Fri. Apr 10th, 2026

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಭಾರತದ ಬೆಳವಣಿಗೆ ಹೆಚ್ಚಳ
ಸಂದರ್ಭ:
ಏಪ್ರಿಲ್ 1ರಿಂದ ಆರಂಭವಾಗಿರುವ ಪ್ರಸಕ್ತ ಆರ್ಥಿಕ ವರ್ಷದಲ್ಲಿ (2026-27) ಭಾರತದ ಜಿಡಿಪಿ ಬೆಳವಣಿಗೆ ದರವು ಶೇ 6.6ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜು ಮಾಡಿದೆ.

  • ಜನವರಿಯಲ್ಲಿ ಒಂದು ಅಂದಾಜನ್ನು ಬಿಡುಗಡೆ ಮಾಡಿದ್ದ ವಿಶ್ವ ಬ್ಯಾಂಕ್, 2026-27ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 6.5ರಷ್ಟು ಆಗಬಹುದು ಎಂದು ಹೇಳಿತ್ತು. ಆದರೆ ಈಗಿನ ಅಂದಾಜು ಅದಕ್ಕಿಂತ ಹೆಚ್ಚು.

ಫೈನಲ್ ಗೆದ್ದ ಮೀನಾಕ್ಷಿ, ಪ್ರೀತಿ, ಪ್ರಿಯಾ, ಅರುಂಧತಿ: ಬಾಕ್ಸಿಂಗ್: ಒಂದೇ ದಿನ ನಾಲ್ಕು ಚಿನ್ನ
ಸಂದರ್ಭ: ಹಾಲಿ ವಿಶ್ವ ಚಾಂಪಿಯನ್ ಮೀನಾಕ್ಷಿ ಹೂಡಾ, ಪ್ರೀತಿ ಪವಾರ್ ಸೇರಿದಂತೆ ಭಾರತದ ನಾಲ್ವರು ಮಹಿಳೆಯರು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

  • ಮೀನಾಕ್ಷಿ (48 ಕೆ.ಜಿ.) ಮತ್ತು ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ (54 ಕೆ.ಜಿ) ಜೊತೆಗೆ ಪ್ರಿಯಾ ಘಂಗಾಸ್ (60 ಕೆ.ಜಿ.) ಮತ್ತು ವಿಶ್ವ ಬಾಕ್ಸಿಂಗ್ ಕಪ್ ಸ್ವರ್ಣ ವಿಜೇತೆ ಅರುಂಧತಿ ಚೌಧರಿ (70 ಕೆ.ಜಿ.) ಅವರೂ ಬಂಗಾರದ ಪದಕಕ್ಕೆ ಕೊರಳೊಡ್ಡಿದರು.
  • ಆದರೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದ್ದು ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ. ಈ ಸೆಣಸಾಟದಲ್ಲಿ ಹಾಲಿ ವಿಶ್ವ ಚಾಂಪಿಯನ್ ಜೈಸ್ಮಿನ್ ಲಂಬೋರಿಯಾ ಅವರು 0-5 ರಿಂದ ಎರಡು ಬಾರಿಯ ವಿಶ್ವ ಚಾಂಪಿಯನ್ ಪುನವೀ ರುಕ್ರೋಸ್ (ಥಾಯ್ಲೆಂಡ್) ಅವರಿಗೆ ಮಣಿದರು.
  • ಭಾರತದ ಅಲ್ಪಿಯಾ ಪಠಾಣ್ 80 ಕೆ.ಜಿ + ವಿಭಾಗದಲ್ಲಿ ರನ್ನರ್ ಅಪ್ ಆದರು. ಅವರು ಫೈನಲ್‌ನಲ್ಲಿ 0-5 ರಿಂದ ಕಜಾಕಸ್ತಾನದ ದೀನಾ ಇಸ್ಲಾಮ್‌ಬೆಕೊವಾ ಅವರಿಗೆ ಮಣಿದರು.
  • ಭಾರತದ ಮಹಿಳೆಯರು ಒಟ್ಟು 10 ಪದಕಗಳನ್ನು ಗೆದ್ದು ಪ್ರಭಾವಶಾಲಿ ಪ್ರದರ್ಶನ ನೀಡಿದರು. ಇವುಗಳಲ್ಲಿ ನಾಲ್ಕು ಚಿನ್ನ. ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳಿವೆ.
  • ಆದರೆ ಕೆಲವು ವಿಭಾಗಗಳಲ್ಲಿ 2-3 ಸ್ಪರ್ಧಿಗಳಿದ್ದ ಕಾರಣ, ಲವಿನಾ ಬೊರ್ಗೊಹ್ಮನ್ (75 ಕೆ ಜಿ), ಪೂಜಾ ರಾಣಿ (80 ಕೆ.ಜಿ) ಮತ್ತು ಅಗ್ನಿಯಾ ಭಾಗವಹಿಸಿದ ಮಾತ್ರಕ್ಕೆ ಪದಕ ಪಡೆದರು.
  • ಮೀನಾಕ್ಷಿ ಅವರು 5-0 ಯಿಂದ ಮಂಗೋಲಿಯಾದ ನೊಮುನ್ನರಿ ಎನ್-ಅಮ್ರಲನ್ ಅವರನ್ನು ಸೋಲಿಸಿ ಭಾರತದ ಚಿನ್ನದ ಬೇಟೆ ಆರಂಭಿಸಿದರು ಪ್ರೀತಿ ಮೂರು ಬಾರಿಯ ವಿಶ್ವ ಚಾಂಪಿಯನ್ ಹುವಾಂಗ್ ಸಿಯಾವೊವೆನ್ (ತೈವಾನ್) ಅವರನ್ನು 5-0 ಸರ್ವಾನುಮತದ ತೀರ್ಪಿನಲ್ಲಿ ಸೋಲಿಸಿದರು.
  • ಪ್ರಿಯಾ 3-0 ಯಿಂದ ಉತ್ತರ ಕೊರಿಯಾದ ವೊನ್ ಉನ್-ಗ್ಯಾಂಗ್ ಅವರನ್ನು ಮಣಿಸಿದರೆ ಆರುಂಧತಿ ಫೈನಲ್‌ನಲ್ಲಿ 4-1 ರಿಂದ ಕಜಾಕಸ್ತಾನದ ಬಕಿಟ್ ಸೀದಿಶ್ ಅವರನ್ನು ಮಣಿಸಿದರು.

ಕುಸ್ತಿ: ಹನ್ಸಿಕಾ, ನೇಹಾಗೆ ಕಂಚು

  • ಹನ್ಸಿಕಾ ಲಂಬಾ ಮತ್ತು ನೇಹಾ ಅವರು ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ 55 ಕೆ.ಜಿ. ಮತ್ತು 59 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು.
  • ಎರಡು ಬಾರಿಯ ರಾಷ್ಟ್ರೀಯ ಚಾಂಪಿಯನ್ ಮೀನಾಕ್ಷಿ ಗೋಯತ್ ಅವರು ಸೋಲಿನ ಸುಳಿಯಿಂದ ಚೇತರಿಸಿ ದಕ್ಷಿಣ ಕೊರಿಯಾದ ಸಿಯೊಂಗ್ ಪಾರ್ಕ್ ವಿರುದ್ಧ ಗೆದ್ದು 53 ಕೆ.ಜಿ. ವಿಭಾಗದಲ್ಲಿ ಫೈನಲ್‌ಗೆ ಲಗ್ಗೆಯಿಟ್ಟರು.
  • 55 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕೆ ನಡೆದ ಸ್ಪರ್ಧೆಯಲ್ಲಿ 19 ವರ್ಷ ವಯಸ್ಸಿನ ಹನ್ನಿಕಾ, ಆತಿಥೇಯ ಕಿರ್ಗಿಸ್ತಾನದ ಅರುಕ ಕದಿರ್ಬೆಕ್ ಕಿಝಿ ಅವರನ್ನು 6-1 ರಿಂದ ಮಣಿಸಿದರು.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಆಯುಷ್ಮಾನ್: ರೂಟ್ ಕೆನಾಲ್ ಚಿಕಿತ್ಸೆ ಸೇರ್ಪಡೆ
ಸಂದರ್ಭ:
ರಾಜ್ಯದಲ್ಲಿ ಜಾರಿಯಲ್ಲಿರುವ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ-ಮುಖ್ಯಮಂತ್ರಿ ಯವರ ಆರೋಗ್ಯ ಕರ್ನಾಟಕ ಯೋಜನೆಯಡಿ’ ರೂಟ್ ಕೆನಾಲ್ ಚಿಕಿತ್ಸೆಯನ್ನು ಸೇರ್ಪಡೆ ಮಾಡಲಾಗಿದೆ.

  • ಈ ಬಗ್ಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ರೂಟ್ ಕೆನಾಲ್ ಚಿಕಿತ್ಸೆಯು ಹುಳುಕು ಹಲ್ಲು ಅಥವಾ ಸೋಂಕಿನಿಂದ ಹಾನಿಗೊಳಗಾದ ಹಲ್ಲನ್ನು ಉಳಿಸಲು ಬಳಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಬಾಯಿಯ ಆರೋಗ್ಯ ಸುಧಾರಣೆಗೆ ಇದು ಸಹಕಾರಿಯಾಗಿದೆ.
  • ಅಧಿಕ ಚಿಕಿತ್ಸಾ ವೆಚ್ಚ ಮತ್ತು ಜಾಗೃತಿ ಕೊರತೆಯಿಂದಾಗಿ ಹೆಚ್ಚಿನ ಜನರು ರೂಟ್ ಕೆನಾಲ್ ಬದಲಿಗೆ, ದಂತ ತೆಗೆಯುವ ವಿಧಾನವನ್ನೇ ಆಯ್ಕೆ ಮಾಡಿ ಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಚಿಕಿತ್ಸೆಯನ್ನು ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ.
  • ಯೋಜನೆಯಡಿ ಮುಂಭಾಗದ ಮತ್ತು ಹಿಂಭಾಗದ ಹಲ್ಲುಗಳಿಗೆ ರೂಟ್ ಕೆನಾಲ್ ಚಿಕಿತ್ಸೆ ಒದಗಿಸಲಾಗುತ್ತದೆ. ಇವುಗಳನ್ನು ಸಂಕೀರ್ಣ ದ್ವಿತೀಯ ಕಾರ್ಯವಿಧಾನಗಳು (2ಬಿ) ಎಂದು ವರ್ಗೀಕರಿಸಲಾಗಿದೆ. ಚಿಕಿತ್ಸೆಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ (ಸಿಜಿಎಚ್‌ಎಸ್) ದರಗಳನ್ನು ಅಳವಡಿಸಿಕೊಳ್ಳಲು ನಿರ್ದೇಶಿಸಲಾಗಿದೆ. ಅದರಂತೆ, ಮುಂಭಾಗದ ಹಲ್ಲುಗಳಿಗೆ ₹1,360 ಮತ್ತು ಹಿಂಭಾಗದ ಹಲ್ಲುಗಳಿಗೆ ₹2,040 ನಿಗದಿಪಡಿಸಲಾಗಿದೆ.
  • ಯೋಜನೆಯಡಿ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬದ ಸದಸ್ಯರು ಪ್ರಯೋಜನ ಪಡೆಯಬಹು ದಾಗಿದೆ. ಯೋಜನೆಯ ಸೌಲಭ್ಯವನ್ನು ಸರ್ಕಾರವು 50 ಸಾವಿರ ಪ್ರಕರಣಗಳಿಗೆ ಅಥವಾ 5 ಕೋಟಿ ಆರ್ಥಿಕ ವೆಚ್ಚಕ್ಕೆ ಮಿತಿಗೊಳಿಸಿದೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಆಧಾರ್: ‘ಸುಪ್ರೀಂ’ಗೆ ಪಿಐಎಲ್ ಸಲ್ಲಿಕೆ
ಸಂದರ್ಭ:
ಆರು ವರ್ಷದೊಳಗಿನ ಭಾರತೀಯ ಪ್ರಜೆಗಳಿಗೆ ಮಾತ್ರ ಆಧಾರ್ ಕಾರ್ಡ್ ವಿತರಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ.

