ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
10 ಕೋಟಿ ದಾಟಿದ ಮೋದಿ ಇನ್ಸ್ಟಾಗ್ರಾಮ್ ಫಾಲೋವರ್ಸ್
ಸಂದರ್ಭ: ಪ್ರಧಾನಿ ನರೇಂದ್ರ ಮೋದಿ ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ಗಳ ಸಂಖ್ಯೆ 10 ಕೋಟಿ ದಾಟಿದೆ. ಈ ಮೂಲಕ ಅವರು ಇಷ್ಟು ದೊಡ್ಡ ಸಂಖ್ಯೆಯ ಫಾಲೋವರ್ಸ್ಗಳನ್ನು ಹೊಂದಿರುವ ವಿಶ್ವದ ಮೊದಲ ನಾಯಕ ಮತ್ತು ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

- 2014ರಲ್ಲಿ ಮೋದಿ ಅವರು ಇನ್‌ಸ್ಟಾಗ್ರಾಮ್ ಖಾತೆ ಆರಂಭಿಸಿದ್ದರು. ಜಾಗತಿಕ ನಾಯಕರಿಗೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ಮೋದಿ ಅವರ ಖಾತೆಯು ಅತಿ ಹೆಚ್ಚು ಬಳಕೆಯಾದ ಡಿಜಿಟಲ್ ವೇದಿಕೆಯಾಗಿದೆ. ವಿಶ್ವದ ಐವರು ಪ್ರಭಾವಿ ನಾಯಕರ ಫಾಲೋವರ್ಸ್‌ಗಿಂತಲೂ ಮೋದಿ ಅವರ ಫಾಲೋವರ್ಸ್ ಹೆಚ್ಚಿದ್ದಾರೆ.
- ಎರಡನೇ ಸ್ಥಾನದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಮಾಧ್ಯಮ ವೇದಿಕೆಗಿಂತಲೂ (4.32 ಕೋಟಿ ಫಾಲೋವರ್ಸ್) ಮೋದಿ ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ಗಳ ಸಂಖ್ಯೆ ಎರಡುಪಟ್ಟು.
- ಮಕರ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೋ (1.50 ಕೋಟಿ), ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ ಲೂಲಾ ಡಾ ಸಿಲ್ವಾ (1.44 ಕೋಟಿ), ಟರ್ಕಿಯ ಅಧ್ಯಕ್ಷ ರಜಬ್ ತಯ್ಯಬ್ ಇರ್ದುಗನ್ (1.16 ಕೋಟಿ) ಮತ್ತು ಅರ್ಜೆಂಟಿನಾ ಅಧ್ಯಕ್ಷ ಜೀವಿಯರ್ ಮಾಯಿಲಿ ಅವರು 64 ಲಕ್ಷ ಫಾಲೋವ ರ್ಸ್‌ಗಳನ್ನು ಹೊಂದಿದ್ದಾರೆ.
- ಭಾರತದಲ್ಲಿ ಮೋದಿ ಅವರ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರು ಸುಮಾರು 1.61 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಆನಂತರದ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರಿಗೆ ಅಂದಾಜು 1.20 ಕೋಟಿ ಪಾಲೋವರ್ಸ್‌ಗಳಿದ್ದಾರೆ.
ಡಿಜಿಟಲ್ ಕರೆನ್ಸಿ ಮೂಲಕ ಆಹಾರ ಸಬ್ಸಿಡಿ: ಪುದುಚೇರಿಯಲ್ಲಿ ಚಾಲನೆ
- ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಆಧಾರಿತ ಆಹಾರ ಸಬ್ಸಿಡಿ ವಿತರಣಾ ಯೋಜನೆಗೆ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ನೀಡಿದರು. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಆಹಾರ ಸಬ್ಸಿಡಿ ವಿತರಣೆಯಲ್ಲಿ ಈ ಯೋಜನೆ ಪಾರದರ್ಶಕವಾಗಿದೆ. ಇದು ಡಿಜಿಟಲ್ ರೂಪಾಂತರದ ಮುಂದಿನ ಹಂತವಾಗಿದೆ.
- ಸರ್ಕಾರ ನೀಡುವ ಆಹಾರ ಮತ್ತು ಸೌಲಭ್ಯಗಳು ಯಾವುದೇ ಸೋರಿಕೆ ಅಥವಾ ಭ್ರಷ್ಟಾಚಾರವಿಲ್ಲದೆ ನೇರವಾಗಿ ಅರ್ಹ ಫಲಾನುಭವಿಗಳನ್ನು ತಲುಪಬೇಕು ಎಂಬುದು ಪ್ರಮುಖ ಆಶಯವಾಗಿದೆ.
ಯೋಜನೆಯ ಪ್ರಮುಖ ಅಂಶಗಳು
- ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳಿಗೆ ನೇರವಾಗಿ ಸುರಕ್ಷಿತ ಡಿಜಿಟಲ್ ನಗದು ಒದಗಿಸುವ ಮೂಲಕ ಡಿಬಿಟಿ ವ್ಯವಸ್ಥೆ ಮೇಲ್ದರ್ಜೆಗೆ
- ಆರ್‌ಬಿಐ ಹೊರತಂದಿರುವ ಡಿಜಿಟಲ್ ರೂಪಾಯಿಯನ್ನು ಡಿಬಿಟಿ ವ್ಯವಸ್ಥೆಯೊಂದಿಗೆ ಸಂಯೋಜಿಸಿ, ಸಬ್ಸಿಡಿ ಹಣ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಜನರನ್ನು ತಲುಪಲಿದೆ.
- ಜನರ ಪೌಷ್ಟಿಕಾಂಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಆದ್ಯತೆ ನೀಡಿದ್ದು, ಫಲಾನುಭವಿಗಳಿಗೆ ಸಿರಿಧಾನ್ಯಗಳನ್ನು ಪೂರೈಸಲಾಗುತ್ತಿದೆ.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
‘ಆಶಾಕಿರಣ’ ಯೋಜನೆಯಡಿ ರಾಜ್ಯದಲ್ಲಿ 1.40 ಕೋಟಿ ಜನರಿಗೆ ನೇತ್ರ ತಪಾಸಣೆ
ಸಂದರ್ಭ: ರಾಜ್ಯದಲ್ಲಿ ‘ಆಶಾಕಿರಣ’ ಯೋಜನೆಯಡಿ 1.40 ಕೋಟಿ ಮಂದಿಗೆ ಕಣ್ಣಿನ ತಪಾಸಣೆ ನಡೆಸಲಾಗಿದ್ದು, 24.50 ಲಕ್ಷ ಜನರಲ್ಲಿ ನೇತ್ರ ಸಮಸ್ಯೆ ದೃಢಪಟ್ಟಿದೆ.
- 2022ರಲ್ಲಿ ಪ್ರಾರಂಭ: ಡಿಜಿಟಲ್ ಸಾಧನಗಳ ಅತಿಯಾದ ಬಳಕೆ, ವಾಯು ಮಾಲಿನ್ಯ ಸೇರಿ ವಿವಿಧ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿದೋಷ ಸಮಸ್ಯೆಗೆ ಒಳಪಡುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ. ಚಿಕಿತ್ಸೆ ವಿಳಂಬವಾದಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದು, ದೃಷ್ಟಿ ನಷ್ಟವಾಗುವ ಸಾಧ್ಯತೆಯಿರುತ್ತದೆ. ಅದ್ದರಿಂದ ಆರಂಭಿಕ ಹಂತದಲ್ಲಿಯೇ ನೇತ್ರ ಸಮಸ್ಯೆ ಪತ್ತೆ ಮಾಡಿ, ಚಿಕಿತ್ಸೆ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣ ಕಾರ್ಯಕ್ರಮದಡಿ ಈ ಯೋಜನೆಯನ್ನು 2022ರಲ್ಲಿ ಪ್ರಾರಂಭಿಸಲಾಗಿತ್ತು.
- ಮೊದಲೆರಡು ಹಂತದಲ್ಲಿ ಆಯ್ದ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ನೇತ್ರ ತಪಾಸಣೆ ನಡೆಸಿ ಸಮಸ್ಯೆ ಪತ್ತೆ ಮಾಡಿದ್ದರು. ಈಗ ರಾಜ್ಯದಾದ್ಯಂತ ‘ಆಶಾಕಿರಣ ದೃಷ್ಟಿ ಕೇಂದ್ರ’ಗಳಲ್ಲಿಯೂ ತಪಾಸಣೆ ನಡೆಸಲಾಗುತ್ತಿದೆ.
- ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಯೋಜನೆ ಜಾರಿಗೆ ತರಲಾಗಿತ್ತು.
- ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ವಿಸ್ತರಿಸಿ, ನೇತ್ರ ತಪಾಸಣೆ ಮಾಡಲಾಗಿತ್ತು.
- 2025ರ ಜುಲೈನಲ್ಲಿ ಈ ಯೋಜನೆಯನ್ನು ಮರುವಿನ್ಯಾಸ ಮಾಡಿ, ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 393 ‘ಆಶಾಕಿರಣ ದೃಷ್ಟಿ ಕೇಂದ್ರ’ಗಳನ್ನು ಸ್ಥಾಪಿಸಲಾಗಿದೆ.
- ಶಸ್ತ್ರಚಿಕಿತ್ಸೆ: ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗುತ್ತಿದೆ. ಕಣ್ಣಿನ ಪೊರೆ ಸಮಸ್ಯೆ ದೃಢಪಟ್ಟಲ್ಲಿ ಉನ್ನತ ಆರೋಗ್ಯ ಕೇಂದ್ರಗಳಿಗೆ ಶಿಫಾರಸು ಮಾಡ ಲಾಗುತ್ತಿದ್ದು, ಅಲ್ಲಿ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ.
- ಯೋಜನೆಯಡಿ ಈ ವರ್ಷ ಜನವರಿ ಅಂತ್ಯಕ್ಕೆ 4.19 ಲಕ್ಷ ಜನರಿಗೆ ಯಶಸ್ವಿ ಯಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆ ಗಳಲ್ಲಿ 58,582 ಮಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿದರೆ, ಉಳಿದವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
- ‘ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ ನೇತ್ರ ತಪಾಸಣೆ ನಡೆಸಿ, ಸಮಸ್ಯೆಯನ್ನು ಪತ್ತೆ ಮಾಡಲಾಗುತ್ತಿದೆ. ಸಮಸ್ಯೆ ಇರುವವರಿಗೆ ಚಿಕಿತ್ಸೆ ಜತೆಗೆ ಕನ್ನಡಕ ವಿತರಣೆಗೆ ಕ್ರಮವಹಿಸಲಾಗಿದೆ. ಆಸ್ಪತ್ರೆ ಗಳಲ್ಲಿ ಶಾಶ್ವತ ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಿರುವುದರಿಂದ, ಸಾರ್ವಜನಿಕರು ಹತ್ತಿರದ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ’.
ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆ ಅನುಷ್ಠಾನಕ್ಕೆ ಸಂಪುಟ ಅಸ್ತು
- 2026-27ನೇ ಸಾಲಿನಿಂದ ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕಂಪ್ಲಿಟ್ ರಿಸ್ಕ್ ಟ್ರಾನ್ಸ್‌ಫರ್ ಮೆಕಾನಿಸಂ(ಸಿಆರ್ ಟಿಎಂ) ಮಾದರಿಯಲ್ಲಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
- ಈ ಮೂಲಕ ಬೆಳೆ ಹಾನಿಯಿಂದ ಉಂಟಾಗುವ ಆರ್ಥಿಕ ಆಘಾತವನ್ನು ರೈತರಿಂದ ವಿಮಾ ಕಂಪನಿಗಳಿಗೆ ಸಂಪೂರ್ಣವಾಗಿ ವರ್ಗಾಯಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.
1) ಯೋಜನೆಯ ಉದ್ದೇಶಗಳು
ಪ್ರಕೃತಿ ವಿಪತ್ತು, ಅತಿವೃಷ್ಠಿ/ಬರ, ಗಾಳಿ-ಮಳೆ, ಕೀಟ-ರೋಗಗಳಿಂದ ಉಂಟಾಗುವ ಬೆಳೆ ಹಾನಿಗೆ ಆರ್ಥಿಕ ರಕ್ಷಣೆ
ರೈತರ ಆದಾಯ ಸ್ಥಿರತೆ ಮತ್ತು ಕೃಷಿಯಲ್ಲಿ ವಿಶ್ವಾಸ ವೃದ್ಧಿ
ಸಾಲದ ಅವಲಂಬನೆ ಕಡಿಮೆ ಮಾಡಿ ಕೃಷಿ ಹೂಡಿಕೆ ಪ್ರೋತ್ಸಾಹ
ತ್ವರಿತ ಪರಿಹಾರದಿಂದ ಸಾಮಾಜಿಕ ಭದ್ರತೆ
2) CRTM (Complete Risk Transfer Mechanism) ಎಂದರೇನು?
ಸರ್ಕಾರದ ಪಾಲಿನ ಪ್ರೀಮಿಯಂ ನೀಡಿದ ನಂತರ ಹಾನಿ ಪರಿಹಾರದ ಸಂಪೂರ್ಣ ಅಪಾಯವನ್ನು ವಿಮಾ ಕಂಪನಿ ಹೊರುತ್ತದೆ
ರಾಜ್ಯಕ್ಕೆ ಅನಿರೀಕ್ಷಿತ ಹೆಚ್ಚಿನ ಹಾನಿ ಸಂದರ್ಭಗಳಲ್ಲಿ ಹಣಕಾಸು ಒತ್ತಡ ಕಡಿಮೆ
ಕ್ಲೇಮ್‌ಗಳ ಲೆಕ್ಕಾಚಾರ, ಪಾವತಿ ಪ್ರಕ್ರಿಯೆಗಳಿಗೆ ಸ್ಪಷ್ಟ ಜವಾಬ್ದಾರಿ ಮತ್ತು ಸಮಯಬದ್ಧತೆ
3) ವ್ಯಾಪ್ತಿ ಮತ್ತು ಅರ್ಹತೆ
ಸಣ್ಣ, ಅತಿಸಣ್ಣ, ದೊಡ್ಡ ರೈತರು – ಎಲ್ಲ ವರ್ಗಗಳಿಗೂ ಅನ್ವಯ
ಸಾಲ ಪಡೆದ ರೈತರು (loanee) ಮತ್ತು ಸ್ವಯಂ ಸೇರ್ಪಡೆಗೊಂಡ ರೈತರು (non-loanee)
ಆಹಾರ ಧಾನ್ಯ, ಪಲ್ಸ್, ತೈಲಬೀಜ, ವಾಣಿಜ್ಯ ಬೆಳೆಗಳು – ಅಧಿಸೂಚಿತ ಬೆಳೆಗಳು
ಹಾನಿ ಕಾರಣಗಳು: ಬರ/ಅತಿವೃಷ್ಠಿ, ಚಂಡಮಾರುತ, ಪ್ರವಾಹ, ಕೀಟ-ರೋಗ, ಕೊಯ್ಲಿನ ನಂತರದ ಹಾನಿ
4) ಪ್ರೀಮಿಯಂ ಹಂಚಿಕೆ (ಸಾಮಾನ್ಯ ಮಾರ್ಗಸೂಚಿ)
ರೈತರ ಪಾಲು: ಕಡಿಮೆ ಶೇಕಡಾವಾರು (ಉದಾ., ಖರೀಫ್ – 2%, ರಬಿ – 1.5%, ವಾಣಿಜ್ಯ ಬೆಳೆ – 5%)*
ಉಳಿದ ಪ್ರೀಮಿಯಂ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಂಚಿಕೆ
(*ಅಂತಿಮ ದರಗಳನ್ನು ಅಧಿಸೂಚನೆಯಂತೆ ನಿಗದಿಪಡಿಸಲಾಗುತ್ತದೆ)
5) ಪರಿಹಾರ ಲೆಕ್ಕಾಚಾರ ಮತ್ತು ಪಾವತಿ
ಎರಿಯಾ ಅಪ್ರೋಚ್ ಆಧಾರಿತ ಬೆಳೆ ಉತ್ಪಾದನೆ ಅಂದಾಜು
ಕ್ರಾಪ್ ಕಟಿಂಗ್ ಎಕ್ಸ್‌ಪೆರಿಮೆಂಟ್‌ಗಳು (CCE), ಉಪಗ್ರಹ/ಡ್ರೋನ್ ಡೇಟಾ ಬಳಕೆ
ಹಾನಿ ದೃಢಪಟ್ಟ ಬಳಿಕ DBT ಮೂಲಕ ನೇರವಾಗಿ ರೈತರ ಖಾತೆಗೆ ಪಾವತಿ
ನಿಗದಿತ ಕಾಲಾವಧಿಯೊಳಗೆ ಕ್ಲೇಮ್ ಪರಿಹಾರ
ಗಮನಿಸಿ: ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನದ ಪ್ರಚಲಿತ ವಿದ್ಯಮಾನಗಳನ್ನು ಮುಖ್ಯ ಪರೀಕ್ಷೆಯ ಆಯಾ ವಿಷಯಗಳೊಂದಿಗೆ ಕೆಳಗೆ ಸಂಯೋಜಿಸಲಾಗಿದೆ.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1:
“ಬಹುಧ್ರುವೀಯ ಜಾಗತಿಕ ವ್ಯವಸ್ಥೆಯಲ್ಲಿ ಭಾರತದ ಬಹು-ಸಂಯೋಜನಾ (Multi-alignment) ತಂತ್ರವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.”
ಪ್ರಬಂಧ-2:
“ಭಾರತದ ನವೀಕರಿಸಬಹುದಾದ ಇಂಧನ ಮಿಷನ್‌ಗೆ ಕರ್ನಾಟಕದ ಕೊಡುಗೆಯನ್ನು, ವಿಶೇಷವಾಗಿ ಸೌರ ಮತ್ತು ಗಾಳಿ ವಿದ್ಯುತ್ ಯೋಜನೆಗಳ ದೃಷ್ಟಿಯಿಂದ ಮೌಲ್ಯಮಾಪನ ಮಾಡಿ.”
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಜಿಡಿಪಿ ಬೆಳವಣಿಗೆ ಶೇ 7.2ರಷ್ಟು ನಿರೀಕ್ಷೆ
ಸಂದರ್ಭ: ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.8ರಿಂದ ಶೇ 7.2ರ ನಡುವೆ ಇರಬಹುದು ಎಂದು ‘ಇ.ವೈ ಎಕಾನಮಿ ವಾಚ್’ ವರದಿ ತಿಳಿಸಿದೆ.
- 2047ರ ವೇಳೆಗೆ ವಿಕಸಿತ ಭಾರತ ಗುರಿ ಸಾಧಿಸಲು, ತೆರಿಗೆ ಸುಧಾರಣೆಗಳ ಮೂಲಕ ದೇಶವು ತನ್ನ ತೆರಿಗೆ ಜಿಡಿಪಿ ಅನುಪಾತವನ್ನು ಹೆಚ್ಚಿಸಬೇಕಿದೆ ಎಂದು ತಿಳಿಸಿದೆ.
- ಪ್ರಮುಖ ದೇಶಗಳೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಕಾರಣದಿಂದಾಗಿ ದೇಶದ ಮಧ್ಯಮ ಅವಧಿಯ ಆರ್ಥಿಕ ಸ್ಥಿತಿಯು ಉಜ್ವಲವಾಗಿರುವಂತೆ ಕಾಣುತ್ತಿದೆ.
- 2026-27ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 6.8ರಿಂದ ಶೇ 7.2ರ ನಡುವೆ ಇರುವ ಅಂದಾಜಿದೆ ಎಂದು ಇ.ವೈ ಇಂಡಿಯಾದ ಮುಖ್ಯ ನೀತಿ ಸಲಹೆಗಾರ ತಿಳಿಸಿದ್ದಾರೆ.
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಭಾರತ–ಇಸ್ರೇಲ್ ಸಂಬಂಧ
ಸಂದರ್ಭ: ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯವು ಕಳೆದ ಕೆಲವು ದಶಕಗಳಲ್ಲಿ ಬಹಳ ಗಟ್ಟಿಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ “ವಿಶೇಷ ತಂತ್ರಜ್ಞಾನದ ಸಹಭಾಗಿತ್ವ” (Special Strategic Partnership) ಮಟ್ಟಕ್ಕೆ ಏರಿದೆ.
ಇತಿಹಾಸಿಕ ಹಿನ್ನೆಲೆ

Image Credits: Samyukta Karnataka
ಪ್ರಮುಖ ಕ್ಷೇತ್ರಗಳು
ರಕ್ಷಣಾ ಸಹಕಾರ: ಡ್ರೋನ್‌ಗಳು, ಕ್ಷಿಪಣಿ ವ್ಯವಸ್ಥೆಗಳು, ಸೈಬರ್ ಸೆಕ್ಯೂರಿಟಿ.
ಕೃಷಿ ಮತ್ತು ನೀರಿನ ನಿರ್ವಹಣೆ: ಇಸ್ರೇಲ್‌ನ ತಂತ್ರಜ್ಞಾನವನ್ನು ಭಾರತದಲ್ಲಿ “ಕೃಷಿ ಕೇಂದ್ರಗಳು” ಮೂಲಕ ಬಳಸಲಾಗುತ್ತಿದೆ.
ವ್ಯಾಪಾರ ಮತ್ತು ಹೂಡಿಕೆ: 2026ರಲ್ಲಿ ಉಚಿತ ವ್ಯಾಪಾರ ಒಪ್ಪಂದ (FTA) ಕುರಿತು ಮಾತುಕತೆಗಳು ನಡೆಯುತ್ತಿವೆ.
ಶಿಕ್ಷಣ ಮತ್ತು ಸಂಶೋಧನೆ: ವಿದ್ಯಾರ್ಥಿ ವಿನಿಮಯ, ಸಂಯುಕ್ತ ಸಂಶೋಧನಾ ಯೋಜನೆಗಳು.
ಹೊಸ ಒಕ್ಕೂಟಗಳು: I2U2 (India, Israel, UAE, USA) ಮೂಲಕ ತಂತ್ರಜ್ಞಾನ ಮತ್ತು ಆರ್ಥಿಕ ಸಹಕಾರ.
ಇತ್ತೀಚಿನ ಬೆಳವಣಿಗೆಗಳು (2026)
ಪ್ರಧಾನಿ ಮೋದಿ ಅವರ ಇಸ್ರೇಲ್ ಪ್ರವಾಸದಲ್ಲಿ ಹಲವು MoUಗಳು ಮತ್ತು ಒಪ್ಪಂದಗಳು ಸಹಿ.
ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯೂರಿಟಿ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳು.
ಉಚಿತ ವ್ಯಾಪಾರ ಒಪ್ಪಂದ (FTA) ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆ.
ಡಿಪಿಡಿಪಿ ಕಾಯ್ದೆ ಆರ್‌ಟಿಐ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

Content Credits/Source: Vartha Bharathi
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ಗ್ರಾಮಾಂತರ ಪ್ರದೇಶಗಳಲ್ಲಿ ವೈ-ಫೈ ಯೋಜನೆಗೆ ಚಾಲನೆ (Rural Wi-Fi Project)
ಸಂದರ್ಭ: ರಾಜ್ಯದ ಕೆಲವು ದುರ್ಗಮ ಪ್ರದೇಶಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸುವ ಉದ್ದೇಶದ ಯೋಜನೆಗೆ ಚಾಲನೆ.
- ಇದರ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಯಾಣ ಹಾಗೂ ಸಹಸ್ರಲಿಂಗದಲ್ಲಿ ಸಾರ್ವಜನಿಕ ವೈ-ಫೈ ಸೌಲಭ್ಯ ಆರಂಭಿಸಲಾಗಿದೆ ಎಂದು ಜಿಎನ್ಎ ಇಂಡಿಯಾ ಕಂಪನಿಯ ಸಿಇಒ ತಿಳಿಸಿದ್ದಾರೆ. ಈ ಕಂಪನಿಯು ಯೋಜನೆಯ ಅಡಿಯಲ್ಲಿ ವೈ-ಫೈ ಕೇಂದ್ರಗಳನ್ನು ಆರಂಭಿಸುತ್ತಿದೆ.
- ‘ಆರಂಭಿಕ ಹೆಜ್ಜೆಯಾಗಿ ನಾವು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಯಾಣ ಹಾಗೂ ಸಹಸ್ರಲಿಂಗದಲ್ಲಿ ಈ ಸೌಲಭ್ಯ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯದ ಇನ್ನಷ್ಟು ಸ್ಥಳಗಳಿಗೆ ವಿಸ್ತರಿಸ ಲಿದ್ದೇವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ, ಇಂಟರ್ನೆಟ್ ಇನ್ನೂ ತಲುಪಿಲ್ಲದ ಸ್ಥಳಗಳನ್ನು ಗುರುತಿಸಿ ಅಲ್ಲಿ ವೈ-ಫೈ ಸೌಲಭ್ಯ ಆರಂಭಿಸಲಾಗುವುದು’.
- ವೈ-ಫೈ ಸೌಲಭ್ಯ ಕಲ್ಪಿಸಲು ಜಿಎನ್ಎ ಕಂಪನಿಯು ಬಿಎಸ್‌ಎನ್‌ಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.
- ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಗಳಲ್ಲಿ ಇಂಟರ್ನೆಟ್ ಸೌಲಭ್ಯ ಇಲ್ಲವೆಂದಾದರೆ ಅಲ್ಲಿ ಯುಪಿಐ ಪಾವತಿಯಿಂದ ಆರಂಭಿಸಿ ಇಂಟರ್ನೆಟ್ ಆಧಾರಿಸಿದ ಯಾವ ಅನುಕೂಲಗಳೂ ಲಭ್ಯವಾಗುವುದಿಲ್ಲ. ಹೀಗಾಗಿ ಈ ಯೋಜನೆ ಆರಂಭಿಸಲಾಗಿದೆ.
- ‘ನಮ್ಮ ಭಾಗದ ಗ್ರಾಮಾಂತರ ಪ್ರದೇಶ ಗಳನ್ನು ಈ ಯೋಜನೆಯು ಇಂಟರ್ನೆಟ್ ಜಾಲದ ಜೊತೆ ಬೆಸೆಯುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಈ ಸೌಲಭ್ಯ ಸಿಗುವ ಪರಿಣಾಮವಾಗಿ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸಾಧ್ಯ ವಾಗುತ್ತದೆ.
ಗಡಿಗೆ ಮಾನವರ ಬದಲಿಗೆ ಎಐ ಕಾವಲು: ಗಡಿ ನಿರ್ವಹಣಾ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ
ಸಂದರ್ಭ: ಗಡಿ ನಿರ್ವಹಣಾ ವ್ಯವಸ್ಥೆ ಯಲ್ಲಿ ಕ್ರಾಂತಿ ಸೃಷ್ಟಿಸುವ ಉದ್ದೇಶ ಹೊಂದಿರುವ ಗಡಿಭದ್ರತಾ ಪಡೆ (ಬಿಎಸ್‌ಎಫ್)ಯು ಇದೀಗ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಗಡಿ ವೀಕ್ಷಣೆ ಹಾಗೂ ನಿಗಾವಣೆ ವ್ಯವಸ್ಥೆ ( ಸ್ಮಾರ್ಟ್ ಬಾರ್ಡರ್ ಆಟ್ಸರ್‌ವೇಶನ್ ಆಂಡ್ ಮಾನಿಟರಿಂಗ್ ಸಿಸ್ಟಮ್) ಯನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಗಡಿ ಯುದ್ದಕ್ಕೂ ಇರುವ ಮೂಲ ಸೌಕರ್ಯಗಳ ಜೊತೆ ಸಂಯೋಜಿಸುವ ಗುರಿಯನ್ನು ಹೊಂದಿದೆ.
- ಮಾನವ ಕೇಂದ್ರೀತ ಗಡಿಕಣ್ಣಾವಲು ವ್ಯವಸ್ಥೆಯ ಮೇಲಿನ ಅವ ಲಂಬನೆಯನ್ನು ಕಡಿಮೆಗೊಳಿಸು ವುದರ ಜೊತೆಗೆ ಸ್ವಯಂಚಾಲಿತ ಹಾಗೂ ತಕ್ಷಣದ ಬೇಹುಗಾರಿಕಾ ಮಾಹಿತಿಯನ್ನು ಒದಗಿಸುವ ಮೂಲಕ ಗಡಿಗಳನ್ನು ಸುಭದ್ರವಾಗಿಡುವ ಉದ್ದೇಶವನ್ನು ಹೊಂದಿದೆ.
- ಗಡಿಗಳ ಸುರಕ್ಷತೆಗಾಗಿ ಮುಂದಿನ ತಲೆಮಾ ರಿನ ಕಣ್ಣಾವಲು ವ್ಯವಸ್ಥೆಯ ನೀಲನಕಾಶೆಯನ್ನು 2025ರ ಡಿಸೆಂಬರ್‌ನಲ್ಲಿ ಅಂತಿಮಗೊಳಿಸಲಾ ಗಿತ್ತು. ಏಕೀಕೃತ ಎಐ ಪ್ಲಾಟ್ ಫಾರಂ ಅನ್ನು ನಿಯೋಜಿಸುವುದೇ ಬಿಎಸ್‌ಎಫ್‌ನ ಉದ್ದೇಶವಾಗಿದೆ.
- ಗಡಿಗಳಲ್ಲಿ ಒಳನುಸುಳುವಿಕೆ ಪತ್ತೆಹಚ್ಚುವಿಕೆ, ಸಂಚಾರ ವೀಕ್ಷಣೆ ಹಾಗೂ ಏಕ ಹಾಗೂ ಸಮಗ್ರ ವ್ಯವಸ್ಥೆಯೊಂದಿಗೆ ಇತರ ಸೆನ್ಸರ್ ದತ್ತಾಂಶಗಳ ಪರಿಷ್ಕರಣೆಯನ್ನು ಈ ವ್ಯವಸ್ಥೆಯು ಒದಗಿಸಲಿದೆ. ಈಗ ಅಳವಡಿಸಲಾಗಿರುವ ಅಥವಾ ನೂತನ ಸಿಸಿಟಿವಿ ಕ್ಯಾಮರಾಗಳಿಂದ ನೇರವಾಗಿ ವೀಡಿಯೊಗಳ ಪ್ರಸಾರ ಕೂಡಾ ಈ ವ್ಯವಸ್ಥೆಯಡಿ ಲಭ್ಯವಿದೆ.
ಪತ್ರಿಕೆ-V: ಸಾಮಾನ್ಯ ಅಧ್ಯಯನ-4
ನೈತಿಕ ಪ್ರಕರಣ ಅಧ್ಯಯನ – ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಿಂಡು ಮತ್ತು ಮಾನವ–ವೈಲ್ಡ್‌ಲೈಫ್ ಸಂಘರ್ಷ
ಹಿನ್ನಲೆ:
ಚಿಕ್ಕಮಗಳೂರು ಜಿಲ್ಲೆಯ ಬೆಟ್ಟ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಗ್ರಾಮಗಳಿಗೆ ನುಗ್ಗಿ ಬೆಳೆ ಹಾನಿ ಮತ್ತು ಜನರಲ್ಲಿ ಆತಂಕ ಉಂಟುಮಾಡಿದೆ. ಇತ್ತೀಚಿನ ಘಟನೆಯಲ್ಲಿ ಸುಮಾರು 30–35 ಕಾಡಾನೆಗಳು ಕೃಷಿಭೂಮಿಗೆ ನುಗ್ಗಿ ಕಾಫಿ, ಮಕ್ಕೆಜೋಳ ಮತ್ತು ಇತರ ಬೆಳೆಗಳಿಗೆ ಹಾನಿ ಮಾಡಿವೆ. ಸ್ಥಳೀಯ ರೈತರು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದು, ಸರ್ಕಾರದಿಂದ ತಕ್ಷಣದ ಪರಿಹಾರ ಮತ್ತು ಕಾಡಾನೆಗಳನ್ನು ಕಾಡಿಗೆ ಹಿಂತಿರುಗಿಸುವ ಕ್ರಮಗಳನ್ನು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ಕಾಡಾನೆಗಳನ್ನು ತಳ್ಳಿಹಾಕಲು ಕಾರ್ಯಾಚರಣೆ ನಡೆಸುತ್ತಿದ್ದರೂ, ಕೆಲವು ಸಂಘಟನೆಗಳು ಪ್ರಾಣಿಹಕ್ಕುಗಳ ದೃಷ್ಟಿಯಿಂದ ಕಾಡಾನೆಗಳನ್ನು ಹಿಡಿಯುವುದು ಅಥವಾ ಸ್ಥಳಾಂತರಿಸುವುದು ಸೂಕ್ತವಲ್ಲ ಎಂದು ವಾದಿಸುತ್ತಿವೆ. ಪರಿಸರ ಸಂರಕ್ಷಣೆ, ಮಾನವ ಸುರಕ್ಷತೆ ಮತ್ತು ರೈತರ ಜೀವನೋಪಾಯ – ಇವುಗಳ ನಡುವೆ ಸಮತೋಲನ ಸಾಧಿಸುವುದು ದೊಡ್ಡ ಸವಾಲಾಗಿದೆ.
ನೀವು ಜಿಲ್ಲೆಯ ಉಪ ಆಯುಕ್ತ (Assistant District Collector) ಆಗಿದ್ದು, ಈ ಸಮಸ್ಯೆಗೆ ತಕ್ಷಣ ಮತ್ತು ದೀರ್ಘಕಾಲೀನ ಪರಿಹಾರ ಕಂಡುಹಿಡಿಯುವ ಜವಾಬ್ದಾರಿಯನ್ನು ಹೊಂದಿದ್ದೀರಿ.
ಪ್ರಮುಖ ನೈತಿಕ ಪ್ರಶ್ನೆಗಳು
1.ಮಾನವ ಸುರಕ್ಷತೆ vs ವನ್ಯಜೀವಿ ಸಂರಕ್ಷಣೆ
2.ರೈತರ ಜೀವನೋಪಾಯ vs ಪರಿಸರ ಸಮತೋಲನ
3.ತಕ್ಷಣದ ಪರಿಹಾರ vs ದೀರ್ಘಕಾಲೀನ ಶಾಶ್ವತ ಕ್ರಮಗಳು
4.ಭಾವನಾತ್ಮಕ ಒತ್ತಡ vs ವೈಜ್ಞಾನಿಕ ನಿರ್ಧಾರಗಳು
5.ಸಾರ್ವಜನಿಕ ಒತ್ತಡ vs ಕಾನೂನುಬದ್ಧ ಅರಣ್ಯ ನಿಯಮಗಳು
ಪಾಲುದಾರರು (Stakeholders)
- ಸ್ಥಳೀಯ ರೈತರು ಮತ್ತು ಗ್ರಾಮಸ್ಥರು
- ಅರಣ್ಯ ಇಲಾಖೆ
- ವನ್ಯಜೀವಿ ತಜ್ಞರು
- ಪ್ರಾಣಿಹಕ್ಕು ಸಂಘಟನೆಗಳು
- ಜಿಲ್ಲಾ ಆಡಳಿತ
- ರಾಜ್ಯ ಸರ್ಕಾರ
ನಿಮ್ಮ ಮುಂದಿರುವ ಆಯ್ಕೆಗಳು
ಆಯ್ಕೆ 1:
ಕಾಡಾನೆಗಳನ್ನು ತಕ್ಷಣ ಹಿಡಿದು ಸ್ಥಳಾಂತರಿಸುವುದು.
ಆಯ್ಕೆ 2:
ತಾತ್ಕಾಲಿಕವಾಗಿ ಗ್ರಾಮಗಳ ಸುತ್ತ ಕಾವಲು ಬಲಪಡಿಸಿ, ಪರಿಹಾರ ಮೊತ್ತ ನೀಡುವುದು.
ಆಯ್ಕೆ 3:
ಮಾನವ–ವೈಲ್ಡ್‌ಲೈಫ್ ಸಂಘರ್ಷ ಕಡಿಮೆ ಮಾಡಲು ದೀರ್ಘಕಾಲೀನ ಯೋಜನೆ ರೂಪಿಸುವುದು (ಎಲಿಫೆಂಟ್ ಕಾರಿಡಾರ್, ಸೌರ ಬೇಲಿ, ತ್ವರಿತ ಪರಿಹಾರ ವ್ಯವಸ್ಥೆ).
Sources: Prajavani, Vijayavani, Samyukta Karntaka, Vishwavani