Sat. Feb 7th, 2026

ಸಂದರ್ಭ: ಡಿಜಿಟಲ್ ಆಸ್ತಿಗಳ ಮಾರುಕಟ್ಟೆಯಲ್ಲಿ ಅಕ್ರಮ ಚಟುವಟಿಕೆ ಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರದ ವಿತ್ತೀಯ ಗುಪ್ತದಳವು (ಎಫ್ಐಯು) ಕಠಿಣ ನಿಯಮಗಳನ್ನು ಅನಾವರಣ ಮಾಡಿದೆ.
• ಹಣದ ಅಕ್ರಮ ವರ್ಗಾವಣೆ ತಡೆಯುವ ಉದ್ದೇಶದ ಹಾಗೂ ಕೆವೈಸಿ (ಗ್ರಾಹಕರಿಗೆ ಸಂಬಂಧಿಸಿದ ಆಗತ್ಯ ಮಾಹಿತಿ ಕಲೆಹಾಕುವುದು) ಪ್ರಕ್ರಿಯೆಗಳ ಕುರಿತಾದ ನಿಯಮಗಳು ಇವು. ಕ್ರಿಪ್ರೊಕರೆನ್ಸಿ ವಿನಿಮಯ ಸೇವೆಗಳನ್ನು ಒದಗಿಸುವವರು ಪಾಲಿಸಬೇಕಿದೆ. ಇವುಗಳನ್ನು ಪರಿಷ್ಕೃತ ನಿಯಮಗಳನ್ನು ಜನವರಿ 8ರಂದು ಹೊರಡಿಸಲಾಗಿದೆ. ಇವು ಕ್ರಿಪ್ರೊ ವಿನಿಮಯ ಕೇಂದ್ರಗಳನ್ನು ‘ವಾಸ್ತವೋಪಮ ಡಿಜಿಟಲ್ ಅಸ್ತಿ (ಪಿಡಿಎ) ಸೇವಾದಾತರು’ ಎಂದು ಗುರುತಿಸಿದೆ. ನಿಯಮಗಳ ಪ್ರಕಾರ ಇವರು ಸರಳವಾದ ಕೆಲವು ದಾಖಲೆಪತ್ರಗಳನ್ನು ಗ್ರಾಹಕರಿಂದ ಪಡೆಯುವುದಷ್ಟೇ ಅಲ್ಲದೆ, ಇನ್ನೂ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.
• ವಿನಿಮಯ ಕೇಂದ್ರಗಳ ಸೇವೆಯನ್ನು ಪಡೆಯಲು ಮುಂದಾಗುವ ಗ್ರಾಹಕರು ತಮ್ಮ ಸೆಲ್ಲಿಯನ್ನು ಕ್ಲಿಕ್ಕಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ. ಕ್ಯಾಮೆರಾ ಕಣ್ಣಿನ ಅಚೆಯಲ್ಲಿ ಗ್ರಾಹಕ ನಿಜಕ್ಕೂ ನಿಂತಿದ್ದಾನೆ ಎಂಬುದನ್ನು ತಂತ್ರಾಂಶವು ಆತನ ಕಣ್ಣುರೆಪ್ಪೆಗಳ ಚಲನೆ ಅಥವಾ ತಲೆಯ ಚಲನೆಯ ಮೂಲಕ ಗುರುತಿಸುತ್ತದೆ. ಈ ಪ್ರಕ್ರಿಯೆಯನ್ನು ಅನುಸರಿಸುವುದರಿಂದಾಗಿ ಭಾವಚಿತ್ರ ಅಥವಾ ಡೀಪ್ಫೇಕ್ ಚಿತ್ರ ಬಳಸಿ ವಂಚನೆ ಎಸಗುವುದನ್ನು ತಡೆಯಲು ಸಾಧ್ಯವಾಗುತ್ತದೆ.
ಬಿಗಿ ನಿಲುವು: ಕೇಂದ್ರ ಹಣಕಾಸು ಸಚಿವಾಲಯದ ಕೆಲಸ ಅಧೀನದಲ್ಲಿ ಮಾಡುವ ಎಫ್ಐಯು, ಕ್ರಿಪ್ರೊ ಆಸ್ತಿಗಳನ್ನು ಬಳಸಿ ನಡೆಯುವ ವಹಿವಾಟುಗಳು ಇನ್ನೊಬ್ಬರಿಗೆ ಗೊತ್ತಾಗದಂತೆ ಮಾಡುವುದರ ವಿರುದ್ಧ ಕಠಿಣ ನಿಲುವು ತಾಳಿದೆ. ಕೆಲವು ಕಂಪನಿಗಳು ಷೇರುಗಳ ಮಾದರಿಯಲ್ಲಿ ಡಿಜಿಟಲ್ ಟೋಕನ್ಗಳನ್ನು ನೀಡು ವುದನ್ನು ನಿರುತ್ತೇಜಿಸುವ ಉದ್ದೇಶವನ್ನು ನಿಯಮಗಳು ಹೊಂದಿವೆ.
• ಭಾರತದಲ್ಲಿ ಕೆಲಸ ನಿರ್ವಹಿಸುತ್ತಿ-ರುವ ಕ್ರಿಪ್ರೊ ವಿನಿಮಯ ಕೇಂದ್ರಗಳಿಗೆ ಎಫ್ಐಯು ಏಕಗವಾಕ್ಷಿ ನಿಯಂತ್ರಣ ನಿಯಂತ್ರಣ ವ್ಯವಸ್ಥೆಯಂತಿದೆ. ಎಲ್ಲ ಕ್ರಿಪ್ರೊ ವಿನಿಮಯ ಕೇಂದ್ರಗಳು ಎಫ್ಐಯು කව ನೋಂದಣಿ ಮಾಡಿಕೊಳ್ಳಬೇಕು, ಅನುಮಾನಕ್ಕೆ ಆಸ್ಪದ ನೀಡುವಂತಹ ವಹಿವಾಟುಗಳ ಬಗ್ಗೆ ಕಾಲಕಾಲಕ್ಕೆ ವರದಿ ಮಾಡಬೇಕು, ಹಣದ ಅಕ್ರಮ ವರ್ಗಾವಣೆ ತಡೆಯಲು, ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುವುದನ್ನು ತಡೆಯಲು ತಮ್ಮ ಗ್ರಾಹಕರ ದಾಖಲೆ ನಿರ್ವಹಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ.
• ‘ಹೆಚ್ಚಿನ ರಿಸ್ಕ್’ ಇರುವ ವ್ಯಕ್ತಿಗಳ ಕೆವೈಸಿ ಪರಿಷ್ಕರಣೆ ಪ್ರಕ್ರಿಯೆಯನ್ನು ಆರು ತಿಂಗಳಿಗೆ ಒಮ್ಮೆ ನಡೆಸಬೇಕು. ಇತರ ಎಲ್ಲರ ಕೆವೈಸಿ ಪರಿಷ್ಕರಣೆ-ಯನ್ನು ವರ್ಷಕ್ಕೊಮ್ಮೆ ನಡೆಸಬೇಕು ಎಂದು ವಿನಿಮಯ ಕೇಂದ್ರಗಳಿಗೆ ಹೇಳಲಾಗಿದೆ.
• ತೆರಿಗೆಗಳ್ಳರ ಸ್ವರ್ಗ ಎಂದು ಹೆಸರಾಗಿರುವ ದೇಶಗಳ ಜೊತೆ ನಂಟು ಕಲೆಹಾಕಬೇಕು. ಹೊಂದಿರುವವರ, ಹೆಚ್ಚಿನ ರಿಸ್ಕ್ ಇರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿಚಾರವಾಗಿ ಮುಕ್ತ ಮೂಲಗಳಿಂದ ಮಾಹಿತಿ ಎಫ್ಎಟಿಎಫ್ನ (ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್) ಬೂದು ಅಥವಾ ಕಪ್ಪುಪಟ್ಟಿ ಯಲ್ಲಿ ಇರುವ ಪ್ರದೇಶಗಳಿಗೆ ಸೇರಿದವರ, ಲಾಭದ ಉದ್ದೇಶವಿಲ್ಲದ ಸಂಘಟನೆಗಳ (ಎನ್ಪಿಒ), ಸರ್ಕಾರಗಳಲ್ಲಿ ಮಹತ್ವದ ಹುದ್ದೆ ಹೊಂದಿರುವ ವ್ಯಕ್ತಿಗಳ ಬಗ್ಗೆಯೂ ಹೆಚ್ಚಿನ ಮಾಹಿತಿಯನ್ನು ಒಗ್ಗೂಡಿಸಬೇಕು ಎಂದು ನಿಯಮಗಳು ಹೇಳಿವೆ.
• ಷೇರುಗಳ ಬದಲು ಡಿಜಿಟಲ್ ಟೋಕನ್ಗಳನ್ನು ನೀಡುವ ಪ್ರಕ್ರಿಯೆ-ಯಲ್ಲಿ ಹೆಚ್ಚಿನ ಮಟ್ಟದ ಹಣದ ಅಕ್ರಮ ವರ್ಗಾವಣೆ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಹಣದ ನೆರವು ಒದಗಿಸುವ ಅಯಾಮಗಳೂ ಇರುತ್ತವೆ. ಹೀಗೆ ಡಿಜಿಟಲ್ ಟೋಕನ್ ನೀಡುವುದನ್ನು ಸಮರ್ಥಿಸಿಕೊಳ್ಳಲು ಆರ್ಥಿಕ ತರ್ಕ ಇರುವುದಿಲ್ಲ ಎಂದು ನಿಯಮಗಳಲ್ಲಿ ಹೇಳಲಾಗಿದೆ.
• ವಿನಿಮಯ ಕೇಂದ್ರಗಳು ಗ್ರಾಹಕರ ಗುರುತು. ವಿಳಾಸ ಮತ್ತು ವಹಿವಾಟಿನ ವಿವರವನ್ನು ಕನಿಷ್ಠ ಐದು ವರ್ಷಗಳವರೆಗೆ ಹಾಗೇ ಇರಿಸಬೇಕು, ತನಿಖೆ ನಡೆಯುತ್ತಿದ್ದರೆ ಅದು ಪೂರ್ಣ-ಗೊಳ್ಳುವವರೆಗೆ ಉಳಿಸಿಕೊಳ್ಳಬೇಕು ಎಂದು ನಿಯಮಗಳಲ್ಲಿ ತಾಕೀತು ಮಾಡಲಾಗಿದೆ.

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments