ಸಂದರ್ಭ: ಕಾರ್ಮಿಕರ ಶ್ರಮ, ಅವರ ಭಾಗೀದಾರಿಕೆ ತೀವ್ರ ಪ್ರಮಾಣದಲ್ಲಿ ಇರುವ ವಲಯಗಳಿಗೆ ಸೇರಿದ ಉತ್ಪನ್ನಗಳ ಮೇಲಿನ ಸುಂಕ ಇಳಿಕೆಯು ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ತಿಪ್ಪಂದದ ಭಾಗವಾಗಿರುವ ನಿರೀಕ್ಷೆ ಇದೆ.
• ಅಂದರೆ, ಭಾರತ ಮತ್ತು ಐರೋಪ್ಯ ಒಕ್ಕೂಟದ (ಇಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್ಟಿಎ) ಜಾರಿಗೆ ಬಂದ ನಂತರದಲ್ಲಿ ಯುರೋಪಿನ ಕಾರುಗಳು, ವೈನ್ನಂತಹ ಉತ್ಪನ್ನಗಳ ಬೆಲೆಯು ಭಾರತದ ಮಾರುಕಟ್ಟೆಯಲ್ಲಿ ಇಳಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ.. ಎಫ್ಟಿಎ ಕುರಿತ ಮಾತುಕತೆಗಳು ಪೂರ್ಣಗೊಂಡಿರುವ ವಿಚಾರವನ್ನು ಭಾರತ ಹಾಗೂ ಇಯು ಪ್ರಮುಖರು ಮಂಗಳವಾರ ಘೋಷಿಸಲಿದ್ದಾರೆ.
• ಸೇವಾ ವಲಯಗಳಿಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಸಡಿಲಿಕೆ ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಭಾರತದ ತನ್ನ ಜವಳಿ, ಚರ್ಮೋದ್ಯಮ, ವಸ್ತ್ರ, ಆಭರಣ ಮತ್ತು ಹರಳು, ಕರಕುಶಲ ಉತ್ಪನ್ನಗಳಿಗೆ ಯುರೋಪಿನ ಮಾರುಕಟ್ಟೆಗೆ ಸುಂಕರಹಿತವಾಗಿ ಪ್ರವೇಶಿಸಲು ಅವಕಾಶ ಸಿಗಬೇಕು ಎಂದು ಒತ್ತಾಯಿಸಿದೆ. ಭಾರತವು ಅಂತಿಮಗೊಳಿಸಿರುವ ಎಲ್ಲ ಎಫ್ಟಿಎಗಳಲ್ಲಿ ಇದೇ ಬೇಡಿಕೆಯನ್ನೇ ಪ್ರಮುಖವಾಗಿ ಇರಿಸಲಾಗಿದೆ.ಅಲ್ಲದೆ, ಭಾರತದ ಜೊತೆ ಎಫ್ಟಿಎ ಅಂತಿಮ ಗೊಳಿಸಿರುವ ಬ್ರಿಟನ್, ಯುಎಇ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಎಲ್ಲದೇಶಗಳು ಈಬೇಡಿಕೆಗೆ ಒಪ್ಪಿವೆ.
• ಐರೋಪ್ಯ ಒಕ್ಕೂಟವು ತನ್ನಲ್ಲಿ ತಯಾರಾಗುವ ವಾಹನಗಳು, ವೈಸ್ ಸೇರಿದಂತೆ ವಿವಿಧ ಬಗೆಯ ಮದ್ಯಕ್ಕೆ ಸುಂಕ ಇಳಿಕೆಯ ಪ್ರಯೋಜನ ನೀಡುವಂತೆ ಒತ್ತಾಯಿಸುತ್ತಿದೆ. ಭಾರತವು ಬ್ರಿಟನ್ ಜೊತೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಲ್ಲಿ, ವಾಹನ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಲ್ಲಿ, ವಾಹನ ವಲಯಕ್ಕೆ ಕೋಟಾ ಆಧಾರಿತ ಸುಂಕ ವಿನಾಯಿತಿ ನೀಡಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಜೊತೆಗಿನ ಒಪ್ಪಂದಗಳಲ್ಲಿ ವೈನ್ಗಳ ಬಗ್ಗೆ ಪ್ರಸ್ತಾಪ ಇದೆ. ಅಸ್ಟ್ರೇಲಿಯಾದ ವೈನ್ಗಳಿಗೆ ಭಾರತವು 10 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ರಿಯಾಯಿತಿಗಳನ್ನು ಒದಗಿಸಿದೆ.
• ಕಳೆದ ಸೆಪ್ಟೆಂಬರ್ನಲ್ಲಿ ವಿಶೇಷ ಕಾರ್ಯದರ್ಶಿ ಆಗಿದ್ದ (ಈಗ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು, ‘ಪ್ರಸ್ತಾವಿತ ಒಪ್ಪಂದವು ಭಾರತದ ಆಟೊಮೊಬೈಲ್ ಉದ್ಯಮಕ್ಕೆ ರಫ್ತು ಹೆಚ್ಚಿಸಲು ದೊಡ್ಡ ಅವಕಾಶ ಒದಗಿಸಲಿದೆ, ಅಲ್ಲಿನ ಕಂಪನಿಗಳ ಜೊತೆ ಪಾಲುದಾರಿಕೆಗೆ ನೆರವಾಗಲಿದೆ ಎಂದು ಎಂದಿದ್ದರು.
• ಈಗ ಶೇ 10ರಷ್ಟು ಸುಂಕ: ಭಾರತದ ಸರಕುಗಳಿಗೆ ಐರೋಪ್ಯ ಒಕ್ಕೂಟವು ವಿಧಿಸುತ್ತಿರುವ ಸುಂಕದ ಪ್ರಮಾಣವು ಸರಿಸುಮಾರು ಶೇ 3.8ರಷ್ಟಿದೆ. ಆದರೆ ಕಾರ್ಮಿಕರ ಅಗತ್ಯವು ಹೆಚ್ಚಿನ ಮಟ್ಟದಲ್ಲಿ ಇರುವ ವಲಯಗಳ ಸರಕುಗಳಿಗೆ ಶೇ 10ರಷ್ಟು ಅಮದು ಸುಂಕವನ್ನು ಒಕ್ಕೂಟವು ವಿಧಿಸುತ್ತಿದೆ.
• ಈಗ ಭಾರತವು ಯುರೋಪಿನ ಉತ್ಪನ್ನಗಳಿಗೆ ಸರಾಸರಿ ಶೇ 9.3ರಷ್ಟು ಸುಂಕ ವಿಧಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ವಾಹನ ಹಾಗೂ ಅವುಗಳ ಬಿಡಿಭಾಗಗಳು (ಶೇ 35.5ರಷ್ಟು), ಪ್ಲಾಸ್ಟಿಕ್ (ಶೇ 10.4ರಷ್ಟು), ರಾಸಾಯನಿಕಗಳು ಹಾಗೂ ಔಷಧಗಳಿಗೆ (ಶೇ 9.9ರಷ್ಟು) ಹೆಚ್ಚಿನ ಪ್ರಮಾಣದಲ್ಲಿ ಸುಂಕ ವಿಧಿಸಲಾಗುತ್ತಿದೆ. ಭಾರತವು ಐರೋಪ್ಯ ಒಕ್ಕೂಟದಿಂದ ಆಮದಾಗುವ ಮದ್ಯದ ಪೇಯಗಳಿಗೆ ಶೇ 100ರಿಂದ ಶೇ 125ರಷ್ಟು ಸುಂಕ ವಿಧಿಸುತ್ತಿದೆ.
• ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಲಯಗಳನ್ನು ಒಪ್ಪಂದದ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ. ಒಕ್ಕೂಟವು ತನ್ನಲ್ಲಿನ ದನದ ಮಾಂಸ, ಸಕ್ಕರೆ ಮತ್ತು ಅಕ್ಕಿ ಮಾರುಕಟ್ಟೆಯನ್ನು ಒಪ್ಪಂದದ ವ್ಯಾಪ್ತಿಗೆ ತಂದಿಲ್ಲ. ಭಾರತವು ತನ್ನ ಕೃಷಿ ವಲಯ, ಹೈನುಗಾರಿಕೆ ವಲಯವನ್ನು ವಿದೇಶಿ ಪೈಪೋಟಿಗೆ ಒಡ್ಡಲು ಒಪ್ಪಿಲ್ಲ.
Subscribe
Login
0 Comments
Oldest