Current Affairs
ಬ್ಲೂಬರ್ಡ್ ಬ್ಲಾಕ್ –2 ಸಂವಹನ ಉಪಗ್ರಹ (BlueBird Block-2 Communication Satellite)
ಕಕ್ಷೆಗೆ ಸೇರಿದ ಬ್ಲೂಬರ್ಡ್ ಬ್ಲಾಕ್: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಇಸ್ರೊ ಭಾರವಾದ ಉಪಗ್ರಹ ಹೊತ್ತು ಆಗಸಕ್ಕೆ ಚಿಮ್ಮಿದ ‘ಬಾಹುಬಲಿ‘ ಎಲ್‌ವಿಎಂ3–ಎಂ6 ರಾಕೆಟ್ಸ್ವದೇಶಿ ನಿರ್ಮಿತ ‘ಬಾಹುಬಲಿ’ ರಾಕೆಟ್ ಮೂಲಕ ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹವನ್ನು ಇಸ್ರೊ ಯಶಸ್ವಿಯಾಗಿ ನಿಗದಿತ ಕಕ್ಷೆಗೆ ಸೇರಿಸಿತು.

- 6,100 ಕೆ.ಜಿ ತೂಕದ ಬ್ಲೂಬರ್ಡ್ ಬ್ಲಾಕ್ –2 ಸಂವಹನ ಉಪಗ್ರಹವನ್ನು ಹೊತ್ತ ಎಲ್‌ವಿಎಂ3–ಎಂ6 ರಾಕೆಟ್, ಆಂಧ್ರ ಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಉಡ್ಡಯನ ಕೇಂದ್ರ ನಭಕ್ಕೆ ಚಿಮ್ಮಿತು. ಭಾರತದ ಮಣ್ಣಿನಿಂದ ಉಡಾವಣೆಯಾದ ಅತ್ಯಂತ ಭಾರವಾದ ಉಪಗ್ರಹ ಇದಾಗಿದೆ: ಇಸ್ರೊ
- ಸ್ವದೇಶಿ ನಿರ್ಮಿತ ‘ಬಾಹುಬಲಿ’ ರಾಕೆಟ್ ಮೂಲಕ ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹವನ್ನು ಇಸ್ರೊ ಯಶಸ್ವಿಯಾಗಿ ನಿಗದಿತ ಕಕ್ಷೆಗೆ ಸೇರಿಸಿತು.
- ಅತ್ಯಂತ ಭಾರವಾದ ಪೇಲೋಡ್‌ಗಳನ್ನು ಹೊತ್ತೊಯ್ಯುತ್ತಿರುವ ಕಾರಣ ಎಲ್‌ವಿಎಂ3–ಎಂ6 ರಾಕೆಟ್‌ಗೆ ‘ಬಾಹುಬಲಿ’ ಎಂದೇ ಕರೆಯಲಾಗುತ್ತಿದೆ ಎಂದು ಇಸ್ರೊ ತಿಳಿಸಿದೆ.
- ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮತ್ತು ಅಮೆರಿಕ ಮೂಲದ ಎಎಸ್‌ಟಿ ಸ್ಪೇಸ್‌ಮೊಬೈಲ್ ನಡುವೆ ನಡೆದ ಖಾಸಗಿ ಒಪ್ಪಂದದ ಭಾಗವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್, ಇಸ್ರೊ ಅಡಿಯಲ್ಲಿ ಕಾರ್ಯನಿರ್ವಹಿಸುವ ವಾಣಿಜ್ಯ ಸಂಸ್ಥೆಯಾಗಿದೆ.
- Highlights – 6,100 ಕೆ.ಜಿ– ಬ್ಲೂಬರ್ಡ್ ಬ್ಲಾಕ್–2ನ ತೂಕ 43.5 ಮೀಟರ್–ಎಲ್‌ವಿಎಂ3 ರಾಕೆಟ್‌ನ ಎತ್ತರ
- *ರಾಕೆಟ್ ವಿನ್ಯಾಸ ಮತ್ತು ಅಭಿವೃದ್ಧಿ: ಇಸ್ರೊದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್
- ಈ 6100 ಕೆಜಿ ಉಪಗ್ರಹವು LVM3 ಇತಿಹಾಸದಲ್ಲಿ ಲೋ ಅರ್ಥ್ ಆರ್ಬಿಟ್ (LEO) ನಲ್ಲಿ ಅತ್ಯಂತ ಭಾರವಾದ ಪೇಲೋಡ್ ಆಗಿದೆ.
- LVM3-M6 ಬ್ಲೂಬರ್ಡ್ ಬ್ಲಾಕ್-2 ಉಪಗ್ರಹ ಉಡಾವಣೆಯಾದ ಸುಮಾರು 15 ನಿಮಿಷಗಳ ನಂತರ ಕೆಳ ಭೂಮಿಯ ಕಕ್ಷೆಗೆ ಸೇರಿಸಿತು.
- ಇದು ಭೂ ಕಕ್ಷೆಯಲ್ಲಿ ನಿಯೋಜಿಸಲಾದ ಅತಿದೊಡ್ಡ ವಾಣಿಜ್ಯ ಸಂವಹನ ಉಪಗ್ರಹವಾಗಿದೆ. ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವು ಭಾರತೀಯ ನೆಲದಿಂದ LVM3 ನಿಂದ ಉಡಾವಣೆ ಮಾಡಲಾದ ಅತ್ಯಂತ ಭಾರವಾದ ಪೇಲೋಡ್ ಆಗಿದೆ.
- ಈ ಸಂವಹನ ಉಪಗ್ರಹವನ್ನು ಅಮೆರಿಕದ ಎಎಸ್‌ಟಿ ಸ್ಪೇಸ್‌ಮೊಬೈಲ್ ಅಭಿವೃದ್ಧಿಪಡಿಸಿದೆ. ಇದು ಮುಂದಿನ ಪೀಳಿಗೆಯ ಬ್ಲೂಬರ್ಡ್ ಬ್ಲಾಕ್-2 ಸಂವಹನ ಉಪಗ್ರಹದ ಭಾಗವಾಗಿದ್ದು, ಪ್ರಮಾಣಿತ ಮೊಬೈಲ್ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಉಪಗ್ರಹದ ವಿಶೇಷತೆ
- *ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಹೈ ಸ್ಪೀಡ್ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಪೂರೈಸುವ ಸಾಮರ್ಥ್ಯ ಹೊಂದಿದೆ.
- *ಈ ಬಾಹ್ಯಾಕಾಶ ಕಾರ್ಯಕ್ರಮವು ಉಪಗ್ರಹದ ಮೂಲಕ ನೇರವಾಗಿ ಮೊಬೈಲ್ ಸಂಪರ್ಕ ಒದಗಿಸುತ್ತದೆ. ಇದರಿಂದ ಪ್ರತಿಯೊಬ್ಬರಿಗೂ ಎಲ್ಲ ಸಮಯದಲ್ಲಿಯೂ 4ಜಿ 5ಜಿ ಧ್ವನಿ ವಿಡಿಯೊ ಕರೆ ಟೆಕ್ಸ್ಟ್ ಸ್ಟ್ರೀಮಿಂಗ್ ಮತ್ತು ಡೇಟಾ ಸೌಲಭ್ಯ ದೊರೆಯಲಿದೆ.
- *ಎಎಸ್‌ಟಿ ಸ್ಪೇಸ್‌ಮೊಬೈಲ್ ಕಂಪನಿಯು ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ನಿರ್ಮಿಸುತ್ತಿದೆ. ಇದನ್ನು ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಳಕೆ ಮಾಡಬಹುದು. ಇದನ್ನು ಸರ್ಕಾರಿ ಮತ್ತು ವಾಣಿಜ್ಯ ಸೇವೆಗಳ ಅಪ್ಲಿಕೇಷನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
- ಬ್ಲೂಬರ್ಡ್ ಬ್ಲಾಕ್-2 ಮಿಷನ್ ಜಾಗತಿಕ LEO ಸಮೂಹದ ಭಾಗವಾಗಿದ್ದು, ಇದು ಉಪಗ್ರಹದ ಮೂಲಕ ನೇರ-ಮೊಬೈಲ್ ಸಂಪರ್ಕವನ್ನು ಒದಗಿಸುತ್ತದೆ. ಈ ಸಮೂಹವು 4G ಮತ್ತು 5G ಧ್ವನಿ ಮತ್ತು ವೀಡಿಯೊ ಕರೆಗಳು, ಪಠ್ಯಗಳು, ಸ್ಟ್ರೀಮಿಂಗ್ ಮತ್ತು ಡೇಟಾವನ್ನು ಎಲ್ಲರಿಗೂ, ಎಲ್ಲೆಡೆ, ಎಲ್ಲಾ ಸಮಯದಲ್ಲೂ ಸಕ್ರಿಯಗೊಳಿಸುತ್ತದೆ.
- ಇದು 223m ಹಂತದ ಶ್ರೇಣಿಯನ್ನು ಹೊಂದಿದೆ, ಇದು ಭೂಮಿಯ ಕೆಳ ಕಕ್ಷೆಗೆ ನಿಯೋಜಿಸಲಾದ ಅತಿದೊಡ್ಡ ವಾಣಿಜ್ಯ ಸಂವಹನ ಉಪಗ್ರಹವಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
- ಬ್ಲೂಬರ್ಡ್-6 ಉಪಗ್ರಹ ಇಲ್ಲಿಯ ತನಕ ಭಾರತೀಯ ರಾಕೆಟ್ ಬಾಹ್ಯಾಕಾಶಕ್ಕೆ ಒಯ್ದಿರುವ ಅತ್ಯಂತ ತೂಕದ ಉಪಗ್ರಹ ಎಂಬ ಕೀರ್ತಿಗೆ ಪಾತ್ರವಾಗಿದೆ. ಎಲ್‌ವಿಎಂ3 ರಾಕೆಟ್ ಒಟ್ಟು ಎಂಟು ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
- ಪ್ರಸ್ತುತ ಉಡಾವಣಾ ಯೋಜನೆ ಇಸ್ರೋದ ವಾಣಿಜ್ಯಿಕ ಅಂಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಮತ್ತು ಅಮೆರಿಕಾ ಮೂಲದ ಎಎಸ್‌ಟಿ ಸ್ಪೇಸ್ ಮೊಬೈಲ್ ಸಂಸ್ಥೆಗಳ ನಡುವೆ ನಡೆದಿರುವ ವಾಣಿಜ್ಯಿಕ ಒಪ್ಪಂದದ ಭಾಗವಾಗಿದೆ. ಒಂದು ಉಡಾವಣಾ ಸೇವೆ ಒದಗಿಸುವ ಸಂಸ್ಥೆಯಾಗಿ ಇಸ್ರೋ ವಿದೇಶೀ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಿ ಆದಾಯ ಸಂಪಾದಿಸುತ್ತದೆ.
- ಎನ್‌ಎಸ್‌ಐಎಲ್ ಮೂಲಕ ನಿರ್ವಹಿಸಲ್ಪಡುವ ಈ ವಾಣಿಜ್ಯಿಕ ಉಡಾವಣೆಗಳು ಒಂದು ರೀತಿ ಟ್ಯಾಕ್ಸಿ ಸೇವೆಯಂತೆ ಕಾರ್ಯಾಚರಿಸುತ್ತವೆ. ಇಲ್ಲಿ ಅಮೆರಿಕದ ಕಂಪನಿ ಪ್ರಯಾಣಿಕನಾಗಿದ್ದು, ಉಡಾವಣೆ ನಡೆಸಿಕೊಟ್ಟದ್ದಕ್ಕೆ ಭಾರತ ಸರ್ಕಾರಕ್ಕೆ ಹಣ ಪಾವತಿಸುತ್ತದೆ.
- ಕೆಳ ಭೂಕಕ್ಷೆಯಲ್ಲಿ (LEO) ಇರಿಸಲಾದ ವಿಶ್ವದ ಅತಿದೊಡ್ಡ ವಾಣಿಜ್ಯ ಸಂವಹನ ಉಪಗ್ರಹ ಇದಾಗಿದೆ. ಬ್ರಾಂಡ್ ಬ್ಯಾಂಡ್ ಸೇವೆಗೆ ಇದು ಉಪಗ್ರಹ ಉಪಯೋಗವಾಗಲಿದೆ. ಆಮೂಲಕ, ಚಂದ್ರಯಾನ-2, ಚಂದ್ರಯಾನ-3 ಮತ್ತು ಎರಡು ಒನ್ ವೆಬ್ (OneWeb) ಮಿಷನ್‌ಗಳ ಯಶಸ್ಸಿನ ಸರಣಿಯಲ್ಲಿ ಈ ಮಿಷನ್ ಕೂಡ ಸೇರಿಕೊಂಡಂತಾಗಿದೆ.
- ನವೆಂಬರ್ 2, 2025 ರಂದು ನಡೆದ LVM3-M5/CMS-03 ಉಡಾವಣೆಯ ಬೆನ್ನಲ್ಲೇ ಈ ಯಶಸ್ಸು ಲಭಿಸಿದ್ದು, ಇಸ್ರೋ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ ಏರಿದೆ. ಈ ಉಪಗ್ರಹ ಉಡಾವಣೆಯಿಂದ ನೇರವಾಗಿ ಸ್ಮಾರ್ಟ್ ಫೋನ್ ಗಳಿಗೆ ಇಂಟರ್ನೆಟ್ ಸಂಪರ್ಕ ಹೊಂದಲು ಸಹಾಯಕಾರಿಯಾಗಲಿದೆ.
