ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ಹರ ಪಾರ್ವತಿ ಕಥಾಕ್ಕೆ ‘ಸರಸ್ವತಿ ಸಮ್ಮಾನ್’
ಸಂದರ್ಭ: ಬೆಂಗಳೂರು ಲೇಖಕ ರಾಮ್ ಕುಮಾರ್ ಮುಖ್ಯೋಪಾಧ್ಯಾಯ ಅವರ ‘ಹರ ಪಾರ್ವತಿ ಕಥಾ’ ಬಂಗಾಳಿ ಕಾದಂಬರಿಯು 2025ನೇ ಸಾಲಿನ ‘ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಕಾದಂಬರಿಯು ಶಿವ ಮತ್ತು ಪಾರ್ವತಿ ಕುರಿತ ಪೌರಾಣಿಕ ಕಥಾಹಂದರವನ್ನು ಹೊಂದಿದೆ.
ಪ್ರಶಸ್ತಿಯ ಬಗ್ಗೆ:
- ಭಾರತೀಯ ಪ್ರಜೆಗಳು ದೇಶದ ಯಾವುದೇ ಭಾಷೆಯಲ್ಲಿ ಬರೆದ ಶ್ರೇಷ್ಠ ಸಾಹಿತ್ಯ ಕೃತಿಗೆ.
- ಕೆ.ಕೆ. ಬಿರ್ಲಾ ಫೌಂಡೇಷನ್ 1991ರಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ.
- ಅರ್ಹತೆ: ಕಳೆದ 10 ವರ್ಷಗಳಲ್ಲಿ 23 ಮಾನ್ಯತೆ ಪಡೆದ ಭಾರತೀಯ ಭಾಷೆಗಳಲ್ಲಿ ಯಾವುದಾದರೂ ಒಂದರಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗಳು (ಗದ್ಯ ಅಥವಾ ಕಾವ್ಯ).
- ಪ್ರಶಸ್ತಿಯು ₹15 ಲಕ್ಷ ನಗದು ಮತ್ತು ಪಾರಿತೋಷಕವನ್ನು ಒಳಗೊಂಡಿದೆ.
ಲೇಖಕ ರಾಮ್ ಕುಮಾರ್ ಮುಖ್ಯೋಪಾಧ್ಯಾಯ ಅವರ ಬಗ್ಗೆ:

- ರಾಮ್ ಕುಮಾರ್ ಮುಖ್ಯೋಪಾಧ್ಯಾಯ ಅವರು ಕೋಲ್ಕತ್ತದಲ್ಲಿ 1956 ಅಕ್ಟೋಬರ್ 5ರಂದು ಜನಿಸಿದರು. ಹೌರಾದ ರಾಮಕೃಷ್ಣ ಮಿಷನ್ ವಿದ್ಯಾಮಂದಿರದಲ್ಲಿ ಪದವಿ ಮತ್ತು ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಜಾದವ್ಪುರ ವಿಶ್ವವಿದ್ಯಾಲಯದಲ್ಲಿ ಪಿ.ಎಚ್ಡಿ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯ ಪೂರ್ವ ಮತ್ತು ಈಶಾನ್ಯ ಪ್ರದೇಶದ ಕಾರ್ಯದರ್ಶಿಯಾಗಿ ಮತ್ತು ವಿಶ್ವಭಾರತಿ ಪ್ರಕಾಶನ ಇಲಾಖೆಯಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
- ಬಹುಮುಖಿ ಪ್ರತಿಭೆಯನ್ನು ಹೊಂದಿರುವ ಅವರು ಈವರೆಗೆ 9 ಕಾದಂಬರಿಗಳು, 11 ಕಥಾ ಸಂಗ್ರಹ ಮತ್ತು ನಾಲ್ಕು ಪ್ರಬಂಧ ಸಂಗ್ರಹ ಹೊರತಂದಿದ್ದಾರೆ. ಎರಡು ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಅಲ್ಲದೇ, 54 ಭಾಷೆಗಳ ಸುಮಾರು 128 ಜನಪದ ಕಥೆಗಳನ್ನು ಸಂಗ್ರಹಿಸಿದ್ದಾರೆ.
- ಬಂಕಿಮಚಂದ್ರ ಪುರಸ್ಕಾರ ಮತ್ತು ಬಾಂಗ್ಲಾ ಅಕಾಡೆಮಿ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ
ಸಂದರ್ಭ: ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಗೌರವ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ.
- ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಸಾಹಿತಿಗಳಾದ ಪ್ರೊ.ಶಿವರಾಮಯ್ಯ (ಬೆಂಗಳೂರು), ಚಂದ್ರಶೇಖರ ತಾಳ್ಯ (ಚಿತ್ರದುರ್ಗ), ಚಂದ್ರಕಾಂತ ಪೋಕಳೆ (ಬೆಳಗಾವಿ), ಡಾ. ವಸುಂಧರಾ ಭೂಪತಿ (ಬಳ್ಳಾರಿ) ಹಾಗೂ ಎಸ್. ತುಕಾರಾಂ (ಮೈಸೂರು) ಆಯ್ಕೆಯಾಗಿದ್ದಾರೆ. ‘ಗೌರವ ಪ್ರಶಸ್ತಿ’ಯು ತಲಾ ₹50 ಸಾವಿರ ನಗದು ಬಹುಮಾನ ಒಳಗೊಂಡಿದೆ.

- 2025ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿಗೆ ನಿಷ್ಠ ರುದ್ರಪ್ಪ (ಬಳ್ಳಾರಿ), ವೀರೇಶ ಬಡಿಗೇರ (ಬಾಗಲಕೋಟೆ), ಸಿ.ಜಿ. ಲಕ್ಷ್ಮೀಪತಿ (ಚಿತ್ರದುರ್ಗ), ಕಂನಾಡಿಗ ನಾರಾಯಣ (ಬೆಂಗಳೂರು), ರೂಪ ಹಾಸನ (ಹಾಸನ), ಜಯರಾಮ್ ರಾಯಪುರ (ವಿಜಯವಾಡ), ಕುಮುದಾ ಸುಶೀಲ್ (ದಾವಣಗೆರೆ), ಓ. ನಾಗರಾಜು (ತುಮಕೂರು), ಬಿ.ಎಂ ಬಷೀರ್ (ಮಂಗಳೂರು) ಹಾಗೂ ಜ್ಯೋತಿ (ಬೆಂಗಳೂರು) ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ ₹25 ಸಾವಿರ ಒಳಗೊಂಡಿದೆ.
- 2024ರ ಪುಸ್ತಕ ಬಹುಮಾನಕ್ಕೆ ವಿಮರ್ಶಕರ ಅಭಿಪ್ರಾಯ ಆಧರಿಸಿ 17 ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಬಹುಮಾನವು ತಲಾ ₹25 ಸಾವಿರ ನಗದು ಒಳಗೊಂಡಿದೆ.
- 2024ರ ವಿವಿಧ ದತ್ತಿ ಬಹುಮಾನಗಳಿಗೆ 11 ಕೃತಿಗಳು ಆಯ್ಕೆಯಾಗಿವೆ.

ಆದಿಕವಿ ಪಂಪ ಪ್ರತಿಷ್ಠಾನ ರಚನೆ
ಸಂದರ್ಭ: ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಆದಿಕವಿ ಪಂಪ ಪ್ರತಿಷ್ಠಾನ ರಚಿಸಿದೆ.
- ಪಂಪ ಮೊದಲ ಬಾರಿಗೆ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಕವಿ. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪವಾಣಿಯು ಇಂದಿಗೂ ಪ್ರಸ್ತುತವಾಗಿದೆ ‘ವಿಕ್ರಮಾರ್ಜುನ ವಿಜಯಂ’ ಕಾವ್ಯದಲ್ಲಿ ಕರ್ಣನ ಪಾತ್ರವನ್ನು ಕುಲಪದ್ಮತಿಯ ಪ್ರತಿರೋಧದ ರೂಪಕವಾಗಿ ಬಳಸಿ ಜಾತಿ ಪದ್ಧತಿಯನ್ನು ವಿರೋಧಿಸಿದ್ದರು.
- ಪಂಪ ಮಹಾಕವಿಯ ಸ್ಮಾರಕವನ್ನು ನಿರ್ಮಿಸಿ, ಪಂಪ ಭವನವನ್ನು ಉನ್ನತೀಕರಿಸಿ, ಜಾತ್ಯತೀತ, ದ್ವೇಷಾತೀತ, ಸೃಜನಶೀಲ ಕೆಲಸಗಳನ್ನು ಮಾಡಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಕೋರಿದ್ದರು. ಈ ಪುಸ್ತಾವದಂತೆ ಪಂಪ ಪ್ರತಿಷ್ಠಾನ ರಚಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಬರಗೂರು ಒತ್ತಾಯದ ಫಲ: ಪಂಪ ಮಹಾಕವಿಯ ಪ್ರತಿಷ್ಠಾನ ಆರಂಭಿಸಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಅವರನ್ನು ಭೇಟಿ ಮಾಡಿ ಒತ್ತಾಯ ಮಾಡಿದ್ದರು.
ಆರ್ಸಿಬಿಗೆ ಕೆಎಂಎಫ್ ಪ್ರಾಯೋಜಕತ್ವ
ಸಂದರ್ಭ: ಕರ್ನಾಟಕ ಹಾಲು ಮಹಾ ಮಂಡಳಿಯು ನಂದಿನಿ ಉತ್ಪನ್ನಗಳ ಪ್ರಚಾರದ ಭಾಗವಾಗಿ ಐಪಿಎಲ್-2026 ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಪ್ರಾಯೋಜಕತ್ವ ವಹಿಸಲಿದೆ.
- ಎರಡು ವರ್ಷದ ಹಿಂದೆ ಸ್ಯಾಟೆಂಡ್, ಐರ್ಲೆಂಡ್ ತಂಡಗಳಿಗೆ ಕೆಎಂಎಫ್ ಪ್ರಾಯೋಜಕತ್ವ ನೀಡಿತ್ತು. ಈ ಬಾರಿ ಆರ್ಸಿಬಿ ತಂಡದ ಅಧಿಕೃತ ಪಾಲುದಾರರಾಗಿ ಕಾರ್ಯ ನಿರ್ವಹಿಸಲಿದ್ದು, ಇದಕ್ಕಾಗಿ ₹4.80 ಕೋಟಿ ವಿನಿಯೋಗ ಮಾಡಲಿದೆ.
- ‘ಕ್ರೀಡೆ ಮತ್ತು ಯುವಜನರನ್ನು ಪ್ರೋತ್ಸಾಹಿಸುವ ಧೈಯವನ್ನು ನಂದಿನಿ ಬ್ಯಾಂಡ್ ಹೊಂದಿದೆ. ಕರ್ನಾಟಕದ ಹೆಮ್ಮೆಯ ಎರಡು ಪ್ರತಿಷ್ಠಿತ ಬ್ಯಾಂಡ್ಗಳಾದ ‘ನಂದಿನಿ’ ಮತ್ತು ‘ಆರ್ಸಿಬಿ’ ಒಂದಾಗಿರುವುದು ಸಂತೋಷದ ವಿಷಯ. ಆರ್ಸಿಬಿ ಅಭಿಮಾನಿಗಳೊಂದಿಗೆ ನಂಟನ್ನು ವಿಸ್ತರಿಸಿ ಲೀಗ್ನಲ್ಲಿ ಸಂಭ್ರಮಿಸಲು ಎದುರು ನೋಡುತ್ತಿದ್ದೇವೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದ್ದಾರೆ.
- ‘ನಂದಿನಿ ಬ್ಯಾಂಡ್ನ ಯಾವುದೇ ಜಾಹೀರಾತು ಕ್ರೀಡಾಂಗಣದಲ್ಲಿ ಪ್ರಕಟವಾಗುವುದಿಲ್ಲ ಆಟಗಾರರ ಜರ್ಸಿಗಳ ಮೇಲೂ ನಂದಿನಿ ಲಾಂಛನ ಇರುವುದಿಲ್ಲ ಬದಲಿಗೆ ನಂದಿನಿ ಉತ್ಪನ್ನಗಳ ಜಾಹೀರಾತಿನಲ್ಲಿ ಆರ್ಸಿಬಿ ಆಟಗಾರರಾದ ವಿರಾಟ್ ಕೊಹ್ಲಿ. ರಜತ್ ಪಾಟೀದಾರ್, ದೇವದತ್ತ ಪಡಿಕಲ್ ಅವರ ಭಾವಚಿತ್ರ ಬಳಸಿಕೊಳ್ಳಲು ಅವಕಾಶ ಇರಲಿದೆ’ ಎಂದು ಹೇಳಿದ್ದಾರೆ.
ಚೊಚ್ಚಲ ಖೇಲೊ ಇಂಡಿಯಾ’ ಆದಿವಾಸಿ ಕ್ರೀಡಾಕೂಟ: ಈಜು: 5 ಚಿನ್ನ ಬಾಚಿದ ಕರ್ನಾಟಕ
ಸಂದರ್ಭ: ಈಜಿನಲ್ಲಿ ‘ಪವರ್ಹೌಸ್’ ಎನಿಸಿರುವ ಕರ್ನಾಟಕ ತಂಡದ ಸ್ಪರ್ಧಿಗಳು, ಆರಂಭವಾದ ಮೊತ್ತಮೊದಲ ಖೇಲೊ ಇಂಡಿಯಾ ಆದಿವಾಸಿ ಕ್ರೀಡಾಕೂಟ ದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದರು. ಪಣಕ್ಕಿದ್ದ ಆರು ಚಿನ್ನದ ಪದಕಗಳಲ್ಲಿ ಐದನ್ನು ಬಾಚಿಕೊಂಡರು. ಕರ್ನಾಟಕದ ಧೋನೀಶ್ ಎನ್ ಪುರುಷರ 200 ಮೀ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಗಮನ ಸೆಳೆದರು.
- ಕರ್ನಾಟಕದ ಮಣಿಕಂಠ ಮತ್ತು ಮೆಹಂಜಲಿ ತಲಾ ಎರಡು ಚಿನ್ನದ ಪದಕಗಳನ್ನು ಗೆದ್ದರು.
- ಧೋನೀಶ್ 32 03.55 ಸೆ.ಗಳಲ್ಲಿ ಗುರಿತಲುಪಿದರು. ಕರ್ನಾಟಕದ ಇನ್ನೊಬ್ಬ ಸ್ಪರ್ಧಿ ಕೀರ್ತನ್ ಶರತ್ (2ನಿ:1099) ಸುಮಾರು ಏಳು ಸೆಕೆಂಡುಗಳು ಅಂತರದಲ್ಲಿ ಹಿಂದೆಬಿದ್ದು ಬೆಳ್ಳಿ ಗೆದ್ದರು. ಮಹಾರಾಷ್ಟ್ರದ ಭಕ್ತಿಶ್ ಕುಮೆ (2ನಿ:14.73 ಸೆ.) ಕಂಚಿನ ಪದಕ ತಮ್ಮದಾಗಿಸಿಕೊಂಡರು.
- ಮೊದಲ ದಿನದ ಸ್ಪರ್ಧೆಗಳ ನಂತರ ಕರ್ನಾಟಕ ಪದಕ ಪಟ್ಟಿಯಲ್ಲಿ (5 ಚಿನ್ನ ಸಹಿತ 7 ಪದಕ) ಅಗ್ರಸ್ಥಾನದಲ್ಲಿದೆ.ಒಡಿಶಾ (1 ಚಿನ್ನ ಸೇರಿ 4 ಪದಕ) ಎರಡನೇ ಮತ್ತು ಆತಿಥೇಯ ಛತ್ತೀಸಗಢ (2 ಪದಕ) ನಾಲ್ಕನೇ ಸ್ನಾನದಲ್ಲಿದೆ.
- ಒಡಿಶಾದ ಅಂಜುಲಿ ಮುಂಡಾ ಮಹಿಳೆಯರ 200 ಮೀ ಫ್ರೀಸ್ಟೈಲ್ ಸ್ಪರ್ಧೆಯನ್ನು 2ನಿ.39.02 ಸೆ.ಗಳಲ್ಲಿ ಜಯಿಸಿ ಕರ್ನಾಟಕದ ಏಕಸ್ವಾಮ್ಯ ತಡೆದರು. ಕೂದಲೆಳೆ ಅಂತರದಲ್ಲಿ ಹಿಂದೆಬಿದ್ದ ಕರ್ನಾಟಕದ ನಿಧಿ ಎಸ್. (2:39.09 ಸೆ.) ಎರಡನೇ ಸ್ಥಾನ ಮತ್ತು ಒಡಿಶಾದ ಶ್ರೀಯಾ ಪದಿಯಾಮಿ (2:49.04) ಮೂರನೇ ಸ್ಥಾನ ಗಳಿಸಿದರು.
- ಪುರುಷರ 100 ಮೀ ಬ್ರೆನ್ಸಸ್ಟೋಕ್ನಲ್ಲಿ ಮಣಿಕಂಠ 1ನಿ.07.41ಸೆ.ಗಳಲ್ಲಿ ಗುರಿತಲುಪಿದರೆ, ಮಹಾರಾಷ್ಟ್ರದ ಪಲಾಶ್ ಠಾಕೂರ್ (1.11.69 ಸೆ.) ನಾಲ್ಕು ಸೆಕೆಂಡುಗಳ ಅಂತರದಲ್ಲಿ ಎರಡನೇ ಸ್ನಾನಕ್ಕೆ ಸರಿದರು.
- ಮಣಿಕಂಠ ಅವರು 50 ಮೀ ಬಟಿರ್ಫೈನಲ್ಲೂ 27.60 ಸೆ.ಗಳ ಅವಧಿಯೊಡನೆ ಚಿನ್ನ ಗೆದ್ದರು ಅಸ್ಸಾಮಿನ ಫಿಮಿನೊ ಇಮೋನ್ ಲಾಲುಂಗ್ (27 69 ಸೆ) ಎರಡನೇ ಸ್ಥಾನ ಗಳಿಸಿದರು
- ಮಹಿಳೆಯರ ವಿಭಾಗದಲ್ಲಿ ಮೆಹಂಜಲಿ ಸಾಧನೆ ಎದ್ದುಕಂಡಿತು 100 ಮೀ ಬ್ರೆನ್ಸಸ್ಟೋಕ್ನಲ್ಲಿ 1ನಿ 25 81 ಸೆ.ಗಳಲ್ಲಿ ಗುರಿತಲುಪಿದ ಅವರು ಮೊದಲಿಗರಾದರು ಛತ್ತೀಸಗಡದ ಅನುಷ್ಕಾ ಭಗತ್ (1.29 10) ಎರಡನೇ ಸ್ಥಾನ ಗಳಿಸಿದರು. ಅವರು ನಂತರ 50 ಮೀ. ಬಟರ್ಪ್ಲೇ ಸ್ಪರ್ಧೆಯನ್ನು 34.67 ಸೆ.ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
“ನಲ್ಸಾ (NALSA) ತೀರ್ಪಿನಿಂದ 2026ರ ತಿದ್ದುಪಡಿ ಮಸೂದೆಯವರೆಗೆ: ಲಿಂಗತ್ವ ಅಲ್ಪಸಂಖ್ಯಾತರ ಸ್ವಯಂ-ಗುರುತಿಸುವಿಕೆಯ ಹಕ್ಕು, ವೈದ್ಯಕೀಯ ತಪಾಸಣೆಯ ಸವಾಲುಗಳು ಮತ್ತು ಸಾಮಾಜಿಕ ನ್ಯಾಯದ ಹಾದಿಯಲ್ಲಿನ ಸಾಂವಿಧಾನಿಕ ಸಂಘರ್ಷ – ಒಂದು ವಿಶ್ಲೇಷಣೆ.”
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
“ಕರ್ನಾಟಕವು ತನ್ನ ಜನಸಂಖ್ಯಾ ಲಾಭಾಂಶದ (Demographic Dividend) ಉತ್ತುಂಗವನ್ನು ದಾಟಿದೆ: ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಉಳಿಸಿಕೊಳ್ಳಲು ‘ಉದ್ಯೋಗ ಸೃಜನೆ’ಯಿಂದ ‘ಉದ್ಯೋಗದ ಗುಣಮಟ್ಟ’ವನ್ನು ಖಚಿತಪಡಿಸಿಕೊಳ್ಳುವತ್ತ ಅಗತ್ಯವಿರುವ ಕಾರ್ಯತಂತ್ರದ ಬದಲಾವಣೆಯನ್ನು ಚರ್ಚಿಸಿ.”
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಪೂರ್ಣ ಬಜೆಟ್ ವಿಧಾನಸಭೆ ಒಪ್ಪಿಗೆ
ಸಂದರ್ಭ: ವಿಧಾನಸಭೆಯು 2026-27ನೇ ಸಾಲಿನ ಹಣಕಾಸು ವರ್ಷಕ್ಕಾಗಿ ₹4.67 ಲಕ್ಷ ಕೋಟಿ ಮೊತ್ತದ ಪೂರ್ಣ ಪ್ರಮಾಣದ ಬಜೆಟ್ಗೆ ಅನುಮೋದನೆ ನೀಡಿತು.
- ಬಜೆಟ್ ಮೇಲಿನ ಚರ್ಚೆಗೆ ತಾವು ಉತ್ತರ ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2026ರ ಕರ್ನಾಟಕ ಧನವಿನಿಯೋಗ ಮಸೂದೆಯನ್ನು ಮಂಡಿಸಿದರು.
- ಬಜೆಟ್ ಮಂಡನೆಯ ವೇಳೆ ಬಜೆಟ್ನ ಗಾತ್ರ ₹4.48 ಲಕ್ಷ ಕೋಟಿ ಎಂದು ಉಲ್ಲೇಖಿಸಲಾಗಿತ್ತು ಧನವಿನಿಯೋಗ ಮಸೂದೆಯಲ್ಲಿ ಬಜೆಟ್ ಗಾತ್ರವನ್ನು ಸುಮಾರು ₹19,000 ಕೋಟಿಯಷ್ಟು ಹೆಚ್ಚಿಗೆ ತೋರಿಸಲಾಗಿದೆ. ಕೇಂದ್ರದ ಅನುದಾನ, ಸಹಾಯಾನುದಾನ, ಪ್ರಕೃತಿ ವಿಕೋಪಕ್ಕೆ ಪರಿಹಾರ ಎಲ್ಲವೂ ಸೇರಿ ಈ ಮೊತ್ತ ಹೆಚ್ಚಳವಾಗಿದೆ.
ಆರ್ಥಿಕ ವರ್ಷದ ಕೊನೆಯಲ್ಲಿ ಮಂಡಿಸಲಾದ ಅಂತಿಮ ಹಾಗೂ ಕೊನೆಯ ಕಂತಿನ ₹14 ಸಾವಿರ ಕೋಟಿ ಮೊತ್ತದ ಪೂರಕ ಅಂದಾಜಿಗೂ ವಿಧಾನಸಭೆ ಒಪ್ಪಿಗೆ ಸೂಚಿಸಿತು.
ಪರಿಷ್ಕೃತ ಉಡಾನ್ ಯೋಜನೆ ₹28,840 ಕೋಟಿ ಎತ್ತಿಟ್ಟ ಕೇಂದ್ರ
ಸಂದರ್ಭ: ಪ್ರಾದೇಶಿಕ ವಿಮಾನ ಸಂಪರ್ಕವನ್ನು ಬಲಪಡಿಸುವ ಸಲುವಾಗಿ ‘ಪರಿಷ್ಕೃತ ಉಡಾನ್ ಯೋಜನೆ’ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
- ನಾಲ್ಕು ಕೋಟಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಒಟ್ಟು ₹28,840 ಕೋಟಿ ವೆಚ್ಚದಲ್ಲಿ 2026-27ನೇ ಹಣಕಾಸು ವರ್ಷದಿಂದ 2035-36ರವರೆಗೆ ಈ ಯೋಜನೆ ಜಾರಿಗೊಳಿಸಲಾಗುವುದು.
- ಈ ಯೋಜನೆಯಡಿ, ಪ್ರಾದೇಶಿಕ ಸಂಪರ್ಕ ಹೆಚ್ಚಿಸಲು ಪ್ರಸ್ತುತ ಬಳಕೆಯಲ್ಲಿಲ್ಲದ 100 ಏರ್ ಸ್ಕ್ರಿಪ್ಗಳನ್ನು ವಿಮಾನ ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಮುಂದಿನ ಎಂಟು ವರ್ಷಗಳಲ್ಲಿ ₹12,159 ಕೋಟಿ ವೆಚ್ಚ ಮಾಡಲಾಗುವುದು.
- ಕೇವಲ ಪ್ರಾದೇಶಿಕ ಸಂಪರ್ಕ ಯೋಜನೆ ಅಡಿಯಲ್ಲಿ ಬರುವ ವಿಮಾನ ನಿಲ್ದಾಣಗಳಿಗೆ ಅಧಿಕ ನಿರ್ವಹಣಾ ವೆಚ್ಚ ತಗಲುತ್ತಿದೆ ಆದರೆ, ಈ ನಿಲ್ದಾಣಗಳಿಗೆ ಸೀಮಿತ ಆದಾಯ ಇದೆ. ಹೀಗಾಗಿ ಈ ಯೋಜನೆಯಡಿ ವಿಮಾನ ನಿಲ್ದಾಣಗಳಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆ ಬೆಂಬಲ ನೀಡಲಾಗುತ್ತದೆ ಪ್ರತಿ ವಿಮಾನ ನಿಲ್ದಾಣಕ್ಕೆ ವರ್ಷಕ್ಕೆ ಗರಿಷ್ಠ ₹3.06 ಕೋಟಿ ಮತ್ತು ಪ್ರತಿ ಹಲಿಪೋರ್ಟ್/ವಾಟರ್ ಏರೋಡೋಮ್ ಗೆ ವರ್ಷಕ್ಕೆ ₹90 ಲಕ್ಷದಂತೆ ಮೂರು ವರ್ಷ ನೆರವು ನೀಡಲಾಗುತ್ತದೆ 441 ನಿಲ್ದಾಣಗಳಿಗಾಗಿ ₹2,577 ಕೋಟಿ ಮೀಸಲಿಡಲಾಗಿದೆ.
- ಗುಡ್ಡಗಾಡು, ದೂರದ ಪ್ರದೇಶಗಳು, ದ್ವೀಪಗಳು ಮತ್ತು ಅಭಿವೃದ್ಧಿ ಆಕಾಂಕ್ಷಿ ಜಿಲ್ಲೆಗಳಲ್ಲಿ ತಲಾ ₹15 ಕೋಟಿ ವೆಚ್ಚದಲ್ಲಿ 200 ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗುವುದು ಇದಕ್ಕೆ ಎಂಟು ವರ್ಷಗಳಲ್ಲಿ ₹3,661 ಕೋಟಿ ವೆಚ್ಚ ಮಾಡಲಾಗುವುದು.
- ವಿಮಾನಯಾನ ಸಂಸ್ಥೆಗಳು ನಿಗದಿತ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲು ಕಾರ್ಯಸಾಧ್ಯತಾ ಅಂತರ ನಿಧಿ (ವಿಜಿಎಫ್) ನೀಡಲಾಗು ವುದು ಮುಂದಿನ 10 ವರ್ಷಗಳಲ್ಲಿ ವಿಮಾನಯಾನ ಸಂಸ್ಥೆಗಳಿಗೆ ₹10.043 ಕೋಟಿ ನಿಧಿ ನೀಡಲು ಉದ್ದೇಶಿಸಲಾಗಿದೆ.
- ದೂರದ ಮತ್ತು ದುರ್ಗಮ ಭೂಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ಸಣ್ಣ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ಕೊರತೆ ನೀಗಿಸಲು ಪವನ್ ಹನ್ಸ್ ಸಂಸ್ಥೆಗೆ ಎರಡು ‘ಎಚ್ಎಎಲ್ ಧ್ರುವ’ ಹೆಲಿಕಾಪ್ಟರ್ಗಳನ್ನು ಮತ್ತು ಅಲಯನ್ಸ್ ಏರ್ ಸಂಸ್ಥೆಗೆ ಎರಡು ‘ಎಚ್ಎಎಲ್ ಡಾರ್ನಿಯರ್’ ವಿಮಾನಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ.
ಯೋಜನೆಯ ಪ್ರಮುಖ ವೈಶಿಷ್ಟ್ಯಗಳು
- ಟೈರ್-2 ಮತ್ತು ಟೈರ್-3 ನಗರಗಳ ಸಂಪರ್ಕ: ಕೇವಲ ಮೆಟ್ರೋ ನಗರಗಳಲ್ಲದೆ, ರಾಜ್ಯದ ಶಿವಮೊಗ್ಗ, ರಾಯಚೂರು, ವಿಜಯಪುರದಂತಹ ನಗರಗಳನ್ನು ಪ್ರಮುಖ ವಾಣಿಜ್ಯ ಕೇಂದ್ರಗಳೊಂದಿಗೆ ಬೆಸೆಯುವುದು.
- ಹೆಲಿ-ಉಡಾನ್ (Heli-UDAN): ಪ್ರವಾಸಿ ತಾಣಗಳು ಮತ್ತು ತುರ್ತು ಸಂದರ್ಭಗಳಲ್ಲಿ ಸುಲಭ ಸಂಚಾರಕ್ಕಾಗಿ ಹೆಲಿಕಾಪ್ಟರ್ ಸೇವೆಗಳಿಗೆ ಹೆಚ್ಚಿನ ಉತ್ತೇಜನ.
- ಅಂತರಾಷ್ಟ್ರೀಯ ಉಡಾನ್: ಆಯ್ದ ರಾಜ್ಯಗಳಿಂದ ಸೀಮಿತ ಅಂತರಾಷ್ಟ್ರೀಯ ತಾಣಗಳಿಗೆ (ಉದಾಹರಣೆಗೆ ಆಗ್ನೇಯ ಏಷ್ಯಾ ರಾಷ್ಟ್ರಗಳು) ಕಡಿಮೆ ದರದಲ್ಲಿ ವಿಮಾನ ಯಾನ ಆರಂಭಿಸುವ ಪ್ರಸ್ತಾವನೆ.
- ಸುಸ್ಥಿರ ಇಂಧನ ಬಳಕೆ: ನೂತನ ವಿಮಾನ ನಿಲ್ದಾಣಗಳಲ್ಲಿ ಸೌರಶಕ್ತಿ ಮತ್ತು ಹಸಿರು ಇಂಧನ ಬಳಕೆಗೆ ಒತ್ತು ನೀಡುವುದು.
ಕರ್ನಾಟಕದ ಮೇಲೆ ಪ್ರಭಾವ
ಈ ಬೃಹತ್ ಅನುದಾನದಡಿ ಕರ್ನಾಟಕಕ್ಕೆ ಹಲವಾರು ಪ್ರಯೋಜನಗಳು ಸಿಗಲಿವೆ:
- ಹೊಸ ವಿಮಾನ ನಿಲ್ದಾಣಗಳು: ಕಾರವಾರ ಮತ್ತು ಧರ್ಮಸ್ಥಳದಂತಹ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳ ಬಳಿ ಏರ್ಸ್ಟ್ರಿಪ್ಗಳ ನಿರ್ಮಾಣಕ್ಕೆ ಅವಕಾಶ.
- ಕೈಗಾರಿಕಾ ಪ್ರಗತಿ: ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದ ನಗರಗಳಿಗೆ ವಿಮಾನ ಸಂಪರ್ಕ ಸಿಗುವುದರಿಂದ ಹೂಡಿಕೆದಾರರಿಗೆ ಅನುಕೂಲವಾಗಲಿದೆ.
- ಪ್ರವಾಸೋದ್ಯಮ ವೃದ್ಧಿ: ಹಂಪಿ, ಬಾದಾಮಿಯಂತಹ ತಾಣಗಳಿಗೆ ಹತ್ತಿರದ ವಿಮಾನ ನಿಲ್ದಾಣಗಳಿಂದ ನೇರ ಸಂಪರ್ಕ ಕಲ್ಪಿಸುವುದು.
ಯೋಜನೆಯ ಆರಂಭ
ಅಧಿಕೃತ ಚಾಲನೆ: ಈ ಯೋಜನೆಯನ್ನು ಅಕ್ಟೋಬರ್ 21, 2016 ರಂದು ನವದೆಹಲಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.
ಮೊದಲ ವಿಮಾನ ಯಾನ: ಈ ಯೋಜನೆಯಡಿ ಮೊದಲ ವಿಮಾನವು ಏಪ್ರಿಲ್ 27, 2017 ರಂದು ಶಿಮ್ಲಾದಿಂದ ದೆಹಲಿಗೆ ಸಂಚರಿಸಿತು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.
ಧ್ಯೇಯವಾಕ್ಯ: “ಹವಾಯಿ ಚಪ್ಪಲಿ ಹಾಕುವವರೂ ವಿಮಾನ ಯಾನ ಮಾಡಬೇಕು” ಎಂಬ ಆಶಯದೊಂದಿಗೆ ಇದನ್ನು ಜಾರಿಗೆ ತರಲಾಯಿತು.
ಉಡಾನ್ ಯೋಜನೆಯ ವಿವಿಧ ಹಂತಗಳು (Phases)
| ಹಂತ (Phase) | ವರ್ಷ | ಗಮನಹರಿಸಿದ ಅಂಶಗಳು |
| ಉಡಾನ್ 1.0 | 2017 | 70 ವಿಮಾನ ನಿಲ್ದಾಣಗಳ ಸಂಪರ್ಕಕ್ಕೆ ಚಾಲನೆ. |
| ಉಡಾನ್ 2.0 | 2018 | ಮೊದಲ ಬಾರಿಗೆ ಹೆಲಿಪ್ಯಾಡ್ಗಳನ್ನು ಯೋಜನೆಯಡಿ ತರಲಾಯಿತು. |
| ಉಡಾನ್ 3.0 | 2019 | ಪ್ರವಾಸಿ ತಾಣಗಳು ಮತ್ತು ಜಲ ವಿಮಾನ (Seaplanes) ಸೌಲಭ್ಯಕ್ಕೆ ಒತ್ತು. |
| ಉಡಾನ್ 4.0 | 2020 | ಈಶಾನ್ಯ ರಾಜ್ಯಗಳು ಮತ್ತು ದ್ವೀಪ ಪ್ರದೇಶಗಳ ಸಂಪರ್ಕಕ್ಕೆ ಆದ್ಯತೆ. |
| ಉಡಾನ್ 5.0 | 2023 | 600 ಕಿ.ಮೀ ದೂರದ ಮಿತಿಯನ್ನು ತೆಗೆದುಹಾಕಿ ದೀರ್ಘ ಪ್ರಯಾಣಕ್ಕೆ ಅವಕಾಶ. |
| ಪರಿಷ್ಕೃತ ಉಡಾನ್ | 2026 | ಮುಂದಿನ 10 ವರ್ಷಗಳ ಸುಸ್ಥಿರ ಅಭಿವೃದ್ಧಿಗಾಗಿ ₹28,840 ಕೋಟಿ ಮೀಸಲು. |
ಐವಿಎಫ್ಆರ್ಟಿ ಮುಂದುವರಿಕೆ:
- ವಲಸೆ, ವೀಸಾ, ವಿದೇಶಿಯರ ನೋಂದಣಿ ಮತ್ತು ಟ್ರ್ಯಾಕಿಂಗ್ (ಐವಿಎಫ್ಆರ್ಟಿ) ಯೋಜನೆಯನ್ನು 2031ರ ಮಾರ್ಚ್ ಅಂತ್ಯದವರೆಗೆ ಮುಂದುವರಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ₹1,800 ಕೋಟಿ ಮೀಸಲಿಡಲಾಗಿದೆ.
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಎಲ್ಜಿಬಿಟಿಕ್ಕು ಸಮುದಾಯದಲ್ಲಿ ಆತಂಕ ಮೂಡಿಸಿದ ಕೇಂದ್ರದ ನಡೆ: ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕು ಮೊಟಕು?
ಸಂದರ್ಭ: ಕೇಂದ್ರ ಸರ್ಕಾರವು ಲಿಂಗತ್ವ ಅಲ್ಪ ಸಂಖ್ಯಾತರ ಕಾಯ್ದೆ-2019ಕ್ಕೆ ಕೆಲವು ಬದಲಾವಣೆಗಳನ್ನು ಮಾಡಿ, ಲಿಂಗತ್ವ ಅಲ್ಪ ಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ-2026ಕ್ಕೆ ಲೋಕಸಭೆಯಲ್ಲಿ ಅಂಗೀಕಾರ ಪಡೆದಿದೆ. ರಾಜ್ಯಸಭೆಯಲ್ಲಿಯೂ ಅಂಗೀಕಾರ ಸಿಕ್ಕಿದೆ.
- ಲಿಂಗತ್ಯ ಅಲ್ಪಸಂಖ್ಯಾತರ ಕುರಿತ ವ್ಯಾಖ್ಯಾನವು ಅಸ್ಪಷ್ಟವಾಗಿದ್ದು, ನಿಜವಾದ ಸಂತ್ರಸ್ತರನ್ನು ಗುರುತಿಸಿ, ಅವರಿಗೆ ಕಾಯ್ದೆಯ ಪ್ರಯೋಜನಗಳನ್ನು ದೊರಕಿಸುವುದು ಅಸಾಧ್ಯವಾಗಿದೆ ತಮ್ಮ ಯಾವ ತವೂ ಇಲ್ಲದೇ ಜೈವಿಕ ಕಾರಣದಿಂದ ತೀವ್ರ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರುವಂಥವರ ಹಕ್ಕುಗಳನ್ನು ಮಾತ್ರವೇ ರಕ್ಷಣೆ ಮಾಡುವುದು ಮಸೂದೆಯ ಉದ್ದೇಶ ಎಂದು ಕೇಂದ್ರವು ಪ್ರತಿಪಾದಿಸಿದೆ.
- 2019ರ ಕಾಯ್ದೆಯ ಪ್ರಕಾರ, ಲಿಂಗತ್ವ ಅಲ್ಪ ಸಂಖ್ಯಾತರು ಎಂದರೆ, ಹುಟ್ಟಿನಿಂದ ದತ್ತವಾದ ಲಿಂಗತ್ಯಕ್ಕಿಂತ ಭಿನ್ನವಾದ ಲಿಂಗತ್ಯ ಹೊಂಗ್ಲಿರುವವರು. ಹುಟ್ಟಿದಾಗ ಗಂಡಾಗಿದ್ದು ನಂತರ ಹೆಣ್ಣಾಗಿರಬಹುದು (ಟ್ರಾನ್ಸ್ ವುಮನ್), ಹುಟ್ಟಿದಾಗ ಹೆಣ್ಣಾಗಿ ನಂತರ ಗಂಡಾಗಿರಬಹುದು (ಟ್ರಾನ್ಸ್ ಮನ್). ಅಂತರಲಿಂಗತ್ವ ಹೊಂದಿರಬಹುದು, ಇಲ್ಲವೇ ಕಿನ್ನರ್, ಹಿಜ್ರಾ, ಅರವಣೆ, ಮತ್ತು ಜೋಗತಿ-ಇಂಥ ಸಾಮಾಜಿಕ ಸಾಂಸ್ಕೃತಿಕ ಚಹರೆಗಳನ್ನು ಹೊಂದಿರುವವರು, ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ, ಲೇಸರ್ ಥೆರಪಿ, ಹಾರ್ಮೋನ್ ಥೆರಪಿ ಇತ್ಯಾದಿಗಳಿಗೆ ಒಳಗಾಗಿರಬಹುದು ಇಲ್ಲದಿರಬಹುದು. ಎಲ್ಲರನ್ನೂ ವಿಶಾಲ ಅರ್ಥದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎಂದೇ ಗುರುತಿಸಲಾಗುತ್ತಿತ್ತು.
- 2019ರ ಕಾಯ್ದೆಯಲ್ಲಿನ ಕೆಲವು ವಿಚಾರಗಳಲ್ಲಿ ಗೊಂದಲಗಳಿದ್ದು, ಅವು ಕಾಯ್ದೆ ಜಾರಿಗೆ ಅಡ್ಡಿಯಾಗಿವೆ; ಲಿಂಗತ್ವ ಅಲ್ಪಸಂಖ್ಯಾತರು ಎಂದರೆ ಯಾರು, ಅವರನ್ನು ಹೇಗೆ ಗುರುತಿಸಲಾಗುತ್ತಿದೆ ಎನ್ನುವ ಅಂಶಗಳು ಕಾಯ್ದೆ ಜಾರಿಯಲ್ಲಿ ನಿರ್ಣಾಯಕವಾಗಿವೆ ಎಂದು ಕೇಂದ್ರವು ಹೇಳಿದೆ. ಈ ಅಂಶಗಳನ್ನು ಮಸೂದೆಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯ ಬಗ್ಗೆಯೇ ಲಿಂಗತ್ವ ಅಲ್ಪ ಸಂಖ್ಯಾತರು ಆಕ್ಷೇಪಣೆ ಎತ್ತಿರುವುದು.
- ಸ್ವಯಂ ಗುರುತಿಸಿಕೊಳ್ಳುವಿಕೆ ರದ್ದು: ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಲಿಂಗತ್ಯದ ಗ್ರಹಿಕೆಯ ಆಧಾರದ ಮೇಲೆ ಲಿಂಗತ್ವ ಅಲ್ಪ ಸಂಖ್ಯಾತರೆಂದು ಸ್ವಯಂ ಗುರುತಿಸಿಕೊಳ್ಳಲು 2019ರ ಕಾಯ್ದೆಯ ಸೆಕ್ಷನ್ 4 (2) ಅವಕಾಶ ಕಲ್ಪಿಸಿತ್ತು ತಿದ್ದುಪಡಿ ಮಸೂದೆಯಲ್ಲಿ ಈ ಅಂಶವನ್ನು ಕೈಬಿಡಲಾಗಿದೆ.
- ತಿದ್ದುಪಡಿ ಮಸೂದೆಯಲ್ಲಿ ‘ಲಿಂಗತ್ವ ಅಲ್ಪ ಸಂಖ್ಯಾತರು ಎಂದರೆ ಯಾರು ಎನ್ನುವುದನ್ನು ಸೀಮಿತವಾಗಿ ವ್ಯಾಖ್ಯಾನಿಸಲಾಗಿದೆ. ಲಿಂಗತ್ಯ ಅಲ್ಪಸಂಖ್ಯಾತರು ಎಂದರೆ, ಜೈವಿಕ ಕಾರಣಗಳಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿರುವ ಹಿಜ್ರಾ, ಕಿನ್ನರ್, ಅರವಾಣಿ, ಜೋಗತಿ ಮೊದಲಾದ ನಿರ್ದಿಷ್ಟ ಸಾಮಾಜಿಕ-ಸಾಂಸ್ಕೃತಿಕ ಸಮುದಾಯಗಳಿಗೆ ಸೇರಿದವರು, ಅಂತರಲಿಂಗಿಗಳು, ನಿರ್ದಿಷ್ಟ ದೈಹಿಕ ಚಹರೆಗಳನ್ನು ಹೊಂದಿರುವವರು, ಶಸ್ತ್ರಚಿಕಿತ್ಸೆಗೆ ಒಳಗಾದವರು.
- ವೈದ್ಯಕೀಯ ಮಂಡಳಿ: ಸರ್ಕಾರದ ಯೋಜನೆಗಳ ನೆರವು ಪಡೆಯಲು ಲಿಂಗತ್ವ ಅಲ್ಪ ಸಂಖ್ಯಾತರು ಗುರುತಿನ ಚೀಟಿ ಹೊಂದಿರಬೇಕು. ಅದು ಅವರ ಗುರುತಿನ ಪ್ರಾಥಮಿಕ ದಾಖಲೆಯಾಗಿದೆ. ಒಬ್ಬ ವ್ಯಕ್ತಿ ತಾನು ಲಿಂಗತ್ವ ಅಲ್ಪಸಂಖ್ಯಾತ ಎಂದು ಗುರುತಿನ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದರೆ, 2019ರ ಕಾಯ್ದೆ ಪ್ರಕಾರ, ಜಿಲ್ಲಾಧಿಕಾರಿ ಪ್ರಮಾಣ ಪತ್ರ ನೀಡುತ್ತಿದ್ದರು. ಅದಕ್ಕೆ ಯಾವುದೇ ವೈದ್ಯಕೀಯ ತಪಾಸಣೆಯ ಅಗತ್ಯವಿರಲಿಲ್ಲ ಆದರೆ, ಈ ಅಂಶವನ್ನು 2026ರ ಮಸೂದೆಯಲ್ಲಿ ತಿದ್ದುಪಡಿ ಮಾಡಲಾಗಿದೆ.
- ಲಿಂಗತ್ವ ಅಲ್ಪ ಸಂಖ್ಯಾತರ ಗುರುತಿನ ಚೀಟಿ ನೀಡಲು ವೈದ್ಯಕೀಯ ಮಂಡಳಿ’ಯು ಅವರನ್ನು ತಪಾಸಣೆ ಮಾಡುತ್ತದೆ ಮತ್ತು ಅದರ ಆಧಾರದಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ, ಜತೆಗೆ, ಲಿಂಗತ್ವ ಅಲ್ಪ ಸಂಖ್ಯಾತ ವ್ಯಕ್ತಿಯು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದನ್ನು ದೃಢೀಕ್ಷೆಸುವ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು (ಸೆಕ್ಷನ್ 5 (1ಎ). ಅವುಗಳನ್ನು ಪರಿಶೀಲಿಸಿ ವ್ಯಕ್ತಿಗೆ ಗುರುತಿನ ಚೀಟಿ ನೀಡಬೇಕೇ ಅಥವಾ ಬೇಡವೇ ಎನ್ನುವ ಅಂತಿಮ ನಿರ್ಧಾರವನ್ನು ಜಿಲ್ಲಾಧಿಕಾರಿಗಳು ಕೈಗೊಳ್ಳುತ್ತಾರೆ.
- ಅಪರಾಧ ವ್ಯಾಪ್ತಿ ವಿಸ್ತರಣೆ: ಲಿಂಗತ್ವ ಅಲ್ಪ ಸಂಖ್ಯಾತರನ್ನು ಒಲ್ಲದ ಕೆಲಸಕ್ಕೆ ಒಲವಂತಪಡಿಸುವುದು, ಸಾರ್ವಜನಿಕ ಸ್ಥಳ ಪ್ರವೇಶಿಸುವುದಕ್ಕೆ ಅಡ್ಡಿಪಡಿಸುವುದು, ಮನೆ/ಹಳ್ಳಿ ತೊರೆಯುವಂತೆ ಮಾಡುವುದು, ದೈಹಿಕ, ಮಾನಸಿಕ, ಲೈಂಗಿಕ ಕಿರುಕುಳ ನೀಡುವುದು ಇತ್ಯಾದಿಗಳನ್ನು ಅಪರಾಧ ಎಂದು ಪರಿಗಣಿಸಿ, ಶಿಕ್ಷೆ ವಿಧಿಸುವ ನಿಬಂಧನೆಗಳನ್ನು 2019ರ ಕಾಯ್ದೆಯು (ಸೆಕ್ಷನ್ 18) ಒಳಗೊಂಡಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಿದರೆ, ಅದರ ಸ್ವರೂಪವನ್ನು ಆಧರಿಸಿ ಅವರಿಗೆ 6 ತಿಂಗಳಿನಿಂದ ಎರಡು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾಯ್ದೆ ಅವಕಾಶ ನೀಡಿದೆ.
- ತಿದ್ದುಪಡಿ ಮಸೂದೆಯಲ್ಲಿ ಸೆಕ್ಷನ್ 18ಕ್ಕೆ ನಾಲ್ಕು ಉಪನಿಯಮಗಳನ್ನು ಸೇರಿಸಿ ಅಪರಾಧದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರು ಯಾವುದೇ ವಯಸ್ಕನನ್ನು/ಮಗುವನ್ನು ಬಲವಂತ ಆಮಿಷ ಪ್ರಲೋಭನೆ, ವಂಚನೆ, ಪ್ರಭಾವದಿಂದ ಅವರ ಒಪ್ಪಿಗೆ ಇಲ್ಲದೆಯೇ ಶಸ್ತ್ರಚಿಕಿತ್ಸೆ/ಹಾರ್ಮೋನ್ ಬದಲಾವಣೆ ಮೂಲಕ ಲಿಂಗತ್ವ ಅಲ್ಪಸಂಖ್ಯಾತರ ಗುರುತನ್ನು ಆಳವಡಿಸಿಕೊಳ್ಳುವಂತೆ ಒತ್ತಾಯಿಸಿದರೆ, ಅದನ್ನು ಅಪರಾಧ ಎಂದು ವರ್ಗೀಕರಿಸಲಾಗಿದೆ ಇದಕ್ಕೆ. ಅಪರಾಧದ ಸ್ವರೂಪವನ್ನು ಆಧರಿಸಿ ₹1 ಲಕ್ಷದಿಂದ ಆರಂಭಿಸಿ ₹5 ಲಕ್ಷದವರೆಗೆ ದಂಡ ಮತ್ತು ಐದು ವರ್ಷಗಳಿಂದ ಜೀವಿತಾವಧಿವರೆಗೆ ಜೈಲು ಶಿಕ್ಷೆ ವಿಧಿಸಲು ಈ ಉಪನಿಯಮಗಳು ಅವಕಾಶ ಕಲ್ಪಿಸುತ್ತವೆ.
ನಲ್ಸಾ v/s ಭಾರತಸರ್ಕಾರ
- ಲಿಂಗತ್ವ ಅಲ್ಪ ಸಂಖ್ಯಾತರನ್ನು ಅಧಿಕೃತವಾಗಿ ಗುರುತಿಸಲು ಕಾರಣವಾಗಿದ್ದು ನಲ್ಸಾ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ 2014ರಲ್ಲಿ ನೀಡಿದ್ದ ತೀರ್ಪು ಈ ತೀರ್ಪು ಎರಡು ಮುಖ್ಯ ಅಂಶಗಳನ್ನು ಒಳಗೊಂಡಿದೆ.
- ಒಂದು, ಹೆಣ್ಣು, ಗಂಡು ಇದ್ದಂತೆ ಲಿಂಗತ್ಯ ಅಲ್ಪಸಂಖ್ಯಾತರು ತೃತೀಯ ಲಿಂಗಿಗಳಾಗಿದ್ದು, ಅವರಿಗೆ ಸಂವಿಧಾನದ ಎಲ್ಲ ಮೂಲಭೂತ ಹಕ್ಕುಗಳೂ ಇವೆ. ಎರಡು, ಒಬ್ಬ ವ್ಯಕ್ತಿ ತನ್ನನ್ನು ತಾನು ಹೆಣ್ಣು, ಗಂಡು, ಲಿಂಗತ್ವ ಅಲ್ಪಸಂಖ್ಯಾತ ಎಂದು ಸ್ವಯಂ ಗುರುತಿಸಿಕೊಳ್ಳಬಹುದು.
- ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ಖಾತರಿಪಡಿಸುವುದಕ್ಕಾಗಿ ಮತ್ತು ಅವರ ಅಭ್ಯುದಯಕ್ಕಾಗಿ ಸೂಕ್ತ ಕಾನೂನು ರೂಪಿಸುವಂತೆಯೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸರ್ಕಾರಕ್ಕೆ ಸೂಚಿಸಿತ್ತು. ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆ-2019 ಅಸ್ತಿತ್ವಕ್ಕೆ ಬರಲು ಇದೇ ಪ್ರಮುಖ ಕಾರಣವಾಗಿತ್ತು.

‘ಪರವಾನಗಿ ರದ್ದು ಗೊಂಡ ಎನ್ಜಿಒ ಸ್ವತ್ತು ನಿರ್ವಹಣೆಗೆ ಹೊಸ ಪ್ರಾಧಿಕಾರ’
ಸಂದರ್ಭ: ವಿದೇಶಗಳಿಂದ ದೇಣಿಗೆ ಪಡೆಯುವ ಎನ್ಜಿಒಗಳ ಮೇಲಿನ ಮೇಲ್ವಿಚಾರಣೆಯನ್ನು ಮತ್ತಷ್ಟು ಬಿಗಿಗೊಳಿಸುವುದು ಹಾಗೂ ಪರವಾನಗಿ ರದ್ದು ಗೊಂಡ ಎನ್ಜಿಒಗಳ ಸ್ವತ್ತುಗಳ ಜಪ್ತಿ ಮತ್ತು ನಿರ್ವಹಣೆಗೆ ಹೊಸ ಪ್ರಾಧಿಕಾರ ರಚನೆ ಸೇರಿ ಹಲವು ಅವಕಾಶಗಳನ್ನು ಒಳಗೊಂಡ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.
- ಗೃಹ ಖಾತೆ ರಾಜ್ಯ ಸಚಿವ ‘ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ-2026 ಅನ್ನು ಲೋಕಸಭೆಯಲ್ಲಿ ಮಂಡಿಸಿದರು.
- ವಿದೇಶಗಳಿಂದ ಪಡೆಯುವ ದೇಣಿಗೆಗಳ ಮೇಲ್ವಿಚಾರಣೆ, ನಿರ್ವಹಣೆಗೆ ‘ಉದ್ದೇಶಿತ ಪ್ರಾಧಿಕಾರ’ದ ಮೂಲಕ ಸಮಗ್ರ ಚೌಕಟ್ಟು ರೂಪಿಸುವ ಅವಕಾಶ ಗಳನ್ನು ಈ ಮಸೂದೆ ಒಳಗೊಂಡಿದೆ.
- ‘ಎನ್ಜಿಒಗಳ ನೋಂದಣಿರನ್ನು ಗೊಂಡ ಅಥವಾ ಒಪ್ಪಿಸಿದ ಸಂದರ್ಭ ಗಳಲ್ಲಿ ಅವುಗಳು ಪಡೆಯು ತ್ತಿದ್ದ ವಿದೇಶಿ ದೇಣಿಗೆಗಳು ಹಾಗೂ ಅವುಗಳಿಂದ ಸೃಜಿಸಲಾದ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿ ಕೆಲ ಕಾನೂನಾತ್ಮಕ ನ್ಯೂನತೆ ಗಳಿರುವುದನ್ನು ಗುರುತಿಸ ಲಾಗಿದೆ’.
- ‘ಪೂರ್ವಾನುಮತಿ ಪಡೆದ ಬಳಿಕ ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ಹಾಗೂ ಬಳಕೆ ಮಾಡಿಕೊಳ್ಳುವುದಕ್ಕೆ ಕಾಲಮತಿ ನಿಗದಿ ಮಾಡುವ ಅವಕಾಶ ಗಳನ್ನು ಈ ಮಸೂದೆ ಒಳ ಗೊಂಡಿದೆ ಪರವಾನಗಿ ಅವಧಿ ಮುಕ್ತಾಯಗೊಂಡ ಸಂದರ್ಭದಲ್ಲಿ ಎನ್ಜಿಒಗಳ ಕಾರ್ಯಾಚರಣೆ ಸಮಾಪ್ತಿಗೊಳಿಸುವ ಪ್ರಕ್ರಿಯೆ ನೆರವೇರಿಸುವುದು, ನವೀಕರಣ, ದಂಡಗಳನ್ನು ತರ್ಕಬದ್ಧಗೊಳಿಸುವುದು ಹಾಗೂ ತನಿಖೆ ಆರಂಭಕ್ಕೂ ಮುನ್ನ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಬೇಕು ಎಂಬ ಹಲವಾರು ಅವಕಾಶಗಳು ಕೂಡ ಮಸೂದೆಯಲ್ಲಿವೆ’.
ಪ್ರಮುಖ ಅಂಶಗಳು
- ವಿದೇಶಿ ದೇಣಿ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) 2010 ಅನ್ನು 2011ರ ಮೇ 1ರಂದು ಜಾರಿಗೊಳಿಸಲಾಯಿತು. 2016, 2018 ಹಾಗೂ 2020ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
- ಎಫ್ಸಿಆರ್ಎ ಅಡಿ ದೇಶದಲ್ಲಿ ಪ್ರಸ್ತುತ 16 ಸಾವಿರ ಎನ್ಜಿಒಗಳು ನೋಂದಣಿ ಮಾಡಿಸಿವೆ.
- ಈ ಎನ್ಜಿಒಗಳು ವಾರ್ಷಿಕ ಅಂದಾಜು ₹22 ಸಾವಿರ ಕೋಟಿಗೂ ಅಧಿಕ ವಿದೇಶಿ ದೇಣಿಗೆ ಪಡೆಯುತ್ತಿವೆ.
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ಪತ್ರಿಕೆ-V: ಸಾಮಾನ್ಯ ಅಧ್ಯಯನ-4
ನೈತಿಕ ಪ್ರಕರಣ ಅಧ್ಯಯನ (Ethics Case Study)
ವಿಷಯ: ಘನತೆಯುಕ್ತ ಸಾವು (Death with Dignity) ಮತ್ತು ನಿಷ್ಕ್ರಿಯ ದಯಾಮರಣ (Passive Euthanasia).
೧. ಪ್ರಕರಣದ ಸಾರಾಂಶ (Case Summary):
ಹರೀಶ್ ರಾಣಾ ಎಂಬ 32 ವರ್ಷದ ಯುವಕ ಕಳೆದ 13 ವರ್ಷಗಳಿಂದ ‘ವೆಜಿಟೇಟಿವ್ ಸ್ಟೇಟ್’ನಲ್ಲಿ (ಸಸ್ಯದಂತಹ ಸ್ಥಿತಿ) ಇದ್ದರು. 2013 ರಲ್ಲಿ ಕಟ್ಟಡದಿಂದ ಬಿದ್ದು 100% ಪಾರ್ಶ್ವವಾಯು ಪೀಡಿತರಾಗಿದ್ದ ಅವರಿಗೆ ವೈದ್ಯಕೀಯ ನೆರವಿನ ಮೂಲಕ ಪೋಷಣೆ ನೀಡಲಾಗುತ್ತಿತ್ತು (CANH). ಸುಪ್ರೀಂ ಕೋರ್ಟ್ ಇತ್ತೀಚೆಗೆ ಈ ವೈದ್ಯಕೀಯ ನೆರವನ್ನು ಹಿಂತೆಗೆದುಕೊಳ್ಳಲು ಅನುಮತಿ ನೀಡಿತು, ಇದು ಭಾರತದ ಇತಿಹಾಸದಲ್ಲೇ ಇಂತಹ ಮೊದಲ ತೀರ್ಪಾಗಿದೆ. ತೀರ್ಪು ಬಂದ ಕೆಲವೇ ದಿನಗಳಲ್ಲಿ ರಾಣಾ ನಿಧನರಾದರು ಮತ್ತು ಅವರ ಕುಟುಂಬವು ಅವರ ಕಣ್ಣು ಹಾಗೂ ಹೃದಯದ ಕವಾಟಗಳನ್ನು ದಾನ ಮಾಡಿತು.
೨. ಈ ಪ್ರಕರಣದಲ್ಲಿರುವ ನೈತಿಕ ದ್ವಂದ್ವಗಳು (Ethical Dilemmas):
- ಬದುಕುವ ಹಕ್ಕು ವರ್ಸಸ್ ಘನತೆಯುಕ್ತ ಸಾವಿನ ಹಕ್ಕು: ಸಂವಿಧಾನದ 21ನೇ ವಿಧಿಯು ಬದುಕುವ ಹಕ್ಕನ್ನು ನೀಡುತ್ತದೆ. ಆದರೆ, ಕೇವಲ ಯಂತ್ರಗಳ ಸಹಾಯದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ದಶಕಗಳ ಕಾಲ ಬದುಕುವುದು ‘ಘನತೆಯುಕ್ತ ಜೀವನ’ವೇ? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.
- ಪೋಷಕರ ಸಂಕಟ ಮತ್ತು ಕರ್ತವ್ಯ: ಒಬ್ಬ ಪೋಷಕನಾಗಿ ಮಗನ ಜೀವ ಉಳಿಸುವುದು ಕರ್ತವ್ಯವೋ ಅಥವಾ ಮಗ ಅನುಭವಿಸುತ್ತಿರುವ ಅಸಹನೀಯ ನೋವನ್ನು ಕೊನೆಗಾಣಿಸುವುದು ಪ್ರೀತಿಯೋ?
- ವೈದ್ಯಕೀಯ ಧರ್ಮ (Beneficence vs Non-maleficence): ವೈದ್ಯರ ಕೆಲಸ ಜೀವ ಉಳಿಸುವುದು. ಆದರೆ ಗುಣಪಡಿಸಲು ಅಸಾಧ್ಯವಾದ ಸ್ಥಿತಿಯಲ್ಲಿ ಚಿಕಿತ್ಸೆಯನ್ನು ಮುಂದುವರಿಸುವುದು ರೋಗಿಗೆ ನೀಡುವ ಹಿಂಸೆಯಾಗುತ್ತದೆಯೇ?
- ಅಂಗಾಂಗ ದಾನದ ಔಚಿತ್ಯ: ಮರಣದ ನಂತರವೂ ಸಮಾಜಕ್ಕೆ ಕೊಡುಗೆ ನೀಡುವುದು ಒಬ್ಬ ವ್ಯಕ್ತಿಯ ಘನತೆಯನ್ನು ಹೇಗೆ ಹೆಚ್ಚಿಸುತ್ತದೆ?
೩. ವಿಶ್ಲೇಷಣಾತ್ಮಕ ಪ್ರಶ್ನೆಗಳು (Questions for Analysis):
ಪ್ರಶ್ನೆ ೧: ಸುಪ್ರೀಂ ಕೋರ್ಟ್ನ ಈ ತೀರ್ಪನ್ನು ನೀವು ನೈತಿಕವಾಗಿ ಸಮರ್ಥಿಸುತ್ತೀರಾ? ನಿಮ್ಮ ವಾದಕ್ಕೆ ಕಾರಣಗಳನ್ನು ನೀಡಿ.
ಮಾದರಿ ಉತ್ತರ ಹಾದಿ: ಇಲ್ಲಿ ‘ಅರಿಷ್ಟಾಟಲ್’ ಅವರ ‘ಸುವರ್ಣ ಮಧ್ಯಮ’ ಅಥವಾ ‘ಯುಟಿಲಿಟೇರಿಯನಿಸಂ’ (ಗರಿಷ್ಠ ಜನರಿಗೆ ಗರಿಷ್ಠ ಸುಖ) ಸಿದ್ಧಾಂತವನ್ನು ಬಳಸಬಹುದು. ದಶಕಗಳ ಕಾಲ ಚಿಕಿತ್ಸೆ ನೀಡಿದರೂ ಚೇತರಿಕೆ ಕಾಣದಿದ್ದಾಗ, ವ್ಯಕ್ತಿಯನ್ನು ನೋವಿನಿಂದ ಮುಕ್ತಗೊಳಿಸುವುದು ಮಾನವೀಯತೆಯ ದೃಷ್ಟಿಯಿಂದ ಸರಿ ಎಂಬ ವಾದ ಮಂಡಿಸಬಹುದು.
ಪ್ರಶ್ನೆ ೨: ಇಂತಹ ಪ್ರಕರಣಗಳಲ್ಲಿ ಕುಟುಂಬದ ಒಪ್ಪಿಗೆ ಮತ್ತು ವೈದ್ಯಕೀಯ ಮಂಡಳಿಯ ವರದಿಯ ನಡುವೆ ಯಾವುದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಬೇಕು?
ಮಾದರಿ ಉತ್ತರ ಹಾದಿ: ವೈದ್ಯಕೀಯ ವರದಿಯು ತಾಂತ್ರಿಕ ಸತ್ಯವನ್ನು ಹೇಳಿದರೆ, ಕುಟುಂಬದ ಒಪ್ಪಿಗೆಯು ಭಾವನಾತ್ಮಕ ಮತ್ತು ನೈತಿಕ ಸತ್ಯವನ್ನು ಹೇಳುತ್ತದೆ. ಕಾನೂನು ಈ ಎರಡನ್ನೂ ಸಮತೋಲನದಲ್ಲಿರಿಸಬೇಕು.
ಪ್ರಶ್ನೆ ೩: ಹರೀಶ್ ರಾಣಾ ಅವರ ಕುಟುಂಬದ ಅಂಗಾಂಗ ದಾನದ ನಿರ್ಧಾರವು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತದೆ?
ಮಾದರಿ ಉತ್ತರ ಹಾದಿ: ಇದು ‘ಪರೋಪಕಾರ’ದ (Altruism) ಅತ್ಯುನ್ನತ ಉದಾಹರಣೆ. ಸಾವಿನಲ್ಲೂ ಸಾರ್ಥಕತೆ ಕಾಣುವ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಇದು ಪ್ರತಿಬಿಂಬಿಸುತ್ತದೆ.
೪. ಪ್ರಮುಖ ಪರಿಕಲ್ಪನೆಗಳು (Key Concepts to highlight):
ನಿಷ್ಕ್ರಿಯ ದಯಾಮರಣ (Passive Euthanasia): ಬದುಕನ್ನು ಉಳಿಸುವ ಕೃತಕ ನೆರವನ್ನು (ಉದಾಹರಣೆಗೆ ವೆಂಟಿಲೇಟರ್ ಅಥವಾ ಪೋಷಣೆ) ಹಿಂತೆಗೆದುಕೊಳ್ಳುವುದು.
ಲಿವಿಂಗ್ ವಿಲ್ (Living Will): ಒಬ್ಬ ವ್ಯಕ್ತಿಯು ತಾನು ಪ್ರಜ್ಞಾಹೀನ ಸ್ಥಿತಿಗೆ ಹೋದರೆ ತನಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಅಥವಾ ನೀಡಬಾರದು ಎಂದು ಮುಂಚಿತವಾಗಿ ಬರೆದಿಡುವ ದಾಖಲೆ.
ಅರುಣಾ ಶಾನ್ಬಾಗ್ ಪ್ರಕರಣ: ಈ ಪ್ರಕರಣದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ದಯಾಮರಣದ ಬಗ್ಗೆ ಚರ್ಚೆ ಆರಂಭಿಸಿತ್ತು.
೫. ತೀರ್ಮಾನ (Conclusion):
ಹರೀಶ್ ರಾಣಾ ಅವರ ಪ್ರಕರಣವು ಕಾನೂನು ಮತ್ತು ಭಾವನೆಗಳ ನಡುವಿನ ಸೇತುವೆಯಾಗಿದೆ. “ಜೀವನದ ಉದ್ದಕ್ಕಿಂತ ಜೀವನದ ಆಳ ಮತ್ತು ಗುಣಮಟ್ಟ ಮುಖ್ಯ” ಎಂಬ ಸತ್ಯವನ್ನು ಇದು ಎತ್ತಿ ತೋರಿಸುತ್ತದೆ. ಈ ಪ್ರಕರಣವು ಭವಿಷ್ಯದಲ್ಲಿ ಇಂತಹ ಕಠಿಣ ಪರಿಸ್ಥಿತಿಯಲ್ಲಿರುವ ಸಾವಿರಾರು ಕುಟುಂಬಗಳಿಗೆ ಒಂದು ದಿಕ್ಸೂಚಿಯಾಗಲಿದೆ.
Sources: Prajavani