sandhyasandu1611@gmail.com
KAS Mains GS-IV 2021 (2017-18)
ಪರಮಪೂಜ್ಯ 14ನೇ ದಲೈಲಾಮಾರವರು “ನನ್ನ ಧರ್ಮ ಬಹಳ ಸರಳ: ನನ್ನ ಧರ್ಮ ದಯೆ (ಕರುಣೆ)” ಎಂದು ತಿಳಿಸಿದ್ದಾರೆ. ಅವರ ಜೀವನ ಮತ್ತು ಉಪದೇಶಗಳಿಂದ ನಾವು ಯಾವ ಮೌಲ್ಯಗಳನ್ನು ಬೇರೂರಿಸಿಕೊಳ್ಳಬಹುದು ಎಂಬುದನ್ನು ವಿಸ್ತಾರವಾಗಿ ಬರೆಯಿರಿ. (300 ಪದಗಳಿಗೆ ಮೀರದಂತೆ ಉತ್ತರಿಸಿ)
“My religion is very simple. My religion is kindness” says His Holiness the 14th Dalai Lama. Elaborate the values that can be inculcated from his life and teachings. (Not more than 300 words)
ಸಾಂಸ್ಥಿಕ ಆಡಳಿತದ ತತ್ವಗಳನ್ನು ವಿವರಿಸಿ ಹಾಗೂ ಯಾವುದೇ ಮೂರು ಭಾರತೀಯ ಕಂಪೆನಿಗಳ ಅತ್ಯುತ್ತಮ ಆಚರಣೆ (corporate practices) ಗಳಿಗೆ ಸಂಬಂಧಿಸಿದಂತೆ ಚರ್ಚಿಸಿ. (300 ಪದಗಳಿಗೆ ಮೀರದಂತೆ ಉತ್ತರಿಸಿ)
Explain the principles of Corporate Governance and discuss about any three Indian Companies in relation to their best corporate practices. (Not more than 300 words)
ಒಂದು ಸಂಸ್ಥೆಯಲ್ಲಿನ ಕೆಲವು ನೌಕರರು, ತಾವು ವೈಯಕ್ತಿಕವಾಗಿ ಒಪ್ಪಿಕೊಳ್ಳದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಅವರ ಸಂಸ್ಥೆಯು ತೊಡಗಿಕೊಂಡಿರುವುದನ್ನು ಕಂಡುಕೊಂಡಿದ್ದಾರೆ. ಹಾಗಾದರೆ ಅವರು ನೌಕರರನ್ನು ಎಚ್ಚರಿಸಬೇಕೆ? ಅಥವಾ ಉನ್ನತಾಧಿಕಾರಿಗಳ ಆದೇಶಗಳನ್ನು ಪಾಲಿಸಬೇಕೆ? ಇಂಥ ನೈತಿಕ ಸಂಧಿಗ್ಧತೆಗಳನ್ನು ಪರಿಹರಿಸಲು ಸಲಹೆಗಳನ್ನು ಸೂಚಿಸಿ. (300 ಪದಗಳಿಗೆ ಮೀರದಂತೆ ಉತ್ತರಿಸಿ)
Some employees in an organisation have found that their organisation is engaged in illegal activities, which they personally disapprove. Should they blow the whistle? Or should they follow orders from the top officials? Suggest measures to resolve such Ethical Dilemmas. (Not more than 300 words)
ಮೌಲ್ಯಗಳನ್ನು ಬೆಳೆಸುವಲ್ಲಿ ಕುಟುಂಬ, ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ವಿವರಿಸಿ. (300 ಪದಗಳಿಗೆ ಮೀರದಂತೆ ಉತ್ತರಿಸಿ)
Explain the role of family, society and educational institutions in inculcating values. (Not more than 300 words)
ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ (integrity), ನಿಷ್ಪಕ್ಷಪಾತ ಮತ್ತು ಅದರ ಪ್ರಮುಖ ಪಾತ್ರಗಳನ್ನು ವಿಮರ್ಶಾತ್ಮಕವಾಗಿ ವಿವರಿಸಿ. (150 ಪದಗಳಿಗೆ ಮೀರದಂತೆ ಉತ್ತರಿಸಿ)
Critically explain integrity, impartiality and its significant role with reference to public administration. (Not more than 150 words)
ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರ ಉದ್ದಾರಕ್ಕಾಗಿ ಅರ್ಪಣಾ ಭಾವನೆಯನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿರಿ. (150 ಪದಗಳಿಗೆ ಮೀರದಂತೆ ಉತ್ತರಿಸಿ)
Critically evaluate dedication for economically weaker section in the context of Women upliftment. (Not more than 150 words)
ಸಾರ್ವಜನಿಕ ಆಡಳಿತದಲ್ಲಿ ನಿಷ್ಪಕ್ಷಪಾತ ಮತ್ತು ತಟಸ್ಥತೆಯ ಮೌಲ್ಯದ ನಡುವಣ ವ್ಯತ್ಯಾಸವನ್ನು ಬರೆಯಿರಿ. (250 ಪದಗಳಿಗೆ ಮೀರದಂತೆ ಉತ್ತರಿಸಿ)
Differentiate between the value of impartiality and non-partisanship in public administration. (Not more than 250 words)
ಸಹಿಷ್ಣುತೆ, ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠತೆಯ ಮೌಲ್ಯಗಳನ್ನು ಧಾರ್ಮಿಕ ಸಂದರ್ಭದಲ್ಲಿ ವಿವರಿಸಿ. (250 ಪದಗಳಿಗೆ ಮೀರದಂತೆ ಉತ್ತರಿಸಿ)
Explain the values of tolerance, impartiality and objectivity in religious context. (Not more than 250 words)
ಸಾರ್ವಜನಿಕ ಆಡಳಿತದಲ್ಲಿ ಅರ್ಪಣಾ ಭಾವನೆ ಮತ್ತು ವಸ್ತುನಿಷ್ಠತೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. (250 ಪದಗಳಿಗೆ ಮೀರದಂತೆ ಉತ್ತರಿಸಿ)
Critically analyse the concept of dedication and objectivity in public administration. (Not more than 250 words)
ಪ್ರಕೃತಿ ವಿಕೋಪಕ್ಕೆ ಗುರಿಯಾದ ಜನರು ತಮ್ಮ ಜೀವನ ನಿರ್ವಹಣೆಯ ಆಧಾರವನ್ನು ಕಳೆದುಕೊಂಡವರ ದಾಖಲಾತಿಗಳನ್ನು ಪರೀಕ್ಷಿಸಿ ದೃಢೀಕರಿಸುವ ಕಚೇರಿಯಲ್ಲಿ ನೀವು ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವಿರಿ, ಒಂದು ದಿನ ಅನಕ್ಷರಸ್ಥ ಹಿರಿಯ ನಾಗರಿಕರೊಬ್ಬರು ನಿಮ್ಮನ್ನು ಭೇಟಿ ಮಾಡಿ, ಸರ್ಕಾರದಿಂದ ಬರುವ ಸವಲತ್ತುಗಳನ್ನು ಪಡೆಯಲು ನಿಮ್ಮ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ. ಅವರು ತಂದಿರುವ ದಾಖಲಾತಿಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರವು ನೀಡುತ್ತಿರುವ ಸವಲತ್ತುಗಳನ್ನು ಪಡೆಯಲು ಸಾಧ್ಯವಿಲ್ಲವೆಂದು ನಿಮಗೆ ತಿಳಿದು ಬರುತ್ತದೆ. ವಾಸ್ತವದಲ್ಲಿ ಆ ಹಿರಿಯ ನಾಗರಿಕರು ಪ್ರಕೃತಿ ವಿಕೋಪದಲ್ಲಿ ತಾವು ಕಳೆದುಕೊಂಡಿರುವುದಷ್ಟೇ ಜೀವನ ನಿರ್ವಹಣೆಗೆ ಆಧಾರವಾಗಿರುತ್ತದೆ. ಆದ್ದರಿಂದ, ಆತನ ಮನವಿಯನ್ನು ತಿರಸ್ಕರಿಸಲು ನೀವು ಸಿದ್ಧರಾಗಿಲ್ಲ. ಈ ಸನ್ನಿವೇಶವು ಹಿರಿಯ ನಾಗರಿಕರಿಗೆ ಸಹಾಯ ಮಾಡಬೇಕೆ? ಅಥವಾ ಇಲ್ಲವೇ ಎಂದು ನಿಮ್ಮಲ್ಲಿ ಗೊಂದಲ ಸೃಷ್ಟಿಸಿದೆ.
ನೀವು ಈ ಸನ್ನಿವೇಶವನ್ನು ಹೇಗೆ ಬಗೆಹರಿಸುವಿರಿ?ವಿವರಿಸಿ. (300 ಪದಗಳಿಗೆ ಮೀರದಂತೆ ಉತ್ತರಿಸಿ)
You are an Officer in charge of authenticating the documents of people who lost their life support in a natural disaster. An illiterate senior citizen comes to meet you one day anticipating your support in getting the benefit proclaimed by the Government. After verifying the papers produced by him, you understand that they are not the documents as expected to be a beneficiary. You are not ready to reject his request because in reality he has no support for survival other than what he has lost in the disaster. This leads to a conflicting situation of either to support him or not.
How do you resolve this situation? Explain. (Not more than 300 words)
ಮನೋಧರ್ಮ ಮತ್ತು ಅದರ ಸ್ವರೂಪವನ್ನು ವಿವರಿಸಿ. ಮನೋಧರ್ಮದ ಮುಖ್ಯ ಘಟಕ ಮಾದರಿಗಳನ್ನು ವಿವರಿಸಿ. (150 ಪದಗಳಿಗೆ ಮೀರದಂತೆ ಉತ್ತರಿಸಿ)
Explain attitude and its structure. Describe the main component models of attitude. (Not more than 150 words)
ರಾಜಕೀಯ ಮನೋಭಾವಗಳು ಮತ್ತು ರಾಜಕೀಯ ಮನೋಭಾವಗಳ ಮೇಲೆ ಪ್ರಭಾವ ಬೀರುವ ಅಂಶಗಳನ್ನು ವಿವರಿಸಿ. (150 ಪದಗಳಿಗೆ ಮೀರದಂತೆ ಉತ್ತರಿಸಿ)
Explain political attitudes and factors influencing political attitudes. (Not more than 150 words)
ಮನವೊಲಿಸುವಿಕೆ ಎಂದರೇನು? ಸಂದೇಶಗಳನ್ನಾಧರಿಸಿ ಮನೋಭಾವಗಳನ್ನು ಪರಿವರ್ತಿಸುವ ಬಗೆ ಹೇಗೆ? (150 ಪದಗಳಿಗೆ ಮೀರದಂತೆ ಉತ್ತರಿಸಿ)
What is persuasion? How can attitudes be changed using messages? (Not more than 150 words)
ಬೇಡಿಕೆಯಿಂದಾಗುವ ಸಾಮಾಜಿಕ ಪ್ರಭಾವವನ್ನು ವಿವರಿಸಿ. (250 ಪದಗಳಿಗೆ ಮೀರದಂತೆ ಉತ್ತರಿಸಿ)
Explain Social influence by demand. (Not more than 250 words)
ಜನರು ಎದುರಿಸುವ ಆಡಳಿತಾತ್ಮಕ ಸಮಸ್ಯೆಗಳು ಯಾವುವು? ಪರಿಣಾಮಕಾರಿ ಆಡಳಿತವನ್ನು ನೀಡುವ ಮೂಲಕ ಈ ಸಮಸ್ಯೆಗಳನ್ನು ಹೇಗೆ ಹೋಗಲಾಡಿಸುವಿರಿ? (300 ಪದಗಳಿಗೆ ಮೀರದಂತೆ ಉತ್ತರಿಸಿ)
What are the administrative problems faced by the people? How do you overcome these problems by effective administration? (Not more than 300 words)
ಭಾವನಾತ್ಮಕ ಬುದ್ಧಿವಂತಿಕೆ ಎಂದರೇನು? ಆಡಳಿತದಲ್ಲಿ ಮತ್ತು ಆಡಳಿತ ನಿರ್ವಹಣೆಯಲ್ಲಿ ಭಾವನಾತ್ಮಕ ಬುದ್ದಿವಂತಿಕೆಯ ಉಪಯುಕ್ತತೆಗಳನ್ನು ಮತ್ತು ಇದರ ಅನ್ವಯಿಸುವಿಕೆಗಳನ್ನು ವಿವರಿಸಿ. (300 ಪದಗಳಿಗೆ ಮೀರದಂತೆ ಉತ್ತರಿಸಿ)
What is emotional intelligence? Explain the utilities and applications of emotional intelligence in administration and governance. (Not more than 300 words)
KAS Mains 2025 GS-IV
1. ಸಾರ್ವಜನಿಕ ಆಡಳಿತದಲ್ಲಿ ನೈತಿಕತೆಯ ಮಾರ್ಗದರ್ಶನದ ಮೂಲಾಧಾರವಾಗಿ ಆತ್ಮಸಾಕ್ಷಿಯ ಪಾತ್ರವೇನು ? ರಾಜಕೀಯ ಒತ್ತಡಗಳು ಹಾಗೂ ಶಾಸನಬದ್ಧ ಹೊಣೆಗಾರಿಕೆಗಳು ಇದ್ದಾಗಿಯೂ ಓರ್ವ ವ್ಯಕ್ತಿಯ ಆತ್ಮ ಸಾಕ್ಷಿಯು ನೈತಿಕ ಆಡಳಿತಕ್ಕೆ ಹೇಗೆ ಎಡೆಮಾಡಿಕೊಟ್ಟಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿ. (150 ಪದಗಳಿಗೆ ಮೀರದಂತೆ ಉತ್ತರಿಸಿ)
What is the role of conscience as a source of ethical guidance in public administration? Explain with examples where following one’s conscience led to ethical governance despite legality and political pressures. (Not more than 150 words)
2. ಪ್ರವಾಹ ಪೀಡಿತ ಪ್ರದೇಶದಲ್ಲಿ ನೀವೂಬ್ಬರು ಜಿಲ್ಲಾಧಿಕಾರಿಗಳಾಗಿದ್ದೀರಿ. ಅನಿರೀಕ್ಷಿತ ಅತ್ಯಧಿಕ ಮಳೆಯಿಂದ ಪ್ರವಾಹ ಉಂಟಾಗಿ ಅನೇಕ ಹಳ್ಳಿಗಳು ಜಲಾವೃತಗೊಂಡಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಸರ್ಕಾರವು ಆಹಾರ ಸಾಮಗ್ರಿಗಳು, ವೈದ್ಯಕೀಯ ನೆರವು ಮತ್ತು ರಕ್ಷಣಾ ದೋಣಿಗಳು ಮೊದಲಾದ ಸೀಮಿತ ನೆರವನ್ನು ಮಾತ್ರ ಒದಗಿಸಿರುತ್ತದೆ. ಆದರೆ ಇದರ ನಡುವೆ ನೀವು ಹಲವಾರು ಸವಾಲುಗಳನ್ನು ಎದುರಿಸುವಿರಿ.
(a) ಸಂಪನ್ಮೂಲ ಕೊರತೆ : ಪರಿಹಾರ ಸಾಮಗ್ರಿಗಳು ಎಲ್ಲಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಮನಾಗಿ ಹಂಚಲು ಸಾಲದು.
(b) ರಾಜಕಿಯ ಒತ್ತಡ : ಸ್ಥಳೀಯ ರಾಜಕಾರಣೆಗಳು ತಮ್ಮ ಕ್ಷೇತ್ರಗಳಿಗೆ ಸಹಾಯಕ್ಕೆ ಆದ್ಯತೆ ನೀಡುವಂತೆ ನಿಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ.
(c) ಮಾಧ್ಯಮ ಪರಿಶೀಲನೆ : ವಾರ್ತಾವಾಹಿನಿಗಳು ಸಂಪನ್ಮೂಲಗಳ, ಪರಿಹಾರ ವಿತರಣೆಯಲ್ಲಿನ ಪಾರದರ್ಶಕತೆಯನ್ನು ಪ್ರಶ್ನಿಸಿ ಪ್ರಸಾರ ಮಾಡುತ್ತಿವೆ.
(i) ಸೀಮಿತ ಸಂಪನ್ಮೂಲಗಳನ್ನು ನ್ಯಾಯ ಮತ್ತು ದಕ್ಷತೆಯಿಂದ ಹೇಗೆ ವಿತರಣೆ ಮಾಡುವಿರಿ ? ನೀವು ರಾಜಕೀಯ ಒತ್ತಡಕ್ಕೆ ಒಳಗಾಗುವಿರಾ ಅಥವಾ ನೆರವನ್ನು ಸಮನಾಗಿ ವಿತರಿಸುವಿರಾ ?
(ii) ಪರಿಹಾರ ವಿತರಣೆಯಲ್ಲಿ ಸಾರ್ವಜನಿಕ ನಂಬಿಕೆ ಮತ್ತು ಪಾರದರ್ಶಕತೆಯನ್ನು ಕಾಪಾಡುವಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳುವಿರಿ.
(300 ಪದಗಳಿಗೆ ಮೀರದಂತೆ ಉತ್ತರಿಸಿ)
3. ನೀವು ಒಂದು ಅಪರೂಪದ ಖಾಯಿಲೆಗೆ ಜೀವರಕ್ಷಕ ಔಷಧವನ್ನು ಅಭಿವೃದ್ಧಿಗೊಳಿಸುತ್ತಿರುವ ಓರ್ವ ಹಿರಿಯ ವೈದ್ಯಕೀಯ ಸಂಶೋಧಕರಾಗಿರುತ್ತೀರಿ. ಆರಂಭಿಕ ಪರೀಕ್ಷೆಗಳು ಉತ್ತೇಜನದಾಯಕವಾಗಿವೆ. ಆದರೆ, ಅಧಿಕೃತ ಅನುಮೋದನೆಗೆ6 ಮುಂಚಿತವಾಗಿ ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಗಳು ಇನ್ನೂ ಐದು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅದೇ ಸಮಯದಲ್ಲಿ ಸಾವಿನ ಅಂಚಿಗೆ ತಳ್ಳಲ್ಪಟ್ಟ ರೋಗಿಗಳು ವೈದಕೀಯ ನೆರವಿಗೆ ಹಾತೊರೆಯುತ್ತಿದ್ದಾರೆ. ನೈತಿಕ ಗೊಂದಲಗಳು ಎದ್ದಿದ್ದು, ಕೆಲವು ವೈದ್ಯರು ಕನಿಕರ ತೋರುವಂತೆ ಒತ್ತಾಯಿಸುತ್ತಿದ್ದು, ರೋಗಿಗಳು ಎನ್ನನ್ನೂ ಕಳೆದು ಕೊಳ್ಳುವುದಿಲ್ಲ ಎಂದು ವಾದಿಸುತಿದ್ದಾರೆ.
ದೀರ್ಘಾವಧಿ ಅಗೋಚರ ಅಡ್ಡಪರಿಣಾಮಗಳು ಉಂಟಾಗಬಹುದೆಂಬ ಭಯದಿಂದ ನಿಯಂತ್ರಣಾಧಿಕಾರಿಗಳು (ಪ್ರಾಧಿಕಾರಗಳು) ಕಟ್ಟುನಿಟ್ಟಿನ ಪರೀಕ್ಷೆಗಳಿಗೆ ಒತ್ತಾಯಿಸುತ್ತಿದ್ದು ಔಷಧ ತಯಾರಿಸುವ ಕಂಪನಿಗಳು ಹೆಚ್ಚಿನ ಲಾಭದ ಅವಕಾಶವಿರುವುದರಿಂದ ಶೀಘ್ರ ಅನುಮೋದನೆಗೆ ಒತ್ತಡ ಹೇರುತ್ತಿವೆ. ರೋಗಿಗಳ ಪರ ಹೋರಾಡುವ ಗುಂಪುಗಳು ಔಷಧಗಳು ಸಿಗಬೇಕೆಂದು ಸರ್ಕಾರದ ಮೇಲೆ ಒತ್ತಡವನ್ನು ಹಾಕುತ್ತಿವೆ.
(a) ಪೂರ್ಣ ಅನುಮೋದನೆಗೆ ಮೊದಲೇ, ಸಾವಿನ ಅಂಚಿನಲ್ಲಿರುವ ರೋಗಿಗಳಿಗೆ ಪ್ರಯೋಗಾತ್ಮಕ ಔಷಧಿಗಳನ್ನು ನೀಡಬಹುದೇ ? ಯಾವ ನೈತಿಕ ಸುರಕ್ಷತಾ ಕ್ರಮಗಳು ಇರಬೇಕು ?
(b) ವೈದ್ಯಕೀಯ ನೈತಿಕತೆಯನ್ನು ಕಾಪಾಡುತ್ತಲೇ ಔಷಧ ತಯಾರಿಕಾ ಕಂಪನಿಗಳ ಒತ್ತಡವನ್ನು ನೀವು ಹೇಗೆ ನಿಭಾಯಿಸುವಿರಿ ?
(c) ಸಾರ್ವಜನಿಕ ಸುರಕ್ಷತೆ ಮತ್ತು ವೈದ್ಯಕೀಯ ಅನ್ವೇಷಣೆಯನ್ನು ಸಮತೋಲನಗೊಳಿಸುವಲ್ಲಿ ಸರ್ಕಾರಿ ಸಂಸ್ಥೆಗಳು ಯಾವ ಪಾತ್ರವನ್ನು ವಹಿಸಬೇಕು ?
(300 ಪದಗಳಿಗೆ ಮೀರದಂತೆ ಉತ್ತರಿಸಿ)
You are senior medical researcher developing a life-saving drug for a rare disease. Initial trials are promising, but the full testing process will take five more years before official approval. Meanwhile, thousands of terminally ill patients are desperate for treatment. Ethical dilemmas arise: some doctors urge compassionate use, arguing that patients have nothing to lose. *
Regulatory authorities insist on strict trials, fearing unknown long-term side effects. Pharmaceutical companies push for quick approval, seeing a major profit opportunity. Patient advocacy groups demand access, pressuring the government.
(a) Should experimental drugs be given to terminally ill patients before full approval? What ethical safeguards should be in place?
(b) How will you handle pressure from pharmaceutical companies while maintaining medical ethics?
(c) What role should government agencies play in balancing medical innovation with public safety?
(Not more than 300 words)
4. ಸಾರ್ವಜನಿಕ ಸೇವಾ ಅಧಿಕಾರಿಗಳು ನ್ಯಾಯಸಮ್ಮತವಾಗಿ ಹಾಗೂ ಸಹಾನುಭೂತಿಯುಳ್ಳವರಾಗಿರಬೇಕು, ಆದರೆ ಇದು ಸಂಘರ್ಷಕ್ಕೆ ಎಡೆಮಾಡಿಕೊಡಬಹುದು ಈ ವಿಷಯವನ್ನು ಉದಾಹರಣೆಯೊಂದಿಗೆ ಚರ್ಚಿಸಿ. ನ್ಯಾಯೋಚಿತ ಮತ್ತು ನೈತಿಕ ಆಡಳಿತಕ್ಕಾಗಿ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳಬಹುದು. (150 ಪದಗಳಿಗೆ ಮೀರದಂತೆ ಉತ್ತರಿಸಿ)
Public servants need to be both fair and compassionate, but these can clash. Discuss this issue with examples. How can a balance be maintained for fair and ethical governance? (Not more than 150 words)
5. “ಈ ಹೇಳಿಕೆಯನ್ನು ಎರಡು ಉದಾಹರಣೆಗಳೊಂದಿಗೆ ಪರಿಶೀಲಿಸಿ: ಒಂದು – ಒಂದು ಕಾಯ್ದೆಯು ಕಾನೂನುಬದ್ದವಾಗಿರುತ್ತದೆ ಅದರ ನೈತಿಕವಾಗಿ ಪ್ರಶ್ನಾರ್ಹವಾಗಿರುತ್ತದೆ. ಹಾಗೂ ಮತ್ತೊಂದು ಕಾಯ್ದೆಯು ನೈತಿಕವಾಗಿರುತ್ತದೆ ಆದರೆ ಅದು ಕಾನೂನು ಬಾಹಿರವಾಗಿರುತ್ತದೆ” (150 ಪದಗಳಿಗೆ ಮೀರದಂತೆ ಉತ್ತರಿಸಿ
“Examine this statement with two examples one where an act is legal but ethically questionable, and another where an act is ethical but illegal.” (Not more than 150 words)
6. “ಕುಟುಂಬ ಮತ್ತು ಸಮಾಜವು ವ್ಯಕ್ತಿಯ ನೈತಿಕ ಮೌಲ್ಯಗಳನ್ನು ರೂಪಿಸುತ್ತವೆ.” ಆರಂಭಿಕ ಸಾಮಾಜಿಕ ವಿದ್ಯಮಾನಗಳು ಸಾರ್ವಜನಿಕ ಜೀವನವಲ್ಲಿ ನೈತಿಕ ನಿರ್ಣಯ-ಕೈಗೊಳ್ಳುವಲ್ಲಿ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಸೂಕ್ತ ಉದಾಹರಣೆಗಳೊಂದಿಗೆ ಚರ್ಚಿಸಿ. (150 ಪದಗಳಿಗೆ ಮೀರದಂತೆ ಉತ್ತರಿಸಿ)
“Family and society shape an individual’s ethical values.” Discuss how early social conditioning impacts ethical decision-making in public life with examples. (Not more than 150 words)
7. ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ (ನೀತಿನಿಷ್ಠೆ) ಯ ಮಹತ್ವವನ್ನು ಚರ್ಚಿಸಿ ಮತ್ತು ನಿರ್ಧಾರ ತೆಗೆದುಕೊಳ್ಳುವಾಗ ಅದನ್ನು ಎತ್ತಿಹಿಡಿಯುವ ಮಾರ್ಗಗಳನ್ನು ಸೂಚಿಸಿ ನೈತಿಕ ಆಡಳಿತದಲ್ಲಿ ಅದರ ಪಾತ್ರವನ್ನು ವಿವರಿಸಲು ಸೂಕ್ತ ಉದಾಹರಣೆಗಳನ್ನು ಒದಗಿಸಿ (150 ಪದಗಳಿಗೆ ಮೀರದಂತೆ ಉತ್ತರಿಸಿ)
Discuss the importance of integrity in public administration and suggest ways to uphold it in decision-making. Provide relevant examples to illustrate its role in ethical governance, (Not more than 150 words)
8. “ಪ್ರತಿಕೂಲ ಸಂದರ್ಭವನ್ನು ಹೆಚ್ಚಿನ ಎಲ್ಲಾ ಜನರೂ ಎದುರಿಸಬಹುದು, ನೀವು ಒಬ್ಬ ವ್ಯಕ್ತಿಯ ನಡತೆಯನ್ನು ಪರೀಕ್ಷಿಸಬೇಕಾದರೆ, ಆತನಿಗೆ ಅಧಿಕಾರ ನೀಡಿ.” – ಅಬ್ರಹಂ ಲಿಂಕನ್.
ನಾಗರಿಕ ಸೇವೆಗಳು ಮತ್ತು ನೈತಿಕ ಆಡಳಿತಕ್ಕೆ ಸಂಬಂಧಿಸಿದಂತೆ ಈ ಮೇಲಿನ ವ್ಯಾಖ್ಯಾನವು ಹೇಗೆ ಅನ್ವಯವಾಗುತ್ತದೆ ಎಂಬುದನ್ನು ಚರ್ಚಿಸಿ. ಜೊತೆಗೆ ಸಾರ್ವಜನಿಕ ಅಧಿಕಾರಿಗಳು ತಮ್ಮ ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಇದರ ಪ್ರಸ್ತುತತೆಯನ್ನು ಹೇಗೆ ಕಾಯ್ದುಕೊಳ್ಳುವರು ಎಂಬುದನ್ನು ಸೂಕ್ತ ಉದಾಹರಣೆಗಳೊಂದಿಗೆ ಬೆಳಕು ಚೆಲ್ಲಿ. (150 ಪದಗಳಿಗೆ ಮೀರದಂತೆ ಉತ್ತರಿಸಿ)
“Nearly all men can stand adversity, but if you want to test a man’s character, give him power.” – Abraham Lincoln.
Discuss how this quote applies to civil services and ethical governance, highlighting its relevance in the conduct of public servants with suitable examples. (Not more than 150 words)
9. “ಒಂದು ರಾಷ್ಟ್ರವನ್ನು ಅದು ತನ್ನ ಅತ್ಯುನ್ನತ ಪ್ರಜೆಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬ ಅಧಾರದಲ್ಲಿ ಅಳೆಯದೆ ಅದು ತನ್ನ ಕೆಳಸ್ಥರದವರನ್ನು ನೋಡುವ ರೀತಿಯಿಂದ ಅಳೆಯಬೇಕು.” ನೆಲ್ಸನ್ ಮಂಡೆಲಾ.
ಸಾರ್ವಜನಿಕ ಆಡಳಿತದಲ್ಲಿ ಪರಾನುಭೂತಿ ಮತ್ತು ಸಹಿಷ್ಣುತೆಯ ಪಾತ್ರದ ಬಗ್ಗೆ ಮೇಲಿನ ಹೇಳಿಕೆ ಹೇಗೆ ಒತ್ತು ನೀಡುತ್ತದೆ ? ದುರ್ಬಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ತರಲಾಗಿರುವ ಕಲ್ಯಾಣ ಯೋಜನೆಗಳ ಮಹತ್ವವನ್ನು ಉದಾಹರಣೆಗಳೊಂದಿಗೆ ಚರ್ಚಿಸಿ (250 ಪದಗಳಿಗೆ ಮೀರದಂತೆ ಉತ್ತರಿಸಿ)
“A nation should not be judged by how it treats its highest citizens, but its lowest ones.” Nelson Mandela
How does this quote emphasize the role of empathy and tolerance in public administration? Discuss its significance with examples of welfare policies aimed at weaker sections. (Not more than 250 words)
10. ನೀವು ಮಹಾನಗರಪಾಲಿಕೆಯ ಮುನಿಸಿಪಲ್ ಕಮಿಷನರ್ ಆಗಿರುವಿರಿ. ಚಳಿಗಾಲ ಸಮೀಪಿಸುತ್ತಿರುವಂತೆ ಶೀತಗಾಳಿಯ ಪರಿಣಾಮವಾಗಿ ವಸತಿರಹಿತರ ಸಾವುಗಳು ತೀವ್ರವಾಗಿ ಹೆಚ್ಚಾಗುತ್ತಿದೆ. ವಸತಿರಹಿತ ಜನರು, ವಲಸೆ ಕಾರ್ಮಿಕರು, ವೃದ್ಧರು ಮತ್ತು ಪರಿತ್ಯಕ್ತ ಮಹಿಳೆಯರು ಒಳಗೊಂಡಂತೆ ಅನೇಕರು ಪಾದಚಾರಿ ಮಾರ್ಗಗಳಲ್ಲಿ ಮಲಗುತ್ತಾರೆ. ನಗರದಲ್ಲಿ ಸರ್ಕಾರದಿಂದ ನಿರ್ವಹಿಸಲ್ಪಡುವ ರಾತ್ರಿ ತಾಣಗಳು ಇದ್ದಾಗ್ಯೂ, ಅವುಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬುದನ್ನು ವರದಿಗಳು ಸೂಚಿಸುತ್ತಿವೆ. ಏಕೆಂದರೆ ತಿಳುವಳಿಕೆಯ ಕೊರತೆ, ಸಾಮಾಜಿಕ ಕಳಂಕ ಮತ್ತು ಅಸುರಕ್ಷಿತ ವಾತಾವರಣಗಳು ಜೊತೆಗೆ ಕೆಲವು ವ್ಯಾಪಾರಿ ಗುಂಪುಗಳು ತಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಪಾದಚಾರಿ ಮಾರ್ಗಗಳ ಅತಿಕ್ರಮಣವನ್ನು ತಡೆಗಟ್ಟಲು ಲಾಬಿ ಮಾಡುತ್ತಿವೆ. ಆಡಳಿತದ ಹೊಣೆಗಾರಿಕೆಯನ್ನು ಮಾಧ್ಯಮವು ಪ್ರಶ್ನೆ ಮಾಡಲು ಆರಂಭಿಸಿವೆ.
(a) ದೀರ್ಘಾವಧಿ ಪುನರ್ ವಸತಿಯ ಸಮಸ್ಯೆಯನ್ನು ಹೋಗಲಾಡಿಸಲು ವಸತಿರಹಿತರಿಗೆ ತಕ್ಷಣದ ಪರಿಹಾರ ಕ್ರಮಗಳನ್ನು ಒದಗಿಸುವುದನ್ನು ಹೇಗೆ ಖಾತರಿಪಡಿಸುವಿರಿ ?
(b) ದುರ್ಬಲವರ್ಗದ ಜನರ ಹಕ್ಕುಗಳ ಜೊತೆಗೆ ವ್ಯವಹಾರಗಳ ಆರ್ಥಿಕ ಕಾಳಜಿಯನ್ನು ನೀವು ಹೇಗೆ ಸಮತೋಲನಗೊಳಿಸುವಿರಿ ?
(300 ಪದಗಳಿಗೆ ಮೀರದಂತೆ ಉತ್ತರಿಸಿ)
You are the Municipal Commissioner of a metropolitan city. As
winter approaches, there has been a sharp increase in homeless deaths due to cold waves. Many homeless individuals, including migrant labourers. elderly and abandoned women, sleep on pavements. While the city has government-run night shelters, reports indicate they are underutilized due to poor awareness, social stigma and unsafe conditions. Additionally, a few commercial groups are lobbying to clear footpaths to prevent ‘encroachments’ that affect their businesses. The media has begun questioning the administration’s accountability.
(a) How will you ensure immediate relief for the homeless while addressing long-term rehabilitation?
(b) How will you balance the economic concerns of businesses with the rights of vulnerable people? (Not more than 300 words)
11. “ಅತಿಯಾದ ಪರಾನುಭೂತಿಯು (ಎಂಪಥಿ) ಕೆಲವೊಮ್ಮೆ ನಿರ್ಧಾರ ತೆಗೆದುಕೊಳ್ಳುವಲ್ಲಿ ವಸ್ತುನಿಷ್ಠತೆಗೆ ವಿರುದ್ಧವಾಗಬಹುದು.” ಸೂಕ್ತ ಉದಾಹರಣೆಗಳೊಂದಿಗೆ ಈ ಸಂದಿಗ್ಧತೆಯನ್ನು ಪರೀಕ್ಷಿಸಿ. ಸಾರ್ವಜನಿಕ ಸೇವಕನು ಪರಾನುಭೂತಿ (ಎಂಪಥಿ) ನ್ಯಾಯ ಮತ್ತು ನಿಷ್ಪಕ್ಷಪಾತದೊಂದಿಗೆ ಹೇಗೆ ಸಮತೋಲನಗೊಳಿಸಬಹುದು ?
(150 ಪದಗಳಿಗೆ ಮೀರದಂತೆ ಉತ್ತರಿಸಿ)
Excessive empathy can sometimes conflict with objectivity in decision-making.” Examine this dilemma with suitable examples. How can a public servant balance empathy with fairness and impartiality?
(Not more than 150 words)
12. ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಮೀರಾ, ಅವರು ಅಕ್ರಮ ವಸಾಹತುಗಳನ್ನು ತೆರವುಗೊಳಿಸುತ್ತಿರುವ ಅಭಿಯಾನದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕ್ರಿಯೆಯು ಕಾನೂನಾತ್ಮಕವಾಗಿ ಇದ್ದರೂ, ಅನೇಕ ಬಾಧಿತ ಕುಟುಂಬಗಳು ಬಡವರಾಗಿದ್ದು ಅವರಿಗೆ ಅನ್ಯ ವಸತಿಯು ಇಲ್ಲದೇ ಇರುವುದನ್ನು ಅವರು ಕಂಡುಕೊಂಡರು. ಅವರನ್ನು ಆ ಸ್ಥಳದಿಂದ ತೆರವುಗೊಳಿಸುವುದು ಬಹಳ ಸಂಕಷ್ಟಗಳಿಗೆ ಎಡೆಮಾಡಿಕೊಡುತ್ತದೆ. ಆದರೆ ಈ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು ಕಾನೂನಾತ್ಮಕ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ ಹಾಗೂ ಸ್ವಜನ ಪಕ್ಷಪಾತದ ಆರೋಪಗಳನ್ನು ಎದುರಿಸಬೇಕಾಗುತ್ತದೆ.
(a) ಮೀರಾ ಅವರು ಕಟ್ಟುನಿಟ್ಟಾಗಿ ಕಾನೂನಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಮುಂದುವರೆಸಬೇಕೇ ಅಥವಾ ಪರಾನುಭೂತಿಯ ವಿಧಾನವನ್ನು ಅನುಸರಿಸಬೇಕೇ ?
(b) ಕಾನೂನಾತ್ಮಕ ಕರ್ತವ್ಯವನ್ನು ಅನುಕಂಪದೊಂದಿಗೆ ಹೇಗೆ ಸರಿದೂಗಿಸಲು ಸಾಧ್ಯ?
(c) ಯಾವ ದೀರ್ಘಾವಧಿ ನೀತಿಯ ಪರಿಹಾರೋಪಾಯಗಳು ಇಂತಹ ಸಂದಿಗ್ಧತೆಯಿಂದ ಹೊರಬರಲು ಸಾಧ್ಯ ವಾಗಿಸುತ್ತವೆ.?
(300 ಪದಗಳಿಗೆ ಮೀರದಂತೆ ಉತ್ತರಿಸಿ)
Meera, a district magistrate, is overseeing an anti-encroachment drive to clear illegal settlements. While the action is legally mandated, she finds that many affected families are poor and have no alternative housing. Evicting them would cause immense suffering, but delaying the operation could result in legal consequences and accusations of favouritism.
(a) Should Meera proceed strictly as per the law or consider a more empathetic approach?
(b) How can she balance legal duty with compassion?
(c) What long-term policy solutions can address such dilemmas?
(Not more than 300 words)
13. ನಿಮ್ಮ ಸ್ವಂತ ಜಿಲ್ಲೆಯಲ್ಲಿ ನೀವು ಒಬ್ಬ ಕೆಎಎಸ್ ಅಧಿಕಾರಿಯಾಗಿ ನಿಯೋಜನೆಗೊಂಡಿರುವಿರಿ. ನಿಮ್ಮ ತಂದೆಯವರು ಓರ್ವ ಗೌರವಾನ್ವಿತ ರಾಜಕೀಯ ನಾಯಕರಾಗಿದ್ದು ಸಾರ್ವಜನಿಕ ಹಣದ ದುರೂಪಯೋಗಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಆರೋಪವಿದ್ದು ಅವರನ್ನು ತನಿಖೆಗೆ ಒಳಪಡಿಸಿದ್ದು, ಆಡಳಿತದ ಮುಖ್ಯಸ್ಥರಾಗಿ ನೀವು ನ್ಯಾಯಸಮ್ಮತ ಮತ್ತು ನಿಷ್ಪಕ್ಷವಾತ ತನಿಖೆ ಕೈಗೊಳ್ಳುವುದನ್ನು ನಿರೀಕ್ಷಿಸಲಾಗಿದೆ ನಿಮ್ಮ ಕುಟುಂಬ ನಿಷ್ಠೆಯನ್ನು ಅಪೇಕ್ಷಿಸುತ್ತದೆ. ಆದರೆ ಮಾಧ್ಯಮ ಮತ್ತು ವಿರೋಧಪಕ್ಷಗಳು ನೀವು ಪಕ್ಷಪಾತಿಗಳೆಂದು ದೂಷಿಸುತ್ತಿವೆ. ಇದೇ ಸಂದರ್ಭದಲ್ಲಿ ಕೌಟುಂಬಿಕ ಸಂಬಂಧಗಳು ಇರುವುದರಿಂದ ನಿಮ್ಮ ಅಧೀನ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸಾರ್ವಜನಿಕರು ನಿಮ್ಮ ಪ್ರತಿಕ್ರಿಯೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ. ಏಕೆಂದರೆ ಈ ಪ್ರಕರಣವು ಆಡಳಿತದಲ್ಲಿನ ಸಾರ್ವಜನಿಕ ನಂಬಿಕೆ ಮತ್ತು ಆಡಳಿತದಲ್ಲಿ ಹೊಣೆಗಾರಿಕೆಯ ಮೇಲೆ ಪ್ರಭಾವ ಬೀರುತ್ತದೆ.
(a) ನಿಮ್ಮ ಕುಟುಂಬದವರು ಈ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಅದನ್ನು ನಿರ್ವಹಿಸುವ ಸಂದರ್ಭದಲ್ಲಿ ವಸ್ತುನಿಷ್ಠತೆ ಮತ್ತು ನ್ಯಾಯಸಮ್ಮತಯನ್ನು ಈ ತನಿಖೆಯಲ್ಲಿ ನೀವು ಹೇಗೆ ಕಾಯ್ದುಕೊಳ್ಳುವಿರಿ ?
(b) ನಿಮ್ಮ ನಿರ್ಣಯದಲ್ಲಿ ಸಾರ್ವಜನಿಕ ನಂಬಿಕೆ ಮತ್ತು ಸಾಂಸ್ಥಿಕ ನಿಷ್ಠೆಯನ್ನು ಖಾತರಿಗೊಳಿಸಲು ಯಾವ ಕ್ರಮಗಳನ್ನು ನೀವು ಕೈಗೊಳ್ಳುವಿರಿ ?
(c) ಈ ಸಂದರ್ಭದಲ್ಲಿ ವೈಯಕ್ತಿಕ ಭಾವೋದ್ವೇಗಗಳು ಮತ್ತು ವೃತ್ತಿಯ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುವಿರಿ ?
(300 ಪದಗಳಿಗೆ ಮೀರದಂತೆ ಉತ್ತರಿಸಿ)
You are an KAS officer posted in your home district, Your father, a respected political leader, is under investigation for alleged misuse of public funds. As the head of the administration, you are expected to ensure a fair and unbiased inquiry. Your family expects loyalty, while the media and opposition parties accuse you of favouritism. Meanwhile, your junior officers are hesitant to take action due to your familial ties, The public is watching your response closely, as this case will impact the credibility of governance and public trust in the administration.
(a) How will you maintain objectivity and fairness while dealing with an inquiry involving your family?
(b) What steps will you take to ensure public trust and institutional integrity in your decision?
(c) How will you handle personal emotions and professional responsibilities in this situation?
(Not more than 300 words)
14. ಕ್ರೀಡೆಗಳಲ್ಲಿ ಮುಖ್ಯವಾಗಿ ಒತ್ತಡವನ್ನು ನಿಭಾಯಿಸುವಲ್ಲಿ, ತಂಡ ಕಾರ್ಯ ಮತ್ತು ನಾಯಕತ್ವಕ್ಕೆ ಸಂಬಂಧಿಸಿದಂತೆ. ಭಾವನಾತ್ಮಕ ಬುದ್ಧಿವಂತಿಕೆಯ ಪಾತ್ರವನ್ನು ಚರ್ಚಿಸಿ. (150 ಪದಗಳಿಗೆ ಮೀರದಂತೆ ಉತ್ತರಿಸಿ)
Discuss the role of emotional intelligence in sports, focusing on its importance in handling pressure, teamwork and leadership. (Not more than 150 words)
15. ಓರ್ವ ಭಾರತೀಯ ಮತ್ತು ಓರ್ವ ಪಾಶ್ಚಿಮಾತ್ಯ ನೈತಿಕ ತತ್ವಶಾಸ್ತ್ರಜ್ಞರನ್ನು ಆಯ್ಕೆ ಮಾಡಿ ಮತ್ತು ಅವರ ನೈತಿಕ ಚಿಂತನೆಗಳು ಆಧುನಿಕ ಸಾರ್ವಜನಿಕ ಆಡಳಿತಕ್ಕೆ ಹೇಗೆ ಅನ್ವಯವಾಗುವುದು ಎಂಬುದನ್ನು ಚರ್ಚಿಸಿ. (150 ಪದಗಳಿಗೆ ಮೀರದಂತೆ ಉತ್ತರಿಸಿ)
Select one Indian and one Western moral philosopher and discuss how their ethical ideas can be applied to modern public administration. (Not more than 150 words)
16. ತ್ಯಾಜ್ಯ ವಿಲೇವಾರಿ ಮತ್ತು ಮರು ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕ ಅಧಿಕಾರಿಗಳು ಸಾಮಾಜಿಕ ಪ್ರಭಾವ ಮತ್ತು ಮನವೊಲಿಸುವಿಕೆಯನ್ನು ಹೇಗೆ ಬಳಸಬಹುದು ಎಂಬುದನ್ನು ಚರ್ಚಿಸಿ. ಯಶಸ್ವೀ ತ್ಯಾಜ್ಯ ನಿರ್ವಹಣೆಯ ಕ್ರಮಗಳಿಂದ ನಡವಳಿಕೆಗಳಲ್ಲಾದ ಬದಲಾವಣೆಯ ಉದಾಹರಣೆಗಳನ್ನು ನೀಡಿ. (150 ಪದಗಳಿಗೆ ಮೀರದಂತೆ ಉತ್ತರಿಸಿ)
Discuss how public officials can use social influence and persuasion to promote responsible waste disposal and recycling. Provide examples of successful waste management initiatives driven by behavioural change. (Not more than 150 words)
17. ನಾಗರೀಕ ಸೇವೆಗಳಲ್ಲಿ ಯುಕ್ತತೆ (ಕೌಶಲ್ಯತೆ ಮತ್ತು ಬುದ್ಧಿವಂತಿಕೆ) ಮತ್ತು ವರ್ತನೆ (ಮನಸ್ಥಿತಿ, ನೈತಿಕತೆ) ಗಳೆರಡರ ಮಹತ್ವವನ್ನು ವಿಶ್ಲೇಷಿಸಿ. ಸಾರ್ವಜನಿಕ ಆಡಳಿತದಲ್ಲಿನ ಉದಾಹರಣೆಗಳನ್ನು ನೀಡುತ್ತಾ ಸಮರ್ಥ ಆಡಳಿತಕ್ಕೆ ಯಾವುದು ಮುಖ್ಯ ಎಂಬುದನ್ನು ಸಮರ್ಥಿಸಿ, (250 ಪದಗಳಿಗೆ ಮೀರದಂತೆ ಉತ್ತರಿಸಿ)
Analyse the significance of both aptitude (skills, intelligence) and attitude (mindset, ethics) in civil services. Justify which is more important for effective governance with examples from public administration. (Not more than 250 words)
18. ಒಂದು ಮಹಾನಗರ ಪಾಲಿಕೆಯ ಪೋಲೀಸ್ ಕಮಿಷನರ್ ಆದ ನೀವು, ಭದ್ರತೆಯನ್ನು ಹೆಚ್ಚಿಸಲು ಮತ್ತು ಅಪರಾಧಗಳನ್ನು ತಡೆಯಲು ಕೃತಕ ಬುದ್ಧಿಮತ್ತೆ (AI) ನಿರ್ಮಿತ ಮುಖ ಚಹರೆಯನ್ನು ಗುರುತಿಸುವ ವ್ಯವಸ್ಥೆಯನ್ನು ಪರಿಚಯಿಸುತ್ತೀರಿ. ಈ ವ್ಯವಸ್ಥೆಯಿಂದ ಅಪರಾಧ ಮಾಡಬಹುದಾದಂಥವರನ್ನು ಕಂಡು ಹಿಡಿಯಬಹುದಾಗಿದೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಮೇಲ್ವಿಚಾರಣೆ ಮಾಡಬಹುದಾಗಿದೆ. ಆದರೆ, ಕೆಲವು ಕಾಳಜಿಗಳು ವ್ಯಕ್ತವಾಗಿದೆ. ನಾಗರೀಕ ಹಕ್ಕುಗಳ ಹೋರಾಟಗಾರರು, ಇದು ಖಾಸಗೀತನವನ್ನು ಉಲ್ಲಂಘಿಸುತ್ತದೆ ಹಾಗೂ ಸಾರ್ವತ್ರಿಕವಾಗಿ ಕಣ್ಣಿಡುತ್ತದೆ ಎಂದು ವಾದಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆ (AI) ಸ್ವಜನ ಪಕ್ಷಪಾತದಿಂದ ಕೂಡಿದ್ದು ತುಳಿತಕ್ಕೆ ಒಳಪಟ್ಟ ಸಮುದಾಯಗಳನ್ನು ತಪ್ಪಾಗಿ ಗುರುತಿಸುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಕಾನೂನು ಜಾರಿಗೊಳಿಸುವ ಅಧಿಕಾರಿಗಳು ಇದು ಅಪರಾಧಗಳನ್ನು ಕಡಿಮೆ ಮಾಡುತ್ತಿದೆ ಎಂದು ಬೆಂಬಲಿಸುತ್ತಿದ್ದಾರೆ, ಮತ್ತು ತಾಂತ್ರಿಕ ಕಂಪನಿಗಳು ಮತ್ತು ರಾಜಕೀಯ ನಾಯಕರು, ರಾಷ್ಟ್ರೀಯ ಭದ್ರತೆಯನ್ನು ಮುಂದಿಟ್ಟುಕೊಂಡು ಕೃತಕ ಬುದ್ಧಿಮತ್ತೆ (AI) ಬಳಕೆಯನ್ನು ವಿಸ್ತರಿಸಬೇಕೆನ್ನುತ್ತಿದ್ದಾರೆ.
(a) ಕೃತಕ ಬುದ್ಧಿಮತ್ತೆಯ ಪೋಲೀಸಿಂಗ್ ನೀತಿಗಳು, ನೈತಿಕವಾಗಿ ಪೂರ್ವಾಗ್ರಹಗಳಿಲ್ಲದೇ, ಮತ್ತು ಖಾಸಗೀತನವನ್ನು ಸಂರಕ್ಷಿಸುತ್ತವೆ ಎಂದು ಹೇಗೆ ಖಾತರಿಪಡಿಸುವಿರಿ ?
(b) ಕಾನೂನು ಜಾರಿ ಸಂಸ್ಥೆಗಳಿಂದ ಕೃತಕ ಬುದ್ಧಿಮತ್ತೆಯ ದುರುಪಯೋಗವನ್ನು ತಡೆಗಟ್ಟಲು ಯಾವ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಿರಿ ?
(c) ಒಬ್ಬ ಮುಗ್ಧನನ್ನು ತಪ್ಪಾಗಿ ಅಪರಾಧಿ ಎಂದು ಕೃತಕ ಬುದ್ಧಿಮತ್ತೆ (AI) ಪರಿಗಣಿಸಿದರೆ, ಯಾವ ಜವಾಬ್ದಾರಿಯುತ ಕ್ರಮಗಳನ್ನು ಅನುಸರಿಸಬೇಕು ?
(300 ಪದಗಳಿಗೆ ಮೀರದಂತೆ ಉತ್ತರಿಸಿ)
As the Police Commissioner of a metropolitan city, you have introduced an Al-based facial recognition system to enhance security and crime prevention. The system can track potential criminals and monitor public spaces in real time. However, concerns have emerged: Civil rights activists argue that it violates privacy and may be used for mass surveillance; reports suggest that Al has biases, leading to wrongful identification of marginalized groups:law enforcement officers support the system, claiming it has reduced crime and Tech companies and political leaders push for expanding Al use, citing national security.
(a) How will you ensure that Al-based policing remains ethical, unbiased and respects individual privacy?
(b) What safeguards will you implement to prevent misuse of Al by law enforcement agencies?
(c) If the Al system incorrectly flags an innocent person as a criminal, what accountability measures should be in place?
(Not more than 300 words)