- ವಿಶೇಷ ಹಾರ್ಡ್‌ವೇರ್ ಅಗತ್ಯವಿಲ್ಲದ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವು, ಪ್ರಪಂಚದಾದ್ಯಂತ ಇರುವ ಸಾಮಾನ್ಯ ಸ್ಮಾರ್ಟ್ ಫೋನ್‌ಗಳಿಗೆ ನೇರವಾಗಿ 24/7 ಹೈಸ್ಪೀಡ್ ಸೆಲ್ಯುಲರ್ ಬ್ರಾಡ್ ಬ್ಯಾಂಡ್ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇಸ್ರೋ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮೂಲಕ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
- ಇದು ಭಾರತೀಯ ಉಡಾವಣಾ ಯಂತ್ರವನ್ನು ಬಳಸಿಕೊಂಡು ಭಾರತೀಯ ನೆಲದಿಂದ ಎತ್ತಲಾದ ಅತ್ಯಂತ ಭಾರವಾದ ಉಪಗ್ರಹವಾಗಿದೆ. ಇದು ಮಾರ್ಕ್-3 ರ ಮೂರನೇ ಸಂಪೂರ್ಣ ವಾಣಿಜ್ಯ ಕಾರ್ಯಾಚರಣೆಯಾಗಿದೆ ಮತ್ತು ಈ ವಾಹನವು ತನ್ನ ಅತ್ಯುತ್ತಮ ದಾಖಲೆಯನ್ನು ಪ್ರದರ್ಶಿಸಿದೆ
- ಒಂದು ದ್ರವ ಕೋರ್ ಹಂತ (110) ಮತ್ತು ಕ್ರಯೋಜೆನಿಕ್ ಮೇಲಿನ ಹಂತ (25) ಗಳನ್ನು ಒಳಗೊಂಡಿರುವ ಮೂರು ಹಂತದ ಉಡಾವಣಾ ವಾಹನವಾಗಿದೆ. ಇದು 640 ಟನ್‌ಗಳ ಲಿಫ್ಟ್-ಆಫ್ ದ್ರವ್ಯರಾಶಿ, 43.5 ಮೀ ಎತ್ತರ ಮತ್ತು ಜಿಯೋಸಿಂಕ್ರೋನಸ್ ಟ್ರಾನ್‌್ಸರ್ಫ ಆರ್ಬಿಟ್ ಗೆ 4,200 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ.
- ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಮತ್ತು ಯುಎಸ್ ಮೂಲದ ಎಎಸ್‌ಟಿ ಸ್ಪೇಸ್ ಮೊಬೈಲ್ (ಎಎಸ್‌ಟಿ ಮತ್ತು ಸೈನ್‌್ಸ, ಎಲ್‌ಎಲ್‌ಸಿ) ನಡುವೆ ಸಹಿ ಹಾಕಲಾದ ವಾಣಿಜ್ಯ ಒಪ್ಪಂದದ ಭಾಗವಾಗಿ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ.
ಈ ಉಪಗ್ರಹವು ಈ ಕೆಳಗಿನ ಸೌಲಭ್ಯಗಳನ್ನು ನೀಡುವ ಗುರಿ ಹೊಂದಿದೆ:
4G ಮತ್ತು 5G ಧ್ವನಿ ಹಾಗೂ ವಿಡಿಯೋ ಕರೆಗಳು
ಹೈಸ್ಪೀಡ್ ಡೇಟಾ ಸ್ಟ್ರೀಮಿಂಗ್
Text Messaging ಮತ್ತು ನಿರಂತರ ಸಂಪರ್ಕ
ಜಾಗತಿಕ ಸಂಪರ್ಕದ ಅಂತರವನ್ನು ಕಡಿಮೆ ಮಾಡುವುದು
“AST ಸ್ಪೇಸ್ ಮೊಬೈಲ್ ಸಂಸ್ಥೆಯು ವಿಶ್ವದ ಮೊದಲ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್ ಬ್ಯಾಂಡ್ ನೆ ಟ್‌ವರ್ಕ್ ಅನ್ನು ನಿರ್ಮಿಸುತ್ತಿದೆ. ವಿಶ್ವದಲ್ಲಿರುವ ಸುಮಾರು 600 ಬಿಲಿಯನ್ ಮೊಬೈಲ್ ಚಂದಾದಾರರು ಎದುರಿಸುತ್ತಿರುವ ನೆಟ್ ವರ್ಕ್ ಸಮಸ್ಯೆಗಳನ್ನು ಹೋಗಲಾಡಿಸುವುದು ಮತ್ತು ಇಂಟರ್ನೆಟ್ ಸೌಲಭ್ಯವಿಲ್ಲದ ಬಿಲಿಯನ್ ಗಟ್ಟಲೆ ಜನರಿಗೆ ಬ್ರಾಡ್ ಬ್ಯಾಂಡ್ ತಲುಪಿಸುವುದು ನಮ್ಮ ಗುರಿ” ಎಂದು AST SpaceMobile ಸಂಸ್ಥೆ ತಿಳಿಸಿದೆ.
ಈಗಾಗಲೇ 50ಕ್ಕೂ ಹೆಚ್ಚು ಜಾಗತಿಕ ಮೊಬೈಲ್ ಆಪರೇಟರ್ ಗಳೊಂದಿಗೆ ಈ ಸಂಸ್ಥೆಯು ಪಾಲುದಾರಿಕೆ ಹೊಂದಿದೆ. ಅತ್ಯಂತ ದುರ್ಗಮ ಪ್ರದೇಶಗಳಿಗೂ ಇಂಟರ್ನೆಟ್ ಕವರೇಜ್ ನೀಡಲು ಈ ಸಂಸ್ಥೆ ಸಜ್ಜಾಗಿದೆ.
ಭಾರತದ ನೆಲದಿಂದ ಭಾರತದ ರಾಕೆಟ್ ಮೂಲಕ ಉಡಾವಣೆ ಮಾಡಲಾದ ಅತ್ಯಂತ ಭಾರವಾದ ಉಪಗ್ರಹ ಇದಾಗಿರುವುದು ವಿಶೇಷ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮತ್ತು ಅಮೆರಿಕ ಮೂಲದ AST ಸ್ಪೇಸ್‌ಮೊಬೈಲ್ ಮಧ್ಯೆ ನಡೆದ ವಾಣಿಜ್ಯ ಒಪ್ಪಂದದ ಭಾಗವಾಗಿ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. 43.5 ಮೀಟರ್ ಎತ್ತರ ಮತ್ತು 640 ಟನ್ ತೂಕವಿರುವ LVM3 ರಾಕೆಟ್ ಅನ್ನು ಬಾಹುಬಲಿ (Baahubali) ಎಂದು ಕರೆಯಲಾಗುತ್ತದೆ.
ಇಸ್ರೋದ ಎಲ್‌ಎಂವಿ 3 ರಾಕೆಟ್, ಸ್ಪೇಸ್ ಮೊಬೈಲ್‌ನಿಂದ ಅಮೆರಿಕ ಮೂಲದ 6.5 ಟನ್ ತೂಕದ ಬ್ಲೂಬರ್ಡ್ ಬ್ಲಾಕ್ 2 ಉಪಗ್ರಹವನ್ನು 520 ಕಿಮೀ ವೃತ್ತಾಕಾರದ ಕಕ್ಷೆಗೆ ಸೇರಿಸುತ್ತದೆ.
ಉಪಗ್ರಹ ಭಿನ್ನ ಹೇಗೆ?
ಮಸ್ಕ್‌ನ ಸ್ಟಾರ್ ಲಿಂಕ್ ಅಥವಾ ಒನ್‌ವೆಬ್ ಸೇರಿದಂತೆ ಹಲವು ಕಂಪನಿಗಳು ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆಯನ್ನು ನೀಡುತ್ತಿವೆ. ಆದರೆ ಇಲ್ಲಿ ಫೋನಿಗೆ ನೇರವಾಗಿ ಉಪಗ್ರಹದ ಸಂಪರ್ಕ ಇಲ್ಲ. ಮನೆಯಲ್ಲಿರುವ ಆಂಟೇನಾಗೆ ಉಪಗ್ರಹದ ಮೂಲಕ ಸಿಗ್ನಲ್ ತಲುಪಿ ನಂತರ ವೈಫೈ ಮೂಲಕ ಫೋನಿಗೆ ಇಂಟರ್‌ನೆಟ್ ಸೌಲಭ್ಯ ಪಡೆಯಬಹುದು. ಆದರೆ ಅಮೆರಿಕದ ಎಎಸ್‌ಟಿ ಸ್ಪೇಸ್ ಮೊಬೈಲ್ ತಾನು ತಯಾರಿಸಿದ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಉಪಗ್ರಹದಿಂದಲೇ ಇಂಟರ್‌ನೆಟ್ ಸೌಲಭ್ಯ ಪಡೆಯುವಂತೆ ಈ ಬ್ಲೂಬರ್ಡ್-6 ಉಪಗ್ರಹವನ್ನು ಅಭಿವೃದ್ಧಿಪಡಿಸಿದೆ.
ವಿಶ್ವದ ಮೊದಲ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ನಿರ್ಮಿಸುವ ಭಾಗವಾಗಿ ಈ ಉಪಗ್ರಹ ರೂಪಿಸಿದೆ. ಟೆಕ್ಸಾಸ್ ಮೂಲದ ಕಂಪನಿಯು 2026 ರ ಅಂತ್ಯದ ವೇಳೆಗೆ 45-60 ಉಪಗ್ರಹಗಳನ್ನು ಹಾರಿಸುವ ಗುರಿಯನ್ನು ಹೊಂದಿದೆ. ಬಾಹ್ಯಾಕಾಶದಿಂದಲೇ 5ಜಿ ಬ್ರಾಡ್‌ಬ್ಯಾಂಡ್ ವೇಗದ ಇಂಟರ್‌ನೆಟ್ ಸೇವೆ ನೀಡಲು ಉದ್ದೇಶಿಸಿದೆ.
BlueBird ವಿಶೇಷತೆ ಏನು..?
ಈ ಸಂವಹನ ಉಪಗ್ರಹವು ಸುಮಾರು 6100 ಕೆಜಿ ತೂಕ ಹೊಂದಿದೆ. ಈ ಕಾರ್ಯಾಚರಣೆಯ ಅಡಿಯಲ್ಲಿ, ಇಸ್ರೋ ತನ್ನ ಹೆವಿ-ಲಿಫ್ಟ್ ರಾಕೆಟ್ LVM3 ಮೂಲಕ ಭೂಮಿಯ ಕೆಳ ಕಕ್ಷೆಯಲ್ಲಿ ಉಪಗ್ರಹ ಇರಿಸಿದೆ. ಇಸ್ರೋ ಪ್ರಕಾರ, 6100 ಕೆಜಿ ತೂಕದ ಈ ಉಪಗ್ರಹವು LVM-3 ಉಡಾವಣಾ ಇತಿಹಾಸದಲ್ಲೇ ಭೂಮಿಯ ಅತ್ಯಂತ ಕೆಳ ಕಕ್ಷೆಯಲ್ಲಿ (LEO) ಇರಿಸಲಾದ ಭಾರವಾದ ಪೇಲೋಡ್ ಆಗಿದೆ.
ಬ್ಲೂ ಬರ್ಡ್ ಬ್ಲಾಕ್ 2 ಉಪಗ್ರಹ ಉಡಾವಣೆಯು 4G ಮತ್ತು 5G ಸ್ಮಾರ್ಟ್‌ಫೋನ್‌ಗಳಿಗೆ ನೇರ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸುತ್ತದೆ. ಇದು ಟವರ್ಗಳ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತದೆ.
ಈ ಕಾರ್ಯಾಚರಣೆಯ ಗುರಿ ಏನು?
ಇದು ಸಂಪೂರ್ಣ ವಾಣಿಜ್ಯಿಕ ಉಡಾವಣೆ. ಸಂವಹನ ಉಪಗ್ರಹ ಉಡಾವಣಾ ವಲಯದಲ್ಲಿ ಭಾರತವು ಇಡೀ ಜಗತ್ತಿಗೆ ಮಹತ್ವದ ಅವಕಾಶವನ್ನು ನೀಡುತ್ತಿದೆ. ಭಾರತದ ನೆಲೆಯನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತಷ್ಟು ಬಲಪಡಿಸೋದು ಇದರ ಗುರಿಯಾಗಿದೆ. ಈ ಉಪಗ್ರಹದ ಯಶಸ್ವಿ ಉಡಾವಣೆ ನಂತರ.. ಮೊಬೈಲ್ ಬಳಕೆದಾರರು 4G ಮತ್ತು 5G ಸೇವೆಗಳನ್ನು ಪ್ರವೇಶಿಸಲು ಸಹಾಯ ಆಗಲಿದೆ. ವಿಶೇಷವಾಗಿ ದೂರದ ಪ್ರದೇಶಗಳು ಮತ್ತು ಸೀಮಿತ ನೆಟ್‌ವರ್ಕ್ ವ್ಯಾಪ್ತಿಯನ್ನು ಹೊಂದಿರುವ ಸ್ಥಳಗಳಲ್ಲಿಯೂ ಇಂಟರ್ನೆಟ್ ಬ್ರೌಸ್ ಮಾಡಲು ಸಾಧ್ಯವಾಗುತ್ತದೆ. ಇದರರ್ಥ 4G ಮತ್ತು 5G ಧ್ವನಿ ಕರೆಗಳು, ವೀಡಿಯೊ ಕರೆಗಳು, ಸಂದೇಶ ಕಳುಹಿಸುವಿಕೆ ಮತ್ತು ಡೇಟಾ ಸೇವೆಗಳು ಜಗತ್ತಿನ ಎಲ್ಲಿಯಾದರೂ ಲಭ್ಯವಿರುತ್ತದೆ.
ಅಂದರೆ ಕಳಪೆ ನೆಟ್‌ವರ್ಕ್ ಇರುವ ಜಾಗದಲ್ಲೂ ಜನ ವೀಡಿಯೊ ಕರೆಗಳನ್ನು ಮಾಡಬಹುದು. ಉಪಗ್ರಹದ ಮೂಲಕ ನೇರವಾಗಿ ಮೊಬೈಲ್ ನೆಟ್‌ವರ್ಕ್ ಸಾಧಿಸಬಹುದು. ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಸಂಪರ್ಕವು ಉಪಗ್ರಹದಿಂದ 4G ಮತ್ತು 5G ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಸಿಗೋದ್ರಿಂದ ಟವರ್ಗಳ ಅಗತ್ಯತೆಯನ್ನೂ ಕಡಿಮೆ ಮಾಡುತ್ತದೆ.
ಅಮೆರಿಕನ್ ಕಂಪನಿ AST ಸ್ಪೇಸ್‌ಮೊಬೈಲ್, ಸೆಪ್ಟೆಂಬರ್ 2024 ರಲ್ಲಿ ಬ್ಲೂಬರ್ಡ್ -1 ಸೇರಿದಂತೆ 5 ಉಪಗ್ರಹಗಳನ್ನು ಉಡಾಯಿಸಿದೆ. ಈ ಕಂಪನಿಯು ವಿಶ್ವಾದ್ಯಂತ 50ಕ್ಕೂ ಹೆಚ್ಚು ಮೊಬೈಲ್ ಆಪರೇಟರ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಭವಿಷ್ಯದಲ್ಲಿ ಇದೇ ರೀತಿಯ ಉಪಗ್ರಹ ಉಡಾವಣೆ ಮಾಡಲು ಪ್ಲಾನ್ ಮಾಡಿದೆ. ಸಾಂಪ್ರದಾಯಿಕ ನೆಟ್‌ವರ್ಕ್‌ಗಳು ಪ್ರವೇಶಿಸಲಾಗದ ಪ್ರದೇಶಗಳಿಗೆ ಮೊಬೈಲ್ ಸಂಪರ್ಕ ತರುವ ಗುರಿಯನ್ನು ಈ ಕಂಪನಿ ಹೊಂದಿದೆ.
ಈ ಸೇವೆ ಪಡೆಯಲು ಬಳಕೆದಾರರು ‘ಸೇವಾ ಪೂರೈಕೆ’ದಾರರನ್ನು ಬದಲಾಯಿಸುವ ಅಗತ್ಯವಿಲ್ಲ. ಕಂಪನಿಯು ಪ್ರಪಂಚದಾದ್ಯಂತ ಮೊಬೈಲ್ ಆಪರೇಟರ್‌ಗಳೊಂದಿಗೆ ಕೆಲಸ ಮಾಡ್ತಿರೋದ್ರಿಂದ ಜನರಿಗೆ ಸುಲಭವಾಗಿ ಸಿಗಲಿದೆ.
ಇಸ್ರೋ ಮತ್ತು ಎಎಸ್‌ಟಿ ಸ್ಪೇಸ್‌ಮೊಬೈಲ್ ನಡುವಿನ ಒಪ್ಪಂದದ ಅಡಿಯಲ್ಲಿ ಉಪಗ್ರಹ ಉಡಾವಣೆ ಆಗಿದೆ.
ಇದು ಮೀಸಲಾದ ವಾಣಿಜ್ಯ ಉಡಾವಣೆಯಾಗಿದೆ. ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮತ್ತು ಬೆಂಗಳೂರು ಮೂಲದ ಇಸ್ರೋ ವಾಣಿಜ್ಯ ವಿಭಾಗವಾದ AST ಸ್ಪೇಸ್‌ಮೊಬೈಲ್ ನಡುವಿನ ಒಪ್ಪಂದದ ಅಡಿಯಲ್ಲಿ ಇದನ್ನು ನಡೆಸಲಾಗಿದೆ -ಇಸ್ರೋ
‘ಗಗನಯಾನ ಯೋಜನೆಗೆ ಮತ್ತಷ್ಟು ಬಲ’
- ಬ್ಲೂಬರ್ಡ್ ಬ್ಲಾಕ್ –2 ಉಪಗ್ರಹದ ಯಶಸ್ವಿ ಉಡ್ಡಯನವು ಮಾನವ ಸಹಿತ ಗಗನಯಾನ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ನಡೆಸುವ ಭಾರತದ ಮಹತ್ವಾಕಾಂಕ್ಷೆಗೆ ಮತ್ತಷ್ಟು ಆತ್ಮವಿಶ್ವಾಸವನ್ನು ತುಂಬಿದೆ: ಇಸ್ರೊ ಅಧ್ಯಕ್ಷ .
- ‘ಅಮೆರಿಕದ ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಸೇರಿಸುವ ಈ ಕಾರ್ಯಕ್ರಮವು ಬಹಳ ಮಹತ್ವದ್ದಾಗಿತ್ತು. ಏಕೆಂದರೆ ಭಾರತದ ಗಗನಯಾನ ಯೋಜನೆಯಲ್ಲಿಯೂ ಎಲ್‌ವಿಎಂ3 ಬಾಹ್ಯಾಕಾಶ ನೌಕೆಯು ನಿರ್ಣಾಯಕ ಪಾತ್ರ ವಹಿಸಲಿದೆ. ಭಾರತದ ಗಗನಯಾನಿಗಳನ್ನು ಕಕ್ಷೆಗೆ ಕೊಂಡೊಯ್ಯಲಿದೆ ಮತ್ತು ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರಲಿದೆ.
- ಈ ನೌಕೆಯು ಶೇ 100ರಷ್ಟು ವಿಶ್ವಾಸಾರ್ಹತೆಯನ್ನು ಹೊಂದಿದೆ. ‘520 ಕಿ.ಮೀ ದೂರದ ಸೆಲ್ಯುಲಾರ್ ಕಕ್ಷೆಗೆ ಉಪಗ್ರಹವನ್ನು ಸೇರಿಸುವ ಗುರಿ ಹೊಂದಲಾಗಿತ್ತು. ಸದ್ಯ 518.8 ಕಿ.ಮೀ ದೂರದ ಕಕ್ಷೆಗೆ ಸೇರಿಸಲಾಗಿದೆ. ಜಗತ್ತಿನ ಅತ್ಯುತ್ತಮ ಉಪಗ್ರಹ ಉಡಾವಣೆಗಳಲ್ಲಿ ಇದೂ ಒಂದು.
- ಬಾಹುಬಲಿ ಮಿಷನ್ ಅನ್ನು ಉಡಾವಣೆ (LVM3-M6 Mission) ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇತಿಹಾಸ ಸೃಷ್ಟಿಸಿದೆ.
- ಕಡಿಮೆ ಬಜೆಟ್, ನಿಖರವಾದ ತಂತ್ರಜ್ಞಾನ ಮತ್ತು ಮಹತ್ವದ ಜವಾಬ್ದಾರಿಯೊಂದಿಗೆ, ಇಸ್ರೋ ಅಮೆರಿಕದ ಮುಂದಿನ ಪೀಳಿಗೆಯ ಸಂವಹನ ಉಪಗ್ರಹವನ್ನು ತನ್ನ ಅತ್ಯಂತ ಶಕ್ತಿಶಾಲಿ ರಾಕೆಟ್ LVM3 ಬಳಸಿ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿತು. ಈ ಮಿಷನ್ ತಾಂತ್ರಿಕ ಸಾಧನೆ ಮಾತ್ರವಲ್ಲದೆ ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಜಾಗತಿಕ ನಾಯಕನನ್ನಾಗಿ ಸ್ಥಾಪಿಸುತ್ತದೆ.
KP
BlueBird Block-2 mission: LVM3-M6 ರಾಕೆಟ್ ಯಶಸ್ವಿ ಉಡಾವಣೆ: ಬಾಹ್ಯಾಕಾಶದಲ್ಲಿ ISRO ಮತ್ತೊಂದು ಐತಿಹಾಸಿಕ ಸಾಧನೆ..!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಬಾಹ್ಯಾಕಾಶದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮಾಡಿದೆ. ಅಮೆರಿಕಾದ ಬ್ಲ್ಯೂಬರ್ಡ್ ಬ್ಲ್ಯಾಕ್-2 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಈ ಮೊದಲು ಉಪಗ್ರಹವನ್ನು ಡಿಸೆಂಬರ್ 15ರಂದು ಉಡಾವಣೆಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ಉಡಾವಣೆ ಮುಂದೂಡಲ್ಪಟ್ಟಿತು. ಇಸ್ರೋ ವಿಳಂಬಕ್ಕೆ ನಿರ್ದಿಷ್ಟ ಕಾರಣವನ್ನೇನೂ ತಿಳಿಸಿರಲಿಲ್ಲ.
BlueBird Block-2 LVM3-M6 : ಆಗಸದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿದ ಇಸ್ರೋ
Success of ISRO : ಅಮೆರಿಕಾದ ಕನಸಿನ ಯೋಜನೆಗೆ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಾಥ್ ನೀಡಿದೆ. ಬ್ಲೂಬರ್ಡ್ ಬ್ಲಾಕ್ 2 ಸಂವಹನ ಉಪಗ್ರಹವನ್ನು ಶ್ರೀಹರಿಕೋಟ ಉಡಾವಣೆ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ಇಸ್ರೋ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO), ಇಂದು (ಡಿ. 24) ಶ್ರೀಹರಿಕೋಟ ಉಡಾವಣೆ ಕೇಂದ್ರದಿಂದ LVM3-M6 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಅಮೆರಿಕ ಮೂಲದ ಸಂಸ್ಥೆಯ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
AST SpaceMobile ಸಂಸ್ಥೆಯ ವಾಣಿಜ್ಯ ಉದ್ದೇಶಗಳಿಗಾಗಿ ‘ಬ್ಲೂಬರ್ಡ್ ಬ್ಲಾಕ್-2’ (BlueBird Block-2) ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೂಲಕ ಉಪಗ್ರಹ ಸಂವಹನ ಕ್ಷೇತ್ರದಲ್ಲಿ ಇಸ್ರೋ ಹೊಸ ಇತಿಹಾಸ ಬರೆದಿದೆ. ಇಸ್ರೋ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ರಾಕೆಟ್ ಇತಿಹಾಸದಲ್ಲೇ ಇದುವರೆಗೆ ಉಡಾವಣೆ ಮಾಡಲಾದ ಅತ್ಯಂತ ತೂಕದ ಉಪಗ್ರಹ ಇದಾಗಿತ್ತು. ಆ ಮೂಲಕ, ಪೇಲೋಡ್ ಎಂಬ ಹೆಗ್ಗಳಿಕೆಗೆ ಬ್ಲೂಬರ್ಡ್ ಬ್ಲಾಕ್ – 2 ಪಾತ್ರವಾಗಿದೆ. ಈ ರಾಕೆಟ್, 223 ಚದರ ಮೀಟರ್ ವಿಸ್ತೀರ್ಣದ ಬೃಹತ್ ‘ಫೇಸ್ಡ್ ಅರೇ ಆಂಟೆನಾ’ ಹೊಂದಿದೆ.
ಇಸ್ರೋದ ಐತಿಹಾಸಿಕ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. “ಭಾರತದ ಯುವಶಕ್ತಿಯಿಂದ ಪ್ರೇರಿತವಾದ ನಮ್ಮ ಬಾಹ್ಯಾಕಾಶ ಕಾರ್ಯಕ್ರಮವು ಹೆಚ್ಚುಹೆಚ್ಚು ಸುಧಾರಿತವಾಗಿ ಮತ್ತು ಪ್ರಭಾವಶಾಲಿಯಾಗುತ್ತಿದೆ. ಈ ಸಾಮರ್ಥ್ಯ, ಸ್ವಾವಲಂಬನೆಗೆ ಸಿಕ್ಕ ಉತ್ತೇಜನ ಮತ್ತು ಮುಂದಿನ ಪೀಳಿಗೆಗೆ ಅತ್ಯಂತ ಆಶಾದಾಯಕವಾಗಿದೆ”ಎಂದು ಪ್ರಧಾನಿಗಳು ಹೇಳಿದ್ದಾರೆ.
Esanje
ಬ್ಲೂಬರ್ಡ್ ಬ್ಲಾಕ್ -2 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ
ISRO launches BlueBird Block-2 satellite for AST SpaceMobile
ಇಸ್ರೋ ಬ್ಲೂಬರ್ಡ್ ಬ್ಲಾಕ್ -2 ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಉಡಾಯಿಸಿತು. ನವದೆಹಲಿ, ಡಿ.24- ಭಾರತದ ಬಾಹುಬಲಿ ರಾಕೆಟ್, ಲಾಂಚ್ ವೆಹಿಕಲ್ ಮಾರ್ಕ್-3 (ಎಲ್‌ಎಂವಿ 3) ಎಂ 6, ಇಂದು ಬೆಳಿಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಿದೆ. ಅಮೆರಿಕದ ನಾವೀನ್ಯಕಾರ ಸ್ಪೇಸ್ ಮೊಬೈಲ್‌ನ ಮುಂದಿನ ಪೀಳಿಗೆಯ ಸಂವಹನ ಉಪಗ್ರಹವಾದ ಬ್ಲೂಬರ್ಡ್ 6 ನೊಂದಿಗೆ ಉಡಾವಣೆಯಾಯಿತು.
ಇದು ಭಾರತೀಯ ಲಾಂಚರ್ ಹೊತ್ತೊಯ್ಯುವ ಅತ್ಯಂತ ಭಾರವಾದ ಪೇಲೋಡ್ ಆಗಿದೆ. ಬಾಹ್ಯಾಕಾಶದಿಂದ ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬ್ರಾಡ್‌ಬ್ಯಾಂಡ್ ಅನ್ನು ಉಡಾಯಿಸುವುದು ಈ ಉಡಾವಣೆಯ ಗುರಿಯಾಗಿದೆ.
24 ಗಂಟೆಗಳ ಕೌಂಟ್‌ಡೌನ್ ಮುಕ್ತಾಯಗೊಂಡಂತೆ, ಎರಡು 200 ಘನ ಬೂಸ್ಟರ್‌ಗಳಿಂದ ಬೆಂಬಲಿತವಾದ 43.5 ಮೀಟರ್ ಎತ್ತರದ ರಾಕೆಟ್ ಚೆನ್ನೈನಿಂದ ಪೂರ್ವಕ್ಕೆ 135 ಕಿಮೀ ದೂರದಲ್ಲಿರುವ ಈ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಎರಡನೇ ಉಡಾವಣಾ ಪ್ಯಾಡ್‌ನಿಂದ ಬೆಳಿಗ್ಗೆ 8:55 ಕ್ಕೆ ನಭಕ್ಕೆ ಹಾರಿತು.
ಸುಮಾರು 15 ನಿಮಿಷಗಳ ಹಾರಾಟದ ನಂತರ, ರಾಕೆಟ್‌ನಲ್ಲಿ ಪಿಗ್ಗಿಬ್ಯಾಕ್ ಸವಾರಿ ಮಾಡುವ ಬಾಹ್ಯಾಕಾಶ ನೌಕೆ ಬ್ಲೂಬರ್ಡ್ ಬ್ಲಾಕ್-2 ಬೇರ್ಪಟ್ಟು ಸುಮಾರು 520 ಕಿಮೀ ಎತ್ತರದಲ್ಲಿ ಅದರ ಉದ್ದೇಶಿತ ಕಕ್ಷೆಯನ್ನು ತಲುಪಿತು.
ಎಲ್‌ಎಂವಿ 3- ಎಂ 6 ಯಶಸ್ವಿಯಾಗಿ ಮತ್ತು ನಿಖರವಾಗಿ ಬ್ಲೂಬರ್ಡ್ ಬ್ಲಾಕ್-2 ಸಂವಹನ ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ, ಎಂದು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದರು.
ಎಂದು ನಾರಾಯಣನ್ ಹೇಳಿದರು, ಇದು ಜಾಗತಿಕ ರಂಗದಲ್ಲಿ ಯಾವುದೇ ಉಡಾವಣಾ ವಾಹನದ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಉಡಾವಣೆಯನ್ನು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಎಂದು ಕರೆದರು.ಭಾರತೀಯ ನೆಲದಿಂದ ಉಡಾಯಿಸಲಾದ ಅತ್ಯಂತ ಭಾರವಾದ ಉಪಗ್ರಹವಾದ ಅಮೆರಿಕದ ಬಾಹ್ಯಾಕಾಶ ನೌಕೆ ಬ್ಲೂಬರ್ಡ್ ಬ್ಲಾಕ್-2 ಅನ್ನು ಅದರ ಉದ್ದೇಶಿತ ಕಕ್ಷೆಗೆ ಸೇರಿಸುವ ಯಶಸ್ವಿ ಎಲ್‌ಎಂವಿ 3-ಎಂ 6 ಉಡಾವಣೆಯು ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ಹೆಮ್ಮೆಯ ಮೈಲಿಗಲ್ಲನ್ನು ಸೂಚಿಸುತ್ತದೆ.
ಇದು ಭಾರತದ ಹೆವಿ-ಲಿಫ್‌್ಟ ಉಡಾವಣಾ ಸಾಮರ್ಥ್ಯವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ವಾಣಿಜ್ಯ ಉಡಾವಣಾ ಮಾರುಕಟ್ಟೆಯಲ್ಲಿ ನಮ್ಮ ಬೆಳೆಯುತ್ತಿರುವ ಪಾತ್ರವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.ಬ್ಲೂಬರ್ಡ್ 6 ಎಂಬ ಉಪಗ್ರಹವು ಮುಂದಿನ ಪೀಳಿಗೆಯ ಬ್ಲೂಬರ್ಡ್ ಬ್ಲಾಕ್ -2 ಸಂವಹನ ಉಪಗ್ರಹಗಳ ಭಾಗವಾಗಿದ್ದು, ಇದನ್ನು ಪ್ರಮಾಣಿತ ಮೊಬೈಲ್ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಘರ್ಷಣೆಯನ್ನು ತಪ್ಪಿಸಲು ಉಡಾವಣೆಯನ್ನು 90 ಸೆಕೆಂಡುಗಳಷ್ಟು ವಿಳಂಬಗೊಳಿಸಲಾಯಿತು. ಇಸ್ರೋ ಎಚ್ಚರಿಕೆಯ ವಿಧಾನವನ್ನು ತೆಗೆದುಕೊಂಡು ಉಡಾವಣಾ ವಾಹನ ಮಾರ್ಕ್ 3 ಎಂ 6 ಹಾರಾಟದ ಉಡಾವಣೆಯನ್ನು 90 ಸೆಕೆಂಡುಗಳಷ್ಟು ವಿಳಂಬಗೊಳಿಸಲು ನಿರ್ಧರಿಸಿತು. ಇದನ್ನು ಮೊದಲು ಬೆಳಿಗ್ಗೆ 8:54 ಕ್ಕೆ ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು ಆದರೆ ನಂತರ ಸಮಯವನ್ನು 8 ಗಂಟೆ 55 ನಿಮಿಷ 30 ಸೆಕೆಂಡುಗಳಿಗೆ ಮುಂದೂಡಲಾಯಿತು.
ಬಾಹುಬಲ್ಲಿ ರಾಕೆಟ್‌ನ ಹಾರಾಟದ ಹಾದಿಯಲ್ಲಿ ಅವಶೇಷಗಳು ಅಥವಾ ಇತರ ಉಪಗ್ರಹಗಳೊಂದಿಗೆ ಸಂಯೋಗವಿರುವುದರಿಂದ ಡಿಕ್ಕಿ ಹೊಡೆಯುವ ಅವಕಾಶವಿದೆ ಎಂದು ಇಸ್ರೋ ದೃಢಪಡಿಸಿತು, ಆದ್ದರಿಂದ ಈ ವಿಳಂಬವಾಗಿದೆ. ಇವು ಶ್ರೀಹರಿಕೋಟಾದ ಮೇಲಿನ ಜಾಗವು ಸಾವಿರಾರು ಉಪಗ್ರಹಗಳು ತಲೆಯ ಮೇಲೆ ಹಾದು ಹೋಗುವುದರಿಂದ ಕಿಕ್ಕಿರಿದಿರುವುದರಿಂದ ವಿಳಂಬಗಳು ಅಸಾಮಾನ್ಯವೇನಲ್ಲ.
ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಎಲ್‌ಎಂವಿ 3 ರಾಕೆಟ್ ಬಳಸಿ ಭಾರತದಿಂದ ಅತ್ಯಂತ ಭಾರವಾದ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ್ದಕ್ಕಾಗಿ ಮತ್ತು ಗಗನ್ ಯಾನ್‌ನಂತಹ ಭವಿಷ್ಯದ ಕಾರ್ಯಾಚರಣೆಗಳಿಗೆ ಅಡಿಪಾಯವನ್ನು ಬಲಪಡಿಸಿದ್ದಕ್ಕಾಗಿ ಇಸ್ರೋವನ್ನು ಅಭಿನಂದಿಸಿದ್ದಾರೆ.
ಭಾರ ಎತ್ತುವ ಎಲ್‌ಎಂವಿ 3 ರಾಕೆಟ್‌ನ ಯಶಸ್ಸು ಜಾಗತಿಕ ವಾಣಿಜ್ಯ ಉಡಾವಣಾ ಮಾರುಕಟ್ಟೆಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಬಲಪಡಿಸಿದೆ ಎಂದು ಪ್ರಧಾನಿ ಹೇಳಿದರು.
ಉಡಾವಣಾ ವಾಹನ ಮಾರ್ಕ್-3ಇಸ್ರೋ ಅಭಿವೃದ್ಧಿಪಡಿಸಿದ 3, ಎರಡು ಘನ ಸ್ಟ್ರಾಪ್-ಆನ್ ಮೋಟಾರ್‌ಗಳು (200),
ಭಾರತದ ಬಾಹ್ಯಾಕಾಶ ವಲಯದಲ್ಲಿ ಮಹತ್ವದ ಹೆಜ್ಜೆ. ಭಾರತೀಯ ಮಣ್ಣಿನಿಂದ ಉಡಾಯಿಸಲಾದ ಅತ್ಯಂತ ಭಾರವಾದ ಉಪಗ್ರಹವಾದ ಅಮೆರಿಕದ ಬಾಹ್ಯಾಕಾಶ ನೌಕೆ ಬ್ಲೂಬರ್ಡ್ ಬ್ಲಾಕ್ -2 ಅನ್ನು ಅದರ ಉದ್ದೇಶಿತ ಕಕ್ಷೆಗೆ ಸೇರಿಸುವ ಯಶಸ್ವಿ ಎಲ್‌ಎಂವಿ 3- ಎಂ 6 ಉಡಾವಣೆಯು ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ಹೆಮ್ಮೆಯ ಮೈಲಿಗಲ್ಲನ್ನು ಗುರುತಿಸುತ್ತದೆ ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದು ಭಾರತದ ಭಾರ ಎತ್ತುವ ಉಡಾವಣಾ ಸಾಮರ್ಥ್ಯವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ವಾಣಿಜ್ಯ ಉಡಾವಣಾ ಮಾರುಕಟ್ಟೆಯಲ್ಲಿ ನಮ್ಮ ಬೆಳೆಯುತ್ತಿರುವ ಪಾತ್ರವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಎಲ್‌ಎಂವಿ 3 ಉಡಾವಣೆಯು ಆತ್ಮನಿರ್ಭರ ಭಾರತ್ ಕಡೆಗೆ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು ಮತ್ತು ಶ್ರಮಶೀಲ ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಅಭಿನಂದಿಸಿದರು.ಭಾರತವು ಬಾಹ್ಯಾಕಾಶ ಜಗತ್ತಿನಲ್ಲಿ ಇನ್ನೂ ಎತ್ತರಕ್ಕೆ ಏರುತ್ತಿದೆ! ಭಾರತದ ಯುವಜನರಿಂದ ನಡೆಸಲ್ಪಡುತ್ತಿರುವ ನಮ್ಮ ಬಾಹ್ಯಾಕಾಶ ಕಾರ್ಯಕ್ರಮವು ಹೆಚ್ಚು ಮುಂದುವರಿದ ಮತ್ತು ಪ್ರಭಾವಶಾಲಿಯಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಎಲ್‌ಎಂವಿ 3 ವಿಶ್ವಾಸಾರ್ಹ ಭಾರ ಎತ್ತುವ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವುದರೊಂದಿಗೆ, ನಾವು ಗಗನ್ಯಾನ್‌ನಂತಹ ಭವಿಷ್ಯದ ಕಾರ್ಯಾಚರಣೆಗಳಿಗೆ ಅಡಿಪಾಯವನ್ನು ಬಲಪಡಿಸುತ್ತಿದ್ದೇವೆ, ವಾಣಿಜ್ಯ ಉಡಾವಣಾ ಸೇವೆಗಳನ್ನು ವಿಸ್ತರಿಸುತ್ತಿದ್ದೇವೆ ಮತ್ತು ಜಾಗತಿಕ ಪಾಲುದಾರಿಕೆಗಳನ್ನು ಆಳಗೊಳಿಸುತ್ತಿದ್ದೇವೆ ಎಂದು ಅವರು ಹೇಳಿದರು.ಈ ಹೆಚ್ಚಿದ ಸಾಮರ್ಥ್ಯ ಮತ್ತು ಸ್ವಾವಲಂಬನೆಗೆ ಉತ್ತೇಜನವು ಮುಂಬರುವ ಪೀಳಿಗೆಗೆ ಅದ್ಭುತವಾಗಿದೆ ಎಂದು ಪ್ರಧಾನಿ ಹೇಳಿದರು.
PTV
ಅಮೆರಿಕದ ಭಾರೀ ತೂಕದ ಇಂಟರ್‌ನೆಟ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಬಾಹುಬಲಿ
ಭಾರತದ ‘ಬಾಹುಬಲಿ’ ರಾಕೆಟ್ ಮಾರ್ಕ್-3 (LVM3)-M6 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಅಮೆರಿಕದ ಬ್ಲೂಬರ್ಡ್-6 (BlueBird 6) ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಶ್ರೀಹರಿಕೋಟಾ ಉಡ್ಡಯನ ಕೇಂದ್ರದ ಎರಡನೇ ಲಾಂಚ್ ಪ್ಯಾಡ್‌ನಿಂದ ಬೆಳಗ್ಗೆ 8:54ಕ್ಕೆ ಮಾರ್ಕ್ 3 ರಾಕೆಟ್ 6,500 ಕೆ.ಜಿ ತೂಕದ ಭಾರೀ ಉಪಗ್ರಹವನ್ನು ಹೊತ್ತುಕೊಂಡು ನಭಕ್ಕೆ ಚಿಮ್ಮಿತು.
ಸುಮಾರು 15 ನಿಮಿಷಗಳ ಹಾರಾಟದ ನಂತರ ರಾಕೆಟ್‌ನಿಂದ ಬ್ಲೂಬರ್ಡ್ ಬ್ಲಾಕ್-2 ಬೇರ್ಪಟ್ಟು ಸುಮಾರು 520 ಕಿ.ಮೀ .ಎತ್ತರದಲ್ಲಿ ಅದರ ಉದ್ದೇಶಿತ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿತು.
ಉಪಗ್ರಹ ಉಡಾವಣೆ ಉಶಸ್ವಿಯಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಇಸ್ರೋವನ್ನು ಅಭಿನಂದಿಸಿದ್ದಾರೆ. LVM3-M6 ಯಶಸ್ವಿಯಾಗಿ ಮತ್ತು ನಿಖರವಾಗಿ ಬ್ಲೂಬರ್ಡ್ ಬ್ಲಾಕ್-2 ಸಂವಹನ ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ ಎಂದು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದರು.
News 1st
ಮೊಬೈಲ್ ನೆಟ್‌ವರ್ಕ್ ಕ್ಷೇತ್ರದಲ್ಲಿ ಇಸ್ರೋ ಹೊಸ ಕ್ರಾಂತಿ.. ‘BlueBird’ ಉಪಗ್ರಹದ ಶಕ್ತಿ ಎಂಥದ್ದು..?
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ BlueBird Block-2 ಎಂಬ ಉಪಗ್ರಹವನ್ನು ಯಶಸ್ವಿಯಾಗಿದೆ. ಅಮೆರಿಕದ ಕಂಪನಿ ‘ಎಎಸ್‌ಟಿ ಸ್ಪೇಸ್ ಮೊಬೈಲ್’ನ ಪ್ರಮುಖ ಉಪಗ್ರಹ (AST SpaceMobile) BlueBird Block-2 ಆಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ BlueBird Block-2 ಎಂಬ ಉಪಗ್ರಹವನ್ನು ಯಶಸ್ವಿಯಾಗಿದೆ. ಅಮೆರಿಕದ ಕಂಪನಿ ‘ಎಎಸ್‌ಟಿ ಸ್ಪೇಸ್ ಮೊಬೈಲ್’ನ ಪ್ರಮುಖ ಉಪಗ್ರಹ (AST SpaceMobile) BlueBird Block-2 ಆಗಿದೆ.
ಬಾಹುಬಲಿ ರಾಕೆಟ್ LVM3-M6 ಕಾರ್ಯಾಚರಣೆ ಮೂಲಕ ಸಂವಹನ ಉಪಗ್ರಹ ಬ್ಲೂಬರ್ಡ್ ಬ್ಲಾಕ್-2 ಅನ್ನು ಭೂಮಿಯ ಕೆಳ ಕಕ್ಷೆಯಲ್ಲಿ ಇರಿಸಲಾಗಿದೆ. ಇಂದು ಬೆಳಗ್ಗೆ 8:55:30 ಕ್ಕೆ ಯಶಸ್ವಿಯಾಗಿ ಉಡಾವಣೆಯಾಗಿದೆ.
https://www.theweek.in/news/sci-tech/2025/08/11/isro-s-lvm3-rocket-to-launch-ast-space-mobile-s-block-2-blue-bird-from-india.html

Total Fertility Rate: Across countries 🌎

Africa has the highest fertility, and parts of East Asia see some of the lowest birth rates.Developed countries are almost all below replacement level (2.1 births per woman), with one notable exception: Israel.Fertility rates are dropping across the world.Between 2019 and 2024, there were only 12 countries that saw fertility rates grow—meanwhile rates declined or stayed the same in 185 countries.Total fertility rate is defined as the average number of children that would be born alive to a woman during her lifetime if she were to pass through her childbearing years conforming to the age-specific fertility rates of a given year.The eight highest ranking countries in terms of fertility are all found in Africa, with the top three being Chad (6.03), Somalia (6.01), and the DRC (5.98). Even so, these countries have seen meaningful five-year drops in their rates, averaging around a 0.4 decrease in births per woman.At the bottom of the rankings, we have four Asian jurisdictions: Taiwan (0.86), South Korea (0.73), Hong Kong (0.73), and Macau (0.68).Mapped: Every Country by Total Fertility RatePublished 17 hours ago on December 22, 2025By Iswardi Ishak green checkmark icon Featured
Fertility rates are falling almost universally; however, there are a handful of outliers that have seen rates increase slightly in the last five years.As a general rule: Africa has the highest fertility, and parts of East Asia see some of the lowest birth rates.Developed countries are almost all below replacement level (2.1 births per woman), with one notable exception: Israel.Fertility rates are dropping across the world.Between 2019 and 2024, there were only 12 countries that saw fertility rates grow—meanwhile rates declined or stayed the same in 185 countries.This map visualization by Idwardi Ishak uses data from the United Nations to show the total fertility rate for countries and other notable jurisdictions globally.
Total fertility rate is defined as the average number of children that would be born alive to a woman during her lifetime if she were to pass through her childbearing years conforming to the age-specific fertility rates of a given year.Total Fertility Rate Data by CountryThe below table shows the total fertility rate for each jurisdiction using data from 2019 and 2024, while also highlighting the five-year change between the years.
The eight highest ranking countries in terms of fertility are all found in Africa, with the top three being Chad (6.03), Somalia (6.01), and the DRC (5.98). Even so, these countries have seen meaningful five-year drops in their rates, averaging around a 0.4 decrease in births per woman.At the bottom of the rankings, we have four Asian jurisdictions: Taiwan (0.86), South Korea (0.73), Hong Kong (0.73), and Macau (0.68).Where Fertility is Falling the FastestFertility is falling fastest in a mix of very different regions, highlighting how universal the shift has become.Some of the sharpest declines since 2019 are in Africa, including Niger and Uganda, where fertility remains high but is dropping rapidly as urbanization and education expand.East Asia continues to see steep declines from already low levels, with China, South Korea, Hong Kong, and Macau pushing deeper into ultra-low fertility. Meanwhile, parts of the Middle East (such as Kuwait) and Eastern Europe (including Lithuania) have also seen rapid drops, driven by economic pressure, delayed family formation, and migration.The Developed World: One Big OutlierIn the developed countries, almost all places are now well below the replacement rate threshold.That said, Israel remains as the one big outlier. In 2024, the country had a fertility rate of 2.79 children per woman.This is largely because having children is strongly supported both culturally and institutionally in Israel, across income and education levels. Further, high fertility is reinforced by generous family policies, widespread childcare support, and strong social norms, including large families among religious communities.Source: https://www.visualcapitalist.com/cp/mapped-countries-by-fertility-rate/
Govinda Rao Committee and Regional Imbalances in Karnataka
Background: Historical Regional Imbalances
Karnataka has long faced inter-regional developmental disparities, especially between North / Kalyana Karnataka and South & Coastal Karnataka.

In 2002, the Dr. D.M. Nanjundappa Committee (High Power Committee for Redressal of Regional Imbalances) identified 114 backward taluks, categorised as most backward, very backward, and backward, mostly concentrated in North and Kalyana Karnataka. The committee recommended targeted interventions and large fiscal allocations (about ₹31,000 crore) over eight years to bridge the gap.
Article 371J/K was inserted into the Constitution (Ninety-eighth Amendment Act, 2012) providing special development measures, reservations and a dedicated Regional Development Board to uplift the Hyderabad-Karnataka region.
Despite these efforts, significant disparities in education, healthcare, infrastructure, income and human development indicators persist across regions.
Govinda Rao Committee — Formation & Mandate
To reassess and update Karnataka’s regional imbalance strategy, the Government constituted the Karnataka Regional Imbalance Remediation Committee in March 2024, chaired by Prof. M. Govinda Rao, a noted economist and former Member of the 14th Finance Commission.
Key Mandate
Review the implementation of the Nanjundappa report and existing development indicators.
Revisit and update criteria for identifying backward areas, considering current socio-economic realities (per capita income, education, health, infrastructure, agriculture, industry etc.).
Formulate policy and fiscal recommendations for equitable development across all regions.
Engage stakeholders and government departments for comprehensive assessment.
The committee’s methodology is more comprehensive than earlier efforts, with increased indicators and field consultations in all districts.
Timeline
Originally expected by September 2025, the Govinda Rao committee sought additional time, and the report is now expected by January 2026.
Government’s Recent Statements & Policy Direction
Winter Session 2025: Assembly Response
On 19–20 December 2025, Chief Minister Siddaramaiah, replying to a special debate in the Karnataka Assembly at Belagavi, outlined the government’s approach to regional imbalance, based on findings and anticipated recommendations of the Govinda Rao panel:
Equitable Allocation of Welfare Benefits
The state has about 6.95 crore residents, of whom ≈2.96 crore (42%) are in North Karnataka.
North Karnataka accounts for ≈53% of the state’s geographical area and ≈43% of assembly seats.
CM emphasized that at least 42–43% of government welfare benefits should be allocated to North Karnataka on the basis of its population and area share.
Guarantee Schemes & Funds Spent
Out of Rs 1,06,066 crore spent on state guarantee schemes, Rs 46,277 crore (43.63%) has gone to North Karnataka beneficiaries, aligning with the population share.
Sectors include Gruha Lakshmi, Gruha Jyothi, Anna Bhagya, Shakti, Yuva Nidhi and others.
(Gruha Jyoti is a subsidy scheme providing free electricity up to 200 units, illustrating the nature of flagship welfare programmes.
Income & Development Gap
The Chief Minister noted stark disparities: Bengaluru Urban’s per capita income (~₹7.4 lakh) versus Kalaburagi (~₹1.2 lakh), underlining ongoing inequality within the state.
The government aims to narrow this gap significantly over coming years.
Report Implementation & Additional Measures
CM confirmed that once the Govinda Rao committee report is received, its recommendations will be implemented fully.
Proposals like ₹500 crore for Kittur Karnataka development, establishment of 300 Karnataka Public Schools, and implementation of education sector reforms based on a separate committee led by Prof. Chhaya Devadgaonkar were highlighted.
Political Debate
Opposition parties, notably the BJP, challenged the government’s assertions and demanded further clarity and special package announcements, leading to political contention in the Assembly.
What the Govinda Rao Committee Report Is Expected to Focus On
Based on media previews and statements by the committee:
1. Updated Development Indicators
Revising deprecated indicators from the Nanjundappa framework (e.g., telephone access, post offices) to current metrics covering human development, services, infrastructure and income.
2. Taluk-Level Assessment
Comprehensive evaluation of all 236 taluks to identify those lagging behind.
3. Sectoral Recommendations
Strategies to enhance:
Education and health infrastructure
Agriculture and allied sectors
Industrial and service sector development
Irrigation, connectivity and transportation
Strengthening institutions such as the Kalyana Karnataka Regional Development Board with long-term planning frameworks.
4. Fiscal Formula
Suggesting need-based resource allocation formulas, possibly moving beyond population-only criteria to include development gaps, density, and economic potential.
Significance & Implications
Policy
The Govinda Rao panel’s report is expected to reshape Karnataka’s regional development policy by updating the basis of backwardness and recommending actionable plans to address structural disparities.
Political & Social
Debate around regional imbalance is not merely administrative but politically charged, reflecting demands for equitable development and scrutiny of welfare spending.
Future Direction
Implementation of committee recommendations may influence:
Budgetary priorities
Targeted welfare schemes
Institutional reforms for regional governance

Conclusion
The Govinda Rao Committee represents Karnataka’s latest, evidence-based effort to objectively assess and address long-standing regional imbalances. Its pending report (expected January 2026) will guide policy decisions, resource allocation, and welfare strategies, aiming for a more balanced, inclusive development trajectory across the state.
ದಕ್ಷಿಣ ಪಿನಾಕಿನಿ ನ್ಯಾಯಮಂಡಳಿ: ‘ಸುಪ್ರೀಂ’ ಇಂಗಿತ (South Pennar (Dakshina Pinakini River)
ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯ ಮಂಡಳಿ ರಚಿಸಲು ಸುಪ್ರೀಂ ಕೋರ್ಟ್ ಇಂಗಿತ ವ್ಯಕ್ತಪಡಿಸಿದೆ.
•ಜಲವಿವಾದವೇನು?: ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟಿ ಕೆರೆ ಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ಗೆ 2018ರ ಮೇ 18ರಂದು ಅರ್ಜಿ ಸಲ್ಲಿಸಿತ್ತು. ಜಲವಿವಾದ ನ್ಯಾಯ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2019ರ ನವೆಂಬರ್ನಲ್ಲಿ ಮನವಿ ಮಾಡಿತ್ತು.
•ಜಲಶಕ್ತಿ ಸಚಿವಾಲಯವು 2020ರಲ್ಲಿ ಸಂಧಾನ ಸಭೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿರಲಿಲ್ಲ. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರವನ್ನು 2024ರ ಜೂನ್ನಲ್ಲಿ ಒತ್ತಾಯಿಸಿತ್ತು.
•ಈ ನಡುವೆ, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲಶಕ್ತಿ ಸಚಿವಾಲಯವು ಹೊಸ ಸಂಧಾನ ಸಮಿತಿ ರಚಿಸಿತ್ತು. ಈ ಸಮಿತಿಯು ಉಭಯ ರಾಜ್ಯಗಳ ನಡುವೆ 9 ಸಭೆಗಳನ್ನು ನಡೆಸಿತ್ತು. ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು.
•ಜಲ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಮಾತುಕತೆಯ ಮೂಲಕ ಈ ವಿವಾದವನ್ನು ಸೌಹಾರ್ದ ಯುತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರವು ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದಿತ್ತು.
•ಕರ್ನಾಟಕದ ಜಲಾನಯನ ಪ್ರದೇಶದಲ್ಲಿ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿ ನೀರನ್ನು ಬಳಸಲು ಯೋಜಿಸಲಾಗಿದೆ. ಇದರಲ್ಲಿ 2 ಟಿಎಂಸಿ ಮತ್ತು ಹೆಚ್ಚುವರಿ ನೀರು ತಮಿಳುನಾಡಿಗೆ ಉಳಿದಿದೆ. ಇದು ತಮಿಳುನಾಡಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು.
ದಕ್ಷಿಣ ಪಿನಾಕಿನಿ (ಪೆನ್ನಾರ್) ನದಿ: ಸಮಗ್ರ ಮಾಹಿತಿ
- ಭೌಗೋಳಿಕ ಹಿನ್ನೆಲೆ (Geographical Background)
ಉಗಮ: ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಸಾಲಿನಲ್ಲಿರುವ ಚೆನ್ನಕೇಶವ ಬೆಟ್ಟದಲ್ಲಿ ಈ ನದಿ ಹುಟ್ಟುತ್ತದೆ.
ಹರಿವು: ಇದು ಕರ್ನಾಟಕದಲ್ಲಿ ಸುಮಾರು 79 ಕಿ.ಮೀ ಹರಿದು (ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳ ಮೂಲಕ), ನಂತರ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ, ವಿಲ್ಲುಪುರಂ ಮತ್ತು ಕಡಲೂರು ಜಿಲ್ಲೆಗಳ ಮೂಲಕ ಹರಿಯುತ್ತದೆ.
ಅಂತ್ಯ: ಅಂತಿಮವಾಗಿ ತಮಿಳುನಾಡಿನ ಕಡಲೂರು ಬಳಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಉದ್ದ: ಒಟ್ಟು ಉದ್ದ ಸುಮಾರು 497 ಕಿ.ಮೀ.
- ಜಲಾನಯನ ಪ್ರದೇಶದ ಹಂಚಿಕೆ (Basin Distribution)
ಈ ನದಿಯ ಒಟ್ಟು ಜಲಾನಯನ ಪ್ರದೇಶವು ಸುಮಾರು 16,019 ಚದರ ಕಿ.ಮೀ ವಿಸ್ತಾರವಾಗಿದೆ:
ತಮಿಳುನಾಡು: 77% (ಅತಿ ಹೆಚ್ಚು ಭಾಗ ತಮಿಳುನಾಡಿನಲ್ಲಿದೆ).
ಕರ್ನಾಟಕ: 23% (ನದಿಯ ಉಗಮ ಮತ್ತು ಮೇಲ್ಭಾಗದ ಪ್ರದೇಶ).
- ಜಲ ವಿವಾದದ ಮೂಲ ಕಾರಣ (Origin of the Dispute)
ವಿವಾದದ ಪ್ರಮುಖ ಕೇಂದ್ರಬಿಂದು ಮಾರ್ಕಂಡೇಯ ನದಿ. ಇದು ದಕ್ಷಿಣ ಪಿನಾಕಿನಿಯ ಪ್ರಮುಖ ಉಪನದಿಯಾಗಿದೆ.
ಕರ್ನಾಟಕದ ಯೋಜನೆ: ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯರಗೋಳ್ ಎಂಬಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿದೆ. ಇದು ಕೋಲಾರ, ಮಾಲೂರು ಮತ್ತು ಬಂಗಾರಪೇಟೆ ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯಾಗಿದೆ.
ತಮಿಳುನಾಡಿನ ಆಕ್ಷೇಪ: ಅಣೆಕಟ್ಟು ನಿರ್ಮಾಣದಿಂದ ಕೃಷ್ಣಗಿರಿ ಜಿಲ್ಲೆಯ ರೈತರಿಗೆ ಸಿಗುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಇದು 1892 ರ ಅಂತರರಾಜ್ಯ ಒಪ್ಪಂದದ ಉಲ್ಲಂಘನೆಯಾಗಿದೆ ಎಂಬುದು ತಮಿಳುನಾಡಿನ ವಾದ.
- ಇತ್ತೀಚಿನ ಕಾನೂನು ಬೆಳವಣಿಗೆಗಳು (Legal Status – 2024-25)
ಸುಪ್ರೀಂ ಕೋರ್ಟ್ ಹಸ್ತಕ್ಷೇಪ: ತಮಿಳುನಾಡು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ವಿವಾದ ಬಗೆಹರಿಸಲು ‘ದಕ್ಷಿಣ ಪಿನಾಕಿನಿ ಜಲವಿವಾದ ನ್ಯಾಯಮಂಡಳಿ’ (Tribunal) ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವ ಇಂಗಿತ ವ್ಯಕ್ತಪಡಿಸಿದೆ.
ಕರ್ನಾಟಕದ ನಿಲುವು: ನ್ಯಾಯಮಂಡಳಿ ರಚನೆಗೆ ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ. ಸಚಿವರ ಮಟ್ಟದ ಮಾತುಕತೆಯ ಮೂಲಕ ಅಥವಾ ಕೇಂದ್ರ ಜಲ ಆಯೋಗದ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ರಾಜ್ಯ ಬಯಸಿದೆ.
ನೀರಿನ ಅಂಕಿಅಂಶ: ಕರ್ನಾಟಕವು ತನ್ನ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ 11.77 ಟಿಎಂಸಿ ನೀರಿನಲ್ಲಿ ಕೇವಲ 9.77 ಟಿಎಂಸಿ ಬಳಸಲು ಉದ್ದೇಶಿಸಿದೆ, ಉಳಿದ ನೀರು ತಮಿಳುನಾಡಿಗೆ ಸಹಜವಾಗಿಯೇ ಹರಿಯುತ್ತದೆ ಎಂದು ವಾದಿಸಿದೆ.
- ಪ್ರಮುಖ ತಾಂತ್ರಿಕಾಂಶಗಳು (Technical Table)
| ವೈಶಿಷ್ಟ್ಯ | ವಿವರ |
| ಇತರ ಹೆಸರುಗಳು | ದಕ್ಷಿಣ ಪೆನ್ನಾರ್, ಪನ್ನೈಯಾರ್ (Ponnaiyar) |
| ಪ್ರಮುಖ ಉಪನದಿ | ಮಾರ್ಕಂಡೇಯ ನದಿ |
| ಕರ್ನಾಟಕದ ಅಣೆಕಟ್ಟು | ಯರಗೋಳ್ ಅಣೆಕಟ್ಟು (ಮಾರ್ಕಂಡೇಯ ನದಿಗೆ) |
| ತಮಿಳುನಾಡಿನ ಅಣೆಕಟ್ಟು | ಕೆ.ಆರ್.ಪಿ (Krishnagiri Reservoir) ಮತ್ತು ಸಾತನೂರು ಅಣೆಕಟ್ಟು |
| ವಿವಾದಿತ ಕಾಯ್ದೆ | ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆ, 1956 |


ಪ್ರಚಲಿತ ವಿದ್ಯಮಾನಗಳು: 20ನೇ ಡಿಸೆಂಬರ್ 2025
- ಒಳಮೀಸಲಾತಿ ಮಸೂದೆಗೆ ಪರಿಷತ್ ಒಪ್ಪಿಗೆ
ಸಂದರ್ಭ: ಪರಿಶಿಷ್ಟಜಾತಿ ಯವರಿಗೆ ಒಳಮೀಸಲಾತಿ ಕಲ್ಪಿಸುವ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಉದ್ದೇಶದ ಮಸೂದೆಗೆ ವಿಧಾನ ಪರಿಷತ್ತು ಅಂಗೀಕಾರ ನೀಡಿದೆ.
- ಸಮಾಜ ಕಲ್ಯಾಣ ಸಚಿವ ವಿಧಾನ ಪರಿಷತ್ತಿನಲ್ಲಿ ‘ಕರ್ನಾಟಕ ಅನುಸೂಚಿತ ಜಾತಿಗಳ (ಉಪವರ್ಗೀ ಕರಣ) ಮಸೂದೆಯನ್ನು ಪರ್ಯಾಲೋಚನೆಗೆ ಮಂಡಿಸಿದರು.
ಇತರ ಮಸೂದೆಗಳು: lಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ–2025
- ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ (ತಿದ್ದುಪಡಿ) ಮಸೂದೆ–2025
- ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಮಸೂದೆ–2025
- ಕಾರಾಗೃಹಗಳಲ್ಲಿ ಎಐ ಆಧಾರಿತ ಭದ್ರತೆ
ಸಂದರ್ಭ: ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಭದ್ರತಾ ತಂತ್ರಾಂಶವನ್ನು ಅಳವಡಿಸಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ವಿಧಾನ ಸಭೆಯಲ್ಲಿ ಹೇಳಿದರು.
- ‘ಕಾರಾಗೃಹಗಳ ಭದ್ರತೆ ಹಾಗೂ ಆಡಳಿತ ವ್ಯವಸ್ಥೆ ಯನ್ನು ಬಲಪಡಿಸಿ, ಬಂದಿಗಳ ಚಲನವಲನಗಳ ಮೇಲೆ ಇನ್ನೂ ಹೆಚ್ಚಿನ ನಿಗಾವಹಿಸಲು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ‘ಎಐ– ಆಡಿಯೊ–ವಿಡಿಯೊ ಅನಾಲಿಟಿಕ್ಸ್ ಸಿಸ್ಟಮ್’ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದನ್ನು ಎಲ್ಲ ಕಾರಾಗೃಹಗಳಿಗೂ ವಿಸ್ತರಿಸಲಾಗುವುದು’ ಎಂದರು.
- ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ನಿಯಮ 69ರ ಅಡಿ ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಪರಮೇಶ್ವರ, ‘ರಾಜ್ಯದ ಯಾವುದೇ ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳು ಇರದಂತೆ ತಪಾಸಣೆ ಮಾಡಿ, ಡಿ.31ರೊಳಗೆ ಎಲ್ಲ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲು ಕಾರಾಗೃಹ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದರು.
- ಬಂದಿಗಳನ್ನು ಎ, ಬಿ, ಸಿ ಮಾದರಿಯಲ್ಲಿ ವರ್ಗೀಕರಿಸಿ, ಸೂಕ್ಷ್ಮವಾಗಿ ಮೇಲ್ವಿಚಾರಣೆ ನಡೆಸ ಲಾಗುತ್ತದೆ. ನಿಷೇಧಿತ ವಸ್ತುಗಳನ್ನು ಸರಬರಾಜು ಮಾಡುವ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಿಬ್ಬಂದಿಯ ಕರ್ತವ್ಯದ ಆಡಿಟ್ ಮಾಡಿ, ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
- ಅರಣ್ಯ ಗುತ್ತಿಗೆ ಕಾನೂನುಬಾಹಿರ: ಕೇಂದ್ರದ ಪೂರ್ವಾನುಮತಿ ಇಲ್ಲದೆ ಭೂಬಳಕೆ ಸಲ್ಲ: ಸುಪ್ರೀಂ
ಸಂದರ್ಭ: 1980ರ ಅರಣ್ಯ (ಸಂರಕ್ಷಣಾ) ಕಾಯ್ದೆಯ ಸೆಕ್ಷನ್ 2ರ ಅಡಿ ಯಲ್ಲಿ ಕೇಂದ್ರ ಸರ್ಕಾರದ ಪೂರ್ವಾ ನುಮತಿ ಇಲ್ಲದೆ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಲು ಅಥವಾ ಕೃಷಿ ಉದ್ದೇಶಗಳಿಗಾಗಿ ಬಳಸಲು ಸಾಧ್ಯವಿಲ್ಲ. ಕಾನೂನು ಉಲ್ಲಂಘಿಸಿ ನೀಡಿದ ಅಂತಹ ಯಾವುದೇ ಗುತ್ತಿಗೆ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
- ಕಲಘಟಗಿ ತಾಲ್ಲೂಕಿನ ಗಾಂಧಿ ಜೀವನ್ ಸಾಮೂಹಿಕ ಕೃಷಿ ಸಹಕಾರ ಸಂಘಕ್ಕೆ 134 ಎಕರೆ ಅರಣ್ಯ ಭೂಮಿಯ ಗುತ್ತಿಗೆ ಮುಂದುವರಿಸಲು ಅವಕಾಶ ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ರದ್ದುಪಡಿಸಿದೆ.
- ಅರಣ್ಯ ಭೂಮಿಯನ್ನು ಕೃಷಿ ಉದ್ದೇಶ ಗಳಿಗಾಗಿ ಗುತ್ತಿಗೆ ನೀಡುವುದೇ ಕಾನೂನು ಬಾಹಿರ ಮತ್ತು 1980ರ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿ ರುವ ನ್ಯಾಯಪೀಠವು, ‘ತಜ್ಞರೊಂದಿಗೆ ಸಮಾಲೋಚಿಸಿ ಸ್ಥಳೀಯ ಸಸ್ಯಗಳು ಮತ್ತು ಮರಗಳನ್ನು ನೆಡುವ ಮೂಲಕ 134 ಎಕರೆ ಪ್ರದೇಶದಲ್ಲಿ ಅರಣ್ಯವನ್ನು ಪುನರ್‌ಸ್ಥಾಪಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ 12 ತಿಂಗಳಲ್ಲಿ ಅನುಸರಣಾ ವರದಿ ಸಲ್ಲಿಸಬೇಕು‘ ಎಂದು ನಿರ್ದೇಶನ ನೀಡಿದೆ.
- ‘ಪ್ರತಿವಾದಿ ಸಹಕಾರ ಸಂಘಕ್ಕೆ ಕೃಷಿ ಉದ್ದೇಶಗಳಿಗಾಗಿ ಅರಣ್ಯಭೂಮಿ ಗುತ್ತಿಗೆ ನೀಡಿದ್ದು ಸರಿಯಲ್ಲ. ಇದರಿಂದಾಗಿ, ಸುಮಾರು 134 ಎಕರೆಗಳಷ್ಟು ವಿಸ್ತಾರ ವಾದ ಅರಣ್ಯ ಪ್ರದೇಶ ನಾಶವಾಯಿತು. ಅಲ್ಲದೇ, ಸಹಕಾರ ಸಂಘವು 10 ವರ್ಷಗಳಿಗೂ ಹೆಚ್ಚು ಕಾಲ ಅರಣ್ಯ ಪ್ರದೇಶದ ಗುತ್ತಿಗೆ ಪಡೆದಿತ್ತು. ಗುತ್ತಿಗೆಯ ವಿಸ್ತರಣೆಗೆ ಸಂಘ ಅರ್ಹತೆಯನ್ನೇ ಹೊಂದಿರಲಿಲ್ಲ’ ಎಂದು ಪೀಠ ಹೇಳಿದೆ.
ಪ್ರಕರಣವೇನು?
- ಕಲಘಟಗಿ ತಾಲ್ಲೂಕಿನ ಬೆಣಚಿ ಮತ್ತು ತುಮರಿಕೊಪ್ಪ ಗ್ರಾಮಗಳಲ್ಲಿರುವ 134 ಎಕರೆ ಮತ್ತು 6 ಗುಂಟೆಯನ್ನು ಸಹಕಾರ ಸಂಘಕ್ಕೆ ಹತ್ತು ವರ್ಷಗಳ ಅವಧಿಗೆ ಅರಣ್ಯ ಇಲಾಖೆ 1976ರಲ್ಲಿ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಅವಧಿಯಲ್ಲಿ, ಸಂಘದ ಸದಸ್ಯರು ಮರಗಳನ್ನು ಕಡಿದು ಭೂಮಿಯಲ್ಲಿ ಸಾಗುವಳಿ ಮಾಡಿದ್ದರು. ಗುತ್ತಿಗೆ ಅವಧಿಯನ್ನು ವಿಸ್ತರಿಸಲು ಅರಣ್ಯ ಇಲಾಖೆ 1985ರಲ್ಲಿ ನಿರಾಕರಿಸಿತ್ತು.
- ಈ ಆದೇಶ ಪ್ರಶ್ನಿಸಿ ಸಂಘವು 1987ರಲ್ಲಿ ಹೈಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆ ಬಳಿಕ, ಈ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ಅರಣ್ಯ ಇಲಾಖೆ ಪ್ರಕ್ರಿಯೆ ಆರಂಭಿಸಿತ್ತು. ಜಾಗ ಸ್ವಾಧೀನಕ್ಕೆ ಅರಣ್ಯ ಸಂರಕ್ಷಣಾಧಿಕಾರಿ 2004ರಲ್ಲಿ ಆದೇಶ ಹೊರಡಿಸಿದ್ದರು. ಸಂಘ ಸಲ್ಲಿಸಿದ್ದ ಮೇಲ್ಮನವಿಯನ್ನು ಅರಣ್ಯ ಸಂರಕ್ಷಣಾಧಿಕಾರಿ 2006ರಲ್ಲಿ ತಿರಸ್ಕರಿಸಿದ್ದರು. ಅರಣ್ಯ ಇಲಾಖೆಯು ಜಾಗವನ್ನು 2007ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು.
- ಹೈಕೋರ್ಟ್‌ನ 2009ರ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಅರಣ್ಯ ಇಲಾಖೆ ಸಲ್ಲಿಸಿದ ಸಿವಿಲ್ ಮೇಲ್ಮನವಿ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.
