿ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

  • ಸಿಜೆಐ ಗವಾಯಿ ಅವರ ಬಳಿಕ ನ್ಯಾ. ಸೂರ್ಯಕಾಂತ್‌ ಅವರೇ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಗವಾಯಿ ಅವರು ನ. 23ರಂದು ನಿವೃತ್ತಿಯಾಗಲಿದ್ದಾರೆ. ಬಳಿಕ ಸೂರ್ಯಕಾಂತ್‌ 53ನೇ ಸಿಜೆಐ ಆಗಲಿದ್ದಾರೆ.
  • ಸುಪ್ರೀಂ ಕೋರ್ಟ್‌ನ ನ್ಯಾಯ ಮೂರ್ತಿಯಾಗಿ ನ್ಯಾ. ಸೂರ್ಯಕಾಂತ್‌ ಅವರು 2019ರ ಮೇ 24ರಂದು ಬಡ್ತಿ ಪಡೆದಿದ್ದರು. ಇವರು 2027ರ ಫೆ. 9ರಂದು ನಿವೃತ್ತಿಯಾಗಲಿದ್ದಾರೆ. ಇವರು ಸುಮಾರು 15 ತಿಂಗಳವರೆಗೆ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸಿಜೆಐ ಆಗಿದ್ದವರು ತಮ್ಮ ನಿವೃತ್ತಿಗೆ ಒಂದು ತಿಂಗಳು ಇರುವಂತೆ ಮುಂದಿನ ಸಿಜೆಐ ಆಗುವವರ ಹೆಸರನ್ನು ಶಿಫಾರಸು ಮಾಡಬೇಕಾಗುತ್ತದೆ.
  • ಸರ್ಕಾರಿ ಬ್ಯಾಂಕ್ನಲ್ಲಿ ಶೇ 49ರಷ್ಟು ಎಫ್ಡಿಐ?

ಸಂದರ್ಭ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಗರಿಷ್ಠ ಶೇಕಡ 49ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್ಡಿಐ) ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಆಲೋಚಿಸಿದೆ ಎಂದು ಮೂಲಗಳು ತಿಳಿಸಿವೆ.

  • ಈ ವಿಚಾರವಾಗಿ ಕೇಂದ್ರ ಹಣಕಾಸು ಸಚಿವಾಲಯವು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಜೊತೆ ಚರ್ಚೆ ನಡೆಸಿದೆ. ಕಳೆದ ಎರಡು ತಿಂಗಳುಗಳಿಂದ ಚರ್ಚೆ ನಡೆಯುತ್ತಿದೆ ಎಂದು ಮೂಲವೊಂದು ಹೇಳಿದೆ. ಆದರೆ ಈ ವಿಚಾರವಾಗಿ ಅಂತಿಮ ತೀರ್ಮಾನ ಇನ್ನೂ ಆಗಿಲ್ಲ.
  • ಭಾರತದ ಬ್ಯಾಂಕಿಂಗ್‌ ಉದ್ಯಮದಲ್ಲಿ ವಿದೇಶಿ ಕಂಪನಿಗಳು ಹೆಚ್ಚಿನ ಮಟ್ಟದ ಆಸಕ್ತಿ ತೋರಿಸಿವೆ. ದುಬೈ ಮೂಲದ ಎಮಿರೇಟ್ಸ್‌ ಎನ್‌ಬಿಡಿ ಸಂಸ್ಥೆಯು ಖಾಸಗಿ ವಲಯದ ಆರ್‌ಬಿಎಲ್‌ ಬ್ಯಾಂಕ್‌ನ ಶೇಕಡ 60ರಷ್ಟು ಪಾಲನ್ನು ಖರೀದಿಸಿದೆ. ಯೆಸ್‌ ಬ್ಯಾಂಕ್‌ನ ಶೇ 20ರಷ್ಟು ಪಾಲನ್ನು ಜಪಾನ್‌ನ ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್‌ ಕಾರ್ಪ್‌ ಖರೀದಿಸಿ, ನಂತರ ಹೆಚ್ಚುವರಿಯಾಗಿ ಶೇ 4.99ರಷ್ಟು ಪಾಲು ಖರೀದಿಸಿದೆ.
  • ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಗ್ಗೆಯೂ ವಿದೇಶಿ ಹೂಡಿಕೆದಾರರು ಆಸಕ್ತಿ ವಹಿಸಿದ್ದಾರೆ. ಈ ಬ್ಯಾಂಕ್‌ ಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಇರುವ ಮಿತಿಯನ್ನು ಹೆಚ್ಚಿಸಿದರೆ ಅವುಗಳಿಗೆ ಭವಿಷ್ಯದಲ್ಲಿ ಹೆಚ್ಚಿನ ಬಂಡವಾಳ ಹೊಂದಲು ಆಗುತ್ತದೆ ಎಂದು ಮೂಲಗಳು ವಿವರಿಸಿವೆ.
  • ಏಷ್ಯನ್ ಯೂತ್ ಗೇಮ್ಸ್ಗೆ ಚರಿತಾ

ಸಂದರ್ಭ: ಬಹ್ರೇನ್ನಲ್ಲಿ ನಡೆಯಲಿರುವ ಮೂರನೇ ಏಷ್ಯನ್ ಯೂತ್ ಗೇಮ್ಸ್  ಈಜು ಸ್ಪರ್ಧೆ ವಿಭಾಗದಲ್ಲಿ ಶೆಟ್ಟಿಹಳ್ಳಿಯ ಸರ್.ಎಂ. ವಿಶ್ವೇಶ್ವರಯ್ಯ ವಿದ್ಯಾನಿಕೇತನ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಚರಿತ ಪಣೀಂದ್ರನಾಥ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.

  • ಶಾಲೆಯ ಆಡಳಿತಾಧಿಕಾರಿ ಆರೋಗ್ಯಪ್ಪ ಮಾತನಾಡಿ, ‘ನಮ್ಮ ಶಾಲೆಯ ವಿದ್ಯಾರ್ಥಿನಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಠಿಣ ಶ್ರಮದಿಂದ ಅಮೋಘ ಸಾಧನೆ ಮಾಡುವ ಮೂಲಕ ಚರಿತಾ ಪದಕ ಗೆದ್ದು ಬರಲಿ’ ಎಂದು ಹಾರೈಸಿದರು.
  • ಆರೋಗ್ಯ ಸಂಜೀವಿನಿ: 4.83 ಲಕ್ಷ ನೌಕರರ ಸಮ್ಮತಿ

ಸಂದರ್ಭ: ಯೋಜನೆಗೆ ನೌಕರರ ಅವಲಂಬಿತರ ಸೇರ್ಪಡೆ ಕಾರ್ಯ ಪ್ರಗತಿಯಲ್ಲಿದೆ. ಕೇಂದ್ರ ಆರೋಗ್ಯ ಯೋಜನೆ ಪರಿಷ್ಕೃತ ಚಿಕಿತ್ಸಾ ವೆಚ್ಚ ಪ್ರಕಟವಾಗಿದ್ದು, ರಾಜ್ಯವೂ ಅದನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆಸಿ.ಎಸ್‌.ಷಡಾಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ.

  • ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (ಕೆಎಎಸ್‌ಎಸ್‌) ಅ.1 ರಿಂದ ಜಾರಿಯಾಗಿದ್ದು, ಇದುವರೆಗೆ 4.83 ಲಕ್ಷ ನೌಕರರು ಸಮ್ಮತಿ ಸೂಚಿಸಿದ್ದಾರೆ.
  • ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತಾದರೂ ಕೆಲ ತಾಂತ್ರಿಕ ಕಾರಣಗಳಿಂದ ಅನುಷ್ಠಾನ ವಿಳಂಬವಾಗಿತ್ತು. ಅಂತಿಮವಾಗಿ ಅ.1 ರಿಂದ ಅನುಷ್ಠಾನಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು.
  • ಸುವರ್ಣ ಕರ್ನಾಟಕ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಎಸ್ಎಎಸ್ಟಿ) ಯೋಜನೆಯ ಅನುಷ್ಠಾನದ ಸಂಸ್ಥೆಯಾಗಿ ಹೊಣೆ ನಿರ್ವಹಿಸುತ್ತಿದೆ.
  • ಎಲ್ಲ ವರ್ಗದ ನೌಕರರು ಪ್ರತಿ ತಿಂಗಳು ತಮ್ಮ ಪಾಲಿನ ಕಂತು ಪಾವತಿಸಬೇಕಿದೆ. ಪತಿಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿ ದ್ದಲ್ಲಿ ಯಾರಾದರೂ ಒಬ್ಬರ ವೇತನದಿಂದ ಮಾತ್ರ ಒಂದು ಕಂತು ಪಾವತಿಸಬಹುದು. ಎಚ್ಆರ್ಎಂಎಸ್ವ್ಯಾಪ್ತಿಯಲ್ಲಿ ಇರದ ಇತರೆ ಸರ್ಕಾರಿ ಸಂಸ್ಥೆಗಳ ನೌಕರರ ಕಂತಿನ ಮೊತ್ತವನ್ನು ಆಯಾ ಸಂಸ್ಥೆಗಳು ಹಿಡಿದು ಕೊಂಡು ಟ್ರಸ್ಟ್ಖಾತೆಗೆ ಜಮೆ ಮಾಡಬೇಕು. ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲ ನೌಕರರ ಕಂತನ್ನು ಅಕ್ಟೋಬರ್‌ ತಿಂಗಳ ವೇತನದಿಂದಲೇ ಕಡಿತ ಮಾಡಲಾಗುತ್ತದೆ. ನಂತರ ಒಟ್ಟು ಮೊತ್ತವನ್ನು ಖಜಾನೆ–2 ಮೂಲಕ ಟ್ರಸ್ಟ್‌ ಖಾತೆಗೆ ಜಮೆ ಮಾಡಲಾಗುತ್ತದೆ.
  • ಆರಂಭಿಕ ತೊಡಕು, ಮರುಪಾವತಿ ಸೌಲಭ್ಯ ವಿಸ್ತರಣೆ: ಸರ್ಕಾರಿ ನೌಕರರು ಯಾವುದೇ ಸಾರ್ವಜನಿಕ ಆಸ್ಪತ್ರೆಗಳು, ಬೋಧನಾ ಆಸ್ಪತ್ರೆಗಳು, ಸ್ಥಳೀಯ ಸಂಸ್ಥೆಗಳ ಆಸ್ಪತ್ರೆಗಳು ಹಾಗೂ ಯೋಜನೆಗೆ ನೋಂದಾಯಿಸಿಕೊಂಡ ಖಾಸಗಿ ಆಸ್ಪತ್ರೆ ಗಳಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಸರ್ಕಾರಿ ನೌಕರರ ಹೆಸರು ಎಚ್‌ಆರ್‌ಎಂಎಸ್‌ನಲ್ಲೇ ದಾಖಲಾಗಿ ರುತ್ತದೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದರೆ ನಗದುರಹಿತ ಚಿಕಿತ್ಸೆಗೆ ಸಮಸ್ಯೆ ಯಾಗದು. ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಪುರುಷ ನೌಕರರ ತಂದೆ–ತಾಯಿಗೆ ಮಾತ್ರ ಸಿಗುತ್ತಿದ್ದ ಆರೋಗ್ಯ ಸೌಲಭ್ಯವನ್ನು ಈ ಬಾರಿ ಮಹಿಳಾ ನೌಕರರ ತಂದೆ– ತಾಯಿಗೂ ವಿಸ್ತರಿಸಲಾಗಿದೆ. ಈ ಎಲ್ಲ ಅವಲಂಬಿತರ ಹೆಸರು ಸೇರ್ಪಡೆ ಕಾರ್ಯವನ್ನು ಹಲವು ನೌಕರರು ಪೂರ್ಣಗೊಳಿಸಿಲ್ಲ. ಇದರಿಂದ ಅವಲಂಬಿತರನ್ನು ಆಸ್ಪತ್ರೆಗೆ ದಾಖಲಿಸಿದಾಗ ಸಮಸ್ಯೆ ಎದುರಿಸು ವಂತಾಗಿದೆ. ಇಂತಹ ತಾಂತ್ರಿಕ ಕಾರಣಗಳಿಂದಾಗಿ ನಗದು ಚಿಕಿತ್ಸಾ ಸೌಲಭ್ಯ ಆರಂಭವಾಗಿ ದ್ದರೂ, ವೈದ್ಯಕೀಯ ವೆಚ್ಚ ಮರು ಪಾವತಿ ಸೌಲಭ್ಯವನ್ನೂ ಸರ್ಕಾರ 6 ತಿಂಗಳ ವರೆಗೆ ವಿಸ್ತರಿಸಿದೆ. ಮುಂಗಡ ಪಾವತಿಸಿ, ಚಿಕಿತ್ಸೆ ಪಡೆದ ನೌಕರರು ತಾವು ಮಾಡಿದ ವೆಚ್ಚದ ಮೊತ್ತವನ್ನು ಮರಳಿ ಪಡೆಯಬಹುದು.
  • ‘ಯೋಜನೆ ವ್ಯಾಪ್ತಿಗೆ ಇನ್ನಷ್ಟು ಆಸ್ಪತ್ರೆಗಳನ್ನು ಸೇರ್ಪಡೆ ಮಾಡುವ ಕೆಲಸ ನಡೆದಿದೆ. ಚಿಕಿತ್ಸಾ ವೆಚ್ಚಗಳ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಸಮ್ಮತಿ ನೀಡುವ ಭರವಸೆ ಇದೆ. ಅವಲಂಬಿತ ಹೆಸರು ಸೇರ್ಪಡೆ ಕಾರ್ಯವೂ ಪ್ರಗತಿಯಲ್ಲಿದೆ. ಯೋಜನೆಯಿಂದ ನೌಕರರ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ’ ಎನ್ನುತ್ತಾರೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ.
  • ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆಮೊಂಥಾ

ಸಂದರ್ಭ: ಬಂಗಾಳಕೊಲ್ಲಿಯಲ್ಲಿ ಎದ್ದಿರುವಮೊಂಥಾ ಚಂಡಮಾರುತ ಮಂಗಳವಾರ ಆಂಧ್ರ ಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೊಂಥಾದ ಪ್ರಭಾವವು ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳದ ಮೇಲೂ ಆಗಲಿದೆ ಎಂದು ಹೇಳಿದೆ.

  • ಆಂಧ್ರ ಪ್ರದೇಶ ಹಾಗೂ ಒಡಿಶಾ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಸಿದ್ಧತೆಗಳನ್ನು ಮಾಡಿಕೊಂಡಿವೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಿದ್ಧತಾ ಕಾರ್ಯಗಳ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಾಯ್ಡು ಅವರಿಗೆ ಭರವಸೆ ನೀಡಿದ್ದಾರೆ.
  • ಪ್ರತಿ ಗಂಟೆಗೆ 90 ಕಿ.ಮೀನಿಂದ 100 ಕಿ.ಮೀವರೆಗೂ ಗಾಳಿ ಬೀಸಲಿದೆ. ಗಾಳಿಯ ವೇಗವು ಗಂಟೆಗೆ 110 ಕಿ.ಮೀವರೆಗೂ ತಲುಪಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.  ಚಂಡಮಾರುತದ ಪ್ರಭಾವವು ಆಂಧ್ರದಲ್ಲಿ ಈಗಾಗಲೇ ಆರಂಭವಾಗಿದ್ದು, ಸೋಮವಾರ ಬೆಳಿಗ್ಗೆಯಿಂದ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಮಂಗಳವಾರದಿಂದ ಶುಕ್ರವಾರದವರೆಗೆ ಪಶ್ಚಿಮ ಬಂಗಾಳ ದಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
  • ಒಡಿಶಾದ ದಕ್ಷಿಣ ಭಾಗದ ಎಂಟು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ರೆಡ್‌ ಅಲರ್ಟ್‌ ಘೋಷಿಸಿದೆ. ಈ ಭಾಗದ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಸರ್ಕಾರ ಆರಂಭಿಸಿದೆ.
  • ಆಂಧ್ರದಲ್ಲಿ ಸರ್ಕಾರಿ ನೌಕರರ ರಜೆಗಳನ್ನು ರದ್ದು ಮಾಡಲಾಗಿದ್ದು, ಮುನ್ನೆಚ್ಚರಿಕಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೂಚಿಸಿದ್ದಾರೆ.
  • ಮುಂದಿನ ಎರಡು ದಿನಗಳಲ್ಲಿ ತೆಲಂಗಾಣದ ಕೆಲವು ಪ್ರದೇಶ ಗಳಲ್ಲಿಯೂ ಭಾರಿ ಮಳೆಯಾಗಲಿದೆ.
  • ಮೊಂಥಾ ಎಂದರೆ?: ಥಾಯ್ಭಾಷೆಯಲ್ಲಿ ಮೊಂಥಾ ಎಂದರೆ ಸುಂದರ ಹೂವು ಅಥವಾ ಸುವಾಸನೆ ಭರಿತ ಹೂವು ಎಂದರ್ಥ.
  • ಹಿಂದುಳಿದ ಪ್ರದೇಶ ತಲುಪದ ಸಿಎಸ್ಆರ್
  • ಅಮೆರಿಕದಿಂದ ತೈಲ ಖರೀದಿ ಹೆಚ್ಚಳ

ಸಂದರ್ಭ: ಆಮದು ಪ್ರಮಾಣ ದಿನವೊಂದಕ್ಕೆ 5.40 ಲಕ್ಷ ಬ್ಯಾರಲ್ಗೆ ಏರಿಕೆ: ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಅಕ್ಟೋಬರ್ನಲ್ಲಿ ಹೆಚ್ಚಳ ಕಂಡಿದೆ. ಇದು 2022 ನಂತರದ ಗರಿಷ್ಠ ಮಟ್ಟ.

  • ಕಚ್ಚಾ ತೈಲದ ಆಮದು ಪ್ರಮಾಣವನ್ನು ರಷ್ಯಾ ಹೊರಗೂ ಹೆಚ್ಚಿಸಿಕೊಳ್ಳುವ, ಅಮೆರಿಕದ ಜೊತೆ ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ಮೂಡಿರುವ ಬಿಕ್ಕಟ್ಟನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿ ಭಾರತವು ಈ ಹೆಜ್ಜೆ ಇರಿಸಿದೆ ಎನ್ನಲಾಗಿದೆ.
  • ಅಕ್ಟೋಬರ್‌ 27, ಹೊತ್ತಿಗೆ ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ದಿನವೊಂದಕ್ಕೆ 5.40 ಲಕ್ಷ ಬ್ಯಾರಲ್‌ಗೆ ತಲುಪಿದೆ ಎಂದು ದತ್ತಾಂಶಗಳ ಮೇಲೆ ಗಮನ ಇರಿಸುವ ಕೆಪ್ಲರ್ ಸಂಸ್ಥೆ ಹೇಳಿದೆ.
  • ಅಕ್ಟೋಬರ್‌ ಅಂತ್ಯದ ಹೊತ್ತಿಗೆ ಆಮದು ಪ್ರಮಾಣವು ದಿನವೊಂದಕ್ಕೆ 5.75 ಲಕ್ಷ ಬ್ಯಾರಲ್‌ಗೆ ತಲುಪಬಹುದು. ನವೆಂಬರ್‌ನಲ್ಲಿ ಆಮದು ಪ್ರಮಾಣವು ದಿನವೊಂದಕ್ಕೆ 4 ಲಕ್ಷದಿಂದ 4.5 ಲಕ್ಷ ಬ್ಯಾರಲ್‌ವರೆಗೆ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಈ ವರ್ಷದಲ್ಲಿ ಇದುವರೆಗೆ ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ತೈಲದ ಸರಾಸರಿ ಪ್ರಮಾಣಕ್ಕೆ (ದಿನವೊಂದಕ್ಕೆ 3 ಲಕ್ಷ ಬ್ಯಾರಲ್) ಹೋಲಿಸಿದರೆ ಇದು ಹೆಚ್ಚು.
  • ಹಣಕಾಸಿನ ಲೆಕ್ಕಾಚಾರ ಆಧರಿಸಿ ಅಮೆರಿಕದಿಂದ ಆಮದು ಪ್ರಮಾಣ ಹೆಚ್ಚಿಸಲಾಗಿದೆ. ಬ್ರೆಂಟ್ ಕಚ್ಚಾ ತೈಲಕ್ಕಿಂತ ಡಬ್ಲ್ಯುಟಿಐ ಮಿಡ್‌ಲ್ಯಾಂಡ್‌ ಕಚ್ಚಾ ತೈಲವು ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳಿಗೆ ಕಡಿಮೆ ದರಕ್ಕೆ ಸಿಕ್ಕಿದೆ ಎಂದು ಕೆಪ್ಲರ್‌ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಸುಮಿತ್ ರಿತೋಲಿಯಾ ಹೇಳಿದ್ದಾರೆ.
  • ಅಮೆರಿಕದಿಂದ ಆಮದು ಹೆಚ್ಚಾಗಿದ್ದರೂ, ಭಾರತಕ್ಕೆ ಕಚ್ಚಾ ತೈಲ ಪೂರೈಸುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಈಗಲೂ ರಷ್ಯಾ ಇದೆ. ಎರಡನೆಯ ಸ್ಥಾನದಲ್ಲಿ ಇರಾಕ್ ಹಾಗೂ ಮೂರನೆಯ ಸ್ಥಾನದಲ್ಲಿ ಸೌದಿ ಅರೇಬಿಯಾ ಇದೆ.
  • ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳು ಅಮೆರಿಕದ ಕಚ್ಚಾ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಮುಂದಾಗಿವೆ. ತಮ್ಮ ಪೂರೈಕೆ ಜಾಲವನ್ನು ವಿಸ್ತರಿಸಿಕೊಳ್ಳುವ ಜೊತೆಗೆ, ಅಮೆರಿಕದ ಜೊತೆ ಸಹಕರಿಸಲು ಸಿದ್ಧ ಎಂಬ ಸಂದೇಶ ರವಾನಿಸುವ ಉದ್ದೇಶವೂ ಇದರ ಹಿಂದಿದೆ ಎಂದು ಸರ್ಕಾರ ಹಾಗೂ ವರ್ತಕರ ವಲಯದ ಮೂಲಗಳು ಹೇಳಿವೆ.
  • ಆದರೆ ಅಮೆರಿಕದಿಂದ ಕಚ್ಚಾ ತೈಲ ಆಮದು ಇನ್ನೂ ಹೆಚ್ಚಾಗುವ ಸಾಧ್ಯತೆ ಕಡಿಮೆ ಎಂದು ರಿತೊಲಿಯಾ ಅಭಿಪ್ರಾಯಪಟ್ಟಿದ್ದಾರೆ. ‘ಈಗ ಭಾರತವು ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸಿರುವುದಕ್ಕೆ ಒಂದು ಕಾರಣ ಒಳ್ಳೆಯ ಬೆಲೆಗೆ ಅದು ಸಿಕ್ಕಿರುವುದು. ಅಲ್ಲಿಂದ ಭಾರತಕ್ಕೆ ಕಚ್ಚಾ ತೈಲ ತರಲು ಹೆಚ್ಚಿನ ಸಮಯ ಬೇಕು, ಸಾಗಣೆ ವೆಚ್ಚ ಹೆಚ್ಚಾಗಿರುತ್ತದೆ. ಹೀಗಾಗಿ ಅಲ್ಲಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿ ಆಗಲಿಕ್ಕಿಲ್ಲ’ ಎಂದು ಅವರು ಹೇಳಿದ್ದಾರೆ.

ಐಒಸಿ ಲಾಭ ಹಲವು ಪಟ್ಟು ಏರಿಕೆ

  • ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ನ (ಐಒಸಿ) ಸೆಪ್ಟೆಂಬರ್‌ ತ್ರೈಮಾಸಿಕದ ಲಾಭವು ಹಲವು ಪಟ್ಟು ಹೆಚ್ಚಾಗಿ ₹7,610 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಲಾಭವು ₹180 ಕೋಟಿ ಆಗಿತ್ತು.
  • ಶೇ 6ರಷ್ಟು ಹೆಚ್ಚಾಗಿದೆ. ಕಚ್ಚಾ ತೈಲ ಸಂಸ್ಕರಣೆಯ ಪ್ರಮಾಣವು ಶೇ 5ರಷ್ಟು ಹೆಚ್ಚಾಗಿದೆ.

ಸಂದರ್ಭ: ಎಲ್ಲ ಬಗೆಯ ನಿರ್ಬಂಧಗಳನ್ನು ಪಾಲಿಸಲಾಗುವುದು ಎಂದು ಐಒಸಿ ಅಧ್ಯಕ್ಷ ಅರವಿಂದರ್ ಸಿಂಗ್ ಸಾಹ್ನಿ ಹೇಳಿದ್ದಾರೆ. ಆದರೆ, ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದರ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

  • ಐಒಸಿ ದೇಶದ ಅತಿದೊಡ್ಡ ತೈಲ ಕಂಪನಿ. ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ಐಒಸಿ ಆಮದು ಮಾಡಿಕೊಂಡ ಕಚ್ಚಾ ತೈಲದಲ್ಲಿ ರಷ್ಯಾದಿಂದ ಬಂದ ಕಚ್ಚಾ ತೈಲದ ಪಾಲು ಶೇ 21ರಷ್ಟಿದೆ.
  • ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳು ಆಮದು ಮೂಲವನ್ನು ಹೆಚ್ಚಿಸಿಕೊಳ್ಳಲು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಆರಂಭಿಸಿವೆ. ಅವು ಕೊಲಂಬಿಯಾ, ಕೆನಡಾ ಮತ್ತು ಪಶ್ಚಿಮ ಏಷ್ಯಾದಿಂದ ಆಮದು ಮಾಡಿಕೊಳ್ಳುವುದನ್ನು ಹೆಚ್ಚಿಸಿವೆ.
  • ಭಾರತದ ಕಂಪನಿಗಳು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಪ್ರತಿದಿನ 16.8 ಲಕ್ಷ ಬ್ಯಾರಲ್‌ ಆಗಿತ್ತು. ಇದು ಜೂನ್‌ ತ್ರೈಮಾಸಿಕದ ಆಮದು ಪ್ರಮಾಣಕ್ಕೆ ಹೋಲಿಸಿದರೆ ಶೇ 13ರಷ್ಟು ಕಡಿಮೆ.
  • ಮಾಲಿಯಲ್ಲಿ ಇಂಧನ ಬಿಕ್ಕಟ್ಟು ಶಾಲೆ, ಕಾಲೇಜುಗಳು ಬಂದ್

ಸಂದರ್ಭ: ಇಂಧನ ಆಮದಿನ ಮೇಲೆ ಜಿಹಾದಿ ಭಯೋತ್ಪಾದಕರು ಹೇರಿರುವ ನಿರ್ಬಂಧದಿಂದ ಪಶ್ಚಿಮ ಆಫ್ರಿಕಾದ ಮಾಲಿ ದೇಶದಲ್ಲಿ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಮುಂದಿನ ಎರಡು ವಾರಗಳವರೆಗೆ ದೇಶದಾದ್ಯಂತ ಎಲ್ಲಾ ಶಾಲೆ ಹಾಗೂ ವಿಶ್ವವಿದ್ಯಾಲಯಗಳನ್ನು  ಮುಚ್ಚುವುದಾಗಿ ಸರ್ಕಾರ ಘೋಷಿಸಿದೆ.

  • ಶಿಕ್ಷಣ ಸಚಿವ ಅಮಡೌ ಸೈ ಸವಾನೆ ಈ ಬಗ್ಗೆ ಮಾಹಿತಿ ನೀಡಿದ್ದು, ‘ಇಂಧನ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಶಾಲಾ–ಕಾಲೇಜುಗಳ ಸಿಬ್ಬಂದಿಯ ಸಂಚಾರಕ್ಕೂ ತೊಡಕಾಗುತ್ತಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದಿದ್ದಾರೆ.
  • ಅಲ್ಲದೇ, ನವೆಂಬರ್‌ 10ರಂದು ಶಾಲೆಗಳನ್ನು ಮತ್ತೆ ತೆರೆಯಲಾಗುವುದು. ಅಷ್ಟರೊಳಗೆ ಸಹಜ ಸ್ಥಿತಿಯನ್ನು ಮರುಸ್ಥಾಪಿಸಲು ಆಡಳಿತ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದೂ ಹೇಳಿದ್ದಾರೆ.
  • ಅಲ್‌–ಖೈದಾ ಬೆಂಬಲಿತ ಜಮಾತ್‌ ನುಸೃತ್‌ ಅಲ್‌–ಇಸ್ಲಾಮ್‌ ವಲ್‌–ಮುಸ್ಲಿಮೀನ್‌ ಎಂಬ ಭಯೋತ್ಪಾದಕ ಸಂಘಟನೆಯು ಮಾಲಿಯ ಸುತ್ತ ಮುತ್ತಲಿನ ದೇಶಗಳಿಂದ ಇಂಧನ ಆಮದು ಮಾಡಿಕೊಳ್ಳದಂತೆ ಸೆಪ್ಟೆಂಬರ್‌ನಲ್ಲಿ ನಿರ್ಬಂಧ ಹೇರಿದೆ.
  • ಇಂಧನ ಹೊತ್ತು ತರುವ ಟ್ಯಾಂಕರ್‌ಗಳನ್ನು ಗಡಿಯಲ್ಲೇ ತಡೆದು, ಅವುಗಳ ಮೇಲೆ ದಾಳಿ ನಡೆಸಿ, ಇಂಧನ ಪೂರೈಕೆಗೆ ಭಯೋತ್ಪಾದಕರು ತಡೆ ಒಡ್ಡಿದ್ದಾರೆ. ಇದು ಮಾಲಿಯಲ್ಲಿ ಆರ್ಥಿಕ, ಸಾಮಾಜಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
  • ಇರಾಕ್, ಇರಾನ್ಗೆ ಬಸರಕೋಡದ ಬಾಳೆ

ಸಂದರ್ಭ: ಅತಿವೃಷ್ಟಿ ಸಮಯದಲ್ಲೂ ಲಾಭ ಕಂಡುಕೊಂಡ ರೈತ: ತಾಲ್ಲೂಕಿನ ಬಸರಕೋಡ ಗ್ರಾಮದ ರೈತ ಹೇಮರೆಡ್ಡಿ .ಮೇಟಿ ಅವರು ಬೆಳೆದ ಬಾಳೆ (ಜಿ 9) ಬೆಳೆಗೆ ಹೊರದೇಶದಲ್ಲಿ ಮಾರುಕಟ್ಟೆ ಲಭಿಸಿದೆ.

  • ರೈತ ಹೇಮರೆಡ್ಡಿ ಬ.ಮೇಟಿ ಬಾಳೆಯನ್ನು ಇರಾಕ್, ಇರಾನ್ ದೇಶಗಳಿಗೆ ರಫ್ತು ಮಾಡಲು ಮುಂದಾಗಿದ್ದಾರೆ. 20 ಎಕರೆ ಜಮೀನಿನಲ್ಲಿ ಬೆಳೆದಿರುವ ಬಾಳೆ ಭಾಗಶಃ ಕಟಾವಿಗೆ ಬಂದಿದೆ. ಅವರ ಪುತ್ರ ಬಾಪುಗೌಡ ಮೇಟಿ ವಿದೇಶಿ ಮಾರುಕಟ್ಟೆಯ ಸಂಪರ್ಕ ಸಾಧಿಸಿದ್ದಾರೆ.
  • ‘ಮಧ್ಯಪ್ರದೇಶ, ಗುಜರಾತ್‌ದಿಂದ ಸಸಿಗಳನ್ನು ತರಿಸಿಕೊಂಡಿದ್ದೆವು. ಸ್ಥಳೀಯ ಮಾರುಕಟ್ಟೆಯಲ್ಲಿ ಕೆ.ಜಿಗೆ ₹3ರಿಂದ ₹4ಕ್ಕೆ ಕೇಳುತ್ತಾರೆ. ಇಷ್ಟು ಕಡಿಮೆಗೆ ನೀಡಿದರೆ ನಷ್ಟ ಖಂಡಿತ. ಎಕರೆಗೆ ತಲಾ ₹1.15 ಲಕ್ಷದಂತೆ ಖರ್ಚು ಮಾಡಿದ್ದು, 20 ಎಕರೆಗೆ 1 ಸಾವಿರ ಟನ್ ಬಾಳೆ ಬರುವ ನಿರೀಕ್ಷೆ ಇದೆ’ ಎಂದು ಹೇಮರೆಡ್ಡಿ ಮೇಟಿ ತಿಳಿಸಿದರು.
  • ‘ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬೆಳೆ ತಲುಪಿಸಲು ಮೀರಜ್‌ನ ಚಾಂದ್‌ ಫ್ರೂಟ್ಸ್‌ ಅವರನ್ನು ಸಂಪರ್ಕಿಸಲಾಗಿತ್ತು. ಅವರು ಖರೀದಿಗೆ ಒಪ್ಪಿದರು. ಕಂಟೇನರ್‌ಗಳಲ್ಲಿ ಬಾಳೆ ಕಾಯಿಗಳನ್ನು ಸಂಗ್ರಹಿಸಿ ಹಡಗುಗಳ ಮೂಲಕ ಇರಾಕ್, ಇರಾನ್‌ಗೆ ಕಳುಹಿಸು ತ್ತಿದ್ದೇವೆ. ಕೆ.ಜಿಗೆ ₹13ರಂತೆ ಈವರೆಗೆ 35 ಟನ್‌ ಬಾಳೆಕಾಯಿ ಕಳುಹಿಸಲಾಗಿದೆ’ ಎಂದು ತಿಳಿಸಿದರು.
  • ಪಶ್ಚಿಮ ಬಂಗಾಳದ ಕಾರ್ಮಿಕರು:  ಬಾಳೆ ಗೊನೆಯನ್ನು ಕತ್ತರಿಸಿ, ಅದು ಕೆಡದಂತೆ ವೈಜ್ಞಾನಿಕ ಕ್ರಮದಲ್ಲಿ ಪ್ಯಾಕಿಂಗ್ ಮಾಡಲು ಪಶ್ಚಿಮ ಬಂಗಾಳದ 25 ಕಾರ್ಮಿಕರು ನಾಲ್ಕು ದಿನಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
  • ‘ಗ್ರಾಮದ ರೈತರೊಬ್ಬರು ಬೆಳೆದಿರುವ ಬಾಳೆ ಅನ್ಯ ದೇಶಕ್ಕೆ ಹೋಗುತ್ತಿದೆ. ನಮ್ಮಲ್ಲೂ ಉತ್ಕೃಷ್ಟ ದರ್ಜೆಯ ಬಾಳೆ ಕೃಷಿ ನಡೆದಿರುವುದು ಹೆಮ್ಮೆಯ ಸಂಗತಿ’ ಎಂದು ಸ್ಥಳೀಯ ರೈತರು ಹೇಳುತ್ತಾರೆ.

ಗುಣಮಟ್ಟದ ಬಾಳೆ

  • ‘ದೇವರ ನಿಂಬರಗಿಯ ಯಂಕಣ್ಣ ಬಿರಾದಾರ ಅವರು ಬಸರಕೋಡದಲ್ಲಿ ಗುಣಮಟ್ಟದ ಬಾಳೆ ಇದೆ ಎಂದು ತಿಳಿಸಿದ್ದರು. ಹೇಮರೆಡ್ಡಿ ಅವರು ಬೆಳೆದ ಬಾಳೆ ರಫ್ತುಮಾಡಲು ಯೋಗ್ಯ ವಾಗಿದೆ. ಖರೀದಿ ಒಪ್ಪಂದ ಆಗಿದೆ. ಈ ಬಾಳೆಯು ನ. 1ರಂದು ಗುಣಮಟ್ಟದ ಪ್ಯಾಕಿಂಗ್‌ನಲ್ಲಿ ಇರಾನ್, ಇರಾಕ್, ಸೌದಿ ಅರೇಬಿಯಾಕ್ಕೆ ರವಾನೆಯಾಗ ಲಿದೆ’ ಎನ್ನುತ್ತಾರೆ ಬಾಳೆ ಖರೀದಿ ದಾರ ಅಬೂಬಕರ ಖರೋಷಿ.
  • ಎಫ್ಡಿಐ ಏರಿಕೆ: ಜಿಗಿದ ಪಿಎಸ್ಯು ಬ್ಯಾಂಕ್ಸೂಚ್ಯಂಕ

ಸಂದರ್ಭ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ವಿದೇಶಿ ನೇರ ಹೂಡಿಕೆಗೆ (ಎಫ್ಡಿಐ) ಇರುವ ಶೇಕಡ 20 ಮಿತಿಯನ್ನು, ಶೇ 49ಕ್ಕೆ ಹೆಚ್ಚಿಸುವ ಚಿಂತನೆ ನಡೆದಿದೆ ಎಂಬ ಸುದ್ದಿಯು ಬಿತ್ತರವಾದ ನಂತರದಲ್ಲಿ ಬ್ಯಾಂಕಿಂಗ್ ವಲಯದನಿಫ್ಟಿ ಪಿಎಸ್ಯು ಬ್ಯಾಂಕ್ ಸೂಚ್ಯಂಕವು ಶೇಕಡ 3ರವರೆಗೆ ಜಿಗಿದಿದೆ.

  • ಸರ್ಕಾರಿ ಬ್ಯಾಂಕ್‌ಗಳಲ್ಲಿ ಎಫ್‌ಡಿಐ ಹೆಚ್ಚಳವು, ನಿಯಮಗಳ ವಿಚಾರದಲ್ಲಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳ ನಡುವಿನ ಅಂತರವನ್ನು ತಗ್ಗಿಸುವ ಪ್ರಯತ್ನದ ಭಾಗವೂ ಆಗಿದೆ ಎಂದು ಮೂಲಗಳು ಹೇಳಿವೆ. ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಶೇ 74ರಷ್ಟು ಎಫ್‌ಡಿಐಗೆ ಅವಕಾಶ ಇದೆ.
  • ಈ ವಿಚಾರವಾಗಿ ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯದಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
  • ದೇಶದ ಆರ್ಥಿಕ ಬೆಳವಣಿಗೆ ದರವು ಕಳೆದ ಮೂರು ವರ್ಷಗಳಿಂದ ಸರಾಸರಿ ಶೇ 8ರಷ್ಟಿದೆ. ಇದರಿಂದಾಗಿ ಸಾಲಕ್ಕೆ ಬೇಡಿಕೆ ಹೆಚ್ಚಾಗಿದೆ, ದೇಶದ ಬ್ಯಾಂಕ್‌ಗಳು ಹೂಡಿಕೆಗೆ ಆಕರ್ಷಕವಾಗುತ್ತಿವೆ.
  • ದೇಶದಲ್ಲಿ 12 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿವೆ. ಈ ಬ್ಯಾಂಕ್‌ಗಳಲ್ಲಿ ಕನಿಷ್ಠ ಶೇ 51ರಷ್ಟು ಪಾಲನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈಗ ದೇಶದ ಸರ್ಕಾರಿ ಬ್ಯಾಂಕ್‌ಗಳಲ್ಲಿ ಎಫ್‌ಡಿಐ ಪ್ರಮಾಣವು ಒಂದೊಂದು ಬ್ಯಾಂಕ್‌ನಲ್ಲಿ ಒಂದೊಂದು ಮಟ್ಟದಲ್ಲಿದೆ. ಕೆನರಾ ಬ್ಯಾಂಕ್‌ನಲ್ಲಿ ಅದು ಶೇ 12ರಷ್ಟಿದೆ.
  • ಸಮಾಜದ ದುರ್ಬಲ ವರ್ಗಗಳಿಗೂ ಸಾಲ ನೀಡುವ ಹೊಣೆಯು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮೇಲೆ ಇರುವ ಕಾರಣ ಹೂಡಿಕೆಯ ದೃಷ್ಟಿಯಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಖಾಸಗಿ ವಲಯದ ಬ್ಯಾಂಕ್‌ಗಳಷ್ಟು ಬಲಿಷ್ಠವಲ್ಲ ಎಂಬ ನಂಬಿಕೆ ಇದೆ.
  • ವಿಶ್ವ ಕುಸ್ತಿ: ಸ್ವರ್ಣ ಜಯಿಸಿದ ಸುಜೀತ್

ಸಂದರ್ಭ: ಭಾರತದ ಉದಯೋನ್ಮುಖ ಕುಸ್ತಿಪಟು ಸುಜೀತ್ಕಲ್ಕಲ್ಅವರು 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಜಯಿಸಿದರು.

  • ಪುರುಷರ 65 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಕಣಕ್ಕಿಳಿದಿರುವ ಸುಜೀತ್‌ ಅವರು ಸೋಮವಾರ ನಡೆದ ಫೈನಲ್‌ ಹಣಾಹಣಿಯಲ್ಲಿ 10–0ಯಿಂದ ಉಜ್ಬೇಕಿಸ್ತಾನದ ಉಮಿಜೊನ್‌ ಜಲಲೊವ್‌ ಅವರನ್ನು ಅಧಿಕಾರಯುತವಾಗಿ ಮಣಿಸಿದರು. 22 ವರ್ಷ ವಯಸ್ಸಿನ ಸುಜೀತ್‌ ಕಳೆದ ಬಾರಿ ಈ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದರು.

ಪ್ರಚಲಿತ ವಿದ್ಯಮಾನಗಳು: 25ನೇ ಅಕ್ಟೋಬರ್ 2025

  • ಮೊಬೈಲ್ನಲ್ಲಿ ಟ್ರಾಫಿಕ್ಸಿಗ್ನಲ್ಮಾಹಿತಿ

ಸಂದರ್ಭ: ಸಿಲಿಕಾನ್ಸಿಟಿ ಟ್ರಾಫಿಕ್ಸಿಗ್ನಲ್ಗಳಲ್ಲಿ ಹಸಿರು, ಕೆಂಪು ನಿಶಾನೆ ತೋರುವ ಸಮಯ ಎಷ್ಟು ಸೆಕೆಂಡ್ಗಳವರೆಗೆ ಇರಲಿದೆ ಎಂಬ ರಿಯಲ್ಟೈಮ್ಮಾಹಿತಿಯನ್ನು ಮ್ಯಾಪಲ್ಸ್ಆ್ಯಪ್ನಲ್ಲಿ ಲೈವ್ಆಗಿ ನೀಡ ಲಾಗುತ್ತದೆ. ಬೆಂಗಳೂರು ನಗರದಲ್ಲಿ ಮೊದಲ ಬಾರಿಗೆ ಇದನ್ನು ಪ್ರಾಯೋಗಿಕ ವಾಗಿ ಜಾರಿಗೊಳಿಸಲಾಗಿದೆ. ಇದರಿಂದ ಯಾವ ರಸ್ತೆಯಲ್ಲಿ ಎಷ್ಟು ಸಮಯ ದವರೆಗೆ ಸಂಚಾರ ದಟ್ಟಣೆ ಇರಲಿದೆ ಎಂಬ ಮಾಹಿತಿಯನ್ನು ಪ್ರಯಾಣಿಕರು ಅಂಗೈಯಲ್ಲಿ ಪಡೆದುಕೊಳ್ಳಬಹುದು.

  • ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗ, ಅರ್ಕಾಡಿಸ್ ಇಂಡಿಯಾ ಮತ್ತು ಮ್ಯಾಪಲ್ಸ್‌ (ಮ್ಯಾಪ್‌ ಮೈ ಇಂಡಿಯಾ) ಜಂಟಿಯಾಗಿ ಈ ಉಪಕ್ರಮವನ್ನು ಜಾರಿಗೊಳಿಸಿವೆ.
  • ಮ್ಯಾಪಲ್ಸ್‌ ಆ್ಯಪ್‌ ಬಳಕೆದಾರರು ಬೆಂಗಳೂರು ನಗರದ ಟ್ರಾಫಿಕ್‌ ಸಿಗ್ನಲ್‌ಗಳು ಸಮೀಪಿಸುತ್ತಿದ್ದಂತೆಯೇ ಟ್ರಾಫಿಕ್‌ ಸಿಗ್ನಲ್‌ಗಳು ಕೆಂಪು ಅಥವಾ ಹಸಿರು ನಿಶಾನೆಗೆ ಬದಲಾಗಲು ಎಷ್ಟು ಸೆಕೆಂಡುಗಳಿವೆ ಎಂಬ ನಿಖರ ಮಾಹಿತಿಯನ್ನು ಈಗ ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದು.
  • ಪ್ರತಿ ಸಿಗ್ನಲ್‌ಗೂ ಕಾಲಮಿತಿ ಅಳವಡಿಸಿ ವಾಹನ ಸಂಚಾರ ನಿಯಂತ್ರಣ ಮಾಡುವ ಹಳೆಯ ವ್ಯವಸ್ಥೆಯ ಬದಲಿಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ಹಸಿರು ನಿಶಾನೆ ನೀಡುವ ಅಡ್ಯಾಪ್ಟಿವ್‌ ಟ್ರಾಫಿಕ್‌ ಕಂಟ್ರೋಲ್‌ ಸಿಸ್ಟಮ್‌ (ಎಟಿಸಿಎಸ್‌) ನಗರದ 169 ಜಂಕ್ಷನ್‌ಗಳಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಈ ಟ್ರಾಫಿಕ್‌ ಸಿಗ್ನಲ್‌ಗಳು ಎಷ್ಟು ಸೆಕೆಂಡುಗಳ ಕಾಲ ಹಸಿರು, ಕೆಂಪು ನಿಶಾನೆ ತೋರುತ್ತವೆ ಎಂಬುದನ್ನು ಮ್ಯಾಪಲ್ಸ್‌ ಆ್ಯಪ್‌ನಲ್ಲಿ ನೋಡಬಹುದು.
  • ‘ಈ ಎಐ ಚಾಲಿತ ಸ್ಮಾರ್ಟ್‌ ಸಿಗ್ನಲ್‌ಗಳಲ್ಲಿ ವೆಹಿಕಲ್‌ ಆಕ್ಚುಯೇಟೆಡ್‌ ಕಂಟ್ರೋಲ್ಡ್‌ (ವಿಎಸಿ) ತಂತ್ರಜ್ಞಾನದ ಸಹಾಯದಿಂದ ಸಿಗ್ನಲ್‌ಗಳಲ್ಲಿ ಬಿತ್ತರಿಸುವ ನೈಜ ಸಮಯವನ್ನು ಮ್ಯಾಪಲ್ಸ್ ಆ್ಯಪ್‌ನಲ್ಲಿ ತೋರಿಸಲಾಗುತ್ತದೆ. ಇದನ್ನು ಸಂಚಾರ ವಿಭಾಗದ ಪೊಲೀಸರು ಮ್ಯಾನ್ಯುಯಲ್ ಆಗಿ ನಿರ್ವಹಣೆ ಮಾಡಿದರೆ, ಆ್ಯಪ್‌ನಲ್ಲಿ ಮಾಹಿತಿ ಸಿಗುವುದಿಲ್ಲ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 
  • ‘ಎಐ ಸಿಗ್ನಲ್‌ಗಳಲ್ಲಿ ಬರುವ ಕೌಂಟ್‌ಡೌನ್‌ ಅವಧಿಯನ್ನು ಮ್ಯಾಪಲ್ಸ್‌ ಆ್ಯಪ್‌ನಲ್ಲಿ ತೋರಿಸಲಾಗುತ್ತಿದೆ. ಇದರಿಂದ ವಾಹನ ಸವಾರರು ಟ್ರಾಫಿಕ್‌ ಸಿಗ್ನಲ್‌ನ 500 ಮೀಟರ್‌ ದೂರದಿಂದಲೇ ಹಸಿರು ಅಥವಾ ಕೆಂಪು ನಿಶಾನೆ ಬರಲು ಎಷ್ಟು ಸೆಕೆಂಡುಗಳಿವೆ ಎಂಬುದನ್ನು ತಿಳಿದುಕೊಂಡು, ಬೇರೆ ಮಾರ್ಗದ ಮೂಲಕ ತೆರಳಲು ಅವಕಾಶ ಕಲ್ಪಿಸುತ್ತದೆ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಇದು ಸಹಾಯಕವಾಗಲಿದೆ’ ಎಂದು ಅವರು ವಿವರಿಸಿದರು.

ಹಲವು ಆವಿಷ್ಕಾರಗಳಿಗೆ ಮ್ಯಾಪಲ್ಸ್ಸಾಕ್ಷಿ

  • ‘ಟ್ರಾಫಿಕ್‌ ಸಿಗ್ನಲ್‌ನ ಹಸಿರು ಅಥವಾ ಕೆಂಪು ನಿಶಾನೆ ತೋರುವ ಸಮಯ ಎಷ್ಟು ಸೆಂಕಡ್‌ಗಳವರೆಗೆ ಇರಲಿದೆ ಎಂಬ ಮಾಹಿತಿಯನ್ನು ಈಗ ಮ್ಯಾಪಲ್ಸ್‌ ಆ್ಯಪ್‌ನಲ್ಲಿಯೂ ನೋಡಬಹುದು. ಸ್ವದೇಶಿ ನಿರ್ಮಿತ್‌ ಆ್ಯಪ್‌ ಇನ್ನೂ ಹಲವು ಆವಿಷ್ಕಾರಗಳಿಗೆ ಸಾಕ್ಷಿಯಾಗಲಿದೆ’ ಎಂದು ಮ್ಯಾಪ್‌ ಮೈ ಇಂಡಿಯಾ ನಿರ್ದೇಶಕ ರೋಹನ್ ವರ್ಮಾ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
  • ಸುಧಾರಣೆಯ ಹಾದಿಯಲ್ಲಿ ಎನ್‌ಪಿಎಸ್

ಖಾಸಗಿ ವಲಯದ ಬಹುತೇಕ ಉದ್ಯೋಗಿಗಳು ಬಾಳಿನ ಮುಸ್ಸಂಜೆಯಲ್ಲಿ ಜೀವನ ನಿರ್ವಹಣೆಗೆ ಇಡುಗಂಟು ಇಲ್ಲದೆ ತೊಂದರೆಗೆ ಸಿಲುಕುತ್ತಾರೆ. ನಿವೃತ್ತಿ ನಂತರದ ಬದುಕಿನ ಬಂಡಿ ಎಳೆಯಲು ಪೂರ್ವಸಿದ್ಧತೆ ಇಲ್ಲದವರ ಕೊರಳಿಗೆ ಸಂಕಷ್ಟಗಳ ಸಂಕೋಲೆ ಬೀಳುತ್ತದೆ. ಅಂಥವರಿಗೆ ನೆರವಾಗಲೆಂದೇ ಕೇಂದ್ರ ಸರ್ಕಾರವು ಪಿಂಚಣಿ ಯೋಜನೆಯನ್ನು ಖಾಸಗಿಯವರಿಗೂ ವಿಸ್ತರಿಸಿತ್ತು.   

2004ರಲ್ಲಿ ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್‌) ರದ್ದುಪಡಿಸಿ, ಸಾಮಾಜಿಕ ಭದ್ರತೆಯ ಭಾಗವಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ಜಾರಿಗೊಳಿಸಿತು. ಆರಂಭದಲ್ಲಿ ಈ ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗಷ್ಟೆ ಸೀಮಿತವಾಗಿತ್ತು. 2009ರಿಂದ ಖಾಸಗಿ ವಲಯದ ಉದ್ಯೋಗಿಗಳಿಗೂ ಇದನ್ನು ವಿಸ್ತರಿಸಿತು. ಪ್ರಸ್ತುತ ಈ ಯೋಜನೆಯು ಸಾರ್ವಜನಿಕ, ಖಾಸಗಿ, ಅಸಂಘಟಿತ ವಲಯದ ಉದ್ಯೋಗಿಗಳು ಮತ್ತು ಮಕ್ಕಳೂ ಸೇರಿದಂತೆ ಎಲ್ಲಾ ನಾಗರಿಕರಿಗೂ ಮುಕ್ತವಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಇದರ ನಿರ್ವಹಣೆಯ ಹೊಣೆ ಹೊತ್ತಿದೆ.

ಎನ್‌ಪಿಎಸ್‌, ಷೇರು ಮಾರುಕಟ್ಟೆ ಸಂಯೋಜಿತ ಹೂಡಿಕೆ ಮತ್ತು ಉಳಿತಾಯ ಯೋಜನೆ. ನಿವೃತ್ತಿ ನಂತರವೂ ನಿಯಮಿತ ಆದಾಯವನ್ನು ಒದಗಿಸುತ್ತದೆ. ಜೊತೆಗೆ, ಚಂದಾದಾರರಿಗೆ ಆರ್ಥಿಕ ಸ್ಥಿರತೆ ಮತ್ತು ಭದ್ರತೆಯನ್ನೂ ಖಾತರಿಪಡಿಸುತ್ತದೆ. ಇದರಡಿ ಹೂಡಿಕೆ ಮಾಡುವವರಿಗೆ ಆದಾಯ ತೆರಿಗೆಯ ವಿನಾಯಿತಿ ಲಭಿಸುತ್ತದೆ. ಎನ್‌ಪಿಎಸ್‌ನಡಿ ಹೂಡಿಕೆ ಮಾಡಿದರೆ ಸೆಕ್ಷನ್‌ 80ಸಿ ಅಡಿ ₹1.50 ಲಕ್ಷ ಹಾಗೂ ಸೆಕ್ಷನ್‌ 80ಸಿಸಿಡಿ (1ಬಿ) ಅಡಿ ₹50 ಸಾವಿರ ವಿನಾಯಿತಿ ದೊರೆಯುತ್ತದೆ. 

ಮತ್ತೊಂದೆಡೆ, ಮ್ಯೂಚುವಲ್‌ ಫಂಡ್‌ಗಳ ನಿರ್ವಹಣಾ ಶುಲ್ಕಕ್ಕೆ ಹೋಲಿಸಿದರೆ ಎನ್‌ಪಿಎಸ್‌ ನಿರ್ವಹಣಾ ಶುಲ್ಕ ಅತ್ಯಲ್ಪ. ಮ್ಯೂಚುವಲ್‌ ಫಂಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕ ಶೇ 1ರಿಂದ ಶೇ 2.5ರಷ್ಟಿದೆ. ಎನ್‌ಪಿಎಸ್‌ನಲ್ಲಿ ವಾರ್ಷಿಕ ನಿರ್ವಹಣಾ ಶುಲ್ಕ ಶೇ 0.09ರಷ್ಟಿದೆ. ಅಂದರೆ ₹1 ಲಕ್ಷ ಹೂಡಿಕೆ ಮೊತ್ತಕ್ಕೆ ಚಂದಾದಾರರು ಕೇವಲ ₹90 ಶುಲ್ಕವನ್ನಷ್ಟೆ ಭರಿಸುತ್ತಾರೆ. ಈ ಯೋಜನೆಯಡಿ ಇಂಥ ಸಾಕಷ್ಟು ಅನುಕೂಲಗಳಿದ್ದರೂ ಅರಿವಿನ ಕೊರತೆಯಿಂದಾಗಿ ಹೆಚ್ಚು ಜನಪ್ರಿಯತೆ ಪಡೆದಿಲ್ಲ.

ನಿಯಮ ಇನ್ನಷ್ಟು ಸರಳ:ಇದಕ್ಕಾಗಿಯೇ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಎನ್‌ಪಿಎಸ್‌ನಲ್ಲಿ ಹೂಡಿಕೆ, ಚಂದಾದಾರಿಕೆ ಅಂತ್ಯಗೊಳಿಸುವ ಮತ್ತು ಹಣ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಅಣಿಯಾಗಿದೆ. ಇದಕ್ಕಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ನಿರ್ಗಮನ ಮತ್ತು ಹಿಂಪಡೆಯುವಿಕೆ) ನಿಯಮಗಳು– 2015ರ ತಿದ್ದುಪಡಿ ಕರಡು ಪ್ರಕಟಿಸಿದೆ. ಉದ್ದೇಶಿತ ತಿದ್ದುಪಡಿ ನಿಯಮಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲ ರೀತಿಯ ಉದ್ಯೋಗಿಗಳಿಗೂ ಅನ್ವಯಿಸುತ್ತವೆ.

ಎನ್‌ಪಿಎಸ್‌ ಸ್ವಾವಲಂಬನೆ (ಅಸಂಘಟಿತ ವಲಯ), ಎನ್‌ಪಿಎಸ್ ವಾತ್ಸಲ್ಯ (ಮಕ್ಕಳ ಹೆಸರಿನಲ್ಲಿ ಚಂದಾದಾರಿಕೆ), ಎಲ್ಲ ನಾಗರಿಕರು, ಕಾರ್ಪೊರೇಟ್ ವಲಯಗಳ ಸಿಬ್ಬಂದಿಗೆ (ಎನ್‌ಪಿಎಸ್‌ನ ಟೈರ್‌–1 ಖಾತೆ) ಈ ನಿಯಮಗಳು ಅನ್ವಯಿಸುತ್ತವೆ.

ಶೇ 80ರಷ್ಟು ಇಡುಗಂಟು ಲಭ್ಯ 

ಪಿಎಫ್‌ಆರ್‌ಡಿಎ ಪ್ರಕಟಿಸಿರುವ ಹೊಸ ಪ್ರಸ್ತಾವದನ್ವಯ ಚಂದಾದಾರರಿಗೆ ಹೆಚ್ಚಿನ ಅನುಕೂಲ ಲಭಿಸಲಿದೆ. ಹಾಲಿ ನಿಯಮದ (ಸಾಮಾನ್ಯ ಯೋಜನೆ) ಅನ್ವಯ ಚಂದಾದಾರರಿಗೆ ಯೋಜನೆಯಿಂದ ಹೊರಬರಲು ನಿವೃತ್ತಿಯ ವಯಸ್ಸು ಅಂದರೆ 60 ವರ್ಷದ ಮಿತಿ ನಿಗದಿಪಡಿಸಲಾಗಿತ್ತು. ಈ ವೇಳೆ ದೊರೆಯುವ ಪಿಂಚಣಿಯ ಇಡುಗಂಟಿನಲ್ಲಿ (ಕಾರ್ಪಸ್‌) ಶೇ 60ರಷ್ಟು ಮೊತ್ತ ಹಿಂಪಡೆಯಲು ಅವಕಾಶವಿತ್ತು. ಈ ಮೊತ್ತವು ಆದಾಯ ತೆರಿಗೆಯಿಂದ ಮುಕ್ತವಾಗಿದೆ. ಉಳಿದ ಶೇ 40ರಷ್ಟು ನಿಧಿಯನ್ನು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ (ಪರ್ಚೇಸ್ ಆಫ್ ಆ್ಯನುಟಿ) ಕಡ್ಡಾಯವಾಗಿ ಹೂಡಿಕೆ ಮಾಡಬೇಕಿತ್ತು.  ‌

ಕರಡಿನಲ್ಲಿ ಇಡುಗಂಟು ಹಿಂಪಡೆಯುವಿಕೆ ಪ್ರಮಾಣವನ್ನು ಶೇ 80ಕ್ಕೆ ಹೆಚ್ಚಿಸುವ ಕುರಿತು ಪ್ರಸ್ತಾಪಿಸಲಾಗಿದೆ (ಈ ಪೈಕಿ ಶೇ 60ರಷ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ಇದ್ದರೆ, ಉಳಿದ ಶೇ 20ರಷ್ಟು ಮೊತ್ತವು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ). ಉಳಿದ ಶೇ 20ರಷ್ಟು ಮೊತ್ತವನ್ನು ಚಂದಾದಾರರು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡುವುದು ಕಡ್ಡಾಯ. ಹೊಸ ಪ್ರಸ್ತಾವವು ಖಾತೆದಾರರಿಗೆ ಹೆಚ್ಚಿನ ಆರ್ಥಿಕ ಭದ್ರತೆ ಒದಗಿಸಲಿದೆ. ಅಲ್ಲದೆ, ಆರ್ಥಿಕ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು ನೆರವಾಗಲಿದೆ ಎನ್ನುತ್ತಾರೆ ಹೂಡಿಕೆ ತಜ್ಞರು.

ಸಾಮಾನ್ಯ ಚಂದಾದಾರಿಕೆ ಹೊರಬರುವ ವ್ಯವಸ್ಥೆಯಡಿ (60 ವರ್ಷಕ್ಕೆ) ಚಂದಾದಾರರ ಖಾತೆಯಲ್ಲಿ ₹2.5 ಲಕ್ಷ ಇಡುಗಂಟು ಇದ್ದರೆ, ಇಡೀ ಮೊತ್ತ ಹಿಂಪಡೆಯಲು ಹಾಲಿ ನಿಯಮದಲ್ಲಿ ಅವಕಾಶವಿದೆ. ಈ ಮೊತ್ತದ ಪ್ರಮಾಣ ಹೆಚ್ಚಿಸಲು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ. ಇಡುಗಂಟು ₹12 ಲಕ್ಷಕ್ಕಿಂತ ಕಡಿಮೆ ಇದ್ದರೆ ಆ ಮೊತ್ತದಲ್ಲಿ ಶೇ 50ರಷ್ಟನ್ನು ಒಂದೇ ಬಾರಿಗೆ ಹಿಂಪಡೆಯಬಹುದಾಗಿದೆ. ಉಳಿದ ಶೇ 50ರಷ್ಟು ಮೊತ್ತವನ್ನು ಐದು ವರ್ಷಗಳಲ್ಲಿ ವ್ಯವಸ್ಥಿತವಾಗಿ ಹಿಂಪಡೆಯಲು ಅವಕಾಶವಿದೆ ಅಥವಾ ಚಂದಾದಾರರು ಇಚ್ಛಿಸಿದರೆ ಈ ಮೊತ್ತವನ್ನು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.

ಕೆಲವು ಚಂದಾದಾರರು ಅವಧಿ ಮುಗಿಯುವ ಮೊದಲೇ ಇಡುಗಂಟು ಹಿಂಪಡೆಯಲು ಇಚ್ಛಿಸುವುದುಂಟು. ಹಾಲಿ ನಿಯಮದಡಿ ₹2.5 ಲಕ್ಷ ಇಡುಗಂಟು ಇದ್ದರೆ ಇಡೀ ಮೊತ್ತವನ್ನು ಹಿಂಪಡೆಯಬಹುದಾಗಿದೆ. ಈ ಮೊತ್ತ ಹೆಚ್ಚಿಸುವ ಕುರಿತು ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ. ₹4 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮೊತ್ತ ಇದ್ದರೆ ಸಂಪೂರ್ಣವಾಗಿ ಹಿಂಪಡೆಯಲು ಅವಕಾಶ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಂತಹ ಚಂದಾದಾರರು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡುವ ಪ್ರಮೇಯ ಇರುವುದಿಲ್ಲ.

ಪ್ರಸ್ತುತ ಎನ್‌ಪಿಎಸ್‌ ಸೇರ್ಪಡೆಗೆ ಗರಿಷ್ಠ ವಯಸ್ಸು 70 ವರ್ಷ. 75 ವರ್ಷದವರೆಗೂ ಖಾತೆ ಮುಂದುವರಿಸಬಹುದು. ತಿದ್ದುಪಡಿಯಲ್ಲಿ ಸೇರ್ಪಡೆ ಮತ್ತು ಖಾತೆ ಮುಂದುವರಿಸುವ ಅವಧಿಯನ್ನು 85 ವರ್ಷದವರೆಗೆ ವಿಸ್ತರಿಸುವ ಕುರಿತು ಉಲ್ಲೇಖಿಸಲಾಗಿದೆ. ಪ್ರಸ್ತುತ ಚಂದಾದಾರರ ಎನ್‌ಪಿಎಸ್‌ ಮೊತ್ತಕ್ಕೆ ಸಾಲ ಸೌಲಭ್ಯವಿಲ್ಲ. ಕರಡಿನಲ್ಲಿ, ಸಾಲ ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಬಹು ಯೋಜನೆಯ ಚೌಕಟ್ಟು

ಎನ್‌ಪಿಎಸ್‌ ಬಲವರ್ಧನೆಗೆ ಪ್ರಾಧಿಕಾರವು ಬಹು ಯೋಜನೆ ಚೌಕಟ್ಟು (ಎಂಎಸ್‌ಎಫ್‌) ರೂಪಿಸಿದೆ. ಇದರಡಿ ಅನುಷ್ಠಾನಗೊಳಿಸಿರುವ ಹೊಸ ಯೋಜನೆಯು ಚಂದಾದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

ಪ್ರಸ್ತುತ ಎನ್‌ಪಿಎಸ್‌ ಚಂದಾದಾರರ ಕೊಡುಗೆಯನ್ನು ಷೇರುಪೇಟೆ, ಸರ್ಕಾರಿ ಬಾಂಡ್‌, ಕಾರ್ಪೊರೇಟ್‌ ಬಾಂಡ್‌ ಮತ್ತು ಇತರ ನಿಧಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಯಾವ ಹೂಡಿಕೆಗೆ ಎಷ್ಟು ಮೊತ್ತ ಹಂಚಿಕೆ ಮಾಡಬೇಕು ಎಂಬುದನ್ನು ಚಂದಾದಾರರೇ ನಿರ್ಧರಿಸಬಹುದು. ಚಂದಾದಾರರ ಸೂಚನೆ ಅನ್ವಯ ಫಂಡ್‌ ಮ್ಯಾನೇಜರ್‌ಗಳು ಹೂಡಿಕೆಯನ್ನು ನಿರ್ವಹಣೆ ಮಾಡುತ್ತಾರೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗಿರುವ ಎನ್‌ಪಿಎಸ್‌ ಮೊತ್ತವು ವಾರ್ಷಿಕ ಶೇ 13ರಷ್ಟು ರಿಟರ್ನ್ಸ್‌ ತಂದುಕೊಟ್ಟಿದೆ. ಕಾರ್ಪೊರೇಟ್ ಬಾಂಡ್‌ ಮತ್ತು ಸರ್ಕಾರಿ ಬಾಂಡ್‌ಗಳಲ್ಲಿನ ಹೂಡಿಕೆಯು ಶೇ 9ರಷ್ಟು ರಿಟರ್ನ್ಸ್‌ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಸದ್ಯ ಎನ್‌ಪಿಎಸ್‌ ಚಂದಾದಾರರು ತಮ್ಮ ಕೊಡುಗೆಯ ಶೇ 75ರಷ್ಟು ಮೊತ್ತವನ್ನಷ್ಟೇ ಷೇರುಪೇಟೆಯಲ್ಲಿ ಹೂಡಲು ಅವಕಾಶವಿದೆ. ಆದರೆ, ಬಹಳಷ್ಟು ಚಂದಾದಾರರು ಹೆಚ್ಚಿನ ರಿಟರ್ನ್ಸ್‌ ಅನ್ನು ಅಪೇಕ್ಷಿಸುತ್ತಾರೆ. ಅಂತಹ ಚಂದಾದಾರರಿಗೆ ತಮ್ಮ ಕೊಡುಗೆಯ ಶೇ 100ರಷ್ಟು ಮೊತ್ತವನ್ನೂ ಷೇರುಪೇಟೆಯಲ್ಲಿ ಹೂಡಿಕೆಗೆ ಬಹು ಯೋಜನೆ ಚೌಕಟ್ಟಿನಡಿ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್‌ 1ರಿಂದಲೇ ಇದು ಜಾರಿಗೆ ಬಂದಿದೆ.   

‘ಜೆನ್‌-ಝೀ’ ಪೀಳಿಗೆ ಮತ್ತು ಗಿಗ್‌ ಕಾರ್ಮಿಕರು ಎನ್‌ಪಿಎಸ್‌ನಿಂದ ದೂರವಿದ್ದಾರೆ. ಅವರನ್ನು ಈ ಯೋಜನೆಯತ್ತ ಆಕರ್ಷಿಸುವ ಉದ್ದೇಶದಿಂದ ಪಿಎಫ್‌ಆರ್‌ಡಿಎ ಈ ಚೌಕಟ್ಟು ರೂಪಿಸಿದೆ. ಆದರೆ, ಜಾಗತಿಕ ಹಾಗೂ ದೇಶೀಯ ವಿದ್ಯಮಾನಗಳು ದೇಶೀಯ ಷೇರುಪೇಟೆ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ, ಹೆಚ್ಚಿನ ರಿಟರ್ನ್ಸ್‌ ನಿರೀಕ್ಷಿಸುವ ಚಂದಾದಾರರು ರಿಸ್ಕ್‌ ಭರಿಸಲೂ ಸಿದ್ಧವಿರಬೇಕಿದೆ. 

ಆಧಾರ: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವೆಬ್‌ಸೈಟ್, ಎನ್‌ಪಿಸ್‌ಟ್ರಸ್ಟ್.ಒಆರ್‌ಜಿ.ಇನ್, 

15 ವರ್ಷಕ್ಕೆ ಹೊರಬರಲು ಅವಕಾಶ 

ಪ್ರಸ್ತಾವಿತ ತಿದ್ದುಪಡಿ ನಿಯಮದಲ್ಲಿ 15 ವರ್ಷಗಳಿಗೆ ಎನ್‌ಪಿಎಸ್‌ನಿಂದ ಹೊರಬರುವುದಕ್ಕೆ ಅವಕಾಶ ಕಲ್ಪಿಸಲಾಗಿದೆ (ಹಾಲಿ ನಿಯಮದಡಿ 60 ವರ್ಷ ಆಗಿರಬೇಕು). ಉದಾಹರಣೆಗೆ, ಒಬ್ಬ ಖಾಸಗಿ ವಲಯದ ಉದ್ಯೋಗಿಯು 30ನೇ ವಯಸ್ಸಿಗೆ ಎನ್‌ಪಿಎಸ್‌ ಖಾತೆ ತೆರೆದು 45ನೇ ವಯಸ್ಸಿಗೆ ತನ್ನ ಚಂದಾದಾರಿಕೆಯನ್ನು ಕೊನೆಗೊಳಿಸಬಹುದು. 

ಆ ಸಮಯದಲ್ಲಿ ಆ ಉದ್ಯೋಗಿಯ ಎನ್‌ಪಿಎಸ್‌ ಖಾತೆಯಲ್ಲಿ ‌₹50 ಲಕ್ಷ ಹೊಂದಿದ್ದರೆ, ಆ ಪೈಕಿ ಶೇ 60ರಷ್ಟು ಮೊತ್ತ (₹30 ಲಕ್ಷ) ಹಿಂಪಡೆಯಬಹುದು. ಉಳಿದ ಶೇ 40ರಷ್ಟು ಮೊತ್ತವನ್ನು (₹20 ಲಕ್ಷ) ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಲು ಮೀಸಲಿಡಬೇಕಿದೆ.

18 ತುಂಬಿದ ನಂತರವಷ್ಟೇ ಚಂದಾದಾರಿಕೆ ಅಂತ್ಯ 

ಎನ್‌ಪಿಎಸ್‌ –ವಾತ್ಸಲ್ಯ ಚಂದಾದಾರರಿಗೆ ಸಂಬಂಧಿಸಿದಂತೆ ಮಕ್ಕಳಿಗೆ 18 ವರ್ಷ ತುಂಬಿದ ಬಳಿಕಷ್ಟೇ ಅವರು ಚಂದಾದಾರಿಕೆಯಿಂದ ಹೊರಬರಬಹುದು ಎಂದು ಕರಡು ನಿಯಮದಲ್ಲಿ ಹೇಳಲಾಗಿದೆ. ಚಂದಾದಾರಿಕೆ ಅಂತ್ಯಗೊಳಿಸಿದ ನಂತರ ನಿಧಿಯಲ್ಲಿ ಸಂಗ್ರಹವಾಗಿರುವ ಮೊತ್ತದಲ್ಲಿ ಶೇ 80ರಷ್ಟನ್ನು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಶೇ 20ರಷ್ಟನ್ನು ಇಡುಗಂಟು ರೂಪದಲ್ಲಿ ನೀಡಲಾಗುತ್ತದೆ. ಒಂದು ವೇಳೆ, ಎನ್‌ಪಿಎಸ್‌ ಖಾತೆಯಲ್ಲಿ ಸಂಗ್ರಹವಾದ ಮೊತ್ತ ₹4 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಒಂದೇ ಸಲಕ್ಕೆ ಪೂರ್ಣ ಮೊತ್ತವನ್ನು ವಾಪಸ್‌ ಪಡೆಯುವುದಕ್ಕೂ ಅವಕಾಶ ಇದೆ. ಇದನ್ನು ಆಯ್ಕೆ ಮಾಡಿಕೊಂಡವರಿಗೆ ನಂತರ ಪಿಂಚಣಿ ಆದಾಯ ಸಿಗುವುದಿಲ್ಲ.   

ಮಕ್ಕಳಿಗೆ 18 ವರ್ಷ ಪೂರ್ಣವಾದ ನಂತರವೂ ಚಂದಾದಾರಿಕೆಯಿಂದ ಹೊರಬಾರದೇ ಇದ್ದ ಪಕ್ಷದಲ್ಲಿ ಚಂದಾದಾರಿಕೆಯು ಎನ್‌ಪಿಎಸ್‌ನ ಎಲ್ಲ ನಾಗರಿಕರು (All citizens) ವಿಭಾಗದಲ್ಲಿ ಮುಂದುವರಿಯುತ್ತದೆ.

  • ನಲಿಕಲಿಮಕ್ಕಳಿಗೆ ದಿನಕ್ಕೊಂದು ರೂಪಾಯಿ

ಸಂದರ್ಭ: ಕೊಪ್ಪಳ ತಾಲ್ಲೂಕಿನ ಲಿಂಗದೇವರಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿನಲಿ ಕಲಿ ಶಿಕ್ಷಣದ ಮಕ್ಕಳಿಗೆ ದಿನಕ್ಕೆ ₹ 1 ನೀಡಲು ಮುಖ್ಯ ಶಿಕ್ಷಕ ಎಂ.ಕೆ. ಹೊಳಜೋಗಿ ತೀರ್ಮಾನಿಸಿದ್ದು, ದಾಖಲಾತಿ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.

  • ಶಾಲೆಯಲ್ಲಿ 1ರಿಂದ 3ನೇ ತರಗತಿಯವರೆಗೆ ನಲಿಕಲಿ ಶಿಕ್ಷಣ ಕ್ರಮವಿದೆ. 1, 2ನೇ ತರಗತಿಯಲ್ಲಿ 7 ಮಕ್ಕಳಿದ್ದಾರೆ. 3ನೇ ತರಗತಿಯಲ್ಲಿ ಮಕ್ಕಳಿಲ್ಲ. ಹೀಗಾಗಿ, ದಾಖಲಾತಿ ಹೆಚ್ಚಳಕ್ಕಾಗಿ ಹೊಳಜೋಗಿ ಅವರು ‘ದಿನಕ್ಕೆ ₹ 1 ಯೋಜನೆ’ ರೂಪಿಸಿದ್ದಾರೆ.
  • ಸರ್ಕಾರಿ ಕನ್ನಡ ಶಾಲೆಗೆ ದಾಖಲಾಗುವ ಮಕ್ಕಳ ಹೆಸರಿನಲ್ಲಿ ಸದ್ಯ ₹ 1,111 ಠೇವಣಿ ಇರಿಸಿರುವ ಹೊಳಜೋಗಿ, ಅದರ ಜೊತೆಗೆ ದಿನಕ್ಕೆ ₹ 1 ನೀಡುವುದಾಗಿ ಘೋಷಿಸಿದ್ದಾರೆ.
  • ‘ಮಕ್ಕಳ ಹೆಸರಿನಲ್ಲಿ ಪೋಷಕರು ಈಗಾಗಲೇ ಬ್ಯಾಂಕ್ ಖಾತೆ ತೆರೆದಿದ್ದಾರೆ. ಅದೇ ಖಾತೆಗೆ ದಿನದ ಲೆಕ್ಕದಲ್ಲಿ ಪ್ರತಿ ತಿಂಗಳೂ ಹಣ ಜಮೆ ಮಾಡುತ್ತೇನೆ. ಮಕ್ಕಳು ಸರ್ಕಾರಿ ಶಾಲೆಗೆ ಬರಲಿ ಎಂಬ ಕಾರಣಕ್ಕೆ ಈ ಕ್ರಮವಹಿಸಿದ್ದೇನೆ. ಜೊತೆಗೆ, ಹಣ ಉಳಿತಾಯದ ಬಗ್ಗೆಯೂ ಮಕ್ಕಳಲ್ಲಿ ಜಾಗೃತಿ ಮೂಡುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.
  • ಪಶ್ಚಿಮ ಏಷ್ಯಾ ದೇಶಗಳಿಂದ ಕಚ್ಚಾ ತೈಲ ಖರೀದಿ?

ಸಂದರ್ಭ: ರಷ್ಯಾದ ತೈಲ ಕಂಪನಿಗಳ ಮೇಲಿನ ನಿರ್ಬಂಧ: ಬೇರೆಡೆ ಖರೀದಿಗೆ ಮುಂದಾದ ಭಾರತದ ಕಂಪನಿಗಳು ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಇತರೆ ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧಗಳನ್ನು ಪಾಲಿಸಲಾಗುವುದುರಿಲಯನ್ಸ್ ಇಂಡಸ್ಟ್ರೀಸ್ ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದರಿಂದಾಗಿ, ಕಚ್ಚಾ ತೈಲ ಆಮದಿನಲ್ಲಿ ಉಂಟಾಗುವ ಕೊರತೆಯನ್ನು ಸರಿದೂಗಿಸಿ ಕೊಳ್ಳಲು ಭಾರತೀಯ ತೈಲ ಸಂಸ್ಕರಣಾ ಕಂಪನಿಗಳು ಪಶ್ಚಿಮ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

  • ಕಚ್ಚಾ ತೈಲ ಉತ್ಪನ್ನ ಮಾಡುವ  ರಷ್ಯಾದ ಅತಿದೊಡ್ಡ ಕಂಪನಿಗಳಾದರೊಸ್ನೆಫ್ಟ್‌’ ಮತ್ತುಲುಕಾಯಿಲ್‌’ ಮೇಲೆ ಅಕ್ಟೋಬರ್ 22ರಂದು ಅಮೆರಿಕ ನಿರ್ಬಂಧ ವಿಧಿಸಿದೆ. ಆ ಮೂಲಕ, ಈ ಕಂಪನಿಗಳು ಮತ್ತು ಅವುಗಳ ಅಂಗ ಸಂಸ್ಥೆಗಳೊಂದಿಗೆ ಅಮೆರಿಕದ ಕಂಪನಿಗಳು ಮತ್ತು ವ್ಯಕ್ತಿಗಳು ವಹಿವಾಟು ನಡೆಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಅವುಗಳಿಂದ ಅಮೆರಿಕದ್ದಲ್ಲದ ಕಂಪನಿಗಳು ತೈಲ ಖರೀದಿಸಿದರೆ ಅಂತಹ ಸಂಸ್ಥೆಗಳೂ ನಿರ್ಬಂಧದ ಪರಿಣಾಮವನ್ನು ಎದುರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
  • ರಷ್ಯಾದ ಈ ಎರಡೂ ಕಂಪನಿಗಳ ಜತೆಗಿನ ವಹಿವಾಟುಗಳನ್ನು ನವೆಂಬರ್‌ 21ರೊಳಗೆ ಅಂತ್ಯಗೊಳಿಸಬೇಕು ಎಂದು ಅಮೆರಿಕ ಹೇಳಿದೆ.
  • ಪ್ರಸ್ತುತ ಭಾರತವು ರಷ್ಯಾದಿಂದ ನಿತ್ಯ 17 ಲಕ್ಷ ಬ್ಯಾರಲ್ನಷ್ಟು ಕಚ್ಚಾ ತೈಲ ಖರೀದಿಸುತ್ತಿದೆ. ಪೈಕಿರೊಸ್ನೆಫ್ಟ್‌’ ಮತ್ತುಲುಕಾಯಿಲ್‌’ನಿಂದಲೇ 12 ಲಕ್ಷ ಬ್ಯಾರಲ್ ತೈಲವನ್ನು ಖರೀದಿ ಮಾಡುತ್ತಿದೆ. ಖಾಸಗಿ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ಮತ್ತು ನಯಾರಾ ಎನರ್ಜಿ ಕಂಪನಿಗಳು ತೈಲದಲ್ಲಿ ಹೆಚ್ಚಿನ ಪ್ರಮಾಣವನ್ನು ಖರೀದಿಸುತ್ತಿವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿವೆ
  • ‘ರಷ್ಯಾದಿಂದ ನವೆಂಬರ್‌ 21ರವರೆಗೆ ನಿಗದಿಯಂತೆ ಕಚ್ಚಾ ತೈಲ ಆಮದು ಆಗಲಿದೆ. ಆ ನಂತರ ತೈಲ ಖರೀದಿ ಪ್ರಮಾಣ ಇಳಿಕೆಯಾಗಲಿದೆ. ಅಮೆರಿಕ ವಿಧಿಸಿರುವ ನಿರ್ಬಂಧದ ಪರಿಣಾಮಗಳನ್ನು ತಪ್ಪಿಸಿಕೊಳ್ಳಲು ಭಾರತದ ತೈಲ ಸಂಸ್ಕರಣಾಗಾರಗಳು ಪ್ರಯತ್ನಿಸುತ್ತಿವೆ’  ಎಂದು ಕೆಪ್ಲೆರ್‌ನ ಸಂಶೋಧನಾ  ವಿಶ್ಲೇಷಕ (ಸಂಸ್ಕರಣೆ ಮತ್ತು ಮಾಡೆಲಿಂಗ್)  ಸುಮಿತ್ ರಿಟೋಲಿಯಾ ಹೇಳಿದ್ದಾರೆ.
  • ‘ದಿನಕ್ಕೆ 5 ಲಕ್ಷ ಬ್ಯಾರಲ್‌ನಂತೆ 25 ವರ್ಷ ಕಚ್ಚಾ ತೈಲ ಪೂರೈಕೆ ಮಾಡಲು ರಿಲಯನ್ಸ್‌, ರೊಸ್ನೆಫ್ಟ್‌ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ನಯಾರಾ ಎನರ್ಜಿ, ರಷ್ಯಾದ ತೈಲ ಕಂಪನಿಗಳ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದೆ. ಅದಕ್ಕಿರುವ ಆಯ್ಕೆ ಕಡಿಮೆ. ಆದರೂ, ಸಂಸ್ಕರಣಾಗಾರರು ಮಧ್ಯವರ್ತಿಗಳ ಮೂಲಕ ಖರೀದಿಯನ್ನು ಮುಂದುವರಿಸಬಹುದು’ ಎಂದು ಅವರು ಹೇಳಿದ್ದಾರೆ.
  • ‍ಕಚ್ಚಾ ತೈಲ ಆಮದಿನಲ್ಲಿ ಉಂಟಾಗುವ ಕೊರತೆಯನ್ನು ಸರಿದೂಗಿಸಿಕೊಳ್ಳಲು ಭಾರತವು ಪಶ್ಚಿಮ ಏಷ್ಯಾ, ಬ್ರೆಜಿಲ್‌, ಲ್ಯಾಟಿನ್ ಅಮೆರಿಕ, ಪಶ್ಚಿಮ ಆಫ್ರಿಕಾ, ಕೆನಡಾ, ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವ ನಿರೀಕ್ಷೆಯಿದೆ‍ಅಮೆರಿಕದ ನಿರ್ಬಂಧಗಳು  ಭಾರತದ ತೈಲ ಖರೀದಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಭಾರತವು ಬೇರೆ ದೇಶಗಳಿಂದ ತೈಲ ಖರೀದಿಸಿದರೆ ವೆಚ್ಚ ಹೆಚ್ಚಳವಾಗ ಬಹುದು ಎಂದು ಅವರು ವಿವರಿಸಿದ್ದಾರೆ.
  • ಕೇರಳ: ಎಡಪಕ್ಷಗಳಲ್ಲಿ ಆಂತರಿಕ ಸ್ಫೋಟ: ಪಿ.ಎಂ.ಶ್ರೀ ಶಾಲಾ ಯೋಜನೆಗೆ ಸೇರಲು ಕೇರಳ ಸರ್ಕಾರಕೇಂದ್ರ ಸರ್ಕಾರ ಒಪ್ಪಂದ

ಸಂದರ್ಭ: ಕೇಂದ್ರ ಸರ್ಕಾರ ಪ್ರಾಯೋಜಿತಪಿ.ಎಂ.ಶ್ರೀ ಶಾಲಾ ಯೋಜನೆಗೆ ಸೇರ್ಪಡೆಯಾಗಲು ಕೇರಳದ ಶಾಲಾ ಶೈಕ್ಷಣಿಕ ಇಲಾಖೆ ಒಪ್ಪಿಗೆ ಸೂಚಿಸಿರುವುದು ರಾಜ್ಯದ ಎಡಪಕ್ಷಗಳ ನೇತೃತ್ವದ ಸರ್ಕಾರದಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಿದೆ. ಎಲ್ಡಿಎಫ್ಒಕ್ಕೂಟದಲ್ಲಿ ಸಿಪಿಐ ಎರಡನೇ ಅತೀ ದೊಡ್ಡ ಮೈತ್ರಿ ಪಕ್ಷವಾಗಿದ್ದು, ಶಿಕ್ಷಣ ಖಾತೆ ಹೊಂದಿರುವ ಸಿಪಿಎಂ ನಿಲುವಿನಿಂದ ಅಸಮಾಧಾನ ಗೊಂಡಿದೆ.

ವಿವಾದ ಏಕೆ?:

  • ‘ಪಿ.ಎಂ.ಶ್ರೀ ಶಾಲಾ ಯೋಜನೆ’ ಮೂಲಕ ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಸೂಚಿಯನ್ನು ಜಾರಿಗೊಳಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಸಿಪಿಐ ಈ ಹಿಂದೆ ಸೇರ್ಪಡೆಯಾಗದಂತೆ ತಡೆ ಹಿಡಿದಿತ್ತು. ಆದರೆ, ಈ ಬಾರಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಸದೇ, ಕೇಂದ್ರ ಸರ್ಕಾರದ ಯೋಜನೆಗೆ ಸೇರ್ಪಡೆಯಾಗಲು ರಾಜ್ಯ ಸರ್ಕಾರ ಒಪ್ಪಿಗೆ‌ ನೀಡಿದೆ. ಶಿಕ್ಷಣ ಇಲಾಖೆ ಕಾರ್ಯದರ್ಶಿ ಕೆ. ವಾಸುಕಿ ಅವರು ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಒಪ್ಪಂದಕ್ಕೆ ಸಹಿ ಹಾಕಿರುವುದೇ ವಿವಾದ ಸೃಷ್ಟಿಸಿದೆ.
  • ಸಿಪಿಐ ಈ ಹಿಂದೆ ಎರಡು ಸಲ ರಾಜ್ಯ ಸರ್ಕಾರದ ನಿರ್ಧಾರವನ್ನು ತಡೆಹಿಡಿದಿತ್ತು. ಮೈತ್ರಿ ಪಕ್ಷ ಸಿಪಿಐ ಅನ್ನು ಹಿರಿಯ ಪಾಲುದಾರ ಸಿಪಿಎಂ ಪಕ್ಕಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿತ್ತು. ಇದರಿಂದಾಗಿಯೇ, ಒಪ್ಪಂದಕ್ಕೆ ಸಹಿಹಾಕಲು ಒಂದು ತಿಂಗಳ ಕಾಲ ಹಿಂಜರಿದಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರವು, ಸಿಪಿಐ ಪ್ರಬಲ ವಿರೋಧದ ಹೊರತಾಗಿಯೂ ‘ಪ್ರಧಾನಮಂತ್ರಿ ಸ್ಕೂಲ್ಸ್‌ ಫಾರ್‌ ರೈಸಿಂಗ್‌’ (ಪಿಎಂ–ಶ್ರೀ) ಸಹಿಹಾಕಲು ಒಪ್ಪಿಗೆ ಸೂಚಿಸಿದ್ದರು.
  • ಭಾರತದ ಅಥ್ಲೀಟ್ಗಳಿಗೆ ನಾಲ್ಕು ಪದಕ: ಏಷ್ಯನ್ ಯೂತ್ಗೇಮ್ಸ್‌: ಎಡ್ವಿನಾ, ಏಶಿನ್ಗೆ ಬೆಳ್ಳಿ

ಸಂದರ್ಭ: ಭಾರತದ ಅಥ್ಲೀಟ್ಗಳಾದ  ಎಡ್ವಿನಾ  ಜೇಸನ್ ಮತ್ತು  ಓಶಿನ್ ಅವರು ಏಷ್ಯನ್ ಯೂತ್ಗೇಮ್ಸ್ನಲ್ಲಿ ಕ್ರಮವಾಗಿ ಮಹಿಳೆಯರ 400 ಮೀಟರ್ ಓಟ ಮತ್ತು ಡಿಸ್ಕಸ್ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.

  • ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆ ಗಳಲ್ಲಿ ಭಾರತ  ಎರಡು ಬೆಳ್ಳಿ ಮತ್ತು ಎರಡು ಕಂಚು ಗೆದ್ದಿತು. ಇದರೊಂದಿಗೆ ಪದಕಗಳ ಸಂಖ್ಯೆ 15ಕ್ಕೆ (ಎರಡು ಚಿನ್ನ, ಐದು ಬೆಳ್ಳಿ ಮತ್ತು ಎಂಟು ಕಂಚು) ಏರಿಕೆಯಾಯಿತು. ಪದಕ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.
  • ಎಡ್ವಿನಾ ಅವರು  ಫೈನಲ್‌ನಲ್ಲಿ 55.43 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಯುಎಇಯ ಆಯಿಷಾ ತಾರಿಕ್ (54.26ಸೆ) ಚಿನ್ನ ಗೆದ್ದರೆ, ತೈವಾನ್‌ನ ಚಿಯಾ ಯಿಂಗ್ (56.60ಸೆ) ಕಂಚಿನ ಪದಕ ತಮ್ಮದಾಗಿಸಿಕೊಂಡರು.
  • ಡಿಸ್ಕಸ್ ಥ್ರೋನಲ್ಲಿ ಓಶಿನ್ 43.38 ಮೀಟರ್ ಸಾಧನೆಯೊಂದಿಗೆ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ತಂದುಕೊಟ್ಟರು. ಚೀನಾದ ಕ್ಸಿನ್ಯಿ ವಾಂಗ್ (55.38 ಮೀ) ಚಿನ್ನ ಗೆದ್ದರು. ತೈವಾನ್‌ನ ಶಿಹ್ ಯುಹ್-ಜೆನ್ (43 ಮೀ) ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
  • ಪಲಾಶ್‌ ಮಂಡಲ್ ಅವರು ಬಾಲಕರ 5,000 ಮೀ. ನಡಿಗೆ ಸ್ಪರ್ಧೆಯಲ್ಲಿ ಶುಕ್ರವಾರ ಕಂಚಿನ ಪದಕ ಗೆದ್ದುಕೊಂಡರು. ಮಂಡಲ್ ಈ ದೂರವನ್ನು 24ನಿ.48.92 ಸೆ. ಗಳಲ್ಲಿ ಕ್ರಮಿಸಿದರು. ಚೀನಾದ ಹಾವೊಝ್ ಝಾಂಗ್ (21ನಿ.43.82 ಸೆ.) ಚಿನ್ನ ಗೆದ್ದರೆ, ಅದೇ ದೇಶದ ಯುಜೀ ಲು (22ನಿ.28.64 ಸೆ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
  • ಪುರುಷರ ಹೈಜಂಪ್‌ನಲ್ಲಿ ಜುಬಿನ್ ಗೊಹೈನ್ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ತಂದುಕೊಟ್ಟರು. ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 2.03 ಮೀ ಎತ್ತರ ಜಿಗಿದರು.
  • ಭಾರತದ ಶೌರ್ಯಾ ಅಂಬುರೆ ಅವರು ಮಹಿಳೆಯರ 100 ಮೀಟರ್‌ ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಅವರು 13.73 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.
  • ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್: ಸಮರ್ದೀಪ್ ಕೂಟ ದಾಖಲೆ

ಸಂದರ್ಭ: ಭಾರತದ ಉದಯೋನ್ಮುಖ ಶಾಟ್ಪಟ್ ಸ್ಪರ್ಧಿ ಸಮರ್ದೀಪ್ ಸಿಂಗ್ ಗಿಲ್ ಅವರು ಶುಕ್ರವಾರ ಇಲ್ಲಿ ಆರಂಭವಾದ ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್ ಫೆಡರೇಷನ್ ಸೀನಿಯರ್ ಚಾಂಪಿಯನ್ಷಿಪ್ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

  • ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಧ್ವಜಧಾರಿಯಾಗಿದ್ದ ಗಿಲ್ ಅವರು ಪುರುಷರ ಶಾಟ್‌ಪಟ್‌ ಸ್ಪರ್ಧೆಯಲ್ಲಿ 19.59 ಮೀಟರ್ ಸಾಧನೆ ಮೆರೆದರು. 2008ರ ಆವೃತ್ತಿಯಲ್ಲಿ ಎಸ್. ಕುಮಾರ್ ಸಿಂಗ್ ಸ್ಥಾಪಿಸಿದ (17.71 ಮೀಟರ್) ದಾಖಲೆಯನ್ನು ಮುರಿದರು. ‌ಭಾರತದವರೇ ಆದ ರವಿ ಕುಮಾರ್ (17.95 ಮೀ) ಬೆಳ್ಳಿ ಗೆದ್ದರೆ, ಶ್ರೀಲಂಕಾದ ಮಿಥುನ್ರಾಜ್ ಕಂಚಿನ ಪದಕ ಪಡೆದರು.
  • 5000 ಮೀಟರ್ ಓಟದಲ್ಲಿ ಭಾರತದ ಅಥ್ಲೀಟ್‌ಗಳು ಪಾರಮ್ಯ ಮೆರೆದರು. ಪುರುಷರ ವಿಭಾಗದಲ್ಲಿ ಪ್ರಿನ್ಸ್ ಕುಮಾರ್ 14 ನಿಮಿಷ 22.17 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಶ್ರೀಲಂಕಾದ ವಕ್ಷನ್ ವಿಕ್ನರಾಜ್ (14:23.21) ಬೆಳ್ಳಿ ಪದಕ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಸಂಜನಾ ಸಿಂಗ್ ಚಿನ್ನ, ಸೀಮಾ ಬೆಳ್ಳಿ ಪದಕವನ್ನು ಗೆದ್ದರು.
  • ಪುರುಷರ 100 ಮೀಟರ್‌ ಓಟದಲ್ಲಿ ಶ್ರೀಲಂಕಾದ ಯೊಡಸಿಂಘೆ ಚಾಮೊ (10.30ಸೆ) ಚಿನ್ನ ಗೆದ್ದರು‌. ಭಾರತದ ಪ್ರಣವ್ ಗುರವ್ (10.32) ಮತ್ತು ಹರ್ಷ್ ರಾವತ್ (10.42) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.

ಪ್ರಚಲಿತ ವಿದ್ಯಮಾನಗಳು: 24ನೇ ಅಕ್ಟೋಬರ್ 2025

  • ರಷ್ಯಾದಿಂದ ಭಾರತದ ತೈಲ ಖರೀದಿ ಶೀಘ್ರದಲ್ಲೇ ಸ್ಥಗಿತ

ಸಂದರ್ಭ: ಭಾರತವು ವರ್ಷದ ಅಂತ್ಯದ ವೇಳೆಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ಟ್ರಂಪ್ಮತ್ತೆ ಹೇಳಿದ್ದಾರೆ.

  • ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು, ‘ಕಚ್ಚಾತೈಲ ಖರೀದಿ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಮಯ ಬೇಕಾಗುತ್ತದೆ’ ಎಂದೂ ಹೇಳಿದ್ದಾರೆ.
  • ರಷ್ಯಾದಿಂದ ಕಚ್ಚಾತೈಲ ಖರೀದಿಗೆ ಸಂಬಂಧಿಸಿ ಟ್ರಂಪ್‌ ಅವರ ಹೇಳಿಕೆಗೆ ಭಾರತ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ,‘ಈ ಪ್ರಕ್ರಿಯೆ ನಡೆಯಲು ಸ್ವಲ್ಪ ಕಾಲಾವಕಾಶದ ಅಗತ್ಯವಿದೆ. ಈ ವಿಚಾರದಲ್ಲಿ ಚೀನಾದ ಮನವೊಲಿಸಲು ಯತ್ನಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
  • ರಷ್ಯಾದಿಂದ ಚೀನಾ ಹಾಗೂ ಭಾರತವು ದೊಡ್ಡ ಪ್ರಮಾಣದಲ್ಲಿ ಕಚ್ಚಾತೈಲ ಖರೀದಿಸುತ್ತಿರುವ ರಾಷ್ಟ್ರಗಳಾಗಿವೆ.
  • ರಷ್ಯಾದಿಂದ ಕಚ್ಚಾತೈಲ ಖರೀದಿಸುವ ಮೂಲಕ ಉಕ್ರೇನ್‌ ವಿರುದ್ಧದ ಸಂಘರ್ಷಕ್ಕೆ ಭಾರತವು ಪರೋಕ್ಷವಾಗಿ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಅಮೆರಿಕ ಆರೋಪಿಸುತ್ತಿದೆ.

ವ್ಯಾಪಾರ: ಮೋದಿ, ಟ್ರಂಪ್ಮಾತುಕತೆ

  • ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚರ್ಚಿಸಿದ್ದಾರೆ.
  • ಸುಂಕ ಹೇರಿಕೆ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿರುವ ಮಧ್ಯೆಯೇ, ಶ್ವೇತಭವನದಲ್ಲಿ ಹಮ್ಮಿಕೊಂಡಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ದೀಪ ಬೆಳಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಮೋದಿ ಅವರೊಂದಿಗೆ ವ್ಯಾಪಾರ ಕುರಿತು ಮಾತನಾಡಿರುವೆ’ ಎಂದು ಹೇಳಿದ್ದಾರೆ.

ಹಿನ್ನೆಲೆ

  • ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ಮತ್ತು ಬಳಕೆಯ ದೇಶವಾಗಿದೆ. ಇದು ದಿನಕ್ಕೆ ಸುಮಾರು 5.5 ಮಿಲಿಯನ್ ಬ್ಯಾರೆಲ್ಗಳಷ್ಟು ಕಚ್ಚಾ ತೈಲ ಬಳಕೆಯಲ್ಲಿ 87 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ.
  • ರಷ್ಯಾ ವಿಶ್ವದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕರು ಮತ್ತು ರಫ್ತುದಾರರಲ್ಲಿ ಒಂದಾಗಿದೆ.

ತೈಲ ವ್ಯಾಪಾರ

  • ಸಾಂಪ್ರದಾಯಿಕವಾಗಿ, ಭಾರತವು ತನ್ನ ಎಲ್ಲಾ ಕಚ್ಚಾ ತೈಲದ ಮೂರನೇ ಎರಡರಷ್ಟು ಭಾಗವನ್ನು ಮಧ್ಯಪ್ರಾಚ್ಯ ದೇಶಗಳಾದ ಇರಾಕ್, ಸೌದಿ ಅರೇಬಿಯಾ ಮತ್ತು ಯುಎಇಯಿಂದ ಖರೀದಿಸಿತು.
  • ಪಾಶ್ಚಿಮಾತ್ಯ ದೇಶಗಳು ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಿದ ನಂತರ ಮತ್ತು ಫೆಬ್ರವರಿ 2022 ರಲ್ಲಿ ಉಕ್ರೇನ್ ಆಕ್ರಮಣದ ನಂತರ ಅದರ ಪೂರೈಕೆಯನ್ನು ದೂರವಿಟ್ಟ ನಂತರ ಭಾರತವು ರಿಯಾಯಿತಿಯಲ್ಲಿ ಮಾರಾಟವಾದ ರಷ್ಯಾದ ತೈಲವನ್ನು ಖರೀದಿಸಲು ತಿರುಗಿತು.
  • ಪರಿಣಾಮವಾಗಿ, 2019-20 (FY20) ನಲ್ಲಿ ಒಟ್ಟು ತೈಲ ಆಮದುಗಳಲ್ಲಿ ಕೇವಲ 1.7 ಪ್ರತಿಶತದಷ್ಟು ಪಾಲನ್ನು ಹೊಂದಿದ್ದ ರಷ್ಯಾದ ಪಾಲು 2023-24 ರಲ್ಲಿ 40 ಪ್ರತಿಶತಕ್ಕೆ ಏರಿತು ಮತ್ತು ಈಗ ಅದು ಭಾರತಕ್ಕೆ ಅತಿದೊಡ್ಡ ತೈಲ ಪೂರೈಕೆದಾರ.
  • ಪರಿಮಾಣದ ವಿಷಯದಲ್ಲಿ, ಭಾರತವು FY25 ರಲ್ಲಿ ರಷ್ಯಾದಿಂದ 88 ಮಿಲಿಯನ್ ಟನ್ಗಳನ್ನು ಆಮದು ಮಾಡಿಕೊಂಡಿತು, ಇದು ಒಟ್ಟು 245 ಮಿಲಿಯನ್ ಟನ್ಗಳ ಸಾಗಣೆಯಾಗಿದೆ.
  • ರಷ್ಯಾದ ತೈಲ ಖರೀದಿಗೆ ಚಾಲನೆ ನೀಡಲು ಪ್ರಮುಖ ಕಾರಣವೆಂದರೆ ಅಂತರರಾಷ್ಟ್ರೀಯವಾಗಿ ವ್ಯಾಪಾರ ಮಾಡುವ ಇತರ ಕಚ್ಚಾ ತೈಲಕ್ಕೆ ಹೋಲಿಸಿದರೆ ರಿಯಾಯಿತಿಗಳು. ರಿಯಾಯಿತಿಗಳು 2023 ರಲ್ಲಿ ಪ್ರತಿ ಬ್ಯಾರೆಲ್ಗೆ USD 19-20 ಕ್ಕೆ ತಲುಪಿದವು, ಆದರೆ ಅಂದಿನಿಂದ ಪ್ರತಿ ಬ್ಯಾರೆಲ್ಗೆ USD 3.5-5 ಕ್ಕೆ ಕುಗ್ಗಿದೆ.

ರಿಲಯನ್ಸ್ಇಂಡಸ್ಟ್ರೀಸ್ಲಿಮಿಟೆಡ್

  • ರಷ್ಯಾದ ತೈಲ ಕಂಪನಿಗಳ ಮೇಲೆ ಅಮೆರಿಕವು ನಿರ್ಬಂಧ ಹೇರಿರುವ ಪರಿಣಾಮವಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡುವ ಆಲೋಚನೆಯಲ್ಲಿದೆ ಎಂದು ಮೂಲಗಳು ಹೇಳಿವೆ.
  • ರಷ್ಯಾ ಕಂಪನಿಗಳ ಮೇಲಿನ ನಿರ್ಬಂಧದ ಪರಿಣಾಮಗಳ ಬಗ್ಗೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಪರಿಶೀಲನೆ ನಡೆಸುತ್ತಿವೆ. ಆದರೆ ಅವು ಬಹುಪಾಲು ಕಚ್ಚಾ ತೈಲವನ್ನು ಯುರೋಪಿನ ವರ್ತಕರಿಂದ (ಇವರ ಮೇಲೆ ನಿರ್ಬಂಧ ಇಲ್ಲ) ಖರೀದಿಸುತ್ತಿವೆ. ಹೀಗಾಗಿ ಅವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ತಕ್ಷಣಕ್ಕೆ ನಿಲ್ಲಿಸಲಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.
  • ರಿಲಯನ್ಸ್ ಕಂಪನಿಯು ರಷ್ಯಾದಿಂದ ಪ್ರತಿದಿನ ಸರಿಸುಮಾರು 8.5 ಲಕ್ಷ ಬ್ಯಾರಲ್‌ ಕಚ್ಚಾ ತೈಲವನ್ನು ರಿಯಾಯಿತಿ ಬೆಲೆಗೆ ಖರೀದಿಸಿದೆ. ಈ ಕಚ್ಚಾ ತೈಲವನ್ನು ಸಂಸ್ಕರಿಸಿ ಅದು ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್‌ಅನ್ನು ಅಮೆರಿಕ, ಯುರೋಪಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಇದರಿಂದ ಉತ್ತಮ ಲಾಭ ಗಳಿಸುತ್ತಿದೆ.
  • ಆದರೆ ಅಮೆರಿಕವು ರಷ್ಯಾದ ರೊಸ್ನೆಫ್ಟ್‌ ಮತ್ತು ಲುಕಾಯಿಲ್‌ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿರುವ ಪರಿಣಾಮವಾಗಿ, ರಿಲಯನ್ಸ್‌ನ ವಹಿವಾಟಿನ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ರಷ್ಯಾದ ಈ ಎರಡು ಕಂಪನಿಗಳಿಂದ ಕಚ್ಚಾ ತೈಲ ಖರೀದಿಸುವವರು ಸಿವಿಲ್‌ ಹಾಗೂ ಕ್ರಿಮಿನಲ್ ಕ್ರಮ ಎದುರಿಸಬೇಕಾಗುತ್ತದೆ.
  • ರಿಲಯನ್ಸ್ ಕಂಪನಿಯು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳು ವುದನ್ನು ಕಡಿಮೆ ಮಾಡುವ, ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ರಿಲಯನ್ಸ್‌ ಕಂಪನಿಯು ಅಮೆರಿಕದಲ್ಲಿ ಹೆಚ್ಚಿನ ವಾಣಿಜ್ಯ ಹಿತಾಸಕ್ತಿ ಹೊಂದಿದೆ. ಈ ವಿಚಾರವಾಗಿ ರಿಲಯನ್ಸ್‌ನಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
  • ರಿಲಯನ್ಸ್‌ ಕಂಪನಿಯು ಕಚ್ಚಾ ತೈಲ ಖರೀದಿಯನ್ನು ಇತರ ಕಡೆಗಳಿಂದ ಮಾಡುವ ಪ್ರಕ್ರಿಯೆ ಶುರುಮಾಡಿದೆ ಎಂದು ಗೊತ್ತಾಗಿದೆ. ರೊಸ್ನೆಫ್ಟ್‌ ಹಾಗೂ ಲುಕಾಯಿಲ್‌ ಕಂಪನಿಗಳ ಜೊತೆಗಿನ ವಹಿವಾಟನ್ನು ನವೆಂಬರ್‌ 21ಕ್ಕೆ ಮೊದಲು ನಿಲ್ಲಿಸಬೇಕಿದೆ.
  • ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ನಯಾರಾ ಎನರ್ಜಿ (ಇದಕ್ಕೆ ರೊಸ್ನೆಫ್ಟ್‌ ಹೂಡಿಕೆ ಇದೆ) ಕಂಪನಿ ಕೂಡ ಅಮೆರಿಕ ಹೇರಿರುವ ನಿರ್ಬಂಧದ ಬಿಸಿ ಅನುಭವಿಸಬೇಕಿದೆ.
  • ರಷ್ಯಾದ ಕಚ್ಚಾ ತೈಲ ಸಂಸ್ಕರಿಸಿ ಸಿದ್ಧಪಡಿಸಿದ ಇಂಧನ ಆಮದನ್ನು ಜನವರಿ 21ರಿಂದ ಅನ್ವಯವಾಗುವಂತೆ ಐರೋಪ್ಯ ಒಕ್ಕೂಟ ನಿರ್ಬಂಧಿಸಿದೆ. ರಿಲಯನ್ಸ್‌ ಮತ್ತು ಎಂಆರ್‌ಪಿಎಲ್‌ ಐರೋಪ್ಯ ಒಕ್ಕೂಟಕ್ಕೆ ಇಂಧನ ರಫ್ತು ಮಾಡಬೇಕು ಎಂದಾರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಕಡಿಮೆ ಮಾಡಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.

ಸರ್ಕಾರಿ ಕಂಪನಿಗಳಿಂದ ಖರೀದಿ ಅಬಾಧಿತ?

  • ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು ಮಧ್ಯವರ್ತಿ ವರ್ತಕರ ಮೂಲಕ ರಷ್ಯಾದ ಕಚ್ಚಾ ತೈಲ ಖರೀದಿಸುವುದನ್ನು ಸದ್ಯಕ್ಕಂತೂ ಮುಂದುವರಿಸುವ ನಿರೀಕ್ಷೆ ಇದೆ.
  • ಸರ್ಕಾರಿ ಸ್ವಾಮ್ಯದ ಕಂಪನಿಗಳು ರೊಸ್ನೆಫ್ಟ್‌ ಅಥವಾ ಲುಕಾಯಿಲ್‌ ಕಂಪನಿ ಜೊತೆ ಒಪ್ಪಂದ ಹೊಂದಿಲ್ಲ. ಅವು ಟೆಂಡರ್‌ ಮೂಲಕ ರಷ್ಯಾದ ಕಚ್ಚಾ ತೈಲ ಖರೀದಿಸುತ್ತಿವೆ. ಈ ಟೆಂಡರ್‌ ಪ್ರಕ್ರಿಯೆಗಳಲ್ಲಿ ಯುರೋಪಿನ ಅಥವಾ ದುಬೈ, ಸಿಂಗಪುರ ಮೂಲದ ತೈಲ ವ್ಯಾಪಾರಿಗಳು ಇರುತ್ತಾರೆ. ನಿರ್ಬಂಧದ ವ್ಯಾಪ್ತಿಯಲ್ಲಿ ಈ ವ್ಯಾಪಾರಿಗಳು ಇಲ್ಲ.
  • ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದುಸ್ತಾನ್ ಪೆಟ್ರೋಲಿಯಂ, ಎಂಆರ್‌ಪಿಎಲ್‌ ಹಾಗೂ ಎಚ್‌ಪಿಸಿಎಲ್‌–ಮಿತ್ತಲ್‌ ಎನರ್ಜಿ ಕಂಪನಿಗಳು ರಷ್ಯಾದ ಕಚ್ಚಾ ತೈಲ ಖರೀದಿಸುತ್ತಿವೆ.
  • ಕೆಲವು ವರ್ತಕರು ರಷ್ಯಾದ ಕಚ್ಚಾ ತೈಲ ಖರೀದಿಸಲು ಹಿಂದೇಟು ಹಾಕಿದರೂ, ದುಬೈನಲ್ಲಿ ಹೊಸ ವರ್ತಕರನ್ನು ರಾತ್ರೋರಾತ್ರಿ ನೋಂದಾಯಿಸುವ ಶಕ್ತಿ ರಷ್ಯಾಕ್ಕೆ ಇದೆ. ಈ ವರ್ತಕರು ರಷ್ಯಾದ ಕಂಪನಿಗಳಿಂದ ಕಚ್ಚಾ ತೈಲ ಖರೀದಿಸಿ, ಅದನ್ನು ಭಾರತ ಮತ್ತು ಚೀನಾಕ್ಕೆ ಮಾರಾಟ ಮಾಡಬಲ್ಲರು ಎಂದು ಮೂಲಗಳು ವಿವರಿಸಿವೆ.
  • ತೈಲ ಮಾರುಕಟ್ಟೆಯು ಅಮೆರಿಕದ ನಿರ್ಬಂಧದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನಿರ್ಬಂಧಗಳು ಬಹಳ ಕಠಿಣ ಎಂದಾಗಿದ್ದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರಲ್‌ಗೆ 5ರಿಂದ 10 ಡಾಲರ್‌ನಷ್ಟು ಹೆಚ್ಚಾಗುತ್ತಿತ್ತು. ಆದರೆ 2 ಡಾಲರ್‌ನಷ್ಟೇ ಹೆಚ್ಚಳ ಆಗಿದೆ. ಅಂದರೆ, ರಷ್ಯಾದಿಂದ ಸಿಗುವ ಅಷ್ಟೂ ಕಚ್ಚಾ ತೈಲ ಇನ್ನು ಮುಂದೆ ಸಿಗುವುದೇ ಇಲ್ಲ ಎಂಬ ಪರಿಸ್ಥಿತಿ ಇಲ್ಲ ಎಂದು ಮೂಲವೊಂದು ವಿವರಿಸಿದೆ.
  • ಹೊಸ ಸಿಜೆಐ ಪ್ರಕ್ರಿಯೆಗೆ ಚಾಲನೆ

ಸಂದರ್ಭ: ಇದೇ ನವೆಂಬರ್‌ 23ರಂದು ಸುಪ್ರೀಂ ಕೋರ್ಟ್ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಮುಂದಿನ ಸಿಜೆಐ ಆಯ್ಕೆ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ.

  • ತಮ್ಮ ಉತ್ತರಾಧಿಕಾರಿ ಯಾರಾಗಬೇಕು ಎಂಬುದರ ಕುರಿತು ಹಾಲಿ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಜ್ಞಾಪನಾಪತ್ರ, ದಾಖಲಾತಿಗಳನ್ನು ಕಾನೂನು ಸಚಿವಾಲಯಕ್ಕೆ ಕಳುಹಿಸಬೇಕು.
  • ಸುಪ್ರೀಂ ಕೋರ್ಟ್‌ನಲ್ಲಿರುವ ಅತ್ಯಂತ ಹಿರಿಯ ನ್ಯಾಯಮೂರ್ತಿಯನ್ನು ಮುಂದಿನ ಸಿಜೆಐ ಆಗಿ ನೇಮಿಸಲು ಹಾಲಿ ಸಿಜೆಐ ಸಾಮಾನ್ಯವಾಗಿ ಶಿಫಾರಸು ಮಾಡುತ್ತಾರೆ. ತನ್ನ ಉತ್ತರಾಧಿಕಾರಿಯ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳು ಸೂಕ್ತ ಸಮಯದಲ್ಲಿ ಶಿಫಾರಸು ಕೋರಲಿದ್ದಾರೆ ಎಂದು ಕಾನೂನು ಸಚಿವಾಯವು ತಿಳಿಸಿದೆ.
  • ಹಾಲಿ ಸಿಜೆಐ ನಿವೃತ್ತಿಯಾಗುವ ತಿಂಗಳು ಮುನ್ನ ಈ ಪತ್ರವನ್ನು ಕಳುಹಿಸುವ ಪದ್ಧತಿಯಿದೆ.
  • ಗವಾಯಿ ನಂತರ ಸೂರ್ಯಕಾಂತ್ಅವರೇ ಸುಪ್ರೀಂ ಕೋರ್ಟ್ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಾಗಿದ್ದು, ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಹುದ್ದೆ ಅಲಂಕರಿಸುವ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.
  • ಸೂರ್ಯಕಾಂತ್ಅವರು ನವೆಂಬರ್‌ 24ರಂದು ಮುಂದಿನ ಸಿಜೆಐ ಆಗಿ ನೇಮಕಗೊಂಡರೆ, ಮುಂದಿನ 15 ತಿಂಗಳು ಅಥವಾ 2027 ಫೆಬ್ರುವರಿ 9 ತನಕ ಈ ಜವಾಬ್ದಾರಿ ನಿರ್ವಹಿಸಲಿದ್ದಾರೆ.
  • ಮರಣದಂಡನೆ ಯಾವುದುಮಾನವೀಯವಿಧಾನ?

ಮರಣದಂಡನೆಯನ್ನು ಅನೇಕ ದೇಶಗಳಲ್ಲಿ ರದ್ದುಪಡಿಸಲಾಗಿದೆ. ಭಾರತದಲ್ಲಿ ವಿರಳ ಪ್ರಕರಣಗಳಲ್ಲಿ ಮಾತ್ರವೇ ಮರಣದಂಡನೆ ವಿಧಿಸಲಾಗುತ್ತಿದೆ. ಈ ಶಿಕ್ಷೆ ವಿಧಿಸಲ್ಪಟ್ಟವರ ಪ್ರಾಣಹರಣವನ್ನು ಯಾವ ವಿಧಾನದ ಮೂಲಕ ಮಾಡಬೇಕು ಎನ್ನುವುದು ದೇಶದಲ್ಲಿ ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಲೇ ಇದೆ.   

ಅಪರಾಧಿಗಳಿಗೆ ನೇಣು ಹಾಕುವುದು ಅತ್ಯಂತ ಕ್ರೂರ ಹಾಗೂ ಅನಾಗರಿಕ ಪದ್ಧತಿ. ಇದು ಹಳೆಯ ಹಾಗೂ ಅತ್ಯಂತ ಯಾತನಾದಾಯಕ ಪದ್ಧತಿಯಾಗಿದೆ ಎನ್ನುವ ಆಕ್ಷೇಪಣೆಗಳು ಹಿಂದೆಯೇ ಕೇಳಿಬಂದಿದ್ದವು. ಗಲ್ಲಿಗೇರಿಸುವಾಗ ಕುತ್ತಿಗೆಯ ಮೂಳೆ ಮುರಿಯುವುದು, ಕಣ್ಣು ಗುಡ್ಡೆ ಹೊರಬರುವುದು, ನಾಲಗೆ ಹೊರಚಾಚಿಕೊಂಡಿರುವುದು, ದೇಹದ ಭಾಗಗಳು ನೋಡಲಾಗದಂತೆ ವಿರೂಪಗೊಳ್ಳುವುದು ವರದಿಯಾಗಿವೆ. ಹೆಚ್ಚಿನ ಸಂದರ್ಭಗಳಲ್ಲಿ ಅಪರಾಧಿಗಳು ಮಲ, ಮೂತ್ರ ವಿಸರ್ಜನೆಯನ್ನೂ ಮಾಡಿಕೊಳ್ಳುತ್ತಾರೆ. ಈ ವಿಧಾನದಲ್ಲಿ ಅಪರಾಧಿಯ ಪ್ರಾಣ ಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಕ್ಷಿಪ್ರವಾದ, ಕಡಿಮೆ ಯಾತನೆಯ ಮಾರ್ಗಗಳನ್ನು ಹುಡುಕಬೇಕು; ವಿಷದ ಚುಚ್ಚುಮದ್ದು ನೀಡುವುದು, ಗುಂಡು ಹಾರಿಸಿ ಸಾಯಿಸುವುದು, ವಿದ್ಯುತ್ ಸ್ಪರ್ಶದ ಮೂಲಕ ಸಾವು, ಸಾರಜನಕದಿಂದ ಉಸಿರುಗಟ್ಟಿಸಿ ಸಾಯುವಂತೆ ಮಾಡುವುದು.. ಹೀಗೆ ಮರಣದಂಡನೆ ಜಾರಿಗೆ ಹಲವು ಪರ್ಯಾಯ ಮಾರ್ಗಗಳಿದ್ದು, ಅವುಗಳನ್ನು ಪರಿಗಣಿಸಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು.

ಗಲ್ಲು ಶಿಕ್ಷೆಯ ಸಾಂವಿಧಾನಿಕತೆ: ಮರಣದಂಡನೆಯ ವಿಧಾನವು ನಾಲ್ಕು ಮುಖ್ಯ ಆಶಯಗಳನ್ನು ಒಳಗೊಳ್ಳಬೇಕು ಎಂದು 1983ರ ದೀನಾ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಸಾವಿನ ವಿಧಾನವು ಸರಳವಾಗಿರಬೇಕು ಮತ್ತು ಕ್ಷಿಪ್ರವಾಗಿ ಸಾವು ತರುವಂತಿರಬೇಕು, ಅಪರಾಧಿಯು ಬೇಗ ಪ್ರಜ್ಞಾಶೂನ್ಯನಾಗಿ ಸಾವಿಗೀಡಾಗಬೇಕು, ಘನತೆಯಿಂದ ಕೂಡಿರಬೇಕು ಮತ್ತು ದೇಹ/ಅಂಗ ವಿರೂಪಗೊಳ್ಳುವಂತೆ ಇರಬಾರದು ಎಂದು ಉನ್ನತ ನ್ಯಾಯಾಲಯ ಸೂಚಿಸಿತ್ತು. ಕೊನೆಗೆ, ಸುಪ್ರೀಂ ಕೋರ್ಟ್ ಇದೇ ಪ್ರಕರಣದಲ್ಲಿ ಗಲ್ಲು ಶಿಕ್ಷೆಯ ವಿಧಾನದ ಸಾಂವಿಧಾನಿಕತೆಯನ್ನು ಎತ್ತಿಹಿಡಿದಿತ್ತು. ದೇಶದಲ್ಲಿ ಗಲ್ಲು ಶಿಕ್ಷೆಯೊಂದೇ ಮರಣದಂಡನೆಯ ಜಾರಿ ವಿಧಾನ ಎಂದು ಸ್ಪಷ್ಟಪಡಿಸಿತ್ತು. ವಿಷದ ಇಂಜೆಕ್ಷನ್ ಮೂಲಕ ಪ್ರಾಣಹರಣ ಮಾಡುವ ವಿಧಾನವು ಎಲ್ಲ ಸಂದರ್ಭಗಳಲ್ಲಿಯೂ ಕ್ಷಿಪ್ರವಾಗಿ ಸಾವು ತರುತ್ತದೆ ಎನ್ನುವುದಕ್ಕೆ ಆಧಾರವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು. 

ಆದರೆ, ಗಲ್ಲಿಗೇರಿಸುವ ವಿಧಾನವನ್ನು ಪುನರ್ ಪರಿಶೀಲಿಸಬೇಕು ಎಂದು ಭಾರತದ ಕಾನೂನು ಆಯೋಗವು 2003ರಲ್ಲಿ ಸೂಚಿಸಿತು. ಇದು ಹೆಚ್ಚು ಮಾನವೀಯವಾಗಿದ್ದು, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಈ ವಿಧಾನವನ್ನು ಬಳಸಲಾಗುತ್ತಿದೆ ಎನ್ನುವುದು ಆಯೋಗದ ಅಭಿಪ್ರಾಯವಾಗಿತ್ತು.

ಗಲ್ಲು ಏಕೆ ಬೇಡ?: 2017ರಲ್ಲಿ ಹಿರಿಯ ವಕೀಲ ರಿಷಿ ಮಲ್ಹೋತ್ರಾ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿ, ನೇಣಿಗೆ ಬದಲು ಮರಣದಂಡನೆಗೆ ಪರ್ಯಾಯ ಮಾರ್ಗ ಅನುಸರಿಸಲು ಆದೇಶಿಸಬೇಕು ಎಂದು ಕೋರಿದರು. ಗಲ್ಲಿಗೇರಿಸಿದರೆ, ಅವರ ದೇಹವು ನೇಣು ಹಗ್ಗದಲ್ಲಿಯೇ 40 ನಿಮಿಷಗಳವರೆಗೆ ಇರುತ್ತದೆ; ಅದು ಕ್ರೂರ ಮತ್ತು ಬರ್ಬರ. ಅದರ ಬದಲು ಮಾನವೀಯವಾದ, ಘನತೆಯಿಂದ ಕೂಡಿದ ವಿಷದ ಚುಚ್ಚುಮದ್ದಿನ ಮಾರ್ಗ ಅನುಸರಿಸುವುದು ಉತ್ತಮ. ಸಂವಿಧಾನದ 21ನೇ ವಿಧಿಯು ಜೀವಿಸುವ ಹಕ್ಕು ಮತ್ತು ಘನತೆಯ ಹಕ್ಕುಗಳನ್ನು ಒಳಗೊಂಡಿರುವಂತೆಯೇ ಘನತೆಯಿಂದ ಸಾಯುವ ಹಕ್ಕನ್ನೂ ನೀಡಿದೆ; ಅಮೆರಿಕದ ಹೆಚ್ಚಿನ ರಾಜ್ಯಗಳಲ್ಲಿ ವಿಷದ ಇಂಜೆಕ್ಷನ್ ನೀಡುವ ಪದ್ಧತಿ ಇದೆ ಎನ್ನುವುದು ಅವರ ವಾದ.   

ನೇಣಿಗೇರಿಸುವುದಕ್ಕಿಂತ ಇತರ ಮಾರ್ಗಗಳು ಕಡಿಮೆ ಯಾತನಾದಾಯಕ ಎನ್ನುವುದನ್ನು ನಿರಾಕರಿಸಿದ್ದ ಕೇಂದ್ರ ಸರ್ಕಾರವು, ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ 2018ರಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿತ್ತು. ಇದರ ಬಗ್ಗೆ ತಜ್ಞರ ಸಮಿತಿ ರಚನೆಗೆ ‌ಕ್ರಮ ಕೈಗೊಳ್ಳಬೇಕು ಎಂದು 2023ರಲ್ಲಿ ತಿಳಿಸಿದ್ದ ನ್ಯಾಯಾಲಯವು, ಈ ಕುರಿತು ಸಮಗ್ರ ಮಾಹಿತಿ ಒದಗಿಸುವಂತೆ ಕೇಂದ್ರವನ್ನು ಕೇಳಿತ್ತು. ಆದರೆ, ಅಪರಾಧಿಗಳಿಗೆ ಶಿಕ್ಷೆ ನೀಡುವ ವಿಧಾನದ ಬಗ್ಗೆ ನ್ಯಾಯಾಂಗವು ಶಾಸಕಾಂಗಕ್ಕೆ ನಿರ್ದೇಶಿಸಲಾಗದು ಎಂದು ಅಭಿಪ್ರಾಯಪಟ್ಟಿತ್ತು.

ಬದಲಾಗದ ಕೇಂದ್ರದ ಧೋರಣೆ: ತಾನು ಯಾವ ವಿಧಾನದ ಮೂಲಕ ಸಾಯಬೇಕು ಎನ್ನುವ ಆಯ್ಕೆಯನ್ನು ಮರಣದಂಡನೆ ವಿಧಿಸಲ್ಪಟ್ಟಿರುವ ಅಪರಾಧಿಗೇ ನೀಡಬೇಕು ಎನ್ನುವುದು ಮಲ್ಹೋತ್ರಾ ಅವರ ವಾದ. ಆದರೆ, ಅದು ಕಾರ್ಯಸಾಧುವಲ್ಲ ಎಂದು ಕೇಂದ್ರವು ಪ್ರತಿಕ್ರಿಯಿಸಿದೆ.

ಪ್ರಸ್ತುತ ಈ ಕುರಿತ ವಾದ–ಪ್ರತಿವಾದ ನಡೆಯುತ್ತಿದ್ದು, ನ್ಯಾಯಾಲಯ ವಿಚಾರಣೆ ಮುಂದುವರಿಸುತ್ತಿದೆ. ಕಾಲ ಬದಲಾಗಿದೆ; ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರದ ಮನೋಭಾವವು ವಿಕಾಸಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚ್ಯವಾಗಿ ಹೇಳಿದೆ. ಇನ್ನೊಂದೆಡೆ, ಮರಣದಂಡನೆಯೇ ಅಮಾನವೀಯ ಶಿಕ್ಷಾ ಪದ್ಧತಿಯಾಗಿದ್ದು, ಅದನ್ನು ರದ್ದುಪಡಿಸಬೇಕು ಎನ್ನುವ ಬೇಡಿಕೆ ಇದೆ.

ಆಧಾರ: ಪಿಟಿಐ, ಎಎಫ್‌ಪಿ, ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್, ಅಮ್ನೆಸ್ಟಿ ಇಂಟರ್‌ನ್ಯಾಷನಲ್, ದೆಹಲಿಯ ನ್ಯಾಷನಲ್ ಲಾ ಕಾಲೇಜ್ ಯೂನಿವರ್ಸಿಟಿ ವರದಿ

32%

2023ಕ್ಕಿಂತ 2024ರಲ್ಲಿ ಜಗತ್ತಿನಲ್ಲಿ ಮರಣದಂಡನೆಯಿಂದ ಸಾವಿಗೀಡಾದವರ ಪ್ರಮಾಣ ಹೆಚ್ಚಳ

ಗಲ್ಲು ಶಿಕ್ಷೆಯ ವಿಧಾನದಲ್ಲಿ, ಅಪರಾಧಿ ಸತ್ತಿದ್ದಾನೆಯೇ ಇಲ್ಲವೇ ಎನ್ನುವುದನ್ನು ದೃಢೀಕರಿಸುವುದಕ್ಕಷ್ಟೇ ವೈದ್ಯರ ಪಾತ್ರವು ಸೀಮಿತವಾಗಿರುತ್ತದೆ. ಆದರೆ, ವಿಷದ ಇಂಜೆಕ್ಞನ್ ಚುಚ್ಚುವ ವಿಧಾನದಲ್ಲಿ ವೈದ್ಯರೇ ಮರಣದಂಡನೆ ಜಾರಿ ಮಾಡುವವರೂ ಆಗಿರುತ್ತಾರೆ. ಹಲವು ದೇಶಗಳಲ್ಲಿ ವೈದ್ಯರು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ವೈದ್ಯರ ಕಾರ್ಯವು ಜೀವ ಉಳಿಸುವುದೇ ವಿನಾ ಜೀವ ತೆಗೆಯುವುದಲ್ಲ ಎನ್ನುವುದು ಅವರ ವಾದ. ಮರಣದಂಡನೆ ಜಾರಿಯಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿರುವ ಯಾವುದೇ ವಿಧಾನವನ್ನು ತಾನು ವಿರೋಧಿಸುವುದಾಗಿ ಬ್ರಿಟಿಷ್ ಮೆಡಿಕಲ್ ಕೌನ್ಸಿಲ್ ಹೇಳಿತ್ತು. ವಿಶ್ವ ವೈದ್ಯಕೀಯ ಸಂಘವೂ ಇದರ ವಿರುದ್ಧ ನಿಲುವು ತಳೆದಿದೆ. ಅಮೆರಿಕದಲ್ಲಿಯೂ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಅಮೆರಿಕದಲ್ಲಿ ವೈದ್ಯರು ಜೈಲು ಅಧಿಕಾರಿಗಳಿಗೇ ಚುಚ್ಚುಮದ್ದು ನೀಡುವ ತರಬೇತಿ ನೀಡುವ ಪದ್ಧತಿ ಅನುಸರಿಸಲಾಯಿತು. ಆದರೆ, ವೈದ್ಯರ ಅನುಪಸ್ಥಿತಿಯಲ್ಲಿ ಈ ವಿಧಾನವು ದೀರ್ಘವೂ ತ್ರಾಸದಾಯಕವೂ ಆಗಿದೆ ಎನ್ನುವ ವರದಿಗಳಿವೆ. 

ಮರಣದಂಡನೆ ಹೆಚ್ಚಳ

ಜಗತ್ತಿನ ಶೇ 70ರಷ್ಟು ರಾಷ್ಟ್ರಗಳಲ್ಲಿ ಮರಣದಂಡನೆಯನ್ನು ರದ್ದುಪಡಿಸಲಾಗಿದೆ. ಆದರೂ, ಸುಮಾರು 50 ದೇಶಗಳಲ್ಲಿ ಈ ಶಿಕ್ಷೆ ಕಾನೂನುಬದ್ಧವಾಗಿದೆ. ಇದರಲ್ಲಿ ಭಾರತ, ಅಮೆರಿಕ, ಚೀನಾ, ಅಘ್ಗಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ, ಜಪಾನ್, ಇರಾನ್, ಇರಾಕ್, ಸೌದಿ ಅರೇಬಿಯಾ, ಥಾಯ್ಲೆಂಡ್ ಮುಂತಾದ ದೇಶಗಳಿವೆ. 2024ರಲ್ಲಿ ಚೀನಾ, ಇರಾನ್, ಸೌದಿ ಅರೇಬಿಯಾ, ಇರಾಕ್, ಯೆಮನ್‌ನಲ್ಲಿ ಹೆಚ್ಚು ಮಂದಿಗೆ ಮರಣದಂಡನೆ ವಿಧಿಸಲಾಗಿದೆ.

ಚೀನಾದಲ್ಲಿ ಅತಿ ಹೆಚ್ಚು ಮಂದಿಗೆ ಸಾವಿನ ಶಿಕ್ಷೆ ನೀಡಲಾಗಿದೆ.ಹೆಚ್ಚು ರಾಷ್ಟ್ರಗಳಲ್ಲಿ ಮರಣದಂಡನೆ ರದ್ದುಪಡಿಸಲಾಗುತ್ತಿದೆಯಾದರೂ ಈ ಶಿಕ್ಷೆಗೆ ಗುರಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸೌದಿ ಅರೇಬಿಯಾದಲ್ಲಿ ಶಿಕ್ಷೆಯ ಪ್ರಮಾಣವು ಹೆಚ್ಚಾಗುತ್ತಿದ್ದು, 2025ರಲ್ಲಿ ಜಾಗತಿಕ ಮಟ್ಟದಲ್ಲಿ ಈ ಸಂಖ್ಯೆ ಇನ್ನೂ ಏರಿಕೆ ಕಾಣಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಅಮೆರಿಕದಲ್ಲಿ ಪ್ರಸಕ್ತ ವರ್ಷ 39 ಮಂದಿಯನ್ನು ಮರಣದಂಡನೆಗೆ ಈಡು ಮಾಡಲಾಗಿದೆ. ಅವುಗಳಲ್ಲಿ 33 ಮಂದಿಗೆ ವಿಷದ ಇಂಜೆಕ್ಷನ್ ನೀಡಿ, ಇಬ್ಬರಿಗೆ ಗುಂಡು ಹೊಡೆದು, ನಾಲ್ವರ ಮಾಸ್ಕ್‌ಗಳ ಒಳಗೆ ಸಾರಜನಕ ಪೂರೈಸಿ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಸಾರಜನಕದಿಂದ ಉಸಿರುಗಟ್ಟಿಸುವ ವಿಧಾನವು ಕ್ರೂರ ಮತ್ತು ಅಮಾನವೀಯ ಎಂದು ವಿಶ್ವಸಂಸ್ಥೆ ಆಕ್ಷೇಪಿಸಿದೆ. ಅಮೆರಿಕದ 50 ರಾಜ್ಯಗಳ ಪೈಕಿ 23ರಲ್ಲಿ ಮರಣದಂಡನೆಯನ್ನು ರದ್ದುಪಡಿಸಲಾಗಿದೆ.

ಭಾರತದಲ್ಲಿ ಹೆಚ್ಚು

ಜಗತ್ತಿನಲ್ಲಿ ಅತಿ ಹೆಚ್ಚು ಮರಣದಂಡನೆ ‌ವಿಧಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಅದರಲ್ಲೂ ಕೆಳಹಂತದ ನ್ಯಾಯಾಲಯಗಳು ಹೆಚ್ಚಿನ ಪ್ರಮಾಣದಲ್ಲಿ ಮರಣದಂಡನೆ ವಿಧಿಸುತ್ತಿವೆ.  ಮರಣದಂಡನೆ ವಿಧಿಸಲ್ಪಟ್ಟ ಪ್ರತಿ ನಾಲ್ವರಲ್ಲಿ ಒಬ್ಬರು ಉತ್ತರ ಪ್ರದೇಶಕ್ಕೆ (130) ಸೇರಿದವರು. ನಂತರದ ಸ್ಥಾನಗಳಲ್ಲಿ ಗುಜರಾತ್ (71), ಮಹಾರಾಷ್ಟ್ರ (42), ಹರಿಯಾಣ (38), ಪಶ್ಚಿಮ ಬಂಗಾಳ (37), ಕೇರಳ (35), ಮಧ್ಯಪ್ರದೇಶ ಇವೆ. ಕರ್ನಾಟಕದಲ್ಲಿ 22 ಮಂದಿಗೆ ಈ ಶಿಕ್ಷೆ ವಿಧಿಸಲಾಗಿದ್ದು, ಜೈಲುವಾಸ ಅನುಭವಿಸುತ್ತಿದ್ದಾರೆ. ಪ್ರಸ್ತುತ ಭಾರತದ ವಿವಿಧ ಜೈಲುಗಳಲ್ಲಿ ಮರಣದಂಡನೆ ವಿಧಿಸಲ್ಪಟ್ಟ 564 ಮಂದಿ (2024ರ ಕೊನೆಗೆ) ಇದ್ದು, ಶಿಕ್ಷೆ ಜಾರಿಯನ್ನು ಎದುರು ನೋಡುತ್ತಿದ್ದಾರೆ. ಇದು ಎರಡು ದಶಕಗಳಲ್ಲಿಯೇ ಅತಿ ದೊಡ್ಡ ಸಂಖ್ಯೆಯಾಗಿದೆ.

  • ಎಐ, ಡೀಪ್ಫೇಕ್ಗೆ ನಿಯಮ ಬಿಗಿ

ಸಂದರ್ಭ: ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ದುರ್ಬಳಕೆ ತಡೆಯಲು ಮತ್ತುಡೀಪ್ಫೇಕ್ಗಳನ್ನು ನಿಯಂತ್ರಿಸಲು ಸರ್ಕಾರ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮದಲ್ಲಿ ಬದಲಾವಣೆ ತರುವುದಾಗಿ ಹೇಳಿದೆ.

  • ‘ಎಐ’ ಬಳಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿ ಹರಡುವುದು ಹೆಚ್ಚುತ್ತಿದ್ದು, ಜನರನ್ನು ದಾರಿ ತಪ್ಪಿಸಲು, ಚುನಾವಣಾ ಅಕ್ರಮಗಳಿಗೆ, ಹಣಕಾಸು ವಂಚನೆಗಳಿಗೆ ಎಐ ದುರ್ಬಳಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಐಟಿ ನಿಯಮ ಗಳನ್ನು ಬಿಗಿಗೊಳಿಸುತ್ತಿರುವುದಾಗಿ ಸಚಿವಾಲಯ ಹೇಳಿದೆ.
  • ಪ್ರಸ್ತಾವಿತ ಐಟಿ ನಿಯಮದಲ್ಲಿ ಯೂಟ್ಯೂಬ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎಐ ಆಧಾರಿತ ಕಂಟೆಂಟ್‌ಗಳನ್ನು ಗುರುತಿಸಲು ಲೇಬಲಿಂಗ್‌ ಕಡ್ಡಾಯಗೊಳಿಸಲಾಗಿದೆ. ಕಂಟೆಂಟ್‌ ತೆಗೆದು ಹಾಕುವ ಅಧಿಕಾರವು ಉನ್ನತ ಅಧಿಕಾರಿಗಳಿಗೆ ಮಾತ್ರ ಇರುತ್ತದೆ.
  • ಈ ನಿಯಮವು  ಜಾಲತಾಣದಲ್ಲಿ ಡೀಪ್‌ಫೇಕ್‌ ವಿಡಿಯೊ, ತಿದ್ದುಪಡಿ ಮಾಡಿದ ಚಿತ್ರ, ಧ್ವನಿಯನ್ನು ಪತ್ತೆಹಚ್ಚಲೂ ನೆರವಾಗಲಿದೆ. ಕರಡು ಪ್ರಸ್ತಾವಕ್ಕೆ ಆಕ್ಷೇಪಗಳಿದ್ದಲ್ಲಿ ನವೆಂಬರ್‌ 6ರೊಳಗೆ ದಾಖಲಿಸುವಂತೆ ಸಚಿವಾಲಯವು ಸಾಮಾಜಿಕ ಜಾಲತಾಣ, ಎಐ ಕಂಟೆಂಟ್‌ ಸೃಷ್ಟಿಸುವ ಸಂಸ್ಥೆಗಳಿಗೆ ಸೂಚಿಸಿದೆ. 
  • ಭಾರತ ಮೂಲದ ಸುನೀಲ್ ಅಮೃತ್ಗೆಬ್ರಿಟಿಷ್ ಅಕಾಡೆಮಿಪುಸ್ತಕ ಪ್ರಶಸ್ತಿ

ಸಂದರ್ಭ: ಭಾರತೀಯ ಮೂಲದ ಇತಿಹಾಸಕಾರ ಸುನೀಲ್ ಅಮೃತ್ ಅವರದಿ ಬರ್ನಿಂಗ್ಅರ್ಥ್: ಆ್ಯನ್ ಎನ್ವಿರಾನ್ಮೆಂಟಲ್ ಹಿಸ್ಟರಿ ಆಫ್ ದಿ ಲಾಸ್ಟ್ 500 ಇಯರ್ಸ್ ಕೃತಿಯು ವರ್ಷದಬ್ರಿಟಿಷ್ಅಕಾಡೆಮಿ ಪುಸ್ತಕ ಪ್ರಶಸ್ತಿಗೆ ಭಾಜನವಾಗಿದೆ.

  • ಸೃಜನೇತರ ಕೃತಿಗಳಿಗಾಗಿ ನೀಡುವ ಈ ಅಂತರರಾಷ್ಟ್ರೀಯ ಪ್ರಶಸ್ತಿಯು ಒಟ್ಟು 25 ಸಾವಿರ ಪೌಂಡ್‌ (ಅಂದಾಜು ₹29 ಲಕ್ಷ) ಮೊತ್ತವನ್ನು ಒಳಗೊಂಡಿದೆ. ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಅಮೃತ್, ದಕ್ಷಿಣ ಭಾರತ ಮೂಲದ ದಂಪತಿಗೆ ಕೆನ್ಯಾದಲ್ಲಿ ಜನಿಸಿದರು.
  • ಸಿಂಗಪುರದಲ್ಲಿ ಆರಂಭಿಕ ಶಿಕ್ಷಣ ಪಡೆದ ಅವರು, ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಬುಧವಾರ ಸಂಜೆ ಲಂಡನ್‌ನ ಬ್ರಿಟಿಷ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ತೀರ್ಪುಗಾರರ ತಂಡದ ಅಧ್ಯಕ್ಷೆ ರೆಬೆಕಾ ಅರ್ಲ್ ಈ ಪ್ರಶಸ್ತಿ ಘೋಷಿಸಿದರು.
  • ಎಸ್ಬಿಐಗೆ ವಿಶ್ವದ ಅತ್ಯುತ್ತಮ ಗ್ರಾಹಕ ಬ್ಯಾಂಕ್ ಪ್ರಶಸ್ತಿ

ಸಂದರ್ಭ: 2025ನೇ ಸಾಲಿನವಿಶ್ವದ ಅತ್ಯುತ್ತಮ ಗ್ರಾಹಕ ಬ್ಯಾಂಕ್ ಮತ್ತುಭಾರತದಲ್ಲಿನ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗೆ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ಬ್ಯಾಂಕ್‌ (ಎಸ್ಬಿಐ) ಭಾಜನವಾಗಿದೆ.

  • ವಿಶ್ವ ಬ್ಯಾಂಕ್‌, ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವಾರ್ಷಿಕ ಸಭೆಯಲ್ಲಿ ನ್ಯೂಯಾರ್ಕ್‌ ಮೂಲದ ಗ್ಲೋಬಲ್‌ ಫೈನಾನ್ಸ್‌ ಸಂಸ್ಥೆ ಈ ಪ್ರಶಸ್ತಿ ಪ್ರದಾನ ಮಾಡಿದೆ.
  • ಈ ಎರಡು ಪ್ರಶಸ್ತಿಗಳು ನಾವೀನ್ಯ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಗ್ರಾಹಕರಿಗೆ ಶ್ರೇಷ್ಠವಾಗಿದ್ದನ್ನು ನೀಡುವುದಕ್ಕೆ ಬದ್ಧವಾಗಿರುವ ಜಾಗತಿಕ ಬ್ಯಾಂಕಿಂಗ್ ನಾಯಕನಾಗಿ ಎಸ್‌ಬಿಐ ಸ್ಥಾನವನ್ನು ಸದೃಢಗೊಳಿಸುತ್ತದೆ ಎಂದು ಬ್ಯಾಂಕ್‌ ಗುರುವಾರ ತಿಳಿಸಿದೆ.
  • ಗ್ಲೋಬಲ್ ಫೈನಾನ್ಸ್‌ನಿಂದ ಎಸ್‌ಬಿಐಗೆ ಈ ಪ್ರಶಸ್ತಿ ಬಂದಿದ್ದಕ್ಕಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್‌ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಸ್ತುತ ಬ್ಯಾಂಕ್ 52 ಕೋಟಿ ಗ್ರಾಹಕರನ್ನು ಹೊಂದಿದೆ.
  • ರಾಣಿ ಚನ್ನಮ್ಮ ನೆನಪಿನ ವಿಶೇಷ ನಾಣ್ಯ

ಸಂದರ್ಭ: ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ ಅವರ 200ನೇ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರವು ₹200 ಮೌಲ್ಯದ ವಿಶೇಷ ನಾಣ್ಯ ರೂಪಿಸಿದೆ.

  • ನಾಣ್ಯವು ಶೇ 50ರಷ್ಟು ಬೆಳ್ಳಿಯನ್ನು ಒಳಗೊಂಡಿದೆ. ಉಳಿದಂತೆ ಶೇ 40ರಷ್ಟು ತಾಮ್ರ, ಶೇ 5ರಷ್ಟು ಸತು ಮತ್ತು ಶೇ 5ರಷ್ಟು ನಿಕೆಲ್ ಅನ್ನು ಈ ನಾಣ್ಯ ತಯಾರಿಕೆಯಲ್ಲಿ ಬಳಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.
  • ಹೈದರಾಬಾದ್ನಲ್ಲಿ ನಾಣ್ಯ ತಯಾರಾಗಿದೆ.
  • ನಾಣ್ಯದ ಒಂದು ಬದಿಯಲ್ಲಿ ರಾಣಿ ಚನ್ನಮ್ಮರ ಚಿತ್ರವಿರಲಿದೆ. ನಾಣ್ಯದ ಮೇಲೆ ಮತ್ತು ಕೆಳಭಾಗದಲ್ಲಿ ‘ಕಿತ್ತೂರಿನ ರಾಣಿ ಚನ್ನಮ್ಮರ ಜಯದ 200ನೇ ವರ್ಷಾಚರಣೆ’ ಎಂಬ ಬರಹ ಇರಲಿದೆ. ಇನ್ನೊಂದು ಬದಿಯಲ್ಲಿ ₹200 ಸಂಕೇತ ಮತ್ತು ರಾಷ್ಟ್ರ ಲಾಂಛನ ಇರಲಿದೆ. ನಾಣ್ಯದ ಸುತ್ತಳತೆ 44 ಮಿ.ಮೀ. ಇದ್ದು, 35 ಗ್ರಾಂ ತೂಕ ಹೊಂದಿದೆ ಎಂದು ತಿಳಿಸಿದೆ.
  • ಅಸಿಯಾನ್ ಶೃಂಗ: ವರ್ಚುವಲ್ಮೂಲಕ ಮೋದಿ ಭಾಗಿ

ಸಂದರ್ಭ:ಮುಂದಿನ ವಾರ ಮಲೇಷ್ಯಾದಲ್ಲಿ ನಡೆಯಲಿರುವ ಅಸಿಯಾನ್ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ಆಗಿ ಹಾಜರಾಗಲಿದ್ದಾರೆ.

  • ಅಸಿಯಾನ್‌ ಸಭೆಯು ಅಕ್ಟೋಬರ್‌ 26ರಿಂದ 28ರವರೆಗೆ ನಡೆಯಲಿದೆ.
  • ‘ಅಸಿಯಾನ್‌ ಶೃಂಗಸಭೆಯಲ್ಲಿ ಡೊನಾಲ್ಡ್‌ ಟ್ರಂಪ್ ಅವರನ್ನು ಭೇಟಿಯಾಗುವುದನ್ನು ತಪ್ಪಿಸಿಕೊಳ್ಳಲು ಪ್ರಧಾನಿ ಮೋದಿ ಅವರು ವರ್ಚುವಲ್‌ ಆಗಿ ಭಾಗಿಯಾಗುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಟೀಕಿಸಿದೆ.
  • ₹79,000 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ

ಸಂದರ್ಭ: ಸೇನಾ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲು ₹79,000 ಕೋಟಿ ಮೌಲ್ಯದ ಖರೀದಿ ಪ್ರಸ್ತಾವನೆ ಗಳಿಗೆ ರಕ್ಷಣಾ ಸಚಿವಾಲಯ ಗುರುವಾರ ಅನುಮೋದನೆ ನೀಡಿದೆರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

  • ನಾಗ್ ಕ್ಷಿಪಣಿಗಳು, ಮೂರೂ ಸಶಸ್ತ್ರ ಪಡೆಗಳು ಬಳಸಬಹುದಾದ ಯುದ್ಧ ಹಡಗುಗಳು ಮತ್ತು ಎಲೆಕ್ಟ್ರಾನಿಕ್ ಗುಪ್ತಚರ ಹಾಗೂ ಕಣ್ಗಾವಲು ವ್ಯವಸ್ಥೆಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಸೇನಾ ಹಾರ್ಡ್‌ವೇರ್‌ಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
  • ‘ಆಪರೇಷನ್ ಸಿಂಧೂರ’ ನಡೆದ ನಂತರ ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದ ಎರಡನೇ ನಿರ್ಧಾರ ಇದಾಗಿದೆ. ಆಗಸ್ಟ್ 5ರಂದು ₹67,000 ಕೋಟಿ ಮೌಲ್ಯದ ಖರೀದಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತು.
  • ಭಾರತ ಕಬಡ್ಡಿ ತಂಡಗಳಿಗೆ ಚಿನ್ನ

ಸಂದರ್ಭ: ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಗುರುವಾರ  ಏಷ್ಯನ್ ಯೂತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡವು.

  • ಭಾರತ ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಐದು ಕಂಚು ಗೆದ್ದು ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಚೀನಾ ಆರು ಚಿನ್ನ, 10 ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ ಅಗ್ರಸ್ಥಾನದಲ್ಲಿದೆ, ನಂತರದಲ್ಲಿ ಥಾಯ್ಲೆಂಡ್‌, ಉಜ್ಬೇಕಿಸ್ತಾನ ದೇಶಗಳಿವೆ.
  • ಮಹಿಳೆಯರ ಕಬಡ್ಡಿ ಫೈನಲ್‌ನಲ್ಲಿ ಭಾರತ 75–21ರಿಂದ ಇರಾನ್‌ ತಂಡವನ್ನು ಮಣಿಸಿತು. ಪುರುಷರ ತಂಡವು 35–32ರಿಂದ ಇರಾನ್‌ ತಂಡವನ್ನು ಸೋಲಿಸಿತು.

ಪ್ರಚಲಿತ ವಿದ್ಯಮಾನಗಳು: 19, 20, 21 & 22ನೇ ಅಕ್ಟೋಬರ್ 2025

‘ಬ್ರಹ್ಮೋಸ್‌ನಿಂದ ಪಾಕ್‌ ತಪ್ಪಿಸಿಕೊಳ್ಳಲಾಗದು’
ಬ್ರಹ್ಮೋಸ್ ಕೇವಲ ಕ್ಷಿಪಣಿಯಲ್ಲ. ಇದು ಭಾರತದ ಹೆಚ್ಚುತ್ತಿರುವ ಶಕ್ತಿಯ ಸಂಕೇತ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಪ್ರಮುಖ ಆಧಾರಸ್ತಂಭವಾಗಿದೆ.
●‘ಭಾರತದ ಬ್ರಹ್ಮೋಸ್‌ ಕ್ಷಿಪಣಿ ಪಾಕಿಸ್ತಾನದ ಮೂಲೆಮೂಲೆಯನ್ನೂ ತಲುಪುವ ಸಾಮರ್ಥ್ಯ ಹೊಂದಿದೆ. ಅದರಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವೇ ಇಲ್ಲ’ ಎಂದು ರಕ್ಷಣಾ ಸಚಿವ.

●ಉತ್ತರ ಪ್ರದೇಶದ ಸರೋಜಿನಿ ನಗರದ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಿಸಲಾದ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್‌ಅನ್ನು ಉದ್ಘಾಟಿಸಿದರು.

●‘ಬ್ರಹ್ಮೋಸ್ ಕ್ಷಿಪಣಿಗಳ ಯಶಸ್ವಿ ತಯಾರಿಕೆಯು ಒಂದು ಕಾಲದಲ್ಲಿ ಕನಸು ಎಂದು ಭಾವಿಸಿದ್ದು ಈಗ ನನಸಾಗಿದೆ ಎಂಬುದನ್ನು ತೋರಿಸುತ್ತದೆ.

●ಮುಖ್ಯಮಂತ್ರಿ ಆದಿತ್ಯನಾಥ ಅವರು, ‘ಇದು ಉತ್ತರ ಪ್ರದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯು ಈ ಸಾಧನೆಯ ಹಿಂದಿದೆ’ ಎಂದರು.

ಪ್ರಮುಖ ಅಂಶಗಳು

  • ಮೊದಲ ಬ್ಯಾಚ್‌ನ ಬ್ರಹ್ಮೋಸ್‌ ಕ್ಷಿಪಣಿಗಳಿಗೆ ಹಸಿರು ನಿಶಾನೆ ತೋರಿದ ರಕ್ಷಣಾ ಸಚಿವ
  • ಬ್ರಹ್ಮೋಸ್‌ ಏರೋಸ್ಪೇಸ್‌ನ ಅತ್ಯಾಧುನಿಕ ಘಟಕದಲ್ಲಿ ತಯಾರಾದ ಕ್ಷಿಪಣಿ
  • ಉತ್ತರ ಪ್ರದೇಶದ ಸರೋಜಿನಿ ನಗರದಲ್ಲಿ ಇದೇ ವರ್ಷ ಮೇ 11ರಂದು ಕಾರ್ಯಾರಂಭ ಮಾಡಿರುವ ಘಟಕ.

ಆರ್ಚರಿ: ಜ್ಯೋತಿಗೆ ಚಾರಿತ್ರಿಕ ಕಂಚು
ಅನುಭವಿ ಜ್ಯೋತಿ ಸುರೇಖಾ ವೆನ್ನಂ ಅವರು ಆರ್ಚರಿ ವಿಶ್ವಕಪ್‌ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಚಾರಿತ್ರಿಕ ಕಂಚಿನ ಪದಕ ಗೆದ್ದರು. ಮಹಿಳೆಯರ ಕಾಂಪೌಂಡ್‌ ವಿಭಾಗದಲ್ಲಿ ಪದಕ ಗೆದ್ದ ಭಾರತದ ಮೊದಲ ಬಿಲ್ಗಾರ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.

●ಏಷ್ಯನ್ ಗೇಮ್ಸ್ ಹಾಲಿ ಚಾಂಪಿಯನ್‌ ಜ್ಯೋತಿ ಅವರು ಕಂಚಿನ ಪದಕದ ಪ್ಲೇ ಆಫ್‌ ಸುತ್ತಿನಲ್ಲಿ 150–145 ಅಂಕಗಳಿಂದ ಎರಡನೇ ಶ್ರೇಯಾಂಕದ ಎಲ್ಲಾ ಗಿಬ್ಸನ್ (ಬ್ರಿಟನ್‌) ಅವರಿಗೆ ಆಘಾತ ನೀಡಿದರು.

2021ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆ 29 ವರ್ಷ ವಯಸ್ಸಿನ ಜ್ಯೋತಿ ಅವರಿಗೆ ಇದು ಮೂರನೇ ವಿಶ್ವಕಪ್‌ ಫೈನಲ್‌ ಆಗಿದೆ. ಈ ಹಿಂದೆ ಟ್ಲಾಕ್ಸ್‌ಕಲಾ (2022) ಮತ್ತು ಹರ್ಮೊಸಿಲೊ (2023) ಆವೃತ್ತಿಗಳಲ್ಲಿ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದರು.

ಈ ಋತುವಿನ ವಿಶ್ವಕಪ್ ಫೈನಲ್‌ಗೆ ರಿಕರ್ವ್ ವಿಭಾಗದಲ್ಲಿ ಭಾರತದ ಯಾವುದೇ ಸ್ಪರ್ಧಿ ಅರ್ಹತೆ ಪಡೆದಿಲ್ಲ.

20th, 21st & 22nd October

  • ರಾಜ್ಯಕ್ಕೆ ₹384 ಕೋಟಿ ಪ್ರವಾಹ ಪರಿಹಾರ

ಸಂದರ್ಭ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ₹1,950.80 ಕೋಟಿ ಪರಿಹಾರವನ್ನು 2025–26ನೇ ಸಾಲಿನ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ಡಿಆರ್ಎಫ್‌) ಅಡಿ ಮುಂಗಡವಾಗಿ ನೀಡಲು ಕೇಂದ್ರ ಗೃಹ ಸಚಿವ ಅಮಿತ್ಶಾ  ಅನುಮೋದನೆ ನೀಡಿದ್ದಾರೆ. ಪರಿಹಾರದ ಎರಡನೇ ಕಂತಿನ ಮೊತ್ತ ಇದಾಗಿದೆ.

  • ಈ ವರ್ಷದ ನೈರುತ್ಯ ಮುಂಗಾರಿನಿಂದ ತೀವ್ರ ಹಾನಿಗೊಳಗಾದ ಜನರಿಗೆ ತ್ವರಿತವಾಗಿ ನೆರವು ಒದಗಿಸಲು ಒಟ್ಟು ಮೊತ್ತದಲ್ಲಿ ಕರ್ನಾಟಕಕ್ಕೆ ₹384.40 ಕೋಟಿ ಹಾಗೂ ಮಹಾರಾಷ್ಟ್ರಕ್ಕೆ ₹1,566.40 ಕೋಟಿ ನೀಡಲು ಅನುಮೋದನೆ ನೀಡಲಾಗಿದೆ.
  • ಪ್ರವಾಹ, ಭೂಕುಸಿತ ಹಾಗೂ ಮೇಘಸ್ಫೋಟಕ್ಕೆ ಒಳಗಾದ ರಾಜ್ಯಗಳಿಗೆ ಎಲ್ಲ ರೀತಿಯ ನೆರವು ಒದಗಿಸಲು ಪ್ರಧಾನಿ ಹಾಗೂ ಗೃಹ ಸಚಿವ ಸಲಹೆಯಂತೆ ಕೇಂದ್ರ ಸರ್ಕಾರ ತನ್ನ ಬದ್ಧತೆ ವ್ಯಕ್ತಪಡಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • ಎಸ್‌ಡಿಆರ್‌ಎಫ್‌ನ ಅಡಿಯಲ್ಲಿ ಕೇಂದ್ರದ ಪಾಲಾದ ₹13,603.20 ಕೋಟಿಯನ್ನು 27 ರಾಜ್ಯಗಳಿಗೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಅಡಿಯಲ್ಲಿ 15 ರಾಜ್ಯಗಳಿಗೆ ₹2,189.28 ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರವು ಈ ವರ್ಷ ಬಿಡುಗಡೆ ಮಾಡಿದೆ.
  • ಇದಲ್ಲದೇ, ಹೆಚ್ಚುವರಿಯಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಎಂಎಫ್‌)ನ ಅಡಿಯಲ್ಲಿ 21 ರಾಜ್ಯಗಳಿಗೆ ₹4,571.30 ಕೋಟಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಎಂಎಫ್‌) ಅಡಿಯಲ್ಲಿ 9 ರಾಜ್ಯಗಳಿಗೆ ₹372.09 ಕೋಟಿ ನೆರವು ನೀಡಲಾಗಿದೆ.
  • ಚಂದ್ರಶೇಖರ ಶಿಲ್ಪಿಗೆ ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ

ಸಂದರ್ಭ: ಹಿರಿಯ ಕಲಾವಿದ ಚಂದ್ರಶೇಖರ ವೈ.ಶಿಲ್ಪಿ ಅವರಿಗೆ ಜವಳಿ ಸಚಿವಾಲಯವು ನೀಡುವ 2024ನೇ ಸಾಲಿನರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಶಿಲ್ಪಿ ಅವರು ಕೆತ್ತನೆ ಮಾಡಿದ ವಿಶಿಷ್ಟ ಕಲಾ ನೈಪುಣ್ಯದ ಬಾಗಿಲಿಗೆ ಪ್ರಶಸ್ತಿ ಲಭಿಸಿದೆ.

  • ಸಾಂಪ್ರದಾಯಿಕ ಕುಸುರಿ ಕೆತ್ತನೆಯ ಹಿರಿಯ ಕಲಾವಿದ ಚಂದ್ರಶೇಖರ ವೈ.ಶಿಲ್ಪಿ ಅವರಿಗೆ ಜವಳಿ ಸಚಿವಾಲಯವು ನೀಡುವ 2024ನೇ ಸಾಲಿನರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ ದೊರೆತಿದೆ.
  • ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಶಿಲ್ಪಿ ಅವರು ಕೆತ್ತನೆ ಮಾಡಿದ ವಿಶಿಷ್ಟ ಕಲಾ ನೈಪುಣ್ಯದ ಬಾಗಿಲಿಗೆ ಪ್ರಶಸ್ತಿ ಲಭಿಸಿದೆ.
  • ಪ್ರಶಸ್ತಿ ₹2 ಲಕ್ಷ ನಗದು ಮತ್ತು ಫಲಕ ಒಳಗೊಂಡಿದೆ.
  • ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯ ವಿಜ್ಞಾನ ಭವನದಲ್ಲಿ ಡಿ.9ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
  • ಕಲ್ಯಾಣ ಕರ್ನಾಟಕದ ಯಾದಗಿರಿ, ಕಲಬುರಗಿ ಭಾಗದಲ್ಲಿ ಪ್ರಸಿದ್ಧಿಯಾದ ಸಗರನಾಡು ಕಲಾ ಶೈಲಿಗೆ ಸಾಂಪ್ರದಾಯಿಕ ಶೈಲಿ ಸಂಯೋಜಿಸಿ ಚಂದ್ರಶೇಖರ ಶಿಲ್ಪಿ ಅವರು ಎತ್ತರಕ್ಕೆ ಒಯ್ದಿದ್ದಾರೆ ಎಂದು ಆಯ್ಕೆ ಸಮಿತಿಯು ಬಣ್ಣಿಸಿದೆ.
  • ಚಂದ್ರಶೇಖರ ಶಿಲ್ಪಿ ಅವರು ಮೂಲತಃ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದವರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರು, ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.
  • 15 ಜಿಲ್ಲೆಗಳ ಕೈತಪ್ಪಲಿದೆಪಿಎಂಜಿಎಸ್ವೈ

ಸಂದರ್ಭ: ಪಿಎಂಜಿಎಸ್ವೈ 4ನೇ ಹಂತದ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಯಾವುದೇ ರಸ್ತೆಯ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಜನಸಂಖ್ಯೆಯ ಮಾನದಂಡವನ್ನು 200ಕ್ಕೆ ಇಳಿಸಿದರೆ ಅನುಕೂಲ ಸಿಇಒ, ಜಿಲ್ಲಾ ಪಂಚಾಯಿತಿ, ದಾವಣಗೆರೆ

  • ‘500ಕ್ಕೂ ಹೆಚ್ಚು ಜನಸಂಖ್ಯೆಯುಳ್ಳ, ಸಂಪರ್ಕರಹಿತ ವಸತಿ ಪ್ರದೇಶಗಳಲ್ಲಷ್ಟೇ ರಸ್ತೆ ನಿರ್ಮಿಸಬಹುದು’ ಎಂಬ ಮಾರ್ಗಸೂಚಿ ಯಿಂದಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ಯೋಜನೆಯು (ಪಿಎಂಜಿಎಸ್ವೈ) 4ನೇ ಹಂತದಲ್ಲಿ ರಾಜ್ಯದ 15 ಜಿಲ್ಲೆಗಳ ಕೈತಪ್ಪುವ ಸಾಧ್ಯತೆ ಇದೆ.
  • ಪಿಎಂಜಿಎಸ್ವೈ 4ನೇ ಹಂತವನ್ನು 2024 ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದು, 25,000 ಜನವಸತಿ ಪ್ರದೇಶಗಳಿಗೆ ಸರ್ವಋತು ಸಂಪರ್ಕ ರಸ್ತೆ ಕಲ್ಪಿಸುವ ಆಶ್ವಾಸನೆ ನೀಡಿತ್ತು. ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 16 ಜಿಲ್ಲೆಗಳ 225 ಜನವಸತಿ ಪ್ರದೇಶಗಳು ಮಾತ್ರವೇ ಯೋಜನೆಗೆ ಅರ್ಹತೆ ಪಡೆದಿವೆ.
  • ಕೆಲವು ಜಿಲ್ಲೆಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ಕಾಯುತ್ತಿರುವ ಬಹುತೇಕ ಗ್ರಾಮಗಳ ಜನಸಂಖ್ಯೆ 500ಕ್ಕಿಂತ ಕಡಿಮೆ ಇರುವುದರಿಂದ ಹಾಗೂ ಈಗಾಗಲೇ ಆಯಾ ಗ್ರಾಮ ವ್ಯಾಪ್ತಿಯಲ್ಲಿ ಕೆಲವೊಂದು ರಸ್ತೆಗಳು ಅಭಿವೃದ್ಧಿ ಹೊಂದಿರುವುದರಿಂದ ಯೋಜನೆಯಿಂದ ವಂಚಿತವಾಗುತ್ತಿವೆ.
  • ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲು 2000–2001ನೇ ಸಾಲಿನಲ್ಲಿ ಯೋಜನೆ ಜಾರಿಗೊಳಿಸಲಾಯಿತು. ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಇದು ಯಶಸ್ಸು ಕಂಡಿದೆ. 2013ರಲ್ಲಿ 2ನೇ ಹಂತ, 2019ರಲ್ಲಿ 3ನೇ ಹಂತ ಜಾರಿಗೊಳಿಸಲಾಗಿತ್ತು.
  • 4ನೇ ಹಂತವು 2024ರ ಡಿಸೆಂಬರ್‌ನಲ್ಲಿ ಅನುಷ್ಠಾನಕ್ಕೆ ಬಂದಿದೆ. ಐದು ವರ್ಷಗಳಲ್ಲಿ ₹ 70,125 ಕೋಟಿ ಅಂದಾಜು ವೆಚ್ಚದಲ್ಲಿ 62,500 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.
  • ರಾಜ್ಯದಲ್ಲಿ ಸಂಪರ್ಕರಹಿತ ಜನವಸತಿ ಪ್ರದೇಶಗಳ ಸಂಖ್ಯೆ ವಿರಳ. ‘ನಮ್ಮ ಗ್ರಾಮ ನಮ್ಮ ರಸ್ತೆಸೇರಿದಂತೆ ಹಲವು ಯೋಜನೆಯಡಿ ಬಹುತೇಕ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.
  • ಹೊಸದಾಗಿ ನಿರ್ಮಾಣವಾಗಿರುವ ಜನವಸತಿ ಪ್ರದೇಶಗಳು 500ಕ್ಕೂ ಕಡಿಮೆ ಜನಸಂಖ್ಯೆ ಹೊಂದಿವೆ. ಪಿಎಂಜಿಎಸ್‌ವೈ 4ನೇ ಹಂತದ ಮಾರ್ಗಸೂಚಿ ಪ್ರಕಾರ ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂಬುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಅಧಿಕಾರಿಯೊಬ್ಬರ ಹೇಳಿಕೆ.
  • ಯೋಜನೆಗೆ ಕೇಂದ್ರ ಮತ್ತು ರಾಜ್ಯ 60:40 ಅನುಪಾತದಲ್ಲಿ ವೆಚ್ಚ ಭರಿಸಿವೆ. 2022–23ರಿಂದ 2024–2025ನೇ ಸಾಲಿನವರೆಗೆ ರಾಜ್ಯದಲ್ಲಿ 2,254 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ₹ 837 ಕೋಟಿ, ರಾಜ್ಯ ಸರ್ಕಾರ ₹ 585 ಕೋಟಿ ವ್ಯಯಿಸಿವೆ.
  • ‘ಗ್ರಾಮದಲ್ಲಿ ಒಂದು ರಸ್ತೆ ಅಭಿವೃದ್ಧಿಪಡಿಸಿದ್ದರೆ ಮತ್ತೊಂದು ರಸ್ತೆ ನಿರ್ಮಿಸಲು ಯೋಜನೆಯ 4ನೇ ಹಂತದಲ್ಲಿ ಅವಕಾಶವಿಲ್ಲ. ರಸ್ತೆ ದುರಸ್ತಿಗೂ ಅವಕಾಶವಿಲ್ಲ. ಇದರಿಂದ ರಾಜ್ಯವು ಯೋಜನೆಯ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ. ಮಾರ್ಗಸೂಚಿಗೆ ತಿದ್ದುಪಡಿ ತಂದರೆ ಮಾತ್ರ ರಾಜ್ಯಕ್ಕೆ ಅನುಕೂಲ ಆಗಲಿದೆ’ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  • ದರೋಜಿ ಬಳಿ ಸ್ಕಾಪ್ಸ್ಗೂಬೆ ಗೋಚರ

ಸಂದರ್ಭ: ತಾಲ್ಲೂಕಿನ ದರೋಜಿ ಕರಡಿಧಾಮದ ಬಳಿ ಭಾಗದಲ್ಲಿ ಅತ್ಯಂತ ವಿರಳವಾಗಿರುವ ಭಾರತೀಯ ಸ್ಕಾಪ್ಸ್ಗೂಬೆ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದೆ.

  • ಕಿವಿಯಂತಹ ಗರಿಯನ್ನು ಹೊಂದಿರುವ ಬೂದು ಬಣ್ಣದ ಗೂಬೆ 20ರಿಂದ 25 ಸೆಂ.ಮೀ ಉದ್ದವಿದೆ. ಕಣ್ಣು ಕಡು ಕಪ್ಪು. ದೇಹದ ಬಣ್ಣ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವುದರಿಂದ ಹಗಲಿನಲ್ಲಿ ಇದನ್ನು ಗುರುತಿಸುವುದು ಕಷ್ಟ. ಈ ಗೂಬೆಗೆ ಛದ್ಮವೇಷಧಾರಿ ಎಂದೂ ಕರೆಯಲಾಗುತ್ತದೆ.
  • ರಾತ್ರಿ ಗೂಬೆಯ ‘ವಟ್ ವಟ್’ ಸದ್ದಿನಿಂದ ಜಾಗೃತರಾದ ಪಕ್ಷಿ ವೀಕ್ಷಕರಾದ ಸವ್ಯಸಾಚಿ ರಾಯ್‌, ಶ್ರೀಧರ ಪೆರುಮಾಳ್‌, ಪಂಪಯ್ಯ ಸ್ವಾಮಿ ಮಳೀಮಠ ಅವರು ಗೂಬೆಯ ಚಲನವಲನ ಹಿಂಬಾಲಿಸಿದ್ದರು. ಶ್ರೀಧರ ಪೆರುಮಾಳ್ ಅವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯಿತು.
  • ಪಶ್ಚಿಮಘಟ್ಟದಲ್ಲಿ ಇಂತಹ ಗೂಬೆ ಗೋಚರಿಸುವುದು ಅಪರೂಪ. ಬಳ್ಳಾರಿಹೊಸಪೇಟೆ ವ್ಯಾಪ್ತಿಯಲ್ಲಿ ಇದು ಕಾಣಿಸಿದ್ದೇ ಇಲ್ಲ ಎಂದು ಪಂಪಯ್ಯಸ್ವಾಮಿ ಮಳೀಮಠ.
  • 24 ದೇಶಗಳಿಗೆ ಭಾರತದ ರಫ್ತು ಹೆಚ್ಚಳ

ಸಂದರ್ಭ: ಏಪ್ರಿಲ್ಸೆಪ್ಟೆಂಬರ್ ಅವಧಿಯಲ್ಲಿ ₹11.37 ಲಕ್ಷ ಕೋಟಿ ಮೌಲ್ಯದ ವಹಿವಾಟು. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧ ದಲ್ಲಿ (ಏಪ್ರಿಲ್ನಿಂದ ಸೆಪ್ಟೆಂಬರ್ಅಂತ್ಯದವರೆಗೆ) 24 ದೇಶಗಳಿಗೆ ದೇಶದ ರಫ್ತು ಏರಿಕೆ ಕಂಡಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

  • ಇದೇ ಅವಧಿಯಲ್ಲಿ ಹೆಚ್ಚಿನ ಸುಂಕ ದಿಂದಾಗಿ ಅಮೆರಿಕಕ್ಕೆ ರಫ್ತು ಪ್ರಮಾಣ ಇಳಿಕೆಯಾಗಿದೆ. ಕೊರಿಯಾ, ಯುಎಇ, ಜರ್ಮನಿ, ಈಜಿಪ್ಟ್‌, ವಿಯೆಟ್ನಾಂ, ಇರಾಕ್‌, ಮೆಕ್ಸಿಕೊ, ರಷ್ಯಾ, ಕೆನ್ಯಾ, ನೈಜೀರಿಯಾ, ಕೆನಡಾ ಸೇರಿದಂತೆ 24 ರಾಷ್ಟ್ರಗಳಿಗೆ ದೇಶದಿಂದ ಆಗುವ ರಫ್ತು ಹೆಚ್ಚಾಗಿದೆ.
  • ಭಾರತವು ತನ್ನ ಸರಕುಗಳನ್ನು ಬೇರೆ ಬೇರೆ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣ ದಲ್ಲಿ ರಫ್ತು ಮಾಡಲು ಆದ್ಯತೆ ನೀಡುತ್ತಿರುವುದನ್ನು ಇದು ತೋರಿಸುತ್ತಿದೆ.
  • ಏಪ್ರಿಲ್‌–ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಒಟ್ಟು ರಫ್ತಿನಲ್ಲಿ ಶೇ 3.02ರಷ್ಟು ಹೆಚ್ಚಳವಾಗಿದ್ದು, ₹19.35 ಲಕ್ಷ ಕೋಟಿಯಷ್ಟಾಗಿದೆ. ದೇಶದ ಆಮದು ಶೇ 4.53ರಷ್ಟು ಏರಿಕೆಯಾಗಿದ್ದು, ₹33 ಲಕ್ಷ ಕೋಟಿಯಷ್ಟಾಗಿದೆ. ವ್ಯಾಪಾರ ಕೊರತೆ ₹13.63 ಲಕ್ಷ ಕೋಟಿಯಾಗಿದೆ.
  • ಇದೇ ಅವಧಿಯಲ್ಲಿ ಈ 24 ದೇಶಗಳಿಗೆ ₹11.37 ಲಕ್ಷ ಕೋಟಿ ಮೌಲ್ಯದಷ್ಟು ರಫ್ತು ವಹಿವಾಟು ದೇಶದಿಂದ ನಡೆದಿದೆ. ಇದು ದೇಶದ ಒಟ್ಟು ರಫ್ತಿನಲ್ಲಿ ಶೇ 59ರಷ್ಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ಆದರೆ, ಕೇಂದ್ರ ವಾಣಿಜ್ಯ ಸಚಿವಾಲ ಯದ ಅಂಕಿ ಅಂಶಗಳ ಪ್ರಕಾರ, ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 16 ದೇಶಗಳಿಗೆ ದೇಶದ ರಫ್ತು ಪ್ರಮಾಣ ಇಳಿಕೆಯಾಗಿದೆ. ಈ ದೇಶಗಳು ದೇಶದ ಒಟ್ಟು ರಫ್ತಿನಲ್ಲಿ ಶೇ 27ರಷ್ಟು ಪಾಲು ಹೊಂದಿವೆ.
  • ಅಮೆರಿಕವು ಭಾರತದಿಂದ ಆಮದಾ ಗುವ ಸರಕುಗಳ ಮೇಲೆ ವಿಧಿಸಿರುವ ಶೇ 50ರಷ್ಟು ಸುಂಕವು, ಅಮೆರಿಕಕ್ಕೆ ರಫ್ತು ಮಾಡಲು ತೊಂದರೆ ಉಂಟು ಮಾಡಿದೆ. ಆದರೆ, ರಫ್ತುದಾರರು ಆಫ್ರಿಕಾ, ಲ್ಯಾಟಿನ್ ಅಮೆರಿಕ, ಪಶ್ಚಿಮ ಏಷ್ಯಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲೂ ಈ ರಫ್ತು ಹೆಚ್ಚಳವಾಗಲಿದೆ ಎಂದು ರಫ್ತುದಾರರೊಬ್ಬರು ಹೇಳಿದ್ದಾರೆ.
  • ಏಪ್ರಿಲ್‌–ಸೆಪ್ಟೆಂಬರ್ ಅವಧಿಯಲ್ಲಿ ಅಮೆರಿಕಕ್ಕೆ ದೇಶದ ರಫ್ತು ಶೇ 13.37ರಷ್ಟು ಹೆಚ್ಚಳವಾಗಿದೆ. ಇದು ರೂಪಾಯಿ ಮೌಲ್ಯದಲ್ಲಿ ₹4 ಲಕ್ಷ ಕೋಟಿಯಷ್ಟಾಗಿದೆ. ಆಮದು ಶೇ 9ರಷ್ಟು ಏರಿಕೆಯಾಗಿದ್ದು, ₹2.25 ಲಕ್ಷ ಕೋಟಿ ಆಗಿದೆ.
  • 2024–25 ಆರ್ಥಿಕ ವರ್ಷದಲ್ಲಿ ಅಮೆರಿಕವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.

ಅಮೆರಿಕಕ್ಕೆ ರಫ್ತು ಇಳಿಕೆ

  • ಸೆಪ್ಟೆಂಬರ್‌ ತಿಂಗಳಿನಲ್ಲಿ ಅಮೆರಿಕಕ್ಕೆ ದೇಶದ ಸರಕುಗಳ ರಫ್ತು ಇಳಿಕೆ ಆಗಿದೆ. ಇದೇ ಅವಧಿಯಲ್ಲಿ ಅಮೆರಿಕ ಹೊರತುಪಡಿಸಿ ಬೇರೆ ದೇಶಗಳಿಗೆ ರಫ್ತು ಹೆಚ್ಚಳವಾಗಿದೆ ಎಂದು ರೇಟಿಂಗ್‌ ಸಂಸ್ಥೆ ಕ್ರಿಸಿಲ್ ವರದಿ ಹೇಳಿದೆ.
  • ಆಗಸ್ಟ್‌ ತಿಂಗಳಿನಲ್ಲಿ ಅಮೆರಿಕಕ್ಕೆ ದೇಶದಿಂದ ರಫ್ತಾದ ಸರಕುಗಳಲ್ಲಿ ಶೇ 7ರಷ್ಟು ಬೆಳವಣಿಗೆ ಆಗಿತ್ತು. ಆದರೆ, ಸೆಪ್ಟೆಂಬರ್‌ನಲ್ಲಿ ರಫ್ತು ಪ್ರಮಾಣ ಶೇ 11.9ರಷ್ಟು ಇಳಿಕೆಯಾಗಿದೆ. ಇದು ಹಣಕಾಸಿನ ಮೌಲ್ಯದಲ್ಲಿ ₹48,372 ಕೋಟಿಯಷ್ಟಾಗಿದೆ.
  • ಇದೇ ಅವಧಿಯಲ್ಲಿ ಅಮೆರಿಕ ಹೊರತು‍ಪಡಿಸಿ ಬೇರೆ ದೇಶಗಳಿಗೆ, ಭಾರತದಿಂದಾದ ಸರಕುಗಳ ರಫ್ತು ಶೇ 10.9ರಷ್ಟು ಹೆಚ್ಚಳವಾಗಿದೆ. ಆಗಸ್ಟ್‌ನಲ್ಲಿ ರಫ್ತು ಶೇ 6.6ರಷ್ಟು ಮಾತ್ರ ಇತ್ತು.
  • ಅಮೆರಿಕದ ಹೆಚ್ಚುವರಿ ಸುಂಕವು ದೇಶದ ಸರಕುಗಳ ರಫ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಕ್ರಿಸಿಲ್ ಎಚ್ಚರಿಸಿದೆ.
  • ಕದನ ವಿರಾಮಕ್ಕೆ ಒಪ್ಪಿದ ಪಾಕ್‌– ಅಫ್ಗಾನಿಸ್ತಾನ

ಸಂದರ್ಭ: ಗಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮ ಘೋಷಿಸಿ, ಶಾಂತಿ ಮರುಸ್ಥಾಪನೆಗೆ ಮುಂದಾಗಲು ಪಾಕಿಸ್ತಾನಅಫ್ಗಾನಿಸ್ತಾನ ಒಪ್ಪಿಗೆ ಸೂಚಿಸಿವೆ.

  • ಪಾಕಿಸ್ತಾನದ ರಕ್ಷಣಾ ಸಚಿವ  ಖ್ವಾಜಾ ಆಸಿಫ್‌ ಮತ್ತು ಅಫ್ಗಾನಿಸ್ತಾನದ ಹಂಗಾಮಿ ರಕ್ಷಣಾ ಸಚಿವ ಮುಲ್ಲಾ ಯಾಕೂಬ್‌ ದೋಹಾದಲ್ಲಿ ಮಾತುಕತೆ ನಡೆಸಿದ ಬೆನ್ನಲ್ಲೇ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿವೆ ಎಂದು ಕತಾರ್‌ನ ವಿದೇಶಾಂಗ ಸಚಿವಾಲಯ ಹೇಳಿದೆ. ಸಂಧಾನಕ್ಕೆ ಕತಾರ್ಮತ್ತು ಟರ್ಕಿ ಮಧ್ಯಸ್ಥಿಕೆ ವಹಿಸಿದ್ದವು.
  • ಶಾಂತಿ ಮರುಸ್ಥಾಪನೆ ಮತ್ತು ಸ್ಥಿರತೆ ತರುವ ವಿಚಾರದಲ್ಲಿ ಸಭೆಗಳು ನಡೆಯಲಿವೆ ಎಂದು ಉಭಯ ದೇಶಗಳು ಹೇಳಿವೆ. ನಿಷೇಧಿತ ತೆಹ್ರೀಕ್–ಎ–ತಾಲಿಬಾನ್ ಪಾಕಿಸ್ತಾನ್‌ನ (ಟಿಟಿಪಿ) ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನವು ದೋಹಾ ಸಭೆಯಲ್ಲಿ ಅಘ್ಗಾನಿಸ್ತಾನವನ್ನು ಒತ್ತಾಯಿಸಿದೆ.
  • ಕದನ ವಿರಾಮದ ನಡುವೆಯೇ ಇಸ್ರೇಲ್ದಾಳಿ

ಸಂದರ್ಭ: ಕದನ ವಿರಾಮದ ನಡುವೆಯೇ ಇಸ್ರೇಲ್ಸೇನೆ ಹಮಾಸ್ಬಂಡುಕೋರರನ್ನು ಗುರಿಯಾಗಿಸಿ ಗಾಜಾಪಟ್ಟಿಯ ಹಲವೆಡೆ ದಾಳಿ ನಡೆಸಿದೆ

  • ಸೇನೆಯ ನಿಯಂತ್ರಣದಲ್ಲಿರುವ ಗಾಜಾದಲ್ಲಿ ಹಮಾಸ್‌ ಬಂಡುಕೋರರು ಇಸ್ರೇಲ್‌ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿ, ಕದನ ವಿರಾಮ ಉಲ್ಲಂಘಿಸಿದ್ದಕ್ಕಾಗಿ ಈ ದಾಳಿ ನಡೆಸಿರುವುದಾಗಿ ಇಸ್ರೇಲ್‌ ಸೇನೆ ಹೇಳಿದೆ. ಆದರೆ, ಗಾಜಾಪಟ್ಟಿಯ ದಕ್ಷಿಣ ಭಾಗದ ರಫಾದಲ್ಲಿ ಯಾವುದೇ ಘರ್ಷಣೆಯಲ್ಲಿ  ಭಾಗಿಯಾಗಿಲ್ಲ ಎಂದು ಹಮಾಸ್‌ ಹೇಳಿದೆ.
  • ‘ಹಮಾಸ್‌ನಿಂದ ಕದನ ವಿರಾಮ ಉಲ್ಲಂಘನೆಯಾದರೆ ಕಠಿಣ ಕ್ರಮ ಕೈಗೊಳ್ಳಿ’ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಸ್ರೇಲ್ ಸೇನಾ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಆದರೆ, ಮತ್ತೊಮ್ಮೆ ಯುದ್ಧ ಪುನರಾರಂಭಿಸುವ ಬೆದರಿಕೆ ಒಡ್ಡಿಲ್ಲ. ಇದರ ಬೆನ್ನಲ್ಲೇ, ಕದನ ವಿರಾಮಕ್ಕೆ ಸಂಬಂಧಿಸಿದ ಎರಡನೆಯ ಸುತ್ತಿನ ಮಾತುಕತೆ ಆರಂಭಗೊಂಡಿದೆ ಎಂದು ಪ್ಯಾಲೆಸ್ಟೀನ್‌ ಹೇಳಿದೆ. ಹಮಾಸ್‌ನ ಸಂಪೂರ್ಣ ನಿಶ್ಶಸ್ತ್ರೀಕರಣ, ಗಾಜಾದ ಭವಿಷ್ಯದ ಆಡಳಿತ ಎರಡನೆಯ ಸುತ್ತಿನ ಕದನ ವಿರಾಮ ಮಾತುಕತೆಯ ಪ್ರಮುಖ ಅಂಶಗಳು.  
  • ಬಾಕಿ ಉಳಿದಿದ್ದ ಇಬ್ಬರು ಇಸ್ರೇಲ್‌ ಒತ್ತೆಯಾಳುಗಳನ್ನು ಹಮಾಸ್‌ ಶನಿವಾರ ರಾತ್ರೋರಾತ್ರಿ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ, ಇಸ್ರೇಲ್‌ ಸೇನೆಯಿಂದ ದಾಳಿ ನಡೆದಿದೆ. ಹಮಾಸ್‌ ಕದನ ವಿರಾಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವರೆಗೆ ಗಾಜಾ–ಈಜಿಪ್ಟ್ ನಡುವಿನ ರಫಾ ಗಡಿಯನ್ನು ಮುಚ್ಚುವುದಾಗಿ ಇಸ್ರೇಲ್‌ ಎಚ್ಚರಿಸಿದೆ.
  • ಮೃತದೇಹ ಹಸ್ತಾಂತರ: ಕದನ ವಿರಾಮ ಘೋಷಣೆಯಾದ ನಂತರ, ಕಳೆದ ಒಂದು ವಾರದಲ್ಲಿ ಹಮಾಸ್‌ ಇಸ್ರೇಲ್‌ಗೆ 13 ಮೃತದೇಹಗಳನ್ನು ಹಸ್ತಾಂತರಿಸಿದೆ. ಇದರಲ್ಲಿ 12 ಮೃತದೇಹಗಳು ಒತ್ತೆಯಾಳುಗಳದ್ದು ಎಂದು ಇಸ್ರೇಲ್ ಸೇನೆ ಗುರುತಿಸಿದೆ. ಇಸ್ರೇಲ್‌, ಹಮಾಸ್‌ಗೆ 150 ಪ್ಯಾಲೆಸ್ಟೀನಿಯರ ಮೃತದೇಹಗಳನ್ನು ಹಸ್ತಾಂತರಿಸಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.
  • ಬೆಳ್ಳಿ ಪದಕ ಗೆದ್ದ ತನ್ವಿ ಶರ್ಮಾ

ಸಂದರ್ಭ: ವಿಶ್ವ ಜೂ. ಬ್ಯಾಡ್ಮಿಂಟನ್‌: ಥಾಯ್ಲೆಂಡ್ ಅನ್ಯಪತ್ಗೆ ಚಿನ್ನ: ಥಾಯ್ಲೆಂಡ್ ಅನ್ಯಪತ್ ಫಿಚಿಟ್ಪ್ರೀಚಸಕ್ ಅವರು ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ನೇರ ಆಟಗಳಿಂದ ಅಗ್ರ ಶ್ರೇಯಾಂಕದ ಭಾರತದ ಆಟಗಾರ್ತಿಯನ್ನು ಅವರನ್ನು ಮಣಿಸಿ ಚಾಂಪಿಯನ್ಆದರು.

  • ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಅಪರ್ಣಾ ಪೊಪಟ್‌ ಬಳಿಕ ಈ ಟೂರ್ನಿಯ ಫೈನಲ್ ತಲುಪಿದ ಭಾರತದ ಮೂರನೇ ಆಟಗಾರ್ತಿಎನಿಸಿರುವ 16 ವರ್ಷ ವಯಸ್ಸಿನ ತನ್ವಿ 7–15, 12–15 ರಲ್ಲಿ ಎರಡನೇ ಶ್ರೇಯಾಂಕದ ಆಟಗಾರ್ತಿಗೆ ಸೋತರು.
  • ಇದು 17 ವರ್ಷಗಳಲ್ಲಿ ಭಾರತದ ಆಟಗಾರ್ತಿಯೊಬ್ಬರು ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಗೆಲ್ಲುತ್ತಿರುವ ಮೊದಲ ಬೆಳ್ಳಿ ಪದಕವಾಗಿದೆ. ಸೈನಾ (2008ರಲ್ಲಿ ಚಿನ್ನ, 2006ಲ್ಲಿ ಬೆಳ್ಳಿ), ಅಪರ್ಣಾ (1996ರಲ್ಲಿ ಬೆಳ್ಳಿ) ಹಿಂದೆ ಪದಕ ಗೆದ್ದ ಭಾರತದ ಇನ್ನಿಬ್ಬರು ಆಟಗಾರ್ತಿಯರಾಗಿದ್ದಾರೆ.
  • ಲಿಯು ಯಾಂಗ್‌ಗೆ ಪ್ರಶಸ್ತಿ: ಇದೇ ಟೂರ್ನಿಯ ‍‍ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಚೀನಾದ ಲಿಯು ಯಾಂಗ್ ಮಿಂಗ್ ಯು ಅವರು 15–10, 15–11 ರಿಂದ ಇಂಡೊನೇಷ್ಯಾದ ಮೊಹಮ್ಮದ್ ಝಕಿ ಉಬೈದಿಲ್ಲಾ ಅವರನ್ನು ಸೋಲಿಸಿದರು. ಮೂರನೇ ಶ್ರೇಯಾಂಕದ ಆಟಗಾರ, ಅಗ್ರ ಶ್ರೇಯಾಂಕದ ಉಬೈದಿಲ್ಲಾ ಅವರನ್ನು ಮಣಿಸಲು 35 ನಿಮಿಷ ತೆಗೆದುಕೊಂಡರು.
  • ಏಷ್ಯನ್ ರೋಯಿಂಗ್‌: ಭಾರತಕ್ಕೆ 10 ಪದಕ

ಸಂದರ್ಭ: ಒಲಿಂಪಿಯನ್ ಬಲರಾಜ್ ಪನ್ವರ್ ನೇತೃತ್ವದಲ್ಲಿ ವಿಯೆಟ್ನಾಮಿನ ಹಾಯ್ಫಾಂಗ್ನಲ್ಲಿ ನಡೆದ ಏಷ್ಯನ್ ರೋಯಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತ ಉತ್ತಮ ಸಾಧನೆ ತೋರಿತು. ಕೂಟದಲ್ಲಿ ಮೂರು ಚಿನ್ನ, ಐದು ಬೆಳ್ಳಿ, ಎರಡು ಕಂಚು ಸೇರಿ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿತು.

  • ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದ ಶ್ರೇಷ್ಠ ಪ್ರದರ್ಶನ ಇದೆನಿಸಿತು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದ ಪನ್ವರ್ ಪುರುಷರ ಸಿಂಗಲ್‌ ಸ್ಕಲ್‌ (ಎಂ1ಎಕ್ಸ್‌) ರೇಸ್‌ನಲ್ಲಿ ಅಧಿಕಾರಯುತ ಪ್ರದರ್ಶನದೊಡನೆ ಚಿನ್ನ ಗೆದ್ದರು.
  • ಲೈಟ್‌ವೇಟ್‌ ಮೆನ್ಸ್‌ ಡಬಲ್‌ ಸ್ಕಲ್‌ನಲ್ಲಿ ಭಾರತ ಮತ್ತೊಂದು ಚಿನ್ನ ಗೆದ್ದುಕೊಂಡಿತು. ಲಕ್ಷಯ್ ಮತ್ತು ಅಜಯ್ ತ್ಯಾಗಿ ಈ ತಂಡದಲ್ಲಿದ್ದರು. ಪುರುಷರ ಕ್ವಾಡ್ರಾಪಲ್ ಸ್ಕಲ್‌ ಸ್ಪರ್ಧೆ ಯಲ್ಲೂ ತಂಡದ (ಕುಲ್ವಿಂದರ್ ಸಿಂಗ್‌, ನವದೀಪ್ ಸಿಂಗ್, ಸತ್ನಾಮ್ ಸಿಂಗ್‌ ಮತ್ತು ಜೇಕರ್ ಖಾನ್‌) ಉತ್ತಮ ಸಮನ್ವಯದಿಂದ ಚಿನ್ನ ಒಲಿಯಿತು.
  • ಭಾರಿ ಸುಂಕ: ಟ್ರಂಪ್ ಎಚ್ಚರಿಕೆ: ತೈಲ ಖರೀದಿ ಹೆಚ್ಚಳ

ಸಂದರ್ಭ: 2022ರಲ್ಲಿ ಉಕ್ರೇನ್ಮೇಲೆ ರಷ್ಯಾ ಸಮರ ಸಾರಿದ ಬಳಿಕ ಭಾರತವು ರಷ್ಯಾದಿಂದ ಖರೀದಿಸುವ ಕಚ್ಚಾತೈಲದ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.

  • 2025ರ ಮೊದಲ ಒಂಬತ್ತು ತಿಂಗಳಲ್ಲಿ ರಷ್ಯಾದಿಂದ ಪ್ರತಿದಿನ 19 ಲಕ್ಷ ಬ್ಯಾರಲ್‌ನಷ್ಟು ತೈಲ ಖರೀದಿಸಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಹೇಳಿದೆ. ಆಂದರೆ, ಈ ಅವಧಿಯಲ್ಲಿ ರಷ್ಯಾದ ಒಟ್ಟು ರಫ್ತಿನ ಶೇ 40ರಷ್ಟು ತೈಲ ಭಾರತಕ್ಕೆ ಬಂದಿದೆ.
  • ಉಕ್ರೇನ್‌ ಸೇನೆಯು ರಷ್ಯಾದ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿಯನ್ನು ಹೆಚ್ಚಿಸಿದೆ. ಇದರ ನಡುವೆಯೇ ಭಾರತದ ಮೇಲೆ ಅಮೆರಿಕದ ಒತ್ತಡ ಬಂದಿದೆ.
  • ತಾಯಂದಿರ ಮರಣ ದರ ಇಳಿಸಲು ಅಭಿಯಾನ

ಸಂದರ್ಭ: ರಾಜ್ಯದಲ್ಲಿ ತಡೆಗಟ್ಟಬಹುದಾದ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಆರೋಗ್ಯ ಇಲಾಖೆಯು ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಸಂಬಂಧ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್) ಬಲವರ್ಧನೆ, ಉಪಕರಣಗಳ ಖರೀದಿ ಸೇರಿ ವಿವಿಧ ಕ್ರಮಗಳಿಗೆ ₹139 ಕೋಟಿ ಅನುದಾನ ಬಳಸಿಕೊಳ್ಳಲು ಅನುಮೋದನೆ ದೊರೆತಿದೆ.

  • ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಇಳಿಮುಖವಾಗಿವೆ. 2024–25ನೇ ಸಾಲಿನಲ್ಲಿ ರಾಜ್ಯದಲ್ಲಿ 9.31 ಲಕ್ಷ ಹೆರಿಗೆಗಳಾಗಿದ್ದು, 530 ತಾಯಂದಿರ ಮರಣ ಪ್ರಕರಣ ವರದಿಯಾಗಿದೆ. ಈ ಸಾವಿನ ನಿಖರ ಕಾರಣ ತಿಳಿಯಲು ಸಾವಿನ ಲೆಕ್ಕಗಳ ವರದಿ (ಡೆತ್ ಆಡಿಟ್) ಸಿದ್ಧಪಡಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
  • ರಕ್ತಸ್ರಾವ, ಗರ್ಭಪಾತ, ಅಧಿಕ ರಕ್ತದೊತ್ತಡ ಸೇರಿ ವಿವಿಧ ಕಾರಣಗಳಿಂದ ತಾಯಂದಿರ ಮರಣ ವರದಿ ಆಗುತ್ತಿದ್ದು, ಶೇ 70 ರಷ್ಟು ಪ್ರಕರಣಗಳಲ್ಲಿ ಮರಣವನ್ನು ತಡೆಯಬಹುದಾಗಿದೆ. ಪ್ರಸವಪೂರ್ವ ಮತ್ತು ಪ್ರಸವ ನಂತರದ ಆರೈಕೆಯ ಗುಣಮಟ್ಟ ಸುಧಾರಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದೆ.
  • ಗರ್ಭಿಣಿಯರಲ್ಲಿ ಮತ್ತು ಪ್ರಸೂತಿ ವೇಳೆಯಲ್ಲಿನ ತೀವ್ರತರಹದ ರಕ್ತಸ್ರಾವ ತಡೆಗಟ್ಟಲು, ಚಿಕಿತ್ಸೆ ನೀಡಲು ಅಗತ್ಯ ಇರುವ ಉಪಕರಣಗಳ ಖರೀದಿ, ಹಾಸಿಗೆಗಳ ಹೆಚ್ಚಳ, ಆಸ್ಪತ್ರೆಗಳ ಮೇಲ್ದರ್ಜೆ, ಮೇಲ್ವಿಚಾರಣೆ ಸೌಲಭ್ಯ, ವಿಶ್ರಾಂತಿ ಕೊಠಡಿ, ಸಹಾಯವಾಣಿ ಸೇರಿ ವಿವಿಧ ವ್ಯವಸ್ಥೆಗೆ ಅನುದಾನ ಹಂಚಿಕೆ ಮಾಡಲಾಗಿದೆ.  
  • ‘₹50 ಸಾವಿರ ಕೋಟಿ ವಿದೇಶಿ ಹೂಡಿಕೆ

ಸಂದರ್ಭ: ದೇಶದ ಹಣಕಾಸು ಮತ್ತು ಬ್ಯಾಂಕಿಂಗ್ ವಲಯಗಳಲ್ಲಿ ₹50 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡುವ ಯೋಜನೆಯನ್ನು ವಿದೇಶಿ ಹೂಡಿಕೆದಾರರು ಕಳೆದ ಕೆಲವು ತಿಂಗಳುಗಳಲ್ಲಿ ಪ್ರಕಟಿಸಿದ್ದಾರೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.‌

  • ಜಾಗತಿಕ ಮಟ್ಟದಲ್ಲಿ ಹಲವು ಸವಾಲುಗಳು ಎದುರಾಗುತ್ತಿದ್ದರೂ ಭಾರತವು ಹೂಡಿಕೆಯ ಓಯಸಿಸ್‌ನಂತೆ ಕಾಣುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಭಾರತವು ಆದ್ಯತೆಯ ಹೂಡಿಕೆ ತಾಣವಾಗಿ ಮುಂದೆ ಬರುತ್ತಿದೆ ಎಂದು ಹೇಳಿದ್ದಾರೆ.
  • ಅಸ್ಥಿರತೆಯ ಕಾಲಘಟ್ಟದಲ್ಲಿಯೂ ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್ಡಿಐ) ಹರಿವು ಚೆನ್ನಾಗಿಯೇ ಇದೆ. ಎಫ್ಡಿಐನಲ್ಲಿನ ಹೆಚ್ಚಳವು ದೇಶದ ಅರ್ಥ ವ್ಯವಸ್ಥೆಯು ಹೂಡಿಕೆದಾರರಿಗೆ ಹೆಚ್ಚೆಚ್ಚು ಆಕರ್ಷಕವಾಗಿ ಕಾಣುತ್ತಿದೆ ಎಂಬುದನ್ನು ಹೇಳುತ್ತಿದೆ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.
  • ಏಷ್ಯನ್ಯೂತ್ಗೇಮ್ಸ್‌: ಭಾರತಕ್ಕೆ ಎರಡು ಪದಕ

ಸಂದರ್ಭ: ಹದಿನಾಲ್ಕು ವರ್ಷದ ಕನಿಷ್ಕಾ ಬಿಧುರಿ ಮತ್ತು ಅರವಿಂದ್ ಅವರು ಏಷ್ಯನ್ ಯೂತ್ ಗೇಮ್ಸ್ ಕುರಾಶ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.

  • ಕನಿಷ್ಕಾ ಅವರು ಬಾಲಕಿಯರ 52 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 0–3ರಿಂದ ಉಜ್ಬೇಕಿಸ್ತಾನದ ಕರಿಮೋವಾ ಮುಬಿನಾಬೋನುಗೆ ಅವರಿಗೆ ಮಣಿದು, ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
  • ಇದಕ್ಕೂ ಮೊದಲು ಸೆಮಿಫೈನಲ್‌ ನಲ್ಲಿ ಕನಿಷ್ಕಾ 10–0 ಅಂತರದಿಂದ ಜಲಲೋದ್ದೀನ್ ಸೆಟಾಯೇಶ್ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಖುಂಡಿ ವಾರಾಚಯಾ ಎದುರು ಗೆಲುವು ಸಾಧಿಸಿದ್ದರು.
  • ಬಾಲಕರ 83 ಕೆ.ಜಿ. ವಿಭಾಗದಲ್ಲಿ ಅರವಿಂದ ಅವರು ಕಂಚಿನ ಪದಕದ ಹೋರಾಟದಲ್ಲಿ 10–0ಯಿಂದ ದವ್ಲಾಟ್ಜೋಡಾ ವಿರುದ್ಧ ಗೆಲುವು ಸಾಧಿಸಿದರು. ಸೆಮಿಫೈನಲ್‌ನಲ್ಲಿ ಅರವಿಂದ 0–10ರಿಂದ ಉಜ್ಬೇಕಿ ಸ್ತಾನದ ಗೋಲಿಬೊವ್ ಶೋಹ್ಜಾ ಹೋನ್ ವಿರುದ್ಧ ಸೋತಿದ್ದರು.
  • 15 ವರ್ಷದ ಖುಷಿ ಭಾನುವಾರ ಬಾಲಕಿಯರ 70 ಕೆ.ಜಿ. ಕುರಾಶ್ ಸ್ಪರ್ಧೆಯಲ್ಲಿ ಕಂಚಿನ ಪದಕದೊಂದಿಗೆ ಭಾರತದ ಪರ ಮೊದಲ ಪದಕ ಗೆದ್ದಿದ್ದರು.
  • ಇದೇ 31ರವರೆಗೆ ನಡೆಯಲಿರುವ ಕೂಟದಲ್ಲಿ 222 ಮಂದಿಯ ಭಾರತ ಅಥ್ಲೀಟುಗಳ ತಂಡ ಭಾಗವಹಿಸುತ್ತಿದೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಮಹಿಳೆಯರಿದ್ದಾರೆ.
  • ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ ದತ್‌ ಅವರು ತಂಡದ ಷೆಫ್‌–ಡಿ– ಮಿಷನ್ ಆಗಿದ್ದಾರೆ.

  • ವಿಷವನ್ನು ಸೋಸೋಣ ಬನ್ನಿ!

ಸಂದರ್ಭ: ಪರಿಸರ ಸಮಸ್ಯೆಗಳಲ್ಲಿ ಕುಡಿಯುವ ನೀರಿನ ಮಾಲಿನ್ಯ ಹಾಗೂ ಕೊಳಚೆ ನೀರಿನ ಸಂಸ್ಕರಣೆ ಪ್ರಮುಖವಾದವು. ನದಿ, ಕೊಳ, ಕೆರೆ, ಸಾಗರಗಳಲ್ಲದೆ, ಅಂತರ್ಜಲಮೂಲಗಳೂ ಮಲಿನವಾಗಿವೆ. ಮಾಲಿನ್ಯಗಳಲ್ಲಿಪರ್ಪ್ಲೂರೋಆಲ್ಕೈಲ್ ಮಾಲಿನ್ಯವೂ ಒಂದು.

  • ನಾವು ನಿತ್ಯವೂ ಬಳಸುವ ಹಲವಾರು ವಸ್ತುಗಳಿಂದ ಸೋರುವ ಈ ಬಗೆಯ ರಾಸಾಯನಿಕಗಳು ಬಡಪೆಟ್ಟಿಗೆ ನಾಶವಾಗುವುದಿಲ್ಲ. ಇಂತಹ ಶಾಶ್ವತ ಮಲಿನಕಗಳನ್ನೂ ನೀರಿನಿಂದ ಹೊರ ತೆಗೆದು ಶುಚಿಗೊಳಿಸುವ ಹೊಸ ವಿಧಾನವೊಂದನ್ನು ದಕ್ಷಿಣ ಕೊರಿಯಾದ ಕೊರಿಯಾ ಅಡ್ವಾನ್ಸಡ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯ ಸೋಟೆ ಕಾಂಗ್‌ ಮತ್ತು ಸಂಗಡಿಗರು ರೂಪಿಸಿದ್ದಾರಂತೆ.
  • ನೀರು ಹಾಗೂ ಕೊಳಚೆ ನೀರಿನಲ್ಲಿ ಇರುವ ಪರ್‌ಫ್ಲೂರೋಆಲ್ಕೈಲ್‌ ಹಾಗೂ ಪಾಲಿಫ್ಲೂರೋಆಲ್ಕೈಲ್‌ ರಾಸಾಯನಿಕಗಳನ್ನು ಸಾವಿರ ಪಟ್ಟು ಹೆಚ್ಚು ಹಾಗೂ ನೂರು ಪಟ್ಟು ವೇಗವಾಗಿ ಈ ವಿಧಾನ ಶುಚಿಗೊಳಿಸಲಿದೆ.
  • ಪರ್ಫ್ಲೂರೋಆಲ್ಕೈಲ್‌’ ಹಾಗೂಪಾಲಿಫ್ಲೂರೋ ಆಲ್ಕೈಲ್’ ಎನ್ನುವವು ವಿಶಿಷ್ಟ ರಾಸಾಯನಿಕಗಳು. ‘ಪಿಎಫ್‌ಎ’ ಎಂದು ಚುಟುಕಾಗಿ ಕರೆಸಿಕೊಳ್ಳುವ ಇವು ಫ್ಲೂರೀನಿನ ಜೊತೆಗೆ ಇಥಿಲೀನಿನಂತಹ ಅಣುಗಳು ಬೆಸೆದುಕೊಂಡು ರೂಪುಗೊಂಡ ರಾಸಾಯನಿಕಗಳ ವರ್ಗ.
  • ಈ ವರ್ಗದಲ್ಲಿರುವ ರಾಸಾಯನಿಕಗಳು ನೀರಿನಂತಹ ದ್ರವಗಳಿಂದ, ಗಟ್ಟಿಯಾದ ಅಂಟುಗಳವರೆಗೂ ಹಲವು ರೀತಿಯಲ್ಲಿ ರೂಪುಗೊಳ್ಳಬಲ್ಲವು. ನಾವು ನಿತ್ಯವೂ ಬಳಸುವ ಹಲವಾರು ವಸ್ತುಗಳಲ್ಲಿ ಇವು ಬೆರೆತಿರುತ್ತವೆ. ಉದಾಹರಣೆಗೆ, ಅಡುಗೆಮನೆಯಲ್ಲಿ ಬಳಸುವ ನಾನ್‌ ಸ್ಟಿಕ್‌ ಪಾತ್ರೆಗಳಿಗೆ ಹಚ್ಚಿರುವ ನಯವಾದ ಲೇಪಗಳಲ್ಲಿ, ಚಾಟ್‌ ಅಂಗಡಿಗಳಿಂದ ತರುವ ತಿನಿಸುಗಳನ್ನು ಪ್ಯಾಕ್‌ ಮಾಡಿದ ಪೇಪರ್‌ ಪ್ಯಾಕಿನ ಒಳಭಾಗದಲ್ಲಿನ ತೇವ ಅಂಟದ ನಯವಾದ ಲೇಪಗಳಲ್ಲಿ, ಕಲೆಗಳು ಹತ್ತದಂತಹ ನೆಲಹಾಸು ಕಂಬಳಿ, ಉಡುಪುಗಳಲ್ಲಿ, ನೀರಿನ ಕೊಳವೆಗಳನ್ನು ಅಂಟಿಸುವ ಗೋಂದುಗಳಲ್ಲಿ, ಬೆಂಕಿಯನ್ನು ಆರಿಸುವ ಪೋಮುಗಳಲ್ಲಿ, ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ ಈ ವರ್ಗದ ರಾಸಾಯನಿಕಗಳು ಬಳಕೆಯಾಗುತ್ತವೆ.
  • ಇಷ್ಟೊಂದು ಉಪಯುಕ್ತವಾಗಿರುವ ಈ ರಾಸಾಯನಿಕಗಳಲ್ಲೊಂದು ದೋಷವಿದೆ. ಇವು ಒಮ್ಮೆ ನೀರು–ಮಣ್ಣುಗಳನ್ನು ಸೇರಿದರೆ ಹಾಗೆಯೇ ಉಳಿದುಬಿಡುತ್ತವೆ. ಬೇರೆ ವಸ್ತುಗಳು ಬಿಸಿಲು, ನೀರು, ಆಕ್ಸಿಜನ್‌ನಿಂದಾಗಿ ಶಿಥಿಲವಾಗಬಹುದು. ಆದರೆ ಪರ್‌ಫ್ಲೂರೋಆಲ್ಕೈಗಳು ಹಾಗಲ್ಲ. ಇವು ಸುಲಭವಾಗಿ ಬೇರೆ ರಾಸಾಯನಿಗಳ ಜೊತೆಗೆ ಪ್ರತಿಕ್ರಿಯಿಸುವುದಿಲ್ಲ, ಕೊಳೆಯುವುದಿಲ್ಲ, ಸುಟ್ಟರೆ ಬೂದಿಯೂ ಆಗುವುದಿಲ್ಲ. ಹೀಗಾಗಿ ನಿತ್ಯ ಬಳಸುವ ಎಲ್ಲ ವಸ್ತುಗಳಿಂದಲೂ ಸ್ವಲ್ಪ, ಸ್ವಲ್ಪವೇ ಸೋರಿ ಎಲ್ಲ ಜಲಮೂಲಗಳಲ್ಲೂ, ಆಹಾರಮೂಲ ಗಳಲ್ಲಿಯೂ ಬೆರೆತಿರುತ್ತವೆ.
  • ಮಾಲಿನ್ಯವೊಂದೇ ಸಮಸ್ಯೆ ಅಲ್ಲ. ಮಾಲಿನ್ಯದಿಂದ ಹೊರಸೂಸುವ ರಾಸಾಯನಿಕಗಳು ದೇಹದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ ಎನ್ನುವುದು ಆತಂಕದ ವಿಷಯ. ಪರ್‌ಫ್ಳೂರೋಆಲ್ಕೈಲುಗಳ ಸೇವನೆಯಿಂದಾಗಿ ಲಿವರ್‌ನ ಚಟುವಟಿಕೆಗಳಲ್ಲಿ ವ್ಯತ್ಯಾಸ ಉಂಟಾಗಬಹುದು. ದೇಹದ ರೋಗನಿರೋಧಕ ಶಕ್ತಿ ಕುಗ್ಗಬಹುದು. ಕೆಲವು ಕ್ಯಾನ್ಸರ್‌ಗಳು ಕೂಡ ಉಂಟಾಗುತ್ತವೆಂದು ಸುಳಿವುಗಳು ತಿಳಿಸಿವೆ. ಅಮೆರಿಕದಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಅಧ್ಯಯನವೊಂದು, ಒಂದು ಬಗೆಯ ಲ್ಯೂಕೀಮಿಯ ಹಾಗೂ ವಿಲ್ಮ್ಸ್‌ ಟ್ಯೂಮರ್‌ ಎನ್ನುವ ಕ್ಯಾನ್ಸರಿಗೆ ತುತ್ತಾಗಿದ್ದ ಎಳೆಯರ ತಾಯಂದಿರು ಬಸುರಾಗಿದ್ದಾಗ ಪರ್‌ಫ್ಲೂರೋಆಕ್ಟೇನ್‌ ಸಲ್ಫೂನಿಕ್‌ ಆಮ್ಲ ಹಾಗೂ ಪರ್‌ಫ್ಲೂರೋಆಕ್ಟನಾಯಿಕ್‌ ಆಮ್ಲಗಳ ಪ್ರಮಾಣ ಹೆಚ್ಚಿದ್ದ ನೀರನ್ನು ಸೇವಿಸಿದ್ದರು ಎಂದು ತಿಳಿಸಿದೆ.
  • ಅತ್ಯಲ್ಪ ಪ್ರಮಾಣದಲ್ಲಿಯೂ ಇಂತಹ ರಾಸಾಯನಿಕಗಳ ಸೇವನೆ ಅಪಾಯಕಾರಿಯಾಗಿದ್ದರಿಂದ ಕುಡಿಯುವ ನೀರಿನಲ್ಲಿ ಅವುಗಳ ಪ್ರಮಾಣವನ್ನು ಮಿತಿಗೊಳಿಸಲಾಗಿದೆ. ಪಿಎಫ್‌ಎ ಇರುವಂತಹ ನೀರನ್ನು ಶುಚಿಗೊಳಿಸಿ ಸರಬರಾಜು ಮಾಡಬೇಕೆನ್ನುವ ನಿಯಮವೂ ಇದೆ. ಈ ರಾಸಾಯನಿಕಗಳು ನೀರಿನ ಮೂಲಕ ಹಸುವಿನ ಹಾಲು, ತಾಯಿಯ ಹಾಲಿನಲ್ಲಿಯೂ ಸೇರಿಕೊಳ್ಳುತ್ತವೆ. ಮಕ್ಕಳು ಹಾಗೂ ದೊಡ್ಡವರ ರಕ್ತದಲ್ಲಿಯೂ ಇವುಗಳನ್ನು ಪತ್ತೆ ಮಾಡಲಾಗಿದೆ.
  • ಕುಡಿಯುವ ನೀರನ್ನು ಈ ವಿಷವಸ್ತುಗಳಿಂದ ಮುಕ್ತಗೊಳಿಸಲು ಹಲವು ವಿಧಾನಗಳನ್ನು ಬಳಸಲಾಗುತ್ತಿದೆ. ಪ್ರಮುಖವಾಗಿ ಆಕ್ಟಿವೇಟೆಡ್‌ ಕಾರ್ಬನ್‌ ಅಥವಾ ಅತಿ ಕ್ರಿಯಾಶೀಲವಾದ ಇದ್ದಿಲಿನಿಂದ ಅವನ್ನು ಪ್ರತ್ಯೇಕಿಸಬಹುದು. ಅಥವಾ ರಿವರ್ಸ್‌ ಆಸ್ಮಾಸಿಸ್‌ ತಂತ್ರದ ಮೂಲಕ, ಅತಿ ಸೂಕ್ಷ್ಮವಾದ ಕೃತಕ ಪೊರೆಗಳನ್ನು ಬಳಸಿ ನೀರನ್ನು ಶುಚಿ ಗೊಳಿಸಬಹುದು. ಆದರೆ ಇವು ಅಲ್ಪ ಪ್ರಮಾಣದಲ್ಲಿ ಆಗಬಹುದೇ ಹೊರತು, ಕೊಳಚೆ ನೀರಿನಲ್ಲಿರುವಷ್ಟು ಪ್ರಮಾಣದ ಪಿಎಫ್‌ಎಗಳನ್ನು ಈ ವಿಧಾನಗಳಿಂದ ಶುಚಿಗೊಳಿಸುವುದು ಕಷ್ಟ. ಈ ನಿಟ್ಟಿನಲ್ಲಿ ಹೊಸದೊಂದು ವಿಧಾನದ ಅಗತ್ಯವಿತ್ತು. ಕಾಂಗ್‌ ಮತ್ತು ಸಂಗಡಿಗರು ಅದನ್ನು ಈಗ ಒದಗಿಸಿದ್ದಾರೆ.
  • ಕಾಂಗ್‌ ತಂಡವು ತಾಮ್ರ ಹಾಗೂ ಅಲ್ಯುಮಿನಿಯಂ ಲೋಹಗಳ ನೈಟ್ರೇಟ್‌ಗಳು ಹೈಡ್ರಾಕ್ಸೈಡ್‌ಗಳ ಜೊತೆಗೆ ಬೆಸೆದುಕೊಂಡು, ಪದರ ಪದರವಾಗಿ ಇರುವಂತಹ ವಿಶೇಷ ರಾಸಾಯ ನಿಕವನ್ನು ತಯಾರಿಸಿದ್ದಾರೆ. ಈ ವರ್ಷ ರಸಾಯನಶಾಸ್ತ್ರದ ನೊಬೆಲ್‌ ಪಾರಿತೋಷಕವನ್ನು ಗಳಿಸಿದ ಸಂಶೋಧನೆಗಳ ಫಲ ಇದು ಎನ್ನಬಹುದು. ಈ ಲೋಹ ಹಾಗೂ ಸಾವಯವ ಬೆರೆತ ರಾಸಾಯನಿಕಗಳಲ್ಲಿ ಆಕ್ಟಿವೇಟೆಡ್‌ ಕಾರ್ಬನ್‌ನಲ್ಲಿ ಇರುವುದ ಕ್ಕಿಂತಲೂ ಹೆಚ್ಚು ರಂಧ್ರಗಳೂ, ಪಿಎಫ್‌ಎ ಅಣುಗಳು ಕೂಡಲು ಅವಕಾಶಗಳೂ ಇರುತ್ತವೆ. ಪ್ರತಿ ಗ್ರಾಂ ವಸ್ತುವೂ ಗರಿಷ್ಠ ಸುಮಾರು 1.72 ಗ್ರಾಂನಷ್ಟು ಪಿಎಫ್‌ಎಯನ್ನು ಅಂಟಿಸಿಕೊಳ್ಳಬಹುದು. ಅದುವೂ ಇದನ್ನು ಬಿಸಿ ಮಾಡಬೇಕಿಲ್ಲ. ನೀರಿನ ಆಮ್ಲೀಯತೆಯಲ್ಲಿಯೇ ಇಷ್ಟು ಪಿಎಫ್‌ಎಯನ್ನು ಅದು ಹೀರಿಕೊಳ್ಳುತ್ತದೆ. ಅಂಟಿಕೊಂಡ ಪಿಎಫ್‌ಎಯನ್ನು ಕಾಯಿಸಿ ಬೇರ್ಪಡಿಸಿ, ಅದರಲ್ಲಿರುವ ಫ್ಲೂರೀನನ್ನು ಕಿತ್ತೊಗೆದು, ಸುರಕ್ಷಿತ ರಾಸಾಯನಿಕವನ್ನಾಗಿಸಬಹುದು. ಹೀಗೆ ಕೇವಲ ನೀರನ್ನು ಶುಚಿಗೊಳಿಸುವುದಷ್ಟೆ ಅಲ್ಲ, ಪಿಎಫ್‌ಎಯನ್ನೂ ನಾಶಗೊಳಿಸುವ ವಿಧಾನ ಇದು ಎನ್ನುತ್ತಾರೆ, ಕಾಂಗ್‌.
  • ಪಿಎಫ್‌ಎಯನ್ನು ಕಿತ್ತೊಗೆದ ನಂತರ ಅದು ಮತ್ತೆ ಮೊದಲಿನಂತೆಯೇ ಆಗುತ್ತದೆ. ಇನ್ನಷ್ಟು ಪಿಎಫ್‌ಎ ಅಂಟಿಸಿಕೊಳ್ಳಲು ಸಿದ್ಧವಾಗುತ್ತದೆ. ಹೀಗೆ ಆರೇಳು ಬಾರಿ ಈ ವಸ್ತುವನ್ನು ಬಳಸಿ ನೀರನ್ನು ಶುಚಿಗೊಳಿಸಬಹುದು. ತಾವೇ ನಿರ್ದಿಷ್ಟ ಪ್ರಮಾಣದ ಪಿಎಫ್‌ಎ ಬೆರೆಸಿ ಮಲಿನಗೊಳಿಸಿದ ನೀರನ್ನು ಈ ವಸ್ತುವಿನ ಮೂಲಕ ಸೋಸಿ, ಎಷ್ಟು ಶುಚಿಗೊಳ್ಳುತ್ತದೆ ಎಂದು ಗಮನಿಸಿದ್ದಾರೆ. ಒಂದು ನಿಮಿಷದಲ್ಲಿ ಅರ್ಧ ಲೀಟರ್‌ ನೀರಿನಿಂದ ಏಳುನೂರು ಮಿಲಿಗ್ರಾಮಿನಷ್ಟು ಪಿಎಫ್‌ಎಯನ್ನು ಈ ವಸ್ತು ಶುಚಿಗೊಳಿಸುತ್ತದೆ. ಹೀಗೆ ಸೋಸುವ ಹಾಗೂ ಅನಂತರ ಬಿಸಿ ಮಾಡಿ ಪಿಎಫ್‌ಎ ಬೇರ್ಪಡಿಸುವ ಮೂಲಕ, ನಿರಂತರವಾಗಿ ನೀರನ್ನು ಶುಚಿಗೊಳಿಸಬಹುದು.
  • ಓದಿನ ಓಘಕ್ಕೆ ಓಗೊಟ್ಟ ಓಮರ್ಯಾಘಿ

ಸಂದರ್ಭ: ಅದು ನಮ್ಮದೇ ಕಾಶ್ಮೀರವಾಗಲೀ, ದೂರದ ಗಾಜಾ ಆಗಲೀ, ಪರವಿರೋಧಗಳ ನಡುವೆ, ಕುತಂತ್ರಕುಯುಕ್ತಿಗಳ ನಡುವೆ, ಯಾರದ್ದೋ ಹಟಕ್ಕೆ, ಯಾರದ್ದೋ ಮೂಲಭೂತವಾದಕ್ಕೆ ಸಿಲುಕಿ ಸಮಸ್ಯೆ ಅನುಭವಿಸುವವರು ಸಾಮಾನ್ಯ ಜನರೇ.

  • ಗಾಜಾದಲ್ಲಿ ಈಗಿರುವಂತಹ ಯುದ್ಧದ ಪರಿಸ್ಥಿತಿಯಲ್ಲಿಯೇ ಗುಳೇ ಹೊರಟ ಕುಟುಂಬದ ಸಾಮಾನ್ಯ ಹುಡುಗನೊಬ್ಬ, ಇಂದು ರಸಾಯನnವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಕಥೆಯಿದು.
  • ವರ್ಷದ ರಸಾಯನವಿಜ್ಞಾನ ನೊಬೆಲ್ ಸಿಕ್ಕಿದ್ದುಲೋಹಸಾವಯವ ಚೌಕಟ್ಟುಗಳ ಬಗೆಗಿನ ಸಂಶೋಧನೆಗೆ ಎಂಬುದು ನಿಮಗೀಗಾಲೇ ತಿಳಿದಿರಬಹುದು. ಅದಕ್ಕೆ ಮುನ್ನುಡಿ ಬರೆದದ್ದು ರಿಚರ್ಡ್ ರಾಬ್ಸನ್. ಆದರೆ ಅವರ ಸಿದ್ಧಾಂತಕ್ಕೆ ಅನ್ವಯಿಕತೆ ಮತ್ತು ಪ್ರಾಯೋಗಿಕತೆಗಳನ್ನು ತಂದದ್ದು ಓಮರ್ ಯಾಘಿ ಮತ್ತು ಸುಸುಮು ಕಿಟಾಗವಾ ಎಂಬ ಇಬ್ಬರು ರಸಾಯನವಿಜ್ಞಾನಿಗಳು. ಓಮರ್ ಯಾಘಿ ಅವರ ಬದುಕು ವಿಜ್ಞಾನದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಮುಂದಿನ ಪೀಳಿಗೆಗೂ ಸ್ಫೂರ್ತಿದಾಯಕ.
  • ಓಮರ್ ಯಾಘಿಯವರು 1965 ಫೆಬ್ರುವರಿ 9ರಂದು ಪ್ಯಾಲೆಸ್ತೀನ್ ಮೂಲದ ಯುದ್ಧನಿರಾಶ್ರಿತ ಕುಟುಂಬದಲ್ಲಿ ಜನಿಸಿದರು. ವಿದ್ಯುತ್ತು, ಸ್ವಚ್ಛವಾದ ಕುಡಿಯುವ ನೀರಿನಂತಹ ಮೂಲಭೂತ ಸಂಪನ್ಮೂಲಗಳೂ ಲಭ್ಯವಿಲ್ಲದ ಪರಿಸ್ಥಿತಿ ಯಲ್ಲಿ ಓಮರ್ ತಮ್ಮ ಬಾಲ್ಯ ಕಳೆದರು. ದನದ ಕೊಟ್ಟಿಗೆಯಲ್ಲಿ ಹತ್ತಾರು ಮಕ್ಕಳ ಜೊತೆ ಮಲಗಬೇಕಿದ್ದ ಪರಿಸ್ಥಿತಿ. ಇಂಥ ಕಷ್ಟಗಳ ನಡುವೆಯೇ ತಮ್ಮ ತಂದೆಯ ಪ್ರೋತ್ಸಾಹ ಓಮರ್ ಅವರನ್ನು ಓದಿನ ಕಡೆಗೆ ಹೊರಳಿಸಿತು. ಕೆಳಕ್ಕೆಳೆಯುವ ಕೆಸರಿನೊಳಗೆ ಇದ್ದುಕೊಂಡೂ ಮೇಲಕ್ಕೇಳುವ ಉಮೇದಿಯಲ್ಲಿ ಅರಳುವ ಕಮಲದಂತೆ, ‘ತಾನು ಓದಬೇಕು’ ಎಂಬ ಹಂಬಲ ಓಮರ್ ಅವರನ್ನು ಇತರರಿಗಿಂತ ಭಿನ್ನವಾಗಿ ಬೆಳೆಯುವಂತೆ ಮಾಡಿತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲೇ ವಿಜ್ಞಾನದ ಬಗ್ಗೆ ಮತ್ತು ಕಲಿಕೆಯ ಬಗ್ಗೆ ಇವರಿಗಿದ್ದ ಆಸಕ್ತಿಯ ಮೇರೆಗೆ, ಓಮರ್ ಅವರ ತಂದೆ ಈ 15 ವರ್ಷದ ಹುಡುಗನನ್ನು ಅಮೆರಿಕಕ್ಕೆ ಮುಟ್ಟಿಸಿದರು. ಕಷ್ಟದ ಬದುಕನ್ನೇ ಉಂಡು ಬಂದಿದ್ದ ಓಮರ್ ಅವರಿಗೆ, ಅಮೆರಿಕದಲ್ಲಿ ದಿನನಿತ್ಯದ ಅನಿವಾರ್ಯ ಅಸೌಕರ್ಯಗಳು ಕಂಗೆಡಿಸಲಿಲ್ಲ. ಅವರ ಲಕ್ಷ್ಯವೇನಿದ್ದರೂ ಓದಿನ ಕಡೆಗೆ, ರಸಾಯನವಿಜ್ಞಾನದ ಅದ್ಭುತಲೋಕದ ಕಡೆಗೆ. ಹಡ್ಸನ್ ವ್ಯಾಲಿ ಸಾಮುದಾಯಿಕ ಕಾಲೇಜು, ನ್ಯೂಯಾರ್ಕ್ ರಾಜ್ಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಮುಂದುವರೆಸುತ್ತಾ, ಇಲಿನಾಯ್‌ ವಿಶ್ವವಿದ್ಯಾಲಯದಲ್ಲಿ ರಸಾಯನ ವಿಜ್ಞಾನದ ಪದವಿ ಪಡೆದರು. ನೀರನ್ನು ಹೊರತು ಪಡಿಸಿ, ಇತರ ಮಾಧ್ಯಮದಲ್ಲಿ ‘ಪಾಲಿ–ಆಕ್ಸೋವಾನಡೇಟ್’ಗಳ ಸಂಶ್ಲೇಷಣೆ, ರಚನೆ, ರಾಸಾಯನಿಕತೆಯ ಸಾಧ್ಯತೆಯ ಬಗ್ಗೆ ಸಂಶೋಧನೆ ನಡೆಸಿ 1990ರಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆದರು.
  • ಅರಿಝೋನಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಓಮರ್, ನಂತರ ಮಿಶಿಗನ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಂತಹ ಅನೇಕ ಪ್ರತಿಷ್ಠಿತ ವಿದ್ಯಾಲಯಗಳ ಭಾಗವಾಗಿ, ಪ್ರಾಧ್ಯಾಪಕರಾಗಿ ಮಾತ್ರವಲ್ಲದೇ, ಕಮಿಟಿಗಳ, ಅಧ್ಯಯನಪೀಠಗಳ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದರು.
  • ಓಮರ್ ಅವರು ಹೆಚ್ಚು ಸಂಶೋಧನೆ ನಡೆಸಿದ್ದು, ‘ರೆಟಿಕ್ಯುಲಾರ್ ಕೆಮಿಸ್ಟ್ರಿ ಎಂಬ ರಸಾಯನವಿಜ್ಞಾನದ ಶಾಖೆಯಲ್ಲಿ. ವಿವಿಧ ಸಾವಯವ ಸಂಯುಕ್ತ ಪದಾರ್ಥಗಳಿಗೆ, ಲೋಹದ ಸಂಯುಕ್ತಗಳಿಗೆ ಪರಮಾಣುಗಳನ್ನು ಸೇರಿಸುವ, ರಾಸಾಯನಿಕ ಬಂಧಗಳನ್ನು ರಚಿಸುವ, ಹೊಸ ರಚನೆಗಳನ್ನು ಸೃಜಿಸುವ ಕ್ರಿಯಾತ್ಮಕ ಶಾಖೆಯಿದು. ಇಲ್ಲಿ ಮೂರು ಆಯಾಮದ ಸ್ಫಟಿಕಗಳ ರಚನೆಗೆ ಪ್ರಾಶಸ್ತ್ಯ; ಅದೇ ನಿಟ್ಟಿನಲ್ಲಿ ಸಂಶೋಧನೆಯಲ್ಲಿ ತೊಡಗಿದ್ದ ಓಮರ್ ಅವರನ್ನು ನೊಬೆಲ್ ಪ್ರಶಸ್ತಿಯ ಹೊಸ್ತಿಲಿಗೆ ತಂದು ನಿಲ್ಲಿಸಿದ್ದು, ಲೋಹ-ಸಾವಯವ ಚೌಕಟ್ಟುಗಳ ಧೃಡತೆಯ ಬಗ್ಗೆ ಅವರ ವಿಶಿಷ್ಟವಾದ ಅನ್ವೇಷಣೆಯೇ!
  • ರಸಾಯನವಿಜ್ಞಾನದ ಭಾಷೆಯಲ್ಲಿ ಕೊಆರ್ಡಿನೇಶನ್ ಪಾಲಿಮರ್ ಎಂಬ ಹೆಸರಿನಿಂದ ಗುರುತಿಸಲಾಗುವ ರಚನೆಗಳಿಗೆ ಭೌತಿಕ ದೃಢತೆ ತಂದುಕೊಡುವುದು ಕಷ್ಟದ ಮಾತೇ ಸರಿ. ಇಲ್ಲಿ ಲೋಹವೂ ಉಂಟು, ಸಾವಯವ ಗುಣ ತಂದುಕೊಡುವ ಇಂಗಾಲವೂ ಉಂಟು; ಜೊತೆಗೆ ಅನೇಕ ಅಯಾನುಗಳ, ಎಲೆಕ್ಟ್ರಾನುಗಳ ಕೊಡು-ಕೊಳ್ಳುವಿಕೆ, ಹಂಚಿಕೊಳ್ಳುವಿಕೆ ಮತ್ತು ಧನಾತ್ಮಕ-ಋಣಾತ್ಮಕ ಚಾರ್ಜ್‌ಗಳ ನರ್ತನ – ಇವೆಲ್ಲದರ ನಡುವೆ ರಾಸಾಯನಿಕ ಕ್ರಿಯಾತ್ಮಕತೆಗೂ ಮೀರಿ ಭೌತಿಕ ದೃಢತೆ ಅತಿ ಮುಖ್ಯವೆನಿಸುತ್ತದೆ. ಹೇಗೆಂದರೆ, ಫಳಫಳ ಪೈಂಟು, ಥಳ ಥಳ ಟೈಲ್ಸು, ಮಿರ ಮಿರ ಮಿಂಚುವ ಒಳಾಂಗಣ ವಿನ್ಯಾಸವೆಲ್ಲವೂ ಇದ್ದು ಮನೆಯ ಭೌತಿಕ ರಚನೆಗೆ, ಬುನಾದಿಗೆ, ಗೋಡೆಗೆ ಬಲವಿಲ್ಲದಿದ್ದರೆ ಪ್ರಯೋಜನವೇನು? ಹಾಗೆಯೇ, ಈ ಲೋಹ-ಸಾವಯವ ಚೌಕಟ್ಟುಗಳು ತಮ್ಮ ರಚನೆಯಿಂದ ಕೈಗಾರಿಕೆಗಳಲ್ಲಿ, ವೈದ್ಯಕೀಯ ಲೋಕದಲ್ಲಿ, ಪ್ರಯೋಗಾಲಯಗಳಲ್ಲಿ ಅನೇಕ ಅನ್ವಯಿಕೆಗಳನ್ನು ಸಾಧ್ಯವಾಗಿಸಬಹುದಾಗಿದ್ದರೂ, ಅದರ ಮೂಲಭೂತ ರಚನೆಗೆ ಭೌತಿಕವಾಗಿ ಬಲವಿಲ್ಲದಿಲ್ಲರೆ ಪ್ರಯೋಜನವೇನು?
  • ಹೀಗಾಗಿ, ಓಮರ್ ಅವರು ಆ ಸಮಸ್ಯೆಯನ್ನು ಪರಿಹರಿಸಲು ಮೂರು ಮುಖ್ಯ ಬದಲಾವಣೆಗಳನ್ನು ತಂದರು. ಈ ಚೌಕಟ್ಟುಗಳನ್ನು ತಯಾರಿಸುವಾಗ, ಲೋಹ ಮತ್ತು ಕಾರ್ಬಾಕ್ಸಿಲೇಟ್ ಅಯಾನುಗಳ ನಡುವೆ ರಾಸಾಯನಿಕ ಬಂಧವನ್ನು ಗಟ್ಟಿಗೊಳಿಸಿದರು. ಸ್ಪಟಿಕೀಕರಣದ ವೇಳೆ ಹೆಚ್ಚುವರಿ ಆಧಾರ ಸ್ತಂಭಗಳಾಗಿ ಲೋಹ-ಕಾರ್ಬಾಕ್ಸಿಲೇಟ್ ಗುಂಪುಗಳನ್ನು ಬಳಸಿದರು. ಈ ಚೌಕಟ್ಟಿನೊಳಗಿರುವ ಪರಮಾಣುಗಳ, ಅಣುಗಳ ನಡುವೆ ಇರುವ ಅಂತರವು, ಹೆಚ್ಚು ರಂಧ್ರ ಮಯವಾಗಿರುವಂತೆ ನೋಡಿಕೊಂಡರು. ಈ ಮೂರೂ ಬದಲಾವಣೆಗಳು ಅಪರಿಮಿತ ಹೊಸ ಸಾಧ್ಯತೆಗಳಿಗೆ ಎಡೆಮಾಡಿಕೊಟ್ಟಿತು. ಇದರಿಂದಾಗಿ ರಿಚರ್ಡ್ ರಾಬ್ಸನ್ ಅವರ ಸಿದ್ಧಾಂತವು 3-ಡಿ ರೂಪವನ್ನು ಪಡೆದು, ಹೊಸ ಅನ್ವಯಿಕೆಗಳಿಗೆ ತೆರೆದುಕೊಂಡಿತು. ವಿಷಾನಿಲ ಸೋರುವಲ್ಲಿ ಅನಿಲದ ಅಣುಗಳನ್ನು ಹಿಡಿದಿಡಲು, ಬಿರುಬಿಸಿಲ ಮರಳುಗಾಡಲ್ಲಿ ಗಾಳಿಯಿಂದ ನೀರನ್ನು ತಯಾರಿಸಲು, ದೇಹದ ನಿರ್ದಿಷ್ಟ ಭಾಗಕ್ಕೆ ಔಷಧವನ್ನು ತಲುಪಿಸಲು ಸಹಾಯಕವಾದ ಲೋಹ-ಸಾವಯವ ಚೌಕಟ್ಟಿಗೆ ಓಮರ್ ಅವರ ಈ ಸಂಶೋಧನೆಯು ಬಲ ತಂದಿದೆ; ಆಧುನಿಕ ಮಾನವನ ಅನೇಕ ಸಮಸ್ಯೆಗಳಿಗೆ ಇದು ಪರಿಹಾರಗಳನ್ನೂ ತಂದಿದೆ.
  • ಕಾಸರಗೋಡು ಚಿನ್ನಾಗೆ ಕಲಾಕಾರ್ಪುರಸ್ಕಾರ

ಸಂದರ್ಭ: ಕುಂದಾಪುರದ ಕಾರ್ವಾಲ್ಮನೆತನ ಹಾಗೂ ಮಾಂಡ್ಸೊಭಾಣ್‌  ಜಂಟಿಯಾಗಿ ನೀಡುವ 21ನೇ ವರ್ಷದ ಕಲಾಕಾರ್ಪುರಸ್ಕಾರಕ್ಕೆ ಕಾಸರಗೋಡು ಚಿನ್ನಾ (ಶ್ರೀನಿವಾಸ ರಾವ್ಎಸ್.‌) ಅವರನ್ನು ಆಯ್ಕೆ ಮಾಡಲಾಗಿದೆ.

  • ಪುರಸ್ಕಾರ ₹50 ಸಾವಿರ ನಗದು ಒಳಗೊಂಡಿದೆ. ನ.2ರಂದು ನಗರದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಂಡ್‌ ಸೊಭಾಣ್‌ ಅಧ್ಯಕ್ಷ ಲುವಿ ಜೆ. ಪಿಂಟೊ ತಿಳಿಸಿದ್ದಾರೆ.
  • ರೂಪಾಯಿ ಮೌಲ್ಯ ಕುಸಿತ ತಡೆಯಲು 7.7 ಬಿಲಿಯನ್ ಡಾಲರ್ ಮಾರಾಟ

ಸಂದರ್ಭ: ವಿನಿಮಯ ದರದ ಏರಿಳಿತವನ್ನು ನಿಯಂತ್ರಿಸಲು ಹಾಗೂ ಡಾಲರ್ಎದುರು ರೂಪಾಯಿ ಮೌಲ್ಯ ಕುಸಿತವನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆಗಸ್ಟ್ತಿಂಗಳಿನಲ್ಲಿ 7.7 ಬಿಲಿಯನ್ಡಾಲರ್ಗಳನ್ನು ಮಾರಾಟ ಮಾಡಿದೆ. ಇದು ರೂಪಾಯಿ ಲೆಕ್ಕದಲ್ಲಿ ₹67,751 ಕೋಟಿ ಆಗುತ್ತದೆ.

  • ಈ ಡಾಲರ್‌ ಮಾರಾಟವು ಜುಲೈ ತಿಂಗಳಿಗೆ ಹೋಲಿಸಿದರೆ ಮೂರು ಪಟ್ಟು ಅಧಿಕ ಎಂದು ಆರ್‌ಬಿಐ ಬುಲೆಟಿನ್ ತಿಳಿಸಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಆರ್‌ಬಿಐ ಡಾಲರ್‌ಗಳನ್ನು ಖರೀದಿಸಿಲ್ಲ ಎಂದು ಸಹ ತಿಳಿಸಿದೆ. ಆಗಸ್ಟ್‌ನಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯ ಶೇ 1.6ರಷ್ಟು ಕುಸಿದಿತ್ತು.
  • ಹೆಚ್ಚಿದ ವ್ಯಾಪಾರ ಬಿಕ್ಕಟ್ಟು, ಜಾಗತಿಕ ಅನಿಶ್ಚಿತತೆ ಮತ್ತು ವಿದೇಶಿ ಬಂಡವಾಳದ ನಿರಂತರ ಹೊರಹರಿವಿನಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ.
  • ಸಿಆರ್ಜೆಡ್ಮಿತಿ ಕಡಿತ ಪ್ರಸ್ತಾವಕ್ಕೆ ವಿರೋಧ

ಸಂದರ್ಭ: ದೇಶದಕರಾವಳಿ ನಿಯಂತ್ರಣ ವಲಯ(ಸಿಆರ್ಜೆಡ್) ಮಿತಿಯನ್ನು ಕಡಿತಗೊಳಿಸುವ ನೀತಿ ಆಯೋಗದ ಪ್ರಸ್ತಾವಕ್ಕೆ ಪರಿಸರ ಪರ ಗುಂಪುಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಪ್ರಧಾನಮಂತ್ರಿ ಕಚೇರಿಯು (ಪಿಎಂಒ) ಮಧ್ಯಪ್ರವೇಶಿಸಿದ್ದು, ಪರಿಸರ ಪರ ಸಂಘಟನೆಗಳು ಎತ್ತಿರುವ ಆಕ್ಷೇಪಗಳ ಕುರಿತು ಗಮನ ಹರಿಸುವಂತೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸೂಚಿಸಿದೆ.

  • ಈ ವಿಚಾರವನ್ನು ಸಚಿವಾಲಯದ ಸಿಆರ್‌ಜೆಡ್‌ ಪರಿಣಾಮ ಮೌಲ್ಯಮಾಪನ ವಿಭಾಗಕ್ಕೆ ಶಿಫಾರಸು ಮಾಡಿರುವುದು ಪಿಎಂಒ ಪೋರ್ಟಲ್‌ನಿಂದ ತಿಳಿದುಬರುತ್ತದೆ.
  • ಕರಾವಳಿ ನಿಯಂತ್ರಣ ವಲಯದ ಮಿತಿಯನ್ನು ಈಗಿನ 500 ಮೀಟರ್ನಿಂದ 200 ಮೀಟರ್ಗೆ ಕಡಿತಗೊಳಿಸುವಂತೆ ನೀತಿ ಆಯೋಗ ಪ್ರಸ್ತಾವ ಮುಂದಿಟ್ಟಿದೆ. ಮುಂಬೈ ಮೂಲದ ಪರಿಸರ ಸಂರಕ್ಷಣೆಗೆ ಹೋರಾಡುವ ಸಂಘಟನೆಗಳಾದ ‘ನ್ಯಾಟ್‌ಕನೆಕ್ಟ್ ಫೌಂಡೇಷನ್’ ಹಾಗೂ ‘ಸಾಗರ ಶಕ್ತಿ’, ಈ ಪ್ರಸ್ತಾವಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿವೆ.
  • ‘ನೀತಿ ಆಯೋಗದ ಈ ಶಿಫಾರಸು ದೇಶದ ಕರಾವಳಿಗಳ ಪರಿಸರಕ್ಕೆ ಮಾರಕ’ ಎಂದು ಹೇಳಿರುವ ಈ ಸಂಘಟನೆಗಳು, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯಪ್ರವೇಶಿಸಬೇಕು ಹಾಗೂ ಆಯೋಗದ ಶಿಫಾರಸನ್ನು ತಿರಸ್ಕರಿಸ ಬೇಕು ಎಂದು ಆಗ್ರಹಿಸಿವೆ.
  • ಕರಾವಳಿ ನಿಯಂತ್ರಣ ವಲಯದ ಮಿತಿಯು ಸದ್ಯ  ‘ಹೈ ಟೈಡ್ಲೈನ್‌'(ಎಚ್ಟಿಎಲ್‌)ನಿಂದ 500 ಮೀಟರ್ ಇದೆ. ಇದನ್ನು 200 ಮೀಟರ್ಗೆ ಕಡಿತಗೊಳಿಸಬೇಕುಎಂದು ನೀತಿ ಆಯೋಗದ ಸದಸ್ಯ ರಾಜೀವ್ ಗೌಬಾ ನೇತೃತ್ವದ ಉನ್ನತಾಧಿಕಾರ ಸಮಿತಿಯು ಸಲಹೆ ನೀಡಿತ್ತು.
  • ಈಗ ಇರುವ ಸಿಆರ್ಜೆಡ್ ಮಿತಿಯು ಅಗತ್ಯಕ್ಕಿಂತ ಹೆಚ್ಚು ನಿರ್ಬಂಧ ಹೇರುತ್ತದೆ. ಸಣ್ಣ ಪ್ರಮಾಣದ ಪ್ರವಾಸೋದ್ಯಮ, ಮೀನುಗಾರಿಕೆ, ಹೋಂ ಸ್ಟೇಗಳ ಕಾರ್ಯಾಚರಣೆ ಹಾಗೂ ಕರಾವಳಿ ಉದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳುವುದಕ್ಕೆ ಇದರಿಂದ ಅಡ್ಡಿ ಉಂಟಾಗಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.

ನ್ಯಾಟ್ಕನೆಕ್ಟ್ಫೌಂಡೇಷನ್ ವಾದವೇನು?

  • ಸಿಆರ್‌ಜೆಡ್ ಮಿತಿಯನ್ನು ಕಡಿತ ಮಾಡುವುದರಿಂದ ಸಮುದ್ರತೀರದ ಸಮೀಪ ಅಪಾಯಕಾರಿ ಎನಿಸುವಷ್ಟು ವಿಪರೀತ ನಿರ್ಮಾಣ ಕಾರ್ಯಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ನ್ಯಾಟ್‌ಕನೆಕ್ಟ್ ಫೌಂಡೇಷನ್ ನಿರ್ದೇಶಕ ಬಿ.ಎನ್‌.ಕುಮಾರ್ ಹೇಳುತ್ತಾರೆ.
  • ಕರ್ನಾಟಕದ ಕರಾವಳಿ ಪೈಕಿ ಶೇ 23.7ರಷ್ಟು ಪ್ರದೇಶ ಸವೆಯುತ್ತಿದೆ. ದೇಶದ ಕರಾವಳಿಯ ಶೇ33.6ರಷ್ಟು ಪ್ರದೇಶ ಸವೆಯುವ ಅಪಾಯ ಎದುರಿಸುತ್ತಿದೆ ಎಂಬುದಾಗಿ ಸಂಸತ್‌ನಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಮಂಡಿಸಿದ ವರದಿಯಲ್ಲಿ ಹೇಳಲಾಗಿದೆ’ ಎನ್ನುತ್ತಾರೆ.
  • ವಾಸ್ತವ್ಯ ಅವಧಿ ವಿಸ್ತರಣೆ ಪ್ರಕರಣಗಳಿಗೆ ಅನ್ವಯಿಸದು

ಸಂದರ್ಭ: ಎಚ್1ಬಿ ವೀಸಾಕ್ಕೆ ಹೊಸದಾಗಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಂಬಂಧಿಸಿ ಮಾಡಲಾಗಿರುವ ಶುಲ್ಕ ಹೆಚ್ಚಳವುಸ್ಥಾನ ಬದಲಾವಣೆ ಅಥವಾವಾಸ್ತವ್ಯದ ಅವಧಿಯ ವಿಸ್ತರಣೆ ಕೋರಿದ ಅರ್ಜಿಗಳಿಗೆ ಅನ್ವಯಿಸುವುದಿಲ್ಲ ಎಂದು ಅಮೆರಿಕ ಹೇಳಿದೆ.

  • ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆಗಳ (ಯುಎಸ್‌ಸಿಐಎಸ್‌) ಇಲಾಖೆಯು ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳು ಇಂತಹ ಹಲವಾರು ಅಂಶಗಳನ್ನು ಒಳಗೊಂಡಿದೆ.
  • ಎಚ್‌–1ಬಿ ವೀಸಾಕ್ಕಾಗಿ ಹೊಸದಾಗಿ ಸಲ್ಲಿಸುವ ಅರ್ಜಿಗಳಿಗೆ ಸಂಬಂಧಿಸಿದ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಅಂದಾಜು ₹88 ಲಕ್ಷ) ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಸೆಪ್ಟೆಂಬರ್ 19ರಂದು ಆದೇಶ ಹೊರಡಿಸಿದ್ದರು.
  • ‘ವೀಸಾ ಅರ್ಜಿ ಶುಲ್ಕ ಹೆಚ್ಚಳ ಕುರಿತ ಆದೇಶವು ಈ ಮೊದಲು ನೀಡಲಾಗಿರುವ ಎಚ್‌–1ಬಿ ವೀಸಾಗಳು ಅಥವಾ ವೀಸಾ ಕೋರಿ ಅಮೆರಿಕ ಕಾಲಮಾನ ಪ್ರಕಾರ ಸೆಪ್ಟೆಂಬರ್ 21ರ ತಡರಾತ್ರಿ 12.01ಕ್ಕೂ ಮೊದಲು ಸಲ್ಲಿಸಿರುವ ಅರ್ಜಿಗಳಿಗೆ ಅನ್ವಯವಾಗುವುದಿಲ್ಲ’ ಎಂದು ಯುಎಸ್‌ಸಿಐಎಸ್‌ ಹೇಳಿದೆ.
  • ಎಚ್‌–1ಬಿ ವೀಸಾ ಹೊಂದಿರುವವರು ಅಮೆರಿಕಕ್ಕೆ ಬರಲು ಇಲ್ಲವೇ ಅಮೆರಿಕದಿಂದ ಇತರ ದೇಶಗಳಿಗೆ ಸಂಚರಿಸುವುದಕ್ಕೆ ಕೂಡ ಈ ಆದೇಶ ನಿರ್ಬಂಧ ಹೇರುವುದಿಲ್ಲ ಎಂದೂ ತಿಳಿಸಿದೆ.
  • ಹೊಸ ಶುಲ್ಕ ನೀತಿ ಪ್ರಶ್ನಿಸಿ ಅಮೆರಿಕ ವಾಣಿಜ್ಯ ಮಂಡಳಿ ಅಕ್ಟೋಬರ್‌ 16ರಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಇದರ ಬೆನ್ನಲ್ಲೇ, ಈ ಹೊಸ ಮಾರ್ಗಸೂಚಿಗಳನ್ನು ಯುಎಸ್‌ಸಿಐಎಸ್‌ ಬಿಡುಗಡೆ ಮಾಡಿದೆ.
  • ಜಪಾನ್‌: ಸನೇ ತಕೈಚಿ ಮೊದಲ ಮಹಿಳಾ ಪ್ರಧಾನಿ

ಸಂದರ್ಭ: ಜಪಾನ್ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ, ಲಿಬರಲ್ಡೆಮಾಕ್ರಟಿಕ್ಪಕ್ಷದ ಕಟ್ಟಾ ಸಂಪ್ರದಾಯವಾದಿ ಸನೇ ತಕೈಚಿ (64) ಅವರನ್ನು ಸಂಸತ್ತು ಆಯ್ಕೆ ಮಾಡಿತು.

  • ಪ್ರಧಾನಿಯಾಗಿ ಕೇವಲ ಒಂದು ವರ್ಷ ಸೇವೆ ಸಲ್ಲಿಸಿದ ಶಿಗೇರು ಇಶಿಬಾ ಅವರ ನೇತೃತ್ವದಲ್ಲಿ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷ ನಿರಂತರ ಸೋಲುಗಳನ್ನು ಕಂಡಿತು. ಈ ಕಾರಣದಿಂದ ಬೇಸತ್ತ ಅವರು ಸಂಪುಟಕ್ಕೆ ಬೆಳಿಗ್ಗೆ ರಾಜೀನಾಮೆ ನೀಡಿ, ತಮ್ಮ ಉತ್ತರಾಧಿಕಾರಿ ಆಯ್ಕೆಗೆ ದಾರಿ ಮಾಡಿಕೊಟ್ಟರು.
  • ಇತರ ಪಾಲುದಾರರ ಜತೆ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷವು ಮೈತ್ರಿ ಒಪ್ಪಂದವನ್ನು ಮಾಡಿಕೊಂಡ ಬಳಿಕ ಸನೇ ತಕೈಚಿ ಅವರ ಆಯ್ಕೆಯಾಗಿದೆ.
  • ಜಪಾನಿನ ಕೆಳಮನೆಯಲ್ಲಿ ತಕೈಚಿ ಅವರು 237 ಮತಗಳನ್ನು ಪಡೆದರೆ, ಅವರ ವಿರುದ್ಧ ಸ್ಪರ್ಧಿಸಿದ್ದ ವಿರೋಧ ಪಕ್ಷ ‘ಕಾನ್‌ಸ್ಟಿಟ್ಯೂಷನಲ್‌ ಡೆಮಾಕ್ರಟಿಕ್‌ ಪಕ್ಷ’ದ ಮುಖ್ಯಸ್ಥ ಯೋಶಿಕೊಕೊ ನೋಡಾ ಅವರು 149 ಮತ ಪಡೆದರು.
  • ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದೇ ಇದ್ದದ್ದು ತಕೈಚಿ ಆಯ್ಕೆಗೆ ವರದಾನವಾಯಿತು. ಎಲ್‌ಡಿಪಿಯು ‘ಜಪಾನ್‌ ಇನ್ನೋವೇಷನ್‌ ಪಾರ್ಟಿ’ (ಜೆಐಪಿ) ಜತೆ ಮೈತ್ರಿ ಮಾಡಿಕೊಂಡು, ಪ್ರಧಾನಿ ಆಯ್ಕೆ ಖಚಿತಪಡಿಸಿಕೊಂಡಿತು.

ಪ್ರಚಲಿತ ವಿದ್ಯಮಾನಗಳು: 18ನೇ ಅಕ್ಟೋಬರ್ 2025

  • ಬೆಂಗಳೂರಿನಲ್ಲಿ 943 ಟನ್ ಆಹಾರ ವ್ಯರ್ಥ

ಸಂದರ್ಭ:  ‘ಪ್ರತಿವರ್ಷ ಬೆಂಗಳೂರು ಒಂದರಲ್ಲೇ 943 ಟನ್ ಆಹಾರ ವ್ಯರ್ಥವಾಗುತ್ತಿದೆ. ಅಂದಾಜು ₹ 360 ಕೋಟಿ ಮೌಲ್ಯದ ಆಹಾರವನ್ನು ನಾವು ವ್ಯರ್ಥ ಮಾಡುತ್ತಿದ್ದೇವೆ ಎಂದು ಜಿಕೆವಿಕೆ ಅಧ್ಯಯನ ಹೇಳಿದೆ.

  • ‘ಅನ್ನ ಭಾಗ್ಯದ ಅಕ್ಕಿಯನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಳಸಂತೆ ಮಾರಾಟ ತಪ್ಪಿಸಲು 5 ಕಿಲೋ ಅಕ್ಕಿ ಕೊಟ್ಟು, ಉಳಿದ ಐದು ಕಿಲೋ ಕಾಳು, ಬೇಳೆ ವಿತರಿಸಲು ತೀರ್ಮಾನಿಸಿದ್ದೇವೆ.
  • ‘ನಾವು ಒಂದು ಕಾಲದಲ್ಲಿ ಆಹಾರ ಧಾನ್ಯಕ್ಕಾಗಿ ಅಮೆರಿಕದ ಮೇಲೆ ಅವಲಂಬಿತರಾಗಿದ್ದೆವು. ಈಗ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ.
  • ಅನ್ನ ಸುವಿಧಾಜಾರಿ: ‘2024-25ನೇ ಸಾಲಿನ ಬಜೆಟ್ಘೋಷಣೆಯಂತೆ 75 ವರ್ಷ ದಾಟಿದ ಫಲಾನುಭವಿಗಳಿಗೆ ಪಡಿತರ ವಿತರಣೆಯನ್ನು ಮನೆಯ ಬಾಗಿಲಿಗೆ ತಲುಪಿಸುವಅನ್ನ ಸುವಿಧಾ ಯೋಜನೆಯನ್ನು ಜಾರಿಗೊಳಿಸ ಲಾಗಿದೆ.
  • ಮೋದಿ ಭೇಟಿಯಾದ ಶ್ರೀಲಂಕಾ ಪ್ರಧಾನಿ

ಸಂದರ್ಭ: ದೆಹಲಿಯ ತಮ್ಮ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದ ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸುದೀರ್ಘ ಚರ್ಚೆ ನಡೆಸಿದರು.

  • ಉಭಯ ದೇಶಗಳ ನಡುವಿನ ಸಹಕಾರ ವೃದ್ಧಿ, ಶಿಕ್ಷಣ, ಮಹಿಳಾ ಸ್ವಾವಲಂಬನೆ, ಸಂಶೋಧನೆ ಮತ್ತು ಭಾರತೀಯ ಮೀನುಗಾರರ ಸುರಕ್ಷತೆಯ ವಿಚಾರಗಳೂ ಸೇರಿದಂತೆ ಹಲವು ಅಂಶಗಳ ಬಗ್ಗೆ ಚರ್ಚೆ ನಡೆಯಿತು ಎಂದು ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.
  • ‘ನಾಗರಿಕರ ಸಮೃದ್ಧಿಯ ಆಶೋತ್ತರ ಈಡೇರಿಸುವುದು ಮತ್ತು ಪ್ರಾದೇಶಿಕ ಸಹಕಾರಕ್ಕೆ ಮತ್ತಷ್ಟು ಮಹತ್ವ ನೀಡುವುದು ಎರಡೂ ಆತ್ಮೀಯ ನೆರೆಯ ದೇಶಗಳ ಮಹತ್ವದ ಉದ್ದೇಶವಾಗಿದೆ’ ಎಂದು ಮೋದಿ ಹೇಳಿದ್ದಾರೆ.
  • ಬಿಹಾರ: ಆಮಿಷ ತಡೆಗೆ ಆಯೋಗ ಸೂಚನೆ

ಸಂದರ್ಭ: ಬಿಹಾರ ಚುನಾವಣೆ ವೇಳೆ ಮತದಾರರನ್ನು ಓಲೈಸಲು ಮಾದಕವಸ್ತು, ಮದ್ಯ ಮತ್ತು ನಗದು ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಚುನಾವಣಾ ಆಯೋಗ ಕಾನೂನು ಜಾರಿ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳಿಗೆ ಸೂಚಿಸಿದೆ.

  • ಮತದಾರರಿಗೆ ಆಮಿಷ ಒಡ್ಡುವ ಕಾರ್ಯಗಳನ್ನು ತಡೆಗಟ್ಟುವ ಕಾರ್ಯತಂತ್ರಕ್ಕೆ ಅಂತಿಮ ರೂಪ ನೀಡುವ ಉದ್ದೇಶದಿಂದ ಆಯೋಗವು ವಿವಿಧ ಕಾನೂನು ಜಾರಿ ಸಂಸ್ಥೆಗಳ ಮುಖ್ಯಸ್ಥರ ಜತೆಗೆ ಸಭೆ ನಡೆಸಿತು. ಅಕ್ರಮಗಳನ್ನು ತಡೆಗಟ್ಟಲು ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವಿಧ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಮಾಹಿತಿ ನೀಡಿದರು.
  • ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ವೆಚ್ಚಗಳು ಹಾಗೂ ಗೋಪ್ಯವಾಗಿ ನಡೆಸುವ ವೆಚ್ಚಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಯಿತು. ಅಲ್ಲದೆ ಮತದಾರರಿಗೆ ಆಮಿಷ ಒಡ್ಡುವ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ತಡೆಯಲು ತಿಳಿಸಲಾಯಿತು.
  • ಆರ್ಥಿಕ ಅಪರಾಧಗಳ ಕುರಿತ ಗುಪ್ತಚರ ಮಾಹಿತಿಯು ಕಾನೂನು ಜಾರಿ ಸಂಸ್ಥೆಗಳ ನಡುವೆ ಹಂಚಿಕೆಯಾಗಬೇಕು. ಅಲ್ಲದೆ ವಿವಿಧ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಸಹಕಾರ ಪ್ರಮುಖವಾಗಿರಬೇಕು ಎಂದು ತಿಳಿಸಲಾಯಿತು.
  • ಅಂತರರಾಜ್ಯ ಮತ್ತು ಅಂತರ ರಾಷ್ಟ್ರೀಯ (ನೇಪಾಳ) ಗಡಿಗಳ ಮೇಲೆ ಹದ್ದಿನ ಕಣ್ಣಿಡಬೇಕು. ವಾಹನಗಳನ್ನು ತಪಾಸಣೆಗೊಳಪಡಿಸಬೇಕು. ಅಕ್ರಮ ವಸ್ತುಗಳ ಸಾಗಣೆ, ಮಾದಕ ವಸ್ತುಗಳು, ಮದ್ಯ, ನಗದು, ನಕಲಿ ನೋಟುಗಳು ರಾಜ್ಯ ಪ್ರವೇಶಿಸುವ ಸಾಧ್ಯತೆಯಿದೆ. ಹೀಗಾಗಿ ಇವುಗಳ ಮೇಲೆ ನಿಗಾ ಇಟ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದು ಕೊಳ್ಳಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
  • ಮುಕ್ತ ಮತ್ತು ನ್ಯಾಯಯುತ ಚುನಾವಣೆಗಾಗಿ ಶೂನ್ಯ ಸಹಿಷ್ಣು ನೀತಿಯನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಲಾಯಿತು. ಬಿಹಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಆನ್‌ಲೈನ್‌ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
  • ಸಿಬಿಡಿಟಿ, ಸಿಬಿಐಸಿ, ಇ.ಡಿ, ಸಿಇಐಬಿ, ಎಫ್‌ಐಯು–ಐಎನ್‌ಡಿ, ಆರ್‌ಬಿಐ, ಐಬಿಎ, ಎನ್‌ಸಿಬಿ, ಸಿಐಎಸ್‌ಎಫ್‌, ಬಿಎಸ್‌ಎಫ್‌, ಸಿಆರ್‌ಪಿಎಫ್‌, ಎಸ್‌ಎಸ್‌ಬಿ, ಬಿಸಿಎಎಸ್‌, ಎಎಐ ಮತ್ತು ಇತರ ಇಲಾಖೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
  • ಬಿಹಾರ ವಿಧಾನಸಭೆಗೆ ನವೆಂಬರ್‌ 6 ಮತ್ತು 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
  • ಬ್ರಹ್ಮೋಸ್: ಹಸಿರು ನಿಶಾನೆ ಇಂದು

ಸಂದರ್ಭ: ಲಖನೌದ ಸರೋಜಿನಿ ನಗರದಲ್ಲಿರುವ ಬ್ರಹ್ಮೋಸ್ಏರೋಸ್ಪೇಸ್ಘಟಕದಲ್ಲಿ ಮೊದಲ ಬ್ಯಾಚ್ ಬ್ರಹ್ಮೋಸ್ಕ್ಷಿಪಣಿಗಳ ತಯಾರಿಕೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ.

  • ‘ಉತ್ತರ ಪ‍್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ (ಯುಪಿಡಿಐಸಿ) ಮಹತ್ವದ ಮೈಲಿಗಲ್ಲಾಗಿರುವ ಇದು, ರಕ್ಷಣಾ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸುವ ದೇಶದ ಸಂಕಲ್ಪಕ್ಕೆ ನವಚೈತನ್ಯವನ್ನು ತುಂಬುತ್ತದೆ’ ಎಂದಿದೆ.
  • ಬ್ರಹ್ಮೋಸ್ಸೂಪರ್ಸಾನಿಕ್ಕ್ಷಿಪಣಿಗಳ ತಯಾರಕರಾದ ಬ್ರಹ್ಮೋಸ್ಏರೋಸ್ಪೇಸ್‌, ಲಖನೌದಲ್ಲಿನ ತನ್ನ ಘಟಕದಲ್ಲಿ ಮೊದಲ ಬ್ಯಾಚ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಉತ್ಪಾದಿಸಿದೆ. ಈ ಅತ್ಯಾಧುನಿಕ ಘಟಕವು ಸಕಲ ಸೌಲಭ್ಯಗಳನ್ನು ಒಳಗೊಂಡಿದ್ದು, 2025ರ ಮೇ 11ರಂದು ಆರಂಭಗೊಂಡಿತ್ತು.
  • ಲಿಂಗತ್ವ ಅಲ್ಪಸಂಖ್ಯಾತರಿಗೆ ನೀತಿ ರೂಪಿಸಿ

ಸಂದರ್ಭ: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ 2019ರಲ್ಲಿ ಕಾನೂನು ಜಾರಿಯಾದರೂ ಸಮುದಾಯದವರು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಸುಪ್ರೀಂ ಕೋರ್ಟ್ತೀವ್ರ ಕಳವಳ ವ್ಯಕ್ತಪಡಿಸಿದೆ.

  • ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರ ಸಮಸ್ಯೆಗಳನ್ನು ಬಗೆಹರಿಸಲು ಹೊಸ ನೀತಿಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.
  • ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, ‘2019ರ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ’ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳು ಕಡತ ಗಳಲ್ಲಿ ಮಾತ್ರ ಉಳಿದಿವೆ’ ಎಂದು ಹೇಳಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಯ್ದೆ ಜಾರಿ ಬಗ್ಗೆ ‘ನಿರಾಸಕ್ತಿ’ತೋರಿವೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
  • ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಆಶಾ ಮೆನನ್ ನೇತೃತ್ವದ ಸಲಹಾ ಸಮಿತಿಯನ್ನು ಸುಪ್ರೀಂ ಕೋರ್ಟ್‌ ರಚಿಸಿತು.
  • ಈ ತೀರ್ಪು ಹೊರಬಂದ ದಿನಾಂಕದಿಂದ ಆರು ತಿಂಗಳ ಒಳಗಾಗಿ ವರದಿ ಅಥವಾ ಕರಡು ನೀತಿಯನ್ನು ಸಿದ್ಧಪಡಿಸುವಂತೆ ಪೀಠವು ಸಮಿತಿಗೆ ಸೂಚಿಸಿತು. ಸಮಿತಿಯು ವರದಿ ಸಲ್ಲಿಸಿದ ಮೂರು ತಿಂಗಳ ಒಳಗಾಗಿ ತನ್ನದೇ ಆದ ‘ಸಮಾನ ಅವಕಾಶ ನೀತಿ’ಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.
  • ‘ಲಿಂಗತ್ವ ಅಲ್ಪಸಂಖ್ಯಾತರು ತಾರತಮ್ಯವನ್ನು ಎದುರಿಸುತ್ತಲೇ ಇದ್ದಾರೆ. ಆರೋಗ್ಯ ರಕ್ಷಣೆ, ಆರ್ಥಿಕ ಅವಕಾಶಗಳು ಮತ್ತು ಶೈಕ್ಷಣಿಕ ನೀತಿಯಿಂದ ಹೊರಗೆ ಇಟ್ಟಿರುವುದು ಅವರ ಸಂಕಷ್ಟ ಹೆಚ್ಚಲು ಕಾರಣವಾಗಿದೆ’ ಎಂದು ಹೇಳಿತು.
  • ಉದ್ಯೋಗದಲ್ಲಿ ಎದುರಿಸಿದ ತಾರತಮ್ಯ ಮತ್ತು ಅವಮಾನದಿಂದ ನೊಂದ ಲಿಂಗತ್ವ ಅಲ್ಪಸಂಖ್ಯಾತ ರೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಉತ್ತರ ಪ್ರದೇಶ ಮತ್ತು ಗುಜರಾತ್‌ನ ಎರಡು ಖಾಸಗಿ ಶಾಲೆಗಳಿಂದ ತಮ್ಮನ್ನು ವಜಾಗೊಳಿಸಲಾಯಿತು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು.

ವಿಧವೆಯ ಪಿತ್ರಾರ್ಜಿತ ಆಸ್ತಿ ಹಕ್ಕು ಎತ್ತಿಹಿಡಿದಸುಪ್ರೀಂ

  • ‘ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದವು ಮಾಲೀಕತ್ವದ ಹಕ್ಕುಗಳನ್ನು ವರ್ಗಾಯಿಸುವುದಿಲ್ಲ’ ಎಂದು ಹೇಳಿರುವ ಸುಪ್ರೀಂ ಕೋರ್ಟ್, ‘ಮೃತ ವ್ಯಕ್ತಿಗೆ ಸೇರಿದ ಎಲ್ಲಾ ಸ್ವತ್ತುಗಳು ಮುಸ್ಲಿಂ ಕಾನೂನಿನ ಪ್ರಕಾರ ಹಂಚಬೇಕಾದ ಪಿತ್ರಾರ್ಜಿತ ಆಸ್ತಿಯ ಭಾಗವಾಗಿರುತ್ತವೆ’ ಎಂದು ತೀರ್ಪು ನೀಡಿದೆ.
  • ಬಾಂಬೆ ಹೈಕೋರ್ಟ್‌ ತೀರ್ಪಿನ ವಿರುದ್ಧ ಜೊಹರಾಬಿ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ಮೃತಪಟ್ಟ ಚಾಂದ್‌ ಖಾನ್‌ ಅವರಿಗೆ ಸೇರಿದ ಆಸ್ತಿಗಳಿಗೆ ಸಂಬಂಧಿಸಿದ ಕೌಟುಂಬಿಕ ವಿವಾದ ಇದಾಗಿದೆ. ‘ಚಾಂದ್‌ ಖಾನ್ ಅವರ ಆಸ್ತಿಯು ಮುಸ್ಲಿಂ ಕಾನೂನಿನಡಿ ಪಿತ್ರಾರ್ಜಿತ ಆಸ್ತಿಯಾಗಿದೆ. ಆಸ್ತಿಯ ಮುಕ್ಕಾಲು ಭಾಗ ತಮಗೆ ಸೇರಬೇಕು’ ಎಂಬುದು ವಿಧವೆ ಜೊಹರಾಬಿ ಅವರ ವಾದವಾಗಿದೆ.
  • ಆದರೆ, ಜೊಹರಾಬಿ ಅವರ ವಾದವನ್ನು ಚಾಂದ್‌ ಖಾನ್‌ ಅವರ ಸಹೋದರ ಇಮಾಮ್ ಖಾನ್ ಪ್ರಶ್ನಿಸಿದರು. ‘ಚಾಂದ್‌ ಖಾನ್ ಅವರ ಜೀವಿತಾವಧಿಯಲ್ಲಿ ಆಸ್ತಿಗಳ ಮಾರಾಟದ ಒಪ್ಪಂದದ ಮೂಲಕ ಮೂರನೇ ವ್ಯಕ್ತಿಗೆ ವರ್ಗಾಯಿಸಲಾಗಿದೆ’ ಎಂಬ ವಾದವನ್ನು ಇಮಾಮ್‌ ಮುಂದಿಟ್ಟರು.
  • ‘ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದವು ಮಾಲೀಕತ್ವದ ಹಕ್ಕುಗಳನ್ನು ವರ್ಗಾಯಿಸುವುದಿಲ್ಲ ಅಥವಾ ನಿರ್ದಿಷ್ಟ ಆಸ್ತಿಯನ್ನು ಖರೀದಿಸಲು ಮುಂದಾಗಿರುವವರಿಗೂ ಆ ಆಸ್ತಿಯ ಮೇಲೆ ಯಾವುದೇ ಅಧಿಕಾರ ನೀಡುವುದಿಲ್ಲ’ ಎಂದು ಪೀಠ ಹೇಳಿತು.
  • ಭಾರತದ ಗ್ರಾಹಕರಲ್ಲಿ ಹೊಸ ಹುರುಪು

ಸಂದರ್ಭ: ಭಾರತದ ಗ್ರಾಹಕರು ಹೊಸ ಹುರುಪು ಮತ್ತು ವಿಶ್ವಾಸದೊಂದಿಗೆ ಹಬ್ಬದ ಋತುವನ್ನು ಬರ ಮಾಡಿಕೊಂಡಿದ್ದಾರೆ, ಹಣಕಾಸಿನ ವಿಚಾರವಾಗಿ ಅವರಲ್ಲಿ ಹೊಸ ಆಶಾವಾದ ಮೂಡಿದೆ ಎಂದು ಡೆಲಾಯ್ಟ್ಇಂಡಿಯಾ ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.

  • ‘ಹಣದುಬ್ಬರದ ಪ್ರಮಾಣವು ಕಡಿಮೆ ಆಗಿದೆ, ಈಚೆಗೆ ಜಾರಿಗೆ ಬಂದಿರುವ ಜಿಎಸ್‌ಟಿ ದರ ಪರಿಷ್ಕರಣೆ ಕ್ರಮವು ಗ್ರಾಹಕರ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಿದೆ. ಈ ಸಂದರ್ಭದಲ್ಲಿ ಬಂದಿ ರುವ ಹಬ್ಬಗಳ ಖುಷಿಯು ಬೇಡಿಕೆಯ ಹೊಸ ಅಲೆಯನ್ನು ಸೃಷ್ಟಿಸಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
  • ಭಾರತದ ಹಣಕಾಸಿನ ಆರೋಗ್ಯ ಸೂಚ್ಯಂಕವು (ಎಫ್‌ಡಬ್ಲ್ಯುಬಿಐ) ಸೆಪ್ಟೆಂಬರ್‌ನಲ್ಲಿ 110.3ಕ್ಕೆ ಏರಿಕೆ ಆಗಿದೆ. ಇದು ಜಾಗತಿಕ ಸರಾಸರಿಯಾದ 103.6ಕ್ಕಿಂತ ಹೆಚ್ಚು. ಕೌಟುಂಬಿಕ ಮಟ್ಟದಲ್ಲಿ ಹಣಕಾಸಿನ ಸ್ಥಿರತೆ ಹೆಚ್ಚಾಗಿ ರುವುದನ್ನು ಹಾಗೂ ಗ್ರಾಹಕರಲ್ಲಿ ಆಶಾಭಾವ ಹೆಚ್ಚಿರುವುದನ್ನು ಇದು ಸೂಚಿಸುತ್ತಿದೆ.
  • ಆಹಾರ ಮಿತವ್ಯಯ ಸೂಚ್ಯಂಕವು (ಎಫ್‌ಎಫ್ಐ) ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿರುವುದು ವರದಿಯಲ್ಲಿನ ಪ್ರಮುಖ ಅಂಶಗಳ ಪೈಕಿ ಒಂದು. ಈ ಸೂಚ್ಯಂಕವು ಈಗ ಮೂರು ವರ್ಷಗಳ ಎರಡನೆಯ ಕನಿಷ್ಠ ಮಟ್ಟದಲ್ಲಿ ಇದೆ. ಅಂದರೆ ಗ್ರಾಹಕರು ಖರೀದಿಯ ಸಂದರ್ಭದಲ್ಲಿ ಬಹಳ ಲೆಕ್ಕಾಚಾರ ಹಾಕುತ್ತಿಲ್ಲ. ಅದರ ಬದಲಿಗೆ ಅವರು, ಉತ್ತಮ ಮೌಲ್ಯದ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.
  • ವಾಹನ ಖರೀದಿ ಉದ್ದೇಶವನ್ನು ಹೇಳುವ ಸೂಚ್ಯಂಕವು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದ್ದ ಮಟ್ಟಕ್ಕೆ ಹೋಲಿಸಿದರೆ ಶೇಕಡ 6.6ರಷ್ಟು ಹೆಚ್ಚಳ ಕಂಡಿದೆ. ಅಂದರೆ, ದೊಡ್ಡ ಮೊತ್ತದ ಖರ್ಚುಗಳನ್ನು ಮಾಡುವ ವಿಶ್ವಾಸವು ಜನರಲ್ಲಿ ಹೆಚ್ಚಾಗಿದೆ ಎಂಬುದನ್ನು ಇದು ಹೇಳುತ್ತಿದೆ. ವಿದ್ಯುತ್ ಚಾಲಿತ (ಇ.ವಿ) ವಾಹನದ ಬಗ್ಗೆ ಒಲವು ಹೆಚ್ಚಾಗಿದೆ, ಶೇ 60ರಷ್ಟು ಗ್ರಾಹಕರು ಇ.ವಿ.ಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
  • ಪ್ರವಾಸ, ಮನರಂಜನೆ, ವೈಯಕ್ತಿಕ ಆರೈಕೆಯಂತಹ ಉದ್ದೇಶಗಳಿಗೆ ವೆಚ್ಚ ಮಾಡುವುದು ಹೆಚ್ಚಾಗುತ್ತಿದೆ. ಹಣದುಬ್ಬರ ಕಡಿಮೆ ಆಗಿರುವುದು ಹಾಗೂ ಜಿಎಸ್‌ಟಿ ದರವನ್ನು ತಗ್ಗಿಸಿರುವುದು ಈ ವೆಚ್ಚಗಳಿಗೆ ಪೂರಕವಾಗಿ ಒದಗಿಬಂದಿದೆ ಎಂದು ವರದಿಯು ವಿವರಿಸಿದೆ.
  • ಭಾರತದ ಗ್ರಾಹಕರು ಈಗ ಹಣಕಾಸಿನ ವಿಚಾರದಲ್ಲಿ ಹಿಂದೆಂದಿ ಗಿಂತಲೂ ಹೆಚ್ಚು ವಿಶ್ವಾಸ ಹೊಂದಿದ್ದಾರೆ ಎಂದು ಡೆಲಾಯ್ಟ್‌ ಸಂಸ್ಥೆಯ ದಕ್ಷಿಣ ಭಾರತ ವಲಯದ ಪಾಲುದಾರ ಆನಂದ್ ರಾಮನಾಥನ್ ಹೇಳಿದ್ದಾರೆ.
  • ಲಾಂಗ್ಜಂಪ್‌: 8 ಮೀ. ಕ್ಲಬ್ಗೆ ಅನುರಾಗ್

ಸಂದರ್ಭ: ಇಂಡಿಯನ್ ಓಪನ್ ಅಥ್ಲೆಟಿಕ್ಸ್‌: ರಾಜ್ಯದ ಕೃಷಿಕ್ಗೆ ಚಿನ್ನ: ಕೇರಳದ ಲಾಂಗ್ಜಂಪರ್ಸಿ.ವಿ.ಅನುರಾಗ್ ಅವರು ಇಂಡಿಯನ್ ಓಪನ್ 23 ವರ್ಷದೊಳಗಿನವರ ಅಥ್ಲೆಟಿಕ್ಕೂಟದಲ್ಲಿ 8.06 ಮೀ. ದೂರ ಜಿಗಿದು ಚಿನ್ನ ಗೆದ್ದರು. ಎಂಟು ಮೀಟರ್ ಜಿಗಿದವರ ಕ್ಲಬ್ಗೆ ಸಾಲಿಗೆ ಹೊಸದಾಗಿ ಸೇರ್ಪಡೆಯಾದರು.

  • ಇದು 21 ವರ್ಷ ವಯಸ್ಸಿನ ಅನುರಾಗ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದ್ದು ಎರಡನೇ ಯತ್ನದಲ್ಲಿ ಈ ದೂರ ದಾಖಲಿಸಿದರು. ಆ ಮೂಲಕ 2024ರಲ್ಲಿ ತಾವೇ ಸ್ಥಾಪಿಸಿದ್ದ 7.87 ಮೀ.ಗಳ ದಾಖಲೆಯನ್ನು ಅವರು ಸುಧಾರಿಸಿದರು.
  • ಮೊದಲ ಯತ್ನದಲ್ಲಿ 7.88 ಮಿ. ಜಿಗಿದಿದ್ದರು. ಎರಡನೇ ಯತ್ನದಲ್ಲಿ 8.06 ಮೀ. ಜಿಗಿದ ಅವರು ನಂತರದ ಯತ್ನಗಳಲ್ಲಿ ಕ್ರಮವಾಗಿ 7.96 ಮೀ, 6.62 ಮೀ ಮತ್ತು 7.88 ಮೀ. ದೂರ ಜಿಗಿದರು.
  • ತಮಿಳುನಾಡಿನ ಶರನ್‌ ಜೆ. (7.82 ಮೀ.) ಮತ್ತು ಪೊಲೀಸ್‌ ತಂಡದ ಆರ್ಯನ್ ಚೌಧರಿ (7.67 ಮೀ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.
  • ಐಸಿಎಗೆ ಕನ್ನಡತಿ ಶಾಂತಾ ರಂಗಸ್ವಾಮಿ ಅಧ್ಯಕ್ಷೆ

ಸಂದರ್ಭ: ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ನಾಯಕಿ ಯಾಗಿದ್ದ ಶಾಂತಾ ರಂಗಸ್ವಾಮಿ ಅವರನ್ನು ಭಾರತೀಯ ಕ್ರಿಕೆಟಿಗರ ಸಂಘಟನೆ (ಐಸಿಎ)ಗೆ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಗಿದೆ. ಕರ್ನಾಟಕದ ಶಾಂತಾ ಅವರು ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

  • ಚುನಾವಣೆ ಪ್ರಕ್ರಿಯೆಯಲ್ಲಿ ವೆಂಕಿಟ್ಟು ಸುಂದರಂ ಮತ್ತು ದೀಪಕ್ ಜೈನ್ ಅವರು ಕ್ರಮವಾಗಿ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ಆಯ್ಕೆಯಾದರು. ಸಂತೋಷ್ ಸುಬ್ರಮಣಿಯಂ ಮತ್ತು ಜ್ಯೋತಿ ಜಿ ತಟ್ಟೆ ಅವರನ್ನು ಸದಸ್ಯ ಪ್ರತಿನಿಧಿಗಳನ್ನಾಗಿ ನೇಮಕ ಮಾಡಲಾಯಿತು ಎಂದು ಐಸಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • ವೆಂಕಿನಾ ಚಾಮುಂಡೇಶ್ವರ್ ನಾಥ್ ಮತ್ತು ಸುಧಾ ಶಾ ಅವರು ಕ್ರಮವಾಗಿ ಬಿಸಿಸಿಐನಲ್ಲಿ ಐಸಿಸಿ ಪ್ರತಿನಿಧಿ ಗಳಾಗಿ ಆಯ್ಕೆಯಾಗಿದ್ದಾರೆ. ಶುಭಾಂಗಿ ಡಿ ಕುಲಕರ್ಣಿ ಅವರನ್ನು ಐಪಿಎಲ್ ಆಡಳಿತ ಸಮಿತಿಗೆ ನಾಮನಿರ್ದೇಶನ ಮಾಡಲಾಯಿತು.
  • 71 ವರ್ಷದ ಶಾಂತಾ, ಮೂಲತಃ ಬೆಂಗಳೂರಿನವರು. 1976 ರಿಂದ 1991ರ ಅವಧಿಯಲ್ಲಿ ಭಾರತ ಮಹಿಳಾ ತಂಡದಲ್ಲಿ ಆಡಿದ್ದರು.  ‌
  • ಅವರು 16 ಟೆಸ್ಟ್‌ಗಳಲ್ಲಿ ಆಡಿ ಒಂದು ಶತಕ ಹಾಗೂ ಆರು ಅರ್ಧಶತಕಗಳನ್ನು ಗಳಿಸಿದ್ದಾರೆ. ಒಟ್ಟು 750 ರನ್‌ ಗಳಿಸಿದ್ದಾರೆ. ಜೊತೆಗೆ 21 ವಿಕೆಟ್‌ಗಳನ್ನೂ ಪಡೆದಿದ್ದಾರೆ. 19 ಏಕದಿನ ಪಂದ್ಯಗಳಿಂದ 287 ರನ್‌ ಪೇರಿಸಿದ್ದಾರೆ.
  • ರ್ಯಾಂಕಿಂಗ್‌: 136ನೇ ಸ್ಥಾನಕ್ಕಿಳಿದ ಭಾರತ

ಸಂದರ್ಭ: ಭಾರತ ಪುರುಷರ ಫುಟ್ಬಾಲ್ತಂಡ, ಶುಕ್ರವಾರ ಪ್ರಕಟವಾದ ಫಿಫಾ ವಿಶ್ವ ರ್ಯಾಂಕಿಂಗ್ನಲ್ಲಿ 136ನೇ ಸ್ಥಾನಕ್ಕೆ ಕುಸಿದಿದೆ. 9 ವರ್ಷಗಳಲ್ಲಿ ಇದೇ ಮೊದಲ ಬಾರಿ ಭಾರತ ್ಯಾಂಕಿಂಗ್ನಲ್ಲಿ ಮಟ್ಟಕ್ಕೆ ಇಳಿದಿದೆ.

  • ಈ ಹಿಂದಿನ ರ್‍ಯಾಂಕಿಂಗ್‌ನಲ್ಲಿ ಭಾರತ 134ನೇ ಸ್ಥಾನ ದಲ್ಲಿದಲ್ಲಿತ್ತು. ಎರಡು ದಿನಗಳ ಹಿಂದೆಯಷ್ಟೇ ಭಾರತ ತಂಡವು ಎಎಫ್‌ಸಿ ಏಷ್ಯನ್ ಕಪ್ ರ‍್ಯಾಂಕಿಂಗ್‌ನಲ್ಲಿ ಸಿಂಗಪುರಕ್ಕೆ ಸೋತು, ಪ್ರಧಾನ ಸುತ್ತಿಗೆ ತಲುಪುವ ಕ್ಷೀಣ ಅವಕಾಶವನ್ನೂ ಕಳೆದುಕೊಂಡಿತ್ತು. ಭಾರತವು, ಕುವೈತ್‌ಗಿಂತ ಒಂದು ಸ್ಥಾನ ಕೆಳಗಿದ್ದು, ಬೋಟ್ಸ್‌ವಾನಾಗಿಂತ ಒಂದು ಸ್ಥಾನ ಮೇಲಿದೆ.
  • 2016ರ ಅಕ್ಟೋಬರ್‌ ನಲ್ಲಿ ಭಾರತ 137ನೇ ಸ್ಥಾನಕ್ಕೆ ಇಳಿದಿದ್ದು, ಈವರೆಗಿನ ಕಳಪೆ ಎನಿಸಿದೆ. 1996ರ ಫೆಬ್ರುವರಿ ಯಲ್ಲಿ 94ನೇ ಸ್ಥಾನಕ್ಕೇರಿದ್ದು ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿದೆ.
  • ಸ್ಪೇನ್‌ಗೆ ಅಗ್ರಸ್ಥಾನ: ವಿಶ್ವ ರ್‍ಯಾಂಕಿಂಗ್‌ನಲ್ಲಿ ಸ್ಪೇನ್‌ ಅಗ್ರಸ್ಥಾನದಲ್ಲಿ ಉಳಿದುಕೊಂಡಿದೆ. ಜರ್ಮನಿ ಎರಡು ಸ್ಥಾನ ಮೇಲೇರಿದ್ದು ಅಗ್ರ 10ರೊಳಗೆ ಮರಳಿದೆ. 2018ರ ವಿಶ್ವಕಪ್ ರನ್ನರ್ ಅಪ್ ಕ್ರೊವೇಷ್ಯಾ 11ನೇ ಸ್ಥಾನದಲ್ಲಿದೆ.
  • ವಿಶ್ವ ಕಪ್ ವಿಜೇತ ಅರ್ಜೆಂಟೀನಾ ಎರಡನೇ, ಫ್ರಾನ್ಸ್‌ ಮೂರನೇ ಸ್ಥಾನದಲ್ಲಿವೆ. ಇಂಗ್ಲೆಂಡ್‌, ಪೋರ್ಚುಗಲ್‌, ನೆದರ್ಲೆಂಡ್ಸ್‌, ಬ್ರೆಜಿಲ್ ಮತ್ತು ಬೆಲ್ಜಿಯಂ ಕ್ರಮವಾಗಿ ನಾಲ್ಕರಿಂದ ಎಂಟರವರೆಗಿನ ಸ್ಥಾನಗಳನ್ನು ಪಡೆದಿವೆ.

ಪ್ರಚಲಿತ ವಿದ್ಯಮಾನಗಳು: 16 & 17ನೇ ಅಕ್ಟೋಬರ್ 2025

  • ಹಸಿರು ಪಟಾಕಿ ಬಳಕೆಗೆಸುಪ್ರೀಂಅನುಮತಿ

ಸಂದರ್ಭ: ದೀಪಾವಳಿ ಹಬ್ಬದ ಆಚರಣೆಗಾಗಿ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಗಳಲ್ಲಿ (ಎನ್ಆರ್ಸಿ) ಹಸಿರು ಪಟಾಕಿಯ ತಯಾರಿಕೆ, ಮಾರಾಟ ಮತ್ತು ಬಳಕೆಗೆ ಸುಪ್ರೀಂ ಕೋರ್ಟ್ಬುಧವಾರ ಅನುಮತಿ ನೀಡಿದೆ. ಆದರೆ, ಇದಕ್ಕೆ ಹಲವು ಷರತ್ತುಗಳನ್ನೂ ವಿಧಿಸಿದೆ.

  • ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿದ್ದವು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್‌. ಗವಾಯಿ ಮತ್ತು ಕೆ. ವಿನೋದ್‌ ಚಂದ್ರನ್‌ ಅವರ ಪೀಠವು ನಡೆಸಿತ್ತು. ಅ.10ರಂದು ಅಂತಿಮ ವಾದ–ಪ್ರತಿವಾದ ನಡೆದು, ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತ್ತು.
  • lಮಾರಾಟದ ಸ್ಥಳಗಳಲ್ಲಿ ಪೊಲೀಸರ ತಂಡವು ಗಸ್ತು ತಿರುಗುತ್ತಲೇ ಇರಬೇಕು. ಈ ತಂಡದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೂ ಇರಬೇಕು. ಕ್ಯೂಆರ್‌ ಕೋಡ್‌ ಇರುವ ಹಸಿರು ಪಟಾಕಿಗಳು ಮಾತ್ರವೇ ಮಾರಾಟವಾಗುತ್ತಿವೆಯೇ ಎಂಬುದನ್ನು ಇವರು ಪರಿಶೀಲಿಸುತ್ತಲೇ ಇರಬೇಕು
  • lನೋಂದಾಯಿಸಿಕೊಳ್ಳದ ತಯಾರಿಕಾ ಕಂಪನಿಗಳ ಮತ್ತು ಪರವಾನಗಿ ಇಲ್ಲದ ಮಾರಾಟಗಾರರ ಹಸಿರು ಪಟಾಕಿಗಳು ಜನರ ಕೈ ಸೇರದಂತೆ ಗಸ್ತು ತಂಡವು ನೋಡಿಕೊಳ್ಳಬೇಕು. ಇಂಥ ಪಟಾಕಿಗಳು ಕಂಡುಬಂದರೆ, ತಕ್ಷಣವೇ ವಶಕ್ಕೆ ಪಡೆಯಬೇಕು
  • lನಿಯಮ ಉಲ್ಲಂಘಿಸುವ ತಯಾರಿಕಾ ಕಂಪನಿಗಳಿಗೆ ನೋಟಿಸ್‌ ನೀಡಿ ಅವರ ಪರವಾನಗಿಯನ್ನು ರದ್ದು ಮಾಡಲಾಗುವುದು
  • ಭಾರತ ವಿರುದ್ಧ ಚೀನಾ ದೂರು

ಸಂದರ್ಭ:ವಿದ್ಯುತ್ಚಾಲಿತ ವಾಹನಗಳಿಗೆ ಹಾಗೂ ಬ್ಯಾಟರಿಗಳಿಗೆ ಭಾರತವು ಸಬ್ಸಿಡಿ ನೀಡುತ್ತಿರುವ ವಿಚಾರವಾಗಿ ಚೀನಾ ದೇಶವು ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ದೂರು ಸಲ್ಲಿಸಿದೆ.

  • ಭಾರತದ ಹಲವು ಕ್ರಮಗಳು ಡಬ್ಲ್ಯುಟಿಒ ರೂಪಿಸಿರುವ ವಿವಿಧ ನಿಯಮಗಳ ಉಲ್ಲಂಘನೆಯಂತೆ ಇವೆ ಎಂದು ಚೀನಾ ದೂರಿದೆ. ಭಾರತದ ಕ್ರಮಗಳು ಭಾರತದ ಉದ್ಯಮಗಳಿಗೆ ಹೆಚ್ಚು ಅನುಕೂಲಕರ ಆಗುವಂತೆ ಇವೆ, ಚೀನಾದ ನ್ಯಾಯಸಮ್ಮತವಾದ ಹಿತಾಸಕ್ತಿಗಳಿಗೆ ಅವು ಅನುಕೂಲಕರವಾಗಿ ಇಲ್ಲ ಎಂದು ಚೀನಾದ ವಾಣಿಜ್ಯ ಸಚಿವಾಲಯ ಆರೋಪಿಸಿದೆ.
  • ತಾನು ತಯಾರಿಸುವ ಇ.ವಿ.ಗಳನ್ನು ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಚೀನಾ ಬಯಸಿದ್ದು, ಈ ಸಂದರ್ಭದಲ್ಲಿ ಅದು ಈ ದೂರು ಸಲ್ಲಿಸಿದೆ. ಅಲ್ಲದೆ, ದ್ವಿಪಕ್ಷೀಯ ಸಂಬಂಧವನ್ನು ಸಹಜಗೊಳಿಸಲು ಎರಡೂ ದೇಶಗಳು ಮುಂದಡಿ ಇರಿಸಿದ ನಂತರದಲ್ಲಿ ಚೀನಾ ಈ ರೀತಿಯ ಕ್ರಮಕ್ಕೆ ಮುಂದಾಗಿದೆ.
  • ಚೀನಾದ ಇ.ವಿ. ತಯಾರಿಕಾ ಕಂಪನಿಗಳು ಭಾರತದ ಮಾರುಕಟ್ಟೆಯನ್ನು ಬಹಳ ಪ್ರಮುಖ ಎಂದು ಪರಿಗಣಿಸಿವೆ. ಈಚೆಗಿನ ಕೆಲವು ವರದಿಗಳ ಪ್ರಕಾರ ಚೀನಾದಲ್ಲಿ ಇ.ವಿ. ತಯಾರಿಕೆಯು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ, ಅಲ್ಲಿನ ಮಾರುಕಟ್ಟೆಯಲ್ಲಿ ಅವುಗಳ ಮಾರಾಟ ಕಡಿಮೆ ಆಗಿದೆ. ಅಲ್ಲಿನ ಇ.ವಿ ಕಂಪನಿಗಳ ಲಾಭವೂ ಕಡಿಮೆ ಆಗಿದೆ. ಹೀಗಾಗಿ ಅವು ಏಷ್ಯಾ ಮತ್ತು ಐರೋಪ್ಯ ಒಕ್ಕೂಟದ ಮಾರುಕಟ್ಟೆ ಮೇಲೆ ಕಣ್ಣಿಟ್ಟಿವೆ.
  • ಚೀನಾ ಸಲ್ಲಿಸಿರುವ ದೂರಿನ ವಿವರಗಳನ್ನು ಪರಿಶೀಲಿಸಲಾಗುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಹೇಳಿದ್ದಾರೆ.
  • ಟರ್ಕಿ, ಕೆನಡಾ ಮತ್ತು ಐರೋಪ್ಯ ಒಕ್ಕೂಟದ ವಿರುದ್ಧವೂ ಚೀನಾ ಇದೇ ಬಗೆಯ ದೂರು ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ‘ಅವರು ಭಾರತದ ಜೊತೆ ಸಮಾಲೋಚನೆ ನಡೆಸಲು ಬಯಸಿದ್ದಾರೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
  • ಡಬ್ಲ್ಯುಟಿಒ ನಿಯಮಗಳ ಪ್ರಕಾರ ವ್ಯಾಜ್ಯ ಇತ್ಯರ್ಥ ಪ್ರಕ್ರಿಯೆಯಲ್ಲಿ ಮೊದಲ ಹಂತವೆಂದರೆ ಸಮಾಲೋಚನೆ ನಡೆಸುವುದು. ಚೀನಾ ದೇಶವು ಭಾರತದ ಎರಡನೆಯ ಅತಿದೊಡ್ಡ ವಾಣಿಜ್ಯ ಪಾಲುದಾರ.
  • ಚೀನಾದ ಇ.ವಿ. ತಯಾರಕರು ವಿದೇಶಗಳಲ್ಲಿ ತುಸು ಪ್ರತಿರೋಧ ಎದುರಿಸುತ್ತಿದ್ದಾರೆ. ಐರೋಪ್ಯ ಒಕ್ಕೂಟವು ಚೀನಾದ ಇ.ವಿ.ಗಳ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅವುಗಳಿಗೆ ಶೇಕಡ 27ರಷ್ಟು ತೆರಿಗೆ ವಿಧಿಸಿದೆ.
  • ಭಾರತದಲ್ಲಿ ಕೇಂದ್ರ ಸರ್ಕಾರವು ಇ.ವಿ. ನೀತಿ ಹಾಗೂ ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆ ಮೂಲಕ ದೇಶದಲ್ಲಿ ಇ.ವಿ. ತಯಾರಿಕೆಯನ್ನು ಹೆಚ್ಚಿಸಲು ಮುಂದಾಗಿದೆ.
  • ವ್ಯಾಪಾರ ಕೊರತೆ ಅಂತರ 13 ತಿಂಗಳ ಗರಿಷ್ಠ

ಸಂದರ್ಭ: ಸೆಪ್ಟೆಂಬರ್ತಿಂಗಳಲ್ಲಿ ಭಾರತದಿಂದ ಆಗಿರುವ ರಫ್ತು ಶೇಕಡ 6.74ರಷ್ಟು ಹೆಚ್ಚಳ ಕಂಡು, 36.38 ಬಿಲಿಯನ್ಡಾಲರ್ಗೆ (₹3.20 ಲಕ್ಷ ಕೋಟಿ) ತಲುಪಿದೆ. ಆಮದು ಪ್ರಮಾಣವು ಶೇ 16.6ರಷ್ಟು ಹೆಚ್ಚಳ ಕಂಡಿದ್ದು, ವ್ಯಾಪಾರ ಕೊರತೆ ಅಂತರವು 31.15 ಬಿಲಿಯನ್ಡಾಲರ್ಗೆ (₹2.74 ಲಕ್ಷ ಕೋಟಿ) ತಲುಪಿದೆ.

  • ಈ ವ್ಯಾಪಾರ ಕೊರತೆಯು ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಅತಿಹೆಚ್ಚಿನದ್ದಾಗಿದೆ. ಚಿನ್ನ, ರಸಗೊಬ್ಬರ ಮತ್ತು ಬೆಳ್ಳಿಯ ಆಮದು ಹೆಚ್ಚಾದ ಕಾರಣದಿಂದಾಗಿ ಸೆಪ್ಟೆಂಬರ್‌ನಲ್ಲಿ ಆಮದು ಮೊತ್ತವು 68.53 ಬಿಲಿಯನ್ ಡಾಲರ್‌ಗೆ (₹6.03 ಲಕ್ಷ ಕೋಟಿ) ಏರಿಕೆ ಆಗಿದೆ.
  • ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ರಫ್ತು ಪ್ರಮಾಣವು ಶೇ 3.02ರಷ್ಟು ಹೆಚ್ಚಳ ಆಗಿದೆ. ಆಮದು ಪ್ರಮಾಣವು ಇದೇ ಅವಧಿಯಲ್ಲಿ ಶೇ 4.53ರಷ್ಟು ಜಾಸ್ತಿ ಆಗಿದೆ.
  • ಜಾಗತಿಕ ಮಟ್ಟದಲ್ಲಿ ಅರ್ಥ ವ್ಯವಸ್ಥೆಯಲ್ಲಿ ಅಸ್ಥಿರತೆ ಇದ್ದರೂ ಭಾರತದ ಸರಕು ಮತ್ತು ಸೇವೆಗಳ ರಫ್ತು ಚೆನ್ನಾಗಿ ಆಗುತ್ತಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ.
  • ದೇಶದ ಉದ್ಯಮ ವಲಯವು ತನ್ನ ವಾಣಿಜ್ಯ ಸಂಬಂಧವನ್ನು ಕಾಪಾಡಿಕೊಂಡಿದೆ, ಪೂರೈಕೆ ವ್ಯವಸ್ಥೆಯನ್ನು ಕೂಡ ಅದು ರಕ್ಷಿಸಿಕೊಂಡಿದೆ. ಹೀಗಾಗಿ ರಫ್ತು ಹೆಚ್ಚಳ ಆಗಿದೆ ಎಂದು ಅಗರ್ವಾಲ್ ಅವರು ‍ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದ್ದಾರೆ.
  • ಭಾರತದಿಂದ ಅಮೆರಿಕಕ್ಕೆ ಆಗುವ ರಫ್ತಿನಲ್ಲಿ ಶೇ 45ರಷ್ಟು ಪಾಲು ಈಗಲೂ ಶೇ 50 ಪ್ರಮಾಣದ ಸುಂಕದ ವ್ಯಾಪ್ತಿಯಿಂದ ಹೊರಗಿದೆ ಎಂದಿದ್ದಾರೆ.
  • ಚಾರ್ಲಿ ಕಿರ್ಕ್ಗೆ ಅಮೆರಿಕ ಅತ್ಯುನ್ನತ ನಾಗರಿಕ ಪುರಸ್ಕಾರ 

ಸಂದರ್ಭ: ಅಮೆರಿಕದ ಪ್ರಮುಖ ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ಅವರಿಗೆ ಮರಣೋತ್ತರವಾಗಿ ಅಮೆರಿಕದ ಅತ್ಯುನ್ನತ ನಾಗರಿಕ ಪುರಸ್ಕಾರಪ್ರೆಸಿಡೆನ್ಷಿಯಲ್ಮೆಡಲ್ಆಫ್ಫ್ರೀಡಂ ಅನ್ನು ಅಧ್ಯಕ್ಷ ಡೊನಾಲ್ಡ್ಟ್ರಂಪ್ಪ್ರಕಟಿಸಿದ್ದಾರೆ.

  • ಚಾರ್ಲಿ ಕಿರ್ಕ್‌ ಅವರ 32ನೇ ಜನ್ಮದಿನದ ಸಂದರ್ಭದಲ್ಲೇ ಈ ಪ್ರಶಸ್ತಿ ಘೋಷಣೆಯಾಗಿದೆ.
  • ಅಮೆರಿಕದ ಒರೆಮ್‌ ನಗರದ ಉತಾಹ್‌ ವ್ಯಾಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆ.10ರಂದು ನಡೆದ ‘ದಿ ಅಮೆರಿಕನ್ ಕಮ್‌ಬ್ಯಾಕ್ ಟೂರ್‌’ ಕಾರ್ಯಕ್ರಮದ ಸಂದರ್ಭದಲ್ಲಿ ಕಿರ್ಕ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
  • ‘ಮುಂದಿನ ತಲೆಮಾರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಯೋಧನನ್ನು ನಾವು ಸದಾ ಸ್ಮರಿಸುತ್ತೇವೆ’ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
  • ಅಮೆರಿಕ ಡಾಲರ್ಮೇಲೆಬ್ರಿಕ್ಸ್ದಾಳಿ

ಸಂದರ್ಭ: ಬ್ರಿಕ್ಸ್ ರಾಷ್ಟ್ರಗಳು ಡಾಲರ್ಮೇಲೆ ದಾಳಿ ಮಾಡುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ಟ್ರಂಪ್ ಅವರು ಆರೋಪಿಸಿದ್ದಾರೆ.

  • ಅಮೆರಿಕ ನೀತಿಗಳ ವಿರುದ್ಧವಾಗಿರುವ ‘ಬ್ರಿಕ್ಸ್‌’ ರಾಷ್ಟ್ರಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
  • ಅರ್ಜೆಂಟೀನಾ ಅಧ್ಯಕ್ಷ ಜಾವಿಯರ್‌ ಮಿಲೈ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಟ್ರಂಪ್, ‘ನಾನು ಡಾಲರ್ ಜೊತೆಗೆ ನಿಲ್ಲುತ್ತೇನೆ. ಡಾಲರ್‌ನಲ್ಲಿ ವಹಿವಾಟು ನಡೆಸಲು ಬಯಸುವವರಿಗೆ ಹಲವು ಉಪಯೋಗವಾಗಲಿದೆ. ಇತರರಿಗೆ ಆ ಅವಕಾಶ ಸಿಗಲ್ಲ’ ಎಂದು ಹೇಳಿದರು.
  • ‘ಬ್ರಿಕ್ಸ್‌ನ ಭಾಗವಾಗಲು ಬಯಸುವವ‌ವರ ಬಗ್ಗೆ ಆಕ್ಷೇಪವಿಲ್ಲ. ಆದರೆ ಅವರಿಗೆ ನಾವು ಸುಂಕವನ್ನು ವಿಧಿಸುವುದಾಗಿ ಹೇಳಿದ್ದೆ. ಎಲ್ಲರೂ ಬ್ರಿಕ್ಸ್‌ನಿಂದ ಹೊರಬಂದರು’ ಎಂದು ಹೇಳಿದರು.
  • ಏಕಪಕ್ಷೀಯ ಸುಂಕ ಮತ್ತು ಸುಂಕ ರಹಿತ ಕ್ರಮಗಳಿಂದಾಗಿ ಜಾಗತಿಕ ವಹಿವಾಟಿನ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ‘ಬ್ರಿಕ್ಸ್‌’ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.
  • 2040ರಲ್ಲಿ ಚಂದ್ರನ ಮೇಲೆ ಭಾರತೀಯರು

ಸಂದರ್ಭ: 2040ರಲ್ಲಿ ಚಂದ್ರನ ಮೇಲೆ ಭಾರತೀಯರನ್ನು ಇಳಿಸುವ ಗುರಿಯಿದ್ದು, ಅದರ ಭಾಗವಾಗಿ ನಡೆಸಲಾಗುವ ಮೊದಲ ಮಾನವ ಬಾಹ್ಯಾಕಾಶ ಹಾರಾಟಮಿಷನ್ ಗಗನಯಾನ 2027ರಲ್ಲಿ ಉಡಾವಣೆಯಾಗುವ ಹಾದಿಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ವಿ.ನಾರಾಯಣನ್ ಹೇಳಿದ್ದಾರೆ.

  • 2035ರ ವೇಳೆಗೆ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮತ್ತು 2026ರ ವೇಳೆಗೆ ಮಾವನ ರಹಿತ ಮೂರು ‘ಗಗನಯಾನ’ ಕಾರ್ಯಾಚರಣೆಗಳು ಸೇರಿದಂತೆ ಹಲವಾರು ಮಹತ್ವಾ ಕಾಂಕ್ಷೆಯ ಬಾಹ್ಯಾಕಾಶ ಯೋಜನೆಗಳು, ವಲಯ ಸುಧಾರಣೆಗಳು ಪ್ರಸ್ತುತ ನಡೆಯುತ್ತಿವೆ ಎಂದು ನಾರಾಯಣನ್ ಹೇಳಿದ್ದಾರೆ.
  • ಇದರಲ್ಲಿ ‘ವ್ಯೋಮಮಿತ್ರ’ ರೋಬೊಟ್‌ ಅನ್ನು ಒಳಗೊಂಡಿರುವ ಮೊದಲನೆಯ ಯೋಜನೆಯನ್ನು 2025ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸುವ ಗುರಿ ಇದೆ.
  • ಗಲ್ಲುಶಿಕ್ಷೆಗೆ ಪರ್ಯಾಯ ಆಯ್ಕೆ: ಒಪ್ಪದ ಕೇಂದ್ರ

ಸಂದರ್ಭ: ಮರಣದಂಡನೆಗೆ ಗುರಿಯಾದ ಅಪರಾಧಿಯನ್ನು ಗಲ್ಲಿಗೇರಿಸಿ ಕೊಲ್ಲುವ ಬದಲು, ಸಿರಿಂಜ್ಮೂಲಕ ವಿಷ ನೀಡುವ ಪರ್ಯಾಯ ಆಯ್ಕೆಯು ಕಾರ್ಯಸಾಧುವಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.

  • ನೇಣುಗಂಬಕ್ಕೆ ಏರಿಸಿ ಅಪರಾಧಿಯನ್ನು ಕೊಲ್ಲುವ ಬದಲು, ಮಾನವೀಯವಾದ ಪರ್ಯಾಯ ಮಾರ್ಗದ ಆಯ್ಕೆಯನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ 2023ರಲ್ಲಿ ಪ್ರಕರಣವೊಂದರಲ್ಲಿ ಹೇಳಿತ್ತು. ‘ಗಲ್ಲಿಗೇರಿಸುವ’ ಪದ್ಧತಿ ರದ್ದತಿ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿಕ್ರಮ್‌ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರನ್ನೊಳಗೊಂಡ ಪೀಠ ನಡೆಸಿತು.
  • ‘ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗೆ ‘ನೇಣುಗಂಬ’ ಅಥವಾ ‘ಪ್ರಾಣಹರಣ ಮಾಡುವ ಚುಚ್ಚುಮದ್ದು’ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ವನ್ನಾದರೂ ನೀಡಬೇಕು’ ಎಂದು ಪಿಐಎಲ್‌ ಸಲ್ಲಿಸಿರುವ ವಕೀಲ ರಿಶಿ ಮಲ್ಹೋತ್ರಾ ಕೋರ್ಟ್‌ಗೆ ಮನವಿ ಮಾಡಿದರು.
  • ‘ನೇಣು ಬಿಗಿದು ಕೊಲ್ಲುವುದಕ್ಕಿಂತ ಹೆಚ್ಚು ಮಾನವೀಯವಾದ ಪರ್ಯಾಯ ಮಾರ್ಗ ಚುಚ್ಚುಮದ್ದು ನೀಡುವುದು. ಅಮೆರಿಕದಲ್ಲಿ 50ರಲ್ಲಿ 49 ರಾಜ್ಯಗಳಲ್ಲಿ ವಿಧಾನವನ್ನು ಅಳವಡಿಸಿಕೊಳ್ಳ ಲಾಗಿದೆ. ನೇಣಿಗೇರಿಸಿದ ವ್ಯಕ್ತಿಯ ದೇಹವು 40 ನಿಮಿಷ ಹಗ್ಗದಲ್ಲೇ ನೇತಾಡುತ್ತಿರುತ್ತದೆ. ಇದು ಅನಾಗರಿಕ, ಅಮಾನವೀಯ. ಮರಣದಂಡನೆ ಶಿಕ್ಷೆ ಜಾರಿಗೊಳಿಸುವಾಗ ಮಾನವನ ಘನತೆಗೆ ಸಂಬಂಧಿಸಿದ ಅಂಶಗಳನ್ನೂ ಪರಿಗಣಿಸಬೇಕು ಎಂದು ಅವರು ಪೀಠದ ಗಮನಕ್ಕೆ ತಂದರು.
  • ಮಲ್ಹೋತ್ರಾ ಸಲ್ಲಿಸಿರುವ ಮನವಿಯ ಬಗ್ಗೆ, ಸರ್ಕಾರಕ್ಕೆ ಸಲಹೆ ನೀಡುವಂತೆ ನ್ಯಾಯಪೀಠ, ಕೇಂದ್ರವನ್ನು ಪ್ರತಿನಿಧಿಸಿದ್ದ ವಕೀಲರಿಗೆ ಸೂಚಿಸಿತು.
  • ‘ಈಗಾಗಲೇ ಈ ಬಗ್ಗೆ ಚರ್ಚಿಸಲಾಗಿದೆ. ಆದರೆ, ಪರ್ಯಾಯ ಆಯ್ಕೆ ನೀಡುವುದು ಕಾರ್ಯಸಾಧು ವಲ್ಲ. ಇದು ಸರ್ಕಾರ ನೀತಿ ನಿರ್ಧಾರದ ಭಾಗ. ಆ ಬಗ್ಗೆ ಸರ್ಕಾರ ನಿರ್ಧಾರ ತೆಗೆದು ಕೊಳ್ಳುತ್ತದೆ’ ಎಂದು ಕೇಂದ್ರವನ್ನು ಪ್ರತಿನಿ ಧಿಸಿದ್ದ ವಕೀಲರು ಕೋರ್ಟ್‌ಗೆ ತಿಳಿಸಿದರು.  
  • ಗಲ್ಲಿಗೇರಿಸುವ ಪದ್ಧತಿ ರದ್ದುಗೊಳಿಸುವ ವಿಚಾರವಾಗಿ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರ ಪ್ರಸ್ತಾವದ ಮೇರೆಗೆ, 2023ರಲ್ಲಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿತ್ತು. ಈ ಸಮಿತಿ ಏನು ಮಾಡಿದೆ ಎನ್ನುವುದನ್ನೂ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ ಕೋರ್ಟ್‌, ಮುಂದಿನ ವಿಚಾರಣೆಯನ್ನು ನವೆಂಬರ್‌ 11ಕ್ಕೆ ನಿಗದಿಪಡಿಸಿತು.

‘ಪರ್ಯಾಯ ಮಾರ್ಗ ಅರಸಬೇಕಿದೆ’

  • ‘ಸಮಸ್ಯೆಯೆಂದರೆ, ಸರ್ಕಾರವು ಕಾಲಕ್ಕೆ ತಕ್ಕಂತೆ ಸುಧಾರಣಾವಾದಿ ಆಲೋಚನೆಗಳನ್ನು ಅಳವಡಿಸಿಕೊಂಡಿಲ್ಲ. ಈಗ ಕಾಲ ಬದಲಾಗಿದೆ. ಮರಣದಂಡನೆ ಜಾರಿಯಲ್ಲೂ ಪರ್ಯಾಯ ಮಾರ್ಗ ಅರಸಬೇಕಿದೆ’ ಎಂದು ನ್ಯಾಯಮೂರ್ತಿ ಸಂದೀಪ್‌ ಮೆಹ್ತಾ ಅಭಿಪ್ರಾಯಪಟ್ಟರು.
  • ‘ಮರಣದಂಡನೆ ಜಾರಿಯಲ್ಲಿ ನಿರ್ದಿಷ್ಟ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಶಾಸಕಾಂಗಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ’ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.
  • ಪೋಕ್ಸೊ ಪ್ರಕರಣ ಶೇ 94ರಷ್ಟು ಹೆಚ್ಚಳ

ಸಂದರ್ಭ: ಇನ್ಟು ದಿ ಲೈಟ್ ಇಂಡೆಕ್ಸ್ 2025’ ಸಂಶೋಧನಾ ವರದಿಯಲ್ಲಿ ಬಹಿರಂಗ : ಭಾರತದಲ್ಲಿ 2017 ಹಾಗೂ 2022 ನಡುವೆ ಪೋಕ್ಸೊ ಕಾಯ್ದೆಯಡಿ ದಾಖಲಾದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಪರಾಧ ಪ್ರಕರಣಗಳ ಸಂಖ್ಯೆ ಶೇ 94ರಷ್ಟು ಏರಿಕೆಯಾಗಿದೆ ಎಂದುಇನ್ಟು ದಿ ಲೈಟ್ ಇಂಡೆಕ್ಸ್ 2025’ ಸಂಶೋಧನಾ ವರದಿ ಹೇಳಿದೆ.

  • ಎಡಿನ್‌ಬರ್ಗ್‌ ವಿಶ್ವವಿದ್ಯಾಲಯ ಮತ್ತು ನ್ಯೂ ಸೌತ್‌ ವೇಲ್ಸ್‌ ವಿಶ್ವವಿದ್ಯಾಲಯವು ಆಯೋಜಿಸಿರುವ, ಚೈಲ್ಡ್‌ಲೈಟ್‌ ಗ್ಲೋಬಲ್‌ ಚೈಲ್ಡ್ ಸೇಫ್ಟಿ ಇನ್‌ಸ್ಟಿಟ್ಯೂಟ್‌ ಈ ವಾರ ಬಿಡುಗಡೆ ಮಾಡಿದ ಸಂಶೋಧನಾ ವರದಿಯಲ್ಲಿ ಈ ವಿವರಗಳು ಬಹಿರಂಗಗೊಂಡಿವೆ.
  • ಈ ವರದಿ ಪ್ರಕಾರ, ಅಪರಾಧ ಪ್ರಕರಣಗಳ ಸಂಖ್ಯೆ 33,210ರಿಂದ 64,469ಕ್ಕೆ ಹೆಚ್ಚಾಗಿದೆ. ಇದರ ಹೊರತಾಗಿಯೂ ಕಾನೂನು ಕ್ರಮ ಜರುಗಿಸುವ ಪ್ರಮಾಣವು ಶೇ 90ಕ್ಕಿಂತ ಹೆಚ್ಚಿದೆ. ಇದು ಕಾಯ್ದೆಯ ಪರಿಣಾಮಕಾರಿ ಜಾರಿ ಮತ್ತು ಪ್ರಕರಣಗಳ ವರದಿ ಮಾಡುವ ಕಾರ್ಯವಿಧಾನಗಳನ್ನು ಸೂಚಿಸುತ್ತದೆ ಎಂದು ಹೇಳಿದೆ.
  • ಭಾರತದಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆ ಕುರಿತು ಹೆಚ್ಚಿನ ದತ್ತಾಂಶ ಲಭ್ಯವಿದೆ. ಅಪರಾಧಗಳ ಅಂಕಿ– ಅಂಶಗಳಲ್ಲಿನ ಪಾರದರ್ಶಕತೆಯು ಹೆಚ್ಚು ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ತ್ವರಿತಗತಿಯ ಕ್ರಮಕ್ಕೆ ಅವಕಾಶ ಮಾಡಿಕೊಡುತ್ತದೆ.
  • ಎಂಟು ಮಕ್ಕಳ ಪೈಕಿ ಒಬ್ಬರು (ಶೇ 12.5) 18 ವರ್ಷ ತುಂಬುವ ಮೊದಲೇ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಭಾರತ, ನೇಪಾಳ ಮತ್ತು ಶ್ರೀಲಂಕಾದಲ್ಲಿ ನಡೆಸಿದ ಸಮೀಕ್ಷೆಯ ದತ್ತಾಂಶವು ತೋರಿಸುತ್ತದೆ. ಈ ಮೂರು ದೇಶಗಳಲ್ಲಿ ಸುಮಾರು 5.4 ಕೋಟಿ ಮಕ್ಕಳು ಇದ್ದಾರೆ.
  • ‘2024ರಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ (ಸಿಎಸ್‌ಎಎಂ) ಬಹುಪಾಲು ಪ್ರಕರಣಗಳು ವರದಿಯಾಗಿವೆ. ಆದರೂ, ಭಾರತವು ಅತ್ಯಂತ ಕಡಿಮೆ ಸಿಎಸ್‌ಎಎಂ ಲಭ್ಯತೆಯ ಅನುಪಾತ ಹೊಂದಿದೆ (ಪ್ರತಿ 10 ಸಾವಿರ ಜನರಿಗೆ 15 ವರದಿಗಳು). ಇದು ಪರಿಣಾಮಕಾರಿಯಾದ ಪತ್ತೆ ಕಾರ್ಯ ಮತ್ತು ವರದಿ ಮಾಡುವ ವ್ಯವಸ್ಥೆಗಳನ್ನು ಸೂಚಿಸುತ್ತದೆ’ ಎಂದು ವರದಿ ಹೇಳಿದೆ.
  • ರಷ್ಯಾದಿಂದ ಆಮದು ತಕ್ಷಣಕ್ಕೆ ನಿಲ್ಲದು

ಸಂದರ್ಭ: ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ತಕ್ಷಣಕ್ಕೆ ನಿಲ್ಲಿಸುವುದು ಸಾಧ್ಯವಾಗದ ಕೆಲಸ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  • ಕಚ್ಚಾ ತೈಲ ಆಮದು ಬಗ್ಗೆ 4–6 ವಾರಗಳ ಮೊದಲೇ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ, ಕನಿಷ್ಠಪಕ್ಷ ನವೆಂಬರ್‌ ಅಂತ್ಯದವರೆ ಗಿನ ಆಮದು ಬಗ್ಗೆ ಈಗಾಗಲೇ ಒಪ್ಪಂದ ಆಗಿರುತ್ತದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿರುವುದು ನಿಜ ಎಂದಾದರೆ, ರಷ್ಯಾದಿಂದ ಕಚ್ಚಾ ತೈಲ ಆಮದು ನವೆಂಬರ್‌ ಮೂರನೆಯ ಅಥವಾ ನಾಲ್ಕನೆಯ ವಾರದಿಂದ ಕೊನೆಗೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.
  • ‘ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಲು ಭಾರತ ಒಪ್ಪಿದೆ’ ಎಂದು ಟ್ರಂಪ್‌ ಅವರು ಹೇಳಿರುವುದು ರಾಜಕೀಯ ಮಾತಿನಂತೆ ಕಾಣುತ್ತಿದೆ ಎಂದು ವಿಶ್ಲೇಷಣಾ ಸಂಸ್ಥೆ ಕೆಪ್ಲರ್‌ ಹೇಳಿದೆ. ಆಮದು ನಿಲ್ಲಿಸುವ ಬಗ್ಗೆ ಕೇಂದ್ರ ಸರ್ಕಾರವು ಅಧಿಕೃತ ಹೇಳಿಕೆ ನೀಡಿಲ್ಲ.
  • ಅಕ್ಟೋಬರ್‌ನಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ 18 ಲಕ್ಷ ಬ್ಯಾರಲ್‌ ಕಚ್ಚಾ ತೈಲ ಖರೀದಿಸಿದೆ ಎಂದು ಕೆಪ್ಲರ್‌ ಅಂದಾಜು ಮಾಡಿದೆ. ಸೆಪ್ಟೆಂಬರ್‌ನಲ್ಲಿ ಖರೀದಿಸುತ್ತಿದ್ದ ಮಟ್ಟಕ್ಕೆ ಹೋಲಿಸಿದರೆ ಇದು ದಿನಕ್ಕೆ 2.50 ಲಕ್ಷ ಬ್ಯಾರಲ್‌ನಷ್ಟು ಹೆಚ್ಚು.
  • ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಖರೀದಿಯು ತುಸು ಕಡಿಮೆ ಆಗಿದ್ದಕ್ಕೆ ಕಾರಣ ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸಿದ ಸುಂಕ ಅಲ್ಲ. ಅದಕ್ಕೆ ಇತರ ಕಾರಣಗಳಿದ್ದವು, ಅದರಲ್ಲೂ ಮುಖ್ಯವಾಗಿ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಘಟಕಗಳಲ್ಲಿ ವಾರ್ಷಿಕ ನಿರ್ವಹಣಾ ಚಟುವಟಿಕೆಗಳು ಕಾರಣವಾಗಿದ್ದವು.
  • ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವಲ್ಲಿ ಎರಡನೆಯ ಸ್ಥಾನದಲ್ಲಿ ಇರುವ ಭಾರತವು ಆಮದನ್ನು ನಿಲ್ಲಿಸಿದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರಲ್‌ಗೆ 100 ಡಾಲರ್‌ವರೆಗೆ ಹೆಚ್ಚಳವಾಗುವ ಅಪಾಯ ಇದೆ. ಇದರ ಪರಿಣಾಮವಾಗಿ ಹಣದುಬ್ಬರವು ಜಗತ್ತಿನೆಲ್ಲೆಡೆ ಏರಿಕೆ ಕಾಣಬಹುದು ಎಂದು ತಜ್ಞರು ಭೀತಿ ವ್ಯಕ್ತಪಡಿಸಿದ್ದಾರೆ.
  • ರಷ್ಯಾದ ಕಚ್ಚಾ ತೈಲ ಆಮದು ನಿಲ್ಲಿಸಬೇಕು ಎಂದಾದರೆ ಭಾರತದ ಕಂಪನಿಗಳು ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭವನ್ನು ಬಿಟ್ಟುಕೊಡಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ ದೇಶದ ವಾರ್ಷಿಕ ಆಮದು ವೆಚ್ಚವು 5 ಬಿಲಿಯನ್‌ ಡಾಲರ್‌ವರೆಗೆ (ಅಂದಾಜು ₹43 ಸಾವಿರ ಕೋಟಿ) ಹೆಚ್ಚಬಹುದು.
  • ಕರುನಾಡು ಗಜನಾಡು

ಭಾ ರತದಲ್ಲಿ 22,446 ಕಾಡಾನೆಗಳಿವೆ ಎಂದು ಸಿಂಕ್ರೋನಸ್ ಆಲ್ ಇಂಡಿಯಾ ಎಲಿಫೆಂಟ್ ಎಸ್ಟಿಮೇಷನ್ ಪ್ರೋಗ್ರಾಂ (ಎಸ್‌ಎಐಇಇ 2021–25) ಹೆಸರಿನಲ್ಲಿ ನಡೆದ ಗಣತಿಯ ಆಧಾರದಲ್ಲಿ ಸಿದ್ಧಪಡಿಸಲಾಗಿರುವ ‘ಭಾರತದಲ್ಲಿ ಆನೆಗಳ ಸ್ಥಿತಿಗತಿ ವರದಿ’ ಹೇಳಿದೆ. ಪರಿಸರ ಸಚಿವಾಲಯ, ಪ್ರಾಜೆಕ್ಟ್ ಎಲಿಫೆಂಟ್ ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಜಂಟಿಯಾಗಿ ಈ ಗಣತಿ ನಡೆಸಿವೆ.

ರಾಜ್ಯಗಳ ಪೈಕಿ ಆನೆಗಳ ಸಂಖ್ಯೆಯಲ್ಲಿ ಕರ್ನಾಟಕವು (6,013) ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಅಸ್ಸಾಂ (4,159), ತಮಿಳುನಾಡು (3,136), ಕೇರಳ (2,785) ಮತ್ತು ಉತ್ತರಾಖಂಡ (1,792) ಇವೆ. ದೇಶದ ಆನೆಗಳ ಪೈಕಿ ಶೇ 59.29ರಷ್ಟು ಕರ್ನಾಟಕ, ಅಸ್ಸಾಂ, ತಮಿಳುನಾಡಿನಲ್ಲಿಯೇ ಇವೆ ಎಂದು ವರದಿ ಹೇಳಿದೆ. ಪ್ರದೇಶವಾರು ಆನೆಗಳ ಸಂಖ್ಯೆಯಲ್ಲಿ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಹರಡಿರುವ ಪಶ್ಚಿಮ ಘಟ್ಟಗಳು ಮುಂಚೂಣಿ ಸ್ಥಾನ ಪಡೆದಿವೆ. ಜತೆಗೆ, ಈಶಾನ್ಯ ರಾಜ್ಯಗಳ ವ್ಯಾಪ್ತಿಯ ಅಸ್ಸಾಂ ಮತ್ತು ಬ್ರಹ್ಮಪುತ್ರ ಜಲಾನಯನ ಪ್ರದೇಶ ಎರಡನೇ ಸ್ಥಾನದಲ್ಲಿದೆ.   

ಆನೆಗಳ ಸಮೀಕ್ಷೆ ಆರಂಭವಾಗಿದ್ದು 2021ರಲ್ಲಿ. ನಾಲ್ಕು ವರ್ಷಗಳ ನಂತರ 2025ರ ಅಕ್ಟೋಬರ್ 14ರಂದು ವರದಿ ಬಿಡುಗಡೆಯಾಗಿದೆ. ವಂಶವಾಹಿ ವಿಶ್ಲೇಷಣೆ ಮತ್ತು ದತ್ತಾಂಶ ದೃಢೀಕರಣವು ಸಂಕೀರ್ಣ ಪ್ರಕ್ರಿಯೆಯಾಗಿದ್ದರಿಂದ ಸಮೀಕ್ಷೆಗೆ ಹೆಚ್ಚು ಸಮಯ ವ್ಯಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಭಾರತವು ಆನೆಗಳಿಗೆ ಪ್ರಸಿದ್ಧವಾಗಿದ್ದು, ದೇಶದಲ್ಲಿ ಆನೆಗಳ ಸಂತತಿಗೆ ಹಲವು ರೀತಿಯಲ್ಲಿ ಕಂಟಕ ಎದುರಾಗಿದೆ. ಚಾರಿತ್ರಿಕವಾಗಿ ದೇಶದಲ್ಲಿ ಆನೆಗಳ ಸಂಖ್ಯೆ ವಿಪುಲವಾಗಿತ್ತು. ಹಿಂದೆ ಆನೆಗಳು ಇದ್ದ ಒಟ್ಟು ಪ್ರದೇಶದ ಪೈಕಿ ಶೇ 3.5ರಷ್ಟು ಪ್ರದೇಶದಲ್ಲಿ ಮಾತ್ರವೇ ಪ್ರಸ್ತುತ ಅವು ಉಳಿದಿವೆ. ಪ್ರಪಂಚದ ಆನೆಗಳ ಸಂಖ್ಯೆಯಲ್ಲಿ ಭಾರತವು ಶೇ 60ರಷ್ಟು ಆನೆಗಳಿಗೆ ನೆಲೆಯಾಗಿದೆ. ಆದರೂ ಹಲವು ಕಾರಣಗಳಿಂದ ಅವುಗಳ ವಾಸಸ್ಥಳಗಳ ವಿಸ್ತೀರ್ಣ ಕಡಿಮೆಯಾಗುತ್ತಲೇ ಸಾಗುತ್ತಿದೆ ಎಂದು ವರದಿ ಹೇಳಿದೆ.

ಮೈಸೂರು ಭಾಗದಲ್ಲಿ ಹೆಚ್ಚು 

ಕರ್ನಾಟಕದಲ್ಲಿ ಬಂಡೀಪುರ, ನಾಗರಹೊಳೆ, ಭದ್ರಾ, ಕಾಳಿ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಗಣತಿ ನಡೆಸಲಾಗಿದೆ. ಒಟ್ಟು ಸಿಬ್ಬಂದಿ 45,323 ಕಿ.ಮೀ ದೂರ ಸಾಗಿ ವಿವರಗಳನ್ನು ದಾಖಲಿಸಿದ್ದಾರೆ.

ರಾಜ್ಯದಲ್ಲಿ ಕನಿಷ್ಠ 4,792, ಗರಿಷ್ಠ 7,235 ಆನೆಗಳಿವೆ ಎಂದು ವರದಿ ಹೇಳಿದ್ದು, ಸರಾಸರಿ ಲೆಕ್ಕಾಚಾರದಲ್ಲಿ ರಾಜ್ಯದಲ್ಲಿರುವ ಆನೆಗಳು 6,013. 2017ರ ಗಣತಿಯು 6,049 ಆನೆಗಳು ಇರುವುದಾಗಿ ಹೇಳಿತ್ತು. ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿರುವ ರಕ್ಷಿತಾರಣ್ಯಗಳ ಪೈಕಿ ಮೈಸೂರು ಭಾಗದಲ್ಲೇ ಹೆಚ್ಚು ಆನೆಗಳಿವೆ ಎಂದು ವರದಿ ಹೇಳಿದೆ. 

ಕಾಳಿ, ದಾಂಡೇಲಿ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು, ಕೊಪ್ಪ, ಭದ್ರಾವತಿ, ಶಿವಮೊಗ್ಗ ವಿಭಾಗಗಳಲ್ಲಿ ಆನೆಗಳ ಸಾಂದ್ರತೆ ಕಡಿಮೆ ಇದೆ. ಮೈಸೂರು ಭಾಗದ ಬಂಡೀಪುರ, ನಾಗರಹೊಳೆ, ಬಿಆರ್‌ಟಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಹೆಚ್ಚು ಆನೆಗಳಿವೆ. ಹಲವು ವರ್ಷಗಳಿಂದ ಇಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಸಂರಕ್ಷಣಾ ಕ್ರಮಗಳು, ಹಸಿರು ಹೆಚ್ಚಾಗಲು ಕಾರಣವಾಗಿವೆ. ಬೇರೆ ಬೇರೆ ಅರಣ್ಯಗಳ ನಡುವೆ ಸಂಪರ್ಕ ಇರುವುದರಿಂದ ಈ ಭಾಗದಲ್ಲಿ ಆನೆಗಳ ಸಂಖ್ಯೆ ಉತ್ತಮವಾಗಿದೆ ಎಂದು ವರದಿ ವಿವರಿಸಿದೆ. 

ರಾಜ್ಯವು ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು ಮಾನವ–ಆನೆ ಸಂಘರ್ಷವೂ ಇಲ್ಲಿ ಜಾಸ್ತಿ ಇದೆ. ಅರಣ್ಯದ ಅಂಚಿನಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿರುವುದು ಇದಕ್ಕೆ ಕಾರಣ. ಅರಣ್ಯದ ಒಳಗೆ ಮತ್ತು ಹೊರಗೆ ಜನವಸತಿ ಪ್ರದೇಶಗಳು ಇರುವುದು ಮತ್ತೊಂದು ಕಾರಣ. ವನ್ಯಜೀವಿಗಳ ಆವಾಸಗಳ ಒತ್ತುವರಿಯೂ ಜಾಸ್ತಿಯಾಗುತ್ತಿದ್ದು, ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಮಾನವ ಹಸ್ತಕ್ಷೇಪದಿಂದ ಕಾಳಿ, ಭದ್ರಾ ಹಾಗೂ ಮೈಸೂರು ವ್ಯಾಪ್ತಿಯ ಸಂರಕ್ಷಿತ ಪ್ರದೇಶಗಳ ಅರಣ್ಯ ನಾಶವಾಗುತ್ತಿರುವುದು ಆನೆಗಳ ಸಂರಕ್ಷಣೆಗೆ ಸವಾಲಾಗಿದೆ. 

ಆನೆಗಳ ಸಂಖ್ಯೆ ಇಳಿಕೆಗೆ ಕಾರಣಗಳೇನು?

l ಆವಾಸದ ವ್ಯಾಪ್ತಿ ಕಿರಿದಾಗುತ್ತಿರುವುದು, ಕಾಡುಗಳು ಕಡಿಮೆಯಾಗಿರುವುದು

l ಪಶ್ಚಿಮ ಘಟ್ಟ, ಈಶಾನ್ಯ ಘಟ್ಟ ಸೇರಿದಂತೆ ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಅರಣ್ಯ ಭಾಗದಲ್ಲಿ ಒತ್ತುವರಿ, ಅಭಿವೃದ್ಧಿ ಕಾಮಗಾರಿಗಳು ಮತ್ತು ಭೂ ಬಳಕೆ ಬದಲಾವಣೆಯಿಂದ ಸಾಂಪ್ರದಾಯಿಕ ಕಾರಿಡಾರ್‌ಗಳು ನಾಶವಾಗಿರುವುದು

l ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಟೀ, ಕಾಫಿ ತೋಟಗಳ ವ್ಯಾಪ್ತಿ ವಿಸ್ತರಿಸುತ್ತಿರುವುದು, ಅಭಿವೃದ್ಧಿ ಯೋಜನೆಗಳ ಹೆಚ್ಚಳ

l ದೇಶದ ಮಧ್ಯಭಾಗದಲ್ಲಿ ಗಣಿಗಾರಿಕೆ ಹೆಚ್ಚಾಗಿದೆ. ಇದರಿಂದಾಗಿ ಆನೆಗಳ ಓಡಾಟಕ್ಕೆ ಅಡ್ಡಿ 

l ಈಶಾನ್ಯ ಭಾಗದಲ್ಲಿ ಆನೆಗಳ ಕಾರಿಡಾರ್‌ಗಳು ನಾಶವಾಗಿವೆ. ಅರಣ್ಯ ಛಿದ್ರವಾಗಿವೆ, ಅಭಿವೃದ್ಧಿ ಕಾಮಗಾರಿಗಳು ಹೆಚ್ಚಾಗಿವೆ

l ಅರಣ್ಯದಲ್ಲಿ ಕಳೆ ಗಿಡಗಳು ಹೆಚ್ಚುತ್ತಿರುವುದು, ಮಾನವನ ಹಸ್ತಕ್ಷೇಪ, ಕೃಷಿ ಭೂಮಿಗೆ ಬೇಲಿ ಹಾಕುವುದು

l ಅಕೇಷಿಯಾದಂತಹ ಗಿಡಗಳನ್ನೊಳಗೊಂಡ ನೆಡುತೋಪುಗಳ ನಿರ್ಮಾಣ 

ಡಿಎನ್‌ಎ ಆಧಾರಿತ ಸಮೀಕ್ಷೆ

2017ರವರೆಗೆ ನೇರ ಎಣಿಕೆ, ಮಾದರಿ ಬ್ಲಾಕ್‌ ಎಣಿಕೆ, ಲದ್ದಿ ಎಣಿಕೆ (Total Count Dung Count & Sample Block Count) ವಿಧಾನಗಳ ಮೂಲಕ ಆನೆ ಗಣತಿ ನಡೆಸಲಾಗುತ್ತಿತ್ತು. ಈ ಬಾರಿ ಆ ಮಾರ್ಗವನ್ನು ಕೈಬಿಡಲಾಗಿದೆ. ಮನುಷ್ಯರನ್ನು ಅವರ ವಂಶವಾಹಿ ಮೂಲಕ ಪತ್ತೆ ಹಚ್ಚುವ ವಿಧಾನವನ್ನೇ ಇಲ್ಲೂ ಅನುಸರಿಸಲಾಗಿದೆ. ಭೂಸಮೀಕ್ಷೆ, ಉಪಗ್ರಹ ಆಧಾರಿತ ಮ್ಯಾಪಿಂಗ್, ವಂಶವಾಹಿ ವಿಶ್ಲೇಷಣೆ– ಹೀಗೆ ಮೂರು ಹಂತದಲ್ಲಿ ಗಣತಿ ನಡೆಸಲಾಗಿದೆ. ಆನೆ ಲದ್ದಿ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಭಿನ್ನ ಪ್ರಯತ್ನವಾಗಿದ್ದು, ಮುಂದಿನ ದಿನಗಳಲ್ಲಿ ಈ ಮಾದರಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು. ಆನೆಗಳ ಮೇಲೆ ನಿಗಾ ಮತ್ತು ಸಂರಕ್ಷಣೆಯಲ್ಲೂ ಈ ಮಾರ್ಗವು ನೆರವಾಗಲಿದೆ ಎಂದು ವರದಿ ಉಲ್ಲೇಖಿಸಿದೆ.

ಪ್ರಚಲಿತ ವಿದ್ಯಮಾನಗಳು: 15ನೇ ಅಕ್ಟೋಬರ್ 2025

  • ಜಾತಿವಾರು ಸಮೀಕ್ಷೆಯಲ್ಲಿಕಲ್ಯಾಣ 6 ಜಿಲ್ಲೆ ಹಿಂದೆ

ಸಂದರ್ಭ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮಾಹಿತಿ ಸಂಗ್ರಹದಲ್ಲಿ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳು ಹಿಂದೆ ಬಿದ್ದಿವೆ.

  • ರಾಜ್ಯದಲ್ಲಿ 1.48 ಕೋಟಿ ಕುಟುಂಬಗಳ ಸುಮಾರು 6.14 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸುವುದು ಗುರಿ. ಅಕ್ಟೋಬರ್ 13ರ ಸಂಜೆ 6.30ರ ವೇಳೆಗೆ ಸಮೀಕ್ಷೆ ಯಲ್ಲಿ 4.92 ಕೋಟಿ ಜನರ ಮಾಹಿತಿ ಯನ್ನು ಕ್ರೋಡೀಕರಣ ಮಾಡಿ ಶೇ 80.15ರಷ್ಟು ಪೂರ್ಣಗೊಳಿಸಲಾಗಿದೆ.
  • ಕೊಪ್ಪಳ ಹೊರತುಪಡಿಸಿ ‘ಕಲ್ಯಾಣ’ದ ಉಳಿದ ಆರು ಜಿಲ್ಲೆಗಳು ಕೊನೆಯಲ್ಲಿರುವ 10 ಜಿಲ್ಲೆಗಳಲ್ಲಿ ಸ್ಥಾನ ಪಡೆದಿವೆ. ಅದರಲ್ಲಿ ಕೊಡಗು, ಚಿಕ್ಕಬಳ್ಳಾಪುರ, ಮೈಸೂರು ಹಾಗೂ ವಿಜಯಪುರ ಜಿಲ್ಲೆಗಳೂ ಇವೆ.
  • ಯಾದಗಿರಿ ಜಿಲ್ಲೆಯಲ್ಲಿ ಶೇ 69.37ರಷ್ಟು ಪ್ರಗತಿಯಾ ಗಿದ್ದು, ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದೆ. ಜನಸಂಖ್ಯೆ ಮಾಹಿತಿ ಸಂಗ್ರಹದಲ್ಲಿ ಚಿಕ್ಕಮಗಳೂರು (ಶೇ 91.32), ತುಮಕೂರು (90.03), ಮಂಡ್ಯ (90) ಮೊದಲ ಮೂರು ಸ್ಥಾನಗಳಲ್ಲಿವೆ. ಹಾವೇರಿ (89.87), ದಾವಣಗೆರೆ (87), ಬೆಂಗಳೂರು ದಕ್ಷಿಣ (87.35), ಹಾಸನ (86), ಶಿವಮೊಗ್ಗ (86), ಚಿತ್ರದುರ್ಗ (86.11), ಉಡುಪಿ (85.11) ಅಗ್ರ 10 ಸ್ಥಾನಗಳಲ್ಲಿವೆ.
  • ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 1.44 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸುವ ಗುರಿ ಇತ್ತು. ಈವರೆಗೆ 1.07 ಕೋಟಿ ಜನರ ಮಾಹಿತಿ ಸಂಗ್ರಹಿಸಲಾಗಿದೆ. ಕೊಪ್ಪಳ (ಶೇ 82.27) ರಾಜ್ಯದಲ್ಲಿ 14ನೇ ಸ್ಥಾನದಲ್ಲಿದೆ. ಉಳಿದಂತೆ ಬೀದರ್ 25, ರಾಯಚೂರು 26, ಬಳ್ಳಾರಿ 27, ಕಲಬುರಗಿ 28ನೇ ಸ್ಥಾನದಲ್ಲಿವೆ.
  • ‘ಕೆಲ ಕುಟುಂಬಗಳು ಹಳೇ, ಹೊಸ ಪಡಿತರ ಚೀಟಿ ಹೊಂದಿವೆ. ಹೊಸ ಪಡಿತರ ಚೀಟಿ ಅನ್ವಯ ಕುಟುಂಬದ ಸದಸ್ಯರ ಹೆಸರು ಸೇರ್ಪಡೆ ಮಾಡಿದ್ದರೂ ಹಳೇ ಪಡಿತರ ಚೀಟಿಯಲ್ಲಿನ ಹೆಸರುಗಳು ಸಮೀಕ್ಷೆಯ ಉಳಿಕೆ ಪಟ್ಟಿಯಲ್ಲಿ ಕಾಣಿಸಿಕೊಳ್ಳು ತ್ತಿವೆ’ ಇದೂ ಹಿನ್ನಡೆಗೆ ಕಾರಣ’ ಎನ್ನುತ್ತಾರೆ ಡಿಡಿಪಿಐ ಚನ್ನಬಸಪ್ಪ ಮುಧೋಳ.
  • ಕೆಮ್ಮಿನ ಕಲುಷಿತ ಸಿರಪ್‌: ಡಬ್ಲ್ಯುಎಚ್ ಎಚ್ಚರಿಕೆ

ಸಂದರ್ಭ: ಭಾರತದಲ್ಲಿ ಮಾರಾಟವಾದ ಕಳಪೆ ಗುಣಮಟ್ಟದ ಕೆಮ್ಮಿನ ಸಿರಪ್ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್) ಎಚ್ಚರಿಕೆ ನೀಡಿದೆ.

  • ಕೋಲ್ಡ್ರಿಫ್, ರೆಸ್ಪಿಫ್ರೆಶ್ ಟಿಆರ್‌, ಮತ್ತು ರಿಲೈಫ್‌ ಕಂಪನಿಗಳ ಕೆಮ್ಮಿನ ಕಲುಷಿತ ಸಿರಪ್‌ಗಳು ವಿಶ್ವದಾದ್ಯಂತ ಎಲ್ಲಿ ಪತ್ತೆಯಾದರೂ ತಕ್ಷಣ ತಿಳಿಸುವಂತೆ ಸೂಚಿಸಿದೆ.
  • ಮಧ್ಯಪ್ರದೇಶ ಮತ್ತು ರಾಜಸ್ಥಾನ ದಲ್ಲಿ ಇಂಥ ಸಿರಪ್ ಸೇವಿಸಿ 5 ವರ್ಷ ದೊಳಗಿನ 22 ಮಕ್ಕಳು ಮೃತಪಟ್ಟಿರುವು ದನ್ನು ಗಂಭೀರವಾಗಿ ಪರಿಗಣಿಸಿರುವ ಡಬ್ಲ್ಯುಎಚ್‌ಒ, ವಿಶ್ವದಾದ್ಯಂತ ಈ ಎಚ್ಚರಿಕೆ ರವಾನಿಸಿದೆ.
  • ‘ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು (ಎನ್‌ಆರ್‌ಎ) ತಮ್ಮ ದೇಶದಲ್ಲಿ ಕೆಮ್ಮಿನ ಕಳಪೆ ಸಿರಪ್‌ ಮಾರಾಟ ಆಗುತ್ತಿಲ್ಲ ಎನ್ನುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಎಲ್ಲಾದರೂ ಕಂಡುಬಂದರೆ ತಕ್ಷಣವೇ ಕ್ರಮ ವಹಿಸಬೇಕು’ ಎಂದು ಡಬ್ಲ್ಯುಎಚ್‌ಒ ಹೇಳಿದೆ. 
  • ಕೆಮ್ಮಿನ ಕಳಪೆ ಸಿರಪ್‌ ಮಾರಾಟ ಮತ್ತು ಇಂತಹ ಸಿರಪ್‌ ಸೇವೆನೆಯಿಂದ ಮಕ್ಕಳಲ್ಲಿ ಅಡ್ಡ ಪರಿಣಾಮಗಳು ಕಂಡುಬಂದರೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಅದನ್ನು ತಕ್ಷಣ ರಾಷ್ಟ್ರೀಯ ಔಷಧ ವಿಜಿಲೆನ್ಸ್‌ ಕೇಂದ್ರ ಮತ್ತು ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
  • ಕೆಮ್ಮಿನ ಕಳಪೆ ಸಿರಪ್‌ ಪೂರೈಕೆ ಜಾಲದ ಮೇಲೆ ಕಣ್ಗಾವಲು ಇರಿಸುವಂತೆ ಮತ್ತು ಇಂತಹ ಕಳಪೆ ಉತ್ಪನ್ನದಿಂದ ಭಾದಿತವಾಗಿರುವ ಪ್ರದೇಶ ಗಳಲ್ಲಿ ಅತೀವ ಶ್ರದ್ಧೆ ವಹಿಸುವಂತೆಯೂ ವಿಶ್ವ ಆರೋಗ್ಯ ಸಂಸ್ಥೆ ಭಾರತಕ್ಕೆ ಸೂಚಿಸಿದೆ.

ಸಿರಪ್‌ನಲ್ಲಿ ‘ಡಿಇಜಿ’ ವಿಷ

  • ಭಾರತದಲ್ಲಿ ಸ್ರೇಸನ್‌ ಫಾರ್ಮಾಸ್ಯುಟಿಕಲ್ಸ್‌, ರೆಡ್‌ನೆಕ್ಸ್‌ ಮತ್ತು ಶೇಪ್‌ ಫಾರ್ಮಾ ತಯಾರಿಸಿದ ಕೆಮ್ಮಿನ ಸಿರಪ್‌ಗಳಲ್ಲಿ ಡಿ– ಎಥಿಲೀನ್ ಗ್ಲೈಕಾಲ್ (ಡಿಇಜಿ) ಎಂಬ ವಿಷಕಾರಿ ಅಂಶ  ಇದೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ (ಸಿಡಿಎಸ್‌ಸಿಒ) ವಿಶ್ವ ಆರೋಗ್ಯ ಸಂಸ್ಥೆಗೆ ಅಕ್ಟೋಬರ್‌ 8ರಂದು ಸಲ್ಲಿಸಿದ ವರದಿಯಲ್ಲಿ ಹೇಳಿತ್ತು.
  • ಡಬ್ಲ್ಯುಎಚ್‌ಒ ಕೂಡ ಇದನ್ನು ದೃಢಪಡಿಸಿತ್ತು. ಇದರ ಬೆನ್ನಲ್ಲೇ, ಈ ಸಿರಪ್‌ಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿತ್ತು. ಈ ಸಿರಪ್‌ಗಳನ್ನು ಭಾರತದಿಂದ ಬೇರೆಲ್ಲಿಗೂ ರಫ್ತು ಮಾಡುತ್ತಿಲ್ಲ ಎಂದು ಸಿಡಿಎಸ್‌ಸಿಒ ಹೇಳಿದೆ.
  • ರಾಬ್ಸನ್‌: ಅಣುರಚನೆಯ ಚಂದಕ್ಕೆ ಸಂದ ನೊಬೆಲ್

ಸಂದರ್ಭ:2025ನೇ ಸಾಲಿನ ರಸಾಯನವಿಜ್ಞಾನದ ನೊಬೆಲ್ ಲಭಿಸಿದ್ದು ಸುಸುಮು ಕಿಟಾಗವಾ, ರಿಚರ್ಡ್ ರಾಬ್ಸನ್ ಮತ್ತು ಓಮರ್ ಯಾಘಿ ಅವರಿಗೆ; ಬೇರೆ ಬೇರೆ ಹಿನ್ನೆಲೆಯ ಮೂವರು ರಸಾಯನವಿಜ್ಞಾನಿಗಳನ್ನು ಒಂದೆಡೆ ಸೇರಿಸಿದ್ದು ಲೋಹಸಾವಯವ ಚೌಕಟ್ಟುಗಳು!

  • ‘ಲೋಹ-ಸಾವಯವ ಚೌಕಟ್ಟು’ಗಳು ಎಂಬ ಈ ಅಪರಿಮಿತ ಅನ್ವಯಿಕೆಗಳನ್ನುಳ್ಳ ರಚನೆ ತಯಾರಾಗಲು ನಾಂದಿ ಹಾಡಿದ್ದು ರಾಬ್ಸನ್. ಇಂಗ್ಲೆಂಡ್‌ನಲ್ಲಿ 1937ರ ಜೂನ್ 4ರಂದು ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇಂಗ್ಲೆಂಡಿನಲ್ಲೇ ಮುಗಿಸಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರೆಸಿದರು; ಕ್ಯಾಲ್ ಟೆಕ್ ಮತ್ತು ಸ್ಟಾನ್ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಪೋಸ್ಟ್ ಡಾಕ್ಟರಲ್ ಸಂಶೋಧನೆಗಳನ್ನು ನಡೆಸಿ, ನಂತರ ಮೆಲ್ಬೋರ್ನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಪ್ರಾರಂಭಿಸಿ, ಅಲ್ಲಿಯೇ, ತಮ್ಮ ನಿವೃತ್ತಿಯವರೆಗೂ ಕಾರ್ಯನಿರ್ವಹಿಸಿದರು.
  • ರಸಾಯನವಿಜ್ಞಾನದ ವಿದ್ಯಾರ್ಥಿಗಳಿಗೆ ‘ಬಾಲ್ ಅಂಡ್ ಸ್ಟಿಕ್ ಮಾಡೆಲ್’ ಗೊತ್ತೇ ಇರುತ್ತದೆ; ರಾಸಾಯನಿಕ ಸಂಯುಕ್ತ ಪದಾರ್ಥಗಳ 3-ಆಯಾಮದ ರಚನೆಯನ್ನು ಅರ್ಥೈಸಿಕೊಳ್ಳಲು ಪುಟಾಣಿ ಚೆಂಡುಗಳು ಮತ್ತು ಕಡ್ಡಿಗಳನ್ನು ಬಳಸಿ ಮಾದರಿಗಳನ್ನು ತಯಾರಿಸಬಹುದು. ರಾಸಾಯನಿಕ ಬಂಧವನ್ನು, ಅಣುವಿನ ಜೋಡಣೆಯನ್ನು ಸರಳವಾಗಿ ತಿಳಿದುಕೊಳ್ಳುವುದಕ್ಕೆ ಈ ಮಾದರಿ ಅತ್ಯಂತ ಸಹಾಯಕ. ಮೊದಲ ಬಾರಿಗೆ 1883ರಲ್ಲಿ ಆಗಸ್ಟ್ ಹಾಫ್ಮನ್ ಎಂಬ ಜರ್ಮನ್ ವಿಜ್ಞಾನಿ ಉಲನ್ ಉಂಡೆಗಳು ಮತ್ತು ಕ್ರೋಷಕಡ್ಡಿಗಳನ್ನು ಬಳಸಿ ಆಣ್ವಿಕ ರಚನೆಯನ್ನು ಸರಳವಾಗಿ ಎಲ್ಲರಿಗೂ ಅರ್ಥಮಾಡಿಸಲು ಮೊದಲ ‘ಬಾಲ್ ಅಂಡ್ ಸ್ಟಿಕ್ ಮಾಡೆಲ್’ ತಯಾರಿಸಿದರು. ಮುಂದಿನ ದಿನಗಳಲ್ಲಿ ಮರದಲ್ಲಿ ಕೆತ್ತಿ, ಕೊರೆದು ತಯಾರಿಸುತ್ತಿದ್ದರು.
  • ರಿಚರ್ಡ್ ರಾಬ್ಸನ್ ಅವರು ತಮ್ಮ ರಸಾಯನವಿಜ್ಞಾನದ ಸಂಶೋಧಕರಿಗೊಂದು ಕಾರ್ಯಾಗಾರ ನಡೆಸುತ್ತಿದರು. ಅಲ್ಲಿ ಅವರೆಲ್ಲ ಮರದಲ್ಲಿ ಕೊರೆದು ತಯಾರಿಸುತ್ತಿದ್ದ ಗುಂಡುಗಳು ಮತ್ತು ಕಡ್ಡಿಗಳಿಗೆ ನಿರ್ದಿಷ್ಟವಾದ ರೂಪ, ಆಕಾರವಿರಬೇಕಾಗುತ್ತಿತ್ತು. ಆ ಗುಂಡುಗಳಲ್ಲಿ ಎಷ್ಟು ರಂಧ್ರಗಳಿರಬೇಕು ಎಂಬುದು ಅದು ಯಾವ ಅಣುವಿನ ಪ್ರತಿರೂಪ ಎಂಬುದರ ಮೇಲೆ ಆಧಾರಿತ. ಉದಾಹರಣೆಗೆ, ಅದು ಇಂಗಾಲವಾದರೆ ನಾಲ್ಕು ರಂಧ್ರ, ಆಮ್ಲಜನಕವಾದರೆ ಎರಡು ರಂಧ್ರ – ಹೀಗೆ! ಅಷ್ಟೇ ಅಲ್ಲದೆ, ಆ ರಂಧ್ರಗಳು ಯಾವ ಕೋನದಲ್ಲಿರಬೇಕು ಎಂಬುದು ಕೂಡ, ಆ ಪರಮಾಣುವು ಎಂತಹ ರಾಸಾಯನಿಕ ಬಂಧದಲ್ಲಿ ಪಾಲ್ಗೊಳ್ಳುತ್ತದೆ ಎಂಬುದರ ಮೇಲೆ ನಿರ್ಭರವಾಗುತ್ತದೆ. ಇಂತಹ ವಿವರಗಳನ್ನು ಗಮನಿಸುತ್ತಾ, ರಾಬ್ಸನ್ ಅವರಿಗೆ ಈ 3–ಡಿ ರಚನೆಗಳಲ್ಲಿರುವ ನಿಗಧಿತ ಅಂತರಗಳು ಗಮನ ಸೆಳೆದವು; ಒಂದಕ್ಕೊಂದು ಸೇರುತ್ತಾ ಈ ಲೋಹದ ಮತ್ತು ಇಂಗಾಲದ ಅಣುಗಳು ಉಂಟುಮಾಡುವ ಚೌಕಟ್ಟುಗಳಲ್ಲಿ, ನಿರ್ದಿಷ್ಟವಾಗಿಯೇ ಇರುವ ಕೋನ, ರಂಧ್ರ, ಜೋಡಣೆಯಂತಹ ವಿಷಯಗಳು ಅವರಲ್ಲಿ ಹೊಸ ಹೊಳಹನ್ನು ಹುಟ್ಟಿಸಿತ್ತು.
  • ಸುಮಾರು ಹತ್ತು ವರ್ಷಗಳು ಅದೇ ಯೋಚನೆಯಲ್ಲಿದ್ದ ರಾಬ್ಸನ್ ಅವರು, ಪ್ರತಿ ವರ್ಷದ ಕಾರ್ಯಾಗಾರದಲ್ಲೂ ಅದೇ ನಿಟ್ಟಿನಲ್ಲಿ ಯೋಚಿಸುತ್ತಿದ್ದರು. ಇಂತಹ ಚೌಕಟ್ಟುಗಳಲ್ಲಿ ಹೇಗೆ ಅನಿಲಗಳನ್ನು ಸೆರೆಹಿಡಿಯಬಹುದು, ವೇಗವರ್ಧಕಗಳನ್ನು ಹಿಡಿದಿಡಬಹುದು ಎಂಬಂತಹ ಯೋಚನೆಗಳು ಯೋಜನೆಗಳಾಗಿ ಬದಲಾದವು. ತಾಮ್ರದ ಅಣುಗಳೊಂದಿಗೆ ಸಾವಯವ ಆಣ್ವಿಕ ಗುಂಪುಗಳಾದ ‘ನೈಟ್ರೈಲ್’ಗಳನ್ನು ಸೇರಿಸಿದಾಗ, 3–ಆಯಾಮದ ರಚನೆ ಹೇಗಿರುತ್ತದೆಂಬ ಸಿದ್ಧಾಂತವನ್ನು ರಾಬ್ಸನ್ ಸೃಜಿಸಿದರು.
  • ಈ ಲೋಹ-ಸಾವಯವ ಉತ್ಪನ್ನದ ಭೌತಿಕ ರಚನೆಯ ಮಾದರಿಯನ್ನು ತಯಾರಿಸಿದಾಗ, ವಜ್ರವು ಇಂಗಾಲದ ಅಣುಗಳ ಜೋಡಣೆಯಿಂದ ಹೇಗೆ ರಚನೆಯಾಗಿರುತ್ತದೋ, ಅಂತಹದ್ದೇ ಸ್ಫಟಿಕದ ರೂಪ ತಯಾರಾಗುತ್ತದೆ ಎಂದು ಪ್ರತಿಪಾದಿಸಿದರು. ಆ ರಚನೆಯಲ್ಲಿ, ಅಣುಗಳು ಮತ್ತು ಬಂಧಗಳ ನಡುವೆ ಇರುವ ನಿರ್ದಿಷ್ಟ ರೂಪದ, ಆಕಾರದ, ಗಾತ್ರದ ಅಂತರಗಳಲ್ಲಿ ನಿರ್ದಿಷ್ಟ ಪರಮಾಣುಗಳನ್ನು, ಅಯಾನುಗಳನ್ನು, ಅಣುಗಳನ್ನು ಕೂರಿಸಬಹುದು ಎಂಬುದನ್ನು ವಿವರಿಸಿದರು. ಇದನ್ನು ಅವರು ಅನೇಕ ಕೋಣೆಗಳಿರುವ ಹೋಟೆಲ್ ಮಳಿಗೆಗೆ ಹೋಲಿಸಿದರು; ತಮಗೆ ಹೊಂದುವ ಕೋಣೆಗೆ ಸೂಕ್ತ ಅತಿಥಿ ಬಂದು ಹೋಗುವ ಹಾಗೆ, ವಿವಿಧ ಅಣುಗಳಿಗೆ ತಕ್ಕ ಹಾಗೆ ಚೌಕಟ್ಟಿನೊಳಗಿನ ಅಂತರಗಳನ್ನು ರಚಿಸಬಹುದು ಎಂಬುದನ್ನು ರಾಬ್ಸನ್ ಅವರ ಮಾದರಿಯು ವಿವರಿಸಿತು.
  • ಈ ಮೂಲಭೂತ ಕಲ್ಪನೆಯ ಮೇಲೆ ಮತ್ತಿಬ್ಬರು ರಸಾಯನ ವಿಜ್ಞಾನಿಗಳಾದ ಸುಸುಮು ಕಿಟಾಗವಾ ಮತ್ತು ಓಮರ್ ಯಾಘಿ ತಮ್ಮ ಪರಿಶ್ರಮ ಮತ್ತು ಪರಿಣಿತಿಯನ್ನು ಧಾರೆಯೆರೆದು, ರಾಬ್ಸನ್ ಅವರೊಂದಿಗೆ ನೊಬೆಲ್ ಪ್ರಶಸ್ತಿಗೆ ಭಾಜನರಾದರು.
  • ರಾಬ್ಸನ್ ಅವರು ನೊಬೆಲ್ ಪಡೆದ ಸುದ್ದಿ ತಿಳಿದ ನಂತರ, ಫೋನಿನಲ್ಲಿ ನೀಡಿದ ಸಂದರ್ಶನದಲ್ಲಿ ತಮ್ಮ ಸಂಶೋಧನೆಯ ಬಗ್ಗೆ ಹಂಚಿಕೊಳ್ಳುತ್ತಾ, ‘ತಾನೇನೂ ವಿಶೇಷವಾಗಿ ಮಾಡಿಲ್ಲ; ಯಾವುದೋ ಅಣುಗಳನ್ನು ಮಿಕ್ಸ್ ಮಾಡಿ, ಏನೋ ಒಂದನ್ನು ತಯಾರಿಸಿದೆ ಅಷ್ಟೇ’ ಎಂದು ವಿನಮ್ರರಾಗಿ ಹೇಳಿ ನಗೆಯಾಡಿದರು. ‘ಆದರೆ, ಎಲ್ಲಾ ಜವಾಬ್ದಾರಿಗಳನ್ನೂ ಮರೆತು ವಿಜ್ಞಾನದ ಬಗ್ಗೆ, ಸಂಶೋಧನೆಯ ಬಗ್ಗೆ ಒಂದು ಬಗೆಯ ಗೀಳಿದ್ದರೆ ಮಾತ್ರ ಇಂತಹದ್ದೇನಾದರೂ ಸಾಧ್ಯವಾಗುತ್ತದೆಯಷ್ಟೇ! ಹತ್ತು ವರ್ಷಗಳಿಂದಲೂ ಗುಂಗು ಹಿಡಿಸಿದ್ದ ಆಣ್ವಿಕ ರಚನೆಯ ನಡುವಿನ ಅಂತರಗಳು, ಹೀಗೆ ಮುಂದೆ ಅನೇಕ ಅದ್ಭುತ ಬೆಳವಣಿಗೆಗಳಿಗೆ ಕಾರಣವಾಗುತ್ತದೆ ಎಂಬ ಅಚಲ ನಂಬಿಕೆಯಿತ್ತು’ ಎಂದು ತಮ್ಮ ಮನದ ಮಾತನ್ನು ಹಂಚಿಕೊಂಡರು. ಮಾಡುವ ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವಿಕೆ ಮತ್ತು ಅಪರಿಮಿತ ಶ್ರದ್ಧೆ, ಅನನ್ಯ ಫಲಿತಾಂಶಗಳನ್ನು ನೀಡುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.
  • .. ನೀರಾವರಿ

ಸಂದರ್ಭ: ಇದು .. ಜಮಾನಾ. ಇದೀಗ ಕೃಷಿಕ್ಷೇತ್ರದಲ್ಲೂ .. ಬಳಕೆ ಶುರುವಾಗಿದ್ದು, ಇದೊಂದು ಕ್ರಾಂತಿಕಾರಕ ಹೆಜ್ಜೆ ಎನ್ನಬಹುದು.

  • ಮೈಸೂರಿನ ಮೊಬಿಟೆಕ್‌ ಸಂಸ್ಥೆ ಅಭಿವೃದ್ಧಿ ಪಡಿಸಿರುವ ‘ಎ.ಐ. ಆಧಾರಿತ ನೀರಾವರಿ ಹಾಗೂ ಗೊಬ್ಬರ ಯಾಂತ್ರಿಕೃತ ವ್ಯವಸ್ಥೆ’ ತಂತ್ರಜ್ಞಾನ ಈಗ ಕೃಷಿಕ್ಷೇತ್ರವನ್ನು ಮತ್ತಷ್ಟು ಸ್ಮಾರ್ಟ್‌ ಆಗಿಸುತ್ತಿದೆ.
  • ರೈತರು ತಮ್ಮ ಜಮೀನಿನಲ್ಲಿ ಈ ತಂತ್ರಜ್ಞಾನ ಅಳವಡಿಸಿದರೆ ತಮ್ಮ ಬೆಳೆಗಳಿಗೆ ಎಷ್ಟು ನೀರು ಕೊಡಬೇಕು, ಯಾವ ಬೆಳೆಗೆ ಎಷ್ಟು ಗೊಬ್ಬರ ನೀಡಬೇಕು, ಹವಾಮಾನ ಹೇಗಿದೆ, ಮಣ್ಣಿನ ತೇವಾಂಶ ಹೇಗಿದೆ, – ಎಂಬಿತ್ಯಾದಿ ಮಾಹಿತಿಗಳನ್ನು ‘ಡಿಕಾನ್‌ಎಜ್‌’ ಮೊಬೈಲ್‌ ಆ‍್ಯಪ್‌ ಮೂಲಕ ರೈತರಿಗೆ ತಲುಪುತ್ತದೆ.
  • ಕೃಷಿಭೂಮಿಗೆ ನೀರುಣಿಸಲು ಬಳಸುವ ಪಂಪ್‌ಸೆಟ್‌ಗಳಿಗೆ ರೈತರು ವಿದ್ಯುತ್‌ಚ್ಛಕ್ತಿಯ ಮೊರೆ ಹೋಗುವುದು ಸಾಮಾನ್ಯ. ಆದರೆ, ಲೋಡ್‌ಶೆಡ್ಡಿಂಗ್‌, ಸಿಂಗಲ್‌ ಫೇಸ್‌ನಂತಹ ಹಲವಾರು ಕಾರಣಗಳಿಂದ ಯಾವಾಗ ವಿದ್ಯುತ್‌ ಬರುತ್ತದೆ, ಯಾವಾಗ ಹೋಗುತ್ತದೆ ಎಂಬುದು ರೈತರಿಗೆ ಗೊತ್ತೇ ಆಗುವುದಿಲ್ಲ. ವೊಲ್ಟೇಜ್‌ ಹೆಚ್ಚು ಕಡಿಮೆಯಿಂದ ಮೋಟಾರ್‌ ಪಂಪ್‌ಸೆಟ್‌ಗಳು ಸುಟ್ಟುಹೋಗುವ ಸಾಧ್ಯತೆಗಳೂ ಹೆಚ್ಚಿರುತ್ತವೆ. ಸುಟ್ಟ ಪಂಪ್‌ಸೆಟ್‌ಗಳನ್ನು ಸರಿಪಡಿಸಿ, ಮತ್ತೆ ಅವನ್ನು ಅಳವಡಿಸಲು ರೈತರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ; ಜೊತೆಗೆ ಸಾಕಷ್ಟು ಹಣವನ್ನೂ ವ್ಯಯಿಸಬೇಕಾಗುತ್ತದೆ. ಇದರಿಂದ ತೋಟ, ಗದ್ದೆಗಳ ಕೆಲಸಗಳಿಗೂ ಸಮಸ್ಯೆ ಉಂಟಾಗುತ್ತದೆ. ಆದರೆ, ಎ.ಐ. ಆಧಾರಿತ ತಂತ್ರಜ್ಞಾನ ಇದಕ್ಕೆಲ್ಲ ಪರಿಹಾರ ಎನಿಸಿದೆ.‌
  • ರೈತರು ತಮ್ಮ ಮನೆಯಲ್ಲಿಯೇ ಕುಳಿತು ಅಥವಾ ಯಾವುದೇ ಸ್ಥಳದಿಂದಲಾದರೂ ತಮ್ಮ ತೋಟ ಅಥವಾ ಹೊಲಗಳಿಗೆ ವಿದ್ಯುತ್‌ ಚಾಲಿತ ಪಂಪ್‌ಸೆಟ್‌ ಮೋಟಾರನ್ನು ಮೊಬೈಲ್‌ ಮೂಲಕ ನಿಯಂತ್ರಿಸಬಹುದು. ಕರೆಂಟ್‌ ಯಾವಾಗ ಬರುತ್ತೆ, ಯಾವಾಗ ಹೋಗುತ್ತದೆ ಎಂಬುದನ್ನು ತಿಳಿಯಬಹುದು. ಇದರಿಂದ ರಾತ್ರಿ ಹೊತ್ತು ಬೆಳೆಗಳಿಗೆ ನೀರುಣಿಸಲು ಜಮೀನಿಗೆ ಹೋಗುವುದು ತಪ್ಪುತ್ತದೆ.
  • ಎಲ್ಲ ರೀತಿಯ ಅಳತೆಯ ತೋಟ ಮತ್ತು ಗದ್ದೆಗಳಿಗೆ ಉಪಯುಕ್ತವಾಗಿದ್ದು, ಒಂದು ಮೊಬೈಲ್‌ ಸಿಮ್ ಕಾರ್ಡ್‌ನಿಂದ ಹಲವು ತೋಟಗಳನ್ನು ನಿಯಂತ್ರಿಸಬಹುದು. ಸೋಲಾರ್‌ ಆಧಾರಿತ ಕಾರ್ಯನಿರ್ವಹಣೆ ಸೌರಫಲಕದೊಂದಿಗೆ 24 ಗಂಟೆ ಕಾರ್ಯ ನಿರ್ವಹಿಸಲಿದೆ. ಅಷ್ಟೇ ಅಲ್ಲದೆ ಸದೃಢ ಬ್ಯಾಟರಿ ನೆರವು, ಮೋಡ ಕವಿದ ವಾತಾವರಣದಲ್ಲೂ 24 ಗಂಟೆ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಕಾರ್ಯವಿಧಾನ ಹೇಗೆ ?

  • ಮೋಟಾರ್‌ ಪಂಪ್‌ಸೆಟ್‌ ಸ್ಟಾರ್ಟರ್‌ ಬೋರ್ಡ್‌ನಲ್ಲಿ ‘ಡಿಒಲ್‌ ಸ್ಟಾರ್ಟರ್‌’ (ಮೇನ್‌ ಕಂಟ್ರೊಲರ್‌) ಇರುತ್ತದೆ. ಇದನ್ನು ಕಂಟ್ರೋಲ್‌ ಮಾಡಲು ಎಂಸಿಯು (ಮೋಟಾರ್‌ ಕಂಟ್ರೋಲ್‌ ಯುನಿಟ್‌) ಹಾಗೂ ಎಂಎಸ್‌ಯು (ಮೋಟಾರ್‌ ಸ್ಟಾರ್ಟರ್‌ ಯೂನಿಟ್‌) ಬರುತ್ತದೆ. ಇವೆರಡು ಡಿವೈಸ್‌ಗಳನ್ನು ವೈಯರ್‌ಲೆಸ್‌ ಮೂಲಕ ಮೇನ್‌ ಮಾಸ್ಟರ್‌ ಕಂಟ್ರೋಲರ್‌ ಡಿಕ್ಯಾನ್‌ ಏಜ್‌ಗೆ ಕನೆಕ್ಟ್‌ ಮಾಡಲಾಗಿರುತ್ತದೆ.
  • ಮೇನ್‌ ಕಂಟ್ರೋಲ್‌ ಬೋರ್ಡ್‌ನಲ್ಲಿ ಆಟೋ ಬ್ಯಾಕ್‌ವರ್ಡ್‌ (ಎಬಿಡಬ್ಲು) ಎನ್ನುವ ಡಿವೈಸ್‌ ಕೂಡ ಇರುತ್ತದೆ. ಇದು ನೀರಿನ ಹಾಗೂ ಗೊಬ್ಬರದ ಫಿಲ್ಡರ್‌ ಕ್ಲೀನ್‌ ಮಾಡಲು ಸಹಾಯ ಮಾಡುತ್ತದೆ. ವಾಟರ್‌ ಲೆವೆಲ್‌ ಕಂಟ್ರೊಲ್‌ ಯುನಿಟ್‌ ಅಳವಡಿಸಲಾಗುತ್ತದೆ.
  • ಹವಾಮಾನ ಮಾಹಿತಿ ಯುನಿಟ್‌ ರೈತರಿಗೆ ತಮ್ಮ ಜಮೀನಿನ ಮಣ್ಣಿನಲ್ಲಿರುವ ತೇವಾಂಶದ ಕುರಿತು ಮಾಹಿತಿಯನ್ನು ನೀಡುತ್ತದೆ. ಈ ಎಲ್ಲಾ ಡಿವೈಸ್‌ಗಳು ಸೌರ ವಿದ್ಯುತ್ತನ್ನು ಬಳಸುವುದರಿಂದ ದಿನದ 24 ಗಂಟೆಯೂ ವಿದ್ಯುತ್‌ ಸಹಾಯವಿಲ್ಲದೆ ಕಾರ್ಯನಿರ್ವಹಿಸುತ್ತವೆ.
  • ಈ ಎಲ್ಲಾ ಡಿವೈಸ್‌ಗಳು ಕಾರ್ಯನಿರ್ವಹಿಸಲು ಕೇವಲ ಒಂದು ಸಿಮ್‌ ಕಾರ್ಡ್‌ ಮಾತ್ರ ಸಾಕು. ಈ ಸಿಮ್‌ ಕಾರ್ಡ್‌ ಅಳವಡಿಸಿದರೆ ಸಾಕು, ರೈತರಿಗೆ ಪ್ರತಿ ದಿನ ತಮ್ಮ ಬೆಳೆಗಳು, ಅದಕ್ಕೆ ಬೇಕಾಗುವ ನೀರು, ಗೊಬ್ಬರದ ಮಾಹಿತಿಗಳು ಅವರನ್ನು ತಲುಪುತ್ತದೆ. ಮೊಬಿಟೆಕ್‌ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಮೊಬೈಲ್‌ ಆ್ಯಪ್‌ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.
  • ಗಾಜಾದಲ್ಲಿ ಹೊಸ ಬೆಳಕು?

ಒಂದು ಕಡೆ ಕಣ್ಣೀರು. ಮತ್ತೊಂದು ಕಡೆ ಹರ್ಷೋದ್ಗಾರ. ಕೆಲವರಂತೂ ಮಾತೇ ಹೊರಡದೇ ಗದ್ಗದಿತ ರಾಗಿದ್ದರು. ಇನ್ನೆಂದಿಗೂ ಮುಖ ಕಾಣಲು ಸಾಧ್ಯವಿಲ್ಲ ಎಂದು ಕೊಂಡಿದ್ದಂಥವರು, ಜೀವಂತ ಇರಲಾರರು ಎಂದುಕೊಂಡಿದ್ದ ಪ್ರೀತಿಪಾತ್ರರು ಎದುರಿಗೆ ಬಂದು ನಿಂತ ಗಳಿಗೆ ಅದು. ಯಾವುದು ಅಸಾಧ್ಯ ಎಂದು ಭಾವಿಸಲಾಗಿತ್ತೋ, ಅದು ಸಾಧ್ಯವಾಗಿದ್ದ ಕ್ಷಣ…

ಎರಡು ವರ್ಷಗಳ ಯುದ್ಧದಿಂದ ಜರ್ಜರಿತವಾಗಿರುವ ಗಾಜಾ ಪಟ್ಟಿಯಲ್ಲಿ ಈಗ ಮನ ಕಲುಕುವ ದೃಶ್ಯಗಳು ಕಾಣುತ್ತಿವೆ. ಅಮೆರಿಕ ಮತ್ತು ಇತರ ದೇಶಗಳ ಪ್ರಯತ್ನದಿಂದ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಒಪ್ಪಂದಕ್ಕೆ ಅಮೆರಿಕದೊಂದಿಗೆ ಈಜಿಪ್ಟ್, ಕತಾರ್, ಟರ್ಕಿ ದೇಶಗಳೂ ಸಾಕ್ಷಿದಾರರಾಗಿ ಸಹಿ ಹಾಕಿವೆ. ಸೋಮವಾರ, ಹಮಾಸ್ ತನ್ನ ವಶದಲ್ಲಿದ್ದ 20 ಇಸ್ರೇಲಿಗರನ್ನು ಬಿಡುಗಡೆ ಮಾಡಿದ್ದರೆ, ಇಸ್ರೇಲ್ 2,000 ಕೈದಿಗಳು ಮತ್ತು ತಾನು ವಶಕ್ಕೆ ಪಡೆದಿದ್ದ ಪ್ಯಾಲೆಸ್ಟೀನ್‌ನ 1,700 ಮಂದಿಯನ್ನು ಬಿಡುಗಡೆ ಮಾಡಿದೆ.

ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ತಾನು ಅರ್ಹ ವ್ಯಕ್ತಿ ಎಂದು ಸ್ವಯಂ ಪ್ರತಿಪಾದಿಸಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಶಾಂತಿ ಒಪ್ಪಂದದಲ್ಲಿ ಮುಖ್ಯ ಪಾತ್ರ ವಹಿಸಿದ್ದು ಗಮನಾರ್ಹ. ಆದರೆ, ಗಾಜಾ ಪಟ್ಟಿಯಲ್ಲಿ ಸಂಪೂರ್ಣ ಶಾಂತಿ ಸ್ಥಾಪನೆ, ಮರು ನಿರ್ಮಾಣ ಸುಲಭದ ಕೆಲಸವಲ್ಲ. ಅದು ಬಹು ದೊಡ್ಡ ಸವಾಲು. ಅಂತರರಾಷ್ಟ್ರೀಯ ಸಮುದಾಯದ ಆಶಯದಂತೆ ಅಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಂತಿ ನೆಲಸುವಂತೆ ಮಾಡಲು ಅವರು ಇದುವರೆಗೆ ವಹಿಸಿದ ಪಾತ್ರಕ್ಕಿಂತಲೂ ಹೆಚ್ಚಿನ ಶ್ರಮವನ್ನು ಮುಂದಿನ ದಿನಗಳಲ್ಲಿ ಹಾಕಬೇಕಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸಿವೆ.

ಯಾಕೆಂದರೆ, ಈ ಹಿಂದೆಯೂ ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಕದನ ವಿರಾಮ ಘೋಷಿಸಲು ಪ್ರಯತ್ನಗಳು ನಡೆದಿದ್ದವು. ಆದರೆ, ಇಸ್ರೇಲ್‌ ಇದಕ್ಕೆ ಪೂರಕವಾಗಿ ನಡೆದುಕೊಂಡಿರಲಿಲ್ಲ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಕೆಲವು ನಿರ್ಧಾರಗಳು ಶಾಂತಿ ಪ್ರಕ್ರಿಯೆಗೆ ತಡೆ ಒಡ್ಡಿದ ನಿದರ್ಶನಗಳುಂಟು.

ಮಾತು ಬದಲಿಸುವರೇ ನೆತನ್ಯಾಹು?: ನೆತನ್ಯಾಹು ಅವರೊಂದಿಗೆ ವ್ಯವಹರಿಸುವುದು ಅಷ್ಟು ಸುಲಭವಲ್ಲ. ಅಮೆರಿಕದ ಹಿಂದಿನ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಮತ್ತು ಜೋ ಬೈಡನ್ ಅವರಿಗೂ ಇದರ ಅನುಭವ ಆಗಿದೆ. ಅಮೆರಿಕದ ಸಲಹೆಯನ್ನೂ ಮೀರಿ ಹಲವು ಬಾರಿ ಗಾಜಾ ಪಟ್ಟಿಯ ಮೇಲೆ ಸೇನಾ ದಾಳಿ ನಡೆಸುವ ಮೂಲಕ ಟ್ರಂಪ್ ಅವರ ಆಡಳಿತಕ್ಕೂ ನೆತನ್ಯಾಹು ಹಲವು ಸಂದರ್ಭಗಳಲ್ಲಿ ತಲೆನೋವು ತಂದಿದ್ದರು.

ಆದರೆ, ಈ ಬಾರಿ ಟ್ರಂಪ್ ಬಿಗಿ ಪಟ್ಟು ಹಿಡಿದು ನೆತನ್ಯಾಹು ಅವರನ್ನು ಕದನ ವಿರಾಮಕ್ಕೆ ಒಪ್ಪಿಸಿದ್ದಾರೆ. ತಮ್ಮ ಮಿತ್ರ ಪಕ್ಷಗಳ ವಿರೋಧದ ನಡುವೆಯೂ ನೆತನ್ಯಾಹು ಅವರು ಒಲ್ಲದ ಮನಸ್ಸಿನಿಂದಲೇ ಕದನವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅದೇ ರೀತಿಯಲ್ಲಿ ಇತ್ತ,  ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಅನ್ನು ಒಪ್ಪಿಸುವಂತೆ ಪಶ್ಚಿಮ ಏಷ್ಯಾದ ರಾಷ್ಟ್ರಗಳ ಮುಖಂಡರ ಮೇಲೆ ಟ್ರಂಪ್ ಒತ್ತಡ ಹಾಕಿದ್ದರು. ಟ್ರಂಪ್ ಅವರ ಪ್ರಯತ್ನ ಫಲಿಸಿ, ಒಪ್ಪಂದ ಏರ್ಪಟ್ಟಿದೆ. ಆದರೆ, ಮುಂದಿನ ದಾರಿ ಇಷ್ಟು ಸುಲಭವಿಲ್ಲ ಎನ್ನಲಾಗುತ್ತಿದೆ.

ಟ್ರಂಪ್ ಉಸ್ತುವಾರಿಯಲ್ಲಿ ರೂಪು ತಳೆದಿರುವ ಒಪ್ಪಂದದ 20 ಅಂಶಗಳಲ್ಲಿ ಕೆಲವು ವಿಚಾರಗಳ ಬಗ್ಗೆ ಹಮಾಸ್ ಮತ್ತು ಇಸ್ರೇಲ್ ಭಿನ್ನಮತ ವ್ಯಕ್ತಪಡಿಸಿವೆ. ಜತೆಗೆ, ಇಸ್ರೇಲ್‌ನಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ತಮ್ಮ ಬಲಪಂಥೀಯ ಮಿತ್ರರನ್ನು ಉಳಿಸಿಕೊಳ್ಳಲು, ವಿರೋಧಿಗಳನ್ನು ಅಧಿಕಾರದಿಂದ ದೂರವಿಡಲು ನೆತನ್ಯಾಹು ಕದನ ವಿರಾಮ ಕುರಿತ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. 

ಟ್ರಂಪ್ ರೂಪಿಸಿರುವ ಶಾಂತಿ ಸೂತ್ರದ ಸಾಮರ್ಥ್ಯವೇ ಅದರ ದೌರ್ಬಲ್ಯವೂ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಪ್ಪಂದದಲ್ಲಿ ಅನೇಕ ಅಂಶಗಳನ್ನು ವಿವರವಾಗಿ ನಮೂದಿಸಿಲ್ಲ. ವಾಸ್ತವವಾಗಿ, ಅದರಲ್ಲಿನ ಅಸ್ಪಷ್ಟತೆಯೇ ಎರಡೂ ಗುಂಪುಗಳು ಕದನ ವಿರಾಮಕ್ಕೆ ಸಮ್ಮತಿಸಲು ಕಾರಣವಾಗಿದೆ. ಟ್ರಂಪ್ ಒಪ್ಪಂದದ ಬಗ್ಗೆ ಅತ್ಯುತ್ಸಾಹ ತೋರುತ್ತಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಿದೆ ಎಂದೂ, ಇದು ಚಾರಿತ್ರಿಕ ಎಂದೂ ಪ್ರತಿಪಾದಿಸುತ್ತಿದ್ದಾರೆ. ಆದರೆ, ಶಾಂತಿ ಮಾತುಕತೆಯ ಮುಖ್ಯ ಭಾಗ ಈಗಷ್ಟೇ ಆರಂಭವಾಗಿದೆ ಎಂದು ಪರಿಣತರು ಹೇಳುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಗಾಜಾ ಜನರ ಶಾಂತಿಯ ಕನಸು ನನಸಾಗುವುದೇ ಇಲ್ಲಾ, ಕನಸಾಗಿಯೇ ಉಳಿಯುವುದೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

ಆಧಾರ: ರಾಯಿಟರ್ಸ್, ಬಿಬಿಸಿ, ಟೈಮ್ ಮ್ಯಾಗಜಿನ್, ಸಂಘರ್ಷದ ಕುರಿತ ಬ್ರೌನ್‌ ವಿವಿ ವರದಿ

ಮರುನಿರ್ಮಾಣದ ಸವಾಲು

ಗಾಜಾವನ್ನು ಮರುನಿರ್ಮಿಸುವುದು ಒಂದು ಸವಾಲಾಗಿದೆ. ಸಂಘರ್ಷದಿಂದ ಗಾಜಾ ಪಟ್ಟಿಯಲ್ಲಿ ಶೇ 10ರಷ್ಟು ಮಂದಿ ಸತ್ತಿದ್ದರೆ, ಶೇ 90ರಷ್ಟು ಮಂದಿ ನಿರ್ವಸಿತರಾಗಿದ್ದಾರೆ. ಈ ಪ್ರದೇಶದ ಶೇ 80ರಷ್ಟು ಕಟ್ಟಡಗಳು ಹಾನಿಗೊಳಗಾಗಿವೆ. ಶೇ 95ರಷ್ಟು ಆಸ್ಪತ್ರೆಗಳು, ಶೇ 90ರಷ್ಟು ಶಾಲೆಗಳು ಹಾನಿಗೊಳಗಾಗಿವೆ. ಗಾಜಾ ನಗರದಲ್ಲಿ ಹಾನಿಯ ಪ್ರಮಾಣ ಶೇ 92ರಷ್ಟು ಎನ್ನಲಾಗಿದೆ. ವಿಶ್ವಸಂಸ್ಥೆ ಯು ಪರಿಹಾರ ಕಾರ್ಯಗಳನ್ನು ನಡೆಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. 

ಈ ಪ್ರದೇಶದಲ್ಲಿ ಕನಿಷ್ಠ 5.5 ಕೋಟಿ ಟನ್‌ಗಳಷ್ಟು ಅವಶೇಷಗಳನ್ನು ತೆರವುಗೊಳಿಸಬೇಕಿದೆ. ಅವಶೇಷಗಳಡಿ ಶವಗಳು ಸಿಗುತ್ತಿದ್ದು, ಅವುಗಳನ್ನು ಪತ್ತೆ ಹಚ್ಚುವುದು, ಸಂಬಂಧಪಟ್ಟವರನ್ನು ಹುಡುಕಿ ಹಸ್ತಾಂತರಿಸುವುದು ಪ್ರಯಾಸದ ಕೆಲಸವಾಗಿದೆ. ಗಾಜಾ ವನ್ನು ವಾಸಯೋಗ್ಯ ಪ್ರದೇಶವನ್ನಾಗಿ ರೂಪಿಸಲು 7,000 ಕೋಟಿ ಡಾಲರ್ (₹6.21 ಲಕ್ಷ ಕೋಟಿ) ಅಗತ್ಯವಿದೆ ಎಂದು ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ಮತ್ತು ವಿಶ್ವಬ್ಯಾಂಕ್ ಅಂದಾಜಿಸಿವೆ.

ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಕದನ ವಿರಾಮ ಒಪ್ಪಂದ ಏರ್ಪಡುತ್ತಿದ್ದಂತೆಯೇ ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಆರಂಭವಾಗಿದೆ. ಅಮೆರಿಕವನ್ನು ಬಿಟ್ಟು ಇತರೆ ಪಶ್ಚಿಮದ ರಾಷ್ಟ್ರಗಳು ಕೂಡ ಪ್ಯಾಲೆಸ್ಟೀನ್‌ ಅನ್ನು ರಾಷ್ಟ್ರವಾಗಿ ಘೋಷಿಸುವುದಕ್ಕೆ ಬೆಂಬಲ ಸೂಚಿಸಿವೆ. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 157 ದೇಶಗಳು ಪ್ಯಾಲೆಸ್ಟೀನ್‌ ಅನ್ನು ‘ಸಾರ್ವಭೌಮ ರಾಷ್ಟ್ರ’ ಎಂದು ಪರಿಗಣಿಸಿವೆ. ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಲು ಪ್ಯಾಲೆಸ್ಟೀನ್‌ ದಶಕಗಳಿಂದ ಯತ್ನಿಸುತ್ತಿದೆಯಾದರೂ, ಅಮೆರಿಕ ಈ ನಿರ್ಣಯವನ್ನು ವಿರೋಧಿಸುತ್ತಿರುವುದರಿಂದ ಪ್ಯಾಲೆಸ್ಟೀನ್‌ ಈಗಲೂ ವಿಶ್ವಸಂಸ್ಥೆಯಲ್ಲಿ ಸದಸ್ಯಯೇತರ ವೀಕ್ಷಕ ರಾಷ್ಟ್ರವಾಗಿಯೇ ಇದೆ. 

ಈಗ ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಏರ್ಪಟ್ಟಿರುವ 20 ಅಂಶಗಳ ಕದನವಿರಾಮ ಒಪ್ಪಂದದಲ್ಲಿ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಿಲ್ಲ. ಆದರೆ, 19ನೇ ಅಂಶದಲ್ಲಿ ಇದರ ಬಗ್ಗೆ ಪ್ರಸ್ತಾಪವಿದೆ.   

ಗಾಜಾದ ಮರು ಅಭಿವೃದ್ಧಿ ಮತ್ತು ಪ್ಯಾಲೆಸ್ಟೀನ್ ಪ್ರಾಧಿಕಾರದ (ಪಿಎ) ಸುಧಾರಣಾ ಕಾರ್ಯಕ್ರಮಗಳು ಯೋಜಿಸಿದಂತೆಯೇ ಪೂರ್ಣವಾದಾಗ, ಜನರ ಬಯಕೆಯಂತೆ ಪ್ಯಾಲೆಸ್ಟೀನಿಯನ್ನರ ದೃಢ ಸಂಕಲ್ಪ ಮತ್ತು ರಾಷ್ಟ್ರದ ಸ್ಥಾನಮಾನ ಹೊಂದುವ ವಿಶ್ವಾಸಾರ್ಹ ಸನ್ನಿವೇಶಗಳು ನಿರ್ಮಾಣವಾಗಲಿವೆ ಎಂದು ಒಪ್ಪಂದದ 19ನೇ ಅಂಶ ಹೇಳುತ್ತದೆ. 

‍ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗಾಗಿ ರಾಜಕೀಯ ವ್ಯವಸ್ಥೆಯೊಂದನ್ನು ರೂಪಿಸುವುದಕ್ಕಾಗಿ ಇಸ್ರೇಲ್‌ ಮತ್ತು ಪ್ಯಾಲೆಸ್ಟೀನಿಯನ್ನರ ನಡುವೆ ಮಾತುಕತೆ ನಡೆಯುವಂತೆ ಅಮೆರಿಕ ನೋಡಿಕೊಳ್ಳಲಿದೆ ಎಂದು ಒಪ್ಪಂದದ 20ನೇ ಅಂಶದಲ್ಲಿ ಹೇಳಲಾಗಿದೆ. 

ಇಸ್ರೇಲ್‌ ವಿರೋಧ: ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಸ್ಥಾನಮಾನ ನೀಡುವುದಕ್ಕೆ ಇಸ್ರೇಲ್‌ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಪೂರ್ವ ಜೆರುಸಲೇಂ, ವೆಸ್ಟ್‌ಬ್ಯಾಂಕ್‌ ಮತ್ತು ಗಾಜಾ ತನಗೆ ಸೇರಿದ್ದು ಎಂಬುದು ಪ್ಯಾಲೆಸ್ಟೀನ್‌ನ ವಾದ. ಆದರೆ, ಇದನ್ನು ಇಸ್ರೇಲ್‌ ಒಪ್ಪುತ್ತಿಲ್ಲ. ಹಾಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈ ಹಿಂದೆ ಪ್ರಧಾನಿಯಾಗಿದ್ದಾಗಲೂ ಪ್ಯಾಲೆಸ್ಟೀನ್‌ ಪ್ರತ್ಯೇಕ ರಾಷ್ಟ್ರ ಸ್ಥಾನಮಾನ ನೀಡುವುದನ್ನು ವಿರೋಧಿಸುತ್ತಲೇ ಬಂದಿದ್ದಾರೆ. 

ಮಧ್ಯಂತರ ಸರ್ಕಾರ 

2007ರಿಂದ ಗಾಜಾವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಹಮಾಸ್‌ ಬಂಡುಕೋರ ಸಂಘಟನೆಯು ಶಾಂತಿ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದರೂ, ಗಾಜಾದ ನಿಯಂತ್ರಣವನ್ನು ಬಿಟ್ಟುಕೊಡಲು ಅದಕ್ಕೆ ಮನಸ್ಸಿಲ್ಲ ಎಂದು ಹೇಳಲಾಗುತ್ತಿದೆ. 

ಗಾಜಾ ಪಟ್ಟಿಯನ್ನು ಭಯೋತ್ಪಾದನೆ ಮುಕ್ತ ವಲಯವನ್ನಾಗಿ ಮಾಡಲಾಗುವುದು; ಅದು ನೆರೆ ರಾಷ್ಟ್ರಗಳಿಗೆ ಇನ್ನು ಮುಂದೆ ಬೆದರಿಕೆ ಒಡ್ಡದು ಎಂಬುದು 20 ಅಂಶಗಳ ಒಪ್ಪಂದದ ಮೊದಲ ಅಂಶ. ಬಂಡುಕೋರರು ಶಸ್ತ್ರ ತ್ಯಜಿಸಬೇಕು. ಅಂತಹವರಿಗೆ ಕ್ಷಮಾದಾನ ನೀಡಲಾಗುವುದು ಎಂದೂ ಒಪ್ಪಂದದಲ್ಲಿ ಹೇಳಲಾಗಿದೆ. 

ಗಾಜಾದಲ್ಲಿ ತಾತ್ಕಾಲಿಕವಾಗಿ ಮಧ್ಯಂತರ ಸರ್ಕಾರ ರಚನೆಯಾಗಲಿದ್ದು, ರಾಜಕೀಯಯೇತರ ವ್ಯಕ್ತಿಗಳಿಂದ ಕೂಡಿದ ಪ್ಯಾಲೆಸ್ಟೀನ್‌ ಸಮಿತಿಯು ಗಾಜಾಪಟ್ಟಿ ಆಡಳಿತ ನಿರ್ವಹಿಸಲಿದೆ. ಪ್ಯಾಲೆಸ್ಟೀನ್‌ ಮತ್ತು ಅಂತರರಾಷ್ಟ್ರೀಯ ತಜ್ಞರು ಈ ಸಮಿತಿಯಲ್ಲಿರಲಿದ್ದಾರೆ.  ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷತೆಯ ‘ಶಾಂತಿ ಸ್ಥಾಪನಾ ಮಂಡಳಿ’ಯು ಮಧ್ಯಂತರ ಸರ್ಕಾರದ ಮೇಲ್ವಿಚಾರಣೆ ಮಾಡಲಿದೆ ಎಂದು ಒಪ್ಪಂದ ಹೇಳಿದೆ.

