Sat. Apr 25th, 2026

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಶಾಂಭವಿ-ದಿವಾಂಶುಗೆ ವಿಶ್ವದಾಖಲೆ ಚಿನ್ನ
ಸಂದರ್ಭ: ಭಾರತದ ಶಾಂಭವಿ ಕ್ಷೀರಸಾಗರ ಹಾಗೂ ದಿವ್ಯಾಂಶು ದೇವಾಂಗನ್ ಜೋಡಿಯು ಐಎಸ್‌ಎಸ್ಎಫ್‌ ಜೂನಿಯರ್ ಶೂಟಿಂಗ್ ವಿಶ್ವಕಪ್‌ನ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ವಿಶ್ವದಾಖಲೆಯೊಂದಿಗೆ ಸ್ವರ್ಣ ಜಯಿಸಿತು.

  • ಫೈನಲ್ ಸುತ್ತಿನಲ್ಲಿ ಶಾಂಭವಿ- ದಿವ್ಯಾಂಶು ಅವರು 499.9 ಅಂಕ ಸಂಪಾದಿಸಿದರು. ಭಾರತದವರೇ ಆದ ಇಳವೆನಿಲ್ ವಾಳರಿವನ್-ದಿವ್ಯಾಂಶ್ ಸಿಂಗ್ ಪನ್ಮರ್ ಜೋಡಿ 2018ರ ಆವೃತ್ತಿಯಲ್ಲಿ 498.6 ಅಂಕ ಗಳಿಸಿದ್ದರು. ಅದು ಈವೆರೆಗಿನ ವಿಶ್ವದಾಖಲೆಯಾಗಿತ್ತು.
  • ಶೈವಾನ್‌ ಸೈ ಚೀಹ್-ಯಿಂಗ್ ಹಾಗೂ ಶೆನ್ ಯುವಾನ್ ಜೋಡಿ 498.3 ಅಂಕಗಳೊಂದಿಗೆ ಬೆಳ್ಳಿ ಪದಕ ತಮ್ಮ ದಾಗಿಸಿಕೊಂಡಿತು ಫ್ರಾನ್ಸ್‌ ನ ಟೀಫನ್ ಪೋಮ್ಸ್- ಗ್ಯಾಸ್ಟರ್ಡ್ ಲೆಸ್ತೂರ್ ಜೋಡಿ (434.4 ಅಂಕ) ಕಂಚು ಜಯಿಸಿತು.
  • ಶಾಂಭವಿ- ದಿವ್ಯಾಂಶು ಅವರು ಕ್ಯಾಲಿಫಿಕೇಶನ್ ಸುತ್ತಿನಲ್ಲಿಯೂ ಅಗ್ರಸ್ಥಾನ (632 ಅಂಕ) ಪಡೆದಿದ್ದರು.
  • ಭಾರತವು ನಾಲ್ಕು ಚಿನ್ನ ಸೇರಿ 12 ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ
ಪ್ರಮುಖ ಯೋಜನೆಗಳು

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪಶ್ಚಿಮ ಏಷ್ಯಾದ ಬಿಕ್ಕಟ್ಟು ಭಾರತೀಯ ಆರ್ಥಿಕತೆಯ ಮೇಲೆ ಉಂಟುಮಾಡಿರುವ ಪರಿಣಾಮವನ್ನು, ವಿಶೇಷವಾಗಿ ಹಣದುಬ್ಬರ, ವ್ಯಾಪಾರ ಮತ್ತು ಬೆಳವಣಿಗೆಯ ಭವಿಷ್ಯದ ಮೇಲೆ ಅದರ ಪರಿಣಾಮಗಳನ್ನು ಉಲ್ಲೇಖಿಸಿ ವಿಶ್ಲೇಷಿಸಿ.

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಸಂವಿಧಾನಿಕ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಆಡಳಿತಾತ್ಮಕ ಕಾರ್ಯಸಾಧ್ಯತೆಗಳ ದೃಷ್ಟಿಯಿಂದ ಕರ್ನಾಟಕದ ಆಂತರಿಕ ಮೀಸಲಾತಿ ಮಾದರಿಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್: ಪರವಾನಗಿ ರದ್ದು
ಸಂದರ್ಭ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನೀಡಲಾದ ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.

  • ಬ್ಯಾಂಕ್ ಮತ್ತು ಠೇವಣಿದಾರರ ಹಿತಾಸಕ್ತಿಗೆ ವಿರುದ್ಧವಾದ ರೀತಿಯಲ್ಲಿ ವ್ಯವಹಾರಗಳನ್ನು ನಡೆಸಿದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಹೇಳಿದೆ ‘ಬ್ಯಾಂಕ್‌ನ ಆಡಳಿತ ಮಂಡಳಿಯ ವರ್ತನೆಯು ಠೇವಣಿದಾರರು ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಇದರ ಪರಿಣಾಮವಾಗಿ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಭವಿಷ್ಯದಲ್ಲಿ ಯಾವುದೇ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸದಂತೆ ನಿಷೇಧಿಸಲಾಗಿದೆ ಎಂದಿದೆ.
  • ‘ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮುಚ್ಚಲು ಕೋರ್ಟ್‌ ಅರ್ಜಿ ಸಲ್ಲಿಸಲಾಗುವುದು ಬ್ಯಾಂಕ್‌ಗೆ ಬಾಗಿಲು ಹಾಕಬೇಕಾದ ಸಂದರ್ಭ ಬಂದರೂ ತನ್ನೆಲ್ಲಾ ಠೇವಣಿದಾರರ ಹಣವನ್ನು ಮರುಪಾವತಿಸಲು ಬೇಕಾದಷ್ಟೂ ನಗದನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊಂದಿದೆ’ ಎಂದು ಆರ್‌ಬಿಐ ಹೇಳಿದೆ.
  • 2022ರ ಮಾರ್ಚ್ 11ರಿಂದ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ ವಿಧಿಸಿತ್ತು.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಒಳಮೀಸಲು: ಸ್ಪೃಶ್ಯ, ಅಲೆಮಾರಿಗಳಿಗೆ ಶೇ 4.5: ಬಲಗೈ-ಎಡಗೈ: ತಲಾ ಶೇ 5.25
ಸಂದರ್ಭ: ಸುಮಾರು ನಾಲ್ಕು ದಶಕಗಳಿಂದ ಕಗ್ಗಂಟಾಗಿಯೇ ಉಳಿದಿದ್ದ ಮತ್ತು ಪ್ರಬಲ ಹೋರಾಟಗಳಿಗೆ ದಾರಿ ಮಾಡಿಕೊಟ್ಟಿದ್ದ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯ ಗೊಂದಲಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಂದು ಹಂತದ ತೆರೆ ಎಳೆದಿದೆ.

  • ಪರಿಶಿಷ್ಟ ಜಾತಿಯಲ್ಲಿನ ಎಡಗೈ-ಬಲಗೈ ಜಾತಿಯವರು ಮತ್ತು ಅಲೆಮಾರಿ ಸಮುದಾಯವನ್ನು ಸಮಾಧಾನಪಡಿಸುವ ಮಹತ್ವದ ತೀರ್ಮಾನವನ್ನು ವಿಶೇಷ ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ.
  • ಪರಿಶಿಷ್ಟ ಜಾತಿಗೆ ಲಭ್ಯ ಇರುವ ಶೇ 15ರಷ್ಟು ಮೀಸಲಾತಿಯಲ್ಲಿ ಈ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಪರಿಶಿಷ್ಟ ಜಾತಿಗಿದ್ದ ಶೇ 15ರಷ್ಟು ಮೀಸಲಾತಿ ಪ್ರಮಾಣವನ್ನು ಶೇ 17ಕ್ಕೆ ಹೆಚ್ಚಿಸಿ ನಿರ್ಧಾರ ತೆಗೆದುಕೊಂಡಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಒಳಮೀಸಲಾತಿ ಹಂಚಿಕೆ ಮಾಡಿತ್ತು ಇದರಿಂದಾಗಿ ಒಟ್ಟು ಮೀಸಲಾತಿ ಪ್ರಮಾಣ ಶೇ 56ಕ್ಕೆ ಏರಿಕೆಯಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಶೇ 17ರಷ್ಟು ಮೀಸಲಾತಿಯಲ್ಲಿ ಬಲಗೈ ಹಾಗೂ ಎಡಗೈಗೆ ತಲಾ ಶೇ 6 ಹಾಗೂ ಸ್ಪೃಶ್ಯ ಜಾತಿಗಳಿಗೆ ಶೇ 5ರಷ್ಟು ಹಂಚಿಕೆ ಮಾಡಲಾಗಿತ್ತು.

ರೋಸ್ಟರ್ ಬಿಂದುವಿಗೆ ಪರಿಹಾರ

  • ‘ರೋಸ್ಟರ್ ಬಿಂದು ಗೊಂದಲವನ್ನು ಸರಿಪಡಿಸಲು ಎಲ್ಲರಿಗೂ ಒಪ್ಪಿತವಾಗುವ ತೀರ್ಮಾನ, ಆ ಪ್ರಕಾರ, 1 ಅಥವಾ 2 ಹುದ್ದೆಗಳು ಇದೆ ಸಂದರ್ಭದಲ್ಲಿ ಅವುಗಳನ್ನು ‘ಎಸ್‌ಸಿ ಜನರಲ್’ ಎಂದು ಮಾಡಲಾಗುವುದು ಎ. ಬಿ. ಸಿ ವರ್ಗದವರು ಆ ಹುದ್ದೆಗೆ ಸ್ಪರ್ಧಿಸಬಹುದು.

ಅಲೆಮಾರಿಗಳಿಗೆ ‘ಸಿ’ ಶ್ರೇಣಿಯ ಹುದ್ದೆಗಳಲ್ಲಿ ಶೇ 20 ಮೀಸಲು

  • ‘ಸಿ’ ಶ್ರೇಣಿಯ ಹುದ್ದೆಗಳಲ್ಲಿ ಶೇ 20ರಷ್ಟು ಹುದ್ದೆಗಳನ್ನು ‘ಸಿ’ ವರ್ಗದ ಪಟ್ಟಿಯಲ್ಲಿರುವ 59 ಅಲೆಮಾರಿ ಜಾತಿಗಳಿಗೆ ಮೀಸಲಾಗಿ ಇಡಲಾಗುವುದು. ಕಾಯ್ದೆಯಲ್ಲೂ ಇದನ್ನು ಸೇರಿಸಲಾಗಿದೆ.

ಹೊಸ ಸೂತ್ರ: ಶೇ 15ರಷ್ಟು ಮೀಸಲಾತಿ ಅನ್ವಯ ಎಡಗೈ ಜಾತಿಗಳಿರುವ ಗ್ರೂಪ್ ‘ಎ’ಗೆ ಶೇ. 5.25, ಬಲಗೈ ಜಾತಿಗಳಿರುವ ಗ್ರೂಪ್ ‘ಬಿ’ಗೆ ಶೇ. 5.25 ಮತ್ತು ಸ್ಪೃಶ್ಯ ಜಾತಿಗಳಿರುವ ಗ್ರೂಪ್ ‘ಸಿ’ಗೆ ಶೇ. 4.5 ಒಳ ಮೀಸಲಾತಿ ನಿಗದಿಪಡಿಸಲಾಗಿದೆ. ಅಲೆಮಾರಿ ಸಮುದಾಯಗಳ 59 ಜಾತಿಗಳನ್ನು ‘ಸಿ’ ಗುಂಪಿಗೇ ಸೇರಿಸಲಾಗಿದೆ.

  • ರೋಸ್ಟರ್ ಬಿಂದು ಗೊಂದಲ ಸರಿಪಡಿಸಲು ‘ಎಸ್‌ಸಿ ಜನರಲ್’ ಎಂಬ ಹೊಸ ಸೂತ್ರವನ್ನು ಪರಿಹಾರವಾಗಿ ನೀಡಲಾಗಿದೆ. ಈ ಒಳಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ಸರ್ಕಾರಿ ನೇಮಕ ಪ್ರಕ್ರಿಯೆ ನಡೆಯಲಿದೆ.
  • ‘ಶೇ 50 ಮೀಸಲಾತಿಗೆ ಅನುಗುಣವಾಗಿ ಶೇ 15ರಷ್ಟರಲ್ಲೇ ಒಳಮೀಸಲಾತಿ ನಿಗದಿ. ಇದಕ್ಕೆ ಮೊದಲು ಎಸ್‌ಸಿ ಶೇ 17, ಎಸ್‌ಟಿ ಶೇ 7 ಸೇರಿ ಒಟ್ಟು ಶೇ 24 ಮೀಸಲಾತಿ ನಿಗದಿ ಮಾಡಿದ್ದರಿಂದ ಮೀಸಲಾತಿ ಪ್ರಮಾಣ ಶೇ 56ಕ್ಕೆ ಏರಿತ್ತು ಅದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತು. ಇದು ಇತ್ಯರ್ಥವಾಗುವವರೆಗೆ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಕ್ಕೆ ಹೆಚ್ಚಿಸಲಾಗಿರುವ ಶೇ 6ರಷ್ಟು ಮೀಸಲಾತಿಯನ್ನು ಅನ್ನು ಬ್ಯಾಕ್‌ಲಾಗ್ ಎಂದು ಪರಿಗಣಿಸಲಾಗುವುದು ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಒಳಮೀಸಲಾತಿ ಪ್ರಮಾಣ ಬದಲಾವಣೆ ತೀರ್ಮಾನ ಕಾಯ್ದಿರಿಸಲಾಗಿದೆ.

2024ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ಒಳಮೀಸಲಾತಿ ನೀಡಬಹುದು ಎಂದು ತೀರ್ಪು ನೀಡಿತು ಆ ತೀರ್ಪಿನ ಹಿನ್ನೆಲೆಯಲ್ಲಿ ನ್ಯಾ.ನಾಗಮೋಹನದಾಸ್ ಅಧ್ಯಕ್ಷತೆಯ ಏಕವ್ಯಕ್ತಿ ಆಯೋಗ ರಚಿಸಲಾಯಿತು. ಆಯೋಗ ನೀಡಿದ ವರದಿಯನ್ನು ಸಂಪುಟ ಸರ್ವಾನುಮತದಿಂದ ಒಪ್ಪಿಕೊಂಡಿತು. ಆಯೋಗವು ಎ, ಬಿ, ಸಿ, ಡಿ ಎಂದು ವರ್ಗೀಕರಣ ಮಾಡಿ ಕ್ರಮವಾಗಿ 6, 5, 5, 1 ಒಳಮೀಸಲಾತಿ ಶಿಫಾರಸು ಮಾಡಿತ್ತು ಕಾಂಗ್ರೆಸ್ ಸರ್ಕಾರ ಅದನ್ನು 6 6 5 ಎಂದು ಮಾಡಿತ್ತು ಎಡ ಮತ್ತು ಬಲ ಸಮುದಾಯಗಳಿಗೆ ತಲಾ ಶೇ 6 ಮತ್ತು ಕೊರಮ, ಕೊರಚ, ಲಂಬಾಣಿ ಮತ್ತು ಅಲೆಮಾರಿಗಳನ್ನು ಸೇರಿಸಿ ಶೇ5 ಮೀಸಲಾತಿ ನೀಡಲು ತೀರ್ಮಾನಿತ್ತು, ಇದಕ್ಕೆ ರಾಜ್ಯಪಾಲರೂ ಸಹಿ ಮಾಡಿದ್ದರು ಮತ್ತೆ ಗೊಂದಲ ಶುರುವಾಯಿತು. ಅಲೆಮಾರಿ ಸಮುದಾಯದವರು ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಈಗ ಎಲ್ಲ ಗೊಂದಲವನ್ನೂ ಪರಿಹರಿಸಲಾಗಿದೆ’.

ಚಡ್ಡಾ ಸೇರಿ ಎಎಪಿಯ 7 ರಾಜ್ಯಸಭಾ ಸದಸ್ಯರು ಬಿಜೆಪಿಗೆ
ಸಂದರ್ಭ: ರಾಘವ್ ಚಡ್ತಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್ ಸೇರಿ ಆಮ್ ಆದ್ಮ ಪಕ್ಷದ (ಎಎಪಿ) 7 ಮಂದಿ ರಾಜ್ಯಸಭಾ ಸದಸ್ಯರು ಪಕ್ಷ ತೊರೆದಿದ್ದು, ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.

  • ಎಎಪಿಯ 10 ಮಂದಿ ರಾಜ್ಯಸಭಾ ಸದಸ್ಯರಲ್ಲಿ 7 ಮಂದಿ ಪಂಜಾಬ್ ಮತ್ತು ಮೂವರು ದೆಹಲಿಗೆ ಸೇರಿದವರಾಗಿದ್ದಾರೆ ಒಂದು ಪಕ್ಷದ ಕನಿಷ್ಠ ಮೂರನೆಯ ಎರಡರಷ್ಟು ಶಾಸಕರು ಪಕ್ಷಾಂತರಗೊಂಡರಪಕ್ಷಾಂತರ ನಿಷೇಧ ಕಾನೂನಿನಡಿ ಅನರ್ಹತೆ ತಪ್ಪುತ್ತದೆ.

ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಲ

  • ಎಎಪಿಯ 7 ರಾಜ್ಯಸಭಾ ಸದಸ್ಯರು ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೆಸ್, ಎನ್‌ಡಿಎಗೆ ಮತ್ತಷ್ಟು ಬಡ್ತಿ ಬಂದಿದೆ. ಆದರೆ, ರಾಜ್ಯಸಭೆ ಯಲ್ಲಿ ಮೂರನೆಯ ಎರಡರಷ್ಟು ಬಹುಮತಕ್ಕೆ ಎನ್‌ಡಿಎಗೆ ಇನ್ನೂ 18 ಸದಸ್ಯರ ಕೊರತೆ ಇದೆ. ಮೇಲ್ಮನೆಯಲ್ಲಿ ಸರಳ ಬಹುಮತಕ್ಕೆ ಬಿಜೆಪಿಗೆ 10 ಸಂಸದರ ಕೊರತೆ ಇದೆ.
  • ರಾಜ್ಯಸಭೆಯಲ್ಲಿ ಎನ್‌ಡಿಎಗೆ 145 ಸದಸ್ಯರ ಬೆಂಬಲ ಇದೆ. ಒಟ್ಟು 244 ಸದಸ್ಯ ಬಲದ ರಾಜ್ಯಸಭೆಯಲ್ಲಿ ಮೂರನೆಯ ಎರಡರಷ್ಟು ಬಹುಮತಕ್ಕೆ 163 ಸದಸ್ಯ ಬಲ ಬೇಕಾಗುತ್ತದೆ.
  • ಬಿಜೆಪಿ ರಾಜ್ಯಸಭೆಯಲ್ಲಿ ಮೂರನೆಯ ಎರಡರಷ್ಟು ಬಹುಮತ ಪಡೆದುಕೊಂಡರೆ ಸಂವಿಧಾನ ತಿದ್ದುಪಡಿ ಅಗತ್ಯವಿರುವ ಕೆಲವು ನಿರ್ಣಾಯಕ ಮಸೂದೆಗಳನ್ನು ಜಾರಿಗೊಳಿಸುವುದು ಸುಲಭವಾಗಲಿದೆ.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Sources: Prajavani

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments