Sat. Feb 7th, 2026

Current Affairs

Treat inclusion of disabled persons as an advantage: SC

Context: The Supreme Court urged corporates and investors to consider the inclusion of persons with disabilities not just as a mere “compliance issue” but also as a “strategic advantage” that would enhance their business performance, resilience, and social impact.

  • The judgment, co-authored by a Bench of Justices J.B. Pardiwala and K.V. Viswanathan, is the second in two months with which the Supreme Court is stepping in to highlight that business corporations not only do lead a profit-only existence but also have a constitutional duty to contribute to the society and environment.
  • The Bench exercised the court’s extraordinary constitutional powers under Article 142 to direct Coal India Limited to give Sujata Bora, who has multiple disabilities, a supernumerary post with a separate desk and specially-designed computer at its North Eastern Coalfields office in Assam.

Source: The Hindu

SC differs on sanction to try public servants

Context: The Supreme Court delivered a split verdict on the legality of a provision in an anti-corruption law which mandates prior sanction before prosecuting public servants.

  • Justice B.V. Nagarathna concluded that Section 17A of the Prevention of Corruption Act, 1988, was plainly unconstitutional, while Justice K.V. Viswanathan, the puisne judge on the Division Bench, said that sanction must be decided by an independent authority such as the Lok Pal or the Lok Ayukta.

Policy paralysis

  • Justice Viswanathan said the mere possibility of abuse of an otherwise valid provision cannot be a ground for declaring it unconstitutional. He compared striking down Section 17A to “throwing the baby out with the bathwater”.
  • “If honest public servants are not given a basic assurance that decisions taken by them will not be subjected to frivolous complaints, it is the nation that will suffer. Public servants will resort to a play-it-safe syndrome, and that will result in policy paralysis. The panacea of striking down will turn out to be worse than the disease,” Justice Viswanathan wrote in his opinion.
  • He directed that an independent inquiry of the facts of a corruption complaint would be ideal before a grant of sanction.
  • The case will now be referred to the Chief Justice of India to be placed before a Bench of three judges.
  • “A fine balance has to be maintained between the need to protect a public servant against mala fide prosecution on the one hand and the object of upholding the probity in public life by prosecuting the public servant against whom prima facie material in support of allegation of corruption exists, on the other,” Justice Viswanathan observed in his opinion.
  • He said the Lokpal had the authority to conduct an inquiry into even an allegation of corruption made against the Prime Minister of the country.
  • “If Section 17A is invalidated on the ground that prior approval should not exist at all, the immediate consequence would be that any complaint alleging corruption in official decision-making could straightaway result in a police inquiry or investigation,” Justice Viswanthan reasoned.

Source: The Hindu

ಒಲಿ೦ಪಿಕ್ ಅಕಾಡೆಮಿಗೆ ಮರುಜೀವ: ಅಹಮದಾಬಾದಿನಲ್ಲಿರುವ ರಾಷ್ಟ್ರೀಯ ಒಲಿಂಪಿಕ್ ಅಕಾಡೆಮಿ

ಸಂದರ್ಭ: ಅಕಾಡೆಮಿಯನ್ನು (ಎನ್ಒಎ) ‘ವಿಧ್ಯುಕ್ತವಾಗಿ ಕ್ರಿಯಾಶೀಲಗೊಳಿಸಲಾಗಿದೆ ಎಂದು ಭಾರತ ಒಲಿಂಪಿಕ್ ಸಮಿತಿ (ಐಒಎ) ಘೋಷಿಸಿದೆ. ಭಾರತದಲ್ಲಿ ಒಲಿಂಪಿಕ್ ಅಂದೋಲನವನ್ನು ಬಲಪಡಿಸುವ ನಿಟ್ಟಿನಲ್ಲಿ ಇದನ್ನು ದೊಡ್ಡಹೆಜ್ಜೆ.
ಈ ಅಕಾಡೆಮಿಗೆ ದಿಗ್ಗಜ ಅಸ್ಟ್ರೀಟ್ ಹಾಗೂ ಐಓಎ ಹಾಲಿ ಅಧ್ಯಕ್ಷೆ ಪಿ.ಟಿ.ಉಷಾ ಅವರೇ ಮುಖ್ಯಸ್ಥರಾಗಿರುತ್ತಾರೆ.

• ರಾಷ್ಟ್ರೀಯ ಒಲಿಂಪಿಕ್ ಶಿಕ್ಷಣ ಮತ್ತು ಅಭಿವೃದ್ಧಿ ಕಾರ್ಯಕ್ರಮವನ್ನೂ (ಎನ್ಒಇಡಿಪಿ) ಆರಂಭಿಸಲಾಗುತ್ತಿದೆ ಎಂದೂ ಐಒಎ ತಿಳಿಸಿದೆ.
• ‘ರಾಷ್ಟ್ರೀಯ ಒಲಿಂಪಿಕ್ ಅಕಾಡೆಮಿಗೆ ಪಿ.ಟಿ.ಉಷಾ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಐಒಎ ಉಪಾಧ್ಯಕ್ಷ ಹಾಗೂ ಒಲಿಂಪಿಕ್ ಪದಕ ವಿಜೇತ ಗಗನ್ ನಾರಂಗ್ ಅವರನ್ನು ನಿರ್ದೇಶಕನ್ನರಾಗಿ ಮಾಡಲು ಐಒಎ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು’.
• ಅಹಮದಾಬಾದಿನಲ್ಲಿ ಜನವರಿ 8ರಂದು ನಡೆದ ಐಒಎ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜನವರಿ 9ರಂದು ಐಒಎ ವಾರ್ಷಿಕ ಮಹಾಸಭೆಯಲ್ಲಿ ಇದನ್ನು ಅನುಮೋದಿಸಲಾಯಿತು.

ಹಿನ್ನೆಲೆ
NOA 2018ರಿಂದ ಅಸ್ತಿತ್ವದಲ್ಲಿದ್ದರೂ, COVID-19 ಸೇರಿದಂತೆ ಹಲವು ಕಾರಣಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.

ಈಗ IOA ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಅಹಮದಾಬಾದ್‌ನಲ್ಲಿ ಅಧಿಕೃತವಾಗಿ ಪುನರ್‌ಸಕ್ರಿಯಗೊಳಿಸಲಾಗಿದೆ.

ಇದು Bharat Centre of Olympic Research and Education (BCROE), ಗಾಂಧಿನಗರದ Rashtriya Raksha Universityಯಲ್ಲಿ ನಡೆದ ಸಂಶೋಧನಾ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದೆ.

ಗುಜರಾತ್ನಲ್ಲಿ ಭೇಟಿಯಾದ ಮೋದಿ-ಫ್ರೆಡರಿಕ್ ಮೆರ್ಜ್ : 19 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ: ‘ಭಾರತ-ಜರ್ಮನಿ ನಡುವಿನ ಸಂಬಂಧಕ್ಕೆ ನವ ಶಕ್ತಿ’

• ಗುಜರಾತ್ನ ಗಾಂಧಿನಗರದಲ್ಲಿರುವ ಮಹಾತ್ಮ ಮಂದಿರದಲ್ಲಿ ಭಾರತ ಮತ್ತು ಜರ್ಮನಿ ನಡುವೆ ಮಹತ್ವದ ದ್ವಿಪಕ್ಷೀಯ ಮಾತುಕತೆಗಳು ನಡೆದವು.
• ‘ಎರಡೂ ರಾಷ್ಟ್ರಗಳು ಇತ್ತೀಚೆಗಷ್ಟೇ ಪಾಲುದಾರಿಕೆಯ 25ನೇ ವರ್ಷ ಹಾಗೂ 75 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಪೂರೈಸಿವೆ. ಇಂತಹ ಮಹತ್ವದ ಘಟ್ಟದಲ್ಲಿ ಜರ್ಮನಿಯ ಚಾನ್ಸಲರ್ ಫ್ರೆಡರಿಕ್ ಮೆರ್ಜ್ ಅವರು ಭೇಟಿ ನೀಡಿದ್ದಾರೆ’.
• ‘ನಮ್ಮ ದ್ವಿಪಕ್ಷೀಯ ವ್ಯಾಪಾರ 50 ಶತಕೋಟಿ ಜರ್ಮನಿಯ ಡಾಲರ್ಗಳನ್ನು ದಾಟಿ ಸಾರ್ವಕಾಲಿಕ ಎತ್ತರಕ್ಕೇರಿದೆ. 2,000 ಅಧಿಕ ಕಂಪನಿಗಳು ಭಾರತದಲ್ಲಿ ಕಾರ್ಯಾಚರಿಸುತ್ತಿವೆ.
• ಆರ್ಥಿಕತೆ, ರಕ್ಷಣಾ ಕ್ಷೇತ್ರ. ಔಷಧ ವಲಯ, ಕಾರ್ಯತಂತ್ರಗಳ ಪಾಲುದಾರಿಕೆ, ಶಿಕ್ಷಣ, ಕಾನೂನುಬದ್ದ ವಲಸೆ ಸೇರಿದಂತೆ 19 ಒಪ್ಪಂದಗಳಿಗೆ ಭಾರತ ಮತ್ತು ಜರ್ಮನಿ ಸಹಿ ಹಾಕಿವೆ.
• ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ಮುಕ್ತ ಸಾರಿಗೆ, ಇಂಡೊ-ಪೆಸಿಫಿಕ್ ಕುರಿತ ಮಾತುಕತೆಗೆ ವೇದಿಕೆ ರೂಪಿಸುವುದು, ನವೀಕರಿಸಬಹುದಾದ ಇಂಧನ ಕ್ಷೇತ್ರದ ಹೂಡಿಕೆ (1.24 ಶತಕೋಟಿ ಯುರೊ ಮೊತ್ತದ ಪಾಲುದಾರಿಕೆಯ ಕಾರ್ಯಕ್ರಮ), ಗ್ರೀನ್ ಹೈಡೋಜನ್ ಪಾಲುದಾರಿಕೆ, ಪಿಎಂ ಇ ಬಸ್ ಸೇವೆ. ಅಹಮದಾಬಾದ್ನಲ್ಲಿ ಜರ್ಮನಿಯ ಕಾನ್ಸುಲ್ ಸ್ಥಾಪನೆ ವಿಚಾರಗಳನ್ನೂ ಘೋಷಿಸಲಾಯಿತು.

ಶಕ್ಸ್ಗಾಮ್ ಕಣಿವೆ

ಸಂದರ್ಭ: ಶಕ್ಗಾಮ್ ಕಣಿವೆಯು ತನ್ನ ಭೂಭಾಗವಾಗಿದೆ ಎಂದು ಚೀನಾ ಪುನರುಚ್ಚರಿಸಿದ್ದು, ಅಲ್ಲಿ ಕೈಗೊಂಡಿರುವ ಮೂಲಸೌಕರ್ಯ ಯೋಜನೆಗಳು ಆಕ್ಷೇಪಕ್ಕೆ ಹೊರತಾಗಿವೆ ಎಂದು ಪ್ರತಿಪಾದಿಸಿದೆ
• ಶಕ್ಸ್ಗಾಮ್ ಕಣಿವೆಯಲ್ಲಿ ಚೀನಾ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು.
• ಇದು ಭಾರತದ ಪ್ರದೇಶವಾಗಿರುವುದರಿಂದ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವ ಹಕ್ಕುಗಳನ್ನು ಕಾಯ್ದಿರಿಸಿಕೊಂಡಿದೆ ಎಂದು ಹೇಳಿತ್ತು, ‘ಶಕ್ಸ್ ಗಾಮ್ ಕಣಿವೆ ಭಾರತದ ಭೂಪ್ರದೇಶ, 1963ರಲ್ಲಿ ಸಹಿ ಹಾಕಿದ ಚೀನಾ-ಪಾಕಿಸ್ತಾನ ಗಡಿ ಒಪ್ಪಂದವೆಂದು ಕರೆಯಲಾಗುವ ಒಪ್ಪಂದವನ್ನು ನಾವು ಎಂದಿಗೂ ಒಪ್ಪಿಲ್ಲ ಮತ್ತು ಮಾನ್ಯತೆ ನೀಡಿಲ್ಲ. ಈ ಒಪ್ಪಂದವು ಕಾನೂನುಬಾಹಿರ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದರು.
• ಹೇಳಿಕೆಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್, ‘ನೀವು ಹೇಳಿದ ಪ್ರದೇಶವು ಚೀನಾದ ಪ್ರದೇಶದ ಭಾಗವಾಗಿದೆ. ನಮ್ಮ ಭೂಪ್ರದೇಶದಲ್ಲಿ ಮೂಲಸೌಕರ್ಯ ಚಟುವಟಿಕೆಗಳನ್ನು ಕೈಗೊಂಡಿದೆ.ಚೀನಾ ಮತ್ತು ಪಾಕಿಸ್ತಾನ ಗಡಿ ಒಪ್ಪಂದಕ್ಕೆ ಸಹಿ ಹಾಕಿವೆ’ ಎಂದಿದ್ದಾರೆ.

ಶಕ್ಗಾಮ್ ಕಣಿವೆ (Shaksgam Valley) ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದ್ದು, ಭಾರತವು ತನ್ನ ಭೂಭಾಗವೆಂದು ಹೇಳುತ್ತದೆ. ಆದರೆ 1963ರಲ್ಲಿ ಪಾಕಿಸ್ತಾನವು ಈ ಪ್ರದೇಶವನ್ನು ಅಕ್ರಮವಾಗಿ ಚೀನಾಗೆ ಒಪ್ಪಿಸಿದ ಕಾರಣದಿಂದ, ಇದು ಭಾರತ–ಚೀನಾ–ಪಾಕಿಸ್ತಾನ ನಡುವಿನ ಗಡಿಚರ್ಚೆಯ ಪ್ರಮುಖ ಕೇಂದ್ರವಾಗಿದೆ.

ಅಂಶ (Aspect)ವಿವರ (Details)
ಸ್ಥಳ (Location)ಕರಾಕೋರಂ ಪರ್ವತಶ್ರೇಣಿಯಲ್ಲಿ, ಸಿಯಾಚಿನ್ ಹಿಮನದಿಯ ಉತ್ತರ ಭಾಗದಲ್ಲಿದೆ. ಇದು ಲಡಾಖ್‌ನ ಗಡಿಯ ಸಮೀಪದಲ್ಲಿದೆ.
ವಿಸ್ತೀರ್ಣ (Area)ಸುಮಾರು 5,180 ಚದರ ಕಿ.ಮೀ. (ಸುಮಾರು 2,000 ಚದರ ಮೈಲಿ).
ಇತರ ಹೆಸರುಗಳುಟ್ರಾನ್ಸ್-ಕರಾಕೋರಂ ಟ್ರಾಕ್ಟ್ (Trans-Karakoram Tract).
ರಾಜಕೀಯ ಸ್ಥಿತಿಇದು ಮೂಲತಃ ಜಮ್ಮು ಮತ್ತು ಕಾಶ್ಮೀರದ (ಈಗ ಲಡಾಖ್ ಕೇಂದ್ರಾಡಳಿತ ಪ್ರದೇಶ) ಭಾಗ. ಪ್ರಸ್ತುತ ಚೀನಾದ ಆಡಳಿತದಲ್ಲಿದೆ.
1963ರ ಒಪ್ಪಂದಪಾಕಿಸ್ತಾನವು ಭಾರತದ ಭೂಭಾಗವನ್ನು ಚೀನಾದೊಂದಿಗೆ ಗಡಿ ವಿವಾದ ಬಗೆಹರಿಸಿಕೊಳ್ಳಲು ಅಕ್ರಮವಾಗಿ “Sino-Pakistan Boundary Agreement” ಮೂಲಕ ಹಸ್ತಾಂತರಿಸಿತು.
ಭಾರತದ ನಿಲುವುಈ ಪ್ರದೇಶವು ಭಾರತದ ಅವಿಭಾಜ್ಯ ಅಂಗ. 1963ರ ಒಪ್ಪಂದವು ಅಕ್ರಮ ಮತ್ತು ಅಮಾನ್ಯ ಎಂದು ಭಾರತ ನಿರಂತರವಾಗಿ ಪ್ರತಿಭಟಿಸುತ್ತಿದೆ.
ಚೀನಾದ ನಿಲುವುಇದು ತನ್ನ ಸಾರ್ವಭೌಮ ಭೂಭಾಗವೆಂದು ಪ್ರತಿಪಾದಿಸುತ್ತದೆ. ಇತ್ತೀಚೆಗೆ (ಜೂನ್ 2025/ಜನವರಿ 2026) ಚೀನಾ ತನ್ನ ನಿರ್ಮಾಣ ಕಾರ್ಯಗಳು “ಕ್ಷೇಪಕ್ಕೆ ಹೊರತಾಗಿವೆ” ಎಂದು ಹೇಳಿದೆ.
ಸೇನಾ ಕಾರ್ಯತಂತ್ರದ ಮಹತ್ವ– ಸಿಯಾಚಿನ್ ಹಿಮನದಿಯ ಮೇಲೆ ಕಣ್ಗಾವಲು ಇಡಲು ಚೀನಾಗೆ ಸಹಕಾರಿ.
– ಕಾರಾಕೋರಂ ಪಾಸ್‌ಗೆ ಹತ್ತಿರದಲ್ಲಿದೆ.
– ಪಾಕಿಸ್ತಾನ ಮತ್ತು ಚೀನಾ ನಡುವಿನ ಭೂ-ಸಂಪರ್ಕಕ್ಕೆ (CPEC) ದಾರಿ ಮಾಡಿಕೊಡುತ್ತದೆ.
ಇತ್ತೀಚಿನ ಬೆಳವಣಿಗೆಗಳು (2025-26)ಚೀನಾ ಇಲ್ಲಿ ಸುಮಾರು 75 ಕಿ.ಮೀ ಉದ್ದದ ಸರ್ವಋತು ರಸ್ತೆಯನ್ನು ನಿರ್ಮಿಸುತ್ತಿದೆ. ಇದನ್ನು ಭಾರತವು ತೀವ್ರವಾಗಿ ವಿರೋಧಿಸಿದೆ ಮತ್ತು ಭಾರತೀಯ ಸೇನಾ ಮುಖ್ಯಸ್ಥರು (Gen Upendra Dwivedi) ಇದನ್ನು ಕಾನೂನುಬಾಹಿರ ಎಂದು ಖಂಡಿಸಿದ್ದಾರೆ.

ಶಕ್ಗಾಮ್ ಕಣಿವೆಯ ಪ್ರಮುಖ ಮುಖ್ಯಾಂಶಗಳು

Shaksham Valley


ಭೌಗೋಳಿಕ ಮಹತ್ವ: ಇದು ವಿಶ್ವದ ಎರಡನೇ ಅತಿ ಎತ್ತರದ ಶಿಖರವಾದ K2 ನ ಉತ್ತರಕ್ಕೆ ನೆಲೆಸಿದೆ. ಇದು ಅತ್ಯಂತ ದುರ್ಗಮವಾದ ಪರ್ವತ ಪ್ರದೇಶವಾಗಿದ್ದರೂ, ಯುದ್ಧತಂತ್ರದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.

ಐತಿಹಾಸಿಕ ಹಿನ್ನೆಲೆ: 1963 ಕ್ಕಿಂತ ಮೊದಲು ಈ ಪ್ರದೇಶವು ಪಾಕಿಸ್ತಾನದ ಆಕ್ರಮಿತ ಕಾಶ್ಮೀರದ (PoK) ಭಾಗವಾಗಿತ್ತು. ಆದರೆ ಚೀನಾದೊಂದಿಗೆ ಗಡಿ ವಿವಾದ ಬಗೆಹರಿಸಿಕೊಳ್ಳಲು ಪಾಕಿಸ್ತಾನವು ಇದನ್ನು ಚೀನಾಗೆ ಬಿಟ್ಟುಕೊಟ್ಟಿತು. ಇದನ್ನು ಭಾರತವು “ಸಿನೋ-ಪಾಕ್ ಗಡಿ ಒಪ್ಪಂದ, 1963” ಎಂದು ಕರೆಯುತ್ತದೆ ಮತ್ತು ಇದನ್ನು ಕಾನೂನುಬಾಹಿರವೆಂದು ಪರಿಗಣಿಸುತ್ತದೆ.

ಭಾರತಕ್ಕೆ ಇದು ಏಕೆ ಮುಖ್ಯ?
ಶಕ್ಗಾಮ್ ಕಣಿವೆಯಲ್ಲಿ ಚೀನಾ ರಸ್ತೆಗಳನ್ನು ನಿರ್ಮಿಸುವುದರಿಂದ, ಯುದ್ಧದ ಸಮಯದಲ್ಲಿ ಪಾಕಿಸ್ತಾನ ಮತ್ತು ಚೀನಾ ಸೇನೆಗಳು ಒಂದಾಗಿ ಭಾರತದ ಮೇಲೆ “ಎರಡು ಮುಖಗಳ ಯುದ್ಧ” (Two-front war) ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ. ಇದು ಸಿಯಾಚಿನ್‌ನಲ್ಲಿರುವ ಭಾರತೀಯ ಸೈನಿಕರ ಭದ್ರತೆಗೆ ನೇರ ಸಂಚಕಾರ ತರಬಹುದು.

ಚಿಲ್ಲರೆ ಹಣದುಬ್ಬರ

ಸಂದರ್ಭ: ಆಹಾರ ಪದಾರ್ಥಗಳ ಬೆಲೆಯಲ್ಲಿನ ಹೆಚ್ಚಳದಿಂದ ಚಿಲ್ಲರೆ ಹಣದುಬ್ಬರವು ಡಿಸೆಂಬರ್ ತಿಂಗಳಿನಲ್ಲಿ ಶೇ 1.33ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ತಿಳಿಸಿದೆ. ಇದು ಮೂರು ತಿಂಗಳ ಗರಿಷ್ಠ ಮಟ್ಟದ ಏರಿಕೆ ಆಗಿದೆ.
• ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಅಧಾರಿತ ಚಿಲ್ಲರೆ ಹಣದುಬ್ಬರವು ನವೆಂಬರ್ನಲ್ಲಿ ಶೇ 0.71ರಷ್ಟಿತ್ತು. 2024ರ ಡಿಸೆಂಬರ್ನಲ್ಲಿ ಶೇ 5.22ರಷ್ಟು ದಾಖಲಾಗಿತ್ತು.
• ತರಕಾರಿಗಳು, ಮೊಟ್ಟೆ, ಮಾಂಸ ಮತ್ತು ಮೀನು, ಮಸಾಲೆ ಪದಾರ್ಥಗಳು, ಧಾನ್ಯಗಳ ಬೆಲೆಯಲ್ಲಿನ ಹೆಚ್ಚಳವೇ ಹಣದುಬ್ಬರ ಏರಿಕೆಗೆ ಕಾರಣ ಎಂದು ತಿಳಿಸಿದೆ. ನಗರ ಪ್ರದೇಶದಲ್ಲಿ ಹಣದುಬ್ಬರ ಪ್ರಮಾಣ ಶೇ 2.03ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.0.76ರಷ್ಟಿದೆ.
ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 4ರ ಹಂತದಲ್ಲಿ ಇರಬೇಕು. ಅದು ಶೇ 2ಕ್ಕಿಂತ ಕಡಿಮೆ ಆಗಬಾರದು ಎಂಬುದು ಆರ್ಬಿಐಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಗುರಿ. ಡಿಸೆಂಬರ್ ತಿಂಗಳಿನಲ್ಲೂ ಇದೇ ಮಟ್ಟದಲ್ಲಿ ಚಿಲ್ಲರೆ ಹಣದುಬ್ಬರ ಇದೆ.
ಕೇರಳದಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಿನ ಪ್ರಮಾಣದಲ್ಲಿದ್ದು, ಶೇ9.19ರಷ್ಟಿದೆ. ಕರ್ನಾಟಕದಲ್ಲಿ ಶೇ 2.99, ಅಂಧ್ರಪ್ರದೇಶ ಶೇ 2.71, ತಮಿಳುನಾಡು ಶೇ 2.67 ಮತ್ತು ಜಮ್ಮು ಕಾಶ್ಮೀರದಲ್ಲಿ ಶೇ 2.26ರಷ್ಟು ದಾಖಲಾಗಿದೆ ಎಂದು ತಿಳಿಸಿದೆ.

ಅಂಶ (Aspect)ವಿವರ (Details)
ಮಾಪನ ವಿಧಾನಗ್ರಾಹಕ ಬೆಲೆ ಸೂಚ್ಯಂಕ (CPI – Consumer Price Index)
ಡಿಸೆಂಬರ್ 2025 ದರ1.3% (ನವೆಂಬರ್‌ನ 0.7% ಕ್ಕಿಂತ ಸ್ವಲ್ಪ ಏರಿಕೆ).
ಹಿಂದಿನ ವರ್ಷ (2024)5.2% (ಗಣನೀಯ ಇಳಿಕೆ ಕಂಡುಬಂದಿದೆ).
ಆಹಾರ ಹಣದುಬ್ಬರ-2.7% (ಆಹಾರ ಪದಾರ್ಥಗಳ ಬೆಲೆಯಲ್ಲಿ ಕುಸಿತ/Deflation).
ಗ್ರಾಮೀಣ vs ನಗರಗ್ರಾಮೀಣ: 0.8%, ನಗರ: 2.0%.
ಕೋರ್ ಇನ್ಫ್ಲೇಶನ್4.8% (28 ತಿಂಗಳ ಗರಿಷ್ಠ ಮಟ್ಟ – ಆಹಾರ ಮತ್ತು ಇಂಧನ ಹೊರತುಪಡಿಸಿ).
RBI FY26 ಅಂದಾಜು3.1% (ಹಿಂದಿನ 3.7% ಅಂದಾಜಿನಿಂದ ಕಡಿತಗೊಳಿಸಲಾಗಿದೆ).
ಆರ್ಥಿಕ ಪರಿಣಾಮಕಡಿಮೆ ಹಣದುಬ್ಬರದಿಂದ RBIಗೆ ಬಡ್ಡಿದರ ಕಡಿತಗೊಳಿಸಲು ಮುಕ್ತ ಅವಕಾಶ.
ಸಾಮಾನ್ಯ ಪ್ರವೃತ್ತಿ2025ರಲ್ಲಿ ನಿರಂತರ ಕುಸಿತ; ಜೂನ್ 2025ರಲ್ಲಿ 77 ತಿಂಗಳ ಕನಿಷ್ಠ (2.1%) ದಾಖಲಾಗಿತ್ತು.

ಖಗೋಳ ವಿಜ್ಞಾನಿ ಶ್ರೀನಿವಾಸ ಕುಲಕರ್ಣಿಗೆ ರಾಯಲ್ ಸೊಸೈಟಿಯ ಚಿನ್ನದ ಪದಕ

ಸಂದರ್ಭ: ಅಮೆರಿಕದಲ್ಲಿ ನೆಲಸಿರುವ ಭಾರತ ಮೂಲದ ಖಗೋಳ ವಿಜ್ಞಾನಿ ಪ್ರೊಫೆಸರ್ ಶ್ರೀನಿವಾಸ ಕುಲಕರ್ಣಿ ಅವರಿಗೆ ಇಂಗ್ಲೆಂಡ್ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯ ಶ್ರೀನಿವಾಸ (ಆರ್ಎಎಸ್) ಚಿನ್ನದ ಪದಕ ಕುಲಕರ್ಣಿ ಲಭಿಸಿದೆ.
• ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸಂಶೋಧನೆಗಳನ್ನು ಕೈಗೊಂಡಿರುವ ಶ್ರೀನಿವಾಸ್ ಕುಲಕರ್ಣಿ ಅವರು, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಸಹೋದರ.
• ಮಹಾರಾಷ್ಟ್ರದಲ್ಲಿ ಜನಿಸಿರುವ ಕುಲಕರ್ಣಿ ಅವರು, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಖಗೋಳ ವಸ್ತುಗಳು ಮತ್ತು ಗಾಮಾ ಕಿರಣಗಳ ಸ್ವಯಂಸ್ಫೋಸೇರಿದಂತೆ ಖಗೋಳ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಸಂಶೋಧನೆ ಕೈಗೊಂಡು ಯಶಸ್ವಿಯಾಗಿದ್ದಾರೆ.
ಬಹುತರಂಗಾಂತರದ ‘ಖಗೋಳ ಭೌತಶಾಸ್ತ್ರದಲ್ಲಿ ಕ್ಷಣಿಕ ಕುರಿತಾದ ಸುಸ್ಥಿರ, ನವೀನ ಮತ್ತು ಅಭೂತಪೂರ್ವ ಅನ್ನೇಷಣೆ’ಯ ಕೊಡುಗೆಯನ್ನು ಚಿನ್ನದ ಪದಕ ಆಯ್ಕೆಗೆ ಪರಿಗಣಿಸಲಾಗಿದೆ.
1984ರಿಂದಲೂ ರಾಯಲ್ ಸಂಸ್ಥೆಯು ಚಿನ್ನದ ಪದಕವನ್ನು ನೀಡುತ್ತಿದೆ. ಖ್ಯಾತ ವಿಜ್ಞಾನಿಗಳಾದ ಸ್ಟೀಪನ್ ಹಾಕಿಂಗ್, ಜಾನ್ ಬೆಲ್ ಬರ್ನೆಲ್, ಅಲ್ಬರ್ಟ್ ಐನ್ಸ್ಟೀನ್ ಮತ್ತು ಎಡ್ರಿನ್ ಹಬಲ್ ಅವರು ಈ ಪದಕ ಪಡೆದಿದ್ದಾರೆ. ಇವರ ಸಾಲಿಗೆ ಕುಲಕರ್ಣಿ ಸೇರಿದ್ದಾರೆ.
• 2024ರಲ್ಲಿ ಖಗೋಳ ಕ್ಷೇತ್ರದ ಪ್ರಶಸ್ತಿ) ಅನ್ವೇಷಣೆಗಾಗಿ ‘ಶಾ’ ಪುರಸ್ಕಾರವನ್ನೂ (ಹಾಂಕಾಂಗ್ ನೀಡುವ ಕುಲಕರ್ಣಿ ಪಡೆದಿದ್ದಾರೆ. ಖಗೋಳ ವಿಜ್ಞಾನದ ಸಾಧನಗಳ ಅನ್ವೇಷಕರಾಗಿ ರುವ ಕುಲಕರ್ಣಿ ಅವರು, ಈವರೆಗೆ 10 ಸಾಧನಗಳನ್ನು ರೂಪಿಸಿದ್ದಾರೆ.
• ಕುಲಕರ್ಣಿ ಅವರು ನಾಸಾದ ನೇರಳಾತೀತ ಕಿರಣಗಳ ಅನ್ವೇಷಣೆಗೆ ಸಂಬಂಧಿಸಿದ (ಯುವಿಎಕ್ಸ್) ಸಂಶೋಧನೆಯ ಕಾರ್ಯಯೋಜನೆಯ ಭಾಗವಾಗಿದ್ದಾರೆ.ನೇರಳಾತೀತ ಕಿರಣಗಳ ಕುರಿತಾದ ಅತ್ಯಂತ ಸೂಕ್ಷ್ಮ ಸಂಶೋಧನೆ ಇದಾಗಿದೆ.

•ಕುಲಕರ್ಣಿ ಅವರು 1978ರಲ್ಲಿ ದೆಹಲಿಯ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ (ಐಐಟಿ) ಸ್ನಾತಕೋತ್ತರ ಪದವಿ, 1983ರಲ್ಲಿ ಬಾರ್ಕ್ಲೆಯಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.

ಬಹಿಷ್ಕಾರ: 3 ವರ್ಷಜೈಲು,₹1ಲಕ್ಷದಂಡ

ಸಂದರ್ಭ: ಸಾಮಾಜಿಕ ಬಹಿಷ್ಕಾರಕ್ಕೆ ಸಂಪೂರ್ಣ ನಿಷೇಧ ಹೇರಲು ನಿರ್ಧರಿಸಿ ರುವ ರಾಜ್ಯ ಸರ್ಕಾರ, ಇನ್ನು ಮುಂದೆ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕ ವಾಗಿ ಬಹಿಷ್ಕರಿಸಿದರೆ ಮೂರು ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ದಂಡ ವಿಧಿಸುವ ಕಾನೂನು ಜಾರಿಗೆ ತಂದಿದೆ.

• ಸಾಮಾಜಿಕ ಬಹಿಷ್ಕಾರವನ್ನು ಅಪರಾಧವೆಂದು ಪರಿಗಣಿಸಿ ಶಿಕ್ಷೆ ವಿಧಿಸಲು ಅವಕಾಶ ನೀಡುವ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ. ನಿಷೇಧ ಮತ್ತು ಪರಿಹಾರ) ಮಸೂದೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಅಂಕಿತ ಹಾಕಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದ ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿದೆ.
• ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡವರು, ಈ ಉದ್ದೇಶದಿಂದ ಸಭೆ, ಪಂಚಾಯಿತಿ, ಜಮಾವಣೆ, ಅಭಿಪ್ರಾಯ ಸಂಗ್ರಹಿಸುವುದು, ಬಹಿಷ್ಕಾರಕ್ಕೆ ಪ್ರತ್ಯಕ್ಷ, ಪರೋಕ್ಷ ಸಹಾಯ ನೀಡುವವರನ್ನೂ ಅಪರಾಧಿಗಳೆಂದು ಪರಿಗಣಿಸಿ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಕೂಡಾ ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
• ಒತ್ತಡ, ಪ್ರಚೋದನೆ ಈ ಕಾಯ್ದೆಯ ಅನ್ವಯ, ಬಹಿಷ್ಕಾರಕ್ಕೆ ಒಳಗಾದವರು ಪೊಲೀಸ್ ಠಾಣೆ, ನ್ಯಾಯಾಧೀಶರಿಗೆ ದೂರು ನೀಡ ಬಹುದು. ಪ್ರಥಮ ದರ್ಜೆ ನ್ಯಾಯಾಧೀಶರಿಗೆ ವಿಚಾರಣೆಯ ಅಧಿಕಾರ ನೀಡಲಾಗಿದೆ.
• ಸಂತ್ರಸ್ತರಿಗೆ ಸಹಾಯ ಒದಗಿಸಲು ಮತ್ತು ದಂಡದ ಮೊತ್ತವನ್ನು ಪರಿಹಾರವಾಗಿ ನೀಡಲು ನಿರ್ದೇಶನ ನೀಡಬಹುದು. ಸಾಮಾಜಿಕ ಬಹಿಷ್ಕಾರದಂತಹ ನಿರ್ಧಾರ ತೆಗೆದುಕೊಳ್ಳಲು ನಡೆಸುವ ಸಭೆಗಳ ಕುರಿತು ಮಾಹಿತಿ ಬಂದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶಿಸಬಹುದು. ಸಾಮಾಜಿಕ ಬಹಿಷ್ಕಾರ ತಡೆ ಅಧಿಕಾರಿ ಗಳಾಗಿ ಗ್ರೂಪ್ ‘ಎ’ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಲಿದೆ.

ಇಸ್ರೋ: ವರ್ಷದ ಮೊದಲ ಉಪಗ್ರಹ ಉಡಾವಣೆ ನಿಷ್ಪಲ: ಕಕ್ಷೆ ತಲುಪಲು ವಿಫಲ

ಸಂದರ್ಭ: ವಿದೇಶದ ಭೂ ಸರ್ವೇಕ್ಷಣಾ ಉಪಗ್ರಹ ಸೇರಿದಂತೆ 16 ಉಪಗ್ರಹಗಳನ್ನು ಹೊತ್ತು ನಭಕ್ಕೆ ಚಿಮ್ಮಿದ್ದ ಪಿಎಸ್ಎಲ್ವಿ-ಸಿ62 ರಾಕೆಟ್ನಲ್ಲಿ ತಾಂತ್ರಿಕ ದೋಷವುಂಟಾಗಿ ಯೋಜನೆಯು ವಿಫಲವಾಗಿದೆ ಎಂದು ಇಸ್ರೋ ತಿಳಿಸಿದೆ.
• “ನಿಗದಿತ ಕಕ್ಷೆಗೆ ಉಪಗ್ರಹಗಳನ್ನು ಸೇರಿಸುವ ಉದ್ದೇಶದ ಯೋಜನೆಯು ವಿಫಲವಾಗಿದೆ. ಎಲ್ಲಾ 16 ಉಪಗ್ರಹಗಳು ಸಂಪರ್ಕ ಕಳೆದುಕೊಂಡಿವೆ’ ಎಂದು ಅದು ಮಾಹಿತಿ ನೀಡಿದೆ.
• ಇದರೊಂದಿಗೆ ಇಸ್ರೋದ ವರ್ಷದ ಮೊದಲ ಉಪ ಗ್ರಹ ಉಡಾವಣೆ ಯೋಜನೆ ವಿಫಲವಾದಂತಾಗಿದೆ.
• “ಪೂರ್ವನಿಗದಿಯಂತೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆ ಮಾಡಲಾಗಿತ್ತು. ಉಪಗ್ರಹಗಳನ್ನು ಭೂಮಿಯಿಂದ 512ಕಿ.ಮೀ. ದೂರದ ‘ಸೂರ್ಯ ಸಮನ್ವಯ ಕಕ್ಷೆ’ಗೆ ಸೇರಿಸುವ ಉದ್ದೇಶದ ಮಹತ್ವದ ಯೋಜನೆ ಇದಾಗಿತ್ತು. ಒಟ್ಟು 4 ಹಂತಗಳಲ್ಲಿ ಯೋಜನೆಯನ್ನು ರೂಪಿಸಲಾಗಿತ್ತು. 3ನೇಹಂತದ ಕೊನೆಯಲ್ಲಿ ಕಾರ್ಯಾಚರಣೆ ವಿಫಲವಾಯಿತು’ ಎಂದು ಇಸ್ರೋ ತಿಳಿಸಿದೆ.