ಗೋದ್ನಾ ಯೋಜನೆ ಜಿಂದಾಲ್ ತೆಕ್ಕೆಗೆ: 1,600 ಮೆ.ವಾ ಉತ್ಪಾದನೆ: ಪಿಪಿಪಿ ಮಾದರಿಯಲ್ಲಿ ಮೊದಲ ಪ್ರಯೋಗ
ಸಂದರ್ಭ: ಸುಮಾರು 18 ವರ್ಷಗಳಿಂದ ನನೆಗುದಿಯಲ್ಲಿದ್ದ 1,600 ಮೆಗಾವಾಟ್ ಸಾಮರ್ಥ್ಯದ ಗೋದ್ನಾ ಶಾಖೋತ್ಪನ್ನ ವಿದ್ಯುತ್ ಯೋಜನೆಯನ್ನು ಜಿಂದಾಲ್ South ವೆಸ್ಟ್ (ಜೆಎಸ್ಡಬ್ಲ್ಯು) ಎನರ್ಜಿ ಕಂಪನಿ ಕೈಗೆತ್ತಿಕೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಸದ್ಯದಲ್ಲೇ ಒಪ್ಪಂದ ಮಾಡಿಕೊಳ್ಳಲಿದೆ.
• ಸಾರ್ವಜನಿಕ ಖಾಸಗಿ ಸಹ ಭಾಗಿತ್ವದ(ಪಿಪಿಪಿ) ಈ ಯೋಜನೆಯನ್ನು ಛತ್ತೀಸಗಢದ ಗೋದ್ಘಾದಲ್ಲಿ ಕರ್ನಾಟಕ ಸರ್ಕಾರ ಆರಂಭಿಸುತ್ತಿದೆ. ಇದರ ಅನುಷ್ಠಾನದ ಹೊಣೆಯನ್ನು ಜೆಎಸ್ಡಬ್ಬುಗೆ ನೀಡುವುದಕ್ಕೆ ಈ ತಿಂಗಳ 8ರಂದು ನಡೆದ ಕೆಪಿಸಿಎಲ್ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
• ಈ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ಕೆಪಿಸಿಎಲ್ ಟೆಂಡರ್ ಕರೆದಿತ್ತು. ಇದರಲ್ಲಿ ಎರಡು ಕಂಪನಿಗಳು ಭಾಗವಹಿಸಿದ್ದವು. ಜೆಎಸ್ಡಬ್ಲ್ಯು, ಕಡಿಮೆ ಬಿಡ್ ಮಾಡಿದ್ದ ಕಾರಣ, ಆ ಕಂಪನಿಗೆ ನೀಡಲು ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದರು ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
• ಜೆಎಸ್ಡಬ್ಲ್ಯು ಎನರ್ಜಿ ಕಂಪನಿಯು 1 ಯೂನಿಟ್ಗೆ ₹4.05 ಹಾಗೂ ಡಿಬಿ ಪವರ್ ಲಿಮಿಟೆಡ್ ₹4.20 ದರ ನಿಗದಿ ಮಾಡುವಂತೆ ಕೋರಿದ್ದವು. ಕಡಿಮೆ ದರ, ತಾಂತ್ರಿಕ ಸಾಮರ್ಥ್ಯ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಜೆಎಸ್ಡಬ್ಲ್ಯು, ಅಯ್ಕೆ ಮಾಡಲಾಗಿದೆ.
• ‘ಯೋಜನೆ ಪೂರ್ಣಗೊಂಡ ಬಳಿಕ ಅದಕ್ಕೆ ಎಷ್ಟು ಹಣ ವೆಚ್ಚವಾಗಿದೆ. ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ಎಷ್ಟಿದೆ ಎಂಬುದನ್ನು ಆಧರಿಸಿ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್ಸಿ) ಯೂನಿಟ್ಗೆ ಎಷ್ಟು ದರ ಎಂಬುದನ್ನು ನಿಗದಿ ಮಾಡಲಿದೆ. ಟೆಂಡರ್ನಲ್ಲಿ ಈಗ ನಿಗದಿ ಮಾಡಿರುವ ದರದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸ ಆದರೂ ಆಗಬಹುದು’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
• ಈ ಯೋಜನೆಗೆ ಸುಮಾರು ₹18 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಜೆಎಸ್ಡಬ್ಲ್ಯು ಶೇ 74ರಷ್ಟು ಹಾಗೂ ಕೆಪಿಸಿಎಲ್ ಶೇ 26ರಷ್ಟು ಮೊತ್ತವನ್ನು ಭರಿಸಲಿದೆ. ಯೋಜನೆ 45 ತಿಂಗಳಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 2008ರಲ್ಲಿ ಸರ್ಕಾರದೊಂದಿಗೆ ಯೋಜನೆ’ ಒಪ್ಪಂದ ಈ ಛತ್ತೀಸಗಢ ‘ಗೋದ್ನಾ ಮಾಡಿಕೊಳ್ಳಲಾಗಿತ್ತು.
ಯೋಜನೆಗಾಗಿ 1,016 ಎಕರೆ ಖಾಸಗಿ ಜಮೀನು ಹಾಗೂ 160 ಎಕರೆ ಸರ್ಕಾಲ ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿ ಕೊಳ್ಳಲಾಗಿದೆ. ಇದಕ್ಕಾಗಿ ಸುಮಾರು ₹220 ಕೋಟಿ ವೆಚ್ಚವಾಗಿದೆ.
• ಕಲ್ಲಿದ್ದಲು ಹಂಚಿಕೆ: ಗೋದ್ನಾದ ಸಮೀಪದಲ್ಲೇ ಎರಡು ಕಲ್ಲಿದ್ದಲು ಗಣಿಗಳನ್ನು ಕೇಂದ್ರ ಸರ್ಕಾರವು 2019ರಲ್ಲಿ ಕೆಪಿಸಿಎಲ್ಗೆ ಹಂಚಿಕೆ ಮಾಡಿದೆ. 1,600 ಮೆಗಾವಾಟ್ ವಿದ್ಯುತ್ ಉತ್ಪಾದನೆಗಾಗಿ ವರ್ಷಕ್ಕೆ 70 ಲಕ್ಷ ಟನ್ ಕಲ್ಲಿದ್ದಲು ಬೇಕಾಗುತ್ತದೆ. 21 ಕೋಟಿ ಟನ್ ಕಲ್ಲಿದ್ದಲು ಅಲ್ಲಿ ಲಭ್ಯವಿದ್ದು, 30 ವರ್ಷಗಳವರೆಗೆ ಬಳಸಬಹುದು ಎಂದು ಅಂದಾಜಿಸಲಾಗಿದೆ.
• ಈ ಯೋಜನೆಗೆ ಆಗತ್ಯವಿರುವ ನೀರನ್ನು ಬಳಸಿಕೊಳ್ಳಲಾಗುತ್ತದೆ. ನದಿಯಿಂದ ಮಹಾನದಿಯಿಂದ ಗೋಡಾಗೆ ನೀರು ತರಲು ಬ್ಯಾರೇಜ್ ನಿರ್ಮಾಣಕ್ಕಾಗಿ 264 ಕೋಟಿ ವೆಚ್ಚ ಮಾಡಲಾಗಿದೆ.
| ವಿಭಾಗ | ವಿವರಗಳು |
| ಯೋಜನೆಯ ಹೆಸರು | ಗೋದ್ನಾ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಯೋಜನೆ (Godna Thermal Power Project) |
| ಸ್ಥಳ | ಗೋದ್ಘಾ ಗ್ರಾಮ, ಜಾಂಜ್‌ಗೀರ್-ಚಂಪಾ ಜಿಲ್ಲೆ, ಛತ್ತೀಸಗಢ |
| ಒಟ್ಟು ಸಾಮರ್ಥ್ಯ | 1,600 ಮೆಗಾವಾಟ್ (800 MW ನ 2 ಘಟಕಗಳು) |
| ತಂತ್ರಜ್ಞಾನ | ಸೂಪರ್ ಕ್ರಿಟಿಕಲ್ ತಂತ್ರಜ್ಞಾನ (ಇದು ಕಡಿಮೆ ಕಲ್ಲಿದ್ದಲು ಬಳಸಿ ಹೆಚ್ಚು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಪರಿಸರ ಮಾಲಿನ್ಯ ಕಡಿಮೆ ಮಾಡುತ್ತದೆ) |
| ಅನುಷ್ಠಾನದ ಮಾದರಿ | ಸಾರ್ವಜನಿಕ-ಖಾಸಗಿ ಸಹಭಾಗಿತ್ವ (Public-Private Partnership – PPP) |
| ಜಂಟಿ ಉದ್ಯಮ (JV) | JSW Energy (74%) ಮತ್ತು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ – KPCL (26%) |
| ಒಟ್ಟು ಅಂದಾಜು ವೆಚ್ಚ | ಸುಮಾರು ₹18,000 ಕೋಟಿ |
| ನಿರ್ಮಾಣ ಅವಧಿ | ಕಾಮಗಾರಿ ಆರಂಭವಾದ 45 ತಿಂಗಳುಗಳಲ್ಲಿ (ಸುಮಾರು 4 ವರ್ಷ) |
| ಒಪ್ಪಂದದ ಅವಧಿ | 25 ರಿಂದ 30 ವರ್ಷಗಳವರೆಗೆ ಕಾರ್ಯಾಚರಣೆ ಮತ್ತು ನಿರ್ವಹಣೆ |
| ಕಲ್ಲಿದ್ದಲು ಪೂರೈಕೆ | ಕೇಂದ್ರ ಸರ್ಕಾರದಿಂದ ಮಂಜೂರಾದ 21 ಕೋಟಿ ಟನ್ ಕಲ್ಲಿದ್ದಲು ಬ್ಲಾಕ್ (30 ವರ್ಷಗಳ ಬಳಕೆಗೆ ಲಭ್ಯ) |
| ವಾರ್ಷಿಕ ಕಲ್ಲಿದ್ದಲು ಅಗತ್ಯ | ಸುಮಾರು 70 ಲಕ್ಷ ಟನ್ |
| ನೀರಿನ ಮೂಲ | ಸಮೀಪದ ಮಹಾನದಿ. ನದಿಗೆ ಬ್ಯಾರೇಜ್ ನಿರ್ಮಿಸಲು ₹264 ಕೋಟಿ ವೆಚ್ಚದ ಯೋಜನೆ |
| ಭೂಮಿ ಲಭ್ಯತೆ | ಒಟ್ಟು 1,176 ಎಕರೆ (ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ) |
| ವಿದ್ಯುತ್ ಖರೀದಿ ದರ | ಪ್ರತಿ ಯೂನಿಟ್ಗೆ ₹4.05 (JSW ಬಿಡ್ ಮಾಡಿದ ದರ) |
| ದರ ನಿಯಂತ್ರಣ | ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಅಂತಿಮ ದರವನ್ನು ಮರುಪರಿಶೀಲಿಸಿ ಅನುಮೋದಿಸುತ್ತದೆ |
| ವಿದ್ಯುತ್ ಹಂಚಿಕೆ | ಉತ್ಪಾದನೆಯಾದ ಒಟ್ಟು ವಿದ್ಯುತ್‌ನಲ್ಲಿ ಕರ್ನಾಟಕಕ್ಕೆ ಸಿಂಹಪಾಲು (ರಾಜ್ಯದ ಗ್ರಿಡ್‌ಗೆ ಪೂರೈಕೆ) |