ಆರ್ಥಿಕತೆ: ಸುಂಕ; ತಂಬಾಕು ಉತ್ಪನ್ನಗಳು
ಸಂದರ್ಭ: ಹೊಸ ವ್ಯವಸ್ಥೆಯ ಅಡಿಯಲ್ಲಿಪ್ರತಿ1,000 ಸಿಗರೇಟುಗಳಿಗೆ ಹೆಚ್ಚುವರಿಯಾಗಿ ₹2,050 ರಿಂದ ₹8,500ರವರೆಗೆ ಸುಂಕ ವಿಧಿಸಲಾಗುತ್ತದೆ.
- ಸುಂಕದ ಪ್ರಮಾಣವು ಸಿಗರೇಟಿನ ಉದ್ದ ಹಾಗೂ ಅದಕ್ಕೆ ಫಿಲ್ಟರ್ ಇದೆಯೇ ಎಂಬುದನ್ನು ಆಧರಿಸಿ ನಿರ್ಧಾರವಾಗಲಿದೆ.ಕೇಂದ್ರ ಸರ್ಕಾರವು ಹೊಸ ನಿಯಮವನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದ ನಂತರದಲ್ಲಿ ದೇಶದ ಪ್ರಮುಖ ಸಿಗರೇಟು ತಯಾರಿಕಾ ಕಂಪನಿಗಳ ಷೇರುಮೌಲ್ಯವು ಭಾರಿ ಪ್ರಮಾಣದಲ್ಲಿ ಕುಸಿದಿದೆ.ಐಟಿಸಿ ಷೇರುಮೌಲ್ಯವು ಶೇ 9.69ರಷ್ಟು ಕುಸಿದಿದೆ. ಗಾಡ್ಪ್ರೇ ಫಿಲಿಪ್ಸ್ ಕಂಪನಿಯ ಷೇರುಮೌಲ್ಯ ಶೇ 17.17ರಷ್ಟು ಕುಸಿದಿದೆ.
- ತಂಬಾಕು ಸಂಬಂಧಿತ ಕಾಯಿಲೆಗಳಿಂದ ದೇಶದ ಮೇಲೆ ಆಗುವ ಆರ್ಥಿಕ ಹೊರೆಯು ವಾರ್ಷಿಕ ₹2.4 ಲಕ್ಷ ಕೋಟಿಗಿಂತ ಹೆಚ್ಚಾಗುವ ಅಂದಾಜು ಇದೆ. ಇಂತಹ ಸಂದರ್ಭದಲ್ಲಿ ಸಿಗರೇಟು ಬಹಳ ಅಗ್ಗವಾಗಬಾರದು ಎಂಬ ಉದ್ದೇಶದಿಂದ ಸುಂಕವನ್ನು ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.ಬೇರೆ ಉತ್ಪನ್ನಗಳಿಗೆ ಹೋಲಿಸಿದರೆ ತಂಬಾಕಿನ ಮೇಲೆ ಭಾರಿ ಪ್ರಮಾಣದ ತೆರಿಗೆ ಇರಬೇಕು ಎಂಬ ಕೇಂದ್ರದ ನಿಲುವಿಗೆ ಇದು ಅನುಗುಣವಾಗಿದೆ ಎಂದು ಅದು ತಿಳಿಸಿದೆ.