ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.
“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ಪಲಕ್-ಮುಕೇಶ್ ವಿಶ್ವದಾಖಲೆ
ಸಂದರ್ಭ: ಭಾರತದ ಶೂಟರ್ಗಳಾದ ಪಲಕ್ ಮತ್ತು ಮುಕೇಶ್ ನೆಲವಲ್ಲಿ ಜೋಡಿ, ಐಎಸ್ಎಸ್ಎಫ್ ವಿಶ್ವ ಕಪ್ ಶೂಟಿಂಗ್ ಚಾಂಪಿಯನ್ಷಿಪ್ನ 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿತು. ಆ ಹಾದಿಯಲ್ಲಿ ವಿಶ್ವ ದಾಖಲೆಯನ್ನೂ ಬರೆಯಿತು.

- ಭಾರತದ ಜೋಡಿ ಫೈನಲ್‌ನಲ್ಲಿ 487.7 ಸ್ಕೋರ್ ಗಳಿಸಿತು. ಇದು ಜೂನಿಯರ್ ವಿಶ್ವ ದಾಖಲೆ ಕೂಡ. ಅರ್ಹತಾ ಸುತ್ತಿನಲ್ಲೇ ಉತ್ತಮ ಗುರಿ ಪ್ರದರ್ಶಿಸಿ 581 ಅಂಕ ದಾಖಲಿಸಿತ್ತು.
- ಚೀನಾದ ಕ್ರಿಯಾನ್‌ಮನ್ ಯಾವೊ ಮತ್ತು ಕಯ್ ಹು ಜೋಡಿ 484.8 ಸ್ಕೋರ್‌ನೊಡನೆ ಬೆಳ್ಳಿ ಗೆದ್ದಿತು. ಹಂಗೆರಿಯ ವೆರೋನಿಕಾ ಮೇಜರ್ ಮತ್ತು ಅಕೋಸ್ ಕರೋಲಿ ಜೋಡಿ (414.9) ಕಂಚಿನ ಪದಕ ಗಳಿಸಿತು.
- ಭಾರತದ ಪರ ಫೈನಲ್‌ನಲ್ಲಿ ಪಲಕ್ 243 ಮತ್ತು ಮುಕೇಶ್ 244 7 ಸ್ಕೋರ್ ದಾಖಲಿಸಿದರು. ಕ್ಯಾಲಿಫಿಕೇಷನ್ ಸುತ್ತಿನಲ್ಲಿ ಭಾರತದ ಜೋಡಿ ಎರಡನೇ ಸ್ಥಾನದಲ್ಲಿತ್ತು.
- 18 ವರ್ಷ ವಯಸ್ಸಿನ ಪಲಕ್, 2023ರ ಏಷ್ಯನ್ ಕ್ರೀಡೆಗಳ 10 ಮೀ ಏರ್ ಪಿಸ್ತೂಲ್ ವೈಯಕ್ತಿಕ ಚಿನ್ನ ಮತ್ತು ತಂಡ ವಿಭಾಗದಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಪ್ರವರ್ಧಮಾನಕ್ಕೆ ಬಂದಿದ್ದರು.
ಕುಸ್ತಿ: ಲಲಿತ್‌ಗೆ ಬೆಳ್ಳಿ, ಸುನಿಲ್‌ಗೆ ಕಂಚು
ಸಂದರ್ಭ: ಅನುಭವಿ ಪೈಲ್ಮಾನ್ ಲಲಿತ್ ಅವರು ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆ.ಜಿ ವಿಭಾಗದ ಗ್ರೀಕೊ ರೋಮನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು ಇದು ಚಾಂಪಿಯನ್‌ಷಿಪ್ ನಲ್ಲಿ ಭಾರತಕ್ಕೆ ಮೊದಲ ಪದಕ ಎನಿಸಿತು.

- ಭಾರತದ ನಿತೇಶ್ 97 ಕೆ.ಜಿ ವಿಭಾಗದಲ್ಲಿ ಪ್ರಶಸ್ತಿ ಸುತ್ತನ್ನು ಪ್ರವೇಶಿಸಿದರು.
- 23 ವರ್ಷದೊಳಗಿನವರ ಮಾಜಿ ಏಷ್ಯನ್ ಕಂಚಿನ ಪದಕ ವಿಜೇತರಾದ ಲಲಿತ ಸೆಮಿಫೈನಲ್‌ನಲ್ಲಿ ಚೀನಾದ ಹುವೊಯಿಂಗ್ ಶಿ ಅವರನ್ನು ಸೋಲಿಸಿದ್ದರು ಫೈನಲ್‌ನಲ್ಲಿ ಉಕಿಸ್ತಾನದ ಇಕ್ತಿಯಾರ್ ಬೊಟಿರೋವ್ ಎದುರು ಪ್ರತಿರೋಧ ತೋರಿದರೂ 0-9 ರಿಂದ ಸೋತರು.
- 87 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕೆ ನಡೆದ ಹಣಾಹಣಿಯಲ್ಲಿ ಮಾಜಿ ಚಾಂಪಿಯನ್ ಸುನಿಲ್ ಕುಮಾರ್ ಅವರು ಮೊದಲ ಸುತ್ತಿನಲ್ಲಿ 0-4 ಹಿನ್ನಡೆಯಿಂದ ಅಮೋಘವಾಗಿ ಚೇತರಿಸಿ ಉಜೈಕಿಸ್ತಾನದ ಮುಖಮಡ್ಗದಿರ್ ರಸುಲೋವ್ ಅವರನ್ನು 5-4 ರಿಂದ ಸೋಲಿಸಿದರು. ಇದು ಅವರಿಗೆ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಕಂಚು ಎನಿಸಿತು
- ಇದಕ್ಕೆ ಮೊದಲು, 23 ವರ್ಷ ವಯಸ್ಸಿನ ನಿತೇಶ್ 97 ಕೆ.ಜಿ. ಗ್ರೀಕೊ ರೋಮನ್ ಕೆಟಗರಿಯಲ್ಲಿ ಫೈನಲ್ ತಲುಪಿದರು ಕಳೆದ ವರ್ಷ ಕಂಚಿನ ಪದಕ ಗೆದ್ದುಕೊಂಡಿದ್ದ ಅವರು ಈ ಬಾರಿ ಸುಧಾರಿತ ಫಲಿತಾಂಶ ಕಾಣುವುದು ಖಚಿತವಾಯಿತು ನಿತೀಶ್ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮೊಹಮ್ಮದ್‌ಹದಿ ಸರವಿ (ಇರಾನ್) ಅವರನ್ನು ಸೋಲಿಸಿದರು.
- 82 ಕೆ.ಜಿ ಗ್ರೀಕೊ ರೋಮನ್ ಸ್ಪರ್ಧೆಯಲ್ಲಿ ಪ್ರಿನ್ಸ್ ಅವರು ಕಂಚಿನ ಪದಕಕ್ಕಾಗಿ ನಡೆಯುವ ಸೆಣಸಾಟದಲ್ಲಿ ತುರ್ಕಮೆನಿಸ್ತಾನದ ದಿದಾರ್ ಅಮ್ಮಾನಝರೋವ್ ಅವರನ್ನು ಎದುರಿಸಲಿದ್ದಾರೆ 20 ವರ್ಷ ವಯಸ್ಸಿನ ಪ್ರಿನ್ನು ಸೆಮಿಫೈನಲ್‌ನಲ್ಲಿ ಇರಾನ್ ಮೊಹಮ್ಮದಮಿನ್ ಹುಸೇನಿ ಅವರಿಗೆ ಮಣಿದಿದ್ದರು.
- ಅಮನ್‌ಗೆ ಹಿನ್ನಡೆ ಆದರೆ ಭಾರತದ ಪ್ರಮುಖ ಸ್ಪರ್ಧಿ ಅಮನ್ ಅವರಿಗೆ ಒಂದು ಪಾಯಿಂಟ್ ಅಂತರದಿಂದ ಹಿನ್ನಡೆಯಾಯಿತು 77 ಕೆ.ಜಿ ಗ್ರೀಕ್ ರೋಮನ್ ಕೆಟಗರಿಯಲ್ಲಿ ಕಂಚಿನ ಪದಕಕ್ಕೆ, ನಡೆದ ಸೆಣಸಾಟದಲ್ಲಿ ಅವರು ದಕ್ಷಿಣ ಕೊರಿಯಾದ ಯೊನ್ನಮ್ ನ್ಯೂ ಅವರಿಗೆ 14-15ರಲ್ಲಿ ಸೋತರು ಸಚಿನ್ ಸಹಾವತ್ (67 ಕೆ.ಜಿ ಗ್ರೀಕೊ ರೋಮನ್) ಅವರು ಕಂಚಿನ ಪದಕಕ್ಕೆ ಸೆಣಸುವ ಆರ್ಹತೆ ಪಡೆದರು ಅವರು ಬುಧವಾರ ರಜೆನಾಜ್ ಸುತ್ತಿನಲ್ಲಿ ಚೀನಾದ ಜಿ ಬೆಂಗ್ ವಿರುದ್ಧ ಅಖಾಡಕ್ಕಿಳಿಯಲಿದ್ದಾರೆ
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಬಾಲಕಿಯರ ಗರ್ಭಧಾರಣೆ: ಲೆಕ್ಕಪರಿಶೋಧನೆ ಕಡ್ಡಾಯ
ಸಂದರ್ಭ: ರಾಜ್ಯದಲ್ಲಿ 10-18 ವರ್ಷ ವಯಸ್ಸಿನ ಹೆಣ್ಣು ಮಕ್ಕಳ ಆರೋಗ್ಯ ಬಲಪಡಿಸುವ ಸಲುವಾಗಿ ಹದಿಹರೆಯದ ಗರ್ಭಧಾರಣೆ ಪ್ರಕರಣಗಳನ್ನು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಆರ್ಸಿಎಚ್ ವೇದಿಕೆಯಲ್ಲಿ ಕಡ್ಡಾಯವಾಗಿ ವರದಿ ಮಾಡಬೇಕು. ಸಂಬಂಧಪಟ್ಟ ತಾಲ್ಲೂಕು ಆರೋಗ್ಯಾಧಿಕಾರಿ ಲೆಕ್ಕಪರಿಶೋಧನೆ ನಡೆಸಿ ವರದಿ ನೀಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
- ಈ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಗರ್ಭಧಾರಣೆಯು ತಾಯಿಗೆ ತೊಡಕು, ಹೆರಿಗೆಯ ವೇಳೆ ಅನಾನುಕೂಲ, ಸಾಮಾಜಿಕ ಸಮಸ್ಯೆಗಳ ಅಪಾಯವನ್ನು ಸೃಷ್ಟಿಸುತ್ತದೆ ಹದಿಹರೆಯದ ಗರ್ಭಧಾರಣೆಗಳು ವರದಿ ಆಗುತ್ತಲೇ ಇವೆ. ಇವು ಬಾಲ್ಯವಿವಾಹ, ಶಿಕ್ಷಣ ಮೊಟಕುಗೊಳಿಸುವುದು, ಸಾಮಾಜಿಕ ಸಮಸ್ಯೆ.
- ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ಅಡಚಣೆ ಉಂಟು ಮಾಡಬಹುದು ಹೀಗಾಗಿ ಅಂತಹ ಪ್ರಕರಣಗಳನ್ನು ಪರಿಶೀಲಿಸಲು ವ್ಯವಸ್ಥಿತ ಕಾರ್ಯವಿಧಾನ ಅಗತ್ಯ ಹಾಗಾಗಿ ಕಡ್ಡಾಯ ಲೆಕ್ಕ ಪರಿಶೋಧನೆ ನಡೆಸಬೇಕು. ಈ ಮೂಲಕ ಹದಿಹರೆಯದ ಗರ್ಭಧಾರಣೆಯನ್ನು ತಡೆಗಟ್ಟುವ ಗುರಿ ಹೊಂದಲಾಗಿದೆ.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ದಕ್ಷಿಣದ ಜನಸಂಖ್ಯೆ ಕುಸಿತ: ಸಣ್ಣದಲ್ಲ ಈ ಸವಾಲು
ಸಂದರ್ಭ: ಹೆಚ್ಚು ಮಕ್ಕಳನ್ನು ಹೊಂದಲು ಪೋಷಕರನ್ನು ಪ್ರೋತ್ಸಾಹಿಸುವ ಸಂಬಂಧ ಕಾನೂನು ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಇತ್ತೀಚೆಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ. ಅದು ರಾಜಕೀಯ ಘೋಷಣೆಯಂತೆ ಕಾಣಬಹುದು. ಆದರೆ, ವಾಸ್ತವವಾಗಿ ಅದು ಆಪತ್ಕಾಲದ ಕೂಗು; ಭಾರತದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸಿರುವ ದಕ್ಷಿಣ ರಾಜ್ಯಗಳಲ್ಲಿ ಸದ್ದಿಲ್ಲದೇ ಘಟಿಸುತ್ತಿರುವ ಜನಸಂಖ್ಯೆ ಕುಸಿತದ ಸವಾಲನ್ನು ಬಹಿರಂಗವಾಗಿ ಒಪ್ಪಿಕೊಂಡ ಹೇಳಿಕೆಯಾಗಿದೆ.

- ಮಹಿಳಾ ಸಾಕ್ಷರತೆ, ಮಹಿಳಾ ಸಬಲೀಕರಣ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ದಶಕಗಳವರೆಗೆ ದಕ್ಷತೆಯಿಂದ ಅನುಷ್ಠಾನ ಮಾಡುವ ಮೂಲಕ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಪ್ರತಿ ಮಹಿಳೆಗೆ 21 ಮಕ್ಕಳಂತೆ ಬದಲಿ (ಜನಸಂಖ್ಯೆಯ ಪ್ರಮಾಣವನ್ನು ಕಾಯ್ದುಕೊಳ್ಳಲು ಅಗತ್ಯವಾದ) ಫಲವಂತಿಕೆಯ ಮಟ್ಟ ಮುಟ್ಟಿದ್ದವು.
- ಆದರೆ, ಕಷ್ಟಪಟ್ಟು ಸಾಧಿಸಿದ ಈ ಜನಸಂಖ್ಯಾ ನಿಯಂತ್ರಣವು ಈಗ ತೀವ್ರ ಆರ್ಥಿಕ ಆತಂಕವಾಗಿ ಬದಲಾಗುತ್ತಿದೆ. ಇದು ಮಕ್ಕಳ ಜನನದ ವಿಚಾರ ಮಾತ್ರವಾಗಿರದೇ ಕಾರ್ಮಿಕರ ಪೂರೈಕೆ, ಪ್ರಗತಿ, ಸಾರ್ವಜನಿಕ ಹಣಕಾಸಿನ ವಿಚಾರವೂ ಆಗಿದೆ. ಜತೆಗೆ, ಒಂದು ಕಾಲದಲ್ಲಿ ತಾವು ಹಿಂದಿಕ್ಕಿದ ಉತ್ತರದ ರಾಜ್ಯಗಳನ್ನೇ ದಕ್ಷಿಣದ ರಾಜ್ಯಗಳು ಅವಲಂಬಿಸಬೇಕಾಗಿದೆ.
- ಮಾದರಿ ನೋಂದಣಿ ವ್ಯವಸ್ಥೆಯ (ಎಸ್‌ಆರ್‌ಎಸ್) 2021ರ ಹೊಸ ದತ್ತಾಂಶವು ಜನಸಂಖ್ಯಾ ಸ್ವರೂಪದಲ್ಲಿನ ಬದಲಾವಣೆಯ ತೀವ್ರತೆಯನ್ನು ತೋರುತ್ತಿದೆ. ದಕ್ಷಿಣದ ಎಲ್ಲ ಐದು ರಾಜ್ಯಗಳ ಒಟ್ಟು ಫಲವಂತಿಕೆ ದರ (ಟಿಎಫ್‌ಆರ್) ಪ್ರತಿ ಮಹಿಳೆಗೆ 1.5 ಮತ್ತು 1.6 ಮಕ್ಕಳ ನಡುವೆ ಇದ್ದು ಇದು ಇತ್ತೀಚಿನ ಅಂದಾಜುಗಳಿಗಿಂತಲೂ ಕಡಿಮೆ ಇದೆ. ಈ ರೀತಿ ಪ್ರತಿ ತಲೆಮಾರಿನ ಗಾತ್ರ ತನ್ನ ಹಿಂದಿನ ತಲೆಮಾರಿಗಿಂತ ಸುಮಾರು ಶೇ 25ರಷ್ಟು ಕಡಿಮೆ ಆಗುತ್ತಿದ್ದು, ಇದು ಸಮುದಾಯಗಳು ಕುಗ್ಗುತ್ತಿರುವುದನ್ನು ಸೂಚಿಸುತ್ತಿದೆ. ಜತೆಗೆ, ಇದು ಕಾರ್ಮಿಕ ಮಾರುಕಟ್ಟೆಯಲ್ಲಿ ಕೊರತೆ ಸೃಷ್ಟಿಸಿ, ಕಾಲಾಂತರದಲ್ಲಿ ಸಾರ್ವಜನಿಕ ಹಣಕಾಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
- ಉತ್ತರ ಭಾರತದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ ಬಿಹಾರವು ಟಿಆರ್‌ಎಫ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ (3.0), ಉತ್ತರ ಪ್ರದೇಶದಲ್ಲಿ 2.7 ಮತ್ತು ಮಧ್ಯಪ್ರದೇಶದಲ್ಲಿ 2.6 ಇದ್ದು ದಕ್ಷಿಣದ ರಾಜ್ಯಗಳಿಗಿಂತ ಎರಡರಷ್ಟಿದೆ ಬಿಹಾರದಲ್ಲಿ ಪ್ರತಿ 1,000 ಮಂದಿಗೆ ಶಿಶು ಜನನ ಪ್ರಮಾಣವು 25.6ರಷ್ಟು ಇದ್ದರೆ, ಕೇರಳದಲ್ಲಿ 12 9ರಷ್ಟು ಇದೆ ಇವು ಕೇವಲ ಅಲ್ಪ ವ್ಯತ್ಯಾಸಗಳಲ್ಲ ‘ಎರಡು ಭಾರತಗಳು’ ಜನಸಂಖ್ಯೆಯ ಸ್ವರೂಪದಲ್ಲಿ ವಿರುದ್ಧ ದಿಕ್ಕಿನಲ್ಲಿ ಮತ್ತು ಸಂಘರ್ಷದ ಹಾದಿಯಲ್ಲಿ ಸಾಗುತ್ತಿರುವುದನ್ನು ಇವು ಸೂಚಿಸುತ್ತಿವೆ.
- ವಲಸೆ ಮತ್ತು ಅಭಿವೃದ್ಧಿಯ ಅಂತರರಾಷ್ಟ್ರೀಯ ಸಂಸ್ಥೆ ಮತ್ತು ಭಾರತದ ಜನಸಂಖ್ಯಾ ಫೌಂಡೇಷನ್ ಮುನ್ನೋಟ ವರದಿಯು ಜನಸಂಖ್ಯಾಶಾಸ್ತ್ರಜ್ಞರು ಈ ಬಗ್ಗೆ ಹಿಂದೆಯೇ ನೀಡಿದ್ದ ಎಚ್ಚರಿಕೆಯನ್ನು ದೃಢಪಡಿಸಿದೆ ದಕ್ಷಿಣದ ರಾಜ್ಯಗಳಲ್ಲಿ, 2041ರ ನಂತರ ಜನಸಂಖ್ಯೆಯಲ್ಲಿ ತೀವ್ರ ಕುಸಿತ ಆರಂಭವಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಕೆ ನೀಡಿದ್ದರು.
- ‘ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ 1981 ಮತ್ತು 2021ರ ನಡುವೆ ಭಾರತದ ಜಿಡಿಪಿಗೆ ಜನಸಂಖ್ಯೆಯು ವಾರ್ಷಿಕವಾಗಿ ಶೇ 19ರನ್ನು ಕೊಡುಗೆ ನೀಡಿದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಿರುವ ದೇಶದ ಅತ್ಯಂತ ಪ್ರಮುಖ ರಾಜ್ಯಗಳಲ್ಲಿ ದುಡಿಯುವ ವಯಸ್ಸಿನ ಜನರ ಕೊರತೆಯುಂಟಾದರೆ, ಜನಸಂಖ್ಯೆಯಿಂದ ಆಗುತ್ತಿದ್ದ ಪ್ರಯೋಜನಗಳು ಹಿಮ್ಮುಖವಾಗಬಹುದು.
- ಭಾರತದ ಅಗ್ರಗಣ್ಯ ಜನಸಂಖ್ಯಾಶಾಸ್ತ್ರಜ್ಞರಲ್ಲಿ ಒಬ್ಬರಾದ ಎಸ್ ಇರುದಯ ರಾಜನ್ ಅವರು ಟಿಎಫ್‌ಆರ್ ಪ್ರವೃತ್ತಿಯ ಬಗ್ಗೆ, ಮಾತನಾಡಿದ್ದು, ಫಲವಂತಿಕೆ ನಿಯಂತ್ರಿಸಲು ದಶಕಗಳ ಕಾಲ ರಾಜಕೀಯ ಬದ್ಧತೆ ತೋರಿದ್ದರ ಅನಿವಾರ್ಯ ಫಲಿತಾಂಶ ಇದು ಎಂದಿದ್ದಾರೆ. 1970ರ ದಶಕದಲ್ಲಿ ಕೇರಳದಲ್ಲಿ ನಡೆದ ಒಂದು ಅಭಿಯಾನದತ್ತ ಅವರು ಗಮನ ಸೆಳೆಯುತ್ತಾರೆ. ಆಗ ಸರ್ಕಾರದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಅಭಿಯಾನವನ್ನು ಸಾರ್ವಜನಿಕ ಉತ್ಸವದಂತೆ ನಡೆಸಲಾಗಿತ್ತು.
- ‘ಈಗ ಅವರು ಹೆಚ್ಚು ಮಕ್ಕಳನ್ನು ಹೊಂದುವಂತೆ ಒತ್ತಾಯಿಸು ತ್ತಿದ್ದಾರೆ. ಕಡಿಮೆ ಮಕ್ಕಳನ್ನು ಹೊಂದುವ ದಿಸೆಯಲ್ಲಿ ಸರ್ಕಾರವು ಸಣ್ಣ ಕುಟುಂಬಗಳಿಗೆ ಪ್ರೋತ್ಸಾಹ ನೀಡಿದಾಗ, ಜನರು ಅದನ್ನು ಅನುಸರಿಸಿದ್ದರು. ಆದರೆ, ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವನ್ನು ಜನ ಅದೇ ರೀತಿಯಲ್ಲಿ ಸ್ವೀಕರಿಸದೇ ಇರಬಹುದು. ಇಂದಿನ ತಲೆಮಾರು ಕೂಡ ತಮ್ಮ ಪೋಷಕರು ಹುಟ್ಟುಹಾಕಿದ ಮಾದರಿಯನ್ನೇ ಅನುಸರಿಸುವ ಸಾಧ್ಯತೆಯಿದೆ. ಮುಂದಿನ ಪೀಳಿಗೆಯು ವಿಭಿನ್ನವಾಗಿ ಯೋಚಿಸಬಹುದೇನೋ. ಆದರೆ, ಅದು 30 ರಿಂದ 40 ವರ್ಷಗಳನ್ನು ತೆಗೆದುಕೊಳ್ಳಬಹುದು’ ಎಂದು ಅವರು ಹೇಳುತ್ತಾರೆ.
- ಪ್ರೋತ್ಸಾಹ ಧನದ ನೀಡುವಂತಹ ಕ್ರಮಗಳಿಗಿಂತ ನೀತಿಯ ಮಟ್ಟದಲ್ಲಿ ಬದಲಾವಣೆ ತರುವುದು ಉತ್ತಮ ಎನ್ನುವುದು ರಾಜನ್ ಅವರ ಅನಿಸಿಕೆ ಮಕ್ಕಳನ್ನು ಪಡೆದ ನಂತರ ಮತ್ತೆ ಕೆಲಸಕ್ಕೆ ಹಿಂದಿರುಗುವ ಬಗ್ಗೆ ಮಹಿಳೆಯರಿಗೆ ಖಾತರಿ ಬೇಕು’ ಎಂದು ಅವರು ಹೇಳುತ್ತಾರೆ:
- ಅಂತರರಾಷ್ಟ್ರೀಯ ಪುರಾವೆಗಳೂ ರಾಜನ್ ಅವರ ನಿಲುವನ್ನು ಸಮರ್ಥಿಸುತ್ತವೆ. ಹೆಚ್ಚು ಮಕ್ಕಳನ್ನು ಹೆರುವಂತೆ ಉತ್ತೇಜಿಸುವ ಚೀನಾದ (ಪ್ರೋನಾಟಲಿಸ್) ಕಾರ್ಯಕ್ರಮವು ಫಲವಂತಿಕೆ ಕುಸಿತವನ್ನು ಹಿಮ್ಮೆಟ್ಟಿಸುವ ವಿಫಲವಾಗಿದೆ ಎಂದು ರಾಂಡ್ ಕಾರ್ಪೊರೇಷನ್ 2025 ನವೆಂಬರ್‌ನಲ್ಲಿ ನಡೆಸಿದ ಮೌಲ್ಯಮಾಪನ ವರದಿಯಲ್ಲಿ ತಿಳಿಸಿದೆ.
- ರಾಜನ್ ಅವರ ಪ್ರಕಾರ. ಮಕ್ಕಳನ್ನು ಹೊಂದು ಬಗೆಗಿನಮೂಲಭೂತ ಲೆಕ್ಕಾಚಾರವು ತಲೆಕೆಳಗಾಗಿದೆ. ‘ಮೊದಲು ಮಕ್ಕಳನ್ನು ಆಸ್ತಿ ಎಂದು ಪರಿಗಣಿಸಲಾಗುತ್ತಿತ್ತು ಈಗ ಅವರು ಹೊಣೆಗಾರಿಕೆಗಳಂತೆ ಆಗಿದ್ದಾರೆ’ ಎಂದು ಅವರು ಹೇಳುತ್ತಾರೆ
- ಗ್ರಹಿಕೆಯಲ್ಲಿನ ಬದಲಾವಣೆಯು ಜೀವನದ ವಿವಿಧ ಹಂತಗಳಲ್ಲಿ ಗೋಚರಿಸುತ್ತಿದೆ ಒಂದು ಕಾಲದಲ್ಲಿ ಮನೆಗಳಲ್ಲಿಯೇ ಮಕ್ಕಳ ಜನನ ಆಗುತ್ತಿತ್ತು. ಆದರೆ, ಈಗ ಹೆಚ್ಚಿನ ಹರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿದ್ದು, ಅದಕ್ಕೆ ದುಬಾರಿ ವೆಚ್ಚ ಭರಿಸಬೇಕು ಸಣ್ಣ ಕುಟುಂಬಗಳು ನಗರಕ್ಕೆ ವಲಸೆ ಬರುವ ಪ್ರಮತ್ತಿ ಹೆಚ್ಚಾಗಿದ್ದು, ಮಕ್ಕಳ ಅನೌಪಚಾರಿಕ ಪಾಲನೆ ಕಣ್ಮರೆಯಾಗಿದೆ ಇದರಿಂದ ಮಹಿಳೆಯರು ಹೆಚ್ಚುವರಿ ಸವಾಲನ್ನು ಎದುರಿಸಬೇಕಾಗಿ ಬಂದಿದೆ. ಮಕ್ಕಳ ಪಾಲನೆಗಾಗಿ ವೃತ್ತಿಜೀವನದ ಮಧ್ಯೆ ಬಿಡುವು ಪಡೆಯುವ ಅವರಿಗೆ ನಂತರ ಕೆಲಸಕ್ಕೆ ಹಿಂದಿರುಗುವ ಅವಕಾಶಗಳು ಸೀಮಿತವಾಗುತ್ತವೆ
- ಇದೆಲ್ಲದರ ಪರಿಣಾಮವಾಗಿ ಫಲವಂತಿಕೆ ಪ್ರಮಾಣವು ಕುಸಿದಿದ್ದು ಅದು ಹೆಚ್ಚಾಗುವ ಯಾವುದೇ ಸೂಚನೆ ಪ್ರಸ್ತುತ ಕಾಣುತ್ತಿಲ್ಲ, ರಾಜನ್ ಅವರು ಹೇಳುವಂತೆ, ಇದು ವೈಯಕ್ತಿಕ ಬೆಳವಣಿಗೆಯ ಮಾನದಂಡವಾಗಿ ರೂಢಿಗೆ ಬಂದಿದ್ದು ಸಾಮಾಜಿಕ ಪದ್ದತಿ’ಯಾಗಿ ಮಾರ್ಪಟ್ಟಿದೆ. ಜ್ಞಾನದ ರೀತಿಯಲ್ಲಿಯೇ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದೆ.
ವಲಸಿಗರನ್ನು ಆಧರಿಸಿದ ಆರ್ಥಿಕತೆ

- ಜನಸಂಖ್ಯೆಯ ಸ್ವರೂಪದಲ್ಲಿ ಆಗುವ ಬದಲಾವಣೆಯಿಂದಾಗಿ ಅತ್ಯಂತ ಹೆಚ್ಚು ಪರಿಣಾಮವಾಗುವುದು ವಲಸೆ ಮತ್ತು ವಿದೇಶದಲ್ಲಿರುವ ಭಾರತೀಯರು ತಾಯ್ತಾಡಿಗೆ ಕಳುಹಿಸುವ ಹಣದ ಆರ್ಥಿಕತೆಯ ಮೇಲೆ ಈ ಆರ್ಥಿಕತೆಯೇ ದಕ್ಷಿಣ ಭಾರತದ ರಾಜ್ಯಗಳನ್ನು ದೀರ್ಘ ಸಮಯದಿಂದ ಪೋಷಿಸುತ್ತಾ ಬಂದಿದೆ. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ದಶಕಗಳಿಂದ ಕೌಶಲ ಮತ್ತು ಅರೆಕೌಶಲ ಹೊಂದಿರುವ ಕಾರ್ಮಿಕರನ್ನು ಕೊಲ್ಲಿ ಮತ್ತು ಬೇರೆ ರಾಷ್ಟ್ರಗಳಿಗೆ ಕಳುಹಿಸುತ್ತಾ ಬಂದಿವೆ.
- ವಿದೇಶಗಳಲ್ಲಿರುವ ಭಾರತೀಯರು ತಾಯ್ಯಾಡಿಗೆ ಕಳುಹಿಸುತ್ತಿರುವ ಹಣದಲ್ಲಿ ಕೇರಳದ ಪಾಲು 2017ರಲ್ಲಿ ಶೇ 19ರಷ್ಟು ಇದ್ದದ್ದು, 2024ರ ಹೊತ್ತಿಗೆ ಶೇ 19.7ಕ್ಕೆ ಏರಿಕೆಯಾಗಿತ್ತು ತಮಿಳುನಾಡಿನ ಪಾಲು ಶೇ 8ರಿಂದ ಶೇ 10.4ಕ್ಕೆ ಏರಿಕೆ ಕಂಡಿತ್ತು ಕೇರಳದ ಬ್ಯಾಂಕುಗಳಲ್ಲಿ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಇರಿಸಿರುವ ಠೇವಣಿ ಮೊತ್ತ 3 ಲಕ್ಷ ಕೋಟಿ.
- ಕೇರಳದಿಂದ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ. ಸ್ಥಳೀಯವಾಗಿ ಕೌಶಲ ಮಟ್ಟ ಹೆಚ್ಚಾಗುತ್ತಿರುವುದು ಮತ್ತು ಉತ್ತಮ ಸಂಬಳ ಸಿಗುತ್ತಿರುವುದರಿಂದ ವಿದೇಶದಲ್ಲಿ ಕಡಿಮೆ ಸಂಬಳದ ಕೆಲಸಕ್ಕೆ ಹೋಗಲು ಜನರು ಹಿಂದೇಟು ಹಾಕುತ್ತಿರುವುದು ಇದಕ್ಕೆ ಭಾಗಶಃ ಕಾರಣ. ಇದರ ನಡುವೆಯೇ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ ಕಡಿಮೆ ಮತ್ತು ಅರೆಕೌಶಲ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡ ನಿರ್ಮಾಣ, ಆತಿಥ್ಯ ಮತ್ತು ಸೇವಾ ಕ್ಷೇತ್ರಗಳಲ್ಲಿ ಕೆಲಸ ಅರಸಿಕೊಂಡು ಕೊಲ್ಲಿ ರಾಷ್ಟ್ರಗಳಿಗೆ ಹೋಗಲು ಆರಂಭಿಸಿದ್ದಾರೆ.
- ‘ವಿದೇಶಗಳಲ್ಲಿರುವ ಕೇರಳದ ಕಾರ್ಮಿಕರು ಈಗ ಕೌಶಲಯುಕ್ತ ಉದ್ಯೋಗಗಳನ್ನು ಬಯಸುತ್ತಿದ್ದಾರೆ ರಾಜ್ಯದಲ್ಲಿ ಸುಲಭವಾಗಿ ಶಿಕ್ಷಣ ಸಿಗುತ್ತಿರುವುದರಿಂದ ಇದು ಸಾಧ್ಯವಾಗಿದೆ’ ಎಂದು ಹೇಳುತ್ತಾರೆ ಕೇರಳದ ವಲಸೆ ಮತ್ತು ಎಲ್ಲರನ್ನೊಳಗೊಂಡ ಅಭಿವೃದ್ಧಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಬಿನೋಯ್ ಪೀಟರ್ ಹೇಳುತ್ತಾರೆ. ‘ಆದರೆ ಈಗ ಹೆಚ್ಚಿನ ಮಲಯಾಳಿಗಳು ಅದರಲ್ಲೂ ಹೆಚ್ಚಾಗಿ ವಿದ್ಯಾರ್ಥಿಗಳು ಯುರೋಪ್ ಕೆನಡಾ ಮತ್ತು ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದು ಭವಿಷ್ಯದಲ್ಲಿ ಅಲ್ಲಿಯೇ ಅವರು ನೆಲಸುವ ಸಾಧ್ಯತೆ ಇದೆ ಹೀಗಾದರೆ, ತಾನ್ನಾಡಿಗೆ ಬರುವ ಹಣ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಅವರು
ಫಲವಂತಿಕೆ ಕುಸಿತದ ಪರಿಣಾಮ

- ಇನ್ನೊಂದು ಕಡೆ ದಕ್ಷಿಣದ ರಾಜ್ಯಗಳಲ್ಲಿ ಕಡಿಮೆಯಾಗುತ್ತಿರುವ ಜನನ ಪ್ರಮಾಣವು ಈ ಪ್ರದೇಶದ ಕಾರ್ಮಿಕರ ಚಿತ್ರಣಕ್ಕೆ ಹೊಸ ರೂಪ ನೀಡುತ್ತಿದೆ
- ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಿಂದ ವಲಸೆ ಬಂದಿರುವ ಕಾರ್ಮಿಕರು ಕರ್ನಾಟಕ, ಕೇರಳ, ತಮಿಳುನಾಡಿನಾದ್ಯಂತ ಕಟ್ಟಡ ನಿರ್ಮಾಣ, ಕೈಗಾರಿಕೆ, ಮೀನುಗಾರಿಕಾ ಬಂದರು ಮತ್ತು ಮನೆಗಳ ಅಡುಗೆ ಕೋಣೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
- ‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಟ್ಟು ಫಲವಂತಿಕೆ ದರ ಕುಸಿದಿರುವುದು ಉತ್ತರದಿಂದ ದಕ್ಷಿಣದೆಡೆಗೆ ಆಂತರಿಕ ವಲಸೆ ಹೆಚ್ಚಾಗುತ್ತಿರುವುದಕ್ಕೆ ನೇರ ಕಾರಣ’ ಎಂಬುದು ಪಾಪ್ಯುಲೇಷನ್ ಫೌಂಡೇಷನ್ ಆಫ್ ಇಂಡಿಯಾದ ಹಿರಿಯ ರಿಸರ್ಚ್ ಫೆಲೋ ರತ್ನಕುಮಾರ್ ಅವರ ಸ್ಪಷ್ಟ ಅಭಿಪ್ರಾಯ.
- ‘ಇದರ ತಕ್ಷಣದ ಪರಿಣಾಮವೇ ಕಾರ್ಮಿಕರ ಕೊರತೆ ಭವಿಷ್ಯದಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ’ ಎಂದು ಹೇಳುತ್ತಾರೆ ಅವರು.
- ಇದರ ಇನ್ನೊಂದು ಪರಿಣಾಮ ಏನೆಂದರೆ, ಯುವಜನರ ಸಂಖ್ಯೆ ಕಡಿಮೆಯಾಗಿ ವಯಸ್ಕರ, ವೃದ್ಧರ ಸಂಖ್ಯೆ ಹೆಚ್ಚಾಗುತ್ತಿರುವುದು. ಇದಕ್ಕೆ ಕೇರಳದ ಪಟ್ಟಣಂತಿಟ್ಟಿದ ಉದಾಹರಣೆಯನ್ನು ರತ್ನಕುಮಾರ್ ಕೊಡುತ್ತಾರೆ. ಈ ಜಿಲ್ಲೆಯು ದೇಶದಲ್ಲೇ ಅತ್ಯಂತ ಕಡಿಮೆ ಫಲವಂತಿಕೆ ದರವನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆಯಲ್ಲಿ ವಯಸ್ಸಾದವರೇ ಹೆಚ್ಚಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಶಾಲೆಗಳು ಮುಚ್ಚುತ್ತಿವೆ. ಯುವ ಗ್ರಾಹಕರನ್ನು ಅವಲಂಬಿಸಿದ ವ್ಯಾಪಾರಕ್ಕೂ ಧಕ್ಕೆಯಾಗುತ್ತಿದೆ. ಇದು ಈ ಜಿಲ್ಲೆ ಒಂದರ ಕಥೆಯಲ್ಲ, ಭವಿಷ್ಯದಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಬಹುದು ಎಂಬುದು ಅವರ ಕಳವಳ.
ಹಣಕಾಸಿನ ಒತ್ತಡ
- ಫಲವಂತಿಕೆ ಕುಸಿತದಿಂದ ಕಾರ್ಮಿಕ ಬಲಕ್ಕೆ ಸೇರ್ಪಡೆಗೊಳ್ಳುವ ಯುವಜನರ ಸಂಖ್ಯೆ ಕಡಿಮೆಯಾಗುತ್ತಿದ್ದು ಅವಲಂಬನೆ ಅನುಪಾತ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗ ಮಾಡುವ ಪ್ರತಿ ವಯಸ್ಕನೂ ಹಿರಿಯ ನಾಗರಿಕರಿಗೆ ಬೆಂಬಲವಾಗಿ ನಿಲ್ಲಬೇಕಾಗುತ್ತದೆ. ದಕ್ಷಿಣದ ರಾಜ್ಯಗಳು ಉದಾರವಾಗಿರುವಂತಹ ಜನಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿವೆ. ಆದರೂ, ಇದು ದೀರ್ಘಾವಧಿಯಲ್ಲಿ ಸರ್ಕಾರದ ಮೇಲಿನ ಹಣಕಾಸಿನ ಹೊರೆ ಹೆಚ್ಚಿಸುತ್ತದೆ. ಮುಂದಿನ ಎರಡು ದಶಕಗಳಲ್ಲಿ ದಕ್ಷಿಣದ ರಾಜ್ಯಗಳ ಜನಸಂಖ್ಯಾ ಸ್ವರೂಪದಲ್ಲಿ ಬದಲಾವಣೆ ಆರಂಭವಾಗುವ ನಿರೀಕ್ಷೆ ಇದೆ.
- ಯುವಜನರ ಸಂಖ್ಯೆ ಕುಸಿದು, ಹಿರಿಯರ ಸಂಖ್ಯೆ ಹೆಚ್ಚಾಗಲಿರುವುದರಿಂದ ಕಾರ್ಮಿಕ ಮತ್ತು ಸಾಮಾಜಿಕ ನೀತಿಗಳು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾದ ಅಗತ್ಯವಿದೆ ಮಹಿಳೆಯರು ಕಾರ್ಮಿಕಬಲದಲ್ಲಿ ತೊಡಗಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುವುದು, ಹಿರಿಯ ಕಾರ್ಮಿಕರ ಸಾಮರ್ಥ್ಯವನ್ನು ಬಳಸಿಕೊಳ್ಳುವುದು, ವಲಸೆ ಕಾರ್ಮಿಕರನ್ನು ಪರಿಣಾಮಕಾರಿಯಾಗಿ ಸಂಯೋಜಿಸುವುದು ಮತ್ತು ಬದಲಾಗುತ್ತಿರುವ ಜನಸಂಖ್ಯೆಯ ಸ್ಮರೂಪಕ್ಕೆ ಅನುಗುಣವಾಗಿ ಸಾರ್ವಜನಿಕ ವೆಚ್ಚವನ್ನು ಮರುಮಾಪನಕ್ಕೆ ಒಳಪಡಿಸುವುದು ಮುಂತಾದ ಪ್ರಮುಖ ವಿಷಯಗಳತ್ತ ಸರ್ಕಾರ ಗಮನ ಹರಿಸಬೇಕಾಗಿದೆ.
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ಕಾಳಿ ಹುಲಿ ಅಭಯಾರಣ್ಯ: 663 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ
ಸಂದರ್ಭ: ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ 663 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ.
- ಅರಣ್ಯದ ಅಂಚಿನಿಂದ 10ಕಿ.ಮೀ. ವರೆಗಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ.
- ಭೀಮಗಡ ವನ್ಯಜೀವಿಧಾಮವು ಪಕ್ಕದಲ್ಲಿ ಇರುವುದರಿಂದ ಉತ್ತರ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸಿಲ್ಲ ಈಶಾನ್ಯದಲ್ಲಿ 5 ಕಿ ಮೀ.ಯಿಂದ 10 ಕಿ.ಮೀ. ಪೂರ್ವದಲ್ಲಿ 1ಕಿ.ಮೀ.ಯಿಂದ 7ಕಿ.ಮೀ. ವರೆಗೆ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ.
- ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ 75 ಚ.ಕಿ.ಮೀ. ಕಂದಾಯ ಪ್ರದೇಶ, 84 ಚ.ಕಿ.ಮೀ ಕಂದಾಯ ಗ್ರಾಮಗಳು ಹಾಗೂ 503 ಚ.ಕಿ.ಮೀ. ಅರಣ್ಯ ಸೇರಿವೆ. ಆಕ್ಷೇಪಣೆ ಸಲ್ಲಿಕೆಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ.
- ಅಂತಿಮ ಅಧಿಸೂಚನೆ ಪ್ರಕಟಗೊಂಡ ಬಳಿಕ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರವು ವಲಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು ಸ್ಥಳೀಯ ಜನರೊಂದಿಗೆ ಸಮಾಲೋಚಿಸಿ ಈ ಪ್ರಕ್ರಿಯೆ ನಡೆಸಬೇಕು’ ಎಂದು ಸಚಿವಾಲಯ ಸೂಚಿಸಿದೆ.
ಕಾಳಿ ಹುಲಿ ಅಭಯಾರಣ್ಯವು (Kali Tiger Reserve) ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮತ್ತು ಜೊಯಿಡಾ ತಾಲ್ಲೂಕುಗಳಲ್ಲಿ ಹರಡಿಕೊಂಡಿರುವ ಒಂದು ಪ್ರಮುಖ ಸಂರಕ್ಷಿತ ಪ್ರದೇಶವಾಗಿದೆ.
೧. ಹಿನ್ನೆಲೆ ಮತ್ತು ಹೆಸರು:
ಇದನ್ನು ಮೊದಲು ‘ದಾಂಡೇಲಿ-ಅಂಶಿ ಹುಲಿ ಅಭಯಾರಣ್ಯ’ ಎಂದು ಕರೆಯಲಾಗುತ್ತಿತ್ತು.
೨೦೧೫ರಲ್ಲಿ ಕರ್ನಾಟಕ ಸರ್ಕಾರವು ಇದರ ಹೆಸರನ್ನು ‘ಕಾಳಿ ಹುಲಿ ಅಭಯಾರಣ್ಯ’ ಎಂದು ಬದಲಾಯಿಸಿತು. ಈ ಪ್ರದೇಶದ ಜೀವನದಿಯಾಗಿರುವ ‘ಕಾಳಿ’ ನದಿಯ ಹೆಸರನ್ನು ಇದಕ್ಕೆ ಇಡಲಾಗಿದೆ.
೨. ಭೌಗೋಳಿಕತೆ:
ಇದು ಪಶ್ಚಿಮ ಘಟ್ಟಗಳ ಉತ್ತರ ಭಾಗದಲ್ಲಿದೆ.
ಈ ಅಭಯಾರಣ್ಯವು ದಟ್ಟವಾದ ಎಲೆ ಉದುರಿಸುವ ಕಾಡುಗಳು ಮತ್ತು ನಿತ್ಯಹರಿದ್ವರ್ಣದ ಕಾಡುಗಳಿಂದ ಕೂಡಿದೆ.
೩. ವನ್ಯಜೀವಿಗಳು:
ಹುಲಿ: ಇಲ್ಲಿನ ಪ್ರಮುಖ ಆಕರ್ಷಣೆ.
ಕಪ್ಪು ಚಿರತೆ (Black Panther): ಈ ಅಭಯಾರಣ್ಯವು ಕಪ್ಪು ಚಿರತೆಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ. ದಟ್ಟವಾದ ಕಾಡು ಇರುವುದರಿಂದ ಇಲ್ಲಿ ಕಪ್ಪು ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.
ಇತರ ಪ್ರಾಣಿಗಳು: ಆನೆ, ಕಾಟಿ (Indian Bison), ಚಿರತೆ, ಜಿಂಕೆ, ಮತ್ತು ಹನುಮಾನ್ ಲಂಗೂರ್.
ಪಕ್ಷಿಗಳು: ಗ್ರೇಟ್ ಹಾರ್ನ್‌ಬಿಲ್ (ಮಲಬಾರ್ ಪೈಡ್ ಹಾರ್ನ್‌ಬಿಲ್) ಸೇರಿದಂತೆ ನೂರಾರು ಜಾತಿಯ ಪಕ್ಷಿಗಳಿಗೆ ಇದು ಆಶ್ರಯತಾಣವಾಗಿದೆ.
೪. ನದಿ ಮತ್ತು ಪ್ರವಾಸೋದ್ಯಮ:
ಕಾಳಿ ನದಿ: ಈ ನದಿಯು ಅಭಯಾರಣ್ಯದ ಮಧ್ಯದಲ್ಲಿ ಹರಿಯುತ್ತದೆ.
ಸಾಹಸ ಕ್ರೀಡೆಗಳು: ಇಲ್ಲಿ ರಿವರ್ ರಾಫ್ಟಿಂಗ್ (River Rafting) ಅತ್ಯಂತ ಜನಪ್ರಿಯ. ಜೊತೆಗೆ ಕಯಾಕಿಂಗ್ ಮತ್ತು ಜಂಗಲ್ ಸಫಾರಿಗೂ ಇದು ಹೆಸರುವಾಸಿ.
ಪ್ರಮುಖ ಸ್ಥಳಗಳು: ಸಿನೆರಿ ರಾಕ್, ಕವಳ ಗುಹೆಗಳು ಮತ್ತು ಉಳವಿ ಚನ್ನಬಸವೇಶ್ವರ ದೇವಸ್ಥಾನ ಈ ಭಾಗದ ಪ್ರಮುಖ ಆಕರ್ಷಣೆಗಳು.
೫. ಪರಿಸರ ಮಹತ್ವ:
ಇದು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿರುವ ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದೆ. ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಈ ಅಭಯಾರಣ್ಯದ ಪಾತ್ರ ಬಹಳ ದೊಡ್ಡದಿದೆ.
ದಕ್ಷಿಣ ಧ್ರುವದಲ್ಲಿ ಮಾನವ ಹೆಜ್ಜೆ ಇಡುವ ಪ್ರಯತ್ನಕ್ಕೆ ಮುನ್ನುಡಿ: ಚಂದ್ರನ ಪರಿಭ್ರಮಣ ನಡೆಸಿದ ‘ಆರ್ಟೆಮಿಸ್-2’
ಸಂದರ್ಭ: ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟಿಮಿಸ್-2’ನ ಓರಿಯೋನ್ ಕೋಶವು ಸೋಮವಾರ ರಾತ್ರಿ ಚಂದ್ರನ ಸುತ್ತ ಐತಿಹಾಸಿಕ ಪರಿಭ್ರಮಣ ನಡೆಸಿದೆ.

- ನಾಲ್ವರು ಗಗನಯಾನಿಗಳಿದ್ದ ಅಮೆರಿಕದ ಓರಿಯೊನ್ ಕೋಶವು ಚಂದ್ರನ ಸುತ್ತ ಏಳು ಗಂಟೆ ಪರಿಭ್ರಮಣ ಮಾಡಿದ ವೇಳೆ ಭೂಮಿಗೆ ಗೋಚರಿಸದ, ಚಂದ್ರನ ಇನ್ನೊಂದು ಬದಿಯ ಈ ಹಿಂದೆ ಕಂಡಿರದ ಹಲವು ಚಿತ್ರಗಳನ್ನು ಸೆರೆಹಿಡಿದು ನಾಸಾಗೆ ಕಳುಹಿಸುತ್ತಿದೆ.
- ಐದು ದಶಕಗಳ ಬಳಿಕ ಚಂದ್ರನ ಕಕ್ಷೆಗೆ ನಾಸಾ, ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನಿಗಳನ್ನು ಕಳುಹಿಸಿತ್ತು. ಈ ಪರಿಭ್ರಮಣವು ‘ಅಪೋಲೊ ಯುಗ’ದ ನಂತರ ಚಂದ್ರನಲ್ಲಿ ನಾಸಾದ ಮೊದಲ ಪಯಣವಾಗಿದೆ. ಮುಂದಿನ 2 ವರ್ಷಗಳಲ್ಲಿ ದಕ್ಷಿಣ ಧ್ರುವದಲ್ಲಿ ಮಾನವ ಹೆಜ್ಜೆ ಇಡುವ ಪ್ರಯತ್ನಕ್ಕೆ ಇದು ಮುನ್ನುಡಿ ಬರೆದಿದೆ.
- 1972ರಲ್ಲಿ ‘ಆಪೋಲೊ-13’ ತಂಡವು ಚಂದ್ರನಲ್ಲಿಗೆ ಪಯಣಿಸಿತ್ತು. 2,48,655 ಮೈಲಿ( 4,00।71 ಕಿಲೋಮೀಟರ್) ದೂರ ಕ್ರಮಿಸಿದ ಅಪೋಲೊದ ದಾಖಲೆಯನ್ನು ‘ಆರ್ಟಿಮಿಸ್-2’ ಮೀರಿದೆ.
- ‘ಚಂದ್ರನನ್ನು ಈಗ ಬರಿಗಣ್ಣಿನಲ್ಲಿ ನೋಡಬಹುದು ಎಂದು ನನ್ನ ಮನಸ್ಸಿಗೆ ಅನ್ನಿಸಿತು. ಇದು ನಂಬಲಸಾಧ್ಯವಾದುದು ಈ ಪೀಳಿಗೆ ಮತ್ತು ಮುಂದಿನ ಪೀಳಿಗೆ ಈ ದಾಖಲೆಯನ್ನು ಬೇಗ ಮುರಿಯಬೇಕು ಎಂದು ಕೆನಡಾದ ಗಗನಯಾನಿ ಜೆರೆಮಿ ಹ್ಯಾನ್ಸನ್ ಅವರು ರೇಡಿಯೊ ಸಂದೇಶ ರವಾನಿಸಿದ್ದಾರೆ.
- ‘ಅಪೋಲೊ 13’ರ ದಾಖಲೆಯನ್ನು ಅಳಿಸಿಹಾಕಿದ ನಂತರ ಈ ಗಗನಯಾನಿಗಳು ಈಗಾಗಲೇ ಗುರ್ತಿಸಿರುವ ಚಂದ್ರನ ಎರಡು ಹೊಸ ಕುಳಿಗಳಿಗೆ ಹೆಸರು ಇಡಲು ಅನುಮತಿ ಕೋರಿದರು. ತಾವು ತೆರಳಿದ ಕೋಶದ ಹೆಸರು ಮತ್ತು 2020ರಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದ ಕಮಾಂಡರ್ ರೀಡ್ ವೈಸ್‌ಮನ್ ಅವರ ಪತ್ನಿಯ ಹೆಸರನ್ನು ನಾಮಕರಣ ಮಾಡುವುದಾಗಿ ಹೇಳಿದರು.
- ಈ ಮನವಿಯಿಂದ ವೈಸ್‌ಮನ್ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂದವು. ನಾಲ್ವರೂ ಗಗನಯಾನಿಗಳು ಭಾವುಕರಾದರು. ಇಡೀ ದೃಶ್ಯವನ್ನು ಚಿತ್ರಗಳ ರೂಪದಲ್ಲಿ ರೇಡಿಯೊದಲ್ಲಿ ಪ್ರಸಾರ ಮಾಡಲಾಯಿತು.
- ಚಂದ್ರ ಮತ್ತು ಭೂಮಿಯನ್ನು ಒಂದೇ ಬಾರಿಗೆ ಸೆರೆಹಿಡಿದಿರುವುದಾಗಿ ಗಗನಯಾನಿಗಳು ಹೂನ್‌ನಲ್ಲಿರುವ ವಿಜ್ಞಾನಿಗಳಿಗೆ ವಿವರಣೆ ನೀಡಿದರು.
- ‘ಕೆಲವು ಶಿಖರಗಳು ಹೊಳೆಯುತ್ತಿದ್ದವು ಹಿಮದಿಂದ ಆವೃತ್ತವಾಗಿದ್ದರೂ ಅವು ಗೋಚರಿಸಿದವು’ ಎಂದು ಪೈಲಟ್ ವಿಕ್ಟರ್ ಗೋವರ್ ಅವರು ಹೇಳಿದರು.
- ನಿಕಾನ್ ಕಾಮರಾದ ಮೂಲಕ ಚಿತ್ರ ಸೆರೆಹಿಡಿಯಲಾಗಿದೆ ಕೆಲವು ಚಿತ್ರಗಳನ್ನು, ಸೆರೆಹಿಡಿಯಲು ಗಗನಯಾನಿಗಳು ತಮ, ಐಪೋನ್‌ಗಳನ್ನೂ ಬಳಸಿದರು.
- ಅಮೆರಿಕದ ರೀಡ್ ವೈಸ್‌ಮನ್, ವಿಕ್ಟರ್ ಗೋವರ್. ಕ್ರಿಸ್ಟಿನಾ ಕೋಚ್ ಹಾಗೂ ಕೆನಡಾದ ಜೆರೆಮಿ ಹ್ಯಾನ್ಸನ್ ತಂಡದಲ್ಲಿದ್ದರು. 54 ವರ್ಷಗಳ ಬಳಿಕ ಚಂದ್ರನನ್ನು ಮನುಷ್ಯ ಮತ್ತೊಮ್ಮೆ ಹತ್ತಿರದಿಂದ ನೋಡಿದ ದಾಖಲೆಯನ್ನು ಈ ತಂಡ ಬರೆದಿದೆ.
ಪತ್ರಿಕೆ-V: ಸಾಮಾನ್ಯ ಅಧ್ಯಯನ-4
Source: Prajavani