ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ಕೈಗಾರಿಕಾ ಪಾರ್ಕ್ಗಳ ನಿರ್ಮಾಣಕ್ಕೆ 233,660 ಕೋಟಿಗೆ ಅನುಮೋದನೆ L 15 ಲಕ್ಷ ನೇರ ಉದ್ಯೋಗ ಸೃಷ್ಟಿ ನಿರೀಕ್ಷೆ: ‘ಭವ್ಯ’ ಯೋಜನೆಗೆ ಕೇಂದ್ರ ಅಸ್ತು
- ದೇಶದಲ್ಲಿ ತಯಾರಿಕಾ ವಲಯಕ್ಕೆ ಉತ್ತೇಜನ ನೀಡಲು ‘ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ’ಗೆ (ಭವ್ಯ) ಯೋಜನೆಗೆ ಪ್ರಧಾನಿ ನೇತೃತ್ವದ ಸಚಿವ ಸಂಪುಟವು ಅನುಮೋದನೆ ನೀಡಿದೆ.
- ಈ ಯೋಜನೆಯ ಅಡಿ ಬಳಕೆಗೆ ಸಿದ್ಧವಾಗಿರುವ 100 ಕೈಗಾರಿಕಾ ಪಾರ್ಕ್ಗಳನ್ನು ದೇಶದ ವಿವಿಧೆಡೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 33,660 ಕೋಟಿ ವ್ಯಯಿ ಸಲು ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಈ ಯೋಜನೆಯಿಂದ 15 ಲಕ್ಷ ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
- ‘ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ಈ ಯೋಜನೆಯ ಅಡಿ ಅಭಿವೃದ್ಧಿ ಮಾಡಲಾಗುವುದು ತಯಾರಿಕಾ ಘಟಕಗಳಲ್ಲಿ ಗರಿಷ್ಠ ಮಟ್ಟದ ಉತ್ಪಾದನೆ, ದಕ್ಷತೆ ಮತ್ತು ನಾವೀನ್ಯತೆ ಇರಲಿದೆ’.
- ಈ ಪಾರ್ಕ್ಗಳು ರಸ್ತೆಗಳು, ನೀರು, ವಿದ್ಯುತ್, ಚರಂಡಿಗಳು, ಐಸಿಟಿ ಸೇರಿದಂತೆ ಪ್ರಮುಖ ಮೂಲಸೌಕರ್ಯ ಗಳನ್ನು ಹೊಂದಿರಲಿವೆ. ಇದರ ಜೊತೆಗೆ ಪರೀಕ್ಷಾ ಪ್ರಯೋಗಾಲಯಗಳು, ಗೋದಾಮು, ಕಾರ್ಮಿಕರಿಗೆ ವಸತಿ ಸೌಕರ್ಯ ಮತ್ತು ಇತರೆ ಸೌಲಭ್ಯಗಳು ಇರಲಿವೆ.
- ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ (ಎನ್ಐಸಿಡಿಪಿ) ಅಡಿಯಲ್ಲಿ ಅಭಿವೃದ್ಧಿ ಪಡಿಸಲಾದ ಕೈಗಾರಿಕಾ ಸ್ಮಾರ್ಟ್ ಸಿಟಿಗಳ ಯಶಸ್ಸಿನ ಆಧಾರದ ಮೇಲೆ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ವಲಯದ ಪಾಲುದಾರರ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು.
- ನಿಯಮಗಳ ಸಡಿಲಗೊಳಿಸುವಿಕೆ, ತ್ವರಿತವಾಗಿ ಯೋಜನೆಗಳಿಗೆ ಅನುಮೋದನೆ ನೀಡುವುದು, ಏಕಗವಾಕ್ಷಿ ವ್ಯವಸ್ಥೆಯನ್ನು ಪರಿಣಾಮ ಕಾರಿಯಾಗಿ ಜಾರಿಗೆ ತರುವುದು ಮತ್ತು ರಾಜ್ಯಗಳಿಂದ ಹೂಡಿಕೆದಾರ ಸ್ನೇಹಿ ಸುಧಾರಣೆಗಳ ಜಾರಿ ಮೂಲಕ ಸುಲಲಿತ ವಹಿವಾಟು ಸಾಧ್ಯವಾಗುವಂತೆ ಮಾಡುವ ಉದ್ದೇಶವನ್ನು ‘ಭವ್ಯ’ ಯೋಜನೆಯು ಹೊಂದಿದೆ.
- ಹೊಸ ಯೋಜನೆಯು ಬಳಕೆಗೆ ಸಿದ್ಧವಾಗಿರುವ ಕೈಗಾರಿಕಾ ಮೂಲ ಸೌಕರ್ಯವನ್ನು ಬಯಸುವ ತಯಾರಿಕಾ ಘಟಕಗಳಿಗೆ, ಎಂಎಸ್ಎಂಇ ವಲಯದ ಉದ್ದಿಮೆಗಳಿಗೆ, ನವೋದ್ಯಮಗಳಿಗೆ, ಜಾಗತಿಕ ಹೂಡಿಕೆದಾರರಿಗೆ ನೇರವಾಗಿ ಅನುಕೂಲ ಮಾಡಿಕೊಡಲಿದೆ.
- 100 ಎಕರೆಯಿಂದ 1 ಸಾವಿರ ಎಕರೆಯವರೆಗಿನ ವಿಸ್ತೀರ್ಣದ ಕೈಗಾರಿಕಾ ಪಾರ್ಕ್ಗಳ ಅಭಿವೃದ್ಧಿಗೆ ಪ್ರತಿ ಎಕರೆಗೆ 1 ಕೋಟಿ ಹಣಕಾಸಿನ ನೆರವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ.
₹2,585 ಕೋಟಿ ವೆಚ್ಚದ ಕಿರು ಜಲ ವಿದ್ಯುತ್ ಅಭಿವೃದ್ಧಿ ಯೋಜನೆ: ಕೇಂದ್ರದ ಒಪ್ಪಿಗೆ
ಸಂದರ್ಭ: ₹2,585 ಕೋಟಿ ವೆಚ್ಚದ ಕಿರು ಜಲ ವಿದ್ಯುತ್ ಅಭಿವೃದ್ಧಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 1,500 ಮೆಗಾ ವಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಅಭಿವೃದ್ಧಿಯ ಉದ್ದೇಶ ಇದಾಗಿದೆ.
- ‘ನದಿ ಹರಿಯುವ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸದೆ, ಜನರನ್ನು ಸ್ಥಳಾಂತರ ಮಾಡದೇ ವಿದ್ಯುತ್ ಉತ್ಪಾದಿಸುವ ಯೋಜನೆ, ಇದು ದೇಶದ 7,133 ಸ್ಥಳಗಳಲ್ಲಿ 21,000 ಮೆ.ವಾ ವಿದ್ಯುತ್ ಉತ್ಪಾದಿಸುವ ಸಣ್ಣ ಜಲ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಅವಕಾಶ ಇದೆ.
- ಒಂದು ಘಟಕದಿಂದ 1 ಮೆಗಾ ವಾಟ್ನಿಂದ 25 ಮೆಗಾ ವಾಟ್ವರೆಗೂ ವಿದ್ಯುತ್ ಉತ್ಪಾದಿಸಬಹುದಾಗಿದೆ’.
- ‘ಮುಂದಿನ ಐದು ವರ್ಷಗಳಲ್ಲಿ (2030-31) ಯೋಜನೆಗಳನ್ನು ಅನುಷ್ಠಾನಗೊಳಿಸಲಿದ್ದು, ₹ 15,000 ಹೂಡಿಕೆ ಆಕರ್ಷಿಸುವ ಸಾಧ್ಯತೆ ಇದೆ.
- ಗರಿಷ್ಠ 30 ಕೋಟಿ ವೆಚ್ಚದ ಒಂದು ಯೋಜನೆಗೆ ಕೇಂದ್ರ ಸರ್ಕಾರ ಯೋಜನಾ ವೆಚ್ಚದ ಶೇ.30ರಷ್ಟು ಆರ್ಥಿಕ ನೆರವು ನೀಡಲಿದೆ’.
- ಸದ್ಯ ದೇಶದಲ್ಲಿ ಸಣ್ಣ ಜಲ ವಿದ್ಯುತ್ ಯೋಜನೆಗಳಿಂದ 5,100 ಮೆ.ವಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
‘ದಿವ್ಯಾಂಗ ಶಕ್ತಿ’ ಯೋಜನೆಗೆ ಚಾಲನೆ
- ಅಂಗವಿಕಲರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ‘ದಿವ್ಯಾಂಗ ಶಕ್ತಿ’ ಯೋಜನೆಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಚಾಲನೆ ನೀಡಿದರು. ಯುಗಾದಿ ಹಬ್ಬದ ವಿಶೇಷ ಉಡುಗೊರೆಯಾಗಿ ಘೋಷಿಸಲಾದ ಈ ಯೋಜನೆಯು ಸಾಮಾಜಿಕ ಸಮಾನತೆ, ಸಂಚಾರ ಸೌಲಭ್ಯ ಮತ್ತು ಕಟ್ಟಕಡೆಯ ವ್ಯಕ್ತಿಗೂ ಘನತೆಯ ಬದುಕು ನೀಡುವ ಗುರಿ ಹೊಂದಿದೆ.
- ಯೋಜನೆಯು 21 ಅಂಗವೈಕಲ್ಯ ಇರುವವರನ್ನು ಒಳಗೊಳ್ಳಲಿದ್ದು, ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಪಿಎಸ್ಆರ್ಟಿಸಿ) ಐದು ವಿಧದ ಬನ್ಗಳಲ್ಲಿ ಉಚಿತ ಪ್ರಯಾಣದ ಜೊತೆಗೆ, ಅವರ ಸಹಾಯಕರಿಗೆ ಶೇ 50ರಷ್ಟು ರಿಯಾಯಿತಿ ನೀಡುತ್ತದೆ.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
“ಭಾರತೀಯ ಮೀಸಲಾತಿ ವ್ಯವಸ್ಥೆಯಲ್ಲಿ ‘ಕೆನೆಪದರ’ (Creamy Layer) ನೀತಿ: ಸಂವಿಧಾನಾತ್ಮಕ ಆಶಯಗಳು, ನ್ಯಾಯಾಂಗದ ಹಸ್ತಕ್ಷೇಪ ಮತ್ತು ಸಾಮಾಜಿಕ ನ್ಯಾಯದ ಮುಂದಿರುವ ಸವಾಲುಗಳು.”
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
“ಕರ್ನಾಟಕದ 11G ಮಾದರಿ ಆರ್ಥಿಕತೆ: ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯ ಹೊಸ ದಿಕ್ಸೂಚಿ.”
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಆರ್ಟಿಐ ವ್ಯಾಪ್ತಿಗೆ ಅಪೆಕ್ಸ್ ಬ್ಯಾಂಕ್ : ಮಾಹಿತಿ ಆಯೋಗ
ಸಂದರ್ಭ: ಅಪೆಕ್ಸ್ ಬ್ಯಾಂಕ್ ಅನ್ನು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿರುವ ರಾಜ್ಯ ಮಾಹಿತಿ ಆಯೋಗವು, ಎಲ್ಲಾ ಕಚೇರಿಗಳಲ್ಲಿ ತಕ್ಷಣವೇ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳನ್ನು ನೇಮಿಸಬೇಕು ಎಂದೂ ಆದೇಶಿಸಿದೆ.
- ರಾಜ್ಯ ಮಾಹಿತಿ ಆಯುಕ್ತ ಎಸ್. ರಾಜಶೇಖರ ಈ ಆದೇಶ ಹೊರಡಿಸಿದ್ದಾರೆ.
- ಹನುಮಂತ ವಸಂತ ಶಿಂಧೆ ಸಲ್ಲಿಸಿದ್ದ ದ್ವಿತೀಯ ಮೇಲ್ಮನವಿಯಲ್ಲಿ ನಿರಾಣಿ ಶುಗರ್ಸ್ ಲಿಮಿಟೆಡ್ ಸಂಸ್ಥೆಯು ಮಾರ್ಚ್ 2022ರಿಂದ ಜೂನ್ 2024ರವರೆಗೆ ಅಪೆಕ್ಸ್ ಬ್ಯಾಂಕಿನಿಂದ ಪಡೆದ ಸಾಲಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ ದಾಖಲೆಗಳ ಪ್ರತಿಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಬ್ಯಾಂಕ್ ತಾವು ಸಹಕಾರ ಸಂಘವಾಗಿರುವುದರಿಂದ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಮಾಹಿತಿ ನೀಡಲು ನಿರಾಕರಿಸಿತ್ತು.
- ಈ ಬಗ್ಗೆ ವಿಚಾರಣೆ ನಡೆಸಿದ ಮಾಹಿತಿ ಆಯುಕ್ತರು, ಬ್ಯಾಂಕ್ ಕಾರ್ಯಾಚರಣೆಯ ಮೇಲೆ ಸರ್ಕಾರದ ಆಳವಾದ ಮತ್ತು ವ್ಯಾಪಕ ನಿಯಂತ್ರಣ ಇದೆ’ ಎಂದು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
- ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4(1)(ಎ) ಮತ್ತು 4(1)(ಬಿ) ಅಡಿಯಲ್ಲಿ ಪ್ರಮುಖ ಮಾಹಿತಿಯನ್ನು ಅಪೆಕ್ಸ್ ಬ್ಯಾಂಕ್ ರ್ಸಾಜನಿಕವಾಗಿ ಪ್ರಕಟಿಸಬೇಕು. ಇದನ್ನು ತಕ್ಷಣ ಜಾರಿಗೆ ತರಲು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಹಕಾರ ಸಂಘಗಳ ನೋಂದಣಾಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರಕಾನೂನು ತಿದ್ದುಪಡಿಗೆ ವಿಧಾನ ಪರಿಷತ್ ಒಪ್ಪಿಗೆ: ಖಾಸಗಿ ಜಾಗದಲ್ಲಿನ ಜಾಹೀರಾತಿಗೂ ಶುಲ್ಕ
ಸಂದರ್ಭ: ಸಾರ್ವಜನಿಕ, ಖಾಸಗಿ ಜಾಗಗಳಲ್ಲಿ ಜಾಹೀರಾತು ಪ್ರದರ್ಶಿಸುವ ಕಂಪನಿಗಳಿಂದ ಶುಲ್ಕ ವಸೂಲಿಗೆ ಹಾಗೂ ಅನಧಿಕೃತವಾಗಿ ಜಾಹೀರಾತು ಫಲಕ ಹಾಕಿದವರಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ಮಸೂದೆಗೆ ವಿಧಾನ ಪರಿಷತ್ ಒಪ್ಪಿಗೆ ನೀಡಿತು.
- ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ ಮಂಡಿಸಿದ ನಗರಾಭಿವೃದ್ಧಿ ಸಚಿವ, ‘ಬೆಂಗಳೂರು ಬಿಟ್ಟು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾಹೀರಾತು ಕಂಪನಿಗಳಿಂದ ಶುಲ್ಕ ವಸೂಲಿ ಮಾಡಲು ಮಸೂದೆ ಅವಕಾಶ ಕಲ್ಪಿಸುತ್ತದೆ. ಖಾಸಗಿ ಜಾಗದ ಮಾಲೀಕರಿಂದ ಶುಲ್ಕ ವಸೂಲಿ ಮಾಡುವುದಿಲ್ಲ.
- ಅನಧಿಕೃತವಾಗಿ ಜಾಹೀರಾತು ಫಲಕಗಳನ್ನು ಹಾಕಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಇವುಗಳನ್ನು ಪತ್ತೆಹಚ್ಚಲು ಡೋನ್ ಮೂಲಕ ಸರ್ವೆ ಮಾಡಲಾಗುವುದು.
- ‘ಸ್ಥಳೀಯ ಸಂಸ್ಥೆಗಳು ಗುರುತಿಸಿರುವ ಜಾಗದಲ್ಲಿ ಮಾತ್ರ ಜಾಹೀರಾತು ಪ್ರದರ್ಶಿಸಲು ಅವಕಾಶ ಇದೆ. ಶುಲ್ಕ ಕಟ್ಟಿದೆ ಇದ್ದರೆ ಜಾಹೀರಾತು ಫಲಕಗಳನ್ನು ನೆಲಸಮಗೊಳಿಸಲಾಗುವುದು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಎಷ್ಟು ಜಾಹೀರಾತು ಫಲಕಗಳು ಇವೆ, ಇವುಗಳಲ್ಲಿ ಅಧಿಕೃತ ಯಾವುದು? ಅನಧಿಕೃತ ಯಾವುದು ಎಂದು ತಿಳಿಯಲು ಆಡಿಟ್ ಮಾಡಿಸುತ್ತೇವೆ’ ಎಂದರು.
ಪೊಲೀಸ್ ಮಂಡಳಿ ಮೂಲಕವೇ ವರ್ಗಾವಣೆ
- ದುರ್ನಡತೆ, ನಿರ್ಲಕ್ಷ್ಯ, ಕರ್ತವ್ಯಲೋಪ ಪ್ರಕರಣಗಳಲ್ಲಿ ಭಾಗಿಯಾದ ಅಧಿಕಾರಿಗಳನ್ನು ಸರ್ಕಾರದ ಬದಲು ಪೊಲೀಸ್ ಸಿಬ್ಬಂದಿ ಮಂಡಳಿ ಮೂಲಕವೇ ವರ್ಗಾವಣೆ ಮಾಡಲು ಅವಕಾಶ ನೀಡುವ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆಗೆ ವಿಧಾನ ಪರಿಷತ್ ಅನುಮೋದನೆ ನೀಡಿತು.
- ತಿದ್ದುಪಡಿ ಮಸೂದೆ ಮಂಡಿಸಿದ ಗೃಹ ಸಚಿವ , ‘ಸರ್ಕಲ್ ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್, ಡಿವೈಎಸ್ಪಿ ಹಂತದವರೆಗಿನ ಅಧಿಕಾರಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ.
- ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ವಿಳಂಬವಾಗುತ್ತಿತ್ತು ಮಂಡಳಿಗೆ ಅಧಿಕಾರ ನೀಡುವುದರಿಂದ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ’.
- ಕಾರ್ಯನಿರ್ವಾಹಕೇತರ ಹುದ್ದೆಗೆ ವರ್ಗಾವಣೆ ಮಾಡುವ ಕೆಲಸವನ್ನಷ್ಟೇ ಮಂಡಳಿಯು ಮಾಡಲಿದೆ. ಆರೋಪಗಳ ಬಗ್ಗೆ, ತನಿಖೆ ನಡೆಸಿ ಶಿಸ್ತುಕ್ರಮಕೈಗೊಳ್ಳುವ ಅಧಿಕಾರ ಸರ್ಕಾರದ ಬಳಿಯೇ ಇರಲಿದೆ.
ಮರ್ಯಾದೆಗೇಡು ಹತ್ಯೆ ನಿಷೇಧ ಮಸೂದೆ ಮಂಡನೆ
ಸಂದರ್ಭ: ಜಾತಿ ಮೀರಿ ಪ್ರೀತಿಸುವ, ಮದುವೆಯಾದವರನ್ನು ಮರ್ಯಾದೆ ಹೆಸರಿನಲ್ಲಿ ಹಲ್ಲೆ, ಹತ್ಯೆ ಮಾಡುವ ಹಾಗೂ ಬಹಿಷ್ಕರಿಸುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಉದ್ದೇಶದ ‘ಇವ ನಮ್ಮವ, ಇವ ನಮ್ಮವ’ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮರ್ಯಾದೆಗೇಡು ಹತ್ಯೆ’ ಹೆಸರಿನಲ್ಲಿ ನಡೆದ ಕೊಲೆ, ದೌರ್ಜನ್ಯಗಳ ಬಗ್ಗೆ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ಕೃತ್ಯಗಳ ತಡೆಗೆ ಕಠಿಣ ಕಾನೂನು ತರಬೇಕೆಂದು ನಾಗರಿಕರು, ವಿವಿಧ ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು.
- ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ಮಸೂದೆ-2026’ ಸಿದ್ಧಪಡಿಸಲಾಗಿದ್ದು, ಈಚೆಗೆ ಸಂಪುಟ ಸಭೆಯಲ್ಲೂ ಅನುಮೋದನೆ ಪಡೆಯಲಾಗಿತ್ತು.
- ಮಸೂದೆಯು ಅಂತರ್ಜಾತಿ ವಿವಾಹಗಳನ್ನು ಮಾನ್ಯಮಾಡುವುದು, ಅಂತಹ ಮದುವೆಯಾದವರಿಗೆ ತಾರತಮ್ಯ ಮಾಡುವುದರ ವಿರುದ್ಧ ರಕ್ಷಣೆ ಒದಗಿಸುವುದು, ಮರ್ಯಾದೆ ಅಥವಾ ಸಂಪ್ರದಾಯದ ಹೆಸರಿನಲ್ಲಿ ದೌರ್ಜನ್ಯ ಎಸಗುವ, ಹತ್ಯೆ ಮಾಡುವ ಕೃತ್ಯಗಳನ್ನು ತಡೆಯುವುದು, ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವುದು, ಪ್ರತಿ ಜಿಲ್ಲೆಯಲ್ಲೂ, ‘ಇವ ನಮ್ಮವ’ ವೇದಿಕೆಗಳನ್ನು ರಚಿಸುವುದು, ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದು ಅಪರಾಧಿಗಳಿಗೆ ಐದು ವರ್ಷಗಳಿಗೆ ಕಡಿಮೆ ಇಲ್ಲದಂತಹ ಕಠಿಣ ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ಪಿಲಿಕುಳ ಜೈವಿಕ ಉದ್ಯಾನದಲ್ಲಿರುವ ತೋಳ ‘ಗೀತಾ’ ಜನವರಿ ತಿಂಗಳಿನಲ್ಲಿ ಜನ್ಮ
ಪ್ರಮುಖ ಮಾಹಿತಿ
ಸ್ಥಳ: ಪಿಲಿಕುಳ ಜೈವಿಕ ಉದ್ಯಾನ, ಮಂಗಳೂರು
ತೋಳದ ಹೆಸರು: ಗೀತಾ (Indian Wolf)
ಜನನ: ಜನವರಿ 2026
ಮರಿಗಳ ಸಂಖ್ಯೆ: 7 (4 ಗಂಡು, 3 ಹೆಣ್ಣು)
ಪ್ರಥಮ ಸಾಧನೆ: ಉದ್ಯಾನದಲ್ಲಿ ಬಂಧಿತ ಪರಿಸರದಲ್ಲಿ ತೋಳಗಳ ಮೊದಲ ಸಂತಾನೋತ್ಪತ್ತಿ

ಮಹತ್ವ
- ಸಂರಕ್ಷಣೆ: ಇದು ಭಾರತೀಯ ತೋಳಗಳ ಸಂರಕ್ಷಣಾ ಪ್ರಯತ್ನಗಳಿಗೆ ಮಹತ್ವದ ಹೆಜ್ಜೆ. ಬಂಧಿತ ಪರಿಸರದಲ್ಲಿ ಸಂತಾನೋತ್ಪತ್ತಿ ಯಶಸ್ವಿಯಾಗಿರುವುದು ಅಪರೂಪ.
- ಜೈವಿಕ ವೈವಿಧ್ಯತೆ: ಪಿಲಿಕುಳ ಉದ್ಯಾನವು ಕರ್ನಾಟಕದ ಪ್ರಮುಖ ಜೈವಿಕ ಉದ್ಯಾನವಾಗಿದ್ದು, ಈ ಸಾಧನೆ ಅದರ ಸಂರಕ್ಷಣಾ ಕಾರ್ಯಕ್ಕೆ ಹೊಸ ಗೌರವ ತಂದಿದೆ.
ಪಿಲಿಕುಳ ಉದ್ಯಾನದ ಪಾತ್ರ
- ಉದ್ಯಾನವು ಕಳೆದ ಮೂರು ವರ್ಷಗಳಿಂದ ಭಾರತೀಯ ತೋಳಗಳನ್ನು ಸಂರಕ್ಷಿಸುತ್ತಿದೆ.
- ಈ ಸಂತಾನೋತ್ಪತ್ತಿ ಕ್ಯಾಪ್ಟಿವ್ ಬ್ರೀಡಿಂಗ್ (Captive Breeding) ಕ್ಷೇತ್ರದಲ್ಲಿ ಮಹತ್ವದ ಸಾಧನೆ.
- ಉದ್ಯಾನವು ಈಗಾಗಲೇ ಹಲವು ಅಪರೂಪದ ಪ್ರಾಣಿಗಳನ್ನು ಸಂರಕ್ಷಿಸುತ್ತಿದ್ದು, ತೋಳ ಮರಿಗಳ ಜನನವು ಅದರ ಸಂರಕ್ಷಣಾ ಕಾರ್ಯಕ್ಕೆ ಹೊಸ ಚೈತನ್ಯ ನೀಡಿದೆ.
ಪಿಎನ್ಜಿಗೆ ಆದ್ಯತೆ ನೀಡಿದರೆ ಹೆಚ್ಚು ಎಲ್ಪಿಜಿ
ಸಂದರ್ಭ: ಕೊಳವೆ ಮೂಲಕ ಅನಿಲ ಪೂರೈಕೆ ಮಾಡುವ ಜಾಲದ ನಿರ್ಮಾಣ ಕಾರ್ಯಕ್ಕೆ ವೇಗ ನೀಡುವ ರಾಜ್ಯಗಳಿಗೆ ವಾಣಿಜ್ಯ ಬಳಕೆ ಎಲ್ಪಿಜಿ ವಿತರಣೆಯನ್ನು ಹೆಚ್ಚು ಮಾಡಲಾಗುತ್ತದೆ ಎಂಬ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ.
- ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರಣದಿಂದಾಗಿ ದೇಶಕ್ಕೆ ಎಲ್ಪಿಜಿ ಪೂರೈಕೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರವು ಮನೆಗಳಿಗೆ ಅಡುಗೆ ಮಾಡಲು ಎಲ್ಪಿಜಿ ಪೂರೈಕೆಗೆ ಆದ್ಯತೆ ನೀಡಿದೆ. ಹೋಟೆಲ್ನಂತಹ ವಾಣಿಜ್ಯ ಘಟಕಗಳಿಗೆ ಎಲ್ ಪಿಜಿ ವೂರೈಕೆಯನ್ನು ಆರಂಭದಲ್ಲಿ ಸ್ಥಗಿತಗೊಳಿಸಲಾಗಿತ್ತು ಈಗ ವಾಣಿಜ್ಯ ಘಟಕಗಳ ಬೇಡಿಕೆಯ ಶೇ 20ರಷ್ಟನ್ನು ಪೂರೈಕೆ ಮಾಡಲಾಗುತ್ತಿದೆ.
- ಕೊಳವೆ ಮೂಲಕ ನೈಸರ್ಗಿಕ ಅನಿಲ ಪೂರೈಸುವ ಮೂಲಸೌಕರ್ಯ ಕಲ್ಪಿಸುವ ಕೆಲಸಕ್ಕೆ ಚುರುಕು ನೀಡುವ ರಾಜ್ಯಗಳಿಗೆ ವಾಣಿಜ್ಯ ಬಳಕೆ ಎಲ್ಪಿಜಿ ಪೂರೈಕೆಯನ್ನು ಶೇ 30ಕ್ಕೆ ಹೆಚ್ಚು ಮಾಡುವುದಾಗಿ ಕೇಂದ್ರ ಹೇಳಿದೆ. ಕೊಳವೆ ಮೂಲಕ ನೈಸರ್ಗಿಕ ಅನಿಲವನ್ನು ಮನೆಗಳಿಗೂ ವಾಣಿಜ್ಯ ಬಳಕೆಗೂ ಪೂರೈಕೆ ಮಾಡಲಾಗುತ್ತದೆ.
ಎಲ್ಪಿಜಿ (Liquefied Petroleum Gas) ಮತ್ತು ಪಿಎನ್ಜಿ (Piped Natural Gas) ನಡುವಿನ ವ್ಯತ್ಯಾಸ:
| ಅಂಶ | ಎಲ್ಪಿಜಿ (LPG) | ಪಿಎನ್ಜಿ (PNG) |
| ಪೂರ್ಣ ರೂಪ | Liquefied Petroleum Gas (ದ್ರವೀಕೃತ ಪೆಟ್ರೋಲಿಯಂ ಅನಿಲ) | Piped Natural Gas (ಪೈಪ್ಡ್ ನೈಸರ್ಗಿಕ ಅನಿಲ) |
| ಮೂಲ ಸಂಪನ್ಮೂಲ | ಕ್ರೂಡ್ ತೈಲ ಶೋಧನೆ ವೇಳೆ ಉತ್ಪಾದನೆಯಾಗುವ ಪ್ರೋಪೇನ್ ಮತ್ತು ಬ್ಯೂಟೇನ್ | ನೈಸರ್ಗಿಕ ಅನಿಲ (ಮುಖ್ಯವಾಗಿ ಮೆಥೇನ್) |
| ಉತ್ಪಾದನಾ ಸ್ಥಳ | ಪೆಟ್ರೋಲಿಯಂ ರಿಫೈನರಿಗಳು (ತೈಲ ಶುದ್ಧೀಕರಣ ಘಟಕಗಳು) ಮತ್ತು ನೈಸರ್ಗಿಕ ಅನಿಲ ಸಂಸ್ಕರಣಾ ಕೇಂದ್ರಗಳು. | ನೈಸರ್ಗಿಕ ಅನಿಲದ ಬಾವಿಗಳು (ತೈಲ ಮತ್ತು ಅನಿಲ ಕ್ಷೇತ್ರಗಳು) ಮತ್ತು ಅನಿಲ ಸಂಸ್ಕರಣಾ ಘಟಕಗಳು. |
| ರೂಪ | ದ್ರವ ರೂಪದಲ್ಲಿ ಸಿಲಿಂಡರ್ಗಳಲ್ಲಿ ಸಂಗ್ರಹಣೆ. | ಅನಿಲ ರೂಪದಲ್ಲಿ ಪೈಪ್ಗಳ ಮೂಲಕ ನೇರ ಪೂರೈಕೆ. |
| ಸಂಗ್ರಹಣೆ | ಸಿಲಿಂಡರ್ಗಳಲ್ಲಿ ಹೆಚ್ಚಿನ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ. | ಪೈಪ್ಲೈನ್ ಜಾಲದ ಮೂಲಕ ನಿರಂತರವಾಗಿ ಹರಿಯುತ್ತದೆ. |
| ಬಳಕೆ | ಮನೆ ಅಡುಗೆ, ಹೋಟೆಲ್ಗಳು, ಕೈಗಾರಿಕೆಗಳು ಮತ್ತು ವಾಹನಗಳು. | ಮನೆ ಅಡುಗೆ, ಹೋಟೆಲ್ಗಳು ಮತ್ತು ಕೈಗಾರಿಕೆಗಳು. |
| ಪೂರೈಕೆ ಸ್ಥಿತಿ | ಆಮದು ಅವಲಂಬಿತ; ಯುದ್ಧ ಅಥವಾ ಅಂತರಾಷ್ಟ್ರೀಯ ಕಾರಣಗಳಿಂದ ಅಡಚಣೆ ಸಾಧ್ಯತೆ. | ಪೈಪ್ಲೈನ್ ಇರುವ ಪ್ರದೇಶಗಳಲ್ಲಿ ನಿರಂತರ ಮತ್ತು ಅಬಾಧಿತ ಪೂರೈಕೆ. |
| ಸರ್ಕಾರದ ನೀತಿ | ಮನೆಗಳಿಗೆ ಆದ್ಯತೆ; ವಾಣಿಜ್ಯ ಘಟಕಗಳಿಗೆ ಸೀಮಿತ ಪೂರೈಕೆ. | PNG ಜಾಲ ವಿಸ್ತರಿಸಿದ ರಾಜ್ಯಗಳಿಗೆ ಹೆಚ್ಚಿನ ವಾಣಿಜ್ಯ ಪ್ರೋತ್ಸಾಹ. |
| ಅನುಕೂಲತೆ | ಎಲ್ಲೆಡೆ ಲಭ್ಯವಿದೆ, ಆದರೆ ಸಿಲಿಂಡರ್ ಬದಲಾವಣೆ/ಬುಕಿಂಗ್ ಅಗತ್ಯ. | ಸುರಕ್ಷಿತ, ನಿರಂತರ ಪೂರೈಕೆ, ಸಿಲಿಂಡರ್ ಬದಲಿಸುವ ಕಿರಿಕಿರಿ ಇಲ್ಲ. |
| ಸವಾಲುಗಳು | ಆಮದು ಅವಲಂಬನೆ ಮತ್ತು ಪೂರೈಕೆಯಲ್ಲಿ ಏರಿಳಿತ. | ಪೈಪ್ಲೈನ್ ಮೂಲಸೌಕರ್ಯ ನಿರ್ಮಾಣಕ್ಕೆ ಹೆಚ್ಚಿನ ಹೂಡಿಕೆ ಬೇಕು. |
ಪ್ರಮುಖ ಮಾಹಿತಿ:
- LPG ಅನ್ನು ಹೆಚ್ಚಾಗಿ ಸೌದಿ ಅರೇಬಿಯಾ, ಕತಾರ್ನಂತಹ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ ಅಥವಾ ದೇಶೀಯ ರಿಫೈನರಿಗಳಲ್ಲಿ (ಉದಾಹರಣೆಗೆ ಮಂಗಳೂರಿನ MRPL) ತಯಾರಿಸಲಾಗುತ್ತದೆ.
- PNG ಗಾಗಿ ಭಾರತವು ತನ್ನದೇ ಆದ ನೈಸರ್ಗಿಕ ಅನಿಲದ ಬಾವಿಗಳನ್ನು (ಉದಾಹರಣೆಗೆ ಕೃಷ್ಣ-ಗೋದಾವರಿ ಬೇಸಿನ್) ಬಳಸುತ್ತದೆ ಮತ್ತು ದ್ರವೀಕೃತ ನೈಸರ್ಗಿಕ ಅನಿಲವನ್ನು (LNG) ಆಮದು ಮಾಡಿಕೊಂಡು ಅದನ್ನು ಅನಿಲ ರೂಪಕ್ಕೆ ಬದಲಿಸಿ ಪೂರೈಸುತ್ತದೆ.
ಪತ್ರಿಕೆ-V: ಸಾಮಾನ್ಯ ಅಧ್ಯಯನ-4
ನೈತಿಕತೆ ಮತ್ತು ಮಾನವ ಹಕ್ಕುಗಳು (Ethics and Human Rights)
ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಗಳು ಸಮಾಜದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಚನೆಗೆ ಪರಿಣಾಮ ಬೀರುವ ಹಲವು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿವೆ. ಇದನ್ನು “ನಾಲ್ಕನೇ ಕೈಗಾರಿಕಾ ಕ್ರಾಂತಿ” ಎಂದು ಕರೆಯಲಾಗುತ್ತಿದೆ. AI ಮಾನವಕುಲಕ್ಕೆ “ಉತ್ತಮ” ಅಥವಾ “ಕೆಟ್ಟ” ಎಂಬ ಪ್ರಶ್ನೆ ಇನ್ನೂ ಚರ್ಚೆಯಲ್ಲಿದೆ.
ಪ್ರಮುಖ ನೈತಿಕ ಪ್ರಶ್ನೆಗಳು
ಉದ್ಯೋಗ ಕಳೆದುಕೊಳ್ಳುವ ಭೀತಿ: AI ಮಾನವರನ್ನು ಬದಲಾಯಿಸಿದರೆ ಸಾಮೂಹಿಕ ನಿರುದ್ಯೋಗ ಉಂಟಾಗಬಹುದೇ?
ಅನರ್ಹ/ಅಪಾಯಕಾರಿ ಬಳಕೆ: AI ಅನ್ನು ಅಪಾಯಕಾರಿ ಉದ್ದೇಶಗಳಿಗೆ ಬಳಸುವುದನ್ನು ಹೇಗೆ ತಡೆಯುವುದು?
ಮಾನವ ಗೌರವ: AI ಮಾನವ ವ್ಯಕ್ತಿತ್ವ ಮತ್ತು ಗೌರವಕ್ಕೆ ಏನು ಪರಿಣಾಮ ಬೀರುತ್ತದೆ?
ಮಾಹಿತಿ ಮರುಕಳಿಕೆ: ಚುನಾವಣೆಗಳ ಸಂದರ್ಭದಲ್ಲಿ ಮಾಹಿತಿ ಮರುಕಳಿಕೆ, ಹ್ಯಾಕಿಂಗ್ ಮುಂತಾದವುಗಳು ಪ್ರಜಾಪ್ರಭುತ್ವಕ್ಕೆ ಸವಾಲು.
ವಿಶ್ವ ಆರ್ಥಿಕ ವೇದಿಕೆ (WEF) ಉಲ್ಲೇಖಿಸಿದ ನೈತಿಕ ಚಿಂತೆಗಳು
ನಿರುದ್ಯೋಗ
ಅಸಮಾನತೆ
ಜಾತ್ಯಾತೀತತೆ
ಭದ್ರತೆ
ರೋಬೋಟ್ಗಳ ಹಕ್ಕುಗಳು
ಖಾಸಗಿ ಕಂಪನಿಗಳ ನೈತಿಕ ಮಾರ್ಗಸೂಚಿಗಳು
Microsoft, Google, SAP, IBM ಮುಂತಾದ ಕಂಪನಿಗಳು AI ಅಭಿವೃದ್ಧಿಯಲ್ಲಿ ಪಾಲಿಸಬೇಕಾದ ನೈತಿಕ ತತ್ವಗಳನ್ನು ರೂಪಿಸಿವೆ.
AI ನೈತಿಕ ತತ್ವಗಳು
| ತತ್ವ | ವಿವರಣೆ |
| ಪಾರದರ್ಶಕತೆ (Transparency) | AI ನಿರ್ಧಾರಗಳ ವಿವರ, ಡೇಟಾ ಬಳಕೆ ಮತ್ತು ಮಾನವ-ಯಂತ್ರ ಸಂವಹನದಲ್ಲಿ ಸ್ಪಷ್ಟತೆ ಇರುವುದು. |
| ನ್ಯಾಯ ಮತ್ತು ಸಮಾನತೆ (Justice & Fairness) | ಭೇದಭಾವ ತಪ್ಪಿಸುವುದು, ವೈವಿಧ್ಯತೆ ಕಾಪಾಡುವುದು ಮತ್ತು ಪ್ರಜಾಪ್ರಭುತ್ವದ ಮೇಲೆ ಧನಾತ್ಮಕ ಪರಿಣಾಮ ಬೀರುವುದು. |
| ಹಾನಿ ಮಾಡದಿರುವುದು (Non-malfeasance) | ಸುರಕ್ಷತೆ ಒದಗಿಸುವುದು, ಸೈಬರ್ ಹ್ಯಾಕಿಂಗ್ ತಡೆಗಟ್ಟುವುದು ಮತ್ತು ಬಳಕೆದಾರರ ಗೌಪ್ಯತೆ ಕಾಪಾಡುವುದು. |
| ಜವಾಬ್ದಾರಿ ಮತ್ತು ಹೊಣೆಗಾರಿಕೆ (Responsibility) | AI ಮೂಲಕ ಯಾವುದಾದರೂ ಹಾನಿ ಉಂಟಾದರೆ ಅದರ ಪರಿಹಾರ ಮತ್ತು ಹೊಣೆಗಾರಿಕೆಯನ್ನು ಸ್ಪಷ್ಟಪಡಿಸುವುದು. |
| ಗೌಪ್ಯತೆ (Privacy) | ಡೇಟಾ ರಕ್ಷಣೆ, ‘Privacy by design’ ಅಳವಡಿಕೆ ಮತ್ತು ಅನಗತ್ಯ ಡೇಟಾ ಸಂಗ್ರಹಣೆ ತಡೆಯುವುದು (Data minimization). |
| ಹಿತಚಿಂತನೆ (Beneficence) | ಸಮಾಜದ ಕಲ್ಯಾಣ, ಶಾಂತಿ ಮತ್ತು ಆರ್ಥಿಕ ಅವಕಾಶಗಳನ್ನು ವೃದ್ಧಿಸುವುದು. |
| ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ (Autonomy) | ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ತಂತ್ರಜ್ಞಾನದ ದುರുപಯೋಗ ತಡೆದು ಮಾಹಿತಿ ಸ್ವಯಂ ನಿರ್ಧಾರಕ್ಕೆ ಅವಕಾಶ ನೀಡುವುದು. |
| ನಂಬಿಕೆ (Trust) | ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಮೂಲಕ AI ವ್ಯವಸ್ಥೆಯ ಮೇಲೆ ಸಾರ್ವಜನಿಕ ನಂಬಿಕೆ ಬೆಳೆಸುವುದು. |
| ಗೌರವ (Dignity) | ಮಾನವನ ಘನತೆ ಮತ್ತು ಗೌರವವನ್ನು ಯಾವುದೇ ಸಂದರ್ಭದಲ್ಲೂ ಕುಗ್ಗಿಸದಂತೆ ಕಾಪಾಡುವುದು. |
| ಸತತತೆ (Sustainability) | ಪರಿಸರ ರಕ್ಷಣೆ ಮತ್ತು ದೀರ್ಘಕಾಲೀನ ಸಮಾನ ಸಾಮಾಜಿಕ ವ್ಯವಸ್ಥೆಗಳ ನಿರ್ಮಾಣ ಮಾಡುವುದು. |
| ಏಕತೆ (Solidarity) | ಸಮಾಜದ ದುರ್ಬಲ ಗುಂಪುಗಳಿಗೆ ರಕ್ಷಣೆ ನೀಡುವುದು ಮತ್ತು ಸಾಮಾಜಿಕ ಒಗ್ಗಟ್ಟನ್ನು ಕಾಪಾಡುವುದು. |
ಅಂತರರಾಷ್ಟ್ರೀಯ ಮಾರ್ಗಸೂಚಿಗಳು
OECD Principles on AI (2019): ಮಾನವ ಕೇಂದ್ರಿತ ಮೌಲ್ಯಗಳು, ಪಾರದರ್ಶಕತೆ, ಸುರಕ್ಷತೆ, ಹೊಣೆಗಾರಿಕೆ.
G-20 Summit (2019): OECD ತತ್ವಗಳನ್ನು ಅಳವಡಿಸಿಕೊಂಡಿತು.
Global Partnership on AI (GPAI, 2020): ಮಾನವ ಹಕ್ಕುಗಳು, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿ AI ಅಭಿವೃದ್ಧಿ.
ಕಾರ್ಯ ಗುಂಪುಗಳು: (a) Responsible AI, (b) Data Governance, (c) Future of Work, (d) Innovation & Commercialisation.
COVID-19 ಪ್ರತಿಕ್ರಿಯೆಯಲ್ಲಿ AI ಬಳಕೆ ಮೊದಲ ಆದ್ಯತೆ.
ಸಾರಾಂಶ
AI ನೈತಿಕತೆ ಮತ್ತು ಮಾನವ ಹಕ್ಕುಗಳ ಚರ್ಚೆ ಪಾರದರ್ಶಕತೆ, ನ್ಯಾಯ, ಹೊಣೆಗಾರಿಕೆ, ಗೌಪ್ಯತೆ, ಸ್ವಾತಂತ್ರ್ಯ, ನಂಬಿಕೆ, ಗೌರವ, ಸತತತೆ ಮತ್ತು ಏಕತೆ ಎಂಬ ತತ್ವಗಳ ಸುತ್ತ ನಡೆಯುತ್ತಿದೆ. OECD ಮತ್ತು GPAI ಮುಂತಾದ ಅಂತರರಾಷ್ಟ್ರೀಯ ವೇದಿಕೆಗಳು ಮಾನವ ಕೇಂದ್ರಿತ, ಹೊಣೆಗಾರಿಕೆಯಿಂದ AI ಅಭಿವೃದ್ಧಿಗೆ ಒತ್ತು ನೀಡುತ್ತಿವೆ.
Sources: Prajavani