ಋತುಚಕ್ರ ಹೊಂದಿರುವ 18 ವರ್ಷದಿಂದ 52 ವರ್ಷ ವಯಸ್ಸಿನ ಮಹಿಳಾ ಸರ್ಕಾರಿ ನೌಕರರಿಗೆ ಈ ರಜೆ ಅನ್ವಯವಾಗಲಿದೆ.
ತಿಂಗಳಿಗೆ ಒಂದರಂತೆ ವರ್ಷಕ್ಕೆ ಒಟ್ಟು 12 ಋತುಚಕ್ರ ರಜೆ ಪಡೆಯಬಹುದು.
ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಸಕ್ಷಮಪ್ರಾಧಿಕಾರವೇ ಈ ರಜೆಯನ್ನೂ ಮಂಜೂರು ಮಾಡಬಹುದಾಗಿದೆ.
ಈ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ನೀಡಬೇಕಿಲ್ಲ.
ಜತೆಗೆ ಈ ರಜೆಯನ್ನು ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು.
ರಾಜ್ಯದಲ್ಲಿ ನಾನಾ ಕಾರ್ಮಿಕ ಕಾಯಿದೆಯಡಿ ನೋಂದಣಿಯಾಗಿರುವ ಎಲ್ಲ ಕೈಗಾರಿಕೆಗಳು, ಸಂಸ್ಥೆಗಳಲ್ಲಿಕಾರ್ಯ ನಿರ್ವಹಿಸುತ್ತಿರುವ 18ರಿಂದ 52 ವರ್ಷ ವಯೋಮಿತಿಯ ಎಲ್ಲ ಕಾಯಂ, ಗುತ್ತಿಗೆ, ಹೊರ ಗುತ್ತಿಗೆ ಮಹಿಳಾ ನೌಕರರಿಗೆ ಋುತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದರಂತೆ ವಾರ್ಷಿಕ 12 ದಿನಗಳ ವೇತನಸಹಿತ ರಜೆ ಸೌಲಭ್ಯ .
ಸರ್ಕಾರಿ ಕಾಯಂ, ಗುತ್ತಿಗೆ, ವಿವಿಧ ಕಾರ್ಮಿಕ ಕಾಯ್ದೆಗಳ ಅಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ದುಡಿಯುವ ಮಹಿಳಾ ನೌಕರರು, ಹೊರಗುತ್ತಿಗೆ ವಲಯಗಳಲ್ಲಿ ದುಡಿಯುವ ಮಹಿಳಾ ಉದ್ಯೋಗಿಗಳಿಗೂ ಈ ರಜೆ ಸೌಲಭ್ಯ ಅನ್ವಯವಾಗಲಿದೆ.
ರಫ್ತುಕೇಂದ್ರವಾಗಿದಕ್ಷಿಣಕನ್ನಡ
ದಕ್ಷಿಣ ಕನ್ನಡವನ್ನು ಜಿಲ್ಲಾ ರಫ್ತು ಕೇಂದ್ರವಾಗಿ ಘೋಷಿಸಲಾಗಿದೆ.
ಸಮುದ್ರ ಆಹಾರಗಳು, ಗೋಡಂಬಿಯನ್ನು ಸಂಭಾವ್ಯ ರಫ್ತು ಉತ್ಪನ್ನಗಳಾಗಿ ಸೇರಿಸಲಾಗಿದೆ.
ಜಿಲ್ಲೆಗಳು ರಫ್ತು ಕೇಂದ್ರಗಳಾಗಿ (DEH) ಉಪಕ್ರಮದಡಿಯಲ್ಲಿ, ದಕ್ಷಿಣ ಕನ್ನಡವನ್ನು ಅಧಿಕೃತವಾಗಿ ರಫ್ತು ತಾಣವೆಂದು ಗುರುತಿಸಲಾಗಿದೆ. ಈ ಮಾನ್ಯತೆಯು ಸುಸ್ಥಿರ ಆರ್ಥಿಕ ಅಭಿವೃದ್ಧಿಯತ್ತ ಜಿಲ್ಲೆಯ ನಿರಂತರ ಪ್ರಯತ್ನಗಳತ್ತ ಗಮನ ಸೆಳೆದಿದೆ.
ಈ ಸಂಬಂಧ ಭಾರತದ ಎಲ್ಲ ಮೊಬೈಲ್ ತಯಾರಕರಿಗೆ, ಮೊಬೈಲ್ ಸೆಟ್‌ಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳಿಗೆ ದೂರಸಂಪರ್ಕ ಸಚಿವಾಲಯವು ನ.28ರಂದು ಕೆಲವು ನಿರ್ದೇಶನಗಳನ್ನು ನೀಡಿ ಆದೇಶ ಹೊರಡಿಸಿದೆ.
‘ಭಾರತದಲ್ಲಿ ತಯಾರಾಗುವ ಅಥವಾ ಆಮದು ಮಾಡಿಕೊಳ್ಳಲಾಗುವ ಎಲ್ಲ ಮೊಬೈಲ್ ಗಳಲ್ಲಿಯೂ ‘ಸಂಚಾರ ಸಾಥಿ’ ಆ್ಯಪ್ ಅನ್ನು ಮೊದಲೇ ಇನ್‌ಸ್ಟಾಲ್ ಮಾಡಿರಬೇಕು. ಈಗಾಗಲೇ ಮಾರುಕಟ್ಟೆಯಲ್ಲಿರುವ (ಇನ್ನೂ ಖರೀದಿಯಾಗದ) ಮೊಬೈಲ್‌ಗಳಲ್ಲಿ ಮೊದಲ ಸಾಫ್ಟ್‌ವೇರ್ ಅಪ್‌ಡೇಟ್ ವೇಳೆ ಈ ಆ್ಯಪ್ ಅನ್ನು ಬಳಕೆದಾರರಿಗೆ ನೀಡಬೇಕು’ ಎಂದು ಸಚಿವಾಲಯ ಹೇಳಿದೆ.
‘ಈ ಆ್ಯಪ್ ಅನ್ನು ಮೊದಲೇ ‘ಇನ್‌ಸ್ಟಾಲ್’ ಮಾಡಿರುವ ಹೊಸ ಮೊಬೈಲ್‌ಗಳನ್ನು ‘ಸೆಟ್ಟಿಂಗ್’ ಮಾಡಿಕೊಳ್ಳುವಾಗಲೇ ಬಳಕೆದಾರರಿಗೆ ಈ ಆ್ಯಪ್ ಇರುವುದು ಸುಲಭವಾಗಿ ಕಾಣುವಂತೆ ಮಾಡಬೇಕು. ಈ ಆ್ಯಪ್‌ನ ಕಾರ್ಯಾಚರಣೆಯನ್ನು ಡಿಸೇಬಲ್ ಮಾಡುವುದಾಗಲೀ ಅಥವಾ ನಿರ್ಬಂಧಿಸುವುದಾಗಲೀ ಮಾಡುವಂತಿಲ್ಲ’ ಎಂದು ಆದೇಶದಲ್ಲಿ ಹೇಳಲಾಗಿದೆ.
‘ತಯಾರಿಕಾ ಕಂಪನಿಗಳು ಮತ್ತು ಮೊಬೈಲ್‌ಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳು ಆದೇಶ ಪ್ರಕಟವಾದ 120 ದಿನಗಳ ಒಳಗೆ ಆ್ಯಪ್ ಇನ್‌ಸ್ಟಾಲ್ ಆದ ಕುರಿತು ವರದಿ ನೀಡಬೇಕು’ ಎಂದೂ ಹೇಳಿದೆ.
ಆದೇಶ ಪಾಲಿಸದಿದ್ದರೆ ಕ್ರಮ: ಈ ಆದೇಶವನ್ನು ಪಾಲಿಸದಿದ್ದರೆ ದೂರಸಂಪರ್ಕಕಾಯ್ದೆ –2023 ಮತ್ತುದೂರಸಂಪರ್ಕಸೈಬರ್ ಭದ್ರತಾನಿಯಮಗಳು – 2024 ಮತ್ತುಇತರೆಕಾಯ್ದೆಗಳಅನ್ವಯ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.
ಅನ್ನಭಾಗ್ಯಯೋಜನೆಯಡಿಹೆಚ್ಚುವರಿ 5 ಕಿಲೋಅಕ್ಕಿಯಬದಲು ‘ಇಂದಿರಾ’ (ಐಎನ್ಡಿಐಆರ್ಎ – ಇಂಟೆಗ್ರೇಟೆಡ್ ನ್ಯೂಟ್ರಿಷಿಯನ್ ಆ್ಯಂಡ್ಡಯೆಟರಿಇನಿಷಿಯೇಟಿವ್ಫಾರ್ರಿವೈಟಲೈಷಿಂಗ್ಅನ್ನಭಾಗ್ಯಬೆನಿಫಿಷರೀಸ್– ಅನ್ನಭಾಗ್ಯಫಲಾನುಭವಿಗಳನ್ನುಪುನರುಜ್ಜೀವನಗೊಳಿಸುವಸಮಗ್ರಪೋಷಣೆಮತ್ತುಆಹಾರಉಪಕ್ರಮ) ಆಹಾರಕಿಟ್ಯೋಜನೆಯ ಅನುಷ್ಠಾನದ ಕುರಿತು ಮುಖ್ಯಮಂತ್ರಿ ಸಭೆ ನಡೆಸಿದರು.
‘ಕಿಟ್‌ನಲ್ಲಿ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಸಬೇಕು. ಗುಣಮಟ್ಟದಲ್ಲಿ ರಾಜಿ ಆಗಬಾರದು. ಅಳತೆಯಲ್ಲಿ ಹೆಚ್ಚು ಕಡಿಮೆ ಆಗದಂತೆಯೂ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.
2019–20ನೇ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ವಿಭಾಗಗಳನ್ನು ಆರಂಭಿಸಲಾಗಿತ್ತು. ಆದರೆ, ಮಧ್ಯಾಹ್ನದ ಬಿಸಿಯೂಟ ವಿಸ್ತರಣೆ ಆಗಿರಲಿಲ್ಲ.
ಪ್ರಧಾನಮಂತ್ರಿಪೋಷಣ್ ಶಕ್ತಿಅಭಿಯಾನದಅನುಮೋದನಾಮಂಡಳಿ ಸಭೆಯ ನಿರ್ಧಾರದಂತೆ ಡಿ.1ರಿಂದ ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಗೂ ವಿಸ್ತರಿಸಲಾಗಿದೆ.
ಪ್ರತಿ ಮಗುವಿಗೆ ಪ್ರತಿದಿನಕೇಂದ್ರಸರ್ಕಾರ ₹4.07, ರಾಜ್ಯಸರ್ಕಾರ ₹2.71 ವೆಚ್ಚಮಾಡಲಿವೆ. ಒಟ್ಟು ಆಹಾರ ತಯಾರಿ ವೆಚ್ಚ ₹6.78 ನಿಗದಿ ಮಾಡಲಾಗಿದೆ. ಅದಲ್ಲದೆ, ವಾರದಲ್ಲಿ ನಾಲ್ಕುದಿನಮೊಟ್ಟೆಖರೀದಿಗೆಅಜೀಂಪ್ರೇಮ್ಜಿಫೌಂಡೇಶನ್ ಹಣಕಾಸಿನಸಹಾಯಮಾಡಲಿದೆ. ಉಳಿದ ಎರಡು ದಿನಗಳ ವೆಚ್ಚವನ್ನು ಶಾಲಾ ಶಿಕ್ಷಣ ಇಲಾಖೆ ಭರಿಸುತ್ತದೆ.
ರಾಜ್ಯದಲ್ಲಿ ‘ಡಿಜಿಟಲ್ ಇ– ಸ್ಟ್ಯಾಂಪ್’ಜಾರಿ: ಸ್ಟ್ಯಾಂಪ್ವಂಚನೆ, ಭದ್ರತಾಲೋಪತಡೆಗೆಕಂದಾಯಇಲಾಖೆಹೊಸವ್ಯವಸ್ಥೆ
ನೋಂದಣಿ ಮತ್ತು ನೋಂದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಬಳಸುವ ‘ಇ– ಸ್ಟ್ಯಾಂಪ್’ ಬದಲಿಗೆ ‘ಡಿಜಿಟಲ್ ಇ– ಸ್ಟ್ಯಾಂಪ್’ ವ್ಯವಸ್ಥೆಯನ್ನು ಕಂದಾಯ ಇಲಾಖೆ ಜಾರಿಗೆ ತಂದಿದೆ.
‘ಸ್ಟ್ಯಾಂಪ್ ವಂಚನೆ ಮತ್ತು ಭದ್ರತಾ ಲೋಪವನ್ನು ಸಂಪೂರ್ಣ ತೊಡೆದು ಹಾಕಲು ಈ ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ. ಈ ವ್ಯವಸ್ಥೆಗೆ ಅಗತ್ಯವಾದ ನಿಯಮಗಳನ್ನು ಪ್ರಕಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ‘ಡಿಜಿಟಲ್ ಇ-ಸ್ಟ್ಯಾಂಪ್’ ಕಡ್ಡಾಯಗೊಳಿಸಲಾಗುವುದು’.
‘ನಾಗರಿಕರು ಮಧ್ಯವರ್ತಿಗಳ ನೆರವಿಲ್ಲದೆ, ಮನೆಯಲ್ಲಿಯೇ ಕುಳಿತು ‘ಡಿಜಿಟಲ್ ಇ– ಸ್ಟ್ಯಾಂಪ್’ ತಯಾರಿಸಿಕೊಳ್ಳಬಹುದು. ಇಂಟರ್‌ನೆಟ್ ಇದ್ದರೆ 24×7 ಜಗತ್ತಿನಲ್ಲಿ ಎಲ್ಲಿಯೇ ಕುಳಿತು ಈ ಸೇವೆಯನ್ನು ಪಡೆಯಬಹುದು. ಎಲ್ಲ ಸೇವೆಗಳು ಸಂಪೂರ್ಣ ಡಿಜಿಟಲ್ ಆಗಿರಲಿದೆ. ಸುರಕ್ಷಿತ ಮತ್ತು ವೇಗವಾಗಿ ಆನ್‌ಲೈನ್ ಪಾವತಿ ಮಾಡಲು ಕೂಡಾ ಅವಕಾಶವಿದೆ’.
‘ಹಿಂದೆ ಛಾಪಾ ಕಾಗದಗಳನ್ನು ಮುದ್ರಿಸಲಾಗುತ್ತಿತ್ತು. ನಕಲಿ ಹಾಗೂ ಛಾಪಾ ಕಾಗದಗಳ ಮರುಬಳಕೆಯ ವಂಚನೆ ತೆಲಗಿ ಹಗರಣದಿಂದ ಬಹಿರಂಗವಾಗಿತ್ತು. ಅದನ್ನು ತಡೆಯಲು ಭೌತಿಕ ಸ್ಟಾಂಪ್ ಕಾಗದಗಳ ಬಳಕೆ ನಿಲ್ಲಿಸಿ, ‘ಇ-ಸ್ಟ್ಯಾಂಪ್’ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.
‘ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಎಸ್‌ಎಚ್‌ಸಿಐಎಲ್) ಸಹಯೋಗದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇ– ಸ್ಟ್ಯಾಂಪ್’ ಕಾಗದವನ್ನು ಮುದ್ರಿಸುತ್ತಿದೆ. ಆದರೆ, ಝೆರಾಕ್ಸ್ ಯಂತ್ರಗಳ ಮೂಲಕ ಇ-ಸ್ಟ್ಯಾಂಪ್ ಪ್ರಮಾಣಪತ್ರಗಳನ್ನು ನಕಲು ಅಥವಾ ಅವುಗಳಂತೆಯೇ ಕಾಣುವ ಪ್ರತಿಗಳನ್ನು ಸೃಷ್ಟಿಸಲು ಸಾಧ್ಯವಾಗಿತ್ತು. ಇದರಿಂದ ಮೂಲ ಹಾಗೂ ನಕಲಿ ಯಾವುದೆಂದು ಪತ್ತೆ ಮಾಡುವುದೇ ಸವಾಲಾಗಿದೆ. ಒಂದು ಉದ್ದೇಶಕ್ಕೆ ಖರೀದಿಸಿದ ಸ್ಟ್ಯಾಂಪ್ ಕಾಗದವನ್ನು ಬೇರೆ ರೀತಿಯ ದಸ್ತಾವೇಜಿಗೆ ಬಳಸುವ ಪ್ರಸಂಗಗಳೂ ನಡೆದಿವೆ. ನಕಲಿ, ನಕಲು ಪ್ರತಿ ಹಾಗೂ ತಪ್ಪು ವರ್ಗೀಕರಣದಿಂದ ಸರ್ಕಾರಕ್ಕೆ ಸೇರುವ ಸ್ಟ್ಯಾಂಪ್ ಶುಲ್ಕ ತಪ್ಪಿಸಿದ ಹಲವು ಘಟನೆಗಳೂ ನಡೆದಿವೆ.
‘ಡಿಜಿಟಲ್ ಇ– ಸ್ಟ್ಯಾಂಪ್ ವ್ಯವಸ್ಥೆ ಎಲ್ಲ ರೀತಿಯಲ್ಲೂ ಸುರಕ್ಷಿತವಾಗಿ ಇರಲಿದೆ. ಹೊಸ ವ್ಯವಸ್ಥೆ ಜಾರಿಯಿಂದ ಇ-ಸ್ಟ್ಯಾಂಪ್ ವಿತರಣೆಗಾಗಿ ಎಸ್‌ಎಚ್‌ಸಿಐಎಲ್‌ಗೆ ಸರ್ಕಾರ ನೀಡುವ ಕಮಿಷನ್ ಮೊತ್ತ ಉಳಿತಾಯ ಆಗಲಿದೆ’.
ನಾಲ್ಕುಕಾರ್ಮಿಕಸಂಹಿತೆಗಳುಹೊಸನಿಯಮಗಳಲ್ಲೇನಿದೆ?
ಸಂದರ್ಭ: ಕೇಂದ್ರ ಸರ್ಕಾರವು ಕಾರ್ಮಿಕ ಕಲ್ಯಾಣದ ದೃಷ್ಟಿಯಿಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರೂಪಿಸಿದೆ. ವೇತನ ಸಂಹಿತೆ (2019), ಕೈಗಾರಿಕಾ ಸಂಪರ್ಕ ಸಂಹಿತೆ (2020), ಸಾಮಾಜಿಕ ಭದ್ರತಾ ಸಂಹಿತೆ (2020), ಉದ್ಯೋಗ ಭದ್ರತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಸಂಹಿತೆ (2020) ಜಾರಿಗೆ ಬಂದಿದ್ದು, ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸುವ ದಿಸೆಯಲ್ಲಿ ಇವುಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರತಿಪಾದಿಸಿದೆ.
ಇದುವರೆಗೂ ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ಪರಾಮರ್ಶಿಸಿ, ನಿಯಮಾವಳಿಗಳನ್ನು ಆಧುನೀಕರಿಸಿ ಹೊಸ ಸಂಹಿತೆಗಳನ್ನು ರೂಪಿಸಲಾಗಿದೆ.
ಪ್ರಗತಿ ಪಥದಲ್ಲಿ ಸಾಗುತ್ತಿರುವ ದೇಶದ ಉದ್ಯಮ ರಂಗಕ್ಕೆ ತಕ್ಕಂತೆ ಕಾರ್ಮಿಕ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಆಶಯ ಇವುಗಳ ಹಿಂದಿದೆ ಎಂದು ಕೇಂದ್ರವು ಹೇಳಿದೆ.
ಹೊಸಕಾರ್ಮಿಕಸಂಹಿತೆಗಳಅಗತ್ಯವೇನು?
ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಬಹುತೇಕ ಕಾರ್ಮಿಕ ಕಾನೂನುಗಳು ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ದೇಶದಲ್ಲಿ ಉದ್ಯಮಗಳು ಆರಂಭವಾಗುತ್ತಿದ್ದ ಹಂತದಲ್ಲಿ ರೂಪಿಸಿದಂಥವು.
ಜಗತ್ತಿನ ಮುಂದುವರಿದ ಆರ್ಥಿಕತೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿದ್ದರೂ ಭಾರತದಲ್ಲಿ ಹಳೆಯ ನಿಯಮಗಳೇ ಚಾಲ್ತಿಯಲ್ಲಿದ್ದವು.
ವಸಾಹತುಶಾಹಿಯ ನೆರಳಿನಿಂದ ಹೊರಬಂದು, ಉದ್ಯಮ ರಂಗದ ಅಗತ್ಯಕ್ಕೆ ತಕ್ಕಂತೆ, ಉದ್ಯಮಿ ಮತ್ತು ಕಾರ್ಮಿಕ ಇಬ್ಬರ ಹಿತವನ್ನೂ ಕಾಯುವಂತೆ ಹೊಸ ನಿಯಮಗಳನ್ನು ರೂಪಿಸುವುದು ಅಗತ್ಯವಾಗಿತ್ತು.
ಈ ದಿಸೆಯಲ್ಲಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲಾಗಿದೆ. ಸದ್ಯದ ಮತ್ತು ಭವಿಷ್ಯದ ತಾಂತ್ರಿಕ ಹಾಗೂ ಆರ್ಥಿಕ ಬೆಳವಣಿಗೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು, ಆತ್ಮನಿರ್ಭರ ಭಾರತಕ್ಕಾಗಿ ಕಾರ್ಮಿಕ ಪಡೆಯನ್ನು ಸಿದ್ಧಗೊಳಿಸಲು ಈ ನಾಲ್ಕು ಸಂಹಿತೆಗಳು ನೆರವಾಗಲಿವೆ ಎಂದು ಕೇಂದ್ರವು ಹೇಳಿದೆ.
‘ಸಾಗರಬಂಧು ಹೆಸರಿನ ಕಾರ್ಯಾಚರಣೆಯಲ್ಲಿ 104 ಭಾರತೀಯರನ್ನು ವಾಯಪಡೆಯ ಯುದ್ಧವಿಮಾನದ ಮೂಲಕ ಕೊಲಂಬೊ ಬಂಡಾರನಾಯಿಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುವನಂತಪುರಕ್ಕೆ ಕರೆತರಲಾಯಿತು’ ಎಂದು ಭಾರತದ ಹೈಕಮಿಷನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಶ್ರೀಲಂಕಾದ ರಕ್ಷಣ ಕಾರ್ಯಕ್ಕೆ ಮತ್ತಷ್ಟು ನೆರವು ನೀಡುತ್ತಿರುವ ಭಾರತ, ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಭಾರತೀಯ ವಾಯುಪಡೆಯ ಚೇತಕ್ ಯುದ್ಧವಿಮಾನವು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ. ಭೂಕುಸಿತ ಮತ್ತು ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವ ಗುಡ್ಡಪ್ರದೇಶ ಕೊಟ್‌ಮಲೆಯಲ್ಲಿಯೂ ಕಾರ್ಯಾಚರಣೆ ನಡೆಸುತ್ತಿದೆ
ಎನ್‌ಡಿಆರ್‌ಎಫ್ ಕೊಲಂಬೊಕ್ಕೆ ತಲುಪಿದ್ದು, ಕೋಚಿಕಡೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ತಮಿಳುನಾಡಿನಲ್ಲಿಮುಂದುವರಿದಮಳೆ
ದಿತ್ವಾ ಚಂಡಮಾರುತದ ಪರಿಣಾಮವಾಗಿ ಚೆನ್ನೈ, ತಿರುವಲ್ಲೂರು, ಕಾಂಚೀಪುರಂ, ಕಡಲೂರು ಸೇರಿದಂತೆ ತಮಿಳುನಾಡಿನ ಹಲವೆಡೆ ಸಾಧಾರಣ ಮಳೆಯಾಗಿದೆ.
ದಿತ್ವಾ ಚಂಡಮಾರುತವು ದುರ್ಬಲಗೊಂಡಿದ್ದು, ಅದರ ಪರಿಣಾಮವಾಗಿ ವಾಯುಭಾರ ಕುಸಿತವಾಗಿದೆ. ಇದು ತಮಿಳುನಾಡು–ಪಾಂಡಿಚೇರಿ ಕರಾವಳಿಗೆ ಸಮೀಪವಾಗಿರುವುದರಿಂದ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನಿರಂತರ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಕೃಷಿಭೂಮಿಗೆ ಹಾನಿಯಾಗಿದೆ.
ಆಯಾವರ್ಷವೇಏಕಲವ್ಯಪ್ರಶಸ್ತಿಪ್ರದಾನ
ಸಂದರ್ಭ: 2022 ಮತ್ತು 2023ನೇಸಾಲಿನಏಕಲವ್ಯ, ಜೀವಮಾನಸಾಧನೆಪ್ರಶಸ್ತಿ, ಕರ್ನಾಟಕಕ್ರೀಡಾರತ್ನಮತ್ತುಕ್ರೀಡಾಪೋಷಕಪ್ರಶಸ್ತಿ.
‘ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ₹6 ಕೋಟಿ ನೀಡಲಾಗುವುದು. ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಸರ್ಕಾರಿ ಉದ್ಯೋಗವನ್ನೂ ನೀಡಲಾಗುವುದು, ಬೆಳ್ಳಿ ಗೆದ್ದವರಿಗೆ ₹4 ಕೋಟಿ ಮತ್ತು ಕಂಚು ಗೆದ್ದವರಿಗೆ ₹3 ಕೋಟಿ ನಗದು ಪುರಸ್ಕಾರ ನೀಡಲಾಗುವುದು’ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ ಅವರು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗಾಗಿ 60 ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ. ತರಬೇತಿಯ ವೇಳೆ ಪ್ರತಿ ವರ್ಷ ಪ್ರತಿ ಕ್ರೀಡಾಪಟುವಿಗೆ ₹10 ಲಕ್ಷ ನೀಡಲಾಗುತ್ತದೆ ಎಂದರು.
ಮೊನಾಕೊದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ‘ಸೋಲಿಲ್ಲದ ಸರದಾರ’ ಡುಪ್ಲಾಂಟಿಸ್ ಅವರು ಟೋಕಿಯೊದಲ್ಲಿ ಈ ವರ್ಷದ ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್‌ನಲ್ಲಿ 6.30ಮೀ. ಜಿಗಿದು 14ನೇ ಬಾರಿಗೆ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.
26 ವರ್ಷ ವಯಸ್ಸಿನ ಡುಪ್ಲಾಂಟಿಸ್ ಅವರು ಈ ವರ್ಷದಲ್ಲಿ ಪೋಲ್‌ವಾಲ್ಟ್ ಹೊರಾಂಗಣ ಮತ್ತು ಒಳಾಂಗಣ ಸ್ಪರ್ಧೆಗಳಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 16 ಕೂಟಗಳಲ್ಲಿ ಚಿನ್ನ ಜಯಿಸಿದ್ದು, ಅಜೇಯರಾಗಿ ಉಳಿದಿದ್ದಾರೆ.
ವರ್ಷದ ಅಥ್ಲೀಟ್ ಜೊತೆಗೆ ವರ್ಷದ ‘ಶ್ರೇಷ್ಠ ಫೀಲ್ಡ್ ಅಥ್ಲೀಟ್’ ಗೌರವಕ್ಕೂ ಅವರು ಭಾಜನರಾಗಿದ್ದಾರೆ ಅವರು 2020 ಮತ್ತು 2022ರಲ್ಲಿಯೂ ವರ್ಷದ ಅಥ್ಲೀಟ್ ಗೌರವಕ್ಕೆ ಭಾಜನರಾಗಿದ್ದರು.
ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದಾಖಲೆ ಹೊಂದಿರುವ ಅಮೆರಿಕದ ಓಟಗಾರ್ತಿ ಲೆವ್ರೊನ್ ಅವರು ಮಹಿಳಾ ವಿಭಾಗದಲ್ಲಿ ಈ ಗೌರವಕ್ಕೆ ಭಾಜನರಾಗಿದ್ದಾರೆ. 26 ವರ್ಷವಯಸ್ಸಿನಲೆವ್ರೊನ್ಅವರುವಿಶ್ವಚಾಂಪಿಯನ್ಷಿಪ್ನ 400 ಮೀ. ಓಟಹಾಗೂ 400 ಮೀ. ಹರ್ಡಲ್ಸ್ ಸ್ಪರ್ಧೆಗಳೆರಡರಲ್ಲೂಚಿನ್ನಗೆದ್ದಮೊದಲಅಥ್ಲೀಟ್ ಆಗಿದ್ದಾರೆ. ಕಳೆದೆರಡುವರ್ಷಗಳಲ್ಲಿಸ್ಪರ್ಧಿಸಿದಎಲ್ಲಸ್ಪರ್ಧೆಗಳಲ್ಲಿಯೂಅವರುಸ್ವರ್ಣಜಯಿಸಿದ್ದಾರೆ.