ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ಸೌರ ಉತ್ಪನ್ನಗಳಿಗೆ ಭಾರಿ ಸುಂಕ
ಸಂದರ್ಭ: ಭಾರತದಿಂದ ಅಮೆರಿಕ ಪ್ರವೇಶಿಸುವ ಕೆಲವು ಬಗೆಯ ಸೌರ ಉತ್ಪನ್ನಗಳ ಮೇಲೆ ಅಲ್ಲಿನ ಆಡಳಿತವು ಶೇಕಡ 125.87ರಷ್ಟು ಸುಂಕ ವಿಧಿಸಿದೆ.
- ಈ ಸೌರ ಉತ್ಪನ್ನಗಳಿಗೆ ಭಾರತದ ಸರ್ಕಾರವು ‘ನ್ಯಾಯಸಮ್ಮತವಲ್ಲದ ಬಗೆಯಲ್ಲಿ ಸಬ್ಸಿಡಿಗಳನ್ನು ನೀಡುತ್ತಿರುವ ಕಾರಣಕ್ಕಾಗಿ ಹೆಚ್ಚುವರಿ ಸುಂಕ ವಿಧಿಸಲಾಗಿದೆ’ ಎಂದು ಅಮೆರಿಕ ಹೇಳಿದೆ. ಇಂಡೊನೇಷ್ಯಾ ಮತ್ತು ಲಾವೋಸ್‌ನಿಂದ ಅಮೆರಿಕ ಪ್ರವೇಶಿಸುವ ನಿರ್ದಿಷ್ಟ ಸೌರ ಉತ್ಪನ್ನಗಳ ಮೇಲೆಯೂ ಅಮೆರಿಕ ಸರ್ಕಾರ ಬೇರೆ ಬೇರೆ ಪ್ರಮಾಣದಲ್ಲಿ ಸುಂಕ ವಿಧಿಸಿದೆ.
- ಭಾರತದ ಸೌರ ಉತ್ಪನ್ನಗಳ ಮೇಲೆ ವಿಧಿಸಿರುವ ಸುಂಕವು ಈಗಾಗಲೇ ಜಾರಿಗೆ ಬಂದಿರುವ ಶೇ 10ರಷ್ಟು ಸುಂಕದ ಮೇಲೆ ಹೆಚ್ಚುವರಿಯಾಗಿ ಅನ್ವಯ ಆಗಲಿದೆ. ಅಮೆರಿಕ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ನೀಡಿರುವ ವಿವರದ ಪ್ರಕಾರ, 2022ರಲ್ಲಿ ಅಮೆರಿಕವು ಭಾರತದಿಂದ ಆಮದು ಮಾಡಿಕೊಂಡ ಸೌರ ಉತ್ಪನ್ನಗಳ ಮೊತ್ತವು 83.86 ಮಿಲಿಯನ್ ಡಾಲರ್ (ಇಂದಿನ ಅಂದಾಜು ₹762 ಕೋಟಿ) ಆಗಿತ್ತು. ಇದು, 2024ರಲ್ಲಿ 792 ಮಿಲಿಯನ್ ಡಾಲರ್‌ಗೆ (ಇಂದಿನ ಅಂದಾಜು ₹7.204 ಕೋಟಿ) ತಲುಪಿದೆ.
- ಭಾರತದಲ್ಲಿ ಉತ್ತೇಜನ: ಭಾರತದಲ್ಲಿ ನವೀಕರಿಸಬಹುದಾದ ಮೂಲಗಳಿಂದ ಇಂಧನ ಉತ್ಪಾದನೆ ಹೆಚ್ಚಿಸಲು, ಈ ಕ್ಷೇತ್ರದಲ್ಲಿ ಅಮದು ಅವಲಂಬನೆ ಕಡಿಮೆ ಮಾಡಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸೌರವಿದ್ಯುತ್ ಉತ್ಪಾದನಾ ಕ್ಷೇತ್ರಕ್ಕೆ ಕೂಡ ಈ ಕ್ರಮಗಳ ಅಡಿಯಲ್ಲಿ ಆದ್ಯತೆ ನೀಡಲಾಗಿದೆ.
- ಜಗತ್ತಿನಲ್ಲಿ ಸೌರವಿದ್ಯುತ್ ಉತ್ಪಾದನೆಯಲ್ಲಿ ಭಾರತವು ಈಗ ಮೂರನೆಯ ಸ್ಥಾನದಲ್ಲಿದೆ.
- ದೇಶದಲ್ಲಿ ಸೌರಫಲಕಗಳ, ಸೌರವಿದ್ಯುತ್ ಉತ್ಪಾದನೆಯಲ್ಲಿ ಬಳಕೆಯಾಗುವ ಇತರ ವಸ್ತುಗಳ ತಯಾರಿಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು, ಮೇಲಾವಣೆ ಸೌರವಿದ್ಯುತ್ ಯೋಜನೆ, ಪಿಎಂ-ಕುಸುಮ್ ಯೋಜನೆಯಲ್ಲಿ ಭಾರತದಲ್ಲಿಯೇ ತಯಾರಾದ ಉತ್ಪನ್ನಗಳ ಬಳಕೆಯನ್ನು ಕಡ್ಡಾಯ ಮಾಡಿದೆ.
- ಕೇಂದ್ರ ಸರ್ಕಾರವು 2022ರಲ್ಲಿ ಸೌರ ಕೋಶಗಳು, ಸೌರ ಮಾಡ್ಯೂಲ್‌ಗಳ ಮೇಲೆ ಮೂಲ ಸೀಮಾ ಸುಂಕವನ್ನು ವಿಧಿಸಿದೆ. ಆಮದು ತಗ್ಗಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ.
ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಲಿಂಗತ್ವ ಅಲ್ಪಸಂಖ್ಯಾತರ ಲೋಕದಲ್ಲಿ…

ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1:
ಮೆರಿಟೋಕ್ರಸಿಯಿಂದ ಕಾರ್ಯಕ್ಷಮತೆ ಆಧಾರಿತ ಆಡಳಿತದತ್ತ: ನಾಗರಿಕ ಸೇವಾ ಸುಧಾರಣೆಗಳ ಅಗತ್ಯತೆ ಮತ್ತು ಸವಾಲುಗಳ ಕುರಿತು ಚರ್ಚಿಸಿ.
Reference:
ಪ್ರಬಂಧ–2:
ಕರ್ನಾಟಕದಲ್ಲಿ ಲಿಂಗ ಅಲ್ಪಸಂಖ್ಯಾತರು ಮತ್ತು ದೇವದಾಸಿಯರ ಸಾಮಾಜಿಕ ಆರ್ಥಿಕ ಸಮೀಕ್ಷೆ: ಒಳಗೊಳ್ಳುವ ನೀತಿ ನಿರೂಪಣೆಯತ್ತ ಒಂದು ಹೆಜ್ಜೆ? ಚರ್ಚಿಸಿ.
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ರಫ್ತು: ಫೋನ್‌ಗೆ ಅಗ್ರ ಸ್ಥಾನ
ಸಂದರ್ಭ: ಭಾರತದಿಂದ ರಫ್ತಾಗುವ ಸರಕುಗಳ ವರ್ಗದಲ್ಲಿ ಈಗ ಸ್ಮಾರ್ಟ್‌ಫೋನ್‌ಗಳು ಮೊದಲ ಸ್ಥಾನಕ್ಕೆ ಬಂದಿವೆ.
- 2024-25 ಭಾರತದಲ್ಲಿ ಅಂದಾಜು ಸಾಲಿನಲ್ಲಿ 25.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ತಯಾರು ಮಾಡಲಾಗಿದೆ.
- 2025ರಲ್ಲಿ ದೇಶದಿ೦ದ ರಫ್ತಾಗಿರುವ ಎಲೆಕ್ಟ್ರಾನಿಕ್ಸ್ ಸರಕುಗಳ ಮೌಲ್ಯವು ₹4 ಲಕ್ಷ ಕೋಟಿಯನ್ನು ದಾಟಿದೆ. ದೇಶದಲ್ಲಿ ನಾಲ್ಕು ಸೆಮಿಕಂಡಕ್ಟರ್ ತಯಾರಿಕಾ ಘಟಕಗಳು ಈ ವರ್ಷ ಉತ್ಪಾದನೆ ಆರಂಭಿಸಿದ ನಂತರದಲ್ಲಿ ಈ ಮೌಲ್ಯವು ಇನ್ನಷ್ಟು ಹೆಚ್ಚಾಗಲಿದೆ ಎಂಬ ಅಂದಾಜು ಮಾಡಲಾಗಿದೆ.
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ವಿಶ್ವಸಂಸ್ಥೆ ನಿರ್ಣಯದ ಮೇಲಿನ ಮತದಾನದಿಂದ ದೂರವುಳಿದ ಭಾರತ
- ಭಾರತ ಸೇರಿದಂತೆ 51 ದೇಶಗಳು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ರಷ್ಯ ಮತ್ತು ಉಕ್ರೇನ್ ನಡುವೆ ‘ತಕ್ಷಣದ, ಸಂಪೂರ್ಣ ಮತ್ತು ಬೇಷರತ್ ಕದನ ವಿರಾಮ’ಕ್ಕೆ ಕರೆ ನೀಡಿರುವ ನಿರ್ಣಯದ ಮೇಲಿನ ಮತದಾನದಿಂದ ದೂರವುಳಿದಿವೆ.
- ಉಕ್ರೇನ್ ಮಂಡಿಸಿದ ನಿರ್ಣಯವನ್ನು 193 ಸದಸ್ಯರ ಅಧಿವೇಶನವು ಅಂಗೀಕರಿಸಿತು. ನಿರ್ಣಯದ ಪರವಾಗಿ 107 ಮತ್ತು ನಿರ್ಣಯದ ವಿರುದ್ಧವಾಗಿ 12 ದೇಶಗಳು ಮತ ಚಲಾಯಿಸಿದ್ದವು.
- ಭಾರತವಲ್ಲದೆ ನಿರ್ಣಯದಿಂದ ದೂರವುಳಿದ ಇತರ 50 ಸದಸ್ಯ ರಾಷ್ಟ್ರಗಳಲ್ಲಿ ಬಹರೈನ್,ಬಾಂಗ್ಲಾದೇಶ, ಬ್ರೆಝಿಲ್, ಚೀನಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಯುಎಇ ಮತ್ತು ಅಮೆರಿಕ ಸೇರಿವೆ.
- ನಿರ್ಣಯವು ಉಕ್ರೇನ್‌ನ ಸಾರ್ವಭೌಮತೆ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಅಖಂಡತೆಗೆ ಬೆಂಬಲವನ್ನು ಪುನರುಚ್ಚರಿಸಿದೆ. ಜೊತೆಗೆ ಯುದ್ಧಕೈದಿಗಳ ವಿನಿಮಯ ಹಾಗೂ ಬಲವಂತದಿಂದ ಸ್ಥಳಾಂತರಿಸಲ್ಪಟ್ಟ ಅಥವಾ ಗಡಿಪಾರುಗೊಂಡ ನಾಗರಿಕರು ಮತ್ತು ಮಕ್ಕಳನ್ನು ಮರಳಿಸುವಂತೆ ಒತ್ತಾಯಿಸಿದೆ.
- ನಾಗರಿಕರು, ನಾಗರಿಕ ಆಸ್ತಿಗಳು ಮತ್ತು ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ರಶ್ಯದಿಂದ ನಿರಂತರ ಮತ್ತು ತೀವ್ರ ದಾಳಿಗಳು ಹಾಗೂ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ಕುರಿತು ಕಳವಳವನ್ನೂ ನಿರ್ಣಯವು ವ್ಯಕ್ತಪಡಿಸಿದೆ.
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ಪತ್ರಿಕೆ-V: ಸಾಮಾನ್ಯ ಅಧ್ಯಯನ-4
ನೈತಿಕ ಪ್ರಕರಣ ಅಧ್ಯಯನ – ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಉಲ್ಲಂಘನೆ
ಹಿನ್ನಲೆ:
ಬೆಂಗಳೂರಿನ ಗಿಜಿಗುಡಿದ ವಾಣಿಜ್ಯ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡವು ಅಗ್ನಿ ಸುರಕ್ಷತಾ ನಿಯಮಗಳ ಗಂಭೀರ ಉಲ್ಲಂಘನೆಗಳನ್ನು ಬಹಿರಂಗಪಡಿಸಿದೆ. ಅನೇಕ ಅಂಗಡಿಗಳು ಮತ್ತು ಸಣ್ಣ ವ್ಯಾಪಾರಗಳನ್ನು ಹೊಂದಿರುವ ಕಟ್ಟಡದಲ್ಲಿ ತುರ್ತು ನಿರ್ಗಮನ ದ್ವಾರಗಳು, ಕಾರ್ಯನಿರ್ವಹಣೆಯಲ್ಲಿರುವ ಅಗ್ನಿ ನಂದಕಗಳು, ಸರಿಯಾದ ವಿದ್ಯುತ್ ಸಂಪರ್ಕ ವ್ಯವಸ್ಥೆ ಇತ್ಯಾದಿ ಮೂಲಭೂತ ಸುರಕ್ಷತಾ ಸೌಲಭ್ಯಗಳು ಅಪೂರ್ಣವಾಗಿದ್ದವು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸದಿದ್ದರೂ, ಸಾರ್ವಜನಿಕ ಸುರಕ್ಷತೆ, ಆಡಳಿತಾತ್ಮಕ ಜವಾಬ್ದಾರಿ ಮತ್ತು ನಿಯಂತ್ರಣದ ಪರಿಣಾಮಕಾರಿತ್ವದ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಟ್ಟಡಕ್ಕೆ ಹಿಂದೆ ಅಗ್ನಿಶಾಮಕ ಇಲಾಖೆಯಿಂದ ನೋಟಿಸ್‌ಗಳು ನೀಡಲಾಗಿದ್ದರೂ, ತಿದ್ದುಪಡಿ ಕ್ರಮಗಳು ಪೂರ್ಣವಾಗಿ ಜಾರಿಯಾಗಿರಲಿಲ್ಲ. ಮೇಲ್ವಿಚಾರಣೆ ಮತ್ತು ಅನುಷ್ಠಾನದಲ್ಲಿ ನಿರ್ಲಕ್ಷ್ಯವೋ, ಅಥವಾ ಅಕ್ರಮಗಳೇ ನಡೆದಿವೆಯೋ ಎಂಬ ಅನುಮಾನವೂ ವ್ಯಕ್ತವಾಗಿದೆ.
ನೀವು ಜಿಲ್ಲೆಯ ಹಿರಿಯ ಆಡಳಿತಾಧಿಕಾರಿಯಾಗಿ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಹೊಂದಿದ್ದೀರಿ.
ಪ್ರಮುಖ ನೈತಿಕ ಪ್ರಶ್ನೆಗಳು:
- ಸಾರ್ವಜನಿಕ ಸುರಕ್ಷತೆ vs ವ್ಯಾಪಾರ ಹಿತಾಸಕ್ತಿ
- ನಿಯಂತ್ರಣ ಜವಾಬ್ದಾರಿ vs ಆಡಳಿತಾತ್ಮಕ ನಿರ್ಲಕ್ಷ್ಯ
- ಅಕ್ರಮ/ಭ್ರಷ್ಟಾಚಾರ vs ಸತ್ಯನಿಷ್ಠೆ
- ನಗರ ಅಭಿವೃದ್ಧಿ vs ಸುರಕ್ಷತಾ ಮಾನದಂಡಗಳು
- ಸಂಸ್ಥೆಯ ಪ್ರತಿಷ್ಠೆ vs ಪೀಡಿತರ ನ್ಯಾಯ
ಪಾಲುದಾರರು
ಅಂಗಡಿ ಮಾಲೀಕರು ಮತ್ತು ವ್ಯಾಪಾರಿಗಳು
ಉದ್ಯೋಗಿಗಳು ಮತ್ತು ಗ್ರಾಹಕರು
ಸ್ಥಳೀಯ ನಿವಾಸಿಗಳು
ಅಗ್ನಿಶಾಮಕ ಇಲಾಖೆ
ಮಹಾನಗರ ಪಾಲಿಕೆ
ಜಿಲ್ಲಾಡಳಿತ
ಸಾಮಾನ್ಯ ಸಾರ್ವಜನಿಕರು
ನಿಮ್ಮ ಮುಂದಿರುವ ಆಯ್ಕೆಗಳು
ಆಯ್ಕೆ 1:
ಕಟ್ಟಡವನ್ನು ತಕ್ಷಣ ಸೀಲ್ ಮಾಡಿ, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದು.
ಆಯ್ಕೆ 2:
ಹೊಸ ನೋಟಿಸ್ ನೀಡಿ, ದಂಡ ವಿಧಿಸಿ, ನಿಗದಿತ ಅವಧಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡುವುದು.
ಆಯ್ಕೆ 3:
ಸ್ವತಂತ್ರ ತನಿಖೆ ಆದೇಶಿಸಿ, ಜವಾಬ್ದಾರಿಯನ್ನು ನಿಗದಿಪಡಿಸಿ, ನಗರಮಟ್ಟದಲ್ಲಿ ಸಮಗ್ರ ಸುರಕ್ಷತಾ ಪರಿಶೀಲನೆ ಆರಂಭಿಸುವುದು.
Sources: Prajavani, Vishwavani