Thu. Apr 16th, 2026

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಮುಖ್ಯಮಂತ್ರಿಯಾಗಿ ಸಾಮ್ರಾಟ್ ಪ್ರಮಾಣ
ಸಂದರ್ಭ:
ಬಿಹಾರದ 24ನೇ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅವರು ಪ್ರಮಾಣವಚನ ಸ್ವೀಕರಿಸಿದರು.

  • ಈ ಮೂಲಕ ಮೊದಲ ಬಾರಿಗೆ ಬಿಜೆಪಿಯ ನಾಯಕರೊಬ್ಬರು ರಾಜ್ಯದ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ರಾಜ್ಯಪಾಲರಾದ ಸೈಯದ್ ಅತಾ ಹಸನ್ ಅವರು ಸಾಮ್ರಾಟ್(57) ಅವರಿಗೆ ಲೋಕ ಭವನದಲ್ಲಿ ಪ್ರಮಾಣವಚನ ಬೋಧಿಸಿದರು.
  • ಇದೇ ವೇಳೆ, ಜೆಡಿಯು ನಾಯಕರಾದ ಬಿಜೇಂದ್ರ ಪ್ರಸಾದ್ ಯಾದವ್ ಮತ್ತು ವಿಜಯ್ ಕುಮಾರ್ ಚೌಧರಿ ಪ್ರಮಾಣವಚನ ಸ್ವೀಕರಿಸಿದರು. ಈ ಇಬ್ಬರಿಗೂ ಉಪ ಮುಖ್ಯಮಂತ್ರಿ ಸ್ಥಾನ ಕಲ್ಪಿಸಲಾಗಿದೆ.
  • ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿದ್ದು, ಜೆಡಿಯು ಮುಖ್ಯಸ್ಥ ನಿತೀಶ್ ಮುಖ್ಯಮಂತ್ರಿಯಾಗಿದ್ದಾಗ ಸಾಮ್ರಾಟ್ ಚೌಧರಿ ಮತ್ತು ಬಿಜೆಪಿಯ ಇನ್ನೊಬ್ಬ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರು ಉಪಮುಖ್ಯಮಂತ್ರಿಗಳಾಗಿದ್ದರು. ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ಜೆಡಿಯು ಪಾಲಾಗಿದೆ.
  • ಸಾಮ್ರಾಟ್ ಚೌಧರಿ ಅವರು ಗೃಹ ಕಂದಾಯ ಸೇರಿದಂತೆ 30 ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

‘ಟೈಮ್’ ಪ್ರಭಾವಿಗಳ ಪಟ್ಟಿಯಲ್ಲಿ ಪಿಚೈ, ರಣಬೀರ್ ಕಪೂರ್
ಸಂದರ್ಭ:
ನ್ಯೂಯಾರ್ಕ್ (ಪಿಟಿಐ): ಟೈಮ್ ನಿಯತಕಾಲಿಕ 2026ರ ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

  • ಪಟ್ಟಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚ್, ಮೈಕಲಿನ್ ಸ್ಟ್ರಾರ್ ಪ್ರಶಸ್ತಿ ವಿಜೇತ ಬಾಣಸಿಗ ವಿಕಾಸ್ ಖನ್ನ, ನಟ ರಣಬೀರ್ ಕಪೂರ್, ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ಮಾನಿ, ಯೂಟ್ಯೂಬ್ ಮುಖ್ಯಸ್ಥ ನೀಲ್ ಮೋಹನ್ ಮತ್ತು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಸ್ಥಾನ ಪಡೆದಿದ್ದಾರೆ.
  • ಟೈಮ್ ಬಿಡುಗಡೆ ಮಾಡಿರುವ ಸಮಗ್ರ ಪಟ್ಟಿಯಲ್ಲಿ ಜಾಗತಿಕ ಸಾಧಕರು, ನಾಯಕರು, ಉದ್ಯಮ ದಿಗ್ಗಜರು, ಕಲಾವಿದರು, ಸಂಶೋಧಕರು ಮತ್ತು ಗಣ್ಯರು ಇದ್ದಾರೆ ಪಟ್ಟಿಯಲ್ಲಿ ಸ್ಥಾನ ಪಡೆದವರು ಸಂಸ್ಕೃತಿಯನ್ನು ಅಭೂತಪೂರ್ವ ರೀತಿಯಲ್ಲಿ ಬದಲಾಯಿಸಿದ್ದಾರೆ ಎಂದು ಟೈಮ್ ಒತ್ತಿ ಹೇಳಿದೆ.

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಮಹಿಳಾ ವಿಭಾಗದಲ್ಲಿ ಅಗ್ರಸ್ಥಾನ: ವೈಶಾಲಿ ಮುಡಿಗೆ ಕಿರೀಟ
ಸಂದರ್ಭ: ಗ್ರಾಂಡ್‌ಮಾಸ್ಟರ್ ಆರ್. ವೈಶಾಲಿ ಅವರು ರಷ್ಯಾದ ಕ್ಯಾತರಿನಾ ಲಾಗ್ಲೆ ಅವರನ್ನು ಅಂತಿಮ ಸುತ್ತಿನಲ್ಲಿ ಸೋಲಿಸಿ ಕ್ಯಾಂಡಿಡೇಟ್ಸ್ ಟೂರ್ನಿಯ ಮಹಿಳಾ ವಿಭಾಗದ ಚಾಂಪಿಯನ್ ಆದರು. ಅವರು ಈ ಸಾಧನೆಗೆ ಪಾತ್ರರಾದ ಭಾರತದ ಮೊದಲ ಆಟಗಾರ್ತಿ.

  • ಟೂರ್ನಿ ಗೆಲ್ಲುವ ಮೂಲಕ ಚೆನ್ನೈನ 24 ವರ್ಷ ವಯಸ್ಸಿನ ಆಟಗಾರ್ತಿ, ವಿಶ್ವ ಚಾಂಪಿಯನ್ ಜು ವೆನ್‌ಜುನ್ (ಚೀನಾ) ಅವರಿಗೆ ‘ಚಾಲೆಂಜರ್’ ಆಗುವ ಅರ್ಹತೆ ಪಡೆದರು. ಈ ವರ್ಷದ ಕೊನೆಗೆ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್ ಹಣಾಹಣಿಗೆ ತಾಣ ಮತ್ತು ದಿನಾಂಕ ಇನ್ನಷ್ಟೇ ನಿಗದಿ ಆಗಬೇಕಾಗಿದೆ.
  • ಈ ಟೂರ್ನಿಯ ಓಪನ್ ವಿಭಾಗದಲ್ಲಿ ಪ್ರಶಸ್ತಿಗೆ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದ ಆರ್.ಪ್ರಜ್ಞಾನಂದ ನಿರಾಸೆ ಮೂಡಿಸಿದರು. ಆದರೆ ಅಕ್ಕ ವೈಶಾಲಿ ಆ ನಿರಾಸೆ ಮರೆಸುವಂತೆ ಆಡಿ ಮಿಂಚಿದರು. ಕೊನೆಯ ಸುತ್ತಿನಲ್ಲಿ ಲಾಗೊ (6.5) ಅವರನ್ನು 48 ನಡೆಗಳಲ್ಲಿ ಅಧಿಕಾರಯುತವಾಗಿ ಮಣಿಸಿದರು. ಆಗ ಅವರ ಬಳಿ ‘ಕ್ಲೀನ್ ಜೊತೆ ಎರಡು ‘ರೂಕ್’ಗಳು ಉಳಿದಿದರೆ, ಲಾಗೊ ಬಳಿ ‘ಕ್ರೀನ್ ಮತ್ತು ‘ಬಿಷಪ್’ ಉಳಿದಿದ್ದವು.
  • ಅಂತಿಮ ಸುತ್ತಿನ ಗೆಲುವಿನ ನಂತರ 8.5 ಅಂಕ ಗಳಿಸಿದ ವೈಶಾಲಿ ಅರ್ಧ ಪಾಯಿಂಟ್ ಅಂತರದಿಂದ ಒಂಟಿಯಾಗಿ ಅಗ್ರಸ್ಥಾನ ಪಡೆದರು. ಕಜಾಕಸ್ತಾನದ ಬಿಬಿಸಾರ ಅಸೌಬಯೇವಾ (8) ಎರಡನೇ ಸ್ಥಾನ ಪಡೆದರು. ಅವರು ಅಂತಿಮ ಸುತ್ತಿನಲ್ಲಿ ಭಾರತದ ದಿವ್ಯಾ ದೇಶಮುಖ್ (5.5) ವಿರುದ್ಧ ಗೆಲುವಿಗೆ ಯತ್ನಿಸಿ ವಿಫಲರಾದರು.
  • ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚೈನಾ ಮತ್ತು ಚೀನಾದಝು ಜಿನೆರ್ (ತಲಾ 7.5) ಅವರು ಮೂರನೇ ಸ್ನಾನ ಹಂಚಿಕೊಂಡರು.ವೈಶಾಲಿ ಸಾಧನೆಯಿಂದ ವಿಶ್ವ ಚೆಸ್‌ನಲ್ಲಿ ಭಾರತದ ವರ್ಚಸ್ಸು ಇನ್ನಷ್ಟು ಹೆಚ್ಚಿದೆ.
  • ಓಪನ್ ವಿಭಾಗದಲ್ಲಿ ಉದ್ರೇಕಿಸ್ತಾನದ ಜಾವೊಖಿರ್ ಸಿಂದರೋಪ್ (10 ಪಾಯಿಂಟ್ಸ್) ಒಂದು ಸುತ್ತು ಮೊದಲೇ ಚಾಂಪಿಯನ್ ಆಗಿದ್ದು, ಅವರು ಕೊನೆಯ ಸುತ್ತಿನಲ್ಲಿ ಚೀನಾದ ವೀ ಯಿ (7) ಜೊತೆ ಡ್ರಾ ಮಾಡಿಕೊಂಡರು.
  • ಪ್ರಜ್ಞಾನಂದ (6) ಕೊನೆಯ ಸುತ್ತಿನಲ್ಲಿ ಅಮೆರಿಕದ ಹಿಕಾರು ನಕಾಮುರ (6.5) ಜೊತೆ ಡ್ರಾ ಮಾಡಿಕೊಂಡರು. ಜರ್ಮನಿಯ ಮಥಾಯಸ್ ಬೂಬಾಮ್ (7) ಅವರನ್ನು ಸೋಲಿಸಿದ ನೆದರ್ಲೆಂಡಪ್ಪನ ಅನಿಶ್ ಗಿರಿ (8.5) ಎರಡನೇ ಸ್ನಾನ ಪಡೆದರು.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ
ಪ್ರಮುಖ ಯೋಜನೆಗಳು

ಭಾನುಕೀರ್ತಿ ಭಟ್ಟಾರಕರಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ: ಸಿದ್ದರಾಮರಿಗೆ ‘ಬಸವ’, ದೇವನೂರಗೆ ‘ಪಂಪ’
ಸಂದರ್ಭ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2025-26ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಘೋಷಿಸಿದೆ.

  • ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಕೌಠಾ(ಬಿ) ಬಸವ ಯೋಗಾಶ್ರಮದ ಬೆಲ್ಲಾಳ ಸಿದ್ಧರಾಮ ಶರಣರು, ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ’ಗೆ ಮಂಡ್ಯದ ಕಂಬದಹಳ್ಳಿಯ ಜೈನ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಭಾಜನರಾಗಿದ್ದಾರೆ. ಈ ಎರಡೂ ಪ್ರಶಸ್ತಿಗಳು ತಲಾ ₹10 ಲಕ್ಷ ನಗದು ಒಳಗೊಂಡಿವೆ.
  • ಪಂಪ ಪ್ರಶಸ್ತಿಗೆ ಸಾಹಿತಿ ದೇವನೂರ ಮಹಾದೇವ (ಮೈಸೂರು), ‘ಸಂಗೊಳ್ಳಿ, ರಾಯಣ್ಣ ಪ್ರಶಸ್ತಿ’ಗೆ ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ (ಧಾರವಾಡ), ‘ಅಕ್ಕಮಹಾದೇವಿ ಪ್ರಶಸ್ತಿ’ಗೆ ಸಾಮಾಜಿಕ ಹೋರಾಟಗಾರ್ತಿಕೆ. ನೀಲಾ (ಕಲಬುರಗಿ), ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿ’ಗೆ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ (ತುಮಕೂರು) ಅವರನ್ನು ಆಯ್ಕೆ ಮಾಡಲಾಗಿದೆ.
  • ‘ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಲೇಖಕ ಅಲ್ಲಾಬಕ್ಷ ಮೀರಾಸಾಹೇಬ ಮಿರ್ಜಿ (ವಿಜಯಪುರ), ‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ಗೆ ಲೇಖಕಿ ಸುಕನ್ಯಾ ಮಾರುತಿ (ಬಳ್ಳಾರಿ), ‘ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ’ಗೆ ಕಲಾವಿದೆ ಜಿ.ವಿ. ಶಾರದಾ (ತುಮಕೂರು), ‘ಬಿ.ವಿ. ಕಾರಂತ ಪ್ರಶಸ್ತಿ’ಗೆ ರಂಗಕರ್ಮಿ ಪ್ರಸನ್ನ (ಶಿವಮೊಗ್ಗ) ಹಾಗೂ ‘ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ’ಗೆ ಸಾಹಿತಿ ಗಂಗಾರಾಂ ಚಂಡಾಳ (ಕೋಲಾರ) ಆಯ್ಕೆಯಾಗಿದ್ದಾರೆ.
  • ಕಲಾ ಪ್ರಶಸ್ತಿ ವಿಭಾಗದಲ್ಲಿ ‘ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ಗೆ ಕಲಾವಿದ ವಿ.ಹರಿರಾಮ್ (ಬೆಂಗಳೂರು), ‘ಜಕಣಾಚಾರಿ ಪ್ರಶಸ್ತಿ’ಗೆ ಅಶೋಕ್ ಗುಡಿಗಾರ್ (ಶಿವಮೊಗ,), ‘ಜಾನಪದ ಶ್ರೀ ಪ್ರಶಸ್ತಿ’ಗೆ ಕಲಾವಿದರಾದ ಎಂ. ಮಹದೇವಸ್ವಾಮಿ (ಮಂಡ್ಯ) ಹಾಗೂ ಬಿ. ಲಕ್ಷ್ಮಣ ಗುತ್ತೇದಾರ (ಯಾದಗಿರಿ) ಆಯ್ಕೆಯಾಗಿದ್ದಾರೆ.
  • ಸಂಗೀತ-ನೃತ್ಯ ಪ್ರಶಸ್ತಿ ವಿಭಾಗದಲ್ಲಿ ‘ಕುಮಾರವ್ಯಾಸ ಪ್ರಶಸ್ತಿ’ಗೆ ಕಲ್ಲಿನಾಥ ಶಾಸ್ತ್ರಿ (ಗದಗ) ಹಾಗೂ ‘ಶಾಂತಲಾ ನಾಟ್ಯರಾಣಿ ಪ್ರಶಸ್ತಿ’ಗೆ ಪ್ರತಿಭಾ ಪ್ರಹ್ಲಾದ್ (ಮೈಸೂರು) ಭಾಜನರಾಗಿದ್ದಾರೆ ಈ ಪ್ರಶಸ್ತಿಗಳು ತಲಾ ₹5 ಲಕ್ಷ ನಗದು ಒಳಗೊಂಡಿವೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

2011ರ ಜನಗಣತಿಯನ್ನು ಆಧಾರವಾಗಿಸಿಕೊಂಡ ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಭಾರತದ ಪ್ರತಿನಿಧಿತ್ವ, ಪ್ರಾದೇಶಿಕ ಸಮತೋಲನ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಉತ್ತರ ಮತ್ತು ದಕ್ಷಿಣ ರಾಜ್ಯಗಳ ಹಿನ್ನೆಲೆಯಲ್ಲಿಚರ್ಚಿಸಿ.

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ರಾಜ್ಯಗಳ ಮೂಲಸೌಕರ್ಯ, ನೀರಾವರಿ, ಸಾರಿಗೆ ಮತ್ತು ಹಣಕಾಸು ನೆರವು ಸಂಬಂಧಿತ ಬೇಡಿಕೆಗಳು ಕೇಂದ್ರ–ರಾಜ್ಯ ಸಂಬಂಧಗಳ ಸ್ವಭಾವವನ್ನು ಹೇಗೆ ಪ್ರತಿಬಿಂಬಿಸುತ್ತವೆ? ಕರ್ನಾಟಕದ ಉದಾಹರಣೆಯೊಂದಿಗೆ ಚರ್ಚಿಸಿ.

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಸಗಟು ಹಣದುಬ್ಬರ 3 ವರ್ಷಗಳ ಗರಿಷ್ಠ
ಸಂದರ್ಭ: ಇಂಧನ, ವಿದ್ಯುತ್ ಹಾಗೂ ತಯಾರಿಸಿದ ಉತ್ಪನ್ನಗಳ ಬೆಲೆ ಯಲ್ಲಿನ ಹೆಚ್ಚಳದ ಪರಿಣಾಮವಾಗಿ ಸಗಟು ಹಣದುಬ್ಬರ ಪ್ರಮಾಣವು ಮಾರ್ಚ್ ತಿಂಗಳಲ್ಲಿ ಶೇ 3.88ಕ್ಕೆ ತಲು ಪಿದೆ. ಇದು ಮೂರು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ದಾಖಲಾಗಿರುವ ಗರಿಷ್ಠ ಮಟ್ಟದ ಸಗಟು ಹಣದುಬ್ಬರ ಪ್ರಮಾಣ.

  • ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ದರವು ಸತತ ಐದನೆಯ ತಿಂಗಳಿನಲ್ಲಿಯೂ ಏರಿಕೆ ಆಗಿರುವುದನ್ನು ಕೇಂದ್ರ ಕೈಗಾರಿಕಾ ಸಚಿವಾಲಯ ಬುಧವಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳುತ್ತಿವೆ.
  • ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಆರಂಭವಾದ ನಂತರದಲ್ಲಿ ಜಾಗತಿಕ ಮಟ್ಟದಲ್ಲಿ ಸರಕುಗಳ ಬೆಲೆಯು ದುಬಾರಿ ಆಗಿರು ವುದನ್ನು ಇಂಧನ ಬೆಲೆ ಹೆಚ್ಚಾಗಿರುವು ದನ್ನು ಮಾರ್ಚ್ ತಿಂಗಳ ಸಗಟು ಹಣದುಬ್ಬರ ಹೆಚ್ಚಳ ಆಗಿರುವುದು ಸೂಚಿಸುತ್ತಿದೆ ಫೆಬ್ರುವರಿಯಲ್ಲಿ ಸಗಟು ಹಣದುಬ್ಬರ ಪ್ರಮಾಣ ಶೇ 2.13ರಷ್ಟು ಕಳೆದ ವರ್ಷದ ಮಾರ್ಚ್‌ನಲ್ಲಿ ಶೇ 2.25ರಷ್ಟು ಇತ್ತು.
  • ‘ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಇತರ ತಯಾರಿಕೆಗಳು, ಆಹಾರೇತರ ವಸ್ತುಗಳು, ಮೂಲ ಲೋಹಗಳ ತಯಾರಿಕೆ ಮತ್ತು ಆಹಾರ ಉತ್ಪನ್ನಗಳ ಬೆಲೆ ಏರಿಕೆಯು ಈ ವರ್ಷದ ಮಾರ್ಚ್‌ನಲ್ಲಿ ಹಣದುಬ್ಬರ ಹೆಚ್ಚಾಗಿರುವುದಕ್ಕೆ ಮುಖ್ಯ ಕಾರಣ’ ಎಂದು ಕೈಗಾರಿಕಾ ಸಚಿವಾಲಯ ಹೇಳಿದೆ.
  • ‘ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಯು ಹೆಚ್ಚಿನ ಮಟ್ಟದಲ್ಲಿದೆ. ಹಂತಹಂತವಾಗಿ ಇದರ ಪರಿಣಾಮವು ಇತರ ಸರಕುಗಳ ಬೆಲೆಯ ಮೇಲೆಯೂ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಮುಂದಿನ ದಿನಗಳಲ್ಲಿಯೂ ಸಗಟು ಹಣದುಬ್ಬರ ಪ್ರಮಾಣ ಹೆಚ್ಚಳ ಆಗುತ್ತದೆ ಎಂಬುದು ನಮ್ಮ ನಿರೀಕ್ಷೆ’ ಎಂದು ಬಾಕ್ಸಸ್ ಸಂಸ್ಥೆ ಅಂದಾಜು ಮಾಡಿದೆ.
  • ಆರ್‌ಬಿಐ ರೆವೊ ದರವನ್ನು ಈ ವರ್ಷ ದುದ್ದಕ್ಕೂ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳ ಲಿದೆ ಎಂದೂ ಅದು ಅಂದಾಜಿಸಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಕೋಟ್ಯಂತರ ಜನರ ನಂಬಿಕೆ ತಪ್ಪು ಎನ್ನುವುದು ಕಷ್ಟ: ‘ಸುಪ್ರೀಂ’
ಸಂದರ್ಭ: ಕೋಟ್ಯಂತರ ಜನರ ನಂಬಿಕೆ ಗಳನ್ನು ತಪ್ಪು ಅಥವಾ ಸಮರ್ಪಕವಲ್ಲದ್ದು ಎಂದು ಘೋಷಿಸುವುದು ತುಂಬಾ ಕಷ್ಟಕರವಾದ ಕೆಲಸ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

  • ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಮತ್ತು ಬಹು ಧರ್ಮೀಯರು ಆಚರಿಸುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ಹೇಳಿಕೆ ನೀಡಿತು.
  • ‘ಹಲವು ನಂಬಿಕೆಗಳು ಹಾಗೂ ಆಚರಣೆಗಳನ್ನು ಆಧರಿಸಿ ಧರ್ಮ ಎಂದು ನಿರ್ಧರಿಸಲಾಗಿರುತ್ತದೆ. ನಿರ್ದಿಷ್ಟ ಸಮುದಾಯಗಳು ಅನುಸರಿಸುವ ಇವುಗಳು ತಪ್ಪೋ ಸರಿಯೋ ಎಂದು ನ್ಯಾಯಾಲಯ ಹೇಳಲು ಸಾಧ್ಯವಿಲ್ಲ’ ಎಂದು ತಿರುವಾಂಕೂರು ದೇವಸ್ಥ ಮಂಡಳಿಯ (ಟಿಡಿಬಿ) ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎ.ಎಂ. ಸಂಘ ಪ್ರತಿಪಾದಿಸಿದರು.
  • ಸಂವಿಧಾನದ 25 (2) (ಬಿ) ವಿಧಿಯ ಅನ್ವಯ ಎಲ್ಲ ಹಿಂದೂಗಳು ದೇವಸ್ಥಾನ ಪ್ರದೇಶಬಹುದು ಎಂದು ಹೇಳುವಂತೆಯೇ, 26 (ಬಿ) ವಿಧಿಯಂತೆ ನಿರ್ದಿಷ್ಟ ಕಟ್ಟುಪಾಡುಗಳನ್ನು ದೇವಸ್ಥಾನದ ಪ್ರದೇಶಕ್ಕೆ ಹಾಕಿಕೊಳ್ಳುವ ಅವಕಾಶವನ್ನೂ ಕಲ್ಪಿಸಬಹುದು ಎಂದು ಸಂಖ್ಯೆ ಅವರು ವಾದಿಸಿದರು.
  • ಸಂವಿಧಾನದ 25 (2) (ಬಿ) ವಿಧಿಯನ್ನು ಉಲ್ಲೇಖಿಸುವಾಗ ಸಾರ್ವಜನಿಕ ಆದೇಶ, ನೈತಿಕತೆ ಅಥವಾ ಆರೋಗ್ಯಎಂಬ ಪದಗಳನ್ನು ಬಳಸುವುದರ ಬದಲು ಸಾಮಾಜಿಕ ಸುಧಾರಣೆಎಂಬ ಪದಪುಂಜ ಉಪಯೋಗಿಸುವುದು ಸೂಕ್ತಎಂದು ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು ಸಲಹೆ ನೀಡಿತು
  • ಸಾಮಾಜಿಕ ಸುಧಾರಣೆಯ ನೆವದಲ್ಲಿ ಧರ್ಮವನ್ನು ಟೊಳ್ಳಾಗಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಹೇಳಿದ್ದನ್ನು ಸಂಘ ಒಪ್ಪಿಕೊಂಡರು ಆದರೆ ಶತಮಾನಗಳಿಂದ ನಿರ್ದಿಷ್ಟ ಆಚರಣೆ ಗಳನ್ನು ನಡೆಸಿಕೊಂಡು ಬಂದಿರುವ ಶಬರಿಮಲೆ ಗುರುವಾಯೂರು ದೇಗುಲಗಳ ವಿಧಿ-ವಿಧಾನಗಳನ್ನು ಪ್ರಶ್ನಿಸಿ ದಿಢೀರ್ ಪಿಐಎಲ್ ಹಾಕುವುದು ಸರಿಯಲ್ಲ ಎಂದು ವಾದಿಸಿದರು.

ಮತಪತ್ರ ಬಳಕೆ: ರಾಜ್ಯಪಾಲರ ಅಸ್ತು
ಸಂದರ್ಭ:
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಬದಲಿಗೆ ಮತಪತ್ರ (ಬ್ಯಾಲೆಟ್) ಬಳಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರೂಪಿಸಿದ್ಧ ಮಸೂದೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಂಕಿತ ಹಾಕಿದ್ದಾರೆ.

  • ಈ ಉದ್ದೇಶಕ್ಕಾಗಿ ತಂದಿದ್ದ ಮಸೂದೆಗೆ ವಿಧಾನಮಂಡಲ ಅನುಮೋದನೆ ನೀಡಿತ್ತು. ರಾಜ್ಯಪಾಲರ ಅಂಕಿತದೊಂದಿಗೆ ಇದು ಕಾಯ್ಕೆಯಾಗಲಿದ್ದು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ಅನುವಾಗಲಿದೆ.
  • ಸಂವಿಧಾನದ 326ನೇ ವಿಧಿ ಅಡಿ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಮುಖ್ಯವಾಗಿ, ಮತದಾರರ ಮತಪತ್ರದ ಗೋಪ್ಯತೆ ಖಚಿತಪಡಿಸಿಕೊಳ್ಳಲು ಮತ್ತು ಮತದಾರರನ್ನು ದಬ್ಬಾಳಿಕೆ, ಬೆದರಿಕೆ ಮತ್ತು ಅನಗತ್ಯ ಪ್ರಭಾವದಿಂದ ರಕ್ಷಿಸಿ. ಆ ಮೂಲಕ ಪ್ರಜಾವುಭುತ್ವ ಪ್ರಕ್ರಿಯೆಯ ವಾವಿತ್ರ್ಯವನ್ನು ಸುರಕ್ಷಿತಗೊಳಿಸುವುದು ರಾಜ್ಯ ಸರ್ಕಾರದ ಉದ್ದೇಶ, ಇವಿಎಂ ಕಾರ್ಯನಿರ್ವಹಣೆಯ ಕುರಿತು ಕಳವಳ ವ್ಯಕ್ತವಾಗಿದ್ದು ಸಾರ್ವಜನಿಕ ನಂಬಿಕೆ ಮರುಸ್ಥಾಪಿಸಲು ಸದೃಢ ರಹಸ್ಯ ಮತದಾನ ಪದ್ಧತಿಗೆ ಮರಳುವುದು ಅವಶ್ಯಕ ಎಂದೂ ತಿದ್ದುಪಡಿ ಮಸೂದೆ ಪ್ರಸ್ತಾಪಿಸಿತ್ತು
  • ಜಿಲ್ಲಾ ಪಂಚಾಯತಿಯ ಪ್ರತಿಯೊಂದು ಮತ ಕ್ಷೇತ್ರದಲ್ಲಿ ರಾಜ್ಯ ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳವಟ್ಟು ಮತದಾರರ ಪಟ್ಟಿ ಸಿದ್ದ ಪಡಿಸುವ ಹೊಣೆಯನ್ನು ಉಪ ವಿಭಾಗಾಧಿಕಾರಿಗೆ ನೀಡಲಾಗಿದೆ.
  • ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ಆಧರಿಸಿ ಸ್ಥಳೀಯ ಸಂಸ್ಥೆಗಳ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿತ್ತು ಅದನ್ನು ಕೈಬಿಡಲಾಗಿದೆ. ರಾಜ್ಯ ಚುನಾವಣಾ ಆಯೋಗವೇ ಪ್ರತ್ಯೇಕವಾಗಿ ಮತದಾರರ ಪಟ್ಟಿ ಸಿದ್ಧಪಡಿಸುವ ಅವಕಾಶ ಸಿಗಲಿದೆ.

ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ: 2011ರ ಜನಗಣತಿ ಅಧಾರದಲ್ಲಿ ಕ್ರಮ: ಉತ್ತರದ ರಾಜ್ಯಗಳಿಗೆ ಲಾಭ- ದಕ್ಷಿಣಕ್ಕೆ ಹೊಡೆತ
ಸಂದರ್ಭ:
2011ರ ಜನಗಣತಿ ಆಧಾರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ನಡೆದಾಗ ಲೋಕಸಭೆಯಲ್ಲಿ ದಕ್ಷಿಣದ ಐದು ರಾಜ್ಯಗಳ ಪಾಲು ಶೇ 20.1ರಿಂದ ಶೇ 18ಕ್ಕೆ ಕುಸಿಯಲಿದೆ. ಬಿಹಾರ ಹಾಗೂ ಉತ್ತರ ಪ್ರದೇಶ ರಾಜ್ಯಗಳ ವಾಲು ಶೇ 221ರಿಂದ ಶೇ 25 1ಕ್ಕೆ ಏರಿಕೆಯಾಗಲಿದೆ.

  • ಕೇಂದ್ರ ಸರ್ಕಾರವು ಮಂಡಿಸಲಿರುವ ‘ಸಂವಿಧಾನ (131ನೇ ತಿನ್ನುವಡಿ) ಮಸೂದೆ- 2026’ರ ಪ್ರಕಾರ, ಸಂಸದರ ಸಂಖ್ಯೆ ಗರಿಷ್ಠ 850ಕ್ಕೆ ಏರಿಕೆಯಾದರೆ, ಲೋಕಸಭೆಯಲ್ಲಿ ರಾಜ್ಯಗಳ ಅನುಪಾತದಲ್ಲಿ ಗಣನೀಯವಾಗಿ ಬದಲಾವಣೆ ಆಗಲಿದೆ ಉತ್ತರದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹಾಗೂ ಅನುಪಾತದಲ್ಲಿ ಭಾರಿ ಹೆಚ್ಚಳವಾದರೆ, ದಕ್ಷಿಣದ ರಾಜ್ಯಗಳ ಅನುವಾತ ಕಡಿಮೆ ಆಗಲಿದೆ.
  • ಈ ಸಂವಿಧಾನ ತಿದ್ದುಪಡಿ ಮಸೂದೆ ಬಗ್ಗೆ ವಿಪಕ್ಷಗಳ ನಾಯಕರು ಹಾಗೂ ದಕ್ಷಿಣದ ರಾಜ್ಯಗಳ ಜನಪ್ರತಿನಿಧಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಏಕೆಂದರ, ಶೇ 33 ಮಹಿಳಾ ಕೋಟಾವನ್ನು ಜಾರಿಗೊಳಿಸಲು ಜನಸಂಖ್ಯೆಯನ್ನು ಆಧಾರವಾಗಿ ಪರಿಗಣಿಸುವ ಅಸ್ತಿತ್ವದಲ್ಲಿರುವ ನಿಬಂಧನೆಯಲ್ಲಿ ಯಾವುದೇ ಬದಲಾವಣೆಯನ್ನು ಈ ಮಸೂದೆ ಪ್ರಸ್ತಾಪಿಸುವುದಿಲ್ಲ. 2011ರ ಜನಗಣತಿಯ ಆಧಾರದಲ್ಲೇ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ವಿಪಕ್ಷಗಳ ಆರೋಪ ತಳ್ಳಿ ಹಾಕಿರುವ ಕೇಂದ್ರ ಸರ್ಕಾರ, ದಕ್ಷಿಣದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಳ ಆಗಲಿದೆ ಎಂದೂ ಸ್ಪಷ್ಟಪಡಿಸಿದೆ.
  • ಜನಸಂಖ್ಯಾ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿರುವ ದಕ್ಷಿಣದ ರಾಜ್ಯಗಳ ಹಿತಾಸಕ್ತಿಗಳಿಗೆ ಈ ಮಸೂದೆ ಮಾರಕವಾಗಿದೆ ಎಂದು ವಿರೋಧ ಪಕ್ಷಗಳು ದೂಷಿಸಿವೆ. ಪಂಜಾಬ್, ಹರಿಯಾಣ ಹಾಗೂ ಈಶಾನ್ಯ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳು ಹೆಚ್ಚಿನ ಸ್ನಾನಗಳನ್ನು ಹಾಗೂ ಅನುಪಾತಗಳನ್ನು ವಡೆಯಲಿವೆ.
  • ಸಂವಿಧಾನ (131ನೇ ತಿದ್ದುಪಡಿ) ಮಸೂದೆ– 2026 81(2)() ಪರಿಚ್ಛೇದಕ್ಕೆ ತಿದ್ದುಪಡಿಯನ್ನು ಪ್ರಸ್ತಾಪಿಸುವುದಿಲ್ಲ. ಪರಿಚ್ಛೇದದ ಪ್ರಕಾರ ರಾಜ್ಯದ ಕ್ಷೇತ್ರ ಸಂಖ್ಯೆ ಮತ್ತು ಜನಸಂಖ್ಯೆಯ ನಡುವಿನ ಅನುಪಾತವು ಸಾಧ್ಯವಾದಷ್ಟು ಎಲ್ಲ ರಾಜ್ಯಗಳಿಗೆ ಒಂದೇ ಆಗಿರುವ ರೀತಿಯಲ್ಲಿ ವ್ರತಿ ರಾಜ್ಯಕ್ಕೂ ಲೋಕಸಭಾ ಸ್ಥಾನಗಳನ್ನು ಹಂಚಿಕೆ ಮಾಡಬೇಕು.
  • ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರವು ಹಲವು ಪಕ್ಷಗಳ ಜತೆಗೆ ಸಮಾಲೋಚನೆ ನಡೆಸಿ ವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಿತ್ತು ಲೋಕಸಭೆಯಲ್ಲಿನ ಸ್ಥಾನಗಳ ಸಂಖ್ಯೆಯನ್ನು ಎಲ್ಲ ರಾಜ್ಯಗಳಿಗೆ ಶೇ 50ರಷ್ಟು ಹೆಚ್ಚಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ, ಇದಕ್ಕೆ ಕಾಂಗ್ರೆಸ್, ಡಿಎಂಕೆ, ಸಿಪಿಎಂ ಮತ್ತು ಎಎಪಿಯಂತಹ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

‘ಕಾಯಂ ಸದಸ್ಯತ್ವ ಸಂಖ್ಯೆ ಹೆಚ್ಚಿಸಿ’
ಸಂದರ್ಭ:
ವಿಶ್ವಸಂಸ್ಥೆ (ಪಿಟಿಐ): ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರುವುದಾದರೆ, ಪರಮಾಧಿಕಾರ ಹೊಂದಿರುವ ಕಾಯಂ ಸದಸ್ಯರ ಸಂಖ್ಯೆಯನ್ನು ಅಧಿಕಗೊಳಿಸಬೇಕು. ಇಲ್ಲವಾದಲ್ಲಿ ವಿಶ್ವಸಂಸ್ಥೆಯಲ್ಲಿ ಈಗಾಗಲೇ ಇರುವ ಅಧಿಕಾರದ ಅಸಮಾನತೆಯು ಇನ್ನಷ್ಟು ಹೆಚ್ಚಾಗಲಿದೆ’ ಎಂದು ಭಾರತ ಪ್ರತಿಪಾದಿಸಿದೆ.

  • ಸರ್ಕಾರಗಳ ನಡುವಿನ ಮಾತುಕತೆ (ಐಜಿಎನ್) ಸಭೆಯಲ್ಲಿ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಆಗಿರುವ ಪರ್ವತನೇನಿ ಹರೀಶ್ ಮಾತನಾಡಿದರು. ಕಾಯಂ ಸದಸ್ಯತ್ವ ನೀಡಬೇಕು ಎಂಬುದು ಭಾರತದ ಹಲವು ದಶಕಗಳ ಬೇಡಿಕೆಯಾಗಿದೆ.
  • ‘ಭದ್ರತಾ ಮಂಡಳಿಯಲ್ಲಿ ಸಾಂಸ್ಥಿಕ ಸ್ವರೂಪದಲ್ಲಿ ಬದಲಾವಣೆಗಳು ಆಗಬೇಕಿದೆ. ಹಳೆಯ ಸ್ವರೂಪಕ್ಕೆ 80 ವರ್ಷ ಕಳೆದಿದೆ ಈ ಸ್ವರೂಪವು ಈಗಿನ ಕಾಲದ ಬದಲಾದ ಅಂತರರಾಷ್ಟ್ರೀಯ ರಾಜಕಾರಣಕ್ಕೆ ಒಗ್ಗುವುದಿಲ್ಲ

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ಪ್ರಕರಣ: ಕೈಗಾರಿಕಾ ಘಟಕದಲ್ಲಿ ಆಹಾರ ಸುರಕ್ಷತೆ ಮತ್ತು ಆಡಳಿತಾತ್ಮಕ ನೈತಿಕತೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯೊಂದರಲ್ಲಿ ಇರುವ ಏರೋಸ್ಪೇಸ್ ಕಂಪನಿಯಲ್ಲಿ ಮಧ್ಯಾಹ್ನದ ಊಟ ಸೇವಿಸಿದ ನಂತರ 90ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥರಾಗುತ್ತಾರೆ. ಅವರಿಗೆ ವಾಂತಿ, ಭೇದಿ, ಹೊಟ್ಟೆನೋವು ಮುಂತಾದ ಲಕ್ಷಣಗಳು ಕಾಣಿಸುತ್ತವೆ. ಒಟ್ಟು ಸುಮಾರು 722 ಕಾರ್ಮಿಕರು ಆಹಾರ ಸೇವಿಸಿದ್ದರೆಂದು ತಿಳಿದುಬರುತ್ತದೆ. ಅಸ್ವಸ್ಥರಾದವರಲ್ಲಿ ಕೆಲವರನ್ನು ಸರ್ಕಾರಿ ಆಸ್ಪತ್ರೆಗೆ, ಇನ್ನೂ ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆಹಾರ ಮಾದರಿ, ರಕ್ತ ಮತ್ತು ಮಲದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುತ್ತಾರೆ. ಕಾರ್ಮಿಕರು ಕಂಪನಿಯ ಆಹಾರದ ಗುಣಮಟ್ಟ, ಶುದ್ಧತೆ, ಅಡುಗೆಮನೆಯ ಪರಿಸ್ಥಿತಿ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಕಂಪನಿ ಆಡಳಿತವು ಘಟನೆ ದೊಡ್ಡದಾಗಿ ತೋರಿಸಲಾಗುತ್ತಿದೆ ಎಂದು ಹೇಳಿ, ಉತ್ಪಾದನೆ ಮೇಲೆ ಪರಿಣಾಮ ಬಾರದೇ ನೋಡಬೇಕೆಂದು ಒತ್ತಡ ತರುತ್ತದೆ. ಇದೇ ವೇಳೆ ಮಾಧ್ಯಮಗಳು, ಕಾರ್ಮಿಕ ಸಂಘಟನೆಗಳು ಮತ್ತು ಸಾರ್ವಜನಿಕರು ತಕ್ಷಣದ ಕ್ರಮವನ್ನು ಆಗ್ರಹಿಸುತ್ತಾರೆ.

ನೀವು ಆ ಜಿಲ್ಲೆಯ ಜಿಲ್ಲಾಧಿಕಾರಿ / ಉಪವಿಭಾಗಾಧಿಕಾರಿ / ಫ್ಯಾಕ್ಟರಿ ಸುರಕ್ಷತಾ ಪರಿಶೀಲನಾ ಅಧಿಕಾರಿ ಎಂದು ಊಹಿಸಿಕೊಳ್ಳಿ.
ಪ್ರಶ್ನೆಗಳು:
ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ನೈತಿಕ ಸಮಸ್ಯೆಗಳು ಯಾವುವು?
ಈ ಪ್ರಕರಣದ ಪ್ರಮುಖ ಹಿತಾಸಕ್ತಿಪಕ್ಷಗಳು (stakeholders) ಯಾರು?
ನೀವು ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು ಯಾವುವು?
ಸತ್ಯಾನ್ವೇಷಣೆ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಯಾವ ಆಡಳಿತಾತ್ಮಕ ಹಾಗೂ ನೈತಿಕ ತತ್ವಗಳನ್ನು ಅನುಸರಿಸುತ್ತೀರಿ?
ಇಂತಹ ಘಟನೆಗಳು ಮರುಕಳಿಸದಂತೆ ದೀರ್ಘಕಾಲೀನ ಕ್ರಮಗಳು ಯಾವುವು?

ಉತ್ತರ ಬರೆಯಲು ಸೂಚನೆ / Framework
1) ನೈತಿಕ ಸಮಸ್ಯೆಗಳು
ಕಾರ್ಮಿಕರ ಆರೋಗ್ಯ ಮತ್ತು ಜೀವಭದ್ರತೆಗೆ ಧಕ್ಕೆಯಾದದ್ದು
ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ
ಕಂಪನಿಯ ಜವಾಬ್ದಾರಿತನ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ
ನಿಜಾಂಶಗಳನ್ನು ಮರೆಮಾಚುವ ಸಾಧ್ಯತೆ
ಲಾಭಕ್ಕಿಂತ ಮಾನವ ಗೌರವ ಮತ್ತು ಕಾರ್ಮಿಕ ಕಲ್ಯಾಣಕ್ಕೆ ಆದ್ಯತೆ ನೀಡಬೇಕಾದ ಅವಶ್ಯಕತೆ
ಸಾರ್ವಜನಿಕ ವಿಶ್ವಾಸ ಮತ್ತು ಆಡಳಿತದ ಹೊಣೆಗಾರಿಕೆ
2) ಹಿತಾಸಕ್ತಿಪಕ್ಷಗಳು
ಅಸ್ವಸ್ಥರಾದ ಕಾರ್ಮಿಕರು
ಅವರ ಕುಟುಂಬಗಳು
ಕಂಪನಿ ಆಡಳಿತ
ಆಹಾರ ಗುತ್ತಿಗೆದಾರ / ಕ್ಯಾಟರಿಂಗ್ ಸಂಸ್ಥೆ
ಆರೋಗ್ಯ ಇಲಾಖೆ
ಕಾರ್ಮಿಕ ಇಲಾಖೆ / ಫ್ಯಾಕ್ಟರಿ ಪರಿಶೀಲನಾ ಇಲಾಖೆ
ಜಿಲ್ಲಾ ಆಡಳಿತ
ಸ್ಥಳೀಯ ಸಾರ್ವಜನಿಕರು ಮತ್ತು ಮಾಧ್ಯಮ
3) ತಕ್ಷಣದ ಕ್ರಮಗಳು
ಎಲ್ಲಾ ಅಸ್ವಸ್ಥರಿಗೆ ತಕ್ಷಣದ ಚಿಕಿತ್ಸೆ ಮತ್ತು ವೈದ್ಯಕೀಯ ಮೇಲ್ವಿಚಾರಣೆ
ಆಹಾರ ಮಾದರಿ, ನೀರಿನ ಮಾದರಿ, ಅಡುಗೆಮನೆಯ ಸ್ವಚ್ಛತೆ ಬಗ್ಗೆ ತುರ್ತು ಪರಿಶೀಲನೆ
ಸಂಬಂಧಿತ ಕ್ಯಾಂಟೀನ್/ಆಹಾರ ಸರಬರಾಜು ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಿಸಿ ಪರಿಶೀಲನೆ
ಕಾರ್ಮಿಕರಿಗೆ ಸುರಕ್ಷಿತ ಆಹಾರ, ಕುಡಿಯುವ ನೀರು ಮತ್ತು ವೈದ್ಯಕೀಯ ನೆರವು ಒದಗಿಸುವುದು
ಘಟನೆ ಕುರಿತು ಪಾರದರ್ಶಕ ಮಾಹಿತಿ ಬಿಡುಗಡೆ ಮಾಡುವುದು
ತಪ್ಪಿತಸ್ಥರ ವಿರುದ್ಧ ಪ್ರಾಥಮಿಕ ಕ್ರಮ
4) ಅನುಸರಿಸಬೇಕಾದ ನೈತಿಕ ತತ್ವಗಳು
ಮಾನವೀಯತೆ
ಜವಾಬ್ದಾರಿತನ
ಪಾರದರ್ಶಕತೆ
ಹೊಣೆಗಾರಿಕೆ
ನ್ಯಾಯಸಮ್ಮತತೆ
ಸಾರ್ವಜನಿಕ ಹಿತಾಸಕ್ತಿ
ನಿರ್ಭಯ ಆಡಳಿತ
5) ದೀರ್ಘಕಾಲೀನ ಕ್ರಮಗಳು
ಕಾರ್ಖಾನೆ ಕ್ಯಾಂಟೀನ್‌ಗಳಿಗೆ ನಿಯಮಿತ ಆರೋಗ್ಯ ತಪಾಸಣೆ
ಆಹಾರ ಗುಣಮಟ್ಟ ಮತ್ತು ನೀರಿನ ಸುರಕ್ಷತೆ ಕುರಿತು ಕಟ್ಟುನಿಟ್ಟಿನ ಮೇಲ್ವಿಚಾರಣೆ
ಗುತ್ತಿಗೆದಾರರ ಲೈಸೆನ್ಸ್, ಮಾನದಂಡ ಮತ್ತು ಹೊಣೆಗಾರಿಕೆ ನಿಗದಿ
ಕಾರ್ಮಿಕರಿಗೆ ದೂರು ದಾಖಲಿಸುವ ವ್ಯವಸ್ಥೆ
ತುರ್ತು ವೈದ್ಯಕೀಯ ಪ್ರತಿಕ್ರಿಯಾ ವ್ಯವಸ್ಥೆ
ಆಹಾರ ಸುರಕ್ಷತೆ ಕುರಿತ ತರಬೇತಿ ಮತ್ತು ಆಡಿಟ್
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಹಾಗೂ ಪರಿಹಾರ ವ್ಯವಸ್ಥೆ
ತೀರ್ಮಾನ
ಈ ಪ್ರಕರಣವು ಕೈಗಾರಿಕಾ ಉತ್ಪಾದನೆಯಲ್ಲಿ ಲಾಭಕ್ಕಿಂತ ಮಾನವ ಜೀವ, ಆರೋಗ್ಯ, ಗೌರವ ಮತ್ತು ಆಡಳಿತಾತ್ಮಕ ಹೊಣೆಗಾರಿಕೆ ಮುಖ್ಯವೆಂಬುದನ್ನು ತೋರಿಸುತ್ತದೆ. ಒಬ್ಬ ನೈತಿಕ ಅಧಿಕಾರಿಯು ತಕ್ಷಣದ ಪರಿಹಾರ ಮಾತ್ರವಲ್ಲ, ದೀರ್ಘಕಾಲೀನ ವ್ಯವಸ್ಥಾತ್ಮಕ ಸುಧಾರಣೆಯನ್ನೂ ಖಚಿತಪಡಿಸಬೇಕು.

Source: Prajavani

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments