Sat. Feb 7th, 2026
  • ಮನೆ ಕೆಲಸದವರಕಲ್ಯಾಣಮಸೂದೆ

ಸಂದರ್ಭ: ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ಸಿದ್ಧತೆ l ವಿಶೇಷ ಮಂಡಳಿ, ನಿಧಿ ಸ್ಥಾಪನೆ: ಮನೆ ಕೆಲಸದವರಿಗೆ ಕನಿಷ್ಠ ವೇತನ, ವಾರಕ್ಕೆ 48 ಗಂಟೆ ದುಡಿಮೆ, .ಟಿ , ವಾರಕ್ಕೊಂದು ರಜೆ, ವಿಶ್ರಾಂತಿ, ವಾರ್ಷಿಕ ರಜೆ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಉದ್ದೇಶದಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ 2025’ ಅನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.

  • ಉದ್ದೇಶಿತ ಮಸೂದೆಯು ರಾಜ್ಯದಲ್ಲಿ ಅಧಿಸೂಚಿತವಾಗಿರುವ ಎಲ್ಲ ನಗರ ಪಾಲಿಕೆಗಳಿಗೆ ಅನ್ವಯ ಆಗಲಿದ್ದು, ಮಸೂದೆಯ ಕರಡನ್ನು ಸಿದ್ಧಪಡಿಸಲಾಗಿದೆ.
  • ಮನೆ ಕೆಲಸದವರ ಕಲ್ಯಾಣಕ್ಕಾಗಿ ವಿಶೇಷ ಮಂಡಳಿ ಮತ್ತು ನಿಧಿ ಸ್ಥಾಪಿಸುವ ಬಗ್ಗೆಯೂ ಮಸೂದೆಯಲ್ಲಿ ಪ್ರಸ್ತಾವವಿದೆ. ಕಲ್ಯಾಣ ನಿಧಿಗೆ ಮನೆ ಕೆಲಸದವರು, ಉದ್ಯೋಗದಾತರು, ಮನೆ ಕೆಲಸದವರನ್ನು ಪೂರೈಸುವ ಏಜೆನ್ಸಿಗಳು ನೀಡುವ ಅಥವಾ ಪಡೆಯುವ ಸಂಭಾವನೆಯ ಶೇ 5ರಷ್ಟು ಸೆಸ್ಪಾವತಿಸಬೇಕಾಗುತ್ತದೆ ಎಂಬ ಅಂಶ ಮಸೂದೆಯಲ್ಲಿದೆ.
  • ಅಲ್ಲದೆ, ಮನೆ ಕೆಲಸದವರ ಸುರಕ್ಷತೆ ನಿಯಮಗಳ ಅಡಿ ಸಂಗ್ರಹಿಸಲಾಗುವ ಎಲ್ಲ ದಂಡಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡಿದ ಅನುದಾನಗಳು, ಮಂಡಳಿ ಮಾಡಿದ ಬ್ಯಾಂಕ್‌ ಹೂಡಿಕೆ ಗಳಿಂದ ಗಳಿಸಿದ ಬಡ್ಡಿ ಆದಾಯಗಳು, ಮನೆ ಕೆಲಸದವರ, ಉದ್ಯೋಗದಾತರ ನೋಂದಣಿಯ ಶುಲ್ಕವೂ ಈ ಕಲ್ಯಾಣ ನಿಧಿಗೆ ಜಮೆ ಆಗಲಿದೆ.
  • ಮನೆ ಕೆಲಸದವರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರಿಗೆ ಸಾಮಾಜಿಕ ಭದ್ರತೆ ಒದಗಿಸಲು ರೂಪಿಸಿರುವ ಈ ಕರಡು ಮಸೂದೆಯು ಲಿಖಿತ ಒಪ್ಪಂದ, ಕಡ್ಡಾಯ ನೋಂದಣಿ, ಕನಿಷ್ಠ ವೇತನ, ನಿಗದಿತ ಕೆಲಸದ ಸಮಯ, ವಾರದ ರಜೆ, ಹೆರಿಗೆ ರಜೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
  • ನೋಂದಣಿ: ಮಸೂದೆಯ ಪ್ರಕಾರ, ಉದ್ಯೋಗದಾತರು, ಸೇವಾ ಪೂರೈಕೆ ದಾರರು ಹಾಗೂ ರಾಜ್ಯದ ಒಳಗೆ ಮನೆ ಕೆಲಸ ಮಾಡುವ ಎಲ್ಲರೂ ನೋಂದಣಿ ಮಾಡಿಕೊಳ್ಳಬೇಕು.
  • ಡಿಜಿಟಲ್ ಪೋರ್ಟಲ್‌ ಮೂಲಕವೇ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗುವುದು. ನೋಂದಣಿ ಮಾಡಿ ಕೊಳ್ಳದೆ ಮನೆ ಕೆಲಸದವರನ್ನು ನೇಮಕ ಮಾಡಿಕೊಳ್ಳುವಂತಿಲ್ಲ. ನೋಂದಣಿ ಮಾಡಿಕೊಂಡರೂ ಕಾಲ ಕಾಲಕ್ಕೆ ನವೀಕರಿಸದಿದ್ದರೆ ಉದ್ಯೋಗದಾತರಿಗೆ ಆರಂಭಿಕ ಹಂತದಲ್ಲಿ ದಂಡ, ಆ ನಂತರ ಸೆರೆವಾಸ ವಿಧಿಸಲು ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ. ಗೃಹ ಕಾರ್ಮಿಕ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಮತ್ತು ಶಿಕ್ಷೆಗಳಿರಲಿವೆ.

ವಾಗ್ದಾನ ಉಳಿಸಿಕೊಳ್ಳಲಿ

  • ‘ಕರ್ನಾಟಕ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆ’ಯ ಬಗ್ಗೆ ಮನೆ ಕೆಲಸದವರ ಸಂಘಟನೆಗಳ ಒಕ್ಕೂಟದೊಂದಿಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಚರ್ಚೆ ನಡೆಸಿದ್ದರು. ಮನೆ ಕೆಲಸದವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಅಗತ್ಯವಾದ ವೆಚ್ಚವನ್ನು ಕಾರ್ಮಿಕರು ಮತ್ತು ಮಾಲೀಕರಿಂದ ಭರಿಸುವ ಪ್ರಸ್ತಾವ ಕೈಬಿಡುವುದಾಗಿ ಅವರು ಭರವಸೆ ನೀಡಿದ್ದರು. ಸಚಿವರು ಮಸೂದೆಯನ್ನು ಅಂಗೀಕರಿಸುವಾಗ ಈ ವಾಗ್ದಾನವನ್ನು ಉಳಿಸಿಕೊಳ್ಳಬೇಕು ಎಂದು ಒಕ್ಕೂಟದ ಸಂಚಾಲಕಿ ಜಬೀನಾಖಾನಂ ಆಗ್ರಹಿಸಿದ್ದಾರೆ.

ಕಲ್ಯಾಣಕ್ಕಾಗಿ ಏನೇನು?

lಮನೆ ಕೆಲಸದವರ ಚಿಕಿತ್ಸಾ ವೆಚ್ಚ  lಮಕ್ಕಳ ವಿದ್ಯಾಭ್ಯಾಸದ ವೆಚ್ಚ

lಅಪಘಾತ ಸಂಭವಿಸಿದರೆ ಪರಿಹಾರ lಇಬ್ಬರು ಮಕ್ಕಳಿಗೆ ಸೀಮಿತಗೊಳಿಸಿ ವೇತನ ಸಹಿತ ಮಾತೃತ್ವ ರಜೆ

lಮರಣ ಹೊಂದಿದರೆ ಅಂತ್ಯಕ್ರಿಯೆಗೆ ಸಹಾಯಧನ lನಿವೃತ್ತಿ ಹೊಂದಿದರೆ ಪಿಂಚಣಿಗೆ ಅವಕಾಶ

lಲೈಂಗಿಕ ಶೋಷಣೆ, ಕಳ್ಳಸಾಗಣೆಗೆ ತಡೆ lಜಾತಿ, ಲಿಂಗ, ವರ್ಗ, ಜನಾಂಗ, ಧರ್ಮ, ಪ್ರದೇಶದ ಆಧಾರದಲ್ಲಿ ತಾರತಮ್ಯಕ್ಕೆ ತಡೆ

lಪ್ರತಿ ನೋಂದಾಯಿತ ಘಟಕಕ್ಕೆ ವಿಶಿಷ್ಟ ಗುರುತಿನ ಸಂಖ್ಯೆ

ದೇಶದಲ್ಲಿಯೇ ಮೊದಲು

  • ದೇಶದಲ್ಲಿಯೇ ಮೊದಲ ಬಾರಿಗೆ ಮನೆ ಕೆಲಸದವರಿಗೆ ಸಾಮಾಜಿಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರವು ಮುಂದಾಗಿದೆ. ಅದಕ್ಕಾಗಿ ಕರಡು ಮಸೂದೆ ತಯಾರಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ಹೆಚ್ಚುವರಿ ಆಯುಕ್ತ ಮಂಜುನಾಥ್‌ ಜಿ. ಮಾಹಿತಿ ನೀಡಿದ್ದಾರೆ.
  • ಮನೆ ಕೆಲಸದವರ ಕುಂದು ಕೊರತೆಗಳನ್ನು ಪರಿಹರಿಸುವುದಕ್ಕಾಗಿ ರಾಜ್ಯಮಟ್ಟ ದಲ್ಲಿ ಸಲಹಾ ಮಂಡಳಿ, ಜಿಲ್ಲಾ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿ ರಚನೆ ಆಗಲಿದೆ ಎಂದು ತಿಳಿಸಿದ್ದಾರೆ.
  • ಎಸ್ಐಆರ್‌: ಇಂದು ವೇಳಾಪಟ್ಟಿ ಘೋಷಣೆ?

ಸಂದರ್ಭ: ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕೈಗೊಳ್ಳಲು  ಕೇಂದ್ರ ಚುನಾವಣಾ ಆಯೋಗ ಸಜ್ಜಾಗಿದ್ದುವೇಳಾಪಟ್ಟಿ ಘೋಷಿಸುವ ಸಾಧ್ಯತೆ ಇದೆ.

  • ಹಲವು ಹಂತಗಳಲ್ಲಿ ಪರಿಷ್ಕರಣೆಗೆ ಚಿಂತನೆ ನಡೆದಿದೆ. ಚುನಾವಣೆ ಸಮೀಪಿಸುತ್ತಿರುವ ರಾಜ್ಯಗಳಲ್ಲಿ ಮೊದಲ ಹಂತದ ಎಸ್‌ಐಆರ್‌ ನಡೆಯಬಹುದು.
  • ಚುನಾವಣೆ ಸಮೀಪಿಸುತ್ತಿರುವ ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಎಸ್‌ಐಆರ್ ನಡೆಯುವ ಮುನ್ಸೂಚನೆ ಇದೆ. ಜತೆಗೆ, ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 10–15 ರಾಜ್ಯಗಳಲ್ಲಿ ಸಮಗ್ರ ಪರಿಷ್ಕರಣೆ ನಡೆಯಲಿದೆ. ಬಹುತೇಕ ರಾಜ್ಯಗಳಲ್ಲಿ 2002 ಮತ್ತು 2004 ನಡುವೆ ಎಸ್ಐಆರ್ನಡೆದಿತ್ತು.
  • ಗ್ರಾ.ಪಂ.ಗೆ ಅನುಮೋದನೆ ಅಧಿಕಾರ

ಸಂದರ್ಭ: ಬಡಾವಣೆ ಅಭಿವೃದ್ಧಿಗೆ ನಿಯಮ ರೂಪಿಸಿದ ಗ್ರಾಮೀಣಾಭಿವೃದ್ಧಿ ಇಲಾಖೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶ ಹೊರತುಪಡಿಸಿದ ಜಾಗಗಳಲ್ಲಿ ಬಡಾವಣೆ ಅಭಿವೃದ್ಧಿಗೆ ನಿಯಮ ಗಳನ್ನು ರೂಪಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಇಲಾಖೆಯು ಸುತ್ತೋಲೆ ಹೊರಡಿಸಿದೆ.

  • ಗ್ರಾಮ ಪಂಚಾಯಿತಿಯ ಸ್ಥಳೀಯ ಯೋಜನಾ ಪ್ರದೇಶದ ಹೊರಗೆ ಇರುವ ಹಾಗೂ ಭೂಪರಿವರ್ತನೆಗೆ ಒಳಗಾದ ಜಮೀನುಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಪೂರ್ವಾನು ಮೋದನೆ ಪಡೆದ ಈ ಬಡಾವಣೆಗಳಲ್ಲಿನ ನಿವೇಶನಗಳಿಗೆ ಗ್ರಾಮ ಪಂಚಾಯಿತಿಯೇ ಖಾತೆ ಮಾಡಿಕೊಡಲಿದೆ. ಭೂಪರಿವರ್ತನೆ ಇಲ್ಲದೆ ಅಭಿವೃದ್ಧಿ ಪಡಿಸಲಾದ ಬಡಾವಣೆಗಳಿಗೆ ಇದು ಅನ್ವಯವಾಗುವುದಿಲ್ಲ.
  • ಬಡಾವಣೆ ಅಭಿವೃದ್ಧಿ ಪಡಿಸುವುದಕ್ಕೂ ಮುನ್ನ ಸಂಬಂಧಿತ, ಪರಿವರ್ತಿತ ಜಮೀನಿನ ಮಾಲೀಕ ಬಡಾವಣೆಯ ವಿನ್ಯಾಸವನ್ನು ರಚಿಸ ಬೇಕು. ಬಡಾವಣೆಯಲ್ಲಿ ಇರಲಿರುವ ಸಾರ್ವಜನಿಕ ರಸ್ತೆಗಳು, ಉದ್ಯಾನ, ಚರಂಡಿ, ಒಳಚರಂಡಿ, ನೀರಿನ ಕೊಳವೆ ಮಾರ್ಗ, ತ್ಯಾಜ್ಯ ನೀರು ಸಂಸ್ಕರಣ ಘಟಕ, ವಿದ್ಯುತ್ ಜಾಲಗಳಿಗೆ ಸಂಬಂಧಿತ ಇಲಾಖೆ ಅಥವಾ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿದೆ.
  • ಈ ಎಲ್ಲ ದಾಖಲೆಗಳನ್ನು ಒಳಗೊಂಡ ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿ, ಬಡಾವಣೆ ಅಭಿವೃದ್ಧಿ ಪಡಿಸಲು ಅನುಮತಿ ಪಡೆಯಬೇಕು. ಹೀಗೆ ಅಭಿವೃದ್ಧಿ ಪಡಿಸಲಾದ ಬಡಾವಣೆ ಯಲ್ಲಿನ ಸಾರ್ವಜನಿಕ ರಸ್ತೆಗಳು, ಉದ್ಯಾನ, ಚರಂಡಿ– ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು, ಸಾರ್ವಜನಿಕ ಬಳಕೆಯ ಪ್ರದೇಶಗಳನ್ನು ಹಕ್ಕು ಪರಿತ್ಯಾಜನಾ ಪತ್ರದ ಮೂಲಕ ಗ್ರಾಮ ಪಂಚಾಯಿತಿಗೆ ಬಿಟ್ಟು ಕೊಡಬೇಕು. ಹೀಗೆ ಬಿಟ್ಟು ಕೊಟ್ಟ ನಂತರ ಅವುಗಳ ನಿರ್ವಹಣೆಯ ಹೊಣೆಗಾರಿಕೆಯು ಸಂಬಂಧಿತ ಗ್ರಾಮ ಪಂಚಾಯಿತಿಯದ್ದಾಗಿರಲಿದೆ ಎಂದಿದೆ.
  • ಇನ್ನು ಬಡಾವಣೆಯ ಮೂಲೆ ನಿವೇಶನಗಳು, ನಾಗರಿಕ ಬಳಕೆ (ಸಿ.ಎ) ನಿವೇಶನಗಳು ಮತ್ತು ಮಧ್ಯಂತರ ನಿವೇಶನಗಳನ್ನು ಅಡಮಾನ ಒಪ್ಪಂದದ ಅಡಿಯಲ್ಲಿ ಗ್ರಾಮ ಪಂಚಾಯಿತಿಗೆ ಒಪ್ಪಿಸಬೇಕು. ನಿಗದಿತ ಅವಧಿಯಲ್ಲಿ ಬಡಾವಣೆಯನ್ನು ಅಭಿವೃದ್ಧಿ ಪಡಿಸಿದರೆ, ಅಡಮಾನ ಒಪ್ಪಂದವನ್ನು ರದ್ದುಪಡಿಸಬೇಕು ಮತ್ತು ನಿವೇಶನ ಗಳನ್ನು ಬಡಾವಣೆ ಅಭಿವೃದ್ಧಿದಾರರಿಗೆ ಹಿಂತಿರುಗಿಸಬೇಕು ಎಂದು ಸೂಚಿಸಿದೆ.
  • ಅಭಿವೃದ್ಧಿ ಪಡಿಸಲಾದ ಬಡಾವಣೆ ಯಲ್ಲಿರುವ ಮೂಲಭೂತ ಸೌಕರ್ಯಗಳು ಯಾವುದೇ ದೋಷದಿಂದ ಕೂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಅಭಿವೃದ್ಧಿದಾರರು ಗ್ರಾಮ ಪಂಚಾಯಿತಿಗೆ ಖಾತರಿ ಒದಗಿಸ ಬೇಕು. ಮೂಲ ಸೌಕರ್ಯ ಅಭಿವೃದ್ಧಿಗೆ ತಗುಲಿರುವ ಒಟ್ಟು ವೆಚ್ಚದ ಶೇ 10ರಷ್ಟನ್ನು ಬ್ಯಾಂಕ್ ಭದ್ರತೆ ರೂಪದಲ್ಲಿ, ಒಂದು ವರ್ಷಕ್ಕೆ ಗ್ರಾಮ ಪಂಚಾಯಿತಿ ಎಂಜಿನಿಯ ರಿಂಗ್‌ ಇಲಾಖೆಯಲ್ಲಿ ಇರಿಸಬೇಕು. ಒಂದು ವರ್ಷದ ನಂತರ ಅದನ್ನು ವಾಪಸ್‌ ಪಡೆಯಬಹುದಾಗಿದೆ ಎಂದು ತಿಳಿಸಿದೆ.

ಸುತ್ತೋಲೆಯ ಪ್ರಮುಖ ಅಂಶಗಳು

lಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿತ ಇಲಾಖೆ/ಪ್ರಾಧಿಕಾರ ಗಳಿಂದ ವಿನ್ಯಾಸ ಅನುಮೋದನೆ ಪಡೆದ ನಂತರವಷ್ಟೇ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲು ಅವಕಾಶ

lಗ್ರಾಮೀಣಾಭಿವೃದ್ಧಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಎಸ್ಕಾಂಗಳಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ

lಮೂಲಭೂತ ಸೌಕರ್ಯಗಳ ಅಭಿವೃದ್ಧಿ ವೇಳೆ ಸಂಬಂಧಿತ ಇಲಾಖೆ/ಪ್ರಾಧಿಕಾರ/ವಿಭಾಗಗಳಿಗೆ ಒಟ್ಟು ವೆಚ್ಚದ ಶೇ5 ರಿಂದ ಶೇ10 ರವರೆಗೆ ಮೇಲ್ವಿಚಾರಣಾ ಶುಲ್ಕ ಪಾವತಿಸಬೇಕು

lಬಡಾವಣೆಗಳಲ್ಲಿನ ರಸ್ತೆ, ಉದ್ಯಾನ, ಸಾರ್ವಜನಿಕ ಬಳಕೆ ಪ್ರದೇಶ, ನಾಗರಿಕ ಬಳಕೆ ನಿವೇಶನಗಳನ್ನು ಗ್ರಾಮ ಪಂಚಾಯಿತಿಗೆ ಬಿಟ್ಟುಕೊಡುವುದು ಕಡ್ಡಾಯ

  • ಗುಡ್ಡೆಹಳ್ಳಿ: ದೈತ್ಯ ಪತಂಗ ಪತ್ತೆ

ಸಂದರ್ಭ: ಇಲ್ಲಿನ ಗುಡ್ಡೆಹಳ್ಳಿ ಗ್ರಾಮದಲ್ಲಿ 24 ಸೆಂ.ಮೀ ಅಗಲದ ರೆಕ್ಕೆ ಹೊಂದಿದ್ದ ದೈತ್ಯ ಪತಂಗ (ಅಟ್ಲಾಸ್ ಮೋತ್) ಕಂಡುಬಂದಿದೆ. ಹವ್ಯಾಸಿ ಛಾಯಾಗ್ರಾಹಕ ರವಿ ಗೌಡಾ ಎಂಬುವವರು ದೈತ್ಯ ಪತಂಗದ ಚಿತ್ರ ಸೆರೆಹಿಡಿದ್ದಾರೆ. 

  • ‘ಕರಾವಳಿ ಭಾಗದ ಕಾಡುಗಳಲ್ಲಿ ದೈತ್ಯ ಪತಂಗ ಕಾಣಿಸಿಕೊಳ್ಳುತ್ತದೆ. ಪ್ರಪಂಚದಲ್ಲಿ ದೊಡ್ಡ ಗಾತ್ರದಲ್ಲಿರುವ ಪತಂಗಗಳ ಪೈಕಿ ಇದೂ ಒಂದು. ಕೆಲ ನಿರ್ದಿಷ್ಟ ಮರಗಳ ಎಲೆಗಳ ಮೇಲೆ ಮಾತ್ರ ಮೊಟ್ಟೆ ಇಡುತ್ತವೆ. ಹೆಣ್ಣು ಪತಂಗ ಮೊಟ್ಟೆ ಇಟ್ಟು ನಂತರ ಸಾಯುತ್ತದೆ’ ಎಂದು ಕೀಟ ತಜ್ಞರು ಮಾಹಿತಿ ನೀಡಿದ್ದಾರೆ.
  • ‘2026: ಕಡಲ ಸಹಕಾರ ವರ್ಷ ಘೋಷಣೆ

ಸಂದರ್ಭ: ಆಸಿಯಾನ್ಭಾರತ ಪಾಲುದಾರಿಕೆ: ಹಿಂದೂಮಹಾಸಾಗರಪೆಸಿಫಿಕ್ ಪ್ರದೇಶದ ವಿದ್ಯಮಾನಗಳಿಗೆ ಸಂಬಂಧಿಸಿ ಆಸಿಯಾನ್ಪ್ರಮುಖ ಪಾತ್ರವಹಿಸಬೇಕು ಎಂಬ ವಿಚಾರವನ್ನು ಭಾರತ ಯಾವಾಗಲೂ ಬೆಂಬಲಿಸುತ್ತಾ ಬಂದಿದೆನರೇಂದ್ರ ಮೋದಿ, ಪ್ರಧಾನಿ.

  • ಆಸಿಯಾನ್‌ ಮತ್ತು ಭಾರತ ನಡುವಿನ ಸಮಗ್ರ ಪಾಲುದಾರಿಕೆಯು ಜಾಗತಿಕ ಸ್ಥಿರತೆ ಹಾಗೂ ಅಭಿವೃದ್ಧಿಗೆ ಪ್ರಬಲ ಅಡಿಪಾಯ ವಾಗಲಿದೆ. ಹೀಗಾಗಿ 2026 ಅನ್ನು ‘ಆಸಿಯಾನ್‌–ಭಾರತ ಕಡಲ ಸಹಕಾರ ವರ್ಷ’ ಎಂಬುದಾಗಿ ಘೋಷಿಸ ಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
  • ಸಾಗರ ಸುರಕ್ಷತೆ ಹಾಗೂ ‘ನೀಲಿ ಆರ್ಥಿಕತೆ’ ಕ್ಷೇತ್ರಕ್ಕೆ ಸಂಬಂಧಿಸಿ ಆಸಿಯಾನ್‌ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಕೂಡ ಹೆಚ್ಚುತ್ತಿದೆ. ಈ ಎಲ್ಲ ಕಾರಣಗಳಿಂದ ಈ ಘೋಷಣೆ ಮಾಡಲಾಗುತ್ತದೆ ಎಂದು ವಿವರಿಸಿದರು. ಮಲೇಷ್ಯಾದ ಕ್ವಾಲಾಲಂ ಪುರದಲ್ಲಿ ಆರಂಭವಾದ ಮೂರು ದಿನಗಳ ಆಸಿಯಾನ್‌ ಶೃಂಗಸಭೆಯನ್ನು ವರ್ಚುವಲ್‌ ಮೂಲಕ ಉದ್ದೇಶಿಸಿ ಅವರು ಮಾತನಾಡಿದರು.
  • ‘ವಿಶ್ವದ ಹಲವೆಡೆ ಈಗ ಅನಿಶ್ಚಿತ ಸ್ಥಿತಿ ಇದೆ. ಈ ಪರಿಸ್ಥಿತಿಯಲ್ಲಿಯೂ ಭಾರತ ಮತ್ತು ಆಸಿಯಾನ್‌ ನಡುವಿನ ಪಾಲುದಾರಿಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ’ ಎಂದರು.
  • ‘ಶಿಕ್ಷಣ, ಪ್ರವಾಸ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ, ಹಸಿರು ಇಂಧನ, ಸೈಬರ್‌ ಭದ್ರತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಆಸಿಯಾನ್‌ ಸದಸ್ಯ ರಾಷ್ಟ್ರಗಳ ಮಧ್ಯೆ ಸಹಕಾರ ಹೆಚ್ಚುತ್ತಿದೆ. ಸದಸ್ಯ ರಾಷ್ಟ್ರಗಳ ಜನರ ನಡುವಿನ ಸಂಬಂಧ ಬಲಪಡಿಸುವುದು, ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಕಾರ್ಯವನ್ನು ಮುಂದುವರಿಸಲಾಗುವುದು’ ಎಂದು ಮೋದಿ ಹೇಳಿದರು.
  • ಭಾರತದ ಕಾಫಿ ವಿಶ್ವ ಪ್ರಸಿದ್ಧ

ಸಂದರ್ಭ: ಮನದ ಮಾತಿನಲ್ಲಿ ಕರ್ನಾಟಕದ ಕಾಫಿ ಉಲ್ಲೇಖಿಸಿದ ಪ್ರಧಾನಿ: ‘ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬೆಳೆಯುವ ಕಾಫಿ ವಿಶ್ವದಲ್ಲಿ ಪ್ರಸಿದ್ಧವಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

  • ಮನದ ಮಾತು 127ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಬೆಳೆಯುತ್ತಿರುವ ಕಾಫಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇದು ಭಾರತದ ಕಾಫಿಯನ್ನು ಜಗತ್ತಿನಾದ್ಯಂತ ಗುರುತಿಸುವಂತೆ ಮಾಡಿದೆ. ಇತ್ತೀಚೆಗೆ ಈಶಾನ್ಯ ಭಾರತದಲ್ಲೂ ಕಾಫಿ ಬೆಳೆಯಲಾಗುತ್ತಿದೆ’ ಎಂದು ಹೇಳಿದ್ದಾರೆ.
  • ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ, ತಮಿಳುನಾಡಿನ ಪುಲ್ನಿ,  ಶೆವರಾಯ್, ನೀಲಗಿರಿ ಮತ್ತು ಅಣ್ಣಾಮಲೈ, ಕೇರಳದ ವಯನಾಡ್, ತಿರುವಾಂಕೂರು ಮತ್ತು ಮಲಬಾರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ ಎಂದಿದ್ದಾರೆ.
  • ಒಡಿಶಾದ ಕೊರಾ ಪುಟ್‌ ಕಾಫಿಯೂ ಜನಪ್ರಿಯತೆ ಪಡೆಯುತ್ತಿದೆ. ದೇಶದ ವಿವಿಧೆಡೆ ಬೆಳೆಯುವ ಕಾಫಿಯ ವೈವಿಧ್ಯ ನಿಜಕ್ಕೂ ಗಮನಾರ್ಹ ಎಂದು ಅವರು ಹೇಳಿದ್ದಾರೆ.
  • ಕೆಲವರು, ಕಾಫಿ ಕೃಷಿ ಮೇಲಿನ ಒಲವಿನ ಕಾರಣದಿಂದಾಗಿ ಖಾಸಗಿ ಕಂಪನಿಗಳಲ್ಲಿನ ತಮ್ಮ ಲಾಭದಾಯಕ ಉದ್ಯೋಗ ತೊರೆದು ಕಾಫಿ ಕೃಷಿಗೆ ಮುಂದಾಗಿ, ಯಶಸ್ವಿಯಾಗುತ್ತಿದ್ದಾರೆ. ಕಾಫಿ ಬೆಳೆಯಿಂದ ಹಲವಾರು ಮಹಿಳೆಯರ ಜೀವನವೂ ಹಸನಾಗಿದೆ ಎಂದು ಅವರು ಹೇಳಿದ್ದಾರೆ.
  • ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 70ರಷ್ಟಿದೆ. ನಂತರದ ಸ್ಥಾನದಲ್ಲಿ ಕೇರಳ ಮತ್ತು ತಮಿಳುನಾಡು ಇವೆ.
  • ಪ್ರೀತಿಸ್ಮಿತಾ ವಿಶ್ವದಾಖಲೆ

ಸಂದರ್ಭ: ಭಾರತದ 16 ವರ್ಷ ವಯಸ್ಸಿನ ವೇಟ್‌ಲಿಫ್ಟರ್‌ ಪ್ರೀತಿಸ್ಮಿತಾ ಭೊಯಿ ಅವರು ಏಷ್ಯನ್ ಯೂತ್ ಗೇಮ್ಸ್‌ನಲ್ಲಿ 158 ಕೆ.ಜಿ. ಭಾರ (66 ಕೆ.ಜಿ. + 92 ಕೆ.ಜಿ.) ಎತ್ತಿ ಚಿನ್ನ ಗೆದ್ದರಲ್ಲದೇ, ಆ ಹಾದಿಯಲ್ಲಿ ಕ್ಲೀನ್ ಆ್ಯಂಡ್‌ ಜರ್ಕ್‌ ವಿಭಾಗದಲ್ಲಿ ನೂತನ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.

  • 44 ಕೆ.ಜಿ.ಯೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರೀತಿಸ್ಮಿತಾ ಅವರು ಸ್ನಾಚ್‌ನಲ್ಲಿ 66 ಕೆ.ಜಿ. ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 92 ಕೆ.ಜಿ. ಎತ್ತಿದರು. ಮೊದಲೆರಡು ಯತ್ನಗಳಲ್ಲಿ ಕ್ರಮವಾಗಿ 87 ಕೆ.ಜಿ. ಹಾಗೂ 90 ಕೆ.ಜಿ. ಭಾರ ಎತ್ತಿದ್ದ ಅವರು ಮೂರನೇ ಯತ್ನದಲ್ಲಿ ಈ ಸಾಧನೆ ಮಾಡಿದರು.
  • 60 ಕೆ.ಜಿ.ಯೊಳಗಿನ ಬಾಲಕರ ಸ್ಪರ್ಧೆಯಲ್ಲಿ ಮಹಾರಾಜನ್‌ ಆರುಮುಗಪಾಂಡ್ಯನ್‌ ಅವರು ಒಟ್ಟು 256 ಕೆ.ಜಿ. (114 ಕೆ.ಜಿ. + 142 ಕೆ.ಜಿ.) ಭಾರ ಎತ್ತಿ, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
  • ಚೀನಾದ ಶೆನ್‌ ಷುವಾನ್ಫಾ (261 ಕೆ.ಜಿ.) ಸ್ವರ್ಣದ ಪದಕ ತಮ್ಮದಾಗಿಸಿಕೊಂಡರು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments