ಜೆ.ಎಸ್. ಮಿಲ್ ವರ್ತನಾ ಉಪಯುಕ್ತತೆ, ಚಾರ್ವಾಕ ಮತ್ತು ಕರ್ಮಯೋಗಗಳಿಗೆ ಸಂಬಂಧಿಸಿದಂತೆ ಮಾನವ ವರ್ತನೆಯ ಸಾರ, ನಿರ್ಧಾರಕಗಳು ಮತ್ತು ಪರಿಣಾಮಗಳನ್ನು ವಿಮರ್ಶಾತ್ಮಕವಾಗಿ ಪರಿಗಣಿಸಿ.
Critically consider the essence, determinants and consequences of human action with reference to J. S. Mill act utilitarianism Charvaka and Karmayoga.
ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ನೀತಿ ಶಾಸ್ತ್ರೀಯ ಇಕ್ಕಟ್ಟುಗಳ ಬಗ್ಗೆ ಟಿಪ್ಪಣಿಯನ್ನು ಬರೆಯಿರಿ.
Write a note about ethical dilemmas in government and private institutions.
ಅಂತರರಾಷ್ಟ್ರೀಯ ಸಂಬಂಧಗಳಲ್ಲಿನ ನೀತಿ ಶಾಸ್ತ್ರೀಯ ವಿವಾದಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.
Critically analyze the ethical issues in International Relations.
ಮಾಹಿತಿ ಹಕ್ಕು ಕಾಯ್ದೆಯ ಧ್ಯೇಯವೇನು? ಈ ಕಾಯ್ದೆಯ ಉಪಬಂಧಗಳ ಅಡಿಯಲ್ಲಿರುವ ನೈತಿಕತೆಯನ್ನು ಮೌಲ್ಯಮಾಪಿಸಿ.
What is the objective of the Right to Information Act? Evaluate the ethics underlying the provisions of this Act.
ವಿಶೇಷವಾಗಿ ಪತಂಜಲಿಯವರ ಪ್ರಕಾರ ಸದ್ಗುಣಗಳ ವರ್ಗೀಕರಣ ಆಧರಿಸಿ ಮಾನವನ ಮೌಲ್ಯಗಳು ಮತ್ತು ಅವುಗಳ ವಿಧಗಳನ್ನು ಚರ್ಚಿಸಿ.
Elucidate the human values and their types with special reference to Patanjali’s classification of virtues.
ನಿಷ್ಠೆ/ಪ್ರಾಮಾಣಿಕತೆಯನ್ನು ವಿವರಿಸಿ, ನಿಷ್ಠೆ/ಪ್ರಾಮಾಣಿಕತೆಯ ವಿವಿಧ ಬಗೆಗಳು ಮತ್ತು ಮಹತ್ವವನ್ನು ವಿವರಿಸಿ. ಒಬ್ಬ ವ್ಯಕ್ತಿಯು ಹೇಗೆ ವೈಯಕ್ತಿಕ ನಿಷ್ಠೆ/ಪ್ರಾಮಾಣಿಕತೆಯನ್ನು ಸಾಧಿಸಬಹುದು? ವಿವರಿಸಿ.
Explain integrity. Describe different types and significance of integrity. Describe how an individual can achieve personal integrity.
ತಾದಾತ್ಮ, ಸಹಾನುಭೂತಿ ಮತ್ತು ಅನುಕಂಪಗಳ ನಡುವಣ ವ್ಯತ್ಯಾಸವೇನು? ಕೆಲಸದಲ್ಲಿನ ತಾದಾತ್ಮಕತೆಯನ್ನು ವಿವರಿಸಿ.
What is the difference between empathy, sympathy and compassion? Describe empathetic behaviour at work.
ಭಾರತೀಯ ಸಂದರ್ಭದಲ್ಲಿ ಸಹಿಷ್ಣುತೆ ಮತ್ತು ಅನುಕಂಪಗಳನ್ನು ವಿವರಿಸಿ. ಸಾರ್ವಜನಿಕ ಆಡಳಿತದಲ್ಲಿ ನಿರ್ಣಯ ಕೈಗೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಸಂಬಂಧಿತ ಪ್ರಾಧಿಕಾರವು ಸಹಿಷ್ಣುತೆ ಮತ್ತು ಸಹಾನುಭೂತಿಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು?
Explain tolerance and compassion in Indian context. How effectively can tolerance and compassion be used by the respective authority in the process of decision making in public administration?
ಸಾರ್ವಜನಿಕ ಸೇವೆಗೆ ಉದ್ಯೋಗಿಯ ಅರ್ಪಣಾಭಾವವನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿ.
Explain the factors which determine an employee’s dedication to public service.
ಸಾರ್ವಜನಿಕ ಸೇವೆಯ ಸಂದರ್ಭದಲ್ಲಿ ನಿಷ್ಪಕ್ಷಪಾತತೆ, ಪಕ್ಷಾತೀತತೆ (ತಟಸ್ಥತೆ) ಮತ್ತು ವಸ್ತುನಿಷ್ಠತೆಗಳೆಂದರೇನು? ವಿವರಿಸಿ. ಒಬ್ಬ ನಾಗರಿಕ ಸೇವೆಯ ನೌಕರನಿಂದ ದುರ್ಬಲ ವರ್ಗದ ಉನ್ನತೀಕರಣಕ್ಕಾಗಿ ನಿಷ್ಪಕ್ಷಪಾತತೆ ಮತ್ತು ವಸ್ತುನಿಷ್ಠತೆ ಗಳನ್ನು ಹೇಗೆ ಬಳಸಬಹುದು?
Explain what is impartiality, non partisanship and objectivity in context to public service. How can impartiality and objectivity can be practiced by a civil servant for the upliftment of weaker section?
ನಾಗರಿಕ ಸೇವೆಗಳ ಮೂಲಭೂತ ಮೌಲ್ಯಗಳನ್ನು ವಿವರಿಸಿ.
Explain fundamental values of civil services.
ಸಾಮಾಜಿಕ ಪ್ರಭಾವವು, ಸಂವಹನದ ಮೂಲಭೂತ ಕಾರ್ಯವಾಗಿದೆ. ವಿವರಿಸಿ.
Explain social influence as fundamental feature of communication.
ಮನವರಿಕೆಗೆ (ಮನವೊಪ್ಪಿಸುವಿಕೆಗೆ) ಗ್ರಹಿಕಾ ವಿಧಾನಗಳಾವುವು?
What are the cognitive approaches to persuasion?
ಅಸಾಮಂಜಸ್ಯ ಮತ್ತು ಕೊರತೆಯು ಅಧಿಕ ಪರಿಣಾಮಕ್ಕೆ ದಾರಿ ಮಾಡಿಕೊಡುತ್ತದೆ. ಇವುಗಳ ಬಗ್ಗೆ ವಿವರಿಸಿ.
Explain dissonance and the less-leads-to-more effect.
ಭಾವನಾತ್ಮಕ ಬೌದ್ಧಿಕತೆ ಎಂದರೇನು? ಅದರ ಪ್ರಧಾನ ಘಟಕಗಳನ್ನು ವಿವರಿಸಿ.
What is emotional intelligence? Explain its major components.