ಸಂದರ್ಭ: ಅಧ್ಯಯನದ ಪ್ರಕಾರ 25 ವರ್ಷದಲ್ಲಿ (2000-2025ರ ಅವಧಿ) ದೇಶದ ರೈತರಿಗೆ ₹111 ಲಕ್ಷ ಕೋಟಿ ನಷ್ಟವಾಗಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಕೃಷಿ ಬಿಕ್ಕಟ್ಟಿನಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದಾರೆ ಎಂದು ಕೃಷಿ ಸುಧಾರಣಾ ಸಮಿತಿ ಅಧ್ಯಕ್ಷ ದೇವಿಂದರ್ ಶರ್ಮಾ ಹೇಳಿದರು.
- ರೈತರ ಆತ್ಮಹತ್ಯೆಗಳ ತಡೆ ಸಮಿತಿ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ರೈತರ ಆತ್ಮಹತ್ಯೆ ತಡೆಯುವ ಕುರಿತು ಚರ್ಚೆ ನಡೆಸಿ ಕೃಷಿ ತಂತ್ರಜ್ಞರ, ರೈತ ನಾಯಕರ ಸಲಹೆ ಪಡೆಯಲಾಯಿತು.
- 2000-2016ರ ಅವಧಿಯಲ್ಲಿ ₹45 ಲಕ್ಷ ಕೋಟಿ ರೈತರಿಗೆ ನಷ್ಟವಾಗಿತ್ತು. ಇದಕ್ಕೆ ಹಲವು ಕಾರಣಗಳಿವೆ.