Fri. Feb 6th, 2026

ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ನವೆಂಬರ್ವರೆಗೆ ಚೀನಾಕ್ಕೆ, ದೇಶದಿಂದ ₹1.10 ಲಕ್ಷ ಕೋಟಿ ಮೌಲ್ಯದಷ್ಟು ಸರಕುಗಳು ರಫ್ತಾಗಿವೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ
• 2024-25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ದೇಶದಿಂದ ಚೀನಾಕ್ಕೆ ₹82,965 ಕೋಟಿ ಮೌಲ್ಯದ ಸರಕುಗಳು ರಫ್ತಾಗಿದ್ದವು. ಇದಕ್ಕೆ ಹೋಲಿಸಿದರೆ ಈ ಬಾರಿ ರಫ್ತು ಪ್ರಮಾಣವು ಶೇ 33ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
• ಚೀನಾವು ಕ್ರಮೇಣವಾಗಿ, ಭಾರತದ ಪ್ರಮುಖ ರಫ್ತು ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಅಲ್ಲದೆ, ಈ ದತ್ತಾಂಶವು ದ್ವಿಪಕ್ಷೀಯ ವ್ಯಾಪಾರ ಸಂಬಂಧದಲ್ಲಿ ರಚನಾತ್ಮಕ ಬದಲಾವಣೆಯನ್ನು ಸೂಚಿಸುತ್ತಿದೆ ಎಂದು ತಿಳಿಸಿದೆ.
• ಎಲೆಕ್ಟ್ರಾನಿಕ್ಸ್ ವಸ್ತುಗಳು, ಕೃಷಿ ಮತ್ತು ಸಾಗರೋತ್ಪನ್ನಗಳು, ದೂರಸಂಪರ್ಕ ಉಪಕರಣಗಳು ಹಾಗೂ ಮಸಾಲೆಗಳಂತಹ ಉತ್ಪನ್ನಗಳು ರಫ್ತು ಹೆಚ್ಚಳಕ್ಕೆ ಕಾರಣವಾಗಿವೆ ಎಂದು ತಿಳಿಸಿದೆ.
• ಅಮೆರಿಕದಲ್ಲಿ ಭಾರತದ ಸರಕುಗಳಿಗೆ ಹೆಚ್ಚಿನ ಸುಂಕ ಹೇರಲಾಗುತ್ತಿದೆ.
• ಇದರಿಂದ ಅಲ್ಲಿಗೆ ರಫ್ತು ಮಾಡಲು ಕಷ್ಟಕರವಾಗುತ್ತಿದೆ. ಈ ವೇಳೆ ಭಾರತವು ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರದ ಅವಕಾಶಕ್ಕಾಗಿ ಅನ್ವೇಷಣೆ ಮಾಡುತ್ತಿದೆ ಎಂದು ರಫ್ತುದಾರರೊಬ್ಬರು ಹೇಳಿದ್ದಾರೆ.

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments