- ಭಾರತ ನಾರಿಯರಿಗೆ ಕಿರೀಟ: ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿದ ಹರ್ಮನ್ಪ್ರೀತ್ ಬಳಗ
ಸಂದರ್ಭ: ಮಹಿಳಾ ಕ್ರಿಕೆಟ್ ರಂಗದಲ್ಲಿ ಹೊಸ ಶಕೆ ಆರಂಭವಾಯಿತು. ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಭಾರತ ತಂಡವು ಮೊದಲ ಬಾರಿಗೆ ವಿಶ್ವ ಕಿರೀಟ ಮುಡಿಗೇರಿಸಿಕೊಂಡು ಚಾರಿತ್ರಿಕ ಸಾಧನೆ ಮೆರೆಯಿತು. ಹಲವು ವರ್ಷಗಳಿಂದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಂಡಿದ್ದ ಕನಸು ನನಸಾಯಿತು. ಹರ್ಮನ್ ಪ್ರೀತ್ ಕೌರ್ ಬಳಗದ ಆಟಗಾರ್ತಿಯರು ಹರ್ಷದ ಹೊನಲಲ್ಲಿ ತೇಲಿದರು.

- 2005 ಮತ್ತು 2017ರ ಟೂರ್ನಿಗಳಲ್ಲಿ ಫೈನಲ್‌ನಲ್ಲಿ ಎಡವಿದ್ದ ಭಾರತ ತಂಡ ಈ ಬಾರಿ ಗುರಿ ತಪ್ಪಲಿಲ್ಲ. ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ಅವರ ಆಲ್‌ರೌಂಡ್ ಆಟದ ಬಲದಿಂದ ಭಾರತವು 52 ರನ್‌ಗಳಿಂದ ದಕ್ಷಿಣ ಆಫ್ರಿಕಾ ವನಿತೆಯರ ಎದುರು ಜಯಭೇರಿ ಬಾರಿಸಿತು.
- ದಕ್ಷಿಣ ಆಫ್ರಿಕಾ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಜಯಿಸುವ ಅವಕಾಶ ಕೈತಪ್ಪಿತು. ಆದರೆ ತಂಡದ ನಾಯಕಿ ಲಾರಾ ವೋಲ್ವಾರ್ಟ್ (101; 98 ಎಸೆತ; 4X11, 6X1) ಅವರ ಅಮೋಘ ಶತಕವು ಇತಿಹಾಸದ ಪುಟ ಸೇರಿತು. ಅವರ ಬಳಗದ ದಿಟ್ಟ ಹೋರಾಟವೂ ಮನಗೆದ್ದಿತು.
- ಏಳು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೆಮಿಫೈನಲ್ ನಲ್ಲಿ ಸೋಲಿಸಿದ್ದ ಭಾರತ ಮತ್ತು ನಾಲ್ಕು ಸಲ ಕಿರೀಟ ಧರಿಸಿದ್ದ ಇಂಗ್ಲೆಂಡ್ ತಂಡ ವನ್ನು ಮಣಿಸಿದ್ದ ದಕ್ಷಿಣ ಆಫ್ರಿಕಾ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದವು.
- ಸಿಎಂಎಸ್ – 3 ಕಕ್ಷೆಗೆ: ಇತಿಹಾಸ ನಿರ್ಮಿಸಿದ ಇಸ್ರೊ
ಸಂದರ್ಭ: ಸಂವಹನ ಉಪಗ್ರಹವನ್ನು ‘ಬಾಹುಬಲಿ’ ನಿಖರವಾಗಿ ಕಕ್ಷೆಗೆ ಸೇರಿಸಿದೆ. ಇದು ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ.ವಿ. ನಾರಾಯಣನ್, ಇಸ್ರೊ ಅಧ್ಯಕ್ಷ
- ಹೊಸ ತಲೆಮಾರಿನ, ಸ್ವದೇಶಿ ನಿರ್ಮಿತ ‘ಬಾಹುಬಲಿ’ ರಾಕೆಟ್ ಮೂಲಕ ಅತ್ಯಂತ ಭಾರವಾದ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದರೊಂದಿಗೆ ಇಸ್ರೊ ಚಾರಿತ್ರಿಕ ಸಾಧನೆ ಮಾಡಿದೆ.
- ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ 4,410 ಕೆ.ಜಿ ತೂಕದ ಸಂವಹನ ಉಪಗ್ರಹವನ್ನು (ಸಿಎಂಎಸ್–03) ಹೊತ್ತು ನಭಕ್ಕೆ ಚಿಮ್ಮಿದ ಲಾಂಚ್ ವೆಹಿಕಲ್ ಮಾರ್ಕ್–3 (ಎಲ್‌ವಿಎಂ3-ಎಂ5) ‘ಬಾಹುಬಲಿ’ಯು ‘ಆತ್ಮನಿರ್ಭರ ಭಾರತ’ದ ಸಾಧನೆಗೆ ಸಾಕ್ಷಿಯಾಯಿತು.
- ದೇಶದ ಬಾಹ್ಯಾಕಾಶ ಕೇಂದ್ರ ದಿಂದ ಮೊದಲ ಬಾರಿಗೆ ಉಡ್ಡಯನ ಮಾಡಲಾಗುತ್ತಿರುವ ಭಾರಿ ತೂಕದ ಉಪಗ್ರಹ ಎಂಬ ಹೆಗ್ಗಳಿಕೆಗೆ ‘ಸಿಎಂಎಸ್–03’ ಪಾತ್ರವಾಯಿತು. ಇದರ ಉಡ್ಡಯನಕ್ಕೆ ಬಳಸಿದ ಭಾರಿ ಗಾತ್ರದ ರಾಕೆಟ್ (ಎಲ್‌ವಿಎಂ3-ಎಂ5) ಕೂಡ ‘ಬಾಹುಬಲಿ’ ಹೆಸರಿನ ಹಿರಿಮೆಯನ್ನು ಹೆಚ್ಚಿಸಿತು.
7 ಉಪಗ್ರಹ ಉಡಾವಣೆ ಗುರಿ
- ಇಸ್ರೊದ ಮಹತ್ವಾಕಾಂಕ್ಷೆಯ ಗಗನಯಾನ ಕಾರ್ಯಕ್ರಮದಡಿ ಮೊದಲ ಮಾನವ ರಹಿತ ಯೋಜನೆಯೂ ಸೇರಿದಂತೆ 2026ರ ಮಾರ್ಚ್ ಒಳಗೆ 7 ಉಪಗ್ರಹ ಉಡಾವಣೆಗಳನ್ನು ನಡೆಸುವ ಗುರಿಯನ್ನು ಇಸ್ರೊ ಹೊಂದಿದೆ.
- ಉಪಗ್ರಹದ ತೂಕ: 4,410 ಕೆ.ಜಿ
- ಉಡ್ಡಯನಕ್ಕೆ ಬಳಸಿದ ರಾಕೆಟ್ನ ಎತ್ತರ: 43.5 ಮೀಟರ್
- ಉಪಗ್ರಹದ ಕಾರ್ಯ ನಿರ್ವಹಣೆಯ ಅವಧಿ :15 ವರ್ಷ
- ಕನಿಷ್ಠ 15 ವರ್ಷ ಕಾರ್ಯಾಚರಣೆ: ಉಪಗ್ರಹವನ್ನು ಭೂಹೊಂದಾಣಿಕೆ ವರ್ಗಾವಣೆ ಕಕ್ಷೆಗೆ (ಜಿಟಿಒ) ಸೇರಿಸಲಾಗಿದ್ದು, ಇದು 2013ರಲ್ಲಿ ಉಡಾವಣೆ ಮಾಡಿದ ‘ಜಿಎಸ್‌ಎಟಿ–7’ ಸರಣಿಯ ಉಪಗ್ರಹಕ್ಕೆ ಬದಲಿಯಾಗಿ, ಮುಂದಿನ 15 ವರ್ಷಗಳವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ಇಸ್ರೊ ಹೇಳಿದೆ.
- ಸಾಗರಯಾನಕ್ಕೆ,ಭೂಮೇಲ್ಮೈ ನಲ್ಲಿ ನಡೆಯುವ ಚಟುವಟಿಕೆಗೆ ಅಗತ್ಯವಿರುವ ಸಂವಹನ ಸೇವೆಯನ್ನು ಈ ಉಪಗ್ರಹದ ಮೂಲಕ ನೀಡಲಾಗುತ್ತದೆ.
- ಎಲ್‌ವಿಎಂ–3 ಮೂಲಕ ನಡೆದಿರುವ ಉಡಾವಣೆಗಳು ಶೇ 100ರಷ್ಟು ಯಶಸ್ಸಿನ ದರ ಹೊಂದಿವೆ. ಚಂದ್ರಯಾನ– 3ರ (3,841.4 ಕೆ.ಜಿ) ಉಡಾವಣೆ ನಂತರ ಈ ರಾಕೆಟ್, ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ.
- ಇಸ್ರೊದ ಗಗನಯಾನ ಯೋಜನೆಯಲ್ಲಿ ‘ಎಲ್‌ವಿಎಂ–3’ ರಾಕೆಟ್ ಬಳಸುವ ಯೋಜನೆ ಇದ್ದು, ಇದಕ್ಕೆ ‘ಎಚ್‌ಆರ್‌ಎಲ್‌ವಿ’ ಎಂದು ಹೆಸರಿಡಲಾಗಿದೆ. 2018ರಲ್ಲಿ ಜಿಸ್ಯಾಟ್–11 (5,854 ಕೆ.ಜಿ) ಉಪಗ್ರಹವನ್ನು ಫ್ರೆಂಚ್ ಗಯಾನದಿಂದ ಉಡ್ಡಯನ ಮಾಡಲಾಗಿತ್ತು.
- ಪವನ ವಿದ್ಯುತ್: ಕರ್ನಾಟಕಕ್ಕೆ ಪ್ರಶಸ್ತಿ
ಸಂದರ್ಭ: ಅತ್ಯಧಿಕ ಪವನ ವಿದ್ಯುತ್ ಉತ್ಪಾದನೆ ಮೂಲಕ 2024-25ನೇ ಸಾಲಿನಲ್ಲಿ ಪ್ರಶಸ್ತಿ ಪಡೆದಿದ್ದ ಕರ್ನಾಟಕ ನವೀಕರಿಸಬಹು ದಾದ ಇಂಧನ ಅಭಿವೃದ್ಧಿ ನಿಯಮಿತವು (ಕ್ರೆಡಲ್), ಇದೇ ಸಾಲಿನಲ್ಲಿ‘ಅನುಷ್ಠಾನದ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್ ಸಾಮರ್ಥ್ಯ‘ಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ.
- ವಿಂಡ್ ಟರ್ಬೈನ್ ತಯಾರಕರ ಸಂಘ (ಐಡಬ್ಲ್ಯುಟಿಎಂಎ) ಚೆನ್ನೈನ ಟ್ರೇಡ್ ಸೆಂಟರ್‌ನಲ್ಲಿ ಆಯೋಜಿಸಿದ್ದ ‘ವಿಂಡ್ ಎನರ್ಜಿ ಇಂಡಿಯಾ 2025’ರ ಏಳನೇ ಆವೃತ್ತಿಯಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು ಕ್ರೆಡಲ್ ಅಧ್ಯಕ್ಷರೂ ಆದ ಶಾಸಕ ಟಿ.ಡಿ. ರಾಜೇಗೌಡ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
- ನಂತರ ಮಾತನಾಡಿದ ರಾಜೇಗೌಡ, ‘ಇದು ನಮ್ಮ ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಶುದ್ಧ ಇಂಧನ ಉತ್ಪಾದನೆ ಮತ್ತು ಬಳಕೆಗೆ ಆದ್ಯತೆ ನೀಡಿ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಎಲ್ಲಾ ಪಾಲುದಾರರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದರು.
- ‘ಅನುಷ್ಠಾನ ಹಂತದಲ್ಲಿರುವ ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಕರ್ನಾಟಕವು ದೇಶದಲ್ಲಿ ಮೊದಲ ಸ್ಥಾನ ಹೊಂದಿದೆ. ಇದನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
- ‘ಇಂಧನ ವಲಯದಲ್ಲಿನ ಹೊಸ ನೀತಿಗಳು ರಾಜ್ಯವನ್ನು ನವೀಕರಿಸಬಹುದಾದ ಇಂಧನದ ಶಕ್ತಿ ಕೇಂದ್ರವನ್ನಾಗಿ ರೂಪಿಸುತ್ತಿವೆ’ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದ್ದಾರೆ.
- ‘ನವೀಕರಿಸಬಹುದಾದ ಇಂಧನದ ರಾಷ್ಟ್ರೀಯ ಗುರಿಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಅವಿರತ ಪ್ರಯತ್ನಕ್ಕೆ ಈ ಪ್ರಶಸ್ತಿ ಸಂದಿದೆ’ ಎಂದು ಕೆ.ಪಿ. ರುದ್ರಪ್ಪಯ್ಯ ಅವರು ತಿಳಿಸಿದ್ದಾರೆ.
- ವೇಣುಗೆ ‘ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿ’
ಸಂದರ್ಭ: ಕೆಂಧೂಳಿ ಪತ್ರಿಕೆ ನೀಡುವ ‘ಕೆಂಧೂಳಿ ರಾಜ್ಯೋತ್ಸವ’ ಪ್ರಶಸ್ತಿಗೆ ಸಾಹಿತಿ ಬಿ.ಎಲ್. ವೇಣು ಆಯ್ಕೆಯಾಗಿದ್ದಾರೆ.
- ಈ ಪ್ರಶಸ್ತಿಯು ₹ 10 ಸಾವಿರ ನಗದು ಒಳಗೊಂಡಿದೆ. ಶಿವಕುಮಾರ್ ಕಂಪ್ಲಿ ಅಧ್ಯಕ್ಷತೆಯಲ್ಲಿ ತುರುವನೂರು ಮಂಜುನಾಥ, ಶ್ರೀದೇವಿ ಕೆರೆಮನೆ ಮತ್ತು ಪರಶಿವ ಧನಗೂರು ಅವರ ಸಮಿತಿ ಈ ಆಯ್ಕೆ ಮಾಡಿದೆ.
- ‘ಕೆಂಧೂಳಿ ಪತ್ರಿಕೆ ಐದು ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಸಾಹಿತ್ಯ, ಪತ್ರಿಕೋದ್ಯಮ, ಕೃಷಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಲು ತೀರ್ಮಾನಿಸಿದೆ’ ಎಂದು ಪತ್ರಿಕೆ ಸಂಪಾದಕ ತುರುವನೂರು ಮಂಜುನಾಥ ತಿಳಿಸಿದ್ದಾರೆ.
- ‘ನೀರಿನ ಹೆಜ್ಜೆ’ 5ರಂದು ಬಿಡುಗಡೆ
ಸಂದರ್ಭ:‘ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜಲ ವಿವಾದಗಳು, ಒಪ್ಪಂದಗಳು, ನ್ಯಾಯಾಲಯದ ತೀರ್ಪುಗಳು, ನೀರಾವರಿ ಯೋಜನೆಗಳು, ಸಮಸ್ಯೆಗಳು ಮತ್ತು ಪರಿಹಾರ ಗಳ ಚಿತ್ರಣವಿರುವ ನಾನು ಬರೆದಿರುವ ‘ನೀರಿನ ಹೆಜ್ಜೆ’ ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 5ರಂದು ಬಿಡುಗಡೆ ಮಾಡಲಿದ್ದಾರೆ.
- ‘1956 ಆಗಸ್ಟ್ 28ರಂದು ದೇಶದ ನದಿಗಳ ಮತ್ತು ಕಣಿವೆ ವಿವಾದಗಳ ನ್ಯಾಯ ನಿರ್ಣಯಕ್ಕೆ ಜಾರಿಗೊಳಿಸಲಾದ ಅಂತರರಾಷ್ಟ್ರೀಯ ಜಲ ಕಾಯ್ದೆ, ಜಲ ಒಪ್ಪಂದಗಳು ಯಾವುವು, ಆ ದೇಶಗಳು ಕೈಗೊಂಡ ನಿರ್ಧಾರಗಳೇನು? ಭಾರತದ ನಿಲುವುಗಳು ಏನಾಗಿತ್ತು? ದೇಶದ ನದಿಗಳ ಜೋಡಣೆ ಬಿಕ್ಕಟ್ಟು, ಪರಿಹಾರ ಹಾಗೂ ಜೋಡಣೆ ಸಾಧ್ಯವೇ? ದೇಶದಲ್ಲಿನ ನದಿಗಳ ವಿವಾದ ಮತ್ತು ಅಲ್ಲಿನ ಪರಿಸ್ಥಿತಿ ಏನು ಎಂಬುದರ ಬಗ್ಗೆ ಈ ಕೃತಿಯಲ್ಲಿ ದಾಖಲಿಸಿದ್ದೇನೆ. ರಾಜ್ಯದ ಮಹದಾಯಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಬಗ್ಗೆಯೂ ಸಮಗ್ರ ಮಾಹಿತಿಯಿದೆ’ ಎಂದರು.
- ‘ಬಾಂಗ್ಲಾದೇಶದೊಂದಿಗೆ ಬೇಸಿಗೆ ಅವಧಿಯಲ್ಲಿ ನೀರಿನ ಹರಿವು ಹಂಚಿ ಕೊಳ್ಳಬೇಕೆಂಬ ಒಪ್ಪಂದ ಮಾಡಿಕೊಳ್ಳ ಲಾಗಿತ್ತು.
- ಮಹಾನದಿ, ಶಾರದಾ ಒಪ್ಪಂದಕ್ಕೆ ಅಂದಿನ ಪ್ರಧಾನಿ ದೇವೇಗೌಡರು ಸಹಿ ಹಾಕಿ, ಪ್ರಮುಖ 12 ಅಧ್ಯಾಯಗಳನ್ನು ಒಳಗೊಂಡ ನಿಯಮಾವಳಿ ರೂಪಿಸಲಾಗಿತ್ತು.
- 1971ರಲ್ಲಿ ನೀರಾವರಿ ಯೋಜನೆಗಳಿಗೆ ವಿಶ್ವಬ್ಯಾಂಕ್ ನೆರವು ನೀಡುವುದಕ್ಕೆ ಆರಂಭಿಸಿತ್ತು.
- ನಂತರದಲ್ಲಿ ದೇಶದ ನದಿ ಜೋಡಣೆ ವಿಚಾರ ಮುನ್ನೆಲೆಗೆ ಬಂತು. ಕೇಂದ್ರ ಸರ್ಕಾರದ ರಾಷ್ಟ್ರೀಯ ನೀರಾವರಿ ಅಭಿವೃದ್ಧಿ ಸಂಸ್ಥೆಯು ಹಿಮಾಲಯದ 14 ನದಿ, ದಕ್ಷಿಣ ಭಾರತದ 16 ನದಿ ಜೋಡಣೆ ಹಾಗೂ ರಾಜ್ಯದ ಒಳಗಿನ 37 ನದಿ ಜೋಡಣೆಗೆ ವರದಿ ನೀಡಿತ್ತು. ಆ ಎಲ್ಲ ವಿಷಯಗಳು ಈ ಕೃತಿಯಲ್ಲಿದೆ’ ಎಂದು ವಿವರಿಸಿದರು.
- ‘1952ರ ಸೆ. 29ರಂದು ಕೃಷ್ಣಾ ನದಿ ಅಣೆಕಟ್ಟು ನಿರ್ಮಾಣಕ್ಕೆ ಶಂಕುಸ್ಥಾಪನೆಗೆ ಬಂದಿದ್ದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಅಣೆಕಟ್ಟುಗಳು ಆಧುನಿಕ ಭಾರತದ ದೇಗುಲಗಳಿದ್ದಂತೆ ಎಂದು ಉಲ್ಲೇಖಿಸಿದ್ದರು. ಅದನ್ನೂ ಉಲ್ಲೇಖಿಸಿ ದ್ದೇನೆ. ಕೃತಿಯಲ್ಲಿ ಯಾರನ್ನೂ ಟೀಕೆ ಮಾಡಿಲ್ಲ. ರಾಜಕೀಯ ವಿಚಾರಗಳ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ. ವಾಸ್ತವಾಂಶಗಳನ್ನಷ್ಟೆ ದಾಖಲಿಸಿದ್ದೇನೆ’ ಎಂದೂ ಅವರು ಸ್ಪಷ್ಟಪಡಿಸಿದರು.
- ‘ನುಗು’ ಸನಿಹ ಅದಿರು ಶೋಧ
ಸಂದರ್ಭ: ಅರಣ್ಯ ಇಲಾಖೆಗೆ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆ ಪ್ರಸ್ತಾವ: ಅದಿರು ಶೋಧ ಇನ್ನೂ ಪ್ರಸ್ತಾವದ ಹಂತದಲ್ಲಿದ್ದರೂ, ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಲು ಕಾರಣವಾಗುವ ಇಂಥ ಯೋಜನೆಗಳನ್ನು ಪುರಸ್ಕರಿಸಬಾರದು ಗಿರಿಧರ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ.
- ಜಿಲ್ಲೆಯ ಸರಗೂರು ತಾಲ್ಲೂಕಿನ ನುಗು ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದ ಸನಿಹದಲ್ಲಿರುವ ಅರಣ್ಯ ಪ್ರದೇಶ ಸೇರಿ 13 ಗ್ರಾಮಗಳಲ್ಲಿ ಸಿಲಿಮನೈಟ್ ಮತ್ತು ಕಯನೈಟ್ ಅದಿರಿನ ಶೋಧ ನಡೆಸಲು ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆಯು (ಜಿಎಸ್‌ಐ) ಅರಣ್ಯ ಇಲಾಖೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರಸ್ತಾವವು ಪರಿಶೀಲನಾ ಹಂತದಲ್ಲಿದೆ.
- ಒಂದು ವೇಳೆ ಅನುಮತಿ ದೊರೆತಲ್ಲಿ ಸರಗೂರು ತಾಲ್ಲೂಕಿನ ಹೊನಗನಹಳ್ಳಿ ಮತ್ತು ಶಾಂತಿಪುರ ವಲಯದ 499 ಹೆಕ್ಟೇರ್ ಅರಣ್ಯ ಪ್ರದೇಶ ಹಾಗೂ 1,001 ಅರಣ್ಯೇತರ ಭೂಮಿಯಲ್ಲಿ ಉದ್ದೇಶಿತ ಅದಿರು ಅನ್ವೇಷಣೆ ನಡೆಯಲಿದೆ. ಹಿರಿಯ ಭೂವಿಜ್ಞಾನಿ ನೇತೃತ್ವದ ಮೂವರು ಸಿಬ್ಬಂದಿಯನ್ನು ಅ.16ರಂದು ‘ಜಿಎಸ್‌ಐ’ ನಿಯೋಜಿಸಿದೆ. ‘50 ದಿನಗಳಲ್ಲಿ ಶೋಧ ನಡೆಸಿ, ವರದಿ ತಯಾರಿಸಲಿದ್ದಾರೆ’ ಎಂದು ಅರ್ಜಿಯಲ್ಲಿ ಹೇಳಿದೆ.
- ಎಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳ ಗಡಿಯಾಗಿ ಹರಿಯುವ ಕಬಿನಿ ನದಿ ತೀರದಲ್ಲಿರುವ ಶಾಂತಿಪುರ ಗ್ರಾಮದ ಎರಡು ಬೃಹತ್ ಬೆಟ್ಟಗಳ ಅರಣ್ಯ ಭೂಮಿ ಹಾಗೂ ಸುತ್ತಲ ಗ್ರಾಮಗಳಲ್ಲಿ ಶೋಧ ನಡೆಯಲಿದೆ. ಇಲ್ಲಿಂದ ನುಗು ಜಲಾಶಯ 4.5 ಕಿ.ಮೀ ಹಾಗೂ ಕಬಿನಿ ಜಲಾಶಯದ ಅಣೆಕಟ್ಟೆ 6.8 ಕಿ.ಮೀ ದೂರದಲ್ಲಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ನುಗು ವನ್ಯಜೀವಿಧಾಮ ಕೂಡ ಸನಿಹದಲ್ಲಿವೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಿಕ್ಕದೇವಮ್ಮ ಬೆಟ್ಟವೂ 1.5 ಕಿ.ಮೀ ದೂರದಲ್ಲಿದೆ.
- ‘ಮಾನವ– ವನ್ಯಜೀವಿ ಸಂಘರ್ಷದಲ್ಲಿ ನಲುಗಿರುವ ಪರಿಸರ ಸೂಕ್ಷ್ಮ ವಲಯದ ಈ ಭಾಗದಲ್ಲಿ ಗಣಿಗಾರಿಕೆ ಆರಂಭವಾದರೆ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಲಿದೆ’ ಎಂಬ ಆತಂಕವೂ ಇದೇ ವೇಳೆ ಪರಿಸರ ಹೋರಾಟಗಾರರಿಂದ ವ್ಯಕ್ತವಾಗಿದೆ.
- ‘ವನ್ಯಜೀವಿ ಹಾಗೂ ಜನರ ಮೇಲೆ ಪರಿಣಾಮ ಬೀರುವ ಗಣಿಗಾರಿಕೆ, ವಾಣಿಜ್ಯ ಪ್ರವಾಸೋದ್ಯಮದಂಥ ಯೋಜನೆ ತರುವ ಮೊದಲು ಸ್ಥಳೀಯರು, ಸಂಘ– ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೂಕ್ತ’ ಎನ್ನುತ್ತಾರೆ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ.
- ಎಲ್ಲೆಲ್ಲಿ ಶೋಧ?: ಸರಗೂರು ಪಟ್ಟಣಕ್ಕೆ ಸಮೀಪದಲ್ಲೇ ಇರುವ ಶಾಂತಿಪುರ ಗ್ರಾಮದ ಸರ್ವೆ ಸಂಖ್ಯೆ 49, ಮಂಚಹಳ್ಳಿಯ ಸರ್ವೆ ಸಂಖ್ಯೆ 7, ಹುಣಸೇಹಳ್ಳಿಯ ಸರ್ವೆ ಸಂಖ್ಯೆ 54ರ ಅರಣ್ಯ ಪ್ರದೇಶ, ಅಡಹಳ್ಳಿ, ಹಳೆ ಮಂಚನಹಳ್ಳಿ, ಹುನುಗಹಳ್ಳಿ, ಇಟ್ನ, ಕಾಟೂರು, ಕೂಲ್ಯ, ಕುಂದಾಪಟ್ಟಣ, ಕೆ.ಬೆಳತೂರು, ಲಕ್ಕೂರು, ಮನುಗನಹಳ್ಳಿಯಲ್ಲಿ ಅದಿರು ಶೋಧ ನಡೆಯಲಿದೆ.
- ವಿದೇಶಿ ಪ್ರವಾಸಿಗರು: ಹಿಂದೆ ಬಿದ್ದ ರಾಜ್ಯ

- ₹14 ಸಾವಿರ ಕೋಟಿ ವಿದೇಶಿ ಹೂಡಿಕೆ
ಸಂದರ್ಭ: ಸತತ ಮೂರು ತಿಂಗಳುಗಳಿಂದ ದೇಶದ ಬಂಡವಾಳ ಮಾರುಕಟ್ಟೆಗಳಿಂದ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದ ವಿದೇಶಿ ಹೂಡಿಕೆದಾರರು (ಎಫ್ಪಿಐ) ಅಕ್ಟೋಬರ್ ತಿಂಗಳಲ್ಲಿ ನಿವ್ವಳ ₹14,610 ಕೋಟಿ ಹೂಡಿಕೆ ಮಾಡಿದ್ದಾರೆ.
- ದೇಶದ ಕಾರ್ಪೊರೇಟ್ ಕಂಪನಿಗಳ ವರಮಾನ ಗಳಿಕೆಯು ಚೆನ್ನಾಗಿ ಇರುವುದು, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಇಳಿಕೆ ಮಾಡಿರುವುದು ಮತ್ತು ಭಾರತ–ಅಮೆರಿಕ ನಡುವೆ ವಾಣಿಜ್ಯ ಒಪ್ಪಂದವೊಂದು ಶೀಘ್ರವೇ ಸಾಧ್ಯವಾಗ ಬಹುದು ಎಂಬ ಆಶಾಭಾವನೆಯಲ್ಲಿ ಅವರು ಈ ಹೂಡಿಕೆ ಮಾಡಿದ್ದಾರೆ.
- ವಿದೇಶಿ ಹೂಡಿಕೆದಾರರು ಸೆಪ್ಟೆಂಬರ್‌ನಲ್ಲಿ ₹23,885 ಕೋಟಿ, ಆಗಸ್ಟ್‌ನಲ್ಲಿ ₹34,990 ಕೋಟಿ ಹಾಗೂ ಜುಲೈನಲ್ಲಿ ₹17,700 ಕೋಟಿ ಹೂಡಿಕೆಯನ್ನು ಹಿಂಪಡೆದಿದ್ದರು. ಅಕ್ಟೋಬರ್ ತಿಂಗಳಲ್ಲಿ ವಿದೇಶಿ ಹೂಡಿಕೆದಾರರ ನಿಲುವು ಬದಲಾಗಿದೆ. ಅಂದರೆ, ಜಾಗತಿಕ ಹೂಡಿಕೆದಾರರಿಗೆ ಭಾರತದ ಬಂಡವಾಳ ಮಾರುಕಟ್ಟೆಗಳ ಮೇಲೆ ಹೊಸದಾಗಿ ವಿಶ್ವಾಸ ಮೂಡಿದೆ.
- ದೇಶದ ಷೇರುಪೇಟೆಗಳಲ್ಲಿ ಈಚೆಗೆ ಕಂಡುಬಂದ ಇಳಿಕೆ ಹಾಗೂ ಕಾರ್ಪೊರೇಟ್ ಕಂಪನಿಗಳು ಉತ್ತಮ ಫಲಿತಾಂಶ ತೋರಿರುವ ಕಾರಣದಿಂದಾಗಿ ದೇಶದ ಷೇರುಗಳ ಮೌಲ್ಯವು ಆಕರ್ಷಕವಾಗಿ ಕಾಣಲಾರಂಭಿಸಿದೆ. ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಗಳತ್ತ ಮತ್ತೆ ಮರಳಿ ರುವುದಕ್ಕೆ ಇದೂ ಒಂದು ಕಾರಣ ಎಂದು ಮಾರ್ನಿಂಗ್‌ಸ್ಟಾರ್ ಇನ್ವೆಸ್ಟ್‌ಮೆಂಟ್ ರಿಸರ್ಚ್ ಇಂಡಿಯಾ ಸಂಸ್ಥೆಯ ಸಂಶೋಧನಾ ನಿರ್ವಾಹಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.
- ದೇಶದ ಅರ್ಥ ವ್ಯವಸ್ಥೆಯಲ್ಲಿನ ಸ್ಥಿರತೆ, ಜಾಗತಿಕ ಮಟ್ಟದಲ್ಲಿ ಪೂರಕ ಪರಿಸ್ಥಿತಿ ಹಾಗೂ ದೇಶದ ಕಾರ್ಪೊರೇಟ್ ಕಂಪನಿಗಳ ವರಮಾನದಲ್ಲಿ ಸ್ಥಿರತೆ ಕಂಡುಬಂದರೆ ಮುಂದಿನ ದಿನಗಳಲ್ಲಿಯೂ ವಿದೇಶಿ ಹೂಡಿಕೆದಾರರು ಹೂಡಿಕೆಯನ್ನು ಮುಂದುವರಿಸಬಹುದು ಎಂದು ಶ್ರೀವಾಸ್ತವ ಹೇಳಿದ್ದಾರೆ.
- ‘ಕಾರ್ಪೊರೇಟ್ ಕಂಪನಿಗಳ ವರಮಾನವು ಸುಧಾರಿಸಿದ ಸ್ಪಷ್ಟ ಲಕ್ಷಣಗಳು ಇವೆ. ಬೇಡಿಕೆಯಲ್ಲಿ ಉತ್ತಮ ಮಟ್ಟವು ಮುಂದುವರಿದರೆ ವರಮಾನವು ಇನ್ನಷ್ಟು ಹೆಚ್ಚಾಗುತ್ತದೆ. ಆಗ ಷೇರುಗಳ ಮೌಲ್ಯವು ಇನ್ನಷ್ಟು ಸಮಾಧಾನಕರವಾಗುತ್ತದೆ. ಹಾಗೆ ಆದಾಗ ವಿದೇಶಿ ಹೂಡಿಕೆದಾರರು ಹೂಡಿಕೆ ಮುಂದುವರಿಸುವ ಸಾಧ್ಯತೆ ಇದೆ’ ಎಂದು ಜಿಯೋಜಿತ್ ಇನ್ವೆಸ್ಟ್ ಮೆಂಟ್ಸ್ ಸಂಸ್ಥೆಯ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.
