Sat. Feb 7th, 2026

2026

ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ಉನ್ನತೀಕರಣ ಯೋಜನೆ(ಪಿಎಂಎಫ್‌ಎಂಇ) ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನ

ಸಂದರ್ಭ: ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ಉನ್ನತೀಕರಣ ಯೋಜನೆ (ಪಿಎಂಎಫ್ಎಂಇ) ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಸಾಲ ವಿತರಣೆಯಲ್ಲಿ ಕರ್ನಾಟಕದ ಜೊತೆಗೆ ತಮಿಳುನಾಡು ಕೂಡ ಮೊದಲ ಸ್ಥಾನ ಹಂಚಿಕೊಂಡಿದೆ.

  • ಕರ್ನಾಟಕದಲ್ಲಿ ಪಿಎಂಎಫ್‌ಎಂಇ ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ‘ಕರ್ನಾಟಕ ಆಹಾರ ಸಂಸ್ಕರಣೆ ಮತ್ತು ರಫ್ತು ನಿಗಮ’ವು (ಕೆಪೆಕ್) ಈ ಸಾಧನೆ ಮಾಡಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಹೇಳಿದ್ದಾರೆ.
  • 2021-22ರಲ್ಲಿ ಶುರುವಾದ ಈ ಯೋಜನೆಯ ಆಡಿ ನೆರವು ಬಯಸಿ ಕೆಪೆಕ್‌ಗೆ ಜನವರಿ ಅಂತ್ಯಕ್ಕೆ 8,734 ಅರ್ಜಿಗಳು ಬಂದಿದ್ದವು. ಈ ಪೈಕಿ 7,872 ಅರ್ಜಿದಾರರಿಗೆ ಸಾಲ ವಿತರಿಸಲಾಗಿದೆ. 2025-26ರ ಆರ್ಥಿಕ ವರ್ಷದಲ್ಲೇ 8.162 ಅರ್ಜಿಗಳನ್ನು ಸ್ವೀಕರಿಸಿ 2,346 ಅರ್ಜಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. 2,486 ಅರ್ಜಿಗಳು ಬ್ಯಾಂಕುಗಳಲ್ಲಿ ಪರಿಶೀಲನಾ ಹಂತದಲ್ಲಿವೆ. ಯೋಜನೆ ಪ್ರಾರಂಭವಾದ ಐದು ವರ್ಷಗಳಲ್ಲಿ ಇದು ಗರಿಷ್ಠ ಸಾಧನೆ ಎಂದು ಪ್ರಕಟಣೆ ತಿಳಿಸಿದೆ.

‘ಪಿನಾಕಿನಿ: ನ್ಯಾಯಮಂಡಳಿ ಸ್ಥಾಪಿಸಿ’

ಸಂದರ್ಭ: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ. ಇದ ರಿಂದಾಗಿ, ಮಾತುಕತೆ ಮೂಲಕವೇ ವಿವಾದ ಬಗೆಹರಿಸಲು ಮುಂದಾಗಿದ್ದ ಕರ್ನಾಟಕಕ್ಕೆ ಹಿನ್ನಡೆಯಾಗಿದೆ.

  • ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯ ಮೂರ್ತಿಗಳಾದ ವಿಕ್ರಮ್ನಾಥ್ ಹಾಗೂ ಎನ್.ವಿ.ಅಂಜಾರಿಯಾ ಅವರಿದ್ದ ಪೀಠವು, ‘1956ರ ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆಯಡಿ ಕೇಂದ್ರ ಸರ್ಕಾರವು ಶಾಸನಬದ್ದ ಕಾರ್ಯಗಳನ್ನು ನಡೆಸಲು ಯಾವುದೇ ಕಾನೂನು ಅಡಚಣೆ ಇಲ್ಲ’ ಎಂದು ಸ್ಪಷ್ಟಪಡಿಸಿದೆ.
  • ವಿವಾದ ಪರಿಹರಿಸಲು ನ್ಯಾಯ ಮಂಡಳಿ ರಚಿಸುವುದಕ್ಕೆ ಕೇಂದ್ರಕ್ಕೆ ಯಾವುದೇ ಅಡಚಣೆ ಇಲ್ಲ.
  • ತಮಿಳುನಾಡು ತನ್ನ ದೂರನ್ನು ನ್ಯಾಯ ಮಂಡಳಿಯ ಮುಂದೆ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿತು. 2018ರಲ್ಲಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಲೇವಾರಿ ಮಾಡಿತು.
  • ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟ ಕೆರೆಯಿಂದ ಹೊಸ-ಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.
  • ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ಗೆ 2018ರ ಮೇ 18ರಂದು ಅರ್ಜಿ ಸಲ್ಲಿಸಿತ್ತು. ಜಲವಿವಾದ ನ್ಯಾಯಮಂಡಳಿ ಒತ್ತಾಯಿಸಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2019ರ ನವೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು.
  • ಜಲಶಕ್ತಿ ಸಚಿವಾಲಯವು 2020ರಲ್ಲಿ ಸಂಧಾನ ಸಭೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿರಲಿಲ್ಲ. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರವನ್ನು 2024ರ ಜೂನ್‌ನಲ್ಲಿ ಒತ್ತಾಯಿಸಿತ್ತು.
  • ಈ ನಡುವೆ, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲಶಕ್ತಿ ಸಚಿವಾಲಯವು ಹೊಸ ಸಂಧಾನ ಸಮಿತಿ ರಚಿಸಿತ್ತು. ಈ ಸಮಿತಿಯು ಉಭಯ ರಾಜ್ಯಗಳ ನಡುವೆ ಒಂಬತ್ತು ಸಭೆಗಳನ್ನು ನಡೆಸಿತ್ತು.
  • జల ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಮಾತುಕತೆಯ ಮೂಲಕ ಈ ವಿವಾದವನ್ನು ಸೌಹಾರ್ದ-ಯುತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರವು ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದಿತ್ತು.
  • ಕರ್ನಾಟಕದ ಜಲಾನಯನ ಪ್ರದೇಶದಲ್ಲಿ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿ ನೀರನ್ನು ಬಳಸಲು ಯೋಜಿಸಲಾಗಿದೆ. ಇದರಲ್ಲಿ 2 ಟಿಎಂಸಿ ಮತ್ತು ವಾಡಿಕೆಗಿಂತ ಹೆಚ್ಚು ಮಳೆ ಬಂದಾಗ ದೊರೆಯುವ ಹೆಚ್ಚುವರಿ ನೀರು ತಮಿಳುನಾಡಿಗೆ ಉಳಿಯುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು.

ದಲೈಲಾಮಾಗೆ ಗ್ರಾಮಿ ಪ್ರಶಸ್ತಿ

ಸಂದರ್ಭ: ಟಿಬೆಟ್‌ನ ಬೌದ್ಧರ ಅಧ್ಯಾತ್ಮಿಕ ಗುರು ದಲೈ ಲಾಮಾ ಅವರು ‘ಗ್ರಾಮಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

  • ಅಡಿಯೊ ಪುಸ್ತಕ, ನಿರೂಪಣೆ ಹಾಗೂ ಕಥೆ ಹೇಳುವಿಕೆ, ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಎಂದು . ‘ಗ್ರಾಮಿ’ಯನ್ನು ಗುರುತಿಸಲಾಗಿದೆ.
  • ಲಾಸ್ ಏಂಜಲೀಸ್‌ನಲ್ಲಿ ನಡೆದ ಗ್ರಾಮಿ ಪ್ರಶಸ್ತಿ ಸಮಾರಂಭದಲ್ಲಿ ‘ಮೆಡಿಟೇಷನ್: ದಿ ರಿಪ್ಲೆಕ್ಷನ್ ಅಫ್ ಹಿಸ್ ಹೋಲಿನೆಸ್ ದಿ ದಲೈ ಲಾಮಾ’ ಎಂಬ ಅಡಿಯೂ ಬುಕ್‌ಗಾಗಿ ಪ್ರಶಸ್ತಿ ಘೋಷಣೆ ಮಾಡಲಾಯಿತು.
  • ಪ್ರಶಸ್ತಿಗೆ ಅರ್ಹರಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿರುವ ದಲೈ ಲಾಮಾ, ‘ಇದು ವೈಯಕ್ತಿಕ ಸಾಧನೆಯಲ್ಲ, ಜಾಗತಿಕ ಹೊಣೆಗಾರಿಕೆ ಹಾಗೂ ಸಹಾನುಭೂತಿಗೆ ಸಂದ ಮನ್ನಣೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  • ‘ಈ ಪ್ರಶಸ್ತಿಯನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ. ಶಾಂತಿ, ಸಹಾನುಭೂತಿ, ಪರಿಸರ ಬಗ್ಗೆ ಕಾಳಜಿ, ಮಾನವೀಯತೆಯ ಏಕತೆ ಮತ್ತು ಎಂಟು ಶತಕೋಟಿ ಜನರ ಯೋಗಕ್ಷೇಮ ಅತ್ಯಗತ್ಯ ಎಂದು ನಾನು ನಂಬಿಕೊಂಡಿದ್ದೇನೆ. ಈ ಸಂದೇಶವನ್ನು ಇನ್ನಷ್ಟು ಪಸರಿಸಲು ಗ್ರಾಮಿ ಪ್ರಶಸ್ತಿ ಪ್ರೇರಣೆಯಾಗಲಿದೆ’ ಎಂದು ಹೇಳಿದ್ದಾರೆ.
  • 1959ರಲ್ಲಿ ಚೀನಾ ಸೇನೆಯ ಅತಿಕ್ರಮಣದಿಂದ ಜೀವಭಯಕ್ಕೆ ಒಳಗಾಗಿ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ.
  • ಚೀನಾ ಆಕ್ಷೇಪ (ಬೀಜಿಂಗ್ ವರದಿ): ದಲೈ ಲಾಮಾ ಅವರಿಗೆ ಗ್ರಾಮಿ ಪ್ರಶಸ್ತಿ ನೀಡಿದ್ದನ್ನು ಚೀನಾ ಖಂಡಿಸಿದೆ.

25 ವರ್ಷದಲ್ಲಿ ರೈತರಿಗೆ ₹111 ಲಕ್ಷ ಕೋಟಿ ನಷ್ಟ: ಕೃಷಿ ಸುಧಾರಣಾ ಸಮಿತಿ ಅಧ್ಯಕ್ಷ ದೇವಿಂದ‌ರ್ ಶರ್ಮಾ

ಸಂದರ್ಭ: ಅಧ್ಯಯನದ ಪ್ರಕಾರ 25 ವರ್ಷದಲ್ಲಿ (2000-2025ರ ಅವಧಿ) ದೇಶದ ರೈತರಿಗೆ ₹111 ಲಕ್ಷ ಕೋಟಿ ನಷ್ಟವಾಗಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಕೃಷಿ ಬಿಕ್ಕಟ್ಟಿನಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದಾರೆ ಎಂದು ಕೃಷಿ ಸುಧಾರಣಾ ಸಮಿತಿ ಅಧ್ಯಕ್ಷ ದೇವಿಂದರ್‌ ಶರ್ಮಾ ಹೇಳಿದರು.

  • ರೈತರ ಆತ್ಮಹತ್ಯೆಗಳ ತಡೆ ಸಮಿತಿ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ರೈತರ ಆತ್ಮಹತ್ಯೆ ತಡೆಯುವ ಕುರಿತು ಚರ್ಚೆ ನಡೆಸಿ ಕೃಷಿ ತಂತ್ರಜ್ಞರ, ರೈತ ನಾಯಕರ ಸಲಹೆ ಪಡೆಯಲಾಯಿತು.
  • 2000-2016ರ ಅವಧಿಯಲ್ಲಿ ₹45 ಲಕ್ಷ ಕೋಟಿ ರೈತರಿಗೆ ನಷ್ಟವಾಗಿತ್ತು. ಇದಕ್ಕೆ ಹಲವು ಕಾರಣಗಳಿವೆ.

Denotified tribes seek constitutional recognition, separate Census entry

Context: Denotified tribes, nomadic tribes, semi-nomadic tribes seek ‘separate column’ in 2027 caste census, claiming they have been politically misclassified among SC, ST, OBC groups; they want sub-classification to highlight backwardness within grouping.

  • Denotified tribes, nomadic tribes, and semi-nomadic tribes across the country are coming together to push for a “separate column” for themselves in Census 2027 . Their demand is for constitutional recognition of the denotified tribes in a Schedule, on a par with the existing classifications of Scheduled Castes and Scheduled Tribes (SC/STs) and Other Backward Classes (OBCs).
  • In February 2027, India will conduct a caste enumeration for the first time since 1931. Five years after that 1931 Census, the origins of the Scheduled Castes list came into being in the form of the Government of India (Scheduled Castes) Order, 1936.
  • Half a century earlier, in 1871, a colonial law had classified entire communities, particularly nomadic and semi-nomadic tribes, as “criminals”. After the law was repealed in 1952, these groups came to be known as “denotified” tribes.
  • The Social Justice Ministry has now recommended to the Office of the Registrar-General of India that these denotified, nomadic, and semi-nomadic tribes be included in the Census. The Office of the RGI has agreed to include them in next year’s caste enumeration exercise, Ministry officials assured community leaders in North India in a virtual meeting on January 30.

‘Separate column’

  • “But we have no idea how they will do this,” B.K. Lodhi, a community organiser in Uttar Pradesh who was at the meeting, told The Hindu. “If we are not counted in a separate column, a separate code, in the Census forms, we will be lost once again,” said Balak Ram Sansi, 63, a Karnal-based organiser with the All India Denotified Nomadic Tribes Development Council.
  • Even as leaders from denotified, nomadic, and semi-nomadic communities across Uttar Pradesh, Haryana, Punjab, Rajasthan, and other parts of North India are fighting to have their own Schedule, some leaders have started to stress the importance of recognising “graded backwardness” within this grouping as well.
  • They want the demand for sub-classification to go hand in hand with that for a separate Schedule. These leaders, like Dr. Lodhi, are drawing their arguments from an August 2024 judgment, in which the Supreme Court paved the way for sub-classification of SCs and STs.

Denotified tribes

  • The Criminal Tribes Act was first enacted in 1871 and then amended in 1924, before being officially repealed on August 31, 1952. The 1871 Act said it was for the “registration, surveillance and control of certain criminal tribes and eunuchs”, describing “criminal tribes” as “tribe, gang, or class of persons” that are “addicted” to committing non-bailable offences. “These communities were among the first to confront the British and sustained the struggle. That is why the colonial government classified us as ‘criminal tribes’,” Mr. Sansi said.
  • The previous National Commission for Denotified Tribes, headed by Bhiku Ramji Idate, identified 1,200 such tribes, most of which have been assimilated in the SC, ST, or OBC classifications over the past seven decades. In its 2017 report, however, the Idate Commission listed 267 DNT communities that have not been classified as such. Dr. Lodhi, who served as Deputy Secretary and Director (Research) to the Idate Commission, said, “Most of the DNTs have been amalgamated in the SC, ST, OBC lists and they are not able to compete in these categories because of how marginalised they are.” Mr. Sansi said it was “politics” that led to the DNT communities being “misclassified”.

No caste certificates

  • Despite schemes for DNTs run by both the State and the Centre, such as the SEED scheme, only a “miniscule” percentage of people are getting benefits, mainly because governments are not willing to issue DNT certificates, the leaders said.
  • The Social Justice Ministry has only spent ₹69.3 crore on the SEED scheme in the past five years (as of December 2025), compared to the planned expenditure of ₹200 crore. “The reason for this is that no State is issuing proper DNT community certificates for us despite reminders from the Centre,” Dr. Lodhi said.

Manipur President’s Rule ends; Khemchand new CM

Context: Will prioritise peace, says the Chief Minister; BJP’s Kuki-Zo member Nemcha Kipgen and Losii Dikho of the Naga People’s Front sworn in as Deputy CMs; two more MLAs take oath as Ministers

  • The installation of a Bharatiya Janata Party (BJP)-led National Democratic Alliance government, with a Meitei leader at the helm, brought an end to nearly a year of President’s Rule in Manipur.
  • Around 6 p.m., Manipur Governor Ajay Kumar Bhalla administered the oath of office to former Assembly Speaker and martial artist Yumnam Khemchand Singh as the State’s second Chief Minister since the 2022 election.
  • The first, Nongthombam Biren Singh, resigned on February 9, 2025, following the ethnic conflict between the Kuki-Zo and Meitei communities that broke out on May 3, 2023. The swearing-in ceremony followed the revocation of President’s Rule, which was imposed on February 13, 2025.
  • Mr. Khemchand Singh represents the BJP from the Singjamei constituency.
  • The BJP’s Kangpokpi MLA, Nemcha Kipgen, from the Kuki-Zo community, and Naga People’s Front MLA Losii Dikho, a Naga leader representing the Mao constituency, were sworn in as Deputy Chief Ministers. The former took the oath virtually from Manipur Bhavan in New Delhi.
  • Two other Meitei MLAs — Govindas Konthoujam of the BJP (Bishnupur) and Khuraijam Loken Singh of the National People’s Party (Wangoi) — were sworn in as Ministers at the Lok Bhavan in Manipur’s capital, Imphal. “There will always be challenges. We will prioritise peace and work for the State’s development and growth,” Mr. Khemchand Singh said after swearing in.

Russia sounds alarm as New START treaty is set to expire

Context: The last nuclear treaty between Washington and Moscow is set to expire tomorrow; Moscow awaiting U.S. response to one-year extension offer; Russian drones strike Ukraine ahead of talks

  • The Kremlin warned on Tuesday that the world was heading into a “dangerous” moment as the last U.S.-Russia nuclear treaty is set to expire this week.
  • New START, the last nuclear treaty between Washington and Moscow after decades of agreements dating to the Cold War, is set to expire on Thursday, and with it restrictions on the two top nuclear powers.
  • “In just a few days, the world will be in a more dangerous position than it has ever been before,” spokesperson Dmitry Peskov said. The Kremlin, which has offered a one-year extension of the treaty, said “we still haven’t received a response from the Americans to this initiative”.
  • If the treaty is not extended, the world’s top two nuclear powers would “be left without a fundamental document that would limit and control these arsenals,” for the first time.
  • U.S. President Donald Trump, who cut many international agreements limiting the United States, said in September that an extension of the New START “sounds like a good idea,” but little has changed since then.
  • Meanwhile, Russia fired around 450 long-range drones and 70 missiles of various types at Ukraine in a major attack overnight, Ukrainian President Volodymyr Zelenskyy said.
  • The barrage came a day before the two countries were due to attend U.S.-brokered talks in Abu Dhabi.