- ಈ ಜಾಗವು ಅರಣ್ಯ ಇಲಾಖೆಯ ಸ್ವಾಧೀನದಲ್ಲಿದ್ದು, ಯಾವುದೇ ಸಾಗುವಳಿ ಇಲ್ಲ ಎಂದು ಅರಣ್ಯ ಇಲಾಖೆಯು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿತು. ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆಯೇ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ 1996 ಹಾಗೂ 2000ರಲ್ಲಿ ತೀರ್ಪು ನೀಡಿದೆ ಎಂದೂ ವಾದಿಸಿತು.
- ಈ ವಾದಗಳನ್ನು ಅಂಗೀಕರಿಸಿದ ನ್ಯಾಯಪೀಠವು, ‘ದೊಡ್ಡ ಪ್ರಮಾಣದಲ್ಲಿ ಅರಣ್ಯನಾಶಕ್ಕೆ ಕಾರಣ ಆಗಿರುವುದರಿಂದ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡು ವುದೇ ಅನಪೇಕ್ಷಿತ. ಗುತ್ತಿಗೆ ನೀಡುವ ಹಂತದಲ್ಲಿ ನಡೆದ ಅಕ್ರಮವನ್ನು ಶಾಶ್ವತ ಗೊಳಿಸಲು ಅನುಮತಿಯನ್ನು ಮುಂದು ವರಿಸುವುದು ಸರಿಯಲ್ಲ ಎಂದಿದೆ.
- ಅರಣ್ಯ ಇಲಾಖೆಯು 2007ರಲ್ಲೇ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿರು ವುದರಿಂದ, ಸಂಘಕ್ಕೆ ಗುತ್ತಿಗೆ ಮುಂದು ವರಿಸಲು ಅವಕಾಶ ನೀಡುವ ಹೈಕೋರ್ಟ್ ನಿರ್ದೇಶನವು ಕಾನೂನಿ ನಲ್ಲಿ ಸಮರ್ಥನೀಯವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
- ‘ಉತ್ತರ’ದ ಅಭಿವೃದ್ಧಿಗೆ ಬದ್ಧ’: ಎಷ್ಟೇ ವೆಚ್ಚವಾದರೂ ಶಿಫಾರಸುಗಳ ಅನುಷ್ಠಾನ: ಸಿ.ಎಂ
ಸಂದರ್ಭ: ‘ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂಬಂಧಿಸಿದಂತೆ ಆರ್ಥಿಕ ತಜ್ಞ ಪ್ರೊ.ಎಂ. ಗೋವಿಂದ ರಾವ್ ಸಮಿತಿ ನೀಡಲಿರುವ ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೆ ತರುವ ಮೂಲಕ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸಲು ಬದ್ಧ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
- ಮುಖ್ಯಮಂತ್ರಿ ಹೇಳಿದ್ದೇನು?: ‘ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ನಂಜುಂಡಪ್ಪ ಸಮಿತಿ ರಚನೆಯಾಗಿತ್ತು. ನಂಜುಂಡಪ್ಪ ವರದಿಯ ಬಳಿಕ ನೀಡಿದ ಅನುದಾನಗಳ ಬಳಕೆ, ಅನುಷ್ಠಾನ ಮತ್ತು ಫಲಿತಾಂಶದ ಬಗ್ಗೆ ಅಧ್ಯಯನ ಮಾಡಲು ಗೋವಿಂದ್ ರಾವ್ ಸಮಿತಿ ರಚನೆ ಮಾಡಿದ್ದೇವೆ. ಸಮಿತಿಯ ವರದಿಯ ಪ್ರಕಾರ, ಯಾವ ಜಿಲ್ಲೆ ಹಿಂದುಳಿದಿದೆಯೊ ಆ ಜಿಲ್ಲೆಗಳಿಗೆ ಹೆಚ್ಚು ಒತ್ತು ಕೊಟ್ಟು ಶಕ್ತಿ ತುಂಬುವ ಕೆಲಸ ಮಾಡಲಾಗುವುದು’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
- ‘ಕರ್ನಾಟಕದ ಎಲ್ಲ ಜನರ ತಲಾ ಆದಾಯ ಹೆಚ್ಚಬೇಕೆನ್ನುವುದು ನಮ್ಮ ಉದ್ದೇಶ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಇಲ್ಲಿಯವರೆಗೆ ಸರ್ಕಾರ ಕೆಲಸ ಮಾಡಿದೆ. ಮುಂದೆಯೂ ಹೆಚ್ಚು ಒತ್ತು ನೀಡಿ, ಸಾಧ್ಯವಾದ ಮಟ್ಟಿಗೆ ತಲಾದಾಯದ ಅಂತರ ಕಡಿಮೆ ಮಾಡಲಾಗುವುದು’ ಎಂದು ಹೇಳಿದರು.
- ಜಿಬಿಎ: 12 ಮಾರ್ಗಸೂಚಿ
ಸಂದರ್ಭ: ಐದುನಗರಪಾಲಿಕೆಗಳವಾರ್ಡ್‌ಗಳಿಗೆಮೀಸಲಾತಿನಿಗದಿಪಡಿಸಲು12 ಮಾರ್ಗಸೂಚಿಗಳನ್ನುನಿಗದಿಪಡಿಸಿನಗರಾಭಿವೃದ್ಧಿಇಲಾಖೆಆದೇಶಹೊರಡಿಸಿದೆ.

- ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024ರಂತೆ ರಚನೆಯಾಗಿರುವ ಐದು ನಗರ ಪಾಲಿಕೆಗಳ ವಾರ್ಡ್ ಮೀಸಲಾತಿ ನಿಗದಿಪಡಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2025ರ ಸೆಪ್ಟೆಂಬರ್ 29ರಂದು ಸಮಿತಿ ರಚಿಸಲಾಗಿತ್ತು.
- ಜಿಬಿಎ ಮುಖ್ಯ ಆಯುಕ್ತ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅವರು ಸಮಿತಿಯ ಸದಸ್ಯರಾಗಿದ್ದರು.
- ಈ ಸಮಿತಿ ಡಿ.12ರಂದು ಸಭೆ ನಡೆಸಿದ್ದು, ವಾರ್ಡ್ ಮೀಸಲಾತಿ ನಿಗದಿಗೆ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಅಭಿಪ್ರಾಯಪಟ್ಟಿತು. ಅದರಂತೆ, ಡಿ.19ರಂದು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
- ದಕ್ಷಿಣ ಪಿನಾಕಿನಿ ನ್ಯಾಯಮಂಡಳಿ: ‘ಸುಪ್ರೀಂ’ ಇಂಗಿತ
ಸಂದರ್ಭ: ತೀರ್ಪು ಕಾಯ್ದಿರಿಸಿದ ದ್ವಿಸದಸ್ಯ ನ್ಯಾಯಪೀಠ l ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ: ನದಿ ತೀರದ ರಾಜ್ಯಗಳು ಮಾತುಕತೆ ನಡೆಸಲು ನಿರಾಕರಿಸಿದರೆ, ಕೇಂದ್ರ ಸರ್ಕಾರವು ಸಭೆ ಕರೆಯಲು ಸಾಧ್ಯವಿಲ್ಲಐಶ್ವರ್ಯ ಭಾಟಿ,ಹೆಚ್ಚುವರಿ ಸಾಲಿಸಿಟರ್ ಜನರಲ್.
- ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯ ಮಂಡಳಿ ರಚಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಇಂಗಿತ ವ್ಯಕ್ತಪಡಿಸಿದೆ.
- ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಎನ್.ವಿ.ಅಂಜಾರಿಯಾ ಪೀಠವು, ‘ವಿವಾದ ಇತ್ಯರ್ಥಪಡಿಸಲು ನ್ಯಾಯ ಮಂಡಳಿ ರಚಿಸುವುದು ಸೂಕ್ತ. ಆಗ ಉಭಯ ರಾಜ್ಯಗಳು ತಮ್ಮ ವಾದ ಗಳನ್ನು ಅಲ್ಲಿ ಮಂಡಿಸುತ್ತವೆ’ ಎಂದು ಅಭಿಪ್ರಾಯಪಟ್ಟಿತು. ಎರಡೂ ರಾಜ್ಯಗಳ ವಾದಗಳನ್ನು ಆಲಿಸಿದ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿತು.
- ಜಲವಿವಾದವೇನು?: ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟಿ ಕೆರೆ ಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ಗೆ 2018ರ ಮೇ 18ರಂದು ಅರ್ಜಿ ಸಲ್ಲಿಸಿತ್ತು. ಜಲವಿವಾದ ನ್ಯಾಯ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2019ರ ನವೆಂಬರ್ನಲ್ಲಿ ಮನವಿ ಮಾಡಿತ್ತು.
- ಜಲಶಕ್ತಿ ಸಚಿವಾಲಯವು 2020ರಲ್ಲಿ ಸಂಧಾನ ಸಭೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿರಲಿಲ್ಲ. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರವನ್ನು 2024ರ ಜೂನ್ನಲ್ಲಿ ಒತ್ತಾಯಿಸಿತ್ತು.
- ಈ ನಡುವೆ, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲಶಕ್ತಿ ಸಚಿವಾಲಯವು ಹೊಸ ಸಂಧಾನ ಸಮಿತಿ ರಚಿಸಿತ್ತು. ಈ ಸಮಿತಿಯು ಉಭಯ ರಾಜ್ಯಗಳ ನಡುವೆ 9 ಸಭೆಗಳನ್ನು ನಡೆಸಿತ್ತು. ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು.
- ಜಲ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಮಾತುಕತೆಯ ಮೂಲಕ ಈ ವಿವಾದವನ್ನು ಸೌಹಾರ್ದ ಯುತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರವು ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದಿತ್ತು.
- ಕರ್ನಾಟಕದ ಜಲಾನಯನ ಪ್ರದೇಶದಲ್ಲಿ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿ ನೀರನ್ನು ಬಳಸಲು ಯೋಜಿಸಲಾಗಿದೆ. ಇದರಲ್ಲಿ 2 ಟಿಎಂಸಿ ಮತ್ತು ಹೆಚ್ಚುವರಿ ನೀರು ತಮಿಳುನಾಡಿಗೆ ಉಳಿದಿದೆ. ಇದು ತಮಿಳುನಾಡಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು.
‘ನ್ಯಾಯಮಂಡಳಿ ರಚಿಸುವ ಅಗತ್ಯವಿಲ್ಲ’
- ಕೇಂದ್ರ ಸರ್ಕಾರವು 2025ರ ಜನವರಿ 2ರಂದು ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ಸಚಿವರ ಸಭೆ ನಡೆಸುವ ಮೂಲಕ ಮಾತುಕತೆಯಿಂದಲೇ ಜಲ ವಿವಾದ ಪರಿಹರಿಸಲು ರಾಜ್ಯಗಳಿಗೆ ಇನ್ನೊಂದು ಅವಕಾಶ ನೀಡಬೇಕು. ಇದೊಂದು ಸಣ್ಣ ವಿವಾದ. ನ್ಯಾಯಮಂಡಳಿ ರಚಿಸುವ ಅಗತ್ಯವೇ ಇಲ್ಲ.
- ಅಣುಶಕ್ತಿ: ಖಾಸಗಿ ಸಹಭಾಗಿತ್ವ ಕೇಂದ್ರ ಸರ್ಕಾರದ ಹುಲಿಸವಾರಿ
ಸಂದರ್ಭ: ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿದ್ದು, ಈ ಮಸೂದೆ ದೇಶದ ಒಟ್ಟಾರೆ ಅಣುಶಕ್ತಿ ನೀತಿಗೆ ಸಂಬಂಧಿಸಿದಂತೆ ಹೊಸ ಸಾಧ್ಯತೆ ಮತ್ತು ಸವಾಲುಗಳಿಗೆ ಅವಕಾಶ ಕಲ್ಪಿಸಲಿದೆ.
- ‘ಭಾರತದ ಪ್ರಗತಿಗಾಗಿ ಅಣುಶಕ್ತಿ ಸುಸ್ಥಿರ ಉತ್ಪಾದನೆ’ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ)ಹೆಸರಿನ ಮಸೂದೆಯು, ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವದ ಜೊತೆಗೆ ವಿದೇಶಿ ಹೂಡಿಕೆಗೂ ಅವಕಾಶ ಕಲ್ಪಿಸಲಿದೆ.
- 1962ರ ‘ಅಣುಶಕ್ತಿ ಕಾಯ್ದೆ’ ಹಾಗೂ ಪರಮಾಣು ಹಾನಿಗೆ ಸಂಬಂಧಿಸಿದ 2010ರ ನಾಗರಿಕ ಹೊಣೆಗಾರಿಕೆ ಕಾಯ್ದೆಯನ್ನು ಬದಲಾವಣೆ ಮಾಡಿ ಈ ಮಸೂದೆ ಮಂಡಿಸಲಾಗಿದೆ. ಈ ಎರಡೂ ಕಾಯ್ದೆಗಳು ಪರಮಾಣು ನೀತಿಗೆ ಸಂಬಂಧಿಸಿದಂತೆ ಕಠಿಣ ನಿಬಂಧನೆಗಳನ್ನು ಹೊಂದಿದ್ದವು. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಅಣು ವಿದ್ಯುತ್ ಉತ್ಪಾದನೆಯ ಪಾಲು ಶೇ 3ರಷ್ಟಿದೆ.
- 2047ರ ವೇಳೆಗೆ 100 ಗಿಗಾವಾಟ್‌ನಷ್ಟು ಅಣು ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗೆ ಅಗತ್ಯವಾಗಿರುವ ಉದಾರ ಆಡಳಿತ ನೀತಿಗೆ ಹೊಸ ಮಸೂದೆಯು ಅವಕಾಶ ಕಲ್ಪಿಸಲಿದೆ ಎಂದು ಹೇಳಲಾಗಿದೆ.
- ತೀವ್ರಗೊಳ್ಳುತ್ತಿರುವ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ, ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆಯನ್ನು ನಿಯಂತ್ರಣದಲ್ಲಿ ಇರಿಸುವುದು ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಮಾರ್ಗಗಳನ್ನು ಬಲಪಡಿಸುವುದು ಅನಿವಾರ್ಯ.
- ಆದರೆ ಜಲಶಕ್ತಿ, ಸೌರಶಕ್ತಿ ಹಾಗೂ ಪವನಶಕ್ತಿ ಬಳಸಿಕೊಂಡು ವಿದ್ಯುತ್ ಉತ್ಪಾದಿಸುವುದಕ್ಕೆ ಸಾಕಷ್ಟು ಮಿತಿಗಳಿವೆ. ಹಾಗಾಗಿಯೇ, ಅಣು ವಿದ್ಯುತ್ ಉತ್ಪಾದನೆ ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
- ಅಣು ವಿದ್ಯುತ್ ಉತ್ಪಾದನೆಯಲ್ಲಿ ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲದೆ, ದೇಶೀಯ ಹಾಗೂ ವಿದೇಶಿ ಖಾಸಗಿ ಸಂಸ್ಥೆ ಗಳ ಭಾಗವಹಿಸುವಿಕೆಯನ್ನು ಉತ್ತೇಜಿ ಸುವುದು ಈ ಮಸೂದೆಯ ಉದ್ದೇಶ ವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
- ಈ ಸಂಸ್ಥೆಗಳಿಗೆ ಪರವಾನಗಿ ನೀಡುವ ಅವಕಾಶವನ್ನು ಹೊಸ ಮಸೂದೆ ಕೇಂದ್ರಕ್ಕೆ ಒದಗಿಸಲಿದೆ. ಇಲ್ಲಿಯವರೆಗೆ, ಅಣು ವಿದ್ಯುತ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಭಾರತೀಯ ಅಣು ವಿದ್ಯುತ್ ನಿಗಮ (ಎನ್‌ಪಿಸಿಐಎಲ್) ಮಾತ್ರ ಅಧಿಕಾರ ಹೊಂದಿತ್ತು.
- ಪರಮಾಣು ಸ್ಥಾವರದ ನಿರ್ವಹಣೆ ಮತ್ತು ಪೂರೈಕೆ ನಿರ್ವಹಣೆಗೆ ಸಂಬಂಧಿಸಿದ ಕೆಲವು ಕ್ಷೇತ್ರಗಳಲ್ಲಿ ಖಾಸಗಿ ಭಾಗವಹಿಸು ವಿಕೆ ಇದ್ದರೂ, ಮುಖ್ಯ ಹಾಗೂ ಬಹುಸೂಕ್ಷ್ಮ ಕ್ಷೇತ್ರಗಳ ನಿರ್ವಹಣೆ ಸರ್ಕಾರದ ಅಧೀನದಲ್ಲೇ ಇತ್ತು.
- ಈ ನಿರ್ಬಂಧಗಳನ್ನು ಮಸೂದೆಯು ತೆರವುಗೊಳಿಸಲಿದ್ದು, ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಶ್ರೇಣೀಕೃತ ಹೊಣೆಗಾರಿಕೆ ವ್ಯವಸ್ಥೆಗೆ ಅವಕಾಶ ಕಲ್ಪಿಸಲಿದೆ.
- ಕಾನೂನು ಚೌಕಟ್ಟಿನ ಸರಳೀಕರಣ ಹಾಗೂ ವಹಿವಾಟು ವೆಚ್ಚಗಳ ಕಡಿತ ಸಾಧ್ಯವಾಗಲಿದ್ದು, ಆಡಳಿತಾತ್ಮಕ ಅನುಮೋದನೆಗಳಿಗೆ ಸಂಬಂಧಿಸಿದ ವಿಳಂಬವನ್ನೂ ಕಡಿಮೆ ಮಾಡುವ ಗುರಿಯನ್ನು ಮಸೂದೆ ಹೊಂದಿದೆ.
- ಪೇಟೆಂಟ್ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಸಂಶೋಧನೆಗಳನ್ನು ಉತ್ತೇಜಿಸುವ ಗುರಿಯನ್ನೂ ಹೊಂದಿದೆ.
- ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿಯವರಿಗೆ ಅವಕಾಶ ಕಲ್ಪಿಸುವ ಚಿಂತನೆ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾಗಿದ್ದರೂ, ಮಸೂದೆಯಲ್ಲಿನ ಕೆಲವು ಅಂಶಗಳು ಆತಂಕಕ್ಕೆ ಕಾರಣ ಆಗುವಂತಿವೆ.
- ಯುಪಿಎ ಸರ್ಕಾರದ ಮೈಲಿಗಲ್ಲುಗಳಲ್ಲಿ ಒಂದಾದ ಭಾರತ–ಅಮೆರಿಕ ಪರಮಾಣು ಒಪ್ಪಂದ ಮತ್ತು 2010ರ ಕಾಯ್ದೆಯೂ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ಅಮೆರಿಕದ ಪೂರೈಕೆದಾರರು ಭಾರತೀಯ ಕಾನೂನು ನಿರ್ಬಂಧಗಳ ಬಗ್ಗೆ, ವಿಶೇಷವಾಗಿ ಉತ್ತರದಾಯಿತ್ವದ ಕಾನೂನುಗಳ ಬಗ್ಗೆ ಎಚ್ಚರದಿಂದಿದ್ದರು.
- ಈ ಹೊಣೆಗಾರಿಕೆಗೆ ವಿಧಿಸಿದ್ದ ನಿಬಂಧನೆಗಳನ್ನು ಪ್ರಸ್ತಾವಿತ ಮಸೂದೆಯು ತೆಗೆದುಹಾಕಿದೆ. ಪರಮಾಣು ಸ್ಥಾವರಗಳಲ್ಲಿ ದುರಂತ ಸಂಭವಿಸಿದರೆ ಸ್ಥಾವರದ ನಿರ್ವಹಣೆ ಹೊತ್ತ ಸಂಸ್ಥೆಯು ಪಾವತಿಸಬೇಕಾದ ಗರಿಷ್ಠ ಹೊಣೆಗಾರಿಕೆಯ ಮೊತ್ತವು, ಆ ಸಂಸ್ಥೆ ಬಳಕೆ ಮಾಡುವ ಪರಮಾಣು ಸ್ಥಾವರದ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ.
- ಈ ಹೊಣೆಗಾರಿಕೆ ಮೊತ್ತವನ್ನು ₹3 ಸಾವಿರ ಕೋಟಿಗೆ ಮಿತಿಗೊಳಿಸಿದೆ. ಜೊತೆಗೆ ಪರಿಹಾರ ನೀಡಬೇಕಾದ ಜವಾಬ್ದಾರಿಯನ್ನೂ ಮಿತಗೊಳಿಸಲಿದೆ. ಬಹು ಸಂಕೀರ್ಣವಾದ ಅಣುಶಕ್ತಿ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಖಾಸಗಿಯವರಿಗೆ ಅವಕಾಶ ಕಲ್ಪಿಸುವ ಹಾಗೂ ಅವರಿಗೆ ಶಾಸನಬದ್ಧ ಸುರಕ್ಷತೆ ಒದಗಿಸುವ ನಿರ್ಧಾರ ಪ್ರತಿ ಪಕ್ಷಗಳ ಟೀಕೆಗೆ ಸಹಜವಾಗಿಯೇ ಒಳಗಾಗಿದೆ.
- ಪರಿಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗದ ವ್ಯಾಪ್ತಿಯನ್ನು ಕಿರಿದುಗೊಳಿಸುವುದರ ಜೊತೆಗೆ, ಅಣುಶಕ್ತಿ ಕ್ಷೇತ್ರಕ್ಕೆ ಸಂಬಂಧಿಸಿದ ಸ್ವತಂತ್ರ ನಿಯಂತ್ರಕಗಳನ್ನು ಇಲ್ಲವಾಗಿಸಿರುವುದರ ಬಗ್ಗೆಯೂ ಟೀಕೆಗಳಿವೆ. ಅಣು ವಿದ್ಯುತ್ ಸ್ವಾವಲಂಬನೆ ಹೆಸರಿನಲ್ಲಿ ಅಸುರಕ್ಷತೆ, ಅಪಾಯ ಕಲ್ಪಿಸುವ ಸಾಧ್ಯತೆ ಇರುವುದರಿಂದಲೇ, ‘ಎಸ್‌ಎಚ್‌ಎಎನ್‌ಟಿಐ–ಶಾಂತಿ ಮಸೂದೆ’ ಸರ್ಕಾರದ ಪಾಲಿಗೆ ಮುಂದಿನ ದಿನಗಳಲ್ಲಿ ಹುಲಿಸವಾರಿಯಾಗಿ ಪರಿಣಮಿಸಿದರೆ ಅಚ್ಚರಿಯೇನಿಲ್ಲ.
- ನೇರ ತೆರಿಗೆ ಸಂಗ್ರಹ ಹೆಚ್ಚಳ: ₹17.04 ಲಕ್ಷ ಕೋಟಿ ವರಮಾನ ಸಂಗ್ರಹ: ಮರುಪಾವತಿಯು ಶೇ 14ರಷ್ಟು ಇಳಿಕೆ
ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ 1ರಿಂದ ಡಿಸೆಂಬರ್ 17ರವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹವು ₹17.04 ಲಕ್ಷ ಕೋಟಿ ಯಷ್ಟಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿಯ (ಸಿಬಿಡಿಟಿ) ಅಂಕಿ–ಅಂಶಗಳು ತಿಳಿಸಿವೆ.
- ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೇರ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಶೇ 8ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
- ಮರುಪಾವತಿಯು ಮಂದಗೊಂಡಿ ರುವುದು ಮತ್ತು ಕಾರ್ಪೊರೇಟ್‌ಗಳಿಂದ ಮುಂಗಡ ತೆರಿಗೆ ಸಂಗ್ರಹದ ಪ್ರಮಾಣದಲ್ಲಿ ಏರಿಕೆಯಾಗಿರುವುದು ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ.
- ನಿವ್ವಳ ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಶೇ 10.54ರಷ್ಟು ಹೆಚ್ಚಳವಾಗಿ,₹8.17 ಲಕ್ಷ ಕೋಟಿಯಾಗಿದೆ. ವೈಯಕ್ತಿಕ ಆದಾಯ ತೆರಿಗೆಯನ್ನು ಒಳಗೊಂಡಿರುವ ಕಾರ್ಪೊರೇಟ್‌ಯೇತರ ತೆರಿಗೆ ಸಂಗ್ರಹವು ₹8.47 ಲಕ್ಷ ಕೋಟಿಯಾಗಿದ್ದು, ಶೇ 6.37ರಷ್ಟು ಏರಿಕೆ ಕಂಡಿದೆ. ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಸಂಗ್ರಹವು ₹40,195 ಕೋಟಿಯಾಗಿದೆ.
- ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮರುಪಾವತಿಯು (ರೀಫಂಡ್) ಶೇ 14ರಷ್ಟು ಇಳಿದಿದ್ದು, ₹2.97 ಲಕ್ಷ ಕೋಟಿಯಾಗಿದೆ. ಮರುಪಾವತಿಯನ್ನು ಸರಿಹೊಂದಿಸುವ ಮೊದಲು ಒಟ್ಟು ನೇರ ತೆರಿಗೆ ಸಂಗ್ರಹವು ಶೇ 4.16ರಷ್ಟು ಏರಿಕೆಯಾಗಿ, ₹20.01 ಲಕ್ಷ ಕೋಟಿ ದಾಟಿದೆ.
- ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು, ನೇರ ತೆರಿಗೆ ಮೂಲಕ ₹25.20 ಲಕ್ಷ ಕೋಟಿ ಸಂಗ್ರಹಿಸಲು ಗುರಿ ಹೊಂದಿದೆ. ಇದು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 12.7ರಷ್ಟು ಹೆಚ್ಚಳ. ಷೇರು ವಹಿವಾಟು ತೆರಿಗೆ ಮೂಲಕ ₹78 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.
- ‘ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿರುವುದು ಕಾರ್ಪೊರೇಟ್ ಕಂಪನಿಗಳ ಸದೃಢ ಗಳಿಕೆಯನ್ನು ಸೂಚಿಸುತ್ತಿದೆ’ ಎಂದು ಡೆಲಾಯ್ಟ್ ಇಂಡಿಯಾ ಪಾಲುದಾರ ರೋಹಿಂಟನ್ ಸಿಧ್ವಾ ಹೇಳಿದ್ದಾರೆ. ಮರುಪಾವತಿ ಸಂಬಂಧಿಸಿದ ಪ್ರಕರಣಗಳ ಹೆಚ್ಚಿನ ಪರಿಶೀಲನೆಯಿಂದಾಗಿ ಮರುಪಾವತಿ ವಿತರಣೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ಹೇಳಿದ್ದಾರೆ.
- ವಿದೇಶಿ ವಿನಿಮಯ ಸಂಗ್ರಹ ಏರಿಕೆ
ಸಂದರ್ಭ:ಡಿಸೆಂಬರ್12ಕ್ಕೆಕೊನೆಗೊಂಡವಾರದಲ್ಲಿದೇಶದವಿದೇಶಿವಿನಿಮಯಮೀಸಲುಸಂಗ್ರಹದಪ್ರಮಾಣ₹15,144 ಕೋಟಿಯಷ್ಟುಹೆಚ್ಚಳವಾಗಿದೆಎಂದುಆರ್‌ಬಿಐತಿಳಿಸಿದೆ.

- ಪ್ರಸ್ತುತ ಒಟ್ಟು ಮೀಸಲು ಸಂಗ್ರಹ ₹61.77 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
- ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ ₹8,122 ಕೋಟಿಯಷ್ಟು ಹೆಚ್ಚಳವಾಗಿದ್ದು, ₹50 ಲಕ್ಷ ಕೋಟಿಯಾಗಿದೆ. ಚಿನ್ನದ ಮೀಸಲು ಸಂಗ್ರಹದಲ್ಲಿ ₹6,795 ಕೋಟಿ ಏರಿಕೆಯಾಗಿದ್ದು, ₹9.65 ಲಕ್ಷ ಕೋಟಿಯಾಗಿದೆ.
- ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್) ₹1.68 ಲಕ್ಷ ಕೋಟಿ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪಾಲು ₹42,007 ಕೋಟಿಯಾಗಿದೆ ಎಂದು ತಿಳಿಸಿದೆ.