  • ಕಾಡಾನೆ ಸಂಖ್ಯೆಯಲ್ಲಿ ಶೇ18ರಷ್ಟು ಇಳಿಕೆ

ಸಂದರ್ಭ: ದೇಶದಲ್ಲಿ ಕಾಡಾನೆಗಳ ಸಂಖ್ಯೆ ಪ್ರಸ್ತುತ 22,446 ಇದ್ದು, ಇವುಗಳ ಸಂಖ್ಯೆಯಲ್ಲಿ ಶೇಕಡ 18ರಷ್ಟು ಇಳಿಕೆ ಕಂಡುಬಂದಿದೆ. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ನಡೆಸಿದ ಡಿಎನ್ ಆಧಾರಿತ ಗಣತಿಯಿಂದ ಅಂಶ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿರುವ, ‘ಅಖಿಲ ಭಾರತ ಸಮಕಾಲಿಕ ಆನೆ ಗಣತಿ’ (ಎಸ್‌ಎಐಇಇ)–2025ರ ವರದಿಯಲ್ಲಿ ಈ ಮಾಹಿತಿ ಇದೆ. 2021ರಲ್ಲಿ ಈ ಗಣತಿ ನಡೆದಿತ್ತು.
  • 2017ರಲ್ಲಿ ಕಾಡಾನೆಗಳ ಸಂಖ್ಯೆ 27,312 ಇತ್ತು. ಸದ್ಯ, ದೇಶದಲ್ಲಿ ಕಾಡಾನೆಗಳ ಸಂಖ್ಯೆ ಸರಾಸರಿ 22,446 ಇದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
  • ‘ಪ್ರತಿ ಸಲ ವಾಡಿಕೆಯಂತೆ ನಡೆಯುವ ಗಣತಿ ಹಾಗೂ ಡಿಎನ್‌ಎ ಆಧಾರಿತ ಗಣತಿಗೆ ಬಳಸುವ ವಿಧಾನಗಳು ಬೇರೆ. ಹೀಗಾಗಿ ಈ ಎರಡೂ ವಿಧಾನಗಳನ್ನು ಹೋಲಿಕೆ ಮಾಡಬಾರದು’ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರಚಲಿತ ವಿದ್ಯಮಾನಗಳು: 14ನೇ ಅಕ್ಟೋಬರ್ 2025

  • 20 ಒತ್ತೆಯಾಳು ಬಿಡುಗಡೆ: ಪ್ಯಾಲೆಸ್ಟೀನ್ಕೈದಿಗಳ ಬಿಡುಗಡೆ ಮಾಡಿದ ಇಸ್ರೇಲ್

ಸಂದರ್ಭ: ಗಾಜಾದಲ್ಲಿ ಒತ್ತೆಯಾಳು ಗಳಾಗಿದ್ದ ಕೊನೆಯ 20 ಮಂದಿಯನ್ನು ಕದನ ವಿರಾಮ ಒಪ್ಪಂದದ ಭಾಗವಾಗಿ ಹಮಾಸ್ಬಿಡುಗಡೆ ಮಾಡಿದೆ.

  • ಮೊದಲ ಹಂತದ ಒತ್ತೆಯಾಳುಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿತು ಎಂಬ ಸುದ್ದಿ ಇಸ್ರೇಲ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ‘ಹೋಸ್ಟೇಜಸ್‌ ಸ್ಕ್ವೇರ್‌’ನಲ್ಲಿ ಸೇರಿದ್ದ ಕುಟುಂಬಸ್ಥರು ಆನಂದಬಾಷ್ಪ ಸುರಿಸಿದರು. ಒತ್ತೆಯಾಳುಗಳು ತಮ್ಮ ಕುಟುಂಬ ಮತ್ತು ಮನೆಯನ್ನು ಸೇರುವ ಫೋಟೊವನ್ನು ಇಸ್ರೇಲ್‌ ಬಿಡುಗಡೆ ಮಾಡಿದೆ.
  • ಪ್ಯಾಲೆಸ್ಟೀನ್‌ ಕೈದಿಗಳ ಬಿಡುಗಡೆ: ಇನ್ನೊಂದೆಡೆ, ಇಸ್ರೇಲ್‌ ಜೈಲುಗಳಲ್ಲಿದ್ದ ಪ್ಯಾಲೆಸ್ಟೀನ್‌ ಕೈದಿಗಳನ್ನು ಹೊತ್ತ ಬಸ್‌ಗಳು ವೆಸ್ಟ್‌ಬ್ಯಾಂಕ್‌ನ ರಾಮಲ್ಲಾಹ್‌ ಮತ್ತು ಗಾಜಾಪಟ್ಟಿಗೆ ಬಂದಿವೆ ಎಂದು ಹಮಾಸ್‌ನ ಕೈದಿಗಳ ಕಚೇರಿಯು ತಿಳಿಸಿದೆ.
  • ಹಮಾಸ್‌ ತನ್ನ ಬಳಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಜನರನ್ನು ಬಿಡುಗಡೆ ಮಾಡಿದ ನಂತರ ಇಸ್ರೇಲ್‌ 1,900ಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡಿದೆ.
  • ಶಾಂತಿಸ್ಥಾಪನೆಗೆ ಕಾರ್ಯೋನ್ಮುಖರಾಗಿ: ‘ಯುದ್ಧಭೂಮಿಯಲ್ಲಿ ಸಾಧಿಸುವುದಕ್ಕೆ ಏನೂ ಇಲ್ಲ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಕಾರ್ಯೋನ್ಮುಖರಾಗಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇಸ್ರೇಲ್‌ ಸಂಸದರಿಗೆ ಕರೆ ನೀಡಿದರು.
  • ‘ಇಸ್ರೇಲ್‌ ಶಸ್ತ್ರ ಬಳಸಿ ಪಡೆಯಬೇಕಾಗಿದ್ದನ್ನು ನಮ್ಮ ನೆರವಿನಿಂದ ಪಡೆದುಕೊಂಡಿದೆ’ ಎಂದು ಹೇಳಿದರು. ಸಂಘರ್ಷದಿಂದ ನಲುಗಿರುವ ಗಾಜಾವನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದರು. ಭಯೋತ್ಪಾದನೆ ಮತ್ತು ಹಿಂಸಾಚಾರದ ಪಥವನ್ನು ಬದಲಿಸುವಂತೆ ಪ್ಯಾಲೆಸ್ಟೀನಿಯನ್ನರನ್ನು ಒತ್ತಾಯಿಸಿದರು.
  • ಒತ್ತೆಯಾಳುಗಳ ಕುಟುಂಬಗಳನ್ನು ಟ್ರಂಪ್‌ ಅವರು ಇಸ್ರೇಲ್‌ನಲ್ಲಿ ಭೇಟಿ ಮಾಡಲಿದ್ದಾರೆ. ಬಳಿಕ ಅವರು ಅವರು ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನವು ಮಾಹಿತಿ ನೀಡಿದೆ.
  • 303 ಗ್ರಾಮ ಜಿಬಿಎ ಯೋಜನಾ ಪ್ರದೇಶ

ಸಂದರ್ಭ: ಗ್ರೇಟರ್ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನಗರ ಯೋಜನೆಯ ಜವಾಬ್ದಾರಿಯಿಂದ ಮುಕ್ತಗೊಳಿಸ ಲಾಗಿದೆ.

  • ‘ಗ್ರೇಟರ್‌ ಬೆಂಗಳೂರು ಪ್ರದೇಶ’ವನ್ನು (ಹಿಂದಿನ ಬಿಬಿಎಂಪಿ)  ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ವೆಂದು ಘೋಷಿಸ ಲಾಗಿದ್ದು, ನಗರ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಜಿಬಿಎಗೆ ವಹಿಸಲಾಗಿದೆ.
  • ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ– 1961 ರಂತೆ ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ವನ್ನು ಅಕ್ಟೋಬರ್‌ 10ರಂದು ಘೋಷಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
  • ಬಿಡಿಎ ಹಾಗೂ ಸರ್ಕಾರದಿಂದ ಈ ಹಿಂದಿನ ಎಲ್ಲ ನಿಯಮಗಳು, ಆದೇಶಗಳು, ನಿರ್ದೇಶನಗಳು, ಅನುಮೋದನೆ/ ಮಂಜೂರಾತಿಗಳು ಮುಂದುವರಿಯಲಿವೆ. ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ದ ಮಹಾಯೋಜನೆ ಅನು ಮೋದನೆ ಆಗುವವರೆಗೂ ಪರಿಷ್ಕೃತ ಮಾಸ್ಟರ್‌ ಪ್ಲಾನ್‌ (ಆರ್‌ಎಂಪಿ–2015) ಮತ್ತು ವಲಯ ನಿಯಮಾವಳಿಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ.
  • ಬಿಡಿಎಯಿಂದ ನಗರ ಯೋಜನೆ ಜವಾಬ್ದಾರಿಯನ್ನು ಜಿಬಿಎಗೆ ವಹಿಸ ಬೇಕೆಂಬ ನಿರ್ಣಯ ಜಿಬಿಎ ಮೊದಲ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆ ಪ್ರಕಾರ ಅಧಿಸೂಚನೆ ಹೊರಡಿಸಲಾಗಿದೆ.
  • ಜಿಬಿಎ ‘ಯೋಜನಾ ಪ್ರಾಧಿಕಾರ’ವೂ ಆಗಿದ್ದು, ತನ್ನ ವ್ಯಾಪ್ತಿಯಲ್ಲಿನ ವಸತಿ ಬಡಾವಣೆಗಳು, ಕೈಗಾರಿಕಾ ಬಡಾವಣೆ ಗಳನ್ನು ಅನುಮೋದಿಸುವ ಅಧಿಕಾರ ವನ್ನು ಹೊಂದಿದೆ. ಅಲ್ಲದೆ ನಗರದ ಮಾಸ್ಟರ್‌ ಪ್ಲಾನ್‌ ತಯಾರಿಸುವ ಜವಾಬ್ದಾರಿಯನ್ನು ಹೊಂದಿದ್ದು, ಅದನ್ನು ನಗರ ಪಾಲಿಕೆಗಳು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮೇಲ್ವಿಚಾರಣೆ ಮಾಡಲಿದೆ.
  • ಜಿಬಿಎ ರೂಪಿಸುವ ಮಾಸ್ಟರ್‌ ಪ್ಲಾನ್‌ನಂತೆಯೇ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ತನ್ನ ವ್ಯಾಪ್ತಿಯ ಕೈಗಾರಿಕಾ ಬಡಾವಣೆ ಹಾಗೂ ಕಟ್ಟಡಗಳ ನಕ್ಷೆಯನ್ನು ಅನುಮೋದಿಸಬೇಕಾಗುತ್ತದೆ.
  • ಯೋಜನಾ ಪ್ರಾಧಿಕಾರವಾಗಿರುವ ಜಿಬಿಎ ತನ್ನ ವಾರ್ಷಿಕ ವರದಿ, ಲೆಕ್ಕ ತಪಾಸಣಾ ವರದಿ, ಆಯವ್ಯಯವನ್ನು ಪ್ರತಿ ಹಣಕಾಸು ವರ್ಷದ ಅಂತ್ಯಕ್ಕೆ ಸರ್ಕಾರಕ್ಕೆ ಸಲ್ಲಿಸಬೇಕು. ಸ್ಥಳೀಯ ಯೋಜನಾ ಪ್ರಕ್ರಿಯೆಗಳನ್ನು ನಿರ್ವಹಿಸಲು ಜಿಬಿಎ ಮುಖ್ಯ ಆಯುಕ್ತರು ಅಧಿಕಾರಿಗಳ ಸಮಿತಿಯನ್ನು ರಚಿಸಲಿದ್ದಾರೆ. ಈಗಾಗಲೇ ಜಿಬಿಎಯಲ್ಲಿ ನಗರ ಯೋಜನೆ ಅಧಿಕಾರಿಗಳಿದ್ದು, ಅವರನ್ನು ಒಳಗೊಂಡ ಸಮಿತಿ ಕಾರ್ಯನಿರ್ವಹಿಸಲಿದೆ.

ಬಿಎಂಐಸಿಎಪಿಎ ಸೇರಿಲ್ಲ

  • ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ದಲ್ಲಿ ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ನ ಸ್ಥಳೀಯ ಯೋಜನಾ ಪ್ರದೇಶವನ್ನು (ಬಿಎಂಐಸಿಎಪಿಎ) ಸೇರಿಸಿಲ್ಲ. ಹೀಗಾಗಿ, 719.29 ಚದರ ಕಿ.ಮೀ ವ್ಯಾಪ್ತಿಯ ಜಿಬಿಎ ಪ್ರದೇಶದಲ್ಲಿ, 683 ಚದರ ಕಿ.ಮೀ ಮಾತ್ರ ಈಗ ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ವಾಗಿದೆ. ನೈಸ್‌ನೊಂದಿಗೆ ಭೂ ವ್ಯಾಜ್ಯ ಇರುವುದರಿಂದ ಈ ಪ್ರದೇಶವನ್ನು ಸದ್ಯಕ್ಕೆ ಸೇರಿಸಿಲ್ಲವಾದರೂ, ಮುಂದಿನ ದಿನಗಳಲ್ಲಿ ಸೇರಿಸಲಾಗುತ್ತದೆ ಎಂದು ನಗರ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದರು.
  • ಕ್ವಾಂಟಮ್ಆರ್ಥಿಕ ರಾಜ್ಯವಾಗಿ ಅಭಿವೃದ್ಧಿ

ಸಂದರ್ಭ: 2035 ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ಮೊತ್ತದ ವಹಿವಾಟಿನಕ್ವಾಂಟಮ್ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ, ಬೆಂಗಳೂರು ನಗರದಲ್ಲಿ ಕ್ಯೂಸಿಟಿ (ಕ್ವಾಂಟಮ್ಸಿಟಿ) ಸ್ಥಾಪಿಸಲು ಭೂಮಿ ನಿಗದಿಪಡಿಸಲಾಗಿದೆ ಎಂದು ವಿಜ್ಞಾನತಂತ್ರಜ್ಞಾನ ಸಚಿವ ಎನ್‌.ಎಸ್ಬೋಸರಾಜು ಹೇಳಿದ್ದಾರೆ.

  • ಸ್ವಿಟ್ಜರ್ಲೆಂಡ್‌ನ ಜಿನಿವಾದ ಬಯೋಟೆಕ್‌ ಕ್ಯಾಂಪಸ್‌ನಲ್ಲಿ ಆಯೋಜಿಸ ಲಾಗಿದ್ದ ‘ಸ್ವಿಸ್‌ನೆಕ್ಟ್ಸ್ ಕ್ವಾಂಟಮ್‌ ಸಮಿಟ್‌’ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  • ಕ್ವಾಂಟಮ್‌ ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ವಿಪುಲ ಅವಕಾಶಗಳಿದ್ದು, ಸಹಭಾಗಿತ್ವದ ಸಂಶೋಧನೆಗೆ ಕರ್ನಾಟಕ ರಾಜ್ಯ ಸರ್ಕಾರದ ಜೊತೆ ಕೈಜೋಡಿಸುವಂತೆ ಭೋಸರಾಜು ಸಲಹೆ ನೀಡಿದರು.
  • ಭಾರತ ಸರ್ಕಾರ ಸುಮಾರು ₹6,000 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಕ್ವಾಂಟಮ್‌ ಮಿಷನ್‌ ಆರಂಭಿಸಿದೆ. ಈ ಮಿಷನ್ ನಾವೀನ್ಯ, ಕೌಶಲ ಮತ್ತು ಸ್ಟಾರ್ಟ್‌ ಅಪ್ ಬೆಂಬಲದ ಮೂಲಕ 50ರಿಂದ 1000 ಕ್ಯೂ ಬಿಟ್‌ ಕ್ವಾಂಟಮ್‌ ಕಂಪ್ಯೂಟರ್‌ಗಳನ್ನು ಅಭಿವೃದ್ಧಿಪಡಿಸುವುದು, ಸುರಕ್ಷಿತ ಕ್ವಾಂಟಮ್ ಸಂವಹನ ಜಾಲಗಳನ್ನು ನಿರ್ಮಿಸುವುದು ಮತ್ತು ಕಂಪ್ಯೂಟಿಂಗ್‌, ಸಂವಹನ, ಸಂವೇದನೆ ಮತ್ತು ಸಾಮಗ್ರಿಗಳಿಗಾಗಿ ರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ ಈ ರಾಷ್ಟ್ರಿಯ ದೃಷ್ಟಿಕೋನವನ್ನು ಅಳವಡಿಸಿಕೊಂಡಿ ರುವ ಪ್ರಮುಖ ರಾಜ್ಯವಾಗಿ ಹೊರ ಹೊಮ್ಮಿದೆ ಎಂದರು.
  • ಇದೇ ಸಂದರ್ಭದಲ್ಲಿ ಬೋಸರಾಜು ಅವರು ಕ್ಯೂ–ಸಿಟಿ ಫೇಸ್‌ ಒನ್‌ನ ಪರಿಕಲ್ಪನೆಯ ವಿಡಿಯೊವನ್ನು ಅನಾವರಣಗೊಳಿಸಿದರು.
  • ಸಂಬಂಧ ವೃದ್ಧಿಗೆ ರೂಪುರೇಷೆ’: ಕೆನಡಾ ವಿದೇಶಾಂಗ ಸಚಿವೆ ಅನಿತಾ ಜತೆಗೆ ಸಚಿವ ಜೈಶಂಕರ್ಮಾತುಕತೆ

ಸಂದರ್ಭ: ‘ಭಾರತ ಮತ್ತು ಕೆನಡಾ ನಡುವಿನ ಸಂಬಂಧ, ಒಪ್ಪಂದ ಬಲಪಡಿಸಲು ಉಭಯ ರಾಷ್ಟ್ರಗಳು ಮಹತ್ವಾಕಾಂಕ್ಷೆಯ ರೂಪುರೇಷೆಗಳನ್ನು ಸಿದ್ಧಪಡಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ಹೇಳಿದ್ದಾರೆ.

  • ಭಾರತ ಪ್ರವಾಸ ಕೈಗೊಂಡಿರುವ ಕೆನಡಾ ವಿದೇಶಾಂಗ ಸಚಿವೆ ಅನಿತಾ ಆನಂದ್‌ ಅವರ ಜತೆಗೆ ವ್ಯಾಪಾರ, ಹೂಡಿಕೆ, ಗಣಿ, ಇಂಧನ ಸೇರಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ ಬಳಿಕ ಆ ಬಗ್ಗೆ ಮಾಧ್ಯಮಗಳಿಗೆ ಜೈಶಂಕರ್‌ ಮಾಹಿತಿ ನೀಡಿದ್ದಾರೆ.
  • ‘ಕಳೆದ ಕೆಲವು ತಿಂಗಳಲ್ಲಿ ಭಾರತ ಮತ್ತು ಕೆನಡಾ ಸಂಬಂಧವು ವೃದ್ಧಿ ಸುತ್ತಿದ್ದು, ಇದನ್ನು ಮತ್ತಷ್ಟು ಬಲಗೊಳಿಸು ವುದಕ್ಕೆ ಅಗತ್ಯ ಕಾರ್ಯವಿಧಾನಗಳನ್ನು ಮರು ರೂಪಿಸಲು ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
  • ಅಲ್ಲದೇ, ಕೃಷಿ, ವಿಜ್ಞಾನ, ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲೂ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎಂದಿದ್ದಾರೆ.
  • .1ರಿಂದಡಿಜಿಟಲ್ ಜೀವಿತ ಪ್ರಮಾಣಪತ್ರಅಭಿಯಾನ

ಸಂದರ್ಭ: ಕೇಂದ್ರ ಸರ್ಕಾರವು ಪಿಂಚಣಿದಾರರಿಗಾಗಿ ನವೆಂಬರ್ 1ರಿಂದ 30ರವರೆಗೆ ದೇಶದಾದ್ಯಂತಡಿಜಿಟಲ್ ಜೀವಿತ ಪ್ರಮಾಣಪತ್ರ (ಡಿಎಲ್ಸಿ) ಅಭಿಯಾನವನ್ನು ಆಯೋಜಿಸಿದೆ.

  • ‘ಪಿಂಚಣಿ ವಿತರಿಸುವ 19 ಬ್ಯಾಂಕ್‌ಗಳು ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ 2,000 ಜಿಲ್ಲೆಗಳು ಮತ್ತು ಉಪ–ವಿಭಾಗ ಕಚೇರಿ ವ್ಯಾಪ್ತಿಯಲ್ಲಿ ಅಭಿಯಾನ ನಡೆಯಲಿದೆ’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
  • ದೇಶದ ಮೂಲೆ ಮೂಲೆಗಳಲ್ಲಿರುವ ಪಿಂಚಣಿದಾರರನ್ನು ತಲುಪಿ ಡಿಜಿಟಲ್ ಜೀವಿತ ಪ್ರಮಾಣಪತ್ರ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಪಿಂಚಣಿ ಇಲಾಖೆಯು ಆಯೋಜಿಸುತ್ತಿರುವ ನಾಲ್ಕನೇ ಅಭಿಯಾನ ಇದಾಗಿದೆ.
  • 1.8 ಲಕ್ಷ ಪೋಸ್ಟ್‌ಮ್ಯಾನ್‌ಗಳು ಮತ್ತು ಗ್ರಾಮೀಣ ಡಾಕ್‌ ಸೇವಕರು(ಜಿಡಿಎಸ್‌) ಎಲ್ಲ ವಿಧದ ಪಿಂಚಣಿದಾರರ ಮನೆ ಬಾಗಿಲಿಗೆ ತೆರಳಿ ಡಿಎಲ್‌ಸಿ ಸೇವೆಗಳ ಬಗ್ಗೆ ತಿಳಿಸಲಿದ್ದಾರೆ.
  • ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಮುಂದುವರಿಸಲು ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ‘ಜೀವಿತ ಪ್ರಮಾಣಪತ್ರ’ವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
  • ವ್ಯಾಪಾರ ಮಾತುಕತೆ ಅಮೆರಿಕಕ್ಕೆ ಭಾರತದ ತಂಡ

 ಸಂದರ್ಭ: ವ್ಯಾಪಾರ ಒಪ್ಪಂದ ಕುರಿತ ಮಾತುಕತೆಗಾಗಿ ಭಾರತದ ಹಿರಿಯ ಅಧಿಕಾರಿಗಳ ತಂಡವು ಅಮೆರಿಕಕ್ಕೆ ಇದೇ ವಾರ ಭೇಟಿ ನೀಡಲಿದೆ.

  • ಉಭಯ ದೇಶಗಳ ನಾಯಕರು ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸುವಂತೆ ಅಧಿಕಾರಿಗಳಿಗೆ ಈ ವರ್ಷದ ಫೆಬ್ರುವರಿಯಲ್ಲಿ ನಿರ್ದೇಶನ ನೀಡಿದ್ದರು.
  • ಅಕ್ಟೋಬರ್‌–ನವೆಂಬರ್‌ ವೇಳೆಗೆ ಒಪ್ಪಂದದ ಮೊದಲ ಹಂತದ ಮಾತುಕತೆ ಮುಕ್ತಾಯಗೊಳಿಸುವ ಆಲೋಚನೆ ಅಧಿಕಾರಿಗಳಿಗೆ ಇದೆ.
  • ಇದುವರೆಗೆ ಐದು ಸುತ್ತಿನ ಮಾತುಕತೆಗಳು ನಡೆದಿವೆ. ಈ ವಾರದಲ್ಲಿ ಭಾರತದ ತಂಡವು ಅಮೆರಿಕಕ್ಕೆ ಭೇಟಿ ನೀಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್‌ ನೇತೃತ್ವದ ಅಧಿಕಾರಿಗಳ ನಿಯೋಗ ವ್ಯಾಪಾರ ಒಪ್ಪಂದದ ಮಾತುಕತೆಗಾಗಿ ನ್ಯೂಯಾರ್ಕ್‌ಗೆ ಕಳೆದ ತಿಂಗಳು ಭೇಟಿ ನೀಡಿತ್ತು.
  • ಈಗ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕವು ಶೇ 50ರಷ್ಟು ಸುಂಕ ವಿಧಿಸುತ್ತಿದೆ. ಇಂಥ ಸಂದರ್ಭದಲ್ಲಿ, ಈ ಮಾತುಕತೆ ಮುಖ್ಯವಾಗಿದೆ ಎನ್ನಲಾಗಿದೆ.
  • ಈಗ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಮೌಲ್ಯ ₹16.93 ಲಕ್ಷ ಕೋಟಿಯಾಗಿದೆ. 2030ರ ವೇಳೆಗೆ ಇದನ್ನು ₹44.33 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿಯನ್ನು ಒಪ್ಪಂದವು ಹೊಂದಿದೆ ಎಂದು ತಿಳಿಸಿದ್ದಾರೆ.
  • ಚಿಲ್ಲರೆ ಹಣದುಬ್ಬರ ಇಳಿಕೆ

ಸಂದರ್ಭ: ಸೆಪ್ಟೆಂಬರ್ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಎಂಟು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ 1.54ಕ್ಕೆ ಇಳಿಕೆ ಕಂಡಿದೆ. ತರಕಾರಿಗಳು, ಹಣ್ಣು ಮತ್ತು ದ್ವಿದಳ ಧಾನ್ಯಗಳ ಬೆಲೆಯಲ್ಲಿನ ಇಳಿಕೆಯು ಹಣದುಬ್ಬರ ಪ್ರಮಾಣ ಕಡಿಮೆ ಆಗಲು ಕಾರಣವಾಗಿದೆ.

  • ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಪ್ರಮಾಣವು ಆಗಸ್ಟ್‌ನಲ್ಲಿ ಶೇ 2.07ರಷ್ಟು ಇತ್ತು. ಇದು ಕಳೆದ ಸೆಪ್ಟೆಂಬರ್‌ನಲ್ಲಿ ಶೇ 5.49ರಷ್ಟಿತ್ತು. 2017ರ ಜೂನ್‌ನಲ್ಲಿ ಹಣದುಬ್ಬರ ಪ್ರಮಾಣ ಶೇ 1.47 ರಷ್ಟಾಗಿತ್ತು. ಅದಾದ ನಂತರದ ಕನಿಷ್ಠ ಮಟ್ಟವು ಈ ಸೆಪ್ಟೆಂಬರ್‌ನಲ್ಲಿ ದಾಖಲಾಗಿದೆ.
  • ಈ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 2ಕ್ಕಿಂತ ಕೆಳಗಿನ ಮಟ್ಟಕ್ಕೆ ಬಂದಿರುವುದು ಇದು ಎರಡನೆಯ ಬಾರಿ. ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 2ರಿಂದ ಶೇ 6ರ ಒಳಗೆ ನಿಯಂತ್ರಿಸುವ ಹೊಣೆಯು ಆರ್‌ಬಿಐ ಮೇಲಿದೆ.
  • ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಪ್ರಮಾಣ ಶೇ 1.07ರಷ್ಟು, ನಗರ ಪ್ರದೇಶಗಳಲ್ಲಿ ಇದು ಶೇ 2.04ರಷ್ಟು ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್‌ಒ) ನೀಡಿರುವ ಅಂಕಿ–ಅಂಶಗಳು ಹೇಳುತ್ತಿವೆ.
  • ಕೇರಳದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಹಣದುಬ್ಬರ (ಶೇ 9.05ರಷ್ಟು) ದಾಖ ಲಾಗಿದೆ. ಉತ್ತರ ಪ್ರದೇಶದಲ್ಲಿ ಶೇ (–)0.61ರಷ್ಟು ಹಣದುಬ್ಬರ ದಾಖಲಾಗಿದ್ದು, ಇದು ಅತ್ಯಂತ ಕನಿಷ್ಠ ಪ್ರಮಾಣ.
  • ಡಿಸೆಂಬರ್‌ನಲ್ಲಿ ಹಣಕಾಸು ನೀತಿ ಸಮಿತಿಯ ಸಭೆಯು ನಡೆಯಲಿದ್ದು, ಅಲ್ಲಿ ರೆಪೊ ದರವನ್ನು ಶೇ 0.25ರಷ್ಟು ಕಡಿಮೆ ಮಾಡುವ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
  • ಮೂವರಿಗೆ ಅರ್ಥಶಾಸ್ತ್ರದ ನೊಬೆಲ್

ಸಂದರ್ಭ: ಅಮೆರಿಕದ ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದ ಜೋಯೆಲ್ ಮೊಕೀರ್, ಕಾಲೇಜ್ ಡಿ ಫ್ರಾನ್ಸ್ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಫಿಲಿಪ್ ಅಘಿಯಾನ್ ಮತ್ತು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಪೀಟರ್ ಹೊವಿಟ್ ಅವರುನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

  • ‘ನಾವೀನ್ಯದೊಂದಿಗೆ ಆರ್ಥಿಕ ಬೆಳವಣಿಗೆ’ಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ನೊಬೆಲ್‌ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್‌ ಸಮಿತಿಯು ತಿಳಿಸಿದೆ.
  • ಈವರೆಗೆ 96 ಮಂದಿಗೆ 56 ಬಾರಿ ಅರ್ಥಶಾಸ್ತ್ರದ ನೊಬೆಲ್‌ ನೀಡಲಾಗಿದೆ. ಈ ಪೈಕಿ ಮೂವರು ಮಾತ್ರ ಮಹಿಳೆಯರು. ಈ ಪ್ರಶಸ್ತಿಯನ್ನು ಡಿಸೆಂಬರ್‌ 10ರಂದು ಪ್ರದಾನ ಮಾಡಲಾಗುತ್ತದೆ.
  • ವೈದ್ಯವಿಜ್ಞಾನ ಮತ್ತು ಭೌತವಿಜ್ಞಾನ, ರಾಸಾಯನ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಕ್ಷೇತ್ರದ ನೊಬೆಲ್‌ ಪುರಸ್ಕಾರವನ್ನು ಈಗಾಗಲೇ ಘೋಷಿಸಲಾಗಿದೆ.
  • ಒಲಿಂಪಿಕ್ಸ್ ಪದಕ ವಿಜೇತರ ಪುರಸ್ಕರಿಸಿದ ಐಒಎ

ಸಂದರ್ಭ: ಜಾವೆಲಿನ್ ತಾರೆ ನೀರಜ್ ಚೋಪ್ರಾ ಮತ್ತು ಶೂಟರ್ಮನು ಭಾಕರ್ ಸೇರಿದಂತೆ ಪ್ಯಾರಿಸ್ಒಲಿಪಿಕ್ಸ್ನಲ್ಲಿ ಪದಕಗಳನ್ನು ಗೆದ್ದ ಭಾರತದ ಕ್ರೀಡಾಪಟುಗಳಿಗೆ ಭಾರತ ಒಲಿಂಪಿಕ್ಸಂಸ್ಥೆ ನಡೆದ ಸಮಾರಂಭದಲ್ಲಿ ನಗದು ಬಹುಮಾನ ನೀಡಿ ಪುರಸ್ಕರಿಸಿತು.

  • ಜಾವೆಲಿನ್‌ನಲ್ಲಿ ಬೆಳ್ಳಿ ಗೆದ್ದಿದ್ದ ಚೋಪ್ರಾ ಅವರು ದೇಶದಿಂದ ಹೊರಗಿದ್ದ ಕಾರಣ ಅವರ ಪರವಾಗಿ ಭಾರತ ಅಥ್ಲೆಟಿಕ್‌ ಫೆಡರೇಷನ್ ಅಧಿಕಾರಿಯೊಬ್ಬರು ₹75 ಲಕ್ಷ ಮೊತ್ತದ ಚೆಕ್‌ ಅನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರಿಂದ ಸ್ವೀಕರಿಸಿದರು.
  • ಚೋಪ್ರಾ ಅವರ ಅಂದಿನ ಕೋಚ್‌ ಆಗಿದ್ದ ಜರ್ಮನಿಯ ಬಾರ್ತೊನೀಝ್ ಅವರಿಗೆ ₹20 ಲಕ್ಷ ಬಹುಮಾನ ನೀಡಲಾಯಿತು. ಚೋಪ್ರಾ ಅವರು ಪ್ರಸ್ತುತ ಝೆಕ್‌ ಗಣರಾಜ್ಯದ ಯಾನ್‌ ಜೆಲೆಜ್ನಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
  • ಮನು ಭಾಕರ್ ಅವರು 10 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಗೆದ್ದ ವೈಯಕ್ತಿಕ ಕಂಚಿನ ಪದಕಕ್ಕೆ ₹50 ಲಕ್ಷ ಬಹುಮಾನ ಪಡೆದರು. 10 ಮೀ. ಮಿಶ್ರ ಪಿಸ್ತೂಲ್ ವಿಭಾಗದಲ್ಲಿ ಗೆದ್ದ ಕಂಚಿನ ಪದಕಕ್ಕಾಗಿ ಸರಬ್ಜೋತ್ ಸಿಂಗ್ ಜೊತೆ ₹50 ಲಕ್ಷ ಹಂಚಿಕೊಂಡರು. ಮನು ಅವರ ಕೋಚ್‌ ಜಸ್ಪಾಲ್‌ ರಾಣಾ ಅವರಿಗೆ ₹10 ಲಕ್ಷ ನೀಡಿ ಗೌರವಿಸಲಾಯಿತು. ಮಿಶ್ರ ತಂಡ ವಿಭಾಗದಲ್ಲಿ ಅವರು ₹15 ಲಕ್ಷ ಮೊತ್ತವನ್ನು ಅಭಿಷೇಕ್ ರಾಣಾ (ಸರಬ್ಜೋತ್ ಅವರ ಕೋಚ್‌) ಜೊತೆ ಹಂಚಿಕೊಂಡರು.
  • 57 ಕೆ.ಜಿ. ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕ ಗೆದ್ದ ಕುಸ್ತಿಪಟು ಅಮನ್ ಸೆಹ್ರಾವತ್ ಅವರು  ₹50 ಲಕ್ಷ ಬಹುಮಾನ ಪಡೆದರು. ತಮ್ಮ ಕೋಚ್‌ ಅಲಿ ಶಬನೋವ್‌ ಪರವಾಗಿ ಅಮನ್ ₹15 ಲಕ್ಷ ಮೊತ್ತ ಸ್ವೀಕರಿಸಿದರು.
  • 50 ಮೀ. ರೈಫಲ್‌ 3 ಪೊಷಿಷನ್ಸ್‌ ನಲ್ಲಿ ಕಂಚಿನ ಪದಕ ಗೆದ್ದ ಶೂಟರ್‌ ಸ್ವಪ್ನಿಲ್ ಕುಸಳೆ ಅವರು ₹50 ಲಕ್ಷ ಬಹುಮಾನ ಪಡೆದರು. ಅವರ ಕೋಚ್‌ ದೀಪಾಲಿ ದೇಶಪಾಂಡೆ ಅವರಿಗೆ ₹15 ಲಕ್ಷ ನೀಡಿ ಪುರಸ್ಕರಿಸಲಾಯಿತು.
  • ಕಂಚಿನ ಪದಕ ಗೆದ್ದ ಪುರುಷರ ಹಾಕಿ ತಂಡದ ಸದಸ್ಯರಿಗೆ ತಲಾ ₹10 ಲಕ್ಷ ಬಹುಮಾನ ನೀಡಲಾಯಿತು. ಕೋಚ್‌ ಕ್ರೇಗ್‌ ಫುಲ್ಟನ್‌ ಅವರಿಗೆ ₹20 ಲಕ್ಷ ನೀಡಲಾಯಿತು.
  • ಮಾಂಡವೀಯ ಜೊತೆ ಪಿ.ಟಿ.ಉಷಾ ಅವರೂ ಪದಕ ವಿಜೇತರನ್ನು ಗೌರವಿಸಿದರು. ಒಲಿಂಪಿಕ್ ಸಂಸ್ಥೆಯ ಬಹುತೇಕ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

ಪ್ರಚಲಿತ ವಿದ್ಯಮಾನಗಳು: 13ನೇ ಅಕ್ಟೋಬರ್ 2025

  • ನವಲಗುಂದ ಧುರಿ; ತಯಾರಕರ ಕೊರತೆ

ಸಂದರ್ಭ: ಶತಮಾನಗಳ ಇತಿಹಾಸವುಳ್ಳ ಮತ್ತು ಭೌಗೋಳಿಕ ಮಾನ್ಯತೆ (ಜಿಐ) ಪಡೆದಿರುವ ಧಾರವಾಡ ಜಿಲ್ಲೆ ನವಲಗುಂದದ ಧುರಿಗಳ (ಜಮಖಾನ) ತಯಾರಿಕೆಗೆ ತಯಾರಕರ ಕೊರತೆ ಕಾಡುತ್ತಿದೆ.

  • ನವಲಗುಂದದ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ (ಕಾವೇರಿ ಎಂಪೋರಿಯಂ) ಘಟಕದಲ್ಲಷ್ಟೇ ಸದ್ಯ ಜಮಖಾನಗಳ ಉತ್ಪಾದನೆ ಆಗುತ್ತಿದೆ. ಇವುಗಳ ತಯಾರಿಕೆ ಮಾಡುವವರ ಸಂಖ್ಯೆ 17ಕ್ಕೆ ಇಳಿದಿದೆ.
  • ‘ಪಾರಂಪರಿಕ ನೇಯ್ಗೆ ಕಲೆಯನ್ನು ಮಕ್ತುಲ್‌ ಸಾಬ್‌ ಜಮಖಾನ್ದಾರ್‌ ಅವರು ನಮಗೆ ಕಲಿಸಿದರು. ನಾನು ತರಬೇತಿ ಪಡೆದಾಗ 150ಕ್ಕೂ ಹೆಚ್ಚು ಮಂದಿ ಕಾರ್ಮಿಕರು ತಯಾರಿಸುತ್ತಿದ್ದರು. ಕ್ರಮೇಣ ಅವರ ಸಂಖ್ಯೆ ಕುಸಿಯುತೊಡಗಿತು’ ಎಂದ ನವಲಗುಂದ ನೇಕಾರರ ಸಂಘದ ಅಧ್ಯಕ್ಷೆ.
  • ‘ಜಮಖಾನ ತಯಾರಿಸುವವರಿಗೆ ಸರ್ಕಾರದಿಂದ ವಿಶೇಷ ನೆರವು ಇಲ್ಲ. ಜಮಖಾನ ಮಾರಾಟದಿಂದ ತಿಂಗಳಿಗೆ ₹2 ಲಕ್ಷದವರೆಗೆ ಆದಾಯಗಳಿಸುವ ಸಾಧ್ಯತೆ ಇದ್ದರೂ, ತಯಾರಕರ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ. ಒಂದೊಂದು ಜಮಖಾನ ದರ ₹ 1 ಸಾವಿರದಿಂದ ₹ 10 ಸಾವಿರದವರೆಗೆ ಇರುತ್ತದೆ. ಸದ್ಯ ತಿಂಗಳಿಗೆ 100 ರಿಂದ 200 ಜಮಖಾನ ತಯಾರಿಸಲಾಗುತ್ತಿದೆ’.

ಪರಂಪರೆಯೂ ಕಾರಣ

  • ‘ಜಮಖಾನ ತಯಾರಿಕೆ, ಮಾರಾಟದ ಹೊಣೆಯನ್ನು ಸರ್ಕಾರ ವಹಿಸಿಕೊಂಡಿದೆ. ಹೊಸದಾಗಿ ತರಬೇತಿ ಪಡೆದವರು ಆ ಕೆಲಸ ಮುಂದುವರಿಸುವುದಿಲ್ಲ. ಮುಖ್ಯವಾಗಿ ಕೌಶಲ ಗೊತ್ತಿರುವವರು ಮನೆಯ ಹೆಣ್ಣುಮಕ್ಕಳಿಗೆ ಕಲಿಸುವುದಿಲ್ಲ. ಹೊಸ ಪೀಳಿಗೆಗೆ ಈ ಬಗ್ಗೆ ಆಸಕ್ತಿ ಇಲ್ಲ. ತಯಾರಕರ ಸಂಖ್ಯೆ ಕುಸಿಯಲು ಇದೂ ಕಾರಣ’ ಎಂದು ಕೈಮಗ್ಗ ಹಾಗೂ ಜವಳಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
  • ಗುತ್ತಿಗೆದಾರರಿಗಾಗಿ ವಿದ್ಯುತ್ಪಂಪ್ಡ್ಸ್ಟೋರೇಜ್ಯೋಜನೆ

ಸಂದರ್ಭ: ಗುತ್ತಿದಾರರಿಗೆ ಅನುಕೂಲ ಮಾಡಿಕೊಡಲೆಂದೇ  ಶರಾವತಿ ಮತ್ತು ವಾರಾಹಿ ಪಂಪ್ಡ್ಸ್ಟೋರೇಜ್ಯೋಜನೆಗಳನ್ನು ರೂಪಿಸಲಾಗಿದೆ ಎಂದು ಪರಿಸರ ಹೋರಾಟಗಾರ ಅಖಿಲೇಶ್ಚಿಪ್ಲಿ ಆರೋಪಿಸಿದರು.

  • ಕೇಂದ್ರ ಅರಣ್ಯ, ಪರಿಸರ ಮತ್ತು ವನ್ಯಜೀವಿ ಸಚಿವಾಯಲದಿಂದ ಅನುಮತಿ ಸಿಕ್ಕಿಲ್ಲ. ಈ ಅನುಮತಿಗಾಗಿ ರಾಜ್ಯ ಸರ್ಕಾರವು ಈ ವರ್ಷದ ಜನವರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, 2024ರಲ್ಲಿಯೇ ಆಂಧ್ರಪ್ರದೇಶದ ‘ಮೇಘಾ ಎಂಜಿನಿಯರಿಂಗ್ ವರ್ಕ್ಸ್‌’ ಎಂಬ ಕಂಪನಿಗೆ ಟೆಂಡರ್‌ ಆಗಿದೆ ಎಂದು ಹೇಳಿದರು.
  • ಬ್ಯಾಟರಿ ಸ್ಟೋರೇಜ್‌ ಎನರ್ಜಿ ಸಿಸ್ಟಂ ಮೂಲಕ ಎಲ್ಲಿ ಬೇಕಾದರೂ ವಿದ್ಯುತ್‌ ಸ್ಟೋರೇಜ್‌ ಮಾಡಲು ಅವಕಾಶವಿದೆ. ಆದರೂ ಪಶ್ಚಿಮ ಘಟ್ಟದ ಸಂರಕ್ಷಿತ ಪ್ರದೇಶದಲ್ಲಿ ಶರಾವತಿ ಮತ್ತು ವಾರಾಹಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರ ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
  • ಗುಂಡಿಬೈಲು, ಹೆನ್ನಿ, ಹಿರೇಹೆನ್ನಿ ಮುಂತಾದ ಪ್ರದೇಶಗಳಲ್ಲಿ 350ಕ್ಕೂ ಅಧಿಕ ಕುಟುಂಬಗಳು ಯಾವುದೇ ಹಕ್ಕುಪತ್ರ ಇಲ್ಲದೇ ಬಹಳ ವರ್ಷಗಳಿಂದ ಬದುಕುತ್ತಿವೆ. ಈ ಪಂಪ್ಡ್‌ ಸ್ಟೋರೇಜ್‌ ಯೋಜನೆಯಡಿ ಈ ಕುಟುಂಬಗಳನ್ನು ಕೂಡ ಒಕ್ಕಲೆಬ್ಬಿಸಲಾಗುತ್ತದೆ. ಆದರೆ, ಹಕ್ಕುಪತ್ರ ಇಲ್ಲದೇ ಇರುವುದರಿಂದ ಇವರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.
  • 1,800 ಟನ್‌ ಸ್ಫೋಟಕಗಳನ್ನು ಬಳಸಿ ಇಲ್ಲಿ ಸುರಂಗಗಳನ್ನು ನಿರ್ಮಿಸಲಾಗುತ್ತಿದೆ. ಗುರುತ್ವಾಕರ್ಷಣೆಗೆ ವಿರುದ್ಧವಾಗಿ ನೀರನ್ನು ಮೇಲಕ್ಕೆ ಹರಿಸಬೇಕಿರುವುದರಿಂದ ಉತ್ಪಾದನೆಗಿಂತ ಶೇ 25ರಷ್ಟು ಅಧಿಕ ವಿದ್ಯುತ್‌ ಇಲ್ಲಿ ವ್ಯಯವಾಗಲಿದೆ ಎಂದು ವಿವರಿಸಿದರು.
  • ಪರಿಸರವಾದಿ ಶಂಕರ್‌ ಶರ್ಮ ಮಾತನಾಡಿ, ‘ಈ ಯೋಜನೆ ಕುರಿತು ತಯಾರಿಸಿದ ವಿಸ್ತೃತ ಯೋಜನಾ ವರದಿಯು ಹಸಿ ಸುಳ್ಳುಗಳಿಂದ ಕೂಡಿದೆ. ಮಾಡಲೇಬೇಕಾದ ಯೋಜನೆ ಎಂದು ಎಲ್ಲಿಯೂ ಹೇಳಿಲ್ಲ. ಈ ಯೋಜನೆಗಾಗಿ 400 ಎಕರೆ ಕಾಡು ಕಡಿಯಬೇಕಾಗುತ್ತದೆ ಎಂಬುದನ್ನು ಹೇಳಿದ್ದಾರೆ. ವಿನಾಶದ ಅಂಚಿನಲ್ಲಿರುವ ಸಿಂಹಬಾಲದ ಸಿಂಗಲೀಕ ಸಹಿತ ಅನೇಕ ಜೀವಜಂತುಗಳು ನಾಶವಾಗಲಿವೆ. ಹಾಗಾಗಿ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಪರಿಸರ ಹೋರಾಟಗಾರ ಜೋಸೆಫ್‌ ಹೂವರ್‌ ಉಪಸ್ಥಿತರಿದ್ದರು.
  • ತಾಲಿಬಾನ್: ಪಾಕ್ಗೆ ದೂರ ಭಾರತಕ್ಕೆ ಇನ್ನಷ್ಟು ಹತ್ತಿರ
  • ದೇಶದಲ್ಲಿ ಲಕ್ಷಕ್ಕೂ ಅಧಿಕ ಏಕೋಪಾಧ್ಯಾಯ ಶಾಲೆಗಳು

ಸಂದರ್ಭ: ದೇಶದಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ. ಇಂಥ ಶಾಲೆಗಳಲ್ಲಿ 33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

  • ಆಂಧ್ರಪ್ರದೇಶದಲ್ಲಿ ಇಂಥ ಶಾಲೆಗಳ ಸಂಖ್ಯೆ ಹೆಚ್ಚು ಇದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಕರ್ನಾಟಕ ಹಾಗೂ ಲಕ್ಷದ್ವೀಪ ಇವೆ. ಶಿಕ್ಷಣ ಸಚಿವಾಲಯವು ಬಿಡುಗಡೆ ಮಾಡಿರುವ 2024–25ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ದತ್ತಾಂಶದಲ್ಲಿ ಈ ಮಾಹಿತಿ ಇದೆ.
  • ಏಕೋಪಾಧ್ಯಾಯ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ನೋಡಿದಾಗ, ಉತ್ತರ ಪ್ರದೇಶ ಅಗ್ರ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶ ಇವೆ ಎಂದು ಸಚಿವಾಲಯ ತಿಳಿಸಿದೆ.
  • ಡೀಪ್ಫೇಕ್‌, . ನಿಯಂತ್ರಣಕ್ಕೆ ಕಾನೂನು ಅಗತ್ಯ: ನ್ಯಾ. ನಾಗರತ್ನ

ಸಂದರ್ಭ: ಡೀಪ್ಫೇಕ್ಮತ್ತು . ಮೂಲಕ ಮಕ್ಕಳ ಮೇಲೆ ನಡೆಯಬಹುದಾದ ದೌರ್ಜನ್ಯ ಗಳ ನಿಗ್ರಹಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಗತ್ಯ ವಾಗಿದೆ ಎಂದು ಸುಪ್ರೀಂ ಕೋರ್ಟ್ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಹೇಳಿದರು.

  • ಕಾರ್ಯಕ್ರಮವೊಂದರಲ್ಲಿ ಮಾತ ನಾಡಿದ ಅವರು, ‘ಸೂಕ್ತ ಮುನ್ನೆಚ್ಚ ರಿಕೆಯ ಮೂಲಕ ನಾವು ದೌರ್ಜನ್ಯ ಮತ್ತು ಮಕ್ಕಳ ಕಳ್ಳಸಾಗಾಣಿಕೆಯನ್ನು ತಡೆಯಲು ಸಾಧ್ಯವಿದೆ’ ಎಂದು ತಿಳಿಸಿದರು.
  • ‘ವಿಕಾಸಗೊಳ್ಳುತ್ತಿರುವ ಹೊಸ ತಂತ್ರಜ್ಞಾನಗಳು ಉಂಟು ಮಾಡುತ್ತಿರುವ ಅಪಾಯಗಳು ಜಗತ್ತಿಗೆ ತೂಗುಗತ್ತಿ ಯಂತಾಗಿವೆ. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ವಿಚಾರ ಗಳ ಮೇಲೆ ನಿಗಾ ಇಡಲು ಮತ್ತು ಆನ್‌ಲೈನ್‌ ವೇದಿಕೆಗಳಲ್ಲಿ ವಯಸ್ಸಿನ ಮಿತಿ ಹೇರಲು ಕಾನೂನು ರೂಪಿಸಬೇಕು’ ಎಂದರು.
  • ‘ಎಐ ಮತ್ತು ಇತರ ತಂತ್ರಜ್ಞಾನಗಳು ಹೆಣ್ಣುಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅವುಗಳನ್ನು ಹೇಗೆ ನಿಗ್ರಹಿಸಬಹುದು ಎಂಬುವುದರ ಕುರಿತು ಅಧ್ಯಯನಕ್ಕೆ ‘ಹೆಣ್ಣುಮಕ್ಕಳ ವಿರುದ್ಧದ ಎ.ಐ ಸೈಬರ್‌ ಅಪರಾಧಗಳ ನಿಗ್ರಹ ಸಲಹಾ ಸಮಿತಿ’ ರಚನೆಯ ಸಾಧ್ಯತೆಯನ್ನು ಸುಪ್ರೀಂ ಕೋರ್ಟ್‌ ಪರಿಗಣಿಸಬಹುದು’ ಎಂದು ತಿಳಿಸಿದರು.
  • ನೆರವು ಸಾಮಗ್ರಿ: ಗಾಜಾ ಪ್ರವೇಶಕ್ಕೆ ಸಿದ್ಧತೆ

ಸಂದರ್ಭ: ಗಾಜಾ ಪಟ್ಟಿಯೊಳಗೆ ಹೆಚ್ಚಿನ ನೆರವು ಸಾಮಗ್ರಿಗಳನ್ನು ಕೊಂಡೊಯ್ಯುವ ಸಿದ್ಧತೆಗಳು ಭಾನುವಾರ ಆರಂಭಗೊಂಡಿವೆ. ‘ಭಾನುವಾರದಿಂದ ಪ್ರತಿ ದಿನವು ನೆರವು ಸಾಮಗ್ರಿಗಳನ್ನು ಹೊತ್ತ 600 ಟ್ರಕ್ಗಳು ಗಾಜಾ ಪ್ರವೇಶಿಸಲಿವೆ ಎಂದು ಇಸ್ರೇಲ್ಹೇಳಿದೆ.

  • ಕದನ ವಿರಾಮದ ಒಪ್ಪಂದದಂತೆ ಸಕಲ ಸಿದ್ಧತೆ ನಡೆಯುತ್ತಿದೆ. ‘ನಾವು ಸುಮಾರು 400 ಟ್ರಕ್‌ಗಳನ್ನು ಕಳುಹಿಸುತ್ತಿದ್ದೇವೆ’ ಎಂದು ಈಜಿಪ್ಟ್‌ ಹೇಳಿದೆ. ಆದರೆ, ಇಸ್ರೇಲ್‌ ಸೇನೆಯ ಪರಿಶೀಲನೆ ಬಳಿಕವೇ ಎಲ್ಲ ಟ್ರಕ್‌ಗಳು ಗಾಜಾ ಪ್ರವೇಶಿಸಲಿವೆ.
  • ಇಸ್ರೇಲ್‌ ನೆರವು ಕೇಂದ್ರ ಧ್ವಂಸ: ವಿಶ್ವಸಂಸ್ಥೆಯ ನೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಇಸ್ರೇಲ್‌ ತನ್ನದೇ ನೆರವು ಕೇಂದ್ರಗಳನ್ನು ಸ್ಥಾಪಿಸಿತ್ತು. ಇದಕ್ಕೆ ಅಮೆರಿಕದ ಬೆಂಬಲವೂ ಇತ್ತು. ಇವುಗಳನ್ನು ‘ಗಾಜಾ ಮಾನವೀಯ ನೆರವು ಫೌಂಡೇಶನ್‌’ ನಿರ್ವಹಿಸುತ್ತಿತ್ತು.ಗಾಜಾ ಪಟ್ಟಿಯ ವಿವಿಧೆಡೆ ಸ್ಥಾಪಿಸಲಾಗಿದ್ದ ಈ ಕೇಂದ್ರಗಳನ್ನು ಜನರು ಕಿತ್ತುಹಾಕುತ್ತಿದ್ದಾರೆ. ಈ ಕೇಂದ್ರಕ್ಕೆ ಬರುವ ಜನರನ್ನು ನಿಯಂತ್ರಿಸುವ ಸಲುವಾಗಿ ಅಳವಡಿಸಲಾಗಿದ್ದ ಬೇಲಿಗಳನ್ನೂ ಕಿತ್ತೆಸೆದಿದ್ದಾರೆ.
  • ‘ನೆರವು ಕಾರ್ಯಗಳಲ್ಲಿ ಹಮಾಸ್‌ ಮಧ್ಯ ಪ್ರವೇಶಿಸುತ್ತಿತ್ತು, ಇದನ್ನು ತಡೆಯಲು ಇಂಥ ಕೇಂದ್ರಗಳನ್ನು ತೆರೆಯಲಾಗಿತ್ತು. ಇವುಗಳು ಉತ್ತಮ ಕೆಲಸ ಮಾಡಿವೆ’ ಎಂದು ಇಸ್ರೇಲ್‌ ಮತ್ತು ಅಮೆರಿಕ ಹೊಗಳಿವೆ. ಈ ಕೇಂದ್ರದ ಮುಂದೆ ಆಹಾರಕ್ಕಾಗಿ ನಿಂತಿದ್ದ ನೂರಾರು ಜನರನ್ನು ಇಸ್ರೇಲ್‌ ಸೇನೆ ಹತ್ಯೆ ಮಾಡಿತ್ತು.

ಇಸ್ರೇಲ್‌ಗೆ ಟ್ರಂಪ್‌ ಭೇಟಿ

  • ಕದನ ವಿರಾಮ ಒಪ್ಪಂದಕ್ಕೆ ಬರುವಂತೆ ಇಸ್ರೇಲ್‌ ಮತ್ತು ಹಮಾಸ್‌ ಸಂಘಟನೆಯನ್ನು ಒತ್ತಾಯಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. ಒತ್ತೆಯಾಳುಗಳ ಕುಟುಂಬಗಳನ್ನು ಅವರು ಇಸ್ರೇಲ್‌ ಸಂಸತ್ತಿನಲ್ಲಿ ಭೇಟಿ ಮಾಡಲಿದ್ದಾರೆ. ಶ್ವೇತಭವನವು ಬಿಡುಗಡೆ ಮಾಡಿದ ಅಧ್ಯಕ್ಷರ ಕಾರ್ಯಕ್ರಮ  ಪಟ್ಟಿಯಲ್ಲಿ ಈ ಮಾಹಿತಿ ಇದೆ.
  • ಇಸ್ರೇಲ್‌ ಬಳಿಕ ಟ್ರಂಪ್‌ ಅವರು ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ. ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ನಾಯಕರು ಪಾಲ್ಗೊಳ್ಳುವ ‘ಶಾಂತಿ ಶೃಂಗಸಭೆ’ಯಲ್ಲಿ ಟ್ರಂಪ್‌ ಸೋಮವಾರ ಭಾಗವಹಿಸಲಿದ್ದಾರೆ ಎಂದು ಈಜಿಪ್ಟ್‌ ಅಧ್ಯಕ್ಷ ಅಬ್ದುಲ್‌ ಫತ್ತಾಹ್‌ ಅಲ್‌ ಸೀಸಿ ಕಚೇರಿ ಮಾಹಿತಿ ನೀಡಿದೆ.