ಇತಿಹಾಸ: ಕರ್ನಾಟಕದ ಪ್ರಮುಖ ದೇವಾಲಯಗಳು
ಸಂದರ್ಭ: ರಾಜ್ಯದ ಧಾರ್ಮಿಕ ದತ್ತಿಇಲಾಖೆಯ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಆದಾಯಗಳಿಕೆಯಲ್ಲಿ’ಅತ್ಯಂತ ಶ್ರೀಮಂತ’ ಎನಿಸಿದೆ.

- 2022-23ರಲ್ಲಿ ಗಳಿಕೆಯಲ್ಲಿ ‘ಅತ್ಯಂತ ₹123 ಕೋಟಿ, 2023-24ರಲ್ಲಿ ₹146 ಕೋಟಿ, 2024-25ರಲ್ಲಿ 155 ಕೋಟಿ ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದೆ.
- ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ 34,566 ದೇವಾಲಯಗಳಿದ್ದು, ಇವುಗಳಲ್ಲಿ 205 ದೇವಾಲಯಗಳು ‘ಎ’ ವರ್ಗ, 193 ದೇವಾಲಯಗಳು ‘ಬಿ’ ವರ್ಗ ಹಾಗೂ 34,168 ದೇವಾಲಯಗಳು ‘ಸಿ’ ವರ್ಗದಲ್ಲಿವೆ.
- ಕೊಲೂರು ಮೂಕಾಂಬಿಕಾ ದೇವಾಲಯ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಕ್ರಮ ವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿವೆ.