ರಾಷ್ಟ್ರಪತಿ ದೌಪದಿ ಮುರ್ಮು ಅವರು ಸಂತಾಲಿ ಭಾಷೆಯಲ್ಲಿ ಭಾರತ ಸಂವಿಧಾನವನ್ನು ಬಿಡುಗಡೆ ಮಾಡಿದರು.
‘ಭಾರತೀಯ ಸಂವಿಧಾನವು ಸಂತಾಲಿ ಭಾಷೆಯಲ್ಲಿ ಲಭ್ಯವಿರುವುದು ಸಂತಾಲಿ ಜನರಿಗೆ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ. ಇದನ್ನು ಒಲ್ ಚಿಕಿ ಲಿಪಿಯಲ್ಲಿ ಬರೆಯಲಾಗಿದೆ. ಅವರ ಭಾಷೆಯಲ್ಲಿ ಸಂವಿಧಾನವನ್ನು ಓದಲು ಮತ್ತು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಬ್ರೌಪದಿ ಮುರ್ಮು ಅವರು ಹೇಳಿದರು.
ಒಲ್ ಚಿಕಿ ಲಿಪಿಯ ಶತಮಾನೋತ್ಸವದ ಸಂದರ್ಭದಲ್ಲಿ ಸಂವಿಧಾನವನ್ನು ಈ ಲಿಪಿಯಲ್ಲಿ ಹೊರತಂದಿರುವುದಕ್ಕೆ ಕೇಂದ್ರ ಕಾನೂನು ಸಚಿವ ಅವರನ್ನು ಮುರ್ಮು ಶ್ಲಾಘಿಸಿದರು.
ಸಂತಾಲಿ ಭಾಷೆಯನ್ನು 2003ರಲ್ಲಿ, 92ನೇ ಸಂವಿಧಾನಾತ್ಮಕ ತಿದ್ದುಪಡಿ ಕಾಯ್ದೆಯ ಮೂಲಕ ಭಾರತದ ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲಾಯಿತು.
2003ರ 92ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸೇರಿಸಲಾದ ಸಂತಾಲಿ ಭಾಷೆ, ಭಾರತದ ಅತ್ಯಂತ ಪ್ರಾಚೀನ ಜೀವಂತ ಭಾಷೆಗಳಲ್ಲೊಂದು ಆಗಿದೆ.
ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ಗಣನೀಯ ಸಂಖ್ಯೆಯ ಆದಿವಾಸಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ.
1950: ಆರಂಭದಲ್ಲಿ 14 ಭಾಷೆಗಳು
1967: ಸಿಂಧಿ ಸೇರಿಕೆ
1992: ಕೊಂಕಣಿ, ಮಣಿಪುರಿ, ನೇಪಾಳಿ
2004: ಬೋಡೋ, ಡೋಗ್ರಿ, ಮೈಥಿಲಿ, ಸಂಥಾಲಿ ➡️ ಒಟ್ಟು 22 ಭಾಷೆಗಳು
‘ಕಾರಾಗೃಹಗಳ ಭದ್ರತೆ ಹಾಗೂ ಆಡಳಿತ ವ್ಯವಸ್ಥೆ ಯನ್ನು ಬಲಪಡಿಸಿ, ಬಂದಿಗಳ ಚಲನವಲನಗಳ ಮೇಲೆ ಇನ್ನೂ ಹೆಚ್ಚಿನ ನಿಗಾವಹಿಸಲು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ‘ಎಐ– ಆಡಿಯೊ–ವಿಡಿಯೊ ಅನಾಲಿಟಿಕ್ಸ್ ಸಿಸ್ಟಮ್’ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದನ್ನು ಎಲ್ಲ ಕಾರಾಗೃಹಗಳಿಗೂ ವಿಸ್ತರಿಸಲಾಗುವುದು’ ಎಂದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ನಿಯಮ 69ರ ಅಡಿ ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಪರಮೇಶ್ವರ, ‘ರಾಜ್ಯದ ಯಾವುದೇ ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳು ಇರದಂತೆ ತಪಾಸಣೆ ಮಾಡಿ, ಡಿ.31ರೊಳಗೆ ಎಲ್ಲ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲು ಕಾರಾಗೃಹ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದರು.
ಬಂದಿಗಳನ್ನು ಎ, ಬಿ, ಸಿ ಮಾದರಿಯಲ್ಲಿ ವರ್ಗೀಕರಿಸಿ, ಸೂಕ್ಷ್ಮವಾಗಿ ಮೇಲ್ವಿಚಾರಣೆ ನಡೆಸ ಲಾಗುತ್ತದೆ. ನಿಷೇಧಿತ ವಸ್ತುಗಳನ್ನು ಸರಬರಾಜು ಮಾಡುವ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಿಬ್ಬಂದಿಯ ಕರ್ತವ್ಯದ ಆಡಿಟ್ ಮಾಡಿ, ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಲಘಟಗಿ ತಾಲ್ಲೂಕಿನ ಗಾಂಧಿ ಜೀವನ್ ಸಾಮೂಹಿಕ ಕೃಷಿ ಸಹಕಾರ ಸಂಘಕ್ಕೆ 134 ಎಕರೆ ಅರಣ್ಯ ಭೂಮಿಯ ಗುತ್ತಿಗೆ ಮುಂದುವರಿಸಲು ಅವಕಾಶ ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ರದ್ದುಪಡಿಸಿದೆ.
ಅರಣ್ಯ ಭೂಮಿಯನ್ನು ಕೃಷಿ ಉದ್ದೇಶ ಗಳಿಗಾಗಿ ಗುತ್ತಿಗೆ ನೀಡುವುದೇ ಕಾನೂನು ಬಾಹಿರ ಮತ್ತು 1980ರ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿ ರುವ ನ್ಯಾಯಪೀಠವು, ‘ತಜ್ಞರೊಂದಿಗೆ ಸಮಾಲೋಚಿಸಿ ಸ್ಥಳೀಯ ಸಸ್ಯಗಳು ಮತ್ತು ಮರಗಳನ್ನು ನೆಡುವ ಮೂಲಕ 134 ಎಕರೆ ಪ್ರದೇಶದಲ್ಲಿ ಅರಣ್ಯವನ್ನು ಪುನರ್‌ಸ್ಥಾಪಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ 12 ತಿಂಗಳಲ್ಲಿ ಅನುಸರಣಾ ವರದಿ ಸಲ್ಲಿಸಬೇಕು‘ ಎಂದು ನಿರ್ದೇಶನ ನೀಡಿದೆ.
‘ಪ್ರತಿವಾದಿ ಸಹಕಾರ ಸಂಘಕ್ಕೆ ಕೃಷಿ ಉದ್ದೇಶಗಳಿಗಾಗಿ ಅರಣ್ಯಭೂಮಿ ಗುತ್ತಿಗೆ ನೀಡಿದ್ದು ಸರಿಯಲ್ಲ. ಇದರಿಂದಾಗಿ, ಸುಮಾರು 134 ಎಕರೆಗಳಷ್ಟು ವಿಸ್ತಾರ ವಾದ ಅರಣ್ಯ ಪ್ರದೇಶ ನಾಶವಾಯಿತು. ಅಲ್ಲದೇ, ಸಹಕಾರ ಸಂಘವು 10 ವರ್ಷಗಳಿಗೂ ಹೆಚ್ಚು ಕಾಲ ಅರಣ್ಯ ಪ್ರದೇಶದ ಗುತ್ತಿಗೆ ಪಡೆದಿತ್ತು. ಗುತ್ತಿಗೆಯ ವಿಸ್ತರಣೆಗೆ ಸಂಘ ಅರ್ಹತೆಯನ್ನೇ ಹೊಂದಿರಲಿಲ್ಲ’ ಎಂದು ಪೀಠ ಹೇಳಿದೆ.
ಪ್ರಕರಣವೇನು?
ಕಲಘಟಗಿ ತಾಲ್ಲೂಕಿನ ಬೆಣಚಿ ಮತ್ತು ತುಮರಿಕೊಪ್ಪ ಗ್ರಾಮಗಳಲ್ಲಿರುವ 134 ಎಕರೆ ಮತ್ತು 6 ಗುಂಟೆಯನ್ನು ಸಹಕಾರ ಸಂಘಕ್ಕೆ ಹತ್ತು ವರ್ಷಗಳ ಅವಧಿಗೆ ಅರಣ್ಯ ಇಲಾಖೆ 1976ರಲ್ಲಿ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಅವಧಿಯಲ್ಲಿ, ಸಂಘದ ಸದಸ್ಯರು ಮರಗಳನ್ನು ಕಡಿದು ಭೂಮಿಯಲ್ಲಿ ಸಾಗುವಳಿ ಮಾಡಿದ್ದರು. ಗುತ್ತಿಗೆ ಅವಧಿಯನ್ನು ವಿಸ್ತರಿಸಲು ಅರಣ್ಯ ಇಲಾಖೆ 1985ರಲ್ಲಿ ನಿರಾಕರಿಸಿತ್ತು.
ಈ ಆದೇಶ ಪ್ರಶ್ನಿಸಿ ಸಂಘವು 1987ರಲ್ಲಿ ಹೈಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆ ಬಳಿಕ, ಈ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ಅರಣ್ಯ ಇಲಾಖೆ ಪ್ರಕ್ರಿಯೆ ಆರಂಭಿಸಿತ್ತು. ಜಾಗ ಸ್ವಾಧೀನಕ್ಕೆ ಅರಣ್ಯ ಸಂರಕ್ಷಣಾಧಿಕಾರಿ 2004ರಲ್ಲಿ ಆದೇಶ ಹೊರಡಿಸಿದ್ದರು. ಸಂಘ ಸಲ್ಲಿಸಿದ್ದ ಮೇಲ್ಮನವಿಯನ್ನು ಅರಣ್ಯ ಸಂರಕ್ಷಣಾಧಿಕಾರಿ 2006ರಲ್ಲಿ ತಿರಸ್ಕರಿಸಿದ್ದರು. ಅರಣ್ಯ ಇಲಾಖೆಯು ಜಾಗವನ್ನು 2007ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು.
ಹೈಕೋರ್ಟ್‌ನ 2009ರ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಅರಣ್ಯ ಇಲಾಖೆ ಸಲ್ಲಿಸಿದ ಸಿವಿಲ್ ಮೇಲ್ಮನವಿ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.
ಈ ಜಾಗವು ಅರಣ್ಯ ಇಲಾಖೆಯ ಸ್ವಾಧೀನದಲ್ಲಿದ್ದು, ಯಾವುದೇ ಸಾಗುವಳಿ ಇಲ್ಲ ಎಂದು ಅರಣ್ಯ ಇಲಾಖೆಯು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿತು. ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆಯೇ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ 1996 ಹಾಗೂ 2000ರಲ್ಲಿ ತೀರ್ಪು ನೀಡಿದೆ ಎಂದೂ ವಾದಿಸಿತು.
ಈ ವಾದಗಳನ್ನು ಅಂಗೀಕರಿಸಿದ ನ್ಯಾಯಪೀಠವು, ‘ದೊಡ್ಡ ಪ್ರಮಾಣದಲ್ಲಿ ಅರಣ್ಯನಾಶಕ್ಕೆ ಕಾರಣ ಆಗಿರುವುದರಿಂದ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡು ವುದೇ ಅನಪೇಕ್ಷಿತ. ಗುತ್ತಿಗೆ ನೀಡುವ ಹಂತದಲ್ಲಿ ನಡೆದ ಅಕ್ರಮವನ್ನು ಶಾಶ್ವತ ಗೊಳಿಸಲು ಅನುಮತಿಯನ್ನು ಮುಂದು ವರಿಸುವುದು ಸರಿಯಲ್ಲ ಎಂದಿದೆ.
ಅರಣ್ಯ ಇಲಾಖೆಯು 2007ರಲ್ಲೇ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿರು ವುದರಿಂದ, ಸಂಘಕ್ಕೆ ಗುತ್ತಿಗೆ ಮುಂದು ವರಿಸಲು ಅವಕಾಶ ನೀಡುವ ಹೈಕೋರ್ಟ್ ನಿರ್ದೇಶನವು ಕಾನೂನಿ ನಲ್ಲಿ ಸಮರ್ಥನೀಯವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮುಖ್ಯಮಂತ್ರಿಹೇಳಿದ್ದೇನು?: ‘ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ನಂಜುಂಡಪ್ಪ ಸಮಿತಿ ರಚನೆಯಾಗಿತ್ತು. ನಂಜುಂಡಪ್ಪ ವರದಿಯ ಬಳಿಕ ನೀಡಿದ ಅನುದಾನಗಳ ಬಳಕೆ, ಅನುಷ್ಠಾನ ಮತ್ತು ಫಲಿತಾಂಶದ ಬಗ್ಗೆ ಅಧ್ಯಯನ ಮಾಡಲು ಗೋವಿಂದ್ ರಾವ್ ಸಮಿತಿ ರಚನೆ ಮಾಡಿದ್ದೇವೆ. ಸಮಿತಿಯ ವರದಿಯ ಪ್ರಕಾರ, ಯಾವ ಜಿಲ್ಲೆ ಹಿಂದುಳಿದಿದೆಯೊ ಆ ಜಿಲ್ಲೆಗಳಿಗೆ ಹೆಚ್ಚು ಒತ್ತು ಕೊಟ್ಟು ಶಕ್ತಿ ತುಂಬುವ ಕೆಲಸ ಮಾಡಲಾಗುವುದು’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
‘ಕರ್ನಾಟಕದ ಎಲ್ಲ ಜನರ ತಲಾ ಆದಾಯ ಹೆಚ್ಚಬೇಕೆನ್ನುವುದು ನಮ್ಮ ಉದ್ದೇಶ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಇಲ್ಲಿಯವರೆಗೆ ಸರ್ಕಾರ ಕೆಲಸ ಮಾಡಿದೆ. ಮುಂದೆಯೂ ಹೆಚ್ಚು ಒತ್ತು ನೀಡಿ, ಸಾಧ್ಯವಾದ ಮಟ್ಟಿಗೆ ತಲಾದಾಯದ ಅಂತರ ಕಡಿಮೆ ಮಾಡಲಾಗುವುದು’ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024ರಂತೆ ರಚನೆಯಾಗಿರುವ ಐದು ನಗರ ಪಾಲಿಕೆಗಳ ವಾರ್ಡ್ ಮೀಸಲಾತಿ ನಿಗದಿಪಡಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2025ರ ಸೆಪ್ಟೆಂಬರ್ 29ರಂದು ಸಮಿತಿ ರಚಿಸಲಾಗಿತ್ತು.
ಜಿಬಿಎ ಮುಖ್ಯ ಆಯುಕ್ತ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅವರು ಸಮಿತಿಯ ಸದಸ್ಯರಾಗಿದ್ದರು.
ಈ ಸಮಿತಿ ಡಿ.12ರಂದು ಸಭೆ ನಡೆಸಿದ್ದು, ವಾರ್ಡ್ ಮೀಸಲಾತಿ ನಿಗದಿಗೆ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಅಭಿಪ್ರಾಯಪಟ್ಟಿತು. ಅದರಂತೆ, ಡಿ.19ರಂದು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ದಕ್ಷಿಣಪಿನಾಕಿನಿನ್ಯಾಯಮಂಡಳಿ: ‘ಸುಪ್ರೀಂ’ ಇಂಗಿತ
ಸಂದರ್ಭ: ತೀರ್ಪುಕಾಯ್ದಿರಿಸಿದದ್ವಿಸದಸ್ಯನ್ಯಾಯಪೀಠ l ತಮಿಳುನಾಡುಸರ್ಕಾರಸಲ್ಲಿಸಿದಅರ್ಜಿವಿಚಾರಣೆ: ನದಿತೀರದರಾಜ್ಯಗಳುಮಾತುಕತೆನಡೆಸಲುನಿರಾಕರಿಸಿದರೆ, ಕೇಂದ್ರಸರ್ಕಾರವುಸಭೆಕರೆಯಲುಸಾಧ್ಯವಿಲ್ಲಐಶ್ವರ್ಯಭಾಟಿ,ಹೆಚ್ಚುವರಿಸಾಲಿಸಿಟರ್ಜನರಲ್.
ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯ ಮಂಡಳಿ ರಚಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಇಂಗಿತ ವ್ಯಕ್ತಪಡಿಸಿದೆ.
ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಎನ್.ವಿ.ಅಂಜಾರಿಯಾ ಪೀಠವು, ‘ವಿವಾದ ಇತ್ಯರ್ಥಪಡಿಸಲು ನ್ಯಾಯ ಮಂಡಳಿ ರಚಿಸುವುದು ಸೂಕ್ತ. ಆಗ ಉಭಯ ರಾಜ್ಯಗಳು ತಮ್ಮ ವಾದ ಗಳನ್ನು ಅಲ್ಲಿ ಮಂಡಿಸುತ್ತವೆ’ ಎಂದು ಅಭಿಪ್ರಾಯಪಟ್ಟಿತು. ಎರಡೂ ರಾಜ್ಯಗಳ ವಾದಗಳನ್ನು ಆಲಿಸಿದ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿತು.
ಜಲಶಕ್ತಿ ಸಚಿವಾಲಯವು 2020ರಲ್ಲಿ ಸಂಧಾನ ಸಭೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿರಲಿಲ್ಲ. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರವನ್ನು 2024ರ ಜೂನ್‌ನಲ್ಲಿ ಒತ್ತಾಯಿಸಿತ್ತು.
ಈ ನಡುವೆ, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲಶಕ್ತಿ ಸಚಿವಾಲಯವು ಹೊಸ ಸಂಧಾನ ಸಮಿತಿ ರಚಿಸಿತ್ತು. ಈ ಸಮಿತಿಯು ಉಭಯ ರಾಜ್ಯಗಳ ನಡುವೆ 9 ಸಭೆಗಳನ್ನು ನಡೆಸಿತ್ತು. ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು.
ಜಲ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಮಾತುಕತೆಯ ಮೂಲಕ ಈ ವಿವಾದವನ್ನು ಸೌಹಾರ್ದ ಯುತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರವು ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದಿತ್ತು.
ಕರ್ನಾಟಕದ ಜಲಾನಯನ ಪ್ರದೇಶದಲ್ಲಿ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿ ನೀರನ್ನು ಬಳಸಲು ಯೋಜಿಸಲಾಗಿದೆ. ಇದರಲ್ಲಿ 2 ಟಿಎಂಸಿ ಮತ್ತು ಹೆಚ್ಚುವರಿ ನೀರು ತಮಿಳುನಾಡಿಗೆ ಉಳಿದಿದೆ. ಇದು ತಮಿಳುನಾಡಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು.
‘ನ್ಯಾಯಮಂಡಳಿರಚಿಸುವಅಗತ್ಯವಿಲ್ಲ’
ಕೇಂದ್ರ ಸರ್ಕಾರವು 2025ರ ಜನವರಿ 2ರಂದು ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ಸಚಿವರ ಸಭೆ ನಡೆಸುವ ಮೂಲಕ ಮಾತುಕತೆಯಿಂದಲೇ ಜಲ ವಿವಾದ ಪರಿಹರಿಸಲು ರಾಜ್ಯಗಳಿಗೆ ಇನ್ನೊಂದು ಅವಕಾಶ ನೀಡಬೇಕು. ಇದೊಂದು ಸಣ್ಣ ವಿವಾದ. ನ್ಯಾಯಮಂಡಳಿ ರಚಿಸುವ ಅಗತ್ಯವೇ ಇಲ್ಲ.
‘ಭಾರತದ ಪ್ರಗತಿಗಾಗಿ ಅಣುಶಕ್ತಿ ಸುಸ್ಥಿರ ಉತ್ಪಾದನೆ’ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ)ಹೆಸರಿನ ಮಸೂದೆಯು, ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವದ ಜೊತೆಗೆ ವಿದೇಶಿ ಹೂಡಿಕೆಗೂ ಅವಕಾಶ ಕಲ್ಪಿಸಲಿದೆ.
1962ರ ‘ಅಣುಶಕ್ತಿ ಕಾಯ್ದೆ’ ಹಾಗೂ ಪರಮಾಣು ಹಾನಿಗೆ ಸಂಬಂಧಿಸಿದ 2010ರ ನಾಗರಿಕ ಹೊಣೆಗಾರಿಕೆ ಕಾಯ್ದೆಯನ್ನು ಬದಲಾವಣೆ ಮಾಡಿ ಈ ಮಸೂದೆ ಮಂಡಿಸಲಾಗಿದೆ. ಈ ಎರಡೂ ಕಾಯ್ದೆಗಳು ಪರಮಾಣು ನೀತಿಗೆ ಸಂಬಂಧಿಸಿದಂತೆ ಕಠಿಣ ನಿಬಂಧನೆಗಳನ್ನು ಹೊಂದಿದ್ದವು. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಅಣು ವಿದ್ಯುತ್ ಉತ್ಪಾದನೆಯ ಪಾಲು ಶೇ 3ರಷ್ಟಿದೆ.
2047ರ ವೇಳೆಗೆ 100 ಗಿಗಾವಾಟ್‌ನಷ್ಟು ಅಣು ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗೆ ಅಗತ್ಯವಾಗಿರುವ ಉದಾರ ಆಡಳಿತ ನೀತಿಗೆ ಹೊಸ ಮಸೂದೆಯು ಅವಕಾಶ ಕಲ್ಪಿಸಲಿದೆ ಎಂದು ಹೇಳಲಾಗಿದೆ.
ತೀವ್ರಗೊಳ್ಳುತ್ತಿರುವ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ, ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆಯನ್ನು ನಿಯಂತ್ರಣದಲ್ಲಿ ಇರಿಸುವುದು ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಮಾರ್ಗಗಳನ್ನು ಬಲಪಡಿಸುವುದು ಅನಿವಾರ್ಯ.
ಆದರೆ ಜಲಶಕ್ತಿ, ಸೌರಶಕ್ತಿ ಹಾಗೂ ಪವನಶಕ್ತಿ ಬಳಸಿಕೊಂಡು ವಿದ್ಯುತ್ ಉತ್ಪಾದಿಸುವುದಕ್ಕೆ ಸಾಕಷ್ಟು ಮಿತಿಗಳಿವೆ. ಹಾಗಾಗಿಯೇ, ಅಣು ವಿದ್ಯುತ್ ಉತ್ಪಾದನೆ ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
ಅಣು ವಿದ್ಯುತ್ ಉತ್ಪಾದನೆಯಲ್ಲಿ ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲದೆ, ದೇಶೀಯ ಹಾಗೂ ವಿದೇಶಿ ಖಾಸಗಿ ಸಂಸ್ಥೆ ಗಳ ಭಾಗವಹಿಸುವಿಕೆಯನ್ನು ಉತ್ತೇಜಿ ಸುವುದು ಈ ಮಸೂದೆಯ ಉದ್ದೇಶ ವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಸಂಸ್ಥೆಗಳಿಗೆ ಪರವಾನಗಿ ನೀಡುವ ಅವಕಾಶವನ್ನು ಹೊಸ ಮಸೂದೆ ಕೇಂದ್ರಕ್ಕೆ ಒದಗಿಸಲಿದೆ. ಇಲ್ಲಿಯವರೆಗೆ, ಅಣು ವಿದ್ಯುತ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಭಾರತೀಯ ಅಣು ವಿದ್ಯುತ್ ನಿಗಮ (ಎನ್‌ಪಿಸಿಐಎಲ್) ಮಾತ್ರ ಅಧಿಕಾರ ಹೊಂದಿತ್ತು.
ಪರಮಾಣು ಸ್ಥಾವರದ ನಿರ್ವಹಣೆ ಮತ್ತು ಪೂರೈಕೆ ನಿರ್ವಹಣೆಗೆ ಸಂಬಂಧಿಸಿದ ಕೆಲವು ಕ್ಷೇತ್ರಗಳಲ್ಲಿ ಖಾಸಗಿ ಭಾಗವಹಿಸು ವಿಕೆ ಇದ್ದರೂ, ಮುಖ್ಯ ಹಾಗೂ ಬಹುಸೂಕ್ಷ್ಮ ಕ್ಷೇತ್ರಗಳ ನಿರ್ವಹಣೆ ಸರ್ಕಾರದ ಅಧೀನದಲ್ಲೇ ಇತ್ತು.
ಈ ನಿರ್ಬಂಧಗಳನ್ನು ಮಸೂದೆಯು ತೆರವುಗೊಳಿಸಲಿದ್ದು, ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಶ್ರೇಣೀಕೃತ ಹೊಣೆಗಾರಿಕೆ ವ್ಯವಸ್ಥೆಗೆ ಅವಕಾಶ ಕಲ್ಪಿಸಲಿದೆ.
ಕಾನೂನು ಚೌಕಟ್ಟಿನ ಸರಳೀಕರಣ ಹಾಗೂ ವಹಿವಾಟು ವೆಚ್ಚಗಳ ಕಡಿತ ಸಾಧ್ಯವಾಗಲಿದ್ದು, ಆಡಳಿತಾತ್ಮಕ ಅನುಮೋದನೆಗಳಿಗೆ ಸಂಬಂಧಿಸಿದ ವಿಳಂಬವನ್ನೂ ಕಡಿಮೆ ಮಾಡುವ ಗುರಿಯನ್ನು ಮಸೂದೆ ಹೊಂದಿದೆ.
ಪೇಟೆಂಟ್ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಸಂಶೋಧನೆಗಳನ್ನು ಉತ್ತೇಜಿಸುವ ಗುರಿಯನ್ನೂ ಹೊಂದಿದೆ.
ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿಯವರಿಗೆ ಅವಕಾಶ ಕಲ್ಪಿಸುವ ಚಿಂತನೆ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾಗಿದ್ದರೂ, ಮಸೂದೆಯಲ್ಲಿನ ಕೆಲವು ಅಂಶಗಳು ಆತಂಕಕ್ಕೆ ಕಾರಣ ಆಗುವಂತಿವೆ.
ಯುಪಿಎ ಸರ್ಕಾರದ ಮೈಲಿಗಲ್ಲುಗಳಲ್ಲಿ ಒಂದಾದ ಭಾರತ–ಅಮೆರಿಕ ಪರಮಾಣು ಒಪ್ಪಂದ ಮತ್ತು 2010ರ ಕಾಯ್ದೆಯೂ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ಅಮೆರಿಕದ ಪೂರೈಕೆದಾರರು ಭಾರತೀಯ ಕಾನೂನು ನಿರ್ಬಂಧಗಳ ಬಗ್ಗೆ, ವಿಶೇಷವಾಗಿ ಉತ್ತರದಾಯಿತ್ವದ ಕಾನೂನುಗಳ ಬಗ್ಗೆ ಎಚ್ಚರದಿಂದಿದ್ದರು.
ಈ ಹೊಣೆಗಾರಿಕೆಗೆ ವಿಧಿಸಿದ್ದ ನಿಬಂಧನೆಗಳನ್ನು ಪ್ರಸ್ತಾವಿತ ಮಸೂದೆಯು ತೆಗೆದುಹಾಕಿದೆ. ಪರಮಾಣು ಸ್ಥಾವರಗಳಲ್ಲಿ ದುರಂತ ಸಂಭವಿಸಿದರೆ ಸ್ಥಾವರದ ನಿರ್ವಹಣೆ ಹೊತ್ತ ಸಂಸ್ಥೆಯು ಪಾವತಿಸಬೇಕಾದ ಗರಿಷ್ಠ ಹೊಣೆಗಾರಿಕೆಯ ಮೊತ್ತವು, ಆ ಸಂಸ್ಥೆ ಬಳಕೆ ಮಾಡುವ ಪರಮಾಣು ಸ್ಥಾವರದ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ.
ಈ ಹೊಣೆಗಾರಿಕೆ ಮೊತ್ತವನ್ನು ₹3 ಸಾವಿರ ಕೋಟಿಗೆ ಮಿತಿಗೊಳಿಸಿದೆ. ಜೊತೆಗೆ ಪರಿಹಾರ ನೀಡಬೇಕಾದ ಜವಾಬ್ದಾರಿಯನ್ನೂ ಮಿತಗೊಳಿಸಲಿದೆ. ಬಹು ಸಂಕೀರ್ಣವಾದ ಅಣುಶಕ್ತಿ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಖಾಸಗಿಯವರಿಗೆ ಅವಕಾಶ ಕಲ್ಪಿಸುವ ಹಾಗೂ ಅವರಿಗೆ ಶಾಸನಬದ್ಧ ಸುರಕ್ಷತೆ ಒದಗಿಸುವ ನಿರ್ಧಾರ ಪ್ರತಿ ಪಕ್ಷಗಳ ಟೀಕೆಗೆ ಸಹಜವಾಗಿಯೇ ಒಳಗಾಗಿದೆ.
ಪರಿಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗದ ವ್ಯಾಪ್ತಿಯನ್ನು ಕಿರಿದುಗೊಳಿಸುವುದರ ಜೊತೆಗೆ, ಅಣುಶಕ್ತಿ ಕ್ಷೇತ್ರಕ್ಕೆ ಸಂಬಂಧಿಸಿದ ಸ್ವತಂತ್ರ ನಿಯಂತ್ರಕಗಳನ್ನು ಇಲ್ಲವಾಗಿಸಿರುವುದರ ಬಗ್ಗೆಯೂ ಟೀಕೆಗಳಿವೆ. ಅಣು ವಿದ್ಯುತ್ ಸ್ವಾವಲಂಬನೆ ಹೆಸರಿನಲ್ಲಿ ಅಸುರಕ್ಷತೆ, ಅಪಾಯ ಕಲ್ಪಿಸುವ ಸಾಧ್ಯತೆ ಇರುವುದರಿಂದಲೇ, ‘ಎಸ್‌ಎಚ್‌ಎಎನ್‌ಟಿಐ–ಶಾಂತಿ ಮಸೂದೆ’ ಸರ್ಕಾರದ ಪಾಲಿಗೆ ಮುಂದಿನ ದಿನಗಳಲ್ಲಿ ಹುಲಿಸವಾರಿಯಾಗಿ ಪರಿಣಮಿಸಿದರೆ ಅಚ್ಚರಿಯೇನಿಲ್ಲ.
ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೇರ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಶೇ 8ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
ಮರುಪಾವತಿಯು ಮಂದಗೊಂಡಿ ರುವುದು ಮತ್ತು ಕಾರ್ಪೊರೇಟ್‌ಗಳಿಂದ ಮುಂಗಡ ತೆರಿಗೆ ಸಂಗ್ರಹದ ಪ್ರಮಾಣದಲ್ಲಿ ಏರಿಕೆಯಾಗಿರುವುದು ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ.
ನಿವ್ವಳ ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಶೇ 10.54ರಷ್ಟು ಹೆಚ್ಚಳವಾಗಿ,₹8.17 ಲಕ್ಷ ಕೋಟಿಯಾಗಿದೆ. ವೈಯಕ್ತಿಕ ಆದಾಯ ತೆರಿಗೆಯನ್ನು ಒಳಗೊಂಡಿರುವ ಕಾರ್ಪೊರೇಟ್‌ಯೇತರ ತೆರಿಗೆ ಸಂಗ್ರಹವು ₹8.47 ಲಕ್ಷ ಕೋಟಿಯಾಗಿದ್ದು, ಶೇ 6.37ರಷ್ಟು ಏರಿಕೆ ಕಂಡಿದೆ. ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಸಂಗ್ರಹವು ₹40,195 ಕೋಟಿಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮರುಪಾವತಿಯು (ರೀಫಂಡ್) ಶೇ 14ರಷ್ಟು ಇಳಿದಿದ್ದು, ₹2.97 ಲಕ್ಷ ಕೋಟಿಯಾಗಿದೆ. ಮರುಪಾವತಿಯನ್ನು ಸರಿಹೊಂದಿಸುವ ಮೊದಲು ಒಟ್ಟು ನೇರ ತೆರಿಗೆ ಸಂಗ್ರಹವು ಶೇ 4.16ರಷ್ಟು ಏರಿಕೆಯಾಗಿ, ₹20.01 ಲಕ್ಷ ಕೋಟಿ ದಾಟಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು, ನೇರ ತೆರಿಗೆ ಮೂಲಕ ₹25.20 ಲಕ್ಷ ಕೋಟಿ ಸಂಗ್ರಹಿಸಲು ಗುರಿ ಹೊಂದಿದೆ. ಇದು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 12.7ರಷ್ಟು ಹೆಚ್ಚಳ. ಷೇರು ವಹಿವಾಟು ತೆರಿಗೆ ಮೂಲಕ ₹78 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.
‘ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿರುವುದು ಕಾರ್ಪೊರೇಟ್ ಕಂಪನಿಗಳ ಸದೃಢ ಗಳಿಕೆಯನ್ನು ಸೂಚಿಸುತ್ತಿದೆ’ ಎಂದು ಡೆಲಾಯ್ಟ್ ಇಂಡಿಯಾ ಪಾಲುದಾರ ರೋಹಿಂಟನ್ ಸಿಧ್ವಾ ಹೇಳಿದ್ದಾರೆ. ಮರುಪಾವತಿ ಸಂಬಂಧಿಸಿದ ಪ್ರಕರಣಗಳ ಹೆಚ್ಚಿನ ಪರಿಶೀಲನೆಯಿಂದಾಗಿ ಮರುಪಾವತಿ ವಿತರಣೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಒಟ್ಟು ಮೀಸಲು ಸಂಗ್ರಹ ₹61.77 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ ₹8,122 ಕೋಟಿಯಷ್ಟು ಹೆಚ್ಚಳವಾಗಿದ್ದು, ₹50 ಲಕ್ಷ ಕೋಟಿಯಾಗಿದೆ. ಚಿನ್ನದ ಮೀಸಲು ಸಂಗ್ರಹದಲ್ಲಿ ₹6,795 ಕೋಟಿ ಏರಿಕೆಯಾಗಿದ್ದು, ₹9.65 ಲಕ್ಷ ಕೋಟಿಯಾಗಿದೆ.
ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್) ₹1.68 ಲಕ್ಷ ಕೋಟಿ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪಾಲು ₹42,007 ಕೋಟಿಯಾಗಿದೆ ಎಂದು ತಿಳಿಸಿದೆ.
‘ನರೇಗಾ’ ಯೋಜನೆಗೆ ಪರ್ಯಾಯವಾಗಿ ರೂಪಿಸಿರುವ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆ ಯಲ್ಲಿ ಅಂಗೀಕರಿಸಲಾಯಿತು.
₹10–11 ಲಕ್ಷ ಕೋಟಿಯನ್ನು ಕೇವಲ ವೇತನ ಪಾವತಿಸಲು ಖರ್ಚು ಮಾಡಬಾರದು. ಬದಲಾಗಿ, ಶಾಶ್ವತ ಆಸ್ತಿಗಳನ್ನು ಸೃಷ್ಟಿಸಲು ಬಳಸಬೇಕು ಎಂದು ಭಾವಿಸಿ ಆಳವಾದ ಚರ್ಚೆಯ ಬಳಿಕ ‘ಜಿ ರಾಮ್ ಜಿ’ ಮಸೂದೆಯನ್ನು ತರಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಒಳಮೀಸಲಾತಿ ನೀಡುವ ಸಂಬಂಧ 2024ರ ಆ. 1ರಂದು ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಯಿತು.
ಒಳಮೀಸಲಾತಿಗೆ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಆಯೋಗವು ಐದು ಪ್ರವರ್ಗಗಳ ನಡುವೆ ಮೀಸಲಾತಿ ಹಂಚಿಕೆ ಮಾಡಿ ವರದಿ ನೀಡಿತ್ತು.
‘ವರದಿ ಆಧರಿಸಿ 101 ಉಪಜಾತಿಗಳನ್ನು ಮೂರು ಪ್ರವರ್ಗಗಳನ್ನಾಗಿ ವಿಂಗಡಿಸಿ ‘ಪ್ರವರ್ಗ ಎ’ನಲ್ಲಿ 16 ಜಾತಿಗಳನ್ನು ಸೇರಿಸಿ ಶೇ 6, ‘ಪ್ರವರ್ಗ ಬಿ’ನಲ್ಲಿ 19 ಜಾತಿಗಳನ್ನು ಸೇರಿಸಿ ಶೇ 6 ಹಾಗೂ ‘ಪ್ರವರ್ಗ ಸಿ’ನಲ್ಲಿ 63 ಜಾತಿಗಳನ್ನು ಸೇರಿಸಿ ಶೇ 5 ಮೀಸಲಾತಿ ಹಂಚಿಕೆ ಮಾಡಲಾಗಿದೆ.
ದ್ವೇಷಭಾಷಣತಡೆಮಸೂದೆಗೆಅಸ್ತು
ಸಂದರ್ಭ: ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ–2025’ಗೆ ಅನುಮೋದನೆ ನೀಡುವಂತೆ ಗೃಹ ಸಚಿವ ಪ್ರಸ್ತಾಪಿಸಿದರು.
ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ: ‘ಕೇಂದ್ರ ಸರ್ಕಾರ ಜಾರಿಗೆ ತಂದ ಬಿಎನ್‌ಎಸ್ ಕಾಯ್ದೆಯು ದ್ವೇಷ ಭಾಷಣ ತಡೆಗೆ ಅವಕಾಶ ಕಲ್ಪಿಸಿದೆ. ಹಾಗಿದ್ದರೂ ಎದುರಾಳಿಗಳನ್ನು ಹತ್ತಿಕ್ಕಲು ಮಸೂದೆ ತರಲಾಗುತ್ತಿದೆ’ ಎಂದರು.
ರಾಜ್ಯಕ್ಕಿಲ್ಲ ₹16,863 ಕೋಟಿ
ಸಂದರ್ಭ: ಜಲ ಜೀವನ್ ಮಿಷನ್‌ನ (ಜೆಜೆಎಂ) ಮಾರ್ಗಸೂಚಿ ಪ್ರಕಾರ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವ ಸಲ್ಲಿಸಲು ವಿಳಂಬ ಮಾಡಿರುವ ಕಾರಣ ನೀಡಿ ಕರ್ನಾಟಕಕ್ಕೆ ₹16,863 ಕೋಟಿ ಅನುದಾನ ನೀಡಲು ಕೇಂದ್ರ ಜಲಶಕ್ತಿ ಸಚಿವಾಲಯ ನಿರಾಕರಿಸಿದೆ.
ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿರುವ ಈ ಯೋಜನೆಗೆ ಜಲಶಕ್ತಿ ಸಚಿವಾಲಯವು ರಾಜ್ಯಕ್ಕೆ 2019ರಿಂದ 2025ರ ಅವಧಿಗೆ ₹28,623 ಕೋಟಿ (ಕೇಂದ್ರದ ಪಾಲು) ಹಂಚಿಕೆ ಮಾಡಿತ್ತು. ಆದರೆ, ಈವರೆಗೆ ₹11,760 ಕೋಟಿ ಬಿಡುಗಡೆ ಮಾಡಿದೆ.
‘ಕೇಂದ್ರದ ನಿಧಿಯನ್ನು ಅನುಮೋದಿತ ಮಿಷನ್ ಅವಧಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಸ್ಪಷ್ಟಪಡಿಸಲಾಗಿದೆ. ರಾಜ್ಯ ಸರ್ಕಾರವು ಸ್ವಂತ ಸಂಪನ್ಮೂಲಗಳಿಂದ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಲಹೆ ನೀಡಲಾಗಿದೆ.
ಕೇಂದ್ರ ಸಚಿವ ಸಂಪುಟವು 2019-20ರಿಂದ 2023-24 ರವರೆಗೆ ಜಲ ಜೀವನ್ ಮಿಷನ್ ಅನುಷ್ಠಾನಕ್ಕೆ ಅನುಮೋದನೆ ನೀಡಿತ್ತು. ಈ ಅವಧಿಯಲ್ಲಿ, ರಾಜ್ಯ ಸರ್ಕಾರಗಳು ಯೋಜನೆ ರೂಪಿಸಿ ಅನುಮೋದನೆ ಪಡೆದು, ಅನುಷ್ಠಾನ ಮಾಡಬೇಕಿತ್ತು. ರಾಜ್ಯಗಳಲ್ಲಿ ಅನಗತ್ಯವಾಗಿ ಹಣ ಪೋಲಾಗುವುದನ್ನು ತಪ್ಪಿಸಲು ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೆ ‘ಸಮಯಕ್ಕೆ ಸರಿಯಾಗಿ ಹಣ ಪಾವತಿ’ ತತ್ವದ ಅಡಿಯಲ್ಲಿ ಹಣಕಾಸು ಸಚಿವಾಲಯದ ಸುತ್ತೋಲೆಗಳ ಪ್ರಕಾರ ಹಣ ಬಿಡುಗಡೆ ಮಾಡಲಾಗಿತ್ತು.
ರಾಜ್ಯಕ್ಕೆ ₹28,623.89 ಕೋಟಿ ಹಂಚಿಕೆ ಮಾಡಲಾಗಿತ್ತು. ಆದರೆ, ಎಂಒಎಫ್ ಮತ್ತು ಜೆಜೆಎಂ ಮಾರ್ಗಸೂಚಿ ಪ್ರಕಾರ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವಗಳನ್ನು ಸಲ್ಲಿಸಲು ವಿಳಂಬ ಮಾಡಿದ ಕಾರಣಕ್ಕೆ ರಾಜ್ಯವು ಮಿಷನ್ ಅವಧಿಯಲ್ಲಿ ₹11,760 ಕೋಟಿ ಮಾತ್ರ ಪಡೆದಿದೆ. ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ಕೇಂದ್ರದ ಪಾಲನ್ನು ಈವರೆಗೆ ನೀಡಲಾಗಿದೆ.
ದೇಶದಲ್ಲಿ ಯೋಜನೆಯ ಪ್ರಗತಿ ಪರಿಗಣಿಸಿ 2028ರವರೆಗೆ ಮಿಷನ್ ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಯೋಜನೆಯ ವಿಸ್ತರಣೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಂತರ ಮತ್ತು ಮಾರ್ಗಸೂಚಿ ಪರಕಾರ ಕೇಂದ್ರದ ಅನುದಾನವನ್ನು ಅರ್ಹ ರಾಜ್ಯಗಳಿಗೆ ಬಿಡುಗಡೆ ಮಾಡಲು ಅವಕಾಶ ಇದೆ.
‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಮಸೂದೆಯನ್ನು ಮಂಡಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ‘ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಾಮಾಜಿಕವಾಗಿ ಬಹಿಷ್ಕಾರ ಹಾಕುವುದು ನಡೆದಿದೆ. ಇದು ಮಾನವ ಹಕ್ಕುಗಳ, ನಾಗರಿಕ ಹಕ್ಕುಗಳು ಉಲ್ಲಂಘನೆ. ಇದನ್ನು ನಿಷೇಧಿಸುವ ಐತಿಹಾಸಿಕ ಮಸೂದೆಯನ್ನು ರೂಪಿಸಲಾಗಿದೆ.
ಪರಿಷತ್ತು: 7 ಮಸೂದೆಗಳಿಗೆಅನುಮೋದನೆ
ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ಮಸೂದೆ–2025
ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ (ಎರಡನೇ ತಿದ್ದುಪಡಿ) ಮಸೂದೆ–2025
ಕರ್ನಾಟಕ ಧನವಿನಿಯೋಗ (ಸಂಖ್ಯೆ:04) ಮಸೂದೆ–2025
ಬಾಂಬೆ ಸಾರ್ವಜನಿಕ ನ್ಯಾಸ (ಕರ್ನಾಟಕ ತಿದ್ದುಪಡಿ) ಮಸೂದೆ–2025
ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ತಿದ್ದುಪಡಿ) ಮಸೂದೆ–2025
ಔಷಧ ಮತ್ತು ಪ್ರಸಾಧನ ಸಾಮಗ್ರಿ (ಕರ್ನಾಟಕ ತಿದ್ದುಪಡಿ) ಮಸೂದೆ–2025
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ತಿದ್ದುಪಡಿ) ಮಸೂದೆ–2025
ಕಾರುಗಳಮೇಲೆಸೆಸ್
ಬೈಕುಗಳು ಮತ್ತು ಕಾರುಗಳ ಮೇಲೆ ವಿಧಿಸಲಾಗುವ ರಸ್ತೆ ಸುರಕ್ಷತಾ ಸೆಸ್ ವಾಪಸ್ ಪಡೆಯುವ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಂಡಿಸಿದ ‘ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ತಿದ್ದುಪಡಿ) ಮಸೂದೆ–2025.
ಸಮಸ್ಯೆಬಗೆಹರಿಸುವುದೇಕಾಯ್ದೆ?
ಭಾರತ–ಒಮಾನ್ ವ್ಯಾಪಾರಒಪ್ಪಂದಕ್ಕೆಸಹಿ: ಪ್ರಧಾನಿನರೇಂದ್ರಮೋದಿಗೆ ‘ಆರ್ಡರ್ಆಫ್ಒಮಾನ್’ ಪ್ರಶಸ್ತಿ
ಸಂದರ್ಭ: ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಟಿಎ) ಭಾರತ ಮತ್ತು ಒಮಾನ್ ಸಹಿ ಹಾಕಿವೆ. ಈ ಒಪ್ಪಂದವು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಹೊಸ ಭರವಸೆ ಮತ್ತು ಬಲವನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಭಾರತ–ಒಮಾನ್ ವ್ಯಾಪಾರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಒಪ್ಪಂದವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ದಿಕ್ಕನ್ನು ನೀಡುತ್ತದೆ ಮತ್ತು ಪರಸ್ಪರ ಬೆಳವಣಿಗೆಗೆ ಅವಕಾಶ ಕಲ್ಪಿಸುತ್ತದೆ. ಪ್ರತಿಯೊಂದು ವಲಯದಲ್ಲಿಯೂ ಅವಕಾಶದ ಹೊಸ ಬಾಗಿಲನ್ನು ತೆರೆಯುತ್ತದೆ’ ಎಂದಿದ್ದಾರೆ.
‘ಭಾರತವು ಯಾವಾಗಲೂ ಪ್ರಗತಿಪರ ಮತ್ತು ಸ್ವಾವಲಂಬಿ ದೇಶವಾಗಿದೆ. ಭಾರತ ಬೆಳೆದಂತೆಲ್ಲ, ಅದು ತನ್ನ ಸ್ನೇಹಿತರಿಗೂ ಬೆಳೆಯಲು ಸಹಾಯ ಮಾಡುತ್ತದೆ. ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗುವತ್ತ ಸಾಗಿದೆ. ಇದು ಇಡೀ ಜಗತ್ತಿಗೆ ಪ್ರಯೋಜನಕಾರಿ. ಅದರಲ್ಲೂ ಒಮಾನ್ ಭಾರತದ ಆತ್ಮೀಯ ದೇಶ ವಾಗಿ ರುವುದರಿಂದ ಅದಕ್ಕೆ ಹೆಚ್ಚು ಪ್ರಯೋ ಜನವಾಗಲಿದೆ’ ಎಂದು ಹೇಳಿದ್ದಾರೆ.
‘ಭಾರತ ಮತ್ತು ಒಮಾನ್‌ನ ವ್ಯಾವಹಾರಿಕ ಸಂಬಂಧವು ತಲೆಮಾರು ಗಳಿಂದ ನಂಬಿಕೆಯ ಬುನಾದಿಯ ಮೇಲೆ ನಿಂತಿದೆ. ಉಭಯ ದೇಶಗಳ ನಾವು ಪರಸ್ಪರ ಮಾರುಕಟ್ಟೆಗಳನ್ನು ಅರ್ಥಮಾಡಿಕೊಂಡಿದ್ದೇವೆ’ ಎಂದಿದ್ದಾರೆ.
ಅಭಿವೃದ್ಧಿಯಲ್ಲಿ ಪಾಲುದಾರರಾ ಗುವಂತೆ ಒಮಾನ್ ಕಂಪನಿಗಳಿಗೆ ಪ್ರಧಾನಿ ಕರೆ ನೀಡಿದ್ದಾರೆ.
‘ಮೈತ್ರಿಪರ್ವ’ದಲ್ಲಿಪ್ರಧಾನಿಮಾತು
21ನೇ ಶತಮಾನದಲ್ಲಿ ಭಾರತವು ತ್ವರಿತವಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ದೊಡ್ಡ ಗುರಿಗಳನ್ನು ಇಟ್ಟುಕೊಂಡು, ನಿರ್ದಿಷ್ಟ ಸಮಯದಲ್ಲಿ ಫಲಿತಾಂಶ ಪಡೆಯುವುದು ಇದರ ಉದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಮಸ್ಕತ್‌ನಲ್ಲಿ ನಡೆದ ‘ಮೈತ್ರಿ ಪರ್ವ’ ಕಾರ್ಯಕ್ರಮದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ದೀಪ ಈಗ ನಮ್ಮ ಮನೆಗಳಲ್ಲಿ ಮಾತ್ರವಲ್ಲದೆ ಇಡೀ ಜಗತ್ತನ್ನೇ ಬೆಳಗುತ್ತಿದೆ’ ಎಂದಿದ್ದಾರೆ.
‘ದೀಪಾವಳಿ ಹಬ್ಬಕ್ಕೆ ದೊರೆತಿರುವ ಜಾಗತಿಕ ಮನ್ನಣೆಯು ಭರವಸೆ, ಸೌಹಾರ್ದ ಮತ್ತು ಮಾನವೀಯತೆಯ ಸಂದೇಶ ಹರಡುವ ನಮ್ಮ ಗುರಿಗೆ ಸಿಕ್ಕ ಗೌರವವಾಗಿದೆ. ಇದು ಎಲ್ಲ ಭಾರತೀಯರು ಹೆಮ್ಮೆಪಡುವ ವಿಷಯವಾಗಿದೆ’ ಎಂದು ಹೇಳಿದ್ದಾರೆ.
‘ಕಾಫಿ ಉದ್ಯಮದ ಸವಾಲು ಮತ್ತು ಪರಿಹಾರ, ತಾಂತ್ರಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಒಳಗೊಳ್ಳುವ ಬಗ್ಗೆ, ಮಾನವ ಪ್ರಾಣಿ ಸಂಘರ್ಷ, ವಿಶೇಷ ಕಾಫಿ ಮತ್ತು ಜಾಗತಿಕ ಮಾರುಕಟ್ಟೆ ವಿಷಯ ಸೇರಿ ಹತ್ತು ಚರ್ಚಾಗೋಷ್ಠಿ ಗಳು ನಡೆಯಲಿವೆ.
ಸಮಗ್ರ ಕೃಷಿ ಆರ್ಥಿಕ ನಿರ್ವಹಣೆ, ಮಣ್ಣು ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ಕಾಫಿ ಬೆಳೆಯುವ ವಿಧಾನ, ಕಾಫಿ ತೋಟಗಳ ನಿರ್ವಹಣೆ ಬಗ್ಗೆ ಕಾರ್ಯಾಗಾರಗಳು ನಡೆಯಲಿವೆ. ಇದೇ ವೇಳೆ, ಕಾಫಿಯ 2 ಹೊಸ ತಳಿ ಬಿಡುಗಡೆ ಮಾಡಲಾಗುತ್ತಿದೆ’ ಎಂದರು.
‘1925ರಲ್ಲಿ ಮೈಸೂರು ಮಹಾರಾಜರ ಆಡಳಿತ ಸಂದರ್ಭದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯು ಕಾಫಿ ಬೆಳೆಯಲ್ಲಿ ಎರಡು ಜಿ.ಐ. ಟ್ಯಾಗ್‌ಗಳನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ಭಾರತೀಯ ಕಾಫಿಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿದ್ದರೂ ಬ್ರ‍್ಯಾಂಡಿಂಗ್ ಸಮಸ್ಯೆ ಇದೆ. ಭಾರತೀಯ ಕಾಫಿ ಬ್ರ‍್ಯಾಂಡಿಂಗ್ ಹೆಚ್ಚಿಸುವ ಬಗ್ಗೆಯೂ ಚರ್ಚಿಸಲಾ ಗುವುದು. ರಾಜ್ಯ, ಹೊರ ರಾಜ್ಯಗಳಿಂದ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸ ಲಿದ್ದಾರೆ’ ಎಂದರು.
7 ಲಕ್ಷಟನ್ಗೆಹೆಚ್ಚಿಸಲುನೀಲನಕ್ಷೆ
‘ರಾಜ್ಯದಲ್ಲಿ ಸದ್ಯ 3.5 ಲಕ್ಷ ಟನ್ ಕಾಫಿ ಉತ್ಪಾದಿಸಲಾಗುತ್ತಿದ್ದು, 7 ಲಕ್ಷ ಟನ್ ಉತ್ಪಾದಿಸಲು ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಉದ್ಯಮಕ್ಕೆ ಬರುತ್ತಿರುವ ಯುವಜನರನ್ನು ಪ್ರೋತ್ಸಾಹಿಸಲು ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದು ಹೇಳಿದರು.
‘ಆಧುನಿಕ ತಂತ್ರಜ್ಞಾನ ಬಳಕೆಯ ಬಗ್ಗೆ ಸಂಸ್ಥೆಯಲ್ಲಿ ಅಧ್ಯಯನ ನಡೆದಿದ್ದು, ಕಾಫಿಯನ್ನು ಉತ್ಕೃಷ್ಟ ಗುಣಮಟ್ಟಕ್ಕೆ ಕೊಂಡೊಯ್ಯಲು ಮಾರ್ಗಸೂಚಿ ಮತ್ತು ಸಿದ್ಧತೆಗಳನ್ನು ನಡೆಸಲಾಗಿದೆ’ ಎಂದರು.
‘ಉತ್ಪಾದನೆ ಹೆಚ್ಚಿಸಲು ಕಾಫಿ ಬೆಳೆಯುವ ಜಾಗ ವಿಸ್ತರಿಸಬೇಕೆಂದೇನಿಲ್ಲ. ತಂತ್ರಜ್ಞಾನ ಸಹಿತ ತೋಟಗಳ ನಿರ್ವಹಣೆಯಲ್ಲಿ ಬದಲಾವಣೆ ಮಾಡಿಕೊಂಡರೆ ಇಳುವರಿಯನ್ನು ದುಪ್ಪಟ್ಟು ಮಾಡಿಕೊಳ್ಳಬಹುದು. ಈ ಬಗ್ಗೆಯೂ ಸಮಾವೇಶದಲ್ಲಿ ಚರ್ಚೆಯಾಗಲಿದೆ’ ಎಂದರು.
ಸಕ್ಕರೆ ಕಾರ್ಖಾನೆಗಳ ಬಾಕಿ ಪಾವತಿಗಳ ಮೊತ್ತವು ಹೆಚ್ಚಾಗುತ್ತಿದೆ, ಅದು ನವೆಂಬರ್ ಅಂತ್ಯಕ್ಕೆ ಮಹಾರಾಷ್ಟ್ರದಲ್ಲೇ ₹2,000 ಕೋಟಿಯಷ್ಟಾಗಿದೆ. ದಾಸ್ತಾನು ಹೆಚ್ಚಿರುವುದು, ಉತ್ಪಾದನಾ ವೆಚ್ಚ ಹೆಚ್ಚಳ, ಎಥೆನಾಲ್ ಉತ್ಪಾದನೆಗೆ ಸಕ್ಕರೆ ಬಳಕೆಗೆ ಮಿತಿ, ದೇಶಿ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಇಳಿಕೆಯ ಕಾರಣಗಳಿಂದಾಗಿ ಸಕ್ಕರೆ ಕಾರ್ಖಾನೆಗಳು ನಗದು ಕೊರತೆಯನ್ನು ಎದುರಿಸುತ್ತಿವೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘವು (ಐಎಸ್‌ಎಂಎ) ಹೇಳಿದೆ.
ಐಎಸ್‌ಎಂಎ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಮಾತನಾಡಿದ ಚೋಪ್ರಾ, ‘ಅವರು (ಐಎಸ್‌ಎಂಎ) ನಮಗೆ ಸಮಸ್ಯೆಗಳನ್ನು ಹೇಳಿದ್ದಾರೆ… ಮುಂದಿನ ಒಂದೆರಡು ತಿಂಗಳಲ್ಲಿ ನಾವು ಕಾರ್ಖಾನೆಗಳಿಗೆ ನೆರವಾಗುವ ರೀತಿಯಲ್ಲಿ ಹಾಗೂ ರೈತರಿಗೆ ಸಕಾಲದಲ್ಲಿ ಪಾವತಿಗಳು ಆಗುವ ರೀತಿಯಲ್ಲಿ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.
ಎಂಎಸ್‌ಪಿ ಪರಿಷ್ಕರಣೆ, ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಅವಕಾಶ ನೀಡುವುದು, ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಸಕ್ಕರೆ ಬಳಸಲು ಅವಕಾಶ ಕಲ್ಪಿಸುವುದು ಸೇರಿ ಎಲ್ಲ ಆಯ್ಕೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ.
ಸಕ್ಕರೆ ಎಂಎಸ್‌ಪಿ ದರ ಕೆ.ಜಿ.ಗೆ ₹31ರ ಮಟ್ಟದಲ್ಲಿ 2019ರ ಫೆಬ್ರುವರಿಯಿಂದ ಇದೆ. ಇದನ್ನು ಕೆ.ಜಿ.ಗೆ ₹41.66ಕ್ಕೆ ಹೆಚ್ಚಿಸಬೇಕು ಎಂಬುದು ಐಎಸ್‌ಎಂಎ ಬೇಡಿಕೆ.
ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (ಎನ್‌ಪಿಎಸ್) ವ್ಯಾಪ್ತಿಗೆ ಖಾಸಗಿ ವಲಯದ 25 ಕೋಟಿ ಹೊಸ ಚಂದಾದಾರರನ್ನು ಸೇರಿಸುವ ಗುರಿ ಹೊಂದಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಅಧ್ಯಕ್ಷ ಶಿವಸುಬ್ರಮಣಿಯನ್ ರಾಮನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಕಸಿತ ಭಾರತ ದೃಷ್ಟಿಕೋನಕ್ಕೆ ಅನುಗುಣವಾಗಿ ಎನ್‌ಪಿಎಸ್ ವಿಸ್ತರಿಸಲು ಉದ್ದೇಶಿಸ ಲಾಗಿದೆ. ಎನ್‌ಪಿಎಸ್ ಅಡಿಯಲ್ಲಿ ಸಂಗ್ರಹವಾಗುವ ಹಣವನ್ನು ಪ್ರಮುಖ ಮೂಲಸೌಕರ್ಯ ಮತ್ತು ಕಾರ್ಪೊರೇಟ್ ಯೋಜನೆಗಳಿಗೆ ಬಳಸಲಾಗುವುದು. ಚಂದಾದಾರರ ಉಳಿತಾಯವನ್ನು ಹೂಡಿಕೆಗಳನ್ನಾಗಿ ಪರಿವರ್ತಿಸಲಾಗು ತ್ತಿದ್ದು, ಇದಕ್ಕಾಗಿ ಹೂಡಿಕೆ ಮಾರ್ಗಸೂಚಿ ಗಳನ್ನು ಬದಲಾಯಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.
ಪ್ರಸ್ತುತ, ಎನ್‌ಪಿಎಸ್ ಮತ್ತು ಅಟಲ್ ಪಿಂಚಣಿ ಯೋಜನೆಯ (ಎಪಿವೈ) ಸಂಪತ್ತಿನ ಮೌಲ್ಯವು (ಎಯುಎಂ) ₹16 ಲಕ್ಷ ಕೋಟಿ ದಾಟಿದೆ. ಈ ಪೈಕಿ ಶೇ 50ರಷ್ಟು ಮೊತ್ತ ಸರ್ಕಾರಿ ಸಾಲಪತ್ರ ಗಳಲ್ಲಿ, ಶೇ 23ರಷ್ಟನ್ನು ಕಾರ್ಪೊರೇಟ್ ಸಾಲಪತ್ರಗಳಲ್ಲಿ, ಶೇ 18ರಷ್ಟನ್ನು ಷೇರುಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದರು.
ಎನ್‌ಪಿಎಸ್ ಸುಧಾರಣೆಗಳ ಮೂಲಕ ವ್ಯವಸ್ಥೆಯನ್ನು ಹೆಚ್ಚು ಗ್ರಾಹಕಸ್ನೇಹಿ ಆಗಿಸಲಾಗಿದ್ದು, ಎಲ್ಲ ವರ್ಗದವರು ಎನ್‌ಪಿಎಸ್ ಪಡೆಯುವಂತೆ ಮಾಡಲಾಗಿದೆ. ಚಂದಾದಾರರು 15 ವರ್ಷಗಳ ನಂತರ ತಮ್ಮ ಹೂಡಿಕೆಯ ಶೇ 80ರವರೆಗಿನ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ರೈತ ಉತ್ಪಾದಕ ಸಂಸ್ಥೆಗಳು, ಎಂಎಸ್‌ಎಂಇ ವಲಯದಲ್ಲಿನ ಕಾರ್ಮಿಕರನ್ನು ಸಹ ಎನ್‌ಪಿಎಸ್ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಅಲ್ಲದೆ, ವಿವಿಧ ಫಿನ್‌ಟೆಕ್ ವೇದಿಕೆಗಳಲ್ಲಿ ಸಹ ಎನ್‌ಪಿಎಸ್ ಲಭ್ಯವಾಗುವಂತೆ ಮಾಡಲು ಫಿನ್‌ಟೆಕ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
ಸಂದರ್ಭ: ಪರಿಶಿಷ್ಟಜಾತಿಯವರಿಗೆ ಒಳಮೀಸಲಾತಿ ಕಲ್ಪಿಸುವ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಉದ್ದೇಶದ ‘ಕರ್ನಾಟಕ ಅನುಸೂಚಿತ ಜಾತಿಗಳ (ಉಪವರ್ಗೀ ಕರಣ) ಮಸೂದೆ’ಗೆ ವಿಧಾನಸಭೆ ಅಂಗೀಕಾರ ನೀಡಿದೆ.
ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಕೆಲ ಮಾರ್ಪಾಡಿನೊಂದಿಗೆ ಅನುಮೋದಿಸಿದ್ದ ಸರ್ಕಾರ ಈ ಮಸೂದೆಯನ್ನು ರೂಪಿಸಿತ್ತು.
ಪರಿಶಿಷ್ಟ ಜಾತಿಗೆ ಲಭ್ಯ ಇರುವ ಶೇ 17 ರಷ್ಟು ಮೀಸಲಾತಿಯಲ್ಲಿ ಪ್ರವರ್ಗ–ಎ(16 ಜಾತಿಗಳು) ಶೇ 6, ಪ್ರವರ್ಗ–ಬಿ (19 ಜಾತಿಗಳು) ಶೇ 6, ಪ್ರವರ್ಗ–ಸಿ(63 ಜಾತಿಗಳು) ಶೇ 5, ಒಟ್ಟು 98 ಜಾತಿಗಳಿಗೆ ಒಳ ಮೀಸಲು ಹಂಚಿಕೆಯಾಗಲಿದೆ. ಈ ಮಸೂದೆಗೆ ಹಸಿರು ನಿಶಾನೆ ಸಿಗುತ್ತದೆ ಎಂದು ಕಾದಿದ್ದ ಬಹುದೊಡ್ಡ ಸಮುದಾಯ ನಿರೀಕ್ಷೆ ಈಗ ಫಲ ಕಂಡಿದೆ.
ಒಳಮೀಸಲಾತಿ ಕಾಯ್ದೆ 2025ರ ಆ.25 ರಿಂದ ಅನ್ವಯವಾಗಲಿದೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಮಸೂದೆ ಮಂಡಿಸಿದರು. ಚರ್ಚೆ ಇಲ್ಲದೇ ಮಸೂದೆ ಅಂಗೀಕಾರ ಪಡೆಯಿತು.
ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು, ‘ಕರ್ನಾಟಕ ಬಂಗಾರ ಅಡವಿಟ್ಟ ಸಾಲಗಾರರ ರಕ್ಷಣಾ ಮಸೂದೆ– 2025’ ಹೆಸರಿನಲ್ಲಿ ಖಾಸಗಿ ಮಸೂದೆ ಸಿದ್ಧಪಡಿಸಿದ್ದಾರೆ. ವಿಧಾನ ಪರಿಷತ್‌ನ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅಧ್ಯಕ್ಷತೆಯ ಸಮಿತಿ ಮಸೂದೆ ಮಂಡನೆಗೆ ಸಮ್ಮತಿ ನೀಡಿದೆ.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕೇತರ ಹಣಕಾಸು ಕಂಪನಿಗಳು, ಖಾಸಗಿ ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರು ಚಿನ್ನದ ಆಭರಣಗಳನ್ನು ಅಡವಿಟ್ಟುಕೊಂಡು ಸಾಲ ನೀಡುತ್ತವೆ. ನಿಗದಿತ ಅವಧಿಯ ಒಳಗೆ ಸಾಲದ ಅಸಲು ಹಾಗೂ ಬಡ್ಡಿ ಮರುಪಾವತಿ ಮಾಡದಿದ್ದರೆ, ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಅಡವಿಟ್ಟ ಆಭರಣಗಳನ್ನು ಹರಾಜು ಹಾಕುತ್ತವೆ.
ಅಡವಿಟ್ಟುಕೊಳ್ಳುವಾಗ ನೀಡುವ ಸಾಲದ ಪ್ರಮಾಣ ಚಿನ್ನದ ಮೌಲ್ಯದ ಶೇ 50ಕ್ಕಿಂತ ಕಡಿಮೆ ಇರುತ್ತದೆ. ಅಸಲು–ಬಡ್ಡಿ ಸೇರಿದರೂ ಚಿನ್ನದ ವರ್ತಮಾನದ ಮೌಲ್ಯಕ್ಕಿಂತ ಕಡಿಮೆ ಇರುತ್ತದೆ. ಇಂತಹ ಹಲವು ಪ್ರಕರಣಗಳಲ್ಲಿ ಉಳಿಕೆ ಮೊತ್ತವನ್ನು ಸಾಲಗಾರರಿಗೆ ವರ್ಗಾಯಿಸುವುದೇ ಇಲ್ಲ.
ಬದಲಿಗೆ ಹರಾಜಿನ ನಂತರವೂ ಉಳಿಕೆ ಸಾಲದ ಬಾಕಿ ಪಾವತಿಸುವಂತೆ ನೋಟಿಸ್ ನೀಡಲಾಗುತ್ತದೆ. ಅಂತಹ ಸಾಲಗಾರರ ರಕ್ಷಣೆ ಹಾಗೂ ಅಡವಿಟ್ಟ ಚಿನ್ನದ ಹರಾಜು ಪ್ರಕ್ರಿಯೆಯನ್ನು ನಿಯಂತ್ರಿಸಲು ಹಾಗೂ ಅನುಸಂಧಾನ ವ್ಯವಸ್ಥೆ ಬಲಪಡಿಸಲು ಕಾಯ್ದೆಯ ಅಗತ್ಯವಿದೆ ಎಂದು ಮಸೂದೆ ರಚನೆಯ ಕಾರಣಗಳನ್ನು ವಿವರಿಸಲಾಗಿದೆ.
ಚಿನ್ನದ ಅಡಮಾನ ಸಾಲ ನೀಡುವ ಯಾವುದೇ ವಾಣಿಜ್ಯ ಬ್ಯಾಂಕ್, ಖಾಸಗಿ ಕಂಪನಿ, ಖಾಸಗಿ ಸಂಸ್ಥೆ, ಬ್ಯಾಂಕೇತರ ಹಣಕಾಸು ಕಂಪನಿಗಳು, ಖಾಸಗಿ ಬ್ಯಾಂಕ್, ಖಾಸಗಿ ಪ್ರತಿಷ್ಠಾನ, ಲೇವಾದೇವಿಗಾರರು ಕಾಯ್ದೆಯ ವ್ಯಾಪ್ತಿಗೆ ಒಳಪಡಲಿದ್ದು, ಅಡಮಾನ ಸಾಲ ಪಡೆದ ಚಿನ್ನವನ್ನು ಹರಾಜು ಹಾಕುವ ಮೊದಲು ಹಲವು ಪ್ರಕ್ರಿಯೆಗಳನ್ನು ನಡೆಸಬೇಕು ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಅವಧಿ ಮುಗಿದ ದಿನಾಂಕದಿಂದ 180 ದಿನಗಳನ್ನು ನಿಗದಿ ಮಾಡಿ, ನೋಟಿಸ್ ನೀಡುವುದು. ಪಡೆದ ಸಾಲ, ವಿಧಿಸಿದ ಬಡ್ಡಿ, ಅಡವಿಟ್ಟ ಸಮಯದ ಚಿನ್ನದ ಮೌಲ್ಯ, ಪ್ರಸ್ತುತ ಮಾರುಕಟ್ಟೆ ಮೌಲ್ಯ, ಮರುಪಾವತಿ ವಿವರಗಳನ್ನು ಒದಗಿಸುವುದು ಕಡ್ಡಾಯ. ಒಟ್ಟು ಮೌಲ್ಯ ಹಾಗೂ ನೋಟಿಸ್ ಅವಧಿಯ ಒಳಗೆ ಬಾಕಿ ಮೊತ್ತ ಮತ್ತು ಅನ್ವಯವಾಗುವ ಬಡ್ಡಿಯನ್ನು ಪಾವತಿಸುವ ಸಾಲಗಾರರಿಗೆ ತಮ್ಮ ಚಿನ್ನವನ್ನು ಮರಳಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. 180 ದಿನಗಳ ನೋಟಿಸ್ ನೀಡಿದ ನಂತರವೂ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚುವರಿ 90 ದಿನಗಳ ಗಡುವು ವಿಧಿಸಬೇಕೆಂದು ಪ್ರಸ್ತಾವವಿದೆ.
ಉಲ್ಲಂಘನೆಗೆ ₹10 ಲಕ್ಷದಂಡ
ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವ ಹಣಕಾಸು ವಹಿವಾಟು ಸಂಸ್ಥೆಗಳಿಗೆ 6 ತಿಂಗಳು ಕಾರಾಗೃಹ ಶಿಕ್ಷೆ, ₹10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಬೇಕೆಂದು ಪ್ರಸ್ತಾಪಿಸಲಾಗಿದೆ.
ಅಪರಾಧ ಪುನರಾವರ್ತನೆಯಾದರೆ ಸಂಸ್ಥೆಯ ನೋಂದಣಿ, ಪರವಾನಗಿ ರದ್ದು ಮಾಡುವುದು, ಅಗತ್ಯ ಕ್ರಮ ಕೈಗೊಳ್ಳಲು, ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವರದಿ ನೀಡಲು ಅಧಿಕಾರ ನೀಡಲಾಗಿದೆ. ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಪಲವಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಅವಕಾಶವನ್ನು ಒದಗಿಸಬೇಕೆಂದು ಉಲ್ಲೇಖಿಸಲಾಗಿದೆ.
ಹರಾಜಿಗೆಅಧಿಕಾರಿಗಳಕಣ್ಗಾವಲು
ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ಪರವಾನಗಿ ಹೊಂದಿದ ಹರಾಜುಗಾರರ ಮೂಲಕ ಮಾತ್ರ ಚಿನ್ನದ ಹರಾಜು ಪ್ರಕ್ರಿಯೆ ನಡೆಸಬೇಕು. ಸ್ಥಳೀಯ ತಹಶೀಲ್ದಾರ್ ಅಥವಾ ಸರ್ಕಾರ ನಿಯೋಜಿಸಿದ ಸರ್ಕಾರಿ ಪ್ರತಿನಿಧಿಯ ಸಮ್ಮುಖದಲ್ಲಿ ನಡೆಸುವುದುನ್ನು ಕಡ್ಡಾಯಗೊಳಿಸಬೇಕೆಂದು ಹೇಳಲಾಗಿದೆ.
ಹರಾಜಿನ ನಂತರ ಸಾಲದ ಬಾಕಿ ಮೊತ್ತ ಹಾಗೂ ಹರಾಜು ವೆಚ್ಚಗಳನ್ನು ಕಡಿತಗೊಳಿಸಿ, ಉಳಿಯುವ ಹೆಚ್ಚುವರಿ ಮೊತ್ತವನ್ನು 15 ದಿನಗಳ ಒಳಗೆ ಸಾಲಗಾರರಿಗೆ ಮರುಪಾವತಿಸಬೇಕು ಎಂಬ ವಿವರಗಳನ್ನು ಮಸೂದೆ ಒಳಗೊಂಡಿದೆ.
ಚಿನ್ನದ ಅಡಮಾನ ಸಾಲದ ಮೇಲ್ವಿಚಾರಣೆ ಬಿಗಿಗೊಳಿಸುವುದು, ಅಡವಿಟ್ಟ ಚಿನ್ನವನ್ನು ಮರಳಿ ಪಡೆಯುವ ಅವಕಾಶವನ್ನು ವಿಸ್ತರಿಸುವುದು, ಸಾಲಗಾರರ ರಕ್ಷಣಾ ಮಾನದಂಡಗಳನ್ನು ಖಚಿತಪಡಿಸುವುದು, ನ್ಯಾಯಸಮ್ಮತ ವ್ಯಾಪಾರ ಕ್ರಮಗಳನ್ನು ಜಾರಿಗೊಳಿಸುವ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ.
ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ, ಶ್ರೀ ಚಾwಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕೆಲ ಕಾನೂನುಗಳ ತಿದ್ದುಪಡಿ ಮಸೂದೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮರಾಯ ದತ್ತಿ ತಿದ್ದುಪಡಿ ಮಸೂದೆ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಮಸೂದೆ, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ಮಸೂದೆ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಸೂದೆ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ತಿದ್ದುಪಡಿ ಮಸೂದೆ, ಕರ್ನಾಟಕ ಮನೆ ಬಾಡಿಗೆ ಮಸೂದೆ, ಶ್ರೀ ಮಲೆ ಮಾದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಮಸೂದೆ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಎರಡನೇ ತಿದ್ದುಪಡಿ ಮಸೂದೆಗಳನ್ನು ಪರಿಷತ್ ಅಂಗೀಕರಿಸಿತು.
ಭೇದವಿಲ್ಲ, ಸರ್ವರೂಸಮಾನ
ದೇಶದ ಸಮಸ್ತ ನಾಗರಿಕರು ಸಮಾನರು ಎಂದು ಸಾರಿ ಹೇಳುವ ನಮ್ಮ ಹೆಮ್ಮೆಯ ಸಂವಿಧಾನವು, ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕು ಗಳನ್ನು ನೀಡಿದೆ. ಧರ್ಮ, ಜಾತಿ, ಲಿಂಗ, ಜನ್ಮಸ್ಥಳ, ಆರ್ಥಿಕ ಸ್ಥಿತಿ ಯಾವುದನ್ನೂ ಪರಿಗಣಿಸದೆ ಮೂಲಭೂತ ಹಕ್ಕುಗಳು ಎಲ್ಲರಿಗೂ ಅನ್ವಯ ವಾಗುತ್ತವೆ. ಪ್ರತಿ ನಾಗರಿಕರೂ ಸಂವಿಧಾನದ ಮುಂದೆ ಒಂದೇ ಎಂದು ಮೂಲಭೂತ ಹಕ್ಕುಗಳು ಪ್ರತಿಪಾದಿಸುತ್ತವೆ.
ಸಮಾನತೆ ಹಕ್ಕು: ಸಮಾನತೆಯ ವಿವಿಧ ಸ್ವರೂಪ ಮತ್ತು ಅವುಗಳನ್ನು ಕಾಯ್ದುಕೊಳ್ಳಬೇಕಾದ ಬಗೆಯನ್ನು ಸಂವಿಧಾನದ 14ರಿಂದ 18ನೇ ವಿಧಿಯವರೆಗೆ ವಿವರಿಸಲಾಗಿದೆ.
ಕಾನೂನಿನ ಮುಂದೆ ಸಮಾನತೆ: ದೇಶದ ಕಾನೂನಿನ ಮುಂದೆ ಪ್ರತಿಯೊಬ್ಬರೂ ಸಮಾನರು ಮತ್ತು ಕಾನೂನಿನ ರಕ್ಷಣೆ ಎಲ್ಲರಿಗೂ ಸಮಾನವಾಗಿ ದೊರೆಯಬೇಕು ಎಂದು ಈ ಹಕ್ಕು ಪ್ರತಿಪಾದಿಸುತ್ತದೆ.
ತಾರತಮ್ಯ ನಿಷೇಧ: ಧರ್ಮ, ಮೂಲವಂಶ, ಜಾತಿ, ಲಿಂಗ, ಭಾಷೆ, ಜನ್ಮಸ್ಥಳದ ಆಧಾರದಲ್ಲಿ ವ್ಯಕ್ತಿಯನ್ನು ತಾರತಮ್ಯಕ್ಕೆ ಗುರಿ ಮಾಡುವಂತಿಲ್ಲ ಎಂದು ಈ ಹಕ್ಕು ಪ್ರತಿಪಾದಿಸುತ್ತದೆ. ಇವುಗಳ ಆಧಾರದಲ್ಲಿ ಯಾವುದೇ ವ್ಯಕ್ತಿಗೆ ಹೋಟೆಲು, ಅಂಗಡಿ, ದೇವಾಲಯ, ಸಾರ್ವಜನಿಕ ಮನೋರಂಜನ ಸ್ಥಳಕ್ಕೆ ಪ್ರವೇಶ ನಿರಾಕರಿಸುವಂತಿಲ್ಲ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು, ಆರ್ಥಿಕವಾಗಿ ದುರ್ಬಲ ವರ್ಗಗಳ ಜನರಿಗೆ ಶೈಕ್ಷಣಿಕ ಸಂಸ್ಥೆಗಳ ಪ್ರವೇಶಾತಿಯಲ್ಲಿ ವಿಶೇಷ ಸವಲತ್ತು ಕಲ್ಪಿಸಬಹುದು ಎಂದು 15 (2ಬಿ, 3, 4, 5, 6)ನೇ ಉಪವಿಧಿಗಳಲ್ಲಿ ವಿವರಿಸಲಾಗಿದೆ.
ಸರ್ಕಾರಿ ನೇಮಕಾತಿಯಲ್ಲಿ ಸಮಾನ ಅವಕಾಶ: ಸರ್ಕಾರದ ಯಾವುದೇ ನೇಮಕಾತಿಯಲ್ಲಿ ದೇಶದ ಎಲ್ಲ ನಾಗರಿಕರಿಗೂ ಸಮಾನ ಅವಕಾಶ ಇರಬೇಕು. ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ವರ್ಗ ಗಳು, ಆರ್ಥಿಕವಾಗಿ ದುರ್ಬಲ ವರ್ಗಗಳ ಜನರಿಗೆ, ಸರ್ಕಾರಿ ನೇಮಕಾತಿಯಲ್ಲಿ ವಿಶೇಷ ಸವಲತ್ತು ಕಲ್ಪಿಸಲು 16ನೇ ವಿಧಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಅಸ್ಪೃಶ್ಯತೆಯ ನಿರ್ಮೂಲನೆಯನ್ನು 18ನೇ ವಿಧಿ ಯಲ್ಲಿ ವಿವರಿಸಲಾಗಿದೆ. ಯಾವುದೇ ರೂಪದ ಅಸ್ಪೃಶ್ಯತೆ ಆಚರಣೆಯನ್ನು ಈ ವಿಧಿಯು ನಿಷೇಧಿಸುತ್ತದೆ. ಜತೆಗೆ ಅಸ್ಪೃಶ್ಯತೆಯ ಆಚರಣೆಯು ದಂಡನೀಯ ಅಪರಾಧ ಎಂಬುದನ್ನೂ ಈ ವಿಧಿ ವಿವರಿಸುತ್ತದೆ.
ಸ್ವಾತಂತ್ರ್ಯದ ಹಕ್ಕು: ಸಂವಿಧಾನ 19ನೇ ವಿಧಿಯಲ್ಲಿ ಸ್ವಾತಂತ್ರ್ಯದ ಹಕ್ಕುಗಳನ್ನು ವಿವರಿಸಲಾಗಿದೆ. ಯಾವುದೇ ವ್ಯಕ್ತಿಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ, ನಿರಾಯುಧರಾಗಿ ಸಭೆ ಸೇರುವ, ಸಂಘ–ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ಅವುಗಳ ಮೂಲಕ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ, ದೇಶದ ಯಾವುದೇ ಭಾಗದಲ್ಲಿ ತನ್ನ ಇಚ್ಛೆಯ ಕುಲಕಸುಬು/ಕಸುಬು/ಉದ್ಯೋಗ/ವ್ಯವಹಾರ/ ವ್ಯಾಪಾರ ನಡೆಸುವ ಸ್ವಾತಂತ್ರ್ಯವನ್ನು ಈ ಹಕ್ಕು ನೀಡುತ್ತದೆ.
lಜೀವಿಸುವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು 21ನೇ ವಿಧಿಯು ನೀಡುತ್ತದೆ. ಈ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಸುವ ಹಕ್ಕಿದೆ. ಯಾವುದೇ ವ್ಯಕ್ತಿ, ಗುಂಪು, ಸಂಸ್ಥೆ, ಸರ್ಕಾರವು ದೇಶದ ನಾಗರಿಕರ ಜೀವಿಸುವ ಹಕ್ಕಿಗೆ ಧಕ್ಕೆ ತರುವಂತಿಲ್ಲ.
lಉಚಿತ ಮತ್ತು ಕಡ್ಡಾಯ ಶಿಕ್ಷಣ: ದೇಶದ ಪ್ರತಿಯೊಂದು ಮಗುವಿಗೂ ಅದರ 6ನೇ ವಯಸ್ಸಿನಿಂದ 14ನೇ ವಯಸ್ಸಿನವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಬೇಕು ಎಂದು 21(ಎ) ವಿಧಿ ಹೇಳುತ್ತದೆ.
lಕಾನೂನು ಬಾಹಿರ ಬಂಧನದಿಂದ ರಕ್ಷಣೆ: ಕಾರಣವನ್ನು ತಿಳಿಸದೆ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸದೆ ಯಾವುದೇ ವ್ಯಕ್ತಿಯನ್ನು 24 ಗಂಟೆಗಳಿಗಿಂತ ಹೆಚ್ಚು ಅವಧಿಗೆ ಬಂಧನದಲ್ಲಿ ಇರಿಸುವಂತಿಲ್ಲ.
4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
ಪ್ರತಿ ನಾಗರಿಕರು ತಮ್ಮ ಇಷ್ಟದ ಧರ್ಮವನ್ನು ಅನುಸರಿಸುವ, ಅದರ ಆಚರಣೆಗಳಲ್ಲಿ ಭಾಗಿಯಾಗುವ, ಆ ಧರ್ಮವನ್ನು ಪ್ರಚಾರ ಮಾಡುವ ಹಕ್ಕನ್ನು ಸಂವಿಧಾನದ 25ನೇ ವಿಧಿ ನೀಡುತ್ತದೆ. ವ್ಯಕ್ತಿಯು ತಾನು ಅನುಸರಿಸುತ್ತಿರುವ ಧರ್ಮಕ್ಕೆ ಸಂಬಂಧಿಸಿದ ಧರ್ಮಾರ್ಥ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿ ಸುವ, ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ, ಆ ಸಂಸ್ಥೆ ಮೂಲಕ ಚರ, ಸ್ಥಿರಾಸ್ತಿ ಹೊಂದುವ, ನಿರ್ವಹಣೆ ಮಾಡುವ ಹಕ್ಕನ್ನು 26ನೇ ವಿಧಿಯು ನೀಡುತ್ತದೆ.
ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು
ಅಲ್ಪಸಂಖ್ಯಾತರ ಹಕ್ಕುಗಳು: ದೇಶದ ಅಲ್ಪಸಂಖ್ಯಾತ ಸಮುದಾಯದ ನಾಗರಿಕರು ತಮ್ಮದೇ ವಿಭಿನ್ನ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿದ್ದರೆ, ಅದನ್ನು ಅವರು ರಕ್ಷಿಸಿಕೊಳ್ಳಬಹುದಾಗಿದೆ. ಅದು ಸರ್ಕಾರದ ಹೊಣೆಗಾರಿಕೆಯೂ ಹೌದು. ಅಲ್ಪಸಂಖ್ಯಾತ ಸಮುದಾಯವು ತನ್ನದೇ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸುವ, ಅದನ್ನು ನಡೆಸುವ ಹಕ್ಕನ್ನು 30ನೇ ವಿಧಿಯು ನೀಡುತ್ತದೆ.
ಸಾಂವಿಧಾನಿಕ ಪರಿಹಾರದ ಹಕ್ಕು: ದೇಶದ ಯಾವುದೇ ನಾಗರಿಕರೂ ಯಾವುದೇ ವಿಚಾರದಲ್ಲಿ ಸಂವಿಧಾನಬದ್ಧ ಪರಿಹಾರ ಕೋರಿ ಅಧೀನ ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಮೊರೆ ಹೋಗುವ ಹಕ್ಕನ್ನು 32ನೇ ವಿಧಿಯು ನೀಡುತ್ತದೆ.
ಕರ್ತವ್ಯಗಳು
ದೇಶದ ಪ್ರತಿಯೊಬ್ಬ ನಾಗರಿಕರೂ ನಿರ್ವಹಿಸಲೇಬೇಕಾದ ಮೂಲಭೂತ ಕರ್ತವ್ಯಗಳನ್ನು ಸಂವಿಧಾನವು ವಿವರಿಸಿದೆ. ಇವುಗಳನ್ನು ನಿರ್ವಹಿಸದೇ ಇರುವುದು ಶಿಕ್ಷಾರ್ಹ ಅಪರಾಧವಾಗುತ್ತದೆ.
ಸಂವಿಧಾನಕ್ಕೆ ಬದ್ಧವಾಗಿರಬೇಕು. ಅದರ ಆದರ್ಶ ಮತ್ತು ಸಂಸ್ಥೆಗಳನ್ನು ಗೌರವಿಸುವುದು
ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಬೇಕು
ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯಬೇಕು ಹಾಗೂ ಸಂರಕ್ಷಿಸಬೇಕು
ದೇಶವನ್ನು ರಕ್ಷಿಸುವುದು ಮತ್ತು ಕರೆಬಂದಾಗ ದೇಶದ ಸೇವೆಗೆ ಧಾವಿಸಬೇಕು
ಧರ್ಮ, ಭಾಷೆ, ಪ್ರದೇಶ, ಜಾತಿ-ಪಂಗಡಗಳ ಭೇದಭಾವಗಳನ್ನು ಬಿಟ್ಟು, ದೇಶದ ಎಲ್ಲ ನಾಗರಿಕರಲ್ಲೂ ಸಾಮರಸ್ಯ ಮತ್ತು ಭ್ರಾತೃತ್ವ ಭಾವನೆಯನ್ನು ಬೆಳೆಸುವುದು. ಮಹಿಳೆಯರ ಗೌರವಕ್ಕೆ ಧಕ್ಕೆತರುವಂತಹ ಆಚರಣೆಗಳನ್ನು ಬಿಟ್ಟುಬಿಡಬೇಕು
ನಮ್ಮ ಸಮ್ಮಿಶ್ರ ಮತ್ತು ವೈವಿಧ್ಯ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಗೌರವಿಸಬೇಕು ಹಾಗೂ ಕಾಪಾಡಬೇಕು
ದೇಶದ ನೈಸರ್ಗಿಕ ಸಂಪತ್ತಿನ ರಕ್ಷಣೆ ಮತ್ತು ಅಭಿವೃದ್ಧಿ. ವನ್ಯಜೀವಿಗಳಿಗೆ ಅನುಕಂಪ ತೋರಬೇಕು
ವೈಜ್ಞಾನಿಕ, ಮಾನವೀಯತೆ, ಪ್ರಶ್ನಿಸುವ ಮತ್ತು ಸುಧಾರಣೆಯ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು
ಹಿಂಸೆಯನ್ನು ತ್ಯಜಿಸಬೇಕು ಮತ್ತು ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸಬೇಕು
ದೇಶವು ನಿರಂತರ ಸಾಧನೆಯ ಹಾದಿಯಲ್ಲಿರಲು ಮತ್ತು ಉನ್ನತ ಸಾಧನೆಗಳನ್ನು ಸಿದ್ಧಿಸಲು ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು
ಪ್ರಧಾನಿ ನರೇಂದ್ರ ಮೋದಿ ಸಮ್ಮುಖ ದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಕಾರ್ಯಕ್ರಮ ದಲ್ಲಿ ಭಾಗಿಯಾಗಲಿದ್ದಾರೆ.
‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ ಎಂಬುದು ಈ ಮುಕ್ತ ವ್ಯಾಪಾರ ಒಪ್ಪಂದದ ಅಧಿಕೃತ ಹೆಸರು. ಇದಕ್ಕೆ ಸಂಬಂಧಿಸಿದ ಮಾತುಕತೆಗಳು 2023ರ ನವೆಂಬರ್‌ನಲ್ಲಿ ಶುರುವಾದವು. ಈ ವರ್ಷ ದಲ್ಲಿ ಮಾತುಕತೆ ಪೂರ್ಣಗೊಂಡಿತು.
ಗಲ್ಫ್ ಸಹಕಾರ ಮಂಡಳಿಯ ಸದಸ್ಯ ರಾಷ್ಟ್ರಗಳ ಪೈಕಿ ಭಾರತದ ಸರಕುಗಳನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ದೇಶಗಳ ಸಾಲಿನಲ್ಲಿ ಒಮಾನ್ ಮೂರನೆಯ ಸ್ಥಾನದಲ್ಲಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಅಂತರರಾಷ್ಟ್ರೀಯ ಹಣಕಾಸು ನಿಧಿ ಭಾರತದ ಜಿಡಿಪಿ ಬೆಳವಣಿಗೆಯು ಶೇ 6.4ರಷ್ಟು ಆಗಲಿದೆ ಎಂದು ಈ ಮೊದಲು ಅಂದಾಜಿಸಿತ್ತು. ಅಕ್ಟೋಬರ್‌ನಲ್ಲಿ ಈ ದರವನ್ನು ಪರಿಷ್ಕರಿಸಿ ಶೇ 6.6ಕ್ಕೆ ಹೆಚ್ಚಿಸಿದೆ’ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಮುಂದಿನ ಆರ್ಥಿಕ ವರ್ಷದಿಂದ ವಿತ್ತೀಯ ಕೊರತೆ ಸೇರಿದಂತೆ ಸಾಲದ ಮಟ್ಟವನ್ನು ಕಡಿಮೆ ಮಾಡುವುದರತ್ತ ಹೆಚ್ಚಿನ ಗಮನ ನೀಡಲಾಗುತ್ತದೆ. 2047ರ ವೇಳೆಗೆ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಸಾಧಿಸಲು ರಾಜ್ಯಗಳು ತಮ್ಮ ಸಾಲದ ಮಟ್ಟವನ್ನು ಕಡಿಮೆ ಮಾಡಬೇಕು’ ಎಂದು ರಾಜ್ಯಗಳಿಗೆ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಬಜೆಟ್ ರೂಪಿಸುವಿಕೆಯಲ್ಲಿ ಪಾರದರ್ಶಕತೆಗಾಗಿ ಸ್ಪಷ್ಟವಾದ ಗುರಿಗಳನ್ನು ನಿಗದಿಪಡಿಸಿದೆ. ಕೋವಿಡ್ ನಂತರದ ಅವಧಿಯಲ್ಲಿ ಸಾಲ–ಜಿಡಿಪಿ ಅನುಪಾತ ಶೇ 60ರಷ್ಟಿತ್ತು. ಇದು ಈಗ ಇಳಿಕೆಯ ಹಾದಿ ಹಿಡಿದಿದೆ ಎಂದಿದ್ದಾರೆ.
ಕೋವಿಡ್ ನಂತರದ ಅವಧಿಯಲ್ಲಿ ದೇಶದ ಸಾಲ–ಜಿಡಿಪಿಯು ಶೇ 61.4ರಷ್ಟಿತ್ತು. ಆದರೆ, ಕೇಂದ್ರ ಸರ್ಕಾರ ಅಳವಡಿಸಿಕೊಂಡ ನಿಯಮಗಳಿಂದಾಗಿ 2023–24ರಲ್ಲಿ ಈ ಪ್ರಮಾಣ ಶೇ 57.1ಕ್ಕೆ ಇಳಿಯಿತು. ಪ್ರಸಕ್ತ ವರ್ಷದಲ್ಲಿ ಇದು ಶೇ 56.1ಕ್ಕೆ ಬರುವ ನಿರೀಕ್ಷೆ ಇದೆ.
ಪ್ರತಿ ವರ್ಷ ಸಾಲದ ಮಟ್ಟವನ್ನು ಕಡಿಮೆ ಮಾಡುತ್ತಿರುವ ಕೇಂದ್ರ ಸರ್ಕಾರದಂತೆ, ರಾಜ್ಯಗಳು ಹಣಕಾಸು ನಿರ್ವಹಣೆಯಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕೆಂದು ಸಚಿವರು ಕರೆ ನೀಡಿದ್ದಾರೆ.
ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಕೂಲಂಕಷ ಪರಾಮರ್ಶೆಗಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಒಪ್ಪಿಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪಲಿಲ್ಲ. ನಂತರ, ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.
ಇದರ ನಡುವೆಯೇ, ‘ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆ’ಯನ್ನು ಧ್ವನಿಮತ ಮೂಲಕ ಸದನ ಅಂಗೀಕರಿಸಿತು.
ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ‘2047ರ ವೇಳೆಗೆ 100 ಗಿಗಾವಾಟ್ ಅಣು ವಿದ್ಯುತ್ ಉತ್ಪಾದನೆ ಗುರಿ ಸಾಧಿಸಲು ಈ ಮಸೂದೆ ನೆರವಾಗಲಿದೆ’ ಎಂದು ಹೇಳಿದರು.
ಪರ–ವಿರೋಧ ಮಾತು: ಇದಕ್ಕೂ ಮುನ್ನ ನಡೆದ ಚರ್ಚೆ ವೇಳೆ, ಆಡಳಿತಾ ರೂಢ ಎನ್‌ಡಿಎ ಮೈತ್ರಿಕೂಟದ ಸಂಸದರು ಈ ಮಸೂದೆಯನ್ನು ಬೆಂಬಲಿಸಿದರೆ, ವ್ಯಾಪಕ ಸಮಾಲೋಚನೆಗಳಿಗಾಗಿ ಈ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ(ಜೆಪಿಸಿ) ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳ ಸಂಸದರು ಪಟ್ಟು ಹಿಡಿದರು.
ವಿದ್ಯುತ್ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಈ ಮಸೂದೆ ನೆರವಾಗಲಿದೆ ಎಂಬುದು ಎನ್‌ಡಿಎ ಪಾಳಯದ ಸಂಸದರ ಪ್ರತಿಪಾದನೆಯಾದರೆ, ಈ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸುವುದು ಅಪಾಯಕಾರಿ ಎಂದು ಹೇಳುವ ಮೂಲಕ ವಿಪಕ್ಷಗಳ ಸಂಸದರು ಮಸೂದೆಗೆ ಬಲವಾದ ಪ್ರತಿರೋಧ ವ್ಯಕ್ತಪಡಿಸಿದರು.
ಬಿಜೆಪಿಯ ಶಶಾಂಕ ಮಣಿ ಮಾತನಾಡಿ, ‘ನಾಗರಿಕ ಅಣು ವಿದ್ಯುತ್ ಕ್ಷೇತ್ರ ಪ್ರವೇಶಿಸುವುದಕ್ಕೆ ಖಾಸಗಿ ಯವರಿಗೂ ಅವಕಾಶ ಕಲ್ಪಿಸುವುದರಿಂದ ಪ್ರತಿಯೊಬ್ಬ ಭಾರತೀಯನಿಗೂ ಪ್ರಯೋಜನವಾಗಲಿದೆ’ ಎಂದು ಹೇಳಿದರು. ಅಣು ಶಕ್ತಿ ಕಾಯ್ದೆ–1962 ಹಾಗೂ ನಾಗರಿಕ ಹೊಣೆಗಾರಿಕೆ (ಪರಮಾಣು ಹಾನಿ) ಕಾಯ್ದೆ–2010ರಲ್ಲಿದ್ದ ಅಂಶಗಳನ್ನು ನೂತನ ಮಸೂದೆಯಲ್ಲಿ ತೆಗೆದು ಹಾಕಿರುವುದಕ್ಕೂ ತಿವಾರಿ ವಿರೋಧ ವ್ಯಕ್ತಪಡಿಸಿದರು.
‘ಈ ಮಸೂದೆ ಕುರಿತು ಕೂಲಂಕಷ ಪರಿಶೀಲನೆ ಅಗತ್ಯ ಇದೆ. ಹೀಗಾಗಿ ಇದನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು’ ಎಂದು ತಿವಾರಿ ಆಗ್ರಹಿಸಿದರು.
ಈ ವಿಷಯವಾಗಿ ಮಾತನಾಡಿದ ಡಿಎಂಕೆಯ ಅರುಣ್ ನೆಹರು, ಟಿಎಂಸಿಯ ಸೌಗತ ರಾಯ್, ಶಿವಸೇನಾದ(ಯುಬಿಟಿ) ಅರವಿಂದ ಸಾವಂತ್ ಕೂಡ, ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಯೋಜನೆ ಮತ್ತು ತಂತ್ರಜ್ಞಾನದ ಅನುಷ್ಠಾನದ ನಂತರ ಟೋಲ್ ಪ್ಲಾಜಾಗಳಲ್ಲಿ ಪ್ರಯಾಣಿಕರು ಕಾಯುವುದು ತಪ್ಪಲಿದೆ ಎಂದು ರಾಜ್ಯಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ಅವಧಿ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ನೂತನ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆ ಆಧಾರಿತವಾಗಿರಲಿದೆ. ಇದರಿಂದ ಪ್ರಯಾಣಿಕರ ಸಮಯ ಮತ್ತು ₹1,500 ಕೋಟಿ ಮೌಲ್ಯದ ಇಂಧನವು ಉಳಿತಾಯವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹6,000 ಕೋಟಿ ಹೆಚ್ಚುವರಿ ವರಮಾನ ಬರಲಿದೆ’ ಎಂದು ತಿಳಿಸಿದರು.
2026ರ ಅಂತ್ಯದೊಳಗೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ನಿಶ್ಚಿತ. ಆ ಬಳಿಕ ಪ್ರಯಾಣಿಕರು ಟೋಲ್ ಪ್ಲಾಜಾಗಳಲ್ಲಿ ಕಾದು ನಿಲ್ಲಬೇಕಾದ ಅಗತ್ಯವೇ ಇರುವುದಿಲ್ಲ ಎಂದರು.
ಮಂಗನಕಾಯಿಲೆಮಲೆನಾಡಿನಲ್ಲಿಆತಂಕದಛಾಯೆ
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಎಫ್‌ಡಿಕೆಎಫ್‌ಡಿ ನಿಯಂತ್ರಣಕ್ಕೆ ಮಲೆನಾಡಿನಲ್ಲಿ ಅಕ್ಟೋಬರ್ ತಿಂಗಳಿಂದಲೇ ಜಾಗೃತಿ ಕಾರ್ಯಕ್ರಮ ನಡೆಸಿದ್ದೇವೆ. ಮನೆ ಮನೆಗೆ ತೆರಳಿ ಕಾಯಿಲೆ ಬಗ್ಗೆ ತಿಳಿವಳಿಕೆ ನೀಡುತ್ತಿದ್ದೇವೆ. ಪ್ರತಿ ಮನೆಗೆ ಎರಡು ಬಾಟಲಿ ಡೆಪಾ ಎಣ್ಣೆ ವಿತರಣೆ ಮಾಡಲಾಗುತ್ತಿದೆಡಾ.ಎಲ್.ನಾಗರಾಜ ನಾಯ್ಕ, ಸರ್ವೇಕ್ಷಣಾ ಅಧಿಕಾರಿ,ಆರೋಗ್ಯ ಇಲಾಖೆ, ಶಿವಮೊಗ್ಗ
ಮಲೆನಾಡಿನಲ್ಲಿ ಈ ಬಾರಿ ಬೇಸಿಗೆ ಆರಂಭವಾಗುವ ಮುನ್ನವೇ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್- ಮಂಗನ ಕಾಯಿಲೆ) ಕಾಣಿಸಿಕೊಂಡಿದೆ. ಡಿ.1ರಿಂದ 17ರವರೆಗೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ 10 ಮಂದಿಗೆ ಕೆಎಫ್‌ಡಿ ಬಾಧಿಸಿದೆ. 36 ಮಂಗಗಳು ಸತ್ತಿವೆ. ಚಳಿ ಕರಗಿ ಬಿಸಿಲು ಹೆಚ್ಚುತ್ತಿದ್ದಂತೆಯೇ ಕಾಯಿಲೆ ವ್ಯಾಪಕಗೊಳ್ಳುತ್ತದೆ. ಹೀಗಾಗಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅರಣ್ಯದಂಚಿನ ಗ್ರಾಮಗಳಲ್ಲಿ ಆತಂಕದ ಛಾಯೆ ಆವರಿಸಿದೆ.
ಆರೋಗ್ಯ ಇಲಾಖೆಯೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜನಜಾಗೃತಿ ಆರಂಭಿಸಿದ್ದು, ಡೆಪಾ (DEPA) ತೈಲ ವಿತರಣೆ ಮಾಡುತ್ತಿದೆ. ರೋಗ ಬಾಧಿತರಿಗೆ ವೈದ್ಯಕೀಯ ನೆರವಿಗೆ ಸಿದ್ಧತೆ ಆರಂಭಿಸಿದೆ.
ಏನಿದು ಕೆಎಫ್‌ಡಿ?: ಕೆಎಫ್‌ಡಿ ಮೊದಲ ಬಾರಿಗೆ 1957ರಲ್ಲಿ ಸೊರಬ ತಾಲ್ಲೂಕಿನ ಕ್ಯಾಸನೂರಿನಲ್ಲಿ ಪತ್ತೆಯಾಗಿತ್ತು. ಹೀಗಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಇದು ಕ್ಯಾಸನೂರು ಕಾಡಿನ ಕಾಯಿಲೆ. ಆದರೆ ಆಡುಭಾಷೆಯಲ್ಲಿ ಇದು ಮಂಗನ ಕಾಯಿಲೆ. ‘ರಷ್ಯನ್ ಎನ್‌ಸಫಲೈಟಿಸ್’ ಹೆಸರಿನ ವೈರಸ್‌ನಿಂದ ಈ ಕಾಯಿಲೆ ಬರುತ್ತದೆ. ಮಲೆನಾಡಿನ ಕಾಡಿಗೆ ಸೈಬೀರಿಯಾ ಭಾಗದಿಂದ ಬಂದ ಯಾವುದೋ ವಲಸೆ ಹಕ್ಕಿಯ ಮೈಯಲ್ಲಿ ಈ ವೈರಸ್ ಹೊತ್ತ ಉಣ್ಣಿ (ಉಣುಗು) ಮಲೆನಾಡಿಗೆ ಬಂದಿರಬಹುದು ಎಂಬುದು ವಿಜ್ಞಾನಿಗಳ ಊಹೆ.
ರೋಗದ ಲಕ್ಷಣಗಳೇನು?: ಮೊದಲ ಹಂತದಲ್ಲಿ ಮೂರರಿಂದ ಎಂಟು ದಿನ ಜ್ವರ, ಕತ್ತಿನ ಹಿಂಭಾಗ, ಸ್ನಾಯುಗಳಲ್ಲಿ ನೋವು ಜೊತೆಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ರೋಗಲಕ್ಷಣ ಆಧರಿಸಿ ವೈದ್ಯರು ಔಷಧಿ ಕೊಟ್ಟು ರೋಗಿ ಗುಣಮುಖರಾದರೂ ವಾರದ ಅಂತರದಲ್ಲಿಯೇ ಎರಡನೇ ಹಂತದ ಲಕ್ಷಣಗಳು ಬಾಧಿಸುತ್ತವೆ. ಎರಡನೇ ಹಂತದಲ್ಲಿ ವಿಪರೀತ ಜ್ವರ, ತಲೆನೋವು, ಕಣ್ಣು ಕೆಂಪಾಗುವುದು, ನಿಶ್ಶಕ್ತಿ, ಕ್ಷೋಭೆ, ರಕ್ತಸ್ರಾವ, ಪ್ರಜ್ಞಾಹೀನತೆ ಉಂಟಾಗುತ್ತದೆ. ಈ ಹಂತದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಸಾವು ಬರಬಹುದು.
ಕೆಎಫ್‌ಡಿಗೆ ಕಾಡಂಚಿನ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರೇ ಶೇ 50ರಿಂದ 60ರಷ್ಟು ತುತ್ತಾಗುತ್ತಿದ್ದಾರೆ. ಇವರಲ್ಲಿ ಅತಿಯಾಗಿ ಮದ್ಯಪಾನ–ತಂಬಾಕು ಸೇವನೆ ಚಟ, ಪೌಷ್ಟಿಕಾಂಶದ ಕೊರತೆ ಇದ್ದವರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗಿ ಸಾವಿಗೀಡಾಗುತ್ತಿದ್ದಾರೆ. ಅವರಲ್ಲಿ ಮಹಿಳೆಯರ ಸಾವಿನ ಪ್ರಮಾಣ ಹೆಚ್ಚಿದೆ. ಮುಟ್ಟಿನ ದಿನಗಳಲ್ಲಿ ಕಾಯಿಲೆ ಬಾಧಿಸಿದರೆ ಅತಿಹೆಚ್ಚು ರಕ್ತಸ್ರಾವ ಆಗುತ್ತದೆ. ಋತುಚಕ್ರದ ಸ್ರಾವ ನಿಲ್ಲಿಸುವುದು ಕಷ್ಟ. ಕೊನೆಗೆ ರಕ್ತಹೀನತೆಯಿಂದ ಸಾವಿಗೀಡಾಗುತ್ತಾರೆ.
ಮಂಗನಿಂದ ಬರುವ ಕಾಯಿಲೆ ಅಲ್ಲ : ಮಂಗನಿಗೂ ಕೆಎಫ್‌ಡಿಗೂ ಸಂಬಂಧವಿಲ್ಲ. ಆದರೆ ಜನರ ಬಾಯಲ್ಲಿ ಮಂಗನ ಕಾಯಿಲೆ ಆಗಿದೆ. ವಾಸ್ತವವಾಗಿ ಮಂಗ ಕೂಡ ಮನುಷ್ಯನಿಗಿಂತ ಹೆಚ್ಚು ಸಂತ್ರಸ್ತ. ಉಣುಗು ಕಡಿತದಿಂದ ರಷ್ಯನ್ ಎನ್‌ಸಫಲೈಟಿಸ್ ವೈರಸ್ ಮನುಷ್ಯನ ರೀತಿಯಲ್ಲೇ ಮಂಗನ ದೇಹಕ್ಕೂ ಸೇರುತ್ತದೆ. ಕೆಎಫ್‌ಡಿ ಬಾಧಿತರು ಬಹುತೇಕ ಸಂದರ್ಭಗಳಲ್ಲಿ ಚಿಕಿತ್ಸೆ ಪಡೆದು ಬದುಕುತ್ತಾರೆ. ಆದರೆ ಸೋಂಕು ಬಾಧಿತ ಮಂಗಗಳು ಸಾಯುತ್ತವೆ.
ಕಾಡಿನಲ್ಲಿ ಮಂಗಗಳ ಕಳೇಬರ ದೊರೆತರೆ ಅಲ್ಲಿ ವೈರಸ್‌ನ ಸುಳಿವು ಇರುತ್ತದೆ. ಮಂಗನ ಹೆಸರಲ್ಲಿ ಕಾಯಿಲೆಯ ಗುರುತಿಸುವುದರಿಂದ ಬಾಧಿತರಲ್ಲಿ ಒಂದು ಬಗೆಯ ಸಾಮಾಜಿಕ ಕಳಂಕದ ಭಾವನೆ ಮೂಡುತ್ತಿದ್ದು, ಅವರು ತಕ್ಷಣ ವೈದ್ಯರ ಬಳಿಗೆ ತೆರಳದೇ ಮನೆ ಮದ್ದಿಗೆ ಸೀಮಿತರಾಗುತ್ತಾರೆ. ರೋಗ ಉಲ್ಬಣಿಸಿದಾಗ ವೈದ್ಯರ ಬಳಿ ತೆರಳುತ್ತಿದ್ದು, ಇದು ಜೀವ ಹಾನಿಗೂ ಕಾರಣವಾಗುತ್ತಿದೆ.
ಲಸಿಕೆ ಅಭಿವೃದ್ಧಿ ಟ್ರಯಲ್ಸ್ ಹಂತದಲ್ಲಿ: ಕೆಎಫ್‌ಡಿಗೆ ಈಗ ನಿರ್ದಿಷ್ಟ ಔಷಧಿ ಇಲ್ಲ. ಆರೋಗ್ಯ ಇಲಾಖೆ ಸದ್ಯ ರೋಗದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡುತ್ತಿದೆ. 1992ರಲ್ಲಿ ಮಹಾರಾಷ್ಟ್ರದ ವಿಜ್ಞಾನಿ ಡಾ.ದಂಡಾವತೆ ಅಭಿವೃದ್ಧಿಪಡಿಸಿದ್ದ ಲಸಿಕೆ ಇಲ್ಲಿಯವರೆಗೂ ಬಳಕೆಯಲ್ಲಿತ್ತು. ಆದರೆ ಅದು ವೈರಸ್‌ನ ರೂಪಾಂತರದಿಂದ (ಮ್ಯುಟೇಶನ್) ತನ್ನ ಪರಿಣಾಮ ಕಳೆದುಕೊಂಡಿದೆ. ಹೀಗಾಗಿ ಆ ಲಸಿಕೆ ಬಳಕೆಯನ್ನು ಆರೋಗ್ಯ ಇಲಾಖೆ ಮೂರು ವರ್ಷಗಳಿಂದ ನಿಲ್ಲಿಸಿದೆ.
‘ಹೊಸದಾಗಿ ಲಸಿಕೆ ಅಭಿವೃದ್ಧಿಗೆ ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ಈಗ
ಅದು ಕ್ಲಿನಿಕಲ್ ಟ್ರಯಲ್ಸ್ ಹಂತದಲ್ಲಿದೆ. ಮುಂದಿನ ವರ್ಷದ ವೇಳೆಗೆ ಲಸಿಕೆ ಸಿದ್ಧವಾಗಬಹುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆ ಶಿವಮೊಗ್ಗ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಲ್.ನಾಗರಾಜ ನಾಯ್ಕ ಹೇಳುತ್ತಾರೆ.
ಲಸಿಕೆ ಅಭಿವೃದ್ಧಿ ಟ್ರಯಲ್ಸ್ ಹಂತದಲ್ಲಿ
ಕೆಎಫ್‌ಡಿಗೆ ಈಗ ನಿರ್ದಿಷ್ಟ ಔಷಧಿ ಇಲ್ಲ. ಆರೋಗ್ಯ ಇಲಾಖೆ ಸದ್ಯ ರೋಗದ ಲಕ್ಷಣಗಳ ಆಧರಿಸಿ ಚಿಕಿತ್ಸೆ ನೀಡುತ್ತಿದೆ. 1992ರಲ್ಲಿ ಮಹಾರಾಷ್ಟ್ರದ ವಿಜ್ಞಾನಿ ಡಾ.ದಂಡಾವತೆ ಅಭಿವೃದ್ಧಿಪಡಿಸಿದ್ದ ಲಸಿಕೆ ಇಲ್ಲಿಯವರೆಗೂ ಬಳಕೆಯಲ್ಲಿತ್ತು. ಆದರೆ ಅದು ವೈರಸ್‌ನ ರೂಪಾಂತರದಿಂದ (ಮ್ಯುಟೇಶನ್) ತನ್ನ ಪರಿಣಾಮ ಕಳೆದುಕೊಂಡಿದೆ. ಹೀಗಾಗಿ ಆ ಲಸಿಕೆ ಬಳಕೆಯನ್ನು ಆರೋಗ್ಯ ಇಲಾಖೆ ಮೂರು ವರ್ಷಗಳಿಂದ ನಿಲ್ಲಿಸಿದೆ.
‘ಹೊಸದಾಗಿ ಲಸಿಕೆ ಅಭಿವೃದ್ಧಿಗೆ ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ಈಗ ಅದು ಕ್ಲಿನಿಕಲ್ ಟ್ರಯಲ್ಸ್ ಹಂತದಲ್ಲಿದೆ. ಮುಂದಿನ ವರ್ಷದ ವೇಳೆಗೆ ಲಸಿಕೆ ಸಿದ್ಧವಾಗಬಹುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಲ್.ನಾಗರಾಜ ನಾಯ್ಕ ಹೇಳುತ್ತಾರೆ.
‘ತಕ್ಷಣ ಪರೀಕ್ಷೆ ಮಾಡಿಸಿ’
ಕೆಎಫ್‌ಡಿ ಬಾಧಿತರಿಗೆ ಚಿಕಿತ್ಸೆ ನೀಡಲು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮಲೆನಾಡು ಭಾಗದ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಯ ಪ್ರತ್ಯೇಕ ವೈರಲ್ ವಾರ್ಡ್ ರೂಪಿಸಲಾಗಿದೆ. ತೀವ್ರ ರೋಗ ಬಾಧಿತರ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್, ಸುಬ್ಬಯ್ಯ ಹಾಗೂ ಮಣಿಪಾಲ್‌ನ ಕಸ್ತೂರಬಾ ಆಸ್ಪತ್ರೆಗಳನ್ನು ಗುರುತಿಸಿದ್ದು, ಅಲ್ಲಿ ಎಲ್ಲ ರೋಗಿಗಳಿಗೂ ಸಂಪೂರ್ಣ ಉಚಿತ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ.
‘ಕೆಎಫ್‌ಡಿ ಮೊದಲ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದು ಸೂಕ್ತ. ಮಲೆನಾಡಿನಲ್ಲಿ ಜ್ವರ ಬಾಧಿತರು ಆರ್‌ಎಂಪಿ, ನಾಟಿ ವೈದ್ಯರ ಬಳಿ ತೆರಳದೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕು. ಅಲ್ಲಿ ರಕ್ತ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಮಾಡಬಹುದು’ ಎಂದು ಡಾ.ನಾಗರಾಜ ನಾಯ್ಕ ಮನವಿ ಮಾಡುತ್ತಾರೆ.
ಉಣುಗು ಕಡಿತದಿಂದ ರಕ್ಷಣೆಗೆ ಸಲಹೆ
ಕೆಎಫ್‌ಡಿ ಹರಡುವ ಉಣುಗುಗಳು ಕಾಡಿನಲ್ಲಿರುತ್ತವೆ. ಇವು ಜೀವಿತಾವಧಿಯಲ್ಲಿ ತಾವಾಗಿಯೇ 100 ಮೀ. ಮಾತ್ರ ಕ್ರಮಿಸಬಹುದು. ಆದರೆ ಇಲಿ, ಹೆಗ್ಗಣ, ಬೆಕ್ಕು, ನಾಯಿ, ಮಂಗ, ಕಾಡಿಗೆ ಮೇಯಲು ಹೋಗುವ ದನಗಳ ಮೂಲಕ ಮನುಷ್ಯರ ಸಂಪರ್ಕಕ್ಕೆ ಬರುತ್ತವೆ. ಕಾಡಿಗೆ ಹೋದವರಿಗೆ ಉಣುಗು ಕಚ್ಚಿದರೂ ರೋಗ ಹರಡುತ್ತದೆ. ಕಾಡಿಗೆ ಹೋಗುವಾಗ ಡೆಪಾ ಎಣ್ಣೆ ಕೈ ಕಾಲಿಗೆ ಹಚ್ಚಿಕೊಳ್ಳಬೇಕು, ಪೂರ್ಣ ತೋಳಿನ ಶರ್ಟು, ಪ್ಯಾಂಟ್, ಶೂ ಧರಿಸಬೇಕು. ವಾಪಸ್ ಮರಳಿದಾಗ ಬಿಸಿ ನೀರಿನಲ್ಲಿ ಸ್ನಾನ ಮಾಡಿ, ಬಟ್ಟೆಗಳನ್ನೂ ಬಿಸಿ ನೀರಿನಲ್ಲಿ ಒಗೆದು ಹಾಕಬೇಕು. ದನ–ಕರುಗಳ ಮೈ ತೊಳೆಯಬೇಕು ಎಂದು ಎಂಬುದು ವೈದ್ಯರ ಸಲಹೆ.
ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾ ಚರಣೆ ತರಬೇತಿ, ಇಥಿಯೋಪಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ದತ್ತಾಂಶ ಕೇಂದ್ರ ಸ್ಥಾಪನೆ ಕುರಿತ ಒಪ್ಪಂದಕ್ಕೆ ಈ ವೇಳೆ ಸಹಿ ಮಾಡಲಾಯಿತು.
ಇದಕ್ಕೂ ಮುನ್ನ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರ ಜತೆಗೆ ಮೋದಿ ಅವರು ವ್ಯಾಪಕ ಮಾತುಕತೆ ನಡೆಸಿದರು.
‘ಈ ಒಪ್ಪಂದಗಳು ಜನ ಕೇಂದ್ರಿತ ಅಭಿವೃದ್ದಿ ಮೇಲೆ ಕೇಂದ್ರೀಕರಿಸಿದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿವೆ’ ಎಂದು ನರೇಂದ್ರ ಮೋದಿ ಬಣ್ಣಿಸಿದರು.
ಉಭಯ ದೇಶಗಳ ನಡುವೆ ಕಾರ್ಯ ತಂತ್ರದ ಪಾಲುದಾರಿಕೆ ನವೀಕರಣ, ಜಿ–20 ಅಡಿಯಲ್ಲಿ ಸಾಲ ಪುನರ್‌ರಚನೆ, ಶಿಕ್ಷಣ, ಆರೋಗ್ಯ, ಸಂಸ್ಕತಿ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಸಂಬಂಧ ವೃದ್ಧಿಸಲು ಉಭಯ ನಾಯಕರು ಸಮ್ಮತಿಸಿದರು.
‘ಎರಡೂ ದೇಶಗಳ ನಡುವೆ ದೀರ್ಘ ಕಾಲೀನ ಮತ್ತು ವಿಶ್ವಾಸಾರ್ಹ ಪಾಲುದಾರಿಕೆ ಯಲ್ಲಿ ಇವು ಪ್ರಮುಖ ನಿರ್ಧಾರಗಳಾಗಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಭಯೋತ್ಪಾದನೆ ವಿರೋಧಿ ಹೋರಾಟಕ್ಕೆ ಇಥಿಯೋಪಿಯಾ ಬಲವಾದ ಬೆಂಬಲ ವ್ಯಕ್ತಪಡಿಸಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅವರು ಅಲ್ಲಿನ ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಆರ್ಥಿಕ ಸಂಬಂಧ) ಸುಧಾಕರ್ ದಲೇಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೋದಿ ಅವರು ಇಥಿಯೋಪಿಯಾದಿಂದ ಒಮಾನ್‌ಗೆ ತೆರಳಿದರು.
‘ಜಂಟಿಅಧಿವೇಶನದಲ್ಲಿಮೋದಿಭಾಷಣ’
ಭಾರತ ಮತ್ತು ಇಥಿಯೋಪಿಯಾ ದೇಶಗಳು ಪ್ರಾದೇಶಿಕ ಶಾಂತಿ, ಭದ್ರತೆ ಕ್ಷೇತ್ರದಲ್ಲಿ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಥಿಯೋಪಿಯಾದ ಸಂಸತ್ತಿನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ‘ಎರಡೂ ದೇಶಗಳ ಪೂರ್ವಿಕರು ಕೇವಲ ಪದಾರ್ಥಗಳನ್ನಷ್ಟೇ ಅಲ್ಲದೆ ವಿಚಾರ ಮತ್ತು ಜೀವನ ವಿಧಾನವನ್ನು ವಿನಿಮಯ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.
‘ಪ್ರಜಾಪ್ರಭುತ್ವವು ಒಂದು ಜೀವನ ವಿಧಾನ ಮತ್ತು ಪ್ರಯಾಣ ಎಂಬುದನ್ನು ಎರಡೂ ದೇಶಗಳು ಅರ್ಥಮಾಡಿ ಕೊಂಡಿವೆ’ ಎಂದು ಅವರು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದ ವಿಶ್ವದ 18ನೇ ಸಂಸತ್ತು ಇದಾಗಿದೆ.
ಪಿಎಫ್ಆರ್ಡಿಎ ನಿಗದಿಪಡಿಸಿದ ಮಿತಿಯ ಒಳಗೆ, ನಿಯಂತ್ರಣಕ್ಕೆ ಒಳಪಟ್ಟ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹುದು ಎಂದು ಡಿಸೆಂಬರ್ 12ರ ‘ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ನಿಯಮಗಳು – 2025’ರಲ್ಲಿ ಹೇಳಲಾಗಿದೆ.
ಸರ್ಕಾರೇತರ ಚಂದಾದಾರರು ಎನ್‌ಪಿಎಸ್ ವ್ಯವಸ್ಥೆಯಿಂದ ಹೊರನಡೆಯುವ ಸಂದರ್ಭದಲ್ಲಿ ಖಾತೆಯಲ್ಲಿನ ಶೇಕಡ 80ರವರೆಗಿನ ಮೊತ್ತವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಶೇ 60ರವರೆಗಿನ ಮೊತ್ತವನ್ನು ಮಾತ್ರ ಹಿಂಪಡೆಯಲು ಅವಕಾಶ ಇತ್ತು. ಇನ್ನುಳಿದ ಶೇ 40ರಷ್ಟು ಮೊತ್ತವನ್ನು ಆ್ಯನ್ಯುಟಿ ಯೋಜನೆ ಖರೀದಿಸಲು ಬಳಸಬೇಕಿತ್ತು.
ಹೊಸ ನಿಯಮಗಳು ಅವು ಅಧಿಸೂಚನೆ ಯಲ್ಲಿ ಪ್ರಕಟವಾದ ದಿನದಿಂದ ಜಾರಿಗೆ ಬರಲಿವೆ.
ಪಿಂಚಣಿ ನಿಧಿಯಲ್ಲಿ ಒಗ್ಗೂಡಿರುವ ಮೊತ್ತವು ₹8 ಲಕ್ಷಕ್ಕಿಂತ ಕಡಿಮೆ ಇದ್ದರೆ, ಅಷ್ಟೂ ಮೊತ್ತವನ್ನು ಒಂದೇ ಬಾರಿಗೆ ಹಿಂಪಡೆಯುವ ಅವಕಾಶ ಇರುತ್ತದೆ. ಅಥವಾ, ಆ ಮೊತ್ತವನ್ನು ಕಾಲಕಾಲಕ್ಕೆ ವ್ಯವಸ್ಥಿತ ಹಿಂತೆಗೆತದ ಮೂಲಕ ಪಡೆಯಲು ಕೂಡ ಅವಕಾಶ ಇರಲಿದೆ.
ಎನ್‌ಪಿಎಸ್ ಮೊತ್ತವನ್ನು ಇನ್ನು ಮುಂದೆ ಒಟ್ಟು ನಾಲ್ಕು ಬಾರಿ ಭಾಗಶಃ ಹಿಂಪಡೆಯಲು ಅವಕಾಶ ಇರಲಿದೆ. ಆದರೆ ಒಂದು ಬಾರಿ ಹಿಂಪಡೆದ ನಂತರ ನಾಲ್ಕು ವರ್ಷ ಮತ್ತೆ ಹಿಂಪಡೆಯಲು ಅವಕಾಶ ಸಿಗುವುದಿಲ್ಲ.
ಸರ್ಕಾರಿ ವಲಯದ ಎನ್‌ಪಿಎಸ್ ಚಂದಾದಾರರಿಗೆ 85 ವರ್ಷ ವಯಸ್ಸಾಗುವವರೆಗೂ ಎನ್‌ಪಿಎಸ್‌ನಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿದೆ. ಈ ಮೊದಲು ಇದಕ್ಕೆ 75 ವರ್ಷ ವಯಸ್ಸಿನ ಮಿತಿ ಇತ್ತು.
ರಾಜೀನಾಮೆ, ಕೆಲಸದಿಂದ ವಜಾ ಕಾರಣದಿಂದಾಗಿ ಎನ್‌ಪಿಎಸ್‌ನಿಂದ ಹೊರನಡೆಯುವ ಸರ್ಕಾರಿ ನೌಕರರು ಎನ್‌ಪಿಎಸ್‌ನಲ್ಲಿ ಶೇ 80ರಷ್ಟು ಮೊತ್ತವನ್ನು ಆ್ಯನ್ಯುಟಿ ಖರೀದಿಗೆ ಬಳಸಬೇಕು. ಇನ್ನುಳಿದ ಮೊತ್ತವನ್ನು ಅವರು ಹಿಂಪಡೆಯಬಹುದು.
ಸರ್ಕಾರೇತರ ವಿಭಾಗ ಹಾಗೂ ಎನ್‌ಪಿಎಸ್–ಲೈಟ್ ವಿಭಾಗದವರು ಕೂಡ ತಮಗೆ 85 ವರ್ಷ ವಯಸ್ಸಾಗುವವರೆಗೂ ಹೂಡಿಕೆಯನ್ನು ಮುಂದುವರಿಸಲು ಹೊಸ ನಿಯಮಗಳಲ್ಲಿ ಅವಕಾಶ ನೀಡಲಾಗಿದೆ.
ಕರ್ನಾಟಕ ಸರ್ಕಾರವು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಸಕಾಲಕ್ಕೆ ನಡೆಸದ ಕಾರಣ ರಾಜ್ಯಕ್ಕೆ ಬರಬೇಕಿದ್ದ 15ನೇ ಹಣಕಾಸು ಆಯೋಗದ ₹1,279 ಕೋಟಿ ಅನುದಾನಕ್ಕೆ ಕತ್ತರಿ ಬಿದ್ದಿದೆ.
ಲೋಕಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಕೇಳಿರುವ ಪ್ರಶ್ನೆಗೆ ಕೇಂದ್ರ ಪಂಚಾಯತ್‌ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ.
‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ– 1993’ಕ್ಕೆ ಇತ್ತೀಚೆಗೆ ಮಾಡಿರುವ ತಿದ್ದುಪಡಿಗಳಿಂದಾಗಿ ರಾಜ್ಯ ಚುನಾವಣಾ ಆಯೋಗದ ಸಾಂವಿಧಾನಿಕ ಅಧಿಕಾರಗಳು ಮತ್ತು ಸ್ವಾಯತ್ತೆಗೆ ಧಕ್ಕೆ ಆಗಿಲ್ಲ ಎಂದು ರಾಜೀವ್ ರಂಜನ್ ಸಿಂಗ್ ತಿಳಿಸಿದ್ದಾರೆ.
ಐದುವರ್ಷಗಳಿಂದಜನಪ್ರತಿನಿಧಿಗಳಿಲ್ಲ
ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ 2016ರ ಏಪ್ರಿಲ್‌ನಲ್ಲಿ ಚುನಾವಣೆ ನಡೆದಿತ್ತು. ಚುನಾಯಿತ ಸದಸ್ಯರ ಅವಧಿ 2021ರ ಏಪ್ರಿಲ್ 27ರಂದು ಮುಕ್ತಾಯವಾಗಿತ್ತು. ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದ್ದ ಚುನಾವಣಾ ಆಯೋಗವು ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡನ್ನು ಪ್ರಕಟಿಸಿತ್ತು. ಆದರೆ, ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಆಯೋಗದಿಂದ ಹಿಂಪಡೆದಿತ್ತು.
ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದು ‘ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ’ಕ್ಕೆ ಆ ಅಧಿಕಾರವನ್ನು ನೀಡಿತ್ತು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿಳಂಬದ ವಿರುದ್ಧ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್ ಮೊರೆ ಹೋಗಿತ್ತು. ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ 2023ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.
ನಂತರ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರ್ಕಾರ ರಚಿಸಿದ್ದ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಧಿಸೂಚನೆ ಹೊರಡಿಸಿತ್ತು. ಆದರೆ, ಮೀಸಲಾತಿ ನಿಗದಿ ಅಂತಿಮಗೊಳಿಸಿರಲಿಲ್ಲ.
ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಸೂದೆಯನ್ನು ಮಂಡಿಸಿದರು. ನರೇಗಾ ಕಾಯ್ದೆಯ ಹೆಸರನ್ನು ಬದಲಿಸಿ ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಯೋಜನೆ’ ಎಂಬ ಹೆಸರಿಡಲು ಈ ಮೊದಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಅಂತಿಮವಾಗಿ ಕೇಂದ್ರವು ನರೇಗಾ ಕಾಯ್ದೆಯನ್ನೇ ಹಿಂಪಡೆಯಲು ಹೊಸ ಮಸೂದೆ ಮಂಡಿಸಿದೆ.
ಕೇಂದ್ರ ಸರ್ಕಾರವು ನರೇಗಾ ಯೋಜನೆಯನ್ನು ದುರ್ಬಲಗೊಳಿಸಿಲ್ಲ. ಯಾಕೆಂದರೆ, 100 ಕೆಲಸದ ದಿನಗಳನ್ನು 125 ಕೆಲಸದ ದಿನಗಳಿಗೆ ಏರಿಸಿದ್ದೇವೆ’ ಎಂದು ಸಚಿವ ಚೌಹಾಣ್ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
‘ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರೇ ವಿಶ್ವವಿದ್ಯಾಲಯಗಳಿಗೆ ಕುಲಾಧಿಪತಿಯಾಗಿ ಮುಂದುವರಿಯಲಿದ್ದಾರೆ’ ಎಂದು ಪಶ್ಚಿಮ ಬಂಗಾಳ ಲೋಕ ಭವನ ತಿಳಿಸಿದೆ. ವಿಶ್ವವಿದ್ಯಾಲಯಗಳ ಆಡಳಿತದ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ಮಧ್ಯೆ ತೀವ್ರ ಜಗಳ ಉಂಟಾದ ಕಾರಣ ಈ ಮಸೂದೆಗಳನ್ನು ಮಂಡಿಸಲಾಗಿತ್ತು.
ಪಿಯುಸಿ ಮಾನದಂಡಗಳನ್ನು ಪಾಲಿಸಲು ವಾಹನ ಮಾಲೀಕರಿಗೆ ಒಂದು ದಿನದ ಕಾಲಾವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೆಟ್ರೋಲ್ ಪಂಪ್‌ಗಳಲ್ಲಿ ಅಳವಡಿಸಲಾದ ಕ್ಯಾಮೆರಾಗಳು ಸ್ವಯಂ ಚಾಲಿತವಾಗಿ ಪಿಯುಸಿ ಪ್ರಮಾಣಪತ್ರ ಇಲ್ಲದ ವಾಹನಗಳ್ನು ಪತ್ತೆ ಹಚ್ಚಲಿವೆ. ಗುರುವಾರದಿಂದ ಅಂತಹ ವಾಹನಗಳಿಗೆ ಯಾವುದೇ ಗೊಂದಲವಿಲ್ಲದೆ ಇಂಧನ ನಿರಾಕರಿಸಲಾಗುತ್ತದೆ ಎಂದು ಸಿರ್ಸಾ ಹೇಳಿದ್ದಾರೆ.
‘ಪಿಯುಸಿ ಪ್ರಮಾಣಪತ್ರಗಳನ್ನು ಹೊಂದಿರದ 8 ಲಕ್ಷಕ್ಕೂ ಹೆಚ್ಚು ವಾಹನ ಮಾಲೀಕರಿಗೆ ಈಗಾಗಲೆ ದಂಡ ವಿಧಿಸಲಾಗಿದೆ. ಗುರುವಾರದಿಂದ ಮತ್ತು ಮುಂದಿನ ಆದೇಶದವರೆಗೆ ದೆಹಲಿಯ ಹೊರಗಿನಿಂದ ಬರುವ ಬಿಎಸ್–6 ಮಾನದಂಡಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾದ ವಾಹನಗಳಿಗೆ ಮಾತ್ರ ನಗರವನ್ನು ಪ್ರವೇಶಿಸಲು ಅವಕಾಶ ನೀಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ಈ ಕುಸಿತಕ್ಕೆ ಪ್ರಮುಖ ಕಾರಣಗಳು ಮತ್ತು ಸರ್ಕಾರದ ವಿವರಣೆ ಇಲ್ಲಿದೆ:
ಮುಖ್ಯಅಂಶಗಳು:
ವ್ಯಾಪಾರಕೊರತೆ (Trade Deficit): ವಿದೇಶಗಳಿಂದ ನಾವು ಮಾಡುವ ಆಮದು (Imports) ಹೆಚ್ಚಾಗಿದ್ದು, ರಫ್ತು (Exports) ಕಡಿಮೆಯಾದ ಕಾರಣ ವ್ಯಾಪಾರ ಕೊರತೆ ಉಂಟಾಗಿದೆ. ಇದು ರೂಪಾಯಿ ಮೌಲ್ಯದ ಮೇಲೆ ನೇರ ಪರಿಣಾಮ ಬೀರಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ವಿದೇಶಿಬಂಡವಾಳಹಿಂತೆಗೆತ: ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ತಮ್ಮ ಹಣವನ್ನು ದೊಡ್ಡ ಮಟ್ಟದಲ್ಲಿ ಹಿಂತೆಗೆದುಕೊಳ್ಳುತ್ತಿರುವುದು (Outflow of funds) ರೂಪಾಯಿಯ ಕುಸಿತಕ್ಕೆ ಮತ್ತೊಂದು ಕಾರಣ.
ಡಾಲರ್ಬೇಡಿಕೆ: ಕಚ್ಚಾ ತೈಲ ಆಮದಿನ ಪಾವತಿಗಾಗಿ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್‌ಗೆ ಬೇಡಿಕೆ ಹೆಚ್ಚಾಗಿದ್ದು, ಇದು ರೂಪಾಯಿಯ ಬೆಲೆಯನ್ನು ಕೆಳಕ್ಕೆ ತಳ್ಳಿದೆ.
ಸರ್ಕಾರದಸಮರ್ಥನೆ:
ಕೇಂದ್ರ ವಾಣಿಜ್ಯ ಸಚಿವಾಲಯದ ಪ್ರಕಾರ, ಜಾಗತಿಕ ಆರ್ಥಿಕ ಬದಲಾವಣೆಗಳು ಮತ್ತು ಡಾಲರ್ ಮೌಲ್ಯದ ಬಲವರ್ಧನೆಯು ರೂಪಾಯಿ ಮೇಲೆ ಒತ್ತಡ ಹೇರುತ್ತಿದೆ. ಆದಾಗ್ಯೂ, ಭಾರತದ ವಿದೇಶಿ ವಿನಿಮಯ ಸಂಗ್ರಹವು (Foreign Exchange Reserves) ಭದ್ರವಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಪರಿಣಾಮಗಳು:
ವಿದೇಶದಿಂದ ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ ವಸ್ತುಗಳು, ಕಚ್ಚಾ ತೈಲ ಮತ್ತು ಯಂತ್ರೋಪಕರಣಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ವಿದೇಶಿ ಶಿಕ್ಷಣ ಮತ್ತು ಪ್ರವಾಸದ ವೆಚ್ಚಗಳು ದುಬಾರಿಯಾಗಲಿವೆ.
ಗ್ರಾಮೀಣಮತ್ತುನಗರಪ್ರದೇಶ: ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ವಿಶೇಷವಾಗಿ ಉತ್ಪಾದನಾ ವಲಯ (Manufacturing) ಮತ್ತು ಸೇವಾ ವಲಯದಲ್ಲಿ (Service Sector) ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ.
ಮಹಿಳಾಕಾರ್ಮಿಕರಭಾಗವಹಿಸುವಿಕೆ: ಈ ಬಾರಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯ ದರದಲ್ಲಿಯೂ ಏರಿಕೆ ಕಂಡುಬಂದಿದೆ. ಸ್ವಯಂ ಉದ್ಯೋಗ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಕೌಶಲಾಧಾರಿತಉದ್ಯೋಗ: ಸರ್ಕಾರದ ವಿವಿಧ ಕೌಶಲ ಅಭಿವೃದ್ಧಿ ಯೋಜನೆಗಳಿಂದಾಗಿ ಯುವಜನರಿಗೆ ತಾಂತ್ರಿಕ ಮತ್ತು ಕೌಶಲಾಧಾರಿತ ಕೆಲಸಗಳು ಸುಲಭವಾಗಿ ದೊರೆಯುತ್ತಿವೆ ಎಂದು ವರದಿ ಹೇಳಿದೆ.
ಸಾಂಪ್ರದಾಯಿಕವಲಯ: ಕೃಷಿ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳಲ್ಲಿಯೂ ಉದ್ಯೋಗದ ಸ್ಥಿರತೆ ಕಂಡುಬಂದಿದೆ.
ಸರ್ಕಾರದಪ್ರತಿಕ್ರಿಯೆ: ಆರ್ಥಿಕತೆಯ ವೇಗವರ್ಧನೆ ಮತ್ತು ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಉದ್ಯೋಗ ಸೃಷ್ಟಿಗೆ ಪೂರಕವಾಗಿವೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ತಗ್ಗುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಹೊಸ ಬ್ರ್ಯಾಂಡ್‌ಗಳ ಬಿಡುಗಡೆ: ರಿಲಯನ್ಸ್ ತನ್ನದೇ ಆದ ಸ್ವಂತ ಬ್ರ್ಯಾಂಡ್ ಅಡಿಯಲ್ಲಿ ಅಕ್ಕಿ, ಬೇಳೆಕಾಳುಗಳು, ಖಾದ್ಯ ತೈಲ (Edible Oil), ಹಿಟ್ಟು ಮತ್ತು ಮಸಾಲೆ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ನೇರಖರೀದಿ: ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಿ, ಸಂಸ್ಕರಿಸಿ, ಪ್ಯಾಕ್ ಮಾಡಿ ಗ್ರಾಹಕರಿಗೆ ತಲುಪಿಸುವ ಬೃಹತ್ ಜಾಲವನ್ನು ಕಂಪನಿಯು ಸಿದ್ಧಪಡಿಸಿದೆ. ಇದು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳನ್ನು ನೀಡಲು ಸಹಕಾರಿಯಾಗಲಿದೆ.
ವಿತರಣಾಜಾಲ: ರಿಲಯನ್ಸ್ ರಿಟೇಲ್ (Reliance Retail) ಮಳಿಗೆಗಳ ಮೂಲಕ ಮಾತ್ರವಲ್ಲದೆ, ದೇಶಾದ್ಯಂತ ಇರುವ ಸಣ್ಣ ಕಿರಣಿ ಅಂಗಡಿಗಳ ಮೂಲಕವೂ ತನ್ನ ಆಹಾರ ಉತ್ಪನ್ನಗಳನ್ನು ತಲುಪಿಸಲು ಕಂಪನಿ ಯೋಜಿಸಿದೆ. ಜಿಯೋ ಮಾರ್ಟ್ (JioMart) ಮೂಲಕ ಆನ್‌ಲೈನ್ ವಿತರಣೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಸ್ಪರ್ಧೆ: ರಿಲಯನ್ಸ್‌ನ ಈ ಪ್ರವೇಶದಿಂದಾಗಿ ಈಗಾಗಲೇ ಈ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರಿರುವ ಟಾಟಾ ಕನ್ಸ್ಯೂಮರ್ ಪ್ರೊಡಕ್ಟ್ಸ್, ಅದಾನಿ ವಿಲ್ಮರ್ ಮತ್ತು ಐಟಿಸಿ (ITC) ಅಂತಹ ಕಂಪನಿಗಳಿಗೆ ದೊಡ್ಡ ಸ್ಪರ್ಧೆ ಎದುರಾಗುವ ನಿರೀಕ್ಷೆಯಿದೆ.
ಮುಂದಿನಗುರಿ: ದೇಶದ ಪ್ರತಿಯೊಂದು ಮನೆಯ ಅಡುಗೆ ಕೋಣೆಯನ್ನು ತಲುಪುವ ಗುರಿಯನ್ನು ಹೊಂದಿರುವ ರಿಲಯನ್ಸ್, ಈ ಮೂಲಕ ಭಾರತದ ಆಹಾರ ಮಾರುಕಟ್ಟೆಯಲ್ಲಿ ದೊಡ್ಡ ಪಾಲನ್ನು ಪಡೆಯಲು ತಂತ್ರ ರೂಪಿಸಿದೆ.
ಗೊಬ್ಬರಮತ್ತುರಾಸಾಯನಿಕಆಮದು: ಭಾರತವು ತನ್ನ ಕೃಷಿ ವಲಯಕ್ಕೆ ಅಗತ್ಯವಿರುವ ಫಾಸ್ಫೇಟ್ ಮತ್ತು ಪೊಟ್ಯಾಶ್ ಗೊಬ್ಬರಗಳಿಗಾಗಿ ಜೋರ್ಡಾನ್ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ. ಈ ಪ್ರವಾಸದ ವೇಳೆ, ದೀರ್ಘಕಾಲದವರೆಗೆ ಗೊಬ್ಬರ ಪೂರೈಕೆ ಮಾಡುವ ಕುರಿತು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಆರ್ಥಿಕಸಹಕಾರ: ವ್ಯಾಪಾರ ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಉಭಯ ದೇಶಗಳ ಪ್ರತಿನಿಧಿಗಳು ಸಮ್ಮತಿಸಿದ್ದಾರೆ. ವಿಶೇಷವಾಗಿ ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಜಂಟಿ ಹೂಡಿಕೆಗೆ ಒತ್ತು ನೀಡಲಾಗಿದೆ.
ಸಂರಕ್ಷಣಾವಲಯ: ಭಯೋತ್ಪಾದನೆ ನಿಗ್ರಹ ಮತ್ತು ಪ್ರಾದೇಶಿಕ ಭದ್ರತೆಯ ವಿಷಯದಲ್ಲಿ ಪರಸ್ಪರ ಸಹಕರಿಸಲು ಮತ್ತು ಗುಪ್ತಚರ ಮಾಹಿತಿ ಹಂಚಿಕೊಳ್ಳಲು ಎರಡೂ ದೇಶಗಳು ನಿರ್ಧರಿಸಿವೆ.
ಸಾಂಸ್ಕೃತಿಕಮತ್ತುಪ್ರವಾಸೋದ್ಯಮ: ಭಾರತೀಯ ಪ್ರವಾಸಿಗರನ್ನು ಜೋರ್ಡಾನ್‌ಗೆ ಆಕರ್ಷಿಸಲು ಮತ್ತು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಉತ್ತೇಜಿಸಲು ಚರ್ಚೆ ನಡೆಸಲಾಗಿದೆ. ಜೋರ್ಡಾನ್‌ನ ಐತಿಹಾಸಿಕ ತಾಣವಾದ ‘ಪೆಟ್ರಾ’ ಪ್ರವಾಸೋದ್ಯಮ ಪ್ರಚಾರದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ರಾಜತಾಂತ್ರಿಕಮಹತ್ವ: ಪಶ್ಚಿಮ ಏಷ್ಯಾದಲ್ಲಿ ಜೋರ್ಡಾನ್ ಭಾರತದ ಅತ್ಯಂತ ವಿಶ್ವಾಸಾರ್ಹ ಮಿತ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಭೇಟಿಯು ಮುಂಬರುವ ದಿನಗಳಲ್ಲಿ ಭಾರತದ ಆಹಾರ ಭದ್ರತೆ ಮತ್ತು ಇಂಧನ ಭದ್ರತೆಗೆ ಹೆಚ್ಚಿನ ಶಕ್ತಿ ನೀಡಲಿದೆ ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಸ್ಥಿಕೆವಹಿಸಿದದೇಶಗಳು: ಹಲವಾರು ಪ್ರಮುಖ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸತತ ಪ್ರಯತ್ನದ ಫಲವಾಗಿ, ಸಂಘರ್ಷದ ಹಾದಿ ಬಿಟ್ಟು ಸಂಧಾನದ ಹಾದಿಗೆ ಬರಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ವರದಿಯಾಗಿದೆ.
ಒಪ್ಪಂದದವಿಷಯಗಳು: ಕದನ ವಿರಾಮ ಘೋಷಿಸುವುದು, ಗಡಿ ಭಾಗಗಳಲ್ಲಿ ಸೇನೆಯನ್ನು ಹಿಂಪಡೆಯುವುದು ಮತ್ತು ಆರ್ಥಿಕ ನಿರ್ಬಂಧಗಳನ್ನು ಸಡಿಲಗೊಳಿಸುವ ಕುರಿತು ಪ್ರಾಥಮಿಕ ಚರ್ಚೆಗಳು ನಡೆದಿವೆ.
ಭಾರತದಪಾತ್ರ: ಭಾರತವು ಮೊದಲಿನಿಂದಲೂ ‘ಯುದ್ಧದ ಬದಲು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ’ ಎಂಬ ನಿಲುವನ್ನು ಹೊಂದಿತ್ತು. ಈ ಶಾಂತಿ ಪ್ರಕ್ರಿಯೆಯಲ್ಲಿ ಭಾರತದ ರಾಜತಾಂತ್ರಿಕ ಪ್ರಯತ್ನಗಳೂ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಲಾಗುತ್ತಿದೆ.
ಜಾಗತಿಕಮಾರುಕಟ್ಟೆಯಮೇಲೆಪರಿಣಾಮ: ಈ ಶಾಂತಿ ಒಪ್ಪಂದದ ಸುಳಿವು ಸಿಗುತ್ತಿದ್ದಂತೆಯೇ ಜಾಗತಿಕವಾಗಿ ಕಚ್ಚಾ ತೈಲದ ಬೆಲೆಯಲ್ಲಿ ಸ್ಥಿರತೆ ಕಂಡುಬರುತ್ತಿದೆ ಮತ್ತು ಷೇರು ಮಾರುಕಟ್ಟೆಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆ.
ನಿರೀಕ್ಷೆ: ಮುಂಬರುವ ಉನ್ನತ ಮಟ್ಟದ ಸಭೆಯಲ್ಲಿ ಅಧಿಕೃತವಾಗಿ ಈ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆಯಿದೆ. ಇದು ಯೂರೋಪ್ ಮತ್ತು ಏಷ್ಯಾದ ದೇಶಗಳ ನಡುವಿನ ವ್ಯಾಪಾರ ವ್ಯವಹಾರಗಳು ಪುನರಾರಂಭಗೊಳ್ಳಲು ಹಾದಿ ಮಾಡಿಕೊಡಲಿದೆ.
ಏಳು ಕಾರ್ಯಾಚರಣೆಗಳ ಪೈಕಿ ಮೊದಲನೆಯ ಉಡಾವಣೆ ಮುಂದಿನ ವಾರ ನಡೆಯುವ ನಿರೀಕ್ಷೆಯಿದೆ.
‘ಇಸ್ರೊದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಹಾಗೂ ಅಮೆರಿಕದ ಎಎಸ್‌ಟಿ ಸ್ಪೇಸ್ ಮೊಬೈಲ್ ನಡುವಿನ ವಾಣಿಜ್ಯ ಒಪ್ಪಂದ ದಂತೆ ‘ಬ್ಲೂಬರ್ಡ್–6’ ಸಂವಹನ ಉಪಗ್ರಹವನ್ನು ಭಾರತದ ‘ಬಾಹುಬಲಿ’ ರಾಕೆಟ್ ಎಲ್‌ವಿಎಂ–3 ಮೂಲಕ ಕಕ್ಷೆಗೆ ಸೇರಿಸಲಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇತ್ತೀಚೆಗೆ ಸಂಸತ್‌ಗೆ ತಿಳಿಸಿದ್ದರು.
ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಮಾನವರಹಿತ ಕಾರ್ಯಾಚರಣೆಗೆ ವಿನ್ಯಾಸ ಗೊಳಿಸಲಾಗಿರುವ ‘ವ್ಯೋಮಮಿತ್ರ’ ರೋಬೊಟ್ ಅನ್ನು ಮುಂದಿನ ವರ್ಷದ ಆರಂಭದಲ್ಲಿ ಎಲ್‌ವಿಎಂ–3 ರಾಕೆಟ್ ಮೂಲಕ ಉಡ್ಡಯನ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಕಾರ್ಯಗಳು ಭರದಿಂದ ಸಾಗಿವೆ.
‘2027ರಲ್ಲಿ ಇಸ್ರೊ ಭಾರತೀಯ ಗಗನ ಯಾತ್ರಿಗಳನ್ನು ಭೂಮಿಯ ಕೆಳ ಕಕ್ಷೆಗೆ ಕಳುಹಿಸುವ ಮೊದಲು, ಮುಂದಿನ ವರ್ಷದ ಕೊನೆಯಲ್ಲಿ ಮತ್ತೊಂದು ಮಾನವರಹಿತ ಕಾರ್ಯಾಚರಣೆ ಕೈಗೊಳ್ಳಲು ಯೋಜಿಸಲಾಗಿದೆ.
ಮುಂದಿನ ವರ್ಷ ಎಚ್‌ಎಎಲ್ ಹಾಗೂ ಎಲ್ ಆ್ಯಂಡ್ ಟಿ ಕಂಪನಿಗಳು ನಿರ್ಮಿಸಿದ ಮೊದಲ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಉಡ್ಡಯನವಾಗಲಿದ್ದು, ಇದು ಓಷನ್‌ಸ್ಯಾಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸಲಿದೆ. ಪಿಎಸ್‌ಎಲ್‌ವಿ ಇನ್ನೂ ಎರಡು ಉಪಗ್ರಹಗಳಾದ ಭಾರತ ಮತ್ತು ಮಾರಿಷಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಉಪಗ್ರಹ ಹಾಗೂ ಭಾರತದ ಖಾಸಗಿ ಬಾಹ್ಯಾಕಾಶ ಕಂಪನಿ ‘ಧ್ರುವ ಸ್ಪೇಸ್’ನ ಎಲ್‌ಇಎಪಿ–2 ಉಪಗ್ರಹವನ್ನು ಹೊತ್ತೊಯ್ಯಲಿದೆ.
ಐದು ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು ತಯಾರಿಸಲು ಎಚ್‌ಎಎಲ್ ಹಾಗೂ ಎಲ್ ಆ್ಯಂಡ್ ಟಿ ಒಕ್ಕೂಟದೊಂದಿಗೆ ಎನ್‌ಎಸ್‌ಐಎಲ್ ಒಪ್ಪಂದ ಮಾಡಿಕೊಂಡಿತ್ತು.
ಇಸ್ರೊ ನಿರ್ಮಿತ ಪಿಎಸ್‌ಎಲ್‌ವಿ, ಭೂ ವೀಕ್ಷಣಾ ಉಪಗ್ರಹ (ಇಒಎಸ್–ಎನ್1), ಭಾರತ ಮತ್ತು ವಿದೇಶಗಳ 18 ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಸೇರಿಸ ಲಾಗುತ್ತದೆ.
ಪಂಚಾಯಿತಿಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ‘ಪರೋಕ್ಷ ಆಡಳಿತ’ ಇದೆ ಎಂದು ಹರಿಯಾಣದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಸುಶೀಲ್ ವರ್ಮಾ ದೂರು ನೀಡಿದ್ದರು. ಎನ್‌ಎಚ್‌ಆರ್‌ಸಿ ಸದಸ್ಯ ಪ್ರಿಯಾಂಕ್ ಕನೂಂಗೊ ನೇತೃತ್ವದ ಪೀಠವು ಈ ದೂರನ್ನು ಡಿ. 12ರಂದು ವಿಚಾರಣೆಗೆ ಕೈಗೆತ್ತಿ ಕೊಂಡು, ಈ ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಚಾಯಿತಿಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಮಹಿಳೆಯರ ಪರವಾಗಿ ಅವರ ಪತಿ ಅಥವಾ ಮಹಿಳೆಯ ಸಂಬಂಧಿಕ ಪುರುಷರೇ ಅಧಿಕಾರ ಚಲಾಯಿಸುತ್ತಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇದನ್ನು ‘ಸರಪಂಚ ಪತಿ’ ಎಂದು ಕರೆಯಲಾಗುತ್ತದೆ.
ಆಡಳಿತ ನಡೆಸುವ ಮತ್ತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಚುನಾಯಿತ ಮಹಿಳೆಯಿಂದ ಕಸಿದುಕೊಳ್ಳಲಾಗಿದೆ. ಅವರನ್ನು ಹೆಸರಿಗೆ ಮಾತ್ರ ಪಂಚಾಯಿತಿ/ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ.
ಇಂತಹ ನಡೆಗಳು ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ ಎಂಬುದಾಗಿ ಸುಪ್ರೀಂ ಕೋರ್ಟ್ ತನ್ನ ಹಲವಾರು ತೀರ್ಪುಗಳಲ್ಲಿ ಹೇಳಿದೆ. ‘ಸರಪಂಚ ಪತಿ’ ವ್ಯವಸ್ಥೆಯು ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಗಳ ಉಲ್ಲಂಘನೆಯೂ ಆಗಿದೆ ಎಂದು ಆಯೋಗ ತಿಳಿಸಿದೆ.
ದೇಶವು, ಎಸ್‌ಎಎಫ್ ರಫ್ತು ಕೇಂದ್ರವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದೆ. ಬ್ರೆಜಿಲ್‌ನಂತಹ ಪ್ರತಿಸ್ಪರ್ಧಿ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚುವರಿ ಎಥೆನಾಲ್ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.
2029ರ ವೇಳೆಗೆ ಸುಸ್ಥಿರ ವಿಮಾನ ಇಂಧನ ಘಟಕ ಕಾರ್ಯಾರಂಭ ಮಾಡಬಹುದು ಎಂದು ತಿಳಿಸಿದ್ದಾರೆ.
ಸುಸ್ಥಿರ ವಿಮಾನ ಇಂಧನದ ರಫ್ತು ಕೇಂದ್ರವಾಗಿ ಹೊರಹೊಮ್ಮಲು ಭಾರತವು ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ಬೆಳೆದ ಕಬ್ಬಿನಿಂದ ಪಡೆದ ಎಥೆನಾಲ್, ಬ್ರೆಜಿಲ್ ದೇಶದ ಎಥೆನಾಲ್‌ಗಿಂತ ಕಡಿಮೆ ಇಂಗಾಲದ ತೀವ್ರತೆಯನ್ನು ಹೊಂದಿದೆ. ಬ್ರೆಜಿಲ್‌ನ ಎಥೆನಾಲ್‌ಗಿಂತ ಭಾರತದ ಎಥೆನಾಲ್ ಅನ್ನು ಬಳಸಿದರೆ ವಾಯುಮಾಲಿನ್ಯ ಇಳಿಕೆಯು ಹೆಚ್ಚಿನ ಪ್ರಮಾಣದಲ್ಲಿ ರುತ್ತದೆ ಎಂದು ಹೇಳಿದ್ದಾರೆ.
ಸರ್ಕಾರಿ ಉದ್ದಿಮೆಗಳ ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಕಳೆದ ವಾರ ಮಂಡಿಸಲಾಗಿದೆ. ಭಾರತವು ತನಗೆ ಅಗತ್ಯವಿರುವ ಕಚ್ಚಾ ತೈಲದಲ್ಲಿ ಶೇಕಡ 89ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಿಂದಾಗಿ, ಸಂಘರ್ಷ, ನಿರ್ಬಂಧ, ಕಚ್ಚಾ ತೈಲ ಉತ್ಪಾದಿಸುವ ದೇಶಗಳಲ್ಲಿ ನಾಗರಿಕ ಅಶಾಂತಿ, ಹಡಗುಗಳ ಮಾರ್ಗದಲ್ಲಿ ಸಮಸ್ಯೆ ಉಂಟಾದಲ್ಲಿ ಭಾರತವು ಕೂಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ವರದಿಯು ಹೇಳಿದೆ.
ರಷ್ಯಾ–ಉಕ್ರೇನ್ ಯುದ್ಧ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಭಾರತ ನೆಚ್ಚಿಕೊಂಡಿರುವ ಇಂಧನ ಪೂರೈಕೆ ವ್ಯವಸ್ಥೆಯು ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸಿವೆ ಎಂದು ಹೇಳಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಕಚ್ಚಾ ತೈಲ ಆಮದು ಮೂಲಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಚುರುಕುಗೊಳಿಸಬೇಕು. ಪರ್ಯಾಯ ಆಮದು ಮಾರ್ಗಗಳನ್ನು ರೂಪಿಸಿಕೊಳ್ಳಬೇಕು, ಪೆಟ್ರೋಲಿಯಂ ಸಂಗ್ರಹಾಗಾರಗಳ ಸಾಮರ್ಥ್ಯ ಹೆಚ್ಚು ಮಾಡಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
‘ಸಂಘರ್ಷಗಳು, ನಿರ್ಬಂಧಗಳು, ಅಶಾಂತಿಯ ಪರಿಣಾಮವಾಗಿ ಭಾರತವು ಕಚ್ಚಾ ತೈಲ ಪೂರೈಕೆಯಲ್ಲಿ ಅನಿಶ್ಚಿತತೆ ಎದುರಿಸಬಹುದು. ಪೂರೈಕೆಯಲ್ಲಿ ವ್ಯತ್ಯಾಸ ಆದರೆ ಬೆಲೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ’ ಎಂದು ಸಮಿತಿಯ ವರದಿ ಹೇಳಿದೆ.
ಕಚ್ಚಾ ತೈಲ ಉತ್ಪಾದನೆ ಮಾಡುವ ದೇಶಗಳ ಜೊತೆಗಿನ ರಾಜತಾಂತ್ರಿಕ ಒಡನಾಟವನ್ನು ಬಲಪಡಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ವಿದೇಶಾಂಗ ವ್ಯವ ಹಾರಗಳ ಸಚಿವಾಲಯದ ಜೊತೆಗೂಡಿ ಕೆಲಸ ಮಾಡಬೇಕು ಎಂದು ಹೇಳಿದೆ.
ಭಾರತದಮುಡಿಗೆಸ್ಕ್ವಾಷ್ ವಿಶ್ವಕಪ್
ಸಂದರ್ಭ: ಭಾರತ ಸ್ಕ್ವಾಷ್ ತಂಡವು ಇದೇ ಮೊದಲ ಬಾರಿ ವಿಶ್ವಕಪ್ ಜಯಿಸಿ ಚಾರಿತ್ರಿಕ ಸಾಧನೆ ಮಾಡಿತು.
India Wins First Squash World Cup
ಎರಡನೇ ಶ್ರೇಯಾಂಕದ ಭಾರತ ತಂಡವು, ಇಲ್ಲಿನ ಎಕ್ಸ್‌ಪ್ರೆಸ್ ಅವೆನ್ಯೂ ಮಾಲ್‌ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ 3–0ಯಿಂದ ಹಾಂಗ್‌ಕಾಂಗ್ ತಂಡದ ವಿರುದ್ಧ ಗೆಲುವು ಸಾಧಿಸಿತು.
2023ರ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದು ಭಾರತ ತಂಡದ ಈವರೆಗಿನ ಉತ್ತಮ ಸಾಧನೆಯಾಗಿತ್ತು.
2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕೂಟದಲ್ಲಿ ಮೊದಲ ಬಾರಿಗೆ ಸ್ಕ್ವಾಷ್ ಕ್ರೀಡೆಯನ್ನು ಸೇರ್ಪಡೆಗೊಳಿಸಲಾಗಿದೆ.
ನರೇಗಾಸ್ವರೂಪಬದಲಿಗೆಮಸೂದೆ: ವಿಕಸಿತಭಾರತಕ್ಕೆ ‘ಜಿರಾಮ್ ಜಿಯೋಜನೆ l ರಾಜ್ಯಗಳಿಗೂಹೊರೆ
ಕೇಂದ್ರ ಸರ್ಕಾರವು ಮೊದಲೇ ನಿಗದಿಪಡಿಸಿದ ನಿಯಮಾನುಸಾರ ಗರಿಷ್ಠ ಮಿತಿಗೆ ಒಳಪಟ್ಟು ರಾಜ್ಯ ಸರ್ಕಾರಗಳಿಗೆ ಹಣ ಮಂಜೂರು ಮಾಡುತ್ತದೆ. ಹಂಚಿಕೆ ಮಾಡಿದ ಅನುದಾನಕ್ಕಿಂತ ಹೆಚ್ಚುವರಿ ಕೆಲಸ ದಿನಗಳನ್ನು ಮಾಡಿಸಿದರೆ ರಾಜ್ಯ ಸರ್ಕಾರವೇ ಹೆಚ್ಚುವರಿ ಹಣವನ್ನು ಭರಿಸಬೇಕಾಗುತ್ತದೆ.
ಅನುದಾನ: ರಾಜ್ಯಗಳಿಗೆಶೇ 40ರಷ್ಟುಹೊರೆ
ನರೇಗಾ ಯೋಜನೆಗೆ ಬೇಕಾದ ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ, ಈಗ ರಾಜ್ಯ ಸರ್ಕಾರಗಳೂ ಹಣ ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ಶೇ 60ರಷ್ಟು ಹಣವನ್ನು, ರಾಜ್ಯ ಸರ್ಕಾರವು ಶೇ 40ರಷ್ಟು ಹಣವನ್ನು ಭರಿಸ ಬೇಕಾಗುತ್ತದೆ (ಎಲ್ಲ ರಾಜ್ಯ ಸರ್ಕಾರಗಳು ಮತ್ತು ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳು).
ಈಶಾನ್ಯ ರಾಜ್ಯಗಳು, ಹಿಮಾಲಯದ ತಪ್ಪಲಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ) ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅನುದಾನ ಹಂಚಿಕೆ ಅನುಪಾತವು ಶೇ 90:10ರಷ್ಟಿರುತ್ತದೆ. ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶ ಗಳಲ್ಲಿ ಕೇಂದ್ರ ಸರ್ಕಾರವೇ ಪೂರ್ತಿ ಹಣ ಭರಿಸುತ್ತದೆ.
ನಿರುದ್ಯೋಗ ಭತ್ಯೆ: ಹೊಸ ಕಾಯ್ದೆಯ ಅನ್ವಯ, ಉದ್ಯೋಗ ಖಾತರಿ ಪಡೆಯದ ವ್ಯಕ್ತಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಈ ಭತ್ಯೆಯನ್ನು ರಾಜ್ಯ ಸರ್ಕಾರವೇ ನೀಡಬೇಕು ಎನ್ನುತ್ತದೆ ಮಸೂದೆ.
ಸಮಿತಿಗಳ ರಚನೆ: ರಾಜ್ಯ ಸರ್ಕಾರಗಳಿಗೆ ಹಣ ಹಂಚಿಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಮಟ್ಟದ ಸಂಚಾಲನಾ ಸಮಿತಿ’ಯನ್ನು ರಚಿಸಬೇಕು. ಜೊತೆಗೆ, ಈ ಕಾಯ್ದೆಯ ಎಲ್ಲ ಕೆಲಸ ಕಾರ್ಯಗಳ ಮೇಲ್ವಿಚಾರಣೆಯನ್ನೂ ನೋಡಿಕೊಳ್ಳಬೇಕು. ಅಂತೆಯೇ, ಕಾಯ್ದೆಯ ಕುರಿತು ಮಾರ್ಗದರ್ಶನ ನೀಡಲು ರಾಜ್ಯ ಸರ್ಕಾರಗಳೂ ‘ರಾಜ್ಯ ಮಟ್ಟದ ಸಂಚಾಲನಾ ಸಮಿತಿ’ಯನ್ನು ರಚಿಸಿಕೊಳ್ಳಬೇಕು ಎನ್ನುತ್ತದೆ ಮಸೂದೆ.
ಕೇಂದ್ರ, ರಾಜ್ಯಗಳಲ್ಲಿಮಂಡಳಿರಚನೆ
ಕಾಯ್ದೆ ಜಾರಿ ಸಂಬಂಧ ನಿಗಾ ಇರಿಸಲು ಕೇಂದ್ರ ಮಟ್ಟದಲ್ಲಿ ‘ಕೇಂದ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿ’ ಮತ್ತು ರಾಜ್ಯ ಮಟ್ಟದಲ್ಲಿ ‘ರಾಜ್ಯ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿ’ಯನ್ನು ರಚಿಸಲಾಗುತ್ತದೆ.
ನಾಲ್ಕುವಿಭಾಗಗಳಲ್ಲಿಕೆಲಸ
ಉದ್ಯೋಗ ಖಾತರಿ ಮೂಲಕ ಯಾವೆಲ್ಲ ಕೆಲಸಗಳನ್ನು ಕೈಗೊಳ್ಳಬಹುದು ಎನ್ನುವ ಬಗ್ಗೆ ಮಸೂದೆಯಲ್ಲಿ ಹೇಳಲಾಗಿದೆ. ಇದನ್ನು ಒಟ್ಟು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.
1. ಜಲ ಸಂಬಂಧಿತ ಕಾರ್ಯಗಳು
2. ಗ್ರಾಮೀಣ ಭಾಗದ ಮೂಲಸೌಕರ್ಯ ನಿರ್ಮಾಣ
3. ಜೀವನೋಪಾಯಕ್ಕೆ ಸಂಬಂಧಿತ ಮೂಲಸೌಕರ್ಯ ನಿರ್ಮಾಣ (ತರಬೇತಿ ಕೇಂದ್ರಗಳು, ಸಂತೆ ಮಾರುಕಟ್ಟೆ ನಿರ್ಮಾಣ, ಆಹಾರ ಸಂಗ್ರಹಿಸಲು ಸಲುವಾಗಿ ಕಟ್ಟಡ ನಿರ್ಮಾಣ, ಹೈನುಕಾರಿಕೆಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣ)
4. ವಿಪತ್ತು ತಡೆ ಸಂಬಂಧಿತ ನಿರ್ಮಾಣ ಕಾರ್ಯಗಳು (ನಿರಾಶ್ರಿತ ಶಿಬಿರಗಳ ನಿರ್ಮಾಣ, ಕೆರೆ–ಕಟ್ಟೆಗಳು ಉಕ್ಕಿ ಹರಿಯದಂಥ ನಿರ್ಮಾಣ ಕಾರ್ಯ, ನೈಸರ್ಗಿಕ ವಿಪತ್ತಿನಿಂದ ಹಾಳಾದ ರಸ್ತೆಗಳ ದುರಸ್ತಿ, ಬಿರುಗಾಳಿಯಿಂದ ನಾಶವಾದ ತೋಟ ಮತ್ತು ಮನೆ ಮರು ನಿರ್ಮಾಣ, ಕಾಳ್ಗಿಚ್ಚು ನಿಯಂತ್ರಣ ಕಾರ್ಯಗಳು)
125 ಕೆಲಸದ ದಿನಗಳು ಎನ್ನುವುದು ತಲೆಬರಹ ಮಾತ್ರ. 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಲಾಗುತ್ತದೆ ಎನ್ನುವುದನ್ನು ಸಣ್ಣದಾಗಿ ಒಳಗೆ ಸೇರಿಸಲಾಗಿದೆ: ನರೇಗಾಕ್ಕೆ ಕೇಂದ್ರ ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಅನುದಾನ ನೀಡುತ್ತದೆ. ಆದರೆ, ಹೊಸ ಮಸೂದೆಯ ಪ್ರಕಾರ, ರಾಜ್ಯ ಸರ್ಕಾರವು ಶೇ 40ರಷ್ಟು ಅನುದಾನ ನೀಡಬೇಕು. ಅಂದರೆ, ರಾಜ್ಯ ಸರ್ಕಾರಗಳು ₹50 ಸಾವಿರ ಕೋಟಿಯನ್ನು ಹೆಚ್ಚುವರಿಯಾಗಿ ಖರ್ಚು ಮಾಡಬೇಕಾಗುತ್ತದೆ. ಅನುದಾನ ನೀಡುವ ಜವಾಬ್ದಾರಿಯನ್ನು ರಹಸ್ಯ ವಿಧಾನದಲ್ಲಿ ರಾಜ್ಯ ಸರ್ಕಾರಗಳ ತಲೆಮೇಲೆ ಹಾಕುವುದನ್ನು ಸುಧಾರಣೆ ಎನ್ನುವುದಿಲ್ಲ
ನರೇಗಾವು ಬೇಡಿಕೆ ಕೇಂದ್ರಿತವಾಗಿತ್ತು: ಒಂದು ವೇಳೆ ಕಾರ್ಮಿಕನು ಕೆಲಸ ಬೇಕು ಎಂದು ಕೇಳಿದರೆ, ಕೇಂದ್ರ ಸರ್ಕಾರವು ಅದಕ್ಕೆ ಹಣ ನೀಡಬೇಕಿತ್ತು. ಆದರೆ, ಹೊಸ ಮಸೂದೆಯಲ್ಲಿ ಈ ಅವಕಾಶವನ್ನು ಕಿತ್ತುಕೊಂಡು, ಪೂರ್ವ ನಿಗದಿತ ನಿಯಮಾನುಸಾರ ಹಂಚಿಕೆ ಮತ್ತು ಗರಿಷ್ಠ ಮಿತಿಯನ್ನು ಹೇರಲಾಗಿದೆ. ಒಮ್ಮೆ ಕೇಂದ್ರ ಸರ್ಕಾರ ನೀಡಿದ ಅನುದಾನ ಮುಗಿದರೆ, ಜನರ ಹಕ್ಕು ಮೊಟಕುಗೊಳ್ಳುತ್ತದೆ
ಪಂಚಾಯಿತಿಗಳನ್ನು ಬದಿಗೊತ್ತಿ, ಡ್ಯಾಶ್‌ಬೋರ್ಡ್‌ಗಳಿಗೆ ಅಧಿಕಾರ ನೀಡಿಕೆ: ಸ್ಥಳೀಯವಾದ ಅಗತ್ಯಕ್ಕೆ ತಕ್ಕಂತೆ ಗ್ರಾಮ ಸಭೆ ಮತ್ತು ಪಂಚಾಯಿತಿಗಳು ಕೆಲಸದ ಯೋಜನೆ ರೂಪಿಸುತ್ತಿದ್ದವು. ಆದರೆ, ಈಗ ಜಿಐಎಸ್ ತಂತ್ರಾಂಶ, ಪಿಎಂ ಗತಿ ಶಕ್ತಿ ದತ್ತಾಂಶಗಳ ಮೇಲೆ ಯೋಜನೆಗಳು ರೂಪುಗೊಳ್ಳುತ್ತವೆ. ಬಯೊಮೆಟ್ರಿಕ್, ಜಿಯೊ ಟ್ಯಾಗಿಂಗ್, ಡ್ಯಾಶ್‌ಬೋರ್ಡ್, ಕೃತಕ ಬುದ್ಧಿಮತ್ತೆ ಸಹಾಯದಿಂದ ಮಾಡುವ ಲೆಕ್ಕಪರಿಶೋಧನೆಯನ್ನು ಕಡ್ಡಾಯ ಮಾಡಲಾಗಿದೆ. ತಂತ್ರಜ್ಞಾನ ಕೈಕೊಟ್ಟರೆ ಗ್ರಾಮೀಣ ಭಾಗದ ಕೋಟಿಗಟ್ಟಲೆ ಜನರು ಕೆಲಸದಿಂದ ವಂಚಿತರಾಗುತ್ತಾರೆ
ಇನ್ನೂ ಕೆಟ್ಟ ಅಂಶವೇನೆಂದರೆ, ನೆಟ್ಟಿ–ಕಟಾವು ಎಂಬ ಕೃಷಿ ಋತುವಿನ ಹೆಸರಿನಲ್ಲಿ 60 ಕೆಲಸ ದಿನಗಳನ್ನು ಕಡಿತ ಮಾಡಲಾಗಿದೆ. ಇದು ಕಾರ್ಮಿಕ ಗ್ಯಾರಂಟಿಯೊ ಕಾರ್ಮಿಕ ನಿಯಂತ್ರಣವೊ? ನೀವು ಕೆಲಸ ಮಾಡಬೇಡಿ, ಹಣ ಗಳಿಸಬೇಡಿ ಎಂದು ಕಾನೂನುಬದ್ಧವಾಗಿ ಕೇಂದ್ರ ಸರ್ಕಾರ ಹೇಳಿದಂತಾಗಿದೆ
ಕೇಂದ್ರಹೇಳುವುದೇನು?
ಕೌಶಲರಹಿತ ಕೂಲಿ ಕೆಲಸ ಮಾಡಲು ಸ್ವಯಂಪ್ರೇರಿತರಾಗಿ ಬರುವ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ಪ್ರತಿ ವಯಸ್ಕ ವ್ಯಕ್ತಿಗೆ ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೆಲಸಕ್ಕೆ ಶಾಸನಬದ್ಧ ಖಾತರಿ ನೀಡುವುದು ಈ ಕಾಯ್ದೆಯ ಉದ್ದೇಶ.
2047ರ ಹೊತ್ತಿಗೆ ವಿಕಸಿತ ಭಾರತದ ಮುನ್ನೋಟಕ್ಕೆ ಅನುಗುಣವಾಗಿ ಗ್ರಾಮೀಣ ಚೌಕಟ್ಟನ್ನು ರೂಪಿಸಲು ಈ ಕಾಯ್ದೆ ಸಿದ್ಧಪಡಿಸಲಾಗಿದೆ. ಸಮೃದ್ಧ ಮತ್ತು ಚೈತನ್ಯಯುತ ಗ್ರಾಮೀಣ ಭಾರತಕ್ಕಾಗಿ ಸಶಕ್ತೀಕರಣ, ಪ್ರಗತಿ, ಸಮನ್ವಯ ಮತ್ತು ಪರಿಪೂರ್ಣತೆಯನ್ನು ಸಾಧಿಸುವ ಉದ್ದೇಶವನ್ನೂ ಇದು ಹೊಂದಿದೆ.
ಅಪಘಾತತಡೆಗೆಮಾರ್ಗಸೂಚಿರೂಪಿಸಲು ‘ಸುಪ್ರೀಂ’ ಚಿಂತನೆ
ಸಂದರ್ಭ: ಎಕ್ಸ್‌ಪ್ರೆಸ್ ವೇಗಳುಮತ್ತುರಾಷ್ಟ್ರೀಯಹೆದ್ದಾರಿಗಳಲ್ಲಿಅಪಘಾತಗಳನ್ನುತಡೆಗಟ್ಟಲಿಕ್ಕಾಗಿದೇಶದಾದ್ಯಂತಅನ್ವಯವಾಗುವಮಾರ್ಗಸೂಚಿಗಳನ್ನುರೂಪಿಸುವಬಗ್ಗೆಸುಪ್ರೀಂಕೋರ್ಟ್ಚಿಂತನೆನಡೆಸಿದೆ.
ರಾಜಸ್ಥಾನದ ಫಲೋದಿಯಲ್ಲಿ ನ. 2ರಂದು ನಡೆದಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕೊಂಡು ವಿಚಾರಣೆ ನಡೆಸುತ್ತಿದೆ.
ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಮತ್ತು ವಿಜಯ್ ಬಿಷ್ಣೋಯಿ ಅವರ ಪೀಠವು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್ ವೇಗಳ ಎರಡೂ ಬದಿಗಳಲ್ಲಿ ಅಕ್ರಮವಾಗಿ ತಲೆಎತ್ತಿರುವ ಢಾಬಾಗಳು ಅಪಘಾತಗಳಿಗೆ ಕಾರಣ ಆಗಿರಲೂಬಹುದು ಎಂದು ಸೋಮವಾರ ಹೇಳಿತು.
ಇಂತಹ ಢಾಬಾಗಳ ವಿರುದ್ಧ ಕ್ರಮಕೈಗೊಳ್ಳಲು ಲಭ್ಯವಿರುವ ನಿಯಮಗಳ ವಿವರ ಸಲ್ಲಿಸುವಂತೆ ಪೀಠವು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.
ಅಕ್ರಮ ಢಾಬಾಗಳ ವಿರುದ್ಧ ಇಲ್ಲಿಯ ವರೆಗೆ ತೆಗೆದುಕೊಂಡಿರುವ ಕ್ರಮ ಗಳು, ಇಂತಹ ಕ್ರಮ ತೆಗೆದುಕೊಳ್ಳುವ ಅಧಿಕಾರವು ಯಾವ ಪ್ರಾಧಿಕಾರದ್ದು ಮತ್ತು ಯಾವೆಲ್ಲಾ ಸಂಸ್ಥೆಗಳು ನಿಬಂಧನೆ ಗಳನ್ನು ಪಾಲಿಸುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆಯೂ ತಿಳಿಸಿದೆ.
‘ಹೆದ್ದಾರಿ ಬದಿಗಳಲ್ಲಿರುವ ಅನಧಿಕೃತ ಢಾಬಾಗಳು ಮತ್ತು ಸಣ್ಣ ಹೋಟೆಲ್‌ಗಳನ್ನು ತೆರವುಗೊಳಿಸುವ ಅಧಿಕಾರ ನಮಗೆ ಇದೆ. ಆದರೆ ಜಿಲ್ಲಾಡಳಿತದ ಕೈಕೆಳಗಿರುವ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸರಿಗೆ ಆ ವಿಷಯದಲ್ಲಿ ನಮಗಿಂತಲೂ ಹೆಚ್ಚಿನ ಅಧಿಕಾರ ಇದೆ. ಆದ್ದರಿಂದ, ಈ ವಿಚಾರದಲ್ಲಿ ನಾವು ಪರಿಹಾರವೊಂದನ್ನು ಕಂಡುಕೊಳ್ಳಬೇಕಿದೆ’ ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು.
ಭಾರತ್‌ಮಾಲಾ ಹೆದ್ದಾರಿಯಲ್ಲಿ ರಾಜಸ್ಥಾನದ ಫಲೋದಿ ಎಂಬಲ್ಲಿ ನಿಂತಿದ್ದ ಟ್ರಕ್‌ವೊಂದಕ್ಕೆ ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದು 10 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 15 ಮಂದಿ ಮೃತಪಟ್ಟಿದ್ದರು.
ಈ ಅಪಘಾತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ.10ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿ ಸಿತ್ತು. ಫಲೋದಿ ಮೂಲಕ ಹಾದು ಹೋಗುವ ಹೆದ್ದಾರಿ ಬದಿಯಲ್ಲಿರುವ ಢಾಬಾಗಳ ಸಂಖ್ಯೆಯ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸಚಿವಾಲಯವನ್ನು ಕೇಳಿತ್ತು.
‘ಒಂದುರಾಜ್ಯಕ್ಕೆಸೀಮಿತವಾಗಿಲ್ಲ’
‘ಈ ವಿಷಯವು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಇಡೀ ದೇಶಕ್ಕೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಇಡೀ ದೇಶಕ್ಕೆ ಅನ್ವಯವಾಗುವ ಮಾರ್ಗಸೂಚಿಗಳನ್ನು ರೂಪಿಸಲು ನ್ಯಾಯಾಲಯ ಚಿಂತಿಸುತ್ತಿದೆ’ ಎಂದು ನ್ಯಾಯಮೂರ್ತಿ ಜೆ.ಕೆ.ಮಾಹೇಶ್ವರಿ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್ ಕ್ಯೂರಿ ಆಗಿ ನೇಮಕಗೊಂಡಿರುವ ಹಿರಿಯ ವಕೀಲ ಎ.ಎನ್.ಎಸ್.ನಾಡಕರ್ಣಿ, ‘ಹೆದ್ದಾರಿಗಳ ಬದಿಗಳಲ್ಲಿ ವ್ಯಾಪಕವಾಗಿ ಒತ್ತುವರಿ ನಡೆದಿರುವುದನ್ನು ತೋರಿಸಲು ಗೂಗಲ್ ಚಿತ್ರಗಳನ್ನು ಸಲ್ಲಿಸಿದ್ದೇನೆ’ ಎಂದು ಹೇಳಿದರು.
ಚಿನ್ನದ ಪದಕ ಪುರಸ್ಕೃತರಿಗೆ ನೀಡುತ್ತಿದ್ದ ₹5,000 ನಗದನ್ನು ₹10 ಸಾವಿರಕ್ಕೆ ಏರಿಸಲಾಗಿದೆ. ತಿಂಗಳ ಭತ್ಯೆ ₹ 500 ಅನ್ನು ₹1000ಕ್ಕೆ ಏರಿಸ ಲಾಗಿದೆ. ಬೆಳ್ಳಿ ಪದಕ ಪುರಸ್ಕೃತರಿಗೆ ನಗದು ಬಹುಮಾನವನ್ನು ₹ 2,500ರಿಂದ ₹ 5,000ಕ್ಕೆ, ತಿಂಗಳ ಭತ್ಯೆ ₹250 ಅನ್ನು ₹ 500ಕ್ಕೆ ಏರಿಸಲಾಗಿದೆ.
ಪರಿಷ್ಕೃತ ನಗದು ಪುರಸ್ಕಾರವು 2026ರ ಜನವರಿ 1ರಿಂದ ಜಾರಿಗೆ ಬರಲಿದೆ. ಈ ಹಿಂದೆ ಪುರಸ್ಕಾರ ಪಡೆದವರಿಗೂ 2026ರಿಂದ ಪರಿಷ್ಕೃತ ಭತ್ಯೆ ಸಿಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದ್ದಾರೆ.
ಸಂದರ್ಭ: ಭಾರತದಮೂವರುಶಿಕ್ಷಣತಜ್ಞರುಒಂದುಮಿಲಿಯನ್ ಡಾಲರ್ (ಸುಮಾರು ₹9.07 ಕೋಟಿ) ಮೊತ್ತದ ‘ಗ್ಲೋಬಲ್ ಟೀಚರ್ ಪ್ರಶಸ್ತಿ– 2026’ರಟಾಪ್ 50ರಶಾರ್ಟ್ಲಿಸ್ಟ್ನಲ್ಲಿಸ್ಥಾನಪಡೆದಿದ್ದಾರೆ.
ಮೀರಠ್‌ನ ಶಾಲಾ ಶಿಕ್ಷಕ ಸುಧಾಂಶು ಶೇಖರ್ ಪಾಂಡಾ, ಜಮ್ಮು ಮತ್ತು ಕಾಶ್ಮೀರದ ಶಿಕ್ಷಕ ಮೆಹ್ರಾಜ್ ಖುರ್ಷಿದ್ ಮಲಿಕ್ ಮತ್ತು ಗ್ರಾಮೀಣ ಜನರಿಗೆ ಶಿಕ್ಷಣ ದೊರೆಯಲು ಶ್ರಮಿಸುತ್ತಿರುವ ರೂಬಲ್ ನಾಗಿ ಸ್ಪರ್ಧೆಯಲ್ಲಿದ್ದಾರೆ.
ವಿಧಾನಸಭೆಯಲ್ಲಿ ಜೆಡಿಎಸ್‌ನ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಈ ಮಾಹಿತಿ ನೀಡಿದ್ದಾರೆ.
ಈಗಾಗಲೇ ಮೀಸಲಿರಿಸಿರುವ ಅನುದಾನದಲ್ಲಿ ಯೋಜನೆ ಪೂರ್ಣಗೊ ಳಿಸಲು ತೀರ್ಮಾನಿಸಲಾಗಿದೆ. ಬಯಲು ಸೀಮೆ ಪ್ರದೇಶಗಳಾದ ಕೋಲಾರ,ಚಿಕ್ಕ ಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲಾಗುವುದು. ಈ ಯೋಜನೆ ಯಡಿ ಕೋಲಾರ ಗುರುತ್ವ ಪೈಪ್‌ಲೈನ್ ಪ್ಯಾಕೇಜ್ 3 ಮತ್ತು 4, ಕೋಲಾರ ಫೀಡರ್ ಪೈಪ್‌ಲೈನ್ ಪ್ಯಾಕೇಜ್ 5 ಮತ್ತು 6 ಹಾಗೂ ಶ್ರೀನಿವಾಸಪುರ ಫೀಡರ್ ಪೈಪ್‌ಲೈನ್ ಪ್ಯಾಕೇಜ್ 1 ರಿಂದ 3ರ ಕಾಮ ಗಾರಿಗಳನ್ನು ಆರಂಭಿಸಲು ಕಳೆದ ಮೇ 16ರಂದೇ ಅನುಮೋದನೆ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಪ್ರಸ್ತುತ ಕಾಮಗಾರಿಗಳ ಪೈಪ್‌ಲೈನ್ ಅಲೈನ್‌ಮೆಂಟ್, ವಿನ್ಯಾಸ, ನಕ್ಷೆಗಳ ತಯಾರಿಕೆ ಕಾರ್ಯ ಪೂರ್ಣಗೊಂಡಿದೆ. ಗುಣಮಟ್ಟ ಖಾತರಿ ಯೋಜನೆ ಕೂಡ ಅನುಮೋದನೆ ಹಂತದಲ್ಲಿದೆ. ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಗುತ್ತಿಗೆ ಕರಾರಿನ ಅನ್ವಯ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
ರೈತರೊಂದಿಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದು, ಈ ಎಲ್ಲ ಪ್ರಕ್ರಿಯೆ ಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗು ವುದು ಎಂದು ಭರವಸೆ ನೀಡಿದ್ದಾರೆ.
‘ಬಾಂಗ್ಲಾದೊಂದಿಗಿನಸಂಬಂಧಶಾಶ್ವತ’
ಸಂದರ್ಭ: ಪ್ರಸ್ತುತಭಾರತದಲ್ಲಿರುವಪದಚ್ಯುತಪ್ರಧಾನಿಶೇಖ್ಹಸೀನಾಅವರುನೀಡಿದ ‘ಪ್ರಚೋದನಕಾರಿಹೇಳಿಕೆ’ಗಳಬಗ್ಗೆಬಾಂಗ್ಲಾದೇಶದವಿದೇಶಾಂಗಕಚೇರಿಯುಗಂಭೀರಕಳವಳವ್ಯಕ್ತಪಡಿಸಿ, ಭಾರತೀಯಹೈಕಮಿಷನರ್ ಪ್ರಣಯ್ವರ್ಮಾಅವರಿಗೆಸಮನ್ಸ್ ನೀಡಿದೆ.
ಇದಾಗಿ ಗಂಟೆಗಳ ನಂತರ ಹೇಳಿಕೆ ನೀಡಿರುವ ಪ್ರಣಯ್ ಅವರು, ‘ಬಾಂಗ್ಲಾದೊಂದಿಗಿನ ಭಾರತದ ಸಂಬಂಧಗಳು ಅಲ್ಪಕಾಲಿಕವಲ್ಲ, ಬದಲಾಗಿ ಶಾಶ್ವತ’ ಎಂದು ಭಾನುವಾರ ಹೇಳಿದ್ದಾರೆ.
ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾದ ‘ಇತಿಹಾಸ್ ಒ ಒಯಿಟ್ಟಿಜ್ಜೋ ಪರಿಷತ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದ ಪ್ರಣಯ್ ಅವರು, ‘ಭಾರತ–ಬಾಂಗ್ಲಾ ಸಂಬಂಧ ಶಾಶ್ವತವಾಗಿದ್ದು, ಅದು ರಕ್ತ ಮತ್ತು ತ್ಯಾಗದಲ್ಲಿ ಬೆಸೆದು ಕೊಂಡಿದೆ. ಅದನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅತಿಹೆಚ್ಚು ಪ್ರಮಾಣದಲ್ಲಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವಿಧಿಸುತ್ತದೆ. ಇದು ಅಲ್ಲಿನ ದುಬಾರಿ ಬೆಲೆಗೆ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.
ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹109.74, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಅದು ₹82.46 ಎಂದು ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್‌ನ ಅಂತಿಮ ಮಾರಾಟ ಬೆಲೆಯು ಕೇಂದ್ರ ಸರ್ಕಾರ ನಿಗದಿಪಡಿಸಿದ ಎಕ್ಸೈಸ್ ಸುಂಕ ಹಾಗೂ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಸರ್ಕಾರ ನಿಗದಿಮಾಡಿದ ವ್ಯಾಟ್ ಪ್ರಮಾಣವನ್ನು ಒಳಗೊಂಡಿ ರುತ್ತದೆ. ಹೀಗಾಗಿ, ಸರಕು ಸಾಗಣೆ ಮತ್ತು ಸ್ಥಳೀಯ ತೆರಿಗೆಯಿಂದಾಗಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ವ್ಯತ್ಯಾಸವಿರುತ್ತದೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ₹29.06 ವ್ಯಾಟ್ ವಿಧಿಸಲಾಗುತ್ತದೆ. ಇದು ದೇಶದಲ್ಲಿ ಅತ್ಯಧಿಕ. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಕೇವಲ ₹0.82 ಮಾತ್ರ ಇದೆ. ಪ್ರತಿ ಲೀಟರ್ ಡೀಸೆಲ್ ಬೆಲೆಯು ಆಂಧ್ರಪ್ರದೇಶದಲ್ಲಿ ₹97.57, ವ್ಯಾಟ್ ₹21.56 ಇದೆ. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಡೀಸೆಲ್ ಬೆಲೆ ₹78.05, ವ್ಯಾಟ್ ₹0.77ರಷ್ಟು ಇದೆ.
ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಕೆ.ಜಿ.ಗೆ ₹41ಕ್ಕೆ ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಬೇಕು. ಹೆಚ್ಚುವರಿಯಾಗಿ 5 ಲಕ್ಷ ಟನ್‌ಗಳಷ್ಟು ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲು ಅವಕಾಶ ನೀಡಬೇಕು ಎಂದು ಅವು ಕೋರಿವೆ.
ಮಾರುಕಟ್ಟೆಯಲ್ಲಿ ಸಕ್ಕರೆ ದರ ಇಳಿಕೆ ಹಾಗೂ ವೆಚ್ಚಗಳ ಹೆಚ್ಚಳವು ರೈತರಿಗೆ ನೀಡಬೇಕಿರುವ ಮೊತ್ತದ ಮೇಲೆ ಪರಿಣಾಮ ಉಂಟುಮಾಡುತ್ತಿವೆ ಎಂದು ಅವು ಎಚ್ಚರಿಸಿವೆ.
ಪ್ರಸಕ್ತ ಹಂಗಾಮು ಆರಂಭವಾದ ನಂತರದಲ್ಲಿ ಸಕ್ಕರೆ ಕಾರ್ಖಾನೆಗಳು ಸಗಟು ವಹಿವಾಟುದಾರರಿಗೆ ಮಾರಾಟ ಮಾಡುವ ಸಕ್ಕರೆಯ ಬೆಲೆಯು ಪ್ರತಿ ಟನ್‌ಗೆ ₹2,300ರಷ್ಟು ಕುಸಿದಿದೆ. ಈಗ ಅದು ಟನ್‌ಗೆ ₹37,700ರಷ್ಟು ಇದೆ ಎಂದು ಸಹಕಾರಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟವು (ಎನ್‌ಎಫ್‌ಸಿಎಸ್‌ಎಫ್) ಹೇಳಿದೆ.
ಡಿಸೆಂಬರ್ 15ರವರೆಗಿನ ದತ್ತಾಂಶದ ಪ್ರಕಾರ ದೇಶದ ಒಟ್ಟು 479 ಸಕ್ಕರೆ ಕಾರ್ಖಾನೆಗಳು ಒಟ್ಟು 77.90 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆಗಿದ್ದ 60.70 ಲಕ್ಷ ಟನ್ ಸಕ್ಕರೆ ಉತ್ಪಾದನೆಗಿಂತ ಹೆಚ್ಚು ಎಂದು ಎನ್‌ಎಫ್‌ಸಿಎಸ್‌ಎಫ್ ನೀಡಿರುವ ದತ್ತಾಂಶಗಳು ಹೇಳುತ್ತಿವೆ.
ಕಬ್ಬು ಅರೆಯುವಿಕೆಯು ಈ ಹಂಗಾಮಿನಲ್ಲಿ ಶೇ 25.6ರಷ್ಟು ಹೆಚ್ಚಾಗಿ 900.75 ಲಕ್ಷ ಟನ್‌ಗೆ ಹೆಚ್ಚಾಗಿದೆ ಎಂದು ಒಕ್ಕೂಟವು ಹೇಳಿಕೆಯಲ್ಲಿ ತಿಳಿಸಿದೆ.
ದೇಶದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯವಾದ ಮಹಾರಾಷ್ಟ್ರ ದಲ್ಲಿ ಉತ್ಪಾದನೆಯು ದುಪ್ಪಟ್ಟಾಗಿದೆ. ಕರ್ನಾಟಕದಲ್ಲಿ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಉತ್ಪಾದನೆಯು 13.50 ಲಕ್ಷ ಟನ್ ಇದ್ದಿದ್ದು ಈ ಬಾರಿ 15.50 ಲಕ್ಷ ಟನ್ ಆಗಿದೆ.
ಪ್ರಸಕ್ತ ಹಂಗಾಮಿನಲ್ಲಿ ಒಟ್ಟು 15 ಲಕ್ಷ ಟನ್ ಸಕ್ಕರೆ ರಫ್ತಿಗೆ ಕೇಂದ್ರವು ಅನುಮತಿ ನೀಡಿದೆ. ಆದರೆ ಈ ಕ್ರಮವೊಂದೇ ಸಕ್ಕರೆ ಕಾರ್ಖಾನೆಗಳ ನಗದು ಬಿಕ್ಕಟ್ಟನ್ನು ಪರಿಹರಿಸುವುದಿಲ್ಲ ಎಂದು ಹೇಳಿದೆ.
ಪುಟಿದೆದ್ದರಫ್ತುವಹಿವಾಟು
ಸಂದರ್ಭ: ನವೆಂಬರ್ನಲ್ಲಿದೇಶದರಫ್ತುಪ್ರಮಾಣವುಪುಟಿದೆದ್ದಿದ್ದು, ಶೇಕಡ 19.37ರಷ್ಟುಏರಿಕೆಕಂಡಿದೆ. ಇದುಆರುತಿಂಗಳಗರಿಷ್ಠಮಟ್ಟ. ನವೆಂಬರ್ನಲ್ಲಿಒಟ್ಟು ₹3.45 ಲಕ್ಷಕೋಟಿಯಷ್ಟುಮೌಲ್ಯದಸರಕುಗಳನ್ನುರಫ್ತುಮಾಡಲಾಗಿದೆ.
ನವೆಂಬರ್ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗಿವೆ.
ನವೆಂಬರ್‌ನಲ್ಲಿ ಆಮದು ಪ್ರಮಾಣವು ಶೇ 1.88ರಷ್ಟು ಕಡಿಮೆ ಆಗಿದ್ದು ₹5.68 ಲಕ್ಷ ಕೋಟಿಗೆ ತಲುಪಿದೆ. ಚಿನ್ನ, ಕಚ್ಚಾ ತೈಲ, ಕಲ್ಲಿದ್ದಲು ಮತ್ತು ಕಲ್ಲಿದ್ದಲ ಕಿಟ್ಟದ ಆಮದು ಕಡಿಮೆ ಆಗಿದ್ದುದು ಇದಕ್ಕೆ ಕಾರಣ.
ನವೆಂಬರ್‌ನಲ್ಲಿ ರಫ್ತು ಮಾಡಲಾಗಿರುವ ಸರಕುಗಳ ಒಟ್ಟು ಮೌಲ್ಯವು ಮೇ ತಿಂಗಳ ನಂತರದ ಗರಿಷ್ಠವಾಗಿದೆ. ಚಿನ್ನದ ಆಮದು ನವೆಂಬರ್‌ನಲ್ಲಿ ಶೇ 59.15ರಷ್ಟು ಕಡಿಮೆ ಆಗಿದೆ. ಕಚ್ಚಾ ತೈಲದ ಆಮದು ಶೇ 11.27ರಷ್ಟು ತಗ್ಗಿದೆ.
ಆಮದು ಕಡಿಮೆ ಆಗಿರುವ ಕಾರಣದಿಂದಾಗಿ ದೇಶದ ವ್ಯಾಪಾರ ಕೊರತೆ ಅಂತರವು ಕೂಡ ನವೆಂಬರ್‌ನಲ್ಲಿ ಕಡಿಮೆ ಆಗಿದೆ.
ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿದ್ದರೂ ರಫ್ತು ಪ್ರಮಾಣ ಹೆಚ್ಚಾಗಿದೆ. ‘ಎಲೆಕ್ಟ್ರಾನಿಕ್ಸ್, ಎಂಜಿನಿಯರಿಂಗ್, ರಾಸಾಯನಿಕಗಳು, ಮುತ್ತು ಮತ್ತು ಆಭರಣಗಳ ರಫ್ತು ಹೆಚ್ಚಾಗಿದ್ದುದು ಒಟ್ಟು ರಫ್ತಿನ ಪ್ರಮಾಣ ಏರಿಕೆ ಕಾಣಲು ನೆರವಾಗಿದೆ’ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಹೇಳಿದ್ದಾರೆ.
ಏಪ್ರಿಲ್‌ನಿಂದ ನವೆಂಬರ್‌ವರೆಗಿನ ಅವಧಿಯಲ್ಲಿ ಭಾರತದ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗಿರುವ ದೇಶಗಳ ಸಾಲಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಇದೆ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಎಸ್.ಸಿ. ರಲ್ಹಾನ್ ಹೇಳಿದ್ದಾರೆ.
ಸಗಟುಹಣದುಬ್ಬರಏರಿಕೆ
ಸಂದರ್ಭ: ದೇಶದಲ್ಲಿಸಗಟುಹಣದುಬ್ಬರದರವು (ಡಬ್ಲ್ಯುಪಿಐ) ನವೆಂಬರ್ ತಿಂಗಳಿನಲ್ಲಿಶೇ (–)0.32ರಷ್ಟಕ್ಕೆಏರಿಕೆಕಂಡಿದೆಎಂದುಕೇಂದ್ರಕೈಗಾರಿಕಾಸಚಿವಾಲಯತಿಳಿಸಿದೆ.
ದ್ವಿದಳ ಧಾನ್ಯಗಳು ಮತ್ತು ತರಕಾರಿಗಳ ಬೆಲೆಯಲ್ಲಿನ ಏರಿಕೆಯು ಸಗಟು ಹಣದುಬ್ಬರ ಹೆಚ್ಚಳಕ್ಕೆ ಕಾರಣ ಎಂದು ಅದು ತಿಳಿಸಿದೆ. ಅಕ್ಟೋಬರ್‌ನಲ್ಲಿ ಸಗಟು ಹಣದುಬ್ಬರ ಶೇ (–)1.21ರಷ್ಟಿತ್ತು, ಕಳೆದ ವರ್ಷದ ನವೆಂಬರ್‌ನಲ್ಲಿ ಇದು ಶೇ 2.16ರಷ್ಟಿತ್ತು.
‘ಆಹಾರ ಪದಾರ್ಥಗಳು, ಖನಿಜ ತೈಲಗಳು, ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ವಿದ್ಯುತ್, ಮೂಲ ಲೋಹಗಳ ಉತ್ಪಾದನಾ ವೆಚ್ಚದಲ್ಲಿನ ಇಳಿಕೆಯಿಂದ ಸಗಟು ಹಣದುಬ್ಬರವು ನವೆಂಬರ್‌ನಲ್ಲಿ ಋಣಾತ್ಮಕ ದರದಲ್ಲಿದೆ’ ಎಂದು ತಿಳಿಸಿದೆ.
ಅಕ್ಟೋಬರ್‌ನಲ್ಲಿ ಆಹಾರ ಪದಾರ್ಥಗಳ ಬೆಲೆ ಇಳಿಕೆಯು ಶೇ 8.31ರಷ್ಟಿತ್ತು. ನವೆಂಬರ್‌ನಲ್ಲಿ ಶೇ 4.16ರಷ್ಟಿದೆ. ತರಕಾರಿಗಳ ಸಗಟು ಬೆಲೆ ಇಳಿಕೆಯು ಶೇ 20.23ರಷ್ಟಾಗಿದೆ. ಇದು ಅಕ್ಟೋಬರ್‌ನಲ್ಲಿ ಶೇ 34.97ರಷ್ಟಿತ್ತು.
ದ್ವಿದಳ ಧಾನ್ಯಗಳ ಬೆಲೆ ಇಳಿಕೆಯು ಶೇ 15.21ರಷ್ಟು, ಆಲೂಗೆಡ್ಡೆ ಮತ್ತು ಈರುಳ್ಳಿ ಸಗಟು ದರ ಇಳಿಕೆವು ಕ್ರಮವಾಗಿ ಶೇ 36.14ರಷ್ಟು ಮತ್ತು ಶೇ 64.70ರಷ್ಟು ಆಗಿದೆ.
ತಯಾರಿಸಿದ ಸರಕುಗಳ ಹಣದುಬ್ಬರ ಶೇ 1.54ರಿಂದ ಶೇ 1.33ಕ್ಕೆ ಇಳಿದಿದೆ. ಇಂಧನ ಮತ್ತು ವಿದ್ಯುತ್ ಸಗಟು ದರ ಇಳಿಕೆಯು ಶೇ 2.55ರಿಂದ ಶೇ 2.27ಕ್ಕೆ ಬಂದಿದೆ ಎಂದು ತಿಳಿಸಿದೆ.
ನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 0.71ರಷ್ಟು ಆಗಿದೆ.
ಅಮೆರಿಕದ ಉಪ ವ್ಯಾಪಾರ ಪ್ರತಿನಿಧಿ ರಿಕ್ ಸ್ವಿಟ್ಜರ್ ಅವರು ವ್ಯಾಪಾರ ಮಾತುಕತೆಗಾಗಿ ಕಳೆದ ವಾರ ಭಾರತಕ್ಕೆ ಬಂದಿದ್ದರು. ‘ವ್ಯಾಪಾರ ಒಪ್ಪಂದದ ಚೌಕಟ್ಟಿನ ವಿಚಾರವಾಗಿ ನಾವು ಬಹಳ ಮುಂದೆ ಬಂದಿದ್ದೇವೆ. ಅದು ಅಲ್ಪಾವಧಿಯಲ್ಲೇ ಸಾಧ್ಯವಾಗಬಹುದು. ಆದರೆ ಅದಕ್ಕೆ ಸಮಯಮಿತಿ ವಿಧಿಸಲು ನಾನು ಬಯಸುವುದಿಲ್ಲ’ ಎಂದು ಅಗರ್ವಾಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಾತುಕತೆ ಪೂರ್ಣಗೊಂಡು, ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದವೊಂದು ಜಾರಿಗೆ ಬರುವುದನ್ನು ಭಾರತದ ರಫ್ತುದಾರರು ಕಾತರದಿಂದ ಕಾಯುತ್ತಿದ್ದಾರೆ. ಅಮೆರಿಕವು ಭಾರತದ ಸರಕುಗಳ ಮೇಲೆ ಒಟ್ಟು ಶೇ 50ರಷ್ಟು ಸುಂಕ ವಿಧಿಸಿರುವುದರಿಂದಾಗಿ ರಫ್ತು ವಲಯಕ್ಕೆ ತೊಂದರೆ ಆಗಿದೆ.
ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಫೈನಲ್‌ನಲ್ಲಿ 36 ಅಂಕಗಳೊಂದಿಗೆ ಹರಿಯಾಣದ ಮನು ಅಗ್ರಸ್ಥಾನಿ ಯಾದರು.
ಕರ್ನಾಟಕದ ಶೂಟರ್ ದಿವ್ಯಾ ಟಿ.ಎಸ್. 32 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಹರಿಯಾಣದ ಅಂಜಲಿ ಚೌಧರಿ (28) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಅರ್ಹತಾ ಸುತ್ತಿನಲ್ಲಿ ದಿವ್ಯಾ 587 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಮನು (581) ನಾಲ್ಕನೇ ಸ್ಥಾನ ಗಳಿಸಿದರು. ಅಂಜಲಿ ಚೌಧರಿ (582) ಮತ್ತು ಅನ್ನು ರಾಜ್ ಸಿಂಗ್ (582) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.
ಕುಸ್ತಿ: ಶ್ವೇತಾಗೆಬೆಳ್ಳಿಪದಕ
ಸಂದರ್ಭ: ಕರ್ನಾಟಕದ ಶ್ವೇತಾ ಎಸ್.ಅಣ್ಣಿಕೆರೆ ಅವರು ಅಹಮದಾಬಾದಿನಲ್ಲಿ ಭಾನುವಾರ ಮುಕ್ತಾಯಗೊಂಡ ಸೀನಿ ಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಷಿಪ್‌ನ ಮಹಿಳೆಯರ 50 ಕೆ.ಜಿ. ವಿಭಾಗ ದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.
ಹಳಿಯಾಳದ ಅರ್ಲವಾಡ ಗ್ರಾಮದ ಶ್ವೇತಾ ಅವರು ಫೈನಲ್‌ನಲ್ಲಿ ರೈಲ್ವೇಸ್‌ನ ಅಂತರರಾಷ್ಟ್ರೀಯ ಕುಸ್ತಿಪಟು, ಅಗ್ರ ಶ್ರೇಯಾಂಕದ ನೀಲಂ ಅವರಿಗೆ ಮಣಿದರು.
ಕರ್ನಾಟಕದ ಆಟಗಾರ್ತಿ ಸೆಮಿ ಫೈನಲ್‌ನಲ್ಲಿ ಮಹಾರಾಷ್ಟ್ರದ ಗೌರಿ ಪಾಟೀಲ್ ಅವರನ್ನು 2 ಪಾಯಿಂಟ್ ಗಳಿಂದ, ಕ್ವಾರ್ಟರ್‌ಫೈನಲ್‌ನಲ್ಲಿ ಹರಿಯಾಣದ ಮುಸ್ಕಾನ್ ಅವರನ್ನು 10–0ಯಿಂದ ಸೋಲಿಸಿದ್ದರು.
19 ವರ್ಷ ವಯಸ್ಸಿನ ಶ್ವೇತಾ, ಉತ್ತರಾಖಂಡದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.
ಪುರುಷರ 70 ಕೆ.ಜಿ. ವಿಭಾಗದಲ್ಲಿ ರೈಲ್ವೇಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ರೋಹನ್ ಎನ್.ಘೆವಡಿ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಹಳಿಯಾಳದ ರೋಹನ್ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಸರ್ವಿಸಸ್‌ನ ನವೀನ್ ಅವರನ್ನು 8–4 ಪಾಯಿಂಟ್‌ಗಳಿಂದ ಸೋಲಿಸಿದರು. ಹರಿಯಾಣದ ಅಭಿಮನ್ಯು ಚಿನ್ನದ ಪದಕ ಗೆದ್ದರೆ, ಉತ್ತರ ಪ್ರದೇಶದ ರವಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.