
ಸಂದರ್ಭ: ಭೂಸರ್ವೇಕ್ಷಣಾ ಉಪಗ್ರಹ ಮತ್ತು ಇತರ 14 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ-ಸಿ62 ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
• ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಬೆಳಿಗ್ಗೆ 10.18ಕ್ಕೆ 250 ಟನ್ ತೂಕದ ಸಾಧನಗಳನ್ನು ಹೊತ್ತು ಎಲ್ಎಸ್ಎಲ್ವಿ-ಸಿ62 ರಾಕೆಟ್ ನಭಕ್ಕೆ ಚಿಮ್ಮಲಿದೆ ಎಂದು ಇಸ್ರೋ ಭಾನುವಾರ ತಿಳಿಸಿದೆ. ಇಸ್ರೋ ಅಂಗಸಂಸ್ಥೆಯಾದನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ನೇತೃತ್ವದಲ್ಲಿ ದೇಶೀಯ ಹಾಗೂ ವಿದೇಶದ 14 ಉಪಗ್ರಹ ಗಳನ್ನು ಕಕ್ಷೆಗೆ ಕಳುಹಿಸಲು ಸಿದ್ಧತೆ ನಡೆದಿದೆ. ಥಾಯ್ಲೆಂಡ್ ಮತ್ತು ಬ್ರಿಟನ್ ಅಭಿವೃದ್ಧಿಪಡಿಸಿದ ಭೂ ಸರ್ವೇಕ್ಷಣಾ ಉಪಗ್ರಹವನ್ನು ಪಿಎಸ್ಎಲ್ವಿ ರಾಕೆಟ್ ಮೊದಲಿಗೆ ಕಕ್ಷೆಗೆ ತಲುಪಿಸಲಿದೆ.ನಂತರ ನಭಕ್ಕೆ ಹಾರಿದ 17 ನಿಮಿಷಗಳ ಒಳಗಾಗಿ ಉಳಿದ 13 ಉಪಗ್ರಹಗಳನ್ನು ಸೂರ್ಯಸಮನ್ವಯ ಕಕ್ಷೆಗೆ ಸೇರಿಸಲಿದೆ.