Fri. Feb 13th, 2026

1. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಲ್ಲ?

(1) ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ರಾಜ್ಯಸಭೆಯ ಸದಸ್ಯರನ್ನು ಮಾತ್ರ ಒಳಗೊಂಡಿರುತ್ತದೆ

(2) ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಅತ್ಯಂತ ಹಳೆಯ ಹಣಕಾಸು ಸಮಿತಿ

(3) ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯರ ಅಧಿಕಾರಾವಧಿ ಒಂದು ವರ್ಷ

(4) ಮಂತ್ರಿಯೊಬ್ಬರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯರಾಗಲು ಅರ್ಹರಲ್ಲ

2. ಈ ಕೆಳಗಿನ ಯಾವ ರಾಸಾಯನಿಕವನ್ನು ಗಾಜಿನ ಶೀಶೆಯಲ್ಲಿ ಶೇಖರಣೆ ಮಾಡಬಾರದು?

(1) ಹೈಡೋಕ್ಲೋರಿಕ್ ಆಮ್ಲ

(2) ಸಲ್ಯೂರಿಕ್ ಆಮ್ಲ

(3) ಹೈಡೋಫ್ಲೋರಿಕ್ ಆಮ್ಲ

(4) ಟಾರ್‌ರಿಕ್ ಆಮ್ಲ

3. ಈ ಕೆಳಗಿನ ರಸಗೊಬ್ಬರಗಳನ್ನು ಪರಿಗಣಿಸಿರಿ.

a) ಯೂರಿಯಾ

b) ಅಮೋನಿಯಂ ನೈಟ್ರೇಟ್

c) ಟ್ರಿಪಲ್ ಸೂಪರ್ ಫಾಸ್ಟೇಟ್

d) ಪೊಟ್ಯಾಷಿಯಂ ಸಟ್

ಈ ಮೇಲಿನ ಯಾವ ರಸಗೊಬ್ಬರ ಸಾರಜನಕಯುಕ್ತ ರಸಗೊಬ್ಬರವಾಗಿದೆ?

(1) a ಮತ್ತು c ಮಾತ್ರ

(2) a ಮತ್ತು b ಮಾತ್ರ

(3) a, b ಮತ್ತು c ಮಾತ್ರ

(4) b, c ಮತ್ತು d ಮಾತ್ರ

4. ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿರಿ.

ಹೇಳಿಕೆ I: ಹಾರ್ಮೋನುಗಳು ಇಂಟರ್ ಸೆಲ್ಯುಲರ್ ಸಂದೇಶವಾಹಕವಾಗಿ ಕಾರ್ಯನಿರ್ವಹಿಸುತ್ತವೆ

ಹೇಳಿಕೆ II : ಹಾರ್ಮೋನುಗಳು ನಮ್ಮ ದೇಹದಲ್ಲಿ ಎಂಡೋಕ್ರೈನ್ ಗ್ಲಾಂಡ್‌ಗಳಲ್ಲಿ ಉತ್ಪತ್ತಿಯಾಗುತ್ತವೆ ಮೇಲಿನ ಹೇಳಿಕೆಗಳ ಆಧಾರದ ಮೇಲೆ ಸರಿಯಾದ ಉತ್ತರವನ್ನು ಗುರುತಿಸಿ.

(1) ಎರಡು ಹೇಳಿಕೆಗಳು ಸರಿಯಾಗಿವೆ

(2) ಹೇಳಿಕೆ I ಸರಿಯಾಗಿದೆ ಆದರೆ ಹೇಳಿಕೆ II ಸರಿಯಾಗಿಲ್ಲ

(3) ಹೇಳಿಕೆ I ಸರಿಯಾಗಿಲ್ಲ ಆದರೆ ಹೇಳಿಕೆ II ಸರಿಯಾಗಿದೆ

(4) ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿಲ್ಲ

5. ಈ ಕೆಳಗೆ ಕೊಟ್ಟಿರುವ ಯಾವ ಜೋಡಿಗಳಲ್ಲಿ ಗಾಜಿನ ವಿಧ ಮತ್ತು ಅದರ ಉಪಯೋಗಗಳು ಸರಿ ಹೊಂದಿರುತ್ತವೆ?

a) ಪ್ಲಿಂಟ್ ಗ್ಲಾಸ್ : ಕ್ಯಾಮರಾ ಮಸೂರಗಳ ತಯಾರಿಕೆಯಲ್ಲಿ

b) ಕ್ರೂಕ್ಸ್ ಗ್ಲಾಸ್ : ಗಾಗಲ್‌ಗಳ ಲೆನ್ಸ್‌ ಗಳ ತಯಾರಿಕೆಯಲ್ಲಿ

c) ಸೋಡಾ ಲೈಮ್‌ ಗ್ಲಾಸ್ : ರೀಏಜೆಂಟ್ ಬಾಟಲುಗಳ ತಯಾರಿಕೆಯಲ್ಲಿ

(1) b ಮಾತ್ರ

(2) b ಮತ್ತು c ಮಾತ್ರ

(3) a, b c

(4) a ಮತ್ತು c ಮಾತ್ರ

6. ಯಾವ ಹೆಸರಿನ ವಿದ್ಯುತ್‌ಕಾಂತೀಯ ವಿಕಿರಣಗಳನ್ನು ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (MRI) ಸ್ಕ್ಯಾನಿಂಗ್‌ನಲ್ಲಿ ಉಪಯೋಗಿಸುತ್ತಾರೆ?

(1) ನೇರಳಾತೀತ ಕಿರಣಗಳು

(2) ರೇಡಿಯೋ ತರಂಗಗಳು

(3) ಸೂಕ್ಷ್ಮ ತರಂಗಗಳು (ಮೈಕ್ರೋವೇವ್)

(4) ಗಾಮಾ ವಿಕಿರಣಗಳು

7. ಈ ಕೆಳಕಂಡ ಯಾವ ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗುತ್ತವೆ?
ಭಾಗ 1 ಭಾಗ 2

a) 243 ನೆ ವಿಧಿ -ಗ್ರಾಮ ಸಭಾ

b) 243 D -ಪಂಚಾಯತಿಗಳ ಸ್ಥಾನಗಳಲ್ಲಿ ಮೀಸಲಾತಿ

c) 243 G- ಪಂಚಾಯತ್‌ನ ಅಧಿಕಾರ, ಪ್ರಾಧಿಕಾರ ಮತ್ತು ಜವಾಬ್ದಾರಿಗಳು

d) 243 J- ಪಂಚಾಯತಿಗಳಿಗೆ ಚುನಾವಣೆ

(1) a ಮತ್ತು b ಮಾತ್ರ

(2) b ಮತ್ತು c ಮಾತ್ರ

(3) c ಮತ್ತು d ಮಾತ್ರ

(4) b ಮತ್ತು d ಮಾತ್ರ

  1. ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ರ ಮುಖ್ಯ ಉದ್ದೇಶವೇನು?

(1) ಹೆಚ್ಚು ಸ್ವಾಯತ್ತ ಸಹಕಾರಿ ಸಂಘಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವುದು

(2) ಎಲ್ಲಾ ಗ್ರಾಮೀಣ ಸಹಕಾರಿ ಸಂಘಗಳನ್ನು ವಿಲೀನಗೊಳಿಸುವುದು

(3) ಕೃಷಿ ಸಹಕಾರಿ ಸಂಘಗಳನ್ನು ಮಾತ್ರ ನಿಯಂತ್ರಿಸುವುದು

(4) ನಗರ ಸಹಕಾರಿ ಸಂಘಗಳನ್ನು ಉತ್ತೇಜಿಸುವುದು

  1. ಪಂಚಾಯತ್ ಚುನಾವಣೆಯ ಮೇಲುಸ್ತುವಾರಿ ಮಾಡುವ, ನಿರ್ದೇಶನ ನೀಡುವ ಹಾಗೂ ಚುನಾವಣೆಗಳನ್ನು ನಡೆಸುವ ಅಧಿಕಾರ ಯಾರ ಬಳಿ ಇದೆ?

(1) ಭಾರತೀಯ ಚುನಾವಣಾ ಆಯೋಗ

(2) ರಾಜ್ಯ ಮುಖ್ಯ ಚುನಾವಣಾಧಿಕಾರಿಯ ಕಚೇರಿ

(3) ಜಿಲ್ಲಾಡಳಿತ

(4) ರಾಜ್ಯ ಚುನಾವಣಾ ಆಯೋಗ

10.ನಂತರ ಭೂಮಿಯಿಂದ ಚಂದ್ರನ ಹೊಳೆಯುತ್ತಿರುವ ಭಾಗದ ಗೋಚರಿಸುವಿಕೆಯ ಗಾತ್ರವು ಪ್ರತಿದಿನ__

(1) ಅಮವಾಸ್ಯೆ, ಕಡಿಮೆಯಾಗುತ್ತದೆ

(2) ಅಮವಾಸ್ಯೆ, ಹೆಚ್ಚಾಗುತ್ತದೆ

(3) ಅಮವಾಸ್ಯೆ, ಅದೇ ರೀತಿ ಇರುತ್ತದೆ

(4) ಹುಣ್ಣಿಮೆ, ಹೆಚ್ಚಾಗುತ್ತದೆ

11.

ಈ ಕೆಳಗಿನ ಯಾವುದು ಸರಿಯಾದ ಕಾಲಾನುಕ್ರಮದಲ್ಲಿದೆ?

(1) ಲಾರ್ಡ್ ಆಮ್‌ಹರ್ಟ್ಸ್ – ವಿಲಿಯಂ ಬೆಂಟಿಂಕ್ – ಲಾರ್ಡ್ ಆಕ್‌ಲ್ಯಾಂಡ್ – ಲಾರ್ಡ್ ಎಲ್ಲೆನ್‌ಬರೋ

(2) ವಿಲಿಯಂ ಬೆಂಟಿಂಕ್ – ಲಾರ್ಡ್ ಆಮ್‌ಹರ್ಟ್ – ಲಾರ್ಡ್ ಆಕ್‌ಲ್ಯಾಂಡ್ – ಲಾರ್ಡ್ ಎಲ್ಲೆನ್‌ಬರೋ

(3) ಲಾರ್ಡ್ ಎಲ್ಲೆನ್‌ಬರೋ – ಲಾರ್ಡ್ ಆಕ್‌ಲ್ಯಾಂಡ್ – ಲಾರ್ಡ್ ಆಮ್‌ಹರ್ಟ್ – ವಿಲಿಯಂ ಬೆಂಟಿಂಕ್

(4) ಲಾರ್ಡ್ ಆಮ್‌ಹರ್ಟ್ – ಲಾರ್ಡ್ ಆಕ್‌ಲ್ಯಾಂಡ್ – ಲಾರ್ಡ್ ಎಲ್ಲೆನ್‌ಬರೋ – ವಿಲಿಯಂ ಬೆಂಟಿಂಕ್

  1. ಭಾರತದ ಸ್ವಾತಂತ್ರ್ಯ ಚಳುವಳಿಯ ಕಾಲದ ಕ್ರಾಂತಿ ಸಂಘಟನೆ HRA ಯ ವಿಸ್ತ್ರತ ರೂಪ ಯಾವುದು?

(1) ಹಿಂದೂ ರಿಲಿಜನ್ ಅಸೋಸಿಯೇಶನ್

(2) ಹಿಂದೂಸ್ತಾನ್ ರಿಪಬ್ಲಿಕ್ ಅಸೋಸಿಯೇಶನ್

(3) ಹಿಂದೂಸ್ತಾನ್ ರಿಫಾರ್ಮ್ ಅಸೋಸಿಯೇಶನ್

(4) ಹಿಂದೂ ರಿಪಬ್ಲಿಕ್ ಅಸೋಸಿಯೇಶನ್

  1. ‘ಸತ್ತರಿಯಾ’ ನೃತ್ಯ ಪ್ರಕಾರವನ್ನು ಪರಿಚಯಿಸಿದವರು__

(1) ರಾಮ ದೇವ

(2) ಶಂಕರದೇವ

(3) ಬಿರ್ಜು ಮಹಾರಾಜ್

(4) ಮೃಣಾಲ್ ಶುಕ್ಲಾ

  1. ಈ ಕೆಳಗಿನ ಯಾವ ಜೋಡಿಯು ಬೆಳಗಾವಿಯಲ್ಲಿ ಮ್ಯಾಜಿನಿ ಕ್ಲಬ್ ಕ್ರಾಂತಿಕಾರಿ ಸಂಘವನ್ನು ಸ್ಥಾಪಿಸಿದರು?

(1) ಗಂಗಾಧರ ರಾವ್ ದೇಶಪಾಂಡೆ – ಆಲೂರು ವೆಂಕಟರಾವ್

(2) ಶ್ರೀನಿವಾಸ ಕೌಜಲಗಿ – ಗೋವಿಂದರಾವ್ ಯಾಳಗಿ

(3) ಗೋವಿಂದರಾವ್ ಯಾಳಗಿ – ಹನುಮಂತರಾಮ್ ದೇಶಪಾಂಡೆ

(4) ಹನುಮಂತರಾವ್ ದೇಶಪಾಂಡೆ – ಗಂಗಾಧರರಾವ್ ದೇಶಪಾಂಡೆ

  1. ಈ ಕೆಳಗಿನ ಹೇಳಿಕೆಗಳಲ್ಲಿ ಗುಪ್ತರ ಕುರಿತಾದ ತಪ್ಪಾದ ಹೇಳಿಕೆಯನ್ನು ಆಯ್ಕೆ ಮಾಡಿರಿ.

(1) ಒಂದನೇ ಚಂದ್ರಗುಪ್ತನು ಲಿಚ್ಛವಿಯ ಯುವರಾಣಿಯನ್ನು ಮದುವೆಯಾಗಿ ತನ್ನ ರಾಜ್ಯದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡನು

(2) ಸಾ.ಶ. 320 ರಲ್ಲಿ ‘ಗುಪ್ತಶಕೆ’ ಯನ್ನು ಸಮುದ್ರಗುಪ್ತನು ಪ್ರಾರಂಭಿಸಿದನು

(3) ಸಮುದ್ರಗುಪ್ತನು ಶ್ರೇಷ್ಟ ಕವಿ ಹಾಗೂ ಸಂಗೀತಪ್ರಿಯನೂ ಆಗಿದ್ದನು

(4) ಎರಡನೇ ಚಂದ್ರಗುಪ್ತನು ‘ವಿಕ್ರಮಾದಿತ್ಯ’ ಎಂಬ ಬಿರುದನ್ನು ಪಡೆದಿದ್ದನು

  1. ಈ ಕೆಳಗಿನವುಗಳಲ್ಲಿ ಕೃತಿ ಮತ್ತು ಅದರ ರಚನೆಕಾರರ ಕುರಿತಾದ ತಪ್ಪಾದ ಜೋಡಿಯನ್ನು ಆಯ್ಕೆ ಮಾಡಿರಿ.

(1) ಭಾರವಿ – ಕಿರಾತಾರ್ಜುನೀಯ

(2) ದಂಡಿ – ದಶಕುಮಾರ ಚರಿತ

(3) ಧರ್ಮಪಾಲ – ಮತ್ತವಿಲಾಸ ಪ್ರಹಸನ

(4) ಶಿವ ಭಟ್ಟಾರಕ – ಹರ ಪಾರ್ವತೀಯ

  1. ಪ್ರತಿಪಾದನೆ (A) : ಇಲ್ತಮಿಶನು ದೆಹಲಿಯ ಸುಲ್ತಾನರ ಮನೆತನದ ನಿಜವಾದ ಸ್ಥಾಪಕ

ಕಾರಣ (R) : ಇಲ್ತಮಿಶನು ಕುತ್ಸುದ್ದೀನ್ ಐಬಕ್‌ನ ಮಗನಾಗಿದ್ದನು

ಈ ಮೇಲ್ಕಂಡ ಹೇಳಿಕೆಗಳನ್ನು ಕುರಿತು ಈ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :

(1) ಈ ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ ಹಾಗೂ A ಯನ್ನು R ಸಮರ್ಥಿಸುತ್ತದೆ.

(2) ಈ ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ, ಆದರೆ A ಯನ್ನು R ಸಮರ್ಥಿಸುವುದಿಲ್ಲ

(3) A ಸರಿಯಾಗಿದೆ ಆದರೆ R ತಪಾಗಿದೆ

(4) R ಸರಿಯಾಗಿದೆ A ತಪ್ಪಾಗಿದೆ

  1. ಒಂದು ಮಗು ಆರ್‌ಎಚ್ ಅಂಶ (Rh factor) ಹೊಂದಾಣಿಕೆಯಾಗದ ಕಾರಣ ರಕ್ತಹೀನತೆ ಮತ್ತು ಕಾಮಾಲೆಯಿಂದ ಬಳಲುತ್ತದೆ. ಅಂತಹ ಪರಿಸ್ಥಿತಿ ಯಾವಾಗ ಎದುರಾಗುತ್ತದೆ?

(1) ‘ಎ’ ರಕ್ತದ ಗುಂಪಿನ ಮಹಿಳೆ ‘ಬಿ’ ರಕ್ತದ ಗುಂಪಿನ ಪುರುಷನೊಂದಿಗೆ ವಿವಾಹವಾದಾಗ

(2) ಆರ್‌ಎಚ್ ಪಾಸಿಟಿವ್ ರಕ್ತದ ಗುಂಪಿನ ಮಹಿಳೆ, ಆರ್‌ಎಚ್ ನೆಗೆಟಿವ್ ಪುರುಷನೊಂದಿಗೆ ವಿವಾಹವಾದಾಗ

(3) ಆರ್‌ಎಚ್ ನೆಗೆಟಿಪ್ ರಕ್ತದ ಗುಂಪಿನ ಮಹಿಳೆ, ಆರ್‌ಎಚ್ ಪಾಸಿಟಿವ್ ಪುರುಷನೊಂದಿಗೆ ವಿವಾಹವಾದಾಗ

(4) ಒ (O) ರಕ್ತದ ಗುಂಪಿನ ಪುರುಷ, ಒ (O) ಗುಂಪಿನ ಮಹಿಳೆಯೊಂದಿಗೆ ವಿವಾಹವಾದಾಗ

  1. ಎರಡು ಗಾಳಿ ತುಂಬಿದ ಬಲೂನ್‌ಗಳನ್ನು ಪರಸ್ಪರ ಉಣ್ಣೆ ಬಟ್ಟೆಯಿಂದ ಉಜ್ಜಿ ಚಾರ್ಜ್ ಮಾಡಿದ ಬಳಿಕ ಆ ಬಲೂನ್‌ಗಳನ್ನು ಪರಸ್ಪರ ಸನಿಹಕ್ಕೆ ತಂದರೆ :

(1) ಅವುಗಳ ಚಾರ್ಜ್‌ಗಳು ಸದೃಶವಾಗಿರುವುದರಿಂದ, ಅವು ಪರಸ್ಪರ ಆಕರ್ಷಿಸುತ್ತವೆ

(2) ಅವುಗಳ ಚಾರ್ಜ್‌ಗಳು ವಿಭಿನ್ನವಾಗಿರುವುದರಿಂದ, ಅವು ಪರಸ್ಪರ ಆಕರ್ಷಿಸುತ್ತವೆ

(3) ಅವುಗಳ ಚಾರ್ಜ್‌ಗಳು ಸದೃಶವಾಗಿರುವುದರಿಂದ, ಅವು ಪರಸ್ಪರ ವಿಕರ್ಷಿಸುತ್ತವೆ

(4) ಅವುಗಳ ಚಾರ್ಜ್‌ಗಳು ವಿಭಿನ್ನವಾಗಿರುವುದರಿಂದ, ಅವು ಪರಸ್ಪರ ವಿಕರ್ಷಿಸುತ್ತವೆ

ಶೀಘ್ರದಲ್ಲೇ ಬರಲಿದೆ

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments