ಸಂದರ್ಭ: ಆಹಾರ ಪದಾರ್ಥಗಳ ಬೆಲೆಯಲ್ಲಿನ ಹೆಚ್ಚಳದಿಂದ ಚಿಲ್ಲರೆ ಹಣದುಬ್ಬರವು ಡಿಸೆಂಬರ್ ತಿಂಗಳಿನಲ್ಲಿ ಶೇ 1.33ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ತಿಳಿಸಿದೆ. ಇದು ಮೂರು ತಿಂಗಳ ಗರಿಷ್ಠ ಮಟ್ಟದ ಏರಿಕೆ ಆಗಿದೆ.
• ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಅಧಾರಿತ ಚಿಲ್ಲರೆ ಹಣದುಬ್ಬರವು ನವೆಂಬರ್ನಲ್ಲಿ ಶೇ 0.71ರಷ್ಟಿತ್ತು. 2024ರ ಡಿಸೆಂಬರ್ನಲ್ಲಿ ಶೇ 5.22ರಷ್ಟು ದಾಖಲಾಗಿತ್ತು.
• ತರಕಾರಿಗಳು, ಮೊಟ್ಟೆ, ಮಾಂಸ ಮತ್ತು ಮೀನು, ಮಸಾಲೆ ಪದಾರ್ಥಗಳು, ಧಾನ್ಯಗಳ ಬೆಲೆಯಲ್ಲಿನ ಹೆಚ್ಚಳವೇ ಹಣದುಬ್ಬರ ಏರಿಕೆಗೆ ಕಾರಣ ಎಂದು ತಿಳಿಸಿದೆ. ನಗರ ಪ್ರದೇಶದಲ್ಲಿ ಹಣದುಬ್ಬರ ಪ್ರಮಾಣ ಶೇ 2.03ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.0.76ರಷ್ಟಿದೆ.
• ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 4ರ ಹಂತದಲ್ಲಿ ಇರಬೇಕು. ಅದು ಶೇ 2ಕ್ಕಿಂತ ಕಡಿಮೆ ಆಗಬಾರದು ಎಂಬುದು ಆರ್ಬಿಐಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಗುರಿ. ಡಿಸೆಂಬರ್ ತಿಂಗಳಿನಲ್ಲೂ ಇದೇ ಮಟ್ಟದಲ್ಲಿ ಚಿಲ್ಲರೆ ಹಣದುಬ್ಬರ ಇದೆ.
• ಕೇರಳದಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಿನ ಪ್ರಮಾಣದಲ್ಲಿದ್ದು, ಶೇ9.19ರಷ್ಟಿದೆ. ಕರ್ನಾಟಕದಲ್ಲಿ ಶೇ 2.99, ಅಂಧ್ರಪ್ರದೇಶ ಶೇ 2.71, ತಮಿಳುನಾಡು ಶೇ 2.67 ಮತ್ತು ಜಮ್ಮು ಕಾಶ್ಮೀರದಲ್ಲಿ ಶೇ 2.26ರಷ್ಟು ದಾಖಲಾಗಿದೆ ಎಂದು ತಿಳಿಸಿದೆ.
| ಅಂಶ (Aspect) | ವಿವರ (Details) |
| ಮಾಪನ ವಿಧಾನ | ಗ್ರಾಹಕ ಬೆಲೆ ಸೂಚ್ಯಂಕ (CPI – Consumer Price Index) |
| ಡಿಸೆಂಬರ್ 2025 ದರ | 1.3% (ನವೆಂಬರ್‌ನ 0.7% ಕ್ಕಿಂತ ಸ್ವಲ್ಪ ಏರಿಕೆ). |
| ಹಿಂದಿನ ವರ್ಷ (2024) | 5.2% (ಗಣನೀಯ ಇಳಿಕೆ ಕಂಡುಬಂದಿದೆ). |
| ಆಹಾರ ಹಣದುಬ್ಬರ | -2.7% (ಆಹಾರ ಪದಾರ್ಥಗಳ ಬೆಲೆಯಲ್ಲಿ ಕುಸಿತ/Deflation). |
| ಗ್ರಾಮೀಣ vs ನಗರ | ಗ್ರಾಮೀಣ: 0.8%, ನಗರ: 2.0%. |
| ಕೋರ್ ಇನ್ಫ್ಲೇಶನ್ | 4.8% (28 ತಿಂಗಳ ಗರಿಷ್ಠ ಮಟ್ಟ – ಆಹಾರ ಮತ್ತು ಇಂಧನ ಹೊರತುಪಡಿಸಿ). |
| RBI FY26 ಅಂದಾಜು | 3.1% (ಹಿಂದಿನ 3.7% ಅಂದಾಜಿನಿಂದ ಕಡಿತಗೊಳಿಸಲಾಗಿದೆ). |
| ಆರ್ಥಿಕ ಪರಿಣಾಮ | ಕಡಿಮೆ ಹಣದುಬ್ಬರದಿಂದ RBIಗೆ ಬಡ್ಡಿದರ ಕಡಿತಗೊಳಿಸಲು ಮುಕ್ತ ಅವಕಾಶ. |
| ಸಾಮಾನ್ಯ ಪ್ರವೃತ್ತಿ | 2025ರಲ್ಲಿ ನಿರಂತರ ಕುಸಿತ; ಜೂನ್ 2025ರಲ್ಲಿ 77 ತಿಂಗಳ ಕನಿಷ್ಠ (2.1%) ದಾಖಲಾಗಿತ್ತು. |