  • ಒಳ ನುಸುಳುಕೋರರಿಂದ ಆಗುತ್ತಿರುವ ದುರ್ಬಳಕೆ ತಡೆಯಲು ಆರು ವರ್ಷದೊಳಗಿನ ಭಾರತೀಯ ಪ್ರಜೆಗಳಿಗೆ ಮಾತ್ರ ಆಧಾರ್ ಕಾರ್ಡ್ ವಿತರಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ (ಯುಐಡಿಎಐ) ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ.
  • ಭಾರತೀಯ ನಾಗರಿಕರು ಎಂದು ನುಸುಳುಕೋರರು ಬಿಂಬಿಸಿಕೊಳ್ಳುವುದನ್ನು ನಿಯಂತ್ರಿಸುವ ಉದ್ದೇಶದಿಂದ ಹರೆಯದವರು ಮತ್ತು ವಯಸ್ಕರಿಗೆ ಆಧಾರ್ ವಿತರಿಸಲು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯ ಇದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
  • ವಕೀಲರಾದ ಅಶ್ವಿನಿ ಉಪಾಧ್ಯಾಯ ಎಂಬುವರು ಅಶ್ವಿನಿ ದುಬೆ ಎಂಬುವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
  • ’12 ಅಂಕಿಗಳ ಡಿಜಿಟಲ್ ಆಧಾರ್ ಸಂಖ್ಯೆ ಗುರುತಿನ ದಾಖಲೆಯೇ ಹೊರತು ಪೌರತ್ನದ ಆಧಾರವಲ್ಲ’ ಎಂಬ ಪ್ರದರ್ಶನ ಫಲಕಗಳನ್ನು ಆಧಾ‌ರ್ ಸೇವಾ ಕೇಂದ್ರಗಳ ಮುಂದೆ ಆಳವಡಿಸಬೇಕು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.
  • ಪ್ರಾಧಿಕಾರ 144 ಕೋಟಿ ಆಧಾರ್ ಕಾರ್ಡ್ ವಿತರಿಸಿದೆ. ಶೇ 99ರಷ್ಟು ಭಾರತೀಯರು ನೋಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಇನ್ನು ಮುಂದೆ ಆರು ವರ್ಷದ ಒಳಗಿನವರಿಗೆ ಮಾತ್ರ ಆಧಾರ್ ಸಂಖ್ಯೆ ವಿತರಿಸುವಂತೆ ಸಂವಿಧಾನದ 32ನೇ ವಿಧಿಯ ಅವಕಾಶ ಬಳಸಿಕೊಂಡು ಅರ್ಜಿದಾರರು ಕೋರಿದ್ದಾರೆ.
  • ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಹಾಗೂ ಇತರೆ ಗುರುತಿನ ಚೀಟಿಗಳನ್ನು ಪಡೆಯಲು ಇತ್ತೀಚೆಗೆ ಆಧಾರ್ ಕಾರ್ಡ್ ಮೂಲ ದಾಖಲೆಯಾಗಿ ಬಳಕೆಯಾಗುತ್ತಿದೆ. ಆಧಾರ್ ನೀಡಲು ಅನುಸರಿಸುವ ಪರಿಶೀಲನಾ ಪ್ರಕ್ರಿಯೆ ದುರ್ಬಲವಾಗಿವೆ. ನುಸುಳುಕೋರರು ಸುಲಭವಾಗಿ ದಾಖಲೆ ತಿರುಚುತ್ತಿದ್ದಾರೆ ಹೀಗಾಗಿ ಕಠಿಣ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯ ಇದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
  • ವಿದೇಶಿಗರು ಆಧಾರ್‌ಗಾಗಿ ವಿದೇಶಿ ವಿಭಾಗದಲ್ಲಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ನುಸುಳುಕೋರರು ಭಾರತೀಯ ನಾಗರಿಕ’ ವಿಭಾಗದಲ್ಲಿ ಅರ್ಜಿ ಸಲ್ಲಿಸಿ ಸುಲಭವಾಗಿ ಪಡೆಯುತ್ತಿದ್ದಾರೆ ಆನಂತರ ವಾಸ ದೃಢೀಕರಣ, ಚಾಲನಾ ಪರವಾನಗಿ ಸೇರಿ ಇತರೆ ದಾಖಲೆ ಪಡೆದು ಸುಲಭವಾಗಿ ಭಾರತೀಯ ಪ್ರಜೆ ಎನಿಸಿಕೊಳ್ಳುತ್ತಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
  • ವಿದೇಶಿಯರನ್ನು ಭಾರತೀಯ ಪ್ರಜೆಯಿಂದ ಬೇರ್ಪಡಿಸುವಲ್ಲಿ, ಆಧಾರ್ ಕಾಯ್-2026 ವಿಫಲವಾಗಿದೆಯೇ ಎಂಬ ಕಾನೂನಾತ್ಮಕ ಪ್ರಶ್ನೆಯನ್ನೂ ಈ ಅರ್ಜಿ ಎತ್ತಿದೆ.
  • ಆಧಾರ್ ದುರ್ಬಳಕೆಯು ಕಲ್ಯಾಣ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಂಪನ್ಮೂಲ ಅನರ್ಹರ ಪಾಲಾಗುವುದನ್ನು ಹೆಚ್ಚಿಸಿದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
  • ಮತದಾರರ ಗುರುತಿನ ಚೀಟಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಸಾಂವಿಧಾನಿಕ ಅವಕಾಶಗಳ ಬಗ್ಗೆಯೂ ಅರ್ಜಿಯಲ್ಲಿ ಗಮನಸೆಳೆಯಲಾಗಿದೆ. ಅಕ್ರಮ ನೋಂದಣಿಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಹಾಳುಮಾಡುತ್ತವೆ ಎಂಬ ಆತಂಕ ಅರ್ಜಿಯಲ್ಲಿ ವ್ಯಕ್ತವಾಗಿದೆ.

ಶಬರಿಮಲೆ: ಮಹಿಳೆಯರ ನಿಷೇಧಕ್ಕೆ ಬೆಂಬಲ
ಸಂದರ್ಭ:
ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಋತುಚಕ್ರದ ವಯಸ್ಸಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವನ್ನು ಬೆಂಬಲಿಸಿದ ಕೇಂದ್ರ ಸರ್ಕಾರ, 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಪುರುಷರು ಶ್ರೇಷ್ಠರು ಮತ್ತು ಮಹಿಳೆಯರು ಕೆಳಮಟ್ಟದಲ್ಲಿ ದ್ದಾರೆ ಎಂಬ ಭಾವನೆಯನ್ನು ಆಧರಿಸಿದೆ ಎಂದು ತಿಳಿಸಿದೆ.

  • ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಮತ್ತು ವಿವಿಧ ಧರ್ಮಗಳ ಜನರ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಮುಂದೆ ಸರ್ಕಾರ ಈ ಹೇಳಿಕೆ ನೀಡಿದೆ.
  • ಕೇಂದ್ರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ, ಈ ಕುರಿತು ಪೀಠಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದರು ಅಲ್ಲದೆ, ಕೆಲ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶ ನಿರಾಕರಣೆ ಇರುವು ದರ ಮಾಹಿತಿಯನ್ನೂ ತಿಳಿಸಿದರು.
  • ಕೇರಳದ ಕೊಟ್ಟಂಕುಳಂಕರದ ಶ್ರೀ ಭಗವತಿ ಕ್ಷೇತ್ರಲ್ಲಿನ ಕೆಲ ನಂಬಿಕೆ ಆಚರಣೆಗಳ ಬಗ್ಗೆ, ಅವರು ಈ ವೇಳೆ ವಿವರಿಸಿದರು. ‘ಈ ದೇಗುಲದಲ್ಲಿ ಪುರುಷರು ಮಹಿಳೆಯರಂತೆ ವೇಷ ಭೂಷಣ ತೊಡಬೇಕು ಎಂಬುದನ್ನು ನಾನು ಓದಿದ್ದೇನೆ. ಈ ದೇಗುಲ ಪ್ರವೇಶಕ್ಕೂ ಮುನ್ನ ಪುರುಷರು ಬ್ಯೂಟಿ ಪಾರ್ಲಗ್ರ ಹೋಗುತ್ತಾರೆ, ಅಲ್ಲಿ ಕುಟುಂಬದ ಮಹಿಳಾ ಸದಸ್ಯರು ಅವರಿಗೆ ಸೀರೆ ಉಡಲು ನೆರವಾಗುತ್ತಾರೆ’ ಎಂದು ಅವರು ಉಲ್ಲೇಖಿಸಿದರು.
  • ಈ ದೇಗುಲದಲ್ಲಿ ವಾರ್ಷಿಕವಾಗಿ ನಡೆಯುವ ‘ಚಮಯವಿಳಕ್ಕು’ ಉತ್ಸವಕ್ಕೆ ಪುರುಷರು ಮಹಿಳೆಯರಂತೆಯೇ ವೇಷ ಧರಿಸಬೇಕು. ಶತಮಾನಗಳ ಹಿಂದಿನಿಂದಲೂ ಈ ಸಂಪ್ರದಾಯ ಇಲ್ಲಿ ನಡೆದುಕೊಂಡು ಬಂದಿದೆ ಎಂದು ಅವರು ಹೇಳಿದರು.
  • ಹೀಗಾಗಿ ಇದು ಪುರುಷ ಕೇಂದ್ರಿತ ಅಥವಾ ಮಹಿಳಾ ಕೇಂದ್ರಿದ ಧಾರ್ಮಿಕ ನಂಬಿಕೆಗಳ ಪ್ರಶ್ನೆಯಲ್ಲ. ಆದರೆ, ಶಬರಿಮಲೆ ಪ್ರಕರಣವನ್ನು ಮಹಿಳಾ ಕೇಂದ್ರಿತವಾಗಿಸಲಾಗಿದೆ ಎಂದು ಮೆಹ್ರಾ ಬೇಸರ ವ್ಯಕ್ತಪಡಿಸಿದರು.
  • ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಎಂ.ಎಂ.ಸುಂದರೇಶ್, ಅಹ್ವಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಆಗಸ್ಮಿನ್ ಜಾರ್ಜ್ ಮಸೀಹ್, ಪ್ರಸನ್ನ ಬಿ. ವರಾಳೆ, ಆರ್. ಮಹದೇವನ್ ಮತ್ತು ಜಾಯ್‌ಲ್ಯಾ ಬಾಗ್ನಿ ಅವರು ಈ ಪೀಠದಲ್ಲಿದ್ದಾರೆ.
  • 2018ರಲ್ಲಿ ಐವರು ನ್ಯಾಯಮೂರ್ತಿ ಗಳ ಸಂವಿಧಾನ ಪೀಠವು 4:1ರ ಬಹುಮತದ ತೀರ್ಪಿನ ಮೂಲಕ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರು ಪ್ರವೇಶಿಸಲು ಇದ್ದ ನಿಷೇಧವನ್ನು ರದ್ದುಗೊಳಿಸಿತು. ಶತಮಾನಗಳಷ್ಟು ಹಳೆಯದಾದ ಈ ಹಿಂದೂ ಧಾರ್ಮಿಕ ಪದ್ಧತಿಯು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ತೀರ್ಪು ನೀಡಿತು.
  • ಬಳಿಕ 2019ರ ನವೆಂಬರ್ 14ರಂದು ಆಗಿನ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಮತ್ತೊಂದು ಐವರು ನ್ಯಾಯಮೂರ್ತಿಗಳ ಪೀಠವು 3:2ರ ಬಹುಮತದಿಂದ ವಿವಿಧ ಪೂಜಾ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯದ ವಿಷಯವನ್ನು ವಿಸ್ತ್ರತ ಪೀಠಕ್ಕೆ ಉಲ್ಲೇಖಿಸಿತ್ತು.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ದೇಶದ ಆನ್ಲೈನ್ ರಿಟೇಲ್ ಮಾರುಕಟ್ಟೆ ಗಾತ್ರ ₹6 ಲಕ್ಷ ಕೋಟಿ
ಸಂದರ್ಭ:
ಕಳೆದ ವರ್ಷ ದೇಶದ ಆನ್ಲೈನ್ ರಿಟೇಲ್ ಮಾರುಕಟ್ಟೆಯ (ಇ-ಕಾಮರ್ಸ್) ಗಾತ್ರವು ₹6 ಲಕ್ಷ ಕೋಟಿಗಿಂತ ಹೆಚ್ಚಾಗಿದೆ. ಇದು 2024ಕ್ಕೆ ಹೋಲಿಸಿದರೆ ಶೇ 21ರಷ್ಟು ಅಧಿಕವಾಗಿದೆ.

  • ಕ್ನಿಕ್ ಕಾಮರ್ಸ್ ವಲಯದಲ್ಲಿ ಭಾರತವು, ಜಾಗತಿಕ ಮಟ್ಟದಲ್ಲಿ ನಾಯಕನ ಸ್ಥಾನದಲ್ಲಿದೆ ಎಂದು ಇ-ಕಾಮರ್ಸ್ ಕಂಪನಿ ಸ್ಲಿಪ್‌ಕಾರ್ಟ್ ಸಹಯೋಗದೊಂದಿಗೆ ಸಲಹಾ ಸಂಸ್ಥೆ ಬೈನ್ ಆ್ಯಂಡ್ ಕಂಪನಿ ಸಿದ್ಧಪಡಿಸಿರುವ ವರದಿ ತಿಳಿಸಿದೆ.
  • 2030ರ ವೇಳೆಗೆ ದೇಶದ ಆನ್‌ಲೈನ್ ರಿಟೇಲ್ ಮಾರುಕಟ್ಟೆಯ ಗಾತ್ರವು ₹16 ಲಕ್ಷ ಕೋಟಿಯಷ್ಟಾಗುವ ನಿರೀಕ್ಷೆ ಇದ್ದು, ವಾರ್ಷಿಕ ಶೇ 20ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ.
  • 2025ರಲ್ಲಿ ಆನ್‌ಲೈನ್ ರಿಟೇಲ್ ಮಾರುಕಟ್ಟೆಯ ಒಟ್ಟು ಮಾರಾಟದ ಮೌಲ್ಯದಲ್ಲಿ ಕ್ರಿಕ್ ಕಾಮರ್ಸ್ ವಲಯವು ₹1 ಲಕ್ಷ ಕೋಟಿಯನ್ನು ಪಾಲು ಹೊಂದಿದೆ. ಇದು 2030ರ ವೇಳೆಗೆ ಇದು ₹6.48 ಲಕ್ಷ ಕೋಟಿಯಷ್ಟಾಗುವ ನಿರೀಕ್ಷೆಯಿದ್ದು. ಒಟ್ಟು ಮಾರುಕಟ್ಟೆಯ ಗಾತ್ರದ ಶೇ 45ರಿಂದ ಶೇ 50ರಷ್ಟಾಗಲಿದೆ ಎಂದು ತಿಳಿಸಿದೆ.
  • 2022ರಿಂದ 2024ರವರೆಗೆ ಕುಟುಂಬಗಳು ಸರಕು ಮತ್ತು ಸೇವೆಗಳಿಗೆ ಖರ್ಚು ಮಾಡುವ ಪ್ರಮಾಣ ವಾರ್ಷಿಕ ಶೇ 8ರಷ್ಟು ಬೆಳವಣಿಗೆ ಕಂಡಿತ್ತು. ಇದು 2025ರ ವೇಳೆಗೆ ಈ 10.5ಕ್ಕೆ ಏರಿಕೆಯಾಗಿದೆ. ಜಿಎಸ್‌ಟಿ ದರ ಪರಿಷ್ಕರಣೆ, ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ, ಹಣದುಬ್ಬರ ಇಳಿಕೆ ಮತ್ತು ಕಡಿಮೆ ಬಡ್ಡಿ ದರದ ಸಾಲವು ಕುಟುಂಬಗಳು ಖರ್ಚು ಮಾಡುವ ಪ್ರಮಾಣವನ್ನು ಹೆಚ್ಚಿಸಿವೆ ಎಂದು ತಿಳಿಸಿದೆ.
  • ಕಳೆದ ಐದು ವರ್ಷದಲ್ಲಿ ದೇಶದ ಆನ್‌ಲೈನ್ ಶಾಪಿಂಗ್ ಮಾರುಕಟ್ಟೆಯ ಗಾತ್ರ ಎರಡು ಪಟ್ಟಿಗಿಂತಲೂ ಹೆಚ್ಚು ಬೆಳವಣಿಗೆ ಕಂಡಿದೆ.
  • ದೇಶದ ಜಿಡಿಪಿ ಗಾತ್ರಕ್ಕೆ ಹೋಲಿಸಿದರೆ ಆನ್‌ಲೈನ್ ರಿಟೇಲ್ ಮಾರುಕಟ್ಟೆಯು ಶೇ1.6ರಷ್ಟಿದೆ ಆದರೆ ಚೀನಾದಲ್ಲಿ ಶೇ 14ರು ಮತ್ತು ಇಂಡೊನೇಷ್ಯಾ ಶೇ 4 5ರಷ್ಟಿದೆ ಎಂದು ತಿಳಿಸಿದೆ.

ಇ.ವಿ ವಾಹನ ಮಾರುಕಟ್ಟೆ ಪ್ರವೇಶಿಸಿದ ರಾಯಲ್ ಎನ್ಫೀಲ್ಡ್
ಸಂದರ್ಭ:
ಐಷರ್ ಮೋಟರ್ಸ್ ಸಮೂಹಕ್ಕೆ ಸೇರಿರುವ ರಾಯಲ್ ಎನ್ಫೀಲ್ಡ್, ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ. ತನ್ನ ಮೊದಲ ಇ.ವಿ. ದ್ವಿಚಕ್ರ ವಾಹನ ‘ಪ್ರೈಯಿಂದ ಫ್ರೀ ಸಿ6’ ವಾಹನವನ್ನು ಬಿಡುಗಡೆ ಮಾಡಿದೆ.

  • ಇದರ ಎಕ್ಸ್ ಷೋರೂಂ ಬೆಲೆಯು ₹2.79 ಲಕ್ಷ ಆದರೆ, ಬ್ಯಾಟರಿಯನ್ನು ಒಂದು ಸೇವೆಯ ರೂಪದಲ್ಲಿ ಪಡೆದರೆ ಈ ವಾಹನವು ₹1.99 ಲಕ್ಷಕ್ಕೆ ಸಿಗುತ್ತದೆ ಎಂದು ಐಷರ್ ಮೋಟರ್ಸ್ ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
  • ಕಂಪನಿಯು ಈ ವಾಹನವನ್ನು ಗ್ರಾಹಕರಿಗೆ ವಿತರಿಸುವ ಕೆಲಸವನ್ನು ಮೇ ತಿಂಗಳ ಕೊನೆಯ ಭಾಗದಿಂದ ಶುರು ಮಾಡಲಿದೆ ವಾಹನವು ಗಂಟೆಗೆ ಗರಿಷ್ಠ 115 ಕಿ.ಮೀ. ವೇಗದಲ್ಲಿ ಸಾಗಬಲ್ಲದು

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments