Sat. Feb 7th, 2026

  • 20 ಒತ್ತೆಯಾಳು ಬಿಡುಗಡೆ: ಪ್ಯಾಲೆಸ್ಟೀನ್ಕೈದಿಗಳ ಬಿಡುಗಡೆ ಮಾಡಿದ ಇಸ್ರೇಲ್

ಸಂದರ್ಭ: ಗಾಜಾದಲ್ಲಿ ಒತ್ತೆಯಾಳು ಗಳಾಗಿದ್ದ ಕೊನೆಯ 20 ಮಂದಿಯನ್ನು ಕದನ ವಿರಾಮ ಒಪ್ಪಂದದ ಭಾಗವಾಗಿ ಹಮಾಸ್ಬಿಡುಗಡೆ ಮಾಡಿದೆ.

  • ಮೊದಲ ಹಂತದ ಒತ್ತೆಯಾಳುಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿತು ಎಂಬ ಸುದ್ದಿ ಇಸ್ರೇಲ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ‘ಹೋಸ್ಟೇಜಸ್‌ ಸ್ಕ್ವೇರ್‌’ನಲ್ಲಿ ಸೇರಿದ್ದ ಕುಟುಂಬಸ್ಥರು ಆನಂದಬಾಷ್ಪ ಸುರಿಸಿದರು. ಒತ್ತೆಯಾಳುಗಳು ತಮ್ಮ ಕುಟುಂಬ ಮತ್ತು ಮನೆಯನ್ನು ಸೇರುವ ಫೋಟೊವನ್ನು ಇಸ್ರೇಲ್‌ ಬಿಡುಗಡೆ ಮಾಡಿದೆ.
  • ಪ್ಯಾಲೆಸ್ಟೀನ್‌ ಕೈದಿಗಳ ಬಿಡುಗಡೆ: ಇನ್ನೊಂದೆಡೆ, ಇಸ್ರೇಲ್‌ ಜೈಲುಗಳಲ್ಲಿದ್ದ ಪ್ಯಾಲೆಸ್ಟೀನ್‌ ಕೈದಿಗಳನ್ನು ಹೊತ್ತ ಬಸ್‌ಗಳು ವೆಸ್ಟ್‌ಬ್ಯಾಂಕ್‌ನ ರಾಮಲ್ಲಾಹ್‌ ಮತ್ತು ಗಾಜಾಪಟ್ಟಿಗೆ ಬಂದಿವೆ ಎಂದು ಹಮಾಸ್‌ನ ಕೈದಿಗಳ ಕಚೇರಿಯು ತಿಳಿಸಿದೆ.
  • ಹಮಾಸ್‌ ತನ್ನ ಬಳಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಜನರನ್ನು ಬಿಡುಗಡೆ ಮಾಡಿದ ನಂತರ ಇಸ್ರೇಲ್‌ 1,900ಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡಿದೆ.
  • ಶಾಂತಿಸ್ಥಾಪನೆಗೆ ಕಾರ್ಯೋನ್ಮುಖರಾಗಿ: ‘ಯುದ್ಧಭೂಮಿಯಲ್ಲಿ ಸಾಧಿಸುವುದಕ್ಕೆ ಏನೂ ಇಲ್ಲ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಕಾರ್ಯೋನ್ಮುಖರಾಗಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇಸ್ರೇಲ್‌ ಸಂಸದರಿಗೆ ಕರೆ ನೀಡಿದರು.
  • ‘ಇಸ್ರೇಲ್‌ ಶಸ್ತ್ರ ಬಳಸಿ ಪಡೆಯಬೇಕಾಗಿದ್ದನ್ನು ನಮ್ಮ ನೆರವಿನಿಂದ ಪಡೆದುಕೊಂಡಿದೆ’ ಎಂದು ಹೇಳಿದರು. ಸಂಘರ್ಷದಿಂದ ನಲುಗಿರುವ ಗಾಜಾವನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದರು. ಭಯೋತ್ಪಾದನೆ ಮತ್ತು ಹಿಂಸಾಚಾರದ ಪಥವನ್ನು ಬದಲಿಸುವಂತೆ ಪ್ಯಾಲೆಸ್ಟೀನಿಯನ್ನರನ್ನು ಒತ್ತಾಯಿಸಿದರು.
  • ಒತ್ತೆಯಾಳುಗಳ ಕುಟುಂಬಗಳನ್ನು ಟ್ರಂಪ್‌ ಅವರು ಇಸ್ರೇಲ್‌ನಲ್ಲಿ ಭೇಟಿ ಮಾಡಲಿದ್ದಾರೆ. ಬಳಿಕ ಅವರು ಅವರು ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನವು ಮಾಹಿತಿ ನೀಡಿದೆ.
  • 303 ಗ್ರಾಮ ಜಿಬಿಎ ಯೋಜನಾ ಪ್ರದೇಶ

ಸಂದರ್ಭ: ಗ್ರೇಟರ್ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನಗರ ಯೋಜನೆಯ ಜವಾಬ್ದಾರಿಯಿಂದ ಮುಕ್ತಗೊಳಿಸ ಲಾಗಿದೆ.

  • ‘ಗ್ರೇಟರ್‌ ಬೆಂಗಳೂರು ಪ್ರದೇಶ’ವನ್ನು (ಹಿಂದಿನ ಬಿಬಿಎಂಪಿ)  ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ವೆಂದು ಘೋಷಿಸ ಲಾಗಿದ್ದು, ನಗರ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಜಿಬಿಎಗೆ ವಹಿಸಲಾಗಿದೆ.
  • ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ– 1961 ರಂತೆ ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ವನ್ನು ಅಕ್ಟೋಬರ್‌ 10ರಂದು ಘೋಷಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
  • ಬಿಡಿಎ ಹಾಗೂ ಸರ್ಕಾರದಿಂದ ಈ ಹಿಂದಿನ ಎಲ್ಲ ನಿಯಮಗಳು, ಆದೇಶಗಳು, ನಿರ್ದೇಶನಗಳು, ಅನುಮೋದನೆ/ ಮಂಜೂರಾತಿಗಳು ಮುಂದುವರಿಯಲಿವೆ. ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ದ ಮಹಾಯೋಜನೆ ಅನು ಮೋದನೆ ಆಗುವವರೆಗೂ ಪರಿಷ್ಕೃತ ಮಾಸ್ಟರ್‌ ಪ್ಲಾನ್‌ (ಆರ್‌ಎಂಪಿ–2015) ಮತ್ತು ವಲಯ ನಿಯಮಾವಳಿಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ.
  • ಬಿಡಿಎಯಿಂದ ನಗರ ಯೋಜನೆ ಜವಾಬ್ದಾರಿಯನ್ನು ಜಿಬಿಎಗೆ ವಹಿಸ ಬೇಕೆಂಬ ನಿರ್ಣಯ ಜಿಬಿಎ ಮೊದಲ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆ ಪ್ರಕಾರ ಅಧಿಸೂಚನೆ ಹೊರಡಿಸಲಾಗಿದೆ.
  • ಜಿಬಿಎ ‘ಯೋಜನಾ ಪ್ರಾಧಿಕಾರ’ವೂ ಆಗಿದ್ದು, ತನ್ನ ವ್ಯಾಪ್ತಿಯಲ್ಲಿನ ವಸತಿ ಬಡಾವಣೆಗಳು, ಕೈಗಾರಿಕಾ ಬಡಾವಣೆ ಗಳನ್ನು ಅನುಮೋದಿಸುವ ಅಧಿಕಾರ ವನ್ನು ಹೊಂದಿದೆ. ಅಲ್ಲದೆ ನಗರದ ಮಾಸ್ಟರ್‌ ಪ್ಲಾನ್‌ ತಯಾರಿಸುವ ಜವಾಬ್ದಾರಿಯನ್ನು ಹೊಂದಿದ್ದು, ಅದನ್ನು ನಗರ ಪಾಲಿಕೆಗಳು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮೇಲ್ವಿಚಾರಣೆ ಮಾಡಲಿದೆ.
  • ಜಿಬಿಎ ರೂಪಿಸುವ ಮಾಸ್ಟರ್‌ ಪ್ಲಾನ್‌ನಂತೆಯೇ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ತನ್ನ ವ್ಯಾಪ್ತಿಯ ಕೈಗಾರಿಕಾ ಬಡಾವಣೆ ಹಾಗೂ ಕಟ್ಟಡಗಳ ನಕ್ಷೆಯನ್ನು ಅನುಮೋದಿಸಬೇಕಾಗುತ್ತದೆ.
  • ಯೋಜನಾ ಪ್ರಾಧಿಕಾರವಾಗಿರುವ ಜಿಬಿಎ ತನ್ನ ವಾರ್ಷಿಕ ವರದಿ, ಲೆಕ್ಕ ತಪಾಸಣಾ ವರದಿ, ಆಯವ್ಯಯವನ್ನು ಪ್ರತಿ ಹಣಕಾಸು ವರ್ಷದ ಅಂತ್ಯಕ್ಕೆ ಸರ್ಕಾರಕ್ಕೆ ಸಲ್ಲಿಸಬೇಕು. ಸ್ಥಳೀಯ ಯೋಜನಾ ಪ್ರಕ್ರಿಯೆಗಳನ್ನು ನಿರ್ವಹಿಸಲು ಜಿಬಿಎ ಮುಖ್ಯ ಆಯುಕ್ತರು ಅಧಿಕಾರಿಗಳ ಸಮಿತಿಯನ್ನು ರಚಿಸಲಿದ್ದಾರೆ. ಈಗಾಗಲೇ ಜಿಬಿಎಯಲ್ಲಿ ನಗರ ಯೋಜನೆ ಅಧಿಕಾರಿಗಳಿದ್ದು, ಅವರನ್ನು ಒಳಗೊಂಡ ಸಮಿತಿ ಕಾರ್ಯನಿರ್ವಹಿಸಲಿದೆ.

ಬಿಎಂಐಸಿಎಪಿಎ ಸೇರಿಲ್ಲ

  • ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ದಲ್ಲಿ ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ನ ಸ್ಥಳೀಯ ಯೋಜನಾ ಪ್ರದೇಶವನ್ನು (ಬಿಎಂಐಸಿಎಪಿಎ) ಸೇರಿಸಿಲ್ಲ. ಹೀಗಾಗಿ, 719.29 ಚದರ ಕಿ.ಮೀ ವ್ಯಾಪ್ತಿಯ ಜಿಬಿಎ ಪ್ರದೇಶದಲ್ಲಿ, 683 ಚದರ ಕಿ.ಮೀ ಮಾತ್ರ ಈಗ ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ವಾಗಿದೆ. ನೈಸ್‌ನೊಂದಿಗೆ ಭೂ ವ್ಯಾಜ್ಯ ಇರುವುದರಿಂದ ಈ ಪ್ರದೇಶವನ್ನು ಸದ್ಯಕ್ಕೆ ಸೇರಿಸಿಲ್ಲವಾದರೂ, ಮುಂದಿನ ದಿನಗಳಲ್ಲಿ ಸೇರಿಸಲಾಗುತ್ತದೆ ಎಂದು ನಗರ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದರು.
  • ಕ್ವಾಂಟಮ್ಆರ್ಥಿಕ ರಾಜ್ಯವಾಗಿ ಅಭಿವೃದ್ಧಿ

ಸಂದರ್ಭ: 2035 ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ಮೊತ್ತದ ವಹಿವಾಟಿನಕ್ವಾಂಟಮ್ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ, ಬೆಂಗಳೂರು ನಗರದಲ್ಲಿ ಕ್ಯೂಸಿಟಿ (ಕ್ವಾಂಟಮ್ಸಿಟಿ) ಸ್ಥಾಪಿಸಲು ಭೂಮಿ ನಿಗದಿಪಡಿಸಲಾಗಿದೆ ಎಂದು ವಿಜ್ಞಾನತಂತ್ರಜ್ಞಾನ ಸಚಿವ ಎನ್‌.ಎಸ್ಬೋಸರಾಜು ಹೇಳಿದ್ದಾರೆ.

  • ಸ್ವಿಟ್ಜರ್ಲೆಂಡ್‌ನ ಜಿನಿವಾದ ಬಯೋಟೆಕ್‌ ಕ್ಯಾಂಪಸ್‌ನಲ್ಲಿ ಆಯೋಜಿಸ ಲಾಗಿದ್ದ ‘ಸ್ವಿಸ್‌ನೆಕ್ಟ್ಸ್ ಕ್ವಾಂಟಮ್‌ ಸಮಿಟ್‌’ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  • ಕ್ವಾಂಟಮ್‌ ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ವಿಪುಲ ಅವಕಾಶಗಳಿದ್ದು, ಸಹಭಾಗಿತ್ವದ ಸಂಶೋಧನೆಗೆ ಕರ್ನಾಟಕ ರಾಜ್ಯ ಸರ್ಕಾರದ ಜೊತೆ ಕೈಜೋಡಿಸುವಂತೆ ಭೋಸರಾಜು ಸಲಹೆ ನೀಡಿದರು.
  • ಭಾರತ ಸರ್ಕಾರ ಸುಮಾರು ₹6,000 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಕ್ವಾಂಟಮ್‌ ಮಿಷನ್‌ ಆರಂಭಿಸಿದೆ. ಈ ಮಿಷನ್ ನಾವೀನ್ಯ, ಕೌಶಲ ಮತ್ತು ಸ್ಟಾರ್ಟ್‌ ಅಪ್ ಬೆಂಬಲದ ಮೂಲಕ 50ರಿಂದ 1000 ಕ್ಯೂ ಬಿಟ್‌ ಕ್ವಾಂಟಮ್‌ ಕಂಪ್ಯೂಟರ್‌ಗಳನ್ನು ಅಭಿವೃದ್ಧಿಪಡಿಸುವುದು, ಸುರಕ್ಷಿತ ಕ್ವಾಂಟಮ್ ಸಂವಹನ ಜಾಲಗಳನ್ನು ನಿರ್ಮಿಸುವುದು ಮತ್ತು ಕಂಪ್ಯೂಟಿಂಗ್‌, ಸಂವಹನ, ಸಂವೇದನೆ ಮತ್ತು ಸಾಮಗ್ರಿಗಳಿಗಾಗಿ ರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ ಈ ರಾಷ್ಟ್ರಿಯ ದೃಷ್ಟಿಕೋನವನ್ನು ಅಳವಡಿಸಿಕೊಂಡಿ ರುವ ಪ್ರಮುಖ ರಾಜ್ಯವಾಗಿ ಹೊರ ಹೊಮ್ಮಿದೆ ಎಂದರು.
  • ಇದೇ ಸಂದರ್ಭದಲ್ಲಿ ಬೋಸರಾಜು ಅವರು ಕ್ಯೂ–ಸಿಟಿ ಫೇಸ್‌ ಒನ್‌ನ ಪರಿಕಲ್ಪನೆಯ ವಿಡಿಯೊವನ್ನು ಅನಾವರಣಗೊಳಿಸಿದರು.
  • ಸಂಬಂಧ ವೃದ್ಧಿಗೆ ರೂಪುರೇಷೆ’: ಕೆನಡಾ ವಿದೇಶಾಂಗ ಸಚಿವೆ ಅನಿತಾ ಜತೆಗೆ ಸಚಿವ ಜೈಶಂಕರ್ಮಾತುಕತೆ

ಸಂದರ್ಭ: ‘ಭಾರತ ಮತ್ತು ಕೆನಡಾ ನಡುವಿನ ಸಂಬಂಧ, ಒಪ್ಪಂದ ಬಲಪಡಿಸಲು ಉಭಯ ರಾಷ್ಟ್ರಗಳು ಮಹತ್ವಾಕಾಂಕ್ಷೆಯ ರೂಪುರೇಷೆಗಳನ್ನು ಸಿದ್ಧಪಡಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ಹೇಳಿದ್ದಾರೆ.

  • ಭಾರತ ಪ್ರವಾಸ ಕೈಗೊಂಡಿರುವ ಕೆನಡಾ ವಿದೇಶಾಂಗ ಸಚಿವೆ ಅನಿತಾ ಆನಂದ್‌ ಅವರ ಜತೆಗೆ ವ್ಯಾಪಾರ, ಹೂಡಿಕೆ, ಗಣಿ, ಇಂಧನ ಸೇರಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ ಬಳಿಕ ಆ ಬಗ್ಗೆ ಮಾಧ್ಯಮಗಳಿಗೆ ಜೈಶಂಕರ್‌ ಮಾಹಿತಿ ನೀಡಿದ್ದಾರೆ.
  • ‘ಕಳೆದ ಕೆಲವು ತಿಂಗಳಲ್ಲಿ ಭಾರತ ಮತ್ತು ಕೆನಡಾ ಸಂಬಂಧವು ವೃದ್ಧಿ ಸುತ್ತಿದ್ದು, ಇದನ್ನು ಮತ್ತಷ್ಟು ಬಲಗೊಳಿಸು ವುದಕ್ಕೆ ಅಗತ್ಯ ಕಾರ್ಯವಿಧಾನಗಳನ್ನು ಮರು ರೂಪಿಸಲು ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
  • ಅಲ್ಲದೇ, ಕೃಷಿ, ವಿಜ್ಞಾನ, ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲೂ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎಂದಿದ್ದಾರೆ.
  • .1ರಿಂದಡಿಜಿಟಲ್ ಜೀವಿತ ಪ್ರಮಾಣಪತ್ರಅಭಿಯಾನ

ಸಂದರ್ಭ: ಕೇಂದ್ರ ಸರ್ಕಾರವು ಪಿಂಚಣಿದಾರರಿಗಾಗಿ ನವೆಂಬರ್ 1ರಿಂದ 30ರವರೆಗೆ ದೇಶದಾದ್ಯಂತಡಿಜಿಟಲ್ ಜೀವಿತ ಪ್ರಮಾಣಪತ್ರ (ಡಿಎಲ್ಸಿ) ಅಭಿಯಾನವನ್ನು ಆಯೋಜಿಸಿದೆ.

  • ‘ಪಿಂಚಣಿ ವಿತರಿಸುವ 19 ಬ್ಯಾಂಕ್‌ಗಳು ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ 2,000 ಜಿಲ್ಲೆಗಳು ಮತ್ತು ಉಪ–ವಿಭಾಗ ಕಚೇರಿ ವ್ಯಾಪ್ತಿಯಲ್ಲಿ ಅಭಿಯಾನ ನಡೆಯಲಿದೆ’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
  • ದೇಶದ ಮೂಲೆ ಮೂಲೆಗಳಲ್ಲಿರುವ ಪಿಂಚಣಿದಾರರನ್ನು ತಲುಪಿ ಡಿಜಿಟಲ್ ಜೀವಿತ ಪ್ರಮಾಣಪತ್ರ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಪಿಂಚಣಿ ಇಲಾಖೆಯು ಆಯೋಜಿಸುತ್ತಿರುವ ನಾಲ್ಕನೇ ಅಭಿಯಾನ ಇದಾಗಿದೆ.
  • 1.8 ಲಕ್ಷ ಪೋಸ್ಟ್‌ಮ್ಯಾನ್‌ಗಳು ಮತ್ತು ಗ್ರಾಮೀಣ ಡಾಕ್‌ ಸೇವಕರು(ಜಿಡಿಎಸ್‌) ಎಲ್ಲ ವಿಧದ ಪಿಂಚಣಿದಾರರ ಮನೆ ಬಾಗಿಲಿಗೆ ತೆರಳಿ ಡಿಎಲ್‌ಸಿ ಸೇವೆಗಳ ಬಗ್ಗೆ ತಿಳಿಸಲಿದ್ದಾರೆ.
  • ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಮುಂದುವರಿಸಲು ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ‘ಜೀವಿತ ಪ್ರಮಾಣಪತ್ರ’ವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
  • ವ್ಯಾಪಾರ ಮಾತುಕತೆ ಅಮೆರಿಕಕ್ಕೆ ಭಾರತದ ತಂಡ

 ಸಂದರ್ಭ: ವ್ಯಾಪಾರ ಒಪ್ಪಂದ ಕುರಿತ ಮಾತುಕತೆಗಾಗಿ ಭಾರತದ ಹಿರಿಯ ಅಧಿಕಾರಿಗಳ ತಂಡವು ಅಮೆರಿಕಕ್ಕೆ ಇದೇ ವಾರ ಭೇಟಿ ನೀಡಲಿದೆ.

  • ಉಭಯ ದೇಶಗಳ ನಾಯಕರು ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸುವಂತೆ ಅಧಿಕಾರಿಗಳಿಗೆ ಈ ವರ್ಷದ ಫೆಬ್ರುವರಿಯಲ್ಲಿ ನಿರ್ದೇಶನ ನೀಡಿದ್ದರು.
  • ಅಕ್ಟೋಬರ್‌–ನವೆಂಬರ್‌ ವೇಳೆಗೆ ಒಪ್ಪಂದದ ಮೊದಲ ಹಂತದ ಮಾತುಕತೆ ಮುಕ್ತಾಯಗೊಳಿಸುವ ಆಲೋಚನೆ ಅಧಿಕಾರಿಗಳಿಗೆ ಇದೆ.
  • ಇದುವರೆಗೆ ಐದು ಸುತ್ತಿನ ಮಾತುಕತೆಗಳು ನಡೆದಿವೆ. ಈ ವಾರದಲ್ಲಿ ಭಾರತದ ತಂಡವು ಅಮೆರಿಕಕ್ಕೆ ಭೇಟಿ ನೀಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್‌ ನೇತೃತ್ವದ ಅಧಿಕಾರಿಗಳ ನಿಯೋಗ ವ್ಯಾಪಾರ ಒಪ್ಪಂದದ ಮಾತುಕತೆಗಾಗಿ ನ್ಯೂಯಾರ್ಕ್‌ಗೆ ಕಳೆದ ತಿಂಗಳು ಭೇಟಿ ನೀಡಿತ್ತು.
  • ಈಗ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕವು ಶೇ 50ರಷ್ಟು ಸುಂಕ ವಿಧಿಸುತ್ತಿದೆ. ಇಂಥ ಸಂದರ್ಭದಲ್ಲಿ, ಈ ಮಾತುಕತೆ ಮುಖ್ಯವಾಗಿದೆ ಎನ್ನಲಾಗಿದೆ.
  • ಈಗ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಮೌಲ್ಯ ₹16.93 ಲಕ್ಷ ಕೋಟಿಯಾಗಿದೆ. 2030ರ ವೇಳೆಗೆ ಇದನ್ನು ₹44.33 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿಯನ್ನು ಒಪ್ಪಂದವು ಹೊಂದಿದೆ ಎಂದು ತಿಳಿಸಿದ್ದಾರೆ.
  • ಚಿಲ್ಲರೆ ಹಣದುಬ್ಬರ ಇಳಿಕೆ

ಸಂದರ್ಭ: ಸೆಪ್ಟೆಂಬರ್ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಎಂಟು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ 1.54ಕ್ಕೆ ಇಳಿಕೆ ಕಂಡಿದೆ. ತರಕಾರಿಗಳು, ಹಣ್ಣು ಮತ್ತು ದ್ವಿದಳ ಧಾನ್ಯಗಳ ಬೆಲೆಯಲ್ಲಿನ ಇಳಿಕೆಯು ಹಣದುಬ್ಬರ ಪ್ರಮಾಣ ಕಡಿಮೆ ಆಗಲು ಕಾರಣವಾಗಿದೆ.

  • ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಪ್ರಮಾಣವು ಆಗಸ್ಟ್‌ನಲ್ಲಿ ಶೇ 2.07ರಷ್ಟು ಇತ್ತು. ಇದು ಕಳೆದ ಸೆಪ್ಟೆಂಬರ್‌ನಲ್ಲಿ ಶೇ 5.49ರಷ್ಟಿತ್ತು. 2017ರ ಜೂನ್‌ನಲ್ಲಿ ಹಣದುಬ್ಬರ ಪ್ರಮಾಣ ಶೇ 1.47 ರಷ್ಟಾಗಿತ್ತು. ಅದಾದ ನಂತರದ ಕನಿಷ್ಠ ಮಟ್ಟವು ಈ ಸೆಪ್ಟೆಂಬರ್‌ನಲ್ಲಿ ದಾಖಲಾಗಿದೆ.
  • ಈ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 2ಕ್ಕಿಂತ ಕೆಳಗಿನ ಮಟ್ಟಕ್ಕೆ ಬಂದಿರುವುದು ಇದು ಎರಡನೆಯ ಬಾರಿ. ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 2ರಿಂದ ಶೇ 6ರ ಒಳಗೆ ನಿಯಂತ್ರಿಸುವ ಹೊಣೆಯು ಆರ್‌ಬಿಐ ಮೇಲಿದೆ.
  • ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಪ್ರಮಾಣ ಶೇ 1.07ರಷ್ಟು, ನಗರ ಪ್ರದೇಶಗಳಲ್ಲಿ ಇದು ಶೇ 2.04ರಷ್ಟು ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್‌ಒ) ನೀಡಿರುವ ಅಂಕಿ–ಅಂಶಗಳು ಹೇಳುತ್ತಿವೆ.
  • ಕೇರಳದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಹಣದುಬ್ಬರ (ಶೇ 9.05ರಷ್ಟು) ದಾಖ ಲಾಗಿದೆ. ಉತ್ತರ ಪ್ರದೇಶದಲ್ಲಿ ಶೇ (–)0.61ರಷ್ಟು ಹಣದುಬ್ಬರ ದಾಖಲಾಗಿದ್ದು, ಇದು ಅತ್ಯಂತ ಕನಿಷ್ಠ ಪ್ರಮಾಣ.
  • ಡಿಸೆಂಬರ್‌ನಲ್ಲಿ ಹಣಕಾಸು ನೀತಿ ಸಮಿತಿಯ ಸಭೆಯು ನಡೆಯಲಿದ್ದು, ಅಲ್ಲಿ ರೆಪೊ ದರವನ್ನು ಶೇ 0.25ರಷ್ಟು ಕಡಿಮೆ ಮಾಡುವ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
  • ಮೂವರಿಗೆ ಅರ್ಥಶಾಸ್ತ್ರದ ನೊಬೆಲ್

ಸಂದರ್ಭ: ಅಮೆರಿಕದ ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದ ಜೋಯೆಲ್ ಮೊಕೀರ್, ಕಾಲೇಜ್ ಡಿ ಫ್ರಾನ್ಸ್ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಫಿಲಿಪ್ ಅಘಿಯಾನ್ ಮತ್ತು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಪೀಟರ್ ಹೊವಿಟ್ ಅವರುನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

  • ‘ನಾವೀನ್ಯದೊಂದಿಗೆ ಆರ್ಥಿಕ ಬೆಳವಣಿಗೆ’ಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ನೊಬೆಲ್‌ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್‌ ಸಮಿತಿಯು ತಿಳಿಸಿದೆ.
  • ಈವರೆಗೆ 96 ಮಂದಿಗೆ 56 ಬಾರಿ ಅರ್ಥಶಾಸ್ತ್ರದ ನೊಬೆಲ್‌ ನೀಡಲಾಗಿದೆ. ಈ ಪೈಕಿ ಮೂವರು ಮಾತ್ರ ಮಹಿಳೆಯರು. ಈ ಪ್ರಶಸ್ತಿಯನ್ನು ಡಿಸೆಂಬರ್‌ 10ರಂದು ಪ್ರದಾನ ಮಾಡಲಾಗುತ್ತದೆ.
  • ವೈದ್ಯವಿಜ್ಞಾನ ಮತ್ತು ಭೌತವಿಜ್ಞಾನ, ರಾಸಾಯನ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಕ್ಷೇತ್ರದ ನೊಬೆಲ್‌ ಪುರಸ್ಕಾರವನ್ನು ಈಗಾಗಲೇ ಘೋಷಿಸಲಾಗಿದೆ.
  • ಒಲಿಂಪಿಕ್ಸ್ ಪದಕ ವಿಜೇತರ ಪುರಸ್ಕರಿಸಿದ ಐಒಎ

ಸಂದರ್ಭ: ಜಾವೆಲಿನ್ ತಾರೆ ನೀರಜ್ ಚೋಪ್ರಾ ಮತ್ತು ಶೂಟರ್ಮನು ಭಾಕರ್ ಸೇರಿದಂತೆ ಪ್ಯಾರಿಸ್ಒಲಿಪಿಕ್ಸ್ನಲ್ಲಿ ಪದಕಗಳನ್ನು ಗೆದ್ದ ಭಾರತದ ಕ್ರೀಡಾಪಟುಗಳಿಗೆ ಭಾರತ ಒಲಿಂಪಿಕ್ಸಂಸ್ಥೆ ನಡೆದ ಸಮಾರಂಭದಲ್ಲಿ ನಗದು ಬಹುಮಾನ ನೀಡಿ ಪುರಸ್ಕರಿಸಿತು.

  • ಜಾವೆಲಿನ್‌ನಲ್ಲಿ ಬೆಳ್ಳಿ ಗೆದ್ದಿದ್ದ ಚೋಪ್ರಾ ಅವರು ದೇಶದಿಂದ ಹೊರಗಿದ್ದ ಕಾರಣ ಅವರ ಪರವಾಗಿ ಭಾರತ ಅಥ್ಲೆಟಿಕ್‌ ಫೆಡರೇಷನ್ ಅಧಿಕಾರಿಯೊಬ್ಬರು ₹75 ಲಕ್ಷ ಮೊತ್ತದ ಚೆಕ್‌ ಅನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರಿಂದ ಸ್ವೀಕರಿಸಿದರು.
  • ಚೋಪ್ರಾ ಅವರ ಅಂದಿನ ಕೋಚ್‌ ಆಗಿದ್ದ ಜರ್ಮನಿಯ ಬಾರ್ತೊನೀಝ್ ಅವರಿಗೆ ₹20 ಲಕ್ಷ ಬಹುಮಾನ ನೀಡಲಾಯಿತು. ಚೋಪ್ರಾ ಅವರು ಪ್ರಸ್ತುತ ಝೆಕ್‌ ಗಣರಾಜ್ಯದ ಯಾನ್‌ ಜೆಲೆಜ್ನಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
  • ಮನು ಭಾಕರ್ ಅವರು 10 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಗೆದ್ದ ವೈಯಕ್ತಿಕ ಕಂಚಿನ ಪದಕಕ್ಕೆ ₹50 ಲಕ್ಷ ಬಹುಮಾನ ಪಡೆದರು. 10 ಮೀ. ಮಿಶ್ರ ಪಿಸ್ತೂಲ್ ವಿಭಾಗದಲ್ಲಿ ಗೆದ್ದ ಕಂಚಿನ ಪದಕಕ್ಕಾಗಿ ಸರಬ್ಜೋತ್ ಸಿಂಗ್ ಜೊತೆ ₹50 ಲಕ್ಷ ಹಂಚಿಕೊಂಡರು. ಮನು ಅವರ ಕೋಚ್‌ ಜಸ್ಪಾಲ್‌ ರಾಣಾ ಅವರಿಗೆ ₹10 ಲಕ್ಷ ನೀಡಿ ಗೌರವಿಸಲಾಯಿತು. ಮಿಶ್ರ ತಂಡ ವಿಭಾಗದಲ್ಲಿ ಅವರು ₹15 ಲಕ್ಷ ಮೊತ್ತವನ್ನು ಅಭಿಷೇಕ್ ರಾಣಾ (ಸರಬ್ಜೋತ್ ಅವರ ಕೋಚ್‌) ಜೊತೆ ಹಂಚಿಕೊಂಡರು.
  • 57 ಕೆ.ಜಿ. ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕ ಗೆದ್ದ ಕುಸ್ತಿಪಟು ಅಮನ್ ಸೆಹ್ರಾವತ್ ಅವರು  ₹50 ಲಕ್ಷ ಬಹುಮಾನ ಪಡೆದರು. ತಮ್ಮ ಕೋಚ್‌ ಅಲಿ ಶಬನೋವ್‌ ಪರವಾಗಿ ಅಮನ್ ₹15 ಲಕ್ಷ ಮೊತ್ತ ಸ್ವೀಕರಿಸಿದರು.
  • 50 ಮೀ. ರೈಫಲ್‌ 3 ಪೊಷಿಷನ್ಸ್‌ ನಲ್ಲಿ ಕಂಚಿನ ಪದಕ ಗೆದ್ದ ಶೂಟರ್‌ ಸ್ವಪ್ನಿಲ್ ಕುಸಳೆ ಅವರು ₹50 ಲಕ್ಷ ಬಹುಮಾನ ಪಡೆದರು. ಅವರ ಕೋಚ್‌ ದೀಪಾಲಿ ದೇಶಪಾಂಡೆ ಅವರಿಗೆ ₹15 ಲಕ್ಷ ನೀಡಿ ಪುರಸ್ಕರಿಸಲಾಯಿತು.
  • ಕಂಚಿನ ಪದಕ ಗೆದ್ದ ಪುರುಷರ ಹಾಕಿ ತಂಡದ ಸದಸ್ಯರಿಗೆ ತಲಾ ₹10 ಲಕ್ಷ ಬಹುಮಾನ ನೀಡಲಾಯಿತು. ಕೋಚ್‌ ಕ್ರೇಗ್‌ ಫುಲ್ಟನ್‌ ಅವರಿಗೆ ₹20 ಲಕ್ಷ ನೀಡಲಾಯಿತು.
  • ಮಾಂಡವೀಯ ಜೊತೆ ಪಿ.ಟಿ.ಉಷಾ ಅವರೂ ಪದಕ ವಿಜೇತರನ್ನು ಗೌರವಿಸಿದರು. ಒಲಿಂಪಿಕ್ ಸಂಸ್ಥೆಯ ಬಹುತೇಕ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments