Sat. Feb 7th, 2026

ಸಂದರ್ಭ: ‘ಪ್ರಶ್ನೆಗಾಗಿ ಲಂಚ’ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾಮೊಯಿತ್ರಾ ವಿರುದ್ಧಆರೋಪ ಪಟ್ಟಿಸಲ್ಲಿಸಲು ಸಿಬಿಐಗೆ ಅನುಮತಿ ನೀಡುವ ವಿಚಾರವನ್ನು ಕಾನೂನಿನ ಪ್ರಕಾರ ಪರಿಗಣಿಸಲು ಲೋಕಪಾಲಕ್ಕೆ ನೀಡಿದ್ದ ಕಾಲಾವಕಾಶವನ್ನು ದೆಹಲಿ ಹೈಕೋರ್ಟ್ ಎರಡು ತಿಂಗಳು ವಿಸ್ತರಿಸಿದೆ.

  • ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕ‌ರ್ ಅವರ ಪೀಠವು, ಸಮಯ ವಿಸ್ತರಣೆ ಕೋರಿ ಇನ್ನು ಮುಂದೆ ಸಲ್ಲಿಸುವ ಯಾವುದೇ ಮನವಿಯನ್ನು ಪರಿಗಣಿಸುವುದಿಲ್ಲ ಎಂದು ಹೇಳಿತು.
  • ಮಹುವಾ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಪರ ವಾದ ಮಂಡಿಸಿದ ವಕೀಲರು, ‘ಕಾಲಾವಕಾಶವನ್ನು ಎರಡು ತಿಂಗಳು ವಿಸ್ತರಿಸಬೇಕೆಂಬ ಲೋಕಪಾಲದ ಮನವಿಯನ್ನು ನಾವು ವಿರೋಧಿಸುತ್ತಿಲ್ಲ’ ಎಂದು ಹೇಳಿದರು.

ಲೋಕಪಾಲ್ (Lokalpal) ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವ ಅತ್ಯುನ್ನತ ಸಂಸ್ಥೆಯಾಗಿದೆ. ಲೋಕಪಾಲ್ ಕಾಯ್ದೆ 2013 ರಲ್ಲಿ ಅಂಗೀಕಾರವಾಯಿತು. 1 ಜನವರಿ 2014 ರಿಂದ ಜಾರಿಗೆ ಬಂದಿತು. ಮೊದಲ ಅಧ್ಯಕ್ಷರು: ಪಿನಾಕಿ ಚಂದ್ರ ಘೋಷ್ (P.C. Ghosh).

ಲೋಕಪಾಲ್: ತನಿಖೆ ಮತ್ತು ವಿಚಾರಣೆಯ ಕಾಲಮಿತಿ

ಲೋಕಪಾಲ್ ಸಂಸ್ಥೆಯ ಇತರ ಪ್ರಮುಖ ಅಂಶಗಳು:

ಹಂತಕಾಲಾವಕಾಶ (Time Limit)ವಿಸ್ತರಣೆ (Extension)
ಪ್ರಾಥಮಿಕ ವಿಚಾರಣೆ (Preliminary Inquiry)30 ದಿನಗಳುಅಗತ್ಯವಿದ್ದರೆ ಲಿಖಿತ ಕಾರಣಗಳೊಂದಿಗೆ 3 ತಿಂಗಳವರೆಗೆ ವಿಸ್ತರಿಸಬಹುದು.
ತನಿಖಾ ವರದಿ ಸಲ್ಲಿಕೆ (Inquiry Report)ಪ್ರಾಥಮಿಕ ವಿಚಾರಣೆ ಮುಗಿದ ನಂತರ 60 ದಿನಗಳೊಳಗೆ ಲೋಕಪಾಲ್‌ಗೆ ಸಲ್ಲಿಸಬೇಕು.
ಪೂರ್ಣ ಪ್ರಮಾಣದ ತನಿಖೆ (Investigation)6 ತಿಂಗಳುವಿಶೇಷ ಸಂದರ್ಭಗಳಲ್ಲಿ ಏಕಕಾಲಕ್ಕೆ 6 ತಿಂಗಳವರೆಗೆ ವಿಸ್ತರಿಸಬಹುದು.
ವಿಚಾರಣೆ ಪೂರ್ಣಗೊಳಿಸುವುದು (Trial)1 ವರ್ಷವಿಶೇಷ ಕಾರಣಗಳಿದ್ದರೆ ಗರಿಷ್ಠ 2 ವರ್ಷಗಳವರೆಗೆ ವಿಸ್ತರಿಸಬಹುದು.


ರಚನೆ: ಒಬ್ಬರು ಅಧ್ಯಕ್ಷರು ಮತ್ತು ಗರಿಷ್ಠ 8 ಜನ ಸದಸ್ಯರಿರುತ್ತಾರೆ (ಇದರಲ್ಲಿ 50% ನ್ಯಾಯಾಂಗ ಸದಸ್ಯರು ಮತ್ತು 50% SC/ST/OBC/ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿರಬೇಕು).

ವ್ಯಾಪ್ತಿ (Jurisdiction): ಪ್ರಧಾನ ಮಂತ್ರಿ (ಕೆಲವು ವಿನಾಯಿತಿಗಳೊಂದಿಗೆ), ಕೇಂದ್ರ ಸಚಿವರು, ಸಂಸತ್ ಸದಸ್ಯರು ಮತ್ತು ಗ್ರೂಪ್ A, B, C, D ಅಧಿಕಾರಿಗಳು ಲೋಕಪಾಲ್ ವ್ಯಾಪ್ತಿಗೆ ಬರುತ್ತಾರೆ.

ಆಯ್ಕೆ ಸಮಿತಿ: ಪ್ರಧಾನ ಮಂತ್ರಿ (ಅಧ್ಯಕ್ಷರು), ಲೋಕಸಭೆಯ ಸ್ಪೀಕರ್, ಲೋಕಸಭೆಯ ವಿರೋಧ ಪಕ್ಷದ ನಾಯಕರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು (CJI) ಅಥವಾ ಅವರು ಸೂಚಿಸಿದ ನ್ಯಾಯಾಧೀಶರು ಮತ್ತು ಒಬ್ಬ ಖ್ಯಾತ ನ್ಯಾಯಶಾಸ್ತ್ರಜ್ಞರು ಈ ಸಮಿತಿಯಲ್ಲಿರುತ್ತಾರೆ.

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments