Sat. Feb 7th, 2026

ಸಂದರ್ಭ: ಅಮೆರಿಕ ಭಾರತದ ಮೇಲೆ ಹೇರಿರುವ ಹೆಚ್ಚುವರಿ ಸುಂಕದ ಪರಿಣಾಮದ ನಡುವೆಯೂ, ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಭಾರತವು ಶೇ 6.6ರಷ್ಟು ಜಿಡಿಪಿ ಪ್ರಗತಿ ದಾಖಲಿಸಲಿದೆ ಎಂದುವಿಶ್ವಸಂಸ್ಥೆ ಅಂದಾಜು ಮಾಡಿದೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಜಾಗತಿಕ ಆರ್ಥಿಕ ಸ್ಥಿತಿಗತಿ ಮತ್ತು ಮುನ್ನೋಟ ವರದಿ -2026 ಬಿಡುಗಡೆ ಮಾಡಿದ್ದು, ಈ ಅವಧಿಯಲ್ಲಿ ಜಾಗತಿಕ ಶೇ.2.7ರಷ್ಟಾಗಬಹುದು ಎಂದು ಹೇಳಿದೆ.
• ಜಿಡಿಪಿ ಭಾರತದಲ್ಲಿ ಹೂಡಿಕೆ ಹೆಚ್ಚಳ, ಬಡ್ಡಿ ದರದಲ್ಲಿ ಆಗಿರುವ ಇಳಿಕೆ, ತೆರಿಗೆ ಸುಧಾರಣೆಗಳು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. 2025ರಲ್ಲಿ ಭಾರತದ ಜಿಡಿಪಿ ಶೇ 7.4ರಷ್ಟು ಇರಲಿದೆ. 2026ರಲ್ಲಿ ಇದು ಶೇ 6.6ಕ್ಕೆ ಇಳಿಯಬಹುದು. ಆದರೂ ಭಾರತವು ಉಳಿಯಲಿದೆ ಎಂದು ವರದಿ ಹೇಳಿದೆ.
• ಅಮೆರಿಕದ ಸುಂಕವು ಕೆಲವು ಸರಕುಗಳ ಮೇಲೆ ಪರಿಣಾಮ ಬೀರಬಹುದಾದರೂ, ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್ಫೋನ್ಗಳಂತಹ ಪ್ರಮುಖ ವಲಯಗಳು ಇದರಿಂದ ವಿನಾಯಿತಿ ಪಡೆಯುವ ನಿರೀಕ್ಷೆ ಇದೆ. ಯುರೋಪ್, ಪಶ್ಚಿಮ ಏಷ್ಯಾ ದೇಶಗಳು ಸೇರಿದಂತೆ ಪ್ರಮುಖ ಮಾರುಕಟ್ಟೆ ಗಳಿಂದ ಭಾರತದ ಸರಕುಗಳಿಗೆ ಬೇಡಿಕೆ ಹೆಚ್ಚಿದೆ. ಇದು ಸುಂಕದ ಒತ್ತಡವನ್ನು ಕಡಿಮೆ ಮಾಡಲಿದೆ. ತಯಾರಿಕೆ ಮತ್ತು ಸೇವಾ ವಲಯದ ಚಟುವಟಿಕೆಯು ಸದೃಢವಾಗಿರಲಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments