Sat. Apr 4th, 2026

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಪೋಕ್ಸ್ ಪ್ರಕರಣ: ಖಾಸಗಿ ಆಸ್ಪತ್ರೆಗಳಿಗೂ ವರದಿ ಕಡ್ಡಾಯ
ಸಂದರ್ಭ: ಬಾಲ ಗರ್ಭಿಣಿ ಪ್ರಕರಣಗಳ ವಿವರವನ್ನು ಖಾಸಗಿ ಆಸ್ಪತ್ರೆಗಳೂ ಕಡ್ಡಾಯವಾಗಿ ಪೋಟೊ ಕಾಯ್ದೆಯಡಿ ವರದಿ ಮಾಡಬೇಕು ಎಂದು ಸೂಚಿಸಿರುವ ಆರೋಗ್ಯ ಇಲಾಖೆ, ಒಂದು ವೇಳೆ ವರದಿ ಮಾಡಲು ವಿಫಲವಾದಲ್ಲಿ ವೈದ್ಯರು ಮತ್ತು ಆಸ್ಪತ್ರೆಗಳ ವಿರುದ್ಧ ಕಾನೂನಿನಡಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

  • ಪೋಕ್ಕೂ ಕಾಯ್ದೆ ಅನ್ವಯ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಬಾಲ ಗರ್ಭಿಣಿ ಪ್ರಕರಣಗಳ ವಿವರವನ್ನು ಕಾನೂನುಬದ್ಧವಾಗಿ ವರದಿ ಮಾಡಬೇಕಿದೆ. ಯಾವುದೇ ಬಾಲ ಗರ್ಭಿಣಿ ಖಾಸಗಿ ಆಸ್ಪತ್ರೆಗೆ ದಾಖಲಾದಲ್ಲಿ ಸಂಬಂಧಿತ ವೈದ್ಯರು ತಕ್ಷಣ ಸಮೀಪದ ವಿಶೇಷ ಬಾಲ ನ್ಯಾಯ ಪೊಲೀಸ್ ಘಟಕ ಅಥವಾ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದೆ.
  • ಇಂತಹ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿ, ಮಾಹಿತಿ ನೀಡಬೇಕು. ಇದರಿಂದ ರಕ್ಷಣಾತ್ಮಕ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದೆ.
  • ಖಾಸಗಿ ಆಸ್ಪತ್ರೆಗಳು ಪೋಕ್ಸ್ ಪ್ರಕರಣದ ವಿವರಗಳನ್ನು ಸೂಕ್ತವಾಗಿ ದಾಖಲಿಸಬೇಕು. ವೈದ್ಯಕೀಯ ದಾಖಲೆಗಳನ್ನು ಕಾನೂನುಬದ್ಧವಾಗಿ ಸಂಗ್ರಹಿಸಬೇಕು ರೋಗಿಯ ಗೋಪ್ಯತೆಯನ್ನು ಕಾಪಾಡಬೇಕು ತನಿಖಾ ಅಧಿಕಾರಿಗೆ ಅಗತ್ಯ ಸಹಕಾರ ನೀಡಬೇಕು. ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮ ವೈದ್ಯರು ಹಾಗೂ ಸಿಬ್ಬಂದಿಗೆ ಪೋಟ್ರೊ ಕಾಯ್ದೆಯ ವಿಧಿನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಲಾಗಿದೆ.

ಎನ್ಸಿಇಆರ್ಟಿಗೆ ಡೀಮ್ಸ್ ವಿಶ್ವವಿದ್ಯಾಲಯ ಸ್ಥಾನಮಾನ
ಸಂದರ್ಭ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ ಸಿಇಆರ್ಟಿ) ಮತ್ತು ಅದರ ಆರು ಘಟಕಗಳಿಗೆ ಶಿಕ್ಷಣ ಸಚಿವಾಲಯವು ವಿಶಿಷ್ಟ ವರ್ಗದಡಿ ಡೀಮ್ಸ್ ವಿಶ್ವವಿದ್ಯಾಲಯ ಸ್ನಾನಮಾನವನ್ನು ನೀಡಿದೆ.

  • ಆ ಮೂಲಕ ಎನ್‌ಸಿಇಆರ್‌ಟಿಯ ಅಧಿಕಾರವನ್ನು ವಿಸ್ತರಿಸಲಾಗಿದೆ ಮತ್ತು ಅದನ್ನು ಯುಜಿಸಿ ವ್ಯಾಪ್ತಿಗೆ ತರಲಾಗಿದೆ. ಜೊತೆಗೆ ಎನ್‌ಸಿಇಆರ್‌ಟಿ ತನ್ನದೇ ಆದ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲು, ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡಲು ಸಾಧ್ಯವಾಗುತ್ತದೆ.
  • ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸಲಹೆಯ ಮೇರೆಗೆ ಶಿಕ್ಷಣ ಸಚಿವಾಲಯವು ಈ ಸ್ನಾನಮಾನ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಸಂಜೀವಿನಿ’ಗೆ ತೊಡಕಾದ ನಿರಾಸಕ್ತಿ
ಸಂದರ್ಭ: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಒಪ್ಪಿಕೊಳ್ಳಲು ಬಹುತೇಕ ಖಾಸಗಿ ಆಸ್ಪತ್ರೆಗಳು ನಿರಾಸಕ್ತಿ ತೋರುತ್ತಿರುವುದು ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರ ನಗದುರಹಿತ ಚಿಕಿತ್ಸೆಗೆ ತೊಡಕಾಗಿದೆ.

  • ರಾಜ್ಯ ಸರ್ಕಾರ ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಿತ್ತಾದರೂ 2025ರ ಅ.1ರಿಂದ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಲಾಗಿದೆ. ಯೋಜನೆ ಜಾರಿಗೂ ಮೊದಲು ಒಂದು ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳು ನಗದು ರಹಿತ ಚಿಕಿತ್ಸೆ ನೀಡಲು ಸರ್ಕಾರದ ಜತೆ ಒಪ್ಪಂದಮಾಡಿಕೊಳ್ಳುವ ಕುರಿತು ಭರವಸೆ ನೀಡಿದ್ದವು.
  • ಆದರೆ, ಯೋಜನೆ ಆರಂಭವಾಗಿ ಆರು ತಿಂಗಳು ಕಳೆದರೂ ಯೋಜನೆ ಅಳವಡಿಸಿ ಕೊಂಡ ಆಸ್ಪತ್ರೆಗಳ ಸಂಖ್ಯೆ 243 ಮಾತ್ರ. ಆರಂಭದಲ್ಲಿ ಸಹಿ ಹಾಕಿದ್ದ ಸುಮಾರು 25 ಆಸ್ಪತ್ರೆಗಳು ಒಪ್ಪಂದದಿಂದ ಹಿಂದೆ ಸರಿದಿವೆ. 700ಕ್ಕೂ ಹೆಚ್ಚು ಆಸ್ಪತ್ರೆಗಳು ಯೋಜನೆಗೆ ಒಳಪಡಲು ಮೀನಮೇಷ ಎಣಿಸುತ್ತಿವೆ.
  • ದರ ಪರಿಷ್ಕರಣೆ ಸಮಸ್ಯೆ ‘ರಾಜ್ಯ ಸರ್ಕಾರಿ ನೌಕರರು, ನಿಗಮ, ಮಂಡಳಿ, ಅನುದಾನಿತ ಸಂಸ್ಥೆಗಳ ಸಿಬ್ಬಂದಿ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಪುರುಷ ನೌಕರರ ತಂದೆ-ತಾಯಿಗೆ ಮಾತ್ರ ಸಿಗುತ್ತಿದ್ದ ಆರೋಗ್ಯ ಸೌಲಭ್ಯವನ್ನು ಹೊಸ ಯೋಜನೆಯಲ್ಲಿ ಮಹಿಳಾ ನೌಕರರ ತಂದೆ-ತಾಯಿಗೂ ವಿಸ್ತರಿಸಲಾಗಿತ್ತು.
  • ಆದರೆ, ಆಸ್ಪತ್ರೆಗಳಿಗೆ ನೀಡುತ್ತಿರುವ ಚಿಕಿತ್ಸಾ ವೆಚ್ಚವನ್ನು ರಾಷ್ಟ್ರೀಯ ಆರೋಗ್ಯ ಯೋಜನೆಯ ದರಗಳಿಗೆ ಅನುಗುಣವಾಗಿ ಪರಿಷ್ಕರಿಸಿಲ್ಲ. ಹೆರಿಗೆ, ಕ್ಯಾನ್ಸರ್, ಶ್ವಾಸಕೋಶ ಸಮಸ್ಯೆ ಕಣ್ಣಿನ ಚಿಕಿತ್ಸೆ ಸೇರಿದಂತೆ ಬಹತೇಕ ಕಾಯಿಲೆಗಳ ಚಿಕಿತ್ಸಾ ವೆಚ್ಚ ಅತ್ಯಂತ ಕಡಿಮೆ ಇದೆ. ಅಷ್ಟು ಮೊತ್ತದಲ್ಲಿ ಸೌಲಭ್ಯ ನೀಡಲು ಸಾಧ್ಯವಿಲ್ಲ’ ಎನ್ನುವುದು ಯೋಜನೆ ವ್ಯಾಪ್ತಿಯಿಂದ ಹೊರ ಹೋಗುತ್ತಿರುವ, ಯೋಜನೆ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಖಾಸಗಿ ಆಸ್ಪತ್ರೆಗಳ ವಾದ.
  • ಸುವರ್ಣ ಕರ್ನಾಟಕ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್‌ಎಎಸ್‌ಟಿ) ಯೋಜನೆಯ ಅನುಷ್ಠಾನದ ಸಂಸ್ಥೆಯಾಗಿ ಹೊಣೆ ನಿರ್ವಹಿಸುತ್ತಿದ್ದು. ಎಲ್ಲ ವರ್ಗದ ನೌಕರರು ಪ್ರತಿ ತಿಂಗಳು ತಮ್ಮ ಪಾಲಿನ ಕಂತು ಪಾವತಿಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ನೌಕರರು ಪಾವತಿಸಿದ ಕಂತು ₹120 ಕೋಟಿಗೂ ಅಧಿಕ. ಟ್ರಸ್ಟ್ ಪಾವತಿಸಿರುವ ಚಿಕಿತ್ಸಾ ವೆಚ್ಚ ₹35 ಕೋಟಿ
  • ‘ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲ ನೌಕರರ ಕಂತನ್ನು ಅಕ್ಟೋಬರ್ ತಿಂಗಳ ವೇತನದಿಂದಲೇ ಕಟಾವು ಮಾಡಿ, ಖಜಾನೆ-2 ಮೂಲಕ ಟ್ರಸ್ಟ್ ಖಾತೆಗೆ ಜಮೆ ಮಾಡಲಾಗುತ್ತಿದೆ ಟ್ರಸ್ಟ್‌ನಲ್ಲಿ ಸಾಕಷ್ಟು ಹಣ ಸಂಗ್ರಹವಾದರೂ ರಾಜ್ಯದ ಪ್ರಮುಖ ಆಸ್ಪತ್ರೆಗಳು ಸೇರಿದಂತೆ ಬಹುತೇಕ ಖಾಸಗಿ ಆಸ್ಪತ್ರೆಗಳು ಯೋಜನೆ ಅಡಿ ಚಿಕಿತ್ಸೆ ನೀಡಲು ಒಲವು ತೋರಿಲ್ಲ ಹಾಗಾಗಿ, ನೌಕರರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಸೌಲಭ್ಯ ಸಿಗುತ್ತಿಲ್ಲ. ಯೋಜನೆ ನಿರೀಕ್ಷಿತ ಫಲ ನೀಡುತ್ತಿಲ್ಲ’ ಎನ್ನುತ್ತಾರೆ ಶಿಕ್ಷಕ ಸದಾನಂದ.

‘ಸಂಜೀವಿನಿ’ಗೆ ತೊಡಕಾದ ನಿರಾಸಕ್ತಿ
ಸಂದರ್ಭ: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಒಪ್ಪಿಕೊಳ್ಳಲು ಬಹುತೇಕ ಖಾಸಗಿ ಆಸ್ಪತ್ರೆಗಳು ನಿರಾಸಕ್ತಿ ತೋರುತ್ತಿರುವುದು ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರ ನಗದುರಹಿತ ಚಿಕಿತ್ಸೆಗೆ ತೊಡಕಾಗಿದೆ.

ಬಾಬೂ ಜಗಜೀವನ್ ರಾಮ್’ ಪ್ರಶಸ್ತಿಗೆ ಐವರು ಆಯ್ಕೆ
ಸಂದರ್ಭ: ರಾಜ್ಯಸರ್ಕಾರ ನೀಡುವ 2026ನೇ ಸಾಲಿನ ಬಾಬೂ ಜಗಜೀವನ್ ರಾಮ್ ಪ್ರಶಸ್ತಿಗೆ ಸಾಮಾಜಿಕ ಕಾರ್ಯಕರ್ತೆ ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐವರು ಭಾಜನರಾಗಿದ್ದಾರೆ.

  • ರಾಯಚೂರು ಜಿಲ್ಲೆ ಅಶಾಪುರದ ಜಾನಪದ ಕಲಾವಿದ ಡಿಂಗಿ ನರಸಪ್ಪ, ಬೆಳಗಾವಿಯ ಪತ್ರಕರ್ತ ಸರಜೂ ಕಾಟ್ಕರ್, ಮೈಸೂರಿನ ಮಾಜಿ ಮೇಯರ್ ನಾರಾಯಣ. ತುಮಕೂರಿನ ನಗರಸಭೆ ಮಾಜಿ ಸದಸ್ಯ ನರಸೀಯಪ್ಪ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.
  • ಪ್ರಶಸ್ತಿಯು ತಲಾ 15 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಬಾಬೂ ಜಗಜೀವನ್ ರಾಮ್ ಅವರ ಜನ್ಮದಿನವಾದ ಏ.5ರಂದು ವಿಧಾನಸೌಧದ ಅವರಣದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ನೀಡಿದ್ದಾರೆ.

ಬಸವರಾಜ ಆಚಾರ್ಗೆ ‘ಪ್ರಿಂಟ್ ಬಿನಾಲೆ ಇಂಡಿಯಾ’ ಪ್ರಶಸ್ತಿ
ಸಂದರ್ಭ: ಹಾಸನ ಜಿಲ್ಲೆಯ ಕಲಾವಿದ ಕೆ.ಆರ್.ಬಸವರಾಜ ಆಚಾರ್ ಅವರಿಗೆ ಕೇಂದ್ರ ಲಲಿತಕಲಾ ಅಕಾಡೆಮಿ ಕೊಡುವ ಅಂತರರಾಷ್ಟ್ರೀಯ ಮಟ್ಟದ ‘ಪ್ರಿಂಟ್ ಬಿನಾಲೆ ಇಂಡಿಯಾ’ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಮೊತ್ತ 12 ಲಕ್ಷ ನಗದು, ಪಾರಿತೋಷಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ.

  • ಮುದ್ರಣ ಮಾಧ್ಯಮದ ಕಲೆ ಉತ್ತೇಜಿಸುವ ದೃಷ್ಟಿಯಿಂದ ಪ್ರಪಂಚದಾದ್ಯಂತ ಇರುವ ವೃತ್ತಿಪರ ಐವರು ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಕೊಡಲಾಗುತ್ತದೆ. ಇದರಲ್ಲಿ ಭಾರತಕ್ಕೆ ಎರಡು ಪ್ರಶಸ್ತಿ ಬಂದಿದೆ. ಬಸವರಾಜ ಆಚಾರ್ ಜೊತೆಗೆ, ಮಧ್ಯಪ್ರದೇಶದ ಭೋಪಾಲ್‌ನ ರವೀಂದ್ರ ರಾಯ್ ಅವರಿಗೆ ಪ್ರಶಸ್ತಿ ಲಭಿಸಿದೆ.
  • ಜೊತೆಗೆ ಫ್ರಾನ್ಸ್, ಪೋಲೆಂಡ್, ಕೊರಿಯಾ ದೇಶದ ತಲಾ ಒಬ್ಬೊಬ್ಬರು ಕಲಾವಿದರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಭಾರತ ಹಾಗೂ ಇತರೆ 34 ದೇಶಗಳಿಂದ ಸುಮಾರು 1449 ಪ್ರವೇಶಗಳು ಬಂದಿದ್ದವು.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ವಿಶ್ವಸಂಸ್ಥೆ: ಹೊರ್ಮುಜ್ ತೆರೆಸುವ ಪ್ರಸ್ತಾವ ಮತಕ್ಕೆ
ಸಂದರ್ಭ: ಸೇನಾ ಶಕ್ತಿ ಬಳಸಿ ಹೊರ್ಮುಜ್ ಜಲಸಂಧಿಯನ್ನು ಜಾಗತಿಕ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವ ಪ್ರಸ್ತಾವವನ್ನು ರಷ್ಯಾ ಮತ್ತು ಚೀನಾ ವಿರೋಧದ ಮಧ್ಯೆಯೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತಕ್ಕೆ ಹಾಕಲು ನಿರ್ಧರಿಸಲಾಗಿದೆ.

  • ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಸೃಷ್ಟಿಯಾದ ನಂತರ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ. ವಿಶ್ವದ ಐದನೇ ಒಂದರಷ್ಟು ತೈಲ ಈ ಮಾರ್ಗದಿಂದ ಸಾಗಣೆಯಾಗುತ್ತದೆ. ಹಡಗು ಸಂಚಾರಕ್ಕೆ ಆದ ಅಡ್ಡಿಯು ಜಾಗತಿಕವಾಗಿ ತೈಲ ಬೆಲೆಯ ಭಾರಿ ಏರಿಕೆ ಮತ್ತು ಆರ್ಥಿಕತೆಯ ಕುಸಿತಕ್ಕೆ ಕಾರಣವಾಗಿದೆ.
  • ಹೊರ್ಮುಜ್ ಜಲಸಂಧಿಯನ್ನು ಸೇನಾ ಪಡೆ ಬಳಸಿ ಮುಕ್ತಗೊಳಿಸುವ ಪ್ರಸ್ತಾವ ಇದಾಗಿದೆ. ಆದರೆ ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಹೊಂದಿರುವ 5 ಸದಸ್ಯ ರಾಷ್ಟ್ರಗಳ ಪೈಕಿ ಚೀನಾ ಮತ್ತು ರಷ್ಯಾ ಸೇನಾ ಬಲ ಬಳಕೆಗೆ ವಿರೋಧ ವ್ಯಕ್ತಪಡಿಸಿವೆ. ಇದರ ಮಧ್ಯೆಯೂ ‘ಬಹರೇನ್ ಪ್ರಸ್ತಾವ’ದ ಕರಡು ಅಂತಿಮಗೊಂಡಿದೆ.
  • ಯಾವುದೇ ಹಾನಿ ಮಾಡದೇ ರಕ್ಷಣಾತ್ಮಕವಾಗಿ ಪಡೆಗಳನ್ನು ಬಳಸಬೇಕು ಎಂಬ ಅಂಶ ಪ್ರಸ್ತಾವದಲ್ಲಿದೆ. ಬಹುರಾಷ್ಟ್ರೀಯ ನೌಕಾ ಪಾಲುದಾರಿಕೆ ಹೊಂದಿರುವ ದೇಶಗಳು ‘ಹೊರ್ಮುಜ್ ಜಲಸಂಧಿ, ಕೊಲ್ಲಿ ಮತ್ತು ಗಲ್ಸ್ ಆಫ್ ಒಮನ್’ನಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ‘ಎಲ್ಲ ಅಗತ್ಯ ವಿಧಾನ ಅನುಸರಿಸಲು ಅವಕಾಶ ಕಲ್ಪಿಸುತ್ತದೆ’ ವಿಶ್ವಸಂಸ್ಥೆ ಪ್ರಕಾರ ಸೇನಾ ಕಾರ್ಯಾಚರಣೆಯ ಸಾಧ್ಯತೆಯೂ ಇದರಲ್ಲಿದೆ.
  • ಕನಿಷ್ಠ ಆರು ತಿಂಗಳವರೆಗಾದರೂ ಈ ಮಾರ್ಗವನ್ನು ಅಂತರರಾಷ್ಟ್ರೀಯ ಹಡಗು ಸಂಚಾರಕ್ಕೆ ಸುರಕ್ಷಿತಗೊಳಿಸಲು ಹೊಣೆ ಹೊತ್ತ ರಾಷ್ಟ್ರಗಳು ಎಲ್ಲ ರೀತಿಯ ರಕ್ಷಣಾತ್ಮಕ ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ‘ಮುಂಚಿತವಾಗಿ ಭದ್ರತಾ ಮಂಡಳಿಯ ಗಮನಕ್ಕೆ ತರಬೇಕು’ ಎಂಬ ಅಂಶ ಪ್ರಸ್ತಾವದಲ್ಲಿದೆ.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

50 ವರ್ಷಗಳ ಬಳಿಕ ನಾಸಾ ಕೈಗೊಂಡ ಯೋಜನೆ: ಚಂದ್ರನತ್ತ ಹೊರಟ ‘ಅರ್ಟೆಮಿಸ್-2’
ಸಂದರ್ಭ: ಐದು ದಶಕಗಳ ಬಳಿಕ ಚಂದ್ರನ ಕಕ್ಷೆಗೆ ಗಗನಯಾನಿಗಳನ್ನು ಕಳುಹಿಸಲು ಮುಂದಾಗಿರುವ ನಾಸಾ, ತನ್ನ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಕಾರ್ಯಕ್ರಮ ‘ಆರ್ಟೆಮಿಸ್-2’ರ ರಾಕೆಟ್ ಅನ್ನು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.

  • ಗಗನನೌಕೆ ಹೊತ್ತ ರಾಕೆಟ್ ವರ್ಷದ ಆರಂಭದಲ್ಲಿಯೇ ಅಂತರಿಕ್ಷಯಾನ ಆರಂಭಿಸಬೇಕಿತ್ತು. ಆದರೆ, ಉಡ್ಡ ಯನಕ್ಕೂ ಕೆಲ ಗಂಟೆಗಳ ಮುನ್ನ ರಾಕೆಟ್‌ನಲ್ಲಿನ ಇಂಧನ ಜಲಜನಕ ಸೋರಲು ಆರಂಭಿಸಿದ್ದರಿಂದ ಉಡ್ಡಯನ ವನ್ನು ಮುಂದೂಡಲಾಗಿತ್ತು.
  • 32 ಮಹಡಿಯ ಈ ರಾಕೆಟ್‌ ಗೆ 26 ಲಕ್ಷ ಲೀಟರ್ ಇಂಧನ ತುಂಬಬೇಕಿತ್ತು. ಈ ಕಾರ್ಯ ಪೂರ್ಣಗೊಂಡ ಬಳಿಕ ರಾಕೆಟ್ ನಭಕ್ಕೆ ಚಿಮ್ಮಿದೆ.
  • 10 ದಿನಗಳ ಕಾಲ ಯೋಜನೆಯು ನಡೆಯಲಿದ್ದು, ಅಮೆರಿಕದ ರೀಡ್ ವೈಸ್‌ಮನ್, ವಿಕ್ಟರ್ ಗೋವರ್, ಕ್ರಿಸ್ಟಿನಾ ಕೋಚ್ ಹಾಗೂ ಕೆನಡಾದ ಜೆರೆಮಿ ಹ್ಯಾನ್ಸನ್ ತಂಡದಲ್ಲಿದ್ದಾರೆ.
  • ಉಡಾವಣೆಗೊಂಡ 25 ಗಂಟೆಗಳ ನಂತರ ನಾಲ್ವರೂ ಭೂಮಿಯ ಕಕ್ಷೆಯಿಂದ ಹೊರಗೆ ಇದ್ದರೂ, ಭೂಮಿಗೆ ಹತ್ತಿರವೇ ಇರಲಿದ್ದಾರೆ. ಕೋಶವನ್ನು (ಕ್ಯಾಪ್ಸುಲ್) ಭೂಮಿಯ ಹತ್ತಿರ ಪರೀಕ್ಷಿಸಲಿದ್ದಾರೆ. ನಂತರ ಚಂದ್ರನ ಸಮೀಪದಲ್ಲಿ ಪ್ರಯಾಣಿ ಸಲಿದ್ದಾರೆ ನಿಗದಿತ ಅವಧಿವರೆಗೆ ಪರಿಭ್ರಮಣೆ ಮಾಡಿದ ಬಳಿಕ ಅವರು ಭೂಮಿಗೆ ಮರಳಲಿದ್ದು, ಅವರನ್ನು ಹೊತ್ತ ಬಾಹ್ಯಾಕಾಶ ಕೋಶವು ಪೆಸಿಫಿಕ್ ಸಾಗರದಲ್ಲಿ ಇಳಿಯಲಿದೆ.
  • ‘ಎಲ್ಲ ನನ್ನ ಮಿತ್ರರೇ, 1972ರ ಅಪೋಲೊ-17ರ ನಂತರ ಮಾನವರು ಭೂಮಿಯ ಕಕ್ಷೆಯನ್ನು ದಾಟಿ ಮುಂದೆ ಸಾಗಿದ್ದಾರೆ’ ಎಂದು ನಾಸಾದ ಹಿರಿಯ ವಿಜ್ಞಾನಿ ಲೊರೊ ಗೋಜ್ ತಿಳಿಸಿದ್ದಾರೆ.
  • ‘ರಾಕೆಟ್ ಇಂಧನ ತುಂಬಿಸುವ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಲಿಲ್ಲ’ ಎಂದು ಹೇಳಿದ್ದಾರೆ.
  • ‘ಮಾನವೀಯ ಸಾಮರ್ಥ್ಯ ಏನೆಂಬುದನ್ನು ಮತ್ತೊಮ್ಮೆ ತೋರಿಸಿದೆ. ನಿಮ್ಮ ಭವಿಷ್ಯದ ಭರವಸೆಗಳೇ ನಮ್ಮನ್ನು ಚಂದ್ರನ ಸುತ್ತ ಈ ಪ್ರಯಾಣದಲ್ಲಿ ಕರೆದೊಯ್ದಿದೆ’ ಎಂದು ಗಗನಯಾನಿ ಜೆರೆಮಿ ಹ್ಯಾನ್ಸನ್ ತಿಳಿಸಿದ್ದಾರೆ.
  • 1972ರಲ್ಲಿ ಅಪೋಲೊ-17 ಕಾರ್ಯಕ್ರಮದಡಿ ಗಗನಯಾನಿಗಳು ಕೊನೆಯದಾಗಿ ಚಂದ್ರನ ಅಂಗಳದಲ್ಲಿ ಇಳಿದಿದ್ದರು.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Source: Prajavani

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments