ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ರಾಮನ್ ಪರಿಣಾಮ (Raman Effect) – ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನೆಲೆ
ಸಂದರ್ಭ: ಭಾರತದಲ್ಲಿ ಪ್ರತಿ ವರ್ಷ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತದೆ. ಈ ದಿನವು ಮಹಾನ್ ಭಾರತೀಯ ವಿಜ್ಞಾನಿ ಸಿ.ವಿ. ರಾಮನ್ ಅವರು 1928ರಲ್ಲಿ ಕಂಡುಹಿಡಿದ ರಾಮನ್ ಪರಿಣಾಮ (Raman Effect) ಘೋಷಣೆಯ ಸ್ಮರಣಾರ್ಥವಾಗಿದೆ.
ರಾಮನ್ ಪರಿಣಾಮ ಎಂದರೇನು?
ರಾಮನ್‌ರ ಪ್ರಯೋಗದ ಪ್ರಕಾರ, ಬೆಳಕು ಯಾವುದಾದರೂ ಒಂದು ವಸ್ತುವಿನ ಮೇಲೆ ಬಿದ್ದಾಗ, ಅದು ಚದುರುತ್ತದೆ. ಈ ರೀತಿ ಚದುರಿದ ಬೆಳಕಿನ ಬಣ್ಣ (ತರಂಗಾಂತರ) ಸ್ವಲ್ಪ ಬದಲಾಗುತ್ತದೆ. ಇದನ್ನೇ ‘ರಾಮನ್ ಪರಿಣಾಮ’ ಎನ್ನಲಾಗುತ್ತದೆ. ಇದು ಅಣುಗಳ ‘ಬೆರಳಚ್ಚು’ ಇದ್ದಂತೆ. ಇಂದು ಈ ತಂತ್ರಜ್ಞಾನವನ್ನು ಬಳಸಿ ಕ್ಯಾನ್ಸರ್ ಪತ್ತೆ ಯಿಂದ ಹಿಡಿದು, ಮಂಗಳ ಗ್ರಹದ ಮೇಲಿರುವ ಖನಿಜಗಳ ವರೆಗೆ ಎಲ್ಲವನ್ನೂ ಪತ್ತೆಹಚ್ಚಲಾಗುತ್ತಿದೆ!
ಐತಿಹಾಸಿಕ ಮಹತ್ವ
1928ರಲ್ಲಿ ರಾಮನ್ ಪರಿಣಾಮವನ್ನು ಕಂಡುಹಿಡಿದರು
1930ರಲ್ಲಿ ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಿಜ್ಞಾನಿ
ಭಾರತೀಯ ವಿಜ್ಞಾನ ಕ್ಷೇತ್ರದ ಜಾಗತಿಕ ಮಾನ್ಯತೆ ಹೆಚ್ಚಿಸಿದ ಸಾಧನೆ
ಪ್ರಸ್ತುತ ಮಹತ್ವ (Current Relevance)
1. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಕೆ
ರಸಾಯನಿಕ ಸಂಯೋಜನೆ ವಿಶ್ಲೇಷಣೆ
ವೈದ್ಯಕೀಯ ಕ್ಷೇತ್ರದಲ್ಲಿ ಕ್ಯಾನ್ಸರ್ ಪತ್ತೆ
ಫಾರ್ಮಾಸ್ಯೂಟಿಕಲ್ ಪರೀಕ್ಷೆಗಳು
ಪರಿಸರ ಮಾಲಿನ್ಯ ಪತ್ತೆ
ನ್ಯಾನೋ ತಂತ್ರಜ್ಞಾನ ಅಧ್ಯಯನ
2. “ಮೇಕ್ ಇನ್ ಇಂಡಿಯಾ” ಮತ್ತು ಸಂಶೋಧನಾ ಪ್ರೋತ್ಸಾಹ
ರಾಮನ್ ಪರಿಣಾಮ ಆಧಾರಿತ ಸ್ಪೆಕ್ಟ್ರೋಸ್ಕೋಪಿ ಉಪಕರಣಗಳ ಸ್ವದೇಶೀ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತಿದೆ.
3. ರಾಷ್ಟ್ರೀಯ ವಿಜ್ಞಾನ ದಿನ – 2026
“ವಿಜ್ಞಾನದಲ್ಲಿ ನವೀನತೆ ಮತ್ತು ಆತ್ಮನಿರ್ಭರ ಭಾರತ” ಎಂಬ ಥೀಮ್.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಸ್ವಾವಲಂಬನೆಗೆ ಲಕ್ಷ್ಮಿ ಆಸರೆ
ಸಂದರ್ಭ: ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳ ಸಹಕಾರ ಸಂಘವನ್ನು ಸ್ಥಾಪಿಸಲು ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಫಲಾನುಭವಿಗಳಿಂದ ₹1,250 ಸದಸ್ಯತ್ವ ಶುಲ್ಕ ಮತ್ತು ತಿಂಗಳಿಗೆ ₹200ರಂತೆ ಠೇವಣಿ ಸಂಗ್ರಹಿಸಲು ತೀರ್ಮಾನಿಸಿದೆ.
- ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ’ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
- ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಯಡಿ ಈವರೆಗೆ 1.24 ಕೋಟಿ ಫಲಾನುಭವಿಗಳಿಗೆ ತಿಂಗಳಿಗೆ ತಲಾ ₹2,000ರಂತೆ, ಈವರೆಗೆ 26 ಕಂತುಗಳನ್ನು ಪಾವತಿಸಿದೆ.
- ಪ್ರತಿ ತಿಂಗಳು ನೀಡುವ ₹2,000ದಲ್ಲಿ ಸಹಕಾರ ಸಂಘ ಬಲ ಗೊಳಿಸಲು ಠೇವಣಿ ರೂಪದಲ್ಲಿ ₹200 ಅನ್ನು ಕಡಿತಗೊಳಿಸಲಾಗುತ್ತದೆ.
- ಸಹಕಾರ ಸಂಘ ಸ್ಥಾಪನೆ ಪ್ರಕ್ರಿಯೆ ಆರಂಭವಾದ ಬಳಿಕ ಆರು ತಿಂಗಳವರೆಗೆ ಮಹಿಳೆಯರ ಖಾತೆಗೆ ₹1,800 ಮಾತ್ರ ಜಮೆಯಾಗಲಿದೆ. ಉಳಿದ ಮೊತ್ತವು ಸದಸ್ಯರ ಖಾತೆಯಲ್ಲಿಯೇ ಇರಲಿದೆ.
- ಫಲಾನುಭವಿಗಳನ್ನು ಸಂಘಟಿಸಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ತರಬೇತಿ ನೀಡುವುದಕ್ಕಾಗಿ ಈ ಸಹಕಾರ ಸಂಘ ಹುಟ್ಟು ಹಾಕಲಾಗುತ್ತಿದೆ.ಗೃಹಲಕ್ಷ್ಮಿ ಯೋಜನೆಯ ಎಲ್ಲ ಫಲಾನುಭವಿಗಳನ್ನು ಸದಸ್ಯರನ್ನಾಗಿಸುವ ಗುರಿ ಹೊಂದಲಾಗಿದೆ.
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಸಂಘದ ಮೂಲಕ ಈ ಮಹಿಳೆಯರಿಗೆ ವಿವಿಧ ಉದ್ದೇಶಗಳಿಗೆ ಸಾಲ-ಸೌಲಭ್ಯ ಒದಗಿಸುವ ಮೂಲಕ ಮಹಿಳೆಯರನ್ನು ಉದ್ಯಮಿಗಳಾಗಿಸುವ ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶ ಹೊಂದಲಾಗಿದೆ.
- 30 ಸಾವಿರದಿಂದ 13 ಲಕ್ಷದವರೆಗೆ ಸಾಲ: ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ₹30 ಸಾವಿರದಿಂದ ₹3 ಲಕ್ಷದವರೆಗೆ ವೈಯಕ್ತಿಕ ಸಾಲ ಒದಗಿಸಲಾಗುವುದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಮನಾಗಿ ವಾರ್ಷಿಕ ಶೇ 7ರಿಂದ ಶೇ 9 ಅಥವಾ ಅದಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಉದ್ದೇಶಿಸಲಾಗಿದೆ. ಸಾಲದ ಹಣವನ್ನು ಮಹಿಳೆಯರು ಸಣ್ಣಪುಟ್ಟ ವ್ಯಾಪಾರ, ಗುಡಿ ಕೈಗಾರಿಕೆ, ಕೃಷಿ, ಪಶುಸಂಗೋಪನೆ ಮಕ್ಕಳ ಶಿಕ್ಷಣ, ವಾಹನ ಖರೀದಿಗೆ ಬಳಸಬಹುದು. ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಾಯಕವಾಗುತ್ತದೆ.
- ಸದಸ್ಯತ್ವ ಪಡೆಯಲು ಒಂದು ಬಾರಿಗೆ ₹1,000 ಷೇರು ಹಣ ನೀಡಬೇಕು. ಇದು ₹1,250ರ ಸದಸ್ಯತ್ವದ ಶುಲ್ಕದಲ್ಲಿ ಸೇರಿದೆ ಅಲ್ಲದೇ, ಪ್ರತಿ ತಿಂಗಳು ₹200 ರಂತೆ ಕನಿಷ್ಠ ಆರು ತಿಂಗಳವರೆಗೆ ಉಳಿತಾಯ ರೂಪದಲ್ಲಿ ಜಮೆ ಮಾಡಬೇಕು. ಈ ರೀತಿ ಉಳಿತಾಯ ಮಾಡಿದವರು ಸಾಲ ಪಡೆಯಲು ಅರ್ಹರಾಗುತ್ತಾರೆ, ಸಾಲ ಪಡೆಯುವುದಕ್ಕೆ ಜಾಮೀನು (ಶೂರಿಟಿ) ಅಗತ್ಯವಿರುವುದಿಲ್ಲ. ಸಂಪೂರ್ಣ ನಗದುರಹಿತ ಡಿಜಿಟಲ್ ಪಾವತಿಯ ಮೂಲಕ ವಹಿವಾಟಿಗೆ ಆದ್ಯತೆ ನೀಡಲಾಗಿದೆ.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
“2047ರ ವಿಕಸಿತ ಭಾರತ ದೃಷ್ಟಿಕೋನದಲ್ಲಿ ಮಹಿಳಾ ವಿಜ್ಞಾನಿಗಳ ಪಾತ್ರ: ಸಂಶೋಧನೆ, ನವೀನತೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ವಿಮರ್ಶಾತ್ಮಕವಾಗಿ ಚರ್ಚಿಸಿ.”
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
“ತ್ರಿಭಾಷಾ ಪದವಿಗಳ ಅಂತ್ಯಕಾಲ: ಹೊಸ ಶಿಕ್ಷಣ ನೀತಿ ಹಿನ್ನೆಲೆಯಲ್ಲಿನ ಭಾಷಾ ನೀತಿ, ಜಾಗತೀಕರಣ ಮತ್ತು ಉನ್ನತ ಶಿಕ್ಷಣದ ಭವಿಷ್ಯ – ವಿಮರ್ಶಾತ್ಮಕವಾಗಿ ಚರ್ಚಿಸಿ.”
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ವಿತ್ತೀಯ ಕೊರತೆ ₹9.8 ಲಕ್ಷ ಕೋಟಿ
ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಜನವರಿವರೆಗಿನ ಅವಧಿಯಲ್ಲಿ ಕೇಂದ್ರ ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಿನ ಅಂತರವಾದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 63ರಷ್ಟಾಗಿದೆ.
- ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ಇದು ₹9.8 ಲಕ್ಷ ಕೋಟಿಯಾಗಿದೆ ಎಂದು ಬಿಡುಗಡೆ ಆಗಿರುವ ಲೆಕ್ಕಪತ್ರಗಳ ಮಹಾನಿಯಂತ್ರಕರ (ಸಿಜಿಎ) ವರದಿ ತಿಳಿಸಿದೆ. 2024-25ರ ಅರ್ಥಿಕ ವರ್ಷದ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಶೇ 74.5ರಷ್ಟಿತ್ತು, 2025-26ರ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.4ಕ್ಕೆ (ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ₹15.58 ಲಕ್ಷ ಕೋಟಿ) ತಗ್ಗಿಸಲು ಸರ್ಕಾರ ಬಜೆಟ್‌ನಲ್ಲಿ ಗುರಿ ನಿಗದಿ ಮಾಡಿದೆ.
- ಏಪ್ರಿಲ್‌ನಿಂದ ಜನವರಿವರೆಗೆ ಸರ್ಕಾರವು ₹27.08 ಲಕ್ಷ ಕೋಟಿ ವರಮಾನ ಸ್ವೀಕರಿಸಿದೆ.
- ಕೇಂದ್ರ ಸರ್ಕಾರ ಸ್ವೀಕರಿಸಿದ ಈ ಮೊತ್ತದ ಪೈಕಿ ₹20.94 ಲಕ್ಷ ಕೋಟಿ ತೆರಿಗೆ ವರಮಾನದಿಂದ ಸಂಗ್ರಹಿಸಿದೆ. ₹5.57 ಲಕ್ಷ ಕೋಟಿ ತೆರಿಗೆಯೇತರ ವರಮಾನ ಮತ್ತು ಇತರೆ ಮೂಲಗಳಿಂದ ₹57.129 ಕೋಟಿ ಸಂಗ್ರಹಿಸಿದೆ.
- ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಗಳಿಗೆ ₹11.39 ಲಕ್ಷ ಕೋಟಿಯನ್ನು ತೆರಿಗೆ ಪಾಲಾಗಿ ವರ್ಗಾಯಿಸಿದೆ. ಇದು ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹65,588 ಕೋಟಿಯಷ್ಟು ಅಧಿಕವಾಗಿದೆ.
- ಇದೇ ಅವಧಿಯಲ್ಲಿ ಸರ್ಕಾರದ ಒಟ್ಟು ವೆಚ್ಚವು ₹36.9 ಲಕ್ಷ ಕೋಟಿಯಾಗಿದೆ. ಈ ಪೈಕಿ ಬಡ್ಡಿಗೆ ₹9.88 ಲಕ್ಷ ಕೋಟಿ ಪಾವತಿಸಲಾಗಿದ್ದು, ₹3.54 ಲಕ್ಷ ಕೋಟಿಯನ್ನು ಪ್ರಮುಖ ಸಬ್ಸಿಡಿಗಳಿಗೆ ನೀಡಲಾಗಿದೆ.
- ಎಫ್‌ಡಿಐ ಶೇ 18ರಷ್ಟು ಹೆಚ್ಚಳ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ದೇಶದಲ್ಲಿನ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರಮಾಣ ಶೇ 18ರಷ್ಟು ಹೆಚ್ಚಳವಾಗಿದ್ದು, ₹4.35 ಲಕ್ಷ ಕೋಟಿಯಷ್ಟಾಗಿದೆ.
- ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆ ₹3.70 ಲಕ್ಷ ಕೋಟಿಯಷ್ಟಾಗಿತ್ತು.
ಜಿಡಿಪಿ: ಶೇ 7.8ರಷ್ಟು ದಾಖಲು
ಸಂದರ್ಭ: ‘ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7.8ರಷ್ಟು ದಾಖಲಾಗಿದೆ.

- ಭಾರತದ ಆರ್ಥಿಕತೆ ಬೆಳವಣಿಗೆಯ ವೇಗ ಹೆಚ್ಚಾಗಿರುವುದು. ಗ್ರಾಹಕರ ಖರೀದಿ ಭರಾಟೆಯು ಇದಕ್ಕೆ ಕಾರಣವಾಗಿವೆ’ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಬಿಡುಗಡೆಗೊಳಿಸಿದ ದತ್ತಾಂಶದಲ್ಲಿ ತಿಳಿಸಿದೆ.
- ಶೇ 7.6ರಷ್ಟು ನಿರೀಕ್ಷೆ: ಪ್ರಸಕ್ತ ಪೂರ್ಣ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ 7.6ಕ್ಕೆ ಏರಿಕೆ ಮಾಡಲಾಗಿದೆ.
- ಜಾಗತಿಕ ವ್ಯಾಪಾರದ ಅಡೆತಡೆಯ ನಡುವೆಯೂ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ದೇಶದ ಆರ್ಥಿಕತೆ ಚೇತರಿಸಿಕೊಂಡ ಕಾರಣ ಜಿಡಿಪಿ ಲೆಕ್ಕಾಚಾರದ ಪರಿಷ್ಕರಣೆ ನಿರ್ಧರಿಸಲಾಗಿದೆ.
- ಹಳೆಯ ದತ್ತಾಂಶ ಸರಣಿಯ ಪ್ರಕಾರ,ಶೇ 7.1ರಷ್ಟು ಜಿಡಿಪಿ ಏರಿಕೆಯನ್ನು ನಿರೀಕ್ಷಿ ಸಲಾಗಿತ್ತು. 2024-25ರ ವಿತ್ತೀಯ ದತ್ತಾಂಶದ ಪ್ರಕಾರ ಏರಿಕೆಯು ಶೇ7.1ರಷ್ಟಿತ್ತು.
- ಲೆಕ್ಕಾಚಾರದ ಪರಿಷ್ಕರಣೆಯ ಪ್ರಕಾರ, 2022-23ಕ್ಕೆ ಪರಿಷ್ಕೃಸಲಾಗಿದ್ದು, ಮೂಲ ವರ್ಷವನ್ನು ಬದಲಾಯಿಸಿ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವ ಸುಧಾರಿತ ಅಂಶಗಳ ಪರಿಗಣನೆಯನ್ನು ಒಳಗೊಂಡಿದೆ.
- ಆದಾಗ್ಯೂ, ಅಕ್ಟೋಬರ್ ಡಿಸೆಂಬರ್‌ನಲ್ಲಿ ಜಿಡಿಪಿ ಬೆಳವಣಿಗೆಯು ಮಧ್ಯಮ ಇಳಿಕೆಗೆ ಕಾರಣವಾಯಿತು. ಇದು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 8.4ರಷ್ಟಿತ್ತು. ಅದು ಈಗ ಶೇ 7.8ಕ್ಕೆ ಇಳಿಕೆಯಾಗಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
‘ಡಾಲ್ಫಿನ್ ಹಂಟರ್’ ಅಂಜದೀಪ್ ಯುದ್ಧನೌಕೆ ನೌಕಾಪಡೆಗೆ ಸೇರ್ಪಡೆ
ಸಂದರ್ಭ: ಶತ್ರು ಜಲಾಂತರ್ಗಾಮಿ ನೌಕೆ ಗಳ ಪತ್ತೆ, ಟ್ರ್ಯಾಕಿಂಗ್ ಮತ್ತು ನಾಶಪಡಿ ಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ, ‘ಡಾಲ್ಟಿನ್ ಹಂಟರ್’ ಎಂದೇ ಪ್ರಸಿದ್ಧ ವಾದ ‘ಐಎನ್‌ಎಸ್ ಅಂಜದೀಪ್ ಯುದ್ಧನೌಕೆ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆ ಗೊಂಡಿದೆ. ಕರ್ನಾಟಕದ ಕಾರವಾರ ಕರಾವಳಿಯಲ್ಲಿರುವ ‘ಅಂಜದೀಪ್’ ದ್ವೀಪದ ಹೆಸರನ್ನು ಇದಕ್ಕಿಟ್ಟಿರುವುದು ವಿಶೇಷ.

- ‘ಆ್ಯಂಟಿ ಸಬ್‌ಮರೈನ್ ವಾರ್‌ಫೇರ್ ಶಾಲೋ ವಾಟರ್ ಕ್ರಾಫ್ಟ್’ (ಎಎಸ್‌ಡಬ್ಲ್ಯು- ಎಸ್‌ಡಬ್ಲ್ಯುಸಿ) ಯೋಜನೆಯಡಿ ನಿರ್ಮಿಸಲಾಗುತ್ತಿರುವ, ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆ ಯೋಜನೆಯಡಿ ಯಲ್ಲಿ ನಿರ್ಮಿಸಲಾಗುತ್ತಿರುವ 8 ಸಮರ ಹಡಗುಗಳ ಪೈಕಿ ಇದು 3ನೆಯದು.
ಅಂಜದೀಪ್ ವಿಶೇಷತೆ: ಕೋಲ್ಕತಾದ ದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಸ್ಥಳೀಯವಾಗಿ ಎಂಜಿನಿಯರ್‌ಗಳು ನಿರ್ಮಿಸಿದ ಈ ನೌಕೆಯನ್ನು ‘ಡಾಲ್ವಿನ್ ಹಂಟರ್’ ರೀತಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ಶತ್ರು ಜಲಾಂತರ್ಗಾಮಿ ನೌಕೆಗಳ ಪತ್ತೆ, ಟ್ರ್ಯಾಕಿಂಗ್ ಮತ್ತು ತಟಸ್ಥಗೊಳಿಸುವಿಕೆಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. 77 ಮೀ.
ಉದ್ದದ ಈ ಹಡಗು ಅತಿ ವೇಗದ ವಾಟರ್-ಜೆಟ್ ಪ್ರೊಪಲ್ಸನ್ ವ್ಯವಸ್ಥೆಯನ್ನು ಹೊಂದಿದ್ದು, ತ್ವರಿತ ಪ್ರತಿಕ್ರಿಯೆ ಮತ್ತು ನಿರಂತರ ಕಾರ್ಯಾಚರಣೆಗಾಗಿ 25 ನಾಟ್‌ಗಳ ಗರಿಷ್ಠ ವೇಗವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ.ಕರಾವಳಿ ಕಣ್ಣಾವಲು, ಕಡಿಮೆ ತೀವ್ರತೆಯ ಸಮುದ್ರಯಾನವನ್ನು ಕೈಗೊಳ್ಳಲು ಸಹ ಸಜ್ಜುಗೊಂಡಿದೆ.
ಕಾರವಾರ ಕರಾವಳಿ ದ್ವೀಪದ ಹೆಸರು
ಈ ಕರ್ನಾಟಕದ ಕಾರವಾರದಿಂದ 10 ಕಿ.ಮೀ. ದೂರದಲ್ಲಿರುವ ‘ಅಂಜ ದೀಪ’ ಎಂಬ ದ್ವೀಪದ ಹೆಸರನ್ನು ಈ ನೌಕೆಗೆ ಇಟ್ಟಿರುವುದು ವಿಶೇಷ. ದ್ವೀಪದಲ್ಲಿ ನೌಕಾದಳ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿತ್ತು. ನೌಕಾ ದಳಕ್ಕೆ ಬಹುದೊಡ್ಡ ಕೊಡುಗೆ ನೀಡಿ ರುವ ಕಾರಣಕ್ಕೆ ನೌಕೆಗೆ ದ್ವೀಪದ ಹೆಸರಿಟ್ಟು ಗೌರವಿಸಲಾಗಿದೆ.
ಡಾಲ್ಟಿನ್ ಹಂಟರ್: ಕರಾವಳಿ ಪ್ರದೇಶಗಳಲ್ಲಿ ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ, ಬೆನ್ನಟ್ಟಿ ನಾಶಪಡಿಸುವ ವಿಶೇಷ ಸಾಮರ್ಥ್ಯ ಹೊಂದಿರುವ ಈ ನೌಕೆಯನ್ನು ‘ಡಾಲ್ವಿನ್ ಹಂಟರ್’ ಎಂದೇ ಕರೆಯಲಾಗುತ್ತದೆ. ಇದರಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಜಲಾಂತರ್ಗಾಮಿ ನಿಗ್ರಹ ಅಸ್ತ್ರಗಳು, ಹಲ್‌ಮೌಂಟೆಡ್ ‘ಅಭಯ್’ ಸೋನಾರ್, ಹಗುರವಾದ ಟಾರ್ಪಿಡೊಗಳು ಮತ್ತು ಎಎಸ್‌ಡಬ್ಲ್ಯು ರಾಕೆಟ್ ಗಳನ್ನು ಅಳವಡಿಸಲಾಗಿದೆ. ಕೋಲ್ಕತದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಆ್ಯಂಡ್ ಇಂಜಿನಿಯರ್ಸ್ ನಿರ್ಮಿಸಿರುವ 77 ಮೀಟರ್ ಉದ್ದದ ಈ ನೌಕೆಯು, ವಾಟರ್‌ಜೆಟ್ ಪ್ರೊಪಲ್ಸನ್ ಸಿಸ್ಟಮ್ ಹೊಂದಿದ್ದು, ಗರಿಷ್ಠ 25 ನಾಟ್‌ಗಳ ವೇಗದಲ್ಲಿ ಚಲಿಸಬಲ್ಲದು. ಯುದ್ಧದ ಜತೆಗೆ ಕರಾವಳಿ ಕಣ್ಣಾವಲು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೂ ಇದು ಸಜ್ಜಾಗಿದೆ.
ಐತಿಹಾಸಿಕ: 2025ರಲ್ಲಿ 12 ಯುದ್ಧನೌಕೆಗಳು ಮತ್ತು ಒಂದು ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರಿಸಲಾಗಿತ್ತು.
2026ರಲ್ಲಿ ಐಎನ್‌ಎಸ್ ಅಂಜದೀಪ್ ಹೊರತಾಗಿ ಇನ್ನೂ 15 ನೌಕೆಗಳನ್ನು ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ.
ಇದು ನಮ್ಮ ಇತಿಹಾಸದಲ್ಲೇ ಅತಿ ವೇಗದ ಸೇರ್ಪಡೆ ಪ್ರಕ್ರಿಯೆ ಎಂದು ಅಡ್ಮಿರಲ್ ದಿನೇಶ್ ತ್ರಿಪಾಠಿ ಹೇಳಿದ್ದಾರೆ.
ಕರ್ನಾಟಕ ಹಿನ್ನೆಲೆ
ಕರ್ನಾಟಕದ ಕಾರವಾರದ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ರುವ ಅಂಜುದೀವ’ ದ್ವೀಪದ ಹೆಸರಿನ ಹಿನ್ನೆಲೆಯಲ್ಲಿ ಈ ನೌಕೆಗೆ ನಾಮಕರಣ ಮಾಡಲಾಗಿದೆ.
1961ರಲ್ಲಿ ಗೋವಾ ವಿಮೋಚನೆಗಾಗಿ ನಡೆದ ‘ಆಪರೇಷನ್ ಚಟ್ಟಿ’ ಕಾರ್ಯಾಚರಣೆಯಲ್ಲಿ ಈ ದ್ವೀಪವು ನಿರ್ಣಾಯಕ ಪಾತ್ರ ವಹಿಸಿತ್ತು. ಇದು 1972 ರಿಂದ 2003ರವರೆಗೆ ಸೇವೆ ಸಲ್ಲಿಸಿದ ಹಿಂದಿನ ಪೆಟ್ಯಾ ಕ್ಲಾಸ್ ನೌಕೆಯ ಯಶಸ್ವಿ ಉತ್ತರಾಧಿಕಾರಿಯಾಗಿದೆ.
ಪತ್ರಿಕೆ-V: ಸಾಮಾನ್ಯ ಅಧ್ಯಯನ-4
ನೈತಿಕ ಪ್ರಕರಣ ಅಧ್ಯಯನ: ₹5.24 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ – ಕಾನೂನು ಜಾರಿ, ಸಾರ್ವಜನಿಕ ಹಿತ ಮತ್ತು ನೈತಿಕ ಸವಾಲುಗಳು
ಹಿನ್ನೆಲೆ:
ನಗರದಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು ₹5.24 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು (ಡ್ರಗ್ಸ್) ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಹಲವು ಆರೋಪಿಗಳನ್ನು ಬಂಧಿಸಲಾಗಿದ್ದು, ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾದಕ ವಸ್ತುಗಳ ಜಾಲವನ್ನು ಬಯಲುಗೊಳಿಸಲಾಗಿದೆ.
ಪೊಲೀಸ್ ಇಲಾಖೆ ಈ ಕಾರ್ಯಾಚರಣೆಯನ್ನು ಕಾನೂನು ಪ್ರಕಾರ ಯಶಸ್ವಿಯಾಗಿ ನಡೆಸಿದರೂ, ಕೆಲವು ಪ್ರಶ್ನೆಗಳು ಉದ್ಭವಿಸಿವೆ:
a) ಆರೋಪಿಗಳ ಹಕ್ಕುಗಳು ಸಮರ್ಪಕವಾಗಿ ಕಾಪಾಡಲ್ಪಟ್ಟಿವೆಯೇ?
b) ಬಂಧನ ಮತ್ತು ಜಪ್ತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಇತ್ತೇ?
c) ಯುವಜನತೆಯ ಮೇಲೆ ಪರಿಣಾಮ ಬೀರುತ್ತಿರುವ ಮಾದಕ ವಸ್ತುಗಳ ನಿಯಂತ್ರಣದಲ್ಲಿ ದೀರ್ಘಕಾಲೀನ ಕ್ರಮಗಳಿವೆಯೇ?
ನೀವು ನಗರದ ಪೊಲೀಸ್ ಆಯುಕ್ತರಾಗಿದ್ದು, ಈ ಪ್ರಕರಣದ ನಿರ್ವಹಣೆಯಲ್ಲಿ ನೈತಿಕ ಮತ್ತು ಕಾನೂನುಬದ್ಧ ಸಮತೋಲನ ಸಾಧಿಸುವ ಜವಾಬ್ದಾರಿಯನ್ನು ಹೊಂದಿದ್ದೀರಿ.
ಪ್ರಮುಖ ನೈತಿಕ ಪ್ರಶ್ನೆಗಳು
1..ಸಾರ್ವಜನಿಕ ಸುರಕ್ಷತೆ vs ವೈಯಕ್ತಿಕ ಹಕ್ಕುಗಳು
2.ಕಠಿಣ ಕಾನೂನು ಜಾರಿ vs ಮಾನವ ಹಕ್ಕುಗಳ ಗೌರವ
3.ತ್ವರಿತ ಕ್ರಮ vs ನ್ಯಾಯಸಮ್ಮತ ತನಿಖೆ
4.ಮಾಧ್ಯಮ ಪ್ರಚಾರ vs ತನಿಖೆಯ ಪಾರದರ್ಶಕತೆ
5.ಅಪರಾಧ ನಿಯಂತ್ರಣ vs ಸಾಮಾಜಿಕ ಪುನರ್ವಸತಿ
ಪಾಲುದಾರರು
ಬಂಧಿತ ಆರೋಪಿಗಳು
ಅವರ ಕುಟುಂಬಗಳು
ನಗರ ಯುವಜನತೆ
ಪೊಲೀಸ್ ಇಲಾಖೆ
ನ್ಯಾಯಾಂಗ ವ್ಯವಸ್ಥೆ
ಸಾರ್ವಜನಿಕರು
ಮಾಧ್ಯಮ
ನಿಮ್ಮ ಮುಂದೆ ಇರುವ ಆಯ್ಕೆಗಳು
ಆಯ್ಕೆ 1:
ಕಠಿಣ ಕಾನೂನು ಕ್ರಮ, ವೇಗದ ತನಿಖೆ ಮತ್ತು ಆರೋಪಿಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ.
ಆಯ್ಕೆ 2:
ತನಿಖೆಯಲ್ಲಿ ಪಾರದರ್ಶಕತೆ ಕಾಪಾಡಿ, ಆರೋಪಿಗಳ ಹಕ್ಕುಗಳನ್ನು ಗೌರವಿಸಿ, ನ್ಯಾಯಾಂಗ ಪ್ರಕ್ರಿಯೆಯನ್ನು ಅನುಸರಿಸುವುದು.
ಆಯ್ಕೆ 3:
ಮಾದಕ ವಸ್ತು ನಿಯಂತ್ರಣದ ಜೊತೆಗೆ ಜಾಗೃತಿ ಅಭಿಯಾನ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ಆರಂಭಿಸುವುದು.
Sources: Prajavani, Vijayavani, Vartha bharathi, Samyukta Karnataka etc.