ಪರಿಸರ: ಚೀತಾ
ಸಂದರ್ಭ: ಅತಿವಿರಳ ಸಂದರ್ಭದಲ್ಲಿ ರೂಪುಗೊಳ್ಳುವ ಗಂಧದ ಬಣ್ಣದ ಚರ್ಮ-ತುಪ್ಪಳ ಮತ್ತು ಮಂಕಾದ ಕಂದುಬಣ್ಣದ ಚುಕ್ಕೆಗಳಿರುವ ಚಿರತೆಯುರಾಜ್ಯದ ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಇದನ್ನುಪತ್ತೆಮಾಡಿರುವ ವನ್ಯಜೀವಿ ತಜ್ಞರ ತಂಡವು, ಇದಕ್ಕೆ’ಚಂದನ ಚಿರತೆ’ ಎಂದು ಹೆಸರಿಟ್ಟಿದೆ.

- ಕಲ್ಯಾಣ ಕರ್ನಾಟಕ ಭಾಗದಲ್ಲಿನ ವನ್ಯಜೀವಿಗಳ ಅಧ್ಯಯನ ನಡೆಸುತ್ತಿರುವ ಹೊಳೆಮತ್ತಿ ನೇಚರ್ ಫೌಂಡೇಶನ್ (ಎಚ್‌ಎನ್‌ಎಫ್) ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾಟ್ರ್ಯಾಪಿಂಗ್ ಸಾಧನಗಳನ್ನು ಅಳವಡಿಸಿತ್ತು. ಈ ಕ್ಯಾಮೆರಾಗಳಲ್ಲಿ ಅತ್ಯಪರೂಪದ ‘ಚಂದನ ಚಿರತೆ’ ಹಲವು ಬಾರಿ ಸೆರೆಯಾಗಿದೆ.
- ಸಾಮಾನ್ಯ ಚಿರತೆಗಳು ಹಳದಿ-ಕಂದು ಮಿಶ್ರಿತ ಚರ್ಮ ಮತ್ತು ಕಪ್ಪು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ಆದರೆ, ಈ ಚಿರತೆಯು ಗಂಧದ ಬಣ್ಣವನ್ನು ಹೋಲುವ ಕೆಂಪು-ಗುಲಾಬಿ ಮಿಶ್ರಿತ ಬಣ್ಣದ ತುಪ್ಪಳ ಮತ್ತು ಮಾಸಲು ಕಂದು ಬಣ್ಣದ ಚುಕ್ಕೆ ಹೊಂದಿದೆ. ಜಗತ್ತಿನಾದ್ಯಂತ ಈವರೆಗೆ ಕೆಲವು ಬಾರಿಯಷ್ಟೇ ಈ ಸ್ವರೂಪದ ಚಿರತೆಗಳು ಪತ್ತೆಯಾಗಿವೆ.
- ಸ್ಟ್ರಾಬೆರಿ ‘ಜಾಗತಿಕವಾಗಿ ಇಂತಹದ್ದನ್ನು ಚಿರತೆ (Strawberry Leopard) ಎಂದು ಕರೆಯುತ್ತಾರೆ. ಆದರೆ ಈ ರೂಪಾಂತರಕ್ಕೆ ಸ್ಥಳೀಯ ಗುರುತನ್ನು ನೀಡಲು ಮತ್ತು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಲು ಮಾಡಲಾಗಿದೆ’ ಎಂದು ಎಚ್‌ಎನ್‌ಎಫ್ ‘ಚಂದನ ಚಿರತೆ’ ಎಂದು ನಾಮಕರಣ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
- ದಕ್ಷಿಣ ಆಫ್ರಿಕಾದಲ್ಲಿ ಕೆಲವು ಬಾರಿ, ತಾಂಜೇನಿಯಾದಲ್ಲಿ ಒಂದು ಬಾರಿ, ರಾಜಸ್ಥಾನದ ರಣಕಪುರದಲ್ಲಿ 2021ರಲ್ಲಿ ಇಂತಹ ಚಿರತೆ ಕಾಣಿಸಿಕೊಳ್ಳುತ್ತಿರುವುದು ಇಂತಹ ಚಿರತೆ ಪತ್ತೆಯಾಗಿತ್ತು. ಭಾರತದಲ್ಲಿ ಇದು ಎರಡನೇ ಬಾರಿ, ಕರ್ನಾಟಕ ದಲ್ಲಿ ಇದೇ ಮೊದಲ ಬಾರಿ ಎಂದು ಎಚ್‌ಎನ್‌ಎಫ್ ಮಾಹಿತಿ ನೀಡಿದೆ.