- ಇ–ಖಾತಾದಲ್ಲಿ ಯುಪಿಒಆರ್ ಮಾಹಿತಿ: ಇಂಟಿಗ್ರೇಟೆಡ್ ವ್ಯವಸ್ಥೆ: ಮುನೀಶ್ ಮೌದ್ಗಿಲ್
ಸಂದರ್ಭ: ಜಿಬಿಎ ವ್ಯಾಪ್ತಿಯಲ್ಲಿನ ಆಸ್ತಿಗಳ ಇ–ಖಾತಾದಲ್ಲಿ ನಗರ ಆಸ್ತಿ ಮಾಲೀಕತ್ವದ ದಾಖಲೆಗಳನ್ನು (ಯುಪಿ ಒಆರ್) ಅಳವಡಿಸುವ ‘ಇಂಟಿಗ್ರೇಟೆಡ್ ಇ–ಖಾತಾ ವ್ಯವಸ್ಥೆ’ಯನ್ನು ಜಾರಿ ಮಾಡಲಾಗಿದೆ.
- ನಗರ ಸಮೀಕ್ಷೆಯಲ್ಲಿ ಯುಪಿಒಆರ್ ನಲ್ಲಿ ಆಸ್ತಿ ನಕ್ಷೆಗಳು, ಡ್ರೋನ್ ಮೂಲಕ ಪಡೆದುಕೊಂಡ ಓವರ್-ವ್ಯೂ ಚಿತ್ರಗಳನ್ನು ಜಿಬಿಎ ನೀಡುತ್ತಿರುವ ಇ-ಖಾತಾ ವ್ಯವಸ್ಥೆ ಯೊಂದಿಗೆ ಸಂಯೋಜಿಸಲಾಗಿದೆ.
- ನಗರದಲ್ಲಿ ಸುಮಾರು ಎರಡು ವರ್ಷ ಗಳಿಂದ ಯುಪಿಒಆರ್ ಯೋಜನೆಯಡಿ ನಿರ್ವಹಿಸಲಾಗಿರುವ ಕಾರ್ಯವನ್ನು ಇ-ಖಾತಾ ವ್ಯವಸ್ಥೆಗೆ ಸಂಯೋಜಿಸಲು ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ಕಾರ್ಯ ಶ್ಲಾಘನೀಯ.
- ಇ-ಖಾತಾದಲ್ಲಿರುವ ನಿಖರ ಜಿಪಿಎಸ್ ಮಾಹಿತಿ, ಯುಪಿಒಆರ್ ನಕ್ಷೆ ಮತ್ತು ಚಿತ್ರಗಳನ್ನು ಜೋಡಿಸುವುದು ಅತ್ಯಂತ ಪ್ರಮುಖವಾಗಿದೆ. ಈಗಾಗಲೇ ಸುಮಾರು ಒಂದು ಲಕ್ಷ ಸಂಯೋಜಿತ ಇ-ಖಾತಾಗಳನ್ನು ನೀಡಲಾಗಿದ್ದು, ಪ್ರತಿದಿನವೂ ಈ ಸಂಖ್ಯೆ ಮತ್ತಷ್ಟು ಹೆಚ್ಚಿಸಲು ಕ್ರಮವಹಿಸಲಾಗುವುದು.
- ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 9 ಲಕ್ಷ ಅಂತಿಮ ಇ-ಖಾತಾ ನೀಡಲಾಗಿದ್ದು, ಪ್ರತಿದಿನ ಸರಾಸರಿ 2,500 ಇ-ಖಾತಾಗಳನ್ನು ನೀಡಲಾಗುತ್ತಿದೆ. ಕಾಯುವ ಅವಧಿ ಸರಾಸರಿ ಎರಡು ದಿನ.
ಲಭ್ಯವಿರುವ ಮಾಹಿತಿ
l ಮಾಲೀಕರ ವಿವರ l ಆಸ್ತಿಯ ಎಲ್ಲ ವಿವರ
l ಆಸ್ತಿಯ ಚಿತ್ರ l ಮಾಲೀಕರ ಚಿತ್ರ
l ಆಸ್ತಿಯ ಜಿಪಿಎಸ್ ಅಂಕಿಗಳು l ಆಸ್ತಿಯ ಡಿಜಿಟಲ್ ಮ್ಯಾಪ್, ಸ್ಥಳದ ಚಿತ್ರ
l ಆಸ್ತಿಯ ತೆರಿಗೆ, ಬಳಕೆ ವಿವರ l ಬೆಸ್ಕಾಂ ಮೀಟರ್ ಸಂಖ್ಯೆ
l ಆಸ್ತಿ ಮಾಲೀಕತ್ವ ಪಡೆದಿರುವ ದಾಖಲೆ ಸಂಖ್ಯೆ
- ವನ್ಯಜೀವಿ ಮಾನವ ಸಂಘರ್ಷ ತಡೆಗೆ ಕಮಾಂಡ್ ಸೆಂಟರ್ ಆರಂಭ
ಸಂದರ್ಭ: ಸಿಬ್ಬಂದಿ ಕಾಡಿನಲ್ಲಿ ಎಷ್ಟು ಹೊತ್ತು ಗಸ್ತು ತಿರುಗುತ್ತಾರೆ ಎಂದು ಗಮನಿಸಲು ಇ–ಗಸ್ತು ತಂತ್ರಾಂಶ ರೂಪಿಸಿದ್ದು, ಎಂ.ಸ್ಟ್ರೈಪ್ ಜೊತೆಗೆ ಜಾರಿಗೆ ಸೂಚಿಸಲಾಗಿದೆ.
- ‘ಮಾನವ ಹಾಗೂ ವನ್ಯಜೀವಿ ಸಂಘರ್ಷ ತಡೆಯಲು ನಾಗರಹೊಳೆ, ಮಲೆಮಹದೇಶ್ವರ ಬೆಟ್ಟ, ಕಾಳಿ, ಮಡಿಕೇರಿ ವನ್ಯಧಾಮಗಳಲ್ಲಿ ಕಮಾಂಡ್ ಕೇಂದ್ರ ತೆರೆಯಲಾಗಿದೆ’.‘ಅರಣ್ಯದೊಳಗೆ ಗಸ್ತು ಹೆಚ್ಚಿಸಲು ಇದು ಸಹಕಾರಿ.
- ಚಿಕ್ಕಮಗಳೂರು, ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನ, ಮೈಸೂರು ವಿಭಾಗ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ, ಹಾಸನ ವಲಯದಲ್ಲೂ ಸೆಂಟರ್ ತೆರೆಯಲಾಗುವುದು.
- ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಕೇಂದ್ರವನ್ನು ಅಧಿವೇಶನದ ನಂತರ ಉದ್ಘಾಟಿಸಲಾಗುವುದು.
- ‘ಈ ಕೇಂದ್ರದಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾ, ಥರ್ಮಲ್ ಡ್ರೋನ್ ಕ್ಯಾಮೆರಾ, ಆಧುನಿಕ ತಂತ್ರಜ್ಞಾನ ಆಧಾರಿತ ಪರಿಕರಗಳು ಇರಲಿದ್ದು, ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇರಿಸಲಾಗುವುದು.
- ಯಾವ ಗ್ರಾಮಗಳ ವನ್ಯಜೀವಿ ಬಳಿ ಬಂದಿವೆ ಎಂಬ ಅರಿತು ಕ್ರಮ ವಹಿಸಿ ಜೀವಹಾನಿ ತಡೆಯಬಹುದು.
- ‘ರಾಜ ಭವನ’ ಅಲ್ಲ ‘ಲೋಕ ಭವನ’
ಸಂದರ್ಭ: ಕೇಂದ್ರ ಗೃಹ ಸಚಿವಾಲಯದ ತೀರ್ಮಾನದಂತೆ ದೇಶದಾದ್ಯಂತ ಇರುವ ‘ರಾಜ ಭವನ’ಗಳ ಹೆಸರನ್ನು ‘ಲೋಕ ಭವನ’ ಎಂದು ಮರುನಾಮಕರಣ ಮಾಡಲಾಗಿದ್ದು, ‘ರಾಜ ಭವನ, ಕರ್ನಾಟಕ’ ಎನ್ನುವುದನ್ನು ‘ಲೋಕ ಭವನ, ಕರ್ನಾಟಕ’ ಎಂದು ಹೆಸರಿಸಲಾಗಿದೆ.
- ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ‘ಹೆಸರು ಬದಲಾವಣೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಅನುಮೋದನೆ ನೀಡಿದ್ದಾರೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬರಲಿದೆ.
- ‘ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲ ಇಲಾಖೆಗಳು, ಸರ್ಕಾರಿ ಆದೇಶಗಳು, ಅಧಿಕೃತ ಪತ್ರ ವ್ಯವಹಾರಗಳು, ವೆಬ್‌ಸೈಟ್ ಹಾಗೂ ಫಲಕಗಳಲ್ಲಿ ‘ರಾಜ ಭವನ ಕರ್ನಾಟಕ’ ಬದಲು ‘ಲೋಕ ಭವನ ಕರ್ನಾಟಕ’ ಎಂದು ಬಳಸಬೇಕು.
ಬಡತನದ ಸುಳಿಯಲ್ಲಿ ಭಾರತದ ಮಕ್ಕಳು

- ಕರ್ನಾಟಕದ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ
ಸಂದರ್ಭ: ಕರ್ನಾಟಕದಲ್ಲಿನ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ ನೀಡಲಾಗಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
- ನವೆಂಬರ್ 25ರವರೆಗೆ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮವು (ಎನ್‌ಸಿಡಿಸಿ) ದೇಶದಲ್ಲಿನ ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ₹4.67 ಲಕ್ಷ ಕೋಟಿ ಮಂಜೂರು ಮಾಡಿದೆ. ಈ ಪೈಕಿ ಕರ್ನಾಟಕದಲ್ಲಿನ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ ನೀಡಲಾಗಿದೆ ಎಂದು ಬುಧವಾರ ತಿಳಿಸಿದ್ದಾರೆ.
- ರಾಷ್ಟ್ರೀಯ ಸಹಕಾರ ದತ್ತಾಂಶದ ಪ್ರಕಾರ, ಕರ್ನಾಟಕದಲ್ಲಿ 46,798 ಸಹಕಾರ ಸಂಘಗಳು ಇದ್ದು, ಅವು ಒಟ್ಟು 2.38 ಕೋಟಿ ಸದಸ್ಯರನ್ನು ಹೊಂದಿವೆ.
- 2021ರಲ್ಲಿ ಕೇಂದ್ರ ಸಹಕಾರ ಸಚಿವಾಲಯ ಆರಂಭವಾಯಿತು. ಅಂದಿನಿಂದ ‘ಸಹಕಾರದಿಂದ ಸಮೃದ್ಧಿ’ ಗುರಿ ಸಾಧಿಸಲು ಮತ್ತು ಕರ್ನಾಟಕ ಸೇರಿದಂತೆ ದೇಶದ ಎಲ್ಲೆಡೆ ಹೈನುಗಾರಿಕೆ, ಸಕ್ಕರೆ ಮತ್ತು ಕೃಷಿ ಸಹಕಾರ ಸಂಘಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
- ಪಾನ್ ಮಸಾಲಾ ಮೇಲೆ ಬೆಲೆ ನಮೂದು ಕಡ್ಡಾಯ
ಸಂದರ್ಭ: ಪಾನ್ ಮಸಾಲಾ ಪೊಟ್ಟಣಗಳ ಮೇಲೆ ಚಿಲ್ಲರೆ ಮಾರಾಟ ದರವನ್ನು (ಆರ್ಎಸ್ಪಿ) ನಮೂದು ಮಾಡುವುದು ಕಡ್ಡಾಯ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಹೇಳಿದೆ.
- ಪೊಟ್ಟಣಗಳ ಗಾತ್ರ ಯಾವುದೇ ಇರಲಿ, ಅದರಲ್ಲಿ ಇರುವ ಉತ್ಪನ್ನದ ತೂಕ ಎಷ್ಟೇ ಇರಲಿ, ಆರ್‌ಎಸ್‌ಪಿ ಹಾಗೂ ‘ಕಾನೂನು ಮಾಪನಶಾಸ್ತ್ರ (ಪೊಟ್ಟಣದಲ್ಲಿನ ಸರಕುಗಳು) ನಿಯಮ–2011’ರ ಅಡಿಯಲ್ಲಿ ಹೇಳಿರುವ ಸಂಗತಿಗಳನ್ನು ನಮೂದು ಮಾಡುವುದು ಕಡ್ಡಾಯ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.
- ಈ ಆದೇಶ ಫೆಬ್ರುವರಿ 1ರಿಂದ ಅನ್ವಯ ವಾಗಲಿದೆ. 10 ಗ್ರಾಂ ಹಾಗೂ ಅದ ಕ್ಕಿಂತ ಕಡಿಮೆ ತೂಕದ ಪೊಟ್ಟಣ ಗಳಲ್ಲಿ ಕೆಲವು ವಿವರಗಳನ್ನು ನೀಡುವ ಅಗತ್ಯ ಇಲ್ಲ ಎಂದು ಈ ಹಿಂದೆ ವಿನಾಯಿತಿ ನೀಡಲಾಗಿತ್ತು. ಆದರೆ ಈಗಿನ ಆದೇ ಶವು ವಿನಾಯಿತಿಗಳನ್ನು ಇಲ್ಲವಾಗಿಸಲಿದೆ.
- ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಮಸೂದೆಗೆ ಅನುಮೋದನೆ
ಸಂದರ್ಭ: ತಂಬಾಕು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಮೇಲೆ ಹೆಚ್ಚಿನ ಅಬಕಾರಿ ಸುಂಕ ವಿಧಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ.
- ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ– 2025 ಅನ್ನು ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
- ಪ್ರಸ್ತುತ ಜಾರಿಯಲ್ಲಿರುವ ತೆರಿಗೆ ಪರಿಹಾರದ ಸ್ವರೂಪವು 2026ರ ಮಾರ್ಚ್ ವೇಳೆಗೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಈ ಮಸೂದೆ ಜಾರಿಗೆ ಬಂದ ನಂತರ ಸಿಗರೇಟ್, ಜಗಿಯುವ ತಂಬಾಕು, ಸಿಗಾರ್, ಹುಕ್ಕಾ, ಜರ್ದಾ ಮತ್ತು ಪರಿಮಳಯುಕ್ತ ತಂಬಾಕಿನಂತಹ ಎಲ್ಲ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಗರಿಷ್ಠ ಮಟ್ಟದಲ್ಲೇ ಮುಂದುವರಿಸಲು ಅವಕಾಶ ಸಿಗುತ್ತದೆ.
- ಪ್ರಸ್ತುತ, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಶೇ 28ರಷ್ಟು ಜಿಎಸ್‌ಟಿ ಜೊತೆಗೆ ವಿವಿಧ ತೆರಿಗೆ ವಿಧಿಸಲಾಗುತ್ತಿದೆ.
- ಈ ಮಸೂದೆಯು, ತಯಾರಿಸದ ತಂಬಾಕಿನ ಮೇಲೆ ಶೇ 60–70ರಷ್ಟು ಅಬಕಾರಿ ಸುಂಕ ವಿಧಿಸಲು ಪ್ರಸ್ತಾಪಿಸುತ್ತದೆ. ಸಿಗಾರ್ ಮತ್ತು ಚುಟ್ಟ ಮೇಲಿನ ಅಬಕಾರಿ ಸುಂಕವು ಶೇ 25ರಷ್ಟು ಅಥವಾ ಒಂದು ಸಾವಿರ ಸಿಗಾರ್ ಮೇಲೆ ₹5 ಸಾವಿರ ಯಾವುದು ಹೆಚ್ಚೋ ಅದನ್ನು ಪ್ರಸ್ತಾಪಿಸಲಾಗಿದೆ.
- ಉದ್ದವಿರುವ ಹಾಗೂ ಫಿಲ್ಟರ್ ಆಧರಿಸಿ ಒಂದು ಸಾವಿರ ಸಿಗರೇಟ್ ಮೇಲೆ ₹2,700ರಿಂದ ₹11 ಸಾವಿರವರೆಗೆ ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ. ಆದರೆ, ಜಗಿಯುವ ತಂಬಾಕಿಗೆ ಪ್ರತಿ ಕೆ.ಜಿಗೆ ₹100ವರೆಗೆ ತೆರಿಗೆ ವಿಧಿಸಲಾಗುತ್ತದೆ.