Sat. Feb 7th, 2026

ಸಂದರ್ಭ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್ ಪಿಂಚಣಿ ಯೋಜನೆಯನ್ನು 2030-31ನೇ ಹಣಕಾಸು ವರ್ಷದ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
• ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು, ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕೆ ರೂಪಿಸಿರುವ ಯೋಜನೆಗಳಿಗೆ ಆರ್ಥಿಕ ನೆರವು ಮುಂದುವರಿಸುವುದಕ್ಕೂ ಅನುಮೋದನೆ ನೀಡಿದೆ ಎಂದು `ಪ್ರಕಟಣೆ ತಿಳಿಸಿದೆ.
ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯ ದಲ್ಲಿ ಆದಾಯ ಭದ್ರತೆ ಒದಗಿಸುವ ದೃಷ್ಟಿಯಿಂದ ಅಟಲ್ ಪಿಂಚಣಿ ಯೋಜನೆಯನ್ನು 2015ರ ಮೇ 9ರಂದು ಆರಂಭಿಸಲಾಯಿತು. ಪ್ರಸ್ತುತ, 8.66 ಕೋಟಿ ಜನರು ಈ ಯೋಜನೆಯಡಿ ನೋಂದಾಯಿಸಿ ಕೊಂಡಿದ್ದಾರೆ.
ನೋಂದಾಯಿತ ಸದಸ್ಯರು ಪಾವತಿಸಿದ ವಂತಿಗೆ ಆಧಾರದಲ್ಲಿ, ಫಲಾನುಭವಿಗೆ 60 ವರ್ಷ ತುಂಬಿದ ನಂತರ ಮಾಸಿಕ ಕನಿಷ್ಠ ಒಂದು ಸಾವಿರ ರೂಪಾಯಿಯಿಂದ ₹5 ಸಾವಿರ ವರೆಗೆ ಪಿಂಚಣಿ ನೀಡಲಾಗುತ್ತದೆ.

ಅಂಶವಿವರಗಳು
ಯೋಜನೆಯ ಹೆಸರುಅಟಲ್ ಪಿಂಚಣಿ ಯೋಜನೆ (Atal Pension Yojana)
ಪ್ರಾರಂಭ9 ಮೇ 2015 (ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿಯವರಿಂದ ಚಾಲನೆ)
ಉಸ್ತುವಾರಿ ಸಂಸ್ಥೆPFRDA (Pension Fund Regulatory and Development Authority)
ಅರ್ಹತೆಭಾರತೀಯ ನಾಗರಿಕನಾಗಿರಬೇಕು.
ವಯೋಮಿತಿ18 ರಿಂದ 40 ವರ್ಷಗಳು.
ಪಿಂಚಣಿ ಲಭ್ಯತೆ60 ವರ್ಷ ತುಂಬಿದ ನಂತರ.
ಪಿಂಚಣಿ ಸ್ಲ್ಯಾಬ್‌ಗಳು₹1,000, ₹2,000, ₹3,000, ₹4,000 ಮತ್ತು ₹5,000 (ತಿಂಗಳಿಗೆ).
ವಂತಿಗೆ ಅವಧಿಕನಿಷ್ಠ 20 ವರ್ಷಗಳ ಕಾಲ ವಂತಿಗೆ (Contribution) ಪಾವತಿಸಬೇಕು.
ತೆರಿಗೆದಾರರಿಗೆ ನಿಯಮ1 ಅಕ್ಟೋಬರ್ 2022 ರಿಂದ, ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಸೇರಲು ಅರ್ಹರಲ್ಲ.
ನಾಮಿನಿ ಸೌಲಭ್ಯಚಂದಾದಾರರ ಮರಣದ ನಂತರ ಸಂಗಾತಿಗೆ (Spouse) ಪಿಂಚಣಿ ಸಿಗುತ್ತದೆ. ಇಬ್ಬರ ಮರಣದ ನಂತರ ಕಾರ್ಪಸ್ ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ.
ಹೂಡಿಕೆ ವಿಧಾನಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕವಾಗಿ ಬ್ಯಾಂಕ್ ಖಾತೆಯಿಂದ ‘ಆಟೋ ಡೆಬಿಟ್’ ಮೂಲಕ ಹಣ ಕಡಿತವಾಗುತ್ತದೆ.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments