Sat. Feb 7th, 2026

ಸಂದರ್ಭ: 2025ನೇ ಸಾಲಿನ ‘ಇಂದಿರಾ ಗಾಂಧಿ ಶಾಂತಿ’ ಪ್ರಶಸ್ತಿಯು ಮೊಜಾಂಬಿಕದ ಹೋರಾಟಗಾರ್ತಿ ಗ್ರಾಸಾಮಾ ಶೆಲ್ಅವರಿಗೆ ಸಂದಿದೆ.

  • ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ ವಲಯ ಹಾಗೂ ಕಷ್ಟಕರ ಸಂದರ್ಭಗಳಲ್ಲಿ ಮಾನವೀಯ ನೆರವು ಮತ್ತು ಆರ್ಥಿಕ ಸಬಲೀಕರಣ ಕ್ಷೇತ್ರಗಳಲ್ಲಿ ಮಾಡಿದ ಕಾರ್ಯಗಳನ್ನು ಪರಿಗಣಿಸಿ ರಾಷ್ಟ್ರೀಯ ಭದ್ರತೆಯ ಮಾಜಿ ಸಲಹೆಗಾರ ಶಿವಶಂಕ‌ರ್ ಮೆನನ್ ಅವರ ಅಧ್ಯಕ್ಷತೆಯ ಸಮಿತಿಯು ಗ್ರಾಸಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಬುಧವಾರ ತಿಳಿಸಿದೆ.
  • ಪ್ರಶಸ್ತಿಯು ₹1 ಕೋಟಿ ಮೊತ್ತ. ಫಲಕ ಹಾಗೂ ಪ್ರಶಂಸನಾ ಪತ್ರ ಒಳಗೊಂಡಿದೆ. ಮೊಜಾಂಬಿಕದ ಮೊದಲ ಅಧ್ಯಕ್ಷ ಸಮೋರಾ ಮೊಯಿಸೆಸ್ ಮಾಶೆಲ್ ಅವರನ್ನು ಗ್ರಾಸಾ ಮದುವೆ ಯಾಗಿದ್ದರು. ಸಮೋರಾ 1986ರಲ್ಲಿ ನಿಧನರಾದ ಬಳಿಕ ದಕ್ಷಿಣ ಆಫ್ರಿಕಾದ ಅಧ್ಯಕ್ಷ ನೆಲ್ಸನ್‌ ಮಂಡೇಲಾ ಅವರನ್ನು ವಿವಾಹವಾದರು. ಮೊಜಾಂಬಿಕ ಶಿಕ್ಷಣ ಮತ್ತು ಸಂಸ್ಕೃತಿ ಖಾತೆಯ ಮೊದಲ ಸಚಿವರಾಗಿಯೂ ಅವರು ಕಾರ್ಯನಿರ್ವಹಿಸಿದರು.

Source: Prajavani

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments