Sat. Feb 7th, 2026

ಸಂದರ್ಭ:  ಭಾರತದ ತಲಾವಾರು ಒಟ್ಟು ರಾಷ್ಟ್ರೀಯ ಆದಾಯದ ಬಗ್ಗೆ ಎಸ್‌ಬಿಐ ಅಂದಾಜು ಇನ್ನು ನಾಲ್ಕು ವರ್ಷಗಳಲ್ಲಿ ಭಾರತವು ಮೇಲ್ಮಧ್ಯಮ ವರ್ಗದ ಆದಾಯ ಹೊಂದಿರುವ ದೇಶವಾಗಿ ಪರಿವರ್ತನೆ ಕಾಣಲಿದೆ, ಆ ಮೂಲಕ ಚೀನಾ ಮತ್ತು ಇಂಡೊನೇಷ್ಯಾ ದೇಶಗಳ ಸಾಲಿಗೆ ಸೇರಲಿದೆ ಎಂದು ಎಸ್‌ಬಿಐ ರಿಸರ್ಚ್‌ನ ವರದಿಯು ಅಂದಾಜು ಮಾಡಿದೆ.

  • ಅಷ್ಟೇ ಅಲ್ಲ, 2028ರ ಸುಮಾರಿಗೆ ಭಾರತವು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಮೂರನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿ ಬೆಳೆಯಲಿದೆ ಎಂದೂ ಹೇಳಿದೆ. ಮೊದಲ ಸ್ಥಾನದಲ್ಲಿ ಅಮೆರಿಕ. ಎರಡನೆಯ ಸ್ಥಾನದಲ್ಲಿ ಚೀನಾ ಇರಲಿವೆ. 1990ರಲ್ಲಿ 14ನೇ ಸ್ಥಾನದಲ್ಲಿದ್ದ ಭಾರತದ ಅರ್ಥ ವ್ಯವಸ್ಥೆಯ ಗಾತ್ರವು 2025ರಲ್ಲಿ ನಾಲ್ಕನೆಯ ಸ್ಥಾನಕ್ಕೆ ಏರಿಕೆ ಕಂಡಿದೆ.
  • ತಲಾವಾರು ಒಟ್ಟು ರಾಷ್ಟ್ರೀಯ ಆದಾಯವನ್ನು ಅಮೆರಿಕದ ಡಾಲರ್ ಲೆಕ್ಕದಲ್ಲಿ ಅಂದಾಜಿಸಿ ದೇಶಗಳನ್ನು ಕಡಿಮೆ ಆದಾಯ, ಕೆಳ ಮಧ್ಯಮ ಆದಾಯ, ಮೇಲ್ಮಧ್ಯಮ ಆದಾಯ, ಹೆಚ್ಚಿನ ಆದಾಯದ ರಾಷ್ಟ್ರಗಳು ಎಂದು ವಿಶ್ವ ಬ್ಯಾಂಕ್ ವರ್ಗೀಕರಿಸಿದೆ.
  • 1990 ರಲ್ಲಿ ವಿಶ್ವ ಬ್ಯಾಂಕ್ ಒಟ್ಟು  218 ದೇಶಗಳನ್ನು ಹೀಗೆ ವರ್ಗೀಕರಿಸಿತ್ತು. 51 ದೇಶಗಳು ಕಡಿಮೆ ಆದಾಯದ ವರ್ಗದಲ್ಲಿ ಇದ್ದವು, 56 ದೇಶಗಳು ಕೆಳ ಮಧ್ಯಮ ಆದಾಯದ ವರ್ಗದಲ್ಲಿ, 29 ದೇಶಗಳು ಮೇಲ್ಮಧ್ಯಮ ಆದಾಯದ ವರ್ಗದಲ್ಲಿ ಹಾಗೂ 39 ದೇಶಗಳು ಹೆಚ್ಚಿನ ಆದಾಯದ ವರ್ಗದಲ್ಲಿ ಇದ್ದವು.
  • 2024 ಪ್ರಕಟವಾಗಿರುವ ಅಂಕಿ ಅಂಶಗಳ ಪ್ರಕಾರ 26 ದೇಶಗಳು ಮಾತ್ರವೇ ಕಡಿಮೆ ಆದಾಯದ ವರ್ಗದಲ್ಲಿವೆ. 87 ದೇಶಗಳು ಹೆಚ್ಚಿನ ಆದಾಯದ ವರ್ಗಕ್ಕೆ ಬಂದಿವೆ.
  • ಕಡಿಮೆ ಆದಾಯದ ವರ್ಗದಲ್ಲಿ ಇದ್ದ ಭಾರತವು ಕೆಳ ಮಧ್ಯಮ ಆದಾಯ ವರ್ಗಕ್ಕೆ ಬರಲು 60 ವರ್ಷ ತೆಗೆದುಕೊಂಡಿತು. 1962ರಲ್ಲಿ 90 ಡಾಲರ್‌ನಷ್ಟು ಇದ್ದ ಭಾರತದ ತಲಾ ವಾರು ಒಟ್ಟು ರಾಷ್ಟ್ರೀಯ ಆದಾಯವು 2007ರಲ್ಲಿ 910 ಡಾಲರ್‌ಗೆ ಹೆಚ್ಚಾಗಿದೆ. ಅದು ವಾರ್ಷಿಕವಾಗಿ ಶೇ 5.3ರಷ್ಟು ಬೆಳವಣಿಗೆ ಕಂಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
  • ‘ವಿಕಸಿತ ಭಾರತ ಗುರಿಯ ಪ್ರಕಾರ 2047ರ ವೇಳೆಗೆ ದೇಶದ ತಲಾವಾರು ಒಟ್ಟು ರಾಷ್ಟ್ರೀಯ ಆದಾಯವನ್ನು 13.936 ಡಾಲರ್ಗೆಗೆ ಹೆಚ್ಚಿಸಬೇಕು ಎಂದಾದರೆ, ದೇಶದ ತಲಾವಾರು ಒಟ್ಟು ರಾಷ್ಟ್ರೀಯ ಆದಾಯವು ಶೇ 7.5ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು (ಸಿಎಜಿಆರ್) ದಾಖಲಿಸಬೇಕು. ರ ಗುರಿಯನ್ನು ಸಾಧಿಸಲು ಸಾಧ್ಯವಿದೆ ಎಂಬಂತೆ ಕಾಣುತ್ತಿದೆ. ಏಕೆಂದರೆ 2001ರಿಂದ 2024ರವರೆಗೆ ಅದು ಶೇ 8.3ರಷ್ಟು ಸಿಎಜಿಆರ್ ದರದಲ್ಲಿ ಬೆಳೆದಿದೆ’ ಎಂದು ವರದಿ ವಿವರಿಸಿದೆ.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments